text
stringlengths 0
61.5k
|
---|
ಆರ್ಷಚರಣಾರಾಮ ಗೋಪೀ |
ಹರ್ಷಕನ ಲೀಲಾಲಹರಿಯಾ |
ಕರ್ಷಿಸುವ ಮಹಿಮಾಮಹೀಪತಿವೃಂದ ತೇಜವನು.. |
ವರ್ಷಿಸುತಲಿರೆ ನಾಕಲೋಕವು |
ಈರ್ಷಿಸುವ ತೆರದಲಿಹ ದೇವಮ- |
ಹರ್ಷಿಗಣಸನ್ನಮಿತ ಭಾರತದೇವಿಗಾನಮಿಪೆ...||೨|| |
ನೇತ್ರವಹ್ನಿಯ ರೂಪೆರಡುದಶ |
ಪುತ್ರಿ ದಕ್ಷನ ತಾಳ್ದ ನವಕೃತಿ |
ಮಿತ್ರಪಾದ್ಯಧಿದೇವತಾ ಬಹುಪುಣ್ಯಪೂರುಷರ.. |
ಸತ್ರಯಾಗತಪೋಬಲದಿ ಸುಪ |
ವಿತ್ರಭೂತಳಸಂಖ್ಯ ದಿವ್ಯ |
ಕ್ಷೇತ್ರಧಾಮ ಪುನೀತಭಾರತದೇವಿಗಾನಮಿಪೆ...||೩|| |
ಸಾಲುಗೂಡುತ ಮಾರುತಗಳನು |
ಕೂಲಿಸುವ ಹಿಮವಿಂಧ್ಯಸಹ್ಯಸು |
ಶೈಲದಾವಳಿ ಬಗೆಯ ಖಗಮೃಗಸಂಗವಿಂಬಿಟ್ಟು.. |
ಹಾಲುನೊರೆಜಲಪಾತ ಝರಿಯನು |
ಗಾಲ ಹಸಿರಿನ ವಸ್ತ್ರಧರ ವನ |
ಮಾಲೆಯಿಂ ಭ್ರಾಜಿಸುವ ಭಾರತದೇವಿಗಾನಮಿಪೆ...||೪|| |
ದೇವನದಿ ಯಮುನಾ ಸರಸ್ವತಿ |
ಪಾವನಾ ಕಾವೇರಿ ಕೃಷ್ಣೆಯ |
ರಾವಗಂ ಮೈದುಂಬಿ ನರ್ತಿಸಿ ನಾಡಮೈದೊಳೆದು |
ಹೂವುಕೇಸರಘನವ ಚಿಗುರಿಸಿ |
ಜೀವಸಂಕುಲಗಳನು ಪೋಷಿಸಿ |
ಕಾವ ಧುನಿತೀರ್ಥಗಳ ಭಾರತದೇವಿಗಾನಮಿಪೆ...||೫|| |
ವ್ಯಾಸಮುಖಸುಜ್ಞನಿಧಿ ಕಾಳಿಯ |
ದಾಸಬಾಣಪ್ರಭೃತಿ ಪದದು |
ಲ್ಲಾಸ ಪಂಪಾದಿಕವಿವಾಣೀಸ್ರೋತವುಗಮಿಸಿಹ.. |
ಲೇಸುಧರ್ಮಪ್ರಚುರಗೊಳಿಸಿದ |
ಸಾಸಿರ ಮತಾಚಾರ್ಯಗುರುವಾ- |
ಗ್ಭಾಸದಿಂ ಶೋಭಿಸಿಹ ಭಾರತದೇವಿಗಾನಮಿಪೆ...||೬|| |
ವೇದಗೀತೊಂಕಾರದಿಂದ |
ಪ್ರಾದಿಗೊಂಡತಿವಿಸ್ತರಿಪ ಸಂ |
ವಾದಿಮುಖ್ಯಸ್ವರದಿ ನೈಕಧ ರಾಗರಾಗಿಗಳ.. |
ನಾದಭಾವದಲಯಕೆ ಭಂಗಿಯ |
ಭೇದ ಮುದ್ರಿಪ ಕೋವಿದರ ಮನ |
ಮೋದನಾಟ್ಯಪ್ರಥಿತ ಭಾರತದೇವಿಗಾನಮಿಪೆ...||೭|| |
ಕಲ್ಲಿನಲಿ ಕಾವ್ಯಗಳ ಮೂರ್ತಿಸಿ |
ಪಲ್ಲವಿಸಿ ಗುಡಿಗೋಪುರಗಳತಿ |
ಮಲ್ಲರಾಜರ ವಿಜಯಚಿಹ್ನೆಯ ಶಿಲ್ಪ ರಚಿಸಿಹರ.. |
ಫುಲ್ಲವರ್ಣದ ಕುಂಚದಲಿ ಸವಿ |
ಫುಲ್ಲರೂಪದಚಿತ್ರಗಳ ಪರಿ- |
ಫುಲ್ಲಿಸಿದ ಕಲೆಗಾರಭಾರತದೇವಿಗಾನಮಿಪೆ...||೮|| |
ಪ್ರಾಂತದೇಶಕೆ ಭಿನ್ನತೆಯ ಸಿರಿ |
ವಂತ ಭಾಷಾಪ್ರಕರಯುಕ್ತ ನಿ |
ತಾಂತ ಶಿಷ್ಟಾಚರಣಶೀಲ ಸುಸಂಸ್ಕೃತರು ಬೆರೆತ.. |
ಶಾಂತಿ ನಾಡಿನ ಕದಡಿದಧಮರ |
ನಂತಿಸಲು ಮೊಳಗಿದ ಯುವಜನ |
ಕ್ರಾಂತಿಗಳ ವಿಕ್ರಾಂತಭಾರತದೇವಿಗಾನಮಿಪೆ...||೯|| |
ಲೋಕಮಾತೆಯೆ ಕಮಲೆ ವೀಣೆಯ |
ಝೇಂಕರಿಪ ವಾಗ್ದೇವಿ ದುರ್ಗೆಯೆ |
ಪಂಕಜಾನನೆ ವಿಮಲೆ ಸರ್ವಪ್ರೇರಕಳೆ ಒಲಿದು.. |
ಶ್ರೀಕರಳೆ ನಿಜಕರದೊಳೆನ್ನ |
ಸ್ವೀಕರಿಸು ಮಜ್ಜನನಿ ಭಾರತಿ |
ಯೇಕಮಾತ್ರಭಿಲಾಷೆಯಿದುವೀ 'ಭಾರತೀಯ'ನಿಗೆ...||೧೦|| |
Posted by ಭೀಮ-'ಮಹಾಭಾರತೀ'ಯ at 08:35 No comments: |
'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ - ಭಾಗ 3 |
ಜೂನ್ 28-1930.ಚಿತ್ತಗಾಂಗ್ ನ ಜನತೆಗೆ ಆಘಾತಕಾರಿ ವಿಷಯವೊಂದು ತಿಳಿಯಿತು.ಕ್ರಾಂತಿಯ ನಾಯಕರಲ್ಲಿ ಒಬ್ಬನಾದ "ಅನಂತ ಸಿಂಹ" ಆಂಗ್ಲರಿಗೆ ಶರಣಾದ ಸುದ್ದಿ ಅದು.ವಿಷಯ ತಿಳಿದಾಕ್ಷಣ ಎಲ್ಲರಿಗೂ ದಿಗ್ಭ್ರಮೆ.ಯಾರೊಬ್ಬರೂ ಇದನ್ನು ನಂಬಲು ತಯಾರಿರಲಿಲ್ಲ. |
ಜೊತೆಗೆ ಜನರಲ್ಲಿ ಅನೇಕ ಗಾಳಿಸುದ್ದಿಗಳೂ ಹರಿದಾಡಲಾರಂಭಿಸಿದವು."ಇದು ಬ್ರಿಟಿಶರೇ ಹಬ್ಬಿಸಿರುವ ಸುಳ್ಳು ಸುದ್ದಿ ಇರಬೇಕು. ಯಾಕಂದ್ರೆ ಬಂಧನಕ್ಕೆ ಉಳಿದಿರೋದು ಅನಂತ ಒಬ್ಬನೆ.ಈಗ ಅವನನ್ನೂ ಹಿಡಿದು ಬಾಯಿ ಬಿಡಿಸುತ್ತಿದ್ದೇವೆ ಅಂತ ಸುದ್ದಿ ಹಬ್ಬಿಸಿದರೆ, ಉಳಿದ ಕ್ರಾಂತಿಕಾರಿಗಳು ಅನಂತನನ್ನು ಕೊಲ್ಲಬಹುದು ಅನ್ನೋ ಉದ್ದೆಶದಿಂದ ಈ ಸುದ್ದಿ ಎದ್ದಿರಬಹುದು." ಅಂತ ಕೆಲವು ಜನ ಅಂದುಕೊಂಡ್ರು.. "ಇಲ್ಲ, ಇದು ಸೂರ್ಯಸೇನನೇ ರೂಪಿಸಿರುವ ಯೊಜನೆ ಇರಬೇಕು. ಉಳಿದ ಯುವಕರಿಗೆ ಜೈಲಿನಲ್ಲಿ ಹಿಂಸೆ ಕೊಡದಿರಲು ಅನಂತ ಈ ನಿರ್ಧಾರ ತೊಗೊಂಡಿರಬಹುದು." ಅಂತ ಇನ್ನೂ ಕೆಲವರು ಭಾವಿಸಿದರು..ಆದರೆ, ಅನಂತ ಬ್ರಿಟಿಶರಿಂದ ಬಂಧಿತನಾಗಿದ್ದಂತೂ ನಿಜವೇ ಆಗಿತ್ತು.. |
ಅನಂತ ಸಿಂಹ |
ಅನಂತ ಒಬ್ಬ ಮಹಾನ್ ಯೋದ್ಧಾ.. ಇಡೀ ಚಿತ್ತಗಾಂಗ್ ನ ಕ್ರಾಂತಿಯಲ್ಲಿ ಮೊದಲಿಂದಲೂ ಯೋಜನೆಯಲ್ಲಿ ಇದ್ದವನು ಇವನು..ಪ್ಲಾನಿನ ಪ್ರಕಾರ, ಒಟ್ಟು ಎರಡು ಶಸ್ತ್ರಾಗಾರಗಳ ಮೇಲೆ ಆಕ್ರಮಣ ಆಗಬೇಕಿತ್ತು. ಒಂದು ಪೋಲಿಸ್ ಶಸ್ತ್ರಾಗಾರ. ಮತ್ತೊಂದು ಅರೆಸೈನ್ಯದ ತುಕಡಿಯ ಶಸ್ತ್ರಾಗಾರ. ಇವೆರಡರಲ್ಲಿ ಪೋಲಿಸ್ ಶಸ್ತ್ರಾಗಾರವನ್ನು ಆಕ್ರಮಿಸುವ ಹೊಣೆ ಗಣೇಶ್ ಘೋಷ್ ಮತ್ತು ಅನಂತ ಸಿಂಹನ ಹೆಗಲೇರಿತ್ತು. |
ದಾಳಿಯೇನೋ ಸುಸೂತ್ರವಾಗಿ ನಡೆಯಿತು. ಒಟ್ಟು ೧೪ ಪಿಸ್ತೊಲ್ ಮತ್ತು ಹತ್ತಾರು ಬನ್ದೂಕುಗಳನ್ನು ಸಂಗ್ರಹಿಸುವಲ್ಲಿ ಅನಂತ ಯಶಸ್ವಿಯಾಗಿದ್ದ,. ಆದರೆ ದಾಳಿಯ ಮಧ್ಯದಲ್ಲಿ "ಹಿಮಾಂಶು ದತ್ತ" ಎಂಬ ಹುಡುಗನ ಬಟ್ಟೆಗೆ ಬೆಂಕಿ ತಗುಲಿಬಿಟ್ಟಿತು.. ಧಗೆಯಲ್ಲಿ ಒದ್ದಾಡುತ್ತಿದ್ದ ಅವನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಅನಂತನ ಜವಾಬ್ದಾರಿಯಾಯಿತು.. ಹಾಗೆ ಕರೆದೊಯ್ಯುವಾಗ, ಪ್ರಯಾಣದ ಮಧ್ಯದಲ್ಲಿ ಬ್ರಿಟಿಶರು ಕ್ರಾಂತಿಕಾರಿಗಳನ್ನು ಸುತ್ತುವರೆದರು. ಉಪಾಯದಿಂದ ಅನಂತ, ಬಳಲಿದ್ದ ಹಿಮಾಂಶುವನ್ನು ವ್ಯಕ್ತಿಯೊಬ್ಬರ ವಶಕ್ಕೆ ಸುರಕ್ಷಿತವಾಗಿ ಒಪ್ಪಿಸಿ, ತಾನು ತಪ್ಪಿಸಿಕೊಂಡುಬಿಟ್ಟ..ಆಮೇಲೆ, ಅದೆಷ್ಟೋ ದಿನಗಳ ನಂತರ, ಬಂದೀಖಾನೆಯಲ್ಲಿ ಆಂಗ್ಲರು ತನ್ನ ಯುವ ಸ್ನೇಹಿತರಿಗೆ ಕೊಡುತ್ತಿದ್ದ ಹಿಂಸೆಯನ್ನು ಕೇಳಿ ತಾನು ಶರಣಾಗಬೇಕೆಂದು ಅನ್ನಿಸಿ ಶರಣಾಗಿಬಿಟ್ಟ.ಅನಂತನ ಶರಣಾಗತಿ ನಿಜಕ್ಕೂ ಸೂರ್ಯಸೇನನ ಒಂದು ಯೋಜನೆಯೇ ಆಗಿತ್ತು. ಈಗಾಗಲೇ ಬಂಧಿತರಾಗಿ ಜೈಲಿನಲ್ಲಿ ಹಿಂಸೆ ಅನುಭವಿಸುತ್ತಿದ್ದ ಯುವಕರಿಗೆ ಮತ್ತೆ ಜೀವನೋತ್ಸಾಹ ತುಂಬಿಸಲು ಅನಂತ ತಾನೇ ಬಂಧಿತನಾದ.. |
ವಿಚಾರಣೆಯ ವೇಳೆ, ಅನಂತನಿಗೆ ಇನ್ನಿಲ್ಲದಂತೆ ಹಿಂಸೆ ನೀಡಲಾಯಿತು. ದೇಶಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಆತ, ಎಲ್ಲವನ್ನೂ ರಾಷ್ಟ್ರಕ್ಕಾಗಿ ಸಹಿಸಿಕೊಂಡ. ಕಡೆಗೆ ಅನಂತನಿಗೆ 'ಕರಿನೀರಿನ' ಶಿಕ್ಷೆ ವಿಧಿಸಿ, ಅಂಡಮಾನಿಗೆ ಅಟ್ಟಲಾಯಿತು..ಇವನ ಸಹನಾಯಕನಾಗಿದ್ದ ಗಣೇಶ್ ಘೋಷ್ ನೂ ಬಂಧಿತನಾಗಿ ಅಂಡಮಾನಿನ ಶಿಕ್ಷೆಗೆ ಗುರಿಯಾದ..ಅನಂತ್ ಸಿಂಹ, ಸ್ವಾತಂತ್ರ್ಯಾನಂತರ ೧೯೭೯ ರಲ್ಲಿ ಜನವರಿ ೨೫ ರಂದು ಇಹಲೋಕ ತ್ಯಜಿಸಿದ.. ಹಾಗೆಯೇ ಗಣೇಶ್ ಘೋಶನು ೧೯೯೪ ಅಕ್ಟೋಬರ್ ೧೬ ರಂದು ನಿಧನನಾದನು.. |
ಇತ್ತ ಲೊಕನಾಥ ಬಲ್ ಕೂಡ ತಲೆಮರೆಸಿಕೊಂಡಿದ್ದ. ಜಲಾಲಬಾದ್ ಗುಡ್ಡದಲ್ಲಿ ನಡೆದ ಹೊರಾಟದಲ್ಲಿ ತನ್ನ ಕಣ್ಣೆದುರೇ, ತನ್ನ ತಮ್ಮ ಹರಿಗೋಪಾಲ್ ಬಲ್(ಟೇಗ್ರ) ಆಂಗ್ಲರ ಗುಂಡಿಗೆ ಬಲಿಯಾದದ್ದನ್ನು ನೋಡಿ ತುಂಬಾ ದುಃಖಿತನಾಗಿದ್ದ.ಬ್ರಿಟಿಶರ ಕೈಗೆ ಸಿಗದಿರಲು, ಫ್ರೆಂಚರ ತಾಣವಾದ "ಚಂದ್ರನಗರ"ದಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ.. ಆದರೆ ಅಲ್ಲಿಗೂ ಆಂಗ್ಲರ ಪಡೆ ದೌಡಾಯಿಸಿತು. ಮತ್ತೊಂದು ಗುಂಡಿನ ಚಕಮಕಿ ಕ್ರಾಂತಿಕಾರಿಗಳ ಹಾಗೂ ಬ್ರಿಟಿಶರ ನಡುವೆ ನಡೆಯಿತು.. ಆ ಹೋರಾಟದಲ್ಲಿ ಲೊಕನಾಥನ ಸಹಚರ "ಜಿಬನ್ ಘೋಶಾಲ್" ಹುತಾತ್ಮನಾದ. ಲೊಕನಾಥ್ ಕಡೆಗೂ ಆಂಗ್ಲರ ಸೆರೆಯಾದ..ಅವನ ವಿಚಾರಣೆಯೂ ನಡೆದು, ಅವನಿಗೂ ಭಯಾನಕ "ಕರಿನೀರಿನ" ಶಿಕ್ಷೆ ವಿಧಿಸಲಾಯಿತು..!!! |
ಕಲ್ಪನಾ ದತ್ತ, ಪ್ಲಾನಿನ ಪ್ರಕಾರ ಪ್ರೀತಿಲತಾಳ ಜೊತೆಗೆ "ಯುರೋಪಿಯನ್ ಕ್ಲಬ್" ಮೆಲೆ ದಾಳಿ ಮಾಡಬೇಕಿತ್ತು.ಆದರೆ ಹೋರಾಟಕ್ಕೂ ಒಂದು ವಾರದ ಮೊದಲೇ ಸ್ಟೇಶನ್ ಒಂದರಲ್ಲಿ ಬ್ರಿಟಿಷರು ಆಕೆಯನ್ನು ಬಂಧಿಸಿದರು..ಹೇಗೋ ಜಾಮೀನಿನ ಮೇಲೆ ಹೊರಬಂದ ನಂತರ, ಭೂಗತಳಾದಳು..ಆನಂತರ, ಅದೊಮ್ಮೆ ಕಲ್ಪನಾ ಮತ್ತು ಸೂರ್ಯಸೇನ್ ಅವಿತಿಟ್ಟುಕೊಂಡಿದ್ದ ಮನೆಯ ಮೇಲೆ ಬ್ರಿಟಿಷರು ದಾಳಿ ಮಾಡಿದರು.ಆ ಹೋರಾಟದಲ್ಲಿ ಸೂರ್ಯಸೇನ್ ಬಂಧಿತನಾದ. ಕಲ್ಪನಾ ಮತ್ತೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು..ಬಂಧಿತನಾದ ಸೂರ್ಯಸೇನ್ ಗಲ್ಲಿಗೇರಿದ್ದುಇತಿಹಾಸವಿದಿತ..ಬಹು ದಿನಗಳ ನಂತರ, ಮತ್ತೆ ಕಲ್ಪನಾ ಬಂಧಿತಳಾಗಿ, ಅವಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು..!!!! |
ಇವೆಲ್ಲದರ ಮಧ್ಯೆ ಹರಿಪಾದ ಎಲ್ಲೋ ಅಡಗಿದ್ದ.ಬಹುಶಃ ಆ ಭಾರತಮಾತೆ ಇನ್ನೂ ಒಂದು ಕಾರ್ಯಕ್ಕಾಗಿ ಕಾಯುತ್ತಿದ್ದಳೇನೋ..!!ಜಲಾಲಬಾದ್ ಗುಡ್ಡದಲ್ಲಿ ನಡೆದ ಹೋರಾಟದಲ್ಲಿ, ತನ್ನ ಸ್ನೇಹಿತರೆಲ್ಲ ಗುಂಡೇಟಿಗೆ ಬಲಿಯಾದದ್ದನ್ನ ನೋಡಿದ್ದ ಹರಿಪಾದನಿಗೆ, ಬ್ರಿಟಿಷರ ಬಗ್ಗೆ ಇನ್ನಷ್ಟು ಕೋಪ ಉಕ್ಕಿತ್ತು.ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಅಷ್ಟೇ.. |
ಅಲ್ಲೊಬ್ಬ ಬ್ರಿಟಿಶ್ ಅಧಿಕಾರಿ, ಈ ಎಲ್ಲ ಸಾವಿಗೆ ಕಾರಣನಾದವನು, ಚಿತ್ತಗಾಂಗ್ ನಲ್ಲೇ ಹಾಯಾಗಿ ಇದ್ದ.ಬಂಧಿತರಾದ ಉಳಿದ ಕ್ರಾಂತಿಕಾರಿಗಳನ್ನ ವಿಚಾರಣೆಯ ವೇಳೆ ಹಿಂಸಿಸುತ್ತಿದ್ದ. ಅವನಿಗೆ ಫುಟ್ಬಾಲ್ ಆಟವೆಂದರೆ ಪ್ರಾಣ.ಸದಾ ಮೈದಾನದಲ್ಲಿ ನಡೆಯುತ್ತಿದ್ದ ಆಟವನ್ನು ನೋಡುತ್ತಾ ಕೂರುತ್ತಿದ್ದ.ಅದನ್ನೇ ಹರಿಪಾದ ವಧಾಸ್ಥಳವನ್ನಾಗಿಸಿಕೊಂಡಿದ್ದ.ಅದೊಮ್ಮೆ, ಫುಟ್ಬಾಲ್ ಆಟದ ವೀಕ್ಷಣೆಯಲ್ಲಿ, ಆ ಅಧಿಕಾರಿ ಮಗ್ನನಾಗಿದ್ದಾಗ, ಹೊಂಚು ಹಾಕಿ ಕುಳಿತಿದ್ದ ಹರಿಪಾದ, ನೇರ ಅವನ ಹತ್ರ ಬಂದವನೇ, ಸೊಂಟದಲ್ಲಿದ್ದ ಪಿಸ್ತೋಲ್ ಹೊರತೆಗೆದು ಗುಂಡು ಹಾರಿಸಿಯೇ ಬಿಟ್ಟ. ನೋಡುನೋಡುತ್ತಲೇ ಬ್ರಿಟಿಶ್ ಅಧಿಕಾರಿ ಕೊನೆಯುಸಿರೆಳೆದ. ತನ್ನ ಸಹಚರರಿಗೆ ನೋವುಣಿಸಿದ್ದ ಆ ಆಂಗ್ಲರಿಗೆ ಚಿಕ್ಕ ಬಾಲಕ, ಚುರುಕು ಮುಟ್ಟಿಸಿದ್ದ.ಆನಂತರ, ಅವನನ್ನು ಬಂಧಿಸಿ, ನೆಪಕ್ಕೆಂದು ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಿದರು.ಆ ವಿದ್ಯಾರ್ಥಿ 'ಹರಿಪಾದ ಮಹಾಜನ್' ನೇಣಿಗೇರಿದಾಗ ಅವನಿಗೆ ಕೇವಲ 14 ವರ್ಷ.!!!! |
ಅಂತೂ ಕೊನೆಗೆ, ಸೂರ್ಯಸೇನ್ ಎಂಬ ಮಹಾನ್ ಸಂಘಟಕ, ಕ್ರಾಂತಿಕಾರಿ, ಅಪ್ಪಟ ದೇಶಾಭಿಮಾನಿ ಹಚ್ಚಿದ ಆ ಕಿಚ್ಚು, ಯಶಸ್ವಿಯಾಯಿತಾದರೂ, ಕ್ರಾಂತಿಕಾರಿಗಳ ಬಂಧನದಿಂದ ಮಂಕು ಕವಿದಿದ್ದು ದಿಟ.ಆದರೂ, ಆ ಕಿಚ್ಚನ್ನು ಮನದೊಳಗೆ ಉರಿಸಿಕೊಂಡಿದ್ದ ಯುವಕರು ಮತ್ತೆ ಮತ್ತೆ ಮೇಲೆದ್ದು ಬ್ರಿಟಿಷರನ್ನು ನಿರಂತರ ಹಣ್ಣಾಗಿಸಿ, ತಾಯಿ ಭಾರತಿಯ ದಾಸ್ಯವನ್ನು ಕಳಚುವಲ್ಲಿ ವಿಜಯ ಸಾಧಿಸಿದರು..!!!! |
ಉಳಿದೆಲ್ಲ ಹೋರಾಟ,ಸತ್ಯಾಗ್ರಹಗಳ ಜೊತೆಗೆ ಚಿತ್ತಗಾಂಗ್ ನ ಈ ಕ್ರಾಂತಿಯನ್ನೂ ನಮ್ಮ ಪುಸ್ತಕದಲ್ಲಿ ಹೇಳಬೇಕಿತ್ತು.!! ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಸಿಡಿದೆದ್ದು, ಬ್ರಿಟಿಶ್ ಪ್ರಭುತ್ವದ ವಿರುದ್ಧ ಮಾಡಿದ ಹೋರಾಟವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೂ ಹೇಳಬೇಕಿತ್ತು..!!ವಯಸ್ಸು ಚಿಕ್ಕದಿದ್ದರೂ ಆಂಗ್ಲರ ಬಂದೂಕಿಗೆ ಎದೆ ಸೆಟೆಸಿ ನಿಂತ ವೀರರ ಧೈರ್ಯ ಸಾಹಸವನ್ನು ನಮ್ಮ ಯುವಕರಿಗೂ ಹೇಳಬೇಕಿತ್ತು..!! ಹ್ಯಾರಿಪಾಟರ್, ಸ್ಪೈಡರ್ ಮ್ಯಾನ್ ನಂತಹ ಕಾಲ್ಪನಿಕ 'ಹೀರೋ'ಗಳ ಕಥೆ ಹೇಳೋದಕ್ಕಿಂತ ಮೊದಲು, ದೇಶಕ್ಕಾಗಿ ಪ್ರಾಣತೆತ್ತ ಈ ನಿಜವಾದ 'ಹೀರೋ'ಗಳ ಕಥೆಯನ್ನ ನಮ್ಮ ಮಕ್ಕಳಿಗೆ ಹೇಳಬೇಕಿತ್ತು..!!!ಆದರೆ ಅದೇಕೋ ನಮ್ಮ ದಿವ್ಯ ನಿರ್ಲಕ್ಷ್ಯದಿಂದ, ಅವರೆಲ್ಲ ತೆರೆಯಲ್ಲಿ ಮರೆಯಾದರು.. |
ಕಡೆ ಪಕ್ಷ,ಅವರು ತಮ್ಮ ರಕ್ತತೈಲವನ್ನೆರೆದು ಹಚ್ಚಿದ ಈ ಸ್ವಾತಂತ್ರ್ಯಜ್ಯೋತಿಯನ್ನು ಆರದಂತೆ, ನಂದಾದೀಪವಾಗಿಸಲಾದರೂ ಅವರ ಸ್ಮರಣೆ ನಾವು ಮಾಡಲೇಬೇಕಲ್ಲವೇ..?!!!! |
[ ಈ ಲೇಖನದ ಮೊದಲೆರಡು ಭಾಗಗಳು |
ಭಾಗ-೧ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೧ |
ಭಾಗ-೨ - 'ಚಿತ್ತಗಾಂಗ್'ನಲ್ಲೊಂದು ಸ್ವಾತಂತ್ರ್ಯ'ಸೂರ್ಯ'ನ ಉದಯ..ಭಾಗ-೨ |
Posted by ಭೀಮ-'ಮಹಾಭಾರತೀ'ಯ at 05:51 1 comment: |
ಚಿತ್ತಗಾಂಗ್ ನಲ್ಲಿ ಕ್ರಾಂತಿ ಯಶಸ್ವಿಯಾಗಿ ನಡೆದು, ಕೊನೆಗೆ ಅದರ ಸಂಪೂರ್ಣ ರೂವಾರಿ ಸೂರ್ಯಸೇನ್ ಹುತಾತ್ಮನಾಗಿಹೋದ. |
ಅದರ ಮಧ್ಯದ ಘಟನೆಗಳು ನಿಜಕ್ಕೂ ರೋಮಾಂಚಕಾರಿ ಮತ್ತು ಕುತೂಹಲಕಾರಿ.. |
ಇತಿಹಾಸದ ಗರ್ಭದಲ್ಲಿ ಅಡಗಿಹೋದ ಆ ಅದ್ಭುತ ಘಟನಾವಳಿಗಳನ್ನ ನಿಮ್ಮೊಡನೆ ಹಂಚಿಕೊಳ್ಳಲೇಬೇಕೆಂದು ಇನ್ನೆರಡು ಭಾಗಗಳಲ್ಲಿ ಇಲ್ಲಿ ಹೊರತರುತ್ತಿದ್ದೇನೆ. |
ಚಿತ್ತಗಾಂಗ್ |
ಚಿತ್ತಗಾಂಗ್ ನ ಹೋರಾಟ ನಡೆದದ್ದು ಎಪ್ರಿಲ್ 18 1930. ಪ್ಲಾನಿನಂತೆ ಎಲ್ಲ ಕೆಲಸಗಳು ಮುಗಿದ ಮೇಲೆ, ಕ್ರಾಂತಿಕಾರಿಗಳು ಜಲಾಲಬಾದ್ ಗುಡ್ಡದ ಮೇಲೆ ಅಡಗಿಕೊಂಡಿದ್ದ್ರು. |
ಅದಾದ 4 ದಿನಗಳ ನಂತರ, ಅಂದ್ರೆ 22 ಏಪ್ರಿಲ್ 1930 , ಆ ಕ್ರಾಂತಿಕಾರಿಗಳ ಪಾಲಿಗೆ ಘೋರವಾಗಿತ್ತು.. ಕೆಲವು ತನಿಖೆಯ ಮೂಲಕ ಪೊಲೀಸರು ಕ್ರಾಂತಿಕಾರಿಗಳ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ಹೀಗಾಗಿ 80 ಸಶಸ್ತ್ರ ಪಡೆಯೊಂದಿಗೆ ಬ್ರಿಟಿಶ್ ಸೈನ್ಯ ಆ ಜಲಾಲಬಾದ್ ಗುಡ್ಡವನ್ನು ಸುತ್ತುವರೆಯಿತು. |
4 ದಿನಗಳಿಂದ ಸರಿಯಾದ ಆಹಾರ ಇಲ್ಲದೆ,ನಿದ್ರೆ ಇಲ್ಲದೆ ದಣಿದು ಹೋಗಿದ್ದ ಆ ಯುವಕರಿಗೆ ಇದು ಮತ್ತೊಂದು ಸವಾಲಾಗಿ ಪರಿಣಮಿಸಿತ್ತು.. ದಣಿವಾಗಿದ್ದು ದೇಹಕ್ಕೆ, ದೇಶಭಕ್ತಿಗೆ ಅಲ್ವಲಾ..!!!! |
ಸೇನಾಪತಿ ಲೋಕನಾಥ್ ಬಲ್ ನ ಆಜ್ನೆಯನ್ನನುಸರಿಸಿ ಎಲ್ಲ ವಿದ್ಯಾರ್ಥಿಗಳು ಯುದ್ಧಕ್ಕೆ ಸನ್ನದ್ಧರಾದರು.ಆ ಯುವಕರ ಹೆಸರು ಹೀಗಿವೆ.. |
೧)ಸುರೇಶ ದೇವ್ ೨)ವಿನೋದ್ ಚೌಧರಿ ೩)ಜಿತೇಂದ್ರ ದಾಸ್ಗುಪ್ತ ೪)ಶಂಭು ದಸ್ತಿದಾರ್ |
೫)ಕೃಷ್ಣ ಚೌಧರಿ ೬)ಸರೋಜ ಗುಹ ೭)ಮಲಿನ್ ಘೋಷ್ ೮)ಕಾಳಿಡೇ |
೯)ಮಧುಸೂದನ್ ದತ್ತ ೧೦)ನಾಣಿ ದೇವ್ ೧೧)ಖಿರೋದ್ ಬ್ಯಾನರ್ಜೀ ೧೨)ಹಿಮೇಂದು ದಸ್ತಿದಾರ್ |
೧೩)ಕಾಳಿ ಚಕ್ರವರ್ತಿ ೧೪)ಅರ್ಧೆಂದು ದಸ್ತಿದಾರ್ ೧೫)ರಣಧೀರ್ ದಾಸ್ಗುಪ್ತ ೧೬)ಶ್ಯಾಮರಾಂ ದಾಸ್ |
೧೭)ಮೋತಿ ಕನುನ್ಗೋ ೧೮)ವಿಧು ಭಟ್ಟಾಚಾರ್ಯ ೧೯)ನಾರಾಯಣ್ ಸೇನ್ ೨೦)ಪುಲಿನ್ ವಿಕಾಸ್ ಘೋಷ್ |
೨೧)ಮಹೇಂದ್ರ ಚೌಧರಿ ೨೨)ನಿರ್ಮಲ ಲಾಲ ೨೩)ವೀರೇಂದ್ರ ಡೇ ೨೪)ವಿಜಯ್ ಸೇನ್ |
೨೫)ನಿತ್ಯಪಾದ ಘೋಷ್ ೨೬)ಅಶ್ವಿನಿ ಚೌಧರಿ ೨೭)ವನವಿಹಾರಿ ದತ್ತ ೨೮)ಶಶಾಂಕ್ ದತ್ತ |
೨೯)ಸುಬೋದ್ಹ್ ಪಾಲ್ ೩೦)ಫಣೀಂದ್ರ ನಂದಿ ೩೧)ಹರಿಪಾದ ಮಹಾಜನ್ ೩೨)ಬಾಬುತೊಶ್ ಭಟ್ಟಾಚಾರ್ಯ |
೩೩)ಸುಧಾಂಶು ಬೋಸ್ ೩೪)ಸುಬೋದ್ಹ್ ಚೌಧರಿ ೩೫)ಬ್ರಿಗೇಡಿಯರ್ ತ್ರಿಪುರ ಸೇನ್ |
೩೬)ಮನೋರಂಜನ್ ಸೇನ್ ೩೭)ದೇವಪ್ರಸಾದ್ ಗುಪ್ತಾ ೩೮)ಹರಿ ಬಲ್ (ಟೇಗ್ರ) |
೩೯)ರಜತ್ ಸೇನ್ ೪೦)ಸ್ವದೇಶ್ ರೋಯ್ ೪೧)ವಿನೋದ್ ಬಿಹಾರಿ ದತ್ತ |
ಈ ಎಲ್ಲ ಯುವಕರ ಹತ್ರ ಇದ್ದಿದ್ದು "ಮಸ್ಕೆತ್ರಿ" ರೈಫಲ್ ಗಳು..ಇವು ಸ್ವಲ್ಪ ಹಳೆ ಕಾಲದವು.. |
ಬ್ರಿಟಿಷರು ಗುಡ್ಡವನ್ನು ಸಮೀಪಿಸುತ್ತಿದ್ದಂತೆ, ಲೋಕನಾಥ್ ಆದೇಶ ನೀಡಿದ. ಕೂಡಲೇ ಯುವಕರ ಬಂದೂಕಿನಿಂದ ಗುಂಡುಗಳು ಹೊರಬಂದವು. ಬ್ರಿಟಿಷರಿಗೆ ದಿಗ್ಭ್ರಮೆಯಾಯಿತು.. ಅಲ್ಲಿನ ಯುವಕರ ರೌದ್ರರೂಪ ಆಗತಾನೆ ಅರ್ಥವಾಗಿತ್ತು ಅವರಿಗೆ. |
ಬ್ರಿಟಿಷರೂ ಅತ್ಯಾಧುನಿಕ ವಿಕರ್ ಮಷಿನ್ ಗನ್ ಗಳಿಂದ ದಾಳಿ ನಡೆಸಿದರು.. |
"ಮಸ್ಕೆತ್ರಿ" ರೈಫಲ್ |
ವಿಕರ್ ಮಷಿನ್ ಗನ್ |
ಆ ಹೋರಾಟದಲ್ಲಿ ಗುಂಡೊಂದು ಟೇಗ್ರಾನಿಗೆ ಬಡಿಯಿತು..ಬರೀ 14 ವರ್ಷದ ಆ ಪುಟ್ಟಪೋರ ಆ ಸಾವಿನಲ್ಲೂ ನಗುತ್ತ ಸಹಚರರಿಗೆ " ನಾನಿನ್ನು ಹೊರಟಿದ್ದೇನೆ.ನೀವು ನಿಲ್ಲಿಸಬೇಡಿ.ದಾಳಿ ಮುಂದುವರೆಯಲಿ" ಎನ್ನುತ್ತಲೇ ಹುತಾತ್ಮನಾದ..ಹೀಗೇ ಒಬ್ಬರ ಹಿಂದೊಬ್ಬರು ಅಸುನೀಗುತ್ತಾ ಹೋದರು.ಅಂಬಿಕಾ ಚಕ್ರವರ್ತಿಗೂ ಗುಂಡು ತಗುಲಿತು. |
ಪರಿಸ್ಥಿತಿಯ ವಿಷಮತೆ ತಿಳಿದಾಕ್ಷಣ, ಸೇನಾಪತಿ ಲೋಕನಾಥ ಕೂಗಿದ, "ಗೆಳೆಯರೇ, ನಿಲ್ಲಬೇಡಿ, ಗೆಲ್ಲುವವರೆಗೂ ದಾಳಿ ಹಾಗೆ ಮುಂದುವರೆಯಲಿ" ಅಂತ. ಉತ್ತೇಜಿತಗೊಂಡ ಯುವಕರು, ದುಪ್ಪಟ್ಟು ಹುಮ್ಮಸ್ಸಿನಿಂದ ದಾಳಿ ನಡೆಸಿದರು. |
ಕೊನೆಗೂ, ಪುಟ್ಟ ಬಾಲಕರು ಹಿಡಿದ ಹಳೆ ಕಾಲದ ಬಂದೂಕಿನ ಎದುರಿಗೆ, ದೊಡ್ಡ ಬ್ರಿಟಿಶ್ ಪಡೆಯ ಅತ್ಯಾಧುನಿಕ ಯಂತ್ರವೂ ಸೋಲೊಪ್ಪಿಕೊಂಡಿತು.. ಅದಾಗಲೇ ರಾತ್ರಿಯಾಗಿದ್ದರಿಂದ ಬ್ರಿಟಿಷರು ಅಲ್ಲಿರಲು ಸಾಧ್ಯವಾಗದೆ ಓಡಿ ಹೋದರು.. ಚಿತ್ತಗಾಂಗ್ ನ ಯುವಕರಿಗೆ ಮತ್ತೊಮ್ಮೆ ವಿಜಯ ಒಲಿದಿತ್ತು.. |
Subsets and Splits
No community queries yet
The top public SQL queries from the community will appear here once available.