text
stringlengths 0
61.5k
|
---|
ರಾಯಿಟರ್ಸ್ ಮೂಲಗಳ ಪ್ರಕಾರ ಡಬ್ಲ್ಯೂಹೆಚ್‌ಒ ಸಂಸ್ಥೆಯ 10 ಅಂತಾರಾಷ್ಟ್ರೀಯ ತಜ್ಞರ ತಂಡವು ಚೀನಾದ ವುಹಾನ್‌ಗೆ ಆಗಮಿಸಿದ್ದು, ಕೋವಿಡ್-19 ಮೂಲವನ್ನು ಪತ್ತೆಹಚ್ಚಲು ಪ್ರಯತ್ನಿಸಲಿದೆ. ಕೊರೊನಾವೈರಸ್ ಸೃಷ್ಟಿಗೆ ಕಾರಣ ಏನು? ಎಲ್ಲಿಂದ ಬಂತು ಎಂದು ತಿಳಿದುಕೊಳ್ಳುವುದು ಈ ತಜ್ಞರ ತಂಡದ ಗುರಿಯಾಗಿದೆ. |
ವೈರಸ್‌ನ ಮೂಲ ಪತ್ತೆ ಹಚ್ಚಲು ಎಷ್ಟು ಸಮಯ ಬೇಕಾಗುತ್ತದೆ? |
ವಿಶ್ವ ಆರೋಗ್ಯ ಸಂಸ್ಥೆಯ ತಂಡವು ವುಹಾನ್‌ಗೆ ಭೇಟಿ ನೀಡಿದ್ದಾಗಿದೆ. ಆದರೆ ವೈರಸ್‌ನ ಮೂಲವನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಇನ್ನೆಷ್ಟು ವರ್ಷಗಳು ಬೇಕಾಗಬಹುದು ಮತ್ತು ಅನಿಶ್ಚಿತ ಫಲಿತಾಂಶ ನಿರೀಕ್ಷಿಸಬಹುದು ಎಂಬುದು ಚೀನಾ ಮತ್ತು ಇತರ ದೇಶಗಳ ಆರೋಗ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ. |
ಕೊರೊನಾವೈರಸ್ ಮೂಲ ವುಹಾನ್ ಎಂದು ಸ್ಥಳೀಯರು ಒಪ್ಪಿಕೊಳ್ಳುವುದಿಲ್ಲ! |
ಹೌದು, ವಿಶ್ವವನ್ನೇ ನುಂಗಿ ಹಾಕಿದ ಮಹಾಮಾರಿ ಕೊರೊನಾವೈರಸ್‌ನ ಕೇಂದ್ರ ಬಿಂದು ವುಹಾನ್ ಎಂಬುದನ್ನು ಅಲ್ಲಿನ ಸ್ಥಳೀಯ ನಿವಾಸಿಗಳು ಇಂದಿಗೂ ಸಹ ಒಪ್ಪಿಕೊಳ್ಳಲು ಸಿದ್ದರಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಈ ಕುರಿತು ಪ್ರಶ್ನಿಸಿದಾಗ ವೈರಸ್ ಅಲ್ಲಿಂದಲೇ ಹರಡಿದೆ ಎಂದು ಒಪ್ಪಿಕೊಳ್ಳಲ್ಲ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. |
ವುಹಾನ್‌ನಲ್ಲಿ ಮೊದಲು ಕೊರೊನಾ ಪತ್ತೆಯಾಗಿ ಒಂದು ವರ್ಷ ಕಳೆದಿದೆ |
ಜಗತ್ತಿಗೆ ವ್ಯಾಪಿಸುವ ಮೊದಲು ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾವೈರಸ್‌ಗೆ ಮೊದಲು ಕಂಡುಬಂದು ಕಳೆದ ಡಿಸೆಂಬರ್‌ಗೆ ಒಂದು ವರ್ಷ ಕಳೆದುಹೋಗಿದೆ. ವುಹಾನ್ ಮಾರುಕಟ್ಟೆಯಲ್ಲಿ ಆರಂಭದಲ್ಲಿ ನ್ಯುಮೇನಿಯಾ ಮಾದರಿಯಲ್ಲಿ ಕಾಣಿಸಿಕೊಂಡ ಬಳಿಕ ಎರಡು ವಾರಗಳವರೆಗೆ ವ್ಯಾಪಾರ ಸ್ಥಗಿತಕೊಂಡಿತು. ನಂತರದಲ್ಲಿ 76 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಯಿತು. ಜನರು ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಲಾಯಿತು. |
ಬೇರೆಯವರ ಮೇಲೆ ಬೊಟ್ಟು ಮಾಡುವ ಚೀನಾ |
ಹೌದು, ಈಗಾಗಲೇ ಹದಿನೈದು ಲಕ್ಷಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿರುವ ಕೊರೊನಾವೈರಸ್ ಚೀನಾದ ವುಹಾನ್‌ನಿಂದಲೇ ಬಂದಿರುವುದು ಎಂದು ಒಪ್ಪಿಕೊಳ್ಳಲು ಚೀನಾ ಸಿದ್ದವಿಲ್ಲ. ಬೇರೆ ದೇಶಗಳ ಮೇಲೆ ಇನ್ನೂ ಬೊಟ್ಟು ಮಾಡುತ್ತಾ, ಬೇರೆ ಕಡೆಯಿಂದ ಬಂದ ಉತ್ಪನ್ನಗಳಿಂದ ಹರಡಿರಬಹುದು ಎನ್ನುತ್ತಲೇ ಸಾಗಿದೆ. ಆದರೆ ಇದೀಗ ವುಹಾನ್‌ಗೆ ಆಗಮಿಸಿರುವ ಡಬ್ಲ್ಯೂಹೆಚ್‌ಒ ತಂಡವು ಕೊರೊನಾವೈರಸ್ ಮೂಲವನ್ನು ನಿಜವಾಗಿಯೂ ಪತ್ತೆಹಚ್ಚಬಲ್ಲದೆ? ಪತ್ತೆ ಹಚ್ಚಿದರೂ ಎಷ್ಟು ಸಮಯ ಬೇಕಾಗಬಹುದು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. |
coronavirus china who vaccine ಚೀನಾ ಲಸಿಕೆ |
A World Health Organization (WHO) team of 10 international experts that will investigate the origins of Covid-19 pandemic, arrives in Wuhan, China. |
ಕರೋನಾ:ಹೊಸಪೇಟೆಯಲ್ಲಿ ಮತ್ತೆ ಮುಂದುವರೆದ ಪೊಲೀಸ್ ಪಹರೆ - Sanjevani |
Home ಜಿಲ್ಲೆ ಬಳ್ಳಾರಿ ಕರೋನಾ:ಹೊಸಪೇಟೆಯಲ್ಲಿ ಮತ್ತೆ ಮುಂದುವರೆದ ಪೊಲೀಸ್ ಪಹರೆ |
ಕರೋನಾ:ಹೊಸಪೇಟೆಯಲ್ಲಿ ಮತ್ತೆ ಮುಂದುವರೆದ ಪೊಲೀಸ್ ಪಹರೆ |
ಹೊಸಪೇಟೆ ಜೂ11: ಇನ್ನು 3 ದಿಗಳ ಕಾಲ ಲಾಕ್‍ಡೌನ್ ಇದ್ದರೂ ಜನರ ಸಂಚಾರ ಮುಂದುವರೆದಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕಠಿಣ ನಿರ್ಭಂಧ ಮುಂದುವೆಸಿರುವ ಪೊಲೀಸರು ನಗರದ ಬಹುತೇಕ ವೃತ್ತಗಳು ಹಾಗೂ ಮುಖ್ಯ ರಸ್ತೆಯಲ್ಲಿ ಬಿಗಿ ಕ್ರಮಕ್ಕೆ ಮುಂದಾಗಿದ್ದರು. |
ದಿನಸಿ, ತರಕಾರಿ, ಹಾಲು ಹಣ್ಣು, ಅಗತ್ಯ ವಸ್ತುಗಳು ಸೇರಿದಂತೆ ಯಾವುದೆ ಅಂಗಡಿ ಮುಂಗಟ್ಟುಗಳು ಇಲ್ಲದಿರುವ ಈ ಸಂದರ್ಭದಲ್ಲಿ ಸಾರ್ವಜನಿಕ ಮಾತ್ರ ಒಂದಲ್ಲಾ ಒಂದು ನೆಪೆಹೇಳಿಕೊಂಡು ತಿರುಗುತ್ತಿರುವ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮಕ್ಕೆ ಮುಂದಾಗಿದ್ದಾರೆ. ಕೋವಿಡ್ ಕಾರ್ಯಕ್ಕೆ ನಿಯುಕ್ತಿಗೊಂಡ ಕೆಲಸಗಾರರನ್ನು ಬಿಟ್ಟು ಉಳಿದಂತೆ ಅನೇಕರು ಅನೇಕ ಕಾರಣಗಳನ್ನು ಹೇಳುತ್ತಲೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂದು ಬಿಗಿ ಕ್ರಮಕ್ಕೆ ಮುಂದಾದರು ದ್ವಿಚಕ್ರವಾಹನ ಸವಾರರು ಸೇರಿದಂತೆ ಅನಗತ್ಯ ತಿರುಗುವವರನ್ನು ವಶಕ್ಕೆ ಪಡೆದು ವಾಹನಗಳನ್ನು ಜಪ್ತುಮಾಡುವ ಕೆಲಸಕ್ಕೆ ಮುಂದಾಗಿದ್ದರು. |
ಮಹಾಮಾರಿಗೆ ಬ್ರೆಕ್ |
ಈ ವರೆಗೂ 3ಅಂಕಿಯಲ್ಲಿರುತ್ತೀದ್ದ ಸೋಂಕಿತ ಸಂಖ್ಯೆ ಇದೀಗ 2ಅಂಕಿಗೆ ತಲುಪಿದ್ದರೂ ಸಹ ಕಳೆದ ನಾಲ್ಕೈದು ದಿನಗಳಿಂದ ಹೊಸಪೇಟೆಯಲ್ಲಿಯೇ ಸೋಂಕಿತರ ಸಂಖ್ಯೆ ಹೆಚ್ಚಿರುವುದು ಸಹ ಒಂದು ರೀತಿಯ ಆತಂಕಕ್ಕೆ ಕಾರಣವಾಗಿತು. ಆದರೆ ಇದೀಗ ಒಟ್ಟು ಸಕ್ರೀಯ ಪ್ರಕರಣಗಳೇ 760 ಆಗಿ ಅವಿಭಾಜಿತ ಬಳ್ಳಾರಿ ಜಿಲ್ಲೆಯ ಪ್ರಕರಣಗಳೇ 4393 ಇರುವುದು ಒಂದು ಹಂತದ ನೆಮ್ಮದಿ ನೀಡಿದ್ದರೂ ಅನ್‍ಲಾಕ್ ಸಂಖ್ಯೆ ವೃದ್ಧಿಯಾಗಲು ಕಾರಣವಾಗದಿದ್ದರೆ ಸಾಕು. |
ಮೈಮರೆತ ಜಿಂದಾಲ್ |
ಕರೋನಾ ಮಹಾಮಾರಿ ಬಂದಾಗಿನಿಂದಲೂ ಸಂಪೂರ್ಣ ವಾಹನಗಳನ್ನು ಸ್ಥಗಿತಗೊಳಿಸಿದ್ದ ಜಿಂದಾಲ ಇದೀಗ ಖಾಸಗಿ ವಾಹನಗಳ ಮೂಲಕ ಸಂಚಾರ ಆರಂಭಿಸಿದ್ದರೂ ಅದೇಕೋÀ ಕರೋನಾ ಮಹಾಮಾರಿಯ ನಿಯಮವಾಳಿಗಳನ್ನು ಮರೆತಂತಿದೆ. ತನ್ನ ವಾಹನದಲ್ಲಿ ವಾಹನದ ಸಾಮಥ್ರ್ಯಕ್ಕೂ ಮೀರಿ ನೌಕರರನ್ನು ತುಂಬುವ ಮೂಲಕ ಸಾಮಾಜಿಕ ಅಂತರವನ್ನು ಮೆರತಂತೆ ತೋರಿತು ಶುಕ್ರವಾರವಾದ ಇಂದು 11 ಗಂಟೆಗೆ ಜಿಂದಾಲ್‍ಗೆ ಹೋದ ವಾಹನದಲ್ಲಿ ಅಂದಾಜು 100ಕ್ಕೂ ಹೆಚ್ಚು ನೌಕರರು ಒಂದೆ ಬಸ್‍ನಲ್ಲಿ ಪ್ರಯಾಣ ಮಾಡುತ್ತಿರುವುದ ಕಂಡುಬಂತು. ಸಂಸ್ಥೆ ಗಮನಿಸೇ ಇಲ್ಲವೂ ಹೊಸಪೇಟೆಯಲ್ಲಿ ಅಧಿಕಾರಿಗಳು ಗಮನಿಸಿಲ್ಲವೂ ಒಟ್ಟಾರೆ ತುಂಬಿತುಳುಕುವ ಸಿಬ್ಬಂದಿ ಅನೇಕ ರೀತಿಯಲ್ಲಿ ಸೋಂಕು ಹರಡಲು ಕಾರಣವಾದರೂ ಅಚ್ಚರಿಯಿಲ್ಲವಾಗಿದೆ. |
"ಅಮ್ಮಾ ಐ ಲವ್ ಯೂ ಮಾ …' | Udayavani – ಉದಯವಾಣಿ |
Monday, 29 Nov 2021 | UPDATED: 08:07 AM IST |
"ಅಮ್ಮಾ ಐ ಲವ್ ಯೂ ಮಾ …' |
Team Udayavani, Jun 2, 2018, 5:20 PM IST |
ಚಿರಂಜೀವಿ ಸರ್ಜಾ ನಟಿಸಿರುವ ದ್ವಾರಕೀಶ್ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾದ "ಅಮ್ಮಾ ಐ ಲವ್ ಯೂ' ಚಿತ್ರದ ಟೀಸರ್ ವಿಶ್ವ ಅಮ್ಮಂದಿರ ದಿನದಂದು ಬಿಡುಗಡೆಯಾಗಿ, ತಾಯಿಯ ಮಹತ್ವ, ಆಕೆಯ ಮೇಲೆ ಎಲ್ಲರೂ ಎಷ್ಟು ಅವಲಂಬಿತವಾಗಿದ್ದೇವೆ ಎಂಬ ಸಾರವನ್ನು ಟೀಸರ್ ನಲ್ಲಿ ನೋಡಿದ ನೆನಪು ಮಾಸುವ ಮುನ್ನವೇ, ಇದೀಗ ಚಿತ್ರತಂಡ ಚಿತ್ರದ "ಅಮ್ಮ… ನನ್ನೀ ಜನುಮ… ನಿನ್ನ ವರದಾನವಮ್ಮ' ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಮತ್ತೊಮ್ಮೆ ನೋಡುಗರನ್ನು ಭಾವುಕರನ್ನಾಗಿಸಿದೆ. |
ಅಲ್ಲದೇ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಸುನೀಲ್ ಕಶ್ಯಪ್ ದನಿಯಲ್ಲಿ, ಗುರುಕಿರಣ್ ಸಂಗೀತದಲ್ಲಿ ಹಾಡು ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದು, ಚಿರುಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. |
ಅಲ್ಲದೇ ರವಿಕಾಳೆ ಸೇರಿದಂತೆ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ತಮಿಳಿನ "ಪಿಚ್ಚೈಕಾರನ್' ರಿಮೇಕ್. ಎಲ್ಲಾ ತಾಯಂದಿರಿಗೂ ಈ ಚಿತ್ರವನ್ನು ಅರ್ಪಿಸಲಾಗಿದ್ದು, ತಾಯಿಯ ಮಹತ್ವ ಸಾರಿ ಭಾವುಕರನ್ನಾಗಿಸುವ ಹಾಡನ್ನು ವೀಕ್ಷಿಸಿ. |
ಯೋಗ ನಡಿಗೆಯಿಂದ ಆತ್ಮಹಿತ, ಲೋಕಹಿತ | VIJAYAVANI - ವಿಜಯವಾಣಿ |
ಯೋಗ ನಡಿಗೆಯಿಂದ ಆತ್ಮಹಿತ, ಲೋಕಹಿತ |
ಆರೋಗ್ಯ ರಕ್ಷಣೆ ಹಾಗೂ ವರ್ಧನೆಯ ಉದ್ದೇಶದಿಂದ ಅಲ್ಲಲ್ಲಿ ಸಮಾನಾಸಕ್ತರ ಗುಂಪುಗಳು ಸಂಘಟಿತರಾಗಿ ತಮ್ಮದೇ ಕ್ಲಬ್ಗಳನ್ನು ಹುಟ್ಟಿ ಹಾಕಿರುವುದು ಸರಿಯಷ್ಟೆ. ಅವುಗಳಲ್ಲಿ ಚಪ್ಪಾಳೆ ಕ್ಲಬ್, ಹಾಸ್ಯ ಸಂಘ, ಜಾಗಿಂಗ್ ಅಸೋಸಿಯೇಶನ್ಗಳಂತೆ ಯೋಗ ನಡಿಗೆ ಅಥವಾ ಯೋಗಿಕ್ ವಾಕಿಂಗ್ ಕ್ಲಬ್ಗಳೂ ರಚನೆಯಾಗಬೇಕು. ಏಕೆಂದರೆ, ಸಂಘಟನೆಯಲ್ಲಿ ನಡೆಯುವ ಕಾರ್ಯವು ಅಪಾರ ಶಕ್ತಿಯನ್ನು, ಪರಿಣಾಮವನ್ನು ನೀಡುತ್ತವೆ. ಒಟ್ಟಾಗಿ ನಡೆಸುವ ಪ್ರಾರ್ಥನೆ ಭಾವಸಂಸ್ಕಾರಗೊಳಿಸುವವು. ಗುಂಪಾದ ನಡಿಗೆ ಆತ್ಮವಿಶ್ವಾಸ, ಸಹಕಾರವನ್ನೂ ವರ್ಧಿಸುವುದು. ಚರ್ಚೆಗಳು ಏರ್ಪಟ್ಟು ವಿಚಾರ ಮಂಥನದೊಂದಿಗೆ ಉತ್ಸಾಹ, ಲವಲವಿಕೆ ತರುವುದು ಹಾಗೂ ಯಾರೊಬ್ಬರೂ ನಿರಂತರ ಅಭ್ಯಾಸದಿಂದ ತಪ್ಪಿಸಿಕೊಳ್ಳದಂತೆ ಕಾಳಜಿ ವಹಿಸುವುದು. |
ಮೌನ ಪಾಲಿಸಿ: ಇಲ್ಲಿ ಮುಖ್ಯವಾಗಿ ಪಾಲಿಸಬೇಕಾದ ನಿಯಮವೆಂದರೆ ಯೋಗ ನಡಿಗೆಯ ಅಭ್ಯಾಸದ ಹೊತ್ತು ಮೌನವನ್ನು ಪಾಲಿಸಬೇಕು. ಅನಿವಾರ್ಯವಾಗಿ ಮಾತನಾಡಲೇ ಬೇಕಾದಲ್ಲಿ ಯೋಗ ಅಥವಾ ನಡಿಗೆಗೆ ಸಂಬಂಧಪಟ್ಟ ಮಾತುಗಳಿಗೆ ಸೀಮಿತವಾಗಿರಲಿ. ಸಮಯಕ್ಕೆ ಆರಂಭಗೊಂಡು ನಿಶ್ಚಿತ ಕಾಲಕ್ಕೆ ಮುಗಿಸುವುದು ಶಿಸ್ತನ್ನು ಮೂಡಿಸುವುದು. ಅಭ್ಯಾಸ ತಪ್ಪಿಸಿಕೊಳ್ಳದಂತೆ ನಿರಂತರತೆ ಕಾಪಾಡುವ ದೃಢ ಸಂಕಲ್ಪ ಮಾಡಬೇಕು. ಯೋಗ ನಡಿಗೆಯ ಮಾರ್ಗದರ್ಶನ ಒಮ್ಮೆಯಾದರೂ ಪಡೆದರೆ ಹೆಚ್ಚು ಪರಿಣಾಮಕಾರಿ. |
ಸ್ಪರ್ಧೆ ಸಲ್ಲದು: ಯೋಗ ನಡಿಗೆಯಲ್ಲಿ ಇನ್ನೊಬ್ಬರೊಂದಿಗೆ ಎಂದಿಗೂ ಸ್ಪರ್ಧೆ ಬೇಡ. ಮೆಲ್ಲಮೆಲ್ಲನೆ ಆರಂಭಿಸಿ ಚಲಿಸುತ್ತ ಮಧ್ಯಮ ವೇಗವನ್ನು ಕ್ರಮೇಣ ತಲುಪುವಂತಿರಲಿ. ಪ್ರತಿಯೊಬ್ಬರ ದೇಹಭಾರ, ಆರೋಗ್ಯ ಭಿನ್ನವೆಂದು ನೆನಪಿರಲಿ. ಕೊನೆಯಲ್ಲಿ ನಡಿಗೆಯ ಲಕ್ಷ್ಯ, ಅನುಭವ, ಮನನೀಯ ಅಂಶಗಳನ್ನು ರ್ಚಚಿಸಿರಿ. ಆರಂಭದ ದಿನಗಳಲ್ಲಿ ನಡಿಗೆಯಿಂದಾಗುವ ಮೈ ಕೈ ನೋವುಗಳೇ ಟಾನಿಕ್ ಎಂಬುದನ್ನೂ ಮರೆಯಬಾರದು. |
ನಡಿಗೆ ಯಜ್ಞ: ನಮ್ಮ ಉಸಿರು, ನೋಟ, ಶಬ್ದ, ಹೃದಯ ಬಡಿತ, ಚಲನೆ, ನಡಿಗೆ, ವಿಚಾರ, ಆಚಾರ ಎಲ್ಲವೂ ಪರಮಾತ್ಮಮಯ. ಈ ತತ್ವವನ್ನು ನಿತ್ಯ ಜೀವನದಲ್ಲಿ ಅನುಷ್ಠಾನ, ಅನುಸಂಧಾನಗೊಳಿಸಲು ಬೇಕಾದ ಶ್ರದ್ಧೆ, ತ್ಯಾಗ, ಸತತ ಪರಿಶ್ರಮ, ಅಭ್ಯಾಸ ಸಾಧನೆಯ ಯೋಗ ಯಜ್ಞ. ಯೋಗ ನಡಿಗೆ ಬಗ್ಗೆ ಸಮಗ್ರ ವಿವರವನ್ನು ಈವರೆಗೆ ತಿಳಿದದ್ದು ಆಯಿತು. ಇನ್ನು ಅದನ್ನು ಅನುಷ್ಠಾನಕ್ಕೆ ತರುವುದು ಎಲ್ಲರ ಜವಾಬ್ದಾರಿಯಾಗಬೇಕು. ಇದು ಒಂದು ದಿನ ಓದು ಮುಗಿಸುವುದು ಅಥವಾ ಮಾಡಿ ಮುಗಿಸುವ ಪ್ರಕ್ರಿಯೆ ಅಲ್ಲ. ಯೋಗ ನಡಿಗೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಯಜ್ಞ ರೂಪದಲ್ಲಿ ಪ್ರಕಟವಾಗಿರುವುದು ವಿಷ್ಣುವೇ ಎನ್ನುತ್ತದೆ ವೇದ. ವಿಷ್ಣುವಿಗೆ ಯಜ್ಞ ಎಂದೂ ಹೆಸರಿದೆ. ಯಜ್ಞೋ ಮೈ ವಿಷ್ಣುಃ ಎಂಬ ಉಕ್ತಿ ಇದನ್ನು ಧ್ವನಿಸುತ್ತದೆ. ವಿಷ್ಣು ಎಂದರೆ ಸರ್ವವ್ಯಾಪಿ, ಸರ್ವಾಂತರ್ಯಾಮಿ ಎಂಬುದು ಪ್ರಸಿದ್ಧವಾಗಿರುವ ಅರ್ಥ. |
ಆತ್ಮಕಲ್ಯಾಣ: ಯಜ್ಞ ಯಾಗಗಳಿಂದ ಲೋಕ ಕಲ್ಯಾಣವಾದರೆ ಯೋಗ ನಡಿಗೆಯಿಂದ ಆತ್ಮ ಕಲ್ಯಾಣ. ನಡಿಗೆ, ಉಸಿರು, ಹೃದಯ ಆಲೋಚನೆಗಳಲ್ಲಿ ಒಂದಾಗುವುದೇ ಯೋಗ ನಡಿಗೆ. ನಮ್ಮ ಕಲ್ಯಾಣಕ್ಕಾಗಿ ಯೋಗ ನಡಿಗೆ ಒಂದು ಯಜ್ಞವಾಗಲಿ. ಅದರ ಪೂರ್ಣ ಫಲ ಪ್ರಾಪ್ತಿಗೆ ನಾವೆಲ್ಲರೂ ವ್ರತಧಾರಿಗಳಾಗೋಣ. ಯೋಗವೇ ಜೀವನವಾಗಲಿ. ಈ ಯೋಗ ನಡಿಗೆಯನ್ನು ದೈನಂದಿನ ಅಭ್ಯಾಸಕ್ಕಾಗಿ ಬಳಸಿಕೊಳ್ಳೋಣ. ಉಸಿರಲ್ಲಿ ಉಸಿರಾಗಿ ಬೆಳೆಸಿಕೊಳ್ಳೋಣ. ತನ್ಮೂಲಕ ಆತ್ಮಹಿತ, ಲೋಕಹಿತ ಸಾಧಿಸಲು ಸಬಲರಾಗೋಣ. |
ಒಬ್ಬರಲ್ಲ ಇಬ್ಬರಲ್ಲ ಮದುವೆಗೂ ಮುನ್ನ ಯುವರಾಜ್ ಪ್ರೀತಿಸಿದ್ದ 8 ಬಾಲಿವುಡ್ ನಟಿಯರು ಯಾರ್ಯಾರು ಗೊತ್ತೇ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ. - ಕರುನಾಡ ವಾಣಿ |
ನಮಸ್ಕಾರ ಸ್ನೇಹಿತರೇ 2011 ಎಂದಾಗ ನಮಗೆ ನೆನಪಾಗುವುದು ಭಾರತ ಕ್ರಿಕೆಟ್ ತಂಡ ವರ್ಲ್ಡ್ ಕಪ್ ಗೆದ್ದಿರುವುದು. ಹೌದು ಸ್ನೇಹಿತರ 28 ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಏಕದಿನ ವಲ್ಡ್ ಕಪ್ಪನ್ನು ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ ಗೆಲ್ಲುತ್ತದೆ. ಆದರೆ ಈ ವರ್ಲ್ಡ್ ಕಪ್ ಅನ್ನು ಗೆಲ್ಲಲು ಪ್ರಮುಖ ಕಾರಣವಾಗಿದ್ದು ಯುವರಾಜ್ ಸಿಂಗ್ ಎಂದರೆ ತಪ್ಪಾಗಲಾರದು. ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಯುವರಾಜ್ ಸಿಂಗ್ ರವರು ತಮ್ಮ ದೇಶಕ್ಕಾಗಿ ವರ್ಲ್ಡ್ ಕಪ್ಪನ್ನು ಗೆಲ್ಲುತ್ತಾರೆ. |
ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ಕ್ರಿಕೆಟ್ ಸಾಧನೆ ಕುರಿತಂತೆ ಅಲ್ಲ ಬದಲಾಗಿ ಅವರು ಡೇಟ್ ಮಾಡಿರುವ ಹುಡುಗಿಯರ ಕುರಿತಂತೆ. ಯುವರಾಜ್ ಸಿಂಗ್ ರವರು ಮದುವೆಯಾಗುವುದಕ್ಕಿಂತ ಮುಂಚೆ 8 ಬಾಲಿವುಡ್ ನಟಿಯರನ್ನು ಡೇಟಿಂಗ್ ಮಾಡಿದ್ದಾರೆ. ಅದರಲ್ಲಿಯೂ ಒಬ್ಬರ ಜೊತೆ ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದರು. ಆದರೂ ಕೂಡ ಮದುವೆಯಾಗಿರಲಿಲ್ಲ. ಹಾಗಿದ್ದರೆ ಆ 8 ನಟಿಯರು ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ. |
ನೇಹ ಧೂಪಿಯ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ನೇಹ ಧೂಪಿಯ ಹಾಗೂ ಯುವರಾಜ್ ಸಿಂಗ್ 2014 ರ ಸಮಯದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಡೇಟ್ ಮಾಡುತ್ತಿದ್ದರು. ಆದರೆ ಈ ಕುರಿತಂತೆ ಸಂದರ್ಶನವೊಂದರಲ್ಲಿ ನೇಹಾ ದುಪಿಯಾ ರವರನ್ನು ಕೇಳಿದಾಗ ನಾವಿಬ್ಬರು ಡೇಟ್ ಮಾಡುತ್ತಿಲ್ಲ ಯಾಕೆ ಜನರು ನನ್ನ ಬಳಿ ಈ ಕುರಿತಂತೆ ಕೇಳುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ ಎಂಬುದಾಗಿ ಹೇಳಿದ್ದರು. |
ಪ್ರೀತಿ ಜಾಂಗಿಯಾನಿ ಮೊಹಬ್ಬತ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೌಂದರ್ಯದ ಮೂಲಕ ಎಲ್ಲರ ಮನ ಗೆದ್ದಂತಹ ನಟಿ ಪ್ರೀತಿ ಜಾಂಗಿಯಾನಿ ಕೂಡ ಯುವರಾಜ್ ಸಿಂಗ್ ರವರ ಜೊತೆಗೆ ಸುದ್ದಿಯಾಗಿದ್ದರು. ಆದರೆ ಇಬ್ಬರೂ ಕೂಡ ಇದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. |
ಪ್ರೀತಿ ಜಿಂಟಾ ಬಾಲಿವುಡ್ ಚಿತ್ರರಂಗದ ಗುಳಿಕೆನ್ನೆಯ ಚೆಲುವೆಯಾಗಿದ್ದಂತಹ ಪ್ರೀತಿಜಿಂಟಾ ರವರು ಕೂಡ ಹಲವಾರು ಬಾರಿ ಯುವರಾಜ್ ಸಿಂಗ್ ರವರನ್ನು ತಬ್ಬಿಕೊಂಡಿರುವ ಹಾಗೂ ಮುತ್ತು ನೀಡುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇವರಿಬ್ಬರು ತಮ್ಮ ಸಂಬಂಧ ಕುರಿತಂತೆ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. |
ಕಿಮ್ ಶರ್ಮಾ ಕಿಮ್ ಶರ್ಮಾ ಜೊತೆ ಯುವರಾಜ್ ಸಿಂಗ್ ರವರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿ ಜೊತೆಯಲ್ಲಿದ್ದರು. ಆದರೆ ನಂತರ ಯುವರಾಜ್ ಸಿಂಗ್ ರವರ ತಾಯಿಗೆ ಕಿಮ್ ಶರ್ಮಾ ರವರು ಇಷ್ಟವಾಗದಿದ್ದ ಕಾರಣ ಅವರು ಯುವರಾಜ್ ಸಿಂಗ್ ಅವರಿಂದ ದೂರವಾಗುತ್ತಾರೆ. |
ದೀಪಿಕಾ ಪಡುಕೋಣೆ ಬಾಲಿವುಡ್ ಚಿತ್ರರಂಗದ ದಿಗ್ಗಜ ನಟಿಯಾಗಿರುವ ದೀಪಿಕಾ ಪಡುಕೋಣೆ ಹಾಗೂ ಯುವರಾಜ್ ಸಿಂಗ್ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಸಾಕಷ್ಟು ಸುದ್ದಿಯನ್ನು ಮಾಡಿದ್ದರು. ಆದರೆ ಇಬ್ಬರೂ ಕೂಡ ಅಷ್ಟೇ ವೇಗದಲ್ಲಿ ಒಬ್ಬರಿಂದೊಬ್ಬರು ದೂರವಾಗುತ್ತಾರೆ. |
ರಿಯಾ ಸೇನ್ ರಿಯಾ ಸೇನ್ ಹಾಗೂ ಯುವರಾಜ್ ಸಿಂಗ್ ಅವರು ಹಲವಾರು ಪಾರ್ಟಿ ಹಾಗೂ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕೈಹಿಡಿದುಕೊಂಡು ಕಾಣಿಸಿಕೊಂಡಿದ್ದರು. ಆದರೆ ಇಬ್ಬರೂ ಕೂಡ ಎಲ್ಲಿಯೂ ತಮ್ಮ ಪ್ರೇಮ ಸಂಬಂಧದ ಕುರಿತಂತೆ ಮಾತನಾಡಿಕೊಂಡಿಲ್ಲ. |
ಆಂಚಲ್ ಕುಮಾರ್ ಇವರು ಯುವರಾಜ್ ಸಿಂಗ್ ರವರ ಬಾಲ್ಯದ ಗೆಳತಿ ಯಾಗಿದ್ದು ಐಪಿಎಲ್ನ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಕೊನೆವರೆಗೂ ಕೂಡ ತಾವಿಬ್ಬರು ಒಳ್ಳೆಯ ಸ್ನೇಹಿತರು ಎಂಬುದಾಗಿಯೇ ಹೇಳಿಕೊಂಡು ಬಂದಿದ್ದರು. |
ಮಿನಿಶ ಲಾಂಬ ಮಿನಿಶ ಲಾಂಬಾ ಹಾಗೂ ಯುವರಾಜ್ ಸಿಂಗ್ ರವರ ಕುರಿತಂತೆ ಸುದ್ದಿ ಹರಡಿದ್ದು ಅವರಿಬ್ಬರು ಪರಸ್ಪರ ಮುತ್ತು ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾಗ. ಆದರೆ ಈ ಕುರಿತಂತೆ ನಟಿ ಇದು ನಾನಲ್ಲ ನನ್ನ ಹಾಗೆ ಇರುವ ಮಾಡಲ್ ಎಂಬುದಾಗಿ ಹೇಳಿದ್ದರು. |
ಹೆಜಲ್ ಕೀಚ್ ಹೆಜಲ್ ಕೀಚ್ ಇಂಗ್ಲೀಷ್ ಮೂಲದ ಮಾಡಲ್ ಆಗಿದ್ದು ಯುವರಾಜ್ ಸಿಂಗ್ ರವರು ಇವರೊಂದಿಗೆ ಹಲವಾರು ವರ್ಷಗಳ ಡೇಟಿಂಗ್ ನಡೆಸಿದ ನಂತರ 2016 ರಲ್ಲಿ ಮದುವೆಯಾಗುತ್ತಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ. |
ಇಲ್ಲಿ ಅವಿವಾಹಿತ ಮಹಿಳೆಯರಿಗೆ ಮೊಬೈಲ್ ನಿಷೇಧ ! | Vartha Bharati- ವಾರ್ತಾ ಭಾರತಿ |
ರಶೀದ್ ಹಾಜಿ, ಮುಸ್ತಫಾ ಅಡ್ಡೂರು |
ಟ್ಯಾಲೆಂಟ್‌ನಿಂದ 'ಉಮ್ಮಗೊರು ಅಗ' ಯೋಜನೆ ಅನುಷ್ಠಾನಕ್ಕೆ ಸಮಿತಿ ರಚನೆ |
ವಾರ್ತಾ ಭಾರತಿ Jul 17, 2019, 9:29 AM IST |
ಪಾಲನಾಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಗುಜರಾತ್ ಸಮುದಾಯದ ಠಾಕೂರ್ ಸಮುದಾಯ, ಅವಿವಾಹಿತ ಮಹಿಳೆಯರು ಮೊಬೈಲ್ ಒಯ್ಯುವುದನ್ನು ನಿಷೇಧಿಸಿದೆ. ಅಂತೆಯೇ ಅಂತರ್ಜಾತಿ ವಿವಾಹವಾಗುವ ಯುವಕ- ಯುವತಿಯರ ಪೋಷಕರಿಗೆ ದಂಡ ವಿಧಿಸುವ ಕುರಿತೂ ಆದೇಶ ಹೊರಡಿಸಿದೆ. |
ಜಿಲ್ಲೆಯ ದಂದಿವಾಡಾ ತಾಲೂಕಿನ 12 ಗ್ರಾಮಗಳ 14 ಮಂದಿ ಹಿರಿಯರು ಜುಲೈ 14ರಂದು ನಡೆಸಿದ ಸಭೆಯಲ್ಲಿ ಈ ಕುರಿತು ಅವಿರೋಧ ನಿರ್ಣಯ ಆಂಗೀಕರಿಸಿದೆ ಎಂದು ಸಮುದಾಯದ ಹಿರಿಯರೊಬ್ಬರು ತಿಳಿಸಿದ್ದಾರೆ. |
ಯುವತಿಯರಿಗೆ ಮೊಬೈಲ್ ನಿಷೇಧಿಸಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಕಾಂಗ್ರೆಸ್ ಶಾಸಕ ಗನೀಬೆನ್ ಠಾಕೂರ್ ಹೇಳಿದ್ದಾರೆ. ಅವರು ತಂತ್ರಜ್ಞಾನದಿಂದ ದೂರ ಇದ್ದು, ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ. |
ಅವಿವಾಹಿತ ಮಹಿಳೆಯರಿಗೆ ಮೊಬೈಲ್ ನೀಡುವಂತಿಲ್ಲ: ಮೊಬೈಲ್‌ನೊಂದಿಗೆ ಅವರು ಸಿಕ್ಕಿಬಿದ್ದರೆ ಪೋಷಕರನ್ನು ಹೊಣೆ ಮಾಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. |
ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ | ಸುದ್ದಿ ಸುಳ್ಯ |
ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ |
in: ಕ್ರೈಂ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ |
ಗೂನಡ್ಕ ಮೂಲದ ಮದ್ರಸ ಅಧ್ಯಾಪಕ ಬಂಧನ |
ಮೂವರು ಯುವಕರೂ ಅರೆಸ್ಟ್; ಬಾಲಕಿಯ ತಾಯಿಯ ಮೇಲೆಯೂ ಕೇಸು |
ತನ್ನ ಹದಿನಾರು ವರ್ಷದ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಗೂನಡ್ಕ ಮೂಲದ ಮದ್ರಸ ಅಧ್ಯಾಪಕನೋರ್ವನನ್ನು ಕೇರಳದ ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. |
ಪ್ರಸ್ತುತ ಕಾಞಂಗಾಡ್ ಸಮೀಪದ ತೈಕಡಪ್ಪುರ ನಿವಾಸಿಯಾದ ಈ ಉಸ್ತಾದ್ ಅಲ್ಲಿ ಮದ್ರಸ ಅಧ್ಯಾಪಕನಾಗಿದ್ದ. ಗೂನಡ್ಕ ಮೂಲದವನಾದ ಈತ ಇಲ್ಲಿಯೂ ಒಂದು ವಿವಾಹವಾಗಿದ್ದು, ಕಾಞಂಗಾಡ್ ನಲ್ಲಿ ಮತ್ತೊಂದು ವಿವಾಹವಾಗಿದ್ದ. ಈತನ ಮೇಲೆ ಈ ಹಿಂದೆಯೂ ಪೋಕ್ಸೋ ಕೇಸು ಸಹಿತ ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿತ್ತು. |
ಈತನ ಹದಿನಾರು ವರ್ಷದ ಮಗಳು ತನ್ನ ಮಾವನ ಸಹಕಾರದೊಂದಿಗೆ ನೀಲೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಕಳೆದ ಕೆಲವು ವರ್ಷಗಳಿಂದ ತಂದೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಹಾಗೂ ಇತರ ಕೆಲವು ಮಂದಿಯೂ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾದ ಕುರಿತು ಮಾಹಿತಿ ನೀಡಿದ್ದಾಳೆ. ಈ ಹುಡುಗಿ ಗರ್ಭಿಣಿಯಾದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿತ್ತು. |
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಉಸ್ತಾದ್ ಹಾಗೂ ಪರಿಸರದ ಮೂವರು ಯುವಕರನ್ನು ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಮಾಹಿತಿ ಗೊತ್ತಿದ್ದೂ ತಿಳಿಸದ ಹಿನ್ನೆಲೆಯಲ್ಲಿ ಹುಡುಗಿಯ ತಾಯಿಯ ಮೇಲೂ ಕೇಸು ದಾಖಲಾಗಿದೆ. |
ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ವಿರುದ್ದ ಕ್ರಮಕ್ಕೆ ಸೂಚನೆ | ವಿಶ್ವ ಕನ್ನಡಿಗ ನ್ಯೂಸ್ |
Home ರಾಜ್ಯ ಸುದ್ದಿಗಳು ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ವಿರುದ್ದ ಕ್ರಮಕ್ಕೆ ಸೂಚನೆ |
ಮಂಗಳೂರು (www.vknews.com) : ಎಲ್ಲಾ ಶಾಲಾ-ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. |
ಅವರು ಜ. 12ರ ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. |
ತಂಬಾಕು ನಿಯಂತ್ರಣ ಕಾಯ್ದೆಯ ಅನುಸಾರ ಶಾಲಾ-ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ 100 ಮೀಟರ್ ಅಂತರದಲ್ಲಿ ತಂಬಾಕು ಪದಾರ್ಥಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ, ಶಾಲಾ ಕಾಲೇಜುಗಳ ಬಳಿ ತಂಬಾಕು ಮುಕ್ತ ವಲಯ ಎಂದು ಫಲಕಗಳನ್ನು ಅಳವಡಿಸಬೇಕು ಹಾಗೂ ನಿಯಮ ಉಲಂಘಿಸುವವರಿಗೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. |
ಮಕ್ಕಳು ದುಷ್ಚಟಕ್ಕೆ ಬಲಿಯಾಗಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಿಕೊಡಬಾರದು, ಶಾಲಾ ಕಾಲೇಜು ಸುತ್ತಮುತ್ತಲಿನ ಪ್ರದೇಶದಲ್ಲಿ ತಂಬಾಕು ಮಾರಾಟವಾಗುತ್ತಿದ್ದರೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಾವುದೇ ಮುಲಾಜಿಲ್ಲದೆ ತಂಬಾಕು ಮಾರಾಟಗಾರರ ವಿರುದ್ದ ಕ್ರಮಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು. |
ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಕೂಡ ತಂಬಾಕು ಉಪಯೋಗ ಅಥವಾ ಸೇವನೆಗೆ ಅವಕಾಶವಿಲ್ಲ, ಇದಕ್ಕೆ ಸಂಬಂಧಸಿದಂತೆ ಆಯಾ ಕಚೇರಿ ಮುಖ್ಯಸ್ಥರು ತಮ್ಮ ಕಛೇರಿ ಅಥವಾ ಕಟ್ಟಡಗಳನ್ನು ತಂಬಾಕು ಮುಕ್ತ ಎಂಬ ನಾಮ ಫಲಕ ಅಳವಡಿಸಲು ಕ್ರಮ ವಹಿಸುವಂತೆ ಹೇಳಿದರು. |
ಪ್ರತಿ ಗ್ರಾಮ ಮಂಚಾಯತ್ ಅಡಿಯಲ್ಲಿ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ (ಆಡಳಿತ) ರವರಿಗೆ ಸೂಚಿಸಲಾಗುವುದು ಮತ್ತು ಆಯಾ ಗ್ರಾಮ ಪಂಚಾಯತ್‍ನ ಪಿ.ಡಿ.ಒ ರವರು ಪ್ರತಿ ತಿಂಗಳು ಕೋಟ್ಪಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬೇಕು ಎಂದು ತಿಳಿಸಿದರು. |
ಆಯಾ ತಾಲೂಕು ಮಟ್ಟದ ತನಿಖಾದಳದವರು ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸ್ಥಳೀಯ ಅಧಿಕಾರಿಗಳು ಉಲ್ಲಂಘನೆಯಾಗುತ್ತಿರುವ ಸ್ಥಳಗಳಲ್ಲಿ ಕೂಡಲೇ ಕಾರ್ಯಚರಣೆ ಮಾಡಲು ಸೂಚಿಸಿದರು. |
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ. ಹನುಮಂತರಾಯಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಣ, ಪೊಲೀಸ್, ಅಬಕಾರಿ, ಕಾರ್ಮಿಕ, ಸಾರಿಗೆ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. |
ಸಾಧನೆಯ ಎತ್ತರಕ್ಕೆ ಏರಿ, ಸುತ್ತಮುತ್ತಲಿನ ಜನ ಸಹಜವಾಗಿ ಚಿಕ್ಕದಾಗಿ ಕಾಣುತ್ತಾರೆ…. - Newsnap Kannada |
ಸಾಧನೆಯ ಎತ್ತರಕ್ಕೆ ಏರಿ, ಸುತ್ತಮುತ್ತಲಿನ ಜನ ಸಹಜವಾಗಿ ಚಿಕ್ಕದಾಗಿ ಕಾಣುತ್ತಾರೆ…. |
ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ……… |
ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ……… |
ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ………… |
ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ………. |
ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ, ನಮ್ಮ ಕಾಲೆಳೆಯುವ, ನಮಗೆ ತೊಂದರೆ ಕೊಡುವ ಜನರ ನಡುವೆ ನಾವು ವಾಸಿಸುವುದು ಕಷ್ಟವಾದಾಗ ನಾವು ಸಾಧನೆಯ ಬೆಟ್ಟವನ್ನು ಏರಲು ಪ್ರಯತ್ನಿಸಬೇಕು……….. |
ಇಲ್ಲದಿದ್ದರೆ ಈ ಜನರ ನಡುವೆ ನಮ್ಮ ಬದುಕು ಅಸಹನೆಯಿಂದಲೇ ಮುಗಿದು ಹೋಗುತ್ತದೆ……. |
ಒಟ್ಟಿನಲ್ಲಿ ನಮ್ಮ ಸಮಕಾಲೀನ ಇತರರಿಗಿಂತ ನೋಡುಗರ ದೃಷ್ಟಿಯಲ್ಲಿ ಹೆಚ್ಚು ಹೆಸರು ಮಾಡುವುದು ಎಂದಾಗಿದೆ.…… |
ಈ ರೀತಿಯ ಸಾಧನೆ ಮಾಡುವ ಅವಕಾಶವಿದ್ದು ಒಂದು ವೇಳೆ ನಾವು ಅದರಲ್ಲಿ ಯಶಸ್ವಿಯಾದರೆ, ನಾವು ಯಾವುದೇ ಸ್ಥಳದಲ್ಲಿ ಇದ್ದರೂ ಗೌರವ ಘನತೆಗೇನು ಕುಂದು ಬರುವುದಿಲ್ಲ…….. |
ಅನೇಕ ಕಾರಣಗಳಿಗಾಗಿ ನಾವು ಈ ರೀತಿಯ ಸ್ಥಾನ ಮಾನ ಪಡೆಯಲು ಸಾಧ್ಯವಾಗದಿದ್ದಾಗ, ನಮ್ಮ ನಡುವಿನ ಇತರರು ಈ ವ್ಯಾವಹಾರಿಕ ಜಗತ್ತಿನಲ್ಲಿ ನಮಗಿಂತ ಮುಂದೆ ಹೋಗಿ ನಮ್ಮನ್ನು ಕೀಳಾಗಿ ಕಂಡಾಗ ಅಥವಾ ನಮ್ಮ ಮನಸ್ಸು ಹಾಗೆ ಭಾವಿಸಿದಾಗ ನಾವು ಎತ್ತರದ ಪ್ರದೇಶಕ್ಕೆ ಹೋಗಲು ಪ್ರಯತ್ನಿಸಬೇಕು…… |
ಖಂಡಿತ ಸಾಧ್ಯವಿದೆ….. |
ಹೇಗೆಂದರೆ……….. |
ಹೆಚ್ಚು ನಿರೀಕ್ಷೆಗಳನ್ನೇ ಇಟ್ಟುಕೊಳ್ಳದೆ ಸ್ಥಿತ ಪ್ರಜ್ಞತೆಯನ್ನು ಬೆಳೆಸಿಕೊಳ್ಳಬೇಕು……. |
ಯಾವುದೇ ಸಂದರ್ಭದಲ್ಲಿಯೂ ಯಾರ ಮೇಲೆಯೂ ಅವಲಂಬಿತವಾಗುವ ಅಥವಾ ಯಾವುದನ್ನಾದರೂ ಬೇಡುವ ಪರಿಸ್ಥಿತಿಯನ್ನು ತಿರಸ್ಕರಿಸಬೇಕು. |
ಈ ಹಂತದಲ್ಲಿ ಸಾಂಪ್ರದಾಯಿಕ ಶೈಲಿಯ ಜನರ ನಡುವೆ ಇರುವುದಕ್ಕಿಂತ ಏಕಾಂತದ ವಾತಾವರಣದಲ್ಲಿ ನಮ್ಮ ಸಮಯ ಕಳೆಯುವಂತೆ ನಮ್ಮ ಮನಸ್ಸಿನ ಅರಮನೆಗೆ ನಾವೇ ರಾಜರಾಗಬೇಕು….. |
ಇದು ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗುವ ಸ್ಥಿತಿಯಲ್ಲ. ಸಾಧನೆಗಾಗಿ ರೂಪಿಸಿಕೊಳ್ಳುವ ಸರಳ ಮಾನಸಿಕ ಜೀವನಶೈಲಿ…… |
ಏನೂ ಇಲ್ಲದ ಸಂದರ್ಭದಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕನಿಷ್ಠ ಮಟ್ಟದ ಸರಳ ಜೀವನಶೈಲಿ ನಮ್ಮದಾದರೆ ನಮ್ಮ ವ್ಯಕ್ತಿತ್ವ ತಾನೇತಾನಾಗಿ ಮೇಲಕ್ಕೇರುತ್ತದೆ. ನಮ್ಮ ಬಡತನದ, ಸೋಲಿನ, ಅಸಹಾಯಕತೆಯ ಜೀವನ ನೋಡಿ ಅಸೂಯೆ ಪಡುವ ವ್ಯಂಗ್ಯ ಮಾಡುವ ಜನ, ತಮ್ಮ ವ್ಯಾವಹಾರಿಕ ಮತ್ತು ಸಂಭಂದಗಳ ಏರಿಳಿತಗಳಿಂದ ಬಸವಳಿದಾಗ ನಮ್ಮ ನೆಮ್ಮದಿಯ ಜೀವನ ಅವರಿಗೆ ಸೋಜಿಗದಂತೆ ಕಾಣುತ್ತದೆ. ಅವರುಗಳು ನಮ್ಮ ವ್ಯಕ್ತಿತ್ವದ ಮುಂದೆ ಸಣ್ಣವರಾಗಿ ಕಾಣುತ್ತಾರೆ. ಅದೇ ನಮ್ಮ ಬಹುದೊಡ್ಡ ಆತ್ಮವಿಶ್ವಾಸ. |
ಮಾನಸಿಕವಾಗಿ ನಾವು ಏರುವ ಎತ್ತರಕ್ಕೆ ಯಾವುದೇ ಮಿತಿಯೂ ಇಲ್ಲ………. |
ಅದೇ KILLING INSTINCT…… |
ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ – ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ಧಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು ಆ ಇಂಗ್ಲೀಷ್ ಪದ ಒಳಗೊಂಡಿದೆ. |
ಹೆಚ್ಚಾಗಿ ಕ್ರೀಡೆಯಲ್ಲಿ ಈ ಪದ ಬಳಸಲ್ಪಟ್ಟರೂ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯಿಸುತ್ತದೆ. |
ಸಮಕಾಲೀನ ರಾಜಕೀಯ ಪರಿಸ್ಥಿತಿಗಳಿಗೆ ಇದನ್ನು ಸಮೀಕರಿಸಿ ಸಾಮಾನ್ಯರಾದ ನಾವು ಒಂದಷ್ಟು ಸ್ಪೂರ್ತಿದಾಯಕ ಅಂಶಗಳನ್ನು ಗುರುತಿಸಬಹುದು. |
ದೇವೇಗೌಡ, ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಮಮತಾ ಬ್ಯಾನರ್ಜಿ, ಮಾಯಾವತಿ, ಅಮಿತ್ ಷಾ, ದಿವಂಗತ ಇಂದಿರಾ ಗಾಂಧಿ – ಜಯಲಲಿತಾ, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೆಲವರ ಪಟ್ಟಿ ಇದೆ. |
ಇವರ ಸಾಮಾನ್ಯ ಅಂಶವೆಂದರೆ ಸೋಲನ್ನು ಒಪ್ಪಿಕೊಳ್ಳದ, ಗೆಲುವಿಗಾಗಿ ಹಲವು ವರ್ಷಗಳ ಕಾಯುವಿಕೆ ಮತ್ತು ನಿರಂತರ ಶ್ರಮದಾಯಕ ಹೋರಾಟವನ್ನು ಅವರಲ್ಲಿ ನೇರವಾಗಿ ಕಾಣಬಹುದು. ಎಂತಹ ಸೋಲು ಕೂಡ ಅವರನ್ನು ಕುಗ್ಗಿಸುವುದಿಲ್ಲ. ಸೋತ ಕ್ಷಣದಿಂದ ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ. ಮಾನ ಅವಮಾನ ಅವರಿಗೆ ಲೆಕ್ಕವೇ ಇಲ್ಲ. ಭರವಸೆಗಳ ಮೇಲೆ ಭರವಸೆಗಳನ್ನು ಕೊಡುತ್ತಾ ಅವರ ಹಿಂಬಾಲಕರನ್ನು ಪ್ರೋತ್ಸಾಹಿಸುತ್ತಿರುತ್ತಾರೆ. |
ಎಂತಹ ಹೀನಾಯ ಸೋಲೇ ಆಗಲಿ, ಕೊಲೆ ಅತ್ಯಾಚಾರ ಭ್ರಷ್ಟಾಚಾರದ ನಿಕೃಷ್ಟ ಆರೋಪ ಶಿಕ್ಷೆಗಳೇ ಆಗಲಿ, ಜೈಲುವಾಸವೇ ಆಗಿರಲಿ, ಅವರ ಮೇಲಿನ ಹಲ್ಲೆಗಳನ್ನು ಸಹ ಅವರು ನಿರ್ಲಕ್ಷಿಸಿ ಮತ್ತೆ ಮತ್ತೆ ಜನರ ಮಧ್ಯೆ ಬರುತ್ತಾರೆ. ಅದೇ ಉತ್ಸಾಹದಿಂದ ಭಾಷಣ ಮಾಡುತ್ತಾರೆ. |
ಅವರುಗಳು ಮಾಡುವುದು ಸರಿ ಎಂದು ನಾನು ಖಂಡಿತ ಹೇಳುತ್ತಿಲ್ಲ. ಅವರ ವ್ಯಕ್ತಿತ್ವವನ್ನು ಮೆಚ್ಚುತ್ತಿಲ್ಲ. |
Subsets and Splits
No community queries yet
The top public SQL queries from the community will appear here once available.