text
stringlengths 0
61.5k
|
---|
ಇ ವಿಟಮಿನ್‌ನ ಉತ್ಕರ್ಷಣ ನಿರೋಧಕ ಶಕ್ತಿಯು ಕಣ್ಣುಗಳ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ,ಜೊತೆಗೆ ಶರೀರದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹೀಗಾಗಿ ಇ ವಿಟಾಮಿನ್‌ಗಳನ್ನು ಒಳಗೊಂಡಿರುವ ಆಹಾರಗಳ ಸೇವನೆಯು ಕಣ್ಣಿನ ದೃಷ್ಟಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ,ಇದೇ ವೇಳೆ ವಿಟಾಮಿನ್ ಶುಷ್ಕತೆಯನ್ನೂ ಅದು ತಡೆಯುತ್ತದೆ. |
ಸೂರ್ಯಕಾಂತಿ ಬೀಜಗಳು,ಪೀನಟ್ ಬಟರ್ ಅಥವಾ ಕಡಲೆಕಾಯಿ ಬೆಣ್ಣೆ,ಅಕ್ರೋಡ್,ಗೋದಿ,ಬಾದಾಮ್,ಸಿಹಿಗೆಣಸು ಇವು ವಿಟಮಿನ್ ಇ ಅನ್ನು ಒಳಗೊಂಡಿರುವ ಕೆಲವು ಆಹಾರಗಳಾಗಿವೆ. |
ಈ ಬಾರಿ 50 ಕೋಟಿ ರೂ.ಬಜೆಟ್ | Udayavani – ಉದಯವಾಣಿ |
Friday, 27 May 2022 | UPDATED: 09:56 AM IST |
Team Udayavani, Jan 21, 2022, 4:30 AM IST |
ಪುತ್ತೂರು: ಈ ಬಾರಿ 50 ಕೋಟಿ ರೂ. ನ ಬಜೆಟ್ ಮಂಡನೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹೇಳಿದರು. |
ನಗರಸಭೆ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿಯಾಗಿ ನಡೆದ ಸಾರ್ವಜನಿಕ ಮತ್ತು ಸಂಘ ಸಂಸ್ಥೆಗಳ ಹಾಗೂ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ವ್ಯಕ್ತವಾ ಗಿರುವ ಅಭಿಪ್ರಾಯವನ್ನು ಬಜೆಟ್‌ನಲ್ಲಿ ಸೇರಿಸುವ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ. |
ಬೊಳುವಾರಿನಲ್ಲಿ ಗಾರ್ಡನ್ : |
ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಜಾನ್ ಕುಟ್ಟಿನ್ಹೊ ಮಾತನಾಡಿ, ಬೊಳು ವಾರು ಬಳಿ ಗಾರ್ಡನ್ ಮಾಡು ವಂತೆ ಪ್ರಸ್ತಾವಿಸಿದರು. ಮೂರು ವರ್ಷ ಕ್ಕೊಮ್ಮೆ ಉದ್ದಿಮೆ ಲೈಸನ್ಸ್ ನವೀಕರಣ ಮಾಡುವಂತೆ ತಿಳಿಸಿದರು. |
ಹೊಟೇಲ್ ಉದ್ಯಮಿ ಗೋಪಾಲಕೃಷ್ಣ ಹೇರಳೆ ಮಾತನಾಡಿ, ಪುತ್ತೂರು ರೈಲ್ವೇ ರಸ್ತೆ ಅಭಿವೃದ್ಧಿಯಾಗಬೇಕು. ಬಿರಮಲೆಗೆ ಮತ್ತು ಬಾಲವನಕ್ಕೆ ರೋಫ್ ವೇ ಮಾಡುವಂತೆ ಸಲಹೆ ನೀಡಿದರು. |
ಸದಸ್ಯ ರಿಯಾಜ್ ನೆಹರೂನಗರ ವಿವೇಕಾನಂದ ಕಾಲೇಜು ರಸ್ತೆಯ ರೈಲ್ವೇ ಸೇತುವೆ ಅಗಲ ಆಗಬೇಕೆಂದು ಸಲಹೆ ನೀಡಿ ದರು. ನಿವೃತ್ತ ಸಿಒ ಸುಂದರ ನಾಯ್ಕ್ ಮಾತನಾಡಿ, ಟ್ರಾಪಿಕ್ ಸಮಸ್ಯೆ ನಿವಾರಿಸಿ ಎಂದರು. ಬೊಳುವಾರಿನ ದಯಾನಂದ ಮಾತನಾಡಿ, ನಗರಸಭೆಯಲ್ಲಿ ಒಳಚರಂಡಿ ಯೋಜನೆ ಮಾಡುವುದು ಉತ್ತಮ ಎಂದರು. ರೋಟರಿ ಕ್ಲಬ್‌ನ ಉಮೇಶ್ ನಾಯಕ್ ಮಾತನಾಡಿ ಒಳ ರಸ್ತೆಗೂ ಫಉಟ್ ಆಪತ್ ಬರಲಿ ಎಂದರು. |
ಟ್ರಾಪಿಕ್ ಸಮಸ್ಯೆ : |
ವರ್ತಕರ ಸಂಘದ ಉಲ್ಲಾಸ್ ಪೈ ಮಾತ ನಾಡಿ, ಬಸ್‌ನಿಲ್ದಾಣದ ಬಳಿ ಫುಟ್‌ಪಾತ್ ಮಾಡಬೇಕು. ಟ್ರಾಫಿಕ್ ಸಮಸ್ಯೆ ಬಗೆ ಹರಿಸುವಂತೆ ಪ್ರಸ್ತಾಪಿಸಿದರು. ಯಾವು ದಾದರೂ ಜಾಗ ಸ್ವಾಧೀನ ಮಾಡಿ ವಾಹನ ಪಾರ್ಕಿಗ್‌ಗೆ ವ್ಯವಸ್ಥೆ ಮಾಡುವಂತೆ ನ್ಯಾಯ ವಾದಿ ನಾಗರಾಜ್ ಸಲಹೆ ನೀಡಿದರು. |
ನಗರಸಭೆ ಪೌರಾಯಕ್ತ ಮಧು ಎಸ್. ಮನೋಹರ ಮಾತನಾಡಿ, ನಗರಸಭೆಯಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ, ಜಾಹಿರಾತು ಶುಲ್ಕ, ಉದ್ದಿಮೆ ಪರವಾನಿಗೆ, ಬಾಡಿಗೆ, ಪಾರ್ಕಿಂಗ್ ಶುಲ್ಕದಲ್ಲ ಸೇರಿದಂತೆ ಬರುವ ಆದಾಯವನ್ನು ನೋಡಿಕೊಂಡು ಖರ್ಚುಗಳಲ್ಲ ರಸ್ತೆ, ಚರಂಡಿ ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ, ನೀರಿನ ನಿರ್ವಹಣೆ, ತ್ಯಾಜ್ಯ ನೀರು ಸಂಗ್ರಹ ಮಾಡುವ, ವಿದ್ಯುತ್ ಅಳವಡಿಕೆ ನಿರ್ವಹಣೆ ಮಾಡಲಾಗುತ್ತದೆ ಎಂದರು. |
ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಯೂಸೂಫ್, ಶಿವರಾಮ ಸಫಲ್ಯ, ಶಶಿಕಲಾ ಸಿ.ಎಸ್., ಪರಿಸರ ಸಂಪನ್ಮೂಲ ವ್ಯಕ್ತಿ ಡಾ| ರಾಜೇಶ್ ಬೆಜ್ಜಂಗಳ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅರವಿಂದ ಭಗವಾನ್, ನಗರಸಭೆ ಅಭಿಯಂತ ಶ್ರೀಧರ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ರವೀಂದ್ರ, ಎಸ್.ಆರ್. ದೇವಾಡಿಗ ಉಪಸ್ಥಿತರಿದ್ದರು. |
ಸಲಹೆ ಸ್ವೀಕರಿಸಲಾಗುವುದು : |
ಜೀವಂಧರ್‌ಜೈನ್ ಉತ್ತರಿಸಿ, ರೈಲ್ವೇ ಇಲಾಖೆಯೊಂದಿಗೆ ಸಂಸದರ ಜತೆ ಮಾತನಾಡಿ ರೈಲ್ವೇಯಿಂದ ನಿರಾಪೇಕ್ಷಣ ಪತ್ರ ಕೊಡಿಸುವ ಕುರಿತು ಚರ್ಚಿಸಲಾಗಿದೆ. ಆಸ್ತಿ ತೆರಿಗೆ, ನೀರಿನ ಬಿಲ್ ಅನ್ನು ಕೂಡಾ ಆನ್ ಲೈನ್ ಮೂಲಕ ಮಾಡುವ ವ್ಯವಸ್ಥೆಗೆ ಹಂತ ಹಂತವಾಗಿ ಹೋಗುತ್ತಿದ್ದೇವೆ. ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ನಿಗದಿತ ಸ್ಥಳದಲ್ಲಿ ಝೀಬ್ರಾಕ್ರಾಸ್ ಅಳವಡಿಸಲಾಗಿದೆ. ಇದರ ಜತೆಗೆ ಸ್ಥಳ ತನಿಖೆ ಬಾಕಿ ಇದೆ. ಪುತ್ತೂರು ಸಿಟಿ ಆಸ್ಪತ್ರೆಗೆ ಬರುವ ಕಾಂಕ್ರೀಟ್ ರಸ್ತೆ ವಿಸ್ತಾರ ಮಾಡುವ ಕುರಿತು ಪರಿಸರದ ಮನೆಯವರೊಂದಿಗೆೆ ಚರ್ಚಿಸಲಾಗಿದೆ. ಬಸ್ ಬೇ ಸಂಬಂಧಿಸಿ ನಗರ ಪ್ರದೇಶದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ಮಾಡಲಾಗಿದೆ. ಸಾಮೆತ್ತಡ್ಕದಲ್ಲಿ ದೊಡ್ಡ ಪಾರ್ಕ್ ನಿರ್ಮಾಣ ಆಗಿದೆ. ಚಿಣ್ಣರ ಪಾರ್ಕ್, ನೆಲ್ಲಿಕಟ್ಟೆಯಲ್ಲಿ ಪಾರ್ಕ್ ಆಗಲಿದೆ. ಕೊಂಬೆಟ್ಟಿನಲ್ಲಿ ಅಟಲ್ ಪಾರ್ಕ್ ಇದೆ. ನೆಲಪ್ಪಾಲ್‌ನಲ್ಲಿ 40 ಸೆಂಟ್ಸ್ ಜಾಗದಲ್ಲಿ ಪಾರ್ಕ್ ಆಗಲಿದೆ. ಪಟ್ನೂರಿನಲ್ಲಿ ಔಷಧ ವನ ಆಗಲಿದೆ. ಸರಕಾರಿ ಜಾಗ ಖಾಲಿ ಇದೆಯೋ ಅಲ್ಲಿ ಸಣ್ಣ ಪಾರ್ಕ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇವೆ.ರಸ್ತೆಗಳ ಅಭಿವೃದ್ಧಿಗೆ ಎಲ್ಲ ವಾರ್ಡ್ ಗಳಿಗೆ 25 ಲಕ್ಷ ರೂ. ನೀಡಿದೆ. ಗ್ರಾಮಾಂತರಕ್ಕೂ ಗಮನ ಹರಿಸಿ, ಸಂಚಾರ ವ್ಯವಸ್ಥೆಯಲ್ಲಿ ಆಗುವ ಸಮಸ್ಯೆಯನ್ನು ನಿವಾರಿ ಸಲು ಸಂಪರ್ಕ ರಸ್ತೆಗೆ ಗಮನ ಹರಿಸಲಾಗುತ್ತದೆ. ನಿಮ್ಮ ಸಲಹೆ ಸ್ವೀಕರಿಸಲಾಗುತ್ತದೆ ಎಂದರು. |
ಐಟಿಎಫ್ ಟೆನಿಸ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಸಾಗರ್ | Prajavani |
ಐಟಿಎಫ್ ಟೆನಿಸ್: ಪ್ರಿ ಕ್ವಾರ್ಟರ್ ಫೈನಲ್‌ಗೆ ಸಾಗರ್ |
ಮಂಡ್ಯ: `ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿರುವ ಕರ್ನಾಟಕದ ಸಾಗರ್ ಮಂಜಣ್ಣ ಇಲ್ಲಿ ನಡೆಯುತ್ತಿರುವ ಪ್ರೇಮ್ ಶುಗರ್ಸ್ ಐಟಿಎಫ್ ಪುರುಷರ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. |
ಪಿಇಟಿ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎರಡು ಗಂಟೆ 30 ನಿಮಿಷ ಹೋರಾಟ ನಡೆಸಿದ ಮಂಜಣ್ಣ 6-3, 7-6ರಲ್ಲಿ ರಿಷಾಬ್‌ದೇವ್ ರಾಮನ್ ಎದುರು ಗೆಲುವು ಪಡೆದರು. ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ (ಕೆಎಸ್‌ಎಲ್‌ಟಿಎ) ತರಬೇತಿ ಪಡೆಯುತ್ತಿರುವ ಮಂಜಣ್ಣ ಈ ಗೆಲುವಿನ ಮೂಲಕ ಮೊದಲ ಸಲ ಎಟಿಪಿ ಪಾಯಿಂಟ್ಸ್ ಗಿಟ್ಟಿಸಿದರು. |
`ಈ ಟೂರ್ನಿಯಲ್ಲಿ ನೀಡುತ್ತಿರುವ ಪ್ರದರ್ಶನದಿಂದ ಸಂತಸವಾಗಿದೆ. ನನಗೆ `ವೈಲ್ಡ್ ಕಾರ್ಡ್~ ಪ್ರವೇಶ ಲಭಿಸಿದ್ದರಿಂದ ನನ್ನ ವೃತ್ತಿ ಜೀವನಕ್ಕೆ ಮಹತ್ವದ ತಿರುವು ಲಭಿಸಿತು~ ಎಂದು ಸಾಗರ್ ಸಂತಸ ವ್ಯಕ್ತಪಡಿಸಿದರು. |
ಸಿಂಗಲ್ಸ್ ವಿಭಾಗದ ಇತರ ಪಂದ್ಯಗಳಲ್ಲಿ ಎಲ್ವಿನ್ ಅಂಥೋನಿ 6-1, 6-3ರಲ್ಲಿ ಅರವಿಂದ್ ವಿಷ್ಣು ಮೇಲೂ, ವಿಘ್ನೇಶ್ ವೀರವರ್ಧನ್ 6-4, 7-5ರಲ್ಲಿ ಅಜಯ್ ಸೆಲ್ವರಾಜನ್ ವಿರುದ್ಧವೂ ಫ್ರಾನ್ಸ್‌ನ ಸೆಬಾಸ್ಟಿಯನ್ ಬೋಲ್ಟ್ 6-4, 6-0ರಲ್ಲಿ ಭಾರತದ ಕೃಷಿಕ್ ದಿವಾಕರ್ ಮೇಲೂ, ರಜತ್ ಮಹೇಶ್ವರಿ 6-2, 6-2ರಲ್ಲಿ ಜೋಶು ಜೋನೆಸ್ ವಿರುದ್ಧವೂ, ಕೆ. ವಿನಾಯಕ ಶರ್ಮ 6-2, 3-6, 6-4ರಲ್ಲಿ ಇಟಲಿಯ ಫ್ರಾನ್ಸಿಸ್ಕೊ ವಿಲಾರ್ದೊ ಮೇಲೂ, ವೈಜಯಂತ್ ಮಲಿಕ್ 6-0, 6-3ರಲ್ಲಿ ಅಮೆರಿಕದ ವಿಜು ಜಾರ್ಜ್ ಜೆ.ಆರ್. ವಿರುದ್ಧವೂ ಗೆಲುವು ಸಾಧಿಸಿ ಹದಿನಾರರ ಘಟ್ಟಕ್ಕೆ ಲಗ್ಗೆ ಇಟ್ಟರು. |
ಫಾರೀಜ್‌ಗೆ ನಿರಾಸೆ: ಭಾರತದ ಫಾರೀಜ್ ಮಹಮ್ಮದ್ ಎರಡನೇ ಸುತ್ತಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದರು. ಅಶ್ವಿನ್ ವಿಜಯ್‌ರಾಘವನ್ 6-3, 6-1ರಲ್ಲಿ ಫಾರೀಜ್ ಎದುರು ಗೆಲುವು ಪಡೆದರು. |
50 ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧ | Prajavani |
50 ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧ |
ಬೆಂಗಳೂರು: 50 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಸಿದ್ಧಗೊಂಡಿವೆ. ಕೆ.ಆರ್.ಮಾರುಕಟ್ಟೆ ಹಾಗೂ ಹೊಸಕೆರೆಹಳ್ಳಿ ಬಳಿಯ ಕ್ಯಾಂಟೀನ್‌ಗಳನ್ನು ಮೇಯರ್ ಸಂಪತ್ ರಾಜ್ ಸೋಮವಾರ ಸಾಂಕೇತಿಕವಾಗಿ ಉದ್ಘಾಟಿಸಲಿದ್ದಾರೆ. |
ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆಗೆ ಆಗಸ್ಟ್ 16ರಂದು ಚಾಲನೆ ನೀಡಲಾಗಿತ್ತು. ಮೊದಲ ಹಂತದಲ್ಲಿ 101 ಕ್ಯಾಂಟೀನ್‌ಗಳು ಉದ್ಘಾಟನೆಗೊಂಡಿದ್ದವು. ಉಳಿದ 97 ಕ್ಯಾಂಟೀನ್‌ಗಳನ್ನು ಗಾಂಧಿ ಜಯಂತಿಯಂದು ಉದ್ಘಾಟಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, 47 ವಾರ್ಡ್‌ಗಳಲ್ಲಿ ಕ್ಯಾಂಟೀನ್ ಇನ್ನಷ್ಟೇ ಸಿದ್ಧಗೊಳ್ಳಬೇಕಿದೆ. |
'ಇಷ್ಟರಲ್ಲೇ 97 ವಾರ್ಡ್‌ಗಳಲ್ಲೂ ಕ್ಯಾಂಟೀನ್‌ಗಳು ನಿರ್ಮಾಣಗೊಳ್ಳಬೇಕಿತ್ತು. ಆದರೆ, ಜಾಗದ ಸಮಸ್ಯೆಯಿಂದಾಗಿ ಕೆಲವೆಡೆ ಕ್ಯಾಂಟೀನ್ ಸ್ಥಾಪಿಸಲು ಸಾಧ್ಯವಾಗಲಿಲ್ಲ. ಸದ್ಯ 50 ವಾರ್ಡ್‌ಗಳಲ್ಲಿ ಕ್ಯಾಂಟೀನ್‌ಗಳು ಸಿದ್ಧಗೊಂಡಿವೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ಪಾಲಿಕೆ ಸದಸ್ಯರ ಸಮಯ ನೋಡಿಕೊಂಡು ಕ್ಯಾಂಟೀನ್‌ಗಳನ್ನು ಉದ್ಘಾಟಿಸುತ್ತೇವೆ' ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ 'ಪ್ರಜಾವಾಣಿ'ಗೆ ತಿಳಿಸಿದರು. |
12 ಅಡುಗೆ ಮನೆಗಳು ಸಿದ್ಧ: 'ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡಲು 12 ಕೇಂದ್ರೀಕೃತ ಅಡುಗೆ ಮನೆಗಳು ಸಿದ್ಧಗೊಂಡಿವೆ. 6 ಅಡುಗೆ ಮನೆಗಳಲ್ಲಿ ಅಡುಗೆ ಮಾಡಲು ಬೇಕಾದ ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಉಳಿದ 9 ಕಡೆ ಕಾಮಗಾರಿ ನಡೆಯುತ್ತಿದೆ' ಎಂದು ಅವರು ತಿಳಿಸಿದರು. |
ಬೇಡಿಕೆ ಆಧರಿಸಿ ಆಹಾರ ಪೂರೈಕೆ |
ಇಂದಿರಾ ಕ್ಯಾಂಟೀನ್‌ಗಳಲ್ಲಿ ಬೇಡಿಕೆ ಆಧರಿಸಿ 101 ಕ್ಯಾಂಟೀನ್‌ಗಳಿಗೆ ಪೂರೈಸುವ ಆಹಾರದ ಪ್ರಮಾಣವನ್ನು ಮರುನಿಗದಿಪಡಿಸಲಾಗಿದೆ. |
'ಕ್ಯಾಂಟೀನ್‌ನಲ್ಲಿ ದಿನದ ಮೂರು ಹೊತ್ತು (ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ) ಊಟ, ಉಪಾಹಾರ ಪೂರೈಸಲಾಗುತ್ತಿದೆ. ಆರಂಭದಲ್ಲಿ ಒಂದು ಹೊತ್ತಿನಲ್ಲಿ ತಲಾ 300 ಮಂದಿಗೆ ತಿಂಡಿ, ಊಟ ವಿತರಿಸಲಾಗಿತ್ತು. ಬೇಡಿಕೆ ಹೆಚ್ಚಿದ್ದರಿಂದ ಒಂದು ಹೊತ್ತಿನಲ್ಲಿ ತಲಾ 500 ಮಂದಿಗೆ ಊಟ, ಉಪಾಹಾರ ನೀಡಲು ನಿರ್ಧರಿಸಿದ್ದೆವು. ಆದರೆ, ಕೆಲವೆಡೆ ಆಹಾರದ ಕೊರತೆ ಉಂಟಾದರೆ, ಮತ್ತೆ ಕೆಲವೆಡೆ ಉಳಿಯುತ್ತಿತ್ತು. ರಾತ್ರಿಯ ಊಟಕ್ಕೆ ಬೇಡಿಕೆ ಕಡಿಮೆ ಇತ್ತು. ಆಯಾ ವಾರ್ಡ್‌ನಲ್ಲಿ ಇರುವ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಸಲು ನಿರ್ಧರಿಸಲಾಗಿದೆ' ಎಂದು ಮಂಜುನಾಥ ಪ್ರಸಾದ್ ತಿಳಿಸಿದರು. |
ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಔಷಧಕ್ಕೆ ಆಸ್ಪದವಿಲ್ಲ : ರಮೇಶ್ ಕುಮಾರ್ ಎಚ್ಚರಿಕೆ | Nammanaadu newspaper |
Home ಅಂಕಣಗಳು ಲೇಖನಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಔಷಧಕ್ಕೆ ಆಸ್ಪದವಿಲ್ಲ : ರಮೇಶ್ ಕುಮಾರ್ ಎಚ್ಚರಿಕೆ |
ಶಿವಮೊಗ್ಗ : ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗಿನಿಂದ ಔಷಧಿ ತರಿಸಲು ಚೀಟಿ ನೀಡುವ ಕೆಟ್ಟ ಪದ್ಧತಿಗೆ ಕಡಿವಾಣ ಹಾಕಲಾಗಿದ್ದು, ಔಷಧಿಗಾಗಿ ಚೀಟಿ ಬರೆದು ನೀಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು. |
ಇಂದು ಹೊಸನಗರದಲ್ಲಿ ೭ ಕೋಟಿ ರೂ. ವೆಚ್ಚದಲ್ಲಿ ೫೦ ಹಾಸಿಗೆಯಿಂದ ೧೦೦ ಹಾಸಿಗೆಗೆ ಮೇಲ್ದರ್ಜೆಗೇರಿಸಿದ ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಆಸ್ಪತ್ರೆಗೆಳಲ್ಲಿ ಮುಂದಿನ ೧೫ದಿನಗಳಲ್ಲಿ ಅಗತ್ಯವಾಗುವ ಔಷಧಿಗಳ ಬಗ್ಗೆ ಒಂದು ತಿಂಗಳು ಮುಂಚಿತವಾಗಿಯೇ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ಜಿಲ್ಲಾ ಔಷಧಿ ಘಟಕಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಔಷಧಿಗಳನ್ನು ೪೮ ಗಂಟೆಗಳ ಒಳಗಾಗಿ ಪೂರೈಕೆ ಮಾಡಲಾಗುತ್ತಿದೆ ಎಂದರು. |
ಕೆಪಿಎಂಇ ತಿದ್ದುಪಡಿ ಕಾಯ್ದೆ ಚುನಾವಣೆ ಒಳಗಾಗಿ ಜಾರಿ: ರಾಜ್ಯದಲ್ಲಿ ಖಾಸಗಿ ವೈದ್ಯ ಕೀಯ ಸೇವೆಯನ್ನು ನಿಯಂತ್ರಿ ಸುವ ಕೆಪಿಎಂಇ ತಿದ್ದುಪಡಿ ಕಾಯ್ದೆ ಅನುಷ್ಟಾನ ಪ್ರಕ್ರಿಯೆ ಫೆ.೧೦ ಒಳಗಾಗಿ ಪೂರ್ಣ ಗೊಂಡು ಚುನಾವಣೆ ಒಳಗಾಗಿ ಜಾರಿಗೆ ಬರಲಿದೆ ಎಂದ ಅವರು, ಇನ್ನು ಮುಂದೆ ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸರ್ಕಾರದಿಂದ ಶುಲ್ಕ ಮರು ಪಾವತಿಸುವ ವ್ಯವಸ್ಥೆಯನ್ನು ಕೊನೆಗೊಳಿಸಲಾ ಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಚಿಕಿತ್ಸೆಗಳನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆದರೆ ಮಾತ್ರ ಶುಲ್ಕವನ್ನು ಮರು ಪಾವತಿ ಮಾಡಲಾಗುವುದು ಎಂದರು. |
ಡಯಾಲಿಸಿಸ್ ಘಟಕಗಳ ಆರಂಭ: ಫೆಬ್ರವರಿ ಅಂತ್ಯದ ಒಳ ಗಾಗಿ ಉಚಿತ ಡಯಾಲಿಸಿಸ್ ಘಟಕಗಳನ್ನು ಎಲ್ಲಾ ತಾಲೂಕು ಗಳಲ್ಲಿ ಆರಂಭಿಸಲಾಗುವುದು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಡಯಾಲಿಸಿಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು. |
ರಾಜ್ಯದಲ್ಲಿ ೫೪ ವೈದ್ಯಕೀಯ ಕಾಲೇಜು ಗಳಿದ್ದು, ದೇಶದಲ್ಲೆ ಅತಿ ಹೆಚ್ಚಿನ ಸಂಖ್ಯೆಯ ಲ್ಲಿದೆ. ವರ್ಷಕ್ಕೆ ಕನಿಷ್ಟ ಸುಮಾರು ೪ಸಾವಿರ ವೈದ್ಯಕೀಯ ವಿದ್ಯಾರ್ಥಿಗಳು ಕಲಿತು ಹೊರ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿರುವ ೨೩೫೩ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆಗಳನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಸವಲತ್ತುಗಳನ್ನು ಬಳಸಿಕೊಂಡು ವೈದ್ಯಕೀಯ ಶಿಕ್ಷಣ ಪೂರೈಸುವ ವೈದ್ಯರು ಗ್ರಾಮೀಣ ಸೇವೆಗೆ ಹಿಂದೇಟು ಹಾಕುತ್ತಿರು ವುದು ವಿಷಾದಕರ ಎಂದರು. |
ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ವೈದ್ಯರ ಕೊರತೆಯನ್ನು ನೀಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾ ಗಿದೆ. ವೈದ್ಯರ ವೇತನವನ್ನು ದುಪ್ಪಟ್ಟುಗೊಳಿಸ ಲಾಗಿದೆ. ಗ್ರಾಮೀಣ ಪ್ರದೇಶಗಳ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆಯನ್ನು ಖಾತ್ರಿಪಡಿಸಲು ಗ್ರಾಮೀಣ ಸೇವೆ ಕಡ್ಡಾಯ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆರೋಗ್ಯ ಇಲಾಖೆಗೆ ಹೊಸ ಕಾಯಕಲ್ಪ ಮಾಡಲಾಗಿದ್ದು, ವೈದ್ಯಕೀಯ ಸೇವೆ ಪ್ರತಿಯೊಬ್ಬ ರಿಗೂ ಲಭಿಸುವಂತೆ ಮಾಡಲಾಗಿದೆ ಎಂದರು. |
ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿ.ಪಂ. ಸದಸ್ಯೆ ಶ್ವೇತಾ ಬಂಡಿ, ಕಲಗೋಡು ರತ್ನಾಕರ್, ಭಾರತಿ ಪ್ರಭಾಕರ್, ತಾ.ಪಂ.ಅಧ್ಯಕ್ಷ ವಾಸಪ್ಪ ಗೌಡ್ರು, ಹಾಲುಗದ್ದೆ ಉಮೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. |
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮ : ಬಿಂಗೆ - Gadi Kannadiga |
Gadi Kannadiga > Local News > ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮ : ಬಿಂಗೆ |
ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮ : ಬಿಂಗೆ |
Suresh02/05/2022 |
posted on May. 02, 2022 at 3:36 pm |
ಬೆಳಗಾವಿ:- "ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ರಾಜಕುಮಾರ ಕುಟುಂಬದ ಕೊಡುಗೆ ಅಪ್ರತಿಮವಾದುದು. ರಂಗಭೂಮಿ ಹಾಗೂ ಚಲನಚಿತ್ರ ರಂಗಗಳ ಸಮನ್ವಯದಂತಿದ್ದ ಪದ್ಮಭೂಷಣ ಡಾ. ರಾಜಕುಮಾರ ಇಂದಿನ ಕಲಾವಿದರಿಗೆ ಮಾದರಿಯಾಗಿದ್ದಾರೆ" ಎಂದು ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಬಿಂಗೆ ಅಭಿಪ್ರಾಯ ಪಟ್ಟರು. |
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಬೆಳಗಾವಿಯ ಬೆಳ್ಳಿಚುಕ್ಕಿ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರತ್ನದ್ವಯರಾದ ಡಾ. ರಾಜಕುಮಾರ ಹಾಗೂ ಡಾ. ಪುನೀತರಾಜಕುಮಾರ ಅವರ ಚಿತ್ರಗಳ ಗೀತಗಾಯನ ಹಾಗೂ ಬೆಳ್ಳಿಚುಕ್ಕಿಯ ಮಹಿಳಾ ವೇದಿಕೆ, ಮಕ್ಕಳ ವೇದಿಕೆ ಹಾಗೂ ಹಿರಿಯರ ವೇದಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, " ನಮ್ಮ ನಾಡಿನ ಇತಿಹಾಸದ ವ್ಯಕ್ತಿಗಳೆಂದರೆ ಡಾ. ರಾಜಕುಮಾರ ಅವರ ಐತಿಹಾಸಿಕ ಚಿತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಅನೇಕ ಸಾಮಾಜಿಕ ಬದಲಾವಣೆಗಳಿಗೆ ರಾಜಣ್ಣನ ಚಿತ್ರಗಳು ಪ್ರೇರಣೆಯಾಗಿದ್ದು ಈಗ ಇತಿಹಾಸ. ಅವರ ದಾರಿಯಲ್ಲೇ ಸಾಗಿದ ಪುನೀತರಾಜಕುಮಾರ ಅವರು ಮನರಂಜನೆಯೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಸಿನೆಮಾ ಮಾಡುವ ಮೂಲಕ ಹೆಚ್ಚಾಗಿ ಯುವಜನರ ಮನ ಗೆದ್ದಿದ್ದಾರೆ. ಅವರ ಸಾಮಾಜಿಕ ಕಾಳಜಿ ನಮಗೆಲ್ಲ ಮಾದರಿಯಾಗಿದೆ" ಎಂದರು. |
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ಅಭಿನಯಿಸಿದ ಭಾಗ್ಯದ ಲಕ್ಷ್ಮಿ ಬಾರಮ್ಮ ಚಿತ್ರದ ಆನಂದ ಆನಂದ ಜಾಹೀರಾತು ಪ್ರೇಕ್ಷಕರ ಮನ ಸೆಳೆಯಿತು. |
ಸಂತೋಷ ತಾಸಗಾನ್ವಕರ ಹಾಗೂ ನಂದಿತಾ ಮಠದ ಅವರು ಹಾಡಿದಶಿವಪ್ಪಾ ಕಾಯೋ ತಂದೆ, ನಾದಮಯ ಹಾಗೂ ಕಾಣದಂತೆ ಮಾಯವಾದನು ಗೀತೆಗಳು ಗಮನ ಸೆಳೆದವು. |
ಬೆಳ್ಳಿಚುಕ್ಕಿ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಹಾಗೂ ಅರವಿಂದ ಪಾಟೀಲ ಅವರು ಅಭಿನಯಿಸಿದ ಕವಿರತ್ನ ಕಾಳಿದಾಸ ಚಿತ್ರದ ಪ್ರಿಯತಮ ಗೀತೆಗೆ ಪ್ರೇಕ್ಷಕರ ಮನಸೂರೆಗೊಂಡಿತು. |
ಕಾರ್ಯಕ್ರಮದಲ್ಲಿ ಅರವಿಂದ ಪಾಟೀಲ, ಡಾ. ಹೆಚ್. ಬಿ.ರಾಜಶೇಖರ, ಮದನಕುಮಾರ ಭೈರಪ್ಪನವರ, ಬಿ. ಎಸ್. ಹಿರೇಮಠ, ಬಸವರಾಜ ಕುಂಬಾರ, ಅಕ್ಷಯ, ವಿದ್ಯಾ, ವಿಜೀತ, ಪೂಜಾ, ವೇದಾಂತ ಉಪಸ್ಥಿತರಿದ್ದರು. ಬೆಳ್ಳಿಚುಕ್ಕಿಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು. |
ಬಿಬಿಎಂಪಿ ಚುನಾವಣೆ : ಮೇ 28ಕ್ಕೆ ಆಮ್ ಆದ್ಮಿ ಪಾರ್ಟಿ ಕಾರ್ಯಕಾರಿಣಿ ಸಭೆ | Udayavani – ಉದಯವಾಣಿ |
ರಾಜಧಾನಿಯ ಹಿತಕ್ಕಾಗಿ ಪಕ್ಷ ಎಂತಹ ಸಾಹಸ, ತ್ಯಾಗಕ್ಕೂ ಸಿದ್ಧ |
Team Udayavani, May 26, 2022, 4:27 PM IST |
ಬೆಂಗಳೂರು: ಬಿಬಿಎಂಪಿ ಚುನಾವಣೆ ಕುರಿತು ಚರ್ಚಿಸಲು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಘಟಕವು ಮೇ 28ರ ಶನಿವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಕಾರ್ಯಕಾರಿಣಿ ಸಭೆ ಆಯೋಜಿಸಿದೆ. |
ಬೆಂಗಳೂರು ನಗರ ಎಎಪಿ ಅಧ್ಯಕ್ಷ ಮೋಹನ್ ದಾಸರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ "ಶನಿವಾರ ಮಧ್ಯಾಹ್ನ 3 ಟೆಗೆ ಬೆಂಗಳೂರು ನಗರ ಕಾರ್ಯಕಾರಿಣಿ ಆರಂಭವಾಗಲಿದೆ. ಬೆಂಗಳೂರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು, ನಗರದ ಅಭಿವೃದ್ಧಿ, ಪಕ್ಷ ಸಂಘಟನೆ, ಚುನಾವಣಾ ಸಿದ್ಧತೆ ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಗುತ್ತದೆ. ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ತಿಳಿಸಿದರು. |
"ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದೇವೆ. ಬೆಂಗಳೂರಿನಲ್ಲಿ ಅತ್ಯುತ್ತಮ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ಸಂಗ್ರಹಣಾ ವ್ಯವಸ್ಥೆ, ಬೀದಿ ದೀಪಗಳು, ಪಾದಚಾರಿ ಮಾರ್ಗಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಕಲ್ಪಿಸಬಲ್ಲದು. ವಾರ್ಡ್ ಸಮಿತಿಗಳನ್ನು ಸಮರ್ಪಕವಾಗಿ ಜಾರಿಗೆ ತಂದು, ಜನಸ್ನೇಹಿ ಹಾಗೂ ಪಾರದರ್ಶಕ ಆಡಳಿತ ನೀಡುವ ಗುರಿಯನ್ನು ಎಎಪಿ ಇಟ್ಟುಕೊಂಡಿದೆ" ಎಂದು ಮೋಹನ್ ದಾಸರಿ ಹೇಳಿದರು. |
ಎಎಪಿ ಬೆಂಗಳೂರು ನಗರ ಉಪಾಧ್ಯಕ್ಷರಾದ ಸುರೇಶ್ ರಾಥೋಡ್ ಮಾತನಾಡಿ, "ಬೆಂಗಳೂರಿನ ಜನತೆ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಾಮರ್ಥ್ಯವಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಬೆಂಗಳೂರಿಗಾಗಿ ಪಕ್ಷವು ಕಳೆದ ಹಲವು ವರ್ಷಗಳಿಂದ ಅಹರ್ನಿಶಿ ಹೋರಾಟಗಳನ್ನು ನಡೆಸಿದೆ. ಇದರಿಂದಾಗಿ ಆಡಳಿತ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ, ಕಾರ್ಯಕರ್ತರು ಪೊಲೀಸ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ರಾಜಧಾನಿಯ ಹಿತಕ್ಕಾಗಿ ಪಕ್ಷವು ಎಂತಹ ಸಾಹಸ ಹಾಗೂ ತ್ಯಾಗಕ್ಕೂ ಸಿದ್ಧವಿದೆ" ಎಂದು ಹೇಳಿದರು. |
ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿದ ಅಮೆರಿಕದ ಕನ್ನಡ ವೈದ್ಯರು! | Udayavani – ಉದಯವಾಣಿ |
Thursday, 29 Jul 2021 | UPDATED: 12:25 AM IST |
ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿದ ಅಮೆರಿಕದ ಕನ್ನಡ ವೈದ್ಯರು! |
Team Udayavani, Jun 19, 2021, 10:07 PM IST |
ಭಾರತದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಸೃಷ್ಟಿಸಿದ ಸಂಕಷ್ಟಗಳು ಹಲವಾರು. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಕರಣ ಕಂಡುಬಂದಿತು. ಇದರ ಪರಿಣಾಮವಾಗಿ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿಬಂದಿ ಕೊರತೆಗಳು ಕಂಡುಬಂದು, ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ನೀಡುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿತ್ತು. |
ಈ ಪರಿಸ್ಥಿತಿಯನ್ನು ಅರಿತ ಅಮೆರಿಕದ ಬಾಸ್ಟನ್‌ನಲ್ಲಿರುವ ಹೃದಯ ತಜ್ಞರಾದ ಕರ್ನಾಟಕ ಮೂಲದ, ಬೆಂಗಳೂರು ಮೆಡಿಕಲ್ ಕಾಲೇಜಿನ ಪದವೀಧರೆ ಡಾ| ವೀಣಾ ಶಂಕರ್ ತಮ್ಮ ಸಹಪಾಠಿಗಳಾದ ಬೆಂಗಳೂರಿನ ವೈದ್ಯರಾದ ಡಾ| ಪದ್ಮ. ಎಸ್. ಹಾಗೂ ಡಾ| ಸ್ನೇಹ ವಿಕ್ರಮ್ ಜತೆ ಕೈಜೋಡಿಸಿ ವೈದ್ಯಕೀಯ ನೆರವನ್ನು ಒದಗಿಸಲು ಕರ್ನಾಟಕ- ಅಮೆರಿಕ ಸ್ವಯಂಸೇವೆಯ ತಂಡವನ್ನು ರಚಿಸಿ ನಿಸ್ವಾರ್ಥ ಸೇವೆಗೆ ಮುಂದಾದರು. |
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ವೈದ್ಯರಿಗೆ ಹಣ ಸಂಗ್ರಹಿಸಿ ಕೊಡುವುದು ಸುಲಭವಾದರೂ ಸದ್ಯದ ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ತಮ್ಮ ವೈದ್ಯಕೀಯ ವೃತ್ತಿಯ ಅನುಭವದ ಪಾಲನ್ನು ಹಂಚುವ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ ಡಾ| ವೀಣಾ ಶಂಕರ್. ಅವರ ನೇತೃತ್ವದಲ್ಲಿ ಅವರ ಸಹೋದರಿ ಡಾ| ಚೇತನಾ ಅಗ್ರಹಾರ ಮತ್ತು ಅವರ ಸಹಪಾಠಿಗಳಾದ ಡಾ| ಸವಿತಾ ಗೌಡ, ಡಾ| ಅನುರಾಧಾ ಅಮರನಾಥ, ಡಾ| ಪಲ್ಲವಿ ನಂದೀಶ್ವರ, ಡಾ| ಇಂದ್ರೇಶ್ ಅಯ್ಯರ್, ಡಾ| ಸುನೀಲಾ ಹಸೂìರು, ಮತ್ತು ಡಾ| ಶೇಖರ ಕೃಪಾದ್ ಸೇರಿಕೊಂಡು ಕನ್ನಡ ಮಾತನಾಡುವ ಇತರೆ 60 ವೈದ್ಯರನ್ನು ತ್ವರಿತವಾಗಿ ಒಟ್ಟುಗೂಡಿಸಿ, ಈ ಕಾರ್ಯಕ್ಕೆ ಬೇಕಾಗುವ ತಾಂತ್ರಿಕ ಸಹಾಯಕ್ಕೆ ಅಮೆರಿಕದಲ್ಲಿ ಹಿರಿಯ ತಂತ್ರಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಿರಣ್ ಅಗ್ರಹಾರ ಹಾಗೂ ರೋಹನ್ ಶಂಕರ್ (ಸ್ಟೆರ್ನ್ ಬ್ಯುಸಿನಸ್ ಸ್ಕೂಲ…) ಜತೆಗೂಡಿ ತಂಡವನ್ನು ರಚಿಸಿದ್ದರು. |
ಕೆಲಸದ ಒತ್ತಡ, ತಮಗಿರುವ ಕಾಲಮಾನ ದಲ್ಲಿನ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಹಗಲಿರುಳು ದೂರವಾಣಿ ಮುಖಾಂತರ ಉಚಿತ ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಅದರ ಜತೆಗೆ ಇತರೆ ವೈದ್ಯಕೀಯ ವಸ್ತುಗಳನ್ನು ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಂಗಳೂರಿನ ವೈದ್ಯರಾದ ಡಾ| ಪದ್ಮಾ ಎಸ್. ಹಾಗೂ ಡಾ| ಸ್ನೇಹ ವಿಕ್ರಮ್ ಅವರ ಸಹಯೋಗದಲ್ಲಿ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿರುವ ಮಾಹಿತಿ ನೀಡುವುದರೊಂದಿಗೆ, ಆಮ್ಲಜನಕ, ಔಷಧಗಳನ್ನು ಸೋಂಕಿತರಿಗೆ ಒದಗಿಸಲು ನೆರವಾಗುತ್ತಿದ್ದಾರೆ. |
ಈ ತಂಡ ಕೊರೊನಾ ಪೀಡಿತ ರೋಗಿಗಳನ್ನು ಸಂಪರ್ಕಿಸಿ ಅವರಿಗೆ ಸಹಾಯ ಮಾಡುವುದನ್ನೇ ತನ್ನ ಮುಖ್ಯ ಉದ್ದೇಶವಾಗಿಸಿಕೊಂಡಿದೆ. ಅಲ್ಲದೆ, ರೋಗಿಗಳಿಗೆ ಮನೆಯಲ್ಲೇ ಗುಣಮುಖರಾಗುವ ಬಗ್ಗೆ ತಿಳುವಳಿಕೆ ನೀಡಿ, ಅವರ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಜನಸಂದಣಿ ಕಡಿಮೆಯಾಗಿ, ಎಲ್ಲರಿಗೂ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗುವಂತಾಗಬೇಕು ಎಂಬುದೇ ಮುಖ್ಯ ಉದ್ದೇಶವಾಗಿದೆ. |
ತಾಂತ್ರಿಕ ತಂಡದ ಕಿರಣ್ ಅಗ್ರಹಾರ ಹಾಗೂ ರೋಹನ್ ಶಂಕರ್ ಅವರು, ದೂರವಾಣಿ ಕರೆಗಳನ್ನು ಸಂಯೋಜಿಸಿ, ಬೆಂಗಳೂರಿನಲ್ಲಿರುವ ರೋಗಿಗಳು ಹಾಗೂ ಇಲ್ಲಿನ ವೈದ್ಯರ ನಡುವೆ ಸಂಪರ್ಕ ಕಲ್ಪಿಸಿ ವೈದ್ಯಕೀಯ ಸಮಾಲೋಚನೆಗೆ ಸಹಾಯ ಮಾಡುತ್ತಿದ್ದಾರೆ. ವೈದ್ಯರು ತಮಗಿರುವ ಸೀಮಿತ ಸಂಪನ್ಮೂಲದಲ್ಲಿ ಅಲ್ಲಿನ ಜನರ ಜತೆ ಮಾತುಕತೆ ನಡೆಸಿ ಸಾಂತ್ವನ ಹೇಳುತ್ತಿದ್ದಾರೆ. |
ಸಾವಿರಾರು ಮೈಲಿ ದೂರದಲ್ಲಿರುವ ಕರ್ನಾಟಕ- ಅಮೆರಿಕ ಸ್ವಯಂ ಸೇವಕರ ಗುಂಪು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯವರೆಗೂ ಬೆಂಗಳೂರಿನ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ಸೀಮಿತ ಚಿಕಿತ್ಸೆ ನೀಡುವುದರ ಮೂಲಕ ಕನ್ನಡ ಮಾತನಾಡುವ ಅನಿವಾಸಿ ವೈದ್ಯರು ಬೆಂಗಳೂರಿನ ಸಂತ್ರಸ್ತ ಜನರಿಗೆ ವೈದ್ಯಕೀಯ ಸಲಹೆ ನೀಡಿ, ಅವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. |
ಅಮೆರಿಕದ 60ಕ್ಕೂ ಹೆಚ್ಚು ವೈದ್ಯರ ಈ ತಂಡದ ನಿಸ್ವಾರ್ಥ ಸೇವೆಯನ್ನು ಮೆಚ್ಚಿ ಇನ್ನೂ ಹಲವಾರು ಅನಿವಾಸಿ ವೈದ್ಯರು ತಮ್ಮ ಸಹಾಯ ಹಸ್ತವನ್ನು ನೀಡಲು ಮುಂದಾಗಿರುವುದು ಇವರ ಕಾರ್ಯಕ್ರಮಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ. |
ಪ್ರಿನ್ಸ್ ವಿಲಿಯಂ, ಕೇಟ್ ಮಿಡಲ್ಟನ್, ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್ ಹೊಸ ರಾಯಲ್ ಉಪಕ್ರಮಕ್ಕಾಗಿ ಕೂಗು – ಹೆಲೋ! ಕೆನಡಾ – Mysore Daily |
ಪ್ರಿನ್ಸ್ ವಿಲಿಯಂ, ಕೇಟ್ ಮಿಡಲ್ಟನ್, ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್ ಹೊಸ ರಾಯಲ್ ಉಪಕ್ರಮಕ್ಕಾಗಿ ಕೂಗು – ಹೆಲೋ! ಕೆನಡಾ |
ಫ್ಯಾಬ್ ಫೋರ್ – ಪ್ರಿನ್ಸ್ ವಿಲಿಯಂ , ಡಚೆಸ್ ಕೇಟ್ , ಪ್ರಿನ್ಸ್ ಹ್ಯಾರಿ ಮತ್ತು ಡಚೆಸ್ ಮೇಘನ್ – ಒಳ್ಳೆಯ ಕಾರಣಕ್ಕಾಗಿ ತಂಡವನ್ನು ರಚಿಸಬಹುದು. ಶುಕ್ರವಾರ (ಮೇ 10), ರಾಯಲ್ ಕ್ವಾಡ್ ಮಾನಸಿಕ ಆರೋಗ್ಯ ಉಪಕ್ರಮವನ್ನು ಪ್ರಾರಂಭಿಸಿತು, ಕೂಗು, ಯುವ ಜನರಿಗೆ ಬಿಕ್ಕಟ್ಟಿನಲ್ಲಿ ಸಹಾಯ ಮಾಡುತ್ತದೆ. |
ಕೇಂಬ್ರಿಡ್ಜ್ ಮತ್ತು ಸಸೆಕ್ಸ್ ಮನೆಗಳು ಅಧಿಕೃತವಾಗಿ ಅಕ್ಟೋಬರ್ 2018 ರಲ್ಲಿ ವಿಭಜನೆ , ಆದರೆ ಯಾವುದೇ ಕಾರಣಗಳು ಅವರ ಹೃದಯ ಮತ್ತು ಅವರ ಹೊರಗಿನ ವಿಧಾನಗಳಿಗೆ ಹತ್ತಿರವಿರುವ ಕಾರಣಗಳನ್ನು ಅವರು ನಿರಾಕರಿಸುವಂತಿಲ್ಲ. ಕೂಗು 24 ಗಂಟೆಗಳ ಸೇವೆಯಾಗಿದ್ದು ಅದು ಸ್ವಯಂ ಸೇವಕರನ್ನು ಅವರ ಅಗತ್ಯತೆಯ ಸಮಯದಲ್ಲಿ ಸಹಾಯ ಮಾಡುವ ಜನರನ್ನು ಸಂಪರ್ಕಿಸುತ್ತದೆ ಮತ್ತು ಅವರ ಮಾನಸಿಕ ಆರೋಗ್ಯದ ಹೋರಾಟಗಳಿಗೆ ದೀರ್ಘಕಾಲೀನ ಬೆಂಬಲವನ್ನು ಹುಡುಕುವಲ್ಲಿ ಸಹಾಯ ಮಾಡುತ್ತದೆ. |
ಹ್ಯಾರಿ, ಮೇಘನ್, ಕೇಟ್ ಮತ್ತು ವಿಲಿಯಂ 2018 ರಲ್ಲಿ ಮೊದಲ ವಾರ್ಷಿಕ ರಾಯಲ್ ಫೌಂಡೇಶನ್ ಫೋರಮ್ಗೆ ಸೇರಿದರು. ಫೋಟೋ: © ಎಡ್ಡಿ ಮುಲ್ಹೋಲೆಂಡ್ – ಡಬ್ಲ್ಯೂಪಿಎ ಪೂಲ್ / ಗೆಟ್ಟಿ ಚಿತ್ರಗಳು |
ಈ ತರಬೇತಿ ಪಡೆದ ಸ್ವಯಂಸೇವಕರು ವೃತ್ತಿಪರರ ಬೆಂಬಲದಿಂದ, ಆತ್ಮಹತ್ಯಾ ಆಲೋಚನೆಗಳು, ನಿಂದನೆ, ಸ್ವಯಂ-ಹಾನಿ, ಬೆದರಿಸುವಿಕೆ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಂದ ಪಠ್ಯಗಳಿಗೆ ಉತ್ತರಿಸುತ್ತಾರೆ. ಕೂಗು ಇದೀಗ 1,000 ಸ್ವಯಂಸೇವಕರನ್ನು ಹೊಂದಿದೆ, ಮತ್ತು ಮೂರು ಪ್ರಿನ್ಸ್ ವಿಲಿಯಂನ ಫೇಥ್ ವರ್ಷದಲ್ಲಿ ಆ ಸಂಖ್ಯೆಯನ್ನು ನಾಲ್ಕರಷ್ಟು ಭರವಸೆಯಿದೆ. ಸಹಾಯ ಮಾಡಲು ಅವರು ಸಾರ್ವಜನಿಕರಿಗೆ ತಲುಪಿದ್ದಾರೆ. |
HELLO! ಕೆನಡಾ ಅವರ ಸಹೋದರಿ ಬ್ರಾಂಡ್ ಹಲೋ! ಯುಕೆ ಕೆನ್ಸಿಂಗ್ಟನ್ ಪ್ಯಾಲೇಸ್ನಲ್ಲಿ ವಿಲಿಯಂ ಮತ್ತು ಕೇಟ್ಗೆ ಸೇರಲು ಸಾಧ್ಯವಾಯಿತು, ಅಲ್ಲಿ ಅವರು ಉಪಕ್ರಮದ ಬಗ್ಗೆ ಪ್ರಾರಂಭಿಸಿದರು. "ಈ ಸೇವೆಯನ್ನು ಪ್ರಾರಂಭಿಸಲು ನಾವು ಬಹಳ ಉತ್ಸುಕರಾಗಿದ್ದೇವೆ, ಪ್ರತಿದಿನ ಸಾವಿರಾರು ಜನರನ್ನು ತಲುಪುವ ಸಾಮರ್ಥ್ಯ ಹೊಂದಿದೆಯೆಂದು ತಿಳಿಯುತ್ತೇವೆ" ಎಂದು ವಿಲಿಯಂ ಹಂಚಿಕೊಂಡಿದ್ದಾರೆ. "ಕಳೆದ ಕೆಲವು ತಿಂಗಳುಗಳಲ್ಲಿ ಶೌಟ್ ತೆರೆಮರೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಹ್ಯಾರಿ, ಮೇಘನ್, ಕ್ಯಾಥರೀನ್ ಮತ್ತು ನಾನು ಈ ಸೇವೆಯನ್ನು ಹತ್ತಿರವಾಗಿ ಕೆಲಸ ಮಾಡಲು ಸಾಧ್ಯವಾಯಿತು ಮತ್ತು ಅದರ ಭವಿಷ್ಯದ ಬಗ್ಗೆ ಉತ್ಸುಕರಾಗಿದ್ದೇವೆ. ಈ ಸೇವೆಯ ಹೃದಯಾಘಾತವು ನಂಬಲಾಗದ ರಾಷ್ಟ್ರೀಯ ಸ್ವಯಂಸೇವಕ ಸಮುದಾಯವಾಗಲಿದೆ, ಇದು ಬೆಳೆಯಲು ಮತ್ತು ಬಿಕ್ಕಟ್ಟಿನಲ್ಲಿ ಹೆಚ್ಚಿನ ಜನರನ್ನು ಬೆಂಬಲಿಸಲು ನಮಗೆ ಅವಕಾಶ ಮಾಡಿಕೊಡುವುದು. ನಿಮ್ಮಲ್ಲಿ ಅನೇಕರು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಮತ್ತು ಬಹಳ ವಿಶೇಷವಾದ ಒಂದು ಭಾಗವಾಗಬೇಕೆಂದು ನಾವು ಭಾವಿಸುತ್ತೇವೆ. " |
ಮೇಘನ್ ಮತ್ತು ಹ್ಯಾರಿ ಇವಿಕ್ಟಸ್ ಗೇಮ್ಸ್ಗೆ ಹಾಜರಿದ್ದರು 2018 ರ ರಾಯಲ್ ಪ್ರವಾಸದ ಸಂದರ್ಭದಲ್ಲಿ ಸಿಡ್ನಿಯಲ್ಲಿ ಸಮಾರಂಭ ಸಮಾರಂಭ ನಡೆಯಿತು. ಫೋಟೋ: © ಸಮೀರ್ ಹುಸೇನ್ / ಸಮೀರ್ ಹುಸೇನ್ / ವೈರ್ಐಮೇಜ್ |
ಅವರು ಹೀಗೆ ಹೇಳಿದರು: "ಸಂದೇಶವು ಖಾಸಗಿ ಮತ್ತು ಮೌನವಾಗಿರುವುದರಿಂದ, ಸಹಾಯವನ್ನು ಕಂಡುಹಿಡಿಯಲು ಅದು ಸಂಪೂರ್ಣ ಹೊಸ ರೀತಿಯಲ್ಲಿ ತೆರೆಯುತ್ತದೆ. ಇದು ತ್ವರಿತ ಬೆಂಬಲವನ್ನು ಒದಗಿಸುತ್ತದೆ. ಎಲ್ಲಿಯಾದರೂ ನೀವು ಸಂಭಾಷಣೆಯನ್ನು ಹೊಂದಬಹುದು; ಶಾಲೆಯಲ್ಲಿ, ಮನೆ, ಬಸ್ನಲ್ಲಿ, ಎಲ್ಲಿಯಾದರೂ. ಪ್ರತಿದಿನವೂ ಸಾವಿರಾರು ಜನರನ್ನು ತಲುಪುವ ಸಾಮರ್ಥ್ಯ ಹೊಂದಿದೆಯೆಂದು ತಿಳಿದುಕೊಂಡು ಈ ಸೇವೆಯನ್ನು ಪ್ರಾರಂಭಿಸಲು ನಾನು ಬಹಳ ಉತ್ಸುಕನಾಗಿದ್ದೇನೆ. " |
ಒಂದು ಸ್ವಯಂಸೇವಕರಾಗಲು ಆಸಕ್ತಿ ಹೊಂದಿರುವವರಿಗೆ, ವಾರಕ್ಕೆ ಎರಡು ನಾಲ್ಕು ಗಂಟೆಗಳ ಕೆಲಸದ ಜೊತೆಗೆ 25 ಗಂಟೆಗಳ ತರಬೇತಿಯ ಅಗತ್ಯವಿರುತ್ತದೆ, ಇದು ಅವರ ಮನೆಯ ಆರಾಮದಿಂದ ಪೂರ್ಣಗೊಳ್ಳುತ್ತದೆ. "ಎಲ್ಲ ಸ್ವಯಂಸೇವಕರು ಸುರಕ್ಷಿತ ಸಂಪರ್ಕವನ್ನು ಹೊಂದಿದ ಕಂಪ್ಯೂಟರ್ಯಾಗಿದ್ದು ಇದರಿಂದ ಅವರು ಆನ್ಲೈನ್ ತರಬೇತಿ ಪೂರ್ಣಗೊಳಿಸಬಹುದು ಮತ್ತು ಅಗತ್ಯವಿರುವವರಿಗೆ ನೇರವಾಗಿ ಸಂಪರ್ಕಿಸಬಹುದು" ಎಂದು ಕೇಟ್ ಹಂಚಿಕೊಂಡಿದ್ದಾರೆ. "ಸೈನ್ ಅಪ್ ಮಾಡಲು ಉತ್ಸುಕರಾಗಿದ್ದವರಿಗೆ ಬದ್ಧತೆಯು ವಾರದ ಎರಡು ಅಥವಾ ನಾಲ್ಕು ಗಂಟೆಗಳವರೆಗೆ, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮಾತ್ರ. ಇದು ನಿಜವಾಗಿಯೂ ಸರಳವಾಗಿದೆ. ಅವಶ್ಯಕತೆ ಇರುವವರಿಗೆ ಇದು ನಿಜವಾಗಿಯೂ ಒಂದು ಪ್ರಮುಖ ಹೆಜ್ಜೆಯಾಗಿದೆ. " |
ಶೌಟ್ ಅನ್ನು ರಾಯಲ್ ಫೌಂಡೇಶನ್ ಬೆಂಬಲಿಸುತ್ತದೆ ಮತ್ತು 2013 ರಿಂದ ಯುನೈಟೆಡ್ ಸ್ಟೇಟ್ಸ್ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸಿಸ್ ಟೆಕ್ಸ್ಟ್ ಲೈನ್ನೊಂದಿಗೆ ಮಾನಸಿಕ ಆರೋಗ್ಯ ಸಂಶೋಧನೆಯಿಂದ ರಚಿಸಲ್ಪಟ್ಟಿದೆ. |
HELLO ನೊಂದಿಗೆ ಒಂದು ಬೀಟ್ ಅನ್ನು ತಪ್ಪಿಸಿಕೊಳ್ಳಬೇಡಿ! ಕೆನಡಾದ |
ಡೈಲಿ ಹಿಟ್ಸ್ ಸುದ್ದಿಪತ್ರ, ರಾಯಲ್ ಮತ್ತು ಸೆಲೆಬ್ರಿಟಿ ನ್ಯೂಸ್ನ ನಿಮ್ಮ ದೈನಂದಿನ ಡೋಸ್, ಫ್ಯಾಷನ್, ವಿವಾಹಗಳು ಮತ್ತು ಹೆಚ್ಚಿನವು. |
ಉಚಿತವಾಗಿ ಸೈನ್ ಅಪ್ ಮಾಡಲು! |
PREVIOUS POST Previous post: ಜಾನ್ ವಿಕ್: ಅಧ್ಯಾಯ 3 – ಪ್ಯಾರಾಬೆಲ್ಲಮ್ ರಿವ್ಯೂ – IGN |
NEXT POST Next post: ವಿಜ್ಞಾನಿಗಳು ಪ್ರತಿಜೀವಕ ನಿರೋಧಕ ಬ್ಯಾಕ್ಟೀರಿಯಾವನ್ನು ಗುರಿ ಮತ್ತು ನಾಶಪಡಿಸುವ ವೈರಸ್ಗಳನ್ನು ಅನ್ವೇಷಿಸಿ – ಐಜಿಯಾನ್ ನೆಟ್ವರ್ಕ್ |
ಚೆಲುವ ಚಾಮರಾಜನಗರ ಅಭಿಯಾನ | Udayavani – ಉದಯವಾಣಿ |
Saturday, 23 Oct 2021 | UPDATED: 09:15 AM IST |
ವಿಧೆಡೆ ಸೆಲ್ಫಿ ಪಾಯಿಂಟ್ ತೆರೆಯಲು ಕ್ರಮ: ಜಿಲ್ಲಾಧಿಕಾರಿ ರವಿ |
Team Udayavani, Oct 9, 2020, 3:00 PM IST |
ಚಾಮರಾಜನಗರ: ಚಾಮರಾಜನಗರವು ಕಲೆ, ಸಂಸ್ಕೃತಿ, ವಿಶಿಷ್ಟತೆ ಹೊಂದಿದ್ದು, ಜಿಲ್ಲೆಯನ್ನು ಸ್ವಚ್ಛ ಹಾಗೂ ಸುಂದರಗೊಳಿಸುವ ಸಲುವಾಗಿ ಚೆಲುವ ಚಾಮರಾಜನಗರ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು. |
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಅವರು, ಅಭಿಯಾನ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ |
ಸಂಘಸಂಸ್ಥೆಗಳ ಸಹಭಾಗಿತ್ವ ಆಯೋಜಿಸಬೇಕಾಗಿದೆ. ಅಭಿಯಾನ ಒಂದು ಯೋಜನೆಯಾಗಿರದೇ ಸಮುದಾಯಿಕ ಪಾಲ್ಗೊಳ್ಳುವಿಕೆಯ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಎಲ್ಲರ ಈ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕೋರಿದರು. |
ಸೆಲ್ಫಿ ಪಾಯಿಂಟ್: ಜಿಲ್ಲೆಯ ನಗರ , ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಿವಿಧೆಡೆ ಸೆಲ್ಫಿ ಪಾಯಿಂಟ್ ಗಳನ್ನು ತೆರೆಯಲಾಗುತ್ತಿದೆ. ನಗರದ ಜಿಲ್ಲಾಡಳಿತ ಭವನದ ಅಂಬೇಡ್ಕರ್ ಪ್ರತಿಮೆ ಬಳಿ, ಜಿಲ್ಲಾಡಳಿತ ಭವನದ ಉದ್ಯಾನವನ, ಸುಲ್ತಾನ್ ಷರೀಫ್ ವೃತ್ತದ ಬಳಿ, ಭುವನೇಶ್ವರಿ ವೃತ್ತದ ಬಳಿ ಸೆಲ್ಫಿ ಪಾಯಿಂಟ್‌ಗಳನ್ನು ತೆರೆಯಲು ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಕರೆಯುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. |
ಫುಡ್‌ಜೋನ್: ಸಾರ್ವಜನಿಕರ ಅನುಕೂಲಕ್ಕಾಗಿ ಮಾದರಿ ಆಹಾರ (ಫುಡ್ ಜೋನ್) ವಲಯಗಳನ್ನು ತೆರೆಯಲು ಜಾಗ ಗುರುತಿಸುವ ಕಾರ್ಯ ಆಗಬೇಕು. ನಗರದ ವೀರಭದ್ರೇಶ್ವರ ದೇವಾಲಯದ ಬಳಿ ಈಗಾಗಲೇ ಜಾಗ ಗುರುತಿಸಲಾಗಿದೆ. ತರಕಾರಿ ಮಾರುಕಟ್ಟೆ ಸ್ಥಳದಲ್ಲಿ ಆಗಬೇಕಾಗಿದೆ ಫುಡ್ ಜೋನ್ ವಲಯವನ್ನು ಬೇರೆಡೆ ಸ್ಥಳಾಂತರಿಸುವ ಅಗತ್ಯವಿದೆ. ಇದಕ್ಕಾಗಿ ತ್ವರಿತವಾಗಿ ಜಾಗ ಗುರುತಿಸಿ ಎಂದರು. |
ಪ್ರವಾಸಿ ತಾಣ ಅಭಿವೃದ್ಧಿ: ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕರಿವರದರಾಯನಬೆಟ್ಟಕ್ಕೆ ಅಗತ್ಯ ಮೂಲಸೌಕರ್ಯ, ಚಿಕ್ಕಹೊಳೆ, ಸುವರ್ಣಾವತಿ ಜಲಾಶಯಗಳಲ್ಲಿ ಉದ್ಯಾನ ನಿರ್ಮಾಣ, ನಗರದ ಸುಬೇದಾರ್ ಕಟೆ rಯ ಬಳಿ ಇರುವ ಪುಷ್ಕರಿಣಿ, ಯಳಂದೂರಿನ ಷಡಕ್ಷರಿದೇವನ ಗದ್ದುಗೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಒಟ್ಟಾರೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ವಿಡಿಯೋ ಚಿತ್ರೀಕರಣಗೊಳಿಸಿಡಾಕ್ಯುಮೆಂಟರಿಮಾಡುವಂತೆ ನಿರ್ದೇಶನ ನೀಡಿದರು. |
ಬೆಗಾರರಿಗೆ ಸಾಲ ಸೌಲಭ್ಯ: ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರು, ನೂಲು ಬಿಚ್ಚಣಿಕೆದಾರರಿಗೆ ಅನುಕೂಲವಾಗುವಂತೆ ಅನುದಾನವನು ಮೂಲಬಂಡವಾಳ, ದುಡಿಮೆ ಬಂಡವಾಳವನ್ನಾಗಿ ಪರಿವರ್ತಿಸಿ ತರಬೇತಿ ನೀಡಲಾಗುವುದು.. ಇದಕ್ಕಾಗಿ ಫಲಾನುಭವಿಗಳನ್ನು ಗುರುತಿಸಿ ಸಾಲ ಒದಗಿಸಲು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಕರೆದು ಚರ್ಚಿಸುವಂತೆ ಅವರು ತಿಳಿಸಿದರು. |
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಜವರೇಗೌಡ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ಕೆ. ಕುನಾಲ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಇತರರಿದ್ದರು. |
Subsets and Splits
No community queries yet
The top public SQL queries from the community will appear here once available.