text
stringlengths 0
61.5k
|
---|
ಫ್ರಾಂಟಿಯರ್ ಏರ್ಲೈನ್ಸ್ - ವಿಕಿಪೀಡಿಯ |
ಫ್ರಾಂಟಿಯರ್_ಏರ್ಲೈನ್ಸ್ ಲೋಗೊ |
ಫ್ರಾಂಟಿಯರ್ ಏರ್ಲೈನ್ಸ್ ಡೆನ್ವರ್, ಕೊಲೊರಾಡೋ, ಇದರ ಪ್ರಧಾನ ಕಛೇರಿ ಯೂಯೆಸೇ ನಲ್ಲಿ ಸ್ಥಾಪಿತವಾಗಿದೆ. ಯುನೈಟೆಡ್ ಸ್ಟೇಟ್ಸ್ನಾ ಕಡಿಮೆ ಆರಂಭಿಕ ವೆಚ್ಚದ ವಾಹಕವಾಗಿದೆ. [೧] ಇದು ಇಂಡಿಗೊ ಪಾರ್ಟ್ನರ್ಸ್, ಳ್ಳ್Cಯ ಒಂದು ಅಂಗಸಂಸ್ಥೆ ಮತ್ತು ಆಪರೇಟಿಂಗ್ ಬ್ರ್ಯಾಂಡ್ ವಾಹಕವಾಗಿದೆ, [೨]ಯುನೈಟೆಡ್ ಸ್ಟಾಟೆಸ್‌ನ ಉದ್ದಗಾಳಕ್ಕೂ 50 ಸ್ಥಳಗಳಿಗೆ ವಿಮಾನಗಳಉ ಕಾರ್ಯನಿರ್ವಹಿಸುತ್ತದೆ ಮತ್ತು 5 ಅಂತಾರಾಷ್ಟ್ರೀಯ ಗಮ್ಯಾಸ್ಥಾನಗಳಿಗೂ ಸೇವೆ ಒದಗಿಸುತ್ತದೆ. ವಿಮಾನಯಾನ ಇಲಿನಾಯ್ಸ್ನ ಚಿಕಾಗೋದಲ್ಲಿ ಚಿಕಾಗೋಒ ಹಾರೆ 'ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಗರ ಸ್ಥಳಗಳ ನಿರ್ವಹಣೆ ಮಾಡಿದರೆ, ಡೆನ್ವರ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ಸಂಪೂರ್ಣ ಕಾರ್ಯಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ; ಓಹಿಯೋದ ಕ್ಲೀವ್ ಲ್ಯಾಂಡ್ನಲ್ಲಿ ಕ್ಲೀವ್ಲ್ಯಾಂಡ್ ಹಾಪ್ಕಿನ್ಸ್ ಅಂತರರಾಷ್ಟ್ರೀಯ ವಿಮಾನ; ಮಿಯಾಮಿ, ಫ್ಲೋರಿಡಾ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ; ಟ್ರೆಂಟನ್, ನ್ಯೂಜರ್ಸಿಯಲ್ಲಿ ಬಳಿ ಒರ್ಲ್ಯಾಂಡೊ, ಫ್ಲೋರಿಡಾದ ಒರ್ಲ್ಯಾಂಡೊ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಹಾಗೂ ಟ್ರೆಂಟನ್-ಮರ್ಸರ್ ವಿಮಾನ. ಅಲ್ಲದೆ, ಗ್ರೇಟ್ ಲೇಕ್ಸ್ ಏರ್ಲೈನ್ಸ್ ಒಂದು ಕೋಡ್ ಪಾಲು ಒಪ್ಪಂದದಡಿ ಏರ್ ಡೆನ್ವರ್ ಹಬ್ ಮೂಲಕ ರಾಕಿ ಮೌಂಟೇನ್ ಸ್ಟೇಟ್ಸ್ ಸುತ್ತಮುತ್ತಲಿನ ಪ್ರಯಾಣಿಕರನ್ನು ಸಂಪರ್ಕಿಸುತ್ತದೆ.[೩] |
೨ ಮಾಜಿ ಪ್ರಾದೇಶಿಕ ಸಾಗಣೆ |
೨.೧ ಫ್ರಾಂಟಿಯರ್ ಎಕ್ಸ್ಪ್ರೆಸ್ |
೨.೨ ಫ್ರಾಂಟಿಯರ್ ಜ಼ೆತೇಕ್ಷ್ಪ್ರೆಸ್ಸ್ |
೪ ವಿಮಾನಯಾನ ಹಂಚಿಕೆಯ ಒಪ್ಪಂದ |
2015 ಸೇವೆ ಫೆಬ್ರವರಿ 2015 ರಲ್ಲಿ, ಫ್ರಾಂಟಿಯರ್ ಅವರು ಅಟ್ಲಾಂಟಾದಿಂದ ಹಲವಾರು ಸ್ಥಳಗಳಿಗೆ ಸೇವೆ ಆರಂಭಿಸಲು ಘೋಷಿಸಿತು. ಜುಲೈನಲ್ಲಿ, ಫ್ರಾಂಟಿಯರ್ ಒಂದು ಗಮನ ನಗರದ ಸ್ಥಾನದಿಂದ ಡಲ್ಲೆಸ್ ಅನ್ನು ಮುಕ್ತಗೊಳಿಸಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಸೇವೆಯನ್ನು ಆರಂಭಿಸಿದರು. ಆಗಸ್ಟ್ 2015 ರಲ್ಲಿ, ಫ್ರಾಂಟಿಯರ್ ಏರ್ಲೈನ್ಸ್ ಗ್ರಾಹಕ ಸೇವೆಗೆ ತಮ್ಮ ಟೋಲ್ ಫ್ರೀ ದೂರವಾಣಿ ಸಂಖ್ಯೆ ತೆಗೆದು ಸ್ಪಿರಿಟ್ ಮತ್ತು ಅಲ್ಲೀಜಿಯಂಟ್ ಸೇರಿದರು. [೪] |
ಮಾಜಿ ಪ್ರಾದೇಶಿಕ ಸಾಗಣೆ[ಬದಲಾಯಿಸಿ] |
ಫ್ರಾಂಟಿಯರ್ ಎಕ್ಸ್ಪ್ರೆಸ್[ಬದಲಾಯಿಸಿ] |
ಚೌತಾಕು ಏರ್ಲೈನ್ಸ್ 12 ಎಂಬ್ರೇಯರ್ 135 ಮಿಲ್ವಾಕೀ ಔಟ್ 145 ಜೆಟ್ ವರೆಗೆ ಕಾರ್ಯಾಚರಣೆ ನಡೆಸುತ್ತದೆ. ಫ್ರಾಂಟಿಯರ್ ಮಿಲ್ವಾಕೀ ಹಬ್ ಪುಲ್ ಡೌನ್ ಜೊತೆ 2011 ರ ವಸಂತ ಋತುವಿನಲ್ಲಿ ಫ್ರಾಂಟಿಯರ್ ಎಕ್ಸ್ಪ್ರೆಸ್ ಈ ವಿಮಾನಗಳು ಬ್ರ್ಯಾಂಡಿಂಗ್ ಆರಂಭಿಸಿದರು ಫ್ರಾಂಟಿಯರ್ ಎಕ್ಸ್ಪ್ರೆಸ್ ಏರ್ಜ್-145 ಜೆಟ್ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿತು ಮಾತ್ರ ಮಾರ್ಗ ರ್ಹಿನೆಲಾಂಡೆರ್ ನಿಂದ ಮಿಲ್ವಾಕೀ ಆಗಿತ್ತು. ಆದರೆ, ರ್ಹಿನೆಲಾಂಡೆರ್ ನಿಂದ ಫ್ರಾಂಟಿಯರ್ ಸೇವೆ ಜನವರಿ 3, 2013 ರಂದು ಕೊನೆಗೊಂಡಿತು, ಮತ್ತು ಚೌತಾಕು ಇತರೆ ಪಾಲುದಾರರಿಗೆ ಉಳಿದ ವಿಮಾನ ವರ್ಗಾವಣೆ ನಡೆಸುತ್ತಿದೆ. |
ಫ್ರಾಂಟಿಯರ್ ಜ಼ೆತೇಕ್ಷ್ಪ್ರೆಸ್ಸ್[ಬದಲಾಯಿಸಿ] |
ಫೆಬ್ರವರಿ 2002 ರಲ್ಲಿ, ವಿಮಾನಯಾನ ಕ್ರ್ಜ್-200 ಪ್ರಾದೇಶಿಕ ಜೆಟ್ ಬಳಸಿಕೊಂಡು ಆರಂಭದಲ್ಲಿ ಮೆಸಾ ಏರ್ಲೈನ್ಸ್ ನಿರ್ವಹಿಸುತ್ತಿರುವ ತನ್ನ ಮೊದಲ ಪ್ರಾದೇಶಿಕ ಉತ್ಪನ್ನ, ಫ್ರಾಂಟಿಯರ್ ಜ಼ೆತೇಕ್ಷ್ಪ್ರೆಸ್ಸ್ ಆರಂಭಿಸಿತು. ಇತರ ವಾಹಕಗಳ ಕಾರ್ಯಾಚರಣೆ ಮಾಡುವ "ಎಕ್ಸ್‌ಪ್ರೆಸ್" ಸೇವೆಯನ್ನು ಹೋಲುತ್ತದೆ, ಫ್ರಾಂಟಿಯರ್ ಜ಼ೆತೇಕ್ಷ್ಪ್ರೆಸ್ಸ್ ಮತ್ತು ಫ್ರಾಂಟಿಯರ್ ಚಿಕ್ಕ ಪ್ರಮುಖ ಜೆಟ್, ಏರ್ಬಸ್ ಆ318 ಬೆಂಬಲಿಸಲು ಸಾಕಷ್ಟು ಸಂಚಾರ ಬೇಡಿಕೆ ಸೃಷ್ಟಿಸಲು ಎಂದು ಡೆನ್ವರ್ ಮಾರುಕಟ್ಟೆಗಳಲ್ಲಿ ಗುರಿಯಾಗಿರಿಸಿಕೊಂಡು ಪರಿಚಯಿಸಲ್ಲಾಗಿತ್ತು, ಆದರೆ ಇನ್ನೂ ಒಂದು ಸಣ್ಣ ಜೆಟ್ ಲಾಭದಾಯಕ ವ್ಯಾಪಾರ ನೀಡಲು ಸಾಧ್ಯವಾಗಿಲ್ಲ. |
ಫ್ರಾಂಟಿಯರ್ ಏರ್ಲೈನ್ಸ್ ಪ್ರಸ್ತುತ ಡೊಮಿನಿಕನ್ ರಿಪಬ್ಲಿಕ್, ಜಮೈಕಾ, ಮೆಕ್ಸಿಕೋ ಮತ್ತು ಯುನೈಟೆಡ್ ಸ್ಟೇಟ್ಸ್ 55 ಸ್ಥಳಗಳಿಗೆ ಹಾರಾಟ ನಡೆಸುತ್ತಿದೆ. ಡಿಸೆಂಬರ್ 2014 ರ, ಫ್ರಾಂಟಿಯರ್ ಆಪಲ್ ರಜಾದಿನಗಳು ಪಾಲುದಾರಿಕೆಯಲ್ಲಿ ಹಲವಾರು ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಚಾರ್ಟರ್ ವಿಮಾನಗಳು ಕಾರ್ಯ ನಿರ್ವಹಿಸುತ್ತವೆ. |
ಫ್ರಾಂಟಿಯರ್ ಏರ್ಲೈನ್ಸ್ ಡೆನ್ವರ್ ಮತ್ತು ಫೀನಿಕ್ಸ್ ಮೂಲಕ ವಿಮಾನಗಳು ಸಂಪರ್ಕಿಸುವ, ಒಂದು ಗ್ರೇಟ್ ಲೇಕ್ಸ್ ಏರ್ಲೈನ್ಸ್ ವಿಮಾನಯಾನದ ಬಳಿ ಹಂಚಿಕೆಯ ಒಪ್ಪಂದ ಹೊಂದಿದೆ. |
↑ "News Release" (Press release). Phx.corporate-ir.net. 2012-01-26. Retrieved 2016-01-20. |
↑ "Indigo Partners Completes Acquisition of Frontier Airlines". Business Wire. December 3, 2013. Retrieved 2016-01-20. |
↑ "On-Board Frontier Airlines". cleartrip.com. Retrieved 2016-01-20. |
↑ "Frontier Airlines - Our History, 1993–1998". Frontier Airlines. Archived from the original on 2013-05-24. Retrieved 2016-01-20. |
ಜಮ್ಮು ಮತ್ತು ಕಾಶ್ಮೀರದಲ್ಲಿ 9.75 ಕೆಜಿ ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿ ಬಂಧನ | Man Held With 9.75 Kg Of Explosive Material In Jammu And Kashmir's Doda - Kannada Oneindia |
18 min ago ಯಾವುದೇ ಚರ್ಚೆಗೆ ಕೇಂದ್ರ ಸಿದ್ಧವಿಲ್ಲ, ಸದನ ಬರೀ ನೆಪ; ಖರ್ಗೆ ಆರೋಪ |
23 min ago ವೈರಲ್ ವಿಡಿಯೋ; ಕರ್ನಾಟಕ ರಾಜಕೀಯದ ಬಗ್ಗೆ ವೆಂಕಪ್ಪಯ್ಯ ಒಡೆಯರ್ ಭವಿಷ್ಯ |
26 min ago ನಿವೇಶನ ಹೆಸರಲ್ಲಿ ಮೋಸ ಮಾಡಿದ್ದ ಬೃಂದಾವನ್ ಪ್ರಾಪರ್ಟಿ ಎಂಡಿ ಸೆರೆ |
| Updated: Wednesday, March 31, 2021, 15:38 [IST] |
ಶ್ರೀನಗರ, ಮಾರ್ಚ್ 31: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 9.75 ಕೆಜಿಯಷ್ಟು ಸ್ಫೋಟಕ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. |
ದೋಡಾದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ತಂತಿಗಳ ರೂಪದಲ್ಲಿ ಸುಮಾರು 9.75 ಕೆಜಿಯಷ್ಟು ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಭದ್ರತಾ ಪಡೆ ಬಂಧಿಸಿದೆ. ಕೆಲವು ದಿನಗಳ ಹಿಂದೆ ಕಿಸ್ತ್ವಾರ್ ಜಿಲ್ಲೆಯ ಜಲವಿದ್ಯುತ್ ಯೋಜನಾ ಪ್ರದೇಶ ಸಮೀಪದ ಅಡಗುದಾಣವೊಂದರಿಂದ ಇದೇ ರೀತಿಯ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. |
ಖಚಿತ ಮಾಹಿತಿ ಮೇರೆಗೆ ಗುಂಡಾ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ವ್ಯಕ್ತಿಯನ್ನು ಬಂಧಿಸಿ, ಆತನಿಂದ 78 ಜಿಲೆಟಿನ್ ಕಡ್ಡಿಗಳು ಹಾಗೂ 275 ಮೀಟರ್ ತಂತಿಯನ್ನು ವಶಪಡಿಸಿಕೊಂಡಿರುವುದಾಗಿ ರಕ್ಷಣಾ ಇಲಾಖೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
ಕಣಿವೆ ರಾಜ್ಯದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಆಡಗಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿತ್ತು. ಐದು ಎಕೆ 47 ರೈಫಲ್ಸ್‍ಗಳು ಸೇರಿದಂತೆ ಭಾರಿ ಪ್ರಮಾಣದ ಸ್ಫೋಟಕಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. |
ಗಡಿ ನಿಯಂತ್ರಣ ರೇಖೆ ಸಮೀಪ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುತ್ತಿದ್ದಾರೆ ಎಂಬ ಬಗ್ಗೆ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನಾಧರಿಸಿ ಸೇನಾ ಯೋಧರು ಕಾರ್ಯಚರಣೆ ನಡೆಸಿ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. |
jammu and kashmir explosives indian army ಜಮ್ಮು ಮತ್ತು ಕಾಶ್ಮೀರ ಸ್ಫೋಟಕ ಭಾರತೀಯ ಸೇನೆ |
Security forces arrested a person along with 9.75 kilograms of explosive material in the form of 78 gelatine sticks and 275 meters of wire in the hilly Doda district of Jammu on Wednesday. |
ಜು.18ಕ್ಕೆ ಶಿವರಾಜ್ ಕುಮಾರ್, ರಮ್ಯಾ ಆರ್ಯನ್ | Shivrajkumar, Ramya lead Aaryan releases on 18th July - Kannada Filmibeat |
» ಜು.18ಕ್ಕೆ ಶಿವರಾಜ್ ಕುಮಾರ್, ರಮ್ಯಾ ಆರ್ಯನ್ |
ಜು.18ಕ್ಕೆ ಶಿವರಾಜ್ ಕುಮಾರ್, ರಮ್ಯಾ ಆರ್ಯನ್ |
Published: Monday, July 7, 2014, 10:55 [IST] |
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅಭಿನಯದ 'ಆರ್ಯನ್' ಚಿತ್ರ ಇದೇ ಜುಲೈ 18ರಂದು ತೆರೆಗೆ ಅಪ್ಪಳಿಸುತ್ತಿದೆ. ರಾಜಕೀಯದ ಕಹಿಯನ್ನು ಮರೆತು ಅತ್ತ ಶಿವಣ್ಣ ಇತ್ತ ರಮ್ಯಾ ಇಬ್ಬರೂ ಜೊತೆಯಾಗಿ ಅಭಿನಯಿಸಿರುವ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಇದೆ. |
ಈಗಾಗಲೆ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಕೇಳುಗರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. 'ಆರ್ಯನ್' ಚಿತ್ರತಂಡಕ್ಕೆ ಆರಂಭದಿಂದಲೂ ಸಾಕಷ್ಟು ಅಡೆತಡೆಗಳು ಉಂಟಾಗುತ್ತಲೇ ಬಂದಿದ್ದವು. ಈಗ ಚಿತ್ರ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ತಂದಿದೆ. [ಆರ್ಯನ್ ಆಡಿಯೋ ವಿಮರ್ಶೆ] |
ಒಂದು ಕಡೆ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣ, ಇನ್ನೊಂದು ಕಡೆ ಶಿವಣ್ಣ, ರಮ್ಯಾ ಅವರ ರಾಜಕೀಯ ಪಯಣ ಚಿತ್ರ ತೆರೆಗೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇದೀಗ ಜುಲೈ 18ಕ್ಕೆ ತೆರೆಗೆ ಬರುತ್ತಿದ್ದು ರಮ್ಯಾ, ಶಿವಣ್ಣ ಅಭಿಮಾನಿಗಳು ಖುಷಿಯಿಂದ ಕುಣಿದಾಡುವಂತಾಗಿದೆ. |
ಚಿತ್ರದಲ್ಲಿ ಶಿವಣ್ಣ ಅಥ್ಲೆಟಿಕ್ ಕೋಚ್ ಆಗಿದ್ದು, ರಮ್ಯಾ ಅಥ್ಲೀಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದ ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. |
<iframe width="600" height="360" src="//www.youtube.com/embed/RBQ5CKZaePw?feature=player_embedded" frameborder="0" allowfullscreen></iframe> |
ಈ ಚಿತ್ರವನ್ನು ಡಿ.ಕೇಶವ್ ಫಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿದ್ದಾರೆ. ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ) |
Read more about: ramya, shiva rajkumar, d rajendra babu, ಶಿವರಾಜ್ ಕುಮಾರ್, ರಮ್ಯಾ, ಡಿ ರಾಜೇಂದ್ರ ಬಾಬು |
Hat trick hero Shivrajkumar, lucky star Ramya lead Kannada movie Aaryan releases on 18th July. The movie directed by Guru Datt and Jassie Gift is the music director and Chandrashekar is the cinematographer of the film. |
ಯಶ್ ಹುಟ್ಟುಹಬ್ಬ: ಜ.೮ರಂದು ಮಡಿಸ್ನಾನ, ಹೋಮ ಕಾರ್ಯಕ್ರಮ | Sanjevani |
Home ಜಿಲ್ಲೆ ರಾಯಚೂರು ಯಶ್ ಹುಟ್ಟುಹಬ್ಬ: ಜ.೮ರಂದು ಮಡಿಸ್ನಾನ, ಹೋಮ ಕಾರ್ಯಕ್ರಮ |
ರಾಯಚೂರು,ಜ.೬- ಯಶ್ ಜನ್ಮದಿನದ ಅಂಗವಾಗಿ ಜ.೮ ರಂದು ತುಂಗಭದ್ರಾ ನದಿ ತೀರದಲ್ಲಿ ಮಡಿಸ್ನಾನ ಮತ್ತು ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಶ್ರೀನಿವಾಸಕೊಪ್ಪರ ಅವರು ಹೇಳಿದರು. |
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಜ.೮ರಂದು ರಾಜ್ಯಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಆಚರಣೆ ಕುರಿತು ಆಚರಣೆಯನ್ನು ಅಮ್ಮಿಕೊಂಡಿದ್ದು ದೇಶದಲ್ಲಿ ಕರೋನಾ ಸಂಕಷ್ಟ ಹಿನ್ನಲೆಯಲ್ಲಿ ಹುಟ್ಟುಹಬ್ಬವನ್ನು ಸರಳತೆ ಮತ್ತು ಕರೋನಾ -೧೯ ಕೋವಿಡ್ ದೇಶಬಿಟ್ಟು ತೊಲಗಲಿ ಎಂಬ ವಿಚಾರವನ್ನು ಇಟ್ಟುಕೊಂಡು ತುಂಗಭದ್ರಾ ತೀರದಲ್ಲಿ ಮಡಿ ಸ್ನಾನ ಮಾಡಿ ಹೋಮ ಕಾರ್ಯಕ್ರಮವನ್ನು ಮಾಡುವುದರ ಮುಖಾಂತರ ಆಚರಿಸಿಲಾಗುವುದು, ಮಹಾಮಾರಿ ಕೋವಿಡ್-೧೯ ನಿಂದ ಜನರು ತತ್ತರಿಸಿದ್ದು, ಇಂಥಾ ಸಮಯದಲ್ಲಿ ದೇಶದ ಜನರು ಈ ರೋಗದಿಂದ ಮುಕ್ತವಾಗಲು ಸಂಘದ ವತಿಯಿಂದ ಇಂಥಹ ಕಾರ್ಯಕ್ರಮಗಳ ಮೂಲಕ ಯಶ್ ರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎಂದರು. |
ಈ ಕಾರ್ಯಕ್ರಮದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಅಭಿಮಾನಿಗಳು ಮಡಿಸ್ನಾನ ಮತ್ತು ಹೋಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.೭ರಂದು ರಾತ್ರಿ ಸುಮಾರು ೧೦೦ ಕ್ಕೂ ಹೆಚ್ಚು ಅಭಿಮಾನಿಗಳು ತಾಲೂಕಿನ ಗಿಲ್ಲೆಸೂಗೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ . ನಂತರ ಮರುದಿನ ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಮುಳುಗಿ ಮಡಿಸ್ನಾನ ಮಾಡಿ ಹೋಮವನ್ನು ಮಾಡುವರು. |
ಈ ಕಾರ್ಯಕ್ರಮಕ್ಕೆ ಡಾ. ರಾಜಕುಮಾರ, ವಿಷ್ಣುವರ್ಧನ್ ಮತ್ತು ಅಂಬರೀಷ್ ಅಭಿಮಾನಿಗಳು ಭಾಗವಹಿಸಲಿದ್ದಾರೆ . ಹಾಗೂ ಪ್ರಮುಖವಾಗಿ ಬಳ್ಳಾರಿಯ ನಮ್ಮ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಭಾಗವಹಿಸಲಿದ್ದಾರೆ ಎಂದು ಹೇಳಿದರು. |
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎ.ರಾಮು, ಉಪಾಧ್ಯಕ್ಷ ರಾಜು ಪೂಜಾರಿ, ನಗರಾಧ್ಯಕ್ಷ ಅಂಬಾಜಿ ಗರಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. |
ಕೋವಿಡ್ ಲಸಿಕೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆ | Sanjevani |
Home ಜಿಲ್ಲೆ ದಾವಣಗೆರೆ ಕೋವಿಡ್ ಲಸಿಕೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆ |
ಕೋವಿಡ್ ಲಸಿಕೆ ಜಿಲ್ಲಾ ಟಾಸ್ಕ್‌ಫೋರ್ಸ್ ಸಭೆ |
ಆರೋಗ್ಯ ಸಂಸ್ಥೆಗಳ ಮಾಹಿತಿ ಶೀಘ್ರ ಸಲ್ಲಿಕೆಗೆ ಜಿಲ್ಲಾಧಿಕಾರಿ ಸೂಚನೆ |
ದಾವಣಗೆರೆ ನ.೬; ಮುಂಬರುವ ಕೋವಿಡ್-೧೯ ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಮೊದಲ ಆದ್ಯತೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಲು ಸರ್ಕಾರ ಸೂಚಿಸಿರುವನ್ವಯ ಜಿಲ್ಲೆಯಲ್ಲಿರುವ ಎಲ್ಲ ಕ್ಲಿನಿಕ್, ನರ್ಸಿಂಗ್ ಹೋಂ, ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್, ಲ್ಯಾಬ್‌ಗಳಿಂದ ಸಿಬ್ಬಂದಿಗಳ ವಿವರವನ್ನು ನಿಗದಿತ ನಮೂನೆಯಲ್ಲಿ ಶೀಘ್ರದಲ್ಲಿ ಪಡೆದು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು. |
ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೊದಲ ಆದ್ಯತೆಯಲ್ಲಿ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಲಸಿಕೆ ನೀಡುವ ಸಂಬಂಧ ಆರೋಗ್ಯ ಸಂಸ್ಥೆಗಳು ಮತ್ತು ಸಿಬ್ಬಂದಿಗಳ ಮಾಹಿತಿ ಪಡೆಯುವ ಕುರಿತು ಪರಿಶೀಲಿಸಲು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. |
ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ಒಟ್ಟು ೭೪೦ ಆರೋಗ್ಯ ಸಂಸ್ಥೆಗಳು ನೋಂದಣ ಮಾಡಿಸಿಕೊಂಡಿದ್ದು, ಪ್ರಸ್ತುತ ೫೬೦ ಸಕ್ರಿಯ ಸಂಸ್ಥೆಗಳಿವೆ. ಈಗಾಗಲೇ ೪೨೨ ಸಂಸ್ಥೆಗಳ ವಿವರ ಪಡೆದು ದೃಢೀಕರಣ(ವ್ಯಾಲಿಡೇಷನ್) ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ ೧೧೦ ಲ್ಯಾಬ್ ಮತ್ತು ಸ್ಕ್ಯಾನಿಂಗ್ ಕೇಂದ್ರಗಳ ಮಾಹಿತಿಯನ್ನು ಇನ್ನೊಂದೆರಡು ದಿನಗಳಲ್ಲಿ ಆರ್‌ಸಿಹೆಚ್‌ಓ ಹಾಗೂ ಅವರು ನಿಗದಿಪಡಿಸಿರುವ ತಂಡಗಳು ಕಲೆ ಹಾಕಿ ನಿಗದಿತ ಟೆಂಪ್ಲೇಟ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇದಕ್ಕೆ ಅಗತ್ಯವಾದ ಪೂರ್ವ ತಯಾರಿ ಮಾಡಿಕೊಂಡು ಈ ಕಾರ್ಯ ಪೂರ್ಣಗೊಳಿಸಬೇಕು. ನಂತರ ಸಿಬ್ಬಂದಿಗಳ ವಿವರನ್ನು ನೀಡಬೇಕೆಂದರು. |
ಆರ್‌ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಆರೋಗ್ಯ ಸಂಸ್ಥೆಗಳ ಮಾಹಿತಿ ಕಲೆ ಹಾಕಲು ೫ ತಂಡಗಳನ್ನು ನೇಮಿಸಿದ್ದು, ಪ್ರತಿದಿನ ಈ ತಂಡಗಳು ಸಂಸ್ಥೆಗಳಿಗೆ ಭೇಟಿ ನೀಡಿ ಸಂಸ್ಥೆಯ ಮತ್ತು ಸಿಬ್ಬಂದಿ ವಿವರ ಪಡೆಯುತ್ತಿದ್ದಾರೆ. ಅನೇಕ ಆಸ್ಪತ್ರೆ, ಸಂಸ್ಥೆಗಳು ಬಂದ್ ಆಗಿದ್ದು ಇವುಗಳ ಮಾಹಿತಿಯನ್ನೂ ಪಡೆಯಲಾಗುತ್ತಿದೆ. ಹಾಗು ಲಸಿಕೆಯನ್ನು ನೀಡುವ ನುರಿತ ಸಿಬ್ಬಂದಿಗಳ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ತರಬೇತಿ ಹೊಂದಿದ ಲಸಿಕಾಕಾರರು, ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಪೂರಕವಾದ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಜಿಲ್ಲೆಯಲ್ಲಿ ಹೊಂದಲಾಗಿದೆ ಎಂದರು. |
ಕೋವಿಡ್ ಪರೀಕ್ಷೆ ಹೆಚ್ಚಿಸಿ : ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್ ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿಗಳು, ಹೋಟೆಲ್‌ಗಳು ಹೀಗೆ ಜನ ನಿಭಿಡ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಬೇಕು. ಸಾರ್ವಜನಿಕರು ಸಹ ಸಹಕರಿಸಬೇಕು. ಅಸಹಕಾರ ತೋರಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಂತಹವರ ವಿರುದ್ದ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದ್ದು, ನಿಗದಿತ ಗುರಿಗಿಂತ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಬೇಕು. ಚಳಿಗಾಲದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವ ಸಂಭವವಿದ್ದು ಎಲ್ಲರೂ ಜಾಗೃತೆಯಿಂದರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ, ಮತ್ತಿತರೆ ಮುನ್ನಚ್ಚರಿಕೆ ಕ್ರಮ ವಹಿಸಬೇಕೆಂದರು. |
ಪ್ರಸ್ತುತ ಜಿಲ್ಲೆಗೆ ಪ್ರತಿದಿನ ೨೨೦೦ ಕೊರೊನಾ ಪರೀಕ್ಷೆಯ ಗುರಿ ನೀಡಲಾಗಿದ್ದು, ೨೫೦೦ ರಿಂದ ೨೮೦೦ ರವರೆಗೆ ಪರೀಕ್ಷೆ ನಡೆಸುವಂತೆ ಡಿಹೆಚ್‌ಓ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು ಐಸಿಎಂಆರ್ ಪೋರ್ಟಲ್‌ನಲ್ಲಿ ಈ ಕುರಿತು ಡಾಟಾ ಎಂಟ್ರಿ ಮಾಡುವುದೂ ಮುಖ್ಯ ಎಂದರು. |
ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಮಾತನಾಡಿ, ಕೊರೊನಾ ಪರೀಕ್ಷೆ ಸಂಬಂಧ ಆರೋಗ್ಯಾಧಿಕಾರಿಗಳು ತಾಲ್ಲೂಕು ಇಓ ಗಳಿಗೆ ಮಾಹಿತಿ ನೀಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಗುರಿ ನಿಗದಿಪಡಿಸಬೇಕು ಎಂದರು. |
ಇದೇ ವೇಳೆ 'ಅನೀಮೀಯತೆ ಮುಕ್ತ ಭಾರತ' ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು. |
ಸಭೆಯಲ್ಲಿ ಡಿಹೆಚ್‌ಓ ಡಾ.ನಾಗರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಜಯಪ್ರಕಾಶ್, ಡಿಎಸ್‌ಓ ಡಾ.ರಾಘವನ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ನಟರಾಜ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಿಎಲ್‌ಓ ಡಾ.ಮುರಳೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಇದ್ದರು. |
ಪರಂಪರೆಯ ತಾಣಗಳು News - ಪರಂಪರೆಯ ತಾಣಗಳು Latest news on kannada.nativeplanet.com /> |
ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್, ಇತ್ತೀಚಿನ ಸಮಯದವರೆಗೂ ಪ್ರವಾಸಿ ನಕ್ಷೆಯಲ್ಲಿ ಅದರ ಉಪಸ್ಥಿತಿಯನ್ನು ಕಂಡುಕೊಂಡಿರಲಿಲ್ಲ.ದೇಶದ ಬೇರೆ ಬೇರೆ ಜಾಗಗಳಂತೆ ಇಲ್ಲಿಯೂ ಕೂಡ ಆಸಕ್ತಿದಾಯಕ ವಿಷಯಗಳು, ಸ್ಥಳಗಳು ಮತ್ತು ಈ ಸ್ಥಳದ ಬಗ್ಗೆ ತಿಳಿಯದೇ ಇರುವವರಿಗೆ ಕುತೂಹಲಕಾರಿ ಎನಿಸುವಂತಹ ಜಾಗಗಳಿವೆ. ಗುಜ... |
ದೆಹಲಿಯು ಭಾರತದ ರಾಜಧಾನಿ ಮಾತ್ರವಲ್ಲದೆ ಮೊಘಲರು, ಬ್ರಿಟಿಷರು ಮತ್ತು ಅನೇಕರಿಂದ ನಿರ್ಮಿಸಲ್ಪಟ್ಟ ಸ್ಮಾರಕಗಳ ನೆಲೆಯಾಗಿದೆ. ಇದಲ್ಲದೆ ಮರೆತಿರುವಂತಹ ಅನೇಕ ಸಂಖ್ಯೆಯ ವಿಷಯಗಳು ಇಲ್ಲಿವೆ. ದೆಹಲಿಯು ಭಾರತದ ರಾಜಧಾನ... |
ಸುಮಾರು 5000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸವುಳ್ಳ ಭಾರತದಲ್ಲಿ ಇಂದಿಗೂ ಪ್ರಸಿದ್ದಿ ಪಡೆದ ಅನೇಕ ಸ್ಮಾರಕಗಳಿವೆ ಇವುಗಳನ್ನು ಒಳಗೊಂಡ ಸ್ಥಳಗಳು ಪರಂಪರೆಯ ತಾಣಗಳೆನಿಸಿವೆ. ಭಾರತವು ಸಂಸ್ಕ್ರೃತಿ ಕಲೆ, ಸಂಗೀತ, ವಾಸ್... |
ಪಟಿಯಾಲವು ಒಂದು ಸಣ್ಣ ನಗರವಾಗಿದ್ದು ಹಲವಾರು ಐತಿಹಾಸಿಕ ಮಹತ್ವಗಳು ಈ ನಗರದಲ್ಲಿ ಹುದುಗಿವೆ. ಈ ಸ್ಥಳವು ತನ್ನ ಆತಿಥ್ಯ, ಐತಿಹಾಸಿಕ ಸ್ಥಳಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಪಂಜಾಬಿನ ಗ್ರಾಮೀಣ ಜೀವನದ ಅನುಭವವನ್ನ... |
ಬೆಂಗಳೂರಲ್ಲಿ 10 ಜೀವಂತ ಬಾಂಬ್ ಪತ್ತೆ? |
Bengaluru, First Published 8, Jul 2019, 8:36 AM IST |
ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್ ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. |
ಬೆಂಗಳೂರು [ಜು.08] : ರಾಜಧಾನಿ ಬೆಂಗಳೂರಿನ ಹೊರವಲಯದ ಮನೆಯೊಂದರ ಮೇಲೆ ಕೊಲ್ಕತ್ತಾ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ವೇಳೆ 10 ಸಜೀವ್ ಬಾಂಬ್ ಹಾಗೂ ಪಿಸ್ತೂಲು ಸೇರಿದಂತೆ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಸಿಕ್ಕಿ ಬಿದ್ದಿದ್ದ ಶಂಕಿತ ಜಮಾತ್-ಉಲ್-ಮುಜಾಹಿದೀನ್- ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಯ ಉಗ್ರ ಹಬೀಬುರ್ ರೆಹಮಾನ್ ವಾಸವಿದ್ದ ಚಿಕ್ಕಬಾಣಾವರದ ರೈಲು ನಿಲ್ದಾಣದ ಸಮೀಪವಿರುವ ಮನೆಯಲ್ಲಿ ಈ ಬಾಂಬ್‌ಗಳು ಸಿಕ್ಕಿವೆ ಎಂದು ಹೇಳಲಾಗಿದೆ. |
ಆದರೆ ಭಾನುವಾರ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿರುವ ಎನ್‌ಐಎ ತಂಡ ಶಂಕಿತ ಹಬೀಬುರ್ ರೆಹಮಾನ್ ಮನೆಯಲ್ಲಿ ದೊರೆತಿರುವ ಬಾಂಬ್ ಮತ್ತು ಸ್ಫೋಟಕ ವಸ್ತುಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. |
ಕೊಲ್ಕತ್ತಾದಿಂದ ಭಾನುವಾರ ನಗರಕ್ಕೆ ಹಬೀಬುರ್ ನನ್ನು ಕರೆ ತಂದಿರುವ ಎನ್‌ಐಎ ತಂಡ ನಗರದಲ್ಲಿ ಶಂಕಿತ ನೆಲೆಸಿದ್ದ ಮನೆಗಳನ್ನು ಶೋಧಿಸಿದೆ. ಶಂಕಿತ ಉಗ್ರ ಹಬೀಬುರ್ ರೆಹಮಾನ್ ಒಂದು ಕಡೆ ವಾಸ ಮಾಡುತ್ತಿರಲಿಲ್ಲ. ಪ್ರತಿ ಬಾರಿಯೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ನೆಲೆ ಬದಲಿಸುತ್ತಿದ್ದ. |
ಎರಡು ವರ್ಷದ ಹಿಂದೆ ಹಬೀಬುರ್ ರೆಹಮಾನ್ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಚಿಕ್ಕಬಾಣಾವರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಈ ಮನೆ ಮುಸ್ತಾಫ್ ಎಂಬುವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಮನೆಯಲ್ಲಿ ಹಬೀಬುರ್ ಜತೆ ಬಿಹಾರ ಮೂಲದ ಇನ್ನು ಮೂವರು ಶಂಕಿತ ಉಗ್ರರಿದ್ದರು. ಈ ವೇಳೆ ಶಂಕಿತರು ಬಾಂಬ್ ತಯಾರಿಸಿದ್ದರು ಎಂದು ತಿಳಿದುಬಂದಿದೆ. |
ಒಂದೂವರೆ ತಿಂಗಳ ಹಿಂದೆ ಮನೆ ಖಾಲಿ: ಬಂಧಿತ ಆರೋಪಿ ಹಬೀಬುರ್‌ನನ್ನು ಎನ್‌ಐಎ ತಂಡ ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಚಿಕ್ಕಬಾಣಾವರದಲ್ಲಿ ತನ್ನ ಜತೆಗಿದ್ದ ಮೂವರು ಶಂಕಿತರ ಬಗ್ಗೆ ಬಾಯ್ಬಿಟ್ಟಿದ್ದ. ಹಬೀಬುರ್ ಕೊಟ್ಟ ಮಾಹಿತಿ ಮೇರೆಗೆ ಕೆಲ ದಿನಗಳ ಹಿಂದೆ ಕೊಲ್ಕತ್ತಾ ರಾಷ್ಟ್ರೀಯ ದಳದ ಅಧಿಕಾರಿಗಳು ಬಿಹಾರ ಮೂಲದ ಮೂವರ ಶಂಕಿತರನ್ನು ಬಂಧಿಸಿತ್ತು. |
ಅಲ್ಲದೆ, ಒಂದೂವರೆ ತಿಂಗಳ ಹಿಂದೆಯಷ್ಟೇ ಶಂಕಿತ ಮೂವರು ಚಿಕ್ಕಬಾಣಾವರದಲ್ಲಿನ ಮನೆ ಖಾಲಿ ಮಾಡಿದ್ದರು. ಇದೀಗ ಹಬೀಬುರ್ ರೆಹಮಾನ್‌ನನ್ನು ಕರೆ ತಂದು ಬಾಡಿಗೆ ಮನೆ ಶೋಧಿಸಲಾಗಿದೆ. ಶಂಕಿತ ಹಬೀಬುರ್‌ನನ್ನು ಎನ್‌ಐಎ ತಂಡ ದೊಡ್ಡಬಳ್ಳಾಪುರದ ಲ್ಲಿನ ಮಸೀದಿಗೆ ಕೂಡ ಭೇಟಿ ನೀಡಿ ಶೋಧ ನಡೆಸಲಿದೆ. ಅಲ್ಲದೆ, ತಮಿಳುನಾಡು ಹಾಗೂ ಇನ್ನಿತರ ಪ್ರದೇಶಗ ಳಿಗೂ ಶಂಕಿತನನ್ನು ಎನ್‌ಐಎ ತಂಡ ಕರೆದೊಯ್ಯಲಿದೆಎಂದು ಮೂಲಗಳು ತಿಳಿಸಿವೆ. |
2014 ರಲ್ಲಿ ಪಶ್ವಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಯಾಗಿದ್ದ ಹಬೀಬುರ್ ತಲೆಮರೆಸಿಕೊಂಡಿದ್ದ. ಶಂಕಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದಿದ್ದ ಮಾಹಿತಿ ಕಲೆ ಹಾಕಿದ್ದ ಎನ್‌ಐಎ ತಂಡ ಜೂ. 25ರಂದು ಆತನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಹಬೀಬುರ್ ನೀಡಿದ ಮಾಹಿತಿ ಮೇರೆಗೆ ರಾಮನಗರದ ಟಿಪ್ಪು ನಗರ ಬಡಾವಣೆಯ ಸೇತುವೆ ಬಳಿ ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ವಸ್ತುಗಳನ್ನು ಎನ್‌ಐಎ ತಂಡ ಜಪ್ತಿ ಮಾಡಿತ್ತು. |
ಇನ್ನು ಭಾನುವಾರ ರಾತ್ರಿ ಬಾಂಬ್ ನಿಷ್ಕ್ರಿಯದಳ ದಾಳಿ ವೇಳೆ ಬಾಣಾವರದ ಮನೆಯಲ್ಲಿ ಸಿಕ್ಕ ಸಜೀವ್ ಬಾಂಬ್ ಮತ್ತು ಸುಧಾರಿತ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಿದೆ ಎನ್ನಲಾಗಿದೆ. |
ದೇಶದ ಉಕ್ಕಿನ ಮಹಿಳೆಯನ್ನ ಸ್ಮರಿಸಿದ ಭಾರತ - Power TV News |
Homeದೇಶದೇಶದ ಉಕ್ಕಿನ ಮಹಿಳೆಯನ್ನ ಸ್ಮರಿಸಿದ ಭಾರತ |
ದೇಶರಾಜಕೀಯರಾಜ್ಯ |
ದೇಶದ ಉಕ್ಕಿನ ಮಹಿಳೆಯನ್ನ ಸ್ಮರಿಸಿದ ಭಾರತ |
ನೆನ್ನೆ ಭಾರತ ಕಂಡ ಧೀಮಂತ ನಾಯಕಿ, ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ಜಯಂತಿ. ತಮ್ಮ ನಿಷ್ಠುರ ನಿಲುವು ಹಾಗೂ ವರ್ಚಸ್ಸಿನಿಂದ ದೇಶದ ಘನತೆ ಹಾಗೂ ಹಿರಿಮೆಯನ್ನ ವಿಶ್ವ ಮಟ್ಟದಲ್ಲಿ ತೋರಿಸಿಕೊಟ್ಟ ಮಹಾನಾಯಕಿಯನ್ನ ನೆನ್ನೆ ಭಾರತದ ದೇಶವು ಸ್ಮರಿಸಿಕೊಳ್ಳುತ್ತಿತ್ತು. ಹಾಗಿದ್ರೆ ಭಾರತದ ಮೊದಲ ಹಾಗೂ ಏಕೈಕ ಮಹಿಳಾ ಪ್ರಧಾನಿಯ ರಾಜಕೀಯ ಯಾನ ಹೇಗಿತ್ತು ಮತ್ತು ರಾಜಕೀಯಕ್ಕೆ ಬಂದ ಹೇಗೆ ಸಂಪೂರ್ಣ ವಿವರ ಇಲ್ಲಿದೆ. |
ಇಂದಿರಾ ಗಾಂಧಿ ಈ ಹೆಸ್ರು ಕೇಳಿರದ ಭಾರತೀಯರೇ ಇಲ್ಲ, ಒಂದು ಕಾಲದಲ್ಲಿ ಭಾರತ ದೇಶದಲ್ಲಿ ತಮ್ಮ ವಿಶಿಷ್ಟ ವ್ಯಕ್ತಿತ್ವ ಹಾಗೂ ಗಟ್ಟಿ ನಿಲುವುಗಳ ಮೂಲಕ ದೇಶದ ಆಂತರಿಕ ಹಾಗು ಹೊರಗಿನ ದುಷ್ಟರಿಂದ ಬರಬಹುದಾದ ದೊಡ್ಡ ದೊಡ್ಡ ಆಪಾಯಗಳನ್ನ ತಡೆದ ಉಕ್ಕಿನ ಮಹಿಳೆಯ ವರ್ಚಸ್ಸು ಇಡೀ ವಿಶ್ವವ್ಯಾಪಿಯಾಗಿತ್ತು. |
ಒಂದು ಕಾಲದಲ್ಲಿ ಭಾರತದ ವಿರುದ್ಧ ತಿರುಗಿ ಬಿದ್ದಿದ್ದ ಬಲಿಷ್ಠ ಅಮೆರಿಕಾಗೆ ರಷ್ಯಾದೊಂದಿಗಿನ ಗೆಳೆತನದ ಮೂಲಕ ರಾಜತಾಂತ್ರಿಕವಾಗಿ ಪೆಟ್ಟು ಕೊಟ್ಟಿದ್ರು. ಹೀಗಾಗಿ ಇಂದಿಗೂ ಕೂಡ ಅಮೆರಿಕಾ ಇಂದಿರಾ ಗಾಂಧಿ ಹೆಸ್ರು ಕೇಳಿದ್ರೆ ಕೊಂಚ ಇರಿಸು ಮುರಿಸುಗೊಳ್ಳುತ್ತೆ. ಹೀಗೆ ಬಲಾಢ್ಯ, ಕುತಂತ್ರಿ ದೇಶಗಳಿಗೂ ಇಂದಿರಾ ಭಾರತ ಇನ್ನಿಲ್ಲದಂತೆ ಕಾಡಿದ್ದಂತೂ ಸುಳ್ಳಲ್ಲ. ಇಂಥಾ ಇಂದಿರಾ ಗಾಂಧಿಯವರ 104ನೇ ಜನ್ಮದಿನೋತ್ಸವವನ್ನು ನೆನ್ನೆ ಎಲ್ಲೆಡೆ ಆಚರಿಸಲಾಗಿತ್ತು. |
ಇಂತಹ ದಿಟ್ಟ ಹಾಗು ಧೀಮಂತ ವ್ಯಕ್ತಿತ್ವದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ಜಯಂತಿ. ಹಾಗಾಗಿ ನೆನ್ನೆ ದೇಶಾದ್ಯಂತ ದಿವಂಗತ ಇಂದಿರಾ ಗಾಂಧಿ ಅವರನ್ನ ನೆನಪು ಮಾಡಿಕೊಂಡು ಬರುತ್ತಿದೆ. ಇನ್ನು ಇಂದಿರಾ ಗಾಂಧಿ ಕೂಡ ಅಷ್ಟು ಸುಲಭವಾಗಿ ರಾಜಕೀಯಕ್ಕೆ ಬಂದ ನಾರಿಯಲ್ಲ. ಹೆಜ್ಜೆ ಹೆಜ್ಜೆಗೂ ಭಾರತದ ರಾಜಕೀಯ ವ್ಯವಸ್ಥೆಯನ್ನ ಕೂಲಂಕಶವಾಗಿ ಅರ್ಥ ಮಾಡಿಕೊಂಡು ಭಾರತದ ರಾಜಕೀಯ ರಂಗಕ್ಕೆ ಧುಮುಕಿದ್ರು. ಅಸಲಿಗೆ ಇಂದಿರಾ ಅವರ ಬಾಲ್ಯದಲ್ಲಿ ತಂದೆ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ರಾಜಕೀಯ ಹಾಗು ಸ್ವಾತಂತ್ರ್ಯ ಚಳವಳಿಯ ವಾತಾವರಣ ಅವರನ್ನ ಕಾಡುತ್ತಲೇ ಇತ್ತು. |
ಹೌದು, 1917ರ ನವಂಬರ್ 19ರಂದು ಜವಾಹರ್ ಲಾಲ್ ನೆಹರು ಮತ್ತು ಕಮಲಾ ದಂಪತಿ ಪುತ್ರಿಯಾಗಿ ಜನಿಸಿದ ಇಂದಿರಾ, ತಮ್ಮ ಬಾಲ್ಯದಿಂದಲೂ ಭಾರತದ ನಾನಾ ಹೋರಾಟಗಳು ಹಾಗು ಇಲ್ಲಿನ ವ್ಯವಸ್ಥೆ ಬಗ್ಗೆ ಮೊದಲಿನಿಂದಲೂ ಕೂಲಂಕಶವಾಗಿ ಅರ್ಥ ಮಾಡಿಕೊಂಡು ಬಂದಿದ್ರು. ಹೀಗಾಗಿಯೇ 70-80ನೇ ದಶಕದಲ್ಲಿ ಇಂಡಿಯಾ ಅಂದ್ರೆ ಇಂದಿರಾ. ಇಂದಿರಾ ಅಂದ್ರೆ ಇಂಡಿಯಾ ಅನ್ನೋವಷ್ಟರ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ರು. |
ಒಂದು ಹಂತದಲ್ಲಿ ಅಪ್ಪ ನೆಹರು ನಂತರ ಮಂದಗತಿಯಲ್ಲಿ ಸಾಗುತ್ತಿದ್ದ ದೇಶದ ಪ್ರಗತಿಯ ಓಟವನ್ನ ಮತ್ತೆ ಮಿಂಚಿನ ವೇಗಕ್ಕೆ ತಂದಿದ್ದು ಇಂದಿರಾ ಗಾಂಧಿ ಅಂದ್ರೆ ತಪ್ಪಾಗಲ್ಲ. ಅಂದಿನ ಕಾಲದಲ್ಲಿ ಮಹಿಳೆಯರನ್ನ ತುಚ್ಚವಾಗಿ ಕಾಣುತ್ತಿದ್ದ ಹಾಗು ಕೇವಲ ಪುರುಷರಿಂದಲೇ ತುಂಬಿ ಹೋಗಿದ್ದ ರಾಜಕೀಯ ವ್ಯವಸ್ಥೆಯಲ್ಲಿ ಬಲಾಢ್ಯ ಶಕ್ತಿಯಾಗಿ ನಿಂತವರು ಇಂದಿರಾ ಗಾಂಧಿ. |
1966ರಲ್ಲಿ ರಷ್ಯಾದ ತಾಷ್ಕೆಂಟ್ನಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಲಿಕ ಮರಣ ಹೊಂದಿದ್ರು. ಈ ಹಿನ್ನೆಲೆ ಪಕ್ಷದಲ್ಲಿ ಸಾಕಷ್ಟು ಜನ ಹಿರಿಯ ನಾಯಕರು ಇದ್ದ ಕಾರಣ ಪ್ರಧಾನಿ ಹುದ್ದೆ ಯಾರಿಗೆ ನೀಡಬೇಕು ಅನ್ನೋ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿ ಉದ್ಭವಿಸಿತ್ತು. ಈ ವೇಳೆ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರದಲ್ಲಿ ಈ ಹಿಂದೆ ವಾರ್ತಾ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರನ್ನ ಕಾಂಗ್ರೆಸ್ ಹಿರಿಯ ನಾಯಕರಾದ ಅತುಲ್ಯ ಗೋಷ್, ಎಸ್.ಕೆ.ಪಾಟೀಲ್, ಎಸ್.ನಿಜಲಿಂಗಪ್ಪ ಹಾಗು ಬಿಜು ಪಟ್ನಾಯಕ್ ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ ಅವರನ್ನ ಆಯ್ಕೆ ಮಾಡಿದ್ರು. ಅಲ್ಲಿಂದ ಭಾರತದಲ್ಲಿ ಇಂದಿರಾ ಯುಗ ಆರಂಭವಾಗಿತ್ತು. |
ಹೀಗೆ ಏಕಾಏಕಿ ಇಂದಿರಾ ಗಾಂಧಿ ಪ್ರಧಾನಿಯಾಗುತ್ತಿದ್ದಂತೆ ಅವರ ವಿರುದ್ಧ ಹಲವು ಟೀಕೆಗಳು ಕೂಡ ಕೇಳಿ ಬಂದಿದ್ವು. ಯಾಕಂದ್ರೆ, ಈ ಹಿಂದೆ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರದಲ್ಲಿ ವಾರ್ತಾ ಸಚಿವರಾಗಿದ್ದಾಗ ಇಂದಿರಾ ಗಾಂಧಿ ಹಲವು ವೈಫಲ್ಯಗಳನ್ನ ಎದುರಿಸಿದ್ರು. ಈ ಹಿನ್ನೆಲೆಯಲ್ಲಿ ರಾಮ್ ಮನೋಹರ ಲೋಹಿಯ ಅವರಂಥ ಪ್ರಭಾವಿ ನಾಯಕರಿಂದ ಗೂಂಗಿ ಗುಡಿಯಾ ಅಂತ ಕರೆಸಿಕೊಂಡಿದ್ರು. ಆದ್ರೆ ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಇಂದಿರಾ, ತಮ್ಮ ಆಡಳಿತ ಶೈಲಿಯ ಮೂಲಕವೇ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ರು. ಇಂತಹ ಉತ್ತುಂಗದ ಅವಧಿಯಲ್ಲೇ ತಮ್ಮ ಜನಪ್ರಿಯ ಕಾರ್ಯಕ್ರಮಗಳನ್ನ ಜಾರಿಗೆ ತಂದ ಇಂದಿರಾ ಗಾಂಧಿ, 14 ರಾಷ್ಟ್ರೀಯ ವಾಣಿಜ್ಯ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಿದ್ರು. ಇದೇ ವೇಳೆ ರಾಜ ವಂಶಸ್ಥ ಕುಟುಂಬಗಳಿಗೆ ನೀಡ್ತಿದ್ದ ವಾರ್ಷಿಕ ಸರ್ಕಾರಿ ನಿಧಿಯನ್ನು ನಿಲ್ಲಿಸಿದ್ರು. ಬಹು ಮುಖ್ಯವಾಗಿ ಹಲವಾರು ಜನಪರ ಕಾರ್ಯಗಳಿಗೆ ಮುನ್ನುಡಿಯನ್ನ ಬರೆಯುತ್ತಾ ಹೋದ್ರು. |
ಹೀಗೆ ಇಂದಿರಾ ಗಾಂಧಿಯವರ ಎಲ್ಲಾ ಯೋಜನೆಗಳು ಬಹುಬೇಗ ಜನರನ್ನ ತಲುಪೋದಕ್ಕೆ ಶುರುವಾಗ್ತಾ ಹೋದ್ವು. ಇದರಿಂದಾಗಿ 1971ರ ಲೋಕಸಭೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಪೂರ್ಣ ಬಹುಮತದಿಂದ ಅಧಿಕಾರ ಹಿಡಿಯಲು ಕಾರಣವಾಯಿತು. ಇದೇ ವೇಳೆ ಕಾಂಗ್ರೆಸ್ನ ಹಿರಿಯ ತಲೆಗಳನ್ನು ಪಕ್ಷದಲ್ಲಿ ಹಿಂದೆ ಸರಿಯುವಂತೆ ಮಾಡಿದ ಇಂದಿರಾ, ಪಕ್ಷದಲ್ಲಿ ಯುವ ಮುಖಂಡರಿಗೆ ಆದ್ಯತೆ ನೀಡ್ತಾ ಬಂದ್ರು. ಒಂದರ್ಥದಲ್ಲಿ ಪಕ್ಷ ಮತ್ತು ಸರ್ಕಾರವನ್ನು ಸಂಪೂರ್ಣ ಇಂದಿರಾ ಗಾಂಧಿಯೇ ಹತೋಟೆಗೆ ತೆಗೆದುಕೊಂಡಿದ್ರು. |
ಇದೇ ಸಂದರ್ಭದಲ್ಲಿ ಇಂದಿರಾ ನೇತೃತ್ವದಲ್ಲಿ ಹಸಿರು ಕ್ರಾಂತಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಉಂಟಾಗಿದ್ದ ಆಹಾರದ ಕೊರತೆಯನ್ನು ನೀಗಿಸಲಾಗಿತ್ತು. ಇದು ಭಾರತದಲ್ಲಿ ಆಗ ಸಂಚಲನವನ್ನೇ ಮೂಡಿಸಿತ್ತು. ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ಪರಮಾಣು ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತ ತೀವ್ರವಾದ ಪ್ರಗತಿ ಸಾಧಿಸಿತು. ಇನ್ನು1971ರಲ್ಲಿ ಭಾರತೀಯ ಸೈನ್ಯವು ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ ಪಾಕಿಸ್ತಾನದ ವಿರುದ್ದ ಗೆಲುವು ಸಾಧಿಸಿದ ಪರಿಣಾಮ ಸ್ವತಃ ಪ್ರತಿಪಕ್ಷಗಳೇ ಇಂದಿರಾ ಗಾಂಧಿಗೆ ದುರ್ಗಾ ಅನ್ನೋ ನಾಮಾಂಕಿತವನ್ನ ನೀಡಿದ್ದರು. |
ಹೀಗೆ ರಾಜಕೀಯ ಜೀವನದ ಉತ್ತುಂಗದಲ್ಲಿ ಇರುವಾಗಲೇ ಇಂದಿರಾ ಗಾಂಧಿ ತಮ್ಮ ಜೀವಿತದ ಬಹುದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡು ಬಿಟ್ರು. 1975-77 ರ ಸಂದರ್ಭದಲ್ಲಿ ದೇಶದಲ್ಲಿ ವಿಧಿಸಿದ ತುರ್ತು ಪರಿಸ್ಥಿತಿಯಿಂದಾಗಿ ಇಂದಿರಾ ಗಾಂಧಿ ತಮಗಿದ್ದ ವರ್ಚಸನ್ನ ತಾವೇ ಹಾಳು ಮಾಡಿಕೊಂಡಿದ್ರು. ಈ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯಗಳು ಹಾಗು ಅಸಂಖ್ಯ ಊಹಾಪೋಹಗಳು ಹಬ್ಬೋದಕ್ಕೆ ಶುರುವಾಗಿತ್ತು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮತ್ತು ವ್ಯಕ್ತಿಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದು. |
ಜೊತೆಗೆ ತುರ್ತುಪರಿಸ್ಥಿತಿ ವಿರೋಧಿಸಿದವರನ್ನು ಜೈಲಿಗೆ ತಳ್ಳಿದ್ದು ಇಂದಿರಾ ವರ್ಚಸ್ಸಿಗೆ ಬಹುದೊಡ್ಡ ಪೆಟ್ಟು ನೀಡಿತ್ತು. ಇದರಿಂದ ಕೆರಳಿದ ಹಿರಿಯ ಗಾಂಧಿವಾದಿ ಜಯಪ್ರಕಾಶ ನಾರಾಯಣ್ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದ್ರು. ಇದರ ಭಾಗವಾಗಿ ಎಲ್ಲ ವಿರೋಧ ಪಕ್ಷಗಳು ಒಂದೇ ವೇದಿಕೆಯಲ್ಲಿ ಬಂದು ಇಂದಿರಾ ನಡೆಯನ್ನು ವಿರೋಧಿಸಲು ಹೋರಾಟ ಪ್ರಾರಂಭಿಸಿದವು. ಆಗ ಎಲ್ಲ ಪಕ್ಷಗಳು ಇಂದಿರಾ ಹಟಾವೋ ಅನ್ನೋ ಘೋಷಣೆ ಮೂಲಕ ಹೋರಾಟ ಆರಂಭಿಸಿದರು. ಮಾರ್ಚ್ 21, 1977ರಂದು ತುರ್ತು ಪರಿಸ್ಥಿತಿಯನ್ನು ವಾಪಸ್ ಪಡೆಯಲಾಯ್ತು. |
ಇದಾದ ಬಳಿಕ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ಹೀನಾಯ ಸೋಲನ್ನ ಅನುಭವಿಸಬೇಕಾಗಿ ಬಂತು. ಇದೇ ಸಂಧರ್ಭದಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮೊರಾರ್ಜಿ ದೇಸಾಯಿ ನೇತೃತ್ವದ ಕಾಂಗ್ರೇಸೇತರ ಜನತಾ ಸರ್ಕಾರ ಅಧಿಕಾರಕ್ಕೆ ಬಂತು. ಹೀಗೆ 1977ರಿಂದ 80ರ ಅವಧಿಯ ನಡುವೆ ಮೊರಾರ್ಜಿ ದೇಸಾಯಿ ಮತ್ತು ಚೌಧರಿ ಚರಣ್ ಸಿಂಗ್ ಪ್ರಧಾನ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ರು. |
ಆದ್ರೆ ಈ ಸಮ್ಮಿಶ್ರ ಸರ್ಕಾರ ಹಲವಾರು ಭಿನ್ನಾಭಿಪ್ರಾಯಗಳಿಂದ ಬೇಗ ಪತನಗೊಳ್ಳುವ ಪರಿಸ್ಥಿತಿ ಬಂತು. ಆನಂತರ 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ, ಹಲವು ಯೋಜನೆಗಳ ಮೂಲಕ ಮತ್ತೆ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ್ರು. ಅದರಲ್ಲೂ ಗರೀಬಿ ಹಠಾವೋ ಘೋಷಣೆ ದೇಶದ ಉದ್ದಗಲಕ್ಕೂ ಸದ್ದು ಮಾಡಿತ್ತು. |
ಇದೇ ಅವಧಿಯಲ್ಲಿ ಕೆಲ ಉಗ್ರವಾದಿ ಸಿಖ್ಖರ ಖಲಿಸ್ತಾನ ಬೇಡಿಕೆಗೆ ಬೆಂಬಲವಾಗಿದ್ದ ಶಕ್ತಿಗಳನ್ನ ಬಗ್ಗುಬಡಿದು ಪಂಜಾಬ್ನ ಸ್ವರ್ಣಮಂದಿರದ ಮೇಲೆ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಿದ್ರು. ಈ ಮೂಲಕ ಪ್ರತ್ಯೇಕತೆಯ ಸೊಲ್ಲೆತ್ತಿದವರ ನಡು ಮುರಿದು ಬುದ್ದಿ ಕಲಿಸಿದ್ರು. ಈ ಒಂದು ಘಟನೆಯೇ ಮುಂದೆ ಇಂದಿರಾ ಗಾಂಧಿಯವರ ಜೀವಕ್ಕೇ ಕುತ್ತು ತಂದಿದ್ದು ಸುಳ್ಳಲ್ಲ. ಸ್ವರ್ಣ ಮಂದಿರದ ಮೇಲಿನ ಕ್ರಮದಿಂದ ಸಿಖ್ಖರ ಕೆಂಗಣ್ಣಿಗೆ ಗುರಿಯಾದ ಇಂದಿರಾ ಗಾಂಧಿ, 1984ರ ಅಕ್ಟೋಬರ್ 31 ರಂದು ಅವರ ಸೆಕ್ಯೂರಿಟಿ ಗಾರ್ಡ್ಗಳಿಂದಲೇ ಗುಂಡಿನ ಹೊಡೆತ ತಿಂದು ಸಾವನ್ನಪ್ಪುತ್ತಾರೆ. |
ಹೀಗೆ ಭಾರತದ ರಾಜಕೀಯ ಇತಿಹಾಸದಲ್ಲಿ ಉಕ್ಕಿನ ಮಹಿಳೆ ಅಂತಲೇ ಕರೆಸಿಕೊಂಡಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ತಮ್ಮ ಅಂಗರಕ್ಷರಿಂದಲೇ ಸಾವಿಗೀಡಾಗಿದರು. ಇದಾದ ಬಳಿಕ ದೇಶದಲ್ಲಿ ಸಾಕಷ್ಟು ವಿದ್ಯಮಾನಗಳು ಹಾಗು ಮಹತ್ತರವಾದ ಬದಲಾವಣೆಗಳು ನಡೆದಿವೆ. ಆದ್ರೆ ಇಂದಿರಾ ಗಾಂಧಿಯವರ ದಿಟ್ಟತೆ, ನಿಲುವು, ಆಕರ್ಷಕ ವ್ಯಕ್ತಿತ್ವ ಹಾಗೂ ಜನಪ್ರಿಯತೆ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಇಂದಿಗೂ ಇಂದಿರಾ ಗಾಂಧಿಯವರು ಭಾರತದ ಅಸಂಖ್ಯಾತ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಅವರು ನಮ್ಮನ್ನಗಲಿ 36 ವರ್ಷಗಳೇ ಕಳೆದುಹೋಗಿದ್ರೂ ಭಾರತದ ಇತಿಹಾಸದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿದೆ. |
2023ರಲ್ಲಿ ಸುಸಜ್ಜಿತ ಹೆದ್ದಾರಿ ಸಂಚಾರಕ್ಕೆ ಮುಕ್ತ | Udayavani – ಉದಯವಾಣಿ |
Subsets and Splits
No community queries yet
The top public SQL queries from the community will appear here once available.