text
stringlengths 0
61.5k
|
---|
ಆದರೆ ಅವರಲ್ಲಿರುವ ಜೀವನೋತ್ಸಾಹ ಮಾತ್ರ ಖಂಡಿತ ಪ್ರೇರಣಾದಾಯಕ. |
ಸಾಮಾನ್ಯ ಜನರನ್ನು ಗಮನಿಸಿ. ಕೇವಲ ಪ್ರೀತಿಗಾಗಿ, ಕೌಟುಂಬಿಕ ಕಲಹಗಳಿಗಾಗಿ, ಸಾಲಕ್ಕಾಗಿ, ಸಣ್ಣ ಪುಟ್ಟ ಅವಮಾನಗಳಿಗಾಗಿ ಜನ ಜೀವನವೇ ಮುಗಿದು ಹೋದಂತೆ ಕುಸಿದು ಬೀಳುತ್ತಾರೆ ಮತ್ತು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. |
ಈ ವ್ಯತ್ಯಾಸ ಏಕೆ. ಎಲ್ಲರೂ ಮನುಷ್ಯರೇ ಅಲ್ಲವೇ. ಈ ಪ್ರಕೃತಿ ಈ ಸಮಾಜ ಈ ಸರ್ಕಾರ ನ್ಯಾಯ ಅನ್ಯಾಯ ನೀತಿ ಅನೀತಿ ಮಾನ ಅವಮಾನ ಕಾನೂನು ಎಲ್ಲವೂ ಎಲ್ಲರಿಗೂ ಒಂದೇ ಅಲ್ಲವೇ. |
ಸೋಲು ಸಂಕಷ್ಟಗಳನ್ನು ಎದುರಿಸುವುದು ಅವರಿಗೆ ಸಾಧ್ಯವಾಗುವುದಾದರೆ ನಮಗೆ ಏಕೆ ಆಗುವುದಿಲ್ಲ. |
ಇಲ್ಲಿಯೇ ಭಾರತದ ಸಾಮಾಜಿಕ ಮತ್ತು ಮಾನಸಿಕ ಅಸಮತೋಲನದ ತಾರತಮ್ಯ ಅಡಗಿರುವುದು. |
ಭಂಡ ವ್ಯಕ್ತಿಗಳು, ಭಾವನೆಗಳನ್ನು ನಿಯಂತ್ರಿಸುವವರು, ಅಧಿಕಾರ ಹಣದ ಮೋಹಕ್ಕೆ ಒಳಗಾದವರು, ಜನರ ನಾಡಿ ಮಿಡಿತ ಅರ್ಥಮಾಡಿಕೊಂಡವರು, ಯಶಸ್ಸು ಮಾತ್ರವೇ ನಿಜವಾದ ಮಾನ ಮರ್ಯಾದೆ ಎಂದು ಭಾವಿಸಿರುವವರು ಜೀವನವನ್ನು ಹೆಚ್ಚು ಧೈರ್ಯದಿಂದ ಎದುರಿಸುತ್ತಾರೆ. |
ಸೂಕ್ಷ್ಮ ಮನಸ್ಸಿನವರು, ಭಾವನಾ ಜೀವಿಗಳು, ಸಮಾಜದ ಮೌಲ್ಯಗಳನ್ನು ಗೌರವಿಸುವವರು ಮತ್ತು ಅದಕ್ಕೆ ಭಯಪಡುವವರು ಬದುಕು ಎದುರಿಸಲು ತುಂಬಾ ಶ್ರಮ ಪಡುತ್ತಾರೆ ಹಾಗು ಸದಾ ಕಾಲ ಅತೃಪ್ತರಾಗಿಯೇ ಇರುತ್ತಾರೆ. ವಿಫಲತೆಯ ಭಯದಿಂದ ನರಳುತ್ತಾರೆ. |
ಜೊತೆಗೆ ಈ ರಾಜಕಾರಣಿಗಳಲ್ಲಿ ಬಹುತೇಕರು 65/75 ವಯಸ್ಸಿನ ನಡುವಿನವರು ಹಾಗು ಅದಕ್ಕಿಂತ ಹಿರಿಯರು. ಆದರೂ ಅವರ ಉತ್ಸಾಹ 25 ರ ಯುವಕರನ್ನು ನಾಚುವಂತಿರುತ್ತದೆ. ಚುನಾವಣಾ ಸಮಯದಲ್ಲಿ ಅವರ ಓಡಾಟ ಹಾರಾಟ ಯುದ್ಧದ ಸೈನಿಕರ ದೈಹಿಕ ಶಕ್ತಿಯನ್ನು ನೆನಪಿಸಿತ್ತದೆ. ಆದರೆ ಸಾಮಾನ್ಯ ಜನ 45/55 ಸಮೀಪಿಸುತ್ತಿದ್ದಂತೆ ಜೀವನವೇ ಮುಗಿದು ಹೋದಂತೆ ಭಾವಿಸುತ್ತಾರೆ. ತಮ್ಮ ಚಟುವಟಿಕೆ ನಿಯಂತ್ರಿಸಿಕೊಳ್ಳುತ್ತಾರೆ. |
ಇರುವುದು ಒಂದೇ ಜೀವನ. ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ ಅಥವಾ ಸಾಮಾನ್ಯ ಸರಳ ಜೀವನವೇ ಸಾಗಿಸುತ್ತಿರಲಿ ಒಟ್ಟಿನಲ್ಲಿ ಬದುಕಿನ ಕೊನೆಯವರೆಗೂ ಜೀವನೋತ್ಸಾಹ ಉಳಿಸಿಕೊಳ್ಳೋಣ. ಎಂತಹ ಸೋಲು ಅಥವಾ ಕೆಟ್ಟ ಪರಿಸ್ಥಿತಿಯೇ ಬರಲಿ ಮತ್ತೆ ಮತ್ತೆ ಗೆಲುವಿನ ಭರವಸೆಯೊಂದಿಗೆ ಮುನ್ನಡೆಯೋಣ. ಪ್ರಕೃತಿಯಲ್ಲಿ ಒಂದು ದಿನ ಲೀನವಾಗುವವರೆಗೂ………. |
'ದಂಡ ಕಟ್ಟು ಮಗನೇ' ಎಂದ ಸ್ಟುವರ್ಟ್ ಬ್ರಾಡ್ ಅಪ್ಪ ಕ್ರಿಸ್ ಬ್ರಾಡ್..! | England Pacer Stuart Broad fined by his father Chris Broad for using inappropriate language against Pakistan Test |
Manchester, First Published 12, Aug 2020, 4:45 PM |
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಸಭ್ಯವಾದ ಪದ ಬಳಕೆ ಮಾಡಿದ ತಪ್ಪಿಗೆ ಸ್ಟುವರ್ಟ್ ಬ್ರಾಡ್ ರೆಫ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತಂದೆ ಕ್ರಿಸ್ ಬ್ರಾಡ್ ಅವರಿಂದಲೇ ದಂಡ ವಿಧಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ |
ಮ್ಯಾಂಚೆಸ್ಟರ್(ಆ.12): ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಸಭ್ಯ ಭಾಷೆ ಬಳಿಸಿದ ತಪ್ಪಿಗಾಗಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಪಂದ್ಯದ 15% ಸಂಭಾವನೆಯನ್ನು ದಂಡ ಕಟ್ಟಲು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಸೂಚಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂದೆಯಿಂದ ದಂಡ ಹಾಕಿಸಿಕೊಂಡ ಮೊದಲ ಕ್ರಿಕೆಟಿಗ ಎನ್ನುವ ಕುಖ್ಯಾತಿಗೆ ಸ್ಟುವರ್ಟ್ ಬ್ರಾಡ್ ಭಾಜನರಾಗಿದ್ದಾರೆ. |
ಸ್ಟುವರ್ಟ್ ಬ್ರಾಡ್ ಲೆವಲ್ 1 ಹಂತದ ಪ್ರಮಾದ ಎಸಗಿರುವುದು ಕಂಡುಬಂದಿದ್ದು, ಇದಕ್ಕಾಗಿ ಒಂದು ಡಿ ಮೆರಿಟ್ ಅಂಕವನ್ನು ಪಡೆದುಕೊಂಡಿದ್ದಾರೆ. ಸ್ಟುವರ್ಟ್ ಬ್ರಾಡ್ ಐಸಿಸಿ ನಿಯಮಾವಳಿಯ ಆರ್ಟಿಕಲ್ 2.5 ಉಲ್ಲಂಘಿಸಿರುವುದು ಖಚಿತವಾಗಿದೆ.ಆರ್ಟಿಕಲ್ 2.5 ನಿಯಮದ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎದುರಾಳಿ ಬ್ಯಾಟ್ಸ್‌ಮನ್ ವಿಕೆಟ್ ಪಡೆದ ಬಳಿಕ ಅಸಭ್ಯ ಭಾಷೆ ಅಥವಾ ಆಕ್ರಮಣಕಾರಿ ವರ್ತನೆ ತೋರುವ ಮೂಲಕ ಕರೆಳಿಸುವಂತೆ ಮಾಡಿದರೆ ಐಸಿಸಿ ಅಂತಹ ಆಟಗಾರರಿಗೆ ದಂಡ ವಿಧಿಸುತ್ತದೆ. |
🗣️🎶 Looks like we might need to change the words to his song slightly... https://t.co/zU63HMvUTn |
ಯಾವಾಗ ನಡೆದ ಘಟನೆ: |
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನ ನಾಲ್ಕನೇ ದಿನದಾಟದ 46ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಸ್ಟುವರ್ಟ್ ಬ್ರಾಡ್ ಪಾಕಿಸ್ತಾನದ ಯಾಸಿರ್ ಶಾ ವಿಕೆಟ್ ಪಡೆದ ಬಳಿಕ ಅಸಭ್ಯ ಪದ ಬಳಕೆ ಮಾಡಿದ್ದರು. ಪಂದ್ಯ ಮುಕ್ತಾಯದ ಬಳಿಕ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಗೆ ತಲೆಬಾಗುವುದಾಗಿ ತಿಳಿಸಿದ್ದಾರೆ. |
ತಾಲಿಬಾನಿಗಳಿಂದ ತಪ್ಪಿಸಿಕೊಂಡವಳ ಬದುಕು ಪಾಕಿಸ್ತಾನದಲ್ಲಿ ಹೀಗಾಯಿತು | Escape from Taliban, arrest in Pakistan - Kannada Oneindia |
» ತಾಲಿಬಾನಿಗಳಿಂದ ತಪ್ಪಿಸಿಕೊಂಡವಳ ಬದುಕು ಪಾಕಿಸ್ತಾನದಲ್ಲಿ ಹೀಗಾಯಿತು |
ತಾಲಿಬಾನಿಗಳಿಂದ ತಪ್ಪಿಸಿಕೊಂಡವಳ ಬದುಕು ಪಾಕಿಸ್ತಾನದಲ್ಲಿ ಹೀಗಾಯಿತು |
ವಿಸ್ಮಯ್ |
By: ವಿಸ್ಮಯ್ |
Updated: Thursday, October 27, 2016, 16:27 [IST] |
'ಪುರುಷ ಪ್ರಧಾನ ಸಮಾಜದಲ್ಲಿ ಬಹುತೇಕ ಸಂದರ್ಭದಲ್ಲಿ ಪುರುಷರದ್ದೇ ಆಧಿಪತ್ಯ. ಆದರೂ ಇಲ್ಲಿ ಯಾಕೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಮುಂದಕ್ಕೆ ನಡೆದು ಹೋಗುತ್ತಿದ್ದರೆ, ನೀವು ಯಾಕೆ ಅವರಿಂದ 10 ಅಡಿ ಹಿಂದೆ ನಡೆದುಕೊಂಡು ಹೋಗುತ್ತಿದ್ದೀರಾ? ನೀವು ಮುಂದೆಯಿದ್ದು, ಪತ್ನಿ ಮತ್ತು ಪುತ್ರಿಯರು ಹಿಂದೆ ಬರಬೇಕಲ್ವಾ? |
-ಅಫ್ಘನಿಸ್ತಾನದ ಗ್ರಾಮವೊಂದರಲ್ಲಿ ಕೆಲ ವರ್ಷಗಳ ಹಿಂದೆ ಇಂತಹ ಒಂದು ಪ್ರಶ್ನೆ ವಿದೇಶಿ ಪತ್ರಕರ್ತೆಯೊಬ್ಬರು ವ್ಯಕ್ತಿಯೊಬ್ಬನನ್ನು ಕೇಳಿದಾಗ, 'ನಿಮಗೆ ಯಾಕೆ ಇದರ ಉಸಾಬರಿ' ಎಂದು ಸಿಟ್ಟಾಗಿ ಮುಂದೆ ಸಾಗಿದ. |
ವಿದೇಶಿ ಪತ್ರಕರ್ತೆ ಗೊಂದಲಕ್ಕೆ ಒಳಗಾಗಿದ್ದು ಕಂಡು ಅಲ್ಲೇ ಕೂತಿದ್ದ ಅಜ್ಜಿ ಬೊಚ್ಚುಬಾಯಿಯಲ್ಲಿ ಉತ್ತರಿಸಿದಳು: ಇಲ್ಲಿನ ನೆಲದಲ್ಲಿ ಬಾಂಬ್ ಗಳನ್ನು (landmines) ಅಡಗಿಸಿಡಲಾಗಿದೆ. ಯಾರಾದರೂ ಅವು ಇರುವ ಕಡೆ ಹೆಜ್ಜೆಯಿಟ್ಟರೆ, ಸ್ಫೋಟಗೊಂಡು ಕೂದಲು ಸಹ ಸಿಗದಂತೆ ಪುಡಿಯಾಗುತ್ತಾರೆ. ಅದಕ್ಕೆ ಇಲ್ಲಿನ ಪುರುಷರು ಸಾಯುವ ಪ್ರಶ್ನೆ ಎದುರಾದಾಗ, ಮೊದಲು ಮಹಿಳೆಯರನ್ನು ಮುಂದೆ ಬಿಡುತ್ತಾರೆ.[ಅಫ್ಘಾನಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ, 35 ಮಂದಿ ಸಾವು] |
ಬಹುಶಃ ಇದು ಸೇರಿದಂತೆ ಇಂತಹದ್ದೇ ಹಲವು ಕಾರಣಗಳಿಂದ ಅಫ್ಘನ್ ಮಹಿಳೆಯರು ಸೇರಿದಂತೆ ಎಲ್ಲರೂ ಬೇರೆ ಬೇರೆ ದೇಶಗಳಲ್ಲಿ ಅಕ್ರಮವಾಗಿ ನುಸುಳಿಯಾದರೂ ಬದುಕಲು ಬಯಸುತ್ತಾರೆ. ಅಂತಹ ಆಶಾಜೀವಿಗಳಲ್ಲಿ 'ಅಫ್ಘನ್ ಹುಡುಗಿ' ಶರ್ಬತ್ ಬೀಬಿ (ಶರ್ಬತ್ ಗುಲ್) ಕೂಡ ಒಬ್ಬರೆಂದರೆ ಅಲ್ಲಗಳೆಯಲಾಗದು. |
ಲಕ್ಷಾಂತರ ಅಫ್ಘನರಂತೆ ಆಕೆಯೂ ಪೌರತ್ವದ ನಕಲಿ ಕಾರ್ಡುಗಳನ್ನು ಪಡೆದು ಪ್ರವೇಶಿಸಿರಬಹುದು. ಅದಕ್ಕಾಗಿ, ಪಾಪ ಅವರು ಬೆಲೆಯೂ ತೆತ್ತಿದ್ದಾರೆ.ಆಕೆಯನ್ನು ಪಾಕಿಸ್ತಾನದ ಎಫ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೂ ವಿಶೇಷವೆಂದರೆ, ನಕಲಿ ಕಾರ್ಡುಗಳನ್ನು ಮಾಡಿಸಿಕೊಟ್ಟವರಲ್ಲಿ ಪಾಕಿಸ್ತಾನ ಆಡಳಿತ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಶಾಮೀಲಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.[ಅಪಹರಣಕ್ಕೆ ಒಳಗಾಗಿದ್ದ ಭಾರತದ ಜುಡಿತ್ ಡಿಸೋಜಾ ತವರಿಗೆ] |
ಶರ್ಬತ್ ಬೀಬಿ ಬೇರೆ ಯಾರೂ ಅಲ್ಲ. ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆಯ ಮುಖಪುಟದಲ್ಲಿ ಪ್ರಕಟಗೊಂಡು 'ಯುದ್ಧ ಪೀಡಿತ ಅಫ್ಘನ್ ಮೋನಾಲಿಸಾ'ಎಂದು ಪ್ರಖ್ಯಾತಿ ಹೊಂದಿದವರು. ಅದಕ್ಕೆ ಕಾರಣವಾದ ಆ ಪತ್ರಿಕೆಯ ಛಾಯಾಗ್ರಹಕ ಸ್ಟೀವ್ ಮಾರ್ಕ್ ಕೆರ್ರಿ ನಿರಾಶ್ರಿತರ ಡೇರೆಯಲ್ಲಿ ಆಕೆಯನ್ನು 1984 ಮತ್ತು 2002ರಲ್ಲಿ ಕ್ಯಾಮೆರಾದಲ್ಲಿ ಸೆರೆ ಹಿಡಿದ. |
ವಿಶ್ವಸಂಸ್ಥೆ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚಿನ ನಿರಾಶ್ರಿತರು ಈ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿ ಪ್ರದೇಶದ ಡೇರೆಗಳಲ್ಲಿ ವಾಸವಿದ್ದಾರೆ. ಅಫ್ಘಾನಿಸ್ತಾನದ ಯುದ್ಧಪೀಡಿತ ಪ್ರದೇಶದಲ್ಲಿ ನೆಮ್ಮದಿ ಕಳೆದುಕೊಂಡು ಬದುಕುವುದಕ್ಕಿಂತ ಮತ್ತು ನಿರಂತರ ಶೋಷಣೆ, ದೌರ್ಜನ್ಯ ಎದುರಿಸುವುದಕ್ಕಿಂತ ಬೇರೊಂದು ದೇಶದಲ್ಲಿ ಅಕ್ರಮ ನಿವಾಸಿಗಳಾಗಿ ಬದುಕುವುದೇ ಮೇಲು ಎಂದು ಭಾವಿಸಿದವರು ಅವರು. |
ಆದರೆ, ಇಲ್ಲಿ ಬದುಕು ಅನಿರೀಕ್ಷಿತ ತಿರುವು ಕಂಡಿತು. ಅದಕ್ಕೆ ಹೇಳಿದ್ದು, ಎಸ್ಕೇಪ್ ಫ್ರಮ್ ತಾಲಿಬಾನ್, ಅರೆಸ್ಟ್ ಇನ್ ಪಾಕಿಸ್ತಾನ. |
pakistan, afghanistan, arrest, ಪಾಕಿಸ್ತಾನ, ಅಫ್ಘಾನಿಸ್ತಾನ, ಬಂಧನ |
Nat Geo's famed 'Afghan Girl' Sharbat Gula arrested from her Peshawar (Pakistan) residence by FIA for alleged forgery of a Computerised National Identity Card. On the backdrop of incident here is an article about situation of women in Afghanistan. |
ಕ್ರಿಕೆಟ್ ರನ್ ಹೊಳೆಯಲ್ಲಿ ಭೀಕರ 'ಬೆಟ್ಟಿಂಗ್' ಸುಳಿ | Prajavani |
ಎಂ.ಸಿ.ಮಂಜುನಾಥ Updated: 05 ಮೇ 2019, 01:45 IST |
ವಯಸ್ಸಿನ ಭೇದವಿಲ್ಲದೆ ಲಕ್ಷಾಂತರ ಮಂದಿ ಬೆಟ್ಟಿಂಗ್ ಕೂಪದಲ್ಲಿ ಬಿದ್ದು ಹಣ, ಆಸ್ತಿ ಕಳೆದುಕೊಂಡು ಸಾಲಗಾರರಾಗಿದ್ದಾರೆ. ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ಎದುರಿಸಲಾಗದೆ, ಮನೆ – ಊರು ತೊರೆದು ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲಾ ಅವಾಂತರಗಳು ನಡೆಯುತ್ತಿದ್ದರೂ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಿದ್ದ ಸರ್ಕಾರ ತನಗೂ, ಅದಕ್ಕೂ ಸಂಬಂಧವಿಲ್ಲ ಎಂಬಂತಿದೆ. ಪೊಲೀಸರು ಆಗೊಮ್ಮೆ, ಈಗೊಮ್ಮೆ ದಾಳಿ ನಡೆಸಿದಂತೆ ಮಾಡಿ ಸುಮ್ಮನಾಗುತ್ತಿದ್ದಾರೆ. |
ಬೆಂಗಳೂರು: ಟೆಸ್ಟ್, ಏಕದಿನ ಪಂದ್ಯಗಳನ್ನು ಹಿಂದಿಕ್ಕಿ ಅಭಿಮಾನದ ಹುಚ್ಚು ಹೆಚ್ಚಿಸಿಕೊಂಡ ಐಪಿಎಲ್ ಎಂಬ ಚುಟುಕು ಕ್ರಿಕೆಟ್, ತನ್ನ ಮೆರುಗಿನಿಂದ ಇಡೀ ಜಗತ್ತಿನ ಕಣ್ಣುಗಳೇ ಭಾರತದತ್ತ ಹೊರಳುವಂತೆ ಮಾಡಿದೆ. ಮೈದಾನದಲ್ಲಿ ರನ್ ಹೊಳೆ ಹರಿದಷ್ಟೇ ವೇಗದಲ್ಲಿ, ಬೌಂಡರಿ ಗೆರೆಯಿಂದಾಚೆ 'ಬಾಜಿ'ಯ ಮೀಟರ್ ಓಡುತ್ತಿದೆ. ಕ್ರಿಕೆಟ್‌ನ ಅಪ್ಪಟ ಅಭಿಮಾನಿಗಳು ಮಾತ್ರ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ, ಜೂಜಿಗೆ ಬಿದ್ದ 'ಅಂದಾಭಿಮಾನಿ'ಗಳು ತಮ್ಮ ಬದುಕನ್ನು ಆ ರನ್ ಹೊಳೆಯ ಸುಳಿಯಲ್ಲೇ ಮುಳುಗಿಸಿಕೊಂಡು ಒದ್ದಾಡುತ್ತಿದ್ದಾರೆ... |
ಈ ಬಾರಿ ಲೋಕಸಭಾ ಚುನಾವಣೆ ಭರಾಟೆ ನಡುವೆಯೇ ಐಪಿಎಲ್ ಅಬ್ಬರ ಶುರುವಾಗಿದ್ದರಿಂದ, ಗಲ್ಲಿಗಲ್ಲಿಗಳಲ್ಲಿ ಈಗಲೂ ಸೋಲು–ಗೆಲುವಿನದ್ದೇ ಲೆಕ್ಕಾಚಾರ. ಪಂದ್ಯದ ಮೇಲಷ್ಟೇ ಅಲ್ಲದೆ ನಾಣ್ಯ ಚಿಮ್ಮಿಕೆ, ಬೌಂಡರಿ, ಸಿಕ್ಸರ್, ವಿಕೆಟ್ ಪತನ... ಹೀಗೆ, ಪಂದ್ಯದ ಪ್ರತಿ ಹಂತಕ್ಕೂ ಬಾಜಿ ನಡೆಯುತ್ತಿದೆ. ದೇಶದ ಯಾವುದೋ ಮೈದಾನದಲ್ಲಿ ಆಟಗಾರ ಸಿಕ್ಸರ್ ಎತ್ತಿದರೆ, ರಾಜ್ಯದ ಗಲ್ಲಿ ಹುಡುಗನ ಹೃದಯ ಚಿಟ್ಟೆಯಂತೆ ಹಾರುತ್ತದೆ. ಇನ್ಯಾರೋ ಔಟ್ ಆದರೆ, ಆತನ ಹೃದಯ ಬಡಿತ ಒಂದು ಕ್ಷಣ ನಿಂತು ಹೋಗುತ್ತದೆ. |
ಮೊದಲೆಲ್ಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಬೆಟ್ಟಿಂಗ್ ವ್ಯವಹಾರ, ಈಗ ಹಳ್ಳಿ–ಹಳ್ಳಿಗೂ ವಿಸ್ತರಿಸಿದೆ. ಯಾವ ತಂಡದ ಪರ ಬೆಟ್ಟಿಂಗ್ ಆಡುವುದು ಸೂಕ್ತ? ಯಾವ ಆಟಗಾರ ಚೆನ್ನಾಗಿ ಆಡಬಲ್ಲ? ಎಷ್ಟು ಹಣದವರೆಗೆ ಬಾಜಿ ಕಟ್ಟಬಹುದು ಎಂಬುದನ್ನು ತಿಳಿಸುವುದಕ್ಕೇ ಸದ್ಯ 40ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿವೆ. ಕ್ರಿಕೆಟ್‌ನ ಗಂಧ–ಗಾಳಿ ಗೊತ್ತಿಲ್ಲದವರ ಮೊಬೈಲ್‌ಗಳಲ್ಲೂ ಈಗ ಅವೇ ಆ್ಯಪ್‌ಗಳು ಕುಣಿಯುತ್ತಿವೆ. |
ಹಣಕಾಸಿನ ವ್ಯವಹಾರ ಕೂಡ ಆನ್‌ಲೈನ್‌ನಲ್ಲೇ ನಡೆಯುತ್ತಿದ್ದು, ಜನ ತಮ್ಮ ಬ್ಯಾಂಕ್ ಖಾತೆಗಳನ್ನೂ ವೆಬ್‌ಸೈಟ್‌ಗಳಿಗೆ ಲಿಂಕ್ ಮಾಡಿಬಿಟ್ಟಿದ್ದಾರೆ. ತಾವು ಯಾರ ಬಳಿ ಬಾಜಿ ಕಟ್ಟುತ್ತಿದ್ದೇವೆ? ಗೆದ್ದಾಗ ತಮಗೆ ಯಾರು ಹಣ ಕೊಡುತ್ತಾರೆ ಎಂಬ ಜ್ಞಾನವೂ ಇಲ್ಲದೇ ಯುವಕರು ಜೂಜಾಡುತ್ತಿದ್ದಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ನಿತ್ಯ ಸಂಸಾರದ ನೊಗ ಎಳೆಯುತ್ತಿರುವ ಪೋಷಕರಿಗೆ, ತಮ್ಮ ಮಕ್ಕಳ ಈ ಹುಚ್ಚಾಟ ಗೊತ್ತೂ ಆಗುತ್ತಿಲ್ಲ. 'ಎಲ್ಲರಂತೆ ನಮ್ಮ ಮಗನೂ ಕ್ರಿಕೆಟ್ ಗೀಳು ಬೆಳೆಸಿಕೊಂಡಿದ್ದಾನೆ' ಎಂದು ಅವರೂ ಅವನೊಂದಿಗೇ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ. |
ಆದರೆ, ಬಾಜಿಯ ಇಳಿಜಾರಿನಲ್ಲಿ ನಿಂತಿರುವವರು ತಮ್ಮ ಬಂಧು–ಮಿತ್ರರು, ನೆರೆ–ಹೊರೆಯವರು ಎನ್ನದೇ ಎಲ್ಲರ ಬಳಿಯೂ ಸಾಲಕ್ಕಾಗಿ ಕೈಚಾಚುತ್ತಿದ್ದಾರೆ. ಅದನ್ನು ತೀರಿಸಲಾಗದೆ ಜೀವ ಬಿಡುತ್ತಿದ್ದಾರೆ. ಶಾಶ್ವತವಾಗಿ ಕಣ್ಮರೆ ಆಗುತ್ತಿದ್ದಾರೆ. |
ಮಂಡ್ಯ ಜಿಲ್ಲೆ ತಾವರಗೆರೆಯ ಫೈನಾನ್ಶಿಯರ್ ಆತ್ಮಹತ್ಯೆಗೆ ಶರಣಾದ, ಆಲೂರಿನ ಎಂಜಿನಿಯರಿಂಗ್ ಪದವೀಧರ ಕುಖ್ಯಾತ ಸರಗಳ್ಳನಾದ, ಬಾಗಲಕೋಟೆಯ ಇಳಕಲ್, ಕೆರೂರಿನಲ್ಲಿ ವಿದ್ಯಾರ್ಥಿಗಳು ನೇಣಿಗೆ ಕೊರಳೊಡ್ಡಿದ, ಹಣ ಕೊಡಲಿಲ್ಲವೆಂದು ಮಂಗಳೂರಿನ ಉದ್ಯಮಿ ಶರಾಬಿಗೆ ವಿಷ ಬೆರೆಸಿ ಕುಡಿದ, ಹಾಸನದ ಕುಂದೂರು ಹೋಬಳಿಯ ಡಿಪ್ಲೊಮಾ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ, ಚಾಮರಾಜನಗರ ಸರಗೂರಿನಲ್ಲಿ ಯುವಕ ಊರು ಬಿಟ್ಟ... ಇಂತಹ ಹತ್ತು–ಹಲವು ನಿದರ್ಶನಗಳು ಬೆಟ್ಟಿಂಗ್ ದಂಧೆಯ ಕರಾಳ ಮುಖವನ್ನು ಬಿಚ್ಚಿಡುತ್ತವೆ. |
ಏಳು ಸೆಕೆಂಡ್, ಕೋಟಿ–ಕೋಟಿ ಬಾಜಿ: ದೇಶದ ಯಾವುದೋ ಮೂಲೆಗಳಲ್ಲಿ (ಪ್ರಮುಖವಾಗಿ ಮುಂಬೈ, ರಾಜಸ್ಥಾನ, ಪಂಜಾಬ್ ಹಾಗೂ ಹರಿಯಾಣ) ಕೂತ 'ಬುಕ್ಕಿ'ಗಳು, ತಮ್ಮ ಕೈಕೆಳಗೆ 'ಪಂಟರ್'ಗಳನ್ನು ಇಟ್ಟುಕೊಂಡಿರುತ್ತಾರೆ. ಪ್ರತಿ ಪಂಟರ್, ನೂರಾರು ಏಜೆಂಟ್‌ಗಳನ್ನು ಹೊಂದಿರುತ್ತಾನೆ. ಹೆಚ್ಚು ಬಾಜಿ ಕಟ್ಟುತ್ತಿರುವ ವ್ಯಕ್ತಿಗಳನ್ನು ಹುಡುಕಿ, ತಮ್ಮ ಜಾಲದಲ್ಲೇ ಬೆಟ್ಟಿಂಗ್‌ಗೆ ತೊಡಗಿಸುವಂತೆ ಅವರನ್ನು ಪುಸಲಾಯಿಸುವುದು ಆ ಏಜೆಂಟ್‌ಗಳ ಕೆಲಸ. |
ಸಾಮಾನ್ಯವಾಗಿ ಮೈದಾನದಲ್ಲಿ ನಡೆಯುವ ಪಂದ್ಯಕ್ಕೂ, ಅದು ಟಿ.ವಿಯಲ್ಲಿ ಪ್ರಸಾರವಾಗುವುದಕ್ಕೂ ಏಳು ಸೆಕೆಂಡ್ ವ್ಯತ್ಯಾಸವಿರುತ್ತದೆ. ಹೀಗಾಗಿ, ಬುಕ್ಕಿಗಳು ಮೈದಾನದಲ್ಲಿರುವ ತಮ್ಮ ಹುಡುಗರಿಂದ ಮಾಹಿತಿ ಪಡೆದು, ಏಳು ಸೆಕೆಂಡ್‌ಗಳ ಅಂತರದಲ್ಲೇ ಬೆಟ್ಟಿಂಗ್ ಕಟ್ಟಿಸಿಕೊಂಡು ಕೋಟಿ–ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ |
ಕ್ರೀಡಾಂಗಣದಲ್ಲಿ ಪ್ರತಿ ಪಂದ್ಯ ನಡೆದಾಗಲೂ, ಇಂತಹ ಕನಿಷ್ಠ ಇಬ್ಬರು ಹುಡುಗರು ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಾರೆ. |
ಬೆಟ್ಟಿಂಗ್‌ನಲ್ಲಿ ಆಸಕ್ತಿವುಳ್ಳ ಹಾಗೂ ಉದ್ಯೋಗವಿಲ್ಲದ ಯುವಕರನ್ನು ಗುರುತಿಸಿಕೊಳ್ಳುವ ಏಜೆಂಟ್‌ಗಳು, ಅವರಿಗೆ ಹಣದ ಆಮಿಷವೊಡ್ಡಿ ತಮ್ಮ ಜಾಲಕ್ಕೆ ಸೇರಿಸಿಕೊಳ್ಳುತ್ತಾರೆ. ಯಾವ ರಾಜ್ಯದಲ್ಲಿ ಪಂದ್ಯ ಇರುತ್ತದೋ, ಏಜೆಂಟ್‌ಗಳು ಕೊಡುವ 'ರೂಟರ್' ಹಾಗೂ '3–ಡಿ ಮೊಬೈಲ್' ಸಾಧನಗಳನ್ನು ತೆಗೆದುಕೊಂಡು ಯುವಕರು ಆ ಪಂದ್ಯ ವೀಕ್ಷಣೆಗೆ ತೆರಳಬೇಕು. ಅವರಿಗೆ ವಿಮಾನ ಪ್ರಯಾಣಕ್ಕೆ ಏಜೆಂಟ್‌ಗಳೇ ಟಿಕೆಟ್ ಮಾಡಿಸಿ, ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಮ್ ಕೂಡ ಕೊಡಿಸುತ್ತಾರೆ. ಜತೆಗೆ ಒಂದು ಪಂದ್ಯಕ್ಕೆ ₹ 10 ಸಾವಿರ ಕಮಿಷನ್ ನೀಡುತ್ತಾರೆ. |
ಮೂರೇ ಬಟನ್‌ಗಳು: 3–ಡಿ ಫೋನ್‌ನಲ್ಲಿ #,1,2 ಎಂಬ ಮೂರು ಬಟನ್‌ಗಳಿರುತ್ತವೆ. # ಎಂದರೆ ವಿಕೆಟ್, 1 ಎಂದರೆ ಬೌಂಡರಿ (4 ರನ್) ಹಾಗೂ 2 ಎಂದರೆ ಸಿಕ್ಸರ್ ಎಂತಲೂ ಸಂಕೇತ ಪದಗಳು ನಿಗದಿಯಾಗಿರುತ್ತವೆ. ಪಂಟರ್ ಹಾಗೂ ಬುಕ್ಕಿಗಳು, ಆ 3–ಡಿ ಫೋನ್‌ಗಳನ್ನು ತಮ್ಮ ಲ್ಯಾಪ್‌ಟಾಪ್‌ಗಳಿಗೆ ಲಿಂಕ್ ಮಾಡಿರುತ್ತಾರೆ. ವಿಕೆಟ್ ಪತನವಾದರೆ ಮೈದಾನದಲ್ಲಿರುವ ಹುಡುಗ ತಕ್ಷಣ ಫೋನ್‌ನಲ್ಲಿ # ಬಟನ್ ಒತ್ತುತ್ತಾನೆ. |
ಅದು ಕ್ಷಣಮಾತ್ರದಲ್ಲಿ ಬುಕ್ಕಿಗಳ ಲ್ಯಾಪ್‌ಟಾಪ್‌ಗೆ ಹೋಗುತ್ತದೆ. ಕೂಡಲೇ ಅವರು, 'ಈ ಬಾಲ್ ವಿಕೆಟ್ ಹೋಗುತ್ತದೆ' ಎಂದು ಆನ್‌ಲೈನ್‌ನಲ್ಲೇ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಾರೆ. ಹೀಗೆ, ಕ್ಷಣ ಕ್ಷಣವೂ ಅವರು ದುಡ್ಡಿಗಾಗಿ ಹೋರಾಟ ನಡೆಸುತ್ತಾರೆ. ಪ್ರತಿ ಎಸೆತಕ್ಕೂ ಲಕ್ಷಾಂತರ ಮಂದಿ ಬಾಜಿ ಕಟ್ಟುವುದರಿಂದ, ಪಂದ್ಯ ಮುಗಿಯುವ ಹೊತ್ತಿಗೆ ಒಬ್ಬ ಬುಕ್ಕಿ ₹ 300 ಕೋಟಿಯಿಂದ ₹ 400 ಕೋಟಿವರೆಗೆ ವಹಿವಾಟು ನಡೆಸಿರುತ್ತಾನೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ. |
ಬೆಂಗಳೂರಿನಲ್ಲಿರುವ ಬುಕ್ಕಿಗಳು ತಮ್ಮ ಭದ್ರತೆಗೆ ಗನ್‌ಮ್ಯಾನ್‌ಗಳನ್ನು ಇಟ್ಟುಕೊಂಡು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಅವರು ಪೊಲೀಸರು, ರಾಜಕಾರಣಿಗಳ ನೆರಳಿನಲ್ಲೇ ಸಲೀಸಾಗಿ ವ್ಯವಹಾರ ನಡೆಸುತ್ತಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಕೆಲ ದಿನಗಳ ಹಿಂದಷ್ಟೇ, 'ಬೆಟ್ಟಿಂಗ್ |
ಬುಕ್ಕಿ ಹಾಗೂ ಕೆಲ ದಂಧೆಕೋರರು ಸೇರಿಕೊಂಡು ಸರ್ಕಾರ ಬೀಳಿಸಲು ಕಸರತ್ತು ನಡೆಸುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದರು. ಅಂತಹ ತಾಕತ್ತೂ ಬುಕ್ಕಿಗಳಿಗಿದೆ. |
'ಸಾರ್ವಜನಿಕ ಜೂಜು ಕಾಯ್ದೆ-1867'ರ ಪ್ರಕಾರ ಯಾವುದೇ ಆಟದ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟುವುದು ಕಾನೂನಿಗೆ ವಿರೋಧ. |
ಹುಬ್ಬಳ್ಳಿಯೇ ಡೆಲಿವರಿ ಪಾಯಿಂಟ್! |
ಕರ್ನಾಟಕಕ್ಕೆ ಬೆಂಗಳೂರು ರಾಜಧಾನಿಯಾದರೆ, ಇಡೀ ರಾಜ್ಯದ ಬೆಟ್ಟಿಂಗ್ ಸಾಮ್ರಾಜ್ಯಕ್ಕೆ ಹುಬ್ಬಳ್ಳಿಯೇ ರಾಜಧಾನಿ. ಬುಕ್ಕಿಗಳು ತಮ್ಮ ಜಾಲವನ್ನು ಹರಡಿಕೊಳ್ಳಲು 'ಛೋಟಾ ಮುಂಬೈ' ಖ್ಯಾತಿಯ ಹುಬ್ಬಳ್ಳಿಯನ್ನು 'ಡೆಲಿವರಿ ಪಾಯಿಂಟ್' ಆಗಿ ಬಳಸಿಕೊಳ್ಳುತ್ತಿದ್ದಾರೆ! |
'ಠೋಕಾ' ಅಥವಾ 'ಸಾಮಾನ್' ಎಂದು ಕರೆಯಲಾಗುವ ಬಾಜಿ ಹಣವನ್ನು ಹವಾಲಾ ಮೂಲಕವೇ ಏಜೆಂಟ್‌ಗಳು ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಮುಂಬೈಗೆ ಸಾಗಿಸುತ್ತಾರೆ. ಮೈಸೂರು ಕರ್ನಾಟಕ ಭಾಗದ ಬೆಟ್ಟಿಂಗ್ ಹಣ ಬೆಂಗಳೂರಿಗೆ ಬಂದು ತಲುಪಿದರೆ, ಅಲ್ಲಿಂದ ಬಾಜಿ ಹಣ ಹರಿಯುವುದು ಹುಬ್ಬಳ್ಳಿ ಕಡೆಗೆ. ಬುಕ್ಕಿಗಳು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜತೆ ನೇರ ಒಡನಾಟ ಇಟ್ಟುಕೊಂಡಿರುವ ಕಾರಣ ಪೊಲೀಸರೂ ಇವರನ್ನು ಮುಟ್ಟುವುದಿಲ್ಲ. |
ರಾಜಸ್ಥಾನ, ಮಧ್ಯಪ್ರದೇಶ, ಮುಂಬೈ, ಕೇರಳ.. ಹೀಗೆ ಎಲ್ಲೆಂದರಲ್ಲಿ ಹಣ ಬಟವಾಡೆ ಮಾಡುವ ಪ್ರಮುಖ ಹವಾಲಾ ಏಜೆಂಟರಿಗೆ ಹುಬ್ಬಳ್ಳಿಯೇ ಸ್ವರ್ಗ ಎಂದೇ ಹೇಳಲಾಗುತ್ತದೆ. |
ಪ್ರತಿ ಮೊಬೈಲ್‌ನಲ್ಲೂ 'ಡ್ರೀಮ್–11' |
ತಾವೇ ಆಟಗಾರರನ್ನು ಆಯ್ಕೆ ಮಾಡಿ ಹಣ ಹೂಡುವ ತಂತ್ರಗಾರಿಕೆಯ ಆಟ 'ಡ್ರೀಮ್–11'. ಇದೂ ಬೆಟ್ಟಿಂಗ್‌ನ ಇನ್ನೊಂದು ಆಯಾಮವಷ್ಟೆ. ಬಾಜಿಯ ಗೀಳಿಗೆ ಬಿದ್ದ ಪ್ರತಿಯೊಬ್ಬರೂ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇಲ್ಲೂ ಪ್ರತಿ ಪಂದ್ಯಕ್ಕೂ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಯುತ್ತದೆ. ₹ 15 ರಿಂದ ₹ 10 ಸಾವಿರದವರೆಗೆ ಹೂಡಿಕೆಗೆ ಅವಕಾಶವಿರುತ್ತದೆ. ಯಾವುದೋ ಒಂದು ಪಂದ್ಯದಲ್ಲಿ ಲಾಭ ಪಡೆಯುವ ಯುವಕರು, ಹಿಂದೆ ಹತ್ತು ಪಂದ್ಯಗಳಲ್ಲಿ ಸೋತಿರುವುದನ್ನೂ ಮರೆತು ಮತ್ತೆ ಟೀಂ ಕಟ್ಟುತ್ತಾರೆ. ಹಣ ಹೂಡುತ್ತಾರೆ. ಐಪಿಎಲ್ ಮಾತ್ರವಲ್ಲದೆ, ಬಿಗ್ ಬ್ಯಾಶ್ (ಆಸ್ಟ್ರೇಲಿಯಾ), ಬಿಪಿಎಲ್ (ಬಾಂಗ್ಲಾದೇಶ), ಸಿಸಿಎಲ್ (ವೆಸ್ಟ್‌ಇಂಡೀಸ್), ಎಸ್‌ಎಲ್‌ಪಿಎಲ್ (ಶ್ರೀಲಂಕಾ) ಹಾಗೂ ಮಹಿಳಾ ಕ್ರಿಕೆಟ್ ಪಂದ್ಯಗಳ ಬಾಜಿಗೂ ಈ ಆ್ಯಪ್ ವೇದಿಕೆಯಾಗಿದೆ. |
'ಹೈವೊಲ್ಟೇಜ್' ಮ್ಯಾಚ್‌ಗೆ ಹೆಚ್ಚು ಬಾಜಿ |
ಚೆನ್ನೈ ಸೂಪರ್‌ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ರತಿ ಐಪಿಎಲ್‌ನಲ್ಲೂ ಬಾಜಿ ಕಟ್ಟುವವರ ಪಾಲಿನ ನೆಚ್ಚಿನ ತಂಡಗಳು. |
ಈ ತಂಡಗಳು ಮುಖಾಮುಖಿಯಾದಾಗ ಬುಕ್ಕಿಗಳೂ ಗೊಂದಲಕ್ಕೆ ಒಳಗಾಗುತ್ತಾರೆ. ಆಗ, '₹ 1,000ಕ್ಕೆ ₹1,300ರಂತೆ ಕೊಟ್ಟು ನೀವೇ ಯಾವುದಾದರೂ ತಂಡವನ್ನು ಆರಿಸಿಕೊಳ್ಳಿ' ಎಂದು ಆಯ್ಕೆಯ ಅವಕಾಶವನ್ನು ಬೆಟ್ಟಿಂಗ್ ಆಡುವವರಿಗೇ ಬಿಟ್ಟುಕೊಡುತ್ತಾರೆ. |
ಆಪ್ತನೇ 'ಮೃತ್ಯುಕೂಪದ' ಏಜೆಂಟ್ |
'ಬೆಟ್ಟಿಂಗ್ ವ್ಯವಹಾರ ಜೋರಿರುವ ಪ್ರತಿ ಊರು–ಕೇರಿಗಳಲ್ಲೂ ಒಬ್ಬೊಬ್ಬ ಏಜೆಂಟ್ ಇರುತ್ತಾನೆ. ಅವನು, ಬೆಟ್ಟಿಂಗ್ ಆಡುವವರ ಬಾಲ್ಯ ಅಥವಾ ಆಪ್ತ ಸ್ನೇಹಿತನೇ ಆಗಿರುತ್ತಾನೆ. ಗೆಳೆಯರನ್ನು ಅದರ ಕೂಪದಲ್ಲಿ ದೂಡಿ, ತಾನು ಪಂಟರ್‌ಗಳಿಂದ ಕಮಿಷನ್ ಪಡೆದು ಸುಖವಾಗಿರುತ್ತಾನೆ. ಇದನ್ನು ಅರಿಯುವ ಹೊತ್ತಿಗೆ, ಯುವಕರ ಬಾಳು ಬೀದಿಗೆ ಬಿದ್ದಿರುತ್ತದೆ' ಎನ್ನುತ್ತಾರೆ ಪೊಲೀಸರು. |
'ಜಾಮರ್'ಗೇ ಸಡ್ಡು ಹೊಡೆದರು! |
ಬುಕ್ಕಿಗಳು ಮೊದಲೆಲ್ಲ ಕ್ರೀಡಾಂಗಣದಲ್ಲಿ ಇರುವ ತಮ್ಮ ಹುಡುಗರನ್ನು ಮೊಬೈಲ್ ಮೂಲಕವೇ ಸಂಪರ್ಕಿಸುತ್ತಿದ್ದರು. ಆದರೆ, 'ಜಾಮರ್' ಅಳವಡಿಕೆ ಬಳಿಕ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಯಿತು. ಆಗ ಅವರು '3–ಡಿ' ಫೋನ್ ಅಸ್ತ್ರ ಬಳಸಿದರು. ಜಾಮರ್‌ಗೆ ಈ ಫೋನನ್ನು ನಿಯಂತ್ರಿಸುವ ಸಾಮರ್ಥ್ಯ ಇರದ ಕಾರಣ, ಸಂಪರ್ಕ ಇನ್ನೂ ಆರಾಮಾವಾಗಿದೆ. |
ಬೆಟ್ಟಿಂಗ್ ಸಂಬಂಧ 2016 ರಿಂದ 2019ರ ಏಪ್ರಿಲ್‌ವರೆಗೆ ದಾಖಲಾಗಿರುವ ಪ್ರಕರಣಗಳ ವಿವರ |
ಜಿಲ್ಲೆ – ದಾಖಲಾದ ಪ್ರಕರಣ |
ಬೆಂಗಳೂರು –104 |
ದಾವಣಗೆರೆ – 67 |
ಮೈಸೂರು – 63 |
ಬೆಳಗಾವಿ – 47 |
ಬಳ್ಳಾರಿ – 40 |
ಹುಬ್ಬಳ್ಳಿ–ಧಾರವಾಡ – 38 |
ಚಿಕ್ಕಬಳ್ಳಾಪುರ – 36 |
ರಾಯಚೂರು – 34 |
ವಿಜಯಪುರ –34 |
ಕೊಪ್ಪಳ – 31 |
ಶಿವಮೊಗ್ಗ – 30 |
ಬಾಗಲಕೋಟೆ –19 |
ಬೀದರ್ –17 |
ಚಿತ್ರದುರ್ಗ –15 |
ಗದಗ –15 |
ಮಂಗಳೂರು –15 |
ಕಲಬುರ್ಗಿ –13 |
ತುಮಕೂರು –12 |
ಹಾವೇರಿ –11 |
ಯಾದಗಿರಿ –10 |
ಹಾಸನ – 7 |
ಚಿಕ್ಕಮಗಳೂರು –5 |
ಕೋಲಾರ – 5 |
ಉತ್ತರ ಕನ್ನಡ – 3 |
ರಾಮನಗರ –3 |
ಚಾಮರಾಜನಗರ – 2 |
ದಕ್ಷಿಣ ಕನ್ನಡ – 2 |
ಕೊಡಗು – 2 |
ಉಡುಪಿ – 2 |
ಮಂಡ್ಯ –1 |
ಒಟ್ಟು – 683 |
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಬೆಂಗಳೂರಿನ ಎರಡು ಕಡೆ ದಾಳಿ |
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದವನ ಬಂಧನ |
ಕ್ರಿಕೆಟ್ ಬೆಟ್ಟಿಂಗ್; ₹3.50 ಲಕ್ಷ ಜಪ್ತಿ |
Subsets and Splits
No community queries yet
The top public SQL queries from the community will appear here once available.