text
stringlengths
0
61.5k
-ಹಾದಿಗಲ್ಲು ಲಕ್ಷ್ಮೀನಾರಾಯಣ 'ಆಯಿತು ನಾನಿನ್ನು ಬರುತ್ತೇನೆ ನಿಮ್ಮ ಮನದ ಸತ್ಸಂಕಲ್ಪಗಳೆಲ್ಲ ಈಡೇರಲಿ…' ಎಂದವನೇ ಆ ಪ್ರಖರ ತೇಜದ ಬಾಲಕ ಹೊರಟೇಬಿಟ್ಟ. 'ತಾವು ವಿದ್ಯಾಸಂಪನ್ನರು. ಕಾರಣವಿಲ್ಲದೇ ಬರುವವರಲ್ಲ. ಬಂದ ಕಾರಣವನ್ನೇ ಹೇಳದೇ ಹೊರಟುಬಿಟ್ಟಿರಲ್ಲ. ಇಲ್ಲಿ ಬಂದವರಾರೂ ಇದುವರೆಗೆ ಬರಿಗೈಯಲ್ಲಿ ತೆರಳಲಿಲ್ಲ' ದೊರೆ ವಿನೀತನಾಗಿ ನುಡಿದ. 'ಬೇಡುವವರಲ್ಲಿ, ಬರಿಗೈಯವರಲ್ಲಿ ಬೇಡುವುದು ಯಾಚಕನ ಲಕ್ಷಣವೇ ಅಲ್ಲ.' ಬಂದ ಬಂದವರಿಗೆ ಮಾತ್ರವಲ್ಲ, ಬರಿದೆ ಹೋಗುವವರನ್ನು ಕರೆ ಕರೆದು ದಾನ ಮಾಡಿದ್ದ ಆ ಮಹಾರಾಜನಿಗೆ ಈ ಮಾತು ಕೇಳಿ ಆಘಾತವಾಯಿತು. ನನ್ನ ಸ್ಥಿತಿ ಆತನಿಗೆ ಹೇಗೆ […]
ತಂದೆ ತೋರಿದ ದಾರಿ
-ಹಾದಿಗಲ್ಲು ಲಕ್ಷ್ಮೀನಾರಾಯಣ ಇದ್ದಕ್ಕಿದ್ದಂತೆಯೇ ಭಾರೀ ಬೆಂಕಿ ಬಂದಂತಾಯಿತು. ಎಲ್ಲೆಡೆ ಚಾಚಿ ಬರುವ ಕೆನ್ನಾಲಿಗೆ. ಆ ಉರಿಯ ಒಳಗಿಂದ ನೆಲಮುಗಿಲನ್ನು ಒಂದುಮಾಡುವ ಯಾವುದೋ ಆಕೃತಿ. ಇದನ್ನು ಕಾಣುತ್ತಿದ್ದಂತೆಯೇ ಆ ಹುಡುಗನ ಧೈರ್ಯವೆಲ್ಲ ಉಡುಗಿಹೋಯಿತು. ಗಂಟಲಾರಿತು. ಮಾತು ಹೊರಡಲಿಲ್ಲ. ಗಡಗಡ ನಡುಗತೊಡಗಿದ. ಇದೆಲ್ಲ ನನ್ನದು, ನನಗೆ ಸೇರಿದ್ದು… ಮುಟ್ಟಬಂದರೆ.. ಸುಟ್ಟು ಬೂದಿ ಆಗುತ್ತೀಯೆ… ಬರಸಿಡಿಲಂತೆ ಬಂದೆರಗಿತು ಮಾತು. ಈಗಂತೂ ಹುಡುಗ ಕಂಗಾಲಾದ. ಈ ಸಂಪತ್ತು ನನ್ನದು.. ಆ ಮುನಿ ನನಗೆ ದಾನವಾಗಿ ಕೊಟ್ಟಿದ್ದು ಎಂಬ ಮಾತುಗಳು ಗಂಟಲಲ್ಲೇ ಉಳಿದವು. ಒಂದು […]
ಸುಖ ಬೇಡದ ಸತಿ
-ಹಾದಿಗಲ್ಲು ಲಕ್ಷ್ಮೀನಾರಾಯಣ ಒಂದು ಕ್ಷಣ ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ ರಾಜ ದಂಪತಿಗಳಿಗೆ. ಆ ಮುನಿಯ ಮಾತು ಹಾಗಿತ್ತು. 'ನಿನ್ನ ಮಗಳು ನನ್ನ ತಪಸ್ಸನ್ನು ಹಾಳುಗೆಡಹಿದ್ದಾಳೆ. ನನ್ನನ್ನು ಕುರುಡನನ್ನಾಗಿಸಿದ್ದಾಳೆ….' ಮುಂದೇನು ಆಘಾತ ಕಾದಿದೆಯೋ.. ತುದಿಗಾಲಲ್ಲಿ ನಿಂತರು ದಂಪತಿಗಳು. ಬಯಸಿ ಪಡೆದ ಮಗಳು ಇದೇನು ಸಂಕಟಕ್ಕೆ ಸಿಲುಕಿದ್ದಾಳೆ ಎಂದು ಮರುಗಿದರು ಅವರು. ಮುನಿಗಳೋ ಮೂಗಿನ ಮೊನೆಯಲ್ಲೇ ಕೋಪವುಳ್ಳವರು. ಅವರು ಮುನಿದರೇನುಗತಿ ಎಂಬ ಚಿಂತೆ ಅವರನ್ನು ಕಾಡಿತು. ಆದದ್ದಿಷ್ಟೆ. ಆ ರಾಜಪರಿವಾರ ವನವಿಹಾರಕ್ಕೆ ಬಂದಿತ್ತು. ಜತೆಗೆ ಮುದ್ದಿನ ಮಗಳೂ ಇದ್ದಳು. ಆ […]
ತಾಯ್ತಂದೆಯರ ಸೇವೆಯೇ ತಪಸ್ಸು
ಆ ಹುಡುಗನಿಗೆ ಏನೆಲ್ಲವನ್ನೂ ತನ್ನ ಕೈವಶ ಮಾಡಿಕೊಳ್ಳಬೇಕೆಂಬ ಬಯಕೆ. ಕಠಿಣ ತಪದಿಂದ ಇದು ಸಾಧ್ಯ ಎಂದರು ತಿಳಿದವರು. ಸರಿ, ಈತ ಸಾಧನೆಗಾಗಿ ತನ್ನ ಮುಪ್ಪಿನ ತಂದೆತಾಯಿಗಳನ್ನೂ ದಾರಿಗೆ ತೊಡಕೆಂದು ತೊರೆದ. ಕಾಡಿಗೆ ಹೊರಟ ; ತಪದಲ್ಲಿ ತೊಡಗಿದ. ಕೊನೆಗೂ ಸಿದ್ಧಿ ಸಿಕ್ಕಿತು. ಆತನ ಬೇಕುಗಳೆಲ್ಲವೂ ಕ್ಷಣಮಾತ್ರದಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದವು. ಜಟೆಗಡ್ಡಗಳೊಡನೆ ಅಹಂಕಾರವೂ ಬೆಳೆಯಿತು. ಆಲದಮರವೊಂದರ ಬುಡದಲ್ಲಿ ಕುಳಿತಿದ್ದಾಗ ಮೇಲಿಂದ ಹಕ್ಕಿಯ ಹಿಕ್ಕೆ ಬಿತ್ತು. ತರುಣ ಮುನಿ ಮುನಿದ. ಕೆಂಗಣ್ಣಿನಿಂದ ಮೇಲೆ ನೋಡಿದ. ಹಕ್ಕಿಯ ಸಂಸಾರ ಸುಟ್ಟು ಬೂದಿ! […]
ತಾಯ ಗೌರವ ಕಾಪಾಡಿದ ಸುಪುತ್ರ
'ಹೌದು, ಅಮ್ಮನ ಮಾತು ನಿಜ. ನಾನು ಉಳಿ ದವರಂತೆ ಆಗಬೇಕು'. ಆ ಹುಡುಗನ ಮನದಲ್ಲಿ ನಿರ್ಧಾರ ಬಲಿಯಿತು. ಋಷಿ ಮಾಂಡೂಕಿ ದಂಪತಿ ಕಠಿಣ ತಪದ ಮೂಲಕ ಭಗವದಾರಾಧನೆ ನಡೆಸಿದ್ದರ ಫಲ ಕಾಂತಿ ತುಂಬಿದ ಮಗು ಜನಿಸಿತ್ತು. ಗರ್ಭಾಷ್ಟಮದಲ್ಲೇ ಉಪನಯನವೂ ಆಗಿತ್ತು. ಆದರೂ ಈ ಮಗು ಎಲ್ಲರಂತೆ ಇರಲಿಲ್ಲ. ಸದಾ ಅಂತರ್ಮುಖಿ. ಉಳಿದ ವಟುಗಳಂತೆ ಬಾಹ್ಯ ಜಗತ್ತಿನ ಪರಿವೆಯೇ ಇರದಂತಿದ್ದ. ಇದು ತಾಯಿಗೂ ದುಃಖ. ಆಕೆಯ ದುಃಖ ಇಮ್ಮಡಿಸಲು ಮತ್ತೊಂದು ಕಾರಣ ಆಕೆಯ ಸವತಿಯ […]
ಅವಿನಾಶಿ ಆತ್ಮವಿದ್ಯೆಯ ಸಾಧಕ
-ಹಾದಿಗಲ್ಲು ಲಕ್ಷ್ಮೀನಾರಾಯಣ ವಾಜಶ್ರವಸ ಸಂಪ್ರದಾಯನಿಷ್ಠ, ಕರ್ಮಠ ಮುನಿಯೆನಿಸಿ ಗುರುಕುಲ ನಡೆಸುತ್ತಿದ್ದ ವೇದ ಪಂಡಿತ. ಆತನ ಮಗ ನಚಿಕೇತ ಅಧ್ಯಯನಶೀಲ. ವಾಜಶ್ರವಸ ಹಲವು ಯಜ್ಞಗಳನ್ನು ಮಾಡಿದವ. ಒಮ್ಮೆ ವಿಶ್ವಜಿತ್ ಯಾಗ ಮಾಡಿದ. ಮಂತ್ರ ಜಪ, ತರ್ಪಣ, ಹೋಮ, ದಾನ, ಸಂತರ್ಪಣೆ, ಪುಣ್ಯ ಕಥಾಶ್ರವಣ ಇವೆಲ್ಲ ಇದರ ಅಂಗಗಳು. ಯಜ್ಞಗಳೆಂದರೆ ಲೋಕೋಪಕಾರಕವೆಂದು ಅರಿತು ರಾಜರು ಪ್ರಜೆಗಳು ತಾವಾಗಿಯೇ ಸಾಧನ ಸಂಪತ್ತನ್ನು ತಂದುಕೊಡುತ್ತಿದ್ದರು. ಈಗ ದಾನದ ಸಮಯ. ಎಲ್ಲವನ್ನೂ ಕೊಟ್ಟು ಉಳಿದುದು ಕೆಲ ಮುದಿಹಸುಗಳಷ್ಟೇ. ತಂದೆ ಅವನ್ನೂ ಬ್ರಾಹ್ಮಣರಿಗೆ ದಾನ ಕೊಡುತ್ತಿರುವುದನ್ನು ಕಂಡು […]
ಕುಂಭ ಮೆರವಣಿಗೆಗೆ ಕಪ್ಪುಪಟ್ಟಿ ವಿರೋಧ: ಪೊಲೀಸರ ಸಂಧಾನ! | Prajavani
ಕುಂಭ ಮೆರವಣಿಗೆಗೆ ಕಪ್ಪುಪಟ್ಟಿ ವಿರೋಧ: ಪೊಲೀಸರ ಸಂಧಾನ!
ಧಾರವಾಡ: ಪ್ರಗತಿರರ ವಿರೋಧದ ನಡುವೆಯೂ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು.
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಪೂರ್ಣಕುಂಭ ಮೆರವಣಿಗೆ ವಿರೋಧಿಸಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ ಅವರಿಗೆ ಪತ್ರ ಬರೆದು, ಪೂರ್ಣಕುಂಭ ಮೆರವಣಿಗೆ ಕೈಬಿಡಬೇಕೆಂದು ಕೋರಿತ್ತು.
ಸಮ್ಮೇಳನದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಿದ್ದನ್ನು ವಿರೋಧಿಸಿ ಒಕ್ಕೂಟದ ಕಾರ್ಯಕರ್ತೆಯರು ಕೈಗಳಿಗೆ ಕಪ್ಪುಪಟ್ಟಿ ಧರಿಸಿ ವಿರೋಧ ವ್ಯಕ್ತಪಡಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಒಕ್ಕೂಟದ ಪುಸ್ತಕ ಮಳಿಗೆಗೆ ಧಾವಿಸಿ, ಕಪ್ಪುಪಟ್ಟಿ ಧರಿಸಿರುವುದನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಮೊಳಗಿತು ಕನ್ನಡದ ಕಹಳೆ: ಅದ್ದೂರಿ ಮೆರವಣಿಗೆಗೆ ವರ್ಣರಂಜಿತ ಚಾಲನೆ​
ಈ ಬಗ್ಗೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸುನಂದಾ, 'ಕನಿಷ್ಠ ಮುಂದಿನ ಸಮ್ಮೇಳನದಲ್ಲಾದರೂ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ಆಗದಿರಲಿ. ಸಾಹಿತ್ಯ ಸಮ್ಮೇಳನ ಯಾವುದೇ ಒಂದು ಜಾತಿ, ಧರ್ಮದ ಸಮ್ಮೇಳನವಲ್ಲ. ಇದು ಎಲ್ಲಾ ಜಾತಿ, ಧರ್ಮದವರಿಗೆ ಸೇರಿದ್ದು. ಈ ಬಗ್ಗೆ ಮೊದಲೇ ಗಮನಕ್ಕೆ ತಂದಿದ್ದರೂ ಕಂಬಾರರು ಲಕ್ಷ್ಯಕೊಡಲಿಲ್ಲ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇದು ಪರಿಷತ್ತಿನ ಅಸೂಕ್ಷ್ಮತೆಯನ್ನು ತೋರಿಸುತ್ತದೆ' ಎಂದರು.
ಒಕ್ಕೂಟದ ಕಾರ್ಯಕರ್ತೆ ಶಾರದಾ ಗೋಪಾಲ ಪ್ರತಿಕ್ರಿಯಿಸಿ, 'ಪೂರ್ಣಕುಂಭ ಮೆರವಣಿಗೆ ಅರ್ಥವಿಲ್ಲದ್ದು' ಎಂದರು.
ಸಾಹಿತಿ ಡಾ.ವಿನಯಾ ಒಕ್ಕುಂದ ಮಾತನಾಡಿ, 'ಈ ಹಿಂದೆ ಕುವೆಂಪು, ಶಾಂತರಸರು ಪೂರ್ಣಕುಂಭ ಮೆರವಣಿಗೆ ಬೇಡವೆಂದಿದ್ದರು. ಕಂಬಾರರು ಅದನ್ನು ಪಾಲಿಸಬಹುದಿತ್ತು. ಸ್ಕಂದ ಪುರಾಣದಲ್ಲಿ ಪೂರ್ಣಕುಂಭದ ಉಲ್ಲೇಖವಿದೆಯೆಂದು ಸಂಸ್ಕೃತ ವಿದ್ವಾಂಸರಾದ ಜಿ.ರಾಮಕೃಷ್ಣ ಮತ್ತು ಬಿ.ಎನ್.ಸುಮಿತ್ರಾ ಬಾಯಿ ಹೇಳಿದ್ದಾರೆ. ವೈದಿಕಷಾಹಿಯ ಆಚರಣೆಯಾಗಿ ಇಂದಿಗೂ ಇಂಥ ಮೆರವಣಿಗೆ ಉಳಿಸಿಕೊಂಡು ಬರಲಾಗಿದೆ. ವಿಧವೆಯರನ್ನು, ತೃತೀಯಲಿಂಗಿಗಳನ್ನು ಸೇರಿಸಿಕೊಂಡಾಕ್ಷಣ ಈ ತಪ್ಪು ಸರಿಪಡಿಸಲಾಗದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲೀ, ಸಮ್ಮೇಳನಾಧ್ಯಕ್ಷರಾಗಲೀ ನಿರ್ಣಯ ಕೈಗೊಂಡು ಇದನ್ನು ತಡೆಬಹುದಿತ್ತು' ಎಂದು ಅಭಿಪ್ರಾಯಪಟ್ಟರು.
ವಿರೋಧಿಸಿದ್ದು ಗೊತ್ತೇ ಇಲ್ಲ!
ಪೂರ್ಣಕುಂಭ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದ್ದು ನಮಗೆ ಗೊತ್ತೇ ಇಲ್ಲ ಎಂದು ಮೆರವಣಿಗೆರೆಯಲ್ಲಿ ಭಾಗವಹಿಸಿದ್ದ ಮಹಿಳೆಯರಾದ ಕವಿತಾ, ಮಂಜುಳಾ ಮತ್ತು ಗೌರಮ್ಮ ತಿಳಿಸಿದರು.
'ನಾವು ಸ್ವಂತ ವಿಚಾರದಿಂದಲೇ ಇಲ್ಲಿಗೆ ಬಂದಿದ್ದೇವೆ. ನಮ್ಮೂರಿಗೆ ಎಷ್ಟೋ ವರ್ಷಗಳ ನಂತರ ಸಮ್ಮೇಳನ ಬಂದಿದೆ ಅನ್ನೋ ಕಾರಣಕ್ಕೆ ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗವಹಿಸಿದೆವು. ಬೆಳಿಗ್ಗೆ 6.15ರಿಂದಲೇ ಸಿದ್ಧತೆ ನಡೆಸಿದೆವು. 11.45ರ ತನಕ ಮೆರವಣಿಗೆಯಲ್ಲಿ ಪಾಲ್ಗೊಂಡೆವು. ಅವರೇ ಸೀರೆ, ಮಣ್ಣಿನ ಮಡಿಕೆ, ಅಕ್ಕಿ, ತೆಂಗಿನಕಾಯಿ, ಎಲೆ ಅಡಿಕೆ ಕೊಟ್ಟಿದ್ದಾರೆ' ಎಂದು ವಿವರಿಸಿದರು.
ಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣ | One lakh devotees expected for Mantralayam - Kannada Oneindia
| Updated: Monday, August 7, 2017, 19:04 [IST]
ಮಂತ್ರಾಲಯ, ಆಗಸ್ಟ್ 7: ರಾಘವೇಂದ್ರ ಸ್ವಾಮಿಗಳ 346ನೇ ಆರಾಧನೆ ಮಹೋತ್ಸವಕ್ಕೆ ಮಂತ್ರಾಲಯವು ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ದೇವಸ್ಥಾನವೂ ಒಳಗೊಂಡಂತೆ ಮುಖ್ಯ ಬೀದಿಯ ಹಲವು ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ಸಹಕಾರ ನಗರದಲ್ಲಿರುವ ಉತ್ತರಾದಿಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನೆ
ಆಗಸ್ಟ್ ಎಂಟರಿಂದ ಹತ್ತನೇ ತಾರೀಕಿನವರೆಗೆ ಆರಾಧನೆ ನಡೆಯುತ್ತದೆ. ಈ ಮೂರೂ ದಿನ ರಾಯರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ದೇವಸ್ಥಾನಕ್ಕೆ ಇತ್ತೀಚೆಗಷ್ಟೇ ಸುಣ್ಣ ಬಣ್ಣ ಮಾಡಲಾಗಿದೆ. ಜತೆಗೆ ವಿದ್ಯುತ್ ವ್ಯವಸ್ಥೆ ಮಾಡಿರುವುದರಿಂದ ಝಗಮಗಿಸುತ್ತಿದೆ. ಚಿನ್ನ, ಬೆಳ್ಳಿ ಮತ್ತು ರತ್ನಗಳಿಂದ ಮಾಡಿದ ರಥವನ್ನು ಪುರೋಹಿತರು ಸ್ವಚ್ಛ ಮಾಡಿದ್ದು, ಮೆರವಣಿಗೆಗೆ ಸಿದ್ಧವಾಗಿದೆ.
ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ನಾನಾ ಕಡೆಯಿಂದ ಒಂದು ಲಕ್ಷ ಭಕ್ತರು ಭೇಟಿ ನೀಡುವ ಅಂದಾಜಿದ್ದು, ಅವರಿಗೆ ಅಗತ್ಯವಿರುವ ಅನುಕೂಲ ಮಾಡಿಕೊಡುವಂತೆ ಸುಬುಧೇಂದ್ರ ತೀರ್ಥರು ಸೂಚನೆ ನೀಡಿದ್ದಾರೆ.
ಕುಡಿಯುವ ನೀರು, ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ಅನುಕೂಲ ಮಾಡಲಾಗಿದೆ. ಮಳೆ ಕೊರತೆಯಿಂದ ನದಿಯಲ್ಲಿ ನೀರಿಲ್ಲ. ಆದ್ದರಿಂದ ಅಗತ್ಯ ಕಂಡುಬಂದಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಮಠದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಆರಾಧನೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. ಐದು ಸಾವಿರ ಮಂದಿ ವೀಕ್ಷಿಸಲು ಅನುಕೂಲ ಮಾಡಲಾಗಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ, ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
mantralaya raghavendra swamy hindu ಮಂತ್ರಾಲಯ ರಾಘವೇಂದ್ರ ಸ್ವಾಮಿ ಹಿಂದೂ
One lakh devotees expected for Mantralayam around the country for Raghavendra Swamy aradhane between August 8th to 10th, 2017.
ಅಹ್ಮದ್ ಪಟೇಲ್ ನಿಧನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಸಂತಾಪ | Karnataka Congress Leaders Condolence To Demise Of Ahmed Patel - Kannada Oneindia
38 min ago ಜ.26ರ ರೈತರ ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರ ಅನುಮತಿ
| Updated: Wednesday, November 25, 2020, 10:29 [IST]
ಬೆಂಗಳೂರು, ನ. 25: ಎಐಸಿಸಿ ಖಜಾಂಚಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
'ಅಹ್ಮದ್ ಪಟೇಲ್ ಅವರ ಅವರ ಅಗಲಿಕೆ ಸುದ್ದಿ ಆಘಾತ ತಂದಿದೆ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ತಮ್ಮ ಇಡೀ ಜೀವನವನ್ನು ಪಕ್ಷಕ್ಕೆ ಮುಡಿಪಾಗಿಟ್ಟ ನಿಷ್ಠಾವಂತ ನಾಯಕರು ಅವರು ಎಂದು ಶಿವಕುಮಾರ್ ಅವರು ಸ್ಮರಿಸಿಕೊಂಡಿದ್ದಾರೆ.
ಪಕ್ಷ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದಾಗಲೆಲ್ಲ ಬಲವಾಗಿ ನಿಲ್ಲುತ್ತಿದ್ದವರು ಅಹ್ಮದ್ ಪಟೇಲ್ ಅವರು. ಪಕ್ಷಕ್ಕೆ ಆಧಾರ ಸ್ತಂಭದಂತಿದ್ದ ಹಿರಿಯ ನಾಯಕನ ಅಗಲಿಕೆ ಪಕ್ಷಕ್ಕೆ ಭರಿಸಲಾರದ ನಷ್ಟವಾಗಿದೆ ಎಂದು ಅವರು ದುಃಖಿಸಿದ್ದಾರೆ.
ಅಹ್ಮದ್ ಪಟೇಲ್ ಅವರ ಜತೆ ಮೊದಲಿಂದಲೂ ಉತ್ತಮ ಒಡನಾಟ ಹೊಂದಿದ್ದೆ. ಅವರು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಮಾರ್ಗದರ್ಶಕರಾಗಿದ್ದರು. ಅವರ ಆಲೋಚನೆ, ವಿಚಾರ, ಸಿದ್ಧಾಂತಗಳು ನಮ್ಮೆಲ್ಲರಿಗೂ ಮಾದರಿಯಾಗಿತ್ತು ಎಂದು ಶಿವಕುಮಾರ್ ಅವರು ಹೇಳಿದ್ದಾರೆ.
ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಡಿ.ಕೆ ಶಿವಕುಮಾರ್ ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ: ನನಗೆ ಆತ್ಮೀಯರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ದೀರ್ಘಕಾಲ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಟೇಲ್ ಪಕ್ಷಕ್ಕೆ ಆಧಾರಸ್ಥಂಭವಾಗಿದ್ದರು. ಇವರ ಸಾವು ಪಕ್ಷಕ್ಕೆ ತುಂಬಿಬಾರದ ನಷ್ಟ. ಅವರ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ.
ಕಾಂಗ್ರೆಸ್ ಪಕ್ಷ ನಿಷ್ಠಾವಂತ ನಾಯಕನನ್ನು ಮತ್ತು ನಾನು ನಂಬಿಕಸ್ತ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣರಾಗಿದ್ದ ಪಟೇಲ್ ಅವರು ಕೊನೆಯವರೆಗೆ ನನ್ನ ಹಿತೈಷಿಯಾಗಿದ್ದವರು. ಈ ಸಾವಿನ ದುಃಖ ಮಾತುಗಳನ್ನು ಮೀರಿದ್ದು, ಹೋಗಿಬನ್ನಿ ಪಟೇಲ್‌ಜಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.
ahmed patel karnataka congress demise condolence siddaramaiah dk shivakumar ಅಹ್ಮದ್ ಪಟೇಲ್ ಕರ್ನಾಟಕ ಕಾಂಗ್ರೆಸ್ ನಿಧನ ಸಂತಾಪ ಸಿದ್ದರಾಮಯ್ಯ ಡಿಕೆ ಶಿವಕುಮಾರ್
Karnataka Congress leaders condole the death of ICC treasurer and senior Congress leader Ahmed Patel, Know more,
'ಬನವಾಸಿ ಮಾತು': August 2012
ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ:ಸುಧಾ ಮೂರ್ತಿಯವರ ದೃಷ್ಠಿಯಲ್ಲಿ
'ಈ ಜಗತ್ತು ಕಂಡ ಅದ್ಭುತ ಹಾಗೂ ಜೀವಂತ ವ್ಯಕ್ತಿಯ ಹೋರಾಟದ ಕಥೆಯ ತಿರುಳನ್ನು ಕಣ್ಣಿಗೆ ಕಟ್ಟಿದ ನಮ್ಮ ಕನ್ನಡ ನಾಡಿನ ಹೆಮ್ಮೆಯ ಆದರ್ಶ ಮತ್ತು ಮಾದರಿ ಮಹಿಳೆ ಹಿರಿಯ ಸಹೋದರಿ ಸುಧಾ ನಾರಾಯಣ ಮೂರ್ತಿ.'
ಈ ದಿನದ ಕನ್ನಡ ಪ್ರಭ (21-08-2012) ರ ಪತ್ರಿಕೆಯ ಮುಖ ಪುಟದ "ಸೂಚಿ ಯೊಂದಿಗೆ ಒಂದು ಸುಂದರ ಸಂಜೆ" ಎಂಬ ವಿಶಿಷ್ಟ ಹಾಗೂ ಮೌಲಿಕ ಚಿಂತನೆಯ ಅಮೋಘ ಅನುಭವವನ್ನು ಸುಧಾ ಮೂರ್ತಿಯವರ ಲೇಖನಿಯಿಂದ ಓದಿ ಪುಳಕಿತನಾದೆ.ಕಣ್ಣಾಲಿಗಳು ತೇವಗೊಂಡವಲ್ಲದೇ ಆ ಮಹಿಳೆಯ ಧೀರೋದಾತ್ತ ಧೀಃಶಕ್ತಿ ವ್ಯಕ್ತಿತ್ವ ಹಾಗೂ ಆ ಮಹಾ ತಾಯಿಯ ಹೋರಾಟದ ತಲಸ್ಪರ್ಷಿ ನಿರೂಪಣೆಯನ್ನು ತಿಳಿದು ರೋಮಾಂಚನವಾಯಿತು.
ಮಯನ್ ಮಾರ್ (ಬರ್ಮಾ) ದೇಶದ ಜನರಲ್ ಆನ್ ಸಾನ್ ಮತ್ತು ಸೂಚಿ ದಂಪತಿಗಳ ಪುತ್ರಿಯೇ ಈ 'ಆನ್ ಸೂಚಿ'.ಇವಳ ಜೀವನವೇ ಒಂದು ದೀರ್ಘ ಹೋರಾದ ಕಥೆಯಾದ ಬಗೆಯನ್ನು ಸುಧಾ ನಾರಾಯಣ ಮೂರ್ತಿಯವರು ತಮ್ಮ ಲೇಖನಿಯಿಂದ ಪಡೆಮೂಡಿಸಿ ಅವರ ಸ್ಪೂರ್ಥಿಯುತ ಬದುಕಿನ ಚಿತ್ತಾಕರ್ಷಕ ವ್ಯಕ್ತಿತ್ವದ ಘಮವನ್ನು ಕನ್ನಡ ಪ್ರಭ ಓದುಗರಿಗೆ ಉಣ ಬಡಿಸಿದ್ದಾರೆ.
14-08-2012 ರಂದು "ನಿಪಿಡೋರ್ " ನಲ್ಲಿ ಸಂಜೆ 5-ಘಂಟೆಗೆ ತಮ್ಮ ಪತಿ ಭಾರತ ದೇಶದ ಹೆಮ್ಮೆಯ ಹಾಗೂ ಕನ್ನಡ ನಾಡಿನ ಕೀರ್ತಿಶಾಲಿ ಸಾಧಕ ಸಂಪನ್ನ ಡಾ|| ನಾರಾಯಣ ಮೂರ್ತಿ ಹಾಗೂ ತಮ್ಮ ಸಹೋದರಿಯರೊಂದಿಗೆ ವಿಶ್ವದ ಮಹಾನ್ ಹೋರಾಟಗಾರ್ತಿ ಮಹಿಳೆ ಆನ್ ಸೂಚಿ ಯನ್ನು ಭೇಟಿಯಾಗಿ ಅವರೊಂದಿಗೆ ಕಳೆದ ಮಧು ಕ್ಷಣಗಳನ್ನು ಕಣ್ಣಿಗೆ ಕಟ್ಟಿದ್ದಾರೆ.ಈ ಅಪರೂಪದ ಹಾಗೂ ಅವಿಸ್ಮರಣೀಯವಾಗುವ ಲೇಖನವನ್ನು ಈ ದಿನದ ಕನ್ನಡ ಪ್ರಭದಲ್ಲಿ ಓದಿ ನಮ್ಮ ಹೋರಾಟದ ಬದುಕಿಗೆ ಸ್ಪೂರ್ಥಿ ಪಡೆಯಬಹುದು.
ಸೂಚಿಯವರು-ಸುಧಾ ಮೂರ್ತಿಯವರನ್ನು ಬೀಳ್ಕೊಡುವಾಗ ಸುಧಾ ಮ್ಯಾಡಮ್ ಅವರು ನಿವೇದಿಸಿಕೊಂಡ ಈ ಸಾಲುಗಳನ್ನು ಓಮ್ಮೆ ಓದಿ.
" ಮ್ಯಾಡಮ್ ಭಾರತೀಯ ಸಂಸ್ಕೃತಿಯಲ್ಲಿ ನಮಗಿಂತ ಹಿರಿಯರಾದ,ಜ್ಞಾನದಿಂದಲೂ ಗುಣದಿಂದಲೂ ಶ್ರೇಷ್ಠರಾದ ವ್ಯಕ್ತಿಗಳಿಗೆ ಕಾಲು ಮುಟ್ಟಿ ನಮಸ್ಕರಿಸಿ ಗೌರವ ಸೂಚಿಸುವದು ಪದ್ಧತಿ.ಈ ಪದ್ಧತಿ ಅನೇಕ ಕಾಲದಿಂದಲೂ ನಡೆದು ಬಂದಿದೆ.ನೀವು ನನ್ನ ದೃಷ್ಠಿಯಲ್ಲಿ ಎಲ್ಲ ರೀತಿಯಿಂದಲೂ ಈ ನಮಸ್ಕಾರಕ್ಕೆ ಯೋಗ್ಯರು,ನನಗೆ ನೀವು 'ಬೇಡ' ಅನ್ನಕೂಡದು ಎಂದಾಗ ತುಂಬಾ ಸಂತೋಷ ಮತ್ತು ಅಂತಃಕರಣದಿಂದ ನನ್ನ ಎರಡೂ ಕೈ ಹಿಡಿದು ಈ ಪದ್ಧತಿ ನಮ್ಮ ಬೌದ್ಧ ಧರ್ಮದಲ್ಲಿಯೂ ಇದೆ ಎಂದರು,ನಾನು ಬಾಗಿ ಅವರ ಕಾಲಿಗೆ ನಮಸ್ಕರಿಸಿದೆ."
ಕೇರಳ ಮಳೆ ಭೀಕರತೆ: ತಬ್ಬಿದ ಸ್ಥಿತಿಯಲ್ಲಿ ತಾಯಿ, ಮಗು ಶವಪತ್ತೆ! | Kerala Rains Bodies Of Mother Son Hugging Each Other Infant In Cradle Found Under Debris pod
Bangalore, First Published Oct 19, 2021, 7:48 AM IST
ಇಡುಕ್ಕಿ(ಅ.19): ಕೇರಳದಲ್ಲಿ(Kerala) ಸುರಿದ ಭಾರೀ ಮಳೆ(Rain), ಪ್ರವಾಹ(Flood), ಭೂಕುಸಿತದಿಂದ(Landslide) ಭಾರೀ ಸಾವು ನೋವು ಉಂಟಾಗಿದೆ. ಕೇರಳ ರಣಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ರಾಜ್ಯ ಮತ್ತು ಕೇಂದ್ರ ರಕ್ಷಣಾ ತಂಡಗಳು(Rescue Teams) ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ವೇಳೆ ಮಳೆ ಸೃಷ್ಟಿಸಿರುವ ಭೀಕರತೆ ಗೋಚರವಾಗುತ್ತಿದೆ. ಅವಶೇಷ ತೆರವು ವೇಳೆ ಪತ್ತೆಯಾಗಿರುವ ಶವಗಳು ಮನಕಲಕುವ ಕತೆಗಳನ್ನು ಹೇಳುತ್ತಿವೆ.
ಭಾನುವಾರ ಮೂರು ಮಕ್ಕಳು ಪರಸ್ಪರ ಕೈ ಹಿಡಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿತ್ತು. ಸೋಮವಾರ ತಾಯಿ(Mother) ಹಾಗೂ ಮಗು​ವಿನ ಶವವು ತಪ್ಪಿ​ಕೊಂಡ ಸ್ಥಿತಿ​ಯಲ್ಲೇ ಪತ್ತೆ​ಯಾ​ಗಿದೆ. ಈ ದೃಶ್ಯವನ್ನು ಕಂಡು ಖುದ್ದು ರಕ್ಷಣಾ ತಂಡ​ಗಳೇ ಕಣ್ಣೀರು ಹಾಕಿ​ವೆ.
ಸಂಬಂಧಿಕರ ಮದುವೆಗೆ ಬಂದಿದ್ದ ತಾಯಿ ಹಾಗೂ ಮಳೆಗೆ ಕುಸಿದ ಮನೆಯ ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿರುವ ಈ ದಾರುಣ ಘಟನೆ ಕೇರಳದ ಇಡುಕ್ಕಿ(Idukki) ಜಿಲ್ಲೆಯಲ್ಲಿ ನಡೆದಿದೆ. ಅವಶೇಷಗಳನ್ನು ತೆಗೆ​ಯು​ವ ಸಮಯದಲ್ಲಿ ತಾಯಿ-ಮಗ ಇಬ್ಬರೂ ತಬ್ಬಿಕೊಂಡು ಮಲಗಿರುವ ಸ್ಥಿತಿ​ಯ​ಲ್ಲಿ​ದ್ದರು. ಇದೇ ವೇಳೆ, ಮತ್ತೊಂದು ಮಗು ತೊಟ್ಟಿಲಿನಲ್ಲೇ ಸಾವನ್ನಪ್ಪಿರುವ ದಾರುಣ ದೃಶ್ಯ ಕಂಡು​ಬಂತು.
ಮೃತ ತಾಯಿ ಮಗನನ್ನು ಫೌಝಿಯಾ (28) ಮತ್ತು ಅಮೀನ್‌(10) ಎಂದು ಗುರುತಿಸಲಾಗಿದೆ. ಕಟ್ಟಡ ಕುಸಿಯುವ ಮೊದಲು ಮನೆಯ ಒಳಗೆ ನೀರು ನುಗ್ಗುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸಂಬಂಧಿಕರೊಬ್ಬರಿಗೆ ಇವರು ಕಳಿ​ಸಿ​ದ್ದ​ರು. ಆದರೆ ಕೆಲವು ಹೊತ್ತಿ​ನಲ್ಲೇ ಜಲ​ಪ್ರ​ಳ​ಯವು ಇವ​ರನ್ನು ಆಪೋ​ಶನ ತೆಗೆ​ದು​ಕೊಂಡಿ​ದೆ.
ತ್ರಿವರ್ಣ ಧ್ವಜ ವಿನ್ಯಾಸಕಾರನ ಜನ್ಮದಿನ ನೆನಪಿಸಿಕೊಂಡ ಟ್ವಿಟ್ಟಿಗರು | Twitterians remember Pingali Venkayya on his birth anniversary - Kannada Oneindia
| Published: Wednesday, August 2, 2017, 14:57 [IST]
ತ್ರಿವರ್ಣ ಧ್ವಜ ಎಂದರೆ ಭಾರತದ ಪ್ರತಿಯೊಬ್ಬ ದೇಶಭಕ್ತನೂ ರೋಮಾಂಚನಗೊಳ್ಳುತ್ತಾನೆ. ಅದನ್ನು ನೋಡುತ್ತಿದ್ದಂತೆಯೇ ದೇಶಪ್ರೇಮ ಉಕ್ಕುತ್ತದೆ. ಆದರೆ ಭಾರತೀಯತೆಯ ಪ್ರತೀಕವಾದ ಈ ಧ್ವಜವನ್ನು ವಿನ್ಯಾಸಗೊಳಿಸಿದ್ದು ಯಾರು ಎಂಬ ಬಗ್ಗೆ ಹಲವರಿಗೆ ತಿಳಿದಿರಲಿಕ್ಕಿಲ್ಲ. ಆಂಧ್ರಪ್ರದೇಶದ ಮಚಲಿಪಟ್ಟಣದ ಹಳ್ಳಿಯೊಂದರಲ್ಲಿ ಜನಿಸಿದ ಪಿಂಗಳಿ ವೆಂಕಯ್ಯ ಅವರೇ ನಮ್ಮ ತ್ರಿವರ್ಣ ಧ್ವಜದ ವಿನ್ಯಾಸಕಾರರು.
ಇಂದು ಅವರ ಜನ್ಮ ದಿನ. ಆಗಸ್ಟ್ 2, 1876 ರಲ್ಲಿ ಜನಿಸಿದ ವೆಂಕಯ್ಯ, ಪ್ರಾಥಮಿಕ ಶಿಕ್ಷಣಗಳನ್ನು ಮಚಲಿಪಟ್ಟಣದಲ್ಲಿ ಮುಗಿಸಿ, ನಂತರ ಉನ್ನತ ಶಿಕ್ಷಣಕ್ಕಾಗಿ ಕೋಲಂಬೋಕ್ಕೆ ತೆರಳಿದರು.
ಒಟ್ಟು 30 ದೇಶಗಳ ರಾಷ್ಟ್ರಧ್ವಜಗಳನ್ನು 5 ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ, ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣಧ್ವಜವನ್ನು ವಿನ್ಯಾಸಗೊಳಿಸಿದರು. ಪಿಂಗಳಿ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ಜುಲೈ 22, 1947 ರಲ್ಲಿ ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.
ವಜ್ರಗಳ ಗಣಿಗಾರಿಕೆಯಲ್ಲಿ ಪರಿಣಿತಿ ಪಡೆದಿದ್ದ ಕಾರಣಕ್ಕೆ ಪಿಂಗಳಿ ವೆಂಕಯ್ಯ ಅವರನ್ನು ಡೈಮಂಡ್ ವೆಂಕಯ್ಯ ಎಂದೂ, ಹತ್ತಿಗೆ ಸಂಬಂಧಿಸಿದ ಅಧ್ಯಯನದಲ್ಲೂ ಅಪಾರ ಜ್ಞಾನ ಹೊಂದಿದ್ದ ಕಾರಣಕ್ಕೆ ಕಾಟನ್ ವೆಂಕಯ್ಯ ಎಂದೂ ಅವರನ್ನು ಕರೆಯುತ್ತಿದ್ದರು.
2009 ರಲ್ಲಿ ಇವರಿಗೆ ಗೌರವ ನೀಡುವುದಕ್ಕಾಗಿ, ಇವರ ಭಾವಚಿತ್ರವನ್ನು ಹೊಂದಿದ ಸ್ಟಾಂಪ್ ಅನ್ನೂ ಬಿಡುಗಡೆಮಾಡಲಾಗಿತ್ತು. 1963 ರ ಜುಲೈ 4 ರಂದು ಅವರು ಇಹಲೋಕ ತ್ಯಜಿಸಿದರು.
ಇಂದು ಅವರ ಜನ್ಮ ದಿನ. ಟ್ವಿಟ್ಟಿಗರು ಮರೆಯದೇ ಪಿಂಗಳಿ ಅವರನ್ನು ನೆನಪಿಸಿಕೊಂಡು, ಅವರ ನೀಡಿದ ಕೊಡುಗೆಗಾಗಿ ಕೃತಜ್ಞತೆ ಅರ್ಪಿಸಿದ್ದಾರೆ.
Remembering #PingaliVenkayya on his birth anniversary. He was not only a brave freedom fighter but the artist who gave us our National Flag. pic.twitter.com/XHhGaPZYCL
— ShivrajSingh Chouhan (@ChouhanShivraj) August 2, 2017
ಅವರು ಕೇವಲ ಸ್ವಾತಂತ್ರ್ಯ ಹೊರಾಟಗಾರರಲ್ಲ!
"ಪಿಂಗಳಿ ವೆಂಕಯ್ಯ ಅವರ ಜನ್ಮದಿನದಂದು ಅವರನ್ನು ನೆನಪಿಸಿಕೊಳ್ಳೋಣ. ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ. ಬದಲಾಗಿ ಕಲಾವಿದ. ನಮ್ಮ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು" ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿದ್ದಾರೆ.
Remembering #PingaliVenkayya ji, great freedom fighter who designed our National flag on his jayanti
— Suresh Prabhu (@sureshpprabhu) August 2, 2017
ಧ್ವಜ ವಿನ್ಯಾಸಕಾರ
ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ಅವರನ್ನು ಅವರ ಜಯಂತಿಯಂದು ನೆನಪಿಸಿಕೊಳ್ಳೋಣ ಎಂದು ಕೇಮದ್ರ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.
Tributes to #PingaliVenkayya who designed our Indian Tricolor.Heart fills with pride and patriotism. Our Tricolor is best i feel#jaihind pic.twitter.com/o3bC7ty2Xc
— Shraddha (@drshraddha16) August 2, 2017
ತ್ರಿವರ್ಣ ಧ್ವಜವೇ ಚೆಂದ
ಪಿಂಗಳಿ ವೆಂಕಯ್ಯ ಅವರಿಗೆ ನಮನಗಳು. ನಮ್ಮ ತ್ರಿವರ್ಣ ಧ್ಜವನ್ನು ವಿನ್ಯಾಸಗೊಳಿಸುವ ಮುಲಕ ದೇಶಭಕ್ತಿ ಮತ್ತು ಹೆಮ್ಮೆಯನ್ನು ಅವರು ಹೆಚ್ಚಿಸಿದ್ದಾರೆ. ಎಲ್ಲಕ್ಕಿಂತ ನಮ್ಮ ತ್ರಿವರ್ಣ ಧ್ವಜವೇ ಚೆಂದ ಎಂದು ಶ್ರದ್ಧಾ ಎಂಬುವವರು ಟ್ವೀಟ್ ಮಾಡಿದ್ದಾರೆ.
Remembering Shri #PingaliVenkayya, freedom fighter and the man behind our tricolour's design, on his birth anniversary. pic.twitter.com/xBjk5GBfkr
— Radha Mohan Singh (@RadhamohanBJP) August 2, 2017
ಸ್ವಾತಂತ್ರ್ಯ ಹೋರಾಟಗಾರ ಮತ್ತು ನಮ್ಮ ತ್ರಿವರ್ಣಧ್ವಜದ ಹಿಂದಿನ ಶಕ್ತಿ ಪಿಂಗಳಿ ವೆಂಕಯ್ಯ ಅವರಿಗೆ ಅವರ ಜನ್ಮದಿನದಂದು ನನ್ನ ನಮನಗಳು ಎಂದು ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
We stand&salute national flag but forget abt d person who is d actual designer of d flag he is d unsung hero of d country #PingaliVenkayya
— venkatesh (@venkate86926030) August 2, 2017
ಅವರೇ ನಮ್ಮ ದೇಶದ ನಿಜವಾದ ಹೀರೋ
ನಾವು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುತ್ತೇವೆ. ಆದರೆ ಅದನ್ನು ವಿನ್ಯಾಸಗೊಳಿಸುವಲ್ಲಿ ಶ್ರಮಿಸಿದ ವ್ಯಕ್ತಿಯನ್ನು ಮರೆತುಬಿಟ್ಟಿದ್ದೇವೆ. ಅದನ್ನು ವಿನ್ಯಾಸಗೊಳಿಸಿದ ಪಿಂಗಳಿ ವೆಂಕಯ್ಯ ನಮ್ಮ ದೇಶದ ನಿಜವಾದ ಹೀರೋ ಎಂದು ವೆಂಕಟೇಶ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
new delhi national flag unsung heroes ನವದೆಹಲಿ ರಾಷ್ಟ್ರಧ್ವಜ
Pingali Venkayya (2 August 1876 - died 4 July 1963) was an Indian freedom fighter and the designer of the flag on which the Indian national flag was based. Today is his birth anniversary. Here is twitter statements on his birth anniversary.
ಕುಕೀ-ಕಡಿಮೆ ಭವಿಷ್ಯವನ್ನು ನ್ಯಾವಿಗೇಟ್ ಮಾಡುವ ಮಾರುಕಟ್ಟೆದಾರರಿಗೆ ಸಂದರ್ಭೋಚಿತ ಗುರಿ ಏಕೆ ನಿರ್ಣಾಯಕ | Martech Zone
ಕುಕೀ-ಕಡಿಮೆ ಭವಿಷ್ಯವನ್ನು ನ್ಯಾವಿಗೇಟ್ ಮಾಡುವ ಮಾರುಕಟ್ಟೆದಾರರಿಗೆ ಸಂದರ್ಭೋಚಿತ ಗುರಿ ಏಕೆ ನಿರ್ಣಾಯಕವಾಗಿದೆ
ನವೆಂಬರ್ 6, 2020 ಶುಕ್ರವಾರ ನವೆಂಬರ್ 6, 2020 ಶುಕ್ರವಾರ ಟಿಮ್ ಬೆವರಿಡ್ಜ್
ನಾವು ಜಾಗತಿಕ ಮಾದರಿ ಬದಲಾವಣೆಯಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಕುಕಿಯ ನಿಧನದೊಂದಿಗೆ ಗೌಪ್ಯತೆ ಕಾಳಜಿಗಳು ಬ್ರಾಂಡ್-ಸುರಕ್ಷಿತ ಪರಿಸರದಲ್ಲಿ ಹೆಚ್ಚು ವೈಯಕ್ತಿಕ ಮತ್ತು ಅನುಭೂತಿ ಅಭಿಯಾನಗಳನ್ನು ನೀಡಲು ಮಾರಾಟಗಾರರ ಮೇಲೆ ಒತ್ತಡ ಹೇರುತ್ತಿವೆ. ಇದು ಅನೇಕ ಸವಾಲುಗಳನ್ನು ಒದಗಿಸುತ್ತದೆಯಾದರೂ, ಹೆಚ್ಚು ಬುದ್ಧಿವಂತ ಸಂದರ್ಭೋಚಿತ ಗುರಿ ತಂತ್ರಗಳನ್ನು ಅನ್ಲಾಕ್ ಮಾಡಲು ಮಾರಾಟಗಾರರಿಗೆ ಇದು ಅನೇಕ ಅವಕಾಶಗಳನ್ನು ಒದಗಿಸುತ್ತದೆ.
ಕುಕೀ-ಕಡಿಮೆ ಭವಿಷ್ಯಕ್ಕಾಗಿ ಸಿದ್ಧತೆ
ಹೆಚ್ಚುತ್ತಿರುವ ಗೌಪ್ಯತೆ-ಬುದ್ಧಿವಂತ ಗ್ರಾಹಕರು ಈಗ ಮೂರನೇ ವ್ಯಕ್ತಿಯ ಕುಕಿಯನ್ನು ತಿರಸ್ಕರಿಸುತ್ತಿದ್ದಾರೆ, 2018 ರ ವರದಿಯು 64% ಕುಕೀಗಳನ್ನು ಹಸ್ತಚಾಲಿತವಾಗಿ ಅಥವಾ ಜಾಹೀರಾತು ಬ್ಲಾಕರ್‌ನೊಂದಿಗೆ ತಿರಸ್ಕರಿಸಲಾಗಿದೆ ಎಂದು ಬಹಿರಂಗಪಡಿಸುತ್ತದೆ - ಮತ್ತು ಇದು ಹೊಸ ಗೌಪ್ಯತೆ ಶಾಸನವನ್ನು ಜಾರಿಗೆ ತರುವ ಮೊದಲು. ಇದರ ಮೇಲೆ, 46% ಫೋನ್‌ಗಳು ಈಗ ಸುಮಾರು 79% ಕುಕೀಗಳನ್ನು ತಿರಸ್ಕರಿಸುತ್ತವೆ, ಮತ್ತು ಕುಕೀ ಆಧಾರಿತ ಮೆಟ್ರಿಕ್‌ಗಳು ಹೆಚ್ಚಾಗಿ 30-70% ರಷ್ಟು ತಲುಪುತ್ತವೆ.
2022 ರ ಹೊತ್ತಿಗೆ, ಗೂಗಲ್ ಮೂರನೇ ವ್ಯಕ್ತಿಯ ಕುಕಿಯನ್ನು ಹೊರಹಾಕುತ್ತದೆ, ಫೈರ್‌ಫಾಕ್ಸ್ ಮತ್ತು ಸಫಾರಿ ಈಗಾಗಲೇ ಸಾಧಿಸಿದೆ. ಇದಕ್ಕಾಗಿ Chrome ಖಾತೆಗಳನ್ನು ನೀಡಲಾಗಿದೆ ವೆಬ್ ಬ್ರೌಸರ್ ಬಳಕೆಯ 60% ಕ್ಕಿಂತ ಹೆಚ್ಚು, ಇದು ಮಾರಾಟಗಾರರು ಮತ್ತು ಜಾಹೀರಾತುದಾರರಿಗೆ, ವಿಶೇಷವಾಗಿ ಪ್ರೋಗ್ರಾಮ್ಯಾಟಿಕ್ ಬಳಸುವವರಿಗೆ ದೊಡ್ಡ ವ್ಯವಹಾರವಾಗಿದೆ. ಈ ಬ್ರೌಸರ್‌ಗಳು ಇನ್ನೂ ಪ್ರಥಮ-ಪಕ್ಷದ ಕುಕೀಗಳನ್ನು ಅನುಮತಿಸುತ್ತದೆ - ಕನಿಷ್ಠ ಈಗಲಾದರೂ - ಆದರೆ ಸ್ಪಷ್ಟವಾದ ಸಂಗತಿಯೆಂದರೆ, ವರ್ತನೆಯ ಗುರಿಯನ್ನು ತಿಳಿಸಲು ಕುಕಿಯನ್ನು ಇನ್ನು ಮುಂದೆ ಹೆಚ್ಚು ಅವಲಂಬಿಸಲಾಗುವುದಿಲ್ಲ.
ಸಂದರ್ಭೋಚಿತ ಗುರಿ ಎಂದರೇನು?
ಸಾಂದರ್ಭಿಕ ಟಾರ್ಗೆಟಿಂಗ್ ಎನ್ನುವುದು ಜಾಹೀರಾತು ದಾಸ್ತಾನು ಸುತ್ತಮುತ್ತಲಿನ ವಿಷಯದಿಂದ ಪಡೆದ ಕೀವರ್ಡ್‌ಗಳು ಮತ್ತು ವಿಷಯಗಳನ್ನು ಬಳಸಿಕೊಂಡು ಸಂಬಂಧಿತ ಪ್ರೇಕ್ಷಕರನ್ನು ಗುರಿಯಾಗಿಸುವ ಒಂದು ಮಾರ್ಗವಾಗಿದೆ, ಅದಕ್ಕೆ ಕುಕೀ ಅಥವಾ ಇನ್ನೊಂದು ಗುರುತಿಸುವಿಕೆ ಅಗತ್ಯವಿಲ್ಲ.
ಸಂದರ್ಭೋಚಿತ ಗುರಿ ಈ ಕೆಳಗಿನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ