text
stringlengths 0
61.5k
|
---|
ಪ್ರತ್ಯುತ್ಪನ್ನಮತಿಯಾಗುವುದೇ? ಪಲಾಯನವಾದಿಯಾಗುವುದೇ? | Digital Kannada |
Home ಸಾಹಿತ್ಯ-ಸಂಸ್ಕೃತಿ ಪ್ರತ್ಯುತ್ಪನ್ನಮತಿಯಾಗುವುದೇ? ಪಲಾಯನವಾದಿಯಾಗುವುದೇ? |
'ದೇಶದಲ್ಲಿ ಆತ್ಮಹತ್ಯೆಗಳ ಸ೦ಖ್ಯೆಯಲ್ಲಿ ಭಾರೀ ಹೆಚ್ಚಳ' ಇದು ವೃತ್ತಪತ್ರಿಕೆ, ಟೆಲಿವಿಜನ್, ಮತ್ತು ಅಂತರ್ಜಾಲದಲ್ಲಿ ತೋರಿ ಬಂದ ಸಣ್ಣ ಸಂಗತಿಯಾಗಿರುವ ಹಿನ್ನೆಲೆಯಲ್ಲಿ ಮನುಷ್ಯ ಜೀವ ಇಷ್ಟು ಹಗುರವಾಗುತ್ತಿರುವುದೇಕೆ, ಸಾವು ಕೆಲವರಿಗೆ ಎಲ್ಲ ಸಮಸ್ಯೆಗಳ ಮುಕ್ತಿಯ ರೂಪವಾಗಿ ಬರುತ್ತಿರುವುದೇಕೆ…ದುರ್ಲಭವಾದ ಮಾನವ ಜನ್ಮವನ್ನು ಹುಲ್ಲು ಕಿತ್ತೆಸೆದಷ್ಟು ಸಲೀಸಾಗಿ ಮುರುಟಿ ಹೋಗುತ್ತಿರುವುದೇಕೆ ? ಎನ್ನುವ ಪ್ರಶ್ನೆಗಳು ಕಾಡುವುದು ಸಹಜ. ಇಲ್ಲಿ ನನಗೊಂದು ಜಾತಕ ಕಥೆ ನೆನಪಾಗುತ್ತಿದೆ. |
'ಒ೦ದು ದೊಡ್ಡ ಕೆರೆಯಿತ್ತು. ಅದರಲ್ಲಿ ಮೂರು ಮೀನುಗಳು ವಾಸವಾಗಿದ್ದುವು. ಒಂದರ ಹೆಸರು ಅನಾಗತಭಯ, ಇನ್ನೊಂದು ಪ್ರತ್ಯುತ್ಪನ್ನಮತಿ ಹಾಗೂ ಮೂರನೆಯದರ ಹೆಸರು ಯದ್ಭವಿಷ್ಯ. ಮೊದಲನೆಯ ಮೀನಿನ ಮನಸ್ಸು 'ಮುಂದೊಂದು ದಿನ ಹೀಗೆ ಹೀಗೆಲ್ಲ ನಡೆಯಬಹುದಲ್ಲವೇ… ಅದನ್ನು ನಾನು ಈ ರೀತಿಯ ಉಪಾಯಗಳಿಂದ ಪರಿಹರಿಸಿಕೊಳ್ಳಬಹುದಲ್ಲವೇ' ಎಂದೆಲ್ಲ ಆಲೋಚಿಸಿ ಅದರ ತಯಾರಿಯಲ್ಲಿರುತ್ತಿತ್ತು. |
ಎರಡನೆಯ ಮೀನು 'ಅಪಾಯ ಬಂದ ಸಮಯದಲ್ಲಿ ಆಲೋಚನೆ ಮಾಡಿದರಾಯಿತು. ಆ ಹೊತ್ತಿಗೆ ಏನಾದರೂ ಉಪಾಯ ತೋಚಿಯೇ ತೋಚುತ್ತದೆ . ಎಂದೋ ಬರಬಹುದಾದ ಭಯಕ್ಕೆ ಇಂದೇ ಯಾಕೆ ಅಧೈರ್ಯ ಪಡಬೇಕು' ಎ೦ದು ನಿಶ್ಚಿಂತೆಯಲ್ಲಿತ್ತು. |
ಮೂರನೆಯದು ಮಾತ್ರ 'ಈ ಪ್ರಪಂಚವೇ ಅನಿಶ್ಚಿತ. ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದನ್ನು ಬ್ರಹ್ಮನೂ ತಪ್ಪಿಸಲು ಸಾಧ್ಯವಿಲ್ಲ. ಏನು ನಡೆಯಬೇಕೋ ನಡೆದೇ ನಡೆಯುತ್ತದೆ. ಆದ್ದರಿ೦ದ ಈಗ ತಲೆ ಕೆಡಸಿಕೊಂಡು ಏನು ಪ್ರಯೋಜನ' ಎ೦ದು ವಾದಿಸುತ್ತ ಕೂತಿತ್ತು. |
ಆಗೊಂದು ದಿನ ನಾಲ್ವರು ಮೀನುಗಾರರು ಬಂದು ಕೆರೆಯ ಸುತ್ತ ಮುತ್ತ ಸುಳಿದಾಡಿದರು. ಅದನ್ನು ಕಂಡ ಮೊದಲನೆಯ ಮೀನು ಅಪಾಯವನ್ನು ಗ್ರಹಿಸಿ 'ಇವತ್ತು ಬಂದ ಮೀನುಗಾರರು ನಾಳೆಯೂ ಬರುತ್ತಾರೆ. ಬಲೆ ಬೀಸಲೂಬಹುದು. ಆದ್ದರಿಂದ ನಾನು ಅಪಾಯವನ್ನು ತಪ್ಪಿಸಿಕೊಳ್ಳುವುದು ಸೂಕ್ತ' ಎಂದೆಣಿಸಿ ಅಲ್ಲಿಂದ ಪರಾರಿಯಾಗಿ ಬೇರೆಡೆಗೆ ಹೋಗಿಬಿಟ್ಟಿತು. ಮತ್ತು ಬದುಕಿಕೊಂಡಿತು. |
ಮಾರನೆಯ ದಿನ ಮೀನುಗಾರರು ಬಂದು ಬಲೆ ಬೀಸಿದಾಗ ಎರಡನೆಯ ಮತ್ತು ಮೂರನೆಯ ಮೀನುಗಳೆರಡೂ ಸಿಕ್ಕಿಹಾಕಿಕೊಂಡವು. ಆದರೆ ಎರಡನೆಯ ಮೀನು 'ಇವರು ಬಲೆಯ ಕುಣಿಕೆ ಎಳೆಯುವುದರೊಳಗಾಗಿ ನಾನಿಲ್ಲಿಂದ ಪಾರಾಗಬೇಕು' ಎಂದುಕೊಳ್ಳುತ್ತ ಚಾಣಾಕ್ಷತೆಯಿ೦ದ ನುಣುಚಿಕೊಂಡು ದೂರ ಹೋಗಿಬಿಟ್ಟಿತು. ಅದೂ ಬದುಕಿಕೊಂಡಿತು. |
ಮೂರನೆಯ ಮೀನು ಯದ್ಭವಿಷ್ಯ ಮಾತ್ರ 'ಆಗಬೇಕಾದು ಆಗಿಯೇ ಆಗುತ್ತೆ. ಯಾರೂ ತಪ್ಪಿಸಲಾರರು' ಎ೦ದು ಬಡಬಡಿಸುತ್ತ ಆ ಮೀನುಗಾರರ ಬಲೆಯೊಳಗೆ ಉಳಿದು ತನ್ನ ಅಂತ್ಯವನ್ನು ಕಂಡಿತು.' |
ಜೀವನ ಮತ್ತದು ಒಡ್ಡಬಹುದಾದ ಪರೀಕ್ಷೆಗಳ ಮಾನದಂಡವಾಗಿ ಈ ಕಥೆಯನ್ನು ಗಣಿಸಿ ನೋಡಿದರೆ ಕೆಲವು ಸತ್ಯಗಳು ಗೋಚರವಾಗುತ್ತವೆ. |
ತರ್ಕ ಸೂಕ್ಷ್ಮತೆ, ಆಗು ಹೋಗುಗಳ ಬಗ್ಗೆ ಸಹಜವಾಗಿಯೇ ಮನಸ್ಸಿನಲ್ಲಿ ಹುಟ್ಟುವ ಲೆಕ್ಕಾಚಾರಗಳು- ನಮ್ಮ ಬದುಕಿನ ಉದ್ದಕ್ಕೂ ಹೆಣೆದುಕೊಂಡು ಬಂದು ನಮ್ಮ ಮಿದುಳಿನ ವಿಚಾರಧಾರೆಯ ಪ್ರತ್ಯುತ್ಪನ್ನ ಸಂಗತಿಗಳು. ಎಲ್ಲಿ ಯಾವಾಗ ಯಾವ ಲಾಜಿಕ್ ಬಳಸಿದರೆ ಬರಬಹುದಾದ, ಬಂದ ಮತ್ತು ಇನ್ನು ಮೇಲೆ ಬರಲಿರುವ ವಿಪತ್ತುಗಳನ್ನು ಯಶಸ್ವಿಯಾಗಿ ದಾಟಬಹುದೆಂಬ ತರ್ಕಸೂಕ್ಷ್ಮತೆಯನ್ನು ಈ ಮೂರು ಮೀನುಗಳು ದೃಷ್ಟಾಂತೀಕರಿಸಿವೆ. ಹೌದಲ್ಲವೇ? |
ಆದರೆ ಕೊಂಚ ತಾಳಿ… ಇಲ್ಲೊಂದು ಅನುಮಾನ. ಇಲ್ಲಿ ಜೀವನಭದ್ರತೆಯ ದೃಷ್ಟಿಯಿಂದ ಇದನ್ನವಲೋಕಿಸಿದಾಗ ಮೂರನೆಯ ಮೀನನ್ನು ಯಾರೂ ಮೆಚ್ಚಲಾಗದು, ತನ್ನ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳುವ ಬುದ್ಧಿಯಿಂದಾಗಿ ಕಂಡ ಪರ್ಯವಸಾನ ಅದು. ಇನ್ನು ಎರಡನೆಯ ಮೀನು ಕೊಟ್ಟ ಕೊನೆಯ ವರೆಗೂ ಅಪಾಯ ಕಣ್ಣೆದುರಲ್ಲಿದ್ದರೂ ಸುಮ್ಮನೇ ಕೂತದ್ದು ಅದರ (ಭಂಡ ) ಧೈರ್ಯವಾಗಬಹುದೇ? ಮೊದಲ ಮೀನು ಅತ್ಯಪೂರ್ವ ದೂರದೃಷ್ಟಿ ಬಳಸಿ ತನ್ನನ್ನೇ ಉಳಿಸಿ ಭದ್ರಪಡಿಸಿಕೊ೦ಡರೆ ಅದು ಜಾಣ್ಮೆಯೇ ಇರಲೂಬಹುದು. ಆದರೆ ಮೀನುಗಾರರು ಮಾರನೇ ದಿನ ಬರದೇ ಹೋಗಿದ್ದರೆ? ಇದ್ದ ಮನೆಯನ್ನೇ ಕಳಕೊಂಡಂತಾಯ್ತಲ್ಲ? |
ಇವೆಲ್ಲವನ್ನೂ ಮೀರಿದ ಇನ್ನೊಂದು ದಾರಿಯನ್ನು ಮನುಷ್ಯರು, ಅದರಲ್ಲೂ ಹೆಚ್ಚಾಗಿ ಹದಿ ಹರೆಯದ ತರುಣ ತರುಣಿಯರು ಅನುಸರಿಸುತ್ತಾರೆ. ಅದೇ 'ಆತ್ಮಹತ್ಯೆ'! ತಮ್ಮ ಪ್ರಾಣವನ್ನು ಕ್ಷಣಾರ್ಧದಲ್ಲಿ ತಾವೇ ಬಲಿಕೊಟ್ಟು ಜೀವನವನ್ನೇ ಮೋಸಗೊಳಿಸುವ ಹುಡುಗ ಹುಡುಗಿಯರ ದೊಡ್ಡ ಪಡೆಯನ್ನೇ ನಾವಿಂದು ಎಲ್ಲೆಲ್ಲೂ ಕಾಣುತ್ತೇವೆ. ಇವರಲ್ಲಿ ಬಹುತೇಕರಿಗೆ ಬದುಕು ಎಂದರೆ ಏನು? ಅದರ ಮಹತ್ವವೇನು ಎಂಬ ಯಾವ ಗಹನ ಸೂಕ್ಷ್ಮವೂ ಅರ್ಥವಾಗಿರುವುದೇ ಇಲ್ಲ. ಅತಿ ಕ್ಷುಲ್ಲಕ ಕಾರಣಗಳಿಗಾಗಿ ಜೀವ ಕೊಡುವ ಇವರ ನಿರ್ಧಾರಗಳ ಪೂರ್ವಾಪರಗಳನ್ನು ವಿಮರ್ಶಿಸಿ ನೋಡಿದರೆ ಸಂಭವಿಸಿದ ಅನೇಕ ಸಾವುಗಳು ತಮಗೆ ತಾವೇ ಮಾಡಿಕೊ೦ಡ ಅನ್ಯಾಯಗಳಾಗಿರುತ್ತವೆ ಎ೦ದು ಸ್ಪಷ್ಟವಾಗಿ ತಿಳಿಯದೇ ಇರಲಾರದು. ಅಪವಾದಗಳನ್ನು ಹೊರತುಪಡಿಸಿಯೂ ಈ ನಿರ್ಧಾರವನ್ನು ಸರಿ ಎನ್ನಲಾಗದು! |
ಇಲ್ಲಿ ಯದ್ಭವಿಷ್ಯ ಮೀನು ಕೂಡ ಇಂಥದೇ ಆತ್ಮಹತ್ಯಾ ಪೃವೃತ್ತಿಯ ಸಂಕೇತವಾಗಿದೆ. ಅಪಾಯವನ್ನು ಎದುರಿಸದೆ, ಪಾರಾಗುವ ಪ್ರಯತ್ನವನ್ನೂ ಮಾಡದೇ ಸಾವಿಗೆ ತನ್ನನ್ನೇ ಒಡ್ಡಿಕೊಂಡ ಅದರಂತೆಯೇ ಸಾವಿರಾರು ಹುಡುಗ ಹುಡುಗಿಯರು ತಮ್ಮ ಸಾವಿನಲ್ಲಿ ಒಂದಿಷ್ಟು ಸಂತಾಪ, ಸಹಾನುಭೂತಿಗಳ ಜೊತೆಯಲ್ಲೇ ಅಧೈರ್ಯ, ಆತ್ಮಸ್ಥೈರ್ಯದ ಕೊರತೆಯ ಸಂಕೇತಗಳಾಗಿ ಉಳಿದು ಹೋಗುತ್ತಾರೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಉತ್ತರವಲ್ಲ ಎಂಬ ಸರಳ ಸತ್ಯವನ್ನು ಅರಿಯದೇ ಮರವಾಗಿ ಬೆಳೆಯದ ಸಸಿಯಾಗೇ ಉಳಿದು ಮುಗಿದು ಹೋಗುತ್ತಾರೆ. |
ಬದುಕು ಖಂಡಿತವಾಗಿ ನಮ್ಮೆದುರು ಆಯ್ಕೆಗಳನ್ನು ತೆರೆದಿಟ್ಟೇ ಪರೀಕ್ಷೆಗಳನ್ನು ಒಡ್ಡೀತು. ಸಮಯ, ಸಂದರ್ಭ, ಗತಿವಿಧಿಗಳ ಸೂತ್ರವೆಲ್ಲವನ್ನೂ ತನ್ನ ಕೈಯೊಳಗಿಟ್ಟುಕೊ೦ಡು ನಡೆಸುವ ಪರೀಕ್ಷೆಗಳಿವು. ಆಯ್ಕೆಯ ಅವಕಾಶವಿದ್ದರೂ ಯಾವ ಆಯ್ಕೆ ಸೂಕ್ತವೆಂಬುದನ್ನು ನಿರ್ಧರಿಸುವ ಅಂಶಗಳು ನಮ್ಮ ಮಾನಸಿಕ ಸ್ತರಗಳ ದಕ್ಷತೆ, ಧಾರ್ಡ್ಯವನ್ನು ಕೆಣಕದೆ ಇರಲಾರವು… ಪರೀಕ್ಷೆಯ ಎಲ್ಲ ಪೇಪರುಗಳು ಹೇಗೆ ವಿಭಿನ್ನ ವಿಷಯಗಳ ಆಗರವೋ ಹಾಗೆಯೇ ಈ ಆಯ್ಕೆಯೂ ವೈವಿಧ್ಯತೆಯ ಪ್ರತೀಕಗಳೇ. 'ತೇನ ವಿನಾ ತೃಣಮಪಿ ನ ಚಲತಿ' ಮನೋಭಾವವನ್ನೊಪ್ಪಿಕೊಳ್ಳುತ್ತಲೇ 'ಈಸಬೇಕು ಇದ್ದು ಜೈಸಬೇಕು' ತತ್ವ ನಮ್ಮನ್ನು ಹಿಂಬಾಲಿಸಿ ಬರುವಾಗ ಬದುಕೊಡ್ಡಿದ ಪರೀಕ್ಷೆಗಳ ನಿರ್ಣಾಯಕ ಫಲಿತಾಂಶ ನಮ್ಮ ಅಂತಸ್ಸತ್ವದ ಆಳವನ್ನರಿಯುವ ಸೂಚನೆಯಾದೀತು. ತರ್ಕವನ್ನೇ ಮೂಲವಾಗಿಟ್ಟು ಕೊಂಡರೂ ಈ ಮೂರು ಮೀನುಗಳು ತಳೆಯುವ ನಿರ್ಧಾರಗಳೊಂದಿಗೆ ಏಕೀಭವಿಸಿರುವ ಮೊದಲ ಮೀನಿನ ದೂರದೃಷ್ಟಿ, ಎರಡನೆಯದರ ಚಾಣಾಕ್ಷತೆ ಮತ್ತು ಕೊನೆಯ ಮೀನಿನ ಅಸಾಧಾರಣ ವಿಚಿತ್ರ ಭಯ ಮತ್ತು ಅಪಾಯದೆದುರಿನಲ್ಲೂ ಮೇಲೆದ್ದು ವ್ಯಾಪಿಸುವ ನಿರ್ಲಿಪ್ತತೆ , ಅದು ಸಾವನ್ನೇ ತಂದೊಡ್ಡಿದರೂ 'ನಡೆಯುವುದು ತಪ್ಪದು' ಎಂಬ ಹುಸಿ ಸಮರ್ಥನೆಯಡಿಯಲ್ಲಿ ಮಾಡಿಕೊಂಡ ಆತ್ಮಹತ್ಯೆ ಹೌದಲ್ಲವೇ ?! ನಮ್ಮಲ್ಲೂ ಇರಬಹುದಾದ ಇಂಥವೇ ಮನೋವ್ಯಾಪಾರಗಳ ಸೂಚಿಗಳು. 'ನಾಳೆ'ಯನ್ನು ಕುರಿತ ನಮ್ಮ ನಡೆಗಳು ಇಂದೇ ನಿರ್ಧಾರವಾಗಬೇಕಿರುತ್ತದೆ. ಸಮಯಪ್ರಜ್ಞೆ,ಸಮಂಜಸತೆಗಳ ಮೇಳೈಕೆಯ ಅವಶ್ಯಕತೆಯಿದೆ. ಜೀವನ ನಾವೆಂದುಕೊಂಡಷ್ಟು ಕ್ರೂರಿಯಲ್ಲ, ಹಾಗೆಂದು ಅದು ನಮ್ಮ ಸ್ನೇಹಿತನೂ ಅಲ್ಲ…ಅದನ್ನು ಉಳಿಸಿ, ಬೆಳೆಸಿ ಸದುಪಯೋಗಪಡಿಸಿಕೊಳ್ಳಬೇಕೇ ಹೊರತು ಯಾವುದೇ ವಿಧಾನದ 'ಆತ್ಮಹತ್ಯೆ'ಗೆ ಎಳಸಬಾರದು. |
ಯಾವ ಮೀನು ನಿಮಗೆ ಮೆಚ್ಚಿಗೆ? ಅರ್ಥಾತ್ ಈ ಮೂರು 'ಉಪಾಯ'ಗಳಲ್ಲಿ ನಿಮ್ಮ ಆಯ್ಕೆ ಯಾವುದು? ಆದರೆ ಕೊನೆಯ ಮೀನು ನಿಮ್ಮ ಆಯ್ಕೆ ಆಗದಿರಲಿ! |
Previous articleಆಟೋರಿಕ್ಷಾ ಚಾಲನೆಯಿಂದಾರಂಭಿಸಿ ವಿಮಾನದ ಪೈಲಟ್- ಇದು ಶ್ರೀಕಾಂತ್ ಸಾಧನೆಯ ಎತ್ತರ! |
Next articleಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಚಾಲನೆ, ಐದು ಕೋಟಿ ಅಗತ್ಯ ಮನೆಗಳಿಗೆ ಉಚಿತ ಎಲ್ ಪಿಜಿ ಸಂಪರ್ಕ ಮೋದಿ ಗುರಿ |
8 ವರ್ಷದಿಂದ ಮನೆಯಿಂದ ಹೊರಬರಲಿಲ್ಲ ! ಏನು ನಡೆಯಿತು ತಿಳಿದರೆ ನೀವು ಶಾಕ್ ಆಗ್ತೀರಾ… ಭಾರತದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಇದು … – Nan Magand |
December 29, 2019 ನನ್ ಮಗಂದ್Leave a Comment on 8 ವರ್ಷದಿಂದ ಮನೆಯಿಂದ ಹೊರಬರಲಿಲ್ಲ ! ಏನು ನಡೆಯಿತು ತಿಳಿದರೆ ನೀವು ಶಾಕ್ ಆಗ್ತೀರಾ… ಭಾರತದಲ್ಲಿ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಇದು … |
ಮನುಷ್ಯ ಸಂಘ ಜೀವಿ ಹಾಗೂ ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ ಹೀಗೆ ಒಂಟಿಯಾಗಿ ಅವನು ಬದುಕುವುದಾದರೆ ಅವನ ಜೀವನ ಸ್ವಲ್ಪ ವರ್ಷಗಳು ಅಷ್ಟೆ ಅವನು ಒಂಟಿಯಾಗಿ ಬದುಕಲು ಸಾಧ್ಯವೇ ಆಗದು. |
ಹಾಗೂ ನಮಗೆ ಬೇಸರವಾದಾಗ ನಾವು ಬೇರೆ ವಿಷಯಗಳಿಗೆ ತಲೆ ಕೊಡದೆ ಮನಸ್ಸು ಅದರ ಬಗ್ಗೆ ಯೋಚಿಸದಂತೆ ನಾವು ನೋಡಿಕೊಳ್ಳಬೇಕು ಇನ್ನು ಈ ವಿಷಯದ ಬಗ್ಗೆ ನಾನು ಏಕೆ ಹೇಳುತ್ತಿದ್ದೇನೆ ಎಂದರೆ ಇಲ್ಲಿ ಒಬ್ಬ ಬಾಲಕನ ಕಥೆಯನ್ನು ಹೇಳುತ್ತೇನೆ ಸ್ನೇಹಿತರೇ ಅದೇನೆಂದರೆ . |
ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ರೈತ ಕುಟುಂಬವಿತ್ತು ಆ ರೈತ ನ ಹೆಸರು ಗೋವರ್ಧನ್ ಮತ್ತು ಆತನ ಹೆಂಡತಿಯ ಹೆಸರು ಸೀತಾ ಈ ದಂಪತಿಗಳಿಗೆ ಇಬ್ಬರು ಮಕ್ಕಳು ಹುಟ್ಟಿದ್ದರು . |
ಇನ್ನು ಒಬ್ಬ ಮಗ ಮನೆಯಲ್ಲೇ ಎಂಟು ವರ್ಷಗಳ ಕಾಲ ತನ್ನನ್ನು ತಾನೇ ಬಂದಿಯಾಗಿ ಅದೇಕೆ ಎಂದರೆ ಈ ಎಂಟು ವರ್ಷಗಳ ಹಿಂದೆ ಅವನ ಅಣ್ಣ ನಾದವನ್ನು ತೋಟದ ಮನೆಯಲ್ಲಿ ಅಚಾನಕವಾಗಿ ಸಾವನ್ನಪ್ಪಿದ ತನ್ನ ಅಣ್ಣನ ಸಾವಿನಿಂದ ನೊಂದು ಬೇಸರವಾಗಿ ಈ ಹುಡುಗನು ತನ್ನನ್ನು ತಾನು ಎಂಟು ವರ್ಷಗಳಿಂದ ಮನೆಯಲ್ಲೇ ಬಂಧನ ಮಾಡಿಕೊಂಡು ಇದ್ದ ಇನ್ನು ಈ ಹುಡುಗನ ದಿನ ನಿತ್ಯದ ಕಾರ್ಯಗಳನ್ನು ಅವನ ತಾಯಿ ನೋಡಿಕೊಂಡು ಇರುತ್ತಿದ್ದಳು . |
ಈಗ ಎಂಟು ವರ್ಷಗಳು ಕಳೆದ ನಂತರ ಈ ಹುಡುಗ ಮನೆಯಿಂದ ಆಚೆ ಬಂದಿದ್ದಾನಂತೆ ಅದು ಹೇಗೆ ಎಂದರೆ ಈ ಊರಿಗೆ ಒಬ್ಬ ಹೊಸ ಪ್ರೆಸಿಡೆಂಟ್ ಬಂದಿದ್ದಾರಂತೆ ಇನ್ನು ಇವರು ಆ ಹುಡುಗನಿಗೆ ಕೌನ್ಸಿಲಿಂಗ್ ಮಾಡಿ ಆ ಹುಡುಗನನ್ನು ಮೊದಲಿನ ಹಾಗೆ ಮಾಡಲು ಸಹಾಯ ಮಾಡಿದ್ದಾರಂತೆ ಒಬ್ಬ ಮಗನನ್ನು ಕಳೆದುಕೊಂಡು ಇದ್ದ ನೋವಿನಲ್ಲಿ ಈ ದಂಪತಿಗಳು ಇನ್ನೊಬ್ಬ ಮಗನೂ ಹೀಗೆ ಅದನ್ನಲ್ಲ ಎಂಬ ದುಃಖದಲ್ಲಿ ಎಂಟು ವರ್ಷಗಳ ಕಾಲದಿಂದಲೂ ಇದ್ದರು ಆದರೆ ಈ ಪ್ರೆಸಿಡೆಂಟ್ ನ ಸಹಾಯದಿಂದ ಈಗ ದಂಪತಿಗಳು ಖುಷಿಯಾಗಿದ್ದಾರೆ . |
ಏನೇ ಆಗಲಿ ಸ್ನೇಹಿತರೇ ತಂದೆ ತಾಯಿಗಳಿಗೆ ಮಕ್ಕಳು ಅವರು ಏನೇ ಆಗಿದ್ದರೂ ತಂದೆ ತಾಯಿಗಳು ಮಕ್ಕಳ ಕೈ ಬಿಡುವುದಿಲ್ಲ ಆದರೆ ಇಂದಿನ ವ್ಯವಸ್ಥೆಯಲ್ಲಿ ಹತ್ತು ಮಕ್ಕಳಿದ್ದರೂ ಒಬ್ಬ ತಾಯಿಯನ್ನು ನೋಡಿಕೊಳ್ಳದೇ ತಂದೆ ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ . ತಾಯಿ ಜನ್ಮವನ್ನು ಕೊಟ್ಟರೆ ತಂದೆ ಬದುಕನ್ನು ರೂಪಿಸಿಕೊಳ್ಳಲು ದಾರಿ ಮಾಡಿಕೊಡುತ್ತಾನೆ ಆದರೆ ಅಂತ ತಂದೆ ತಾಯಿಗಳನ್ನು ಭಾರ ಎನ್ನುವ ಹಾಗೆ ನೋಡಿಕೊಳ್ಳುತ್ತಾರೆ ಒಂಬತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಹೊತ್ತುಕೊಂಡು ತಾಯಿ ಮಕ್ಕಳನ್ನು ಸಾಕಿರುತ್ತಾರೆ . |
ಹಾಗೂ ತಂದೆ ಮಕ್ಕಳು ಜೀವನದಲ್ಲಿ ದೊಡ್ಡವರಾಗಿ ತಮ್ಮ ಕಾಲ ಮೇಲೆ ನಿಲ್ಲುವವರೆಗೂ ತಮ್ಮ ಭುಜದ ಮೇಲೆ ಅವರ ಜವಾಬ್ದಾರಿಯನ್ನು ಹೊತ್ತ ಕೊಂಡು ಮಕ್ಕಳಿಗೋಸ್ಕರ ಕಷ್ಟಪಡುತ್ತಾರೆ ಆದರೆ ಅಪ್ಪ ಅಮ್ಮನಿಗೆ ವಯಸ್ಸಾದ ನಂತರ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ . |
ಇಂದಿನ ಮಕ್ಕಳು ಆದ್ದರಿಂದ ಇಂತಹವರಿಗೆ ತಂದೆ ತಾಯಿಗಳ ಬೆಲೆ ತಿಳಿಸುವಂತೆ ತಂದೆ ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವ ಹಾಗೆ ಜಾಗೃತಿ ಮೂಡಿಸಬೇಕು ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭವಾಗಲಿ ಶುಭ ದಿನ ಧನ್ಯವಾದಗಳು . |
July 3, 2022 ನನ್ ಮಗಂದ್ |
ನಿಮ್ಮ ಮಕ್ಕಳಿಗೆ ಎಷ್ಟು ಓದಿದ್ರೂ ಅವರಿಗೆ ಓದಿದ್ದು ನೆನಪು ಉಳಿಯುತ್ತಿಲ್ವಾ ಹಾಗಾದ್ರೆ ಅಂತಹ ಮಕ್ಕಳು ಈ ರೀತಿಯ ರುದ್ರಾಕ್ಷಿ ಧರಿಸಿದರೆ ಸಾಕು ಅವರ ನೆನಪಿನ ಶಕ್ತಿ ಹೆಚ್ಚಾಗಿ ಓದಿನಲ್ಲಿ ಎಲ್ಲರಿಗಿಂತ ಮುಂದೆ ಬರುತ್ತಾರೆ …!!! |
3 ವರ್ಷ ಕೆಲಸ ಮಾಡಿದ್ದರೂ ವರ್ಗಕ್ಕೆ ಅರ್ಹತೆ | Prajavani |
3 ವರ್ಷ ಕೆಲಸ ಮಾಡಿದ್ದರೂ ವರ್ಗಕ್ಕೆ ಅರ್ಹತೆ |
ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧಾರ |
Published: 18 ಡಿಸೆಂಬರ್ 2018, 00:08 IST |
Updated: 18 ಡಿಸೆಂಬರ್ 2018, 00:08 IST |
ಬೆಳಗಾವಿ: ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಬೇಕಾದರೆ ಒಂದು ವಲಯದಲ್ಲಿ ಕನಿಷ್ಠ ಐದು ವರ್ಷ ಪೂರೈಸಿರಬೇಕು ಎಂಬ ನಿಯಮವನ್ನು ಮೂರು ವರ್ಷಕ್ಕೆ ಇಳಿಸುವ ಮೂಲಕ ಈ ಸಮುದಾಯಕ್ಕೆ ಸಿಹಿ ಸುದ್ದಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. |
ಈ ಉದ್ದೇಶದಿಂದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ –2007ಕ್ಕೆ ತಿದ್ದುಪಡಿ ತರಲು ಸರ್ಕಾರ ತೀರ್ಮಾನಿಸಿದ್ದು, ಇಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಿದೆ. |
ಕೋರಿಕೆ ವರ್ಗಾವಣೆಯಡಿ ಅರ್ಜಿ ಸಲ್ಲಿಸಲು ಯಾವುದೇ ವಲಯ( ಸಿ–ಗ್ರಾಮೀಣ, ಬಿ–ನಗರದಿಂದ 10 ಕಿ.ಮೀ ದೂರ, ಎ–ನಗರ ಪ್ರದೇಶ) ದಲ್ಲಿ ಐದು ವರ್ಷ ಕೆಲಸ ಮಾಡಲೇಬೇಕಾಗಿತ್ತು. ಇದರಿಂದ ತೊಂದರೆಯಾಗಿದೆ ಎಂದೂ ಶಿಕ್ಷಕರ ಸಂಘ ದೂರಿತ್ತು. ಹೀಗಾಗಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. |
ಆದರೆ, ಪದವಿಪೂರ್ವ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು 'ನಗರ' ವ್ಯಾಪ್ತಿ ಎಂದು ಪರಿಗಣಿಸುವುದಿಲ್ಲ. ಶಿಕ್ಷಕ ದಂಪತಿ ಪೈಕಿ ಪತಿ, ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಅಲ್ಲಿ ದೊರೆಯದಿದ್ದರೆ ಮತ್ತು ಪತಿ–ಪತ್ನಿ ಪ್ರಕರಣದಲ್ಲಿ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆಗೆ ಅನುವು ಮಾಡಿಕೊಡುವ ಉದ್ದೇಶ |
ದಿಂದ, ಅಂತಹವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಪ್ರಸ್ತಾವವೂ ಮಸೂದೆಯಲ್ಲಿದೆ. |
ಪತಿ–ಪತ್ನಿ ಪ್ರಕರಣದಡಿ ವರ್ಗಾವಣೆ ಬಯಸಬೇಕಾದರೆ ಈ ಮೊದಲು ಇಬ್ಬರೂ ಸರ್ಕಾರಿ ನೌಕರರಾಗಿರಬೇಕು ಎಂಬ ನಿಯಮವಿತ್ತು. ಈಗ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದವರಿಗೂ ಇದು ಅನ್ವಯಿಸಲಿದೆ. |
ಕಡ್ಡಾಯ ವರ್ಗಾವಣೆ:'ಎ' ವಲಯದಲ್ಲಿ ಗರಿಷ್ಠ ಸೇವಾ ಅವಧಿ ಪೂರ್ಣಗೊಳಿಸಿದ ಮತ್ತು ಎರಡು ವರ್ಷಗಳಿಗಿಂತ ಹೆಚ್ಚು ಸೇವೆ ಉಳಿದಿರುವ ಶಿಕ್ಷಕರಿಗೆ 'ಸಿ' ವಲಯದ ಹುದ್ದೆಗೆ ವರ್ಗಾವಣೆ ಕಡ್ಡಾಯ. ಆದರೆ, ಶಿಕ್ಷಕರ ಅಥವಾ ನೌಕರರ ಸಂಘದ ಪದಾಧಿಕಾರಿ |
ಯಾಗಿರುವ ಶಿಕ್ಷಕ, ಅವಿವಾಹಿತ ಶಿಕ್ಷಕಿ, ವಿಧವೆ ಮತ್ತು ಶೇ 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ಶಿಕ್ಷಕರಿಗೆ ಇದರಿಂದ ವಿನಾಯಿತಿ ಸಿಗಲಿದೆ. |
ಮಸೂದೆಯ ಇತರ ಅಂಶಗಳು |
* ಕೌನ್ಸೆಲಿಂಗ್ ಪ್ರಕ್ರಿಯೆಯ ಸಂದರ್ಭದಲ್ಲಿ ಹುದ್ದೆ ತುಂಬಲೇಬೇಕಾದ ಶಾಲೆಯನ್ನು ಯಾವೊಬ್ಬ ಶಿಕ್ಷಕನೂ ಆಯ್ಕೆ ಮಾಡಿಕೊಳ್ಳದಿದ್ದರೆ ಇತರ ವಲಯದಲ್ಲಿ ಕನಿಷ್ಠ ಸೇವಾ ಅವಧಿ (ಒಂದು ವಲಯದಲ್ಲಿ ವಿವಿಧ ವೃಂದಗಳಲ್ಲಿ ಒಟ್ಟಾರೆಯಾಗಿ 5 ವರ್ಷ ಸತತ ಸೇವೆ) ಪೂರೈಸಿದ ಶಿಕ್ಷಕರನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ. |
* ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಜ್ಯೇಷ್ಠತಾ ಘಟಕಕ್ಕೆ ಶಿಕ್ಷಕರ ವರ್ಗಾವಣೆಗೆ ನಿಷೇಧ. |
* ಶಿಕ್ಷಕರ ಜ್ಯೇಷ್ಠತಾ ಘಟಕದ ಹೊರಗಿನ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ದಿಮೆಯ ಹುದ್ದೆಯಲ್ಲಿರುವ ನೌಕರನನ್ನು ಶಿಕ್ಷಕರು ವಿವಾಹವಾದರೆ ಅಂಥವರಿಗೆ ಸೇವಾವಧಿಯ ಹೊರತಾಗಿಯೂ ವರ್ಗಾವಣೆ |
* ಶಿಕ್ಷಕ ಕೋರಿಕೆಯಂತೆ ಕೌನ್ಸೆಲಿಂಗ್ ಪ್ರಕ್ರಿಯೆಯ ಮೂಲಕ ಜ್ಯೇಷ್ಠತೆ ಘಟಕದ ಹೊರಗೆ ಆತನ ಸಂಗಾತಿ ಕೆಲಸ ಮಾಡುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿನ ಸ್ಥಳ ಅಥವಾ ಹುದ್ದೆಗೆ (ನಗರ ಪ್ರದೇಶ ಹೊರತುಪಡಿಸಿ) ವರ್ಗಾವಣೆಗೆ ಅವಕಾಶ. |
ಬಾಲಗಂಗಾಧರ ತಿಲಕರಿಂದ ಸ್ವಾತಂತ್ರ್ಯ ಹೋರಾಟದ ಏಕೀಕರಣ: ಡಾ. ಎಂ.ಕೆ.ಪ್ರಸಾದ್‌ರಿಂದ ದೇಶ ಪ್ರೇಮ ಬೆಳೆಸುವ ಜಾಗೃತಿ ಕಾರ್ಯ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 |
ಬಾಲಗಂಗಾಧರ ತಿಲಕರಿಂದ ಸ್ವಾತಂತ್ರ್ಯ ಹೋರಾಟದ ಏಕೀಕರಣ: ಡಾ. ಎಂ.ಕೆ.ಪ್ರಸಾದ್‌ರಿಂದ ದೇಶ ಪ್ರೇಮ ಬೆಳೆಸುವ ಜಾಗೃತಿ ಕಾರ್ಯ |
ಈ ಬಾರಿ ದೇವಳದ ವಠಾರದ ಗಣೇಶೋತ್ಸವದಲ್ಲಿ ಆರ್ಟಿಕಲ್ 370 ರದ್ಧತಿ ವಿಶೇಷ |
ಪುತ್ತೂರು: ಭಕ್ತಿ ಹಾಗೂ ಭಾವೈಕ್ಯತೆಯ ಜತೆಗೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಆರಂಭಗೊಂಡ ಸಾರ್ವಜನಿಕ ಗಣೇಶೋತ್ಸವ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದು ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ. ತಿಲಕರ ಕರೆಗೆ ಜಾತಿ-ಮತ ಭೇದವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು. ದಿನಕಳೆದಂತೆ ಅಧುನಿಕ ಯುಗದಲ್ಲಿ ಹಲವಾರು ಕಡೆ ಆಡರಂಬರದ ಗಣೇಶ ಹಬ್ಬ ಆಚರಿಸಿದರೆ ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಮಾರ್ಗದಲ್ಲೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋತ್ಸವ ಕಾರ್ಯಕ್ರಮದಲ್ಲೂ ದೇಶ ಪ್ರೇಮ ಬೆಳೆಸುವ ಕಾರ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ನಡೆಸಲಾಗುತ್ತಿದೆ. |
ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡುವುದಕ್ಕಾಗಿ ಸಾಧನವಾಗಿ ಬಳಸಿಕೊಂಡರು. ಅದೇ ಚಿಂತನೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಾ. ಎಂ.ಕೆ.ಪ್ರಸಾದ್ ಅವರ ಗೌರವಾಧ್ಯಕ್ಷತೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ದೇಶ ಪ್ರೇಮ, ಪರಿಸರ ಪ್ರೇಮ, ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಒಂದೊಂದು ರೀತಿಯಲ್ಲಿ ನಾನಾ ಸಂದೇಶ, ಮಾಹಿತಿಗಳನ್ನೊಳಗೊಂಡ ಬೃಹತ್ ಕಟೌಟ್ ಅಳವಡಿಸಿ ಜನರನ್ನು ಜಾಗೃತಿ ಗೊಳಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಸಭಾಂಗಣ ಮತ್ತು ವೇದಿಕೆ ಸೇರಿದಂತೆ ಕಂಬ-ಕಂಬಗಳಲ್ಲೂ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಇಟ್ಟು ದೇಶ ಪ್ರೇಮಕ್ಕೆ ಸ್ಪೂರ್ತಿ ನೀಡುತ್ತಿರುವ ಗಣೇಶೋತ್ಸವ ಸಮಿತಿ ಈ ವರ್ಷ ಆರ್ಟಿಕಲ್ 370 ರದ್ದತಿ ಕುರಿತು ಹೆಚ್ಚಿನ ಮಾಹಿತಿ ನೀಡಿದೆ. |
ಒನ್ ನೇಷನ್, ಒನ್ ಫ್ಲ್ಯಾಗ್, ಒನ್ ಕಾನ್‌ಸ್ಟಿಟ್ಯೂಷನ್ ಎಂಬ ಧ್ಯೇಯವನ್ನು ಇಟ್ಟು ಕೊಂಡು ಜಮ್ಮುಕಾಶ್ಮೀರದ ಆರ್ಟಿಕಲ್ 370 ರದ್ದತಿಯ ಕುರಿತು ಮಾಹಿತಿ ನೀಡುವ ಕಾರ್ಯಕ್ಕೆ ಇಲ್ಲಿ ಸಿದ್ಧತೆ ನಡೆಯುತ್ತಿದೆ. ಇದರ ಜೊತೆ ಸಂತೃಪ್ತ ರೈತ ಸಂತೃಪ್ತ ಭಾರತ, ನಮ್ಮ ಸೈನ್ಯ, ನಮ್ಮ ಹೆಮ್ಮೆ ಸೇರಿದಂತೆ ಆಧುನಿಕ ವಿಜ್ಞಾನ ಯುಗದ ಸಂಶೋಧನಾ ಭರಿತ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶ ಇಟ್ಟುಕೊಂಡು ಸಭಾಂಗಣದ ಉದ್ದಕ್ಕೂ ಬೃಹತ್ ಕಟೌಟ್‌ಗಳ ಅಳವಡಿಸಲಾಗುತ್ತದೆ. ಇದರ ಪೂರ್ಣ ಉಸ್ತುವಾರಿಯನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ವಹಿಸಿಕೊಂಡಿದ್ದಾರೆ. ಈಗಾಗಲೇ ಕಟೌಟ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. |
ಪೆಟ್ರೋಲ್-ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ತರಲು ನಡೆದಿದೆ ಹಗ್ಗಜಗ್ಗಾಟ | Kannada Dunia | Kannada News | Karnataka News | India News |
HomeBusinessಪೆಟ್ರೋಲ್-ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ತರಲು… |
23-08-2018 10:33AM IST / No Comments / Posted In: Business, Latest News |
ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಮೇಲೆ ಸರ್ಕಾರ ಜಿಎಸ್ಟಿ ಜಾರಿಗೊಳಿಸೋಕೆ ಇನ್ನೂ ಹಿಂದೆ ಮುಂದೆ ನೋಡ್ತಿದೆ. ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಕಚ್ಚಾತೈಲ, ನೈಸರ್ಗಿಕ ಇಂಧನ ಮತ್ತು ವಿಮಾನಕ್ಕೆ ಬಳಸುವ ಪೆಟ್ರೋಲ್ ಉತ್ಪನ್ನಗಳನ್ನ ಒನ್ ನೇಷನ್ ಒನ್ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಿಲ್ಲ. ಜುಲೈ 2017ರಿಂದಲೂ ಪೆಟ್ರೋಲ್ ಸೇರಿದಂತೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ತರೋದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಮುಂದು ನೋಡ್ತಿವೆ. |
ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಕೇಳಿಬರ್ತಿರೋ ಮಾತುಗಳು ಏನಂದ್ರೆ ಪೆಟ್ರೋಲ್ ಡೀಸೆಲ್ ಸೇರಿದಂತೆ ಇತರೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸೋದ್ರಿಂದ ರಾಜ್ಯ ಮತ್ತು ಕೇಂದ್ರಗಳ ಆದಾಯ ಕುಂಠಿತವಾಗಲಿದೆಯಂತೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸದ್ಯಕ್ಕೆ ಪೆಟ್ರೋಲ್-ಡೀಸೆಲ್, ಇತರೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸುವ ಯಾವುದೇ ಯೋಚನೆಗಳು ಸದ್ಯಕ್ಕಿಲ್ಲ ಅಂತ ಹೇಳಲಾಗ್ತಿದೆ. |
ಈ ಬಗ್ಗೆ ಆಗಸ್ಟ್ 4ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ರಾಜ್ಯ ಸರ್ಕಾರಗಳು ಕೂಡ ವಿರೋಧ ವ್ಯಕ್ತಪಡಿಸಿವೆಯಂತೆ. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ ನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿದ ಪಕ್ಷದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸುಮಾರು 20,000 ಕೋಟಿ ನಷ್ಟ ಸಂಭವಿಸಲಿದೆಯಂತೆ. ಇನ್ನು ರಾಜ್ಯ ಸರ್ಕಾರಗಳಿಗೂ ಕೂಡ ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ಜಾರಿಯಾದ್ರೆ ಹೆಚ್ಚಿನ ನಷ್ಟ ಸಂಭವಿಸಲಿದೆಯಂತೆ. |
ಸದ್ಯಕ್ಕೆ ದೆಹಲಿಯಲ್ಲಿ ಪೆಟ್ರೋಲ್ ದರದ ಮೇಲೆ 19.48 ರೂಪಾಯಿಯ ತೆರಿಗೆಯನ್ನ ಸರ್ಕಾರ ವಿಧಿಸಿದೆ. ಡೀಸೆಲ್ ದರದ ಮೇಲೆ 15.33 ರೂಪಾಯಿ ತೆರಿಗೆಯನ್ನ ವಿಧಿಸಿದೆ. ತೈಲ ಕಂಪನಿಗಳಿಂದ ಖರೀದಿಸುವ ಬೆಲೆಗಿಂತ ಶೇಕಡಾ 27 ರಷ್ಟು ಹೆಚ್ಚಿನ ಬೆಲೆಗೆ ತೈಲ ಮಾರಾಟವಾಗ್ತಿದೆ. |
ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡಾ 39ರಷ್ಟು ವ್ಯಾಟ್ ಇದ್ದರೆ, ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇಕಡಾ 26ರಷ್ಟು ವ್ಯಾಟ್ ವಿಧಿಸಲಾಗಿದೆ. ಒಟ್ಟಾರೆ ಪೆಟ್ರೋಲ್ ಮೇಲೆ ಶೇಕಡಾ 45-50 ಮತ್ತು ಡೀಸೆಲ್ ಮೇಲೆ 35-40 ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಜಾನೆ ತುಂಬಿಸುತ್ತಿದೆ. |
7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬಲಿಷ್ಠ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿ ಬೆಂಗಾಲ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ವಿರುದ್ಧ 34-39 ಅಂಕಗಳಿಂದ ಬೆಂಗಾಲ್ ಗೆಲುವಿನ ಕೇಕೆ ಹಾಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... |
Ahmedabad, First Published Oct 19, 2019, 9:10 PM IST |
ಅಹಮದಾಬಾದ್[ಅ.19]: 7ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಕಾದಾಟದಲ್ಲಿ ದಬಾಂಗ್ ಡೆಲ್ಲಿಯನ್ನು 34-39 ಅಂಕಗಳ ಅಂತರದಿಂದ ಮಣಿಸಿ ಚೊಚ್ಚಲ ಬಾರಿಗೆ ಬೆಂಗಾಲ್ ವಾರಿಯರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. |
ಬೆಂಗಾಲ್ ವಾರಿಯರ್ಸ್ ಪರ ಮಣೀಂದರ್ ಅನುಪಸ್ಥಿತಿಯಲ್ಲಿ ಸುಕೇಶ್ ಹೆಗ್ಡೆ ಮೊದಲ ರೈಡ್ ಮಾಡಿದರು. ಚಂದ್ರನ್ ರಂಜಿತ್ ಬೋನಸ್ ಮೂಲಕ ಡೆಲ್ಲಿಗೆ ಅಂಕಗಳ ಖಾತೆ ತೆರೆದರು. ಇದರ ಬೆನ್ನಲ್ಲೇ ಪ್ರಪಂಜನ್'ರನ್ನು ಟ್ಯಾಕಲ್ ಮಾಡಿದ ಡೆಲ್ಲಿ 2-0 ಅಂಕಗಳಿಂದ ಮುನ್ನಡೆಯಿತು. ಪಂದ್ಯದ ನಾಲ್ಕನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ಅಂಕಗಳ ಖಾತೆ ತೆರೆಯಿತು. ರವೀಂದರ್ ರಮೇಶ್, ರಿಂಕು ನರ್ವಾಲರನ್ನು ಔಟ್ ಮಾಡುವ ಮೂಲಕ ವಾರಿಯರ್ಸ್'ಗೆ ಮೊದಲ ಯಶಸ್ಸು ತಂದಿತ್ತರು. ಡಿಫೆಂಡಿಂಗ್'ನಲ್ಲಿ ಪ್ರಾಬಲ್ಯ ಮೆರೆದ ಡೆಲ್ಲಿ 6ನೇ ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ಆಲೌಟ್ ಮಾಡಿ 11-3 ಅಂಕಗಳ ಭರ್ಜರಿ ಮುನ್ನಡೆ ಸಾಧಿಸಿತು. ಆರಂಭಿಕ ಹಿನ್ನಡೆಯನ್ನು ಮೆಟ್ಟಿ ನಿಲ್ಲಲು ಬೆಂಗಾಲ್ ವಾರಿಯರ್ಸ್ ಆಕ್ರಮಣಕಾರಿ ಆಟದ ರಣತಂತ್ರ ಅಳವಡಿಸಿಕೊಂಡಿತು. ಪರಿಣಾಮ ಪಂದ್ಯದ 16ನೇ ನಿಮಿಷದಲ್ಲಿ ದಬಾಂಗ್ ಡೆಲ್ಲಿಯನ್ನು ಆಲೌಟ್ ಮಾಡುವ ಮೂಲಕ 14-15 ಅಂಕಗಳೊಂದಿಗೆ ಕೇವಲ ಒಂದಂಕದ ಹಿನ್ನಡೆ ಅನುಭವಿಸಿತು. ಕೊನೆಗೂ ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 17-17 ಅಂಕಗಳ ಸಮಬಲ ಸಾಧಿಸಿದವು. |
ಮೊದಲಾರ್ಧದಲ್ಲಿ ಆಕ್ರಮಣಕಾರಿಯಾಟದ ರಣತಂತ್ರ ಫಲಕೊಟ್ಟಿದ್ದರಿಂದ ಕನ್ನಡಿಗ ರಮೇಶ್ ಕುಮಾರ್ ಮಾರ್ಗದರ್ಶನದ ಬೆಂಗಾಲ್ ವಾರಿಯರ್ಸ್ ತಂಡ ಮೊದಲ ಬಾರಿಗೆ ದ್ವಿತಿಯಾರ್ಧದಲ್ಲಿ ನಿಚ್ಚಳ ಮುನ್ನಡೆ ಗಳಿಸಿತು. ದ್ವಿತಿಯಾರ್ಧದ 6ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ಬೆಂಗಾಲ್ 25-21 ಅಂಕಗಳ ಮುನ್ನಡೆ ಗಳಿಸಿಕೊಂಡಿತು. ನಭೀಭಕ್ಷ್ ಹಾಗೂ ಸುಕೇಶ್ ಹೆಗ್ಡೆ ನಿರಂತರ ಅಂಕ ಗಳಿಸುತ್ತಲೇ ಸಾಗಿದರು. ಪರಿಣಾಮ 32ನೇ ನಿಮಿಷದಲ್ಲಿ ಡೆಲ್ಲಿಯನ್ನು ಮತ್ತೊಮ್ಮೆ ಆಲೌಟ್ ಮಾಡುವ ಮೂಲಕ ಬೆಂಗಾಲ್ ತಂಡ 34-24 ಅಂಕಗಳೊಂದಿಗೆ 10 ಅಂಕಗಳ ಮುನ್ನಡೆ ಸಾಧಿಸಿತು. ಕೊನೆಯಲ್ಲಿ ನವೀನ್ ಕುಮಾರ್ ಮಿಂಚಿನ ರೈಡಿಂಗ್ ನಡೆಸಿದರಾದರೂ ಅಂಕಗಳ ಅಂತರವನ್ನು ಕಡಿಮೆ ಮಾಡಿದರೇ ಹೊರತು, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. |
ಬೆಂಗಾಲ್ ವಾರಿಯರ್ಸ್ ಪರ ನಭೀಭಕ್ಷ್ 10 ಅಂಕ ಪಡೆದರೆ, ಕನ್ನಡಿಗರಾದ ಸುಕೇಶ್ ಹಗ್ಡೆ 8 ಹಾಗೂ ಜೀವಾ ಕುಮಾರ್ 4 ಅಂಕ ಪಡೆದರು. ಇನ್ನು ಡೆಲ್ಲಿ ಪರ ನವೀನ್ ಕುಮಾರ್ 18 ಅಂಕ ಪಡೆದರೆ, ಅನಿಲ್ ಕುಮಾರ್ ಹಾಗೂ ವಿಜಯ್ ತಲಾ ಮೂರು ಅಂಕ ಗಳಿಸಿದರು. |
ಟರ್ನಿಂಗ್ ಪಾಯಿಂಟ್: ಒಂದು ಹಂತದವರೆಗೂ ಉಭಯ ತಂಡಗಳಿಂದಲೂ ಜಿದ್ದಾಜಿದ್ದಿನ ಹೋರಾಟ ಕಂಡು ಬಂತು. ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತಿಯಾರ್ಧದ ಆರಂಭದಲ್ಲೇ ಡೆಲ್ಲಿಯನ್ನು ಆಲೌಟ್ ಮಾಡಿದ್ದ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು. ಆ ಬಳಿಕ ಸಿಕ್ಕ ಮುನ್ನಡೆಯನ್ನು ಬೆಂಗಾಲ್ ತಂಡದ ಲಾಭ ಪಡೆದು ಗೆಲುವಿನ ನಗೆ ಬೀರಿತು. |
ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾ ದಾಳಿ : ಭ್ರಷ್ಟರು ಬಲೆಗೆ | KANNADIGA WORLD |
Home ಕನ್ನಡ ವಾರ್ತೆಗಳು ಕರ್ನಾಟಕ ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾ ದಾಳಿ : ಭ್ರಷ್ಟರು ಬಲೆಗೆ |
ರಾಜ್ಯದ ಹಲವೆಡೆ ಏಕಕಾಲಕ್ಕೆ ಲೋಕಾ ದಾಳಿ : ಭ್ರಷ್ಟರು ಬಲೆಗೆ |
Posted By: Gulf ReporterPosted date: February 26, 2015 In: ಕರ್ನಾಟಕ |
ಬೆಂಗಳೂರು, ಫೆ.26: ಭ್ರಷ್ಟ ಅಧಿಕಾರಿಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿರುವ ಲೋಕಾಯುಕ್ತ ಪೊಲೀಸರು ಇಂದೂ ಐದು ಅಧಿಕಾರಿಗಳ ಲಂಚಾವತಾರ ಬಯಲು ಮಾಡಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. ಮೈಸೂರು, ಬೀದರ್, ಕಲ್ಬುರ್ಗಿಗಳಲ್ಲಿ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾ ಪೊಲೀಸರು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ. ಮೈಸೂರು ವರದಿ: ಲೋಕಾಯುಕ್ತ ಎಸ್‌ಪಿ ನಾರಾಯಣ್ ನೇತೃತ್ವದ ಲೋಕಾ ತಂಡ ವೈದ್ಯಾಧಿಕಾರಿ, ಪಾಲಿಕೆ ಸೂಪರಿಡಿಟೆಂಟ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಯೋಜನಾಧಿಕಾರಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. |
ಟಿ.ನರಸೀಪುರ ತಾಲೂಕಿನಲ್ಲಿ ವೈದ್ಯಾಧಿಕಾರಿಯಾಗಿರುವ ಕರಣಾಕರನ್ ಅವರ ಬನ್ನಿಮಂಟಪದಲ್ಲಿರುವ ನಿವಾಸ ಹಾಗೂ ನರ್ಸಿಂಗ್ ಹೋಂ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. |
ಅದೇ ರೀತಿ ಪಾಲಿಕೆ ಸೂಪರಿಡಿಟೆಂಡ್ ಪಾರ್ವತಮ್ಮ ಅವರ ರಾಜ್‌ಕುಮಾರ್ ರಸ್ತೆಯಲ್ಲಿರುವ ನಿವಾಸ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನಾಧಿಕಾರಿ ಲಿಂಗಣ್ಣ ಅವರ ಬನ್ನೂರು ರಸ್ತೆಯ ಮಾನಸಿನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. |
ಈ ಮೂವರು ಭ್ರಷ್ಟ ಅಧಿಕಾರಿಗಳಿಗೆ ಸಂಬಂಧಿಸಿದಂತೆ 9 ಕಡೆ ಏಕ ಕಾಲಕ್ಕೆ ಲೋಕಾ ಪೊಲೀಸರು ದಾಳಿ ನಡೆಸಿ ಅವರ ಕರ್ಮಕಾಂಡ ಬಯಲು ಮಾಡಿದ್ದಾರೆ. ಬೀದರ್; ಬೀದರ್‌ನಲ್ಲಿ ಅರಣ್ಯಾಧಿಕಾರಿಯಾಗಿರುವ ಶಶಿಕಾಂತ್ ಅವರ ನಿವಾಸ ಹಾಗೂ ಆತನ ಇಬ್ಬರು ಸ್ನೇಹಿತರ ಮನೆಗಳ ಮೇಲೆ ದಾಳಿ ನಡೆಸಿರುವ ಸ್ಥಳೀಯ ಲೋಕಾ ಪೊಲೀಸರು ಭಾರಿ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ. |
ಕಲ್ಬುರ್ಗಿ: ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದ ಲೋಕಾ ತಂಡ ಕಲ್ಬುರ್ಗಿ ಮಹಾನಗರ ಪಾಲಿಕೆಯಲ್ಲಿ ಎಇಇ ಆಗಿರುವ ಮಹಮ್ಮದ್ ಹಾಜಿ ಅವರ ನಯಾ ಮೊಹಲ್ಲಾ ನಿವಾಸದ ಮೇಲೆ ದಾಳಿ ನಡೆಸಿ 4.30 ಲಕ್ಷ ನಗದು, ಎರಡು ಕಾರು ಮತ್ತಿತರ ಆಸ್ತಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದೆ. |
ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್! |
Bengaluru, First Published Jan 4, 2019, 9:19 PM IST |
ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸದ್ಯ 521 ರನ್ ಸಿಡಿಸೋ ಮೂಲಕ ದಾಖಲೆ ಬರೆದಿರುವ ಚೇತೇಶ್ವರ್ ಪೂಜಾರ ಟೀಂ ಇಂಡಿಯಾ ಗೆಲುವಿನ ರೂವಾರಿಯಾಗಿದ್ದಾರೆ. ಕಾಂಗರೂ ನಲೆದಲ್ಲಿ ಅಬ್ಬರಿಸುತ್ತಿರುವ ಪೂಜಾರೆಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ. |
ಮುಂಬೈ(ಜ.04): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಆಡಿಲೇಡ್, ಮೆಲ್ಬರ್ನ್ ಹಾಗೂ ಇದೀಗ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸೋ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆಗೆ ಕಾರಣವಾಗಿರುವ ಪೂಜಾರಾಗೆ ಬಿಸಿಸಿಐ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. |
ಬಿಸಿಸಿಐ ಸಿಒಎ ವಿನೋದ್ ರೈ ಹೊಸ ಪ್ರಸ್ತಾವನೆ ಮಂದಿಟ್ಟಿದ್ದಾರೆ. ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಸದ್ಯ ಪೂಜಾರ ಎ ಕೆಟಗರಿಯಲ್ಲಿದ್ದಾರೆ. ಇದೀಗ ಆಸಿಸ್ ಪ್ರವಾಸದಲ್ಲಿ ಅಬ್ಬರಿಸಿದ ಪೂಜಾರಾಗೆ ಎ ಪ್ಲಸ್ ಗ್ರೇಡ್ ನೀಡಲು ಬಿಸಿಸಿಐ ಮುಂದಾಗಿದೆ. ಎ ಗ್ರೇಡ್ ಆಟಗಾರರಿಗೆ ಸದ್ಯ ವಾರ್ಷಿಕ ಸಂಭಾವನೆ 5 ಕೋಟಿ. ಇದೀಗ ಪೂಜಾರಾ ಎ ಗ್ರೇಡ್‌ನಿಂದ ಎ ಪ್ಲಸ್ ಗ್ರೇಡ್‌ಗೆ ಬಡ್ತಿ ಪಡೆದರೆ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ. |
ಎ ಪ್ಲಸ್ ಗ್ರೇಡ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. ಇವರೆಲ್ಲಾ ವಾರ್ಷಿಕ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಬಿ ಹಾಗೂ ಸಿ ಗ್ರೇಡ್ ಕ್ರಿಕೆಟಿಗರಿಗೆ ಕ್ರಮಾವಾಗಿ 3 ಮತ್ತು 2 ಕೋಟಿ ರೂಪಾಯಿ ನೀಡಲಾಗುತ್ತಿದೆ. |
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಪೂಜಾರ ದ್ವಿಶತಕ ಜಸ್ಟ್ ಮಿಸ್..! |
ಟೆಸ್ಟ್ ಬ್ಯಾಟ್ಸ್‌ಮನ್ ಅನ್ನೋ ಕಾರಣಕ್ಕೆ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸದ್ಯ ವಿರಾಟ್ ಕೊಹ್ಲಿ ಬಳಿಕ ಗರಿಷ್ಠ ಟೆಸ್ಟ್ ಶತಕ ಸಿಡಿಸಿದ ಹೆಗ್ಗಳಿಕೆಗೂ ಪೂಜಾರ ಪಾತ್ರರಾಗಿದ್ದಾರೆ. ಕೊಹ್ಲಿ 25 ಸೆಂಚುರಿ ಸಿಡಿಸಿದ್ದರೆ, ಪೂಜಾರ 18 ಶತಕ ಸಿಡಿಸಿದ್ದಾರೆ. ಇಷ್ಟಾದರೂ ಪೂಜಾರಾಗೆ ಸರಿಯಾದ ಗೌರವ ಸಿಕ್ಕಿಲ್ಲ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿದೆ. ಹೀಗಾಗಿ ಪೂಜಾರಾಗೆ ಎ ಪ್ಲಸ್ ಗ್ರೇಡ್ ನೀಡಲು ಬಿಸಿಸಿಐ ಮುಂದಾಗಿದೆ. |
ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗ್ತೀನಿ: ಸಚಿವ ಆರ್.ಶಂಕರ್ – Public TV |
77 ಬಾರಿ ನಿಯಮ ಉಲ್ಲಂಘಟನೆ- ಬೈಕ್ ಮಾಲೀಕನಿಗೆ ಬಿತ್ತು ಬಾರಿ ದಂಡ |
ಮೈಸೂರು: ಕೆಜೆಪಿ ಪಕ್ಷದಲ್ಲಿಯೇ ಮುಂದುವರಿಯುತ್ತೇನೆ ಅಂತಾ ಹೇಳುತ್ತಾ ಬಂದಿದ್ದ ಅರಣ್ಯ ಸಚಿವ ಆರ್.ಶಂಕರ್ ಈಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ಒಳ್ಳೆಯ ಮುಹೂರ್ತ ನೋಡಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಹೇಳುವ ಮೂಲಕ ಕೈ ಸೇರ್ಪಡೆಗೆ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ. |
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಆದರೆ ಸಚಿವ ಸಂಪುಟದಲ್ಲಿಯೇ ಇರುತ್ತೇನೆ. ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆ ವಿಚಾರ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಮಾಧ್ಯಮಗಳು ಕೆಲವು ಗೊಂದಲಗಳನ್ನು ಸೃಷ್ಟಿಸಿದ್ದವು. ಹೀಗಾಗಿ ಅದಕ್ಕೆ ನಾನೂ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. |
ಇದೇ ವೇಳೆ ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಕೇವಲ ಒಂದು ವಾರದ ಹಿಂದೆಯಷ್ಟೇ ರಮೀಳಾ ಉಮಾಂಶಕರ್ ಅವರು ಬಿಬಿಎಂಪಿ ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದ್ರು. |
ಈ ಹಿಂದೆ ಸಚಿವರು ಹೇಳಿದ್ದೇನು? |
ಬಿಜೆಪಿಗೆ ಬೆಂಬಲ ನೀಡುವ ಕುರಿತು ಉಡುಪಿಯಲ್ಲಿ ಸ್ಪಷ್ಟನೆ ನೀಡಿದ್ದ ಸಚಿವರು, ನಾನು ಸ್ವತಂತ್ರ ಮತ್ತು ಪಕ್ಷೇತರ ಶಾಸಕ. ಕಾಂಗ್ರೆಸ್, ಜೆಡಿಎಸ್ ಯಾಕೆ ಸೇರಬೇಕು? ಕೆಪಿಜೆಪಿ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿರುವೆ ಹಾಗೂ ಅದೇ ಪಕ್ಷದಿಂದ ಆಯ್ಕೆಯಾಗಿದ್ದೇನೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವೆ. ಪಕ್ಷ ತೊರೆಯುವ ವಿಚಾರವಿಲ್ಲ ಎಂದಿದ್ದರು. |
Related Topics:congressForest Minister R.ShankarKPJPmysuruPublic TVಅರಣ್ಯ ಸಚಿವ ಆರ್.ಶಂಕರ್ಕಾಂಗ್ರೆಸ್ಕೆಪಿಜೆಪಿಪಬ್ಲಿಕ್ ಟಿವಿಮೈಸೂರು |
ಉಡುಪಿ: ದೇವಾಡಿಗರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆಯವರ ಆಶ್ರಯದಲ್ಲಿ ದೇವಾಡಿಗರ ರಾಜ್ಯ ಮಟ್ಟದ ಕ್ರೀಡಾಕೂಟ-ಅಭಿನ್ ದೇವಾಡಿಗರಿಗೆ ಸನ್ಮಾನ |
ಅಭಿನ್ ದೇವಾಡಿಗರಿಗೆ ಸನ್ಮಾನ |
ಉಡುಪಿ: ದೇವಾಡಿಗರ ಸೇವಾ ಸಂಘ (ರಿ.) ಉಡುಪಿ ಇದರ ವತಿಯಿಂದ ದೇವಾಡಿಗರ ಯುವ ಸಂಘಟನೆ ಮತ್ತು ದೇವಾಡಿಗರ ಮಹಿಳಾ ಸಂಘಟನೆ ಉಡುಪಿ ಇವರ ಆಶ್ರಯದಲ್ಲಿ ದೇವಾಡಿಗರ ರಾಜ್ಯ ಮಟ್ಟದ ಕ್ರೀಡಾಕೂಟ-2020 ಉಡುಪಿಯ ಮಹಾತ್ಮಾ ಗಾಂಧಿ ಬಯಲು ಮಂದಿರದಲ್ಲಿ ದಿನಾಂಕ 19.01.2020 ರಂದು ಜರಗಿತು. ಈ ಕ್ರೀಡಾಕೂಟದ ಉದ್ಘಾಟನೆಯನ್ನು ಶ್ರೀ ಮಟ್ಟಾರು ರತ್ನಾಕರ್ ಹೆಗ್ಡೆ ಅಧ್ಯಕ್ಷರು, ಬಿ.ಜೆ.ಪಿ ಉಡುಪಿ ಜಿಲ್ಲೆ ಇವರು ನೆರವೇರಿಸಿದರು. |
ಶ್ರೀ ರತ್ನಾಕರ ದೇವಾಡಿಗರವರು ಅಧ್ಯಕ್ಷತೆಯನ್ನು ವಹಿಸಿದರು. ಈ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಸುಪ್ರಸಾದ್ ಶೆಟ್ಟಿ , ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ಡಾ. ಕೆ. ದೇವರಾಜ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶ್ರೀ ಬಿ.ಜಿ ಮೋಹನದಾಸ್, ಕಟಪಾಡಿ ರೋಟರಿ ಕ್ಲಬ್‍ನ ಮಾಜಿ ಅಧ್ಯಕ್ಷರಾದ ಶ್ರೀಮತಿ ತುಳಸಿ ಎಸ್ ದೇವಾಡಿಗ, ಸಂಘದ ಮಾಜಿ ಕಾರ್ಯದರ್ಶಿ, ಶ್ರೀ ಸುಂದರ ದೇವಾಡಿಗ ಬೈಲಕೆರೆ, ಓರಿಯಂಟಲ್ ಇನ್ಸುರೆನ್ಸ್ ಕಂ. ಲಿ.. ಸುರತ್ಕಲ್ ಇದರ ಹಿರಿಯ ಶಾಖಾ ಪ್ರಬಂಧಕರಾದ ಶ್ರೀ ಯಾದವ ದೇವಾಡಿಗ , ಸಪ್ತಸ್ವರ ವಿವಿದ್ದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ರವಿ ತಲ್ಲೂರು ಹಾಗೂ ದೇವಾಡಿಗ ಸಮಾಜದ ವಿವಿಧ ಸಂಘಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ತುಳಸಿ ಎಸ್ ದೇವಾಡಿಗ ಇವರು ನಮ್ಮ ಸಮಾಜದ ಎಲ್ಲಾ ಸಂಘಗಳ ಪ್ರತಿನಿಧಿಗಳ ಸಮಾಕ್ಷಮದಲ್ಲಿ ನೆರವೇರಿಸಿದರು. |
ಶ್ರೀ ರಘುಪತಿ ಭಟ್ ಶಾಸಕರು ಮತ್ತು ಶ್ರೀ ಪ್ರಮೋದ ಮಧ್ವರಾಜ್ ಮಾಜಿ ಸಚಿವರು ಇವರುಗಳು ಪಂದ್ಯಾಟದ ಸಂದರ್ಭದಲ್ಲಿ ಹಾಜರಿದ್ದು, ಶುಭ ಹಾರೈಸಿದರು. |
ಸಮಾರೋಪ ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಶ್ರೀ ಕೃಷ್ಣ ರಾವ್ ಕೊಡಂಚ, ನಗರ ಸಭಾ ಸದಸ್ಯರುಗಳಾದ ಶ್ರೀಮತಿ ರಜನಿ ಹೆಬ್ಬಾರ್ ( ವಳಕಾಡು ವಾರ್ಡ್) , ಶ್ರೀ ರಮೇಶ್ ಕಾಂಚನ್ ( ಬೈಲೂರು ವಾರ್ಡ್) ಉದಯವಾಣಿ ಮಣಿಪಾಲ ಹಣಕಾಸು ವಿಭಾಗದ ಮಹಾಪ್ರಂಬಂಧಕರಾದ ಶ್ರೀ ಸುದರ್ಶನ್ ಸೇರಿಗಾರ್, ಉದ್ಯಮಿಗಳಾದ ಶ್ರೀ ಬಾಬು ದೇವಾಡಿಗ ಮಣಿಪಾಲ, ಅವಿರಾಗ್ ಕೆಟರರ್ಸ್ ನ ಮಾಲಿಕರಾದ ಶ್ರೀ ಹರೀಶ್ ದೇವಾಡಿಗ ಕುಕ್ಕಿಕಟ್ಟೆ, ಪಿ.ಡಬ್ಲ್ಯು.ಡಿ ಗುತ್ತಿಗೆದಾರ ಶ್ರೀ ಪ್ರದೀಪ್ ಜಿ , ಶ್ರೀ ಏಕನಾಥೇಶ್ವರಿ ಕ್ರೆಡಿಟ್ ಕೋಪರೇಟಿವ್ ಸೊಸೈಟಿ (ನಿ.) ಚಿಟ್ಪಾಡಿ ಇದರ ಅಧ್ಯಕ್ಷರಾದ ಶ್ರೀ ರತ್ನಾಕರ್ ಜಿ.ಎಸ್ ,ಸಂಘದ ಹಿರಿಯ ಸದಸ್ಯರಾದ ಶ್ರೀ ಕೇಶವ ರಾವ್ , ದೇವಾಡಿಗ ಯುವ ಸಂಘಟನೆಯ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಕಡಿಯಾಳಿ, ದೇವಾಡಿಗ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಶ್ರೀ ಸುಕನ್ಯಾ ಸೇರಿಗಾರ್ ಬೈಲಕೆರೆ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನವನ್ನು ವಿತರಿಸಿದರು. |
Subsets and Splits
No community queries yet
The top public SQL queries from the community will appear here once available.