text
stringlengths
0
61.5k
ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಹರಿಗೆ ನೋವು ಕಾಣಿಸಿಕೊಂಡಿತ್ತು. ಕೊವೀಡ್ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುವ ಬ್ಯಾಡಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ನಾಗರಾಜ್ ನೇತೃತ್ವದಲ್ಲಿ ಮಾಲಾ, ವಾಣಿ, ಉಮಾ ಶುಶ್ರೂಷಕಿಯರ ಸಹಯೋಗದೊಂದಿಗೆ ನಾರ್ಮಲ್ ಡೆಲಿವರಿ ಮಾಡಿಸಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ.
ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು‌ ಕೊವೀಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರ್ಮಲ್ ಡೆಲಿವರಿ ಮಾಡಿಸಿದ್ದ ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯ ವೈದ್ಯರಿಗೆ ಜಿಲ್ಲೆಯ ಜನರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ತಾಯಿ ಮತ್ತು ಮಗು ಕೊರೋನಾನಿಂದ ಗೆದ್ದು ಬೇಗ ಗುಣಮುಖರಾಗಲಿ ಎಂದು ಜನರು ಹಾರೈಸಿದ್ದಾರೆ.
Tags: #byadagi #kannadanews #sudditaranga #sudditaranga.com Corona 2wave Corona breaking Corona case Corona second wave Corona treatment Corona update Doctor Hospital Pregnant lady Pregnency Today corona cases Today corona report
Previous ಸ್ವಂತ ದುಡ್ಡಿನಿಂದ ಕ್ಷೇತ್ರದ ಜನರಿಗೆ ಆಕ್ಸಿಜನ್ ಒದಗಿಸಲು ಮುಂದಾದ ಸಂಸದೆ..!
Next ಕೊಪ್ಪಳದ ಗವಿಸಿದ್ದೇಶ್ವರ ಮಠದ ವಸತಿ ನಿಲಯ ಆಯ್ತು, 100 ಹಾಸಿಗೆಯ ಕೋವಿಡ್ ಆಸ್ಪತ್ರೆ: ಅಭಿನವ ಶ್ರೀ ಗವಿಸಿಧ್ದೇಶ್ವರ ಶ್ರೀಗಳ ಕಾರ್ಯಕ್ಕೆ ಜನ‌ ಮೆಚ್ಚುಗೆ..!
ಪ್ರತ್ಯೇಕ ತುಳುನಾಡು ಬೇಡಿಕೆ ಕುಚೋದ್ಯ, ಸಾಂವಿಧಾನಿಕ ಮಾನ್ಯತೆಗೆ ನನ್ನ ಹೋರಾಟವಿದೆ: ಕರಂದ್ಲಾಜೆ - ಸವಿ ಕನ್ನಡ ನ್ಯೂಸ್
ಉಡುಪಿ: ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಆದರೆ ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ. ಎರಡು ಬಾರಿ ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ ಎಂದರು. ಇದನ್ನೂ ಓದಿ: 8ನೇ ಪರಿಚ್ಛೇದಕ್ಕೆ ತುಳು – ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದೆ ಎಂದ ಕಟೀಲ್
ನಾವು ಕರ್ನಾಟಕದವರು. ತುಳುರಾಜ್ಯ ಎಂಬ ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಇಲ್ಲ. ಕರ್ನಾಟಕ ಏಕೀಕರಣವಾದ ಮೇಲೆ ನಾವೆಲ್ಲ ಒಟ್ಟಾಗಿ ಇರಬೇಕಾದವರು. ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆಯಿದೆ. ತುಳುನಾಡು ಎಂಬ ಬೇಡಿಕೆ ಸರಿಯಲ್ಲ. ಯಾರೂ ಪ್ರತ್ಯೇಕತೆ ಬಗ್ಗೆ ಮಾತನಾಡಬಾರದು ಎಂದು ಹೇಳಿದರು.
ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು. ತುಳು ಭಾಷೆಗಾಗಿ ನಮ್ಮ ಹೋರಾಟ ಇದೆ. ತುಳು ಭಾಷಾ ಅಭಿಮಾನಿಗಳು, ಹೋರಾಟಗಾರರು ಕವಿಗಳು ಕೃತಿಕಾರರ ಮನಸ್ಸಿನ ಭಾವನೆ ಏನೆಂದು ನನಗೆ ತಿಳಿದಿದೆ. ತುಳು ಭಾಷಿಗಳಾಗಿ ಏನೆಲ್ಲ ಮಾಡಬೇಕು ಖಂಡಿತಾ ಮಾಡುತ್ತೇನೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
The post ಪ್ರತ್ಯೇಕ ತುಳುನಾಡು ಬೇಡಿಕೆ ಕುಚೋದ್ಯ, ಸಾಂವಿಧಾನಿಕ ಮಾನ್ಯತೆಗೆ ನನ್ನ ಹೋರಾಟವಿದೆ: ಕರಂದ್ಲಾಜೆ appeared first on Public TV.
ಶಿರೂರು ಶ್ರೀ ಸಾವಿಗೆ ರಮ್ಯಾ ಶೆಟ್ಟಿಯೇ ಕಾರಣ: ಮಠದ ಮಾಜಿ ಮ್ಯಾನೇಜರ್ | Shiroor mutt former Manager alleges, Ramya Shetty will be responsible for shiroor seer death | Kannadaprabha.com
Published: 21 Jul 2018 08:54 PM IST
ಮಾಜಿ ಮ್ಯಾನೇಜರ್, ರಮ್ಯಾ ಶೆಟ್ಟಿ
ಹಾಸನ: ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿಗೆ ರಮ್ಯಾ ಶೆಟ್ಟಿ ಎಂಬ ಮಹಿಳೆಯೇ ಕಾರಣ ಎಂದು ಮಠದ ಮಾಜಿ ಮ್ಯಾನೇಜರ್​ ಸುನೀಲ್​ ಕುಮಾರ್​ ಅವರು ಆರೋಪಿಸಿದ್ದಾರೆ.
ಶಿರೂರು ಮಠದಲ್ಲಿ ಸ್ವಾಮೀಜಿ ಮಾತಿಗಿಂತ ರಮ್ಯಾ ಮಾತು ಹೆಚ್ಚಾಗಿ ನಡೆಯುತ್ತಿತ್ತು. ಆಕೆಯೇ ಮಠದ ಬ್ಯಾಂಕ್​ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಮಠಕ್ಕೆ ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವನ್ನೂ ಆಕೆಯೇ ತರುತ್ತಿದ್ದಳು. ಇಡೀ ಮಠವನ್ನು ರಮ್ಯಾ ಸ್ವಾಧೀನಕ್ಕೆ ಪಡೆದಿದ್ದರು ಎಂದು ಸುನೀಲ್​ ದೂರಿದ್ದಾರೆ.
ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದಳು. ಸ್ವಾಮೀಜಿ ರೂಂಗೆ ಯಾರು ಹೋಗುತ್ತಿರಲಿಲ್ಲ. ಆದರೆ, ರಮ್ಯಾ ಮಾತ್ರ ಹೋಗುತ್ತಿದ್ದಳು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು, 2 ಮನೆ ಸೇರಿ ಆಸ್ತಿ ಹೆಚ್ಚಾಯಿತು. ಆಕೆಯೇ ಸ್ವಾಮೀಜಿಗೆ ಹೊರಗಿನಿಂದ ಆಹಾರ ತಂದು ಕೊಡುತ್ತಿದ್ದಳು. ಮಠದಲ್ಲಿ ಇರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ ಎಂದು ಸುನೀಲ್​ ಹೇಳಿದ್ದಾರೆ.
ಒಂಭತ್ತು ವರ್ಷ ನಾನು ಹಾಗೂ ನನ್ನ ಕುಟುಂಬ ಮಠದಲ್ಲಿದ್ದವು. ಸ್ವಾಮೀಜಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ರಮ್ಯಾ ಶೆಟ್ಟಿ ಬಂದ ನಂತರ ಮಠದ ವಾತಾವರಣವೇ ಬದಲಾಯಿತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೊಲೀಸರಿಗೆಗೆ ದೂರು ನೀಡಿ‌ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸುನೀಲ್​ ಒತ್ತಾಯಿಸಿದ್ದಾರೆ.
ಆಹಾರ ಭದ್ರತೆ: ಪ್ರಚಾರಾಂದೋಲನ ಆರಂಭ | Prajavani
ಆಹಾರ ಭದ್ರತೆ: ಪ್ರಚಾರಾಂದೋಲನ ಆರಂಭ
ಮೈಸೂರು: ಆಹಾರ ಭದ್ರತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಗುರುವಾರದಿಂದ ಪ್ರಚಾರಾಂದೋಲನ ಆರಂಭಿಸಿದವು.
ರಂಗಕರ್ಮಿ ಜನಾರ್ದನ್ (ಜನ್ನಿ) ಪ್ರಚಾರಾಂದೋ ಲನಕ್ಕೆ ಚಾಲನೆ ನೀಡಿ ಮಾತನಾಡಿ `ಜಗತ್ತಿನಲ್ಲಿಯೇ ಅತಿ ಹೆಚ್ಚು ಅಪೌಷ್ಟಿಕತೆಯಿಂದ ಜನ ನರಳುತ್ತಿರುವ ದೇಶ ಭಾರತ. ಹತ್ತರಲ್ಲಿ ಆರು ಮಂದಿ ರಕ್ತಹೀನತೆ ಯಿಂದ ಬಳಲುತ್ತಿದ್ದಾರೆ. 770 ಟನ್‌ಗಳಷ್ಟು ಗೋದಿ ಮತ್ತು ಅಕ್ಕಿ ಸರ್ಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಪಡಿತರ ವ್ಯವಸ್ಥೆಯ ಪ್ರಕಾರ ಇಡೀ ವರ್ಷ 5 ಕೋಟಿ ಟನ್ ಆಹಾರ ಧಾನ್ಯ ಮಾತ್ರ ಸಾಕು.
ಈಗಿರುವ ಪಡಿತರದಲ್ಲಿಯೇ ಹೆಚ್ಚು ಜನರಿಗೆ ಆಹಾರ ಒದಗಿಸಲು ಸಾಧ್ಯವಿದೆ~ ಎಂದು ತಿಳಿಸಿದರು.
`ಆಹಾರ ಭದ್ರತೆಗೆ ಸಂಬಂಧಿಸಿದಂತೆ ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳು ಜಾಗೃತಿ ಆಂದೋಲನ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಕ್ಕಳಲ್ಲಿ ಅಪೌಷ್ಟಿಕತೆ ಬಗ್ಗೆ ಗಮನ ಹರಿಸಬೇಕು~ ಎಂದು ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಮಾತನಾಡಿ, `ಎಪಿಎಲ್, ಬಿಪಿಎಲ್ ಎಂಬ ಎರಡು ನಿಯಮಗಳನ್ನು ಸರ್ಕಾರ ಜಾರಿ ತಂದು ಜನರನ್ನು ಇಬ್ಭಾಗ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ರೂ.26 ಕ್ಕಿಂತ ಹೆಚ್ಚು ಸಂಪಾದನೆ ಮಾಡುವವರು ಮತ್ತು ನಗರ ಪ್ರದೇಶದಲ್ಲಿ ರೂ.32 ಸಂಪಾದಿಸುವವರು ಬಡವರಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಯಾರು ಬಡವರು ಮತ್ತು ಶ್ರೀಮಂತರು ಎಂಬುದನ್ನು ತಿಳಿಯಲು ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಾನದಂಡ ಸರಿಯಲ್ಲ~ ಎಂದು ಟೀಕಿಸಿದರು.
`ದೇಶದಲ್ಲಿ ಅಸಂಘಟಿತ ಕಾರ್ಮಿಕ ವರ್ಗ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ನೇಮಿಸಿದ ಆಯೋಗದ ಪ್ರಕಾರ ದೇಶದಲ್ಲಿ ಶೇ 77 ರಷ್ಟು ಜನರು ದಿನಕ್ಕೆ ರೂ.20 ಕ್ಕಿಂತಲೂ ಕಡಿಮೆ ಆದಾಯದಲ್ಲಿ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಪಿಎಲ್, ಬಿಪಿಎಲ್ ಎಂದು ವಿಂಗಡಿಸುವುದಾಗಲಿ, ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸದೆ ನಿರ್ದಿಷ್ಟ ಜನರಿಗೆ ಎಂದು ನಿಗದಿಗೊಳಿಸುವುದು ಸಲ್ಲದು. ಇದು ಸರ್ಕಾರದ ಜನ ವಿರೋಧಿ ನೀತಿ~ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಸಿಪಿಐ(ಎಂ) ಕಾರ್ಯದರ್ಶಿ ಕೆ.ಬಸವರಾಜು, ಜಿಲ್ಲಾ ಸಮಿತಿ ಸದಸ್ಯ ವಿಜಯಕುಮಾರ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಜು ಇದ್ದರು.
ಉಡುಪಿ: ತೈಲಬೆಲೆ ಏರಿಕೆ ಖಂಡಿಸಿ ರಿಕ್ಷಾ ತಳ್ಳಿ ಪ್ರತಿಭಟನೆ | Vartha Bharati- ವಾರ್ತಾ ಭಾರತಿ
ಉಡುಪಿ, ಸೆ.10: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕರೆ ನೀಡಿ ರುವ ಸೋಮವಾರದ ಭಾರತ್ ಬಂದ್ ಸಂದರ್ಭ ಉಡುಪಿ ಜಿಲ್ಲಾ ಆಶ್ರಯ ದಾತ ಅಟೋ ಯೂನಿಯನ್ ನೇತೃತ್ವದಲ್ಲಿ ಚಾಲಕರು ತಮ್ಮ ರಿಕ್ಷಾವನ್ನು ತಳ್ಳಿಕೊಂಡು ಹೋಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ವಿಸ್ ಬಸ್ ನಿಲ್ದಾಣದಿಂದ ಕ್ಲಾಕ್ ಟವರ್, ಕಿದಿಯೂರು ಹೊಟೇಲ್ ಮಾರ್ಗವಾಗಿ ಸಿಟಿ ಬಸ್ ನಿಲ್ದಾಣದವರೆಗೆ ಸುಮಾರು 15ಕ್ಕೂ ಅಧಿಕ ರಿಕ್ಷಾಗಳನ್ನು ಚಾಲಕರು ತಳ್ಳಿಕೊಂಡು ಹೋದರು. ಈ ಸಂದರ್ಭದಲ್ಲಿ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮೊದ ಲಾದವರು ಉಪಸ್ಥಿತರಿದ್ದರು.
ಕೊನೆಗೂ ವಿಶ್ವಾಸ ಮತ ಗೆದ್ದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌​..! - Tv5 Kannada
ಕೊನೆಗೂ ವಿಶ್ವಾಸ ಮತ ಗೆದ್ದ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌​..!
ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ವಿಶ್ವಾಸ ಮತ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಅವರು ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಂಡಿದ್ದಾರೆ. ಸಂಸತ್‌ನಲ್ಲಿ ತಮ್ಮ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಜಾನ್ಸನ್ 211 ಮತಗಳಿಸಿದರು. ಆದರೆ, ಅವರದ್ದೇ ಪಕ್ಷದ (ಕನ್ಸರ್‌ವೇಟಿವ್‌ ಪಾರ್ಟಿ)148 ಮಂದಿ ಸಂಸದರು ಬೋರಿಸ್‌ ವಿರುದ್ಧ ಮತ ಚಲಾಯಿಸಿದ್ದಾರೆ.
ಕೋವಿಡ್‌ ಸಾಂಕ್ರಾಮಿಕದ ವೇಳೆ ಲಾಕ್‌ಡೌನ್‌ ಇದ್ದರೂ ಪಾರ್ಟಿಗಳಲ್ಲಿ ಭಾಗವಹಿಸಿದ್ದು, ಕೋವಿಡ್‌ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಪಕ್ಷದ ಘನತೆಗೆ ಸಾರ್ವಜನಿಕವಾಗಿ ಧಕ್ಕೆ ತಂದಿದೆ ಎಂದು ಸ್ವಪಕ್ಷೀಯರೇ ಬೋರಿಸ್‌ ಅವರ ವಿರುದ್ಧ ಆರೋಪಿಸಿದ್ದರು. ಹೀಗಾಗಿ ಅವರ ರಾಜೀನಾಮೆಗೂ ಆಗ್ರಹಿಸಿದ್ದರು.
ಕನ್ಸರ್‌ವೇಟಿವ್‌ ಪಾರ್ಟಿಯ ಹಲವು ಸದಸ್ಯರು ಬ್ರಿಟನ್‌ ಸಂಸತ್‌ನಲ್ಲಿ ಬೋರಿಸ್‌ ಜಾನ್ಸನ್‌ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ ಎಂದು ಬ್ಯಾಕ್‌ಬೆಂಚ್‌ 1922 ಕಮಿಟಿ ( ಕನ್ಸರ್ವೇಟಿವ್‌ ಪಕ್ಷದ ಸದಸ್ಯರ ಸಮಿತಿ)ಯ ಮುಖ್ಯಸ್ಥ ಸರ್‌ ಗ್ರಹಮ್‌ ಬ್ರಾಡಿ ಇತ್ತೀಚೆಗೆ ಹೇಳಿದ್ದರು.
ಅಂತಿಮವಾಗಿ ಜಾನ್ಸನ್‌ ಶೇ 58.6 ಮತ ಪಡೆಯುವ ಮೂಲಕ ವಿಶ್ವಾಸಮತ ಗೆದ್ದಿದ್ದಾರೆ. ಈ ಫಲಿತಾಂಶವನ್ನು ಗುಡ್‌ ನ್ಯೂಸ್‌ ಮತ್ತು ನಿರ್ಣಾಯಕ ಎಂದು ಬೋರಿಸ್‌ ಜಾನ್ಸನ್‌ ವಿಶ್ಲೇಷಿಸಿದ್ದಾರೆ. ಒಗ್ಗಟ್ಟಿನಿಂದ ಮುನ್ನಡೆಯಲು ಫಲಿತಾಂಶ ಅವಕಾಶ ಕಲ್ಪಿಸಿದೆ ಎಂದೂ ಅವರು ಹೇಳಿದ್ದಾರೆ.
ಎನ್ ಎಸ್ ಶಂಕರ್ ಕೇಳುತ್ತಾರೆ: ನಾಗಪ್ಪನ ಶತ್ರು ನಿಜಕ್ಕೂ ಯಾರು? – Avadhi/ಅವಧಿ
ಎನ್ ಎಸ್ ಶಂಕರ್ ಕೇಳುತ್ತಾರೆ: ನಾಗಪ್ಪನ ಶತ್ರು ನಿಜಕ್ಕೂ ಯಾರು?
by avadhi · Published April 3, 2018 · Updated April 2, 2018
ತನ್ನ ಕಣ್ಣುಗಳಲ್ಲಿ ತಾನೇ 'ನಿಷ್ಪಾಪ ಮುಗ್ಧತೆ'ಯನ್ನು ಕಂಡು ಆತ್ಮಮರುಕದಿಂದ ಅಂತರ್ಮುಖಿಯಾಗುವವನು, ಯಶವಂತ ಚಿತ್ತಾಲರ ಸುಪ್ರಸಿದ್ಧ ಕಾದಂಬರಿ 'ಶಿಕಾರಿ'ಯ ಕಥಾನಾಯಕ ನಾಗಪ್ಪ.
ಪ್ರಕಟವಾದ 1979ರಿಂದಲೂ- ಅಂದರೆ ಸರಿ ಸುಮಾರು ನಾಲ್ಕು ದಶಕ ಕಾಲ ಓದುಗರನ್ನು, ಅದರ ಜೊತೆಗೆ ಕನ್ನಡ ಸಾರಸ್ವತ ಲೋಕವನ್ನು 'ಶಿಕಾರಿ' ರೋಮಾಂಚನಗೊಳಿಸಿದೆ.
ಈ ಕಾದಂಬರಿಯ ಇಂಗ್ಲಿಷ್ ಆವೃತ್ತಿ ಸಿದ್ಧವಾಗಿ ಈಗಷ್ಟೇ ಬಿಡುಗಡೆಯಾಗಿರುವ ಈ ಸಂದರ್ಭದಲ್ಲಿ ಕನ್ನಡದ ಮಹತ್ವದ ಚಿಂತಕ, ಪತ್ರಕರ್ತ ಎನ್ ಎಸ್ ಶಂಕರ್ ಚಿತ್ತಾಲರ ಬಗ್ಗೆ- ವಿಶೇಷವಾಗಿ 'ಶಿಕಾರಿ'ಯ ಬಗ್ಗೆ ನೋಟ ಹರಿಸಿದ್ದಾರೆ.
ನಿನ್ನೆಯ ಮೊದಲ ಭಾಗವನ್ನು ಇಲ್ಲಿ ಓದಬಹುದು
'ಇಷ್ಟು ವರ್ಷ ಬೆಳೆಸಿಕೊಂಡು ಬಂದ ಒಂದು ಕರಿಯರ್, ತನ್ನ ಶಿಖರಾವಸ್ಥೆಗೆ ಮುಟ್ಟಲಿದ್ದ ಕ್ಷಣದಲ್ಲೇ ಈಗ ಉಧ್ವಸ್ತಗೊಳ್ಳಲಿತ್ತು. ಕಾರಣ: ಮನುಷ್ಯನ ಶಿಕಾರಿಯಾಡುವ ಪ್ರವೃತ್ತಿ' ಎಂದು ಆತಂಕಗೊಳ್ಳುತ್ತಾನೆ.
'ಇದೆಲ್ಲ ಆಗುತ್ತಿದ್ದದ್ದು ತನಗೇ ಎಂಬುದರ ಮೇಲೆ ನಂಬಿಕೆಯಾಗುತ್ತಿರಲಿಲ್ಲ- ಎಲ್ಲರನ್ನು ಬಿಟ್ಟು ತನ್ನಂಥ ತನಗೆ! ಬದುಕಿನಿಂದ ಬಹಳಷ್ಟನ್ನು ಬೇಡಿರದ ಕೋಳೀಗಿರಿಯಣ್ಣನ ಕೇರಿಯ ಈ ನಾಗಪ್ಪನಿಗೆ!' ಎಂಬ ಆತ್ಮಮರುಕದಲ್ಲಿ ಸಿಲುಕಿದ ನಾಗಪ್ಪ, ಕಾದಂಬರಿಯ ಅರ್ಧ ಭಾಗ ಈ ಅಸ್ಪಷ್ಟ ಭಯಾನಕ ಸವಾಲನ್ನು ಅರಿಯುವುದರಲ್ಲಿ, ಅರಿತು ಅರಗಿಸಿಕೊಳ್ಳುವುದರಲ್ಲೇ ಕಳೆಯುತ್ತಾನೆ.
'ಈ ಆಯ- ಆಕಾರಗಳಿಲ್ಲದ; ಗೊತ್ತು ಗುರಿಯಿಲ್ಲದ ಹೊತ್ತಿಗೆ ಶಿಲ್ಪ ಕಡೆಯುವ, ಒಳಗಿಂದ ಎದ್ದೆದ್ದು ಬರುತ್ತಿದ್ದ ವಿದ್ರೂಪ ಭಯಕ್ಕೆ ರೂಪ ಮೂಡಿಸುವ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ….' ಎಂದು ವಿವರಿಸುತ್ತಾರೆ ಲೇಖಕರು.
ಅಷ್ಟಾದರೂ ಅವನಿಗೊಂದು ಅಸ್ಪಷ್ಟ ಧೈರ್ಯ- 'ರಾಜಕೀಯ ಕುತಂತ್ರ ತನ್ನ ವ್ಯಕ್ತಿತ್ವದ ಅಳವಿನಾಚೆಯದಾದರೂ ಸತ್ಯ ತನ್ನ ಬದಿಗಿದೆ ಎಂಬ ಒಂದೇ ಒಂದು ಧೈರ್ಯ…' ಆದರೆ ಮುಂದಕ್ಕೆ ನಡೆವ ವಿಚಾರಣೆಯ ಕಾಲಕ್ಕೆ ನಾಗಪ್ಪನ ನಂಬಿಕೆಯ ಈ ಬುನಾದಿಯೂ ಕುಸಿಯುತ್ತದೆ. ವಿಚಾರಣಾಧಿಕಾರಿಗಳಲ್ಲಿ ಒಬ್ಬನಾದ ದಸ್ತೂರ್ ಹೇಳುತ್ತಾನೆ- "ಮೂಲಭೂತವಾದ ಕೆಲವು ಮೌಲ್ಯಗಳಲ್ಲಿ ನಿಮಗೆ ನಂಬಿಕೆ ಇದ್ದಂತಿದೆ. ಅದರ ಜೊತೆಗೇ, ಉಳಿದವರಿಗೂ ಅವುಗಳಲ್ಲಿ ನಂಬಿಕೆ ಇದೆ ಎಂಬ ವಿಶ್ವಾಸ, ಇರಲೇಬೇಕೆಂಬ ಹಟ.
ನೀವು ಮೊದಲಿನಿಂದಲೂ ನಮ್ಮೊಡನೆ ನಡೆದುಕೊಂಡ ರೀತಿ ನೋಡಿದರೆ- 'ಸತ್ಯ ಹೇಗಾದರೂ ನನ್ನ ಬದಿಗಿದೆ. ಕೊನೆಯಲ್ಲಿ ಗೆಲ್ಲುವದು ಆ ಸತ್ಯವೊಂದೇ' ಎಂಬ ಪುರಾಣ- ಕಲ್ಪನೆಗೆ ಜೋತು ಬಿದ್ದವರ ಹಾಗೆ ತೋರುತ್ತೀರಿ…"
ಕಡೆಗೆ ನಾಗಪ್ಪನಿಗೆ ಜ್ಞಾನೋದಯವಾಗುತ್ತದೆ. 'ಸತ್ಯವೇ ಕೊನೆಗೆ ಗೆಲ್ಲುತ್ತದೆ ಎಂಬ ಮಾತು ಫಿರೋಜನಂತಹ ಧೂರ್ತ ರಾಜಕಾರಣಿಯ ಮುಂದೆ ನಡೆಯುವಂತಹದಲ್ಲ. ಇದೇ! ಇದೇ! ತಾನು ಸಂಪೂರ್ಣವಾಗಿ ನಿರಪರಾಧಿಯಾಗಿರುವಾಗಲೂ ತನ್ನನ್ನು ಅಪರಾಧಿಯನ್ನಾಗಿ ತೋರಿಸುವ ಈ ಕಪ್ಪು ಬಲಕ್ಕೆ ಹಾಗೂ ಮಾತಿನ ತೆಕ್ಕೆಗೆ ಸಿಗದೆ ಅದು ಹುಟ್ಟಿಸುವ- ಭಯಕ್ಕೆ ತಾನಿಂದು ದಣಿಯುತ್ತಿದ್ದೇನೆ…' ಎಂದು ಕಣ್ಣು ತೆರೆಯುತ್ತಾನೆ ನಾಗಪ್ಪ, ದಣಿಯುತ್ತಾನೆ. '
ಬೇಡ ಈ ಸ್ಪರ್ಧೆ! ಈ ಹಗೆ! ಸುಳ್ಳು- ಆಮಿಷಗಳ ಹಿಂದೆ ಓಡಿ ಸುಳ್ಳಾಗುವ ಈ ಜಂಜಾಟದ ಬದುಕು' ಎಂದು ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟುಬಿಡುತ್ತಾನೆ. ಅವನ ನೆನಪಿಗೆ ಬರುವವನು 'ಬರ್ನಾರ್ಡ್ ಮಾಲ್ಮೂಡ್‍ನ ಕಾದಂಬರಿ ಫಿಕ್ಸರ್' ಮತ್ತು ಅದರ ನಾಯಕ ಯಾಕೋವ್ ಬೋಕ್- ಯಾಕೆಂದರೆ ಆತನೂ 'ತನ್ನಂತೆಯೇ ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ!'
ಕಾದಂಬರಿಯಲ್ಲಿ ಹೀಗೆಯೇ ತನ್ನಂಥ 'ನಿರ್ದೋಷಿಗಳ ಬಲಿ'ಯ ಬಗ್ಗೆ ನಾಗಪ್ಪ ಪರಿತಪಿಸುವ ಪ್ರಸಂಗವೂ ಇದೆ. ಒಟ್ಟು ಅಂತ್ಯವಿಲ್ಲದಂತೆ ಭಾಸವಾಗುವ ಈ ಎಲ್ಲ ಯಾತನೆಯ ನಂತರ ರಾಜೀನಾಮೆ ಬಿಸಾಕಿ ಹೋಗುವ ಕ್ಷಣ ನಾಗಪ್ಪನ ಹೊಸ ಹುಟ್ಟಿನ ಮುಹೂರ್ತವೂ ಹೌದು.
'ಒಬ್ಬನು ಇನ್ನೊಬ್ಬನನ್ನು ಉಪಯೋಗಿಸಿಕೊಳ್ಳುವುದರಿಂದ ಸುಳ್ಳಾದ ಸಂಬಂಧಗಳನ್ನೆಲ್ಲ ಒಂದೊಂದಾಗಿ ತೊಡೆದು, ಉಳಿದ ಆಯುಷ್ಯವನ್ನಾದರೂ ಅಪ್ಪಟವಾದ ನಿಜವಾದ ಸಂಬಂಧಗಳನ್ನು (ಹಾಗೆಂದರೇನು ಎನ್ನುವದೇ ಇನ್ನೂ ಸ್ಪಷ್ಟವಾಗಿರದಿದ್ದರೂ ಕೂಡ) ಹುಟ್ಟಿಸಿಕೊಳ್ಳುವುದರಲ್ಲಿ ಕಳೆಯುವುದಿತ್ತು' ಎಂದು ಆತ ತೀರ್ಮಾನಿಸಿದ ಗಳಿಗೆ. ಎಳವೆಯಿಂದಲೂ ತಾನೇ ಎದುರಿಸಲು ಅಂಜಿದ ತನ್ನ ಹಲವು ಮನೋದೈಹಿಕ ಊನಗಳನ್ನು ಜೀರ್ಣಿಸಿಕೊಂಡು ಮುಕ್ತಿ ಪಡೆದ ದಿವ್ಯ ಕ್ಷಣ.
ಆದರೆ ಈ ಹಂತ ತಲುಪುವ ಹಾದಿಯಲ್ಲಿ ನಾಗಪ್ಪ ನಗರವೆಂಬ ನರಕದ ಸಹಸ್ರ ರೂಪಗಳ ಎದುರು ನರಳುತ್ತ ಬಂದಿದ್ದಾನೆ. ಮತ್ತು ನಾಗಪ್ಪನ ಈ ಪಯಣದ ಚಿತ್ರಣದಲ್ಲಿ, ಅತಿ ಸೂಕ್ಷ್ಮ ಮನೋವ್ಯಾಪಾರಗಳ ಜೊತೆಜೊತೆಗೇ ಕುತೂಹಲಕಾರಿಯೂ ಪ್ರೌಢವೂ ಆದ ಹೆಣಿಗೆಯ ಮೂಲಕ ಚಿತ್ತಾಲರು ಪ್ರದರ್ಶಿಸುವ ಅದ್ಭುತ ಕಥನ ಪ್ರತಿಭೆ, ನಲವತ್ತು ವರ್ಷಗಳ ನಂತರವೂ 'ಶಿಕಾರಿ'ಯನ್ನು ಕನ್ನಡದ ಗಣ್ಯಕೃತಿಯಾಗೇ ಉಳಿಸಿದೆ; ಸಾಹಿತ್ಯಾಸಕ್ತರಿಗೆ ಅಪಾರ ಓದುವ ಸುಖ ಕೊಟ್ಟಿದೆ.
ಈಗ ಮೂಲ ಪ್ರಶ್ನೆ:
ನಾಗಪ್ಪನ ಈ ಸಂಕಟಕ್ಕೆ ಯಾರು ಅಥವಾ ಏನು ಕಾರಣ? ಅಥವಾ ಈ ಪ್ರಶ್ನೆಯನ್ನು ಹೀಗೂ ಕೇಳುವುದಾದರೆ- ನಾಗಪ್ಪನ ಶತ್ರು ನಿಜಕ್ಕೂ ಯಾರು?
ಇದಕ್ಕೆ ಉತ್ತರ ಸ್ವತಃ ನಾಗಪ್ಪನಿಗೇ ಸ್ಪಷ್ಟವಿಲ್ಲ. ಸಂಸ್ಥೆಯಲ್ಲಿ ತನ್ನ ಸುತ್ತಮುತ್ತ ಇರುವ ಮೇಲಧಿಕಾರಿಗಳೇ ವ್ಯೂಹ ಹೂಡಿ ತನ್ನನ್ನು ಕೆಡವುತ್ತಿದ್ದಾರೆ; ತನಗೇ ಅರಿವಿಲ್ಲದಂತೆ ಅವರ ಯಾವುದೋ ಹುನ್ನಾರಕ್ಕೆ ತಾನು ಅಡ್ಡಿಯಾಗಿರುವುದೇ ಬಹುಶಃ ಅವರ ಈ ಹಗೆಸಾಧನೆಗೆ ಕಾರಣ; 'ಫಿರೋಜ್, ಜಲಾಲ ಹಾಗೂ ಶ್ರೀನಿವಾಸ ಈ ಮೂವರ ಕ್ರೌರ್ಯಕ್ಕೆ ತನ್ನಂತಹ ನಿರುಪದ್ರವಿಯಾದವನು ಕಾರಣವಾಗಬೇಕಾದರೆ ಈ ಮೂವರನ್ನೂ ಒಟ್ಟಿಗೆ ತಂದ ಯಾವುದೋ ದುಷ್ಟ ಸಂಚಿಗೆ ತಾನು ತನಗೇ ಗೊತ್ತಿಲ್ಲದ ರೀತಿಯಲ್ಲಿ ಅಡ್ಡಗಾಲು ಹಾಕಿರಬಹುದೇ?'- ಎಂದೆಲ್ಲ ಲೆಕ್ಕ ಹಾಕುತ್ತಾನೆ ನಾಗಪ್ಪ.
ಅಷ್ಟಾದರೂ ತಾನು 'ನಿಷ್ಕಾರಣವಾಗಿ ಯಾತನೆಗೆ ಗುರಿಯಾದ ಬಡಪಾಯಿ' ಅನ್ನುವುದರಲ್ಲಿ ಅವನಿಗೆ ಅನುಮಾನವಿಲ್ಲ. ಯಾಕೆಂದರೆ ಎಲ್ಲ ಮುಕ್ತಾಯಕ್ಕೆ ಬರುವ ಹಂತದಲ್ಲೂ ನಾಗಪ್ಪ 'ನನಗಿನ್ನೂ ಅರ್ಥವಾಗದೇ ಇದ್ದದ್ದು- ಇದನ್ನೆಲ್ಲ ಉಪಯೋಗಿಸಿ ನೀವು ನನ್ನನ್ನು ಹಣಿಯಲು ಹೊರಟಿದ್ದರ ಉದ್ದೇಶ' ಎಂದು ಗೊಂದಲಗೊಳ್ಳುತ್ತಾನೆ.
ಒಟ್ಟಿನಲ್ಲಿ ನಾಗಪ್ಪನ ಅಮಾಯಕ ಮುಗ್ಧತೆ ಅಥವಾ ಉದಾತ್ತ ವ್ಯಕ್ತಿತ್ವದ ಬಗ್ಗೆ ಓದುಗರು, ಯಾವ ಪ್ರಶ್ನೆಯೂ ಇಲ್ಲದೆ, ಸಹಾನುಭೂತಿಪರ ಮೆಚ್ಚುಗೆ ತಳೆಯಬೇಕೆಂದು ಚಿತ್ತಾಲರು ಬಯಸುತ್ತಾರೆ. ಆದರೆ 'ಶಿಕಾರಿ' ಕಾದಂಬರಿಯ ಮರುಓದು, ನಾಗಪ್ಪನ ಜೀವಾಳದ ಬಗ್ಗೆ ಗಹನವಾದ ಅನುಮಾನಗಳನ್ನು ಹುಟ್ಟುಹಾಕುತ್ತದೆ.
ಈಗ ಶ್ರೀನಿವಾಸನ ವಿಚಾರಕ್ಕೆ ಬರೋಣ.
ಇಲ್ಲಿ ಉಲ್ಲೇಖಗೊಂಡ ಶ್ರೀನಿವಾಸ ನಾಗಪ್ಪನ ಸಹೋದ್ಯೋಗಿಯಲ್ಲ, ಅವನ ಬಾಲ್ಯಗೆಳೆಯ. 'ಚಿಕ್ಕಂದಿನಿಂದಲೂ ತನ್ನ ಪ್ರತಿಸ್ಪರ್ಧಿಯಾಗಿದ್ದ ಶ್ರೀನಿವಾಸ' ಎನ್ನುತ್ತಾನೆ ನಾಗಪ್ಪ. ಕಾದಂಬರಿಯ ಮೊದಲ ಪುಟದಿಂದಲೂ ಈ ಶ್ರೀನಿವಾಸನದು- ನಾಗಪ್ಪನ ಪಾಲಿಗೆ- ಹಂತ ಹಂತವಾಗಿ ಖಳನಾಯಕನಾಗಿ ಬೆಳೆಯುತ್ತ ಹೋಗುವ ಪಾತ್ರ. ನಾಗಪ್ಪನ ಲೆಕ್ಕದಲ್ಲಿ ಇವನೊಂದು ಒಗಟು.
'ಶಿಕಾರಿ' ಕಾದಂಬರಿ ಕುರಿತ ಎಲ್ಲ ನೈತಿಕ ಪ್ರಶ್ನೆಗಳಿಗೆ ಕಾರಣವಾಗುವುದು ಈ ಶ್ರೀನಿವಾಸನ ಪಾತ್ರ, ಹಾಗೂ ಅವನೊಂದಿಗೆ ನಾಗಪ್ಪನ ಸಂಬಂಧ ತಳೆಯುತ್ತ ಹೋಗುವ ವಿವಿಧ ಛಾಯೆಗಳು.
ಅಷ್ಟಕ್ಕೂ ಈ ಶ್ರೀನಿವಾಸ ಎಂಥವನು? 'ಶ್ರೀನಿವಾಸನ ಇಡೀ ಇತಿಹಾಸವನ್ನು ಸ್ವಲ್ಪದರಲ್ಲಿ ಹಿಡಿಯುವುದಾದರೆ ಚಿಕ್ಕಂದಿನಲ್ಲಿ ಬಡತನದಿಂದಾಗಿ ಪಟ್ಟ ಅಪಮಾನಗಳನ್ನೆಲ್ಲ ಮರೆಯಲು ಮಾಡಿದ ಪ್ರಚಂಡ ಹೋರಾಟ. ಅದೊಂದು ದೊಡ್ಡ ಸಾಹಸದ ಕತೆ. ಎಲ್ಲೋ ಒಂದು ಗೊತ್ತಾಗದ ಜಾಗದಲ್ಲಿ, ಗೊತ್ತಾಗದ ರೀತಿಯಲ್ಲಿ ಆತ ನನ್ನನ್ನು ಆಹ್ವಾನಿಸುತ್ತಾನೆ.'
ಕೆಲಸದಿಂದ ಸಸ್ಪೆಂಡ್ ಆಗಿದ್ದ ನಾಗಪ್ಪ, ಅದರ ಹಿಂದುಮುಂದು ಗೊತ್ತಿಲ್ಲದೆ ತಬ್ಬಿಬ್ಬಾಗಿದ್ದ ಅವಧಿಯಲ್ಲಿ, 'ಕಾದಂಬರಿ ಬರೆಯುವುದಕ್ಕಾಗಿ ರಜೆಯಲ್ಲಿದ್ದೇನೆ' ಎಂಬ ನೆಪ ಸೃಷ್ಟಿಸಿಕೊಂಡಿರುವ ಹಂತದಲ್ಲಿ, ನಾಗಪ್ಪನನ್ನು ತನ್ನ ಮನೆಯಲ್ಲೇ ಕೂತು ಕಾದಂಬರಿ ಬರೆಯುವಂತೆ ಆಹ್ವಾನಿಸುವವನು ಇದೇ ಶ್ರೀನಿವಾಸ.
ಅತ್ತ ಆ ಕಾದಂಬರಿಯೋ, ಅದೂ ಶ್ರೀನಿವಾಸನ ಬಗ್ಗೆಯೇ!…
'ನಿನ್ನ ಆಫೀಸು ಗೀಫೀಸು ಎಲ್ಲಾ ಮರೆತುಬಿಟ್ಟು, ಸುಖವಾಗಿ ಇಲ್ಲಿ ಬಂದು ಒಂದು ತಿಂಗಳು ಇದ್ದುಬಿಡು. ಹೇಗಾದರೂ ರಜೆ ತೆಗೆದುಕೊಂಡಿದ್ದೀಯಲ್ಲ. ಮಹಾಬಲೇಶ್ವರ್, ಮಾಥೇರಾನ್ ಅಲ್ಲದಿದ್ದರೂ ಮುಂಬಯಿಯ ಸೆಖೆ ನಿನ್ನನ್ನು ಇಲ್ಲಿ ಬಾಧಿಸದು. ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ- ನನ್ನ ಬಗ್ಗೆ, ಬರೆ ಬರೆ. ಎಂತಹ ಭಿಡೆಯೂ ಬೇಡ. ಅಮ್ಮನ ಬಗ್ಗೆ ನೀನು ಬರೆದದ್ದನ್ನು ಓದಿದೆ- ನೀನೇ ಅದರ ಪತ್ತೆ ಹತ್ತಗೊಡದಿದ್ದರೂ…' ಎಂದು ಆಹ್ವಾನವೀಯುತ್ತಾನೆ ಶ್ರೀನಿವಾಸ. ಆಗ ನಾಗಪ್ಪನೂ 'ಕಳೆದ ಇಪ್ಪತ್ತು ವರ್ಷಗಳಿಗೂ ಮಿಕ್ಕಿದ ಕಾಲದಿಂದ ಅವನ ಬಗ್ಗೆ ತಳೆಯುತ್ತ ಬಂದ, ದ್ವೇಷಕ್ಕೇ ಹತ್ತಿರವಾದ, ಅಸಡ್ಡೆಯನ್ನೂ ಮರೆತು' ಅವನ ಮನೆಗೇ ಹೋಗಿ ಕೂರುತ್ತಾನೆ!
ಈಗ ನಾಗಪ್ಪ ಶ್ರೀನಿವಾಸನ ಬಗ್ಗೆಯೇ ಕಾದಂಬರಿ ಬರೆಯಹೊರಟಿದ್ದಾನೆ, ಅದೂ ಶ್ರೀನಿವಾಸನ ಅಮ್ಮನ ಬಗ್ಗೆ ಕತೆ ಬರೆದು ಪ್ರಕಟಿಸಿ ಆದ ಮೇಲೆ. ಇಲ್ಲಿ ಆ ಕತೆಯ ಚರ್ಚೆ ಮಾಡುವ ಮುನ್ನ ಶ್ರೀನಿವಾಸನ ದೈಹಿಕ ವರ್ಣನೆ ಗಮನಿಸಬೇಕು.
'ರೋಮ ವಿರಲವಾದ ಮೈಯಲ್ಲಿ ಬೊಜ್ಜೇ ತುಂಬಿ ಗಡ್ಡ ಮೀಸೆಗಳು ಕೂಡ ಸರಿಯಾಗಿ ಬೆಳೆಯದೇ ನುಣುಪುನುಣುಪಾಗಿ ತಕತಕಿಸುವ ಈ ಅಂಜುಬುರುಕಾ….'
'ಶುದ್ಧ ದನ!… ಅವನ ಗಿಡ್ಡ ದೇಹಕ್ಕೆ ಶೋಭಿಸದ ಡೊಳ್ಳು ಹೊಟ್ಟೆ, ಗುಂಡುಗುಂಡಾದ ದೇಹದ ಶಿಖರದಲ್ಲಿ ದೊಡ್ಡ ತಲೆ. ಹರವಾದ ಮೂಗು. ದಪ್ಪ ದಪ್ಪ ತುಟಿಗಳು….'
ಅಂತೂ ಶ್ರೀನಿವಾಸನ ದೇಹಸ್ವರೂಪ ವರ್ಣನೆಯ ಮೊದಲ ಹೆಜ್ಜೆಯಿಂದಲೇ ಆತನ ಬಗ್ಗೆ ಓದುಗರಿಗೆ ಅಸಹ್ಯ ಮೂಡಿಸುವುದು ಚಿತ್ತಾಲರ ಉದ್ದೇಶ. ಇನ್ನು ಅವನ ಸ್ವಭಾವ? 'ಶ್ರೀನಿವಾಸನಿಗೆ, ಹಾವಿನಂತೆ ಹಗೆ ಕಾಯುವ ಛಲದ ಗುಣ ಅವನ ತಾಯಿಯಿಂದ ಬಂದದ್ದು. ನಾಗಪ್ಪ ಅವನ ತಾಯಿಯನ್ನು ಕುರಿತು ಬರೆದ ಕತೆ ಈ ಛಲವನ್ನು ಅರಿಯುವುದರ ಸಲುವಾಗಿಯೇ ಬರೆದದ್ದಾಗಿತ್ತು'- ಎಂಬುದು ಲೇಖಕರು ನೀಡುವ ಸಮರ್ಥನೆ.
ಇರಲಿ. ಶ್ರೀನಿವಾಸನ ಬಣ್ಣನೆ ಹೀಗಾದರೆ ಇನ್ನು ಅವನ ಅಮ್ಮ? ಅದರಲ್ಲಿ ಚಿತ್ತಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಾ ಭೀಭತ್ಸ ಚಿತ್ರಣವನ್ನೇ ನೀಡುತ್ತಾರೆ!…
ಶ್ರೀನಿವಾಸನ ತಾಯಿ ಪದ್ದಕ್ಕ…. 'ಈವರೆಗೂ ಅನುಭವಕ್ಕೆ ಬಂದಿರದ, ವಿಕಾಸವಾದದ ವಿದ್ಯಾರ್ಥಿಯಾಗಿಯೂ ಈವರೆಗೂ ಓದಿ ಕೂಡ ಗೊತ್ತಿರದ ಒಂದು ವಿಚಿತ್ರ ಪ್ರಾಣಿ ಧುತ್ ಎಂದು ಕಣ್ಣಮುಂದೆ ನಿಂತುಬಿಟ್ಟಿದೆ ಎಂಬಂತಹ ಅನ್ನಿಸಿಕೆಗೆ ನಾಗಪ್ಪ ಹೆದರಲಿಲ್ಲ. ಹೆದರಿದ್ದು- ಈ ಬಗೆಯಾಗಿ ತೋರುವ ಈ ಆಕೃತಿ ಪದ್ದಕ್ಕನೇ ಎಂದು ಖಾತರಿಯಾದದ್ದಕ್ಕೆ; ಕೆಂಪು ಸೀರೆ ಸುತ್ತಿಕೊಂಡ ದೇಹ ಮುದುಡಿ ಮುದ್ದೆಯಾಗಿ ಎರಡು ಕೈಗಳಂತಹ, ಎರಡು ಕಾಲುಗಳಂತಹ ಅವಯವಗಳು ಸೀರೆಯಿಂದ ಹೊರಗೆ ಚಾಚಿದ ಕಾರಣದಿಂದಲೇ ಇದು ಮನುಷ್ಯ ದೇಹವಿರಬಹುದೆಂಬ ಸಂದೇಹ ಹುಟ್ಟಿಸುವಂತಿತ್ತು. ತಲೆಯಿರುವ ಜಾಗದಲ್ಲಿಯ ಬೋಳು ಬೋಳಾದ ಗೋಲಾಕೃತಿಯನ್ನು ಸೀರೆಯ ಸೆರಗು ಸಂಪೂರ್ಣವಾಗಿ ಮುಚ್ಚಿತ್ತು. ಮುಂದಿನ ತೆರೆದಿದ್ದ ಜಾಗದಲ್ಲಿ ಒಂದು ಹೆಣ್ಣಿನ ಮೂಗು ಆಗಿರಬಹುದಾದ, ಕಣ್ಣುಗಳಾಗಿರಬಹುದಾದ ಅವಯವಗಳ ಅವಶೇಷಗಳಂತಹ ಕುರುಹುಗಳು. ಬಾಯಿಯಂತಹ ದೊಡ್ಡ ತೂತಿನಲ್ಲಿ ಹಲ್ಲುಗಳಂತೆ ತೋರುವ ನಾಲ್ಕೈದು ಕಪ್ಪುಗಟ್ಟಿದ ತುಂಡುಗಳು…. ತೀರ ಸ್ಪಷ್ಟವಾಗಿ ದೃಷ್ಟಿಗೋಚರವಾದುದರ ಈ ಭೀಭತ್ಸ ವಾಸ್ತವತೆಯಿಂದ ಅರ್ಜುನ್‍ರಾವರ ಮನೆಯಲ್ಲಿ ನಾಸ್ತಾ ಮಾಡಿದ್ದೆಲ್ಲ ಹೊರಗೆ ಬರುವ ಭಯ…'
ಈ 'ಭೀಭತ್ಸ ಅಕೃತಿ' ಕುರಿತು ನಾಗಪ್ಪ ಈ ಹಿಂದೆಯೇ ಕತೆ ಬರೆದು ಪ್ರಕಟಿಸಿದ್ದಾನೆ. ಆ ಕತೆಯ ತಿರುಳೇನು ಎಂಬ ಬಗ್ಗೆ ಕಾದಂಬರಿಯಲ್ಲಿ ಅಷ್ಟು ವಿವರಗಳಿಲ್ಲ. ಆದರೆ- 'ನಡೆದದ್ದನ್ನೆಲ್ಲ ಹೆಸರೂ ಬದಲಿಸದೆ ಬರೆದದ್ದನ್ನು' ಒಂದು ಹಂತದಲ್ಲಿ ನಾಗಪ್ಪನೇ ಹೊರಗೆಡಹುತ್ತಾನೆ! ಸಹಜವಾಗಿಯೇ ಇದು ಶ್ರೀನಿವಾಸನನ್ನು ಕೆರಳಿಸಿದೆ. 'ಅವನ ಅಮ್ಮನ ಬಗ್ಗೆ ತಾನು ಬರೆದ ಕತೆ ಓದಿದ ದಿನ ಸಿಟ್ಟಿನಿಂದ ಧಿಮಿಧಿಮಿ ಕುಣಿದುಬಿಟ್ಟಿದ್ದನೆಂದು ಸೀತಾರಾಮನಿಂದ ತಿಳಿದಿತ್ತು' ಎಂದೂ ದಾಖಲಿಸುತ್ತಾನೆ ನಾಗಪ್ಪ.
ನಾಗಪ್ಪ ಬರೆದ ಆ ಕತೆಯ ಹಿಂದಿನ ನೈತಿಕ ಪ್ರಶ್ನೆಗಳನ್ನು ಅವಲೋಕಿಸುವ ಮುನ್ನ ಅವನೀಗ ಬರೆಯಹೊರಟಿರುವ ಕಾದಂಬರಿಯ ಪ್ರವರವೂ ಓದುಗರ ಗಮನಕ್ಕೆ ಬರಬೇಕು.
ಶ್ರಿನಿವಾಸನೇನೋ ಇದು ತನ್ನ ಬಗ್ಗೆಯೇ ಬರೆಯುತ್ತಿರುವ ಕಾದಂಬರಿ ಅಂದುಕೊಂಡಿದ್ದಾನೆ. ನಾಗಪ್ಪನಿಗೂ ಅದು ಗೊತ್ತಿಲ್ಲದ್ದೇನಲ್ಲ- 'ಇದು ತನ್ನ ಬಗ್ಗೆ ನಾನು ಬರೆಯುತ್ತಿದ್ದ ಕಾದಂಬರಿಯೆಂದು ತಿಳಿದೇ ಹೆದರಿದ್ದಾನೆ- ನಾಡೂ ಮಾಸ್ಕೇರಿಯ ಪದ್ಮನಾಭ ಕೇಣಿಗಳ ಜ್ಯೇಷ್ಠ ಚಿರಂಜೀವನಾದ ಶ್ರೀನಿವಾಸ!' ಎಂದು ನಾಗಪ್ಪ ತನ್ನೊಳಗೇ ಉದ್ಗರಿಸಿಕೊಳ್ಳುತ್ತಾನೆ.
ಜೊತೆಗೆ ಶ್ರೀನಿವಾಸನ ಅನುಮಾನಕ್ಕೆ ಪುಷ್ಟಿ ನೀಡುವ ಸಂಗತಿಗಳೂ ಸಾಕಷ್ಟಿವೆ. ಸ್ವತಃ ಶ್ರೀನಿವಾಸ ಖುದ್ದು ನಾಗಪ್ಪನ ಬಳಿ 'ಹೊಸ ಕಾದಂಬರಿಯನ್ನೇನೋ ಬರೆಯಲು ಹಿಡಿದಿದ್ದೀಯಂತಲ್ಲ- ನನ್ನ ಬಗ್ಗೆ, ಬರೆ ಬರೆ. ಎಂತಹ ಭಿಡೆಯೂ ಬೇಡ' ಎಂದಾಗ ನಾಗಪ್ಪ ಅದನ್ನೇನೂ ಅಲ್ಲಗಳೆದಿಲ್ಲ. ಜೊತೆಗೆ ಹೋಟೆಲ್ ಮಾಲೀಕ ನಾಯಕ್ ನಾಗಪ್ಪನನ್ನು ಕೇಳುತ್ತಾನೆ- "ಶ್ರೀನಿವಾಸನ ಬಗ್ಗೆ ನೀನೇನೋ ಕಾದಂಬರಿ ಬರೆಯಲು ಹಿಡಿದಿದ್ದೀಯಂತೆ. ನಿನ್ನ ಗೆಳೆಯ ಸೀತಾರಾಮ ಎಲ್ಲ ಕಡೆಯಲ್ಲಿ ಸುದ್ದಿ ಹಬ್ಬಿಸಿದ್ದಾನೆ. ಶ್ರೀನಿವಾಸನಿಗೆ ಇದು ಗೊತ್ತಾಗಿದೆ. ಆದರೆ ಅದಕ್ಕೆ ಅವನು ಹೆದರಿಕೊಂಡಿಲ್ಲ. 'ಬರೆಯಲಿ, ಯಾವ ಭಿಡೆಯೂ ಬೇಡ. ನನ್ನ ಮನೆಯಲ್ಲೇ ಕೂತು ಬರೆ' ಎಂದು ಅವನೇ ನಿನಗೆ ಸೂಚಿಸಿದ್ದನಂತೆ. ಹೌದೆ? ಶ್ರೀನಿವಾಸನೇ ಹೇಳಿದ್ದು…" ಇದಕ್ಕೆ ನಾಗಪ್ಪ ಕೊಡುವ ಉತ್ತರವೂ ಶ್ರೀನಿವಾಸನ ಅನುಮಾನಕ್ಕೆ ಮತ್ತಷ್ಟು ತುಪ್ಪ ಸುರಿಯುವಂತೆಯೇ ಇದೆ-
"ನನ್ನ ಕಾದಂಬರಿಯಲ್ಲಿ ಬರುವ ಅವನ ಪೂರ್ವೇತಿಹಾಸವನ್ನು ಇದಿರಿಸಲು ಮಾತ್ರ ಬೆನ್ನೆಲುಬಿಗೆ ತಾಕತ್ತು ಬರಲು ದಿನವೂ ಚಂಪೀ ಮಾಡಿಕೊಳ್ಳಲು ಹೇಳು" ಅಷ್ಟೇ ಅಲ್ಲ, 'ನಾಗಪ್ಪನ ಮಾತಿನಲ್ಲಿ ಅವನೇ ಬಯಸಿರದ ನಿಷ್ಠುರ ಸೇರಿಕೊಂಡಿತ್ತು' ಎಂಬುದು ಲೇಖಕರ ಷರಾ….
ಹೌದು, ಶ್ರೀನಿವಾಸನ ಬಗ್ಗೆ ನಾಗಪ್ಪ ಬರೆಯಹೊರಟಿರುವ ಈ ಕಾದಂಬರಿಯ ತಿರುಳೇನು?
ಮೊದಲ ಓದಿಗೆ ಬೆರಗು ಹುಟ್ಟಿಸಿದ್ದ ಶಿಕಾರಿಯನ್ನು ಮತ್ತೆ, ಮತ್ತೆ ಓದಿದಾಗ ನಾಗಪ್ಪ ಅಪಾರ ಆತ್ಮಮರುಕವುಳ್ಳವನಾಗಿಯೇ ಕಾಣುತ್ತಾನೆ. ನನಗೆ ಗೊತ್ತಿದ್ದ ಹಾಗೆ 'ಶಿಕಾರಿ' ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಒಡೆದು ಹೇಳಿದ ಕನ್ನಡದ ಮೊದಲ ಕಾದಂಬರಿ. ಈಗ ಕಾರ್ಪೊರೇಟ್ ಜಗತ್ತು ಇಷ್ಟು ಬೆಳೆದಿದೆ, ಆ ಜಗತ್ತಿನಿಂದಲೇ ಬಂದ ಬರಹಗಾರರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ. ಆದರೆ ಚಿತ್ತಾಲರಷ್ಟು ತೀವ್ರವಾಗಿ ಆ ಲೋಕದ ತಳಮಳಗಳನ್ನು ಕಟ್ಟಿಕೊಡುವ ಕಾದಂಬರಿ ಕನ್ನಡದಲ್ಲಿ ಇನ್ನೊಂದಿಲ್ಲ. ಏಕಕಾಲಕ್ಕೆ ಪತ್ತೇದಾರಿ ಕಾದಂಬರಿಯಾಗಿಯೂ, ಮನೋವಿಶ್ಲೇಷಣಾ ಕಾದಂಬರಿಯಾಗಿಯೂ ಶಿಕಾರಿ ಕಾಣುತ್ತದೆ. ಬದುಕನ್ನು ಹುಡುಕಿಕೊಂಡು ಹನೇಹಳ್ಳಿಯಿಂದ ಮುಂಬೈಗೆ ಬರುವ ನಾಗಪ್ಪ ಬೆನ್ನಿಗೆ ಆತ್ಮಘಾತುಕತೆಯನ್ನು, ಎದೆಯ ಮೇಲೆ ಅದರ ನಿಶಾನಿಯನ್ನೂ ಹೊತ್ತುಬಂದಿರುತ್ತಾನೆ.
ಶಿಕಾರಿಯಲ್ಲಿ ಒಂದು ಸಲವೂ ಎದುರಾಗದೆ ಕೇವಲ ತನ್ನ ಇರುವಿಕೆಯಿಂದಲೇ ನಾಗಪ್ಪನ ಬದುಕನ್ನು ಸಹನೀಯಗೊಳಿಸುವವಳು ರಾಣಿ. ತನ್ನ ಚಿಕ್ಕ ಚಿಕ್ಕ ಕಣ್ಣುಗಳಲ್ಲಿ, ಕೆನ್ನೆಗಳ ನಗುವಿನಲ್ಲಿ, ಅವನು ಇರುವಂತೆ ಅವನನ್ನು ಒಪ್ಪಿಕೊಳ್ಳಬಲ್ಲ, ತನ್ನ ಪ್ರೇಮದಲ್ಲಿ ಅವನೆದೆಯ ಒಳಗಿನ ಬೆಂಕಿಯನ್ನು ತಂಪಾಗಿಸಬಲ್ಲ ರಾಣಿ. ಆದರೆ ಅವಳನ್ನು ನೋಡಹೋಗಲು ನಾಗಪ್ಪನಿಗೆ ಕಡೆಯವರೆಗೂ ಬಿಡುವಾಗುವುದೇ ಇಲ್ಲ. ಮೇರಿಯ ಒಂದು ಕರೆ, ನೆರೆಮನೆಯ ಜಾನಕಿಯ ಒಂದು ನೋಟ, ರೀನಾಳ ಜೊತೆಯಲ್ಲಿ ಕಳೆದ ಘಳಿಗೆಗಳು, ಡಯಾನಾಳ ಸಾಮಿಪ್ಯ, ಥ್ರೀಟಿಯ ಸ್ಪರ್ಶ ಎಲ್ಲಕ್ಕೂ ಹಂಬಲಿಸುವ ನಾಗಪ್ಪ ರಾಣಿಯೆಡೆಗೆ ಮಾತ್ರ ಇನ್ನಿಲ್ಲದ ಉದಾಸೀನತೆಯನ್ನು ತೋರಿಸುತ್ತಾನೆ. ಅವಳಿಗೆ ಕಳಿಸುವ ೨೦೦ ರೂಗಳ ಮನಿಆರ್ಡರ್ ಅವಳೆಡೆಗಿನ ತನ್ನ ಕರ್ತವ್ಯವನ್ನು ತೀರಿಸುತ್ತದೆ ಎಂದು ತಿಳಿದುಕೊಂಡಿರುತ್ತಾನೆ. ನಾಗಪ್ಪನ ದುರಂತ ಮತ್ತು ಕೆಡುಕು ಇರುವುದು ಇಲ್ಲಿ. ತನ್ನ ಸುತ್ತಲೂ ಶಿಕಾರಿಗೆ ನಿಂತ ಎಲ್ಲರೆಡೆಗೂ ಸಹಾಯಕ್ಕಾಗಿ ಕೈಚಾಚುವ ನಾಗಪ್ಪ, ಎಲ್ಲರನ್ನೂ ಕ್ರೂರಿಗಳು ಎಂದು ತೀರ್ಮಾನಿಸುವ ನಾಗಪ್ಪ ರಾಣಿಯೆಡೆಗೆ ತಾನೂ ಸಹ ಅಷ್ಟೇ ಕ್ರೂರಿಯಾಗಿದ್ದೆ ಎಂದು ಅರ್ಥ ಮಾಡಿಕೊಳ್ಳುವುದೇ ಇಲ್ಲ.
ಪ್ರಧಾನಿ ಮೋದಿ ಟೀಂ ಕಂಗಾಲಾಗಿಸಿದ ಗುಪ್ತಚರ ವರದಿ..! | Digital Kannada
Home ರಾಜಕೀಯ ಪ್ರಧಾನಿ ಮೋದಿ ಟೀಂ ಕಂಗಾಲಾಗಿಸಿದ ಗುಪ್ತಚರ ವರದಿ..!
ಪ್ರಧಾನಿ ಮೋದಿ ಟೀಂ ಕಂಗಾಲಾಗಿಸಿದ ಗುಪ್ತಚರ ವರದಿ..!
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದು, ಬಿಜೆಪಿ ಒಂದು ಹೆಜ್ಜೆ ಮುಂದಿಟ್ಟಿದೆ. ಚುನಾವಣಾ ಘೋಷಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣಾ ಪ್ರಚಾರ ಶುರುವಾಗಲಿದೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಮಹತ್ಚದ ಸಭೆ ನಡೆಸಿದ್ದು ಚುನಾವಣಾ ತಂತ್ರಗಾರಿಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಚುನಾವಣಾ ಪ್ರವಾಸದ ಉಸ್ತುವಾರಿ ಹಾಗೂ ಯಶಸ್ಸಿನ ಬಗ್ಗೆ ಚರ್ಚೆ ನಡೆಸಿದ್ದಾರೆ.
ಲೋಕಸಭಾ ‌ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಹೊಂದಿದ್ದು, ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಗಳನ್ನಾಗಿ ಮಾಡಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ರು. ಜೊತೆಗೆ ಫೆಬ್ರವರಿ 10ರಂದು ಹುಬ್ಬಳ್ಳಿಯಲ್ಲಿ ನಡೆಯುವ ಬೃಹತ ಸಮಾವೇಶದ ಮೂಲಕ ಕರ್ನಾಟಕದಲ್ಲಿ ಮೋದಿ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ ಎಂದ ಯಡಿಯೂರಪ್ಪ, ಫೆಬ್ರವರಿ 19 ಹಾಗೂ 27ಕ್ಕೂ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಫೆಬ್ರವರಿ ‌14 ಹಾಗೂ 21ರಂದು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಮೋದಿ ಹಲೆಯಲ್ಲಿ ಗೆದ್ದು ಬರುತ್ತೇವೆ ಎನ್ನುತ್ತಿದ್ದ ಕೆಲವರು ಈ ಬಾರಿ ಗೆಲುವು ಸಾಧಿಸುವುದು ಕಷ್ಟ. ಹಾಗಾಗಿ ಕಲವು ಹಾಲಿ ಸಂಸದರಿಗೆ ಟಿಕೆಟ್​ ಸಿಗೋದು ಡೌಟ್​ ಎನ್ನುತ್ತಿದ್ದಾರೆ. ಹಾಲಿ ಸಂಸದರಿಗೆ ಟಿಕೆಟ್ ಸಿಗದೇ ಇರಲು ಮತ್ತೊಂದು ಕಾರಣವಿದೆ. ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿ ಸೋಲಿನ ಭೀತಿ ಎದುರಾಗಿದೆ. ಅದೇ ಕಾರಣಕ್ಕಾಗಿ ಈಗಾಗಲೇ ಎರಡು ಮೂರು ಬಾರಿ ಗೆದ್ದಿದ್ದರೂ ಜನ ಸಂಪರ್ಕ ಕಡಿಮೆ ಇದ್ದು, ಜನಾಭಿಪ್ರಾಯ ಸಂಸದರ ವಿರುದ್ಧ ಇರುವ ಕ್ಷೇತ್ರದಲ್ಲಿ ಹೊಸ ಮುಖ ಪರಿಚಯಿಸುವ ಮೂಲಕ ಸ್ಥಾನ ಉಳಿಸಿಕೊಳ್ಳಲು ತಂತ್ರಗಾರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ಕೂಡ ಸಿಕ್ಕಿದ್ದು, ಈ ಬಾರಿ‌ ಅತಂತ್ರ ಲೋಕಸಭೆ ಹೊರಹೊಮ್ಮಲಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಂಡ್ ಟೀಂ ಕಾಲಿಗೆ ಚಕ್ರ ಕಟ್ಟಿಕೊಂಡ ಹಾಗೆ ದೇಶ ಪರ್ಯಾಟನೆ ಕೈಗೊಂಡಿದ್ದು, ಚುನಾವಣೆ ಘೋಷಣೆಗೂ ಮುನ್ನವೇ ಪ್ರಚಾರ ಆರಂಭಿಸಿದೆ. ಮೊನ್ನೆ ಗುಜರಾತ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಅತಂತ್ರ ಲೋಕಸಭೆ ಎದುರಾಗದಂತೆ ನೋಡಿಕೊಳ್ಳಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು. ಒಂದು ವೇಳೆ ಅತಂತ್ರ ಲೊಕಸಭೆ ಎದುರಾಗಿ ಯಾರೋ ಒಬ್ಬರು ಪ್ರಧಾನಿ ಆದರೂ ದಕ್ಷ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಣ ಅಮಿತ್ ಶಾ, ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ದಿನಕ್ಕೊಬ್ಬರು ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ. ಅದೇನೆ ಇರಲಿ ಗುಪ್ತಚರ ಇಲಾಖೆ ವರದಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ತಲೆ ಕೆಡಿಸಿದೆ ಅನ್ನೋದು ಸತ್ಯ.
ವಾರಾಂತ್ಯ ಕರ್ಫ್ಯೂ ಅಸಾಂವಿಧಾನಿಕ- ಅವೈಜ್ಞಾನಿಕ- ಬಿಪಿನ್‌ ಚಂದ್ರ ಪಾಲ್‌ - News Karkala
Homeಸ್ಥಳೀಯ ಸುದ್ದಿವಾರಾಂತ್ಯ ಕರ್ಫ್ಯೂ ಅಸಾಂವಿಧಾನಿಕ- ಅವೈಜ್ಞಾನಿಕ- ಬಿಪಿನ್‌ ಚಂದ್ರ ಪಾಲ್‌
ವಾರಾಂತ್ಯ ಕರ್ಫ್ಯೂ ಅಸಾಂವಿಧಾನಿಕ- ಅವೈಜ್ಞಾನಿಕ- ಬಿಪಿನ್‌ ಚಂದ್ರ ಪಾಲ್‌
ಜನತೆ ಸಹಿಸಿಕೊಳ್ಳಲು ಸಾಧ್ಯವಿಲ್ಲ
ಕಾರ್ಕಳ : ರಾಜ್ಯ ಸರಕಾರ ಜಿಲ್ಲಾಡಳಿತಗಳ ಮೂಲಕ ಹೇರುತ್ತಿರುವ ವಾರಾಂತ್ಯ ಕರ್ಫ್ಯೂ ಅಸಾಂವಿಧಾನಿಕ ಮತ್ತು ಅವೈಜ್ಞಾನಿಕ. ಜಿಲ್ಲಾಡಳಿತಗಳ ಸ್ವೇಚ್ಛಾಚಾರದ ಆಡಳಿತಕ್ಕೆ ಇಂಬು ಕೊಡುವ ಈ ಆದೇಶ ಬಡವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸರಕಾರ ಕೂಡಲೇ ಈ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್‌ ಚಂದ್ರ ಪಾಲ್‌ ಅಭಿಪ್ರಾಯಪಟ್ಟರು.
ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ. ತನ್ನದೇ ಸರಕಾರದ ಭಂಡ ಧೈರ್ಯದೊಂದಿಗೆ ನಡೆಯುವ ಜನಾಶೀರ್ವಾದ ಮೆರವಣಿಗೆ, ನೂತನ ಮಂತ್ರಿಗಳ ಸ್ವಾಗತ ಸಂಭ್ರಮಾಚರಣೆಗೆ ಸಹಸ್ರ ಸಂಖ್ಯೆಯ ಜನ ಸೇರುವಾಗ ಇಲ್ಲದ ಕೋವಿಡ್ ನಿಬಂಧನೆಗಳನ್ನು, ವಾರಾಂತ್ಯ ಕರ್ಫ್ಯೂ ಹೆಸರಲ್ಲಿ ದೈನಂದಿನ ದುಡಿಮೆಯಲ್ಲಿಯೇ ಬದುಕು ಸಾಗಿಸುತ್ತಿರುವ ರೀಕ್ಷಾ, ಟಾಕ್ಸೀ, ಬಸ್ ಚಾಲಕ ಮಾಲಕರು, ಹೊಟೇಲ್, ಗೂಡಂಗಡಿದಾರರು, ಸೆಲೂನ್ ಬ್ಯೂಟಿ ಪಾರ್ಲರುಗಳು ಹಾಗೂ ಬಟ್ಟೆ ಅಂಗಡಿ ಮೊದಲಾದ ಸಮಾಜದ ದೈನಂದಿನ ಅವಶ್ಯಕತೆಗಳಿಗೆ ಸ್ಪಂದಿಸುವ ಕಸುಬುದಾರರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ಹೇರಿ, ದಿನದ ಸಂಪಾದನೆಗೆ ಕೊಕ್ಕೆ ಹಾಕಿಲಾಗುತ್ತಿದೆ. ಅವರ ಬದುಕು ಕಸಿದುಕೊಳ್ಳುತ್ತಿರುವುದು ಖಂಡನೀಯ. ಇದು ಜನಸಾಮಾನ್ಯರಿಗೆ ಇರುವ ಸಂವಿಧಾನದತ್ತ ಹಕ್ಕಿನ ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ. ಜನತೆ ಇದನ್ನು ಹೆಚ್ಚು ಸಮಯ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಪಿನ್‌ಚಂದ್ರ ಪಾಲ್‌ ಹೇಳಿಕೆಯಲ್ಲಿ ತಿಳಿಸಿದರು.
ಪೂರ್ವಾಪರ ಯೋಚನೆ ಇಲ್ಲ
ಸರಕಾರ ಕೊರೋನಾದೊಂದಿಗೆ ಬದುಕಲು ಕಲಿಯಿರಿ ಎಂದು ಹೇಳುತ್ತಲೇ ಇಂತಹ ಅಪಸವ್ಯದ ಆದೇಶಗಳನ್ನು ಪೂರ್ವಾಪರ ದೂರಾಲೋಚನೆ ಇಲ್ಲದೆ ಜಾರಿಗೊಳಿಸುತ್ತಿರುವುದು ಖಂಡನೀಯ. ಈ ಬಗ್ಗೆ ಸರಕಾರಕ್ಕೆ ಮಾಹಿತಿ ಕೊರತೆಯಿದೆ. ಉಡುಪಿ ಜಿಲ್ಲೆಯಲ್ಲಿ ಕೊರೋನಾ 150ರ ಆಸುಪಾಸಿನಲ್ಲಿದ್ದು, ಜಿಲ್ಲೆಗೆ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮಾನ್ಯ ಜಿಲ್ಲಾಧಿಕಾರಿಯವರು ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಿಸಿ, ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದು ಒಳಿತು ಎಂದವರು ತಿಳಿಸಿದ್ದಾರೆ.
ಕೊರೊನಾವೈರಸ್ ಮೂಲವನ್ನು ಪತ್ತೆಹಚ್ಚಲು ಚೀನಾದ ವುಹಾನ್‌ಗೆ ಆಗಮಿಸಿದ WHO ತಜ್ಞರ ತಂಡ | WHO Team Of 10 International Experts Arrives In Wuhan, China: Team Will Investigate The Origins Of Covid-19 - Kannada Oneindia
3 min ago ಅರ್ನಬ್ ವಾಟ್ಸಾಪ್ ಚಾಟ್ ಸೋರಿಕೆ: ಸರ್ಕಾರದ ಮೌನದ ಕುರಿತು ಸೋನಿಯಾ ಗಾಂಧಿ ತರಾಟೆ
13 min ago Union Budget 2021: ಇತಿಹಾಸದಲ್ಲೇ ಮೊದಲ ಬಾರಿ "ಕಾಗದರಹಿತ ಬಜೆಟ್"
16 min ago ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?
| Published: Thursday, January 14, 2021, 13:03 [IST]
ವುಹಾನ್, ಜನವರಿ 14: ವಿಶ್ವವನ್ನೇ ನಲುಗಿಸಿಬಿಟ್ಟ ಕೊರೊನಾವೈರಸ್ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತು. ಕೋಟ್ಯಾಂತರ ಜನರನ್ನು ಬೀದಿಗೆ ತಂದಿತು. ನೂರಾರು ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿತು. ಇಂತಹ ಕೊರೊನಾವೈರಸ್ ಮೊದಲು ಪತ್ತೆಯಾದ ಚೀನಾದ ವುಹಾನ್‌ಗೆ ಇಂದು ಗುರುವಾರ ವಿಶ್ವ ಆರೋಗ್ಯ ಸಂಸ್ಥೆ (WHO) ತಜ್ಞರ ತಂಡ ಆಗಮಿಸಿದೆ.