text
stringlengths
0
61.5k
ಶತಮಾನ ಪೂರೈಸಿರುವ 35 ಶಾಲೆಗಳ ಅಭಿವೃದ್ಧಿಗೆ ಹಣ : ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ35 ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಚಾಮರಾಜನಗರ ತಾಲೂಕಿನಲ್ಲಿ 11, ಗುಂಡ್ಲುಪೇಟೆ 10, ಹನೂರು 2,ಕೊಳ್ಳೇಗಾಲ 10 ಮತ್ತು ಯಳಂದೂರಿನಲ್ಲಿ100 ವರ್ಷಗಳನ್ನು ಕಂಡಿರುವ2ಶಾಲೆಗಳಿಗೆ ಪ್ರತಿಶಾಲೆಗೆ5ಲಕ್ಷ ರೂ. ಮೀಸಲಿಡಲಾಗಿದೆ.ಈಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲು ಕ್ರಿಯಾಯೋಜನೆ ಅಂತಿಮಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಗ್ರಾನೈಟ್‌ಗೆ ಸಾಕಷ್ಟುಬೇಡಿಕೆ, ಯುವಜನರಿಗೆ ತರಬೇತಿ : ಜಿಲ್ಲೆಯ ಗ್ರಾನೈಟ್‌ಗೆ ಇತರೆಡೆ ತುಂಬಾ ಬೇಡಿಕೆ ಇದ್ದು, ನಿರುದ್ಯೋಗಿ ಯುವಕ, ಯುವತಿಯರಿಗೆ ಕೌಶಲ್ಯಾಭಿವೃದ್ಧಿತರಬೇತಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಸ್ವಯಂಉದ್ಯೋಗ ಕಲ್ಪಿಸಬೇಕು. ಗ್ರಾನೈಟ್‌ಕಟಿಂಗ್‌, ಡಿಸೈನ್‌, ಡ್ರಿಲ್ಲಿಂಗ್‌, ಪಾಲಿಶ್‌ ಸೇರಿದಂತೆ 5 ಬಗೆಯ ತರಬೇತಿ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ರವಿ ತಿಳಿಸಿದರು.
ಮಣ್ಣಲ್ಲಿ ಮಣ್ಣಾದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್..ಮಗನಿಂದ ಅಂತಿಮ ಸಂಸ್ಕಾರ – Kannada BigNews
April 7, 2020 April 7, 2020 - by Kannada BigNews
ಬಹುಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ರವರು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರುಳೆದಿದ್ದರು. ಇನ್ನು ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ.
ಇನ್ನು ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದು ಅಂತಿಮಕ್ರಿಯೆಯ ಸಂಧರ್ಭದಲ್ಲಿ ಹೆಚ್ಚಿನ ಜನರು ಸೇರಬಾರದು ಎಂದು ಪೊಲೀಸರು ಕುಟುಂಬಸ್ಥರಿಗೆ ಮಾತ್ರ ಬುಲೆಟ್ ಪ್ರಕಾಶ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಿದ್ದರು.
ಇನ್ನು ತೆರೆದ ವಾಹನದಲ್ಲಿಯೇ ಬುಲೆಟ್ ಪ್ರಕಾಶ್ ರವರ ಪಾರ್ಥಿವ ಶರೀರವನಂ ಹೆಬ್ಬಾಳದ ರುದ್ರಭೂಮಿಯವರಿಗೆ ತರಲಾಗಿತ್ತು. ಇನ್ನು ನೆಚ್ಚಿನ ನಟನ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿಗಳನ್ನ ಪೊಲೀಸರು ತಡೆದಿದ್ದಾರೆ.
ಇನ್ನು ಬುಲೆಟ್ ಪ್ರಕಾಶ್ ರವರ ಮಗ ರಕ್ಷಕ್ ಮಡಿವಾಳ ಸಂಪ್ರದಾಯದಂತೆ ತಂದೆಯ ಸಂಸ್ಕಾರದ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿದ್ದಾರೆ.
ಸಲಗ ಏ.15, ಕೋಟಿಗೊಬ್ಬ 3 ಏ.29, ಭಜರಂಗಿ 2 ಮೇ 14 | Kannada movie salaga kotigobba 3 bajarangi 2 release date announced vcs
Bangalore, First Published Jan 21, 2021, 8:42 AM IST
ಬಹುತೇಕ ಸ್ಟಾರ್‌ ಸಿನಿಮಾಗಳ ಬಿಡುಗಡೆ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 15ರಂದು ಕೆ ಪಿ ಶ್ರೀಕಾಂತ್‌ ನಿರ್ಮಾಣದ, ದುನಿಯಾ ವಿಜಯ್‌ ನಿರ್ದೇಶನದ 'ಸಲಗ', ಏಪ್ರಿಲ್‌ 29ಕ್ಕೆ ಸೂರಪ್ಪ ಬಾಬು ನಿರ್ಮಾಣದ, ಶಿವ ಕಾರ್ತಿಕ್‌ ನಿರ್ದೇಶನದ 'ಕೋಟಿಗೊಬ್ಬ 3' ಹಾಗೂ ಮೇ.14ರಂದು ಜಯಣ್ಣ ನಿರ್ಮಾಣದ, ಹರ್ಷ ನಿರ್ದೇಶನದ 'ಭಜರಂಗಿ 2' ಚಿತ್ರಗಳು ಬಿಡುಗಡೆಯಾಗುತ್ತಿವೆ.
ಹೊಸ ರೆಕಾರ್ಡ್ ಮಾಡಿದ ಕೋಟಿಗೊಬ್ಬ 3 ಸಿನಿಮಾ..!
ಒಬ್ಬರಿಗೊಬ್ಬರು ಸ್ಪರ್ಧೆಗೆ ಬೀಳದಂತೆ ನಮ್ಮ ತಂಡದ ನಿರ್ಮಾಪಕರು ನಿರ್ಮಿಸಿರುವ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತರುತ್ತಿದ್ದೇವೆ. ಹೀಗಾಗಿ ಮೊದಲೇ ಆಯಾ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದೇವೆ. - ಸೂರಪ್ಪ ಬಾಬು, ನಿರ್ಮಾಪಕ
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ಗೆ ಕೊರೊನಾ ಸೋಂಕು | Supreme Court Judge Justice DY Chandrachud Tests Positive For Covid-19 - Kannada Oneindia
8 min ago ಇದು ಪಾಕಿಸ್ತಾನವಲ್ಲ; ಮುಡಾ ಆಯುಕ್ತರಿಂದ ಮೆಕ್ಯಾನಿಕ್‌ಗೆ ಧಮಕಿ
24 min ago SSLC ಪರೀಕ್ಷೆ 2021: ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
| Published: Wednesday, May 12, 2021, 17:49 [IST]
ಏಪ್ರಿಲ್ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ನಾಲ್ಕು ನ್ಯಾಯಮೂರ್ತಿಗಳು COVID-19 ಗೆ ಒಳಗಾಗಿದ್ದರು, ಅದೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ 44 ಸಿಬ್ಬಂದಿಗಳು ಸಹ ಧನಾತ್ಮಕ ಪರೀಕ್ಷೆ ನಡೆಸಿದ್ದು, ಇದರಿಂದಾಗಿ ನ್ಯಾಯಮೂರ್ತಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ದೊರೆಯಿತು.
supreme court judge justice coronavirus COVID19 disease health corona vaccine ನ್ಯಾಯಮೂರ್ತಿ ಸುಪ್ರೀಂಕೋರ್ಟ್ ಆರೋಗ್ಯ ರೋಗ ಕೊರೊನಾ ಲಸಿಕೆ
Supreme Court judge Justice DY Chandrachud has tested positive for Covid-19. A staff member, too, has tested positive for the virus.
ಮಹಾ'ರಾಷ್ಟ್ರಪತಿ' ಆಡಳಿತ: ರಾಮನಾಥ್ ಕೋವಿಂದ್ ಅಂಕಿತ - Andolana
November 12, 2019 November 13, 2019 Andolana
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಷ್ಟ್ರಪತಿ ರಾಮನಾಥ್‍ ಕೋವಿಂದ್ ಅಂಕಿತ ಹಾಕಿದ್ದಾರೆ. ಶಿವಸೇನೆ ಬಿಜೆಪಿ ಸಖ್ಯ ತೊರೆದಿದ್ದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಅತಿದೊಡ್ಡ ಪಕ್ಷವಾದ ಬಿಜೆಪಿ ಸರ್ಕಾರ ರಚನೆಯಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮೊದಲು ಶಿವಸೇನೆ, ಅನಂತರ ಎನ್‍ಸಿಪಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ಗಡವು ನೀಡಿದ್ದರು.
ಎನ್‍ಸಿಪಿ ಮಂಗಳವಾರ ರಾತ್ರಿ 8.30ರವರೆಗೆ ಹಕ್ಕು ಮಂಡನೆಗೆ ಅವಕಾಶವಿತ್ತು. ಈ ಬೆನ್ನಲ್ಲೇ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಿದ್ದರು. ಕೂಡಲೇ ಕೇಂದ್ರ ಸಚಿವ ಸಂಪುಟ ಸಭೆ ಕರೆಯಲಾಯಿತು. ಸಭೆಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲು ತೀರ್ಮಾನ ಮಾಡಲಾಯಿತು. ಶಿಫಾರಸನ್ನು ರಾಷ್ಟ್ರಪತಿಗೆ ಕಳುಹಿಸಿಕೊಡಲಾಯಿತು. ರಾಷ್ಟ್ರಪತಿ ರಾಮನಾಥ ಕೋವಿಂದ್‍ ಕೂಡಲೇ ಅದಕ್ಕೆ ಅಂಕಿತ ಹಾಕಿದರು.
ಅಕ್ಟೋಬರ್ 21ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ, ಶಿವಸೇನೆ ಪಕ್ಷಗಳು 161 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಬಿಜೆಪಿ 105, ಶಿವಸೇನೆ 56 ಸ್ಥಾನಗಳನ್ನು ಗೆದ್ದಿದ್ದವು. ಆದರೆ, ಅಧಿಕಾರ ಹಂಚಿಕೆ ಕುರಿತು ಎರಡೂ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಸ್ವತಂತ್ರವಾಗಿ ಯಾರಿಗೂ ಸರ್ಕಾರ ರಚನೆಗೆ ಬೇಕಾದ 145 ಸ್ಥಾನಗಳ ಬಲ ಇಲ್ಲದಿದ್ದುದರಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.
ಜಾರ್ಖಂಡ್‍ನಲ್ಲೂ ಮೈತ್ರಿಗೆ ಕುತ್ತು; ಬಿಜೆಪಿ ಸಖ್ಯ ಬಿಟ್ಟ ಎಲ್‍ಜೆಪಿ
BREAKING NEWS (889) SOMETHING ಸ್ಪೆಷಲ್ (3) Uncategorized (16) ಅಪರಾಧ & ಕಾನೂನು (326) ಉದ್ಯೋಗಗಳು (1) ಕಟಕಟೆಯ ಕಥೆಗಳು (3) ಕಾನೂನು ಅರಿವು (6) ಕೃಷಿ ಯೋಜನೆಗಳ ಮಾಹಿತಿ (1) ಕೊಡಗು (54) ಕೋರ್ಟ್ ತೀರ್ಪುಗಳು (33) ಕ್ರೀಡೆ (9) ಚಾಮರಾಜನಗರ (31) ಚಾಲಾಕಿ ಕಳ್ಳರು (17) ಚಿತ್ರ ಮಂಜರಿ (18) ಜಿಲ್ಲಾ ಸುದ್ದಿ (1) ತಿಳಿಯಿರಿ-ಬೆಳೆಯಿರಿ (1) ನಾಮಾವಳಿ (5) ಪೈರು (12) ಪ್ರಾಣಿ ಪ್ರಪಂಚ (34) ಮಂಡ್ಯ (58) ಮಹಿಳೆ (5) ಮಾದರಿ ಬೆಳೆಗಾರರು (3) ಮೈಸೂರು (420) ಮೈಸೂರು ಸ್ಪೆಷಲ್ (20) ರಾಜಕೀಯ (360) ವಾಣಿಜ್ಯ (18) ವಿಜ್ಞಾನ ಮತ್ತು ತಂತ್ರಜ್ಞಾನ (19) ವಿಶೇಷ ಬೆಳೆಗಳು (3) ಶಿಕ್ಷಣ & ಯುವಜನ (24) ಹಾಸನ (6)
ಅಮೆರಿಕ ಮಧ್ಯಸ್ಥಿಕೆ: ಇಸ್ರೇಲ್‌-UAE ಮೊದಲ ವಿಮಾನ ಹಾರಾಟ | Udayavani – ಉದಯವಾಣಿ
Wednesday, 19 Jan 2022 | UPDATED: 07:27 AM IST
ಅಮೆರಿಕ ಮಧ್ಯಸ್ಥಿಕೆ: ಇಸ್ರೇಲ್‌-UAE ಮೊದಲ ವಿಮಾನ ಹಾರಾಟ
Team Udayavani, Sep 1, 2020, 8:28 PM IST
ಟೆಲ್‌ಅವಿವ್‌: ಇಸ್ರೇಲ್‌ ಮತ್ತು ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ನಡುವೆ ಮೊಟ್ಟ ಮೊದಲ ವಾಣಿಜ್ಯ ಉದ್ದೇಶದ ವಿಮಾನ ಹಾರಾಟ ಸೋಮವಾರ ಆರಂಭವಾಯಿತು.
ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನ ಬೆನ್‌ ಗುರಿಯಾನ್‌ ವಿಮಾನನಿಲ್ದಾಣದಿಂದ ಈ ವಿಮಾನ ಅಬು ಧಾಬಿಯತ್ತ ಹಾರಿತು.
ಅಮೆರಿಕ ಮಧ್ಯಸ್ಥಿಕೆಯ ಪರಿಣಾಮ ಉಭಯ ದೇಶಗಳ ನಡುವೆ ಸಂಧಾನ ಯಶಸ್ವಿಯಾಯಿತು.
ರಾಜತಾಂತ್ರಿಕ ಸಂಬಂಧಕ್ಕೆ ಚಾಲನೆ ನೀಡುವುದಾಗಿ ಎರಡೂ ದೇಶಗಳು ಆಗಸ್ಟ್‌ 13ರಂದು ಪ್ರಕಟಿಸಿದವು. ಈ ಬೆಳವಣಿಗೆಯ ಬೆನ್ನಲ್ಲೇ ಐತಿಹಾಸಿಕ ವಿಮಾನ ಹಾರಾಟ ಆರಂಭಗೊಂಡಿತು.
ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆರ್‌ ಬೆನ್‌ ಶಬ್ಬತ್‌ ನೇತೃತ್ವದ ತಂಡ, ಅಮೆರಿಕ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್‌ ಅವರ ಸಲಹೆಗಾರ ಮತ್ತು ಅಳಿಯ ಜರೇಡ್‌ ಕುಶ್ನರ್‌ ನೇತೃತ್ವದ ತಂಡ ಹಾಗೂ ಭದ್ರತಾ ಸಲಹೆಗಾರ ರಾಬರ್ಟ್‌ ಒಬ್ರಿಯಾನ್‌ ಸೇರಿದಂತೆ ಉನ್ನತ ಅಧಿಕಾರಿಗಳು ಈ ವಿಮಾನದಲ್ಲಿ ಪ್ರಯಾಣಿಸಿದರು.
ಈಜಿಫ್ಟ್‌ ಮತ್ತು ಜೋರ್ಡಾನ್‌ ನಂತರ ಇಸ್ರೇಲ್‌ ಜೊತೆ ರಾಜತಾಂತ್ರಿಕ ಸಂಬಂಧ ಹೊಂದಿದ ಮೂರನೇ ಅರಬ್‌ ದೇಶ ಯುಎಇ ಆಗಿದೆ.
ಪ್ರವಾಸೋದ್ಯಮ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯವಾಗಲಿದೆ. ಈ ದ್ವಿಪಕ್ಷೀಯ ಸಂಬಂಧವನ್ನು ಮತ್ತೂಂದು ಮಜಲಿಗೆ ಒಯ್ಯವುದು ಸರಕಾರದ ಆಶಯವಾಗಿದೆ.
ಸೌದಿ ಅರೇಬಿಯಾ ಸಹ ತನ್ನ ವಾಯುಪ್ರದೇಶದ ಮೂಲಕ ಇಸ್ರೇಲ್‌ ವಿಮಾನ ಹಾರಾಟ ನಡೆಸಲು ಅನುಮತಿ ನೀಡಿದೆ. ಅದರಲ್ಲೂ ಅಮೆರಿಕ ಈ ಸಂಬಂಧ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್‌ನ ಚಾನೆಲ್‌ 12 ಸುದ್ದಿಸಂಸ್ಥೆ ವರದಿ ಮಾಡಿದೆ.
ಟೆಲ್‌ ಅವಿವ್‌ ಮತ್ತು ನವದೆಹಲಿ ನಡುವಿನ ವಿಮಾನ ಸಹ ಸೌದಿ ಅರೇಬಿಯಾ ವಾಯುಪ್ರದೇಶ ಮೂಲಕವೇ ಹಾರಾಟ ನಡೆಸುತ್ತಿದೆ. ಆದರೆ, ಇಸ್ರೇಲ್‌ ಮೂಲದ ವಿಮಾನಗಳ ಹಾರಾಟಕ್ಕೆ ಸೌದಿ ಅರೇಬಿಯಾ ತನ್ನ ವಾಯುಪ್ರದೇಶವನ್ನು ಮುಕ್ತಗೊಳಿಸಿಲ್ಲ.
ಮಂಗಳೂರಿನ ವಿವಿಧೆಡೆ ರಾಷ್ಟ್ರೀಯ ಏಕತಾ ಓಟ: ಯಾರೆಲ್ಲಾ ಭಾಗವಹಿಸಿದ್ದರು? | Unity run marks Sardar Patel's Birth anniversary in Dakshina Kannada - Kannada Oneindia
2 min ago ಅನುಮತಿ ಪಡೆಯದೆ ಪುರಾತನ ಮೂರ್ತಿ ಇಟ್ಟುಕೊಂಡ ಆರೋಪ: ಕಲಾವಿದೆ ಬಂಧನ
5 min ago ಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿ
10 min ago ಅಮೆರಿಕಾ ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತಕ್ಕೆ ಹೆಚ್ಚಿನ ಆದ್ಯತೆ:ಜೋ ಬಿಡೆನ್
| Published: Wednesday, October 31, 2018, 12:45 [IST]
ಮಂಗಳೂರು, ಅಕ್ಟೋಬರ್. 31: ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ಅಂಗವಾಗಿ ನಡೆಯುವ ರಾಷ್ಟ್ರೀಯ ಏಕತಾ ಓಟವನ್ನು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಬುಧವಾರ ಆಯೋಜಿಸಲಾಗಿತ್ತು.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ , ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಸೇರಿದಂತೆ ಸುಳ್ಯದಲ್ಲಿ ಕೂಡ ಏಕತಾ ಓಟ ನಡೆಯಿತು. ಪುತ್ತೂರಿನಲ್ಲಿ ಆಯೋಜಿಸಲಾಗಿದ್ದ ಏಕತಾ ಓಟ ಪುತ್ತೂರು ಅಂಜನೇಯ ಮಂತ್ರಾಲಯದಿಂದ ದರ್ಬೆ ವೃತ್ತದವರೆಗೆ ಸಾಗಿತು. ಓಟದಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಶಾಸಕ ಸಂಜೀವ ಮಠಂದೂರು ಓಟಕ್ಕೆ ಚಾಲನೆ ನೀಡಿದರು.
ನಗರದ ಕದ್ರಿಯಲ್ಲಿ ಆಯೋಜಿಸಲಾಗಿದ್ದ ಏಕತೆಗಾಗಿ ಓಟದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಭಾಗವಹಿಸಿದ್ದರು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟವನ್ನು ಮುಖಂಡರಾದ ಟಿ.ಜಿ. ರಾಜಾರಾಂ ಭಟ್ ಉದ್ಘಾಟಿಸಿದರು. ಎರಡೂ ಕಾಲುಗಳಲ್ಲೂ ಬಲವಿಲ್ಲದಿದ್ದರೂ ಎರಡು ಕಿ.ಮೀ. ಏಕತಾ ಓಟದಲ್ಲಿ ನರಿಂಗಾನ ಪಡ್ಪುವಿನ ಪಿ.ಇಬ್ರಾಹಿಂ ಪಾಲ್ಗೊಂಡರು.
ಮಂಗಳೂರು ಉತ್ತರ ಕ್ಷೇತ್ರ ಸುರತ್ಕಲ್ ನಲ್ಲಿ ಕೂಡ ಇಂದು ಏಕತಾ ಓಟ ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಮತ್ತಿತರರು ಓಟದಲ್ಲಿ ಪಾಲ್ಗೊಂಡರು. ಬೆಳ್ತಂಗಡಿ, ಸುಳ್ಯದಲ್ಲೂ ಬಿಜೆಪಿ ವತಿಯಿಂದ ಏಕತಾ ಓಟ ಆಯೋಜಿಸಿದ್ದರು.
dakshina kannada mangaluru sardar patel district bjp district news ದಕ್ಷಿಣ ಕನ್ನಡ ಮಂಗಳೂರು ಓಟ ಬಿಜೆಪಿ ಜಿಲ್ಲಾಸುದ್ದಿ
Dakshina Kannada BJP unit organised Run for unity marathon in all Constituency. All BJP leaders participated in Unity run.
ಗಡಿನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಸಂಭ್ರಮ | Prajavani
ಗಡಿನಾಡಿನಲ್ಲಿ ಸಾಹಿತ್ಯ ಸಮ್ಮೇಳನ ಸಂಭ್ರಮ
ಪ್ರಜಾವಾಣಿ ವಾರ್ತೆ Updated: 22 ಜೂನ್ 2013, 16:47 IST
ಬೆಳಗಾವಿ ಗಡಿ ಭಾಗದಲ್ಲಿ ಕನ್ನಡಪರ ಚಟುವಟಿಕೆ ನಡೆಯುವುದು ಎಂದರೆ ಅದೊಂದು ನುಡಿಹಬ್ಬ, ನುಡಿ ಸಂಭ್ರಮ. ಇಂತಹ ಎಷ್ಟೋ ಸಂಭ್ರಮಗಳನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡು ತಾನೂ ಸಂಭ್ರಮಪಟ್ಟು ಕನ್ನಡ ಮನಸ್ಸುಗಳನ್ನು ಸಂಭ್ರಮಿಸುವಂತೆ ಮಾಡಿದ ಹಿರಿಮೆಯ ಬೆಳಗಾವಿ ನೆಲದ್ದಾಗಿದೆ.
ಇದುವರೆಗೆ ನಡೆದ ಒಟ್ಟು 5 ಅಖಿಲ ಭಾರತ ಮತ್ತು 7 ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು; ರಾಜಧಾನಿ ಬೆಂಗಳೂರಿನಲ್ಲಿರುವ ಸರ್ಕಾರವನ್ನು ಬೆಳಗಾವಿಗೆ ತಂದು ಎರಡು ಸಲ ನಡೆಸಿದ ವಿಧಾನ ಮಂಡಲದ ಅಧಿವೇಶನಗಳು ಸಂಭ್ರಮದ ಪಟ್ಟಿಯ ಪ್ರಮುಖ ಘಟನಾವಳಿಗಳಾಗಿದೆ. ಇದೀಗ ಗಡಿ ಭಾಗವಾದ ನಿಪ್ಪಾಣಿಯಲ್ಲಿ ಜೂನ್ 22 ಹಾಗೂ 23ರಂದು ನಡೆಯುವ 8ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಮನಸ್ಸಿನ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಈ ವರ್ಷ ಎಲ್ಲ ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಬೇಕು ಎಂಬುದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಚ್ಛಾಶಕ್ತಿಯಾಗಿದೆ. ಈಗಾಗಲೇ 8 ತಾಲ್ಲೂಕುಗಳಲ್ಲಿ ಸಮ್ಮೇಳನಗಳನ್ನು ಏರ್ಪಡಿಸಿದ್ದು, 9ನೇ ತಾಲ್ಲೂಕಾಗಿ ಅಥಣಿಯಲ್ಲಿ ಜೂನ್ 24ರಂದು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಹತ್ತೂ ತಾಲ್ಲೂಕುಗಳಲ್ಲಿ ಸಮ್ಮೇಳನ ಏರ್ಪಡಿಸಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ.
ಸಮ್ಮೇಳನಗಳವೆಂದರೆ, ಒಂದು ದಿನದ ಜಾತ್ರೆ, ಊಟ, ಭಾಷಣಗಳಿಗೆ ಸೀಮಿತ ಎಂಬ ಭಾವನೆ ಇತ್ತೀಚೆಗೆ ಬೇರೂರಿದೆ. ಆದರೆ ತಾಲ್ಲೂಕು ಸಮ್ಮೇಳನಗಳಲ್ಲಿ ಮಂಡಿಸಿದ ಠರಾವುಗಳು ಕಾರ್ಯರೂಪಕ್ಕೆ ಬರುವ ಲಕ್ಷಣಗಳು ಕಂಡು ಬರುತ್ತಿದೆ. ಎಲ್ಲ ತಾಲ್ಲೂಕು ಸಮ್ಮೇಳನಗಳಲ್ಲಿ ಬೆಳಗಾವಿಯ `ಸುವರ್ಣ ವಿಧಾನಸೌಧ'ಕ್ಕೆ ರಾಜ್ಯಮಟ್ಟದ ಕಚೇರಿಗಳು ಸ್ಥಳಾಂತರಗೊಳ್ಳಬೇಕು ಎಂಬ ಠರಾವು ಮಂಡಿಸಲಾಗಿದೆ. ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ದೇಶನೂರಿನಲ್ಲಿ ನಡೆದ ಮೊದಲನೇ ಬೈಲಹೊಂಗಲ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅವಸಾನದ ಅಂಚಿನಲ್ಲಿರುವ ಸ್ಮಾರಕ `ನಿರಂಜನಿ ಮಹಲ್'ಗೆ ಕಾಯಕಲ್ಪ ನೀಡಬೇಕು ಎಂಬ ಠರಾವು ಮಂಡಿಸಲಾಗಿತ್ತು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು, ಮುಂದಿನ ಸಮ್ಮೇಳನ ನಡೆಯುವುದರೊಳಗಾಗಿ ಈ ಸ್ಮಾರಕಕ್ಕೆ ಕಾಯಕಲ್ಪ ನೀಡುವುದಾಗಿ ಘೋಷಿಸಿದ್ದಾರೆ.
ನಿಪ್ಪಾಣಿಯಲ್ಲಿ ಜೂನ್ 22 ಹಾಗೂ 23ರಂದು 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಇದುವರೆಗೆ ನಡೆದ ಏಳು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳ ಪಕ್ಷಿನೋಟವನ್ನು ನೋಡೋಣ.
ಬೆಳಗಾವಿ ನಗರದ ಕಲಾ ಮಂದಿರಲ್ಲಿ 1971ರ ಸೆಪ್ಟೆಂಬರ್‌ನಲ್ಲಿ ಮೊಟ್ಟ ಮೊದಲನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಮೂಲಕ ಗಡಿ ಭಾಗದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಂದಿಯಾಯಿತು. ಇದರ ಅಧ್ಯಕ್ಷತೆಯನ್ನು ಡಾ. ಹಾ.ಮಾ. ನಾಯಕ ವಹಿಸಿದ್ದರು. ವರಕವಿ ಡಾ. ದ.ರಾ. ಬೇಂದ್ರೆ ಹಾಗೂ ಸಿದ್ಧಯ್ಯ ಪುರಾಣಿಕರ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
1984ರ ಮೇ ತಿಂಗಳಲ್ಲಿ ಬೆಳಗಾವಿ ನಗರದ ಮಾಣಿಕಭಾಗ ಜೈನ್ ಹಾಸ್ಟೇಲ್‌ನಲ್ಲಿ ಎರಡನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಇದರ ಅಧ್ಯಕ್ಷತೆಯನ್ನು ಹಂಪನಾ ವಹಿಸಿದ್ದರೆ, ಉದ್ಘಾಟಕರಾಗಿ ಡಾ. ಯು.ಆರ್. ಅನಂತಮೂರ್ತಿ ಆಗಮಿಸಿದ್ದರು. ಡಾ. ಹಾ.ಮಾ.ನಾ. ಸಮರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
3ನೇ ಜಿಲ್ಲಾ ಮಟ್ಟದ ಸಮ್ಮೇಳನವು 1992ರ ಮಾರ್ಚ್‌ನಲ್ಲಿ ನಗರದ ಕಲಾಮಂದಿರದಲ್ಲಿ ಡಾ. ಎಂ.ಎಸ್. ಲಠ್ಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ಬೈಲಹೊಂಗಲ ತಾಲ್ಲೂಕಿನ ತಿರುಳ್ಗನ್ನಡ ನಾಡೆಂದು ಹೆಸರಾದ `ವಕ್ಕುಂದ'ದಲ್ಲಿ 1999ನೇ ಸಾಲಿನ ಏಪ್ರಿಲ್‌ನಲ್ಲಿ ನಡೆದ 4ನೇ ಸಮ್ಮೇಳನದ ಅಧ್ಯಕ್ಷತೆಯನ್ನು ಬ.ಗಂ. ತುರವರಿ ವಹಿಸಿದ್ದರು. ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ 2006ರ ನವೆಂಬರ್‌ನಲ್ಲಿ ನಡೆದ 5ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಶ್ರೀರಾಮ ಇಟ್ಟಣ್ಣನವರ ಅಧ್ಯಕ್ಷತೆಯಲ್ಲಿ ನಡೆದಿತ್ತು.
2010ರ ಮಾರ್ಚ್‌ನಲ್ಲಿ ಬೆಳಗಾವಿಯಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ವಹಿಸಿದ್ದರು. ಸಿದ್ಧೇಶ್ವರ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಒಟ್ಟು ಐದು ಕೃತಿಗಳನ್ನು ಹೊರತರಲಾಗಿತ್ತು. ಜಿಲ್ಲೆಯ ಸುಮಾರು 70 ಸಾಹಿತಿ, ವಿದ್ವಾಂಸರನ್ನು ಸನ್ಮಾನಿಸಲಾಗಿತ್ತು.
2011ರ ಏಪ್ರಿಲ್‌ನಲ್ಲಿ ಕಿತ್ತೂರಿನಲ್ಲಿ ನಡೆದ 7ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಬಿ.ಎ. ಸನದಿ ವಹಿಸಿದ್ದರು. ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಸಾಹಿತಿ ಚಂದ್ರಕಾಂತ ಕುಸುನೂರ ಸಮ್ಮೇಳನ ಉದ್ಘಾಟಿಸಿದ್ದರು.
22ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.
ಈ ಸಮ್ಮೇಳನದ ವಿಶೇಷತೆ ಎಂದರೆ ಗಡಿ ಭಾಗದಲ್ಲಿ ಕನ್ನಡ- ಮರಾಠಿ ಭಾಷಿಕರ ಬಾಂಧವ್ಯದ ಬೆಸುಗೆಯಾಗಿದೆ. ಈ ಹಿನ್ನೆಲೆಯಲ್ಲಿ ಬಹುಭಾಷಾ ಕವಿಗೋಷ್ಠಿ, ಗಡಿ ಭಾಗದ ಸಾಮರಸ್ಯ ಮತ್ತು ಸೌಹಾರ್ದತೆ, ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ ಮುಂತಾದ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ವಿಶೇಷವಾಗಿ ದಲಿತ- ಬಂಡಾಯ ಕುರಿತ ಗೋಷ್ಠಿಯನ್ನೂ ಏರ್ಪಡಿಸಲಾಗಿದೆ.
ನಿಪ್ಪಾಣಿಯಂತಹ ಗಡಿಭಾಗದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಇದಾಗಿದೆ. 8ನೇ ಸಾಹಿತ್ಯ ಸಮ್ಮೇಳನದ ಅಂಗವಾಗಿ 8 ಲೇಖಕರ ಕೃತಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಇವುಗಳಲ್ಲಿ ಇಂಗ್ಲಿಷ್, ಮರಾಠಿ ಹಾಗೂ ಗುಜರಾತಿ ಭಾಷೆಗಳ ಕೃತಿಗಳೂ ಇವೆ.
ಯ.ರು. ಪಾಟೀಲ ಅಧ್ಯಕ್ಷರು, ಕಸಾಪ ಜಿಲ್ಲಾ ಘಟಕ
'); $('#div-gpt-ad-165961-2').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-165961'); }); googletag.cmd.push(function() { googletag.display('gpt-text-700x20-ad2-165961'); }); },300); var x1 = $('#node-165961 .field-name-body .field-items div.field-item > p'); if(x1 != null && x1.length != 0) { $('#node-165961 .field-name-body .field-items div.field-item > p:eq(0)').append('
'); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-165961').addClass('inartprocessed'); } else $('#in-article-165961').hide(); } else { _taboola.push({article:'auto', url:'https://www.prajavani.net/article/ಗಡಿನಾಡಿನಲ್ಲಿ-ಸಾಹಿತ್ಯ-ಸಮ್ಮೇಳನ-ಸಂಭ್ರಮ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-165961', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-165961'); }); googletag.cmd.push(function() { googletag.display('gpt-text-300x20-ad2-165961'); }); // Remove current Outbrain //$('#dk-art-outbrain-165961').remove(); //ad before trending $('#mob_rhs1_165961').prepend('
'); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-165961 .field-name-body .field-items div.field-item > p'); if(x1 != null && x1.length != 0) { $('#node-165961 .field-name-body .field-items div.field-item > p:eq(0)').append('
'); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-165961 .field-name-body .field-items div.field-item > p:eq(2)').after('
'); googletag.cmd.push(function() { googletag.display('in-article-mob-3rd-165961'); }); } else { $('#in-article-mob-165961').hide(); $('#in-article-mob-3rd-165961').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $('
'; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-165961','#in-article-829557','#in-article-829547','#in-article-829528','#in-article-829517']; var twids = ['#twblock_165961','#twblock_829557','#twblock_829547','#twblock_829528','#twblock_829517']; var twdataids = ['#twdatablk_165961','#twdatablk_829557','#twdatablk_829547','#twdatablk_829528','#twdatablk_829517']; var obURLs = ['https://www.prajavani.net/article/ಗಡಿನಾಡಿನಲ್ಲಿ-ಸಾಹಿತ್ಯ-ಸಮ್ಮೇಳನ-ಸಂಭ್ರಮ','https://www.prajavani.net/district/belagavi/belgaum-police-busted-the-fake-id-card-scam-and-arrested-two-people-829557.html','https://www.prajavani.net/district/belagavi/residents-oppose-to-covid-care-center-belagavi-covid-829547.html','https://www.prajavani.net/district/belagavi/this-doctor-go-to-patients-house-to-give-treatment-in-gokak-829528.html','https://www.prajavani.net/district/belagavi/dcm-govind-karajola-suggest-to-start-kuteeras-for-orphan-children-829517.html']; var vuukleIds = ['#vuukle-comments-165961','#vuukle-comments-829557','#vuukle-comments-829547','#vuukle-comments-829528','#vuukle-comments-829517']; // var nids = [165961,829557,829547,829528,829517]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
ಆಕಾಶವಾಣಿ : ಭಾನುವಾರ ಕೈಲಾಸಂ ಮಾತನ್ನು ಆಲಿಸಿರಿ.. | Radio programme on T.P. Kailasam - Kannada Oneindia
ಆಕಾಶವಾಣಿ : ಭಾನುವಾರ ಕೈಲಾಸಂ ಮಾತನ್ನು ಆಲಿಸಿರಿ..
ಬೆಂಗಳೂರು : ಆಕಾಶವಾಣಿಯಲ್ಲಿ ಮೂಡಿಬರುತ್ತಿರುವ ಕನ್ನಡದ ಕಣ್ಮಣಿಗಳು ಧಾರಾವಾಹಿಯಲ್ಲಿ, ಟಿ.ಪಿ.ಕೈಲಾಸಂ ಬಗ್ಗೆ ಭಾನುವಾರ ಬೆಳಗ್ಗೆ 8.40ರಿಂದ 9.10ರವರೆಗೆ ಕಾರ್ಯಕ್ರಮ ಮೂಡಿಬರಲಿದೆ.
ಹಾಸ್ಯ ಪಿತಾಮಹ ಕೈಲಾಸಂ ಶೀರ್ಷಿಕೆಯಡಿಯಲ್ಲಿ ಮೂಡಿಬರಲಿರುವ ಕಾರ್ಯಕ್ರಮದಲ್ಲಿ, ಕೈಲಾಸಂ ಅವರ ಧ್ವನಿಮುದ್ರಿಕೆಯನ್ನು ಪ್ರಸಾರ ಮಾಡಲಾಗುತ್ತದೆ. ಕೈಲಾಸಂ ವಾಕ್‌ಚಾತುರ್ಯ ಹೇಗಿತ್ತು ಎಂಬುದನ್ನು ಕೇಳುಗರು ಆಲಿಸಬಹುದು. ಬಿ.ಎಸ್‌.ಕೇಶವ ರಾವ್‌ ಮತ್ತು ರಂಗನಾಥ ರಾವ್‌ ಅವರುಗಳು ಕೈಲಾಸಂರನ್ನು ಪರಿಚಯಿಸಲಿದ್ದಾರೆ.
ಕುದುರೆಮುಖ ಐರನ್ ಓರ್ ಕಂಪೆನಿಯಲ್ಲಿ ಅಧಿಕಾರಿ (ಲಾ) ಹುದ್ದೆಗಳಿಗೆ ಅರ್ಜಿ ಆಹ್ವಾನ | KIOCL Limited Recruitment 2019 – Apply For Officer (Law) Posts - Kannada Careerindia
» ಕುದುರೆಮುಖ ಐರನ್ ಓರ್ ಕಂಪೆನಿಯಲ್ಲಿ ಅಧಿಕಾರಿ (ಲಾ) ಹುದ್ದೆಗಳಿಗೆ ಅರ್ಜಿ ಆಹ್ವಾನ
ಕುದುರೆಮುಖ ಐರನ್ ಓರ್ ಕಂಪೆನಿಯಲ್ಲಿ ಅಧಿಕಾರಿ (ಲಾ) ಹುದ್ದೆಗಳಿಗೆ ಅರ್ಜಿ ಆಹ್ವಾನ
Published: Saturday, May 18, 2019, 11:48 [IST]
ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್ ನೇಮಕಾತಿ ಅಧಿಕಾರಿ (ಲಾ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಧಿಸೂಚನೆಯನ್ನು ಓದಬಹುದು.
ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಕಚೇರಿಯ ವಿಳಾಸಕ್ಕೆ ಕಳುಹಿಸಬೇಕಿರುತ್ತದೆ. ಹುದ್ದೆಗಳಿಗೆ ನೀಡಲಾಗುವ ವೇತನ ಮತ್ತು ಕೇಳಲಾಗಿರುವ ಅರ್ಹತೆಯನ್ನು ತಿಳಿಯಲು ಮುಂದೆ ಓದಿ.
Name Of The Posts ಅಧಿಕಾರಿ (ಕಾನೂನು)
Organisation ಕುದುರೆಮುಖ ಐರನ್ ಓರ್ ಕಂಪೆನಿ ಲಿಮಿಟೆಡ್ (ಕೆಐಓಸಿಎಲ್‌ ಲಿಮಿಟೆಡ್)
Educational Qualification ಎಲ್‌ಎಲ್‌ಬಿ ಪದವಿ / ಸ್ನಾತಕೋತ್ತರ ಪದವಿ
Salary Scale ತಿಂಗಳಿಗೆ 35,000/- ರೂ
Application Start Date May 21, 2019
ಅಧಿಕಾರಿ ಹುದ್ದೆಗಳಿಗೆ ಎಲ್‌ಎಲ್‌ಬಿ ಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಏಪ್ರಿಲ್ 30,2019 ರ ಅನ್ವಯ ಗರಿಷ್ಟ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ೩5,000/- ರೂ ವೇತನವನ್ನು ನೀಡಲಾಗುವುದು.
ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಕೆಐಓಸಿಎಲ್‌ನ ಅಧಿಕೃತ ವೆಬ್‌ಸೈಟ್ https://www.kioclltd.in/ ಗೆ ಹೋಗಿ ಅಧಿಸೂಚನೆಯನ್ನು ಓದಿಕೊಳ್ಳಬಹುದು. ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಜೂನ್ 7,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅರ್ಜಿಯನ್ನು ಡೌನ್‌ಲೋಡ್ ಮಾಡಿ ಪ್ರಿಂಟೌಟ್‌ ಅನ್ನು ತೆಗೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಕಚೇರಿಯ ವಿಳಾಸಕ್ಕೆ ಜೂನ್ 13,2019 ರೊಳಗೆ ಪೋಸ್ಟ್ ಮೂಲಕ ಕಳುಹಿಸಬೇಕಿರುತ್ತದೆ.
ಹೆಚ್‌.ಆರ್‌ ಡಿಪಾರ್ಟ್ಮೆಂಟ್,
ಕೆಐಓಸಿಎಲ್‌ ಲಿಮಿಟೆಡ್,