text
stringlengths 0
61.5k
|
---|
'ಭೀಮಪಲಾಸ' ಸಂಗೀತೋತ್ಸವ – ನವೆಂಬರ್ ೧೩ 'ಭೀಮಪಲಾಸ' ಸಂಗೀತೋತ್ಸವ - VIVIDLIPI |
November 13, 2021 @ 5:30 pm - 8:30 pm IST |
« "ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ" ಸರಣಿ ಕಾರ್ಯಕ್ರಮ 11 |
"ಸಾಧನ ಪಥ" – ಉಪನ್ಯಾಸ – 17 "ಸಾರ್ಥಕ ಬದುಕಿಗೆ ಷೋಡಶ ಸಂಸ್ಕಾರಗಳು" – ಭಾಗ 12 » |
ರಮಾಕಾಂತ ಗಾಯಕವಾಡ, ಮುಂಬೈ (ಗಾಯನ) |
ಸಂಗೀತಗಾರರ ಮನೆತನದಲ್ಲಿ ಜನಿಸಿದ ರಮಾಕಾಂತ ಗಾಯಕವಾಡ ಹಿಂದುಸ್ತಾನಿ ಸಂಗೀತದ ಉದಯೋನ್ಮುಖ ಪ್ರತಿಭೆ. ತಂದೆ ಪಂ. ಸೂರ್ಯಕಾಂತ ಹಾಗೂ ತಾಯಿ ಸಂಗೀತಾ ಗಾಯಕವಾಡ, ಅವರಿಬ್ಬರೂ ಸಂಗೀತ ಶಿಕ್ಷಕರು. ರಮಾಕಾಂತ ಅವರ ಗಾಯನ ಕಲಿಕೆ ಪ್ರಾರಂಭಗೊAಡಾಗ ಅವರಿಗೆ ಕೇವಲ ಆರು ವರ್ಷ. ತಂದೆ ಸೂರ್ಯಕಾಂತ ಅವರು ನಡೆಸುವ ಹರಿ ಓಂ ಸಂಗೀತ ಕಲಾ ಮಂಚ್ ಸಂಸ್ಥೆಯಲ್ಲಿ ಪಟಿಯಾಲಾ ಘರಾಣೆ ಶೈಲಿಯಲ್ಲಿ ಶಾಸ್ತೊçÃಕ್ತ ಆಳವಾದ ಸಂಗೀತಾಭ್ಯಾಸ ಮಾಡಿದರು. ನಂತರ ಡಾ. ಸತೀಶ ಕೌಶಿಕ್ ಅವರಲ್ಲಿ ಕಿರಾನಾ ಘರಾಣೆ ಹಾಗೂ ಪಂ. ಜಗದೀಶ ಪ್ರಸಾದ ಅವರಿಂದ ಪಟಿಯಾಲಾ ಘರಾಣೆಯ ಆಳವಾದ ಮಾರ್ಗದರ್ಶನ ಪಡೆದು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓರ್ವ ಭರವಸೆಯ ಗಾಯಕನಾಗಿ ಹೊರಹೊಮ್ಮಿದರು. |
ಗಂಧರ್ವ ಮಹಾವಿದ್ಯಾಲಯದಿಂದ ವಿಶಾರದ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ರಮಾಕಾಂತ ಅವರು ಪಂ. ರಾಮ ಮರಾಠೆ ಪುರಸ್ಕಾರ, ಪಂ. ಜಗನ್ನಾಥಬುವಾ ಪುರೋಹಿತ ಪುರಸ್ಕಾರ, ಪಂ.ಜಿತೇAದ್ರ ಅಭಿಷೇಕಿ ಪುರಸ್ಕಾರ, ಪಂ. ವಸಂತರಾವ ದೇಶಪಾಂಡೆ ಪುರಸ್ಕಾರ, ಇನ್ನೂ ಅನೇಕ ಪುರಸ್ಕಾರಗಳಿಗೆ ಪಾತ್ರರಾಗಿರುವ ಅತೀ ಕಡಿಮೆ ವಯಸ್ಸಿನ ಸಂಗೀತ ಪ್ರತಿಭೆ. ಮುಂಬೈ, ಪುಣೆ, ಕೊಲ್ಹಾಪುರ, ಜೈಪುರ, ಹೈದರಾಬಾದ ಅಲ್ಲದೇ ಅಮೆರಿಕದ ಅನೇಕ ಸ್ಥಳಗಳಲ್ಲಿ ತಮ್ಮ ಸಂಗೀತ ಸುಧೆಯನ್ನು ಹರಿಸಿದ್ದಾರೆ. |
ಶ್ರೀಮತಿದೇವಿ, ಮೈಸೂರು (ಗಾಯನ) |
ಕೀರ್ತನಕಾರರ ಮನೆತನದ ಹಿನ್ನೆಲೆಯುಳ್ಳ ಶ್ರೀಮತಿದೇವಿ ಅವರು ನಾಡಿನ ಪ್ರಬುದ್ಧ ಹಿಂದುಸ್ತಾನಿ ಗಾಯಕಿ. ತಂದೆ ಜಗದೀಶ ದಾಸ ಅವರು ಹರಿಕಥಾ ವಿದ್ವಾನರು. ತಾಯಿ ಗಿರಿಜಾಬಾಯಿ ಕೂಡ ಗಾಯಕಿ. ಸಹಜವಾಗಿ ಶ್ರೀಮತಿದೇವಿಯವರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಮೂಡಿತು. ಧಾರವಾಡದ ಪಂ. ಚಂದ್ರಶೇಖರ ಪುರಾಣಿಕಮಠ ಹಾಗೂ ಹೊನ್ನಾವಾರದ ಪಂ. ನಾರಾಯಣ ಪಂಡಿತ ಅವರಲ್ಲಿ ಆಳವಾದ ಸಂಗೀತಾಧ್ಯಯನಗೈದು ಉದಯೋನ್ಮುಖ ಗಾಯಕಿಯಾಗಿ ಹೊರಹೊಮ್ಮಿದರು. ನಂತರದ ದಿನಗಳಲ್ಲಿ ವಿದುಷಿ ಪದ್ಮಾ ತಳವಲಕರ, ಪಂ. ವ್ಯಾಸಮೂರ್ತಿ ಕಟ್ಟಿ, ಪಂ. ರವಿಕಿರಣ ಮಣಿಪಾಲ ಅವರಲ್ಲಿ ಅಭ್ಯಾಸ ನಡೆಸಿದರು. ಪ್ರಸ್ತುತವಾಗಿ ಮುಂಬೈನ ವಿದುಷಿ ಅಪೂರ್ವಾ ಗೋಖಲೆ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆಯುತ್ತಿದ್ದಾರೆ. ವಿವಿಧ ಶಿಷ್ಯವೇತನ, ತಾಮಣಕರ ಪುರಸ್ಕಾರ, ವಾಮನದಾಜಿ ಪುರಸ್ಕಾರಗಳಿಗೆ ಭಾಜನರಾಗಿರುವ ಶ್ರೀಮತಿದೇವಿ ಅವರು ಅಮೆರಿಕ, ತಮಿಳುನಾಡು, ಮಹಾರಾಷ್ಟç, ಕರ್ನಾಟಕದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ ಸೈ ಎನಿಸಿಕೊಂಡಿದ್ದಾರೆ. |
ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ: ಕೃಷಿ ವಿಜ್ಞಾನ ಕೇಂದ್ರದಿಂದ ಪೌಷ್ಠಿಕ ಕೈ ತೋಟ ನಿರ್ಮಿಸುವ ಗುರಿ - aims to build a nursery home garden from the agricultural science center | Vijaya Karnataka |
aims to build a nursery home garden from the agricultural science center |
ವಿಜಯ ಕರ್ನಾಟಕ | Updated: Dec 7, 2018, 04:52PM IST |
ಮಾಗಡಿ ಗ್ರಾಮಾಂತರ: ಶಾಲೆಗಳಲ್ಲಿ ಆಹಾರ ಬೆಳೆಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಕೊಡಲು ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ ಐದು ಶಾಲೆಗಳನ್ನು ಆಯ್ದುಕೊಂಡು ಪೌಷ್ಠಿಕ ಆಹಾರ ಬೆಳೆಗಳ ಪರಿಚಯ ಮಾಡಿಸುವ ಪ್ರಾಯೋಗಿಕ ಯೋಜನೆಯನ್ನು ರೂಪಿಸಿ ಮಕ್ಕಳಲ್ಲಿ ಅರಿವಿನ ಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಿದೆ..! |
ಜಿಲ್ಲೆಯ ಮಾಗಡಿ ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಗೃಹವಿಜ್ಞಾನ ವಿಭಾಗದ ವಿಜ್ಞಾನಿಗಳ ತಂಡ ಜಿಲ್ಲೆಯ ಸೋಲೂರು, ಬ್ಯಾಲಕೆರೆ, ಅಚ್ಚಲು, ದೊಡ್ಡಗಂಗವಾಡಿ, ಜಾಲಮಂಗಲ ಶಾಲೆಗಳಲ್ಲಿ ಪೌಷ್ಠಿಕ ಆಹಾರ ಬೆಳೆಗಳ ಪರಿಚಯ ಮಾಡಿಸುತ್ತಿದೆ. |
ಕೈ ತೋಟ ಮಾಡುವ ಪ್ಲಾನ್: ಶಾಲೆಗಳಲ್ಲಿಯೇ ಪ್ರಾಯೋಗಿಕವಾಗಿ ಪೌಷ್ಠಿಕ ಕೈ ತೋಟವನ್ನು ನಿರ್ಮಿಸಿ ಸೊಪ್ಪು, ತರಕಾರಿ, ಔಷಧೀಯ ಗುಣವುಳ್ಳ ಸಸ್ಯಗಳು ಹಾಗೂ ತಾಜಾ ತರಕಾರಿಗಳನ್ನು ಪ್ರತಿ ದಿನ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದಲ್ಲಿ ಬಳಸಿಕೊಳ್ಳುವ ಬಗ್ಗೆ ವಿಜ್ಞಾನಕೇಂದ್ರ ಶಾಲೆಗಳಿಗೆ ಸಮಗ್ರ ಮಾಹಿತಿ ನೀಡುತ್ತಿದೆ. |
ಕೈ ತೋಟ ನಿರ್ಮಾಣದಲ್ಲಿ ತೋಟಗಾರಿಕಾ ಶಿಕ್ಷಕರ ಪಾತ್ರ, ತೋಟಗಾರಿಕೆ ಅವಧಿಯಲ್ಲಿ ಯಾವ ಯಾವ ರೀತಿಯ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡಬಹುದಾಗಿದೆ ಎಂಬುದರ ಪ್ರಾಯೋಗಿಕ ಪರಿಚಯ ನೀಡುತ್ತಿದ್ದಾರೆ. |
ಜೀವಸತ್ವ ಪೂರೈಕೆಗೆ ಕ್ರಮ: ವಿಜ್ಞಾನಿ ಡಾ.ಲತಾ ಆರ್. ಕುಲಕರ್ಣಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಪೌಷ್ಠಿಕಾಂಶಯುಕ್ತ ಆಹಾರ ಅತೀ ಮುಖ್ಯ. ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಒದಗಿಸುವ ಅವಶ್ಯಕ ಖನಿಜ, ಜೀವಸತ್ವ, ನಾರು, ಆಂಟಿಆಕ್ಸಿಡೆಂಟ್‌ಗಳನ್ನು ಪೂರೈಸುವ ತರಕಾರಿಗಳು ಮತ್ತು ಹಣ್ಣುಗಳ ಸೇವನೆ ಅತ್ಯವಶ್ಯಕ. ಶಾಲಾ ಆವರಣದಲ್ಲಿ ವೈಜ್ಞಾನಿಕವಾಗಿ ಪೌಷ್ಠಿಕ ಕೈ ತೋಟವನ್ನು ನಿರ್ಮಿಸಿ ಪ್ರಾಯೋಗಿಕವಾಗಿ ಬೆಳೆಯುವ ಹವ್ಯಾಸವನ್ನು ಬೆಳೆಸಿಕೊಂಡು ದಿನನಿತ್ಯ ಅವಶ್ಯವಿರುವ ಪೌಷ್ಠಿಕಾಂಶಯುಕ್ತ ತಾಜಾ ಸೊಪ್ಪು ತರಕಾರಿಗಳನ್ನು ಸ್ವತಃ ತಾವೇ ಬೆಳೆದು ತಮ್ಮ ನಿತ್ಯ ಬಿಸಿಯೂಟದಲ್ಲಿ ಬಳಸಿಕೊಳ್ಳಲು ಕರೆ ನೀಡಿದರು. ಇದರಿಂದ ತಾಜಾ ತರಕಾರಿಗಳನ್ನು ಪಡೆಯುವುದಲ್ಲದೆ ನಿತ್ಯ ಖರ್ಚಿನಲ್ಲಿಯೂ ಸಹ ಕಡಿಮೆಗೊಳಿಸಬಹುದೆಂದು ಹೇಳಿದರು. |
ವಿಜ್ಞಾನಿ ಡಾ.ರಾಜೇಂದ್ರಪ್ರಸಾದ್ ಮಾತನಾಡಿ, ಪೌಷ್ಠಿಕ ಕೈ ತೋಟದಲ್ಲಿ ಕಾಣಿಸುವ ಕೀಟ ಮತ್ತು ರೋಗಗಳ ನಿರ್ವಹಣೆ ಮತ್ತು ಸಸ್ಯಜನ್ಯ ಕೀಟನಾಶಕಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತಿಳಿಸಿದರು. |
ರಾಮನಗರ ತಾಲೂಕಿನ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಂಕರ್ ಮಾತನಾಡಿ, ಮಕ್ಕಳು ಅಪೌಷ್ಠಿಕತೆಯಿಂದ ದೂರವಿರಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ನಿಗದಿಪಡಿಸಿದಂತೆ ಪೌಷ್ಠಿಕಾಂಶಗಳ ಸೇವನೆಯನ್ನು ಮಾಡಬೇಕು ಎಂದರು. |
ನುಗ್ಗೆ, ಚಕ್ರಮುನಿ, ಕರಿಬೇವು, ನಿಂಬೆ ಮತ್ತು ನೆಲ್ಲಿಕಾಯಿಯ ಮಹತ್ವನ್ನು ತಿಳಿಸಿ ಇವುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಬಳಸಬೇಕೆಂದು ತಿಳಿಸಿದರು. |
Web Title aims to build a nursery home garden from the agricultural science center |
Keywords:ಶಾಲೆಗಳಲ್ಲಿ ಆಹಾರ ಬೆಳೆಗಳ ಬಗ್ಗೆ|ಮಾಗಡಿ ಗ್ರಾಮಾಂತರ|ಮಕ್ಕಳಿಗೆ ಪರಿಚಯ ಮಾಡಿಕೊಡಲು|ಪೌಷ್ಠಿಕ ಆಹಾರ ಬೆಳೆಗಳ ಪರಿಚಯ ಮಾಡಿಸುವ ಪ್ರಾಯೋಗಿಕ ಯೋಜನೆ|ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ|ಐದು ಶಾಲೆಗಳನ್ನು ಆಯ್ದುಕೊಂಡು| |
ದೇವೇಗೌಡರಿಗೆ ತಟ್ಟಿದ ಹೇಮಾವತಿಯ ಶಾಪ | Udayavani – ಉದಯವಾಣಿ |
ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್‌ಗೆ ಮಣೆ ಹಾಕಿದ್ದಾರೆ. |
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಇದ್ದ ಕಾಂಗ್ರೆಸ್ ಸಂಸದ ಎಸ್.ಪಿ.ಮುದ್ದ ಹನುಮೇಗೌಡರಿಗೆ ಟಿಕೆಟ್ ವಂಚಿಸಿ, ದೇವೇಗೌಡರು ಸ್ಪರ್ಧೆ ಮಾಡಿದ ದಿನದಿಂದಲೇ ಗೌಡರಿಗೆ ವಿರೋಧಿ ಅಲೆ ಶುರುವಾಯಿತು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಹಿರಂಗವಾಗಿಯೇ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದರು. |
ಇದೇನು, "ಬಾಂಬೆ ರೆಡ್‌ಲೈಟ್ ಏರಿಯಾನಾ?, ಯಾರು ಬೇಕಾದರೂ ಬಂದು ಹೋಗಲು' ಎಂದು ಕುಟಿಕಿ, ದೇವೇಗೌಡರು ಇಲ್ಲಿ ಬಂದು ನಿಂತರೆ ಸೋಲು ಖಚಿತ ಎಂದಿದ್ದರು. "ಅವರು ನಿಂತರೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ' ಎಂದು ಗುಡುಗಿದ್ದರು. |
ದೇವೇಗೌಡರು ನಾಮಪತ್ರ ಸಲ್ಲಿಸುವ ದಿನವೇ ಭಾರೀ ರೋಡ್ ಶೋ ನಡೆಸಿ, ಕೆ.ಎನ್.ರಾಜಣ್ಣ ಮತ್ತು ಸಂಸದ ಎಸ್.ಪಿ.ಮುದ್ದಹನುಮೇ ಗೌಡ ನಾಮಪತ್ರ ಸಲ್ಲಿಸಿದ್ದರು. ವರಿಷ್ಠರ ಒತ್ತಾಯದ ಮೇರೆಗೆ ಇಬ್ಬರೂ ನಾಮಪತ್ರ ವಾಪಸ್ ತೆಗೆದುಕೊಂಡರಾದರೂ, ಈ ಇಬ್ಬರು ನಾಯಕರ ಜೊತೆ ದೇವೇಗೌಡರನ್ನು ಹೊಂದಾಣಿಕೆ ಮಾಡುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಸೋತರು. |
ಇಬ್ಬರೂ ನಾಯಕರ ಬೆಂಬಲಿಗರು ಆಂತರಿಕವಾಗಿ ಬಿಜೆಪಿ ಪರ ಕೆಲಸ ಮಾಡಿದರು. ಇನ್ನು, ಜೆಡಿಎಸ್ ಶಾಸಕರಿರುವ ಮಧುಗಿರಿ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿಯೇ ದೇವೇಗೌಡರಿಗೆ ಹಿನ್ನಡೆಯಾಗಿದೆ. ಸ್ಥಳೀಯ ನಾಯಕರ ಒಳ ಏಟೇ ದೇವೇಗೌಡರ ಸೋಲಿಗೆ ಕಾರಣವಾಗಿದೆ. |
ತುಮಕೂರಿಗೆ ನಿಗದಿಯಾಗಿರುವಷ್ಟು ಹೇಮಾವತಿ ನೀರು ಹರಿಸಲು ಹಾಸನದ ರಾಜಕಾರಣ ಅಡ್ಡಿ ಬರುತ್ತಿದೆ. ದೇವೇಗೌಡರ ಕುಟುಂಬ ಇದಕ್ಕೆ ತೊಂದರೆ ನೀಡುತ್ತಿದೆ. ಹೇಮಾವತಿ ನೀರು ಕೊಡದ ದೇವೇಗೌಡರಿಗೆ ಬರಗಾಲದಿಂದ ನೀರಿನ ಬವಣೆಯಿಂದ ತತ್ತರಿಸುತ್ತಿರುವ ಕ್ಷೇತ್ರದ ಜನತೆ ಮತ ಹಾಕಬೇಕೇ ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಹೋದ ಕಡೆಯಲೆಲ್ಲಾ ಜನರನ್ನು ಕೇಳಲಾರಂಭಿಸಿದರು. |
ಇದಕ್ಕೆ ಪೂರಕವಾಗಿ ಮಾಜಿ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು, "ದೇವೇಗೌಡರಿಗೆ ಗಂಗೇ ಶಾಪ ಇದೆ. ಇಲ್ಲಿಯ ಮತದಾರರು ಪ್ರಬುದ್ಧರು, ಸ್ವಾಭಿಮಾನಿಗಳು. ಆದ್ದರಿಂದ ದೇವೇಗೌಡರನ್ನು ಸೋಲಿಸುತ್ತಾರೆ' ಎಂದು ಹೇಳಿದ್ದರು. |
ಮತ್ತೊಮ್ಮೆ ಉಳುವವನೇ ಭೂ ಒಡೆಯ - TheNewsism \n |
Home News ಮತ್ತೊಮ್ಮೆ ಉಳುವವನೇ ಭೂ ಒಡೆಯ |
70ರ ದಶಕದಲ್ಲಿ ದೇಶಾದ್ಯಂತ ಜಾರಿಯಲ್ಲಿದ್ದತುರ್ತು ಪರಿಸ್ಥಿತಿಯನ್ನು ಬಳಸಿಕೊಂಡೇ ದೇವರಾಜು ಅರಸು ಅವರು ಇಂತಹ ಕ್ರಾಂತಿಕಾರಕ ಕಾಯ್ದೆಯನ್ನು ಜಾರಿಗೆ ತಂದರು. ಕಾಯ್ದೆ ವಿರುದ್ಧ ಭೂ ಮಾಲೀಕರು ತೀವ್ರ ಆಕ್ರೋಶ ಹೊಂದಿದ್ದರಾದರೂ ಅಂದಿನ ಸಂದರ್ಭದಲ್ಲಿ ಯಾರೊಬ್ಬರೂ ವಿರೋಧದ ದನಿ ಎತ್ತಿರಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಅಂಥದ್ದೇ ಕಾನೂನು ಜಾರಿಗೆ ನಡೆದಿರುವ ಚಿಂತನೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. |
ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಟ್ಟಿರುವ ರಾಜ್ಯ ಸರ್ಕಾರವೀಗ ಉಳುವವನೇ ಭೂ ಒಡೆಯ ಕಾನೂನನ್ನು ಮತ್ತೆ ಜಾರಿಗೆ ತರಲು ಮುಂದಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಗೇಣಿದಾರಿಕೆ ಹಕ್ಕನ್ನು ನೀಡುವ ಬಗ್ಗೆ ಗಂಭೀರ ಪರಿಶೀಲನೆ ನಡೆಸುವ ಮೂಲಕ ಜೇನುಗೂಡಿಗೆ ಕಲ್ಲೆಸೆಯಲು ಮುಂದಾಗಿದೆ. |
ಗ್ರಾಮೀಣ ಭಾಗದ ಗೇಣಿದಾರರು ಸಾಮಾಜಿಕ ಹಾಗೂ ಅರ್ಥಿಕವಾಗಿ ಉನ್ನತಿಗೆ ಬರಲೆಂಬ ಕಾರಣ್ಣಕ್ಕಾಗಿ ದೇಶದಲ್ಲಿ ಮೊದಲ ಬಾರಿ ಜಾರಿಗೊಂಡಿದ್ದ ಈ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ಮೂಲಕ ಹಾಲಿ ಗೇಣಿಪದ್ಧತಿಯಲ್ಲಿರುವ ಲಕ್ಷಾಂತರ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಉದ್ದೇಶವಾಗಿದೆ. |
4 ದಶಕದ ಕಾಯ್ದೆ : ಡಿ ದೇವರಾಜ ಅರಸು ಅವರು 1974ರಲ್ಲಿ ಜಾರಿಗೆ ತಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಲಕ್ಷಾಂತರ ಕೃಷಿಕರಿಗೆ ಉಳುವವನೇ ಭೂಮಿಗೆ ನಿಯಮದಡಿ ಭೂಮಿಯ ಹಕ್ಕನ್ನು ದೊರೆಕಿಸಿಕೊಟ್ಟಿತ್ತು. ಆದರೆ ಆ ನಂತರ ರಾಜ್ಯದಲ್ಲಿ ಗೇಣಿ ಪದ್ಧತಿ ರದ್ದು ಮಾಡಲಾಗಿತ್ತು. |
ದಾಕಲಾತಿ ಒತ್ತಾಯ: ಕೇವಲ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಬದಲಿಗೆ ಗೇಣಿದಾರರನ್ನು ದಾಖಲಾತಿ ಮಾಡುವ ಕಾರ್ಯ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಆ ರೀತಿಮಾಡುವುದಕ್ಕೆ ಮುಂದಾದರೆ ಭೂ ಮಾಲೀಕರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಜಿಪಿಎಸ್ ಮೂಲಕ ಪಟ್ಟಿ ಮಾಡುವ ಕಾರ್ಯ ಹಮ್ಮಿಕೊಳ್ಳುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. |
ಹಕ್ಕಿನ ರಕ್ಷಣೆಗೂ ಆದ್ಯತೆ: ಗೇಣಿದಾರರಿಗೆ ಭೂಮಿಯ ಹಕ್ಕನ್ನು ಕೊಡಿಸಲು ಸಾಧ್ಯವಾಗದಿದ್ದಲ್ಲಿ ಕನಿಷ್ಠ ರಕ್ಷಣ ಮಾಡುವ ಬಗ್ಗೆಯಾದರೂ ಕಾನೂನು ರೂಪಿಸಲು ಸರ್ಕಾರ ಗಂಭೀರ ಚಿಂತನೆ ಮಾಡಿದೆ. ಆಂಧ್ರ, ಕೇರಳದಲ್ಲಿ ಇಂಥ ಕಾನೂನು ಜಾರಿಯಲ್ಲಿದೆ. ಅಧ್ಯಯನವೂ ನಡೆಯುತ್ತದೆ. ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಗೇಣಿದಾರರ ರಕ್ಷಣೆಗಾಗಿ ಕರಡನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿತ್ತು. ಆದರೆ ಸಂಸತ್ ಮುಂದೆ ತೆಗೆದುಕೊಂಡು ಹೋಗುವುದರೊಳಗೆ ಸರ್ಕಾರವೇ ಬಿದ್ದು ಹೋಗಿತ್ತು. ಈಗ ಕೇಂದ್ರ ಸರ್ಕಾರ ಗುತ್ತಿಗೆ ನೀಡುವ ಬಗ್ಗೆ ಕಾನೂನು ರೂಪಿಸುವುದರಿಂದ ಗೇಣಿದಾರರಿಗೆ ಕೆಲ ಹಕ್ಕುಗಳನ್ನು ನೀಡುವ ಮೂಲಕ ಅವರ ರಕ್ಷನೆಯಾಗಲಿದೆ. |
'ಗಾಜನೂರು ಗಂಡು' ಶಿವಣ್ಣನಿಗೆ ಸುವರ್ಣ ಸಂಭ್ರಮ | Kannada Actor Shivrajkumar | 50th Birthday Celebrations | Hat Trick Hero Birthday | ಕನ್ನಡ ನಟ ಶಿವರಾಜ್ ಕುಮಾರ್ | 50ನೇ ಹುಟ್ಟುಹಬ್ಬ ಸಂಭ್ರಮ - Kannada Filmibeat |
'ಗಾಜನೂರು ಗಂಡು' ಶಿವಣ್ಣನಿಗೆ ಸುವರ್ಣ ಸಂಭ್ರಮ |
| Updated: Thursday, July 12, 2012, 11:15 [IST] |
ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುವ ಕ್ಷಣಗಳು ಮತ್ತೊಮ್ಮೆ ಸಮೀಪಿಸಿವೆ. ಈಗಾಗಲೆ ಅಭಿಮಾನಿಗಳಿಂದ 'ಸೆಂಚುರಿ ಸ್ಟಾರ್' ಬಿರುದನ್ನು ಸ್ವೀಕರಿಸಿ ಬೀಗುತ್ತಿರುವ 'ಗಾಜನೂರು ಗಂಡು' ಬಾಳದೋಣಿಯಲ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಹ್ಯಾಪಿ ಬರ್ತ್ ಡೇ ಶಿವಣ್ಣ. |
ಜುಲೈ 12, 2012ಕ್ಕೆ 'ಯುವರಾಜ' ಶಿವರಾಜ್ ಕುಮಾರ್ ಐವತ್ತಕ್ಕೆ ಅಡಿಯಿಡುತ್ತಿದ್ದಾರೆ. ಈ ಸುವರ್ಣ ಸಂಭ್ರಮಕ್ಕೆ ಅಭಿಮಾನಿಗಳು ಪ್ರೀತಿಯ ಅಭಿಮಾನದಲ್ಲಿ ಮಿಂದೇಳಲು ಸಿದ್ಧವಾಗಿದ್ದಾರೆ. ಬುಧವಾರ (ಜು.12) ಮಧ್ಯರಾತ್ರಿಯಿಂದಲೇ ಶಿವಣ್ಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಲಿದೆ. |
ಬುಧವಾರ ಮಧ್ಯರಾತ್ರಿ 12 ಗಂಟೆ ಸರಿಯುತ್ತಿದ್ದಂತೆ ಅಭಿಮಾನಿಗಳು ಶಿವಣ್ಣನ ನಾಗವಾರ ನಿವಾಸದ ಮುಂದೆ ಸರಪಟಾಕಿ ಸಿಡಿಸಿ ಬರ್ತ್ ಡೇ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. ಆದರೆ ಶಿವಣ್ಣ ಬೆಂಗಳೂರಿನಲ್ಲಿ ಇಲ್ಲದಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕೊಂಚ ನಿರಾಸೆಮೂಡಿಸಲಿದೆ. |
ಬುಧವಾರ (ಜು.12) ಬೆಳಗ್ಗೆ ಕುಟುಂಬ ಸಮೇತ ಶಿವಣ್ಣ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ತಮ್ಮ ಬರ್ತ್ ಡೇ ಸಡಗರಕ್ಕೆ ಚಾಲನೆ ನೀಡಲಿದ್ದಾರೆ. ಪ್ರತಿವರ್ಷ ನೆಚ್ಚಿನ ನಾಯಕನ ಹುಟ್ಟುಹಬ್ಬದ ಆಚರಣೆಯ ನೆನಪಿಗಾಗಿ ದೀನ ದಲಿತರಿಗೆ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಅಭಿಮಾನಿಗಳು ಹಮ್ಮಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಫಲಾನುಭವಿಗಳು ಎಚ್ಐವಿ ಸೋಂಕಿತ ಮಕ್ಕಳು. |
ಈ ಬಾರಿ 'ಶಿವು ಅಡ್ಡ' ಅಭಿಮಾನಿಗಳ ಸಂಘ ಎಚ್ಐವಿ ಸೋಂಕಿತ ಮಕ್ಕಳಿಗೆ ಸಹಾಯಹಸ್ತ ಚಾಚಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಈ ಬಾರಿ ಶಿವಣ್ಣ ಹುಟ್ಟುಹಬ್ಬದ ನಿಮಿತ್ತ ಉದಾರ ಧನಸಹಾಯ ಮಾಡಲಿದ್ದಾರೆ. |
ಹುಟ್ಟುಹಬ್ಬ ನಿಮಿತ್ತ ಜುಲೈ 25ರಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್ ಹಾಗೂ ಉತ್ತರ ಕರ್ನಾಟಕದ ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಲಭ್ಯಗಳ ಅಭಿವೃದ್ಧಿಗೆ ಶಿವರಾಜ್ ಕುಮಾರ್ ರು.1 ಲಕ್ಷ ಧನ ಸಹಾಯ ಮಾಡುವ ಯೋಜನೆಯೂ ಇದೆ. ಕನ್ನಡ ಮಾಧ್ಯಮ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. |
ಜುಲೈ 26ರಂದು ಶಿವಣ್ಣನ ಹೊಸ ಚಿತ್ರ 'ಕಡ್ಡಿಪುಡಿ' ಸೆಟ್ಟೇರಲಿದೆ. ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳಲಿದ್ದಾರೆ. ರಾಧಿಕಾ ಪಂಡಿತ್ ಚಿತ್ರದ ನಾಯಕಿ. ಜುಲೈ 27ರ ವರಮಹಾಲಕ್ಷ್ಮಿ ಹಬ್ಬದಂದು 'ಶಿವ' ಚಿತ್ರ ತೆರೆಕಾಣುತ್ತಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಒನ್ ಇಂಡಿಯಾ ಕನ್ನಡ) |
Read more about: ಶಿವರಾಜ್ ಕುಮಾರ್ ಹುಟ್ಟುಹಬ್ಬ ಹ್ಯಾಟ್ರಿಕ್ ಹೀರೋ shiva rajkumar birthday hat trick hero |
Hat trick Hero Shivrajkumar fans geting ready for celebrate his 50th birthday on 12th July 2012. Shivaraj Kumar and his family members will be joining this celebration by cutting the first birthday cake on 12th July morning, as the actor will be out of town on 11th July. |
ಕಾರ್ಪೊರೇಟ್‍ಗಳಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶ ನೀಡುವ ಆರ್‌ಬಿಐ ಕ್ರಮ ವಿನಾಶಕಾರಿ: ರಾಜನ್, ವಿರಲ್ ಆಚಾರ್ಯ | Vartha Bharati- ವಾರ್ತಾ ಭಾರತಿ |
ಜನರಿಂದ ತಿರಸ್ಕರಿಸಲ್ಪಟ್ಟವರನ್ನು ಮಂತ್ರಿ ಮಾಡಲಾಗಿದೆ: ಶಾಸಕ ಎಂ.ಪಿ.ರೇಣುಕಾಚಾರ್ಯ |
ಎರಡು ದಿನದಲ್ಲಿ ಖಾತೆಗಳ ಹಂಚಿಕೆ : ಕುಂಭಾಶಿಯಲ್ಲಿ ಸಿಎಂ ಯಡಿಯೂರಪ್ಪ |
ಮಾನಸಿಕ ದೌರ್ಬಲ್ಯದ ಮನಸ್ಥಿತಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ: ಬಿ.ಸಿ.ಪಾಟೀಲ್ |
ಮೀನಿಗಾಗಿ ಹಾಕಿದ್ದ ಬಲೆಯಲ್ಲಿ ಸಿಲುಕಿದ ಕಾಡಾನೆ |
ಸಮಾಜದಲ್ಲಿ ವಿಷಬೀಜ ಬಿತ್ತುತ್ತಿರುವ ಉದ್ಧವ್ ಠಾಕ್ರೆ: ನಳಿನ್ ಕುಮಾರ್ ಕಟೀಲ್ |
ಉಡುಪಿ: ಪಿಯುಸಿ ಶೇ.87 ಹಾಜರಾತಿ |
ಉಡುಪಿ: ಮಂಗಳವಾರ 235 ಮಂದಿಗೆ ಕೊರೋನ ಲಸಿಕೆ |
ಉಡುಪಿ ಜಿಲ್ಲೆಯ ನಾಲ್ವರಲ್ಲಿ ಕೋವಿಡ್ ಸೋಂಕು ಪತ್ತೆ |
"ಸಾಲಗಾರರು ಬ್ಯಾಂಕ್‍ಗಳ ಒಡೆಯರಾಗಬಾರದು" |
ವಾರ್ತಾ ಭಾರತಿ Nov 23, 2020, 5:10 PM IST |
ರಘುರಾಮ್ ರಾಜನ್, ವಿರಲ್ ಆಚಾರ್ಯ |
ಹೊಸದಿಲ್ಲಿ: ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಬ್ಯಾಂಕ್‍ಗಳನ್ನು ಆರಂಭಿಸಲು ಅನುವಾಗಲು ಬ್ಯಾಂಕಿಂಗ್ ನಿಯಂತ್ರಣಾ ಕಾಯಿದೆಗೆ ಸೂಕ್ತ ತಿದ್ದುಪಡಿ ತರಲು ಹಾಗೂ ಖಾಸಗಿ ಬ್ಯಾಂಕ್‍ಗಳ ಲೈಸನ್ಸಿಂಗ್ ನೀತಿಯ ಸಮಗ್ರ ಪುನರ್ ಪರಿಶೀಲನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆಂತರಿಕ ಸಮಿತಿ ಮಾಡಿರುವ ಶಿಫಾರಸನ್ನು ಮಾಜಿ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಹಾಗೂ ಆರ್ ಬಿ ಐನ ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಖಂಡಿಸಿದ್ದಾರೆ. ಇಂತಹ ಒಂದು ಕ್ರಮವನ್ನು ಕೈಗೊಂಡಿದ್ದೇ ಆದಲ್ಲಿ ಅದು ದೇಶದ ದೊಡ್ಡ ಸಂಸ್ಥೆಗಳ ಕೈಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಅಧಿಕಾರ ಕೇಂದ್ರೀಕರಿಸುವಂತಾಗುವುದಲ್ಲದೆ ಒಂದು ವೇಳೆ ಇಂತಹ ಬ್ಯಾಂಕ್‍ಗಳು ವಿಫಲವಾದಲ್ಲಿ ಅದು ಮತ್ತೆ ಬೊಕ್ಕಸದ ಮೇಲೆ ದೊಡ್ಡ ಹೊರೆಯನ್ನೇ ಸೃಷ್ಟಿಸಲಿದೆ ಎಂದಿದ್ದಾರೆ ಎಂದು theprint.in ವರದಿ ಮಾಡಿದೆ. |
ಬ್ಯಾಂಕಿಂಗ್ ಕ್ಷೇತ್ರಕ್ಕೆ ಕಾರ್ಪೊರೇಟ್‍ಗಳಿಗೆ ಅನುಮತಿ ನೀಡುವ ಕುರಿತು ಆರ್ ಬಿ ಐ ಆಂತರಿಕ ಸಮಿತಿ ಮಾಡಿರುವ ಶಿಫಾರಸು ಒಂದು 'ಬಾಂಬ್ ಶೆಲ್' ಎಂದು ರಘುರಾಮ್ ರಾಜನ್ ಇಂದು ತಮ್ಮ 'ಲಿಂಕ್ಡ್ ಇನ್' ಪುಟದಲ್ಲಿ ಬರೆದಿದ್ದಾರೆ ಹಾಗೂ ಈ ಪ್ರಸ್ತಾವನೆಯನ್ನು 'ಶೆಲ್ಫ್ ನಲ್ಲಿಯೇ ಬಾಕಿಯಿಡುವುದು ಒಳ್ಳೆಯದು,' ಎಂದಿದ್ದಾರೆ. |
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಪೊರೇಟ್‍ಗಳ ಶಾಮೀಲಾತಿಯ ಈಗಿನ ಮಿತಿಗಳಿಗೇ ಅಂಟಿಕೊಳ್ಳುವುದು ಉತ್ತಮ ಎಂದು ರಘುರಾಮ್ ರಾಜನ್ ಹಾಗೂ ವಿರಲ್ ಆಚಾರ್ಯ ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ. |
"ದೊಡ್ಡ ಉದ್ದಿಮೆಗಳಿಗೆ ಹಣಕಾಸು ಸಹಾಯ ಬೇಕಿದ್ದರೆ ಅದು ಅವರಿಗೆ ಸುಲಭವಾಗಿ ದೊರೆಯುತ್ತದೆ, ಅವರದ್ದೇ ಬ್ಯಾಂಕ್ ಇದ್ದರೆ ಅಲ್ಲಿ ಪ್ರಶ್ನೆಗಳನ್ನು ಕೇಳಬೇಕಾದ ಅಗತ್ಯವೇ ಇರುವುದಿಲ್ಲ,'' ಎಂದು ಅವರು ಹೇಳಿದ್ದಾರೆ. |
"ಇಂತಹ ಒಂದು ಕ್ರಮ ವಿನಾಶಕಾರಿಯಾಗಬಹುದು. ಸಾಲಗಾರನೇ ಮಾಲಿಕನಾಗಿದ್ದರೆ ಏನಾಗಬಹುದು?,'' ಎಂದು ಅವರು ಪ್ರಶ್ನಿಸಿದ್ದಾರೆ. ಕಾರ್ಪೊರೇಟ್‍ಗಳನ್ನು ಬ್ಯಾಂಕಿಂಗ್ ಕ್ಷೇತ್ರಗಳಿಗೆ ಅನುಮತಿಸಿದಲ್ಲಿ ಸಾಕಷ್ಟು ಸಾಲದಲ್ಲಿರುವ ಹಾಗೂ ರಾಜಕೀಯವಾಗಿ ಪ್ರಭಾವಿಯಾಗಿರುವ ಉದ್ಯಮ ಸಂಸ್ಥೆಗಳು ಬ್ಯಾಂಕ್ ಆರಂಭಿಸಲು ಪರವಾನಗಿಗಾಗಿ ಹೆಚ್ಚು ಒತ್ತಡ ಹೇರುವ ಸಾಧ್ಯತೆಯಿದೆ, ಇಂತಹ ಕ್ರಮ ರಾಜಕಾರಣದಲ್ಲಿ ಹಣ ಬಲವನ್ನು ಇನ್ನೂ ಅಧಿಕಗೊಳಿಸುತ್ತದೆ,'' ಎಂದೂ ಅವರು ಹೇಳಿದ್ದಾರೆ. |
"ಆರ್ ಬಿ ಐ ಆಂತರಿಕ ಸಮಿತಿಗೆ ಇಂತಹ ಶಿಫಾರಸು ಈಗ ಮಾಡುವ ತುರ್ತು ಏನಿದೆ?,'' ಎಂದೂ ರಾಜನ್ ಮತ್ತು ಆಚಾರ್ಯ ಪ್ರಶ್ನಿಸಿದ್ದಾರೆ. |
"ಈಗಿನ ಸಾರ್ವಜನಿಕ ರಂಗದ ಬ್ಯಾಂಕುಗಳ ಆಡಳಿತಗಳನ್ನು ಇನ್ನಷ್ಟು ವೃತ್ತಿಪರವಾಗಿಸಿ ಹಾಗೂ ಅವುಗಳಲ್ಲಿ ಸಾರ್ವಜನಿಕರ ಪಾಲುದಾರಿಕೆಯನ್ನು ಹೆಚ್ಚಿಸಬೇಕು. ಅದರ ಬದಲು ದೊಡ್ಡ ಸಂಸ್ಥೆಗಳ ಒಡೆತನದಲ್ಲಿ ಬ್ಯಾಂಕ್‍ಗಳನ್ನು ಆರಂಭಿಸುವುದು ಮೂರ್ಖತನವಾಗಿದೆ,'' ಎಂದೂ ಅವರಿಬ್ಬರು ಹೇಳಿದ್ದಾರೆ. |
ಮಾನವೀಯತೆ ಮೆರೆದ ಸಬ್ ಕಲೆಕ್ಟರ್, ಗಾಯಾಳುಗಳನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಯುವ ಐಎಎಸ್..! - Chandamama Kannada |
Home / Human angle / ಮಾನವೀಯತೆ ಮೆರೆದ ಸಬ್ ಕಲೆಕ್ಟರ್, ಗಾಯಾಳುಗಳನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಯುವ ಐಎಎಸ್..! |
ಮಾನವೀಯತೆ ಮೆರೆದ ಸಬ್ ಕಲೆಕ್ಟರ್, ಗಾಯಾಳುಗಳನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಯುವ ಐಎಎಸ್..! |
Siva January 18, 2019 Human angle |
ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಯುವ ಐಎಎಸ್ ಅಧಿಕಾರಿ ಸಕಾಲದಲ್ಲಿ ಸ್ಪಂದಿಸಿ ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಗೊಲ್ಲನಪಲ್ಲಿ ಎಂಬಲ್ಲಿ ನಡೆದಿದೆ. ವಿವರಗಳನ್ನು ನೋಡುವುದಾದರೆ. |
ಪುರುಷೋತ್ತಮ ಪಟ್ಟಣ ಗ್ರಾಮಕ್ಕೆ ಸೇರಿದ ವೇಮೂರಿ ರಾಮಕೋಟಯ್ಯ (29) ಆಗಿರಿಪಲ್ಲಿಯಿಂದ ಐದು ತಿಂಗಳ ಗರ್ಭಿಣಿಯಾದ ತನ್ನ ಪತ್ನಿ ವರಲಕ್ಷ್ಮಿ (23), ಮೂರು ವರ್ಷದ ಮಗಳ ಜತೆಗೆ ಬೈಕ್ ಮೇಲೆ ಮನೆಗೆ ಹೊರಟ. ಮಾರ್ಗದ ನಡುವೆ ಗೊಲ್ಲನಪಲ್ಲಿ ಬಳಿ ನಾಲ್ಕು ರಸ್ತೆ ಸೇರುವ ಬಳಿ ಅತಿ ವೇಗವಾಗಿ ಬಂದ ಇನ್ನೊಂದು ಬೈಕನ್ನು ಡಿಕ್ಕಿ ಹೊಡೆಯಿತು. |
ಈ ಅಪಘಾತದಲ್ಲಿ ರಾಮಕೋಟಯ್ಯ, ವರಲಕ್ಷ್ಮಿಗೆ ತೀವ್ರ ಗಾಯಗಳಾದವು. ಅವರ ಮಗಳಿಗೆ ಸ್ವಲ್ಪ ಗಾಯಗಳಾದವು. ಅದೇ ಸಮಯದಲ್ಲಿ ವಿಜಯವಾಡದಿಂದ ಗನ್ನವರಂ ಮುಖಾಂತರ ಸೂಜಿವೀಡುಗೆ ಹೋಗುತ್ತಿದ್ದ ಜಿಲ್ಲಾಧಿಕಾರಿ ಸ್ನಪಿಲ್ ದಿನಕರ್ ರಸ್ತೆ ಮೇಲೆ ಬಿದ್ದಿದ್ದ ಗಾಯಾಳುಗಳನ್ನು ಗಮನಿಸಿ ತನ್ನ ಸಿಬ್ಬಂದಿಯೊಂದಿಗೆ ಅವರಿಗೆ ಸಹಾಯ ಮಾಡಿದ್ದಾರೆ. ಗಾಯಗೊಂಡು ನರಳುತ್ತಿದ್ದ ಗಾಯಾಳುಗಳನ್ನು ಸಬ್ ಕಲೆಕ್ಟರ್ ತನ್ನ ಕಾರಿನಲ್ಲಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಬಳಿಕ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್‌ನಲ್ಲಿ ವಿಜಯವಾಡ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೂಕ್ತ ಸಮಯದಲ್ಲಿ ಪ್ರತಿಕ್ರಿಯಿಸಿ ಗಾಯಾಳುಗಳ ಮೇಲೆ ಮಾನವೀಯತೆ ತೋರಿಸಿದ ಸಬ್ ಕಲೆಕ್ಟರ್ ಕ್ರಮವನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. |
ಸಾಮಾನ್ಯವಾಗಿ ಅಧಿಕಾರಿಗಳು ಎಂದರೆ ತಾವಾಯಿತು ತಮ್ಮ ಕೆಲಸ ಆಯಿತು ಎಂದುಕೊಳ್ಳುವವರೇ ಹೆಚ್ಚು. ಬೆರಳೆಣಿಕೆಯಷ್ಟು ಮಂದಿ ಮಾತ್ರ ಈ ರೀತಿಯ ಕೆಲಸಕ್ಕೆ ಕೈಹಾಕಿ ಮಾನವೀಯತೆ ಮೆರೆಯುತ್ತಾರೆ. ಅದರಲ್ಲೂ ಅಪಘಾತದಂತಹ ಘಟನೆಗಳಲ್ಲಿ ತಮಗ್ಯಾಕೆ ಆ ಉಸಾಬರಿ ಎಂದುಕೊಳ್ಳುವವರೇ ಅಧಿಕ. ಜೀವ ಹೋಗುತ್ತಿದ್ದರೂ ನೋಡದೆ ಹೋಗುವ ಅದೆಷ್ಟೋ ಮಂದಿ ಇರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿ ದಿನಕರ್ ಎಲ್ಲರನ್ನೂ ಕಾಪಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಿನಕರ್ ಅವರಿಗೆ ನೀವೂ ಅಭಿನಂದನೆ ತಿಳಿಸಿ. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದರೆ ಸಹಾಯ ಮಾಡಿದವರ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳುವಂತಿಲ್ಲ ಎಂದು ಕೋರ್ಟ್ ಅಭಯ ನೀಡಿದೆ. ಹಾಗಾಗಿ ನೀವೂ ಅಷ್ಟೇ ಅಂತಹ ಪರಿಸ್ಥಿತಿಯಲ್ಲಿರುವವರನ್ನು ಕಂಡರೆ ಸಹಾಯ ಮಾಡಿ, ಜೀವ ಉಳಿಸಿ. ನಿಮಗೂ ಆ ಪುಣ್ಯ ಸಿಗುತ್ತದೆ. |
ಆಗಸ್ಟ್ 28ಕ್ಕೆ ಧಾರವಾಡ ಐಐಟಿ ಕ್ಯಾಂಪಸ್‌ಗೆ ಶಂಕುಸ್ಥಾಪನೆ | Dharwad IIT foundation laying ceremony on August 28, 2016 - Kannada Oneindia |
8 min ago ಪ್ರಧಾನಿ ಮೋದಿ ವಿರುದ್ಧ ವ್ಯಕ್ತಿಗತ ನಿಂದನೆ ಬಿಡಿ: ಕಾಂಗ್ರೆಸ್ ಮುಖಂಡ ಸಿಂಘ್ವಿ |
13 min ago ಮೈತ್ರಿ ಸರ್ಕಾರ ಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದು ಸಿದ್ದರಾಮಯ್ಯ: ಜಗದೀಶ್ ಶೆಟ್ಟರ್ |
16 min ago ಪಾಕ್ ದುರಹಂಕಾರಕ್ಕೆ ತಕ್ಕ ಶಾಸ್ತಿ, FATF ನಿಂದ ಕಪ್ಪುಪಟ್ಟಿಯ ಶಿಕ್ಷೆ! |
22 min ago ಉಮೇಶ್ ಕತ್ತಿ ಫೋನ್ ಮಾಡಿದ್ದು ಈ ವಿಚಾರಕ್ಕೆ...: ಸಿದ್ದರಾಮಯ್ಯ ಹೇಳಿಕೆ |
ಆಗಸ್ಟ್ 28ಕ್ಕೆ ಧಾರವಾಡ ಐಐಟಿ ಕ್ಯಾಂಪಸ್‌ಗೆ ಶಂಕುಸ್ಥಾಪನೆ |
| Updated: Tuesday, August 9, 2016, 9:43 [IST] |
ಧಾರವಾಡ, ಆಗಸ್ಟ್ 09 : ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಶಂಕುಸ್ಥಾಪನಾ ಕಾರ್ಯಕ್ರಮ ಆಗಸ್ಟ್ 28ರಂದು ನಡೆಯಲಿದೆ. ಜಲಸಂಪನ್ಮೂಲ ಇಲಾಖೆಯ ವಾಲ್ಮಿ ಕಟ್ಟಡದ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಐಐಟಿ ತರಗತಿಗಳು ಆಗಸ್ಟ್ 1ರಿಂದಲೇ ಆರಂಭವಾಗಿವೆ. |
ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಸೋಮವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೆಡೇಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಆ.28ರಂದು ಹಮ್ಮಿಕೊಂಡಿರುವ ಐಐಟಿ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.[ಧಾರವಾಡ ಐಐಟಿ ಕ್ಯಾಂಪಸ್ಸಿಗೆ 470 ಎಕರೆ ಜಾಗ] |
ಧಾರವಾಡದ ಐಐಟಿ ಕ್ಯಾಂಪಸ್‌ಗೆ ಕೆಲಗೇರಿ ಗ್ರಾಮದಲ್ಲಿ 470 ಎಕರೆ ಜಮೀನು ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಜಾಗದಲ್ಲಿ ಶಾಶ್ವತ ಕ್ಯಾಂಪಸ್ ನಿರ್ಮಾಣವಾಗಲಿದ್ದು, ಆಗಸ್ಟ್ 28ರಂದು ಇದಕ್ಕೆ ಶಂಕುಸ್ಥಾಪನೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.[ಐಐಟಿ ತರಗತಿಗಳು ಆರಂಭ] |
ಉದ್ಘಾಟನೆಯಾಗಿಲ್ಲ : ಧಾರವಾಡದ ಐಐಟಿ ಜುಲೈ 31ರಂದು ಉದ್ಘಾಟನೆಯಾಗಬೇಕಿತ್ತು. ಆಗಸ್ಟ್ 1ರಿಂದ ತರಗತಿಗಳು ಆರಂಭವಾಗಬೇಕಿತ್ತು. ಆದರೆ, ಮಹದಾಯಿ ಹೋರಾಟದ ಹಿನ್ನಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿಲ್ಲ. ಆದರೆ, ತರಗತಿಗಳು ಆಗಸ್ಟ್ 1ರಿಂದ ಆರಂಭವಾಗಿವೆ.[ಧಾರವಾಡ ಐಐಟಿ ಉದ್ಘಾಟನೆ ಮುಂದಕ್ಕೆ] |
120 ವಿದ್ಯಾರ್ಥಿಗಳು : ಧಾರವಾಡ ಐಐಟಿ ಮೊದಲ ಬ್ಯಾಚ್‌ನಲ್ಲಿ 120 ವಿದ್ಯಾರ್ಥಿಗಳಿದ್ದಾರೆ. ಕಂಪ್ಯೂಟರ್ ಸೈನ್ಸ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಕ್ಕೆ ತಲಾ 40 ರಂತೆ 120 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಇವರಲ್ಲಿ 8 ವಿದ್ಯಾರ್ಥಿಗಳು ಕನ್ನಡಿಗರು. |
Karnataka higher education minister Basavaraj Rayareddy invited union minister of Human Resource Development (HRD) Prakash Javadekar for the Dharwad Indian Institute of Technology (IIT)foundation laying ceremony scheduled on August 28, 2016. |
"ಅಕ್ಟೋಪಸ್" ಕೆರೆಯಲ್ಲಿ ವಿಹಾರ! | Ashtamudi Lake : A Lake made long Boat Rides - Kannada Nativeplanet |
»"ಅಕ್ಟೋಪಸ್" ಕೆರೆಯಲ್ಲಿ ವಿಹಾರ! |
Updated: Thursday, June 7, 2018, 17:03 [IST] |
ಇದೊಂದು ಅಕ್ಟೋಪಸ್ ಕೆರೆ. ಅರೆರೆ, ಅಕ್ಟೋಪಸ್ ಎಂದಾಕ್ಷಣ, ಈ ಕೆರೆಯು ಅಕ್ಟೋಪಸ್ ಎಂಬ ಎಂಟು ಬಾಹುಗಳುಳ್ಳ ಜಲಜೀವಿಗಳಿಂದ ತುಂಬಿದೆಯಾ...ಎಂದುಕೊಳ್ಳಬೇಡಿ. ಪಾಮ್ ಮರದ ಹಾಗೆ, ಅಕ್ಟೋಪಸ್ ನ ಹಾಗೆ ಈ ಅದ್ಭುತ ಕೆರೆಯು ಎಂಟು ಮೂಲೆಗಳನ್ನು ಹೊಂದಿರುವ ಆಕರ್ಷಕ ಹಿನ್ನೀರಿನ ತಾಣವಾಗಿದೆ. |
ಕೇರಳದಲ್ಲೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹಿನ್ನೀರಿನ ಪ್ರವಾಸಿ ತಾಣವಾಗಿದೆ ಈ ಕೆರೆ. ಇದನ್ನೆ ಅಷ್ಟಮುಡಿ ಕೆರೆ ಎಂದು ಕರೆಯಲಾಗುತ್ತದೆ. ಆಕಾರದಲ್ಲಿ ಕೇರಳದಲ್ಲೆ ಎರಡನೇಯ ದೊಡ್ಡ ಕೆರೆಯಾಗಿ ಅಷ್ಟಮುಡಿ ಕೆರೆ ಗಮನಸೆಳೆಯುತ್ತದೆ. ಮೊದಲನೇಯ ದೊಡ್ಡ ಕೆರೆಯಾಗಿದೆ ವೆಂಬನಾಡ್. |
ನಿಮಗೆಲ್ಲ ಗೊತ್ತಿರುವ ಹಾಗೆ ಕೇರಳ ರಾಜ್ಯವು ಒಂದು ಸುಂದರ ಪ್ರವಾಸಿ ವಿಶೇಷತೆಯುಳ್ಳ ರಾಜ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಇಲ್ಲಿನ ಹಿನ್ನೀರು ಪ್ರವಾಸ ಎಲ್ಲೆಡೆ ಪ್ರಸಿದ್ಧಿಗಳಿಸಿದೆ. ಅಗಾಧವಾದ ಶಾಂತಿಯುತ ನೀರಿನಲ್ಲಿ, ಸುತ್ತ ಮುತ್ತಲು ದಟ್ಟವಾದ ಹಸಿರಿನಿಂದಾವರಿಸಿದ ಗಿಡ-ಮರಗಳ ಮಧ್ಯದಲ್ಲಿ ಹಾಯಾಗಿ ವಿಹರಿಸುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ! |
ಇನ್ನೂ ಒತ್ತು ಕೊಟ್ಟು ಹೇಳಬೇಕೆಂದರೆ ದೋಣಿ ಮನೆಯಲ್ಲೆ ಘಂಟೆಗಟ್ಟಲೆ ಹಾಯಾಗಿ ವಿಹರಿಸುವುದೆಂದರೆ...ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆಯೆ...ಅಲ್ಲವೆ. ಅಂತಹ ಅದ್ಭುತ ಅನುಭೂತಿಯನ್ನು ಹಿನ್ನೀರು ಪ್ರವಾಸ ಒದಗಿಸುತ್ತದೆ. ಈ ರೀತಿಯ ಹಿನ್ನೀರು ಪ್ರವಾಸಕ್ಕೆ ಕೇರಳ ಹೆಸರುವಾಸಿ. ಅಷ್ಟಮುಡಿ ಕೆರೆಯು ಕೇರಳದ ಹಿನ್ನೀರಿನ ಪ್ರವಾಸಕ್ಕೆ ಪ್ರವೇಶ ದ್ವಾರವಾಗಿದೆ. |
ಚಿತ್ರಕೃಪೆ: Sureshkajal |
ಈ ಕೆರೆಯ ಸುತ್ತಮುತ್ತಲು ಸಾಕಷ್ಟು ಹಳ್ಳಿಗಳು ಆವರಿಸಿವೆ. ಅಲ್ಲಿನ ಜನರ ಮುಖ್ಯ ಕಸುಬು ತೆಂಗು ಬೆಳೆ, ನಾರಿನಿಂದ ಹಗ್ಗ ತಯಾರಿಕೆ ಹಾಗೂ ಪ್ರಪ್ರಥಮವಾಗಿ ಮೀನುಗಾರಿಕೆ ಆಗಿವೆ. ಈ ಅಷ್ಟಮುಡಿ ಕೆರೆಯು ತನ್ನ ಅಗಾಧತೆಯಿಂದ ಇಂದಿಗೂ ಜನಜೀವನದ ಜೀವನಾಡಿಯಾಗಿದೆ. ಎಷ್ಟೊ ಜನರ ಪಾಲಿಗೆ ಬದುಕುವ ಹಾದಿಯಾಗಿದೆ. |
ಈ ಕೆರೆಯ ಮೂಲಕವೆ ಸಾಕಷ್ಟು ಹಳ್ಳಿಗಳು ಒಂದಕ್ಕೊಂದು ಬೆಸೆದುಕೊಂಡಿದ್ದು ಸಂಚಾರಿ ಮಾಧ್ಯಮವಾಗಿಯೂ ಅಷ್ಟಮುಡಿ ಕೆರೆ ಹೆಸರುವಾಸಿಯಾಗಿದೆ. ಮಿಕ್ಕಂತೆ ಹಲವಾರು ದೋಣಿಮನೆಗಳು ಪ್ರವಾಸಿಗರ ಅನುಕೂಲಕ್ಕೆಂದೆ ಕಾರ್ಯನಿರತವಾಗಿವೆ. ಇವುಗಳಲ್ಲಿ ಸುತ್ತಾಡುತ್ತ ಅದೆಷ್ಟೊ ಕವಿಗಳು, ಲೇಖಕರು ಸುತ್ತಲಿನ ಪರಿಸರದಿಂದ ಪ್ರಭಾವಿತರಾಗಿ ಸಾಕಷ್ಟು ರಚನೆಗಳನ್ನು ಬರೆದಿದ್ದಾರೆ. |
Subsets and Splits
No community queries yet
The top public SQL queries from the community will appear here once available.