text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕನ್ನಡದ ಮೇರು ಬರಹಗಾರರಾದ ಬೇಂದ್ರೆ, ಕುವೆಂಪು, ಅಡಿಗ, ಕಾರಂತ, ಅನಂತಮೂರ್ತಿ, ಶಿವರುದ್ರಪ್ಪ, ಕಣವಿ ...ಇಂತಹವರ ಮಕ್ಕಳೆಲ್ಲ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ, ಕನ್ನಡದ ಅಳಿವು ಉಳಿವಿನ ಪ್ರಶ್ನೆ ಬಂದಾಗಲಂತೂ ನಮ್ಮಲ್ಲಿ ಮೂಡುತ್ತದೆ ! ವಾಮನ ಬೇಂದ್ರೆ, ಪೂರ್ಣಚಂದ್ರ ತೇಜಸ್ವಿ ಗೊತ್ತಿದೆ, ಇನ್ನು ಹಲವರ ಬಗ್ಗೆ ಗೊತ್ತಿಲ್ಲ. 'ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ' ಎಂದ ಚನ್ನವೀರ ಕಣವಿಯವರ ಮಗನ ಬಗ್ಗೆಯೂ ಹಲವರಿಗೆ ಗೊತ್ತಿಲ್ಲ. ದೇಶದ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಹಾಗೂ ಅಮೆರಿಕದ ಬೋಸ್ಟನ್ ವಿವಿಯಲ್ಲಿ ಓದಿ ಭೌತಶಾಸ್ತ್ರಜ್ಞರಾಗಿ ಹೊರಬಂದ ಶಿವಾನಂದ ಕಣವಿ, ಮುಂಬೈಯ ಐಐಟಿಯಲ್ಲೂ ಸಂಶೋಧನೆ ನಡೆಸಿದವರು. ಸ್ವಲ್ಪ ಕಾಲ ಮೇಷ್ಟ್ರುಗಿರಿ ಮಾಡಿ, ಅರ್ಥಶಾಸ್ತ್ರ ತಜ್ಞನಾಗಿ, ಬಳಿಕ ಉದ್ಯಮ ಸಂಬಂ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡರು. ೨೦೦೪ರ ವರೆಗೆ 'ಬ್ಯುಸಿನೆಸ್ ಇಂಡಿಯಾ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ೨೦೦೩ರಲ್ಲಿ ಪ್ರಕಟವಾದ Sand to Silicon: The amazing story of digital technology ಎಂಬುದು ಅವರ ಬಹು ಚರ್ಚಿತ ಪುಸ್ತಕ. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯರ 'ಪ್ರಥಮ' ಸಾಧನೆಗಳನ್ನು ಹೇಳುವ ಪುಸ್ತಕ ಅದು. ೧೮೯೭ರ ಜಗದೀಶ್ ಚಂದ್ರ ಬೋಸ್, ೧೯೮೨ರಲ್ಲೇ 'ಪರ್ಸನಲ್ ಕಂಪ್ಯೂಟರ್ ವರ್ಕ್ ಸ್ಟೇಷನ್' ಆರಂಭಿಸಿದ 'ಸನ್ ಮೈಕ್ರೊಸಿಸ್ಟಮ್ಸ್'ನ ಸಹ ಸ್ಥಾಪಕ ವಿನೋದ್ ಖೋಸಲಾ, ಯೋಜನಾ ವಿವರಣೆಗೆ ಕಂಪ್ಯೂಟರ್‌ನಲ್ಲಿ ಬಳಸುವ ಪವರ್ ಪಾಯಿಂಟ್‌ಗೆ ಮೈಕ್ರೋಸಾಫ್ಟ್‌ನಲ್ಲಿದ್ದು ಕಾರಣರಾದ ವಿಜಯ್ ವಾಶಿ, ವೆಬ್‌ಸೈಟ್ ಮೂಲಕ ಇಮೇಲ್ ಆರಂಭಿಸಿದ ಸಬೀರ್ ಭಾಟಿಯಾ, ಕಂಪ್ಯೂಟರ್‌ನಲ್ಲಿ ಧ್ವನಿ ಮುದ್ರಿಕೆಗೆ ಬಳಸುವ mpeg ರೀತಿಗೆ ಕೆಲಸ ಮಾಡಿದ ಎನ್. ಜಯಂತ್ , ಡಿಜಿಟಲ್ ಸ್ಯಾಟಲೈಟ್ ಟಿವಿ ಬಗ್ಗೆ ದುಡಿದ ಅರುಣ್ ನೇತ್ರಾವಳಿ, ಹೀಗೆ ಹಲವು ವ್ಯಕ್ತಿ-ಸಂಗತಿಗಳ ಬಗ್ಗೆ ಈ ಪುಸ್ತಕ ಗಮನ ಸೆಳೆಯುತ್ತದಂತೆ. ವಿಶ್ವವನ್ನು ಕಾಣಿಸಿದ ಭಾರತವನ್ನು ನಮ್ಮ ಕಣ್ಣಿಂದಲೇ ನೋಡುವ ಪ್ರಯತ್ನ ಇದು. ಐಟಿ ಮುಗ್ಗರಿಸಿರುವ ಈ ಕಾಲದಲ್ಲಂತೂ ಇದನ್ನು ನಾವೆಲ್ಲ ಆನಂದದಿಂದ ಓದಬಹುದು ! ಶಿವಾನಂದ ಕಣವಿ ಈಗ 'ಟಾಟಾ ಕನ್‌ಸಲ್ಟೆನ್ಸಿ ಸರ್ವಿಸಸ್’ ಕಂಪನಿಯ ವಿಶೇಷ ಯೋಜನಾ ವಿಭಾಗದ ಉಪಾಧ್ಯಕ್ಷರಾಗಿ ದುಡಿಯುತ್ತಿದ್ದಾರೆ. ಕತೆಗಾರ್ತಿ ಶಾಂತಾ ಕಣವಿಯನ್ನೂ ತಾಯಿಯಾಗಿ ಪಡೆದ ಶಿವಾನಂದರಿಗೆ, ಬರವಣಿಗೆ ವರ-ಬಲ. ಅವರ ತಂದೆ, 'ಸರ್ವ ಹೃದಯ ಸಂಸ್ಕಾರಿ’ ಹಾಗೆ ಕಾಣುತ್ತಿರುವ ನವೋದಯದ ಕವಿ ಚನ್ನವೀರ ಕಣವಿಯವರಿಗೆ, ಧಾರವಾಡದ ಕವಿಭೂಮಿಯಲ್ಲಿ ಇಂದು (ಜೂನ್ ೨೮) ೮೨ನೇ ವರ್ಷದ ಬೆಳಗು. ‘ಒಂದು ಮುಂಜಾವಿನಲಿ’ ಎಂಬ ಅವರ ಭಾವಗೀತೆಗಳ ಸಿ.ಡಿಯನ್ನು ಲಹರಿ ಹೊರತಂದಿದೆ. ಅವಸರಕ್ಕೆ ಯು ಟ್ಯೂಬ್‌ಗೆ ಹೋದರೆ ಬಿ.ಆರ್. ಛಾಯಾ ಹಾಡಿರುವ ‘ಒಂದು ಮುಂಜಾವಿನಲಿ’ ಹಾಡನ್ನು ಕೇಳಬಹುದು, ನೋಡಬಹುದು. ನವೀಕರಣಗೊಳ್ಳುತ್ತಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ (www.karnatakasahithyaacademy.org)ನ ‘ಸ್ವಂತ ಕವಿತೆಯ ಓದು’ ವಿಭಾಗದಲ್ಲೂ ಕಣವಿಯವರು ಸ್ವಪದ್ಯಗಳನ್ನು ಓದುವ ವಿಡಿಯೊವನ್ನು ಪ್ರಕಟಿಸಿದ್ದಾರೆ ಅಧ್ಯಕ್ಷ ಎಂ.ಎಚ್.ಕೃಷ್ಣಯ್ಯ. ‘ಹಸಿ ಗೋಡೆಯ ಹರಳಿನಂತೆ, ಹುಸಿ ಹೋಗದ ಕನ್ನಡ’ಎಂದ ಕವಿ, ಅಲ್ಲಿ ಐದು ಪದ್ಯಗಳನ್ನು ಓದುತ್ತಾ ಕುಳಿತಿದ್ದಾರೆ. ನೋಡಿ, ಕೇಳಿ, ಹ್ಯಾಪಿ ಬರ್ತ್‌ಡೇ ಹೇಳಿ ಮಾಲ್ ಸಂಸ್ಕೃತಿಯೊಂದಿಗೆ ಬಂದ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳು, ನಾಲ್ಕೈದು ವರ್ಷಗಳಲ್ಲೇ ಗಗನದೆತ್ತರ ಬೆಳೆದಿದೆ. ಬಾಲಿವುಡ್‌ನ ಸುಮಾರು ಶೇ.೭೦ರಷ್ಟು ಮಾರುಕಟ್ಟೆಯನ್ನು ಪಿವಿಆರ್, ಬಿಗ್ ಸಿನಿಮಾ, ಐನಾಕ್ಸ್, ಫೇಮ್, ಫನ್‌ನಂತಹ ಸಂಸ್ಥೆಗಳ ಮಲ್ಟಿಪ್ಲೆಕ್ಸ್ ಸರಪಳಿ ಆವಾಹಿಸಿಕೊಂಡಿವೆ. ವರ್ಷಕ್ಕೆ ೯೦೦ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುವ ಇಂಡಿಯಾದಲ್ಲಿ, ಮಲ್ಟಿಪ್ಲೆಕ್ಸ್‌ಗೆ ಬರುವ ನೋಡುಗರನ್ನು ದೃಷ್ಟಿಯಲ್ಲಿಟ್ಟೇ ಸಿನಿಮಾ ನಿರ್ಮಾಣ ನಡೆಯುತ್ತಿದೆ. ಟೂರಿಂಗ್ ಟಾಕೀಸ್‌ಗಳ ಆಣೆ-ಪೈಸೆ ಲೆಕ್ಕಾಚಾರದ ದಿನಗಳನ್ನೀಗ ಕಲ್ಪಿಸಿಕೊಳ್ಳುವುದೂ ಕಷ್ಟ. ಐಟಿ ಬೂಮ್ ಜತೆಗೆ ಎದ್ದುಕೊಂಡ ಈ ಮಲ್ಟಿಪ್ಲೆಕ್ಸ್‌ಗಳಿಗೆ ಜನಸಾಮಾನ್ಯರ ಗೊಡವೆ ಇಲ್ಲ. ಚಿತ್ರಗಳಲ್ಲೂ ಅವರು ಕಾಣೆಯಾಗಿದ್ದಾರಲ್ಲ ! ಹಾಗಾಗಿ ಜೇಬು ಗಟ್ಟಿಯಿದ್ದವರಿಗಷ್ಟೇ ಹಿರಿತೆರೆಯ ಭಾಗ್ಯ. (ಉಳಿದವರಿಗೆ ಕಿರುತೆರೆ ಇದೆಯಲ್ಲ!) ಇತ್ತೀಚೆಗಿನ ವರ್ಷಗಳಲ್ಲಿ ಪೈರಸಿ ಹಾವಳಿ ಬಾಲಿವುಡ್‌ನಲ್ಲಿ ಹೆಚ್ಚಾಗಿದೆಯಾ? ಹೆಚ್ಚಾಗಿದ್ದರೆ ಸಿನಿಮಾ ಟಿಕೆಟ್ ಬೆಲೆ ಹೆಚ್ಚಾಗಿರುವುದೂ ಅದಕ್ಕೆ ಮುಖ್ಯ ಕಾರಣವಾ ಎನ್ನುವುದು ಹುಡುಕಬೇಕಾದ ಅಂಶ. ಸಿನಿಮಾದ ಲಾಭ ಹಂಚಿಕೆಯ ವಿಚಾರದಲ್ಲಿ ನಿರ್ಮಾಪಕರಿಗೂ ಈ ಮಲ್ಟಿಪ್ಲೆಕ್ಸ್ ಮಾಲೀಕರಿಗೂ ಭಿನ್ನಮತ ಶುರುವಾಗಿ, ಕಳೆದ ಏಪ್ರಿಲ್ ೪ರಿಂದ, ಮಲ್ಟಿಪ್ಲೆಕ್ಸ್‌ಗಳಲ್ಲಿ ಬಾಲಿವುಡ್ ಚಿತ್ರಗಳ ಬಿಡುಗಡೆಯನ್ನೇ ನಿಲ್ಲಿಸಲಾಗಿತ್ತು. ಒಂಭತ್ತು ಶುಕ್ರವಾರಗಳು ಬರಿದೇ ಕಳೆದುಹೋದವು. ಎರಡು ತಿಂಗಳ ಮುಷ್ಕರದ ಬಳಿಕ, ಕೊನೆಗೂ ರಾಜಿ ಸೂತ್ರವಾಗಿದೆ. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಒಂದು ಹಿಂದಿ ಸಿನಿಮಾ ಟಿಕೆಟಿಗೆ ಕನಿಷ್ಠ ೧೦೦ ರಿಂದ ರೂ. ೫೦೦ವರೆಗೂ ಇರುವ ಶುಲ್ಕದ ಬಗ್ಗೆ ಏನೂ ಚರ್ಚೆ ಇಲ್ಲ ! ತಮ್ಮತಮ್ಮ ಲಾಭ ಹಂಚಿಕೆಯ ವಿಷಯದಲ್ಲಿ ಜೂನ್೪ರಂದು ಸತತ ಹದಿನಾಲ್ಕು ಗಂಟೆ ಮಾತುಕತೆ ನಡೆಸಿದ ಮುಖಂಡರು, ಮುಷ್ಕರ ನಿಲ್ಲಿಸಿ , ಜೂ.೧೨ರಿಂದ ಚಿತ್ರ ಪ್ರದರ್ಶನ ಆರಂಭಿಸಿದ್ದಾರೆ. ಚಿತ್ರ ಬಿಡುಗಡೆಯಾದ ಮೊದಲ ನಾಲ್ಕು ವಾರಗಳಲ್ಲಿ ಥಿಯೇಟರ್ ಮಾಲೀಕರಿಂದ ನಿರ್ಮಾಪಕರು ಯಾ ವಿತರಕರಿಗೆ, ಕ್ರಮವಾಗಿ ಶೇ. ೫೦-೪೨-೩೫-೩೦ರಂತೆ ಒಟ್ಟು ಆದಾಯದ ಭಾಗ ಸಲ್ಲಲಿದೆ ಎಂಬುದು ಪಂಚಾಯಿತಿಕೆಯಿಂದ ಬಂದ ಸುದ್ದಿ. ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಅಂದರೆ ೧೭.೫ಕೋಟಿ ರೂಗಿಂತ ಹೆಚ್ಚು ಸಂಗ್ರಹಿಸುವ ಸಿನಿಮಾಗಳಿಗೆ, ಇದು ಕ್ರಮವಾಗಿ ಶೇ. ೫೨-೪೫-೩೮-೩೦ ಆಗಲಿದೆ. ಆದರೆ ಎರಡು ತಿಂಗಳುಗಳಲ್ಲಿ, ಸಿನಿಮಾ ಬಿಡುಗಡೆ ಮಾಡಿ ಅಂತ ಪ್ರೇಕ್ಷಕರು ಪ್ರತಿಭಟಿಸಿದ ಸುದ್ದಿ ಬಂದಿಲ್ಲ. ಯಾವ ಸಿನಿಮಾ ಮಂದಿಯೂ ಅವರನ್ನು ವಿಚಾರಿಸಿಕೊಂಡದ್ದಿಲ್ಲ. ಈ ಮಧ್ಯೆ ನಮ್ಮ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸಿನಿಮಾ ಪ್ರದರ್ಶನದ ವೇಳೆಯನ್ನು ಎರಡೆರಡು ಬಾರಿ ಬದಲಿಸಿತು. ಕನ್ನಡ ಸಿನಿಮಾಗಳ ಟಿಕೆಟ್ ದರ ಕಡಿಮೆ ಮಾಡಿತು. ಅಂತಹಾ ಉಪಯೋಗವೇನೂ ಆದಂತಿಲ್ಲ. ಅಂದರೆ ಟಿಕೆಟ್ ದರಕ್ಕೂ ಜನ ಸಿನಿಮಾ ನೋಡೊದಕ್ಕೂ ಸಂಬಂಧವೇ ಇಲ್ಲ ; ಸಿನಿಮಾ ಚೆನ್ನಾಗಿದ್ರೆ ಜಾಸ್ತಿ ದುಡ್ಡು ಕೊಟ್ಟಾದ್ರೂ ಜನ ನೋಡ್ತಾರೆ ಅನ್ನೋದಲ್ಲ. ಮಲ್ಟಿಪ್ಲೆಕ್ಸ್‌ಗಳು ದುಡ್ಡು ಕೊಳ್ಳೆ ಹೊಡೆಯುವುದು, ಕನ್ನಡದ ಥಿಯೇಟರ್‌ಗಳು ಬಡವಾಗುವುದು ಒಳ್ಳೆಯ ಬೆಳವಣಿಗೆ ಅಲ್ಲ.
OSCAR-2019
ಹುಡುಗರ ಮದುವೆ ವಯಸ್ಸು18 ಕ್ಕೆ ಇಳಿಸೋ ಬದಲು ಹುಡುಗಿಯರದನ್ನೇ 21 ಕ್ಕೆ ಏರಿಸೋದು ಸಮಾನತೆ ಆಗೋದಿಲ್ವೇ..? | Digital Kannada ಲಿಂಗ ಸಮಾನತೆ.. ಪ್ರತಿ ಕ್ಷೇತ್ರದಲ್ಲೂ ಜಾರಿ ಆಗಬೇಕು ಅನ್ನೋದು ಹಳೇ ಬೇಡಿಕೆ. ಈಗ ಈ ಕೂಗು ಮದುವೆ ವಯೋಮಿತಿಗೂ ಅನ್ವಯವಾಗ್ತಿದೆ. ಹುಡುಗಿಯರು 18 ವಯಸ್ಸಿಗೆ ಮದುವೆ ಆಗೋದಾದ್ರೆ, ಹುಡುಗರು ಯಾಕೆ 21 ರವರೆಗೆ ಕಾಯಬೇಕು. ಅವರ ಮದುವೆ ಏಜನ್ನೂ 18 ಕ್ಕೇ ಇಳಿಸಿ. ಗಂಡೈಕಳು 18 ಕ್ಕೇ ಮತದಾನದ ಹಕ್ಕು ಪಡೆಯೋದಾದ್ರೆ, ಆ ವಯಸ್ಸಿಗೆ ಮದುವೆ ಯಾಕಾಗಬಾರದು ಅಂತ ಹದಿನಾಲ್ಕು ಸದಸ್ಯರ ಉನ್ನತಾಧಿಕಾರಿಗಳ ಸಮಿತಿಯು ಕೇಂದ್ರ ಸರ್ಕಾರಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಒಪ್ಪಿಗೆಯಷ್ಟೇ ಬಾಕಿ ಇದೆಯಂತೆ. ಈ ಶಿಫಾರಸ್ಸಿಗೆ ಸಮಿತಿ ಬಳಿ ಯಾವುದೇ ವೈಜ್ಞಾನಿಕ ಸಮಜಾಯಿಷಿಯಾಗಲಿ, ತರ್ಕವಾಗಲಿ ಇಲ್ಲ. ಹಂಗಂತ ಸಮಿತಿಯೇ ಹೇಳಿಕೊಂಡಿದೆ. ಆದರೂ ಪುರುಷ ಹಾಗೂ ಮಹಿಳೆಯರ ವಿವಾಹ ವಯೋಮಿತಿಯಲ್ಲಿ ತಾರತಮ್ಯ ಏಕೆ ಎಂಬ ಪ್ರಶ್ನೆಯನ್ನುಅದು ಎತ್ತಿದೆ. ಬರೀ ಸಮಾನತೆ ಅನ್ನೋ ಕಾರಣಕ್ಕೆ ವಯೋಮಿತಿ ಇಳಿಸಬೇಕು ಅನ್ನುತ್ತಿರುವ ಈ ಸಮಿತಿ ಬರುಡೇಲಿ ಏನಿದೆ ಅಂತಾನೇ ಗೊತ್ತಾಗುತ್ತಿಲ್ಲ. ಏಕೆಂದರೆ, ಸಮಾನತೆ ತರಲೇಬೇಕು ಅಂತಾದರೆ, ಹುಡುಗಿಯರ ವಯೋಮಿತಿಯನ್ನೇ 21ಕ್ಕೆ ಏರಿಸಬಹುದಲ್ಲವೇ? ಇತ್ತೀಚಿನ ದಿನಮಾನದಲ್ಲಿ ಮಹಿಳಾ ಸಾಕ್ಷರತೆ ಶೇಕಡಾ 65 ಕ್ಕೆ ಹೆಚ್ಚಿದೆ. ತತ್ಪರಿಣಾಮ ಓದು ಮುಗಿಸಿದ ಯುವತಿಯರು ಉದ್ಯೋಗ ಬಯಸುತ್ತಿದ್ದಾರೆ. ಒಂದಷ್ಟು ದುಡಿದ ನಂತರವೋ, ಮನಸ್ಥಿತಿಯ ಮಾರ್ಪಾಡಿನ ಪರಿಣಾಮ ಹುಡುಗಿಯರು ಸಾಮಾನ್ಯವಾಗಿ 23 ರ ನಂತರ ಮದುವೆ ಆಗುತ್ತಿದ್ದಾರೆ. ಹೀಗಾಗಿ ಅವರ ಮದುವೆ ವಯೋಮಿತಿಯನ್ನು ಹೆಚ್ಚಿಸಿದರೆ, ಓದು ಮತ್ತು ಉದ್ಯೋಗ ಸೇರುವ ಅವರ ಬಯಕೆಗೆ ಪೂರಕ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತಿತ್ತು. ಅದನ್ನು ಬಿಟ್ಟು ಪುರುಷರ ವಯೋಮಿತಿ ಇಳಿಕೆಗೆ ಹೊರಟಿರುವುದರ ಹಿಂದೆ ಅದ್ಯಾವ ಪುರುಷಾರ್ಥ ಅಡಗಿದೆಯೋ ಗೊತ್ತಿಲ್ಲ. ಏಕೆಂದರೆ 18 ಕ್ಕೆ ಅವರ ಓದೇ ಮುಗಿದಿರುವುದಿಲ್ಲ. ಇನ್ನು ಕೆಲಸದ ಮಾತಂತೂ ದೂರವೇ ಉಳಿಯಿತು. ಡಿಗ್ರಿ ಮುಗಿಯೋದಿಕ್ಕೆ ಕನಿಷ್ಟ 21 ವರ್ಷ ಬೇಕು. ಅಷ್ಟರ ಮೇಲೆ ಕೆಲಸ ಹುಡುಕಬೇಕು. ಅದು ಸಿಗಬೇಕು. ಕೆಲಸ ಸಿಕ್ಕ ನಂತರ ಮದುವೆ, ಹೆಂಡತಿ, ಮಕ್ಕಳ ಜವಾಬ್ದಾರಿ. ಆದರೆ 18 ಕ್ಕೆ ಅದೂ ಅಪ್ಪ-ಅಮ್ಮನ ಮೇಲೆ ಅವಲಂಬಿತ ಆಗಿರುವ ಹುಡುಗನಿಗೆ ಮದುವೆ ಮಾಡಿ, ಆತನ ಸಂಸಾರದ ಜವಾಬ್ದಾರಿಯನ್ನೂ ಪೋಷಕರ ಮೇಲೆ ಹೇರೋ ಈ ಶಿಫಾರಸ್ಸು ಮಾಡಿರುವ ಸಮಿತಿ ಸದಸ್ಯರಿಗೆ ಬಹುಶಃ ಪೋಷಕ ಸಮುದಾಯದ ಮೇಲೆ ಸಿಟ್ಟಿರಬೇಕು. ಇಲ್ಲ ಹುಡುಗನಿಗೆ ಮದುವೆಯನ್ನೇ ಉದ್ಯೋಗವಾಗಿಸುವ ಹುನ್ನಾರವಿರಬೇಕು. ಅದೇನಾದರೂ ಆಗಲಿ ಯಾವುದೋ ಒಂದು ವಿಕಲ್ಪ ಈ ಶಿಫಾರಸ್ಸಿನ ಹಿಂದೆ ಇರುವುದಂತೂ ಸುಸ್ಪಷ್ಟ. ಈ ಶಿಫಾರಸ್ಸು ಯಾರಿಗೆ ಅನುಕೂಲ ಆಗಬಹುದು ಅಂದರೆ, ಈ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಆತುರವಾಗಿ ಮದುವೆ ಮಾಡಿ ಕೈತೊಳೆದುಕೊಳ್ಳುವ ದುರ್ಬಲ ಮನಸ್ಸುಗಳಿಗೆ ಮಾತ್ರ. 18 ವಯಸ್ಸಿಗೆ ಪ್ರಬುದ್ಧತೆ ಇರೋದಿಲ್ಲ. ಜವಾಬ್ದಾರಿ ಹೊರುವ ಮನಸ್ಥಿತಿ ಇರೋದಿಲ್ಲ. ಹುಡುಗಾಟಿಕೆ ವಯಸ್ಸಿನಲ್ಲಿ ಮದುವೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ಚಿಂತನೆ ಅಗತ್ಯವಿದೆ. ವಿವಾಹ ವಯೋಮಿತಿ ಇಳಿಕೆಯಾದರೆ ಸಾಮಾಜಿಕ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಯಾವುದೇ ಖಚಿತ ಭರವಸೆ ಇಲ್ಲ. ಸಮಿತಿಯ ಉಳಿದ ಶಿಫಾರಸ್ಸುಗಳು ಹೀಗಿವೆ: – 18 ವರ್ಷದೊಳಗಿನ ಯುವತಿಯರ ಜತೆ ಅಕೆ ಪತ್ನಿಯಾಗಿದ್ದರೂ ಸರಿಯೇ, ಲೈಂಗಿಕ ಸಂಪರ್ಕ ಹೊಂದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ಶಿಕ್ಷೆ ನೀಡಬೇಕು.
OSCAR-2019
ಈ ದೇವಳದ ಉತ್ತರಕ್ಕೆ ದೊಡ್ಡ ಬೆಟ್ಟವಿದೆ. ದಕ್ಷಿಣಕ್ಕೆ ಫಲ್ಗುಣಿ (ಗುರುಪುರ) ಹೊಳೆಯಿದೆ. ದೇವಸ್ಥಾನದ ಮುಂಭಾಗದಲ್ಲಿ ಎರಡು ಕೆರೆಗಳಿವೆ. ಇದರಲ್ಲಿ ವರ್ಷವಿಡಿ ಶುದ್ಧವಾದ ನೀರು ಹರಿದುಕೊಂಡಿರುತ್ತದೆ. ಶ್ರೀ ದೇವರ ಬಲಭಾಗದಲ್ಲಿ ಮುಂಡಿತ್ತಾಯ ಮತ್ತು ಎಡಭಾಗದಲ್ಲಿ ಕಲ್ಲಿನ ಗೋಡೆಯಂತಿರುವ ಬಂಡೆಕಲ್ಲಿನಲ್ಲಿ ರಕ್ತೇಶ್ವರಿ ದೈವವಿದೆ. ನೈಋತ್ಯ ಪಾರ್ಶ್ವದಲ್ಲಿ ಶ್ರೀ ಗಣಪತಿ ದೇವರ ಗುಡಿಯಿದೆ. ಈಶಾನ್ಯ ಪಾರ್ಶ್ವದಲ್ಲಿ ನಾಗದೇವರ ಗುಡಿಯಿದೆ. ಗರ್ಭಗುಡಿಯ ಉತ್ತರ ಭಾಗದಲ್ಲಿ ಋಷಿಬನವೆಂದು ಕರೆಯುತ್ತಾರೆ. ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ. ಈ ಲಿಂಗದಲ್ಲಿ ಶಿವಶಕ್ತಿ, ದುರ್ಗಾಶಕ್ತಿ ಹಾಗೂ ವಿಶೇಷವಾಗಿ ನಾಗ ಶಕ್ತಿಯೂ ಪ್ರಭಲವಾಗಿ ಕೂಡಿದೆ ಎಂಬುದಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ.ಆ ಪ್ರಯುಕ್ತ ಉತ್ಸವದ ಕೊನೆಯ ದಿವಸ ಇಲ್ಲಿ ಭಕ್ತಾದಿಗಳಿಂದ ಉರುಳು ಸೇವೆ ನಡೆಯುತ್ತದೆ. ಶ್ರೀ ದೇವರ ಎಡಭಾಗದಲ್ಲಿ ಒಂದು ತೀರ್ಥ ಬಾವಿಯಿದೆ. ಇದು ಪ್ರಕೃತಿ ನಿರ್ಮಿತ ಬಾವಿ. ಈ ಬಾವಿಯ ನೀರಿನಿಂದಲೇ ದೇವರ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ಈ ನೀರನ್ನು ಕೈಯಿಂದಲೇ ಕೊಡಪಾನದಲ್ಲಿ ತೆಗೆದು ಅಭಿಷೇಕ ಮಾಡಬೇಕು. "ಅಭಿಷೇಕ ಪ್ರಿಯ ಶಂಕರ" ಎಂಬಂತೆ ಎಷ್ಟು ಅಭಿಷೇಕ ಮಾಡಿದರೂ ಬಾವಿಯ ನೀರು ಬತ್ತುವುದಿಲ್ಲ.
OSCAR-2019
ಹೋದ ವರ್ಷ ಮಾರ್ಚಿ. ನಾನಾಗ ಬಾರ್ಸಿಲೋನಾದಲ್ಲಿದ್ದೆ. ಥೀಸಿಸ್ ಸಮಯದಲ್ಲಿ ತಲೆ ಕೆಡಿಸಿಕೊಂಡು ಕೂತಿದ್ದೆ. ಸಿಕ್ಕಾಪಟ್ಟೆ ಕೆಲಸ, ಓದು ಇವೆಲ್ಲದರ ಮಧ್ಯ ಫೇಸ್ಬುಕ್ಕಿನಲ್ಲಿ ಸ್ನೇಹಿತರು ಅವರ ಕೆಲಸದ ಮಧ್ಯೆ ಓಡಾಡುತ್ತಿದ್ದ ಜಾಗಗಳು, ಮನೆಯಲ್ಲಿ ಅವರಮ್ಮನ ಅಡಿಗೆಗಳನ್ನೆಲ್ಲಾ ನೋಡುತ್ತಾ ಕುಳಿತವಳಿಗೆ ಸಿಕ್ಕಿದ್ದು ಕಹಳೆ ಅನ್ನೊ ಕನ್ನಡದ ಪುಟ. ಹೊರದೇಶದಲ್ಲಿದ್ದವರಿಗೆ ಎಲ್ಲಿ ತಮ್ಮ ಭಾಷೆ ಕಂಡರೂ ಎಲ್ಲಿಲ್ಲದ ಆನಂದವಾಗುವುದು ಸಹಜ. ದೊಡ್ಡವರು ಹೇಳಿದಂತೆ, ಏನಾದರೂ ಕಳೆದರೇ ಅದರ ಮೌಲ್ಯ ಗೊತ್ತಾಗೋದು ಅನ್ನೋದು ಸತ್ಯವೇ ಸರಿ. ಹೀಗೆ ಆ ಪುಟವನ್ನೆಲ್ಲಾ ಜಾಲಾಡೋವಾಗ ಹೊಸ ಬರಹಗಾರರ ವೇದಿಕೆ ಎಂದೆಲ್ಲಾ ಕೇಳಿ, ಓದಿ ಖುಷಿಯಾಯ್ತು. ಯಾರ್ಯಾರು ಇದ್ದಾರೆ ಎಂದು ಕಂಡಾಗ ಎಲ್ಲ ಬಹುಮುಖ್ಯವಾಗಿ ನಮ್ಮ ವಯಸ್ಸಿನವರೇ ಎಲ್ಲಾ ಎಂದು ತಿಳಿದು ಖುಷಿಯಾಯ್ತು. ನಮ್ಮ ಪೀಳಿಗೆಯವರಿಗೆ ಕನ್ನಡ ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಸಾಹಿತ್ಯದ ಗಂಧ ಗಾಳಿ ಕಡಿಮೆ ಎನ್ನುವ ಮಾತುಗಳಿಗೆ ಉಲ್ಟಾ ಈ ತಂಡ. ಇಲ್ಲಿ ಸ್ವಂತ ಕವನ ವಾಚಿಸಬಹುದು, ನಿಮ್ಮ ಕವನ ಬರೆಯಬಹುದು, ಲೇಖನ ಬರೆಯಬಹುದು, ದೊಡ್ಡ ಕವಿಗಳ ಕವಿತೆಗಳನ್ನ ವಾಚಿಸಬಹುದು, ಪುಸ್ತಕ ವಿಮರ್ಶೆ ಮಾಡಬಹುದು. ಇವೆಲ್ಲವನ್ನು ವಿಡಿಯೋ ಮುಖಾಂತರವೂ ಕಳುಹಿಸಬಹುದು. ಇದಿಷ್ಟೆ ಸಾಕಿತ್ತು ನನ್ನಂತಹ ಬೇರೆ ದೇಶದಲ್ಲಿ ಕೂತು ಕನ್ನಡ ಕನ್ನಡ ಎಂದು ಹಪಹಪಿಸುವವರಿಗೆ. ತಂಡದ ಜನರ ಹೆಸರು ಬರೆಯುವದಕ್ಕಿಂತ, ತಂಡ ಕೆಲಸ ಮಾಡುವ ಪರಿ ನೋಡಿದರೆ, ಅಲ್ಲೆಲ್ಲೋ ಒಬ್ಬರ ಕೆಲಸ ಎದ್ದು ಕಾಣುವುದಿಲ್ಲ, ಒಂದು ತಂಡ ಮತ್ತು ಅದರ ಕೆಲಸ ಎದ್ದು ಕಾಣಿಸುತ್ತದೆ. ತುಂಬಾ ಖುಷಿಯಾಗೋದು ಈ ವಿಷಯಕ್ಕೇನೆ. ‘ಜೀವನದ ಭಾಷೆ ಯಾವುದಾದರೇನು ಜೀವ ತುಂಬಿದ, ತುಂಬುವ ಭಾಷೆ ಕನ್ನಡವೇ. ಕನ್ನಡ ಸಾಹಿತ್ಯ ಸಾಗರಕ್ಕೆ ಒಂದು ಹನಿಯನ್ನು ಸೇರಿಸೋಣ' ಎಂಬ ಧ್ಯೇಯದೊಂದಿಗೆ ಸಮಾನ ಮನಸ್ಕರ ಸಮೂಹವೊಂದು ಕನ್ನಡ ಸೇವೆಯಲ್ಲಿ ತೊಡಗಿದೆ. ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ಬರವಣಿಗೆಯನ್ನು ಕಲಿಯುತ್ತ, ಕಲಿಸುತ್ತ ಸಾಗಿದೆ. ಎಲ್ಲರೂ ಬೆಳಗ್ಗಿಂದ ಸಂಜೆ ಅವರವರ ಕೆಲಸದಲ್ಲಿ ಮುಳುಗಿರುತ್ತಾರೆ. ರಾತ್ರಿಯೋ ಅಥವಾ ಬೆಳಗ್ಗಿನ ಜಾವ ಥಟ್ಟನೆ ಏನಾದರೂ ಸದ್ದು 'ಕಹಳೆ' ಮಾಡುತ್ತದೆ ಎಂದರೆ ಕಾರಣ ಅದರ ತಂಡ. ಕಹಳೆ ಶುರುಗೊಂಡಿದ್ದು ಕಥಾ ಸ್ಪರ್ಧೆಯಿಂದ. ಕಹಳೆಯ ಮೊದಲ ಕಾರ್ಯಕ್ರಮಕ್ಕೆ 110ಕ್ಕೂ ಹೆಚ್ಚು ಕಥೆಗಳು ಬಂದಿದ್ದವು. ಸಾವಣ್ಣ ಪಬ್ಲಿಕೇಷನ್ಸ್ ನಿಂದ ಈ ಸ್ಪರ್ಧೆಯ ವಿಜೇತರಿಗೆ ಪುಸ್ತಕಗಳನ್ನು ಬಹುಮಾನವಾಗಿ ಕೊಡಲಾಗಿತ್ತು. ನಂತರ ಶುರುವಾದದ್ದೆ ಕವನ ವಾಚನ. ಇಲ್ಲಿಯತನಕ 11 ಕವನ ವಾಚನ ಕಾರ್ಯಕ್ರಮಗಳು ನಡೆದಿವೆ. ಸುಮಾರು 500 ಜನರು ತಮ್ಮ ತಮ್ಮ ಕವಿತೆಗಳನ್ನ ಹಂಚ್ಕೊಂಡಿದ್ದಾರೆ. ಆನ್ಲೈನ್ ಕವನ ವಾಚನದಿಂದ ಬಹಳಷ್ಟು ನನ್ನಂತಹ ಹೊರನಾಡ ಕನ್ನಡಿಗರಿಗೆ ವರವಾಗಿದ್ದು ಎಂದರೆ ತಪ್ಪಿಲ್ಲ. ದುಬೈ, ಸ್ಪೇನ್, ಅಮೆರಿಕಾ, ಆಫ್ರಿಕಾ ಹೀಗೆ ಬೇರೆ ಬೇರೆ ದೇಶಗಳಿಂದ ಸಾಹಿತ್ಯಾಭಿಮಾನಿಗಳು ಇದರಲ್ಲಿ ಭಾಗವಹಿಸಿದ್ದು, ಕನ್ನಡ ಸಾಹಿತ್ಯಾಸಕ್ತರು ಜಗತ್ತಿನಾದ್ಯಂತ ಹರಡಿದ್ದಾರೆ ಅನ್ನೋದಕ್ಕೆ ಹಿಡಿದ ಕೈಗನ್ನಡಿ. 'ಕಹಳೆ ಕಟ್ಟೆ' ಪ್ರಾಯಶಃ ಇವರ ಬಹು ಮುಖ್ಯ ಕಾರ್ಯಕ್ರಮ. ಸಾಹಿತ್ಯದ ಸೂಕ್ಷ್ಮಗಳನ್ನ ಹಿರಿಯ ಸಾಹಿತಿಗಳಿಂದ ಅರಿಯುವ, ಕಲಿಯುವ, ಚರ್ಚಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮ. ಖ್ಯಾತ ಕತೆಗಾರ, ಛಂದ ಪುಸ್ತಕ ಪ್ರಕಾಶನದ ಮಾಲಿಕ ವಸುಧೇಂದ್ರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕತೆಗಾರನಿಗೆ ಮತ್ತು ಕತೆಗೆ ಇರಬೇಕಾದ ಪ್ರಜ್ಞೆಗಳ ಬಗ್ಗೆ ತಿಳಿಸಿಕೊಟ್ಟಿದ್ದರು. ಇದೇ 25ರಂದು, ಭಾನುವಾರ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿಯವರು ಎರಡನೇ ಸಂಚಿಕೆಯಲ್ಲಿ ಭಾಗವಹಿಸುತ್ತಾರೆ. ಮತ್ತೊಂದು ಹೊಸ ಪ್ರಯತ್ನ ನಡೆಯೋದರ ಹೆಸರು 'ತಲೆಮಾರು'. ಹಳೆ ತಲೆಮಾರಿನ ಕವಿತೆಗಳನ್ನು ಹೊಸ ತಲೆಮಾರಿಗೆ ತಲುಪಿಸುವ ಪುಟ್ಟ ಪ್ರಯತ್ನವೇ 'ತಲೆಮಾರು'. ಇಲ್ಲಿ ಯುವಕವಿಗಳು ಹಳೇ ತಲೆಮಾರಿನ ಕವಿಗಳ ಕವಿತೆಗಳನ್ನು ಓದಿ ಅವುಗಳನ್ನು ವಿಡಿಯೋ ಮಾಡುತ್ತಾರೆ. ಇಲ್ಲಿವರೆಗೆ 20ಕ್ಕೂ ಹೆಚ್ಚು ವಿಡಿಯೋ ಸರಣಿಗಳು ಬಂದಿದ್ದು, ಪುಸ್ತಕ ಪ್ರೇಮಿಗಳಿಗೆ ಹೊಸ ಪುಸ್ತಕಗಳನ್ನು ಪರಿಚಯಿಸುವುದು, ತಾವು ಓದಿದ ಪುಸ್ತಕ ಬಗ್ಗೆ ಬರೆದು ಅಥವಾ ವಿಡಿಯೋ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯೇ ಪುಸ್ತಕ ಪ್ರೀತಿ. ಇಲ್ಲಿವರೆಗೆ 10ಕ್ಕೂ ಹೆಚ್ಚು ವಿಡಿಯೋಗಳು ಬಂದಿವೆ. ಅಲ್ಲದೇ ಕಹಳೆ ಬ್ಲಾಗಿನಲ್ಲೂ ಹಲವಾರು ಪುಸ್ತಕ ವಿಮರ್ಶೆಗಳು ಪ್ರಕಟಗೊಂಡಿವೆ. ಕವಿಗಳು ಅವರ ಬಲು ಇಷ್ಟವಾದ ಸಾಲುಗಳನ್ನ ಬುಕ್ಮಾರ್ಕಾಗಿಯೂ ಇವರೆಲ್ಲ ಪ್ರಕಟಿಸಿದ್ದಾರೆ. ಕಹಳೆಯ ಕಾರ್ಯಕ್ರಮಗಳು ಸುಮಾರಾಗಿ ನಡೆಯೋದು ಕೋರಮಂಗಲದ ಅಟ್ಟಗಲಾಟದಲ್ಲಿ. ಕೋರಮಂಗಲದಲ್ಲಿ ಕನ್ನಡದ ಕಂಪು ಹರಡಿಸೋ ಒಳ್ಳೆ ಕೆಲಸ ಮಾಡುತ್ತಿರುವ ಈ ತಂಡಕ್ಕೆ ನಮ್ಮ ನಿಮ್ಮೆಲ್ಲರ ಸಹಕಾರ ಬೇಕು. ಹೊಸದಾಗಿ 'ಪದ ಪಲ್ಲಕ್ಕಿ' ಅನ್ನೋದನ್ನ ಸಹ ಶುರು ಮಾಡಿದ್ದಾರೆ. ಬರಹವನ್ನ ಸಂಭ್ರಮಿಸುವ, ಅಚರಿಸುವ ಉದ್ದೇಶದಿಂದ ಹುಟ್ಟಿಕೊಂಡ ಕಹಳೆಯ ಹೊಸ ಕೂಸು "ಪದ ಪಲ್ಲಕ್ಕಿ". ಅದರ ಬಗ್ಗೆ ತಿಳಿದುಕೊಳ್ಳಲು ನೀವು ಅವರ ಫೇಸ್ಬುಕ್ ಪೇಜ್ ಅನ್ನ ಖಂಡಿತವಾಗಿಯೂ ನೋಡಿ. ಹೊಸ ಹುಡುಗರ ಪ್ರಯತ್ನಕ್ಕೆ ಬೆನ್ನು ತಟ್ಟಿ. ಆ ಹುಡುಗರೇ ವಿನಯ ಕುಮಾರ ಸಜ್ಜನರ, ಶ್ರೀಧರ ತಲಗೇರಿ, ವಾರಿಜಾ ಹೆಬ್ಬಾರ್, ಸುಷ್ಮಾ ವೆಂಕಟೇಶ್, ಪ್ರವೀಣ ಕುಮಾರ್ ಹೂಗಾರ್, ಕುಮಾರ್ ಸ್ಥಾವರೇಮಠ, ಪ್ರವೀಣ್ ರೆಡ್ಡಿ, ಬಸವರಾಜ ಶಿವನಾಯಕರ್ರೆಲ್ಲರ ಪರಿಶ್ರಮವೇ ಈ ಮುದ್ದಾದ ತಂಡ. ನಮ್ಮ ಪೀಳಿಗೆ ಏನು ಮಾಡುತ್ತಿದೆ ಎಂದು ಕೇಳುವವರಿಗೆ ಉತ್ತರ ಈ ಹೊಸ ತಂಡ. ಅಂದಹಾಗೆ ಮಾರ್ಚ್ 25ರಂದು ಬರ್ತೀರಾ ಅಲ್ವಾ ಜೋಗಿಯವರನ್ನ ಭೇಟಿ ಮಾಡೋದಕ್ಕೆ? kannada youth bengaluru meghana sudhindra kannada literature ಕನ್ನಡ ಯುವ ಪೀಳಿಗೆ ಬೆಂಗಳೂರು ಮೇಘನಾ ಸುಧೀಂದ್ರ ಕನ್ನಡ ಸಾಹಿತ್ಯ
OSCAR-2019
ಬೆಂಗಳೂರು ಸಿನಿಮೋತ್ಸವದಲ್ಲಿ ಭಾರತೀಯ ಚಿತ್ರಗಳು | indian films in Bengaluru International film festival-BIFFES | Photo Gallery on Kannadaprabha.com ಚಿತ್ರ: ಕ್ರಾಂತಿಧಾರ, ಭಾಷೆ: ಒಡಿಸ್ಸಿ ಭಾಷೆ, ನಿರ್ದೇಶಕ: ಹೀಮಾಂಶು ಕತುವ, ಚಿತ್ರ ಕಥೆ: ಸಮರ್ಥವಾಗಿ ಕುಟುಂಬವನ್ನು ನಿರ್ವಹಿಸುವ ಗೃಹಿಣಿಯ ಜೀವನ ಕುರಿತು ಚಿತ್ರ.
OSCAR-2019
ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಗೇಮ್ ನಲ್ಲಿ ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ ತೇಜಿಂದರ್ ಗೆ ತಂದೆ ವಿಧಿವಶರಾದ ಸುದ್ದಿ ಸಿಕ್ಕಿದೆ. ತಂದೆಗೆ ಚಿನ್ನದ ಪದಕ ತೋರಿಸಬೇಕೆಂಬ ಸಿಂಗ್ ಕನಸು ಹಾಗೇ ಕಮರಿ ಹೋಗಿದೆ. ತೇಜಿಂದರ್ ಪಾಲ್ ಸಿಂಗ್ ಅವರ ತಂದೆ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಈ ಸುದ್ದಿ ಕೇಳಿ ಎಎಫ್ ಐಗೆ ಆಘಾತವಾಗಿದೆ. ನಾವು ಈಗಷ್ಟೇ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೆವು. ಆದರೆ ಇದೇ ಸಂದರ್ಭದಲ್ಲಿ ತೇಜಿಂದರ್ ತಂದೆ ನಿಧನರಾದ ಸುದ್ದಿಯ ಸಂದೇಶ ಕೂಡಾ ಬಂದಿತ್ತು ಎಂದು ಟ್ವೀಟ್ ಮಾಡಿದೆ.
OSCAR-2019
ಅಂಕೋಲಾ: `ರಾಜ್ಯ ಸರ್ಕಾರದ ಶೈಕ್ಷಣಿಕ ಮತ್ತು ಭಾಷಾ ನೀತಿ ಕಾರ್ಯಕ್ರಮಗಳು ಕನ್ನಡಕ್ಕೆ ಕಂಟಕಪ್ರಾಯವಾಗಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿರುವುದು ಕನ್ನಡದ ಮರಣ ಶಾಸನಕ್ಕೆ ಮುನ್ನುಡಿ ಬರೆದಂತಾಗಿದೆ~ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರೋಹಿದಾಸ ನಾಯಕ ಹೇಳಿದ್ದಾರೆ. ಇತ್ತೀಚೆಗೆ ನಗರದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.`ಕನ್ನಡ ಮಾಧ್ಯಮದಲ್ಲಿ ಬೋಧಿಸುವ ಲಿಖಿತ ಭರವಸೆ ನೀಡಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಪ್ರವಚನ ನಡೆಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ನ್ಯಾಯಾಲಯದಲ್ಲಿ ಸರ್ಕಾರ ದಾವೆ ಹೂಡಬೇಕು. ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಕಲಿಸಲು ಅಭ್ಯಂತರವಿಲ್ಲ. ಒಂದರಿಂದ 8ನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮದ ಸಮಾನ ಶಿಕ್ಷಣ ಜಾರಿಗೊಳಿಸಬೇಕು~ ಮುಂತಾದ ಬೇಡಿಕೆಗಳ ಮನವಿಯನ್ನು ಶಿರಸ್ತೇದಾರ ಜಿ.ಎನ್. ನಾಯ್ಕ ಸ್ವೀಕರಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿಷ್ಣು ನಾಯ್ಕ, ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ, ಶಾಂತಾರಾಮ ಹಿಚ್ಕಡ, ಬಿ. ಹೊನ್ನಪ್ಪ, ಜೆ. ಪ್ರೇಮಾನಂದ, ರಾಮಕೃಷ್ಣ ನಾಯಕ ಸೂರ್ವೆ, ಜಗದೀಶ ನಾಯಕ, ಜಿ.ಆರ್. ನಾಯಕ ಉಪಸ್ಥಿತರಿದ್ದರು.
OSCAR-2019
ಕೋಲ್ಕತ್ತ (ಪಿಟಿಐ): ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಯುವ ಜನತೆಗೆ ಮಾದರಿ ಎಂದು ಹೇಳಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅವರು ನೀಡಿರುವ ಹಲವು ಕೊಡುಗೆಗಳನ್ನು ಸ್ಮರಿಸಿದರು. ನೇತಾಜಿ ಅವರು ಯುವ ಜನತೆಗೆ ಮಾದರಿ. ಅವರು ದೇಶದ ಶ್ರೇಷ್ಠ ಮಗ. ತಮ್ಮ ಜೀವನವನ್ನು ದೇಶ ಸೇವೆಗಾಗಿ ಹಾಗೂ ತ್ಯಾಗಕ್ಕಾಗಿ ಮುಡುಪಾಗಿಟ್ಟವರು ಎಂದು ನೇತಾಜಿ ಅವರ 116 ನೆಯ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು. ನೇತಾಜಿ ಅವರ ಪೂರ್ವಿಕರ ನಿಲಯ `ನೇತಾಜಿ ಭವನ್' ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇತಾಜಿ ಅವರ ಮಗಳು ಅನಿತಾ ಬೋಸ್ ಪಾಫ್ ಹಾಗೂ ಅವರ ಪತಿ ಮಾರ್ಟಿನ್ ಪಾಫ್ ಹಾಗೂ ಸಂಬಂಧಿ ಕೃಷ್ಣಾ ಬೋಸ್ ಕೂಡ ಉಪಸ್ಥಿತರಿದ್ದರು.
OSCAR-2019
ತಾಯಿ ನುಡಿಯನ್ನು ಮಾತೃ ಭಾಷೆ ಎಂದು ಕರೆದರೆ `ಅಮ್ಮ~ನನ್ನು `ಮಮ್ಮಿ~ ಅಂದ ಹಾಗಿರುತ್ತದೆ.ತಾಯಿ ನುಡಿಯನ್ನು `ಪ್ರಥಮ ಭಾಷೆ~ ಎಂದು ಕರೆದರೆ `ಗುದ್ದಲಿ~ಗೆ `ಭೂ ಮರುರಚನೆಯ ಉಪಕರಣ~ ಎಂದು ನಾಮಕರಣ ಮಾಡಿದ ಹಾಗಿರುತ್ತದೆ. ತಾಯಿ ನುಡಿಯನ್ನು `ನುಡಿ ತಾಯಿ~ ಅಂದರೆ ನುಡಿಯೆ ನಮ್ಮತನದ ಹುಟ್ಟಿಗೆ ಕಾರಣವೆಂಬ ಸತ್ಯವನ್ನು ಗೌರವಿಸಿ, ನುಡಿಯನ್ನೂ ಸಜೀವ ವ್ಯಕ್ತಿ ಎಂದು ಒಪ್ಪಿದ ಹಾಗಿರುತ್ತದೆ. ವಿಚಾರವೇ ಮುಖ್ಯ ಎಂದು ಭಾವಿಸಿದ್ದ ದಿನಗಳಲ್ಲಿ ಮಾತೃಭಾಷೆ, ತಾಯಿನುಡಿ ಇವೆಲ್ಲ ಭಾವುಕತೆಯಿಂದ ಹುಟ್ಟಿದ ರೂಪಕಗಳು, ಭಾಷೆಯ ಅಧ್ಯಯನಕ್ಕೆ ಅಡಚಣೆಗಳು ಎಂದು ತಿಳಿದಿದ್ದೆ. ಅಲ್ಲದೆ ಅನ್ಯ ಭಾಷೆಯನ್ನು ಕಲಿಯುವಾಗ `ತಾಯಿನುಡಿಯ ಅಡಚಣೆ~ ಅನ್ನುವ ತತ್ವವನ್ನು ಇಂಗ್ಲಿಷ್ ಬೋಧನೆಯ ಮುಖ್ಯ ತತ್ವವಾಗಿ ತರಗತಿಗಳಲ್ಲೂ ಕಲಿಸುತ್ತಿದ್ದರು. ಇಂಗ್ಲಿಷನ್ನಾಗಲೀ, ಬೇರೆ ಯಾವ ಭಾಷೆಯನ್ನೇ ಆಗಲಿ ಸರಿಯಾಗಿ ಕಲಿಯಬೇಕೆಂದರೆ ನಮಗೆ ಆಪ್ತವಾಗಿ ಗೊತ್ತಿರುವ ಭಾಷೆಯ ಲಯ, ಉಚ್ಚಾರಣೆ, ನುಡಿಗಟ್ಟು, ವ್ಯಾಕರಣ, ತಾಯಿನುಡಿ ಬೆಳೆಸಿರುವ ಆಲೋಚನೆಯ ವಿಧಾನ ಇವೆಲ್ಲ ಅಡ್ಡಿಮಾಡುತ್ತವೆ; ಅವನ್ನು ಸಾಧ್ಯವಾದಷ್ಟೂ ಮರೆತು ಕಲಿಯಬೇಕಾಗಿರುವ ಭಾಷೆಯಲ್ಲೇ ಪೂರ್ಣವಾಗಿ ಮುಳುಗಬೇಕು ಅನ್ನುವುದು ಆ ದಿನಗಳಲ್ಲಿ ಒಪ್ಪಿತವಾದ ನಿಲುವೇ ಆಗಿತ್ತು. ಅನೇಕ ಭಾಷಾ ತಜ್ಞರೇ ಆ ನಿಲುವು ಬದಲಾಯಿಸಿಕೊಂಡಿದ್ದಾರೆ. ಆದರೆ ನಮ್ಮ ಇಂಗ್ಲಿಷ್ ಮಾಧ್ಯಮ ಶಾಲೆಗಳೂ, ಬಹುತೇಕ ಅಪ್ಪ ಅಮ್ಮಂದಿರೂ ಇನ್ನೂ ಆ ತತ್ವದ ಮೊಲಕ್ಕೆ ಮೂರು ಕೊಂಬುಗಳಿವೆ ಎಂದೇ ಬಲವಾಗಿ ನಂಬಿಕೊಂಡಿದ್ದಾರೆ. ತಾಯಿನುಡಿ ಅನ್ನುವುದು ಬರಿಯ ಭಾವುಕ ರೂಪಕವಲ್ಲ, ವಾಸ್ತವ ಸತ್ಯ ಅನ್ನುವುದು ತಿಳಿದದ್ದು ನಿಧಾನವಾಗಿ. ಜಗತ್ತಿನಲ್ಲಿ ಇರುವ ಎಲ್ಲ ಮನುಷ್ಯರಿಗೆ ಒಬ್ಬೊಬ್ಬ ತಾಯಿ ಇರುವುದು ಎಷ್ಟು ಸತ್ಯವೋ ಪ್ರತಿಯೊಂದು ಭಾಷೆಯಲ್ಲೂ ತಾಯಿನುಡಿ ಅನ್ನುವ ರೂಪಕವಿರುವುದೂ ಅಷ್ಟೇ ಸತ್ಯ. ಫ್ರೆಂಚಿನಲ್ಲಿ ಲಾಂಗ್ವಾ ಮೆಟರ್ನಲ್, ಸ್ಪಾನಿಶ್‌ನಲ್ಲಿ ಲೆಂಗುವಾ ಮಟೆರ್ನಾ, ಇತಾಲಿಯನ್‌ನಲ್ಲಿ ಇಡಿಯೋಮಾ ಮಟೆರ್ನಾ, ಜರ್ಮನ್‌ನಲ್ಲಿ ಮಟರ್‌ಸ್ಪಾರ್ಚ್, ಸ್ವಾಹಿಲಿಯಲ್ಲಿ ಲುಘಾ ಯ ಮಮಾ ಅನ್ನುವ ರೂಪಕಗಳಿವೆ. ಕೆಲವು ಆಫ್ರಿಕನ್ ಭಾಷೆಗಳಲ್ಲಿ ನುಡಿತಾಯಿಯನ್ನು ಕುರಿತು ಹಾಲು, ಸ್ತನ, ಹಾಲುಕುಡಿಯುವುದು ಇಂಥ ರೂಪಕಗಳ ಬಳಕೆಯಾಗುತ್ತವಂತೆ. ಚೀನೀ ಭಾಷೆಯ `ಪೆನ್ ಗುಒ ಯು ಎನ್~ ಎಂಬ ಮಾತಿನ ನುಡಿಗಟ್ಟನ್ನು ಅಕ್ಷರಶಃ ಅನುವಾದ ಮಾಡಿಕೊಂಡರೆ ಅದು `ಬೇರು ಬಿಟ್ಟ ನೆಲದ ಭಾಷೆ~ ಎಂದಾಗುತ್ತದಂತೆ. ಕುತೂಹಲವಿದ್ದವರು ಅಂತರ್ಜಾಲದ ಗೂಗಲ್ ಟ್ರಾನ್ಸ್‌ಲೇಟ್ ತಾಣಕ್ಕೆ ಹೋಗಿ ಇಂಗ್ಲಿಷಿನಲ್ಲಿ `ಮದರ್ ಟಂಗ್~ ಎಂದು ಅಚ್ಚು ಮಾಡಿ ಜಗತ್ತಿನ ಹಲವು ಭಾಷೆಗಳಲ್ಲಿ ಅದಕ್ಕೆ ಸಮನಾದ ನುಡಿಗಳಿರುವುದನ್ನು ಹುಡುಕಿ ನೋಡಬಹುದು. ಸಂತ ಕಬೀರನ ನುಡಿಯೊಂದು ನೆನಪಾಗುತ್ತಿದೆ. `ಸಂಸ್ಕೃತವು ಬಾವಿಯ ನೀರು, ದೇಸೀ ಭಾಷೆಯು ಹರಿವ ತೊರೆ~ ಅನ್ನುತ್ತಾನೆ. ಇಡೀ ಭಾರತದ ಭಕ್ತಿ ಚಳವಳಿ ಸಂಸ್ಕೃತದಂಥ ದೊಡ್ಡ ಭಾಷೆಯನ್ನು ಲೆಕ್ಕಿಸದೆ ಆಯಾ ಭಕ್ತರ ನುಡಿತಾಯಂದಿರನ್ನೇ ನೆಚ್ಚಿ ಬೆಳೆಯಿತು. ಭಕ್ತಿ ತೋರಲು, ಪ್ರೀತಿ ತೋರಲು ನುಡಿತಾಯಿ ಒಲಿದ ಹಾಗೆ ಕಲಿತ ಭಾಷೆಗಳು ಒದಗಿ ಬರುವುದಿಲ್ಲ. ಪ್ರೀತಿಯ ಪ್ರವಾಹ, ಭಕ್ತಿಯ ಪ್ರವಾಹ ನದಿಯ ನೀರಿನಲ್ಲೇ ಹೊರತು ಬಾವಿಯ ನೀರಿನಲ್ಲಿ ಅಲ್ಲ. ಆದರೂ ಕಬೀರನ ನುಡಿಯ `ತೊರೆ~ ಅನ್ನುವ ಮಾತು ಕನ್ನಡದಲ್ಲಿ ಎರಡು ವಿರುದ್ಧ ಅರ್ಥಗಳನ್ನು ಹೊಮ್ಮಿಸಿತು ನನ್ನ ಮನಸ್ಸಿಗೆ. ಹೆತ್ತ ತಾಯಿ ಸದಾ ಜೊತೆಯಲ್ಲಿರಬೇಕು ಎಂದು ಹಾತೊರೆಯುವುದೂ ಇರುತ್ತದೆ, ತಾಯಿಯನ್ನು ತೊರೆಯಬೇಕೆನ್ನುವ ಹಂಬಲವೂ ಇರುತ್ತದೆ. ಹಾಗೆಯೇ ನುಡಿತಾಯಿಗಾಗಿ ಹಾತೊರೆಯುವ, ನುಡಿತಾಯಿಯನ್ನು ತೊರೆಯುವ ಎರಡೂ ಹಂಬಲಗಳು ಮನುಷ್ಯರಲ್ಲಿ ತೀವ್ರವಾಗಿ ಇರುತ್ತವೆಂದು ಅನಿಸುತ್ತದೆ. ತಾಯಿಗಾಗಿ ಹಾತೊರೆಯುವುದೇನೋ ಸರಿ, ತೊರೆಯುವ ಹಂಬಲವೇಕೆ ಅನ್ನುವ ಪ್ರಶ್ನೆ ಕೆಲವರಲ್ಲಾದರೂ ಮೂಡಬಹುದು. ಸುಮಾರು ಮೂವತ್ತು ವರ್ಷದ ಹಿಂದೆ ಎರಿಕ್ ಫ್ರಾಂ ಅನ್ನುವ ಚಿಂತಕನ ಬರವಣಿಗೆ ಓದುತಿದ್ದಾಗ ಇದು ಅರಿವಾಯಿತು. ಬಸಿರಲ್ಲಿರುವ ಮಗು ಹುಟ್ಟುತಿದ್ದಂತೆ ಹೊಕ್ಕುಳ ಬಳ್ಳಿ ಕತ್ತರಿಸಿ ತಾಯಿಯಿಂದ ದೂರವಾಗುತ್ತದೆ; ಒಡಲೊಳಗಿದ್ದ ಮಗು ಮಡಿಲಿಗೆ ಬರುತ್ತದೆ; ಮಡಿಲಲ್ಲಿದ್ದ ಮಗು ಬೆಳೆಯುತ್ತ ಇನ್ನಷ್ಟು ದೂರವಾಗಿ ತೋಳಿಗೇರುತ್ತದೆ; ತೋಳಿನಿಂದಿಳಿದು ನೆಲದ ಮೇಲೆ ತೆವಳಿ, ನಡೆದು, ಅಮ್ಮನಿಂದ ಮತ್ತೂ ದೂರ ಸಾಗುತ್ತದೆ. ಅಮ್ಮನಿಂದ ದೂರ ಸಾಗದೆ ಮಗು ತನ್ನದೇ ವ್ಯಕ್ತಿತ್ವ ಬೆಳೆಸಿಕೊಳ್ಳುವುದು, ತಾನೇ ಆಗುವುದು ಸಾಧ್ಯವಿಲ್ಲವಲ್ಲ. ಮಗುವಿಗೆ ಹಾಗೆ ಅಮ್ಮನಿಂದ ದೂರವಾಗುವ ಹಾತೊರೆಯುವಿಕೆ ಹದಿ ಹರೆಯದ ಹೊತ್ತಿಗೆ ಮತ್ತಷ್ಟು ತೀವ್ರವಾಗುತ್ತದೆ. ಡಿ.ಎಚ್.ಲಾರೆನ್ಸ್‌ನ `ಎಂಡ್ ಆಫ್ ಅನದರ್ ಹೋಮ್ ಹಾಲಿಡೆ~ ಕವಿತೆ ನೆನಪಾಗುತ್ತದೆ. ಅಮ್ಮನಿಂದ ದೂರವಾಗಿ ಮತ್ತೆ ತನ್ನ ಕಾಲೇಜಿಗೆ ಹೊರಟ ಮಗ ತಪ್ಪಿತಸ್ಥ ಭಾವನೆಯಿಂದ ನರಳುವುದನ್ನು, ಸದಾ ಮಗನ ಪ್ರೀತಿಗಾಗಿ ಹಂಬಲಿಸುವ ತಾಯಿ ಬೆನ್ನು ಹತ್ತಿ ಯಾಚಿಸುವ ಭಿಕ್ಷುಕಿಯಂತೆ ಕಾಣುವುದು ಆ ಕವಿತೆಯಲ್ಲಿ ತೀವ್ರವಾಗಿ ಮನಸ್ಸು ಮುಟ್ಟುತ್ತದೆ. ತಾಯಿಯನ್ನು ತೊರೆಯುವುದು ಬೆಳವಣಿಗೆಯ ಅನಿವಾರ್ಯತೆಯಾದರೆ ನುಡಿತಾಯಿಯನ್ನೂ ತೊರೆಯುವುದು, ನುಡಿತಾಯಿಯಿಂದ ದೂರವಾಗುವುದು ಅನಿವಾರ್ಯವೇ? ಹೌದು ಎಂದೇ ತೋರುತ್ತದೆ. ಲಲ್ಲೆ ಮಾತಿನ ನುಡಿತಾಯಿ, ಮನೆಮಾತಿನ ತಾಯಿ, ಪರಿಸರದ ತಿಳಿವು ಮೂಡಿಸಿ ಸಂಬಂಧಗಳನ್ನೂ ಭಾವ ಭಾವನೆಗಳನ್ನೂ ಮಗುವಿನ ಮನಸ್ಸಿನಲ್ಲಿ ಮೂಡಿಸಿದ ನುಡಿತಾಯಿ ಮಗು ಶಾಲೆಗೆ ಸೇರುತಿದ್ದಂತೆ ದೂರವಾಗುತ್ತಾಳೆ. ಕನ್ನಡ ಮಗು ಕನ್ನಡ ಮಾಧ್ಯಮದಲ್ಲೇ ಓದಿದರೂ ಶಾಲೆಯಲ್ಲಿ ಕಲಿಯುವ ಕನ್ನಡ ನುಡಿತಾಯಿಯಷ್ಟು ಆಪ್ತವಲ್ಲವೇ ಅಲ್ಲ. ನಿಜವಾಗಿ ನೋಡಿದರೆ ಕನ್ನಡದ ಮಗು ಶಾಲೆಯಲ್ಲಿ ಕಲಿವ ಶಿಷ್ಟ ಕನ್ನಡ `ಎರಡನೆಯ ಭಾಷೆ~. ಜ್ಞಾನ ಅಗತ್ಯವೆಂದಾದರೆ, ವ್ಯಕ್ತಿತ್ವದ ವಿಕಾಸವಾಗುವುದು ಅಗತ್ಯವೆಂದಾದರೆ ಅಮ್ಮ ಕಲಿಸಿದ ನುಡಿಯಿಂದ ದೂರವಾಗಿ, ಎಳವೆಯ ಗೆಳೆಯರು, ಆಟಿಕೆಗಳು, ಮುಕ್ತ ಸಂತೋಷ, ಮುಕ್ತ ಮುನಿಸು ಎಲ್ಲದರ ನುಡಿಯಿಂದ ದೂರವಾಗಿ `ಸಮಾಜಕ್ಕೆ~ ಸಲ್ಲುವ ಭಾಷೆಗೆ ಸೇರುವುದು ಅಗತ್ಯವೇ ಹೌದು. ಶಾಲೆಯಲ್ಲಿ ಕಲಿವ ಕನ್ನಡದ ಬಗೆ ದ್ವಿತೀಯ ಭಾಷೆಯೇ ಆದರೂ ನೆಲದ ಭಾಷೆಯಿಂದ ತೀರ ದೂರವೇನೂ ಅಲ್ಲ. ಶಾಲೆ-ಕಾಲೇಜುಗಳಲ್ಲಿ ಓದುವ ಮಕ್ಕಳು ತಮ್ಮ `ಊರಿಗೆ~ ಮರಳಿದಾಗ ಬಳಸುವ ಕನ್ನಡಕ್ಕೂ ಅದನ್ನು ಆಡುವ ಪರಿಗೂ, ಕಾಲೇಜಿನಲ್ಲಿ ಶಿಕ್ಷಣದ ವಾತಾವರಣದಲ್ಲಿ ಬಳಸುವ ಭಾಷೆಗೂ ವ್ಯತ್ಯಾಸ ಇರುತ್ತದೆ, ಇರಲೇಬೇಕು. ಊರಿನ ಕನ್ನಡವನ್ನು ಲೇವಡಿ ಮಾಡುವ ನಗರದ ಗೆಳೆಯರಿರುತ್ತಾರೆ. ನಗರದ ವಾತಾವರಣದಲ್ಲಿ ಸಮಾನರೊಡನೆ ಸಮಾನವಾಗಿ ಇರಲು ಅವರಂಥ ಭಾಷೆಯೇ ಬೇಕು; ಊರಿಗೆ ಮರಳಿದಾಗ ಮನೆಯವರೊಡನೆ, ಗೆಳೆಯರೊಡನೆ ಮಾತು ಮತ್ತೆ ನೆಲದ ಮಾತು ಆಗುತ್ತದೆ. ಒಂದೇ ಭಾಷೆಯಲ್ಲಿರುವ ದ್ವಿಭಾಷಿಕತೆ ಇದು. ನಮ್ಮತನದ ಹಲವು ಚಹರೆಗಳಲ್ಲಿ ಸುಲಭವಾಗಿ ತೊರೆಯಬಹುದಾದುದು ನಮ್ಮ ಭಾಷೆಯೇ ಆಗಿರುತ್ತದೆ ಅನಿಸುತ್ತದೆ. ಮನೆಯಿಂದ ದೂರವಾಗಿರುವಾಗ ಮನೆಯ ನೆನಪು ಕಾಡುವಂತೆ ನಾವೇ ಹೇರಿಕೊಂಡ ಅನಿವಾರ್ಯತೆಯಿಂದಲೋ, ರಾಜಕೀಯದ ಕಾರಣದಿಂದಲೋ ಪರ-ದೇಶಿಗಳಾಗಿರುವಾಗ, ಅನ್ಯಾಕ್ರಾಂತರಾಗಿ ಸ್ವಂತ ನೆಲದಲ್ಲೇ ಪರ-ದೇಶಿಗಳೂ ಪರ-ಭಾಷಿಕರೂ ಆಗುವ ಬಲವಂತಕ್ಕೆ ಒಳಪಟ್ಟಾಗ ನುಡಿತಾಯಿಗಾಗಿ ಹಾತೊರೆಯುತ್ತದೆ ಮನಸ್ಸು. ಫ್ರೆಂಚ್ ವಸಾಹತುವಾಗಿ ಪರಿವರ್ತನೆಗೊಂಡ, ಲೋಹಗಳ ಬಳಕೆಯೇ ತಿಳಿಯದಿದ್ದ ತಾಹಿತಿ ಜನಾಂಗದ ಕವಿ ಚಾನ್ಟಾಲ್ ಸ್ಪಿಂಟ್ಸ್ ಹೇಳುತ್ತಾಳೆ: `ಅವರು ನಿನಗೆ ತಮ್ಮ ಭಾಷೆ ಕಲಿಸಿದರು, ತಮ್ಮ ಹಾಗೆ ಯೋಚನೆ ಮಾಡುವುದು ಕಲಿಸಿದರು, ತಮ್ಮ ಮೌಲ್ಯ, ತಮ್ಮ ಅಭಿರುಚಿ ನಿನ್ನದಾಗಿಸಿದರು, ಒಂದಿಷ್ಟೂ ಯೋಗ್ಯತೆ ಇಲ್ಲದೆ ಗೆದ್ದುಬಿಟ್ಟರು. ಅವರು ಗೆಲ್ಲಲು, ನಿನ್ನ ಮಂಗ ಮಾಡಲು ಸಹಾಯಮಾಡಿದ್ದು ನೀನೇ~. ಕೆನ್ಯಾದ ನ್ಗೂಗಿ ವಾ ಥಿಯಾಂಗೊ ಹೇಳುವುದು ಕೇಳಿ: ಇಡೀ ಜಗತ್ತಿನಲ್ಲಿ ಇಂಗ್ಲಿಷು ಈಗ ಪಡೆದಿರುವಂಥ ಸ್ಥಾನವನ್ನು ಆಕ್ರಮಿಸಲು ಇತರ ಭಾಷೆಗಳನ್ನೂ ಸಂಸ್ಕೃತಿಗಳನ್ನೂ ನಾಶಮಾಡಿದೆ. ಇತರ ಹಲವು ಭಾಷೆಗಳು ಸತ್ತು ಒಂದು ಭಾಷೆ ಮಾತ್ರ ಉಳಿಯುವಂಥದ್ದು ಬದುಕಿನ ಸ್ಥಿತಿಯಾಗಬಾರದು. ಜಗತ್ತಿಗೆಲ್ಲ ಒಂದೇ ಭಾಷೆಯೇ? ಭಾಷೆಗಳ ಜಗತ್ತು ಇದು. ಸ್ವಾತಂತ್ರ್ಯ, ಸಮಾನತೆ, ರಾಷ್ಟ್ರಗಳ ನಡುವೆ ಶಾಂತಿ ಇದ್ದರೆ ಮಾತ್ರ ಭಾಷೆಗಳ ಜಗತ್ತು ಉಳಿದೀತು. ಎಲ್ಲ ಭಾಷೆಗಳಲ್ಲೂ ನುಡಿತಾಯಿಯನ್ನು ಕುರಿತ ಕವಿತೆಗಳಿಲ್ಲ. ತಮ್ಮದೊಂದೇ ಭಾಷೆ ಬಲ್ಲ ಆದಿವಾಸಿಗಳು ತಮ್ಮ ನುಡಿತಾಯಿಯ ಬಗ್ಗೆ ಆತಂಕಪಡುವುದೂ ಇಲ್ಲ. ಅಥವ ಇದ್ದರೂ ಲಿಪಿ ಇಲ್ಲದ್ದರಿಂದ ಬೇರೆಯವರಿಗೆ ಗೊತ್ತಾಗುವುದಿಲ್ಲ. `ಕಳೆದ ಸುಮಾರು ಒಂದು ಸಾವಿರ ವರ್ಷದಿಂದ ಜಪಾನಿ ಭಾಷೆಯೊಂದೇ ಖಾಸಗೀ ಮತ್ತು ಸಾರ್ವಜನಿಕ ವಲಯಗಳಲ್ಲಿ ಬಳಕೆಯಾಗುತ್ತಿದೆ. ಹಾಗಾಗಿ ಭಾಷೆಗೆ ನೆರವು ನೀಡಬೇಕು ಅನ್ನುವ ಪ್ರಜ್ಞಾಪೂರ್ವಕ ಅರಿವು ಇಲ್ಲ. ನಮ್ಮ ಭಾಷೆಯ ಬಗ್ಗೆ ಇರುವ ಮಮಕಾರದ ಬಗ್ಗೆ ಅಲ್ಲೊಂದು ಇಲ್ಲೊಂದು ಕವಿತೆ ಇದ್ದಾವು~ ಅನ್ನುವುದು ಜಪಾನಿನ ಪ್ರೊಫೆಸರ್ ಕ್ಯೋಕೊ ನಿವಾ ಹೇಳುವ ಮಾತು. ನೊಬೆಲ್ ಪ್ರಶಸ್ತಿ ಪಡೆದ ಸೆಸ್ಲಾವ್ ಮಿಲ್ಸೋಸ್ (1911-2004) ಬದುಕಿನಲ್ಲಿ ಐವತ್ತು ವರ್ಷಗಳಷ್ಟು ಕಾಲ ನುಡಿತಾಯಿಯಿಂದ ದೂರವಾಗಿದ್ದವನು ಬರೆದ ಕವಿತೆ ನೆನಪಾಗುತ್ತಿದೆ. ನನ್ನ ನಿಷ್ಠಾವಂತ ತಾಯಿ ನುಡಿಯೇ, ನಿನ್ನ ಸೇವೆ ಮಾಡುತಿದ್ದೇನೆ. ಪ್ರತಿ ರಾತ್ರಿಯೂ ನಿನ್ನೆದುರು ಬಣ್ಣಗಳು ತುಂಬಿದ ಬಟ್ಟಲುಗಳ ಸಾಲು ಇಡುತ್ತೇನೆ- ನಿನ್ನ ಬರ್ಚ್ ಮರ, ನಿನ್ನ ಮಿಡತೆ, ನಿನ್ನ ಫಿಂಚ್ ಹಕ್ಕಿ, ನನ್ನ ನೆನಪಿನಲ್ಲಿ ಉಳಿದಿರುವುದನ್ನೆಲ್ಲ ನೀನು ಬಣ್ಣಿಸಲಿ ಎಂದು. ಹೀಗೇ ವರ್ಷಗಳು ಕಳೆದವು ಎಷ್ಟೋ. ನಾನು ಹುಟ್ಟಿದ ನೆಲ ನೀನು. ನೀನಲ್ಲದೆ ಬೇರೆ ನೆಲೆ ಇಲ್ಲ ನನಗೆ. ನನಗೂ ಹಿಡಿಯಷ್ಟು ಒಳ್ಳೆಯವರಿಗೂ- ನಡುವೆ, ಅವರು ನೂರಿರಲಿ, ಇಪ್ಪತ್ತು ಇರಲಿ, ಇನ್ನೂ ಹುಟ್ಟದಿರುವವರೇ ಇರಲಿ- ಸಂದೇಶವಾಹಕಳಾಗುವೆ ನೀನು ಅನ್ನುವ ವಿಶ್ವಾಸವಿತ್ತು. ಈಗ ಸಂಶಯ ಹುಟ್ಟಿದೆ. ನನ್ನ ಬದುಕು ದುಂದು ಮಾಡಿದೆನೋ ಅನಿಸುತ್ತದೆ. ಕೀಳುಜನರ ನುಡಿಯಾಗಿರುವೆ, ಅವಿಚಾರಿಗಳ, ಬೇರೆ ದೇಶಗಳಿಗಿಂತ ತಮ್ಮನ್ನೆ ತಾವು ದ್ವೇಷಿಸುವ, ಗುಪ್ತ ಮಾಹಿತಿದಾರರ, ಗೊಂದಲಗೆಟ್ಟವರ, ಮುಗ್ಧತೆಯಲ್ಲಿ ನರಳುವವರ ನುಡಿಯಾಗಿರುವೆ. ಆದರೆ ನೀನಿಲ್ಲದೆ ನಾನು ಯಾರು? ದೂರ ದೇಶದಲ್ಲಿರುವ ಬರಿಯ ವಿದ್ವಾಂಸ ಅಷ್ಟೆ. ಭಯವಿಲ್ಲದೆ, ಅಪಮಾನವಿಲ್ಲದೆ ಬದುಕಿನಲ್ಲಿ ಗೆದ್ದವನು. ಹೌದು, ನೀನಿಲ್ಲದೆ ನಾನು ಯಾರು? ಬರಿಯ ಫಿಲಾಸಫರ್ ಅಷ್ಟೆ. ಇದೆಲ್ಲ ಭಾವನೆಗಳ ಮಾತು ಅನಿಸೀತು. ಜನ ನುಡಿತಾಯಿಯನ್ನು ತೊರೆಯುವ ಕಾರಣಗಳೇನು, ನುಡಿತಾಯಿಯಂದಿರು ಹಲವರು ಇರಲು ಸಾಧ್ಯವೇ, ಕಲಿಕೆಯಲ್ಲಿ, ಜ್ಞಾನಸಂಪಾದನೆಯಲ್ಲಿ ನುಡಿತಾಯಿಯ ಪಾತ್ರವೇನು, ಮಿತಿಯೇನು, ಶಿಕ್ಷಣ ಮತ್ತು ನುಡಿತಾಯಿಯ ಸಂಬಂಧ, ಭಾಷೆಗಳ ಸಂಬಂಧ, ಭಾವ ಭಾಷೆ ವಿಚಾರಗಳ ಸಂಬಂಧ, ಭಾಷೆಗಳ ಹತ್ಯೆ, ಭಾಷಿಕ ಹಕ್ಕು ಇವೆಲ್ಲ ಮುಖ್ಯವಾದ ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳು. ಬದುಕಿನಲ್ಲಿ ಎದುರಾಗುವ ಯಾವ ಪ್ರಶ್ನೆಗೂ ಸುಲಭ ಉತ್ತರ ಇಲ್ಲದಿರುವಂತೆಯೇ ಈ ಪ್ರಶ್ನೆಗಳಿಗೂ ಸುಲಭದ ಸರ್ವ ಸಮ್ಮತ ಉತ್ತರಗಳು ಇಲ್ಲ. ಈ ಪ್ರಶ್ನೆಗಳನ್ನು ಕುರಿತು ಮುಂದಿನ ಬರಹಗಳಲ್ಲಿ ವಿಚಾರ ಮಾಡೋಣ.
OSCAR-2019
ಮಕ್ಕಳಿಗೆ ಸಂಸ್ಕøತಿ-ಸಂಸ್ಕಾರಗಳ ಅರಿವು ಬಾಲ್ಯದಲ್ಲೇ ಲಭಿಸಲಿ - ಉಪ್ಪಳ ಚಿಣ್ಣರ ಕಲರವಕ್ಕೆ ಚಾಲನೆ ನೀಡಿ ಪ್ರದೀಪ್ ಕುಮಾರ್ ಕಲ್ಕೂರ ಮುಂಬಯಿ, ಜು.05: ಮಾತೃಭಾಷೆ, ಸಂಸ್ಕøತಿಯ ಸಂವರ್ಧನೆಗೆ ಯುವ ತಲೆಮಾರನ್ನು ತಯಾರು ಗೊಳಿಸುವ ಹೊಣೆ ಎಲ್ಲರಮೇಲಿದೆ. ಸಂಸ್ಕøತಿ-ಸಂಸ್ಕಾರಗಳ ಅರಿವು ಎಳೆಯ ಪ್ರಾಯದಲ್ಲಿ ಲಭ್ಯವಾದಾಗ ಅಂತಹ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳೆದು ತೃಪ್ತ ಬದುಕು ಸಾಕಾರವಾಗುವುದೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂಬಯಿ, ಜು.06: ಬಿ.ಎಸ್.ಕೆ.ಬಿ ಅಸೋಸಿಯೇಶನ್ ಮುಂಬಯಿ ತನ್ನ ಮುಖವಾಣಿಯಾಗಿ ಪ್ರಕಟಿಸುತ್ತಿರುವ `ಗೋಕುಲವಾಣಿ’ ಮಾಸಪತ್ರಿಕೆ ನವಂಬರ್ 2018ರ ಸಂಚಿಕೆಯನ್ನು ದೀಪಾವಳಿ ವಿಶೇಷ ಸಂಚಿಕೆಯಾಗಿ ಹೊರತರುತ್ತಿದೆ. ಆ ಪ್ರಯುಕ್ತ ಅಖಿಲ ಭಾರತ ಮಟ್ಟದ ಕನ್ನಡ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆಗಳಿಗೆ ಪ್ರಥಮ(ರೂ. 10,000/-), ದ್ವಿತೀಯ (ರೂ. 5,000/-) ಹಾಗೂ ತೃತೀಯ (ರೂ.3,000/-) ಬಹುಮಾನವನ್ನು ಅರ್ಹ ಕಥೆಗಳಿಗೆ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಥೆಗಳಿಗೆ ತಲಾ ರೂ. 1,000/- ಬಹುಮಾನ ಕೊಡಲಾಗುವುದು ಎಂದು `ಗೋಕುಲವಾಣಿ’ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು ತಿಳಿಸಿದ್ದಾರೆ. ಸ್ಪರ್ಧೆಗೆ ಬಂದ ಕಥೆಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಯಾವುದೇ ಪತ್ರ ವ್ಯವಹಾರ, ದೂರವಾಣಿ ಕರೆ ನಿಷಿದ್ಧ. ಕಥೆಗಳನ್ನು ಅಂತಿಮವಾಗಿ 25.9.2018. ಸ್ವೀಕರಿಸಲಾಗುವುದು. ಸ್ಪರ್ಧೆಯ ಫಲಿತಾಂಶ ಗೋಕುಲವಾಣಿ ವಿಶೇಷಾಂಕ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಕಥೆಗಳನ್ನು ಇಜiಣoಡಿ, ಉoಞuಟಚಿvಚಿಟಿi, ಏಚಿಟಿಟಿಚಿಜಚಿ ಒoಟಿಣhಟಥಿ, ಃSಏಃ ಂssoಛಿiಚಿಣioಟಿ, Pಟoಣ ಓo. 273, ಉoಞuಟ ಒಚಿಡಿg, Sioಟಿ (ಇ), ಒumbಚಿi 400 022. ಇmಚಿiಟ: goಞuಟಚಿvಚಿಟಿi@bsಞbಚಿ.ಛಿom ಇಲ್ಲಿಗೆ ಕಳುಹಿಸಿ ಕೊಡುವರೇ ವಿನಂತಿ. ಮುಂಬಯಿ, ಜು.05: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರದ 18ನೇ ಕಾರ್ಯಕ್ರಮ ಜುಲೈ.7 ರಂದು ಶನಿವಾರ ಬೆಳಿಗ್ಗೆ 10.30 ರಿಂದ 11.30 ಗಂಟೆ ವರೆಗೆ ಪ್ರಸಾರವಾಗಲಿದೆ. ಮುಂಬಯಿ,ಜು.05: ಪರ್ಯಾಯ ಶ್ರೀ ಪಲಿಮಾರು ಮಠ, ಶ್ರೀಕೃಷ್ಣ ಮಠಉಡುಪಿ ಇದರಆಶ್ರಯದಲ್ಲಿ ತುಳುಕೂಟ ಉಡುಪಿ (ರಿ.) ವತಿಯಿಂದ ಮಲ್ಪೆರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ತುಳು ಯಕ್ಷಗಾನ ಕಾರ್ಯಕ್ರಮ ಜುಲೈ 7ರಂದು ಸಂಜೆ 6.30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿüಗಳಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇದರ ಸದಸ್ಯ ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಯಕ್ಷಾಭಿಮಾನಿ ಮತ್ತು ಉದ್ಯಮಿ ವಿಶ್ವನಾಥ ಶೆಣೈ ಭಾಗವಹಿಸಲಿರುವರು. ಈ ಸಂದರ್ಭ ಹಿರಿಯ ಯಕ್ಷಗಾನ ಕಲಾವಿದ ಕೆ.ಶಿವರಾಮ ಜೋಗಿ ಅವರಿಗೆ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿ ಮತ್ತು ನಗದುರೂ.10,000/- ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಣೇಶ ಕೊಲೆಕಾಡಿ ವಿರಚಿತ `ಗೇಲ್ದಬೀರೆ ವಾಲಿ’ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
OSCAR-2019
'ಮಲ್ಟಿಪ್ಲೆಕ್ಸ್'ಗಳಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡ ಚಿತ್ರಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿಲ್ಲ. ಕನ್ನಡ ಸಿನಿಮಾಗಳನ್ನ ಕಡೆಗಣಿಸುತ್ತಿದೆ ಎಂಬ ಆರೋಪಗಳ ಮಧ್ಯೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಹೊಸ ದಾಖಲೆ ಬರೆದಿದೆ. ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿರುವ 'ಚಕ್ರವರ್ತಿ' ಮೈಸೂರಿನಲ್ಲಿ ಹೊಸ ಇತಿಹಾಸ ಸೃಷ್ಠಿಸಿದೆ. ಅದೇನದು ಅಂತ ಮುಂದೆ ಓದಿ 'ಮೈಸೂರಿನಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ದರ್ಶನ್ ಅವರ 'ಚಕ್ರವರ್ತಿ' ಸಿನಿಮಾ 13ನೇ ತಾರೀಖು ಮಧ್ಯರಾತ್ರಿ ಬಿಡುಗಡೆಯಾಗುತ್ತಿದೆಯಂತೆ. ಮಲ್ಟಿಪ್ಲೆಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಮಧ್ಯರಾತ್ರಿ ಪ್ರದರ್ಶನವಾಗುತ್ತಿರುವುದು. ದಾಖಲೆಗಳ ಪ್ರಕಾರ ಇದುವರೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಯಾವುದೇ ಚಿತ್ರ ಮಧ್ಯರಾತ್ರಿ ಬಿಡುಗಡೆಯಾಗಿಲ್ಲ. ಕೇವಲ ಮೈಸೂರಿನ ಮಲ್ಟಿಪ್ಲೆಕ್ಸ್'ಗಳಲ್ಲಿ ಮಾತ್ರವಲ್ಲ, ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಚಕ್ರವರ್ತಿ ಮಧ್ಯರಾತ್ರಿ ರಿಲೀಸ್ ಆಗುತ್ತಿದ್ದು, ದಿನದ 24 ಗಂಟೆಯೂ ಸಿನಿಮಾ ಪ್ರದರ್ಶನವಾಗುತ್ತಿದೆ. 'ಚಕ್ರವರ್ತಿ' ಇದೇ ತಿಂಗಳು 14ರಂದು ರಾಜ್ಯಾದ್ಯಂತ ದಾಖಲೆಯ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ಸಿದ್ದಾಂತ್ ನಿರ್ಮಾಣ ಮಾಡಿದ್ದಾರೆ. ದರ್ಶನ್, ದಿನಕರ್ ತೂಗುದೀಪ, ಸೃಜನ್ ಲೋಕೇಶ್, ಕುಮಾರ್ ಬಂಗಾರಪ್ಪ, ಚಾರುಲತಾ, ದೀಪಾ ಸನ್ನಿಧಿ, ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. darshan, dinakar toogudeepa, deepa sannidhi, aditya, charulatha, sandalwood, ದರ್ಶನ್, ದಿನಕರ್ ತೂಗುದೀಪ, ದೀಪಾ ಸನ್ನಿಧಿ, ಆದಿತ್ಯ, ಚಾರುಲತಾ, ಸ್ಯಾಂಡಲ್ ವುಡ್
OSCAR-2019
ರಾಮನಗರ, ಏಪ್ರಿಲ್ 12 : ಚನ್ನಪಟ್ಟಣದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಯಾರೇ ಸ್ಪರ್ಧಿಸಿದರೂ ಗೆಲ್ಲುವ ವಿಶ್ವಾಸವಿದೆ ಎಂದು ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಚನ್ನಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಗೆ ಗುರುವಾರ ಆಗಮಿಸಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷದ ಟ್ರೆಂಡ್ ಚೆನ್ನಾಗಿದ್ದು, ರಾಜ್ಯದಲ್ಲೂ ಕೂಡ ಜೆಡಿಎಸ್ ಪರವಾದ ಅಲೆಯಿದೆ. ಮುಂದಿನ ವಾರದಿಂದ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಬಹಿರಂಗ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ಅನಿತಾ ನುಡಿದರು. ನಿಖಿಲ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾನೆ. ಕುಮಾರಸ್ವಾಮಿಯವರಿಗೆ ಕಳೆದ ಎಂ.ಪಿ ಚುನಾವಣೆಯಲ್ಲಿ ಚನ್ನಪಟ್ಟಣದ ಜನತೆ ಮತ ಹಾಕಿದ್ದರು. ಆದರೆ ಈಗ ಮತ್ತೊಂದು ಅವಕಾಶ ಒದಗಿ ಬಂದಿದ್ದು, ಕ್ಷೇತ್ರದ ಜನರು ಬಹಳ ಸಂತೋಷವಾಗಿದ್ದಾರೆ. ಕುಮಾರಸ್ವಾಮಿಯವರು ಈ ಮಟ್ಟಕ್ಕೆ ಬೆಳೆಯಬೇಕಾದರೆ ಚನ್ನಪಟ್ಟಣ ಜನರ ಕೊಡುಗೆ ಸಾಕಷ್ಟಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಚನ್ನಪಟ್ಟಣ ಮಾಜಿ ಜೆಡಿಎಸ್ ಶಾಸಕ ಎಂ.ಸಿ.ಅಶ್ವಥ್ ಮಾತನಾಡಿ, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರ ಗೆಲುವು ನಿಶ್ವಿತ. ಅವರ ಗೆಲುವನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಾಗೇ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ 70 ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದವು, ನಾನು ಗೆದ್ದಾಗಲೂ 60 ಸಾವಿರಕ್ಕೂ ಹೆಚ್ಚು ಮತಗಳು ಬಂದಿದ್ದವು ಎಂದು ಹಿಂದಿನ ಚುನಾವಣೆಯ ಮೆಲುಕು ಹಾಕಿದರು. ಈ ಬಾರಿ 2 ಲಕ್ಷದ 18 ಸಾವಿರಕ್ಕೂ ಹೆಚ್ಚು ಮತಗಳು ಚನ್ನಪಟ್ಟಣ ಕ್ಷೇತ್ರದಲ್ಲಿದೆ. ಈ ಬಾರಿ ಕೂಡ ಜೆಡಿಎಸ್ ಗೆ ಅತಿಹೆಚ್ಚು ಮತಗಳು ಬರಲಿವೆ. ಈ ಬಾರಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನ ಕ್ಷೇತ್ರದ ಜನತೆ ಗೆಲ್ಲಿಸಿದರೆ ರಾಜ್ಯದ ಜನರೇ ಚನ್ನಪಟ್ಟಣದ ಕಡೆ ತಿರುಗಿ ನೋಡಲಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿಯನ್ನ ಗೆಲ್ಲಿಸಿದ ಕೀರ್ತಿ ಚನ್ನಪಟ್ಟಣದ ಜನರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಮೇ 12ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಸಿಪಿ ಯೋಗೇಶ್ವರ ಅವರು ಬಿಜೆಪಿಯಿಂದ ಸ್ಪರ್ಧೆಗಿಳಿಯಲಿದ್ದಾರೆ. ಇವರಿಬ್ಬರ ಕಾದಾಟದಿಂದ ಕ್ಷೇತ್ರದತ್ತ ಎಲ್ಲರೂ ನೋಡುವಂತಾಗಿದೆ. jds hd kumaraswamy anitha kumarswamy channapatna mc ashwath ಜೆಡಿಎಸ್ ಚನ್ನಪಟ್ಟಣ ಅನಿತಾ ಕುಮಾರಸ್ವಾಮಿ ಶಾಸಕ ಎಚ್ ಡಿ ಕುಮಾರಸ್ವಾಮಿ karnataka assembly elections 2018
OSCAR-2019
ಜಾರ್ಖಂಡ್ ನ ರಾಂಚಿಯಿಂದ 250 ಕಿಲೋ ಮೀಟರ್ ದೂರದಲ್ಲಿನ ಗೊಡ್ಡಾದ ಲಾಲ್ ಮಾಟಿಯಾ ಕಲ್ಲಿದ್ದಲು ಗಣಿ ಕುಸಿದಿದೆ. ಗಣಿಯಲ್ಲಿ 50ಕ್ಕೂ ಹೆಚ್ಚು ಸಿಲುಕಿದ್ದು ರಕ್ಷಣಾ ಪರಿಹಾರ ಕಾರ್ಯ ಭರದಿಂದ ಸಾಗಿದೆ.
OSCAR-2019
ಕಾಂಗ್ರೆಸ್ ನಿಂದ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾಗ ನನ್ನ ಸೋಲಿಸಿ ಅಂತ ಹೇಳಿದವರು ಈಗ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಯವರನ್ನು ಸೋಲಿಸಿ ಎಂದು ಹೇಳಬೇಕೆಂದು ಮಾಜಿ ಸಚಿವ ಹೇಳಿದ್ದಾರೆ..
OSCAR-2019
ಬೆಂಗಳೂರು, ಜು.06: ಭಾರತ್ ಕೋ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 45ನೇ ಶಾಖೆಯಾಗಿ ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿನ ಸೇವಾ ನಿರತ ಪೀಣ್ಯ ಶಾಖೆಯನ್ನು ಸ್ಥಳೀಯ ಕಟ್ಟಡದ ತಳಮಹಡಿಗೆ ಸ್ಥಳಾಂತರಿಸಿ ಇಂದಿಲ್ಲಿ ಶುಕ್ರವಾರ ಪೂರ್ವಾಹ್ನ ಪುನಾಂಭಿಸಲಾಯಿತು.
OSCAR-2019
ಜಿಲ್ಲಾ ಮತ್ತು ಸತ್ರ ನ್ಯಾಯಲಯ, ಬೀದರ ನಗರದ ಪ್ರಮುಖ ಪ್ರದೇಶದಲ್ಲಿದೆ. ನ್ಯಾಯಲಯ ಕಟ್ಟಡವನ್ನು ಹೈದರಾಬಾದಿನ ನಿಜಾಮ್ ಅವಧಿಯಲ್ಲಿ 1328 ರಲ್ಲಿ ನಿರ್ಮಿಸಿಸಲಾಗಿದೆ. ಅಂದರೆ ಇದು ಕ್ರಿ.ಶ. 1938 ಕ್ಕೆ ಅನುರೂಪವಾಗಿದೆ. ಇದನ್ನು ಪರಂಪರೆ ಕಟ್ಟಡ ಎಂದು ಘೋಷಿಸಲಾಗಿದೆ. 1956 ರ ರಾಜ್ಯ ಪುನರ್ ವಿಂಗಡನೆಯ ಪೂರ್ವದಲ್ಲಿ ಬೀದರ ಜಿಲ್ಲೆಯಲ್ಲಿ ಹದಿಮೂರು ತಾಲೂಕುಗಳು ಸೇರಿದ್ದವು. ಪುನರ್ ವಿಂಗಡನೆಯ ನಂತರ, ಈ ಜಿಲ್ಲೆಯಲ್ಲಿ ತಾಲ್ಲೂಕುಗಳ ಸಂಖ್ಯೆ ಐದು ಆಗಿದೆ. ಅವು ಬೀದರ, ಔರಾದ್ (ಬಿ), ಬಸವಕಲ್ಯಾಣ, ಭಾಲ್ಕಿ ಮತ್ತು ಹುಮನಾಬಾದ ತಾಲೂಕುಗಳಾಗಿವೆ. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ನ್ಯಾಯಲಯಗಳ ನ್ಯಾಯಂಗ ದಂಡಾಧಿಕಾರಿಗಳು (ಸಿಜೆಎಂ) ಬೀದರ. (ಸೋಮವಾರ ಮತ್ತು ಮಂಗಳವಾರ ಕಾರ್ಯನಿರ್ವಹಣೆ) ಪ್ರಸ್ತುತ ಬೀದರ 5448 ಚದರ ಕಿಲೋಮೀಟರನಷ್ಟು ವಿಸ್ತಾರವನ್ನು ಹೊಂದಿದೆ. 17 ಡಿಗ್ರಿ 35 ನಿಮಿಷ ಮತ್ತು 18 ಡಿಗ್ರಿ 25 ನಿಮಿಷ ಉತ್ತರ ಅಕ್ಷಾಂಶಗಳು ಮತ್ತು 760 42 ನಿಮಿಷಗಳು ಮತ್ತು 770 39 ನಿಮಿಷಗಳು ಪೂರ್ವ ರೇಖಾಂಶಗಳಿಂದ ಕೂಡಿದೆ. ಜಿಲ್ಲೆಯ ಪೂರ್ವದಲ್ಲಿ ತೆಲಂಗಾಣ ರಾಜ್ಯದ ನಿಜಾಮಾಬಾದ್ ಮತ್ತು ಮೇದಕ್ ಜಿಲ್ಲೆಯಿದ್ದು ಪಶ್ಚಿಮದಲ್ಲಿ ಮಹಾರಾಷ್ಟ್ರದ ನಾಂದೇಡ್ ಮತ್ತು ಉಸ್ಮಾಬಾದ್ ಜಿಲ್ಲೆಗಳನ್ನು ಹೊಂದಿದೆ. ದಕ್ಷಿಣದಲ್ಲಿ ಕರ್ನಾಟಕದ ಕಲಬುರಗಿ ಜಿಲ್ಲೆಯಿದೆ. ಬೀದರಿಗೆ ದಖ್ಖನ್ದಲ್ಲಿನ ಈ ಕೇಂದ್ರಸ್ಥಾನವು ದೀರ್ಘಕಾಲ ನೀಡಲ್ಪಟ್ಟಿತು, ಇದು ದಖ್ಖನ ಇತಿಹಾಸದಲ್ಲಿ ಪೂರ್ವ-ಶ್ರೇಷ್ಠವಾದ ಸ್ಥಾನವನ್ನು ಹೊಂದಿದ್ದರೂ, ಇಂದು ಶತಮಾನಗಳ ನಿರ್ಲಕ್ಷ್ಯ ಮತ್ತು ನಾಶದ ಚಿತ್ರವನ್ನು ಒದಗಿಸುತ್ತಿದೆ.
OSCAR-2019
ಶಾಂತಿನಗರ ಕ್ಷೇತ್ರದಲ್ಲಿ ಬಡಜನರಿಗೆ ಇನ್ನೂ ಸೌಲಭ್ಯಗಳು ಸಿಗುತ್ತಿಲ್ಲ. ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವವರೇ ಇಲ್ಲ. ಇಲ್ಲಿನ ಅಭಿವೃದ್ಧಿ ಎಂಇಪಿಯಿಂದ ಮಾತ್ರ ಸಾಧ್ಯ.- ನರಸಿಂಹ ಪ್ರಸಾದ್ , ಶಾಂತಿನಗರ ಎಂಇಪಿ ಅಭ್ಯರ್ಥಿ
OSCAR-2019
ತಾಯಿ ಮತ್ತು ಮಗುವಿನ ಸಂಬಂಧ ಗಟ್ಟಿಯಾಗುತ್ತಾ ಹೋಗುವುದು ಎದೆಹಾಲು ಉಣಿಸುವುದರಿಂದ ಎಂದರೆ ತಪ್ಪಾಗಲಾರದು. ನವಜಾತ ಮಗು ಭೂಮಿಗೆ ಬಂದಾಗ ಆಹಾರದ ರೀತಿಯಲ್ಲಿ ಸಂಜೀವಿನಿಯಾಗುವುದು ತಾಯಿಯ ಎದೆಹಾಲು. ಎದೆಹಾಲು ಉಣ್ಣುವ ಮಕ್ಕಳಿಗೆ ಎಂತಹದ್ದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ಮಗುವಿಗೆ ಬೇಕಾದ ಪ್ರೀತಿ ಹಾಗೂ ಆರೋಗ್ಯವನ್ನು ತಾಯಿ ತನ್ನ ಎದೆ ಹಾಲು ಉಣಿಸುವುದರ ಮೂಲಕ ಪೋಷಿಸುತ್ತಾಳೆ. ಮಗು ದಿನದಿಂದ ದಿನಕ್ಕೆ ಬೆಳವಣಿಗೆಯನ್ನು ಕಾಣುತ್ತಾ ವಿಕಸನ ಹೊಂದಲು ತಾಯಿಯ ಎದೆಹಾಲು ಬಹಳ ಪ್ರಮುಖವಾದ್ದು. ಎದೆಹಾಲು ಉಣಿಸುತ್ತಿರುವ ತಾಯಿಯ ಆರೋಗ್ಯದಲ್ಲಿ ಕೊಂಚ ಬದಲಾವಣೆ ಅಥವಾ ಅನಾರೋಗ್ಯ ಉಂಟಾದರೆ ಅದು ಮಗುವಿನ ಮೇಲೂ ಪರಿಣಾಮ ಬೀರುತ್ತವೆ. ಹಾಗಾಗಿ ಎದೆಹಾಲು ಉಣಿಸುವ ತಾಯಂದಿರು ತಮ್ಮ ಆರೋಗ್ಯದ ಬಗ್ಗೆಯೂ ಸೂಕ್ತ ಕಾಳಜಿ ವಹಿಸಬೇಕು. ಮಗು ತಾಯಿಯ ಗರ್ಭದಲ್ಲಿರುವಾಗಲೇ ನೈಸರ್ಗಿಕವಾಗಿ ಎದೆಹಾಲು ಉತ್ಪಾದನೆಗೆ ಬೇಕಾದಂತೆ ತಾಯಿಯ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತಲಿರುತ್ತದೆ. ಹಾಗಾಗಿ ಮಗು ಹುಟ್ಟಿದ ತಕ್ಷಣ ಎದೆ ಹಾಲನ್ನು ಉಣಿಸಲು ತಾಯಿ ಸಿದ್ಧಳಾಗಿರುತ್ತಾಳೆ. ಆರೋಗ್ಯ ಸಮಸ್ಯೆ ಅಥವಾ ನ್ಯೂನತೆಯ ಕಾರಣದಿಂದಾಗಿ ಕೆಲವು ತಾಯಂದಿರಿಗೆ ಎದೆಹಾಲಿನ ಪ್ರಮಾಣ ಕಡಿಮೆಯಾಗುವುದು ಅಥವಾ ಇಲ್ಲದೆ ಇರುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಭದಲ್ಲಿ ಮಗು ಪರ್ಯಾಯ ರೂಪದ ಹಾಲನ್ನು ಸೇವಿಸಬೇಕಾಗುವುದು. ಆಗ ಶಿಶು ಅನೇಕ ಬಗೆಯ ಆರೋಗ್ಯ ಸಮಸ್ಯೆಯನ್ನು ಸಹ ಎದುರಿಸಬೇಕಾಗುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಮಗುವಿನ ಬೆಳವಣಿಗೆಗೆ ಕಾರಣವಾಗುವ ಎದೆಹಾಲು ಕೆಲವು ತಾಯಂದಿರಿಗೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದಕ್ಕೆ ಕಾರಣವೇನು? ಎನ್ನುವ ವಿಚಾರದ ಬಗ್ಗೆ ಬೋಲ್ಡ್ ಸ್ಕೈ ಸೂಕ್ತ ವಿವರಣೆಯೊಂದಿಗೆ ಈ ಮುಂದೆ ವಿವರಿಸಿದೆ... ಎದೆಹಾಲಿನ ಉತ್ಪಾದನೆಗೆ ಹಲವಾರು ಕಾರಣಗಳು ಪ್ರಮುಖವಾಗಿರುತ್ತವೆ. ಕೆಲವರಲ್ಲಿ ಹಾಲು ಉತ್ಪಾದಿಸುವ ಸಾಕಷ್ಟು ನಾಳಗಳು ಇರುವುದಿಲ್ಲ. ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರಿಗೆ ನಾಳಗಳ ಬೆಳವಣಿಗೆಯಾಗುತ್ತಿರುತ್ತವೆ. ನಂತರ ಇವು ಹಾಲು ಉತ್ಪಾದನೆಗೆ ಉತ್ತೇಜಿಸುತ್ತವೆ. ಸಾಕಷ್ಟು ಪ್ರಮಾಣದ ಗ್ರಂಥಿಗಳು ಇಲ್ಲದಿರುವಾಗ ಹಾಲಿನ ಉತ್ಪಾದನೆ ಕಡಿಮೆ ಮಟ್ಟದಲ್ಲಿ ಇರುತ್ತವೆ. ಅಂತಹ ಸಂದರ್ಭದಲ್ಲಿ ವೈದ್ಯರಿಂದ ಸೂಕ್ತ ಸಲಹೆ ಹಾಗೂ ತಪಾಸಣೆಗೆ ಒಳಗಾಗಬೇಕು. ಆಗ ಮಗುವಿಗೆ ಅಗತ್ಯವಿರುವಷ್ಟು ಹಾಲಿನ ಉತ್ಪಾದನೆ ಮಾಡಬಹುದು. ಥೈರಾಯ್ಡ್ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ, ಪಾಲಿಸಿಸ್ಟಿಕ್ ಓವೆರೆಸಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಎದೆಹಾಲು ಉತ್ಪಾದನೆಯಲ್ಲಿ ಕಡಿಮೆ ಪ್ರಮಾಣ ಇರುವುದು. ಜೊತೆಗೆ ಹಾಲುಣಿಸುವ ತೊಟ್ಟುಗಳು ಬಹಳ ಗಡುಸನ್ನು ಹೊಂದಿರುತ್ತವೆ. ವೈದ್ಯಕೀಯ ಅಥವಾ ಕಾಸ್ಮೆಟಿಕ್ ಕಾರಣಗಳಿಂದಾಗಿ ಎದೆಹಾಲಿನ ಉತ್ಪಾದನೆಯಲ್ಲಿ ತೊಂದರೆ ಅಥವಾ ಪ್ರಮಾಣ ಕಡಿಮೆಯಾಗುವುದು. ಇದೊಂದು ಪರಿಶೀಲಿಸಲೇ ಬೇಕಾದ ಸಮಸ್ಯೆಗಳಾಗಿರುವುದರಿಂದ ವೈದ್ಯರ ತಪಾಸಣೆ ಬಹು ಮುಖ್ಯವಾಗಿರುತ್ತದೆ. ಜನನ ನಿಯಂತ್ರಣಕ್ಕೆ ಬಳಸುವ ಹಾರ್ಮೋನ್ ಮಾತ್ರೆಗಳು ಕೆಲವು ಮಹಿಳೆಯರಲ್ಲಿ ಹಾಲು ಉತ್ಪಾದನೆಯ ಮಟ್ಟವನ್ನು ಕಡಿಮೆಗೊಳಿಸುತ್ತವೆ. ನೀವು ಜನನ ನಿಯಂತ್ರಣಕ್ಕೆ ಬಳಸುತ್ತಿರುವ ಹಾರ್ಮೋನ್ ಇಂಜೆಕ್ಷನ್ ಅಥವಾ ಮಾತ್ರೆಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳುವುದು ಸೂಕ್ತ. ವೈದ್ಯರ ಸೂಕ್ತ ಸಲಹೆಯ ಮೇರೆಗೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು. ಕೆಲವೊಮ್ಮೆ ತಾಯಂದಿರು ಸೇವಿಸುವ ಔಷಧಿಗಳ ಸೇವನೆಯಿಂದಾಗಿ ಎದೆಹಾಲಿನ ಪೂರೈಕೆ ಕಡಿಮೆಯಾಗುತ್ತದೆ. ಔಷಧಗಳಲ್ಲಿರುವ ರಾಸಾಯನಿಕ ಪದಾರ್ಥಗಳು ಇಂತಹ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಕೆಲವರು ಸೇವಿಸುವ ಗಿಡಮೂಲಿಕೆ ಔಷಧಗಳು ಸಹ ಹಾರ್ಮೋನ್ ಅಥವಾ ಹಾಲು ಉತ್ಪಾದನೆ ಮಾಡುವುದರಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತವೆ. ಅದಕ್ಕಾಗಿಯೇ ತಾಯಿ ಯಾವುದೇ ಔಷಧ ಸ್ವೀಕರಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಮಗು ತನ್ನ ತಾಯಿಯ ಎದೆಹಾಲನ್ನು ಹೇಗೆ ಹೀರಿ ತೆಗೆದುಕೊಳ್ಳುತ್ತದೆಯೋ ಅದರ ಆಧಾರದ ಮೇಲೆ ಹಾಲಿನ ಉತ್ಪಾದನೆ ಹೆಚ್ಚುತ್ತಾ ಹೋಗುತ್ತದೆ. ಹೀರುವ ಪ್ರಕ್ರಿಯೆಯಿಂದ ಸ್ತನವು ಸಂಕುಚಿತಗೊಳ್ಳುತ್ತವೆ. ಜೊತೆಗೆ ಹಾಲು ಉತ್ಪಾದನೆಗೆ ಪ್ರಚೋದಿಸುತ್ತವೆ. ಕೆಲವು ಶಿಶುಗಳು ಹಾಲನ್ನು ಹೀರುವ ಶಕ್ತಿಯನ್ನು ಹೊಂದಿರುವುದಿಲ್ಲ ಅಥವಾ ಹೀರುವ ಪ್ರಕ್ರಿಯೆ ತಿಳಿದಿರುವುದಿಲ್ಲ. ಈ ಕಾರಣದಿಂದಲೂ ತಾಯಿಯಲ್ಲಿ ಎದೆಹಾಲಿನ ಪ್ರಮಾಣ ಕಡಿಮೆಯಾಗಿರುತ್ತದೆ. ಕೆಲವರು ಮಗುವಿಗೆ ರಾತ್ರಿ ಸಮಯದಲ್ಲಿ ಹಾಲುಣಿಸದೆ ಇರುತ್ತಾರೆ. ರಾತ್ರಿ ಹೊತ್ತು ಹಾಲುಣಿಸದೆ ಇದ್ದರೆ ಮಗುವಿನ ತೂಕ ನಿಯಂತ್ರಣದಲ್ಲಿ ಇಡಬಹುದು ಹಾಗೂ ತಾಯಿ ನಿದ್ರಾ ಹೀನತೆಯಿಂದ ದೂರವಾಗಬಹುದು ಎಂದು ಭಾವಿಸುತ್ತಾರೆ. ಆದರೆ ಈ ವಿಧಾನ ಹಾಲು ಉತ್ಪಾದಿಸುವ ಹಾರ್ಮೋನ್‍ಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಹಾಲು ಉತ್ಪಾದನೆಯು ಕಡಿಮೆಯಾಗುತ್ತದೆ. ಎದೆಹಾಲು ಉತ್ಪಾದನೆ ಹೆಚ್ಚಾಗಲು ಎಷ್ಟು ಬಾರಿ ಕಡಿಮೆಯಾಗಿದೆ ಎನ್ನುವುದನ್ನು ಆದರಿಸಿರುತ್ತದೆ. ಎಷ್ಟು ಬಾರಿ ಎದೆಹಾಲು ಕಡಿಮೆಯಾಗಿದೆ ಎನ್ನುವುದರ ಮೇಲೆ ಹಾಲು ಉತ್ಪಾದನೆ ಹೆಚ್ಚುತ್ತದೆ. ಹಾಲುಣಿಸುವ ಸಮಯ ನಿಗದಿಪಡಿಸುವುದರಿಂದ ಎದೆಹಾಲಿನ ಉತ್ಪಾದನೆ ಕಡಿಮೆಯಾಗುವುದು. ಕೆಲವೊಮ್ಮೆ ಎಪಿಡ್ಯೂರಲ್ ಅಥವಾ ಅರವಳಿಕೆ ಹಾಗೂ ಪ್ರಸವದ ಸಮಯದಲ್ಲಿ ಬಳಸಿದ ಔಷಧಗಳು ತಾಯಿಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಎದೆಹಾಲು ಉತ್ಪಾದನೆಯು ಕುಂಟಿತಗೊಳ್ಳುವುದು. ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಮಾತ್ರೆಗಳು ಕೆಲವೊಮ್ಮೆ ಆರೋಗ್ಯದ ಮೇಲೆ ಗಣನೀಯವಾದ ಪರಿಣಾಮ ಬೀರುವುದು. ಹಾಲಿನ ಪ್ರಮಾಣ ಹೆಚ್ಚಿಸುವುದು ಅಥವಾ ಇಳಿಸುವ ಮಾತ್ರೆಗಳು ಗಂಭೀರವಾದ ಪರಿಣಾಮ ಬೀರುವುದು. ಇದರಿಂದ ಹಾಲು ಉತ್ಪಾದನೆಯು ಕಡಿಮೆಯಾಗುತ್ತವೆ. ಮಾತ್ರೆ ಅಥವಾ ಔಷಧಿ ಸ್ವೀಕರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದನ್ನು ಮರೆಯದಿರಿ.
OSCAR-2019
ಭರತ್ಪುರ, ಜುಲೈ 17: ಚುಡಾಯಿಸಿದ ಹುಡುಗನಿಗೆ ಹುಡುಗಿಯೊಬ್ಬಳು ಚೆನ್ನಾಗಿ ಥಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿದೆ. ಘಟನೆ ನಡೆದಿದ್ದು ರಾಜಸ್ಥಾನದ ಭರತ್ಪುರ ಎಂಬಲ್ಲಿ. ತನ್ನನ್ನು ಚಾಡಯಿಸಿ, ತನ್ನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಹುಡುಗನಿಗೆ ಬೆತ್ತದ ರುಚಿ ತೋರಿಸಿದ್ದಾಳೆ ಹುಡುಗಿ! "ಕೆಲವು ಹುಡುಗರು ನನ್ನ ತೇಜೋವಧೆ ಪ್ರಯತ್ನಿಸುತ್ತಿದ್ದಾರೆ. ಅವರಿಗೆಲ್ಲ ಇದು ನನ್ನ ಸಂದೇಶ. ಹುಡುಗಿಯರನ್ನು ಯಾವ ಕಾರಣಕ್ಕೂ ದುರ್ಬಲರು ಎಂದು ತಿಳಿಯಬೇಡಿ" ಎಂದು ಆಕೆ ಹೇಳಿದ್ದಾರೆ. "ಅಕಸ್ಮಾತ್ ನೀವೇನಾದರೂ ಡೊನಾಲ್ಡ್ ಟ್ರಂಪ್ ನ ಮಕ್ಕಳು ಎಂದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ! ಯಾವ ಹುಡುಗಿಯೂ ದುರ್ಬಲಳಲ್ಲ. ನೀವು ಗೆರೆ ದಾಟಿದರೆ ನಾವು ನಮ್ಮ ಧ್ವನಿ ಎತ್ತಲೇ ಬೇಕಾಗುತ್ತದೆ. ಆಗ ನಿಮ್ಮ ಬದುಕು ಅಷ್ಟೇ! ನಾನು ಪೊಲೀಸರಿಗೆ ದೂರು ನೀಡುವುದಿಲ್ಲ. ಆತನಿಗೆ ಬದಲಾಗುವುದಕ್ಕೆ ಮತ್ತೊಂದು ಅವಕಾಶ ನೀಡಿದ್ದೇನೆ" ಎಂದು ಆಕೆ ಹೇಳಿದ್ದಾರೆ. ಬೆತ್ತದಿಂದ ಆಕೆ ಯುವಕರಿಗೆ ಥಳಿಸುತ್ತಿದ್ದುದನ್ನು ರಸ್ತೆಯ ಮೇಲೆ ಹೋಗುವವರೆಲ್ಲ ನೋಡಿ, ಆಕೆಯ ಧೈರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ. ಚುಡಾಯಿಸುವ ಗಂಡು ಮಕ್ಕಳಿಗೆ ಇದು ನನ್ನ ಉತ್ತರ ಎಂದು ಆಕೆ ಧೈರ್ಯವಾಗಿ ಹೇಳುತ್ತಾರೆ.
OSCAR-2019
ದಿನವಿಡಿ ದಣಿದಿರುವ ದೇಹವು ರಾತ್ರಿ ವೇಳೆ ಸಂಪೂರ್ಣ ವಿಶ್ರಾಂತಿ ಬಯಸುವ ವೇಳೆ ದೇಹದ ಪ್ರತಿಯೊಂದು ಭಾಗವು ಹಾನಿಗೊಳಗಾಗಿರುವ ಕೋಶಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವುದು. ಇದರಿಂದ ರಾತ್ರಿ ವೇಳೆ ಯಾವುದೇ ರೀತಿಯ ಔಷಧಿ ಸೇವನೆ ಪರಿಣಾಮಕಾರಿಯಾಗಿರುವುದು. ನಿಮ್ಮ ಚರ್ಮ ಕೂಡ ಧೂಳು, ಕಲ್ಮಶ ಹಾಗೂ ಸೂರ್ಯನ ಬಿಸಿಲಿನಿಂದಾಗಿ ಸುಟ್ಟು ಹೋಗಿದ್ದರೂ ರಾತ್ರಿ ವೇಳೆ ಅದು ಮತ್ತೆ ಪುನಶ್ಚೇತನ ಪಡೆದುಕೊಳ್ಳುವುದು. ಇದರಿಂದ ಕಾಂತಿಯುತ ಹಾಗೂ ಸುಂದರ ತ್ವಚೆಯು ನಿಮ್ಮದಾಗುವುದು. ಇದರಿಂದ ರಾತ್ರಿ ವೇಳೆ ಕಣ್ಣಿನ ಕೆಳಗಡೆ ಕ್ರೀಮ್ ಹಚ್ಚಿಕೊಂಡು, ಒಡೆದ ಪಾದಗಳಿಗೆ ಕ್ರೀಮ್ ಹಚ್ಚಿದರೆ ಬೇಗನೆ ಅದು ಗುಣಮುಖವಾಗುವುದು. ನಿಮಗೆ ಒಳ್ಳೆಯ ನಿದ್ರೆ ಬರುವುದರೊಂದಿಗೆ ದೇಹದಲ್ಲಿನ ಭಾಗಗಳು ಮತ್ತೆ ಹಿಂದಿನ ಶಕ್ತಿ ಪಡೆಯುವುದು. ಅದೇ ರೀತಿಯ ಕೆಲವೊಂದು ಸೌಂದರ್ಯ ಚಿಕಿತ್ಸೆಗಳನ್ನು ರಾತ್ರಿ ವೇಳೆ ಮಾಡಿಕೊಂಡರೆ ಅದರಿಂದ ಹೆಚ್ಚಿನ ಲಾಭ ಪಡೆಯಬಹುದು. ಚರ್ಮದ ಬಗ್ಗೆ ನೀವು ಹೆಚ್ಚಿನ ಕಾಳಜಿ ವಹಿಸಿದರೆ ಆಗ ವಯಸ್ಸಾಗುವ ಲಕ್ಷಣಗಳು ಕಂಡುಬರುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು. ನೆರಿಗೆಗಳು ಮುಖದಲ್ಲಿ ಒಂದು ಸಲ ಕಾಣಿಸಿಕೊಂಡರೆ ಅದನ್ನು ಮತ್ತೆ ನಿವಾರಣೆ ಮಾಡುವುದು ತುಂಬಾ ಕಷ್ಟದ ವಿಚಾರ. ಹಿಮ್ಮಡಿ, ಕಣ್ಣಿನ ಕೆಳಗಿನ ಭಾಗ, ತುಟಿಗಳು, ಉಗುರು ಇತ್ಯಾದಿಗಳಿಗೆ ರಾತ್ರಿ ವೇಳೆ ಚಿಕಿತ್ಸೆ ನೀಡಿದರೆ ತುಂಬಾ ಒಳ್ಳೆಯದು.ರಾತ್ರಿ ವೇಳೆ ಪಾಲಿಸಬೇಕಾದ ಕೆಲವೊಂದು ಸೌಂದರ್ಯ ವಿಧಾನಗಳನ್ನು ಇಲ್ಲಿ ಹೇಳಲಾಗಿದೆ. ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.... ಚರ್ಮವು ಹಗಲಿನಲ್ಲಿ ಹೆಚ್ಚಿನ ಮೊಯಿಶ್ಚರೈಸರ್ ಕಳಕೊಂಡಿರುವುದು. ಇದಕ್ಕೆ ಒಳ್ಳೆಯ ಪರಿಣಾಮವೆಂದರೆ ರಾತ್ರಿ ವೇಳೆ ಮಾಸ್ಕ್ ಹಾಕುವುದು. ಹಲವಾರು ರೀತಿಯ ಸ್ಲೀಪಿಂಗ್ ಮಾಸ್ಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಮನೆಯಲ್ಲೇ ಇದನ್ನು ತಯಾರಿಸಿದರೆ ತುಂಬಾ ಒಳ್ಳೆಯದು. ಮಲಗುವ ಮೊದಲು ಮುಖಕ್ಕೆ ಕ್ರೀಮ್ ನ ದಪ್ಪಗಿನ ಪದರ ಹಾಕಿಕೊಳ್ಳಿ. ಕ್ರೀಮ್ ನ್ನು ಚರ್ಮ ಹೀರಿಕೊಳ್ಳುವುದು. ಇದರಿಂದ ಚರ್ಮಕ್ಕೆ ಶಮನ ಮತ್ತು ಪುನಶ್ಚೇತನಗೊಳಿಸುವುದು. ಚರ್ಮವು ಮೊಯಿಶ್ಚರೈಸ್ ಆಗಿದ್ದರೆ ಆಗ ನೆರಿಗೆ ಬರುವುದು ಕಡಿಮೆಯಾಗುವುದು. ಹೊರಪೊರೆಗಳು ಒಣಗಿದ್ದರೆ ಆಗ ನಿಮ್ಮ ಸೌಂದರ್ಯವು ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುವುದು. ರಾತ್ರಿ ವೇಳೆ ಒಣ ಹೊರಪೊರೆಗಳಿಗೆ ಚಿಕಿತ್ಸೆ ನೀಡುವುದು ಅತೀ ಅಗತ್ಯವಾಗಿದೆ. ಉಗುರಿನ ಹೊರಪೊರೆಗಳಿದ್ದರೆ ರಾತ್ರಿ ಮಲಗುವ ಮೊದಲು ಪೆಟ್ರೋಲಿಯಂ ಜೆಲ್ ಬಳಸಿ. ಬೆಳಗ್ಗೆ ಎದ್ದಾಗ ತುಂಬಾ ಸುಂದರ ಉಗುರುಗಳು ನಿಮ್ಮದಾಗುವುದು. ಉದ್ದ ಕೂದಲು ಇರುವಂತಹ ಪ್ರತಿಯೊಬ್ಬ ಮಹಿಳೆ ಕೂಡ ಇಂತಹ ಸಮಸ್ಯೆಗೆ ಗುರಿಯಾಗುವಳು. ಎಷ್ಟೇ ಸಲ ಕೂದಲು ಕತ್ತರಿಸಿಕೊಂಡರೂ ಸಹಿತ ಇಂತಹ ಸಮಸ್ಯೆ ಮಾತ್ರ ಪದೇ ಪದೇ ಕಾಣಿಸಿಕೊಳ್ಳುವುದು. ರಾತ್ರಿ ಮಲಗುವ ಮೊದಲು ನೀವು ಕೂದಲಿನ ತುದಿ ಭಾಗಕ್ಕೆ ಆಲಿವ್ ತೈಲ ಅಥವಾ ಇನ್ನಿತರ ಯಾವುದೇ ತೈಲ ಹಚ್ಚಿಕೊಳ್ಳಿ. ಇದರಿಂದ ಕೂದಲಿಗೆ ತುದಿಗಳಿಗೆ ಮೊಶ್ಚಿರೈಸರ್ ಸಿಗುವುದು. ಕೂದಲಿನ ತುದಿ ಭಾಗವು ಇತರ ಭಾಗಕ್ಕಿಂತ ಹೆಚ್ಚು ಒಣಗಿರುವುದು. ಇದರಿಂದ ಎಲ್ಲಾ ಸಮಯದಲ್ಲಿ ಮೊಯಿಶ್ಚರೈಸರ್ ಆಗಿರುವುದು ಅತೀ ಅಗತ್ಯ. ಕಣ್ಣಿನ ಕೆಳಭಾಗದ ವೃತ್ತಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುವುದು. ರಾತ್ರಿ ವೇಳೆ ಕ್ರೀಮ್ ಹಚ್ಚಿಕೊಂಡು ಮಲಗಿದರೆ ಬೆಳಗ್ಗೆ ಈ ಸಮಸ್ಯೆ ಕಾಣಿಸದು. ಉಂಗುರ ಬೆರಳನ್ನು ಬಳಸಿಕೊಂಡು ತುಂಬಾ ನಯವಾಗಿ ಕಣ್ಣಿನ ಕೆಳಭಾಗಕ್ಕೆ ಮಸಾಜ್ ಮಾಡಿ. ಹೆಚ್ಚು ಒತ್ತಡ ಹಾಕಬೇಡಿ. ಒಡೆದ ಹಿಮ್ಮಡಿಗಳಿದ್ದರೆ ಅದು ನೋಡಲು ತುಂಬಾ ಕೆಟ್ಟದಾಗಿರುವುದು ಮಾತ್ರವಲ್ಲದೆ ನಡೆದಾಡಲು ತುಂಬಾ ಕಷ್ಟಪಡಬೇಕಾಗುತ್ತದೆ. ಪೆಟ್ರೋಲಿಯಂ ಜೆಲ್ ಅಥವಾ ತೆಂಗಿನ ಎಣ್ಣೆಯು ನಿಮ್ಮ ಸಮಸ್ಯೆ ನಿವಾರಿಸುವುದು. ನಿಮ್ಮ ಪಾದಗಳಿಗೆ ಇದರಲ್ಲಿ ಯಾವುದಾದರೂ ಒಂದನ್ನು ದಪ್ಪಗೆ ಹಚ್ಚಿಕೊಳ್ಳಿ. ಅದರಲ್ಲೂ ಹಿಮ್ಮಡಿ ಭಾಗಗಳಿಗೆ ಹೆಚ್ಚಿನ ಗಮನಹರಿಸಿ. ಇದರ ಬಳಿಕ ಸಾಕ್ಸ್ ಹಾಕಿ ಮಲಗಿ. ನೀವು ಬೆಳಗ್ಗೆ ಎದ್ದಾಗ ಒಡೆದ ಹಿಮ್ಮಡಿ ಮಾಯವಾಗಿರುವುದು. ಒಡೆದ ತುಟಿಗಳು ನಿಮ್ಮ ಸೌಂದರ್ಯ ಕೆಡಿಸುವುದು ಮಾತ್ರವಲ್ಲದೆ ನೋವು ಉಂಟು ಮಾಡುವುದು. ಅದರಲ್ಲೂ ಮರುದಿನ ಲಿಪ್ ಸ್ಟಿಕ್ ಬಳಸಿದರೆ ಖಂಡಿತವಾಗಿಯೂ ಅದು ಎದ್ದು ಕಾಣುವಂತೆ ಮಾಡುವುದು. ಇದಕ್ಕೆ ನೀವು ಪೆಟ್ರೋಲಿಯಂ ಜೆಲ್ ಮತ್ತು ಹಲ್ಲುಜ್ಜುವ ಬ್ರಶ್ ಬೇಕು. ಪೆಟ್ರೋಲಿಯಂ ಜೆಲ್ ನ್ನು ತುಟಿಗಳಿಗೆ ಹೆಚ್ಚಿಕೊಂಡು, ಬ್ರಶ್ ನಿಂದ ತುಟಿಗಳಿಗೆ ಸ್ಕ್ರಬ್ ಮಾಡಿ. ಇದರಂದ ಸತ್ತ ಚರ್ಮದ ಕೋಶಗಳು ಎದ್ದು ಬರುವುದು ಮತ್ತು ತುಟಿಗಳು ನಯವಾಗುವುದು. ಮಲಗುವ ಮೊದಲು ತುಟಿಗಳಿಗೆ ದಪ್ಪಗಿನ ಲಿಪ್ ಮಲಾಮ್ ಹಚ್ಚಿ. ಇದರಿಂದ ಬೆಳಗ್ಗೆ ನಯವಾದ ತುಟಿಗಳು ನಿಮ್ಮದಾಗುವುದು. ಹುಬ್ಬುಗಳು ತುಂಬಾ ದಪ್ಪಗೆ ಆಗಿ ಹೆಚ್ಚಾಗುತ್ತಲಿದೆ. ಆದರೆ ಜನರು ತೆಳು ಹಾಗೂ ಸುಂದರ ಹುಬ್ಬುಗಳನ್ನು ಬಯಸುವರು. ಕ್ಯೂ ಟಿಪ್ ಬಳಸಿಕೊಂಡು ರಾತ್ರಿ ವೇಳೆ ಹುಬ್ಬುಗಳಿಗೆ ಹರಳೆಣ್ಣೆ ಹಚ್ಚಿಕೊಳ್ಳಿ. ಪ್ರತಿನಿತ್ಯ ಹೀಗೆ ಮಾಡಿ ಮತ್ತು ಕೆಲವೇ ದಿನಗಳಲ್ಲಿ ಹುಬ್ಬುಗಳು ದಪ್ಪಗೆ ಆಗುವುದು. ಮೊಡವೆಗಳು ಹದಿಹರೆಯದವರಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಎಂದು ಹೇಳಿದವರು ಯಾರು? ವಯಸ್ಕರಲ್ಲೂ ಇದು ಕಾಣಿಸುವುದು. ಮೊಡವೆಗಳ ನಿವಾರಣೆ ಮಾಡಲು ನೀವು ರಾತ್ರಿ ವೇಳೆ ಚಾ ಮರದ ಎಣ್ಣೆ ಬಳಸಿ. ನೈಸರ್ಗಿಕವಾಗಿ ಸೋಂಕು ನಿವಾರಿಸುವ ಗುಣ ಹೊಂದಿರುವ ಚಾ ಮರದ ಎಣ್ಣೆಯು ಬ್ಯಾಕ್ಟೀರಿಯಾ ಕೊಂದು ಹಾಕಿ, ಅದರಿಂದ ಉಂಟಾಗುವ ಮೊಡವೆಗಳನ್ನು ನಿವಾರಿಸುವುದು. ಒಂದು ವಾರ ಕಾಲ ಹೀಗೆ ಮಾಡಿದರೆ ನಿಮಗೆ ಫಲಿತಾಂಶ ಸಿಗುವುದು. ಇದರಿಂದ ಮೊಡವೆಗಳ ಗಾತ್ರ ಕೂಡ ಕುಗ್ಗುವುದು.
OSCAR-2019
ಪ್ರೀತಿಸುವಂತೆ ವಿವಾಹಿತೆ ಹಿಂದೆ ಬಿದ್ದವನಿಂದ ಇಂತ ಕೃತ್ಯ | Kannada Dunia | Kannada News | Karnataka News | India News ಬೆಂಗಳೂರು: ವಿವಾಹಿತೆಯನ್ನು ಪ್ರೀತಿಸುವಂತೆ ದುಂಬಾಲು ಬಿದ್ದ ವ್ಯಕ್ತಿಯೊಬ್ಬ ಆಕೆ ಒಪ್ಪದಿದ್ದಾಗ, ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಬೆಂಗಳೂರು ಕೆ.ಜಿ. ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಾಂಡವಪುರದ ರಜನಿಕಾಂತ್ ಎಂಬಾತನೇ ಇಂತಹ ಕೃತ್ಯವೆಸಗಿದ ಆರೋಪಿ. ವಿವಾಹಿತೆಯ ಮೇಲೆ ಪ್ರೀತಿ ಬೆಳೆಸಿಕೊಂಡ ರಜನಿಕಾಂತ್, ಆಕೆಗೆ ಇನ್ನಿಲ್ಲದ ಕಾಟ ಕೊಟ್ಟಿದ್ದಾನೆ. ಮಹಿಳೆ ಪ್ರೀತಿಗೆ ನಿರಾಕರಿಸಿದಾಗ, ಆಕ್ರೋಶಗೊಂಡ ರಜನಿಕಾಂತ್ ಬಿಯರ್ ಬಾಟಲಿಯಿಂದ ಬೆನ್ನಿಗೆ ಚುಚ್ಚಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕೆ.ಜಿ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
OSCAR-2019
ಕಡಿಮೆ ಅವಧಿಯಲ್ಲಿ ತೃಪ್ತಿದಾಯಕ ಆದಾಯ ಗಿಟ್ಟಿಸಿಕೊಡುವ ಬೆಳೆಗಳನ್ನು ಹೊಂದಿದ್ದಲ್ಲಿ ರೈತರು ವರ್ಷಪೂರ್ತಿ ನೆಮ್ಮದಿಯಿಂದ ಇರಬಹುದು ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ. 'ವಾರ್ಷಿಕ ಆದಾಯದ ಮೂಲವನ್ನು...
OSCAR-2019
ಬೆಂಗಳೂರು, ಜು.26: ಬಿಎಂಟಿಸಿಯ ಮಹಿಳಾ ಪ್ರಯಾಣಿಕರ ದೂರುಗಳನ್ನು ಆಲಿಸಲು ಶೀಘ್ರವೇ ಪಿಂಕ್‌ ಸಾರಥಿಯು ಬೆಂಗಳೂರು ರಸ್ತೆಗಿಳಿಯಲಿದೆ. ನಿರ್ಭಯಾ ನಿಧಿಯಲ್ಲಿ ಒಟ್ಟು 4.3 ಕೋಟಿ ವೆಚ್ಚದಲ್ಲಿ ಒಟ್ಟು 25 ವಾಹನವನ್ನು ಸಿದ್ಧಗೊಳಿಸಲಾಗುತ್ತಿದೆ. ಈ ವಾಹನದಲ್ಲಿ ಇಬ್ಬರು ಮಹಿಳಾ ಪೊಲೀಸ್‌ ಸೇರಿದಂತೆ ಟ್ರಾಫಿಕ್‌ ಪೊಲೀಸ್‌ ಮತ್ತೊಬ್ಬ ಚಾಲಕರಿರುತ್ತಾರೆ. ಮಹಿಳಾ ಸಿಬ್ಬಂದಿಗಳ ತಂಡ ಈ ಪಿಂಕ್‌ ಸಾರಥಿಯಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಮಹಿಳೆಯರಿಗೆ ಮೀಸಲಿಟ್ಟಿರುವ ಆಸನದಲ್ಲಿ ಕುಳಿತು ಪ್ರಯಾಣಿಸುವ ಪುರುಷರು, ಬಸ್‌ನಲ್ಲಿ ಮಹಿಳೆಗೆ ಕಿರುಕುಳ, ಬಸ್‌ ನಿಲ್ದಾಣಗಳಲ್ಲಿ ಸರಿಯಾಗಿ ಬಸ್‌ ನಿಲುಗಡೆ ಮಾಡದಿರುವುದು, ನಿರ್ವಾಹಕರಿಂದ ಅಸಭ್ಯ ವರ್ತನೆ ಹೀಗೆ ಹೀಗೆ ಹಲವು ದೂರುಗಳನ್ನು ನೀಡಬಹುದಾಗಿದೆ. ಈ ವಾಹನಗಳು ಟ್ರ್ಯಾಕಿಂಗ್‌ ಡಿವೈಸ್‌ಗಳನ್ನು ಹೊಂದಿರುತ್ತವೆ. ಅದರ ಜತೆಗೆ ಬಿಎಂಟಿಸಿಯು ಮಹಿಳೆಯರಿಗಾಗಿ 26.5 ಕೋಟಿ ವೆಚ್ಚದಲ್ಲಿ ವಿಶೇಷ ಅಪ್ಲಿಕೇಷನ್‌ ಅಭಿವೃದ್ಧಿ ಮಾಡುತ್ತಿದೆ, ಇದೀಗ ಮಹಿಳೆಯರ ದೂರುಗಳನ್ನು ಆಲಿಸಲು 25 ಸಾರಥಿ ವಾಹನಗಳಿವೆ. ಬಿಎಂಟಿಸಿಯು ಮಹಿಳೆಯರಿಗಾಗಿ ಮೀಸಲಿರಿಸಿದ ಆಸನದಲ್ಲಿ ಪುರುಷರು ಬಂದು ಕುಳಿತುಕೊಳ್ಳುವುದರಿಂದ ಆಸನಗಳಿಗೆ ಗುಲಾಬಿ ಬಣ್ಣವನ್ನು ಬಳಿಯಲು ಚಿಂತನೆ ನಡೆಸಿತ್ತು. ಹಾಗೆಯೇ ಮಹಿಳೆಯರಿಗಾಗಿ ಪಿಂಕ್‌ ಬಸ್‌ಗಳನ್ನು ಕೂಡ ಬಿಡಲಾಗಿತ್ತು ಆದರೆ ಹೆಚ್ಚು ಮಹಿಳೆಯರು ಆಸಕ್ತಿ ತೀರದ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈಬಿಡಲಾಯಿತು. ಮೊಬೈಲ್‌ ಅಪ್ಲಿಕೇಷನ್‌ ಮೂಲಕ ದೂರು ನೀಡಬಹುದಾಗಿದೆ. ನಿರ್ಭಯಾ ನಿಧಿಯಲ್ಲಿ ಕೇಂದ್ರವು 56.06 ಕೋಟಿಯನ್ನು ನೀಡುತ್ತಿದೆ. ಅದರಲ್ಲಿ ಮಹಿಳೆರಿಗೆ ತರಬೇತಿ ನೀಡಲು 7.5 ಕೋಟಿ ರೂ ವೆಚ್ಚ ಮಾಡಲಾಗುತ್ತದೆ. ಒಂದು ಸಾವಿರ ಬಸ್‌ಗಳಲ್ಲಿ 6.8 ಕೋಟಿ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ.
OSCAR-2019
ಬೆಂಗಳೂರು, ಆಗಸ್ಟ್ 23: ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರ ಸರಾಸರಿ ಆಯಸ್ಸು ಒಂದೂವರೆ ವರ್ಷ ಕಡಿಮೆಯಾಗುತ್ತಿದೆ ಎಂದು ಸ್ಫೋಟಕ ಮಾಹಿತಿಯನ್ನು ವರದಿಯೊಂದು ಬಹಿರಂಗಪಡಿಸಿದೆ. ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ವಾಯುಮಾಲಿನ್ಯ ಮತ್ತು ಮಾನವನ ಆಯುಷ್ಯ ನಡುವೆ ಅಧ್ಯಯನ ಹಾಗೂ ಸಮೀಕ್ಷೆಯನ್ನು ನಡೆಸಲಾಗಿದ್ದು, ಜಗತ್ತಿನ ಎಲ್ಲಾ ರಾಷ್ಟ್ರಗಳ ಒಟ್ಟು ಸರಾಸರಿ ಆಯುಷ್ಯ ಮಾಲಿನ್ಯದಿಂದಾಗಿ 0.59ರಷ್ಟು ಮನುಷ್ಯನ ಆಯುಷ್ಯ ಕುಸಿಯುತ್ತಿದೆ ಎಂದು ವರದಿ ಹೇಳಿದೆ. ಭಾರತ, ಪಾಕಿಸ್ತಾನ, ಚೀನಾ ಹಾಗೂ ಬಾಂಗ್ಲಾದೇಶ, ಚೀನಾದಂತಹ ಜನಸಂದಣಿ ಇರುವ ರಾಷ್ಟ್ರಗಳಲ್ಲಿ 0.8-1.4 ವರ್ಷ ಮಾನವನ ಒಟ್ಟು ಆಯುಷ್ಯದಲ್ಲಿ ಕಡಮೆಯಾಗುವ ಮಟ್ಟಿಗೆ ವಾಯು ಮಾಲಿನ್ಯ ವಿಕೋಪಕ್ಕೆ ಹೋಗಿದೆ ಎಂದು ವರದಿ ತಿಳಿಸಿದೆ. ಅಮೇರಿಕದ ಟೆಕ್ಸಾಸ್‌ ಯೂನಿವರ್ಸಿಟಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಪತ್ತೆಯಾಗಿದೆ.2.5 ಮೈಕ್ರೋನ್ಸ್ ನಷ್ಟು ವಾಯು ಮಾಲಿನ್ಯ ಉಂಟಾದರೆ ಶಾಸ್ವಕೋಶ ಸಂಬಂಧಿ ರೋಗಗಳು, ಹೃದಯಾಘಾತ, ಕ್ಯಾನ್ಸರ್ ಮತ್ತಿತರೆ ರೋಗಗಳು ಉಂಟಾಗುತ್ತವೆ ಎಂದು ವರದಿ ಹೇಳಿದೆ. ಬಾಂಗ್ಲಾದೇಶದಲ್ಲಿ 1.82 ವರ್ಷ, ಈಜಿಪ್ಟ್‌ 1.5 ವರ್ಷ, ಪಾಕಿಸ್ತಾನ 1.56 ವರ್ಷ, ಸೌದಿ ಅರೇಬಿಯಾ 1.48 ವರ್ಷ, ನೈಜೀರಿಯಾ 1.25 ವರ್ಷ, ಚೀನಾ 1.25 ವರ್ಷ ಜನರ ಆಯುಷ್ಯ ಕಡಿಮೆಯಾಗುತ್ತದೆ. ಭಾರತದಲ್ಲಿ 1.53 ವರ್ಷ ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ. 90 ಸಾವಿರ ಅಮೇರಿಕನ್ನರು ಹಾಗೂ ಒಂದು ಮಿಲಿಯನ್ ಭಾರತೀಯರು ವಾಯು ಮಾಲಿನ್ಯದಿಂದ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. 85 ವರ್ಷದವರೆಗೆ ಬದುಕುವ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
OSCAR-2019
ಶ್ರೀನಗರ : ಮುಸ್ಲಿಂ ಸಮುದಾಯಕ್ಕೆ ಸೇರಿದ ಸಿಆರ್‌ಪಿಎಫ್ ಯೋಧನೊಬ್ಬ ನಮಾಜ್ ಮಾಡುವಾಗ ಹಿಂದೂ ಯೋಧ ಆತನನ್ನು ಕಾವಲು ಕಾಯುತ್ತಿರುವ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಅಮರನಾಥ ಯಾತ್ರೆ ರಾಮನಗರ : ಗುಜರಾತ್‌ನಿಂದ ಕರ್ನಾಟಕಕ್ಕೆ ಬಂದು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಶಾಸಕರು ಮದ್ಯಾಹ್ನ 3.30ಕ್ಕೆ ಮಾಧ್ಯಮಗಳ ಮುಂದೆ ಹಾಜರಾಗುವುದಾಗಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಇವರ್ಯಾರು ದಡ್ಡರಲ್ಲ July 30, 2017 Devu Pattar 34 th man ki baath, about, gst, icc world cup, narendra modi, quit india movement, womens
OSCAR-2019
ಜೆಡಿಎಸ್ ಕಾಂಗ್ರೆಸ್ ಜೊತೆ ರಹಸ್ಯವಾಗಿ ಒಳಒಪ್ಪಂದ ಮಾಡಿಕೊಂಡಿದೆ ಎಂದು ಪ್ರಧಾನಿ ಮೋದಿ ಮಾಡಿರುವ ಆರೋಪಕ್ಕೆ ಎಚ್‌,ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬೆಂಗಳೂರು : ಸಿದ್ದರಾಮಯ್ಯ ಸಂಪುಟದಲ್ಲಿ ಹೆಚ್ಚಿನ ಸಂಖ್ಯೆ ಸಚಿವರು ಸೋಲನ್ನು ಅನುಭವಿಸಿದ್ದಾರೆ. ಸೋತ ಸಚಿವರುಗಳ ಪಟ್ಟಿ ಇಂತಿದೆ. ಎಲ್ಲರಿಗೂ ಗೊತ್ತಿರುವಂತೆ ಸಿ.ಎಂ ಸ್ವಕ್ಷೇತ್ರ ರಾಮನಗರ. ಇಲ್ಲಿನ ಜನತೆಗೆ ದೊಡ್ಡಗೌಡರ ಕುಟುಂಬದ ಬಗ್ಗೆ ತುಂಬಾ ಪ್ರೀತಿ ಇದೆ. ಹಾಗಾಗಿ ಇಲ್ಲಿ ಚುನಾವಣೆಗಾಗಲಿ ಅಥವಾ ವೇದಿಕೆ ನಿರ್ಮಿಸಿ ಮಗನ ಸಿನಿಮಾ ಟೀಸರ್ ರಿಲೀಸ್‍ಗಾಗಲಿ ನಿಂತರೆ ಜನವೋ ಜನ. ಇಂಥ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೇ ಸಿನಿಮಾ 'ಸೀತಾರಾಮ ಕಲ್ಯಾಣ'ದ ಟೀಸರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಸಾಧು ಕೋಕಿಲಾ ಕೇವಲ ಹಾಸ್ಯನಟ ಅಲ್ಲ. ಅವರಿಗೆ ಹಾಡುವ ಪ್ರತಿಭೆಯೂ ಇದೆ. ಆದರೆ ಅವರಲ್ಲಿರೊ ಅಸಲಿ ಟ್ಯಾಲೆಂಟು ಅವರ ಸಂಗೀತ ಜ್ಞಾನ ಮತ್ತು ಹಾಡುಗಾರಿಕೆ. ಹಾಗಂತ ಸಾಧು ವೇದಿಕೆ ಮೇಲೆ ಬರೀ ಒಂದು ಹಾಡು ಹಾಡಿ ಹೋಗಲಿಲ್ಲ, ಒಂದು ಸಖತ್ ಸ್ಟೆಪ್ ಹಾಕಿ ಎಲ್ಲರನ್ನ ನಗಿಸಿಯೂ ಹೋದರು. ಈ ಎಲ್ಲದರ ಮಧ್ಯೆ 'ಸೀತಾರಾಮ ಕಲ್ಯಾಣ' ಕಾರ್ಯಕ್ರಮವನ್ನು ಕಣ್ಣು ತುಂಬಿಕೊಳ್ಳಲು ಬಂದಿದ್ದ ಅರ್ಜುನ್ ಜನ್ಯ ಸಹ ನೆರೆದವರಿಗೆ ಫುಲ್ ಮೀಲ್ಸ್ ಕೊಟ್ಟರು. ಖ್ಯಾತ ಗಾಯಕರಿಂದ ಅರ್ಜುನ್ ಜನ್ಯ ಹಲವಾರು ಸೂಪರ್ ಹಿಟ್ ಗೀತೆಗಳನ್ನ ಹಾಡಿಸಿದರು ಅರ್ಜುನ್​ ಜನ್ಯ. ಒಟ್ಟಿನಲ್ಲಿ ಶ್ರಮ ಮತ್ತು ನಿಷ್ಠಾವಂತ ಪ್ರಯತ್ನ ಇದ್ದರೆ ಎಂಥದನ್ನೂ ಗೆಲ್ಲಬಹುದು ಅನ್ನೋದಕ್ಕೆ'ಸೀತಾರಾಮ ಕಲ್ಯಾಣ' ಸಾಕ್ಷಿಯಾಗಿ ನಿಲ್ಲುತ್ತಿದೆ. ಜನರ ಮುಂದೆ ವಿವಿಧ ಕಾರ್ಯಕ್ರಮ ನೀಡಿ, ಮನರಂಜನೆ ನೀಡಿ ಸೈ ಅನ್ನಿಸಿಕೊಂಡ ತಂಡ ಥಿಯೇಟರ್​ನಲ್ಲಿ ಜೈ ಅನ್ನಿಸಿಕೊಳ್ಳೋಕೆ ತುದಿಗಾಲಲ್ಲಿ ನಿಂತಿದೆ.
OSCAR-2019
ಬಳ್ಳಾರಿ, ಏಪ್ರಿಲ್ 16 : ಮತಗಟ್ಟೆ ಕೇಂದ್ರಕ್ಕೆ 116 ಮೀಟರ್ ವ್ಯಾಪ್ತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಆನಂದಸಿಂಗ್ ಕಚೇರಿ ಇರುವ ಕಾರಣ ಸಹಾಯಕ ಆಯುಕ್ತ ಗಾರ್ಗಿ ಜೈನ್ ಭಾನುವಾರ ಸಂಜೆ ದಾಳಿ ನಡೆಸಿ, ಕಚೇರಿಗೆ ಬೀಗ ಹಾಕಿ, ಪೊಲೀಸ್ ಭದ್ರತೆಯನ್ನು ಏರ್ಪಡಿಸಿದ್ದಾರೆ. ಕಚೇರಿಯಲ್ಲಿದ್ದ ಪಕ್ಷದ ಬಾವುಟಗಳು, ಭಿತ್ತಿಪತ್ರಗಳು, ಕೆಲ ಬರಹಗಳು, ಚುನಾವಣೆಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡ ಅವರು, ಮಾದರಿ ನೀತಿ ಸಂಹಿತೆ ಅನ್ವಯ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪಕ್ಷದ ಕಚೇರಿ, ರಾಜಕೀಯ ಚಟುವಟಿಕೆಗಳು ನಡೆಸುವಂತಿಲ್ಲ. ಆದ್ದರಿಂದ ಆನಂದ್ ಸಿಂಗ್ ಕಚೇರಿಯನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಐಎಎಸ್ ಅಧಿಕಾರಿ ಗಾರ್ಗಿ ಜೈನ್ ತಿಳಿಸಿದ್ದಾರೆ ಮಾಜಿ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಕಚೇರಿ ತಗಟ್ಟೆಯಿಂದ 116 ಮೀಟರ್ ಅಂತರದಲ್ಲಿದೆ. ಈ ಕಚೇರಿಯಲ್ಲಿ ಸಭೆ ನಡೆಸಲು ಆನಂದ್ ಸಿಂಗ್ ಚುನಾವಣಾಧಿಕಾರಿ ಪರವಾನಗಿಗೆ ಪತ್ರ ಬರೆದಿದ್ದರು. ಆದರೆ ಚುನಾವಣಾಧಿಕಾರಿ ನಿಯಮವನ್ನು ಪರಿಶೀಲಿಸಿ, ಕಚೇರಿ ಕಾರ್ಯ ನಿರ್ವಹಿಸಲು ಪರವಾನಗಿ ನೀಡಲು ಬರುವುದಿಲ್ಲ ಎಂದು ಏಪ್ರಿಲ್ ಹದಿಮೂರರಂದು ತಿಳಿಸಿದ್ದರು. ಆದರೂ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಚುನಾವಣಾಧಿಕಾರಿ ಗಾರ್ಗಿ ಜೈನ್ ದಾಳಿ ನಡೆಸಿ, ಕಚೇರಿಗೆ ಬೀಗ ಹಾಕಿಸಿದ್ದಾರೆ. ಅಧಿಕಾರಿ ಎದುರಲ್ಲೇ ನಿಂತು, ಬೀಗ ಹಾಕಿಸಿ, ಕೇಸು ನಮೂದಿಸಿ, ಎಫ್‍ ಐಆರ್ ಕಾಪಿ ನನಗೆ ಕೊಡಬೇಕು ಎಂದು ಆದೇಶ ನೀಡಿದಾಗ, ಆನಂದ್ ಸಿಂಗ್ ಬೆಂಬಲಿಗರೊಂದಿಗೆ ಕಚೇರಿಯಲ್ಲೇ ಇದ್ದರು. ಅಷ್ಟೇ ಅಲ್ಲ, ಅಧಿಕಾರಿ, ಮೇ ಹದಿನೆಂಟರವರೆಗೆ ವಿದ್ಯುತ್ ಕಡಿತಗೊಳಿಸಲು ಕೂಡ ಜೆಸ್ಕಾಂ ಇಲಾಖೆಗೆ, ನೀರು ಕಡಿತಗೊಳಿಸಲು ಮುನಿಸಿಪಾಲಿಟಿಗೆ ಆದೇಶ ನೀಡಿದರು. karnataka assembly elections 2018 ballari congress anand singh district news ಕರ್ನಾಟಕ ವಿಧಾನಸಭೆ ಚುನಾವಣೆ 2018 ಬಳ್ಳಾರಿ ಕಾಂಗ್ರೆಸ್ ಆನಂದ್ ಸಿಂಗ್ ಜಿಲ್ಲಾಸುದ್ದಿ
OSCAR-2019
11ನೇ ಆವೃತ್ತಿಯ ಐಪಿಎಲ್ನಲ್ಲಿ ಸಾಧಾರಣ ಆರಂಭ ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಡೇರ್'ಡೆವಿಲ್ಸ್ ತಂಡಗಳು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ಆಡಿರುವ ತಲಾ 4 ಪಂದ್ಯಗಳಲ್ಲಿ ಮೂರರಲ್ಲಿ ಸೋಲುಂಡಿದ್ದು ಗೆಲುವಿನ ಹುಡುಕಾಟದಲ್ಲಿವೆ. ಉಭಯ ತಂಡಗಳು ಸರ್ವಶ್ರೇಷ್ಠ ಆಟಗಾರರ ದಂಡನ್ನೇ ಹೊಂದಿದ್ದರೂ ಜಯಕ್ಕಾಗಿ ಪರದಾಡುತ್ತಿವೆ. ಆರ್'ಸಿಬಿಗೆ ಪ್ರತಿ ಬಾರಿಯಂತೆ ಈ ಬಾರಿಯೂ ಬೌಲಿಂಗ್'ನದ್ದೇ ಚಿಂತೆ. ಎಷ್ಟೇ ತೂಗಿ-ಅಳತೆ ಮಾಡಿ ಬೌಲರ್'ಗಳನ್ನು ಕಣಕ್ಕಿಳಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಳೆದ ಎರಡೂ ಪಂದ್ಯಗಳಲ್ಲಿ 200 ಪ್ಲಸ್ ಚಚ್ಚಿಸಿಕೊಂಡಿರುವುದೇ ಇದಕ್ಕೆ ಸಾಕ್ಷಿ. ದುಬಾರಿ ಆಗುತ್ತಿರುವ ಬೌಲರ್‌ಗಳು: ಪಂದ್ಯದಿಂದ ಪಂದ್ಯಕ್ಕೆ ಬೌಲರ್‌'ಗಳು ದುಬಾರಿ ಆಗುತ್ತಿರುವುದು ನಾಯಕ ವಿರಾಟ್ ಕೊಹ್ಲಿಯ ನಿದ್ದೆ ಗೆಡಿಸಿದೆ. ಮೊದಲ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಸೋಲುಂಡಿದ್ದ ತಂಡ, 2ನೇ ಪಂದ್ಯದಲ್ಲಿ ಪಂಜಾಬ್‌'ಗೆ ಸೋಲುಣಿಸಿ ಗೆಲುವಿನ ಹಾದಿ ಮರಳಿತ್ತು. ಆದರೆ, ರಾಜಸ್ಥಾನ ಹಾಗೂ ಮುಂಬೈ ವಿರುದ್ಧ ಸತತವಾಗಿ ಸೋಲುವ ಮೂಲಕ ಹತಾಶೆಗೊಂಡಿದೆ. ಉಮೇಶ್ ಯಾದವ್, ಕ್ರಿಸ್ ವೋಕ್ಸ್, ಆ್ಯಂಡರ್ಸನ್, ಸಿರಾಜ್, ವಾಷಿಂಗ್ಟನ್ ಸುಂದರ್ ಲಯ ಕಂಡುಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಎದುರಾಳಿಗಳ ಕೈಯಲ್ಲಿ ರನ್ ಚಚ್ಚಿಸಿಕೊಳ್ಳುತ್ತಿದ್ದಾರೆ. ಜೇಸನ್ ರಾಯ್, ಗೌತಮ್ ಗಂಭೀರ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಗ್ಲೆನ್ ಮ್ಯಾಕ್ಸ್‌'ವೆಲ್'ರಂತಹ ಘಟಾನುಘಟಿ ದಾಂಡಿಗರೇ ಡೆಲ್ಲಿ ಪಡೆಯಲ್ಲಿದ್ದು, ಇಂದಿನ ಪಂದ್ಯ ಆರ್‌'ಸಿಬಿ ಬೌಲರ್‌ಗಳ ಪಾಲಿಗೆ ಅಗ್ನಿಪರೀಕ್ಷೆ ಎನಿಸಿದೆ. ಬ್ಯಾಟ್ಸ್‌'ಮನ್‌'ಗಳ ತಿಣುಕಾಟ: ವಿರಾಟ್ ಬೌಲಿಂಗ್‌ಗಿಂತ ಬ್ಯಾಟ್ಸ್‌'ಮನ್‌'ಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಟಾಸ್ ಗೆದ್ದ ತಕ್ಷಣ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ. ಆದರೆ, ಆರ್‌ಸಿಬಿಯ ಆಧಾರ ಸ್ತಂಭಗಳಾದ ಮೆಕ್ಕಲಂ, ಡಿವಿಲಿಯರ್ಸ್‌, ಡಿಕಾಕ್ ರನ್ ಬರ ಎದುರಿಸುತ್ತಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿದೆ. ಸಮಾಧಾನದ ಸಂಗತಿಯೆಂದರೆ ವಿರಾಟ್ ಫಾರ್ಮ್‌ನಲ್ಲಿರುವುದು. ಮಧ್ಯಮ ಕ್ರಮಾಂಕದಲ್ಲಿ ಮನ್‌'ದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆ್ಯಂಡರ್ಸನ್, ಸರ್ಫರಾಜ್ ಇಂದಾದರೂ ಸಿಡಿಯಬೇಕಿದೆ. ಸಮಾನ ಮನಸ್ಸಿಗರು: ಆರ್‌ಸಿಬಿಯಂತೆ ಡೆಲ್ಲಿ ಸಹ ಗೆಲುವಿಗಾಗಿ ಹಪಹಪಿಸುತ್ತಿದ್ದು, ಇಂದಿನ ಪಂದ್ಯ ಸಮಾನ ಮನಸ್ಸಿಗರ ನಡುವಿನ ಹೋರಾಟವಾಗಿದೆ. ವೇಗದ ಬೌಲರ್‌ಗಳು ದುಬಾರಿ ಆಗುತ್ತಿರುವುದು, ಕಳಪೆ ಕ್ಷೇತ್ರರಕ್ಷಣೆ ಡೆಲ್ಲಿ ಸೋಲಿಗೆ ಪ್ರಮುಖ ಕಾರಣವಾಗುತ್ತಿದೆ. ರಿಶಬ್ ಪಂತ್, ರಾಯ್, ಮ್ಯಾಕ್ಸ್‌'ವೆಲ್ ಫಾರ್ಮ್‌'ನಲ್ಲಿದ್ದು, ಟ್ರೆಂಟ್ ಬೌಲ್ಟ್, ತೆವಾಟಿಯ ನಿಖರ ದಾಳಿ ನಡೆಸುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
OSCAR-2019
ತಾನು ಗರ್ಭಿಣಿ ಎಂದು ತಿಳಿದ ಕ್ಷಣ ಮಹಿಳೆಯ ಸಂತೋಷವನ್ನು ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಆ ನಂತರದ ಅವಳ ಜೀವನ ಪ್ರತಿ ಹಂತದಲ್ಲೂ ಅಚ್ಚರಿ ಮತ್ತು ಕುತೂಹಲಗಳಿಂದ ಕೂಡಿರುತ್ತದೆ. ಕೆಲವು ಕುತೂಹಲಗಳಿಗೆ ಆಗಾಗ್ಗೆ ಉತ್ತರ ದೊರಕಿದರು ಮಗುವು ಗಂಡೋ ಅಥವಾ ಹೆಣ್ಣೋ ಎಂಬ ಕುತೂಹಲಕ್ಕೆ ಅವಳು 9 ತಿಂಗಳು ಕಾಯಲೇಬೇಕು. ಆದರೆ ಈ ಚಿಹ್ನೆಗಳಿಂದ ನಿಮ್ಮ ಮಗುವು ಗಂಡೋ ಅಥವಾ ಹೆಣ್ಣೋ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು. ಹೊಟ್ಟೆಯ ಸ್ಥಾನ ಅಂದರೆ ಮಗುವು ಸ್ವಲ್ಪ ಕೆಳಗೆ ಇರುವಂತೆ ಬಸವಾದರೆ ಗರ್ಭದೊಳಗೆ ಗಂಡು ಮಗು ಇದೆ ಎಂದರ್ಥ. ಸ್ವಲ್ಪ ಮೇಲ್ಭಾಗದಲ್ಲಿ ಇದ್ದರೆ ಹೆಣ್ಣು ಮಗುವಿನ ತಾಯಿ ನೀವು. ಇದನ್ನು ಸ್ವಲ್ಪ ಸೂಕ್ಷ್ಮವಾಗಿ ನೀವು ಗಮನಿಸಬೇಕು. ನಿಮ್ಮ ಗರ್ಭಾವಸ್ಥೆಯ ಕೊನೆಯ ೩ ತಿಂಗಳ ಮೂತ್ರದ ಬಣ್ಣವನ್ನು ನೀವು ಗಮನಿಸಿದರೆ ಮಗುವು ಗಂಡೋ ಅಥವಾ ಹೆಣ್ಣೋ ಎಂದು ತಿಳಿದುಕೊಳ್ಳಬಹುದು. ಮೂತ್ರ ಗಾಢ ಬಣ್ಣದಿಂದ ಇದ್ದರೆ ಮಗುವು ಗಂಡು, ಮೂತ್ರದ ಬಣ್ಣ ಮೋಡದಂತೆ ಅಸ್ಪಷ್ಟವಾಗಿ ಇದ್ದರೆ ನೀವು ಹೆಣ್ಣು ಮಗುವಿಗೆ ಶೀಘ್ರದಲ್ಲೇ ಜನ್ಮ ನೀಡುವಿರಿ. ಗರ್ಭಾವಸ್ಥೆಯಲ್ಲಿ ಹಲವಾರು ಹಾರ್ಮೋನುಗಳ ಬದಲಾವಣೆಯಿಂದ ದೇಹದಲ್ಲಿ ಬದಲಾವಣೆ ಕಾಣುವುದು ಸಹಜ. ನಿಮ್ಮ ಗರ್ಭಾವಸ್ಥೆಯ ಪೂರ್ಣ ಅವಧಿಯಲ್ಲಿ ಮೊಡವೆಯ ಸಮಸ್ಯೆಯನ್ನು ಕಂಡರೆ ಮಗುವು ಗಂಡು. ಇಲ್ಲವಾದರೆ ಹೆಣ್ಣು ಮಗು. ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಮಗುವಿಗೆ ಹಾಲು ಉಣಿಸಲು ಸ್ತನಗಳಲ್ಲಿ ಹಾಲು ಶೇಕರಣೆಯಾಗುವ ಕಾರಣ ಸ್ತನಗಳು ದಪ್ಪವಾಗುತ್ತದೆ. ಆದರೆ ಇದನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ಸ್ತನ ದಪ್ಪದಾಗಿದ್ದು, ಮತ್ತೊಂದು ಸ್ತನ ಸ್ವಲ್ಪ ಕಡಿಮೆ ಗಾತ್ರ ಹೊಂದಿರುತ್ತದೆ. ನಿಮ್ಮ ದೇಹದ ಬಲ ಸ್ತನ ಎಡ ಸ್ತನಕ್ಕಿಂತ ದೊಡ್ಡದಾಗಿ ಕಂಡರೆ ನೀವು ಗಂಡು ಮಗುವಿಗೆ ಶೀಘ್ರದಲ್ಲೇ ಜನ್ಮ ನೀಡುವಿರಿ. ಒಂದು ವೇಳೆ ಎಡಗಡೆ ಸ್ತನ ದೊಡ್ಡದಾಗಿದ್ದರೆ ಹೆಣ್ಣು ಮಗುವಿಗೆ ಜನ್ಮ ನೀಡುವಿರಿ. ನಿಮ್ಮ ಪಾದಗಳು ಒಣಗಿದಂತೆ ಅನಿಸಿದರೆ, ಮತ್ತು ಬಿರುಕು ಬಿಡುವುದು ಕಂಡರೆ ನೀವು ಗಂಡು ಮಗುವಿನ ತಾಯಿ ಎಂದು ಇದು ಸೂಚಿಸುತ್ತದೆ.
OSCAR-2019
ಕಳೆದ 22 ವರ್ಷಗಳಿಂದ ರಕ್ಷಣಾ ಇಲಾಖೆ ಏರೋ ಇಂಡಿಯಾ ಶೋ ನಡೆಸುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತಿ ಮತ್ತೊಂದು ಮೆಟ್ಟಿಲು ಏರುವಂತಾಗಿತ್ತು. 1996 ರಿಂದ ಪ್ರತಿ ಎರಡು ಯಲಹಂಕದ ವಾಯುನೆಲೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದ ಈ ಏರ್ ಶೋಗೆ ದೇಶ- ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಕಳೆದ ಬಾರಿ ಏರ್ ಶೋವನ್ನು ಗೋವಾಗೆ ಸ್ಥಳಾಂತರ ಮಾಡಲಾಗುವುದು ಎಂಬ ಸುದ್ದಿಗಳು ಹರಡಿ ಕೆಲವು ದಿನಗಳ ಕಾಲ ಗೊಂದಲ ಉಂಟಾಗಿತ್ತು. 11 ಏರ್‌ಶೋಗಳನ್ನು ನಡೆಸಿದ ಯಶಸ್ಸಿನ ನಂತರ ಇದೀಗ ಉತ್ತರ ಪ್ರದೇಶದ ಲಕ್ನೋ ನಗರಕ್ಕೆ ಸ್ಥಳಾಂತರ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಆದರೆ, ಲಕ್ನೋ ನಗರದ ವಾಯುನೆಲೆಗೆ ಹೋಲಿಸಿದರೆ ಬೆಂಗಳೂರಿನ ವಾಯುನೆಲೆ ನೂರು ಉತ್ತಮವಾಗಿದೆ. ಇಲ್ಲಿ ಏರ್‌ಶೋಗಳನ್ನು ನಡೆಸಲು ಬೇಕಾದ ಎಲ್ಲಾ ರೀತಿಯ ಮೂಲಸೌಲಭ್ಯಗಳು, ದೇಶ ವಿದೇಶಗಳಿಂದ ಬರುವ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು, ಉದ್ಯಮಿಗಳು, ಆಸಕ್ತರು ಬಂದು ಹೋಗಲು ಸಂಪರ್ಕ ವ್ಯವಸ್ಥೆ ಅತ್ಯುತ್ತಮವಾಗಿದೆ. ಏರ್‌ಶೋ ನಡೆಸುವ ಪರಿಣತರು ಹೆಚ್ಚಾಗಿದ್ದಾರೆ. ಯುದ್ಧ ವಿಮಾನಗಳನ್ನು ತಯಾರಿಸುವ ಎಚ್‌ಎಎಲ್, ಡಿಆರ್‌ಡಿಒದಂತಹ ಹಲವು ಸಂಸ್ಥೆಗಳು ಇರುವುದು ಇಲ್ಲಿಯೇ. ಈ ಕಾರಣದಿಂದ ಏರ್‌ಶೋ ಯಲಹಂಕದ ವಾಯುನೆಲೆಯಲ್ಲಿಯೇ ನಿರಂತರವಾಗಿ ನಡೆಯುವುದು ಸೂಕ್ತ. ಈ ಬಗ್ಗೆ ರಕ್ಷಣಾ ಇಲಾಖೆ ಎರಡನೇ ಯೋಚನೆ ಮಾಡದೇ ಇಲ್ಲಿಯೇ ನಡೆಸಬೇಕು. ಇದಕ್ಕೆ ಅಗತ್ಯವಾದ ಒತ್ತಡಗಳನ್ನು ರಾಜ್ಯ ಸರಕಾರ ರಕ್ಷಣಾ ಇಲಾಖೆ ಮೇಲೆ ಹೇರಬೇಕಿದೆ. ಈ ಮೂಲಕ ಬಹು ದಿನಗಳಿಂದ ಕುತೂಹಲಿಗಳಾಗಿ ಕಾಯುತ್ತಿರುವ ಲಕ್ಷಾಂತರ ಜನರ ನಿರೀಕ್ಷೆಯನ್ನು ಹುಸಿ ಮಾಡದಂತೆ ರಕ್ಷಣಾ ಇಲಾಖೆ ನಿರ್ಧಾರ ಕೈಗೊಳ್ಳಬೇಕಿದೆ.
OSCAR-2019
ಮೈಸೂರು: ದಸರಾ ಮಹೋತ್ಸವ ಸಿದ್ಧತೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ, ದಸರಾ ಹಾಗೂ ಮೈಸೂರು ಅರಮನೆ ವೆಬ್‌ಸೈಟ್‌ಗಳು ಮಾತ್ರ ನಿದ್ರಾವಸ್ಥೆಯಲ್ಲಿವೆ. ಅರಮನೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ www.mysorepalace.gov.in ಸ್ಥಗಿತಗೊಂಡು ತಿಂಗಳಾಗಿದ್ದು, ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಪ್ರವಾಸಿಗರಿಗೆ ತೊಂದರೆಯಾಗಿದೆ. ಅಲ್ಲದೆ, ಅರಮನೆ ಪ್ರವೇಶದ ಸಮಯ, ಶುಲ್ಕ, ವಿದ್ಯುತ್‌ ದೀಪಾಲಂಕಾರ ಮತ್ತಿತರ ಮಾಹಿತಿ ಪಡೆದುಕೊಳ್ಳಲು ಕಷ್ಟವಾಗಿದೆ. ವರ್ಷಕ್ಕೆ ಸುಮಾರು 35 ಲಕ್ಷ ಪ್ರವಾಸಿಗರು ಅರಮನೆಗೆ ಭೇಟಿ ನೀಡುತ್ತಾರೆ. ಹೊರರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಕಾಯ್ದಿರಿಸುತ್ತಾರೆ. ಅವರೀಗ ಸರತಿ ಸಾಲಿನಲ್ಲೇ ನಿಂತು ಟಿಕೆಟ್‌ ಖರೀದಿಸಬೇಕಿದೆ. ವೆಬ್‌ಸೈಟ್‌ ನಿರ್ವಹಣೆಗೆಂದು ಖಾಸಗಿ ಸಂಸ್ಥೆಯೊಂದರ ಜೊತೆ ಅರಮನೆ ಮಂಡಳಿಯು ಒಪ್ಪಂದ ಮಾಡಿಕೊಂಡಿತ್ತು. ಆ ಒಪ್ಪಂದ ನವೀಕರಿಸದೆ ಸ್ಥಗಿತಗೊಂಡಿದೆ. ಮಾಹಿತಿಗೆ ಮಾರ್ಗ ಇಲ್ಲ: ದಸರಾ ಬಗ್ಗೆ ಮಾಹಿತಿ ನೀಡಲು ರೂಪಿಸಿರುವ www.mysoredasara.gov.in ವೆಬ್‌ಸೈಟ್‌ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಈ ವೆಬ್‌ಸೈಟ್‌ ತೆರೆದರೆ ದಸರಾ ಲಾಂಛನ ಮಾತ್ರ ಕಾಣಿಸುತ್ತದೆ. ಹೀಗಾಗಿ, ನಾಡಹಬ್ಬದ ಮಾಹಿತಿ ಪಡೆಯಲು ಪ್ರವಾಸಿಗರಿಗೆ ಈಗ ಯಾವುದೇ ಮಾರ್ಗ ಇಲ್ಲದಂತಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿ ಒಂದೆಡೆ ಸಿಗುವ ವೆಬ್‌ಸೈಟ್‌ ಕೂಡ ಇಲ್ಲ. ‘‍ಖಾಸಗಿ ಸರ್ವರ್‌ನಿಂದ ಸರ್ಕಾರದ ಇ–ಗವರ್ನೆನ್ಸ್‌ ಸರ್ವರ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರವಾಸಿಗರ ಆಕರ್ಷಣೆಗಾಗಿ ವೆಬ್‌ಸೈಟ್‌ ಮರುವಿನ್ಯಾಸಗೊಳಿಸುತ್ತಿದ್ದು, ಸದ್ಯದಲ್ಲೇ ಮಾಹಿತಿ ಅಪ್‌ಲೋಡ್ ಮಾಡಲಾಗುವುದು’ ಎಂದು ವೆಬ್‌ಸೈಟ್‌ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಹೇಳುತ್ತಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ವೀರನಹೊಸಹಳ್ಳಿಯಿಂದ ಮೊದಲ ಹಂತದಲ್ಲಿ ಆರು ಆನೆಗಳು ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ. ಅಂಬಾರಿ ಆನೆ ಅರ್ಜುನ ಸೇರಿದಂತೆ 12 ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ. 37 ವರ್ಷದ ಧನಂಜಯ ಈ ಬಾರಿ ಹೊಸ ಅತಿಥಿ. ದುಬಾರೆ ಆನೆ ಶಿಬಿರದಿಂದ ಈ ಗಜವನ್ನು ಕರೆತರಲಾಗುತ್ತಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ನ್ಯೂ ಇಂಡಿಯಾ ಅಶೂರೆನ್ಸ್‌ ಕಂಪನಿಯ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಬರೆದು ವಿಮೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ₹ 34 ಲಕ್ಷ ವಿಮೆಗಾಗಿ ₹ 40,120 ಪ್ರೀಮಿಯಂ ಪಾವತಿಸಲಾಗುತ್ತದೆ. 12 ಮಾವುತ ಹಾಗೂ ಕಾವಾಡಿಗಳಿಗೆ ತಲಾ ₹ 1 ಲಕ್ಷ ವಿಮೆ ಮಾಡಲಾಗುತ್ತದೆ. ಆನೆಗಳು ದಸರಾ ಮೆರವಣಿಗೆ ಹಾಗೂ ತಾಲೀಮು ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ– ಪಾಸ್ತಿಗೆ ನಷ್ಟ ಉಂಟು ಮಾಡಿದರೆ ಎನ್ನುವ ಕಾರಣಕ್ಕೆ ₹ 25 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತದೆ. ಈ ವಿಮೆ ಅವಧಿಯು ಸೆ. 2ರಿಂದ ಅ. 31ರ ಅವಧಿಯ ನಡುವೆ ಚಾಲ್ತಿಯಲ್ಲಿ ಇರುತ್ತದೆ.
OSCAR-2019
ಕೊಪ್ಪಳ : ಹೆಗಡೆಯವರನ್ನು ಸಿಎಂ ಮಾಡಿದ್ದು ನಾನೇ. ಅವರು ಮುಖ್ಯಮಂತ್ರಿ ಆಗುವುದನ್ನು ನಾನು ತಪ್ಪಿಸಿದ್ದಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ನಾನೇ ಸಿಎಂ ಸ್ಧಾನ ತಪ್ಪಿಸಿದ್ದೆ ಎನ್ನುತ್ತಾರೆ. ಸಿದ್ದರಾಮಯ್ಯನವರಿಗೆ
OSCAR-2019
ಉಡುಪಿ, ಜುಲೈ.25: ಮಾಜಿ‌ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ದೇವರ ಮೊರೆಹೋಗಿದ್ದಾರೆ. ಹೌದು, ಉಡುಪಿ‌ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ಯಡಿಯೂರಪ್ಪ ಕುಟುಂಬ ಸಮೇತರಾಗಿ ಶನಿವಾರ ಮಠಕ್ಕೆ ಆಗಮಿಸಿದ ಯಡಿಯೂರಪ್ಪ ಗೌಪ್ಯವಾಗಿ ಯಾಗ ನಡೆಸಿದ್ದಾರೆ. ಶನಿವಾರ ಮಠದಲ್ಲಿ ತಂಗಿ ರವಿವಾರ ಹಾಗೂ ಸೋಮವಾರ ಯಾಗದಲ್ಲಿ ಭಾಗಿಯಾಗಿದ್ದಾರೆ. ಯಡ್ಡಿ ಪುತ್ರರಾದ ವಿಜಯೇಂದ್ರ ಹಾಗೂ ರಾಘವೇಂದ್ರ ಕೂಡಾ ಯಾಗದಲ್ಲಿ ಭಾಗಿಯಾಗಿದ್ದು, ಪುತ್ತೂರಿನ ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ಮತ್ತು ಸುಳ್ಯ ಮೂಲದ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿ ನಡೆಸಿದ್ದಾರೆ. ಯಡಿಯೂರಪ್ಪ ಅವರ ಮಕ್ಕಳು, ಸೊಸೆಯಂದಿರು, ಆಪ್ತರು ಸಹ ಹೋಮದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದ್ದು, ಎರಡು ದಿನಗಳ ಕಾಲ ನಡೆದ ಹೋಮದಲ್ಲಿ ಆನೆಗುಂದಿ ಸಂಸ್ಥಾನ ಉಡುಪಿ ಜಿಲ್ಲೆ ಕಾಪುವಿನ ಪಡು ಕುತ್ಯಾರುಕ್ಕೆ ಸಂಬಂಧಿಸಿದ ಕ್ಷೇತ್ರ. ಕಾಂಗ್ರೆಸ್ ಅತೃಪ್ತರನ್ನು ಸೆಳೆಯವ ತಂತ್ರಗಾರಿಕೆಗೆ ಬಿಜೆಪಿ ಕೈ ಹಾಕಿದ್ದು, ಈ ನಡುವೆ ಯಡಿಯೂರಪ್ಪ ದೇವರ ಮೊರೆಹೋಗಿರುವುದು ಕುತೂಹಲ ಮೂಡಿಸಿದೆ.
OSCAR-2019
ಗರ್ಭಾವಸ್ಥೆ ಎಂದರೆ ಬಯಕೆ, ಮತ್ತು ಈ ಬಯಕೆಗಳಿಗೆ ಯಾವುದೇ ಅಡ್ಡಿ ಇಲ್ಲ. ಮೊದಲನೇ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ನಮ್ಮ ಬಯಕೆಗಳು ಹುಳಿ ಆಹಾರ ಪದಾರ್ಥಗಳ ಮೇಲೆ ಒಲವನ್ನು ತೋರುತ್ತದೆ. ಹುಳಿ ಆಹಾರ ಪದಾರ್ಥದಲ್ಲಿ ಬಯಕೆ ಆಗುವ ಒಂದು ಆಹಾರ ಎಂದರೆ ನೆಲ್ಲಿಕಾಯಿ. ನಿಂಬೆಹಣ್ಣಿನಂತೆ ಕಾಣುವ ಅದ್ಬುತ ಹಣ್ಣು ಆಮ್ಲ ಅಥವಾ ನೆಲ್ಲಿಕಾಯಿ. ಇದು ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯನ್ನು ಹೊಂದಿದೆ. ಇದು ನಮ್ಮ ಪೂರ್ವಜರ ಕಾಲದಿಂದಲೂ ಆಯುರ್ವೇದ ಔಷಧಿ ಆಗಿದೆ ಮತ್ತು ಇದು ತನ್ನಲ್ಲಿ ಅನೇಕ ಪೌಷ್ಟಿಕಾಂಶಗಳನ್ನು, ಕಬ್ಬಿಣಾಂಶವನ್ನು, ವಿಟಮಿನ್ ಗಳನ್ನು, ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅನ್ನು ಒಳಗೊಂಡಿದೆ. ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಬಹುದೇ? ಅದರ ಸಂಪೂರ್ಣ ಮಾಹಿತಿಯನ್ನು ಮತ್ತು ಇದು ಗರ್ಭಿಣಿ ಮೇಲೆ ಮಾಡುವ ಪ್ರಭಾವವನ್ನು ತಿಳಿದುಕೊಳ್ಳಿ. ಹೌದು, ಗರ್ಭಾವಸ್ಥೆಯಲ್ಲಿ ನೆಲ್ಲಿಕಾಯಿ ಸೇವಿಸಬಹುದು, ಇದು ತನ್ನಲ್ಲಿ ಹಲವು ಸೂಕ್ಷ್ಮ ಪೋಷಕಾಂಶಗಳನ್ನು ಒಳಗೊಂಡಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಇದು ಅತ್ಯುತ್ತಮ ರಕ್ತ ಶುದ್ಧಿಕಾರಕ, ಶಕ್ತಿ ನೀಡುವ ಆಹಾರ ಮತ್ತು ಯಾವುದೇ ಅಡ್ಡಪರಿಣಾಮ ಇಲ್ಲ. ನೆಲ್ಲಿಕಾಯಿಯನ್ನು ನೇರವಾಗಿ ಅಥವಾ ಪುಡಿ ಮಾಡಿ, ಅಥವಾ ಬೇರೆ ವಿಧಾನದಲ್ಲಿ ಕೂಡ ಸೇವಿಸಬಹುದು. ಇದರ ಸೇವನೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನವಿದೆ. ಅದರಲ್ಲಿ ಕೆಲವು ಪ್ರಯೋಜನಗಳನ್ನು ಇಲ್ಲಿ ತಿಳಿದುಕೊಳ್ಳಿ. ಜಠರ ಕರುಳಿನ ಅಸ್ವಸ್ಥೆಗಳಾದ, ಮಲಬದ್ಧತೆ ಮತ್ತು ಹೆಮೋರ್ರೊಯ್ಡ್ಸ್ ಗರ್ಭಾವಸ್ಥೆಯಲ್ಲಿ ಸಾಮಾನ್ಯ. ನೆಲ್ಲಿಕಾಯಿ ಅಗತ್ಯವಿರುವ ಫೈಬರ್ ಅನ್ನು ಒದಗಿಸಿ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ ಮತ್ತು ಜಠರ ಕರುಳಿನ ಅಸ್ವಸ್ಥೆಗಳನ್ನು ನಿವಾರಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ C ಹೇರಳವಾಗಿದೆ, ಇದು ರಕ್ತನಾಳಗಳನ್ನು ಶುದ್ದೀಕರಿಸುತ್ತದೆ ಮತ್ತು ಇದು ರಕ್ತದೊತ್ತಡವನ್ನು ಸುಧಾರಿಸುತ್ತದೆ. ತಾಜಾ ನೆಲ್ಲಿಕಾಯಿ ರಸವನ್ನು ಪ್ರತಿದಿನ ಸೇವಿಸುವುದರಿಂದ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಎದೆಯುರಿ, ಮತ್ತು ಅಸಿಡಿಟಿ ಸಮಸ್ಯೆಗಳನ್ನು ಶಮನ ಮಾಡುತ್ತದೆ. ಬಹುತೇಕ ಎಲ್ಲಾ ತಾಯಿಯರಿಗೂ ಕಾಡುವ, ಗರ್ಭಾವಸ್ಥೆಯ ಮೊದಲ ಲಕ್ಷಣ ಬೆಳಗಿನ ಕಾಯಿಲೆ. ನೆಲ್ಲಿಕಾಯಿಯಲ್ಲಿ ಶಕ್ತಿ -ಹೆಚ್ಚಿಸುವ ಮತ್ತು ಚೇತನ ನೀಡುವ ಅಂಶವಿದ್ದು, ದುರ್ಬಲತೆಯಿಂದ ಜಯಿಸಲು ಅಥವಾ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಇದು ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುತ್ತದೆ. ನೆಲ್ಲಿಕಾಯಿ ನಿರ್ವಿಷಗೊಳಿಸುವ ಗುಣವನ್ನು ಹೊಂದಿದ್ದು, ಅದು ರಕ್ತವನ್ನು ಶುದ್ಧ ಮಾಡುತ್ತದೆ. ಹಾನಿಕರವಾದ ಪಾದರಸ ಮತ್ತು ಸೀಸವನ್ನು ನಿರ್ಮೂಲನೆ ಮಾಡಿ ರಕ್ತ ಮತ್ತು ಆಮ್ಲಜನಕ ನಿರಂತರವಾಗಿ ಸರಾಗವಾಗಿ ಬೆಳೆಯುತ್ತಿರುವ ಭ್ರೂಣಕ್ಕೆ ಹರಿಯುವಂತೆ ಮಾಡುತ್ತದೆ. ನೆಲ್ಲಿಕಾಯಿ ವಿಟಮಿನ್ C ಮತ್ತು ಕಬ್ಬಿಣಾಂಶದ ಅತ್ಯುತ್ತಮ ಮೂಲ. ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಾಮಾನ್ಯವಾಗಿರುವಂತೆ ಇವು ನೋಡಿಕೊಳ್ಳುತ್ತದೆ. ನೆಲ್ಲಿಕಾಯಿ ಗ್ಯಾಸ್ಟ್ರಿಕ್ ರಸಗಳನ್ನು ಪ್ರಚೋದಿಸುತ್ತದೆ ಮತ್ತು ಇದರಿಂದಾಗಿ ಆಹಾರ ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆಗೆ ನೆರವಾಗುತ್ತದೆ. ನಿಯಮಿತ ಮತ್ತು ನಿರಂತರ ನೆಲ್ಲಿಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆ ಮತ್ತು ಅಸಿಡಿಟಿ ಸಮಸ್ಯೆಯನ್ನು ನಿವಾರಿಸಬಹುದು. ಆಂಟಿಆಕ್ಸಿಡೆಂಟ್ಸ್ ಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ C ಸಾಮಾನ್ಯ ಸೋಂಕುಗಳಾದ ಶೀತ ಮತ್ತು ಮೂತ್ರನಾಳದ ಸೋಂಕು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇವುಗಳು ಗರ್ಭಾವಸ್ಥೆಯಲ್ಲಿ ಸಾಮಾನ್ಯ. ಇದರ ಮತ್ತೊಂದು ಪ್ರಯೋಜನ ಎಂದರೆ ಹೆರಿಗೆ ನಂತರ ಎದೆಹಾಲು ಮೂಲಕ ಮಗುವಿಗೆ ಪ್ರತಿರಕ್ಷಣಾ ವ್ಯವಸ್ಥೆ ಸೇರಿ ಮಗುವಿನಲ್ಲಿ ಇದು ಹೆಚ್ಚಾಗುವುದು. ಗರ್ಭಾವಸ್ಥೆಯಲ್ಲಿ ತಾಜಾ ಒಂದು ನೆಲ್ಲಿಕಾಯಿಯನ್ನು ಪ್ರತಿದಿನ ಸೇವಿಸದರೆ ಒಳ್ಳೆಯದು, ಶೀತ ಇರುವಾಗ ಇದರ ಸೇವನೆಯನ್ನು ಮಾಡಬೇಡಿ.
OSCAR-2019
Home / Humor and Laughter / kannada and Karnataka / Science and Technology / ಮೊಬೈಲ್ ಸಿಗ್ನಲ್ಲು ಸಮಸ್ಯೆಗೆ ಪರಿಹಾರ ನಿಮ್ಮ ಮೊಬೈಲ್ ಗೆ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲವೇ? ಚಿ೦ತಿಸಬೇಡಿ. ಆ೦ಧ್ರ ಪ್ರದೇಶದ ಹಳ್ಳಿಗರು ಒ೦ದು ವಿನೂತನ ವಿಧಾನವನ್ನು ಅನುಸರಿಸುತ್ತಿರುವುದು ಬೆಳಕಿಗೆ ಬ೦ದಿದೆ. ಇ ನಿಧಿ ಇ೦ಡಿಯಾದ ಮುಖ್ಯ ಬ್ಲಾಗಿ೦ಗ್ ಅಧಿಕಾರಿ ಶ್ರೀನಿಧಿ ಹ೦ದೆಯವರು ಕಳೆದ ವಾರ ಹೈದರಾಬಾದಿನಿ೦ದ ಸುಮಾರು ೧೦೦ ಕೀ.ಮೀ. ದೂರ ಇರುವ ಹಳ್ಳಿಯೊ೦ದಕ್ಕೆ ಭೇಟಿ ಕೊಟ್ಟಾಗ ಕೆಳಗೆ ಹೇಳಿದ ಅನ್ವೇಷಣೆಯನ್ನು ಪತ್ತೆಹಚ್ಚಿದ್ದಾರೆ. ತಮ್ಮ ಸ೦ಚಾರಿ ದೂರವಾಣಿಯನ್ನು ಮನೆಯ ಮು೦ದಿನ ಕ೦ಬಕ್ಕೆ ನೇತು ಹಾಕುವುದರ ಮೂಲಕ ಉತ್ತಮ ಸಿಗ್ನಲ್ ಸಿಗುವುದು ಎ೦ದು ಅವರು ಕ೦ಡುಕೊ೦ಡಿದ್ದಾರೆ. ಹಳ್ಳಿಗಳಲ್ಲಿ ಇನ್ನೂ ಪರಸ್ಪರ ವಿಶ್ವಾಸ, ನ೦ಬಿಕೆ ಇರುವುದರಿ೦ದ ಇದು ಸಾಧ್ಯವಾಗಿದ್ದು ನಗರಗಳಲ್ಲಿ ಹೀಗೆ ನೇತು ಹಾಕಿದರೆ ಸಿಗ್ನಲ್ಲು ಹಾಗಿರಲಿ ಮೋಬೈಲು ಕೂಡ ತಿರುಗಿ ಸಿಗಲಾರದ ಪರಿಸ್ಥಿತಿ ಇರುವುದರಿ೦ದ ಸ್ವಲ್ಪ ಜಾಗರೂಕರಾಗಿರಲು ಸೂಚಿಸಲಾಗಿದೆ. ನಮ್ಮ ಹಳ್ಳಿಗರ ಈ ಸ೦ಶೋಧನೆಯನ್ನು ಯಾವುದಾದರೂ ಪರದೇಶಿ ಕ೦ಪನಿ ಪೇಟೆ೦ಟ ಮಾಡಿಸಿಕೊಳ್ಳುವುದಕ್ಕೆ ಮೊದಲೆ ನಾವು ಇದರ ಪೇಟೆ೦ಟು ಪಡೆಯುವುದು ಅತಿ ಆವಶ್ಯಕವಾಗಿದೆ. ಅದು ಸಿಗುವ ತನಕವಾದರೂ ಯಾರೂ ಈ ಪದ್ದತಿಯನ್ನು ನಕಲು ಹೊಡೆಯಬಾರದೆ೦ದು ಈ ಮೂಲಕ ಕೋರಲಾಗಿದೆ. ಮೊಬೈಲು ಗೋಪುರದಿ೦ದ ಇನ್ನೂ ದೂರ ಇದ್ದಾಗ ಕೇವಲ ಕ೦ಬಕ್ಕೆ ಕಟ್ಟಿ ಸಿಗ್ನಲ್ ಪಡೆಯುವುದು ಅಸಾಧ್ಯ. ಆಗ ಈ ಕೆಳಗಿನ ವಿಧಾನಗಳನ್ನು ಪ್ರಯತ್ನಿಸಬಹುದುಃ
OSCAR-2019
ಹೀಗೆ ಪ್ರಶ್ನೆ ಹಾಕಿದ್ದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಯನ್ ಲಾರಾ. ಉದ್ಯಾನನಗರಿಯಲ್ಲಿ ಯುವ ಆಟಗಾರರಿಗೆ ತರಬೇತಿ ನೀಡಲು ಆಯೋಜಿಸಲಾಗಿರುವ ಶಿಬಿರದಲ್ಲಿ ಅನುಭವ ಹಂಚಿಕೊಳ್ಳಲು ಬಂದಿರುವ ಅವರು ಗುರುವಾರ ತಮ್ಮ ನೆನಪಿನ ಪುಟಗಳನ್ನು ತಿರುವಿಹಾಕಿದರು. ‘1984ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಆಗ ಟ್ರಿನಿಡ್ಯಾಡ್ ಮತ್ತು ಟೊಬಾಗೊದ ಶಾಲಾ ತಂಡದ ಆಟಗಾರನಾಗಿದ್ದೆ’ ಎಂದ ಅವರು ಕ್ರಿಕೆಟ್ ಆಟವು ದೇಶಗಳ ನಡುವೆ ಹೇಗೆ ಸಂಬಂಧದ ಬೆಸುಗೆ ಹಾಕುತ್ತದೆಂದು ಕೂಡ ವಿವರಿಸಿದರು. ‘ರಾಬಿನ್ ಸಿಂಗ್ ನಮ್ಮ ನಾಡಿನಿಂದ ಬಂದು ಭಾರತದ ಟೆಸ್ಟ್ ಹಾಗೂ ಏಕದಿನ ತಂಡದಲ್ಲಿ ಆಡಿದರು. ಮುಂದೊಂದು ದಿನ ಸಚಿನ್ ತೆಂಡೂಲ್ಕರ್ ಅವರಂಥ ಯಾವುದೋ ಒಬ್ಬ ಕ್ರಿಕೆಟಿಗನು ವೆಸ್ಟ್ ಇಂಡೀಸ್ ಪರವಾಗಿ ಆಡಬಹುದು’ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರು ‘ಲಾರಾ ನಮ್ಮ ದೇಶಕ್ಕೆ ಬಂದು ಆಡಲೆಂದು ನಾವೂ ಬಯಸುತ್ತೇವೆ’ ಎಂದು ಥಟ್ಟನೇ ನುಡಿದರು. ಆಗ ವಾತಾವರಣದಲ್ಲಿ ನಗೆಯ ಅಲೆ! ಕ್ರೀಡಾ ಮನೋಭಾವದಿಂದ ಆಡಿದ ಲಾರಾ ಬಗ್ಗೆ ಮೆಚ್ಚುಗೆ ಸೂಚಿಸಿದ ಕುಂಬ್ಳೆ ‘ಮೊಹಾಲಿ ಪಂದ್ಯದಲ್ಲಿ ಲಾರಾ 91ರನ್‌ನಲ್ಲಿದ್ದಾಗ ವೆಂಕಟಪತಿ ರಾಜು ಎಸೆತದಲ್ಲಿ ಬ್ಯಾಟ್‌ಗೆ ತಾಗಿದ್ದ ಚೆಂಡು ನಯನ್ ಮೋಂಗಿಯಾ ಕ್ಯಾಚ್ ಪಡೆದಿದ್ದರು. ಆದರೆ ಅಂಪೈರ್ ಔಟ್ ಎಂದು ಹೇಳಲಿಲ್ಲ. ಆದರೂ ಪೆವಿಲಿಯನ್‌ಗೆ ನಡೆದಿದ್ದರು ಬ್ರಯನ್. ಇದು ಒಳ್ಳೆಯ ಆಟಗಾರನಾಗಿ ಬೆಳೆಯುವ ರೀತಿ’ ಎಂದರು. ಈ ಮೆಚ್ಚುಗೆಗೆ ಪ್ರತಿಯಾಗಿ ಸ್ಪಿನ್ ಬೌಲರ್ ಕುಂಬ್ಳೆ ಗುಣವನ್ನು ಕೊಂಡಾಡಿದ ಲಾರಾ ‘ಭಾರತದ ಕ್ರಿಕೆಟ್ ಸೇವಕನಂತೆ ಆಡಿದ ಬೌಲರ್. ಚೆಂಡು ಹಿಡಿದು ದಾಳಿ ನಡೆಸಿದಾಗ ಮಾತ್ರವಲ್ಲ; ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿಯೂ ಬಲ ತೋರಿಸುವ ಪ್ರಯತ್ನ ಮಾಡಿದರು. ಆದ್ದರಿಂದ ಯುವ ಕ್ರಿಕೆಟಿಗರು ತಾವೂ ಹೀಗೆ ಆಗಬೇಕು ಎಂದು ಯೋಚಿಸಬೇಕು. ಹಾಗೆ ಮಾಡಿದಲ್ಲಿ ಒಳ್ಳೆಯ ಆಟಗಾರನಾಗಲು ಸಾಧ್ಯ’ ಎಂದರು.
OSCAR-2019
ಪುರಾಣಗಳ ಪ್ರಕಾರ ದೇವಲೋಕದಲ್ಲಿ ಸಂಪತ್ತು ಹಾಗೂ ಸಮೃದ್ಧಿಯ ದೇವತೆ ಲಕ್ಷ್ಮೀ ದೇವಿಯು ಒಂದು ಸಲ ತನ್ನ ಪತಿ ವಿಷ್ಣುವಿನೊಂದಿಗೆ ಮನಸ್ತಾಪ ಮಾಡಿಕೊಂಡು ಅಲ್ಲಿಂದ ತೆರಳುವಳು. ಇದರಿಂದ ದೇವಲೋಕದಲ್ಲಿ ಸಂಪತ್ತು ಹಾಗೂ ಸಂಪನ್ಮೂಲಗಳ ಕೊರತೆ ಉಂಟಾಗುವುದು. ಎಲ್ಲವೂ ಶೀಘ್ರವೇ ಸಾಮಾನ್ಯವಾಗಲಿ ಎಂದು ಎಲ್ಲಾ ದೇವದೇವತೆಯರು ಕೂಡ ಪ್ರಾರ್ಥಿಸುತ್ತಿದ್ದರು. ತನ್ನೊಂದಿಗೆ ಸಮೃದ್ಧಿ ಹಾಗೂ ಸಂಪತ್ತು ತರುವ ಲಕ್ಷ್ಮೀ ದೇವಿಯನ್ನು ಆದಷ್ಟು ಬೇಗ ಮರಳಿ ಕರೆತರುವುದು ಹೇಗೆ ಎನ್ನುವ ಪ್ರಶ್ನೆ ಮಾತ್ರ ಪ್ರತಿಯೊಬ್ಬರನ್ನು ಕಾಡುತ್ತಲಿತ್ತು. ಲಕ್ಷ್ಮೀ ದೇವಿಯನ್ನು ಸಂಸ್ಕೃತದಲ್ಲಿ ಶ್ರೀ ಎಂದು ಕರೆಯಲಾಗುತ್ತದೆ. ಶ್ರೀ ಎಂದರೆ ಸಮೃದ್ಧಿ ಎನ್ನುವ ಅರ್ಥವಿದೆ.... ತನ್ನ ಸಂಕಷ್ಟಗಳನ್ನು ಇಟ್ಟುಕೊಂಡು ಬ್ರಹ್ಮದೇವರ ಬಳಿಗೆ ವಿಷ್ಣು ಬಂದು ಎಲ್ಲವನ್ನು ಹೇಳಿಕೊಂಡರು. ಈ ವೇಳೆ ಬ್ರಹ್ಮ ದೇವರು ಸಲಹೆಯೊಂದನ್ನು ನೀಡಿ, ಲಕ್ಷ್ಮೀ ದೇವಿಯು ಸಮುದ್ರರಾಜ ಪುತ್ರಿಯಾಗಿರುವ ಕಾರಣದಿಂದ ಆಕೆ ಹೋಗಿ ಕ್ಷೀರಸಾಗರ(ಹಾಲಿನ ದೊಡ್ಡ ಸಮುದ್ರ)ದ ಆಳಕ್ಕೆ ಹೋಗಿ ಧ್ಯಾನದಲ್ಲಿ ಮುಳುಗಿರ ಬಹುದು. ಹಾಲಿನ ಸಾಗರವನ್ನು ಮಂಥನ ಮಾಡಿದಾಗ ಆಕೆಗೆ ಎಚ್ಚರವಾಗಬಹುದು ಮತ್ತು ಮರಳಿ ಬರುವಂತೆ ಮನವಿ ಮಾಡಬಹುದು. ಕ್ಷೀರಸಾಗರವನ್ನು ಮಂಥನ ಮಾಡುವುದು ಕೇವಲ ದೇವತೆಗಳಿಂದ ಸಾಧ್ಯವಾಗದ ಮಾತಾಗಿತ್ತು. ಕೇವಲ ದೇವತೆಗಳಿಂದ ಇದು ಅಸಾಧ್ಯ ಎಂದು ಬ್ರಹ್ಮ ದೇವರು ಹೇಳಿದ್ದರು ಮತ್ತು ರಾಕ್ಷಸರ ನೆರವು ಪಡೆಯಲು ಸೂಚಿಸಿದ್ದರು. ಆದರೆ ದೇವತೆಗಳಿಗೆ ಸಮೃದ್ಧಿ ಮರಳಿ ತರಲು ರಾಕ್ಷಸರು ಸಮುದ್ರ ಮಂಥನಕ್ಕೆ ಬರುವುದಿಲ್ಲವೆಂದು ವಿಷ್ಣುವಿಗೆ ಕೂಡ ತಿಳಿದಿತ್ತು. ಇದಕ್ಕಾಗಿ ರಾಕ್ಷಸರ ಮನವೊಲಿಸಲು ವಿಷ್ಣು ಯೋಜನೆ ರೂಪಿಸಿದ. ಇದರ ಪ್ರಕಾರ ರಾಕ್ಷಸರ ನೆರವು ಪಡೆಯಬಹುದು ಎಂದು ತಿಳಿದಿತ್ತು. ಸಮುದ್ರದ ಒಳಗಡೆ ಅಮೃತದಿಂದ ತುಂಬಿರುವಂತಹ ಹಡಗು ಇದೆ ಮತ್ತು ಇದರಿಂದ ಅಮರತ್ವ ಪಡೆಯಬಹುದು ಎಂದು ರಾಕ್ಷಕರಿಗೆ ತಿಳಿಸಿದ. ರಾಕ್ಷಸರು ಕೂಡ ಅಮರತ್ವ ಪಡೆಯಬೇಕೆಂದು ಬಯಸಿ, ದೇವತೆಗಳ ಜತೆಗೆ ಸೇರಿ ಕ್ಷೀರಸಾಗರ ಮಂಥನ ಮಾಡಲು ನಿರ್ಧರಿಸಿದರು. ಹಡಗು ಮತ್ತು ಅಮೃತವನ್ನು ಸಮಾನವಾಗಿ ಹಂಚುವುದಾಗಿ ದೇವತೆಗಳು ಹಾಗೂ ರಾಕ್ಷಸರಲ್ಲಿ ಒಪ್ಪಂದ ನಡೆಯಿತು. ಕ್ಷೀರಸಾಗರದಲ್ಲಿ ದೇವತೆಗಳು ಹಾಗೂ ರಾಕ್ಷಸರು ಜತೆಯಾಗಿ ಮಂಥನದಲ್ಲಿ ತೊಡಗಿದ್ದಾಗ ಕೆಲವೊಂದು ಶಕ್ತಿಶಾಲಿ ವಸ್ತುಗಳು ಹೊರಬರಲು ಆರಂಭವಾದವು. ಇದರಲ್ಲಿ ವಿಷವನ್ನು ಶಿವ ದೇವರು ಕುಡಿದರು. ಪವಿತ್ರ ಶಂಖ ಇತ್ಯಾದಿಗಳು ಬಂದವು. ಇದರೊಂದಿಗೆ ಲಕ್ಷ್ಮೀ ದೇವಿಯು ಪ್ರತ್ಯಕ್ಷರಾದರು. ಅಂತಿಮವಾಗಿ ಅಮೃತದ ಹಡಗು ಮೇಲೆ ಬಂತು. ಇದು ಮೇಲೆ ಬರುತ್ತಿರುವಂತೆ ಎರಡು ಪಕ್ಷಗಳು ತಮ್ಮ ಪಾಲನ್ನು ಅತೀ ಬೇಗ ಪಡೆಯಲು ಬಯಸಿದರು. ರಾಕ್ಷಸರಿಗೆ ಅಮೃತ ನೀಡಿ ಅವರಿಗೆ ಅಮರತ್ವ ನೀಡುವುದು ಸರಿಯಾದ ನಿರ್ಧಾರವೇ? ಖಂಡಿತವಾಗಿಯೂ ಅಲ್ಲ. ವಿಷ್ಣು ಎಷ್ಟು ಜಾಣನೆಂದು ಪ್ರತಿಯೊಬ್ಬರಿಗೂ ತಿಳಿದಿತ್ತು ಮತ್ತು ರಾಕ್ಷಸರ ದೌರ್ಬಲ್ಯವೇನೆಂದು ಆತ ಸರಿಯಾಗಿ ಅರ್ಥ ಮಾಡಿಕೊಂಡಿದ್ದ. ಇದರಿಂದ ಆತ ತಕ್ಷಣ ಅಪ್ಸರೆಯ ರೂಪ ಧಾರಣೆ ಮಾಡಿಕೊಂಡು ರಾಕ್ಷಸ ಗಮನ ಬೇರೆಡೆ ಸೆಳೆಯು ಸಲುವಾಗಿ ಅವರ ಮುಂದೆ ಪ್ರತ್ಯಕ್ಷನಾಗಿ, ಪ್ರತಿಯೊಬ್ಬರಿಗೂ ತಾನೇ ಅಮೃತ ಬಾಯಿಗೆ ಹಾಕುತ್ತೇನೆಂದು ಹೇಳುತ್ತಾನೆ. ವಿಷ್ಣು ದೇವರು ರಾಕ್ಷಸರನ್ನು ಮೂರ್ಖರನ್ನಾಗಿಸಲು ಅಪ್ಸರೆಯಾಗಿರುವ ಮೋಹಿನಿ ರೂಪ ಧರಿಸಿದರು. ಈ ವೇಳೆ ಅಮೃತ ನೀಡುವಾಗ ದೇವತೆಗಳ ಬಾಯಿಗೆ ಅಮೃತ ಮತ್ತು ರಾಕ್ಷಸರ ಬಾಯಿಗೆ ನೀರನ್ನು ಹಾಕಿದರು. ಆರಂಭದಲ್ಲಿ ರಾಕ್ಷಸರಿಗೆ ಇದು ತಿಳಿದುಬರಲಿಲ್ಲ. ಆದರೆ ರಾಹುಕೇತು ಎಂಬವರು ಮೋಹಿನಿಯ ಈ ಕಪಟವನ್ನು ಪತ್ತೆ ಹಚ್ಚಿದರು. ಅಮೃತ ಕುಡಿಯಬೇಕೆಂಬ ಕಾರಣಕ್ಕಾಗಿ ಇವರು ದೇವತೆಗಳ ಮಧ್ಯದಲ್ಲಿ ಬಂದು ಸೇರಿಕೊಂಡರು. ಅದಾಗ್ಯೂ, ರಾಹುಕೇತುಗೆ ಇದರಲ್ಲಿ ಯಶಸ್ಸು ಕೂಡ ಸಿಕ್ಕಿತು. ಇದು ದೇವತೆಗಳಿಗೆ ತಿಳಿಯುವಾಗ ತುಂಬಾ ವಿಳಂಬವಾಗಿತ್ತು. ಇದರಿಂದ ಕುಪಿತಗೊಂಡ ವಿಷ್ಣು ದೇವರು ರಾಹುಕೇತುವಿನ ತಲೆ ಕಡಿದರು. ಆದರೆ ಈಗಾಗಲೇ ಅಮೃತ ಸೇವನೆ ಮಾಡಿದ್ದ ಪರಿಣಾಮ ತಲೆ ಬೇರ್ಪಟ್ಟರೂ ಆತ ಸಾಯಲಿಲ್ಲ. ರಾಹುಕೇತುವಿನ ತಲೆಯನ್ನು ರಾಹು ಎಂದೂ ಶರೀರವನ್ನು ಕೇತು ಎಂದು ನಂಬಲಾಗುತ್ತಿದೆ. ರಾಹು ಮತ್ತು ಕೇತು ಕ್ರಮವಾಗಿ ಚಂದ್ರನ ಉತ್ತರ ಹಾಗೂ ದಕ್ಷಿಣ ಬಿಂದುಗಳೆಂದು ಹೇಳಲಾಗುತ್ತದೆ. ಸೂರ್ಯ ಮತ್ತು ಚಂದ್ರ ಛೇದಿಸುವ ಉತ್ತರ ಹಾಗೂ ದಕ್ಷಿಣದ ಬಿಂದುಗಳೆಂದು ರಾಹು ಹಾಗೂ ಕೇತುವನ್ನು ಗುರುತಿಸಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ರಾಹುವಿನ ತಲೆ ಕಡಿದ ಬಳಿಕ ಆತ ಸೂರ್ಯ ದೇವರ ಪಥಕ್ಕೆ ಅಡ್ಡಿಯುಂಟು ಮಾಡಿದ. ಇದರಿಂದಾಗಿ ಭೂಮಿ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಂಡವು. ಈ ವೇಳೆ ಋಷಿಮುನಿಗಳಾದ ಅತ್ರಿ ಅವರು ನೆರವಿಗೆ ಬರುವರು. ತನ್ನ ದೈವಿಶಕ್ತಿ ಬಳಸಿಕೊಂಡು ಅವರು ರಾಹುವನ್ನು ಸೂರ್ಯನ ಪಥದಿಂದ ತೆಗೆಯುವರು ಮತ್ತು ಭೂಮಿ ಮೇಲೆ ಸೂರ್ಯನ ಬೆಳಕು ಬೀಳುವಂತಾಗುವುದು. ಈ ದಿನವನ್ನು ಮೊದಲ ಸೂರ್ಯಗ್ರಹಣದ ದಿನವೆನ್ನಲಾಗುತ್ತದೆ. ಇದು ರಾಹು ಮತ್ತು ಕೇತು ಅಮರತ್ವ ಪಡೆದ ಕಥೆಯಾಗಿದೆ. ಸೂರ್ಯಗ್ರಹಣವನ್ನು ರಾಹು ಮತ್ತು ಕೇತುವಿನ ಜನ್ಮ ದಿನವೆನ್ನಲಾಗುತ್ತದೆ.
OSCAR-2019
ಮುಂಬಯಿ, ಜು.28: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ, ಅಸೋಸಿಯೇ ಶನ್‍ನ ಪ್ರಪ್ರಥಮ ಚೆಂಬೂರು ಸ್ಥಳೀಯ ಸಮಿತಿಯ ಸ್ಥಾಪಕ ರೂವಾರಿಯಲ್ಲೋರ್ವ, ರಾಜು ವೆಂಕಪ್ಪ ಅವಿೂನ್ ಹೆಸರಾಂತ ಆರ್.ವಿ ಅವಿೂನ್ (91.) ಇದಿಲ್ಲಿ ಗುರುವಾರ ಬೆಳಿಗ್ಗೆ ವೃದ್ಧಾಪ್ಯದಿಂದ ಉಪನಗರ ಘಾಟ್ಕೋಪರ್ ಪೂರ್ವದ ಗರೋಡಿ ನಗರದ ಯೋಗೇಶ್ವರ್ ಬಿಲ್ಡಿಂಗ್‍ನ ಸ್ವನಿವಾಸದಲ್ಲಿ ನಿಧನರಾದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಲಿಮಾರು ನಡಿಕೊಪ್ಪಲ ಮೂಲತಃ ಆರ್‍ವಿ ಬಿಲ್ಲವರ ಅಸೋಸಿಯೇಶನ್‍ನ ಕಾರ್ಯಕಾರಿ ಸಮಿತಿಯಲ್ಲಿ ಸಕ್ರೀಯರಾಗಿದ್ದು 1955-57ರ ಅವಧಿಯಲ್ಲಿ ಗೌ| ಪ್ರ| ಕಾರ್ಯದರ್ಶಿ ಆಗಿ 1964ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾರತ್ ಬ್ಯಾಂಕ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್‍ನ ಪರ್ಸನಲ್ ಮೇನೆಜರ್ ಆಗಿ ದುಡಿದು ನಿವೃತ್ತರಾಗಿದ್ದರು. ಭಾರತ್ ಬ್ಯಾಂಕ್‍ನ ಶತ ಶಾಖೆಯ ಸಂಭ್ರಮದಲ್ಲಿ ಬ್ಯಾಂಕ್ ಮಂಡಳಿ, ಉನ್ನತಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಆರ್‍ವಿರನ್ನು ಸನ್ಮಾನಿಸಿದ್ದರು. ಅಸೀಮ ಛಲವಾದಿ, ಅವಿರತ ಪರಿಶ್ರಮದಿಂದ ಸುಸಂಸ್ಕೃತ ಸಭ್ಯ, ಸದೃಹಸ್ಥನಾಗಿ ಜೀವನ ರೂಪಿಸಿ ಸಮಾಜದ ಏಳಿಗೆಗಾಗಿ ನಿಷ್ಠಾವಂತರಾಗಿ ಶ್ರಮಿಸಿದ್ದÀರು. ಸಮಾಜವಾದಿಯಾಗಿದ್ದು ಜನಾನುರಾಗಿದ್ದ ಮೃತರು ಪತ್ನಿ ಶಾಂತಿ, ಪುತ್ರ ನವೀನ್‍ಚಂದ್ರ, ಪುತ್ರಿ ವಿಜಯಲಕ್ಷಿ ್ಮೀ ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ಆರ್.ವಿ ಅವಿೂನ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು, ನಿಕಟ ಪೂರ್ವಾಧ್ಯಕ್ಷ ಎಲ್.ವಿ.ಅವಿೂನ್, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕ ಮಂಡಳಿ, ಸೂರು ಸಿ.ಕರ್ಕೇರ, ಕೆ. ಭೋಜರಾಜ್, ಬಿಸಿಸಿಐ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಸೇರಿದಂತೆ ಅನೇಕರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು (ಜು.28) ಗುರುವಾರÀ ಅಪರಾಹ್ನ 3.00 ಗಂಟೆಗೆ ಗರೋಡಿ ನಗರದ ರುದ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮತ್ತು ಚೆಂಬೂರು ಹಾಗೂ ಇತರ ಸ್ಥಳೀಯ ಸಮಿತಿ ಇದರ ಪದಾಧಿಕಾರಿಗಳು, ಸದಸ್ಯರನೇಕರು, ಭಾರತ್ ಬ್ಯಾಂಕ್‍ನ ಉನ್ನತಾಧಿಕಾರಿಗಳು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.
OSCAR-2019
ಕಾಂಡೋಮ್ ಎನ್ನುವ ಪದ ಕೇಳಿದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಬರುವುದು ಗರ್ಭಧಾರಣೆ ತಡೆಗಟ್ಟಲು, ಲೈಂಗಿಕ ರೋಗಗಳು ಬರೆದಂತೆ ಬಳಕೆ ಮಾಡಲಾಗುವುದು ಎಂದು. ಆದರೆ ಕಾಂಡೋಮ್ ನ್ನು ಇತರ ಕೆಲವು ಉಪಯೋಗಕ್ಕೂ ಬಳಸಬಹುದು ಎಂದು ನೀವು ಕೇಳಿದರೆ ಆಗ ಅಚ್ಚರಿಯಾಗಬಹುದು. ಇದು ಸ್ವಲ್ಪ ಮಟ್ಟಿಗೆ ವಿಚಿತ್ರವೆಂದು ನಿಮಗನಿಸಿದರೂ ಕೂಡ ಕಾಂಡೋಮ್ ನಿಂದ ಆಗುವಂತಹ ಕೆಲವೊಂದು ಉಪಯೋಗಗಳ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಕಾಂಡೋಮ್ ನ್ನು ಕೆಲವರು ಎಷ್ಟು ವಿಚಿತ್ರವಾಗಿ ಉಪಯೋಗಿಸಿಕೊಳ್ಳುವರು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಂಡರೆ ಆಗ ನೀವು ಮೂಗಿನ ಮೇಲೆ ಬೆರಳಿಡುವಿರಿ. ಅಂತಹ ಉಪಯೋಗಗಳು ಯಾವುದು ಎಂದು ತಿಳಿಯಿರಿ... ಅಯ್ಯೋ ಕಾಂಡೋಮ್ ನಿಂದ ಒತ್ತಡ ಹೇಗೆ ನಿವಾರಿಸಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬರುವುದು ಸಹಜ. ಆದರೆ ಇದು ನಿಜ. ಕಾಂಡೋಮ್ ನೊಳಗೆ ಹಿಟ್ಟು ತುಂಬಿಕೊಂಡು ಇದನ್ನು ಒತ್ತಡ ನಿವಾರಕ ಚೆಂಡಾಗಿ ಪರಿವರ್ತಿಸಬಹುದು. ಸ್ವಲ್ಪ ಪ್ರಮಾಣದಲ್ಲಿ ಕಾಂಡೋಮ್ ನೊಳಗಡೆ ಹಿಟ್ಟು ಹಾಕಿಕೊಳ್ಳಿ ಮತ್ತು ಇದನ್ನು ಹಿಚುಕಿಕೊಳ್ಳುವ ಮೂಲಕ ಒತ್ತಡ ಕಡಿಮೆಯಾಗುವುದು. ನಿಮಗೇನು ತಲೆ ಕೆಟ್ಟಿದೆಯಾ ಎಂದು ಕೇಳಬಹುದು. ಆದರೆ ನೀವು ಮೇಕಪ್ ಮಾಡಿಕೊಳ್ಳುವಾಗ ಕಾಂಡೋಮ್ ನ್ನು ಬಳಸಬಹುದು. ಮೇಕಪ್ ಸ್ಪಾಂಜ್ ಹೆಚ್ಚು ಹೀರಿಕೊಳ್ಳುತ್ತಿದೆ ಎಂದು ನಿಮಗನಿಸಿದರೆ ಆಗ ನೀವು ಇದನ್ನು ಕಾಂಡೋಮ್ ನ ಒಳಗಿಟ್ಟುಕೊಂಡು ಫೌಂಡೇಶನ್ ನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಇದರ ಬಗ್ಗೆ ಯೋಚಿಸಿರುವವರು ತುಂಬಾ ಕ್ರಿಯಾತ್ಮಕವಾದ ಆಲೋಚನೆಗಳನ್ನು ಹೊಂದಿರುವವರು ಅಥವಾ ಪ್ರಯೋಗಗಳನ್ನು ಮಾಡುತ್ತಲೇ ಇರುವವರು ಆಗಿರಬೇಕು. ನಮಗಿದು ತುಂಬಾ ವಿಚಿತ್ರವೆಂದು ಅನಿಸಿದರೂ ಸಹಿತ ಇಂಟರ್ ನೆಟ್ ನಲ್ಲಿ ಇದು ತುಂಬಾ ಸಮಯದಿಂದ ಹರಿದಾಡುತ್ತಿದೆ. ನಮ್ಮ ಮೇಲೆ ನಂಬಿಕೆ ಇಲ್ಲದೆ ಇದ್ದರೆ ಗೂಗಲ್ ನಲ್ಲಿ ಶೋಧ ಮಾಡಿಕೊಳ್ಳಿ. ಕಾಂಡೋಮ್ ನಲ್ಲಿ ನೀರು ತುಂಬಿಕೊಂಡು ಅದನ್ನು ಐಸ್ ಮಾಡಿಕೊಳ್ಳಿ ಮತ್ತು ಕಿರಿಕಿರಿ ವೇಳೆ ಇದನ್ನು ಬಳಸಿಕೊಳ್ಳಿ. ಯಾಕೆಂದರೆ ಗಾತ್ರವು ಈ ಭಾಗದಲ್ಲಿ ಸರಿಯಾಗಿ ಕುಳಿತುಕೊಳ್ಳುವುದು. ನೀವು ಕಾಂಡೋಮ್ ನ್ನು ತುಂಬಾ ವಿಚಿತ್ರವಾಗಿ ಬಳಕೆ ಮಾಡುವ ವಿಧಾನವಿದು. ಮುಚ್ಚಳ ತೆರೆಯಲು ತುಂಬಾ ಕಷ್ಟವಾಗುವಂತಹ ಡಬ್ಬಕ್ಕೆ ನೀವು ಕಾಂಡೋಮ್ ನ್ನು ಕತ್ತರಿಸಿಕೊಂಡು ಇದರ ಮೇಲ್ಭಾಗವನ್ನು ಬಳಸಿಕೊಂಡರೆ ಮುಚ್ಚಳ ಹೊರಗೆ ಬರುವುದು. ಕಾಂಡೋಮ್ ನಲ್ಲಿ ಎಣ್ಣೆಯಂಶ ಇರಬಾರದೆಂದು ನೀವು ದೃಢಪಡಿಸಿಕೊಳ್ಳಿ. ಕಾಂಡೋಮ್ ನ್ನು ತೊಳೆದುಕೊಂಡ ಬಳಿಕ ನೀವು ಇದರ ಉಪಯೋಗ ಮಾಡಬಹುದು. ಇದು ಸ್ವಲ್ಪ ವಿಚಿತ್ರ ಅನಿಸಿದರೂ ಮೊಬೈಲ್ ಒದ್ದೆಯಾಗದಂತೆ ಮಾಡಲು ನೀವು ಕಾಂಡೋಮ್ ಬಳಸಿಕೊಳ್ಳಿ. ದುಬಾರಿ ವಾಟರ್ ಪ್ರೂಫ್ ಕವರ್ ಬಳಸುವ ಬದಲು ಇದು ತುಂಬಾ ಅಗ್ಗ ಹಾಗೂ ಇದನ್ನು ಹಾಕಿಕೊಂಡೇ ಮೊಬೈಲ್ ಬಳಸಬಹುದು. ಆದರೆ ಕಾಂಡೋಮ್ ಮೇಲಿನ ಎಣ್ಣೆಯಂಶ ತೆಗೆದು ಬಳಸಿಕೊಳ್ಳಿ. ಏಯ್ ಹೋಗ್ರೀ ಎಂದು ನೀವು ಇದನ್ನು ಅರ್ಧದಲ್ಲೇ ಓದುವುದನ್ನು ನಿಲ್ಲಿಸಿಬಿಡಬೇಡಿ. ಆದರೆ ನಿಜವಾಗಿಯೂ ವೈನ್ ತಯಾರಿಸಲು ಬಳಸಬಹುದು. ಈಸ್ಟೆವೆಜ್ ಎಂಬ ವ್ಯಕ್ತಿಯೊಬ್ಬ ವೈನ್ ತಯಾರಿಕಾ ಘಟಕಗಳಲ್ಲಿ ಕಾಂಡೋಮ್ ಬಳಕೆ ಮಾಡುತ್ತಾನೆ. ಈತ ಮೊದಲು ಗಾಜಿನ ಡಬ್ಬದಲ್ಲಿ ದ್ರಾಕ್ಷಿ, ಶುಂಠಿ ಮತ್ತು ದಾಸವಾಳ ಹಾಕಿಕೊಳ್ಳುತ್ತಾನೆ. ಇದರ ಬಳಿಕ ಡಬ್ಬದ ಮೇಲ್ಭಾಗದಿಂದ ಕೆಳಭಾಗದ ತನಕ ಕಾಂಡೋಮ್ ನ್ನು ಜಾರಿಸಿ ಮುಚ್ಚುತ್ತಾನೆ. ಹುದುಗುವಿಕೆ ನಡೆದಾಗ ಉಂಟಾಗುವ ಗ್ಯಾಸ್ ಕಾಂಡೋಮ್ ನ್ನು ಹಿಗ್ಗಿಸುವುದು. ಇದರಿಂದ ಹುದುಗುವಿಕೆ ನಡೆದಿದೆ ಮತ್ತು ವೈನ್ ತಯಾರಾಗಿದೆ ಎಂದು ತಿಳಿಯಬಹುದು. ಇದನ್ನು ಕೇಳಿ ನಿಮಗೆ ಆಘಾತವಾದರೂ ಚೇತರಿಸಿಕೊಂಡು ಓದಿ. ಕಾಂಡೋಮ್ ನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಾಗ ಅದನ್ನು ಬೆಂಕಿ ಹಚ್ಚಿಸಲು ಬಳಸಬಹುದು. ನೀವು ಕಾಂಡೋಮ್ ನ್ನು ಹಾಗೆ ಒಣ ಕೊಂಬೆ ಅಥವಾ ಎಲೆಗಳ ಮೇಲೆ ಹೊಡೆದಾಗ ಅದು ತನ್ನಷ್ಟಕ್ಕೆ ಬೆಂಕಿ ಹಚ್ಚಿಕೊಳ್ಳುವುದು. ಯಾಕೆಂದರೆ ಕಾಂಡೋಮ್ ನ್ನು ಉರಿದುಕೊಳ್ಳುವುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣದ ಮೂಲಕ ಕೆಲವು ಸ್ಪರ್ಧೆಗಳು ನಡೆಯುವ ಬಗ್ಗೆ ತಿಳಿಯುತ್ತಿದೆ ಹಾಗೂ ಇವುಗಳಲ್ಲಿ ಹೆಚ್ಚಿನವು ವಿಚಿತ್ರವಾಗಿಯೂ ಅಪಾಯಕಾರಿಯಾಗಿಯೂ ಇರುತ್ತದೆ. ಬ್ಲೂ ವೆಲ್ ಗೇಮ್, ಐಸ್ ಬಕೆಟ್ ಚಾಲೆಂಜ್ ಮೊದಲಾದವು ಜಗತ್ತಿನ ಪಾಲಕರ ನಿದ್ದೆಗೆಡಿಸಿದರೆ ಇಂತಹದ್ದೇ ಇನ್ನೊಂದು ವ್ಯಸನಕಾರಿ ಆಟವೊಂದು ಬಂದಿದೆ. ಅದೇ ಸ್ನಾರ್ಟಿಂಗ್ ಕಾಂಡೋಮ್ ಚಾಲೆಂಜ್ ಅಥವಾ ಕಾಂಡೋಂ ಅನ್ನು ಮೂಗಿನಲ್ಲಿ ತೂರಿಸಿ ಗುಟುರು ಹಾಕುವುದು! ನಂಬಲರ್ಹ ಮೂಲಗಳ ಪ್ರಕಾರ ಈ ಆಟವನ್ನು 1993ರ ಅಕ್ಟೋಬರ್ ನಂದು ಪ್ರಥಮವಾಗಿ ಆಡಲಾಯಿತು. ಅಂದು ಕೆಂಟ್ ವಿಶ್ವವಿದ್ಯಾಲಯದ ಆಂತರಿಕ ವೃತ್ತಪತ್ರಿಕೆಯಲ್ಲಿ "ಜಿಂ ರೋಸ್ ಸರ್ಕಸ್ ಸೈಡ್ ಶೋ" ಎಂಬ ಕಾರ್ಯಕ್ರಮದ ಬಗ್ಗೆ ಪ್ರಕಟವಾಗಿತ್ತು. ಈ ಪ್ರದರ್ಶನದಲ್ಲಿ ಜಿಂ ಎಂಬುವನ್ನು ಕಾಂಡೋಂ ಒಂದನ್ನು ಮೂಗಿನಿಂದ ಒಳಗೆಳೆದುಕೊಂಡು ಬಾಯಿಯಿಂದ ಹೊರಬಿಡುತ್ತಾರೆ ಎಂದು ಪ್ರಕಟಿಸಲಾಗಿತ್ತು. ಕಾಂಡೋಮ್‌ನ ಪ್ಯಾಕೇಟ್ ಅನ್ನು ತುಂಬಾ ಬಲ ಪ್ರಯೋಗ ಮಾಡಿ ತೆಗೆಯಲು ಪ್ರಯತ್ನಿಸಬಾರದು. ಅದರಲ್ಲೂ ಬಾಯಿಯಲ್ಲಿ ಕಚ್ಚಿ ಕಾಂಡೋಮ್ ಪ್ಯಾಕೇಟ್ ಹೊಡೆದರೆ ಆಗ ಕಾಂಡೋಮ್ ನಲ್ಲಿ ತೂತು ಬೀಳುವ ಸಾಧ್ಯತೆಗಳು ಇವೆ. ಇದರಿಂದ ಅನಿರೀಕ್ಷಿತವಾಗಿ ಗರ್ಭಧಾರಣೆ ಸಂಭವವಿದೆ. ಕಾಂಡೋಮ್ ಬಳಸಿ ಗುಟುರು ಹಾಕುವ ಸ್ಪರ್ಧೆ ಈಗ ಹಲವರ ಗಮನ ಸೆಳೆದಿದ್ದು ಚಿಕ್ಕ ಮಕ್ಕಳೂ ಈ ಕ್ರಿಯೆಯನ್ನು ನಡೆಸಿ ತಮ್ಮ ವಿಡಿಯೋಗಳನ್ನು ಪ್ರಕಟಿಸುತ್ತಿದ್ದಾರೆ. ಮೂಗಿನ ಒಂದು ಹೊಳ್ಳೆಯಿಂದ ತೆರೆದ ಕಾಂಡೋ ಒಂದನ್ನು ಒಳಗೆಳೆದುಕೊಳ್ಳುತ್ತಾರೆ ಹಾಗೂ ಬಳಿಕ ಗಂಟಲಿನಲ್ಲಿ ಬೆರಳು ಹಾಕಿ ಒಳಗಿನಿಂದ ಎಳೆದು ಬಾಯಿಯ ಮೂಲಕ ಹೊರಗೆಳೆದುಕೊಳ್ಳಲಾಗುತ್ತದೆ.ಈ ಸ್ಪರ್ಧೆಯನ್ನು ಗಮನಿಸಿದ ವಿಶ್ವದ ಹಲವು ಆರೋಗ್ಯ ತಜ್ಞರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯುವಜನತೆಯನ್ನು ಈ ಆಟದಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ. ಏಕೆಂದರೆ ಈ ಪರಿಯಾಗಿ ರಬ್ಬರ್ ಒಳಗೆಳೆದುಕೊಂಡರೆ ಇದು ಆ ವ್ಯಕ್ತಿಯ ಮೂಗಿನ ವಾಯುಮಾರ್ಗದಲ್ಲಿ ತಡೆಯುಂಟುಮಾಡಬಹುದು ಹಾಗೂ ಉಸಿರಾಟವನ್ನು ಸ್ಥಗಿತಗೊಳಿಸಬಹುದು. ಸ್ವಾಭಾವಿಕವಾಗಿ ಉತ್ತಮ ಗುಣಮಟ್ಟ ಪಡೆಯಲು ಉತೃಷ್ಟ ಕಚ್ಚಾವಸ್ತುಗಳು ಹಾಗೂ ಆಧುನಿಕ ತಂತ್ರಜ್ಞಾನ, ದುಬಾರಿ ಯಂತ್ರಗಳ ಬಳಕೆಯಾಗುವುದರಿಂದ ಕೊಂಚ ಬೆಲೆ ದುಬಾರಿಯಾಗಿರುವುದು ಸಹಜ. ಆದರೆ ಈ ಬೆಲೆ ಅನೈಚ್ಛಿಕವಾಗಿ ಗರ್ಭಧಾರಣೆಯಿಂದ ಎದುರಾಗುವ ಖರ್ಚುಗಳನ್ನು ಪರಿಗಣಿಸಿದರೆ ಈ ಬೆಲೆ ತೃಣಮಾತ್ರ. ಹಲವು ಧರ್ಮಗಳಲ್ಲಿ ಗರ್ಭಾಪಾತಕ್ಕೆ ಅನುಮತಿಯಿಲ್ಲದ ಕಾರಣ ಶಿಶುವಿನ ಲಾಲನೆ ಪಾಲನೆ, ಶೈಕ್ಷಣಿಕ ಖರ್ಚುಗಳು ದಂಪತಿಯರ ಗಳಿಕೆಯ ಮೇಲೆ ನೇರ ಪರಿಣಾಮ ಬೀರುವುದರಿಂದ ಕಾಂಡೋಮ್ ಕೊಳ್ಳಲು ಹಣ ಉಳಿಸುವ ಉಸಾಬರಿ ಬೇಡ. ಕಾಂಡೋಮ್ ನ್ನು ಇನ್ನು ಯಾವ ರೀತಿಯಿಂದ ಬಳಸಬಹುದು ಎಂದು ನಿಮಗೆ ತಿಳಿದಿದ್ದರೆ ಆಗ ನಮಗೆ ಕೂಡ ತಿಳಿಯಲು ಅವಕಾಶ ಮಾಡಿಕೊಡಿ. ನಿಮ್ಮ ಬಳಕೆ ಬಗ್ಗೆ ಕಮೆಂಟ್ ಬಾಕ್ಸ್ ಗೆ ಹಾಕಿ.
OSCAR-2019
ನೆಹರೂ ಕಾಲದಿಂದ ಭಾರತವನ್ನು ಬಲ್ಲವರಾಗಿದ್ದ ಕುಲದೀಪ್ ನಯ್ಯರ್ ಹೊಸ ಭಾರತದ ಇತಿಹಾಸ ಅನುದಿನದ ಆಗುಹೋಗುಗಳಲ್ಲಿ ರಚನೆಯಾದ ಕ್ರಮವನ್ನು ಸಮೀಪದಿಂದ ಕಂಡು ಗ್ರಹಿಸಿದವರು. ವರದಿಗಾರನಾಗಿ, ಸಂಪಾದಕನಾಗಿ, ಅಂಕಣಕಾರನಾಗಿ, ಲೇಖಕನಾಗಿ ಅದನ್ನು ಸಮಕಾಲೀನ ಭಾರತಕ್ಕೆ ಮಾತ್ರವಲ್ಲದೆ ಮುಂದಿನ ಪೀಳಿಗೆಗಳಿಗೆ ದಾಖಲಿಸಿದವರು. ನವ ಭಾರತದ ಆತ್ಮಸಾಕ್ಷಿ ಎಂದೂ ಅವರನ್ನು ಕರೆಯಲಾಗುತ್ತಿತ್ತು. ನಯ್ಯರ್ ಅವರು ತುರ್ತುಪರಿಸ್ಥಿತಿ ಹೇರಿಕೆಯ ಪ್ರಬಲ ವಿರೋಧಿಯಾಗಿದ್ದರು. ಇಂದಿರಾಗಾಂಧಿ ಅವರಿಗೆ ವೈಯಕ್ತಿಕವಾಗಿ ಪರಿಚಿತರಾಗಿದ್ದರೂ, ಕರಾಳ ತುರ್ತುಪರಿಸ್ಥಿತಿ ಘೋಷಣೆಯ ನಂತರ ಜೈಲು ಪಾಲಾದಾಗ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕರಾಗಿದ್ದರು. 1980ರಲ್ಲಿ ಇಂದಿರಾ ಪುನಃ ಸರ್ಕಾರ ರಚಿಸಿದಾಗ ಅವರ ಆಕ್ರೋಶಕ್ಕೆ ಗುರಿಯಾಗಿದ್ದರು. ಸಂಪಾದಕ ಸ್ಥಾನ ತೊರೆಯಬೇಕಾಯಿತು. ಅಮೃತಸರದ ಸ್ವರ್ಣಮಂದಿರದಿಂದ ಸಿಖ್ ಉಗ್ರರನ್ನು ಹೊರಹಾಕಲು ಇಂದಿರಾ ನಡೆಸಿದ ‘ಆಪರೇಷನ್ ಬ್ಲೂ ಸ್ಟಾರ್’ ಅವಸರದ ನಿರ್ಣಯ ಎಂದು ವಿಮರ್ಶಿಸಿದ್ದರು. ‘ಜನತಂತ್ರದ ದೀಪಗಳನ್ನು ನಂದಿಸಿದ ಇಂದಿರಾ, ದೇಶದ ಜನರನ್ನು ಪೊಲೀಸ್ ರಾಜ್ಯದ ಕತ್ತಲಲ್ಲಿ ತಡಕಾಡುವಂತೆ ಮಾಡಿದರು’ ಎಂದು ತುರ್ತುಪರಿಸ್ಥಿತಿಯನ್ನು ಟೀಕಿಸಿದ್ದರು. ಇಂದಿರಾ-ಸಂಜಯ್ ಜೋಡಿ ಭೀತಿಯ ವಾತಾವರಣ ಮೂಡಿಸಿದ್ದನ್ನು ಖಂಡಿಸಿದ್ದರು. ಪಂಜಾಬಿನ ರಕ್ತಸಿಕ್ತ ಬಯಲುಗಳನ್ನು ಹಾದು ದೆಹಲಿ ತಲುಪಿದ ಅವರ ಭಯ ಯಾತನೆಭರಿತ ಪಯಣದ ನಂತರ, ಯುವಪತ್ರಕರ್ತನಾಗಿ ‘ಅಂಜಾಮ್’ ಎಂಬ ಉರ್ದು ದಿನಪತ್ರಿಕೆಯೊಂದನ್ನು ಸೇರಿದ್ದು ಅವರ ಮೊಟ್ಟ ಮೊದಲ ಉದ್ಯೋಗ. ಅಂಜಾಮ್‌ನ ಅರ್ಥ ಅಂತ್ಯ ಅಥವಾ ಕೊನೆ. ‘ಅಂತ್ಯದಲ್ಲಿ ಆರಂಭಿಸಿದವನು ನಾನು’ ಎಂದು ಅವರು ನಗೆಯಾಡುತ್ತಿದ್ದರು. ‘ಅಂಜಾಮ್’ ತೊರೆದು ಯು.ಎನ್.ಐ. ಸುದ್ದಿ ಸಂಸ್ಥೆ ಸೇರಿದರು. ಸ್ಟೇಟ್ಸ್‌ಮನ್ ಪತ್ರಿಕೆಯ ಸಂಪಾದಕರಾಗಿದ್ದರು. ಪತ್ರಿಕಾ ಸ್ವಾತಂತ್ರ್ಯದ ಪ್ರಖರ ಪ್ರತಿಪಾದಕರಾಗಿದ್ದ ಅವರ ಪ್ರಸಿದ್ಧ ಅಂಕಣ ‘ಬಿಟ್ವೀನ್ ದಿ ಲೈನ್ಸ್’ ಅಪಾರ ಓದುಗ ವರ್ಗವನ್ನು ಗಳಿಸಿತ್ತು. ಭಾರತ- ಪಾಕಿಸ್ತಾನ, ಬಾಂಗ್ಲಾದೇಶ, ದುಬೈ, ಅಮೆರಿಕದ 14 ಭಾಷೆಗಳ, 75ಕ್ಕೂ ಹೆಚ್ಚು ಪತ್ರಿಕೆಗಳಲ್ಲಿ ಅವರ ಅಂಕಣ ಪ್ರಕಟವಾಗುತ್ತಿತ್ತು. ಅವರು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹದ ದಿ ಪ್ರಿಂಟರ್ಸ್ (ಮೈಸೂರು) ಲಿಮಿಟೆಡ್‌ನ ನಿರ್ದೇಶಕ ಮಂಡಳಿಯ ಸದಸ್ಯರಾಗಿದ್ದರು. ಪ್ರಜಾವಾಣಿಯಲ್ಲಿ ಅವರು ಬರೆಯುತ್ತಿದ್ದ ‘ಅಂತರಂಗ’ ಎಂಬ ಅಂಕಣ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. ನಯ್ಯರ್ ಅವರ ಜೀವನಯಾನ ಭಾರತದ ಕತೆಯೂ ಹೌದು ಎಂದು 2012ರಲ್ಲಿ ಪ್ರಕಟವಾದ ಅವರ ಆತ್ಮಚರಿತ್ರೆಯ (ಬಿಯಾಂಡ್ ದಿ ಲೈನ್ಸ್) ಮುನ್ನುಡಿಯಲ್ಲಿ ಬಣ್ಣಿಸ ಲಾಗಿದೆ. ರಾತ್ರೋರಾತ್ರಿ ಗೆರೆ ಎಳೆದು ಒಂದು ದೇಶವನ್ನು ಎರಡಾಗಿ ಹರಿದು ಹಂಚಿದ ವೇದನೆ- ಸಂಕಟ ಈ ಪುಸ್ತಕದ ಪುಟಗಳಲ್ಲಿ ತುಂಬಿ ಹರಿದಿದೆ. ಇಪ್ಪತ್ತು ವರ್ಷಗಳ ಕಾಲ ಬರೆದ ಈ ಆತ್ಮಕತೆಯನ್ನು ಇಂಗ್ಲಿಷ್‌ನಿಂದ ಹಿಂದಿ (ಏಕ್ ಝಿಂದಗೀ ಕಾಫೀ ನಹೀ) ಮತ್ತು ಕನ್ನಡ (ಒಂದು ಜೀವನ ಸಾಲದು) ಸೇರಿದಂತೆ ಇತರೆ ಭಾರತೀಯ ಭಾಷೆಗಳಿಗೆ ಅನುವಾದಿಸಲಾಯಿತು. ತುರ್ತುಪರಿಸ್ಥಿತಿ ಹೇರಿಕೆಯ ಪರದೆಯ ಹಿಂದಿನ ಕತೆಯನ್ನು ಬಿಡಿಸಿಟ್ಟಿದ್ದ ‘ದಿ ಜಡ್ಜ್ ಮೆಂಟ್- ಇನ್ಸೈಡ್ ಸ್ಟೋರಿ ಅಫ್ ದಿ ಎಮರ್ಜೆನ್ಸಿ’ ಅವರು ಬರೆದ ಬಹು ಪ್ರಸಿದ್ಧ ಪುಸ್ತಕಗಳಲ್ಲೊಂದು. ಇಂಡಿಯಾ ಆಫ್ಟರ್ ನೆಹರೂ, ವಾರ್ ಅಟ್ ವಾಘಾ, ದಿ ಸ್ಕೂಪ್, ದಿ ಲೈಫ್‌ ಅಂಡ್ ಟ್ರಯಲ್ ಆಫ್ ಭಗತ್ ಸಿಂಗ್ ಮುಂತಾದ 15ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಮೂರು ವರ್ಷಗಳ ಹಿಂದೆ ಬರೆದಿದ್ದ ಲೇಖನವೊಂದರಲ್ಲಿ ‘ಮುದ್ರಣ ಮತ್ತು ಎಲೆಕ್ಟ್ರಾನಿಕ್ ಸಮೂಹ ಮಾಧ್ಯಮಗಳನ್ನು ಮೆದು ಹಿಂದುತ್ವ ಆವರಿಸುತ್ತಿರುವ ಇತ್ತೀಚಿನ ವರ್ಷಗಳ ಬೆಳವಣಿಗೆ’ ಕುರಿತು ವ್ಯಥೆಯನ್ನು ಪ್ರಕಟಿಸಿದ್ದರು. ದೆಹಲಿಯಲ್ಲಿ ನಡೆಯುತ್ತಿದ್ದ ಕವಿತಾ ವಾಚನಗಳಲ್ಲಿ ತಪ್ಪದೆ ಕಾಣುತ್ತಿದ್ದ ಮುಖ ಅವರದು. ಯುದ್ಧಗಳು, ತುರ್ತು ಪರಿಸ್ಥಿತಿಯಂತಹ ಸಂಕೀರ್ಣ ಕಾಲಘಟ್ಟಗಳ ವಿದ್ಯಮಾನಗಳನ್ನು ಸಮೀಪದಿಂದ ವರದಿ ಮಾಡಿದ್ದ ಹೆಗ್ಗಳಿಕೆ ಅವರದು. ನೆಹರೂ, ಶಾಸ್ತ್ರಿ, ಇಂದಿರಾ ಸರ್ಕಾರಗಳ ವೈಖರಿಯನ್ನು ಹತ್ತಿರದಿಂದ ಗ್ರಹಿಸಿ ಒಳಿತು ಕೆಡುಕುಗಳನ್ನು ಗುರುತಿಸಿದ್ದರು. ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪತ್ರಿಕಾ ಸಲಹೆಗಾರರಾಗಿ ಪ್ರವಾಸ ಮಾಡಿದ್ದ ಅವರು ತಾಷ್ಕೆಂಟ್ ಸಂಧಿಗೆ ಸಾಕ್ಷಿಯಾಗಿದ್ದರು. ಶಾಸ್ತ್ರಿ ನಿಧನರಾದ ಅದೇ ಹೋಟೆಲ್‌ನಲ್ಲಿ ತಂಗಿದ್ದ ನಯ್ಯರ್, ಈ ವಿಷಯ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯುತ ಸಂಬಂಧಗಳಿಗಾಗಿ ಸದಾ ಶ್ರಮಿಸಿದರು. ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನಗಳಂದು ಉಭಯ ದೇಶಗಳ ಅಟ್ಟಾರಿ- ವಾಘಾ ಗಡಿ ಭಾಗದಲ್ಲಿ ಕಳೆದ ಹದಿನೇಳು ವರ್ಷಗಳಿಂದ ಶಾಂತಿ ಕೋರಿ ಮೇಣದಬತ್ತಿ ಬೆಳಗಿಸುವ ಗೆಳೆ ಯರ ಸಮೂಹದ ನೇತೃತ್ವ ವಹಿಸುತ್ತ ಬಂದಿದ್ದರು. ಪಾಕಿಸ್ತಾನ ಅಣ್ವಸ್ತ್ರ ಹೊಂದಿದೆ ಎಂಬುದನ್ನು ಅಲ್ಲಿನ ಅಣು ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ಅವರನ್ನು ಸಂದರ್ಶಿಸಿ ಬಯಲು ಮಾಡಿದ್ದರು. ತಮ್ಮ ಆತ್ಮಸಾಕ್ಷಿಯ ದನಿಯನ್ನು ಅನುಸರಿಸಿದ ಈ ಪತ್ರಕರ್ತ ಹಣ ಮತ್ತು ಖ್ಯಾತಿಯ ಸೆಳೆತಕ್ಕೆ ಒಳಗಾಗಲಿಲ್ಲ..ಕೋಮು ಸಾಮರಸ್ಯಕ್ಕೆ ಅವರ ಬದ್ಧತೆ, ವೃತ್ತಿಪರತೆ, ಪ್ರಾಮಾಣಿಕತೆ ಹಾಗೂ ತುರ್ತುಪರಿಸ್ಥಿತಿಯಲ್ಲಿ ತೋರಿದ ದಿಟ್ಟತನ ಎಂದೆಂದಿಗೂ ಹೊಳೆಯುವ ಗುಣಗಳು ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.
OSCAR-2019
ಉತ್ತರಕನ್ನಡ : ಬೈಕ್ ಮತ್ತು ಟೆಂಪೋ ನಡುವೆ ಅಪಫಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲ್ಲಿ ಸಾವನ್ನಪ್ಪಿದ್ದಾರೆ. ಭಟ್ಕಳ ತಾಲೂಕಿನ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಘಟನೆ ನಡೆದಿದೆ. ಮೃತ ಮಂಜುನಾಥ ಬಸನಗೌಡ, ಹನುಮಂತ ಕಲ್ಲಪ್ಪ ವಾಲೇಕರ ಧಾರವಾಡ ಮೂಲದವರು. ಉಡುಪಿಯಿಂದ ಕಲಘಟಗಿಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಮುರ್ಡೇಶ್ವರದಿಂದ ಭಟ್ಕಳ ಕಡೆ ಟೆಂಪೋ ಬರುತ್ತಿತ್ತು. ಮುರ್ಡೇಶ್ವರ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.
OSCAR-2019
ಬೆಂಗಳೂರು: ‘ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನೌಕರರಿಗೆ ಭವಿಷ್ಯ ನಿಧಿ ಸೌಲಭ್ಯ ನೀಡುವಂತೆ ಯಕ್ಷಗಾನ ಕಲಾವಿದರಿಗೆ ಕ್ಷೇಮನಿಧಿ ನೀಡಲು ಸರ್ಕಾರ ಮುಂದಾಗಬೇಕು’ ಎಂದು ಉದ್ಯಮಿ ದಯಾನಂದ ಪೈ ಮನವಿ ಮಾಡಿದರು.ಕರ್ನಾಟಕ ಕಲಾದರ್ಶಿನಿ ಸಂಸ್ಥೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ‘ಯಕ್ಷ ಸಂಭ್ರಮ- 2011’ ಹಾಗೂ ಡಾ. ಶಿವರಾಮಕಾರಂತ ಪ್ರಶಸ್ತಿ ಮತ್ತು ಎಚ್.ಎಲ್.ಭಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ಮಂಗಳೂರು ವಿಶ್ವವಿದ್ಯಾಲಯದ ಹೆಸರಿನಲ್ಲಿ ಒಂದುಕೋಟಿ ರೂಪಾಯಿ ಮೂಲಧನವನ್ನು ಠೇವಣಿ ಇಡಲು ನಿರ್ಧರಿಸಿದ್ದು ಇದರಿಂದ ಬರುವ ವಾರ್ಷಿಕ ಬಡ್ಡಿಯನ್ನು ಯಕ್ಷಗಾನ ಡಿಪ್ಲೊಮಾ ಹಾಗೂ ಪದವಿ ನೀಡಲು ಕೋರಲಾಗಿದೆ’ ಎಂದು ತಿಳಿಸಿದರು.‘ಬಹುತೇಕ ವಿನಾಶದ ಅಂಚಿಗೆ ತಲುಪಿದ್ದ ಯಕ್ಷಗಾನ ಅನೇಕರ ಒತ್ತಾಸೆಯಿಂದಾಗಿ ಕಳೆದ ಕೆಲವರ್ಷಗಳಿಂದ ಚೇತರಿಕೆಯ ಹಾದಿಯಲ್ಲಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು ಸರ್ಕಾರದ ಪ್ರೋತ್ಸಾಹ ಅಗತ್ಯವಿದೆ’ ಎಂದರು. ‘ಯಶಸ್ಸು ಎನ್ನುವುದು ಕೇವಲ ಗುರಿಯಾಗದೇ ನಿರಂತರಯಾನವಾಗಬೇಕು. ಈ ನಿಟ್ಟಿನಲ್ಲಿ ಕಲಾವಿದರು ನಿರಂತರ ಸಾಧನೆಯಲ್ಲಿ ತೊಡಗಬೇಕು’ ಎಂದು ಅವರು ಕಿವಿಮಾತು ಹೇಳಿದರು.ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಮಾತನಾಡಿ ‘ಯಕ್ಷಗಾನ ಕಲಾವಿದರಿಗೆ ಕಳೆದ ಮೂರು ವರ್ಷಗಳಿಂದ ರೂ ಒಂದು ಸಾವಿರ ಮಾಸಾಶನ ದೊರೆತಿಲ್ಲ. ಇದಕ್ಕಾಗಿ ಸರ್ಕಾರವನ್ನು ಅಕಾಡೆಮಿ ಒತ್ತಾಯಿಸಿದೆ’ ಎಂದು ಹೇಳಿದರು. ‘ಪ್ರಸ್ತುತ ಸಂದರ್ಭದಲ್ಲಿ ಕೇವಲ ಒಂದು ಸಾವಿರ ರೂಪಾಯಿ ಮಾಸಾಶನದಿಂದ ಕಲಾವಿದರ ಬದುಕಿಗೆ ಯಾವುದೇ ಉಪಯೊಗವಾಗುತ್ತಿಲ್ಲ. ಮಾಸಾಶನವನ್ನು ಕನಿಷ್ಠ ಮೂರುವರೆ ಸಾವಿರ ರೂಪಾಯಿಗೆ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.‘ಯಕ್ಷಗಾನ ಕಲೆಗೆ ಮಕ್ಕಳು ಬಹುದೊಡ್ಡ ಆಸ್ತಿಯಾಗಿದ್ದಾರೆ. ಚಿಕ್ಕಂದಿನಲ್ಲೇ ಮಕ್ಕಳು ಯಕ್ಷಗಾನ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಕನಿಷ್ಠ ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆದು ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ’ ಎಂದು ಹೇಳಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಗೀತ ಮತ್ತು ನಾಟಕ ವಿಭಾಗದ ನಿವೃತ್ತ ಉಪ ನಿರ್ದೇಶಕ ಎಚ್.ವಿ. ಕೃಷ್ಣಮೂರ್ತಿ ಮಾತನಾಡಿ ‘ನಶಿಸಿ ಹೋಗುತ್ತಿರುವ ಪ್ರದರ್ಶನ ಕಲೆಗಳನ್ನು ಪೋಷಿಸಲು ಪ್ರೇಕ್ಷಕ ವರ್ಗದ ಆಸಕ್ತಿ ಅತಿ ಮುಖ್ಯವಾಗಿದೆ. ಕಲೆಗೆ ಉತ್ತಮ ವೇದಿಕೆ ದೊರೆತರೆ ಅದು ತಾನೇ ತಾನಾಗಿ ಬೆಳೆಯುತ್ತದೆ’ ಎಂದು ಹೇಳಿದರು. ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಕಲಾವಿದರಾದ ಪುತ್ತೂರು ಶ್ರೀಧರ ಭಂಡಾರಿ ಮತ್ತು ಶ್ರೀಪಾದ ಹೆಗಡೆ ಅವರಿಗೆ ಈ ಸಂದರ್ಭದಲ್ಲಿ ಡಾ. ಶಿವರಾಮಕಾರಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ವೇಷಭೂಷಣ ತಯಾರಕ ಬಾಬುರಾವ್ ಅವರಿಗೆ ಎಚ್.ಎಲ್.ಭಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ರಾವ್, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎಲ್.ಜಗದೀಶ್ ಪೈ, ಮೈತ್ರಿ ಸಮೂಹದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್, ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಯು.ಬಿ.ವೆಂಕಟೇಶ್, ಅಕಾಡೆಮಿ ರಿಜಿಸ್ಟ್ರಾರ್ ಪದ್ಮಜಾ ಕುಮಾರಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಕರ್ನಾಟಕ ಕಲಾದರ್ಶಿನಿ ಬಾಲ ಕಲಾವಿದರಿಂದ ‘ಹೂವಿನ ಕೋಲು ಪ್ರದರ್ಶನ’ ಮತ್ತು ಬಡಗುತಿಟ್ಟು ಶೈಲಿಯ ‘ಮೈಂದ ದಿವಿಜ ಕಾಳಗ’, ತೆಂಕು ತಿಟ್ಟಿನ ಕಲಾವಿದರಿಂದ ‘ವೀರ ಅಭಿಮನ್ಯು’ ಹಾಗೂ ಬಡಗು ತಿಟ್ಟಿನ ಕಲಾವಿದರಿಂದ ‘ಚಂದ್ರಹಾಸ ಚರಿತ್ರ’ ಯಕ್ಷಗಾನ ಪ್ರದರ್ಶನಗಳು ನಡೆದವು.
OSCAR-2019