text
stringlengths
0
61.5k
ಗತಪ್ರತ್ಯಾಗತ .
೧.ಶಾಂತಿ ಪುರಾಣ -ಇದಕ್ಕೆ 'ಪುರಾಣ ನಾಮ ಚೂಡಾಮಣಿ'ಎಂಬ ಪರ್ಯಾಯನಾಮವಿದೆ.೧೨ ಆಶ್ವಾಸಗಳಲ್ಲಿ ರಚನೆಯಾಗಿರುವ ಈ ಚಂಪೂ ಕಾವ್ಯ ೧೬ನೆಯ ತೀರ್ಥಂಕರನಾದ ಶಾಂತಿನಾಥನನ್ನು ಕುರಿತದ್ದು.ಈ ಕಾವ್ಯದಲ್ಲಿ ಪೊನ್ನನ ವಿದ್ವತ್ತು,ಪ್ರೌಢಿಮೆ,ಭಾಷೆ,ಛಂದಸ್ಸುಗಳ ಮೇಲೆ ಇರುವ ಹಿಡಿತ ಎದ್ದು ಕಾಣುತ್ತದೆ.ತೀರ್ಥಂಕರನಾಗಲಿರುವವನು ೬ನೆಯ ಜನ್ಮದಲ್ಲಿ 'ಅಪರಾಜಿತ'ನಾಗಿ ಹುಟ್ಟಿದಂದಿನಿಂದ ಕಥೆ ಆರಂಭವಾಗಿ,ಕೊನೆಯ ೩(೧೦-೧೨) ಆಶ್ವಾಸಗಳಲ್ಲಿ ಶಾಂತಿನಾಥನ ಸ್ವಂತ ಜೀವನವೂ,ಸಿದ್ಧಿಯೂ ವರ್ಣಿಸಲ್ಪಟ್ಟಿದೆ.ಜೈನಧರ್ಮದ ತತ್ವಗಳನ್ನು ಕವಿ ಕಾವ್ಯದುದ್ದಕ್ಕೂ ಪ್ರತಿಪಾದಿಸಿದ್ದಾನೆ.
೨.ಜಿನಾಕ್ಷರಮಾಲೆ-೩೯ ಕಂದಪದ್ಯಗಳಿರುವ ಕೃತಿ.'ಕ'ಕಾರದಿಂದ ಹಿಡಿದು 'ಳ'ಕಾರದವರೆಗೂ ಕ್ರಮವಾಗಿ ಒಂದೊಂದು ಪದ್ಯಾಕ್ಷರ ಆರಂಭವಾಗುತ್ತದೆ.
೩.ಭುವನೈಕ ರಾಮಾಭ್ಯುದಯ-ಇದು ೧೪ ಆಶ್ವಾಸಗಳ ಚಂಪೂ ಕಾವ್ಯ.ಈ ಗ್ರಂಥವು ಲಭ್ಯವಿಲ್ಲವಾದ್ದರಿಂದ ಇದರ ಕಥಾವಸ್ತು ಚಕ್ರವರ್ತಿ ಕೃಷ್ಣನ ಸಾಮಂತರಾಜ ಶಂಕರಗಂಡನ ಕುರಿತುದೊ,ಅಥವಾ ರಾಮಕಥೆಯನ್ನು ಕುರಿತುದೊ,ಇಲ್ಲವೇ ತನ್ನನ್ನು 'ಕೋದಂಡರಾಮ'ನೆಂದು ಕರೆದುಕೊಳ್ಳುತ್ತಿದ್ದ ಚೋಳರಾಜ ರಾಜಾದಿತ್ಯನ ಮೇಲೆ ಮುಮ್ಮಡಿಕೃಷ್ನ ತಕ್ಕೋಲದಲ್ಲಿ ವಿಜಯ ಸಾಧಿಸಿದ ಕಥೆಯೋ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.ಮಲ್ಲಪನ ಮಗಳಾದ 'ದಾನಚಿಂತಾಮಣಿ'ಅತ್ತಿಮಬ್ಬೆಯು ಈ ಕೃತಿಯ ಸಾವಿರ ಪ್ರತಿಗಳನ್ನು ಮಾಡಿಸಿ,ಧರ್ಮಶ್ರದ್ಧೆಯುಳ್ಳವರಿಗೆ ಹಂಚಿದಳಂತೆ.
ಆದಾಯ: Latest ಆದಾಯ News & Updates, Photos & Images, Videos | Vijaya Karnataka - Page 3
October,17,2019, 06:44:12
ಎರಡನೇ ದಿನವೂ ಮುಂದುವರಿದ ಐಟಿ ಶೋಧ
ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಸೋದರ ಅಳಿಯ ಜಿ.ಎಚ್‌.ನಾಗರಾಜು ಅವರ ಚಿಕ್ಕಬಳ್ಳಾಪುರದ ಮನೆಯ ಮೇಲೆ ದಾಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎರಡನೇ ದಿನವಾದ ಶುಕ್ರವಾರವೂ ದಾಳಿ ನಡೆಸಿ ತನಿಖೆ ಮುಂದುವರೆಸಿದ್ದಾರೆ.
'ಸ್ವಂತ ಉದ್ದಿಮೆ ತೆರೆದು ಸ್ವಾವಲಂಬಿಗಳಾಗಿ'
Oct 12, 2019, 03.57 PM
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶ ದಿಂದಲೇ ಸ್ವಂತ ಉದ್ಯೋಗದ ತರಬೇತಿಗಳನ್ನು ನೀಡುತ್ತಿದೆ ಎಂದು ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ಪ್ರಬಂಧಕರಾದ ವಿ. ಕಾಮತ್‌ ಹೇಳಿದರು.
'ಪರಮಾ'ಪ್ತ ಸಹಾಯಕ ರಮೇಶ್‌ ಕೂಡ ಸಿರಿವಂತ?
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಪರಮೇಶ್ವರ್‌ ಆಪ್ತ ಸಹಾಯಕನ ಆಸ್ತಿ ಬಗ್ಗೆ ಎಲ್ಲಡೆ ಚರ್ಚೆಯಾಗುತ್ತಿದೆ.
ಪ್ರಸ್ತುತ ಪ್ರವಾದಿ ನಿಂದನೆ: ಭುಗಿಲೆದ್ದ ಜಾಗತಿಕ ಆಕ್ರೋಶ – Prasthutha
✍️ಇಲ್ಯಾಸ್ ಮುಹಮ್ಮದ್
►ವಿಶ್ವದ ಮುಂದೆ ಕುಗ್ಗಿದ ಭಾರತ
ಜಗತ್ತಿನ ಮುಂದೆ ಭಾರತದ ಮಾನ ಮೂರಾಬಟ್ಟೆಯಾಗಿರುವುದು ಇಂದು ಹೊಸತೇನಲ್ಲ. ಈ ಹಿಂದೆ ಗಾಂಧೀಜಿಯವರನ್ನು ಕೊಂದಾಗ, ಬಾಬರಿ ಮಸ್ಜಿದ್ ಧ್ವಂಸಗೊಳಿಸಿದಾಗ, ದೆಹಲಿಯ ರಸ್ತೆಗಳಲ್ಲಿ ಸಿಖ್ಖರನ್ನು ಬೆಂಬತ್ತಿ ಹತ್ಯಾಕಾಂಡ ನಡೆಸಿದಾಗ, ಗುಜರಾತಿನಲ್ಲಿ ಸಾವಿರಾರು ಮುಸ್ಲಿಮರ ನರಮೇಧ ನಡೆಸಿದಾಗ ವಿಶ್ವದಾದ್ಯಂತ ಭಾರತವು ಛೀಮಾರಿ ಎದುರಿಸಿ ತಲೆತಗ್ಗಿಸಿ ನಿಂತಿತ್ತು. ಅದೇ ಹಾದಿಯಲ್ಲಿ ಭಾರತ ಇಂದು ಅಪಮಾನಕ್ಕೊಳಗಾಗಿ ತಲೆ ತಗ್ಗಿಸಿ ನಿಂತಿದೆ. ಪ್ರವಾದಿ ಮುಹಮ್ಮದ್ (ಸ)ರನ್ನು ನಿಂದನೆಗೈದ ಬಿಜೆಪಿ ನಾಯಕರಿಂದಾಗಿ ಭಾರತಕ್ಕೆ ಇಂದು ಇಂತಹ ದುಃಸ್ಥಿತಿ ಒದಗಿದೆ. ಈ ಬಾರಿಯ ವಿಶೇಷತೆಯೇನೆಂದರೆ ಭಾರತ ಸರ್ಕಾರವನ್ನು ನಡೆಸುವ ಬಿಜೆಪಿ ಪಕ್ಷದ ಆ ಇಬ್ಬರು ನಾಯಕರನ್ನೇ ಉಚ್ಛಾಟಿಸಬೇಕಾಗಿ ಬಂದಿರುವುದು. ಭಾರತೀಯ ಉತ್ಪನ್ನಗಳೇ ಏಕಾಏಕಿ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನಿಷೇಧಕ್ಕೊಳಗಾಗಿರುವುದು. ಭಾರತದ ಉಪರಾಷ್ಟ್ರಪತಿಗೆ ವಿದೇಶದಲ್ಲಿ ನಿಗದಿಯಾಗಿದ್ದ ರಾಜತಾಂತ್ರಿಕ ಭೋಜನ ಕೂಡ ರದ್ದಾಗಿ ಅವಮಾನಕ್ಕೊಳಗಾಗಿರುವುದು. ಸಾವಿರಾರು ಕೆಲಸಗಾರರು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸವನ್ನು ಕಳೆದುಕೊಂಡಿರುವುದು.
'ಜೀವ ಬೇಕಾದರೂ ತ್ಯಾಗ ಮಾಡಬಲ್ಲೆವು. ಆದರೆ ಪ್ರವಾದಿ ನಿಂದನೆ ಮಾತ್ರ ಯಾವ ಕಾರಣಕ್ಕೂ ಕ್ಷಮಾರ್ಹವಲ್ಲ !' ಇದು ಜಗತ್ತಿನ ಎಲ್ಲ ಮುಸ್ಲಿಮರ ಗಟ್ಟಿ ನಿಲುವು. ಮುಸ್ಲಿಮರು ಪ್ರವಾದಿ ಮುಹಮ್ಮದ್ (ಸ)ರವರನ್ನು ತಮ್ಮ ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಾರೆ. ತಮ್ಮ ದಿನನಿತ್ಯದ ಪ್ರಾರ್ಥನೆಯಲ್ಲಿ ಪ್ರವಾದಿ ಮುಹಮ್ಮದ್(ಸ)ರವರಿಗೆ ರಕ್ಷೆಯನ್ನು (ಸ್ವಲಾತ್) ಹೇಳುತ್ತಾರೆ. ಅವರ ನರನಾಡಿಗಳಲ್ಲಿ ಪ್ರವಾದಿ ಪ್ರೇಮ ಹರಿಯುತ್ತಲೇ ಇರುತ್ತದೆ. ವಿಶ್ವದ ಎಲ್ಲೇ ಆಗಲಿ, ಯಾರಾದರೂ ಪ್ರವಾದಿ ನಿಂದನೆಗೈದರೆ ಅದಕ್ಕೆ ಜಗತ್ತಿನೆಲ್ಲೆಡೆ ಮುಸ್ಲಿಮರು ವಿರೋಧಿಸುತ್ತಾರೆ. ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ವಾಸ್ತವವನ್ನು ವಿಶ್ವದಲ್ಲಿ ಸರ್ವ ಧರ್ಮೀಯ ಬಾಂಧವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಹಾಗಿರುವಾಗ ಪ್ರವಾದಿ ನಿಂದನೆ ಮಾಡುತ್ತಿರುವವರು ಹಾಗೇ ಮಾಡುತ್ತಿರುವುದು ದ್ವೇಷ ಸಾಧನೆಗೇ ಹೊರತು ಬೇರೆ ಕಾರಣಕ್ಕಲ್ಲ. ಇಸ್ಲಾಮ್ ಧರ್ಮದ ಅವಹೇಳನ ಮಾಡುವುದರಿಂದ ಮುಸ್ಲಿಮರ ಸ್ವಾಭಿಮಾನವನ್ನು ಧ್ವಂಸಗೊಳಿಸುವುದು ಅಥವಾ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು ಎಂಬುದೇ ಇಂತಹ ನಿಂದನೆಯ ಉದ್ದೇಶ.
ಪ್ರವಾದಿ(ಸ)ರನ್ನು ನಿಂದಿಸಿದ ನೂಪುರ್ ಶರ್ಮಾ ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತಳೇನಲ್ಲ. ಆಕೆ ಬಿಜೆಪಿ ರಾಷ್ಟ್ರೀಯ ವಕ್ತಾರೆ. ಅದೇ ರೀತಿ ಟ್ವೀಟ್ ಮೂಲಕ ಪ್ರವಾದಿ (ಸ)ರನ್ನು ನಿಂದಿಸಿದ ನವೀನ್ ಜಿಂದಲ್ ಕೂಡಾ ಒಬ್ಬ ತಿರುಬೋಕಿ ಬಿಜೆಪಿಯ ಕಾರ್ಯಕರ್ತನಲ್ಲ, ಆತ ಬಿಜೆಪಿ ಪಕ್ಷದ ಮಾಧ್ಯಮ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ. ಇವರಿಬ್ಬರ ನಿಂದನೆಯ ಬಗ್ಗೆ ದೇಶಾದ್ಯಂತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾದಾಗಲೂ ನರೇಂದ್ರ ಮೋದಿಯಾಗಲೀ, ಅಮಿತ್ ಶಾ ಆಗಲಿ ಕಿಂಚಿತ್ತೂ ಕ್ಯಾರೇ ಅಂದಿರಲಿಲ್ಲ. ಹಲವರು ಈ ಬಗ್ಗೆ ಪೊಲೀಸ್ ದೂರು ನೀಡಿದಾಗ ಅದನ್ನು ದಾಖಲಿಸಲು ಪೊಲೀಸರು ಮುಂದಾಗಿರಲಿಲ್ಲ. ಕೊನೆಗೆ ಒಂದೆರಡು ದೂರುಗಳು ಮಾತ್ರ ದಾಖಲಾದವು. ಆದರೆ, ಎಲ್ಲೂ ಮುಂದಿನ ಹಂತದ ಪೊಲೀಸ್ ಕ್ರಮಗಳು ನಡೆಯಲೇ ಇಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಪ್ರವಾದಿ ನಿಂದಕರನ್ನು ಬೆಂಬಲಿಸಿ ಕಮೆಂಟ್ ಗಳ ಮಹಾಪೂರವೇ ಹರಿಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಈ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟಕ್ಕೂ ತಲುಪಿತು. ಜೀನುಗೂಡಿಗೆ ಕಲ್ಲೆಸೆದರೆ ಮಧು ಹೀರಿ ಸಂಗ್ರಹಿಸುವ ಜೇನ್ನೊಣಗಳು ದಾಳಿಕೋರರನ್ನು ಕಚ್ಚಿ ಅಟ್ಟಿಸದೇ ಬಿಡುವುದಿಲ್ಲ. ಅದೇ ರೀತಿ ವಿಶ್ವದ ಮುಸ್ಲಿಮರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಯಿತು. ಇಸ್ಲಾಮಿಕ್ ರಾಷ್ಟ್ರಗಳು ಭಾರತಕ್ಕೆ ಕಟುಶಬ್ದಗಳಲ್ಲಿ ಖಂಡನೆಯ ಮಾತುಗಳಿಂದ ಪ್ರತಿಭಟಿಸಿದವು. ಕತಾರ್, ಕುವೈತ್, ಇರಾನ್ ಮುಂತಾದ ರಾಷ್ಟ್ರಗಳು ಭಾರತದ ಹೈಕಮಿಷರನ್ನು ಕರೆಸಿ ಕಠಿಣ ಶಬ್ದಗಳಲ್ಲಿ ಖಂಡಿಸಿದವು. ಕತಾರ್ ದೇಶವು ಅಲ್ಲಿ ಭೇಟಿ ನೀಡಿದ್ದ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಜತೆಗೆ ನಿಗದಿಯಾಗಿದ್ದ ಭೋಜನ ಕೂಟವನ್ನು ರದ್ದುಪಡಿಸಿತು. ಕತಾರ್ ಹಾಗೂ ಕುವೈತ್ ನಲ್ಲಿ ಹಲವು ಭಾರತೀಯರನ್ನು ಹೆಚ್ಚಿನ ಸಂಬಳ ನೀಡಿ ವಿಮಾನಯಾನ ಟಿಕೆಟ್ ನೀಡಿ ಭಾರತಕ್ಕೆ ಪ್ಯಾಕ್ ಮಾಡಿದವು. ಗಲ್ಫ್ ರಾಷ್ಟ್ರಗಳಲ್ಲಿದ್ದ ಹಲವು ಸೂಪರ್ ಸ್ಟೋರ್ ಗಳು ಭಾರತೀಯ ಉತ್ಪನ್ನಗಳನ್ನು ತಮ್ಮ ಶೆಲ್ಫ್ ಗಳಿಂದ ಕೆಳಗಿಳಿಸಿದವು. ಭಾರತದ ಮೇಲೆ ನಡೆದ ಸೂಪರ್ ಮಾಸ್ಟರ್ ಸ್ಟ್ರೋಕ್ ಇದಾಗಿದೆ. ಪರಿಣಾಮ ಬಿಜೆಪಿ ಆ ಇಬ್ಬರು ತಿರುಬೋಕಿ ರಾಷ್ಟ್ರೀಯ ಮುಖಂಡರನ್ನು ಉಚ್ಚಾಟಿಸುವ ಕ್ರಮಕೈಗೊಂಡಿತು.
ಬಿಜೆಪಿ ಪಕ್ಷವು ಹೇಳಿಕೆಯೊಂದನ್ನು ಹೊರಡಿಸಿ, ಸಾವಿರಾರು ವರ್ಷಗಳಿಂದ ಸಮನ್ವಯ – ಸಹಯೋಗದೊಂದಿಗೆ ಜೀವಿಸುತ್ತಿರುವ ಭಾರತದಲ್ಲಿ ಸರ್ವಧರ್ಮೀಯರಿಗೆ ಸಮಾನ ಗೌರವವನ್ನು ನೀಡಲಾಗುತ್ತಿದೆ. ಅದು ಇಂದೂ, ಎಂದೂ ಮುಂದುವರೆಯುತ್ತದೆ ಎಂದಿತು. ಅಲ್ಲದೆ, ಆ ಇಬ್ಬರು ರಾಷ್ಟ್ರೀಯ ಮುಖಂಡರನ್ನು ಫ್ರಿಂಜ್( ಅಂಚು) ಎಂದು ಘೋಷಿಸಿತು. ವಿಷಯ ಇರುವುದೇ ಇಲ್ಲಿ. ಆ ಇಬ್ಬರು ಫ್ರಿಂಜ್ ಎಂದಾದರೆ ಬಿಜೆಪಿಯಲ್ಲಿ ಫ್ರಿಂಜ್ ಅಲ್ಲದವರೇ ಇಲ್ಲ. ನರೇಂದ್ರ ಮೋದಿಯಿಂದ ಮೊದಲ್ಗೊಂಡು ಪಂಚಾಯತ್ ಮಟ್ಟದಲ್ಲಿನ ಬಿಜೆಪಿ ಕಾರ್ಯಕರ್ತರವರೆಗೆ ಎಲ್ಲರೂ ಫ್ರಿಂಜ್ ಆಗಿದ್ದಾರೆ. ಕೇವಲ ಫ್ರಿಂಜ್ ಅಂದರೆ ಮಾತ್ರ ಸಾಲದು, ಫ್ರಿಂಜ್ ಅಥವಾ ಅಂಚು ಅಥವಾ ನಗಣ್ಯರು ಎಂದು ಹೆಗಲಿನ ಬೂದಿ ಒರೆಸ ಹೊರಟ ಬಿಜೆಪಿಯ ಇತಿಹಾಸ ಜಗತ್ತಿಗೆ ಚೆನ್ನಾಗಿ ತಿಳಿದಿದೆ. ಈ ಫ್ರಿಂಜ್ ಗಳನ್ನು ಇಂಗ್ಲೀಷಿನಲ್ಲೇ ಸರಿಯಾಗಿ ಕರೆಯುವುದಾದರೆ ಹೀಗೆ ಹೇಳಬಹುದು; ಬಿಗೋಟರ್, ಕಮ್ಯುನಲ್, ಫ್ಯಾಶಿಸ್ಟರು, ಟೆರರಿಸ್ಟ್, ಸ್ಯಾಡಿಸ್ಟ್ ಗಳು, ಡಿವಿಸಿವ್ ಗಳು, ಕಿಲ್ಲರ್ ಗಳು, ಮನುವಾದಿಗಳು ಎಂದೆಲ್ಲಾ ಕರೆಯಬೇಕಾಗಿರುವುದನ್ನು ಸಾವಿರಾರು ನಿದರ್ಶನಗಳೊಂದಿಗೆ ಕರಾರುವಕ್ಕಾಗಿ ಸಾಧಿಸಬಹುದು. ಬಿಜೆಪಿಯ ಸಂಸದರಾದ ಅನಂತ್ ಕುಮಾರ್ ಹೆಗಡೆ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಮುಂತಾದವರು ಕುರ್ ಆನ್, ಇಸ್ಲಾಮ್, ಮುಸ್ಲಿಮರ ನಿಂದನೆ ಮಾಡಿರುವ ಅಸಂಖ್ಯಾತ ನಿದರ್ಶನಗಳಿವೆ. ಈಶ್ವರಪ್ಪ, ಯತ್ನಾಳ್ ಮುಂತಾದವರು ಮುಸ್ಲಿಮರನ್ನು ಕಡಿಯಬೇಕು, ಕೊಲ್ಲಬೇಕು ಎಂದಿರುವ ಉದಾಹಣೆಗಳಿವೆ. ಉತ್ತರ ಪ್ರದೇಶದ ಶಾಸಕ ಮಾಯಾ ಶಂಕರ್ ಸಿಂಗ್ ಎಂಬಾತ 'ಹಿಂದೂಗಳು ಎದ್ದು ಬಿಟ್ಟರೆ ಮುಸ್ಲಿಮರ ಗಡ್ಡವನ್ನು ತಲೆಗೂದಲಿನ ಜಡೆ (ಚೋಟೀ)ಯಾಗಿ ಬದಲಿಸುವುದು' ಎಂದಿದ್ದರು. ಇನ್ನೊಬ್ಬ ಉತ್ತರ ಪ್ರದೇಶ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ 'ನನಗೆ ಮತ ಹಾಕದವರ ದೇಹದ ರಕ್ತನಾಳಗಳಲ್ಲಿ ಮಿಯಾಗಳ ರಕ್ತ ಹರಿಯುತ್ತಿದೆ. ಅವರ ಹಾದರಕ್ಕೆ ಹುಟ್ಟಿದವರು' ಎಂದು ದ್ವೇಷ ಉಗುಳಿದ್ದರು.
ಹಲವು ಕಾರ್ಯಕ್ರಮಗಳಲ್ಲಿ ಆರೆಸೆಸ್ಸ್ ನ ನಾಯಕರು ಇಸ್ಲಾಮ್ ಧರ್ಮವನ್ನೇ ಭಾರತದಿಂದ ನಿರ್ಮೂಲನೆಗೊಳಿಸಬೇಕೆಂದು ಕರೆ ಕೊಟ್ಟ ಭಾಷಣಗಳು ಜನರ ಮುಂದಿವೆ. ಸ್ವತಃ ಗೃಹಮಂತ್ರಿ ಅಮಿತ್ ಶಾ ಮುಸ್ಲಿಮರನ್ನು 'ಗೆದ್ದಲುಗಳು' ಎಂದಿದ್ದಾರೆ. ಗಲಭೆಕೋರರನ್ನು ಅವರ ಬಟ್ಟೆಗಳ ಮೂಲಕ ಯಾವ ಧರ್ಮದವರೆಂದು ಗುರುತು ಹಿಡಿಯಬಹುದು ಎಂದು ಸ್ವತಃ ಪ್ರಧಾನಿಯೇ ಹೇಳಿದ್ದಾರೆ. ಸಂಸದೆ ಪ್ರಜ್ಞಾ ಸಿಂಗ್, ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸಬೇಕು ಎಂದಿರುವಾಗ ಮೌನ ಮುರಿಯದ ಮೋದಿ ಮತ್ತು ಶಾ ದೇಶವನ್ನು ಆಳುತ್ತಿದ್ದಾರೆ. ಒಕ್ಕೂಟದ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ 'ದೇಶ್ ಕೆ ಗದ್ದಾರೊ ಸಾಲೊಂಕೊ ಗೋಲಿಮಾರೋ' ಎಂದು ಮುಸ್ಲಿಮರನ್ನು ಕೊಲ್ಲಲು ಬಹಿರಂಗ ಕರೆ ಕೊಟ್ಟಿದ್ದಾರೆ. ಕಪಿಲ್ ಶರ್ಮಾ ಎಂಬ ಸಂಸದ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು. ಹಿಂದಿ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ 'ದನ ಸಾಗಾಟಗಾರರು' ಎಂಬ ನೆಪದಲ್ಲಿ ಸಂಘಪರಿವಾರದ ಕಾರ್ಯಕರ್ತರು ನೂರಾರು ಮುಸ್ಲಿಮರನ್ನು ಹೊಡೆದು ಕೊಂದ, ಜೈಶ್ರೀರಾಮ್ ಹೇಳುವಂತೆ ಬಲವಂತ ಪಡಿಸಿ ಮುಸ್ಲಿಮರನ್ನು ಥಳಿಸಿ ಕೊಂದ ನೂರಾರು ಪ್ರಕರಣಗಳು ಇರುವಾಗ ಮೌನ ಸಮ್ಮತಿ ನೀಡಿದ ಕುಖ್ಯಾತಿ ಪ್ರಧಾನಿ, ಗೃಹಮಂತ್ರಿಯದ್ದು, ಅನಾಗರಿಕ ಮನಸ್ಸು ಎನ್ನುವುದನ್ನು ಸಾಬೀತುಪಡಿಸುತ್ತಿದೆ.
ಬಾಬರಿ ಮಸ್ಜಿದನ್ನು ಧ್ವಂಸಗೊಳಿಸಿದ ಅದೇ ಬಿಜೆಪಿ, ಆರೆಸ್ಸೆಸ್ ಇಂದು ದೇಶದಲ್ಲಿ ಮಂದಿರ-ಮಸೀದಿ ವಿವಾದಗಳನ್ನು ಹುಟ್ಟು ಹಾಕಿ ದ್ವೇಷವನ್ನು ಹರಿಯ ಬಿಟ್ಟಿರುವುದು. ಪ್ರಧಾನಿಯೊಬ್ಬರು ಸಂಘಿ ಪ್ರಾಯೋಜಿತ ರಾಮಮಂದಿರ ಭೂಮಿ ಪೂಜೆಗೆ ಶಿಲಾನ್ಯಾಸ ಮಾಡುತ್ತಿರುವುದು ಬಾಬರಿ ಮಸ್ಜಿದ್ ಭೂಮಿ ಮೇಲೆ ಈ ಮಂದಿರ ಸ್ಥಾಪನೆ ಎಂದು ಗೊತ್ತಿದ್ದರೂ ಅದರಲ್ಲಿ ಪಾಲ್ಗೊಳ್ಳುತ್ತಿರುವುದು 'ಮುಸ್ಲಿಮರನ್ನು ಸೋಲಿಸಿ ಮಂದಿರ ಕಟ್ಟುತ್ತಿದ್ದೇವೆ ಎಂಬ ಭಾವನೆಯಿಂದಲ್ಲವೆ?… ಈಗ ಜ್ಞಾನವ್ಯಾಪಿ, ತಾಜ್ ಮಹಲ್, ಕುತುಬ್ ಮಿನಾರ್, ಶ್ರೀರಂಗಪಟ್ಟಣ ಮಸ್ಜಿದ್ ಇತ್ಯಾದಿಗಳನ್ನು ಮಂದಿರಗಳೆಂದು ಕ್ಯಾತೆ ತೆಗೆಯುವ ಸಂಘಿಗಳನ್ನು ಬಾಯಿ ಮುಚ್ಚಿಸಲು ಪ್ರಧಾನಿ, ಗೃಹಮಂತ್ರಿ ಮುಂತಾದವರು ಒಂದೇ ಒಂದು ಮಾತೂ ಆಡುವುದಿಲ್ಲವಾದರೆ ಅದು ಅವರ ಒಪ್ಪಿಗೆಯಿಂದ ಆಗುತ್ತಿರುವುದು ತಾನೆ?
ಅವೆಷ್ಟು ಚರ್ಚುಗಳ ಮೇಲೆ ಭಾರತದಲ್ಲಿ ಸಂಘಿಗಳು ದಾಳಿ ಮಾಡಿಲ್ಲ. 2020ರಲ್ಲಿ ದೇಶದಲ್ಲಿ 426 ಚರ್ಚ್ ಮತ್ತು ಕ್ರೈಸ್ತರ ಗುರುಗಳ ಮೇಲೆ ದಾಳಿ ನಡೆದಿದೆ ಎಂದು ಸರಕಾರಿ ಅಂಕಿಅಂಶಗಳೇ ಹೇಳುತ್ತಿವೆ. ಕ್ರೈಸ್ತರ ಪ್ರಾರ್ಥನಾ ಸಭೆಗಳ ಮೇಲೆ ದಾಳಿಗಳನ್ನು ನಡೆಸಿದ ಸಂಘಪರಿವಾರದ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿರುವುದಾಗಲೀ, ಬಂಧಿಸಿ ಜೈಲಿಗೆ ತಳ್ಳುವುದಾಗಲೀ ಎಲ್ಲೂ ಕಂಡುಬಂದಿಲ್ಲ. ಬದಲಿಗೆ ತುಳಿತಕ್ಕೊಳಗಾದವರ ಮೇಲೆ ಮತಾಂತರದ ಹೆಸರಿನಲ್ಲಿ ಕೇಸು ದಾಖಲಾಗಿ ಜೈಲಿಗೆ ಹೋದ ಪ್ರಕರಣಗಳೇ ಸಾಕಷ್ಟಿವೆ.
ಗಲ್ಫ್ ರಾಷ್ಟ್ರಗಳಿಂದ ವ್ಯಕ್ತವಾದ ಪ್ರತಿಕೂಲ ವಿರೋಧಗಳಿಂದ ಬೆದರಿದ ಒಕ್ಕೂಟ ಸರಕಾರ, ಕೇವಲ ಇಬ್ಬರು ನಾಯಕರನ್ನು ಉಚ್ಚಾಟಿಸಿದರೆ ಅದು ತಕ್ಕುದಾದ ಶಿಸ್ತುಕ್ರಮ ಹೇಗಾದೀತು? ಅವರಿಬ್ಬರನ್ನು ಬಂಧಿಸಿ ಜೈಲಿಗೆ ಕಳಿಸಬೇಕಿತ್ತಲ್ಲವೇ? ಬಿಜೆಪಿಯ ಸುಮಾರು 53 ವಕ್ತಾರರಿಗೆ ಇನ್ನು ಮುಂದೆ ಮಾತನಾಡುವಾಗ ಯೋಚಿಸಿ ಮಾತನಾಡಬೇಕೆಂದು ಆದೇಶ ನೀಡುವುದರಿಂದ ಬಿಜೆಪಿಯ ಮುಸ್ಲಿಮ್, ಕ್ರೈಸ್ತ ವಿರೋಧಿ ತತ್ವಗಳು ಇಲ್ಲವಾದೀತೆ?
ಸರ್ವಧರ್ಮದವರೂ ಇದೀಗ ಬಹಳ ಅನ್ಯೋನ್ಯತೆಯಿಂದ ಭಾರತದಲ್ಲಿ ಜೀವಿಸುತ್ತಿದ್ದಾರೆ ಎನ್ನುವುದು ಕಡು ಸುಳ್ಳು ಎನ್ನುವುದು ಅಷ್ಟೇ ಸತ್ಯ. ದೇಶದ ನಗರಗಳಲ್ಲಿ ಮುಸ್ಲಿಮರಿಗೆ ಪ್ಲ್ಯಾಟ್ ನೀಡಲಾಗದು, ಮುಸ್ಲಿಮರಿಗೆ ಭೂಮಿ ಮಾರಲಾಗದು, ಮುಸ್ಲಿಮರ ಅಂಗಡಿ, ವ್ಯಾಪಾರಗಳಿಗೆ ಹೋಗಬಾರದು ಎನ್ನುವ ನಿಷೇಧ, ಬಹಿಷ್ಕಾರ ವ್ಯಾಪಕವಾಗಿ ಕಂಡುಬರುತ್ತಿದೆ. ರಾಮನವಮಿ, ವಿಜಯದಶಮಿ ಮುಂತಾದ ಹಬ್ಬದ ಸಂದರ್ಭಗಳಲ್ಲಿ ಸಂಘಪರಿವಾರದವರು ವಾಹನಗಳಲ್ಲಿ ಖಡ್ಗ, ಕೊಡಲಿ, ತ್ರಿಶೂಲ, ರಿವಾಲ್ವರ್, ಬಂದೂಕುಗಳನ್ನು ಪ್ರದರ್ಶಿಸುತ್ತಾ ಮುಸ್ಲಿಮರನ್ನು ಕೊಲ್ಲಬೇಕು, ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎನ್ನುತ್ತಾ ಮಸ್ಜಿದ್ಗಳ, ಮಿನಾರಗಳ ಮೇಲೆ ಏರಿ ಭಗವಾಧ್ವಜಗಳನ್ನು ಏರಿಸಿದ ಘಟನೆಗಳು ಸಂಭವಿಸಿದಾಗ ಪ್ರತಿಕ್ರಿಯಿಸಿದ ಮುಸ್ಲಿಮರ ಮೇಲೆ ಪ್ರಕರಣಗಳು ದಾಖಲಾದವು. ಅವರ ಮನೆಗಳನ್ನು ಬುಲ್ಡೋಜರ್ಗಳಿಂದ ಧ್ವಂಸಗೊಳಿಸಲಾಯಿತು. ಮನೆಗಳೊಳಗೆ ಪೊಲೀಸರು ನುಗ್ಗಿ ಸಿಕ್ಕ ಸಿಕ್ಕವರನ್ನು ಎಳೆದುಕೊಂಡು ಹೋದರು. ಠಾಣೆಗಳಲ್ಲಿ ತಮ್ಮವರನ್ನು ಮಾತನಾಡಿಸಲು ಬಂದವರನ್ನೇ ಕೇಸುಗಳಲ್ಲಿ ಫಿಕ್ಸ್ ಮಾಡಿ ಜೈಲಿಗೆ ಕಳುಹಿಸಲಾಯಿತು. ಇವೆಲ್ಲಾ ಇದೇ ಪ್ರಧಾನಿ, ಗೃಹಮಂತ್ರಿಯ ಮೂಗಿನ ನೇರದಲ್ಲಿ ನಡೆಯುವ ಪ್ರಾಯೋಜಿತ ಘಟನೆಗಳಲ್ಲವೇ?
ಅನುರಾಗ್ ಠಾಕೂರ್ 'ಸಾಲೋಂಕೋ ಗೋಲಿ ಮಾರೋ' ಎಂದು ನಗು ನಗುತ್ತಾ ಹೇಳಿದ್ದಾರೆ, ಅದು ಪ್ರಕರಣದ ತನಿಖೆಗೆ ಅರ್ಹವಲ್ಲ ಎಂದಿರುವ ನ್ಯಾಯಾಧೀಶರು ಯಾವ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ.
1925ರಲ್ಲೇ ಆರೆಸ್ಸೆಸ್ ಒಂದು ಗುರಿಯೊಂದಿಗೆ ಹೊರಟಿದೆ. ಅದುವೇ ಹಿಂದೂ ರಾಷ್ಟ್ರದ ಗುರಿ. ಅಂದರೆ 'ಮನುವಾದೀ ರಾಷ್ಟ್ರ' ಗುರಿ. ಆರೆಸ್ಸೆಸ್ ನ ಸರಸಂಘಚಾಲಕ ಗೋಳ್ವಾಲ್ಕರ್ ಬರೆದ ಪುಸ್ತಕದಲ್ಲೇ ಆ ಗುರಿಯ ವ್ಯಾಖ್ಯಾನ ಬರೆಯಲಾಗಿದೆ. ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮ್, ಕ್ರೈಸ್ತ ಹಾಗೂ ಪ್ರಗತಿಪರರಿಗೆ ಜಾಗವಿಲ್ಲ. ಅವರು ದೇಶದಿಂದ ತೆರಳಬೇಕು. ಇಲ್ಲದಿದ್ದರೆ ಎರಡನೇ ದರ್ಜೆಗೆ ಇಳಿಯಬೇಕು ಮತ್ತು ಜರ್ಮನಿಯಲ್ಲಿ ನಡೆದ ಶುದ್ಧೀಕರಣದಂತೆ ದೇಶವನ್ನು ಶುದ್ದೀಕರಿಸಬೇಕು ಎಂದಿರುವಾಗ ಆರೆಸ್ಸೆಸ್ ನ ಕಾರ್ಯಕರ್ತರಿಗೆ ಅದುವೇ ಮಾರ್ಗದರ್ಶಕವಲ್ಲವೇ? ಕೊಡಗಿನಲ್ಲಿ ಸಂಘಪರಿವಾರದ ಕಾರ್ಯಕರ್ತರಿಗೆ ರೈಫಲ್ ತರಬೇತಿ ನೀಡಲಾಯಿತು. ಇದು ಕೊಡಗಿನಲ್ಲಿ ಮಾತ್ರವೇ ಅಲ್ಲ. ಇಡೀ ದೇಶದಲ್ಲಿ ಬಹಳ ಹಿಂದೆಯೇ ನಡೆಯುತ್ತಿದೆ.ಜತೆಗೆ ತ್ರಿಶೂಲ, ಖಡ್ಗ, ಕೊಡಲಿ ಹಾಗೂ ಬಂದೂಕು ವಿತರಣೆ ಕೂಡ ನಡೆಯುತ್ತಿದೆ. ಇಂತಹ ಭಯೋತ್ಪಾದಕ ಶಿಬಿರಗಳಿಗೆ ಬಿಜೆಪಿ, ಕಾಂಗ್ರೆಸ್ ಸರಕಾರ ಸಂಪೂರ್ಣ ಆಶೀರ್ವಾದ ನೀಡುತ್ತಿದೆ. ಆಶ್ಚರ್ಯ ಎಂದರೆ, ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರವಿದ್ದರೂ ಅಲ್ಲೂ ಸಂಘಿಗಳ ಭಯೋತ್ಪಾದನೆ ಶಿಬಿರ ಜಾರಿಯಲ್ಲಿರುವುದು. ಇಂತಹ ಭಯೋತ್ಪದನಾ ಶಿಬಿರಗಳಲ್ಲಿರುವ ಉಗ್ರರಿಗೆ ನೀಡುವ ಸಂದೇಶವೇನೆಂದರೆ, ಮುಸ್ಲಿಮರ ಸಂಹಾರ ಹಾಗೂ ಮಸೀದಿಗಳ ಧ್ವಂಸದಿಂದ ಹಿಂದೂ ರಾಷ್ಟ್ರ ಕಟ್ಟುವುದಾಗಿದೆ. ಅಂತಹ ಶಿಬಿರಗಳಲ್ಲಿ ಇಸ್ಲಾಮ್, ಪ್ರವಾದಿ, ಮುಸ್ಲಿಮರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಎಲ್ಲವೂ ಸರಕಾರ, ಪೊಲೀಸ್ ಹಾಗೂ ಮಾಧ್ಯಮಗಳ ಕೃಪಾಕಟಾಕ್ಷ ಆಶೀರ್ವಾದದೊಂದಿಗೆ ನಡೆಯುತ್ತಿದೆ.
ಭಾರತವು ಪರಂಪರೆಯಲ್ಲಿ ಸೌಹಾರ್ದ ರಾಷ್ಟ್ರ ಹೌದು. ಆದರೆ ಇದೀಗ ದ್ವೇಷ, ಅಸೂಯೆ, ವಿತಂಡವಾದ, ಮತಾಂಧತೆ, ಕ್ರೌರ್ಯ, ಅತ್ಯಾಚಾರಗಳಂತಹ ಕ್ಷುದ್ರತೆಯ ಕೇಂದ್ರವಾಗಿ ಮಾರ್ಪಾಡಾಗಿರುವುದನ್ನು ಅಲ್ಲಗಳೆಯಲಾಗದು. ಹಾಗೆಂದ ಮಾತ್ರಕ್ಕೆ ಎಲ್ಲವೂ ಎಲ್ಲರೂ, ಎಲ್ಲೆಲ್ಲಿಯೂ ಹಾಗಿದೆಯೆಂದಲ್ಲ. ವಿಚಾರವಂತರೂ, ಸೌಹಾರ್ದಯುತರೂ, ಜಾತ್ಯತೀತರೂ ಇದ್ದಾರೆ. ಆದರೆ ಅವರ ಶಕ್ತಿ ಕ್ಷೀಣವಾಗುತ್ತಾ ಸಾಗುತ್ತಿದೆ. ಹಾಗೆ ದಮನಕ್ಕೊಳಗಾದ ಸಮುದಾಯದ ಪರವಾಗಿ ಧ್ವನಿಯೆತ್ತಿರುವವರನ್ನು, ಪ್ರತಿರೋಧಿಸಿದವರನ್ನೂ ಕೋಮುವಾದಿಗಳೆಂದು ಕರೆಯುವುದರಲ್ಲಿ ಕೆಲವು ವಿಚಾರವಂತರೆನಿಕೊಂಡವರೂ ಸೇರಿಕೊಂಡಿರುವುದು ಕಳವಳಕಾರಿಯೆನಿಸುತ್ತಿದೆ. ಸಮಾಜದ ಅಂಕುಡೊಂಕುಗಳನ್ನು, ಅನಿಷ್ಟಗಳನ್ನು ತಿದ್ದಬೇಕಾದ ಮಾಧ್ಯಮಗಳೆಲ್ಲವೂ ಫ್ಯಾಶಿಸ್ಟರ ಧ್ವಜವಾಹಕವಾಗಿರುವುದು ದೇಶದ ಪರಂಪರೆಯನ್ನು ನುಚ್ಚುನೂರು ಮಾಡುತ್ತಿರುವುದು ಆತಂಕಕ್ಕೆ ಎಡೆಮಾಡಿದೆ.
ಜಾತ್ಯತೀತ ಎಂದರೆ ಅದು ತೋರಿಕೆಗೆ ಮಾತ್ರ. ಜಾತ್ಯತೀತತೆಯನ್ನು ಸೋಗಿನಂತೆ ಬಳಸಿಕೊಂಡು ಕೋಮುವಾದದ ಕಹಲ ಪ್ರಿಯತೆಯ ಹಾದಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪೈಪೋಟಿಯಿಂದ ಸಾಗುತ್ತಿರುವ ರಾಜಕೀಯ ದೇಶದಲ್ಲಿ ಟ್ರೆಂಡ್ ಆಗಿರುವಾಗ ಸೌಹಾರ್ದ ಪರಂಪರೆ ಎಂಬ ಮಾತು ಅರ್ಥ ಕಳೆದುಕೊಳ್ಳುತ್ತಿದೆ.
ಮಕ್ಕಳಾಗೋ ಟೈಂ ಬಂದ್ರೂ ಮಕ್ಕಳಾಟ ಬಿಟ್ಟಿಲ್ಲ….! ನಿವೇದಿತಾ ಗೌಡ ಪೋಸ್ಟ್ ಗೆ ಬೇಕಾಬಿಟ್ಟಿ ಕಮೆಂಟ್….! ಟ್ರೋಲ್..!! - Breaking
ಬಿಗ್ ಬಾಸ್ ಮೂಲಕ ಬೆಳಕಿಗೆ ಬಂದ ಪ್ರತಿಭೆಗಳಲ್ಲಿ ಮೈಸೂರಿನ ನಟಿ ಹಾಗೂ ಟಿಕ್ ಟಾಕ್ ಸ್ಟಾರ್ ನಿವೇದಿತಾ ಗೌಡ ಕೂಡ ಒಬ್ಬರು. ಹಾಲಿನಂತ ಬಿಳುಪು ಕನ್ನಡವನ್ನು ಇಂಗ್ಲೀಷ್ ಆಕ್ಸೆಂಟ್ ಮಾತನಾಡೋ ಚೆಲುವೆಯ ಉದ್ದನೇಯ ಕೇಶ ರಾಶಿ ಆಕೆಗೆ ಬಾರ್ಬಿ ಗೊಂಬೆ ಅನ್ನೋ ಟೈಟಲ್ ಕೂಡ ತಂದುಕೊಟ್ಟಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಆಕೆ ಪ್ರತಿಪೋಸ್ಟ್ ಗೂ ಟೀಕೆ ಹಾಗೂ ಟ್ರೋಲ್ ಗೆ ಒಳಗಾಗುತ್ತಾರೆ.
ಸದ್ಯ ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿರುವ ನಿವೇದಿತಾ ಗೌಡ ಇತ್ತೀಚಿಗೆ ತಮ್ಮ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ ನಿವೇದಿತಾ ಹಲವು ಟಿಕ್ ಟಾಕ್ ಆಡಿಯೋಗಳನ್ನು ಮತ್ತೆ ಶೇರ್ ಮಾಡಿದ್ದಾರೆ. ಆದರೆ ಈ ವಿಡಿಯೋಗಳನ್ನು ನೋಡಿದ ಜನರು ಮನಬಂದಂತೆ ಕಮೆಂಟ್ ಮಾಡಿದ್ದಾರೆ.
ಚೈಲ್ಡ್ ತರ ಆಡಬೇಡಿ ಅಂತ ಕೆಲವರು ಕಮೆಂಟ್ ಮಾಡಿದ್ದರೇ, ಇನ್ನು ಕೆಲವರು ಮಕ್ಕಳಾಗೋ ಕಾಲ ಬಂದರೂ ಮಕ್ಕಳಾಟ ಬಿಟ್ಟಿಲ್ಲವಾ ಎಂದು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಆದರೆ ಈ ಕಮೆಂಟ್ ಗಳಿಗೆ ನಿವೇಧಿತಾ ಏನು ಉತ್ತರ ನೀಡಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೆಟಿಗಳು ತಮ್ಮ ಪೋಟೋ, ವಿಡಿಯೋ ಹಂಚಿಕೊಳ್ಳೋದು ಕಾಮನ್. ಆದರೆ ಇತ್ತೀಚಿಗೆ ಅಂಥ ಪೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡೋ ಪ್ರವೃತ್ತಿ ಹುಟ್ಟಿ ಕೊಳ್ಳುತ್ತಿದೆ. ಮೊದಲು ನಿವೇಧಿತಾ ತಮ್ಮ ಬಟ್ಟೆ ಹಾಗೂ ಡ್ರೆಸ್ ಕಾರಣಕ್ಕೆ ಟ್ರೋಲ್ ಗೆ ಒಳಗಾಗಿದ್ದರು.
ಆದರೆ ಈಗ ಮಾತ್ರ ಪರ್ಸನಲ್ ವಿಚಾರಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರೋ ನಿವೇಧಿತಾ ಅಭಿಮಾನಿಗಳು, ಮದುವೆ ಆದ ಮಾತ್ರಕ್ಕೆ, ಸೆಲೆಬ್ರೆಟಿ ಗಳಾದ ಮಾತ್ರಕ್ಕೆ ಅವರೊಳಗಿನ ಭಾವನೆಗಳನ್ನು ವ್ಯಕ್ತಪಡಿಸೋ ಹಕ್ಕಿಲ್ಲವೇ ಅಂತ ಪ್ರಶ್ನಿಸುತ್ತಿದ್ದಾರೆ.
ಬಿಗ್ ಬಾಸ್ ಬಳಿಕ ಹಲವು ಜಾಹೀರಾತು ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಸಾಂಗ್ ಗಳಲ್ಲಿ ನಟಿಸಿದ ನಿವೇದಿತಾ ಬಳಿಕ ಚಂದನ್ ಶೆಟ್ಟಿ ಜೊತೆ ದಾಂಪತ್ಯಕ್ಕೆ ಕಾಲಿರಿಸಿದ್ದರು.
ಪಿಎಂ ಕೇರ್ಸ್​ ಫಂಡ್​ನಲ್ಲಿ ಮೋಸ ನಡೆಯಿತಾ? ಮಾತಾಡಿ ಪ್ಲೀಸ್​..! - ARE WE STUPID..? - Tv5 Kannada
ಪಿಎಂ ಕೇರ್ಸ್​ ಫಂಡ್​ನಲ್ಲಿ ಮೋಸ ನಡೆಯಿತಾ? ಮಾತಾಡಿ ಪ್ಲೀಸ್​..! – ARE WE STUPID..?
ಬುರ್ಝ್ ಖಲಿಫಾದಲ್ಲಿ ತೆಲಂಗಾಣ ಹಬ್ಬ ನೋಡಿ ಸಂಭ್ರಮಿಸಿದ ಜನ
ಜಮ್ಮು-ಕಾಶ್ಮೀರದೊಳಗೆ ನುಸುಳಲು 250 ಉಗ್ರರು ಕಾಯುತ್ತಿರುವುದಾಗಿ ಗುಪ್ತಚರ ಇಲಾಖೆಗೆ ಮಾಹಿತಿ..!
ಭಾರತದ ಬಳಿ ತೈಲ ಖರೀದಿಗೆ ಸಾಲ ಕೇಳಿದೆ ಶ್ರೀಲಂಕಾ!
ಪ್ರವಾಸಿಗರಿಗೆ ಬಿಸಿ ತುಪ್ಪವಾದ ಮಲ್ಪೆ ಸೈಂಟ್ ಮೇರಿಸ್ ದ್ವೀಪ
ದೇಶದಲ್ಲಿ ಕೋವಿಡ್​ ಕೊಟ್ಟ ಕಷ್ಟಗಳು ಸಾಲದೆಂಬಂತೆ ಬೆಲೆ ಏರಿಕೆ ಕಷ್ಟಗಳಿಂದಲೂ ಜನ ಹೈರಾಣಾಗಿದ್ದಾರೆ.
ಪೆಟ್ರೋಲ್​, ಡೀಸೆಲ್​ ಅಡುಗೆ ಅನಿಲ, ಅಡುಗೆ ಎಣ್ಣೆ , ದಿನಸಿ ಪದಾರ್ಥಗಳ ಬೆಲೆ ಎರಡು ಮೂರು ಪಟ್ಟು ಹೆಚ್ಚಾಗಿದೆ. ಮನುಷ್ಯನಿಗೆ ತಾನು ದುಡಿಯುತ್ತಿರುವ ಹಣ ಅವತ್ತಿನ ಊಟಕ್ಕಾದರೆ ಅದೇ ಹೆಚ್ಚು ಎನ್ನುವಂತಾಗಿದೆ. ಇಂತಹ ಸನ್ನಿವೇಶದಲ್ಲಿಯೂ ಇದೇ ಪಿಎಂ ಕೇರ್ಸ್​ ಫಂಡ್​ಗೆ ಅನೇಕರು ದಾನವಾಗಿ ಹಣ ಕೊಟ್ಟಿದ್ದಾರೆ. ದೇಶದ ಪ್ರಧಾನಿಗಳು ಇದನ್ನ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬಳಸುತ್ತಾರೆ ಎಂಬ ನಂಬಿಕೆಯಿಂದ. ಆದರೆ ಆದದ್ದೇನು? ಈ ಪಿಎಂ ಕೇರ್ಸ್​ ಫಂಡ್​ ಅಸಲಿಗೆ ಸರ್ಕಾರದ ನಿಧಿಯೇ ಅಲ್ಲ! ಇದೊಂದು ಖಾಸಗಿ ಟ್ರಸ್ಟ್​. ಈ ಖಾಸಗಿ ಟ್ರಸ್ಟ್ ನಿಂದ ಜನಗಳಿಗೆ ಯಾವ ರೀತಿ ನೆರವನ್ನ ನಿರೀಕ್ಷಿಸಬಹುದು. ಈ ಕಡೆ ಬೆಲೆಯೇರಿಕೆ ಕಾರಣದಿಂದಲೂ ಅಪಾರ ಪ್ರಮಾಣದ ಟ್ಯಾಕ್ಸ್​ ಹಣ ಸರ್ಕಾರದ ಬೊಕ್ಕಸ ಸೇರುತ್ತಿದೆ. ಅಲ್ಲಿಯೂ ತೆರಿಗೆ ಕಟ್ಟಿ ಕಟ್ಟಿ ದೇಶದ ಜನ ಹೈರಾಣಾಗಿದ್ದಾರೆ. ಈ ಕಡೆ ದಾನ ಕೊಟ್ಟ ಹಣದಿಂದಲೂ ಬಿಡಿಗಾಸಿನ ನೆರವಿಲ್ಲದೇ ಕುಗ್ಗಿ ಹೋಗಿದ್ದಾನೆ.
ದೇಶದ ಪ್ರಧಾನ ಮಂತ್ರಿಗಳ ಈ ನಡೆ ನಿಜಕ್ಕೂ ಆಘಾತಕಾರಿಯಲ್ಲವೇ? ಜನಗಳ ದಾನದ ಹಣವನ್ನ , ಜನಗಳ ಕಷ್ಟಗಳಿಗೆ ಬಳಸದೇ ತಮ್ಮ ಖಾಸಗಿ ಉದ್ದೇಶಕ್ಕೆ ವರ್ಗಾಯಿಸಿಕೊಂಡರೆ ಯಾರಾದರೂ ಮೆಚ್ಚುವ ಕೆಲಸವೇ ಇದು. ಇಂತಹ ಪ್ರಕರಣವನ್ನ ದೇಶ ಎಂದಾದರೂ ಕಂಡಿತ್ತಾ? ಕೇಳಿತ್ತಾ? ನೀವೇ ಹೇಳಿ. ಸ್ವಾಮಿ ಪ್ರಧಾನಿಯವರೇ ಈ ದೇಶ ನಿಮಗೆ ಏನು ಕಡಿಮೆ ಮಾಡಿತ್ತು? ಜನಪ್ರತಿನಿಧಿಗಳ ಜನಪ್ರತಿನಿಧಿ ನೀವು. ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಹುದ್ದೆಯನ್ನ ನೀವು ಅಲಂಕರಿಸಿದ್ದೀರಿ. ಅದಕ್ಕಿರುವ ತೂಕ ಮತ್ತು ಘನತೆ ವರ್ಣಿಸಲು ಸಾಧ್ಯವಿಲ್ಲ. ಇಂತಹ ಹುದ್ದೆಯಲ್ಲಿದ್ದು ಇದೇ ಪಿಎಂ ಕೇರ್ಸ್​ ಫಂಡ್​ ಅನ್ನ ಸರ್ಕಾರದ ನಿಧಿಯಾಗಿಯೇ ಸಂಗ್ರಹಿಸಬಹುದಿತ್ತಲ್ಲ. ಅದು ಬಿಟ್ಟು ಪ್ರಧಾನಿ ಹುದ್ದೆಯಲ್ಲಿದ್ದುಕೊಂಡೇ ಸರ್ಕಾರದ ಮತ್ತು ದೇಶದ ಹೆಸರು ಹೇಳಿ ಖಾಸಗಿಯಾಗಿ ಒಂದು ಟ್ರಸ್ಟ್​ ಹೇಗೆ ಮತ್ತು ಏಕೆ ಸ್ಥಾಪಿಸಿಕೊಂಡಿರಿ? ಇದಕ್ಕೆ ನಿಮಗೆ ಪ್ರಶ್ನೆ ಕೇಳಬಾರದೇ? ಮತ್ತು ಉತ್ತರ ನಿರೀಕ್ಷಿಸಬಾರದೇ? ದೇವದುರ್ಲಭ ಜನಪ್ರೀತಿ ಮತ್ತು ಆಶೀರ್ವಾದ ನಿಮಗೆ ಸಿಕ್ಕಿರಲಿಲ್ಲವೇ? ನಿಮ್ಮ ಒಂದು ಮಾತಿಗೆ ಓಗೊಟ್ಟು ದೇಶದ ಜನ ಅಪಾರವಾಗಿ ದಾನ ಕೊಡಲಿಲ್ಲವೇ? ಆ ಹಣವೆಲ್ಲಾ ಖಾಸಗಿ ತಿಜೋರಿ ಸೇರಿಸಿಕೊಂಡಿದ್ದೀರಲ್ಲಾ ? ಇದು ಸರಿಯೇ?
Also read: 9 ವರ್ಷಗಳಾದ್ರೂ ಮುಗಿಯದ ಎತ್ತಿನಹೊಳೆ ಯೋಜನೆ..! ₹12,900 ಕೋಟಿಯಿಂದ ₹26 ಸಾವಿರ ಕೋಟಿಗೆ ವೆಚ್ಚ ಹೆಚ್ಚಳ..!
ದೇಶದ ಸುಪ್ರೀಂ ಕೋರ್ಟ್​ ಇದೇ ವಿಚಾರಕ್ಕೆ ಒಂದು ಸು ಮೋಟೋ ಕೇಸ್​ ದಾಖಲಿಸಿಕೊಂಡು ಒಂದು ತನಿಖೆ ನಡೆಸಲು ಮನಸು ಮಾಡಬಾರದೇ? ದೇಶದ ಜನಗಳ ದುಡ್ಡು ಖಾಸಗಿ ಟ್ರಸ್ಟ್​ಗೆ ಹೋಗಿದ್ದರೆ ಅದು ಹಗರಣವಲ್ಲವೇ? ಕನಿಷ್ಠ ಮೋಸವಲ್ಲವೇ? ಆಕ್ಸಿಜನ್​, ವ್ಯಾಕ್ಸಿನ್​, ಸಾವಿನ ಪರಿಹಾರ, ಅನಾಥ ಮಕ್ಕಳ ಶಿಕ್ಷಣ ಎಲ್ಲ ವಿಷಯದಲ್ಲಿಯೂ ಸುಪ್ರೀಂ ಕೋರ್ಟ್​ನ ಮಧ್ಯಸ್ಥಿಕೆಯಿಂದಲೇ ನ್ಯಾಯ ಸಿಕ್ಕಿದೆ. ಪಿಎಂ ಕೇರ್ಸ್​ ಫಂಡ್​ ವಿಷಯದಲ್ಲೂ ನ್ಯಾಯ ನಿಮ್ಮಿಂದ ಸಿಗಲಿ.
ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 - Leo Yearly Horoscope 2022 in Kannada
ಸಿಂಹ ರಾಶಿ ಭವಿಷ್ಯ 2022
A Year Of Stabilization And Reshufflings
ಗಮನಾರ್ಹವಾದ ರಾಶಿಚಕ್ರದ ಪುರುಷರು ಮತ್ತು ಮಹಿಳೆಯರಿಗೆ ಹೊಸ ವರ್ಷ 2022, ನೀವು ಈಗಾಗಲೇ ಹೊಂದಿರುವುದನ್ನು ಇನ್ನಷ್ಟು ಸುಧಾರಿಸುವ ಕುಶಲತೆಯನ್ನು ಹೊಂದಿರುತ್ತದೆ. ಇಷ್ಟೇ ಅಲ್ಲ ನಿಮ್ಮ ಜೀವನದಲ್ಲಿ ದೊಡ್ಡ ಸಮತೋಲನವನ್ನು ಕಾಪಾಡಿಕೊಳ್ಳಲು ಸಹ ವರ್ಷವು ನಿಮಗೆ ಸಹಾಯ ಮಾಡಲಿದೆ. ಸಿಂಹ ವಾರ್ಷಿಕ ರಾಶಿ ಭಾವಿಷ್ಯ 2022ರ ಪ್ರಕಾರ, ನಿಮ್ಮ ಆದ್ಯತೆಗಳನ್ನು ಸಂಘಟಿಸುವುದು ಮತ್ತು ನಿರ್ವಹಿಸುವುದು ಈ ವರ್ಷ ನಿಮ್ಮ ಮಂತ್ರವಾಗಿರಬೇಕು ಎಂದು ನಿಮಗೆ ಸಲಹೆ ನೀಡಲಾಗಿದೆ.
ಇದಲ್ಲದೆ ಸಿಂಹ ರಾಶಿಚಕ್ರದ ಜನರು ತಮ್ಮ ಜೀವನವನ್ನು ಒಂದು ಸಾಲಿನಲ್ಲಿ ನಿರ್ವಹಿಸಲು ನೀವು ಕೆಲವು ಕಠಿಣ ನಿರ್ಧಾರಗಳನ್ನು ತೆಗದುಕೊಳ್ಳಬೇಕು, ಆದರೆ ಅದು ವರ್ಷದ ಅಂತ್ಯದ ವೇಳೆಗೆ ನಿಮ್ಮ ಪರವಾಗಿರುತ್ತದೆ ಎಂದು ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ಹೇಳುತ್ತದೆ. ಇದಲ್ಲದೆ ವರ್ಷದ ಮಧ್ಯ ತಿಂಗಳುಗಳಲ್ಲಿ ನೀವು ಕೆಲವು ಅಸಾಧಾರಣವಾದ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಅದೇ ಸಮಯದಲ್ಲಿ ಮತ್ತೊಂದೆಡೆ, ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆರಂಭಿಕ ತಿಂಗಳುಗಳಲ್ಲಿ ನೀವು ಕೆಲವು ರೋಮಾಂಚಕ ಕ್ಷಣಗಳನ್ನು ನಿರೀಕ್ಷಿಸಬಹುದು.
ಸಿಂಹ ಆರ್ಥಿಕ ರಾಶಿ ಭವಿಷ್ಯ 2022 - Leo Finance Horoscope 2022 in Kannada
ಹೌದು, ನೀವು ಹಣಕಾಸು ಮತ್ತು ಆದರೆ ನಿರ್ವಹಣೆಯ ವಿಷಯದಲ್ಲಿ ಎಲ್ಲವನ್ನೂ ತಿಳಿದಿರುವಿರಿ. ಹಣವನ್ನು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬೇಕು ಅಥವಾ ಖರ್ಚು ಮಾಡಬೇಕು ಎಂಬ ಜ್ಞಾನದಿಂದ ಹೇಗೆ ಮತ್ತು ಏನನ್ನು ಗಳಿಸಬೇಕು ಎಂಬುದು ನಿಮಗೆ ತಿಳಿದಿದೆ. ಆದ್ದರಿಂದ ಈ ವರ್ಷವಿಡೀ ನಿಮ್ಮ ಹಣವನ್ನು ನೀವು ಆನಂದಿಸುವಿರಿ ಎಂದು ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ಹೇಳುತ್ತಿದೆ. ಇದರೊಂದಿಗೆ ವರ್ಷದ ಆರಂಭಿಕ ತಿಂಗಳುಗಳಲ್ಲಿ ನೀವು ಕೆಲವು ವಸ್ತುಗಳನ್ನು ಭಾರೀದಿಸಬಹುದು ಮತ್ತು ಕೆಲವು ಸ್ವಯಂ ಖರ್ಚು ಕೂಡ ಇರುತ್ತದೆ. ಇದಲ್ಲದೆ ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ಪೂರ್ವಜರ ಆಸ್ತಿಯನ್ನು ಸಹ ಆನಂದಿಸುವ ಸಂಪೂರ್ಣ ಸಾಧ್ಯತೆ ಇದೆ.
ಹೂಡಿಕೆಗಳ ಬಗ್ಗೆ ಮಾತನಾಡಿದರೆ, ವರ್ಷದ ಮೊದಲಾರ್ಧದಲ್ಲಿ ಯಾವುದೇ ರೀತಿಯ ಆಸ್ತಿಯ ಮೇಲೆ ಹೂಡಿಕೆ ಮಾಡುವುದನ್ನು ತಪ್ಪಿಸಲು ನಿಮ್ಮನ್ನು ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ಎಚ್ಚರಿಸುತ್ತದೆ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ಹೂಡಿಕೆಗಳು ವರ್ಷದ ಮೊದಲ ತ್ರೈಮಾಸಿಕದಲ್ಲಿ ಫಲಿತಾಂಶಗಳನ್ನು ನೀಡದಿರಬಹುದು. ಆದ್ದರಿಂದ ನೀವು ಸಾಧ್ಯವಾದಷ್ಟು ಯಾವುದನ್ನೂ ಮಾಡುವುದನ್ನು ತಪ್ಪಿಸಬೇಕೆಂದು ಸೂಚಿಸಲಾಗುತ್ತದೆ. ಆದಾಗ್ಯೂ, ಹೂಡಿಕೆ ಮಾಡದಿರುವುದು ನಿಮ್ಮ ವ್ಯಾಪಾರದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. 2022 ರ ಮೊದಲಾರ್ಧದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಪ್ರಯತ್ನಿಸಬಹುದು.
2022 ರಲ್ಲಿ, ಮನೆಯ ಅಲಂಕಾರ, ವಿವಾಹ ಯೋಜನೆ ಅಥವಾ ಛಾಯಾಗ್ರಹಣಕ್ಕೆ ಸಂಬಂಧಿಸಿದ ಯಾವುದೇ ವ್ಯಾಪಾರಕ್ಕಾಗಿ ಸಿಂಹ ರಾಶಿಚಕ್ರದ ಸ್ಥಳೀಯರ ಉತ್ತಮ ಆಲೋಚನೆಗಳನ್ನು ಹೊಂದಿರುತ್ತಾರೆ. ನೀವು ಅರೆಕಾಲಿಕ ಆಧಾರದ ಮೇಲೆ ಈ ವಿಷಯಗಳಲ್ಲಿ ಹೂಡಿಕೆ ಮಾಡಿದರೂ ಸಹ, 2022 ರಲ್ಲಿ ನೀವು ಖಂಡಿತವಾಗಿಯೂ ಈ ಕ್ಷೇತ್ರಗಳಲ್ಲಿ ಉತ್ಕೃಷ್ಟರಾಗುತ್ತೀರಿ. ಏಪ್ರಿಲ್ ತಿಂಗಳ ನಂತರ ಗುರು ಗ್ರಹವು ನಿಮ್ಮ ಎಂಟನೇ ಮನೆಗೆ ಪ್ರವೇಶಿಸಿದಾಗ, ನೀವು ಹಠಾತ್ ಲಾಭಗಳನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಅಂದರೆ ಕೆಲವು ಪೂರ್ವಜರ ಆಸ್ತಿ, ಎಫ್ಡಿ ಪ್ರಬುದ್ಧವಾಗುವುದು ಅಥವಾ ಈಕ್ವಿಟಿ ಮಾರ್ಕೆಟ್ ನಲ್ಲಿ ಹೋಲ್ಡಿಂಗ್ ಗಳನ್ನು ಮಾರಾಟ ಮಾಡಿದ ನಂತರ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಈ ಮೂಲಗಳಿಂದ ಗಳಿಸಿದ ಹಣವನ್ನು ತ್ವರಿತವಾಗಿ ಖರ್ಚು ಮಾಡಬಹುದು. ಅದು ಮನೆ ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಅಥವಾ ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಆಗಿರಬಹುದು.
ಸಿಂಹ ಆರ್ಥಿಕ ರಾಶಿ ಭವಿಷ್ಯ 2022 ರ ಪ್ರಕಾರ, ಆಗಸ್ಟ್ ತಿಂಗಳಿನಿಂದ ಬುಧ ಗ್ರಹವು ಹಣಕಾಸಿನ ಎರಡನೇ ಮನೆಗೆ ಸಾಗಿದಾಗ, ಸೇವಾ ವಲಯದಲ್ಲಿ ನಿಮಗೆ ಗಣನೀಯ ಲಾಭವನ್ನು ನೀಡಲಿದೆ. ಕುತೂಹಲಕಾರಿಯಾಗಿ ಈ ಅವಧಿಯು ವ್ಯಾಪಾರಸ್ಥರಿಗೂ ಅನುಕೂಲಕರವಾಗಿರಲಿದೆ. ಯಾವುದೇ ಪ್ರಮುಖ ಹೂಡಿಕೆಗಳನ್ನು ಮಾಡಲು ಅವಕಾಶಗಳು ಮತ್ತು ಮಾರ್ಕೆಟ್ ಸಾಕಷ್ಟು ಉತ್ತಮವಾಗಿರಲಿದೆ. ಕೆಲವು ವ್ಯವಹಾರಗಳಲ್ಲಿ ಹಣವನ್ನು ಹೂಡಿಕೆನ್ ಮಾಡಲು ಅಥವಾ ಯಾವುದೇ ಯೋಜನೆಯನ್ನು ಆರಂಭಿಸಲು ವರ್ಷದ ಅಂತ್ಯವು ಅನುಕೂಲಕರವಾಗಿರುತ್ತದೆ. ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಮತ್ತು ಭವಿಷ್ಯದಲ್ಲಿ ಇದು ನಿಮಗೆ ಹೇರಳವಾದ ಲಾಭವನ್ನು ತರುತ್ತದೆ. ಯಾವುದೇ ರೀತಿಯ ವಿದೇಶಿ ಅವಕಾಶಗಳ ಬಗ್ಗೆ ಮಾತನಾಡಿದರೆ, ವರ್ಷ 2022 ಸಿಂಹ ರಾಶಿಚಕ್ರದ ಸ್ಥಳೀಯರಿಗೆ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಅದು ಉದ್ಯೋಗವಾಗಲಿ ಅಥವಾ ಅಧ್ಯಯನವಾಗಲಿ ಅವಕಾಶವನ್ನು ಪಡೆಯುವಲ್ಲಿ ನೀವು ಮುಂಚೂಣಿಯಲ್ಲಿರುತ್ತೀರಿ. ನಿಮ್ಮ ವೃತ್ತಿ ಜೀವನದ ವಿಷಯದಲ್ಲಿ ನೀವು ಮಾಡಲು ಬಯಸುವ ಯಾವುದೇ ವಿಷಯದಲ್ಲಿ ನಿಮಗೆ ಸಾಕಷ್ಟು ಆಸಕ್ತಿ ಇದೆ ಎಂದು ಖಚಿತಪಡಿಸಿಕೊಳ್ಳಿ. ನೀವು ಏನನ್ನು ಮಾಡಲು ಇಷ್ಟಪಡುವುದಿಲ್ಲ ಎಂದು ಆರಿಸಿಕೊಂಡರೆ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಹಣವನ್ನು ಪಡೆಯದಿದ್ದರೆ, ನಿಮ್ಮ ವೃತ್ತಿ ಜೀವನದಲ್ಲಿ ನೀವು ಬೆಳೆಯದಿರಬಹುದು.
ಸಿಂಹ ವೃತ್ತಿ ಜೀವನ ರಾಶಿ ಭವಿಷ್ಯ 2022 - Leo Career Horoscope 2022 in Kannada
ಸಿಂಹ ವೃತ್ತಿ ಜೀವನ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷವಿಡೀ ನೀವು ಉತ್ತಮ ಸಮಯವನ್ನು ನಿರೀಕ್ಷಿಸಬಹುದು. ನಿಮ್ಮ ದೌರ್ಬಲ್ಯಗಳು ಸುಧಾರಣೆಯ ಹಾದಿಯಲ್ಲಿ ಸಾಗುತ್ತಿರುವಾಗ ನಿಮ್ಮ ಗುಣಗಳು ಹೆಚ್ಚಾಗುತ್ತವೆ. ಆದಾಗ್ಯೂ ಅಂತ್ಯದ ಕೆಲವು ತಿಂಗಳುಗಳು ಸವಾಲುಗಳಿಂದ ತುಂಬಿರುವ ಸಾಧ್ಯತೆ ಇದೆ. ಉದ್ಯೋಗ ಮಾಡುತ್ತಿರುವ ಸಿಂಹ ರಾಶಿಚಕ್ರದ ಪುರುಷರು ಮತ್ತು ಮಹಿಳೆಯರು ಕಚೇರಿಯ ರಾಜಕೀಯದಿಂದ ದೂರವಿರಬೇಕು ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಜನರು ಬಡ್ತಿ ಅಥವಾ ವರ್ಗಾವಣೆಯನ್ನು ಪಡೆದುಕೊಳ್ಳುವ ಪ್ರಯತ್ನಗಳನ್ನು ನೋಡಬೇಕು. ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಸಿಂಹ ರಾಶಿಚಕ್ರದ ವಿದ್ಯಾರ್ಥಿಗಳು ಯಾವುದೇ ರೀತಿಯ ಯೋಜನೆಗಳು, ವೆಬೈನರ್ಸ್ ಮತ್ತು ಸೆಮಿನಾರ್ ಗಳಿಗಾಗಿ ತಮ್ಮನ್ನು ತಾವು ಸಂಘಟಿಸಿಕೊಳ್ಳಬೇಕು.
ಸಿಂಹ ರಾಶಿಚಕ್ರದ ವ್ಯಾಪಾರಸ್ಥರಿಗೆ ವರ್ಷ 2022 ರಲ್ಲಿ ಸಮಯವು ಮಾಧ್ಯಮವಾಗಿರುತ್ತದೆ. ವಿಶೇಷವಾಗಿ ವರ್ಷದ ಆರಂಭಿಕ ತಿಂಗಳುಗಳಲ್ಲಿ ನೀವು ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಸೆಪ್ಟೆಂಬರ್ ನಿಂದ ಅಕ್ಟೋಬರ್ ವರೆಗಿನ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು, ಆದರೆ ಅವಧಿಯು ತಾತ್ಕಾಲಿಕವಾಗಿರುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ನೀವು ಸುಲಭವಾಗಿ ತೊಡೆದುಹಾಕುವಿರಿ. ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮಲ್ಲಿ ಕೆಲವರು ನಿಮ್ಮ ಯಶಸ್ಸು ಖ್ಯಾತಿಯನ್ನು ಕೆರಳಿಸಲು ಪ್ರಯತ್ನಿಸಬಹುದು ಮತ್ತು ತಪ್ಪು ಕಣ್ಣುಗಳು ಮತ್ತು ಜನರ ಅಪಾಯವನ್ನು ಕಡಿಮೆ ಮಾಡಬಹುದು. ಉಳಿದ ಅರ್ಧ ಅಂದರೆ ಜೂಲೈ ನಂತರದ ತಿಂಗಳುಗಳು ನಿಮ್ಮನ್ನು ಎಂದಿಗಿಂತಲೂ ಹೆಚ್ಚು ಕ್ರಿಯಾಶೀಲರನ್ನಾಗಿಸುತ್ತದೆ ಮತ್ತು ಆಗ ನೀವು ಉತ್ತಮ ಮತ್ತು ಹೆಚ್ಚು ಲಾಭದಾಯಕ ಅವಕಾಶಗಳನ್ನು ಆಕರ್ಷಿಸುವಿರಿ.
ಯುವ ವೃತ್ತಿಪರರು ಮತ್ತು ಕೆಲಸದ ಜಗತ್ತಿನಲ್ಲಿ ತಾಜಾ ಸಿದ್ಧರಾಗಿರಿ! ಅಂತಿಮವಾಗಿ ನಿಮ್ಮ ವರ್ಷ ಬಂದಿದೆ. ಸಿಂಹ ವೃತ್ತಿ ರಾಶಿ ಭವಿಷ್ಯ 2022 ರ ಪ್ರಕಾರ, ಉತ್ತಮ ಅವಕಾಶಗಳು ಮತ್ತು ಅಪಾರ ಯಶಸ್ಸು ನಿಮ್ಮ ಬಾಗಿಲು ತಟ್ಟಲಿದೆ. ಇದನ್ನು ಪಡೆದುಕೊಳ್ಳಲು ನೀವು ನಿಮ್ಮನ್ನು ಮುಂದಕ್ಕೆ ತಳ್ಳಿರಿ. ಈಗಾಗಲೇ ಉದ್ಯೋಗದಲ್ಲಿರುವ ಜನರು ತಮ್ಮ ಕೈಯಲ್ಲಿ ಉತ್ತಮ ಯೋಜನೆಗಳ ಗುಂಪನ್ನು ಹೊಂದಿರುತ್ತಾರೆ. ಇದು ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಸಿಂಹ ವೃತ್ತಿ ರಾಶಿ ಭವಿಷ್ಯ 2022 ಪ್ರಕಾರ, ಸಿಂಹ ರಾಶಿಚಕ್ರದ ಉದ್ಯೋಗಾಕಾಂಕ್ಷಿಗಳು ವೃತ್ತಿಪರ ಜಗತ್ತಿನಲ್ಲಿ ತೃಪ್ತಿದಾಯಕ ಸ್ಥಾನವನ್ನು ಹೊಂದಿರಬಹುದು. ಉದ್ಯೋಗವನ್ನು ಬದಲಾಯಿಸಲು ಯೋಜಿಸುತ್ತಿರುವ ಜನರು ತಮ್ಮಲ್ಲಿ ನಂಬಿಕೆ ಇರಿಸಬೇಕು ಮತ್ತು ತಾವು ಪಡೆದ ಅತ್ಯುತ್ತಮ ಹೊಡೆತಕ್ಕೆ ಹೋಗಬೇಕು!
ಶಿಕ್ಷಣತಜ್ಞರಿಗೆ ಸಂಬಂಧಿಸಿದಂತೆ, ಯಾವ ವಿಷಯವನ್ನು ಆರಿಸಬೇಕು ಮತ್ತು ಮತ್ತು ಯಾವುದನ್ನೂ ಬಿಡಬೇಕು ಎಂಬುದೇ ದೊಡ್ಡ ಸಂದಿಗ್ಧತೆ. ಆದ್ದರಿಂದ ಈಗಾಗಲೇ ನಿಮ್ಮ ಈ ಹಂತದ ಮೂಲಕ ಹಾದುಹೋಗಿರುವ ಜನರಿಂದ ಸ್ವಲ್ಪ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ನಿಮಗೆ ಉತ್ತಮ. ನಿಮ್ಮ ಜೀವನವನ್ನು ಕಲೆ ಮತ್ತು ವಿನ್ಯಾಸದ ಸುತ್ತ ರೂಪಿಸಲು ಇದು ಸೂಕ್ತ ಸಮಯ ಎಂದು ಸಿಂಹ ಶೈಕ್ಷಣಿಕ ರಾಶಿ ಭವಿಷ್ಯ 2022 ಹೇಳುತ್ತದೆ. ವಿಳಂಬವಾದ ಫಲಿತಾಂಶಗಳು ಮತ್ತು ನಿರಾಸಕ್ತಿಯ ಮೋಡಗಳು ನಿಮ್ಮನ್ನು ಸುತ್ತುವರೆದಿರಬಹುದು, ಆದರೆ ಅವುಗಳನ್ನು ನೋಡಲು ಧೈರ್ಯ ಮಾಡಬೇಡಿ! ನಿಮಗೆ ಬೇಕಾದುದನ್ನು ಅರ್ಪಿಸಿ ಮತ್ತು ಬದ್ಧರಾಗಿರಿ ಮತ್ತು ನೀವು ಅದನ್ನು ಹೊಂದುವಿರಿ.
ಸಿಂಹ ಪ್ರೀತಿ ರಾಶಿ ಭವಿಷ್ಯ 2022 - Leo Love Horoscope 2022 in Kannada
ನಿಮ್ಮ ಪ್ರೀತಿ ಜೀವನವು ಇಲ್ಲಿಯವರೆಗೆ ಸುಗಮವಾಗಿ ಸಾಗುತ್ತಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಇನ್ನಷ್ಟು ಪ್ರಣಯದ ಜೀವನವನ್ನು ನೀವು ಆನಂದಿಸುವಿರಿ ಎಂದು ಸಿಂಹ ಪ್ರೀತಿ ರಾಶಿ ಭವಿಷ್ಯ 2022 ಸೂಚಿಸುತ್ತದೆ. ಹೊಸ ಜನರೊಂದಿಗೆ ಡೇಟಿಂಗ್ ಮಾಡಲು ಯೋಜಿಸುತ್ತಿರುವವರು ಸೂಕ್ತವಾದ ಸಂಗಾತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ ಮತ್ತು ಆ ವಕ್ತಿಯು ನಿಮ್ಮೊಂದಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತಾರೆ. ಇದಲ್ಲದೆ ನೀವು ಎಲ್ಲಾ ಹಂತಗಳಲ್ಲಿ ಅವನ/ಅವಳೊಂದಿಗೆ ಸಂಪರ್ಕ ಹೊಂದುತ್ತೀರಿ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಮತ್ತು ಅವರಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ದೀರ್ಘಕಾಲದಿಂದ ಕಾಯುತ್ತಿದ್ದರೆ ಮತ್ತು ಡೇಟ್ ಅಥವಾ ಕಾಫಿ ಗಾಗಿ ಕೇಳಲು ಬಯಸುತ್ತಿದ್ದರೆ, ಅವರಿಂದ ನೀವು ಧನಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು
ಸಿಂಹ ಪ್ರೀತಿ ರಾಶಿ ಭವಿಷ್ಯ 2022 ಪ್ರಕಾರ, ಈ ಹಿಂದೆ ತಮ್ಮ ಹೃದಯವನ್ನು ಮುರಿದುಕೊಂಡಿರುವ ಸಿಂಹ ರಾಶಿಚಕ್ರದ ಜನರು ಈ ವರ್ಷ ತಮ್ಮ ಆದರ್ಶ ಹೊಂದಾಣಿಕೆಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದೇ ಸಂಬಂಧದಲ್ಲಿ ಹೂಡಿಕೆ ಮಾಡುವ ಮೊದಲು, ನೀವು ಬದ್ಧತೆಯ ಸ್ಥಳದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ಸಲಹೆ ನೀಡಲಾಗಿದೆ. ಇದಕ್ಕಾಗಿ ಸಮಯವನ್ನು ತೆಗೆದುಕೊಳ್ಳಿ ಮತ್ತು ನೀವು ಯಾರೊಂದಿಗಾದರೂ ಬಂಧಿಸುವ ಮೊದಲು ನಿಮ್ಮನ್ನು ನಿಜವಾಗಿ ಗುಣಪಡಿಸಿಕೊಳ್ಳಿ. ಬುಧ ಗ್ರಹದಲ್ಲಿ ಸೂರ್ಯನ ಸಾಗಣೆಯು, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಈ ಕಷ್ಟದ ಹಂತದಲ್ಲಿ ನಿಮ್ಮ ಸಂಗಾತಿಯ ಕಾಳಜಿಯನ್ನು ಆಲಿಸಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅಂತಹ ಯಾವುದೇ ಕಳಪೆ ಪರಿಸ್ಥಿತಿಯಲ್ಲಿ ನಿಮ್ಮ ಸಂಬಂಧದ ಮಹತ್ವವನ್ನು ಅವರಿಗೆ ನೆನಪಿಸಿ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸಲು ನೀವು ಬಯಸಿದರೆ, ನಿಮ್ಮ ಹಿಂದಿನ ತಪ್ಪುಗಳನ್ನು ಪುನರಾವರ್ತಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗುತ್ತದೆ.
ವರ್ಷದ ಕೆಲವು ತಿಂಗಳುಗಳು ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಒಳಗೊಂಡಿರಬಹುದು, ಆದರೆ ನೀವು ಸ್ವಲ್ಪ ಪ್ರಯತ್ನದಿಂದ ವಿಂಗಡಿಸಲು ಸಾಧ್ಯವಾಗುವುದಿಲ್ಲ. ಒಮ್ಮೆ ನೀವು ಈ ಕೆಟ್ಟ ಹಂತದಿಂದ ಹೊರಬಂದರೆ, ನಿಮಗಾಗಿ ಸಂತೋಷವನ್ನು ಮಾತ್ರ ಸಂಗ್ರಹಿಸಲಾಗುತ್ತದೆ. ಗುರುವಿನ ಸಾಗಣೆಗೆ ಧನ್ಯವಾದಗಳು! ಏಪ್ರಿಲ್ ತಿಂಗಳ ಮಧ್ಯದ ನಂತರ ನಿಮ್ಮ ಸುಧಾರಿಸುತ್ತದೆ. ವರ್ಷದ ಮಧ್ಯದಿಂದ ವರ್ಷದ ಅಂತ್ಯದ ವರೆಗಿನ ಸಮಯವು ನಿಮಗೆ ಅಂತ್ಯಂತ ಮಂಗಳಕರವಾಗಿರಲಿದೆ. ನಿಮ್ಮ ಮತ್ತು ನಿಮ್ಮ ದೀರ್ಘಕಾಲದ ಪಾಲುದಾರರ ನಡುವಿನ ಸಂಪರ್ಕವು ಗಣನೀಯವಾಗಿ ಗಾಢವಾಗುತ್ತದೆ ಮತ್ತು ದಿನಗಳು ಕಳೆದಂತೆ ನೀವಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಇನ್ನಷ್ಟು ಆಳವಾಗಿ ಬೀಳುತ್ತೀರಿ. ಈ ಹಂತದಲ್ಲಿ ನೀವು ಪರಸ್ಪರರನ್ನು ಬೆಂಬಲಿಸುತ್ತಿರಿ ಮತ್ತು ಪರಸ್ಪರರ ಬಗ್ಗೆ ಕಾಳಜಿವಹಿಸುತ್ತೀರಿ.
ಒಂಟಿಯಾಗಿರುವ ಸಿಂಹ ರಾಶಿಚಕ್ರದ ಸ್ಥಳೀಯರು ಗುಣವಾಗಲು ಸಮಯ ತೆಗೆದುಕೊಂಡ ನಂತರ ಮಾತ್ರ, ತೆರೆದ ತೋಳುಗಳಿಂದ ಪ್ರೀತಿಯನ್ನು ಸ್ವಾಗತಿಸಬೇಕು. ಏಪ್ರಿಲ್ ತಿಂಗಳಲ್ಲಿ ಶನಿ ಸಂಚಾರವು ನಿಮ್ಮ ಪ್ರೇಮಿಯನ್ನು ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನೀವು ಸಂಪರ್ಕಿಸಬಹುದು ಎಂದು ಖಚಿತಪಡಿಸುತ್ತದೆ. ಇದರಿಂದಾಗಿ ನಿಮ್ಮ ಚಿಂತೆ ಮತ್ತು ಆತಂಕಗಳ ಬಗ್ಗೆ ಅವರಿಗೆ ತಿಳಿಸಲು ಸಾಧ್ಯವಾಗುತ್ತದೆ. ಇದರಿಂದಾಗಿ ನೀವಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಮತ್ತು ವೈಯಕ್ತಿಕ ಮಟ್ಟದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಈ ಹೊಸ ಸಂಪರ್ಕವನ್ನು ಒಮ್ಮೆ ಪ್ರಯತ್ನಿಸಿದರೆ, ಅದು ಭರವಸೆಯ ವಿಷಯವಾಗಿ ಹೊರಹೊಮ್ಮಬಹುದು. ಇನ್ನೂ ಒಂಟಿಯಾಗಿರುವ ಸಿಂಹ ರಾಶಿಚಕ್ರದ ಜನರು ಮೇ, ಏಪ್ರಿಲ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯೂ ಇದೆ.
ಸಿಂಹ ವೈವಾಹಿಕ ರಾಶಿ ಭವಿಷ್ಯ 2022 - Leo Marriage Horoscope 2022 in Kannada
ಸಿಂಹ ವೈವಾಹಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಸಂಗಾತಿಯೊಂದಿಗೆ ನಿಮ್ಮ ವೈವಾಹಿಕ ಜೀವನವನ್ನು ಹೇಗೆ ನಿರ್ವಹಿಸುತ್ತೀರಿ ಮತ್ತು ನಿಮ್ಮ ಕೆಲಸವನ್ನು ಸಮಾನಾಂತರವಾಗಿ ಹೇಗೆ ನಿರ್ವಹಿಸುತ್ತೀರಿ ಎಂಬುದು ಸಂಪೂರ್ಣವಾಗಿ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ನೀವು ಈಗಾಗಲೇ ವಿವಾಹಿತರಾಗಿದ್ದರೆ, ನಿಮ್ಮ ಮುಂದೆ ಕೆಲವು ಮಿಶ್ರ ಸಾಧ್ಯತೆಗಳು ಉಂಟಾಗಬಹುದು. ಆದಾಗ್ಯೂ, ನೀವು ಸೂಕ್ತವಾದ ಸಂಗಾತಿಯನ್ನು ಹುಡುಕಲು ಯೋಜಿಸುತ್ತಿದ್ದರೆ, ಎಲ್ಲಾ ಸಂದೇಹಗಳಿಂದ ದೂರವಿರಿ ಏಕೆಂದರೆ ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ ಈ ವರ್ಷ ನೀವು ಹುಡುಕುತ್ತಿರುವ ವ್ಯಕ್ತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ನವವಿವಾಹಿತ ಜನರು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಒಂದೆಡೆ ನೀವು ಆನಂದದಾಯಕ ಮತ್ತು ಸುಂದರ ಕ್ಷಣಗಳನ್ನು ಕಳೆದರೆ, ಅದೇ ಸಮಯದಲ್ಲಿ ಮತ್ತೊಂದೆಡೆ, ಕೌಟುಂಬಿಕ ವಿಷಯಗಳ ಕಾರಣದಿಂದಾಗಿ ನೀವು ಕೆಲವು ಘರ್ಷಣೆಗಳಿಗೆ ಒಳಗಾಗಬಹುದು
ಈಗಾಗಲೇ ಸಂಬಂಧದಲ್ಲಿರುವ ಜೋಡಿಗಳು ಮದುವೆಯ ವಿಷಯವನ್ನು ತಮ್ಮ ಪೋಷಕರಿಗೆ ವೈಶಸ್ವಿಯಾಗಿ ಮನವರಿಕೆ ಮಾಡುತ್ತಾರೆ. ನಿಮ್ಮ ನಡುವೆ ಕೆಲವು ಬಿಸಿಯಾದ ವಿವಾದಗಳು ಉದ್ಭವಿಸಬಹುದು ಆದರೆ ಅದು ತಾತ್ಕಾಲಿಕವಾಗಿರುತ್ತದೆ ಮತ್ತು ನಿಮ್ಮ ನಿರ್ಧಾರದಲ್ಲಿ ನೀವು ದೃಢವಾಗಿದ್ದರೆ, ಕೊನೆಯಲ್ಲಿ ಅವರು ಒಪ್ಪುಕೊಳ್ಳುತ್ತಾರೆ ಎಂದು ಸಿಂಹ ವೈವಾಹಿಕ ರಾಶಿ ಭವಿಷ್ಯ 2022 ಹೇಳುತ್ತದೆ. ಮದುವೆ ವರ್ಷಾಂತ್ಯದ ವೇಳೆಗೆ ಸಂಭಸುವ ಸಂಪೂರ್ಣ ಸಾಧ್ಯತೆ ಇದೆ. ನಕ್ಷತ್ರಳು ಸಂಪೂರ್ಣವಾಗಿ ನಿಮ್ಮ ಪರವಾಗಿರುತ್ತವೆ ಮತ್ತು ಸಿಂಹ ವೈವಾಹಿಕ ರಾಶಿ ಭವಿಷ್ಯ 2022 ರ ಪ್ರಕಾರ, ನಿಮ್ಮ ಕುಟುಂಬದ ಒಪ್ಪಿಗೆಯೊಂದಿಗೆ ನಿಮ್ಮ ಜೀವನದ ಸಮಯವನ್ನು ನೀವು ಆನಂದಿಸುವಿರಿ.
ವ್ಯಕ್ತಿಯನ್ನು ಮದುವೆಯಾಗಲು ಆತುರಪಡಬೇಡಿ. ಮದುವೆಯ ವಿಷಯಗಳಲ್ಲಿ ಸ್ವಲ್ಪ ತಡೆಯಲು ನಿಮಗೆ ಸಲಹೆ ನೀಡಲಾಗುತ್ತದೆ. ಈ ವರ್ಷ ನೀವು ಬಯಸುತ್ತಿರುವ ವ್ಯಕ್ತಿಯನ್ನು ಪಡೆಯುವ ಸಾಧ್ಯತೆ ಇದೆ. ಇದಲ್ಲದೆ ಕೆಲವು ಸಾಮಾಜಿಕ ಅಥವಾ ವ್ಯಾಪಾರ ಕೂಟದಲ್ಲಿ ನೀವು ಅವಳು/ಅವನನ್ನು ಭೇಟಿಯಾಗುತ್ತೀರಿ ಎಂದು ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ಊಹಿಸುತ್ತದೆ. ನೀವಿಬ್ಬರು ಸಿದ್ಧಾಂತಗಳು ಮತ್ತು ಆಲೋಚನಾ ಪ್ರಕ್ರಿಯೆಗಳ ವಿಷಯದಲ್ಲಿ ಹೊಂದಿಕೆಯಾಗುತ್ತೀರಿ ಮತ್ತು ಆ ಸಂಪರ್ಕವನ್ನು ತಕ್ಷಣವೇ ಅನುಭವಿಸುವಿರಿ
ಹೊಸದಾಗಿ ಮದುವೆಯಾಗಿರುವ ದಂಪತಿಗಳು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯಬಹುದು. ಒಂದೆಡೆ ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲಗೊಂಡರೆ, ಮತ್ತೊಂದೆಡೆ, ನೀವಿಬ್ಬರು ವಿವಾದಗಳಿಗೆ ಒಳಗಾಗುವಂತಹ ಸನ್ನಿವೇಶಗಳು ಸಹ ಉದ್ಭವಿಸಲಿವೆ. ಸಣ್ಣ ಭಿನ್ನಾಭಿಪ್ರಾಯಗಳನ್ನು ತಪ್ಪಿಸುವುದು ಮತ್ತು ಕುಟುಂಬದ ಯೋಗಕ್ಷೇಮವನ್ನು ಎಲ್ಲಾ ವಿಧಾನಗಳು ಮತ್ತು ನಡವಳಿಕೆಗಳಲ್ಲಿ ಕಾಪಾಡಿಕೊಳ್ಳಲು ಆಸ್ಟ್ರೋಟಾಕ್ ಜ್ಯೋತಿಷಿಗಳು ನಿಮಗೆ ಸಲಹೆ ನೀಡುತ್ತಿದ್ದಾರೆ.
ಸಿಂಹ ಅರೋಗ್ಯ ರಾಶಿ ಭವಿಷ್ಯ 2022 - Leo Health Horoscope 2022 in Kannada
ಸಿಂಹ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ದೀರ್ಘಕಾಲದಿಂದ ನೀವು ಕೆಲವು ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದಾಗ್ಯೂ 2022 ರ ಹೊಸ ವರ್ಷವು ಅದನ್ನು ತೊಡೆದುಹಾಕಲು ನಿಮಗೆ ಸಹಾಯ ಮಾಡಬಹುದು. ನಿಮ್ಮ ಆರೋಗ್ಯದ ಕಡೆಗೆ ನೀವು ಪ್ರಯತ್ನಗಳನ್ನು ಕಡಿಮೆ ಮಾಡಬಹುದು. ಆದರೆ ಯಾವುದೇ ಕೆಟ್ಟ ಅಭ್ಯಾಸವನ್ನು ಬಿಡಲು ಯೊಶಿಸುತ್ತಿರುವ ಜನರು ಯಶಸ್ವಿಯಾಗುತ್ತಾರೆ. ಈ ವರ್ಷ ನಿಮ್ಮ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ಪಾರಾಗಲು ನೀವು ನಿರೀಕ್ಷಿಸಬಹುದು. ಸಿಂಹ ವಾರ್ಷಿಕ ರಾಶಿ ಭವಿಷ್ಯ 2022 ರ ಪ್ರಕಾರ, ಈ ವರ್ಷ ನಿಮ್ಮ ನಿರತ ಕೆಲಸದಿಂದ ನೀವು ಕೆಲವು ಒತ್ತಡಗಳಿಗೆ ಒಳಗಾಗಬಹುದು ಆದರೆ ಅದು ತಾತ್ಕಾಲಿಕವಾಗಿರುತ್ತದೆ.
ತಮ್ಮ ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿರುವವರು ಸ್ವಲ್ಪ ಜಾಗರೂಕರಾಗಿರಬೇಕು. ಸಿಂಹ ಅರೋಗ್ಯ ರಾಶಿ ಭವಿಷ್ಯ 2022 ರ ಪ್ರಕಾರ, ಇದು ನಿಮ್ಮ ಕಾಯಿಲೆಯನ್ನು ಹೆಚ್ಚಿಸಬಹುದು ಮತ್ತು ನೀವು ಈಗಾಗಲೇ ಬಳಲುತ್ತಿರುವುದಕ್ಕಿಂತ ಸ್ವಲ್ಪ ಹೆಚ್ಚು ತೊಂದರೆ ನೀಡಬಹುದು ಎಂದು ಸೂಚಿಸುತ್ತದೆ. ಇದಲ್ಲದೆ ಈ ಸಮಯದಲ್ಲಿ ನೀವು ಹೆಚ್ಚು ಪೌಷ್ಟಿಕಾಂಶದ ಆಯ್ಕೆಗಳನ್ನು ಹುಡುಕಬೇಕು ಮತ್ತು ವರ್ಷದಲ್ಲಿ ಚಿಂತೆಗಳ ಬೆನ್ನಟ್ಟುವಿಕೆಯನ್ನು ಕಡಿತಗೊಳಿಸಬೇಕು.ನಿಮ್ಮ ನಡೆಯುತ್ತಿರುವ ಆರೋಗ್ಯ ಅಸ್ವಸ್ಥತೆಯು ತೀವ್ರದಿಂದ ಸೌಮ್ಯವಾಗಿ ಬದಲಾಗುತ್ತದೆ ಅಥವಾ ಶೀಘ್ರದಲ್ಲೇ ಏನೂ ಆಗದಿರಬಹುದು. ನಿರ್ಧಿಷ್ಟವಾಗಿ ಹೇಳುವುದಾದರೆ, ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವ ಸಿಂಹ ರಾಶಿಚಕ್ರದ ಜನರು ವರ್ಷದ ಮೊದಲಾರ್ಧದಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು.
ಉತ್ತಮ ಆರೋಗ್ಯವನ್ನು ಆನಂದಿಸಲು ನಿಮ್ಮ ದಿನಚರಿಯಲ್ಲಿ ನೀವು ಸಮತೋಲಿತ ಆಹಾರ ಮತ್ತು ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ವರ್ಷದ ಮಧ್ಯ ತಿಂಗಳುಗಳಲ್ಲಿ ನೀವು ತಂಪು ಪಾನೀಯಗಳು ಮತ್ತು ಕಾಕ್ಟೈಲ್‌ಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುವ ಸಂಪೂರ್ಣ ಸಾಧ್ಯತೆ ಇದೆ. ನಿಮ್ಮನ್ನು ನೀವು ಬಯಸುವ ಆಕಾರದಲ್ಲಿ ಉಳಿಸಿಕೊಳ್ಳಲು ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳನ್ನು ಅಭ್ಯಾಸ ಮಾಡುವುದನ್ನು ಮುಂದುವರಿಸಬೇಕೆಂದು ಆಹಾರ ಯೋಜಕರು ಸಹ ಹೇಳುತ್ತಾರೆ.
ಅಂತಿಮವಾಗಿ, ನೀವು ಅದನ್ನು ಅನುಸರಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಉತ್ತಮ ಆಹಾರವನ್ನು ಸೇವಿಸಿ, ಕೆಲಸ ಮಾಡಿ, ಸಂಪೂರ್ಣ ನಿದ್ರೆ ಮಾಡಿ, ಚಾರ್ಟ್ ಅನ್ನು ಪುನರಾವರ್ತಿಸಿ. ಇದು ನಿಮ್ಮ ವರ್ಷವಾಗಿರುವುದರಿಂದ "ಯಾವುದೇ ರೋಗಲಕ್ಷಣಗಳು ಅಥವಾ ಕಾಯಿಲೆಗಳಿಲ್ಲ." ಹೀಗಾಗಿ, ನೀವು ಏನು ಬೇಕಾದರೂ ಮಾಡಬಹುದು. ನಿಮ್ಮನ್ನು ಯಾವುದೇ ವೈದ್ಯಕೀಯ ಸಮಸ್ಯೆಗಳಿಗೆ ಕರೆದೊಯ್ಯುವ ವಿಷಯಗಳಿಂದ ದೂರವಿರಿ ಮತ್ತು ಆರೋಗ್ಯಕರ ಮತ್ತು ಒಳ್ಳೆಯದನ್ನು ಮಾತ್ರ ತಿನ್ನುವುದನ್ನು ಮರೆಯದಿರಿ. ಇದರ ಹೊರತಾಗಿ ವರ್ಷದ ಮಧ್ಯದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಚಿಕ್ಕ ಸಮಸ್ಯೆಯನ್ನು ಕೂಡ ನಿರ್ಲಕ್ಷಿಸಬೇಡಿ ಎಂದು ನಿಮಗೆ ಸಲಹೆ ನೀಡಲಾಗಿದೆ.
ದೇವಸ್ಥಾನದಲ್ಲಿಯೇ ಮದ್ಯದ ಬಾಟಲಿ ಹಂಚಿದ ಬಿಜೆಪಿ ನಾಯಕನ ಮಗ | uttar pradesh hardoi liquor bottles distributed at temple event organised by bjp leader - Kannada Oneindia
ದೇವಸ್ಥಾನದಲ್ಲಿಯೇ ಮದ್ಯದ ಬಾಟಲಿ ಹಂಚಿದ ಬಿಜೆಪಿ ನಾಯಕನ ಮಗ
| Published: Tuesday, January 8, 2019, 13:15 [IST]
ಹರ್ದೋಯ್ (ಉತ್ತರ ಪ್ರದೇಶ) ಜನವರಿ 8: ದೇವಸ್ಥಾನವೊಂದರಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಬಿಜೆಪಿ ಮುಖಂಡರೊಬ್ಬರ ಮಗ ಅಲ್ಲಿಯೇ ಆಹಾರದೊಂದಿಗೆ ಮದ್ಯದ ಬಾಟಲಿಗಳನ್ನು ಹಂಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜೆಪಿ ಮುಖಂಡ ನರೇಶ್ ಅಗರವಾಲ್ ಅವರ ಮಗ ನಿತಿನ್, ಪಾಸಿ ಸಮುದಾಯದ ಜನರಿಗಾಗಿ ಹರ್ದೋಯ್‌ನ ಶ್ರವಣದೇವಿ ದೇವಸ್ಥಾನದಲ್ಲಿ ಸಮ್ಮೇಳನವೊಂದನ್ನು ಆಯೋಜಿಸಿದ್ದರು.
ಕಾರ್ಯಕ್ರಮದ ಬಳಿಕ ಗ್ರಾಮದ ಮುಖ್ಯಸ್ಥನಿಗೆ ಆಹಾರದ ಪೊಟ್ಟಣಗಳನ್ನು ನೀಡಲಾಗಿದ್ದು, ಆತ ಎಲ್ಲರಿಗೂ ಹಂಚಿಕೆ ಮಾಡಲಿದ್ದಾನೆ ಎಂದು ನಿತಿನ್ ಅಗರವಾಲ್ ವೇದಿಕೆ ಮೇಲಿಂದ ಪ್ರಕಟಿಸಿದ್ದರು.
ಆದರೆ, ಆಹಾರದ ಪೊಟ್ಟಣ ಪಡೆದುಕೊಂಡ ಕೆಲವು ಗ್ರಾಮಸ್ಥರ ಸಂಭ್ರಮ ಮುಗಿಲು ಮುಟ್ಟಿತ್ತು. ಏಕೆಂದರೆ ಪೊಟ್ಟಣದಲ್ಲಿ ಆಹಾರದ ಜೊತೆಗೆ ಮದ್ಯವೂ ಇತ್ತು!
ನಿತಿನ್ ಅಗರವಾಲ್ ಅವರು ಆಯೋಜಿಸಿದ್ದ ಕಾರ್ಯಕ್ರಮ ಇದು. ಕಾರ್ಯಕ್ರಮದಲ್ಲಿ ಆಹಾರದ ಜೊತೆಗೆ ಮದ್ಯವನ್ನೂ ಇರಿಸಿ ಕೊಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ತಿಳಿಸಿದರು.
ಆದರೆ, ಇದೇ ಪೊಟ್ಟಣಗಳನ್ನು ಅಪ್ರಾಪ್ತ ವಯಸ್ಸಿನ ಮಕ್ಕಳಿಗೂ ವಿತರಿಸಲಾಗಿದೆ. 'ಅಪ್ಪನ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದೆ. ನನಗೂ ಇದನ್ನು ಕೊಟ್ಟಿದ್ದಾರೆ' ಎಂದು ಬಾಲಕನೊಬ್ಬ ಹೇಳಿದ್ದಾನೆ.
ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹರ್ದೋಯ್ ಬಿಜೆಪಿ ಸಂಸದ ಅನ್ಷುಲ್ ವರ್ಮಾ, ಅಗರವಾಲ್ ಅವರನ್ನು ಟೀಕಿಸಿದ್ದಾರೆ. ದೇವಸ್ಥಾನದ ಕಾರ್ಯಕ್ರಮದಲ್ಲಿ ಮದ್ಯ ಹಂಚಿಕೆ ಮಾಡಿದ ವಿಚಾರವನ್ನು ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
'ಅಗರವಾಲ್ ಇತ್ತೀಚೆಗಷ್ಟೇ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. ನಮ್ಮ ಧಾರ್ಮಿಕ ಸ್ಥಳವೊಂದರಲ್ಲಿ ಪಾಸಿ ಸಮ್ಮೇಳನ ಆಯೋಜಿಸಿದ್ದಾರೆ. ಇದನ್ನು ದುರದೃಷ್ಟಕರ ಕಾರ್ಯಕ್ರಮ ಎಂದು ಹೇಳುತ್ತೇನೆ. ಏಕೆಂದರೆ, ನಾವು ಪೆನ್ನು ಪುಸ್ತಕ ಕೊಡಬೇಕಾದ ಮಕ್ಕಳಿಗೆ ಅಗರವಾಲ್ ಮದ್ಯದ ಬಾಟಲಿಗಳನ್ನು ನೀಡಿದ್ದಾರೆ.
ಇದಕ್ಕೆ ಹೇಗೆ ಅವಕಾಶ ನೀಡಲಾಯಿತು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮದ್ಯ ಹಂಚಿಕೆ ಮಾಡಿದ್ದು ಅಬಕಾರಿ ಇಲಾಖೆಯ ಕಣ್ಣಿಗೆ ಹೇಗೆ ಬೀಳಲಿಲ್ಲ? ಈ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿ ಮರುಚಿಂತನೆ ನಡೆಸಬೇಕಿದೆ' ಎಂದು ಅವರು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ನಾಯಕರಾಗಿದ್ದ ನರೇಶ್ ಅಗರವಾಲ್ ಮಾರ್ಚ್ 2018ರಂದು ತಮ್ಮ ಮಗ ಹಾಗೂ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.
uttar pradesh lucknow bjp liquor temple ಉತ್ತರ ಪ್ರದೇಶ ಲಕ್ನೋ ಬಿಜೆಪಿ ಮದ್ಯ ದೇವಸ್ಥಾನ
Liquor bottles kept inside food pockets were distributed at Shravan Devi temple in a event organised by BJP leader Naresh Agarwal's son nitin at Uttar Pradesh's Hardoi.
ಆರ್‌ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ - News Belgaum
ಆರ್‌ ಸಿಯು ವಿದ್ಯಾಲಯದ ಮೇಲೆ ಕೊರೋನಾ ದಾಳಿ
ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ದೃಢ
By News Belgaum Kannada News On Feb 1, 2022
ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ತಗ್ಗಿದೇ ಎನ್ನುವರಷ್ಟರಲ್ಲಿ ಮತ್ತೆ ನುಸುಳುತ್ತಿದ್ದು, ಇದೀಗ ರಾಣಿ ಚೆನ್ನಮ್ಮ ವಿವಿಯ ವಿದ್ಯಾರ್ಥಿಗಳೂ ಸೇರಿದಂತೆ 42 ಜನರಿಗೆ ಸೋಂಕು ತಗುಲಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 32 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸೇರಿದಂತೆ 42 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಗೆ ಕೋವಿಡ್ ದೃಢಪಟ್ಟಿದ್ದು ಅವರು ರಜೆಯ ಮೇಲೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಹಾಸ್ಟೇಲ್ ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಗಂಟಲು ದ್ರವದ ಮಾದರಿ ಪಡೆದು ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ ಒಟ್ಟು 42 ಜನರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದೆ.//////