Dataset Viewer
Auto-converted to Parquet
text
stringlengths
2
56.4k
ಕೋವಿಡ್‌ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳು ‘ಥಂಡಾ’ | Prajavani
ಕೋವಿಡ್‌ ಹೊಡೆತಕ್ಕೆ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳು ‘ಥಂಡಾ’
6 ತಿಂಗಳು ಆದಾಯ ಕಸಿದ ‘ಕೊರೊನಾ’, ಅಂಗಡಿಗಳಿಗೆ ಬಾರದ ಜನತೆ
ಯಾದಗಿರಿ: ಕೊರೊನಾ ಮಹಾಮಾರಿ ಸೋಂಕಿನಿಂದ ಐಸ್ ಕ್ರೀಂ, ಜ್ಯೂಸ್ ಪಾರ್ಲರ್ ಅಂಗಡಿಗಳವರಿಗೆ 'ಥಂಡಾ' ಹೊಡೆದಿದೆ. ಇದರಿಂದ 6 ತಿಂಗಳ ಆದಾಯವನ್ನೇ ಕೊರೊನಾ ನೆಪ ಕಸಿದುಕೊಂಡಿದೆ.
ನಗರದಲ್ಲಿ 50ಕ್ಕೂ ಐಸ್ ಕ್ರೀಂ, ಜ್ಯೂಸ್ ಪಾರ್ಲರ್‌ಗಳಿವೆ. ಆದರೆ, ಕೊರೊನಾ ಹೊಡೆತ ಅವರೆಲ್ಲರಿಗೂ ಸೀಸನ್‌ ಆದಾಯವನ್ನೆ ಮುಗಿಸಿಬಿಟ್ಟಿದೆ.
ಕೆಲ ಕಡೆ ಐಸ್‌ಕ್ರೀಂ ಅಂಗಡಿಗಳು ಹಾಲು ಮಾರಾಟ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಜ್ಯೂಸ್‌ ಅಂಗಡಿಗಳಿಗೆ ಗ್ರಾಹಕರು ತೆರಳದೆ ಇರುವುದರಿಂದ ಖಾಲಿ ಖಾಲಿ ಹೊಡೆಯುತ್ತಿವೆ.
‘ಐದರಿಂದ ಹತ್ತು ಸಾವಿರ ಬಾಡಿಗೆ ಕಟ್ಟುವ ಜೊತೆಗೆ ಕಾರ್ಮಿಕರಿಗೂ ಕೂಲಿ ನೀಡಬೇಕಾಗಿದೆ. ಗ್ರಾಹಕರು ಮಾತ್ರ ನಮ್ಮ ಅಂಗಡಿಗಳಿಗೆ ಸುಳಿಯುತ್ತಿಲ್ಲ. ಬಾಡಿಗೆ ಹೇಗೆ ಕಟ್ಟಬೇಕು ಎನ್ನುವುದು ತಿಳಿಯದಂತಾಗಿದೆ. ಕೊರೊನಾ ಸೋಂಕು ನಮಗೆ ಆರು ತಿಂಗಳ ಆದಾಯವನ್ನೇ ಬರದಂತೆ ಮಾಡಿ ಬಿಟ್ಟಿದೆ’ ಎಂದು ಜ್ಯೂಸ್‌ ಅಂಗಡಿ ಮಾಲೀಕ ಮಹ್ಮದ್‌ ಆನಿಫ್‌ ಹೇಳುತ್ತಾರೆ.
‘ಕೊರೊನಾ ನೆಪದಿಂದ ಐಸ್‌ ಕ್ರೀಂ ಸೇವಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ಹೆಚ್ಚಿನ ರೀತಿಯಲ್ಲಿ ಆರ್ಡರ್‌ ಮಾಡುತ್ತಿಲ್ಲ. ಬದಲಾಗಿ ಹಾಲು ಮಾರಾಟದ ಮಳಿಗೆಯನ್ನಾಗಿ ಮಾಡಿಕೊಂಡಿದ್ದೇವೆ. ಐಸ್‌ ಕ್ರೀಂ ಋತುಮಾನಕ್ಕೆ ತಕ್ಕಂತೆ ಇದ್ದರೆ ಹಾಲು ನಿರಂತರ ಮಾರಾಟವಾಗುತ್ತದೆ. ಹೀಗಾಗಿ ಇದನ್ನು ಅವಲಂಬಿಸಿದ್ದೇವೆ’ ಎನ್ನುತ್ತಾರೆ ಮಲ್ಲಿಕಾರ್ಜುನ ಪಾಟೀಲ.
‘ನಮ್ಮಲ್ಲಿ ₹10 ರೂಪಾಯಿಯಿಂದ ಆರಂಭಗೊಂಡು ₹280 ಕುಟುಂಬ ಸಮೇತ ಸೇವಿಸುವ ಐಸ್‌ ಕ್ರೀಂಗಳಿವೆ. ಆದರೆ, ಗ್ರಾಹಕರು ಬರುತ್ತಿಲ್ಲ. ಇದರಿಂದ ನಮಗೆ ಈ ಬಾರಿ ತುಂಬಾ ನಷ್ಟವಾಗಿದೆ. ಇದರಿಂದ ಹೊರ ಬರಲು ಕನಿಷ್ಠ ಮೂರ್ನಾಲು ತಿಂಗಳುಗಳೇ ಬೇಕಾಗುತ್ತವೆ’ ಎನ್ನುತ್ತಾರೆ ಅವರು.
ನಗರದಲ್ಲಿ ಜನವರಿ, ಫೆಬ್ರವರಿ ತಿಂಗಳಲ್ಲಿ ಆಂಧ್ರದಿಂದ ಬಂದಿದ್ದ ಕೆಲವರು ರಸ್ತೆ ಬದಿಯಲ್ಲಿಯೇ ಜ್ಯೂಸ್‌ ಅಂಗಡಿಗಳನ್ನು ತೆರೆದಿದ್ದರು. ಈಗ ಅವರಿಗೆ ತೆರೆಯಲು ಅನುಮತಿ ಇಲ್ಲದಿದ್ದರಿಂದ ಹಾಕಿದ ಬಂಡವಾಳವೂ ಇಲ್ಲದಂತಾಗಿದೆ. ಕೆಲವರು ಹೊಸ ಯಂತ್ರಗಳನ್ನು ಖರೀದಿಸಿ ತಂದಿದ್ದರು. ಅಲ್ಲದೆ ಭರ್ಜರಿ ಲಾಭದ ಆಸೆಯನ್ನು ಹೊಂದಿದ್ದರು. ಆದರೆ, ಕೊರೊನಾ ಹೊಡೆತದಿಂದ ಅವರಿಗೆ ನಷ್ಟವುಂಟು ಮಾಡಿದೆ. ವಿವಿಧ ಜ್ಯೂಸ್‌ ಮಾರಾಟ ಮಾಡುವವರು ಈಗ ಅಲ್ಲಿಯೇ ಹಣ್ಣುಗಳನ್ನು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಹಕರಿಗೆ ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ, ಮಾರಾಟಗಾರರಿಗೆ ಮಾತ್ರ ಕಹಿಯನ್ನು ಉಣಬಡಿಸುತ್ತಿವೆ. ಬೇಸಿಗೆಯಲ್ಲಿ ಭರ್ಜರಿ ಲಾಭ ತಂದು ಕೊಡುತ್ತಿದ್ದ ಐಸ್‌ಕ್ರೀಂ ವ್ಯಾಪಾರ ಈಗ ನೆಲಕಚ್ಚಿದೆ. ವಿವಿಧ ಕಂಪನಿ ಬಣ್ಣ ಬಣ್ಣದ ಆಕೃತಿಗಳೊಂದಿಗೆ ಬೇಸಿಗೆ ವೇಳೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇಷ್ಟ ಪಡುತ್ತಿದ್ದರು. ಆದರೆ, ಈಗ ಕೊರೊನಾ ಭಯದಿಂದ ಐಸ್‌ ಕ್ರೀಂ ಸೇವನೆಯೇ ಬಿಟ್ಟಿದ್ದಾರೆ ಎಂದು ಅಂಗಡಿಗಳ ಮಾಲೀಕರು ಸಂಕಷ್ಟ ತೋಡಿಕೊಂಡರು.
ರಬಕವಿ ಬನಹಟ್ಟಿ | ಐಸ್‌ಕ್ರೀಮ್‌ ಪಾರ್ಲರ್‌ಗೆ ಲಾಕ್‌ಡೌನ್‌ ಬಿಸಿ
ಲಾಕ್‌ಡೌನ್‌ | ಕೊರೊನಾಗೆ ಕರಗಿದ ಐಸ್‌ಕ್ರೀಂ ಉದ್ಯಮ
ಐಸ್ ಕ್ರೀಂ ಖರೀದಿಗೆ ಹಿಂದೇಟು
ಬೇಸಿಗೆಯಲ್ಲಿ ಕರಗಿ ನೀರಾಗಿ
ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ! | shodhanews
Home ಕವರ್ ಸ್ಟೋರಿ ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ!
ಆರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್‌ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳಗೆ ಕೂರಿಸೋದೆಂದರೆ ಅದೊಂದು ಕಠೋರ ಕಾರ್ಯ. ಸಾವು, ನೋವು, ಸಂಕಟಗಳಾಚೆಗೂ ಅದರಲ್ಲಿಯೂ ಒಂದು ಮಟ್ಟಕ್ಕೆ ಯಶ ಸಿಕ್ಕಿತ್ತು. ಆದರೆ ಇದೀಗ ಖುದ್ದು ಸರ್ಕಾರಗಳೇ ಕೊರೋನಾ ವೈರಸ್ಸಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುವಂಥ ಮುಠ್ಠಾಳ ಕ್ರಮಗಳನ್ನು ಅನುಸರಿಸುತ್ತಿದೆ. ಇಂಥಾ ದರಿದ್ರದ ನೀತಿ ನಿಯಮಾವಳಿಗಳಿಂದ ದೇಶ ಯಾವ ಅಪಾಯದ ಅಂಚಿನತ್ತ ಹೊರಳುತ್ತಿದೆ ಅನ್ನೋದಕ್ಕೆ ಭಾರತದ ಪುಟ್ಟ ರಾಜ್ಯ ಗೋವಾಕ್ಕಿಂತಲೂ ಸೂಕ್ತ ಉದಾಹರಣ ಬೇರೊಂದಿಲ್ಲ.
ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಭಾರತದ ಚಿಕ್ಕ ರಾಜ್ಯವಾಗಿ ಗುರುತಿಸಿಕೊಂಡಿರೋ ಗೋವಾ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿಕೊಂಡಿದೆ. ವಿದೇಶಿಯರು ಬಂದು ಗುಡ್ಡೆ ಬೀಳುವ ಈ ಪ್ರದೇಶ ಪ್ರವಾಸಪ್ರಿಯರ ಪಾಲಿನ ಹಾಟ್‌ಸ್ಪಾಟ್ ಕೂಡಾ ಹೌದು. ಈ ರಾಜ್ಯದ ಅಸಲೀ ಬಂಡವಾಳವೇ ಪ್ರವಾಸೋದ್ಯಮ. ಹಾಗಿದ್ದ ಮೇಲೆ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಥಂಡಾ ಹೊಡೆದಾಗ ಹೆಚ್ಚು ಕಾಲ ಈ ರಾಜ್ಯ ಅದನ್ನು ತಡೆದುಕೊಳ್ಳಲು ಸಾಧ್ಯವಿರಲಿಲ್ಲ. ವಿಶೇಷವೆಂದರೆ, ಪ್ರವಾಸಿಗರಿಂದ ಪಿತಗುಡುತಿದ್ದರೂ ಈ ರಾಜ್ಯ ಗ್ರೀನ್ ಝೋನಿನಲ್ಲಿತ್ತು.
ಇದನ್ನೇ ಮುಂದಿಟ್ಟುಕೊಂಡು ತರಾತುರಿಯಲ್ಲಿ ಗೋವಾದಲ್ಲಿ ಪ್ರವಾಸೋಧ್ಯಮಕ್ಕೆ ಚಾಲನೆ ಕೊಡಲಾಗಿತ್ತು. ಇದರ ಬಗ್ಗೆ ದೇಶಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಇದು ಈಗ ಅಗತ್ಯವಿರಲಿಲ್ಲ ಎಂಬ ವಿಶ್ಲೇಷಣೆಗಳೂ ಹಬ್ಬಿಕೊಂಡಿದ್ದವು. ಈ ಹಂತದಲ್ಲಿ ಗೋವಾ ಪ್ರವಾಸೋದ್ಯಮ ಸಚಿವರು ಶ್ರೀಮಂತ ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡುವ ಪಡಪೋಶಿ ಹೇಳಿಕೆಯನ್ನೂ ರವಾನಿಸಿದ್ದರು. ತಮಾಶೆಯೆಂದರೆ, ಕೊರೋನಾ ವೈರಸ್ಸು ಭಾರತಕ್ಕೆ ಬಂದಿದ್ದೇ ಶ್ರೀಮಂತ ಕುಳಗಳಿಂದ. ಈ ನೆಲದ ಯಾವ ಬಡವರಿಗೂ ಗೋವಾ ಬೀಚಿಗೆ ಹೋಗಿ ಬರೀ ಕಾಚದಲ್ಲಿ ಬೋರಲು ಬಿದ್ದುಕೊಳ್ಳುವಂಥ ಶೋಕಿ ಅಮರಿಕೊಂಡಿಲ್ಲ.
ಹೀಗೆ ಯಡವಟ್ಟು ಆಸಾಮಿ ಪ್ರವಾಸೋದ್ಯಮ ಸಚಿವ ಶ್ರೀಮಂತ ಪ್ರವಾಸಿಗರನ್ನು ಬೀಚಿಗೆ ಆಹ್ವಾನಿಸಿದನಲ್ಲಾ? ಅದರ ದೆಸೆಯಿಂದ ಗ್ರೀನ್ ಝೋನಿನಲ್ಲಿದ್ದ ಗೋವಾ ರೆಡ್ ಝೋನ್ ತಲುಪಿಕೊಂಡಿದೆ. ಅಲ್ಲಿನ ಕಡಲ ತಡಿಯ ತಾಪಮಾನಕ್ಕೆ ಪೈಪೋಟಿ ನೀಡುವಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಕೊಳ್ಳುತ್ತಿದೆ. ಇದೀಗ ಸೇಫಾಗಿದ್ದ ಈ ರಾಜ್ಯ ತಾನೇ ತಾನಾಗಿ ಕೊರೋನಾವನ್ನು ತಬ್ಬಿಕೊಂಡಿದೆ. ಸದ್ಯಕ್ಕೆ ಅಲ್ಲಿ ಐವತ್ತೆರಡು ಕೇಸುಗಳಿದ್ದಾವೆ. ಪ್ರವಾಸೋದ್ಯಮಕ್ಕಾಗಿ ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡಿರೋದರಿಂದ ಕೊರೋನ ಆ ರಾಜ್ಯವನ್ನು ಬೇಗನೆ ಆವರಿಸಿಕೊಳ್ಳುವ ಎಲ್ಲ ಅಪಾಯಗಳೂ ಇವೆ. ಕೇಂದ್ರ ಸರ್ಕಾರ ಕಣ್ಣೆದುರಿಗೇ ನಡೆಯುತ್ತಿರೋ ಈ ವಿದ್ಯಮಾನಗಳಿಂದಲಾದರೂ ಎಚ್ಚೆತ್ತುಕೊಳ್ಳಬಹುದೇ?
Previous articleಭಾರತದಲ್ಲೀಗ ಸ್ಯಾನಿಟರಿ ಪ್ಯಾಡ್‌ಗೂ ಬರ!
Next articleಹಿತ್ತಲಿಂದ ಯುದ್ಧ ಘೋಷಣೆ ಮಾಡೋ ಕುನ್ನಿಗಳಿಗೆ ಹಚಾ ಅನ್ನಿ!ಅಪರಿಚಿತ ಮಹಿಳೆಯ ಶವ ಪತ್ತೆ | Vartha Bharati- ವಾರ್ತಾ ಭಾರತಿ
ವಾರ್ತಾ ಭಾರತಿ Feb 21, 2020, 11:05 PM IST
ಮಂಡ್ಯ, ಫೆ.21: ತಾಲೂಕಿನ ಹೆಮ್ಮಿಗೆ ಗ್ರಾಮದ ಹೊರವಲಯದ ಆಲೆಮನೆ ಬಳಿ ಅಪರಿಚಿತ ಮಹಿಳೆಯ ತುಂಡಾದ ಕೈ, ಕಾಲು, ರುಂಡ, ಮುಂಡ ಪತ್ತೆಯಾಗಿವೆ.
ನಾಯಿಯೊಂದು ತುಂಡಾದ ಕೈಯನ್ನು ತಿನ್ನುತ್ತಿದ್ದುದ್ದನ್ನು ಮಕ್ಕಳು ನೋಡಿ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದಾಗ ಮಹಿಳೆಯ ಈ ಶವ ಪತ್ತೆಯಾಗಿದೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಂಡ್ಯದಲ್ಲಿ ಕೊರೋನ ದೃಢಪಟ್ಟಿಲ್ಲ, ಜನತಾ ಕರ್ಫ್ಯೂಗೆ ಸಹಕರಿಸಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್
ವಿದೇಶದಿಂದ ಬಂದ ಇಬ್ಬರಲ್ಲೂ ಕೊರೋನ ವೈರಸ್ ಇಲ್ಲ: ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಸ್ಪಷ್ಟನೆ
ಮಂಡ್ಯ ಜಿಲ್ಲೆಯಲ್ಲಿ ಕೊರೋನಾ ಪತ್ತೆಯಾಗಿಲ್ಲ: ಡಿಸಿ ಡಾ.ವೆಂಕಟೇಶ್
ಮಂಡ್ಯ: ರೈತರ ಒಡವೆ ಹರಾಜು ವಿರೋಧಿಸಿ ರೈತಸಂಘ ಪ್ರತಿಭಟನೆ"ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ"; ನಗುತ್ತಲೇ ತಿವಿದ ಡಿವಿಎಸ್ | DV Sadananda Gowda Reaction On Mangaluru Video Released By Hd Kumaraswamy - Kannada Oneindia
1 min ago ಕೊರೊನಾ ಬೆನ್ನಲ್ಲೇ ಹಂದಿ ಜ್ವರದ ಭೀತಿ: ಬಾಗಿಲು ಮುಚ್ಚಿದ ಸಾಫ್ಟ್‌ವೇರ್ ಕಂಪೆನಿ
32 min ago ಪಾಕ್ ಪರ ಘೋಷಣೆ; ಅಮೂಲ್ಯ ಲಿಯೋನ್ ವಿರುದ್ಧ ವ್ಯಾಪಕ ಪ್ರತಿಭಟನೆ
43 min ago ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ
| Updated: Saturday, January 11, 2020, 12:52 [IST]
ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿರವರು ಬಿಡುಗಡೆ ಮಾಡಿರುವ ವಿಡಿಯೋ ವಿಷಯವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಿ.ಡಿಗಳು ರಾಜಕೀಯದಲ್ಲಿರುವ ಹಲವರಿಗೆ ತಮ್ಮ ರಾಜಕೀಯದ ಅಸ್ತಿತ್ವದ ಸ್ವತ್ತುಗಳಾಗಿ ಪರಿವರ್ತನೆಯಾಗಿವೆ. ಯಾವುದೋ ಫೇಕ್ ಸಿಡಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡೋದು. ಆಮೇಲೆ ಅದರ ಹಿಂದೆ ಯಾರೂ ಹೋಗುವುದಿಲ್ಲ. ಕರ್ನಾಟಕದಲ್ಲಿ ಬಿಡುಗಡೆಯಾದ ಸಿಡಿಗಳ ಸಂಖ್ಯೆ ನೋಡಿದ್ರೆ ಇಷ್ಟು ಹೊತ್ತಿಗೆ ಅದೆಷ್ಟೋ ಜನರು ಜೈಲಿಗೆ ಹೋಗಬೇಕಿತ್ತು" ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಅಲ್ಲದೇ, "ಆ ಸಿಡಿ ರೆಡಿ ಮಾಡಲು ಇಷ್ಟು ದಿನ ಬೇಕಿತ್ತಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. "ಘಟನೆ ನಡೆದ ಕೆಲವು ದಿನಗಳಲ್ಲೇ ಸಿಡಿ ಬಿಡುಗಡೆ ಮಾಡಬಹುದಿತ್ತು. ಆದರೆ ತಮ್ಮ ರಾಜಕೀಯ ಮೆಟ್ಟಿಲು ಕುಸಿಯುತ್ತಿರುವ ಸಮಯದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಕಾರ್ಯಾಚರಣೆ ಇದು. ಇದರ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ" ಎಂದರು.
ವಕೀಲರ ಭವನದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸಂವಾದ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, "ಗೂಟದ ಕಾರು ಬಿಟ್ಟು ಸ್ವಂತ ಕಾರಿನಲ್ಲಿ ಹೋದರೆ ಕೆಲವರಿಗೆ ನಿರಾಸೆಯಾಗುವುದು ಸಹಜ. ಅದರಂತೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ" ಎಂದರು.
ಸಂಪುಟ ರಚನೆ ವಿಚಾರವಾಗಿಯೂ ಮಾತನಾಡಿ, "ನಾವು ಅನರ್ಹರಾಗಿದ್ದ ಶಾಸಕರಿಗೆ ಮಾತು ಕೊಟ್ಟಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ವಿಸ್ತರಣೆಯ ಸಂಪೂರ್ಣ ಅಧಿಕಾರ ಸಿಎಂಗೆ ಬಿಟ್ಟಿದ್ದು" ಎನ್ನುವ ಮೂಲಕ ಎಲ್ಲಾ ನೂತನ ಶಾಸಕರಿಗೆ ಸಚಿವ ಸ್ಥಾನ ಸಿಗುವ ಕುರಿತಂತೆ ಪರೋಕ್ಷವಾಗಿ ಸುಳಿವು ನೀಡಿದರು.
video kumaraswamy jds politics mandya ಕುಮಾರಸ್ವಾಮಿ ಜೆಡಿಎಸ್ ರಾಜಕೀಯ ಮಂಡ್ಯ
HD Kumaraswamy released video only to get advantage for his political life. There is nothing in that cd said central minister dv sadananda gowda in mandya,ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ | Udupixpress | ಉಡುಪಿ Xpress
Home Trending ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ
ಕೊರೊನಾಗೆ ರಾಜ್ಯದಲ್ಲಿ ಒಂದೇ ದಿನ 257 ಪ್ರಕರಣ ದಾಖಲು, ಸೋಂಕಿಗೆ 57 ಮಂದಿ ಬಲಿ
ಬೆಂಗಳೂರು: ಕೊವೀಡ್೧೯ ಸೋಂಕಿನಿಂದ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಸೋಂಕಿಗೆ ಸಾವಿಗೀಡಾದವರ ಸಂಖ್ಯೆ ಒಟ್ಟು 57ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಗುರುವಾರ ವರದಿಯಾದ ಪ್ರಕರಣಗಳು:
ಉಡುಪಿಯಲ್ಲಿ 92, ರಾಯಚೂರಿನಲ್ಲಿ 88, ಮಂಡ್ಯದಲ್ಲಿ 15, ಹಾಸನದಲ್ಲಿ 15, ದಾವಣಗೆರೆಯಲ್ಲಿ 13, ಬೆಳಗಾವಿಯಲ್ಲಿ 12, ಬೆಂಗಳೂರಿನಲ್ಲಿ 9, ದಕ್ಷಿಣ ಕನ್ನಡದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 2, ಗದಗದಲ್ಲಿ 2 ಹಾಗೂ ವಿಜಯಪುರ, ಮೈಸೂರು, ಬಳ್ಳಾರಿ, ತುಮಕೂರು, ಹಾವೇರಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.
ಒಟ್ಟು 106 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
Previous articleಬಂಟ್ವಾಳದಲ್ಲಿ ಸಿಕ್ತು ಬಿಳಿ ಬಣ್ಣದ ಅಪರೂಪದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಪಿಲಿಕುಳಕ್ಕೆ ಬಿಟ್ರು ಸ್ನೇಕ್ ಕಿರಣ್
Next articleಕಾಲೇಜು ವಿದ್ಯಾರ್ಥಿಗಳೇ, ನಿಮ್ಮ ಲಾಕ್ ಡೌನ್ ಹೊತ್ತು ಹೇಗಿತ್ತೆಂದು ನಮಗೆ ತಿಳಿಸಿ, ಒಂದು ವಿಡಿಯೋ ಕಳಿಸಿಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ | Prajavani
ಸಂಪಾದಕೀಯ | ಸಾರ್ವಜನಿಕ ಸಾರಿಗೆ ಶುರುವಾಗಲಿ: ಸೋಂಕು ಜಾಗೃತಿ ಗರಿಷ್ಠವಾಗಿರಲಿ
ಸಂಪಾದಕೀಯ Updated: 13 ಮೇ 2020, 07:07 IST
ಕೊರೊನಾ ವೈರಾಣು ಪಸರಿಸುವಿಕೆ ತಡೆಯುವ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದೆ ಹೇರಲಾದ ಲಾಕ್‌ಡೌನ್‌ನಿಂದಾಗಿ ದೇಶದ ಜನಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ‘ಎಲ್ಲಿರುವಿರೋ ಅಲ್ಲಿಯೇ ಇರಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ ಘೋಷಿಸಿದ ಸಂದರ್ಭದಲ್ಲಿ ಹೇಳಿದ್ದರು. ಕಣ್ಣಿಗೆ ಕಾಣದ ವೈರಿಯ ವಿರುದ್ಧದ ಹೋರಾಟದಲ್ಲಿ ಇದು ಅನಿವಾರ್ಯ ಎಂದು ಜನರು ಅದನ್ನು ಪಾಲಿಸಿದ್ದರು. ಆದರೆ, ಎಲ್ಲೆಲ್ಲೋ ಇರುವವರು ಅಲ್ಲಲ್ಲೇ ಇರುವುದು ಎಷ್ಟು ತ್ರಾಸದಾಯಕ ಎಂಬುದು ಲಾಕ್‌ಡೌನ್‌ ಮತ್ತೆ ಮತ್ತೆ ವಿಸ್ತರಣೆಯಾದಾಗ ಅರಿವಾಗುತ್ತಾ ಹೋಯಿತು.
ಜನ ಮತ್ತು ಜೀವನೋಪಾಯ, ವ್ಯಾಪಾರೋದ್ಯಮ ಮತ್ತು ಅರ್ಥ ವ್ಯವಸ್ಥೆಗಳೆಲ್ಲವೂ ತಾಳತಪ್ಪಿ, ಕೊರೊನಾಕ್ಕಿಂತ ದೊಡ್ಡ ಸಂಕಷ್ಟದತ್ತ ಸಾಗುತ್ತಿದ್ದೇವೆ ಎಂಬುದರ ಸೂಚನೆಗಳು ಇತ್ತೀಚಿನ ಕೆಲ ವಾರಗಳಲ್ಲಿ ಸಿಕ್ಕಿವೆ. ಎಲ್ಲೆಲ್ಲೋ ಇದ್ದವರು ಮನೆ ಸೇರುವ ತವಕದಲ್ಲಿ ತಮಗೆ ಮತ್ತು ತಮ್ಮಿಂದ ಇತರರಿಗೆ ಕೊರೊನಾ ಸೋಂಕು ತಗುಲಬಹುದು ಎಂಬುದನ್ನೇ ಮರೆತರು. ಭಾರತದಂತಹ ಅರ್ಥ ವ್ಯವಸ್ಥೆಯಲ್ಲಿ ಕಾರ್ಮಿಕರು ಅಮೂಲ್ಯ. ಆದರೆ, ಅಂತಹ ಕಾರ್ಮಿಕರು ನೂರಾರು ಕಿಲೊಮೀಟರ್‌ ನಡೆದು, ಸೈಕಲ್ ತುಳಿದು ಊರು ಸೇರಬೇಕಾದ ಸ್ಥಿತಿ, ಈ ಅನಿವಾರ್ಯ ಪಯಣದಲ್ಲಿ ಎದುರಿಸಿದ ತೊಂದರೆಗಳು, ಕೆಲವರು ಜೀವವನ್ನೇ ತೆತ್ತ ಉದಾಹರಣೆಗಳೂ ನಮ್ಮ ಮುಂದೆ ಈಗ ಇವೆ. ಹಳಿ ತಪ್ಪಿರುವ ವ್ಯವಸ್ಥೆಯನ್ನು ಇನ್ನಾದರೂ ಹಳಿಗೆ ತಾರದಿದ್ದರೆ, ಜನಜೀವನದ ಮೇಲೆ ಈಗಾಗಲೇ ಬಿದ್ದಿರುವ ಮತ್ತು ಮುಂದೆ ಬೀಳಲಿರುವ ಹೊಡೆತವನ್ನು ತಾಳಿಕೊಳ್ಳುವುದು ಈ ದೇಶಕ್ಕೆ ಸುಲಭ ಸಾಧ್ಯವಲ್ಲ. ಹಾಗಾಗಿಯೇ, ಒಂದು ವಾರದಿಂದ ನಿರ್ಬಂಧಗಳಲ್ಲಿ ತುಸು ಸಡಿಲಿಕೆ ಆಗಿದೆ. ಆದರೆ, ಈ ದಿನಗಳಲ್ಲಿ, ಕೋವಿಡ್‌–19 ಪ್ರಕರಣಗಳು ದೃಢಪಡುತ್ತಿರುವ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯಾಗಿದೆ. ಇದು ಆಡಳಿತ ನಡೆಸುತ್ತಿರುವವರಲ್ಲಿ ದ್ವಂದ್ವ ಮತ್ತು ಕಳವಳ ಮೂಡಿಸಿರುವ ಸಾಧ್ಯತೆಗಳಿವೆ.
ಪ್ರಧಾನಿ ಜತೆಗೆ ಮುಖ್ಯಮಂತ್ರಿಗಳು ಸೋಮವಾರ ನಡೆಸಿದ ವಿಡಿಯೊ ಸಂವಾದದಲ್ಲಿ ಇದು ವ್ಯಕ್ತವಾಗಿದೆ. ಆರ್ಥಿಕ ಚಟುವಟಿಕೆಗಳು ಮತ್ತು ಸಾರ್ವಜನಿಕ ಸಾರಿಗೆ ಆರಂಭವಾಗಲೇಬೇಕಿದೆ ಎಂಬ ವಿಚಾರದಲ್ಲಿ ಮುಖ್ಯಮಂತ್ರಿಗಳಲ್ಲಿ ಸಹಮತ ಕಾಣಿಸಿಲ್ಲ. ಸೋಮವಾರದಿಂದ 15 ಮಾರ್ಗಗಳಲ್ಲಿ 30 ರೈಲುಗಳ ಸೇವೆ ಆರಂಭವಾಗಿದೆ. ಈ ರೈಲು ಸಂಚಾರಕ್ಕೆ ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣದ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂತರರಾಜ್ಯ ಸಾರ್ವಜನಿಕ ಸಾರಿಗೆ ಶುರುವಾಗಲಿ ಎಂದು ಗೋವಾ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಅವಕಾಶ ಕೊಡಿ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೂ ಕೋರಿದ್ದಾರೆ ಎಂದು ವರದಿಯಾಗಿದೆ. ಆರ್ಥಿಕ ಚಟುವಟಿಕೆಗೆ ಚಾಲನೆ ನೀಡಲು ಮಾತ್ರವಲ್ಲ, ಎಲ್ಲೆಲ್ಲೋ ಸಿಲುಕಿಕೊಂಡಿರುವವರು ತಮ್ಮ ಗಮ್ಯ ಸೇರಲು ಕೂಡ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಬೇಕಿದೆ. ಲಾಕ್‌ಡೌನ್‌ನಿಂದಾಗಿ ಅಪರಿಚಿತ ನಗರದಲ್ಲಿ ಸಿಲುಕಿಕೊಂಡ ಕಾರ್ಮಿಕರು ಊರಿಗೆ ಮರಳಲು ಸರ್ಕಾರವೇ ಶ್ರಮಿಕ ರೈಲು ವ್ಯವಸ್ಥೆ ಮಾಡಿದೆ. ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಈಗ ಊರು ಸೇರಿಕೊಂಡಿದ್ದಾರೆ. ಗ್ರಾಮಗಳ ಜನರು ದುಡಿಯಲು ಬಾರದೇ ಇದ್ದರೆ ಪಟ್ಟಣ, ನಗರಗಳ ಕಾರ್ಖಾನೆಗಳ ಯಂತ್ರ ತಿರುಗುವುದಿಲ್ಲ. ಎಲ್ಲವೂ ಸಹಜ ಸ್ಥಿತಿಯತ್ತ ಹೊರಳುತ್ತಿದೆ ಎಂಬ ಭಾವನೆಯನ್ನು ಜನರಲ್ಲಿ ಬಿತ್ತುವುದು ಕೂಡ ಭಾವನಾತ್ಮವಾಗಿ ಬಹಳ ಮುಖ್ಯ. ಸರಕು ಸಾಗಾಟ ಮತ್ತು ಜನ ಸಂಚಾರವು ಅರ್ಥವ್ಯವಸ್ಥೆಯ ಜೀವನಾಡಿ ಇದ್ದಂತೆ. ಹಾಗಾಗಿ, ಸಾರ್ವಜನಿಕ ಸಾರಿಗೆಯನ್ನು ಆರಂಭಿಸುವ ದಿಸೆಯಲ್ಲಿ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು.
ಕೊರೊನಾ ಪಿಡುಗು ಹರಡುವ ವೇಗ ಮತ್ತು ವಿಧಾನಗಳೆರಡನ್ನೂ ಗಮನದಲ್ಲಿ ಇರಿಸಿಕೊಂಡೇ ಈ ನಿರ್ಧಾರ ಕೈಗೊಳ್ಳಬೇಕು. ಬಸ್ಸು, ರೈಲು ಮತ್ತು ಈ ಎರಡರ ನಿಲ್ದಾಣಗಳು ಎಷ್ಟು ಕೊಳಕಾಗಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಈಗಿನ ಸನ್ನಿವೇಶದಲ್ಲಿಯೂ ಅದೇ ಕೊಳಕುತನವನ್ನು ಮುಂದುವರಿಸಿದರೆ ಅದಕ್ಕೆ ತೆರಬೇಕಾದ ಬೆಲೆಯನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಹಾಗಾಗಿ, ನಿಲ್ದಾಣಗಳು, ರೈಲು, ಬಸ್ಸುಗಳನ್ನು ಸ್ವಚ್ಛಗೊಳಿಸಬೇಕು, ಸೋಂಕುಮುಕ್ತಗೊಳಿಸಬೇಕು. ಸಾರ್ವಜನಿಕ ಸಾರಿಗೆಯಲ್ಲಿ ಸೋಂಕು ಒಂದೂರಿನಿಂದ ಇನ್ನೊಂದು ಊರಿಗೆ ಸಾಗುತ್ತಿಲ್ಲ ಎಂಬುದನ್ನು ಖಾತರಿ‍ಪಡಿಸಿಕೊಳ್ಳಬೇಕು. ಅತ್ಯಂತ ಆರೋಗ್ಯಕರವಾದ, ಗರಿಷ್ಠ ಎಚ್ಚರದ ಪ್ರಯಾಣ ಸಾಧ್ಯವಾಗುವಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಜನ ಕೂಡ ಸಣ್ಣ ಉದಾಸೀನಕ್ಕೂ ಎಡೆಮಾಡಿಕೊಡದೆ ಜಾಗೃತರಾಗಿರಬೇಕು. ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆ ರಾಜ್ಯಗಳಲ್ಲಿ ಒಮ್ಮತ ಇಲ್ಲ. ಹಾಗಾಗಿ, ಯಾವೆಲ್ಲ ಜಾಗರೂಕತೆ ಇರಬೇಕು ಎಂಬ ಮಾರ್ಗಸೂಚಿಯನ್ನು ಕೇಂದ್ರವೇ ಸಿದ್ಧಪಡಿಸುವುದು ಒಳಿತು.
‘ಕೊರೊನಾ ಸುರಕ್ಷಾ ಕವಚ’ ಕೊರತೆ!? | Prajavani
‘ಕೊರೊನಾ ಸುರಕ್ಷಾ ಕವಚ’ ಕೊರತೆ!?
ದೊಡ್ಡ ಜಿಲ್ಲೆಯಲ್ಲಿ ಲಭ್ಯವಿರುವುದು ಕೆಲವು ಮಾತ್ರ
ಎಂ. ಮಹೇಶ Updated: 24 ಮಾರ್ಚ್ 2020, 18:13 IST
ಬೆಳಗಾವಿ: ಕೊರೊನಾ ವೈರಾಣು ಸೋಂಕು ಬಂದವರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಕೋವಿಡ್–19ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆಂದು ಒದಗಿಸಲಾಗುವ ‘ಕೊರೊನಾ ಸುರಕ್ಷಾ ಕವಚದ ಕಿಟ್‌’ಗಳ ಕೊರತೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ 55 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಅವರೆಲ್ಲರ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಸಾವಿರಾರು ಮಂದಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋವಿಡ್‌–19ಗೆ ಒಳಗಾದವರನ್ನು ಉಪಚರಿಸುವವರು ಈ ಸುರಕ್ಷಾ ಕವಚ ಧರಿಸಿಕೊಳ್ಳದಿದ್ದಲ್ಲಿ ಅವರಿಗೂ ಸೋಂಕು ತಗಲುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪ್ರಮಾಣದಲ್ಲಿ ಕಿಟ್‌ಗಳನ್ನು ಪೂರೈಸುವ ಕೆಲಸ ಸರ್ಕಾರದಿಂದ ನಡೆದಿಲ್ಲ.
‘ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್ ಇಕ್ಯು‍ಪ್‌ಮೆಂಟ್‌) ಇಲಾಖೆಯ ಕೇಂದ್ರ ಕಚೇರಿ ಮಟ್ಟದಲ್ಲಿಯೇ ಒಂದಿಷ್ಟು ಕಿಟ್‌ಗಳನ್ನು ಕಳುಹಿಸಿಕೊಡಲಾಗಿದೆ. ಹೆಚ್ಚಾಗಿ ಬೇಕಾದರೆ ಸ್ಥಳೀಯ ಆರೋಗ್ಯ ರಕ್ಷಾ ಸಮಿತಿಯ ನಿಧಿಯಿಂದ ಖರೀದಿಸುವಂತೆ ಸೂಚಿಸಲಾಗಿದೆ. ಆದರೆ, ಸ್ಥಳೀಯವಾಗಿ ಅವುಗಳ ಲಭ್ಯತೆ ಇಲ್ಲ. ಇದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಸಂಗ್ರಹವಿದೆ:
ಈ ಕುರಿತು ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಪ್ರಸ್ತುತ ಬಿಮ್ಸ್‌ನಲ್ಲಿ 150, ಕೆಎಲ್ಇ ಆಸ್ಪತ್ರೆಯಲ್ಲಿ 250, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ 90 ಕೊರೊನಾ ಸುರಕ್ಷಾ ಕಿಟ್‌ಗಳನ್ನು ಸಂಗ್ರಹಿಸಲಾಗಿದೆ. ಜನಸಂಖ್ಯೆ ಆಧರಿಸಿ ಇಲಾಖೆಯಿಂದಲೇ ಪೂರೈಸಲಾಗುತ್ತಿದೆ. ಜಿಲ್ಲೆಗೆ ಮತ್ತಷ್ಟು ಕಿಟ್‌ಗಳು ಅಗತ್ಯ ಇದ್ದು, ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ಮಾಹಿತಿ ನೀಡಿದರು.
ಸಿಬ್ಬಂದಿಗೆ ನೀಡುವ ಈ ಸುರಕ್ಷಾ ಕವಚಗಳನ್ನು ಕೋವಿಡ್‌–19 ಪಾಸಿಟಿವ್ ಲಕ್ಷಣಗಳು ಕಂಡುಬಂದವರನ್ನು ಕರೆತರುವಾಗ ಮಾತ್ರ ಬಳಸಲಾಗುತ್ತದೆ. ಇವು ‘ಒಮ್ಮೆ ಬಳಸಿ ಬಿಸಾಡುವಂಥವಾಗಿವೆ’. ಒಮ್ಮೆ ಹಾಕಿ ತೆಗೆದರೆ ಮುಗಿಯಿತು ಅದನ್ನು ಸಂಪೂರ್ಣವಾಗಿ ನಾಶ ಮಾಡಬೇಕಾಗುತ್ತದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಆಂಬ್ಯುಲೆನ್ಸ್‌ ಸಿಬ್ಬಂದಿ ಆಸ್ಪತ್ರೆಯಲ್ಲೇ ಈ ಕವಚಗಳನ್ನು ವಿಲೇವಾರಿ ಮಾಡಬೇಕು. ಅದೇ ರೀತಿ ವೈದ್ಯಕೀಯ ಸಿಬ್ಬಂದಿ ಕೂಡ ಅನುಸರಿಸಬೇಕು ಎಂದು ಮಾರ್ಗಸೂಚಿ ಇದೆ. ಪರಿಸ್ಥಿತಿ ಹೀಗಿರುವಾಗ, ಜಿಲ್ಲೆಯಲ್ಲಿ ಲಭ್ಯವಿರುವ ಸುರಕ್ಷಾ ಕಿಟ್‌ಗಳು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ!
ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಆಂಬ್ಯುಲೆನ್ಸ್‌ ಸಿಬ್ಬಂದಿ ಅಂದರೆ ಚಾಲಕ, ಅದರಲ್ಲಿನ ವೈದ್ಯ ಹಾಗೂ ಒಬ್ಬ ನರ್ಸ್‌, ಆಸ್ಪತ್ರೆಯಲ್ಲಿ ಗಾಲಿಕುರ್ಚಿಯಲ್ಲಿ ಸೋಂಕಿತರನ್ನು ಒಳಗಡೆಗೆ ಕರೆದೊಯ್ಯುವವರು, ತಪಾಸಣೆ ಮಾಡುವ ವೈದ್ಯ, ಉಪಚಾರ ಮಾಡುವ ನರ್ಸ್‌, ಭೇಟಿ ನೀಡುವ ಮೇಲ್ವಿಚಾರಕರು... ಹೀಗೆ ಕಡಿಮೆ ಸಂಖ್ಯೆ ಸಿಬ್ಬಂದಿ ಮಾತ್ರ ಈ ಕವಚ ಬಳಸಲು ಅನುಮತಿ ಇದೆ. ಹೀಗಾಗಿ, ಹೆಚ್ಚಿನ ಕಿಟ್‌ಗಳ ಅಗತ್ಯ ಬೀಳುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಏನಿದು ಕವಚ?
ತಿಳಿ ನೀಲಿ ಬಣ್ಣದ ದಪ್ಪ ಪ್ಲಾಸ್ಟಿಕ್‌ನಿಂದ ತಯಾರಿಸಿದ ಈ ಸುರಕ್ಷಾ ಕವಚಗಳು ಕೊರೊನಾ ವೈರಾಣು ದೇಹಕ್ಕೆ ಅಂಟಿಕೊಳ್ಳದಂತೆ ನಿರ್ಬಂಧಿಸುತ್ತವೆ. ಪಾದದಿಂದ ತಲೆಯವರೆಗೂ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಕವಚ ಇವಾಗಿವೆ. ತಲೆಯನ್ನು ಬಿಗಿದು ಸುತ್ತಿಕೊಳ್ಳುವಂತಹ ಕ್ಯಾಪ್‌, ಕಣ್ಣುಗಳಿಗೆ ಗಾಗಲ್‌, ಮೊಣಕೈ–ಮುಂಗೈ ಬಳಿ ಎಲಾಸ್ಟಿಕ್‌ ಲಾಕ್‌, ಮುಂಗೈಗೆ ಕೈಗವಸು, ಬಾಯಿ,ಮೂಗು, ಕಿವಿ ಮುಚ್ಚಿಕೊಳ್ಳುವಂಥ ಮುಖಗವಸು, ಅದರ ಮೇಲೆ ಮುಖದ ಅರ್ಧ ಭಾಗ ಮಾತ್ರ ಕಾಣುವಂತೆ ಮುಚ್ಚುವ ಪಾರದರ್ಶಕ ಸ್ಕೀನ್‌, ಕತ್ತು, ಹೊಟ್ಟೆ, ಬೆನ್ನು, ಎದೆ, ತೊಡೆ, ಕಾಲು ಮುಂತಾದ ಭಾಗಗಳನ್ನು ಪೂರ್ಣವಾಗಿ ಮುಚ್ಚುವ ನಿಲುವಂಗಿ ಮಾದರಿಯ ಕೋಟ್‌, ಕಾಲುಗಳಿಗೆ ಒಳಗೆ ಸಾಕ್ಸ್‌; ಅದರ ಮೇಲೆ ಗಮ್‌ ಬೂಟಿನ ಆಕಾರದ ಗಟ್ಟಿಯಾದ ಪ್ಲಾಸ್ಟಿಕ್‌ ಕವರ್‌... ಮೊದಲಾದವುಗಳನ್ನು ಕವಚಗಳು ಒಳಗೊಂಡಿರುತ್ತವೆ.
ಮೂಲನೆಲೆ / ಆರೋಗ್ಯ / ರೋಗಗಳು / ಹೃದಯ / ಹೃದಯಾಘಾತ
ಎದೆಯ ಮಧ್ಯ ಭಾಗದ, ಕೊಂಚ ಎಡ ಭಾಗಕ್ಕೆ ಹೃದಯ ಇರುತ್ತದೆ. ಹೃದಯವು ದಿನವೊಂದಕ್ಕೆ ಒಂದು ಲಕ್ಷ ಬಾರಿ ಬಡಿಯುತ್ತದೆ. ಪ್ರತಿ ಬಡಿತದೊಂದಿಗೂ ಇಡೀ ದೇಹಕ್ಕೆ ರಕ್ತವನ್ನು ಹೃದಯವು ತಳ್ಳುತ್ತದೆ. ನಿಮಿಷವೊಂದಕ್ಕೆ ಹೃದಯವು 60-90 ಬಾರಿ ಬಡಿದುಕೊಳ್ಳುತ್ತದೆ. ಹೃದಯವು ಸರಿಯಾಗಿ ಕಾರ್ಯ ನಿರ್ವಹಿಸಲು ಮಯೋಕಾರ್ಡಿಯಂ ಆರೋಗ್ಯಪೂರ್ಣವಾಗಿರಬೇಕು. ಹೃದಯಕ್ಕೆ ಅಗತ್ಯವಾದ ಪೋಷಕಗಳು ಹಾಗೂ ಆಮ್ಲಜನಕವನ್ನು ರಕ್ತನಾಳಗಳು (ಅಪಧಮನಿ, ಅಭಿಧಮನಿ) ಪೂರೈಸುತ್ತವೆ. ಹೃದಯವನ್ನು ಎಡ ಹಾಗೂ ಬಲ ಎಂದು ಎರಡು ಭಾಗಗಳಾಗಿ ವಿಭಜಿಸಬಹುದು. ಬಲಭಾಗವು ಎರಡು ಕೋಣೆಗಳನ್ನು ಅಂದರೆ, ಬಲ ಹೃತ್ಕರ್ಣ ಹಾಗೂ ಬಲ ಹೃತ್ಕುಕ್ಷಿಗಳೆಂದು ಕರೆಯಲಾಗುತ್ತದೆ. ಅದೇ ಬಗೆಯಲ್ಲಿ ಎಡ ಭಾಗದಲ್ಲಿಯೂ ಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳಿರುತ್ತವೆ. ದೇಹದ ಎಲ್ಲ ಭಾಗಗಳಿಂದ ಅಶುದ್ಧ ರಕ್ತವು ಬಲ ಹೃತ್ಕರ್ಣಕ್ಕೆ ಮೊದಲು ಬರುತ್ತದೆ. ಅಲ್ಲಿಂದ ಅದು ಬಲ ಹೃತ್ಕುಕ್ಷಿಗೆ ಮೂಲಕ ಪುಪ್ಪಸಗಳಿಗೆ ಅದನ್ನು ರವಾನಿಸುತ್ತದೆ. ಹೀಗೆ ರವಾನಿಸಲು ಹೃದಯ ಪಂಪ್ ಮಾಡಬೇಕು. ಪುಪ್ಪಸಗಳಿಂದ ಶುದ್ಧವಾದ ರಕ್ತವು ಹೃದಯದ ಎಡಭಾಗಕ್ಕೆ ಬಂದು, ಅಲ್ಲಿಂದ ಇಡೀ ದೇಹಕ್ಕೆ ವಿತರಣೆಯಾಗುತ್ತದೆ. ಈ ಪ್ರಕ್ರಿಯೆಲ್ಲಿ ಪ್ರಮುಖ ಪಾತ್ರವಹಿಸುವುದು ನಾಲ್ಕು ಕವಾಟಗಳು. ತಲಾ ಎರಡೆರಡು ಎಡ ಮತ್ತು ಬಲ ಬದಿಯಲ್ಲಿರುವ ಕವಾಟಗಳು ಒಮ್ಮುಖ ದ್ವಾರಗಳಂತೆ ಕಾರ್ಯ ನಿರ್ವಹಿಸಿ, ರಕ್ತದ ದಿಕ್ಕನ್ನು ನಿರ್ಧರಿಸುತ್ತವೆ.
ಹೃದಯಾಘಾತ ಎಂದರೇನು?
ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತದೆ. ಹೃದಯದ ಸ್ನಾಯುಗಳಿಗೆ ಉಂಟಾಗುವ ಹಾನಿಗೆ ಅನುಗುಣವಾಗಿ, ಹೃದಯಾಘಾತದ ತೀವ್ರತೆಯನ್ನು ಗುರುತಿಸಲಾಗುತ್ತದೆ. ಸತ್ತ ಹೃದಯದ ಸ್ನಾಯು ಹೃದಯದ ಕಾರ್ಯವೈಖರಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ, ಹೃದಯ ಹೆಚ್ಚು ರಕ್ತವನ್ನು ಪಂಪ್ ಮಾಡಲಾಗದು
ಈ ಸ್ಥಿತಿಯನ್ನು ಕಂಜೆಸ್ಟಿವ್ ಹೃದಯ ವೈಫಲ್ಯ ಎನ್ನಲಾಗುತ್ತದೆ. ಸ್ಥಿತಿಯಿಂದ ಉಸಿರಾಟದ ಕೊರತೆ ಮತ್ತು ಪಾದಗಳಲ್ಲಿ ಬೆವರು ಕಾಣಿಸಿಕೊಳ್ಳುತ್ತದೆ.
ಇದು ಏಕೆ ಕಾಣಿಸಿಕೊಳ್ಳುತ್ತದೆ?
ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಈ ಬಗೆಯಲ್ಲಿ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕೆಲೆರೋಸಿಸ್ ಎಂದು ಕರೆಯಲಾಗುತ್ತದೆ.ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು. ಈ ಬಗೆಯ ರಕ್ಷಣಾತ್ಮಕ ಪ್ರಭಾವ ಮಹಿಳೆಯರ ಮುಟ್ಟು ನಿಲ್ಲುವಿಕೆಯವರೆಗೂ ಇರಬಲ್ಲದು. ಏಷ್ಯನ್ನರು ಅದರಲ್ಲೂ ವಿಶೇಷವಾಗಿ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚು.
ಈ ಗಂಡಾಂತರಕ್ಕೆ ಕಾರಣಗಳು:
ಹೆಚ್ಚಿನ ತೂಕ
ಹೆಚ್ಚಿನ ಕೊಲ್ಲೆಸ್ಟ್ರಾಲ್ ಮತ್ತು ಉತ್ತಮ ಕೊಬ್ಬಿನಂಶದ ಕಡಿಮೆ ಪ್ರಮಾಣ
ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ
ಒತ್ತಡ, ಸತತ ಕೋಪ ಹಾಗೂ ಆತಂಕ
ವಂಶಪಾರಂಪರ್ಯ ಕಾರಣಗಳು
ರೋಗ ಲಕ್ಷಣಗಳನ್ನು ಗುರುತಿಸಲು ತುಂಬ ಕಷ್ಟ. ಇವು ಮತ್ಯಾವುದೋ ಆನಾರೋಗ್ಯದ ಲಕ್ಷಣಗಳಂತೆಯೂ ಕಾಣಿಸಬಹುದು. ಆದರೆ, ಪ್ರಮುಖ ಲಕ್ಷಣವೆಂದರೆ, ಎದೆ ಭಾರದೊಂದಿಗೆ ಕೂಡಿದ ಎದೆನೋವು ಮತ್ತು ಉಸಿರಾಟದ ಕೊರತೆ. ಬೆವರುವಿಕೆ, ತಲೆ ಸುತ್ತುವಿಕೆ ಮತ್ತು ಪ್ರಜ್ಞಾಹೀನತೆಯಾಗುವ ಭಾವನೆಗಳು ಇದರ ಲಕ್ಷಣಗಳು. ನೋವು ಮುಖ್ಯವಾಗಿ ಎದೆಯ ಮುಂಭಾಗ ಅಥವಾ ಮೊಲೆ ಮೂಳೆಯ ಹಿಂಭಾಗದಲ್ಲಿರಬಹುದು. ನೋವು ಈ ಭಾಗದಿಂದ ಆರಂಭವಾಗಿ, ಕತ್ತು ಅಥವಾ ಎಡ ಭಾಗಕ್ಕೆ ಹೋಗಬಹುದು. ವಾಂತಿ, ಆತಂಕ, ಕೆಮ್ಮು ಮತ್ತು ನಾಡಿ ಬಡಿತದಲ್ಲಿ ಏರಿಕೆ, 20 ನಿಮಿಷಕ್ಕಿಂತ ಹೆಚ್ಚು ಕಾಲ ಕಾಣಿಸಿಕೊಳ್ಳುವ ನೋವು-ಇವು ಇತರ ಲಕ್ಷಣಗಳು. ಕೆಲ ಪ್ರಕರಣಗಳಲ್ಲಿ ರಕ್ತದೊತ್ತಡದಲ್ಲಿ ತೀವ್ರ ಕುಸಿತವುಂಟಾಗಿ ರೋಗಿಯು ನಿಸ್ತೇಜನಾಗಿ ಕಂಡು ಬರಬಹುದು. ಈ ಬಗೆಯ ರಕ್ತದೊತ್ತಡ ಕುಸಿತದಿಂದ ರೋಗಿಯು ಸಾವನ್ನಪ್ಪಬಹುದು.
ವೈದ್ಯರು ವ್ಯಕ್ತಿಯ ವಿವರವಾದ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುವರು. ಆ ಬಳಿಕ ಹೃದಯದ ಬಡಿತ ಮತ್ತು ರಕ್ತದೊತ್ತಡವನ್ನು ದಾಖಲಿಸುವರು. ಹೃದಯದ ಚಟುವಟಿಕೆಯ ದಾಖಲೆಯಾದ ಎಲೆಕ್ಟ್ರೋ ಕಾರ್ಡಿಯೋಗ್ರಾಮ್, ಇಸಿಜಿ ತೆಗೆಯಲಾಗುತ್ತದೆ. ಹೃದಯದ ಬಡಿತದ ದರ, ಬಡಿತದಲ್ಲೇನಾದರೂ ವೈಪರಿತ್ಯಗಳಿವೆ ಮತ್ತು ಹೃದಯದ ಸ್ನಾಯುಗಳಿಗೇನದರೂ ಹಾನಿಯುಂಟಾಗಿದೆಯೇ ಎಂಬ ಮಾಹಿತಿಯನ್ನು ಇಸಿಜಿ ನೀಡುತ್ತದೆ. ಆರಂಭದ ಹಂತದಲ್ಲಿ ಸಾಮಾನ್ಯ ಇಸಿಜಿಯು ಹೃದಯಾಘಾತವನ್ನು ಹೊರೆಗಡಬಲ್ಲದು. ಹೃದಯದ ಸ್ನಾಯುಗಳು ಹಾನಿಗೊಂಡಿರುವುದನ್ನು ರಕ್ತದ ಪರೀಕ್ಷೆಗಳು ಖಚಿತ ಪಡಿಸಲು ಸಹಕಾರಿ. ಹೃದಯದ ಚಟುವಟಿಕೆಯ ಕುರಿತು ಉಪಯುಕ್ತ ಮಾಹಿತಿಯನ್ನು ಅರಿಯಲು ಇಕೋ ಕಾರ್ಡಿಯೋಗ್ರಾಮ್ ಎಂಬ ಸ್ಕ್ಯಾನ್ ಸಹಾಯ ಮಾಡುತ್ತದೆ. ರಕ್ತನಾಳಗಳಲ್ಲಿ ಅಡಚಟಣೆ ಉಂಟಾಗಿರುವುದು ಖಚಿತ ಪಡಿಸುವುದು ಕರೋನರಿ ಆಂಜಿಯೋಗ್ರಾಮ್.
ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ನೀಡುವ ಪ್ರಥಮ ಚಿಕಿತ್ಸೆಯೇನು?
ಹೃದಯಾಘಾತದ ಸಂದರ್ಭದಲ್ಲಿ ತತ್ ಕ್ಷಣ ಚಿಕಿತ್ಸೆ ನೀಡುವುದರಿಂದ ಜೀವನವನ್ನು ಉಳಿಸಬಹುದು. ತಜ್ಞ ವೈದ್ಯರು ಬರುವವರೆಗೂ ರೋಗಿಯನ್ನು ಮಲಗಿಸಿಯೇ ಇರಬೇಕು ಮತ್ತು ಬಿಗಿಯಾದ ಉಡುಪುಗಳನ್ನು ಸಡಿಲಿಸಬೇಕು. ಆಮ್ಲಜನಕದ ಸಿಲಿಂಡರ್ ಲಭ್ಯವಿದ್ದಲ್ಲಿ ಆಮ್ಲಜನಕವನ್ನು ರೋಗಿಗೆ ನೀಡಬೇಕು.ನೈಟ್ರೋಗ್ಲಿಸರೀನ್ ಅಥವಾ ಸಾರ್ಬಿಟ್ರೇಟ್ ಮಾತ್ರೆಗಳು ಲಭ್ಯವಿದ್ದಲ್ಲಿ, ಒಂದೆರಡು ಮಾತ್ರೆಗಳನ್ನು ನಾಲಿಗೆಯ ಕೆಳಗಿಡಬೇಕು. ಆಸ್ಪ್ರಿನ್ ಮಾತ್ರೆಯನ್ನು ಕರಗಿಸಿ ನೀಡಬೇಕು.
ಚಿಕಿತ್ಸೆಯೇನು?
ಹೃದಯಾಘಾತ ಸಂದರ್ಭವು ತುರ್ತು ವೈದ್ಯಕೀಯ ನಿಗಾವನ್ನು ಬೇಡುತ್ತದೆ ಮತ್ತು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕು. ಹೃದಯಾಘಾತವಾದ ಆರಂಭಿಕ ಕೆಲ ನಿಮಿಷ ಅಥವಾ ಕೆಲ ಗಂಟೆಗಳು ಅತ್ಯಂತ ಗಂಡಾಂತರಕಾರಿ. ಆರಂಭದಲ್ಲಿಯೇ ಪತ್ತೆಯಾದಾಗ, ಸೂಕ್ತವಾದ ಔಷಧಿಗಳ ಮೂಲಕ ನೀಡಿ ರಕ್ತನಾಳಗಳಲ್ಲಿನ ರಕ್ತದ ಕರಣೆಯನ್ನು ಕರಗಿಸಬಹುದು. ಹೃದಯದ ಬಡಿತದ ವೈಪರಿತ್ಯವನ್ನು ಗಮನಿಸಿ, ಸೂಕ್ತ ಚಿಕಿತ್ಸೆ ನೀಡಬಹುದು. ರಕ್ತದೊತ್ತಡ ಜಾಸ್ತಿಯಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ಚಿಕಿತ್ಸೆ ನೀಡಬೇಕು. ನಿರ್ದಿಷ್ಟವಾದ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ರೋಗಿಯ ವಯಸ್ಸು, ಹೃದಯಾಘಾತದ ಪ್ರಮಾಣ, ಹೃದಯದ ಸ್ನಾಯುಗಳಿಗೆ ಆಗಿರುವ ಹಾನಿಯ ಪ್ರಮಾಣ ಮತ್ತು ರಕ್ತನಾಳದಲ್ಲಿ ಕಾಣಿಸಿಕೊಂಡಿರುವ ಅಡಚಣೆಗಳ ಮೇಲೆ ನಿರ್ಧರಿಸಲಾಗುತ್ತದೆ. ಅನೇಕ ಸಂದರ್ಭದಲ್ಲಿ ಈ ಅಡಚಣೆಗಳನ್ನು ನಿವಾರಿಸಲು ಕೆಲ ನಿರ್ದಿಷ್ಟ ತಂತ್ರಗಳನ್ನು ಬಳಸಲಾಗುತ್ತದೆ. ಕರೋನರಿ ಅಂಜಿಯೋಪ್ಲಾಸ್ಟಿ, ಬಲೂನುಗಳ ಮೂಲಕ ರಕ್ತನಾಳಗಳನ್ನು ಹಿಗ್ಗಿಸುವ ತಂತ್ರ ಅಥವಾ ಕರೋನರಿ ಬೈಪಾಸ್ ಸರ್ಜರಿ ತಂತ್ರಗಳ ಮುಖಾಂತರ ಅಡಚಣೆಗಳನ್ನು ನಿವಾರಿಸಬಹುದು.
ಹೃದಯಾಘಾತಗಳನ್ನು ತಡೆಯುವುದು ಹೇಗೆ?
ಹೃದಯಾಘಾತಗಳಿಗೆ ಒಳಗಾಗುವ ಸಾಧ್ಯತೆಯಿರುವವರು ಈ ಕೆಳಕಂಡ ಕ್ರಮವನ್ನು ಕೈಗೊಳ್ಳಬೇಕು: ಜೀವನಶೈಲಿಯಲ್ಲಿ ಬದಲಾವಣೆ
ಆಹಾರವು ಆರೋಗ್ಯಪೂರ್ಣವಾಗಿದ್ದು, ಕೊಬ್ಬು ಮತ್ತು ಉಪ್ಪಿನ ಪ್ರಮಾಣ ಕಡಿಮೆಯಿರಬೇಕು. ನಾರಿನಂಶ ಹಾಗೂ ಸಂಕೀರ್ಣ ಪಿಷ್ಟಗಳು ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
ತೂಕ ಹೆಚ್ಚಿರುವವರು, ತೂಕ ಇಳಿಸಬೇಕು.
ದೈಹಿಕ ಚಟುವಟಿಕೆ, ಕಸರತ್ತುಗಳನ್ನು ದಿನಂಪ್ರತಿ ಮಾಡಬೇಕು.
ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಡಯಾಬಿಟೀಸ್, ಹೆಚ್ಚಿನ ರಕ್ತದೊತ್ತಡ ಹಾಗೂ ಹೆಚ್ಚಿನ ಕೊಲ್ಲೆಸ್ಟ್ರಾಲ್ ಹೊಂದಿರುವವರು ಸೂಕ್ತವಾದ ಔಷಧವನ್ನು ಸೇವಿಸುವ ಮೂಲಕ ಈ ಕಾಯಿಲೆಗಳನ್ನು ಹತೋಟಿಯಲ್ಲಿಡಬೇಕು.
laxman Jul 28, 2017 12:41 PM
ತುಂಬಾ ಒಳ್ಳೆಯ ಸಂದೇಶವಾಗಿದೆ ಇನ್ನಷ್ಟು ಮಾಹಿತಿಯನ್ನು ನೀಡಬಹುದು.ಸಂಪಾದಕೀಯ | ಒಲಿಂಪಿಕ್ಸ್‌ ಮುಂದೂಡಿಕೆ ವಿವೇಕಯುತ ನಿರ್ಧಾರ | Prajavani
ಸಂಪಾದಕೀಯ Updated: 28 ಮಾರ್ಚ್ 2020, 02:00 IST
‘ನಾಳೆಯನ್ನು ಅನ್ವೇಷಿಸುತ್ತಾ’ ಎಂಬ ಧ್ಯೇಯವಾಕ್ಯದೊಂದಿಗೆ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಜುಲೈ 24ರಂದು ಆರಂಭವಾಗಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ. ಕೊರೊನಾ ವೈರಸ್‌ ಮಹಾಮಾರಿಯಿಂದಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ವಿವೇಕಯುತ ನಿರ್ಧಾರ. 1916ರ ಕೂಟವು ಪ್ರಥಮ ವಿಶ್ವಯುದ್ಧದ ಕಾರಣ, 1940 ಹಾಗೂ 1944ರ ಒಲಿಂಪಿಕ್‌ ಕ್ರೀಡಾಕೂಟಗಳು ದ್ವಿತೀಯ ವಿಶ್ವಯುದ್ಧದಿಂದಾಗಿ ರದ್ದಾಗಿದ್ದವು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಮಹಾಮೇಳಕ್ಕೆ ಇದೇ ಮೊದಲ ಬಾರಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ.
ಈ ಸಲದ ಕೂಟವನ್ನು ಅಭೂತಪೂರ್ವ ರೀತಿಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಜಪಾನ್ ಮಾಡಿಕೊಂಡಿತ್ತು. ಅದಕ್ಕಾಗಿ, ₹ 89 ಸಾವಿರ ಕೋಟಿ ವೆಚ್ಚ ಮಾಡಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದಾಗಿ ಜಪಾನ್ ಹೇಳಿತ್ತು. ನಿಗದಿತ ವೇಳಾಪಟ್ಟಿಯಂತೆ ಕೂಟ ಆಯೋಜಿಸುವ ಛಲವನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ನಾಲ್ಕು ದಿನಗಳ ಹಿಂದಿನವರೆಗೂ ತೋರಿತ್ತು. ಆದರೆ ಕೊರೊನಾ ವೈರಸ್‌ನ ಉಗ್ರಪ್ರತಾಪ ಮುಂದುವರಿದಿದ್ದರಿಂದ ಪ್ರಮುಖ ದೇಶಗಳು ಕೂಟದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡಲು ಆರಂಭಿಸಿದವು.
End of preview. Expand in Data Studio
README.md exists but content is empty.
Downloads last month
74