text
stringlengths 0
61.5k
|
---|
ಕೋರಮಂಗಲ, 2ನೇ ಬ್ಲಾಕ್, |
ಸರ್ಜಾಪುರ ರೋಡ್, |
54 min ago KEA Document Upload 2020: ದಾಖಲೆಗಳನ್ನು ಅಪ್‌ಲೋಡ್ ಮಾಡದ ಸಿಇಟಿ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ |
2 hrs ago KPSC: ಸಹಾಯಕ ವೈಜ್ಞಾನಿಕ ಅಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಪ್ರಕಟ |
15 hrs ago Schools Reopening: ದೇಶದಲ್ಲಿ ನ.30ರ ವರೆಗೆ ಯಾವುದೇ ಶಾಲೆಗಳು ರೀ ಓಪನ್ ಆಗಲ್ಲ |
Read more about: recruitment, jobs, information, ಉದ್ಯೋಗ, ಮಾಹಿತಿ, ಸಲಹೆ, ನೇಮಕಾತಿ |
KIOCL Limited Recruitment 2019-20:Apply Online for Officer (Law) Vacancies. Kudremukh Iron Ore Company Limited (KIOCL Limited) invited Online applications from eligible and interested candidates to fill up Officer (Law) Post through KIOCL Limited official notification 2019. Job seekers who are looking for a career in Bangalore – Karnataka Government can make use of this opportunity. Apply online for these KIOCL Limited Officer (Law) jobs before 07th June 2019. Official website of KIOCL Limited is www.kioclltd.in Recruitment 2019. |
ಸೊಳ್ಳೆ-ಜಿರಳೆ-ತಿಗಣೆ ಓಡಿಸಲು ಮನೆ ಮದ್ದು | Kannada Dunia | Kannada News | Karnataka News | India News |
HomeLife StyleSpecialಸೊಳ್ಳೆ-ಜಿರಳೆ-ತಿಗಣೆ ಓಡಿಸಲು ಮನೆ ಮದ್ದು |
09-11-2018 7:32PM IST / No Comments / Posted In: Latest News, Special |
ಸಾಮಾನ್ಯವಾಗಿ ಮಹಿಳೆಯರು ಮನೆಯನ್ನು ಕೊಳಕು ಮಾಡುವ ಹಾಗೂ ಅನಾರೋಗ್ಯಕ್ಕೆ ಕಾರಣವಾಗುವ ಕೀಟಗಳನ್ನು ಮನೆಯಿಂದ ಹೊರಹಾಕಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟದ ಕೆಲಸ. ಒಂದು ಕಡೆ ತೆಗೆದ್ರೆ ಮತ್ತೊಂದು ಕಡೆ ಇನ್ನೊಂದು ಕೀಟ ಕಾಣಿಸುತ್ತೆ ಎಂಬ ಚಿಂತೆ ಮಹಿಳೆಯರದ್ದು. ಜಿರಳೆ, ಸೊಳ್ಳೆ, ತಿಗಣೆಯನ್ನು ಮನೆಯಿಂದ ಓಡಿಸಲು ಈ ಸುಲಭ ಉಪಾಯಗಳನ್ನು ನೀವು ಪ್ರಯೋಗ ಮಾಡಬಹುದಾಗಿದೆ. |
ಜಿರಳೆ: ಹೆಚ್ಚಿನವರು, ಅದ್ರಲ್ಲೂ ಮಹಿಳೆಯರು ಜಿರಳೆ ಕಂಡ್ರೆ ಭಯಗೊಳ್ತಾರೆ. ಜಿರಳೆಯಿಂದ ನೆಮ್ಮದಿ ಪಡೆಯಲು ಏನು ಮಾಡೋದು ಎನ್ನುವವರು ಈ ಸರಳ ಮದ್ದು ಬಳಸಿ, ಜಿರಳೆಯನ್ನು ಓಡಿಸಬಹುದು. ಬೆಳ್ಳುಳ್ಳಿ, ಈರುಳ್ಳಿ ಹಾಗೂ ಕೆಂಪು ಮೆಣಸನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿಕೊಳ್ಳಿ. ನಂತ್ರ ಇದಕ್ಕೆ ಸ್ವಲ್ಪ ನೀರು ಬಾಟಲಿಗೆ ಹಾಕಿ. ಈ ಮಿಶ್ರಣವನ್ನು ಜಿರಳೆ ಹೆಚ್ಚಿರುವ ಜಾಗಕ್ಕೆ ಸಿಂಪಡಿಸಿ. ನಿಯಮಿತ ರೂಪದಲ್ಲಿ ಇದನ್ನು ಮಾಡುವುದರಿಂದ ಬೇಗ ನೀವು ಜಿರಳೆ ಕಾಟದಿಂದ ನೆಮ್ಮದಿ ಕಾಣಬಹುದಾಗಿದೆ. |
ಸೊಳ್ಳೆ: ಬೆಳ್ಳುಳ್ಳಿಯ ಕೆಟ್ಟ ವಾಸನೆ ಸೊಳ್ಳೆಗಳನ್ನು ಮನೆ ಪ್ರವೇಶ ಮಾಡದಂತೆ ತಡೆಯುತ್ತವೆ. ಬೆಳ್ಳುಳ್ಳಿಯನ್ನು ನೀರಿನಲ್ಲಿ ಕುದಿಸಿ. ಆ ನೀರನ್ನು ಸೊಳ್ಳೆಯಿಂದ ಮುಕ್ತವಾಗಿಡಬೇಕೆಂದಿರುವ ಜಾಗಕ್ಕೆ ಸಿಂಪಡಿಸಿ. ರೂಂನಲ್ಲಿ ಬೆಳ್ಳುಳ್ಳಿ ವಾಸನೆ ಹರಡಬಹುದು. ಆದ್ರೆ ಸೊಳ್ಳೆಗಳು ಮಾತ್ರ ಇರೋದಿಲ್ಲ. |
ತಿಗಣೆ : ಮನೆಯಿಂದ ತಿಗಣೆಯೋಡಿಸುವುದು ಬಹಳ ಸುಲಭ. ಈರುಳ್ಳಿ ರಸವನ್ನು ಸಿದ್ಧಪಡಿಸಿಕೊಳ್ಳಿ. ಅದನ್ನು ಸ್ಪ್ರೇ ಮಾಡುವ ಬಾಟಲಿಗೆ ಹಾಕಿ ತಿಗಣೆಯಿರುವ ಜಾಗಕ್ಕೆ ಸಿಂಪಡಿಸಿ. ಈರುಳ್ಳಿ ವಾಸನೆಗೆ ತಿಗಣೆ ಸಾವನ್ನಪ್ಪುತ್ತದೆ. |
ನಿಮ್ಮ ಜೀವನದಲ್ಲಿ ಸರಳತೆ.. - VIVIDLIPI |
ನಿಮ್ಮ ಜೀವನದಲ್ಲಿ ಸರಳತೆ.. |
Simple living and high thinking… ಈ ಮಾತು ಬಹಳಷ್ಟು ಜನಜನಿತವಾದದ್ದು. ನಾವೆಲ್ಲ ಚಿಕ್ಕಂದಿನಿಂದಲೂ ಗಾಂಧೀಜಿಯವರ ಬಗೆಗೆ ಜನಜನಿತವಾಗಿದ್ದ ಈ ಮಾತುಗಳನ್ನೇ ಕೇಳಿ ಬೆಳೆದವರು. ಅದಕ್ಕೆ ತಕ್ಕಂತೆ ನಮ್ಮ ಜೀವನವೂ ಇತ್ತೇನೋ. |
ಆ ಕಾಲದಲ್ಲಿ ಜನರ ಹತ್ತಿರ ಈಗಿನಂತೆ ಹಣವೂ ಇರುತ್ತಿರಲಿಲ್ಲ. ಖರ್ಚು ಮಾಡುವ ಪ್ರವೃತ್ತಿಯೂ ಇರುತ್ತಿರಲಿಲ್ಲ.. ಸಂದರ್ಭಗಳೂ ಕಡಿಮೆಯೇ. ನಮ್ಮ ಮನೆಯಲ್ಲಂತೂ ಅವ್ವನದು ಯಾವಾಗಲೂ ಕೊರತೆಯ ಬಜೆಟ್ಟೇ. ಬಟ್ಟೆಗಳ ವಿಷಯದಲ್ಲಿ ಹೇಳಬೇಕೆಂದರೆ ಎರಡು ಶಾಲೆಯ ಸಮವಸ್ತ್ರಗಳು… ಎರಡು ಸಾದಾ ಫ್ರಾಕುಗಳು. ಒಂದು ಸ್ವಲ್ಪ ಜೋರಾಗಿರುವ ಲಂಗ, ಬ್ಲೌಸ್. ಅದು ಯಾರದಾದರೂ ಮದುವೆ, ಮುಂಜಿಗೆಂದು ತೆಗೆದಿರಿಸಿದ್ದುದು. ಅದೂ ಕೂಡ ಒಮ್ಮೊಮ್ಮೆ ಅವ್ವನ ಹಳೆಯ ರೇಶ್ಮೆ ಸೀರೆಯಲ್ಲಿ ಹೊಲೆಸಿದ್ದುದೂ ಇರುತ್ತಿತ್ತು.. ನಮಗೆ ಆ ಡ್ರೆಸ್ ಹಾಕ್ಕೊಂಡರೆ ಒಂಥರಾ ರಾಜಕುಮಾರಿ ಫೀಲಿಂಗು. ಅಷ್ಟೇ ಏಕೆ, ವಿಶೇಷವಾದದ್ದನ್ನು ತಿನ್ನಲು ಕೂಡ ನಾವು ಹಬ್ಬದ ದಾರಿ ಕಾಯಬೇಕಿತ್ತು. ಅದೂ ಪೂಜೆ, ನೈವೇದ್ಯಗಳು, ಊಟಕ್ಕೆ ಕರೆದವರನ್ನು ಉಪಚಾರ ಮಾಡಿದ ನಂತರವೇ ನಮ್ಮ ಊಟ. ಮನೆಯಲ್ಲಿ ಕೊರತೆಯೇ ಇದ್ದರೂ ವಾರಕ್ಕೊಮ್ಮೆ ಒಬ್ಬ ಶಾಲೆ ಕಲಿಯುತ್ತಿರುವ ಹುಡುಗನಿಗೆ ಊಟಕ್ಕೆ ಹಾಕುತ್ತಿದ್ದಂಥ ಹೃದಯವಂತಿಕೆ. ಒಮ್ಮೊಮ್ಮೆ ಆ ಹುಡುಗ ಮುಖ ಸಣ್ಣದು ಮಾಡಿಕೊಂಡಾಗ ಅಪ್ಪ ಕಾರಣ ಕೇಳುತ್ತಿದ್ದ. 'ಕಾಕಾರ, ಪುಸ್ತಕ ತೊಗೋಬೇಕಾಗೇದರಿ.. ಅಪ್ಪ ಇನ್ನೂ ರೊಕ್ಕನ ಕಳಸಿಲ್ಲಾ." ಅಂತ ಹೇಳಿದರೆ ಅವನಿಗೆ ಒಂದು ನೋಟನ್ನು ಥಟ್ಟನೆ ನೀಡುತ್ತಿದ್ದ. |
ನಾನು ಯಾವಾಗಲೂ ಒಂದಿಷ್ಟು ರೆಬೆಲ್ಲೇ. ಅಪ್ಪನಿಗೆ "ಅಪ್ಪಾ, ನನಗಾದ್ರ ಏನರೆ ಕೇಳಿದ್ರ ರೊಕ್ಕಿಲ್ಲಂತೀ… ಆ ಮಾಧೂ ಮನ್ನೆ ಪುಸ್ತಕಕ್ಕ ರೊಕ್ಕಿಲ್ಲಂದಕೂಡ್ಲೇ ಹತ್ತ ರೂಪಾಯಿ ತಗದ ಕೊಟ್ಟೆಲಾ..ನಿನಗ ನನ್ನ ಮ್ಯಾಲ ಪ್ರೀತೀನ ಇಲ್ಲಾ…" |
ಅಂದಾಗ ಅಪ್ಪ,"ನಿನಗ ಪುಸ್ತಕ, ನೋಟಬುಕ್ಕು, ಕಂಪಾಸು ಇವ್ಯಾವಕ್ಕರೆ ಕಡಿಮೀ ಮಾಡೇದೇನವಾ? ಆದರ ಹೆಚ್ಚಿನ ಐಶಾರಾಮಿ ಸಾಮಾನ ಮಾತ್ರ ಬ್ಯಾಡಂತೇನೀ.. ಪಾಪಾ, ಆ ಹುಡಗಾ ಸಾಲಿ ಕಲಿಯಾಂವಾ.. ತಾಯಿಲ್ಲದ ಪರದೇಶಿ. ಅಂವಗ ಪುಸ್ತಕಕ್ಕ ಕಡಿಮೀ ಬಿದ್ದಾವ ರೊಕ್ಕಾ.. ಇವತ್ತು ನಾ ಕೊಟ್ಟದ್ದು ಬರೇ ಹತ್ತು ರುಪಾಯಿ. ಅಂವಾ ಸಾಲೀ ಕಲತ ಮುಂದ ವಿದ್ಯಾವಂತಾಗಿ ಗಳಸಲಿಕ್ಕೆ ಸುರೂ ಮಾಡಿದ್ರ ಒಂದ ಸಂಸಾರದ ಉದ್ಧಾರ ಆಗತದ.." ಅಂತಿದ್ದರು. |
ಅವರ ದೃಷ್ಟಿಯಲ್ಲಿ ಜೀವನದಲ್ಲಿ ನೆಮ್ಮದಿ ಬೇಕಾದರೆ ನಿಶ್ಚಿಂತೆ, ನಿರ್ಲಿಪ್ತತೆ ಮೈಗೂಡಿಸಿಕೊಳ್ಳಬೇಕು. ಏನೇನೋ ಆಶೆ ಮಾಡಿ ಅದು ಸಿಗದೇಹೋದಾಗ ಕೊರಗಿ ಇದ್ದ ಸಂತೋಷ ವನ್ನೂ ಹಾಳುಮಾಡಿಕೊಳ್ಳುವುದು ಸರಳ ಜೀವನದ ತತ್ವವಲ್ಲ. ಪರೋಪಕಾರ, ದಾನ, ಧರ್ಮಗಳಿಗೆ ಇದ್ದ ಗಳಿಗೆಯೇ ಪ್ರಶಸ್ತ. ಕೋಪ, ತಾಪ ಬಿಟ್ಟು ನೆರೆಹೊರೆಯವರನ್ನು ಪ್ರೀತಿಸುವುದನ್ನು, ಗೌರವಿಸುವುದನ್ನು, ಕ್ಷಮಿಸುವುದನ್ನು ಕಲಿಯಬೇಕು. ಇನ್ನೊಬ್ಬರ ದೋಷ ಹುಡುಕುವ ಬದಲು ನಮ್ಮೊಳಗಿನ ದೋಷವನ್ನು ಪತ್ತೆ ಹಚ್ಚಿ, ತಿದ್ದಿಕೊಳ್ಳಬೇಕು ಎಂಬುದೇ ಅವರ ಜೀವನದ ಮೂಲಮಂತ್ರವಾಗಿತ್ತು. ಹೀಗಾಗಿ ನಮ್ಮದು ಆರಕ್ಕೇರದ ಮೂರಕ್ಕಿಳಿಯದ ನೆಮ್ಮದಿಯ ಸಂಸಾರವಾಗಿತ್ತು. ಮನುಷ್ಯನಿಗೆ ನೀತಿ, ಸನ್ನಡತೆಗಳೇ ಮುಖ್ಯ. ಹೆಚ್ಚಿನದಕ್ಕೆ, ನಿಲುಕದುದಕ್ಕೆ ಆಶೆಪಟ್ಟರೆ ಅದು ನಮ್ಮ ಜೀವನದ ನೆಮ್ಮದಿಯನ್ನೇ ಕೆಡಿಸುತ್ತದೆ. ಹಣವಿದ್ದರೆ ನೆಮ್ಮದಿ ಸಿಗುವುದಿಲ್ಲ. ಗುಣವಿದ್ದರೆ ಮಾತ್ರ ನೆಮ್ಮದಿ ಸಿಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು |
ಜಗತ್ತಿನಲ್ಲಿ ದೊಡ್ಡ ಶಕ್ತಿ ಸರಳತೆ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಆದರೂ ನಮ್ಮಿಂದ ಆದಷ್ಟು ಮಟ್ಟಿಗೆ ಪಾಲಿಸಬೇಕು ಎಂಬುದೇ ಅವರ ತತ್ತ್ವ. |
ನಾವು ಗಳಿಸುವಂತಾದಾಗ ಜಗತ್ತಿನ ರೀತಿ ಬದಲಾಗಿತ್ತೋ, ನಾವೇ ಬದಲಾಗಿದ್ದೆವೋ ಅರಿಯದು. ಆ ಸರಳ ಜೀವನ ಕೈಬಿಟ್ಟಿತ್ತು. ಆದರೂ ಪೂರ್ತಿಯೇನಲ್ಲ! ಕಪಾಟಿನ ತುಂಬ ಬಟ್ಟೆ, ಒಂದೇ ಜೋಡಿ ಚಪ್ಪಲಿಯ ಮೇಲೆ ವರ್ಷಗಳನ್ನೇ ಕಳೆದ ನಮಗೆ ನಾಲ್ಕೈದು ಜೊತೆ ಚಪ್ಪಲಿ, ಒಂದು ಪಠ್ಯಪುಸ್ತಕ ತೆಗೆದುಕೊಳ್ಳಲು ಪರದಾಡುತ್ತಿದ್ದ, ಮುಂದಿನ ಕ್ಲಾಸಿನವರ ಹತ್ತಿರ ಸೆಕೆಂಡ್ ಹ್ಯಾಂಡ್ ಪಠ್ಯ ಪುಸ್ತಕಗಳಿಗಾಗಿ ವಾರ್ಷಿಕ ಪರೀಕ್ಷೆ ನಡೆದಿರುವಾಗಲೇ ಮುಂಗಡ ಬುಕಿಂಗ್ ಮಾಡಿರುತ್ತಿದ್ದ ನಾವು ಈಗ ಓದಲೆಂದು ಕಂಡ ಕಂಡೆಡೆಗಳಿಂದ ತಂದು ಪೇರಿಸಿದ ಪುಸ್ತಕಗಳು.. ಉಪಯೋಗ ಮಾಡದೆ ಚೀಲ ತುಂಬಿಟ್ಟ ಪಾತ್ರೆಪಡಗಗಳು, ಮನೆಯ ಉಪಯೋಗಕ್ಕೆ, ಅತಿಥಿಗಳು ಬಂದಾಗ ಉಪಯೋಗಕ್ಕೆ ಎಂದು ತಂದ ಅನೇಕ ನಿತ್ಯೋಪಯೋಗಿ ವಸ್ತುಗಳು! |
ಆದರೂ ಮನಸ್ಸು ಮೊದಲಿನ ಸಂಸ್ಕಾರವನ್ನು ಮರೆತಿಲ್ಲ. ಶಾಲೆಯ ಪುಸ್ತಕ, ಪೆನ್ನು, ಪೆನ್ಸಿಲ್ ಗಳಿಗಾಗಿ ಇಲ್ಲವೆಂದು ಕಣ್ಣೀರು ತಂದ ಕೆಲಸದವಳ ಮಕ್ಕಳಿಗೆ ಅಲ್ಪ ಸ್ವಲ್ಪ ಸಹಾಯ, ಹಸಿದು ಬಂದವರಿಗೆ ಊಟ, ಇತ್ಯಾದಿ… ಅದೇ ಸರಳತೆಯೆಂದಾದಲ್ಲಿ ಅದು ನಮ್ಮ ಜೀವನದಲ್ಲಿ ಇನ್ನೂ ಜೀವಂತವಿದೆಯೆಂದು ಹೇಳಬಲ್ಲೆ. ಕಾಲಾಯ ತಸ್ಮೈ ನಮಃ.. ಎಂಬಂತೆ ಒಂಚೂರು ಬದಲಾವಣೆ ಸಹ್ಯವೇನೋ… |
ಕಾಯಿಲೆಗಳ ನಿಯಂತ್ರಣಕ್ಕೆ ಸ್ವಚ್ಚತೆಯೊಂದೇ ಪರಿಹಾರ : ಕೆ.ಎಸ್.ಈಶ್ವರಪ್ಪ | SahilOnline |
ಕಾಯಿಲೆಗಳ ನಿಯಂತ್ರಣಕ್ಕೆ ಸ್ವಚ್ಚತೆಯೊಂದೇ ಪರಿಹಾರ : ಕೆ.ಎಸ್.ಈಶ್ವರಪ್ಪ |
Source: so news | Published on 12th September 2019, 12:13 AM | State News | Don't Miss | |
ಶಿವಮೊಗ್ಗ: ಎಲ್ಲಾ ಕಾಯಿಲೆಗಳ ನಿಯಂತ್ರಣಕ್ಕೆ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದೇ ಪರಿಹಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು. |
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ತುಂಗಾನಗರ ಪ್ರಸೂತಿ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರೋಟಾ ವೈರಸ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ರೋಟಾ ವೈರಸ್‍ನಿಂದ ಮರಣ ಸಂಭವಿಸುವ ಸಾಧ್ಯತೆ ಅಧಿಕವಾಗಿದ್ದು, ಅದನ್ನು ನಿಯಂತ್ರಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನವಜಾತ ಶಿಶುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಅವರು ಕರೆನೀಡಿದರು. |
ಮಕ್ಕಳಲ್ಲಿ ರೋಟಾ ವೈರಸ್ ಸೋಂಕು(ಅತಿಸಾರ ಬೇದಿ) ಕಡಿಮೆ ಮಾಡುವ ಉದ್ದೇಶದಿಂದ ಲಸಿಕೆಯನ್ನು ಹಾಕಲಾಗುತ್ತಿದೆ. ಪ್ರತಿ ವರ್ಷ ಮಾರಕ ರೋಗಗಳಿಂದ ಲಕ್ಷಾಂತರ ಮಕ್ಕಳು ಮರಣ ಹೊಂದುತ್ತಿದ್ದಾರೆ. ಮಕ್ಕಳ ಮರಣ ಪ್ರಮಾಣವನ್ನು ನಿಯಂತ್ರಿಸಲು ಇಂತಹ ಅನೇಕ ಲಸಿಕಾ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಜನಸಾಮಾನ್ಯರು ಮಕ್ಕಳ ಚಿಕಿತ್ಸೆಗಾಗಿ ಸಾಕಷ್ಟು ಹಣ ವ್ಯಯ ಮಾಡುವ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸು¯ಭವಾಗಿ ದೊರೆಯುವ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೆ ಸರ್ಕಾರದ ಜನಪರ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು. |
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಮಹಾನಗರಪಾಲಿಕೆ ಸದಸ್ಯ ಶ್ರೀಮತಿ ಲಕ್ಷ್ಮೀಶಂಕರನಾಯ್ಕ್, ಡಾ|ನಾಗರಾಜ್‍ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ, ಡಾ||ಅಚ್ಯುತ, ಡಾ||ದಿನೇಶ್, ಡಾ||ಹನುಮಂತಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು. |
ಉತ್ತರ ಕನ್ನಡದ ಅಭಿವೃದ್ಧಿಯ ಮುನ್ನೋಟ ಬಿಚ್ಚಿಟ್ಟ ಜಿಲ್ಲಾಧಿಕಾರಿ | Uttara Kannada DC Mullai Muhilan Media Interaction - Kannada Oneindia |
ಉತ್ತರ ಕನ್ನಡದ ಅಭಿವೃದ್ಧಿಯ ಮುನ್ನೋಟ ಬಿಚ್ಚಿಟ್ಟ ಜಿಲ್ಲಾಧಿಕಾರಿ |
| Updated: Friday, August 27, 2021, 10:41 [IST] |
ಕಾರವಾರ, ಆಗಸ್ಟ್ 27; "ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅನುಕೂಲವಾಗುವ ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾಪ ಕೂಡ ಸಲ್ಲಿಸಲಾಗಿದೆ" ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. |
ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, "ಉತ್ತರ ಕನ್ನಡ ನಿರಂತರವಾಗಿ ಪ್ರಾಕೃತಿ ವಿಕೋಪಕ್ಕೆ ತುತ್ತಾಗುವ ಜಿಲ್ಲೆಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಣೆ ಮಾಡಲು ಎಲ್ಲಾ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಮುನ್ಸೂಚನೆಗಳನ್ನು ಇಟ್ಟುಕೊಂಡು, ಸಾರ್ವಜನಿಕರಿಗೆ ಪೂರ್ವಭಾವಿಯಾಗಿ ಸೂಚನೆಗಳನ್ನು ನೀಡಿ, ಎಲ್ಲಾ ಕಡೆಗಳಲ್ಲೂ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಕೂಲವಾಗುವಂಥ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುವುದು" ಎಂದರು. |
ಅಂಕೋಲಾ; ಅಲಗೇರಿ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಪ್ಪಿಗೆ |
"ಘಟ್ಟದ ಮೇಲೆ ಮಳೆ ಬಿದ್ದರೆ ಆದರೆ ಅದರ ಹಾನಿ, ಪ್ರವಾಹ ಉಂಟಾಗುವುದು ಕರಾವಳಿ ಪ್ರದೇಶಗಳಲ್ಲಿ. ಕರಾವಳಿಯಲ್ಲಿ ಕಾರವಾರ ಹಾಗೂ ಹೊನ್ನಾವರದಲ್ಲಿ ಈಗಾಗಲೇ ಜಲಾಶಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವ ಮೂಲಕ ಸಂಭವನೀಯ ಪ್ರವಾಹಗಳನ್ನು ಆದಷ್ಟು ಕಡಿಮೆ ಮಾಡುತ್ತಿದ್ದೇವೆ. ಇನ್ನು ಕೆಲವು ಕಡೆಗಳಲ್ಲಿ ಮಾಹಿತಿಗಳನ್ನಾಧರಿಸಿ ತಂತ್ರಜ್ಞಾನವನ್ನು ಬಳಸಿಕೊಂಡು ಮುನ್ನೆಚ್ಚರಿಕೆ ವಹಿಸಲು ಈ ಯೋಜನೆ ರೂಪಿಸಿದ್ದೇವೆ" ಎಂದು ತಿಳಿಸಿದರು. |
"ಜಿಲ್ಲಾ ಕಂಟ್ರೋಲ್ ರೂಮ್‌ನಲ್ಲಿ ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳನ್ನು ಮ್ಯಾಪ್ ಮಾಡಿಡಲಾಗುತ್ತದೆ. ಎಲ್ಲೆಲ್ಲಿ ಮಳೆ ಬಿದ್ದರೆ ಎಲ್ಲೆಲ್ಲಿ ಅನಾಹುತ ಆಗಬಹುದು ಎಂಬ ಬಗ್ಗೆ ಮೊದಲೇ ಸ್ವಯಂಚಾಲಿತವಾಗಿ ನಮಗೆ ಸೂಚನೆ ಬರುವಂಥ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. ವೈಜ್ಞಾನಿಕವಾಗಿ ಮಾಹಿತಿಗಳನ್ನು ಆಧರಿಸಿ, ಮೊದಲೇ ಮುಂಜಾಗ್ರತಾ ಕ್ರಮ ವಹಿಸಿ ಆ ಭಾಗದ ನಿವಾಸಿಗಳನ್ನು ಸ್ಥಳಾಂತರಿಸಲು ಇದು ಅನುಕೂಲವಾಗಲಿದೆ. ಮುಂದಿನ ಮಳೆಗಾಲದೊಳಗೆ ಈ ತಂತ್ರಜ್ಞಾನ ಅಭಿವೃದ್ಧಿಗೊಂಡು ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ" ಎಂದು ವಿವರಿಸಿದರು. |
ಪೋರ್ಟಲ್ ಅಭಿವೃದ್ಧಿ; "ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಿಲ್ಲೆ, ಇಲ್ಲಿನ ಕಲೆ- ಸಂಸ್ಕೃತಿಗಳ ಬಗ್ಗೆ, ಇತಿಹಾಸ, ವನ್ಯಜೀವಿ ಪ್ರಪಂಚ ಹಾಗೂ ಪ್ರವಾಸಿ ತಾಣಗಳ ಮಾಹಿತಿಗಳನ್ನು ಸಂಗ್ರಹಿಸಿ ಪೋರ್ಟಲ್‌ನಲ್ಲಿ ಅಳವಡಿಸಲಾಗುವುದು. ಕಾಳಿ, ಶರಾವತಿ, ಅಘನಾಶಿನಿ ನದಿ ಪ್ರದೇಶಗಳಲ್ಲಿ ಸೀ ಪ್ಲೇನ್ ಮಾಡಲು ಕೂಡ ಚಿಂತನೆ ಮಾಡಿದ್ದೇವೆ. ಪೋರ್ಟಲ್ ಸಿದ್ಧಗೊಂಡ ಬಳಿಕ ಒಂದರಂತೆ ಒಂದು ಪ್ರವಾಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಯೋಚನೆ ಇದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು. |
ಕೌಶಲ್ಯಾಧಾರಿತ ಶಿಕ್ಷಣ; "ಕಳೆದ ಐದು ವರ್ಷಗಳಲ್ಲಿ ಶಿಕ್ಷಣ ಪಡೆದ ಯುವಜನರು ಎಲ್ಲಿ ಉದ್ಯೋಗ ಮಾಡುತ್ತಿದ್ದಾರೆ? ಎಂಬ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಉದ್ಯೋಗವಿಲ್ಲದವರ ಮಾಹಿತಿಗಳನ್ನೂ ಕ್ರೋಢೀಕರಿಸಲಾಗಿದೆ. ಇಂದಿನ ದಿನಮಾನಗಳಲ್ಲಿ ಬೇಡಿಕೆ ಇರುವ ಟ್ರೇಡ್‌ಗಳಲ್ಲಿ ಕೌಶಲ್ಯ ತರಬೇತಿ ನೀಡಲು ಯೋಜನೆ ರೂಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ. ವಿಮಾನ ನಿಲ್ದಾಣ ಬರಲಿದೆ. ಹೀಗಾಗಿ ಅಲ್ಲಿಗೆ ಬೇಕಾದ ಅಗತ್ಯ ಕೌಶಲ್ಯಗಳನ್ನು ಈಗಲೇ ಯುವಜನರಿಗೆ ಒದಗಿಸಿದಾಗ ಅವರಿಗೆ ಉದ್ಯೋಗ ಸಿಗುತ್ತದೆ. ಜೊತೆಗೆ ಸ್ವಯಂ ಉದ್ಯೋಗವನ್ನೂ ಕೈಗೊಳ್ಳಲು ಬೇಕಾದ ಕೌಶಲ್ಯಗಳನ್ನೂ ನೀಡಲು ಯೋಜನೆಗಳನ್ನು ಮಾಡಿಕೊಂಡಿದ್ದೇವೆ" ಎಂದರು. |
ಶೇ 60ರಷ್ಟು ಲಸಿಕಾಕರಣ; "ಲಸಿಕಾಕರಣಕ್ಕೆ ಸಾರ್ವಜನಿಕರಿಂದ ಉತ್ತಮ ಸಹಕಾರ, ಸ್ಪಂದನೆ ವ್ಯಕ್ತವಾಗಿದೆ. ಒಂದು ದಿನ ಹೆಚ್ಚು, ಒಂದು ದಿನ ಕಡಿಮೆ ಲಸಿಕೆ ಬಂದರೂ ಹಳ್ಳಿಗಾಡುಗಳಿಂದ ಬಂದು ಜನರು ಲಸಿಕೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿನ 10,04,218 ಲಸಿಕೆಗೆ ಅರ್ಹರ ಪೈಕಿ 6,75,553 ಮಂದಿಗೆ ಮೊದಲ ಸುತ್ತಿನ ಕೋವಿಡ್ ಲಸಿಕೆ ನೀಡಲಾಗಿದೆ. ಅಂದರೆ ಶೇ 60ರಷ್ಟು ಮಂದಿ ಈಗಾಗಲೇ ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ ಶೇ 32ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಕಾರವಾರದಲ್ಲಿ ಈಗಾಗಲೇ ಶೇ 90ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆ ಹೆಚ್ಚು ಲಭ್ಯವಾದರೆ ಇನ್ನು 10 ದಿನಗಳಲ್ಲಿ ಜಿಲ್ಲೆಯಲ್ಲಿ ಶೇ 80ರಷ್ಟು ಜನರಿಗೆ ಲಸಿಕಾಕರಣ ಪೂರ್ಣಗೊಳ್ಳಲಿದೆ" ಎಂದು ಜಿಲ್ಲಾಧಿಕಾರಿಗಳು ಎಂದು ವಿಶ್ವಾಸ ವ್ಯಕ್ತಪಡಿಸಿದರು. |
"ಕೋವಿಡ್ ಮೂರನೇ ಅಲೆ ಆತಂಕ ಇರುವ ಕಾರಣ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬರುವವರನ್ನು ಆಯಾ ಗ್ರಾಮ ಮಟ್ಟದ ಸಮಿತಿಗಳೇ ಗುರುತಿಸಿ, ಅವರ ಮಾಹಿತಿಗಳನ್ನು ಸಂಗ್ರಹಿಸಿ, ಅವರೆಲ್ಲರ ಗಂಟಲುದ್ರವಗಳನ್ನು ಪಡೆದು ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರವಾಸಿ ತಾಣಗಳು, ದೇವಾಲಯಗಳು ಸೇರಿದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಹೆಚ್ಚು ಸಂಪರ್ಕಕ್ಕೆ ಬರುವವರಿಗೆ ನಿರಂತರವಾಗಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಶೇ 1.7ರಷ್ಟು ಇದ್ದ ಕೋವಿಡ್ ಪಾಸಿಟಿವಿಟಿ ದರ ಈಗ ಶೇ 0.85ಗೆ ಇಳಿದಿದೆ. ಆದರೂ ಪರೀಕ್ಷೆಗಳನ್ನು ಕಡಿಮೆ ಮಾಡಿಲ್ಲ. ನಿರಂತರವಾಗಿ ತಪಾಸಣಾ ಕಾರ್ಯ ಪ್ರಗತಿಯಲ್ಲಿದೆ" ಎಂದು ಮಾಹಿತಿ ನೀಡಿದರು. |
ಪ್ರವಾಸಿ ಚಟುವಟಿಕೆಗಳು ಪುನರಾರಂಭ; "ಸ್ಕೂಬಾ ಡೈವಿಂಗ್ ಅನ್ನು ಸರಿಯಾಗಿ ನಡೆಸಿಕೊಂಡು ಹೋಗಬೇಕಿದೆ ಹಾಗೂ ಆ ಮೂಲಕ ಪ್ರವಾಸೋದ್ಯಮಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬರುವಂಥೆ ನೋಡಿಕೊಳ್ಳಬೇಕಿದೆ. ಹೀಗಾಗಿ ಬಿಡ್‌ನಲ್ಲಿ ಗೊಂದಲಗಳು ಉಂಟಾಗದಂತೆ ಬಿಡ್‌ನಲ್ಲಿ ಭಾಗವಹಿಸುವ ಪೂರ್ವ ಸಮಾಲೋಚನೆಯೊಂದನ್ನು ಮಾಡಿದ್ದೇವೆ. ಬಿಡ್‌ನಲ್ಲಿ ಭಾಗವಹಿಸಿದ ಬಳಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೋರ್ಟ್ಗೆ ಹೋಗುವಂಥದ್ದೆಲ್ಲ ಹಿಂದೆ ಆಗಿದೆ. ಹೀಗಾಗಿ ಈ ರೀತಿ ಆಗದಂತೆ ಈ ಪೂರ್ವ ಸಮಾಲೋಚನೆ ಮಾಡಿದ್ದೇವೆ. ಒಟ್ಟಾರೆಯಾಗಿ ಈ ಸೀಸನ್‌ನಲ್ಲಿ ಸ್ಕೂಬಾ ಡೈವಿಂಗ್ ಕಾರ್ಯಾರಂಭ ಮಾಡಲಿದೆ" ಎಂದರು. |
"ಉಪಪ್ರಾದೇಶಿಕ ವಿಜ್ಞಾನ ಕೇಂದ್ರವನ್ನೂ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಮತ್ಸ್ಯಾಯದ ಕಟ್ಟಡ ಶಿಥಿಲಗೊಂಡಿದ್ದ ಕಾರಣ ಅದನ್ನು ಒಡೆಯುತ್ತಿದ್ದೇವೆ. ವಿಜ್ಞಾನ ಕೇಂದ್ರಕ್ಕೆ ಅಲ್ಲಿನ ಅಕ್ವೇರಿಯಂಗಳನ್ನು ಸ್ಥಳಾಂತರಿಸಲಾಗಿದ್ದು, ಮತ್ಸ್ಯಾಲಯವಿದ್ದ ಜಾಗದಲ್ಲಿ ಏನು ಮಾಡಬೇಕೆಂಬುದನ್ನು ಮುಂದೆ ಯೋಚಿಸಲಾಗುವುದು. ಹೊನ್ನಾವರದ ಇಕೋ ಬೀಚ್ ಈ ಬಾರಿಯೂ ರಾಷ್ಟ್ರೀಯ ಮಟ್ಟದ ತೀರ್ಪುಗಾರ ಸಮಿತಿಯಲ್ಲಿ ಆಯ್ಕೆಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದ ಸಮಿತಿಯಲ್ಲಿ ಆಯ್ಕೆಯಾಗುವ ಭರವಸೆ ಕೂಡ ಇದೆ. ಎಲ್ಲಾ ಪ್ರವಾಸಿ ತಾಣಗಳಲ್ಲೂ ಸೆಪ್ಟೆಂಬರ್‌ನಿಂದ ಜೀವ ರಕ್ಷಕ ಸಿಬ್ಬಂದಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾರವಾರದಲ್ಲಿ ಪ್ರವಾಸಿಗರಿಗೆ ಎಲ್ಲಾ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ಯಾರಾ ಮೋಟಾರ್ ಚಟುವಟಿಕೆಯನ್ನು ಆರಂಭಿಸಲು ಕೂಡ ಪರಿಶೀಲಿಸಲಾಗುವುದು" ಎಂದು ಹೇಳಿದರು. |
"ನಿವೃತ್ತ ಯುದ್ಧವಿಮಾನ ಟುಪೆಲೋವ್ ಅನ್ನು ವಿಶಾಖಪಟ್ಟಣಂನಿಂದ ಕಾರವಾರಕ್ಕೆ ತರುವ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ನಮ್ಮಲ್ಲಿ ಅನುದಾನ ಹಾಗೂ ಸ್ಥಳವಿದೆ. ಕೋವಿಡ್ ಸೇರಿದಂತೆ ಕೆಲವು ತಾಂತ್ರಿಕ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ. ಶೀಘ್ರದಲ್ಲೇ ಅದು ಇಲ್ಲಿಗೆ ಬರಲಿದೆ" ಎಂದರು. |
karwar uttara kannada karavali ಕಾರವಾರ ಉತ್ತರ ಕನ್ನಡ ಕರಾವಳಿ |
Uttara Kannada deputy commissioner Mullai Muhilan media interaction. Shared views on development of the Uttara Kannada district. |
ಪ್ರಜಾ"ಪ್ರಭುತ್ವದಲ್ಲಿ" ಎಲ್ಲವೂ ಸಾಧ್ಯ – KannadaTimes |
Home/ಕನ್ನಡ/ಜೀವನ ಕಲೆ/ಅಸಾಮಾನ್ಯರು/ಪ್ರಜಾ"ಪ್ರಭುತ್ವದಲ್ಲಿ" ಎಲ್ಲವೂ ಸಾಧ್ಯ |
–ಚಿನ್ಮಯ.ಎಂ.ರಾವ್ ಹೊನಗೋಡು |
"ಆಗದು ಎಂದು…ಕೈಲಾಗದು ಎಂದು…ಕೈಕಟ್ಟಿಕುಳಿತರೆ..ಆಗದು ಕೆಲಸವು ಮುಂದೆ ಆಗದು ಕೆಲಸವು ಮುಂದೆ ", ಬಂಗಾರದ ಮನುಷ್ಯ ಚಿತ್ರದ ಈ ಹಾಡನ್ನು ಕೇಳದ ಕನ್ನಡಿಗ ಕಿವುಡನೇ ಸರಿ. ಇದೇನು ಚಿತ್ರಗೀತೆಯ ಈ ಸಾಲಿಗೂ ಮೇಲಿನ ಶೀರ್ಷಿಕೆ ಹೊತ್ತ ಈ ಲೇಖನಕ್ಕೂ ಎತ್ತಣ ಸಂಬಂಧವಯ್ಯ? ಎಂದು ನೀವು ಕೇಳಬಹುದು. ಆದರೆ ಸಂಬಂಧವಿದೆ. "ಅಯ್ಯೋ ನಮ್ ದೇಶದ್ ಕಥೆ ಇಷ್ಟೇ ಬಿಡಿ,ಇದು ಉದ್ಧಾರ ಆಗಲ್ಲ ಬಿಡಿ" ಎಂದು ಸದಾ ನಿರಾಶಾವಾದಿಗಳಾಗಿ ನರಳುವ ನೀರಸ ನರೋತ್ತಮರಿಗೂ ಇಲ್ಲಿ ಉತ್ತರವಿದೆ. ನಮ್ಮ ದೇಶದಲ್ಲಿ ಪ್ರೆಶ್ನೆಗಳಾಗಿಯೇ ಉಳಿಯುವ ಸಮಸ್ಯೆಗಳಿಗೆ ಉತ್ತರಕಂಡುಕೊಳ್ಳದಿರುವ ನಾವೇ ಸಮಸ್ಯೆ ಎಂದು ನಮಗನಿಸುತ್ತದೆ. |
ಅವರು ಮಾಡಿಲ್ಲ ಇವರು ಮಾಡಿಲ್ಲ ಎಂದು ಮನೆಯಲ್ಲೇ ಬೆಚ್ಚಗೆ ಕುಳಿತುಕೊಂಡು ರಾಜಕಾರಣಿಗಳನ್ನು ದೂಷಿಸುವ ನಾವು ಅವರು ಅದನ್ನು ಮಾಡುವಂತೆ ನಾವು ಮಾಡಿಲ್ಲ ಎಂಬ ನಮ್ಮ ಜಡತ್ವವನ್ನು ನಾವು ಸರಿಪಡಿಸಿಕೊಂಡಿಲ್ಲ. ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ನಾವು ಸರಿಯಾಗಿ ಕೆಲಸ ಮಾಡುವ ಜನಪ್ರತಿನಿಧಿಗಳನ್ನು ಆರಿಸಿಲ್ಲ. ಅಥವಾ ನಂಬಿಕೆ ಇಟ್ಟು ನಾವು ಆರಿಸಿದಾಗಲೂ ಅವರು ಹಾದಿ ತಪ್ಪಿದಾಗ ಹಾದಿಯಲ್ಲೇ ಅವರನ್ನು ನಿಲ್ಲಿಸಿಕೊಂಡು ಆ ಬಗ್ಗೆ ವಿಚಾರಿಸಿಲ್ಲ. ಹಾಗೆ ವಿಚಾರಿಸಬೇಕಾದ ನಾವು ನಮ್ಮ ಸುತ್ತಲಿನ ಸಮಸ್ಯೆಗಳನ್ನು ಅವರ ಬಳಿ ತೆಗೆದುಕೊಂಡು ಹೋಗಿಲ್ಲ. ತೆಗೆದುಕೊಂಡು ಹೋಗಲು ನಮಗೆ ಸಮಯವಿಲ್ಲ. ಸಮಯವಿದ್ದರೂ ನಾವು ಒಬ್ಬರೇ ಹೋಗುವುದಿಲ್ಲ. ಹೋದರೆ ಅದು ನಮ್ಮ ಘನತೆಗೆ ತಕ್ಕುದಲ್ಲ. ಅವರು ಹೋಗಬಹುದಲ್ಲ,ಇವರು ಹೋಗಬಹುದಲ್ಲ, ಪಕ್ಕದ ಮನೆ…ಆಚೆ ಮನೆ..ಈಚೆ ಮನೆ…ಛೇ..ಯಾರಾದರೂ ಹೋಗಬಹುದಲ್ಲ. ಒಗ್ಗೂಡಿ ಹೋಗಬಹುದಲ್ಲ. ಒಗ್ಗೂಡಲು ಆಗುವುದೇ ಇಲ್ಲ! ಅವರನ್ನು ಕಂಡರೆ ಇವರಿಗೆ, ಇವರನ್ನು ಕಂಡರೆ ಅವರಿಗಾಗುವುದಿಲ್ಲ. ಅಂತೂ ಕಡೆಗೂ ಒಂದು ಮನವಿಯನ್ನು ಸಲ್ಲಿಸಲೂ ನಮಗಾಗುವುದಿಲ್ಲ. ಮಗು ಅತ್ತರೆ ತಾನೆ ತಾಯಿ ಹಾಲನ್ನುಣಿಸುವುದು. ನಾವೆಲ್ಲಾ ನಮ್ಮ ನಮ್ಮ ಸ್ವಾರ್ಥಕ್ಕಾಗಿ ಅತ್ತು ಸಾಯುತ್ತೇವೆ ಬಿಟ್ಟರೆ ಸಮಾಜ,ದೇಶಕ್ಕಾಗಿ ಬದುಕುವುದೇ ಇಲ್ಲ. ನಮ್ಮ ಮನೆಗಷ್ಟೇ ಸೀಮಿತವಾಗುವ ನಾವು ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳುವುದೆಂದು? ಸಾಮಾಜಿಕ ಕಳಕಳಿ ಎಂದರೇನು? ತಿಳಿದು ಸ್ವಲ್ಪ ನಮ್ಮ ಸ್ವಾರ್ಥವನ್ನು ಕಳೆದುಕೊಳ್ಳೋಣ ಬನ್ನಿ. ನಮ್ಮ ಸುತ್ತಮುತ್ತಲಿನ ಅಭಿವೃದ್ಧಿಗಾಗಿ ನಾವೇ ಸರ್ಕಾರಕ್ಕೆ ಒತ್ತಡತಂದು ಹತ್ತಾರು ಬಾರಿ ಮತ್ತೆ ಮತ್ತೆ ಕಛೇರಿಯತ್ತ ಸುತ್ತಾಡಿದರೆ ಜನಪ್ರತಿನಿಧಿಗಳಿಗೆ ಕೆಲಸ ಮಾಡದೆ ನಿದ್ರಿಸುವ ಪ್ರಮೇಯವೇ ಬರುವುದಿಲ್ಲ ಎಂಬುದಕ್ಕೆ ಸಾಗರದ ಕ್ರೀಯಾಶೀಲವ್ಯಕ್ತಿಯೊಬ್ಬರ ಉದಾಹರಣೆಯೇ ಸಾಕು. |
ಯಾರೀ ವ್ಯಕ್ತಿ? ಈತ ಮಾಡಿದ್ದೇನು? |
ನಿವೃತ್ತ ಪ್ರೌಢಶಾಲಾ ಶಿಕ್ಷಕ,ಹವ್ಯಾಸಿ ಬರಹಗಾರ ಜಿ.ಟಿ ಶ್ರೀಧರ ಶರ್ಮ ಎಂಬ ಸಾಗರದ ವಿಜಯನಗರ ಬಡಾವಣೆಯ ಈ ವ್ಯಕ್ತಿಯ ಪಾದರಕ್ಷೆಗಳೇನಾದರು ಬೇಗ ಸವೆದು ಹೋಗಿದ್ದರೆ ಅದಕ್ಕೆ ಕಾರಣ ನಗರಸಭೆಗೆ ಇವರ ಅಲೆದಾಟ. ಅದು ಇವರ ಮನೆಯ ಸಮಸ್ಯೆಗಲ್ಲ. ಮನೆಯಾಚೆಗಿನ ಅಭಿವೃದ್ಧಿಗೆ. |
ತರಿಕೆರೆ ತಾಲೂಕು ಅಜ್ಜಂಪುರದಲ್ಲಿ ಮೂರು ದಶಕಗಳ ಕಾಲ ಆದರ್ಶ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ತಮ್ಮ ಮೂಲ ಊರು ಸಾಗರಕ್ಕೆ ಬಂದು ವಿಜಯನಗರದಲ್ಲಿ ಸ್ವಂತ ಮನೆ ಕಟ್ಟಿಸಿರುವ ಶರ್ಮ ಸುಮ್ಮನೆ ಕೂತು ಮಾತಿನ ಪಟಾಕಿ ಹಾರಿಸುವವರಲ್ಲ. ಬದಲಿಗೆ ಮೌನವಾಗಿಯೇ ಒಂದಷ್ಟು ಅರ್ಜಿಗಳನ್ನು ನಗರಸಭೆಗೆ ಹೊತ್ತೊಯ್ದು ಒಂದಷ್ಟು ಯೋಜನೆಗಳನ್ನು ತನ್ನ ಬಡಾವಣೆಗೆ ಎತ್ತಿಕೊಂಡು ಬಂದು ಯಶಸ್ವಿಯಾಗಿದ್ದಾರೆ. ಇನ್ನೂ ಒಂದಷ್ಟು ಕೆಲಸಗಳನ್ನು ತನ್ನ ಬಡಾವಣೆಗಾಗಿ ತಾವೇ ಓಡಾಡಿ ಮಾಡಿಸುತ್ತಿದ್ದಾರೆ. ಇವರೇನು ಜನಪ್ರತಿನಿಧಿಯಲ್ಲ. ಅಥವ ಯಾವ ಪುಡಾರಿಯ ಚೇಲಾ ಕೂಡ ಅಲ್ಲ. ಒಬ್ಬ ಸಾಮಾನ್ಯ ನಾಗರಿಕ. |
ಬಡಾವಣೆ-ಬದಲಾವಣೆ |
ಇವರ ಮನೆಯ ಮುಂಭಾಗದ ಬೀದಿಯಲ್ಲಿ ಅಂದರೆ ವಿಜಯನಗರದ ಮೂರನೇ ಅಡ್ಡರಸ್ತೆಯಲ್ಲಿ ವಿಪರೀತ ಹರಿಯುವ ನೀರು ೮೦ ಅಡಿ ಮುಖ್ಯರಸ್ತೆಯತ್ತ ಮುನ್ನುಗ್ಗಿ ಹರಿಯುತ್ತಿತ್ತು. ಅಡ್ಡರಸ್ತೆ ಮುಖ್ಯರಸ್ತೆಗೆ ಸೇರುವಲ್ಲಿ ಸಿಮೆಂಟ್ ಪೈಪ್ ಹಾಕುವಂತೆ ಶರ್ಮ ನಗರಸಭೆಗೆ ಮನವಿಪತ್ರಸಲ್ಲಿಸಿ ಸುಮ್ಮನೆ ಕೂರಲಿಲ್ಲ. ಬದಲಿಗೆ ನೂರಾರು ಬಾರಿ ಅಲೆದು ಒತ್ತಾಯಿಸಿ ಪೈಪ್ ಹಾಕಿಸಿದರು. ಈಗ ರಸ್ತೆಯತ್ತ ನೀರು ನುಗ್ಗದೆ ಚರಂಡಿಯಲ್ಲೇ ಹರಿಯುತ್ತಿದೆ. ಇದರಿಂದ ಮುಖ್ಯರಸ್ತೆ ಹಾಳಾಗುವುದೂ ತಪ್ಪಿದೆ. |
ಇದೇ ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಸ್ಥಳ ಮೀಸಲಾಗಿದ್ದರೂ ಅದು ಅನುಷ್ಠಾನಗೊಂಡಿಲ್ಲ. ೨೦೦೮ರಲ್ಲಿ ಶರ್ಮಾ ಉದ್ಯಾನವನ ನಿರ್ಮಾಣಕ್ಕೆ ಅರ್ಜಿಕೊಟ್ಟು ಮುತುವರ್ಜಿವಹಿಸಿದ್ದರಿಂದ ಈ ವರ್ಷ ಹಣ ಮಂಜೂರಾಗಿ ಕೆಲಸ ಆರಂಭವಾಗಿದೆ. |
ಸಾಗರ ಪಟ್ಟಣದಿಂದ ೪ ಕಿಲೋಮೀಟರ್ ದೂರದಲ್ಲಿರುವ ವಿಜಯನಗರಕ್ಕೆ ಸಾಗುವ ಪಾದಚಾರಿಗಳ ಮಾರ್ಗದಲ್ಲಿ ನಿರ್ಜನಪ್ರದೇಶವೊಂದಿದೆ. ಅಲ್ಲಿ ಈ ಹಿಂದೆ ಆಗಬಾರದ್ದು ಆಗಿಯೇ ಹೋಗಿ ಆ ದಾರಿಯಲ್ಲಿ ಆ ಭಾಗದ ಜನರು ಸಂಚರಿಸಲು ಹೆದರುತ್ತಿದ್ದರು. ಕಾಲ ಎಲ್ಲವನ್ನೂ ಮರೆಸುತ್ತದೆ,ಕ್ಷಮಿಸುತ್ತದೆ ಎನ್ನುವುದಕ್ಕೆ ಸಾಗರದ ಈ ದಾರಿಯೂ ಸೇರಿದೆ. ಇಂತಹ ಅತಿಸೂಕ್ಷ್ಮ ಪ್ರದೇಶದಲ್ಲಿ ಈಗ ಬೀದಿದೀಪ ಇದ್ದೂ ಇಲ್ಲದಂತಿದೆ. ಅತ್ಯಂತ ನಾಜೂಕಾದ ಅಷ್ಟೇ ಅಪಾಯಕಾರಿಯಾದ ಈ ಜಾಗದ ಗಂಭೀರತೆಯನ್ನರಿತು ಶರ್ಮಾ ಆಗಾಗ ಹಾಳಾಗದ ಬೀದಿದೀಪಗಳನ್ನು ವ್ಯವಸ್ಥಿತವಾಗಿ ಹಾಕಬೇಕೆಂದು ನಗರಸಭೆಯಲ್ಲಿ ಒತ್ತಾಯಿಸಿ ಹಾಕಿಸಿದ್ದಾರೆ. |
ಹಾಗೆಯೇ ಸಾಗರ ನಗರದಲ್ಲಿ ನಗರಸಾರಿಗೆಯ ಅಗತ್ಯವಿದೆಯೆಂದು ನಗರಸಭೆಯಿಂದ ಹಿಡಿದು ಪ್ರಧಾನಮಂತ್ರಿ,ರಾಷ್ಟ್ರಾಧ್ಯಕ್ಷರವರೆಗೂ ಎಲ್ಲಾ ಹಂತದವರೆಗೂ ಮನವಿಯನ್ನು ಸಲ್ಲಿಸಿದ್ದಾರೆ. ಕೆಲವರಿಂದ ಪರಿಶೀಲಿಸಿ ಈಡೇರಿಸುವ ಭರವಸೆಯ ಉತ್ತರ ಕೂಡ ಬಂದಿದೆ. |
"ಅರ್ಜಿಕೊಟ್ಟ ಮಾತ್ರಕ್ಕೆ ಇಂದು ಕೆಲಸ ಆಗುವುದಿಲ್ಲ. ಬಯ್ಯೋದ್ರಿಂದನೂ ಆಗೋಲ್ಲ. ಸ್ವತಃ ಕಛೇರಿಗೆ ಅಲೆದಲೆದಲೆದಲೆದು ಅಧಿಕಾರಿಗಳಿಗೆ ಸಮಸ್ಯೆಯ ಮನವರಿಕೆ ಮಾಡಿ ಅನುಷ್ಠಾನಕ್ಕೆ ಒತ್ತಡ ತಂದರೆ ಮಾತ್ರ ಕೆಲಸ ಆಗುತ್ತದೆ ಎಂಬುದು ಶರ್ಮಾ ಅವರ ಸ್ವಾನುಭವ. |
ಹಲವಾರು ಮನವಿಗಳನ್ನು ಸಲ್ಲಿಸುತ್ತಾ ಹಲವಾರು ಬಾರಿ ನಗರಸಭೆಗೆ ಅಲೆಯುತ್ತಾ ಹಲವಾರು ಕೆಲಸಗಳನ್ನು ಸಮಾಜಕ್ಕಾಗಿ ಹೀಗೆ ಸದಾ ಸದ್ದಿಲ್ಲದೆ ಮಾಡುತ್ತಲೇ ಇರುತ್ತಾರೆ ಶ್ರೀಧರ ಶರ್ಮ. ನಿವೃತ್ತರಾಗಿದ್ದಾರೆ….ಅವರಿಗೇನೂ ಕೆಲಸವಿಲ್ಲ ಎಂದು ಭಾವಿಸಬೇಡಿ,ಸ್ವಂತ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಬಿಡುವುಮಾಡಿಕೊಂಡು ಇದನ್ನೆಲ್ಲಾ ಮಾಡುತ್ತಾರೆ. ಈ ರೀತಿ ಸದ್ದಿಲ್ಲದೆ ಸಮರ್ಪಣೆಯಾಗುವ ಸಮಾಜಸೇವೆ ನಿಜಕ್ಕೂ ಅನುಸರಣೀಯ. ಹೀಗೆ ಮನೆಮನೆಗಳಲ್ಲಿ ಇಂತವರೊಬ್ಬರು ತಯಾರಾಗಿ ಸಾಮಾಜಿಕ ಸಮಸ್ಯೆಗಳನ್ನು ಅಧಿಕಾರಿಗಳ ಆಳಕ್ಕಿಳಿಸಿದರೆ ಅವರಿಗೆ ಆಕಳಿಸಲಿಕ್ಕೂ ಪುರುಸೊತ್ತಾಗುವುದಿಲ್ಲ ಅಲ್ಲವೇ? ಪ್ರಜೆಗಳೇ ಪ್ರಭುತ್ವ ಸಾಧಿಸಿದರೆ ಮಾತ್ರ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ. |
ಕಾಳಗಿ: ಇಲ್ಲಿ ನೀರಿಗಿಲ್ಲ ಕಿಮ್ಮತ್ತು! | Prajavani |
ಕಾಳಗಿ: ಇಲ್ಲಿ ನೀರಿಗಿಲ್ಲ ಕಿಮ್ಮತ್ತು! |
Published: 17 ಜೂನ್ 2011, 15:35 IST |
ಕಾಳಗಿ: ಹನಿ ನೀರು ಸಕಾಲಕ್ಕೆ ಸಿಗದ ಇಂದಿನ ಪರಿಸ್ಥಿತಿಯಲ್ಲಿ ಅದೆಷ್ಟೋ ಜನ ಜಾನುವಾರುಗಳು ಬಾಯಾರಿಕೆಯಿಂದ ನರಳುತ್ತಿವೆ. ನಗರ ಪಟ್ಟಣಗಳಲ್ಲಿ ಎಷ್ಟು ದುಡ್ಡು ಕೊಟ್ಟರೂ ಕುಡಿಯಲು ಶುದ್ಧ ನೀರು ಕೈಗೆ ಬರದೆ ಪರಿತಪಿಸುವ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. |
ಹಲವು ಹಳ್ಳಿಗಳು ನೀರಿನ ಬವಣೆಯಲ್ಲಿ ಬಳಲುತ್ತಿವೆ. ಹೀಗೆ ಏನೆಲ್ಲ ತೊಂದರೆ ಉಂಟಾಗಿದ್ದನ್ನು ಕಣ್ಣಾರೆ ಕಂಡು, ಕಿವಿಗಳಿಂದ ಕೇಳಿದರೂ ಕಾಳಗಿಯ ಜನತೆ ಮಾತ್ರ ಯಾವುದಕ್ಕೂ ಜುಮ್ ಎನ್ನುತ್ತಿಲ್ಲ. ಕಾರಣ ಇಷ್ಟೇ, ಇಲ್ಲಿ ಜಲ ಸಂಪನ್ಮೂಲದ ಮಟ್ಟ ವಿಪರೀತ ಇದೆ ಎಂಬ ಭ್ರಮೆಯಿಂದ. |
ಹೀಗಾಗಿ ಹಾಲಿಗಿಂತ ನೀರಿನ ದರ ದುಬಾರಿ ಇದ್ದರೂ ಹಾಲಿಗೆ ಕೊಡುವಷ್ಟು ಮಾನ್ಯತೆ ನೀರಿಗೆ ದೊರಕದ ಇಲ್ಲಿ ಎಲ್ಲಿ ನೋಡಿದರಲ್ಲಿ ನೀರೇ ನೀರು ಕಾಣುವುದು ರೂಢಿ ಯಾಗಿ ಬಿಟ್ಟಿದೆ. ಇದಕ್ಕೆಲ್ಲ ಗ್ರಾಮದ ಆರಾಧ್ಯದೈವ ನೀಲಕಂಠ ಕಾಳೇಶ್ವರ ಕೃಪಾಶೀರ್ವಾದ ಎಂಬುದು ಹೊರಗಿನ ಜನತೆಗೆ ಗೊತ್ತಾಗಿದ್ದರೂ ಸ್ಥಳೀಯರಿಗೆ ಮಾತ್ರ ಅರಿವಿಗೆ ಬಾರದ ಅವ್ಯವಸ್ಥೆ ನಿರ್ಮಾಣವಾಗಿ ಊರೆಲ್ಲ ಕೆಸರು ಮುಸುರಿಯಿಂದ ಕಾಣತೊಡಗಿದೆ. |
ದಿನ ಬೆಳಗಾದರೆ ನೀರಿನ ನಳಗಳು ಭರ್ ಎನ್ನುತ್ತವೆ. ಕೆಲ ಸಮಯ ಕಳೆಯುತ್ತಿದ್ದಂತೆ ನೀರಿನ ಪೂರೈಕೆ ಪೂರ್ಣಗೊಂಡು ರಸ್ತೆಗಳ ಮೇಲೆ ಹರಿಯುವ ನೀರಿಗೆ ಲಗಾಮು ಇರುವುದೇ ಇಲ್ಲ. ಸಣ್ಣಪುಟ್ಟ ಕೆಲಸಗಳಿಗೂ ಅಧಿಕ ನೀರಿನ ಪೋಲು ಮಾಮೂಲಾಗಿ ಬಿಟ್ಟಿದೆ. |
ದೊಡ್ಡದಾದ ಹಳ್ಳವಿದ್ದರೂ ಬಹುತೇಕ ಜನ ಮಹಿಳೆಯರು ಬಟ್ಟೆಬರೆ ತೊಳೆಯುವ ಕೆಲಸ ಮನೆಯಲ್ಲೆ ಮಾಡುವುದು ಸಾಮಾನ್ಯವಾಗಿದೆ. ಇನ್ನೂ ಅನೇಕ ಕೆಲಸಗಳಿಗೆ ಮಿತಿಮೀರಿದ ನೀರು ಹಾಳಾಗತೊಡಗಿ ರಸ್ತೆ ತುಂಬೆಲ್ಲ ಹರಿದಾಡುವುದು ಓಡಾಡುವ ಇದೇ ಜನಾಂಗಕ್ಕೆ ತೊಂದರೆ ಉಂಟು ಮಾಡುತ್ತಿದೆ. |
ವಿದ್ಯುತ್ ಅಥವಾ ನೀರು ಸರಬರಾಜಿನ ಮೋಟರ್ ಕೈಕೊಟ್ಟಾಗ ತೆರೆದ ಅಥವಾ ಕೊಳವೆ ಬಾವಿಯತ್ತ ಮುಗಿಬಿದ್ದು ಹನಿ ನೀರಿಗೂ ಒದ್ದಾಡುವ ಸ್ಥಿತಿ ಪ್ರತಿಯೊಬ್ಬರಿಗೂ ಗೊತ್ತಿರದೆ ಇಲ್ಲಂತಿಲ್ಲ. ಅಷ್ಟಾದರೂ ಅನಾವಶ್ಯಕ ನೀರು ರಸ್ತೆ ಮೇಲೆ ಹರಿಬಿಡುವ ದುಃಸ್ಥಿತಿ ಬಿಡದಿರುವುದು ನೋಡುಗರಿಗೆ ಆಶ್ಚರ್ಯ ಎನಿಸುತ್ತಿದೆ. ಕಾರಣ ಗ್ರಾಮಾಡಳಿತ ಮತ್ತು ನೀರು ಸಂರಕ್ಷಣೆಯ ಮೇಲಧಿಕಾರಿಗಳು ಈಕಡೆ ಶೀಘ್ರದಲ್ಲಿ ಗಮನ ಹರಿಸಿ ನೀರಿನ ಬಗ್ಗೆ ಅರಿವು ಮೂಡಿಸಿ ಬೇಕಾಬಿಟ್ಟಿ ಹರಿಯುವ ನೀರು ಸಂರಕ್ಷಿಸಬೇಕಾಗಿದೆ. |
ಗೃಹ ಸಾಲ ಬಡ್ಡಿ ಸಬ್ಸಿಡಿ: ಕೇಂದ್ರದಿಂದ ಶುಭ ಸುದ್ದಿ – EBM News Kannada |
ಹೊಸದಿಲ್ಲಿ : ಮಧ್ಯಮ ವರ್ಗದ ಜನತೆಗೆ ಸ್ವಂತ ಸೂರು ಹೊಂದಲು ಅನುಕೂಲವಾಗುವಂತೆ ಕೇಂದ್ರ ಸರಕಾರ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹತೆ ಪಡೆಯುವ ಫ್ಲ್ಯಾಟ್‌ಗಳ ಕಾರ್ಪೆಟ್ ಏರಿಯಾದ ಮಿತಿಯನ್ನು ಶೇ.33ರಷ್ಟು ಹೆಚ್ಚಿಸಿದೆ. |
ಮಧ್ಯಮ-ಆದಾಯ ವರ್ಗದ (ಎಂಐಜಿ- ಐ ) ಗುಂಪಿನ ಜನತೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್‌ಎಸ್) ಯೋಜನೆಯನ್ವಯ ಬಡ್ಡಿ ಸಬ್ಸಿಡಿ ಪಡೆಯಲು ಅರ್ಹ ಫ್ಲ್ಯಾಟ್‌ಗಳ ಕಾರ್ಪೆಟ್ ಏರಿಯಾದ ಮಿತಿಯನ್ನು 120 ಚದರ ಮೀಟರ್‌ನಿಂದ 160 ಚದರ ಮೀಟರ್ ಅಥವಾ 1,722 ಚದರ ಅಡಿಗೆ ವಿಸ್ತರಿಸಲಾಗಿದೆ. ಹಾಗೂ ಎಂಐಜಿ- ಐಐ ವರ್ಗದಲ್ಲಿ 150 ಚದರ ಮೀಟರ್‌ನಿಂದ 200 ಚದರ ಮೀಟರ್ ಅಥವಾ 2,153 ಚದರ ಅಡಿಗೆ ವಿಸ್ತರಿಸಲಾಗಿದೆ. |
ಈ ಹಿಂದೆ (ಎಂಐಜಿ- ಐ ) ಕ್ಕೆ 120 ಚದರ ಮೀಟರ್ ಅಥವಾ 1,291 ಚದರ ಅಡಿ ಮತ್ತು ಎಂಐಜಿ ಐಐ ವರ್ಗದಲ್ಲಿ 150 ಚದರ ಮೀಟರ್ ಅಥವಾ 1,614 ಚದರ ಅಡಿಗೆ ನಿಗದಿಯಾಗಿತ್ತು. ಇದೀಗ ಮಿತಿ ವಿಸ್ತರಣೆಯ ಪರಿಣಾಮ ನಿರ್ಮಾಣ ವಲಯಕ್ಕೆ ಭಾರಿ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಆರ್ಥಿಕ ಚಟುವಟಿಕೆ ವೃದ್ಧಿಸುವ ಸಾಧ್ಯತೆ ಇದೆ ಎಂದು ರಿಯಾಲ್ಟಿ ವಲಯದ ಪ್ರಾತಿನಿಧಿಕ ಸಂಸ್ಥೆ ಕ್ರೆಡಾಯ್‌ನ ಅಧ್ಯಕ್ಷ ಜಕ್ಸೆ ಶಾ ಹೇಳಿದ್ದಾರೆ. |
ಮಧ್ಯಮ ವರ್ಗದ ಜನತೆಗೆ ಪ್ರಯೋಜನ: |
ವಾರ್ಷಿಕ 6ರಿಂದ 12 ಲಕ್ಷ ರೂ. ಆದಾಯ ಇರುವ ಕುಟುಂಬಗಳು ಎಂಐಜಿ- ಐ ಹಾಗೂ 12ರಿಂದ 18 ಲಕ್ಷ ರೂ. ಆದಾಯ ಇರುವ ಕುಟುಂಬಗಳು ಎಂಐಜಿ-ಐಐ ವರ್ಗದ ವ್ಯಾಪ್ತಿಗೆ ಬರುತ್ತವೆ. ಎಂಐಜಿ- ಐ ರಲ್ಲಿ 9 ಲಕ್ಷ ರೂ. ತನಕದ ಗೃಹ ಸಾಲಕ್ಕೆ ಶೇ.4ರಷ್ಟು ಬಡ್ಡಿ ಸಬ್ಸಿಡಿ ಸಿಗುತ್ತದೆ. ಈ ಸಬ್ಸಿಡಿ ಪಡೆಯಲು ಮುಂಗಡವಾಗಿ ಪಾವತಿಸಬೇಕಾಗುವ ಹಣ 2,35,068 ರೂ.ಗಳಾಗಿದೆ. ಎಂಐಜಿ-ಐಐ ವರ್ಗಕ್ಕೆ 12 ಲಕ್ಷ ರೂ. ತನಕದ ಸಾಲಕ್ಕೆ ಬಡ್ಡಿ ಸಬ್ಸಿಡಿ ಶೇ.3 ಆಗಿದೆ. ಈ ಸಬ್ಸಿಡಿ ಪಡೆಯಲು ಮುಂಗಡವಾಗಿ ಪಾವತಿಸಬೇಕಾದ ಹಣ 2,30,156 ರೂ.ಗಳಾಗಿದೆ. |
"ಆರ್‌ಬಿಐ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ (ಪಿಎಂಎವೈ) ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಗೃಹ ಸಾಲ ವಿತರಣೆಗೆ ಗೃಹ ಸಾಲದ ಮಿತಿಯನ್ನು ಮೆಟ್ರೊ ನಗರಗಳಲ್ಲಿ 35 ಲಕ್ಷ ರೂ.ಗೆ ವೃದ್ಧಿಸಿದೆ. ಇದು ಸ್ವಾಗತಾರ್ಹ ನಿರ್ಧಾರವಾಗಿದ್ದು, ಇದಕ್ಕೆ ಪೂರಕವಾಗಿ ಬಡ್ಡಿ ಸಬ್ಸಿಡಿಗೆ ಅರ್ಹತೆಯಲ್ಲಿ ಫ್ಲ್ಯಾಟ್‌ನ ಕಾರ್ಪೆಟ್ ಏರಿಯಾದ ಮಿತಿಯನ್ನೂ ವಿಸ್ತರಿಸಲಾಗಿದೆ. ರಿಯಾಲ್ಟಿ ಚಟುವಟಿಕೆಗಳ ಪ್ರಗತಿಗೆ ಇದು ನೆರವಾಗುವ ನಿರೀಕ್ಷೆ ಇದೆ ಎಂದು ರಿಯಲ್ ಎಸ್ಟೇಟ್ ಉದ್ಯಮಿ ರಾಕೇಶ್ ರೆಡ್ಡಿ ಹೇಳಿದ್ದಾರೆ. ಪರಿಷ್ಕೃತ ನಿಯಮಗಳು 2017ರ ಜನವರಿ 1ರಿಂದ ಅನ್ವಯವಾಗುತ್ತವೆ. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್‌ನಲ್ಲಿ ಪ್ರತಿಯೊಬ್ಬ ಫಲಾನುಭವಿ 2.35 ಲಕ್ಷ ರೂ. ತನಕ ಸಬ್ಸಿಡಿ ಪಡೆಯಲು ಸಾಧ್ಯವಿದೆ. |
ರಾಜ್ಯಮಟ್ಟದ ಉತ್ಸವ : ಸಿಎಂ ಭರವಸೆ - kittur |
HomeDistrictರಾಜ್ಯಮಟ್ಟದ ಉತ್ಸವ : ಸಿಎಂ ಭರವಸೆ - kittur |
ರಾಜ್ಯಮಟ್ಟದ ಉತ್ಸವ : ಸಿಎಂ ಭರವಸೆ |
ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು |
ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕøತಿ ಇಲಾಯ ಆಶ್ರಯದಲ್ಲಿ ಇಲ್ಲಿಯ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿ, ಕಿತ್ತೂರು ವೀರ ಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆದೇಶವನ್ನು ನೀಡಿದರು. |
ಕಿತ್ತೂರು ಉತ್ಸವದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ ಮುಖ್ಯಮಂತ್ರಿಗಳು, ಇತ್ತೀಚಿನ ದಿನಗಳಲ್ಲಿ ವೇದಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ ಎಂದರು. |
ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಅವರದು ತಾಯಿ-ಮಗನ ಸಂಬಂಧ. ಬ್ರಿಟೀಷರ ಕುತಂತ್ರಕ್ಕೆ ರಾಯಣ್ಣ ಸೆರೆಸಿಕ್ಕಾಗ ಚೆನ್ನಮ್ಮ ಅಧೀರಳಾಗುತ್ತಾಳೆ. |
ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ಗೆ ಒಟ್ಟಾರೆ 200 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ. ಮುಂದಿನ ಆಯವ್ಯಯದಲ್ಲಿ ಪ್ರಾಧಿಕಾರಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. |
ಮೀಸಲಾತಿ- ಕಾನೂನು ಪರಿಶೀಲಿಸಿ ಸೂಕ್ತ ಕ್ರಮ: |
ಮೀಸಲಾತಿ ಒದಗಿಸಲು ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರಕಾರ ಪರಿಶೀಲಿಸುತ್ತಿದೆ. |
ಸಂಗೊಳ್ಳಿ ಸೈನಿಕ ಶಾಲೆಯು ಕೂಡ ಮುಕ್ತಾಯ ಹಂತದಲ್ಲಿದೆ. ರಕ್ಷಣಾ ಇಲಾಖೆಯ ಜತೆ ಚರ್ಚಿಸಿ ಶಾಲೆಯನ್ನು ರಾಜ್ಯ ಸರಕಾರದ ವ್ಯಾಪ್ತಿಗೆ ಸೇರಿಸಿ ಉನ್ನತಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. |
ಸತ್ಯ, ನ್ಯಾಯ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ. ದೇಶವನ್ನು ಆಂತರಿಕ ಮತ್ತು ಬಾಹ್ಯಶಕ್ತಿಗಳಿಂದ ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಧಾನಮಂತ್ರಿಗಳು ದೇಶವನ್ನು ಸಶಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. |
ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ಸಚಿವರಾದ ಪ್ರಹ್ಲಾದ ಜೋಶಿ ಮಾತನಾಡಿ, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚೆನ್ನಮ್ಮಳಿಗೆ ಸಿಗಬೇಕಾದ ಮಾನ್ಯತೆ ಇತಿಹಾಸದಲ್ಲಿ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. |
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, ದೇಶದ ಸ್ವಾತಂತ್ರ್ಯದ ಕಹಳೆ ಊದಿದ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸಬೇಕು; ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು; ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳನ್ನು ಕಿತ್ತೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. |
ಕಿತ್ತೂರು ಉತ್ಸವವನ್ನು ರಾಜ್ಯ ಉತ್ಸವವೆಂದು ಘೋಷಿಸಿ ಪ್ರತಿವರ್ಷ ಎರಡು ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಒತ್ತಾಯಿಸಿದರು. |
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಅನುದಾನ ಒದಗಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಒಟ್ಟಾರೆ 200 ಕೋಟಿ ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದ್ದರಿಂದ ಮುಂದಿನ ಬಜೆಟ್ ನಲ್ಲಿ 150 ಕೋಟಿ ಅನುದಾನ ಕಲ್ಪಿಸಬೇಕು ಎಂದು ಶಾಸಕ ದೊಡ್ಡಗೌಡರ ಒತ್ತಾಯಿಸಿದರು. |
ಹರಿಹರದ ಹರಕ್ಷೇತ್ರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. |
ಇದೇ ಸಂದರ್ಭದಲ್ಲಿ ಡಾ.ಸಂತೋಷ ಹಾನಗಲ್ ಅವರು ರಚಿಸಿದ "ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮ" ಕೃತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದರು. |
ಕಿತ್ತೂರು ಪಟ್ಟಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಸಿಎಂ ಚಾಲನೆ ನೀಡಿದರು. |
ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಉಮೇಶ್ ಕತ್ತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಸಚಿವ ಮುರುಗೇಶ್ ನಿರಾಣಿ, ವಿಧಾನಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬೆಳಗಾವಿ ಸಂಸದರಾದ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕರ್ನಾಟ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ಕಾಡಾ ಅಧ್ಯಕ್ಷರಾದ ಡಾ.ವಿಶ್ವನಾಥ್ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. |
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸ್ವಾಗತಿಸಿದರು. ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು. |
Subsets and Splits
No community queries yet
The top public SQL queries from the community will appear here once available.