text
stringlengths
0
61.5k
ಯೋಗ ಮಾನಸಿಕ ನೆಮ್ಮದಿಯನ್ನು ವೃದ್ಧಿಸುತ್ತದೆ: ವಿನಾಯಕ ಕೃಷ್ಣ
ರಾಮಕುಂಜ: ಯೋಗವು ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದುಕೊಂಡಿದೆ. ಮನುಷ್ಯನು ಸ್ವಾಸ್ಥ್ಯನಾಗಿರಬೇಕಾದರೆ ಯೋಗವು ಬಹುಮುಖ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಮ್.ಎಸ್.ಸಿ ಯೋಗ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕ ವಿನಾಯಕ ಕೃಷ್ಣ ಅವರು ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ವಿವೇಕಾನಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪುತ್ತೂರು ಹಾಗೂ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಅಲಂಕಾರು ಇದರ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಜೀವನದಲ್ಲಿ ಬರೀ ಸಂಪತ್ತು ಗಳಿಸಿಕೊಂಡರೆ ಅದು ವ್ಯರ್ಥ, ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ಮನುಷ್ಯ ಸ್ವಾಸ್ಥ್ಯನಾಗಿರುತ್ತಾನೆ. ಏಕಾಗ್ರತೆ ಹೆಚ್ಚಾಗಬೇಕಾದರೆ ಜ್ಞಾನ ವೃದ್ದಿಸಬೇಕಾದರೆ ಹಾಗೂ ಗುರಿಯನ್ನು ತಲುಪಬೇಕಾದರೆ ಮಾನಸಿಕ ನೆಮ್ಮದಿ ಬೇಕು ಅದು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದು ಅವರು ಯೋಗದ ಮಹತ್ವವನ್ನು ವಿವರಿಸಿದರು. ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಕಾಲೇಜಿನ ಪ್ರಾಂಶುಪಾಲ ಡಾ. ಸಂಕೀರ್ತ ಹೆಬ್ಬಾರ್, ಆತೂರು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಮುರಳಿ ಕೃಷ್ಣ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಲಕ್ಷ್ಮೀನಾರಾಯಣ ರಾವ್ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ತಿರುಮಲೇಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ದಿವಾಕರ. ಕೆ. ಸ್ವಾಗತಿಸಿ, ಪ್ರಾಂಶುಪಾಲ ಡಾ. ಸಂಕೀರ್ತ ಹೆಬ್ಬಾರ್ ವಂದಿಸಿದರು, ಹಾಗೂ ವಿದ್ಯಾರ್ಥಿನಿ ಜ್ಯೋತಿರಾವ್ ಕಾರ್‍ಯಕ್ರಮ ನಿರೂಪಿಸಿದರು.
ಹಸಿ ತ್ಯಾಜ್ಯ ನೀರಾಗಿಸುವ ಯಂತ್ರ ಸ್ಥಾಪನೆ | Udayavani – ಉದಯವಾಣಿ
ವಾಸನೆ ಮುಕ್ತ ಹಸಿಕಸ ವಿಲೇವಾರಿ • ಕಸದ ನೀರು ಕೃಷಿಗೆ ಬಳಕೆ • ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರಯೋಗ
Team Udayavani, Jul 21, 2019, 3:26 PM IST
ರಾಮನಗರದ ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರಾಯೋಗಿಕವಾಗಿ ಸ್ಥಾಪನೆಯಾಗಿರುವ ಹಸಿ ತ್ಯಾಜ್ಯವನ್ನು ನೀರಾಗಿ ಪರಿವರ್ತಿಸುವ ಯಂತ್ರವನ್ನು ನಗರ ಸಭೆ ಆಯುಕ್ತರಾದ ಶುಭಾ ವೀಕ್ಷಿಸಿ ಮಾಹಿತಿ ಪಡೆದರು.
ರಾಮನಗರ: ಮೂಳೆ ಸೇರಿದಂತೆ ಹಸಿ ಕಸ ಸಂಸ್ಕರಣೆಯಾಗಿ ನೀರಾಗಿ ಹರಿದರೆ? ಹೀಗೆ ಹರಿದ ನೀರು ಕೃಷಿಗೆ ಉಪಯೋಗಿಸುವಂತಾದರೆ? ಈ ಪ್ರಶ್ನೆಗಳಿಗೆ ಉತ್ತರವಾಗಿ ಇಲ್ಲಿನ ನಗರಸಭೆ ಖಾಸಗಿ ಸಂಸ್ಥೆಯೊಂದರ ಯಂತ್ರವನ್ನು ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿದೆ.
ಹಸಿಕಸವನ್ನು ನೀರು ಮಾಡುವ ಯಂತ್ರವನ್ನು ಆರ್‌ಗ್ರೀನ್‌ ಎಂಬ ಸಂಸ್ಥೆ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿದೆ. ಬೆಂಗಳೂರು ಮೂಲದ ಈ ಸಂಸ್ಥೆಯ ಅಧಿಕಾರಿಗಳು ಹೇಳುವ ಪ್ರಕಾರ ವಿಶ್ವದ ಐದು ರಾಷ್ಟ್ರಗಳಲ್ಲಿ ಮಾತ್ರ ಈ ತಂತ್ರಜ್ಞಾನ ಚಾಲ್ತಿಯಲ್ಲಿದೆ. ಇಡೀ ದೇಶದಲ್ಲಿ ಪ್ರಥಮವಾಗಿ ರಾಮನಗರ ನಗರಸಭೆ ಆಸಕ್ತಿವಹಿಸಿದ್ದರಿಂದ ಪ್ರಾಯೋಗಿಕವಾಗಿ ಯಂತ್ರವನ್ನು ಇಂದಿರಾ ಕ್ಯಾಂಟಿನ್‌ನಲ್ಲಿ ಸ್ಥಾಪಿಸಲಾಗಿದೆ.
ಯಂತ್ರದ ಕಾರ್ಯನಿರ್ವಹಣೆ ಹೇಗೆ?: ಇದೊಂದು ಸರಳ ಯಂತ್ರ. ನಮ್ಮ ಹೊಟ್ಟೆಯಲ್ಲಿ ಸಂಸ್ಕರಣೆ ಆಗುವ ರೀತಿಯಲ್ಲೇ ಈ ಯಂತ್ರವೂ ಕಾರ್ಯನಿರ್ವಹಿಸುತ್ತದೆ. ಹೊಟ್ಟೆಯಲ್ಲಿ ಇರುವ ಕಿಣ್ವ (ಎನ್‌ಜೈಮ್‌) ಆಹಾರವನ್ನು ಸಂಸ್ಕರಿಸುತ್ತದೆ. ಯಂತ್ರದಲ್ಲಿಯೂ ಕಿಣ್ವ ಮತ್ತು ಬಯೋಸ್ಥಾರ್‌ ಎಂದು ನಾಮಾಂಕಿತವಾಗಿರುವ ಮೈಕ್ರೋ ಆರ್ಗಾನಿಸಂ ಇರುತ್ತದೆ. ಬಯೋಸ್ಟಾರ್‌ಗಳು ತ್ಯಾಜ್ಯ ಆಹಾರದಲ್ಲಿನ ಕೊಬ್ಬು ಮತ್ತು ಎಣ್ಣೆಯ ಅಂಶಗಳನ್ನು ಸಂಸ್ಕರಿಸಿ ನೀರಾಗಿ ಪರಿವರ್ತಿಸುತ್ತದೆ. ಸಂಸ್ಕರಣೆಯ ವೇಳೆ ಕಾರ್ಬನ್‌ ಡೈ ಆಕ್ಸೈಡ್‌ ಉತ್ಪತ್ತಿಯಾಗುತ್ತದೆ .ಆದರೆ, ಹಾಲಿ ಇರುವ ತ್ಯಾಜ್ಯ ಸಂಸ್ಕರಣ ಪದ್ಧತಿಯಲ್ಲಿ ಉತ್ಪತ್ತಿಯಾಗುವ ಪ್ರಮಾಣಕ್ಕಿಂತ ಅತಿ ಕಡಿಮೆ ಕಾರ್ಬನ್‌ ಡೈ ಆಕ್ಸೈಡ್‌ ಉತ್ಪತ್ತಿಯಾಗುವುದರಿಂದ ಪರಿಸರ ಹಾನಿ ಆಗುವುದಿಲ್ಲ ಎಂಬುದು ಆರ್‌ಗ್ರೀನ್‌ ಸಂಸ್ಥೆಯ ಅಧಿಕಾರಿಗಳ ವಾದ.
ಪರಿವರ್ತಿಸಲು 24 ಗಂಟೆ ಬೇಕು: ಹಸಿ ಕಸವನ್ನು ನೀರಾಗಿ ಪರಿವರ್ತಿಸಲು ಯಂತ್ರಕ್ಕೆ 24 ಗಂಟೆ ಸಮಯ ಬೇಕು. ಆದರೆ, ಯಂತ್ರ ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ತ್ಯಾಜ್ಯವೂ ನಿರಂತರವಾಗಿ ನೀರಾಗಿ ಪರಿವರ್ತನೆಯಾಗುತ್ತಿರುತ್ತದೆ. ಹೀಗಾಗಿ ಯಂತ್ರಕ್ಕೆ ಪದೇ ಪದೆ ಹಸಿ ತ್ಯಾಜ್ಯವನ್ನು ಸೇರಿಸುತ್ತಿರಬಹುದು.
ಹೊರಬಂದ ನೀರು ಹೇಗೆ ಉಪಯೋಗ?: ಹಸಿ ತ್ಯಾಜ್ಯ ಬಹುತೇಕ ಆಹಾರ ಪದಾರ್ಥವೇ ಆಗಿರುವುದರಿಂದ ಅದನ್ನು ಸಂಸ್ಕರಿಸಿ, ಹೊರ ಬಂದ ನೀರು ಪೌಷ್ಟಿಕಾಂಶಗಳಿಂದಲೇ ಕೂಡಿರುತ್ತದೆ. ಹೀಗಾಗಿ ಈ ನೀರು ತೋಟಗಾರಿಕೆ ಮತ್ತು ಕೃಷಿಗೆ ಬಳಸಬಹುದಾಗಿದೆ. ಹಸಿ ತ್ಯಾಜ್ಯದ ಸಂಸ್ಕರಣೆ ವೇಳೆ ಯಂತ್ರದಿಂದ ವಾಸನೆ ಇರುವುದಿಲ್ಲ. ಯಂತ್ರದಿಂದ ಹೊರ ಬಂದ ನೀರು ಸಹ ವಾಸನೆಯಿಂದ ಮುಕ್ತವಾಗಿರುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಲ್ಯಾಬ್‌ಗಳ ವರದಿಯನ್ನಾಧರಿಸಿ ಕ್ರಮ: ಇಂದಿರಾ ಕ್ಯಾಂಟಿನ್‌ನಲ್ಲಿ ಸ್ಥಾಪಿಸಿರುವ ಯಂತ್ರದಿಂದ ಹೊರಬರುವ ನೀರು ಕೃಷಿಗೆ ಯೋಗ್ಯವೇ ಎಂದು ಕೃಷಿ ವಿವಿಗೆ ಸ್ಯಾಂಪಲ್ ಕಳುಹಿಸಿ, ವರದಿಗೆ ನಗರಸಭೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇನ್ನೊಂದೆಡೆ ಯಂತ್ರದಿಂದ ಪರಿಸರದ ಮೇಲೆ ಯಾವ ರೀತಿಯ ದುಷ್ಪರಿಣಾಮಗಳು ಬೀರುವುದಿಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ಪರಿಸರ ಮಾಲಿನ್ಯ ನಿಯಂತ್ರ ಇಲಾಖೆಗೂ ಪತ್ರ ಬರೆದಿದ್ದಾರೆ. ಎಲ್ಲಾ ವರದಿಗಳಲ್ಲು ಸಕರಾತ್ಮಕ ಪ್ರತಿಕ್ರಿಯೆ ಬಂದರಷ್ಟೇ ಯಂತ್ರವನ್ನು ಕೊಳ್ಳುವ ವಿಚಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಷ್ಟು ವೆಚ್ಚ?: ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರಾಯೋಗಿಕವಾಗಿ ಸ್ಥಾಪನೆಯಾಗಿರುವ ಯಂತ್ರ 50 ಕೆ.ಜಿ ಹಸಿ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. ಇದರ ಆಮದು ಬೆಲೆ ಸುಮಾರು 9.50 ಲಕ್ಷ ರೂ. ಇನ್ನೊಂದು ವರ್ಷದಲ್ಲಿ ಭಾರತದಲ್ಲೇ ಇಂತಹ ಯಂತ್ರಗಳನ್ನು ತಯಾರಿಸುವ ಪ್ರಯತ್ನ ಸಾಗಿದೆ. ಆದರೆ, ಯಂತ್ರಕ್ಕೆ ಬಳಕೆಯಾಗುವ ಬಯೋಸ್ಟಾರ್‌ಗಳನ್ನು ದಕ್ಷಿಣ ಕೊರಿಯಾದ ಸಂಸ್ಥೆ ವಿಶ್ವ ಪೇಟೆಂಟ್ ಪಡೆದುಕೊಂಡಿದೆ. ಹೀಗಾಗಿ ಅಲ್ಲಿಂದಲೇ ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಆರ್‌ಗ್ರೀನ್‌ ವೇಸ್ಟ್‌ ಟು ವಾಟರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಸುಬ್ಬರಾವ್‌ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರಯೋಗ
raw waste water treatment plant
ಪೋಲಿಯೋ ಜಾಗೃತಿ ಜಾಥಾ
ಚನ್ನಪಟ್ಟಣ: ಐದು ವರ್ಷ ದೊಳಗಿನ ಮಕ್ಕಳಿಗೆ ಉಚಿತವಾಗಿ ಪಲ್ಸ್‌ ಪೋಲಿಯೊ ಹನಿ ಹಾಕಿಸುವ ಮೂಲಕ ಶಾಶ್ವತ ಅಂಗವಿಕಲತೆ ಯಿಂದ ಪಾರು ಮಾಡಬೇಕು ಎಂದು ನರ್ಸರಿ ಟೀಚರ್ ಟ್ರೆçನಿಂಗ್‌...
ಚೆನ್ನೈ: ಬಿಸಿಸಿಐನ ವಾರ್ಷಿಕ ಒಪ್ಪಂದ ಯಾದಿಯಿಂದ ಮಹೇಂದ್ರ ಸಿಂಗ್‌ ಧೋನಿ ಅವರನ್ನು ಕೈಬಿಟ್ಟ ದಿನದಿಂದಲೂ ಅವರ ನಿವೃತ್ತಿ ಕುರಿತು ಭಾರೀ ಚರ್ಚೆ ಆರಂಭವಾಗಿದೆ....
ಮೌಲ್ಯ ಶಿಕ್ಷಣ - ವಿಕಿಪೀಡಿಯ
ಐವತ್ತಕ್ಕೂ ದೇಶಗಳಲ್ಲಿ ಶಾಲೆಯ ಪಠ್ಯಕ್ರಮದಲ್ಲಿ ಮೌಲ್ಯವನ್ನು ಶಿಕ್ಷಣದ ಮಹತ್ವವನ್ನು ಮಾನ್ಯತೆ, ಮತ್ತು ಸಹ, ನಿಸ್ಸಂದೇಹವಾಗಿ ಮಕ್ಕಳು ಉತ್ತಮ ಮಾನವರ ಬಲಿಯಲು ವೇಳೆ ಮೌಲ್ಯಗಳ ಒಂದು ಧ್ವನಿ ವ್ಯವಸ್ಥೆಯ ಬೆಳೆಯಲು ಅಗತ್ಯವಿರುವ ಮೂಲಭೂತ ವಾಸ್ತವವಾಗಿ ಗುರುತಿಸಲು ಇರುವ ಆ ಮತ್ತು ಜವಾಬ್ದಾರಿಯುತ ನಾಗರಿಕರಾದ,
ವಿಷಯಗಳನ್ನು ನಮ್ಮ ದೇಶದಲ್ಲಿ ನಿಂತು ಮಾಹಿತಿ, ಸಾಮಾನ್ಯ ನಿರ್ದೇಶನದ ತಮ್ಮ ಪಠ್ಯಕ್ರಮದ ಭಾಗವಾಗಿರಲಿಲ್ಲ ಶಿಕ್ಷಣ ಮೌಲ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ, ಆದರೆ ಶಾಲೆಗಳು ತಮ್ಮ ಕೆಲಸ ವಿವರಗಳನ್ನು ಬಿಡಲಾಗಿದೆ.
ಎಲ್ಲಾ, ನಡೆಸುವಿಕೆಯನ್ನು ಶ್ರೀಮಂತ ಫಲಕಾರಿಯಾಗಿ ಮಾಡಿಲ್ಲ. ಇದು ಉತ್ತಮ ಶಾಲೆಗಳಲ್ಲಿ ಕೆಲವು ತಮ್ಮ ನೆರೆಹೊರೆಯ ಸಮಾಜ ಸೇವೆ ಕಾರ್ಯಕ್ರಮಗಳು ಕೈಗೊಳ್ಳಲು ಅಥವಾ ನಾಯಕತ್ವ ಮತ್ತು ಉತ್ತಮ ನಾಗರಿಕತ್ವ ತಮ್ಮ ಮಕ್ಕಳು ತಯಾರು ಅಣಕು ಸಂಸತ್ ಹಂತ ಎಂದು ಸರಿಯಿದ್ದರೂ, ಇದು ಸತ್ಯ ಬಹುತೇಕ ಎಂದು ಸಹ ಶಾಲೆಗಳ ವಿಷಯದ ಅತ್ಯಂತ ಆರಾಮದಾಯಕ ಅಲ್ಲ, ಮತ್ತು ಅದನ್ನು ಬೋಧನೆ ಚಲನೆ ಮೂಲಕ ಹೋಗಿ,
ಮೊದಲನೆಯದಾಗಿ, ವಿಷಯದ ಮೇಲೆ ನಿರ್ದಿಷ್ಟ ಪಠ್ಯಕ್ರಮ ಮತ್ತು ತರಬೇತಿ ಶಿಕ್ಷಕರು ಅನುಪಸ್ಥಿತಿಯಲ್ಲಿ, ತರಗತಿಗಳು ಸುತ್ತಾಡು ಮತ್ತು ಅಂತಿಮವಾಗಿ ತಮ್ಮ ಹಾದಿ ತಪ್ಪಿ: ಒಂದು ಅವುಗಳನ್ನು ದೂಷಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಇದು ಅಲಕ್ಷಿಸಿದ್ದರು-ತಮ್ಮ ಪೋಷಕರು ಮಕ್ಕಳಿಗೆ ಹೆಚ್ಚು ರನ್ನಲ್ಲಿ ಅಂತ್ಯಗೊಳ್ಳುತ್ತದೆ ಪರಿಣಾಮವಾಗಿ ಮೌಲ್ಯಮಾಪನ ಅವಕಾಶವಿರಲಿಲ್ಲ ಇದರಲ್ಲಿ ವ್ಯಕ್ತಿಯು, ಆಗಿದೆ.
ಹಾಗೆ ಅಲ್ಲಿ ನಾವು ಆರಂಭಿಸಲು ಇಲ್ಲ? ಒಂದು ಕಷ್ಟದ ಪ್ರಶ್ನೆ, ಆದರೆ ನಾವು ಅದನ್ನು ಉತ್ತರಿಸಲು ಪ್ರಯತ್ನಿಸಿ ಮೊದಲು ಒಂದು ಪ್ರಮುಖ ಬಿಂದು ಮನಸ್ಸಿನಲ್ಲಿ ದಾಳಿಗೊಳಗಾದ ಅಗತ್ಯವಿದೆ. ಪ್ರಜಾಪ್ರಭುತ್ವದಲ್ಲಿ, ಮೌಲ್ಯಗಳ ವಿವಿಧ ಸೆಟ್ ಸಹಬಾಳ್ವೆ. ಒಂದು ನಿರ್ದಿಷ್ಟ ಗುಂಪಿಗೆ ಬಲ ಏನು ಇನ್ನೊಂದು ತಪ್ಪಾಗಿರಬಹುದು.
ನಮಗೆ ಎಲ್ಲಾ ಸಂಸ್ಥೆಗಳು ಮಕ್ಕಳ ಆವರಿಸಿರುವ ಮೌಲ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಇದು ಸತ್ಯ, ಮಾತನಾಡುವ ಆದರ್ಶ ತೆಗೆದುಕೊಳ್ಳೋಣ. ಮುಗ್ಧ ಹುಡುಕುತ್ತಿರುವ, ಪಾತಕಿ ಭಾವಿಸಿ ನೀವು ಸತ್ಯ ವಿಚಾರವಿಲ್ಲದೆ ಮಾತಾಡು ಇಲ್ಲ, ಅವರ ಇರುವಿಕೆಯ ತಿಳಿಯಲು ಸಂಭವಿಸಿ, ನೀವು ವ್ಯಕ್ತಿಯ ಕಂಡ ನೀವು ಕೇಳುತ್ತದೆ ಬಲಿಪಶುವಾಗಿ ಆಗಿರಬಹುದು, ಅಥವಾ ನೀವು ಅನೇಕ ಸ್ಪರ್ಧಿಸಬೇಕಾಗುತ್ತದೆ ಇದು ಒಂದು ಸುಳ್ಳು ಅವಲಂಬನೆಯಿಂದ ತೆಗೆದುಕೊಳ್ಳುತ್ತವೆ ಮಾಡಬೇಕು ಆಗಿದೆ , ಸತ್ಯ ಹೆಚ್ಚು ಸದ್ಗುಣಶೀಲ ಈ ಪ್ರಸಂಗದಲ್ಲಿ, ರಲ್ಲಿ? ನಾವು ಮೌಲ್ಯ ಶಿಕ್ಷಣ ವ್ಯವಹರಿಸಲು ಯಾವಾಗ, ಇದು ಅಂತಿಮವಲ್ಲ ವಿಷಯದಲ್ಲಿ ಮಾತನಾಡಲು ಶಿಫಾರಸು, ಆದರೆ ಹೊಂದಿಕೊಳ್ಳುವ ನಮ್ಮ ವರ್ತನೆಗಳು ಇಟ್ಟುಕೊಳ್ಳುತ್ತಿದ್ದರು.
ಹಕ್ಕಿ ಕಥೆ : ಸಂಚಿಕೆ - 36 - MAKKALA JAGALI -->
Home › senior › ಹಕ್ಕಿ ಕಥೆ : ಸಂಚಿಕೆ - 36
ಹಕ್ಕಿ ಕಥೆ : ಸಂಚಿಕೆ - 36
ಹಕ್ಕಿ ಕಥೆ - 36
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ...... ನಾನು ಚಿಕ್ಕವನಿದ್ದಾಗ ಅಮ್ಮನ ಜೊತೆ ತರಕಾರಿ ತರಲು ಮಾರ್ಕೆಟ್ ಗೆ ಹೋಗುತ್ತಿದ್ದೆ. ಮಾರ್ಕೆಟ್ ನಲ್ಲಿ ಹಣ್ಣು , ತರಕಾರಿ , ದಿನಸಿ ಸಾಮಾನು ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಿದ್ದೆವು. ಮಾರುಕಟ್ಟೆಯ ಇನ್ನೊಂದು ಭಾಗದಲ್ಲಿ ಮೀನು ಮತ್ತು ಮಾಂಸದ ಅಂಗಡಿಗಳು ಇರುತ್ತಿದ್ದವು. ಅವರು ಉಳಿದ ತ್ಯಾಜ್ಯಗಳನ್ನು ಮಾರುಕಟ್ಟೆಯ ಹಿಂದೆ ಒಂದು ದೊಡ್ಡ ಕಸದ ತೊಟ್ಟಿಗೆ ಹಾಕುತ್ತಿದ್ದರು. ಅದರ ಮೇಲೆಲ್ಲಾ ಗಿಡುಗಗಳು ಹಾರಾಡುತ್ತಿದ್ದವು. ಈ ಗಿಡುಗಗಳ ಹಾರಾಟವನ್ನು ನಾವು ಬಹಳ ದೂರದಿಂದಲೇ ನೋಡಲು ಸಾಧ್ಯವಾಗುತ್ತಿತ್ತು. ಹಲವಾರು ಗಿಡುಗಗಳು ಹಾರುತ್ತಿವೆ ಎಂದರೆ ಅಲ್ಲೊಂದು ಮೀನು ಅಥವಾ ಮಾಂಸದ ಮಾರುಕಟ್ಟೆ ಇದೆ ಎಂದೇ ಅರ್ಥ ಅಥವಾ ಅದು ನಿಮ್ಮ ಊರಿನ ಕಸ ರಾಶಿ ಹಾಕುವ ಜಾಗ ಆಗಿರಬಹುದು ಎಂದರ್ಥ. ಕಡಲ ತೀರಕ್ಕೆ ಹೋದಾಗಲೂ ಈ ಗಿಡುಗಗಳನ್ನು ನಾವು ನೋಡುತ್ತಿದ್ದೆವು.
ಕಡುಕಂದು ಅಥವಾ ಕಪ್ಪು ಬಣ್ಣದ ಈ ಗಿಡುಗ ನಮ್ಮ ಬಾಲ್ಯದ ದಿನಗಳ ನಿತ್ಯದ ಒಡನಾಡಿ. ಶಾಲೆಗೆ ಹೋಗುವಾಗ ಬರುವಾಗಲೆಲ್ಲಾ ಇವುಗಳನ್ನು ನೋಡುವುದು ಲೆಕ್ಕ ಹಾಕುವುದು, ನಾನೆಷ್ಟು ನೋಡಿದೆ ಎಂದು ಹೇಳಿಕೊಳ್ಳುವುದು ನಮಗೊಂದು ಆಟವೇ ಆಗಿತ್ತು. ಇವುಗಳಲ್ಲಿ ಎರಡು ವಿಧಗಳು ಇದ್ದು ತಲೆ, ಎದೆಭಾಗವೆಲ್ಲ ಬಿಳಿ ಬಣ್ಣವಿದ್ದ ಇನ್ನೊಂದು ಗಿಡುಗವನ್ನು ನೋಡಿದರೆ ಗೆಲುವು, ಪೂರ್ತಿ ಕಡುಕಂದು ಬಣ್ಣದ ಈ ಗಿಡುಗವನ್ನು ನೋಡಿದರೆ ಸೋಲು ಎಂದು ನಾವು ನಂಬಿದ್ದೆವು. ಆದರೆ ಈ ನಂಬಿಕೆ ಬರೇ ಸುಳ್ಳು ಎಂದು ನಮಗೆ ಆಮೇಲೆ ಗೊತ್ತಾಯಿತು.
ನಾನು ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನಮ್ಮ ಮನೆಯ ಹತ್ತಿರವೂ ಬಹಳ ಸಂಖ್ಯೆಯಲ್ಲಿ ಗಿಡುಗಗಳು ಇರುವುದು ತಿಳಿಯಿತು. ಹೀಗೇ ಗಮನಿಸುತ್ತಿದ್ದಾಗ ಮನೆಯ ಹತ್ತಿರದಲ್ಲಿ ಇದ್ದ ಮೊಬೈಲ್ ಟವರ್ ಕಡೆಗೆ ಈ ಗಿಡುಗ ಹಾರಿಬರುವುದು, ಮತ್ತೆ ಹಾರಿ ಹೋಗುವುದು ಕಾಣಿಸಿತು. ನನ್ನ ಬೈನಾಕುಲಾರ್ ತಂದು ಅದರ ಚಲನವಲನಗಳನ್ನು ಗಮನಿಸುತ್ತಾ ಕುಳಿತೆ. ಮೊಬೈಲ್ ಟವರ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವರ ಮಧ್ಯಭಾಗದಲ್ಲಿ ಒಂದಷ್ಟು ಕಟ್ಟಿಗೆ ಮತ್ತು ಇತರೆ ವಸ್ತುಗಳನ್ನು ಜೋಡಿಸಿ ಒಂದು ಅಟ್ಟಳಿಗೆಯಂಥ ಗೂಡು ಮಾಡಿರುವುದು ಕಾಣಿಸಿತು. ಅದರಲ್ಲಿ ಎರಡು ಮರಿಗಳೂ ಇದ್ದವು. ಮೊಬೈಲ್ ಟವರ್ ನಿಂದಾಗಿ ಹಕ್ಕಿಯ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದಾಗಿದ್ದರೆ ಈ ಹಕ್ಕಿ ಮೊಬೈಲ್ ಟವರ್ ನಲ್ಲೇ ಗೂಡು ಮಾಡಿ ಹೇಗೆ ಮರಿಮಾಡಿತು ಎಂಬ ಪ್ರಶ್ನೆ ಮೂಡಿತು. ವಿಜ್ಞಾನಿ ಮಿತ್ರರಬಳಿ ಕೇಳಿದಾಗ, ಮೊಬೈಲ್ ಟವರ್ ಮತ್ತು ಹಕ್ಕಿಯ ಸಂತಾನೋತ್ಪತ್ತಿಗೂ ನೇರ ಸಂಬಂಧ ಇರುವುದನ್ನು ಯಾವ ಸಂಶೋಧನೆಯೂ ಇನ್ನೂ ದೃಢಪಡಿಸಿಲ್ಲ ಎಂಬ ಉತ್ತರ ಬಂತು.
ಎತ್ತರದ ಮರಗಳ ಮೇಲೆ, ಎತ್ತರದ ಕಟ್ಟಡಗಳ ಮೇಲೆ ಸೆಪ್ಟೆಂಬರ್ ನಿಂದ ಎಪ್ರಿಲ್ ತಿಂಗಳ ನಡುವೆ ಗೂಡು ಮಾಡುವ ಈ ಹಕ್ಕಿ ಪೇಟೆ ಪಟ್ಟಣಗಳಲ್ಲಿ ಬಹಳ ಸಾಮಾನ್ಯವಾಗಿ ಕಾಣಲು ಸಿಗುತ್ತದೆ. ನೆಲದಿಂದ ಆಕಾಶದ ಎತ್ತರದ ವರೆಗೂ ಎಂಥ ಜಾಗದಲ್ಲೂ ಹಾರಾಟ ಮಾಡುವ ಸಾಮರ್ಥ್ಯ ಈ ಹಕ್ಕಿಗೆ ಇದೆ. ಆಕಾಶದ ಎತ್ತರದಲ್ಲಿ ಹಾರುವಾಗ ಬಾಲದ V ಆಕಾರದಿಂದ ಬಹಳ ಸುಲಭವಾಗಿ ಈ ಹಕ್ಕಿಯನ್ನು ಗುರುತಿಸಬಹುದು. ಕಸದ ತೊಟ್ಟಿಯಿಂದ ಮಾಂಸದ ತ್ಯಾಜ್ಯ , ಎರೆಹುಳು , ಹಾರಾಡುವ ಗೆದ್ದಲು ಹುಳು , ಹಲ್ಲಿಗಳು , ಇಲಿಗಳು , ಇತರೇ ಹಕ್ಕಿಯ ಮರಿಗಳು ಹೀಗೆ ಹಲವು ವಿಧದ ಮಾಂಸಾಹಾರವೇ ಇದರ ಮುಖ್ಯ ಆಹಾರ. ಹಾರುವಾಗ ಮತ್ತು ಎತ್ತರದ ಜಾಗದಲ್ಲಿ ಕುಳಿತಾಗ ಇವುಗಳು ಕೂಗುವುದನ್ನು ನೀವು ಖಂಡಿತಾ ಕೇಳಬಹುದು. ಗಂಡು ಮತ್ತು ಹೆಣ್ಣು ಒಂದೇ ರೀತಿ ಕಾಣುವ ಈ ಹಕ್ಕಿಯನ್ನು ನಿಮ್ಮ ಆಸುಪಾಸಿನಲ್ಲಿ ನೀವು ಖಂಡಿತಾ ನೋಡಲು ಸಾಧ್ಯ.. ಹುಡುಕಿ ಗಮನಿಸ್ತೀರಲ್ಲ..
ಈ ಬಾರಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ! ಉದ್ಧವ್ ಠಾಕ್ರೆ ಹೇಳಿದ್ದೇನು? | KANNADIGA WORLD
Home ಕನ್ನಡ ವಾರ್ತೆಗಳು ಮುಂಬೈ ಈ ಬಾರಿ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ! ಉದ್ಧವ್ ಠಾಕ್ರೆ ಹೇಳಿದ್ದೇನು?
Posted By: Karnataka News BureauPosted date: October 26, 2019 In: ಮುಂಬೈ, ರಾಷ್ಟ್ರೀಯ
ನವದೆಹಲಿ: 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ 162 ಸ್ಥಾನಗಳು ದೊರೆತಿದೆ. ಬಿಜೆಪಿ 106, ಶಿವಸೇನೆ 56 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಅದೇ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆ ಮತ್ತು ಬಿಜೆಪಿ ನಡುವೆ ಪೈಪೋಟಿ ನಡೆದಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಸಂಜೆ ಪಕ್ಷ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ, ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, ನಾವು ಪ್ರತಿ ಬಾರಿಯೂ ಬಿಜೆಪಿಯ ಪ್ರಸ್ತಾಪವನ್ನು ಸ್ವೀಕರಿಸುವುದಿಲ್ಲ. ತಮ್ಮ ಪಕ್ಷವು 50-50 ಕ್ಕಿಂತ ಕಡಿಮೆ ಸೂತ್ರಕ್ಕೆ ತಲೆಬಾಗುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ಈ ಬಾರಿ ಶಿವಸೇನೆಗೆ ಸಿಎಂ ಪಟ್ಟ ಸಿಗಬಹುದೇ ಎಂದು ಉದ್ಧವ್ ಠಾಕ್ರೆ ಅವರನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಠಾಕ್ರೆ, ನಿಮ್ಮ ಬಾಯಿಯಲ್ಲಿ ತುಪ್ಪ-ಸಕ್ಕರೆ ಹಾಕಬೇಕು. "ಲೋಕಸಭಾ ಚುನಾವಣೆಯ ಸಮಯದಲ್ಲಿ 50-50ರ ಸೂತ್ರವನ್ನು ನಿರ್ಧರಿಸಲಾಯಿತು. ಅದನ್ನು ಕಾರ್ಯಗತಗೊಳಿಸಲು ಈಗ ಸಮಯ ಬಂದಿದೆ. ಚುನಾವಣೆಗೆ ಮೊದಲು ರಾಜ್ಯ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರು ನನಗೆ ಹೇಳಿದ್ದರು, ನಾನು ಅವರ ಮಾತನ್ನು ಆಲಿಸಿದ್ದೇನೆ. ಈಗ ನಾವು ಮೊದಲು ಭೇಟಿಯಾಗುತ್ತೇವೆ, ಸಭೆಯಲ್ಲಿ ಎಲ್ಲಾ ವಿಷಯಗಳನ್ನು ಚರ್ಚಿಸುತ್ತೇವೆ. ನಂತರ ಏನು ಮಾಡಬೇಕೆಂದು ನಾವು ನಿರ್ಧರಿಸುತ್ತೇವೆ" ಎಂದರು.
ಮತ್ತೊಂದೆಡೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಿವಸೇನೆ ಹಿಂದುತ್ವದ ವಿಷಯದ ಬಗ್ಗೆ ಒಗ್ಗೂಡಿದೆ, ಮಾತುಕತೆ ನಡೆಸುವ ಪಕ್ಷವಲ್ಲ. ಕೆಲವು ನಿರೀಕ್ಷೆಗಳಿರಬಹುದು, ಆ ಬಗ್ಗೆ ಮಾತುಕತೆ ನಡೆಯಲಿದೆ. ನಮಗೆ 106 ಸ್ಥಾನಗಳು ಸಿಕ್ಕಿವೆ, ನಮ್ಮ ಸೀಟುಗಳು ಕಡಿಮೆಯಾಗಿವೆ ಎಂದು ಫಡ್ನವೀಸ್ ಹೇಳಿದರು. ಕಳೆದ ಬಾರಿ ನಾವು 260 ಸ್ಥಾನಗಳಿಗೆ ಸ್ಪರ್ಧಿಸಿದಾಗ ನಮಗೆ 122 ಸ್ಥಾನಗಳು ಸಿಕ್ಕವು. ಈ ಬಾರಿ ನಾವು 164 ಸ್ಥಾನಗಳಿಗೆ ಸ್ಪರ್ಧಿಸಿದ್ದೇವೆ, ಈಗ ಸೀಟುಗಳು ಕಡಿಮೆಯಾಗಿವೆ ಆದರೆ ನಮ್ಮ ಸ್ಟ್ರೈಕ್ ರೇಟ್ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮುಂದಿನ ಐದು ವರ್ಷಗಳ ಕಾಲ ನಾವು ಉತ್ತಮ ಸರ್ಕಾರವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ ಫಡ್ನವೀಸ್, ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸುವ ಮೂಲಕ ಮತ್ತೆ ಸಿಎಂ ಆಗುತ್ತಿರುವುದು ಇದೇ ಮೊದಲು. ನಾನು ಮಹಾರಾಷ್ಟ್ರದ ಆದೇಶವನ್ನು ಸ್ವೀಕರಿಸುತ್ತೇನೆ. ನನ್ನ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಬದುಕಿದೆ ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದರು.
ಒಂದು ಮಿಲಿಯನ್ ಹಿಟ್ಸ್, ನಂ 1 ಟ್ರೆಂಡ್ - ಎಲ್ಲ ನಾರಾಯಣನ ಕೃಪೆ | Avane srimannarayana movie teaser trending number 1 in youtube - Kannada Filmibeat
| Published: Sunday, June 10, 2018, 13:03 [IST]
'ಅವನೇ ಶ್ರೀಮನ್ನಾರಾಯಣ' ಸಿನಿಮಾ ಟೀಸರ್ ಈಗ ಸೂಪರ್ ಹಿಟ್ ಆಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿದ್ದ ಈ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಯೂ ಟ್ಯೂಬ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ಟೀಸರ್ ಬಿಡುಗಡೆಯಾದ ದಿನದಿಂದ ಅಂದರೆ ಸತತ ನಾಲ್ಕು ದಿನಗಳ ಕಾಲ ನಂ 1 ಟ್ರೆಂಡಿಂಗ್ ನಲ್ಲಿದೆ. ಎಲ್ಲ ಕಡೆ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿರುವ ಈ ಟೀಸರ್ ಅನ್ನು ಒಂದು ಮಿಲಿಯನ್ ಜನರು ನೋಡಿದ್ದಾರೆ. ಒಂದು ಮಿಲಿಯನ್ ಹಿಟ್ಸ್ ಪಡೆದಿರುವ ಟೀಸರ್ ಗೆ ಒಳ್ಳೆ ಒಳ್ಳೆಯ ಕಮೆಂಟ್ ಗಳು ಬಂದಿವೆ.
ಅಂದಹಾಗೆ, 'ಅವನೇ ಶ್ರೀಮನ್ನಾರಾಯಣ' ಟೀಸರ್ ತುಂಬ ಹೊಸತನದಿಂದ ಕೂಡಿದೆ. ಅದರ ಮೇಕಿಂಗ್ ಸ್ಟೈಲ್ ಎಲ್ಲರಿಗೆ ಇಷ್ಟ ಆಗಿದೆ. ಸಚಿನ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. 'ಕಿರಿಕ್ ಪಾರ್ಟಿ' ನಂತರ ಮತ್ತೆ ಅಜನೀಶ್ ಲೋಕನಾಥ್ ರಕ್ಷಿತ್ ಶೆಟ್ಟಿಗೆ ಮ್ಯೂಸಿಕ್ ಮಾಡುತ್ತಿದ್ದಾರೆ. ರಕ್ಷಿತ್ ಗೆ ಶಾನ್ವಿ ಶ್ರೀವತ್ಸವ್ ಜೋಡಿ ಆಗಿದ್ದಾರೆ. ಇನ್ನು ಸಿನಿಮಾ ಇದೇ ಡಿಸೆಂಬರ್ ಗೆ ಬರುವ ಸಾಧ್ಯತೆ ಇದೆ.
'ಅವನೇಶ್ರೀನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಐದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಭ್ರಷ್ಟ ಪೊಲೀಸ್ ಪಾತ್ರವನ್ನು ರಕ್ಷಿತ್ ಇಲ್ಲಿ ಪ್ಲೇ ಮಾಡುತ್ತಿದ್ದಾರೆ.
Read more about: rakshit shetty shanvi srivastava teaser sandalwood ರಕ್ಷಿತ್ ಶೆಟ್ಟಿ ಟೀಸರ್ ಸ್ಯಾಂಡಲ್ ವುಡ್
Kannada actor Rakshit shetty and Shanvi Srivastava's 'Avane srimannarayana' movie teaser trending number 1 in youtube
ಮೋದಿ ಫೋಟೋ ಬಳಸುವ ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿದ ಮಮತಾ | 'PM Modi taking credit for Ayushman Bharat, Bengal exits scheme' - Kannada Oneindia
4 min ago 150 ದಿನ: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರೆಷ್ಟು ಜನ?
17 min ago ಮನೆ ಬಾಗಿಲಿಗೆ ತೆರಳಿ ಕೊರೊನಾವೈರಸ್ ಲಸಿಕೆ ನೀಡುವುದೆಷ್ಟು ಸರಿ!?
| Published: Thursday, January 10, 2019, 20:12 [IST]
ಕೋಲ್ಕತ್ತಾ, ಜನವರಿ 10: "ನಾವು ಆಯುಷ್ಮಾನ್ ಭಾರತ್ ಯೋಜನೆಯಿಂದ ಹಿಂದಕ್ಕೆ ಸರಿಯುತ್ತಿದ್ದೇವೆ. ನಮ್ಮ ರಾಜ್ಯವು ಈ ಯೋಜನೆಗೆ 40% ಅನುದಾನ ನೀಡುವುದಿಲ್ಲ" ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಆಯುಷ್ಮಾನ್ ಭಾರತ್-ಪ್ರಧಾನ್ ಮಂತ್ರಿ ಜನ್ ಆರೋಗ್ಯ ಯೋಜನಾಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಅನುದಾನ ನೀಡುತ್ತಿದೆ. ಆದರೆ ಕೇಂದ್ರ ಸರಕಾರ ಅಧಿಕೃತ ಸಂವಹನದಲ್ಲಿ ಪ್ರಧಾನಮಂತ್ರಿ ಮೋದಿ ಅವರ ಚಿತ್ರಗಳನ್ನು ಮಾತ್ರ ಬಳಸಲಾಗುತ್ತಿದೆ. ಆದ್ದರಿಂದ ಪಶ್ಚಿಮ ಬಂಗಾಲದ ಪಾಲನ್ನು ನೀಡುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಆಯುಷ್ಮಾನ್ ಯೋಜನೆಗೆ ರಾಜ್ಯ ಸರಕಾರ 40% ಅನುದಾನ ನೀಡಿದರೆ, ಕೇಂದ್ರ ಸರಕಾರ 60% ಅನುದಾನ ನೀಡುತ್ತದೆ. ಈ ಯೋಜನೆಯ ಶ್ರೇಯವನ್ನು ಪ್ರಧಾನಿ ನರೇಂದ್ರ ಮೋದಿ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಈ ಯೋಜನೆಯ ಎಲ್ಲ ಅಧಿಕೃತ ಸಂವಹನದಲ್ಲಿ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಫೋಟೋ ಹಾಕಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಯೋಜನೆಯ ಲೋಗೋ ಕೂಡ ಭಾರತೀಯ ಜನತಾ ಪಕ್ಷದ ಸಂಕೇತವನ್ನು ಹೋಲುವಂತೆಯೇ ಇದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.
ಜಗತ್ತಿನ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಅನ್ನು ಕಳೆದ ವರ್ಷ ಸೆಪ್ಟೆಂಬರ್ ಇಪ್ಪತ್ಮೂರರಂದು ಆರಂಭಿಸಲಾಗಿತ್ತು. ಈ ಯೋಜನೆ ಅಡಿಯಲ್ಲಿ ಐದು ಲಕ್ಷ ರುಪಾಯಿವರೆಗೆ ಕವರೇಜ್ ಆಗುತ್ತದೆ. ಇದರಿಂದ ಹತ್ತು ಕೋಟಿ ಕುಟುಂಬಗಳಿಗೆ ಅನುಕೂಲ ಆಗುತ್ತದೆ ಎನ್ನಲಾಗಿದೆ.
ಮಮತಾ ಆಕ್ರೋಶಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡರು, ಎಲ್ಲ ರಾಜ್ಯಗಳಂತೆಯೇ ಪಶ್ಚಿಮ ಬಂಗಾಲ ಕೂಡ ತೆರಿಗೆಯಲ್ಲಿ ಪಾಲು ಪಡೆಯುತ್ತದೆ. ಆದರೆ ಮಮತಾ ಅವರು ಪ್ರತ್ಯೇಕ ದೇಶ ನಡೆಸುತ್ತಿರುವಂತೆ ವರ್ತಿಸುತ್ತಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಬಸ್ ಸ್ಟ್ಯಾಂಡ್ ನಿಂದ ಸಾರ್ವಜನಿಕ ಶೌಚಾಲಯದ ತನಕ ಅವರ ಫೋಟೋಗಳನ್ನು ನೋಡುತ್ತಿರುತ್ತೇವೆ ಎಂದಿದ್ದಾರೆ.
ಇನ್ನು ರೈತರ ವಿಮೆ ವಿಚಾರವಾಗಿ ಹೇಳಿಕೆ ನೀಡಿದ್ದ ಮಮತಾ, ಕೇಂದ್ರ ಸರಕಾರ ಈ ಯೋಜನೆಗೆ 20% ನೀಡುತ್ತಿದ್ದರೆ, ರಾಜ್ಯ ಸರಕಾರ 80ರಷ್ಟು ಪ್ರೀಮಿಯಂ ಪಾವತಿಸುತ್ತಿದೆ. ಇನ್ನು ಮುಂದೆ ಪೂರ್ತಿ ಮೊತ್ತ ನಾವೇ ನೀಡುತ್ತೇವೆ ಎಂದಿದ್ದರು.
ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಮಮತಾ, ಕೇಂದ್ರ ಸರಕಾರವು ರಾಜ್ಯಗಳಲ್ಲಿ ಪರ್ಯಾಯ ಆಡಳಿತ ನಡೆಸಲು ಯತ್ನಿಸುತ್ತಿದೆ. ಕೇಂದ್ರದ ವಿಚಾರಗಳಿಗೆ ನಾವು ತಲೆ ಹಾಕಲ್ಲ. ರಕ್ಷಣಾ ವ್ಯವಹಾರಗಳು ಕೇಂದ್ರಕ್ಕೆ ಸೇರಿದ್ದು. ರಫೇಲ್ ವ್ಯವಹಾರ ಮಾಡುವಾಗ ನನ್ನನ್ನು ನೀವು ಕೇಳಿಲ್ಲ. ನೀವು ಯಾಕೆ ರಾಜ್ಯದ ವಿಚಾರಗಳಿಗೆ ತಲೆ ಹಾಕ್ತೀರಿ? ಎಂದು ಪ್ರಶ್ನಿಸಿದ್ದಾರೆ.
ayushman bharat mamata banerjee west bengal kolkata narendra modi bjp ಆಯುಷ್ಮಾನ್ ಭಾರತ್ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲ ಕೋಲ್ಕತ್ತಾ ನರೇಂದ್ರ ಮೋದಿ ಬಿಜೆಪಿ
ಇಂದಿರಾ ಹೆಗ್ಡೆ ಅವರ ಲೇಖನ 'ತುಳುವರು ವೇದಾಧಾರಿತ ಸಮಾಜದವರು ಅಲ್ಲ..' ಲೇಖನ ಸಾಕಷ್ಟು ಗಮನ ಸೆಳೆದಿದೆ. ಅದು ಇಲ್ಲಿದೆ
ಇದಕ್ಕೆ ಹೇಮಾ ಸದಾನಂದ್ ಅಮೀನ್ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ –
ನಮ್ಮ ದೇಶದಲ್ಲಿ ಹೆಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟ ಏಕೈಕ ನಾಡು ಅಂದರೆ ಅದು ತುಳುನಾಡು.
ಮೊದಲು ಮದುವೆ ಸಮಾರಂಭಗಳಲ್ಲಿ ಹೆಣ್ಣಿಗೆ ತಾಳಿ ಗಂಡ ಕಟ್ಟದೆ, ಹೆಣ್ಣಿನ ತಾಯಿ ಅಥವಾ ಹೆಣ್ಣಿನ ಮಾವನ ಹೆಂಡತಿ ಕಟ್ಟುತ್ತಿದ್ದರು. ಇಲ್ಲಿ ತಾಳಿ ಗುರುತಿನ ಸಂಕೇತವಾಗುತ್ತಿತ್ತೆ ವಿನಹ ಗುಲಾಮಗಿರಿಯಲ್ಲ ಎಂದು ಭಾವಿಸುತ್ತಿದ್ದರು. ಈಗಿನ ಸ್ತ್ರೀ ಧನ ಅದು ಮೊದಲಿನಂದಲೂ ಇತ್ತು. ಪ್ರಕೃತಿಯನ್ನು ನಂಬುತ್ತಾ ಬಂದ ತುಳುವರು ಪ್ರಕೃತಿಯ ಕಣ ಕಣವನ್ನು ಪೂಜಿಸುತ್ತಾ ಬಂದವರು. ಅದರಲ್ಲೂ ಜಲತತ್ವವನ್ನು ವಿಶೇಷವಾಗಿ ಪೂಜಿಸುವುದರಿಂದ ಆಗ ಕನ್ಯಾದಾನ ಅಷ್ಟೇ ತುಳುವರ ಸಂಪ್ರದಾಯವಾಗಿತ್ತು.
"ಶುದ್ದ ಜಲವನಿಟ್ಟ ಕಲಶವನ್ನು ಹೆಣ್ಣು ಗಂಡಿನ ಕಡೆಯವರು ಒಮ್ಮೆ ಆಕಾಶ: ಮತ್ತೊಮ್ಮೆ ಭೂಮಿಗೆ ತೋರಿಸಿ ಕನ್ಯಾದಾನ ಮಾಡುತ್ತಿದ್ದರು. ಸಪ್ತಪದಿ ತುಳುನಾಡಿನ ಸಂಪ್ರದಾಯದಲ್ಲಿ ಇರಲಿಲ್ಲ ಎಂದು ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿ ಅವರೂ ಹೇಳುತ್ತಾರೆ.
ಕೆಲಸ, ಹಾಗೂ ಶಿಕ್ಷಣಕ್ಕೆಂದು ಮುಂಬಯಿ , ದುಬಾಯಿಯಂತಹ ಸ್ಥಳಕ್ಕೆ ವಲಸೆ ಹೋದ್ದರಿಂದ ಊರಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಲೂ ಯಾರು ಇಲ್ಲದೇ, ವೈಭವೀಕರಣದ ಭರಾಟೆಯಲ್ಲಿ ತುಳುನಾಡಿನ ಸಂಪ್ರದಾಯಗಳಿಗೆ ವೈದಿಕ ಸ್ಪರ್ಶದ ಅಗ್ಯವೆನಿಸಿತು. ಆ ಬಳಿಕ ತುಳುನಾಡಿನ ಕಟ್ಟುಕಟ್ಟಳೆಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಾ ಬಂದವು.
ಅದೇ ರೀತಿ ತುಳುವರು ಪುನರ್ಜನ್ಮವನ್ನೂ ನಂಬುತ್ತಿರಲಿಲ್ಲ. ನಮ್ಮ ಮನೆಯ ಹಿರಿಯರಿಗೆ ಬದುಕಿದ್ದಾಗ ಇದ್ದ ಪ್ರಾಧ್ಯಾನ್ಯತೆ ಸತ್ತ ಬಳಿಕವೂ ಇತ್ತು. ಮನೆಯಲ್ಲಿ ಆಗುವ ಪ್ರತಿಯೊಂದು ವಿಶೇಷ ಕಾರ್ಯಗಳಲ್ಲಿ ಅವರನ್ನು ನೆನೆಸಿಕೊಳ್ಳುತ್ತಿದ್ದರು. ಇದರಿಂದಾಗಿ ಹೊಸ ಪೀಳಿಗೆಗೂ ತಮ್ಮ ಹಿರಿಯರ ಬಗ್ಗೆ ತಿಳಿಯುತ್ತಿತ್ತು.
ಮೊದಲು ತುಳುನಾಡಿನ ಧಾರ್ಮಿಕ ಸಂಪ್ರದಾಯ ದುಂದುವೆಚ್ಚದ ಆಚರಣೆ ಇರಲಿಲ್ಲ. ಈಗ ಎಲ್ಲವೂ ಬದಲಾಗಿದೆ . ಎಲ್ಲಿ ಮನೆಯ ಹಿರಿಯರಿಗೇ ಆದ್ಯ ಸ್ಥಾನವಿತ್ತೋ ಆ ಸ್ಥಾನವನ್ನು ಈಗ ರಾಜಕೀಯ ಪೂಡಾರಿಗಳಿಗೆ, ಸೆಲೆಬ್ರಿಟಿಗಳಿಗೆ, ಕೊಡುತ್ತಿದ್ದಾರೆ.
ಈಗಲೂ… ಬಹಳಷ್ಟು ಸಂಪ್ರದಾಯದಲ್ಲಿ ಸಪ್ತಪದಿ ಇಲ್ಲ..
ಅಗ್ನಿಸಾಕ್ಷಿ ಮದುವೆಯೂ ಇಲ್ಲ..
ತುಳುನಾಡಲ್ಲಿ
ಕನ್ಯಾದಾನ ಮಾಡಿದ ಹೆಣ್ಣಿನ ಮನೆಯವರಿಗೆ 5ರಿಂದ ಪ್ರಾರಂಭಿಸಿ ಬೆಸ ಸಂಖ್ಯೆಯಲ್ಲಿ ಗೋದಾನ ಮಾಡುವ ಪದ್ಧತಿಯೂ ಇತ್ತು..
ಕನ್ಯಾದಾನ ಮಾಡಿದ ಮನೆಯಲ್ಲಿ ಕ್ಷೀರ ಉಕ್ಕಿ ಹರಿಯಲಿ ( ಸಮೃದ್ಧಿಯಾಗಿರಲಿ) ಎಂದು ಹಾರೈಸಿ ತಮ್ಮ ಶಕ್ತ್ಯಾನುಸಾರ ಗೋಧಾನ ಮಾಡುವ ಪದ್ಧತಿ ಇತ್ತು..
ಅನುಷ್ಕ ಕಥೆ | Anushka Sandalwood Movie Story, Preview in Kannada - Filmibeat Kannada
Kannada Movies Anushka Story
ಅನುಷ್ಕ (2019)
ಅನುಷ್ಕ ಕಥೆ
ಈ ಹಾರರ್ ಚಿತ್ರದಲ್ಲಿ ನಾಯಕಿ ಅಮೃತಾ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಧಿಯ ಆಸೆಗಾಗಿ ಒಂದು ಅಮಾಯಕ ಹುಡುಗಿಯನ್ನು ಬಲಿಕೊಡಲು ಹೋದಾಗ ಒಂದು ಹಳೆ ಸಾಮ್ರಾಜ್ಯದ ಕಥೆ ತೆರೆದುಕೊಳ್ಳುತ್ತದೆ.ಆಗ ತಾನೇ ಮದುವೆಯಾದ ಅರ್ಜುನ್ ಮತ್ತು ಅಮೃತಾ ತಮ್ಮ ಹನಿಮೂನ್ ಗೆಂದು ಒಂದು ಗೆಸ್ಟ್ ಹೌಸ್ ಬುಕ್ ಮಾಡಿರುತ್ತಾರೆ. ಆದರೆ ಸುಖಮಯವಾಗಬೇಕಿದ್ದ ಮೊದಲ ರಾತ್ರಿ ಹಲವು ಭಯಾನಕ ಘಟನೆಗಳ ಮೂಲಕ ಅವರ ಪಾಲಿಗೆ ನರಕಮಯವಾಗುತ್ತದೆ. ಆ ಮನೆಯಲ್ಲಿ ಹಲವು ದುಷ್ಟ ಆತ್ಮಗಳು ಸೇರಿಕೊಂಡಿರುತ್ತವೆ . ಅರ್ಜುನ್ ಮತ್ತು ಅಮೃತಾ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಆ ಆತ್ಮಗಳು ತಡೆಯೊಡ್ಡುತ್ತವೆ. ಈ ಹೋರಾಟದಲ್ಲಿ ಅಮೃತಾ ಮಡಿಯುತ್ತಾಳೆ. ಅಲ್ಲಿಂದ ಚಿತ್ರ ಇನ್ನೊಂದು ಘಟ್ಟಕ್ಕೆ ಹೋಗುತ್ತದೆ. ಧರ್ಮದುರ್ಗ ಸಾಮ್ರಾಜ್ಯವನ್ನು ಆಳಿದ ಅನುಷ್ಕರಾಣಿ ಎಂಬ ರಾಣಿಯ ಆತ್ಮದ ಕತೆಯು ಚಿತ್ರದಲ್ಲಿ ಸೇರುತ್ತದೆ.
**Note:Hey! Would you like to share the story of the movie ಅನುಷ್ಕ with us? Please send it to us (popcorn@oneindia.co.in).
ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ...!? ·
ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಕ್ಕೆ ತನ್ನ ಪತಿಗೆ ಪತ್ನಿ ಕೊಟ್ಟ ಶಿಕ್ಷೆ ಏನು ಗೊತ್ತಾ…!?
ವಿಜಯವಾಣಿ ಸುದ್ದಿಜಾಲ June 25, 2019 1:47 PM No Comments
ಬೆಂಗಳೂರು: ನೂರಾರು ಕೋಟಿ ರೂಪಾಯಿ ವಂಚಿಸಿ ಬಾಗಿಲಿಕ್ಕಿಕೊಂಡಿರುವ ಐಎಂಎ ಜುವೆಲ್ಸ್​ನ ವಂಚನೆಯಿಂದಾಗಿ ಹಲವು ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದರೆ, ಇನ್ನು ಹಲವು ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಉಂಟಾಗಿವೆ. ಕೆಲವು ಕಲಹಗಳು ವಿಚ್ಛೇದನದ ಹಂತದವರೆಗೂ ತಲುಪಿರುವುದು ದುರಂತ.
ಆತ ಹೋಟೆಲ್​ ಉದ್ಯಮ ನಡೆಸಿಕೊಂಡು ಆರಾಮವಾಗಿದ್ದ. ಕೈತುಂಬಾ ಬರುತ್ತಿದ್ದ ಆದಾಯದಲ್ಲಿ ಪತ್ನಿಯೊಂದಿಗೆ ಸುಖ ಜೀವನ ನಡೆಸುತ್ತಿದ್ದ. ಆದರೆ, ಹೆಚ್ಚಿನ ಲಾಭದ ಆಸೆಗೆ ಬಿದ್ದು ಐಎಂಎ ಜುವೆಲ್ಸ್​ನಲ್ಲಿ 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ. ಇದೀಗ ಐಎಂಎ ಬಾಗಿಲಿಕ್ಕಿಕೊಂಡಿರುವುದರಿಂದ ಆತನ 25 ಲಕ್ಷ ರೂಪಾಯಿ ಹೂಡಿಕೆ ನೋಡುನೋಡುತ್ತಿದ್ದಂತೆ ಮಾಯವಾಗಿದೆ. ವಿಷಯ ತಿಳಿದ 26 ವರ್ಷದ ಈತನ ಪತ್ನಿ ಈತನಿಗೆ ವಿಚ್ಛೇದನ ನೀಡಿ 4 ವರ್ಷದ ಪುತ್ರಿಯೊಂದಿಗೆ ತವರು ಸೇರಿಕೊಂಡಿದ್ದಾಳೆ.
ಇದು ಚಿಕ್ಕಮಗಳೂರಿನ ಮೊಹಮ್ಮದ್​ ಅಮೀರ್​ ಎಂಬಾತನ ಕಥೆ. ಈತ ಹೋಟೆಲ್​ ನಡೆಸುತ್ತಿದ್ದ ಬೆಂಗಳೂರಿನಲ್ಲಿ ಮನೆ ಖರೀದಿಸಲು ನಿರ್ಧರಿಸಿದ್ದ. ಇದಕ್ಕಾಗಿ ತಾನು ತನ್ನ ಗದ್ದೆಯನ್ನು ಮಾರುವುದಾಗಿ ತನ್ನ ಪತ್ನಿ ಅಮ್ರೀನ್​ಗೆ ತಿಳಿಸಿದ್ದ. ಇದಕ್ಕೆ ಆಕೆ ಸಮ್ಮತಿಸಿದ್ದಳು. ಗದ್ದೆಯನ್ನು 25 ಲಕ್ಷ ರೂಪಾಯಿಗೆ ಮಾರಿದ್ದ ಅಮೀರ್​ ಬೆಂಗಳೂರಿನಲ್ಲಿ ಮನೆ ಹುಡುಕಲಾರಂಭಿಸಿದ್ದ.
ಈತನ ಬಳಿ ದೊಡ್ಡ ಮೊತ್ತ ಇರುವುದನ್ನು ತಿಳಿದ ಅಮೀರ್​ನ ಸ್ನೇಹಿತನೊಬ್ಬ ಐಎಂಎಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ. ಬೆಂಗಳೂರಿನಲ್ಲಿ ಒಳ್ಳೆಯ ಮನೆ ಖರೀದಿಸಬಹುದು ಎಂದು ಪುಸಲಾಯಿಸಿ ಮಾರ್ಚ್​ನಲ್ಲಿ ಐಎಂಎಯಲ್ಲಿ ಹೂಡಿಕೆ ಮಾಡಿಸಿದ್ದ. ಕೇವಲ ಮೂರು ತಿಂಗಳ ಅವಧಿಯಲ್ಲಿ ಅಮೀರ್​ ಅತ್ತ ಗದ್ದೆ, ಇತ್ತ ಹಣವನ್ನು ಕಳೆದುಕೊಂಡಿದ್ದಾನೆ. ಜತೆಗೆ ಪತ್ನಿ ಕೂಡ ವಿಚ್ಛೇದನ ನೀಡಿ ಜೀವನವನ್ನೂ ಕಸಿದುಕೊಂಡಿದ್ದಾಳೆ.
ವನಿತಾ ಸಹಾಯವಾಣಿಯ ಮೊರೆ
ವಿಚ್ಛೇದನ ನೀಡಿ ಹೋಗಿರುವ ತನ್ನ ಪತ್ನಿಯನ್ನು ಮತ್ತೊಮ್ಮೆ ಒಂದುಗೂಡಿಸುವಂತೆ ಕೋರಿ 32 ವರ್ಷದ ಅಮೀರ್​ ಬೆಂಗಳೂರು ವನಿತಾ ಸಹಾಯವಾಣಿಯ ಮೊರೆಹೋಗಿದ್ದಾನೆ. ಜೀವನದಲ್ಲಿ ದುಡ್ಡೇ ಮುಖ್ಯವಲ್ಲ. ದುಡ್ಡು ಹೋದರೆ ಮತ್ತೊಮ್ಮೆ ದುಡಿಯಬಹುದು. ಆದರೆ ಸಂಸಾರವೇ ಒಡೆದು ಹೋದರೆ ಮತ್ತೆ ಕಟ್ಟಿಕೊಳ್ಳಲಾಗದು ಎಂದು ಅಮ್ರೀನ್​ಗೆ ಮನವರಿಕೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. (ಏಜೆನ್ಸೀಸ್​)
25 ಲಕ್ಷ ರೂ. ಹೂಡಿಕೆCikkamgaluruDivorceIMA JewelsMansoor Ahmed KhanRs.25 lakh Investmentಐಎಂಎ ಜುವೆಲ್ಸ್​ಚಿಕ್ಕಮಗಳೂರುಮನ್ಸೂರ್​ ಅಹ್ಮದ್​ ಖಾನ್​ವನಿತಾ ಸಹಾಯವಾಣಿವಿಚ್ಛೇದನ
Previous Previous post: ನನ್ನ ಕೈಗಳನ್ನು ಕತ್ತರಿಸಿ ನರಕದಿಂದ ಪಾರು ಮಾಡಿ: ವೈದ್ಯರ ಬಳಿ 'ಮರದ ಮನುಷ್ಯ' ಎಂದೇ ಕರೆಯಲ್ಪಡುವ ವ್ಯಕ್ತಿಯ ಗೋಳಾಟ
Next Next post: VIDEO| ನಂಬಿಕೆ ಭಾಗವಾಗಿ ಆನೆ ವಿಗ್ರಹದಡಿ ನುಸುಳಲು ಹೋಗಿ ಸಿಲುಕಿ ಪರದಾಡಿದ ಮಹಿಳೆ ಕೊನೆಗೂ ಹೊರಬಂದಿದ್ದು ಹೀಗೆ….
ಈ ಯುವಕನ ಮನೆಯ ದೇವರ ಕೋಣೆಯಲ್ಲಿದೆ ಟ್ರಂಪ್ ಫೋಟೋ…! | Kannada Dunia | Kannada News | Karnataka News | India News
HomeLive NewsIndiaಈ ಯುವಕನ ಮನೆಯ ದೇವರ ಕೋಣೆಯಲ್ಲಿದೆ ಟ್ರಂಪ್ ಫೋಟೋ…!
22-06-2018 11:55AM IST / No Comments / Posted In: India, Featured News
ತೆಲಂಗಾಣದ ಜಾನ್ಗಾಂವ್ ಜಿಲ್ಲೆಯಲ್ಲಿರುವ ಪುಟ್ಟ ಗ್ರಾಮ ಕೊನ್ನೆ ನಿವಾಸಿ 31 ವರ್ಷದ ಬುಸ್ಸಾ ಕೃಷ್ಣಾನಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೂ ಎಲ್ಲಿಯ ಸಂಬಂಧ. ಆದರೂ ಈತ ತನಗೆ ಅಮೆರಿಕ ಅಧ್ಯಕ್ಷರಿಂದ ಸಂದೇಶ ಬಂದಿದೆ ಎಂಬ ದೃಢ ನಂಬಿಕೆ ಹೊಂದಿದ್ದಾನೆ. ಜೊತೆಗೆ ಟ್ರಂಪ್ ಫೋಟೋಗೆ ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾನೆ. ಹಾಗಾದ್ರೆ ಈ ಸ್ಟೋರಿ ಏನು ಅಂತೀರಾ? ಮುಂದೆ ಓದಿ.
ಈ ಕಥೆ ಆರಂಭವಾಗುವುದು ಕಳೆದ ವರ್ಷದ ಫೆಬ್ರವರಿಯಲ್ಲಿ ಜನಾಂಗೀಯ ದ್ವೇಷಕ್ಕೆ ಬಲಿಯಾದ ಶ್ರೀನಿವಾಸ್ ಕುಚಿಬೋಟ್ಲಾ ಪ್ರಕರಣದಿಂದ. ಇದರಿಂದ ತೀವ್ರವಾಗಿ ನೊಂದಿದ್ದ ಕೃಷ್ಣಾ, ಮುಂದೆ ಇಂತಹ ಘಟನೆ ಮರುಕಳಿಸಬಾರದೆಂಬ ಕಾರಣಕ್ಕೆ ವಿಶ್ವದ ಶಕ್ತಿಶಾಲಿ ರಾಷ್ಟ್ರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋಗೆ ಪೂಜೆ ಮಾಡಲು ಆರಂಭಿಸಿದ್ದು, ಇಂತಹ ಶಕ್ತಿ ಇರುವುದು ಡೊನಾಲ್ಡ್ ಟ್ರಂಪ್ ಅವರಿಗೆ ಮಾತ್ರ ಎಂಬ ದೃಢ ವಿಶ್ವಾಸ ಕೃಷ್ಣಾನದ್ದು. ಮನೆಯಲ್ಲಿರುವ ಇತರ ದೇವತೆಗಳ ಫೋಟೊ ಜೊತೆಗೆ ಟ್ರಂಪ್ ಫೋಟೋಗೂ ಜಾಗ ಸಿಕ್ಕಿದೆ.
ಕೃಷ್ಣಾನ ವರ್ತನೆಗೆ ಗ್ರಾಮಸ್ಥರು ಗೇಲಿ ಮಾಡಿದರೂ ಆತ ತಲೆಕೆಡಿಸಿಕೊಂಡಿಲ್ಲ. ಒಂದಲ್ಲ ಒಂದು ದಿನ ತನ್ನ ಪೂಜೆ ಫಲ ಕೊಡುತ್ತದೆ ಎಂದು ನಂಬಿರುವ ಆತ, ಈಗಾಗಲೇ ಡೊನಾಲ್ಡ್ ಟ್ರಂಪ್ ರಿಂದ ನನಗೆ ಸಂದೇಶ ಬಂದಿದ್ದು, ಮುಂದಿನ ಭಾರತ ಭೇಟಿ ವೇಳೆ ನನ್ನನ್ನು ನೆನಪಿಸಿಕೊಳ್ಳುವುದು ಖಂಡಿತ ಎಂಬ ನಂಬಿಕೆ ಹೊಂದಿದ್ದಾನೆ.