text
stringlengths 0
61.5k
|
---|
ಕೂಡಲೇ, ಕ್ರಾಂತಿಕಾರಿಗಳೂ ಬೆಟ್ಟವನ್ನು ಇಳಿದು ಬೇರೆ ಜಾಗಗಳಿಗೆ ಗುಂಪುಗುಂಪಾಗಿ ಚದುರಿಹೋದರು.. |
ಇಡೀ ಹೋರಾಟದಲ್ಲಿ ಒಟ್ಟು 12 ಜನ ಹುತಾತ್ಮರಾದರು. 11 ವಿದ್ಯಾರ್ಥಿಗಳು ಸ್ಥಳದಲ್ಲೇ ಅಸುನೀಗಿದರೆ, ಅರ್ಧೆಂದು ದಸ್ತಿದಾರ್ ಆಸ್ಪತ್ರೆಯಲ್ಲಿ ಮರಣಹೊಂದಿದ.. |
ಅಂಬಿಕಾ ಚಕ್ರವರ್ತಿಗೆ ಗುಂಡು ಬಡಿದಿದ್ದರಿಂದ ಅವನನ್ನು ಅಲ್ಲೇ ಬಿಟ್ಟು ಹೊರಟುಹೋದರು. ಆದರೆ ಅವನು ಇನ್ನೂ ಬದುಕಿದ್ದ..!!! ಹೇಗೋ ಆನಂತರ ತಲೆಮರೆಸಿಕೊಂಡ..!!! |
ಇತ್ತ ಓಡಿ ಹೋದ ಯುವಕರಲ್ಲಿ ಕೆಲವರು ಬ್ರಿಟಿಷರಿಂದ ಬಂಧಿತರಾದರು.ಕೆಲವರು ತಾವು ಬ್ರಿಟಿಷರ ಕೈಗೆ ಸಿಕ್ಕು ಗುಲಾಮರಾಗಬಾರದೆಂದು ತಮಗೆ ತಾವೇ ಗುಂಡು ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಕೊಂಡರು.ಇನ್ನು ಕೆಲವರು ಹಾಗೆಯೇ ತಮ್ಮ ತಮ್ಮ ಊರನ್ನು ಸೇರಿಕೊಂಡುಬಿಟ್ಟರು.. ಅದೇನೇ ಇರಲಿ, ಒಟ್ಟಿನಲ್ಲಿ ಆ ಎಲ್ಲರೂ, ತಾಯಿ ಭಾರತಿಗೆ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು..!!!!! |
ಸೂರ್ಯಸೇನ್, ನಿರ್ಮಲ್ ಸೇನ್ ಮತ್ತು ಪ್ರೀತಿಲತಾ ಗುಟ್ಟಾಗಿ ಒಬ್ಬ ವಿಧವೆಯ ಮನೆಯಲ್ಲಿ ಆಶ್ರಯ ಪಡೆದರು.. ಆದರೆ ಅದೂ ಹೇಗೋ ಆಂಗ್ಲರಿಗೆ ಗೊತ್ತಾಗಿ, ಕೂಡಲೇ ಬ್ರಿಟಿಷರು ಕಾರ್ಯೋನ್ಮುಖರಾದರು.. ದೊಡ್ಡ ಪಡೆಯೇ ಆ ಮನೆಯನ್ನು ಆವರಿಸಿ, ದಾಳಿ ನಡೆಸಲಾಯಿತು.. ಒಳಗಿದ್ದ ಕ್ರಾಂತಿಕಾರಿಗಳೂ ಪ್ರತಿದಾಳಿ ನಡೆಸಿದರು.ಆದರೆ, ಈ ದಾಳಿಯ ಬಗ್ಗೆ ಪೂರ್ವತಯಾರಿ ಇಲ್ಲದೆ ಇದ್ದಿದ್ದರಿಂದ ಕ್ರಾಂತಿಕಾರಿಗಳಿಗೆ ದಾಳಿ ಮಾಡೋದು ಕಷ್ಟವಾಯಿತು.. ಆ ಹೋರಾಟದಲ್ಲಿ ನಿರಂತರ ಗುಂಡಿನ ಹೊಡೆತಕ್ಕೆ ಸಿಲುಕಿ ನಿರ್ಮಲ್ ಸೇನ್ ಹುತಾತ್ಮನಾದ.. |
ಆದರೆ, ಸೂರ್ಯಸೇನ್ ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು..!! |
ಸೂರ್ಯಸೇನ್, ಎಷ್ಟೋ ದಿನ ಬ್ರಿಟಿಷರಿಗೆ ಸಿಂಹಸ್ವಾಪ್ನವಾಗಿಯೇ ಉಳಿದಿದ್ದ.. ಆದರೆ ದೇಶದ್ರೋಹಿಯೊಬ್ಬ ಅವನ ಇರುವಿಕೆಯ ಸುಳಿವು ಕೊಟ್ಟಕ್ಷಣ, ಬ್ರಿಟಿಷರು ಸೂರ್ಯಸೆನನನ್ನು ಬಂಧಿಸಿಬಿಟ್ಟರು..!! |
ಜೊತೆಗೆ, ಒಬ್ಬ ಕ್ರಾಂತಿಕಾರಿ ಆ ದ್ರೋಹಿಯನ್ನೂ ಕೊಂದುಬಿಟ್ಟ..ಆದರೆ ಆ ಕ್ರಾಂತಿಕಾರಿ ಯಾರು ಅಂತ ಕಡೆಗೂ ಪೊಲೀಸರಿಗೆ ಗೊತ್ತಾಗ್ಲಿಲ್ಲ..ಯಾಕಂದ್ರೆ, ಕೊಲೆಯಾದ ನೇತ್ರಸೇನನ ಹೆಂಡತಿ ಸೂರ್ಯಸೆನನನ್ನು ಅಪಾರವಾಗಿ ಗೌರವಿಸುತ್ತಿದ್ದಳು.ಹೀಗಾಗಿ ತನ್ನ ಗಂಡ ದುಡ್ಡಿಗಾಗಿ ಮಾಡಿದ ನಾಡದ್ರೋಹಕ್ಕೆ ಅವಳೂ ತಪ್ತಳಾಗಿದ್ದಳು. ಪೊಲೀಸರು ಆಕೆಯನ್ನು ಎಷ್ಟೇ ಹಿಮ್ಸಿಸಿದರೂ, ತನ್ನ ಪತಿಯ ಕೊಲೆ ಮಾಡಿದವನ ಹೆಸರನ್ನ ಆಕೆ ಹೇಳಲೇ ಇಲ್ಲ.. ಇಂತಹ ಸ್ತ್ರೀಯರಿಂದಲೇ ಭಾರತ ಇನ್ನೂ ಉಸಿರಾಡುತ್ತಿದೆ..!!!! |
ಮತ್ತೊಬ್ಬ ನಾಯಕ ಗಣೇಶ್ ಘೋಷ್ ನನ್ನು ಬಂಧಿಸಲಾಯಿತು.ಅವನ ವಿಚಾರಣೆಯೂ ನಡೆದು, ಅವನಿಗೆ ಅಂಡಮಾನಿನ ಭಯಾನಕ "ಕರಿನೀರಿನ"ಶಿಕ್ಷೆಗೆ ಗುರಿಮಾಡಲಾಯಿತು.. |
ಇಷ್ಟೆಲ್ಲದರ ನಡುವೆ, ಅನಂತ, ಲೋಕನಾಥ,ಕಲ್ಪನಾ ಏನಾದ್ರು..???? |
ಬಾಲಕ ಹರಿಪಾದ ಮಹಾಜನ್ ಎಲ್ಲಿ ಅಡಗಿದ್ದ..?????!!!! |
[ಮುಂದಿನ ಭಾಗದಲ್ಲಿ] |
[ ಉಳಿದೆರಡು ಭಾಗಗಳು, |
ಭಾಗ-೧ - "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೧ |
ಭಾಗ-೩ - "ಚಿತ್ತಗಾಂಗ್"ನಲ್ಲೊಂದು ಸ್ವಾತಂತ್ರ್ಯ"ಸೂರ್ಯ"ನ ಉದಯ..ಭಾಗ-೩ |
(ಚಿತ್ರಕೃಪೆ -- http://shantigrouprealhistory.blogspot.com ) |
Posted by ಭೀಮ-'ಮಹಾಭಾರತೀ'ಯ at 09:11 No comments: |
ಮಿಡ್ನಾಪುರದಲ್ಲಿ ಕ್ರಾಂತಿಯ ಕಲರವ.. |
ಪ್ರದ್ಯೋತ ಕುಮಾರ ಭಟ್ಟಾಚಾರ್ಯ |
ಬಂಗಾಳದ ತೋಟದಿಂದ, ತಾಯಿ ಭಾರತಿಗೆ ಪೂಜಿತಗೊಂಡ ಕ್ರಾಂತಿಯ ಹೂವುಗಳು ಅಸಂಖ್ಯ. |
ಅಂಥಾ ಒಬ್ಬ ಯುವಕನ ಸ್ಮರಣೆ ಇದು. |
ಮಿಡ್ನಾಪುರ ಅನ್ನೋದು ಬಂಗಾಳದ ಒಂದು ಜಿಲ್ಲೆ. "ಅನುಶೀಲನ ಸಮಿತಿ"ಯ ಪ್ರಭಾವದಿಂದ ಅನೇಕ ಯುವಕ ಕ್ರಾಂತಿಕಾರಿಗಳು ಅಲ್ಲಿ ಬೆಳೆದಿದ್ರು.. |
ಮಿಡ್ನಾಪುರದಲ್ಲಿ ಇದ್ದ ಆಂಗ್ಲ ಅಧಿಕಾರಿಗಳು ಅತಿಕ್ರೂರತನದಿಂದ ಆಳ್ವಿಕೆ ನಡೆಸ್ತಿದ್ರು. |
ಅಲ್ಲಿನ ಮ್ಯಾಜಿಸ್ಟ್ರೇಟ್ ಗಳಂತೂ, ಕ್ರಾಂತಿಕಾರಿಗಳ ಮೇಲೆ ಕೇಸುಗಳನ್ನ ಹಾಕಿ, ವಿವಿಧ ಶಿಕ್ಷೆಗಳನ್ನ ವಿಧಿಸ್ತಿದ್ರು. |
ಹೀಗಾಗಿಯೇ, ಮಿಡ್ನಾಪುರದ ಯುವಕರು ಆಲ್ಲಿನ ಬ್ರಿಟಿಷರಿಗೆ ಒಂದು ಬಿಸಿ ಮುಟ್ಟಿಸಿದರು. ತಮ್ಮ ಜಿಲ್ಲೆಗೆ ಒಬ್ಬ ಭಾರತೀಯನನ್ನು ಮ್ಯಾಜಿಸ್ಟ್ರೇಟ್ ಮಾಡೋ ವರೆಗೂ, ಉಳಿದ ಆಂಗ್ಲ ಮ್ಯಾಜಿಸ್ಟ್ರೇಟ್ ಗಳನ್ನ ಕೊಲ್ತಿವಿ ಅಂತ.. |
ಬ್ರಿಟಿಷರು ಇದನ್ನು ಅಷ್ಟೊಂದು ಪರಿಗಣಿಸಲಿಲ್ಲ. |
ಆಗ ಅಲ್ಲಿಗೆ 'ಜೇಮ್ಸ್ ಪ್ಯಾಡಿ' ಅನ್ನೋನು ಮ್ಯಾಜಿಸ್ಟ್ರೇಟ್ ಆಗಿ ಬಂದ. ಪ್ರತಿಜ್ಞೆ ಮಾಡಿದ್ದ ಕ್ರಾಂತಿಕಾರಿಗಳು, ಅದೊಂದು ಸಮಾರಂಭದಲ್ಲಿ, ಅತಿಥಿಯಾಗಿ ಬಂದಿದ್ದ ಅವನನ್ನು ಗುಂಡು ಹಾರಿಸಿ ಕೊಂದೇ ಬಿಟ್ಟರು. ಬ್ರಿಟಿಷರು ಕಲ್ಕತ್ತೆಯಿಂದ ವೈದ್ಯರನ್ನು ಕರೆಸಿದರು. ವೈದ್ಯರು ಪ್ಯಾಡಿ ಯಾ ದೇಹದಿಂದ ಗುಂಡುಗಳನ್ನು ಹೊರತೆಗೆದರೂ, ಅವನನ್ನು ಬದುಕಿಸಲಾಗಲಿಲ್ಲ.. ಯುವಕರ ನಿಲುವು ಸ್ಪಷ್ಟವಾಗಿತ್ತು. ಆಂಗ್ಲರು ಈಗ ಸ್ವಲ್ಪ ಚಿನ್ತಿಸಲಾರಮ್ಭಿಸಿದರು.. |
ಆನಂತರ 'ಡಾಗ್ಲಾಸ್' ಎಂಬ ಆಂಗ್ಲನನ್ನು ಮತ್ತೆ ಮ್ಯಾಜಿಸ್ಟ್ರೇಟ್ ಆಗಿ ನಿಯೋಜಿಸಿದರು.. ಆತ ಮೊದಲಿಂದಲೂ ಹೆದರಿದ್ದ. |
ಅದೊಮ್ಮೆ "ಡಿಸ್ಟ್ರಿಕ್ಟ್ ಬೋರ್ಡ್" ನ ಸಭೆ ಇತ್ತು. ಸಂಜೆಯವರೆಗೂ ಶಾಂತಿಯುತವಾಗಿಯೇ ಇತ್ತು. ಆದರೆ ಗಂಟೆ ೫ ಆಗುತ್ತಿದ್ದಂತೆ ಇಬ್ರು ಯುವಕರು, 'ಡಾಗ್ಲಾಸ್' ನ ಹತ್ರ ಬಂದ್ರು. ನೋಡುನೋಡುತ್ತಲೇ ಆ ಆಂಗ್ಲನ ಮೇಲೆ ಗುಂಡು ಹಾರಿಸಲಾಯಿತು..ಆ ಅಧಿಕಾರಿ ಧರೆಗುರುಳಿದ. |
ತಕ್ಷಣ ಇಬ್ರೂ ಯುವಕರು ಓಡಿ ಹೋದರು. ಒಬ್ಬ ಅಲ್ಲೇ ಇದ್ದ ಪಾರ್ಕಿನಲ್ಲಿ ಅಡಗಿ ಕುಳಿತ. ಮತ್ತೊಬ್ಬ ಹತ್ತಿರದ ಲಾಡ್ಜ್ ಒಳಗೆ ನುಸುಳಿ ಹೋದ. |
ಪಾರ್ಕಿನ ಒಳಗೆ ಬಚ್ಚಿಟ್ಟುಕೊಂಡ ಯುವಕ ಸುಲಭವಾಗಿ ಬ್ರಿಟಿಷರ ಕಣ್ಣಿಗೆ ಬಿದ್ದುಬಿಟ್ಟ. ಕೂಡಲೇ ಪಾರ್ಕಿಗೆ ಬಂದ ಬ್ರಿಟಿಶ್ ಪಡೆ ಅವನ ಮೇಲೆ ಗುಂಡಿನ ದಾಳಿ ನಡೆಸಿತು.. ಎಷ್ಟೇ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆ ಹುಡುಗನಿಗೆ ಗುಂಡುಗಳು ತಗುಲಿದವು. ಕೆಳಗೆ ಬಿದ್ದ ಆತನನ್ನು ಆಂಗ್ಲರು ಸೆರೆ ಹಿಡಿದರು.. |
ಅವನ ಹೆಸರು "ಪ್ರದ್ಯೋತ ಕುಮಾರ ಭಟ್ಟಾಚಾರ್ಯ".. |
ಗುಂಡಿನಿಂದ ಬಳಲಿದ್ದ 'ಡಾಗ್ಲಾಸ್' ಬದುಕಿ ಉಳಿಯಲಿಲ್ಲ.. ಇತ್ತ ಸೆರೆಮನೆಯಲ್ಲಿ 'ಪ್ರದ್ಯೋತ'ನಿಗೆ ಅವನ ಸಹಚರರ ಬಗ್ಗೆ ಸುಳಿವು ನೀಡಬೇಕೆಂದು ಚಿತ್ರ-ವಿಚಿತ್ರ ಹಿಂಸೆ ನೀಡಲಾಯಿತು. ದೇಶಕ್ಕಾಗಿ ಎಲ್ಲ ನೋವನ್ನೂ ಸಹಿಸಿಕೊಂಡನೆ ಹೊರತು, ಯಾರ ಹೆಸರನ್ನೂ ಹೇಳಲಿಲ್ಲ..!! |
ಕೊನೆಗೆ ವಿಚಾರಣೆಯ ನಂತರ "ಪ್ರದ್ಯೋತ"ನಿಗೆ, ಮರಣದಂಡನೆಯ ಶಿಕ್ಷೆ ವಿಧಿಸಲಾಯಿತು. 1933 ಜನವರಿ 12 ರಂದು ಆತನನ್ನು ನೇಣಿಗೇರಿಸಿದರು.. |
ಆದರೂ ಆಂಗ್ಲರು ಮತ್ತೊಮ್ಮೆ "ಬರ್ಗ್' ಎಂಬ ಮತ್ತೊಬ್ಬನನ್ನು ಮಾಡಿದರು. |
ತಾವೂ ಅಷ್ಟೇ ಬಲವಂತರು ಅಂತ, ಪಟ್ಟು ಹಿಡಿದ ಕ್ರಾಂತಿಕಾರಿಗಳು ಆ ಅಧಿಕಾರಿಯನ್ನೂ ಕೊಂದರು. |
ಆ ಕಾರಣಕ್ಕೆ "ನಿರ್ಮಲ್ ಜೀವನ ಘೋಷ್", "ಬ್ರಿಜ್ ಕಿಶೋರ್ ಚಕ್ರವರ್ತಿ", "ರಾಮಕೃಷ್ಣ ರೈ" ಈ ಮೂವರನ್ನೂ ಗಲ್ಲಿಗೇರಿಸಲಾಯಿತು.. |
ಕಡೆಗೂ ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳ ಬೇಡಿಕೆಯಂತೆ, ಮುಂದೆ ಭಾರತೀಯನನ್ನೇ ಮಾಡಿದರು. ಅಲ್ಲಿಗೆ ಆ ಎಲ್ಲ ಹುತಾತ್ಮರ, ಕ್ರಾಂತಿಕಾರಿಗಳ ಗೆಲುವಾಗಿತ್ತು.. |
ಸ್ನೇಹಿತರೆ, ನಮಗೆ ಸ್ವಾತಂತ್ರ್ಯ ಪುಗಸಟ್ಟೆ ಸಿಕ್ಕಿಲ್ಲ.. ನಮ್ಮೀ ಸ್ವಾತಂತ್ರದ ಮಹಲು, ಅದೆಷ್ಟೋ ಕ್ರಾಂತಿಕಾರಿಗಳ ಬಲಿದಾನದ ಭದ್ರ ಅಡಿಪಾಯದ ಮೇಲೆ ನಿಂತಿದೆ ಅನ್ನೋದು, ಬಹಳಷ್ಟು ಮಂದಿಗೆ ಗೊತ್ತಾಗಲೇ ಇಲ್ಲ.. ಯಾಕಂದ್ರೆ, ಅಂಥಾ ಹುತಾತ್ಮರನ್ನು ಪರಿಚಯಿಸುವ ಕೆಲಸ, ಯಾವ ಶಾಲಾ ಪುಸ್ತಕಗಳೂ ಮಾಡಲೇ ಇಲ್ಲ... |
ಅಣುಮಾತ್ರವೂ, ಕ್ಷಣಮಾತ್ರವೂ ತಮ್ಮ ಬದುಕಿನ ಬಗ್ಗೆ ಯೋಚಿಸದೆ, ಮಾತೃಭೂಮಿಯ ಸೇವೆಗಾಗಿ ಸಂಪೂರ್ಣವಾಗಿ ಅರ್ಪಿಸಿಕೊಂಡ ಯುವಕರೆಷ್ಟೋ.. ವಿದ್ಯಾರ್ಥಿಗಳೆಷ್ಟೋ.. |
ಅವರೆಲ್ಲರ ತ್ಯಾಗವನ್ನು ಮರೆತಿದ್ದರ ಪರಿಣಾಮವೇ, ಇವತ್ತಿನ ದೇಶದ ಈ ಸ್ಥಿತಿ..!!! |
ಆ ಹುತಾತ್ಮ, "ಪ್ರದ್ಯೋತ"ನಿಗೊಂದು ಭಾವಪೂರ್ಣ ನಮನ.. |
Posted by ಭೀಮ-'ಮಹಾಭಾರತೀ'ಯ at 07:20 1 comment: |
ಸೂರ್ಯಸೇನ್ - ಮಾಸ್ಟರ್ ದಾ.. |
ಗಣೇಶ್ ಘೋಷ್ |
ಅಂಬಿಕಾ ಚಕ್ರವರ್ತಿ |
'ಚಿತ್ತಗಾಂಗ್' ಅನ್ನೋ ಹೆಸರು ಕೇಳಿದರೆ ಸಾಕು, ಸ್ವಾತಂತ್ರ್ಯ ಇತಿಹಾಸವನ್ನು ಓದಿದ ಪ್ರತಿಯೊಬ್ಬರಿಗೂ ಮೈನವಿರೇಳುತ್ತದೆ. ಅಂಥಾ ಚಮತ್ಕಾರ ನಡೆದ ಸ್ಥಳ ಅದು. ಕ್ರಾಂತಿಕಾರಿಗಳ, ದೇಶಪ್ರೇಮಿಗಳ ಪುಣ್ಯಕ್ಷೇತ್ರವದು.ಆದರೆ, ದೇಶ ವಿಭಜನೆಯಾದ ಮೇಲೆ, ಈಗ ಈ ಜಾಗ 'ಬಾಂಗ್ಲಾದೇಶ'ದಲ್ಲಿದೆ.. |
ಅವನ ಹೆಸರು 'ಸೂರ್ಯಸೇನ್'. ವೃತ್ತಿಯಿಂದ ಶಿಕ್ಷಕ.. ಎಲ್ಲ ವಿದ್ಯಾರ್ಥಿಗಳ ಪ್ರೀತಿಯ 'ಮಾಸ್ಟರ್ ದಾ'.ಹುಟ್ಟಿದ್ದು ನೌಪರ ಎಂಬ ಗ್ರಾಮದಲ್ಲಿ, 1894 ರಲ್ಲಿ...ಅದಾಗಲೇ, ಬಂಗಾಳದ ಪ್ರಸಿದ್ಧ ಸಂಘಟನೆಗಳಾದ 'ಅನುಶೀಲನ ಸಮಿತಿ' ಮತ್ತು 'ಜುಗಾಂತರ' ದಿಂದ ಪ್ರಭಾವಿತನಾಗಿದ್ದ.. |
ಭಾರತದ ಸ್ವಾತಂತ್ರ್ಯ, ಚಿತ್ತಗಾಂಗ್ ಗ್ರಾಮದಿಂದಲೇ ಪ್ರಾರಂಭವಾಗಬೇಕೆಂಬ ಮಹತ್ವಾಕಾಂಕ್ಷೆ ಹೊದಿದ್ದ.. ಅದಕ್ಕಾಗಿ ಮಾಸ್ಟರ್ ದಾ, ಸಂಘಟನೆಯನ್ನೂ ಶುರು ಮಾಡಿದ್ರು.. ಶಿಕ್ಷಕರಾಗಿದ್ದರಿಂದ ಸಂಘಟನೆ ಮಾಡೋದು ಅಷ್ಟೇನೂ ಕಷ್ಟ ಆಗ್ಲಿಲ್ಲ. ಶಾಲೆಯಲ್ಲಿನ, ಕೇವಲ 14-15 ವರ್ಷದೊಳಗಿನ ಪುಟ್ಟ ವಿದ್ಯಾರ್ಥಿಗಳೂ ಸೂರ್ಯಸೇನನ ಜೊತೆ ಸಹಕರಿಸಲು ಮುಂದೆ ಬಂದ್ರು.. |
ಸುಮಾರು ೬೦ ವಿದ್ಯಾರ್ಥಿಗಳ ದೊಡ್ಡ ಸೈನ್ಯವೆ ತಯಾರಾಯ್ತು. |
ಗಣೇಶ್ ಘೊಶ್,ಅನಂತ ಸಿಂಹ,ನಿರ್ಮಲ್ ಸೇನ್,ಲೊಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವದ್ದೆದಾರ್, ಕಲ್ಪನಾ ದತ್ತ ಇವರ ಮುನ್ದಾಳತ್ವದಲ್ಲಿ ಅನೆಕ ಪಡೆಗಳನ್ನು ಸೂರ್ಯಸೇನ್ ರಚಿಸಿದ. ಹರಿಗೊಪಾಲ್ ಬಲ್(ಟೆಗ್ರ), ದೇವಪ್ರಸಾದ್ ಗುಪ್ತಾ, ಆನಂದಪ್ರಸಾದ ಗುಪ್ತಾ, ಹರಿಪಾದ ಚಕ್ರವರ್ತಿ, ಜಿಬನ್ ಘೋಶಾಲ್ ಮುಂತಾದ ಉತ್ಸಾಹಿ ತರುಣರು ಆ ಪಡೆಗಳಲ್ಲಿದ್ರು. |
ಪ್ರತಿ ಪಡೆಗೂ ಒಂದೊಂದು ಕೆಲಸ ನೀಡಲಾಯಿತು. |
ಪ್ರೀತಿಲತಾ ವದ್ದೆದಾರ್ |
ಲೋಕನಾಥ್ ಬಲ್ |
ಅದು ಎಪ್ರಿಲ್ 18 - 1930. ಸೂರ್ಯಸೇನನ ಪ್ಲಾನಿನಂತೆ ಅವತ್ತು ರಾತ್ರಿ 10 ಗಂಟೆಗೆ ಸರಿಯಾಗಿ, ಒಮ್ಮೆಲೇ ಚಿತ್ತಗಾಂಗ್ ನ ಎಲ್ಲ ಆಂಗ್ಲ ಕಛೇರಿಗಳ ಮೇಲೆ ದಾಳಿ ಮಾಡಲಾಯಿತು.. |
ಪೂರ್ವ ಯೋಜಿತದಂತೆ, ಗಣೇಶ್ ಘೊಶನ ತಂಡ ಪೊಲಿಸ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡರೆ, ಲೋಕನಾಥನ ತಂಡ 'ಅರೆಸೈನ್ಯ'ದ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿತು. ಅಂಬಿಕಾ ಚಕ್ರವರ್ತಿಯ ಜೊತೆಗಾರರು, ಚಿತ್ತಗಾಂಗ್ ಗೆ ಕೂಡುವ ಎಲ್ಲ ರೈಲ್ವೆ ಮಾರ್ಗವನ್ನು ಭಗ್ನಗೊಳಿಸಿದರು. ನಿರ್ಮಲ್ ಸೇನ್ ಟೆಲಿಗ್ರಾಫ್ ಸಂಪರ್ಕವನ್ನು ಕಡಿತಗೊಳಿಸಿದ. |
ಈ ಎಲ್ಲ ಕಾರ್ಯಗಳ ನಂತರ, ಸೂರ್ಯಸೇನನ ನಾಯಕತ್ವದಲ್ಲಿ, ಪೋಲಿಸ್ ಶಸ್ತ್ರಾಗಾರದ ಮುಂದೆ ಎಲ್ಲರೂ ಸೇರಿ, ಅಲ್ಲೇ ಭಾರತದ ಬಾವುಟ ಹಾರಿಸಿ, "ವಂದೇ ಮಾತರಂ" ಹೇಳಿ, ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು.. |
ಆನಂತರ, ಚಿತ್ತಗಾಂಗ್ ನ ಪರ್ವತಶ್ರೇಣಿಗಳಲ್ಲಿ ಕ್ರಾಂತಿಕಾರಿಗಳು ಅಡಗಿಕೊಂಡರು. ಆದರೆ ಸುಳಿವನ್ನು ಹಿಡಿದು ಬೆನ್ನುಹತ್ತಿದ ಆಂಗ್ಲರು, ಇಡೀ ಆ ಪರ್ವತವನ್ನು ಸುತ್ತುವರೆದರು. |
ಸುಮಾರು 80 ಬ್ರಿಟಿಶ್ ಪಡೆಗಳ ಜೊತೆಗೆ, ಆ ಪುಟ್ಟ ವಿದ್ಯಾರ್ಥಿಗಳ ಪಡೆ ಗುಂಡಿನ ದಾಳಿ ನಡೆಸಿತು.. 12 ಜನ ಆ ಹೋರಾಟದಲ್ಲಿ ಮೃತರಾದರು. ಕೆಲವರು ಕಲ್ಕತ್ತೆಗೆ ಓಡಿಹೋದರು. ಸೂರ್ಯಸೇನ್ ಮಾತ್ರ ವೇಷಮರೆಸಿಕೊಂಡಿದ್ದ..!! |
ಇದಾದ ಮೇಲೆ, ಅಜ್ಞಾತ ಮನೆಯೊಂದರಲ್ಲಿ ಅಡಗಿದ್ದಾಗ, ಬ್ರಿಟಿಷರ ದಾಳಿಗೆ 'ನಿರ್ಮಲ್ ಸೇನ್' ಬಲಿಯಾದ. ನಂತರ ಪ್ರೀತಿಲತಾ, ಊರಿನ "ಯುರೋಪೆಯನ್ ಕ್ಲಬ್' ಮೇಲೆ ದಾಳಿ ನಡೆಸಿ, ದುಷ್ಟ ಆಂಗ್ಲರನ್ನು ಕೊಂದು, ತಾನೂ ಹುತಾತ್ಮಳಾದಳು.. |
ಆದರೂ ಕೊನೆಗೆ, 'ನೇತ್ರ ಸೇನ್' ಎಂಬ ದ್ರೋಹಿಯ ಕಾರಣದಿಂದ, ಸೂರ್ಯಸೇನ್ ಬಂಧಿತನಾಗಿಬಿಟ್ಟ.. ಆ ಸಿಟ್ಟಿಗೆ, ಉಳಿದ ಕ್ರಾಂತಿ ಯುವಕರು ಆ ಮನೆಮುರುಕನನ್ನು ಕೊಂದು, ದೇಶದ್ರೋಹಕ್ಕೆ ಸಾವೇ ಶಿಕ್ಷೆ ಅನ್ನೋದನ್ನ ತೋರಿಸಿದರು.. |
ಬಂಧಿತ ಸೂರ್ಯಸೇನನ ವಿಚಾರಣೆ ನಡೆದು, ಅವನಿಗೆ ಮತ್ತು ಜುಗಾಂತರ ಪಾರ್ಟಿಯ "ತಾರಕೆಶ್ವರ ದಸ್ತಿದಾರ್' ಇಬ್ರಿಗೂ ಗಲ್ಲು ಶಿಕ್ಷೆ ಪ್ರಕಟಿಸಲಾಯಿತು.. |
ಜನವರಿ 12 ರಂದು ಅವರನ್ನು ನೇಣು ಹಾಕಲಾಯಿತು.. |
ಆದರೆ, ಗಲ್ಲಿಗೆರಿಸುವುದಕ್ಕಿಂತ ಮುಂಚೆ, ಸೂರ್ಯಸೆನನನ್ನು ಅಮಾನುಷವಾಗಿ ಬ್ರಿಟಿಷರು ಹಿಂಸಿಸಿದರು.. |
ಹ್ಯಾಮರ್ ನಿಂದ ಅವನ ಹಲ್ಲುಗಳನ್ನು ಒಡೆದರು. ಕಟಿಂಗ್ ಪ್ಲೇಯರ್ ನಿಂದ ಅವನ ಉಗುರುಗಳನ್ನ ಕೀಳಲಾಯಿತು.. ತೊಡೆಯ ಸಂದಿಗಳಲ್ಲಿ ತಿವಿದರು. ಕೈಕಾಲಿನ ಕೀಲುಗಳನ್ನ ಮುರಿದರು. ಇಂಥಾ ಹಿಂಸೆಯಿಂದ ಮೂರ್ಚೆ ಹೋಗಿದ್ದ ಸೂರ್ಯಸೇನನನ್ನು ಅನಾಮತ್ತಾಗಿ ಎಳೆದುಕೊಂಡು ಬಂದು ನೇಣಿಗೇರಿಸಿದರು. |
ಸಾವಿಗೂ ಮುಂಚೆ, ಆತ ತನ್ನ ಯುವಕರಿಗೆ ಪತ್ರವೊಂದನ್ನು ಬರೆದಿದ್ದ.. |
" ಸಾವು ನನ್ನನ್ನು ಆಲಂಗಿಸುತ್ತಿದೆ.. ಆ ಅನಂತದೆಡೆಗೆ ನಾನು ಹೊರಟಿದ್ದೇನೆ.. ಮಾತೃಭೂಮಿಗೆ ಪ್ರಾಣ ಕೊಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ, ನಾನು ನಿಮಗೆ ನೀಡುವ ಆದೇಶ ಒಂದೇ. ಅದು ನನ್ನ ದೇಶದ "ಸ್ವರಾಜ್ಯ"ದ ಕನಸು. ಚಿತ್ತಗಾಂಗ್ ನ ಕ್ರಾಂತಿಯನ್ನು ಎಂದಿಗೂ ಮರೆಯಬೇಡಿ.. ನಿಮ್ಮ ಮನದಲ್ಲಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಎಲ್ಲ ವೀರರ ಹೆಸರನ್ನು ರಕ್ತದಲ್ಲಿ ಬರೆದುಕೊಳ್ಳಿರಿ.. ಮತ್ತು ಸ್ವಾತಂತ್ರ್ಯ ಸಿಗೋವರೆಗೂ ಹೋರಾಟ ನಿಲ್ಲಿಸದಿರಿ.." |
ಹೋರಾಟದಲ್ಲಿ ಹುತಾತ್ಮರಾದ - ಟೆಗ್ರ( ಹರಿಗೋಪಾಲ್ ಬಲ್) ಮತ್ತು ಮೋತಿ ಕನುನ್ಗೋ. |
ಹುತಾತ್ಮರಾದ - ನರೇಶ್ ರೋಯ್, ತ್ರಿಪುರ ಸೇನ್, ವಿಧು ಭಟ್ಟಾಚಾರ್ಯ. |
ಹುತಾತ್ಮರಾದ ಪ್ರಭಾಸ್ ಬಲ್, ಶಶಾಂಕ್ ದತ್ತ, ನಿರ್ಮಲ ಲಾಲಾ. |
ಹುತಾತ್ಮರಾದ ಜಿತೇಂದ್ರ ದಾಸಗುಪ್ತ, ಮಧುಸೂದನ್ ದತ್ತ, ಪುಲಿನ್ ವಿಕಾಸ್ ಘೋಷ್.. |
ಅವನ ಶಿಷ್ಯರೆನೋ, ಹುತಾತ್ಮರ ಹೆಸರನ್ನು ಸ್ಮರಿಸಿ, ಅದರಂತೆ ಹೋರಾಡಿ ದೇಶವನ್ನು ಬಿಡುಗಡೆಗೊಳಿಸಿದರು.. |
ಆದರೆ, ನಾವು ನಮ್ಮ ಹೃದಯದಾಳದಲ್ಲಿ, ಆ ತ್ಯಾಗಮಯಿಗಳ ಹೆಸರನ್ನು ಬರೆದುಕೊಳ್ಳಲೆ ಇಲ್ಲವಲ್ಲ..!!!!!!! |
ಇದೇ ಚಿತ್ತಗಾಂಗ್ ಹೋರಾಟವನ್ನು ಆಧರಿಸಿ ಆಶುತೋಷ್ ಗೊವಾರಿಕರ್ ಅವ್ರ ನಿರ್ದೇಶನದಲ್ಲಿ, "ಖೇಲೇ ಹಂ ಜೀ ಜಾನ್ ಸೆ" ಎಂಬ ಅದ್ಭುತ ಚಿತ್ರ ತೆರೆಕಂಡಿತ್ತು. ಆದರೆ ಡಾನ್-2, ಬಾಡಿಗಾರ್ಡ್ ಮುಂತಾದ ಚಿತ್ರವನ್ನು ನೋಡುವ ನಮ್ಮ ಯುವಕರು ಇಂಥಾ ಅಪರೂಪದ ಚಿತ್ರವನ್ನು ಪ್ರೋತ್ಸಾಹಿಸಲಿಲ್ಲ.( ಅದೆಷ್ಟೋ ಮಂದಿಗೆ ಇಂಥಾ ಸಿನೆಮಾ ಇದೆ ಅನ್ನೋದೇ ಗೊತ್ತಿಲ್ಲ.) |
ಪತ್ನಿ ಸೀತೆಯಂತೆ ಪತಿಯ ಅನುಸರಿಸಬೇಕು: ಕೋರ್ಟ್ | Wife should follow goddess Sita Bombay High Court, ಪತ್ನಿ ಸೀತೆಯಂತೆ ಪತಿಯನ್ನು ಅನುಸರಿಸಬೇಕು: ಕೋರ್ಟ್ - Kannada Oneindia |
47 min ago ತುಮಕೂರು ಜೆಡಿಎಸ್ ನಾಯಕರ ಸಭೆ ಕರೆದ ದೇವೇಗೌಡರು! |
ಪತ್ನಿ ಸೀತೆಯಂತೆ ಪತಿಯ ಅನುಸರಿಸಬೇಕು: ಕೋರ್ಟ್ |
| Published: Wednesday, May 9, 2012, 10:56 [IST] |
ಮುಂಬೈ, ಮೇ 9: 'ಪತ್ನಿ ಸೀತಾಮಾತೆಯಂತೆ ಇರಬೇಕು. ವಿವಾಹಿತ ಮಹಿಳೆ ಆಕೆಯ ಆದರ್ಶವನ್ನು ಪಾಲಿಸುವಂತಾಗಬೇಕು' ಎಂದು ಡೈವೋರ್ಸ್ ಪ್ರಕರಣವೊಂದರಲ್ಲಿ ತೀರ್ಪು ನೀಡುತ್ತಾ ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. |
ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದ (SCI) ಉದ್ಯೋಗಿಯೊಬ್ಬರು ಕಾರ್ಯಭಾರದಿಂದ ಪೋರ್ಟ್ ಬ್ಲೇರಿಗೆ ವರ್ಗವಾಗಿದ್ದರು. ಆದರೆ ಅವರ ಪತ್ನಿ ತಾನು ಅಲ್ಲಿಗೆ ಬರೋಲ್ಲ ಎಂದು ವರಾತ ತೆಗೆದಿದ್ದರು. ಇದರಿಂದ ಬೇಸತ್ತ ಆ ಉದ್ಯೋಗಿಯು ಪತ್ನಿಯಿಂದ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. |
ಅದಕ್ಕೆ ಸ್ಪಂದಿಸಿದ ನ್ಯಾ. ಪಿಬಿ ಮಜೂಂದಾರ್ ಮತ್ತು ಅನೂಪ್ ಮೊಹ್ತಾ ಅವರ ನ್ಯಾಯಪೀಠ ಶ್ರೀರಾಮ ಚಂದ್ರ 14 ವರ್ಷ ವನವಾಸಕ್ಕೆ ತೆರಳಿದಾಗ ಸೀತೆ ಆತನನ್ನು ಅನುಸರಿಸಿದಳು. ಇತರೆ ಮಹಿಳೆಯರೂ ಇದರಿಂದ ಪಾಠ ಕಲಿಯೇಕಿದೆ ಎಂದು ನ್ಯಾಯಪೀಠ ಕಿವಿಮಾತು ಹೇಳಿದೆ. |
ಅರ್ಜಿದಾರ SCI ಉದ್ಯೋಗಿಯು ಮೂಲತಃ ಕೋಲ್ಕೊತ್ತಾದವರು. ಅವರು ಮುಂಬೈ ನಿವಾಸಿಯನ್ನು 2000 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಐದು ವರ್ಷ ಕಾಲ ಮುಂಬೈನಲ್ಲೇ ಉದ್ಯೋಗದಲ್ಲಿದ್ದ ಅರ್ಜಿದಾರ, ಆನಂತರ ಪೋರ್ಟ್ ಬ್ಲೇರಿಗೆ ವರ್ಗವಾದರು. ದಂಪತಿಗೆ 5 ವರ್ಷದ ಮಗಳು ಇದ್ದಾಳೆ. ಆಗ ಸಂಸಾರ ಸಮೇತ ಪೋರ್ಟ್ ಬ್ಲೇರಿಗೆ ಹೋಗೋಣ ಎಂದು ಪತಿ ಹೇಳಿದ್ದಕ್ಕೆ ಪತ್ನಿ ಸುತರಾಂ ಒಪ್ಪಲಿಲ್ಲ. ಅನ್ಯಮಾರ್ಗವಿಲ್ಲದೆ ಪತಿಮಹಾಶಯ ಸೀದಾ ಕೋರ್ಟ್ ಮೆಟ್ಟಿಲೇರಿದರು. |
ಮಗುವಿನ ಭವಿಷ್ಯದ ದೃಷ್ಟಿಯಲ್ಲಿ ಕೋರ್ಟ್, ಪತಿ-ಪತ್ನಿ ನಡುವೆ ಸಂಧಾನಕ್ಕೆ ಯತ್ನಿಸಿದೆ. ಆದರೆ ಮರುಸಾಂಗತ್ಯಕ್ಕೆ ಮಹಿಳೆ ಬಿಲ್ ಕುಲ್ ಒಪ್ಪದ ಕಾರಣ ವಿಚಾರಣೆಯನ್ನು ಕೋರ್ಟ್ ಜೂನ್ 21ಕ್ಕೆ ಮುಂದೂಡಿದೆ. |
ಇನ್ನಷ್ಟು ವಿಚ್ಛೇದನ ಸುದ್ದಿಗಳುView All |
ವಿಚ್ಛೇದನಕ್ಕೆ ಅರ್ಜಿಹಾಕಿದ ಜ್ಯೂನಿಯರ್ ಡೊನಾಲ್ಡ್ ಟ್ರಂಪ್ ದಂಪತಿ |
ಅತ್ಯಾಚಾರಿಯನ್ನು ಮದುವೆಯಾಗಿ, 'ತಲಾಖ್' ಹೇಳಿಸಿಕೊಂಡ ನತದೃಷ್ಟೆ! |
ವಿಚ್ಛೇದನ ಮದುವೆ ಮಹಿಳೆ ಸಂಭೋಗ ಹೈಕೋರ್ಟ್ ಕ್ರೈಂ divorce marriage high court crime beat |
The Bombay High Court on Tuesday (May 8) observed that married women should take a cue from goddess Sita, who followed her husband Lord Ram even during his exile, while hearing a divorce petition filed by a man on ground that his wife is unwilling to relocate to his new place of work. The court has posted the matter for further hearing on June 21. |
ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು | ThatsKannada.com - Winter guests arrive at Shirahatti tank - Kannada Oneindia |
36 min ago ಇನ್ನು 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕು |
56 min ago ಬಿ.ಎಸ್.ಯಡಿಯೂರಪ್ಪಗೆ ಸೇರಿ ಬಿಜೆಪಿ ನಾಯಕರು ಪೊಲೀಸರ ವಶಕ್ಕೆ |
ಸಾವಿರ ಮೈಲುಗಳಿಂದ ಶಿರಹಟ್ಟಿಗೆ ಬಂದಾರೊ ಚಳಿಗಾಲದ ನಂಟರು |
ಶಿರಹಟ್ಟಿಯ ಕೆರೆಗೆ ನೆರೆ ದೇಶಗಳಿಂದ ಸಾವಿರಾರು ಪಕ್ಷಿಗಳು |
ಶಿರಹಟ್ಟಿ : ಸಾವಿರಾರು ಮೈಲು ದೂರದಿಂದ ವಿವಿಧ ಪ್ರಬೇಧದ ನೂರಾರು ಪಕ್ಷಿಗಳು ಬದಾಮಿ ಸಮೀಪದ ಶಿರಹಟ್ಟಿಗೆ ಬಂದಿವೆ. ಶಿರಹಟ್ಟಿಯಲ್ಲೀಗ ಪಕ್ಷಿಗಳದೇ ಮಾತು-ಕಥೆ. |
ಟಿಬೆಟ್, ಲಡಾಕ್, ಬಾಂಗ್ಲಾ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ ಮತ್ತಿತರ ಪ್ರದೇಶಗಳಿಂದ ಪಕ್ಷಿಗಳು ಶಿರಹಟ್ಟಿಗೆ ವಲಸೆ ಬಂದಿದ್ದು , ಪಕ್ಷಿಪ್ರಿಯರನ್ನು ಸೆಳೆದಿವೆ. ಲಕ್ಷ್ಮೇಶ್ವರದಿಂದ 11 ಕಿಮೀ, ಗದಗದಿಂದ 23 ಕಿಮೀ ಇರುವ ಶಿರಹಟ್ಟಿ ಬಳಿಯ 120 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಈ ಪಕ್ಷಿಗಳ ಬಿಡಾರ. ಸುಮಾರು 30 ಪ್ರಬೇಧದ ಪಕ್ಷಿಗಳು ಇಲ್ಲಿಗೆ ಬಂದಿವೆ ಎನ್ನುತ್ತಾರೆ ಡಿಎಫ್‌ಒ ವಿಜಯ್ ಮೋಹನ್ ರಾಜ್. |
ಪಕ್ಷಿಗಳು ಬೀಡು ಬಿಟ್ಟಿರುವ ಈ ಕೆರೆ ಕೂಡ ಪರಿಸರ ಮಾಲಿನ್ಯದ ಕಬಂಧ ಹಸ್ತಕ್ಕೆ ಸಿಲುಕುತ್ತಿದ್ದು , ಸಮೀಪದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿಷ ಕೆರೆಯನ್ನು ಸೇರುತ್ತಿದೆ. ಹಳ್ಳಿಯ ಜನರು ಬಟ್ಟೆ ಒಗೆಯಲು, ಜಾನುವಾರುಗಳ ಮೈ ತೊಳೆಯುವುದು ಕೂಡ ಇಲ್ಲಿಯೇ. |
ಸ್ವಲ್ಪ ದಿನಗಳ ಹಿಂದೆ ಕೆಲವು ಪಕ್ಷಿಗಳು ಕೆರೆಯ ಸಮೀಪ ಸತ್ತು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಗೆಗೆ ಬಾಯಿ ಬಿಡಲು ಸಿದ್ಧರಿಲ್ಲ . |
ಪ್ರಸ್ತುತ ಪಕ್ಷಿಗಳ ಸಂರಕ್ಷಣೆಯ ಕಟ್ಟೆಚ್ಚರದ ಕೆಲಸವನ್ನು ಸ್ಥಳೀಯರ ಸಂಘಟನೆಯಾದ ಗ್ರಾಮ ಅರಣ್ಯ ಸಮಿತಿ ವಹಿಸಿಕೊಂಡಿದೆ. ಕೆರೆಯ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪಕ್ಷಿಗಳ ವಲಸೆಗೆ ಅನುಕೂಲಕರ ಪರಿಸರ ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಕೆರೆಯನ್ನು ಪಕ್ಷಿಧಾಮವಾಗಿ ಪರಿವರ್ತಿಸುವ ಪ್ರಸ್ತಾಲವನೆಯನ್ನು ಸ್ಥಳೀಯ ಆಡಳಿತ ಸರ್ಕಾರದ ಮುಂದಿಟ್ಟಿದೆ. |
ಉಡುಪಿ: ಕಂಟೈನರ್ ಲಾರಿ ಚಾಲಕನೋರ್ವ ಮದ್ಯ ಸೇವಿಸಿ ಲಾರಿಯನ್ನು ಯದ್ವಾತದ್ವಾ ಓಡಿಸಿ ಆತಂಕ ಸೃಷ್ಟಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ-66ರ ಉಡುಪಿ ಸಮೀಪ ನಡೆದಿದೆ. |
ಕಂಟೈನರ್ ಲಾರಿ ಚಾಲಕ ಮದ್ಯದ ನಶೆಯಲ್ಲಿ ವೇಗ ತಡೆಗಾಗಿ ಮುಳ್ಳಿಕಟ್ಟೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಎಳೆದೊಯ್ದಿದ್ದಾನೆ. ಸುಮಾರು ನಾಲ್ಕು ಕಿ.ಮೀ ತನಕ ಬ್ಯಾರಿಕೇಡ್ ಎಳೆದು ತಂದ ಕಂಟೈನರ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಅರಾಟೆ ಸೇತುವೆ ತಡೆಗೋಡೆಗೂ ಢಿಕ್ಕಿಯಾಗಿದೆ. ಕೊಂಚ ಜೋರಾಗಿ ಡಿಕ್ಕಿಯಾಗಿದ್ದರೆ ಲಾರಿ ಸಮೇತ ಚಾಲಕ ನದಿಗೆ ಉರುಳುತ್ತಿದ್ದ ಎಂದು ಸ್ಥಳೀಯ ಮುಳ್ಳಿಕಟ್ಟೆ ನಿವಾಸಿ ಜಯರಾಮ್ ಆಲೂರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸಿ ಕ್ಯಾಬಿನ್ ಬುಕ್ ಮಾಡಿದ ಮಾಲೀಕ |
Subsets and Splits
No community queries yet
The top public SQL queries from the community will appear here once available.