text
stringlengths
0
61.5k
ಬೆಂಗಳೂರು: ಒಂದ್ಕಡೆ ಫುಡ್ ಡೆಲಿವರಿ ಬಾಯ್ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು ದೂರು ಕೊಡ್ತಿದ್ದಾರೆ. ಆದ್ರೆ ಮತ್ತೊಂದೆಡೆ ಮಹಿಳೆಯರೇ ಮನೆ ಬಾಗಿಲಿಗೆ ಹೋಗಿ ಫುಡ್ ಡೆಲಿವರಿ ಮಾಡಿ ತಾವು ಸೇಫ್ ಆಗಿ ಇದ್ದೀವಿ ಅನ್ನೋ ಸಂದೇಶ ಸಾರುತ್ತಿದ್ದಾರೆ. ಇದು ಬೆಂಗಳೂರಿನಲ್ಲಿ ಮನೆಮನೆಗೆ ಫುಡ್ ಡೆಲಿವರಿ ಮಾಡುತ್ತಲೇ ಬದುಕು ಕಟ್ಟಿಕೊಂಡ ಹೆಣ್ಮಕ್ಕಳ ಕತೆ.
ಫೂಡ್ ಡೆಲಿವರಿ ಕ್ಷೇತ್ರಕ್ಕೆ ಧುಮುಕುತ್ತಿರುವ ಮಹಿಳೆಯರ ಪೈಕಿ ಉಮಾ ಮತ್ತು ರೋಹಿಣಿ ಎಂಬಿಬ್ಬರ ನಿದರ್ಶನ ಇಲ್ಲಿದೆ. ಇವರಿಬ್ಬರು ಮೊದಲು ಬೇರೆ ಕಡೆ ಕೆಲಸ ಮಾಡ್ತಿದ್ರು. ಒಬ್ಬರು ಆಫೀಸ್ ಸ್ಟಾಫ್ ಆಗಿ, ಮತ್ತೊಬ್ಬರು ಗಾರ್ಮೆಂಟ್ಸ್ ನಲ್ಲಿ.. ಹೀಗೆ ಮನೆ ನಡೆಸೋಕೆ ನಿರಂತರವಾಗಿ ಇಬ್ಬರೂ ದುಡಿಯುತ್ತಲೇ ಇದ್ದರು. ಆದ್ರೆ ಕೊರೊನಾ, ಲಾಕ್ ಡೌನ್ ಎಲ್ಲಾ ಸೇರಿ ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿಯುವಂತಾಯ್ತು. ಆಗ ಇವರಿಗೆ ಹೊಳೆದದ್ದೇ ಫುಡ್ ಡೆಲಿವರಿ ಕೆಲಸ. ಇಡೀ ಪ್ರಪಂಚ ವೈರಸ್​ಗೆ ಹೆದರಿ ಮನೆಯೊಳಗೆ ಕುಳಿತಾಗಲೂ ಇವರು ಬೀದಿ ಬೀದಿ ಅಲೆದು ಜನರ ಮನೆ ಬಾಗಿಲಿಗೆ ಊಟ ತಲುಪಿಸಿ ಬರುತ್ತಿದ್ದರು.
ಉಮಾ ಮತ್ತು ರೋಹಿಣಿ ಬೆಂಗಳೂರಿನ ಮೊದಲ ಮಹಿಳಾ ಫುಡ್ ಡೆಲಿವರಿ ಸಿಬ್ಬಂದಿ. ಇವರನ್ನು ನೋಡಿ ಇನ್ನೂ ಹತ್ತಾರು ಯುವತಿಯರು ಈ ಕೆಲಸಕ್ಕೆ ಸೇರಿದ್ದಾರೆ. ಮನೆ ನಡೆಸೋಕೆ ಕೆಲಸ, ಸಂಬಳ ಬೇಕು. ಇದೊಂದು ಒಳ್ಳೆ ಅವಕಾಶ ಸಿಕ್ಕಿದೆ ಎನ್ನುತ್ತಾರೆ ಈ ದಿಟ್ಟೆಯರು. ಅನೇಕ ಬಾರಿ ಡೆಲಿವರಿ ಬಾಯ್ಸ್ ಗಿಂತಲೂ ಹೆಚ್ಚು ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ. ಈಗಾಗಲೇ ಸಂಸ್ಥೆ ಇವರನ್ನು ಗುರುತಿಸಿ ಪ್ರಶಂಸಿಸಿದೆ. ಇವರ ಸೇಫ್ಟಿ ವಿಚಾರದಿಂದಾಗಿ ಸಂಜೆ 7 ರವರಗೆ ಮಾತ್ರ ಇವರಿಗೆ ಕೆಲಸ ಮಾಡಲು ಅವಕಾಶವಿತ್ತು. ಆದರೆ ಈಗ ಇವರೇ ಮನವಿ ಮಾಡಿ 9 ಗಂಟೆಯವರಗೆ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ. ತಮ್ಮ ಸೇಫ್ಟಿ ಬಗ್ಗೆ ಸಂಸ್ಥೆ ಮತ್ತು ಸಹೋದ್ಯೋಗಿಗಳು ಆಸ್ಥೆ ವಹಿಸೋದು ಇವರಿಗೆ ಒಂದು ರೀತಿಯಲ್ಲಿ ಸಮಾಧಾನ ಕೊಟ್ಟಿದೆಯಂತೆ.
ಇದನ್ನೂ ಓದಿ: ಹಳದಿ ಕಲ್ಲಂಗಡಿ ಹಣ್ಣು ಸವಿದಿದ್ದೀರಾ? ಬೆಂಗಳೂರಿನ ತುಂಬಾ ಇದರದ್ದೇ ಹವಾ !
ಇಷ್ಟೆಲ್ಲಾ ಇದ್ದರೂ ಇದುವರೆಗೆ ಯಾವ ಗ್ರಾಹಕರೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಸಂತಸದಿಂದಲೇ ಹೇಳುತ್ತಾರಿವರು. ಸ್ವಿಗ್ಗಿಯ ಮಹಿಳಾ ಡೆಲಿವರಿ ಸಿಬ್ಬಂದಿಯನ್ನು ನೋಡಿ ಅನೇಕರು ಮೆಚ್ಚುಗೆಯಿಂದ ಸಿಹಿ ಕೊಡ್ತಾರೆ, ಸೆಲ್ಫಿ ಕೂಡಾ ತೆಗೆದುಕೊಳ್ತಾರಂತೆ.
ಇವರೂ ಕೂಡಾ ಒಂದರ್ಥದಲ್ಲಿ ಕೋವಿಡ್ ವಾರಿಯರ್ಸ್ ಗಳೇ. ಎಲ್ಲೆಡೆ‌ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳಿರುವಾಗ ಈ ಮಹಿಳೆಯರು ನೆಮ್ಮದಿಯಾಗಿ ತಮ್ಮ ಕೆಲಸ ಮಾಡಿಕೊಂಡು ಹೋಗ್ತಿದ್ದಾರೆ. ತಮ್ಮ ಈ ಕೆಲಸದಿಂದ ಕುಟುಂಬ ನಿರ್ವಹಣೆಗೆ ಬಹಳ ಸಹಾಯವಾಗಿದೆ ಎನ್ನುವುದೇ ಇವರಿಗೆ ಬಹು ದೊಡ್ಡ ಹೆಮ್ಮೆ. ಆರಂಭದಲ್ಲಿ ಬಾಡಿಗೆಗೆ ಟೂ ವೀಲರ್ ಪಡೆದು ಡೆಲಿವರಿ ಕೆಲಸ ಮಾಡ್ತಿದ್ರಂತೆ. ಆದ್ರೆ ಒಳ್ಳೆ ಸಂಬಳ, ಅಲೊವೆನ್ಸ್ ಸಿಕ್ಕು ತಾವೇ ಸ್ವಂತ ವಾಹನ ಖರೀದಿಸಿದ್ದಾರೆ. ಈಗ ಬೆಳಗ್ಗೆ ಎದ್ದು ಮನೆ-ಮಕ್ಕಳ ಕೆಲಸವೆಲ್ಲಾ ಮುಗಿಸಿ ಗಾಡಿ ಏರಿ ಹೊರಟರೆ ಸಂಜೆವರೆಗೆ ನಿರಂತರ ದುಡಿಮೆ. ಅಲ್ಲದೇ ತಮ್ಮ ಮನೆಯ ಸುತ್ತಮುತ್ತಲಿನ ಏರಿಯಾದಲ್ಲೇ ಕೆಲಸ ಮಾಡೋ ಅವಕಾಶ ಸಿಗೋದ್ರಿಂದ ಅದೂ ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ ಎನ್ನುತ್ತಾರೆ ಈ ಮಹಿಳೆಯರು. ಒಟ್ಟಿನಲ್ಲಿ ಅವಕಾಶ ಒಂದು ಸಿಕ್ಕರೆ ಎಲ್ಲಾ ಕೆಲಸದಲ್ಲೂ ಭೇಷ್ ಎನಿಸಿಕೊಳ್ಳೋ ಛಾತಿ ತಮಗಿದೆ ಅನ್ನೋದು ಈ ದಿಟ್ಟೆಯರ ಅನಿಸಿಕೆ.
ನಾಚಿಕೆ ಸ್ವಭಾವದಿಂದ ಮೊದಲ ಕೆಲಸ ಪಡೆಯಲು ವಿಫಲನಾದ ವ್ಯಕ್ತಿಯೀಗ ವಿಶ್ವದ ಶ್ರೀಮಂತ ಉದ್ಯಮಿ - Kannada DriveSpark
ನಾಚಿಕೆ ಸ್ವಭಾವದಿಂದ ಮೊದಲ ಕೆಲಸ ಪಡೆಯಲು ವಿಫಲನಾದ ವ್ಯಕ್ತಿಯೀಗ ವಿಶ್ವದ ಶ್ರೀಮಂತ ಉದ್ಯಮಿ
ಎಲಾನ್ ಮಸ್ಕ್ ವಿಶ್ವದ ಜನಪ್ರಿಯ ಉದ್ಯಮಿಗಳಲ್ಲಿ ಒಬ್ಬರು. ಎಲಾನ್ ಮಸ್ಕ್ ಈ ಸ್ಥಾನಕ್ಕೆ ತಲುಪುವ ಮುನ್ನ ಹಲವಾರು ಅಡೆ ತಡೆ ಹಾಗೂ ಸವಾಲುಗಳನ್ನು ಎದುರಿಸಿದ್ದಾರೆ. ವಿಶ್ವ ವಿಖ್ಯಾತ ಕಂಪನಿಗಳಾದ ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಗಳ ಮಾಲೀಕರಾದ ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.
ಅವರು ಈ ಕಂಪನಿಗಳನ್ನು ಸ್ಥಾಪಿಸುವ ಮುನ್ನ ಕೆಲಸಕ್ಕಾಗಿ ಇಂಟರ್ ನೆಟ್ ಕಂಪನಿಯೊಂದರಲ್ಲಿ ಅರ್ಜಿ ಸಲ್ಲಿಸಿದ್ದರು ಎಂಬುದು ಗಮನಾರ್ಹ. ಆದರೆ ತಮ್ಮ ನಾಚಿಕೆ ಸ್ವಭಾವದಿಂದಾಗಿ ಎಲಾನ್ ಮಸ್ಕ್ ಅವರಿಗೆ ಕೆಲಸ ಪಡೆಯಲು ಸಾಧ್ಯವಾಗಲಿಲ್ಲ. ನಂತರ ಅವರು ತಮ್ಮದೇ ಆದ ಇಂಟರ್'ನೆಟ್ ಕಂಪನಿಯನ್ನು ತೆರೆದರು. ಎಲಾನ್ ಮಸ್ಕ್'ರವರ ಯಶಸ್ಸಿನ ಕಥೆಯನ್ನು ಈ ಲೇಖನದಲ್ಲಿ ನೋಡೋಣ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇತ್ತೀಚಿಗೆ ಪ್ರಣಯ್ ಪಾಥೋಲ್ ಎಂಬುವವರು ಎಲಾನ್ ಮಸ್ಕ್ ಅವರ ಬಾಲ್ಯದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಇದರಲ್ಲಿ ಅವರು ಎಲಾನ್ ಮಸ್ಕ್ ಅವರ ನಾಚಿಕೆ ಸ್ವಭಾವದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪೋಸ್ಟ್'ಗೆ ಎಲಾನ್ ಮಸ್ಕ್ ಸಹ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇಂಟರ್'ನೆಟ್ ಜಗತ್ತಿಗೆ ಕಾಲಿಡುವ ಮುನ್ನ ಎಲಾನ್ ಮಸ್ಕ್ ಏನು ಮಾಡುತ್ತಿದ್ದರು ಎಂಬುದನ್ನು ಪ್ರಣಯ್ ಪಾಥೋಲ್ ಹೇಳಿದ್ದಾರೆ.
ಪ್ರಣಯ್ ಪಾಥೋಲ್ ಅವರ ಪೋಸ್ಟ್ ಪ್ರಕಾರ, 1995ರಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಎಲಾನ್ ಮಸ್ಕ್ ಇಂಟರ್ ನೆಟ್ ಕಂಪನಿಯೊಂದರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರು.
ಆದರೆ ಅವರ ನಾಚಿಕೆ ಸ್ವಭಾವದಿಂದಾಗಿ ಅವರು ಯಾರೊಂದಿಗೂ ಮಾತನಾಡದ ಕಾರಣ ಆ ಕೆಲಸ ಅವರಿಗೆ ಸಿಗಲಿಲ್ಲ. ನಂತರ 1995ರಲ್ಲಿ ಅವರು ತಮ್ಮದೇ ಆದ ಜಿಪ್ 2 ಎಂಬ ಹೆಸರಿನ ಕಂಪನಿಯನ್ನು ಆರಂಭಿಸಿದರು.
ಮಸ್ಕ್ ಅವರು ಬೇರೆಯವರೊಂದಿಗೆ ಮಾತನಾಡಲು ತುಂಬಾ ನಾಚಿಕೆಪಡುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಣಯ್ ಪಾಥೋಲ್'ರವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್ ತಾವು ಇಂಟರ್ ನೆಟ್ ಕಂಪನಿಯಲ್ಲಿ ಕೆಲಸ ಮಾಡಲು ಬಯಸಿದ್ದಾಗಿ ತಿಳಿಸಿದ್ದಾರೆ.
1995ರಲ್ಲಿ ಅಮೆರಿಕಾದಲ್ಲಿ ಬೆರಳೆಣಿಕೆಯಷ್ಟು ಇಂಟರ್ ನೆಟ್ ಕಂಪನಿಗಳು ಮಾತ್ರ ಇದ್ದ ಕಾರಣ ತಮಗೆ ಕೆಲಸ ಸಿಗಲಿಲ್ಲವೆಂದು ತಿಳಿಸಿದ್ದಾರೆ. ಎಲಾನ್ ಮಸ್ಕ್ ರವರಿಗೆ ಇಂಟರ್ ನೆಟ್ ನಲ್ಲಿ ತುಂಬಾ ಆಸಕ್ತಿ ಇತ್ತು.
ಈ ಕಾರಣಕ್ಕೆ ಅವರು ಖ್ಯಾತ ಇಂಟರ್ ನೆಟ್ ಕಂಪನಿಯಾದ ನೆಟ್‌ಸ್ಕೇಪ್‌ನಲ್ಲಿ ಕೆಲಸ ಪಡೆಯಲು ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗಿದೆ. ನೆಟ್‌ಸ್ಕೇಪ್‌, ಮೊದಲ ವೆಬ್ ಬ್ರೌಸರ್ ಆದ ನೆಟ್‌ಸ್ಕೇಪ್‌ ನ್ಯಾವಿಗೇಟರ್ ಅನ್ನು ವಿನ್ಯಾಸಗೊಳಿಸಿದ ಕಂಪನಿಯಾಗಿದೆ.
ಕವಿತೆ | ಕಾಮಧೇನು – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal
ಎಚ್.ಎಸ್. ಬಿಳಿಗಿರಿ
ನಿನ್ನ ಕಣ್ಣಲಿ ಮಿಂಚು, ನನ್ನ ಎದೆಯಲಿ ಸಿಡಿಲು!
ನಿನ್ನ ತುಟಿಯೊಳು ರೋಜ, ನನ್ನ ಎದೆಯಲಿ ಮುಳ್ಳು! ನಿನ್ನೆದೆಯೊಳಮೃತಪೂರಿತ ಕುಂಭ-ಅದ ಕಳ್ಳು
ನನಗೆ; ಕಣ್ಣಿಗೆ ತಂಪು, ಎದೆಗೂ ಉರಿ ಭುಗಿಭುಗಿಲು! ನಿನಗಿದೆಯೆ ತುಂಬಿದೆದೆ, ನನ್ನ ಎದೆಯೋ ತೆರವು!
ನಿನ್ನ ತನುವಿನ ಏರುತಗ್ಗುಗಳ ದಾರಿಯಲಿ
ಸುತ್ತಿ ಕುಲುಕಾಡಿ ಅತ್ತಿತ್ತ ತೇಂಕಾಡುತಲಿ
ಬಿದ್ದು ನೂರಾರು ಚೂರಗಳಾಯ್ತು ಮನ-ರಥವು!
ಬರಿ ಬೂದಿಗುರಿನೆನಪು ಕೆರಳಿ ಕಾಡಿದೆಯೇನು?
ಗೊದ್ದಗಳ ಗೂಡುಗಳ ಹೀರುತ್ತಿರುವುದೂ ಕರಡಿ?
ಎల్ల ಸೋಸುತ ಕಾಮವೊಂದ ನಿಲಿಸುವ ಜರಡಿ?
ಮಗುಚಿ ಕೆಳಗಡೆ ಬೀಳುತ್ತಿದೆಯೋ ಏರೋಪ್ಲೇನು?
ಎದೆಯ ತಲೆಗೂದಲೋಳು ಪಿಚಪಿಚನೆ ಹರಿವ ಹೇನು? ಗಡಿಗೆಗೆಚ್ಚಲ ಸೋರವ ಬಿಟ್ಟಿತೋ ಕಾಮ-ಧೇನು
('ಕಾಮಧೇನು' ಕವಿತೆ ಕನ್ನಡದ ಸಾನೆಟ್ ಅಥವಾ ಸುನೀತ)
'ಸಾನೆಟ್' ಒಂದು ಟಿಪ್ಪಣಿ
ಕವಿತೆಯ ಈ ನಿರ್ದಿಷ್ಟ ಸ್ವರೂಪವು 13 ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡಿತು. ತನ್ನ 15 ಸಾನೆಟ್, ಮತ್ತು ನಂತರದ ಮುಖ್ಯ ಥೀಮ್ ಮತ್ತು ಇತರ ಹದಿನಾಲ್ಕನೇ ಕಲ್ಪನೆ. ಈ ಕಾರಣಕ್ಕಾಗಿ, ನಾವು ಕೊನೆಯಲ್ಲಿ ಕೆಲಸ ಪ್ರಾರಂಭಿಸಿದ್ದಾರೆ.
ಹದಿನೈದನೇ ಸುನೀತ ಪ್ರಮುಖ ಮೊದಲ ಎರಡು ಪ್ಯಾರಾಗಳನ್ನು, ಮತ್ತು ಸಂಪ್ರದಾಯದ ಪ್ರಕಾರ, ಮೊದಲ ಸುನೀತ ಅಗತ್ಯವಾಗಿ ಮೊದಲ ಸಾಲಿನ ಆರಂಭಿಸಲು ಮತ್ತು ಕೊನೆಯ ಎರಡನೇ ಕೊನೆಗೊಳ್ಳಬೇಕು. ಕಡಿಮೆ ಕುತೂಹಲಕಾರಿ ಕೆಲಸವಿತ್ತು-ಪದ್ಯ ಇತರ ಭಾಗಗಳು. ಹಿಂದಿನ ಇತರ ಹದಿಮೂರು ಸಾನೆಟ್ ಕೊನೆಯ ಸಾಲು ಅಗತ್ಯವಾಗಿ ಮುಂದಿನ ಮೊದಲ ಸಾಲು ಇರಬೇಕು.
ವಿಶ್ವದ ಸಾಹಿತ್ಯ ಇತಿಹಾಸದಲ್ಲೇ ರಷ್ಯಾದ ಕವಿಗಳ ಹೆಸರುಗಳು Vyacheslava Ivanova ಎಂದು ಮತ್ತು ವಾಲೆರಿ ಬ್ರ್ಯುಸೋವ್ ನೆನಪಿಡುವ. ಅವರು ಸಂಪೂರ್ಣವಾಗಿ ಏನು ಒಂದು ಸುನೀತ, ಆದ್ದರಿಂದ ಸಾನೆಟ್ ಕಿರೀಟ ಆಸಕ್ತಿಯನ್ನು ತೋರಿಸಲು ಗೊತ್ತು. ರಶಿಯಾದಲ್ಲಿ ಬರವಣಿಗೆಯ ಈ ಫಾರ್ಮ್ 18 ನೇ ಶತಮಾನದಲ್ಲಿ ಹುಟ್ಟಿಕೊಂಡಿತು. ಜೀನಿಯಸ್ ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದ ಬೋಧಕರಾಗಿದ್ದಾರೆ, ಮತ್ತು ಸ್ಥಾಪಿತ ಅಡಿಪಾಯ ಪಾಲಿಸಬೇಕೆಂದು. ಸಾನೆಟ್ ಮಾಲೆಯ ಇವರ ಕೊನೆಯ ಪದ್ಯ ( "ಡೂಮ್ ಸರಣಿ") ಸಾಲುಗಳನ್ನು ಆರಂಭವಾಗುತ್ತದೆ:
"ಹದಿನಾಲ್ಕು ಅಗತ್ಯ ಹೇಳಿ
ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು! "
ನೀವು ಸಂಯೋಜನೆಯ ಪ್ರಕಾರಕ್ಕೆ ಸ್ವಲ್ಪ ವಿಶ್ಲೇಷಣೆ ಖರ್ಚು ಮಾಡಬೇಕಾಗುತ್ತದೆ ಹೆಚ್ಚು ಅರ್ಥವಾಗುವ ಆಗಿತ್ತು. ಸಂಪ್ರದಾಯದಂತೆ ಮೊದಲ ಸುನೀತ ಅಂತಿಮ ನುಡಿಯು ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ – ಎರಡನೇ; ಮೂರನೇ ಸುನೀತ ಹಿಂದಿನದರ ಕೊನೆಯ ಸಾಲು, ಈ ಸಂದರ್ಭದಲ್ಲಿ ಪ್ರಾರಂಭವಾಗುತ್ತದೆ – "! ಜೀವಂತವಾಗಿ ನೆಚ್ಚಿನ ನೆನಪುಗಳ ಹೆಸರುಗಳು" ಇದು ವ್ಯಾಲೇರಿಯ್ ಬ್ರ್ಯುಸೋವ್ ಈ ಪ್ರಕಾರದಲ್ಲಿ ಪರಿಪೂರ್ಣತೆ ತಲುಪಿದ ವಾದ ಮಾಡಬಹುದು. ಇಲ್ಲಿಯವರೆಗೆ, 150 ಸಾಹಿತ್ಯ ಎಣಿಕೆ ದಂಡೆಗಳು ರಷ್ಯಾದ ಕವಿಗಳು ಸುನೀತಗಳನ್ನು ಮತ್ತು ಕಾವ್ಯದ ಪ್ರಪಂಚದಲ್ಲಿ ಸುಮಾರು 600 ಇವೆ.
Related Topics:FeaturedH.s. biligiriKannada poemPoemSunday poemಎಚ್.ಎಸ್. ಬಿಳಿಗಿರಿಕನ್ನಡ ಕವಿತೆಕವಿತೆಕಾಮಧೇನುಭಾನುವಾರದ ಕವಿತೆ
ಅಪ್ಪುಗೆಯೊಂದಿಗೆ ಪ್ರೀತಿಯ ಪತಿಗೆ ಅನುಷ್ಕಾ ವಿಶ್ | anushka sharma wishes for virat kohli birthday - Kannada Filmibeat
| Published: Monday, November 5, 2018, 14:12 [IST]
ಭಾರತ ಕ್ರಿಕೆಟ್ ತಂಡದ ರನ್ ಮಿಷಿನ್, ಸೆಂಚುರಿ ಸರದಾರ ವಿರಾಟ್ ಕೋಹ್ಲಿ ಇಂದು ತಮ್ಮ 30ನೇ ವರ್ಷದ ಹುಟ್ಟುಹಬ್ಬದ ಆಚರಣೆಯಲ್ಲಿ ಇದ್ದಾರೆ. ಲಕ್ಷಾಂತರ ಅಭಿಮಾನಿಗಳ ಶುಭಾಶಯ ಕೊಹ್ಲಿಗೆ ತಲುಪಿದೆ.
ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಪ್ರೀತಿಯ ಪತಿ ವಿರಾಟ್ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ತಮ್ಮ ಪ್ರೀತಿಯನ್ನು ಒಂದೇ ಸಾಲಿನಲ್ಲಿ ಹೇಳಿರುವ ಅವರು ''ಅವನ ಹುಟ್ಟಿಗೆ ದೇವರಿಗೆ ಧನ್ಯವಾದ'' ಎಂದಿದ್ದಾರೆ.
ಕೊಹ್ಲಿ ಜೊತೆಗೆ ತೆಗೆದ ಎರಡು ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಅನುಷ್ಕಾ ಹಂಚಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ತಬ್ಬಿಕೊಂಡ ಫೋಟೋ ಸಖತ್ ಮುದ್ಧಾಗಿದೆ. ಅಭಿಮಾನಿಗಳಿಗೆ ಈ ಜೋಡಿಯ ಫೋಟೋ ಬಹಳ ಇಷ್ಟ ಅಗಿದೆ. ವಿಶೇಷ ಅಂದರೆ, ಮದುವೆ ನಂತರ ಬಂದಿರುವ ಮೊದಲ ಬರ್ತ್ ಡೇ ಇದಾಗಿದೆ.
ಬರ್ತ್ ಡೇ ಇರುವ ಕಾರಣ #HappyBirthdayVirat ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಉಳಿದಂತೆ, ಇತ್ತೀಚಿಗಷ್ಟೆ ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವೆ ನಡೆದ ಏಕದಿನ ಪಂದ್ಯದ ಸರಣಿಯಲ್ಲಿ ಮೂರು ಸೆಂಚುರಿ ಬಾರಿಸಿದ ಕೊಹ್ಲಿ ಟಿ20 ಪಂದ್ಯದಿಂದ ರೆಸ್ಟ್ ಪಡೆದಿದ್ದಾರೆ.
ಇತ್ತ ಅನುಷ್ಕಾ ಶರ್ಮ ನಟ ಶಾರೂಖ್ ಖಾನ್ ಅವರ ಜೊತೆಗೆ 'ಜೀರೋ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟ್ರೇಲರ್ ಕೆಲದಿನಗಳ ಹಿಂದೆ ರಿಲೀಸ್ ಆಗಿದ್ದು, ಅನುಷ್ಕಾ ಪಾತ್ರದ ಬಗ್ಗೆ ದೊಡ್ಡ ಪ್ರಶಂಸೆ ಸಿಕ್ಕಿದೆ.
Read more about: anushka sharma birthday virat kohli bollywood ಅನುಷ್ಕಾ ಶರ್ಮಾ ಹುಟ್ಟುಹಬ್ಬ ವಿರಾಟ್ ಕೊಹ್ಲಿ ಬಾಲಿವುಡ್
ಗತಿ ಬಿಂಬ| ಬಿಹಾರ: ಕರ್ನಾಟಕಕ್ಕೆ ತೋರಲಿ ದಾರಿ | Prajavani
Politics Bihar Election results Karnataka political party
ನಾಡು–ನುಡಿಯ ಹಿತ ಕಾಯುವ ಪರ್ಯಾಯವೊಂದರ ಕಟ್ಟೋಣಕ್ಕೆ ಸಕಾಲ
ಗತಿ ಬಿಂಬ| ಬಿಹಾರ: ಕರ್ನಾಟಕಕ್ಕೆ ತೋರಲಿ ದಾರಿ
ವೈ.ಗ.ಜಗದೀಶ್‌ Updated: 16 ನವೆಂಬರ್ 2020, 01:00 IST
ರಾಷ್ಟ್ರೀಯ ಪಕ್ಷಗಳ ದಬ್ಬಾಳಿಕೆಗೆ ಸಿಲುಕಿದ ಪ್ರಾದೇಶಿಕ ಪಕ್ಷಗಳು ಸೊರಗಿ, ಕರಗಿ ಹೋಗುತ್ತಿರುವ ಕಾಲಮಾನ
ದಲ್ಲಿ ಬಿಹಾರ ಚುನಾವಣೆಯ ಫಲಿತಾಂಶವು, ಕತ್ತಲ ಕಾಲಕ್ಕೆ ಕಂದೀಲಿನ ಕೋಲ್ಮಿಂಚು ಹೊಳೆಯಿಸಿದೆ. ಪರ್ಯಾಯ ರಾಜಕಾರಣವೊಂದರ ಕಟ್ಟೋಣಕ್ಕೆ ಇಂಬು ಕೊಡು ವಂತಹ ಭರವಸೆಗಳು ಚರ್ಚೆಯ ಜಗುಲಿಗೆ ಬಂದಿವೆ.
'ದೈವತ್ವ'ಕ್ಕೆ ಏರಿಸಲ್ಪಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಭಾವಿಯಾಗಿ ಉಳಿಯಲು ಯತ್ನಿಸುತ್ತಲೇ ಇರುವ ನಿತೀಶ್‌ ಕುಮಾರ್ ಎಂಬ ದಿಗ್ಗಜ ಜೋಡಿಯ ಮುಂದೆ ಇನ್ನೂ 31ರ ಪ್ರಾಯದ ತೇಜಸ್ವಿ ಯಾದವ್‌ ನಡೆಸಿದ ಚಮತ್ಕಾರವು ಪ್ರಾದೇಶಿಕ ಪಕ್ಷ ಹಾಗೂ ಪರ್ಯಾಯ ರಾಜಕಾರಣಕ್ಕೆ ತವಕಿಸುತ್ತಿರುವವರಿಗೆ ಒಂದು ಮಾರ್ಗದರ್ಶನವಾದೀತು. ಇಬ್ಬರು ಪ್ರಭಾವಿ ನಾಯಕರು 'ವಿಶ್ವಗುರು ಭಾರತ'ದ ಭ್ರಮೆಯನ್ನು ಹರಳುಗಟ್ಟಿಸುತ್ತಾ ಜನರನ್ನು ಹುಸಿ ನಂಬುಗೆಯ ಕೊಂಡದೊಳಗೆ ತಳ್ಳುತ್ತಲೇ ಚುನಾವಣೆಯನ್ನು ಮುನ್ನಡೆಸಿದರು. ರಾಷ್ಟ್ರೀಯವಾದ, ಚೀನಾ–ಪಾಕಿಸ್ತಾನದ ಅತಿಕ್ರಮಣ ಕಾರಿ ವರ್ತನೆ, ಆರ್ಥಿಕ ಸುಧಾರಣೆ ಮುಂತಾದವುಗಳ ಬಗ್ಗೆ ಭಾಷಣ–ಭೀಷಣದ ಪ್ರತಾಪವನ್ನು ತೋರದ ತೇಜಸ್ವಿ ಯಾದವ್‌, ಶಿಕ್ಷಣ, ಆರೋಗ್ಯ, ನೀರಾವರಿ, ಉದ್ಯೋಗ ದಂತಹ, ಜನರ ಮೇಲೆ ನೇರ ಪ್ರಭಾವ ಬೀರುವ ಸಂಗತಿ ಗಳತ್ತಲೇ ಬೆಳಕು ಚೆಲ್ಲುತ್ತಾ ಹೋದರು. ವಲಸಿಗರು ಹಾಗೂ ನಿರುದ್ಯೋಗಿಗಳನ್ನು ಕಾಡುತ್ತಿರುವ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರದ ದಾರಿಗಳನ್ನು ಬಿಡಿಸಿಟ್ಟರು. ಅಧಿಕಾರ ಹಿಡಿಯಲು ತೇಜಸ್ವಿಗೆ ಸಾಧ್ಯವಾಗಿಲ್ಲ. ಆದರೆ, 75 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿಹೆಚ್ಚು ಸ್ಥಾನ ಹೊಂದಿದ ಪಕ್ಷವೆಂಬ ಹೆಗ್ಗಳಿಕೆಯನ್ನು ರಾಷ್ಟ್ರೀಯ ಜನತಾದಳಕ್ಕೆ ತಂದುಕೊಟ್ಟರು.
ಮೋದಿ ಅವರ ಅಷ್ಟೆಲ್ಲ ಪ್ರಭಾವಲಯವನ್ನೂ ಮೀರಿ, ಸ್ಥಳೀಯ ವಿಷಯಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ನಡೆಸಿದರೆ ಜನಮನಕ್ಕೆ ಹತ್ತಿರವಾಗಬಹುದು ಎಂಬುದು ಚುನಾವಣೆ ತೋರಿಸಿಕೊಟ್ಟ ಪಾಠ. ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯದ ಹಿತದ ಪ್ರಶ್ನೆ ಬಂದಾಗಲೆಲ್ಲ ಪ್ರಾದೇಶಿಕ ಪಕ್ಷಗಳೇ ನ್ಯಾಯ ಒದಗಿಸುತ್ತವೆ ಎಂಬುದರಲ್ಲಿ ಅಸತ್ಯವೇನಿಲ್ಲ.
ದೂರಗಾಮಿ ರಾಜಕೀಯ ಲಾಭದ ಮೇಲೆ ಕಣ್ಣಿಡುವ ರಾಜಕೀಯ ಪಕ್ಷಗಳಿಗೆ ರಾಜ್ಯಗಳ ಹಿತರಕ್ಷಣೆ ಆದ್ಯತೆಯಲ್ಲ. ದೇಶದಲ್ಲಿ ಸರ್ಕಾರ ನಡೆಸಲು ಯಾರು ಹೆಗಲು ಕೊಡುತ್ತಾರೆ ಎಂಬುದರತ್ತ ಅವುಗಳ ಲಕ್ಷ್ಯ. ಸ್ಥಳೀಯ ಭಾಷೆ, ಸಂಸ್ಕೃತಿ, ವೈಶಿಷ್ಟ್ಯ, ನೆಲ–ಜಲದ ವಿಷಯದಲ್ಲಿ ಸಮಾನ ನ್ಯಾಯದತ್ತ ನಿರ್ಲಕ್ಷ್ಯವೇ ಅವುಗಳ ಜಾಯಮಾನ. ಹಾಗಾಗಿಯೇ ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ ಪಡೆದಷ್ಟು ಪ್ರಯೋಜನವನ್ನು ಕರ್ನಾಟಕ ಪಡೆಯಲಾಗಿಲ್ಲ.
ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಅಧಿಕಾರ ಇದ್ದಾಗಲೂ ಕೆಲವು ಲಾಭಗಳಾಗಿದ್ದು ಇದೆ. ಕೇಂದ್ರ
ವನ್ನು ಜಬರಿಸುವಷ್ಟು ಧೈರ್ಯವಾದರೂ ನಮ್ಮಮುಖ್ಯಮಂತ್ರಿಗೆ ಇರುತ್ತದೆ. ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು. ದೆಹಲಿಗೆ ಬಂದು ಧರಣಿ ಕೂರುವುದಾಗಿ ಯಡಿಯೂರಪ್ಪ ಎಚ್ಚರಿಸಿದಾಗ, ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನ ಘೋಷಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಕೇಂದ್ರದಿಂದ ರಬೇಕಾದ ಅನುದಾನ ಬಾರದೇ ಇದ್ದಾಗ ಹೋರಾಟದ ಎಚ್ಚರಿಕೆ ನೀಡಿದ್ದು ಇದೆ.
ಲೋಕಸಭೆ ಚುನಾವಣೆ ವೇಳೆ 'ಒಂದು ಮತ ಎರಡು ಸರ್ಕಾರ' ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ರಾಜ್ಯ ಅಭಿವೃದ್ಧಿಯಾಗಬೇಕಾದರೆ ಒಂದೇ ಎಂಜಿನ್‌ ಇರಬೇಕು ಎಂಬ ಮಂಕುಬೂದಿಯನ್ನೂ ಎರಚಿದ್ದರು. ಈಗ ರಾಜ್ಯದ ಪಾಲಿಗೆ ನ್ಯಾಯವಾಗಿ ಬರಬೇಕಾದ ಜಿಎಸ್‌ಟಿ ಪರಿಹಾರದ ಮೊತ್ತ, ತೆರಿಗೆ ಪಾಲು, ನೈಸರ್ಗಿಕ ವಿಕೋಪ ಅನುದಾನಕ್ಕೂ ಅಂಗಲಾಚುವ ದುಃಸ್ಥಿತಿ ಬಂದೊದಗಿದೆ. ಯಡಿಯೂರಪ್ಪ ದಮ್ಮಯ್ಯ ಎಂದರೂ ಬಿಡಿಗಾಸು ಬಿಚ್ಚುತ್ತಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. ಇವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿದ್ದಾರೆ.
ಇಂತಹ ಹೊತ್ತಿನಲ್ಲಿ ನಾಡಿನ ಹಿತ ಕಾಯುವ ಪ್ರಾದೇಶಿಕ ಪಕ್ಷವೊಂದರ ಜರೂರು ಇದೆ. ಪ್ರಾದೇಶಿಕ ಪಕ್ಷ ಎಂದತಕ್ಷಣ ಎದುರಿಗೆ ಕಾಣುವುದು ಕುಟುಂಬ ರಾಜಕಾರಣದ ಅಪಸವ್ಯವೇ. ಆಂಧ್ರದಲ್ಲಿ ಜಗನ್ಮೋಹನ ರೆಡ್ಡಿ, ತೆಲಂಗಾಣದಲ್ಲಿ ಚಂದ್ರಶೇಖರರಾವ್‌, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್‌, ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ, ಬಿಹಾರದಲ್ಲಿ ತೇಜಸ್ವಿ ಯಾದವ್‌ ಈ ಮುಖಗಳೇ ಧುತ್ತನೆ ಕಣ್ಣೆದುರು ಬಂದು ನಿಲ್ಲುತ್ತವೆ. ಕರ್ನಾಟಕದ ಮಟ್ಟಿಗೆ ಬಿಜೆಪಿಯು ಕುಟುಂಬ ರಾಜಕಾರಣದ ದಿರಿಸನ್ನೇ ಹೊದ್ದುಕೊಂಡಿದೆ. ಪರ್ಯಾಯ ಅಥವಾ ಪ್ರಾದೇಶಿಕ ರಾಜಕಾರಣವೆಂದರೆ, 'ವಂಶವಾಹಿ ಪ್ರಜಾಪ್ರಭುತ್ವ'ವನ್ನು ಬದಿಗೊತ್ತಿ 'ಜನವಾಹಿ ಪ್ರಜಾತಂತ್ರ'ವನ್ನು ಕಟ್ಟಬೇಕಾದ ನೆಲೆಯಿಂದ ಯೋಚಿಸಬೇಕಾಗಿದೆ.
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೆಂದರೆ ಸದ್ಯಕ್ಕೆ ಜೆಡಿಎಸ್‌ ಮಾತ್ರ. ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ರೈತಸಂಘ, ಪಿ.ಲಂಕೇಶ್‌ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಪ್ರಗತಿರಂಗದ ಪ್ರಯೋಗವನ್ನು ತುಸು ಭಿನ್ನವಾಗಿ ನೋಡಬೇಕು. ಆದರೆ ಅದರಲ್ಲಿ ಯಶ ಸಿಗಲಿಲ್ಲ. ನಾಡಿನಲ್ಲಿ ಪರ್ಯಾಯದ ಅನೇಕ ಪ್ರಯೋಗಗಳು ನಡೆದಿವೆ. ಮಾತೃಪಕ್ಷದಲ್ಲಿ ತಮಗೆ ಬೆಲೆ ಸಿಗದೇಹೋದಾಗ ಸಿಡಿದು ಹೊರಬಂದು ಹೊಸ ಪಕ್ಷ ಕಟ್ಟಿದವರಿದ್ದಾರೆ. ತಮ್ಮ ಪಕ್ಷಕ್ಕೆ ಜನರಿಂದ ಬೆಲೆ ಸಿಗದೇ ಇದ್ದಾಗ ಮಾತೃಪಕ್ಷಕ್ಕೆ ಜಿಗಿದು ತಮ್ಮ ಭವಿಷ್ಯ ಕಂಡುಕೊಂಡವರೂ ಇದ್ದಾರೆ.
ಎಸ್‌.ಬಂಗಾರಪ್ಪನವರ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಯಡಿಯೂರಪ್ಪನವರ ಕರ್ನಾಟಕ ಜನತಾಪಕ್ಷ, ರಾಮಕೃಷ್ಣ ಹೆಗಡೆ ಅವರ ನವನಿರ್ಮಾಣ ವೇದಿಕೆ, ದೇವೇಗೌಡರ ಸಮಾಜವಾದಿ ಜನತಾ ‍‍ಪಕ್ಷ ಇವೆಲ್ಲವೂ ಭದ್ರವಾಗಿ ನೆಲೆಯೂರಲೇ ಇಲ್ಲ.
'ಕನ್ನಡ, ಕನ್ನಡಿಗ, ಕರ್ನಾಟಕ'ದ ಭವಿಷ್ಯವನ್ನು ಉಜ್ವಲವಾಗಿಸುವ ದೂರಗಾಮಿ ಕನಸಾಗಲಿ, ನೆಲ–ಜಲದ ಬಗ್ಗೆ ನಿರ್ದಿಷ್ಟ ಯೋಜನೆಯಾಗಲಿ, ಕನ್ನಡ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವ ತವಕವಾಗಲಿ ಈ ಪರ್ಯಾಯದ ಹಿಂದೆ ಇರಲಿಲ್ಲ. ತಮಗೆ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ, ತಾವು ಗೆಲ್ಲುವುದಕ್ಕಿಂತ ತಮಗೆ 'ದ್ರೋಹ' ಎಸಗಿದವರ ಎರಡೂ ಕಣ್ಣು ತೆಗೆಯುವ ಹುಮ್ಮಸ್ಸು ಮಾತ್ರ ಬಲಿಷ್ಠವಾಗಿದ್ದುದು ಕಾಣಿಸುತ್ತದೆ.
1994ರಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದ ಜನತಾದಳ, 1996ರ ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆದ್ದಿತ್ತು. ಇಡೀ ಜನಸಮೂಹ ವನ್ನು ಪ್ರಭಾವಿಸುವ ನಾಯಕರಿದ್ದ ಪಕ್ಷವೆಂದರೆ ಅದು ಜನತಾದಳ ಎಂಬಂತಾಗಿತ್ತು. ನಂತರ ಅದು ಬೇರೆ ಬೇರೆ ಚೂರುಗಳಾಗಿ, ನಾಯಕರು ದಿಕ್ಕಾಪಾಲಾಗಿ ಚದುರಿಹೋದರು. ಕುಟುಂಬದ ಮೇಲಿನ ಗೌಡರ ಮೋಹವೇ ಇದಕ್ಕೆ ಕಾರಣ ಎಂದು ಅವರ ವಿರೋಧಿಗಳು ಟೀಕಿಸಿದರೆ, ಪಕ್ಷವನ್ನು ಉಳಿಸಿಕೊಂಡಿದ್ದೇ ಕುಟುಂಬ ಎಂಬುದು ಗೌಡರ ವಾದ.
ಕುಟುಂಬ ರಾಜಕಾರಣವು ಜೆಡಿಎಸ್‌ನ ದೊಡ್ಡ ಮಿತಿ. ಅದರ ಜತೆಗೆ ದಶಕದಿಂದೀಚೆಗೆ ಹೊಸಬರನ್ನು, ಪಕ್ಷದ ತಾತ್ವಿಕತೆ ಹಾಗೂ ಅದರ ದಾರ್ಶನಿಕತೆಗೆ ಹೊಳಪು ಕೊಡುವ ನಾಯಕರನ್ನು ಬೆಳೆಸಲು ಅಥವಾ ಪಕ್ಷದಲ್ಲಿ ಉಳಿಸಿಕೊಳ್ಳಲು ದೇವೇಗೌಡರು ಮುಂದಾಗಿಲ್ಲ. ಚುನಾವಣೆಯಲ್ಲಿ ಕುಟುಂಬದವರಿಗೆ ಮಣೆ ಹಾಕುವುದು, ರಾಜ್ಯಸಭೆ, ಪರಿಷತ್ತಿನ ಸದಸ್ಯತ್ವದ ಆಯ್ಕೆ, ನಾಮನಿರ್ದೇಶನದ ಪ್ರಶ್ನೆಬಂದಾಗ ರಮೇಶಗೌಡ, ತಿಪ್ಪೇಸ್ವಾಮಿ, ಶರವಣ ಅಂತಹವರಷ್ಟೇ ಕಾಣಿಸುವುದು ಈ ಪಕ್ಷದ ವೈಫಲ್ಯ ಎಂಬ ಟೀಕೆಯೂ ಉಂಟು. ಅತಂತ್ರ ರಾಜಕೀಯ ಸನ್ನಿವೇಶಗಳಲ್ಲಿ ಅನುಕೂಲಸಿಂಧು ರಾಜಕಾರಣಕ್ಕೆ ಹೊಂದಿಕೊಳ್ಳುವುದು ಜೆಡಿಎಸ್‌ಗೆ ಅಂಟುಜಾಡ್ಯವೇ ಆಗಿಬಿಟ್ಟಿದೆ.
ಈ ಹೊತ್ತಿನೊಳಗೆ ಬಿಹಾರ ಚುನಾವಣೆಯ ಪಾಠವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಹೊಸ ಹೆಜ್ಜೆ ಇಟ್ಟರೆ, ಆ ದಿಕ್ಕಿನತ್ತ ಯೋಚಿಸುವವರು ಪರ್ಯಾಯ ಸೃಷ್ಟಿಯ ಕಡೆಗೆ ದೂರದೃಷ್ಟಿಯ ಯೋಜನೆ ರೂಪಿಸಿಕೊಂಡರೆ, ರಾಷ್ಟ್ರೀಯ ಪಕ್ಷಗಳಿಗೆ ಭಿನ್ನವಾದ ರಾಜಕಾರಣ ವನ್ನು ಕರ್ನಾಟಕದಲ್ಲಿ ಆಗುಮಾಡುವುದು ಕಷ್ಟವೇನಲ್ಲ. ನಾಡಿನ–ನಾಡವರ ಹಿತ ಕಾಯುವ ಮನಸ್ಸುಗಳು ಸ್ವಾರ್ಥ ಮರೆತು ಒಂದಾದರೆ ಪರ್ಯಾಯವೊಂದರ ಬೆಳಕು ಹೊರಚಿಮ್ಮೀತು.
'); $('#div-gpt-ad-779444-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-779444'); }); googletag.cmd.push(function() { googletag.display('gpt-text-700x20-ad2-779444'); }); },300); var x1 = $('#node-779444 .field-name-body .field-items div.field-item > p'); if(x1 != null && x1.length != 0) { $('#node-779444 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-779444').addClass('inartprocessed'); } else $('#in-article-779444').hide(); } else { _taboola.push({article:'auto', url:'https://www.prajavani.net/columns/gathibimba/politics-bihar-election-results-karnataka-political-party-779444.html'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-779444', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-779444'); }); googletag.cmd.push(function() { googletag.display('gpt-text-300x20-ad2-779444'); }); // Remove current Outbrain //$('#dk-art-outbrain-779444').remove(); //ad before trending $('#mob_rhs1_779444').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-779444 .field-name-body .field-items div.field-item > p'); if(x1 != null && x1.length != 0) { $('#node-779444 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-779444 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-779444'); }); } else { $('#in-article-mob-779444').hide(); $('#in-article-mob-3rd-779444').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0){ var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-779444','#in-article-771185','#in-article-762939','#in-article-754426','#in-article-745964']; var twids = ['#twblock_779444','#twblock_771185','#twblock_762939','#twblock_754426','#twblock_745964']; var twdataids = ['#twdatablk_779444','#twdatablk_771185','#twdatablk_762939','#twdatablk_754426','#twdatablk_745964']; var obURLs = ['https://www.prajavani.net/columns/gathibimba/politics-bihar-election-results-karnataka-political-party-779444.html','https://www.prajavani.net/columns/gathibimba/bs-yediyurappa-leadership-has-been-put-to-the-test-in-state-politics-771185.html','https://www.prajavani.net/columns/gathibimba/ordinance-rama-rajya-karnataka-762939.html','https://www.prajavani.net/columns/gathibimba/jagadish-pens-on-bangalore-communal-violence-754426.html','https://www.prajavani.net/columns/gathibimba/government-actions-and-covid-19-coronavirus-lockdown-745964.html']; var vuukleIds = ['#vuukle-comments-779444','#vuukle-comments-771185','#vuukle-comments-762939','#vuukle-comments-754426','#vuukle-comments-745964']; // var nids = [779444,771185,762939,754426,745964]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಅನಂತ್: ದೆಹಲಿ ರಾಜಕಾರಣದ ಒಳಮನೆ ಹೊಕ್ಕ ವಿರಳ ಕನ್ನಡಿಗ | Prajavani
ಅನಂತ್‌ ವಿಧಿವಶ
Updated: 13 ನವೆಂಬರ್ 2018, 01:50 IST
ನವದೆಹಲಿ: ದೆಹಲಿ ರಾಜಕಾರಣದ ಒಳಮನೆ ಹೊಕ್ಕು ಪ್ರಭಾವಿಸಿದ ಕರ್ನಾಟಕದ ರಾಜಕಾರಣಿಗಳ ಸಂಖ್ಯೆ ಬೆರಳೆಣಿಕೆಯದು.
ಅದರಲ್ಲಿ ತಮ್ಮ ವೈಯಕ್ತಿಕ ಏಳಿಗೆ ಮತ್ತು ರಾಜಕಾರಣದ ಜೊತೆ ಜೊತೆಗೆ ಕನ್ನಡದ ನೆಲ-ಜಲ-ನುಡಿ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಹೃದಯಕ್ಕೆ ಹತ್ತಿರ ತೆಗೆದುಕೊಂಡು ಶ್ರಮಿಸಿದವರು ಇನ್ನೂ ವಿರಳ. ಅನಂತಕುಮಾರ್ ಈ ಮಾತಿಗೆ ಅಪವಾದ.
ಆಡಳಿತ ಪಕ್ಷದಲ್ಲಿರಲಿ, ವಿರೋಧಪಕ್ಷದಲ್ಲೇ ಕುಳಿತುಕೊಳ್ಳಲಿ ರಾಜ್ಯಕ್ಕೆ ಅನ್ಯಾಯ ಆಗುವುದನ್ನು ಅವರು ಸುಲಭಕ್ಕೆ ಸಹಿಸುತ್ತಿರಲಿಲ್ಲ.
ವಾಜಪೇಯಿ ಮಂತ್ರಿಮಂಡಲದ ಅತ್ಯಂತ ಪ್ರಭಾವಿ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಉಪಪ್ರಧಾನಿ ಆಡ್ವಾಣಿ ಅವರ ವಿಶೇಷ ಕೃಪಾಕಟಾಕ್ಷ ಅವರ ಮೇಲಿತ್ತು. ರಾಜ್ಯದ ಹಿತಕ್ಕಾಗಿ ಪ್ರಧಾನಿ ಕಾರ್ಯಾಲಯವನ್ನು ಪ್ರಭಾವಿಸಬಲ್ಲ ಕೇಂದ್ರ ಮಂತ್ರಿಯೊಬ್ಬರನ್ನು ದೆಹಲಿಯಲ್ಲಿ ಹೊಂದಿರುವ ಮಹತ್ವ ಏನೆಂಬುದನ್ನು ಅವರು 1998-2004ರ ಅವಧಿಯಲ್ಲಿ ಪ್ರತ್ಯಕ್ಷವಾಗಿ ತೋರಿಸಿಕೊಟ್ಟರು.
ಒಂದೆಡೆ ಡಿಎಂಕೆ, ಮತ್ತೊಂದೆಡೆ ತೆಲುಗುದೇಶಂ ಪಾರ್ಟಿಯು ವಾಜಪೇಯಿ ಸರ್ಕಾರದ ಪ್ರಮುಖ ಆಧಾರಸ್ತಂಭಗಳಾಗಿದ್ದವು. ಅವುಗಳನ್ನು ಎದುರು ಹಾಕಿಕೊಳ್ಳುವುದು ಸುಲಭವಿರಲಿಲ್ಲ. ತಮಿಳುನಾಡಿನ ಜೊತೆ ಕಾವೇರಿ ವಿವಾದ ಭುಗಿಲೆದ್ದಿದ್ದ ದಿನಗಳಲ್ಲಿ ಕಾವೇರಿ ಜಲಾಶಯಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕರಾಳ ಶಾಸನದ ಹಲ್ಲು ಉಗುರುಗಳನ್ನು ಪ್ರಧಾನಿ ವಾಜಪೇಯಿ ಅವರ ಮನಒಲಿಸಿ ಕಳಚಿದ ಕೀರ್ತಿ ಅಂದು ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಮತ್ತು ಅವರ ಬೆನ್ನಿಗೆ ನಿಂತಿದ್ದ ನೀರಾವರಿ ತಜ್ಞ ರಾಜಕಾರಣಿ ಎಚ್.ಎನ್.ನಂಜೇಗೌಡ ಅವರಿಗೆ ಸಲ್ಲಬೇಕು.
ರಾಜ್ಯದ ಹಿತದ ಪ್ರಶ್ನೆ ಬಂದಾಗ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವಿದ್ದರೂ ಅವರ ಸಹಕಾರದ ಬಾಗಿಲು ಸದಾ ತೆರೆದಿರುತ್ತಿತ್ತು. ಜೆ.ಎಚ್.ಪಟೇಲ್ ಅವರಿಂದ ಹಿಡಿದು ಎಸ್.ಎಂ.ಕೃಷ್ಣ, ಧರಂಸಿಂಗ್ ಅವರಂತಹ ಬಿಜೆಪಿ ಯೇತರ ಮುಖ್ಯಮಂತ್ರಿಗಳಿಂದ ಮೊದಲು
ಗೊಂಡು ಮೈತ್ರಿ ಸರ್ಕಾರದ ಕುಮಾರಸ್ವಾಮಿ, ಬಿಜೆಪಿ ಸರ್ಕಾರದ ಬಿ.ಎಸ್‌.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಸಿದ್ದರಾಮಯ್ಯ ಎಲ್ಲರ ಸರ್ಕಾರಗಳಿಗೂ ಅವರ ತೆರೆಮರೆಯ ಸಲಹೆ ಸಹಕಾರ ಧಾರಾಳ ಲಭ್ಯವಿತ್ತು.
1996ರಲ್ಲಿ ಮೊದಲ ಸಲ ಲೋಕಸಭೆಗೆ ಆರಿಸಿ ಬಂದ ಅನಂತಕುಮಾರ್, ಲೋಕಸಭೆಯಲ್ಲಿ ಮುಂದಿನ ಆಸನಗಳಲ್ಲಿ ಕುಳಿತು ಮಾತನಾಡಿ ಗಮನ ಸೆಳೆದ ರಾಜಕಾರಣಿ.
ಹಿಂದಿಯೇ ಮೆರೆದಾಡುವ ದೆಹಲಿ ರಾಜಕಾರಣದಲ್ಲಿ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಸಂಸದರಿಗೆ ಭಾಷೆಯೇ ದೊಡ್ಡ ಅಡಚಣೆ. ಬಾಯಿ ಕಟ್ಟಿ ಹೋಗುತ್ತದೆ. ಆದರೆ ಅನಂತಕುಮಾರ್ ಈ ಮಿತಿಯನ್ನು ಪ್ರಯತ್ನಪೂರ್ವಕವಾಗಿ ಮೀರಿ ಗೆದ್ದರು. ವಾಜಪೇಯಿ ಸರ್ಕಾರದ ಮಂತ್ರಿಯಾಗಿ ಅನತಿ ಕಾಲದಲ್ಲೇ ಪಕ್ಷದೊಳಗಿನ ತಮ್ಮ ರಾಜಕೀಯ ಪ್ರತಿಸ್ಪರ್ಧಿ ಧನಂಜಯ ಕುಮಾರ್ ಅವರನ್ನು ಹಿಂದೆ ಹಾಕಿದರು.
ಕ್ಲಿಷ್ಟ ವಿಷಯಗಳನ್ನು ಚುರುಕಾಗಿ ಗ್ರಹಿಸುವ ಪ್ರತಿಭೆ ಅವರಿಗಿತ್ತು. ನಾಗರಿಕ ವಿಮಾನಯಾನ ಖಾತೆಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊಟ್ಟಮೊದಲ ಪತ್ರಿಕಾಗೋಷ್ಠಿಯಲ್ಲೇ ಆ ವಿಷಯ ಕುರಿತು ಅವರು ಪ್ರದರ್ಶಿಸಿದ ಆಳದ ತಿಳಿವಳಿಕೆ ಅಪರೂಪದ್ದು.
ನಗರಾಭಿವೃದ್ಧಿ, ಸಂಸ್ಕೃತಿ- ಪ್ರವಾಸೋದ್ಯಮ ಮಂತ್ರಿಯಾಗಿ ತಮ್ಮ ಪ್ರಭಾವವನ್ನು ಗಟ್ಟಿ ಮಾಡಿಕೊಳ್ಳುತ್ತಲೇ ಬೆಳೆದರು. ಯಶಸ್ಸಿನ ನಡುವೆ ಎಡವಿ ಆಪಾದನೆಗಳು- ವಿವಾದಗಳನ್ನು ಮೈಮೇಲೆ ಎಳೆದುಕೊಂಡರು.
ನವದೆಹಲಿಯಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ವಾಜಪೇಯಿ, ಎಲ್.ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರೊಂದಿಗೆ ಅನಂತಕುಮಾರ್.
ಹುಡ್ಕೋ ಹಗರಣ- ನೀರಾ ರಾಡಿಯಾ ಗೌಜುಗಳಲ್ಲಿ ಸಿಲುಕಿದ್ದುಂಟು. ಸದಾ ಅವರ ತಲೆ ಕಾಯ್ದ ಬಿಜೆಪಿಯ ಮಹಾರಥಿ ಲಾಲ್ ಕೃಷ್ಣ ಆಡ್ವಾಣಿ ಅವರ ಪ್ರಭಾವ-ಸಾಮರ್ಥ್ಯಗಳು ಕ್ಷೀಣಿಸಿದ ವಿದ್ಯಮಾನ ಅನಂತ್ ಮೇಲೂ ಪ್ರತಿಫಲಿಸಿತ್ತು. ಪಕ್ಷದ ಒಳ-ಹೊರಗೆ ನರೇಂದ್ರ ಮೋದಿ ಪ್ರಬಲವಾಗಿ ಹೊರಹೊಮ್ಮಿ ಆಡ್ವಾಣಿ ಮೂಲೆಗುಂಪಾಗುತ್ತಿದ್ದಂತೆ ಅನಂತ್ ಕೂಡ ಪಾಳೆಯ ಬದಲಿಸಿದರು. ಆದರೆ ಆಡ್ವಾಣಿ ಅವರೊಂದಿಗೆ ಬಹುಕಾಲ ಗುರುತಿಸಿಕೊಂಡಿದ್ದ ಅನಂತ್ ಕುಮಾರ್ ಗೆ ಮೋದಿ ವಿಶ್ವಾಸ ಸಂಪೂರ್ಣವಾಗಿ ದೊರೆಯಲೇ ಇಲ್ಲ.
ಸದಾನಂದಗೌಡರಿಗೆ ರೈಲ್ವೆಯಂತಹ ಬೃಹತ್ ಖಾತೆಯನ್ನು ನೀಡಿ, ಅನಂತ್ ಅವರಿಗೆ ರಾಸಾಯನಿಕ- ರಸಗೊಬ್ಬರ ಖಾತೆ ನೀಡಿದ ಮೋದಿಯವರ ನಡೆ ಕುರಿತು ರಾಜಕೀಯ ವಲಯದ ಹುಬ್ಬುಗಳು ಮೇಲೇರಿದ್ದವು.
ಮುಖ್ಯಮಂತ್ರಿಯಾಗುವ ಗುಪ್ತ ಆಕಾಂಕ್ಷೆಯನ್ನು ಅನಂತ್ ಹೊಂದಿದ್ದು ಸುಳ್ಳಲ್ಲ. ಅಂತಹ ಯೋಗ್ಯತೆಯನ್ನೂ ಅವರು ಗಳಿಸಿಕೊಂಡಿದ್ದರು. ಪರಿಣಾಮವಾಗಿ ರಾಜ್ಯದಲ್ಲಿ ಎರಡು ಅಧಿಕಾರ ಕೇಂದ್ರಗಳು ತಲೆಯೆತ್ತಿದ್ದವು. ರಾಜ್ಯ ರಾಜಕಾರಣದಲ್ಲಿ ಅವರ ಒಂದು ಕಾಲದ ಗುರು ಯಡಿಯೂರಪ್ಪ ಅವರು ಅನಂತ್ ವಿರುದ್ಧ ನಿಂತರು.
ಕಡೆಗೆ ಬಿಜೆಪಿ ವರಿಷ್ಠರು ಪಂಚಾಯಿತಿ ನಡೆಸಿ ರಾಜ್ಯವನ್ನು ಯಡಿಯೂರಪ್ಪ ಅವರಿಗೂ ಕೇಂದ್ರವನ್ನು ಅನಂತ್‌ ಅವರಿಗೂ ಹಂಚಿಕೊಟ್ಟರು. ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಅನಂತ್‌ಗೆ ತಾಕೀತು ಮಾಡಿದ್ದುಂಟು. ಆದರೆ ಈ ಮುಸುಕಿನ ಗುದ್ದಾಟ ನಿಲ್ಲಲಿಲ್ಲ. ಪಕ್ಷ ಬಿಟ್ಟ ಯಡಿಯೂರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನಗಳಿಗೆ ಆಡ್ವಾಣಿ-ಅನಂತ್-ಸುಷ್ಮಾ ಸ್ವರಾಜ್ ಅವರು ಸುಲಭಕ್ಕೆ ಒಪ್ಪಲಿಲ್ಲ.
ಈ ಕುರಿತು ಅವರ ಮನಸ್ಸುಗಳು ಮೆತ್ತಗಾಗುವ ಹೊತ್ತಿಗೆ ಮೋದಿಯವರ ರಂಗಪ್ರವೇಶ ಆಗಿತ್ತು. ಮರುಪ್ರವೇಶಕ್ಕೆ ಈ ತ್ರಿಮೂರ್ತಿಗಳ ಮರ್ಜಿ ಕಾಯುವ ಅಗತ್ಯ ಯಡಿಯೂರಪ್ಪನವರಿಗೆ ತೀರಿ ಹೋಗಿತ್ತು. ಇದೆಲ್ಲದರ ನಡುವೆ ರಾಜ್ಯ ಬಿಜೆಪಿಯ ದೆಹಲಿ ವ್ಯವಹಾರಗಳಿಗೆ ಅನಂತ್ ಅಧಿಕೃತ ನಿವಾಸವೇ ಕೇಂದ್ರವಾಗಿತ್ತು. ಎಲ್ಲ ಚರ್ಚೆಗಳು-ಸಮಾಲೋಚನೆಗಳು ಇಲ್ಲಿಯೇ ಹರಳುಗಟ್ಟುತ್ತಿದ್ದವು.
ಅಕಾಲ ಸಾವಿಗೆ ತುತ್ತಾಗಿರುವ ಅನಂತಕುಮಾರ್, ಈದ್ಗಾ ಮೈದಾನದ ರಾಜಕಾರಣ ನಡೆಸಿದರೂ ಕಟ್ಟರ್ ಹಿಂದುತ್ವ
ವಾದಿ ಅಥವಾ ಉಗ್ರಕೋಮುವಾದಿ ಆಗಿರಲಿಲ್ಲ. ಅವರು ತೆರವು ಮಾಡಿರುವ ಉದಾರಮುಖಿ ಬಿಜೆಪಿ ನಾಯಕನ ಜಾಗವನ್ನು ಮುಂಬರುವ ದಿನಗಳಲ್ಲಿ ಕಟ್ಟರ್ ವಾದಿ ಮುಖಗಳು ತುಂಬಿದರೆ ಆಶ್ಚರ್ಯಪಡಬೇಕಿಲ್ಲ.
ಕೇಂದ್ರ ಸಚಿವ ಅನಂತಕುಮಾರ್ ಅವರ ಪಾರ್ತಿವ ಶರೀರ ಮುಂದೆ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ಮಗಳು ಮತ್ತಿತರರು ಇದ್ದರು –ಪ್ರಜಾವಾಣಿ ಚಿತ್ರ/ಚಂದ್ರಹಾಸ ಕೋಟೆಕಾರ್‌
ಬೆಂಗಳೂರು: ಕೇಂದ್ರದ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್‌ ಕುಮಾರ್ (59) ಸೋಮವಾರ ಬೆಳಗಿನ ಜಾವ ನಿಧನರಾದರು.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೂ ಮೊದಲು ಲಂಡನ್‌ ಮತ್ತು ನ್ಯೂಯಾರ್ಕ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅವರಿಗೆ ಪತ್ನಿ ತೇಜಸ್ವಿನಿ, ಪುತ್ರಿಯರಾದ ಐಶ್ವರ್ಯಾ ಮತ್ತು ವಿಜೇತಾ ಇದ್ದಾರೆ.
ಅಂತಿಮ ಸಂಸ್ಕಾರ ಇಂದು: ಸೋಮವಾರ ಬಸವನಗುಡಿಯ ಅವರ ಮನೆ 'ಸುಮೇರು'ನಲ್ಲಿ ಅನಂತ್‌ ಕುಮಾರ್‌ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ನ.13ರಂದು ಬೆಳಿಗ್ಗೆ 8ಕ್ಕೆ ಮಲ್ಲೇಶ್ವರದ ಬಿಜೆಪಿ ಕಚೇರಿಗೆ (ಜಗನ್ನಾಥ ಭವನ) ಪಾರ್ಥಿವ ಶರೀರವನ್ನು ತರಲಾಗುವುದು. ಬೆಳಿಗ್ಗೆ 10ಕ್ಕೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.