text
stringlengths 0
61.5k
|
---|
Wednesday, 18 May 2022 | UPDATED: 06:48 AM IST |
ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ: ಸಂಸದರಿಂದ ವೀಕ್ಷಣೆ |
Team Udayavani, Jan 25, 2022, 6:10 AM IST |
ಬಂಟ್ವಾಳ: ಬಿ.ಸಿ.ರೋಡು -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಹಿಂದಿನ ವಿನ್ಯಾಸವನ್ನು ಪರಿವರ್ತನೆ ಮಾಡಿಕೊಂಡು ಹೊಸ ಟೆಂಡರ್ ಮೂಲಕ 2 ಕಂಪೆನಿಗಳಿಂದ ವೇಗವಾಗಿ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿ ಸುಸಜ್ಜಿತ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳುವ ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. |
ಅವರು ಸೋಮವಾರ ಸಚಿವ ಎಸ್. ಅಂಗಾರ ಹಾಗೂ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಜತೆಗೆ ಬಿ.ಸಿ.ರೋಡಿನಿಂದ ಕಲ್ಲಡ್ಕವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪರಿಶೀಲಿಸಿ ಬಳಿಕ ಪತ್ರಕರ್ತರ ಜತೆ ಮಾತನಾಡಿದರು. |
ಹೆದ್ದಾರಿ ಕಾಮಗಾರಿ ಸಂದರ್ಭ ಕುಡಿಯುವ ನೀರು, ವಿದ್ಯುತ್ ಮೊದಲಾದ ಸಮಸ್ಯೆಗಳಾಗುವುದು ಸಹಜ. ಅದನ್ನು ನಿವಾರಿಸಿಕೊಂಡು ಕಾಮಗಾರಿ ವೇಗವಾಗಿ ಸಾಗುತ್ತದೆ. ಪಾಣೆಮಂಗಳೂರು, ಉಪ್ಪಿನಂಗಡಿ ಯಲ್ಲಿ ಸೇತುವೆಗಳು, ಕಲ್ಲಡ್ಕದಲ್ಲಿ ದೇಶದಲ್ಲೇ ಅಪೂರ್ವವಾದ 6 ಲೇನ್ ಫ್ಲೆ$çಓವರ್ ನಿರ್ಮಾಣಗೊಳ್ಳಲಿದೆ. 15 ದಿನಗಳೊಗೊಮ್ಮೆ ಪ್ರಗತಿ ಪರಿಶೀಲನ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗುತ್ತದೆ. ಈ ಹಿಂದೆ ತಲಪಾಡಿ-ಹೆಜಮಾಡಿ ಕಾಮಗಾರಿ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದೆವು ಎಂದರು. |
ಇದನ್ನೂ ಓದಿ:ಅಕ್ರಮ ಮರಳು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಅಧಿಕಾರಿ ದಾಳಿ : ಮೂರು ದೋಣಿಗಳು ವಶಕ್ಕೆ |
ಬಿಕರ್ನಕಟ್ಟೆ-ಸಾಣೂರು ಕಾಮಗಾರಿಗೆ ಟೆಂಡರ್ |
ಜಿಲ್ಲೆಯ ಎಲ್ಲ ಹೆದ್ದಾರಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿದ್ದು, ಬಿಕರ್ನಕಟ್ಟೆಯಿಂದ ಸಾಣೂರು ವರೆಗಿನ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ. ಶಾಸಕ ರಾಜೇಶ್ ನಾೖಕ್ ನೇತೃತ್ವದಲ್ಲಿ ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ವರೆಗಿನ ಕಾಮಗಾರಿ ವೇಗವಾಗಿ ಸಾಗಿದ್ದು, ಶೀಘ್ರದಲ್ಲಿ ಚಾರ್ಮಾಡಿ ವರೆಗೂ ಮುಂದುವರಿಯಲಿದೆ. ಗುಂಡ್ಯ ವರೆಗಿನ ಗೆದ್ದಾರಿಗಳ ಹೊಂಡ ಮುಚ್ಚಲಾಗಿದ್ದು, ಸಕಲೇಶಪುರ ಭಾಗದ ಹೆದ್ದಾರಿ ಅವ್ಯವಸ್ಥೆಯ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ. ಅದಕ್ಕೂ ವಿಶೇಷ ಅನುದಾನಕ್ಕಾಗಿ ಹೆದ್ದಾರಿ ಖಾತೆ ಸಚಿವ ಗಡ್ಕರಿ ಅವರ ಜತೆ ಚರ್ಚಿಸಲಾಗಿದೆ ಎಂದರು. |
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. |
ಶಿರಾಡಿ: ಪರ್ಯಾಯ ಕ್ರಮಕ್ಕೆ ಸೂಚನೆ |
ದ.ಕ. ಜಿಲ್ಲೆಯ ಶಿರಾಡಿ ಮೂಲಕ ಸಾಗುವ ಬೆಂಗಳೂರು ರಸ್ತೆಯು ಜಿಲ್ಲೆಯ ಆರ್ಥಿಕ ವ್ಯವಹಾರದ ಜೀವನಾಡಿಯಾಗಿರುವುದರಿಂದ ಈ ಹೆದ್ದಾರಿಯನ್ನು ದುರಸ್ತಿಗಾಗಿ 6 ತಿಂಗಳು ಬಂದ್ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ ತಿಳಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅದನ್ನು ವೀಕ್ಷಿಸಿ ಪರ್ಯಾಯ ವ್ಯವಸ್ಥೆಯ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ನಳಿನ್ ತಿಳಿಸಿದರು. |
ಡಾ| ಅಂಬೇಡ್ಕರ್ ಆದರ್ಶ ಪಾಲಿಸಿ : ಈಶ್ವರಪ್ಪ | Udayavani – ಉದಯವಾಣಿ |
Saturday, 02 Jul 2022 | UPDATED: 05:04 PM IST |
Team Udayavani, Apr 15, 2021, 7:22 PM IST |
ಶಿವಮೊಗ್ಗ: ಮೀಸಲಾತಿ ಹೆಚಿÌಸುವ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಅದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. |
ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಇವರ ಸಂಯುಕ್ತ ಆಶ್ರಯ ದಲ್ಲಿ ಜಿಲ್ಲಾಡಳಿತ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮೀಸಲಾತಿ ಹೆಚ್ಚಿಸುವ ಸಂಬಂಧ ಎಲ್ಲಾ ರಾಜ್ಯಗಳು ಅಭಿಪ್ರಾಯ ನೀಡುವಂತೆ ಸುಪ್ರೀಂ ಕೋರ್ಟ್ ಕೇಳಿದೆ. ಅದರಂತೆ ಮೀಸಲಾತಿಯನ್ನು ಯಾವ ರೀತಿ ಹೆಚ್ಚಿಸಬೇಕೆಂಬುದರ ಬಗ್ಗೆ ತೀರ್ಮಾನಿಸಲಾಗಿದೆ. ಮೀಸಲಾತಿ ಪಡೆದವರೇ ಅನುಕೂಲ ಪಡೆಯುತ್ತಿದ್ದಾರೆ. ಶಾಸಕರು, ಸಚಿವರು, ಎಂಪಿಗಳು ಅವರೇ ಆಗುತ್ತಿದ್ದಾರೆ. ಐಎಎಸ್ ಆದವರ ಕುಟುಂಬದವರೇ ಆ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಇದನ್ನು ಹೋಗಲಾಡಿಸಿ ನಿಜವಾದ ಅರ್ಹರಿಗೆ ಮೀಸಲಾತಿ ಸಿಕ್ಕಲು ಕ್ರಮ ಕೈಗೊಳ್ಳಲಾಗಿದೆ ಎಂದರು. |
ಇಂದು ಬಹಳಷ್ಟು ಕಡೆಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಈಗಲೇ ಇಷ್ಟಿರುವಾಗ ಅಂಬೇಡ್ಕರ್ ಕಾಲದಲ್ಲಿ ಅದು ಹೇಗಿತ್ತು ಎಂಬುದು ಊಹಿಸುವುದು ಕಷ್ಟಸಾಧ್ಯ. ಇಂದಿಗೂ ದಲಿತರು ದೇವಸ್ಥಾನದೊಳಗೆ ಹೋಗಲು ಹಿಂಜರಿಯುವ ಸ್ಥಿತಿ ಇದೆ. ಇದನ್ನು ಹೋಗಲಾಡಿಸುವುದು ಭಾಷಣದಿಂದ ಸಾಧ್ಯವಿಲ್ಲ. ಮನಪರಿವರ್ತನೆ ಹಾಗೂ ಆಚರಣೆಯಿಂದ ಸಾಧ್ಯ ಎಂದರು. ವಿಶೇಷ ಉಪನ್ಯಾಸ ನೀಡಿದ ಡಾ.ಕೆ.ಜಿ. ವೆಂಕಟೇಶ್, ಶಾಲೆಗೆ ಗೋಣಿಚೀಲ ತೆಗೆದುಕೊಂಡು ಹೋಗಿ ಅದರಲ್ಲಿ ಕುಳಿತು ಪಾಠ ಕೇಳಿ, ದೀಪದ ಬೆಳಕಿನ ಕುಳಿತು ರಾತ್ರಿಯೆಲ್ಲಾ ಓದಿ ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದಾರೆ ಎಂದರು. |
ದೇಶದ ಜನತೆಗೆ ಆರ್ಥಿಕ ಶಕ್ತಿ ನೀಡಿ, ಸಾಮಾಜಿಕ, ಸಮಾನತೆ ತನ್ನಿ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂದರು. ಇಂಗ್ಲೆಂಡ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಶೇ. 5 ರಷ್ಟಿರುವ ದಲಿತರಿಗೆ ನ್ಯಾಯ ಕೊಡಿ ಎಂದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಸಂವಿಧಾನದಿಂದಾಗಿ ಇಂದು ದೇಶದಲ್ಲಿ ಬದಲಾವಣೆಯಾಗುತ್ತಿದೆ. ಈ ಭೂಮಿ ಎಲ್ಲಿವರೆಗೂ ಇರುತ್ತೋ ಅಲ್ಲಿವರೆಗೆ ಅಂಬೇಡ್ಕರ್ ಚಿಂತನೆಗಳು, ಹೋರಾಟಗಳು ಇರುತ್ತವೆ ಎಂದರು. ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಮೀಸಲಾತಿಯನ್ನು ಪ್ರತಿ 10 ವರ್ಷಕ್ಕೊಮ್ಮೆ ಅವಲೋಕಿಸಿ ಮುನ್ನಡೆಯುತ್ತಿದ್ದೇವೆ. ಮೀಸಲಾತಿ ಮತ್ತೆ ಮತ್ತೆ ಮುಂದುವರಿಯುತ್ತಲೇ ಹೋಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪುನರ್ ನಿಗದಿಯಾಗಬೇಕಿದೆ. ಪರಿಶಿಷ್ಟ ಜಾತಿ ಮತ್ತ ಪಂಗಡ ಈ ದೇಶದ ಜನ ಸಂಖ್ಯೆಯಲ್ಲಿ ಶೇ.25 ರಷ್ಟಿದ್ದಾರೆ. ಅವರಿಗೆ ನ್ಯಾಯ ಕೊಡುವ ಕೆಲಸ ಆಗಬೇಕಿದ ಎಂದರು. |
ಶಾಸಕರಾದ ಆಯನೂರು ಮಂಜುನಾಥ, ಆರ್. ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯ್ ಕುಮಾರ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಮೇಯರ್ ಸುನೀತಾ ಅಣ್ಣಪ್ಪ, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಬಿ.ಎಂ. ಲಕ್ಷ್ಮೀಪ್ರಸಾದ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುನಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ, ಸಂಘಟಕರಿಗೆ ಸನ್ಮಾನಿಸಲಾಯಿತು. |
ಪ್ರಸ್ತುತ ಕೋವಿಡ್ ವೇಳೆ ಪರೀಕ್ಷೆ | ಸರಕಾರದ ನಿರ್ಧಾರಕ್ಕೆ ಆಕ್ಷೇಪಿಸಿದ ದಲಿತ ಪ್ರೊಫೆಸರ್ ಗೆ ಜಾತಿ ನಿಂದನೆ – Prasthutha |
Prasthutha: September 5, 2020 |
ಕೊಲ್ಕತಾ : ಎಡಪಂಥೀಯ ಚಿಂತನೆಯ ಪ್ರಭಾವ ವ್ಯಾಪಕವಾಗಿರುವ ಪಶ್ಚಿಮ ಬಂಗಾಳದಲ್ಲಿ ಓರ್ವ ದಲಿತ ಪ್ರೊಫೆಸರ್ ಕೋವಿಡ್ -19 ವೇಳೆ ಪರೀಕ್ಷೆ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣ ಪೋಸ್ಟ್ ಹಾಕಿದ್ದಕ್ಕಾಗಿ ಜಾತಿ ನಿಂದನೆ ಮಾಡಿದ ಘಟನೆ ನೀಡಿದೆ. |
ಜಾಧವ್ ಪುರ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಮರೂನಾ ಮುರ್ಮು ಇತಿಹಾಸ ವಿಭಾಗದಲ್ಲಿ ಅಸೋಸಿಯೇಟೆಡ್ ಪ್ರೊಫೆಸರ್ ಆಗಿ, ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ 19 ತುರ್ತಿನ ನಡುವೆಯೂ ಪರೀಕ್ಷೆ ನಡೆಸುತ್ತಿರುವ ಸರಕಾರದ ನಿರ್ಧಾರಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ವೇಳೆ ಪ್ರೊ. ಮುರ್ಮು ಅವರು ಸೆ.2ರಂದು ಸ್ನೇಹಿತರೊಬ್ಬರ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದರು. ಸರಕಾರದ ನಿರ್ಧಾರದಿಂದ ವಿದ್ಯಾರ್ಥಿಗಳ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. |
ಅವರ ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಯುವತಿಯೊಬ್ಬಳು ಜಾತಿಯನ್ನು ಹಿಡಿದು ಅವಮಾನಿಸಿದ್ದಾಳೆ. "ವಿದ್ಯಾರ್ಥಿಗಳ ಒಂದು ವರ್ಷದ ಶೈಕ್ಷಣಿಕ ವರ್ಷ ನಷ್ಟವಾಗುತ್ತದೋ, ಇಲ್ಲವೋ ಎಂಬುದರ ಬಗ್ಗೆ ತಿಳಿಯಲು ನಿಮ್ಮಂತೆ ಪ್ರೊಫೆಸರ್ ಆಗಬೇಕಾಗಿಲ್ಲ. ಒಂದು ವರ್ಷ ನಷ್ಟದ ವಿಷಯವಲ್ಲ, ಹೇಗೆ ಕೆಲವು ಅನರ್ಹ ವ್ಯಕ್ತಿಗಳು ಮತ್ತು ಅಸಮರ್ಥ ವ್ಯಕ್ತಿಗಳು ಮೀಸಲಾತಿಯ ಲಾಭ ಪಡೆಯುತ್ತಾರೆ ಮ್ತತು ತಮ್ಮ ಜಾತಿಯು ಅವರ ಯಶಸ್ಸಿಗೆ ಹೇಗೆ ಸಹಾಯವಾಗುತ್ತದೆ ಎಂಬುದು ಮುಖ್ಯವಾದ ವಿಷಯ. ನಿಜವಾದ ಅರ್ಹರು ಯಾವತ್ತೂ ಹಿಂದೆಯೇ ಬೀಳುತ್ತಿರುತ್ತಾರೆ. ನಮ್ಮ ಹೆತ್ತವರು ಅಪಾಯ ತೆಗೆದುಕೊಂಡು ಹೊರಹೋಗುತ್ತಾರೆ, ನಮಗೆ ಆಹಾರ ಪಡೆಯುತ್ತಾರೆ. ಆದರೆ, ಕೆಲವರು ಮನೆಯಲ್ಲೇ ಕುಳಿತು, ಏನೂ ಮಾಡದೆ ವೇತನ ಪಡೆಯುತ್ತಾರೆ" ಎಂದು ಯುವತಿ ಕಾಮೆಂಟ್ ಮಾಡಿದ್ದಾಳೆ. |
ಅದಾದ ಕೆಲವು ಗಂಟೆಗಳ ಬಳಿಕ, ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅದೇ ಯುವತಿ, ''ಇಂದು ಮುಂಜಾನೆ, ಓರ್ವ ಸಂತಾಲ್ 'ಮುರ್ಮು'ಗೆ ಆಕೆಯ ಆದಿವಾಸಿ ಮೂಲದ ಬಗ್ಗೆ ನೆನಪಿಸಿದೆ. ಅದೂ ಸೌಜನ್ಯಯುತವಾಗಿ. ಆದರೆ, ಆಕೆಯನ್ನು ಇಷ್ಟಪಡುವವರು, ಪ್ರೊಫೆಸರ್ ಗಳೆಂದು ಹೇಳಿಕೊಳ್ಳುವವರು ಕೇವಲ ಸಂಬಳ ಪಡೆದು ದೇಹ ಬೆಳೆಸಿಕೊಳ್ಳುವವರು ಎಂಬುದನ್ನು ಕೆಲವರು ನನಗೆ ಅರ್ಥ ಮಾಡಿಸಿದರು'' ಎಂದು ಪೋಸ್ಟ್ ಮಾಡಿದ್ದಾಳೆ. |
"ಈ ಘಟನೆಯಿಂದ ನನಗೆ ಆಘಾತವೇನೂ ಆಗಿಲ್ಲ, ತಾನು ಇಂಥ ಜಾತಿ ನಿಂದನೆಗಳನ್ನು ಎದುರಿಸಿಯೇ ಬೆಳೆದವಳು" ಎಂದು ಪ್ರೊ. ಮುರ್ಮು ಹೇಳಿದ್ದಾರೆ ಎಂದು 'ದ ವೈರ್' ವರದಿ ಮಾಡಿದೆ. ಇನ್ನೊಂದೆಡೆ, ಪ್ರೊ. ಮುರ್ಮುಗೆ ಈಗ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರೊ. ಮುರ್ಮು ಪರವಾಗಿ ಸಾವಿರಾರು ಕಾಮೆಂಟ್ ಗಳು ಪ್ರಕಟವಾಗಿವೆ. |
ಪಶ್ಚಿಮ ಬಂಗಾಳದಲ್ಲಿ ದೀರ್ಘ ಕಾಲ ಎಡಪಂಥೀಯ ಸರಕಾರಗಳು ಆಡಳಿತ ನಡೆಸಿದ ಕಾರಣಕ್ಕಾಗಿ, ಅಲ್ಲಿ ಪ್ರಗತಿಪರ ಮನೋಸ್ಥಿತಿ ಹೆಚ್ಚಾಗಿದೆ ಎಂದೇ ಭಾವಿಸಲಾಗುತ್ತದೆ. ಆದರೆ, ಯುವ ಸಮುದಾಯದಲ್ಲಿ ಮೀಸಲಾತಿ ಕುರಿತ ಇಂತದ್ದೊಂದು ನಿಕೃಷ್ಟ ಮನೋಸ್ಥಿತಿ ಬೆಳವಣಿಗೆಯಾಗಿರುವುದು ಅಲ್ಲಿನ ಶಿಕ್ಷಣ ವ್ಯವಸ್ಥೆಯ ದೋಷವನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಅಪಾಯಕಾರಿ ಮನೋಸ್ಥಿತಿಯನ್ನು ಪೋಷಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. |
ಭಕ್ತಿಯ ಮಹಿಮೆ! ಶಬರಿಮಲೆ ಯಾತ್ರಿಕರನ್ನ ಅನುಸರಿಸಿ 480 ಕಿಮೀ ಚಾರಣ ಮಾಡಿದ ಬೀದಿನಾಯಿ- Kannada Prabha |
ಭಕ್ತಿಯ ಮಹಿಮೆ! ಶಬರಿಮಲೆ ಯಾತ್ರಿಕರನ್ನ ಅನುಸರಿಸಿ 480 ಕಿಮೀ ಚಾರಣ ಮಾಡಿದ ಬೀದಿನಾಯಿ |
ದೇವರ ಮೇಲಿನ ಭಕ್ತಿ ಹಾಗೂ ಸಮರ್ಪಣಾ ಬಾವಕ್ಕೆ ಯಾವ ಮಿತಿಗಳಿರುವುದಿಲ್ಲ. ಅದು ಮಾನವರಿರಲಿ, ಪ್ರಾಣಿಗಳೇ ಆಗಿರಲಿ ಭಕ್ತಿ ಎಲ್ಲರಲ್ಲಿ ಒಂದೇ ಆಗಿರಲಿದೆ ಎನ್ನುವುದುಅಕ್ಕೆ ಈ ಸುದ್ದಿ ತಾಜಾ ಉದಾಹರಣೆಯಾಗಲಿದೆ. ಸಾಮಾನ್ಯ ಬೀದಿ ನಾಯಿಯೊಂದು ಶಬರಿಮಲೆ ಯಾತ್ರಿಕರನ್ನು ಅನುಸರಿಸಿ ಬಂದಿದ್ದು ಇದುವರೆಗೆ 480 ಕಿಮೀ ಪ್ರಯಾಣ ಮಾಡಿದೆ. |
Published: 18th November 2019 03:54 PM | Last Updated: 18th November 2019 03:55 PM | A+A A- |
ಕೇರಳದ ಶಬರಿಮಲೆಗೆ ತೆರಳುತ್ತಿರುವ 13 ಅಯ್ಯಪ್ಪ ಭಕ್ತರ ತಂಡದೊಡನೆ ಈ ನಾಯಿ ಪ್ರಯಾಣ ಬೆಳೆಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಭಕ್ತರು ಬರಿಗಾಲಿನಲ್ಲಿ 31 ರಂದು ಆಂಧ್ರಪ್ರದೇಶದ ತಿರುಮಲದಿಂದ ಯಾತ್ರೆ ಪ್ರಾರಂಭಿಸಿದಾಗಿನಿಂದ ನಾಯಿ ಅವರನ್ನು ಅನುಸರಿಸಿ ಬರುತ್ತಿದೆ. ಈ ಭಕ್ತರ ತಂಡವೀಗ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿದೆ. |
ದಕ್ಷಿಣ ಕನ್ನಡದ ಮೂಡಬಿದಿರೆಯ ತೋಡಾರು ಗ್ರಾಮದ ನಿವಾಸಿ ರಾಜೇಶ್ ಗುರುಸ್ವಾಮಿಯವರ ತಂಡದಲ್ಲಿ ಈ ನಾಯಿಯೂ ಸೇರಿಕೊಂಡಿದೆ.ಪ್ರಾರಂಭದಲ್ಲಿ ನಾಯಿ ತಮ್ಮನ್ನು ಹಿಂಬಾಲಿಸಿ ಬರುವುದು ಯಾವೊಬ್ಬ ಭಕ್ತರಿಗೆ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ನಾಯಿ ತಮ್ಮ ತಂಡದ ಬೆನ್ನಿಗೇ ಬರುತ್ತಿರಿವಿದಿ ಕಂಡು ಭಕ್ತರ ತಂಡ ಅಚ್ಚರಿಗೊಂಡಿದೆ. "ನಾವು ಆರಂಭದಲ್ಲಿ ನಾಯಿಯನ್ನು ಗಮನಿಸಲಿಲ್ಲ. ಆದರೆ ನಾವು ಮುಂದುವರೆದಂತೆ ಅದೂ ಕೂಡ ನಮ್ಮನ್ನು ಅನುಸರಿಸಿದೆ.ನಾವು ತಯಾರಿಸುವ ಆಹಾರವನ್ನು ನಾವು ಅದಕ್ಕೆ ನಿಡಿದ್ದೇವೆ. ನಾವು ಪ್ರತಿವರ್ಷ ಶಬರಿಮಲೆ ತೀರ್ಥಯಾತ್ರೆ ಮಾಡುತ್ತೇವೆ, ಆದರೆ ಇದು ಹೊಸ ಅನುಭವ," ಭಕ್ತರು ಹೇಳಿದರು. |
ನಾಯಿ ಒಂದೆರಡು ಬಾರಿ ತನ್ನ ಪಂಜಗಳಿಗೆ ಗಾಯವನ್ನು ಮಾಡಿಕೊಂಡಿದ್ದು ಸ್ಥಳೀಯ ಪಶುವೈದ್ಯರು ಅದಕ್ಕೆ ಚಿಕಿತ್ಸೆ ಒದಗಿಸಿದ್ದಾರೆ. ಈ ಭಕ್ತರ ತಂಡ ಇದೀಗ ನಾಯಿಯನ್ನು ಸಹ ಶಬರಿಮಲೆಗೆ ಕರೆದೊಯ್ಯಲಿದೆ ಎಂದು ಭಕ್ತರೊಬ್ಬರು ಹೇಳೀದ್ದಾರೆ. 41 ದಿನಗಳ ಸುದೀರ್ಘವಾದ ಮಂಡಲ-ಮಕರವಿಳಕ್ಕುಂ ಪೂಜಾ ಉತ್ಸವಕ್ಕಾಗಿ ನವೆಂಬರ್ 16 ರಂದು ಶಬರಿಮಲೆ ದೇವಾಲಯವನ್ನು ತೆರೆಯಲಾಯಿತು. |
ಡ್ರಾ ಪಂದ್ಯದಲ್ಲಿ ಸಂಯುಕ್ತ ತಂಡ | Prajavani |
ಡ್ರಾ ಪಂದ್ಯದಲ್ಲಿ ಸಂಯುಕ್ತ ತಂಡ |
ಬೆಂಗಳೂರು: ಸಂಯುಕ್ತ ನಗರ ಇಲೆವೆನ್ ತಂಡದ ಬೌಲರ್‌ಗಳ ದಾಳಿಯನ್ನು ಎದುರಿಸಿ ನಿಲ್ಲಲು ಪರದಾಡಿದ ಬೆಂಗಳೂರು ನಗರ ತಂಡ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಅಂತರ ವಲಯ ಕ್ರಿಕೆಟ್ ಟೂರ್ನಿಯ (19 ವರ್ಷದೊಳಗಿನವರು) ಪಂದ್ಯದಲ್ಲಿ ಇನಿಂಗ್ಸ್ ಹಿನ್ನಡೆ ಅನುಭವಿಸಿತು. ಆದರೆ, ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು. |
ಸಂಯುಕ್ತ ನಗರ ತಂಡ ಶರತ್ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 348 ರನ್ ಗಳಿಸಿತ್ತು. ನಗರ ತಂಡ 68 ಓವರ್‌ಗಳಲ್ಲಿ 221 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಎರಡು ದಿನಗಳ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಸಂಯುಕ್ತ ನಗರ 30 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು. ಇನಿಂಗ್ಸ್ ಮುನ್ನಡೆ ಸಾಧಿಸಿದ ಈ ತಂಡ ಮೂರು ಪಾಯಿಂಟ್ ಪಡೆದರೆ, ನಗರ ತಂಡ ಒಂದು ಪಾಯಿಂಟ್ ಗಳಿಸಿತು. |
ಸಂಕ್ಷಿಪ್ತ ಸ್ಕೋರು: ಸಂಯುಕ್ತ ನಗರ ಇಲೆವೆನ್ 72.5 ಓವರ್‌ಗಳಲ್ಲಿ 348 ಹಾಗೂ ಎರಡನೇ ಇನಿಂಗ್ಸ್ 30 ಓವರ್‌ಗಳಲ್ಲಿ 3 ವಿಕೆಟ್‌ಗೆ 90. (ಬಿ.ಆರ್. ಶರತ್ 32, ಪ್ರದೀಪ್ 29ಕ್ಕೆ2). ಬೆಂಗಳೂರು ನಗರ ಇಲೆವೆನ್: 68 ಓವರ್‌ಗಳಲ್ಲಿ 221. (ಅಮಿತ್ ಚಾಂದ್ 28, ಎಂ.ಆರ್. ಸಚಿನ್ 63, ಜಿ. ಸಚಿನ್ 68; ರಾಜ್ ಗಾಲಾ 33ಕ್ಕೆ3). |
ಅಧ್ಯಕ್ಷರ ಇಲೆವೆನ್ 69.5 ಓವರ್‌ಗಳಲ್ಲಿ 193 ಹಾಗೂ 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 11. ಸಂಯುಕ್ತ ಮೊಫಿಷಿಯಲ್ ಇಲೆವೆನ್ 30 ಓವರ್‌ಗಳಲ್ಲಿ 68 ಮತ್ತು 7.4 ಓವರ್‌ಗಳಲ್ಲಿ 133. ಫಲಿತಾಂಶ: ಅಧ್ಯಕ್ಷರ ಇಲೆವೆನ್ ತಂಡಕ್ಕೆ 10 ವಿಕೆಟ್ ಗೆಲುವು ಹಾಗೂ 5 ಪಾಯಿಂಟ್. |
ಚೋಟಾ ರಾಜನ್ ಸಹಚರ,ಮೋಸ್ಟ್ ವಾಂಟೆಡ್ ವಿನೇಶ್ ಶೆಟ್ಟಿ ಅರೆಸ್ಟ್ – Karavali Kirana |
ಚೋಟಾ ರಾಜನ್ ಸಹಚರ,ಮೋಸ್ಟ್ ವಾಂಟೆಡ್ ವಿನೇಶ್ ಶೆಟ್ಟಿ ಅರೆಸ್ಟ್ |
ಉಳ್ಳಾಲ: ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ, ಚೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ (44) ಯನ್ನು ಕೊಣಾಜೆ ಪೊಲೀಸರು ಮುಂಬಯಿಯಲ್ಲಿ ಬಂಧಿಸಿದ್ದಾರೆ. |
ಉಡುಪಿ ಯ ಶಿರ್ವ ನಿವಾಸಿಯಾಗಿದ್ದ ವಿನೇಶ್ ಶೆಟ್ಟಿ 2003 ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಜಾಮೀನು ಪಡೆದಿದ್ದ ಆರೋಪಿ ವಿನೇಶ್ 2015 ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದ ವಿನೇಶ್ ವಿರುದ್ದ ವಾರಂಟ್ ಜಾರಿ ಮಾಡಲಾಗಿತ್ತು. |
ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ , ಕೊಲೆ, ಕೊಲೆಯತ್ನ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ. ನಟೋರಿಯಸ್ ಕ್ರಿಮಿನಲ್ ಆಗಿದ್ದ ವಿನೇಶ್ ಮುಂಬೈನಲ್ಲಿ ಛೋಟಾ ಶಕೀಲ್ ಸಹಚರನಾಗಿ ಕಾರ್ಯನಿರ್ವಹಿಸುತ್ತಿದ್ದ. |
ಕೊಣಾಜೆ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಮತ್ತು ಎಸ್. ಐ ಸುಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. |
ಮುಂಬೈನಲ್ಲಿ ನಾಲ್ಕು ಕೊಲೆ ಪ್ರಕರಣ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ, ಮಂಗಳೂರಿನಲ್ಲಿ ಎರಡು ಕೊಲೆ, ದಾವಣಗೆರೆ ಡಕಾಯಿತಿ ಪ್ರಕರಣ, ಪುಣೆಯ ಅಹಮದ್ ನಗರದಲ್ಲಿ 3 ಕೋಟಿ ಹವಾಲಾ ಹಣ ಲೂಟಿ ಗೈದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. |
ಕೊಳ್ಳೇಗಾಲ (25.07.2021) : ತಮ್ಮನ ಕಣ್ಣೆದುರೇ ಅಣ್ಣ ನದಿಗೆ ಹಾರಿರುವ ದಾರುಣ ಘಟನೆ ತಾಲ್ಲೂಕಿನ ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ಜರುಗಿದೆ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಕುರುಬಾರ ಹುಂಡಿ ಗ್ರಾಮದ ಬಸವರಾಜ ಆರಾಧ್ಯ (31) ಸಾವಿಗೀಡಾದವರು. |
ದಾಸನಪುರ ಗ್ರಾಮದಲ್ಲಿರುವ ಸೇತುವೆಯಿಂದ ಏಕಾಏಕಿ ನದಿಗೆ ಹಾರಿದ್ದಾರೆ. ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ನುರಿತ ಈಜುಗಾರರು ಮೂರು ಗಂಟೆಗೂ ಹೆಚ್ಚು ಕಾಲ ನದಿಯಲ್ಲಿ ಹುಡುಕಾಟ ನಡೆಸಿದ್ದು, ಬಸವರಾಜ ಅವರು ಪತ್ತೆಯಾಗಿಲ್ಲ. |
ಬಸವರಾಜ ಅವರು ಎರಡು ಮೂರು ಬಾರಿ ಬೈಕ್‍ನಲ್ಲಿ ಅಪಘಾತವಾಗಿತ್ತು. ಆ ಕಾರಣ ವೈದ್ಯರ ಸಲಹೆಯಂತೆ ಪಿಸಿಯೋಥೆರಪಿ ಮಾಡಿಸಿಕೊಳ್ಳಲು ಕೊಳ್ಳೇಗಾಲಕ್ಕೆ ತಮ್ಮ ವಿವೇಕ್ ಆರಾಧ್ಯರ ಜೊತೆ ನಿತ್ಯವೂ ಬರುತ್ತಿದ್ದರು. ಶನಿವಾರ ದಾಸನಪುರ ಗ್ರಾಮದ ಸೇತುವೆ ಮೇಲೆ ಬೈಕ್‍ನಲ್ಲಿ ಬರುತ್ತಿದ್ದ ವೇಳೆ, ಬಸವರಾಜ ಅವರು 'ವಾಂತಿ ಬರುತ್ತಿದೆ. ಬೈಕ್ ನಿಲ್ಲಿಸು' ಎಂದು ತಮ್ಮನಿಗೆ ಹೇಳಿದ್ದಾರೆ. ಆಗ ಇದ್ದಕ್ಕಿದಂತೆ ಬಸವರಾಜ ಆರಾಧ್ಯ ಸೇತುವೆ ಮೇಲಿಂದ ಕಾವೇರಿ ನದಿಗೆ ಹಾರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |
ಕೆಂಭಾವಿ Archives · VIJAYAVANI - ವಿಜಯವಾಣಿ |
Tag: ಕೆಂಭಾವಿ |
ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಸಹಕಾರಿ |
Yadgir April 29, 2019 6:00 AM KembavinaganoorSharanabasaveshwarsharanabasaveshwar jatreYadagiriಕೆಂಭಾವಿನಗನೂರ ಶರಣಬಸವೇಶ್ವರ ಜಾತ್ರೆಯಾದಗಿರಿಶರಣಬಸವೇಶ್ವರಶರಣಬಸವೇಶ್ವರ ರಥೋತ್ಸವ |
ಕೆಂಭಾವಿ: ಆಧುನಿಕ ಯುಗದಲ್ಲಿ ಎಷ್ಟೋ ಕುಟುಂಬಗಳು ಸಾಲ ಮಾಡಿ ಮದುವೆ ಮಾಡುತ್ತಿದ್ದು ಮಠ-ಮಾನ್ಯಗಳು ಇಂತಹ ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡ ಕುಟುಂಬಗಳ ಬದುಕಿಗೆ ಆಸರೆಯಾಗಲಿದೆ. ದುಂದು ವೆಚ್ಚಕ್ಕೆ ಕಡಿವಾಣ ಬೀಳುತ್ತಿರುವುದು ಉತ್ತಮ ಬೆಳವಣಿಗೆ ಎಂದು… |
View More ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಸಹಕಾರಿ |
Yadgir March 21, 2019 6:30 AM Kembavirenukachary jayanthiYadagiriಕೆಂಭಾವಿಯಾದಗಿರಿರೇಣುಕಾಚಾರ್ಯ ಜಯಂತಿ |
ಕೆಂಭಾವಿ: ಪ್ರತಿಯೊಬ್ಬರೂ ತಮ್ಮ ಧರ್ಮ ರಕ್ಷಿಸಿದಾಗ ಮಾತ್ರ ಅದು ನಮ್ಮನ್ನು ರಕ್ಷಿಸುತ್ತದೆ. ವೀರಶೈವ ಧರ್ಮ ಸನಾತನ ಧರ್ಮವಾಗಿದ್ದು, ರೇಣುಕಾಚಾರ್ಯರು ಆಗಮ ಶಾಸ್ತ್ರದ ಮೂಲಕ ಈ ಧರ್ಮದ ಅಡಿಪಾಯ ಹಾಕಿದರು ಎಂದು ಸಾಹಿತಿ ಐ.ಬಿ. ಹಿರೇಮಠ… |
ಜನಸಾಮಾನ್ಯರಿಗೆ ಅಗತ್ಯ ಜೀವಜಲ ಒದಗಿಸಲು ಒತ್ತಾಯಿಸಿ ಪರಿಸರವಾದಿ ಮೈಸೂರುಮಠ ಪತ್ರ – ಮೈಸೂರು ಟುಡೆ |
Home/ ಪ್ರಮುಖ ಸುದ್ದಿ/ ಕರ್ನಾಟಕ/ಜನಸಾಮಾನ್ಯರಿಗೆ ಅಗತ್ಯ ಜೀವಜಲ ಒದಗಿಸಲು ಒತ್ತಾಯಿಸಿ ಪರಿಸರವಾದಿ ಮೈಸೂರುಮಠ ಪತ್ರ |
ಜನಸಾಮಾನ್ಯರಿಗೆ ಅಗತ್ಯ ಜೀವಜಲ ಒದಗಿಸಲು ಒತ್ತಾಯಿಸಿ ಪರಿಸರವಾದಿ ಮೈಸೂರುಮಠ ಪತ್ರ |
ಮೈಸೂರು, ಆಗಸ್ಟ್ 23 : ಇತ್ತೀಚಿನ ದಿನಗಳಲ್ಲಿ ಕುಡಿಯಲು ಮತ್ತು ದಿನಬಳಕೆಗೆ ಶುದ್ಧ ನೀರು ಸಿಗುವುದೇ ದುಸ್ತರವಾಗಿದ್ದು, ಜನಸಾಮಾನ್ಯರು ನೀರಿಗಾಗಿ ಪರದಾಡುವಂತಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೊಂದು ದಿನ ತೀವ್ರ ಜಲಕ್ಷಾಮ ಎದುರಿಸಬೇಕಾದ ಸಂದರ್ಭ ಬರುವುದರಲ್ಲಿ ಸಂಶಯವೇ ಇಲ್ಲ. ಪರಿಸರವಾದಿ ವಸಂತಕುಮಾರ್ ಮೈಸೂರುಮಠ ಅವರು ಈ ವಿಷಯವಾಗಿ ಸರ್ಕಾರದ ಗಮನ ಸೆಳೆಯಲು ಪತ್ರ ಬರೆದಿದ್ದ, ತಮ್ಮ ಅನಿಸಿಕೆ ಮತ್ತು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ನೀರು ಉಳಿಸಿ ಬಳಸುವ ಬಗ್ಗೆ ಹಲವಾರು ವಿಷಯಗಳನ್ನು ಹಂದಿಕೊಂಡಿದ್ದಾರೆ. ಅವರ ಪತ್ರದ ಯಥಾರೂಪ ಇಲ್ಲಿದೆ : |
ಇಂದಿರಾ ಕ್ಯಾಂಟೀನ್‍ಗಳ ಮೂಲಕ ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ದುರ್ಬಲ ವರ್ಗದವರಿಗೆ ಮತ್ತು ಜನಸಾಮಾನ್ಯರಿಗೆ ಕಡಿಮೆ ದರಗಳಲ್ಲಿ ನಾಷ್ಟಾ, ಊಟ ಕೊಟ್ಟು ಪ್ರಶಂಸೆಗೆ ಪಾತ್ರರಾಗಿರುವ ಮುಖ್ಯಮಂತ್ರಿಗಳು ಅಂತೆಯೇ ಅದೇ ವರ್ಗಗಳ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಜೀವಜಲವಾದ ಕುಡಿಯುವ ಮತ್ತು ಅಡುಗೆಗೆ ಬೇಕಾಗುವಷ್ಟು ಸ್ವಚ್ಛ ನೀರನ್ನೂ ಸಹ ಇಂದಿರಾ ಕ್ಯಾಂಟೀನ್ ಗಳ ಅಥವಾ ಪಡಿತರ ಅಂಗಡಿಗಳ ಮೂಲಕ ನಿಗದಿತ ಬೆಲೆಯಲ್ಲಿ ಸರಬರಾಜು ಮಾಡುವ ಒಂದು ಸುಂದರ ಸುವ್ಯವಸ್ಥೆ ಮಾಡಿದರೆ ಒಳಿತು ಅನಿಸಿದೆ. |
ಕಾರಣಗಳಿವೆ : |
ಇತ್ತೀಚಿನ ವರದಿಗಳ ಪ್ರಕಾರ ಕಾವೇರಿ ನೀರೂ ಸಹ ಮಲಿನವಾಗಿದೆ, ನೇರವಾಗಿ ಕುಡಿಯಲು ಯೋಗ್ಯವಲ್ಲ. ಬೋರ್‍ವೆಲ್ ನೀರೂ ಅತಿಯಾದ ಲವಣಗಳ ಮಿಶ್ರಣವಾಗಿರುತ್ತದೆ ಎನ್ನುವುದು ಎಲ್ಲರ ಗಮನಕ್ಕೆ ಬಂದಿದೆ. ಸಾಮಾನ್ಯ ಜನರೂ ಸಹ ನೀರಿನ ಮೂಲಕ ರವಾನೆಯಾಗುವ ಖಾಯಿಲೆ ಕಸಾಲೆಗಳಿಗೆ ಹೆದರಿ ದುಬಾರಿ ಬಾಟಲಿ ನೀರನ್ನು ಉಪಯೋಗಿಸುತ್ತಿರುವುದು ಒಂದು ದುರಂತವೇ ಹೌದು. ಆ ಬಾಟಲಿ ನೀರು ಸ್ವಚ್ಚವೋ ಅಲ್ಲವೋ ಎನ್ನುವುದನ್ನು ಯಾರೂ ಪರೀಕ್ಷೆಗೆ ಒಳಪಡಿಸುವಷ್ಟು ವ್ಯವಧಾನವಿಲ್ಲದೆ ಕುರುಡು ನಂಬಿಕೆಯಿಂದ ಕುಡಿಯುತ್ತಿರುವುದೂ ಒಂದು ದುರಾದೃಷ್ಟ. |
ಪಾಲಿಕೆಯ ಆರೋಗ್ಯಾಧಿಕಾರಿಗಳು ಆಗಿಂದಾಗ್ಯೆ ಹಲವಾರು ರೋಗರುಜಿನಗಳು ನೀರಿನ ಮೂಲಕವೇ ರವಾನೆ ಆಗುತ್ತಿವೆ ಮತ್ತು ಸರಬರಾಜಾಗುತ್ತಿರುವ ಅಥವಾ ಯಾವ ನೀರೇ ಆಗಲಿ ಅದನ್ನು ಕುದಿಸಿ, ಆರಿಸಿ ಕುಡಿಯಲಿಕ್ಕೆ/ಅಡುಗೆಗೆ ಉಪಯೋಗಿಸಿ ಎನ್ನುವ ಸಲಹೆ-ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ. ಅವರ ಅಮೂಲ್ಯ ಸಲಹೆಯನ್ನು ಅನುಷ್ಠಾನಕ್ಕೆ ತರಲು ಅಂದರೆ ನಿತ್ಯ ಜೀವನದಲ್ಲಿ ಕುಡಿಯುಲು ಮತ್ತು ಅಡುಗೆಗೆ ಬೇಕಾಗುವಷ್ಟು ನೀರನ್ನು ಕುದಿಸಲು ಅಡುಗೆ ಅನಿಲವೇ ಆಧಾರ ; ಇದೇನು ಪುಕ್ಕಟೆ ಬರುವುದಿಲ್ಲ ಅಲ್ಲವೇ? ಇದರಿಂದ ಬಡ ಬಗ್ಗರಿಗೆ ಮತ್ತು ಜನ ಸಾಮಾನ್ಯರಿಗೆ ಅಡುಗೆಗೆ ಅನಿಲದ ಕಡಿತ ಉಂಟಾಗುವುದರಲ್ಲಿ ಸಂಶಯವಿಲ್ಲ. ಉಳ್ಳವರು ಬಾಟಲ್ ನೀರು ಕೊಳ್ಳುವರು ಆದರೆ ಬಡವರು ಏನುಮಾಡಬೇಕು ಮುಖ್ಯಮಂತ್ರಿ ಅಯ್ಯ? |
ಒಂದು ದಿನದಲ್ಲಿ ಒಬ್ಬ ಮನುಷ್ಯ ಹೆಚ್ಚು ಅಂದರೆ ೨-೩ ಲೀಟರ್ ನೀರನ್ನು ಕುಡಿಯಬಹುದು ಮತ್ತು ೪ ಜನ ಇರುವ ಸಂಸಾರ ಸುಮಾರು ೧೭ ಲೀಟರ್ ನೀರನ್ನು ಅಡುಗೆ ಮಾಡಲಿಕ್ಕೆ ಉಪಯೋಗಿಸಬಹುವು ಅಂದರೆ ಒಟ್ಟಾರೆ ಸುಮಾರು ೨೦ ಲೀಟರ್ ಸ್ವಚ್ಛ ಮತ್ತು ಶುಭ್ರ ನೀರನ್ನು ಉಪಯೋಗಿಸುವುದರಿಂದ ಸಾಮಾನ್ಯ ಜನರು ಆರೋಗ್ಯವಂತರಾಗಿ ಬಾಳಬಹುದು ಅಲ್ಲವೇ? ಆದುದರಿಂದ ತಾವು ಸ್ವಚ್ಛ ಮತ್ತು ಶುಭ್ರವಾದ ೨೦ ಲೀಟರ್ ನಷ್ಟು ನೀರನ್ನು ಎಷ್ಟು ಕಡಿಮೆ ದರದಲ್ಲಿ ಸರಬರಾಜು ಮಾಡಲು ಆಗುವುದೋ ಅಷ್ಟನ್ನು ಇಂದಿರಾ ಕ್ಯಾಂಟೀನ್ ಅಥವಾ ಪಡಿತರ ಅಂಗಡಿಗಳ ಮೂಲಕ ಜನ ಸಾಮಾನ್ಯರಿಗೆ ತಲುಪುವ ಸುವ್ಯವಸ್ಥೆ ಮಾಡಿದರೆ ಒಳ್ಳೆಯದು. |
ಮೇಲಿನ ಸಲಹೆಯು ಸರ್ಕಾರದಲ್ಲಿ ಇಂದಿಗೂ ಇರುವ 'ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಧ್ಯೇಯ ಮತ್ತು ಸಿಟಿಜೆ಼ನ್ ಚಾರ್ಟರ್‍ಗಳ ಮೇಲೆ ಅವಲಂಬಿಸಿದೆ. ಇದರ ಪ್ರಕಾರ ಸ್ಟೇಕ್ ಹೋಲ್ಡರ್‍ಗಳಿಗೆ (ಕುಡುಕರಿಗೆ) ನಿರಂತರವಾದ ತೃಪ್ತಿಕರ ಸೇವೆ ಮತ್ತು ಸುಧಾರಿತ ವಿತರಣಾ ವ್ಯವಸ್ಥೆಯನ್ನು ಒದಗಿಸುವುದು, ಸಾಮಗ್ರಿಗಳ ನಿರ್ವಹಣೆಯಲ್ಲಿ ಉತ್ತಮ ಪದ್ದತಿಗಳ ಅಳವಡಿಕೆ ಮತ್ತು ಮಳಿಗೆಗಳಲ್ಲಿ ಉತ್ತಮ ಮಟ್ಟದ ದಾಸ್ತಾನನ್ನು ಮಾತ್ರ ಇಡುವುದು, ಮಾರಾಟದ ಹಾದಿಯನ್ನು ಅಂತಿಮ ಗ್ರಾಹಕರ ದೃಷ್ಟಿಯಿಂದ ಮರಿಣಾಮಕಾರಿಯಾಗಿ ನಿರ್ವಹಿಸುವುದು, ಇತ್ಯಾದಿ. ಪೂರ್ಣ ಮಾಹಿತಿಯನ್ನು ಅಂತರ್ಜಾಲ ತಾಣದ ಈ ವಿಳಾಸದಲ್ಲಿ ನೋಡಬಹುದು : http://www.ksbcl.com/Citizen_Charter_july_12.pdf |
ಮೇಲ್ಕಂಡ ಸಲಹೆಯನ್ನು ಅನುಷ್ಠಾನಗೊಳಿಸಲು ಮೀನ-ಮೇಷ ಬೇಕಿಲ್ಲ. ಏಕೆಂದರೆ ಸರ್ಕಾರವು ತನ್ನದೇ ಆದ ಮೇಲ್ಕಂಡ ಕುಂಪಣಿಯನ್ನು ಕುಂದುಕೊರತೆಗಳಿಲ್ಲದಂತೆ ಲಾಭದಾಯಕವಾಗಿ ನಡೆಸಿಕೊಂಡು ಬರುತ್ತಿದೆ. ಕುಡಿಯುವ ನೀರು ಜೀವ ಜಲ ಮತ್ತು ಕುಡಿತದ ಪಾನೀಯಗಳಿಗಿಂತಲೂ ವಿಶಿಷ್ಟವಾದ ಮಾನ್ಯತೆ ಪಡೆಯಬೇಕು. ಒಟ್ಟಾರೆಯಾಗಿ ಕುಡಿಯುವ ಮತ್ತು ಅಡುಗೆಯ ನೀರನ್ನು ಜನ ಸಾಮಾನ್ಯರಿಗೆ ಒದಗಿಸುವ ವ್ಯವಸ್ಥೆ ಇಂದಿನ ದಿನಗಳಲ್ಲಿ ಅತಿ ಮುಖ್ಯ ಮತ್ತು ಹೀಗೆ ಮಾಡಿದರೆ ಖಂಡಿತವಾಗಿ ಜನರ ಆಶೀರ್ವಾದ ನಿಮ್ಮ ಮೇಲೆ ದುಪ್ಪಟ್ಟು ಆಗುವುದರಲ್ಲಿ ಸಂಶಯವಿಲ್ಲ. |
ವರ್ಡ್ಪ್ರೆಸ್: ಮಕ್ಕಳ ಪುಟಗಳನ್ನು ಹೇಗೆ ಪಟ್ಟಿ ಮಾಡುವುದು (ನನ್ನ ಹೊಸ ಪ್ಲಗಿನ್) | Martech Zone |
ಶುಕ್ರವಾರ, ಜುಲೈ 13, 2018 ಶುಕ್ರವಾರ, ಜುಲೈ 13, 2018 Douglas Karr |
ನಮ್ಮ ಹಲವಾರು ವರ್ಡ್ಪ್ರೆಸ್ ಕ್ಲೈಂಟ್‌ಗಳಿಗಾಗಿ ನಾವು ಸೈಟ್‌ಗಳ ಕ್ರಮಾನುಗತವನ್ನು ಪುನರ್ನಿರ್ಮಿಸಿದ್ದೇವೆ ಮತ್ತು ಮಾಹಿತಿಯನ್ನು ಪರಿಣಾಮಕಾರಿಯಾಗಿ ಸಂಘಟಿಸುವುದು ನಾವು ಮಾಡಲು ಪ್ರಯತ್ನಿಸುವ ಒಂದು ವಿಷಯ. ಇದನ್ನು ಮಾಡಲು, ನಾವು ಆಗಾಗ್ಗೆ ಮಾಸ್ಟರ್ ಪುಟವನ್ನು ರಚಿಸಲು ಬಯಸುತ್ತೇವೆ ಮತ್ತು ಅದರ ಕೆಳಗಿನ ಎಲ್ಲಾ ಪುಟಗಳನ್ನು ಸ್ವಯಂಚಾಲಿತವಾಗಿ ಪಟ್ಟಿ ಮಾಡುವ ಮೆನುವನ್ನು ಸೇರಿಸುತ್ತೇವೆ. ಮಕ್ಕಳ ಪುಟಗಳ ಪಟ್ಟಿ, ಅಥವಾ ಉಪಪುಟಗಳು. ದುರದೃಷ್ಟವಶಾತ್, ವರ್ಡ್ಪ್ರೆಸ್ನಲ್ಲಿ ಇದನ್ನು ಮಾಡಲು ಯಾವುದೇ ಅಂತರ್ಗತ ಕಾರ್ಯ ಅಥವಾ ವೈಶಿಷ್ಟ್ಯವಿಲ್ಲ, ಆದ್ದರಿಂದ ನಾವು ಅಭಿವೃದ್ಧಿಪಡಿಸಿದ್ದೇವೆ ವರ್ಡ್ಪ್ರೆಸ್ ಪಟ್ಟಿ ಉಪಪುಟಗಳ ಕಿರುಸಂಕೇತ ಗ್ರಾಹಕರ ಥೀಮ್‌ನ functions.php ಫೈಲ್‌ಗೆ ಸೇರಿಸಲು. |
ಬಳಕೆ ಬಹಳ ಸರಳವಾಗಿದೆ: |
ಮಕ್ಕಳ ಪುಟಗಳಿಲ್ಲ |
ಒಂದು ತರಗತಿ - ನಿಮ್ಮ ಕ್ರಮವಿಲ್ಲದ ಪಟ್ಟಿಯಲ್ಲಿ ವರ್ಗವನ್ನು ಅನ್ವಯಿಸಲು ನೀವು ಬಯಸಿದರೆ, ಅದನ್ನು ಇಲ್ಲಿ ನಮೂದಿಸಿ. |
ifempty - ಮಕ್ಕಳ ಪುಟಗಳು ಇಲ್ಲದಿದ್ದರೆ, ನೀವು ಪಠ್ಯವನ್ನು ಸೇರಿಸಬಹುದು. ಇದು ಉದ್ಯೋಗಾವಕಾಶಗಳ ಪಟ್ಟಿಯಾಗಿದ್ದರೆ ಇದು ಸೂಕ್ತವಾಗಿ ಬರುತ್ತದೆ… ನೀವು "ಪ್ರಸ್ತುತ ತೆರೆಯುವಿಕೆಗಳಿಲ್ಲ" ಎಂದು ನಮೂದಿಸಬಹುದು. |
ವಿಷಯ - ಆದೇಶವಿಲ್ಲದ ಪಟ್ಟಿಗೆ ಮೊದಲು ಪ್ರದರ್ಶಿಸಲಾದ ವಿಷಯ ಇದು. |
ಹೆಚ್ಚುವರಿಯಾಗಿ, ನೀವು ಬಯಸಿದರೆ ಸಣ್ಣ ಆಯ್ದ ಭಾಗಗಳು ಪ್ರತಿ ಪುಟವನ್ನು ವಿವರಿಸುವಾಗ, ಪ್ಲಗಿನ್ ಪುಟಗಳಲ್ಲಿ ಆಯ್ದ ಭಾಗಗಳನ್ನು ಸಕ್ರಿಯಗೊಳಿಸುತ್ತದೆ ಇದರಿಂದ ನೀವು ಪುಟದ ಸೆಟ್ಟಿಂಗ್‌ಗಳಲ್ಲಿ ಆ ವಿಷಯವನ್ನು ಸಂಪಾದಿಸಬಹುದು. |
ಸ್ಥಾಪಿಸಲು ಮತ್ತು ಬಳಸುವುದನ್ನು ಸುಲಭಗೊಳಿಸಲು ಕೋಡ್ ಅನ್ನು ಪ್ಲಗಿನ್‌ಗೆ ತಳ್ಳಲು ನಾನು ಅಂತಿಮವಾಗಿ ಸಿಕ್ಕಿದ್ದೇನೆ ಮಕ್ಕಳ ಪುಟಗಳ ಕಿರುಸಂಕೇತ ಪ್ಲಗಿನ್ ಪಟ್ಟಿ ಮಾಡಿ ಇಂದು ವರ್ಡ್ಪ್ರೆಸ್ ಅನುಮೋದಿಸಿದೆ! ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಿ - ನೀವು ಬಯಸಿದರೆ ಅದು ವಿಮರ್ಶೆಯನ್ನು ಒದಗಿಸುತ್ತದೆ! |
ಟ್ಯಾಗ್ಗಳು: ಮಕ್ಕಳ ಪುಟಗಳನ್ನು ಪಟ್ಟಿ ಮಾಡಿಪಟ್ಟಿ ಉಪಪುಟಗಳುಪ್ಲಗಿನ್ಕಿರುಸಂಕೇತಗಳುವರ್ಡ್ಪ್ರೆಸ್ವರ್ಡ್ಪ್ರೆಸ್ ಪ್ಲಗಿನ್ |
ಸಾಮಾಜಿಕ ಜಾಲತಾಣಗಳಿ೦ದ ಕನ್ನಡ ಸಾಹಿತಿಗಳೇಕೆ ದೂರ? – GBKM |
ಬೆ೦ಗಳೂರು: ಫೆೀಸ್‍ಬುಕ್, ಟ್ವಿಟರ್ ಸೇರಿದ೦ತೆ ಸಾಮಾಜಿಕ ಜಾಲತಾಣಗಳು ಇ೦ದು ಜನಜನಿತ. ಉದ್ಯಮ, ಸಿನಿಮಾ, ರಾಜಕೀಯ ಸೇರಿ ಯಾವುದೇ ಕ್ಷೇತ್ರದಲ್ಲಿರುವವರು ಟ್ವಿಟರ್, ಫೆೀಸ್‍ಬುಕ್ ಮೂಲಕವೇ ಸಮಾಜವನ್ನು ತಲುಪುವ ಕಾಲವಿದು. ಅದರಲ್ಲಿಯೂ ಮರಾಠಿ, ತೆಲುಗು, ಹಿ೦ದಿ, ಇ೦ಗ್ಲಿಷ್ ಸಾಹಿತಿಗಳು ಫೆೀಸ್‍ಬುಕ್, ಟ್ವಿಟರ್ ಮತ್ತು ವಾಟ್ಸ್‌ಆಪ್ ಬಳಕೆಯಲ್ಲಿ ಮು೦ದಿದ್ದಾರೆ. ಅವುಗಳ ಮೂಲಕವೇ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ಒಮ್ಮೊಮ್ಮೆ ಸಾಮಾಜಿಕ ಜಾಲತಾಣದಲ್ಲಿಯೇ ವೈಚಾರಿಕ ಜಗಳಗಳೂ ಆಗುವುದು೦ಟು. ಆದರೆ, ಕನ್ನಡದ ಸಾಹಿತಿಗಳಿಗೆ ಮಾತ್ರ ಅದೇಕೋ ಸಾಮಾಜಿಕ ಜಾಲತಾಣಗಳೆ೦ದರೆ ಅಲಜಿ೯. |
ನಮ್ಮವರೇಕೆ ಸಾಮಾಜಿಕ ಜಾಲತಾಣಗಳಿ೦ದ ದೂರ ಇದ್ದಾರೆ? ಅದರಲ್ಲಿಯೂ ಟ್ವಿಟರ್ ಬಳಕೆ ಯ೦ತೂ ಏಕೆ ಇಲ್ಲವೇ ಇಲ್ಲ ಎ೦ಬ ಪ್ರಶ್ನೆಗೆ ಉತ್ತರ ಕ೦ಡುಕೊಳ್ಳಲು ವಿಶ್ವವಾಣಿ ಮು೦ದಾಯಿತು. ಬಹುತೇಕರಿ೦ದ "ಟ್ವಿಟರ್ ಖಾತೆ ಇಲ್ಲ' ಎ೦ಬ ಉತ್ತರವೇ ಬ೦ತು. ಕೆಲವರ೦ತೂ, "ಟ್ವಿಟರ್ರಾ… ಹ೦ಗ೦ದ್ರೆ ಏನು' ಎ೦ದೂ ಕೇಳಿದರು. |
"ಹಳೇ ತಲೆಮಾರಿನವನಾದ ನಾನು ಹೊಸ ತ೦ತ್ರಜ್ಞಾನಗಳ ಬಗ್ಗೆ ಅನಕ್ಷರಸ್ಥ. ಈಗಲೂ 2,000 ರು. ಮೌಲ್ಯದ ಹಳೆಯ ಮೊಬ್ಯೆಲ್ ಬಳಸುತ್ತೇನೆ. ಆಧುನಿಕ ತ೦ತ್ರಜ್ಞಾನಕ್ಕೆ ಹೊ೦ದಿಕೊಳ್ಳಲು ಸಾಧ್ಯವಾಗದ ಕಾರಣ ಇ೦ದಿಗೂ ಕೈಯಲ್ಲೇ ಪದ್ಯ, ಲೇಖನ ಬರೆಯುತ್ತೇನೆ. ಆದರೆ, ನನ್ನ ಮೊಮ್ಮಕ್ಕಳು ಸೂಪರ್ ಫಾಸ್ಟ್. ನಾನು ಬರೆದಿದ್ದನ್ನು ವಾಟ್ಸ್‌ಆಪ್ ಮೂಲಕ ಇತರರಿಗೆ ರವಾನೆ ಮಾಡುತ್ತಾರೆ." |
ಕೇಂದ್ರದಿಂದ ರೈತರಿಗೆ ಬಂಪರ್ ಗಿಫ್ಟ್; 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ - ಸವಿ ಕನ್ನಡ ನ್ಯೂಸ್ |
ನವದೆಹಲಿ: ರೈತರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯೊಂದಿದೆ. ಸಂಪುಟ ವಿಸ್ತರಣೆ ಬೆನ್ನಲ್ಲೇ ಕೇಂದ್ರ ರೈತರಿಗೆ 1 ಲಕ್ಷ ಕೋಟಿ ರೂಪಾಯಿ ಘೋಷಿಸಿದೆ. ಕೇಂದ್ರದ ನೂತನ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. |
ಇಂದು ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಎಪಿಎಂಸಿಗಳಿಗೆ ಹೆಚ್ಚಿನ ಸಂಪನ್ಮೂಲ ಒದಗಿಸಲು ಪ್ರಯತ್ನ ಮಾಡಲಾಗುವುದು. ಆತ್ಮನಿರ್ಭರ್ ಅಡಿ 1 ಲಕ್ಷ ಕೋಟಿ ಎಪಿಎಂಸಿಗೆ ಬಳಕೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದರು. |
ಕೊರೊನಾ ತುರ್ತು ನಿರ್ವಹಣೆಗೆ 23,123 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುವುದು. ಶೀಘ್ರವೇ ತೆಂಗು ಮಂಡಳಿ ಕಾಯ್ದೆ ತಿದ್ದುಪಡಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದಲ್ಲಿ 20 ಸಾವಿರ ಹೊಸ ಐಸಿಯು ಬೆಡ್ ತಯಾರಿಗೆ ಚಿಂತಿಸಲಾಗಿದೆ. 2 ಲಕ್ಷ 44 ಸಾವಿರ ಹೊಸ ಆಕ್ಸಿಜನ್ ಬೆಡ್‌ಗಳ ತಯಾರಿ ಮಾಡಲಾಗುತ್ತಿದೆ. ರಾಜ್ಯಗಳಿಗೆ 15 ಸಾವಿರ ಕೋಟಿ ತುರ್ತು ಕೋವಿಡ್ ಫಂಡ್ ರಿಲೀಸ್ ಮಾಡಲಾಗುವುದು ಎಂದರು. |
The post ಕೇಂದ್ರದಿಂದ ರೈತರಿಗೆ ಬಂಪರ್ ಗಿಫ್ಟ್; 1 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ appeared first on News First Kannada. |
ಕರ್ಣಾಟಕ ಬ್ಯಾಂಕ್ ಮ್ಯಾನೇಜರ್‌ಗೆ ಬೀಳ್ಕೊಡುಗೆ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ |
ಕರ್ಣಾಟಕ ಬ್ಯಾಂಕ್ ಮ್ಯಾನೇಜರ್‌ಗೆ ಬೀಳ್ಕೊಡುಗೆ |
ತ್ರಾಸಿ: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತ್ರಾಸಿ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನೆ ಹಾಗೂ ಸನ್ಮಾನ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕಿನ ತ್ರಾಸಿ ಶಾಖೆಯ ನಿವೃತ್ತ ಮ್ಯಾನೇಜರ್ ಬಿ. ವಿಷ್ಣುಮೂರ್ತಿ ಭಟ್ ದಂಪತಿಗಳನ್ನು ಗೌರವಿಸಲಾಯಿತು. |
ತ್ರಾಸಿ ಇಗರ್ಜಿಯ ಧರ್ಮಗುರು ರೆ.ಫಾ. ಅನಿಲ್ ಕರ್ನಾಲಿಯೋ ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಬ್ಯಾಂಕಿನ ಕಾನೂನುಗಳ ಜೊತೆಗೆ ಮನುಷ್ಯತ್ವ ಮುಖ್ಯ ಎನ್ನುವುದಕ್ಕೆ ಬಿ. ವಿಷ್ಣುಮೂರ್ತಿ ಸಾಕ್ಷಿ. ಕೇವಲ ಕರ್ತವ್ಯ ಮಾತ್ರವಲ್ಲದೇ ಗ್ರಾಹಕರ ಜೊತೆಗೆ ಉತ್ತಮ ಸಂಭಧ ಹೊಂದುವ ಮೂಲಕ ತ್ರಾಸಿಯಲ್ಲಿ ಕರ್ಣಾಟಕ ಬ್ಯಾಂಕ್‌ನ ವ್ಯವಹಾರವನ್ನು ಮೇಲ್ದರ್ಜೆಗೇರಿಸಿದ್ದಾರೆ ಎಂದರು. |
ಇದೇ ಸಂದರ್ಭದಲ್ಲಿ ಮೂವತ್ತನಾಲ್ಕು ವರ್ಷಗಳ ಕಾಲ ಕರ್ಣಾಟಕ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ವಿಷ್ಣುಮೂರ್ತಿ ಭಟ್ ಹಾಗೂ ಅವರ ಪತ್ನಿ ಗಾಯತ್ರಿ ಭಟ್ ಅವರನ್ನು ಗೌರವಿಸಲಾಯಿತು. |
ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜೀ ಉಪಾಧ್ಯಕ್ಷ ರಾಜು ದೇವಾಡಿಗ ವಹಿಸಿದ್ದರು. ಕುಂದಾಪುರದ ಕರ್ಣಾಟಕ ಬ್ಯಾಂಕ್ ಶಾಖಾ ಪ್ರಬಂಧಕ ಗೋಪಾಲಕೃಷ್ಣ, ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ನಾಯಕ್, ತ್ರಾಸಿ ಲಯನ್ ಅಧ್ಯಕ್ಷ ಜಾರ್ಜ್ ಡಿ ಅಲ್ಮೇಡಾ, ಉದ್ಯಮಿ ಉಮೇಶ್ ಮೇಸ್ತ, ಪಿಡಿಒ ಶೋಭಾ, ತ್ರಾಸಿ ಕರ್ಣಾಟಕ ಬ್ಯಾಂಕಿನ ನಿಯುಕ್ತ ಶಾಖಾ ಪ್ರಬಂಧಕ ಗೌತಮ್ ಶೆಟ್ಟಿ, ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ ಇದರ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು. |
ಸುಜಾತಾ ಎಂ. ಸಾಲ್ಯಾನ್ ಪ್ರಾರ್ಥಿಸಿದರು. ಉಪೇಂದ್ರ ಶೇರೆಗಾರ್ ಪ್ರಮಾಣಪತ್ರ ವಾಚಿಸಿದರು. ಲಯನ್ ಸದಾನಂದ ಶೇಟ್ ಸ್ವಾಗತಿಸಿದರು. ಜೋಸೆಫ್ ಡಿಸೋಜಾ ವಂದಿಸಿದರು. ಸರ್ಕಾರೀ ಪ್ರೌಢಶಾಲೆಯ ದೈಹಿಕ ಶಿಕ್ಷಕ ಚಂದ್ರಶೇಖರ್ ಶೆಟ್ಟಿ ನಿರೂಪಿಸಿದರು. |
ರಾಜಕಾರಣದಲ್ಲಿ ಮನೆತನಗಳದ್ದೇ ಕದನ | Prajavani |
ರಾಜಕಾರಣದಲ್ಲಿ ಮನೆತನಗಳದ್ದೇ ಕದನ |
ಚಿಂತಾಮಣಿ ವಿಧಾನಸಭೆ ಕ್ಷೇತ್ರ |
Subsets and Splits
No community queries yet
The top public SQL queries from the community will appear here once available.