text
stringlengths
0
61.5k
ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೈನರ್ ನಿಲ್ಲಿಸಲು ಆರಂಭದಲ್ಲಿ ಹರಸಾಹಸಪಟ್ಟಿದ್ದಾರೆ. ಕೊನೆಗೂ ಕಂಟೈನರ್ ಗಾಜಿಗೆ ಕಲ್ಲೆಸೆದು ರಿಕ್ಷಾಚಾಲಕರು ಮತ್ತು ಸ್ಥಳೀಯರು ಕಂಟೈನರ್ ನಿಲ್ಲಿಸಿದ್ದಾರೆ. ಹೆಮ್ಮಾಡಿಯ ಸರ್ಕಲ್ ಸಮೀಪ ಕಂಟೈನರ್ ತಡೆದ ಸಾರ್ವಜನಿಕರು ಚಾಲಕನನ್ನು ಹಿಡಿದು ಬಾರಿಸಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಕಂಟೈನರ್ ಲಾರಿಯಲ್ಲಿ ಬೈಹುಲ್ಲಿನ ಕಂತೆಗಳು ಇರುವುದು ನಮಗೆ ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಛತ್ತಿಸ್‌ಗಢ ನೋಂದಣಿಯ ಕಂಟೈನರ್ ನಲ್ಲಿ ಭತ್ತದ ಹುಲ್ಲು ಸಾಗಿಸಲಾಗುತ್ತಿತ್ತು. ಮಂಗಳೂರಿಗೆ ಸರಕು ಸಾಗಾಣಿಕೆಗಾಗಿ ಲಾರಿ ಬಂದಿರಬಹುದು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪಘಾತದಿಂದ ಜೀವ ಉಳಿಸಲು ಅಂಗಲಾಚಿದ ಯುವಕ, ಯುವತಿ
ಬಾಡಿಗೆ ಪಾವತಿಸದ ಅಂಗಡಿಗಳಿಗೆ ವರ್ಷದಿಂದ ಬೀಗ! | Prajavani
ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ನಷ್ಟ
Published: 13 ಜೂನ್ 2018, 18:07 IST
Updated: 13 ಜೂನ್ 2018, 18:07 IST
ಇಲ್ಲಿನ ಚಾಮರಾಜನಗರ ರಸ್ತೆಯಲ್ಲಿ 2014ನೇ ಸಾಲಿನಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ₹20 ಲಕ್ಷ ವೆಚ್ಚದಲ್ಲಿ 10 ಮಳಿಗೆ ಹಾಗೂ ಯಳಂದೂರು ರಸ್ತೆಯಲ್ಲಿ 2 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಂತೇಮರಹಳ್ಳಿ, ಹೆಗ್ಗವಾಡಿಪುರ, ದೇಶವಳ್ಳಿ, ಬಸವಟ್ಟಿ, ಕಾವುದವಾಡಿ ಹಾಗೂ ತೆಳ್ಳನೂರು ಗ್ರಾಮಗಳ ಸ್ಥಳೀಯರಿಗೆ ಮಾತ್ರ ಬಾಡಿಗೆ ನೀಡಲು ಟೆಂಡರ್ ಕರೆಯಲಾಗಿತ್ತು. ಪಂಚಾಯಿತಿ ಮೂಲಕ ಟೆಂಡರ್ ಕರೆದು ಮುಂಗಡ ಹಣವನ್ನು ಕಟ್ಟಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆದೇಶ ನೀಡಲಾಗಿತ್ತು. ಅದರಂತೆ ಹರಾಜಿನಲ್ಲಿ ಭಾಗವಹಿಸಿದವರು ಮುಂಗಡ ಹಣ ಕಟ್ಟಿ ₹9 ಸಾವಿರದಿಂದ ₹11 ಸಾವಿರದವರೆಗೆ ಪ್ರತಿ ಮಳಿಗೆಗೆ ಒಂದೊಂದು ರೀತಿ ಹಣ ನಿಗದಿ ಮಾಡಿ ಬಾಡಿಗೆ ಪಡೆದುಕೊಂಡಿದ್ದರು.
ಗ್ರಾಮ ಪಂಚಾಯಿತಿಯವರು ಅಂಗಡಿ ಬಾಡಿಗೆ ಪಡೆದ ಮಾಲೀಕರಿಂದ ಮುಂಗಡ ಹಣ ಪಾವತಿಸಿಕೊಂಡು ಮಾಲೀಕರ ಹೆಸರಿನಲ್ಲಿ ದಾಖಲೆ ಪಡೆದು ಖರಾರು ಪತ್ರ ಬರೆಸಿಕೊಡಬೇಕಾಗಿತ್ತು. ಆದರೆ, ಗ್ರಾಮ ಪಂಚಾಯಿತಿಯವರ ಉದಾಸೀನ ಹಾಗೂ ಬದಲಾದ ಅಭಿವೃದ್ಧಿ ಅಧಿಕಾರಿಗಳಿಂದ 2 ವರ್ಷಗಳಿಂದ ಅಂಗಡಿ ಮಾಲೀಕರು ಗ್ರಾಮ ಪಂಚಾಯಿತಿಗೆ ಬಾಡಿಗೆ ಪಾವತಿಸಿಲ್ಲ.
ಇದರಿಂದ ಗ್ರಾಮ ಪಂಚಾಯಿತಿಗೆ ಪ್ರತಿ ತಿಂಗಳಿಗೆ 10 ಮಳಿಗೆಗಳಿಗೆ ₹ 35,450ರಂತೆ ಮೂರು ವರ್ಷಕ್ಕೆ ₹12,76,200 ರಷ್ಟು ನಷ್ಟವಾಗಿದೆ. ಅಂಗಡಿ ಮಾಲೀಕರಿಗೆ ಗ್ರಾಮ ಪಂಚಾಯಿತಿ ವತಿಯಿಂದ 2–3 ಬಾರಿ ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. 12 ಮಳಿಗೆಗಳ ಪೈಕಿ 2 ಅಂಗಡಿ ಮಾಲೀಕರಿಂದ ಮಾತ್ರ ಬಾಡಿಗೆ ಸಂದಾಯವಾಗುತ್ತಿದೆ.
ಬಹಿರ್ದೆಸೆಯ ತಾಣ: ಮಳಿಗೆಗಳ ನಿರ್ವಹಣೆ ಇಲ್ಲದ ಪರಿಣಾಮ ಅಂಗಡಿಗಳ ಕಟ್ಟಡದ ಮುಂಭಾಗ ಗಿಡಗಳು, ಜಾಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಬೀಡಾಡಿ ದನಗಳು, ನಾಯಿಗಳ ಆಶ್ರಯ ತಾಣವಾಗಿದೆ. ಅಂಗಡಿಗಳ ಸುತ್ತಲಿನ ಜಾಗ ಬಹಿರ್ದೆಸೆಯ ತಾಣವಾಗಿ ಮಾರ್ಪಟ್ಟಿದೆ.
ಪಂಚಾಯಿತಿ ಅಭಿವೃದ್ಧಿಗಾಗಿ ಮಳಿಗೆಗಳನ್ನು ನಿರ್ಮಿಸಿ ಬಂದ ಹಣದಲ್ಲಿ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಬೇಕು. ಆದರೆ, ಲಕ್ಷಾಂತರ ಬಾಡಿಗೆ ಹಣ ಪಂಚಾಯಿತಿಗೆ ನಷ್ಟವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಿ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ಕೊನೆಗೂ ಕರ್ನಾಟಕದ ಪ್ರತ್ಯೇಕ ನಾಡಧ್ವಜ ಅನಾವರಣ, ಹೇಗಿದೆ ನೋಡಿ ನಮ್ಮ ಹೊಸ ಕನ್ನಡ ದ್ವಜ – EESANJE / ಈ ಸಂಜೆ
ಕೊನೆಗೂ ಕರ್ನಾಟಕದ ಪ್ರತ್ಯೇಕ ನಾಡಧ್ವಜ ಅನಾವರಣ, ಹೇಗಿದೆ ನೋಡಿ ನಮ್ಮ ಹೊಸ ಕನ್ನಡ ದ್ವಜ
March 8, 2018 March 8, 2018 Sri Raghav CM, Kannada Flag, Karnataka Flag, Siddaramaiah, ಕನ್ನಡ ದ್ವಜ, ನಾಡಧ್ವಜ
ಬೆಂಗಳೂರು, ಮಾ.8- ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ತನ್ನದೇ ಸ್ವಂತ ಧ್ವಜ ರೂಪಿಸಿಕೊಳ್ಳುವ ಪ್ರಕ್ರಿಯೆಗೆ ರಾಜ್ಯಸರ್ಕಾರದಿಂದ ಅಂತಿಮ ಮುದ್ರೆ ಬಿದ್ದಿದೆ. ತಜ್ಞರ ಸಮಿತಿ ವರದಿ ಆಧರಿಸಿ ಕೆಂಪು, ಹಳದಿ ಮತ್ತು ಬಿಳಿ ಬಣ್ಣ ಮಿಶ್ರಿತ ಧ್ವಜದ ಮಧ್ಯ ಭಾಗದಲ್ಲಿ ರಾಜ್ಯ ಸರ್ಕಾರದ ಚಿಹ್ನೆ ಇರುವ ಬಾವುಟವನ್ನು ಅಧಿಕೃತ ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ತಜ್ಞರ ಸಮಿತಿ ಇತ್ತೀಚಿಗೆ ನೀಡಿದ ವರದಿ ಆಧರಿಸಿ ರೂಪಿಸಲಾದ ಕನ್ನಡದ ಧ್ವಜವನ್ನು ಅಂಗೀಕರಿಸುವ ಕುರಿತು ಇತ್ತೀಚೆಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿತ್ತು.
ಉದ್ದೇಶಿತ ಧ್ವಜಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಾದರೂ ಕನ್ನಡ ಸಂಘಟನೆಗಳ ಜತೆ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುವ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಅದರಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಸಾಹಿತಿಗಳು, ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರೊಂದಿಗೆ ಸಭೆ ನಡೆಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಿಧಾನಪರಿಷತ್ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ್, ಹಂಪಾ ನಾಗರಾಜಯ್ಯ, ಕೆ.ಮರಳುಸಿದ್ದಪ್ಪ, ಕಮಲಾ ಹಂಪನ, ಡಾ.ರಾಜ್‍ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್‍ಶೆಟ್ಟಿ, ಮುಖಂಡರಾದ ಶಿವರಾಮೇಗೌಡ, ಕನ್ನಡ ಪಕ್ಷದ ಅಧ್ಯಕ್ಷ ಪುರುಷೋತ್ತಮ್ ಮತ್ತಿತರರು ಭಾಗವಹಿದ್ದರು.
ಸಭೆಯಲ್ಲಿ ಕೆಲವರು ಧ್ವಜದ ಸ್ವರೂಪದ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದರಾದರೂ ಅಂತಿಮವಾಗಿ ರಾಜ್ಯ ಸರ್ಕಾರ ಕನ್ನಡ ಅಸ್ಮಿತೆಯನ್ನು ಗೌರವಿಸಿ ಸ್ವಂತ ಧ್ವಜ ರೂಪಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ತಜ್ಞರ ಸಮಿತಿ ವರದಿ ಆಧರಿಸಿ ಸಿದ್ಧಗೊಳಿಸುವ ಈ ಧ್ವಜ ವಿನ್ಯಾಸವನ್ನು ಸರ್ವಾನುಮತದಿಂದ ಒಪ್ಪಿಕೊಳ್ಳುವುದಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಶಿಫಾರಸು:
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ನಾಡಿಗಾಗಿ ಪ್ರತ್ಯೇಕ ಧ್ವಜ ಬೇಕೆಂದು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು ಈ ಕುರಿತು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು. ಅದನ್ನು ಆಧರಿಸಿ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯಲ್ಲಿ ಕಸಾಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಂಪಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಸ್ಥೆಗಳು ಸದಸ್ಯರಾಗಿದ್ದವು. ಸಮಿತಿ ನೀಡಿದ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿತ್ತು.
ಅಧಿಕೃತವಾದ ಧ್ವಜಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ, ಈ ಧ್ವಜದ ಅಸ್ಥಿತ್ವಕ್ಕಾಗಿ ಹೋರಾಟ ಮಾಡಿದ ಸಾಹಿತಿಗಳು ಮತ್ತು ಸಂಘಟನೆಗಳ ಜತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಬೇಕೆಂಬ ನಿಲುವು ಹೊಂದಿದ್ದ ನಾವು ಇಂದು ಸಭೆ ನಡೆಸಿದ್ದೇವೆ ಎಂದರು.
ಸಭೆಯಲ್ಲಿ ನವ ವಿನ್ಯಾಸದ ಧ್ವಜಕ್ಕೆ ಸರ್ವಾನುಮತದ ಒಪ್ಪಿಗೆ ದೊರೆತಿದೆ. ಈ ಹಿಂದೆ ಇದ್ದ ಧ್ವಜದ ಹಳದಿ, ಕೆಂಪು ಬಣ್ಣವನ್ನು ಉಳಿಸಿಕೊಂಡು ಬಿಳಿ ಬಣ್ಣವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ರಾಜ್ಯ ಸರ್ಕಾರದ ಚಿಹ್ನೆಯನ್ನು ಮಧ್ಯ ಭಾಗದಲ್ಲಿ ಅಳವಡಿಸಲಾಗಿದೆ. ವಿಶ್ವದ ಯಾವುದೇ ದೇಶದ ಧ್ವಜವಾದರೂ ಮೂರು ಬಣ್ಣವನ್ನು ಹೊಂದಿವೆ. ಹಾಗಾಗಿ ನಮ್ಮ ಕನ್ನಡ ಭಾವುಟಕ್ಕೂ ಮೂರು ಬಣ್ಣವನ್ನು ಜೋಡಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಧ್ವಜದಲ್ಲಿ ಯಾವುದೇ ಬರಹಗಳಿಲ್ಲ. ಹೀಗಾಗಿ ಅದು ತಿರುಗು ಮುರುಗು ಆಗುವ ಆತಂಕವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕನ್ನಡದ ಧ್ವಜವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಲು ಅವಕಾಶವಿಲ್ಲ. ಹೀಗಾಗಿ ಕೂಡಲೇ ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. ಸಂವಿಧಾನದಲ್ಲಿ ರಾಜ್ಯ ಸರ್ಕಾರಗಳು ಪ್ರತ್ಯೇಕ ಧ್ವಜ ರೂಪಿಸಿಕೊಳ್ಳುವುದಕ್ಕೆ ವಿರೋಧ ವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಶೀಘ್ರವೇ ಮಾನ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ. ಮಾನ್ಯತೆ ನೀಡುವಂತೆ ಒತ್ತಾಯಿಸಲಾಗುವುದು. ದೇಶದಲ್ಲೇ ಕರ್ನಾಟಕ ಸ್ವಂತ ಧ್ವಜವನ್ನು ರೂಪಿಸಿಕೊಳ್ಳುತ್ತಿರುವುದು ಪ್ರಥಮವಾಗಿದೆ. ಇದು ಐತಿಹಾಸಿಕ ನಿರ್ಣಯ.
ರಾಜ್ಯದ ಧ್ವಜ ಯಾವಾಗಲೂ ರಾಷ್ಟ್ರ ಧ್ವಜಕ್ಕಿಂತಲೂ ಸ್ವಲ್ಪ ಕೆಳ ಭಾಗದಲ್ಲೇ ಹಾರೋಹಣಗೊಳ್ಳುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ. ರಾಷ್ಟ್ರಧ್ವಜಕ್ಕೂ ಅಗೌರವವಾದಂತಾಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು. ವಾಟಾಳ್ ನಾಗರಾಜ್ ಅವರು, ನವವಿನ್ಯಾಸ ಧ್ವಜಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬುದು ತಪ್ಪು ಮಾಹಿತಿ. ಇಂದಿನ ಸಭೆಗೆ ಅವರನ್ನೂ ಆಹ್ವಾನಿಸಲಾಗಿತ್ತು. ಕೋರ್ಟ್‍ನಲ್ಲಿ ಪ್ರಕರಣವೊಂದರ ವಿಚಾರಣೆ ಇರುವುದರಿಂದ ಅವರು ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಸಿಎಂ ತಿಳಿಸಿದರು. ಸದಾ ಅವರ ಜತೆ ಹೋರಾಟ ಮಾಡುವ ಸಾ.ರಾ.ಗೋವಿಂದು, ಪ್ರವೀಣ್‍ಶೆಟ್ಟಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲರೂ ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಸರ್ಕಾರದ ನಿರ್ಧಾರಕ್ಕೆ ಸ್ವಾಗತ:
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಾ.ರಾ.ಗೋವಿಂದು ಅವರು, ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಹೇಳಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವರ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಯಾವುದೇ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಮತ್ತೊಂದೆಡೆ ಮಾತನಾಡಿದ ಪ್ರವೀಣ್‍ಶೆಟ್ಟಿ ಅವರು, ಈವರೆಗೂ ಹಳದಿ ಮತ್ತು ಕೆಂಪು ಬಣ್ಣವನ್ನು ನಾವು ಒಪ್ಪಿಕೊಂಡಿದ್ದೆವೆ. ಆದರೆ ಅದನ್ನು ಮುಂದುವರೆಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಸರ್ಕಾರ ವಿವರಣೆ ನೀಡಿದೆ. ಅನಿವಾರ್ಯವಾಗಿ ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಇಷ್ಟು ದಿನ ಹಳದಿ ಮತ್ತು ಕೆಂಪು ಬಣ್ಣದ ಬಾವುಟದ ಜತೆ ನಮಗೆ ಭಾವನಾತ್ಮಕ ಸಂಬಂಧವಿತ್ತು. ಅದನ್ನು ಕಳೆದುಕೊಂಡ ವಿಷಾದ ಕಾಡುತ್ತಿದೆ ಎಂದು ಹೇಳಿದರು.
ಕ್ಯಾನ್ಸರ್‌ ಚಿಕಿತ್ಸೆ: ನೆರವಿಗೆ ಮನವಿ - Dakshina-Kannadanews - Duta
ಕ್ಯಾನ್ಸರ್‌ ಚಿಕಿತ್ಸೆ: ನೆರವಿಗೆ ಮನವಿ
23 September 2019 | Dakshina-Kannadanews
ನಗರ: ಬಡ ಕುಟುಂಬದ ಮಹಿಳೆಯೊಬ್ಬರು ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ದಂಪತಿ ಮಾತ್ರ ಇರುವ ಈ ಕುಟುಂಬ ಈಗ ಮನೆಯ ಬಾಡಿಗೆ ನೀಡಲು ಮತ್ತು ಔಷಧ ಖರೀದಿಸಲು ಹಣವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದು, ಸಹೃದಯಿಗಳ ಸಹಾಯ ಯಾಚಿಸಿದ್ದಾರೆ.
ನಗರದ ಹೊರವಲಯದ ಪರ್ಲಡ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ, ಮೂಲತಃ ತೆಂಕಿಲ ನಿವಾಸಿ ಜನಾರ್ದನ ಗೌಡ ಅವರ ಪತ್ನಿ ಪಿ. ಗಿರಿಜಾ (54) ಅವರಿಗೆ ಎರಡು ವರ್ಷಗಳ ಹಿಂದೆ ವಿಪರೀತ ತಲೆನೋವು ಆರಂಭವಾಗಿತ್ತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಸಂದರ್ಭ ತಲೆಯ ಭಾಗದಲ್ಲಿ ಕ್ಯಾನ್ಸರ್‌ ಗಡ್ಡೆ ಇರುವುದು ಖಚಿತವಾಗಿತ್ತು. ಬಳಿಕ ಅವರನ್ನು ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಅಲ್ಲಿನ ನರಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಪಿ.ಜಿ. ಗಿರೀಶ್‌ ಅವರ ಸಲಹೆಯಂತೆ 2018ರ ಜನವರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅಲ್ಲಿನ ಶಸ್ತ್ರ ಚಿಕಿತ್ಸೆ ಮತ್ತು ಔಷಧ ಉಚಿತವಾಗಿದ್ದವು.
ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಜನಾರ್ದನ ಅವರು ಪತ್ನಿ ಅನಾರೋಗ್ಯಕ್ಕೆ ತುತ್ತಾದ ಬಳಿಕ ಆರೈಕೆಯಲ್ಲೇ ಸಮಯ ಕಳೆಯುವಂತಾಗಿದೆ. ಉಚಿತ ಔಷಧ ಪಡೆಯಬೇಕಾದರೆ ತಿಂಗಳಿಗೊಮ್ಮೆ ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಬರಬೇಕಾಗುತ್ತದೆ. ಇಲ್ಲೇ ಔಷಧ ಪಡೆಯಲು ತಿಂಗಳಿಗೆ 2,000 ರೂ. ಬೇಕಾಗುತ್ತದೆ. ಬಾಡಿಗೆ ಮನೆಯ ಮಾಲಕರು ಕರುಣೆ ತೋರಿದ್ದರಿಂದ ಬದುಕಿದ್ದೇವೆ ಎನ್ನುವ ಜನಾರ್ದನ, ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ....
ಬಂದ್: ಗಣ್ಯರ ಅಭಿಪ್ರಾಯಗಳು | Prajavani
ಬಂದ್: ಗಣ್ಯರ ಅಭಿಪ್ರಾಯಗಳು
ಬಂದ್ ನಡೆಸುವುದು ಅನಿವಾರ್ಯ
`ಬಂದ್ ನಡೆಸುವುದು ರಾಜ್ಯದ ಜನರಿಗೆ ಅನಿವಾರ್ಯವಾಗಿತ್ತು. ಕೆಆರ್‌ಎಸ್ ಜಲಾಶಯ ಬತ್ತಿರುವಾಗ ಇತರೆ ರಾಜ್ಯಕ್ಕೆ ನೀರು ಬಿಡಬೇಕೆಂಬ ಆದೇಶ ಸರಿಯಲ್ಲ. ಈ ವಿಚಾರದಲ್ಲಿ ಸಂಸದರು ಹಾಗೂ ಮುಖ್ಯಮಂತ್ರಿ ಹೆಚ್ಚಿನ ಪ್ರಯತ್ನ ನಡೆಸಬೇಕಾಗಿತ್ತು. ಪರಿಶೀಲನೆಗೆ ಬಂದ ಕೇಂದ್ರ ತಂಡದ ಅಭಿಪ್ರಾಯವನ್ನು ಪಡೆದುಕೊಂಡು ರಾಜ್ಯ ಸರ್ಕಾರ ಮುಂದಿನ ಕ್ರಮದ ಬಗ್ಗೆ ಆಲೋಚನೆ ನಡೆಸಬೇಕು. ಕುಡಿಯಲು, ಬೆಳೆ ಬೆಳೆಯಲು ನೀರೇ ಇಲ್ಲದೇ ಹೋದರೆ ರಾಜ್ಯವೂ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ. ಈಗ ನಡೆದ ಬಂದ್‌ಗೆ ಕೇಂದ್ರ ಸರ್ಕಾರ ಧನಾತ್ಮಕವಾಗಿ ಪ್ರತಿಕ್ರಿಯಿಸಲಿ.
-ಪ್ರೊ ಜಿ.ವೆಂಕಟಸುಬ್ಬಯ್ಯ, ನಿಘಂಟುತಜ್ಞ
ಮಣ್ಣಿನ ಮಕ್ಕಳ ಅಭಿಪ್ರಾಯ ಪಡೆಯಲಿ
`ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರ ಅಭಿಪ್ರಾಯಕ್ಕೆ ಮೊದಲ ಮನ್ನಣೆ ದೊರೆಯಬೇಕು. ತಮಿಳುನಾಡು ರೈತರು ಕೆಆರ್‌ಎಸ್ ಜಲಾಶಯದ ಸುತ್ತಮುತ್ತಲಿನ ಕೃಷಿ ಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಾಜ್ಯದ ರೈತರೊಂದಿಗೆ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಯುತ್ತದೆ. ಇಷ್ಟು ವರ್ಷಗಳಿಂದ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮತ್ತು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಆಗಿದೆ. ಈ ವರೆಗೂ ಎರಡು ರಾಜ್ಯದ ಮಣ್ಣಿನ ಮಕ್ಕಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ಜಗಳವಿಲ್ಲದೇ ಸಂಧಾನ ಮಾಡಿಕೊಳ್ಳುವಷ್ಟು ವಿವೇಚನೆ ರೈತರಿಗಿದೆ.
- ಡಾ.ಯು.ಆರ್.ಅನಂತಮೂರ್ತಿ, ಹಿರಿಯ ಸಾಹಿತಿ
ಸುಪ್ರೀಂಕೋರ್ಟ್ ಆದೇಶದಿಂದ ನೋವಾಗಿದೆ
`ಗೋಕಾಕ್ ಚಳವಳಿ ಸಂದರ್ಭದಲ್ಲಿ ಜನತೆಯಿಂದ ದೊರಕಿದ ಬೆಂಬಲದಷ್ಟೇ ಈ ಬಾರಿಯೂ ಬೆಂಬಲ ದೊರಕಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ಒಗ್ಗಟ್ಟಿನಿಂದ ಪ್ರತಿಭಟಿಸಿರುವುದು ಹೆಮ್ಮೆಯ ವಿಚಾರ. ಕನ್ನಡಿಗರ ಒಗ್ಗಟ್ಟಿನಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕನ್ನಡಿಗರು ಶಿಸ್ತಿಗೆ ಬದ್ಧರೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದರೆ ಸುಪ್ರೀಂ ಕೋರ್ಟ್‌ನ ಆದೇಶ ನೋವು ತಂದಿದೆ. ಸರ್ಕಾರದ ಪ್ರಯತ್ನದಿಂದ ಸಮಸ್ಯೆ ಬಗೆಹರಿಯಬೇಕು.
- ಡಾ.ಎಂ. ಚಿದಾನಂದ ಮೂರ್ತಿ, ಹಿರಿಯ ಸಂಶೋಧಕ
ಸಮಸ್ಯೆಗೆ ಕೇಂದ್ರ, ರಾಜ್ಯ ಸ್ಪಂದಿಸುತ್ತಿಲ್ಲ
`ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡುವುದು ಕೇಂದ್ರ ಸರ್ಕಾರದ ಅವಸಾರದ ತೀರ್ಮಾನ. ತಮಿಳುನಾಡಿನ ಜನತೆಗೆ ಒಂದೂವರೆ ತಿಂಗಳಿಗೆ ಸಾಕಾಗುವಷ್ಟು ನೀರಿನ ವ್ಯವಸ್ಥೆಯಿದೆ. ಇದಲ್ಲದೇ ಇದೇ ತಿಂಗಳ ಕೊನೆಯಲ್ಲಿ ತಮಿಳುನಾಡಿನಲ್ಲಿ ಮಳೆ ಆರಂಭವಾಗಲಿದೆ. ಕುಡಿಯುವ ನೀರನ್ನು ಕಿತ್ತುಕೊಂಡು ಬೇರೆ ರಾಜ್ಯಕ್ಕೆ ಹಂಚುವುದು ಜನವಿರೋಧಿ ನೀತಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿತನ. ಇದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವುದು ಸೂಕ್ತವಾಗಿದೆ. ಆದರೆ, ಹೋರಾಟಗಳಿಗೆ ಮನ್ನಣೆಯಿಲ್ಲ ಎಂಬ ವಿಚಾರ ತಿಳಿದಾಗ ಸಂಕಟವಾಗುತ್ತದೆ~.
-ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿ
ರಾಷ್ಟ್ರೀಯ ಪಕ್ಷಗಳಿಂದ ಪ್ರಯೋಜನವಿಲ್ಲ
`ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಕನ್ನಡಿಗರು ಸ್ವಯಂಪ್ರೇರಣೆಯಿಂದ ಬಂದ್ ಮಾಡಿರುವುದು ಒಳ್ಳೆಯ ಲಕ್ಷಣ. ಕಾವೇರಿ ವಿವಾದವನ್ನು ಇಂದಿಗೂ ಬಗೆಹರಿಸಲು ಸಾಧ್ಯವಾಗದೇ ಇರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯವೇ ಕಾರಣ. ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳು ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಾದೇಶಿಕ ಪಕ್ಷಗಳು ಮತ್ತು ಕನ್ನಡ ಪರ ಸಂಘಟನೆಗಳಿಗೆ ರಾಜಕೀಯ ಶಕ್ತಿ ದೊರಕದೆ ಕಾವೇರಿ ವಿವಾದ ಬಗೆಹರಿಯದು.
ರಾಜಕೀಯ ಮುತ್ಸದ್ಧಿತನದ ಅಭಾವ
`ಕಾವೇರಿ ಜಲವಿವಾದ ಇಂದು ನಿನ್ನೆಯದಲ್ಲ. ಕಾವೇರಿ ಪ್ರಾಧಿಕಾರವು ವಸ್ತುಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸಿಲ್ಲ. ಹಾಗಾಗಿ ನೀರು ಹಂಚಿಕೆ ವಿವಾದ ಹೆಚ್ಚಾಗಿದೆ. ಇದಲ್ಲದೇ ಈಚೆಗೆ ನಡೆದ ಕಾವೇರಿ ಪ್ರಾಧಿಕಾರದ ಚರ್ಚೆಯಲ್ಲಿ ಮುಖ್ಯಮಂತ್ರಿ ಮತ್ತು ಸಂಸದರು ಸಭಾತ್ಯಾಗ ಮಾಡುವ ಮೂಲಕ ಹೀರೋಗಳಾದೆವು ಎಂಬ ಭ್ರಮೆಗೊಳಗಾದುದು ಈ ಅನಾಹುತಕ್ಕೆ ಕಾರಣ. ಕಾವೇರಿ ಹಂಚಿಕೆ ತೀರ್ಪು ದೊರೆಯುವ ಮುನ್ನವೇ ಸರ್ಕಾರ ಸರ್ವ ಪಕ್ಷಗಳ ಸದಸ್ಯರನ್ನು ಒಟ್ಟಾಗಿ ದೆಹಲಿಗೆ ಕರೆದುಕೊಂಡು ಪ್ರಧಾನಿಯೊಂದಿಗೆ ಚರ್ಚೆ ನಡೆಸಬೇಕಿತ್ತು. ರಾಜಕೀಯ ಮುತ್ಸದ್ಧಿತನದ ಅಭಾವದಿಂದ ಈ ಪರಿಸ್ಥಿತಿ ಎದುರಾಗಿದೆ~
-ಬರಗೂರು ರಾಮಚಂದ್ರಪ್ಪ, ವಿಮರ್ಶಕ
ಯಾರಿಗೂ ಅನ್ಯಾಯವಾಗಬಾರದು
`ಕಾವೇರಿ ವಿವಾದವನ್ನು ಈವರೆಗೆ ಬಗೆಹರಿಸಲು ಸಾಧ್ಯವಾಗದೇ ಇರುವುದು ನಮ್ಮನ್ನು ಆಳಿದ ಸರ್ಕಾರಗಳ ವೈಫಲ್ಯ. ನೈಸರ್ಗಿಕ ಸಂಪನ್ಮೂಲ ಎಲ್ಲರ ಆಸ್ತಿ. ಇದನ್ನು ಸಮರ್ಪಕವಾಗಿ ಎರಡು ರಾಜ್ಯಗಳಿಗೆ ಹಂಚಲು ಸಾಧ್ಯವಾಗದೇ ಇರುವುದು ಇಂದಿನ ದುಸ್ಥಿತಿಗೆ ಕಾರಣ. ಈ ವಿವಾದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸುವ ಅಗತ್ಯವಿದ್ದು, ನೆಲ, ಜಲ, ಗಡಿ,ನಾಡು ಸಂರಕ್ಷಣೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಯನ್ನು ಬಿಟ್ಟು ಜವಾಬ್ದಾರಿ ಮೆರೆಯಲಿ. ಯಾರಿಗೂ ಅನ್ಯಾಯವಾಗದಂತ ಹೆಜ್ಜೆ ಇಡಲಿ.
-ವಿಮಲ ಕೆ.ಎಸ್, ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ
ಬ್ರಿಟಿಷರ ತಪ್ಪು ನಿರ್ಧಾರ ಮುಂದುವರೆದಿದೆ
`ಆಗಿರುವ ಅನ್ಯಾಯವನ್ನು ಪ್ರತಿಭಟಿಸಲು ಬಂದ್ ನಡೆಸುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಆದರೆ ಒಂದು ತಿಂಗಳಲ್ಲಿಯೇ ಮೂರು ಬಂದ್ ಆಗಿರುವುದರಿಂದ ಕೂಲಿಕಾರ್ಮಿಕರಿಗೆ ಕಷ್ಟವಾಗುತ್ತದೆ. ಸರ್ಕಾರದ ಆಡಳಿತಾಂಗದ ವಿರುದ್ಧ ಪ್ರತಿಭಟಿಸುವ ಅಗತ್ಯ ಎದ್ದು ಕಾಣುತ್ತಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಬ್ರಿಟಿಷ್ ಸರ್ಕಾರದ ಮಾಡಿದ ತಪ್ಪುಗಳನ್ನೇ ರಾಷ್ಟ್ರೀಯ ಪಕ್ಷಗಳು ಅನುಸರಿಸಿಕೊಂಡು ಹೋಗುತ್ತಿರುವುದು ವಿಪರ್ಯಾಸ~.
-ಡಾ.ಸಿ.ಎಸ್.ದ್ವಾರಕನಾಥ್, ಹಿರಿಯ ವಕೀಲ
ಕಾವೇರಿ ಕಳೆದುಕೊಳ್ಳಲು ಸಾಧ್ಯವಿಲ್ಲ
`ನೆಲ ಜಲದ ವಿಚಾರದಲ್ಲಿ ನಾವೆಲ್ಲ ಒಂದೇ ಎಂಬುದಕ್ಕೆ ಬಂದ್ ಉತ್ತಮ ಉದಾಹರಣೆ. ಕಾವೇರಿ ನದಿ ಕರ್ನಾಟಕದ ಹಕ್ಕು, ನಮ್ಮ ರೈತರಿಗೆ ನೀರಿಲ್ಲದಿರುವಾಗ ಬೇರೆಯವರಿಗೆ ನೀಡಬೇಕೆಂಬುದು ಅವೈಜ್ಞಾನಿಕ. ಜೀವ ನದಿ ಕಾವೇರಿಯನ್ನು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದೆ. ಅನ್ಯಾಯವಾದಾಗ ಒಂದು ಹಂತದವರೆಗೆ ತಾಳ್ಮೆ ವಹಿಸುವ ಕನ್ನಡಿಗರು ಎಂದಿಗೂ ಕೈಲಾಗದವರಲ್ಲ ಎಂಬುದನ್ನು ತೋರಿಸುವ ಅಗತ್ಯವಿದೆ~
- ಪುಂಡಲೀಕ ಹಾಲಂಬಿ, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್
ಕೇಂದ್ರ ತಂಡದ ಭೇಟಿಯೇ ಕಣ್ಣೊರೆಸುವ ತಂತ್ರ
`ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಜ್ಞರ ತಂಡ ಕಳುಹಿಸುವ ಮೂಲಕ ಕಣ್ಣೊರೆಸುವ ತಂತ್ರ ಮಾಡಲಾಗಿದೆ. ಈ ತಂಡವೇ ಅವೈಜ್ಞಾನಿಕ. ತಜ್ಞರ ಸಮಿತಿಯಲ್ಲಿ ಅಧಿಕಾರಿಗಳು ಹಾಗೂ ನೀರಾವರಿ ತಜ್ಞರು ಮಾತ್ರ ಇದ್ದಾರೆ. ಕೃಷಿ ಹಾಗೂ ಮಣ್ಣಿನ ತಜ್ಞರು ಇಲ್ಲ. ಇವರಿಂದ ರಾಜ್ಯಕ್ಕೆ ನ್ಯಾಯ ದೊರಕುತ್ತದೆ ಎಂಬ ನಿರೀಕ್ಷೆ ಮಾಡುವಂತಿಲ್ಲ. ಎಲ್ಲ ಕ್ಷೇತ್ರದ ತಜ್ಞರ ಸಮಿತಿಯನ್ನು ಕಳುಹಿಸಿದರೆ ಅವರಿಗೆ ಇಲ್ಲಿನ ವಸ್ತುಸ್ಥಿತಿಯ ಅರಿವಾಗುತ್ತಿತ್ತು~.
-ಪ್ರೊ.ಎಂ.ಮಹದೇವಪ್ಪ, ವಿಶ್ರಾಂತ ಕುಲಪತಿ,
ಆದೇಶಕ್ಕೂ ಮುನ್ನ ವಸ್ತುಸ್ಥಿತಿ ಅರಿಯಬೇಕಿತ್ತು
`ಕಾವೇರಿ ನದಿ ಪ್ರಾಧಿಕಾರದ ಸೂಚನೆ ಆಧಾರದಲ್ಲಿ ಸುಪ್ರೀಂಕೋರ್ಟ್ ತಮಿಳುನಾಡಿಗೆ ನೀರು ಬಿಡಲು ರಾಜ್ಯಕ್ಕೆ ಆದೇಶಿಸಿದೆ. ಆದರೆ, ನೀರು ಬಿಡುವಂತೆ ಕೇಂದ್ರ ಸೂಚನೆ ನೀಡುವ ಮೊದಲೇ ರಾಜ್ಯಕ್ಕೆ ತಜ್ಞರ ಸಮಿತಿಯನ್ನು ಕಳುಹಿಸಿ ವಸ್ತುಸ್ಥಿತಿಯ ಮಾಹಿತಿ ಪಡೆದಿದ್ದರೆ ಸಮಂಜಸವಾಗುತ್ತಿತ್ತು~.
ಡಾ.ಎಂ.ಎನ್. ಶೀಲವಂತರ್,
ವಿಶ್ರಾಂತ ಕುಲಪತಿ, ಬೆಂಗಳೂರು ಕೃಷಿ ವಿವಿ
ಶಾಶ್ವತ ಸಮಿತಿ ರಚಿಸಬೇಕು
`ಪ್ರಾಧಿಕಾರದ ತೀರ್ಪಿನ ಆಧಾರದಲ್ಲಿಯೇ ಸುಪ್ರೀಂ ಕೋರ್ಟ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಆದೇಶ ಹೊರಡಿಸುತ್ತಿದೆ. ಇಲ್ಲಿ ಮಳೆ ಕೊರತೆ, ಬರ ಇದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ರಾಜ್ಯದಲ್ಲಿ ಸಾಮಾನ್ಯವಾಗಿ ನಾಲ್ಕೈದು ವರ್ಷಕ್ಕೊಮ್ಮೆ ಮಳೆ ಕೊರತೆ ಉಂಟಾಗುತ್ತಿದೆ. ಆ ಸಂದರ್ಭದಲ್ಲಿ ನೀರು ಬಿಡುಗಡೆ ಕಷ್ಟ. ಇಂತಹ ಸಮಸ್ಯೆಯನ್ನು ನಿಭಾಯಿಸಲು ಶಾಶ್ವತ ಸಮಿತಿಯೊಂದನ್ನು ರಚಿಸಿ ಮಾರ್ಗಸೂಚಿ ರೂಪಿಸಬೇಕು. ವಸ್ತುಸ್ಥಿತಿ ನೋಡಿಕೊಂಡು ನೀರು ಬಿಡುಗಡೆಗೆ ಆದೇಶ ಹೊರಡಿಸುವಂತಾಗಬೇಕು~.
ಸಿರಿಯೊಂದಿಗೆ ಸಂಗೀತ ಪ್ಲೇಬ್ಯಾಕ್ ಅನ್ನು ಹೇಗೆ ನಿಯಂತ್ರಿಸುವುದು | ಐಫೋನ್ ಸುದ್ದಿ
ಸಿರಿಯೊಂದಿಗೆ ಸಂಗೀತ ಪ್ಲೇಬ್ಯಾಕ್ ಅನ್ನು ಹೇಗೆ ನಿಯಂತ್ರಿಸುವುದು
ಐಪ್ಯಾಡ್ ಸುದ್ದಿ | | ಐಒಎಸ್, ಸುದ್ದಿ, ಟ್ಯುಟೋರಿಯಲ್ ಮತ್ತು ಕೈಪಿಡಿಗಳು
ಐಒಎಸ್ನಲ್ಲಿ ಸಿರಿ ಅನೇಕ ಕಾರ್ಯಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ ಎಂದು ನಮಗೆ ತಿಳಿದಿದೆ ಉದಾಹರಣೆಗೆ: ಅಪ್ಲಿಕೇಶನ್ ತೆರೆಯಿರಿ, ಯಾರಿಗಾದರೂ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ, ಇಮೇಲ್ ಕಳುಹಿಸಿ, ಸಂಪರ್ಕ ಮಾಹಿತಿಯನ್ನು ಉಳಿಸಿ, ಸಂಗೀತ ನುಡಿಸಿ… ಆದರೆ ಐಒಎಸ್‌ನಿಂದ ನಮ್ಮ ವೈಯಕ್ತಿಕ ಸಹಾಯಕ ಸಿರಿ ಮೂಲಕ ಸಂಗೀತ ಪ್ಲೇಬ್ಯಾಕ್ ಅನ್ನು ಸಹ ನೀವು ನಿಯಂತ್ರಿಸಬಹುದು ಎಂಬುದು ಕೆಲವರಿಗೆ ತಿಳಿದಿರುವ ಒಂದು ವಿಷಯ. ವಿರಾಮಗೊಳಿಸುವುದು ಹೇಗೆ ಎಂದು ತಿಳಿಯಲು ನೀವು ಬಯಸಿದರೆ, ಹಿಂದಕ್ಕೆ ಹೋಗಿ ಅಥವಾ ಹಾಡನ್ನು ಫಾರ್ವರ್ಡ್ ಮಾಡಿ ಮತ್ತು ಸಿರಿಯೊಂದಿಗೆ ಸಂಗೀತ ಪ್ಲೇಬ್ಯಾಕ್‌ನಲ್ಲಿ ಇನ್ನೂ ಅನೇಕ ಕ್ರಿಯೆಗಳು, ನೀವು ಓದುವುದನ್ನು ಮುಂದುವರಿಸಬೇಕು.
ಸಿರಿಯೊಂದಿಗೆ ಸಂಗೀತ ಪ್ಲೇಬ್ಯಾಕ್ ಅನ್ನು ನಿಯಂತ್ರಿಸುವುದು
ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ಬಳಕೆದಾರರ ಅಗತ್ಯಗಳನ್ನು ಪೂರೈಸಲು (ಇನ್ನೂ ಉತ್ತಮ) ಸಿರಿ ಈಗಾಗಲೇ ಮಾಡಿದ್ದಕ್ಕಿಂತ ಹೆಚ್ಚಿನದನ್ನು ಮಾಡಲು ಆಪಲ್ ಎಂಜಿನಿಯರ್‌ಗಳು ಪ್ರತಿದಿನ ಕೆಲಸ ಮಾಡುತ್ತಾರೆ. ಸಿರಿ ನಮಗೆ ನೀಡುವ ಆಯ್ಕೆಗಳಲ್ಲಿ ಒಂದು ಸಂಗೀತ ಪ್ಲೇಬ್ಯಾಕ್ ನಿಯಂತ್ರಣ, ಅಂದರೆ, ಹಾಡುಗಳ ನಡುವೆ ಚಲಿಸಲು, ಪ್ಲೇಬ್ಯಾಕ್ ನಿಲ್ಲಿಸಲು, ಪಟ್ಟಿಯನ್ನು ಯಾದೃಚ್ mode ಿಕ ಮೋಡ್‌ನಲ್ಲಿ ಇರಿಸಿ ... ನಿಮ್ಮ ಸಾಧನದೊಂದಿಗೆ ಇದನ್ನು ಮಾಡಲು ನೀವು ಬಯಸಿದರೆ, ಮುಂದುವರಿಯಿರಿ:
ಮೊದಲನೆಯದಾಗಿ, ಕೆಲವು ಸೆಕೆಂಡುಗಳ ಕಾಲ ಹೋಮ್ ಬಟನ್ ಒತ್ತುವ ಮೂಲಕ ಸಿರಿಯನ್ನು ಸಕ್ರಿಯಗೊಳಿಸಿ
"ಫಾರ್" ಅಥವಾ "ಮ್ಯೂಸಿಕ್ ಪ್ಲೇಬ್ಯಾಕ್ಗಾಗಿ": ಈ ಎರಡು ವಿಷಯಗಳಲ್ಲಿ ಒಂದನ್ನು ನಾವು ಹೇಳಿದಾಗ, ಸಿರಿ ಸ್ವಯಂಚಾಲಿತವಾಗಿ ಪ್ಲೇಬ್ಯಾಕ್ ಅನ್ನು ನಿಲ್ಲಿಸುತ್ತದೆ. ಪ್ಲೇಬ್ಯಾಕ್ ನಿಲ್ಲಿಸಲು ಖಂಡಿತವಾಗಿಯೂ ಇತರ ಆಜ್ಞೆಗಳಿವೆ.
"ಪ್ಲೇಬ್ಯಾಕ್ ಪುನರಾರಂಭಿಸು": ಈ ಸಂದರ್ಭದಲ್ಲಿ, ಸಿರಿ ಅದು ನಿಲ್ಲಿಸಿದ ಹಾಡನ್ನು ಮರುಪ್ರಸಾರ ಮಾಡುತ್ತದೆ, ನಾವು ಈ ಹಿಂದೆ ವಿರಾಮವನ್ನು ಒತ್ತಿದಾಗ ಪ್ಲೇ ಅನ್ನು ಒತ್ತುವಂತೆಯೇ ಇರುತ್ತದೆ.
"ಯಾದೃಚ್ om ಿಕ": ನೀವು ಇದನ್ನು ಹೇಳಿದರೆ, ಪ್ಲೇಬ್ಯಾಕ್ ಯಾದೃಚ್ be ಿಕವಾಗಿರುತ್ತದೆ, ಅಂದರೆ ಅದು ಅಪ್ಲಿಕೇಶನ್‌ನ ಕ್ರಮವನ್ನು ಅನುಸರಿಸುವುದಿಲ್ಲ. ಪ್ಲೇಪಟ್ಟಿಗಳು ಅಥವಾ ಆಲ್ಬಮ್‌ಗಳನ್ನು ಸೇರಿಸುವ ಮೂಲಕ ನಾವು ಆಜ್ಞೆಯನ್ನು ಹೆಚ್ಚು ಸಂಕೀರ್ಣಗೊಳಿಸಬಹುದು: «ರಾಂಡಮ್ ರಾಕ್ ಪ್ಲೇಪಟ್ಟಿ».
The ಹಾಡನ್ನು ಹಾದುಹೋಗು »: ನಾವು ಹಾಡನ್ನು ಬದಲಾಯಿಸಲು ಬಯಸಿದರೆ ಈ ಸರಳ ಆಜ್ಞೆಯಿಂದ ನಾವು ಇದನ್ನು ಮಾಡಬಹುದು.
"ಹಿಂತಿರುಗಿ" ಅಥವಾ "ಹಿಂದಿನ ಹಾಡನ್ನು ಪ್ಲೇ ಮಾಡಿ": ಕೇಳಿದ ಸಂಗೀತದಲ್ಲಿ ನಾವು ಹಿಂದಕ್ಕೆ ಹೋಗಲು ಬಯಸಿದರೆ, ಇದನ್ನು ಹೇಳಿದರೆ ಸಾಕು.
ಅವು ತುಂಬಾ ಸರಳವಾದ ಕ್ರಿಯೆಗಳು ಆದರೆ ಅವುಗಳನ್ನು ಬೇರೆ ಬೇರೆ ರೀತಿಯಲ್ಲಿ ಕಾರ್ಯಗತಗೊಳಿಸಬಹುದು, ನಿಮಗೆ ಇನ್ನೇನಾದರೂ ತಿಳಿದಿದೆಯೇ?
ಲೇಖನಕ್ಕೆ ಪೂರ್ಣ ಮಾರ್ಗ: ಐಫೋನ್ ಸುದ್ದಿ » ಐಫೋನ್ » ಟ್ಯುಟೋರಿಯಲ್ ಮತ್ತು ಕೈಪಿಡಿಗಳು » ಸಿರಿಯೊಂದಿಗೆ ಸಂಗೀತ ಪ್ಲೇಬ್ಯಾಕ್ ಅನ್ನು ಹೇಗೆ ನಿಯಂತ್ರಿಸುವುದು
ಚಾಮರಾಜನಗರಕ್ಕೆ ಆಕ್ಸಿಜನ್​​ ಪೂರೈಕೆಗೆ ರೋಹಿಣಿ ಸಿಂಧೂರಿ ಅಡ್ಡಿ? ಸ್ಫೋಟಕ ಮಾಹಿತಿ ಬಹಿರಂಗ
ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಲು ಮೈಸೂರಿನಿಂದ ಆಕ್ಸಿಜನ್​ ಪೂರೈಕೆಯಾಗದಿರುವುದು ಪ್ರಮುಖ ಕಾರಣ. ಆಕ್ಸಿನ್​ ಪೂರೈಕೆ ಮಾಡಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಡ್ಡಿಪಡಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಾಟ್ಸಾಪ್​ ಗ್ರೂಪ್​ ಚಾಟ್​ ಫೋಟೋಗಳು ಬೆಳಕಿಗೆ ಬಂದಿದೆ.
ಚಾಮರಾಜನಗರ ಆಸ್ಪತ್ರೆ ಆಕ್ಸಿಜನ್ ಪೂರೈಕೆ ಕುರಿತಂತೆ ಮಾಡಿಕೊಂಡಿದ್ದ ವೈದ್ಯಾಧಿಕಾರಿಗಳ ವಾಟ್ಸಾಪ್​ ಗ್ರೂಪ್​​ನಲ್ಲಿ ದುರಂತ ನಡೆಯುವ ಎರಡು ದಿನಗಳ ಮುನ್ನವೇ ಚರ್ಚೆ ನಡೆದಿದೆ. ಏ.28 ರಂದು ನಡೆದಿದ್ದ ಸಭೆಯಲ್ಲಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ಮಾಡಲು ಮೈಸೂರು ಜಿಲ್ಲಾಧಿಕಾರಿಗಳು ಅಬ್ಜೆಕ್ಷನ್ ಹಾಕಿರುವ ಬಗ್ಗೆ ವೈದ್ಯಾಧಿಕಾರಿ ಸಂಜೀವ್ ಅವರು ಜಿಲ್ಲಾಧಿಕಾರಿಗಳಿಗೆ ಹೇಳಿದ್ದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಉಂಟಾಗುವ ಸಂಭವ ಇದೆ. ಕೂಡಲೇ ಮೈಸೂರಿಗೆ ವಾಹನಗಳನ್ನು ಕಳುಹಿಸಿ ಆಕ್ಸಿಜನ್​ ಪಡೆಯಿರಿ ಎಂದು ಜಿಲ್ಲಾಧಿಕಾರಿಗಳು ಕಳುಹಿಸಿದ್ದ ಸಂದೇಶದಕ್ಕೆ ಮೆಡಿಕಲ್​ ಕಾಲೇಜು ಡೀನ್ ಸಂಜೀವ್​ ಪ್ರತಿಕ್ರಿಯೆ ನೀಡಿದ್ದರು. ಮೈಸೂರು ಜಿಲ್ಲಾಧಿಕಾರಿಗಳು ಆಕ್ಷೇಪ ವ್ಯಕ್ತವಾಗುತ್ತಿದೆ ಎಂದು ತಿಳಿದ ಚಾಮರಾಜನಗರ ಡಿಸಿ, ಆಕ್ಸಿಜನ್ ಪೂರೈಕೆ ಮಾಡಲು ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದಿದ್ದರು. ಆಸ್ಪತ್ರೆಯ ಡೀನ್​ ಹಾಗೂ ಜಿಲ್ಲಾಶಸ್ತ್ರಚಿಕಿತ್ಸಕರು ಹಾಗೂ ಜಿಲ್ಲಾಧಿಕಾರಿಗಳ ನಡುವೆ ನಡೆದಿರುವ ವಾಟ್ಸಪ್‌ ಚಾಟ್‌ ಇದಾಗಿದೆ ಎನ್ನಲಾಗಿದೆ.
ವಾಟ್ಸಾಪ್ ಚಾಟ್​​ನಲ್ಲಿ ಆಕ್ಸಿಜನ್​ ಕೊರತೆ ಆಗುತ್ತದೆ ಎಂದು ಹೇಳಿದ ಎರಡು ದಿನಗಳ ಬಳಿಕ ದುರಂತ ನಡೆದಿದೆ. ಎರಡು ದಿನ ಸಮಯ ಸಿಕ್ಕರೂ ಜಿಲ್ಲಾಧಿಕಾರಿಗಳು ಆಕ್ಸಿಜನ್​ ತರಿಸಿಕೊಳ್ಳಲು ಯಾಕೆ ಪ್ರಯತ್ನ ನಡೆಸಲಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ. ಇತ್ತ ಸ್ಕ್ರೀನ್ ಶಾಟ್ಸ್ ಬಿಡುಗಡೆ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರತ್ತ ಬೆಟ್ಟು ತೋರಿಸಿ ತಮ್ಮ ಮೇಲಿನ ಆರೋಪದಿಂದ ಪಾರಾಗಲು ಚಾಮರಾಜನಗರ ಆರೋಗ್ಯಾಧಿಕಾರಿಗಳು ಪ್ರಯತ್ನಿಸುತ್ತಿದ್ದರ ಎಂಬ ಅನುಮಾನವೂ ಮೂಡಿದೆ.
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚಿಕ್ಕಪೇಟೆ, ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳಲ್ಲಿ ಬಿಜೆಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಎಸ್‌.ಎಸ್‌.ನಕುಲ್‌ ಮತ್ತು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.
ಬಿಬಿಎಂಪಿ ದಕ್ಷಿಣ ವಲಯದ ಕಚೇರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ''ಮಕ್ಕಳು ಟೀ ಶರ್ಟ್‌ ಧರಿಸುವ ಜತೆಗೆ ಬಿಜೆಪಿ ಪಕ್ಷದ ಧ್ವಜಗಳನ್ನು ಹಿಡಿದು ಪ್ರಚಾರ ನಡೆಸುತ್ತಿರುವ ವಿಡಿಯೊಗಳನ್ನು ಆಧರಿಸಿ ಫ್ಲೈಯಿಂಗ್‌ ಸ್ಕ್ವಾಡ್‌ ತಂಡಗಳು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಚಾರಕ್ಕೆ ಅನುಮತಿ ಪಡೆದವರ ಮೇಲೆ ಎಫ್‌ಐಆರ್‌ ಹಾಕಲಾಗಿದೆ,'' ಎಂದು ಹೇಳಿದರು.
''ಅದೇ ರೀತಿ ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಅನುಮತಿ ಪಡೆಯದೆ ರಾಜಕೀಯ ಮುಖಂಡರ ಭಾವಚಿತ್ರವಿರುವ ಕರಪತ್ರ ಹಂಚಿಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಏ. 3ರಂದು ಪ್ರಕರಣ ದಾಖಲಿಸಲಾಗಿದೆ. ಜಯನಗರ ಕ್ಷೇತ್ರದಲ್ಲಿ ಸಾಮಾಜಿಕ ಜಾಲತಾಣವಾದ ಗೂಗಲ್‌ನಲ್ಲಿ ರಾಷ್ಟ್ರೀಯ ಧ್ವಜವಿರುವ ಭಾವಚಿತ್ರವನ್ನು ಮೇಲ್‌ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಬಿಜೆಪಿ ವಿರುದ್ಧ ಪ್ರಕರಣ ದಾಖಲಾಗಿದೆ,'' ಎಂದು ಮಾಹಿತಿ ನೀಡಿದರು.
''ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 23 ಸ್ಟಾಟಿಕ್‌ ಸರ್ವೇಲೆನ್ಸ್‌ ತಂಡಗಳ ಚೆಕ್‌ಪೋಸ್ಟ್‌ ಸ್ಥಾಪಿಸಿದ್ದು, 69 ತಂಡಗಳು ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಏ. 14ರವರೆಗೆ 93542 ವಾಹನಗಳ ತಪಾಸಣೆ ನಡೆಸಿವೆ. ಒಟ್ಟು 3 ಪ್ರಕರಣಗಳಲ್ಲಿ 5,42,100 ರೂ. ನಗದು ಮತ್ತು 23800 ರೂ. ಮೌಲ್ಯದ 12.50 ಲೀ. ಮದ್ಯವನ್ನು ವಶಕ್ಕೆ ಪಡೆದು ಎಫ್‌ಐಆರ್‌ ದಾಖಲಿಸಲಾಗಿದೆ. ಫ್ಲೈಯಿಂಗ್‌ ಸ್ಕ್ವಾಡ್‌ನಲ್ಲಿ 67 ತಂಡಗಳಿದ್ದು, 5 ಲಕ್ಷ ರೂ. ಮತ್ತು 4.58 ಲಕ್ಷ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿವೆ. ಅಬಕಾರಿ ಇಲಾಖೆಯ 43 ತಂಡಗಳು 1,08,46,489 ರೂ. ಮೌಲ್ಯದ 21554.36 ಲೀ. ಮದ್ಯವನ್ನು ವಶಪಡಿಸಿಕೊಂಡಿವೆ. ಜತೆಗೆ 12.40 ಲಕ್ಷ ರೂ. ಮೌಲ್ಯದ 10 ವಾಹನಗಳನ್ನು ಜಪ್ತಿ ಮಾಡಿ 622 ಪ್ರಕರಣ ದಾಖಲಿಸಿವೆ,'' ಎಂದು ಚುನಾವಣಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದರು.
''ಏ. 16ರ ಸಂಜೆ 6ರಿಂದ ಏ. 19ರ ಮುಂಜಾನೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಪ್ರತಿ ವ್ಯಕ್ತಿಯು 18.2 ಲೀ. ಬಿಯರ್‌ ಮತ್ತು 2.3 ಲೀಟರ್‌ ಮದ್ಯವನ್ನು ಮನೆಯಲ್ಲಿಟ್ಟುಕೊಳ್ಳಲು ಅವಕಾಶವಿದೆ,'' ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಡಿಸಿಪಿ ಅಣ್ಣಾಮಲೈ, ''ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿನ 2131 ಮತಗಟ್ಟೆಗಳ ಪೈಕಿ 323 ಸೂಕ್ಷ್ಮ ಮತ್ತು 56 ಪ್ರದೇಶಗಳಲ್ಲಿ 80 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಒಟ್ಟು 4741 ಮಂದಿ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ ವಿರುದ್ಧ 14 ಎಫ್‌ಐಆರ್‌ ಹಾಕಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ 1363 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೆಲವರನ್ನು ಗಡಿಪಾರು ಮಾಡಲಾಗಿದೆ,'' ಎಂದು ಹೇಳಿದರು.
'ರೇಸ್ 3' ಸೈಫ್ ಅಲಿ ಖಾನ್ ಜಾಗಕ್ಕೆ ಸಲ್ಮಾನ್ ಖಾನ್ | Salman khan to replace Saif Ali Khan in 'Race 3' | Kannadaprabha.com
'ರೇಸ್ 3' ಸೈಫ್ ಅಲಿ ಖಾನ್ ಜಾಗಕ್ಕೆ ಸಲ್ಮಾನ್ ಖಾನ್
Published: 01 Sep 2017 02:37 PM IST
ಬಾಲಿವುಡ್ ನಟ ಸಲ್ಮಾನ್ ಖಾನ್
ಮುಂಬೈ: ರೇಸ್-3 ಚಿತ್ರದಲ್ಲಿ ಸೈಫ್ ಅಲಿ ಖಾನ್ ಬದಲಿಗೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅವರು ನಟಿಸುತ್ತಿದ್ದರೆಂಬ ಸುದ್ದಿ ಇದೀಗ ಬಾಲಿವುಡ್ ಅಂಗಳದಲ್ಲಿ ಹರಿದಾಡತೊಡಗಿದೆ.
ನಿರ್ಮಾಪ ರಮೇಶ್ ತೂರಾನಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಸೈಫ್ ನಟನೆಯಿಲ್ಲದೆ ಚಿತ್ರ ಮುಂದುವರೆಯುವುದಿಲ್ಲ. ಚಿತ್ರದಲ್ಲಿ ಸೈಫ್ ಅಲಿ ಖಾನ್ ಕೂಡ ನಟಿಸುತ್ತಿದ್ದು, ಸಲ್ಮಾನ್ ಖಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆಂದು ಹೇಳಿದ್ದಾರೆ.
ತಮ್ಮ ಬಹುನಿರೀಕ್ಷಿತ 'ಚೆಫ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಸೈಫ್ ಅಲಿ ಖಾನ್ ಅವರು, ರೇಸ್-3 ಚಿತ್ರ ನಿರ್ಮಾಣದ ಬಗ್ಗೆ ರಮೇಶ್ ಅವರು ಕಳೆದ ವರ್ಷವೇ ನನ್ನ ಬಳಿ ಹೇಳಿದ್ದರು. ರಮೇಶ್ ಎಂದರೆ ನನಗೆ ಬಹಳ ಇಷ್ಟ. ಸಲ್ಮಾನ್ ಖಾನ್ ಅವರು ಚಿತ್ರಕ್ಕೆ ಉತ್ತಮ ನಟರಾಗಿಲಿದ್ದಾರೆ. ಇಬ್ಬರಿಗೂ ಈ ಮೂಲಕ ಶುಭ ಹಾರೈಸುತ್ತೇನೆ. ಆದರೆ, ಚಿತ್ರದಲ್ಲಿ ನನ್ನ ನಟನೆ ಬಗ್ಗೆ ನಿರ್ಮಾಪಕರು ನನ್ನೊಂದಿಗೆ ಮಾತುಕತೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.