text
stringlengths
0
61.5k
b) ಲೋ ಷಟರ್ ಸ್ಪೀಡ್(ಷಟರ್ ವೇಗ 30ಕ್ಕಿಂತ ಕಡಿಮೆ)
ಉದಾಹರಣೆಗೆ ಹಾರುತ್ತಿರುವ ಪಕ್ಷಿಯ ರೆಕ್ಕೆಗಳ ಬಡಿತ, ರೆಕ್ಕೆಯಲ್ಲಿರುವ ಚಿಕ್ಕ ಮತ್ತು ಉದ್ದನೆಯ ಗರಿಗಳ ವಿನ್ಯಾಸ, ಅದರ ಮೇಲೆ ಬಿದ್ದಿರುವ ಬೆಳಕು ಇತ್ಯಾದಿ ಸೂಕ್ಷ್ಮಗಳನ್ನೆಲ್ಲ ಚಿತ್ರದಲ್ಲಿ ಸ್ಥಿರವಾಗಿ ತೋರುವುದಾದರೆ ಹಾಗೂ ರೈಲು, ಬಸ್ಸಿನಲ್ಲಿ ಪ್ರಯಾಣಿಸುವಾಗ ಹೊರಗಿನ ದೃಶ್ಯಗಳು ಬ್ಲರ್ ಆಗದಂತೆ ಚಿತ್ರಿಸಬೇಕೆಂದರೆ ಷಟರ್ ವೇಗ ( ಸುಮಾರು 1000ಕ್ಕಿಂತ ಹೆಚ್ಚು) ಜಾಸ್ತಿ ಇಟ್ಟಿರಬೇಕು. ಲೋ ಷಟರ್ ಸ್ಪೀಡ್ ಮೂಲಕ ಕ್ಯಾಮರಾದೊಳಗೆ ಹೆಚ್ಚು ಬೆಳಕು ಬರುವಂತೆ ಮಾಡಿಕೊಳ್ಳಬಹುದು. ಉದಾಹರಣೆಗೆ, ಜಲಪಾತದ ಹರಿವ ನೀರು ಲೋ ಷಟರ್ ಸ್ಪೀಡ್‌ನ ಸಹಾಯದಿಂದ ತೆಳುವಾದ ಪರದೆಯೊಂದು ಬಂಡೆಗಳ ಮೇಲೆ ಇಳಿಬಿಟ್ಟಂತೆ ಚಿತ್ರಿಸಬಹುದು. ಆಗ ನೀರು ಬೀಳುವ ರಭಸ ಹೆಚ್ಚಿದಂತೆಲ್ಲ ಜಲಪಾತದ ಸೌಂದರ್ಯ ಇನ್ನಷ್ಟು ಮೆರಗು ತುಂಬಿ ಕಂಗೊಳಿಸಿದಂತೆ ಕಾಣುತ್ತದೆ. ಓಡುತ್ತಿರುವ ಜಿಂಕೆಗಳ ಹಿಂಡು ಆಗಿರಬಹುದು, ಒಮ್ಮೆಲೇ ಗುಂಪಿನಲ್ಲಿ ಮೇಲೆದ್ದು ಹಾರುವ ಪಕ್ಷಿಗಳೇ ಆಗಿರಬಹುದು -ಓಡುವ ಮತ್ತು ಹಾರುವ ರೀತಿಯ ಚಲನೆಯನ್ನು ಚಿತ್ರದಲ್ಲಿ ಎಳೆದಂತೆ ಕಾಣಿಸಬಹುದು.
ತಾಂತ್ರಿಕವಾಗಿ ಹೇಳುವುದಾದರೆ ಕ್ಯಾಮರಾದೊಳಗೆ ಪುಟ್ಟ ಕನ್ನಡಿ (mirror) ಯೊಂದು ಇರುತ್ತದೆ. (ಈಗ ಮಿರರ್‌ಲೆಸ್ ಕ್ಯಾಮರಾಗಳ ಯುಗ ಪ್ರಾರಂಭವಾಗಿದೆ-ಅದು ಬೇರೆ ವಿಚಾರ) ಪ್ರತಿ ಚಿತ್ರ ಕ್ಲಿಕ್ಕಿಸಿದಾಗಲೂ ಅದನ್ನು ದಾಖಲಿಸಿಕೊಳ್ಳಲು ಆ ಕನ್ನಡಿಯು ಕ್ಷಣಾರ್ಧದಲ್ಲಿ ತೆರೆದು ಮುಚ್ಚಿಕೊಳ್ಳುತ್ತದೆ. ಆಗ ಬೆಳಕಿನ ಪ್ರತಿಬಿಂಬ ಕ್ಯಾಮರಾದ ಒಳಗಿನ ಸೆನ್ಸರ್ ಒಂದು Image ಆಗಿ ದಾಖಲಿಸಿಕೊಳ್ಳುತ್ತದೆ. ಷಟರ್ ವೇಗವನ್ನು ಹೆಚ್ಚು ಅಥವಾ ಕಡಿಮೆ ಮಾಡಿದಂತೆ ಈ ಮೇಲೆ ಹೇಳಿದ ರೀತಿಯಲ್ಲಿ ಅದು ಬೆಳಕನ್ನು ಸನ್ಸರ್ ಗ್ರಹಿಸುತ್ತದೆ. ಮುಂದಿನ ವಾರ ಅಪರ್ಚರ್ ಮತ್ತು ಐಎಸ್‌ಒ ಕುರಿತ ಮಾಹಿತಿ ಹಂಚಿಕೊಳ್ಳೋಣ.
ಪ್ರತಿ ವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ | Udayavani – ಉದಯವಾಣಿ
ದೊಡ್ಡ ಗಾತ್ರದ ಹೊಂಡ-ಗುಂಡಿಗಳಿಂದ ಸಂಚಾರಕ್ಕೆ ತೊಡಕು
Team Udayavani, Sep 23, 2019, 5:25 AM IST
ದರ್ಬೆ: ನಗರದ ಮುಖ್ಯ ರಸ್ತೆಯ ದರ್ಬೆ ಸರ್ಕಲ್‌ ಬಳಿ ಪ್ರತಿ ವರ್ಷದಂತೆ ಈ ಬಾರಿಯೂ ಎರಡು ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ.
ಸುಳ್ಯ ಭಾಗದಿಂದ ಪುತ್ತೂರು ನಗರಕ್ಕೆ ಸಂಪರ್ಕಿಸುವ ದ್ವಿಪಥ ರಸ್ತೆಯ ಒಂದು ಭಾಗದಲ್ಲಿ ಎರಡು ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಕಳೆದ ಎರಡು ವಾರಗಳ ಹಿಂದೆ ಈ ಹೊಂಡ ನಿರ್ಮಾಣ ವಾಗಿದ್ದರೂ ಯಾರೋ ಅಪಾಯ ವನ್ನು ಸೂಚಿಸಲು ಬ್ಯಾರಿಕೇಡ್‌ಗಳನ್ನು ತಂದಿರಿಸಿದ್ದು ಬಿಟ್ಟರೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.
ಈ ಭಾಗದಲ್ಲಿ ಮೂರು ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಪ್ರತಿ ಬಾರಿಯೂ ಹೊಂಡ ನಿರ್ಮಾಣವಾಗುತ್ತದೆ. ಸಾರ್ವಜನಿಕ ಮನವಿಯ ಬಳಿಕ ಸ್ಥಳೀಯಾಡಳಿತ ತಾತ್ಕಾಲಿಕ ದುರಸ್ತಿ ಮಾಡುತ್ತದೆ. ಮುಂದಿನ ವರ್ಷಕ್ಕೆ ಮತ್ತೆ ಅದೇ ಸಂಕಟ ಎದುರಾಗುತ್ತದೆ.
ಎರಡೂ ಹೊಂಡಗಳಿಗೆ ಲಿಂಕ್‌ ಇರುವಂತೆ ಒಳಭಾಗದಲ್ಲಿ ದೊಡ್ಡ ಪ್ರಮಾಣದ ಕುಸಿತ ಉಂಟಾಗಿದೆ. ಘನ ವಾಹನಗಳೂ ಸಂಚರಿಸುವುದರಿಂದ ಈ ಕುಸಿತ ಅಧಿಕವಾಗುವ ಅಪಾಯವಿದೆ. ಪ್ರಸ್ತುತ ಬ್ಯಾರಿಕೇಡ್‌ ಅಳವಡಿಸಿ ರಸ್ತೆ ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ ಇರುವ ಸಂದರ್ಭ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ.
ಇಲ್ಲಿ ರಸ್ತೆ ಹೊಂಡ ನಿರ್ಮಾಣವಾಗುವ ಸ್ಥಿತಿ ಪ್ರತಿ ವರ್ಷವೂ ಮುಂದುವರಿಯುತ್ತಿರುವ ಕಾರಣ ತಾತ್ಕಾಲಿಕ ದುರಸ್ತಿ ಮಾಡಿ ಹಣ ಪೋಲು ಮಾಡುವ ಬದಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯಾಡಳಿತ ಚಿಂತನೆ ನಡೆಸಬೇಕಿದೆ ಮತ್ತು ತ್ವರಿತ ಕ್ರಮ ಕೈಗೊಳ್ಳಬೇಕಾಗಿದೆ.
ಶೀಘ್ರ ತೀರ್ಮಾನ
ರಸ್ತೆಯಲ್ಲಿ ದೊಡ್ಡ ಗಾತ್ರದ ಹೊಂಡಗಳು ಸೃಷ್ಟಿಯಾಗಿರುವುದನ್ನು ಗಮನಿಸಿದ್ದೇವೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ದೊಡ್ಡ ಅನುದಾನ ಬೇಕಾಗುತ್ತದೆ. ಈ ಕುರಿತು ಶೀಘ್ರ ನಗರಸಭೆಯಲ್ಲಿ ತೀರ್ಮಾನ ಕೈಗೊಂಡು ಟೆಂಡರ್‌ ಕರೆದು ಸರಿಪಡಿಸುತ್ತೇವೆ.
– ರೂಪಾ ಟಿ. ಶೆಟ್ಟಿ,
ದರ್ಬೆ ಸರ್ಕಲ್‌
ಹೊಂಡ ನಿರ್ಮಾಣ
ಚಾರಣಪ್ರಿಯರ ನೆಚ್ಚಿನ ತಾಣ ಗಡಾಯಿಕಲ್ಲು ಮೇಲ್ಭಾಗದಲ್ಲಿ ಬೆಂಕಿ ಅವಘಡ
ಬೆಳ್ತಂಗಡಿ: ಚಾರಣ ಪ್ರಿಯರ ಸ್ವರ್ಗ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲಿನ ಮೇಲ್ಭಾಗ ಸಂಜೆ ಬೆಂಕಿ ಆವರಿಸಿದ ಘಟನೆ ನಡೆದಿದೆ. ಕುದುರೆಮುಖ ರಾಷ್ಟ್ರೀಯ...
ವರ್ಡ್ಪ್ರೆಸ್ಗೆ ವಿಂಡೋಸ್ ಲೈವ್ ರೈಟರ್ | Martech Zone
ಮಂಗಳವಾರ, ಜುಲೈ 26, 2011 ಜನವರಿ 19, 2014 ರ ಭಾನುವಾರ Douglas Karr
ಕೆಲವು ಜನರು ವರ್ಡ್ಪ್ರೆಸ್ ನಂತಹ ಅಪ್ಲಿಕೇಶನ್‌ಗಳೊಂದಿಗೆ ಬರುವ ವೆಬ್ ಆಧಾರಿತ ಸಂಪಾದನೆ ಪರಿಕರಗಳನ್ನು ಬಳಸಿಕೊಂಡು ನಿಲ್ಲಲು ಸಾಧ್ಯವಿಲ್ಲ. ನಾನು ಅವರನ್ನು ದೂಷಿಸುವುದಿಲ್ಲ ... ನಾನು ಅದನ್ನು ಬಿಟ್ಟುಬಿಟ್ಟೆ ಶ್ರೀಮಂತ ಸಂಪಾದನೆ ಸಾಧನ ವರ್ಷಗಳ ಹಿಂದೆ ಮತ್ತು ನನ್ನ ಬ್ಲಾಗ್ ಪೋಸ್ಟ್‌ಗಳಲ್ಲಿ ನನ್ನ ಸ್ವಂತ HTML ಅನ್ನು ಬರೆಯಿರಿ. ಮೈಕ್ರೋಸಾಫ್ಟ್ ವಿಂಡೋಸ್ ಬಳಕೆದಾರರಿಗೆ ಮತ್ತೊಂದು ಪರ್ಯಾಯವಿದೆ, ಆದರೂ ನಾನು ಇಂದು ರಾತ್ರಿ ಕ್ಲೈಂಟ್ ಅನ್ನು ತೋರಿಸುತ್ತಿದ್ದೇನೆ ... ವಿಂಡೋಸ್ ಲೈವ್ ರೈಟರ್.
ವಿಂಡೋಸ್ ಲೈವ್ ರೈಟರ್ ಈಗ ಕೆಲವು ವರ್ಷಗಳಿಂದಲೂ ಇದೆ ಮತ್ತು ವರ್ಡ್ಪ್ರೆಸ್ ಅಂತರ್ನಿರ್ಮಿತವಾಗಿದೆ ಎಪಿಐ ಸಂವಹನ ಮಾಡಲು ಅದನ್ನು ಸಕ್ರಿಯಗೊಳಿಸಲು. ನಿಮ್ಮ ಥೀಮ್ ಅನ್ನು ವಿಂಡೋಸ್ ಲೈವ್ ರೈಟರ್‌ಗೆ ಸಹ ನೀವು ಡೌನ್‌ಲೋಡ್ ಮಾಡಬಹುದು ಆದ್ದರಿಂದ ನೀವು ನಿಮ್ಮ ಬ್ಲಾಗ್‌ನ ನೋಟ ಮತ್ತು ಭಾವನೆಗೆ ನೇರವಾಗಿ ಬರೆಯುತ್ತಿರುವಿರಿ.
ಮೊದಲ ಹಂತವೆಂದರೆ ನಿಮ್ಮ ಕರಡುಗಳು ಮತ್ತು ಪೋಸ್ಟ್‌ಗಳನ್ನು ಇಂಟರ್ನೆಟ್ ಮೂಲಕ ಪ್ರಕಟಿಸುವ ಸಾಮರ್ಥ್ಯವನ್ನು ಹೊಂದಿಸುವುದು. ವರ್ಡ್ಪ್ರೆಸ್ ಆಡಳಿತದ ಸೆಟ್ಟಿಂಗ್‌ಗಳು> ಬರವಣಿಗೆ ವಿಭಾಗದಲ್ಲಿ ಇದನ್ನು ಸಾಧಿಸಲಾಗುತ್ತದೆ:
ಮುಂದೆ, ನೀವು ಡೌನ್‌ಲೋಡ್ ಮಾಡಲು ಬಯಸುತ್ತೀರಿ ವಿಂಡೋಸ್ ಲೈವ್ ಎಸೆನ್ಷಿಯಲ್ಸ್ 2011. ಲೈವ್ ಎಸೆನ್ಷಿಯಲ್ಸ್‌ನೊಂದಿಗೆ ಪೂರ್ವನಿಯೋಜಿತವಾಗಿ ಲೋಡ್ ಮಾಡಲು ಹೊಂದಿಸಲಾಗುವ ಕೆಲವು ಅಪ್ಲಿಕೇಶನ್‌ಗಳಿವೆ… ನಾನು ಎಲ್ಲಾ ಐಚ್ al ಿಕ ಅಪ್ಲಿಕೇಶನ್‌ಗಳನ್ನು ಗುರುತಿಸುವುದಿಲ್ಲ ಆದ್ದರಿಂದ ನೀವು ಲೈವ್ ರೈಟರ್ ಅನ್ನು ಸ್ಥಾಪಿಸಬಹುದು:
ಸ್ಥಾಪಿಸಿದ ನಂತರ, ತೆರೆಯಿರಿ ಲೈವ್ ರೈಟರ್ ಮತ್ತು ನಿಮ್ಮ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಅನ್ನು ಆಯ್ಕೆ ಮಾಡಿ - ಈ ಸಂದರ್ಭದಲ್ಲಿ ವರ್ಡ್ಪ್ರೆಸ್:
ನಿಮ್ಮ ಬ್ಲಾಗ್‌ನೊಂದಿಗೆ ಸಂಪರ್ಕ ಸಾಧಿಸುವುದು ಕೊನೆಯ ಹಂತವಾಗಿದೆ. ನಿಮ್ಮ ಬ್ಲಾಗ್ ಯುಆರ್ಎಲ್, ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಅನ್ನು ಮಾತ್ರ ನೀವು ಟೈಪ್ ಮಾಡಬೇಕು ಮತ್ತು ಅದು ಉತ್ತಮವಾಗಿ ಸಂಪರ್ಕಗೊಳ್ಳಬೇಕು. ಕೇಳಿದಾಗ, ನಿಮ್ಮ ಬ್ಲಾಗ್ ಥೀಮ್ ಅನ್ನು ಡೌನ್‌ಲೋಡ್ ಮಾಡಲು ನಾನು ಶಿಫಾರಸು ಮಾಡುತ್ತೇನೆ ಇದರಿಂದ ನಿಮ್ಮ ಬ್ಲಾಗ್ ಪೋಸ್ಟ್‌ಗಳನ್ನು ಬರೆಯುವಾಗ ನಿಮಗೆ ನಿಜವಾದ ನೋಟ ಮತ್ತು ಭಾವನೆ ಸಿಗುತ್ತದೆ.
ಲೈವ್ ರೈಟರ್ ನಿಮ್ಮ ಥೀಮ್ ಮತ್ತು ವರ್ಗಗಳನ್ನು ಡೌನ್‌ಲೋಡ್ ಮಾಡಿದ ನಂತರ, ನೀವು ಹೋಗುವುದು ಒಳ್ಳೆಯದು!
ಮೆನುವಿನಿಂದ ನಿಮ್ಮ ಬ್ಲಾಗ್ ಅನ್ನು ಆಯ್ಕೆ ಮಾಡುವ ಮೂಲಕ ಮತ್ತು ಬ್ಲಾಗ್ ಪೋಸ್ಟ್ ಅನ್ನು ಸೇರಿಸುವ ಮೂಲಕ ಪರೀಕ್ಷಾ ರನ್ ನೀಡಿ. ನಂತರ ಅದನ್ನು ಡ್ರಾಫ್ಟ್‌ನಂತೆ ಬ್ಲಾಗ್‌ಗೆ ಕಳುಹಿಸಿ. ವರ್ಡ್ಪ್ರೆಸ್ಗೆ ಲಾಗಿನ್ ಮಾಡಿ, ಪೋಸ್ಟ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ನಿಮ್ಮ ಡ್ರಾಫ್ಟ್ ಅನ್ನು ನೀವು ನೋಡಬೇಕು!
ಟ್ಯಾಗ್ಗಳು: ಐಫೋನ್ 5 ವಿಷಯ ಸಾಲುಐಫೋನ್ 5 ವಿಷಯ ಸಾಲಿನ ಉದ್ದವಿಂಡೋಸ್ ಮೊಬೈಲ್ ವಿಷಯ ಸಾಲುವಿಂಡೋಸ್ ಮೊಬೈಲ್ ವಿಷಯ ಸಾಲಿನ ಉದ್ದ
ಬ್ಲಾಗಿಂಗ್ ತೊಂದರೆ ಇದೆಯೇ? ಅದರಂತೆ ಯೋಜನೆ ಮಾಡಿ.
ಕೆ ಮಿಲ್ಲೊಯ್
ನವೆಂಬರ್ 13, 2011 ರಂದು 10:17 PM
ನನ್ನ ಕಿಟಕಿಗಳು ವರ್ಡ್ಪ್ರೆಸ್ಗೆ ಲೈವ್ ಆಗಲು ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ನಾನು ಚಿತ್ರವನ್ನು ಸೇರಿಸಿದಾಗ ಮತ್ತು ಬ್ಲಾಗ್‌ಗೆ ಅಪ್‌ಲೋಡ್ ಮಾಡಿದಾಗ, ವರ್ಡ್ಪ್ರೆಸ್ ಬದಿಯಲ್ಲಿ ನಾನು HTML ಕೋಡ್‌ನಂತೆ ಕಾಣುತ್ತದೆ. ಇದನ್ನು ಹೇಗೆ ಸರಿಪಡಿಸುವುದು ಎಂದು ವಿವರಿಸಬಹುದೇ ???
ನವೆಂಬರ್ 14, 2011 ರಂದು 12:24 ಎಎಮ್
ಕೆ ಮಿಲ್ಲೊಯ್ ಖಚಿತವಾಗಿಲ್ಲ - ಆದರೆ ಇದು ಎನ್‌ಕೋಡಿಂಗ್ ಸಮಸ್ಯೆಯಾಗಿರಬಹುದು. ವರ್ಡ್ಪ್ರೆಸ್ನಲ್ಲಿ ಕೆಲವು ಮಾಹಿತಿಗಳಿವೆ, ಆದರೂ: http://codex.wordpress.org/Windows_Live_Writer_Help
ರಾಕಿಂಗ್​ ಸ್ಟಾರ್​ ಮನೆ ಜಾಲಾಡಿದ ಐಟಿ ಅಧಿಕಾರಿಗಳಿಗೆ ಸಿಕ್ಕ ಆಸ್ತಿ ವಿವರ ಏನು? ·
ರಾಕಿಂಗ್​ ಸ್ಟಾರ್​ ಮನೆ ಜಾಲಾಡಿದ ಐಟಿ ಅಧಿಕಾರಿಗಳಿಗೆ ಸಿಕ್ಕ ಆಸ್ತಿ ವಿವರ ಏನು?
ಬೆಂಗಳೂರು: ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವ ಅನುಮಾನದ ಮೇಲೆ ಸ್ಯಾಂಡಲ್​ವುಡ್​ ತಾರೆಗಳು ಮತ್ತು ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದು, ರಾಕಿಂಗ್​ಸ್ಟಾರ್​ ಯಶ್​ ಅವರ ಆಸ್ತಿ ವಿವರ ಪಡೆದುಕೊಳ್ಳುತ್ತಿದ್ದಾರೆ.
ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶ್ ಮನೆ ಪರಿಶೀಲನೆ ಆರಂಭಿಸಿದ ಐಟಿ ಅಧಿಕಾರಿಗಳು ಇಲ್ಲಿಯವರೆಗೂ ಯಶ್ ಆಸ್ತಿ ವಿವರ ದಾಖಲೆಗಳನ್ನು ಪಡೆದು, ಪರಿಶೀಲನೆ ನಡೆಸಿದ್ದಾರೆ.
​ಎಂಟು ಎಕರೆ ಜಮೀನು ಖರೀದಿಸಲು ವಿವಿಧ ಬ್ಯಾಂಕ್​ಗಳಲ್ಲಿ 40 ಕೋಟಿ ರೂ. ಸಾಲ ಪಡೆದಿರುವುದಾಗಿ ಯಶ್​ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಯಶ್ ಸದ್ಯದ ಆಸ್ತಿ ವಿವರ
ಹೊಸಕೆರೆಹಳ್ಳಿಯಲ್ಲಿ 80*60 ವಿಸ್ತೀರ್ಣದ ಮನೆ.
ಗಾಲ್ಫ್ ಕ್ಲಬ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಲ್ಲಿ 'ಪೆಂಟ್​ ಹೌಸ್​' ಖರೀದಿ. ಇದರ ಬೆಲೆ ಅಂದಾಜು 8 ಕೋಟಿ ರೂ. ಎನ್ನಲಾಗಿದೆ.
ಮಂಡ್ಯದ ಸಮೀಪ ಎಂಟು ಎಕರೆ ಜಮೀನು ಖರೀದಿ.
ಸದ್ಯ ತಾಜ್ ವೆಸ್ಟೆಂಡ್ ನಲ್ಲಿ ವಾಸ್ತವ್ಯ. ತಿಂಗಳಿಗೆ ಲಕ್ಷಾಂತರ ರೂ. ಬಾಡಿಗೆ ಪಾವತಿ.
ಇದೇ ವೇಳೆ ಯಶ್​ ಪತ್ನಿ ರಾಧಿಕಾ ಪಂಡಿತ್ ಅವರ ಮಲ್ಲೇಶ್ವರಂನಲ್ಲಿರುವ ನಿವಾಸಕ್ಕೂ ಐಟಿ ಅಧಿಕಾರಿಗಳು ತೆರಳಿದ್ದು, ಸದ್ಯ ಮನೆಯ ಮೂವರು ಚಾಲಕರ ಪೈಕಿ ಒಬ್ಬ ಚಾಲಕನನ್ನು ಐಟಿ ಅಧಿಕಾರಿಗಳು ಇನೋವಾ ಕಾರ್​ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)
'ಆಪರೇಷನ್ ಅಡಿಯೋ' ತನಿಖೆಗೆ ರಚನೆಯಾಗಿದ್ದ ಎಸ್‍ಐಟಿ ಈಗ ಆನಾಥ..! – EESANJE / ಈ ಸಂಜೆ
'ಆಪರೇಷನ್ ಅಡಿಯೋ' ತನಿಖೆಗೆ ರಚನೆಯಾಗಿದ್ದ ಎಸ್‍ಐಟಿ ಈಗ ಆನಾಥ..!
June 26, 2019 Sri Raghav Operation Lotus Audio, SIT
ಬೆಂಗಳೂರು, ಜೂ.26- ರಾಜ್ಯ ರಾಜಕಾರಣದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದ, ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲದ ಅಡಿಯೋ ಕುರಿತು ರಾಜ್ಯ ಸರ್ಕಾರ ರಚನೆ ಮಾಡಿದ್ದ ವಿಶೇಷ ತನಿಖಾ ದಳ (ಎಸ್‍ಐಟಿ) ಸದ್ಯಕ್ಕೆ ಯಾರಗೂ ಬೇಡವಾದ ಅನಾಥವಾಗಿದೆ.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆಪರೇಷನ್ ಕಮಲದ ವಿಚಾರ ಹೆಚ್ಚು ಸದ್ದು ಮಾಡಿತ್ತು. ವಿಧಾನಸಭೆ ಸ್ಪೀಕರ್ ಹೆಸರು ಕೇಳಿ ಬಂದ ಕಾರಣಕ್ಕೆ ಸರ್ಕಾರ ಎಸ್‍ಐಟಿ ರಚನೆ ಮಾಡುವುದಾಗಿ ಹೇಳಿತ್ತು.
2019ರ ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಎಸ್‍ಐಟಿ ರಚನೆ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿತ್ತು. ಆದರೆ, ಜೂನ್ ತಿಂಗಳು ಬಂದರೂ ಎಸ್‍ಐಟಿ ರಚನೆಯಾಗಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ಈ ವಿಚಾರದಲ್ಲಿ ಒಂದಾಗಿದ್ದು, ಎಸ್‍ಐಟಿ ಯಾರಿಗೂ ಬೇಡವಾಗಿದೆ.
ಶಾಸಕರ ರಾಜೀನಾಮೆ ಪಡೆಯಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಲಂಚ ನೀಡಲಾಗುತ್ತದೆ ಎಂಬ ಆಪರೇಷನ್ ಕಮಲದ ಆಡಿಯೋ ಭಾರೀ ಸದ್ದು ಮಾಡಿತ್ತು. ವಿಧಾನಸಭೆಯಲ್ಲಿ ಈ ಕುರಿತು ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು.
ಪ್ರತಿಪಕ್ಷ ಬಿಜೆಪಿ ಮತ್ತು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್-ಜೆಡಿಎಸ್ ಈ ಆಡಿಯೋ ವಿವಾದವನ್ನು ಮರೆತು ಹೋಗಿವೆ. ಸದನದಲ್ಲಿ ಅಬ್ಬರಿಸಿ ಬೊಬ್ಬರಿದಿದ್ದ ವಿವಿಧ ಪಕ್ಷಗಳ ರಾಜಕೀಯ ನಾಯಕರು ಈಗ ಏನೋ ಆಗಿಲ್ಲ ಎಂಬಂತೆ ಎಸ್‍ಐಟಿ ವಿಚಾರವನ್ನು ಮರೆತು ಹೋಗಿದ್ದಾರೆ.
# ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ
ಪ್ರತಿಪಕ್ಷ ಬಿಜೆಪಿ ಆರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಲು ಹೊರಟಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದರು. ಜೆಡಿಎಸ್ ಶಾಸಕರನ್ನು ಸೆಳೆಯಲು ಮಾತುಕತೆ ನಡೆಸಿದ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದರು.
ಶಾಸಕರ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಲಂಚ ನೀಡಲಾಗುತ್ತದೆ ಎಂಬ ವಿಚಾರ ಇದರಲ್ಲಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆಡಿಯೋ ಬಗ್ಗೆ ಸದನದಲ್ಲಿ ಪ್ರತಿಕ್ರಿಯೆ ನೀಡಿದ್ದ ಸ್ಪೀಕರ್ ರಮೇಶ್ ಕುಮಾರ್, 'ಹಾದಿ ಬೀದಿಯಲ್ಲಿ ಹೋಗುವವರು ನನ್ನ ಹೆಸರು ಬಳಸಲು ಬಿಡುವುದಿಲ್ಲ.
ಆಡಿಯೋದಲ್ಲಿರುವ ಸಂಭಾಷಣೆ ಯಾರದ್ದು ಎಂದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ 15 ದಿನದಲ್ಲಿ ವರದಿ ನೀಡಬೇಕು. ಯಾವ ಸಂಸ್ಥೆ ಮೂಲಕ ತನಿಖೆ ಮಾಡಿಸಬೇಕು ಎಂದು ಸರ್ಕಾರ ತೀರ್ಮಾನಿಸಲಿ¿ ಎಂದು ಸ್ಪೀಕರ್ ಸಲಹೆ ನೀಡಿದ್ದರು.
# ಎಸ್‍ಐಟಿ ತನಿಖೆಗೆ ಸರ್ಕಾರ ತೀರ್ಮಾನ :
ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಬಿಸಿ-ಬಿಸಿ ಚರ್ಚೆ ನಡೆದಿತ್ತು. ಅಂತಿಮವಾಗಿ ಸರ್ಕಾರ ಎಸ್‍ಐಟಿ ರಚನೆ ಮಾಡಿ ಆಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಘೋಷಣೆ ಮಾಡಿತ್ತು. ಫೆಬ್ರವರಿಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದವು, ಜೂನ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಎಸ್‍ಐಟಿ ರಚನೆಯೇ ಆಗಿಲ್ಲ.
ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಲೋಕಸಭಾ ಚುನಾವಣೆ ಎದುರಾಯಿತು. ಬಳಿಕ ಮೈತ್ರಿ ಸರ್ಕಾರದಲ್ಲಿ ಶಾಸಕರ ಬಂಡಾಯ, ಸಂಪುಟ ವಿಸ್ತರಣೆ ಎಂದು ಹಲವು ಚಟುವಟಿಕೆ ನಡೆದು ಎಲ್ಲರೂ ಆಪರೇಷನ್ ಕಮಲದ ಆಡಿಯೋ ವಿಚಾರ ಮರೆತಿದ್ದಾರೆ. ತಮ್ಮ ಹೆಸರು ಕೇಳಿ ಬಂದಿದ್ದರೂ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
# ನ್ಯಾಯಾಲಯ ತಜ್ಡೆಯಾಜ್ಞೆ :
ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗದ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್‍ಗೆ ಕಲಬುರಗಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಯಡಿಯೂರಪ್ಪ ಅವರಲ್ಲದೆ, ಉಳಿದ ಮೂವರು ಆರೋಪಿಗಳಾದ ಹಾಸನ ಶಾಸಕ ಪ್ರೀತಂಗೌಡ, ದೇವದುರ್ಗದ ಶಾಸಕ ಶಿವನಗೌಡ ಮತ್ತು ಪತ್ರಕರ್ತ ಮರಂಕಲ್ ಅವರೂ ಸದ್ಯ ಎಫ್‍ಐಆರ್‍ನಿಂದ ಪಾರಾಗಿದ್ದಾರೆ.
ಆಪರೇಷನ್ ಕಮಲ ನಡೆಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಮತ್ತು ಮೂವರ ವಿರುದ್ಧ ದೇವದುರ್ಗ ಪೊಲೀಶ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರು ಅವರ ಮಗ ಶರಣಗೌಡ ನೀಡಿದ್ದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು.
ಇದನ್ನು ರದ್ದುಗೊಳಿಸುವಂತೆ ಕೋರಿ ಕಲಬುರಗಿ ಹೈಕೋರ್ಟ್‍ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಎಫ್‍ಐಆರ್‍ಗೆ ಮಧ್ಯಂತರ ತಡೆ ನೀಡಿದೆ.
ಗುರುಮಠಕಲ್ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರ ಶರಣಗೌಡ ಅವರು ಯಡಿಯೂರಪ್ಪ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಎಫ್‍ಐಆರ್ ದಾಖಲಿಸಲಾಗಿತ್ತು.
ಶಾಂತಕುಮಾರಿ-ಸತ್ಯನಾರಾಯಣ ಪೈಪೋಟಿ | Prajavani
ಶಾಂತಕುಮಾರಿ-ಸತ್ಯನಾರಾಯಣ ಪೈಪೋಟಿ
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದ್ದರಿಂದ ಬಿಬಿಎಂಪಿ ಹೊಸ ಮೇಯರ್ ಆಯ್ಕೆ ಏ. 27ರಂದು ಮಧ್ಯಾಹ್ನ 2ಕ್ಕೆ ನಡೆಯಲಿದೆ. ವಿಧಾನಸಭಾ ಚುನಾವಣೆಯಲ್ಲಿ ತೊಡಗಿಕೊಂಡಿದ್ದ ಮೇಯರ್ ಹುದ್ದೆ ಆಕಾಂಕ್ಷಿಗಳು ಮತ್ತೆ ಬಿಬಿಎಂಪಿ ಕಡೆಗೆ ತಿರುಗಿ ನೋಡುವಂತಾಗಿದೆ.
ಪೂರ್ವನಿಗದಿಯಂತೆ ಮೇಯರ್ ಚುನಾವಣೆ ಏಪ್ರಿಲ್ ಕೊನೆಯ ವಾರದಲ್ಲಿ ನಡೆಯಬೇಕಿತ್ತು. ಆದರೆ, ವಿಧಾನಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಬಿಬಿಎಂಪಿ ಆಯುಕ್ತರು, `ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲು ಏನಾದರೂ ತೊಡಕಿದೆಯೇ' ಎಂದು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ್ದರು.
ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ವಿಧಾನಸಭಾ ಚುನಾವಣೆಗೂ ಮೇಯರ್ ಆಯ್ಕೆಗೂ ಯಾವುದೇ ಸಂಬಂಧ ಇಲ್ಲ. ನಿಗದಿಯಂತೆ ಆಯ್ಕೆ ಪ್ರಕ್ರಿಯೆ ನಡೆಸಬಹುದು ಎಂದು ಸ್ಪಷ್ಟನೆ ನೀಡಿದ್ದರು. ಆದೇಶದ ಪ್ರತಿ ಕೈಗೆ ಸಿಗುತ್ತಿದ್ದಂತೆಯೇ ಬಿಬಿಎಂಪಿ ಆಯುಕ್ತರು ಅದನ್ನು ಪ್ರಾದೇಶಿಕ ಆಯುಕ್ತ ಕೆ.ಶಿವರಾಂ ಅವರಿಗೆ ಕಳುಹಿಸಿಕೊಟ್ಟರು. ಮಧ್ಯಾಹ್ನದ ಹೊತ್ತಿಗೆ ಮೇಯರ್ ಆಯ್ಕೆಗೆ ವೇಳಾಪಟ್ಟಿ ನಿಗದಿಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದರು.
`ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲು ಆಯೋಗ ಅನುಮತಿ ನೀಡಿದೆ. ಶುಕ್ರವಾರವೇ ಬಿಬಿಎಂಪಿ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ' ಎಂದು ಆಯುಕ್ತ ಸಿದ್ದಯ್ಯ ತಿಳಿಸಿದರು.
ಗರಿಗೆದರಿದ ಚಟುವಟಿಕೆ: ವಿಧಾನಸಭಾ ಚುನಾವಣೆಯಲ್ಲಿ ಮಗ್ನರಾಗಿದ್ದ ಬಿಬಿಎಂಪಿ ಸದಸ್ಯರೆಲ್ಲ ಈಗ ಮೇಯರ್ ಚುನಾವಣೆ ಕುರಿತು ತಲೆ ಕೆಡಿಸಿಕೊಳ್ಳಲು ಆರಂಭಿಸಿದ್ದಾರೆ. ಶುಕ್ರವಾರ ಸಂಜೆಯೇ ಬಿಜೆಪಿ ಕಚೇರಿಯಲ್ಲಿ ಮೇಯರ್ ಆಯ್ಕೆ ಕುರಿತಂತೆ ಅನೌಪಚಾರಿಕ ಸಭೆ ನಡೆದಿದೆ. ಆರ್.ಅಶೋಕ ಸೇರಿದಂತೆ ಪಕ್ಷದ ಮುಖಂಡರೆಲ್ಲ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆಕಾಂಕ್ಷಿಗಳೆಲ್ಲ ಮುಖಂಡರ ದುಂಬಾಲು ಬಿದ್ದಿದ್ದಾರೆ.
ಮೇಯರ್ ಇಲ್ಲವೆ ಉಪಮೇಯರ್ ಹುದ್ದೆಗಳಲ್ಲಿ ಒಂದನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಬೇಕು ಎಂದು ಶುಕ್ರವಾರವಷ್ಟೇ ಹೈಕೋರ್ಟ್ ಆದೇಶ ಹೊರಡಿಸಿದೆ. ಮೇಯರ್ ಹುದ್ದೆಯನ್ನು ಸಾಮಾನ್ಯ ವರ್ಗಕ್ಕೆ ಉಳಿಸಿಕೊಂಡು ಉಪಮೇಯರ್ ಹುದ್ದೆಯನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಮೂಡಲಪಾಳ್ಯ ಬಿಬಿಎಂಪಿ ಸದಸ್ಯೆ ಎನ್.ಶಾಂತಕುಮಾರಿ ಮತ್ತು ಬಸವನಗುಡಿ ಸದಸ್ಯ ಬಿ.ಎಸ್. ಸತ್ಯನಾರಾಯಣ ಮೇಯರ್ ಹುದ್ದೆಗೆ ಪ್ರಮುಖ ಆಕಾಂಕ್ಷಿಗಳಾಗಿದ್ದು, ಶಾಂತಕುಮಾರಿ ಅವರನ್ನೇ ಪಕ್ಷದ ಹಿರಿಯರು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವಿ.ಸೋಮಣ್ಣ ಸಹ ಶಾಂತಕುಮಾರಿ ಅವರನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸತ್ಯನಾರಾಯಣ ಸಹ ಆ ಹುದ್ದೆ ಅಲಂಕರಿಸಲು ಪ್ರಬಲ ಪೈಪೋಟಿ ನಡೆಸಿದ್ದು, ಅವರಿಗೆ ಪ್ರಭಾವಿ ಮುಖಂಡರೊಬ್ಬರ ಬೆಂಬಲ ಇದೆ ಎನ್ನಲಾಗಿದೆ. ಆದರೆ, ಈ ಸಲ ಮಹಿಳೆಗೆ ಆ ಸ್ಥಾನವನ್ನು ಮೀಸಲಿಡಬೇಕು ಎಂಬ ಒತ್ತಡ ಪಕ್ಷದಲ್ಲಿ ಹೆಚ್ಚುತ್ತಿದೆ ಎಂದೂ ಮೂಲಗಳು ತಿಳಿಸಿವೆ.
ಜೆಡಿಯುನ 15 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ | Elections 2018: Janata Dal (United) announces first list of 15 candidates - Kannada Oneindia
| Updated: Monday, April 16, 2018, 21:53 [IST]
ಬಳ್ಳಾರಿ, ಏಪ್ರಿಲ್. 16 : ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯುನ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟ ಮಾಡಿದೆ. ಎರಡನೇ ಪಟ್ಟಿ ಏಪ್ರಿಲ್ 22 ರಂದು ಬಿಡುಗಡೆ ಆಗಲಿದೆ.
ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್ ಅವರು ಪಟ್ಟಿಯನ್ನು ಪ್ರಕಟಿಸಿದ್ದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಟಪಾಲ್ ಗಣೇಶ್, ಕೂಡ್ಲಿಗಿ ಎಸ್ಟಿ ವಿಧಾನಸಭಾ ಕ್ಷೇತ್ರದಿಂದ ಜಿ. ಈಶಪ್ಪ ಸ್ಪರ್ಧಿಸುತ್ತಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ನೇತೃತ್ವದ ಜೆಡಿಯು ನೇತೃತ್ವದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಸಮಾಜಮುಖಿ ಚಿಂತನೆ ಉಳ್ಳವರಾಗಿದ್ದಾರೆ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುವ ದೂರದೃಷ್ಟಿ ಉಳ್ಳವರು ಆಗಿದ್ದು, ಮತದಾರರು ಬೆಂಬಲಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ನಮ್ಮ ಪಕ್ಷದ ತತ್ವ, ಸಿದ್ಧಾಂತ ಮತ್ತು ನೀತಿಗಳನ್ನು ಮೆಚ್ಚಿಕೊಂಡಿರುವ ವಿವಿಧ ಪಕ್ಷಗಳ ಮುಖಂಡರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದು, ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಮಹಿಮಾ ಜೆ. ಪಟೇಲ್ ತಿಳಿಸಿದ್ದಾರೆ.
ಅರುಣಕುಮಾರ ಸಿ.ಪಾಟೀಲ- ಆಳಂದ,
ಹಜರತ್ ಅಲಿ ಶೇಖ್- ಕುಂದಗೋಳ,
ಟಪಾಲ್ ಗಣೇಶ್- ಬಳ್ಳಾರಿ ನಗರ,
ಜಿ.ಎನ್.ತೋಟದ್- ನವಲಗುಂದ,
ಡಿ.ಕೆ.ಹಿತ್ತಲಮನಿ- ರಾಣೆಬೆನ್ನೂರು,
ವಿಜಯೇಂದ್ರ ರೆಡ್ಡಿ- ಚಿಕ್ಕನಾಯಕನಹಳ್ಳಿ,
ಬಿ.ರಾಮಯ್ಯ- ನೆಲಮಂಗಲ,
ರಾಜು ನಾಯಕ ವಾಡಿ- ಹುಬ್ಬಳ್ಳಿ ಸೆಂಟ್ರಲ್,
ರಾಜೀವ್ ಕೋಟ್ಯಾನ್-ಕುಂದಾಪುರ
ಪುರುಷೋತ್ತಮ ಎಸ್- ದೊಡ್ಡಬಳ್ಳಾಪುರ,
ದೊಡ್ಡಪ್ಪ ಮಾಲಿ.ಪಾಟೀಲ್- ಗುರುಮಿಠಕಲ್
ಎಸ್.ಎಸ್.ರಡ್ಡೇರ- ಗದಗ,
ಎಚ್.ರಾಮಚಂದ್ರಪ್ಪ- ಹೊಳಲ್ಕೆರೆ
ಜಿ.ಈಶಪ್ಪ-ಕೂಡ್ಲಗಿ.
ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ: 50:50 ಸೀಟು ಹಂಚಿಕೆ
jdu karnataka assembly elections 2018 mahima patel tapal ganesh ಜೆಡಿಯು ಕರ್ನಾಟಕ ವಿಧಾನಸಭೆ ಚುನಾವಣೆ 2018 ಮಹಿಮಾ ಪಟೇಲ್ ಟಪಾಲ್ ಗಣೇಶ್
Elections 2018: Janata Dal (United) today(April 16) announced first list of 15 candidates. Mahima Patel to contest from Channagiri and Tapal Ganesh to contest from Ballari City.
ಬಿಜೆಪಿ ಮತ್ತು ರಾಮಮಂದಿರಗಳಿಗಾಗಿ ದುಡಿದೂ ದುರಂತ ನಾಯಕನಾದ ಅಡ್ವಾಣಿ