text
stringlengths
0
61.5k
ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated: 04 ಏಪ್ರಿಲ್ 2013, 14:14 IST
ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಚಿಂತಾಮಣಿಯಲ್ಲಿ ಚುನಾವಣೆಯೆಂದರೆ, ಪ್ರತಿಷ್ಠೆಗಳ ಸಮರವೆಂದೇ ಅರ್ಥ. ಬೇರೆಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷಗಳು ಪ್ರಮುಖವಾದರೆ, ಚಿಂತಾಮಣಿಯಲ್ಲಿ ಮಾತ್ರ ವ್ಯಕ್ತಿಯೇ ಮುಖ್ಯ.
ಯಾವ ಪಕ್ಷವು ತಮ್ಮ ನಾಯಕನನ್ನು ಸೆಳೆದುಕೊಳ್ಳುತ್ತದೆ ಎನ್ನುವುದರಕ್ಕಿಂತ ತಮ್ಮ ನಾಯಕ ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದಕ್ಕೆ ಇಲ್ಲಿನ ಮತದಾರರು ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಪ್ರತಿಯೊಂದು ಚುನಾವಣೆಯಲ್ಲೂ ಅಭ್ಯರ್ಥಿಗಳು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿದ್ದಾರೆ. ಪಕ್ಷೇತರರಾಗಿಯೂ ಸ್ಪರ್ಧಿಸಿದ್ದಾರೆ.
ಚಿಂತಾಮಣಿಯಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವುದು ಎರಡು ಮನೆತನಗಳ ರಾಜಕಾರಣ. ಒಮ್ಮೆ ಎಂ.ಸಿ.ಆಂಜನೇಯರೆಡ್ಡಿ ಮನೆತನದವರು ಗೆಲುವು ಸಾಧಿಸಿದರೆ, ಮಗದೊಮ್ಮೆ ಟಿ.ಕೆ.ಗಂಗಿರೆಡ್ಡಿ ಮನೆತನದವರಿಗೆ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಅರ್ಥ. ಈ ಮನೆತನಗಳ ಪರಂಪರೆ ಎರಡು-ಮೂರು ದಶಕಗಳದ್ದಲ್ಲ. 1957ರಿಂದಲೂ ಎರಡೂ ಮನೆತನಗಳ ನಡುವಿನ ಜಿದ್ದಾಜಿದ್ದಿ ರಾಜಕಾರಣ ನಡೆಯುತ್ತಲೇ ಬಂದಿದೆ. ಎರಡೂ ಮನೆತನದವರಿಗೆ ಹೊರತುಪಡಿಸಿದರೆ, ಮೂರನೆಯವರಿಗೆ ಗೆಲ್ಲಲು ಅವಕಾಶ ಸಿಗದಿರುವುದೇ ಒಂದು ದಾಖಲೆ !
ಚಿಂತಾಮಣಿಯಲ್ಲಿ ನಡೆದ ಬಹುತೇಕ ಚುನಾವಣೆಗಳಲ್ಲಿ ನೇರವಾದ ಹಣಾಹಣಿ ಏರ್ಪಟ್ಟಿದ್ದು ಕಾಂಗ್ರೆಸ್‌ನ ಚೌಡರೆಡ್ಡಿ ಮತ್ತು ಕೆ.ಎಂ.ಕೃಷ್ಣಾರೆಡ್ಡಿ ನಡುವೆ. ಬಹುತೇಕ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಚೌಡರೆಡ್ಡಿಯವರು 1999ರ ಚುನಾವಣೆಯಲ್ಲಿ ಮಾತ್ರ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ದಾಖಲಿಸಿದರು. 1983 ಮತ್ತು 1989ರ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಅವರು 1985 ಮತ್ತು 1989ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. 1994ರ ಚುನಾವಣೆಯಲ್ಲಿ ಕೇವಲ 898 ಮತಗಳ ಅಂತರದಿಂದ ಕೆ.ಎಂ.ಕೃಷ್ಣಾರೆಡ್ಡಿ ವಿರುದ್ಧ ಚೌಡರೆಡ್ಡಿ ಪರಾಭವಗೊಂಡರು.
ಆದರೆ ಕೆ.ಎಂ.ಕೃಷ್ಣಾರೆಡ್ಡಿಯವರು ಬಹುತೇಕ ಚುನಾವಣೆಗಳನ್ನು ಜನತಾ ಪರಿವಾರದ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. 1983 ಮತ್ತು 1985ರ ಚುನಾವಣೆಗಳಲ್ಲಿ ಸ್ಪರ್ಧಿಸಿದ ಅವರು 1989 ಮತ್ತು 1994ರ ಚುನಾವಣೆಗಳಲ್ಲಿ ಜನತಾ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ನಂತರದ ಮೂರು ಚುನಾವಣೆಗಳಲ್ಲೂ ಅವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಸತತ ಸೋಲು ಅನುಭವಿಸಿದರು. 1999ರಲ್ಲಿ ಜೆಡಿಯು, 2004ರಲ್ಲಿ ಬಿಜೆಪಿ ಮತ್ತು 2008ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.
2008ರವರೆಗೆ ಎರಡೂ ಮನೆತನಗಳದ್ದೇ ರಾಜಕಾರಣ ಮುಂದುವರೆದಿದ್ದರಿಂದ ಗದ್ದುಗೆಯೇರಲು ಬೇರೆಯವರಿಗೆ ಅವಕಾಶ ಸಿಗಲಿಲ್ಲ. ಬೇರೆಯವರು ಪ್ರಯತ್ನಿಸಿದರು ಯಶಸ್ವಿಯಾಗಲಿಲ್ಲ. ಆದರೆ ಪ್ರಸಕ್ತ 2013ರ ಚುನಾವಣೆಯು ಹೊಸ ಬದಲಾವಣೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ.
ಚಿಂತಾಮಣಿಯಲ್ಲಿ ಮೊಟ್ಟಮೊದಲ ಬಾರಿಗೆ ಇಡೀ ರಾಜಕೀಯ ಚಿತ್ರಣವೇ ಬದಲಾಗಿದ್ದು, ಯಾರು ಗೆಲ್ಲುತ್ತಾರೆ ಎಂಬುದು ಪಕ್ಷದ ಕಾರ್ಯಕರ್ತರಲ್ಲಿ ಅಷ್ಟೇ ಅಲ್ಲ, ಕ್ಷೇತ್ರದ ಜನರಲ್ಲೂ ಕುತೂಹಲ ಮೂಡಿಸಿದೆ.
ಚುನಾವಣೆಯು ಹೊಸ ಬದಲಾವಣೆಗೆ ಕಾರಣವಾಗುವುದಾ ಅಥವಾ ಹಳೆಯ ಪರಂಪರೆ ಮುಂದುವರೆಸುವುದಾ ಎಂಬ ಪ್ರಶ್ನೆ ಅಲ್ಲಿನ ಜನರಲ್ಲಿ ಕಾಡುತ್ತಿದೆ.
ತಮ್ಮ ತಾತಾ ಎಂ.ಸಿ.ಆಂಜನೇಯರೆಡ್ಡಿಯವರ ಕಾಲದಿಂದಲೂ ಇಡೀ ಕುಟುಂಬವು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡು ಬಂದಿದ್ದರೂ ಹಾಲಿ ಶಾಸಕ ಡಾ. ಎಂ.ಸಿ.ಸುಧಾಕರ್ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿದ್ದಾರೆ. `ಕಾಂಗ್ರೆಸ್‌ನಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಕಿರಿಕಿರಿ ತಾಳಲಾರದೇ ಇಂತಹ ನಿರ್ಧಾರಕ್ಕೆ ಬಂದಿದ್ದೇನೆ' ಎಂದು ಹೇಳಿರುವ ಅವರು ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಅರ್ಜಿಯನ್ನು ಕೂಡ ಸಲ್ಲಿಸಿಲ್ಲ. ಪ್ರಥಮ ಬಾರಿ ಪಕ್ಷೇತರರಾಗಿ ಸ್ಪರ್ಧಿಸಲಿರುವ ಅವರು ಹಲವಾರು ಸವಾಲುಗಳನ್ನು ಎದುರಿಸುವ ಸಾಧ್ಯತೆಯಿದೆ.
ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ವಾಣಿ ಕೃಷ್ಣಾರೆಡ್ಡಿಯವರು ಕಾಂಗ್ರೆಸ್‌ನಿಂದ ಮತ್ತು ಸಮಾಜಸೇವಕರಾಗಿ ಗುರುತಿಸಿಕೊಂಡು ಈಗ ರಾಜಕಾರಣಿಯಾಗಿರುವ ಜೆ.ಕೆ.ಕೃಷ್ಣಾರೆಡ್ಡಿಯವರು ಜೆಡಿಎಸ್‌ನಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಮನೆತನಗಳ ರಾಜಕಾರಣದಲ್ಲಿ ಮೂರನೆಯವರ ಪ್ರವೇಶವಾಗಿದ್ದು, ರಾಜಕೀಯ ಯಾವ ದಿಕ್ಕು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಡಾ. ಎಂ.ಸಿ.ಸುಧಾಕರ್ ಅವರು ಮೂರನೇ ಬಾರಿ ಶಾಸಕರಾಗಿ ಆಯ್ಕೆಯಾಗುವರೇ? ವಾಣಿಕೃಷ್ಣಾರೆಡ್ಡಿ ಅಥವಾ ಜೆ.ಕೆ.ಕೃಷ್ಣಾರೆಡ್ಡಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗುವುರೋ ಎಂಬುದು ಕಾದು ನೋಡಬೇಕು.
'); $('#div-gpt-ad-151353-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-151353'); }); googletag.cmd.push(function() { googletag.display('gpt-text-700x20-ad2-151353'); }); },300); var x1 = $('#node-151353 .field-name-body .field-items div.field-item > p'); if(x1 != null && x1.length != 0) { $('#node-151353 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-151353').addClass('inartprocessed'); } else $('#in-article-151353').hide(); } else { // Text ad googletag.cmd.push(function() { googletag.display('gpt-text-300x20-ad-151353'); }); googletag.cmd.push(function() { googletag.display('gpt-text-300x20-ad2-151353'); }); // Remove current Outbrain $('#dk-art-outbrain-151353').remove(); //ad before trending $('#mob_rhs1_151353').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-151353 .field-name-body .field-items div.field-item > p'); if(x1 != null && x1.length != 0) { $('#node-151353 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); } else $('#in-article-mob-151353').hide(); } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var obDesktop = ['#dk-art-outbrain-151353','#dk-art-outbrain-690302','#dk-art-outbrain-690293','#dk-art-outbrain-690283','#dk-art-outbrain-690245']; var obMobile = ['#mob-art-outbrain-151353','#mob-art-outbrain-690302','#mob-art-outbrain-690293','#mob-art-outbrain-690283','#mob-art-outbrain-690245']; var obMobile_below = ['#mob-art-outbrain-below-151353','#mob-art-outbrain-below-690302','#mob-art-outbrain-below-690293','#mob-art-outbrain-below-690283','#mob-art-outbrain-below-690245']; var in_art = ['#in-article-151353','#in-article-690302','#in-article-690293','#in-article-690283','#in-article-690245']; var twids = ['#twblock_151353','#twblock_690302','#twblock_690293','#twblock_690283','#twblock_690245']; var twdataids = ['#twdatablk_151353','#twdatablk_690302','#twdatablk_690293','#twdatablk_690283','#twdatablk_690245']; var obURLs = ['https://www.prajavani.net/article/ರಾಜಕಾರಣದಲ್ಲಿ-ಮನೆತನಗಳದ್ದೇ-ಕದನ','https://www.prajavani.net/district/chikkaballapur/call-and-tell-a-problem-690302.html','https://www.prajavani.net/district/chikkaballapur/pea-mela-at-city-690293.html','https://www.prajavani.net/district/chikkaballapur/the-groaning-of-the-riders-690283.html','https://www.prajavani.net/district/chikkaballapur/blackmail-begins-in-bjp-too-690245.html']; var vuukleIds = ['#vuukle-comments-151353','#vuukle-comments-690302','#vuukle-comments-690293','#vuukle-comments-690283','#vuukle-comments-690245']; // var nids = [151353,690302,690293,690283,690245]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; var obscroll = false; $(window).scroll(function(){ if(obscroll == true) return; obscroll = true; if(screen.width < 1025) // Mobile only processing { $.each( obDesktop, function( key, dkOb ) { if($(dkOb) && $(dkOb).length!=0) { if( !$(dkOb).hasClass('obrprocessed')) { if(isInViewport2($(dkOb)) ) { $(dkOb).addClass('obrprocessed'); //console.log('calling timeout - obr '); $(dkOb).html('
ಗೋಲುಗಳ ಗೋಪುರ ಕಟ್ಟಿದ ಆರ್ಮಿ ಇಲೆವನ್‌ | Prajavani
ಗೋಲುಗಳ ಗೋಪುರ ಕಟ್ಟಿದ ಆರ್ಮಿ ಇಲೆವನ್‌
ಬೆಂಗಳೂರು: ಆರ್ಮಿ ಇಲೆವನ್‌ ತಂಡ ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಮಂಗಳವಾರ ಗೋಲುಗಳ ಗೋಪುರ ಕಟ್ಟಿತು.
ಈ ತಂಡವು ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯ ಪಂದ್ಯದಲ್ಲಿ 5–3 ಗೋಲುಗಳಿಂದ ಮುಂಬೈಯ ಏರ್‌ ಇಂಡಿಯಾ ತಂಡವನ್ನು ಪರಾಭವಗೊಳಿಸಿತು.
'ಬಿ' ಗುಂಪಿನ ಈ ಹಣಾಹಣಿಯ ಆರಂಭದಿಂದಲೇ ಆರ್ಮಿ ಇಲೆವನ್‌ ಮೇಲುಗೈ ಸಾಧಿಸಿತು. ವೇಗದ ಆಟಕ್ಕೆ ಒತ್ತು ನೀಡಿದ ಈ ತಂಡವು ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ಪ್ರತಾಪ್‌ ಸಿಂಧೆ ಕೈಚಳಕ ತೋರಿದರು.
ನಂತರ ಈ ತಂಡ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿತು. 14ನೇ ನಿಮಿಷದಲ್ಲಿ ರಾಜಂತ್‌ ರಜಪೂತ್‌ ಗೋಲು ಹೊಡೆದು 2–0 ಮುನ್ನಡೆಗೆ ಕಾರಣರಾದರು. ಇದರ ಬೆನ್ನಲ್ಲೇ ವಿನಯ್‌ ಬೆಂಗ್ರಾ (20ನೇ ನಿ.) ಚೆಂಡನ್ನು ಗುರಿ ಮುಟ್ಟಿಸಿ ಆರ್ಮಿ ಪಾಳಯದಲ್ಲಿ ಸಂಭ್ರಮ ಮೂಡಿಸಿದರು.
26ನೇ ನಿಮಿಷದಲ್ಲಿ ಏರ್‌ ಇಂಡಿಯಾ ತಂಡದ ಅರ್ಜುನ್‌ ಶರ್ಮಾ ಗೋಲು ಗಳಿಸಿ ಹಿನ್ನಡೆಯನ್ನು 1–3ಕ್ಕೆ ತಗ್ಗಿಸಿದರು.
ಬಳಿಕ ಶಿವೇಂದ್ರ ಸಿಂಗ್‌ ಮೋಡಿ ಮಾಡಿದರು. 39 ಮತ್ತು 41ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದ ಶಿವೇಂದ್ರ ತಂಡವು 3–3ರಿಂದ ಸಮಬಲ ಸಾಧಿಸಲು ನೆರವಾದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು.
‌ಅಂತಿಮ ಕ್ವಾರ್ಟರ್‌ನಲ್ಲಿ ಆರ್ಮಿ ಇಲೆವನ್‌ ಪಾರಮ್ಯ ಮೆರೆಯಿತು. 50ನೇ ನಿಮಿಷದಲ್ಲಿ ರಾಜಂತ್‌ ರಜಪೂತ್‌ ವೈಯಕ್ತಿಕ ಎರಡನೇ ಗೋಲು ಹೊಡೆದರು. 59ನೇ ನಿಮಿಷದಲ್ಲಿ ಸಿರಾಜು ಅಲಿರಾ, ಚೆಂಡನ್ನು ಗುರಿ ತಲುಪಿಸುತ್ತಿದ್ದಂತೆ ಆರ್ಮಿ ಪಾಳಯದಲ್ಲಿ ಹರ್ಷದ ಹೊನಲು ಹರಿಯಿತು.
ಡ್ರಾ ಪಂದ್ಯದಲ್ಲಿ ಐಒಸಿಎಲ್‌: ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಐಒಸಿಎಲ್‌ ಮತ್ತು ಬಿಪಿಸಿಎಲ್‌ ನಡುವಣ 'ಎ' ಗುಂಪಿನ ಹೋರಾಟವು 5–5 ಗೋಲುಗಳಿಂದ ಡ್ರಾ ಆಯಿತು.
ಐಒಸಿಎಲ್‌ ತಂಡದ ಗುರ್ಜಿಂದರ್‌ ಸಿಂಗ್‌ ಎರಡು ಗೋಲು ಹೊಡೆದು (14 ಮತ್ತು 20ನೇ ನಿಮಿಷ) ಗಮನ ಸೆಳೆದರು.
ಅಫಾನ್ ಯೂಸುಫ್‌ (3ನೇ ನಿ.), ತಲ್ವಿಂದರ್‌ ಸಿಂಗ್‌ (8ನೇ ನಿ.) ಮತ್ತು ಸುಮಿತ್‌ ಕುಮಾರ್‌ (42ನೇ ನಿ.) ಅವರೂ ಮಿಂಚಿದರು.
ಬಿಪಿಸಿಎಲ್‌ ತಂಡದ ದೇವಿಂದರ್ ವಾಲ್ಮೀಕಿ (10ನೇ ನಿ.), ಮೊಹಮ್ಮದ್‌ ಅಮೀರ್‌ ಖಾನ್‌ (20ನೇ ನಿ.), ಶಿಲಾನಂದ ಲಾಕ್ರಾ (39ನೇ ನಿ.), ಆಭರಣ ಸುದೇವ್‌ (57ನೇ ನಿ.) ಮತ್ತು ಮೊಹಮ್ಮದ್‌ ಅಮೀರ್‌ ಖಾನ್‌ (59ನೇ ನಿ.) ಗೋಲು ಬಾರಿಸಿದರು.
ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ರಶ್ಮಿಕಾ! - Kannada Updates
ಮುಂಬೈ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ರಶ್ಮೀಕಾ ಮಂದಣ್ಣ ಕೆಲವೇ ದಿನಗಳಲ್ಲಿ ಬಹುಭಾಷ ನಟಿಯಾಗಿ ಹೊರಹೊಮ್ಮಿದ್ದಾರೆ. ಟಾಲಿವುಡ್, ಕಾಲಿವುಡ್ ನಲ್ಲೂ ಮಿಂಚಿದ ರಶ್ಮೀಕಾ ಇದೀಗ ಬಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದು, ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿದ್ದಾರಂತೆ.
ನಟಿ ರಶ್ಮೀಕಾ ಕನ್ನಡದಿಂದ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ತೆಲುಗಿನಲ್ಲಿ ಹಿಟ್ ಆದ ಬಳಿಕ ಹೈದರಾಬಾದ್‌ಗೆ ಶಿಫ್ಟ್ ಆಗಿ, ಅಲ್ಲಿಯೇ ಮನೆಯನ್ನು ಸಹ ಖರೀದಿ ಮಾಡಿದರು. ಇದೀಗ ಮುಂಬೈನಲ್ಲಿ ಮನೆಯೊಂದನ್ನು ಖರೀದಿಸಿ ಮುಂಬೈಗೆ ಶೀಫ್ಟ್ ಆಗಲಿದ್ದಾರಂತೆ. ಬಾಲಿವುಡ್‌ನ ಸಿನೆಮಾವೊಂದರಲ್ಲಿ ಅವಕಾಶ ಸಿಕ್ಕ ಕೂಡಲೇ ಮುಂಬೈನಲ್ಲಿ ಮನೆ ಖರೀದಿಸಿದ್ದು, ತಮ್ಮ ಸಿನೆಮಾಗಾಗಿ ಹೈದರಾಬಾದ್ ಹಾಗೂ ಮುಂಬೈ ಗೆ ಓಡಾಡಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ರಶ್ಮಿಕಾ ಸಿದ್ಧಾರ್ಥ್ ಮೆಲ್ಹೋತ್ರ ನಾಯಕನಾಗಿ ನಟಿಸುತ್ತಿರುವ ಮಿಷನ್ ಮಜ್ನು ಸಿನೆಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಮತ್ತೊಂದು ಬಾಲಿವುಡ್ ಸಿನೆಮಾಗೂ ಸಹ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಬಾಲಿವುಡ್‌ನಲ್ಲಿ ಮಿಂಚಲು ಮೊದಲೇ ಯೋಚಿಸಿ ಮನೆಯನ್ನು ಖರೀದಿಸಿದ್ದಾರೆ ಎಂತಲೂ ಹೇಳಲಾಗುತ್ತಿದೆ.
ಇನ್ನೂ ನಟಿ ರಶ್ಮಿಕಾ ಇತ್ತೀಚಿಗಷ್ಟೆ ಐಶಾರಾಮಿ ಕಾರೊಂದನ್ನು ಖರೀದಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಶ್ಮಿಕಾ ಟಾಲಿವುಡ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಮತ್ತೊಂದು ತೆಲುಗು ಸಿನೆಮಾದಲ್ಲೂ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಹಲ್ಲುಜ್ಜುವ ಅನುಭವವನ್ನು ಆನಂದದಾಯಕವಾಗಿಸುವುದು ಹೇಗೆ? | udayavani
05:34 PM May 09, 2022 | Team Udayavani |
ಸರಳವಾಗಿ ಹೇಳಬೇಕೆಂದರೆ, ಧ್ಯಾನವು ಅರಿವು ಮತ್ತು ಸಹಾನುಭೂತಿಗಳನ್ನು ನಿಯಂತ್ರಿತ ಪರಿಸರದಲ್ಲಿ ಅನುಭವಕ್ಕೆ ತರುವುದು. ನಾವು ಕಣ್ಣು ಮುಚ್ಚಿಕೊಂಡು ಕುಳಿತು ನಮ್ಮ ಏಕಾಗ್ರತೆಯನ್ನು ನಮ್ಮ ಉಸಿರಾಟದ ಕಡೆಗೆ ಅಥವಾ ದೀಪಜ್ವಾಲೆಯಂತಹ ಒಂದು ದೃಶ್ಯದ ಕಡೆಗೆ ನೆಟ್ಟಾಗ ನಾವು ಆ ಅರಿವನ್ನು ಸ್ಥಿರಗೊಳಿಸಲು ಪಳಗಿಸುತ್ತೇವೆ. ನಾವು ಮನಸ್ಸಿನ ಮೂಲಕ ಇದನ್ನು ನಡೆಸಿದಾಗ ನಾವು ಪ್ರತಿಯೊಂದು ಕ್ಷಣದ ಬಗ್ಗೆ ಅರಿವನ್ನು ಹೊಂದುತ್ತೇವೆ.
ಇದನ್ನು ಹೀಗೆಯೇ ಹೇಳಿದರೆ ಆಚರಣೆಗೆ ತರುವುದು ಬಹಳ ಕಠಿನ ಎನ್ನಿಸಬಹುದು. ಆದರೆ ಇದೇ ತಂತ್ರವನ್ನು ನಾವು ನಮ್ಮ ದೈನಂದಿನ ಕೆಲವು ಚಟುವಟಿಕೆಗಳಿಗೂ ಅನ್ವಯಿಸಬಹುದು. ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಎಂದರೆ ಇದೇ. ನಾವು ಯಾವ ಕ್ಷಣದಲ್ಲಿ ಏನನ್ನು ಮಾಡುತ್ತಿದ್ದೇವೆಯೋ ಅದರಲ್ಲಿ ಸಂಪೂರ್ಣವಾಗಿ, ನೂರಕ್ಕೆ ನೂರರಷ್ಟು ತೊಡಗಿಸಿಕೊಳ್ಳುವುದು. ಇದರರ್ಥ ದಿನದ ಇಪ್ಪತ್ತನಾಲ್ಕು ತಾಸು, ವಾರದ ಏಳು ದಿನ ಸಕ್ರಿಯವಾಗಿ ಇರುವುದು ಎಂದರ್ಥವಲ್ಲ – ಮರ್ಕಟದಂತಹ ನಮ್ಮ ಮನಸ್ಸು ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಸಕ್ರಿಯವಾಗಿರುತ್ತದೆ. ಆದರೆ ನಾವು ಪ್ರಜ್ಞಾಪೂರ್ವಕವಾಗಿ ಎಚ್ಚರದಿಂದಿರುವ ನಿರ್ದಿಷ್ಟ ಉದ್ದೇಶದಿಂದ ಕೆಲವು ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ಇದರ ಅರ್ಥ.
ಉದಾಹರಣೆಗೆ, ಹಲ್ಲುಜ್ಜುವ ಚಟುವಟಿಕೆಯಿಂದ ಇದನ್ನು ಆರಂಭಿಸಬಹುದು. ನಾವೆಲ್ಲರೂ ಪ್ರತೀ ದಿನ ನಡೆಸುವ ಚಟುವಟಿಕೆಗಳಲ್ಲಿ ಇದು ಒಂದು. ಪ್ರಾಯಃ ಅನೇಕರು ಯಾಂತ್ರಿಕವಾಗಿ ಇದನ್ನು ನಡೆಸಬಹುದು. ಕೆಲವೊಮ್ಮೆ ಇದು ಬಹಳ ಉದಾಸೀನತೆಯ, ಬೋರ್‌ ಹೊಡೆಸುವ ಚಟುವಟಿಕೆಯಾಗಿಯೂ ಕಾಣಿಸಬಹುದು. ಇದರಿಂದಾಗಿ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಇದನ್ನು ಮುಗಿಸಿ ಮುಂದಿನ ಕೆಲಸಕ್ಕೆ ಹೊರಡುವ ತರಾತುರಿಯೂ ನಮ್ಮಲ್ಲಿ ಇರಬಹುದು. ಆದರೆ ಹಲ್ಲುಜ್ಜುವ ಚಟುವಟಿಕೆಯನ್ನೂ ಸಂಪೂರ್ಣ ಅರಿವಿನೊಂದಿಗೆ, ಮನಸ್ಸಿನ ಏಕಾಗ್ರತೆಯೊಂದಿಗೆ ಆಚರಿಸುವ ಸಾಧ್ಯತೆ ನಮ್ಮ ಮುಂದೆ ಇದೆ. ಪ್ರತೀ ದಿನ ಬೆಳಗ್ಗೆ ಎದ್ದು ಯಾವುದೋ ಯೋಚನೆಯಲ್ಲಿ ಕಳೆದುಹೋಗಿರುತ್ತ ಹಲ್ಲುಜ್ಜುವುದಕ್ಕಾಗಿ ಸ್ನಾನಗೃಹದತ್ತ ತೆರಳುವ ಬದಲು ಪ್ರತೀ ಬಾರಿ ಮನಸ್ಸು ಎಲ್ಲೆಲ್ಲೋ ಸುತ್ತಾಡಲು ಹೊರಟಾಗ ನಿಮ್ಮ ಮನಸ್ಸನ್ನು ಹಲ್ಲುಜ್ಜುವ ಕ್ರಿಯೆಯತ್ತ ಎಳೆದು ತನ್ನಿ. ನೀವು ಏನನ್ನು ನೋಡುತ್ತಿದ್ದೀರಿ, ಏನನ್ನು ಕೇಳುತ್ತಿದ್ದೀರಿ, ನೀವು ಹಾಕಿಕೊಂಡಿರುವ ಟೂತ್‌ಪೇಸ್ಟ್‌ನ ಬಣ್ಣ ಯಾವುದು, ಅದರ ಸುವಾಸನೆ ಹೇಗಿದೆ ಎಂಬುದನ್ನೆಲ್ಲ ಪ್ರತೀ ಕ್ಷಣ ಅನುಭವಿಸಿ.
ಇದರ ಬಗ್ಗೆ ನೀವು ಬಹಳ ಯೋಚನೆ ಮಾಡಬೇಕಾಗಿಲ್ಲ; ಕಷ್ಟ ಪಡಬೇಕಾಗಿಲ್ಲ; ನೀವು ಯಾವುದರಲ್ಲಿ ತೊಡಗಿದ್ದೀರೋ ಅದರ ಬಗ್ಗೆ ಸಂಪೂರ್ಣವಾಗಿ ಅರಿವನ್ನು ಹೊಂದಿದ್ದು, ಅನುಭವಿಸುತ್ತ ನಡೆಸುವುದು ಇದು.
ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಮನನೊಂದು ಆತ್ಮಹತ್ಯೆ
ಪ್ರತಿನಿತ್ಯ ಯೋಗಭ್ಯಾಸದಿಂದ ಉತ್ತಮ ಆರೋಗ್ಯ: ಶಾಸಕ ಸಿದ್ದು ಸವದಿ
ಡಿಜಿಟಲ್ ಆರೋಗ್ಯ ಸೇವೆಯಿಂದ ಕ್ರಾಂತಿಕಾರಕ ಬದಲಾವಣೆ: ಸಚಿವ ಸುಧಾಕರ್
ಜನರ ದೈಹಿಕ ಆರೋಗ್ಯ-ಮಾನಸಿಕ ನೆಮ್ಮದಿ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಪ್ರಧಾನಿ ಮೋದಿ
ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ
ಯೋಗಾಸನದಿಂದ ಉತ್ತಮ ಆರೋಗ್ಯ ಕಂಡುಕೊಂಡ ವಾಯುವಿಹಾರಿ ಮಹಿಳೆಯರು
ಜನರ ಆರೋಗ್ಯ ರಕ್ಷ ಣೆಗೆ ಜಲಜೀವನ: ಸಂಸದ ನಾಯಕ್‌
ಮುಂದಕ್ಕೆ ನೀವು ಹಲ್ಲುಜ್ಜಲು ಆರಂಭಿಸಿದಾಗ ಮನಸ್ಸನ್ನು ಅದರತ್ತ ಕೇಂದ್ರೀಕರಿಸಿ, ಧ್ಯಾನ ಮಾಡುವ ಸಂದರ್ಭದಲ್ಲಿ ಉಸಿರಾಟದತ್ತ ಮನಸ್ಸನ್ನು ಕೇಂದ್ರೀಕರಿಸುವ ಹಾಗೆಯೇ ಹಲ್ಲುಜ್ಜುವ ಕ್ರಿಯೆಯತ್ತ ಮನಸ್ಸನ್ನು ಕೇಂದ್ರೀಕರಿಸಿ. ಬ್ರಶ್‌ ಹಲ್ಲುಗಳ ಹಿಂದೆ ಮುಂದೆ ಸರಿಯುವುದನ್ನು, ಒಂದು ಲಯದಲ್ಲಿ ನಿಮ್ಮ ಕೈ ಬ್ರಶ್ಶನ್ನು ಹಿಂದೆ ಮುಂದೆ ಆಡಿಸುವುದನ್ನು ಏಕಾಗ್ರತೆಯಿಂದ ಗಮನಿಸಿ. ಟೂತ್‌ಬ್ರಶ್‌ ಹಲ್ಲುಗಳಿಗೆ ಉಜ್ಜುವಾಗ ಆಗುವ ಸದ್ದನ್ನು ಗಮನಿಸಿ.
ಬ್ರಶ್‌ನ ಕೂದಲುಗಳು ನಿಮ್ಮ ವಸಡು, ಹಲ್ಲುಗಳಿಗೆ ಉಜ್ಜುವುದನ್ನು ಏಕಾಗ್ರವಾಗಿ ಗಮನಿಸಿ. ಮೊದಮೊದಲು ಇದು ಬಹಳ ಕ್ಷುಲ್ಲಕ ವಿಚಾರ ಎನ್ನಿಸಬಹುದು. ಆದರೆ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನದಂತಹ ಅನುಭವವನ್ನು ಪಡೆಯಲು ಹಲ್ಲುಜ್ಜುವ ಕ್ರಿಯೆಯು ಬಹಳ ಉತ್ತಮವಾದ ಒಂದು ಅವಕಾಶ. ಹಲ್ಲುಜ್ಜುವ ಕ್ರಿಯೆಯ ಪುನರಾವರ್ತನೆಯ ಸ್ವಭಾವವೇ ಇದಕ್ಕೆ ಕಾರಣ. ಧ್ಯಾನದ ಹಾಗೆಯೇ ಹಲ್ಲುಜ್ಜುವ ಕ್ರಿಯೆ ಕೂಡ ಗಮನವನ್ನು ಏಕಾಗ್ರಗೊಳಿಸಲು ಒಂದು ನಿರ್ದಿಷ್ಟ ಚೌಕಟ್ಟನ್ನು ಹಾಕಿಕೊಡುತ್ತದೆ.
ನಾವು ಪುನರಾವರ್ತಿತವಾಗಿ, ಪದೇಪದೆ ಮಾಡುವ ಚಟುವಟಿಕೆಗಳನ್ನು ಮನಸ್ಸು ಸ್ವಯಂಚಾಲಿತವಾಗಿ, ಏಕತಾನವಾಗಿ ನಡೆಸುವ ಸ್ವಭಾವವನ್ನು ಹೊಂದಿರುತ್ತದೆ. ಊಟ ಮಾಡುವುದು, ನಮಗೆ ನಿಕಟರಾಗಿರುವ ವ್ಯಕ್ತಿಗಳ ಜತೆಗೆ ನಮ್ಮ ಸಂಬಂಧದಂತಹ ಕೆಲವು ಚಟುವಟಿಕೆಗಳನ್ನು ತೆಗೆದುಕೊಂಡರೆ, ಇವು ಕೂಡ ರೂಢಿಗತ, ಏಕತಾನತೆಯ ಕ್ರಿಯೆಗಳಾಗಿ ಬಿಡುವ ಸಾಧ್ಯತೆಗಳಿರುತ್ತವೆ. ನಾವು ಈ ಕ್ಷಣ ಏನು ಮಾಡುತ್ತಿದ್ದೇವೆಯೋ ಅದರಲ್ಲಿಯೇ ನಮ್ಮ ಏಕಾಗ್ರತೆಯನ್ನು ಹರಿಸುವುದು, ಅದನ್ನು ಈಗಷ್ಟೇ ಹೊಸದಾಗಿ ಮಾಡುತ್ತಿದ್ದೇವೆ ಎಂಬಂತೆ ತಲ್ಲೀನರಾಗುವುದು ಅತ್ಯಂತ ಉತ್ತಮ. ಮನಸ್ಸನ್ನು ಪೂರ್ಣವಾಗಿ ತೊಡಗಿಸಿಕೊಂಡು ಹಲ್ಲನ್ನು ಉಜ್ಜುವುದರಿಂದ ನಮ್ಮ ಹಲ್ಲುಗಳು ಶುಚಿಯಾಗುವುದಷ್ಟೇ ಅಲ್ಲ; ಸಮಯವಿಲ್ಲ ಎಂದು ಗಡಿಬಿಡಿಯಲ್ಲಿ, ಯಾಂತ್ರಿಕವಾಗಿ ನಡೆಸಬಹುದಾದ ಒಂದು ಕ್ರಿಯೆಯನ್ನು ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ನಡೆಸಲು ಸಾಧ್ಯವಾಗುತ್ತದೆ.
-ಡಾ| ಆನಂದದೀಪ್‌ ಶುಕ್ಲಾ ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಮತ್ತು ಮ್ಯಾಕ್ಸಿಲೊಫೇಶಿಯಲ್‌ ವಿಭಾಗ ಮಣಿಪಾಲ ದಂತ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ, ಮಾಹೆ, ಮಣಿಪಾಲ
ಉಲಿವ ಮರ: ೨೫. ಪ್ರಾಚೀನ ಕರ್ನಾಟಕದಲ್ಲಿ ಸಾರ್ವತ್ರಿಕ ಶಿಕ್ಷಣ – ಕಣಜ
ಉಲಿವ ಮರ: ೨೫. ಪ್ರಾಚೀನ ಕರ್ನಾಟಕದಲ್ಲಿ ಸಾರ್ವತ್ರಿಕ ಶಿಕ್ಷಣ
Home/ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ, ಸಾಹಿತ್ಯ ವಿಮರ್ಶೆ/ಉಲಿವ ಮರ: ೨೫. ಪ್ರಾಚೀನ ಕರ್ನಾಟಕದಲ್ಲಿ ಸಾರ್ವತ್ರಿಕ ಶಿಕ್ಷಣ
ಪ್ರಾಚೀನ ಭಾರತದ ಶಿಕ್ಷಣ ಧಾರ್ಮಿಕವಾಗಿತ್ತು; ಆಗಿನ ಗುರುಕುಲಗಳು, ವಿದ್ಯಾಕೇಂದ್ರಗಳು ಈ ಮಾತಿಗೆ ಸಾಕ್ಷಿ; ಬೌದ್ಧ ವಿಹಾರಗಳೂ ಜೈನ ಬಸದಿಗಳೂ ಇದಕ್ಕೆ ಇನ್ನಷ್ಟು ಸಾಕ್ಷಿಯನ್ನೊದಗಿಸುತ್ತವೆ. ಇದೇ ಪರಿಸ್ಥಿತಿ ಕರ್ನಾಟಕದಲ್ಲಿತ್ತು.
ಕರ್ನಾಟಕದಲ್ಲಿ ಗುರುಕುಲ ಪದ್ಧತಿ ಇತ್ತು ಎಂಬುದಕ್ಕೆ ಆಧಾರಗಳು ದೊರಕುವುದಿಲ್ಲ; ಸಾರ್ವಜನಿಕರ ನೆರವಿನಿಂದ, ದೊರೆ ಅಥವಾ ಶ್ರೀಮಂತರ ಸಹಾಯದಿಂದ ಸ್ಥಾಪನೆಗೊಂಡ ವಿದ್ಯಾಕೇಂದ್ರಗಳಿದ್ದವು. ಇವು ಅಗ್ರಹಾರ, ಬ್ರಹ್ಮಪುರಿ ಮತ್ತು ಘಟಿಕಾಸ್ಥಾನ ಎಂದು ಮೂರು ಬಗೆಯಾಗಿದ್ದವು. ಇವಲ್ಲದೆ ಪ್ರಾಚೀನ ಕರ್ನಾಟಕದ ದೇವಸ್ಥಾನಗಳು ವಿದ್ಯಾಕೇಂದ್ರಗಳೂ ಆಗಿದ್ದುವೆಂಬುದಕ್ಕೆ ವಿಪುಲವಾದ ಶಾಸನಾಧಾರಗಳು ಸಿಕ್ಕುತ್ತವೆ. ಅಲ್ಲದೆ ಜೈನರ ಬಸದಿಗಳೂ ವಿದ್ಯಾ ಕೇಂದ್ರಗಳಾಗಿದ್ದುವು. ಬೌದ್ಧರ ವಿಹಾರಗಳೂ ಈ ನಾಡಿನಲ್ಲಿದ್ದವೆಂಬುದಕ್ಕೆ ಹಲವು ಕುರುಹುಗಳಿವೆ.
ಪ್ರಾಥಮಿಕ, ಪ್ರೌಢ ಮತ್ತು ಸ್ನಾತಕ ಶಿಕ್ಷಣ ಈ ಕೇಂದ್ರಗಳಲ್ಲಿ ದೊರೆಯುತ್ತಿತ್ತು. ಹಲವು ಹತ್ತೆಂಟು ವಿಷಯಗಳು ಇಲ್ಲಿ ಪಠ್ಯ ವಿಷಯಗಳಾಗಿದ್ದವು. ಆದರೆ ಈ ಎಲ್ಲ ವಿದ್ಯಾಕೇಂದ್ರಗಳಲ್ಲಿ ಶಿಕ್ಷಣ ಸಾರ್ವಜನಿಕರಿಗೆ ಮುಕ್ತವಾಗಿತ್ತೇ ಅಥವಾ ಕೆಲವೇ ಜನರಿಗೆ ಸೀಮಿತವಾಗಿತ್ತೇ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ಅವಶ್ಯಕವಾಗಿದೆ.
ಇಂದು ಯಾವುದಕ್ಕೆ ನಾವು Mass Education ಎಂದು ಕರೆಯುತ್ತೇವೆ. ಅದು ಪ್ರಾಚೀನ ಭಾರತದಲ್ಲಿ ಎಲ್ಲಿಯೂ ಅಸ್ತಿತ್ವದಲ್ಲಿದ್ದ ಕುರುಹುಗಳಿಲ್ಲ; ಕರ್ನಾಟಕವೂ ಇದಕ್ಕೆ ಅಪವಾದವಾಗಿಲ್ಲ. ವರ್ಗ, ವರ್ಣಗಳಿಂದ ಕೂಡಿದ ಸಮಾಜ ತನ್ನ ಶಿಕ್ಷಣ ಕ್ರಮವನ್ನು, ಶಿಕ್ಷಣದ ಉದ್ದೇಶವನ್ನು ಅದಕ್ಕೆ ತಕ್ಕಂತೆ ರೂಪಿಸಿತ್ತು. ಧರ್ಮ, ದೇವರು, ತತ್ವಜ್ಞಾನ ಮುಂತಾದವುಗಳಿಂದ ವಂಚಿತವಾ ಕೆಳವರ್ಗಗಳು, ಕೆಳಜಾತಿಗಳು ಶಿಕ್ಷಣದಿಂದಲೂ ವಂಚಿತವಾಗಿದ್ದುವು. ನಾಲಂದಾ, ತಕ್ಷಶಿಲೆ, ವಲ್ಲಭಿ, ನಾಗಾಯಿ ಮುಂತಾದ ಶಿಕ್ಷಣದ ಮಹಾಕೇಂದ್ರಗಳಲ್ಲಿ ಅಭ್ಯಸಿಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಬಹುಪಾಲು ಬ್ರಾಹ್ಮಣರೇ ಆಗಿದ್ದರು; ಕ್ಷತ್ರಿಯರ ಸಂಖ್ಯೆ ಕಡಿಮೆಯಾಗಿತ್ತು; ವೈಶ್ಯರ ಹೆಸರು ಕೇಳಿಬರುವುದು ಕ್ವಚಿತ; ಇನ್ನು ಕೆಳವರ್ಗದವರು ಶಿಕ್ಷಣ ಪಡೆದ ವಿಷಯ ಯಾವ ಕಾಲಕ್ಕೂ ಎಲ್ಲಿಯೂ ಬರುವುದಿಲ್ಲ. ಕರ್ನಾಟಕದ ಎಲ್ಲ ಅಗ್ರಹಾರಗಳಲ್ಲಿ, ಬ್ರಹ್ಮಪುರಿಗಳಲ್ಲಿ, ಘಟಿಕಾಸ್ಥಾನಗಳಲ್ಲಿ, ದೇವಸ್ಥಾನಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಪ್ರಾಚೀನ ಕರ್ನಾಟಕದಲ್ಲಿ ಬೋಧಭಾಷೆ ಮಾತೃಭಾಷೆಯಾಗಿರಲಿಲ್ಲ; ಸಂಸ್ಕೃತವಾಗಿತ್ತು. ಬೋಧನ ವಿಷಯಗಳೆಲ್ಲ ಸಂಸ್ಕೃತ ಸಾಹಿತ್ಯಕ್ಕೆ ಸಂಬಮಧಪಟ್ಟುವಾಗಿದ್ದವು; ಹೆಚ್ಚಾಗಿ ವೈದಿಕ ಧರ್ಮಕ್ಕೆ ಸಂಬಂಧಿಸಿದುವಾಗಿದ್ದವು; ಕಾವ್ಯ, ಶಾಸ್ತ್ರ, ಅಲಂಕಾರ, ಗಣಿತ, ಮೀಮಾಂಸೆ, ತರ್ಕ, ಜ್ಯೋತಿಷ್ಯ ಏನು ಕಲಿತರೂ ಸಂಸ್ಕೃತದಲ್ಲೇ ಕಲಿಯಬೇಕಾಗಿತ್ತು; ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಯಾವ ಬೆಲೆಯೂ ಇರಲಿಲ್ಲ. "ಪ್ರಾಚೀನ ಕರ್ನಾಟಕದ ವಿದ್ಯಾಭ್ಯಾಸದ ಪದ್ಧತಿಯು ಕನ್ನಡ ಸಾಹಿತ್ಯವನ್ನೂ ಕನ್ನಡ ಭಾಷೆಯನ್ನೂ ಬಹುಮಟ್ಟಿಗೆ ಉಪೇಕ್ಷಿಸಿದೆ."[1]
ಬಹುಮೋಜಿನ ಸಂಗತಿಯೆಂದರೆ ಸಂಸ್ಕೃತ ಸಾಹಿತ್ಯವನ್ನೆಲ್ಲ ಕನ್ನಡ ಲಿಪಿಯಲ್ಲಿ ಬರೆದುಕೊಂಡೇ ಕಲಿಯುತ್ತಿದ್ದರು. ಈ ಪದ್ಧತಿ ಮೊನ್ನೆ ಮೊನ್ನೆಯವರೆಗೂ ಬಳಕೆಯಲ್ಲಿತ್ತು. ಈಗಲೂ ಕೆಲವುಕಡೆ ಇದೆ. ಕನ್ನಡ ಲಿಪಿಯನ್ನು ಕಲಿಸಲು ಉಪಾಧ್ಯಾಯರುಗಳಿರುತ್ತಿದ್ದರೆಂದು ಶಾಸನಗಳಿಂದ ತಿಳಿದುಬರುತ್ತದೆ. "ತಾಳಗುಂದದ ಶಾಸನವೊಂದರಲ್ಲಿ ವೇದಾಧ್ಯಯನ ಮುಂತಾದವುಗಳಿಗೆ ಕೊಟ್ಟ ದತ್ತಿಗಳ ಜೊತೆಯಲ್ಲಿ 'ಕನ್ನಡಕ್ಷರ ಸಿಕ್ಷೆಗೂ' ದತ್ತಿಯನ್ನು ಬಿಟ್ಟುಕೊಟ್ಟಂತೆ ಹೇಳಿದೆ; ಬಹುಶಃ ಆ ಕಾಲದಲ್ಲಿ ಬಾಲಕರಿಗೆ ಮೊದಲು ಕನ್ನಡ ಅಕ್ಷರಗಳನ್ನು ಕಲಿಸುತ್ತಿದ್ದಂತೆ ಕಾಣುತ್ತದೆ."[2] ಆದರೆ ಈ ಶಿಕ್ಷಕನಿಗೆ ಹೆಚ್ಚು ಗೌರವವೇನೂ ಇರಲಿಲ್ಲ. ಕ್ಷೌರಿಕನಿಗಿಂತ ಅವನಿಗೆ ತುಸು ಹೆಚ್ಚು ಮರ್ಯಾದೆ, ಅಷ್ಟೆ. ಅದೇ ತಾಳಗುಂದದ ಶಾಸನದಲ್ಲಿ ಬ್ರಾಹ್ಮಣರ ಉಗುರುಗಳನ್ನು ತೆಗೆವ ನಾವಿದನಿಗೆ ನಾಲ್ಕು ಗದ್ಯಾಣಗಳನ್ನೂ ಕನ್ನಡ ಉಪಾಧ್ಯಾಯನಿಗೆ ಐದು ಗದ್ಯಾಣಗಳನ್ನೂ ಬಿಟ್ಟುಕೊಟ್ಟಂತೆ ಹೇಳಿದೆ.[3]
ಮಾತೃಭಾಷೆಗೆ ಮಾನ್ಯತೆಕೊಟ್ಟು ಶಿಕ್ಷಣ ಸಾರ್ವತ್ರಿಕವಾಗಲು ಕಾರಣರಾದವರು ಕಲ್ಯಾಣದ ಶಿವಶರಣರು; ಅವರು ಧಾರ್ಮಿಕ, ಆಮಾಜಿಕ, ಆರ್ಥಿಕ ಮುಂತಾದ ರಂಗಗಳಲ್ಲಿ ಕ್ರಾಂತಿಯೆಸಗಿ ವರ್ಗರಹಿತವಾದ, ವರ್ಣರಹಿತವಾದ, ಸರ್ವಸಮಾನತೆಯ ಒಂದು ಸಮಾಜ ರಚನೆಗೆ ಕೈ ಹಾಕಿದರು; ಆ ಸಮಾಜ ರಚನೆಗೆ ಪೋಷಕವಾಗುವಂತೆ ಶಿಕ್ಷಣಕ್ರಮವೂ ಪಠ್ಯ ವಿಷಯಗಳೂ ಬೋಧನಾ ಪದ್ಧತಿಗಳೂ ಬೇರೆಯಾದವು. ಶಿಕ್ಷಣಕ್ಕೆ ಅಂಟಿದ ಜಾತೀಯತೆ. ಸಂಕುಚಿತತೆ ದೂರಾಯಿತು. Mass Education (ಸಾರ್ವತ್ರಿಕ ಶಿಕ್ಷಣ) ಪ್ರಾರಂಭವಾಯಿತು. ಇಂಥ ಒಂದು ಪ್ರಯತ್ನ ಪ್ರಾಚೀನ ಭಾರತದಲ್ಲಿ ಎಲ್ಲಿಯೂ ಆದಂತೆ ಕಂಡುಬರುವುದಿಲ್ಲ.
ಕರ್ನಾಟಕದಲ್ಲಿ ಶರಣರು ಬರುವುದಕ್ಕಿಂತ ಮುಂಚೆ ಕಾಳಮುಖರ ಅನೇಕ ಮಠಗಳಿದ್ದವು; ಅವು ದೊಡ್ಡ ವಿಕೇಂದ್ರಗಳಾಗಿದ್ದವು. ಶರಣರ ಧಾರ್ಮಿಕ ಕ್ರಾಂತಿಯಿಂದ ಈ ಕಾಳಾಮುಖ ಮಠಗಳೆಲ್ಲ ಶೈವದಿಂದ ವೀರಶೈವಕ್ಕೆ ಪರಿವರ್ತನೆಗೊಂಡವು; ಶರಣರ ಸಮಾಜದ ನಿರ್ಮಾಣದಲ್ಲಿ ಈ ಮಠಗಳು ಬಹು ಮಹತ್ತರ ಪಾತ್ರವಹಿಸಿದವು; ಅಂತೆಯೆ ವಿದ್ಯಾಭ್ಯಾಸದ ಕ್ರಮವನ್ನೂ ಬದಲಾಯಿಸಿದವು. ಪಠ್ಯ ವಿಷಯಗಳು ಬದಲಾದ ಸಮಾಜಕ್ಕೆ ಅನುಗುಣವಾಗುವಂತೆ ಬದಲಾದವು; ಬೋಧಭಾಷೆ ಕನ್ನಡವಾಯಿತು. ಶಿಕ್ಷಣ ಸಾರ್ವಜನಿಕರಿಗೆ ನಿಲುಕಿತು; ಸರ್ವರೂ ಜಾತಿ ತ ಪಂಥಗಳೆನ್ನದೆ ಈ ಮಠಗಳಲ್ಲಿ ಶಿಕ್ಷಣ ಪಡೆಯತೊಡಗಿದರು.[4]
ಶರಣರ ಹೊಸ ಸಮಾಜದ ರಚನೆಗನುಗುಣವಾಗಿ ಊರೂರಿಗೆ ಮಠಗಳಾದವು. ಈ ಮಠಗಳು ವಿದ್ಯಾಕೇಂದ್ರಗಳಾಗಿದ್ದವು. ಹೀಗೆ ನಾಡಿನ ಉದ್ದಗಲಕ್ಕೂ ಶಿಕ್ಷಣ ಪ್ರಸಾರಗೊಂಡಿತು. ಶಿಕ್ಷಣವಲ್ಲದೆ ಈ ಮಠಗಳಲ್ಲಿ ವೃತ್ತಿ ಶಿಕ್ಷಣವೂ ನೀಡಲಾಗುತ್ತಿತ್ತು. ಈ ವಿಷಯದಲ್ಲಿ ಖ್ಯಾತ ಸಂಶೋಧಕರಾದ ಡಾ|| ಜಿ.ಎಸ್. ದೀಕ್ಷಿತರು ಬಹು ಅಮೂಲ್ಯವಾದ ಅಭಿಪ್ರಾಯ ಕೊಟ್ಟಿದ್ದಾರೆ.
"ವೀರಶೈವ ಮತದಿಂದ ೧೧ನೇ ಮತ್ತು ೧೨ನೇ ಶತಮಾನಗಳಿಂದ ಕರ್ನಾಟಕದಲ್ಲಿ ಮತ್ತು ಅದರ ನೆರೆಹೊರೆಯ ಪ್ರಾಂತಗಳಲ್ಲಿ ಲೋಕಶಿಕ್ಷಣಕ್ಕೆ ಬೆಂಬಲ ದೊರೆಯಿತು. ಇದರ ಪ್ರಮುಖರು ಎಲ್ಲರಿಗೂ ತಿಳಿಯುವಂತೆ ಕನ್ನಡದಲ್ಲಿ ಅದರಲ್ಲಿಯೂ ಸುಲಭ ಶೈಲಿಯಲ್ಲಿ ಬರೆದರು. ವಚನಗಳು ಗಹನವಾದ ತತ್ವಗಳನ್ನು ಕೂಡ ಅತ್ಯಂತ ಉದ್ಬೋಧಕವಾದ ರೀತಿಯಲ್ಲಿ ಸಾಮಾನ್ಯ ಜನರಿಗೆ ತಿಳಿಸಿ ಹೇಳುತ್ತವೆ. ಅನೇಕ ವಚನಕಾರರು ಸಮಾಜದಲ್ಲಿ ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿದವರ ಕುಲಕ್ಕೆ ಸೇರಿದವರಾಗಿದ್ದರಿಂದ ಅವರ ಕೃತಿಗಳೆಲ್ಲ ಬಹುಜನ ವರ್ಗಗಳಿಗೆ ಸಹಜವಾಗಿಯೇ ಇಷ್ಟವಾದವು.
"ವಚನಗಳಲ್ಲದೇ ವೀರಶೈವ ಮಠಗಳೂ ಈ ಲೋಕ ಶಿಕ್ಷಣ ಪ್ರಚಾರಕಾರ್ಯವನ್ನು ಮಾಡಿದವು. ಹಿಂದೆ ಕಾಳಮುಖರ ವಶಗಳಲ್ಲಿದ್ದ ಮಠಗಳು ಸಾವಕಾಶವಾಗಿ ವೀರಶೈವರ ಕೈಯೊಳಗೆ ಬಂದವು. ಬಳ್ಳಿಗಾವೆ ಮತ್ತು ಹೂಲಿಗಳ ಮಠಗಳೇ ಇದಕ್ಕೆ ಸಾಕ್ಷಿಯಾಗಿವೆ. ಕಾಳಮುಖ ಮಠಗಳಲ್ಲಿ ಹಿಂದೆ ಉಚ್ಚಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದ್ದರೆ ೧೨ನೇ ಶತಮಾನದಿಂದ ಮುಂದೆ ವೀರಶೈವ ಮಠಗಳಲ್ಲಿ ಅದರ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿಶಿಕ್ಷಣಗಳಿಗೂ ಹೆಚ್ಚಾಗಿ ಅವಕಾಶ ದೊರೆಯಿತು. ವೀರಶೈವ ಮಠಗಳು ಹಳ್ಳಿ ಹಳ್ಳಿಗಳಲ್ಲಿ ಸ್ಥಾಪನೆಯಾದ್ದರಿಂದ ವಿದ್ಯಾಪ್ರಸಾರವು ಮೊದಲಿಗಿಂತ ಹೆಚ್ಚಾಯಿತು.
"ವೀರಶೈವ ಮಠಗಳಲ್ಲಿ ಮುಖ್ಯವಾಗಿ ಮೂರು ವಿಧ: ಓದಿಸುವ ಮಠ, ಸಾಲಿಮಠ ಮತ್ತು ವಿರಕ್ತ ಮಠ. ಮೊದಲಿನ ಎರಡು ಮಠಗಳಲ್ಲಿ ಓದು ಬರಹಗಳನ್ನು ಕಲಿಸುತ್ತಿದ್ದರೆ ಎರಡನೆಯದರಲ್ಲಿ ಇವುಗಳ ಜೊತೆಗೆ ವೃತ್ತಿಗಳಿಗೂ ಸ್ಥಾನವಿತ್ತು. ಈ ವೃತ್ತಿಗಳಲ್ಲಿ ನೂಲುವುದು, ನೇಯುವುದು, ಒಕ್ಕಲುತನ ಮತ್ತು ವೈದ್ಯಕೀಯ ಶಾಸ್ತ್ರಗಳು ಸೇರಿದ್ದವು. ಇವೆರಡರಲ್ಲಿ ಶಿಕ್ಷಣ ಮುಗಿಸಿದವನಿಗೆ ವಿರಕ್ತ ಮಠಗಳಲ್ಲಿ ಪ್ರವೇಶವಿತ್ತು. ಈ ಎಲ್ಲಾ ಬೆಳವಣಿಗೆಗಳು ಕಾಲಕ್ರಮೇಣ ಆದವು."
"ಹೀಗೆ ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಶಿಕ್ಷಣ ಪ್ರಸಾರದಲ್ಲಿ ಮಹತ್ವದ ಕ್ರಾಂತಿಗೆ ನಾಂದಿ ಆಯಿತೆಂದು ಹೇಳಬಹುದು. ಇದರ ಪರಿಣಾಮವಾಗಿ ಮಾತೃಭಾಷೆಯಲ್ಲಿ ಶಿಕ್ಷಣ, ವೃತ್ತಿಗಳಿಗೆ ಪ್ರಾಶಸ್ತ್ಯ, ಸಮಾಜದಲ್ಲಿ ಸಮಾನತೆ, ನೀತಿಬೋಧೆ ಇವುಗಳಿಗೆ ಪುರಸ್ಕಾರವು ವಿದ್ಯಾಭ್ಯಾಸ ಪದ್ಧತಿಯಲ್ಲಿ ಹೆಚ್ಚಿತು."[5]
ಶರಣರ ಹೊಸ ಸಮಾಜದ ನಿರ್ಮಾಣದಿಂದ ಸ್ತ್ರೀ ಶಿಕ್ಷಣಕ್ಕೆ ಮಹತ್ವ ಬಂತು. ಪ್ರಾಚೀನ ಭಾರತದಲ್ಲಿ ಸ್ತ್ರೀಯರ ಶಿಕ್ಷಣ ಸಂಪೂರ್ಣ ಉಪೇಕ್ಷಿಸಲಾಗಿತ್ತು. ಅಲ್ಲಲ್ಲಿ ಒಂದೆರಡು ಸ್ತ್ರೀಯರ ಹೆಸರು ಸಾಹಿತ್ಯದಲ್ಲಿ ಕೇಳಿಬರುತ್ತದೆ; ಆದರೆ ಆ ಸಂಖ್ಯೆ ಇಲ್ಲವೆಂಬುದರಲ್ಲಿ ಗಣನೆಯಾಗುತ್ತವೆ. ಶರಣರು ಹೆಣ್ಣಿಗೆ ಕೊಟ್ಟ ಸಮಾನತೆ ಮತ್ತು ಸ್ವಾತಂತ್ರ್ಯಗಳಿಂದ ಆಕೆ ವಿವಿಧ ರಂಗದಲ್ಲಿ ಹೆಸರು ಗಳಿಸಿದಳು. ಜಾತಿ ಕುಲವೆನ್ನದೆ ಸರ್ವ ಸ್ತ್ರೀಯರಿಗೆ ಶಿಕ್ಷಣ ದೊರಕಿ ಅವರು ಸಾಹಿತ್ಯದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದರು. ಈ ಬಗ್ಗೆ ಡಾ|| ಎಂ. ಚಿದಾನಂದ ಮೂರ್ತಿಯವರು ಹೀಗೆ ಹೇಳುತ್ತಾರೆ:
"…… ಹೀಗೆ ರಾಜಮನೆತನಗಳ ಮತ್ತು ಶ್ರೀಮಂತರ ಮನೆಗಳ ಸ್ತ್ರೀಯರು ತಕ್ಕಮಟ್ಟಿಗೆ ವಿದ್ಯಾವತಿಯರಾಗುತ್ತಿದ್ದರು…. ಉಳಿದ ಸಾಮಾನ್ಯ ಸ್ತ್ರೀಯರು ವಿದ್ಯಾವತಿಯರಾಗುವ ವಿಷಯದಲ್ಲಿ ಸಮಾಜವು ಬಹುಮಟ್ಟಿಗೆ ಔದಾಶೀನ್ಯವನ್ನು ತೋರಿದೆ. …… ನಮಗೆ ತಿಳಿದಮಟ್ಟಿಗೆ ಯಾವ ಸ್ತ್ರೀ ಲೇಖಕಿಯೂ ಶಾಸನವನ್ನು ರಚಿಸಿಲ್ಲ.
"ಕನ್ನಡ ಸಾಹಿತ್ಯ ಚರಿತ್ರೆಯೂ ಇದನ್ನೇ ಪೋಷಿಸುತ್ತದೆ. ಕವಿ ಚರಿತೆಯ ಪ್ರಕಾರ ಹನ್ನೆರಡಯ ಶತಮಾನದ ಪೂರ್ವಾರ್ಧದಲ್ಲಿದ್ದ ನಾಗಚಂದ್ರನ ಸಮಕಾಲೀನಳಾದ ಕಂತಿಯೇ ಕನ್ನಡದ ಮೊದಲ ಕವಯತ್ರಿ. ಕಂತಿಯ ಕಾಲವು ಖಚಿತವಾಗಿ ಗೊತ್ತಿಲ್ಲ. ಬಹುಶಃ ಅವಳು ಇನ್ನೂ ಈಚಿನವಳು ಮತ್ತು ಬಹುತೇಕ ಕಲ್ಪಿತ ವ್ಯಕ್ತಿ. ಕನ್ನಡದಲ್ಲಿ ಕೃಷಿಮಾಡಿದ ಮೊತ್ತಮೊದಲ ಸ್ತ್ರೀಯರೆಂದರೆ ವೀರಶೈವ ಶರಣೆಯರು. (೧೨ನೇ ಶ.) ವರ್ಣಾಶ್ರಮದ ಕಟ್ಟುಗಳನ್ನು ಕತ್ತರಿಸಿಹಾಕಿದ ವೀರಶೈವ ಧರ್ಮವು ಸ್ಮೃತ್ಯಾದಿಗಳನ್ನು ವಿರೋಧಿಸಿ ನಿಂತು ಸ್ತ್ರೀಯರು ವಿಷಯದಲ್ಲಿ ಉದಾರವಾಗಿ ನಡೆದುಕೊಂಡಿತು. ಈ ಔದಾರ‍್ಯದ ಫಲವಾಗಿ ಸ್ತ್ರೀಯರು ಧರ್ಮಗ್ರಂಥಗಳನ್ನು ಅಭ್ಯಸಿಸಿ ಪುರುಷರಂತೆ ತಾವೂ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದರು. ಇದೊಂದು ಅತ್ಯಪೂರ್ವ ಘಟನೆ."[6]
ಶರಣರಿಂದ, ವೀರಶೈವ ಮಠಗಳಿಂದ ಶಿಕ್ಷಣ ಸರ್ವರಿಗೆ ಲಭ್ಯವಾಯಿತು. ಕನ್ನಡ ಭಾಷೆ ಬೆಳೆಯಿತು; ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಕ್ಕಿತು; ಅದು ಹೊಸಮಾರ್ಗದಲ್ಲಿ ಮುನ್ನಡೆಯಿತು. ಹರಿಹರ ರಾಘವಾಂಕರು ಇದಕ್ಕೆ ಕಾರಣ ಪುರುಷರಾದರು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಲೋಕ ಮೆಚ್ಚುವಂತೆ ಬೆಳೆದವು. ಸರ್ವಜ್ಞನಂಥ ಗಂಡುಕವಿ ಊರೂರು ಮನೆಮನೆ ತಿರುಗಿ ತ್ರಿಪದಿಯಲ್ಲಿ ಸಾರಿದ ಜ್ಞಾನಕ್ಕೆ ಶರಣರ ಕ್ರಾಂತಿಯಿಂದ ಶಿಕ್ಷಣ ಸಾಮಾನ್ಯರವರೆಗೆ ಮುಟ್ಟಿದ್ದೇ ಕಾರಣವೆಂದು ವಿಶ್ವಾಸದಿಂದ ಹೇಳಬಹುದು.
[1] ಡಾ|| ಎಂ.ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೨೪೨.
[2] ಅದೇ ಪುಟ ೨೨೮.
[3] ಅದೇ ಪುಟ ೨೨೮.
[4] ಶಿಕ್ಷಣದ ಈ ಹೊಸಕ್ರಮಕ್ಕೆ ಅನುಭವಮಂಟಪವೇ ಮೂಲವೆಂದು ಊಹಿಸಲು ಅವಕಾಶವಿದೆ. ಅದು ಲೋಕಶಿಕ್ಷಣದ ಕೇಂದ್ರವಾಗಿತ್ತು. ಸರ್ವ ಕಾಯಕದವರೂ ಅಲ್ಲಿ ಕೂಡುತ್ತಿದ್ದರು; ಅವರಲ್ಲಿ ಬಹುಪಾಲು ಜನ ವಚನ ರಚಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನೋಡಿದರೆ ಅವರಿಗೆ ಶಿಕ್ಷಣದ ಅನುಕೂಲ ಕಲ್ಪಿಸಲಾಗಿತ್ತೆಂದು ಭಾವಿಸಬಹುದು. ಈ ನಿಟ್ಟಿನಲ್ಲಿ ಸಂಶೋಧಕರಿಗೆ ಒಂದು ಹೊಸ ಕ್ಷಿತಿಜ ದೊರಕುವ ಸಾಧ್ಯತೆ ಇದೆ.
[5] ಡಾ|| ಜಿ.ಎಸ್. ದೀಕ್ಷಿತ : ಪ್ರಾಚೀನ ಕರ್ನಾಟಕದ ಶಿಕ್ಷಣಕ್ರಮ, ಪುಟ ೪೭ – ೪೮ ಪ್ರಕಾಶಕರು ಪ್ರಸಾರಾಂಗ ಕ.ವಿ.ವಿ. ಧಾರವಾಡ.
[6] ಡಾ|| ಎಂ.ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪುಟ ೨೪೨.
By kanaja|2015-06-26T20:22:32+05:30June 26, 2015|ವಿಶ್ಲೇಷಣೆ ಮತ್ತು ಸಂಶೋಧನೆ, ಸಮುದಾಯ ಸಾಹಿತ್ಯ, ಸಾಹಿತ್ಯ, ಸಾಹಿತ್ಯ ವಿಮರ್ಶೆ|0 Comments
ದರ್ಶನ್ ತೋಟಕ್ಕೆ ಎಂಟ್ರಿ ಕೊಟ್ಟ 'ಗಜೇಂದ್ರ' – Halli Katte
ದರ್ಶನ್ ಅವರ ಫಾರ್ಮ್ ಹೌಸ್ ಗೆ ಹೊಸ ಕುದುರೆಯನ್ನು ತಂದಿದ್ದಾರೆ ಎಂಬುದು ಲೇಟೆಸ್ಟ್ ನ್ಯೂಸ್! ಪ್ರಾಣಿಗಳ ಬಗ್ಗೆ ಅಪಾರವಾದ ವ್ಯಾಮೋಹ ಹೊಂದಿರೋ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಈಗಾಗಲೇ ಸಾಕಷ್ಟು ಕುದುರೆಗಳನ್ನು ಸಾಕಿದ್ದಾರೆ. ಈಗ ಇವುಗಳ ಜೊತೆಗೆ ಮತ್ತೊಂದು ಕುದುರೆ ಸೇರಿದೆ. ಮಹಾರಾಷ್ಟ್ರದಿಂದ ಬಿಳಿ ಬಣ್ಣದ ಕುದುರೆ ಮರಿಯನ್ನು ಖರೀದಿಸಿರುವ ದಚ್ಚು ಅದಕ್ಕೆ ಗಜೇಂದ್ರ ಎಂಬ ನಾಮಕರಣವನ್ನು ಕೂಡ ಮಾಡಿದ್ದಾರೆ..
ಮೈಸೂರು ಬಳಿಯ ಟಿ ನರಸೀಪುರ ರಸ್ತೆಯಲ್ಲಿರುವ ತೂಗುದೀಪ ಫಾರ್ಮ್ ಹೌಸ್​ನಲ್ಲಿ ಹಸು, ಕುದುರೆ, ನಾಯಿ ಸೇರಿದಂತೆ ಹಲವಾರು ಪ್ರಾಣಿಗಳ ಜೊತೆ ಉಷ್ಟ್ರಪಕ್ಷಿ ಪಕ್ಷಿಯನ್ನು ನಟ ದರ್ಶನ್ ಸಾಕಿದ್ದಾರೆ.
ಅತಿಯಾದ ಪ್ರೀತಿಯನ್ನು ಹೊಂದಿರುವ ದರ್ಶನ್ ಮೂರು ವರ್ಷದಿಂದ ಹುಲಿ ಮತ್ತು ಆನೆಯನ್ನು ದತ್ತು ಪಡೆದುಕೊಂಡಿದ್ದಾರೆ. ಈಗ ಮತ್ತೆ ಅದೇ ಪ್ರಾಣಿಗಳನ್ನು ಒಂದು ವರ್ಷದ ಅವಧಿಗಾಗಿ ದತ್ತು ಪಡೆದುಕೊಂಡಿದ್ದಾರೆ. ಈಗಾಗಲೇ ದರ್ಶನ್ ಮೃಗಾಲಯಕ್ಕೆ 2 ಲಕ್ಷ 75 ಸಾವಿರ ರೂ. ಹಣವನ್ನು ಸಹ ಪಾವತಿ ಮಾಡಿದ್ದಾರೆ.
ಶ್ರೀರಾಮಚಂದ್ರಾಪುರ ಮಠದ ನೂತನ ಜಾಲತಾಣ ಲೋಕಾರ್ಪಣೆ - ಉಪಯುಕ್ತ ನ್ಯೂಸ್
ಶ್ರೀರಾಮಚಂದ್ರಾಪುರ ಮಠದ ನೂತನ ಜಾಲತಾಣ ಲೋಕಾರ್ಪಣೆ
by Upayuktha November 24, 2019 November 24, 2019 0226
ಶ್ರೀಮಠದ ಸಮಗ್ರ ರೂಪ ಈ ಜಾಲತಾಣ : ರಾಘವೇಶ್ವರ ಭಾರತೀ ಸ್ವಾಮೀಜಿ
ಶ್ರೀರಾಮಚಂದ್ರಾಪುರಮಠದ Srisamsthana.org ಜಾಲತಾಣ ವಿಟಿಯು ನಿವೃತ್ತ ಕುಲಪತಿಗಳಾದ ಪ್ರೊ.ಬಲವೀರ ರೆಡ್ಡಿ ಅವರಿಂದ ಲೋಕಾರ್ಪಣೆ
ಬೆಂಗಳೂರು: ದೇವರನ್ನು ತೋರಿಸುವುದು ಮಠ, ಶ್ರೀಮಠದ ಸಮಗ್ರ ರೂಪವನ್ನು ತೋರಿಸುವಲ್ಲಿ Srisamsthana.org ಜಾಲತಾಣವು ಸಹಕಾರಿಯಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀಮಹಾಸ್ವಾಮಿಗಳವರು ಹೇಳಿದರು.
ಗಿರಿನಗರದ ಶ್ರೀರಾಮಾಶ್ರಮದ ಪುನರ್ವಸುಭವನದಲ್ಲಿ ಭಾನುವಾರ ನಡೆದ Srisamsthana.org ಜಾಲತಾಣ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಆದಿಶಂಕರರು ಮಠವೆಂಬ ದೀಪವನ್ನು ಬೆಳಗಿದ ಜಾಗವಾದ ಗೋಕರ್ಣದ ಅಶೋಕೆಯಲ್ಲಿರುವ ಮಲ್ಲಿಕಾರ್ಜುನ ದೇವಾಲಯದ ಪ್ರತಿಬಿಂಬವನ್ನು ಇಟ್ಟು ದೀಪ ಬೆಳಗಲಾಗಿದೆ ಈ ಜಾಲತಾಣದಿಂದ ಶ್ರೀಮಠವನ್ನು ಜಗತ್ತಿಗೆ ತೋರುವ ಕೆಲಸವನ್ನು ಮಾಡಲಾಗುತ್ತಿದೆ. ಮಠವು ಸಮಾಜಕ್ಕೆ ಬೆಳಕನ್ನು ಕೊಡಬೇಕು, ಮಠದ ಮೇಲೆ ಬೆಳಕನ್ನು ಚೆಲ್ಲಬೇಕು ಈ ಜಾಲತಾಣ ಎಂದು ಶ್ರೀಗಳು ತಿಳಿಸಿದರು.
ಶ್ರೀಮಠವು ಎಲ್ಲರದ್ದೂ, ಜಗತ್ತಿನಲ್ಲಿರುವ ಎಲ್ಲರಿಗೂ ಮಠವು ಲಭ್ಯವಾಗಬೇಕು. ಮಠವು ನಮ್ಮದು ಹೌದು ಆದರೆ ನಮ್ಮದು ಮಾತ್ರವಲ್ಲ ಎಲ್ಲರದ್ದು. ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ ಅನುಕೂಲಗಳು ತುಂಬ ಇದೆ. ಆದರೆ ವಿವೇಚನಾರಹಿತರಾಗಿ ಬಳಸದೆ ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಬೇಕು. ಹಲವು ವಿದ್ಯಾರ್ಥಿಗಳಿಗೆ ಕಲಿಯಲು ಆಸಕ್ತಿ ಇದ್ದರು ಅನುಕೂಲ ಆಗುವುದಿಲ್ಲ. ಆದರೆ ಈ ತಂತ್ರಜ್ಞಾನದಿಂದ ಅಪರೂಪದ ವಿದ್ಯೆಗಳನ್ನು ಕಲಿಸಲು, ಕಲಿಯಲು ಸಾಧ್ಯವಾಗಿದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ನಿವೃತ್ತ ಕುಲಪತಿಗಳು ಹಾಗೂ ಎನ್‍ಐಟಿಕೆ ಸುರತ್ಕಲ್‍ನ ಅಧ್ಯಕ್ಷರಾದ ಪ್ರೊ. ಬಲವೀರ ರೆಡ್ಡಿ ಮಾತನಾಡಿ ಶ್ರೀ ಮಠದ ಮಾಹಿತಿ, ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸುವಲ್ಲಿ ಈ ಜಾಲತಾಣದ ಕಾರ್ಯ ಶ್ಲಾಘನೀಯ. ಕೇಂದ್ರ ಸರ್ಕಾರವು ತಂದಿರುವ ನೂತನ ಶಿಕ್ಷಣ ನೀತಿ- 2019 ಬಹಳ ಉತ್ತಮವಾಗಿದೆ. ಇನ್ನು 12 ವರ್ಷಗಳಲ್ಲಿ ಅಫಿಲಿಯೇಶನ್ ವಿಶ್ವವಿದ್ಯಾನಿಲಯಗಳು ಮುಚ್ಚಲಿವೆ. ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆ ಬಹಳ ಮುಖ್ಯ. ಸಹಕಾರಿಯಾಗಲಿದೆ. ವಿಶ್ವವಿದ್ಯಾಲಯ ಧನ ಆಯೋಗ(ಯುಜಿಸಿ)ವು ವಿದ್ಯಾರ್ಥಿವೇತನ, ಸಹಾಯಧನಕ್ಕೆ ಮಾತ್ರ ಇದೆ. ಶಾಸನತ್ವದ ಅಧಿಕಾರವಿಲ್ಲ. ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವಿಶಿಷ್ಟ ವಿಶ್ವವಿದ್ಯಾಲಯವಾಗಿದ್ದು ಇದು ಗೋಕರ್ಣದಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಇದರ ಶಾಖೆ ಹೊಂದುವಂತಾಗಲಿ. ತಂತ್ರಜ್ಞಾನ ಆಧರಿತ ಶಿಕ್ಷಣದಿಂದ ನಮ್ಮ ಸಂಸ್ಕೃತಿಯ ವಿದ್ಯೆಗಳನ್ನು ಪಸರಿಸಲು ಸಾಧ್ಯವಿದೆ ಎಂದು ಹೇಳಿದರು.
ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಮಾತನಾಡಿ ಭಾರತೀಯ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಮಠವು ಈಗ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಧುನಿಕ ವಿದ್ಯೆಗಳನ್ನು ಒಳಗೊಂಡ 64 ಪ್ರಾಚೀನ ವಿದ್ಯೆಗಳ ಕಲಿಯುಕೆಯ ಜತೆಗೆ ಜಾಲತಾಣ ತಂತ್ರಜ್ಞಾನದ ಮೂಲಕ ಜಗತ್ತಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಚಲನಚಿತ್ರ ನಟ ಅಜಯ್ ರಾವ್ ಮಾತನಾಡಿ ನಮ್ಮ ಸಂಸ್ಕ್ರತಿ, ವಿಚಾರಗಳನ್ನು ತಂತ್ರಜ್ಞಾನದ ಮೂಲಕ ಎಲ್ಲೆಡೆ ತಿಳಿಸಲು ಸಾಧ್ಯವಾಗಿದೆ. ನಾವು ಹಿಂದೂಗಳು ಎಂದು ಹೇಳಲು ಭಯಪಡಬೇಕಾಗಿಲ್ಲ. ಸಿನಿಮಾಗಳಲ್ಲಿಯೂ ಹಿಂದೂ ದೇವರುಗಳನ್ನು ಹಾಸ್ಯರೂಪದಲ್ಲಿ ತೋರಿಸದೆ ಗೌರವದ ಭಾವನೆಯಲ್ಲಿ ಬಿಂಬಿಸಬೇಕು ಎಂಬುದು ನನ್ನ ಅಭಿಪ್ರಾಯ. ಜತೆಗೆ ನನ್ನ ಸಿನಿಮಾಗಳಲ್ಲಿ ಹಿಂದೂ ವಿಚಾರಧಾರೆಗಳನ್ನು ತೋರಿಸುವುದಕ್ಕೆ ಆದ್ಯತೆ ನೀಡುತ್ತೇನೆ. ಶ್ರೀಮಠದ ಎಲ್ಲ ಕಾರ್ಯಕ್ರಮಗಳಿಗೆ ನನ್ನ ಸಹಕಾರವಿದೆ ಎಂದು ತಿಳಿಸಿದರು.
ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಮಾತನಾಡಿ ಜಗತ್ತು ಇಂದು ಶ್ರೀಮಠದ ಕಾರ್ಯ ಯೋಜನೆಗಳನ್ನು ಕಣ್ತೆರೆದು ನೋಡುವ ದಿನವಾಗಿದೆ. ಶ್ರೀಮಠವು ಎರಡು ದಶಕಗಳಲ್ಲಿ ಮಾಡಿದ ಹಲವು ಕಾರ್ಯಚಟುವಟಿಕೆಗಳನ್ನು ಜಗತ್ತಿಗೆ ತಲುಪಿಸುವ ಉದ್ದೇಶದಿಂದ ಈ ಜಾಲತಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಕನಸಲ್ಲ ಅದು ಸಂಕಲ್ಪವಾಗಿದೆ. ಸಂಕಲ್ಪ ಎನ್ನುವುದು ಹಗಲಿನಲ್ಲಿ ಆಗುವಂತದ್ದು ಅಂದರೆ ಬೆಳಕು ಇರುವ ಸಮಯ ಅದಕ್ಕೆ ಹೆಚ್ಚಿನ ಮಹತ್ವವಿದೆ. ಸಾವಿರಾರು ತಲೆಮಾರಿಗೆ ಒಮ್ಮೆ ಬರುವಂತಹ ಒಂದು ಪೀಠ ಅಂದರೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಕೋಗಿಲೆ ಸ್ಪರ್ಧಾ ವಿಜೇತೆ ಅರುಂಧತಿ ವಸಿಷ್ಠ ಹಾಗೂ ಮನೋಜ್ ವಸಿಷ್ಠ ಗಾಯನ ಕಾರ್ಯಕ್ರಮ ನಡೆಸಿದರು. ಗುರುಪ್ರಸಾದ್ ಎಂಬವರು ಸಂಗ್ರಹಿಸಿದ ಹಲವು ಪುಸ್ತಕಗಳನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ನಿರ್ಮಾಣ ಖಂಡದ ಶ್ರೀಸಂಯೋಜಕ ಜಗದೀಶ ಶರ್ಮಾ, ಜಾಲತಾಣ ವಿಭಾಗದ ಶ್ರೀಸಂಯೋಜಕ ಮಹೇಶ್ ಕೋರಿಕ್ಕಾರ್ ಪ್ರಸ್ತಾವನೆ ಮಾಡಿದರು. ಮೋಹನ್ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಶ್ರೀಮಠದ ಯೋಜನೆಗೆ ಬೆಂಬಲವಿದೆ: ಡಿಸಿಎಂ ಅಶ್ವತ್ಥನಾರಾಯಣ
ಶ್ರೀರಾಘವೇಶ್ವರ ಸ್ವಾಮೀಜಿ ಅವರ ಭಾರತೀಯ ಗೋ ತಳಿಯ ಸಂರಕ್ಷಣೆ ಯೋಜನೆ ಸೇರಿದಂತೆ ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಈ ಹಿಂದೆ ಭಾಗವಹಿಸಿದ್ದೆ. ಈಗ ಮತ್ತೊಂದು ಐತಿಹಾಸಿಕ ಮಹತ್ಕಾರ್ಯವಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ನಿರ್ಮಾಣವು ಭಾರತೀಯರಿಗೆ ಸಂದ ಗೌರವ. ಇದಕ್ಕೆ ಎಲ್ಲ ರೀತಿಯ ಸಹಕಾರ, ಬೆಂಬಲ ನೀಡುತ್ತೇವೆ. ಅನ್ಯ ಕಾರ್ಯಕ್ರಮದ ನಿಮಿತ್ತ ಜಾಲತಾಣ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಲು ಆಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಧ್ವನಿ ಸಂದೇಶ ನೀಡಿದರು.
New WebsiteSri Raghaveshwara Bharathi SwamijiSri Ramachandrapura Mathaನೂತನ ವೆಬ್‌ಸೈಟ್ ಲೋಕಾರ್ಪಣೆಶ್ರೀರಾಮಚಮದ್ರಾಪುರ ಮಠ