title
stringlengths
1
95
url
stringlengths
31
125
text
stringlengths
0
216k
ಶಿವಮೊಗ್ಗ
https://kn.wikipedia.org/wiki/ಶಿವಮೊಗ್ಗ
ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ). ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ. thumb|ಮಹಿಷ ಮರ್ಧಿನಿ - ಶಿವಪ್ಪನಾಯಕನ ಅರಮನೆಯ ಹಿಂಭಾಗದಲ್ಲಿರುವ ಒಂದು ಶಿಲ್ಪ ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ. thumb|ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ ಚರಿತ್ರೆ ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು. ಪ್ರವಾಸೀ ತಾಣಗಳು thumb|Jog-falls ಜೋಗದ ಜಲಪಾತ ಚಂದ್ರಗುತ್ತಿ "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ ​​ ೧೨ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ ಲಿಂಗನಮಕ್ಕಿ ಅಣೆಕಟ್ಟು ಒನಕೆ-ಅಬ್ಬೆ ಜಲಪಾತ ಭದ್ರಾ ನದಿ ಯೋಜನೆ, ಲಕ್ಕವಳ್ಳಿ ತು೦ಗಾ ನದಿ ಯೋಜನೆ, ಗಾಜನೂರು ಅಣೆಕಟ್ಟು ಆಗುಂಬೆ ಮಂಡಗದ್ದೆ ಪಕ್ಷಿದಾಮ. ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ ಕು೦ದಾದ್ರಿ ಬೆಟ್ಟ ಕುಪ್ಪಳ್ಳಿಯ ಕವಿಶೈಲ ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಸ್ಠಳ ಹಿಡ್ಲುಮನೆ ಜಲಪಾತ (ನಿಟ್ಟೂರು) ದಬ್ಬೆ ಜಲಪಾತ ಚೀಲನೂರು ಗ್ರಾಮದ ಜೋಗದ ಜಲಪಾತ ಕೊಡಚಾದ್ರಿ ಬೆಟ್ಟ ಶಿವಪ್ಪನಾಯಕನ ಕೋಟೆ (ಬಿದನೂರು ನಗರ) ಸಿಗಂದೂರು ತಾವರೆ ಕೊಪ್ಪದ ಸಿಂಹ ಧಾಮ ಚೀಲನೂರು ಸೊರಬ ತಾಲ್ಲೂಕು ಸೊರಬ ತಾಲ್ಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ) ಕವಲೇದುರ್ಗ ಕೋಟೆ ಕೆಳದಿ ಕೋಟೆ ಸಕ್ರೇಬೈಲು ಬಿಡಾರ ಆನೆಗಳ ಬಿಡಾರ ಕೊಡಚಾದ್ರಿ ಬೆಟ್ಟ ವರದಹಳ್ಳಿ ಶ್ರೀಧರ ಆಶ್ರಮ, ಶ್ರೀ ದುರ್ಗಾಂಬಾ ದೇವಾಲಯ ವಿಮಾನ ನಿಲ್ದಾಣ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ೨೦೨೦ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದರುಹಿಂದು ಪತ್ರಿಕೆ ವರದಿ. ೨೮ ಫೆಬ್ರವರಿ ೨೦೨೩ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು.https://www.prajavani.net/karnataka-news/prime-minister-narendra-modi-inaugurate-the-shivamogga-airport-1019084.html ಕುವೆಂಪು ವಿಶ್ವವಿದ್ಯಾನಿಲಯ ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ. ಗಿರಿ-ಶಿಖರಗಳು ಆಗುಂಬೆ, ಸೂರ್ಯಾಸ್ತಕ್ಕೆ ವಿಶ್ವಪ್ರಸಿದ್ದ ಕೊಡಚಾದ್ರಿ ಕುಂದಾದ್ರಿ ಬೆಟ್ಟ. ~ಜೈನ ಕ್ಷೇತ್ರ ಬರೆಕಲ್ ಬತೆರಿ ನಿಶಾನೆ ಗುಡ್ಡ ಹೆದ್ದಾರಿಖಾನ್ ಮೊಳಕಾಲ್ಮುರಿ ಗುಡ್ಡ ಜೊಗಿ ಗುಡ್ಡ ಮುಪ್ಪಾನೆ ನದಿಗಳು ತುಂಗಾ ಭದ್ರಾ ಶರಾವತಿ ಕುಮುದ್ವತಿ ವೇದಾವತಿ ವರದ ನದಿ ಕುಶಾವತಿ ದ೦ಡಾವತಿ ನದಿ ಮಾಲತಿ ಸೀತಾ ಚರಿತ್ರೆ ಮತ್ತು ಧರ್ಮ ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು ನಗರ, ಬಿದನೂರು ಸಂಸ್ಥಾನದ ರಾಜಧಾನಿ ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ ಶಿವಪ್ಪ ನಾಯಕನ ಅರಮನೆ ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್ ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ. ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ. ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ. ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ. ವನ್ಯಜೀವಿ ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ ಸಕ್ಕರೆಬೈಲು, ಆನೆ ತರಬೇತಿ ಶಿಬಿರ ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ ಐತಿಹಾಸಿಕ ವ್ಯಕ್ತಿಗಳು ಕೆಳದಿಯ ಚೆನ್ನಮ್ಮಾಜಿ ಅಲ್ಲಮಪ್ರಭು ದೇವರು ಕೆಳದಿ ಶಿವಪ್ಪ ನಾಯಕ ಅಕ್ಕಮಹಾದೇವಿ ಪ್ರಮುಖ ವ್ಯಕ್ತಿಗಳು ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ. ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯವಸ್ತುತಜ್ಞ ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಪಿ.ಲಂಕೇಶ್, ಲೇಖಕ-ಪತ್ರಕರ್ತರು ನಾ. ಡಿಸೋಜ, ಸಾಹಿತಿ ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ ಜಿ. ಎಸ್. ಶಿವರುದ್ರಪ್ಪ, ಕವಿ ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಕವಿ ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ಸಿನೆಮಾ ನಿರ್ದೇಶಕ ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು ಸುದೀಪ್, ಚಲನಚಿತ್ರ ನಟ ತಾಲ್ಲೂಕುಗಳು ತಾಲ್ಲೂಕು ಎತ್ತರ (ಮಿ.) ಹೋಬಳಿಗಳ ಸಂಖ್ಯೆ ನಿವಾಸಿತ ಹಳ್ಳಿಗಳ ಸಂಖ್ಯೆ ಅನಿವಾಸಿತ ಹಳ್ಳಿಗಳ ಸಂಖ್ಯೆ ವಿಸ್ತಿರಣ (ಚ. ಕಿ.ಮಿ)  ತೀರ್ಥಹಳ್ಳಿ  ೬೧೦  ೫  ೨೪೫  ೨  ೧೨೪೭  ಭಧ್ರಾವತಿ  ೫೯೪  ೬  ೧೪೬  ೭  ೬೯೦  ಶಿಕಾರಿಪುರ  ೬೦೩  ೫  ೧೫೩  ೨೨  ೯೦೯  ಶಿವಮೊಗ್ಗ  ೫೭೧  ೮  ೧೯೮  ೨೪  ೧೧೦೮  ಸಾಗರ  ೫೭೯  ೬  ೨೩೩  ೫  ೧೯೪೦  ಸೊರಬ  ೫೭೯  ೬  ೨೬೮  ೩೮  ೧೧೪೮  ಹೊಸನಗರ  ೫೭೨  ೪  ೧೯೭  ೫  ೧೪೨೩ ಜನಸಂಖ್ಯೆ ೨೦೧೧ರ ಜನಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲಾ ಜನಸಂಖ್ಯಾ ವಿವರ https://censusindia.gov.in/census.website/data/census-tables ತಾಲ್ಲೂಕುಸಾಕ್ಷರತೆ ಪ್ರಮಾಣ (%) ಜನಸಂಖ್ಯೆ ೨೦೧೧ರ ಜನಗಣತಿ ಪ್ರಕಾರಪುರುಷರುಮಹಿಳೆಯರು/ (ಪ್ರತಿ ೧೦೦೦ ಪುರುಷರಿಗೆ ಮಹಿಳೆಯರ ಪ್ರಮಾಣ) ರ2001 ರ ಗಣತಿ ಜನಸಂಖ್ಯೆ ೨೦೦೧ರ ಜನಗಣತಿ ಪ್ರಕಾರ ಶಿವಮೊಗ್ಗ ಜಿಲ್ಲೆ 74.89 17,55,5128,79,817 8,75,695/995 ಲಭ್ಯವಿಲ್ಲ ಶಿವಮೊಗ್ಗ ತಾಲ್ಲೂಕು 77 5,07,083 2,55,317 251761/969 4,45,192 ಭದ್ರಾವತಿ ತಾಲ್ಲೂಕು 77 3,39,930 1,70,291. 1,69,636/997 3,38,989 ಭದ್ರಾವತಿ ನಗರ -- 1,50,776 ಲಭ್ಯವಿಲ್ಲ ಲಭ್ಯವಿಲ್ಲ 1,60,662 ತೀರ್ಥಹಳ್ಳಿ 83.05 1,41,453 69,593 71,869/1038 1,43,207 ಶಿವಮೊಗ್ಗ ಗ್ರಾಮೀಣ-- 1,26,916ಲಭ್ಯವಿಲ್ಲ ಲಭ್ಯವಿಲ್ಲ 1,28,399 ಸಾಗರ 81.00 2,06,112 1,02,276 1,03,834/1012 2,00,995 ಹೊಸನಗರ 81.5 1,18,148 58,503 59,645/1037 1,15,000 ಶಿಕಾರಿಪುರ 76.5 2,41,943 1,22,527 1,19,413/980 2,13,590 ಸೊರಬ 77 2,00,843 1,01,297 91,546/999 1,85,572 ಉಲ್ಲೇಖಗಳು ಇದನ್ನೂ ನೋಡಿ ಶಿವಮೊಗ್ಗ (ಲೋಕ ಸಭೆ ಚುನಾವಣಾ ಕ್ಷೇತ್ರ) ಹೊರಗಿನ ಸಂಪರ್ಕಗಳು ಶಿವಮೊಗ್ಗ ಗ್ಲೋರಿ ಶಿವಮೊಗ್ಗ ಮಹಾನಗರಪಾಲಿಕೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಶಿವಮೊಗ್ಗದ ಬಗ್ಗೆ ಮಾಹಿತಿ ಶಿವಮೊಗ್ಗ ಜಿಲ್ಲೆಯ ನಕ್ಷೆ ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಕರ್ನಾಟಕದ ಜಿಲ್ಲೆಗಳು *
ಭಾರತ
https://kn.wikipedia.org/wiki/ಭಾರತ
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ. ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು, ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ ಹಾಗೂ ಭೂತಾನ, ಪೂರ್ವದಲ್ಲಿ ಮಯನ್ಮಾರ್ ಹಾಗೂ ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಶ್ರೀಲಂಕಾ, ಮಾಲ್ಡೀವ್ಸ್ ನಂತಹ ದ್ವೀಪ ರಾಷ್ಟ್ರಗಳಿಗೆ ಹತ್ತಿರವಾಗಿದೆ. ಕೊಳ್ಳುವ ಶಕ್ತಿಯ ಮೇರೆಗೆ, ಪ್ರಪಂಚದ ನಾಲ್ಕನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆಯಾಗಿದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಉಗಮಿಸಿವೆ. ಪ್ರಪಂಚದ ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಆರಂಭವಾಗಿವೆ. ಝೊರಾಷ್ಟ್ರಿಯನಿಜ಼ಂ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಕ್ರಿ.ಶ ೭ನೇ ಶತಮಾನದಲ್ಲಿ ಆಗಮಿಸಿ ಈ ಪ್ರದೇಶದ ಸಂಸ್ಕೃತಿಯನ್ನು ವೈವಿಧ್ಯಮಯವಾಗಿಸಿವೆ. ೧೬ನೇ ಶತಮಾನದಲ್ಲಿ ಭಾರತ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಆಕ್ರಮಣಗೊಂಡು ಇಂಗ್ಲೆಂಡಿನ ಆಡಳಿತಕ್ಕೊಳಪಟ್ಟಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ ಅನೇಕ ಸ್ವಾತಂತ್ರ್ಯ ಹೋರಾಟದ ಫಲವಾಗಿ ಬ್ರಿಟೀಷರಿಂದ ಸ್ವತಂತ್ರವಾಯಿತು. ಹೆಸರಿನ ಉಗಮ ಭಾರತ ಎಂಬ ಹೆಸರು "ಭರತವರ್ಷ" ಎಂಬ ಹೆಸರಿನಿಂದ ಉಗಮಗೊಂಡದ್ದು. ಪುರಾತನ ಪೌರಾಣಿಕ ಆಕರಗಳಿಂದಲೂ ಈ ಹೆಸರು ಭಾರತಕ್ಕೆ ಸೂಚಿತವಾಗಿದೆ. ವೃಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು. "ಇಂಡಿಯಾ" ಎಂಬ ಹೆಸರು ಸಿಂಧೂ ನದಿಯ ಪರ್ಷಿಯನ್ ರೂಪಾಂತರ "ಇಂಡಸ್" ಎಂಬುದರಿಂದ ಬಂದದ್ದು. ಭಾರತವನ್ನು ನಿರ್ದೇಶಿಸಲು ಉಪಯೋಗಿಸಲಾಗಿರುವ ಇತರ ಹೆಸರುಗಳಲ್ಲಿ ಒಂದು ಹಿಂದೂಸ್ಥಾನ ಕೂಡ ಒಂದು. ಚರಿತ್ರೆ ಭಾರತದಲ್ಲಿ ಜನವಸತಿಯ ಮೊದಲ ಕುರುಹುಗಳೆಂದರೆ ಈಗಿನ ಮಧ್ಯ ಪ್ರದೇಶ ರಾಜ್ಯದ ಬಿಂಭೇಟ್ಕಾದಲ್ಲಿ ದೊರೆತಿರುವ ಶಿಲಾಯುಗದ ಪಳೆಯುಳಿಕೆಗಳು. ಸುಮಾರು ೯೦೦೦ ವರ್ಷಗಳ ಹಿಂದೆ ನಾಗರೀಕತೆಯ ಕುರುಹುಗಳು ಕಂಡು ಬಂದು ಕ್ರಿ.ಪೂ ೨೬೦೦ ರಿಂದ ಕ್ರಿ.ಪೂ. ೧೯೦೦ ರ ವರೆಗೆ ಸಿಂಧೂ ಕಣಿವೆ ನಾಗರೀಕತೆ ಅಸ್ತಿತ್ವದಲ್ಲಿತ್ತು. ನಂತರ ವೇದಗಳನ್ನು ಆಧರಿಸಿ ಹಿಂದೂ ಧರ್ಮ ಬೆಳೆಯಿತು. ಆ ಸಂದರ್ಭದಲ್ಲಿ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ಸಹ ಉಗಮಗೊಂಡವು. ಕ್ರಿ.ಪೂ ೫೦೦ ರ ನಂತರ ಅನೇಕ ಸ್ವತಂತ್ರ ರಾಜ್ಯಗಳು ತಲೆಯೆತ್ತಲಾರಂಭಿಸಿದವು. ಮೌರ್ಯ ಸಾಮ್ರಾಜ್ಯ ಭಾರತವನ್ನು ಸರಿ ಸುಮಾರಾಗಿ ಒಗ್ಗೂಡಿಸಿದ ಮೊದಲ ಸಾಮ್ರಾಜ್ಯ. ನಂತರ ಗುಪ್ತ ಸಾಮ್ರಾಜ್ಯ ಭಾರತದ "ಸುವರ್ಣ ಯುಗ"ದಲ್ಲಿ ಆಡಳಿತ ನಡೆಸಿತು. ಈ ಕಾಲದಲ್ಲಿ ಸಾಹಿತ್ಯ, ವಿಜ್ಞಾನ, ತತ್ವಶಾಸ್ತ್ರ ಮೊದಲಾದ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಭಾರತ ಸಾಧಿಸಿತು. ಎರಡನೆಯ ಸಹಸ್ರಮಾನದ ಆರಂಭದಲ್ಲಿ ಅನೇಕ ಮುಸ್ಲಿಮ್ ರಾಜರ ದಾಳಿ ಆರಂಭವಾಗಿ ೧೨ ನೆಯ ಶತಮಾನದಿಂದ ಮುಂದಕ್ಕೆ ಉತ್ತರ ಭಾರತದ ಅನೇಕ ಭಾಗಗಳು ಮತ್ತು ದಕ್ಷಿಣ ಭಾರತದ ಕೆಲ ಭಾಗಗಳು ಮುಸ್ಲಿಮ್ ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು ಭಾರತಕ್ಕೆ ಬರಲಾರಂಭಿಸಿದರು. ಹಂಚಿಹೋಗಿದ್ದ ಭಾರತದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಭಾರತದ ಅನೇಕ ಪ್ರದೇಶಗಳನ್ನು ಇವರು ವಶಪಡಿಸಿಕೊಳ್ಳಲಾರಂಭಿಸಿದರು. ಎಲ್ಲರಿಗಿಂತ ಪ್ರಬಲವಾಗಿ ಬೆಳೆದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಹೆಚ್ಚು ಕಡಿಮೆ ಸಂಪೂರ್ಣ ಭಾರತದ ಮೇಲೆ ಅಧಿಪತ್ಯ ಸ್ಥಾಪಿಸಿತು. ೧೮೫೭ ರಲ್ಲಿ ಭಾರತದ ಅನೇಕ ರಾಜ್ಯಗಳು ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡವು. ಇದರ ನಂತರ ನೇರ ಬ್ರಿಟಿಷ್ ಆಡಳಿತಕ್ಕೆ ಭಾರತ ಸಾಗಿತು. ಸ್ವಲ್ಪ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯ ಚಳುವಳಿ ಆರಂಭವಾಗಿ ಆಗಸ್ಟ್ ೧೫, ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯಿತು. ಸ್ವಾತಂತ್ರ್ಯಾ ನಂತರ ನೆರೆಯ ದೇಶಗಳೊಂದಿಗೆ ಒಟ್ಟು ನಾಲ್ಕು ಯುದ್ಧಗಳು ನಡೆದಿವೆ. ೧೯೭೪ ರಲ್ಲಿ ಭಾರತ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಪಡೆಯಿತು. ೧೯೭೫ ರಿಂದ ೭೭(77) ರ ವರೆಗೆ ಇಂದಿರಾ ಗಾಂಧಿಯವರ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಏರ್ಪಟ್ಟಿತ್ತು. ೯೦ ರ ದಶಕದಿಂದ ಆರ್ಥಿಕ ಉದಾರೀಕರಣ ನೀತಿಯನ್ನು ಭಾರತ ಪಾಲಿಸುತ್ತಾ ಬಂದಿದೆ. ಭೂಗೋಳ ಭಾರತದ ಭೌಗೋಳಿಕ ಭಾಗಗಳಲ್ಲಿ ಮುಖ್ಯವಾದವು: ಹಿಮಾಲಯ ಪರ್ವತಶ್ರೇಣಿ ಉತ್ತರದ ಸಮತಟ್ಟು ಪ್ರದೇಶ ಥಾರ್ ಮರುಭೂಮಿ ದಖನ್ ಪ್ರಸ್ತಭೂಮಿ ಭಾರತದಲ್ಲಿ ಹರಿಯುವ ಮುಖ್ಯವಾದ ನದಿಗಳಲ್ಲಿ ಕೆಲವೆಂದರೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಯಮುನಾ, ನರ್ಮದಾ, ಗೋದಾವರಿ, ಕೃಷ್ಣಾ, ಕಾವೇರಿ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು + ಭಾರತ ಗಣರಾಜ್ಯದ ರಾಷ್ಟ್ರೀಯ ಚಿಹ್ನೆಗಳು (ಅಧಿಕೃತ) ರಾಷ್ಟ್ರೀಯ ಪ್ರಾಣಿ ಹುಲಿ 50px ರಾಷ್ಟ್ರೀಯ ಹಕ್ಕಿ ನವಿಲು 50px ರಾಷ್ಟ್ರೀಯ ಪರಂಪರೆ ಪ್ರಾಣಿ ಆನೆ 50px ರಾಷ್ಟ್ರೀಯ ಮರ ಆಲದ ಮರ 50px ರಾಷ್ಟ್ರೀಯ ಪುಷ್ಪ ಕಮಲ 50px ರಾಷ್ಟ್ರೀಯ ಈಜುವ ಕಡಲ ಸಸ್ತನಿ ಡಾಲ್ಫಿನ್ 50px ರಾಷ್ಟ್ರೀಯ ಸರೀಸೃಪ ಕಾಳಿಂಗ ಸರ್ಪ 50px ರಾಷ್ಟ್ರೀಯ ಪರಂಪರೆ ಸಸ್ತನಿ ಹನುಮಾನ್ ಲಂಗೂರ್ 50px ರಾಷ್ಟ್ರೀಯ ಹಣ್ಣು ಮಾವು 50px ರಾಷ್ಟ್ರೀಯ ನದಿ ಗಂಗಾ 50px thumb|ಭಾರತದ ನಕ್ಷೆ framed|ಭಾರತದ ರಾಜ್ಯಗಳು ಭಾರತವನ್ನು ಕೆಳಗಿನ ಮುಖ್ಯ ಭಾಗಗಳಾಗಿ ವಿಂಗಡಿಸಲಾಗಿದೆ: ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳು ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನು ಭಾರತ ಹೊಂದಿದ್ದು,India's economy is growing faster: 26 June 2015 (English) ಒಟ್ಟು ರಾಷ್ಟ್ರೀಯ ಉತ್ಪಾದನೆಯ ದೃಷ್ಟಿಯಿಂದ ಪ್ರಪಂಚದಲ್ಲಿ ಹನ್ನೆರಡನೆಯ ಸ್ಥಾನವನ್ನು ಹೊಂದಿದೆ. ಕೊಳ್ಳುವ ಶಕ್ತಿಯ ಮೇರೆಗೆ ಮೂರನೆ ಸ್ಥಾನವನ್ನು ಹೊಂದಿದೆ. ಆದರೆ ಭಾರತದ ಜನಸಂಖ್ಯೆಯನ್ನು ಗಮನಿಸಿ ಸರಾಸರಿ ಒಬ್ಬ ವ್ಯಕ್ತಿಯ ಆದಾಯ ಸುಮಾರು ವರ್ಷಕ್ಕೆ ೧೧,೦೦೦ ರೂಪಾಯಿಗಳಷ್ಟು. ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಬೆಳೆದ ನಂತರ ಭಾರತೀಯ ಮಧ್ಯಮ ವರ್ಗ ಹೆಚ್ಚುತ್ತಾ ಬಂದಿದೆ. ಭಾರತದ ಮುಖ್ಯ ವೃತ್ತಿಗಳಲ್ಲಿ ಕೆಲವೆಂದರೆ ಕೃಷಿ, ಬಟ್ಟೆಗಳ ತಯಾರಿಕೆ, ಪೆಟ್ರೋಲಿಯಮ್ ಉತ್ಪನ್ನಗಳು, ಮಾಹಿತಿ ತಂತ್ರಜ್ಞಾನ, ಚಲನ ಚಿತ್ರಗಳು ಹಾಗೂ ಕುಶಲ ಕೈಗಾರಿಕೆ. ವಾರ್ಷಿಕವಾಗಿ ಸುಮಾರು ೨೦ ಲಕ್ಷ ಅಂತರರಾಷ್ಟ್ರೀಯ ಪ್ರವಾಸಿಗಳು ಭಾರತಕ್ಕೆ ಬರುತ್ತಾರೆ. ಭಾರತದೊಂದಿಗೆ ಹೆಚ್ಚಾಗಿ ಅಂತಾರಾಷ್ಟ್ರೀಯ ವ್ಯಾಪಾರ ನಡೆಸುವ ದೇಶ-ಸಂಸ್ಥೆಗಳೆಂದರೆ ಅಮೆರಿಕದ ಸಂಯುಕ್ತ ಸಂಸ್ಥಾನ, ರಷ್ಯಾ, ಯುರೋಪಿಯನ್ ಒಕ್ಕೂಟ, ಚೀನಾ ಮತ್ತು ಜಪಾನ್. ಜನಸಂಖ್ಯಾ ಅಂಕಿ ಅಂಶಗಳು ಭಾರತ ಪ್ರಪಂಚದಲ್ಲಿ ಎರಡನೆ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಭಾರತೀಯ ಸಮಾಜದಲ್ಲಿ ಭಾಷೆ, ಧರ್ಮ, ಜಾತಿ ಮೊದಲಾದ ಅನೇಕ ಅಂಶಗಳು ವಿವಿಧ ಪಾತ್ರಗಳನ್ನು ವಹಿಸುತ್ತವೆ. ಭಾರತದ ಅತಿ ದೊಡ್ಡ ನಗರಗಳೆಂದರೆ ಮುಂಬಯಿ, ದೆಹಲಿ, ಬೆಂಗಳೂರು, ಕೋಲ್ಕತ್ತ ಮತ್ತು ಚೆನೈ ಭಾರತದ ಸಾಕ್ಷರತಾ ಪ್ರಮಾಣ ಶೇ. ೬೪.೮. ಧರ್ಮದ ದೃಷ್ಟಿಯಿಂದ, ಜನಸಂಖ್ಯೆಯ ವಿಂಗಡಣೆ ಹೀಗಿದೆ: ಹಿಂದೂ (೮೦.೫ %), ಮುಸ್ಲಿಮ್ (೧೩.೪ %), ಕ್ರೈಸ್ತ (೨.೩೩ %), ಸಿಖ್ (೧.೮೪ %), ಬೌದ್ಧ (೦.೭೬ %), ಜೈನ (೦.೪ %). ಭಾರತದಲ್ಲಿರುವ ಇತರ ಧಾರ್ಮಿಕ ವರ್ಗಗಳಲ್ಲಿ ಕೆಲವೆಂದರೆ ಯಹೂದಿ, ಪಾರ್ಸಿ, ಅಹ್ಮದಿ ಮತ್ತು ಬಹಾ-ಈ. ಭಾರತದಲ್ಲಿರುವ ಎರಡು ಮುಖ್ಯ ಭಾಷಾ ಬಳಗಗಳೆಂದರೆ ಉತ್ತರ ಭಾರತದ ಇಂಡೋ-ಆರ್ಯನ್ ಭಾಷಾ ಬಳಗ ಮತ್ತು ದಕ್ಷಿಣ ಭಾರತದ ದ್ರಾವಿಡ ಭಾಷಾ ಬಳಗ. ಭಾರತ ೨೨ ಅಧಿಕೃತ ಭಾಷೆಗಳನ್ನು ಹೊಂದಿದೆ. ೧೯೦೧ ಮತ್ತು ನಂತರದ ಗಣತಿ 1901 ಮತ್ತು ನಂತರದ ಜನಗಣತಿ ಇಸವಿ ಒಟ್ಟು ಜನಸಂಖ್ಯೆ ಗ್ರಾಮೀಣ ನಗರ :ಶೇಕಡವಾರು ಜನಸಂಖ್ಯೆಯ ದರ ಏರಿಕೆ1901 238,396,327 212,544,454 25,851,573 1911 252,093,390 226,151,757 25,941,633 1921 251,351,213- 223,235,043- 28,086,170 1931 278,977,238 245,521,249 33,455,686 1941 318,660,580 275,507,283 44,153,297 1951 362,088,090- 298,644,381- 62,443,709 1961 439,234,771 360,298,168- 78,936,60321.6%1971 548,159,652 439,045,675 109,113,67724.8%1981683,329,097 623,866,550- 159,462,547 24.7% 1991 846,302,688 628,691,676 217,611,012 23.9% 2001 1,028737,436 742,490,639 386,119,689 21.5% 2011 1,21,01,93,422 83,30,87,662 37,71,05,760 17.6%//68.84 ಗ್ರಾಮ //31.16ನಗರ2011 1,21,01,93,422 62,37,24,248; ಪುರುಷರು 58,64,69,174 ಮಹಿಳೆಯರು 1000 ಪುರುಷರಿಗೆ 943-ಮಹಿಳೆಯರು 2011 ಜನಗಣತಿಯ ಅಂಕಿಅಂಶಗಳು ಇಸವಿ ಒಟ್ಟು ಜನಸಂಖ್ಯೆ ಏರಿಕೆ 2011 1,210,193,422 17.6% ಜನಸಂಖ್ಯೆಯ ಬೆಳವಣಿಗೆ ಮತ್ತು ಹೋಲಿಕೆ ಇದು ಜನಸಂಖ್ಯಾ ವಿವರ ಮತ್ತು ಹೋಲಿಕೆ : 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕಿಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕಿಸ್ತಾನ =(7ಕೋಟಿ 66 ಲಕ್ಷ) 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :76 ಮಿಲಿಯನ್ ಪಶ್ಚಿಮ ಪಾಕಿಸ್ತಾನ 3400000 ಪೂರ್ವ ಪಾಕಿಸ್ತಾನ 42600000 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕಿಸ್ತಾನ :94 ಮಿಲಿಯನ್ ಪಶ್ಚಿಮ ಪಾಕಿಸ್ತಾನ 43000000 ಪೂರ್ವ ಪಾಕಿಸ್ತಾನ 51000000 2011 / 2012 ರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ) ಪಶ್ಚಿಮ ಪಾಕಿಸ್ತಾನ (170,000000) 180440005; ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) 161,083,804/ 161083804 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ) 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ). ದೇಶದ ಮೂರನೇ ಸಿರಿವಂತ ನಗರ 27 Feb, 2017 ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಸಂಪತ್ತಿನ ಮೊತ್ತ ರೂ.54.6 ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.29.9 ಲಕ್ಷ ಕೋಟಿ ಮತ್ತು ರೂ.21.3 ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ 2016ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. ವಲಸೆ ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. 2016ರಲ್ಲಿ ವಿಶ್ವದಾದ್ಯಂತ 82 ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. ಈ ಸಾಲಿನಲ್ಲಿ ಒಟ್ಟು 6 ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. 2015ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ 50 ರಷ್ಟು ಹೆಚ್ಚಳವಾಗಿದೆ. ಶತ ಕೋಟ್ಯಧಿಪತಿಗಳು ೧೦ ಲಕ್ಷ ಅಮೆರಿಕನ್ ಡಾಲರ್‌ನಿಂದ 100 ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ 6.6 ಕೋಟಿಯಿಂದ ₹ 6.6 ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಧಿಪತಿ ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. 100 ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ 6.6 ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;27 Feb, 2017 ರಾಜಕೀಯ ೧೯೯೮ ರಿಂದ ೨೦೧೯/2019ರ ವರೆಗಿನ ಲೋಕಸಭೆ ಚುನಾವಣೆ ಸಾರಾಂಶ ದಪ್ಪಗಿನ ಅಕ್ಷರ ವರ್ಷ ಕಾಂಗ್ರೆಸ್.ಸ್ಥಾನ-> .ಶೇಕಡ ಓಟು->ಹೆಚ್ಚು/ಕಡಿಮೆ ಯು.ಪಿ.ಎ.ಬಿ ಜೆ ಪಿ.ಸ್ಥಾನ-> ಶೇಕಡ ಓಟು-> ಹೆಚ್ಚು/ಕಡಿಮೆ.+/-%ಎನ್.ಡಿ.ಎ ಪ್ರಧಾನಮಂತ್ರಿ 1998 141 25.82% - ೧ 26.14% (26.42) 182 :25.59% +25 ---37.21%(46.61) ಅಟಲ್ ಬಿಹಾರಿ ವಾಜಪೇಯಿ1999(0 114 -- -27 Utd. Ft 28.30%182-- -- -- 269+29 TDP;37.06% ಅಟಲ್ ಬಿಹಾರಿ ವಾಜಪೇಯಿ2004 145 26.53% 31:+7.1% 218+117 /35.4% 13822.16% -44 -3.76% ಎನ್.ಡಿ.ಎ(-89: 33.3%) ಮನಮೋಹನ್ ಸಿಂಗ್ 2009 206 +2 28.55% +80:2.೦2% 262 +63 ಇತರೆ (37.22%) 116 18.80% -22 -3.36% ಎನ್.ಡಿ.ಎ:159:24.63% (:-4.88%)ಮನಮೋಹನ್ ಸಿಂಗ್ 2009-> ಕಾಂ:ಪಡೆ ದ ಓಟು 153482356 -- ಬಿಜೆಪಿ ಪಡೆದ ಓಟು 102689312 -- -- -- --2014 1 44 19.4 -9.2 58 283 31.2 116+167 +12.4 ಎನ್.ಡಿಎ.283+54=337 ನರೇಂದ್ರ ಮೋದಿ 2019 52 19.01% +6 91 303 37.36 383+20 +6.6 ಎನ್.ಡಿ.ಎ. 303+50=353ನರೇಂದ್ರ ಮೋದಿ ನೋಡಿ ಭಾರತದ ಇತಿಹಾಸ ಭಾರತ ಗಣರಾಜ್ಯದ ಇತಿಹಾಸ ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಭಾರತದ ಜನಸಂಖ್ಯೆಯ ಬೆಳವಣಿಗೆ ಲೋಕಸಭೆ ಟೆಲಿಗ್ರಾಂ-ಟೆಲಿಗ್ರಾಂ ರಾಜ್ಯಸಭೆ ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ ಹೊರ ಸಂಪರ್ಕ ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ;11 Jul 2018 ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಭಾರತ ಸರ್ಕಾರದ ಅಧಿಕೃತ ತಾಣಗಳು ಭಾರತದ ಪ್ರಧಾನ ಮಂತ್ರಿ ಭಾರತದ ಅಧ್ಯಕ್ಷರು ಭಾರತೀಯ ಸಂಸತ್ತು ರಕ್ಷಣಾ ಸಚಿವಾಲಯ ಭಾರತದ ಜನಗಣತಿ ಭಾರತದ ಸರ್ವೋಚ್ಚ ನ್ಯಾಯಾಲಯ ವಿದೇಶ ವ್ಯವಹಾರಗಳ ಸಚಿವಾಲಯ ಚುನಾವಣಾ ಆಯೋಗ ವಿದ್ಯುನ್ಮಾನ ವಿಭಾಗ ಪ್ರವಾಸೋದ್ಯಮ ಶಿಕ್ಷಣಾ ವಿಭಾಗ ವರ್ಗ:ಏಷ್ಯಾ ಖಂಡದ ದೇಶಗಳು ವರ್ಗ:ದೇಶಗಳು ವರ್ಗ:ದಕ್ಷಿಣ ಏಷ್ಯಾ ವರ್ಗ:ಭಾರತೀಯ ಉಪಖಂಡ
ಜೋಗ
https://kn.wikipedia.org/wiki/ಜೋಗ
ಜೋಗ ಅಥವಾ 'ಗೇರುಸೊಪ್ಪಿನ ಜಲಪಾತ' ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.http://en.wikipedia.org/wiki/Jog_Falls ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ದಟ್ಟವಾದ ಕಾಡು ಹಾಗು ಗುಡ್ಡಗಳಿಂದ ಆವೃತ್ತವಾದ ಸ್ಥಳದಲ್ಲಿದೆ. ಜೋಗ ಜಲಪಾತವನ್ನು ವೀಕ್ಷಿಸುವ ತಾಣ ಜೋಗವು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ತಾಣ. ಜೋಗ ಜಲಪಾತವು ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದೆ ಎಂದು ಅನೇಕರು ಹೇಳುತ್ತಾರೆ. thumb|400px|ಮಳೆಗಾಲದಲ್ಲಿ ಮೈದುಂಬಿಕೊಂಡಿರುವ ಜೋಗ ಜಲಪಾತ thumb|400px|ಬೇಸಿಗೆಯಲ್ಲಿ ಜೋಗ ಜಲಪಾತ ಜಲಪಾತ ವಿವರಣೆ ಶರಾವತಿ ನದಿಯ ಜಲಪಾತ ಗೇರುಸೊಪ್ಪೆ ಎಂದೂ ಪ್ರಸಿದ್ಧ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಈ ಜಲಪಾತ ಸಾಗರ ತಾಲ್ಲೂಕಿನ ತಾಳಗುಪ್ಪ ರೈಲು ನಿಲ್ದಾಣಕ್ಕೆ ೧೬ ಕಿಮೀ ದೂರದಲ್ಲಿದೆ. ಜಲಪಾತ ಶಿವಮೊಗ್ಗದಿಂದ ೧೦೦ ಕಿಮೀ ದೂರದಲ್ಲೂ, ಹೊನ್ನಾವರದಿಂದ ೫೬ ಕಿಮೀ ದೂರದಲ್ಲೂ ಇದೆ. ಇಲ್ಲಿ ಶರಾವತಿ ನದಿ ೨೫೨.೭ ಮೀ (೮೨೯ ಅಡಿ) ಆಳದ ಪ್ರಪಾತಕ್ಕೆ ಧುಮುಕುತ್ತದೆ. ಸೌಂದರ್ಯಪೂರ್ಣ ಔನ್ನತ್ಯದಲ್ಲಿ ಗೇರುಸೊಪ್ಪೆಯನ್ನು ಮೀರಿಸುವ ಜಲಪಾತ ಜಗತ್ತಿನಲ್ಲೆಲ್ಲೂ ಇಲ್ಲ. ಆಲ್ಪ್ಸ್ ಪರ್ವತದಲ್ಲಿರುವ ಸೆರೊಸೊಲಿ (೨೪೦೦ ಅಡಿ), ಎವಾನ್ಸನ್ (೧೨೦೦ ಅಡಿ) ಮತ್ತು ಆರ್ವೆ (೧೧೦೦ ಅಡಿ) ಜೋಗ ಜಲಪಾತಕ್ಕಿಂತ ಎತ್ತರವಾಗಿವೆಯಾದರೂ ಅವುಗಳಲ್ಲಿ ಜೋಗದಷ್ಟು ಜಲಸಮೃದ್ಧಿ ಇಲ್ಲ. ನಯಾಗರ ಜಲಪಾತದ ನೀರಿನ ಮೊತ್ತ ಜೋಗದ್ದಕ್ಕಿಂತ ಅಧಿಕವಾಗಿದ್ದರೂ, ಅದರ ಎತ್ತರ (೧೬೪ ಅಡಿ) ಗೇರುಸೊಪ್ಪೆಯಷ್ಟು ಇಲ್ಲ. ಶರಾವತಿ ನದಿ ಹರಿದು ಧುಮುಕುವ ಕಮರಿಯ ಬಂಡೆ ೨೫೦ ಗಜಗಳಷ್ಟು ಉದ್ದವಾಗಿದೆ. ನಾಲ್ಕು ಪ್ರತ್ಯೇಕ ಬಿರುಕುಗಳಿಂದ ನದಿ ರಭಸದಿಂದ ಇಳಿದು ಕಮರಿಗೆ ಬೀಳುತ್ತದೆ. ಅದು ಧುಮುಕುವ ಠೀವಿ ಮನಮೋಹಕವಾದ್ದು. ಜಲಪಾತದ ನಾಲ್ಕು ಕವಲುಗಳ ಪೈಕಿ ರಾಜಾ ಸುಮಾರು ೮೨೯ ಅಡಿ ಆಳಕ್ಕೆ ಧುಮುಕುತ್ತದೆ. ರಾಜಾ ಬೀಳುತ್ತಿರುವಂತೆಯೇ ಸ್ವಲ್ಪ ಕೆಳಗೆ, ಬಂಡೆಯ ಬಿರುಕಿನಿಂದ ಹರಿದು ಬೀಳುವ ರೋರರ್ ಜಲಪಾತವನ್ನು ಅಪ್ಪಿಕೊಂಡು, ಅದರೊಂದಿಗೆ ಕಮರಿಗೆ ಬೀಳುತ್ತದೆ. ಮೂರನೆಯ ಜಲಪಾತ ರಾಕೆಟ್ ಬಂಡೆಯ ಮೇಲಿನಿಂದ ಹಲವು ಧಾರೆಗಳಲ್ಲಿ ಚಿಮ್ಮಿ ತಳಕ್ಕೆ ಕುಪ್ಪಳಿಸುತ್ತದೆ. ನಾಲ್ಕನೆಯ ರಾಣಿ ಜಲಪಾತ (ಲೇಡಿ ಬ್ಲಾಂಚೆ) ಬೀಳುವ ರಭಸದಿಂದೇಳುವ ನೊರೆಯಿಂದ ತುಂಬಿ ಸೊಗಸುಗಾತಿಯಂತೆ ಪ್ರಪಾತಕ್ಕೆ ಇಳಿಯುತ್ತದೆ. ಮಳೆಗಾಲದಲ್ಲಿ ಹೆಚ್ಚು ನೀರು ರಭಸದಿಂದ ಬೀಳುವ ಕಾರಣ ನೀರಿನಿಂದ ಏಳುವ ಧೂಮ ಪ್ರಪಾತವನ್ನು ಆವರಿಸಿದ್ದು ನೀರಿನ ಭೋರ್ಗರೆತದ ಶಬ್ದ ಹೃದಯವನ್ನು ಕಂಪಿಸುವಂತಿರುತ್ತದೆ. ಮಳೆಗಾಲದ ಅನಂತರದ ತಿಂಗಳುಗಳಲ್ಲಿ ನದಿಯ ಪ್ರವಾಹ ಸರಿಯಾದ ಗಾತ್ರದಲ್ಲಿರುವುದರಿಂದ ಜಲಪಾತ ನೋಡಲು ರಮ್ಯವಾಗಿರುತ್ತದೆ. ಜಲಪಾತದ ಪೂರ್ಣ ದೃಶ್ಯವನ್ನು ಶಿವಮೊಗ್ಗ ಗಡಿ ಭಾಗದಿಂದ ನೋಡಬಹುದು. ಜಲಪಾತದ ಬಂಡೆಯ ಅಂಚುಗಳಲ್ಲಿರುವ ಪೊಟರೆಗಳಲ್ಲಿ ಕಾಡು ಪಾರಿವಾಳಗಳು ಮನೆ ಮಾಡಿಕೊಂಡು ಪ್ರಪಾತದ ಬಳಿ ಗುಂಪುಗುಂಪಾಗಿ ಹಾರುತ್ತಿರುತ್ತವೆ. ಸೂರ್ಯಕಿರಣಗಳಿಂದ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜಲಪಾತದ ಏಕತಾನದ ನಾದ ಹತ್ತಿರ ನಿಂತು ಕೇಳುವವರ ಕಿವಿಗಳಿಗೆ ಘನಗರ್ಜನೆಯಂತೆ ಕೇಳಿಸುತ್ತದೆ. ಅದರ ಮೇಘನಾದದ ಗಾಂಭೀರ್ಯ ನಿಸರ್ಗ ಸಂಗೀತದ ಒಂದು ನಿರುಪಮ ಮಾದರಿ. ಮೌನವನ್ನು ಸೀಳುವ ಆ ನಿತ್ಯನಾದವನ್ನು ಆಲಿಸುತ್ತ ನಿಂತವರಿಗೆ ಒಮ್ಮೆ ನಾದಸಮಾಧಿಯನ್ನು ಉಂಟುಮಾಡಬಹುದು. ಜೊತೆಗೆ ಬಿಸಿಲು ಹರಿದಂತೆ ಜಲಧರೆಗಳ ಮೇಲಿನ ಕಾಮನಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವುವು : ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಈ ಜೀವಂತ ಪ್ರವಾಹದ ಸೌಮ್ಯ-ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಗೇರುಸೊಪ್ಪೆ ಜಲಪಾತದ ಮಾಹಿತಿ ಗಳನ್ನು ಸಂಗ್ರಹಿಸಲು ಮಾರ್ಚ್ ೧೮೫೬ರಲ್ಲಿ ಬಂದ ಇಬ್ಬರು ಬ್ರಿಟಿಷ್ ನೌಕಾಧಿಕಾರಿಗಳ ವರದಿಯಂತೆ- ಪ್ರಪಾತದ ಆಳ ೮೨೯ ಅಡಿಗಳು. ಪ್ರಪಾತದ ತಳದಲ್ಲಿ ನದಿ ಕೊರೆದಿರುವ ಮಡುವಿನ ಆಳ ೧೩೯ ಅಡಿಗಳು. ನದಿಯ ಆಡ್ಡಗಲ ಉತ್ತರ ಕನ್ನಡ ಮತ್ತು ಶಿವಮೊಗ್ಗ ದಂಡೆಗಳ ಮೇಲಿರುವ ಬಂಗಲೆಗಳ ನಡುವೆ ೨೧೩೦ ಅಡಿಗಳು. ೧೮೬೯ರ ಜನವರಿಯಲ್ಲಿ ಜಲಪಾತ ಪ್ರದೇಶಕ್ಕೆ ಭೇಟಿ ನೀಡಿದ್ದ ಶ್ರೀಮತಿ ಲೂಯಿ ಬ್ರೌನಿಂಗ್ ತಿಳಿಸುವಂತೆ- ಆಗ ಶಿವಮೊಗ್ಗ ಜಿಲ್ಲೆಯ ಅಂಚಿನ ಕಡೆ ಜಲಪಾತದ ಸಮೀಪದಲ್ಲಿ ಡೇರೆಯನ್ನು ಹಾಕಲು ಸಹ ಸಾಧ್ಯವಿಲ್ಲದಂತೆ ಒತ್ತಾದ ಕಾಡು ಬೆಳೆದಿತ್ತು. ಈಗ ಜಲಪಾತದ ಎದುರಿಗೆ, ನದಿ ಭೋರ್ಗರೆದು ಸಾಗುವ ಸುಂದರವಾದ ಸ್ಥಳದಲ್ಲಿ ಪ್ರವಾಸಿ ಬಂಗಲೆ, ಉಪಹಾರ ಗೃಹ ಮತ್ತು ಅಂಚೆ ಕಚೇರಿ ಇವೆ. ಅಕ್ಟೋಬರಿನಿಂದ ಫೆಬ್ರವರಿಯವರೆಗೆ ಸಹಸ್ರಾರು ಪ್ರವಾಸಿಗಳು ಜಗತ್ಪ್ರಸಿದ್ಧವಾದ ಈ ಮನೋಹರ ಸ್ಥಳಕ್ಕೆ ಭೇಟಿ ನೀಡುವುದುಂಟು. ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ. ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ: ರಾಜ: ಈ ಝರಿಯು ರಾಜಗಾಂಭೀರ್ಯದಿಂದ ಧುಮುಕುತ್ತದೆ. ರೋರರ್: ಕಲ್ಲು ಬಂಡೆಗಳ ನಡುವಿನಿಂದ ನುಗ್ಗುವ ಈ ಝರಿಯು ಅತಿ ಹೆಚ್ಚಿನ ಶಬ್ದ ಮಾಡುತ್ತದೆ. ರಾಕೆಟ್: ಹೆಚ್ಚಿನ ಪ್ರಮಾಣದ ನೀರು ಸಣ್ಣ ಕಿಂಡಿಯಿಂದ ರಭಸವಾಗಿ ಧುಮುಕುತ್ತದೆ. ರಾಣಿ: ಈ ಝರಿಯ ಆಕಾರವು ಹೆಣ್ಣು ನರ್ತಕಿಯ ತಳುಕು-ಬಳುಕಿಗೆ ಹೋಲುತ್ತದೆ. ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಮಹಾತ್ಮ ಗಾಂಧಿ ಜಲ ವಿದ್ಯುತ್ ಯೋಜನೆ ಜೋಗ ಜಲಪಾತದ ಬಳಿ ಇರುವ ವಿದ್ಯುತ್ ಸ್ಥಾವರ. ಸ್ವಾತಂತ್ರಪೂರ್ವದಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಮೊದಲ ಬಾರಿ ಜೋಗಕ್ಕೆ ಭೇಟಿಯಿತ್ತಾಗ ಜೋಗ ಜಲಪಾತವನ್ನು ನೋಡಿ "ಎಂತಹ ವ್ಯರ್ಥ" ಎಂದು ಉದ್ಗರಿಸಿದರಂತೆ. ಅವರ ಈ ಮಾತಿನ ಫಲಶ್ರುತಿ ಈ ಜಲವಿದ್ಯುತ್ ಆಗಾರ. ೧೯೩೦ರ ದಶಕದ ಪೂರ್ವಭಾಗದಲ್ಲಿ ಮೈಸೂರು ಲೋಕೋಪಯೊಗಿ ಇಲಾಖೆಯಿಂದ ಜಲವಿದ್ಯುತ್ ಯೋಜನಾ ಕಾರ್ಯ ಶುರುವಾಯಿತು. ಮೊದಲ ಹಂತದ ಕೆಲಸ ೧೯೩೯ರಲ್ಲಿ ಜೋಗ ಜಲಪಾತದಿಂದ ೨೪ ಕಿ. ಮಿ. ದೂರದಲ್ಲಿರುವ ಹಿರೆಭಾಸ್ಕರ ಎಂಬ ಸ್ಥಳದಲ್ಲಿ ಶುರುವಾಯಿತು. ಮೊದಲು ಕೃಷ್ಣರಾಜೇಂದ್ರ ಜಲವಿದ್ಯುತ್ ಯೋಜನೆಯೆಂದು ಕರೆಯಲ್ಪಡುತಿದ್ದ ಈ ಯೋಜನೆಯನ್ನು ನಂತರ ಮಹಾತ್ಮ ಗಾಂಧಿ ಜಲವಿದ್ಯುತ್ ಯೊಜನೆಯೆಂದು ನಾಮಕರಣ ಮಾಡಲಾಯಿತು. ಫೆಬ್ರುವರಿ ೨೧ ೧೯೪೯ರಲ್ಲಿ ಉದ್ಘಾಟನೆಯಾದ ಈ ವಿದ್ಯುತ್ ಸ್ಥಾವರ ೧೨೦ ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ. ಮೊದಲು ಹಿರೆಭಾಸ್ಕರ ಜಲಾಶಯದಿಂದ ಈ ಯೊಜನೆಗೆ ನೀರಿನ ಸರಬರಾಜಾಗುತ್ತಿತ್ತು. ೬೦ರ ದಶಕದಲ್ಲಿ ಲಿಂಗನಮಕ್ಕಿ ಜಲಾಶಯ ಪ್ರಾರಂಭವಾದ ನಂತರ ಅದೆ ಈ ಯೋಜನೆಗೆ ನೀರಿನ ಮೂಲ. ಪ್ರವಾಸಿಗರಿಗೆ ಮಾರ್ಗದರ್ಶನ ಆಗಸ್ಟ್-ಡಿಸೆಂಬರ್ ಅವಧಿಯ ಜೋಗ ಜಲಪಾತವನ್ನು ವೀಕ್ಷಿಸಲು ಅತಿ ಸೂಕ್ತ ಸಮಯ. ಸಿದ್ದಾಪುರದಿಂದ ಜೋಗವು ೨೪ ಕಿಲೋಮೀಟರ್ ಹಾಗು ಬೆಂಗಳೂರಿನಿಂದ ೩೭೯ ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ಸಿದ್ದಾಪುರ ತಲುಪಿ, ಸಿದ್ದಾಪುರದಿಂದ ಖಾಸಗಿ ಬಸ್ಸಿನಲ್ಲಿ ಜೋಗ ತಲುಪಬಹುದು. ರೈಲಿನಲ್ಲಿ ಬರುವುದಾದರೆ ಬೆಂಗಳೂರಿನಿಂದ ಸಾಗರ ತಲುಪಿ,ಸಾಗರದಿಂದ ಜೋಗಕ್ಕೆ ಬಸ್ಸಿನಲ್ಲಿ ತಲುಪಬಹುದು. ಸಾಗರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಜೋಗದ ಜಲಪಾತ thumb|center|ಜೋಗದ ಜಲಪಾತ ಎಡದಲ್ಲಿ ನೇರವಾಗಿ ಬೀಳುತ್ತಿರುವುದು 'ರಾಜ' ;ಅದರ ಪಕ್ಕದಲ್ಲಿ ಸಂದಿಯಿಂದ ಧುಮುಕುತ್ತಿರುವುದು 'ರೋರರ್'-ಆರ್ಭಟ ಅದರದ್ದೇ ;ನಂತರದಲ್ಲಿ ಕೆಳಭಾಗಲ್ಲಿ ಮೂರು ಸೀಳು ಮೇಲೆ ಒಂದೇಇರುವ-ರಾಕೆಟ್ ಹಾರಿದಾಗ ಉಗುಳುವ ಹೊಗೆಯಂತಿರುವುದು 'ರಾಕೆಟ್'; ನಂತರ ಕೊನೆಯ ಬಲಭಾಗದಲ್ಲಿರುವುದು 'ಲೇಡಿ', ಮೆಲ್ಲಗೆ ಇಳಿಜಾರಿನಲ್ಲಿ ಜಾರುತ್ತಿದೆ. ಛಾಯಾಂಕಣ ಬಾಹ್ಯ ಸಂಪರ್ಕ ಮಳೆಗಾಲದ ಜಲಪಾತ ಮತ್ತು ಹೆಚ್ಚಿನ ವಿವರ:ಧುಮ್ಮಿಕ್ಕುವ ಜಲಪಾತ - ಜೋಗ;d: 27 ಆಗಸ್ಟ್ 2019 ಉಲ್ಲೇಖಗಳು ವರ್ಗ:ಜಲಪಾತಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಸಾಗರ ತಾಲೂಕಿನ ಪ್ರವಾಸಿ ತಾಣಗಳು ವರ್ಗ:ಕರ್ನಾಟಕದ ಜಲಪಾತಗಳು ವರ್ಗ:ಕರ್ನಾಟಕದ ಏಳು ಅದ್ಭುತಗಳು
ಕುವೆಂಪು
https://kn.wikipedia.org/wiki/ಕುವೆಂಪು
ಟಿ.ಪಿ.ಕೈಲಾಸಂ
https://kn.wikipedia.org/wiki/ಟಿ.ಪಿ.ಕೈಲಾಸಂ
thumb|150px|'ಟಿ.ಪಿ. ಕೈಲಾಸಂ' ಟಿ.ಪಿ.ಕೈಲಾಸಂ "ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ" ."ಕರ್ನಾಟಕ ಪ್ರಹಸನ ಪಿತಾಮಹ". ತಂಜಾವೂರು ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ಕನ್ನಡ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟವರು. ಬಾಲ್ಯ ಜೀವನ ಕೈಲಾಸಂರವರು (೨೯.೦೭.೧೮೮೪-೧೯೪೬) ಮೈಸೂರು ರಾಜ್ಯದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ತಮಿಳು ಮೂಲದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ. ಪದವಿ. ಎಂ.ಎ.ಪದವಿಗಳನ್ನು ಪಡೆದು ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಪಡೆದರು. ಜ್ಞಾನಾರ್ಜನೆಯಂತೆ ಕ್ರೀಡೆಯಲ್ಲೂ ಆಸಕ್ತಿ. ಫುಟ್‌ಬಾಲ್‌ನಲ್ಲಿ ಅಜೇಯ ಗೋಲ್ ಕೀಪರ್. ಯೂಜಿನ್ ಸ್ಯಾಂಡೋರ ನೆಚ್ಚಿನ ಶಿಷ್ಯರಾಗಿ ವ್ಯಾಯಾಮ ಪಟುವಾಗಿದ್ದರು.http://tpkailasam.blogspot.com Kailasam's English Poems and Plays ನಾಟಕಕಾರರಾಗಿ ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಕೈಲಾಸಂರವರ ಮೇಲೆ ಅಪಾರ ಪ್ರಭಾವ ಬೀರಿದ್ದವು. ಅದೇ ತಂತ್ರಗಾರಿಕೆ ಬಳಸಿ ಹಲವು ನಾಟಕಗಳನ್ನು ರಚಿಸಿದರು. ರವೀಂದ್ರನಾಥರು ಬೆಂಗಳೂರಿಗೆ ಬಂದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ನಾಟಕ ಟೊಳ್ಳುಗಟ್ಟಿ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು.https://www.sapnaonline.com/shop/Author/tp-kailasam ಕೃತಿಗಳು ನಾಟಕಗಳು ಟೊಳ್ಳುಗಟ್ಟಿ ಅಥವಾ ಮಕ್ಕಳಸ್ಕೂಲ್ ಮನೇಲಲ್ವೇ! ಹೋಂರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ, ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಂಪ್ನಿ, ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ವೈದ್ಯನವ್ಯಾಧಿ, ಸೂಳೆ . -ಮೊದಲಾದ ನಾಟಕಗಳ ಜೊತೆಗೆ ನಾಲ್ಕು ಇಂಗ್ಲಿಷ್ ನಾಟಕಗಳೂ ರಚನೆಯಾದವು. (ಟೊಳ್ಳುಗಟ್ಟಿ; BY ಕೈಲಾಸಂ ಟಿ ಪಿಪೋಲೀ ಕಿಟ್ಟಿ. BY ಕೈಲಾಸಂ ಟಿ ಪಿ) ಕಥೆಗಳು ತಾವರೆಕೆರೆ ಸಮಶ್ಪೋಯಿನ ದಂಬ್ಡಿ ಮುದ್ದೋ ಇಲ್ಲಾ ಕದ್ದೋ ಸುಂಕದ ಕಟ್ಟೆ ಶಾಮಿಯ ಸೇಡುhttp://tpkailasam.blogspot.com/2008/09/kailasam.html ಶ ಕವನಗಳು ತಿಪ್ಪಾರಳ್ಳಿ ಕೋಳಿಕೆ ರಂಗ ನಂಜಿ ನನ್ ಅಪರಂಜಿ ಕಾಶಿಗ್ ಹೋದ ನಂ ಬಾವ ಬೋರನ ಭಾರ ಅಲ್ಪಜ್ಞನ ಪದ ಅರಿವು https://kn.wikisource.org/s/1jql ಮಹಾತ್ಮಾ ಗಾಂಧಿ ಇಂಗ್ಲಿಷ್ ಕವನಗಳು ದಿ ಡ್ರಮಾಟಿಸ್ಟ್ (The Dramatist) ಎಟೆರ್ನಲ್ ಕೆಯಿನ್ (Eternal Cain) ಟ್ರುತ್ ನೆಕೆಡ್ (Truth Naked) ದಿ ಲೇಕ್ (The Lake) ಕೈಕೇಯೀ ದ್ರೋಣ ಕಮಿಸರೇಶನ್ (Commiseration) ಮದರ್-ಲವ್ (Mother-Love) ದಿ ಸಿಕ್ಸತ್ ಕಾಲಮಿಸ್ಟ್ ೧೯೪೩ (The Sixth columnist 1943) ಎ ಮೋನೋಲಾಗ್ (A Monolougue) ದಿ ರೆಸಿಪಿ (The Recipe) ದಿ ಸ್ಮಿಲಿನ್ ಸೆವೆನ್ ೧೯೩೦ (The Smilin' Seven 1930) ಕೃಷ್ಣ (Krishna) ಸುಭದ್ರಾ (Subhadra) ದಿ ಆರ್ಟಿಸ್ಟ್ (The Artist) ಇಂಗ್ಲಿಷ್ ನಾಟಕಗಳು ದಿ ಬರ್ಡನ್ (The Burden) ಫುಲ್ಫಿಲ್ಮೆಂಟ್ (Fulfilment) ದಿ ಪರ್ಪಸ್ (The Purpose) ದಿ ಬ್ರಾಹ್ಮಿನ್ಸ್ ಕರ್ಸ್ (The Brahmin's Curse)(Karna ; Murder of Mercy?) ಕೈಲಾಸಂ ಎಂದೂ ಪೆನ್ನು ಹಿಡಿದವರಲ್ಲ. ಕನ್ನಡಾಂಗ್ಲಾ ಭಾಷೆಯಲ್ಲಿ ಹೇಳಿದ್ದನ್ನು ಸ್ನೇಹಿತರು ಬರೆದು ಕೊಂಡರು. ಅವರ 'ಕೋಳಿಕೆ ರಂಗ' ಕವನ ಅವರು ಇಂಗ್ಲೆಂಡಿನಲ್ಲಿದ್ದಾಗ 'ಕಾನ್ಸ್ಟಂಟಿನೊಪಲ್' ಕವನವನ್ನು ಒಬ್ಬ ಇಂಗ್ಲಿಷ್ ಸಂಗೀತಗಾರ ಹೊಸ ರಾಗದಲ್ಲಿ ಹಾಡಿ, ಇದೇ ರಾಗದಲ್ಲಿ ಬೇರೆ ಹಾಡು ಹಾಡಿದರ ಅವರಿಗ ಬಹುಮಾನ ಕೊಡುವುದಾಗಿ ಸವಾಲು ಹಾಕುತ್ತಾನೆ. ಆಗ ಕೈಲಾಸಂ ಅದೇರಾಗದಲ್ಲಿ 'ಕೋಳಿಕೆ ರಂಗಾ' ಹಾಡು ಹೇಳಿ ಬಹುಮಾನ ಗಿಟ್ಟಿಸಿಕೊಳ್ಳುತ್ತಾರೆ ಎಂದು ಕಥೆ ಇದೆ(ಪ್ರತಿ ೬ಗ್ರಾಂ ಗಳ ೧೦ ಪೌಂಡು). ಆ ಹಾಡು ಹೀಗಿದೆ (ಸುಮಾರು ೧೯೨೦ ರಲ್ಲಿ ರಚನೆ.) ಕೋಳಿಕೆ ರಂಗ ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ, ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ; ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ ಇವ್ರೆಲ್ರು ಕಂಡವ್ರೆ ನನ್ನಾ. ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು, ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ ನಂಹಳ್ಳಿ ಕಿಲಾಡಿ ಹುಂಜಾ! ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೋತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ ಬೆಪ್ಪು ನನ್ ಮಗ ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ, ತುಂಬಿದ್ ಮೈಸೂರಿಗ್ ಬಂದೆ; ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ ಕಟ್ ತಂದಿದ್ ಬುತ್ತಿನ್ ತಿಂತಿದ್ದೆ. ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ, ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ “ಲೇ, ಯಾರೋ ಯಾಕೋ ಇಲ್ಲಿ” ಅಂತ! ಹಃ ನಾನು.. ನಾನು ಕೋಳಿಕೆ ರಂಗ ‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಬೆಪ್ ನನ್ ಮಗ. - ಟಿ. ಪಿ. ಕೈಲಾಸಂ* ಕೋಳಿಕೆ ರಂಗ... / Kolike Ranga ಕನ್ನಡಕ್ಕೊಬ್ನೆ ಕೈಲಾಸಂ ಕೈಲಾಸಂ ಅವರು ೧೯೪೫ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾಡಿದ ಭಾಷಣ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದೆಂದು, ಜೊಕ್ಕವಾಗಿತ್ತೆಂದೂ ಪ್ರಸಿದ್ಧವಾಗಿದೆ. ಏಕೆಂದರೆ ಅದರಲ್ಲಿ ಪದೇ ಪದೇ ಹೇಳಿದ್ದನ್ನೇ ಹೇಳುವ ಪರಿಪಾಠವಿರಲಿಲ್ಲ. ಪ್ರತಿಪದ, ಪ್ರತಿವಾಕ್ಯಗಳೂ ಮೊದಲೇ ನಿರ್ಧಾರಿತವಾಗಿದ್ದು, ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಮೊದಲ ತಯಾರಿಯಿಲ್ಲದೆ ಯಾವ ಸಮಾರಂಭಕ್ಕೂ ಅವರು ಹೋಗುತ್ತಿರಲಿಲ್ಲ. ಕನ್ನಡಕ್ಕೊಬ್ನೆ ಕೈಲಾಸಂ’, ಎಂದು ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಕೊಡುಗೆ ಅನನ್ಯ! ಯಾರೋ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೆ, ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಗೆ ಯಾಡಿದ್ದರಂತೆ. ಪಾಶ್ಚಾತ್ಯ ಸಂಗೀತಾಸಕ್ತರಾಗಿ ಅವರು ಇಂಗ್ಲಿಷ್ ರಾಗಕ್ಕೆ ಕನ್ನಡದಲ್ಲಿ ಹಾಡು ಬರೆದು ಕೇಳುಗರಿಗೆ ಅಚ್ಚರಿ ಹುಟ್ಟಿಸುತ್ತಿದ್ದರಂತೆ. ಕೈಲಾಸಂರ ಪದ್ಯದ ತುಣುಕೊಂದು ಹೀಗಿದೆ. "ಕಲ್ಲಲ್ಲಿ ಸಿಗುವುದೇ ಕಲ್ಲಿದ್ದಿಲೆಂದೆನಿಸಿ ಕಲ್ಲನ್ನು ಕೊರೆಯಲು--ಎಲ್ಲೆಲ್ಲಿ ಕೊರೆದರೂ ಕಲ್ಲಲ್ಲದೊಂದಿಲ್ಲ ! ಬಲ್ಲೆ-- ಕಲ್ಲೇ ಇದ್ದಿಲೆಂದನಲ್ಪಜ್ಞ ". ಕೈಲಾಸಂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಹೇಳಿದ ಇಂಗ್ಲಿಷ್ ಕವನದ ಕನ್ನಡಾನುವಾದ ಹೀಗಿದೆ, "ಹೊನ್ನೆ ? ಬಲ್ ಬಿರುದುಗಳೆ ? ಹಾಲುಗಲ್ ವಿಗ್ರಹವೆ ? ಕವಿ ಬಯಸನಿಂಥದೇ ಪ್ರತಿಫಲವೆ ಬೇಕು ! ಹಿರಿಯರುಂ ಕಿರಿಯರುಂ ಕಿಲಕಿಲನೆ ನಕ್ಕೆರೆಡು ಕಣ್ಣ ಹನಿಯಿತ್ತರೆನಗದು ಅನಿತೆ ಸಾಕು" !.(ಕಣ್ಣ ಹನಿಯಿತ್ತರೆ+ ಎನಗದು ಅನಿತೆ ಸಾಕು") ೨೯ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರು;ಟಿ. ಪಿ. ಕೈಲಾಸಂ ನಿಧನ ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ನಿಜಜೀವನದ ರಂಗದಿಂದ ಮರೆಯಾದದ್ದು ೨೩.೧೧.೧೯೪೬ರಲ್ಲಿ.T.P. Kailasam ಹೊರಗಿನ ಕೊಂಡಿಗಳು ಚಿಲುಮೆ - http://chilume.com/?author=43 ಕೈಲಾಸಂ @ ನಂಜನಗೂಡು: ಮರೆತ ಅಧ್ಯಾಯದ ನೆನಪು;ಪದ್ಮಾ ಶ್ರೀರಾಮ;18 Sep, 2016 ಟಿ.ಪಿ.ಕೈಲಾಸಂ ಟಿಪಿಕೈಲಾಸಂ ಉಲ್ಲೇಖಗಳು ಟಿ.ಪಿ.ಕೈಲಾಸಂ ಟಿ.ಪಿ.ಕೈಲಾಸಂ ಟಿ.ಪಿ.ಕೈಲಾಸಂ ವರ್ಗ:೧೮೮೪ ಜನನ ವರ್ಗ:೧೯೪೬ ನಿಧನ ವರ್ಗ:ಮೈಸೂರಿನ ಬರಹಗಾರರು
ಮುಕ್ತ ತಂತ್ರಾಂಶ (ಒಪನ್ ಸೊರ್ಸ್)
https://kn.wikipedia.org/wiki/ಮುಕ್ತ_ತಂತ್ರಾಂಶ_(ಒಪನ್_ಸೊರ್ಸ್)
REDIRECT ಮುಕ್ತ ತಂತ್ರಾಂಶ
ಡಿ.ವಿ.ಗುಂಡಪ್ಪ
https://kn.wikipedia.org/wiki/ಡಿ.ವಿ.ಗುಂಡಪ್ಪ
ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.Sahithya Academ(1988), p 1057Murthy (1992), pp. 173, 174, 178, 190Sahitya Akademi (1988), p. 1437 ಬಾಲ್ಯ ಜೀವನ ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಶಿಕ್ಷಣ ಡಿ.ವಿ.ಜಿ ಅವರು ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು. ವೃತ್ತಿ ಜೀವನ ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು. ಸಾಹಿತ್ಯ ಕೃಷಿ ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಲೇಖನ ಡಿ.ವಿ.ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಗುಂಡಪ್ಪನವರ ಸಮಗ್ರ ಸಾಹಿತ್ಯ ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿರುತ್ತಾರೆ. ಇವರ ಇಂಗ್ಲಿಷ್ ಕೃತಿಗಳು ಹಾಗೂ ಲೇಖನಗಳನ್ನು ವಿಶ್ವವಿಖ್ಯಾತ ವಿದ್ವಾಂಸರಾದ ಡಾ. ಎ.ಬಿ. ಕೀತ್ ಹಾಗೂ ಸಿ.ಎಫ್. ಆಂಡ್ರ್ಯೂಸ್ ಮತ್ತು ನಮ್ಮ ದೇಶದ ಅಗ್ರಗಣ್ಯ ವ್ಯಕ್ತಿಗಳಾಗಿದ್ದ ಎಸ್. ಕವಿತೆಗಳು ನಿವೇದನ (1942) ಉಮರನ ಒಸಗೆ ಮಂಕುತಿಮ್ಮನ ಕಗ್ಗ - I ಮರುಳ ಮುನಿಯನ ಕಗ್ಗ - II ಶ್ರೀರಾಮ ಪರೀಕ್ಷಣಂ ಅ೦ತಃಪುರಗೀತೆ ಗೀತ ಶಾಕುಂತಲಾ ಜ್ಞಾಪಕ ಚಿತ್ರಶಾಲೆ ನಿಬಂಧ ಜೀವನ ಸೌಂದರ್ಯ ಮತ್ತು ಸಾಹಿತ್ಯ ಸಾಹಿತ್ಯ ಶಕ್ತಿ ಸಂಸ್ಕೃತಿ ಬಾಳಿಗೊಂದು ನಂಬಿಕೆ ಜೀವವನಧರ್ಮ ಯೋಗ (ದೈನಂದಿನ ಜೀವನದ ಯೋಗ)-(ಗೀತೆಯ ಮೇಲೆ ಪ್ರವಚನ ಸಂಗ್ರಹ) ನಾಟಕ ವಿದ್ಯಾರಣ್ಯ ವಿಜಯ ಜಾಕ್ ಕೇಡ್ ಮ್ಯಾಕ್ ಇಂಗ್ಲಿಷಿನಲ್ಲಿ Vedanta and Nationalism (1909) The Problems of Indian Native States (1917) The Native States in the Empire (1918) The Indian Native States and the Montagu-Chelmsford Report (1918) The Government of India and the Indian States, The Indian States Committee : A Note on its Terms of Reference and Their Implications (1928) All About Mysore (1931) The States and their People in the Indian Constitution (1931) ಸಾಧನೆ thumb|right|250px|ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿರುವ ಡಿವಿಜಿ ಪ್ರತಿಮೆ. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ಡಿ.ವಿ.ಜಿ. ಅವರು, ಮೈಸೂರು ವಿಶ್ವವಿದ್ಯಾನಿಲಯ ಪ್ರಕಟಿಸಿದ ‘ಇಂಗ್ಲಿಷ್–ಕನ್ನಡ ನಿಘಂಟು’ ಕೃತಿಯ ಸಂಪಾದಕ ಸಮಿತಿಯಲ್ಲಿದ್ದರು. 1939ರಲ್ಲಿ ಮೈಸೂರು ರಾಜ್ಯಾಂಗ ಸುಧಾರಣಾ ಸಮಿತಿ ಸದಸ್ಯರಾಗಿದ್ದರು. ರಾಜಕೀಯ ದೃಷ್ಟಿಕೋನ ಅವರ ಈ ಮಾತುಗಳು: ‘ರಾಜದಂಡ ಹುಟ್ಟಿದ್ದು ಮನುಷ್ಯನಿಗೆ ಮನುಷ್ಯನ ವಿಷಯದಲ್ಲಿರುವ ಹೆದರಿಕೆಯಿಂದ. ರಾಜ್ಯನಿಬಂಧನೆಯಾದದ್ದೂ ಮನುಷ್ಯನಿಗೆ ಮನುಷ್ಯನಲ್ಲಿರುವ ಅಪನಂಬಿಕೆಯಿಂದ. ಮನುಷ್ಯರು ಅನ್ಯೋನ್ಯ ಸಹವಾಸದಲ್ಲಿರಬೇಕಾಗಿಬಂದ ಮೇಲೆ, ಒಬ್ಬನನ್ನೊಬ್ಬನು ನಂಬದಿದ್ದರೆ ಬದುಕು ಸಾಗದು; ಪೂರ್ತಿ ನಂಬುವುದೆಂದರೆ ವಂಚನೆಯ ಶಂಕೆ. ಹೀಗೆ ನಂಬಿಕೆ–ಅಪನಂಬಿಕೆಗಳ ಬೆರಕೆಯೇ ರಾಜ್ಯಸಂಬಂಧಗಳ ಒಳತಿರುಳು... ಸಾರ್ವಜನಿಕ ಕಾರ್ಯಕ್ಕೆಂದು ಮುಂದೆ ಬರುವವರ ಮನಸ್ಸುಗಳಲ್ಲಿ ಪ್ರತ್ಯಕ್ಷವಾಗಲ್ಲದಿದ್ದರೆ ಪರೋಕ್ಷವಾಗಿಯಾದರೂ, ಸಮೀಪದಲ್ಲಿ ಅಲ್ಲದಿದ್ದರೆ ದೂರವಾಗಿಯಾದರೂ, ಸ್ವಪ್ರಯೋಜನದ ನಿರೀಕ್ಷೆ ಅಷ್ಟೋ ಇಷ್ಟೋ ಇರುವುದು ಅಸ್ವಾಭಾವಿಕವಲ್ಲ. ಆದರೆ ಎಲ್ಲಿ ಅವರು ನೂರಕ್ಕೆ ನೂರು ಮಂದಿಯೂ ಅಂಥವರೇ ಆಗಿದ್ದಾರೆಯೋ ಆ ದೇಶ ತೀರ ಬಡದೇಶವೆನ್ನಬೇಕು. ಸ್ವಾಭಾವಿಕವಾದ ಆಶಾಪ್ರವೃತ್ತಿಯ ಮಟ್ಟದಿಂದ ಮೇಲೇರಿ ನಡೆಯಬಲ್ಲವನು ದೇಶದ ನೂರರಲ್ಲಿ ಹತ್ತು ಮಂದಿಯಾದರೂ ಎಲ್ಲಿ ದೊರೆಯುತ್ತಾರೆಯೋ ಅದೇ ಪ್ರಜಾರಾಜ್ಯವನ್ನು ಅನರ್ಥದಿಂದ ಉಳಿಸಿಕೊಳ್ಳಬಲ್ಲ ದೇಶ’. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವುದರ ಅಪಾಯದ ಬಗ್ಗೆಯೂ ಡಿವಿಜಿ ಎಚ್ಚರಿಸಿದ್ದರು. ‘ಅನ್ನ ವಸ್ತು ಸಂಪಾದನೆಗಾಗಿ ಬೇರೆ ವೃತ್ತಿಯನ್ನಿರಿಸಿಕೊಂಡು, ಕೇವಲ ಸಾರ್ವಜನಿಕ ಹಿತದೃಷ್ಟಿಯಿಂದ ರಾಜಕೀಯಕ್ಕೆ ಕೈ ಹಚ್ಚುವವರೆಲ್ಲ ನಿಷ್ಪಾಕ್ಷಿತ ರಾಜ್ಯಸ್ಥರೇ. ಅಂಥವರ ಸ್ವತಂತ್ರ ಪೋಷಣೆಯಿಂದ ಬೆಳೆಯಬೇಕಾದದ್ದು ನಮ್ಮ ರಾಜಕೀಯ’ ಎಂದು ಆಶಿಸಿದರು. ಗೌರವಗಳು / ಪ್ರಶಸ್ತಿಗಳು ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೬೧ ರಲ್ಲಿ ಡಿ.ವಿ.ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ.ವಿ.ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ.ವಿ.ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು. ಭಾರತೀಯ ಅಂಚೆ ಸೇವೆ ಡಿವಿಜಿಯವರ ನೆನಪಿಗಾಗಿ ೧೯೮೮ರಲ್ಲಿ ಅಂಚೆಚೀಟಿ ಬಿಡುಗಡೆ ಮಾಡಿತು. ಅವರ ಹಾಸ್ಯಪ್ರಜ್ಞೆ ಜೀವನದಲ್ಲಿ ತೊಂದರೆಗಳಿದ್ದರೂ ಅವರಲ್ಲಿ ಹಾಸ್ಯ ಪ್ರವೃತ್ತಿಯೂ ಇತ್ತು. ಅವರು ವ್ಯಾಕರಣಕಲಿಯಲು ಗರಣಿಕೃಷ್ಣಾಚಾರ್ಯರಲ್ಲಿ ಹೋದಾಗ ಅವರಿಗೆ ಶಬ್ದಶಾಸ್ತ್ರ ಒಲಿಯದೆ ಸೂಪಶಾಸ್ತ್ರದಲ್ಲಿ ಪರಿಣತಿ ಪಡೆದುದಾಗಿ ಒಂದು ಹಾಸ್ಯ ಭರಿತ ಸಂಸ್ಕೃತ ಶ್ಲೋಕದಲ್ಲಿ ಹೇಳುತ್ತಾರೆ: ನ ವೇದಾಂತೇ ಗಾಢಾ ನಚ ಪರಿಚಿತಂ ಶಬ್ದಶಾಸ್ತ್ರಂ| ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿಹವೇ| ವಯಂ ಶ್ರೀಮದ್ಬ್ಯಾಳೀಹುಳಿ ಪಳದ್ಯ ಕೊಸುಂಂಬ್ರಿತೊವ್ವೀ| ಹಯಗ್ರೀವಾಂಬೋಡೀ ಕರಿಗಡಬು ದಧ್ಯನ್ನ ರಸಿಕಾಃ|| ಅರ್ಥ: ನಾವು ವೇದಂತದಲ್ಲಿ ನುರಿತವರಲ್ಲ, ವ್ಯಾಕರಣವನ್ನೂ ಅರಿತವರಲ್ಲ, ತರ್ಕವೇದಗಳನ್ನೂ ತಿಳಿದವರಲ್ಲ, ಸಾಹಿತ್ಯದಲ್ಲಿ ಸರಸತೆಇಲ್ಲ, ಆದರೆ ಕೇವಲ ಶ್ರೀಮದ್ ಬೇಳೇಹುಳಿ,ಪಳದ್ಯ, ಕೋಸಂಬರಿ, ತೊವ್ವೆ,ಹಯಗ್ರೀವ, ಅಂಬೊಡೆ, ಕರಿಗಡಬು ಮತ್ತು ಮೊಸರನ್ನದಲ್ಲಿ ರಸಿಕರು.(ಜ್ಞಾಪಕಚಿತ್ರಶಾಲೆ:ಪ್ರಜಾವಾಣಿ:೩೦-೭-೨೦೧೬:) ಸ್ಮಾರಕ ೨೦೦೩ರಲ್ಲಿ ಬೆಂಗಳೂರಿನ ಬಸವನಗುಡಿ ಬ್ಯೂಗಲ್ ರಾಕ್ ಪಾರ್ಕಿನಲ್ಲಿ ಡಿವಿಜಿಯವರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ನಿಧನ ೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು. ಹೆಚ್ಚಿಗೆ ಓದಲು ಬಿ. ಜಿ. ಎಲ್. ಸ್ವಾಮಿ ಮಂಕುತಿಮ್ಮನ ಕಗ್ಗ ಮರುಳ ಮುನಿಯನ ಕಗ್ಗ ಕನ್ನಡ ನೆಲದಲ್ಲಿ ಗಾಂಧಿ ಡಿ.ವಿ.ಜಿ.ಗಾಂಧೀಜಿಯವರನ್ನು ಮೊಟ್ಟಮೊದಲಿಗೆ ಕರ್ನಾಟಕಕ್ಕೆ ಕರೆತಂದಿದ್ದರು. ಡಿ.ವಿ. ಗುಂಡಪ್ಪನವರ ಚೊಚ್ಚಿಲ ಕೃತಿ ‘ವೇದಾಂತ ಅಂಡ್ ನ್ಯಾಷನಲಿಸಂ ಡಿವಿಜಿ:ಪ್ರಜಾಪ್ರಭುತ್ವದ ಬೆಳಕು;ಎಸ್‌. ಸೂರ್ಯಪ್ರಕಾಶ ಪಂಡಿತ್‌;17 Mar, 2017 ; ಕಣಜ-ಡಿವಿಗುಂಡಪ್ಪ. ‘ಡಿ.ವಿ.ಗುಂಡಪ್ಪ: ಹೃದಯವಂತ ಧೀಮಂತ;Nateshababu H | Vijaya KarnatakaUpdated: 17 Mar 2012;ಅ.ರಾ.ಮಿತ್ರ ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಡಿ.ವಿ.ಜಿ. ಅವರ ಪತ್ರಗಳು ಮರುಳ ಮುನಿಯನ ಕಗ್ಗ ವರ್ಗ:ಕನ್ನಡ ಸಾಹಿತ್ಯ ಡಿ.ವಿ.ಗುಂಡಪ್ಪ ವರ್ಗ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವರ್ಗ:ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ಕವಿಗಳು
ಕೂಡ್ಲಿ
https://kn.wikipedia.org/wiki/ಕೂಡ್ಲಿ
thumb|ತುಂಗಾ ನದಿ ಸಂಗಮಕ್ಕೆ ಹರಿದುಬರುತ್ತಿರುವ ಒಂದು ನೋಟ ಕೂಡ್ಲಿ (ಕೂಡಲಿ) ಶಿವಮೊಗ್ಗ ಜಿಲ್ಲೆಯ ಒಂದು ಪುಟ್ಟ ಊರು. ಈ ಊರು ಭಾರತ ದೇಶದ ಕರ್ನಾಟಕ ರಾಜ್ಯಕ್ಕೆ ಸೇರುತ್ತದೆ. ತುಂಗಾ ಮತ್ತು ಭದ್ರಾ - ನದಿಗಳು, ಬೇರೆ ಬೇರೆಯಾಗಿ ಉಗಮಿಸಿ, ಕೂಡ್ಲಿ (ಕೂಡಲಿ) ಎಂಬಲ್ಲಿ ಈ ಜೀವನದಿಗಳ ಸಂಗಮವಾಗುತ್ತವೆ. ಈ ಊರು ತುಂಗಭದ್ರಾ ನದಿಗೆ ಜನ್ಮ ನೀಡುವ ಸ್ಥಳ. right|thumb|ಸಂಗಮೇಶ್ವರ ದೇವಾಲಯ, ಕೂಡ್ಲಿ ಪ್ರಾಮುಖ್ಯತೆ ಆದಿ ಕಾಲದ ಸಂಗಮೇಶ್ವರ ದೇವಾಲಯ, ಸಂಗಮ ಹಾಗೂ ಪರಿಸರದ ವಿಹಂಗಮ ನೋಟ ಈ ಪ್ರದೇಶವನ್ನು ಸುಂದರಗೊಳಿಸಿದೆ. ಮಗದೊಂದು ಪ್ರವಾಸಿ ತಾಣವೆಂದೂ ಹೇಳಿದರೆ ತಪ್ಪಾಗದು. ಇಲ್ಲಿಯ ರಂಗನಾಥ ಸ್ವಾಮಿ ದೇವಾಲಯವೂ ಜನಪ್ರಿಯ. ಸಂಗಮ ಸ್ಥಳದಲ್ಲಿ ಸಂಗಮೇಶ್ವರನ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. ಸಂಗಮೇಶ್ವರ ದೇವಾಲಯಕ್ಕೆ ಮಹತ್ತರ ಇತಿಹಾಸವಿರುವುದು. ಈ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಪ್ರಾಚೀನ ಶಿಲ್ಪಕಲೆಗಳಿಂದ ರಾರಾಜಿಸುವ ಈ ದೇವಾಲಯ ಕೂಡ್ಲಿಯ ಪ್ರಮುಖ ಆಕರ್ಷಣೆಗಳಲ್ಲೊಂದು. ಇತಿಹಾಸ thumb|ಸಂಗಮ ಸ್ಥಳದಲ್ಲಿ ನಂದಿಯ ಗುಡಿ ಇದೆ. ಈ ಪುಟ್ಟ ಗುಡಿ ಸಂಗಮ ಸ್ಥಳವನ್ನು ಸೂಚಿಸುತ್ತದೆ. ಇಲ್ಲಿಯ ಪ್ರಾಚೀನ ಸಂಗಮೇಶ್ವರ ದೇವಾಲಯ ಹೊಯ್ಸಳರ ಕಾಲದ್ದೆಂದು ಹೇಳಲಾಗುತ್ತದೆ. ಇಲ್ಲಿ ಕೆಲವು ಪ್ರಾಚೀನ ಶಾಸನಗಳಿರುವುದುಂಟು. ದೇವಾಲಯದ ಸುಂದರ ಶಿಲ್ಪಕಲೆ ಜನರ ಮನ ಸೂರೆಗೊಳಿಸುತ್ತದೆ. ಇದಲ್ಲದೆ ಇನ್ನೂ ಕೆಲವು ಚಿಕ್ಕ ಪುಟ್ಟ ಪ್ರಾಚೀನ ದೇವಾಲಯಗಳು ಇಲ್ಲಿ ಇರುವುದುಂಟು. ಕೂಡಲಿಯಲ್ಲಿ ಶಾರದ ಪೀಠವಾದ ಕೂಡಲಿ ಶೃಂಗೇರಿ ಮಠ. ಕೂಡ್ಲಿಯಲ್ಲಿ ಆರ್ಯ ಅಕ್ಷೋಭ್ಯ ತೀರ್ಥರ ಮಠವಿದೆ. ಕೂಡ್ಲಿ ಜಾತ್ರೆ ಪ್ರತಿ ವರ್ಷ ಯುಗಾದಿ ಹಬ್ಬದ ಸಂದರ್ಭ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ನಡೆಯಲಿದೆ. ಸುಮಾರು 200 ಗ್ರಾಮದ ಜನರು ಜಾತ್ರೆಯಲ್ಲಿ ಪಾಲ್ಗುಳ್ಳುತ್ತಾರೆ. ನೂರಕ್ಕು ಹೆಚ್ಚು ದೇವರುಗಳು ಕೂಡ ಜಾತ್ರೆಗೆ ಬರುತ್ತವೆ. ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ದೇವರುಗಳನ್ನು ಶುಚಿಗೊಳಿಸಿ, ಪೂಜೆ ಸಲ್ಲಿಸಲಾಗುತ್ತದೆ. ಸಹಸ್ರಾರು ಭಕ್ತರು ಇಲ್ಲಿ ಬಂದು ಪುಣ್ಯ ಸ್ನಾನ ಮಾಡಿ, ಶ್ರೀ ಸಂಗಮೇಶ್ವರ ಸ್ವಾಮಿ ಪೂಜೆ ಸಲ್ಲಿಸುತ್ತಾರೆ. ಹೊಳೆಯ ನಡುಗಡ್ಡೆಯ ಮೇಲೆ ಜಾತ್ರೆಯ ಅಂಗಡಿಗಳನ್ನು ತೆಗೆಯಲಾಗುತ್ತದೆ. ತೆಪ್ಪದ ಮೂಲಕ ನಡುಗಡ್ಡೆಗೆ ಹೋಗಬೇಕಾಗುತ್ತದೆ. ವರ್ಗ:ಭೂಗೋಳ ವರ್ಗ:ಐತಿಹಾಸಿಕ ಸ್ಥಳಗಳು ವರ್ಗ:ಪ್ರವಾಸೋದ್ಯಮ ವರ್ಗ:ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳು
ಬೆಂಗಳೂರು
https://kn.wikipedia.org/wiki/ಬೆಂಗಳೂರು
ಬೆಂಗಳೂರು ಕರ್ನಾಟಕ ರಾಜ್ಯದ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ, ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರ ಬೆಂಗಳೂರು ಜಿಲ್ಲೆ. ಬೆಂಗಳೂರು ತಾಲೂಕು ೩೯೨ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ೧೯೫೬ರಲ್ಲಿ ಬೆಂಗಳೂರು ೩ ತಾಲ್ಲೂಕುಗಳನ್ನು ಹೊಂದಿದ್ದು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಆನೇಕಲ್. ೨೦೨೦ರಲ್ಲಿ ಬೆಂಗಳೂರು ೫ ತಾಲ್ಲೂಕು ಹೊಂದಿದ್ದು, ಬೆಂಗಳೂರು ತಾಲೂಕುನ್ನು ವಿಭಜಸಿ ಯಲಹಂಕ ತಾಲೂಕು ರಚನೆ, ಬೆಂಗಳೂರು ದಕ್ಷಿಣ ತಾಲೂಕನ್ನು ಕೆಂಗೇರಿ ಎಂದು ಮರು ನಾಮಕರಣ ಮಾಡಲಾಗಿದೆ, ಕೆಂಗೇರಿ ತಾಲ್ಲೂಕು ವಿಭಜಸಿ ಕೃಷ್ಣರಾಜಪುರ ತಾಲೂಕು ರಚನೆ ಮಾಡಲಾಗಿದೆ, ಮತ್ತು ಆನೇಕಲ್ ತಾಲೂಕು ಹೊಂದಿದೆ. ಆಡಳಿತದ ಅನುಕೂಲಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಯನ್ನು ತಾಲೂಕುವಾರು ರಚನೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ರಚನೆ ಮಾಡಲಾಗುವುದು. 01.ಬೆಂಗಳೂರು ಮಹಾನಗರ ಪಾಲಿಕೆ 02.ಕೆಂಗೇರಿ ಮಹಾನಗರ ಪಾಲಿಕೆ 03.ಕೃಷ್ಣರಾಜ ಪುರ ಮಹಾನಗರ ಪಾಲಿಕೆ 04.ಯಲಹಂಕ ಮಹಾನಗರ ಪಾಲಿಕೆ ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ. ಭಾರತದ ೫ನೇ ದೊಡ್ಡ ಮಹಾನಗರವಾಗಿರುವ ಬೆಂಗಳೂರು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ೩ನೇ ಸ್ಥಾನದಲ್ಲಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿರುವ ಕಾರಣ ಬೆಂಗಳೂರು ವಿಶ್ವಾದ್ಯಂತ ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸಮುದ್ರ ಮಟ್ಟದಿಂದ ಸುಮಾರು ೩೦೦೦ ಅಡಿ (೯೧೪.೪ ಮೀ) ಗಳಿಗಿಂತ ಎತ್ತರದಲ್ಲಿರುವ ಬೆಂಗಳೂರು ನಗರವು ವರ್ಷವಿಡೀ ಆಹ್ಲಾದಕರ ವಾತಾವರಣ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ಹೊಂದಿದೆ. 'ಕಬ್ಬನ್ ಪಾರ್ಕ್', 'ಲಾಲ್ ಬಾಗ್'ಗಳಂತಹ ದೊಡ್ಡ ಉದ್ಯಾನವನಗಳನ್ನು ಹೊಂದಿರುವ ಈ ನಗರವು 'ಉದ್ಯಾನ ನಗರಿ' ಎಂದೂ ಪ್ರಸಿದ್ಧ. ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಿಗಳ ಅಚ್ಚುಮೆಚ್ಚಿನ ೧೦ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರು ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ. ಜಿಲ್ಲೆ ತಾಲೂಕುವಿಸ್ತೀರ್ಣ 01.ಬೆಂಗಳೂರು (1991 ಜನಗಣತಿ ಪ್ರಕಾರ) 01.ಬೆಂಗಳೂರು 393 ಚ.ಕಿ.ಮೀ 02.ಆನೇಕಲ್ 530 ಚ.ಕಿ.ಮೀ ೦3.ಕೆಂಗೇರಿ 540 ಚ.ಕಿ.ಮೀ 04.ಕೃಷ್ಣರಾಜ ಪುರ 329 ಚ.ಕಿ.ಮೀ 05.ಯಲಹಂಕ 401 ಚ.ಕಿ.ಮೀ ಒಟ್ಟು ಜಿಲ್ಲೆಯ ವಿಸ್ತೀರ್ಣ 2196 ಚ.ಕಿ.ಮೀ 02.ಬೆಂಗಳೂರು ಗ್ರಾಮಾಂತರ 01.ದೊಡ್ಡಬಳ್ಳಾಪುರ 791 ಚ.ಕಿ.ಮೀ 02.ದೇವನಹಳ್ಳಿ 449 ಚ.ಕಿ.ಮೀ 03.ಹೊಸಕೋಟೆ 548 ಚ.ಕಿ.ಮೀ 04.ನೆಲಮಂಗಲ 510 ಚ.ಕಿ.ಮೀ 05.ದಾಬಸ್ ಪೇಟೆ 000 ಚ.ಕಿ.ಮೀ ಒಟ್ಟು ಜಿಲ್ಲೆಯ ವಿಸ್ತೀರ್ಣ 2298 ಚ.ಕಿ.ಮೀ ಬೆಂಗಳೂರು ಜಿಲ್ಲೆಯ ಹೋಬಳಿಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯು ವಿಸ್ತೀರ್ಣದಲ್ಲಿ ಚಿಕ್ಕದಾಗಿರುವ ಕಾರಣ ಒಂದು ಜಿಲ್ಲೆಯಾಗಿ ಮಾಡಲಾಗಿದೆ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಏರಡು ಜಿಲ್ಲಾ ಕೇಂದ್ರಗಳನ್ನೂ ಒಳಗೊಂಡಿದೆ. ಜಿಲ್ಲೆ ತಾಲೂಕುಹೋಬಳಿನಗರ ಸ್ಥಿತಿ 02.ಬೆಂಗಳೂರು 1.ಬೆಂಗಳೂರು 01.ಬೆಂಗಳೂರು ಕಸಬಾ ಮಹಾನಗರ ಪಾಲಿಕೆ 02.ಯಶವಂತಪುರ ಮಹಾನಗರ ಪಾಲಿಕೆ 03.ಬೇಗೂರು ನಗರ ಸಭೆ 2.ಯಲಹಂಕ 01.ಯಲಹಂಕ ಕಸಬಾ ಮಹಾನಗರ ಪಾಲಿಕೆ 02.ಹೆಸರುಘಟ್ಟ ಪಟ್ಟಣ ಪಂಚಾಯತಿ 03.ಚಿಕ್ಕಜಾಲ ಗ್ರಾಮ ಪಂಚಾಯತಿ 3.ಕೆಂಗೇರಿ 01.ಕೆಂಗೇರಿ ಕಸಬಾ ಮಹಾನಗರ ಪಾಲಿಕೆ 02.ಉತ್ತರಹಳ್ಳಿ ಮಹಾನಗರ ಪಾಲಿಕೆ 03.ದಾಸನಪುರ ಮಹಾನಗರ ಪಾಲಿಕೆ 04.ತಾವರೆಕೆರೆ ಪಟ್ಟಣ ಪಂಚಾಯತಿ 4. ಕೃಷ್ಣರಾಜ ಪುರ 01.ಕೃಷ್ಣರಾಜ ಪುರ ಕಸಬಾ ಮಹಾನಗರ ಪಾಲಿಕೆ 02.ವರ್ತೂರು ಮಹಾನಗರ ಪಾಲಿಕೆ 03.ಬಿದರಹಳ್ಳಿ ಪಟ್ಟಣ ಪಂಚಾಯತಿ 5.ಆನೇಕಲ್ 01.ಆನೇಕಲ್ ಕಸಬಾ ನಗರ ಸಭೆ 02.ಅತ್ತಿಬೆಲೆ ನಗರ ಸಭೆ 03.ಸರ್ಜಾಪುರ ನಗರ ಸಭೆ 04.ಜಿಗಣಿ ನಗರ ಸಭೆ 6.ದೊಡ್ಡಬಳ್ಳಾಪುರ 01.ದೊಡ್ಡಬಳ್ಳಾಪುರ ಕಸಬಾ ನಗರ ಸಭೆ 02.ಮಧುರೆ ಗ್ರಾಮ ಪಂಚಾಯತಿ 03.ದೊಡ್ಡ ಬೆಳವಂಗಲ ಗ್ರಾಮ ಪಂಚಾಯತಿ 04.ಸಾಸಲು ಗ್ರಾಮ ಪಂಚಾಯತಿ 05.ತುಬಗೆರೆ ಗ್ರಾಮ ಪಂಚಾಯತಿ 7.ದೇವನಹಳ್ಳಿ 01.ದೇವನಹಳ್ಳಿ ಕಸಬಾ ಪುರ ಸಭೆ 02.ಕುಂದಾಣ ಗ್ರಾಮ ಪಂಚಾಯತಿ 03.ವಿಜಯಪುರ ಪುರ ಸಭೆ 04.ಚನ್ನರಾಯ ಪಟ್ಟಣ ಗ್ರಾಮ ಪಂಚಾಯತಿ 8.ಹೊಸಕೋಟೆ 01.ಹೊಸಕೋಟೆ ಕಸಬಾ ನಗರ ಸಭೆ 02.ನಂದಗುಡಿ ಗ್ರಾಮ ಪಂಚಾಯತಿ 03.ಸೂಲಿಬೆಲೆ ಗ್ರಾಮ ಪಂಚಾಯತಿ 04.ಅನುಗೊಂಡನಹಳ್ಳಿ ಗ್ರಾಮ ಪಂಚಾಯತಿ 05.ಜಡಿಗೆನಹಳ್ಳಿ ಗ್ರಾಮ ಪಂಚಾಯತಿ 9.ನೆಲಮಂಗಲ 01.ನೆಲಮಂಗಲ ಕಸಬಾ ಪುರ ಸಭೆ 02.ತ್ಯಮಗೊಂಡ್ಲು ಗ್ರಾಮ ಪಂಚಾಯತಿ 03.ದಾಬಸ್ ಪೇಟೆ/(ಸೋಂಪುರ) ಪಟ್ಟಣ ಪಂಚಾಯಿತಿ ಒಟ್ಟು 09 - ತಾಲ್ಲೂಕು 34 - ಹೋಬಳಿ ಭೂಗೋಳ ಬೆಂಗಳೂರು ಸಮುದ್ರ ಮಟ್ಟ ದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾಂಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. ಸದಾಶಿವನಗರದ ರಮಣಶ್ರೀ ಪಾರ್ಕ್ ಬೆಂಗಳೂರಿನ ಅತೀ ಎತ್ತರದ ಪ್ರದೇಶವಾಗಿದೆ. ಈ ಮೊದಲು ಮಲ್ಲೇಶ್ವರದ ವಯ್ಯಾಲಿ ಕಾವಲ್ ಎತ್ತರದ ಪ್ರದೇಶವಾಗಿತ್ತು. ಬೆಂಗಳೂರಿನ ಹೊಸಕೆರೆಹಳ್ಳಿ ಅತಿ ತಗ್ಗಿನ ಪ್ರದೇಶವಾಗಿದೆ. ಡೆಕ್ಕನ್ ಪ್ರಸ್ತಭೂಮಿಯ ಒಂದು ಭಾಗವಾದ ಮೈಸೂರು ಪ್ರಸ್ತಭೂಮಿಯ ಹೃದಯ ಭಾಗದಲ್ಲಿ ನೆಲೆಸಿರುವ ಈ ನಗರವು, ಕರ್ನಾಟಕದ ಆಗ್ನೇಯ ಭಾಗದಲ್ಲಿದೆ. ೭೪೧ ಚ.ಕಿ.ಮೀ. ವಿಸ್ತೀರ್ಣವುಳ್ಳ ಈ ಪ್ರದೇಶವು ೫.೮ ಮಿಲಿಯನ್ (ಅತಿ ಹೆಚ್ಚು ಜನಸಂಖ್ಯೆಯುಳ್ಳ ಮೂರನೆ ನಗರ) ಜನಸಂಖ್ಯೆಯನ್ನು ಹೊಂದಿದೆ. ಮುಖ್ಯವಾಗಿ ಇದು ಸಮುದ್ರ ಮಟ್ಟದಿಂದ ೩೧೧೩ ಅಡಿ(೯೪೯ ಮಿ.) ಎತ್ತರದಲ್ಲಿ ಸ್ಥಿತವಾಗಿರುವುದರಿಂದ, ಸುಂದರವಾದ ವಾತಾವರಣವನ್ನು ಹೊಂದಿದೆ. ಉಷ್ಣವಲಯದ ವಾತಾವರಣವಿರುವುದರಿಂದ, ಈ ಪಟ್ಟಣವು ಪದೇ ಪದೇ ಮಳೆಯನ್ನು ಅನುಭವಿಸುತ್ತ ಬೇಸಿಗೆಗಾಲದಲ್ಲಿ ಬೆಚ್ಚಗಿದ್ದು ಚಳಿಗಾಲದಲ್ಲಿ ತಂಪಾಗಿರುತ್ತದೆ. ಇಂತಹ ಸುಂದರ ವಾತಾವರಣವು ಒಂದೊಮ್ಮೆ ನಿವೃತ್ತಿ ಹೊಂದಿದವರನ್ನು ಆಕರ್ಷಿಸಿದ್ದು, ನಿವೃತ್ತಿ ಹೊಂದಿದವರ ಸ್ವರ್ಗ ಎಂದೂ ಕೂಡ ಇದಕ್ಕೆ ಕರೆಯಲಾಗುತ್ತಿತ್ತು. ಬೇಸಿಗೆಯಲ್ಲಿ ತಾಪಮಾನವು ೨೦ ರಿಂದ ೩೬ ಡಿಗ್ರಿಯಿದ್ದು, ಚಳಿಗಾಲದಲ್ಲಿ ೧೭ ರಿಂದ ೨೭ ಡಿಗ್ರಿಯಾಗಿರುತ್ತದೆ. ಇತಿಹಾಸ ಕ್ರಿಸ್ತ ಶಕ ೧೫೩೭ರ ತನಕ ಬೆಂಗಳೂರು ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದೆ. ನಂತರ ವಿಜಯನಗರ ಸಾಮ್ರಾಜ್ಯದ ನಾಡ ಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಮರಾಠರು ಮತ್ತು ಮುಘಲರ ಅಲ್ಪಾವಧಿ ಆಡಳಿತಕ್ಕೆ ಒಳಪಟ್ಟಿದ್ದ ಬೆಂಗಳೂರು, ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ನಂತರ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಕ್ಕೆ ಒಳಪಟ್ಟ ಬೆಂಗಳೂರು, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧ (೧೭೯೯) ದಲ್ಲಿ ಬ್ರಿಟೀಷರ ಪಾಲಾಯಿತು. ತದನಂತರ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು. ಬೆಂಗಳೂರು ೧೫೩೭|೧೫೩೭ರಲ್ಲಿ ಕೆಂಪೇಗೌಡರ (೧೫೧೦ - ೧೫೭೦) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ನಿರ್ಮಿಸಿದರು. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಹದಿನೆಂಟನೇ/ಹತ್ತೊಂಬತ್ತನೇ ಶತಮಾನದಲ್ಲಿ ಬೆಂಗಳೂರು ಒಂದು ನಗರವಾಗಿ ಬೆಳೆಯಿತು. ಆಗ ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ ಎಲ್, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು. ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈಗಿನ ಈ ಸ್ಥಳಗಳಲ್ಲಿ ಕಾಣಬಹುದಾಗಿದೆ. ಲಾಲಭಾಗ್ ಕೆಂಪಾಂಬುಧಿ ಕೆರೆ ಹಲಸೂರು ಕೆರೆ ಮೇಖ್ರಿ ವೃತ್ತ thumb|right|250px|ಕೃಷ್ಣರಾಜೇಂದ್ರ ಮಾರುಕಟ್ಟೆ ಸಂಸ್ಕೃತಿ ಮತ್ತು ವಿದ್ಯಾಭ್ಯಾಸ thumb|ವಿಶ್ವವಿಖ್ಯಾತ ಗಾಜಿನ ಮನೆ, ಲಾಲ್‌ಬಾಗ್ thumb|ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕೇಂದ್ರ (ಐಟಿಪಿಎಲ್) thumb|ಮಹಾತ್ಮಾ ಗಾಂಧಿ ರಸ್ತೆ, ಬೆಂಗಳೂರಿನ ಜನನಿಬಿಡ ರಸ್ತೆ ಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿದ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಷಿಸಿದೆ. ಬೆಂಗಳೂರು ನಗರವು ಬಹುಮುಖ ಸಂಸ್ಕೃತಿಯನ್ನು ಹೊಂದಿದ್ದರೂ ಕೂಡ, ಬಹುಪಾಲು ಜನರು ಹಿಂದುಗಳಾಗಿದ್ದಾರೆ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ ಇದೆ . ಕನ್ನಡವು ಇಲ್ಲಿಯ ಅಧಿಕೃತ ಭಾಷೆ‌. ಇಲ್ಲಿ ಬಳಕೆಯಲ್ಲಿರುವ ಇತರ ಭಾಷೆಗಳೆಂದರೆ ಉರ್ದು, ತೆಲುಗು ಮತ್ತು ಮಲಯಾಳಮ್. ಮುಂಬಯಿ ನಂತರ ಹಚ್ಚಿನ ಸಾಕ್ಷರತಾ ಪ್ರಮಾಣ (೮೩%) ಹೊಂದಿದ ಪ್ರದೇಶ ಇದಾಗಿದೆ. ನಗರದ ಶ್ರೀಮಂತ ಸಂಸ್ಕೃತಿಯು, ರಂಗ ಶಂಕರ, ಚೌಡಯ್ಯ ಮೆಮೋರಿಯಲ್ ಹಾಲ್ ಮತ್ತು ರವೀಂದ್ರ ಕಲಾಕ್ಷೇತ್ರಗಳಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತ ಸಾಂಸ್ಕೃತಿಕ ಮತ್ತು ಆಧುನಿಕ ರಂಗಭೂಮಿಯಾಗಿ ಬೆಳೆಯಲು ಭದ್ರ ಬುನಾದಿಯಾಗಿದೆ. "ಬೆಂಗಳೂರು ಹಬ್ಬ"ವು ವರ್ಷಕ್ಕೊಮ್ಮೆ ನಡೆಯುವ ಉತ್ಸವವಾಗಿದ್ದು, ಜನರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಉತ್ತಮವಾದ ಅವಕಾಶ ಒದಗಿಸುತ್ತದೆ. ದೀಪಾವಳಿ ಮತ್ತು ಗಣೇಶ ಚತುರ್ಥಿಯು ಇನ್ನೆರಡು ಪ್ರಮುಖ ಹಬ್ಬಗಳಾಗಿದ್ದು ಜೊತೆಗೆ ರಂಝಾನ್, ಬಕ್ರೀದ್, ಕ್ರಿಸ್ಮಸ್ ಹಬ್ಬ ಗಳ್ಳನ್ನು ಆಚರಿಸುತ್ತಾರೆ ಶ್ರೀಮಂತ ಧಾರ್ಮಿಕ ಸಂಪ್ರದಾಯಕ್ಕೆ ಸಾಕ್ಷಿಯಾಗಿವೆ. ಬೆಂಗಳೂರಿನ ವೆಂಕಟ್ಟಪ್ಪ ಚಿತ್ರ ಕಲಾ ಪರಿಷತ್ತು, ಭಾರತೀಯ ವಿದ್ಯಾ ಭವನ , ಭಾರತೀಯ ವಿಜ್ಞಾನ ಮಂದಿರ, ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತಿತರ ವಿವಿಧ ರೀತಿಯ ಶಿಕ್ಷಣದಲ್ಲಿ ಮಂಚೂಣಿಯಲ್ಲಿವೆ. ಬೆಂಗಳೂರಿನಲ್ಲಿ ಹಲವು ದೇಶೀಯ ಮತ್ತು ಪಾಶ್ಚ್ಯಾತ್ಯ ಸಂಸ್ಕೃತಿಗಳು ಮಿಲನಗೊಂಡಿವೆ. ಆದುದರಿಂದ ಇದು ಈಗ ಕಾಸ್ಮೊಪಾಲಿಟನ್ ಸಿಟಿ ಎಂತಲೂ ಕರೆಯಲ್ಪಡುತ್ತಿದೆ. ಇಲ್ಲಿನ ದೂರದರ್ಶನ ಹಾಗೂ ಆಕಾಶವಾಣಿ ಕೇಂದ್ರಗಳು ಹೆಸರುವಾಸಿ. ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ, ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಇಲ್ಲೇ. ಹಾಗೂ ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು ರೇಡಿಯೋ ಆಕ್ಟೀವ್ ತರಂಗಾಂತರ ೧೦೭.೮ ಪ್ರತಿಷ್ಠೆಯ ವಿದ್ಯಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ(ಐ.ಐ.ಎಮ್) ಗಳನ್ನು ಇಲ್ಲಿ ಕಾಣಬಹುದು. ಇಷ್ಟೇ ಅಲ್ಲದೆ, ಬಹು ಸಂಖ್ಯೆಯಲ್ಲಿ ಇಂಜಿನೀಯರಿಂಗ್, ಮೆಡಿಕಲ್ ಮತ್ತು ಮ್ಯಾನೇಜಮೆಂಟ್ ಕಾಲೇಜುಗಳು ಕೂಡ ಇಲ್ಲಿವೆ. ಕೈಗಾರಿಕೆ ಹಿಂದುಸ್ತಾನ ಏರೊನಾಟಿಕ್ಸ್ ಲಿಮಿಟೆಡ್ (ಎಚ್.ಎ.ಎಲ್), ಭಾರತ ಎಲೆಕ್ಟ್ರೊನಿಕ್ಸ್ ಲಿಮಿಟೆಡ್ (ಬಿ.ಇ.ಎಲ್), ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿ.ಇ.ಎಮ್.ಎಲ್), ಹಿಂದುಸ್ತಾನ ಮಷೀನ್ ಟೂಲ್ಸ್ (ಎಚ್.ಎಮ್.ಟಿ) ಮತ್ತು ಇಂಡಿಯನ್ ಸ್ಪೆಸ್ ರಿಸರ್ಚ್ ಒರ್ಗನೈಸೆಷನ್ (ಇಸ್ರೊ) ಇವುಗಳು ತಮ್ಮ ಪ್ರಧಾನ ಕಛೇರಿಗಳನ್ನು ಇಲ್ಲಿ ತೆರೆದಿದುದರಿಂದ, ನಗರವು ಒಂದು ಉತ್ಪಾದನಾ ಕೇಂದ್ರವಾಗಿ ಬೆಳೆಯಿತು. ಕಂಪನಿಗಳಾದ ಇನ್ಫೊಸಿಸ್, ವಿಪ್ರೊ ಮತ್ತು ಟಿಸಿಎಸ್ ಗಳು ಇಲ್ಲಿ ತಮ್ಮ ಪ್ರಧಾನ ಕಛೇರಿಗಳನ್ನು ತೆರೆದಿದುದರಿಂದ, ನಗರದ ಆರ್ಥಿಕ ಪ್ರಗತಿಯು ಮಹತ್ತರವಾಗಿ ಬೆಳೆಯಿತು. ಬೆಂಗಳೂರಿನಲ್ಲಿರುವ ಇತರ ಪ್ರಮುಖ ಕಂಪನಿಗಳೆಂದರೆ ಇಂಟೆಲ್, ಟೆಕ್ಸಸ್ ಇನ್ಸ್ತ್ರುಮೆನ್ತ್ಸ್, ಕ್ವಾಲ್ಕಾಮ್, ಆರ್ಮ್, ಬ್ರಾಡ್ಕಾಮ್, ಇ.ಎಮ್.ಸಿ. ಸ್ಕುವೆರ್, ನೆಟ್ ಆಪ್, ಸ್ಯಾನ್ ಡಿಸ್ಕ್, ಎಲ್.ಜಿ, ಸ್ಯಾಮ್ಸಂಗ್ ಮತ್ತು ಐ.ಬಿ.ಎಮ್. ಇಲ್ಲಿ ಸೃಷ್ಟಿಯಾದಂತಹ ಉದ್ಯೋಗ ಮಾರುಕಟ್ಟೆಯು ಜಗತ್ತಿನಾದ್ಯಂತ ಎಲ್ಲರನ್ನೂ ಆಕರ್ಷಿಸುತ್ತದೆ, ಇದೊಂದು ಬಹುಸಂಸ್ಕೃತಿ ಹಾಗೂ ಬಹುಜನಾಂಗೀಯ ಸಮಾಜವನ್ನಾಗಿ ಪರಿವರ್ತಿಸಲು ಸಹಾಯವಾಯಿತು. ಬೆಂಗಳೂರು ಯಾವುದೇ ಭಾರತೀಯ ನಗರಕ್ಕಿಂತ ಭಿನ್ನವಾಗಿದೆ, ಇದು ತನ್ನ ಪರಿಪೂರ್ಣ ವರ್ಷಪೂರ್ತಿ ಹವಾಮಾನ, ರಾತ್ರಿಜೀವನ ಮತ್ತು ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಬೆಂಗಳೂರು ಅನಿಯಮಿತ ವ್ಯಾಪಾರ ಅವಕಾಶಗಳು, ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್-ಅಪ್‌ಗಳು ಮತ್ತು ಉತ್ತಮ ಹವಾಮಾನವನ್ನು ಸಹ ಹೊಂದಿದೆ. ಅನೇಕ ಜನರು ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೂಲ ಕಾರಣ ಮಿತಿಯಿಲ್ಲದ ಉದ್ಯೋಗ ಅವಕಾಶಗಳು ಮತ್ತು ವ್ಯಾಪಾರ ಅವಕಾಶಗಳು. ಈ ನಗರವು ಕೆಲವು ಉನ್ನತ ಐಟಿ ಬ್ರ್ಯಾಂಡ್‌ಗಳ ಪ್ರಧಾನ ಕಛೇರಿಯಾಗಿದೆ. ಇದು ಜಾಗತಿಕವಾಗಿ ವಿಪ್ರೋ, ಗೂಗಲ್, ಇನ್ಫೋಸಿಸ್ ಮುಂತಾದ ಕೆಲವು ಅತ್ಯುತ್ತಮ ಐಟಿ ಕಂಪನಿಗಳಿಗೆ ಕೇಂದ್ರವಾಗಿದೆ. ಮಾಧ್ಯಮ ಬೆಂಗಳೂರಿನಲ್ಲಿ ಮೊದಲ ಮುದ್ರಣಾಲಯವನ್ನು ೧೮೪೦ರಲ್ಲಿ ಸ್ಥಾಪಿಸಲಾಯಿತು. ೧೮೫೯ ರಲ್ಲಿ "ಪಂಜಾಬ್ ಕೇಸರಿ" ಎಂಬ ಮೊದಲ ಇಂಗ್ಲಿಷ್ ವಾರ ಪತ್ರಿಕೆ ಪ್ರಕಟವಾಗಿತ್ತು ಮತ್ತು ೧೮೬೦ ರಲ್ಲಿ "ಮೈಸೂರು ವ್ರಿತ್ತಂತ ಬೋಧಿನಿ" ಎಂಬ ಕನ್ನಡ ಪತ್ರಿಕೆ ಪ್ರಕಟವಾಗಿತ್ತು. ಈಗ "ವಿಜಯ ಕರ್ನಾಟಕ" ಮತ್ತು "ದಿ ಟೈಂಸ್ ಆಫ್ ಇಂಡಿಯಾ" ತುಂಬಾ ಜನಪ್ರಿಯವಾಗಿದೆ ಹಾಗೂ "ಪ್ರಜಾವಾಣಿ" ಮತ್ತು "ಡೆಕ್ಕನ್ ಹೆರಾಲ್ಡ್" ಅತಿ ದೊಡ್ಡ ಮುದ್ರಣಾಲಯಗಳನ್ನು ಹೊಂದಿದೆ. ಬೆಂಗಳೂರು ಟಿವಿ ಮಾಧ್ಯಮ ಮೊದಲ ಬಾರಿಗೆ ನವೆಂಬರ್ ೧ ೧೯೮೧ ರಂದು "ದೂರದರ್ಶನ" ಮುಖಾಂತರ ಪ್ರಾರಂಭವಾಯಿತು. ೧೯ ನವೆಂಬರ್ ೧೯೮೩ ರಂದು ದೂರದರ್ಶನ ನಿರ್ಮಾಣ ಕೇಂದ್ರವನ್ನು ಸ್ಥಾಪಿಸಿ ವಾರ್ತಾ ಪ್ರಸಾರವನ್ನು ಪ್ರಾರಂಭಿಸಿತು. ನಂತರ ೧೯೯೧ ರಂದು ಕನ್ನಡ ದೂರದರ್ಶನ "ಡಿಡಿ ಚಂದನ" ಪ್ರಾರಂಭವಾಯಿತು. ಈಗ ಅನೇಕ ಟಿವಿ ಮಾಧ್ಯಮಗಳು ಜನಪ್ರಿಯವಾಗಿದೆ. ಇದಕ್ಕೆ ಉದಾಹರಣೆ ಟಿವಿ ೯, ಉದಯ, ಈ ಟಿವಿ, ಸುವರ್ಣ, ಜನಶ್ರೀ, ಸಮಯ, ಮುಂತಾದವು. ಸಂಪರ್ಕ ನಗರದ ಒಳ ಹಾಗು ಹೊರಭಾಗಗಳು ಒಂದಕ್ಕೊಂದು ಒಳ್ಳೆಯ ಸಂಪರ್ಕ ಹೊಂದಿರುವ ಕಾರಣ ನಗರದ ಒಳಗೆ ಮತ್ತು ಹೊರಗೆ ಓಡಾಡುವುದು ತುಂಬಾ ಸರಳವಾಗಿದೆ. ನಗರದ ಒಳಗಡೆ ಸಂಚರಿಸಲು, ಜನರು ಆಟೊ ರಿಕ್ಷಾಗಳು, ಕ್ಯಾಬಗಳು, ಮೆಟ್ರೊ ಟ್ರೇನಗಳ ಸೌಲಭ್ಯವನ್ನು ಪಡೆಯಬಹುದು. ವಿಮಾನ ನಿಲ್ದಾಣಕ್ಕೆ ಹೋಗಲು ವಾಯು ವಜ್ರ ಬಸ್ಸುಗಳ ಸೌಲಭ್ಯವಿದೆ. ಬೆಂಗಳೂರು ಆಕಾಶ ಮಾರ್ಗ, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಭಾರತದ ಇತರ ಭಾಗಗಳಿಗೂ ಸಂಪರ್ಕ ಹೊಂದಿದೆ. 'ನಮ್ಮ ಮೆಟ್ರೋ'ವಿನ ಮೊದಲನೆಯ ಹಂತ ಪೂರ್ಣವಾಗಿ ಚಾಲನೆಯಲ್ಲಿದೆ. ೪೨ ಕಿಲೋಮೀಟರ್ ಗಳ ಎರಡು ಮಾರ್ಗಗಳು (ಉತ್ತರ ದಕ್ಷಿಣ ದಿಕ್ಕಿನಲ್ಲಿ ಹಸಿರು ಮಾರ್ಗ - ನಾಗಸಂದ್ರದಿಂದ ಯೆಲಚೇನಹಳ್ಳಿವರೆಗೆ, ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇರಳೆ ಮಾರ್ಗ - ಬೈಯ್ಯಪ್ಪನಹಳ್ಳಿಯಿಂದ ನಾಯಂಡಹಳ್ಳಿವರೆಗೆ) ಚಾಲನೆಯಲ್ಲಿದೆ. ಎರಡನೆ ಹಂತದ ಕಾಮಗಾರಿ ನಡೆಯುತ್ತಿದೆ ಭಾರತದ ನೈಋತ್ಯ ರೇಲ್ವೆ ವಲಯಕ್ಕೆ ಇದು ಮುಖ್ಯ ಕೇಂದ್ರವಾಗಿದ್ದು, ಯಶವಂತಪುರ, ಕ್ಯಾಂಟೊನಮೆಂಟ್ ಮತ್ತು ಕೆ.ಆರ್.ಪುರಂ ನಂತಹ ಕೆಲವು ಇತರ ನಿಲ್ದಾಣಗಳನ್ನೂ ಹೊಂದಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ, ದೇವನಹಳ್ಳಿ ಎಂಬಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಇದು ನಗರದಿಂದ ೪೦ ಕಿ.ಮೀ. ದೂರದಲ್ಲಿದೆ. ಪ್ರವಾಸಿ ಸ್ಥಳಗಳು ಬೆಂಗಳೂರು ಇತರ ಸ್ಥಳಗಳಿಗೆ ಉತ್ತಮವಾದ ಸಂಪರ್ಕ ಹೊಂದಿರುವದರಿಂದ ಪ್ರವಾಸಿಗರಿಗೆ ಸ್ವರ್ಗವಾಗಿದ್ದು, ಅನೇಕ ಆಕರ್ಷಣೀಯ ಸ್ಥಳಗಳಾದ ಜವಾಹರಲಾಲ್ ನೆಹರು ಪ್ಲಾನೇಟೊರಿಯಮ್, ಲಾಲಬಾಗ್, ಕಬ್ಬನ್ ಪಾರ್ಕ್, ಅಕ್ವೇರಿಯಮ್, ವೆಂಕಟಪ್ಪಾ ಆರ್ಟ್ ಗ್ಯಾಲರಿ, ವಿಧಾನ ಸೌಧ ಮತ್ತು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗಳನ್ನು ಇಲ್ಲಿ ಕಾಣಬಹುದು. ಮುತ್ಯಾಲಮಡುವು (ಮುತ್ತಿನಕಣಿವೆ), ಮೈಸೂರು, ಶ್ರವಣಬೆಳಗೋಳ, ನಾಗರಹೊಳೆ, ಬಂಡಿಪುರ, ರಂಗನತಿಟ್ಟು, ಬೇಲೂರು, ಮಂಡ್ಯ, ಹಳೇಬೀಡು, ಚಿಕ್ಕಮಗಳೂರು, ಕೊಡಗು ಮುಂತಾದ ಸ್ಥಳಗಳಿಗೂ ಕೂಡ ಬೆಂಗಳೂರಿನಿಂದ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ನಗರದಲ್ಲಿ ಇಳಿದುಕೊಳ್ಳಲು ಅನೇಕ ಆಯ್ಕೆಗಳಿದ್ದು, ಅವುಗಳಲ್ಲಿ ಲೀಲಾ ಪ್ಯಾಲೇಸ್, ಗೊಲ್ಡನ್ ಲ್ಯಾಂಡಮಾರ್ಕ್, ವಿಂಡ್ಸರ್ ಮ್ಯಾನರ್, ಲಿ ಮೇರಿಡಿಯನ್, ತಾಜ್ ಮತ್ತು ಲಲಿತ್ ಅಶೋಕ ಮುಂತಾದ ಹಲವು ಹೋಟೆಲ್ ಗಳು ಸೂಕ್ತ ಹಾಗು ದುಬಾರಿ ಬೆಲೆಗಳಲ್ಲಿ ಪ್ರವಾಸಿಗರಿಗೆ ಲಭ್ಯವಿವೆ. ಬಹುಮುಖಿಯ ಸಂಸ್ಕೃತಿಹೊಂದಿರುವ ಕಾರಣ, ವಿವಿಧ ಬಗೆಯ ಖಾದ್ಯಗಳನ್ನು ಕೂಡ ಇಲ್ಲಿ ಕಾಣಬಹುದು. ಬೀದಿ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗಿನ ತಿನಿಸುಗಳು ಕೂಡ ಇಲ್ಲಿ ಲಭ್ಯ. ಬೆಂಗಳೂರಿನಾದ್ಯಂತ ಬಹುಸಂಖ್ಯೆಯಲ್ಲಿ ಮ್ಯಾಕ್ ಡೊನಾಲ್ಡ್, ಕೆ.ಎಫ್.ಸಿ ಮತ್ತು ಪೀಜ್ಜಾ ಹಟ್ ಗಳ ಔಟ್ ಲೆಟ್ ಗಳನ್ನು ಕಾಣಬಹುದಾಗಿದ್ದು, ಆಸಕ್ತಿಯುಳ್ಳ ಪ್ರವಾಸಿಗರು ಸ್ಥಳೀಯ ತಿಂಡಿತಿನಿಸುಗಳ ಕೇಂದ್ರವಾದ ಎಂ.ಟಿ.ಅರ್. ಗೂ ಕೂಡ ಭೇಟಿ ನೀಡಬಹುದು. ಇತರ ಅನೇಕ ಸ್ಥಳಗಳಲ್ಲಿ ಭಾರತದ ಬೇರೆ ಬೇರೆ ರಾಜ್ಯಗಳ ಖಾದ್ಯಗಳು ಲಭ್ಯವಿದ್ದು, ಉತ್ತರ ಅಥವಾ ಪೂರ್ವ ಭಾರತದ ಅಡುಗೆಗಳಿಗೆ ಯಾವುದೆ ಕೊರತೆಯಿಲ್ಲ. ಫೀನಿಕ್ಸ್ ಮಾಲ್, ದಿ ಫೋರಮ್, ಗರುಡಾ ಮಾಲ್, ಸೆಂಟ್ರಲ್ ,ಒರಾಯನ್ ಮಾಲ್, ಮತ್ತು ಮಂತ್ರಿ ಮಾಲ್ ಗಳಲ್ಲಿ, ದೇಶಿಯ ಹಾಗು ವಿದೇಶಿಯ ಉತ್ಪನ್ನಗಳು ಲಭ್ಯವಿದ್ದು ಖರೀದಿಗೆ ಯೋಗ್ಯವಾದ ಸ್ಥಳಗಳಾಗಿವೆ. ಎಂ.ಜಿ. ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಮ್ ದೇಶೀಯ ಉತ್ಪನ್ನಗಳಾದ ಚಂದನದ ಸಾಮಗ್ರಿಗಳು, ಜನಪ್ರಿಯವಾದ ಚೆನ್ನಪಟ್ಟಣದ ಕಟ್ಟಿಗೆಯ ಬೊಂಬೆಗಳನ್ನು ಖರೀದಿಸಲು ಉತ್ತಮ ಸ್ಥಳವಾಗಿದೆ. ತುಡಿಯುತ್ತಿರುವ ಯುವಜನಾಂಗದ ಪರಿಣಾಮವಾಗಿ, ಬೆಂಗಳೂರಿನ ರಾತ್ರಿ ಜೀವನವು ಬಲು ಸೊಗಸಾಗಿರುತ್ತದೆ. ಜಗತ್ತಿನ ಕ್ರಿಯಾಶೀಲ ನಗರಗಳು ವಿಶ್ವದ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. ಜಿಎಲ್‍ಎಲ್ ಗ್ಲೋಬಲ್ ರಿಸರ್ಚ್ ಕಂಪನಿ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಶಿಕ್ಷಣ, ಮೂಲಸೌಕರ್ಯ, ಅಗಾಧವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಹೊಂದಿಕೊಳ್ಳುವುದು ಸೇರಿದಂತೆ ದೇಶದ ಪ್ರಗತಿಗೆ ತಮ್ಮ ಕಾಣಿಕೆಯನ್ನೂ ನೀಡುತ್ತಿರುವ ವಿಚಾರಗಳನ್ನಾಧರಿಸಿ ಜಗತ್ತಿನ ಮೂವತ್ತು ನಗರಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಟಾಪ್ ೧೦ ಸ್ಥಾನದಲ್ಲಿರುವ ನಗರಗಳು. ೧ ಬೆಂಗಳೂರು ೨ ಹೋ ಚಿ ಮಿನಾ ಸಿಟಿ ೩ ಸಿಲಿಕಾನ್ ವ್ಯಾಲಿ ೪ ಶಾಂಘೈ ೫ ಹೈದ್ರಾಬಾದ್ ೬ ಲಂಡನ್ ೭ ಆಸ್ಟಿನ್g ೮ಹನೋಯಿ ೯ ಬೋಸ್ಟನ್ ೧೦ ನೈರೋಬಿ ಜಗತ್ತಿನ ಕ್ರಿಯಾಶೀಲ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ;ಪಿಟಿಐ;೧೮ ಜನವರಿ, ೨೦೧೭ ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು ೨೭ ಫೆಬ್ರುವರಿ, ೨೦೧೭ ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ. ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ವಾಣಿಜ್ಯ ನಗರಿ ಮುಂಬೈ ಪಾತ್ರವಾಗಿದ್ದರೆ, ದೆಹಲಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈನ ಸಂಪತ್ತಿನ ಮೊತ್ತ ರೂ.೫೪.೬ ಲಕ್ಷ ಕೋಟಿ. ಇನ್ನು ದೆಹಲಿ ಮತ್ತು ಬೆಂಗಳೂರಿನ ಸಂಪತ್ತು ಕ್ರಮವಾಗಿ ರೂ.೨೯.೯ ಲಕ್ಷ ಕೋಟಿ ಮತ್ತು ರೂ.೨೧.೩ ಲಕ್ಷ ಕೋಟಿಯಷ್ಟಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ, ನ್ಯೂ ವರ್ಲ್ಡ್‌ ವೆಲ್ತ್‌ ಬಿಡುಗಡೆ ಮಾಡಿರುವ ೨೦೧೬ನೇ ಸಾಲಿನ ವರದಿಯಲ್ಲಿ ಈ ಮಾಹಿತಿ ಇದೆ. ವಲಸೆ ಸ್ವದೇಶದಿಂದ ವಲಸೆ ಹೋಗುತ್ತಿರುವ ಸಿರಿವಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ೨೦೧೬ರಲ್ಲಿ ವಿಶ್ವದಾದ್ಯಂತ ೮೨ ಸಾವಿರ, ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಈ ರೀತಿ ಅತಿ ಹೆಚ್ಚು ವಲಸೆ ಹೋದ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಇದೆ. ಈ ಸಾಲಿನಲ್ಲಿ ಒಟ್ಟು ೬ ಸಾವಿರ ಸಿರಿವಂತರು ತಮ್ಮ ವಾಸ್ತವ್ಯವನ್ನು ಭಾರತದಿಂದ ಬೇರೆ ದೇಶಗಳಿಗೆ ಬದಲಿಸಿದ್ದಾರೆ. ೨೦೧೫ನೇ ಸಾಲಿನಲ್ಲಿ ಹೀಗೆ ವಲಸೆ ಹೋದವರ ಸಂಖ್ಯೆ ೪ ಸಾವಿರ. ಹಿಂದಿನ ವರ್ಷಕ್ಕೆ ಹೋಲಿಸಿದರೆ ೨೦೧೬ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ ೫೦ ರಷ್ಟು ಹೆಚ್ಚಳವಾಗಿದೆ. ಶತ ಕೋಟ್ಯಾಧಿಪತಿಗಳು ೧೦ ಲಕ್ಷ ಅಮೆರಿಕನ್ ಡಾಲರ್‌ನಿಂದ ೧೦೦ ಕೋಟಿ ಅಮೆರಿಕನ್ ಡಾಲರ್‌ವರೆಗೆ (ಸುಮಾರು ₹ ೬.೬ ಕೋಟಿಯಿಂದ ₹ ೬.೬ ಸಾವಿರ ಕೋಟಿ) ಸಂಪತ್ತು ಹೊಂದಿರುವವರನ್ನು ಮಿಲಿಯನೇರ್ ಅಥವಾ ಶತ ಕೋಟ್ಯಾಧಿಪತಿಗಳು ಎಂದು ನ್ಯೂ ವರ್ಲ್ಡ್‌ ವೆಲ್ತ್‌ ವರದಿಯಲ್ಲಿ ಪರಿಗಣಿಸಲಾಗಿದೆ. ೧೦೦ ಕೋಟಿ ಅಮರಿಕನ್‌ ಡಾಲರ್‌ಗಿಂತ (ಸು. ₹ ೬.೬ ಸಾವಿರ ಕೋಟಿ) ಹೆಚ್ಚು ಸಂಪತ್ತು ಇದ್ದವರನ್ನು ಬಿಲಿಯನೇರ್‌ ಅಥವಾ ಸಹಸ್ರ ಕೋಟ್ಯಾಧಿಪತಿಗಳು ಎಂದು ಕರೆಯಲಾಗಿದೆ.ದೇಶದ ಮೂರನೇ ಸಿರಿವಂತ ನಗರ ಬೆಂಗಳೂರು;ಪ್ರಜಾವಾಣಿ ವಾರ್ತೆ;೨೭ ಫೆಬ್ರುವರಿ, ೨೦೧೭ ಇದನ್ನೂ ನೋಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ಉತ್ತರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ) ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ) ನಮ್ಮ ಮೆಟ್ರೊ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬೆಂಗಳೂರು ಎಫ್ ಸಿ ಇತರೆ ಸಂಪರ್ಕ Interactive Map of Bangalore ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮಹಾನಗರ ಪಾಲಿಕೆ Bangalore cyber police ಇತರೆ ಇಲಾಖೆಗಳ ಸಂಪರ್ಕ ಪಟ್ಟಿ ಬೆಳದಿದೆ ನೊಡ ಬೆಂಗಳೂರು ನಗರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಲ್ಲೇಖಗಳು visit: www.bangaloreitbt.in ವರ್ಗ:ಭಾರತದ ಪಟ್ಟಣಗಳು ವರ್ಗ:ಬೆಂಗಳೂರು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಮಹಾನಗರಪಾಲಿಕೆಗಳು
ಕನ್ನಡ ಅಕ್ಷರಮಾಲೆ
https://kn.wikipedia.org/wiki/ಕನ್ನಡ_ಅಕ್ಷರಮಾಲೆ
ಇತಿಹಾಸ ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ. ಈ ಲಿಪಿ ಎಡದಿಂದ ಬಲಕ್ಕೆ ಬರೆಯಲ್ಪಟ್ಟಿದ್ದು ಅದರಲ್ಲಿಯ ಸರಳ ಸುಂದರ, ಅಕ್ಷರಗಳು ಸುಲಭವಾಗಿ ಗುರುತಿಸುವಂತಿವೆ. ಈ ಅಕ್ಷರಗಳಿಗೆ ತಲೆಕಟ್ಟು ಇರುವುದಿಲ್ಲ. ಥ, ಪ, ಮ, ವ. ಲ, ಹ ಮುಂತಾದ ಅಕ್ಷರಗಳ ಬುಡಕಟ್ಟು ದುಂಡಾಗಿರುತ್ತವೆ. ಸಂಸ್ಕೃತ ಭಾಷೆಯ ಋ, ವಿಸರ್ಗ, ಜಿಹ್ವಾ ಮೂಲೀಯ ಮತ್ತು ಉಪಧ್ಮಾನೀಯಗಳನ್ನು ನಿರ್ದೇಶಿಸುವ ಸಂಜ್ಞೆಗಳಿರುವುದಿಲ್ಲ. ಅದರಂತೆ ಪದಾದಿಯ ದೀರ್ಘ ಈ ಕಾರವಿಲ್ಲ. ಕರ್ಣಾಟಕದಲ್ಲಿ ಅಶೋಕನ ಬಾಹ್ಮೀ ಲಿಪಿಯ ಶಾನಗಳು ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗ ರಾಮೇಶ್ವರ ಎಂಬ ಸ್ಥಳಗಳಲ್ಲಿಯೂ ರಾಯಚೂರು ಜಿಲ್ಲೆಯ ಮಸ್ಕಿ, ಪಾಲ್ಕಗುಂಡು ಮತ್ತು ಗವಿಮಠ ಎಂಬ ಸ್ಥಳಗಳಲ್ಲಿಯೂ ದೊರೆತಿವೆ. ಅಶೋಕನ ಬ್ರಾಹ್ಮೀ ಲಿಪಿ ಮುಂದೆ 3ನೆಯ ಶತಮಾನದ ವರೆಗೆ ಶುಂಗ, ಕುಶಾನ, ಕ್ಷತ್ರಪ, ಆಂಧ್ರ, ಶಾತವಾಹನ ಮುಂತಾದ ಅರಸರ ಶಾಸನಗಳಲ್ಲಿ ಭಾರತದ ಬೇರೆ ಬೇರೆ ಭಾಗಗಳಲ್ಲಿ ವಿಕಾಸ ಹೊಂದಿರುತ್ತದೆ. ಕುಶಾನ ಕಾಲದ ಲಿಪಿಯ ಅಕ್ಷರಗಳು ಕಡಿಮೆ ಎತ್ತರವಾಗಿಯೂ ಅಗಲವಾಗಿಯೂ ದಪ್ಪವಾಗಿಯೂ ಇರುತ್ತವೆ. ಕ್ಷತ್ರಪ ಹಾಗೂ ಶಾತವಾಹನರ ಕಾಲದ ಲಿಪಿಗಳೂ ಹೆಚ್ಚು ಕಡಿಮೆ ಇದೇ ವೈಶಿಷ್ಟ್ಯಗಳನ್ನೊಳಗೊಂಡಿವೆ. ಕರ್ಣಾಟಕದಲ್ಲಿ ಅಶೋಕನ ಬ್ರಾಹ್ಮೀ ಲಿಪಿಯ ಮುಂದಿನ ಹಂತವನ್ನು 2-3ನೆಯ ಶತಮಾನದ ಮಳವಳ್ಳಿ ಮತ್ತು ಬನವಾಸಿಯ ಸಾತಕರ್ಣಿಯ ಶಾಸನಗಳಲ್ಲಿ ಕಾಣುತ್ತೇವೆ. ಇಲ್ಲಿಯೂ ಅಕ್ಷರಗಳ ಎತ್ತರ ಕಡಿಮೆಯಾಗಿದ್ದು ಕೆಲವು ಅಕ್ಷರಗಳಿಗೆ ತ್ರಿಕೋಣಾಕೃತಿಯುಳ್ಳ ತಲೆಕಟ್ಟು ಇರುತ್ತದೆ. ಅಗಲವಾದ ತುದಿಯುಳ್ಳ ಲೇಖನಿಯನ್ನು ಉಪಯೋಗಿಸಿದ್ದರಿಂದ ಇಂಥ ತಲೆಕಟ್ಟುಗಳು ತಲೆದೋರಿವೆಯೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಅ, ಕ, ರ ಮುಂತಾದ ಅಕ್ಷರಗಳ ಲಂಬರೇಖೆಯ ಕೆಳಭಾಗ ವೃತ್ತಾಕಾರವಾಗಿ ಎಡಗಡೆ ಹೊರಳಿದೆ. ಇತ್ತೀಚೆಗೆ ಗುಲ್ಬರ್ಗಾ ಜಿಲ್ಲೆಯ ಸನ್ನತಿ ಎಂಬ ಸ್ಥಳದಲ್ಲಿ ದೊರೆತ 3ನೆಯ ಶತಮಾನದ ಶಾನಗಳಲ್ಲಿಯ ಕೆಲವು ಅಕ್ಷರಗಳು ಆಂಧ್ರಪ್ರದೇಶದ ನಾಗಾರ್ಜುನ ಕೊಂಡದ ಇಕ್ಷ್ವಾಕು ಅರಸರ ಶಾಸನಗಳ ಅಕ್ಷರಗಳಂತೆ ಸುಂದರವಾಗಿಯೂ ಅಂಕಾರಯುತವಾಗಿಯೂ ಕೆತ್ತಲ್ಪಟ್ಟಿವೆ. 10-12ನೆಯ ಶತಮಾನ ಕನ್ನಡ ಲಿಪಿ 10-12ನೆಯ ಶತಮಾನದಲ್ಲಿ ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಯನ್ನು ಹೊಂದಿ ಒಂದು ಮುಖ್ಯವಾದ ಹಂತವನ್ನು ಸೂಚಿಸುತ್ತಿವೆ. ಈ ಕಾಲದ ಕೆಲವು ಅಕ್ಷರಗಳು ಇನ್ನಷ್ಟು ದುಂಡಾಗಿದ್ದು ಆಧುನಿಕ ಕನ್ನಡ ಲಿಪಿಯ ಅಕ್ಷರಗಳ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಉದಾಹರಣೆಗಾಗಿ ಕ, ರ, ಯ ಮುಂತಾದ ಅಕ್ಷರಗಳ ಮೈಕಟ್ಟು ಹೆಚ್ಚು ಕಡಿಮೆ ಈಗಿನಂತೆಯೇ ಇದೆ. ಕೆಲವು ಅಕ್ಷರಗಳ ತಲೆಕಟ್ಟು ಕೋನಾಕೃತಿಯುಳ್ಳದಾಗಿದೆ. ಚ, ವ, ಮ ಮುಂತಾದ ಅಕ್ಷರಗಳ ತಲೆಕಟ್ಟಿನ ಭಾಗ ಎರಡು ಭಾಗವಾಗಿ ಬೇರ್ಪಡೆಯಾಗಿದ್ದು ತಲೆಕಟ್ಟು ಬಲಭಾಗದ ರೇಖೆಗೆ ಹೊಂದಿ ಕೊಂಡಿರುತ್ತದೆ. ಅನೇಕ ಅಕ್ಷರಗಳ ತಲೆಕಟ್ಟು ಸ್ಪಷ್ಟವಾಗಿ ಎದ್ದುಕಾಣುವಂತಿದೆ. ಮುಂದೆ 12-13ನೆಯ ಶತಮಾನದಲ್ಲಿ ಹೊಯ್ಸಳ ಅರಸರ ಅನೇಕ ಶಾಸನಗಳನ್ನು ನುಣುಪಾದ ಕಲ್ಲಿನ ಹಲಗೆಗಳ ಮೇಲೆ ಅಲಂಕಾರಯುತವಾಗಿಯೂ ಕಲಾತ್ಮಕವಾಗಿಯೂ ಬರೆಯಲ್ಪಟ್ಟಿದ್ದು ಅಲ್ಲಿಯ ಅಕ್ಷರಗಳು ಬಹು ಸುಂದರವಾಗಿ ಕಾಣುತ್ತವೆ. ಈ ಅಕ್ಷರಗಳನ್ನು ಸ್ಪಷ್ಟವಾಗಿಯೂ ಹೆಚ್ಚು ದುಂಡಾಗಿಯೂ ಬರೆಯಲಾಗಿದೆ. ಇಲ್ಲಿ ಕನ್ನಡ ಲಿಪಿ ಊರ್ಜಿತಾವಸ್ಥೆಯನ್ನು ಹೊಂದಿದೆಯೆಂದು ಹೇಳಬಹುದು. ಆದರೆ ಮುಂದಿನ 2-3 ಶತಮಾನಗಳ ಕಾಲದಲ್ಲಿ ಅಂದರೆ 14-16ನೆಯ ಶತಮಾನದ ವಿಜಯನಗರ ಅರಸರ ಶಾಸನಗಳಲ್ಲಿ ಅಕ್ಷರಗಳನ್ನು ಡೊಂಕು ಡೊಂಕಾಗಿ ಬರೆಯಲಾಗಿದ್ದು ಅವುಗಳ ಜೋಡಣೆಯ ವಿಷಯದಲ್ಲಿ ಅಷ್ಟು ಗಮನವನ್ನಿತ್ತಿಲ್ಲ. ಆದುದರಿಂದ ಕಲ್ಯಾಣಿ ಚಾಳುಕ್ಯ ಹಾಗೂ ಹೊಯ್ಸಳರ ಕಾಲದ ಲಿಪಿಯ ಅಕ್ಷರಗಳಂತೆ ವಿಜನಗರ ಕಾಲದ ಲಿಪಿಯ ಅಕ್ಷರಗಳು ಅಂದವಾಗಿ ಕಾಣುವುದಿಲ್ಲ. ಆದರೂ ಈ ಕಾಲದ ಲಿಪಿಯ ಅಕ್ಷರಗಳು ಕನ್ನಡ ಲಿಪಿಯ ಬೆಳೆವಣಿಗೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ಅ, ಞ, ಣ, ಷ, ಳ ಮುಂತಾದ ಅಕ್ಷರಗಳು ಈಗಿನ ರೂಪಗಳನ್ನು ಹೆಚ್ಚಾಗಿ ಹೋಲುತ್ತವೆ. ದ, ಡ, ಪ ಮುಂತಾದ ಅಲ್ಪಪ್ರಾಣದ ಅಕ್ಷರಗಳಿಗೆ ಕೆಳಗಡೆ ಒಂದು ರೇಖೆಯನ್ನು ಸೇರಿಸಿ ಧ, ಢ, ಫ, ಮುಂತಾದ ಮಹಾಪ್ರಾಣಗಳ ಸಂಜ್ಞೆಗಳನ್ನು ಸೂಚಿಸಲಾಗಿದೆ. ಇದುವರೆಗೆ ಅಕ್ಷರಗಳ ಮೇಲ್ಭಾಗದಲ್ಲಿ ಒಂದು ಚುಕ್ಕೆ ಅಥವಾ ಚಿಕ್ಕ ಬಿಂದುವಿನಿಂದ ಸೂಚಿಸಲ್ಪಡುತ್ತಿದ್ದ ಅನುಸ್ವಾರವನ್ನು ಆಯಾ ಅಕ್ಷರಗಳ ಬಲಗಡೆಗೆ ಅಷ್ಟೇ ಗಾತ್ರದ ಬಿಂದುವಿನಿಂದ ತೋರಿಸಲಾಗಿದೆ. 18ನೆಯ ಶತಮಾನದಲ್ಲಿ ಮೈಸೂರು ಅರಸರ ಕಾಲದಲ್ಲಿ ಕನ್ನಡ ಲಿಪಿ ವಿಜಯನಗರ ಕಾಲದ ಅಕ್ಷರಗಳ ಕೆಲವು ಲಕ್ಷಣಗಳನ್ನು ಉಳಿಸಿಕೊಂಡಿದ್ದರೂ ಆಧುನಿಕ ಕನ್ನಡ ಲಿಪಿಗೆ ಬಹಳ ಹತ್ತಿರಬಾಗಿ ತೋರುತ್ತದೆ. ಇತ್ತೀಚೆಗೆ ಮುದ್ರಣ ಬಂದಮೇಲೆ ಇತರ ಲಿಪಿಗಳಂತೆ ಕನ್ನಡ ಲಿಪಿಯಾದರೂ ಒಂದು ಸ್ಥಿರತೆಯನ್ನು ಹೊಂದಿದ್ದರಿಂದ ಹೆಚ್ಚಿನ ವಿಕಾಸಕ್ಕೆ ಅಸ್ಪದವಿಲ್ಲದಂತಾಗಿದೆ. ಆದರೂ ಮುದ್ರಣದ ಲಿಪಿಯಲ್ಲಿ ಸಹ ಕಾಲಕಾಲಕ್ಕೆ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಹೆಚ್ಚಿನ ಅಂದವಾದ ಅಕ್ಷರಗಳನ್ನು ಅಚ್ಚು ಹಾಕುತ್ತಿರುವುದನ್ನು ನೋಡುತ್ತೇವೆ. ಪರಿಣಾಮ ಕನ್ನಡ ಲಿಪಿಯ ಒಂದು ವೈಶಿಷ್ಟ್ಯವೆಂದರೆ ಪ್ರಾಚೀನಕಾಲದಿಂದಲೂ ಕಾಗುಣಿತಾಕ್ಷರದ ಹೃಸ್ವ ಮತ್ತು ದೀರ್ಘ ಎ ಮತ್ತು ಏ ಕಾರಗಳನ್ನು ಹಾಗೂ ಒ ಮತ್ತು ಓ ಕಾರಗಳನ್ನು ಒಂದೇ ಸಂಜ್ಞೆಯಿಂದ ಸೂಚಿಸುತ್ತಿದ್ದು ಅವುಗಳಲ್ಲಿಯ ಹೃಸ್ವ ಮತ್ತು ದೀರ್ಘ ವರ್ಣಗಳ ಭೇದವನ್ನು ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬೇಕಾಗಿತ್ತು. ಇತ್ತೀಚೆಗೆ ಅಂದರೆ 17-18ನೆಯ ಶತಮಾನದಂದೀಚೆಗೆ ಮಾತ್ರ ಕಾಗುಣಿತಾಕ್ಷರದ ದೀರ್ಘ ಏ ಕಾರ, ದೀರ್ಘ, ಓ ಕಾರ ಮತ್ತು ದೀರ್ಘ ಈ ಕಾರಗಳನ್ನು ಆಯಾ ಅಕ್ಷರಗಳ ಬಲಗಡೆ ಕೋಡಿಯುಳ್ಳ ಒಂದು ರೇಖೆಯಿಂದ ಸೂಚಿಸಲಾಗಿದೆ. ಇನ್ನು 4-5ನೆಯ ಶತಮಾನದಿಂದ 13-14ನೆಯ ಶತಮಾನದವರೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಶಾಸನಗಳಲ್ಲಿ ಸುಮಾರು ಒಂದೇ ಮಾದರಿಯ ಲಿಪಿಯನ್ನು ಉಪಯೋಗಿಸಿದ್ದುದರಿಂದ ಇವೆರಡೂ ಭಾಗದ ಲಿಪಿಗಳಿಗೆ ಕನ್ನಡ ತೆಲುಗು ಲಿಪಿಯೆಂದು ಹೇಳುವುದುಂಟು. ಅದರಲ್ಲೂ ವಿಶೇಷವಾಗಿ ಬಾದಾಮಿ ಚಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದ ಕನ್ನಡ ತೆಲುಗು ಲಿಪಿ ಒಂದೇ ಸ್ವರೂಪದ್ದಾಗಿದೆಯೆಂದು ಹೇಳಬಹುದು. 14-15ನೆಯ ಶತಮಾನಗಳಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಕೆಲವು ವ್ಯತ್ಯಾಸಗಳು ತಲೆದೋರಿದ್ದು ಮುಂದಿನ ಎರಡು ಮೂರು ಶತಮಾನಗಳಲ್ಲಿ ಗಮನಾರ್ಹವಾದ ಭೇದಗಳು ಕಂಡುಬರುತ್ತವೆ. ಆದರೂ ಅಲ್ಪ ಪ್ರಯತ್ನದಿಂದ ಕನ್ನಡಿಗರು ತೆಲುಗು ಲಿಪಿಯನ್ನೂ ಅದರಂತೆ ಆಂಧ್ರರು ಕನ್ನಡ ಲಿಪಿಯನ್ನೂ ಸುಲಭವಾಗಿ ತಿಳಿದುಕೊಳ್ಳಬಹುದು. ಬಾದಾಮಿ ಚಳುಕ್ಯರ ಕಾಲದಲ್ಲ ಕನ್ನಡ ಲಿಪಿ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರಾಂತ್ಯಗಳಲ್ಲಿಯೂ ಪ್ರಚಲಿತವಿದ್ದು ಮುಂದೆ ಅಲ್ಲಿ ನಾಗರೀ ಲಿಪಿ ಬಳಕೆಗೆ ಬಂತು. * ಅಂತೂ ಮೇಲಿನ ವಿವೇಚನೆಯಿಂದ ಕನ್ನಡ ಲಿಪಿ ಸು. 2000 ವರ್ಷಕ್ಕೂ ಹೆಚ್ಚಿನ ಪರಂಪರೆಯುಳ್ಳದ್ದಾಗಿದೆಯೆಂದು ವಿಶದವಾಗುತ್ತದೆ. ಒಂದು ಲಿಪಿಯ ಹುಟ್ಟು ಮತ್ತು ಬೆಳೆವಣಿಗೆ ಅದನ್ನು ಉಪಯೋಗಿಸುವ ಜನರ ಸಂಸ್ಕೃತಿಯ ಪ್ರತೀಕವಾಗಿರುತ್ತದೆ. ಒಂದು ಆದರ್ಶ ಲಿಪಿಯಲ್ಲಿ ಪ್ರತಿಯೊಂದು ಶಬ್ದದ ಉಚ್ಚಾರಣೆಗೆ ಅಸಂದಿಗ್ಧವಾದ ಸಂಜ್ಞೆಯಿರಬೇಕು. ಬರೆದಂತೆ ಓದುವಂತಿರಬೇಕು. ಓದಿದಂತೆ ಬರೆಯುವಂತೆಯೂ ಇರಬೇಕು. ಅಂದರೆ ಉಚ್ಚಾರಿತ ಅಕ್ಷರ ಹಾಗೂ ಲಿಖಿತ ವರ್ಣ ಇವುಗಳ ಸಂಬಂಧ ಸಂಪುರ್ಣವಿರಬೇಕು. ಈ ದೃಷ್ಟಿಯಿಂದ ವಿಚಾರಿಸಿದರೆ ಕನ್ನಡ ಲಿಪಿ ಪರಿಪುರ್ಣತೆಯನ್ನು ಪಡೆದಿದೆಯೆಂದು ಹೇಳಬಹುದು. ಈ ಲಿಪಿಯಲ್ಲಿ ಸ್ವರ ಮತ್ತು ವ್ಯಂಜನಗಳು ಪುರ್ಣವಾಗಿದ್ದು ಆರ್ಯ ಮತ್ತು ದ್ರಾವಿಡ ಭಾಷೆಗಳ ಧ್ವನಿಗಳನ್ನು ಕೊರತೆಯಿಲ್ಲದೆ ಸೂಚಿಸಲಿಕ್ಕೆ ಉಪಯುಕ್ತವಾದ ಸಂಕೇತಗಳಿವೆ. ವ್ಯಂಜನಾಕ್ಷರಗಳೊಡನೆ ಸ್ವರಗಳ ಸುಂದರವಾದ ಸಂಯೋಗವಿದೆ. ಹೀಗೆ ಕನ್ನಡ ಲಿಪಿ ಅಶೋಕನ ಬ್ರಾಹ್ಮೀಲಿಪಿಯಿಂದ ಉದ್ಬವಿಸಿ ಕಾಲಕ್ರಮದಿಂದ ಅನೇಕ ಮಾರ್ಪಾಟುಗಳನ್ನು ಹೊಂದಿ ವೈವಿಧ್ಯಪುರ್ಣವಾದ ವಿಕಾಸವನ್ನು ಪಡೆದು ಸಾಹಿತ್ಯ-ಸಂಸ್ಕೃತಿಗಳ ಹಿರಿಮೆಯನ್ನು ವ್ಯಕ್ತಪಡಿಸುತ್ತದೆ. ಕನ್ನಡ ವರ್ಣಮಾಲೆಯ ಪ್ರತಿಯೊಂದು ಅಕ್ಷರದ ಉಗಮ, ವಿಕಾಸ, ಉಚ್ಚಾರಣೆ ಮುಂತಾದ ವಿವರಗಳು ಆಯಾ ಅಕ್ಷರಗಳ ಶೀರ್ಷಿಕೆಗಳಲ್ಲಿ ಬಂದಿವೆ. ಅವನ್ನು ನೋಡಬಹುದು.http://mupadhyahiri.blogspot.in/2011/07/blog-post_6978.html ಈಚೆಗೆ ಪರಭಾಷೆಯ ಪದಗಳನ್ನು ಎರವಲಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಒದಗಿಬಂದುದರಿಂದ ಈಚಿಣheಡಿ, ಈಚಿisಚಿಟ, Zoo, ಒಚಿಟಿ ಮೊದಲಾದುವನ್ನು; ಬರೆಯಲು ವಿಶಿಷ್ಟ ಸಂಜ್ಞೆಗಳನ್ನು ಬಳಸಲಾಗುತ್ತಿದೆ. ಉದಾ : ಫಾದರ್, ಫೈಸಲ್ ಜóÆ, ಮ್ಯಾನ್-ಹೀಗೆ. ಸಂಜ್ಞಾ ಪ್ರಕರಣ ಕೇಶಿರಾಜನ ಸೂತ್ರದ ಪ್ರಕಾರ, ಅಕ್ಷರ ಮಾಲೆ/ವರ್ಣಮಾಲೆ ಎಂಬುದು ಒಂದು ಸಂಜ್ಞಾ ಪ್ರಕಾರವಾಗಿದೆ.http://shabdkosh.com/kn/translate/ಅಕ್ಷರಮಾಲೆ/ಅಕ್ಷರಮಾಲೆ-meaning-in-English-Kannada ಕವಿಗಳ್ ಸ್ವರದಿಂ ವರ್ಗದಿ ನವರ್ಗದಿಂ ಯೋಗವಾಹದಿಂ ದೇಶಿಯಳು ದ್ಭವಮಪ್ಪ ವರ್ಣದಿಂ ಪಂ ಚ ವಿಧಂ ತಾನೆಂದು ತಿಳಿಸುವರ್ ಶುದ್ಧಗೆಯಂ (ಸೂತ್ರ ವಿವರಣೆ:ಕವಿಗಳು ಸ್ವರದಿಂದ, ವರ್ಗಾಕ್ಷರಗಳಿಂದ, ಅವರ್ಗೀಯ ಅಕ್ಷರಗಳಿಂದ, ಯೋಗವಾಹ ಅಕ್ಷರದಿಂದದಿಂದ, ಮತ್ತು ದೇಶಿಯ ಅಕ್ಷರಗಳಿಂದ ಹುಟ್ಟಿರುವ ಐದು ವಿಧದ ಅಕ್ಷರಗಳನ್ನು ಶುದ್ಧಗೆ ಎಂದು ಹೇಳುತ್ತಾರೆ) (ಸೂತ್ರಸಂಖ್ಯೆ – ೪೧)ಕೇಶಿರಾಜನ ಶಬ್ದಮಣಿದರ್ಪಣಂ ಕನ್ನಡದ ಶುದ್ಧಾಕ್ಷರಗಳ ವಿಧಗಳು ಕೇಶಿರಾಜನ ಪ್ರಕಾರ ಕನ್ನಡ ಶುದ್ಧಗೆಯಲ್ಲಿ ಐದು ವಿಧಗಳು. ಅವುಗಳು ಕ್ರಮವಾಗಿ : ಸ್ವರ ಅಕ್ಷರಗಳು, ವರ್ಗೀಯ ವ್ಯಂಜನ ಅಕ್ಷರಗಳು, ಅವರ್ಗೀಯ ವ್ಯಂಜನ ಅಕ್ಷರಗಳು, ಯೋಗವಾಹ ಅಕ್ಷರಗಳು, ದೇಶಿಯ ಅಕ್ಷರಗಳು. ಆದರೆ ಕನ್ನಡ ಪಠ್ಯಾನುಸಾರ ಪ್ರಾಥಮಿಕ ಮತ್ತು ಮಾಧ್ಯಮಿಕ ತರಗತಿಯ ವಿದ್ಯಾರ್ಥಿಗಳು ಒಟ್ಟು ಕನ್ನಡ ಅಕ್ಷರಗಳನ್ನು ಈ ಕೆಳಗಿನಂತೆ ಗ್ರಹಿಸಿಕೊಂಡಿದ್ದಾರೆ. ಶುದ್ಧಾಕ್ಷರ ವಿಧಗಳು ಗಣನೆ ಅಕ್ಷರಗಳು ಸ್ವರ ೧೩ ಅ - ಔ ವರ್ಗೀಯ ವ್ಯಂಜನ ೨೫ ಕಚಟತಪ-ವರ್ಗಗಳು ಅವರ್ಗೀಯ ವ್ಯಂಜನ ೯ ಯ-ಳ ಯೋಗವಾಹ ೨ ಅನುಸ್ವಾರ(ಂ), ವಿಸರ್ಗ ( ಃ) ಹಳಗನ್ನಡ ೨ ಱ(ರ) ಮತ್ತು ೞ(ಳ) ಈ ರೀತಿ ಕನ್ನಡದಲ್ಲಿ ೫೧ ಅಕ್ಷರಗಳಿವೆ. ಪ್ರಸ್ತುತ ಕನ್ನಡದಲ್ಲಿ ಬಳಸುತ್ತಿರುವುದು ೪೯ ಅಕ್ಷರಗಳು. ಕನ್ನಡ ಅಕ್ಷರಮಾಲೆ ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ಕನ್ನಡ ವರ್ಣಮಾಲೆ ಕನ್ನಡ ವರ್ಣಮಾಲೆಯಲ್ಲಿ ೪೯ಅಕ್ಷರಗಳಿವೆ. ಅವುಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸ್ವರಗಳು -೧೩ ವ್ಯಂಜನಗಳು -೩೪ ಯೋಗವಾಹಗಳು-೦೨ ಸ್ವರ ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ. ಸ್ವರಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ಹೃಸ್ವ ಸ್ವರಗಳು ಹಾಗೂ ದೀರ್ಘ ಸ್ವರ ಹೃಸ್ವ ಸ್ವರ ಹೃಸ್ವ ಸ್ವರಗಳು (೬)ಆರು. ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಆರು ಅಕ್ಷರಗಳನ್ನು(ಅ,ಇ ಉ,ಋ,ಎ,ಒ) ಹೃಸ್ವ ಸ್ವರಗಳೆಂದು ಕರೆಯುವರು. ದೀರ್ಘ ಸ್ವರ ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ (೭)ಏಳು ಅಕ್ಷರಗಳನ್ನು (ಆ,ಈ,ಊ,ಏ.ಐ.ಓ,ಔ) ದೀರ್ಘ ಸ್ವರಗಳೆಂದು ಕರೆಯುವರು. ವ್ಯಂಜನ ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. ಪ್ರಮುಖವಾಗಿ ವ್ಯಂಜನಗಳಲ್ಲಿ ಎರಡು ವಿಧ. ಅವು ಯಾವುವೆಂದರೆ ವರ್ಗೀಯ ವ್ಯಂಜನಗಳು(೨೫: ಕ,ಚ,ಟ,ತ,ಪ-ವರ್ಗಗಳು) ಮತ್ತು ಅವರ್ಗೀಯ ವ್ಯಂಜನಗಳು(೯-ಯ ಇಂದ ಳ ವರೆಗೆ) ವರ್ಗೀಯ ವ್ಯಂಜನ ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ, ಕ-ವರ್ಗ = ಕ, ಖ, ಗ, ಘ, ಙ ಚ-ವರ್ಗ = ಚ, ಛ, ಜ, ಝ, ಞ ಟ-ವರ್ಗ = ಟ, ಠ, ಡ, ಢ, ಣ ತ-ವರ್ಗ = ತ, ಥ, ದ, ಧ, ನ ಪ-ವರ್ಗ = ಪ, ಫ, ಬ, ಭ, ಮ ಅವರ್ಗೀಯ ವ್ಯಂಜನ ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ- ಯ,ರ,ಲ,ವ,ಶ,ಷ,ಸ,ಹ,ಳ. ಕನ್ನಡ ಒತ್ತಕ್ಷರಗಳು ಕನ್ನಡ ಒತ್ತಕ್ಷರಗಳು (೩೪)ಮುವತ್ನಾಲ್ಕು. ಅವು ಯಾವುವೆಂದರೆ: ಕ್ಕ ಖ್ಖ ಗ್ಗ ಘ್ಘ ಙ್ಙ ಚ್ಚ ಛ್ಛ ಜ್ಜ ಝ್ಝ ಞ್ಞ ಟ್ಟ ಠ್ಠ ಡ್ಡ ಢ್ಢ ಣ್ಣ ತ್ತ ಥ್ಥ ದ್ದ ಧ್ಧ ನ್ನ ಪ್ಪ ಫ್ಫ ಬ್ಬ ಭ್ಭ ಮ್ಮ ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ ಯೋಗವಾಹಗಳು ಸ್ವತಂತ್ರವಲ್ಲದ ಹಾಗೂ ಸ್ವರವೂ ಅಲ್ಲದ,ವ್ಯಂಜನವೂ ಅಲ್ಲದ ಸ್ವರಾಕ್ಷರಗಳ ಅಂತ್ಯದಲ್ಲಿನ ಹಾಗೂ ವ್ಯಂಜನಗಳ ಆರಂಭಾಕ್ಷರಗಳ ನಡುವಿನ ಎರಡು ಅಕ್ಷರಗಳನ್ನು (ಅನುಸ್ವಾರ-೦,ವಿಸರ್ಗ-ಃ)ಯೋಗವಾಹಗಳೆಂದು ಕರೆಯುತ್ತಾರೆ. ಕರ್ನಾಟಕ ಸರ್ಕಾರವು ತನ್ನ ಪಠ್ಯ ಕ್ರಮದಿಂದ ೠ ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು. ಹಳೆಗನ್ನಡದ ಮೂರು ಅಕ್ಷರಗಳಾದ ಱ, ೞ ಮತ್ತು 10px|baseline|link=ಕನ್ನಡ ಅಕ್ಷರ ನ್|alt=ನ್(ನ್, ಯುನಿಕೋಡ್ - U+0CDD) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು. ಇಂಗ್ಲಿಷ್‌ನ F ಮತ್ತು Z ಅಕ್ಷರಗಳಿಗೆ ಫ಼ ಮತ್ತು ಜ಼ (ಫ ಮತ್ತು ಜ) ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ. ಆದರೆ ಅವುಗಳನ್ನು ಕನ್ನಡ ವರ್ಣಮಾಲೆಯಲ್ಲಿ ಸೇರಿಸಿಲ್ಲ. ಸ್ವರಗಳು ಕನ್ನಡದಲ್ಲಿ ಒಟ್ಟು ೧೩ ಸ್ವರಗಳಿವೆ. ಅವನ್ನು "ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ" ಹೀಗೆ 'ಅ'ಕಾರದಿಂದ ಮೊದಲು ಮಾಡಿ, 'ಔ'ಕಾರದ ವರೆಗೆ ಕೊನೆ ಮಾಡಿ, ಹೀಗೆ ಬರೆಯುವುದು ಸಂಸ್ಕೃತ ವ್ಯಾಕರಣದ ಅನುಕರಣೆ. ಸಂಸ್ಕೃತದಲ್ಲಿ ಈ ಬಗೆಯಲ್ಲಿ ಬರೆಯಲು ಕಾರಣ ಅದರ ಮಾಹೇಶ್ವರ ಸೂತ್ರ ಮತ್ತು ಸಂಧಿನಿಯಮಗಳು. ಆದರೆ ಹೀಗೆ ಬರೆಯುವುದರಿಂದ ಕನ್ನಡದ ಸಂಧಿನಿಯಮಗಳನ್ನು ಅರಿಯಲು ಯಾವ ಅನುಕೂಲವೂ ಆಗುವುದಿಲ್ಲವೆಂಬ ಅಭಿಪ್ರಾಯವಿದೆ. "ಇ ಈ ಎ ಏ ಉ ಊ ಒ ಓ ಅ ಆ" ಎಂದು ಇನ್ನೊಂದು ಬಗೆಯಲ್ಲಿಯೂ ಬರೆಯುವುದುಂಟು. ಇಲ್ಲಿ ಸ್ವರಗಳನ್ನು ನಾಲಗೆಯ ತುದಿಯಿಂದ ಕೊನೆಯ ತನಕ ಅವುಗಳು ಹೊರಡುವ ನಾಲಗೆಯ ಭಾಗಕ್ಕೆ ಅನುಕ್ರಮವಾಗಿ ಬರೆಯಲಾಗಿದೆ. ಅಂದರೆ "ಇ ಈ" ನಾಲಗೆಯ ತುತ್ತುದಿಯಿಂದ ಉಲಿದರೆ, "ಅ ಆ" ನಾಲಗೆಯ ಕಟ್ಟಕಡೆಯಲ್ಲಿ ಹೊರಡುವುದು. ೠ, ಱ, ೞ ಗಳನ್ನು ಬಿಟ್ಟಮಾತ್ರಕ್ಕೆ ಆ ಅಕ್ಷರಗಳು ಕನ್ನಡದಲ್ಲಿ ಇಲ್ಲ ಅಥವಾ ಜನರಿಗೆ ಉಚ್ಚರಿಸಲಾಗದೆಂದು ಹೇಳಲಾಗದು. ಸ್ವರಗಳಲ್ಲಿ ನಾಲ್ಕು ವಿಧ ಹೃಸ್ವಸ್ವರ/ಗಿಡ್ಡಸ್ವರ : ಒಂದು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ಹೃಸ್ವ ಅಂದರೆ ಚಿಕ್ಕದು. ಒಂದು ಹ್ರಸ್ವ ಸ್ವರವನ್ನು ಉಳಿಯಲು (ಉಚ್ಚಾರ ಮಾಡಲು) ಬರಿ ಒಂದು ಮಾತ್ರೆಯಷ್ಟು( ಒಂದು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು ) ಹೊತ್ತು ಬೇಕಾಗುವುದು. ಹೃಸ್ವ ಸ್ವರಗಳು : ಅ ಇ ಉ ಋ ಎ ಒ ದೀರ್ಘಸ್ವರ/ಉದ್ದಸ್ವರ. : ಎರಡು ಮಾತ್ರೆಯ ಕಾಲಾವಧಿಯಲ್ಲಿ ಉಚ್ಛರಿಸುವ ಅಕ್ಷರ. ದೀರ್ಘ ಅಂದರೆ ಉದ್ದದ್ದು ಎಂದು. ಒಂದು ದೀರ್ಘ ಸ್ವರವನ್ನು ಉಲಿಯಲು ಎರಡು ಮಾತ್ರೆಯಷ್ಟು(ಎರಡು ಸರತಿ ಕಣ್ಣು ಮಿಟುಕುವಷ್ಟು/ಎವೆಯಿಕ್ಕುವಷ್ಟು) ಹೊತ್ತು ಬೇಕಾಗುವುದು. ದೀರ್ಘ ಸ್ವರಗಳು: ಆ ಈ ಊ ಏ ಐ ಓ ಔ ಪ್ಲುತ ಸ್ವರ : ಮೂರು ಇಲ್ಲವೆ, ಅದಕ್ಕಿಂತ ಹೆಚ್ಚು ಮಾತ್ರೆಗಳ ಹೊತ್ತು ಉಳಿಯುವ ಸ್ವರ. ಸಂಧ್ಯಕ್ಷರ : ಎರಡು ಸ್ವರಗಳಿಂದ ಉಂಟಾಗುವ ಅಕ್ಷರಗಳು. ಐ, ಔ, ಏ, ಓ ಯೋಗವಾಹಗಳು ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು. ಕನ್ನಡ ವರ್ಣಮಾಲೆಯಲ್ಲಿ ನಾಲ್ಕು ಯೋಗವಾಹಗಳಿದ್ದರೂ ಎರಡು ಯೋಗವಾಹಗಳು ಮಾತ್ರ ಬಳಕೆಯಲ್ಲಿವೆ. ಅನುಸ್ವಾರ/ಬಿಂದು (ಅಂ) ಮತ್ತು ವಿಸರ್ಗ (ಅಃ) ಉಪಾಧ್ಮಾನೀಯ ‍: ೲ ಜಿಹ್ಹಾಮೂಲೀಯ : ೱ ಉದಾಹರಣೆಗೆ: ವಿವಿಧ ಸ್ವರಗಳೊಡನೆ ಅನುಸ್ವಾರ: ಅಂಜೂರ, ಆಂಧ್ರ, ಇಂಚರ, ಉಂಗುರ, ಎಂಬತ್ತು, ಒಂಟೆ, ಓಂಕಾರ ಕನ್ನಡದಲ್ಲಿ ಪದದ ನಡುವಿನಲ್ಲಿ ಬರುವ ಅನುನಾಸಿಕ ವ್ಯಂಜನಗಳ ಅರ್ಧಾಕ್ಷರ (ನ್, ಮ್ ಮುಂತಾದವು) ಬದಲು ಅನುಸ್ವರವನ್ನು ಬಳಸುವುದುಂಟು. ಉದಾ: ಅಙ್ಕ = ಅಂಕ ( ಇದನ್ನು ಅಮ್ಕ ಎಂದು ಉಲಿಯಬಾರದು ) ಅಞ್ಚೆ = ಅಂಚೆ ತಙ್ಗಿ = ತಂಗಿ ಗಣ್ಟೆ = ಗಂಟೆ ಅನ್ದ = ಅಂದ ಅಮ್ಬ = ಅಂಬ ವಿವಿಧ ಸ್ವರಗಳೊಡನೆ ವಿಸರ್ಗ: ಅಂತಃಕರಣ, ದುಃಖ ಕನ್ನಡ ಅಕ್ಷರಗಳ ಉಚ್ಚಾರಣೆ ಐಪಿಎ ನಕಾಶೆ +ಐಪಿಎ ಉಚ್ಛಾರ ನಕಾಶೆ - ವ್ಯಂಜನಗಳುಪ್ರಯತ್ನ ನಿಯಮಾವಳಿಕಂಠ್ಯತಾಲವ್ಯಮೂರ್ಧನ್ಯದಂತ್ಯದಂತೋಷ್ಟ್ಯಓಷ್ಟ್ತಸ್ಪರ್ಶ್ಯಅಲ್ಪಪ್ರಾಣ ಶ್ವಾಸಕಚಟತ -ಪಮಹಾಪ್ರಾಣ ಶ್ವಾಸಖಛಠಥ -ಫಅಲ್ಪಪ್ರಾಣ ನಾದಗಜಡದ -ಬಮಹಾಪ್ರಾಣ ನಾದಘಝಢಧ -ಭಅನುನಾಸಿಕಙಞಣನ -ಮ ಅನಾಸ್ಥಅವ್ಯಾಹತ -ಯರಲವ -ಊಷ್ಮಾಣಶ್ವಾಸಃಶಷಸ - -ನಾದಹ - - - - - +ಸ್ವರಗಳುಮುಂದೆಮಧ್ಯಹಿಂದೆಮುಚ್ಚಿದಇ ಈ -ಉ ಊಅರ್ಧ ಮುಚ್ಚಿದಎ ಏ -ಒ ಓಅರ್ಧ ತೆರೆದ - - -ತೆರೆದ - -ಅ ಆ ಕೂಡುಸ್ವರಗಳು - ಐ ಔ ಕನ್ನಡ ದೇವನಾಗರಿ ISO 15919 ಸಂಕೇತ ಉಚ್ಚಾರಣೆ ಅ अ a ಚಿತ್ರ:Kn-ಅ.oga ಆ आ ā ಚಿತ್ರ:Kn-ಆ.oga ಇ इ i ಚಿತ್ರ:Kn-ಇ.oga ಈ ई ī ಚಿತ್ರ:Kn-ಈ.oga ಉ उ u ಚಿತ್ರ:Kannada-u.ogg ಊ ऊ ū ಚಿತ್ರ:Kn-ಊ.oga ಋ ऋ ru ಚಿತ್ರ:Kn-ಋ.oga ಎ ए e ಚಿತ್ರ:Kn-ಎ.oga ಏ एॅ ē ಚಿತ್ರ:Kn-ಏ.oga ಐ ऐ ai ಚಿತ್ರ:Kn-ಐ.oga ಒ ओ o ಚಿತ್ರ:Kn-ಒ.oga ಓ ऑ ō ಚಿತ್ರ:Kn-ಓ.oga ಔ औ au ಚಿತ್ರ:Kn-ಔ.oga ಅಂ अं aom ಚಿತ್ರ:Kn-ಅಂ.oga ಅಃ अः ahā ಚಿತ್ರ:Kn-ಅಃ.oga ಕ क ka ಚಿತ್ರ:Kn-ಕ.oga ಖ ख kha ಚಿತ್ರ:Kn-ಖ.oga ಗ ग ga ಚಿತ್ರ:Kn-ಗ.oga ಘ घ gha ಚಿತ್ರ:Kn-ಘ.oga ಙ ङ nga ಚಿತ್ರ:Kn-ಙ.oga ಚ च cha ಚಿತ್ರ:Kn-ಚ.oga ಛ छ chha ಚಿತ್ರ:Kn-ಛ.oga ಜ ज ja ಚಿತ್ರ:Kn-ಜ.oga ಝ झ jha ಚಿತ್ರ:Kn-ಝ.oga ಞ ञ ña ಚಿತ್ರ:Kn-ಞ.oga ಟ ट ṭa ಚಿತ್ರ:Kn-ಟ.oga ಠ ठ ṭa ಚಿತ್ರ:Kannada-tta.ogg ಡ ड ḍa ಚಿತ್ರ:Kn-ಡ.oga ಢ ढ ḍha ಚಿತ್ರ:Kn-ಢ.oga ಣ ण ṇa ಚಿತ್ರ:Kn-ಣ.oga ತ त ta ಚಿತ್ರ:Kn-ತ.oga ಥ थ tha ಚಿತ್ರ:Kn-ಥ.oga ದ द da ಚಿತ್ರ:Kn-ದ.oga ಧ ध dha ಚಿತ್ರ:Kn-ಧ.oga ನ न na ಚಿತ್ರ:Kn-ನ.oga ಪ प pa ಚಿತ್ರ:Kn-ಪ.oga ಫ फ pha ಚಿತ್ರ:Kn-ಫ.oga ಬ ब ba ಚಿತ್ರ:Kn-ಬ.oga ಭ भ bha ಚಿತ್ರ:Kn-ಭ.oga ಮ म ma ಚಿತ್ರ:Kn-ಮ.oga ಯ य ya ಚಿತ್ರ:Kn-ಯ.oga ರ र ra ಚಿತ್ರ:Kn-ರ.oga ಲ ल la ಚಿತ್ರ:Kn-ಲ.oga ವ व va ಚಿತ್ರ:Kn-ವ.oga ಶ श śa ಚಿತ್ರ:Kn-ಶ.oga ಷ ष ṣa ಚಿತ್ರ:Kn-ಷ.oga ಸ स sa ಚಿತ್ರ:Kn-ಸ.oga ಹ ह ha ಚಿತ್ರ:Kn-ಹ.oga ಳ ळ ḷa ಚಿತ್ರ:Kn-ಳ.oga ಕನ್ನಡ ಅಕ್ಷರಗಳನ್ನು ಬರೆಯುವ ವಿಧಾನ ಅಕ್ಷರ ಅಕ್ಷರ ಚಿತ್ರಸಂಚಲನೆ Animationಅ ಚಿತ್ರ:Kannada-alphabet-a.gif ಆ ಚಿತ್ರ:Kannada-alphabet-aa.gif ಇ ಚಿತ್ರ:Kannada-alphabet-e.gif ಈ ಚಿತ್ರ:Kannada-alphabet-ee.gif ಉ ಚಿತ್ರ:Kannada-alphabet-u.gif ಊ ಚಿತ್ರ:Kannada-alphabet-uu.gif ಋ ಚಿತ್ರ:Kannada-alphabet-ru.gif ಎ ಚಿತ್ರ:Kannada-alphabet-ae.gif ಏ ಚಿತ್ರ:Kannada-alphabet-aee.gif ಐ ಚಿತ್ರ:Kannada-alphabet-ai.gif ಒ ಚಿತ್ರ:Kannada-alphabet-o.gif ಓ ಚಿತ್ರ:Kannada-alphabet-oo.gif ಔ ಚಿತ್ರ:Kannada-alphabet-ou.gif ಅಂ ಚಿತ್ರ:Kannada-alphabet-am.gif ಅಃ ಚಿತ್ರ:Kannada-Alphabet-Aha.gif ಕ ಚಿತ್ರ:Kannada-alphabet-ka.gif ಖ ಚಿತ್ರ:Kannada-alphabet-kha.gif ಗ ಚಿತ್ರ:Kannada-alphabet-ga.gif ಘ ಚಿತ್ರ:Kannada-alphabet-gha.gif ಙ ಚಿತ್ರ:Kannada-alphabet-knha.gif ಚ ಚಿತ್ರ:Kannada-alphabet-cha.gif ಛ ಚಿತ್ರ:Kannada-alphabet-chha.gif ಜ ಚಿತ್ರ:Kannada-alphabet-ja.gif ಝ ಚಿತ್ರ:Kannada-alphabet-jha.gif ಞ ಚಿತ್ರ:Kannada-alphabet-chna.gif ಟ ಚಿತ್ರ:Kannada-alphabet-ta.gif ಠ ಚಿತ್ರ:Kannada-alphabet-tta.gif ಡ ಚಿತ್ರ:Kannada-alphabet-da.gif ಢ ಚಿತ್ರ:Kannada-alphabet-dda.gif ಣ ಚಿತ್ರ:Kannada-alphabet-nna.gif ತ ಚಿತ್ರ:Kannada-alphabet-tha.gif ಥ ಚಿತ್ರ:Kannada-alphabet-thha.gif ದ ಚಿತ್ರ:Kannada-alphabet-dha.gif ಧ ಚಿತ್ರ:Kannada-alphabet-dhha.gif ನ ಚಿತ್ರ:Kannada-alphabet-na.gif ಪ ಚಿತ್ರ:Kannada-alphabet-pa.gif ಫ ಚಿತ್ರ:Kannada-alphabet-pha.gif ಬ ಚಿತ್ರ:Kannada-alphabet-ba.gif ಭ ಚಿತ್ರ:Kannada-alphabet-bha.gif ಮ ಚಿತ್ರ:Kannada-alphabet-ma.gif ಯ ಚಿತ್ರ:Kannada-alphabet-ya.gif ರ ಚಿತ್ರ:Kannada-alphabet-ra.gif ಲ ಚಿತ್ರ:Kannada-alphabet-la.gif ವ ಚಿತ್ರ:Kannada-alphabet-va.gif ಶ ಚಿತ್ರ:Kannada-alphabet-sha.gif ಷ ಚಿತ್ರ:Kannada-alphabet-shha.gif ಸ ಚಿತ್ರ:Kannada-alphabet-sa.gif ಹ ಚಿತ್ರ:Kannada-alphabet-ha.gif ಳ ಚಿತ್ರ:Kannada-alphabet-lla.gif ವ್ಯಂಜನಗಳು ವ್ಯಂಜನಗಳಲ್ಲಿ ಎರಡು ವಿಧ. ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ. 'ಕ' ಅಕ್ಷರದಿಂದ 'ಮ' ಅಕ್ಷರದವರೆಗೆ ವರ್ಗೀಯ ವ್ಯಂಜನಗಳು. ಇದರಲ್ಲಿ ಐದು ವರ್ಗಗಳು. ಕ ವರ್ಗ, ಚ ವರ್ಗ, ಟ ವರ್ಗ, ತ ವರ್ಗ ಮತ್ತು ಪ ವರ್ಗ. 'ಯ' ಅಕ್ಷರದಿಂದ 'ಳ' ಅಕ್ಷರದವರೆಗೆ ಅವರ್ಗೀಯ ವ್ಯಂಜನಗಳು. ಪ್ರತಿ ವ್ಯಂಜನಕ್ಕೆ ಎರಡು ಸ್ವರಗಳಿವೆ: ಅಲ್ಪಪ್ರಾಣ: ಕ (ಕ್+ಅ) ಮಹಾಪ್ರಾಣ: ಕಾ (ಕ್+ಆ') ಸಾಮಾನ್ಯ ವರ್ಣಮಾಲೆಯಲ್ಲಿ (ಅಕ್ಷರಮಾಲೆಯಲ್ಲಿ) ದೀರ್ಘ ಸ್ವರವು ಉಪಯೋಗವಾಗುತ್ತದೆ. ಕನ್ನಡದ ಗುಣಿತಾಕ್ಷರಗಳು ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ — ಕ ಕಾ ಕಿ ಕೀ ಕು ಕೂ ಕೃ ಕೆ ಕೇ ಕೈ ಕೊ ಕೋ ಕೌ ಕಂ ಕಃ ಕ್ ಖ ಖಾ ಖಿ ಖೀ ಖು ಖೂ ಖೃ ಖೆ ಖೇ ಖೈ ಖೊ ಖೋ ಖೌ ಖಂ ಖಃ ಖ್ ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ ಗೋ ಗೌ ಗಂ ಗಃ ಗ್ ಘ ಘಾ ಘಿ ಘೀ ಘು ಘೂ ಘೃ ಘೆ ಘೇ ಘೈ ಘೊ ಘೋ ಘೌ ಘಂ ಘಃ ಘ್ ಙ ಙಾ ಙಿ ಙೀ ಙು ಙೂ ಙೃ ಙೆ ಙೇ ಙೈ ಙೊ ಙೋ ಙೌ ಙಂ ಙಃ ಙ್ ಚ ಚಾ ಚಿ ಚೀ ಚು ಚೂ ಚೃ ಚೆ ಚೇ ಚೈ ಚೊ ಚೋ ಚೌ ಚಂ ಚಃ ಚ್ ಛ ಛಾ ಛಿ ಛೀ ಛು ಛೂ ಛೃ ಛೆ ಛೇ ಛೈ ಛೊ ಛೋ ಛೌ ಛಂ ಛಃ ಛ್ ಜ ಜಾ ಜಿ ಜೀ ಜು ಜೂ ಜೃ ಜೆ ಜೇ ಜೈ ಜೊ ಜೋ ಜೌ ಜಂ ಜಃ ಜ್ ಝ ಝಾ ಝಿ ಝೀ ಝು ಝೂ ಝೃ ಝೆ ಝೇ ಝೈ ಝೊ ಝೋ ಝೌ ಝಂ ಝಃ ಝ್ ಞ ಞಾ ಞಿ ಞೀ ಞು ಞೂ ಞೃ ಞೆ ಞೇ ಞೈ ಞೊ ಞೋ ಞೌ ಞಂ ಞಃ ಞ್ ಟ ಟಾ ಟಿ ಟೀ ಟು ಟೂ ಟೃ ಟೆ ಟೇ ಟೈ ಟೊ ಟೋ ಟೌ ಟಂ ಟಃ ಟ್ ಠ ಠಾ ಠಿ ಠೀ ಠು ಠೂ ಠೃ ಠೆ ಠೇ ಠೈ ಠೊ ಠೋ ಠೌ ಠಂ ಠಃ ಠ್ ಡ ಡಾ ಡಿ ಡೀ ಡು ಡೂ ಡೃ ಡೆ ಡೇ ಡೈ ಡೊ ಡೋ ಡೌ ಡಂ ಡಃ ಡ್ ಢ ಢಾ ಢಿ ಢೀ ಢು ಢೂ ಢೃ ಢೆ ಢೇ ಢೈ ಢೊ ಢೋ ಢೌ ಢಂ ಢಃ ಢ್ ಣ ಣಾ ಣಿ ಣೀ ಣು ಣೂ ಣೃ ಣೆ ಣೇ ಣೈ ಣೊ ಣೋ ಣೌ ಣಂ ಣಃ ಣ್ ತ ತಾ ತಿ ತೀ ತು ತೂ ತೃ ತೆ ತೇ ತೈ ತೊ ತೋ ತೌ ತಂ ತಃ ತ್ ಥ ಥಾ ಥಿ ಥೀ ಥು ಥೂ ಥೃ ಥೆ ಥೇ ಥೈ ಥೊ ಥೋ ಥೌ ಥಂ ಥಃ ಥ್ ದ ದಾ ದಿ ದೀ ದು ದೂ ದೃ ದೆ ದೇ ದೈ ದೊ ದೋ ದೌ ದಂ ದಃ ದ್ ಧ ಧಾ ಧಿ ಧೀ ಧು ಧೂ ಧೃ ಧೆ ಧೇ ಧೈ ಧೊ ಧೋ ಧೌ ಧಂ ಧಃ ಧ್ ನ ನಾ ನಿ ನೀ ನು ನೂ ನೃ ನೆ ನೇ ನೈ ನೊ ನೋ ನೌ ನಂ ನಃ ನ್ ಪ ಪಾ ಪಿ ಪೀ ಪು ಪೂ ಪೃ ಪೆ ಪೇ ಪೈ ಪೊ ಪೋ ಪೌ ಪಂ ಪಃ ಪ್ ಫ ಫಾ ಫಿ ಫೀ ಫು ಫೂ ಫೃ ಫೆ ಫೇ ಫೈ ಫೊ ಫೋ ಫೌ ಫಂ ಫಃ ಫ್ ಬ ಬಾ ಬಿ ಬೀ ಬು ಬೂ ಬೃ ಬೆ ಬೇ ಬೈ ಬೊ ಬೋ ಬೌ ಬಂ ಬಃ ಬ್ ಭ ಭಾ ಭಿ ಭೀ ಭು ಭೂ ಭೃ ಭೆ ಭೇ ಭೈ ಭೊ ಭೋ ಭೌ ಭಂ ಭಃ ಭ್ ಮ ಮಾ ಮಿ ಮೀ ಮು ಮೂ ಮೃ ಮೆ ಮೇ ಮೈ ಮೊ ಮೋ ಮೌ ಮಂ ಮಃ ಮ್ ಯ ಯಾ ಯಿ ಯೀ ಯು ಯೂ ಯೃ ಯೆ ಯೇ ಯೈ ಯೊ ಯೋ ಯೌ ಯಂ ಯಃ ಯ್ ರ ರಾ ರಿ ರೀ ರು ರೂ ರೃ ರೆ ರೇ ರೈ ರೊ ರೋ ರೌ ರಂ ರಃ ಲ ಲಾ ಲಿ ಲೀ ಲು ಲೂ ಲೃ ಲೆ ಲೇ ಲೈ ಲೊ ಲೋ ಲೌ ಲಂ ಲಃ ಲ್ ವ ವಾ ವಿ ವೀ ವು ವೂ ವೃ ವೆ ವೇ ವೈ ವೊ ವೋ ವೌ ವಂ ವಃ ವ್ ಶ ಶಾ ಶಿ ಶೀ ಶು ಶೂ ಶೃ ಶೆ ಶೇ ಶೈ ಶೊ ಶೋ ಶೌ ಶಂ ಶಃ ಶ್ ಷ ಷಾ ಷಿ ಷೀ ಷು ಷೂ ಷೃ ಷೆ ಷೇ ಷೈ ಷೊ ಷೋ ಷೌ ಷಂ ಷಃ ಷ್ ಸ ಸಾ ಸಿ ಸೀ ಸು ಸೂ ಸೃ ಸೆ ಸೇ ಸೈ ಸೊ ಸೋ ಸೌ ಸಂ ಸಃ ಸ್ ಹ ಹಾ ಹಿ ಹೀ ಹು ಹೂ ಹೃ ಹೆ ಹೇ ಹೈ ಹೊ ಹೋ ಹೌ ಹಂ ಹಃ ಳ ಳಾ ಳಿ ಳೀ ಳು ಳೂ ಳೃ ಳೆ ಳೇ ಳೈ ಳೊ ಳೋ ಳೌ ಳಂ ಳಃ ಳ್ ಕನ್ನಡ ಗುಣಿತಾಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. ಗುಣಿತಾಕ್ಷರ ಮತ್ತು ಒತ್ತಕ್ಷರ ಕನ್ನಡದಲ್ಲಿ ಪ್ರತಿಯೊಂದು ವ್ಯಂಜನಗಳಿಗೂ ಪ್ರತ್ಯೇಕ ಒತ್ತಕ್ಷರಗಳಿವೆ. ಅವುಗಳು ಹೀಗಿವೆ; ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ಕ ಕ್ಕ ಕ್ಖ ಕ್ಗ ಕ್ಘ ಕ್ಙ ಕ್ಚ ಕ್ಛ ಕ್ಜ ಕ್ಝ ಕ್ಞ ಕ್ಟ ಕ್ಠ ಕ್ಡ ಕ್ಢ ಕ್ಣ ಕ್ತ ಕ್ಥ ಕ್ದ ಕ್ಧ ಕ್ನ ಕ್ಪ ಕ್ಫ ಕ್ಬ ಕ್ಭ ಕ್ಮ ಕ್ಯ ಕ್ರ ಕ್ಱ ಕ್ಲ ಕ್ವ ಕ್ಶ ಕ್ಷ ಕ್ಸ ಕ್ಹ ಕ್ಳ ಕ್ೞ ಖ ಖ್ಕ ಖ್ಖ ಖ್ಗ ಖ್ಘ ಖ್ಙ ಖ್ಚ ಖ್ಛ ಖ್ಜ ಖ್ಝ ಖ್ಞ ಖ್ಟ ಖ್ಠ ಖ್ಡ ಖ್ಢ ಖ್ಣ ಖ್ತ ಖ್ಥ ಖ್ದ ಖ್ಧ ಖ್ನ ಖ್ಪ ಖ್ಫ ಖ್ಬ ಖ್ಭ ಖ್ಮ ಖ್ಯ ಖ್ರ ಖ್ಱ ಖ್ಲ ಖ್ವ ಖ್ಶ ಖ್ಷ ಖ್ಸ ಖ್ಹ ಖ್ಳ ಖ್ೞ ಗ ಗ್ಕ ಗ್ಖ ಗ್ಗ ಗ್ಘ ಗ್ಙ ಗ್ಚ ಗ್ಛ ಗ್ಜ ಗ್ಝ ಗ್ಞ ಗ್ಟ ಗ್ಠ ಗ್ಡ ಗ್ಢ ಗ್ಣ ಗ್ತ ಗ್ಥ ಗ್ದ ಗ್ಧ ಗ್ನ ಗ್ಪ ಗ್ಫ ಗ್ಬ ಗ್ಭ ಗ್ಮ ಗ್ಯ ಗ್ರ ಗ್ಱ ಗ್ಲ ಗ್ವ ಗ್ಶ ಗ್ಷ ಗ್ಸ ಗ್ಹ ಗ್ಳ ಗ್ೞ ಘ ಘ್ಕ ಘ್ಖ ಘ್ಗ ಘ್ಘ ಘ್ಙ ಘ್ಚ ಘ್ಛ ಘ್ಜ ಘ್ಝ ಘ್ಞ ಘ್ಟ ಘ್ಠ ಘ್ಡ ಘ್ಢ ಘ್ಣ ಘ್ತ ಘ್ಥ ಘ್ದ ಘ್ಧ ಘ್ನ ಘ್ಪ ಘ್ಫ ಘ್ಬ ಘ್ಭ ಘ್ಮ ಘ್ಯ ಘ್ರ ಘ್ಱ ಘ್ಲ ಘ್ವ ಘ್ಶ ಘ್ಷ ಘ್ಸ ಘ್ಹ ಘ್ಳ ಘ್ೞ ಙ ಙ್ಕ ಙ್ಖ ಙ್ಗ ಙ್ಘ ಙ್ಙ ಙ್ಚ ಙ್ಛ ಙ್ಜ ಙ್ಝ ಙ್ಞ ಙ್ಟ ಙ್ಠ ಙ್ಡ ಙ್ಢ ಙ್ಣ ಙ್ತ ಙ್ಥ ಙ್ದ ಙ್ಧ ಙ್ನ ಙ್ಪ ಙ್ಫ ಙ್ಬ ಙ್ಭ ಙ್ಮ ಙ್ಯ ಙ್ರ ಙ್ಱ ಙ್ಲ ಙ್ವ ಙ್ಶ ಙ್ಷ ಙ್ಸ ಙ್ಹ ಙ್ಳ ಙ್ೞ ಚ ಚ್ಕ ಚ್ಖ ಚ್ಗ ಚ್ಘ ಚ್ಙ ಚ್ಚ ಚ್ಛ ಚ್ಜ ಚ್ಝ ಚ್ಞ ಚ್ಟ ಚ್ಠ ಚ್ಡ ಚ್ಢ ಚ್ಣ ಚ್ತ ಚ್ಥ ಚ್ದ ಚ್ಧ ಚ್ನ ಚ್ಪ ಚ್ಫ ಚ್ಬ ಚ್ಭ ಚ್ಮ ಚ್ಯ ಚ್ರ ಚ್ಱ ಚ್ಲ ಚ್ವ ಚ್ಶ ಚ್ಷ ಚ್ಸ ಚ್ಹ ಚ್ಳ ಚ್ೞ ಛ ಛ್ಕ ಛ್ಖ ಛ್ಗ ಛ್ಘ ಛ್ಙ ಛ್ಚ ಛ್ಛ ಛ್ಜ ಛ್ಝ ಛ್ಞ ಛ್ಟ ಛ್ಠ ಛ್ಡ ಛ್ಢ ಛ್ಣ ಛ್ತ ಛ್ಥ ಛ್ದ ಛ್ಧ ಛ್ನ ಛ್ಪ ಛ್ಫ ಛ್ಬ ಛ್ಭ ಛ್ಮ ಛ್ಯ ಛ್ರ ಛ್ಱ ಛ್ಲ ಛ್ವ ಛ್ಶ ಛ್ಷ ಛ್ಸ ಛ್ಹ ಛ್ಳ ಛ್ೞ ಜ ಜ್ಕ ಜ್ಖ ಜ್ಗ ಜ್ಘ ಜ್ಙ ಜ್ಚ ಜ್ಛ ಜ್ಜ ಜ್ಝ ಜ್ಞ ಜ್ಟ ಜ್ಠ ಜ್ಡ ಜ್ಢ ಜ್ಣ ಜ್ತ ಜ್ಥ ಜ್ದ ಜ್ಧ ಜ್ನ ಜ್ಪ ಜ್ಫ ಜ್ಬ ಜ್ಭ ಜ್ಮ ಜ್ಯ ಜ್ರ ಜ್ಱ ಜ್ಲ ಜ್ವ ಜ್ಶ ಜ್ಷ ಜ್ಸ ಜ್ಹ ಜ್ಳ ಜ್ೞ ಝ ಝ್ಕ ಝ್ಖ ಝ್ಗ ಝ್ಘ ಝ್ಙ ಝ್ಚ ಝ್ಛ ಝ್ಜ ಝ್ಝ ಝ್ಞ ಝ್ಟ ಝ್ಠ ಝ್ಡ ಝ್ಢ ಝ್ಣ ಝ್ತ ಝ್ಥ ಝ್ದ ಝ್ಧ ಝ್ನ ಝ್ಪ ಝ್ಫ ಝ್ಬ ಝ್ಭ ಝ್ಮ ಝ್ಯ ಝ್ರ ಝ್ಱ ಝ್ಲ ಝ್ವ ಝ್ಶ ಝ್ಷ ಝ್ಸ ಝ್ಹ ಝ್ಳ ಝ್ೞ ಞ ಞ್ಕ ಞ್ಖ ಞ್ಗ ಞ್ಘ ಞ್ಙ ಞ್ಚ ಞ್ಛ ಞ್ಜ ಞ್ಝ ಞ್ಞ ಞ್ಟ ಞ್ಠ ಞ್ಡ ಞ್ಢ ಞ್ಣ ಞ್ತ ಞ್ಥ ಞ್ದ ಞ್ಧ ಞ್ನ ಞ್ಪ ಞ್ಫ ಞ್ಬ ಞ್ಭ ಞ್ಮ ಞ್ಯ ಞ್ರ ಞ್ಱ ಞ್ಲ ಞ್ವ ಞ್ಶ ಞ್ಷ ಞ್ಸ ಞ್ಹ ಞ್ಳ ಞ್ೞ ಟ ಟ್ಕ ಟ್ಖ ಟ್ಗ ಟ್ಘ ಟ್ಙ ಟ್ಚ ಟ್ಛ ಟ್ಜ ಟ್ಝ ಟ್ಞ ಟ್ಟ ಟ್ಠ ಟ್ಡ ಟ್ಢ ಟ್ಣ ಟ್ತ ಟ್ಥ ಟ್ದ ಟ್ಧ ಟ್ನ ಟ್ಪ ಟ್ಫ ಟ್ಬ ಟ್ಭ ಟ್ಮ ಟ್ಯ ಟ್ರ ಟ್ಱ ಟ್ಲ ಟ್ವ ಟ್ಶ ಟ್ಷ ಟ್ಸ ಟ್ಹ ಟ್ಳ ಟ್ೞ ಠ ಠ್ಕ ಠ್ಖ ಠ್ಗ ಠ್ಘ ಠ್ಙ ಠ್ಚ ಠ್ಛ ಠ್ಜ ಠ್ಝ ಠ್ಞ ಠ್ಟ ಠ್ಠ ಠ್ಡ ಠ್ಢ ಠ್ಣ ಠ್ತ ಠ್ಥ ಠ್ದ ಠ್ಧ ಠ್ನ ಠ್ಪ ಠ್ಫ ಠ್ಬ ಠ್ಭ ಠ್ಮ ಠ್ಯ ಠ್ರ ಠ್ಱ ಠ್ಲ ಠ್ವ ಠ್ಶ ಠ್ಷ ಠ್ಸ ಠ್ಹ ಠ್ಳ ಠ್ೞ ಡ ಡ್ಕ ಡ್ಖ ಡ್ಗ ಡ್ಘ ಡ್ಙ ಡ್ಚ ಡ್ಛ ಡ್ಜ ಡ್ಝ ಡ್ಞ ಡ್ಟ ಡ್ಠ ಡ್ಡ ಡ್ಢ ಡ್ಣ ಡ್ತ ಡ್ಥ ಡ್ದ ಡ್ಧ ಡ್ನ ಡ್ಪ ಡ್ಫ ಡ್ಬ ಡ್ಭ ಡ್ಮ ಡ್ಯ ಡ್ರ ಡ್ಱ ಡ್ಲ ಡ್ವ ಡ್ಶ ಡ್ಷ ಡ್ಸ ಡ್ಹ ಡ್ಳ ಡ್ೞ ಢ ಢ್ಕ ಢ್ಖ ಢ್ಗ ಢ್ಘ ಢ್ಙ ಢ್ಚ ಢ್ಛ ಢ್ಜ ಢ್ಝ ಢ್ಞ ಢ್ಟ ಢ್ಠ ಢ್ಡ ಢ್ಢ ಢ್ಣ ಢ್ತ ಢ್ಥ ಢ್ದ ಢ್ಧ ಢ್ನ ಢ್ಪ ಢ್ಫ ಢ್ಬ ಢ್ಭ ಢ್ಮ ಢ್ಯ ಢ್ರ ಢ್ಱ ಢ್ಲ ಢ್ವ ಢ್ಶ ಢ್ಷ ಢ್ಸ ಢ್ಹ ಢ್ಳ ಢ್ೞ ಣ ಣ್ಕ ಣ್ಖ ಣ್ಗ ಣ್ಘ ಣ್ಙ ಣ್ಚ ಣ್ಛ ಣ್ಜ ಣ್ಝ ಣ್ಞ ಣ್ಟ ಣ್ಠ ಣ್ಡ ಣ್ಢ ಣ್ಣ ಣ್ತ ಣ್ಥ ಣ್ದ ಣ್ಧ ಣ್ನ ಣ್ಪ ಣ್ಫ ಣ್ಬ ಣ್ಭ ಣ್ಮ ಣ್ಯ ಣ್ರ ಣ್ಱ ಣ್ಲ ಣ್ವ ಣ್ಶ ಣ್ಷ ಣ್ಸ ಣ್ಹ ಣ್ಳ ಣ್ೞ ತ ತ್ಕ ತ್ಖ ತ್ಗ ತ್ಘ ತ್ಙ ತ್ಚ ತ್ಛ ತ್ಜ ತ್ಝ ತ್ಞ ತ್ಟ ತ್ಠ ತ್ಡ ತ್ಢ ತ್ಣ ತ್ತ ತ್ಥ ತ್ದ ತ್ಧ ತ್ನ ತ್ಪ ತ್ಫ ತ್ಬ ತ್ಭ ತ್ಮ ತ್ಯ ತ್ರ ತ್ಱ ತ್ಲ ತ್ವ ತ್ಶ ತ್ಷ ತ್ಸ ತ್ಹ ತ್ಳ ತ್ೞ ಥ ಥ್ಕ ಥ್ಖ ಥ್ಗ ಥ್ಘ ಥ್ಙ ಥ್ಚ ಥ್ಛ ಥ್ಜ ಥ್ಝ ಥ್ಞ ಥ್ಟ ಥ್ಠ ಥ್ಡ ಥ್ಢ ಥ್ಣ ಥ್ತ ಥ್ಥ ಥ್ದ ಥ್ಧ ಥ್ನ ಥ್ಪ ಥ್ಫ ಥ್ಬ ಥ್ಭ ಥ್ಮ ಥ್ಯ ಥ್ರ ಥ್ಱ ಥ್ಲ ಥ್ವ ಥ್ಶ ಥ್ಷ ಥ್ಸ ಥ್ಹ ಥ್ಳ ಥ್ೞ ದ ದ್ಕ ದ್ಖ ದ್ಗ ದ್ಘ ದ್ಙ ದ್ಚ ದ್ಛ ದ್ಜ ದ್ಝ ದ್ಞ ದ್ಟ ದ್ಠ ದ್ಡ ದ್ಢ ದ್ಣ ದ್ತ ದ್ಥ ದ್ದ ದ್ಧ ದ್ನ ದ್ಪ ದ್ಫ ದ್ಬ ದ್ಭ ದ್ಮ ದ್ಯ ದ್ರ ದ್ಱ ದ್ಲ ದ್ವ ದ್ಶ ದ್ಷ ದ್ಸ ದ್ಹ ದ್ಳ ದ್ೞ ಧ ಧ್ಕ ಧ್ಖ ಧ್ಗ ಧ್ಘ ಧ್ಙ ಧ್ಚ ಧ್ಛ ಧ್ಜ ಧ್ಝ ಧ್ಞ ಧ್ಟ ಧ್ಠ ಧ್ಡ ಧ್ಢ ಧ್ಣ ಧ್ತ ಧ್ಥ ಧ್ದ ಧ್ಧ ಧ್ನ ಧ್ಪ ಧ್ಫ ಧ್ಬ ಧ್ಭ ಧ್ಮ ಧ್ಯ ಧ್ರ ಧ್ಱ ಧ್ಲ ಧ್ವ ಧ್ಶ ಧ್ಷ ಧ್ಸ ಧ್ಹ ಧ್ಳ ಧ್ೞ ನ ನ್ಕ ನ್ಖ ನ್ಗ ನ್ಘ ನ್ಙ ನ್ಚ ನ್ಛ ನ್ಜ ನ್ಝ ನ್ಞ ನ್ಟ ನ್ಠ ನ್ಡ ನ್ಢ ನ್ಣ ನ್ತ ನ್ಥ ನ್ದ ನ್ಧ ನ್ನ ನ್ಪ ನ್ಫ ನ್ಬ ನ್ಭ ನ್ಮ ನ್ಯ ನ್ರ ನ್ಱ ನ್ಲ ನ್ವ ನ್ಶ ನ್ಷ ನ್ಸ ನ್ಹ ನ್ಳ ನ್ೞ ಪ ಪ್ಕ ಪ್ಖ ಪ್ಗ ಪ್ಘ ಪ್ಙ ಪ್ಚ ಪ್ಛ ಪ್ಜ ಪ್ಝ ಪ್ಞ ಪ್ಟ ಪ್ಠ ಪ್ಡ ಪ್ಢ ಪ್ಣ ಪ್ತ ಪ್ಥ ಪ್ದ ಪ್ಧ ಪ್ನ ಪ್ಪ ಪ್ಫ ಪ್ಬ ಪ್ಭ ಪ್ಮ ಪ್ಯ ಪ್ರ ಪ್ಱ ಪ್ಲ ಪ್ವ ಪ್ಶ ಪ್ಷ ಪ್ಸ ಪ್ಹ ಪ್ಳ ಪ್ೞ ಫ ಫ್ಕ ಫ್ಖ ಫ್ಗ ಫ್ಘ ಫ್ಙ ಫ್ಚ ಫ್ಛ ಫ್ಜ ಫ್ಝ ಫ್ಞ ಫ್ಟ ಫ್ಠ ಫ್ಡ ಫ್ಢ ಫ್ಣ ಫ್ತ ಫ್ಥ ಫ್ದ ಫ್ಧ ಫ್ನ ಫ್ಪ ಫ್ಫ ಫ್ಬ ಫ್ಭ ಫ್ಮ ಫ್ಯ ಫ್ರ ಫ್ಱ ಫ್ಲ ಫ್ವ ಫ್ಶ ಫ್ಷ ಫ್ಸ ಫ್ಹ ಫ್ಳ ಫ್ೞ ಬ ಬ್ಕ ಬ್ಖ ಬ್ಗ ಬ್ಘ ಬ್ಙ ಬ್ಚ ಬ್ಛ ಬ್ಜ ಬ್ಝ ಬ್ಞ ಬ್ಟ ಬ್ಠ ಬ್ಡ ಬ್ಢ ಬ್ಣ ಬ್ತ ಬ್ಥ ಬ್ದ ಬ್ಧ ಬ್ನ ಬ್ಪ ಬ್ಫ ಬ್ಬ ಬ್ಭ ಬ್ಮ ಬ್ಯ ಬ್ರ ಬ್ಱ ಬ್ಲ ಬ್ವ ಬ್ಶ ಬ್ಷ ಬ್ಸ ಬ್ಹ ಬ್ಳ ಬ್ೞ ಭ ಭ್ಕ ಭ್ಖ ಭ್ಗ ಭ್ಘ ಭ್ಙ ಭ್ಚ ಭ್ಛ ಭ್ಜ ಭ್ಝ ಭ್ಞ ಭ್ಟ ಭ್ಠ ಭ್ಡ ಭ್ಢ ಭ್ಣ ಭ್ತ ಭ್ಥ ಭ್ದ ಭ್ಧ ಭ್ನ ಭ್ಪ ಭ್ಫ ಭ್ಬ ಭ್ಭ ಭ್ಮ ಭ್ಯ ಭ್ರ ಭ್ಱ ಭ್ಲ ಭ್ವ ಭ್ಶ ಭ್ಷ ಭ್ಸ ಭ್ಹ ಭ್ಳ ಭ್ೞ ಮ ಮ್ಕ ಮ್ಖ ಮ್ಗ ಮ್ಘ ಮ್ಙ ಮ್ಚ ಮ್ಛ ಮ್ಜ ಮ್ಝ ಮ್ಞ ಮ್ಟ ಮ್ಠ ಮ್ಡ ಮ್ಢ ಮ್ಣ ಮ್ತ ಮ್ಥ ಮ್ದ ಮ್ಧ ಮ್ನ ಮ್ಪ ಮ್ಫ ಮ್ಬ ಮ್ಭ ಮ್ಮ ಮ್ಯ ಮ್ರ ಮ್ಱ ಮ್ಲ ಮ್ವ ಮ್ಶ ಮ್ಷ ಮ್ಸ ಮ್ಹ ಮ್ಳ ಮ್ೞ ಯ ಯ್ಕ ಯ್ಖ ಯ್ಗ ಯ್ಘ ಯ್ಙ ಯ್ಚ ಯ್ಛ ಯ್ಜ ಯ್ಝ ಯ್ಞ ಯ್ಟ ಯ್ಠ ಯ್ಡ ಯ್ಢ ಯ್ಣ ಯ್ತ ಯ್ಥ ಯ್ದ ಯ್ಧ ಯ್ನ ಯ್ಪ ಯ್ಫ ಯ್ಬ ಯ್ಭ ಯ್ಮ ಯ್ಯ ಯ್ರ ಯ್ಱ ಯ್ಲ ಯ್ವ ಯ್ಶ ಯ್ಷ ಯ್ಸ ಯ್ಹ ಯ್ಳ ಯ್ೞ ರ ರ್‍ಕ ರ್‍ಖ ರ್‍ಗ ರ್‍ಘ ರ್‍ಙ ರ್‍ಚ ರ್‍ಛ ರ್‍ಜ ರ್‍ಝ ರ್‍ಞ ರ್‍ಟ ರ್‍ಠ ರ್‍ಡ ರ್‍ಢ ರ್‍ಣ ರ್‍ತ ರ್‍ಥ ರ್‍ದ ರ್‍ಧ ರ್‍ನ ರ್‍ಪ ರ್‍ಫ ರ್‍ಬ ರ್‍ಭ ರ್‍ಮ ರ್‍ಯ ರ್‍ರ ರ್‍ಱ ರ್‍ಲ ರ್‍ವ ರ್‍ಶ ರ್‍ಷ ರ್‍ಸ ರ್‍ಹ ರ್‍ಳ ರ್‍ೞ ಱ ಱ್ಕ ಱ್ಖ ಱ್ಗ ಱ್ಘ ಱ್ಙ ಱ್ಚ ಱ್ಛ ಱ್ಜ ಱ್ಝ ಱ್ಞ ಱ್ಟ ಱ್ಠ ಱ್ಡ ಱ್ಢ ಱ್ಣ ಱ್ತ ಱ್ಥ ಱ್ದ ಱ್ಧ ಱ್ನ ಱ್ಪ ಱ್ಫ ಱ್ಬ ಱ್ಭ ಱ್ಮ ಱ್ಯ ಱ್ರ ಱ್ಱ ಱ್ಲ ಱ್ವ ಱ್ಶ ಱ್ಷ ಱ್ಸ ಱ್ಹ ಱ್ಳ ಱ್ೞ ಲ ಲ್ಕ ಲ್ಖ ಲ್ಗ ಲ್ಘ ಲ್ಙ ಲ್ಚ ಲ್ಛ ಲ್ಜ ಲ್ಝ ಲ್ಞ ಲ್ಟ ಲ್ಠ ಲ್ಡ ಲ್ಢ ಲ್ಣ ಲ್ತ ಲ್ಥ ಲ್ದ ಲ್ಧ ಲ್ನ ಲ್ಪ ಲ್ಫ ಲ್ಬ ಲ್ಭ ಲ್ಮ ಲ್ಯ ಲ್ರ ಲ್ಱ ಲ್ಲ ಲ್ವ ಲ್ಶ ಲ್ಷ ಲ್ಸ ಲ್ಹ ಲ್ಳ ಲ್ೞ ವ ವ್ಕ ವ್ಖ ವ್ಗ ವ್ಘ ವ್ಙ ವ್ಚ ವ್ಛ ವ್ಜ ವ್ಝ ವ್ಞ ವ್ಟ ವ್ಠ ವ್ಡ ವ್ಢ ವ್ಣ ವ್ತ ವ್ಥ ವ್ದ ವ್ಧ ವ್ನ ವ್ಪ ವ್ಫ ವ್ಬ ವ್ಭ ವ್ಮ ವ್ಯ ವ್ರ ವ್ಱ ವ್ಲ ವ್ವ ವ್ಶ ವ್ಷ ವ್ಸ ವ್ಹ ವ್ಳ ವ್ೞ ಶ ಶ್ಕ ಶ್ಖ ಶ್ಗ ಶ್ಘ ಶ್ಙ ಶ್ಚ ಶ್ಛ ಶ್ಜ ಶ್ಝ ಶ್ಞ ಶ್ಟ ಶ್ಠ ಶ್ಡ ಶ್ಢ ಶ್ಣ ಶ್ತ ಶ್ಥ ಶ್ದ ಶ್ಧ ಶ್ನ ಶ್ಪ ಶ್ಫ ಶ್ಬ ಶ್ಭ ಶ್ಮ ಶ್ಯ ಶ್ರ ಶ್ಱ ಶ್ಲ ಶ್ವ ಶ್ಶ ಶ್ಷ ಶ್ಸ ಶ್ಹ ಶ್ಳ ಶ್ೞ ಷ ಷ್ಕ ಷ್ಖ ಷ್ಗ ಷ್ಘ ಷ್ಙ ಷ್ಚ ಷ್ಛ ಷ್ಜ ಷ್ಝ ಷ್ಞ ಷ್ಟ ಷ್ಠ ಷ್ಡ ಷ್ಢ ಷ್ಣ ಷ್ತ ಷ್ಥ ಷ್ದ ಷ್ಧ ಷ್ನ ಷ್ಪ ಷ್ಫ ಷ್ಬ ಷ್ಭ ಷ್ಮ ಷ್ಯ ಷ್ರ ಷ್ಱ ಷ್ಲ ಷ್ವ ಷ್ಶ ಷ್ಷ ಷ್ಸ ಷ್ಹ ಷ್ಳ ಷ್ೞ ಸ ಸ್ಕ ಸ್ಖ ಸ್ಗ ಸ್ಘ ಸ್ಙ ಸ್ಚ ಸ್ಛ ಸ್ಜ ಸ್ಝ ಸ್ಞ ಸ್ಟ ಸ್ಠ ಸ್ಡ ಸ್ಢ ಸ್ಣ ಸ್ತ ಸ್ಥ ಸ್ದ ಸ್ಧ ಸ್ನ ಸ್ಪ ಸ್ಫ ಸ್ಬ ಸ್ಭ ಸ್ಮ ಸ್ಯ ಸ್ರ ಸ್ಱ ಸ್ಲ ಸ್ವ ಸ್ಶ ಸ್ಷ ಸ್ಸ ಸ್ಹ ಸ್ಳ ಸ್ೞ ಹ ಹ್ಕ ಹ್ಖ ಹ್ಗ ಹ್ಘ ಹ್ಙ ಹ್ಚ ಹ್ಛ ಹ್ಜ ಹ್ಝ ಹ್ಞ ಹ್ಟ ಹ್ಠ ಹ್ಡ ಹ್ಢ ಹ್ಣ ಹ್ತ ಹ್ಥ ಹ್ದ ಹ್ಧ ಹ್ನ ಹ್ಪ ಹ್ಫ ಹ್ಬ ಹ್ಭ ಹ್ಮ ಹ್ಯ ಹ್ರ ಹ್ಱ ಹ್ಲ ಹ್ವ ಹ್ಶ ಹ್ಷ ಹ್ಸ ಹ್ಹ ಹ್ಳ ಹ್ೞ ಳ ಳ್ಕ ಳ್ಖ ಳ್ಗ ಳ್ಘ ಳ್ಙ ಳ್ಚ ಳ್ಛ ಳ್ಜ ಳ್ಝ ಳ್ಞ ಳ್ಟ ಳ್ಠ ಳ್ಡ ಳ್ಢ ಳ್ಣ ಳ್ತ ಳ್ಥ ಳ್ದ ಳ್ಧ ಳ್ನ ಳ್ಪ ಳ್ಫ ಳ್ಬ ಳ್ಭ ಳ್ಮ ಳ್ಯ ಳ್ರ ಳ್ಱ ಳ್ಲ ಳ್ವ ಳ್ಶ ಳ್ಷ ಳ್ಸ ಳ್ಹ ಳ್ಳ ಳ್ೞ ೞ ೞ್ಕ ೞ್ಖ ೞ್ಗ ೞ್ಘ ೞ್ಙ ೞ್ಚ ೞ್ಛ ೞ್ಜ ೞ್ಝ ೞ್ಞ ೞ್ಟ ೞ್ಠ ೞ್ಡ ೞ್ಢ ೞ್ಣ ೞ್ತ ೞ್ಥ ೞ್ದ ೞ್ಧ ೞ್ನ ೞ್ಪ ೞ್ಫ ೞ್ಬ ೞ್ಭ ೞ್ಮ ೞ್ಯ ೞ್ರ ೞ್ಱ ೞ್ಲ ೞ್ವ ೞ್ಶ ೞ್ಷ ೞ್ಸ ೞ್ಹ ೞ್ಳ ೞ್ೞ ಸಂಯುಕ್ತಾಕ್ಷರಗಳಲ್ಲಿ ಎರಡು ವಿಧಗಳಿವೆ. ಕನ್ನಡ ಒತ್ತಕ್ಷರಗಳ ಚಿತ್ರಸಂಚಲನೆಯನ್ನು (ಅನಿಮೇಶನ್) ವೀಕ್ಷಿಸಲು ಕೆಳಗಿನ ಬಾಕ್ಸ್‍ನಲ್ಲಿ ನೀಡಿರುವ ಕೊಂಡಿಯನ್ನು ಕ್ಲಿಕ್ ಮಾಡಿ. ಅವರ್ಗೀಯ ವ್ಯಂಜನ ಎಂದರೇನು?ಅವು ಎಷ್ಟಿವೆ? ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ-ಯ,ರ,ಲ,ವ,ಶ,ಷ,ಸ,ಹ,ಳ. ನೋಡಿ ಕನ್ನಡ ಹೊರಸಂಪರ್ಕ ಕರ್ನಾಟಕ ಜನಾಂಗದ ಮೊತ್ತಮೊದಲ ಬರಹ ಭಾಷೆ, ಪ್ರಾಕೃತ; ಲಿಪಿ, ಬ್ರಾಹ್ಮೀ. ಇಲ್ಲಿಯ ಜನಾಂಗಕ್ಕೆ ಇವನ್ನು ಪರಿಚಯಿಸಿದವನು, ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಪಾಟಲೀಪುತ್ರ (ಬಿಹಾರ ರಾಜ್ಯ)ದಿಂದ ಆಳುತ್ತಿದ್ದ ಮೌರ್ಯಚಕ್ರವರ್ತಿ ಅಶೋಕ. ಒಂದು ಭಾಷೆ ಮತ್ತು ಒಂದು ಲಿಪಿಯ ಮೂಲಕ ಈತನು ಬೆಸೆದ ದಖ್ಖಣವು ಸುಮಾರು ಆರು ಶತಮಾನಗಳ ಕಾಲ (ಕ್ರಿ.ಪೂ. 3ರಿಂದ ಕ್ರಿ.ಶ. 3ರವರೆಗೆ) ಈ ಮಾಧ್ಯಮಗಳ ಮೂಲಕವೇ ಸಂಭಾಷಿಸಿತು.http://www.prajavani.net/news/article/2017/02/05/470193.html ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017 ಉಲ್ಲೇಖಗಳು ವರ್ಗ:ಅಕ್ಷರಮಾಲೆಗಳು ವರ್ಗ:ಲಿಪಿಗಳು ವರ್ಗ:ಭಾರತೀಯ ಭಾಷೆಗಳು ವರ್ಗ:ದ್ರಾವಿಡ ಭಾಷೆಗಳು ವರ್ಗ:ಕನ್ನಡ ವರ್ಗ:ಕರ್ನಾಟಕ ವರ್ಗ:ವ್ಯಾಕರಣ
ಕನ್ನಡ ವಿಕಿಪೀಡಿಯ.
https://kn.wikipedia.org/wiki/ಕನ್ನಡ_ವಿಕಿಪೀಡಿಯ.
ಕನ್ನಡ ವಿಶ್ವಕೋಶವು ಮೀಡಿಯಾವಿಕಿಯನ್ನು ಬಳಸಿ ಕಟ್ಟಿರುವ ಸ್ವತಂತ್ರ ವಿಶ್ವಕೋಶ. ಈ ವಿಶ್ವಕೋಶ ಅನೇಕ ಭಾಷೆಗಳಲ್ಲಿ ಲಭ್ಯವಿದೆ. ಪ್ರಸ್ತುತ ಕನ್ನಡ ಆವೃತ್ತಿಯು ಜೂನ್ ೨೦೦೩ ರಲ್ಲಿ ಪ್ರಾರಂಭವಾಯಿತು. ಅನುವಾದಿಸಲು ಉತ್ಸಾಹವಿರುವವರು ಈ ಉಲ್ಲೇಖವನ್ನು ಓದಿಕೊಳ್ಳುವುದಾಗಿ ವಿನಂತಿ. ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಬಳಸಿಕೊಳ್ಳಬಹುದು. ಪೀಠಿಕೆ ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಅವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ -ವಿಕಿಪೀಡಿಯಾ. ಹವಾಮಿ ಭಾಷೆಯಲ್ಲಿ ವಿಕಿ(wiki) ಎಂದರೆ ಶೀಘ್ರ ಅಥವಾ ತ್ವರಿತಗತಿ ಎಂದರ್ಥ. ಇಂಗ್ಲೀಷಿನಲ್ಲಿ ಎನ್ ಸೈಕ್ಲೊಪೀಡಿಯಾ (Encyclopedia) ಎಂದರೆ ವಿಶ್ವಕೋಶ ಎಂದರ್ಥ. ಇವೆರಡೂ ಶಬ್ದಗಳನ್ನು ಸಂಯೋಜಿಸಿ ವಿಕಿಪೀಡಿಯಾ (wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಇದನ್ನು ಅಭಿವೃದ್ಧಿಗೊಳಿಸಲಾಗಿದೆ. ಕನ್ನಡದಲ್ಲಿ ಇದನ್ನು 'ತ್ವರಿತ ವಿಶ್ವಕೋಶ' ಎಂದು ಹೆಸರಿಸ ಬಹುದು. ಇದೊಂದು ಬಹುಭಾಷೀಯ ಹಾಗೂ ಅಂತರಜಾಲ ಆಧಾರಿತ ವಿಶ್ವಕೋಶವಾಗಿದ್ದು,ನಿರಂತರವಾಗಿ ಪರಿಷ್ಕರಣಗೂಳ್ಳಬಲ್ಲ ಮಾಹಿತಿ ವಿತರಣ ಸಾಧನವಾಗಿದೆ. ಕ್ರಿ.ಶ್ ೨೦೦೧ರಲ್ಲಿ ಆಯೋಜಿಸಲ್ಪಟ್ಟ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆಯನ್ನು ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿಗೊಂಡಿದೆ. ಈ ತಾಣವನ್ನು ವಿಶ್ವದಾದ್ಯಂತ ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ. ಅನೇಕ ವೈವಿಧ್ಯಮಯ ಕ್ಷೇತ್ರಗಳಲ್ಲಿನ ಸುಮಾರು ೮೨೦೦೦ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ತಾಣಕ್ಕೆ ಕಳುಹಿಸುತ್ತಾರೆ. ಯಾವುದೇ ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಅಥವಾ ಜನಾಂಗೀಯ ನಿರ್ಬಂಧಗಳಿಲ್ಲದೆ ಯಾರು ಬೇಕಾದರೂ ವಿವಿಧ ರೀತಿಯ ಲೇಖನಗಳು, ಆಕರಗಳು, ಚಿತ್ರಗಳು ಮತ್ತಿತರ ಮಾಧ್ಯಮ ಪ್ರಕಾರಗಳ ಬಗೆಗಿನ ಮಾಹಿತಿಗಳನ್ನು ಈ ತಾಣಕ್ಕೆ ಕಳುಹಿಸಬಹುದು. ಮುಕ್ತ ಬಳಕೆಗೆ ಅವಕಾಶ ಕೊಡುಗೆದಾರರ ಪರಿಣತಿಯಾಗಲೀ ವಿದ್ಯಾರ್ಹತೆಯಾಗಲೀ ಅಥವಾ ಮತ್ತಾವುದೇ ಅಂಶವಾಗಲೀ ಇಲ್ಲಿ ಗಣನೆಗೆ ಬರುವುದಿಲ್ಲ. ಆದರೆ ಹಾಗೆ ನೀಡಲ್ಪಟ್ಟ ಮಾಹಿತಿಗಳು ನಂಬಲರ್ಹವಾದ ಮೂಲಗಳ ಮೂಲಕ ಖಚಿತಗೊಳ್ಳಲ್ಪಡಲು ಸಮರ್ಥವಾಗಿರಬೇಕು. ಅಂತರಜಾಲ ಸಂಪರ್ಕವನ್ನು ಹೊಂದಿರುವ ಯಾರೇ ಆದರೂ ಇಲ್ಲಿ ಲಭ್ಯವಿರುವ ಮಾಹಿತಿಗಳನ್ನು ಪರಿಷ್ಕರಿಸಬಹುದು ಅಥವಾ ವೃದ್ಧಿಗೊಳಿಸಬಹುದು. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದಾಗಿ ಈ ತಾಣದಲ್ಲಿ ಬೃಹತ್ ಪ್ರಮಾಣದ ಮಾಹಿತಿಗಳು ಲಭ್ಯವಾಗಲು ಸಾಧ್ಯವಾಗಿದೆ. ವಿಕಿಪೀಡಿಯಾ ತಾಣವನ್ನು ಸಂದರ್ಶಿಸುವ ಮಂದಿಯಲ್ಲಿ ಅನೇಕರು ತಮಗೆ ಆಸಕ್ತಿ ಇರುವ ಮಾಹಿತಿಗಳನ್ನು ಪಡೆದುಕೂಳ್ಳಲು ಬಯಸಿದರೆ ಮತ್ತೆ ಕೆಲವರು ತಮ್ಮಲ್ಲಿಯ ಮಾಹಿತಿಗಳನ್ನು ಇತರರೊಂದಿಗೆ ವಿನಿಮಯ ಮಾಡಿಕೂಳ್ಳಲು ಉತ್ಸುಕರಾಗಿರುತ್ತಾರೆ. ಈ ತಾಣದಲ್ಲಿ ಲಭ್ಯವಿರುವ ಮಾಹಿತಿಗಳನ್ನು ನಿರಂತರವಾಗಿ ಸುಧಾರಣೆಗೆ ಮತ್ತು ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ . ಮಾಹಿತಿಗಳನ್ನು ಹಲವಾರು ಶೀರ್ಷಿಕೆಗಳಿಗೆ ಅನುಗುಣವಾಗಿ ವರ್ಗೀಕರಿಸಲಾಗುತ್ತದೆ. ಈ ವಿಕಿಪೀಡಿಯ ತಾಣವು ಹಲವಾರು ಪ್ರವೇಶದ್ವಾರ (Portal)ಗಳನ್ನು ಹೊಂದಿದೆ. ಈ ದ್ವಾರಗಳ ಸುತ್ತ ಒಂದು ನಿರ್ದಿಷ್ಟ ವಿಷಯದ ಬಗೆಗಿನ ಪಠ್ಯಗಳನ್ನು ಅಳವಡಿಸಲಾಗಿರುತ್ತದೆ. ಗಣಕಯಂತ್ರದ ಪರದೆಯ ಬಲ ಮೇಲುಭಾಗದಲ್ಲಿನ ಶೋಧ ಸಂಪುಟ (Search Box)ವನ್ನು ಬಳಸಿ ನಮೆಗೆ ಬೇಕಾದ ಲೇಖನಗಳು ಅಥವಾ ಮಾಹಿತಿಯನ್ನು ಪಡೆಯಬಹುದು. ವಿಕಿಪೀಡಿಯಾ ಸುಮಾರು ಇನ್ನೂರು ಭಾಷಾವಿಭಾಗಗಳಲ್ಲಿ ಲಭ್ಯವಿದೆ. ಸರಳ ಇಂಗ್ಲೀಷ ಅವತರಣೆಕೆಗಳಲ್ಲದೆ. ಶಬ್ದಕೋಶ (Dictionary) ನುಡಿಮುತ್ತುಗಳು (Quotations), ಗ್ರಂಥಗಳು (Books), ಕೈಪಿಡಿಗಳು (Manuals) ವೈಜ್ಞಾನಿಕ ಆಕರಗಳು (Scientific References) ಹಾಗೂ ಮಾಧ್ಯಮ ಸೇವೆಗಳು (News Services) ಹಾಗೂ ಇತರ ಸಂಬಂಧಿತ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು. ಈ ಎಲ್ಲ ಮಾಹಿತಿ ಪ್ರಾಕಾರಗಳನ್ನು ಪ್ರತ್ಯೇಕ ತಜ್ಞ ಸಮುದಾಯಗಳು ನಿರ್ವಹಿಸಿ ಸುಧಾರಿಸುತ್ತಿರುತ್ತವೆ. ಇತರ ಮೂಲಗಳಿಂದ ಪಡೆಯಲು ದುರ್ಲಭವಾಗಿರುವಂತಹ ಅನೇಕ ಮಾಹಿತಿಪ್ರಾಕಾರಗಳು ಮತ್ತು ಲೇಖನಗಳನ್ನು ಇಲ್ಲಿ ಕಾಣಲು ಸಾಧ್ಯವಿದೆ. ವಿಕಿಪೀಡಿಯಾದಲ್ಲಿನ ಲೇಖನಗಳು ಮತ್ತು ಮಾಹಿತಿಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ- ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆ (Link)ಯ ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಪ್ರಸ್ತುತ ಬಾಹ್ಯ ಜಾಲತಾಣಗಳು (Relevant External Websites) ಮತ್ತು ಪುಟಗಳು, ಆಕರ ವಿಷಯಗಳು ಆಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಇತರ ಕೆಲವು ಲೇಖನಗಳು, ಶಬ್ದಕೋಶದಲ್ಲಿನ ಖಚಿತ ವಿವರಣೆಗಳು, ಶ್ರಾವ್ಯ ಗ್ರಂಥಗಳ ಆಲಿಕೆ ಮತ್ತು ವಾಚನ, ಉದ್ಧೃತ ವಾಕ್ಯಗಳು ಇತರ ಭಾಷೆಗಳಲ್ಲಿರಬಹುದಾದ ಅದೇ ಲೇಖನ ಅಥವಾ ವಿಕಿಪೀಡಿಯಾದ ಸಹ-ಪ್ರಕಟನೆಗಳಲ್ಲಿ ದೂರೆಯಬಹುದಾದ ಇನ್ನಷ್ಟು ವಿವರಗಳು, ಇವೇ ಮುಂತಾದುವುಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಅವಕಾಶವಿದೆ. ಇದು ಆಸಕ್ತರು ವಿಕಿಪೀಡಿಯಾಗೆ ನೀಡಬಹುದಾದ ಮತ್ತೊಂದು ಕೊಡುಗೆ. ಬದಲಾವಣೆ ಅನಿವಾರ್ಯ ವಿಕಿಪೀಡಿಯಾದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ವಿಶ್ವದಲ್ಲಿ ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಮತ್ತು ಅನ್ವೇಷಣೆಗಳು ನಿರಂತರವಾಗಿ ಜರುಗುತ್ತಿರುವುದರಿಂದ, ಹೀಗೆ ದೊರೆತ ತಧ್ಯಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ, ಕೆಲವುಸಮಯದಲ್ಲಿ ಹಳೆಯದನ್ನು ಒತ್ತಟ್ಟಿಗಿಟ್ಟು ಹೊಸದನ್ನು ಪ್ರತಿಪಾದಿಸುವ ಒಂದು ದೃಷ್ಟಿಕೋನ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ. ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ವಿಶ್ವಕೋಶೀಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು. ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ. ಸಮಯೋಜಿತ ಬಳಕೆ ಅನಿವಾರ್ಯ ವಿಕಿಪೀಡಿಯಾದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ವಿಶ್ವಕೋಶೀಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ. ವಿಕಿಪೀಡಿಯಾದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ. ಸಾಂಪ್ರದಾಯಿಕವಾದ ಮುದ್ರಿತ ವಿಶ್ವಕೋಶಗಳಿಗಿಂತ ವಿಕಿಪೀಡಿಯಾ ಕೆಲವು ಹೆಚ್ಚಿನ ಸೌಲಭ್ಯಗಳನ್ನು ಹೂಂದಿದೆ. ವಿಕಿಪೀಡಿಯಾದಲ್ಲಿನ ಮಾಹಿತಿ ಸಂಗ್ರಹಣೆ ತುಂಬಾ ಅಗ್ಗ. ಈ ಮಾಹಿತಿಗಳನ್ನು ಮುದ್ರಿಸಬೇಕಾದ ಅಗತ್ಯವಿಲ್ಲದೆ ಇರುವುದರಿಂದ ಪರಿಸರ ಹಾನಿ ಗಣನೀಯವಾಗಿ ತಗ್ಗುವುದು . ವಿಕಿಪೀಡಿಯಾದ ಪ್ರತಿಯೊಂದು ಮಾಹಿತಿಯೂ ಬೆಸುಗೆಗಳನ್ನು (Links) ಹೊಂದಿರುವುದರಿಂದ ಮುದ್ರಿತ ಗ್ರಂಥಗಳಲ್ಲಿರುವಂತೆ ಸಾಲು ಸಾಲಿಗೂ ಸೂಕ್ತ ವಿವರಣೆಗಳನ್ನು ನೀಡಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ವಿಕಿಪೀಡಿಯಾದ ಸಂಪಾದಕೀಯ ಚಕ್ರ ಅಲ್ಪಪ್ರಮಾಣದ್ದು. ಮುದ್ರಿತ ವಿಶ್ವಕೋಶಗಳು ಮುಂದಿನ ಪರಿಷ್ಕೃತ ಆವೃತ್ತಿ ಪ್ರಕಟಗೊಳ್ಳುವವರೆಗೂ ಬದಲಾವಣೆ ಹೊಂದದೆ ಇರಬೇಕಾಗುತ್ತದೆ. ಅಲ್ಲದೆ ಬಳಕೆದಾರರು ಪ್ರತಿ ಪರಿಷ್ಕೃತ ಆವೃತ್ತಿಗೂ ಹೆಚ್ಚಿನ ಹಣವನ್ನು ವೆಚ್ಚಮಾಡಬೇಕಾಗುತ್ತದೆ. ಆದರೆ ವಿಕಿಪೀಡಿಯಾದಲ್ಲಿ ಪರಿಷ್ಕರಣಕಾರರು ಯಾವುದೇ ಕ್ಷಣದಲ್ಲಿ ಮಾಹಿತಿಗಳನ್ನು ಪರಿಷ್ಕರಿಸಿ ಅವುಗಳ ಉತ್ಕೃ಼ಷ್ಟತೆಯನ್ನು ಹೆಚ್ಚಿಸಬಹುದು. ಇದರಿಂದಾಗಿ ಇತ್ತೀಚಿನ ವಿದ್ಯಮಾನಗಳು ಮತ್ತು ವಿದ್ವತ್ ಪ್ರಗತಿಗಳನ್ನು ಸಹ ತಕ್ಷಣವೇ ದಾಖಲಿಸಿ ಮಾಹಿತಿಗಳು ಪ್ರಸ್ತುತತೆಯನ್ನು ವೃದ್ಧಿಗೊಳಿಸಬಹುದು. ವಿಕಿಪೀಡಿಯಾ ಎಂಬ ಬೌದ್ಧಿಕ ಆಯಾಮದಲ್ಲಿ ಪಾತ್ರ ವಹಿಸಲು ಎಲ್ಲರಿಗೂ ಮುಕ್ತ ಅವಕಾಶವುಂಟು. ಅದರಲ್ಲಿನ ಮಾಹಿತಿ ಸಂಗ್ರಹಕಾರರ ವ್ಯಾಪ್ತಿ ತುಂಬಾ ವಿಸ್ತಾರವಾದುದು. ಅಲ್ಲದೆ, ವಿಕಿಪೀಡಿಯಾದ ಸಂಪಾದಕೀಯ ಮಾರ್ಗಸೂಚಿ ಹಾಗೂ ಧೋರಣೆಗಳಿಗೆ ಒಳಪಟ್ಟು ಮತ್ತು ಬಹುಮತದ ಒಪ್ಪಿಗೆಯಿಂದ ಅಲ್ಲಿನ ಲೇಖನಗಳು ಬರೆಯಲ್ಪಡುತ್ತವೆ. ಇದು ವಿಕಿಪೀಡಿಯಾದ ಅಗಾಧ ಸಾಮರ್ಥ್ಯವೂ ಹೌದು ಮತ್ತು ಕೆಲವೊಮ್ಮೆ ಇದರ ದೌರ್ಬಲ್ಯ ಮತ್ತು ವೈವಿಧ್ಯತೆಗಳೂ ಹೌದು. ಮಾಹಿತಿಗಳನ್ನು ಜವಾಬ್ದಾರಿಯುತವಾಗಿ ಬದಲಾಯಿಸಬೇಕು ವಿಕಿಪೀಡಿಯಾದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಅವು ಬೌದ್ಧಿಕ ರೂಕ್ಷತೆಗೆ ಗುರಿಯಾಗುವ ಸಂಭವವುಂಟು. ಇಂತಹ ಅನಪೇಕ್ಷಿತ ಮಾಹಿತಿಗಳು ಸೇರ್ಪಡೆಯಾಗುವ ಸಾಧ್ಯತೆಗಳೂ ಉಂಟು. ಇಂತಹ ಅನಪೇಕ್ಷಿತ ಮಾಹಿತಿಗಳನ್ನು ವಿಸರ್ಜಿಸಬೇಕಾದ ಅಗತ್ಯತೆಗಳೂ ಉಂಟಾಗುತ್ತವೆ. ಸಾಂಪ್ರದಾಯಿಕ ಆಕರಗಳಲ್ಲಿ ಪೂರ್ವಾಗ್ರಹದಿಂದ ಕೂಡಿದ ಅಥವಾ ಏಕಪಕ್ಷೀಯವಾದ ಮಾಹಿತಿಗಳ ಬಗ್ಗೆ ಆಕ್ಷೇಪಗಳನ್ನೆತ್ತುವುದು ಸುಲಭವಲ್ಲ. ಆದರೆ ವಿಕಿಪೀಡಿಯಾದಲ್ಲಿ ಇಂತಹ ಆಕ್ಷೇಪಣೆಗಳನ್ನು ಕೂಡಲೇ ಪ್ರಸ್ತಾಪಿಸಿ ಮಾಹಿತಿ ಸಂಗ್ರಹಕಾರರಿಗೆ ತಕರಾರುಗಳನ್ನು ನೀಡಬಹುದು. ಅನೇಕ ಮಾಹಿತಿದಾರರು ವಿಕಿಪೀಡಿಯಾದ ಸಂಪಾದಕೀಯ ಧೋರಣೆಗಳನ್ನು ಸಂಪೂರ್ಣವಾಗಿ ಪರಿಪಾಲಿಸದೆ ಇರಬಹುದು ಅಥವಾ ಉಲ್ಲೇಖಾರ್ಹ ಮೂಲಗಳಿಲ್ಲದೆ ಮಾಹಿತಿಗಳನ್ನು ಒದಗಿಸಬಹುದು. ವಿಕಿಪೀಡಿಯಾದ ಬಿಚ್ಚು ಧೋರಣೆಯಿಂದಾಗಿ ಯಾವುದೇ ಸತ್ಯಬಾಹಿರವಾದ ಅಥವಾ ತಪ್ಪುದಾರಿಗೆಳೆಯುವ ಮಾಹಿತಿಗಳನ್ನು ತಕ್ಷಣವೇ ಸರಿಪಡಿಸುವ ಸಾಧ್ಯತೆಗಳು ಅಧಿಕಗೊಂಡಿವೆ. ವಿಕಿಪೀಡಿಯಾಗೆ ಮಾಹಿತಿಗಳನ್ನು ನೀಡುವ ವ್ಯಕ್ತಿಗಳು ಸೌಜನ್ಯಶೀಲರೂ, ತಟಸ್ಥರೂ ಆಗಿರಬೇಕೆಂಬುದನ್ನು ನಿರೀಕ್ಷಿಸಲಾಗುತ್ತದೆ. ಅವರು ಮಾಹಿತಿಗಳನ್ನು ಕಳುಹಿಸಿವ ಮುನ್ನ ವಿಕಿಪೀಡಿಯಾದ ಸ್ವಾಗತ ಪುಟಗಳನ್ನು ಮತ್ತು ಇತರ ಸಹಾಯಕ ಉಪಕರಣಗಳನ್ನೂ ನೋಡಿ ಮನದಟ್ಟುಮಾಡಿಕೊಳ್ಳುವುದು ಒಳ್ಳೆಯದು. ವಿಕಿಪೀಡಿಯಾ ಸಮುದಾಯವು ಬಹುಪಾಲು ಒಂದು ಸ್ವ-ವ್ಯವಸ್ಥೆಗೂಂಡ ಸಂಘಟನೆ. ಈ ಕಾರಣದಿಂದ ಯಾವುದೇ ವ್ಯಕ್ತಿಯಾದರೂ ಒಬ್ಬ ಸಮರ್ಥ ಪರಿಷ್ಕರಣಕಾರನೆಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳುವುದು ಸಾಧ್ಯವಾಗಿದೆ. ಯಾವುದೇ ವ್ಯಕ್ತಿಯು ತಾನು ಬಯಸಿದ ಯಾವುದೇ ಪಾತ್ರದಲ್ಲಿ ತೂಡಗಿಸಿಕೊಳ್ಳಲು ಸಾಧ್ಯ. ಬಹುತೇಕ ವ್ಯಕ್ತಿಗಳು ಕೆಲವು ಪರಿಣತ ಕೆಲಸಗಳಲ್ಲಿ ಪ್ರವೃತ್ತರಾಗಲು ಬಯಸುತ್ತಾರೆ. ಇತರರ ಪ್ರಾರ್ಥನೆಯ ಮೇರೆಗೆ ಲೇಖನಗಳ ವಿಮರ್ಶೆ, ಬೌದ್ಧಿಕ ರೂಕ್ಷತೆಗಾಗಿ ಪ್ರಸ್ತುತ ಲೇಖನಗಳ ಮೇಲೆ ಕಣ್ಣಿಡುವುದು. ಗುಣನಿಯಂತ್ರಣದ ಉದ್ದೇಶಕ್ಕಾಗಿ ನೂತನವಾಗಿ ಸೇರ್ಪಡೆಗೊಂಡ ಲೇಖನಗಳ ಬಗ್ಗೆ ಜಾಗರೂಕರಾಗಿರುವುದು ಮತ್ತಿತರ ಅಂತಹ ಕಾರ್ಯಗಳಲ್ಲಿ ಅವರು ಪ್ರವೃತ್ತರಾಗ ಬಯಸುತ್ತಾರೆ. ದುರ್ಬಳಕೆ ಹಾಗೂ ವಿವಾದರಹಿತವಾಗಿರಲಿ ಆಗಾಗ್ಗೆ ತಲೆದೋರಬಹುದಾದ ದುರ್ಬಳಿಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಈ ವಿದಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ. ಜ್ಞಾನ ಭಂಡಾರ ವೃದ್ಧಿಸಲಿ ಕ್ರಿ.ಶ. ೨೦೦೧ರಲ್ಲಿ ಪ್ರಾರಂಭವಾದ ಇಂಗ್ಲೀಷ ವಿಕಿಪೀಡಿಯಾದಲ್ಲಿ ಇಂದು ಸುಮಾರು ೪೬ ಲಕ್ಷ ಲೇಖನಗಳು ಲಭ್ಯವಿದೆ. ಇಂಗ್ಲೀಷ್ ವಿಕಿಪೀಡಿಯಾ ಅಲ್ಲದೆ ಜಗತ್ತಿನ ಸುಮಾರು ೨೮೬ ಭಾಷೆಗಳಲ್ಲಿ ವಿಕಿಪೀಡಿಯಾ ಲಭ್ಯವಿದೆ. ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಿಂದ ನೂರಾರು ಸಾವಿರ ಮಂದಿ ಹತ್ತಾರು ಸಾವಿರ ಮಾಹಿತಿಗಳನ್ನು ಒದಗಿಸುತ್ತಾರಲ್ಲದೆ ಸಾವಿರಾರು ಲೇಖನಗಳನ್ನು ಸಿದ್ಧಪಡಿಸಿ ವಿಕಿಪೀಡಿಯಾದ ಜ್ಞಾನ ಭಂಡಾರವನ್ನು ಮತ್ತಷ್ಟು ಸಮೃದ್ಧಗೂಳಿಸಲು ನೆರವಾಗುತ್ತಲಿದ್ದಾರೆ. ಕನ್ನಡ ವಿಕಿಪೀಡಿಯ ಅಂಕಿ ಅಂಶಗಳು + ಕನ್ನಡ ವಿಕಿಪೀಡಿಯ ಅಂಕಿ ಅಂಶಗಳು (ಆಟೊ ಅಪ್ಡೇಟ್) ಬಳಕೆದಾರ ಖಾತೆಗಳ ಸಂಖ್ಯೆ ಲೇಖನಗಳ ಸಂಖ್ಯೆ ಕಡತಗಳ ಸಂಖ್ಯೆ ಆಡಳಿತಗಾರರ ಸಂಖ್ಯೆ ಸಂಪಾದನೋತ್ಸವಗಳು ಕನ್ನಡ ವಿಕಿಪೀಡಿಯದಲ್ಲಿ ಲೇಖನಗಳನ್ನು ಹೆಚ್ಚಿಸಲು ಅಲ್ಲಲ್ಲಿ ಆಗಾಗ ಸಂಪಾದನೋತ್ಸವಗಳನ್ನು (edit-a-thon) ಆಚರಿಸಲಾಗುತ್ತದೆ. ಅವುಗಳ ಬಗೆಗಿನ ವಿವರಣಾತ್ಮಕ ಪುಟಗಳನ್ನು ಇಲ್ಲಿವೆ. ವಿಕಿಪೀಡಿಯ:ಸಂಪಾದನೋತ್ಸವಗಳು ಉಲ್ಲೇಖಗಳು ಅಂತರ್ಜಾಲದಲ್ಲಿ ನೆಟ್ಟ ಸಸಿಗೆ ಈಗ ಹತ್ತು ವರ್ಷ | - Kannadaprabha.com 10 years on, Kannada Wikipedia lags - The Hindu The struggles of keeping Kannada Wikipedia afloat - The Hindu ವರ್ಗ:ವಿಕಿಪೀಡಿಯ ಪುಟಗಳು
ಯುನಿಕೋಡ್
https://kn.wikipedia.org/wiki/ಯುನಿಕೋಡ್
ಗಣಕೀಕರಣದಲ್ಲಿ ಯುನಿಕೋಡ್ ಎಂದರೆ ಒಂದು ಅಂತರರಾಷ್ಟ್ರೀಯ ನಿರ್ದಿಷ್ಟಮಾನ. ಇದರ ಧ್ಯೇಯ - ಎಲ್ಲಾ ಮಾನವ ಭಾಷೆಗಳಲ್ಲಿ ಬೇಕಾಗುವ ಪ್ರತಿಯೊಂದು ಅಕ್ಷರಕ್ಕೂ ಆಕರದಲ್ಲಿ ಒಂದು ಅಪೂರ್ವ (Unique) ಇಂಟಿಜರ್ ಸಂಖ್ಯೆಯನ್ನು ಕೊಡುವುದು. ಈ ಕೋಡ್ ಸಂಖ್ಯೆಯನ್ನು ಕೋಡ್ ಪಾಯಿಂಟ್ ಎನ್ನುತ್ತಾರೆ. ಕೆಲವು ಟೀಕೆ, ಸಂಧಿಗ್ಧತೆ ಹಾಗೂ ತಾಂತ್ರಿಕ ತೊಂದರೆಗಳಿದ್ದರೂ ಸಹ ತಂತ್ರಾಂಶಗಳ ಅಂತರರಾಷ್ಟ್ರೀಯತೆಯಲ್ಲಿ (internationalization) ಪ್ರಬಲ ಎನ್ಕೋಡಿಂಗ್ ವಿಧಾನವಾಗಿ ಹೊರಹೊಮ್ಮಿದೆ. ಯುನಿಕ್ಸ್ ಮತ್ತು ಸಮಾನವಾದ ಗ್ನು/ಲಿನಕ್ಸ್, ಬಿ ಎಸ್ ಡಿ, ಹಾಗೂ ಮ್ಯಾಕ್ ಓಎಸ್ ಎಕ್ಸ್ ಇವೇ ಮೊದಲಾದ ಆಪರೇಟಿಂಗ್ ಸಿಸ್ಟಮ್ ಗಳು ಯುನಿಕೋಡನ್ನು (ಯು ಟಿ ಎಫ್ -೮ ರ ರೂಪದಲ್ಲಿ) ಅಂಗೀಕರಿಸಿವೆ. ಮೈಕ್ರೊಸಾಫ್ಟ್ನ ವಿಂಡೋಸ್ ಶ್ರೇಣಿಯ ಆಪರೇಟಿಂಗ್ ಸಿಸ್ಟಮ್ ಗಳು ಯು ಟಿ ಎಫ್ -೧೬ನ್ನು ಬಹಳವಾಗಿ ಉಪಯೋಗಿಸುತ್ತವೆ. ಯುನಿಕೋಡ್ ಎಂಬ ವಿಶ್ವಸಂಕೇತ ಅಂಗಡಿಗೆ ಹೋಗಿ ಒಂದು ಬಲ್ಬ್ ಬೇಕೆಂದು ಕೇಳಿ ನೋಡಿ. ಅಂಗಡಿಯಾತ ನಿಮ್ಮ ಮನೆಯಲ್ಲಿ ಯಾವ ಕಂಪೆನಿಯ ಹೋಲ್ಡರ್ ಇದೆ ಎಂದು ಕೇಳುವುದಿಲ್ಲ. ಯಾಕೆಂದರೆ ಯಾವ ಕಂಪೆನಿಯ ಹೋಲ್ಡರ್ ಆದರೇನು, ಎಲ್ಲ ಬಲ್ಬ್‌ಗಳು ಎಲ್ಲ ಹೋಲ್ಡರ್‌ಗಳಲ್ಲಿ ಕೆಲಸ ಮಾಡುತ್ತವೆ. ಈಗ ಕನ್ನಡ ಮತ್ತು ಗಣಕ ಕ್ಷೇತ್ರಕ್ಕೆ ಬನ್ನಿ. ನಿಮ್ಮ ಮನೆಯ ಗಣಕದಲ್ಲಿ ಕಡತವೊಂದನ್ನು ತಯಾರಿಸಿ ಫ್ಲಾಪಿಯಲ್ಲಿ ತುಂಬಿಸಿ ಅದರ ಲೇಸರ್ ಮುದ್ರಣಕ್ಕೆ ಯಾವುದಾದರು ಡಿ.ಟಿ.ಪಿ. ಕೇಂದ್ರಕ್ಕೆ ತೆಗೆದುಕೊಂದು ಹೋಗಿ. ಆತ ನಿಮ್ಮನ್ನು ಖಂಡಿತವಾಗಿ ಕೇಳುವ ಪ್ರಶ್ನೆಯೆಂದರೆ "ನೀವು ಯಾವ ತಂತ್ರಾಂಶ ತಯಾರಿಸಿ ಕಡತವನ್ನು ತಯಾರು ಮಾಡಿದ್ದೀರಾ?". ನೀವು ಬಳಸಿದ ತಂತ್ರಾಂಶ ಆತನ ಗಣಕದಲ್ಲಿ ಇಲ್ಲದಿರುವ ಸಂಭವವೇ ಹೆಚ್ಚು. ಕನ್ನಡದ ಯಾವುದೇ ತಂತ್ರಾಂಶವನ್ನು ಬಳಸಿ ತಯಾರಿಸಿದ ಕಡತವನ್ನು ಕನ್ನಡದ ಯಾವುದೇ ತಂತ್ರಾಂಶದಲ್ಲಿ ಓದಲು ಸಾಧ್ಯವಿರಬೇಕಲ್ಲವೇ, ಎಂದು ನಿಮಗೆ ಅನ್ನಿಸಿರಬೇಕಲ್ಲವೇ? ಅದನ್ನು ಸಾಧ್ಯಮಾಡಿಕೊಡುವುದೇ ಈ ಯುನಿಕೋಡ್. ಕನ್ನಡದಲ್ಲಿ ಕಡತವೊಂದನ್ನು ತಯಾರಿಸಿ ಜಪಾನಿಗೆ ಕಳುಹಿಸಿದರೆ ಅವರಿಗೆ ಇದು ಕನ್ನಡ ಭಾಷೆಯಲ್ಲಿದೆ ಎಂದು ತಿಳಿಯುವುದು ಹೇಗೆ? ವಿಶ್ವಕ್ಕೆಲ್ಲ ಒಂದೇ ಸಂಕೇತ ವಿಧಾನ ಇದ್ದರೆ ಒಳ್ಳೆಯದಲ್ಲವೇ? ಇದುವೇ ಯುನಿಕೋಡ್. ನಾವು ಇಂಗ್ಲೀಷ್ನಲ್ಲಿ ಮಾತನಾಡುವಾಗ ಕನ್ನಡದಲ್ಲಿ ಆಲೋಚಿಸಿ ಇಂಗ್ಲೀಷ್ ಗೆ ಅನುವಾದಿಸಿ ಮಾತನಾಡುತ್ತೇವಲ್ಲವೇ? ಗಣಕಗಳು ಕನ್ನಡದಲ್ಲಿ ವ್ಯವಹರಿಸುವುದು ಸುಮಾರಾಗಿ ಹಾಗೆಯೇ. ಮಾಹಿತಿಯ ಸಂಗ್ರಹಣೆಗೆ ಒಂದು ಸಂಕೇತ, ತೋರಿಸಲು ಇನ್ನೊಂದು ಸಂಕೇತ. ಮಾಹಿತಿಯ ಸಂಗ್ರಹಣೆಗೆ ಭಾರತೀಯ ಭಾಷೆಗಳಿಗೆ ಬಳಸುತ್ತಿರುವುದು ಇಸ್ಕಿಯನ್ನು (ISCII = Indian Script Code for Information Interchange). ಇಸ್ಕಿಯು ಆಸ್ಕಿಯನ್ನು (ASCII = American Standards Code for Information Interchange) ಆಧರಿಸಿದೆ. ಆಸ್ಕಿ ಮತ್ತು ಇಸ್ಕಿ ಆಸ್ಕಿ ೮ ಬಿಟ್‌ಗಳನ್ನು ಹೊಂದಿದೆ. ಗಣಕದಲ್ಲಿ ಮಾಹಿತಿಯ ಒಂದು ತುಣಕೇ ಬಿಟ್ (bit = binary digit). ವಿದ್ಯುತ್ತಿಗೆ ಎರಡೇ ಸಾಧ್ಯತೆಗಳಿರುವುದು -ಇದೆ ಅಥವಾ ಇಲ್ಲ. ವಿದ್ಯುತ್ ಇದೆ ಎಂದರೆ "ಒಂದು", ಇಲ್ಲ ಎಂದರೆ "ಸೊನ್ನೆ" ಎಂದು ತೆಗೆದುಕೊಂಡರೆ ಒಂದು ಬಿಟ್‌ನಲ್ಲಿ ೦ ಅಥವಾ ೧ ಅನ್ನು ಸೂಚಿಸಬಹದು. ಒಂದು ಅಕ್ಷರವನ್ನು ಶೇಖರಿಸಲು ಎರಡು ಬಿಟ್‌ಗಳನ್ನು ತೆಗೆದುಕೊಂಡರೆ ಒಟ್ಟು ನಾಲ್ಕು ಸಾಧ್ಯತೆಗಳಿವೆ -೦೦, ೦೧, ೧೦ ಮತ್ತು ೧೧ (ದ್ವಿಮಾನ). ಇವು ದಶಮಾನ ಪದ್ಧತಿಯಲ್ಲಿ ೦, ೧, ೨, ೩ ಆಗುತ್ತವೆ. ಆಸ್ಕಿ ಮತ್ತು ಇಸ್ಕಿಗಳು ೮ ಬಿಟ್‌ಗಳನ್ನು ಬಳಸುತ್ತವೆ. ೮ ಬಿಟ್‌ಗಳನ್ನು ಬಳಸುವ ಯಾವುದೇ ಸಂಕೇತೀಕರಣ ವಿಧಾನವು ೨೫೬ (೨೮ = ೨೫೬) ಅಕ್ಷರಗಳನ್ನು ಮಾತ್ರವೇ ಹೊಂದಿರಬಲ್ಲುದು. ಕನ್ನಡ ಭಾಷೆಯಲ್ಲಿ ೪೯ ಅಕ್ಷರಗಳಿವೆ. ಜೊತೆಗೆ ಸ್ವರ ಚಿಹ್ನೆಗಳಿವೆ. ಇಂಗ್ಲೀಷ್ ಭಾಷೆಯಲ್ಲಿ ೨೬ (ಮತ್ತು ೨೬) ಅಕ್ಷರಗಳಿವೆ. ಬರೆವಣಿಗೆಯ ಚಿಹ್ನೆ, ಅಂಕೆ, ಇತ್ಯಾದಿಗಳೆಲ್ಲ ಒಟ್ಟು ಸೇರಿದರೂ ೨೫೬ಕ್ಕಿಂತ ಕಡಿಮೆಯೇ. ಹಾಗಿದ್ದಲ್ಲಿ ೨೫೬ ಸಂಕೇತಗಳು ಸಾಕಲ್ಲವೇ? ಇಸ್ಕಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುವಾಗ ಇಂಗ್ಲೀಷ್ ಮತ್ತು ಒಂದು ಭಾರತೀಯ ಭಾಷೆಯನ್ನು ಬಳಸಬಹುದು. ಅಂದರೆ ಕನ್ನಡ, ಹಿಂದಿ, ತಮಿಳು, ತೆಲುಗು, ಹೀಗೆ ಹಲವು ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸುವುದು ಅಸಾಧ್ಯ. ಇಸ್ಕಿಯಲ್ಲಿ ಭಾರತದ ಎಲ್ಲ ಭಾಷೆಗಳಿಗೆ ಒಂದೇ ಸಂಕೇತ ನೀಡಲಾಗಿದೆ. ಅಂದರೆ ಕನ್ನಡದ "ಕ" ಮತ್ತು ಹಿಂದಿಯ "क" ಎರಡಕ್ಕೂ ಒಂದೇ ಸಂಕೇತ ಇದೆ. ಇದರಿಂದ ಕೆಲವೊಮ್ಮೆ ಲಾಭವೂ ಇದೆ. ಒಂದು ಟೆಲಿಫೋನ್ ಡೈರೆಕ್ಟರಿಯನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಿಸಬೇಕಾದರೆ, ಕನ್ನಡದಲ್ಲಿ ಬೆರಳಚ್ಚು ಮಾಡಿ, ಇಸ್ಕಿಯಲ್ಲಿ ಶೇಖರಿಸಿ, ಅದನ್ನು ಹಿಂದಿಯ ಫಾಂಟ್‌ನ ಸಂಕೇತಗಳಿಗೆ ಪರಿವರ್ತಿಸಿದರೆ ಸಾಕು. ಆದರೆ ಸಮಸ್ಯೆ ಇರುವುದು ಅಕಾರಾದಿ ವಿಂಗಡಣೆಯಲ್ಲಿ. ಕನ್ನಡ, ತೆಲುಗು, ಮರಾಠಿ, ಹಿಂದಿ, ಹೀಗೆ ಎಲ್ಲ ಭಾಷೆಗಳಿಗೂ ಒಂದೆ ಅಕಾರಾದಿ ವಿಂಗಡಣೆಯ ಸೂತ್ರ ಕಲ್ಪಿಸಲಾಗಿದೆ. ಕನ್ನಡ ಮತ್ತು ಹಿಂದಿಯ ಸೂತ್ರ ಒಂದೇ ಆಗಿರಬೇಕಾಗಿಲ್ಲ. ಉದಾಹರಣೆಗೆ ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆ -"ಯ, ರ ಲ, ಳ, ವ, ಶ, ಷ, ಸ, ಹ". ಕನ್ನಡದಲ್ಲಿ ಇದು "ಯ, ರ, ಲ, ವ, ಶ, ಷ, ಸ, ಹ, ಳ" ಆಗಬೇಕು. ಯುನಿಕೋಡ್ ಪ್ರಪಂಚದ ಮಟ್ಟಿಗೆ ಹೇಳುವುದಾದರೆ ಭಾರತೀಯ ಭಾಷೆಗಳ ಜೊತೆ, ಚೀನಾ, ಜಪಾನ್, ಅರೇಬಿ, ಯುರೋಪಿನ ಭಾಷೆಗಳು, ಹೀಗೆ ನೂರಾರು ಭಾಷೆಗಳಿಗೆ ಸ್ಥಾನ ಕಲ್ಪಿಸಿ ಕೊಡಬೇಕಾಗುತ್ತದೆ. ಇದಕ್ಕೆಲ್ಲ ಮದ್ದೆಂದರೆ ೮ ಬಿಟ್‌ಗಳ ಸಂಕೇತೀಕರಣದ ಬದಲಿಗೆ ೧೬ ಬಿಟ್‌ಗಳನ್ನು ಬಳಸುವುದು. ೧೬ ಬಿಟ್‌ಗಳನ್ನು ಬಳಸುವುದರಿಂದ ಸುಮಾರು ೬೫,೦೦೦ (೨೧೬ = ೬೫೫೩೬)ಮೂಲಾಕ್ಷರಗಳಿಗೆ ಜಾಗ ಮಾಡಿಕೊಟ್ಟಂತಾಗುತ್ತದೆ. ಇದು ಪ್ರಪಂಚದ ಬಹುತೇಕ ಭಾಷೆಗಳಿಗೆ ಸಾಕು. ಇದುವೇ ಯುನಿಕೋಡ್ (Unicode). ಯುನಿಕೋಡ್ ಎಂಬುದು uniform, universal, unique ಮತ್ತು code (ಸಂಕೇತ) ಎಂಬ ಪದಗಳನ್ನು ಸೂಚಿಸುತ್ತದೆ. ಪ್ರಪಂಚಕ್ಕೆಲ್ಲಾ ಒಂದೇ ಸಂಕೇತ ವಿಧಾನ ಇರತಕ್ಕದ್ದು. ಪ್ರಪಂಚದ ಪ್ರತಿ ಭಾಷೆಯ ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಪ್ರತ್ಯೇಕ ಸಂಕೇತ ಇರಬೇಕು. ಈ ಎಲ್ಲ ಬೇಕುಗಳಿಗೆ ಉತ್ತರವೇ ಯುನಿಕೋಡ್. ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಶ್ರೇಣಿ ಇದೆ. ಇದು ಭಾರತೀಯ ಭಾಷೆಗಳಿಗೂ ಅನ್ವಯಿಸುತ್ತದೆ. ಯುನಿಕೋಡ್ ವಿಧಾನದಲ್ಲಿ ಮಾಹಿತಿ ಸಂಗ್ರಹಣೆ ಮಾಡಿದರೆ ಒಂದೇ ಕಡತದಲ್ಲಿ ಪ್ರಪಂಚದ ಎಲ್ಲ ಭಾಷೆಗಳಲ್ಲಿ ಮಾಹಿತಿಯನ್ನು ಶೇಖರಣೆ ಮಾಡಲು ಸಾಧ್ಯ. ಗ್ರಂಥಾಲಯವೊಂದರಲ್ಲಿ ಭಾರತದ ಎಲ್ಲ ಭಾಷೆಯ ಪುಸ್ತಕಗಳಿದ್ದಲ್ಲಿ ಅವುಗಳ ವಿವರಗಳ ದತ್ತಸಂಚಯ (database) ತಯಾರಿಸಬೇಕಾದರೆ ಯುನಿಕೋಡ್ ವಿಧಾನದಿಂದ ಮಾತ್ರ ಸಾಧ್ಯ. ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ. ಅಂದರೆ ನುಡಿ, ಬರಹ, ಆಕೃತಿ, ಶ್ರೀಲಿಪಿ, ಸಿಡಾಕ್, ಇತ್ಯಾದಿ ತಂತ್ರಾಂಶಗಳಂತೆ ಅಕ್ಷರಶೈಲಿ (ಫಾಂಟ್)ಗಳ ಸಂಕೇತಗಳಲ್ಲಿ ಮಾಹಿತಿ ಸಂಗ್ರಹಣೆ ಅಲ್ಲ. ನಿಮ್ಮಲ್ಲಿ ಯುನಿಕೋಡ್ ಆಧಾರಿತ ಕನ್ನಡದ ಓಪನ್‌ಟೈಪ್ ಫಾಂಟ್ ಇರತಕ್ಕದ್ದು. ಯುನಿಕೋಡ್‌ನಲ್ಲಿ ತಯಾರಿಸಿದ ಕಡತವನ್ನು ಬೇರೊಬ್ಬರಿಗೆ ಕಳುಹಿಸುವಾಗ ಕಡತದ ಜೊತೆ ನಿಮ್ಮ ಅಕ್ಷರಶೈಲಿಯನ್ನೂ ಕಳುಹಿಸುವ ಅಗತ್ಯವಿಲ್ಲ. ನಿಮ್ಮಲ್ಲಿರುವ ಓಪನ್‌ಟೈಪ್ ಫಾಂಟ್ ಮತ್ತು ನಿಮ್ಮ ಸ್ನೇಹಿತರಲ್ಲಿರುವ ಓಪನ್‌ಟೈಪ್ ಫಾಂಟ್ ಬೇರೆ ಬೇರೆ ಇರಬಹುದು. ಮಾಹಿತಿಯನ್ನು ಅಕ್ಷರಶೈಲಿಯ ಸಂಕೇತಗಳ ಬದಲಿಗೆ ಮೂಲ ಮಾಹಿತಿಯಾಗಿಯೇ ಕಳುಹಿಸುವುದರಿಂದ ಮಾಹಿತಿ ಸಂವಹನೆಯಲ್ಲಿ ಯಾವ ತೊಡಕೂ ಇಲ್ಲ. ಯುನಿಕೋಡ್‌ನಲ್ಲಿ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಗಳಿರುವುದು ಮಾತ್ರವಲ್ಲ, ಪ್ರತಿ ಭಾಷೆಗೂ ತನ್ನದೇ ಆದ ಅಕಾರಾದಿ ವಿಂಗಡಣೆಯ ಸೂತ್ರವೂ ಯುನಿಕೋಡ್‌ನಲ್ಲಿದೆ. ಇಸ್ಕಿಯಲ್ಲಿರುವ ಅಕಾರಾದಿ ವಿಂಗಡಣೆಯ ಸಮಸ್ಯೆಗೆ ಯುನಿಕೋಡ್‌ನಲ್ಲಿ ಪರಿಹಾರಹವಿದೆ. ಯುನಿಕೋಡ್‌ನ ಹಳೆಯ ಆವೃತ್ತಿಯಲ್ಲಿ ಕನ್ನಡದ ಅಕಾರಾದಿ ವಿಂಗಡಣೆಗೆ ಇಸ್ಕಿಯಲ್ಲಿನ ಸೂತ್ರವನ್ನೇ ಬಳಸಲಾಗಿತ್ತು. ಆದರೆ ಯುನಿಕೋಡ್‌ನ ೪.೦ ಆವೃತ್ತಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಪ್ರಪಂಚದ ಖ್ಯಾತ ಗಣಕ ಕಂಪೆನಿಗಳು, ತಂತ್ರಾಂಶ ತಯಾರಕರು, ದೇಶಗಳು ಸೇರಿ ಆಗಿರುವ ಒಂದು ಸಂಸ್ಥೆ ಯುನಿಕೋಡ್ ಕನ್‌ಸೋರ್ಟಿಯಂ. ಭಾರತ ದೇಶವೂ ಇದರ ಸದಸ್ಯತ್ವ ಹೊಂದಿದೆ. ಯುನಿಕೋಡ್ ಒಂದು ಕಂಪೆನಿಯ ಸ್ವತ್ತಲ್ಲ. ಮೈಕ್ರೋಸಾಫ್ಟ್‌ನವರ ವಿಂಡೋಸ್ 7, 8, ‍XP ಮತ್ತು ಸರ್ವರ್ ೨೦೦೩ ಕಾರ್ಯಾಚರಣ ವ್ಯವಸ್ಥೆಗಳಲ್ಲಿ (operating system) ಕನ್ನಡದ ಯುನಿಕೋಡ್ ಸವಲತ್ತನ್ನು ನೀಡಲಾಗಿದೆ. ವಿಂಡೋಸ್ ಎಂಇ, ೯೮, ೯೫, ಇತ್ಯಾದಿಗಳಲ್ಲಿ ಯುನಿಕೋಡ್‌ನ ಸೌಲಭ್ಯ (ಸರಿಯಾಗಿ) ಇಲ್ಲವೆಂದೇ ಹೇಳಬಹುದು. ಕನ್ನಡ ಲಿನಕ್ಸ್‌ನಲ್ಲಿ ನೇರವಾಗಿ ಯುನಿಕೋಡ್‌ನ್ನೇ ಬಳಸಲಾಗಿದೆ. ಅಂದರೆ ವಿಂಡೋಸ್‌ನಲ್ಲಿ ಯುನಿಕೋಡ್ ವಿಧಾನದಲ್ಲಿ ಕಡತವೊಂದನ್ನು ತಯಾರಿಸಿದರೆ ಅದನ್ನು ಲಿನಕ್ಸ್‌ನಲ್ಲಿ ಯಾವ ತೊಂದರೆಯೂ ಇಲ್ಲದೆ ಓದಬಹುದು. ಯುನಿಕೋಡ್ ಸಹಯೋಗ ಸಮಿತಿ ಕ್ಯಾಲಿಫೊರ್ನಿಯ ಸ್ಥಿತ ಯುನಿಕೋಡ್ ಸಹಯೋಗ ಸಮಿತಿ (Unicode Consortium) ಮೊಟ್ಟಮೊದಲಾಗಿ ೧೯೯೧ರಲ್ಲಿ "ದ ಯುನಿಕೋಡ್ ಸ್ಟ್ಯಾಂಡರ್ಡ್" (ISBN ೦-೩೨೧-೧೮೫೭೮-೧) ಎಂಬ ಸ್ಟ್ಯಾಂಡರ್ಡ್ ಹೊರತಂದಿತು. ಈಗಲೂ ಕೂಡ ಆ ಮೂಲ ಕೆಲಸವನ್ನುಪಯೋಗಿಸಿಕೊಂಡು ಹಲವು ನಿರ್ದಿಷ್ಟಮಾನಗಳನ್ನು ಹೊರತರಲಾಗುತ್ತಿದೆ. 'ಇಂಟರ್ನ್ಯಾಷನಲ್ ಆರ್ಗನೈಝೇಶನ್ ಫಾರ್ ಸ್ಟ್ಯಾಂಡರ್ಡೈಝೇಶನ್' ಜೊತೆಜೊತೆಗೆ ವಿಕಸಿತಗೊಂಡ ಯುನಿಕೋಡ್, ತನ್ನ ಅಕ್ಷರಗಳ ಸಮೃದ್ಧ ಕಣಜವನ್ನು ISO/IEC ೧೦೬೪೬ ಜೊತೆ ಹಂಚಿಕೊಳ್ಳುತ್ತಿದೆ. ಯುನಿಕೋಡ್ ಹಾಗೂ ISO/IEC ೧೦೬೪೬ ಸಮನಾದ ಅಕ್ಷರ ಎನ್ಕೋಡಿಂಗ್ ಗಳಾಗಿದ್ದರೂ, ಯುನಿಕೋಡ್ ನಿರ್ದಿಷ್ಟಮಾನ ಇಂಪ್ಲಿಮೆಂಟರ್‍ಗಳು, ಬಿಟ್ ವೈಸ್ ಎನ್ಕೋಡಿಂಗ್, ಕೊಲ್ಲೇಶನ್, ರೆಂಡರಿಂಗ್ ಹಾಗೂ ಮತ್ತಷ್ಟು ಹಲವು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದೆ. ಅದಲ್ಲದೆ, ಇವೆರಡೂ ನಿರ್ದಿಷ್ಟಮಾನಗಳು ಕೆಲವು ಅಸಮಾನ ಶಬ್ದ ಪ್ರಯೋಗಗಳನ್ನು (Terminology) ಹೊಂದಿವೆ. ಮ್ಯಾಪಿಂಗ್ ಈ ವಿವರವನ್ನು ನೋಡಿ. (ಆಂಗ್ಲ ಭಾಷೆಯಲ್ಲಿದೆ) ಯುನಿಕೋಡ್ ಪೈಪ್ ಲೈನ್ ಹೊಸ ಅಕ್ಷರಗಳನ್ನು ಈಗಾಗಲೇ ಕೂಡಿಸಲ್ಪಟ್ಟ ಯುನಿಕೋಡ್ ನಿರ್ಧಿಷ್ಟಮಾನಕ್ಕೆ ಮತ್ತು ISO/IEC 10646ಗೆ ಸ್ವೀಕರಿಸಲು ಬಹಳ ದೂರದ ಹಾದಿ ತುಳಿಯಬೇಕಾಗಬಹುದು. ಆದ್ದರಿಂದ ಇದರ ಬಳಕೆದಾರರಿಗೆ ಹಾಗು ಪ್ರಬಂಧಕರಿಗೆ ಮುಂದೆ ಬರುವ ಸೇರ್ಪಡೆಗಳೆಡೆಗೆ ಗಮನವಿರಿಸುವುದಕ್ಕೆ ಸಹಾಯ ಮಾಡಲು ಯುನಿಕೋಡ್ ಪೈಪ್ ಲೈನ್ ಟೇಬಲ್ ಇದುವರೆಗೆ ಪ್ರಸ್ತಾಪಿಸಿದ ಕೋಡ್ ಪಾಯಿಂಟ್ಗಳನ್ನು ಹಾಗು ಹೊಸ ಅಕ್ಷರಗಳ ಈಗಿನ ಸ್ಥಿತಿಯನ್ನು ತಿಳಿಸುತ್ತದೆ. ಹೊಸ ಸ್ಕ್ರಿಪ್ಟ್ ಗಳು ಅಥವಾ ಅಕ್ಷರಗಳು ಯುನಿಕೋಡ್ ಪೈಪ್ಲೈನ್ ಸೇರುವ ಮುನ್ನ 'Characters and Scripts Under Investigation' ಅಥವಾ 'Proposed new scripts' ವರ್ಗಗಳ ಕೆಳಗೆ ನಾವು ಅವನ್ನು ಕಾಣಬಹುದು. ಪ್ರಸ್ತಾವನೆಗಳು ಮುಕ್ತವಾಗಿ ನಡೆಯುವುದಲ್ಲದೆ ಎಲ್ಲೆಡೆಯಿಂದಲೂ ಪ್ರತಿಕ್ರಿಯೆಗಳನ್ನು ಆಮಂತ್ರಿಸಲಾಗುತ್ತದೆ. 'ಎನ್ಕೋಡಿಂಗ್'ಗಳು ಯುನಿಕೋಡ್ ಮತ್ತು ವಿ-ಅಂಚೆ ಅಂತರ ಜಾಲದಲ್ಲಿ ಯುನಿಕೋಡ್ ಯುನಿಕೋಡ್ ಫಾಂಟ್ ಗಳು ವಿವಾದಗಳು ಸಂಬಂದಪಟ್ಟ ಸಂಪರ್ಕಗಳು The Unicode Consortium ಜಾಲತಾಣ ಯುನಿಕೋಡ್ ಎಂದರೇನು? ಕ್ರ. ಸಂ. 1 ರಿಂದ 65535 ರವರೆಗಿನ ಯುನಿಕೋಡ್ ಅಕ್ಷರ ವಿನ್ಯಾಸಗಳ ತ:ಖ್ತೆ ಕನ್ನಡ ಯುನಿಕೋಡ್ ಕೋಷ್ಟಕ ವರ್ಗ:ತಂತ್ರಜ್ಞಾನ ವರ್ಗ:ಗಣಕ ವಿಜ್ಞಾನ
ಯೂನಿಕೋಡ್
https://kn.wikipedia.org/wiki/ಯೂನಿಕೋಡ್
REDIRECT ಯುನಿಕೋಡ್
ಮೈಸೂರು
https://kn.wikipedia.org/wiki/ಮೈಸೂರು
thumb|ಕೆ.ಆರ್.ಎಸ್ ಅಣೆಕಟ್ಟು ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ. ಮೈಸೂರನ್ನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯುತ್ತಾರೆ. ಮೈಸೂರು ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದ ವಾರ್ಡನ್ ನಗರಗಳಲ್ಲಿ ಒಂದು. ಅದ್ಭುತವಾದ ಮೈ ನವಿರೇಳಿಸುವ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಹೆಸರಾದ ಮೈಸೂರು ನಗರದಲ್ಲಿ ಮೊದಲ ಪಿರಂಗಿ ಗುಂಡು ಹಾಗೂ ರಾಕೇಟ್ಗಳ ದಾಳಿ ನಡೆದದ್ದು. ಮೈಸೂರನ್ನು ಚಂದದ ನಗರಿ ಎಂದು ಕರೆಯಲಾಗುತ್ತದೆ. thumb|alt=A photo of a building in the Infosys campus at Mysore|Multiplex in the Infosys campus at Mysore ಮೈಸೂರಿನ ಅಧಿದೇವತೆ ಈಕೆಯು ಮೈಸೂರಿನ ಅಧಿದೇವತೆ, ಸಪ್ತಮಾತೃಕೆಯರಲ್ಲಿ ಏಳನೆಯವಳು. ಹಿಂದೂ ಧರ್ಮದಲ್ಲಿ, ಚಾಮುಂಡೇಶ್ವರಿ ಪ್ರಬಲವಾದ ದೇವತೆ. "ಚಾಮುಂಡಿ" ಎಂದೊಡನೆ ಈಕೆ ಶಿಷ್ಟ ಪುರಾಣದ ವಿಶಿಷ್ಟ ಶಕ್ತಿದೇವತೆ. ಆದಿಶಕ್ತಿಯಾಗಿ ಹುಟ್ಟಿ ದುಷ್ಟ ಶಿಕ್ಷಕಿ-ಶಿಷ್ಟರಕ್ಷಕಿಯಾಗಿ ಮಹಿಷೂರಿನ ಮಹಿಷನನ್ನು ಕೊಂದು, ಲೋಕ ಕಂಟಕರಾಗಿದ್ದ ಚಂಡ-ಮುಂಡರೆಂಬ ರಕ್ಕಸರನ್ನು ಸಂಹರಿಸಿ 'ಚಾಮುಂಡಿ'ಯಾಗಿದ್ದಾಳೆಂಬುದು ತಿಳಿಯುತ್ತದೆ. ಈಕೆ- ಷೋಡಶಿ, ಅಂಬೆ, ಈಶ್ವರಿ, ಚಂಡಿ, ಕಾಳಿ, ಭಗವತೀ, ಮಹೇಶ್ವರಿ, ಮಹಾದೇವಿ, ತ್ರಿಪುರ ಸುಂದರಿ, ದುರ್ಗೆ ಮುಂತಾದ ಹಲವು ಹೆಸರುಗಳಿಂದ ಕರೆಯಲ್ಪಡುತ್ತಾಳೆ. ಚಾಮುಂಡಿ ಮಹಿಷಮಂಡಲವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಮಹಾಬಲಗಿರಿಯ ಮೇಲೆ ನೆಲೆಗೊಂಡಿ ದ್ದಾಳೆ. ಚಾಮುಂಡಿ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು-೩೪೮೯ಅಡಿ ಎತ್ತರದಲ್ಲಿದೆ. ಮೈಸೂರಿನ ದೊಡ್ಡದೇವರಾಜ ಒಡೆಯರ್ ಅವರು ಬೆಟ್ಟವನ್ನೇರಲು ಬರುವ ಭಕ್ತಾದಿಗಳಿಗೆ ಅನುಕೂಲ ವಾಗಲೆಂದು ೧೧೦೧ ಮೆಟ್ಟಿಲುಗಳನ್ನು ಕಟ್ಟಿಸಿ, ೭೦೦ನೇ ಮೆಟ್ಟಿಲ ಬಳಿ ಬೃಹತ್ ನಂದಿ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಆಶ್ವಯುಜ ಶುಕ್ಲಪಕ್ಷದ ನವರಾತ್ರಿಯ ಸಮಯದಲ್ಲಿ ಭಾರತಾದಾದ್ಯಂತ ಚಾಮುಂಡಿ ಆರಾಧನೆ "ದುರ್ಗೆ"ಯ ಹೆಸರಿನಲ್ಲಿ ಬಹಳ ವೈಭವಯುತವಾಗಿ ನಡೆಯುತ್ತದೆ. ನವರಾತ್ರಿ ದಿನಗಳಲ್ಲಿ ಅಷ್ಟಲಕ್ಷ್ಮೀಯರ, ಅಷ್ಟದುರ್ಗೆಯರ ಆರಾಧನೆಯನ್ನು ಚಾಮುಂಡಿ ಬೆಟ್ಟದಲ್ಲಿರುವ ದೇಗುಲದಲ್ಲಿ ಮಾಡಲಾಗುತ್ತದೆ. ನವ ದಿನವು ದೇವಿಗೆ ವಿಶಿಷ್ಟವಾದ ಅಲಂಕಾರಗಳನ್ನು, ಉಡುಗೆ-ತೊಡುಗೆ, ಆಭರಣಗಳಿಂದ ಚಾಮುಂಡೇಶ್ವರಿಯನ್ನು ಸಿಂಗರಿಸಿ ಭಕ್ತವೃಂದಕ್ಕೆ ಸಂತಸವನ್ನು ನೀಡುತ್ತಾರೆ. ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯ ಭಾರತದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿರುವ ಒಂದು ಪಟ್ಟಣ ಮತ್ತು ಗ್ರಾಮ ಪಂಚಾಯತ್ ಆಗಿದೆ. ಇದು ಮೈಸೂರು ನಗರದಿಂದ 38 ಕಿಲೋಮೀಟರ್ (೨೪ ಮೈಲಿ) ದೂರದಲ್ಲಿದೆ ಮತ್ತು ಸೋಮನಾಥಪುರದಲ್ಲಿರುವ ಚೆನ್ನಕೇಶವ ದೇವಾಲಯಕ್ಕೆ ( ಕೇಶವ ಅಥವಾ ಕೇಶವ ದೇವಾಲಯ ಎಂದೂ ಕರೆಯುತ್ತಾರೆ) ಪ್ರಸಿದ್ಧವಾಗಿದೆ. ಮೈಸೂರು ನಗರದ ಇತಿಹಾಸ thumb|alt=A photo depicting the Mysore style of painting|Mysore painting depicting the goddess ಸರಸ್ವತಿ ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ ಒಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು "ಯದುರಾಯ". ಹಾಗಾಗಿ ವಂಶದ ಹೆಸರು 'ಯದುವಂಶ' ಎಂದಾಯಿತು. ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್‌ರ ಆಡಳಿತ ನಡೆಯಿತು. ಈ ಸಮಯದಲ್ಲಿ ಸಾಮ್ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣ ಮತ್ತು ಮೈಸೂರು ನಗರಗಳ ನಡುವೆ ಬದಲಾಗುತ್ತಿತ್ತು. ಮೈಸೂರು ಸಂಸ್ಥಾನ ಆಧುನಿಕ ಕರ್ನಾಟಕದ ದಕ್ಷಿಣ ಭಾಗದ ಬಹುಭಾಗವನ್ನು ಒಳಗೊಂಡಿತ್ತು. ೧೭೯೯ರಲ್ಲಿ ಟೀಪು ಸುಲ್ತಾನನ ಸೋಲಿನ ನಂತರ, ಬ್ರಿಟಿಷರು ಒಡೆಯರ್ ಮನೆತನವನ್ನು ಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ೧೮೮೧ರಲ್ಲಿ ಮೈಸೂರಿನಲ್ಲಿ ೧೪೪ ಸದಸ್ಯರೊಂದಿಗೆ, ಪ್ರಜಾ ಪ್ರತಿನಿಧಿ ಸಭೆ ಸ್ಥಾಪನೆಯಾಯಿತು. ೧೮೮೧ರಲ್ಲಿ ಮಹಾರಾಣಿ ಬಾಲಕಿಯರ ಪ್ರೌಢಶಾಲೆ ಮೈಸೂರಿನಲ್ಲಿ ಆರಂಭವಾಯಿತು. ೧೮೮೨ರಲ್ಲಿ ಬೆಂಗಳೂರು ಮೈಸೂರು ರೈಲ್ವೆ ಮಾರ್ಗ ಹಾಸಿದರು. ಕೋಲಾರದ ಚಿನ್ನದ ಗಣಿ ಆರಂಭವಾಯಿತು. ೧೯೦೫ರಲ್ಲಿ ಶಿವನ ಸಮುದ್ರ ಅಣೆಕಟ್ಟಿನಿಂದ ವಿದ್ಯುತ್ ಉತ್ಪಾದನೆ ಹಾಗು ಕೋಲಾರದ ಚಿನ್ನದ ಗಣಿ, ಮತ್ತು ಬೆಂಗಳೂರಿಗೆ ವಿದ್ಯುತ್ ಸರಬರಾಜು. ಪ್ರಥಮಬಾರಿಗೆ ಭಾರತದಲ್ಲಿ ವಿದ್ಯುತ್ ದೀಪ ಬೆಳಗಿತು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಗೊಂಡಿತು. ಮೈಸೂರು ಸಂಸ್ಥಾನದಲ್ಲಿ ಶಾಲೆಗಳ ಸಂಖ್ಯೆ ೪೫೬೮ ರಿಂದ ೧೧೨೯೪ ಕ್ಕೆ ಹೆಚ್ಚಿದವು. ಇದು ಕರ್ನಾಟಕದಲ್ಲಿ ಮೊದಲ ಕಲಿಕಾ ಕೇಂದ್ರವಾಯಿತು. ೧೯೧೧ರಲ್ಲಿ, ಸುಮಾರು ಆರು ಕೋಟಿ ರೂಪಾಯಿ ವೆಚ್ಚದಲ್ಲಿ, ಕಾವೇರಿ ನದಿಗೆ ಕನ್ನಂಬಾಡಿ [ಕೃಷ್ಣರಾಜ ಸಾಗರ] ಆಣೆಕಟ್ಟು ಕಟ್ಟಿದರು. ಹಾಗೂ ೧೯೧೬- ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆ ಕೈಗಾರಿಕೆ ನಿರ್ಮಾಣ,  ಎಚ್. ಎ. ಎಲ್. ಕಾರ್ಖಾನೆ, ಮೈಸೂರು ಲ್ಯಾಂಪ್ಸ್ ಕಾರ್ಖಾನೆ, ಮತ್ತು ಶಿವನ ಸಮುದ್ರದಲ್ಲಿ ೪೦೦೦ ಅಶ್ವಶಕ್ತಿಯ ವಿದ್ಯುತ್ ಉತ್ಪಾದನೆ ಆರಂಭಗೊಂಡವು. ದಿವಾನ್ ಸಾರ್ ಎಮ್. ವಿಶ್ವೇಶ್ವರಯ್ಯ ಇವರ ಕಾಲದಲ್ಲಿ ೩೭೨ ಮೈಲಿ ಉದ್ದದ ರೈಲ್ವೆ ಮಾರ್ಗವನ್ನು ಹಾಸಲಾಹಿತು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆಯಾಯಿತು. ಮೈಸೂರು ಬ್ರಿಟಿಷ್ ಸಾಮ್ರಾಜ್ಯದ ಕೆಳಗೆ ಉಳಿಯಿತು ಮತ್ತು ೧೮೩೪ ರಲ್ಲಿ ರಾಜಧಾನಿಯನ್ನು ಬೆಂಗಳೂರಿಗೆ ವರ್ಗಾಯಿಸಲಾಯಿತು. ಮೈಸೂರು ಸಂಸ್ಥಾನ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ ೧೯೫೦ ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ ೧೯೫೬ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ ೧೯೭೩ರಲ್ಲಿ "ಕರ್ನಾಟಕ ರಾಜ್ಯ " ಎಂಬ ಹೆಸರು ಸ್ಥಿರವಾಯಿತು. ಮೈಸೂರು ನಗರ ಸಮುದ್ರ ಮಟ್ಟದಿಂದ ೭೭೦ ಮೀ ಎತ್ತರದಲ್ಲಿದೆ, ಹಾಗೂ ಬೆಂಗಳೂರು ನಗರದಿಂದ ೧೪೦ ಕಿ.ಮೀ. ದೂರದಲ್ಲಿದೆ. ಮೈಸೂರಿನಲ್ಲಿ ಪ್ರತಿ ವರ್ಷ ಹತ್ತು ದಿನ-ಒಂಬತ್ತು ರಾತ್ರಿಗಳವರೆಗೆ ದಸರಾ ಅಥವಾ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವುದು. ಉಗಮ ಮೈಸೂರು ಎಂಬ ಹೆಸರು ಆಂಗ್ಲ ಭಾಷೆಯಿಂದ ರೂಪಾಂತರಗೊಂಡಿದೆ. ಇದರ ಮೂಲ ಹೆಸರು 'ಮಹಿಷಪುರಿ', 'ಮಹಿಷೂರು'. ಇದರ ಅರ್ಥ ಮಹಿಷನ ವಾಸಸ್ಥಾನ ಎಂದು ಕನ್ನಡದಲ್ಲಿ ಹೇಳಬಹುದು. 'ಮಹಿಷ' ಎಂದರೆ ಮಹಿಷಾಸುರ ಎಂಬ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ಈತ ಮಾನವ ಮತ್ತು ಕೋಣ ಎರಡೂ ರೂಪದಲ್ಲಿ ಇರುವ ವ್ಯಕ್ತಿ. ಹಿಂದೂ ಪುರಾಣದ ಪ್ರಕಾರ ಈ ಪ್ರದೇಶವನ್ನು ರಾಕ್ಷಸ ಮಹಿಷಾಸುರನು ಆಳುತ್ತಿದ್ದ, ಆ ರಾಕ್ಷಸ ತಾಯಿ ಚಾಮುಂಡೇಶ್ವರಿಯಿಂದ ಹತನಾಗುತ್ತಾನೆ. ಬಳಿಕ ಚಾಮುಂಡೇಶ್ವರಿಯು ಅದೇ ಬೆಟ್ಟದ ಮೇಲೆ ನೆಲೆಗೊಳ್ಳುತ್ತಾಳೆ. ನಂತರ ಮಹಿ‍‌ಷೂರು>ಮಹಿಸೂರು>ಮಸೂರು ಆಗಿ ತದನಂತರ ಕೊನೆಯದಾಗಿ ಮೈಸೂರು ಎಂದು ಬದಲಾವಣೆಯಾಗಿದೆ. ಡಿಸೆಂಬರ್ ೨೦೦೫ ರಲ್ಲಿ, ಕರ್ನಾಟಕ ಸರ್ಕಾರ ಮೈಸೂರು ನಗರದ ಆಂಗ್ಲ ಹೆಸರನ್ನು ಬದಲಾಯಿಸಲು ಇಚ್ಛೆಯನ್ನು ಪ್ರಕಟಿಸಿತು. ಭಾರತ ಸರ್ಕಾರವು ಇದನ್ನು ಅಂಗೀಕರಿಸಿದೆ. ಆದರೆ ಹೆಸರನ್ನು ಸೇರಿಸಲು ಅಗತ್ಯ ವಿಧಿವಿಧಾನಗಳನ್ನು ಇನ್ನೂ ಪೂರ್ಣಗೊಳಿಸಿಲ್ಲ. ಚಾಮುಂಡಿ ದೇವಾಲಯದ ಇತಿಹಾಸ thumb|೧೦೦px|ಚಾಮುಂಡಿ ಬೆಟ್ಟದ ದೇವಸ್ಥಾನಗಳಿಗೂ ಸಹ ಮೈಸೂರು ಪ್ರಸಿದ್ಧ ಮೈಸೂರು ಇತಿಹಾಸದಲ್ಲಿ ಗಂಗರ ಆಳ್ವಿಕೆಯನ್ನು ೯೫೦ರ ಹಿಂದಿನ ಶಾಸನದಲ್ಲಿ ಇದರ ಉಲ್ಲೇಖವಿದೆ. ಈಗಲೂ ಚಾಮುಂಡಿ ಬೆಟ್ಟದ ಮೇಲೆ ಇದನ್ನು ಕಾಣಬಹುದು. ನಗರದ ಚೋಳರು, ಚಾಲುಕ್ಯರು, ಹೊಯ್ಸಳರು , ವಿಜಯನಗರ ಸಾಮ್ರಾಜ್ಯ ಮತ್ತು ರಾಜವಂಶದ ನಂತರ ಗಂಗಾ ಸಾಮ್ರಾಜ್ಯವು ಮೊದಲು ಆಳ್ವಿಕೆ ನಡೆಸಿತು. ಹೊಯ್ಸಳರ ಕಟ್ಟಡ ಅಥವಾ ಚಾಮುಂಡಿ ಬೆಟ್ಟದ ಮೇಲೆ ಪ್ರಸಿದ್ಧ ಚಾಮುಂಡಿ ದೇವಸ್ಥಾನ ಸೇರಿದಂತೆ ನಗರದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳು ಅತ್ಯಂತ ವಿಸ್ತೃತವಾಗಿವೆ. ನಂತರ ಬೆಟ್ಟದ ಚಾಮರಾಜ ಒಡೆಯರ್ ಎಂದು ಕರೆಯಲ್ಪಡುವ ಪ್ರಸಿದ್ಧ ರಾಜ ತಮ್ಮ ಆಳ್ವಿಕೆಯಲ್ಲಿ ಕೋಟೆಯನ್ನು, ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ನಂತರ ಮಹಿಷೂರು, ಅಂತಿಮವಾಗಿ ಮೈಸೂರಾಗಿ ಬದಲಾಯಿತು. ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣವನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಹೀಗೆ ರಾಜ ಒಡೆಯರ್ ಆಳ್ವಿಕೆಯಲ್ಲಿ, ಮೈಸೂರು ತನ್ನ ವೈಭವವನ್ನು ಮರಳಿ ಪಡೆಯಿತು. ಶ್ರೀರಂಗಪಟ್ಟಣ ಕೋಟೆಯ ಪ್ರಾಂಗಣ ಕೃಷ್ಣರಾಜ ಒಡೆಯರ್ III ರ ಆಳ್ವಿಕೆಯಲ್ಲಿ ವಿಸ್ತರಿಸಿತು. ಇದು ನಗರದ ಅನೇಕ ಆಡಳಿತಗಾರರ ಕೊಡುಗೆಗಳನ್ನು ಹೊಂದಿದೆ. ಮೈಸೂರಿನ ಮಹಾನ್ ಎಂಜಿನಿಯರ್ ಗಳು ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ, ವಿಶಿಷ್ಟ ಆಳ್ವಿಕೆಗೆ ನೆರವಾಗಿದ್ದಾರೆ. ಅವರುಗಳಲ್ಲಿ ಪ್ರಮುಖರೆಂದರೆ- ಸರ್. ಎಂ. ವಿಶ್ವೇಶ್ವರಯ್ಯ, ಸರ್. ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯ ಇವರುಗಳು. ಇವರ ಕಾಲದಲ್ಲಿ ವಿಶಾಲ ರಸ್ತೆಗಳು, ಕಾಲುವೆಗಳು ಮತ್ತು ಅತ್ಯಂತ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಗಾರ್ಡನ್ ಸಿದ್ಧಗೊಂಡವು. ಅವರು ಪ್ರಗತಿಯ ಮುಂಚೂಣಿಗೆ ನಗರವನ್ನು ತರುವ ಸಲುವಾಗಿ ಉದ್ಯಮ, ಕಲೆ, ಕೃಷಿ ಮತ್ತು ಶಿಕ್ಷಣ ಬಡ್ತಿಯನ್ನು ನೀಡುತ್ತಿದ್ದರು. ಅವರ ಕಾಲವನ್ನು "ಮೈಸೂರಿನ ಸುವರ್ಣ ಯುಗ" ಎಂದು ಕರೆಯುತ್ತಾರೆ. ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಶಕ್ತಿ ಕೇಂದ್ರ ಎಂದು ಪ್ರಸಿದ್ಧವಾಗಿದ್ದು, ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ದೇವಾಲಯದ ಎರಡೂ ರಸ್ತೆ ೧೦೦೮ ಕ್ರಮಗಳನ್ನು ನಿಲುಕಿಸಿ ಕೊಳ್ಳಬಹುದು. ಬೆಟ್ಟದ ಮೇಲೆ ೭೦೦ ಹಂತಗಳನ್ನು ಏರಿಕೆಗೆ ಮತ್ತು ಮಹಿಷಾಸುರನ ಪ್ರತಿಮೆ ಹಾಗೂ ದೇವತೆ ಚಾಮುಂಡೇಶ್ವರಿಯ ಬಳಿ {BULL} ನಂದಿಯ ಒಂದು ಬೃಹತ್ ಪ್ರತಿಮೆ ಇದೆ. ಬೆಟ್ಟದ ಮೇಲಿಂದ ಇಡೀ ಮೈಸೂರು ನಗರದ ಪರಿದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಅರಕೇಶ್ವರ ಸ್ವಾಮಿ ದೇವಾಲಯ ಕೃಷ್ಣರಾಜ ನಗರವು ಮೈಸೂರು ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರವಾಗಿದ್ದು, ಕಾವೇರಿ ನದಿಯ ದಡದಲ್ಲಿದೆ ಈ ನಗರವು ಇಂದೆ ಎಡ ತೊರೆ ಎಂದು ಕರೆಯಲಾಗುತ್ತಿತು ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನ ಇದೆ. ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ ವಾಗಿದ್ದು. ಕಾವೇರಿ ನದಿಯ ದಡದಲ್ಲಿದೆ. ಈ ನಗರವು ಹಿಂದೆ ಯಡತೊರೆ ಎಂದು ಕರೆಯಲ್ಪಟ್ಟಿತು. ಈ ನಗರದ ಕಾವೇರಿ ದಂಡೆಯ ಮೇಲೆ ಅರಕೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ಜಗತ್ತಿನಲ್ಲೇ ಕಂಡು ಬರುವ ಎರಡನೇ ಸೂರ್ಯ ದೇವಾಲಯವಾಗಿದೆ. ಈ ದೇವಾಲಯದಲ್ಲಿರುವ ಲಿಂಗದ ಮೇಲೆ ಶಿವರಾತ್ರಿಯಾದ ಮರುದಿನ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತದೆ. ಚೆನ್ನಕೇಶವ ದೇವಾಲಯ ಚನ್ನ ಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ 38 ಕಿಲೋ ಮೀಟರ್ ದೂರದಲ್ಲಿದೆ.. ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ. ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ, ರೀಜನಲ್ ಮ್ಯೂಜಿಯಂ ಆಫ್ ನ್ಯಾಚುರಲ್ ಹಿಸ್ಟರಿ, ಜಗನ್ಮೊಹನ ಅರಮನೆ. ಮೈಸೂರಿಗೆ ಸಮೀಪದಲ್ಲಿರುವ ಆಕರ್ಷಣೆಗಳಲ್ಲಿ ಕೆಲವು ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ರಂಗನತಿಟ್ಟು, ಬಂಡೀಪುರ, ತಲಕಾಡು, ಮುಡುಕುತೊರೆ ಟಿ. ನರಸೀಪುರ ಇತ್ಯಾದಿ. ಭಾರತದ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾಲಯ ಇದೇ ನಗರದಲ್ಲಿದೆ. ಇತರ ಸಂಶೋಧನಾ ಸಂಸ್ಥೆಗಳೆಂದರೆ ಕೇಂದ್ರೀಯ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎಫ್‌ಆರ್‌ಎಲ್), ಭಾರತೀಯ ಭಾಷಾ ಸಂಸ್ಥಾನ http://www .ciil.org/. ಸ್ಥಳೀಯವಾಗಿ ಮೈಸೂರು ಎಂದು ಮೈಸೂರು , ಬೆಂಗಳೂರಿಗೆ ಮೊದಲು ಕರ್ನಾಟಕ ಪ್ರಮುಖ ನಗರವಾಗಿತ್ತು . ಈ ಅತೀಂದ್ರಿಯ ಮತ್ತು ಪೌರಾಣಿಕ ನಗರದ ದೇವತೆ ಚಾಮುಂಡೇಶ್ವರಿ, ಪಾರ್ವತಿಯ ಅವತಾರವೆಂದು ಮೂಲಕ ಚಾಮುಂಡಿ ಬೆಟ್ಟದ ಮೇಲೆ ಕೊಲ್ಲಲ್ಪ ಟ್ಟಿರಬಹುದು ಪರಿಚಿತರಾಗಿರುವ ಮಹಿಷಾಸುರ ರಾಕ್ಷಸ. ೧೦ ದಿನ ದಸರಾವನ್ನು ಉತ್ಸವ ದುಷ್ಟ ಒಳ್ಳೆಯ ಈ ವಿಜಯವನ್ನು ಆಚರಿಸಲು ಪ್ರತಿವರ್ಷ ಆಯೋಜಿಸಲಾಗುತ್ತದೆ. ಆಧುನಿಕತೆಯ ನಗರದ ಮೇಲೆ ತನ್ನ ಪ್ರಭಾವವನ್ನು ಹೊಂದಿದ್ದರೂ, ಮೈಸೂರು ನಗರದಲ್ಲಿ ಪ್ರವಾಸೋದ್ಯಮವನ್ನು ಮಾಡಿದ್ದಾರೆ. ಇದರ ಉದ್ದೇಶ ತನ್ನ ಹಳೆಯ ಶ್ರೀಮಂತ ಪರಂಪರೆ, ಅರಮನೆ ವೈಭವಗಳು, ಅದ್ಭುತ ತೋಟಗಳು/ಉದ್ಯಾನವನಗಳ ಸಂರಕ್ಷಣೆ, ಭವ್ಯವಾದ ದೇವಾಲಯಗಳ ರಕ್ಷಣೆ, ಸಂಪ್ರದಾಯ ಮತ್ತು ಮೋಡಿಗಳನ್ನು ಉಳಿಸಿಕೊಳ್ಳವುದಾಗಿದೆ. ಚೆನ್ನಕೇಶವ ದೇವಾಲಯ:ಚನ್ನಕೇಶವ ದೇವಸ್ಥಾನ,ಕೇಶವ ದೇವಸ್ಥಾನ ಎಂದು ಕೂಡ ಕರೆಯಲ್ಪಡುವ ಈ ದೇವಾಲಯವು ಕರ್ನಾಟಕದ ಸೋಮನಾಥಪುರದಲ್ಲಿ ಕಾವೇರಿ ನದಿಯ ತೀರದಲ್ಲಿ ವೈಷ್ಣವ ಹಿಂದೂ ದೇವಾಲಯ ವಾಗಿದೆ.ಈ ದೇವಾಲಯವು. ೧೨೫೮ CE ಯಲ್ಲಿ ಹೊಯ್ಸಳ ರಾಜ ನರಸಿಂಹ೧೧೧ ನ ಜನರಲ್ ಸೋಮನಾಥ ದಂಡನಾಯಕ ನಿಂದ ನಿರ್ಮಿಸಲ್ಪಟ್ಟಿತ್ತು. ಇದು ಮೈಸೂರು ನಗರದ ಪೂರ್ವಾಕ್ಕೆ ೩೮ ಕಿಲೋ ಮೀಟರ್ ದೂರದಲ್ಲಿದೆ.. ಅಲಂಕೃತ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪದ ಒಂದು ಮಾದರಿ ಉದಾಹರಣೆಗೆ ಯಾಗಿದೆ. ದೇವಸ್ಥಾನ ವನ್ನು ಒಂದು ಸಣ್ಣ ಕಂಬಗಳ ಒಂದು ಕಂಬದ ಕಾರಿಡಾರ್ ನೊಂದಿಗೆ ಅಂಗಳದಲ್ಲಿ ಕಟ್ಟಲಾಗಿದೆ. ಇದು ಉದ್ದಕ್ಕೂ ಚೌಕಾಕಾರದ ಮಾತೃಕೆಯಲ್ಲಿ ಹೊಂದಿದ ಮೂರು ಸಂಮಿತಿಯ ಧಾರ್ಮಿಕ ಕೇಂದ್ರಗಳು ಮಧ್ಯದಲ್ಲಿ ಮುಖ್ಯ ದೇವಸ್ಥಾನವು ಉನ್ನತ ನಕ್ಷತ್ರದ ಆಕಾರದ ವೇದಿಕೆಯಾಗಿದೆ. <gallery> images.jpg| <gallery> ಅರಮನೆಗಳು ಮೈಸೂರು ನಗರವನ್ನು "ಅರಮನೆಗಳ ನಗರ " ಎಂದು ಕರೆಯಲಾಗುತ್ತದೆ. ಆದ್ದರಿಂದ ಅರಮನೆಗಳು ಪ್ರವಾಸಿ ಆಕರ್ಷಣೆಯಾಗಿದೆ. ಇದಲ್ಲದೆ ಸಹ ಅಂಬಾವಿಲಾಸ ಅರಮನೆ ಎಂಬ ಪ್ರಸಿದ್ಧ ಮೈಸೂರು ಅರಮನೆ. ಇದಲ್ಲದೆ ಜಗನ್ ಮೋಹನ ಅರಮನೆ, ಜಯಲಕ್ಮೀ ವಿಲಾಸ ಮತ್ತು ಲಲಿತಮಹಲ್ ಗಳನ್ನು ಹೊಂದಿದೆ. ಜೊತೆಗೆ ಇಂದು ವಿವಿಧ ಉದ್ದೇಶಗಳನ್ನು ಮೂರು ಪ್ರಸಿದ್ಧ ಮಹಲುಗಳನ್ನು ಕಾರಂಜಿ ಮ್ಯಾನ್ಷನ್ ,ಜಯಲಕ್ಷ್ಮೀ ಮ್ಯಾನ್ಷನ್ ಮತ್ತು ಚೆಲುವಾಂಬ ಮ್ಯಾನ್ಷನ್ ಇವೆ. ಎಲ್ಲಾ ಮಹಲುಗಳು, ಮೈಸೂರು ಅರಮನೆ ಕಾರಂಜಿಗಳನ್ನು ಸುಂದರ ವಿಸ್ತಾರವಾದ ತೋಟಗಳು ಸುತ್ತುವರಿದಿದೆ. ಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು: ಮುಖ್ಯ ಮೈಸೂರು ಅರಮನೆ: ಮುಖ್ಯ ಮೈಸೂರು ಅರಮನೆ ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ ೩೬೦° ನೋಟ ನೀಡುವ ಅರಮನೆ. ರಾಜೇಂದ್ರ ವಿಲಾಸ ಅರಮನೆ ಇದಕ್ಕೆ ಬೇಸಿಗೆ ಅರಮನೆ ಎಂದೂ ಹೆಸರು. ಇದು ಚಾಮುಂಡಿ ಬೆಟ್ಟದ ಮೇಲೆ ಇದೆ. ಜಗನ್ಮೋಹನ ಅರಮನೆ ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿ ವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಚಿತ್ರಕೃತಿಗಳನ್ನು ಇಲ್ಲಿ ಕಾಣಬಹುದು. ಜಯಲಕ್ಷ್ಮಿ ವಿಲಾಸ ಅರಮನೆ ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿ ಜಾನಪದ ವಸ್ತುಸಂಗ್ರಹಾಲಯವಾಗಿ ಪರಿವರ್ತಿತವಾಗಿದೆ. ಲಲಿತ ಮಹಲ್ ಅರಮನೆ ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ. ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ, ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.http://www.mysorepalace.in/act.doc ಮೈಸೂರು ಅರಮನೆ ಕಾಯ್ದೆ ಚಾಮುಂಡಿ ಬೆಟ್ಟ : ಬೆಟ್ಟದ ಮೇಲೆ ಚಾಮುಂಡಿ ದೇವಾಲಯ ಒಂದು ಧಾರ್ಮಿಕ ಕೇಂದ್ರ ಎಂದು ಆದರೆ ಪ್ರವಾಸಿ ಆಕರ್ಷಣೆಯ ಪ್ರಸಿದ್ಧವಾಗಿದೆ. ಚಾಮುಂಡಿ ಬೆಟ್ಟದ ನಂದಿ, ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು ಚಾಮುಂಡಿ ಬೆಟ್ಟ. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ. ಮೂಲ: ವಿಕಿಮೀಡಿಯ ಕಣಜದಲ್ಲಿ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ : ಮೈಸೂರು ಮೃಗಾಲಯ ಪ್ರಾಣಿ ಅದರ ವಿವಿಧ ಭೇಟಿ ಸೆಳೆಯುತ್ತದೆ. ಇದು ಭಾರತದಲ್ಲಿರುವ ಪ್ರಾಚೀನ ಪ್ರಾಣಿ ಸಂಗ್ರಹಾಲಯಗಳಲ್ಲಿ ಒಂದಾಗಿದೆ. ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಮತ್ತು ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ. ಮೈಸೂರಿನ ಚಾಮರಾಜೇಂದ್ರ ವನ್ಯ ಮೃಗಾಲಯ ಅಥವಾ "ಮೈಸೂರು ಝೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು. ಝಿಯಾನ್ ಗಾರ್ಡನ್ಸ್ : ಝಿಯಾನ್ ಗಾರ್ಡನ್ಸ್ ವಿಶ್ವದ ತಾರಸಿ ಗಾರ್ಡನ್ಸ್ ಅತ್ಯುತ್ತಮ ಪರಿಗಣಿಸಲಾಗುತ್ತದೆ . ಕೆಆರ್ಎಸ್ ಅಣೆಕಟ್ಟಿನ ಸೈಟ್ ಇಟ್ಟ , ಗಾರ್ಡನ್ ಕೆಲವೇ ಹೆಸರಿಸಲು , ನೀರಿನ ವಾಹಕಗಳು ಕ್ಯಾಸ್ಕೇಡಿಂಗ್ ಅದರ ಸಮ್ಮಿತೀಯ ಯೋಜನೆ , ಸಂಗೀತ ಕಾರಂಜಿಗಳು ಹೆಸರುವಾಸಿಯಾಗಿವೆ. ಸೂರ್ಯನ ಕೆಳಗೆ ಹೋಗುತ್ತದೆ ಎಂದು , ಕಾರಂಜಿಗಳು ಪ್ರಕಾಶಿಸುವಂತೆ ಮತ್ತು ಅವರು ಅದ್ಭುತ ದೃಷ್ಟಿ ಇದು ರಾಗ ನೃತ್ಯ ಮಾಡಲಾಗುತ್ತದೆ . ಒಂದು ಪ್ರವಾಸಿ ತೋಟದಲ್ಲಿ ಉತ್ತಮ ದೋಣಿ ಸವಾರಿ ಆನಂದಿಸಬಹುದು . ಕೃಷ್ಣ ರಾಜ ಸಾಗರ ಅಣೆಕಟ್ಟು : ಮೂರು ನದಿಗಳು ಕಾವೇರಿ , ಹೇಮಾವತಿ ಮತ್ತು ಲಕ್ಷ್ಮಣ ತೀರ್ಥ ಒಂದೆಡೆ ಹತ್ತಿರ ನಿರ್ಮಿಸಲಾಗಿದೆ ಎಸ್ ಅಣೆಕಟ್ಟೆಯಿಂದ , ಭಾರತದ ದಕ್ಷಿಣ ಭಾಗದಲ್ಲಿ ಪ್ರಮುಖ ಜಲಾಶಯ. ಇದು ಮಹಾನ್ ಇಂಜಿನಿಯರ್ ಸರ್ ಎಂ ವಿಶ್ವೆಸ್ವರಯ್ಯ ಮತ್ತು ಅದರ ಅದ್ಭುತ ಕಾಲುವೆಗಳ ಮೂಲಕ ೧೯೩೨ರಲ್ಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅತ್ಯಂತ ನೀರು ಒದಗಿಸುವ ಅಣೆಕಟ್ಟು ನಿರ್ಮಿಸಲಾಗಿತ್ತು ನೀರಿನ ಹೊರಬಂದರು ಮಾಡಿದಾಗ ನೋಡು ಒಂದು ಸುಂದರ ದೃಶ್ಯ. ಸೇಂಟ್ ಫಿಲೋಮಿನಾ ಚರ್ಚ್ : ನವ್ಯ-ಗೋಥಿಕ್ ಶೈಲಿಯಲ್ಲಿ ಬೃಹತ್ ಚರ್ಚ್ ಭಾರತದ ಅತಿ ಭವ್ಯ ಚರ್ಚುಗಳು ಒಂದಾಗಿದೆ . ಚರ್ಚ್ ಅದ್ಭುತ ನೆಲಮಹಡಿಯು ಕ್ರಾಸ್ ಹೋಲುತ್ತದೆ . ಚರ್ಚ್ ೧೭೫ ಅಡಿ ಎತ್ತರದ ಅವಳಿ ಗೋಪುರಗಳು ಹಲವಾರು ಮೈಲಿಗಳ ದೂರದಿಂದ ಗೋಚರಿಸುತ್ತವೆ . ಈ ಚರ್ಚ್ ಗಾಜಿನ ಚಿತ್ರಿಸಿದ ಕಿಟಕಿಗಳಿವೆ ಅವರ ಹುಟ್ಟು, ಲಾಸ್ಟ್ ಸಪ್ಪರ್ , ಶಿಲುಬೆಗೇರಿಸಿದ ಮತ್ತು ಪುನರುತ್ಥಾನದ ರೀತಿಯ ಯೇಸುಕ್ರಿಸ್ತನ ಜೀವನದಲ್ಲಿ ಘಟನೆಗಳ ದೃಶ್ಯಗಳನ್ನು ಚಿತ್ರಿಸಲು . ರೈಲು ಮ್ಯೂಸಿಯಂ : ಈ ಇತರ ದೆಹಲಿಯಲ್ಲಿ ಜೊತೆಗೆ ಭಾರತದಲ್ಲಿ ಸ್ಥಾಪನೆ ಎರಡು ರೈಲು ವಸ್ತು ಒಂದಾಗಿದೆ . ಇದು ಛಾಯಾಚಿತ್ರಗಳು , ಪುಸ್ತಕ ಮತ್ತು ಇಂಜಿನ್ ಎಂಜಿನ್ ಮತ್ತು ರೈಲು ಗಾಡಿಗಳು ಪ್ರದರ್ಶನ ಮೂಲಕ ಭಾರತೀಯ ರೈಲ್ವೆ ಹಿಂದೆ ಮೂಲಕ ಹೊಂದಿದೆ ಪ್ರಗತಿಯ ಪ್ರಯಾಣ ದಾಖಲಿಸಿದೆ. ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ (ಮೈಸೂರು ವಿಶ್ವವಿದ್ಯಾಲಯದ ಆವರಣ). ಇನ್ನು ಕೆಲವು ಸ್ಥಳಗಳೆಂದರೆ ನೈಸರ್ಗಿಕ ಚರಿತ್ರೆ ವಸ್ತುಸಂಗ್ರಹಾಲಯ, ರೈಲ್ವೇ ವಸ್ತುಸಂಗ್ರಹಾಲಯ, ಕಲಾ ಮಂದಿರ, ಕುಕ್ಕರಹಳ್ಳಿ ಕೆರೆ, ಪುಷ್ಪಕಾಶಿ (ಪುಷ್ಪೋದ್ಯಾನ), ಕಾರಂಜಿ ಕೆರೆ, ಮೈಸೂರು ರೇಷ್ಮೆ ಕಾರ್ಖಾನೆ ಮುಂತಾದವು. ಆಕರ್ಷಣೆಗಳು ತಿಂಡಿ ತಿನಿಸುಗಳ ವಿಷಯದಲ್ಲಿ ಮೈಸೂರಿನ - ಮೈಲಾರಿ ದೋಸೆ, ಮೈಸೂರು ಪಾಕ್, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದ ಎಲೆ, ಮೈಸೂರು ರೇಷ್ಮೆ ಮತ್ತು ಗಂಧದ ಎಣ್ಣೆ, ಸೋಪು ಪ್ರಸಿದ್ಧಿ. ಮೈಸೂರು ನಗರ ಪ್ರದೇಶಗಳು ಮೈಸೂರು ನಗರದ ಕೆಲವು ಪ್ರಮುಖ ಪ್ರದೇಶಗಳು- ಸಂತೇಪೇಟೆ, ಕೃಷ್ಣರಾಜ ಮೋಹಲ್ಲ, ನಜರ್ ಬಾದ್, ಕ್ಯಾತಮಾರನಹಳ್ಳಿ (ಕಂಠೀರವ ನರಸಿಂಹರಾಜಪುರ), ಕನ್ನೇಗೌಡನ ಕೊಪ್ಪಲು, ಇಟ್ಟಿಗೆಗೂಡು, ಚಾಮರಾಜ ಪುರಂ,ಕೃಷ್ಣಮೂರ್ತಿ ಪುರಂ, ಅಶೋಕಪುರಂ, ಶ್ರೀರಾಮಪುರ, ಜಯನಗರ, ಕುವೆಂಪುನಗರ, ಸರಸ್ವತಿ ಪುರಂ, ವಿದ್ಯಾರಣ್ಯಪುರಂ, ಸಿದ್ದಾರ್ಥನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಶಾರದದೇವಿನಗರ, ತೊಣಚಿಕೊಪ್ಪಲು, ಮಾನಸಗಂಗೋತ್ರಿ, ಜಯಲಕ್ಷ್ಮಿಪುರಂ, ಒಂಟಿಕೊಪ್ಪಲು (ವಾಣಿ ವಿಲಾಸ ಮೊಹಲ್ಲ), ಗೋಕುಲಂ, ಯಾದವಗಿರಿ, ಬೃಂದಾವನ ಬಡಾವಣೆ,ಕುಂಬಾರ ಕೊಪ್ಪಲು, ಮೇಟಗಳ್ಳಿ, ಬಿ ಎಂ ಶ್ರೀ ನಗರ, ಮಂಚೇಗೌಡನಕೊಪ್ಪಲು, ಲಕ್ಷ್ಮಿಕಾಂತಾನಗರ,ಹೆಬ್ಬಾಳು ಬಡಾವಣೆ, ವಿಜಯನಗರ, ಜೆ.ಪಿ.ನಗರ, ಶಿವರಾಮಪೇಟೆ, ವೀರನಗೆರೆ (ಗಾಂಧಿನಗರ), ಕನಕದಾಸನಗರ, ರೂಪನಗರ, ದೀಪನಗರ, ದಟ್ಟಗಳ್ಳಿ ಮುಂತಾದವುಗಳು. ಸಮೀಪದ ಪ್ರವಾಸಿ ಸ್ಥಳಗಳು ಶ್ರೀರಂಗಪಟ್ಟಣ ಕೃಷ್ಣರಾಜಸಾಗರ ಕಬಿನಿ ಸೋಮನಾಥಪುರ ಗೋಸಾಯಿ ಘಾಟ್, ಸಂಗಮ ನೀಲಗಿರಿ ಬೆಟ್ಟಗಳು ತಲಕಾಡು ಬಂಡಿಪುರ ಅಭಯಾರಣ್ಯ ಮದುಮಲೈ ಕಾಡುಗಳು ನಾಗರಹೊಳೆ ಅಭಯಾರಣ್ಯ ರಂಗನತಿಟ್ಟು ಪಕ್ಷಿಧಾಮ ಬಲಮುರಿ ಮತ್ತು ಎಡಮುರಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಿಳಿಗಿರಿರಂಗನ ಬೆಟ್ಟ ಕುಂತಿ ಬೆಟ್ಟ ಮೇಲುಕೋಟೆ ಚಾಮುಂಡಿ ಬೆಟ್ಟ ಲಲಿತ್ ಮಹಲ್ thumb|ಚಾಮುಂಡಿ ಬೆಟ್ಟದ ಮಹಿಷಾಸುರ thumb|alt=A photo of Crawford Hall, the headquarters of the University of Mysore|Crawford Hall, the administrative headquarters of the University of Mysore ತಿ.ನರಸೀಪುರವುಕಾವೇರಿ-ಕಪಿಲಾ-ಸ್ಫಟಿಕ ಸರೋವರಗಳು ತ್ರಿವೇಣಿ ಸಂಗಮದ ತನ್ನೊಡಲಲ್ಲಿ ಹಲವು ದೇಗುಲಗಳನ್ನು ಒಳಗೊಂಡಿದ್ದು ಅಗಸ್ತ್ಯೇಶ್ವರ,ಹನುಮಂತೇಶ್ವರ,ಕಾಮಾಕ್ಷಿ,ಪುರಾಣ ಪ್ರಸಿದ್ಧ ಅಶ್ವತ್ಥ ವೃಕ್ಷ, ಶಂಕರಾಚಾರ್ಯ ಪೀಠ,ಗ್ರಾಮದೇವತೆ ನಡುಹೊಳೆ ಚೌಡೇಶ್ವರಿ,ಇವು ತಿರುಮಕೂಡಲಿನಲ್ಲಿದ್ದು ಭಿಕ್ಷೇಶ್ವರ -ಆನಂದೇಶ್ವರ ನದಿಯ ಮತ್ತೊಂದು ತೀರದಲ್ಲಿ ಹಾಗೂ ಇವುಗಳ ಎದುರಿಗೆ ಶ್ರೀ ಗುಂಜಾನರಸಿಂಹ, ಬಳ್ಳೇಶ್ವರ,ಮೂಲಸ್ಥಾನೇಶ್ವರ, ತೋಟಗೇರಿ ಮಾರಮ್ಮ, ಚಿಕ್ಕಮ್ಮ-ದೊಡ್ಡಮ್ಮ ದೇಗುಲ,ಛಾಯಾದೇವಿ ಗುಡಿ,ಬಣ್ಣಾರಿಯಮ್ಮ ದೇವಾಲಯಗಳು ನೆಲೆ ನಿಂತಿವೆ. ಇಲ್ಲಿನ ಇತಿಹಾಸವು ಚಾಲುಕ್ಯ,ಚೋಳ,ಪಲ್ಲವ,ವಿಜಯನಗರ,ಗಂಗ,ಪುನ್ನಾಟ, ಮೂಗೂರು ಪಾಳೇಗಾರರು ಆಳಿದ್ದು ಐತಿಹಾಸಿಕವಾಗಿ ಶಿಲಾಯುಗದ ಸಂಸ್ಕೃತಿ ಹಲವೆಡೆ ಕಂಡು ಬಂದಿದೆ. ಮೈಸೂರು ಜಿಲ್ಲೆ ಮೈಸೂರು ಜಿಲ್ಲೆಯ ಉತ್ತರ ಪೂರ್ವಕ್ಕೆ ಜಿಲ್ಲೆ, ದಕ್ಷಿಣ ಪೂರ್ವಕ್ಕೆ ಚಾಮರಾಜನಗರ ಜಿಲ್ಲೆ, ದಕ್ಷಿಣಕ್ಕೆ ತಮಿಳುನಾಡು ರಾಜ್ಯ, ದಕ್ಷಿಣ ಪಶ್ಚಿಮಕ್ಕೆ ಕೇರಳ ರಾಜ್ಯ, ಪಶ್ಚಿಮಕ್ಕೆ ಕೊಡಗು ಜಿಲ್ಲೆ ಮತ್ತು ಉತ್ತರಕ್ಕೆ ಹಾಸನ ಜಿಲ್ಲೆಗಳಿವೆ. ಮೈಸೂರು ಜಿಲ್ಲೆಯ ವಿಸ್ತೀರ್ಣ ೬,೨೬೮ ಚದರ ಕಿಮೀ, ಮತ್ತು ೨೦೦೧ ರ ಜನಗಣತಿಯ ಪ್ರಕಾರ ಜನಸಂಖ್ಯೆ ೨೬,೨೪,೯೧೧ - ೧೯೯೧ ರಿಂದ ಶೇಕಡ ೧೫.೦೪ ರ ಹೆಚ್ಚಳ. ಮೈಸೂರು ಜಿಲ್ಲೆ ದಖ್ಖನ ಪ್ರಸ್ತಭೂಮಿಯ ಮೇಲಿದೆ. ಅದರ ಉತ್ತರಪಶ್ಚಿಮ ಮತ್ತು ಪೂರ್ವ ಭಾಗಗಳ ಮೂಲಕ ಹರಿಯುವ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಇದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೃಷ್ಣರಾಜಸಾಗರ ಅಣೆಕಟ್ಟು ಜಿಲ್ಲೆಯ ಉತ್ತರದಲ್ಲಿ ಇದೆ. ಬಂಡೀಪುರ ಅಭಯಾರಣ್ಯ ಮೈಸೂರು ಜಿಲ್ಲೆಯಲ್ಲಿ ಇದ್ದರೆ ನಾಗರಹೊಳೆ ಅಭಯಾರಣ್ಯ ಭಾಗಶಃ ಮೈಸೂರು ಜಿಲ್ಲೆಯಲ್ಲಿ ಮತ್ತು ಭಾಗಶಃ ಪಕ್ಕದ ಕೊಡಗು ಜಿಲ್ಲೆಯಲ್ಲಿ ಇದೆ. ಜಿಲ್ಲೆಯ ಪ್ರಮುಖರಲ್ಲಿ ಜನಪ್ರಿಯರಾಗಿರುವ ಈರ್ವರು ಕನ್ನಡ ಕಾದಂಬರಿಕಾರ್ತಿಯರ ಹೆಸರುಗಳನ್ನು ಇಲ್ಲಿ ನಾವು ಉಲ್ಲೇಖಿಸಬಹುದಾಗಿದೆ. *ಓರ್ವರು, ಕಾದಂಬರಿಕಾರ್ತಿಯಷ್ಟೇ ಅಲ್ಲದೆ ರಾಜ್ಯಮಟ್ಟದ ನೋಂದಾಯಿಸಲ್ಪಟ್ಟ ಮಹಿಳಾ ಸಂಘಟನೆಯಾದ ಸ್ತ್ರೀಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ತ್ ನ ಸ್ಥಾಪಕರೂ ಹಾಗೂ ಪ್ರಧಾನ ಅಧ್ಯಕ್ಷರೂ ಆದ ಶ್ರೀಮತಿ ಎಸ್. ಮಂಗಳಾ ಸತ್ಯನ್. ಇವರು ಈವರೆಗೆ ನಲವತ್ತಕ್ಕೂ ಹೆಚ್ಚು ಕಾದಂಬರಿ ಗಳನ್ನು, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳು, ನೂರಾರು ಲೇಖನಗಳು, ನಾಟಕಗಳನ್ನೂ ರಚಿಸಿರುವುದಲ್ಲದೆ, ನಾಲ್ಕು ಸ್ಮರಣ ಸಂಚಿಕೆಗಳನ್ನೂ ಸಂಪಾದಿಸಿದ್ದಾರೆ. ಅಲ್ಲದೆ, ಶ್ರೀಮತಿ ಮಂಗಳಾ ಸತ್ಯನ್ ೨೦೦೨ ರ ಮೇ ೨೫ ಮತ್ತು ೨೬ ರಂದು ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ನಡೆದ ೬ ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಮತಿ ಮಂಗಳಾ ಸತ್ಯನ್ ರವರ "ಭಾಗ್ಯ ಜ್ಯೋತಿ", "ಮುಗ್ಧ ಮಾನವ", "ಬಿಸಿಲು ಬೆಳದಿಂಗಳು" (ಕಾದಂಬರಿಯ ಹೆಸರು "ಆ ಮುಖ"), ಮತ್ತು "ಮುರಳಿ ಗಾನ ಅಮ್ರತಪಾನ" ಕಾದಂಬರಿಗಳು ಚಲನಚಿತ್ರಗಳಾಗಿವೆ. ಅಲ್ಲದೆ, ಇವರು "ಹೂವೊಂದು ಬೇಕು ಬಳ್ಳಿಗೆ" ಮತ್ತು "ಸ್ವಾತಿ" ಚಲನಚಿತ್ರಗಳಿಗೆ ಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಅಷ್ಟೇ ಜನಪ್ರಿಯರಾಗಿರುವ ಮತ್ತೋರ್ವ ಕಾದಂಬರಿಕಾರ್ತಿ ಶ್ರೀಮತಿ ಆರ್ಯಾಂಬ ಪಟ್ಟಾಭಿ ಅವರು. ಆರ್ಯಾಂಬ ಅವರ ಕೆಲವು ಕಾದಂಬರಿಗಳೂ ಕನ್ನಡ ಚಲನಚಿತ್ರಗಳಾಗಿ ರೂಪುಗೊಂಡಿವೆ. ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಮೈಸೂರಿನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಪಟ್ಟಿವಿಶ್ವವಿದ್ಯಾಲಯಗಳು<small>ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಡಾ. ಗಂಗೂಭಾಯಿ ಹಾನಗಲ್ ಕರ್ನಾಟಕ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿಶ್ವವಿದ್ಯಾಲಯಸಂಶೋಧನಾ ಸಂಸ್ಥೆಗಳುಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಶನಾ ಸಂಸ್ಥೆ (ಸಿ ಎಫ್ ಟಿ ಆರ್ ಐ), ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿ ಐ ಐ ಎಲ್), ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿ ಎಫ ಆರ್ ಎಲ್) ಇಂಜಿನಿಯರಿಂಗ್ ಕಾಲೇಜುಗಳುನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್ (NIE), ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಅಫ್ ಇಂಜಿನಿಯರಿಂಗ್ (SJCE), ವಿದ್ಯಾವರ್ಧಕ ಕಾಲೇಜ್ ಆಫ್ ಇ೦ಜಿನಿಯರಿ೦ಗ್ (VVCE), ವಿದ್ಯಾವಿಕಾಸ ಇನ್ಸ್ಟಿಟ್ಯೂಟ್ ಅ೦ಡ್ ಎಜ್ಯುಕೇಶನಲ್ ಟೆಕ್ನೊಲಜಿ (VVIET), ಗೀತ ಶಿಶು ಶಿಕ್ಷಣ ಸಂಘ ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (ಹುಡುಗಿಯರು ಮಾತ್ರ)(GSSIET),ಮಹಾರಾಜ ಇನ್ಸ್ಟಿಟ್ಯೂಟ್ ಅಫ್ ಟೆಕ್ನೊಲಜಿ(MIT), ಎನ್.ಐ.ಇ. ಇನ್ಸಿಟ್ಯೂಟ್ ಆಫ಼್ ಟೆಕ್ನಾಲಜಿ (NIEIT), ಅಕಡೆಮಿ ಫ಼ಾರ್ ಟೆಕ್ನಿಕಲ್ ಅಂಡ್ ಮ್ಯಾನೇಜ್ಮೆಂಟ್ ಎ‍ಕ್ಸೆಲ್ಲೆನ್ಸ್ (ATME)ವೈದ್ಯಕೀಯ ಕಾಲೇಜುಗಳುಮೈಸೂರು ಮೆಡಿಕಲ್ ಕಾಲೇಜು (MMC), ಜೆ ಎಸ್ ಎಸ್ ಮೆಡಿಕಲ್ ಕಾಲೇಜು(JSS)ದಂತ ವೈದ್ಯಕೀಯ ಕಾಲೇಜುಗಳುಜೆ ಎಸ್ ಎಸ್ ಡೆಂಟಲ್ ಕಾಲೇಜು, ಫಾರೂಕಿಯಾ ಡೆಂಟಲ್ ಕಾಲೇಜು ಕಾನೂನುಜೆ ಎಸ್ ಎಸ್ ಲಾ ಕಾಲೇಜು, ವಿದ್ಯಾವರ್ಧಕ ಲಾ ಕಾಲೇಜು, ಶಾರದಾ ವಿಲಾಸ ಕಲೆ, ವಾಣಿಜ್ಯ, ಮತ್ತು ವಿಜ್ಞಾನ ಕಾಲೇಜುಗಳುಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಯುವರಾಜ ಕಾಲೇಜು, ಮಹಾಜನ ಕಾಲೇಜು, ಜೆ.ಎಸ್.ಎಸ್ ಕಾಲೇಜು, ಬನುಮಯ್ಯ ಕಾಲೇಜು, ಟೆರೆಷಿಯನ್ ಕಾಲೇಜು,ಟಿ.ಟಿ.ಎಲ್. ಕಾಲೇಜು, ಮರಿಮಲ್ಲಪ್ಪ ಕಾಲೇಜು, ಎಮ್ ಎಮ್ ಕೆ ಅಂಡ್ ಎಸ್ ಡಿ ಎಮ್ ಕಾಲೇಜು ಸಂಸ್ಕೃತ ಕಾಲೇಜು- ಮಹಾರಾಜ ಸಂಸ್ಕೃತ ಪಾಠಶಾಲೆ, ಬನುಮಯ್ಯ ಕಾಲೇಜು ಸಾರಿಗೆ ವ್ಯವಸ್ಥೆ right|thumb|Chennai-Mysore Shatabdi at the Mysore Junction ಮೈಸೂರು ನಗರ ಸುತ್ತಲ ಸ್ಥಳಗಳಿಗೆ ರೈಲ್ವೆ ಜಂಕ್ಷನ್. ರೈಲ್ವೇ ಮಾರ್ಗಗಳು ಮೈಸೂರನ್ನು ಮಂಡ್ಯದ ಮೂಲಕ ಬೆಂಗಳೂರಿಗೆ (ಈಶಾನ್ಯ ದಿಕ್ಕಿನಲ್ಲಿ), ವಾಯುವ್ಯ ದಿಕ್ಕಿನಲ್ಲಿ ಹಾಸನಕ್ಕೆ ಮತ್ತು ಆಗ್ನೇಯ ದಿಕ್ಕಿನಲ್ಲಿ ಚಾಮರಾಜನಗರಕ್ಕೆ ಸಂಪರ್ಕಿಸುತ್ತವೆ. ರಸ್ತೆ ಸಂಪರ್ಕ ಮೈಸೂರಿನಿಂದ ಕರ್ನಾಟಕದ ಹಾಗೂ ನೆರೆಯ ರಾಜ್ಯಗಳ ವಿವಿಧೆಡೆಗಳಿಗೆ ಇದೆ. ಕೆಲವು ವರ್ಷಗಳ ಹಿಂದೆ ಮೈಸೂರಿನ ಬಳಿ ಇರುವ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಇತ್ತು. ಈಗ ಈ ವಿಮಾನ ನಿಲ್ದಾಣವನ್ನು ಉಪಯೋಗಿಸಲಾಗುತ್ತಿಲ್ಲ.ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಇತ್ತೀಚೆಗೆ (ಡಿಸೆಂಬರ್ ೨೦೦೫)ಕಾರ್ಯಾರಂಭ ಮಾಡಿವೆ. ಈಗ ಮ೦ಡಕಳ್ಳಿ ವಿಮಾನ ನಿಲ್ದಾಣವು ಶುರುವಾಗಿದ್ದು, ಬೆ೦ಗಳೂರಿಗೆ ಕಿ೦ಗ್ಫಫಿಶರ್ ನಿ೦ದ ವಿಮಾನ ವ್ಯವಸ್ಥೆ ಇಲ್ಲ.ಕೆವಲ ದಸರಾ ಸಮಯಕ್ಕೆ ಮಾತ್ರ. thumb|ದರಿಯಾ ದೌಲತ್ - ಶ್ರೀರಂಗಪಟ್ಟಣದ ಟೀಪುವಿನ ಬೇಸಿಗೆ ಅರಮನೆ ಪ್ರಮುಖ ವ್ಯಕ್ತಿಗಳು ಎಂ. ಜಯಶ್ರೀ - ಖ್ಯಾತ ಪೋಷಕ ನಟಿ ತಿರುಮಲಾಂಬ - ಕನ್ನಡ ಮೊದಲ ಪತ್ರಕರ್ತೆ, ಪ್ರಕಾಶಕಿ; ಲೇಖಕಿ ಟಿ. ಚೌಡಯ್ಯ - ಖ್ಯಾತ ಪಿಟೀಲು ವಾದಕ ದೇವನೂರು ಮಹಾದೇವ - ಖ್ಯಾತ ಸಾಹಿತಿ ಡಿ. ದೇವರಾಜ ಅರಸ್ - ಮಾಜಿ ಮುಖ್ಯಮಂತ್ರಿ ಡಾ.ವಿಷ್ಣುವರ್ಧನ್ - ಖ್ಯಾತ ನಟ ಹುಣಸೂರು ಕೃಷ್ಣಮೂರ್ತಿ - ಚಿತ್ರ ನಿರ್ದೇಶಕ, ನಿರ್ಮಾಪಕ ಸೂರ್ಯಕೀರ್ತಿ - ಖ್ಯಾತ ಉರಗ ತಜ್ಞ, ಪರಿಸರ ಸಂರಕ್ಷಣಾವಾದಿ ಆರ್.ಕೆ.ಲಕ್ಷ್ಮಣ್ - ಚಿತ್ರಕಾರ ಇದನ್ನೂ ನೋಡಿ ಮೈಸೂರು (ಲೋಕ ಸಭೆ ಚುನಾವಣಾ ಕ್ಷೇತ್ರ) ಮೈಸೂರು ಇದು ಬಹಳ ಆಕರ್ಷಣಿಯ ಸ್ಥಳವಾಗಿದೆ. ಸಾಂಸ್ಕೃತಿಕ ನಗರಿಯ ಪರಂಪರೆ ಮತ್ತು ನಂಬಿಕೆ;ಪೃಥ್ವಿ ದತ್ತ ಚಂದ್ರ ಶೋಭಿ;14 Oct, 2016 ಬಾಹ್ಯ ಅಂತರಜಾಲ ತಾಣಗಳು ಮೈಸೂರು ನಗರಪಾಲಿಕೆ ಮೈಸೂರು ದಸರ ಮೈಸೂರು ವಿಶ್ವವಿದ್ಯಾಲಯ ಸ್ಟಾರ್ ಆಫ್ ಮೈಸೂರ್, ಇಂಗ್ಲಿಷ್‌ನಲ್ಲಿ ಸಂಜೆ ಪತ್ರಿಕೆ. ಬಿಎಸ್‌ಎನ್‌ಎಲ್ ಮೈಸೂರು ಸಮಾಚಾರ ಮೈಸೂರು ಅರಮನೆ ಮೈಸೂರಿನ ಭೂಪಟ ಆಧಾರ/ಆಕರಗಳು ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಭಾರತದ ಪಟ್ಟಣಗಳು * ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಮೈಸೂರು ತಾಲೂಕಿನ ಪ್ರವಾಸಿ ತಾಣಗಳುವರ್ಗ:ಭಾರತದ ಹಿಂದಿನ ರಾಜಧಾನಿ ನಗರಗಳು
ವಿಜಯನಗರ
https://kn.wikipedia.org/wiki/ವಿಜಯನಗರ
ವಿಜಯನಗರವು ಕರ್ನಾಟಕ ರಾಜ್ಯದ ಹಂಪಿಯ ಆಧುನಿಕ ಸ್ಥಳದಲ್ಲಿರುವ ಒಂದು ನಗರವಾಗಿದೆ. ವಿಜಯನಗರವು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದೆ. ಇದು ತುಂಗಭದ್ರ ನದಿಯ ದಡದಲ್ಲಿರುವ ವಿಶಾಲ ಪ್ರದೇಶದವರೆಗೂ ಹರಡಿತ್ತು ಮತ್ತು ವಿಜಯನಗರ ಜಿಲ್ಲೆ, ಬಳ್ಳಾರಿ ಜಿಲ್ಲೆ ಮತ್ತು ಈ ಜಿಲ್ಲೆಗಳ ಸುತ್ತಮುತ್ತಲಿನ ಇತರ ಸ್ಥಳಗಳನ್ನೂ ಒಳಗೊಂಡಿತ್ತು. Vijayanagara, Encyclopaedia Britannica ಹಿಂದೂ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪ್ರಾಚೀನ ಮಾನವ ವಸಾಹತು ಹಂಪಿಯು ವಿಜಯನಗರ ಪೂರ್ವದ ದೇವಾಲಯಗಳು ಮತ್ತು ಸ್ಮಾರಕಗಳನ್ನು ಹೊಂದಿದೆ. ೧೪ ನೇ ಶತಮಾನದ ಆರಂಭದಲ್ಲಿ, ಡೆಕ್ಕನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಪ್ರಬಲ ಕಾಕತೀಯರು, ಸೇವುಣ ಯಾದವರು, ಹೊಯ್ಸಳರು ಮತ್ತು ಅಲ್ಪಾವಧಿಯ ಕಂಪ್ಲಿ ಸಾಮ್ರಾಜ್ಯವನ್ನು ಖಿಲ್ಜಿ ಮತ್ತು ನಂತರ ದೆಹಲಿ ಸುಲ್ತಾನರ ತುಘಲಕ್ ರಾಜವಂಶಗಳ ಸೈನ್ಯಗಳು ಆಕ್ರಮಿಸಿ ಲೂಟಿ ಮಾಡಿದವು. ಕಂಪ್ಲಿದೇವರಾಯನ ಜೊತೆಯಲ್ಲಿ ಕಂಪ್ಲಿ ಸಾಮ್ರಾಜ್ಯದಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದ ಸಂಗಮ ಸಹೋದರರು ಈ ಅವಶೇಷಗಳಿಂದ ವಿಜಯನಗರವನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಜೊತೆಗೆ, ವಿಜಯನಗರವು ಜೈನ ಧರ್ಮ ಮತ್ತು ಇಸ್ಲಾಂನಂತಹ ಇತರ ಧರ್ಮಗಳ ಸಮುದಾಯಗಳನ್ನು ಸ್ವೀಕರಿಸಿತು. ಇದು ಬಹು-ಧಾರ್ಮಿಕ ಸ್ಮಾರಕಗಳು ಮತ್ತು ಪರಸ್ಪರ ಪ್ರಭಾವಗಳಿಗೆ ಕಾರಣವಾಯಿತು. Catherine B Asher (1985), Islamic Influence and the Architecture of Vijayanagara, in A. L. Dallapiccola et al (Eds), Vijayanagara: City and Empire— New Currents of Research, Weisbaden: Steiner Verlag, pp. 188-95 ಹಂಪಿಯ ಸ್ಮಾರಕಗಳ ಗುಂಪು ಎಂದು ಕರೆಯಲ್ಪಡುವ ವಿಜಯನಗರದ ಅವಶೇಷಗಳ ಒಂದು ಭಾಗವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಲಾಗಿದೆ. ಸುತ್ತಲೂ ಇತರ ಪವಿತ್ರ ಸ್ಥಳಗಳು ಸಹ ಇವೆ. ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಕ್ಷೇತ್ರವನ್ನು ಒಳಗೊಂಡಿವೆ. ಪ್ರಸ್ತುತ ಇದು ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಕಮಲಾಪುರ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ ಇದು ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ದೊಡ್ಡ ಗಾತ್ರದ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲ್ಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿದೆ. ಮೊಗಲರಿಂದ ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ. ಸ್ಥಳ ಮತ್ತು ಇತಿಹಾಸ thumb|left|೧೬ ನೇ ಶತಮಾನದ ಆರಂಭದಲ್ಲಿ ಹಂಪಿ ವಿಜಯನಗರ ಪವಿತ್ರ ಕೇಂದ್ರವು ಪ್ರಮುಖ ಹಿಂದೂ ದೇವಾಲಯಗಳು ಮತ್ತು ಅದಕ್ಕೆ ಸಂಬಂಧಿಸಿದ ಮಾರುಕಟ್ಟೆಗಳನ್ನು ಒಳಗೊಂಡಿತ್ತು. ನಗರ ಕೇಂದ್ರವು ರಾಜ ಕೇಂದ್ರವನ್ನು ಒಳಗೊಂಡಿತ್ತು. ಉಪನಗರ ಉಪಗ್ರಹಗಳನ್ನು ಈಗಿನ ಗಂಗಾವತಿಯಿಂದ ಹೊಸಪೇಟೆಯವರೆಗೆ ಹರಡಲಾಯಿತು.KD Morrison and CM Sinopoli (2006), Vijayanagara: Archaeological Explorations, J. Fritz et al (eds.), VPR Monograph, Manohar, pages 423–434 ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದು ಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟ ತುದಿಯಲ್ಲಿತ್ತು. ಇದೇ ಸಮಯದಲ್ಲಿ ಅದು ಕಾಲ ಕಾಲಕ್ಕೆ ಉತ್ತರದ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಯುದ್ಧದಲ್ಲಿ ತೊಡಗುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಅವನತಿಯೆಡೆಗೆ ಮುಖಮಾಡಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು. ಈ ನಗರವು ಈಗಾಗಲೇ ೧೦ ನೇ ಶತಮಾನದಲ್ಲಿ ಶಿವನ ಭಕ್ತರಿಗೆ ಪವಿತ್ರ ಯಾತ್ರಾ ಸ್ಥಳವಾಗಿತ್ತು. ಈ ನಗರವು ೧೪ ರಿಂದ ೧೬ ನೇ ಶತಮಾನದವರೆಗೆ ದಕ್ಷಿಣ ಭಾರತದ ಪ್ರಬಲ ನಗರ ಕೇಂದ್ರವಾಗಿತ್ತು ಮತ್ತು ವಿಶ್ವದ ಹತ್ತು ದೊಡ್ಡ ನಗರಗಳಲ್ಲಿ ಒಂದಾಗಿದೆ. ಪುನರುಜ್ಜೀವನದ ಪೋರ್ಚುಗೀಸರು ಮತ್ತು ಪರ್ಷಿಯನ್ ವ್ಯಾಪಾರಿಗಳು ಇದನ್ನು ಅದ್ಭುತ ಸಾಧನೆ ಎಂದು ವರದಿ ಮಾಡಿದರು. ಇದು ಉತ್ತರದ ಮುಸ್ಲಿಂ ಸುಲ್ತಾನರ ಅತಿಕ್ರಮಣಗಳ ವಿರುದ್ಧ ಹೋರಾಡಲು ಸಮರ್ಪಿತವಾದ ಹಿಂದೂ ಮೌಲ್ಯಗಳ ಭದ್ರಕೋಟೆಯಾಗಿ ನಿಂತಿತು. ಅವರು ಶೀಘ್ರದಲ್ಲೇ ಗೋಲ್ಕೊಂಡದಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಸಂಗಮ ರಾಜವಂಶವು ಬಹಮನಿ ಸುಲ್ತಾನರೊಂದಿಗೆ ಪದೇ ಪದೇ ಸಂಘರ್ಷಗಳಲ್ಲಿ ತೊಡಗಿತ್ತು. ಬಹಮನಿಗಳು ನಂತರ ದಖ್ಖನ್ ಸುಲ್ತಾನರು ಐದು ಸುಲ್ತಾನರುಗಳಾಗಿ ವಿಭಜನೆಗೊಂಡು ಡೆಕ್ಕನ್ ಮೈತ್ರಿಯನ್ನು ರಚಿಸಿದರು. ರಾಯಚೂರು ಕದನದ ನಂತರ ಕೃಷ್ಣದೇವರಾಯನು ಒಬ್ಬ ಸುಲ್ತಾನನನ್ನು ಸಣ್ಣ ರಾಜ್ಯಗಳಾಗಿ ವಿಭಜಿಸುವ ಬದಲು ಅಧಿಕಾರದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟನು. ಆದಾಗ್ಯೂ, ನಂತರದ ವಿಜಯನಗರ ರಾಜರು ತಮ್ಮ ಉತ್ತರದಲ್ಲಿ ಅನೇಕ ಸುಲ್ತಾನರೊಂದಿಗೆ ಹೋರಾಡಬೇಕಾಯಿತು. ವಿಜಯನಗರ ಸಾಮ್ರಾಜ್ಯವು ಪೋರ್ಚುಗೀಸ್ ಸಾಮ್ರಾಜ್ಯದೊಂದಿಗೆ ಸ್ನೇಹ ಬೆಳೆಸಿತು ಮತ್ತು ಅವಕಾಶ ಮಾಡಿಕೊಟ್ಟಿತು. ಪೋರ್ಚುಗೀಸರು ಗೋವಾವನ್ನು ಮತ್ತು ಮತ್ತು ಬಹಮನಿ ಸುಲ್ತಾನರ ಪಶ್ಚಿಮ ಪ್ರದೇಶಗಳನ್ನು ವಶಪಡಿಸಿಕೊಂಡರು ಹಾಗೂ ನಿಯಂತ್ರಣಕ್ಕೆ ತೆಗೆದುಕೊಂಡರು. ವಿಜಯನಗರ ಸಾಮ್ರಾಜ್ಯದ ವಿರುದ್ಧ ಸುಲ್ತಾನರು ಒಗ್ಗೂಡಿದರು. ಮುಸ್ಲಿಂ ಸುಲ್ತಾನರು ಮತ್ತು ಹಿಂದೂ ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯುತ್ತಿರುವ ಯುದ್ಧವು ಸಾ.ಶ ೧೫೬೫ ರಲ್ಲಿ ತಾಳಿಕೋಟೆ ಕದನಕ್ಕೆ ಕಾರಣವಾಯಿತು. ಇದು ಉತ್ತರಕ್ಕೆ ನಲ್ಲಿ ನಡೆಯಿತು. ಇದು ವಿಜಯನಗರದ ನಾಯಕನನ್ನು ಸೆರೆಹಿಡಿದು ಶಿರಚ್ಛೇದ ಮಾಡುವುದು, ವಿಜಯನಗರ ಪಡೆಗಳೊಳಗಿನ ಸಾಮೂಹಿಕ ಗೊಂದಲ ಮತ್ತು ಆಘಾತಕಾರಿ ಸೋಲಿಗೆ ಕಾರಣವಾಯಿತು. ನಂತರ ಸುಲ್ತಾನರ ಸೈನ್ಯವು ವಿಜಯನಗರವನ್ನು ತಲುಪಿ, ಹಲವಾರು ತಿಂಗಳುಗಳ ಅವಧಿಯಲ್ಲಿ ಅದನ್ನು ಲೂಟಿ ಮಾಡಿ, ನಾಶಪಡಿಸಿ ಸುಟ್ಟುಹಾಕಿತು. ವಿಜಯನಗರ ಪ್ರದೇಶದಲ್ಲಿ ಪುರಾತತ್ವಶಾಸ್ತ್ರಜ್ಞರು ಕಂಡುಕೊಂಡ ಇದ್ದಿಲಿನ ಪ್ರಮಾಣ, ಶಾಖದಿಂದ ಒಡೆದ ನೆಲಮಾಳಿಗೆಗಳು ಮತ್ತು ಸುಟ್ಟ ವಾಸ್ತುಶಿಲ್ಪದ ತುಣುಕುಗಳು ಇದಕ್ಕೆ ಸಾಕ್ಷಿಯಾಗಿದೆ. ನಂತರ ವಿಜಯನಗರವನ್ನು ಕೈಬಿಡಲಾಯಿತು ಹಾಗೂ ಅಂದಿನಿಂದ ಶಿಥಿಲಾವಸ್ಥೆಯಲ್ಲಿತ್ತು. ವಿರೂಪಾಕ್ಷ ದೇವಾಲಯ thumbnail|ವಿರೂಪಾಕ್ಷ ದೇವಾಲಯ. ವಿರೂಪಾಕ್ಷ ದೇವಾಲಯ ಮತ್ತು ಅದರ ಆವರಣ ಹಂಪೆ ಗ್ರಾಮದ ಮುಖ್ಯ ಭಾಗವಾಗಿದೆ. ಇದಕ್ಕೆ ಪಂಪಾಪತಿ ದೇವಸ್ಥಾನ ಎಂಬ ಹೆಸರು ಇದೆ. ೧೩ನೇ ಶತಮಾನದಿಂದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತು ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ನಂದಿಯ ಒಂದು ಶಿಲ್ಪದತ್ತ ಸಾಗುತ್ತದೆ. ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದಾಗಿದೆ. https://www.karnataka.com/hampi/virupaksha-temple/ ಕೃಷ್ಣ ದೇವಾಲಯ thumbnail|left|ಕೃಷ್ಣ ದೇವಾಲಯ. ಕೃಷ್ಣ ದೇವಾಲಯವು ಹಂಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನವಾಗಿದೆ. ಒರಿಸ್ಸಾದ ದಂಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ ಇದಾಗಿದೆ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ. https://hampi.in/krishna-temple ಉಗ್ರ ನರಸಿಂಹ thumb|left|ಉಗ್ರನರಸಿಂಹನ ಪ್ರತಿಮೆ, ಹಂಪಿ thumb|ಉಗ್ರ ನರಸಿಂಹ. ಹಂಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿಂಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ. ಮೂರ್ತಿಯ ಮಂಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿಂದ ಅಥವಾ ಅದೇ ಕಾಲದ ಓರ್ವ ಶ್ರೀಮಂತ ವರ್ತಕರಿಂದ ಸಂದ ಧನಸಹಾಯದಿಂದ ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ಮೂರ್ತಿಯನ್ನು ಕಟ್ಟಿದಾಗ ಮೂರ್ತಿಯ ಮಂಡಿಯ ಮೇಲೆ ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು. ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇದೆ. https://www.trawell.in/karnataka/hampi/ugra-narasimha-lakshmi-narasimha-statue ಸುಗ್ರೀವನ ಗುಹೆ ಇದು ಒಂದು ಪ್ರಾಕೃತಿಕ ಗುಹೆಯಾಗಿದೆ. ಇಲ್ಲಿಯೇ ಶ್ರೀರಾಮನು ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಸ್ಥಳವೆಂದು ಪ್ರಚಲಿತವಾಗಿದೆ. ಸುಗ್ರೀವನ ಗುಹೆ ಪೌರಾಣಿಕವಾಗಿದ್ದು ಸುಗ್ರೀವ ವಾಸಿಸುತ್ತಿದ್ದ ಸ್ಥಳ ಎಂದು ನಂಬಲಾಗಿದೆ. ರಾಕ್ಷಸ ರಾಜ ರಾವಣನು ಸೀತೆಯನ್ನು ಅಪಹರಿಸಿದಾಗ ಅವಳು ಎಸೆದ ಆಭರಣಗಳನ್ನು ಮರೆಮಾಡಲು ಅವನು ಗುಹೆಯನ್ನು ಬಳಸಿದನು. ನಂತರ, ಸುಗ್ರೀವನು ಸೀತೆಯನ್ನು ಹುಡುಕುತ್ತಾ ನದಿಯ ತೀರದಲ್ಲಿ ರಾಮ ಮತ್ತು ಲಕ್ಷ್ಮಣರನ್ನು ಭೇಟಿಯಾದನು. ಸ್ಥಳೀಯ ಪರಿಭಾಷೆಯಲ್ಲಿ ಬಂಡೆಯ ಮೇಲಿನ ಬಣ್ಣದ ಮಾದರಿಯನ್ನು ಸೀತಾ ಕೊಂಡ ಎಂದು ಕರೆಯಲಾಗುತ್ತದೆ. ಇದು ಸೀತೆಯ ವೇಷಭೂಷಣದ ಮೇಲಿನ ಮಾದರಿಯನ್ನು ಚಿತ್ರಿಸುತ್ತದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳನ್ನು ಕಾಣುತ್ತೇವೆ. ಕೋದಂಡರಾಮ ದೇವಸ್ಥಾನದಿಂದ ರಾಜನ ಸಮತೋಲನಕ್ಕೆ ಹೋಗುವ ದಾರಿಯಲ್ಲಿ ಈ ಗುಹೆಯನ್ನು ನೀವು ಕಾಣಬಹುದು. ಬಹುತೇಕ ನದಿಯ ದಡದಲ್ಲಿರುವ ಈ ಗುಹೆಯು ನೈಸರ್ಗಿಕವಾಗಿ ರೂಪುಗೊಂಡ ಗುಹೆಯಾಗಿದ್ದು, ಒಂದರ ಮೇಲೊಂದರಂತೆ ಬಾಗಿದ ಬೃಹತ್ ಬಂಡೆಗಳಿಂದ ಕೂಡಿದೆ. <ref>https://hampi.in/sugreevas-cave</</ref> ಕೋದಂಡರಾಮ ದೇವಸ್ಥಾನ ಕೋದಂಡರಾಮ ದೇವಸ್ಥಾನವು ಹಂಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇಂದ್ರದ ನಡುವೆ ತುಂಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನವಾಗಿದೆ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ. ಇಲ್ಲಿರುವ ಶ್ರೀರಾಮನ ವಿಗ್ರಹ ಸುಮಾರು ೧೮ ಅಡಿ ಎತ್ತರವಿದೆ, ಜೊತೆಗೆ ಸೀತೆ, ಲಕ್ಷ್ಮಣ ಮತ್ತು ಹನುಮಂತನ ವಿಗ್ರಹಗಳಿವೆ. ನದಿಗೆ ಅಭಿಮುಖವಾಗಿರುವ ಈ ದೇವಾಲಯವು ವಿನಮ್ರವಾಗಿ ಕಾಣುತ್ತದೆ ಆದರೆ ಧಾರ್ಮಿಕವಾಗಿ ಮಹತ್ವದ್ದಾಗಿದೆ. ಸ್ಥಳೀಯ ಪುರಾಣಗಳ ಪ್ರಕಾರ, ರಾಮನು ವಾಲಿಯನ್ನು ಕೊಂದು ಸುಗ್ರೀವನಿಗೆ ಕಿರೀಟಧಾರಣೆ ಮಾಡಿದ ಸ್ಥಳ ಇದು. ಕೋದಂಡರಾಮ ಎಂಬ ಹೆಸರಿನ ಅರ್ಥ ಸ್ಥಳೀಯ ಉಪಭಾಷೆಯಲ್ಲಿ ಕಿರೀಟಧಾರಿ ರಾಮ. ಮುಂಭಾಗದಲ್ಲಿರುವ ಪವಿತ್ರ ಸ್ನಾನದ ಸ್ಥಳವು ಹಂಪಿಗೆ ಯಾತ್ರಾರ್ಥಿಗಳಿಗೆ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯದ ಪಕ್ಕದಲ್ಲಿ ನೀವು ಉದ್ದವಾದ ಪ್ರಾಚೀನ ಮಂಟಪಗಳನ್ನು ನೋಡಬಹುದು. ಇದನ್ನು ಯಾತ್ರಾರ್ಥಿಗಳು ಅನೇಕ ಶತಮಾನಗಳಿಂದ ವಿಶ್ರಾಂತಿ ಸ್ಥಳವಾಗಿ ಬಳಸುತ್ತಾರೆ. https://hampi.in/kodandarama-temple ವಿಠ್ಠಲ ದೇವಸ್ಥಾನ thumb|left|ವಿಠ್ಠಲ ದೇವಸ್ಥಾನದ ಕಲ್ಲಿನ ರಥ. ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂದಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊಂದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆಂದು ನಂಬಲಾಗಿದೆ. ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ. ಹಂಪಿಯ ಆಕರ್ಷಣೆಗಳ ಕೇಂದ್ರಬಿಂದುವಾಗಿರುವ ವಿಠ್ಠಲ ದೇವಾಲಯವು ಹಂಪಿಯ ವಾಸ್ತುಶಿಲ್ಪದ ಪ್ರದರ್ಶನವಾಗಿದೆ. ಈ ದೇವಾಲಯವನ್ನು ಕಾಂಪೌಂಡ್ ಗೋಡೆ ಮತ್ತು ಗೇಟ್ವೇ ಗೋಪುರಗಳೊಂದಿಗೆ ವಿಶಾಲವಾದ ಕ್ಯಾಂಪಸ್ ರೂಪದಲ್ಲಿ ನಿರ್ಮಿಸಲಾಗಿದೆ. ಈ ಕ್ಯಾಂಪಸ್ ಒಳಗೆ ಅನೇಕ ಸಭಾಂಗಣಗಳು, ಮಂಟಪಗಳು ಮತ್ತು ದೇವಾಲಯಗಳಿವೆ. ಈ ದೇವಾಲಯವನ್ನು ಮೂಲತಃ ಕ್ರಿ.ಶ ೧೫ ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ನಂತರದ ಅನೇಕ ರಾಜರು ತಮ್ಮ ಆಳ್ವಿಕೆಯಲ್ಲಿ ದೇವಾಲಯದ ಆವರಣವನ್ನು ಪ್ರಸ್ತುತ ರೂಪಕ್ಕೆ ಹೆಚ್ಚಿಸಿದ್ದಾರೆ. ಈ ದೇವಾಲಯದ ಸಂಕೀರ್ಣದ ಸುತ್ತಲೂ ಅಸ್ತಿತ್ವದಲ್ಲಿದ್ದ ವಿಠ್ಠಲಪುರ ಎಂಬ ಪಟ್ಟಣದ ಅವಶೇಷಗಳನ್ನು ಸಹ ನೀವು ನೋಡಬಹುದು. ವಿಠ್ಠಲ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಅದರ ಪ್ರಭಾವಶಾಲಿ ಕಂಬಗಳ ಸಭಾಂಗಣಗಳು ಮತ್ತು ಕಲ್ಲಿನ ರಥ. ಸಭಾಂಗಣಗಳನ್ನು ದೈತ್ಯ ಗ್ರಾನೈಟ್ ಕಂಬಗಳ ಮೇಲೆ ಅಗಾಧವಾದ ಶಿಲ್ಪಗಳೊಂದಿಗೆ ಕೆತ್ತಲಾಗಿದೆ. ಕ್ಯಾಂಪಸ್ ಒಳಗೆ ಇರುವ ಕಲ್ಲಿನ ರಥವು ಬಹುತೇಕ ಅಪ್ರತಿಮವಾಗಿದೆ. https://hampi.in/vittala-temple ರಾಜ ಕೇಂದ್ರ ಈ ವಿಶಾಲ ಪ್ರದೇಶ ಹಂಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರಂಭವಾಗಿ ಸುಮಾರು ಕಮಲಾಪುರ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಅವಶೇಷಗಳು ಉಳಿದಿಲ್ಲ. ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿಂದ ಕಟ್ಟಲ್ಪಟ್ಟಿದ್ದರಿಂದ, ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಸುತ್ತಲ ಕೋಟೆ ಗೋಡೆಗಳೊಂದಿಗೆ ಉಳಿದಿವೆ. ರಾಮಚಂದ್ರ ದೇವಸ್ಥಾನ ರಾಮನ ಅನೇಕ ಪ್ರತಿಮೆಗಳು ಕಂಡುಬರುವುದರಿಂದ ಇದಕ್ಕೆ ಹಜಾರರಾಮ ದೇವಸ್ಥಾನ ಎಂದೂ ಹೆಸರು (ಸಾವಿರ ರಾಮರ ದೇವಸ್ಥಾನ)ಇದೆ. ಇದು ಹಂಪೆಯ ದಕ್ಷಿಣಪೂರ್ವದಲ್ಲಿ ರಾಜಕೇಂದ್ರದಲ್ಲಿ ಇದೆ. ಹಂಪಿಯ ಮಾನದಂಡದ ಪ್ರಕಾರ ಇದು ದೊಡ್ಡ ದೇವಾಲಯವಲ್ಲ. ಆದರೆ ರಾಜಮನೆತನದ ಹೃದಯಭಾಗದಲ್ಲಿರುವ ಈ ದೇವಾಲಯವು ಕೆಲವು ವಿಶೇಷತೆಗಳನ್ನು ಹೊಂದಿದೆ. ಮೊದಲನೆಯದಾಗಿ ಇದು ರಾಜನಿಗೆ ಅಥವಾ ರಾಜಮನೆತನಕ್ಕೆ ಖಾಸಗಿ ದೇವಾಲಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ದೇವಾಲಯದ ಪ್ರಾಮುಖ್ಯತೆಯನ್ನು ರಾಜಮನೆತನದ ಪ್ರದೇಶದಲ್ಲಿನ ನೋಡಲ್ ಸ್ಥಳದಿಂದ ನಿರ್ಣಯಿಸಬಹುದು. ಕೋಟೆಯೊಳಗಿನ ವಿವಿಧ ಸ್ಥಳಗಳಿಗೆ ನಿಮ್ಮ ಮಾರ್ಗಗಳು ಈ ದೇವಾಲಯದ ಒಂದು ಮೂಲೆಯಲ್ಲಿ ಕೊನೆಗೊಳ್ಳುತ್ತವೆ. https://hampi.in/hazara-rama-temple ಲೋಟಸ್ ಮಹಲ್ thumb|ಲೋಟಸ್ ಅರಮನೆ ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊಂಡಂತೆ ಅನೇಕ ವಿಶೇಷ ಪರಿಸರ ನಿಯಂತ್ರಣ ಉಪಕರಣಗಳಿವೆ.ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ ಕಾಣಬಹುದು. ಚಿತ್ರಾಂಗನಿ ಮಹಲ್ ಮತ್ತು ಕಮಲ್ ಮಹಲ್ ಎಂದೂ ಕರೆಯಲ್ಪಡುವ ಇದು ಹಂಪಿಯ ಜಾತ್ಯತೀತ ಅಥವಾ ಧಾರ್ಮಿಕವಲ್ಲದ ರಚನೆಗಳ ಮೂಲಕ ಬರುತ್ತದೆ. ನಗರದ ಮುತ್ತಿಗೆಯ ಸಮಯದಲ್ಲಿ ಹಾನಿಯಾಗದೆ ಉಳಿದ ಸುಂದರವಾದ ರಚನೆಗಳಲ್ಲಿ ಇದು ಒಂದಾಗಿದೆ. ಆದಾಗ್ಯೂ ಹೊರ ಮೇಲ್ಮೈಯಲ್ಲಿ ಇರಿಸಲಾದ ಕೆಲವು ಶಿಲ್ಪಗಳ ಮೇಲೆ ವಿರೂಪಗಳ ಕೆಲವು ಚಿಹ್ನೆಗಳಿವೆ. ಮೂಲತಃ ಇದು ತೆರೆದ ತಳ ಮಹಡಿಯನ್ನು ಹೊಂದಿರುವ ಎರಡು ಅಂತಸ್ತಿನ ರಚನೆಯಾಗಿದ್ದು, ಅಡ್ಡಗೋಡೆಗಳು ಎತ್ತರದ ಕಮಾನಿನ ಕಿಟಕಿಗಳನ್ನು ಹೊಂದಿವೆ. ಮೇಲಿನ ಮಹಡಿಗಳು ಕಮಾನಿನ ಕಿಟಕಿಗಳೊಂದಿಗೆ ಬಾಲ್ಕನಿಗಳನ್ನು ಹೊಂದಿವೆ. ಪರದೆಯನ್ನು ನೇತುಹಾಕಲು ಕಿಟಕಿಗಳಿಗೆ ಹತ್ತಿರವಿರುವ ಗೋಡೆಯ ಮೇಲೆ ಹುಕ್ ನಂತಹ ರಚನೆಗಳನ್ನು ಮಾಡಲಾಗುತ್ತದೆ. ನೆಲಮಹಡಿಯ ಕಮಾನುಗಳು ವಿರಾಮ ಮತ್ತು ಅಲಂಕೃತವಾಗಿವೆ. ಅಲಂಕಾರಗಳು ಮತ್ತು ವಾಸ್ತುಶಿಲ್ಪವು ಹಿಂದೂ ಮತ್ತು ಇಸ್ಲಾಮಿಕ್ ಶೈಲಿಗಳ ಕುತೂಹಲಕಾರಿ ಮಿಶ್ರಣವಾಗಿದೆ. ಲೋಟಸ್ ಮಹಲ್ ನ ಇಸ್ಲಾಮಿಕ್ ಶೈಲಿಯ ಕಮಾನುಗಳು ಮತ್ತು ಹಿಂದೂ ಶೈಲಿಯ ಮಲ್ಟಿಪ್ಲೇಯರ್ ಮೇಲ್ಛಾವಣಿ ಮತ್ತು ಮೂಲ ರಚನೆಯನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತದೆ. https://hampi.in/lotus-mahal ಪುಷ್ಕರಿಣಿ thumb|left|ಮಹಾರಾಣಿಯ ಪುಷ್ಕರಿಣಿ ಪುಷ್ಕರಣಿ ದೇವಾಲಯಗಳಿಗೆ ಹೋಲಿಸಲಾದ ಪವಿತ್ರ ಕೊಳವಾಗಿದೆ. ಹಂಪಿಯ ಹೆಚ್ಚಿನ ದೊಡ್ಡ ದೇವಾಲಯಗಳು ಅದಕ್ಕೆ ಹೊಂದಿಕೊಂಡಂತೆ ಒಂದು ಕೊಳವನ್ನು ಹೊಂದಿವೆ. ಈ ಕೆರೆಗಳು ದೇವಾಲಯದ ಆಚರಣೆ ಮತ್ತು ಕ್ರಿಯಾತ್ಮಕ ಅಂಶಗಳನ್ನು ಮತ್ತು ಅದರ ಸುತ್ತಲಿನ ಜೀವನವನ್ನು ಪೂರೈಸುತ್ತವೆ. ಸಾಂಕೇತಿಕವಾಗಿಯೂ ಈ ಕೊಳ ಮಹತ್ವದ್ದಾಗಿದೆ ಮತ್ತು ಬಹಳ ಗೌರವದಿಂದ ಪರಿಗಣಿಸಲ್ಪಟ್ಟಿವೆ. ಅನೇಕ ಸಂದರ್ಭಗಳಲ್ಲಿ ಪವಿತ್ರ ಕೊಳಗಳು ವಾರ್ಷಿಕ ದೋಣಿ ಉತ್ಸವದ ಸ್ಥಳವಾಗಿತ್ತು. ಅಲ್ಲಿ ದೇವರು ಮತ್ತು ದೇವಿಯ ಚಿತ್ರಗಳನ್ನು ಕೊರಕಲ್ ಮೇಲೆ ತೆಗೆದುಕೊಳ್ಳಲಾಗುತ್ತದೆ. ಪವಿತ್ರ ಕೊಳದ ಉತ್ತಮ ಸಂರಕ್ಷಿತ ಮಾದರಿ ವಿಠ್ಠಲ ದೇವಾಲಯದ ಬಳಿ ಇದೆ. ಇದು ದೇವಾಲಯದ ಸಂಕೀರ್ಣದಿಂದ ಸ್ವಲ್ಪ ಪೂರ್ವದಲ್ಲಿದೆ. ವಿಠ್ಠಲ ದೇವಸ್ಥಾನದಿಂದ ಕಾರ್ ಸ್ಟ್ರೀಟ್ (ವಿಠ್ಠಲ ಬಜಾರ್) ಮೂಲಕ, ಕುದುರೆಗೊಂಬೆ ಮಂಟಪ ಎಂದು ಗುರುತಿಸಲಾದ ಪಾಳುಬಿದ್ದ ದೇವಾಲಯದ ಎದುರಿನ ಕೊಳವನ್ನು ನೀವು ಕಾಣಬಹುದು. ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಕೊಳ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಬಿಸಿಲಿನ ಬೇಗೆಯಿಂದ ಈ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿಂದ ಆವೃತವಾಗಿರುತ್ತಿತ್ತು. ಇದನ್ನು ನಕ್ಷತ್ರ ಬಾವಿ ಎಂದೂ ಕರೆಯತ್ತಾರೆ. https://hampi.in/pushkarani ಆನೆ ಲಾಯಗಳು thumb|ಆನೆ ಲಾಯ ವಿಶಾಲವಾದ ಆನೆಲಾಯಗಳ ಗುಂಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು. ಇದನ್ನು ಆನೆಸಾಲು ಎಂದೂ ಕರೆಯುತ್ತಾರೆ. ಉಲ್ಲೇಖಗಳು ವರ್ಗ:ಇತಿಹಾಸ ವರ್ಗ:ಐತಿಹಾಸಿಕ ಸ್ಥಳಗಳು ವರ್ಗ:ಸಂಸ್ಕೃತಿ ವರ್ಗ:ಪ್ರವಾಸೋದ್ಯಮ ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
ಕನ್ನಡ
https://kn.wikipedia.org/wiki/ಕನ್ನಡ
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ ೫.೫ ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರುಷಗಳ ಚರಿತ್ರೆಯಿದೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು.Zvelebil (1973), p.7 (Introductory, chart) ಅದಲ್ಲದೆ ಸಾವಿರ ವರುಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ.ಗರ್ಗ್ (1992), p.67ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ. ಭಾಷಿಕ ಚರಿತ್ರೆ ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ದ್ರಾವಿಡ ಭಾಷಾತಜ್ಞ ಸ್ಟಾನ್‍ಫೋರ್ಡ್ ಸ್ಟೀವರ್ ಅವರ ಅಭಿಪ್ರಾಯದಂತೆ, ಕನ್ನಡದ ಭಾಷಿಕ ಚರಿತ್ರೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು; ಹಳಗನ್ನಡ ಕ್ರಿ.ಶ. ೪೫೦ರಿಂದ ಕ್ರಿ.ಶ. ೧೨೦೦ರವರೆಗೆ, ನಡುಗನ್ನಡ ಕ್ರಿ. ಶ. ೧೨೦೦ರಿಂದ ಕ್ರಿ.ಶ. ೧೭೦೦ರವರೆಗೆ ಮತ್ತು ಹೊಸಗನ್ನಡ ಕ್ರಿ. ಶ. ೧೭೦೦ರಿಂದ ಪ್ರಸ್ತುತ ಕಾಲಘಟ್ಟದವರೆಗೆ.Steever, S.B. (1998), p. 129 ಕನ್ನಡ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಬಹುದಾದ ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ. ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ; ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ; ನಡುಗನ್ನಡ – ೧೨ನೆಯ ಶತಮಾನದ ಪ್ರಾರಂಭದಿಂದ ೧೮ನೆಯ ಶತಮಾನದವರೆಗೆ; ಹೊಸಗನ್ನಡ – ೧೮ನೆಯ ಶತಮಾನದ ಆದಿಯಿಂದ ಈಚೆಗೆ. ಕಳೆದ ಶತಮಾನದಲ್ಲಿ ಎಂದರೆ ೨೦ನೆಯ ಶತಮಾನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ ಬಹಳ ವ್ಯಾಪಕವಾಗಿ ನಡೆಯಿತು. ಕನ್ನಡ ಭಾಷೆಯು ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರಕಾರದಿಂದ ಪಡೆದಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಯಥೇಚ್ಛವಾಗಿದೆ. ಕನ್ನಡ ಭಾಷೆ ವಾಣಿಜ್ಯ ಕ್ಷೇತ್ರದಲ್ಲಿಯೂ ಮುಂಚೂಣಿಯ ಭಾಷೆಯಾಗಿ ಬೆಳೆಯತೊಡಗಿದೆ. ಕನ್ನಡದಲ್ಲಿ ಸಂಸ್ಕೃತದ ಪ್ರಭಾವ ಅಸಾಧಾರಣವಾದುದು. ಪ್ರಾಕೃತ, ಪಾಳಿ ಮುಂತಾದ ಭಾಷೆಗಳ ಪ್ರಭಾವವೂ ಕನ್ನಡಕ್ಕಿದೆ. ಕ್ರಿ.ಪೂ ಮೂರನೆಯ ಶತಮಾನಕ್ಕೂ ಮುನ್ನವೇ ಕನ್ನಡ ಮೌಖಿಕ ಪರಂಪರೆಯ ಭಾಷೆಯಾಗಿ ರೂಪುಗೊಂಡಿತ್ತೆಂಬುದಕ್ಕೂ ಪ್ರಾಕೃತ ಭಾಷೆಯಲ್ಲಿಯೂ ತಮಿಳು ಭಾಷೆಯಲ್ಲಿಯೂ ಬರೆಯಲ್ಪಟ್ಟ ಶಾಸನಗಳಲ್ಲಿ ಕನ್ನಡದ ಶಬ್ದಗಳು ಬಳಕೆಯಾಗಿವೆಯೆಂದೂ ಇತಿಹಾಸ ತಜ್ಞ ಐರಾವತಂ ಮಹಾದೇವನ್ ಸಾಬೀತುಪಡಿಸಿದ್ದಾರೆ. ಆ ಸಂಶೋಧನೆಯ ಪ್ರಕಾರ ಕನ್ನಡ ಅಗಾಧ ಪ್ರಮಾಣದ ಜನತೆ ಮಾತನಾಡುತ್ತಿದ್ದ ಭಾಷೆಯಾಗಿದ್ದಿತೆಂದೂ ತಿಳಿದುಬಂದಿದೆ.Kamath (2001), p. 5–6(Wilks in Rice, B.L. (1897), p490)Pai and Narasimhachar in Bhat (1993), p103 ಕೆ.ವಿ. ನಾರಾಯಣರು ಹೇಳುವಂತೆ, ಇಂದಿಗೆ ಕನ್ನಡದ ಉಪಭಾಷೆಗಳೆಂದು ಗುರುತಿಸಲ್ಪಡುವ ಭಾಷೆಗಳಲ್ಲಿ ಹೆಚ್ಚಿನವು ಕನ್ನಡದ ಹಳೆಯ ರೂಪವನ್ನು ಹೋಲುವಂಥದ್ದಾಗಿರಬಹುದು. ಅಲ್ಲದೆ ಅನ್ಯ ಭಾಷೆಗಳ ಪ್ರಭಾವ ವ್ಯಾಪಕವಾಗಿ ಒಳಗಾಗದ ಭಾಷೆಗಳು ಇವೆಂದೂ ಅಭಿಪ್ರಾಯಪಡುತ್ತಾರೆ. ಸಂಸ್ಕೃತದ ಪ್ರಭಾವ ಕನ್ನಡ ಭಾಷೆಗೆ ಪೂರ್ವಕಾಲದಿಂದಲೂ ಮೂರು ಬಗೆಯ ಪ್ರಭಾವಗಳು ಉಂಟಾಗಿವೆ; ಪಾಣಿನೀಯ ಸಂಸ್ಕೃತ ವ್ಯಾಕರಣದ್ದು, ಕಟಂತ್ರ ಮತ್ತು ಶಕಟಯಾನದಂತಹ ಅಪಾಣೀನೀಯ ವ್ಯಾಕರಣಗಳದ್ದು ಹಾಗೂ ಪ್ರಾಕೃತ ವ್ಯಾಕರಣದ್ದು. ಪ್ರಾಚೀನ ಕರ್ಣಾಟಕದಲ್ಲಿ ಗ್ರಾಂಥಿಕ ಪ್ರಾಕೃತ ಉಪಯೋಗದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ದೇಶ್ಯ ಪ್ರಾಕೃತವನ್ನು ಮಾತನಾಡುತ್ತಿದ್ದವರು ಮತ್ತು ಕನ್ನಡ ಮಾತನಾಡುತ್ತಿದ್ದವರ ಸಂಪರ್ಕದೊಂದಿಗೆ ಪರಸ್ಪರ ಪೋಷಿಸುತ್ತಲೇ ಬೆಳೆದುವು ಎಂಬುದೂ ಸ್ಪಷ್ಟವಾಗಿದೆ. ಕನ್ನಡ ಉಪಾಸನೆಯ ಮತ್ತು ರಾಜಸತ್ತೆಯ ಭಾಷೆಯಾಗಿ ಉಪಯೋಗಿಸಲ್ಪಡುವ ಮುನ್ನವೇ ಈ ಸಂಪರ್ಕ ಮತ್ತು ತನ್ನಿಮಿತ್ತವಾದ ಕೊಡು ಕೊಳ್ಳುಗೆ ಸಂಭವಿಸಿರಬಹುದು. ಕನ್ನಡದ ಧ್ವನಿಮಾದಲ್ಲಿಯೂ, ಸಂರಚನೆಯಲ್ಲಿಯೂ, ಶಬ್ದಸಂಪತ್ತಿಯಲ್ಲಿಯೂ, ವ್ಯಾಕರಣದಲ್ಲಿಯೂ ಹಾಗೆಯೇ ಭಾಷಿಕ ಪ್ರಯೋಗದಲ್ಲಿಯೂ ಸಂಸ್ಕೃತ ಮತ್ತು ಪ್ರಾಕೃತದ ಪ್ರಭಾವ ಸ್ಪಷ್ಟವಾಗಿದೆ. ಕನ್ನಡದಲ್ಲಿ ಬಹಳ ಸಾಮಾನ್ಯವಾಗಿ ತತ್ಸಮ ಮತ್ತು ತದ್ಭವ ಶಬ್ದಗಳನ್ನು ಕಾಣುತ್ತೇವೆ. ಕನ್ನಡದ ಬಣ್ಣ ಎಂಬ ಶಬ್ದ ಪ್ರಾಕೃತದ ವಣ್ಣ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ವಣ್ಣ ಎಂಬ ಶಬ್ದ ಸಂಸ್ಕೃತದ ವರ್ಣ ಎಂಬ ಶಬ್ದದಿಂದ ಉಂಟಾಯಿತು. ಕನ್ನಡದ ಹುಣ್ಣಿಮೆ ಎಂಬ ಶಬ್ದ ಪ್ರಾಕೃತದ ಪುಣ್ಣಿವ ಎಂಬ ಶಬ್ದದಿಂದ ಉಂಟಾಯಿತು ಮತ್ತು ಪ್ರಾಕೃತದ ಪುಣ್ಣಿವ ಎಂಬ ಶಬ್ದ ಸಂಸ್ಕೃತದ ಪೌರ್ಣಮಿ ಎಂಬ ಶಬ್ದದಿಂದ ಉಂಟಾದ ತದ್ಭವವಾಗಿದೆ. ಕನ್ನಡದಲ್ಲಿ ತತ್ಸಮ ಶಬ್ದಗಳು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತವೆ. ದಿನ, ಕೋಪ, ಸೂರ್ಯ, ಮುಖ, ನಿಮಿಷ, ಅನ್ನ ಎಂಬುವು ಕೆಲ ಉದಾಹರಣೆಗಳು. ಸಾಹಿತ್ಯ ಹಳಗನ್ನಡ ತ್ರಿಪದಿ ಛಂಧಸ್ಸಿನಲ್ಲಿ ರಚನೆಗೊಂಡ ಕನ್ನಡದ ಮೊದಲ ಕವಿತೆ ಕ್ರಿ.ಶ. ೭೦೦ರ ಕಪ್ಪೆ ಅರಭಟ್ಟನ ಶಾಸನದಲ್ಲಿ ಕಂಡುಬರುತ್ತದೆ.ಕಾಮತ್ (2001), p67 ರಾಜಾ ನೃಪತುಂಗ ಅಮೋಘ ವರ್ಷ‍ ರಚಿಸಿದ ಕವಿರಾಜಮಾರ್ಗ ಕನ್ನಡದಲ್ಲಿ ರಚನೆಗೊಂಡ ಮೊದಲ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆಗಳನ್ನೂ ಕಾವ್ಯರಚನೆಯನ್ನೂ ಒಳಗೊಂಡಂಥ ಈ ಕೃತಿ ಆ ಕಾಲದಲ್ಲಿ ಅಸ್ತಿತ್ವದಲ್ಲಿ ಕನ್ನಡದ ಉಪಭಾಷೆಗಳನ್ನು ಒಂದೆಡೆ ಸೇರುವ ಪ್ರಯತ್ನ ಮಾಡಿದೆ. ಈ ಕೃತಿ ಕ್ರಿ.ಶ. ೬ನೆಯ ಶತಮಾನದ ರಾಜ ದುರ್ವಿನೀತನ ಬಗ್ಗೆಯೂ ಕ್ರಿ. ೬೩೬ರ ಐಹೊಳೆ ಶಾಸನ ಬರೆದ ರವಿಕೀರ್ತಿಯ ಬಗ್ಗೆಯೂ ವಿವರಗಳನ್ನು ನೀಡುತ್ತದೆ.Sastri (1955), p355ಕಾಮತ್ (2001), p90 ಕನ್ನಡದಲ್ಲಿ ಲಭ್ಯವಾಗಿರುವ ಮೊದಲ ಕೃತಿ ವ್ಯಾಕರಣವನ್ನು ವಿವರಿಸುವಂಥದ್ದೂ ವಿವಿಧ ಕನ್ನಡ ಉಪಭಾಷೆಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುವುದರಿಂದಲೂ ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚನೆ ಅದಕ್ಕಿಂತಲೂ ಕೆಲ ಶತಮಾನಗಳ ಹಿಂದೆಯೇ ಆರಂಭಗೊಂಡಿರಬಹುದೆಂದು ಊಹಿಸಬಹುದಾಗಿದೆ. ಕ್ರಿ.ಶ. ೯೦೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ ವಡ್ಡಾರಾಧನೆ ಎಂಬ ಗದ್ಯಕೃತಿಯಲ್ಲಿ ಶ್ರವಣಬೆಳಗೊಳದ ಭದ್ರಬಾಹುವಿನ ಕುರಿತಾದ ವಿವರಗಳು ಲಭ್ಯವಾಗುತ್ತವೆ.ಶಾಸ್ತ್ರಿ (1955), p356 ಪಂಪನ ಕವಿಯು ಬರೆದ ವಿಕ್ರಮಾರ್ಜುನ ವಿಜಯಂ ಹಾಗೂ ಇನ್ನಿತರ ಕೃತಿಗಳು ಇವೆ. ನಡುಗನ್ನಡ ಹದಿನೈದನೆಯ ಮತ್ತು ಹದಿನೆಂಟನೆಯ ಶತಮಾನದ ನಡುವಣ ಕಾಲ ಕನ್ನಡ ಭಾಷೆ ಮತ್ತು ಸಾಹಿತ್ಯದ ಉಚ್ಛ್ರಾಯ ಕಾಲವಾಗಿತ್ತು. ಆ ಕಾಲದ ಅತ್ಯಂತ ಶ್ರೇಷ್ಠನೆನಿಸಿಕೊಂಡ ಕವಿ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂಬ ಕೃತಿಯೊಂದಿಗೆ ವಿಶ್ವವಿಖ್ಯಾತನಾದನು. ಮಹಾಭಾರತವನ್ನು ಆಧರಿಸಿದ ಕೃತಿ ಭಾಮಿನಿ ಷಟ್ಪದಿ ಛಂದಸ್ಸಿನ ಪದ್ಯಗಳನ್ನೊಳಗೊಂಡಿದೆ.ಶಾಸ್ತ್ರಿ (1955), p364 ಈ ಕಾಲದಲ್ಲಿ ಕನ್ನಡದ ಮೇಲೆ ಸಂಸ್ಕೃತದ ಧಾರ್ಮಿಕವೂ ಸಾಮಾಜಿಕವೂ ಆದ ಪ್ರಭಾವ ಮೂರ್ಧನ್ಯಾವಸ್ಥೆಯಲ್ಲಿತ್ತು."ಎಲ್ಲಾ ದ್ರಾವಿಡ ಭಾಷೆಗಳಲ್ಲಿಯೂ ಇರುವ ಸಾಹಿತ್ಯ ಅಗಾಧ ಪ್ರಮಾಣದಲ್ಲಿ ಸಂಸ್ಕೃತದ ಪ್ರಭಾವಕ್ಕೊಳಗಾಯಿತು. ಸಂಸ್ಕೃತ ಒಂದು ಮಂತ್ರದಂಡದಂತೆ ಸ್ಪರ್ಶ ಮಾತ್ರದಿಂದ ಒಂದೊಂದು ಭಾಷೆಯನ್ನೂ ಮೇಲಕ್ಕೆತ್ತಿತು". (ಶಾಸ್ತ್ರಿ 1955, p309)ತಕನೋಬು ತಕಹಾಷಿ 1995. ತಮಿಳು ಪ್ರೇಮ ಕವಿತೆಯೂ ಕಾವ್ಯವೂ. Brill's Indological library, v. 9. Leiden: E.J. Brill, p16,18" ಈ ಗ್ರಂಥದ ಕರ್ತೃ, ಸಂಘಕಾಲ ಸಾಹಿತ್ಯ ಅಗಾಧ ಪ್ರಮಾಣದಲ್ಲಿ ಸಂಸ್ಕೃತ ಕಾವ್ಯಪರಂಪರೆಯಿಂದ ಪ್ರಭಾವಗೊಂಡಿದೆಯೆಂಬುದನ್ನು ತೋರಿಸಿಕೊಡುತ್ತಾರೆ."- ಹರ್ಮನ್ ಜೋಸೆಫ್ ಹ್ಯೂಗೋ ಟಿಕ್ಕನ್‍. 2001. ದಕ್ಷಿಣಭಾರತದ ಕಾವ್ಯ: ಹಳೆಯ ಸಂಘಂ ತಮಿಳು ಕಾವ್ಯ. Groningen: Egbert Forsten ಈ ಕಾಲದಲ್ಲಿ ರಾಜ್ಯಾಡಳಿತ ಮತ್ತು ಜಮೀನ್ದಾರಿಗೆ ಸಂಬಂಧಿಸಿದ ಮರಾಠಿ ಮತ್ತು ಹಿಂದಿ ಭಾಷೆಯ ಹಲವಾರು ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದುವು. ಕನಕ ದಾಸರು, ಪುರಂದರ ದಾಸರು, ನರಸಿಂಹ ತೀರ್ಥರು, ವ್ಯಾಸತೀರ್ಥರು, ಶ್ರೀಪಾದ ರಾಯರು, ವಾದಿರಾಜ ತೀರ್ಥರು, ವಿಜಯ ದಾಸರು, ಜಗನ್ನಾಥ ದಾಸರು, ಪ್ರಸನ್ನವೆಂಕಟ ದಾಸರೇ ಮೊದಲಾದ ವೈಷ್ಣವ ಸಂತರು ಕನ್ನಡದಲ್ಲಿ ದಾಸರ ಪದಗಳೆಂದು ಖ್ಯಾತವಾದ ಶ್ರೇಷ್ಠ ಭಕ್ತಿಕಾವ್ಯಗಳನ್ನು ರಚಿಸಿದರು. ಅವುಗಳಲ್ಲಿ ಹೆಚ್ಚಿನವು ಇಂದಿಗೆ ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಿ ಆದರಿಸಲ್ಪಡುವ ಕೃತಿಗಳಾಗಿವೆ.ಶಾಸ್ತ್ರಿ (1955), pp 364–365 ಕನಕ ದಾಸರ ರಾಮಧಾನ್ಯ ಚರಿತೆ ಎಂಬ ಕೃತಿಯಲ್ಲಿ ಧಾನ್ಯಗಳ ರೂಪಕದೊಂದಿಗೆ ವರ್ಗ ಸಂಘರ್ಷವನ್ನು ಸೂಚಿಸಿರುವುದು ಮನಗಾಣಬಹುದು.ಈ ಕೃತಿಯಲ್ಲಿ ಕರುನಾಡಿನ ಎಲ್ಲಾ ಧಾನ್ಯಗಳಿಗಿಂತ ರಾಗಿಯೇ ಮಿಗಿಲೆನ್ನಲಾಗಿದೆ.(ಶಾಸ್ತ್ರಿ 1955, p365) ಇಲ್ಲಿ ಹೆಸರಿಸಲಾದ ಮತ್ತು ಇತರ ವೈಷ್ಣವ ಸಂತರು / ಹರಿದಾಸರು ತಮ್ಮ ದಾಸಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೂ ಆ ಮೂಲಕ ಕರ್ಣಾಟಕ ಸಂಗೀತಕ್ಕೂ ಶ್ರೇಷ್ಠವೆನಿಸಿದ ಕೊಡೂಗೆಗಳನ್ನು ನೀಡಿದರು. ಇವರಲ್ಲಿ ಅತ್ಯಂತ ಪ್ರಸಿದ್ಧರಾದವರು ಕರ್ಣಾಟಕ ಸಂಗೀತದ ಪಿತಾಮಹ ಎಂದು ಖ್ಯಾತರಾದ ಪುರಂದರದಾಸರು.ಅಯ್ಯರ್ (2006), p93ಶಾಸ್ತ್ರಿ(1955), p365 ಹೊಸಗನ್ನಡ ಹತ್ತೊಂಬತ್ತನೆಯ ಶತಮಾನದ ನಂತರದ ಕನ್ನಡ ಕೃತಿಗಳ ಭಾಷೆಯಲ್ಲಿ ಗಮನಾರ್ಹ ವ್ಯತ್ಯಯ ಕಂಡುಬಂದಿತು. ಈ ಬಗೆಯಲ್ಲಿ ರೂಪುಗೊಂಡ ಕನ್ನಡ ಭಾಷೆಯನ್ನು ಹೊಸಗನ್ನಡ ಎಂದು ಕರೆಯುತ್ತೇವೆ. ಹೊಸಗನ್ನಡ ಬರಹಗಾರರಲ್ಲಿ ಅತ್ಯಂತ ಪ್ರಮುಖನಾದವನು ಮುದ್ದಣ ಎಂಬ ಕಾವ್ಯನಾಮದೊಂದಿಗೆ ಪ್ರಸಿದ್ಧನಾದ ನಂದಳಿಕೆ ಲಕ್ಷ್ಮಿನಾರಣಪ್ಪ. ಮುದ್ದಣನ ಕಾವ್ಯ ಕನ್ನಡದಲ್ಲಿ ಹೊಸದೊಂದು ಪರಂಪರೆಗೆ ನಾಂದಿಯಾಗಿದ್ದರೂ ಭಾಷಾವಿದಗ್ಧರು ಗುಲ್ವಾಡಿ ವೆಂಕಟರಾಯರು ಬರೆದ ಇಂದಿರಾಬಾಯಿ ಅಥವಾ ಸದ್ಧರ್ಮ ವಿಜಯವು ಎಂಬ ಕೃತಿಯನ್ನು ಹೊಸಗನ್ನಡದ ಮೊದಲ ಕೃತಿಯನ್ನು ಗುರುತಿಸುತ್ತಾರೆ. ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯೆಂಬ ಅಗ್ಗಳಿಕೆಗೆ ಪಾತ್ರವಾಗಿದೆ. *೧೮೨೦ರಲ್ಲಿ ಜೋನ್ ಹಾನ್ಸ್ ಬೈಬಲಿನ ಕನ್ನಡದ ಅನುವಾದವನ್ನು ಪ್ರಕಟಿಸಿದರು.ಮೈಸೂರು ಆಡಳಿತದ ಕುರಿತಾದ ವರದಿ- ಪು. ೯೦ ಮೈಸೂರು, ೧೮೬೪ "ಕನ್ನಡದಲ್ಲಿ ಮೊದಲ ಬಾರಿಗೆ ಅಚ್ಚುಗೊಂಡ ಕೃತಿಯ ಬಗ್ಗೆ ವಿವರಗಳು ದೊರೆತಿಲ್ಲ. ಆದರೆ ೧೮೧೭ರಲ್ಲಿ ವಿಲಿಯಂ ಕಾರಿ ರಚಿಸಿ ಶ್ರೀರಾಮಪುರದಿಂದ ಪ್ರಕಾಶನಗೊಂಡ ಕಾನರೀಸ್ ವ್ಯಾಕರಣ ಎಂಬ ಕೃತಿ ಲಭ್ಯವಾಗಿದೆ. ಮತಗ್ರಂಥಗಳ ಕನ್ನಡ ಅನುವಾದಗಳು ಸುಮಾರು ಇದೇ ಕಾಲಘಟ್ಟದಲ್ಲಿ ಪ್ರಕಾಶನಗೊಂಡುವು. ಅಚ್ಚುಗೊಂಡ ಮೊದಲ ಕಾದಂಬರಿ ಪಿಲ್‍ಗ್ರಿಂಸ್ ಪ್ರೋಗ್ರೆಸ್ ಎಂಬ ಕೃತಿಯಾಗಿದೆ. ಕಾನರೀಸ್ ಪ್ರೋವರ್ಬ್ಸ್ (ಕನ್ನಡ ಗಾದೆಗಳು) ಎಂಬ ಕೃತಿಯೂ ಮೇರಿ ಮಾರ್ತ್ ಷೆರ್ವುಡ್ ಬರೆದ ದ ಹಿಸ್ಟರಿ ಆಫ್ ಹೆನ್ರಿ ಅಂಡ್ ಹಿಸ್ ಬೇರರ್ ಎಂಬ ಕೃತಿಯೂ ಕ್ರಿಸ್ತಿಯನ್ ಗೋತ್ಲೋವ್ ಬಾರ್ತನು ಬರೆದ ಬೈಬಲ್ ಸ್ಟೋರೀಸ್ ಮತ್ತು ಕನ್ನಡ ಸ್ತೋತ್ರ ಪುಸ್ತಕ ಇಲ್ಲಿ ಪ್ರಕಾಶನಗೊಂಡವು.ಮಿಷನ್ಸ್ ಇನ್ ಸೌತ್ ಇಂಡಿಯಾ - ಪುಟ ೫೬, ಜೋಸೆಫ್ ಮುಲ್ಲನ್ಸ್ - ೧೮೫೪ "Among those of the former are tracts on Caste, on the Hindu gods ; Canarese Proverbs ; Henry and his Bearer ; the Pilgrim's Progress; Barth's Bible Stories; a Canarese hymn book" ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಹಲ ಬಗೆಯ ಚಳುವಳಿಗಳಿಂದ ಪ್ರಭಾವಗೊಂಡಿದೆ. ಇವುಗಳಲ್ಲಿ ಪ್ರಮುಖವಾದುವು ನವೋದಯ. ನವ್ಯ, ನವ್ಯೋತ್ತರ, ದಲಿತ, ಬಂಡಾಯ ಎಂಬಿವುಗಳಾಗಿವೆ. ಪ್ರಸ್ತುತ ಕನ್ನಡ ಸಾಹಿತ್ಯ ಸಮಾಜದ ಎಲ್ಲಾ ವರ್ಗಗಳನ್ನೂ ತಲುಪುತ್ತಲಿದೆ. ಅಷ್ಟಲ್ಲದೆ ಕನ್ನಡದಲ್ಲಿ ಪ್ರಸಿದ್ಧರೂ ಶ್ರೇಷ್ಠರೂ ಆದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ. ಗೋಕಾಕ್ ಮುಂತಾದ ಕವಿಗಳೂ ಸಾಹಿತಿಗಳೂ ಬಾಳಿ ಬದುಕಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಎಂಟು ಸಾರಿ ಜ್ಞಾನಪೀಠ ಪುರಸ್ಕಾರ ದೊರೆತಿದೆ. ಭಾರತೀಯ ಭಾಷೆಗಳ ಕೃತಿಗಳಿಗೆ ದೊರಕುವ ಜ್ಞಾನಪೀಠ ಪುರಸ್ಕಾರವು ಎಂಟು ಬಾರಿ ಕನ್ನಡ ಭಾಷೆಗೆ ದೊರೆಯಿತು. ಹಲವು ಬಾರಿ ಕೇಂದ್ರ ಸಾಹಿತ್ಯ ಅಕಾದೆಮಿ ಪುರಸ್ಕಾರಗಳೂ ಕನ್ನಡ ಭಾಷೆಗೆ ಲಭ್ಯವಾಗಿವೆ. ದಿಲ್ಲಿಯ ಕೆ. ಕೆ. ಬಿರ್ಲಾ ಫೌಂಡೇಷನ್ ಕೊಡಮಾಡುವ ಸರಸ್ವತಿ ಸಮ್ಮಾನವೂ ಕನ್ನಡ ಭಾಷೆಗೆ ಲಭ್ಯವಾಗಿದೆ. ಎಸ್. ಎಲ್. ಭೈರಪ್ಪನವರ ಮತ್ತು ಶಿವರಾಮ ಕಾರಂತರ ಕೃತಿಗಳು ಭಾರತದ ಹದಿನಾಲ್ಕು ಭಾಷೆಗಳಲ್ಲಿ ಅನುವಾದಗೊಂಡಿವೆ. ಕನ್ನಡ ಉಪಭಾಷೆಗಳು ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ,ಕೋಟಗನ್ನಡ, ಹವ್ಯಕ ಕನ್ನಡ, ಅರೆಭಾಷೆ (ಗೌಡಕನ್ನಡ), ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ.http://www.ethnologue.com/language/kan 20 dialects of Kannada. ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಡಿಸಲ್ಪಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು. ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಬಡಗ ಭಾಷೆಯನ್ನು ಬರೆಯಲು ಕನ್ನಡ ಲಿಪಿಯನ್ನು ೧೮೯೦ರಲ್ಲೇ ಉಪಯೋಗಿಸಲಾಗುತ್ತಿತ್ತು.http://gospelgo.com/q/Badaga%20Bible%20-%20Gospel%20of%20Luke.pdf ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ. ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ 'ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬ ಗ್ರಂಥದ ಪ್ರಕಾರ ಕನ್ನಡ ಭಾಷೆ ಒಂದು ಗುಪ್ತಭಾಷೆಯಾಗಿದ್ದಿತು (ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದಕಾಲದಿಂದ ಕನ್ನಡವೂ ಸೇರಿದಂತೆ ೪ ಗುಪ್ತಭಾಷೆಗಳು ಇದ್ದುವು). ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. "ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಮತ್ತು ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ. ಕನ್ನಡ ಭಾಷೆ ಈಗ ವ್ಯಾಪಾರಿ ರಂಗದಲ್ಲೂ ಮುಂಚೂಣಿಯ ಭಾಷೆಯಾಗಿ ಬೆಳೆಯುತ್ತಿದೆ. ಉದಾಹರಣೆಗೆ: ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತುಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್ ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂದೆನ್ನುವುದನು ಕಲಿಸಿದನು ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರುಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ ಭೌಗೋಳಿಕ ವ್ಯಾಪಕತೆ ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತಿದೆ ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಕೇರಳ, ಗೋವಾ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ) ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ, ಇಂಗ್ಲೆಂಡ್ ಮತ್ತು ಕೊಲ್ಲಿ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರಲ್ಲಿ ಹೊರದೇಶಗಳಲ್ಲಿ ವಾಸಿಸುತ್ತಿರುವವರು ಉದ್ಯೋಗ ನಿಮಿತ್ತ ಕರ್ನಾಟಕದಿಂದ ವಲಸೆ ಹೋದವರಾಗಿದ್ದಾರೆ. ಇಂದಿಗೆ ಕೇರಳದಲ್ಲಿರುವ ಕಾಸರಗೋಡು ೧೯೫೬ರ ಭಾಷಾವಾರು ಪ್ರಾಂತ್ಯ ವಿಂಗಡಣೆಗಿಂತ ಪೂರ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಅಧಿಕೃತ ಮಾನ್ಯತೆ ಮತ್ತು "ಅಭಿಜಾತ ಭಾಷೆ (ಚೆನ್ನುಡಿ)" ಸಂಸ್ಕೃತಿ ಸಚಿವಾಲಯ ನೇಮಿಸಿದ ಭಾಷಿಕ ನಿಪುಣರು ಶಿಫಾರಸ್ಸುಗಳನ್ನು ಅನುಮೋದಿಸುತ್ತ ಕೇಂದ್ರ ಸರಕಾರ ಕನ್ನಡ ಭಾಷೆಗೆ ಅಭಿಜಾತ ಭಾಷೆ ಎಂಬ ಗೌರವವನ್ನಿತ್ತು ಆದರಿಸಿತು.Kuiper (2011), p.74 ಅದಲ್ಲದೆ ಭಾರತದ ಭಾಷೆಗಳಲ್ಲಿ ನಾಲ್ಕನೆಯ ಗೌರವ ಸ್ಥಾನವೂ ಕನ್ನಡಕ್ಕೆ ದೊರೆಯಿತು. ಜುಲೈ 2011ರಲ್ಲಿ ಮೈಸೂರಿನ ಕೇಂದ್ರೀಯ ಭಾರತೀಯ ಭಾಷೆಗಳ ಅಧ್ಯಯನ ಸಂಸ್ಥೆಯಲ್ಲಿ ಅಭಿಜಾತ ಕನ್ನಡದ ಅಧ್ಯಯನಕ್ಕಾಗಿ ಪ್ರತ್ಯೇಕ ಕೇಂದ್ರ ಆರಂಭಗೊಂಡಿತು. ನಿಘಂಟು ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿದವರು ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್. ಈ ನಿಘಂಟು ೭೦,೦೦೦ಕ್ಕೂ ಅಧಿಕ ಕನ್ನಡ ಪದಗಳನ್ನು ಒಳಗೊಂಡಿದೆ. ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವೊಂದನ್ನೂ ರಚಿಸಿದ್ದಾರೆ.Ferdinand Kittel. rnNxtHfKxZAC&pg=PP11&lpg=PP11&ots= p8gHyBeg7y&dq= kannada+ grammar&sig=UEOhCXLrlp_eSLfYwh7GOvwVK4Q#PPP1,M1 A Grammar of the Kannada Language: Comprising the Three Dialects of the Language. 1993. Asian Educational Services. ISBN 81-206-0056-8 ಹೊಸಗನ್ನಡ ಕಾಲಘಟ್ಟದಲ್ಲಿ ಮೊದಲ ಕನ್ನಡ-ಕನ್ನಡ ನಿಘಂಟು ರಚಿಸಿದವರು ಪ್ರೊ.ಜಿ.ವೆಂಕಟಸುಬ್ಬಯ್ಯ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ೯,೦೦೦ಕ್ಕೂ ಅಧಿಕ ಪುಟಗಳನ್ನೊಳಗೊಂಡ ಈ ನಿಘಂಟು ಒಂಬತ್ತು ಸಂಪುಟಗಳಲ್ಲಿ ಬಿಡುಗಡೆಗೊಂಡಿದೆ. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕನ್ನಡ-ಇಂಗ್ಲೀಷ್ ನಿಘಂಟನ್ನೂ ಕ್ಲಿಷ್ಟ ಪದಕೋಶ ಎಂಬ ಕನ್ನಡದ ಕ್ಲಿಷ್ಟ ಪದಗಳನ್ನೊಳಗೊಂಡ ನಿಘಂಟನ್ನೂ ರಚಿಸಿದ್ದಾರೆ. ಕನ್ನಡ ಅಕ್ಷರಮಾಲೆ ಕನ್ನಡ ಅಕ್ಷರಮಾಲೆಯಲ್ಲಿ ೪೯ ಅಕ್ಷರಗಳಿದ್ದು, ಇದು ಒಂದು ಶಾಬ್ದಿಕ ಅಕ್ಷರಮಾಲೆ. ಕನ್ನಡ ಅಕ್ಷರಮಾಲೆಯಲ್ಲಿ ಬರುವ ಅಕ್ಷರಗಳು ಸರಿ ಸುಮಾರು ಎಲ್ಲಾ ಭಾರತೀಯ ಭಾಷೆಗಳಲ್ಲಿ ಬರುತ್ತವೆ. ತೆಲುಗು ಲಿಪಿಗೆ ಕನ್ನಡ ಲಿಪಿಯೊಂದಿಗೆ ನಿಕಟವಾದ ಹೋಲಿಕೆಯಿದೆ ಮತ್ತು ಈ ಎರಡು ಲಿಪಿಗಳ ಮೂಲ ಒಂದೇ ಆಗಿದೆ. ಕನ್ನಡ ಮತ್ತು ತೆಲುಗು ಲಿಪಿಗಳೆರಡೂ ಕದಂಬ ಲಿಪಿಯಿಂದ ರೂಪುಗೊಂಡಂಥವು. ಕನ್ನಡ ಲಿಪಿ ಒತ್ತಕ್ಷರ ಹಾಗೂ ಕಾಗುಣಿತಗಳ ದೆಸೆಯಿಂದ ಸಾಕಷ್ಟು ಸಂಕೀರ್ಣವಾದದ್ದು. ಕನ್ನಡ ಬರವಣಿಗೆಯ ಪ್ರತಿ ಚಿಹ್ನೆ ಒಂದು ಶಾಬ್ದಿಕ ಮಾತ್ರೆಯನ್ನು ಪ್ರತಿನಿಧಿಸುತ್ತದೆ. ಇಂಗ್ಲೀಷಿನಂಥ ಭಾಷೆಗಳಲ್ಲಿ ಒಂದು ಚಿಹ್ನೆ ಒಂದು ಶಬ್ದವನ್ನು ಮಾತ್ರ ಪ್ರತಿನಿಧಿಸುತ್ತದೆ. ಮಾನವನು ತಿಳಿಸಬೇಕಾದ ಅರ್ಥಕ್ಕೆ ಭಾಷೆ ಸಂಕೇತವಾದರೆ, ಭಾಷೆಗೆ ಲಿಪಿ ಸಂಕೇತವಾಗುತ್ತದೆ. ಚಿತ್ರ ಲಿಪಿಯಿಂದ ಹಿಡಿದು ಇಂದಿನ ಮುದ್ರಣ ಮತ್ತು ಕಂಪ್ಯೂಟರ್ ಲಿಪಿಯವರೆಗೆ ಲಿಪಿಗಳು ಬೆಳೆದಿವೆ. ಭಾರತದಲ್ಲಿರುವ ಅನೇಕ ಭಾಷಾಲಿಪಿಗಳಿಗೂ ಅಶೋಕನ ಶಾಸನಗಳಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಬ್ರಾಹ್ಮಿ ಲಿಪಿಯೇ ಮೂಲ. ಕನ್ನಡದ ಅಕ್ಷರ ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಬಗೆಯನ್ನು ವಿಸ್ತೃತ ಅಧ್ಯಯನಗಳು ನಡೆದಿವೆ. ವಿದ್ವಾಂಸರು ಈ ಬಗ್ಗೆ ವರ್ಣಮಾಲೆಯ ಪಟಗಳನ್ನು ರಚಿಸಿ ಶತಮಾನಗಳ ಅಕ್ಷರ ಸ್ವರೂಪಗಳನ್ನು ಗುರುತಿಸಿದ್ದಾರೆ. ಇಂಥ ಅಧ್ಯಯನಗಳ ಸಹಾಯದೊಂದಿಗೆ ಅಕ್ಷರಗಳು ಮಾರ್ಪಟ್ಟ ಬಗೆಯನ್ನು ಕಂಡರಿಯಲು ಸಾಧ್ಯವಿದೆ. ಮುದ್ರಣದ ಆರಂಭದೊಂದಿಗೆ ಕನ್ನಡ ಲಿಪಿಗೆ ಈಗಿನ ರೂಪ ನೆಲೆನಿಂತಿರುವುದು ಗಮನಾರ್ಹ. ಪ್ರಪಂಚದಲ್ಲಿರುವ ೧೮ ಬಗೆಯ ಲಿಪಿಗಳಲ್ಲಿ ೮ ಅಕ್ಷರ ಲಿಪಿಗಳು. ಉಳಿದಂತೆ ಚಿತ್ರಲಿಪಿಯೇ ಮುಂತಾದುವುಗಳನ್ನು ಕಾಣಬಹುದು. ಭಾರತದಲ್ಲಿ ಅನೇಕ ಭಾಷೆಗಳವು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಲಿಪಿಗಳಾಗಿವೆ. ಪಾರ್ಸೋ-ಅರಬ್ಬಿ ಲಿಪಿಗಳೂ ಭಾರತದಲ್ಲಿ ರೂಢಿಯಲ್ಲಿವೆ. ಉದಾ: ಉರ್ದು, ಕಾಶ್ಮೀರಿ ಮತ್ತು ಪುಷ್ತು. ಕನ್ನಡ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು: ಸ್ವರಗಳು ಹ್ರಸ್ವ ಅ ಇ ಉ ಋ ಎ   ಒ   ದೀರ್ಘ ಆ ಈ ಊ ೠ ಏ ಐ ಓ ಔ ಯೋಗವಾಹಗಳು ಅಂ (ಅನುಸ್ವಾರ) ಅಃ (ವಿಸರ್ಗ) ವರ್ಗೀಯ ವ್ಯಂಜನಗಳು ಕಂಠ್ಯ (ಕವರ್ಗ) ಕ ಖ ಗ ಘ ಙ ತಾಲವ್ಯ (ಚವರ್ಗ) ಚ ಛ ಜ ಝ ಞ ಮೂರ್ಧನ್ಯ (ಟವರ್ಗ) ಟ ಠ ಡ ಢ ಣ ದಂತ್ಯ (ತವರ್ಗ) ತ ಥ ದ ಧ ನ ಓಷ್ಠ್ಯ (ಪವರ್ಗ) ಪ ಫ ಬ ಭ ಮ ಅವರ್ಗೀಯ ವ್ಯಂಜನಗಳು ಅವರ್ಗೀಯ ವ್ಯಂಜನಗಳು‍ ಯ ರ ಲ ವ ಶ ಷ ಸ ಹ ಳ ಹೀಗೆ ಒಟ್ಟು ೪೯ ವರ್ಣಗಳು ಕನ್ನಡದಲ್ಲಿರುವಂಥವು. ವರ್ಣ ವಿಂಗಡಣೆ ವಿಭಜಿಸಲು ಸಾಧ್ಯವಿಲ್ಲದ ಧ್ವನಿಯನ್ನು ವರ್ಣವೆನ್ನಲಾಗುತ್ತದೆ ಮತ್ತು ಭಾಷೆಯ ಅತ್ಯಂತ ಕಿರಿಯ ಅಂಶವನ್ನು ಸ್ವರವೆಂದು ಕರೆಯಲಾಗುತ್ತದೆ. (ಉದಾಃ ವಸ್ತ್ರ = ವ್+ಅ+ಸ್+ತ್+ರ್+ಅ) ಸ್ವತಂತ್ರವಾಗಿ ಉಚ್ಚರಿಸಬಹುದಾದ ವರ್ಣಗಳನ್ನು ಸ್ವರಗಳೆಂದೂ ಇತರ ವರ್ಣಗಳ ಸಹಾಯದಿಂದ ಉಚ್ಚರಿಸಬಹುದಾದ ವರ್ಣಗಳನ್ನೂ ವ್ಯಂಜನಗಳೆಂದೂ ಕರೆಯಲಾಗುತ್ತದೆ. ಸ್ವರಗಳ ವಿಧಗಳು ಸ್ವರಗಳನ್ನು ಅವುಗಳ ಉಚ್ಚಾರಣೆಗೆ ತೆಗೆದುಕೊಳ್ಳುವ ಕಾಲಾವಧಿಯನ್ನು ಅವಲಂಬಿಸಿ ಹ್ರಸ್ವಸ್ವರಗಳು, ಮತ್ತು ದೀರ್ಘಸ್ವರಗಳು ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ. ಹ್ರಸ್ವ ಸ್ವರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಛಂದಸ್ಸಿನಲ್ಲಿ ಒಂದು ಮಾತ್ರೆಯ ಕಾಲ ಎಂದು ಕರೆಯಲಾಗಿದೆ. ಉದಾಹರಣೆಗೆ: ಅ, ಇ, ಉ, ಋ, ಎ, ಒ. ದೀರ್ಘಸ್ವರಗಳ ಉಚ್ಚಾರಣೆಗೆ ಎರಡು ಮಾತ್ರೆಗಳ ಕಾಲವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ: ಆ, ಈ, ಊ, ೠ, ಏ, ಐ, ಓ, ಔ. "ಋ"ಕಾರವನ್ನು ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಪದಗಳಲ್ಲಿ ಮಾತ್ರ ಕಾಣುತ್ತೇವೆ. ಉದಾಹರಣೆಗೆ: ಋಷಿ, ಋಜುವಾತು, ಋಣ, ಋತುಮಾನ. "ಐ" ಮತ್ತು "ಔ"ಗಳ ಸ್ವರೂಪ: ಮೇಲಿನ ವರ್ಣಗಳು ಎರಡು ವಿಭಿನ್ನ ಸ್ವರಗಳ ಸಂಯೋಗದಿಂದ ಉಂಟಾಗುತ್ತವೆ. ಅ ಮತ್ತು ಇ ಸ್ವರಗಳ ಸಂಧಿಯಲ್ಲಿ "ಐ"ಕಾರವು ಉಂಟಾಗಿದ್ದು, ಅ ಮತ್ತು ಉ ಸ್ವರಗಳಿಂದ "ಔ"ಕಾರವು ಜನಿಸಿದೆ. ಈ ಎರಡು ಸ್ವರಗಳು ವಿಜಾತೀಯ ಸ್ವರಗಳ ಸಂಧಿಯಿಂದ ಆಗಿದ್ದು, ತಮ್ಮ ದೀರ್ಘ ಸ್ವರೂಪದಿಂದಲಾಗಿ ದೀರ್ಘಸ್ವರಗಳ ಪಟ್ಟಿಗೆ ಸೇರುತ್ತವೆ. ವ್ಯಂಜನದ ವಿಧಗಳು ವ್ಯಂಜನಗಳನ್ನು ಉಚ್ಚಾರಣೆಯ ಆಧಾರದ ಮೇಲೆ "ಕ್"ನಿಂದ "ಮ್"ಕಾರದ ವರೆಗಿನ ಇಪ್ಪತ್ತೈದು ವರ್ಣಗಳನ್ನು ವರ್ಗೀಯ ವ್ಯಂಜನಗಳೆಂದು ಕರೆಯುತ್ತೇವೆ. ಕ ಖ ಗ ಘ ಙ; ಚ ಛ ಜ ಝ ಞ; ಟ ಠ ಡ ಢ ಣ; ತ ಥ ದ ಧ ನ; ಪ ಫ ಬ ಭ ಮ. "ಯ" ಕಾರದಿಂದ "ಳ" ಕಾರದ ವರೆಗಿನ ವ್ಯಂಜನಗಳನ್ನು ಅವರ್ಗೀಯ ವ್ಯಂಜನಗಳೆನ್ನುತ್ತೇವೆ. ಯ ರ ಲ ವ ಶ ಷ ಸ ಹ ಳ. ಲಿಪ್ಯಂತರಣ ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ. ಪಿ. ರಾವ್ರವರು. ಕನ್ನಡ ಅಂಕೆಗಳು ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ. ಕನ್ನಡ ಅಂಕೆಗ‍ಳುಇಂಡೋ ಅರೇಬಿಯನ್ ಅಂಕೆಗಳು ೦ ಸೊನ್ನೆ 0 ೧ ಒಂದು 1 ೨ ಎರಡು 2 ೩ ಮೂರು 3 ೪ ನಾಲ್ಕು 4 ೫ ಐದು 5 ೬ ಆರು 6 ೭ ಏಳು 7 ೮ ಎಂಟು 8 ೯ ಒಂಬತ್ತು 9 ಚಿತ್ರಸಂಚಯ ಕ್ರಿ.ಶ.370–450ರ ಅವಧಿಯ ಹಿರಿತನ ತಂದ ಕನ್ನಡ ಶಾಸನ ಹಲ್ಮಿಡಿಯ ಶಾಸನವನ್ನು ಇದುವರೆಗೂ ಕನ್ನಡದ ಪ್ರಾಚೀನ ಶಾಸನವೆನ್ನಲಾಗುತ್ತಿತ್ತು. ಆದರೆ ಕೇಂದ್ರ ಪುರಾತತ್ವ ಇಲಾಖೆ ಹಲ್ಮಿಡಿಗಿಂತಲೂ ಹಳೆಯದಾದ ಶಾಸನವನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಹತ್ತಿರದ ತಾಳಗುಂದಲ್ಲಿ ಪತ್ತೆ ಹಚ್ಚಲಾಗಿದೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತಾಳಗುಂದದಲ್ಲಿ ಈಚೆಗೆ ಸಿಕ್ಕಿರುವ ಶಾಸನಗಳು ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ. ಪುರಾತತ್ವ ಇಲಾಖೆಯ ಇಲಾಖೆಯು ನಿವೃತ್ತ ಅಧೀಕ್ಷಕ ಟಿ.ಎಂ. ಕೇಶವ ಅವರ ನೇತೃತ್ವದಲ್ಲಿ ಅಧ್ಯಯನ ನಡೆಸಿ, ಮೊದಲ ಬಾರಿಗೆ 2012–13ರಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಗಂಗರ ಭೂ ವಿಕ್ರಮ (ಕ್ರಿ. ಶ. 630–670) ಕಾಲದ 13 ಚಿನ್ನದ ಆನೆ ವರಹ ಹಾಗೂ ಒಂದು ವಿಜಯನಗರ/ಕೆಳದಿ ಅರಸರ ನಾಣ್ಯ ಪತ್ತೆಯಾಯಿತು. ಕಲಚೂರಿ ಕಾಲದ ತಾಮ್ರದ ತಟ್ಟೆಗಳು, ಸಾವಿರಾರು ವರ್ಷದ ಹಿಂದಿನ ಪೂಜಾ ಸಾಮಗ್ರಿಗಳು, ಮಣ್ಣಿನ ಹಣತೆ ಲಭಿಸಿದವು. ಈ ಗ್ರಾಮವು ಶಿರಾಳಕೊಪ್ಪದಿಂದ ಆರು ಕಿ.ಮೀ. ಅಂತರದಲ್ಲಿದೆ. ಕನ್ನಡದ ಮೂಲ ಬೇರುಗಳು ಇಲ್ಲಿಂದಲೇ ಟಿಸಿಲೊಡೆದು ಜಗತ್ತಿನಾದ್ಯಂತ ಹಬ್ಬಿವೆ. ಕನ್ನಡದ ಪ್ರಥಮ ದೊರೆ ಮಯೂರ ವರ್ಮನ ಜನ್ಮಸ್ಥಳವಾಗಿರುವ ತಾಳಗುಂದ ಹಲವು ಪ್ರಥಮಗಳ ಮುಕುಟವನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ಪ್ರಥಮ ಸಾಮ್ರಾಜ್ಯ ಎನಿಸಿರುವ ಕದಂಬ ಸಾಮ್ರಾಜ್ಯ ಸ್ಥಾಪನೆ, ಪ್ರಾಚೀನ ಶಿವಲಿಂಗ, ಕೆರೆ, ಶಿಲಾಶಾಸನ, ಕನ್ನಡ ಶಾಲೆ, ವಿಶ್ವವಿದ್ಯಾಲಯ ಸೇರಿದಂತೆ ಕನ್ನಡ ನಾಡಿನ ಹಲವಾರು ಪ್ರಥಮಗಳು ತಾಳಗುಂದ ಗ್ರಾಮದಲ್ಲಿ ನಿರ್ಮಾಣವಾಗಿವೆ. ಈಗ ಆ ಗುಂಪಿಗೆ ಕರ್ನಾಟಕದ ಪ್ರಾಚೀನ ಕನ್ನಡ ಶಾಸನ ಪತ್ತೆಯಾಗಿ ಸೇರ್ಪಡೆಯಾಗಿದೆ. ಈ ಶಾಸನವನ್ನು 2014ರಲ್ಲಿಯೇ ಪತ್ತೆ ಹಚ್ಚಲಾಗಿತ್ತು. ಹಲವಾರು ಅಧ್ಯಯನಗಳ ನಂತರ ಈ ಶಾಸನವು ಕ್ರಿ. ಶ. 370–450ರ ಅವಧಿಯದು ಎಂದು ಕಳೆದ ಡಿಸೆಂಬರ್‌ನಲ್ಲಿ ಪುರಾತತ್ವ ಇಲಾಖೆ ಪ್ರಕಟಿಸಿದೆ. ಇಲಾಖೆ 2013–14ರಲ್ಲಿ ಮತ್ತೆ ಪ್ರಾಯೋಗಿಕ ಉತ್ಖನನ ನಡೆಸಿತು. ಆಗ ಒಂದು ಸಿಂಹಕಟಾಂಜನ (ಶಾಸನ) ಲಭ್ಯವಾಯಿತು. ಅದರಲ್ಲಿ ವಜಿನಾಗ(ಯ್ಯ) ಎಂಬ ಅಂಬಿಗನಿಗೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಶಾಸನದಲ್ಲಿ ತುಂಡರಿಸಿದ ಏಳು ಸಾಲುಗಳಿವೆ. "ಕೊಟ್ಟಾರ್, ನಾಲ್ಕು, ಬೊಯ್ಗರಾ, ನಾಗಣ, ಪುಲಿಂದಿಗೆ, ಕೊಳ್ಳೆ" ಎಂಬ ಕನ್ನಡ ಶಬ್ದಗಳು ಸೇರಿದಂತೆ ಸಂಸ್ಕೃತ ಹಾಗೂ ಕನ್ನಡ ಶಬ್ದಗಳನ್ನು ಬಳಸಲಾಗಿದೆ. ನೋಡಿ ವಿಕಿಪೀಡಿಯ:ಯೋಜನೆ/ಕನ್ನಡ ಸಾಹಿತ್ಯ ಚರಿತ್ರೆ ಅಪೂರ್ಣವಾಗಿದೆ. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡದಲ್ಲಿ ನವ್ಯಕಾವ್ಯ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲಕೃಷ್ಣ ಅಡಿಗ, ಎಂ ಹೆಚ್ಚಿಗೆ ಓದಲು ನೋಡಿ ಕನ್ನಡ ಸಾಹಿತ್ಯ ಕನ್ನಡ ವ್ಯಾಕರಣ ಭಾರತೀಯ ಭಾಷೆಗಳು ದ್ರಾವಿಡ ಭಾಷೆಗಳು ಸಮುಚ್ಚಯ ಪದಗಳು ಕನ್ನಡ ಅಕ್ಷರಮಾಲೆ ಬ್ರಾಹ್ಮಿ ಲಿಪಿ ಕರ್ನಾಟಕ ಕನ್ನಡ ವಿಕಿಯಲ್ಲಿ ಕನ್ನಡ ಟೈಪಿಂಗ್ ಬಾಹ್ಯ ಸಂಪರ್ಕಗಳು ಪ್ರಾಕೃತ, ಸಂಸ್ಕೃತ, ಕನ್ನಡ : ಆರಂಭಕಾಲದ ಭಾಷಾಬಾಂಧವ್ಯ:ಭಾಷೆಗಳ ಬಳ್ಳಿ ಮತ್ತು ಅಕ್ಷರಸಮಾಜ;ಷ. ಶೆಟ್ಟರ್;5 Feb, 2017 ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಇತಿಹಾಸ ಕನ್ನಡ ಅಕ್ಷರಗಳಿಗೆ ಅಧಿಕೃತವಾದ ಯೂನಿಕೋಡ್ ಪಟ್ಟಿ ಕನ್ನಡ ಭಾಷೆಯಲ್ಲಿ ಗಣಕೀಕರಣದ ವಿವರಗಳು ಕನ್ನಡ ಕನ್ನಡ ಕಲಿಯಿರಿ (Learn Kannada) ಕನ್ನಡ ಬರುತ್ತೆ (Learn spoken Kannada) ಕನ್ನಡ ಲಿಪಿಯ ವಿಕಾಸ ಕನ್ನಡ ಸಾಹಿತ್ಯ ಪರಿಷತ್ತು: ಕನ್ನಡವೆಂಬ ಜ್ಞಾನದ ಭಾಷೆ; ಜಿ.ಎನ್ ದೇವಿ; ೨೮-೧೦-೨೦೧೮ [alvasnudisiri.com/media/press-release]ಭಾಷಣ | ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರೀಅಧ್ಯಕ್ಷರ ಭಾಷಣ Robert Zydenbos: A Manual of Modern Kannada. Heidelberg 2020 (Open Access: PDF-ರೂಪದಲ್ಲಿ) ಉಲ್ಲೇಖಗಳು ವರ್ಗ:ಭಾರತೀಯ ಭಾಷೆಗಳು ವರ್ಗ:ದ್ರಾವಿಡ ಭಾಷೆಗಳು ವರ್ಗ:ಕನ್ನಡ ವರ್ಗ:ಕರ್ನಾಟಕ
Main Page
https://kn.wikipedia.org/wiki/Main_Page
REDIRECT ಮುಖ್ಯ ಪುಟ
ಕನ್ನಡ ಸಾಹಿತ್ಯ
https://kn.wikipedia.org/wiki/ಕನ್ನಡ_ಸಾಹಿತ್ಯ
right|thumb ಇತಿವೃತ್ತ ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ [[ಕವಿರಾಜಮಾರ್ಗ] ನೃಪತುಂಗನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯನ ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು. ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ. ಹಳೆಗನ್ನಡ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫). ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.' ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ. ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ. ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ) ನಡುಗನ್ನಡ ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು. ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ. ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ. ವಚನ ಸಾಹಿತ್ಯ ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ. ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು. ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ). ಇವರಲ್ಲದೆ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ. ಕುಮಾರವ್ಯಾಸ ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ. ಅವನ ಜೀವನಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು, ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ . ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು. ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ. ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ. ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ. ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ. ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ. ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ. ಈತನ ಮೊದಲಿನ ಹೆಸರು ನಾರಯಣಪ್ಪ . ಕುವೆಂಪುರವರು ಕುಮಾರವ್ಯಾಸನನ್ನು ಕುರಿತು, ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು . ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು... ಎಂದಿದ್ದಾರೆ. ಪಂಪ ಕಲಿತವರ ಪಾಲಿನ ಕಲ್ಪವೃಕ್ಷ ವಾದರೆ, ಕುಮಾರವ್ಯಾಸ ಕಲಿಯದವರ ಪಾಲಿನ ಕಾಮಧೇನು. ದಾಸ ಸಾಹಿತ್ಯ ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) ೧೫ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು. ಈ ಪದ್ಯಗಳಿಗೆ ಸಾಮಾನ್ಯವಾಗಿ 'ಪದ' ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ. ದಾಸ ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (೧೪೯೪-೧೫೬೪) ಮತ್ತು ಕನಕದಾಸ(೧೫೦೯-೧೬೦೯). ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ. ಆಧುನಿಕ ಕನ್ನಡ ಕನ್ನಡದ ನವೋದಯ ನವೋದಯ ಎಂದರೆ ಹೊಸ ಹುಟ್ಟು/ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು. ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳ ಪುಸ್ತಕ ದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡು ಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು. ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕಾವ್ಯಕೃತಿ ಶ್ರೀ ರಾಮಾಯಣ ದರ್ಶನಂ. ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು-ಚೋಮನ ದುಡಿ, ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು ಮೊದಲಾದುವು. ಈ ಕಾಲದ ಪ್ರಸಿದ್ಧ ಕವಿಗಳು ಕುವೆಂಪು, ಬಿ.ಎಂ.ಶ್ರೀ, ದ.ರಾ.ಬೇಂದ್ರೆ, ಪು ತಿ ನ ಕೆ.ಎಸ್. ನರಸಿಂಹಸ್ವಾಮಿ, ಎಂ.ಗೋಪಾಲಕೃಷ್ಣ ಅಡಿಗ, ಪ್ರೊ‌.ನಿಸಾರ್ ಅಹಮದ್ ಚೆನ್ನವೀರ ಕಣವಿ ಮೊದಲಾದವರು. ಡಾ.ಚಂದ್ರಶೇಖರ್ ಕಂಬಾರ-ಕವಿ- ನಾಟಕಕಾರ - ಕಾದಂಬರಿಕಾರ- ಸಂಶೋಧಕ ಡಿ.ವಿ.ಜಿ. ಈ ಕಾಲದ ಪ್ರಸಿದ್ಧ ಕಾದಂಬರಿಕಾರರು ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ವಿ. ಕೃ. ಗೋಕಾಕ್ ಡಿ.ವಿ.ಗುಂಡಪ್ಪ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕೆ.ವಿ.ಅಯ್ಯರ್ ಮಂಜೇಶ್ವರ ಗೋವಿಂದ ಪೈ ತೀ ನಂ ಶ್ರೀ ಎಸ್. ಎಲ್. ಭೈರಪ್ಪ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಬಿ.ವಿ. ಕಾರಂತ ಮೊದಲಾದವರು. ನವ್ಯ ೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು. ಇತರ ಪ್ರಕಾರಗಳು ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು ರಾಜ್ಯದ ಹಲವರು ತಮ್ಮನ್ನು ಸ್ಥಳೀಯ ಬಾಷೆಯಲ್ಲಿ ಕಥೆ ಕಾದಂಬರಿ ಬರೆಯುವಲ್ಲಿ ಗುರುತಿಸಿಕೊಂಡರು. ಅದರಲ್ಲಿ ಬಾಳಾಸಾಹೇಬ ಲೋಕಾಪುರ ಅಮರೇಶ ನುಗಡೋಣಿ ಶಂಕರ ಬೈಚಬಾಳ ಲೋಕೇಶ ಅಗಸನಕಟ್ಟೆ ಮುಂತಾದ ಹಲವರನ್ನು ಇಲ್ಲಿ ಹೆಸರಿಸಬಹುದಾಗಿದೆ. ಪ್ರಶಸ್ತಿಗಳು ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು. ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಜನಸಂಪರ್ಕ ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ. ಹಳೆ ಕನ್ನಡದ ಗದ್ಯ/ಕವಿಗಳು ಕವಿರಾಜಮಾರ್ಗ - ಶ್ರೀವಿಜಯ ಛಂದೊಂಬುಧಿ - ನಾಗವರ್ಮ-1 ಕವಿಜೀಹ್ವಾಬಂಧನ - ಈಶ್ವರಕವಿ ಛಂದಸ್ಸಾರ - ಗುಣವರ್ಮ ನಂದಿಛಂದಸ್ಸು - ವೀರಭದ್ರ ವಡ್ಡಾರಾಧನೆ -ಶಿವಕೋಟ್ಯಾಚಾರ್ಯ ನಾಗವರ್ಮ-೨ ಉದಯಾದಿತ್ಯಾಲಂಕಾರ - ಉದಯಾದಿತ್ಯ ಶೃಂಗಾರ ರತ್ನಾಕರ - ಕಾಮದೇವ ಮಾಧವಾಲಂಕಾರ - ಮಾಧವ ರಸರತ್ನಾಕರ - ಸಾಳ್ವ ನರಪತಿಚರಿತೆ - ಲಿಂಗರಾಜ ಅಪ್ರತಿಮವೀರಚರಿತೆ - ತಿರುಮಲರಾಯ ಶಬ್ದಮಣಿದರ್ಪಣ - ಕೇಶಿರಾಜ ಸಂಬಂಧಿತ ಲೇಖನಗಳು ಕನ್ನಡ ಕರ್ನಾಟಕ ಭಾರತ ಕನ್ನಡ ಸಾಹಿತ್ಯ ಪ್ರಕಾರಗಳು| ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ಲಕ್ಷ್ಮೀಶ ಜೈಮಿನಿ ಭಾರತ ಜೈಮಿನಿ ಭಾರತದಲ್ಲಿ ನವರಸಗಳು ಜೈಮಿನಿ ಭಾರತದಲ್ಲಿ ಅಲಂಕಾರಗಳು ಕನ್ನಡ ಸಾಹಿತ್ಯ ಪರಿಷತ್ತು ಇಂಗ್ಲಿಷ್‍ನಲ್ಲಿ ಕನ್ನಡ ಸಾಹಿತ್ಯ ದಿ ಲೈಫ್ ಆಫ್ ಹರಿಶ್ಚಂದ್ರ;800 ವರ್ಷಗಳ ನಂತರ ಇಂಗ್ಲಿಷ್‌ನಲ್ಲಿ ಹರಿಶ್ಚಂದ್ರ ಕಾವ್ಯ;ಪ್ರಜಾವಾಣಿ ವಾರ್ತೆ;17 Jan, 2017 ಬಾಹ್ಯ ಅಂತರ್ಜಾಲ ತಾಣಗಳು `ಚಿಲುಮೆ' - ಕನ್ನಡ ಸಾಹಿತ್ಯ ತಾಣ History of Kannada Literature-ಕನ್ನಡ ಸಾಹಿತ್ಯದ ಚರಿತ್ರೆ ಕನ್ನಡ ಸಾಹಿತ್ಯದ ಚರಿತ್ರೆ (ಕನ್ನಡ ಪುಟ) ಕನ್ನಡ ಲೇಖಕರ ಛಾಯಾಚಿತ್ರಗಳು ಕನ್ನಡ ರಸಾಯನ ಭಾರತ ಸಾಹಿತ್ಯ ಅಕಾಡೆಮಿ ಪ್ರಶತಿ ಪುರಸ್ಕೃತ ಕನ್ನಡ ಸಾಹಿತಿಗಳು ಜ್ಞಾನಪೀಠ ಪುರಸ್ಕೃತ ಭಾರತೀಯ ಸಾಹಿತಿಗಳು ವರ್ಗ:ಸಾಹಿತ್ಯ ವರ್ಗ:ಕನ್ನಡ ವರ್ಗ:ಸಾಹಿತಿಗಳು
ಪಟ್ಟದಕಲ್ಲು
https://kn.wikipedia.org/wiki/ಪಟ್ಟದಕಲ್ಲು
ಪಟ್ಟದಕಲ್ಲು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಪಟ್ಟಣಗಳಲ್ಲಿ ಒಂದು. ಹಿಂದೂ ದೇವಸ್ಥಾನಗಳ ಶಿಲ್ಪಕಲೆಯ ಪ್ರಪ್ರಥಮ ಪ್ರಯೋಗಗಳನ್ನು ಪ್ರತಿನಿಧಿಸುವ ದೇವಾಲಗಳ ಗುoಪಿಗೆ ಪಟ್ಟದಕಲ್ಲು ಪ್ರಸಿದ್ಧ. ಇಲ್ಲಿನ ಶಿಲ್ಪಕಲೆಯ ವಿಶಿಷ್ಟತೆ - ದಕ್ಷಿಣಭಾರತದ ದ್ರಾವಿಡ ಶೈಲಿ ಹಾಗೂ ಉತ್ತರ ಭಾರತದ ಆರ್ಯ ಶೈಲಿ - ಎರಡನ್ನೂ ಇಲ್ಲಿ ಕಾಣಬಹುದು. ಪಟ್ಟದಕಲ್ಲು ಕೆಲಕಾಲ ದಕ್ಷಿಣ ಭಾರತದ ಚಾಲುಕ್ಯ ವoಶದ ರಾಜಧಾನಿಯಾಗಿತ್ತು . ಚಾಲುಕ್ಯ ವoಶದ ಅರಸರು ಏಳನೇ ಮತ್ತು ಎoಟನೇ ಶತಮಾನಗಳಲ್ಲಿ ಇಲ್ಲಿನ ದೇವಾಲಯಗಳನ್ನು ಕಟ್ಟಿಸಿದರು. ಇಲ್ಲಿ ಒoಬತ್ತು ಮುಖ್ಯ ದೇವಾಲಯಗಳು ಮತ್ತು ಒಂದು ಜೈನ ಬಸದಿ ಇವೆ. ಎಲ್ಲಕ್ಕಿoತ ಪ್ರಸಿದ್ಧವಾದುದು ಕ್ರಿ.ಶ. ಸುಮಾರು ೭೪೦ ರಲ್ಲಿ ಮಹಾರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ. ಇದನ್ನು ೨ನೇ ವಿಕ್ರಮಾದಿತ್ಯನು ಕಂಚಿಯ ಪಲ್ಲವರ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ಕಟ್ಟಿಸಲಾಯಿತು. ಇದು ಕಂಚಿಯ ಕೈಲಾಸನಾಥ ದೇವಾಲಯದಂತೆ ಇದ್ದು ಅದನ್ನು ನೋಡಿ ಸ್ಫೂರ್ತಿಗೊಂಡು ಕಟ್ಟಿಸಲಾಗಿದೆ.ಇಲ್ಲಿರುವ ಇತರ ಮುಖ್ಯ ದೇವಾಲಯಗಳೆಂದರೆ ಮಲ್ಲಿಕಾರ್ಜುನ ದೇವಾಲಯ ಹಾಗೂ ಪಾಪನಾಥ ದೇವಸ್ಥಾನ. ಈ ಸ್ಥಳ ಚಾಳುಕ್ಯರ ಮಟ್ಟಿಗೆ ಅತ್ಯಂತ ಪ್ರಮುಖ ಸ್ಥಳ. ಚಾಳುಕ್ಯರ ಎಲ್ಲ ದೊರೆಗಳು ಇಲ್ಲಿನ ಉತ್ತರವಾಹಿನಿಯಲ್ಲಿ ಸ್ನಾನಗೈದ ನಂತರವೇ ಪಟ್ಟಾಭಿಷಿಕ್ತರಾಗುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ 'ಪಟ್ಟದಕಲ್ಲು' ಎಂಬ ಹೆಸರು ಬಂದಿದೆ. ಕ್ರಿ ಶ 150ರಷ್ಟು ಹಿಂದೆಯೇ ಇತಿಹಾಸದಲ್ಲಿ ಈ ಊರಿನ ಪ್ರಸ್ತಾಪ ಸಿಗುತ್ತದೆ. ಪ್ರಸಿದ್ಧ ಇತಿಹಾಸಕಾರ ಟಾಲೆಮಿ ಉಲ್ಲೇಖದಲ್ಲಿ ಇದು 'ಪೇತಗಲ್' ಎಂದು ಅನೇಕ ಶಾಸನಗಳ್ಲಿ 'ಪಟ್ಟದ ಕಿಸುವೊಳಲ್' ಎಂದೂ ಉಲ್ಲೇಖಿತವಾಗಿದೆ. ಇಲ್ಲಿರುವ ಅನೇಕ ದೇವಾಲಯಗಳಲ್ಲಿ ಹತ್ತು ದೇವಾಲಯಗಳು ಶೈವ ಸಂಪ್ರದಾದವುಗಳಾಗಿದ್ದರೆ ಉಳಿದವು ಜೈನ ಹಾಗು ಇತರ ಮತಗಳ ದೇವಾಲಯಗಳಾಗಿವೆ. ಇಲ್ಲಿನ ದೇವಾಲಯಗಳಲ್ಲಿ ವಾಸ್ತುವಿನ್ಯಾಸ ಉತ್ತುಂಗವನ್ನು ತಲುಪಿದ್ದನ್ನು ಕಾಣುತ್ತೇವೆ.ಆ ಕಾರಣಕ್ಕಾಗೇ ಇಂದಿಗೂ ಅಸಂಖ್ಯ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಸಮುಚ್ಚಯದಲ್ಲಿನ ಗಮನಸೆಳೆಯುವ ಪ್ರಮುಖ ದೇವಾಲಯಗಳೆಂದರೆ ವಿರೂಪಾಕ್ಷ ಹಾಗು ಮಲ್ಲಿಕಾರ್ಜುನ ದೇವಾಲಯಗಳು. ಈ ಎರಡೂ ದೇವಾಲಯಗಳ ವಿಶೇಷತೆಯೆಂದರೆ ಇವುಗಳನ್ನು ೨ನೇ ವಿಕ್ರಮಾದಿತ್ಯನು ತಮ್ಮ ಸಾಂಪ್ರದಾಯಿಕ ವೈರಿಗಳಾಗಿದ್ದ ಪಲ್ಲವರ ಮೇಲೆ ಸಾಧಿಸಿದ ದಿಗ್ವಿಜಯದ ನೆನಪಿಗಾಗಿ ಅವನ ಇಬ್ಬರು ರಾಣಿಯರು ಕಟ್ಟಿಸಿರುವುದು. ಇವು ಕಂಚಿಯಲ್ಲಿನ ಕೈಲಾಸ್ ನಾಥರ್ ದೇವಾಲಯದ ವಾಸ್ತುವಿನಿಂದ ಪ್ರಭಾವಿತವಾಗಿರುವುದು ಎದ್ದು ಕಾಣುತ್ತದೆ. ಮಲ್ಲಿಕಾರ್ಜುನ ದೇವಾಲಯ|right ಅದರಲ್ಲೂ ವಿರೂಪಾಕ್ಷ ದೇವಾಲಯ ಒಂದು ಪರಿಪೂರ್ಣ ದೇವಾಲಯ ವಾಸ್ತುವಿಗೆ ಉದಾಹರಣೆಯಾಗಿದೆ. ಇದು ಕ್ರಿ ಶ 740ರಲ್ಲಿ ಹಿರಿಯ ರಾಣಿಯಾದ ಲೋಕಮಹಾದೇವಿಯಿಂದ ಕಟ್ಟಿಸಲ್ಪಟ್ಟಿದೆ. ಇದು ಪೂರ್ವಾಭಿಮುಖವಾಗಿದ್ದು ಮುಂದಿರುವ ತೆರೆದ ಮಂಟಪದಲ್ಲಿ ಸುಂದರವಾದ ನಂದಿ ವಿಗ್ರಹವಿದೆ. ಪಶ್ಚಿಮ ದಿಕ್ಕನ್ನು ಹೊರತುಪಡಿಸಿ ಉಳಿದೆಲ್ಲ ದಿಕ್ಕುಗಳಲ್ಲಿ ಮುಖಮಂಟಪವಿದ್ದು ದೇವಾಲಯದ ಒಳಗೆ ಸಭಾಮಂಟಪ ಹಾಗು ಪ್ರದಕ್ಷಿಣಾ ಪಥವಿದೆ. ಪ್ರವೇಶದಲ್ಲೇ ಇರುವ ವೇದಿಕೆ ಮೇಲೆ ವಸ್ತ್ರಾಭರಣಗಳಿಂದ ಶೋಭಿತರಾದ ರಾಜ ದಂಪತಿಗಳ ವಿವಿಧ ಭಂಗಿಯ ಶಿಲ್ಪಗಳು ಮನಸೆಳೆಯುತ್ತವೆ. ಇವು ವಿಕ್ರಮಾದಿತ್ಯ ಹಾಗು ರಾಣಿ ಲೋಕಮಹಾದೇವಿಯನ್ನು ಬಿಂಬಿಸುತ್ತವೆ(?). ಈ ದೇವಾಲಯದ ಶಿಲ್ಪಿ ಸರ್ವಸಿದ್ಧಿ ಆಚಾರಿ ಎಂಬುವವನು.ಇವನಿಗೆ ವಿಕ್ರಮಾದಿತ್ಯನು 'ಪೆರ್ಜೆರಿಪು' ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿರುವ ಬಗ್ಗೆ ಶಾಸನ ಬರೆಸಲಾಗಿದೆ. ಇಂಥ ಸುಂದರ ದೇವಾಲಯವೇ ಮುಂದೆ ರಾಷ್ಟ್ರಕೂಟರ ೧ನೇ ಕೃಷ್ಣನು ಎಲ್ಲೋರದಲ್ಲಿ ಕಟ್ಟಿಸಿದ ಕೈಲಾಸನಾಥ ಗುಹಾಲಯಕ್ಕೆ ಮುಖ್ಯ ಸ್ಫೂರ್ತಿಯಾಯಿತು. ಇದರ ಪಕ್ಕದಲ್ಲಿರುವುದೇ ಮಲ್ಲಿಕಾರ್ಜುನ ದೇವಾಲಯ. ಇದನ್ನು ವಿಕ್ರಮಾದಿತ್ಯನ ಮತ್ತೊಬ್ಬ ರಾಣಿ ತ್ರೈಲೋಕ್ಯದೇವಿಯು ಕ್ರಿ ಶ 743ರಲ್ಲಿ ನಿರ್ಮಿಸಿದಳು. ಈಗ ಇದು ಬಹುತೇಕ ಹಾಳಾಗಿದ್ದು ನೋಡುಗರಿಗೆ ಹಿಂದೊಮ್ಮೆ ಇದ್ದಿರಬಹುದಾದ ವೈಭವವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ. ಇದು ಕೂಡ ವಾಸ್ತು ವಿನ್ನ್ಯಾಸದಲ್ಲಿ ವಿರುಪಾಕ್ಷ ದೇವಾಲಯವನ್ನು ಹೋಲುತ್ತದೆ. ಇದನ್ನೂ ಅದೇ ಶಿಲ್ಪಿಗಳು ನಿರ್ಮಿಸಿರುವ ಸಾಧ್ಯತೆ ಇದೆ. ಇವೆರಡು ದೇವಾಲಯಗಳ ಹೊರತಾಗಿ ಇಲ್ಲಿನ ಸಮುಚ್ಚಯದಲ್ಲಿ ಕಾಶಿ ವಿಶ್ವನಾಥ, ಪಾಪನಾಥ ಹಾಗು ಜಿನಾಲಯಗಳೂ ಇವೆ. ಜಿನಾಲಯದಲ್ಲಿನ ಕಲ್ಲಿನ ಆನೆಗಳು ಹಾಗು ಮೇಲ್ಮಹಡಿಗೆ ಹೋಗಲು ಇರುವ ಕಲ್ಲಿನ ಏಣಿಗಳು ತುಂಬ ಆರ್ಷಕವಾಗಿವೆ. ಇಲ್ಲಿರುವ ಸ್ಮಾರಕಗಳ ಗುoಪನ್ನು ಯುನೆಸ್ಕೋ ೧೯೮೭ ರಲ್ಲಿ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ. ವರ್ಗ:ಇತಿಹಾಸ ವರ್ಗ:ಪ್ರವಾಸೋದ್ಯಮ ವರ್ಗ:ವಿಶ್ವ ಪರಂಪರೆಯ ತಾಣಗಳು ವರ್ಗ:ಬಾದಾಮಿ ತಾಲೂಕಿನ ಪ್ರವಾಸಿ ತಾಣಗಳು
ವಿಜಯ ದಶಮಿ
https://kn.wikipedia.org/wiki/ವಿಜಯ_ದಶಮಿ
ವಿಜಯ ದಶಮಿ - ನವರಾತ್ರಿ ಉತ್ಸವದ ಕಡೆಯ ದಿನ. ಈ ದಿನದಂದು ಪಾಂಡವರು ಶತ್ರುಗಳ ಮೇಲೆ ಜಯ ಸಾಧಿಸಿದ ದಿನವೆಂದು ಹೇಳಲಾಗುತ್ತದೆ. ಹೆಸರೇ ಹೇಳುವಂತೆ ಇದು ದಶಮಿ - ಹತ್ತನೆಯ ದಿನ ಅಂದರೆ ದಸರಾ ಉತ್ಸವದ ಹತ್ತನೆಯ ದಿನ. 'ದಶ ಅಹರ್' -> ದಶಹರ -> ದಶರಾ -> ದಸರಾ ಎಂದೇ ಪ್ರಸಿದ್ಧವಾಗಿರುವ ಶಕ್ತಿಪೂಜೆಯ ಶರನ್ನವರಾತ್ರಿಗಳ ನಂತರದ ವಿಜಯೋತ್ಸವದ ದಿನ. ಚಾಂದ್ರಮಾನ ರೀತಿಯಲ್ಲಿ ಹೇಳುವುದಾದರೆ ಶರದೃತುವಿನ ಆಶ್ವಯುಜ ಮಾಸ ಶುಕ್ಲಪಕ್ಷದ ಹತ್ತನೆಯ ದಿನ. 'ದಶಹರ'ದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ವಿಜಯೋತ್ಸವವೆಂದೂ ಪ್ರತೀತಿಯಿದೆ. ಉತ್ತರ JJIಭಾರತದ ಕೆಲವೆಡೆ ಈ ದಿನವನ್ನು ಹೊಸವರ್ಷದ ದಿನವೆಂದು ಆಚರಿಸುವ ಪದ್ಧತಿಯೂ ಇದೆ. ಪ್ರಾಮುಖ್ಯತೆ ಮಹಾಭಾರತದಂತೆ ಪಾಂಡವರು, ಮತ್ಸ್ಯದೇಶದ ರಾಜನಾದ ವಿರಾಟನ ರಾಜಧಾನಿಯಲ್ಲಿ ಒಂದು ವರ್ಷದ ಅಜ್ಞಾತವಾಸ ಮುಗಿದ ಬಳಿಕ ಕಾಡಿನಲ್ಲಿದ್ದ ಮಸಣದ ಶಮೀ ವೃಕ್ಷಕ್ಕೆ ಅಲ್ಲಿ ಅಡಗಿಸಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಂದರಂತೆ. ಅಲ್ಲಿ ಶಮೀ ವೃಕ್ಷವನ್ನು ಪೂಜಿಸಿ, ಮಾತೆ ದುರ್ಗಾದೇವಿಯನ್ನು ನಮಿಸಿ, ಯುದ್ಧಕ್ಕೆ ಹೊರಟರಂತೆ. ಯುದ್ಧದಲ್ಲಿ ಜಯಶಾಲಿಯಾದದ್ದರಿಂದ ವಿಜಯದಶಮಿ ಎಂದು ಹೆಸರು ಬಂದಿತಂತೆ. ಇಂದಿಗೂ ಗುರುಹಿರಿಯರಿಗೆ ಶಮೀ ಎಲೆಗಳನ್ನು ನೀಡುತ್ತಾ ಈ ಕೆಳಗಿನ ಶ್ಲೋಕವನ್ನು ಹೇಳುವುದು ರೂಢಿಯಲ್ಲಿದೆ: ಶಮೀ ಶಮಯತೇ ಪಾಪಂ ಶಮೀ ಶತ್ರುವಿನಾಶಿನೀ | ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀ || ಕರಿಷ್ಯಮಾಣಯಾತ್ರಾಯಾ ಯಥಾಕಾಲಂ ಸುಖಂ ಮಯಾ | ತತ್ರ ನಿರ್ವಿಘ್ನಕರ್ತ್ರೀ ತ್ವಂ ಭವ ಶ್ರೀರಾಮಪೂಜಿತಾ || ಈ ವಿಜಯ ದಶಮಿ ದಿನದ೦ದೇ, 'ದ್ವೈತ ವೇದಾ೦ತ' ಅಥವ 'ತತ್ವ ಸಿದ್ಧಾ೦ತ'ದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಶ್ರೀ ವಿಶ್ವ ಗುರು ಶ್ರೀ ಮಧ್ವಾಚಾರ್ಯರು, ಉಡುಪಿಯ ಬಳಿ ಇರುವ "ಪಾಜಕ" ಎ೦ಬ ಸ್ಥಳದಲ್ಲಿ ಕ್ರಿ.ಶ. ೧೨೩೮ರಲ್ಲಿ ಅವತರಿಸಿದರು. ಹಾಗಾಗಿ, ವಿಜಯ ದಶಮಿಯ೦ದೇ ಮಧ್ವ ಜಯ೦ತಿಯನ್ನು ಅವರ ಅನುಯಾಯಿಗರು ಆಚರಿಸುತ್ತಾರೆ. ವಿಜಯದ ಶಮೀ ಜಯವು ಸಿದ್ಧವೆಂದು ನಂಬಿ ವಿಜಯದಶಮಿಯಂದು ಹಿಂದಿನ ಅರಸರು ದಂಡಯಾತ್ರೆಗೆ ಹೊರಡುತ್ತಿದ್ದರು; ಇನ್ನೂ ರಾಜವಂಶದವರಲ್ಲಿ ಆ ಪದ್ಧತಿ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ತಮ್ಮ ಚತುರಂಗ ಸಮೇತವಾಗಿ ರಾಜ್ಯದ ಗಡಿಯನ್ನು ದಾಟಿದಂತೆ ಮಾಡಿ, ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರೆಯಿತು. ಶಮೀವೃಕ್ಷವನ್ನು ಕನ್ನಡದಲ್ಲಿ ಬನ್ನಿಮರ ಎನ್ನುತ್ತಾರೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ. ಮೈಸೂರು ಪ್ರಾಂತ್ಯದ ಜನಸಾಮಾನ್ಯರಿಗೆ ವಿಜಯದಶಮಿಯ ದಿನದ ಜಂಬೂಸವಾರಿಯನ್ನು ನೋಡುವುದೆಂದರೆ ಪರಮ ಸಂತೋಷ. ರಾಮಲೀಲ ಉತ್ಸವಗಳು ದೆಹಲಿ ಮತ್ತು ಇತರೆಡೆಗಳಲ್ಲಿ ವಿಜ್ರಂಭಣೆಯಿಂದ ನೆರವೇರುತ್ತದೆ. ಕಾಳಿ ವಿಗ್ರಹಗಳನ್ನು ಉತ್ಸವ ಸಮೇತವಾಗಿ ಕೊಂಡೊಯ್ದು ನೀರಿನಲ್ಲಿ ವಿಸರ್ಜಿಸುವ ಪದ್ಧತಿಯೂ ಪಶ್ಚಿಮ ಬಂಗಾಳ ಮತ್ತು ಇತರ ಹಲವೆಡೆಗಳಲ್ಲಿ ನಡೆಯುತ್ತಿದೆ. ಸತ್ಯಕ್ಕೇ ಜಯ. ಒಳಿತಿಗೇ ಗೆಲುವು. ಒಳಿತು ಕೆಡುಕಿನ ಮೇಲೆ ಜಯಸಾಧಿಸುತ್ತದೆ ಎಂಬ ನಂಬಿಕೆ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿದುಬಂದಿದೆ. ಒಳಿತು ಕೆಡುಕಿನ ಮೇಲೆ ಜಯಸಾಧಿಸಿದ ದಿನ ವಿಜಯದಶಮಿ ಎನ್ನಲಾಗಿದೆ. ಹೊರಗಿನ ಸಂಪರ್ಕಗಳು ಪಾಂಡವರ ಬಗ್ಗೆ ಮೈಸೂರು ದಸರಾ ತಾಣ] ಕಾಮತ್‌ರವರ ಬರಹ ನವರಾತ್ರಿ - ಬಿಬಿಸಿಯಲ್ಲಿ ವರ್ಗ:ಹಿಂದೂ ಧರ್ಮದ ಹಬ್ಬಗಳು ವರ್ಗ: ಹಬ್ಬಗಳು ವರ್ಗ: ಸಂಸ್ಕೃತಿ de:Dashahara en:Dasara gu:દશેરા hi:दशहरा ml:ദസ്റ mr:विजयादशमी ne:दसैं nl:Dashera nn:Vidjayadasjami no:Vijayadasami pl:Dasara uk:Дасара
ಬೆ೦ಗಳೂರು
https://kn.wikipedia.org/wiki/ಬೆ೦ಗಳೂರು
REDIRECT ಬೆಂಗಳೂರು
ಟಿಪ್ಪು ಸುಲ್ತಾನ್
https://kn.wikipedia.org/wiki/ಟಿಪ್ಪು_ಸುಲ್ತಾನ್
ಟಿಪ್ಪು ಸುಲ್ತಾನನು (ಸುಲ್ತಾನ್ ಫತೇಹ್ ಅಲಿ ಸಾಹಬ್ ಟಿಪ್ಪು; 1 ಡಿಸೆಂಬರ್ 1751 – 4 ಮೇ 1799), ಸಾಮಾನ್ಯವಾಗಿ ಶೇರ್-ಎ-ಮೈಸೂರ್ ಅಥವಾ "ಮೈಸೂರು ಹುಲಿ" ಎಂದು ಉಲ್ಲೇಖಿಸಲಾದವನು, ದಕ್ಷಿಣ ಭಾರತದ ಮೈಸೂರು ರಾಜ್ಯದ ಮುಸಲ್ಮಾನ ದೊರೆ.  ಭಾರತ.  ಅವನು ರಾಕೆಟ್ ಫಿರಂಗಿಗಳ ಪ್ರವರ್ತಕರಾಗಿದ್ದನು. ಅವನು ತನ್ನ ಆಡಳಿತದ ಅವಧಿಯಲ್ಲಿ ಹೊಸ ನಾಣ್ಯ ವ್ಯವಸ್ಥೆ ಮತ್ತು ಕ್ಯಾಲೆಂಡರ್, ಮತ್ತು ಹೊಸ ಭೂಕಂದಾಯ ವ್ಯವಸ್ಥೆಯನ್ನು ಒಳಗೊಂಡಂತೆ ಹಲವಾರು ಆಡಳಿತಾತ್ಮಕ ಆವಿಷ್ಕಾರಗಳನ್ನು ಪರಿಚಯಿಸಿದನು, ಇದು ಮೈಸೂರು ರೇಷ್ಮೆ ಉದ್ಯಮದ ಬೆಳವಣಿಗೆಯನ್ನು ಪ್ರಾರಂಭಿಸಿತು.  ಚನ್ನಪಟ್ಟಣದ ಆಟಿಕೆಗಳನ್ನು ಪರಿಚಯಿಸುವಲ್ಲಿ ಟಿಪ್ಪು ಕೂಡ ಪ್ರವರ್ತಕನಾಗಿದ್ದ.  ಅವರು ಕಬ್ಬಿಣಕವಚದ ಮೈಸೂರಿ ರಾಕೆಟ್‌ಗಳನ್ನು ವಿಸ್ತರಿಸಿದನು ಮತ್ತು ಮಿಲಿಟರಿ ಕೈಪಿಡಿ ಫತುಲ್ ಮುಜಾಹಿದೀನನ್ನು ನಿಯೋಜಿಸಿದರು, ಅವರು ಪೊಲ್ಲಿಲೂರ್ ಕದನ ಮತ್ತು ಶ್ರೀರಂಗಪಟ್ಟಣದ ಮುತ್ತಿಗೆಯಲ್ಲಿ ಆಂಗ್ಲಮೈಸೂರು ಯುದ್ಧಗಳ ಸಮಯದಲ್ಲಿ ಬ್ರಿಟಿಷ್ ಪಡೆಗಳು ಮತ್ತು ಅವರ ಮಿತ್ರರ ಪ್ರಗತಿಯ ವಿರುದ್ಧ ರಾಕೆಟ್‌ಗಳನ್ನು ನಿಯೋಜಿಸಿದನು. ಪರಿಚಯ ಇಮ್ಮಡಿ ಕೃಷ್ಣರಾಜ ಒಡೆಯರ್ ಮರಣದ ನಂತರ, ಹೈದರ್ ಅಲಿ, ಮೈಸೂರು ಸೇನೆಯ ಮಹಾದಂಡನಾಯಕ, ಪ್ರಾಂತದ ಅಧಿಕಾರವನ್ನು ವಹಿಸಿಕೊಂಡ, ಹೈದರ್ ಅಲಿಯ ಮರಣದ ನಂತರ ಆಳ್ವಿಕೆ ಅವನ ಪುತ್ರ ಟಿಪ್ಪುಸುಲ್ತಾನನಿಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಖ್ಯಾತವಾದ ಟಿಪ್ಪುಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪಿಯನ್ ವಿಸ್ತರಣೆ ತಡೆಗಟ್ಟಲು, ನಾಲ್ಕು ಯುದ್ದಗಳನ್ನು ಮಾಡಿದ ಆಂಗ್ಲೋ-ಮೈಸೂರು ಯುದ್ದಗಳು, ಕೊನೆಯದರಲ್ಲಿ ಅವನು ಮರಣವನ್ನಪ್ಪಿದ. ಮೈಸೂರು ರಾಜ್ಯ ಬ್ರಿಟಿಷ್ ರಾಜ್ಯ ಏಕೀಕರಣವಾಯಿತು.http://kannadakannadigga.blogspot.in/p/blog-page.html ಟಿಪ್ಪು ಸೇನಾ ತಂತ್ರಗಳನ್ನು ತನ್ನ ತಂದೆ, ಹೈದರಾಲಿಯೊಂದಿಗೆ ಇದ್ದ ಫ್ರೆಂಚ್ ಅಧಿಕಾರಿಗಳಿಂದ ಪಡೆದನು. ೧೭೬೭ ರ ಕರ್ನಾಟಕ ಯುದ್ಧದಲ್ಲಿ ಒಂದು ಅಶ್ವದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದನು. ಸೇನಾನಾಯಕನಾಗಿ ಟಿಪ್ಪು ಪ್ರಸಿದ್ದಿ ಪಡೆದದ್ದು ೧೭೭೫-೭೯ ರ ಆಂಗ್ಲೋ-ಮರಾಠಾ ಯುದ್ಧದಲ್ಲಿ. ೧೫ನೆಯ ವಯಸ್ಸಿನಲ್ಲಿ ತನ್ನ ತಂದೆ ಹೈದರಾಲಿಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ, ಒಂದು ದೊಡ್ಡ ಸೇನಾ ತುಕಡಿಯ ನಾಯಕನಾಗಿ ೧೭೮೨ರ ಫೆಬ್ರವರಿಯಲ್ಲಿ ಆಂಗ್ಲ ಸೇನಾನಾಯಕ ಬ್ರಾತ್‍ವೈಟ್‍ನನ್ನು ಸೋಲಿಸಿದನು.https://sujankumarshetty.wordpress.com/2009/08/page/7/ ಬಾಲ್ಯ ಟಿಪ್ಪು ಸುಲ್ತಾನ್ ಹುಟ್ಟಿದ್ದು (೨೦ ನವಂಬರ್ ೧೭೫೦), ಇಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ (ಬೆಂಗಳೂರು ನಗರದಿಂದ ಸುಮಾರು ೩೩ ಕಿ.ಮೀ. ದೂರ)ತಂದೆ ಹೈದರ್ ತಾಯಿ ಫಾತಿಮಾ. ಟಿಪ್ಪುವಿನ ಅಜ್ಜ ಆರ್ಕಾಟ್ ನವಾಬನ ಸೇನೆಯಲ್ಲಿ ರಾಕೆಟ್ ಪಡೆಯ ಮುಖ್ಯಸ್ಥನಾಗಿದ್ದ. ಕಡಪಾ ಕೋಟೆಯ ಕಾವಲಿನ ಮುಖ್ಯಸ್ಥನ ಮಗಳು ಟಿಪ್ಪುವಿನ ಅಮ್ಮ. ಇಂಥ ವಾತಾವರಣದಲ್ಲಿ ಬೆಳೆದ ಟಿಪ್ಪುವಿಗೆ ಆಡಳಿತ, ಯುದ್ಧ, ವ್ಯೂಹ, ತಂತ್ರಗಾರಿಕೆ ಎಲ್ಲವೂ ಬಹು ಸಹಜವಾಗಿ ನೀರು ಕುಡಿದಂತೆ ಸಿದ್ಧಿಸಿತ್ತು. ವ್ಯಕ್ತಿತ್ವ ಟಿಪ್ಪು ತನ್ನನ್ನು ನಾಗರಿಕ ಟಿಪ್ಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ ಹಿಂದೂ ದೇವಾಲಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದನು. ಸಾಧನೆ thumb|right|upright=1.4|In his attempts to junction with Tipu Sultan, Napoleon annexed Ottoman Egypt in the year 1798. ಮೈಸೂರನ್ನು ರಕ್ಷಿಸಲು ಬ್ರಿಟಿಷರೊಂದಿಗೆ ಹೋರಾಡಿದನು. ಬ್ರಿಟಿಷರೊಂದಿಗೆ ಹೋರಾಡಲು ನೆಪೋಲಿಯನ್ನನ ನೆರವನ್ನು ಪಡೆಯಲು ಪ್ರಯತ್ನಿಸಿದನು. ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನ ಪರಿಚಯಿಸಿದ ಮೊದಲ ವ್ಯಕ್ತಿ. ಮೈಸೂರು ರಾಜ್ಯಕ್ಕೆ ರೇಷ್ಮೆಯನ್ನು ಪರಿಚಯಿಸಿದನು. ಕುಣಿಗಲ್‍‍ನಲ್ಲಿ ಕುದುರೆ ಫಾರಂ ಸ್ಥಾಪಿಸಿದನು. ಕೇರಳದ ಮಲಬಾರಿನ ಹೆಣ್ಣುಗಳು ಮಾನ ಮುಚ್ಚಲು ರೇಷ್ಮೇ ವಸ್ತ್ರಗಳನ್ನೇ ದಾನ ಮಾಡಿದನು ಮತ್ತು ಸ್ತನ ತೆರಿಗೆಯನ್ನು ರದ್ದುಗೊಳಿಸಿದನು. ದಲಿತರ ಮೇಲಿನ ಬಹಿಷ್ಕಾರವನ್ನು ತೊಡೆದು ಹಾಕಿದನು. ಭೂ ಕಂದಾಯ ನೀತಿಯನ್ನು ಜಾರಿಗೆ ತಂದನು. ಆಡಳಿತ thumb|right|Tipu Sultan seated on his throne, by thumb|Tipu Sultan's summer palace at Srirangapatna, Karnataka thumb|right|Mural of the Battle of Pollilur on the walls of Tipu's summer palace, painted to celebrate his triumph over the British. thumb|Tipu Sultan's forces during the Siege of Srirangapatna. ಟಿಪ್ಪು ಮೈಸೂರಿನ ಆಳರಸರಲ್ಲಿ ಒಬ್ಬ. ಕ್ರಿ. ಶ. ೧೭೫೦, ನವೆಂಬರ್ ೨೦ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಹುಟ್ಟಿದ. ಕೇವಲ ೪೯ ವರ್ಷ ಬದುಕಿದ ಅವನ ಶೌರ್ಯ, ಬಲಿದಾನ, ಸ್ವಾಭಿಮಾನ ಕುರಿತು ಕತೆಗಳೇ ಇವೆ. ಯುದ್ಧದ ನಾನಾ ಕಲೆಗಳಲ್ಲಿ ನಿಷ್ಣಾತರಾದ ಕುಟುಂಬದಿಂದ ಬಂದವ ಟಿಪ್ಪು. ಅಸಮರ್ಥ ಹಾಗೂ ಅದಕ್ಷ ಮೈಸೂರರಸನನ್ನು ಸಿಂಹಾಸನದಿಂದ ಕೆಳಗಿಳಿಸಿ, ತಾನು ಪ್ರವಾದಿ ಮಹಮದರ ಕುರೇಶಿ ಪಂಗಡದವನೆಂದು ಸಾರಿ ರಾಜನಾದ ಹೈದರಾಲಿಯ ಮಗ. ಅನಕ್ಷರಸ್ಥನಾಗಿದ್ದ ಹೈದರಾಲಿ ಮಗ ಟಿಪ್ಪುವಿಗೆ ಸಣ್ಣಂದಿನಿಂದಲೇ ಸಕಲ ವಿದ್ಯೆಗಳನ್ನು ಕಲಿಸುವ ವ್ಯವಸ್ಥೆ ಮಾಡಿದ. ಉರ್ದು, ಪರ್ಷಿಯನ್, ಕನ್ನಡ, ಅರೇಬಿಕ್, ಕುರಾನ್, ಇಸ್ಲಾಮೀ ನ್ಯಾಯಶಾಸ್ತ್ರ, ಕುದುರೆ ಸವಾರಿ, ತೋಪು ಚಲಾಯಿಸುವುದು ಮುಂತಾದವುಗಳನ್ನೆಲ್ಲ ಕಲಿಸಲಾಯಿತು. ಹಲವು ಪರಿಣತಿಗಳಲ್ಲಿ ಜ್ಞಾನ ಸಂಪಾದಿಸಿದ ಟಿಪ್ಪು ಹೊಸ ಮೂಲೂದಿ ಇಸ್ಲಾಮಿ ಪಂಚಾಂಗ ದಿನಗಣನೆಯನ್ನು ಚಾಲ್ತಿಗೆ ತಂದ. ಮೈಸೂರು ತನ್ನ ತಂದೆಯ ಕೈವಶವಾಗುತ್ತಿದ್ದದ್ದನ್ನು ಟಿಪ್ಪು ಹದಿವಯಸ್ಸಿನಲ್ಲಿ ಗಮನಿಸುತ್ತಿದ್ದ. ರಾಜಕಾರಣದ ಒಳಹೊರಗುಗಳ ಅರಿಯುತ್ತ ತಾನೂ ರೂಪುಗೊಂಡ. ಹದಿವಯಸ್ಸಿನಲ್ಲಿಯೇ ಮೊದಲ ಮೈಸೂರು ಯುದ್ಧ, ಆರ್ಕಾಟ್ ಮೇಲಿನ ದಾಳಿಯಲ್ಲಿ ಭಾಗವಹಿಸಿ ಹದಿನೇಳರ ಹೊತ್ತಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಾಗಿದ್ದ. ಟಿಪ್ಪುವಿಗೆ ಯುದ್ಧವಿದ್ಯೆ ಹೇಳಿಕೊಟ್ಟವರು ಫ್ರೆಂಚ್ ಕಮ್ಯಾಂಡರುಗಳು. ೧೭೮೨ರಲ್ಲಿ ಎರಡನೆ ಮೈಸೂರು ಯುದ್ಧ ನಡೆಯುತ್ತಿರುವಾಗಲೇ ಕ್ಯಾನ್ಸರಿನಿಂದ ಹೈದರಾಲಿ ತೀರಿಕೊಂಡಾಗ ತಂದೆ ಅರ್ಧಕ್ಕೆ ಬಿಟ್ಟುಹೋದ ಯುದ್ಧ ಗೆದ್ದು ತನಗೆ ಅನುಕೂಲಕರವಾದ ಷರತ್ತು ವಿಧಿಸಿ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡ. ಹೀಗೆ ೩೨ ವರ್ಷದ ಟಿಪ್ಪು ವಿಶಾಲ ರಾಜ್ಯದ ಅಧಿಪತಿಯಾದ. ಬೆಂಗಳೂರಿನ ಲಾಲ್‌ಬಾಗನ್ನು ಪೂರ್ಣಗೊಳಿಸಿದ. ರಸ್ತೆ, ಕೆರೆಕಟ್ಟೆ, ಅರಮನೆಗಳ ನಿರ್ಮಿಸಿದ. ಮೈಸೂರು ರೇಶಿಮೆ ಉದ್ದಿಮೆಯಾಗಿ ಬೆಳೆಯಲು ಅನುವಾಗುವಂತೆ ಹೊಸ ತೆರನ ಕಂದಾಯ ವ್ಯವಸ್ಥೆ ಜಾರಿಗೆ ತಂದ. ಫಾತುಲ್ ಮುಜಾಹಿದೀನ್ ಎಂಬ ಮಿಲಿಟರಿ ಕೈಪಿಡಿ ಬರೆದ. ಪಾನ ನಿಷೇಧ ಜಾರಿಗೊಳಿಸಿದ. ರಾಜ್ಯದ ಗಡಿಗಳನ್ನು ದಕ್ಷಿಣ, ಪಶ್ಚಿಮದತ್ತ ವಿಸ್ತರಿಸಲು ಸುಲಭವಾಯಿತು.ಆದರೆ ಒಂದು ಕಡೆ ರಾಜ್ಯದ ಗಡಿ ವಿಸ್ತಾರಗೊಳ್ಳತೊಡಗಿದ್ದರೆ ಮತ್ತೊಂದು ಕಡೆ ಸಂಕುಚಿತಗೊಳ್ಳತೊಡಗಿತ್ತು. ೧೭೮೬ರ ಹೊತ್ತಿಗೆ ಮರಾಠರಿಗೆ ಮತ್ತು ನಿಜಾಮನ ಸೇನೆಗೆ ಉತ್ತರ ಕರ್ನಾಟಕದ ಬಹುಭಾಗ ಬಿಟ್ಟುಕೊಡಬೇಕಾಯಿತು. ಮರಾಠ ಪೇಶ್ವೆ ಮಾಧವ ರಾಯನ ದಳಪತಿ ನಾನಾ ಫಡ್ನವೀಸನ ಸೇನೆ ಬಾದಾಮಿ, ಕಿತ್ತೂರು, ಗಜೇಂದ್ರಗಡದವರೆಗೆ ತುಂಗಭದ್ರಾನದಿ ತನಕದ ಪ್ರದೇಶವನ್ನು ಮೈಸೂರಿನಿಂದ ಮರುವಶ ಪಡಿಸಿಕೊಂಡಿತು. ಅದೋನಿಯು ಹೈದರಾಬಾದ್ ನಿಜಾಮನ ಪಾಲಾಯಿತು. ಮರಾಠರೊಡನೆ ಒಪ್ಪಂದವಾಗಿ ಟಿಪ್ಪುವು ಯುದ್ಧಖರ್ಚು ೪೮ ಲಕ್ಷ ರೂಪಾಯಿ, ವಾರ್ಷಿಕ ಕಪ್ಪ ೧೨ ಲಕ್ಷ ರೂಪಾಯಿ ಕೊಡಬೇಕಾಯಿತು. ಈ ಸೋಲಿನ ಸಿಟ್ಟಿನಿಂದ ಕುದಿಯುತ್ತಿದ್ದ ಟಿಪ್ಪು ಗಮನವನ್ನು ಮಲಬಾರಿನೆಡೆ ಹರಿಸಿದ. ಅತ್ತ ಮಲಬಾರಿಗೆ ದೊಡ್ಡ ಸೇನೆ ಒಯ್ದಾಗ ಇತ್ತ ಬ್ರಿಟಿಷರು ಮಿತ್ರಸೇನೆಯೊಡಗೂಡಿ ಮೂರನೇ ಮೈಸೂರು ಯುದ್ಧ ಕೆದರಿದರು. ಆ ಯುದ್ಧದಲ್ಲಿ ಸೋಲು ಖಚಿತವೆನಿಸತೊಡಗಿದಾಗ ಸೈನ್ಯಕ್ಕೆ ಅನ್ನನೀರು ಪೂರೈಕೆ ಸಿಗದಂತೆ ಮಾಡಿ ಒಪ್ಪಂದಕ್ಕೆ ಬರುವಂತೆ ಮಾಡಿದ. ಮಿತ್ರಸೇನೆಯೊಂದಿಗೆ ಒಪ್ಪಂದವೇನೋ ಆಯಿತು. ಆದರೆ ತನ್ನ ಅರ್ಧ ಪ್ರಾಂತ್ಯ ಬಿಟ್ಟುಕೊಟ್ಟು ೩ ಕೋಟಿ ೩೦ ಲಕ್ಷ ರೂಪಾಯಿ ಯುದ್ಧ ಖರ್ಚನ್ನು ಕೊಡಬೇಕಾಯಿತು. ಅಷ್ಟು ಹಣ ಸಂದಾಯವಾಗುವವರೆಗೆ ತನ್ನಿಬ್ಬರು ಮಕ್ಕಳನ್ನು ಲಾರ್ಡ್ ಕಾರ್ನ್‌ವಾಲೀಸನ ಬಳಿ ಮದರಾಸಿನಲ್ಲಿ ಒತ್ತೆಯಿರಿಸಿ ಎರಡು ಕಂತಿನಲ್ಲಿ ಪೂರ್ತಿ ಹಣ ಕೊಟ್ಟು ಮಕ್ಕಳನ್ನು ಬಿಡಿಸಿ ತರಬೇಕಾಯಿತು. ಯಾವ ಎರಡನೆ ಮೈಸೂರು ಯುದ್ಧದ ಗೆಲುವು ಟಿಪ್ಪುವನ್ನು ರಾಜನನ್ನಾಗಿಸಿತೊ ಅದೇ ಯುದ್ಧವು ಅವನ ಅತಿಗಳ ಕುರಿತೂ ಹೇಳುತ್ತದೆ. ಬ್ರಿಟಿಷರನ್ನೇನೋ ಸೋಲಿಸಲಾಯಿತು, ಆದರೆ ತಂಜಾವೂರನ್ನು ಟಿಪ್ಪುವಿನ ಪಡೆಗಳು ಬುಡಮಟ್ಟ ನಾಶಮಾಡಿದವು. ತಂಜಾವೂರು ಚೇತರಿಸಿಕೊಳ್ಳಲು ಒಂದು ಶತಮಾನ ಹಿಡಿಯಿತು. ದನಕರು, ಬೆಳೆ ನಾಶವಷ್ಟೆ ಅಲ್ಲ, ೧೨,೦೦೦ ಮಕ್ಕಳನ್ನು ಟಿಪ್ಪು ಅಪಹರಿಸಿದ ಎಂಬ ದಾಖಲಾತಿಯೂ ಇದೆ. ವಸಾಹತುಶಾಹಿ ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು. ಆದರೆ ಅವ ಹೋರಾಡಿದ್ದು, ಖ್ಯಾತ ಮೈಸೂರು ರಾಕೆಟ್ಟುಗಳನ್ನು ಬಳಸಿದ್ದು ಕೇವಲ ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಆಚೀಚಿನ ರಾಜರುಗಳಾದ ಮರಾಠರು, ತಂಜಾವೂರು-ಮಲಬಾರ್-ಶಿರಾ-ಬಿದನೂರು-ಕೊಡಗು-ತಿರುವಾಂಕೂರು ಆಳ್ವಿಕರು, ಅರ್ಕಾಟಿನ ನವಾಬ, ಹೈದರಾಬಾದಿನ ನಿಜಾಮ ಇವರ ವಿರುದ್ಧ. ಕೊನೆಯತನಕ ಟಿಪ್ಪುವಿನ ಕಡುವೈರಿಗಳು ಮರಾಠರು ಮತ್ತು ಹೈದರಾಬಾದಿನ ನಿಜಾಮ. ಗತವೈಭವದ ಕನವರಿಕೆಯಲ್ಲಿ ಕೊನೆಯುಸಿರೆಳೆಯುತ್ತಿದ್ದ ಮುಘಲ್ ಸಾಮ್ರಾಜ್ಯದ ದೊರೆ ಶಾ ಅಲಂಗೆ ಟಿಪ್ಪು ತಾನೇತಾನಾಗಿ ಅಧೀನತೆಯನ್ನು ಪ್ರದರ್ಶಿಸುತ್ತಿದ್ದ. ಶಾ ಅಲಂನನ್ನು ಹಿಜ್ರಾ ಒಬ್ಬ ಕುರುಡನನ್ನಾಗಿಸಿ ಪದಚ್ಯುತಗೊಳಿಸಿದ ನಂತರ ಟಿಪ್ಪು ಮರಾಠರನ್ನು ಸೋಲಿಸಲು ಆಫ್ಘನಿಸ್ತಾನದ ದುರಾನಿ ರಾಜರನ್ನು ಸಂಪರ್ಕಿಸಿದ. ಬ್ರಿಟಿಷರ ವಿರುದ್ಧ ಆಕ್ರಮಣಕ್ಕೆ ತುರ್ತು ಸಹಾಯ ಮಾಡುವಂತೆ ಟರ್ಕಿಯ ಒಟ್ಟೊಮನ್ ರಾಜರ ಸಹಾಯ ಕೇಳಿದ. ಆದರೆ ಇವರಿಗೆಲ್ಲ ರಷ್ಯಾದ ವಿರುದ್ಧ ಹೋರಾಡಲು ಬ್ರಿಟಿಷರ ಸಹಾಯ ಬೇಕಿದ್ದರಿಂದ ಟಿಪ್ಪುವಿಗೆ ಸಹಾಯ ಮಾಡಲಾರದೆ ಹೋದರು. ಕೊನೆಗೆ ಬ್ರಿಟಿಷರ ವಿರುದ್ಧ ಫ್ರೆಂಚ್ ಯುದ್ಧವೀರ ನೆಪೋಲಿಯನ್ ಬೋನಪಾರ್ಟೆಯ ಸಹಾಯಕ್ಕಾಗಿ ಪ್ರಯತ್ನಿಸಲಾಯಿತು. ಒಂದನೆಯ ಮೈಸೂರು ಯುದ್ಧ (೧೭೬೬-೧೭೬೯) ಮೈಸೂರು ರಾಜ್ಯಕ್ಕೂ ಬ್ರಿಟೀಷರಿಗೂ ನಡೆದ ಯುದ್ಧ. ಈ ಯುದ್ಧ ಸರಣಿಯಲ್ಲಿ ಮೊದಲನೆಯದು. ಮೈಸೂರಿನ ಆಡಳಿತಾಧಿಕಾರಿ ಹೈದರಾಲಿಯ ಚಟುವಟಿಕೆಗಳನ್ನು ಮದರಾಸು ಪ್ರಾಂತದ ಬ್ರಿಟೀಷರು ಗಂಭೀರವಾಗಿ ಪರಿಗಣಿಸಿದರು. ೧೭೬೬ರಲ್ಲಿ ಬ್ರಿಟೀಷರು ಹೈದರಾಬಾದಿನ ನಿಜಾಮನೊಂದಿನ ಒಪ್ಪಂದ ಮಾಡಿಕೊಂಡು, ಅದರ ಪ್ರಕಾರ, ತಮ್ಮಿಬ್ಬರ ಸಮಾನ ಶತ್ರುವಾಗಿದ್ದ ಹೈದರಾಲಿಯ ವಿರುದ್ಧ ಬಳಸಲಿಕ್ಕಾಗಿ ಸೈನ್ಯವನ್ನು ಪೂರೈಸಿದರು. ಆದರೆ, ಈ ಒಪ್ಪಂದವಾದ ಸ್ವಲ್ಪ ಸಮಯದಲ್ಲಿಯೇ, ಹೈದರಾಲಿ ಮತ್ತು ನಿಜಾಮ ರಹಸ್ಯ ಒಪ್ಪಂದಕ್ಕೆ ಬಂದು, ಬ್ರಿಟೀಷರ ಕರ್ನಲ್ ಸ್ಮಿತ್‍ನ ಸಣ್ಣ ಸೇನೆಯ ಮೇಲೆ ತಮ್ಮ ಒಕ್ಕೂಟದ ೫೦,೦೦೦ ಸಿಪಾಯಿಗಳು ಮತ್ತು ೧೦೦ ತುಪಾಕಿಗಳ ಸೇನೆಯನ್ನು ನುಗ್ಗಿಸಿದರು. ಸಂಖ್ಯೆಯಲ್ಲಿ ಸಣ್ಣದಿದ್ದರೂ, ಬ್ರಿಟೀಷ್ ಪಡೆಗಳು,ಶಿಸ್ತು ಮತ್ತು ಉತ್ತಮ ತರಬೇತಿಯಿಂದಾಗಿ, ಒಕ್ಕೂಟದ ಸೇನೆಯನ್ನು ಮೊದಲು ಚೆಂಗಮ್ ಎಂಬಲ್ಲಿಯೂ ( ಸೆಪ್ಟೆಂರ್‍ ೩, ೧೭೬೭)ಮತ್ತೆ , ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ, ತಿರುವಣ್ಣಾಮಲೈಯಲ್ಲಿಯೂ ಹಿಮ್ಮೆಟ್ಟಿಸಿದರು. ಪಶ್ಚಿಮ ತೀರದ ತನ್ನ ನವೀನ ನೌಕಾಪಡೆ ಮತ್ತು ಕೋಟೆಗಳನ್ನು ಕಳೆದುಕೊಂಡ ನಂತರ ಹೈದರಾಲಿಯು ಸಂಧಾನಕ್ಕೆ ಬಂದನು. ಈ ಸಂಧಾನದ ಕೋರಿಕೆ ತಿರಸ್ಕೃತವಾಗಲು, ಹೈದರಾಲಿಯು ತನ್ನೆಲ್ಲ ಅಳಿದುಳಿದ ಸೈನ್ಯವನ್ನು ಒಗ್ಗೂಡಿಸಿ ಬ್ರಿಟೀಷರ ಮೇಲೇರಿ ಹೋದನು. ಕರ್ನಲ್ ಸ್ಮಿತ್ ಬೆಂಗಳೂರಿಗೆ ಹಾಕಿದ್ದ ಮುತ್ತಿಗೆಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಲ್ಲದೆ, ತನ್ನ ಸೇನೆಯೊಡನೆಮದರಾಸು ನಗರದ ಐದು ಮೈಲಿಯಷ್ಟು ಸಮೀಪದವರೆಗೂ ಬಂದು ತಲುಪಿದನು. ಈ ಯುದ್ಧದ ಪರಿಣಾಮವಾಗಿ ಏಪ್ರಿಲ್ ೧೭೬೯ರಲ್ಲಿ, ಎರದೂ ಪಕ್ಷಗಳೂ ತಾವು ಆಕ್ರಮಿಸಿದ ಪ್ರದೇಶಗಳನ್ನು ವಾಪಸು ಮಾಡಬೇಕೆಂದು ಮತ್ತು ಯುದ್ಧಗಳಲ್ಲಿ ಪರಸ್ಪರರ ಸಹಾಯಕ್ಕೆ ಬರುವಂತೆಯೂ ಒಪ್ಪಂದವಾಯಿತು. ಈ ಒಪ್ಪಂದವನ್ನು "ಮದ್ರಾಸ್ ಒಪ್ಪಂದ" ಎಂದು ಕರೆಯುತ್ತಾರೆ. ಎರಡನೆಯ ಮೈಸೂರು ಯುದ್ಧ (೧೭೮೦-೧೭೮೪) ಮೈಸೂರು ಸಂಸ್ಥಾನಕ್ಕೂ ಬ್ರಿಟಷರಿಗೂ ನಡೆದ ಯುದ್ಧದ ಸರಣಿಯಲ್ಲಿ ಎರಡನೆಯದು. ಅಮೆರಿಕದಲ್ಲಿ ನಡೆಯುತ್ತಿದ್ದ ಕ್ರಾಂತಿಕಾರಿ ಹೋರಾಟದ ಫಲವಾಗಿ ಬ್ರಿಟಷರು ಮತ್ತು ಫ್ರೆಂಚರ ನಡುವೆ ನಡೆದ ಕದನದ ಸುಳಿಯಲ್ಲಿ ಫ್ರೆಂಚರ ಸ್ನೇಹದಲ್ಲಿದ್ದ ಮೈಸೂರು ಕೂಡಾ ಸಿಕ್ಕಿತು. ಆ ಕಾಲದಲ್ಲಿ ಮೈಸೂರನ್ನು ಆಳುತ್ತಿದ್ದವನು ( ರಾಜಾ ಎಂಬ ಗೌರವನಾಮ ಇಲ್ಲದಿದ್ದರೂ) ಹೈದರ್‍ ಆಲಿ. ಹಿಂದೊಮ್ಮೆ ಮರಾಠರ ವಿರುದ್ಧದ ಯುದ್ಧದಲ್ಲಿ ಬ್ರಿಟಿಷರ ವಿಶ್ವಾಸಘಾತುಕತನವನ್ನು ಕಂಡು ಕಿಡಿಕಿಡಿಯಾಗಿದ್ದ ಹೈದರ್‍ ಆಲಿ ಬ್ರಿಟಿಷರೊಂದಿಗೆ ಸೇಡು ತೀರಿಸಿಕೊಳ್ಳಲು, ಫ್ರೆಂಚರ ಸಹಾಯಕ್ಕೆ ಒಮ್ಮನಸ್ಸಿನಿಂದ ಧುಮುಕಿದ. ೧೭೭೮ರಲ್ಲಿ ಬ್ರಿಟನ್ ಮೇಲೆ ಯುದ್ಧ ಸಾರಿದಾಗ, ಈಗಾಗಲೇ ಮದರಾಸಿನಲ್ಲಿ ಬಲವಾಗಿ ಬೇರು ಬಿಟ್ಟಿದ್ದ ಬ್ರಿಟೀಷರು, ಫ್ರೆಂಚರನ್ನು ಭಾರತದಿಂದ ಓಡಿಸುವ ಪಣ ತೊಟ್ಟರು. ಮಲಬಾರ್‍ ತೀರದ ಮಾಹೆಯನ್ನು ಗೆದ್ದುಕೊಂಡ ಬ್ರಿಟೀಷರು, ಹೈದರನ ಆಶ್ರಿತನೊಬ್ಬನ ಕೆಲ ಭೂಭಾಗಗಳನ್ನೂ ಸ್ವಾಧೀನಕ್ಕೆ ತೆಗೆದುಕೊಂಡರು. ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಹೈದರಾಲಿಯು, ಮರಾಠರು ತನ್ನಿಂದ ಕಿತ್ತುಕೊಂಡ ಪ್ರದೇಶಗಳನ್ನು ಮರುಪಡೆಯುವುದರಲ್ಲಿ ಯಶಸ್ವಿಯಾದನು. ಕೃಷ್ಣಾ ನದಿಯವರೆಗೆ ಹರಡಿದ್ದ ತನ್ನ ರಾಜ್ಯದಿಂದ, ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ರಾಮಗಳ ಮಧ್ಯೆ, ಕಣಿವೆ, ಘಟ್ಟಗಳನ್ನು ಬಳಸಿಕೊಂಡು, ಮದರಾಸಿನಿಂದ ಕೇವಲ ೪೫ ಮೈಲಿ ( ೭೨ ಕಿ.ಮೀ.) ದೂರದ ಕಾಂಜೀವರವನ್ನು ಒಂದಷ್ಟೂ ಪ್ರತಿರೋಧ ವಿಲ್ಲದೆ ತಲುಪಿದನು. ಮದರಾಸಿನ ಸೈಂಟ್ ಥಾಮಸ್ ಮೌಂಟಿನಲ್ಲಿ ೫೨೦೦ ಸೈನಿಕರೊಂದಿಗೆ ಬೀಡುಬಿಟ್ಟಿದ್ದ, ಸರ್‍ ಹೆಕ್ಟರ್‍ ಮನ್ರೋಗೆ ಬೆಂಕಿಯ ಜ್ವಾಲೆಗಳು ಕಾಣಿಸಿದ ನಂತರವೇ ಬ್ರಿಟೀಷರ ಪ್ರತಿಕ್ರಿಯೆಗೆ ಚಾಲನೆ ಸಿಕ್ಕಿತು. ಗುಂಟೂರಿಂದ ವಾಪಸು ಕರೆಸಿದ್ದ ಕರ್ನಲ್ ಬೈಲೀಯ ಕೈಕೆಳಗಿನ ಸಣ್ಣ ಸೈನ್ಯವನ್ನು ಹೈದರಾಲಿಯನ್ನು ಎದುರಿಸಲು ಕಳುಹಿಸಲಾಯಿತು. ಅಪ್ರತಿಮ ಧೈರ್ಯದಿಂದ ಕಾದಾಡಿದರೂ, ಬೈಲಿಯ ೨೮೦೦ ಜನರ ಸೇನೆ ಸಂಪೂರ್ಣ ಸೋಲಪ್ಪಿತು. ಆದಿನ ೧೭೮೦ರ ಸೆಪ್ಟೆಂಬರ್‍ ೧೦, 1782ರಲ್ಲಿ ಹೈದರಾಲಿ ಬೆನ್ನುಮೊಳೆ ರೋಗದಿಂದ ಮರಣ ಹೊಂದಿದನು. 1784ರಲ್ಲಿ ಮಂಗಳೂರು ಒಪ್ಪಂದದೊಂದಿಗೆ ಯುದ್ದ ಮುಕ್ತಾಯವಾಯಿತು. ಮೂರನೆಯ ಮೈಸೂರು ಯುದ್ಧ (೧೭೮೯-೧೭೯೨) thumb|General Lord Cornwallis, receiving two of Tipu Sultan's sons as hostages in the year 1793. ಮೈಸೂರು ರಾಜ್ಯಕ್ಕೂ ಬ್ರಿಟಿಷರಿಗೂ ನಡೆದ ಯುದ್ಧ. ನಾಲ್ಕು ಬಾರಿ ನಡೆದ ಯುದ್ಧ ಸರಣಿಯಲ್ಲಿ ಇದು ಮೂರನೆಯದು. ಫ್ರೆಂಚರೊಂದಿಗೆ ಮೈತ್ರಿಯಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು ಬ್ರಿಟಿಷ್ ಅಧೀನದಲ್ಲಿದ್ದ ಟ್ರಾವಂಕೂರಿನ ಮೇಲೆ ೧೭೮೯ರಲ್ಲಿ ದಂಡೆತ್ತಿ ಹೋದನು. ಆಗ ಪ್ರಾರಂಭವಾದ ಯುದ್ಧ ಮುಂದಿನ ಮೂರು ವರ್ಷಗಳವರೆಗೆ ಮುಂದುವರೆದು ಟಿಪ್ಪೂ ಸುಲ್ತಾನನ ಪರಾಭವದೊಂದಿಗೆ ಪರ್ಯವಸಾನಗೊಂಡಿತು. ತಮ್ಮದೇ ದೇಶದ ಫ್ರೆಂಚ್ ಕ್ರಾಂತಿಯನ್ನು ಎದುರಿಸುವುದರಲ್ಲಿ ಮಗ್ನರಾದ ಫ್ರೆಂಚರು, ಬ್ರಿಟಿಷರ ನೌಕಾದಳದಿಂದಲೂ ಹಿಮ್ಮೆಟ್ಟಿಸಲ್ಪಟ್ಟುದರಿಂದ, ಟಿಪ್ಪು ಸುಲ್ತಾನನ ನಿರೀಕ್ಷೆಯಂತೆ ಬೆಂಬಲ ನೀಡಲಿಲ್ಲ. ಟಿಪ್ಪು ಸುಲ್ತಾನ ರಾಕೆಟ್ಟುಗಳ ಪಡೆಯಿಂದ ಧಾಳಿ ಮಾಡಿದ್ದು ಈ ಯುದ್ಧದ ಹೆಗ್ಗಳಿಕೆ. ಈ ಧಾಳಿಯ ಪರಿಣಾಮ ನೋಡಿ ಮಾರುಹೋದ ಬ್ರಿಟಿಷ್ ವಿಜ್ಞಾನಿ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟುಗಳನ್ನು ಸಂಶೋಧಿಸಿದನು. ಈ ಯುದ್ಧದ ಪರಿಣಾಮವಾಗಿ ಟಿಪ್ಪುವು ತನ್ನ ರಾಜ್ಯದ ಕೆಲ ಭಾಗಗಳನ್ನು ಬ್ರಿಟಿಷರ ಬೆಂಬಲಿಗರೋ, ಏಜಂಟರೋ ಆಗಿದ್ದ ಮರಾಠರು, ಹೈದರಾಬಾದಿನ ನಿಜಾಮ ಮತ್ತು ಮದ್ರಾಸ್ ಪ್ರೆಸಿಡೆನ್ಸಿಗಳವರಿಗೆ ಹಂಚಿಕೊಡಬೇಕಾಗಿ ಬಂದು, ಇದರಿಂದ ಮೈಸೂರು ರಾಜ್ಯದ ವಿಸ್ತೀರ್ಣ ತೀವ್ರವಾಗಿ ಕುಸಿಯಿತು. ಮಲಬಾರ್‍, ಸೇಲಂ, ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಗಳು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಹೋದವು. ಈ ಯುದ್ಧದ ಕೊನೆಯಲ್ಲಿ ಶ್ರೀರಂಗಪಟ್ಟಣದ ಒಪ್ಪಂದವಾಗಿ, ಅದರ ಪ್ರಕಾರ ಟಿಪ್ಪು ತನ್ನ ಅರ್ಧ ರಾಜ್ಯವನ್ನು ಬ್ರಿಟಿಷರಿಗೆ ಒಪ್ಪಿಸಿದ್ದಷ್ಟೇ ಅಲ್ಲದೇ, ತನ್ನಿಬ್ಬರು ಮಕ್ಕಳನ್ನು ಬ್ರಿಟಿಷರಲ್ಲಿ ಒತ್ತೆ ಇಡಬೇಕಾಗಿ ಬಂದಿತು. ನಾಲ್ಕನೆಯ ಮೈಸೂರು ಯುದ್ಧ (೧೭೯೮ – ೧೭೯೯) ಬ್ರಿಟೀಷರಿಗೂ ಮೈಸೂರು ರಾಜ್ಯಕ್ಕೂ ನಡೆದ ಯುದ್ಧ ಸರಣಿಯಲ್ಲಿ ನಾಲ್ಕನೆಯ ಹಾಗೂ ಕಡೆಯ ಯುದ್ಧ. ಆಗಿನ ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ಪದವಿಯು ಲಾರ್ಡ್ ಕಾರ್ನವಾಲೀಸನಿಂದ ಜನರಲ್ ಹ್ಯಾರಿಸನಿಗೆ ಹಸ್ತಾಂತರ ಗೊಂಡಿತ್ತು. ೧೭೯೮ರಲ್ಲಿ ನೆಪೋಲಿಯನ್, ಭಾರತವನ್ನು ಹೆದರಿಸುವ ಉದ್ದೇಶದಿಂದ, ಈಜಿಪ್ಟಿನಲ್ಲಿ ಬಂದಿಳಿದ. ಈ ಉದ್ದೇಶ ಸಾಧನೆಗೆ, ಫ್ರಾನ್ಸಿನ ಮಿತ್ರನಾಗಿದ್ದ, ಮೈಸೂರಿನ ದೊರೆ ಟಿಪ್ಪು ಸುಲ್ತಾನ ಮುಖ್ಯವಾಗಿದ್ದ. ಹೊರಾಷಿಯೋ ನೆಲ್ಸನ್ನನು ನೆಪೋಲಿಯನ್ನನನ್ನು ನೈಲ್ ಯುದ್ಧದಲ್ಲಿ ಸೋಲಿಸಿ, ಈ ಆಸೆಯನ್ನು ಭಂಗಗೊಳಿಸಿದರೂ, ಮೂರು ಸೇನೆಗಳು ( ಒಂದು ಬಾಂಬೆ, ಎರಡು ಬ್ರಿಟೀಶ್ ) ಅಷ್ಟಕ್ಕೆ ನಿಲ್ಲದೆ ಮುನ್ನುಗ್ಗಿ ೧೭೯೯ರಲ್ಲಿ ಮೈಸೂರಿನ ರಾಜಧಾನಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದವು. ಮೇ ನಾಲ್ಕರಂದು ಈ ಸೇನೆಗಳು ಕೋಟೆಯ ಭಾಗವೊಂದನ್ನು ಭಗ್ನಮಾಡಿ, ಒಳನುಗ್ಗತೊಡಗಿದರು. ಅಲ್ಲಿಗೆ ಧಾವಿಸಿದ ಟಿಪ್ಪು ಸುಲ್ತಾನ ಗುಂಡೇಟಿನಿಂದ ಅಸುನೀಗಿದ. ಈ ಕಾರ್ಯದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ಎಂಬಾತ, ಬ್ರಿಟೀಷರೊಂದಿಗೆ ಶಾಮೀಲಾಗಿ, ಟಿಪ್ಪುವಿಗೆ ಎರಡು ಬಗೆದನು. ಯುದ್ಧದ ತೀವ್ರವಾಗಿದ್ದ ಸಮಯದಲ್ಲಿ ಮೀರ್ ಸಾದಕನು, ತನ್ನ ಸೇನಾ ತುಕಡಿಯನ್ನು ಸಂಬಳ ಪಡೆದುಕೊಳ್ಳಲು ಕಳುಹಿಸಿ, ಆ ಮೂಲಕ, ಬ್ರಿಟೀಷರು ಗೋಡೆ ಒಡೆದು ಒಳಬರಲು ಅನುವುಮಾಡಿಕೊಟ್ಟನು. ಅಷ್ಟೇ ಅಲ್ಲ, ನೆಲಮಾಳಿಗೆಯಲ್ಲಿ ಶೇಖರಿಸಿದ್ದ ಮದ್ದುಗುಂಡುಗಳ ಮೇಲೆ ನೀರು ಹೊಯ್ದು, ಅವು ನಿರುಪಯುಕ್ತವಾಗುವಂತೆ ಮಾಡಿದನು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನನು ರಾಕೆಟ್ಟುಗಳ ಉಪಯೋಗ ಮಾಡಿದ್ದು ಗಮನಾರ್ಹವಾಗಿತ್ತು. ಮೂರನೆಯ ಮತ್ತು ನಾಲ್ಕನೆಯ ಮೈಸೂರು ಯುದ್ಧಗಳಲ್ಲಿ ಈ ರಾಕೆಟ್ಟುಗಳ ಪರಿಣಾಮದಿಂದ ಪ್ರಭಾವಿತನಾದ ವಿಲಿಯಮ್ ಕಾಂಗ್ರೀವನು ಮುಂದೆ ಕಾಂಗ್ರೀವ್ ರಾಕೆಟ್ಟುಗಳನ್ನು ಸಂಶೋಧಿಸಿದನು. ಈ ಯುದ್ಧದ ಪರಿಣಾಮವಾಗಿ ಮೈಸೂರು ಬ್ರಿಟೀಷರ ವಶಕ್ಕೆ ಬಂದಿತು. ಒಡೆಯರ್ ವಂಶಕ್ಕೆ ಮರಳಿ ಅಧಿಕಾರ ದೊರೆತು, ಅವರಿಗೆ ಸಲಹಾಕಾರರಾಗಿ ಬ್ರಿಟೀಷ್ ಕಮೀಷನರು ನೇಮಿಸಲ್ಪಟ್ಟರು. ಟಿಪ್ಪುವಿನ ಎಳೆಯ ಮಗ ಮತ್ತು ಉತ್ತರಾಧಿಕಾರಿ ಫತೇ ಆಲಿಯನ್ನು ಗಡೀಪಾರು ಮಾಡಲಾಯಿತು. ಮೈಸೂರು ರಾಜ್ಯವು ಬ್ರಿಟೀಷ್ ಅಧೀನ ಸಂಸ್ಥಾನವಾಯಿತು. ಕೊಯಮತ್ತೂರು, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಬ್ರಿಟೀಷ್ ಭಾರತದ ಭಾಗವಾದವು. ರಾಕೆಟ್ ಬಳಕೆ thumb|right|Cannon used by Tipu Sultan's forces at the battle of Srirangapatna 1799 ಹೈದರಾಲಿ ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ‘ಮೈಸೂರು ರಾಕೆಟ್ಟುಗಳನ್ನು ಅಭಿವೃದ್ಧಿಪಡಿಸಿದ. ಮುಂದೆ ಚೂಪಾದ ಬ್ಲೇಡು ಕಟ್ಟಿ, ಕಬ್ಬಿಣದ ಕೇಸುಗಳೊಳಗೆ ಮದ್ದಿನಪುಡಿ ತುಂಬಿದ್ದರಿಂದ ಅವುಗಳ ದೂರಗಾಮಿತ್ವ ಎರಡು ಕಿ.ಮೀ.ನಷ್ಟು ಹೆಚ್ಚಾಯಿತು. ಮೊದಲು ಈ ರಾಕೆಟ್ಟುಗಳನ್ನು ಎದುರುಗೊಂಡಾಗ ಬ್ರಿಟಿಷರ ತಂತ್ರಜ್ಞಾನ ಅದಕಿಂತ ಹಿಂದಿತ್ತು. ಎಂದೇ ಮೊದಲ ಯುದ್ಧಗಳನ್ನು ಟಿಪ್ಪು ಗೆಲ್ಲಲು ಸಾಧ್ಯವಾಯಿತು. ಟಿಪ್ಪು ಚರಿತ್ರೆ ಕಾಲದ ನಾಣ್ಯಗಳು ಆ ನಾಣ್ಯಗಳಿಗೆ ಎರಡು ಭಿನ್ನ ಮುಖಗಳಿರುತ್ತವೆ. ಎರಡು ಮುಖಗಳನ್ನು ಆ ಕಾಲದ ಅಗತ್ಯವು ರೂಪುಗೊಳಿಸಿರುತ್ತದೆ. ಚರಿತ್ರೆ ಕಾಲದ ನೀತಿಕೋಶವೇ ಬೇರೆ. ನ್ಯಾಯ, ನೀತಿ ಎಂಬ ಪದಗಳ ಅರ್ಥವೇ ಬೇರೆ. ಅವನ್ನು ಇವತ್ತು ಎಳೆತರುವುದು, ಹೋಲಿಸುವುದು ಸಾಧುವಲ್ಲ. ಕೊನೆಗೂ ಚರಿತ್ರೆಯೆಂದರೆ ಏನೆಂದು ನಿರ್ಣಯವಾಗಬೇಕಾದ್ದು ಆಕರಗಳಿಂದ ಮಾತ್ರವಲ್ಲ, ನ್ಯಾಯಸೂಕ್ಷ್ಮದ ಮನಸುಗಳಲ್ಲೇ ಎಂದು ನೆನಪಿಸಿಕೊಳ್ಳುತ್ತ ಟಿಪ್ಪು ಸುಲ್ತಾನನ ಎರಡು ಭಿನ್ನ ವ್ಯಕ್ತಿತ್ವಗಳನ್ನು ಪೂರ್ವಗ್ರಹಗಳನ್ನಿಟ್ಟುಕೊಳ್ಳದ ಚರಿತ್ರೆಯ ಆಕರಗಳಿಂದ ಇಲ್ಲಿಡಲಾಗಿದೆ. ಟಿಪ್ಪುವಿನ ಕೊನೆಯ ದಿನಗಳು ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆ ಕೋಟೆ ಒಡೆದು ಒಳ ಪ್ರವೇಶಿಸಿದಾಗ ಟಿಪ್ಪುವಿನ ಮಿಲಿಟರಿ ಸಲಹಾಕಾರನಾಗಿದ್ದ ಫ್ರೆಂಚ್ ಅಧಿಕಾರಿ ಸುರಕ್ಷಿತ ಜಾಗಕ್ಕೆ ಓಡಿಹೋಗುವಂತೆ ಅಥವಾ ಶರಣಾಗುವಂತೆ ಟಿಪ್ಪುವಿಗೆ ಹೇಳಿದ. ಆದರೆ ‘ಒಂದು ದಿನ ಹುಲಿಯಂತೆ ಬದುಕುವುದು, ಸಾವಿರವರ್ಷ ಕುರಿಯಂತೆ ಬದುಕಿರುವುದಕ್ಕಿಂತ ಉತ್ತಮವೆಂದು ಟಿಪ್ಪು ಹೋರಾಟವನ್ನೇ ಆಯ್ದುಕೊಂಡ. ಹುಲಿಯಂತೆ ಬದುಕಬೇಕೆಂದು ತಮ್ಮ ರಾಜ ಬಯಸಿದ್ದಕ್ಕೆ ಮೈಸೂರಿನ ೧೧,೦೦೦ ಸೈನಿಕರು ಪ್ರಾಣ ತೆರಬೇಕಾಯಿತು. ಕಾವೇರಿ ಕೆಂಪಾಗಿ ಹರಿಯಿತು. ಟಿಪ್ಪು ಕುರಿತ ಕೃತಿಗಳು ‘ಅಪ್ರತಿಮ ದೇಶಭಕ್ತ ಟೀಪುಸುಲ್ತಾನ್’ ಕನ್ನಡದ ಹಿರಿಯ ಲೇಖಕರಾದ ಕೋ. ಚೆನ್ನಬಸಪ್ಪ ಅವರು ಸಂಗ್ರಹಿಸಿ, ಸಂಪಾದನೆ ಮಾಡಿರುವ ಕೃತಿ ‘ಅಪ್ರತಿಮ ದೇಶಭಕ್ತ ಟಿಪ್ಪುಸುಲ್ತಾನ್’. ಈ ಕೃತಿ ಸಂಶೋಧನೆಗೆ ಸಂಬಂಧಪಟ್ಚಿರುವುದು. ಆದುದರಿಂದಲೇ, ಇದರಲ್ಲಿ ಲೇಖಕರಾಗಿ ಗುರುತಿಸಿ ಕೊಳ್ಳದೆ, ಈ ಸಂಶೋಧನೆಯ ಹಿಂದಿರುವ ದಾಖಲೆಗಳಿಗೆ ಲೇಖಕರು ಕೃತಜ್ಞತೆ ಸಲ್ಲಿಸಿದ್ದಾರೆ. ಟೀಪು ಸುಲ್ತಾನ್‌ನ ಕುರಿತಂತೆ ರಾಜಕೀಯ ಕಾರಣಗಳಿಗೆ ಅಪಪ್ರಚಾರ ಮಾಡುತ್ತಿರುವ ಸಂಚುಗಳನ್ನು ಈ ಕೃತಿ ಬಯಲಿಗೆಳೆಯುತ್ತದೆ. ಟಿಪ್ಪು ಸುಲ್ತಾನ್ ತನ್ನ ಬದುಕಿನುದ್ದಕ್ಕೂ ಹೇಗೆ ‘ರಾಜಧರ್ಮ’ವನ್ನು ಪಾಲಿಸಿದ್ದ ಎನ್ನುವ ಸತ್ಯವನ್ನು ಈ ಕೃತಿ ತೆರೆದಿಡುತ್ತದೆ. ದಿ. ತೀ. ತಾ. ಶರ್ಮಾರ ಗ್ರಂಥವನ್ನು ಮುಂದಿಟ್ಟುಕೊಂಡು ಟಿಪ್ಪು ಸುಲ್ತಾನ್ ಹೇಗೆ ಮರಾಠರು ಸೇರಿದಂತೆ ಅನ್ಯರಿಂದ ಕನ್ನಡದ ಹಿಂದೂಗಳಿಗೆ ತೊಂದರೆಯಾದಾಗ ಅವರ ರಕ್ಷಣೆಗೆ ಧಾವಿಸಿದ ಎನ್ನುವುದನ್ನು ಮೊದಲ ಅಧ್ಯಾಯದಲ್ಲಿ ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಟಿಪ್ಪು ಅಪ್ಪಟ ದೇಶಭಕ್ತ ಎನ್ನುವುದನ್ನು ದಾಖಲೆಗಳ ಸಹಿತ ಕೃತಿಯಲ್ಲಿ ನಿರೂಪಿಸುತ್ತಾರೆ. ಟಿಪ್ಪು ತನ್ನ ಆಳ್ವಿಕೆಯಲ್ಲಿ ರೈತರಿಗೆ, ದಲಿತರಿಗೆ ಹೇಗೆ ನೆರವಾದ ಎನ್ನುವ ಅಂಶವೂ ಈ ಕೃತಿಯಲ್ಲಿದೆ. ಹಾಗೆಯೇ ಟೀಪುವಿನ ಕುರಿತಂತೆ ಹರಡಿರುವ ‘ಮತಾಂತರ’ದ ಹಿಂದಿರುವ ರಾಜಕೀಯ ಏನು ಎನ್ನುವುದನ್ನು ಈ ಕೃತಿ ತೆರೆದಿಡುತ್ತದೆ. ‘ಬ್ರಿಟಿಷರಿಗೆ ನೆರವಾದವರ ಕತೆ’ ಇದರ ಕೊನೆಯ ಅಧ್ಯಾಯ. ಈ ಅಧ್ಯಾಯ ನಿಜವಾದ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳು ಯಾರು ಎನ್ನುವ ಬೆಚ್ಚಿ ಬೀಳು ಸತ್ಯವನ್ನು ಹೇಳುವ ಪ್ರಯತ್ನ ಮಾಡುತ್ತದೆ. ಟಿಪ್ಪುವಿನ ದುರಂತಕ್ಕೆ ಕಾರಣರಾದ ದೇಶದ್ರೋಹಿಗಳನ್ನು ಈ ಅಧ್ಯಾಯ ತೆರೆದಿಡುತ್ತದೆ. ರಾಜಕೀಯ ವಿರೋಧಿಗಳನ್ನು ಟಿಪ್ಪು ಹಿಂಸಿಸಿರಬಹುದು. ಅದು ಅಂದಿನ ರಾಜಕೀಯ ಕಾಲಘಟ್ಟದಲ್ಲಿ ಅನಿವಾರ್ಯ. ಆದರೆ ಧರ್ಮದ ಹೆಸರಿನಲ್ಲಿ ಎಂದೂ ಟಿಪ್ಪು ಸುಲ್ತಾನ್ ಯಾರನ್ನೂ ಬೆದರಿಸಿರಲಿಲ್ಲ. ಜೊತೆಗೆ ಅವನು ಜಾತ್ಯತೀತನಾಗಿ ತನ್ನ ಕರ್ತವ್ಯವನ್ನು ಪಾಲಿಸಿದ ಎನ್ನುವುದನ್ನು ಈ ಕೃತಿ ಹೇಳುತ್ತದೆ. ನವಕರ್ನಾಟಕ ಪ್ರಕಾಶನ ಈ ಕೃತಿಯನ್ನು ಹೊರತಂದಿದೆ. ಮುಖಬೆಲೆ 40 ರೂ.ಟೀಪು ಸುಲ್ತಾನ್ ಕುರಿತ ಸತ್ಯಗಳುhttp://gujariangadi.blogspot.in/2014/01/blog-post_12.html ಧಾರಾವಾಹಿಯಾಗಿ ಗಿದ್ವಾನಿಯವರ - 'ದಿ ಸ್ವೋರ್ಡ್ ಆಫ್ ಟೀಪು ಸುಲ್ತಾನ್ ' ಎಂಬ ಕೃತಿಯು ಹಿಂದಿಯಲ್ಲಿ ಪ್ರಸಿದ್ದವಾಗಿದೆ. ಈ ಕೃತಿಯಲ್ಲಿ ಟೀಪ್ಪು ಒಬ್ಬ ಅಪ್ರತಿಮ ದೇಶಪ್ರೇಮಿ ಎಂಬಂತೆ ಚಿತ್ರಿಸಲಾಗಿದೆ. ಇದು ಹಿಂದಿ ಧಾರವಾಹಿಯಾಗಿಯೂ ಪ್ರಸಿದ್ದಿ ಪಡೆದಿತ್ತು. ಸಂಜಯಖಾನ್ ಎಂಬ ನಟ ಟಿಪ್ಪುವಿನ ಪಾತ್ರ ಮಾಡಿದ್ದನು. ಆ ಧಾರವಾಹಿಯ ಸಂದರ್ಭದಲ್ಲಿ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಬೆಂಕಿ ಅಪಘಾತಕ್ಕೆ ಒಳಗಾಗಿ, ಅಪಾರ ಸಾವು-ನೋವು ಸಂಭವಿಸಿತ್ತು. ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯು ರಾಷ್ಟ್ರೀಯ ಹಬ್ಬವಾಗಲಿ ಮತ್ತು ಆ ದಿವಸವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಸಿಸಬೇಕೆಂದು ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ‍್ ಇಂದಿಲ್ಲಿ ಹೇಳಿದರು. ಅವರು ಇಲ್ಲಿ ಇಂದು ತಮ್ಮ ಪಕ್ಷದ ವತಿಯಿಂದ ಆಯೋಜಿಸಿದ್ದ ಟಿಪ್ಪು ಸುಲ್ತಾನ್‍ರ ೨೬೩ನೆಯ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಅಭಿಪ್ರಾಯಪಟ್ಟರು. ಟೀಪು ಸುಲ್ತಾನ್ ಅತಿ ದೊಡ್ಡ ದೇಶ ಭಕ್ತ ಮತ್ತು ನಮ್ಮ ದೇಶಕ್ಕಾಗಿ ಹೋರಾಟ ಮಾಡಿ ಪ್ರಾಣ ಬಿಟ್ಟರು. ಆದರೆ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಈ ಹುತಾತ್ಮನ ದೇಶ ಭಕ್ತಿಯನ್ನು ನಿರ್ಲಕ್ಷಿಸಿದ್ದಾರೆ. ಟಿಪ್ಪು ಸುಲ್ತಾನ್ ರ ಪ್ರತಿಮೆಯನ್ನು ಸಂಸತ್ತಿನ ಮತ್ತು ವಿಧಾನ ಸಭೆಯ ಎದುರುಗಡೆ ಸ್ಥಾಪಿಸಬೇಕೆಂದು ಅವರು ಅಭಿಪ್ರಾಯ ಪಟ್ಟರು. ಟಿಪ್ಪುವಿನ ಹಲವಾರು ಐತಿಹಾಸಿಕ ಸ್ಥಳಗಳು ಇಂದು ನಿರ್ಲಕ್ಶಕ್ಕೊಳಗಾಗಿದೆ. ಅವುಗಳಿಗೆ ಯಾವುದೊಂದು ರಕ್ಷಣೆಯನ್ನು ಸರಕಾರ ಒದಗಿಸಿಲ್ಲ. ಇದಕ್ಕೆ ಎರಡು ಸರಕಾರಗಳ ನಿರ್ದಾಕ್ಷಣ್ಯವೆ ಸಾಕ್ಷಿ. ಆದುದರಿಂದ ಈ ಕೂಡಲೇ ಸರಕಾರಗಳು ಎಚ್ಚೆತ್ತು ಟಿಪ್ಪುವಿನ ಐತಿಹಾಸಿಕ ಸ್ಮಾರಕಾಗಳಿಗೆ ರಕ್ಷಣೆ ಕೊಡಬೇಕೆಂದು ಹೇಳಿದರು com/%E0%B2%9F%E0%B2%BF%E0%B2%AA%E0%B3%8 D%E0%B2%AA%E0%B3%81-%E0%B2%B8%E0%B3%81%E0%B2%B2%E0%B3%8D%E0%B2%A4%E0%B2%BE%E0%B2%A8%E0%B3%8D-%E0%B2%9C%E0%B2%A8%E0%B3%8D%E0%B2%AE-%E0%B2%A6%E0 %B2% BF%E0%B2%A8/ ಕರಾವಳಿ ನುಡಿ. ಇತ್ತೀಚೆಗೆ ನಡೆದ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಗಲಭೆಯಾಗಿ ಇಬ್ಬರು ಸಾವನ್ನಪ್ಪಿದರು. ವಿವಾದ ಟಿಪ್ಪು ಸುಲ್ತಾನನ ಜಯಂತಿ ವಿವಾದ ಕರ್ನಾಟಕ ಸರಕಾರ 2015ನೇ ಇಸವಿಯ ನವೆಂಬರ್ 10ರಂದು ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸಿತು. ಈ ಸರಕಾರೀ ಕಾರ್ಯಕ್ರಮವನ್ನು ನಡೆಸಲು ಪ್ರತಿ ಜಿಲ್ಲೆಗೆ 50 ಸಾವಿರ ಮತ್ತು ಪ್ರತಿ ತಾಲೂಕಿಗೆ 25 ಸಾವಿರ ರುಪಾಯಿಗಳಂತೆ ಒಟ್ಟು 80 ಲಕ್ಷವನ್ನು ವ್ಯಯಿಸಲಾಯಿತು. ನಾಡಹಬ್ಬ ದಸರಾ ಆಚರಿಸಲು ದುಡ್ಡಿಲ್ಲದೆ ಪರದಾಡುತ್ತಿದ್ದ ಸರಕಾರಕ್ಕೆ ಟಿಪ್ಪು ಜಯಂತಿ ಎಂಬ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲು ಇಷ್ಟೊಂದು ದುಡ್ಡು ಎಲ್ಲಿಂದ ಸಿಕ್ಕಿತು ಎನ್ನುವುದು ಯಕ್ಷಪ್ರಶ್ನೆ! ಟಿಪ್ಪು ಜಯಂತಿಯನ್ನು ಆಚರಿಸಿರುವುದು ಕೇವಲ ಮುಸ್ಲಿಮ್ ಸಮುದಾಯವನ್ನು ಮೆಚ್ಚಿಸಲಿಕ್ಕಾಗಿ ಎಂಬ ಸರಕಾರದ ಅಜೆಂಡವನ್ನು ಸರಕಾರೀ ಸಾಹಿತಿ ಬಾಯಿತಪ್ಪಿ ಹೇಳಿಬಿಟ್ಟಿದ್ದಾರೆ! ಟಿಪ್ಪು ಜಯಂತಿ ಒಂದಲ್ಲ ಹಲವು ವಿವಾದಗಳಿಗೆ ಕಾರಣವಾಯಿತು. ಯಾವುದೇ ಒಂದು ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯ ವಿಷಯಕ್ಕೆ ಮೂರು ಹೆಣಗಳು ಉರುಳಿದ ಚರಿತ್ರೆ ಕರ್ನಾಟಕದಲ್ಲಿ ಇರಲಿಲ್ಲ. ಟಿಪ್ಪು ಜಯಂತಿಯ ಆಸುಪಾಸು ಸಂಪೂರ್ಣ ವಿರುದ್ಧ ಕ್ರಿಯೆ, ಪ್ರತಿಕ್ರಿಯೆಗಳನ್ನು ಈ ನಾಡು ಕಂಡಿತು. ಮೈಸೂರು ಆಳಿದ ಅರಸನ ಆರಾಧನೆ, ನಿಂದನೆ ಎರಡೂ ನಡೆದವು. ಒಂದು ವರ್ಗವು ಟಿಪ್ಪುವನ್ನು ಅನನ್ಯ ದೇಶಪ್ರೇಮಿ, ಸೆಕ್ಯುಲರ್ ರಾಜ, ಜಮೀನ್ದಾರಿ ಪದ್ಧತಿ ಕೊನೆಗೊಳಿಸಲೆತ್ನಿಸಿದ ಕ್ರಾಂತಿಕಾರಿ ಸುಲ್ತಾನ, ಶೃಂಗೇರಿ-ನಂಜನಗೂಡು-ಮೇಲುಕೋಟೆ ಮುಂತಾದ ದೇವಾಲಯಗಳಿಗೆ ದತ್ತಿಕಾಣಿಕೆ ನೀಡಿದ ಸಹಿಷ್ಣುವೆಂದು ಬಿಂಬಿಸಿದರೆ ಮತ್ತೊಂದು ವರ್ಗವು ಅವನು ಸೋತ ಪ್ರದೇಶಗಳಲ್ಲಿ ಮಾಡಿದ ಲೂಟಿ ಮತ್ತು ನಾಶವನ್ನು ನೆನಪಿಸಿಕೊಂಡು ಕಾಫಿರರನ್ನು ಸೋಲಿಸಿ ಹಿಂಸಿಸಿ ಇಸ್ಲಾಂ ಸಾಮ್ರಾಜ್ಯ ಕಟ್ಟಹೊರಟ ಮತಾಂಧ ಎಂದು ಜರೆಯಿತು. ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರುವಂಥವೇ ಎಂದಿಟ್ಟುಕೊಂಡು ವಿರುದ್ಧ ಪ್ರತಿಕ್ರಿಯೆಗಳನ್ನು ಅತ್ತ ಸರಿಸುವಂತಿಲ್ಲ. ಧಾರ್ಮಿಕ ಅಸಹನೆ ಉತ್ತುಂಗ ಮುಟ್ಟಿರುವ ೨೦೧೫ರಲ್ಲಿ ಕನ್ನಡಿಗ ಮುಸ್ಲಿಮರಿಗೆ ಟಿಪ್ಪು ಸುಲ್ತಾನ್ ಮಾದರಿ ನಾಯಕನ ಗುಣಗಳ ಹೊಂದಿದ್ದನೆ? ವಿವಾದದ ಅಲೆ:೧, ಫ್ರೆಂಚರನ್ನು ಕರೆದವನು ಟಿಪ್ಪು ಸುಲ್ತಾನನ ಕತೆಯನ್ನು ಪ್ರಾಥಮಿಕ ಶಾಲೆಯ ಚರಿತ್ರೆ ಪುಸ್ತಕದಲ್ಲಿ ನಾವೆಲ್ಲರೂ ಓದಿದವರೇ. ಟಿಪ್ಪು ಒಬ್ಬ ಮಹಾನ್ ಹೋರಾಟಗಾರನಾಗಿದ್ದ; ಅವನಿಗೆ ಮೈಸೂರಿನ ಹುಲಿ ಎಂಬ ಬಿರುದಿತ್ತು; ಅವನ ಕಾಲದಲ್ಲಿ ನಮ್ಮ ರಾಜ್ಯ ಸರ್ವಧರ್ಮಗಳ ಶಾಂತಿ-ಸಾಮರಸ್ಯಗಳ ಬೀಡಾಗಿತ್ತು; ಆತ ಹುಲಿಯ ಜೊತೆ ಕಾದಾಡಿದ್ದ; ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಹೋರಾಡುತ್ತ ವೀರಮರಣವನ್ನಪ್ಪಿದ – ಮುಂತಾದ ಕತೆಗಳನ್ನು ನಾವು ಪಠ್ಯದಲ್ಲಿ ಓದಿದ್ದೆವು. ಕನ್ನಡನಾಡಿನ ಜನರ ರಕ್ಷಣೆ ಮಾಡುತ್ತಿದ್ದ ಮೈಸೂರಿನ ಒಡೆಯರ ಒಡಕು ಆಡಳಿತದಿಂದ, ಒಳ ಜಗಳದಿಂದ ಮತ್ತು ಕುಟುಂಬ ಕಲಹದಿಂದಾಗಿ ಹೈದರ್ ಮೈಸೂರನ್ನು ಆಳುವಂತಾಯಿತು. ದಕ್ಷಿಣ ಭಾರತದಲ್ಲಿ ಪ್ರಬಲನಾದ ಹೈದರಾಲಿಯ ಮಗ ಟಿಪ್ಪು, ಬ್ರಿಟಿಷರ ವಿರುದ್ಧ ಹೋರಾಡಿದ್ದು ಅವರು ನಿಜಾಮ ಮತ್ತು ಮೈಸೂರಿನ ಒಡೆಯರ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ವಿರುದ್ಧ ತಿರುಗಿಬಿದ್ದರು ಎಂಬ ಕಾರಣಕ್ಕೆ ಮಾತ್ರ. 1797ರ ಏಪ್ರಿಲ್ 21ರಂದು ಫ್ರೆಂಚರಿಗೆ ಪತ್ರ ಬರೆಯುವ ಟಿಪ್ಪು, ಅವರ ಬೆಂಬಲ ಸಿಕ್ಕರೆ ಬ್ರಿಟಿಷರನ್ನು ಓಡಿಸಿ ಇಡೀ ದೇಶವನ್ನು ಲೂಟಿ ಹೊಡೆಯಬಹುದು ಎಂಬ ಪ್ರಲೋಭನೆ ಒಡ್ಡುತ್ತಾನೆ. ಬ್ರಿಟಿಷರಿಂದ ಬಂಧನಕ್ಕೊಳಗಾಗಿ ಸೆರೆಮನೆವಾಸಿಯಾಗಿದ್ದ ಫ್ರೆಂಚ್ ನಾಯಕ ನೆಪೋಲಿಯನ್ ಬೋನಪಾರ್ಟೆಯ ಜೊತೆ ಟಿಪ್ಪುವಿಗೆ ಪತ್ರ ವ್ಯವಹಾರ ಇತ್ತು. ಫ್ರೆಂಚರು ಟಿಪ್ಪುವಿನೊಡನೆ ಸೇರಿ ದಕ್ಷಿಣ ಭಾರತದ ನಿಜಾಮ, ಮತ್ತು ಮರಾಠರನ್ನು ಸೋಲಿಸಿ ಇಲ್ಲಿ ಮೇಲುಗೈ ಸಾಧಿಸುವ ಕನಸು ಕಂಡರು. ಬ್ರಿಟಿಷರ ವಿರುದ್ಧ ಹೋರಾಡಲು, ಮೈಸೂರನ್ನು ಬ್ರಿಟಿಷರಿಂದ ರಕ್ಷಿಸಲು ಫ್ರೆಂಚರ ಸಹಾಯ ಬೇಡಿದ. ಅವನ ಹೆಚ್ಚಿನೆಲ್ಲ ಶ್ರಮ ವ್ಯರ್ಥವಾದದ್ದು ತನ್ನ ಸುತ್ತಲಿನ ರಾಜ್ಯಗಳ ಮೇಲೆ ದಂಡೆತ್ತಿ ಹೋಗುವುದರಲ್ಲಿ; ಅಲ್ಲಿನ ಸಾವಿರಾರು ಪ್ರಜೆಗಳನ್ನು ಇಸ್ಲಾಂ ಮತಕ್ಕೆ ಮತಾಂತರಿಸುವುದರಲ್ಲಿ ಮತ್ತು ತನ್ನ ಮಾತು ಕೇಳದವರಿಗೆ ಬಗೆಬಗೆಯ ಶಿಕ್ಷೆಗಳನ್ನು ಕೊಟ್ಟು ಜೀವ ತೆಗೆಯುವುದರಲ್ಲಿ. ಭಾರತ ಎಂಬ ಏಕರಾಷ್ಟ್ರದ ಕಲ್ಪನೆಯೇ ಇನ್ನೂ ಮೊಳೆತಿರದ ಕಾಲದಲ್ಲಿದ್ದ ಟಿಪ್ಪು, ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಸಿಕೊಳ್ಳಲು ಹೇಗೆ ಯೋಗ್ಯನಾಗುತ್ತಾನೆ ಎಂಬ ಪ್ರಶ್ನೆಯೂ ಇದೆ. ಆತ ಕನ್ನಡದ ಕಂದನಾಗಿದ್ದ ಎಂಬುದಕ್ಕೂ ಇತಿಹಾಸದಲ್ಲಿ ಹೆಚ್ಚು ಆಧಾರಗಳು ಸಿಗುವುದಿಲ್ಲ. ಟಿಪ್ಪು ತನ್ನ ಆಡಳಿತವಿರುವ ಎಲ್ಲಾ ಪ್ರದೇಶಗಳಲ್ಲಿ ಉರ್ದು ಮತ್ತು ಫಾರಸಿ/ಪರ್ಶಿಯನ್ ಭಾಷೆಗಳನ್ನು ಖಾಯಂ ಮಾಡಿದ. ತನ್ನ ರಾಜ್ಯದ ವ್ಯವಹಾರಗಳು ಫಾರಸಿ ಭಾಷೆಯಲ್ಲೇ ಇರಬೇಕೆಂದು ಕಟ್ಟಪ್ಪಣೆ ಹೊರಡಿಸಿದ. ಅತ್ಯಂತ ಕಟ್ಟಾ ಮತೀಯನಾಗಿದ್ದ ಟಿಪ್ಪು ತನ್ನ ಆಡಳಿತ ಕಾಲದಲ್ಲಿ ಹಲವು ಊರುಗಳ ಹೆಸರುಗಳನ್ನು ಬದಲಾಯಿಸಿದ. ಮಂಗಳೂರು ಜಲಲಾಬಾದ್ ಆಯಿತು. ಮೈಸೂರು – ನಝರಾಬಾದ್, ಕಣ್ಣಾನೂರು – ಕುಸನಬಾದ್, ಗುಟ್ಟಿ – ಫೈಜ್ ಹಿಸ್ಸಾರ್, ಧಾರವಾಡ – ಖುರ್ಷಿದ್ ಸವಾಡ್, ದಿಂಡಿಗಲ್ – ಕಲಿಖಾಬಾದ್, ರತ್ನಗಿರಿ – ಮುಸ್ತಫಾಬಾದ್, ಕಲ್ಲಿಕೋಟೆ – ಇಸ್ಲಮಾಬಾದ್.. ಹೀಗೆ ಮೈಸೂರಿನ ಸುತ್ತಮುತ್ತಲಿನ ಜಾಗಗಳಿಗೆಲ್ಲ ಟಿಪ್ಪು ಮುಸ್ಲಿಮ್ ಹೆಸರುಗಳನ್ನು ಇಡುತ್ತಾ ಹೋದ. ಟಿಪ್ಪು ಊರುಗಳ ಹೆಸರುಗಳನ್ನು ಬದಲಿಸಿದ್ದು ಮಾತ್ರವಲ್ಲ; ದೂರವನ್ನು ಅಳೆಯುವ ಅಳತೆ ಮತ್ತು ಮಾನದಲ್ಲಿಯೂ ಇಸ್ಲಾಂ ಮತವನ್ನು ತುರುಕಿದ. ಖುರಾನಿನ ಒಂದು ಸಾಲು (ಕಲ್ಮಾ) ಇಪ್ಪತ್ತನಾಲ್ಕು ಅಕ್ಷರಗಳನ್ನು ಹೊಂದಿದೆಯೆಂಬ ಕಾರಣಕ್ಕೆ 24 ಅಂಗುಲಗಳ ಉದ್ದವನ್ನು ಮೂಲಮಾನವಾಗಿ ಇಟ್ಟುಕೊಂಡ. ಉಳಿದೆಲ್ಲ ಅಳತೆಗಳೂ ಇದಕ್ಕೆ ತಕ್ಕಂತೆ ಬದಲಾದವು. ಪ್ರವಾದಿ ಮುಹಮ್ಮದರು ಹುಟ್ಟಿದ ವರ್ಷದಿಂದ ಆರಂಭಿಸಿ ಹೊಸ ಶಕೆಯೊಂದನ್ನು ಆರಂಭಿಸಿ, ಹೊಸ ಬಗೆಯ ಪಂಚಾಂಗವನ್ನು ಟಿಪ್ಪು ಜಾರಿಗೆ ತಂದ. ಸೌರಮಾನ ಪದ್ಧತಿಯನ್ನು ಕೈಬಿಟ್ಟು ಚಾಂದ್ರಮಾನ ಪದ್ಧತಿ ಅನುಸರಿಸಲು ಆದೇಶ ಹೊರಡಿಸಲಾಯಿತು. ಟಿಪ್ಪು ಪ್ರಾರಂಭಿಸಿದ ವರ್ಷದಲ್ಲಿ 354 ದಿನಗಳಿದ್ದವು. ವರ್ಷಗಳಿಗೆ ಅಹಂದ್, ಅಬ್, ಝಾ, ಬಾಬ್ ಮುಂತಾದ ಇಸ್ಲಾಮಿಕ್ ಹೆಸರುಗಳನ್ನು ಕೊಡಲಾಯಿತು. ಇನ್ನು, ಹೆಚ್ಚಾಗಿ ಎಲ್ಲರೂ ಭಾವಿಸುವುದು ಹುಲಿಯೊಂದಿಗೆ ಕಾದಾಡಿ ಅದನ್ನು ಕೊಂದದ್ದರಿಂದಾಗಿ ಅವನಿಗೆ ಮೈಸೂರು ಹುಲಿ ಎಂಬ ಬಿರುದು ಬಂದಿದೆಯೆಂದು. ಆದರೆ, ಟಿಪ್ಪು ಎಂದೂ ಹುಲಿಗಳೊಂದಿಗೆ ಕಾದಾಡಿದ ಉದಾಹರಣೆ ಇಲ್ಲ! ಪರಂಗಿಯೊಬ್ಬನ ಮೇಲೆರಗಿ ಕೂತ ಹುಲಿಯ ಆಟಿಕೆ ಅವನ ಬಳಿ ಇತ್ತು ಅಷ್ಟೆ! ಅದನ್ನು ಆತ ಚಿಕ್ಕ ಮಕ್ಕಳಂತೆ ಪ್ರೀತಿಯಿಂದ ತನ್ನ ಜೊತೆಗಿಟ್ಟುಕೊಂಡಿದ್ದ. ಆ ಕಾಲದಲ್ಲಿ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದ್ದುದರಿಂದ ಆತನಿಗೆ ಅದನ್ನೇ ತನ್ನ ರಾಜಚಿಹ್ನೆಯಾಗಿ ಇಟ್ಟುಕೊಳ್ಳುವ ಹಂಬಲ ಮೂಡಿರಬಹುದು. ಅವನ ಕತ್ತಿಯಲ್ಲಿ ಹುಲಿಯ ಉಲ್ಲೇಖ ಇತ್ತು. ಹುಲಿಯ ಮುಖದ ಅಚ್ಚು ಇರುವ ಸಿಂಹಾಸನವನ್ನು ಬಳಸುತ್ತಿದ್ದ. ಹುಲಿಯ ಪಟ್ಟೆಗಳ ವಿನ್ಯಾಸ ಇರುವ ಸಮವಸ್ತ್ರಗಳನ್ನು ತನ್ನ ಸೈನಿಕರಿಗೆ ಕೊಟ್ಟಿದ್ದ. ಜೊತೆಗೆ, ತನ್ನ ಅರಮನೆಯಲ್ಲಿ ಒಂದಷ್ಟು ಹುಲಿಗಳನ್ನು ಸಾಕಿಕೊಂಡಿದ್ದ. ಈ ಎಲ್ಲ ಕಾರಣಗಳಿಂದ ಅವನಿಗೆ ಶೇರ್-ಇ-ಮೈಸೂರ್ ಎಂಬ ಬಿರುದನ್ನು ಅವನಿಗೆ ಕೊಟ್ಟಿರಬಹುದು. ಯಮಸದೃಶ ಮತಾಂತರಿ ಟಿಪ್ಪುವಿನ ದೌರ್ಜನ್ಯಗಳ ಮಾಹಿತಿಗಳು ನಮಗೆ ಸಿಕ್ಕುವುದು ಆ ಕಾಲದಲ್ಲಿ ಮೈಸೂರು ರಾಜ್ಯಕ್ಕೆ ಭೇಟಿ ಕೊಟ್ಟ ಪರದೇಶ ಗಳ ಇತಿಹಾಸ ತಜ್ಞರಿಂದ. ಜಗತ್ಪ್ರಸಿದ್ಧ ಪೋರ್ತುಗೀಸ್ ಯಾತ್ರಿಕ ಬಾರ್ತೊಲೋಮಿಯೋ ತನ್ನ “ವೊಯೇಜ್ ಟು ಈಸ್ಟ್ ಇಂಡೀಸ್” ಎಂಬ ಕೃತಿಯಲ್ಲಿ ಬರೆಯುವ ಕೆಲವು ಸಾಲುಗಳು: “ಟಿಪ್ಪು ಒಂದು ಆನೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ. ಪ್ಪುವಿನ ಕಾಲದಲ್ಲಿ ಮಂಗಳೂರಿಗೆ ಬ್ರಿಟಿಷ್ ಅಧಿಕಾರಿಯಾಗಿ ನೇಮಕವಾಗಿದ್ದ ಕರ್ನಲ್ ಫುಲ್ಲೆರ್ಟನ್ 1783ರಲ್ಲಿ ಟಿಪ್ಪುಸೈನ್ಯ ತೋರಿದ ಹಿಂಸೆಯ ಭೀಭತ್ಸವನ್ನು ಹೀಗೆ ದಾಖಲು ಮಾಡುತ್ತಾನೆ: ಟಿಪ್ಪುವಿನ ಸೈನಿಕರು ಪ್ರತಿದಿನ ಹತ್ತಿಪ್ಪತ್ತು ಜನ ಬ್ರಾಹ್ಮಣರ ತಲೆಗಳನ್ನು ಕಡಿದು ತಂದು ಝಮೊರಿನ್ ಕೋಟೆಯ ಆಸುಪಾಸಿನಲ್ಲಿ ತೂಗು ಹಾಕುತ್ತಿದ್ದರು. ಈ ಕ್ರೌರ್ಯವನ್ನು ಕಂಡು ಸಹಿಸಲಾಗದೆ; ಇನ್ನಷ್ಟು ಬ್ರಾಹ್ಮಣರ ಜೀವ ಹೋಗಬಾರದೆಂಬ ಉದ್ಧೇಶದಿಂದ ಝಮೊರಿನ್ ರಾಜ ಆ ಪ್ರದೇಶಗಳನ್ನು ಬಿಟ್ಟುಕೊಟ್ಟು ಕೇರಳದ ದಕ್ಷಿಣಭಾಗಕ್ಕೆ ಹೋದ. ವಿವಾದದ ಅಲೆ:೨, ಟಿಪ್ಪುವಿನ ಕೃತ್ಯಗಳ ವಿವರಗಳು ಸಿಗುವ ಇನ್ನೊಂದು ಮೂಲ “ಮಲಬಾರ್ ಮ್ಯಾನುಯೆಲ್” ಎಂಬ ಗ್ರಂಥ. ಇದನ್ನು ಬರೆದ ವಿಲಿಯಂ ಲೋಗನ್, ಬ್ರಿಟಿಷ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಸ್ಕಾಟಿಷ್ ಅಧಿಕಾರಿ. ಈತ ಕೇರಳ ಮತ್ತು ತಮಿಳುನಾಡುಗಳಲ್ಲಿ ಸುಮಾರು ಇಪ್ಪತ್ತು ವರ್ಷ ಮ್ಯಾಜಿಸ್ಟ್ರೇಟ್ ಮತ್ತು ನ್ಯಾಯಾಧೀಶನಾಗಿ ಕೆಲಸ ಮಾಡಿದ. ನಂತರ ಇವನನ್ನು ಮಲಬಾರ್ ಪ್ರಾಂತ್ಯದ ಕಲೆಕ್ಟರ್ ಆಗಿ ನೇಮಿಸಿ ಕಳಿಸಲಾಯಿತು. ಭಾರತದಲ್ಲಿ ತನ್ನ ಬಹುವರ್ಷಗಳನ್ನು ಕಳೆದದ್ದರಿಂದ ಲೋಗನ್ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲನಾಗಿದ್ದ. ತನ್ನ ಪುಸ್ತಕದಲ್ಲಿ ಆತ, ಟಿಪ್ಪು ಮಲಬಾರಿನಲ್ಲಿ ಮಾಡಿದ ಮತಾಂತರದ ಅತ್ಯಾಚಾರಗಳನ್ನು ತಣ್ಣಗಿನ ಭಾಷೆಯಲ್ಲಿ ನಿರ್ವಿಕಾರ ಸಂತನಂತೆ ಹೇಳುತ್ತಾ ಹೋಗುತ್ತಾನೆ. ಅವನು ಹೇಳುವ ವರ್ಣನೆಗಳನ್ನು ಕೇಳಿದರೆ ಹೊಟ್ಟೆಯಲ್ಲಿ ಛಳುಕು ಮೂಡುತ್ತದೆ. “ಕಲ್ಲಿಕೋಟೆಯಿಂದ ಇಪ್ಪತ್ತನೇ ಪತ್ರ ಬಂತು. ಎಂದಿನಂತೆ – ಇಷ್ಟಿಷ್ಟು ಜನ ಬ್ರಾಹ್ಮಣರನ್ನು ಹಿಡಿದುಹಾಕಲಾಯಿತು. ಅವರನ್ನು ಬಲಾತ್ಕಾರವಾಗಿ ಮುಂಜಿ ಮಾಡಿಸಿ ದನದ ಮಾಂಸ ತಿನ್ನಿಸಿ ಮುಸಲ್ಮಾನರಾಗಿ ಮಾಡಲಾಯಿತು – ಎಂಬ ಒಕ್ಕಣೆ ಇತ್ತು ಅದರಲ್ಲಿ. ಈ ಇಪ್ಪತ್ತನೇ ಪತ್ರದಲ್ಲಿ 200 ಮಂದಿ ಬ್ರಾಹ್ಮಣರನ್ನು ಹಿಡಿಯಲಾಯಿತು ಎಂಬ ಮಾಹಿತಿ ಇತ್ತು.” ಈ ಪತ್ರಗಳು ನಿರಂತರವಾಗಿ ಕೇರಳದ ಸೈನಿಕರಿಂದ ಟಿಪ್ಪುವಿಗೆ ರವಾನೆಯಾಗುತ್ತಿದ್ದವು. ನೂರಿನ್ನೂರು ಜನರನ್ನು ಹಿಡಿಯುವುದು; ಅವರನ್ನು ಸಾಮೂಹಿಕವಾಗಿ ಮುಂಜಿ ಮಾಡಿಸಿ, ಮಾಂಸ ತಿನ್ನಿಸುವುದು ಅವ್ಯಾಹತವಾಗಿ ನಡೆಯುತ್ತಿತ್ತು. ತಾವು ಎಷ್ಟೆಷ್ಟು ಜನರನ್ನು ಹೀಗೆ ಮುಸಲ್ಮಾನರಾಗಿ ಮಾಡಿದೆವು ಎನ್ನುವ ವಿವರಗಳನ್ನು ಅವರು ಟಿಪ್ಪುವಿಗೆ ತಲುಪಿಸಬೇಕಾಗಿತ್ತು. ವಿವಾದಾತ್ಮಕ ಹೇಳಿಕೆಗಳು ಕರ್ನಾಟಕದ ಸಚಿವ ಡಿ.ಎಚ್.ಶಂಕರಮೂರ್ತಿ ಅವರು ನೀಡಿದ 'ಟೀಪ್ಪು ಕನ್ನಡ ವಿರೋಧಿ' ಎಂಬ ಹೇಳಿಕೆ ಟೀಪ್ಪು ಕುರಿತ ವಿವಾದಗಳನ್ನು ಕೆಣಕಿತು. ಗಿರೀಶ್ ಕಾರ್ನಾಡ್ ಅವರು ಟಿಪ್ಪು ದಿನಾಚರಣೆ ಸಂದರ್ಭದಲ್ಲಿ ಮಾತನಾಡುತ್ತಾ "ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬಹುದಿತ್ತು" ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಕಲೆಂಟು ಸಾಮಾಜಿಕ, ಆರ್ಥಿಕ ಸಮಸ್ಯೆಗಳ ಜೊತೆಗೆ ಅಭದ್ರತೆ, ತಳಮಳ ಎದುರಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಮಾಡಬೇಕಾದ್ದು ಬೇಕಾದಷ್ಟಿತ್ತು. ಮುಸ್ಲಿಂ ಸಮುದಾಯದ ಸಮಗ್ರ ಅಧ್ಯಯನ ನಡೆಸಿ ಸಾಚಾರ್ ಸಮಿತಿ ನೀಡಿದ ವರದಿಯನ್ನು ದಕ್ಷವಾಗಿ ಅನುಷ್ಠಾನಗೊಳಿಸಿದ್ದರೂ ಆ ಸಮುದಾಯದ ಸ್ಥಿತಿ ಉತ್ತಮಗೊಳ್ಳಬಹುದಿತ್ತು. ಆದರೆ ಜಾತಿಗೊಂದು ಜಯಂತಿ ನಿಗದಿಪಡಿಸಿ ಆ ಸಮುದಾಯವನ್ನೇ ಉದ್ಧಾರ ಮಾಡಿದೆವೆಂದು ಬೀಗುವ ಆಳುವವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವಂತಿರಲಿಲ್ಲ. ಇದುವರೆಗೆ ಕೆಲ ಸಂಘಸಂಸ್ಥೆಗಳು ಆಚರಿಸಿಕೊಂಡು ಬರುತ್ತಿದ್ದ ಟಿಪ್ಪು ಜಯಂತಿಯನ್ನು ಈ ಸಲದಿಂದ ಸರ್ಕಾರವೇ ಆಚರಿಸಲು ತೀರ್ಮಾನಿಸಿತು. ಮತ್ತಿನ್ನಾವ ಜಯಂತಿ, ಪುಣ್ಯತಿಥಿಗಳಲ್ಲೂ ಹೀಗಾಗಿರಲಿಲ್ಲ. ಇವನ್ನೂ ಓದಿ ಹೈದರ್ ಆಲಿ ಟಿಪ್ಪು ಸುಲ್ತಾನ್ ಟಿಪ್ಪು ಮನೆತನದವರು: ಹೊರಗಿನ ಸಂಪರ್ಕಗಳು ಟೀಪು ಬಗ್ಗೆ ಗ್ಯಾಲರಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದಲ್ಲಿನ ಮಾಹಿತಿಪುಟ ಉಲ್ಲೇಖ ವರ್ಗ:ಭಾರತೀಯ ಇತಿಹಾಸದ ಪ್ರಮುಖರು ವರ್ಗ:ಭಾರತದ ಇತಿಹಾಸ ವರ್ಗ:ಕರ್ನಾಟಕದ ಇತಿಹಾಸ .
ಹಂಪೆ
https://kn.wikipedia.org/wiki/ಹಂಪೆ
right|200px|ವಿರೂಪಾಕ್ಷ ದೇವಾಲಯ thumb|ಹಂಪಿಯ ಭೂಪಟ, 1911 right|thumb|ಕೃಷ್ಣ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ಪವಿತ್ರ ಪುಷ್ಕರಿಣಿ ಕೊಳ, ಹಂಪಿ thumb|Schematic map of Hampi with major tourist spots and areas of mythological significance right|thumb|150px|ವಿರೂಪಾಕ್ಷ ದೇವಾಲಯ 200px|right|ಹಂಪಿ ವಿಹಂಗಮ ನೋಟ, ಮಾತಾಂಗ ಬೆಟ್ಟದಿಂದ ತೆಗೆದ ೩೬೦° ಪನೋರಮ ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (೧೩೩೬-೧೫೬೫) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ೧೯೮೬ರಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳಿಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪಿಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ. ಭೂವಿವರಣೆ ಹಂಪಿಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಚಟುವಟಿಕೆ. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ. ಹಂಪೆ ಹಾಗು ಸುತ್ತಮುತ್ತಲಿರುವ ಕೆಲವು ಮುಖ್ಯ ಸ್ಮಾರಕಗಳು ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ಹಲವು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ- ಕೇಂದ್ರವಾದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ. ನಡೆದು ನೋಡಬಹುದಾದ ದಾರಿ. ವಾಹನಗಳಲ್ಲಿ ಸಂಚರಿಸಿ ನೋಡಬಹುದಾದ ದಾರಿ. ಸೂರ್ಯಾಸ್ತದ ಸ್ಥಳಗಳು. ಅಚ್ಯುತರಾಯ ದೇಗುಲ ಆನೆಗೊಂದಿ ಅಂಜನಾದ್ರಿ ಪರ್ವತ ವಿರೂಪಾಕ್ಷೇಶ್ವರ ದೇವಾಲಯ ತುಂಗಭದ್ರ ನದಿ ಪುರಂದರ ಮಂಟಪ ವಿಜಯವಿಠ್ಠಲ ದೇಗುಲ ಕಲ್ಲಿನ ತೇರು ಉಗ್ರ ನರಸಿಂಹ ವಿಷಯದ ಬಗ್ಗೆ ಕಡಲೆಕಾಳು ಗಣಪತಿ ಸಾಸಿವೆಕಾಳು ಗಣಪತಿ ರಾಣಿ ಸ್ನಾನಗೃಹ ಹಂಪೆ ಬಜಾರ್ ಹೇಮಕೂಟ ಬಡವಿ ಲಿಂಗ ೯ ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು. ಸಾಸುವೆಕಾಳು ಗಣೇಶ ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರಿಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಂತ ಗಣೇಶನು, ಮಿತಿ ಮೀರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕಾರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.೧೫೦೬ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬದು ತಿಳಿದು ಬರುತ್ತದೆ. ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ ವಿಸ್ತಾರವಾದ ವಿವರಗಳನ್ನು ನೀಡುತ್ತದೆ.ಈ ಸಂಗ್ರಹಾಲಯವು ಪ್ರಧಾನವಾಗಿ ನಾಲ್ಕು ಭಾಗಗಳನ್ನು ಹೊಂದಿದೆ. ಮೇಲೆ ವಿವರಿಸಿದ ಹಂಪಿಯ ಮಾದರಿಗಳು ಒಂದನೆ ಭಾಗದಲ್ಲಿದ್ದು, ಎರಡನೆ ಭಾಗವು ಹಂಪಿಯ ಅವಶೇಷಗಳಿಗೆ ಸಂಬಂಧಿಸಿದ ಮೂರ್ತಿಗಳು ಹಾಗು ಶಿಲಾಕೃತಿಗಳನ್ನು ಹೊಂದಿದೆ. ಮೂರನೆ ಭಾಗವು ಆಗಿನ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದ ಯುದ್ಧ ಸಲಕರಣೆಗಳು,ನಗನಾಣ್ಯಗಳು ಮತ್ತು ಇತರೆ ಸಾಮಗ್ರಿಗಳನ್ನು ಹೊಂದಿದೆ. ನಾಲ್ಕನೆ ಭಾಗವು ಇತಿಹಾಸದ ಪೂರ್ವ ಹಾಗು ನಂತರದ ವಸ್ತುಗಳನ್ನು ಹೊಂದಿದೆ. ಹಿರೊ ಕಲ್ಲುಗಳು, ಸತಿ ಕಲ್ಲುಗಳು,ಚಿಕ್ಕದಾದ ರಾಯಲ್ ಸೆಂಟರ್ ಪ್ರತಿರೂಪ, ಪಿಂಗಾಣಿ ವಸ್ತುಗಳು ಮತ್ತು ಗೋಡೆಯ ಅಲಂಕಾರಿಕ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಇದರ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫ ರ ವರೆಗೆ. ನೀವು ಹಂಪಿಗೆ ಹೋಗುತ್ತಿರಾದರೆ, ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಿ. ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಷ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ. ವಿರೂಪಾಕ್ಷ ದೇವಾಲಯ ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಶೈಲಿಯನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗೂ ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು ೭ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣವಾಗಿ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು, ದೀಪಸ್ಥಂಬಗಳು, ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ. ಜೆನಾನಾ ಎನ್ಕ್ಲೊಸರ್ ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುವರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಕಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ ೪೬*೨೯ ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು. ಆನೆಗೊಂದಿ (ಆನೆಗುಂಡಿ) ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ. ಆನೆಗುಂದಿಯ ಕೆಲವು ಪ್ರಮುಖ ಆಕರ್ಷಣೆಗಳು ಗಗನ ಪ್ಯಾಲೇಸ್, ಪಂಪ ಸರೋವರ ಲಕ್ಷ್ಮಿದೇವಾಲಯ, ಶ್ರೀಕೄಷ್ಣದೇವರಾಯ ಸಮಾಧಿ, ಆನೆಗುಂದಿ ಕೋಟೆಯ ಹೆಬ್ಬಾಗಿಲು ಹಾಗು ಏಳು ತಲೆಯ ಸರ್ಪ ಇವು ಆನೆಗುಂದಿಯ ಕೆಲವು ಪ್ರಮುಖ ಆಕರ್ಷಣೆಗಳು. ಇಷ್ಟೇ ಅಲ್ಲದೆ ಪ್ರವಾಸಿಗರು- ಶ್ರೀ ಗವಿ ರಂಗನಾಥ ಸ್ವಾಮಿ ದೇವಸ್ಥಾನ, ಗಣಪತಿ ದೇವಸ್ಥಾನ, ಚಿಂತಾಮಣಿ ಶಿವ ದೇವಸ್ಥಾನ, ಹುಚ್ಚೈಪ್ಪನ ಮಠ ಮತ್ತು ಜೈನ್ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದು. ಇವನ್ನೂ ನೋಡಿ ವಿಜಯನಗರ ಬೊಮ್ಮಘಟ್ಟ ಹೊರಗಿನ ಸಂಪರ್ಕಗಳು ಹಂಪಿಯಲ್ಲಿರುವ ಸ್ಮಾರಕಗಳು - ಯುನೆಸ್ಕೊ ಪುಟ ಕರ್ನಾಟಕ ಡಾಟ್ ಕಾಮ್ - ಹಂಪಿ ಪುಟ ಪ್ರವಾಸಿಗರೊಬ್ಬರ ಬರಹ ಪಳೆಯುಳಿಕೆಗಳು - ಬರಹ, ಚಿತ್ರಗಳು ಇನ್ನಷ್ಟು ಚಿತ್ರಗಳು ಮತ್ತು ಮಾಹಿತಿ www.ಹಂಪೆ.in http://www.incrediblehampi.org/ ] Archaeological Survey of India Museum Hampi Group of Monuments at Hampi - UNESCO World Heritage List www.HAMPI.in Hampi Online Hampi: Tenali's Wonderful Town Hampi, “A Forgotten Empire” Hampi. Kala Darshana Hampi in the News. The Times of India September 2012. Global Heritage Fund Explore Hampi with Google Earth. Global Heritage Fund Hampi @ Karnataka.com http://www.malligihotels.com/monuments.html Hampi Photographs, 2013 Elephant Stables Photographs, 2013 360 degree spherical panoramas of the Monkey temple ವರ್ಗ:ವಿಶ್ವ ಪರಂಪರೆಯ ತಾಣಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಬಳ್ಳಾರಿ ಜಿಲ್ಲೆ ವರ್ಗ:ಬಳ್ಳಾರಿ ಜಿಲ್ಲೆಯ ಪ್ರವಾಸಿ ತಾಣಗಳು ವರ್ಗ:ಕರ್ನಾಟಕದ ಏಳು ಅದ್ಭುತಗಳುವರ್ಗ:ಭಾರತದ ಹಿಂದಿನ ರಾಜಧಾನಿ ನಗರಗಳು
ಭಾರತದ ರಾಷ್ಟ್ರಗೀತೆ
https://kn.wikipedia.org/wiki/ಭಾರತದ_ರಾಷ್ಟ್ರಗೀತೆ
ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ ಬರೆದ ಗೀತೆ. ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ ೫ ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.ಈ ಗೀತೆಯನ್ನು ಜನವರಿ ೨೪, ೧೯೫೦ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು. ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್https://thedarjeelingchronicle.com/special-article-capt-ram-singh-thakuri/. ರಾಷ್ಟ್ರಗೀತೆಯನ್ನು ರಾಷ್ಟ್ರ ಧ್ವಜವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು. ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು. ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ. ಭಾರತದ ರಾಷ್ಟ್ರಗೀತೆ "ಜನ ಗಣ ಮನ" ಕನ್ನಡದಲ್ಲಿ ಈ ಮುಂದಿನಂತಿದೆ: ಕನ್ನಡದಲ್ಲಿ "ಜನ ಗಣ ಮನ"ಕನ್ನಡದಲ್ಲಿ ಭಾವಾನುವಾದಜನಗಣಮನ-ಅಧಿನಾಯಕ ಜಯ ಹೇ ಭಾರತಭಾಗ್ಯವಿಧಾತಾ! ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ ವಿಂಧ್ಯ ಹಿಮಾಚಲ ಯಮುನಾ ಗಂಗಾ ಉಚ್ಛಲಜಲಧಿತರಂಗ ತವ ಶುಭ ನಾಮೇ ಜಾಗೇ, ತವ ಶುಭ ಆಶಿಷ ಮಾಗೇ, ಗಾಹೇ ತವ ಜಯಗಾಥಾ. ಜನಗಣಮಂಗಳದಾಯಕ ಜಯ ಹೇ ಭಾರತಭಾಗ್ಯವಿಧಾತಾ! ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ.ಜನ ಸಮೂಹದ ಮನಸ್ಸಿಗೆ ಒಡೆಯನಾದ ಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನು ದಯಪಾಲಿಸುವವನೇ ನಿನಗೆ ಜಯವಾಗಲಿ! ಪಂಜಾಬ, ಸಿಂಧು, ಗುಜರಾತ, ಮಹಾರಾಷ್ಟ್ರ ದ್ರಾವಿಡ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ) ಒಡಿಶಾ, ಬಂಗಾಳ ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ-ಯಮುನೆಯಂತಹ ಜೀವನದಿಗಳು ಶ್ರೇಷ್ಠವಾದ ಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ, ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ! ಜಯವಾಗಲಿ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ರಾಷ್ಟ್ರಗೀತೆ ಭಾರತದ ಸಂವಿಧಾನ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಲ್ಲಿರುವ ವಿವರ ಭಾರತದ ರಾಷ್ಟ್ರಗೀತೆ - ಜನಗಣಮನ ಅಧಿನಾಯಕ ಜಯಹೇ ಭಾರತದ ರಾಷ್ಟ್ರಗೀತೆ. ರವೀಂದ್ರನಾಥ ಠಾಕೂರ್ ಅವರು 1911ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಯಿತು. ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ 1950 ಜನವರಿ 24ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು 1912ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಪ್ರಕಟಣೆಗೆ ಮೊದಲು ಈ ಗೀತೆಯನ್ನು 27 ಡಿಸೆಂಬರ್ 1911ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಠಾಕೂರ್ ಅವರು ಇದನ್ನು 'ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ 1919ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ; ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ. ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು. ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು. ಉಲ್ಲೇಖ ವರ್ಗ:ಭಾರತ
ಪ್ರಜಾವಾಣಿ
https://kn.wikipedia.org/wiki/ಪ್ರಜಾವಾಣಿ
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ಇತಿಹಾಸ ಮತ್ತು ಮಾಲೀಕತ್ವ ಸ್ವಾತಂತ್ರ್ಯದ ನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿಯು ಒಂದು. ೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‍ನಲ್ಲಿ ಪ್ರಜಾವಾಣಿಯನ್ನು ಪ್ರಾರಂಭಿಸಲಾಯಿತು. ಬಿ.ಪುಟ್ಟಸ್ವಾಮಯ್ಯನವರ ಸಂಪಾದಕತ್ವದಲ್ಲಿ ಮೊದಲಾಗಿ ಪ್ರಸಕ್ತ ಕೆ.ಎನ್. ಶಾಂತ ಕುಮಾರ್ ರವರೆಗೆ ಪ್ರಜಾವಾಣಿ ಅವಿರತವಾಗಿ ಸಾಗಿದೆ.http://www.prajavaniepaper.com ನಿಲುವು ಪ್ರಜಾವಾಣಿ (ಪಿವಿ) ರಾಜಕೀಯವಾಗಿ ಸ್ವತಂತ್ರ ಪತ್ರಿಕೆಯಾಗಿ ಇತಿಹಾಸವನ್ನು ಹೊಂದಿದೆ.http://www.prajavani.net/ ಇದು ದಲಿತರ ಕಾರಣಗಳನ್ನು ಸಮರ್ಥಿಸಲು, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕ ವಿಷಯಗಳಲ್ಲಿ ಬಡವರ ಪರವಾದ ನಿಲುವುಗಳನ್ನು ತೆಗೆದುಕೊಳ್ಳಲು ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಹೆಚ್ಚುತ್ತಿರುವ ಧ್ರುವೀಕರಣದ ಮಾಧ್ಯಮದ ಹೊರತಾಗಿಯೂ ಇದು ಸ್ವತಂತ್ರ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.https://en.wikipedia.org/wiki/List_of_Kannada-language_magazines ಪ್ರಜಾವಾಣಿಯು "ಅತ್ಯಂತ ವಿಶ್ವಾಸಾರ್ಹ ಕನ್ನಡ ದಿನಪತ್ರಿಕೆ" ಎಂಬ ಅಡಿಬರಹವನ್ನು ಬಳಸುತ್ತದೆ, ಅದು ಅದರ ಮಾಸ್ಟ್‌ಹೆಡ್‌ನ ಕೆಳಗೆ ಕಾಣಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿನ ಸ್ಥಾನ ಪ್ರಜಾವಾಣಿ ದಶಕಗಳಿಂದ ಕನ್ನಡದ ಪ್ರಮುಖ ಪತ್ರಿಕೆಯಾಗಿತ್ತು, ಆದರೆ ಇದನ್ನು ೨೦೦೪ರಲ್ಲಿ ವಿಜಯ ಕರ್ನಾಟಕ (ವಿಕೆ) ದಿನಪತ್ರಿಕೆ ಹಿಂದಿಕ್ಕಿತು. ನಂತರ ಪಿವಿ ಮತ್ತು ಅಪ್‌ಸ್ಟಾರ್ಟ್ ವಿಕೆ ನಡುವಿನ ಅಂತರವು ಸ್ವಲ್ಪ ಸಮಯದವರೆಗೆ ದೊಡ್ಡದಾಯಿತು, ಆದರೆ ೨೦೧೪ ರ ಹೊತ್ತಿಗೆ ಎರಡು ಪತ್ರಿಕೆಗಳು ಹೆಚ್ಚು ನಿಕಟವಾಗಿ ಸ್ಪರ್ಧಿಸುತ್ತಿರುವಂತೆ ಕಂಡುಬರುತ್ತವೆ. ಅಂತೆಯೇ ಪಿವಿ ಉದ್ಯಮದ ಸಂಖ್ಯೆಗಳ ಪ್ರಕಾರ, ಪ್ರಜಾವಾಣಿಯು ಗಮನಾರ್ಹವಾಗಿ ನೆಲವನ್ನು ಚೇತರಿಸಿಕೊಂಡಿದೆ ಎಂದು ತಿಳಿದು ಬಂದಿದೆ. ವಿಜಯ ಕರ್ನಾಟಕದ ಮೂಲ ಮಾಲೀಕರಾದ ವಿಜಯ ಸಂಕೇಶ್ವರ ಮತ್ತು ಅವರ ವಿ ಆರ್ ಎಲ್ ಸಮೂಹ, ವಿಜಯ ಕರ್ನಾಟಕದ ಓದುಗರನ್ನು ಸ್ಪಷ್ಟವಾಗಿ ತಮ್ಮ ಕಡೆಗೆ ಗಮನ ಸೆಳೆದುಕೊಂಡಿದ್ದಾರೆ ಎಂದು ಹೇಳುವ ಕೆಲವು ವಿಶ್ಲೇಷಕರು ವಿಜಯ ವಾಣಿಯ ಪ್ರಾರಂಭವೂ ಇದಕ್ಕೆ ಕಾರಣವೆಂದು ತಿಳಿಸಿದ್ದಾರೆ. ಅಲ್ಲದೆ ಇತರ ಪ್ರಾದೇಶಿಕ ಸ್ಪರ್ಧಿಗಳಾಗಿ ಉದಯವಾಣಿ, ವಾರ್ತಾ ಭಾರತಿ, ಕನ್ನಡಪ್ರಭ ಮತ್ತು ಸಂಯುಕ್ತ ಕರ್ನಾಟಕ ಸೇರಿವೆ.https://en.wikipedia.org/wiki/List_of_Kannada-language_newspapers ಇತರ ಪ್ರಕಟಣೆಗಳು ಡೆಕ್ಕನ್ ಹೆರಾಲ್ಡ್, ದಿನನಿತ್ಯದ ಇಂಗ್ಲಿಷ್ ಪತ್ರಿಕೆ ಸುಧಾ, ಕನ್ನಡ ವಾರಪತ್ರಿಕೆ ಮಯೂರ, ಕನ್ನಡ ಮಾಸಪತ್ರಿಕೆ ಸಂಪಾದಕರು ಬಿ.ಪುಟ್ಟಸ್ವಾಮಯ್ಯನವರು ಖಾದ್ರಿ ಶಾಮಣ್ಣ ಟಿಯೆಸ್ಸಾರ್ ಎಂ.ಬಿ.ಸಿಂಗ್ ಕೆ.ಎನ್. ಹರಿಕುಮಾರ್ ಕೆ.ಎನ್. ಶಾಂತ ಕುಮಾರ್ ಕೆ.ಎನ್.ತಿಲಕ್ ಕುಮಾರ್. ಕೆ.ಎನ್.ಶಾಂತ ಕುಮಾರ್ ಸಹ ಸಂಪಾದಕರು ಪಿ.ರಾಮಣ್ಣ ಬಿ.ಎಂ.ಕೃಷ್ಣಸ್ವಾಮಿ ಜಿ.ಎನ್.ರಂಗನಾಥರಾವ್, ಕೆ. ಶ್ರೀಧರ ಆಚಾರ್ ರಾಜಾ ಶೈಲೇಶ್ಚಂದ್ರ ಗುಪ್ತ ಆರ್. ಪಿ. ಜಗದೀಶ ಪದ್ಮರಾಜ ದಂಡಾವತಿ ಸಹಾಯಕ ಸಂಪಾದಕರು ಮಾಗಡಿ ಗೋಪಾಲಕಣ್ಣನ್ ಶ್ರೀಧರ ಕೃಷ್ಣಮುರ್ತಿ ಜಿ.ಎಸ್. ಸದಾಶಿವ ಡಿ.ವಿ. ರಾಜಶೇಖರ ಲಕ್ಷ್ಮಣ ಕೊಡಸೆ ಶಿವಾಜಿ ಗಣೇಷನ್ ಇ.ವಿ.ಸತ್ಯನಾರಾಯಣ ಮೊದಲಾದವರು. ಸಾಪ್ತಾಹಿಕ ಪುರವಣಿ ಉಸ್ತುವಾರಿ ಬಿ.ವಿ.ವೈಕುಂಠರಾಜು ಜಿ.ಎನ್.ರಂಗನಾಥ ರಾವ್ ಡಿ.ವಿ. ರಾಜಶೇಖರ ಗಂಗಾಧರ ಮೊದಲಿಯಾರ್ ಪ್ರೇಮಕುಮಾರ್ ಹರಿಯಬ್ಬೆ ಲಕ್ಷ್ಮಣ ಕೊಡಸೆ ರಘುನಾಥ ಚ.ಹ ಹೊರಗಿನ ಸಂಪರ್ಕಗಳು ಬಾಹ್ಯಕೊಂಡಿಗಳು Official website https://web.archive.org/web/20081206111259/http://prajavaniepaper.com/ Prajavani News Paper History http://mruc.net/uploads/posts/a27e6e912eedeab9ef944cc3315fba15.pdf ವರ್ಗ:ಕನ್ನಡ ಪತ್ರಿಕೆಗಳು ವರ್ಗ:ಕನ್ನಡ ದಿನಪತ್ರಿಕೆಗಳು ವರ್ಗ:ಪತ್ರಿಕೋದ್ಯಮ ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
ರಾಷ್ಟ್ರೀಯ ಗಾನ
https://kn.wikipedia.org/wiki/ರಾಷ್ಟ್ರೀಯ_ಗಾನ
REDIRECT ವಂದೇ ಮಾತರಮ್
ವೀರಪ್ಪನ್
https://kn.wikipedia.org/wiki/ವೀರಪ್ಪನ್
ಕೂಸೆ ಮುನಿಸ್ವಾಮಿ ವೀರಪ್ಪನ್ (ಜನವರಿ ೧೮, ೧೯೫೨ - ಅಕ್ಟೋಬರ್ ೧೮, ೨೦೦೪) - ಭಾರತದ ಕುಖ್ಯಾತ ದಂತಚೋರ, ನರಹಂತಕ. ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ಇರುವ ಸುಮಾರು ೬,೦೦೦ ಚದುರ ಕಿ.ಮೀ. ಕಾಡಿನಲ್ಲಿ ಜೀವನಪರ್ಯಂತ ವಾಸಿಸಿದ ಇವನು, ಅಲ್ಲಿಯೇ ತನ್ನ ಕಾರುಬಾರು ನೆಡೆಸುತ್ತಿದ್ದ. ಸುಮಾರು ೧೨೦ಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಗಿದ್ದ ಇವನು ಪೋಲಿಸರ ಕಣ್ಣಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಕಾಡಿನಲ್ಲಿದ್ದ ಆನೆಗಳ ಹತ್ಯೆ ಮಾಡುತ್ತಾ, ದಂತವನ್ನು, ಹಾಗೂ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದನು. ಇವನ ತಲೆಯ ಮೇಲೆ ಸುಮಾರು ೫ ಕೋಟಿ ಬಹುಮಾನವಿದ್ದರೂ ೨೦ ವರ್ಷಗಳವರೆಗೂ ಪೋಲೀಸರ ಕೈಗೆ ಸಿಕ್ಕದೆ ಹೋದನು. ಕೊನೆಗೆ ಅಕ್ಟೋಬರ್ ೧೮, ೨೦೦೪ ರಂದು ಪೋಲೀಸರ ಗುಂಡಿಗೆ ಬಲಿ ಯಾದನು.ಆಗ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಜಯಲಲಿತಾ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ.ಕೃಷ್ಣ. ಆ ದಿನ ಬೆಳಗ್ಗೆ ಬಾನುಲಿಯಲ್ಲಿ ಬಂದಿದ್ದ ಸುದ್ದಿ ಭಾರೀ ಕುತೂಹಲ ಮೂಡಿಸಿತ್ತು. ಜೀವನ ಕರ್ನಾಟಕದ ಗೋಪಿನಾಥಂನಲ್ಲಿ ವೀರಪ್ಪನ್ ಹುಟ್ಟಿದವನು. ೧೮ನೇ ವಯಸ್ಸಿಗೇ ಅಕ್ರಮ ಶಿಕಾರಿಗೆ, ಪ್ರಾಣಿ ಹತ್ಯೆಗೆ ತೊಡಗಿದನು. ತನ್ನ ವಿರೋಧಿ ಪಂಗಡಗಳನ್ನು ನಾಶ ಮಾಡಿದ ಇವನು ವರ್ಷಗಳು ಉರುಳಿದಂತೆ ಇಡೀ ಕಾಡಿನ ನಿಯಂತ್ರಣವನ್ನು ತನ್ನ ತೆಕ್ಕೆಗೆ ಪಡೆದುಕೊಂಡನು. ದಂತ ಹಾಗೂ ಶ್ರೀಗಂಧದ ಕಳ್ಳಸಾಗಾಣಿಕೆಯಿಂದ ದುಡ್ಡು ಮಾಡಿದನು. ೨,೦೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದನೆಂದು ಹೇಳಲಾಗುತ್ತದೆಯಾದರೂ, ವೀರಪ್ಪನ್ ಬಗ್ಗೆ ಜೀವನ ಚರಿತ್ರೆಯನ್ನು ಬರೆದ ಸುನಾದ ರಘುರಾಮ್‌ರವರ ಪ್ರಕಾರ ೨೦೦ಕ್ಕೂ ಹೆಚ್ಚು ಆನೆಗಳನ್ನು ಕೊಂದಿರಲಾರ. ಕ್ರೂರಿಯ ಕಾಲಚಕ್ರ ೧೯೭೦ - ಕಳ್ಳಸಾಗಾಣಿಕೆದಾರರ ಗುಂಪೊಂದನ್ನು ಸೇರಿದನು. ೧೯೮೬ - ಬಂಧಿಸಿ ಬೂದಿಪಾಡ ಕಾಡಿನ ಗ್ಯೆಸ್ಟ್ ಹೌಸ್‌ನಲ್ಲಿ ಕೂಡಿ ಹಾಕಲಾಯಿತು. ಆದರೆ ನಿಗೂಡವಾಗಿ ಪರಾರಿಯಾದ. (ಲಂಚ ಕೊಟ್ಟು ಪರಾರಿಯಾದ ಎಂದು ಹೇಳಲಾಗುತ್ತದೆ) ೧೯೮೭ - ಫಾರೆಸ್ಟ್ ಆಫೀಸರ್ ಚಿದಂಬರಮ್ ಅವರನ್ನು ಅಪಹರಿಸಿ ಕೊಲೆಗೈದ. ತನ್ನ ವಿರೋಧಿ ಗುಂಪಿನ ೫ ಜನರನ್ನು ಕೊಲಗೈದ. ೧೯೮೯ - ಬೇಗೂರು ಅರಣ್ಯ ಪ್ರದೇಶದಲ್ಲಿ ೩ ಜನ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಕೊಲೆಗೈದ. ೧೯೯೦ - ತನ್ನ ತಂಡದ ಇಬ್ಬರನ್ನು ಕೊಂದದ್ದಕ್ಕಾಗಿ ಸೇಡಿನಂತೆ ಇಬ್ಬರು ಪೋಲಿಸ್ ಸಿಬ್ಬಂದಿಯನ್ನು ಕೊಲೆಗೈದ. ಇನ್ನೂ ೪ ಕರ್ನಾಟಕದ ಪೋಲಿಸ್ ಅಧಿಕಾರಿಗಳನ್ನು ಕೊಲೆಗೈದ. ಕರ್ನಾಟಕ ರಾಜ್ಯವು ವೀರಪ್ಪನ್‌ನ ಹಿಡಿಯಲು ಸ್ಪೆಷಲ್ ಟ್ಯಾಸ್ಕ್ ಫೋರ್ಸ್ (ವಿಶೇಷ ಕಾರ್ಯಾಚರಣೆ ಪಡೆ) ಅನ್ನು ರಚಿಸಿತು. ಕರ್ನಾಟಕದ ಡೆಪ್ಯುಟಿ ಕನ್ಸರ್ವೇಟರ್ ಶ್ರೀನಿವಾಸ್ ಅವರನ್ನು ಗುಂಡಿಟ್ಟು ಕೊಂದು ತಲೆ ಕಡಿದು ಹಾಕಿದ (ತನ್ನ ತಂಗಿಯ ಆತ್ಮಹತ್ಯೆಗೆ ತೀರಿಸಿಕೊಂಡ ಸೇಡು ಇದಾಗಿತ್ತು). ೩ ವರ್ಷಗಳ ನಂತರ ಶ್ರೀನಿವಾಸ್‌ರವರ ತಲೆಯು ಪತ್ತೆಯಾಯಿತು. ೧೯೯೨ - ರಾಂಪುರದ ಪೋಲಿಸ್ ಸ್ಟೇಶನ್ ಮೇಲೆ ದಾಳಿ ನಡೆಸಿ ಐದು ಜನರನ್ನು ಪೋಲಿಸರನ್ನು ಕೊಲೆಗೈದು ಅಲ್ಲಿಂದ ಮದ್ದು, ಗುಂಡು ಮತ್ತು ಅಸ್ತ್ರಗಳನ್ನು ದೋಚಿದ. ಎಸ್ ಟಿ ಎಫ್ ಇದಕ್ಕೆ ಪ್ರತ್ಯುತ್ತರವಾಗಿ ವೀರಪ್ಪನ್ ತಂಡದ ೪ ಜನರನ್ನು ಗುಂಡಿಟ್ಟಿ ಕೊಂದಿತು. ಎಸ್ ಟಿ ಎಫ್ ಪೋಲಿಸ್ ಅಧಿಕಾರಿ ಹರಿಕೃಷ್ಣ ಹಾಗೂ ಷಕೀಲ್ ಅಹ್ಮದ್ ಮತ್ತು ೨೫ ಕಾನ್ಸ್ಟಬಲ್‌ಗಳನ್ನು ಸುಳ್ಳು ಮಾಹಿತಿದಾರನ ದೆಸೆಯಿಂದ ಸಿಕ್ಕಿಹಾಕಿಸಲು ಬಲೆ ಬೀಸಿದ. ಈ ತಂಡದ ಆರು ಜನರನ್ನು ಕೈ ಬಾಂಬುಗಳಿಂದ, ಗ್ರೆನೇಡ್‌ಗಳಿಂದ ಕೊಂದನು. ೧೯೯೩ - ಪೋಲಿಸರು ಹಾಗು ಸಾಮಾನ್ಯ ಜನರಿಂದ ಕೂಡಿದ ೨೨ ಪ್ರಯಾಣಿಕರಿದ್ದ ಬಸ್ಸನ್ನು ನೆಲ ಬಾಂಬಿನಿಂದ ಉಡಾಯಿಸಿದನು. ಎಸ್ ಪಿ ಗೋಪಾಲ್ ಹೊಸೂರ್‌ರ ವಿಶೇಷ ತಂಡದ ೬ ಪೋಲೀಸರನ್ನು ಕೊಂದನು. ತಮಿಳುನಾಡು ಸರಕಾರವು ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ಅನ್ನು ವೀರಪ್ಪನ್‌ನ ಹಿಡಿಯಲು ಗೊತ್ತು ಮಾಡಿತು. ಬಿಎಸ್‌ಎಫ್ ಹಾಗೂ ಎಸ್‌ಟಿಎಫ್‌ನ ಮಿಶ್ರ ಕಾರ್ಯಾಚರಣೆ ಪಡೆ ೧೯ ವೀರಪ್ಪನ್ ಸಹಚರರನ್ನು ಹಿಡಿದು ೬ ಜನರನ್ನು ಕೊಂದಿತು. ೩ ಜನ ಪೋಲಿಸರು ಹತರಾದರು. ವೀರಪ್ಪನ್ ಶರಣಾಗತನಾಗಲು ಹಲವು ಷರತ್ತುಗಳನ್ನು ಮುಂದಿಟ್ಟ. ಆದರೆ ಹುತಾತ್ಮರ ಸಂಬಂಧಿಕರು ವೀರಪ್ಪನ್‌ನ ಷರತ್ತಿನನುಗುಣವಾಗಿ ಸರಕಾರ ಯಾವುದೇ ಕ್ರಮ ತೆಗುದುಕೊಳ್ಳುವುದನ್ನು ವಿರೋಧಿಸಿದರು. ೧೯೯೬ - ಒಬ್ಬ ಪೋಲೀಸ್ ಮಾಹಿತಿಗಾರನನ್ನು ಕೊಂದನು. ಇನ್ನೂ ಹತ್ತು ಪೋಲೀಸ್ ಸಿಬ್ಬಂದಿಗಳನ್ನು ಕೊಂದನು. ಪೋಲೀಸ್ ಕಸ್ಟಡಿಯಲ್ಲಿ ತನ್ನ ತಮ್ಮ ಅರ್ಜುನನ್ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಸೇಡೆಂಬಂತೆ ಪೋಲಿಸ್ ಅಧಿಕಾರಿ ತಮಿಳ್ಸೆಲ್ವನ್‌ನ ಮೇಲೆ ದಾಳಿ ನಡೆಸಿ ಒಬ್ಬ ಕಾನ್ಸ್ಟಬಲ್‌ಅನ್ನು ಕೊಂದನು. ೧೯೯೭ - ತನ್ನ ಮಗುವನ್ನು ಕೊಂದನು. ೨೦೦೦ - ಡಾ. ರಾಜ್‌ಕುಮಾರ್ ಅವರನ್ನು ಅವರ ಗಾಜನೂರು ಮನೆಯಿಂದ ಅಪಹರಿಸಿ ೧೦೯ ದಿನಗಳ ಬಳಿಕ ಬಿಟ್ಟನು (ಹಣ ಪಡೆದ ಬಳಿಕ). ೨೦೦೨ - ಕರ್ನಾಟಕದ ಮಂತ್ರಿಯೋರ್ವರಾದ ನಾಗಪ್ಪರವರನ್ನು ಅಪಹರಿಸಿ ಕೊಂದನು. ೨೦೦೪ - ಕರ್ನಾಟಕ ಟ್ಯಾಸ್ಕ್ ಫೋರ್ಸ್‌ನಿಂದ ಸಾಯಿಸಲ್ಪಟ್ಟ. ನೋಡಿ ವೀರಪ್ಪನ್ (ಚಲನಚಿತ್ರ) ಹೊರಗಿನ ಸಂಪರ್ಕಗಳು "ವೀರಪ್ಪನ್, ೧೨೦ ಕೊಲೆಯ ಹಿಂದಿರುವ ನರಹಂತಕ": ಹಿಂದುಸ್ತಾನ್ ಟೈಮ್ಸ್. ವೀರಪ್ಪನ್ ಸಾವಿನ ಬಗ್ಗೆ ಬಿಬಿಸಿ ವರದಿ ಸಿಫಿ - ಕಾಲ ಚಕ್ರದ ಬಗ್ಗೆ ಮಾಹಿತಿ ಡಾ|| ರಾಜ್‌ಕುಮಾರ್ ಅಪಹರಣದ ವರದಿಗಳ ಆರ್ಕೈವ್ ಉಲ್ಲೇಖಗಳು "killing veerappan" the kannada movie ವರ್ಗ:ನರಹಂತಕರು ವರ್ಗ:೧೯೫೨ ಜನನ ವರ್ಗ:೨೦೦೪ ನಿಧನ
ಪ್ರಚಲಿತ
https://kn.wikipedia.org/wiki/ಪ್ರಚಲಿತ
ಕನ್ನಡಕ್ಕೆ ವಿಕಿಮೀಡಿಯಾದ ತ್ರೈಮಾಸಿಕ ಸುದ್ದಿ ಪತ್ರವನ್ನು ಅನುವಾದಿಸಲಾಗುತ್ತಿದೆ. ಅನುವಾದ ಮಾಡಲು ಉತ್ಸಾಹ ಇರುವವರು ಈ ಪುಟವನ್ನು ವೀಕ್ಷಿಸಿರಿ. ಕನ್ನಡ ವಿಕಿಪೀಡಿಯಾಕ್ಕೆ ನಿರ್ವಾಹಕರಾಗುವ ಬಗ್ಗೆ ಮನವಿ ಸಲ್ಲಿಸಲು ವಿಕಿಪೀಡಿಯ:ನಿರ್ವಾಹಕ ಮನವಿ ಪುಟವನ್ನು ನೋಡಿ. ಪ್ರಚಲಿತ ಸುದ್ದಿಗಳನ್ನು ಸಂಪಾದಿಸಲು ಉತ್ಸಾಹವಿರುವವರು ಈ ಪುಟದ ಚರ್ಚೆ ಕಾಲಂನಲ್ಲಿ ಸಂದೇಶ ಬಿಡಬಹುದು. ಆಯ್ದ ದಿನಗಳ, ಪ್ರಮುಖ ದಿನಗಳ ಪಟ್ಟಿಯನ್ನು ತಯಾರಿಸುತ್ತಿದ್ದೇವೆ. ಉತ್ಸಾಹ್ವಿರುವವರು ಇದರ ಮೇಲ್ವಿಚಾರಣೆವಹಿಸಿಕೊಳ್ಳಲು ಮುಂದೆ ಬರಬಹುದು. ವರ್ಗ:ವಿಕಿಪೀಡಿಯ ಪುಟಗಳು
ಚಾಲುಕ್ಯ
https://kn.wikipedia.org/wiki/ಚಾಲುಕ್ಯ
ಚಾಲುಕ್ಯ ರಾಜವಂಶ ದಕ್ಷಿಣ ಭಾರತದಲ್ಲಿ ಕ್ರಿ.ಶ. ೫೫೦ ರಿಂದ ೭೫೦ ಮತ್ತು ಕ್ರಿ.ಶ. ೯೭೩ ರಿಂದ ೧೧೯೦ರ ವರೆಗೆ ಅಸ್ತಿತ್ವದಲ್ಲಿದ್ದ ರಾಜವಂಶ. ಬೆಳವಣಿಗೆ ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ (ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ) ನಗರವನ್ನು ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ, ಮಹಾರಾಷ್ಟ್ರ , ಗೋವಾ, ಆಂಧ್ರಪ್ರದೇಶ, ತೆಲಂಗಾಣ ಅಲ್ಲದೆ ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಕೇರಳದ ಕೆಲಭಾಗಗಳಿಗು ವಿಸ್ತರಿಸಿದರು. thumb|300px|ನರ್ತಿಸುತ್ತಿರುವ ಶಿವ - ಚಾಲುಕ್ಯ ಶಿಲ್ಪಕಲೆ ಪುನರುತ್ಥಾನ ಮತ್ತು ಅವಸಾನ ಚಾಲುಕ್ಯ ಸಾಮ್ರಾಜ್ಯ ಮತ್ತೆ ಕ್ರಿ.ಶ. ೬೫೫ ರಲ್ಲಿ ಮೊದಲನೆಯ ವಿಕ್ರಮಾದಿತ್ಯನ ಮೂಲಕ ಮೇಲೆದ್ದಿತು. ಪಲ್ಲವರೊಂದಿಗಿನ ಸರಣಿ ಯುದ್ಧಗಳು ಕ್ರಿ.ಶ. ೭೪೦ ರಲ್ಲಿ ಚಾಲುಕ್ಯ ದೊರೆ ಎರಡನೇ ವಿಕ್ರಮಾದಿತ್ಯನ ವಿಜಯದೊಂದಿಗೆ ಕೊನೆಗೊಂಡವು. ಆದರೆ ಮತ್ತೆ ೭೫೦ ರಲ್ಲಿ ರಾಷ್ಟ್ರಕೂಟರ ಮೇಲೆ ಯುದ್ಧದಲ್ಲಿ ಸೋತ ನಂತರ ಆ ಕಾಲಕ್ಕೆ ಚಾಲುಕ್ಯ ಸಾಮ್ರಾಜ್ಯ ಪತನವಾಯಿತು. ೯೭೦ ರ ದಶಕದಲ್ಲಿ ಚಾಲುಕ್ಯರ ವಂಶಜರಲ್ಲಿ ಒಬ್ಬನಾದ ಎರಡನೇ ತೈಲಪ ರಾಷ್ಟ್ರಕೂಟರನ್ನು ಸೋಲಿಸಿ ಗುಜರಾತ್ ಪ್ರದೇಶವನ್ನು ಬಿಟ್ಟು ಚಾಲುಕ್ಯ ಸಾಮ್ರಾಜ್ಯದ ಉಳಿದ ಭಾಗಗಳನ್ನೆಲ್ಲ ಹಿಂದಕ್ಕೆ ಪಡೆದನು. ಈತನ ರಾಜಧಾನಿ ಕಲ್ಯಾಣಿ, ಮತ್ತು ಈ ಕಾಲದ ಚಾಲುಕ್ಯ ವಂಶಕ್ಕೆ ಕಲ್ಯಾಣಿ ಚಾಲುಕ್ಯರು ಎಂದೂ ಸಹ ಹೆಸರು. ಈ ಬಾರಿ ಚಾಲುಕ್ಯರು ನಡುನಡುವೆ ಚೋಳ ಸಾಮ್ರಾಜ್ಯದ ವಿರುದ್ಧ ಯುದ್ಧಗಳನ್ನು ನಡೆಸುತ್ತಿದ್ದರು. ಮೊದಲನೆಯ ಸೋಮೇಶ್ವರ ಎಂಬ ಚಾಲುಕ್ಯ ಅರಸು (ಈತನಿಗೆ ಆಹವಮಲ್ಲ ಎಂದೂ ಹೆಸರು) ರಾಜಾಧಿರಾಜ ಚೋಳ ನನ್ನು ಕ್ರಿ.ಶ. ೧೦೫೨ ರಲ್ಲಿ ಸೋಲಿಸಿದನು. ಚಾಲುಕ್ಯ ವಂಶದ ಮುಂದಿನ ಪ್ರಸಿದ್ಧ ಅರಸು ಆರನೇ ವಿಕ್ರಮಾದಿತ್ಯ (ಕ್ರಿ.ಶ ೧೦೭೬-೧೧೨೬, ವಿಕ್ರಮಾಂಕ ಎಂದೂ ಹೆಸರು). ವಿಕ್ರಮಾಂಕನ ಮರಣದ ನಂತರ ಚಾಲುಕ್ಯ ಸಾಮ್ರಾಜ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ೧೧೯೦ ರಲ್ಲಿ ದ್ವಾರಸಮುದ್ರದ ಹೊಯ್ಸಳರು ಮತ್ತು ಯದುಗಿರಿಯ ಯಾದವರು ಚಾಲುಕ್ಯ ವಂಶವನ್ನು ಸೋಲಿಸಿದರು. ಐತಿಹ್ಯಗಳು ಕಲ್ಯಾಣದ ಚಾಲುಕ್ಯರ ರಾಜ ನಾಲ್ಕನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ ವಿದ್ಯಾಪತಿ ಬಿಲ್ಹಣ, ತನ್ನ ಕೃತಿ ವಿಕ್ರಮಾಂಕದೇವ ಚರಿತದಲ್ಲಿ, ಈ ಕಥೆಯನ್ನು ಹೇಳುತ್ತಾನೆ. ಇಂದ್ರ ಜಗತ್ತಿನಲ್ಲೆಲ್ಲಾ ಹೆಚ್ಚುತ್ತಿದ್ದ ಅಧರ್ಮವನ್ನು ಹತ್ತಿಕ್ಕಿ ,ದುರುಳರನ್ನು ಸದೆಬಡಿಯಲು ಸಮರ್ಥನಾದ ವೀರನೊಬ್ಬನ್ನು ಸೃಷ್ಟಿಸುವಂತೆ ಬ್ರಹ್ಮನನ್ನು ಬೇಡಿಕೊಂಡ. ಇದಕ್ಕೊಪ್ಪಿದ ಬ್ರಹ್ಮ ಸಂಧ್ಯಾವಂದನೆ ಮಾಡುವಾಗ ಅವನ ಬೊಗಸೆಯಿಂದ (ಚುಲುಕ??) ವೀರನೊಬ್ಬ ಹೊರಬಂದ. ಅವನೇ ಚಾಲುಕ್ಯವಂಶದ ಮೂಲಪುರುಷ. ಇದೇ ವಂಶದಲ್ಲಿ ಮುಂದೆ ಆಗಿಹೋದ ಹರಿತ ಮತ್ತು ಮಾನವ್ಯ ಎಂಬ ಮಹಾವೀರರು ವಂಶದ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದರು.ವೆಂಗಿಯ ಚಾಲುಕ್ಯರ ವಿಮಲಾದಿತ್ಯನ ಉಂಬಳಿ ರಾಮಸ್ತಿಪುಂಡಿಯಲ್ಲಿಯೂ ಇದೇ ಐತಿಹ್ಯವನ್ನು ಪ್ರಸ್ತಾಪಿಸಿ, ವಿವರಿಸಲಾಗಿದೆ. ಇದೇ ಕಥೆಯ ಇನ್ನೊಂದು ಆವೃತ್ತಿ , ಆರನೆಯ ವಿಕ್ರಮಾದಿತ್ಯನ ಕಾಲದ ನಿಲಗುಂದ ದಾಖಲೆಯಲ್ಲಿದ್ದು, ಬಿಲ್ಹಣ ಇದನ್ನು ಪುನಃ ವಿವರಿಸುತ್ತಾನೆ. ಈ ಐತಿಹ್ಯದ ಪ್ರಕಾರ ಚಾಲುಕ್ಯರ ಪೂರ್ವಜರು ಅಯೋಧ್ಯೆಯವರೆಂದೂ, ಅಲ್ಲಿ ಐವತ್ತೊಂಭತ್ತು ತಲೆಮಾರು ರಾಜ್ಯವಾಳಿ, ನಂತರ ದಕ್ಷಿಣಾಪಥಕ್ಕೆ ಬಂದು ನೆಲೆಸಿ ಅಲ್ಲಿ ಹದಿನಾರು ತಲೆಮಾರು ರಾಜ್ಯಭಾರ ಮಾಡಿದರಂತೆ. ಅದರ ನಂತರ ಮರೆಯಾದ ಈ ಮನೆತನವನ್ನು ಪುನಃ ಮುಂದೆ ತಂದವನು ಜಯಸಿಂಹ. ಆರನೆಯ ವಿಕ್ರಮಾದಿತ್ಯನ ಹಂಡರಿಕೆ ಶಾಸನದ ಪ್ರಕಾರ , ಹರಿತಿಪಂಚಶಿಖಿ ಎಂಬ ಋಷಿಯು ಅರ್ಘ್ಯಪ್ರದಾನ ಮಾಡುತ್ತಿರುವಾಗ, ಅವನ ಬೊಗಸೆಯಿಂದ ಉತ್ಪತ್ತಿಯಾದವರು ಚಾಲುಕ್ಯರು. ಅಷ್ಟೇ ಅಲ್ಲ, ಚಾಲುಕ್ಯರು ತಮ್ಮನ್ನು ಸಪ್ತಮಾತೃಕೆಯರು ಸಲಹಿದರು ಎಂದೂ ಹೇಳಿಕೊಳ್ಳುತ್ತಾರೆ. ಚಾಲುಕ್ಯ ಇತಿಹಾಸದ ಮೂರು ಕಾಲಮಾನಗಳು ಚಾಲುಕ್ಯರು ದಕ್ಷಿಣ ಪ್ರಸ್ಥಭೂಮಿಯ ಪ್ರದೇಶವನ್ನು ೬೦೦ ವರ್ಷಗಳಷ್ಟು ದೀರ್ಘ ಕಾಲ ಆಳಿದರು. ಈ ಅವಧಿಯಲ್ಲಿ ಮೂರು, ಸ್ವತಂತ್ರ ಆದರೆ ನಿಕಟ ಸಂಬಂಧದ, ರಾಜ್ಯಗಳಾಗಿ ಮೆರೆದಿದ್ದವು. ಇವು ಬಾದಾಮಿಯ ಚಾಲುಕ್ಯರು, (ಕ್ರಿ.ಶ. ೬ - ೮ನೆಯ ಶತಮಾನ) ಮತ್ತು ಅವರದೇ ಸೋದರ ಸಾಮ್ರಾಜ್ಯಗಳಾದ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರು ಮತ್ತು ವೆಂಗಿಯ (ಪೂರ್ವ) ಚಾಲುಕ್ಯರು ಬಾದಾಮಿಯ ಚಾಲುಕ್ಯರು ಚಾಲುಕ್ಯ ಸಾಮ್ರಾಜ್ಯವನ್ನು ಕಟ್ಟಿದವನು ಒಂದನೆಯ ಪುಲಿಕೇಶಿ (ಕ್ರಿ.ಶ. ೫೫೦). ವಾತಾಪಿ ( ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಈಗಿನ ಬಾದಾಮಿ) ಯನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಈ ಚಾಲುಕ್ಯರು ಮುಂದೆ ಬಾದಾಮಿಯ ಚಾಲುಕ್ಯರು ಎಂದು ಪ್ರಸಿದ್ಧರಾದರು. ಪುಲಿಕೇಶಿ ಹಾಗೂ ಆತನ ವಂಶಸ್ಥರು ಆಳಿದ ರಾಜ್ಯ ಇಂದಿನ ಸಂಪೂರ್ಣ ಕರ್ನಾಟಕ ರಾಜ್ಯ,ಮಹಾರಾಷ್ಟ್ರ,ಗೋವಾ ,ಮಧ್ಯಪ್ರದೇಶ ,ಗುಜರಾತ್ ಮತ್ತು ಆಂಧ್ರ ಪ್ರದೇಶದ ಬಹುತೇಕ ಭಾಗಗಳನ್ನೊಳಗೊಂಡಿತ್ತು. ಇಮ್ಮಡಿ ಪುಲಿಕೇಶಿ ಬಾದಾಮಿ ಚಾಲುಕ್ಯರ ಅತಿ ದೊಡ್ಡ ಚಕ್ರವರ್ತಿ ಎನ್ನಲು ಅಡ್ಡಿಯಿಲ್ಲ. ಒಂದನೆಯ ಪುಲಿಕೇಶಿ (ಕ್ರಿ.ಶ. ೫೪೩ – ೫೬೬ ) ಒಂದನೆಯ ಕೀರ್ತಿವರ್ಮ (ಕ್ರಿ.ಶ. ೫೬ ೬ – ೫೯೭ ) ಮಂಗಳೇಶ (ಕ್ರಿ.ಶ. ೫೯ ೭ – ೬ ೦೯ ) ಇಮ್ಮಡಿ ಪುಲಿಕೇಶಿ (ಕ್ರಿ.ಶ. ೬ ೦೯ – ೬ ೪೨ ) ಒಂದನೆಯ ವಿಕ್ರಮಾದಿತ್ಯ (ಕ್ರಿ.ಶ. ೬ ೫೫ – ೬ ೮೦ ) ವಿನಯಾದಿತ್ಯ (ಕ್ರಿ.ಶ. ೬ ೮೦ – ೬ ೯ ೬ ) ವಿಜಯಾದಿತ್ಯ (ಕ್ರಿ.ಶ. ೬ ೯ ೬ – ೭೩೩ ) ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ. ೭೩೩ – ೭೪೬ ) ಎರಡನೆಯ ಕೀರ್ತಿವರ್ಮ (ಕ್ರಿ.ಶ. ೭೪೬ – ೭೫೩ ) ಕ್ರಿ.ಶ. ೭೫೩ರಲ್ಲಿ ರಾಷ್ಟ್ರಕೂಟರ ದಂತಿದುರ್ಗನು ಕೀರ್ತಿವರ್ಮನ್ನು ಸೋಲಿಸುವುದರೊಂದಿಗೆ ಈ ಚಾಲುಕ್ಯ ಸಾಮ್ರಾಜ್ಯಕ್ಕೆ ತೆರೆ ಬಿದ್ದಿತು. ಕಲ್ಯಾಣಿಯ ಚಾಲುಕ್ಯರು ರಾಷ್ಟ್ರಕೂಟರ ಕಾಲದಲ್ಲಿ ಹಿಮ್ಮೆಟ್ಟಿದ ಚಾಲುಕ್ಯ ಸಾಮ್ರಾಜ್ಯ ,ಎರಡನೆಯ ತೈಲಪನು ರಾಷ್ಟ್ರಕೂಟರ ಮೂರನೆಯ ಕೃಷ್ಣನನ್ನು ಪದಚ್ಯುತಮಾಡಿ , ಚಾಲುಕ್ಯ ರಾಜ್ಯದ ಬಹುತೇಕ ಪ್ರದೇಶಗಳನ್ನು ಮತ್ತೆ ಕೈವಶಮಾಡಿಕೊಳ್ಳುವುದರೊಂದಿಗೆ, ತನ್ನ ವೈಭವವನ್ನು ಮರಳಿ ಪಡೆಯಿತು. ಚಾಲುಕ್ಯರ ಈ ಶಾಖೆ ಕಲ್ಯಾಣಿಯ ( ಪಶ್ಚಿಮ) ಚಾಲುಕ್ಯರೆಂದು ಹೆಸರಾಯಿತು. ಮುಂದೆ ಸುಮಾರು ೨೫೦ ವರ್ಷ ಆಳಿದ ಈ ರಾಜವಂಶವು , ಚೋಳರೊಂದಿಗೂ , ವೆಂಗಿಯ ಚಾಲುಕ್ಯರೊಂದಿಗೂ ನಿರಂತರ ಹೋರಾಟದಲ್ಲಿ ತೊಡಗಿತ್ತು. ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮), ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮) ಮತ್ತು ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬ – ೧೧೨೬ ) ಈ ವಂಶದ ಕೆಲವು ಪ್ರಸಿದ್ಧ ರಾಜರುಗಳು. ಎರಡನೆಯ ತೈಲಪ (ಕ್ರಿ.ಶ. ೯ ೭೩-೯ ೯ ೭ ) ಸತ್ಯಾಶ್ರಯ (ಕ್ರಿ.ಶ. ೯ ೯ ೭-೧೦೦೮) ಐದನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೦೮-೧೦೧೫) ಎರಡನೆಯ ಜಯಸಿಂಹ (ಕ್ರಿ.ಶ. ೧೦೧೫-೧೦೪೨) ಒಂದನೆಯ ಸೋಮೇಶ್ವರ (ಕ್ರಿ.ಶ. ೧೦೪೨-೧೦೬ ೮) ಎರಡನೆಯ ಸೋಮೇಶ್ವರ (ಕ್ರಿ.ಶ. ೧೦೬ ೮-೧೦೭೬ ) ಆರನೆಯ ವಿಕ್ರಮಾದಿತ್ಯ (ಕ್ರಿ.ಶ. ೧೦೭೬ – ೧೧೨೬ ) ಮೂರನೆಯ ಸೋಮೇಶ್ವರ (ಕ್ರಿ.ಶ. ೧೧೨೬ – ೧೧೩೮) ಎರಡನೆಯ ಜಗದೇಕಮಲ್ಲ (ಕ್ರಿ.ಶ. ೧೧೩೮ – ೧೧೫೧ ) ಮೂರನೆಯ ತೈಲಪ (ಕ್ರಿ.ಶ. ೧೧೫೧ – ೧೧೬ ೪ ) ಮೂರನೆಯ ಜಗದೇಕಮಲ್ಲ (ಕ್ರಿ.ಶ. ೧೧೬ ೩ – ೧೧೮೩) ನಾಲ್ಕನೆಯ ಸೋಮೇಶ್ವರ (ಕ್ರಿ.ಶ. ೧೧೮೪ – ೧೨೦೦) ಹೊಯ್ಸಳರು, ಕಾಕತೀಯರು ಮತ್ತು ಯಾದವರು ಈ ರಾಜಮನೆತನಗಳ ಉತ್ಕರ್ಷದೊಂದಿಗೆ ,೧೧೮೦ರಲ್ಲಿ, ಕಲ್ಯಾಣಿಯ ಚಾಲುಕ್ಯರ ಸಾಮ್ರಾಜ್ಯವು ಅಸ್ತಂಗತವಾಯಿತು. ವೆಂಗಿಯ (ಪೂರ್ವ) ಚಾಲುಕ್ಯರು ಇಂದಿನ ಆಂಧ್ರ ಪ್ರದೇಶದ ಕರಾವಳಿಯ ಭಾಗವಾಗಿದ್ದ , ವಿಷ್ಣುಕುಂಡಿನ ಸಾಮ್ರಾಜ್ಯದ ಅಳಿದುಳಿದ ಭಾಗಗಳನ್ನು ಸೋಲಿಸಿ, ಇಮ್ಮಡಿ ಪುಲಿಕೇಶಿಯು , ಅಲ್ಲಿಗೆ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ರಾಜಪ್ರತಿನಿಧಿಯಾಗಿ ನೇಮಿಸಿದನು. ಪುಲಿಕೇಶಿಯ ಮರಣದ ನಂತರ , ಈ ಶಾಖೆಯು ಸ್ವತಂತ್ರವಾಗಿ, ಮುಖ್ಯ ವಾತಾಪಿ ಸಾಮ್ರಾಜ್ಯಕ್ಕಿಂತ ಮುಂದೆ ,ಅನೇಕ ಪೀಳಿಗೆಗಳವರೆಗೆ ಸ್ವತಂತ್ರ ರಾಜ್ಯಭಾರ ಮಾಡಿತು. ಈ ರಾಜರು ೯ ನೆಯ ಶತಮಾನದ ಮಧ್ಯದವರೆಗೂ , ವೆಂಗಿ ಪ್ರಾಂತ್ಯದಲ್ಲಿ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟರು. ಅಲ್ಲಿಂದ ಮುಂದಿನ ಶಾಸನಗಳಲ್ಲಿ ಕ್ರಮೇಣ ಕನ್ನಡಲಿಪಿಯಲ್ಲಿ ಬರೆದ ತೆಲುಗು ಭಾಷೆ ಕಾಣಬರುತ್ತದೆ. ಕುಬ್ಜ ವಿಷ್ಣುವರ್ಧನ (ಕ್ರಿ.ಶ. ೬೨೪ – ೬೪೧ ) ಒಂದನೆಯ ಜಯಸಿಂಹ (ಕ್ರಿ.ಶ. ೬೪೧-೬೭೩) ಇಂದ್ರ ಭಟ್ಟಾರಕ (ಕ್ರಿ.ಶ. ೬೭೩) ಎರಡನೆಯ ವಿಷ್ಣುವರ್ಧನ (ಕ್ರಿ.ಶ.೬೭೩-೬೮೨) ಮಂಗಿ ಯುವರಾಜ (ಕ್ರಿ.ಶ.೬೮೨ – ೭೦೬ ) ಎರಡನೆಯ ಜಯಸಿಂಹ (ಕ್ರಿ.ಶ.೭೦೬ -೭೧೮) ಮೂರನೆಯ ವಿಷ್ಣುವರ್ಧನ (ಕ್ರಿ.ಶ.೭೧೯ -೭೫೫) ಒಂದನೆಯ ವಿಜಯಾದಿತ್ಯ (ಕ್ರಿ.ಶ.೭೫೫ – ೭೭೨) ನಾಲ್ಕನೆಯ ವಿಷ್ಣುವರ್ಧನ (ಕ್ರಿ.ಶ.೭೭೨ – ೮೦೮) ಎರಡನೆಯ ವಿಜಯಾದಿತ್ಯ (ಕ್ರಿ.ಶ.೮೦೮ – ೮೪೭) ಐದನೆಯ ವಿಷ್ಣುವರ್ಧನ (ಕ್ರಿ.ಶ.೮೪೭ – ೮೪೯) ಮೂರನೆಯ ವಿಜಯಾದಿತ್ಯ (ಕ್ರಿ.ಶ.೮೪೮ – ೮೯೨) ಒಂದನೆಯ ಭೀಮ (ಕ್ರಿ.ಶ. ೮೯ ೨-೯೨೧) ನಾಲ್ಕನೆಯ ವಿಜಯಾದಿತ್ಯ (ಕ್ರಿ.ಶ.೯೨೧) ಒಂದನೆಯ ಅಮ್ಮ (ಕ್ರಿ.ಶ.೯೨೧ – ೯೨೭) ಎರಡನೆಯ ವಿಕ್ರಮಾದಿತ್ಯ (ಕ್ರಿ.ಶ.೯೨೭ – ೯೨೮ .) ಎರಡನೆಯ ಯುದ್ಧಮಲ್ಲ (ಕ್ರಿ.ಶ.೯೨೮ – ೯೩೫ .) ಎರಡನೆಯ ಚಾಲುಕ್ಯ ಭೀಮ (ಕ್ರಿ.ಶ.೯೩೫ – ೯೪೭ .) ಎರಡನೆಯ ಅಮ್ಮ (ಕ್ರಿ.ಶ.೯೪೭ – ೯೭೦ .) ದಾನಮವ (ಕ್ರಿ.ಶ.೯೭೦ – ೯೭೩ .) ಜಟ ಚೋಡ ಭೀಮ (ಕ್ರಿ.ಶ.೯೭೩ - ೧೦೦೦). ಒಂದನೆಯ ಶಕ್ತಿವರ್ಮ (ಕ್ರಿ.ಶ.೧೦೦೦ - ೧೦೧೧ . ವಿಮಲಾದಿತ್ಯ (ಕ್ರಿ.ಶ.೧೦೧೧ – ೧೦೧೮ ) ರಾಜರಾಜ ನರೇಂದ್ರ (ಕ್ರಿ.ಶ.೧೦೧೮ – ೧೦೬೧) ಎರಡನೆಯ ಶಕ್ತಿವರ್ಮ ಏಳನೆಯ ವಿಜಯಾದಿತ್ಯ (ಕ್ರಿ.ಶ.೧೦೬೩ – ೧೦೬೮. , ೧೦೭೨ – ೧೦೭೫ .) ಲಾಟ ಚಾಲುಕ್ಯರು ಸೋಲಂಕಿಗಳು (ಪಶ್ಚಿಮ ) ಚಾಲುಕ್ಯರು ಚಾಲುಕ್ಯರ ಮೂಲ ಚಾಲುಕ್ಯರ ಮೂಲದ ಬಗ್ಯೆ ಅನೇಕ ಅಭಿಪ್ರಾಯಗಳಿದ್ದರೂ ಅವರು ಕರ್ನಾಟಕದವರು ಎಂಬ ಬಗ್ಯೆ ಸಾಕಷ್ಟು ಒಮ್ಮತವಿದೆ. ಚಾಲುಕ್ಯರ ಶಾಸನಗಳ ಭಾಷೆ ಕನ್ನಡ ಮತ್ತು ಸಂಸ್ಕೃತ. ಕೆಲವು ಚಾಲುಕ್ಯ ದೊರೆಗಳ ಹೆಸರು ಅಂತ್ಯವಾಗುವುದು ‘ಅರಸ’ ಎಂಬ ಕನ್ನಡ ಶಬ್ದದಿಂದ. ರಾಷ್ಟ್ರಕೂಟರ ಶಾಸನಗಳಲ್ಲಿ ಬಾದಾಮಿಯ ಚಾಲುಕ್ಯರನ್ನು ‘ಕರ್ನಾಟಕ ಬಲ’ ಎಂದು ಸಂಭೋದಿಸಲಾಗಿದೆ. ಅವರ ಪ್ರಕಾರ, ಚಾಲುಕ್ಯರು, ಬನವಾಸಿಯ ಕದಂಬರ ಪೀಳಿಗೆಯವರೋ ಅಥವಾ ಸಂಬಂಧಿಕರೋ ಆಗಿದ್ದರು. ಬನವಾಸಿಯ ಕದಂಬರ ಅಧೀನದಲ್ಲಿದ್ದ ಪ್ರದೇಶಗಳು ಮುಂದೆ ಚಾಲುಕ್ಯರ ವಶವಾದವು. ಮಂಗಳೇಶನ ಪ್ರಸಿದ್ಧ ಬಾದಾಮಿ ಗುಹಾ ಶಾಸನಗಳು ( ಕ್ರಿ.ಶ ೫೭೮) , ಅವನದೇ ಆದ ಮಹಾಕೂಟದ ಕಂಬದ ಮೇಲಿನ ಬರವಣಿಗೆ (ಕ್ರಿ.ಶ ೬೦೨) ಮತ್ತು ಕ್ರಿ.ಶ ೭೦೦ರ ಕಪ್ಪೆ ಅರಭಟ್ಟನ ಕನ್ನಡದಲ್ಲಿಯ ದಾಖಲೆಗಳು ಚಾಲುಕ್ಯರ ಭಾಷೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಬಾದಾಮಿ ಕೋಡಿನ ಒಂದನೆಯ ಪುಲಿಕೇಶಿಯ ಕ್ರಿ.ಶ ೫೪೩ರ ಮೊಟ್ಟಮೊದಲ ಶಾಸನ ಮತ್ತು ಎರಡನೆಯ ಪುಲಿಕೇಶಿಯ ಐಹೊಳೆಯ ಶಾಸನ (ಕ್ರಿ.ಶ ೬೩೪) ಕನ್ನಡಲಿಪಿಯಲ್ಲಿರುವ ಸಂಸ್ಕೃತ ಶಾಸನಗಳ ಉದಾಹರಣೆಗಳಾಗಿವೆ. ಐಹೊಳೆಯ ಶಾಸನ ಪುಲಿಕೇಶಿಯನ್ನು ೯೯,೦೦೦ ಗ್ರಾಮಗಳ ಮೂರು ಮಹಾರಾಷ್ಟ್ರಗಳ ಅಧಿಪತಿ ಎಂದು ವರ್ಣಿಸುತ್ತದೆ. ಪುಲಿಕೇಶಿ ಆ ಮೂರು ಮಹಾರಾಷ್ಟ್ರಗಳ ಅಧಿಪತಿ ಆಗಿದ್ದು ಉತ್ತರ ಭಾರತದ ಅರಸ ಹರ್ಷವರ್ಧನನ್ನು ಸೋಲಿಸಿದ ನಂತರ. ಬಾದಾಮಿ ಚಾಲುಕ್ಯರ ಕೊಡುಗೆಗಳು ವಾಸ್ತುಶಿಲ್ಪ ಮತ್ತು ಕಲೆ ಚಾಲುಕ್ಯ ಸಾಮ್ರಾಜ್ಯದ ಶಾಶ್ವತ ಕೊಡುಗೆಗಳು. ಪಟ್ಟದಕಲ್ಲು (|UNESCO heritage site), ಬಾದಾಮಿ,ಐಹೊಳೆಗಳಲ್ಲಿನ ಬಂಡೆಗಳಲ್ಲಿ ಕಡೆದ ದೇವಾಲಯಗಳು, ಅಜಂತಾ, ಎಲ್ಲೋರಾಗಳಲ್ಲಿನ ಸುಪ್ರಸಿದ್ಧ ಶಿಲ್ಪಕೃತಿಗಳು ಮತ್ತು ಭಿತ್ತಿಚಿತ್ರಗಳು ಚಾಲುಕ್ಯರ ಕಲಾಭಿರುಚಿಗೆ ಸಾಕ್ಷಿಯಾಗಿವೆ. ಈ ಕಾಲವನ್ನು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಆರಂಭಕಾಲವನ್ನಾಗಿ ಪರಿಗಣಿಸಲಾಗಿದೆ. ಕ್ರಿ.ಶ. ೪೫೦ - ೭೫೦ ರ ನಡುವೆ ಬರಿಯ ಐಹೊಳೆ ಒಂದರಲ್ಲಿಯೇ ನೂರೈವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಬಾದಾಮಿ ಚಾಲುಕ್ಯರು ಕಟ್ಟಿಸಿದರು. ಈ ಆರಂಭ ಕಾಲದ ಕಲೆಯ ಉದಾಹರಣೆಯಾಗಿ ಐಹೊಳೆಯ ದುರ್ಗಾ (ಕ್ರಿ.ಶ.೬ ನೆಯ ಶತಮಾನ),ಲಾಡ್ ಖಾನ್ (ಕ್ರಿ.ಶ. ೪೫೦),ಮೇಗುತಿ (ಕ್ರಿ.ಶ.೬೩೪),ಹುಚ್ಚಿಮಲ್ಲಿ ಮತ್ತು ಹುಚ್ಚಪ್ಪಯ್ಯ (ಕ್ರಿ.ಶ. ೫ನೆಯ ಶತಮಾನ) ದೇವಾಲಯಗಳು, ಬಾದಾಮಿಯ ಗುಹಾ ದೇವಾಲಯಗಳನ್ನು ನೋಡಬಹುದು.ಪಟ್ಟದಕಲ್ಲಿನ ಅದ್ಭುತ ದೇವಾಲಯಗಳನ್ನು ಕಟ್ಟಿಸಿದವನು ಎರಡನೆಯ ವಿಕ್ರಮಾದಿತ್ಯ. (ಕ್ರಿ.ಶ.೭೪೦) ಇಲ್ಲಿನ ವಿರೂಪಾಕ್ಷ,ಮಲ್ಲಿಕಾರ್ಜುನ,ಸಂಗಮೇಶ್ವರ ಮತ್ತು ಒಂದು ಜೈನ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದರೆ, ಜಂಬುಲಿಂಗ,ಕಾಶಿವಿಶ್ವೇಶ್ವರ ಮತ್ತು ಗಳಗನಾಥ ದೇವಾಲಯಗಳು ಉತ್ತರ ಭಾರತೀಯ ನಾಗರ ಶೈಲಿಯಲ್ಲಿವೆ.ಪಾಪನಾಥ ದೇವಾಲಯದಲ್ಲಿ ದಕ್ಷಿಣ ಮತ್ತು ಉತ್ತರದ ಶೈಲಿಗಳ ಸಮ್ಮಿಶ್ರಣದ ಪ್ರಯತ್ನ ಕಾಣುತ್ತದೆ. ಕಲ್ಯಾಣಿ ಚಾಲುಕ್ಯರ ಕಾಲದ ಕಲೆ ಮತ್ತು ಸಾಹಿತ್ಯ ಕನ್ನಡ ಸಾಹಿತ್ಯ ರನ್ನನಂತಹ ಶ್ರೇಷ್ಠ ಕನ್ನಡ ಕವಿಗಳಿಗೆ ಕಲ್ಯಾಣಿಯ ಚಾಲುಕ್ಯರು ಆಶ್ರಯ ಮತ್ತು ಪ್ರೋತ್ಸಾಹ ಕೊಟ್ಟರು. ರನ್ನನು ಎರಡನೆಯ ತೈಲಪನ ಮತ್ತು ಸತ್ಯಾಶ್ರಯನ ಆಸ್ಥಾನಕವಿಯಾಗಿದ್ದು, ಕಲ್ಯಾಣಿಯ ಚಾಲುಕ್ಯರ ಕಾಲದ ಮೊದಲ ಕವಿ. ಅಜಿತಪುರಾಣ, ಸಾಹಸಭೀಮವಿಜಯ ಅಥವಾ ಗದಾಯುದ್ಧ, ಪರಶುರಾಮಚರಿತ ಮತ್ತು ರನ್ನಕಂದ ಇವನ ಪ್ರಸಿದ್ಧ ಕೃತಿಗಳು.. ಆ ಕಾಲದಲ್ಲಿ ಇನ್ನೂ ಅನೇಕ ಕನ್ನಡ ವಿದ್ವಾಂಸರು ಆಗಿಹೋದರು. ಅವರಲ್ಲಿ ಕೆಲವರು, ಶೃಂಗಾರಶಾಸ್ತ್ರದ ಬಗೆಗಿನ ಮದನತಿಲಕ ಎಂಬ ಕೃತಿ ರಚಿಸಿದ ಚಂದ್ರರಾಜ, ಜಾತಕತಿಲಕ ( ಜ್ಯೋತಿಶ್ಶಾಸ್ತ್ರ) ಬರೆದ ಶ್ರೀಧರಾಚಾರ್ಯ, ಗೋವೈದ್ಯ ( ಪಶುವೈದ್ಯ ಶಾಸ್ತ್ರ) ಬರೆದ ಕೀರ್ತಿವರ್ಮ, ನಯಸೇನ (ಧರ್ಮಾಮೃತ), ನಾಗವರ್ಮ(ಕಾವ್ಯಾವಲೋಕನ) , ಬ್ರಹ್ಮಶಿವ (ಸಮಯಪರೀಕ್ಷೆ) , ರಾಜಾದಿತ್ಯ (ಕ್ಷೇತ್ರ ಗಣಿತ,ವ್ಯವಹಾರ ಗಣಿತ, ಲೀಲಾವತಿ) , ಜಗದ್ದಾಲ ಸೋಮನಾಥ (ಕರ್ನಾಟಕ ಕಲ್ಯಾಣಕಾರಕ - ಔಷಧಗಳ ಬಗ್ಯೆ). ವಚನಗಳನ್ನು ಬರೆದು ಪ್ರಸಿದ್ಧನಾದ ದೇವರ ದಾಸಿಮಯ್ಯನೂ ಈ ಕಾಲದವನೇ. ಅಷ್ಟೇ ಏಕೆ, ಮಂತ್ರಿಯಾಗಿದ್ದ ದುರ್ಗಸಿಂಹ (ಪಂಚತಂತ್ರ) ಹಾಗೂ ದಂಡನಾಯಕ ಎರಡನೆಯ ಚಾವುಂಡರಾಯ (ಲೋಕೋಪಕಾರ) ಸಹ ಸಾಹಿತ್ಯ ಕೃತಿಗಳನ್ನು ರಚಿಸಿದರು. ಇದು ಕನ್ನಡ ಸಾಹಿತ್ಯದ ಸುವರ್ಣ ಕಾಲವಾಗಿತ್ತು. ಸಂಸ್ಕೃತ ಸಾಹಿತ್ಯ ಕಲ್ಯಾಣಿಯ ಚಾಲುಕ್ಯರು ವಾದಿರಾಜ ( ಯಶೋಧರ ಚರಿತಮ್, ಪಾರ್ಶ್ವನಾಥ ಚರಿತಮ್)ರಂತಹ ಸಂಸ್ಕೃತ ವಿದ್ವಾಂಸರಿಗೆ ಪ್ರೋತ್ಸಾಹ ಕೊಟ್ಟರು. ತನಗೆ ಆಶ್ರಯ ಕೊಟ್ಟ ಆರನೆಯ ವಿಕ್ರಮಾದಿತ್ಯನನ್ನು ಬಿಲ್ಹಣನು ವಿಕ್ರಮಾಂಕದೇವ ಚರಿತೆಯ ಮೂಲಕ ಅಜರಾಮರವಾಗಿಸಿದ್ದಾನೆ. ಸುಪ್ರಸಿದ್ಧ ಮಿತಾಕ್ಷರ ಸಂಹಿತೆ ಬರೆದವನು ವಿಜ್ಞಾನೇಶ್ವರ(ಮರತೂರು). ಸ್ವತಃ ಮೂರನೆಯ ಸೋಮೇಶ್ವರನೇ ಕಲೆ ಮತ್ತು ವಿಜ್ಞಾನದ ಬಗೆಗೆ ವಿಶ್ವಕೋಶವನ್ನು ರಚಿಸಿದನು. ಜಗದೇಕಮಲ್ಲನು ಸಂಗೀತಚೂಡಾಮಣಿಯನ್ನು ರಚಿಸಿದನು. ವಾಸ್ತು ಶಿಲ್ಪ ಬಳ್ಳಾರಿ, ಧಾರವಾಡ ಮತ್ತು ಹೈದರಾಬಾದ್ ಕರ್ನಾಟಕದ ಪ್ರದೇಶಗಳಲ್ಲಿ ಕಂಡುಬರುವ ಉತ್ತರಾರ್ಧ ಚಾಲುಕ್ಯ ಶೈಲಿಯ ಕಟ್ಟಡಗಳು ಚಾಲುಕ್ಯರ ಪೂರ್ವಾರ್ಧದ ಶೈಲಿಗೂ, ಹೊಯ್ಸಳರ ಶೈಲಿಗೂ ಮಧ್ಯದ ಕೊಂಡಿಯಾಗಿವೆ. ದಕ್ಷಿಣದಲ್ಲಿ ನೂರಾರು, ಅದರಲ್ಲಿ ಅರ್ಧಕ್ಕೂ ಹೆಚ್ಚು ಕರ್ನಾಟಕದಲ್ಲಿ, ಕಟ್ಟಲ್ಪಟ್ಟ ದೇವಾಲಯಗಳೊಂದಿಗೆ ೧೨ನೆಯ ಶತಮಾನದಲ್ಲಿ ಕಲ್ಯಾಣಿ ಶೈಲಿಯ ವಾಸ್ತುಶಿಲ್ಪ ತನ್ನ ಉತ್ತುಂಗ ಸ್ಥಿತಿಯನ್ನು ಮುಟ್ಟಿತು. ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪದ ಮತ್ತೊಂದು ವೈಶಿಷ್ಟ್ಯವೆಂದರೆ , ಬಹು ಮಜಲಿನ ಸೋಪಾನಗಳ ಪುಷ್ಕರಣಿಗಳು. ಗದಗ ಜಿಲ್ಲೆಯ ಲಕ್ಕುಂಡಿಯ ಕಾಶಿವಿಶ್ವೇಶ್ವರ, ದಾವಣಗೆರೆ ಜಿಲ್ಲೆಯ ಕುರುವತ್ತಿಯ ಮಲ್ಲಿಕಾರ್ಜುನ ಮತ್ತು ಕೊಪ್ಪಳ ಜಿಲ್ಲೆಯ ಮಹಾದೇವ ದೇವಾಲಯಗಳು ಚಾಲುಕ್ಯರ ಉತ್ತರಾರ್ಧ ವಾಸ್ತುಶಿಲ್ಪ ಶೈಲಿಯ ಉತ್ಕೃಷ್ಟ ಉದಾಹರಣೆಗಳಾಗಿವೆ. ಅದರಲ್ಲಿಯೂ ಮಹಾದೇವ ದೇವಾಲಯವು , ತನ್ನ ಬೃಹದಾಕಾರ ಮತ್ತು ಸೂಕ್ಷ್ಮ ವಿವರಗಳಿಂದ , ಭಾರತದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು ಎಂದು ಹೇಳಲಾಗಿದೆ.ಗೋಡೆಯ, ಕಂಬದ ಹಾಗೂ ಗೋಪುರಗಳ ಮೇಲಿನ ಕೆತ್ತನೆಗಳು ಚಾಲುಕ್ಯರ ಅತ್ಯುನ್ನತ ಮಟ್ಟದ ಕಲಾಭಿರುಚಿ ಹಾಗೂ ಸಂಸ್ಕೃತಿಗೆ ಸಾಕ್ಷಿಯಾಗಿವೆ. ಅಲ್ಲಿಯ ಕ್ರಿ.ಶ. ೧೧೧೨ರ ಶಾಸನವೊಂದು ಆ ದೇವಾಲಯವನ್ನು ಆರನೆಯ ವಿಕ್ರಮಾದಿತ್ಯನ ದಂಡನಾಯಕ ಮಹದೇವನು ಕಟ್ಟಿಸುತ್ತಿದ್ದಾನೆಂದು ವಿವರಿಸಿ, ಅದು ದೇವಾಲಯಗಳಲ್ಲೇ ಚಕ್ರವರ್ತಿ ಎಂದು ಬಣ್ಣಿಸುತ್ತದೆ. ಹೊಯ್ಸಳರ ರಾಜರು ಪ್ರಸಿದ್ಧ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿಗೆ ಬೇಲೂರಿನಲ್ಲಿನ ಸುಪ್ರಸಿದ್ಧ ದೇವಾಲಯ ಕಟ್ಟಲು ಹೇಳಿದಾಗ, ಆತ ಮಹಾದೇವ ದೇವಾಲಯಕ್ಕೆ ದರ್ಶನವಿತ್ತು ಪ್ರೇರಣೆ ಪಡೆದುಕೊಂಡ ಎಂದು ಒಂದು ಐತಿಹ್ಯವಿದೆ. ಕಲ್ಯಾಣಿಯ ಚಾಲುಕ್ಯರ ವಾಸ್ತುಶಿಲ್ಪವು ಸೂಕ್ಷ್ಮ ಕುಸುರಿ ಕೆಲಸದ ಕಂಬಗಳು , ಮತ್ತು ಪುಷ್ಕರಣಿ (ಕಲ್ಯಾಣಿ)ಗೆ ಒತ್ತು ಕೊಟ್ಟಿದೆ. ಕಲ್ಯಾಣಿಯ ಚಾಲುಕ್ಯರು ಕರ್ನಾಟಕದ ಧಾರವಾಡ, ಗದಗ ಮತ್ತು ಹಾವೇರಿ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ದೇವಾಲಯಗಳನ್ನು ಕಟ್ಟಿದರು. ಬಾದಾಮಿ, ಐಹೊಳೆಗಳಲ್ಲಿಯೂ, ದೇವಾಲಯ ನಿರ್ಮಾಣದ ಎರಡನೆಯ ಹಂತದ ಕಾರ್ಯದಲ್ಲಿ , ಮಲ್ಲಿಕಾರ್ಜುನ ಮತ್ತು ಯಲ್ಲಮ್ಮ ಮೊದಲಾದ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಗದಗ ವಾಸ್ತುಶಿಲ್ಪ ಶೈಲಿ ಎಂದೇ ಹೆಸರಾದ ಹೊಸ ಶೈಲಿಯೊಂದು ಈ ಕಾಲದಲ್ಲಿ ಅಭಿವೃದ್ಧಿಯಾಯಿತು. ಇದು ದಕ್ಷಿಣ ( ದ್ರಾವಿಡ) ಮತ್ತು ಉತ್ತರ ( ನಾಗರ) ಶೈಲಿಯ ಸಮ್ಮಿಶ್ರಣವಾಗಿದ್ದು ವೇಸರ ಶೈಲಿಯದಾಗಿದೆ ಎನ್ನಲಾಗುತ್ತದೆ. ಡಾ. ಜ್ಯೋತ್ಸ್ನಾ ಕಾಮತರು ಹೇಳುತ್ತಾರೆ “ ಕರ್ನಾಟಕದ ಇತಿಹಾಸದಲ್ಲಿ , ಚಾಲುಕ್ಯರ ಕಾಲವನ್ನು ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ರಾಜ್ಯವಿಸ್ತಾರ ಅಷ್ಟೇ ಅಲ್ಲದೆ, ಈ ಕಾಲವು ದಕ್ಷ ಆಡಳಿತ ಕ್ರಮ, ಸಾಮಾಜಿಕ ಸುರಕ್ಷತೆ, ವಿದ್ಯಾಪ್ರಸಾರ , ಇತರ ಸಾಂಸ್ಕೃತಿಕ ಚಟುವಟಿಕೆಗಳು, ವ್ಯಾಪಾರ , ವಾಣಿಜ್ಯಗಳಲ್ಲಿ ವಿಕಾಸ , ಸಾಹಿತ್ಯ, ಕಲೆಮತ್ತು ವಾಸ್ತುಶಿಲ್ಪಗಳಲ್ಲಿ ಅಭಿವೃದ್ಧಿ ಇವುಗಳನ್ನೂ ಪ್ರತಿನಿಧಿಸುತ್ತದೆ. ಈ ಕಾಲವು ಸಾಮಾಜಿಕ ಸುಧಾರಣೆಗಳಿಗೂ ಇಂಬು ಕೊಟ್ಟು ಬಸವೇಶ್ವರರಂತಹ ವಿಶಿಷ್ಟ ಸುಧಾರಕರಿಂದ ವೀರಶೈವಪಂಥದ ಹುಟ್ಟಿಗೂ ಕಾರಣವಾಯಿತು" ಪ್ರತಿ ವರ್ಷ ಕರ್ನಾಟಕ ಸರ್ಕಾರವು ಪಟ್ಟದಕಲ್ಲು , ಬಾದಾಮಿ,ಐಹೊಳೆಗಳಲ್ಲಿ ಮೂರು ದಿನಗಳ ಚಾಲುಕ್ಯ ಉತ್ಸವ ಎಂಬ ಸಂಗೀತ, ನೃತ್ಯ ಕಾರ್ಯಕ್ರಮವನ್ನು ನಡೆಸುತ್ತದೆ. ಅರವತ್ತರ ದಶಕದಲ್ಲಿ ತಯಾರಾದ ಇಮ್ಮಡಿ ಪುಲಿಕೇಶಿ ಚಲನಚಿತ್ರವು ಆ ಮಹಾನ್ ರಾಜನ ಜೀವನ ,ಸಾಧನೆಗಳನ್ನು ಕೊಂಡಾಡುತ್ತದೆ. ಇವನ್ನೂ ನೋಡಿ ಇಮ್ಮಡಿ ಪುಲಿಕೇಶಿ ರಾಷ್ಟ್ರಕೂಟ, ಹೊಯ್ಸಳರು ಬಾದಾಮಿ, ಐಹೊಳೆ, ಪಟ್ಟದಕಲ್ಲು ರನ್ನ, ನಯಸೇನ, ನಾಗವರ್ಮ ಬಾಹ್ಯ ಸಂಪರ್ಕಗಳು ಚಾಲುಕ್ಯರ ಕಲೆ ಕಲ್ಯಾಣಿ ಚಾಲುಕ್ಯರು ಚಾಲುಕ್ಯ ವಂಶ ವರ್ಗ: ಭಾರತದ ಇತಿಹಾಸ ವರ್ಗ:ಕರ್ನಾಟಕದ ಇತಿಹಾಸ ja:後期チャールキヤ朝
ಚಕ್ರವರ್ತಿ
https://kn.wikipedia.org/wiki/ಚಕ್ರವರ್ತಿ
thumb|350px|One of the most famous Imperial coronation ceremonies was that of Napoleon, crowning himself Emperor in the presence of Pope Pius VII (who had blessed the regalia), at the Notre Dame Cathedral in Paris.The painting by David commemorating the event is equally famous: the gothic cathedral restyled style Empire, supervised by the mother of the Emperor on the balcony (a fictional addition, while she had not been present at the ceremony), the pope positioned near the altar, Napoleon proceeds to crown his then wife, Joséphine de Beauharnais as Empress. ಚಕ್ರವರ್ತಿ ಎಂದರೆ ಸಾರ್ವಭೌಮ, ಸಾಮ್ರಾಟ. ಒಂದು ರಾಜ್ಯದ ಅಧಿಪತಿ ರಾಜನೆನಿಸಿಕೊಂಡರೆ, ಅಂತಹ ರಾಜರುಗಳಿಗೆ ಅಧಿಪತಿಯಾದ ರಾಜಾಧಿರಾಜನಿಗೆ ಚಕ್ರವರ್ತಿ ಎಂದು ಕರೆಯಲಾಗುತ್ತಿತ್ತು. ಚಕ್ರವರ್ತಿ ಎನ್ನುವುದು ಪ್ರಾಚೀನ ಕಾಲದ ರಾಜರನ್ನುದ್ದೇಶಿಸಿ ಕೊಡುತ್ತಿದ್ದ ಬಿರುದು. ಬಹಳವಾಗಿ ದಂಡಯಾತ್ರೆಗಳಲ್ಲಿ ಯಶಸ್ವಿಯಾಗಿ ಹಲವು ಪ್ರಾಂತ್ಯಗಳನ್ನು ಗೆದ್ದು, ಏಕಚಕ್ರಾಧಿಪತ್ಯಕ್ಕೆ ಒಳಪಡಿಸುತ್ತಿದ್ದ, ಒಟ್ಟುಗೂಡಿಸುತ್ತಿದ್ದ ರಾಜರಿಗೆ ಸಾಮಾನ್ಯವಾಗಿ ಚಕ್ರವರ್ತಿ ಎಂದು ಹೆಸರಿಸಿ ಕರೆಯುವುದುಂಟು.ಚತ್ರವತಿಗಳನ್ನು ರಾಜರುಗಳಿಗಿಂತ ಹಿಚ್ಚಿನ ಘನತೆ ಮತ್ತು ಉನ್ನತ ದರ್ಜಿಯಲ್ಲಿ ಗುರುತುಪಡಿಸಲಾಗುತ್ತದೆ. ಮಧ್ಯ ಶತಮಾನದಲ್ಲಿ ಇರೋಪಿನಲ್ಲಿ ಚಕ್ರವತಿಗಳನ್ನು ಪೋಪ್‌ಗಳಿಗೆ ಹೋಲಿಸಲಾಗಿತ್ತು. ವರ್ಗ:ನಾಮಪದಗಳು ವರ್ಗ:ಸರ್ಕಾರ ವರ್ಗ:ರಾಜಕೀಯ
ಕುಮಾರವ್ಯಾಸ
https://kn.wikipedia.org/wiki/ಕುಮಾರವ್ಯಾಸ
thumbnail|ಗದುಗಿನಲ್ಲಿರುವ ಕುಮಾರವ್ಯಾಸನ ಪ್ರತಿಮೆ thumbnail|ಕುಮಾರವ್ಯಾಸನ ಕಂಬ ಕುಮಾರವ್ಯಾಸ (ಕ್ರಿ.ಶ. ೧೩೫೦-೧೪೦೦) ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಾಯಣಪ್ಪ. "ಗದುಗಿನ ನಾರಾಯಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ, ವ್ಯಾಸ ಮಹಾಕವಿಯ ಮಾನಸಪುತ್ರ ತಾನೆನ್ನುವ ವಿನೀತ ಭಾವದಿಂದ ನಾರಣಪ್ಪ ಕುಮಾರ ವ್ಯಾಸನಾಗಿದ್ದಾನೆ. ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ. ಕುಮಾರವ್ಯಾಸ ಗದುಗಿನ ವೀರನಾರಾಯಣ ದೇಗುಲದಲ್ಲಿನ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ. ಕುಮಾರವ್ಯಾಸನ ಕಾಲ ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಆದರೂ ಕವಿಚರಿತಾಕಾರರು ಕೆಲವು ಸಾಹಿತ್ಯದ ಹಿನ್ನೆಲೆಯಿಂದ ಕುಮಾರವ್ಯಾಸನ ಕಾಲವನ್ನು ನಿರ್ಣಯಿಸಲು ಪ್ರಯತ್ನಿಸಿದ್ದಾರೆ. ಕುಮಾರವ್ಯಾಸನ ಹೆಸರು ಹೇಳುವ ಉತ್ತರಕಾಲೀನ ಕವಿಗಳಲ್ಲಿ ಮೊದಲಿಗ ತಿಮ್ಮಣ್ಣಕವಿ. ಇವನ ಕಾಲ ಸುಮಾರು ಕ್ರಿ.ಶ. ೧೫೧೦. ಇವನು ವಿಜಯನಗರದ ಶ್ರೀಕೃಷ್ಣದೇವರಾಯ ನ(ಕ್ರಿ.ಶ.೧೫೦೯ ರಿಂದ ೧೫೨೯ರವರೆಗೆ) ಆಜ್ಞಾನುಸಾರ 'ಕೃಷ್ಣರಾಜ ಭಾರತ'ಎಂಬ ಕೃತಿಯನ್ನು ರಚಿಸಿದ್ದಾನೆ. ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ 'ತೊರವೆ ರಾಮಾಯಣ' ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು 'ಕೃಷ್ಣರಾಯ ಭಾರತ' ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ. ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ. ಕುಮಾರವ್ಯಾಸನ ಹೆಸರಿರುವ ಒಂದು ಶಾಸನ ಗದುಗಿನ ವೀರನಾರಾಯಣ ದೇವಸ್ಥಾನಕ್ಕೆ ಸೇರಿದ ಬಾವಿಯ ಎಡಮಗ್ಗುಲ ಗೋಡೆಯ ಮೇಲಿದೆ. ಇದರ ಕಾಲ ಸುಮಾರು ಕ್ರಿ.ಶ. ೨೬-೮-೧೫೩೯ ರಲ್ಲಿ ಬರೆದ ಶಾಸನದಲ್ಲಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರ ನಾರಾಯಣನ ಸನ್ನಿಧಿಯಲ್ಲಿ. ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆಂದು ಸ್ಪಷ್ಟವಾಗಿದೆ. ಕುಮಾರವ್ಯಾಸ ಶ್ರೀಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದವನೆಂದೂ, ಪ್ರಭುಲಿಂಗಲೀಲೆ ಬರೆದ ಚಾಮರಸನ ತಂಗಿಯ ಗಂಡನೆಂದೂ, ಇದರ ಪ್ರಕಾರ ಇವನ ಕಾಲ ಸುಮಾರು ೧೪೩೯ ಆಗುತ್ತದೆಂದು ಕವಿಚರಿತಾಕಾರರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ). ಕುಮಾರವ್ಯಾಸನು 'ಕರ್ಣಾಟ ಭಾರತ ಕಥಾಮಂಜರಿ' ರಚಿಸಿ, ವ್ಯಾಸರಾಯರಿಗೆ ತೋರಿಸಿದನೆಂಬ ಐತಿಹ್ಯವಿದೆಯೆಂದು ತಿಳಿಸಿರುವ ಪಂಚಮುಖಿ ಎಂಬ ವಿದ್ವಾಂಸರು- "ಹರಿ ಶರಣರೆನ್ನ ಮನೆಯ ಮೆಟ್ಟಲು ಮನೆ ಪರಮಪಾವನವಾಯಿತು" ಎಂಬ ಸುಳಾದಿಯಲ್ಲಿ ಪುರಂದರದಾಸರು ತಮ್ಮ ಮನೆಗೆ ಕುಮಾರವ್ಯಾಸ ಬಂದುದನ್ನು, ಆತ ತನ್ನ ಕೃತಿಗೆ ಶ್ರೀಕೃಷ್ಣನೇ ಕಥಾನಾಯಕನೆಂದು ಶಾಸ್ತ್ರ ಸಮ್ಮತವಾಗಿ ಹೇಳಿದನೆನ್ನಲಾಗಿದೆ. ಈ ದಿಸೆಯಲ್ಲಿ ಕುಮಾರವ್ಯಾಸ ಅತಿ ಪ್ರಾಚೀನನೂ ಅಲ್ಲ, ಅರ್ವಾಚೀನನೂ ಅಲ್ಲ. ಮಧ್ಯಕಾಲದವನೆಂದೂ, ಅವನ ಭಾಷಾಶೈಲಿಯ ದೃಷ್ಠಿಯಿಂದ ನಿರ್ವಿವಾದವಾಗಿ ಹೇಳಬಹುದು. ಕುಮಾರವ್ಯಾಸನ ಊರು ಹುಟ್ಟೂರು ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಹೇಳಲಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ.ಪ್ರಸನ್ನ, ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯ ಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸುತ್ತಾರೆ. ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್ ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚಿನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಟ್ಟಿನಲ್ಲಿ ಕವಿ ನಾರಾಯಣಪ್ಪ ಕೋಳಿವಾಡದ ಶಾನುಭೋಗ. ಗದುಗಿನ ವೀರನಾರಾಯಣ ಇವನ ಆರಾಧ್ಯದೈವ. ಇವನಿಗೆ ವೇದವ್ಯಾಸ ಮತ್ತು ಅಶ್ವತ್ಥಾಮರ ಅನುಗ್ರಹವಾಗಿತ್ತೆಂದು ಹೇಳಲಾಗುತ್ತದೆ. ವಂಶಾವಳಿ ಈ ವಂಶಾವಳಿಯಂತೆ, ವೀರನಾರಾಯಣರೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ > ಗಾಮುಂಡ > ಗೌಡ ಎಂದು ನಿರ್ಣಯಿಸಿದ್ದಾರೆ. ಆನಂತರ ಕೆಲವು ಅದೇ ಮನೆತನದವರು ಅಯ್ಯ, ಪಾಟೀಲ ಎಂದು ತಮ್ಮ ಹೆಸರಿನ ಕೊನೆಗೆ ಸೇರಿಸಿ ಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿ ತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ, ಕುಮಾರವ್ಯಾಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷ ಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ. ವಂಶಾವಳಿ : ||ಶ್ರೀ ವೀರನಾರಾಯಣ ಪ್ರಸನ್ನಃ|| ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ. ೨.ತಿರುಮಲಯ್ಯ. ೩. ಲಕ್ಕರಸಯ್ಯ. ೪.ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ? ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ.ಶ್ರೀಎ.ವಿ. ಪ್ರಸನ್ನ ಕೆ.ಎ. ಎಸ್. ಬೆಂಗಳೂರು ಅವರ ಲೇಖನ- 'ಕುಮಾರವ್ಯಾಸನ ವಂಶಾವಳಿ' -ಗಮಕ ಸಂಪದ ಸಂಚಿಕೆ ೪ ಮತ್ತು ೫ ಸಂಪುಟ ೧೦. ಹೊಸ ಹಳ್ಳಿ) ಕೃತಿಗಳು ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಕನ್ನಡಾನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳು, ೧೪೭ ಸಂಧಿ, ೭೯೭೧ ಪದ್ಯಗಳನ್ನು ಒಳಗೊಂಡಿದೆ. (ತಿದ್ದುಪಡಿ:೧೫೨ ಸಂಧಿಗಳು, 8244ಪದ್ಯಗಳು) 'ಕುಮಾರವ್ಯಾಸ ಭಾರತ'ದ ಭಾಷೆ ನಡುಗನ್ನಡ. (ಕುಮಾರವ್ಯಾಸ ಭಾರತ-ಆದಿಪರ್ವ) ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ: "ಬವರವಾದರೆ ಹರನ ವದನಕೆ ಬೆವರ ತಹೆನು" (ಅಭಿಮನ್ಯುವಿನ ವೀರೋಕ್ತಿ!) "ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ" (ಕಿರಾತಾರ್ಜುನೀಯ ಪ್ರಸಂಗದಲ್ಲಿ) "ಜವನ ಮೀಸೆಯ ಮುರಿದನೋ" (ಉತ್ತರನ ಪೌರುಷದಲ್ಲಿ) "ಅರಿವಿನ ಸೆರಗು ಹಾರಿತು" ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ. ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ("ತಿಳಿಯ ಹೇಳುವೆ ಕೃ‍ಷ್ಣ ಕಥೆಯನು") ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ. ಕುಮಾರವ್ಯಾಸ ಕೃಷ್ಣನ ಭಕ್ತ. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ. ಬರೆದು ದುರ್ಯೋಧನನ ಅವಸಾನದ ನಂತರ, ಕುಮಾರವ್ಯಾಸನು ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ; ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:"ಕುಮಾರ ವ್ಯಾಸನು ಹಾಡಿದನೆಂದರೆಕಲಿಯುಗ ದ್ವಾಪರವಾಗುವುದುಭಾರತ ಕಣ್ಣಲಿ ಕುಣಿವುದು! ಮೈಯಲಿಮಿಂಚಿನ ಹೊಳೆ ತುಳುಕಾಡುವುದು!" ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ. ಪ್ರಭಾವ ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ."ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆಬಳಸಿ ಬರೆಯಲು ಕಂಠಪತ್ರದವುಲಹುಗೆಡದಗ್ಗಳಿಕೆಯೆಂಬೀಬಲುಹು ವೀರನಾರಾಯಣನ ಕಿಂಕರಗೆ""ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ ಕೇಳುವಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರುಚಾರು ಕವಿತೆಯ ಬಳಕೆಯಲ್ಲ ವಿಚಾರಿಸುವಡಳವಲ್ಲ ಚಿತ್ತವಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ" ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು(೧) ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದು ಕಷ್ಟ.ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ) ಇವನ್ನೂ ನೋಡಿ ಕುಮಾರವ್ಯಾಸಭಾರತ-ಸಟೀಕಾ ಕುಮಾರವ್ಯಾಸ ಭಾರತ-ಆದಿಪರ್ವ-ಪೀಠಿಕಾ ಸಂಧಿ ಕರ್ಣಾಟ ಭಾರತ ಕಥಾಮಂಜರಿ ಚರ್ಚೆಪುಟ:ಕುಮಾರವ್ಯಾಸ ಕನ್ನಡ ಸಾಹಿತ್ಯ ಕುಮಾರವ್ಯಾಸನ ಮಂಡಿಗೆಗಳು ಆಧಾರ ಶ್ರೀಎ.ವಿ. ಪ್ರಸನ್ನ ಕೆ.ಎ. ಎಸ್. ಬೆಂಗಳೂರು ಅವರ ಲೇಖನ- 'ಕುಮಾರವ್ಯಾಸನ ವಂಶಾವಳಿ' -ಗಮಕ ಸಂಪದ ಸಂಚಿಕೆ ೪ ಮತ್ತು ೫ ಸಂಪುಟ ೧೦. ಹೊಸ ಹಳ್ಳಿ) (೧)ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ) ಉಲ್ಲೇಖ ವರ್ಗ:ಪ್ರಾಚೀನ ಹಳಗನ್ನಡ ಸಾಹಿತಿಗಳು ವರ್ಗ:ಭಾಮಿನಿ ಷಟ್ಪದಿಕಾರ ವರ್ಗ:ರೂಪಕ ಸಾಮ್ರಾಜ್ಯದ ಚಕ್ರವರ್ತಿ ವರ್ಗ:ಕನ್ನಡ ಸಾಹಿತ್ಯ
ರಾಹುಲ್ ದ್ರಾವಿಡ್
https://kn.wikipedia.org/wiki/ರಾಹುಲ್_ದ್ರಾವಿಡ್
ತುಂಗಾ
https://kn.wikipedia.org/wiki/ತುಂಗಾ
ತುಂಗಾ ನದಿ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನದಿ. thumbnail|ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ತುಂಗಾ ನದಿ ತುಂಗಾ ನದಿ ಪಶ್ಚಿಮ ಘಟ್ಟಗಳ ವರಾಹ ಪರ್ವತದಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಅಲ್ಲಿಂದ ಇದು ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಮೂಲಕ ಹರಿಯುತ್ತದೆ. ಸುಮಾರು 147 ಕಿ.ಮೀ. ದೂರದವರೆಗೆ ಹರಿದು ಶಿವಮೊಗ್ಗ ಜಿಲ್ಲೆಯ ಕೂಡ್ಲಿಯಲ್ಲಿ ಭದ್ರಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಇದರ ನಂತರ ತುಂಗಭದ್ರಾ ಎಂಬ ಹೆಸರು ಪಡೆದು ಮುಂದೆ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ತುಂಗಾ ನದಿ ಸಿಹಿನೀರಿಗೆ ಪ್ರಸಿದ್ಧ. "ತುಂಗಾ ಪಾನಂ ಗಂಗಾ ಸ್ನಾನಂ" ಎಂಬ ಗಾದೆಯೇ ಇದೆ! ತುಂಗಾ ನದಿಗೆ ಗಾಜನೂರಿನಲ್ಲಿ ಒಂದು ಅಣೆಕಟ್ಟನ್ನು ಕಟ್ಟಲಾಗಿದೆ. ಭದ್ರಾ ನದಿಯೊಂದಿಗೆ ಸೇರಿದ ಮೇಲೆ ತುಂಗಭದ್ರಾ ನದಿಗೆ ಹೊಸಪೇಟೆಯಲ್ಲಿ ಇನ್ನೊಂದು ಅಣೆಕಟ್ಟನ್ನು ಕಟ್ಟಲಾಗಿದೆ. ತುಂಗಾ ನದಿಯ ದಡದ ಮೇಲಿರುವ ಒಂದು ಪ್ರಸಿದ್ಧ ಸ್ಥಳವೆಂದರೆ ಶೃಂಗೇರಿ. ತೀರ್ಥಹಳ್ಳಿ ಮತ್ತು ಶಿವಮೊಗ್ಗ ತುಂಗಾ ನದಿಯ ತೀರದಲ್ಲಿರುವ ಇತರ ಪ್ರಮುಖ ಪಟ್ಟಣಗಳು. ವರ್ಗ:ಭೂಗೋಳ ವರ್ಗ:ಜಲಸಮೂಹಗಳು ವರ್ಗ:ನದಿಗಳು ವರ್ಗ:ಭಾರತದ ನದಿಗಳು ವರ್ಗ:ಕರ್ನಾಟಕದ ನದಿಗಳು
ಗಂಗ್ನಿಹೆಸ್ಸೊ
https://kn.wikipedia.org/wiki/ಗಂಗ್ನಿಹೆಸ್ಸೊ
ಗಂಗ್ನಿಹೆಸ್ಸೊ - ಸಾಂಪ್ರದಾಯಿಕ "ದಹೊಮಿಯ ಹನ್ನೆರಡು ರಾಜರು" ಗಳಲ್ಲಿ ಮೊದಲನೆಯವ. ಇವನ ರಾಜ್ಯಭಾರ ಸುಮಾರು ೧೬೨೦ರಲ್ಲಿ ನಡೆದಿರಬಹುದು. ಇವನ ಲಾಂಛನಗಳು ಒಂದು ಗಂಗ್ನಿಹೆಸ್ಸೊ ಪಕ್ಷಿ (ಈ ಪಕ್ಷಿ ಅವನ ಹೆಸರನ್ನು ಸೂಚಿಸುತ್ತಿತ್ತು), ಒಂದು ಡೋಲು, ಹಾಗೂ ಎಸೆಯುವ/ಶಿಕಾರಿ ಮಾಡುವ ಕೋಲುಗಳು. ಇವನು ನಿಜವಾಗಿಯೂ ರಾಜನಾಗಿ ಕಾರ್ಯನಿರ್ವಹಿಸಿದ್ದು ಐತಿಹಾಸಿಕವಾಗಿ ಸ್ಪಷ್ಟವಿಲ್ಲ. ಆದರೆ ಇವನು ತನ್ನ ತಮ್ಮ ಡಾಕೊಡೊನೊ ಮೂಲಕ ತನ್ನ ಸಲಹೆಗಳ ಶಕ್ತಿಯನ್ನುಪಯೋಗಿಸಿ ಸಮುದಾಯದ ವ್ಯವಹಾರಗಳನ್ನು ನಡೆಸಲು ಸಹಾಯ ಮಾಡಿದ ಪ್ರಭಾವಶಾಲಿ ನಾಯಕನಾಗಿದ್ದಿರಬಹುದು. ಡಾಕೊಡೊನೊ ತನ್ನ ಜೀವನಕಾಲದಲ್ಲಿ ರಾಜನೆಂದು ಕರೆಯಲ್ಪಟ್ಟಿದ್ದ. ವರ್ಗ:ಆಫ್ರಿಕಾ ಖಂಡ ವರ್ಗ:ಇತಿಹಾಸ
ಅನಿಲ್ ಕುಂಬ್ಳೆ
https://kn.wikipedia.org/wiki/ಅನಿಲ್_ಕುಂಬ್ಳೆ
ಅನಿಲ್ ಕೃಷ್ಣಸ್ವಾಮಿ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦ ಬೆಂಗಳೂರಿನಲ್ಲಿ) - ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ. ಕುಂಬ್ಳೆ ಲೆಗ್ ಸ್ಪಿನ್ನರ್. ಇವರು ತಮ್ಮದೇ ಆದ ಬೌಲಿಂಗ್ ಶೈಲಿಗೆ ಹೆಸರುವಾಸಿ, ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ. ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು; ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ. ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೫೩೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ. ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು. ಕ್ರಿಕೆಟ್ ಜೀವನ ಭಾರತ ೧೯೯೨ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸ ಮಾಡಿದಾಗ ಇವರು ತಮ್ಮ ಗುಣಮಟ್ಟವನ್ನು ಸ್ಥಾಪಿಸಿದರು, ೨ನೇ ಟೆಸ್ಟ್‌ನಲ್ಲಿ ೮ ವಿಕೆಟ್‌ಗಳನ್ನು ಉರುಳಿಸಿದರು. ಅದೇ ವರ್ಷ ಇಂಗ್ಲೆಂಡ್ ಭಾರತಕ್ಕೆ ಪ್ರವಾಸ ಬಂದಾಗ, ಕೇವಲ ೩ ಪಂದ್ಯಗಳಲ್ಲಿ ೨೧ ವಿಕೆಟ್‌ಗಳನ್ನು ಸರಾಸರಿ ೧೯.೮ ರಲ್ಲಿ ತೆಗೆದುಕೊಂಡರು. ಇವರು ಮೊದಲ ೫೦ ವಿಕೆಟ್‌ಗಳನ್ನು ಕೇವಲ ೧೦ ಟೆಸ್ಟ್ ಪಂದ್ಯಗಳಲ್ಲಿ ತೆಗೆದುಕೊಂಡರು. ಇದನ್ನು ಸಾಧಿಸಿದ ಭಾರತದ ಏಕೈಕ ಬೌಲರ್‌ ಆಗಿ ಉಳಿದಿದ್ದಾರೆ. ಎರಪಳ್ಳಿ ಪ್ರಸನ್ನರವರಾದ ಮೇಲೆ ೧೦೦ ಟೆಸ್ಟ್ ವಿಕೆಟ್‌ಗಳನ್ನು ಬಹು ಬೇಗ ಪಡೆದ ಎರಡನೆಯ ಭಾರತದ ಬೌಲರ್ ಇವರಾದರು. ಇವರು ಇದನ್ನು ಸಾಧಿಸಿದ್ದು ೨೧ ಪಂದ್ಯಗಳಲ್ಲಿ. ಒಂದುದಿನದ ಪಂದ್ಯಗಳಲ್ಲಿ, ಇವರ ಜೀವನದ ಅತುತ್ತಮ ಸಾಧನೆ ಬಂದದ್ದು ನವೆಂಬರ್ ೨೭, ೧೯೯೩ ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಹೀರೋ ಕಪ್ ಫೈನಲ್ ಪಂದ್ಯದಲ್ಲಿ, ಇವರು ಕೇವಲ ೧೨ ರನ್‌ಗಳಿಗೆ ೬ ವಿಕೆಟ್‌ಗಳನ್ನು ಉರುಳಿಸಿದರು. ಈ ದಾಖಲೆ ಭಾರತದ ಯಾವುದೇ ಬೌಲರ್‌ನ ಅತ್ಯುತ್ತಮ ಸಾಧನೆಗಿಂತ ಹಿರಿದಾದುದಲ್ಲದೆ, ೧೦ ವರ್ಷಗಳಿಂದಲೂ ಇದು ಖಾಯಂ ಆಗಿ ಯಾರಿಂದಲೂ ಮುರಿಯದೆಯೇ ಉಳಿದಿದೆ. ವರ್ಷವಾರು ನೋಡಿದಲ್ಲಿ, ಇವರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ್ದು ೧೯೯೬ರಲ್ಲಿ. ಈ ವರ್ಷದಲ್ಲಿ ಇವರು ೬೧ ವಿಕೆಟ್‌ಗಳನ್ನು ಉರುಳಿಸಿದರು, ಒಟ್ಟು ೨೦.೨೪ ಸರಾಸರಿಯಲ್ಲಿ. ಇವರ ಎಕಾನಮಿ ರೇಟ್ ೪.೦೬ ಆಗಿತ್ತು. ಇದೇ ವರ್ಷ ಏಶಿಯಾದಲ್ಲಿ ವಿಶ್ವ ಕಪ್ ನಡೆದದ್ದು. ಲೋಕದಾಖಲೆ ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ ಫೆಬ್ರವರಿ ೪-ಫೆಬ್ರವರಿ ೮ ೧೯೯೯ನಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ. ಮೈಲಿಗಲ್ಲುಗಳು ಡಿಸೆಂಬರ್ ೧೦, ೨೦೦೪ - ಕಪಿಲ್ ದೇವ್ ಅವರ ೪೩೪ ವಿಕೆಟುಗಳನ್ನು ದಾಟಿದ ಅನಿಲ್ ಕುಂಬ್ಳೆ. ಅತ್ಯಂತ ಹೆಚ್ಚು ಟೆಸ್ಟ್ ವಿಕೆಟ್‍ಗಳನ್ನು ಪಡೆದ ಭಾರತದ ಬೌಲರ್ ಎಂಬ ಕೀರ್ತಿ. ಮಾರ್ಚ್ ೧೧, ೨೦೦೬ - ೫೦೦ ಟೆಸ್ಟ್ ವಿಕೆಟುಗಳ ಸಾಧನೆ ಜೂನ್ ೧೧, ೨೦೦೬ - ವೆಸ್ಟ್ ಇಂಡೀಸಿನ ಕರ್ಟ್ನಿ ವಾಲ್ಷ್ ಅವರ ೫೨೦ ವಿಕೆಟುಗಳ ಗುರಿ ದಾಟಿದ ಕುಂಬ್ಳೆ. ಅತಿಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್‍ಗಳ ಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಮುನ್ನಡೆ. ೩೦೦ ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ಸ್ಪಿನ್ನರ್. ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪೈಕಿ ಮೂರನೆಯವರು. ( ೫೬೬ ವಿಕೆಟ್). ಫೆಬ್ರುವರೀ ೧೯೯೯ರಲ್ಲಿ ಪಾಕಿಸ್ತಾನದ ವಿರುದ್ದ ದೆಹಲಿಯಲ್ಲಿ ಒಂದು ಇನ್ನಿಂಗ್ಸ್ ನಲ್ಲಿ ೧೦ ವಿಕೆಟ್. ಜುಂಬೋ (Jumbo) ಅನಿಲ್ ಕುಂಬ್ಳೆ ಜುಂಬೋ("Jumbo") ಎಂಬ ಅಡ್ಡಹೆಸರನ್ನು ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಮಾಡಿಯೂ, ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ. ಇದಲ್ಲದೇ, ಇವರ ಪಾದದ ಗಾತ್ರ ತುಂಬಾ ದೊಡ್ಡದಿರುವುದರಿಂದ ಅವರ ಟೀಂ ಮೇಟ್ ಗಳು ಈ ಹೆಸರನ್ನು ಇಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ.!! ಪ್ರಶಸ್ತಿ ಪುರಸ್ಕಾರಗಳು ೧೯೯೬ - ವಿಸ್ಡನ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ೨೦೦೫ - ಭಾರತ ಸರಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ. ಕರ್ನಾಟಕ ಸರಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ವರ್ಗ:ಕ್ರಿಕೆಟ್ ಆಟಗಾರ ವರ್ಗ:ಕ್ರಿಕೆಟ್ ವರ್ಗ:ಭಾರತದ ಕ್ರಿಕೆಟ್ ಕ್ರೀಡಾಪಟುಗಳು
ಮದರಾಸು
https://kn.wikipedia.org/wiki/ಮದರಾಸು
REDIRECT ಚೆನ್ನೈ
ಚೆನ್ನೈ
https://kn.wikipedia.org/wiki/ಚೆನ್ನೈ
"ಮದ್ರಾಸ್" ಇಲ್ಲಿಗೆ ಪುನರ್ನಿರ್ದೇಶಿಸುತ್ತದೆ. ಇತರ ಬಳಕೆಗಳಿಗಾಗಿ, ಮದ್ರಾಸ್ (ದ್ವಂದ್ವ ನಿವಾರಣೆ) ನೋಡಿ. ಚೆನ್ನೈ ಬಂದರು ಚೆನ್ನೈ - ತಮಿಳುನಾಡಿನ ರಾಜಧಾನಿ. ಸಮುದ್ರ ತಟದಲ್ಲಿರುವ ಈ ಊರನ್ನು 'ಮದರಾಸು' ಎಂದು ಕರೆಯಲಾಗುತ್ತಿತ್ತು. ಬ್ರಿಟಿಷರಿಂದ ಬಂದ ಈ ಹೆಸರನ್ನು ತಮಿಳುನಾಡು ಸರ್ಕಾರ ಚೆನ್ನೈ ಎಂದು ಬದಲಾಯಿಸಿತು. ಚೆನೈ ಉಚ್ಚಾರಣೆ (· ಬಗ್ಗೆ?) (), ಹಿಂದೆ ಮದ್ರಾಸ್ ಉಚ್ಚಾರಣೆ ಎಂದು ತಮಿಳುನಾಡು ರಾಜ್ಯದ ರಾಜಧಾನಿ ಮತ್ತು ಭಾರತದ ದೊಡ್ಡ ನಾಲ್ಕನೇ ಮೆಟ್ರೋಪಾಲಿಟನ್ ನಗರ (· ಬಗ್ಗೆ?). ಬಂಗಾಳ ಕೊಲ್ಲಿಯ ಕೋರಮಂಡಲ್ ತೀರದಲ್ಲಿ ಇದೆ. ಇ ನಗರದ ಅಂದಾಜು ಜನಸಂಋಯ 7.60 ರಂತೆ ಮಿಲಿಯನ್ (2006), ಸುಮಾರು 368 ವರ್ಷಗಳ ಇತಿಹಾಸವಿರುವ ಈ ನಗರ ಜಗತ್ತಿನ ಆತಿ ದೊಡ್ಡ ನಗರಳ ಪಟ್ಟಿಯಲ್ಲಿ 36 ನೆ ಸ್ಥಾನದಲ್ಲಿದೆ. ಈ ನಗರವು ಒಂದು ದೊಡ್ಡ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ದೇಗುಲ ಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ (ಪುಣೆ ಮೊದಲನೆಯದು) ವಾಹನ ರಾಜಧಾನಿಯಾಗಿದ್ದು, ವಾಹನೋದ್ಯಮದ ಹೆಚ್ಚುಭಾಗ ಅಲ್ಲಿ ನೆಲೆಸಿ, ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು ದಕ್ಷಿಣ ಏಶಿಯಾದ ಡೆಟ್ರಾಯಿಟ್ ಎಂದು ಕರೆಸಿಕೊಳ್ಳುತ್ತದೆ. ಅದು ಪಾಶ್ಚಿಮಾತ್ಯ ಜಗತ್ತಿನಿಂದ ಹೊರಗುತ್ತಿಗೆಯಾದ ನೌಕರಿಗಳ ಪ್ರಮುಖ ಕೇಂದ್ರವೂ ಆಗಿದೆ. ಹನ್ನೆರಡು ಕಿಲೋಮೀಟರ್ ಉದ್ದದ ಮರೀನಾ ಬೀಚ್ ನಗರದ ಪೂರ್ವ ತೀರವಾಗಿದ್ದು, ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ. ಈ ನಗರವು ತನ್ನ ಕ್ರೀಡಾ ತಾಣಗಳಿಗಾಗಿ ಹೆಸರುವಾಸಿಯಾಗಿದ್ದು ಭಾರತದ ಏಕೈಕ ATP ಟೆನ್ನಿಸ್ ಮುಕ್ತ ಚೆನ್ನೈ ಸ್ಪರ್ಧಾಕೂಟವನ್ನು ಏರ್ಪಡಿಸುತ್ತದೆ. ಪರಿವಿಡಿ [ಅಡಗಿಸು] 1 ಹೆಸರು 2 ಇತಿಹಾಸ 3 ಭೂಗೋಳ 3.1 ಹವಾಗುಣ 3.2 ರೂಪುರೇಷೆ (ಲೇಔಟ್) 4 ಆಡಳಿತ 5 ಅರ್ಥವ್ಯವಸ್ಥೆ (ಆರ್ಥಿಕತೆ) 6 ಜನಸಂಖ್ಯೆ (ಜನಸಂಖ್ಯಾಶಾಸ್ತ್ರ) 7 ಸಂಸ್ಕೃತಿ 8 ಸಾರಿಗೆ ಸಂಪರ್ಕ (ಸಾರಿಗೆ) 9 ಮಾಧ್ಯಮ (ಮಾಧ್ಯಮ) 10 ಉಪಯುಕ್ತ ಸೇವೆಗಳು (ಯುಟಿಲಿಟಿ ಸರ್ವೀಸಸ್) 11 ಶಿಕ್ಷಣ 12 ಕ್ರೀಡೆಗಳು 13 ಉಲ್ಲೇಖಗಳು 14 ಬಾಹ್ಯ ಸಂಪರ್ಕಗಳು [ಬದಲಾಯಿಸಿ] ಹೆಸರು 'ಮದ್ರಾಸು' ಎಂಬ ಹೆಸರು 'ಮದ್ರಾಸುಪಟ್ನಂ' ಪದದಿಂದ ಬಂದಿದೆ, ಈ ಜಾಗವನ್ನು ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಖಾಯಂ ನೆಲೆಗಾಗಿ 1639 ರಲ್ಲಿ ಆಯ್ಕೆ ಮಾಡಿಕೊಂಡಿತು.https://www.mapsofindia.com/on-this-day/22nd-august-1639-madras-now-chennai-is-founded-by-the-east-india-company ಮದ್ರಾಸು ನಗರದ ದಕ್ಷಿಣ ಭಾಗದಲ್ಲಿ 'ಚೆನ್ನಪಟ್ಟಣಂ' ಎಂಬ ಚಿಕ್ಕ ಪೇಟೆಯಿದೆ. ಕಾಲಾಂತರದಲ್ಲಿ ಎರಡೂ ಪಟ್ಟಣಗಳೂ ಸೇರಿ 'ಮದರಾಸು' ಬ್ರಿಟೀಷರ ಕೃಪೆಗೆ ಪಾತ್ರವಾಯಿತು. ಆದರೆ ಅಲ್ಲಿನ ಜನ ಅದನ್ನು 'ಚೆನ್ನಪಟ್ಟಣ' ಅಥವಾ 'ಚೆನ್ನಪುರಿ' ಎಂದೇ ಗುರುತಿಸುತ್ತಿದ್ದರು. 'ಚೆನ್ನು' ಎಂಬ ಪದ ತೆಲುಗು ಮೂಲದ ದಕ್ಷಿಣ ಮಧ್ಯ ದ್ರಾವಿಡ ಭಾಷೆಯ ಪದ ಇದರ ಅರ್ಥ "ಸುಂದರ" ಎಂದು ಹಾಗಾಗಿ 'ಚೆನ್ನಪುರಿ' ಅಥವಾ 'ಚೆನ್ನಪಟ್ಟಣಂ' ಎಂದರೆ "ಸುಂದರ ನಗರ" ಎಂದರ್ಥ. ಈ ನಗರವನ್ನು 1996 ಆಗಸ್ಟ್ ತಿಂಗಳಲ್ಲಿ 'ಚೆನ್ನೈ' ಎಂದು ಮರುಹೆಸರಿಸಲಾಯಿತು. 'ಮದ್ರಾಸು' ಎಂಬ ಪದ ಪೋರ್ಚುಗೀಸ್ ಮೂಲದ್ದು. (ಭಾರತದ ಅನೇಕ ಇತರ ನಗರಗಳು ಕೂಡ ಅಂಥದೇ ಹೆಸರು ಬದಲಾವಣೆಗಳನ್ನು ಮಾಡಿವೆ.) ಮೂಲ ಪೋರ್ತುಗೀಸ್ ಹೆಸರು ಮಾದ್ರ ದೆ ಸಾಯ್ಸ್ -1500 ರ ಅರಂಭಿಕ ವಸತಿಗಾರರಲ್ಲೊಬ್ಬ ಉನ್ನತ ಅಧಿಕಾರಿಯ ಹೆಸರು ಎಂದು ನಂಬಲಾಗಿದೆ. ಚೆನ್ನೈ ತಮಿಳು ಹೆಸರಾಗಿರಲಿಕ್ಕಿಲ್ಲ ಎಂದೂ ಮದ್ರಾಸ್ ಎಂಬುದು ತಮಿಳುಮೂಲದ್ದಾಗಿರಬಹುದೆಂದೂ ಕೆಲವರು ಹೇಳಿದ್ದಾರೆ. [ಬದಲಾಯಿಸಿ] ಇತಿಹಾಸ 7 ನೇ ಶತಮಾನದಲ್ಲಿ ಪಲ್ಲವ ರಾಜರಿಂದ ಕಟ್ಟಲ್ಪಟ್ಟ ಮೈಲಾಪುರದಲ್ಲಿರುವ ಕಪಾಲೀಶ್ವರ ದೇವಸ್ಥಾನ . ಮುಖ್ಯ ಲೇಖನ: ಚೆನೈ ಇತಿಹಾಸ ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ, ಸೈನ್ಯ ಮತ್ತು ಆರ್ಥಿಕ ಕೇಂದವಾಗಿದೆ. ಅದನ್ನು ದಕ್ಷಿಣ ಭಾರತದ ಸಾಮ್ರಾಜ್ಯಗಳು, ಪ್ರಮುಖವಾಗಿ ಪಲ್ಲವ, ಚೋಳ, ಪಾಂಡ್ಯ, ಮತ್ತು ವಿಜಯನಗರ ಸಾಮ್ರಾಜ್ಯಗಳು ಆಳಿವೆ. ಇಂದಿನ ಮಹಾನಗರದ ಭಾಗವಾಗಿರುವ ಮೈಲಾಪುರ ಪಟ್ಟಣವು ಒಂದು ಕಾಲಕ್ಕೆ, ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು. 1522 ರಲ್ಲಿ ಪೋರ್ತುಗೀಸ್ರು ಬಂದು ಕೋಟೆಯನ್ನು ಕಟ್ಟಿ, ಕ್ರಿ. ಶ 52 ರಿಂದ 70 ರಲ್ಲಿ ಇಲ್ಲಿನ ಕ್ರಿಸ್ತ ಧರ್ಮ ಪ್ರಚಾರಕನಾಗಿದ್ದ ಸಂತ ಥಾಮಸರ ಹೆಸರಿನಲ್ಲಿ ಸಾವೋ ಟೋಮ್ (ಸಾವೊ ಟೋಮ್) ಎಂದು ಕರೆದರು. ಪೋರ್ತುಗೀಸರು ಈ ಪ್ರದೇಶವನ್ನು ಡಚ್ಚ್ರ ವಶಕ್ಕೆ ನೀಡಿದ ನಂತರ ಡಚ್ಚ್ರು 1612 ರಲ್ಲಿ ಚೆನ್ನೈನ ಉತ್ತರದಲ್ಲಿರುವ ಪುಲಿಕಾಟ್ ನಲ್ಲಿ ತಮ್ಮ ವಸಾಹತುವನ್ನು ನಿರ್ಮಿಸಿಕೊಂಡರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಾಶ್ವತ ವಸಾಹತು ನಿರ್ಮಾಣಕಾಗಿ, ವಂದವಾಸಿಯ ನಾಯಕರಾಗಿದ್ದ ದಮೆರ್ಲ ವೆಂಕಟಾದ್ರಿಯವರು 22 ನೇ ಆಗಸ್ಟ್ 1639 ರಂದು ಈ ಪ್ರದೇಶವನ್ನು ನೀಡಿದರು. ಬ್ರಿಟಿಷರು ಈ ಪ್ರದೇಶವನ್ನು ಮದ್ರಾಸೆಮನ್ ಎಂದು ಕರೆದರು. ಇದಾದ ಒಂದು ವರ್ಷದಲ್ಲಿ ಸಂತ ಜಾರ್ಜ್ ಕೋಟೆಯನ್ನು ಕಟ್ಟಲಾಯಿತು ಮತ್ತು ಈ ನಗರವು ಎಲ್ಲಾ ಚಟುವಟಿಕೆಗಳ ಹಾಗೂ ವಾಣಿಜ್ಯಕೇಂದ್ರವಾಗಿ ಬೆಳೆಯಿತು. ಇದು ಇಂದಿಗೂ ತಮಿಳುನಾಡಿನ ವಿಧಾನ ಸಭೆ ಹಾಗೂ ಆಡಳಿತದ ಕೇಂದ್ರವಾಗಿದೆ. ಈ ಕೋಟೆಯನ್ನೂ ಹಾಗೂ ಸುತ್ತಲಿನ ಅನೇಕ ಹಳ್ಳಿಗಳನ್ನು ಫ್ರೆಂಚರ ಮಾಲ್ಡೀವ್ಸ್ ನ ಪ್ರಾಂತ್ಯಾಧಿಪತಿಯಾಗಿದ್ದ ಲಾ ಬೋರ್ದೊನ್ನೇಸ್ 1746 ರಲ್ಲಿ ವಶಪಡಿಸಿಕೊಂಡನು. ಏಕ್ಸ್-la-ಚಾಪೆಲೆ ಒಡಂಬಡಿಕೆಯ ಮೂಲಕ ಮತ್ತು ಅನಂತರ ಫ್ರೆಂಚ್ ಮತ್ತು ಹೈದರ್ ಅಲಿ, ಮೈಸೂರು ಸುಲ್ತಾನ್ ಇನ್ನಷ್ಟು ದಾಳಿ ತಡೆದುಕೊಳ್ಳುವ ಬೇಸ್ ಬಲಗೊಳ್ಳುತ್ತದೆ 1749 ರಲ್ಲಿ ಪಟ್ಟಣದ ಬ್ರಿಟಿಷ್ ನಿಯಂತ್ರಣವನ್ನು ಮರಳಿ ಪಡೆದರು. 18 ನೇ ಶತಮಾನದ ಕೊನೆಯಲ್ಲಿ, ಬ್ರಿಟಿಷ್ ಅದರ ರಾಜಧಾನಿ ಮದ್ರಾಸ್ ಎಂದು ಮದ್ರಾಸ್ ಪ್ರೆಸಿಡೆನ್ಸಿ, ಸ್ಥಾಪಿಸಲು ತಮಿಳುನಾಡು ಮತ್ತು ಆಂಧ್ರ ಪ್ರದೇಶ ಮತ್ತು ಕರ್ನಾಟಕ ಉತ್ತರ ಆಧುನಿಕ ರಾಜ್ಯಗಳ ಸುತ್ತಮುತ್ತಲಿನ ಪ್ರದೇಶದ ಅತ್ಯಂತ ವಶಪಡಿಸಿಕೊಂಡ. ಬ್ರಿಟಿಶರ ಆಳ್ವಿಕೆಯ ಅವಧಿಯಲ್ಲಿ ಪಟ್ಟಣವು ಒಂದು ಪ್ರಮುಖ ನಾಗರಿಕ ಕೇಂದ್ರವಾಗಿಯೂ ನೌಕಾನೆಲೆಯಾಗಿಯೂ ಬೆಳೆಯಿತು. 19 ನೇ ಶತಮಾನದ ಕೊನೆಗೆ ಭಾರತದಲ್ಲಿ ರೈಲು ಆಗಮನದೊಂದಿಗೆ, ಅದು ಮೊದಲು ಬಾಂಬೇ ಎಂಬ ಹೆಸರಿನಲ್ಲಿ ಪ್ರಖ್ಯಾತವಾದ ಮುಂಬಯಿ ಮತ್ತು ಕೊಲ್ಕತ್ತ (ಹಿಂದಿನ ಕಲ್ಕತ್ತಾ) ದಂತಹ, ಇತರ ಪ್ರಮುಖ ಪಟ್ಟಣಗಳೊಂದಿಗೆ ಸಂಪರ್ಕ ಪಡೆಯಿತು. ಒಳನಾಡಿನ ಸಂವಹನ ಮತ್ತು ವ್ಯಾಪಾರಕ್ಕೆ. ಇದು ತೈಲ DEPOT ಜರ್ಮನ್ ಹಗುರ ವಾಹನ SMS Emden ಅದಕ್ಕೆ ಚಿಪ್ಪುಳ್ಳ ನಂತರ ವಿಶ್ವ ಸಮರ I ರ ಸಮಯದಲ್ಲಿ ಕೇಂದ್ರ ಶಕ್ತಿಗಳು ದಾಳಿ ಏಕೈಕ ಭಾರತೀಯ ನಗರವಾಗಿದೆ. 1947 ರ ಸ್ವಾತಂತ್ರ್ಯದ ನಂತರ, ನಗರವು 1969 ರಲ್ಲಿ ತಮಿಳುನಾಡು ಎಂಬುದಾಗಿ ಮರುನಾಮಕರಣಗೊಂಡಿತು ಮದ್ರಾಸ್ ರಾಜ್ಯದ ರಾಜಧಾನಿಯಾಯಿತು. 1965 ರಿಂದ 1967, ಚೆನ್ನೈಯು ಹಿಂದಿ ಹೇರಿಕೆಯ ವಿರುದ್ಧದ ತಮಿಳು ಜನರ ಪ್ರತಿಭಟನೆಯ ಪ್ರಮುಖ ನೆಲೆಯಾಗಿತ್ತು. ಚೆನೈ ಶ್ರೀಲಂಕಾ, 1984 ರಲ್ಲಿ ಜನಾಂಗೀಯ ಸಂಘರ್ಷಕ್ಕೆ ಕಾರಣ ಕೆಲವು ರಾಜಕೀಯ ಹಿಂಸಾಚಾರ ಸಾಕ್ಷಿಯಾಗಿರಲಿಲ್ಲ ರಲ್ಲಿ ವಿಮಾನ ನಿಲ್ದಾಣದಲ್ಲಿ ತಮಿಳು ಈಳಂ ಸೈನ್ಯವು ಇಟ್ಟ ಬಾಂಬ್ನಿಂದಾಗಿ 33 ಜನರ ಸಾವು, 1991 ರಲ್ಲಿ ಶ್ರೀಲಂಕಾದ ಪ್ರತ್ಯೇಕತಾವಾದಿ ಗುಂಪು EPRLF ದ 13 ಸದಸ್ಯರು ಮತ್ತು ಇಬ್ಬರು ಭಾರತೀಯ ನಾಗರಿಕರ, ಎದುರಾಳಿ ಎಲ್ಟಿಟಿಇ ಇಂದ ಹತ್ಯೆಗಳಂತಹ ರಾಜಕೀಯ ಹಿಂಸಾಚಾರವನ್ನು ಶ್ರೀ ಲಂಕಾದಲ್ಲಿ ಜನಾಗೀಯ ಸಮಸ್ಯೆಯಿಂದಾಗಿ ಚೆನ್ನೈ ನಗರವು ಕಂಡಿತು. . ಕಠೋರ ಕ್ರಮಗಳನ್ನು ಕೈಗೋಂಡಿದ್ದರಿಂದಾಗಿ, ನಗರವು ಆ ನಂತರ ಯಾವುದೇ ಪ್ರಮುಖ ಭಯೋತ್ಪಾದಕ ಕೃತ್ಯಗಳನ್ನು ಕಂಡಿಲ್ಲ. ಹೆಸರನ್ನು ಮದ್ರಾಸ್ ಪೋರ್ಚುಗೀಸ್ ಮೂಲದ ಎಂದು ಅರ್ಥ ಎಂದು ನಗರದ ಆಗಸ್ಟ್ 1996 ರಲ್ಲಿ ಚೆನೈ ಮರುನಾಮಕರಣ ಮಾಡಲಾಯಿತು. 2004 ರಲ್ಲಿ ಶ್ರೀಲಂಕಾದಲ್ಲಿ ಹಲವಾರು ಕೊಂದು ಶಾಶ್ವತವಾಗಿ ಕರಾವಳಿ ಪರಿವರ್ತಿಸುವ, ಚೆನೈ ತೀರದಲ್ಲಿ ವರ್ಣಿಸಿದರು. [ಬದಲಾಯಿಸಿ] ಭೂಗೋಳ ಚೆನೈ ಈ ಲ್ಯಾಂಡ್ಸ್ಯಾಟ್ 7 ನಕ್ಷೆಯಲ್ಲಿ ಕಾಣಬಹುದು, ಒಂದು ಫ್ಲಾಟ್ ಕರಾವಳಿ ಮೈದಾನದ ಮೇಲೆ ನೆಲೆಗೊಂಡಿದೆ. ಚೆನೈ ಮತ್ತು ಸುತ್ತಮುತ್ತಲಿನ ಪಟ್ಟಣಗಳು ಚೆನೈ ಭಾರತದ ಆಗ್ನೇಯ ಕರಾವಳಿ ಮತ್ತು ತಮಿಳುನಾಡು ಈಶಾನ್ಯ ಮೂಲೆಯಲ್ಲಿ 13,04 ° ಎನ್ 80,17 ° ಇ ನಲ್ಲಿ ಇದೆ.https://www.chennai.org.uk/travel-tips/location.html ಇದು ಪೂರ್ವ ಕರಾವಳಿ ಬಯಲು ಎಂಬ ಫ್ಲಾಟ್ ಕರಾವಳಿ ಮೈದಾನದ ಮೇಲೆ ಇದೆ. ನಗರದ 6 ಮೀಟರ್ (20 ಅಡಿ), 60 ಮೀ (200 ಅಡಿ) ಅದರ ಅತ್ಯುನ್ನತ ಬಿಂದುವಿನ ಸರಾಸರಿ ಎತ್ತರದಲ್ಲಿದೆ. ಚೆನೈ, ಕೇಂದ್ರ ಪ್ರದೇಶದಲ್ಲಿ Cooum (ಅಥವಾ Koovam) ಮತ್ತು ದಕ್ಷಿಣ ಪ್ರದೇಶದಲ್ಲಿ ಅದ್ಯಾರ್ ಮೂಲಕ ಎರಡು ನದಿಗಳು ಸುತ್ತಾಡು. ಎರಡೂ ನದಿಗಳು ದೇಶೀಯ ಮತ್ತು ವಾಣಿಜ್ಯ ಮೂಲಗಳಿಂದ ಎಫ್ಲುಯೆಂಟ್ಸ್ ಮತ್ತು ಕಸವು ಅತೀವವಾಗಿ ಕಲುಷಿತ ಇವೆ. Cooum ಕಡಿಮೆ ಕಲುಷಿತ ಇದು ಅದ್ಯಾರ್, ಡಿ-silted ಮತ್ತು ರಾಜ್ಯ ಸರ್ಕಾರದಿಂದ ನಿಯತಕಾಲಿಕವಾಗಿ ಸ್ವಚ್ಛಗೊಳಿಸಲಾಗುತ್ತದೆ. ಅದ್ಯಾರ್ ಒಂದು ಸಂರಕ್ಷಿತ ನದೀಮುಖ ಪಕ್ಷಿಗಳು ಮತ್ತು ಪ್ರಾಣಿಗಳ ಹಲವಾರು ಜಾತಿಗಳ ನೈಸರ್ಗಿಕ ವಾಸಸ್ಥಾನ ರೂಪಿಸುತ್ತದೆ. ಬಕಿಂಗ್ಹ್ಯಾಮ್ ಕಾಲುವೆ, ಒಳನಾಡಿನ 4 ಕಿಮೀ (3 ಮೈಲಿ), ಎರಡು ನದಿಗಳ ಲಿಂಕ್ ತೀರಕ್ಕೆ ಸಮಾನಾಂತರವಾಗಿ ಸಾಗುತ್ತದೆ. Otteri ತೊರೆ, ಒಂದು ಈಶಾನ್ಯ ಸ್ಟ್ರೀಮ್ ಉತ್ತರ ಚೆನೈ ಹಾದು ಮತ್ತು ಬೇಸಿನ್ ಬ್ರಿಡ್ಜ್ ಬಕಿಂಗ್ಹ್ಯಾಮ್ ಕಾಲುವೆ ಭೇಟಿಯಾಗುತ್ತದೆ. ಗಾತ್ರ ಬದಲಾಗುವ ಅನೇಕ ಸರೋವರಗಳು ನಗರದ ಪಶ್ಚಿಮ ಭಾಗದ ಅಂಚಿನ ಮೇಲೆ ಇವೆ. ರೆಡ್ ಹಿಲ್ಸ್, Sholavaram ಮತ್ತು ಕುಡಿಯುವ ನೀರು Chembarambakkam ಲೇಕ್ ಪೂರೈಕೆ ಚೆನೈ. ಅಂತರ್ಜಲ ಮೂಲಗಳು ಹೆಚ್ಚಾಗಿ ಚೌಳಾದ ಇವೆ. ನಗರದ ನೀರು ಸರಬರಾಜು ಅದರ ಜನಸಂಖ್ಯೆಯು ಅಸಮರ್ಪಕ ಸಾಬೀತಾಗಿದೆ, ಮತ್ತು ನೀರಿನ ಜಲಾಶಯಗಳು ಮತ್ತೆ ವಾರ್ಷಿಕ ಮಾನ್ಸೂನ್ ಮೇಲೆ ಹೆಚ್ಚು ಅವಲಂಬನೆ ಸಮಸ್ಯೆಗಳನ್ನು ಜಟಿಲಗೊಳಿಸಿತು. ಉದಾಹರಣೆಗೆ Veeranam ಇತರ ಮೂಲಗಳು, ತಮಿಳುನಾಡಿನ ನೀರಿನ ಭರಿತ ಸ್ಥಳದಿಂದ ಅಥವಾ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ನೀರನ್ನು ಕೆಲವು ಪ್ರಯತ್ನಗಳು ಪೈಪ್ ಗೆ ಇರಲಿಲ್ಲ. ವಾಟರ್ ಚೆನೈ ಒಂದು ಅಮೂಲ್ಯ ಸರಕು ಮತ್ತು ಈ ಹಲವಾರು ಪ್ರದೇಶಗಳು ಸರಬರಾಜು ಖಾಸಗಿ ನೀರಿನ ಟ್ಯಾಂಕರ್ ಹೆಚ್ಚಾಗಿದೆ. ಉದಾಹರಣೆಗೆ ಹಿಮ್ಮೊಗ ಆಸ್ಮೋಸಿಸ್ ಮತ್ತು ಮಳೆನೀರು ಕೊಯ್ಲು ಪರ್ಯಾಯ ಕ್ರಮಗಳನ್ನು ಅಪ್ ನಡೆಸಲಾಯಿತು. ಚೆನೈ Metrowater ಪ್ರಸ್ತುತ ದಿನಕ್ಕೆ 100 ದಶಲಕ್ಷ ಲೀಟರ್ (ಪ್ರತಿ ವ್ಯಕ್ತಿಗೆ ಪ್ರತಿ ದಿನ ಸುಮಾರು 15 ಲೀಟರ್) ಸಾಮರ್ಥ್ಯದ ಒಂದು ಹಿಮ್ಮೊಗ ಆಸ್ಮೋಸಿಸ್ ಸಸ್ಯ ನಿರ್ಮಿಸಲು ಬಿಡ್ ಅಂತಿಮಗೊಳಿಸಿತು. ಚೆನೈ ಭೂವಿಜ್ಞಾನ ಹೆಚ್ಚಾಗಿ ಮಣ್ಣಿನ, ಜೇಡಿ ಮತ್ತು ಮರಳುಗಲ್ಲಿನಿಂದ ಒಳಗೊಂಡಿದೆ. ನಗರದ ಭೂವಿಜ್ಞಾನ, ಮರಳು ಪ್ರದೇಶಗಳಲ್ಲಿ, clayey ಪ್ರದೇಶಗಳಲ್ಲಿ ಮತ್ತು ಹಾರ್ಡ್ ರಾಕ್ ಪ್ರದೇಶಗಳ ಆಧಾರದ ಮೇಲೆ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಸ್ಯಾಂಡಿ ಪ್ರದೇಶಗಳು ನದಿಯ ಮತ್ತು ತೀರಪ್ರದೇಶಗಳ ಉದ್ದಕ್ಕೂ ಕಂಡುಬರುತ್ತದೆ. Clayey ಪ್ರದೇಶಗಳಲ್ಲಿ ನಗರದ ಅತ್ಯಂತ ರಕ್ಷಣೆ. ಹಾರ್ಡ್ ರಾಕ್ ಪ್ರದೇಶಗಳಲ್ಲಿ ಗಿಂಡಿ, ವೇಲಾಚೇರಿ, ಆಡಮ್ ಬಕ್ಕಾಮ್ ಮತ್ತು ಸೈದಾಪೇಟ್ ಒಂದು ಭಾಗವಾಗಿದೆ. ಉದಾಹರಣೆಗೆ Tiruvanmiyur, ಅದ್ಯಾರ್, Kottivakkam, Santhome, ಜಾರ್ಜ್ ಟೌನ್ ಮತ್ತು ಕರಾವಳಿ ಚೆನೈ, ಮಳೆನೀರು ರನ್ ಆಫ್ ಉಳಿದ ಮರಳು ಪ್ರದೇಶಗಳಲ್ಲಿ ಬೇಗನೆ ಬಸಿದಂತೆ. Clayey ಮತ್ತು ಹಾರ್ಡ್ ರಾಕ್ ಪ್ರದೇಶಗಳಲ್ಲಿ, ಮಳೆನೀರು ನಿಧಾನವಾಗಿ ಬಸಿದಂತೆ, ಆದರೆ ಮುಂದೆ ಕಾಲ ಮಣ್ಣು ನಡೆಯುತ್ತದೆ. ನಗರದ clayey ಪ್ರದೇಶಗಳಲ್ಲಿ T.Nagar, ವೆಸ್ಟ್ Mambalam, ಅಣ್ಣಾ ನಗರ, Kolathur ಮತ್ತು Virugambakkam ಸೇರಿವೆ. ಇವನ್ನೂ ನೋಡಿ: ಫ್ಲೋರಾ ಮತ್ತು ಚೆನೈ ಪ್ರಾಣಿಗಳು [ಬದಲಾಯಿಸಿ] ಹವಾಗುಣ ಚೆನೈ ಉಷ್ಣ ಭೂಮಧ್ಯ ಮೇಲಿದೆ, ಮತ್ತು ಆದ್ದರಿಂದ ಋತುಮಾನದ ಉಷ್ಣಾಂಶದಲ್ಲಿ ವ್ಯತ್ಯಾಸ ಕಡಿಮೆಯಿರುತ್ತದೆ ನೋಡುತ್ತಾನೆ. ಸಮುದ್ರ ಸಾಮೀಪ್ಯ ಇದು ವರ್ಷದ ಅತ್ಯಂತ ಒಂದು ಬಿಸಿ ಮತ್ತು ಆರ್ದ್ರತೆಯ ಹವಾಮಾನವು ನೀಡುತ್ತದೆ. ಅತ್ಯಧಿಕ ತಾಪಮಾನ ಕೊನೆಯಲ್ಲಿ ಮೇ ಮತ್ತು ಜೂನ್ ಮೊದಲ ಅನುಭವ ಮತ್ತು ಸಾಮಾನ್ಯವಾಗಿ 38 ನಡುವೆ ವ್ಯತ್ಯಾಸ °C (100.4 °F) ಮತ್ತು 42 °C (107.6 °F) ಕೆಲವೊಮ್ಮೆ ಸುಮಾರು 45 ಮುಟ್ಟಿದರೆ ಆದರೂ °C ಕೆಲವು ದಿನಗಳ ಕಾಲ (113 °F). ಜನವರಿ ಸಮಯದಲ್ಲಿ ಚೆನೈ ಸರಾಸರಿ ದೈನಂದಿನ ತಾಪಮಾನ ಸುಮಾರು 24 °C (75 °F) ತಾಪಮಾನದಲ್ಲಿ ವಿರಳವಾಗಿ 18 ಕಳಗೆ ಆದರೂ °C (64 °F). ದಾಖಲಾದ ಅತಿ ಕಡಿಮೆ ತಾಪಮಾನ 15.8 °C (60.4 °F) ಮತ್ತು ಅತಿ ಹೆಚ್ಚು 44.1 °C (111.4 °F). ಸರಾಸರಿ ವಾರ್ಷಿಕ ಮಳೆ 1,300 mm (47.2 ಇಂಚುಗಳು) ಇರುತ್ತದೆ. ನಗರದ ಮಧ್ಯ ಅಕ್ಟೋಬರ್ ನಿಂದ ಮಿಡ್ ಡಿಸೆಂಬರ್, ಈಶಾನ್ಯ ಮಾನ್ಸೂನ್ ಮಾರುತಗಳು ತನ್ನ ಋತುವಾರು ಮಳೆ ಪಡೆಯುತ್ತದೆ. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಗಳು ಕೆಲವೊಮ್ಮೆ ಸಿಟಿ ಹಿಟ್. [ಬದಲಾಯಿಸಿ] ರೂಪುರೇಷೆ (ಲೇಔಟ್) ಚೆನೈ ನಗರದ ವಿಭಾಗಗಳು. 1. ಎಗ್ಮೋರ್-Nungambakam 2. ಫೋರ್ಟ್ Tondiarpet 3. Mambalam-ಗಿಂಡಿ 4. ಮೈಲಾಪೊರೆ-ಟ್ರಿಪ್ಲಿಕೇನ್ 5. Perambur-Purasawalkkam. ಇವನ್ನೂ ನೋಡಿ: ಚೆನೈ ವಾಸ್ತುಶಿಲ್ಪ ಆಡಳಿತಾತ್ಮಕ ಉದ್ದೇಶಗಳಿಗಾಗಿ ಚೆನೈ ಐದು ತಾಲ್ಲೂಕುಗಳು ವಿಂಗಡಿಸಲಾಗಿದೆ. 1. ಎಗ್ಮೋರ್-Nungambakam, 2. ಫೋರ್ಟ್ Tondiarpet 3. Mambalam-ಗಿಂಡಿ 4. ಮೈಲಾಪೊರೆ-ಟ್ರಿಪ್ಲಿಕೇನ್ 5. Perambur-Purasawalkkam. ಚೆನೈ ಮಹಾನಗರ ಪ್ರದೇಶದ ಮೂರು ಜಿಲ್ಲೆಗಳು ಚೆನೈ ನಗರದಲ್ಲಿ ಮತ್ತು ಕಾಂಚೀಪುರಂ ಮತ್ತು ಭೂಮಿ ಜಿಲ್ಲೆಗಳನ್ನು ಒಳಗೊಂಡಿದೆ. ನಗರ ಪ್ರದೇಶದಲ್ಲಿ 174 km ² (67 ಮೈಲು ²) ಪ್ರದೇಶವನ್ನು ಒಳಗೊಂಡಿದೆ. ಮೆಟ್ರೋಪಾಲಿಟನ್ ಪ್ರದೇಶದ 1.177 km ² (455 mi ²) ವಿಸ್ತಾರವಾಗಿದೆ. ಉತ್ತರ, ಮಧ್ಯ, ದಕ್ಷಿಣ ಮತ್ತು ಪಶ್ಚಿಮ: ನಗರದ ನಾಲ್ಕು ಪ್ರಮುಖ ಭಾಗಗಳಾಗಿ ಸಂಯೋಜನೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ಉತ್ತರ ಚೆನೈ ಮುಖ್ಯವಾಗಿ ಕೈಗಾರಿಕಾ ಪ್ರದೇಶವಾಗಿದೆ. ಕೇಂದ್ರ ಚೆನೈ ನಗರದ ವಾಣಿಜ್ಯ ಹೃದಯ ಮತ್ತು ಡೌನ್ಟೌನ್ ಪ್ರದೇಶ. ದಕ್ಷಿಣ ಚೆನೈ ಮತ್ತು ವೆಸ್ಟ್ ಚೆನೈ, ಹಿಂದೆ ಪ್ರಧಾನವಾಗಿ ವಸತಿ ಪ್ರದೇಶಗಳಲ್ಲಿ ತ್ವರಿತ ಐಟಿ ಮತ್ತು ಹಣಕಾಸು ಸಂಸ್ಥೆಗಳು ಒಂದು ದೊಡ್ಡ ಸಂಖ್ಯೆಯ ಹೋಸ್ಟಿಂಗ್, ವಾಣಿಜ್ಯ ಪ್ರದೇಶಗಳಲ್ಲಿ ಮಾಡುತ್ತಿರುವಿರಿ. ಸಮೀಪದ ಉಪಗ್ರಹ ಪಟ್ಟಣಗಳು ​​ದಕ್ಷಿಣಕ್ಕೆ ಮಹಾಬಲಿಪುರಂನ, ನೈಋತ್ಯ, ಕಾಂಚೀಪುರಂ ಪಟ್ಟಣ ಶ್ರೀಪೆರಂಬದೂರಿನ, ತಿರುವಳ್ಳೂರು ಮತ್ತು ಪಶ್ಚಿಮಕ್ಕೆ ಅರಕ್ಕೋಣಮ್ ಗೆ Chengalpattu ಸೇರಿವೆ. Guduvancheri ಚೆನೈ ಒಂದು ಉಪನಗರವಾಗಿದೆ. [ಬದಲಾಯಿಸಿ] ಆಡಳಿತ ಚೆನೈ ಕಾರ್ಪೊರೇಷನ್ ಕೊಠಡಿಗಳನ್ನಾಗಿ ರಿಪನ್ ಬಿಲ್ಡಿಂಗ್, 1913 ಪೂರ್ಣಗೊಂಡಿತು. ಇದು ಮಾಜಿ ವೈಸ್ರಾಯ್ ಲಾರ್ಡ್ ರಿಪ್ಪನ್ ಹೆಸರಿಡಲಾಗಿದೆ. ಚೆನೈ ನಗರವು ಮೇಯರ್ ಮತ್ತು ಮೇಯರ್ ಮತ್ತು ಡೆಪ್ಯುಟಿ ಮೇಯರ್ ಇತರ ಸಮಿತಿ ಆಯ್ಕೆಯಾದ ಒಂದು ಇವರಲ್ಲಿ 155 ವಾರ್ಡ್ಸನ (ಎಲ್ಲಾ ನೇರವಾಗಿ ನಗರದ ನಿವಾಸಿಗಳು ಚುನಾಯಿತ), ಪ್ರತಿನಿಧಿಸುವ 155 ಸಮಿತಿ ಹೊಂದಿರುತ್ತದೆ ಚೆನೈ, ಸಂಸ್ಥೆಯು ನಿರ್ವಹಿಸುತ್ತದೆ. ಮೇಯರ್ ಮತ್ತು ಡೆಪ್ಯುಟಿ ಮೇಯರ್ 10 ಸ್ಥಾಯಿ ಸಮಿತಿಗಳ ಅಧ್ಯಕ್ಷತೆ. ಕಾರ್ಪೊರೇಷನ್ ರಾಜಧಾನಿಯ ನಾಗರಿಕ ಕಾರ್ಯಗಳು ನೋಡಿಕೊಳ್ಳುತ್ತಾರೆ. ಚೆನೈ ಮಹಾನಗರ ಪ್ರದೇಶದ ಕಾಂಚೀಪುರಂ ಮತ್ತು ಭೂಮಿ ಜಿಲ್ಲೆಗಳು ಭಾಗವಾಗಿದೆ ಅನೇಕ ಉಪನಗರಗಳು ಆವರಿಸುತ್ತದೆ. ಸಣ್ಣದಾಗಿ ಪಂಚಾಯತ್ ಎಂಬ ಪಟ್ಟಣದ ಮಂಡಳಿಗಳನ್ನು ಆಡಳಿತ ಸಂದರ್ಭದಲ್ಲಿ ದೊಡ್ಡ ಉಪನಗರಗಳಿಗೆ ಪಟ್ಟಣದ ಪುರಸಭೆಗಳನ್ನು goverened ಮಾಡಲಾಗುತ್ತದೆ. ಚೆನೈ ತಮಿಳುನಾಡು ರಾಜಧಾನಿ ಎಂದು ತಮಿಳುನಾಡು ಸರ್ಕಾರದ ಕಾರ್ಯಾಂಗ ಮತ್ತು ಶಾಸಕಾಂಗ ಪ್ರಧಾನ ನೆಲೆಯಾಗಿದೆ. ಮುಖ್ಯವಾಗಿ ಸಚಿವಾಲಯದ ಕಟ್ಟಡಗಳು, ಫೋರ್ಟ್ ಸೇಂಟ್ ಜಾರ್ಜ್ ಕ್ಯಾಂಪಸ್ ಭಾಗವಾಗಿ ಹಾಗೂ ನಗರದ ಸುತ್ತ ಅಲ್ಲಲ್ಲಿ ಅನೇಕ ಕಟ್ಟಡಗಳಲ್ಲಿ ಇರಿಸಲಾಗಿದೆ. ಇದರ ವ್ಯಾಪ್ತಿಗೆ ತಮಿಳುನಾಡು ಮತ್ತು ಪಾಂಡಿಚೇರಿ ಉದ್ದಗಲಕ್ಕೂ ಹರಡಿದೆ ಮದ್ರಾಸ್ ಹೈಕೋರ್ಟ್, ರಾಜ್ಯದ ಅತ್ಯುನ್ನತ ನ್ಯಾಯಾಂಗ ಅಧಿಕಾರವನ್ನು ಹೊಂದಿದೆ ಮತ್ತು ನಗರದಲ್ಲಿ ಇದೆ. ಚೆನೈ ಉತ್ತರ, ಮಧ್ಯ ಮತ್ತು ಚೆನೈ ಚೆನೈ ದಕ್ಷಿಣ - ಚೆನೈ ಮೂರು ಸಂಸದೀಯ ಕ್ಷೇತ್ರಗಳನ್ನು ಹೊಂದಿದೆ. ಪ್ರಸ್ತುತ ಸಂಸದರು ಕ್ರಮವಾಗಿ ಸಿ Kuppusami, ದಯಾನಿಧಿ ಮಾರನ್ ಮತ್ತು ಟಿಆರ್ Baalu ​​ಇವೆ. ಚೆನೈ ರಾಜ್ಯದ ಶಾಸನ 18 ಶಾಸಕರು ಆಯ್ಕೆ. ಗ್ರೇಟರ್ ಚೆನೈ ಪೊಲೀಸ್ ಇಲಾಖೆ, ತಮಿಳುನಾಡು ಪೊಲೀಸ್ ವಿಭಾಗದ ನಗರದಲ್ಲಿ ಕಾನೂನು ಜಾರಿ ಸಂಸ್ಥೆ ಹೊಂದಿದೆ. ನಗರ ಪೊಲೀಸ್ ಪಡೆಯ ಪೊಲೀಸ್ ಮತ್ತು ತಮಿಳುನಾಡು ಮುಖಪುಟ ಮಂತ್ರಿಮಂಡಲದ ಆಡಳಿತಾತ್ಮಕ ನಿಯಂತ್ರಣ ನಡುವಂಗಿಗಳನ್ನು ಧರಿಸುತ್ತಿದ್ದರು ಒಂದು ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ. ಗ್ರೇಟರ್ ಚೆನೈ ಪೊಲೀಸ್ ಮೂವತ್ತಾರು ಉಪವಿಭಾಗಗಳಲ್ಲಿ, ಮತ್ತು 121 ಪೊಲೀಸ್ ನಿಲ್ದಾಣಗಳಿವೆ. ಈ ಪೊಲೀಸ್ ಕೇಂದ್ರಗಳ ಹದಿನೈದು ಈಗ ಐಎಸ್ಒ 9001:2000 ಪ್ರಮಾಣಿತ ಇವೆ. ನಗರದ ಸಂಚಾರ ಚೆನೈ ಸಿಟಿ ಸಂಚಾರ ಪೊಲೀಸ್ (CCTP) ನಿರ್ವಹಿಸುತ್ತದೆ. ಮೆಟ್ರೋಪಾಲಿಟನ್ ಉಪನಗರಗಳಲ್ಲಿ ಕಾಂಚೀಪುರಂ ಮತ್ತು ಭೂಮಿ ಪೊಲೀಸ್ ಇಲಾಖೆಗಳು ಆಟಗಳ ನಿಯಮಗಳು. [ಬದಲಾಯಿಸಿ] ಅರ್ಥವ್ಯವಸ್ಥೆ (ಆರ್ಥಿಕತೆ) Tidel ಪಾರ್ಕ್, ಚೆನೈ ಅತಿದೊಡ್ಡ ಸಾಫ್ಟ್ವೇರ್ ಪಾರ್ಕ್ ಚೆನೈ ವಿವಿಧ ಆರ್ಥಿಕ ಮೂಲವನ್ನು ಹೊಂದಿದೆ. ಮುಖ್ಯ ಕೈಗಾರಿಕೆಗಳು ವಾಹನ, ತಂತ್ರಾಂಶ ಸೇವೆಗಳು, ಹಾರ್ಡ್ವೇರ್ ಉತ್ಪಾದನಾ ಮತ್ತು ಹಣಕಾಸು ಸೇವೆಗಳು. ಇತರ ಪ್ರಮುಖ ಉದ್ಯಮಗಳು ಪೆಟ್ರೋಕೆಮಿಕಲ್ಸ್, ಜವಳಿ ಮತ್ತು apparels ಸೇರಿವೆ. ಚೆನೈ ಪೋರ್ಟ್ ಮತ್ತು ಎನ್ನೋರ್ ಪೋರ್ಟ್ ಇದರ ಪ್ರಾಮುಖ್ಯತೆಯ ಸೂಕ್ತ ಕೊಡುಗೆ. ನಗರದ ಮದ್ರಾಸ್ ಸ್ಟಾಕ್ ಎಕ್ಸ್ಚೇಂಜ್ ಎಂಬ ಸಂಪೂರ್ಣ ಗಣಕೀಕೃತ ಸ್ಟಾಕ್ ವಿನಿಮಯ ಹೊಂದಿದೆ. 1990, ಸಾಫ್ಟ್ವೇರ್ ಅಭಿವೃದ್ಧಿ ಮತ್ತು ವ್ಯಾಪಾರ ಪ್ರಕ್ರಿಯೆಯ ಹೊರಗುತ್ತಿಗೆ ಮತ್ತು ಇತ್ತೀಚೆಗೆ MANUFACTURING ನಗರದ ಆರ್ಥಿಕತೆಯಲ್ಲಿ ಪ್ರಮುಖ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ ರಿಂದ. ಚೆನೈ ಪ್ರಕಾರ ಸಾಗರೋತ್ತರ ಸೇವೆಗಳನ್ನು ಅತ್ಯಂತ ಆಕರ್ಷಕ ಭಾರತೀಯ ನಗರ ರೇಟ್ ಮಾಡಲಾಗಿದೆ ಕೀಯರ್ನಿ ಭಾರತೀಯ ಸಿಟಿ ಸೇವೆಗಳು ಆಕರ್ಷಣೆ ಸೂಚಿಕೆ 2005. [1] ಐಟಿ ಕಾರಿಡಾರ್, ನಗರವು ಅನೇಕ ತಂತ್ರಜ್ಞಾನ ಉದ್ಯಾನಗಳು ಆಗ್ನೇಯ ಓಲ್ಡ್ ಮಹಾಬಲಿಪುರಂನ ರಸ್ತೆಯಲ್ಲಿ. ಮಹೀಂದ್ರಾ ವರ್ಲ್ಡ್ ಸಿಟಿ, ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಪಾರ್ಕ್ಗಳನ್ನು ಒಬ್ಬ ವಿಶೇಷ ಆರ್ಥಿಕ ವಲಯ (SEZ), ಚೆನೈ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿದೆ. ನೋಕಿಯಾ, ಮೊಟೊರೊಲಾ, ಸೀಮೆನ್ಸ್, ಫ್ಲೆಕ್ಸ್ಟ್ರಾನಿಕ್ಸ್, ಹಾಗೂ ಫಾಕ್ಸ್ಕಾನ್ಗಳು ನಂತಹ ಬಹುರಾಷ್ಟ್ರೀಯ ಅಥವಾ ಶ್ರೀಪೆರುಂಬುದೂರ್ ಉಪಗ್ರಹ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ SEZ ಗಳಲ್ಲಿ ಸ್ಥಾಪಿಸಲು ಪ್ರಕ್ರಿಯೆಯಲ್ಲಿವೆ. ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ 'ಆರ್ & ಡಿ ಸೌಲಭ್ಯ ಪೈಪ್ಲೈನ್ ನಡೆಸುತ್ತಿರುವಾಗ ಎರಿಕ್ಸನ್ ಮತ್ತು ಲ್ಯೂಸೆಂಟ್-ಅಲ್ಕಾಟೆಲ್ ನಗರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸೌಲಭ್ಯಗಳನ್ನು ಹೊಂದಿರುತ್ತವೆ. ನಗರದ ಎರಡು ಪ್ರಮುಖ ಜೈವಿಕ ಉದ್ಯಾನಗಳು, ಸಿರುಸೆರಿ ನಲ್ಲಿ TICEL ಜೈವಿಕ ತಂತ್ರಜ್ಞಾನ ಪಾರ್ಕ್ ಮತ್ತು ಗೋಲ್ಡನ್ ಜುಬಿಲಿ ಜೈವಿಕ ತಂತ್ರಜ್ಞಾನ ಪಾರ್ಕ್ ಮನೆಗೆ ಜೈವಿಕ ತಂತ್ರಜ್ಞಾನ ಕಂಪನಿಗಳು ಮತ್ತು ಪ್ರಯೋಗಾಲಯಗಳು ಹೊಂದಿದೆ. ಚೆನೈ ಭಾರತದ ಆಟೋ ಘಟಕಗಳನ್ನು ಉದ್ಯಮದ 45 ರಷ್ಟು ಹಾಗೂ ವಾಹನ ಉದ್ಯಮದ 27 ರಷ್ಟು ಮೂಲ ಹೊಂದಿದೆ. ಭಾರತದಲ್ಲಿ ವಾಹನ ಕಂಪನಿಗಳ ಒಂದು ದೊಡ್ಡ ಸಂಖ್ಯೆಯ ಚೆನೈ ನೆಲೆಗೊಂಡಿದೆ. BMW, ಮಹೀಂದ್ರಾ & ಮಹೀಂದ್ರಾ, ಮತ್ತು ಅಪೊಲೊ ಟೈರುಗಳು ಅಡಿಯಲ್ಲಿ ಸಸ್ಯಗಳು ಹೊಂದಿರುತ್ತವೆ ಹಾಗೆಯೇ ಹ್ಯುಂಡೈ, ಫೋರ್ಡ್, ಮಿತ್ಸುಬಿಷಿ, ಟಿವಿಎಸ್, ಅಶೋಕ್ ಲೇಲ್ಯಾಂಡ್, ಕ್ಯಾಟರ್ಪಿಲ್ಲರ್, ರಾಯಲ್ ಎನ್ಫೀಲ್ಡ್, TI ಚಕ್ರಗಳಿಗೆ TAFE, ಡನ್ಲಪ್, ಕಂಪನಿಯು ಹಲವು ಜಾಗತಿಕ ವಾಹನ ಕಂಪನಿಗಳು ಚೆನೈ ಮತ್ತು ಸುಮಾರು ಸಸ್ಯಗಳು ಉತ್ಪಾದಕ ಎಂದು ಚೆನೈ ಮತ್ತು ಸುತ್ತ ನಿರ್ಮಾಣ. ನಗರದ ಸ್ವಯಂ ಸಹಾಯಕ ಉದ್ಯಮದ ಒಂದು ಪ್ರಮುಖ ಕೇಂದ್ರವಾಗಿದೆ. ಚಿತ್ರ: Chennaihyundai.jpg ಚೆನೈ ನಗರದಲ್ಲಿ ಹ್ಯುಂಡೈ ಕಾರು ಕಾರ್ಖಾನೆಯಿಂದ ಸಾಲಿನಲ್ಲಿ ಕಾರುಗಳು ಅರ್ಜುನ್: ಹೆವಿ ವಾಹನ ಫ್ಯಾಕ್ಟರಿ, Avadi ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಸೇರಿದಂತೆ ಮಿಲಿಟರಿ ವಾಹನಗಳು, ಉತ್ಪಾದಿಸುತ್ತದೆ. ಭಾರತೀಯ ರೈಲ್ವೆಯ ರೈಲ್ವೆ ಕೋಚ್ ನಿರ್ಮಾಣ ಫ್ಯಾಕ್ಟರಿ, ಇಂಟೆಗ್ರಲ್ ಕೋಚ್ ಫ್ಯಾಕ್ಟರಿ [1] ರೈಲ್ವೆ ತರಬೇತುದಾರರು ಮತ್ತು ಇಂಜಿನ್ಗಳನ್ನು ತಯಾರಿಸುತ್ತದೆ. ಚೆನೈ ಬ್ಯಾಂಕಿಂಗ್ ಮತ್ತು ಹಣಕಾಸು ಪ್ರಮುಖ ಕೇಂದ್ರವಾಗಿದೆ. ಪ್ರಸ್ತುತ ಮೂರು ದೊಡ್ಡ ರಾಷ್ಟ್ರೀಯ ಬ್ಯಾಂಕುಗಳು ವಾಣಿಜ್ಯ ಬ್ಯಾಂಕುಗಳ ಮತ್ತು ಅನೇಕ ರಾಜ್ಯ ಮಟ್ಟದ ಸಹಕಾರ ಬ್ಯಾಂಕ್ಗಳು ​​ನೆಲೆಯಾಗಿದೆ. ಅನೇಕ ಹಣಕಾಸು ಸಂಸ್ಥೆಗಳು ಮತ್ತು ವಿಮಾ ಕಂಪನಿಗಳು ಚೆನೈ ಕೇಂದ್ರಕಾರ್ಯಾಲಯ ಹೊಂದಿವೆ. ಅನೇಕ ಭಾರತೀಯ ಬ್ಯಾಂಕ್, ಬಹುರಾಷ್ಟ್ರೀಯ ಬ್ಯಾಂಕುಗಳು ಹಾಗೂ ವಿಶ್ವ ಬ್ಯಾಂಕ್ ನಗರದಲ್ಲಿ ತಮ್ಮ ಬ್ಯಾಕ್ ಆಫೀಸ್ ಕಾರ್ಯಾಚರಣೆಗಳು ನೆಲೆಗೊಂಡಿದೆ. ನಗರದ ಭಾರತದಲ್ಲಿ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳನ್ನು ಕಾರ್ಯಾಚರಣೆಗಳಿಗೆ ಕೇಂದ್ರವನ್ನು ಪ್ರಮುಖ ಮರಳಿ ಕಾರ್ಯನಿರ್ವಹಿಸುತ್ತದೆ. ಇತರ ಪ್ರಮುಖ ತಯಾರಿಕಾ ಸೌಲಭ್ಯಗಳನ್ನು ಸಣ್ಣ ಪ್ರಮಾಣದ ಉತ್ಪಾದನಾ ದೊಡ್ಡ ಪ್ರಮಾಣದ ಭಾರೀ ಕೈಗಾರಿಕಾ ಉತ್ಪಾದನಾ, pertochemicals ಮತ್ತು ಸ್ವಯಂ ಸಹಾಯಕ ಸಸ್ಯಗಳು ಹಿಡಿದು. ಚೆನೈ ನಗರದ ಉತ್ತರದ ಉಪನಗರಗಳಲ್ಲಿ Ambattur-ಪಾಡಿ ಕೈಗಾರಿಕಾ ವಲಯದಲ್ಲಿ ಇದೆ ಉಡುಪು ಕೈಗಾರಿಕೆಗಳ ಒಂದು ದೊಡ್ಡ ಸಂಖ್ಯೆಯ ಒಂದು ಜವಳಿ ಉದ್ಯಮ ಕೇಂದ್ರವಾಗಿದೆ. ನಗರವು ಒಂದು ದೊಡ್ಡ ಚರ್ಮದ ಉಡುಪು ಮತ್ತು ಪರಿಕರಗಳ ಉದ್ಯಮ ಹೊಂದಿದೆ. SEZ ನ ಉಡುಪು ತಯಾರಿಕೆ ಮತ್ತು ಪಾದರಕ್ಷೆಗಳ ನಗರವು ದಕ್ಷಿಣ ಉಪನಗರಗಳಲ್ಲಿ ನಿರ್ಮಾಣ ಹಂತದಲ್ಲಿದೆ. ನಗರದ ತಮಿಳು ಎಂಟರ್ಟೈನ್ಮೆಂಟ್ (ಚಲನಚಿತ್ರಗಳು, ದೂರದರ್ಶನ ಮತ್ತು ಮುದ್ರಿತ ಸಂಗೀತ), ಭಾರತೀಯ ಮನರಂಜನಾ ಉದ್ಯಮಗಳಲ್ಲಿ ಎರಡನೇ ಅತಿದೊಡ್ಡ ಇದು ಉದ್ಯಮ ನೆಲೆಯಾಗಿದೆ. [ಬದಲಾಯಿಸಿ] ಜನಸಂಖ್ಯೆ (ಜನಸಂಖ್ಯಾಶಾಸ್ತ್ರ) ಚೆನೈ ನಿವಾಸಿಗಳು Chennaiites ಕರೆಯಲಾಗುತ್ತದೆ. ಒಟ್ಟು ಮೆಟ್ರೊಪಾಲಿಟನ್ ಜನಸಂಖ್ಯೆಯು 6.7 ಮಿಲಿಯನ್ ಆದರೆ 2000 ರ, ಚೆನೈ ಸಿಟಿ, 4.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು. 2006 ರಲ್ಲಿ ಅಂದಾಜು ಮೆಟ್ರೊಪಾಲಿಟನ್ ಜನಸಂಖ್ಯೆಯು 7.60 ರಂತೆ ಮಿಲಿಯನ್ ಆಗಿದೆ. ಚಿತ್ರ: Chennai.ranganathanst.jpg T.Nagar ರಲ್ಲಿ ರಂಗನಾಥನ್ ಸ್ಟ್ರೀಟ್ ಸಾಮಾನ್ಯವಾಗಿ ಪಾದಚಾರಿ ವ್ಯಾಪಾರಿಗಳು ತುಂಬಿಹೋಗಿದ್ದು. ನಗರದಲ್ಲಿ ಜನಸಂಖ್ಯೆ ಸಾಂದ್ರತೆ ಪ್ರತಿ km ² ನಷ್ಟು ವಿಸ್ತೀರ್ಣ 24.418 ಒಟ್ಟಾರೆ ಜನಸಂಖ್ಯೆಯ ಸಾಂದ್ರತೆ ಪ್ರತಿ km 5.847 ಹಾಗೆಯೇ ². ಲಿಂಗ ಅನುಪಾತ 934 ರಾಷ್ಟ್ರೀಯ ಸರಾಸರಿ ಕೊಂಚ ಹೆಚ್ಚಿನ ಪ್ರತಿ 1000 ಪುರುಷರಿಗೆ ಸಂಬಂಧಿಸಿದಂತೆ 948 ಮಹಿಳೆಯರಂತೆ. ಸರಾಸರಿ ಸಾಕ್ಷರತೆಯ ಪ್ರಮಾಣವು 59.5%, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ 80,14% ಆಗಿದೆ. ನಗರದ ಜನಸಂಖ್ಯೆಯಲ್ಲಿ 18% ರಷ್ಟು ಕೊಳಚೆ ಪರಿಸ್ಥಿತಿಗಳು ವಾಸಿಸುವ ಎಂದು ವರ್ಗೀಕರಿಸಲಾಗಿದೆ. ಚೆನೈ ಎದುರಿಸುತ್ತಿದೆ ಮುಖ್ಯ ಸಮಸ್ಯೆ ಜನಸಂಖ್ಯಾ ಮತ್ತು ಪರಿಣಾಮವಾಗಿ ನೀರಿನ ಕೊರತೆ ಇದೆ. ವಸತಿ ಗಗನಚುಂಬಿ ಸಾಮಾನ್ಯವಾಗಿ ಸಮಯ ಮತ್ತು ಖಾಸಗಿ ವಾಹನಗಳು ಮಾಲೀಕತ್ವವನ್ನು ವಾಹನದಟ್ಟಣೆ ರಲ್ಲಿ ನಂತರದ ಹೆಚ್ಚಳ, ನಗರದ ಅವ್ಯವಸ್ಥಿತ ಬೆಳವಣಿಗೆ ಕಾರಣವಾಗುತ್ತದೆ ಒಲವು ಇಲ್ಲ. ಹೆಚ್ಚಿನ ಜಮೀನು ಬೆಲೆಗಳು ಮತ್ತು ಸ್ಥಳಾವಕಾಶದ ಕೊರತೆ ಕಳಪೆ ನಿರ್ಮಲೀಕರಣ ಮತ್ತು ಶುದ್ಧ ನೀರಿನ ಪ್ರವೇಶವನ್ನು ಕೊರತೆ ಹೊಂದಿವೆ ಇದು ಕೊಳೆಗೇರಿಗಳ, ವಾಸಿಸುತ್ತಿದ್ದವು ಆಗಿ ಸಮಾಜದ ಕೆಳ ಸ್ತರದ ಹಲವು ಸದಸ್ಯರು ಮೇಲೇರಲು ಕಾರಣವಾಗಿದೆ. ಚೆನೈ ನಗರದಲ್ಲಿ ನಿವಾಸಿಗಳು ಬಹುತೇಕ ಸ್ಥಳೀಯ ತಮಿಳರ ಮತ್ತು ತಮಿಳು ಮಾತನಾಡುತ್ತಾರೆ. ಇಂಗ್ಲೀಷ್ ವ್ಯಾಪಕವಾಗಿ ಮಾತನಾಡುತ್ತಾರೆ, ಮತ್ತು ವ್ಯಾಪಾರ, ಶಿಕ್ಷಣ ಮತ್ತು ಇತರ ಬಿಳಿ ಕಾಲರ್ ವೃತ್ತಿಗಳನ್ನು ಮಾತ್ರ ಪ್ರತ್ಯೇಕವಾಗಿ ಬಳಸಲಾಗುತ್ತದೆ. ಚೆನೈ ಮಾತನಾಡುವ ತಮಿಳು ಇದನ್ನು ಮದ್ರಾಸ್ bhashai ("ಮದ್ರಾಸ್ ಭಾಷೆ" ತಮಿಳು) ಎಂದು ಕರೆಯಲ್ಪಡುವ ಎಷ್ಟರಮಟ್ಟಿಗೆಂದರೆ, ಧಾರಾಳವಾಗಿ ಇಂಗ್ಲೀಷ್ ಪದಗಳನ್ನು ಬಳಸುತ್ತದೆ. ಗಮನಾರ್ಹ ತೆಲುಗು, ಮಲೆಯಾಳಿ, ಕನ್ನಡ ಮತ್ತು ಉರ್ದು ಭಾಷಿಕ ಸಮುದಾಯಗಳು ಇವೆ. ಬ್ರಿಟಿಷ್ ಕಾಲದಿಂದಲೂ ಒಂದು ಪ್ರಾದೇಶಿಕ ಕೇಂದ್ರವಾಗಿದೆ, ಇತರ ಪ್ರಮುಖ ಸಮುದಾಯಗಳು ಮಾರ್ವಾಡಿ, ಆಂಗ್ಲೋ ಇಂಡಿಯನ್, ಬಂಗಾಳಿ, ಪಂಜಾಬಿ, ಉತ್ತರ ಪ್ರದೇಶ ಮತ್ತು ಬಿಹಾರ ರಿಂದ ಗುಜರಾತಿ ಸಮುದಾಯಗಳು ಮತ್ತು ಜನರು ಸೇರಿವೆ. ಚೆನೈ ಸಹ ಕೈಗಾರಿಕೆಗಳಲ್ಲಿ ಕೆಲಸ ಮತ್ತು ಐಟಿ ಕೇಂದ್ರಗಳನ್ನು ಒಬ್ಬ ಬೆಳೆಯುವ ವಿದೇಶವಾಸಿ ಜನರನ್ನೂ ಹೊಂದಿದೆ. [ಬದಲಾಯಿಸಿ] ಸಂಸ್ಕೃತಿ ಮುಖ್ಯ ಲೇಖನ: ಚೆನೈ ಸಂಸ್ಕೃತಿ ಚೆನೈ ಸಂಸ್ಕೃತಿ ತನ್ನ ವೈವಿಧ್ಯಮಯ ಜನಸಂಖ್ಯೆಯನ್ನು ಪ್ರತಿಬಿಂಬಿಸುತ್ತದೆ. ನಗರವು ತನ್ನ ಶಾಸ್ತ್ರೀಯ ನೃತ್ಯ ಪ್ರದರ್ಶನಗಳು ಮತ್ತು ಹಿಂದೂ ದೇವಾಲಯಗಳಿಗೆ ಪ್ರಖ್ಯಾತವಾಗಿದೆ. ಡಿಸೆಂಬರ್ ಪ್ರತಿ, ಚೆನೈ ವಿಶ್ವದ ಅತಿದೊಡ್ಡ ಸಾಂಸ್ಕೃತಿಕ ಘಟನೆಗಳ ಒಂದು ಎಂದು ವಿವರಿಸಲಾಗಿದೆ ಐದು ವಾರದ ಸಂಗೀತ ಸೀಸನ್, ಹೊಂದಿದೆ. ಸಂಗೀತ ಸೀಸನ್ ನಗರದಲ್ಲಿ ಮತ್ತು ಸುತ್ತಮುತ್ತಲಿನ ಕಲಾವಿದರು ನೂರಾರು ಸಾಂಪ್ರದಾಯಿಕ ಕರ್ನಾಟಕ ಸಂಗೀತದ ಪ್ರದರ್ಶನಗಳನ್ನು (kutcheries) ಒಳಗೊಳ್ಳುತ್ತದೆ. ಚೆನೈ ಸಹ ತಮಿಳುನಾಡಿನ ಅಧಿಕೃತ ನೃತ್ಯ ಇದು ಶಾಸ್ತ್ರೀಯ ಭಾರತೀಯ ನೃತ್ಯ, ಭರತನಾಟ್ಯ, ಹೆಸರುವಾಸಿಯಾಗಿದೆ. ಭರತನಾಟ್ಯ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ ನಗರದ ದಕ್ಷಿಣದಲ್ಲಿ ಸಮುದ್ರತೀರದಲ್ಲಿ ಇದೆ ಕಲಾಕ್ಷೇತ್ರ ("ಕಲೆಗಳ ಸ್ಥಳ" ಸಂಸ್ಕೃತ), ಆಗಿದೆ. ಚಿತ್ರ: Bharatanatyam1.jpg ಸಾಂಪ್ರದಾಯಿಕ ಭರತನಾಟ್ಯ ಪ್ರದರ್ಶನ ಚೆನೈ ತಮಿಳು ದೊಡ್ಡ ಸಂಖ್ಯೆಯ ನಿರ್ವಹಿಸುತ್ತದೆ ಪಾತ್ರದಲ್ಲಿ, ಒಂದು ರೋಮಾಂಚಕ ನಾಟಕ ದೃಶ್ಯ ಹೊಂದಿದೆ. ಸಾಮಾನ್ಯವಾಗಿ, ತಮಿಳು ನಾಟಕ ಕೋಡಂಗಿ ಹಾಸ್ಯ ಮತ್ತು ಗಂಭೀರ ನಾಟಕಗಳನ್ನು ಮತ್ತು ಐತಿಹಾಸಿಕ ನಾಟಕಗಳು ಸೇರಿದಂತೆ ಅಲ್ಲದ ಸಭ ಆಧಾರಿತ ನಾಟಕ ಬೆಂಬಲ ರಾಜಕೀಯ ಸಮಸ್ಯೆಗಳು ಅಥವಾ ಶೈಲಿಗಳನ್ನು ಅಣಕು ಅವು ಸಭ ಆಧಾರಿತ ನಾಟಕ ವಿಂಗಡಿಸಲಾಗಿದೆ. ಇಂಗ್ಲೀಷ್ ರಂಗಭೂಮಿ ಕೂಡ ಜನಪ್ರಿಯವಾಗಿದೆ. ಶಾಲೆ ಮತ್ತು ಕಾಲೇಜು ಸಾಂಸ್ಕೃತಿಕ ಉತ್ಸವಗಳು (ಸ್ಥಳೀಯವಾಗಿ ಕರೆಯಲ್ಪಡುವ culfests) ಕಲೆ ಮತ್ತು ಸಂಸ್ಕೃತಿಯಲ್ಲಿ ಆಸೆಗಳನ್ನು ನಗರದ ಯುವಕರ ವೇದಿಕೆಗಳು ಒದಗಿಸುವ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಹ ಪ್ರಸ್ತುತ ಪಶ್ಚಿಮ ಮತ್ತು ಇತರ ಶೈಲಿಗಳಲ್ಲಿ ತಂಡಗಳಲ್ಲಿ ಸ್ಥಾಪಿತ ಮತ್ತು ಬೆಳೆಯುತ್ತಿರುವ ಸಂಸ್ಕೃತಿ. ಚೆನೈ ಅತ್ಯಂತ ಸ್ಟುಡಿಯೋಗಳು ಇವೆ ಅಲ್ಲಿ ಕೋಡಂಬಾಕ್ಕಂ ಪ್ರದೇಶದಲ್ಲಿ ನಂತರ ಕಾಲಿವುಡ್ ಡಬ್ ದೊಡ್ಡ ತಮಿಳು ಚಲನಚಿತ್ರ ಉದ್ಯಮ, ಮೂಲ ಹೊಂದಿದೆ. ಉದ್ಯಮ ಸುಮಾರು 300 ತಮಿಳು ಸಿನೆಮಾ ಒಂದು ವರ್ಷದ ಮಾಡುತ್ತದೆ, ಮತ್ತು ಅದರ ಚಿತ್ರ ನಗರದಲ್ಲಿ ಸಂಗೀತ ಕ್ಷೇತ್ರದಲ್ಲಿ ಪ್ರಾಬಲ್ಯ ಧ್ವನಿಮುದ್ರಿಕೆಗಳು. ಚೆನೈ ಉತ್ಸವಗಳು ಅನೇಕ ಆಚರಿಸುತ್ತದೆ. ಜನವರಿ ತಿಂಗಳಲ್ಲಿ ಆಚರಿಸಲಾಗುತ್ತದೆ ಪೊಂಗಲ್, ಪ್ರಮುಖ ಉತ್ಸವ ಮತ್ತು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ತಮಿಳು ಹೊಸ ವರ್ಷದ ದಿನ ತಮಿಳು ಕ್ಯಾಲೆಂಡರ್ ಆರಂಭದಲ್ಲಿ ಸಾಮಾನ್ಯವಾಗಿ ಏಪ್ರಿಲ್ 14 ರಂದು ಬರುತ್ತದೆ ಮತ್ತು ವ್ಯಾಪಕವಾಗಿ ಆಚರಿಸಲಾಗುತ್ತದೆ ಸೂಚಿಸುತ್ತದೆ. ಕಾಸ್ಮೊಪೊಲಿಟನ್ ನಗರ, ದೀಪಾವಳಿ, ಈದ್ ಮತ್ತು ಕ್ರಿಸ್ಮಸ್ ನಂತಹ ಎಲ್ಲಾ ಪ್ರಮುಖ ಧಾರ್ಮಿಕ ಹಬ್ಬಗಳು ಇಲ್ಲಿ ಆಚರಿಸಲಾಗುತ್ತದೆ.https://www.madras.com/v/festivals/ ಚೆನೈ ಸಾಮಾನ್ಯವಾಗಿ ಅಕ್ಕಿ ಆಧಾರಿತ ಆವಿಯಲ್ಲಿ ಬಿಸಿ ಫಿಲ್ಟರ್ ಕಾಫಿ ಬಡಿಸಲಾಗುತ್ತದೆ ಪೊಂಗಲ್, ದೋಸೆ, ಇಡ್ಲಿ ಅಥವಾ ವಡಾ ರೀತಿಯ ಭಕ್ಷ್ಯಗಳು, ಚೆನೈ ಸೇವಿಸಲ್ಪಡುವ ಒಂದು ಅತ್ಯಂತ ಜನಪ್ರಿಯ ಪಾನೀಯ ಸೇರಿದಂತೆ ಬೆಳಕಿನ ಊಟ ಅಥವಾ TIFFIN ನೀಡುವ ಅಸಂಖ್ಯಾತ ರೆಸ್ಟಾರಂಟ್ ಪ್ರಸಿದ್ಧವಾಗಿದೆ. ಈ ಅನನ್ಯ ಪಾಕಪದ್ಧತಿ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಅನೇಕ ಒಂದು ಮದ್ರಾಸ್ ಕೆಫೆ ಮರುರೂಪಗೊಳ್ಳುತ್ತದೆ. ಇವನ್ನೂ ನೋಡಿ: ಚೆನೈ ಪ್ರವಾಸೋದ್ಯಮ ಮತ್ತು ಚೆನೈ ತಿನಿಸು [ಬದಲಾಯಿಸಿ] ಸಾರಿಗೆ ಸಂಪರ್ಕ (ಸಾರಿಗೆ) ಮುಖ್ಯ ಲೇಖನ: ಚೆನೈ ಸಾರಿಗೆ ಚೆನೈ ಮಹಾನಗರ ಪ್ರದೇಶದಲ್ಲಿ ರಸ್ತೆ ಮತ್ತು ರೈಲು ಜಾಲದ ನಕ್ಷೆ ಜನಪ್ರಿಯವಾಗಿ "ದಕ್ಷಿಣ ಭಾರತಕ್ಕೆ ಗೇಟ್ವೇ" ಎಂದು ಕರೆಯಲಾಗುತ್ತದೆ, ಚೆನೈ ಮತ್ತು ಅಂತರರಾಷ್ಟ್ರೀಯವಾಗಿ ಮತ್ತು ಭಾರತದ ಇತರ ಭಾಗಗಳೊಂದಿಗೆ ಜೋಡಿಸುತ್ತವೆ. ಐದು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಪಸರಿಸುವ ಕೋಲ್ಕತಾ (ಕಲ್ಕತ್ತಾ), ಬೆಂಗಳೂರು, ತ್ರಿಚಿ, ತಿರುವಳ್ಳೂರು, ಮತ್ತು ಪಾಂಡಿಚೇರಿ ಕಡೆಗೆ ಹೊರಕ್ಕೆ. ಚೆನೈ ಎಲ್ಲಾ ಅಂತರ ಬಸ್ಸುಗಳ ಟರ್ಮಿನಸ್ ಸೇವೆಸಲ್ಲಿಸುತ್ತದೆ ಚೆನೈ Mofussil ಬಸ್ ಟರ್ಮಿನಸ್ (CMBT), ದಕ್ಷಿಣ ಏಷ್ಯಾದಲ್ಲಿ ದೊಡ್ಡ ಬಸ್ ನಿಲ್ದಾಣ. ಏಳು ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳು ಅಂತರ ನಗರ ಮತ್ತು ಅಂತರ ರಾಜ್ಯ ಬಸ್ ಸೇವೆಗಳನ್ನು ನಿರ್ವಹಿಸುತ್ತವೆ. ಅನೇಕ ಖಾಸಗಿ ಅಂತರ ನಗರ ಹಾಗೂ ಚೆನೈ ನಿಂದ ಕಾರ್ಯನಿರ್ವಹಿಸುವ ಅಂತರ ರಾಜ್ಯ ಬಸ್ ಕಂಪನಿಗಳು ಇವೆ. ಚೆನೈ ಇಂಟರ್ನ್ಯಾಷನಲ್ ಏರ್ಪೋರ್ಟ್ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಎರಡೂ ನಗರದ ವಿಮಾನ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ಮೂರನೇ ಅವಿಶ್ರಾಂತ ಮತ್ತು ದಕ್ಷಿಣ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಹೆಬ್ಬಾಗಿಲಾಗಿದೆ. ನಗರದ ಸುಮಾರು ಮೂವತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೌಕೆಗಳ ಮೂಲಕ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಪ್ರಮುಖ ಕೇಂದ್ರಗಳಲ್ಲಿ ಸಂಪರ್ಕ ಇದೆ. ವಿಮಾನನಿಲ್ದಾಣವು ದೇಶದಲ್ಲಿ ಎರಡನೇ ಜನನಿಬಿಡ ಸರಕು ಟರ್ಮಿನಸ್. ನಗರದ ಎರಡು ಪ್ರಮುಖ ಅವುಗಳೆಂದರೆ ಪೋರ್ಟುಗಳನ್ನು ದೊಡ್ಡ ಕೃತಕ ಬಂದರುಗಳು ಮತ್ತು ಎನ್ನೋರ್ ಪೋರ್ಟ್ ಒಂದಾಗಿದೆ ಚೆನೈ ಪೋರ್ಟ್ ಸೇವೆಯನ್ನು ಇದೆ. ಚೆನೈ ಪೋರ್ಟ್ ಸಾಮಾನ್ಯ ಕೈಗಾರಿಕಾ ಸರಕು, ಇತ್ಯಾದಿ ಎನ್ನೋರ್ ಪೋರ್ಟ್ ಕಲ್ಲಿದ್ದಲು, ಅದಿರು ಮತ್ತು ಇತರ ದೊಡ್ಡ ಪ್ರಮಾಣದ ಉತ್ಪನ್ನಗಳ ಸರಕನ್ನು ನಿರ್ವಹಿಸುತ್ತದೆ ವಾಹನಗಳು ನಿಭಾಯಿಸಲು ಭಾರತದ ಎರಡನೇ ಅತ್ಯಂತ ಅವಿಶ್ರಾಂತ ಧಾರಕ ಕೇಂದ್ರವಾಗಿದೆ. Royapuram ಒಂದು ಸಣ್ಣ ಬಂದರು ಸ್ಥಳೀಯ ಮೀನುಗಾರಿಕೆ ದೋಣಿಗಳು ಮತ್ತು trawlers ಬಳಸಲ್ಪಡುತ್ತದೆ. 1900 ರಲ್ಲಿ 1873 ಮತ್ತು ಹೊಸದಾಗಿ ನಿರ್ಮಿಸಿದ ಚೆನೈ ಸೆಂಟ್ರಲ್, Royapuram ರಿಂದ ತೆಗೆದುಕೊಳ್ಳುವ, 1907 ರಿಂದ ನಗರದ ಮುಖ್ಯ ರೈಲ್ವೆ ಸ್ಟೇಷನ್ ಆಗಿದೆ. ಒಳಗೆ ಸ್ಥಳಗಳಿಗೆ ರೈಲುಗಳು ಮುಂಬಯಿ, ಬೆಂಗಳೂರು, ದೆಹಲಿ, ಹೈದರಾಬಾದ್, ಕೊಯಿಮತ್ತೂರು ಮತ್ತು ಪಟ್ಟಣಗಳು ​​ಭಾರತದಲ್ಲಿ, ಮತ್ತು ಚೆನೈ ಎಗ್ಮೋರ್ ಎಲ್ಲಾ ಪ್ರಮುಖ ನಗರಗಳಿಗೆ ರೈಲುಗಳು ನಗರದ ಅತಿದೊಡ್ಡ ರೈಲ್ವೆ ನಿಲ್ದಾಣ ಎರಡು ಪ್ರಮುಖ ರೈಲ್ವೆ ನಿಲ್ದಾಣಗಳಿವೆ, ಚೆನೈ ಸೆಂಟ್ರಲ್ ಸ್ಟೇಷನ್, ಇವೆ ತಮಿಳುನಾಡು. ಬಸ್ ಮತ್ತು ರೈಲುಗಳು ಸಾರ್ವಜನಿಕ ಸಾರಿಗೆ ಜನಪ್ರಿಯ ರೂಪ. ಚೆನೈ ಸಬ್ ಅರ್ಬನ್ ರೈಲ್ವೇ ನೆಟ್ವರ್ಕ್ ಅವುಗಳೆಂದರೆ ನಾಲ್ಕು ರೈಲ್ವೆ ವಲಯಗಳು, ಚೆನೈ ಸೆಂಟ್ರಲ್ ಅರಕ್ಕೋಣಮ್, ಚೆನೈ ಸೆಂಟ್ರಲ್ ಪೇಟ, ಮತ್ತು ಚೆನೈ ಬೀಚ್-Chengalpattu ಒಳಗೊಂಡಿದೆ. ನಾಲ್ಕನೇ ಸೆಕ್ಟರ್ ಉಳಿದ ರೈಲು ಜಾಲದ ಮೂಲಕ ಒಂದಕ್ಕೊಂದನ್ನು ಸೇರಿಸಿದಾಗ ಅದು ಎತ್ತರದ MRTS ಉಪನಗರದ ರೈಲು ವ್ಯವಸ್ಥೆಯನ್ನು ಹೊಂದಿದೆ. ರೈಲು ಜಾಲ ಬ್ರಾಡ್ಗೇಜ್ ಹೊಂದಿದೆ. ಸಿಟಿ ಒಂದು ಭೂಗತ ಮೆಟ್ರೋ ನಿರ್ಮಿಸಲು ಯೋಜನೆಯನ್ನು ಹೊಂದಿದೆ. ಮಹಾನಗರ ಸಾರಿಗೆ ಸಂಸ್ಥೆ (ಎಂಟಿಸಿ) ಒಂದು ವ್ಯಾಪಕವಾದ ನಗರ ಬಸ್ ವಿಧಾನವನ್ನು ನಡೆಸುತ್ತದೆ. ಬಸ್ ಸೇವೆ 375 ಮಾರ್ಗಗಳಲ್ಲಿ 2.773 ಬಸ್ಗಳನ್ನು ಒಳಗೊಂಡಿದೆ, ಮತ್ತು ದೈನಂದಿನ ಅಂದಾಜು 4.2 ದಶಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ. ಎಂಟಿಸಿ ಸೇವೆಗಳ ಹೊರತಾಗಿ, ಮಿನಿ ಬಸ್ ಚೆನೈ ಮಹಾನಗರದ ಉಪನಗರಗಳಲ್ಲಿ ಕಂಡುಬರುತ್ತವೆ. ಬಸ್ ಸೇವೆಗಳು ರೀತಿಯಲ್ಲಿ ರನ್ ಮತ್ತು ಜನಪ್ರಿಯವಾಗಿ "ಮಾಕ್ಸಿ ಕ್ಯಾಬ್ಸ್" ನಗರದಲ್ಲಿ ಹಲವಾರು ಮಾರ್ಗಗಳಲ್ಲಿ ಸಂಚರಿಸುತ್ತವೆ ಕೂಡ ಕರೆಯುತ್ತಾರೆ ಇದು ವ್ಯಾನ್ಸ್. ನೇಮಕ ಸಾರಿಗೆ ಸೌಲಭ್ಯಗಳನ್ನು ಅದುಮು ಕರೆ ಟ್ಯಾಕ್ಸಿಗಳು, ಸ್ಥಿರ ದರ ಪ್ರವಾಸಿ ಟ್ಯಾಕ್ಸಿಗಳು ಹಾಗು ಆಟೋ ರಿಕ್ಷಾಗಳು ಸೇರಿವೆ. [ಬದಲಾಯಿಸಿ] ಮಾಧ್ಯಮ (ಮಾಧ್ಯಮ) ಚೆನೈ ಎಂಟು ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಬಗ್ಗೆ ಪ್ರಕಟಿಸಲು ಆರು ಪ್ರಮುಖ ಪತ್ರಿಕೆಗಳ ಗುಂಪುಗಳನ್ನು ಹೊಂದಿದೆ. ಪ್ರಮುಖ ಇಂಗ್ಲೀಷ್ ದಿನಪತ್ರಿಕೆಗಳು ಹಿಂದೂ, ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್, ಡೆಕ್ಕನ್ ಕ್ರಾನಿಕಲ್ ಮತ್ತು ಸಂಜೆ ದೈನಿಕಗಳು, ಟ್ರಿನಿಟಿ ಮಿರರ್ ಮತ್ತು ನ್ಯೂಸ್ ಇಂದು. ನಗರದಿಂದ ಪ್ರಕಟವಾದ ಪ್ರಮುಖ ವ್ಯಾಪಾರ ದಿನಪತ್ರಿಕೆಗಳು ಇಕನಾಮಿಕ್ ಟೈಮ್ಸ್, ಹಿಂದೂ ಬಿಸಿನೆಸ್ ಲೈನ್, ಬ್ಯುಸಿನೆಸ್ ಸ್ಟ್ಯಾಂಡರ್ಡ್, ಮತ್ತು ಫೈನಾನ್ಷಿಯಲ್ ಎಕ್ಸ್ಪ್ರೆಸ್ ಇವೆ. ಪ್ರಮುಖ ತಮಿಳು ದಿನಪತ್ರಿಕೆಗಳು ದಿನತಂತಿ, ದಿನಕರನ್, ದಿನಮಣಿ, ದಿನಮಲಾರ್, ತಮಿಳು ಮುರಸು ಮಕ್ಕಳ್ ಕುರಾಲ್ ಮತ್ತು ಮಲೈ ಮಲಾರ್ ಸೇರಿವೆ. ತೆಲುಗು ದೈನಂದಿನ ಈನಾಡು ಮತ್ತು ಹಿಂದಿ ದಿನಪತ್ರಿಕೆ ರಾಜಸ್ಥಾನ ಪತ್ರಿಕಾ ಸಹ ಪ್ರಕಟವಾಗುತ್ತವೆ. ಪ್ರಮುಖ ಪತ್ರಿಕೆಗಳು ಜೊತೆಗೆ, ಕೆಲವು ಪ್ರದೇಶಗಳಲ್ಲಿ ಗೆ ಅನುಕೂಲವಾಗುವ ಅದ್ಯಾರ್ ಟೈಮ್ಸ್ ಸ್ಥಳೀಯ ನೆರೆಹೊರೆಯ ಪತ್ರಿಕೆಗಳು ಅನೇಕ ಇವೆ. ಚೆನೈ ಪ್ರಕಟವಾಗುತ್ತವೆ ನಿಯತಕಾಲಿಕೆಗಳು ಆನಂದ Vikatan, ಕುಮುದಂನಲ್ಲಿ, ಕಲ್ಕಿ, Kungumam, ಫ್ರಂಟ್ಲೈನ್ ಮತ್ತು ಸ್ಪೋರ್ಟ್ ಸೇರಿವೆ. ದೂರದರ್ಶನವು ಎರಡು ಪ್ರಾದೇಶಿಕ ಚಾನಲ್ ಮತ್ತು ಅದರ ಚೆನೈ ಕೇಂದ್ರದಿಂದ ಎರಡು ಉಪಗ್ರಹ ದೂರದರ್ಶನ ವಾಹಿನಿಗಳು ಸಾಗುತ್ತದೆ. ಸನ್ ಟಿವಿ, ರಾಜ್ TV, ಸ್ಟಾರ್ ವಿಜಯ್ ನಂತಹ ಖಾಸಗಿ ತಮಿಳು ಉಪಗ್ರಹ ದೂರದರ್ಶನ ಜಾಲಗಳು, ಜಯಾ ಟಿವಿ ಚೆನೈ ಹೊರಗೆ ಪ್ರಸಾರ. ನಗರದ ಅಖಿಲ ಭಾರತ ರೇಡಿಯೋ ಮತ್ತು ಖಾಸಗಿ ಪ್ರಸಾರಕರು ನಿರ್ವಹಿಸುವ ಎರಡು AM ಮತ್ತು ಐದು ವಾಣಿಜ್ಯ FM ರೇಡಿಯೋ ಕೇಂದ್ರಗಳನ್ನು ಹೊಂದಿದೆ. FM ರೇಡಿಯೋ ಕೇಂದ್ರಗಳು Suryan ಎಫ್ಎಂ, ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಮತ್ತು FM ರೈನ್ಬೋ ಇವೆ. [ಬದಲಾಯಿಸಿ] ಉಪಯುಕ್ತ ಸೇವೆಗಳು (ಯುಟಿಲಿಟಿ ಸರ್ವೀಸಸ್) ಚೆನೈ ಮತ್ತು ಉಪನಗರಗಳ ವಿವಿಧ ಪುರಸಭೆಗಳ ಕಾರ್ಪೊರೇಷನ್ ನಾಗರಿಕ ಸೇವೆಗಳು ನೋಡಿಕೊಳ್ಳಲು. ಕಸ ನಿರ್ವಹಣೆ ಓನಿಕ್ಸ್, ಒಂದು ಖಾಸಗಿ ಕಂಪನಿಯ ನಿರ್ವಹಿಸುತ್ತವೆ. ನೀರು ಸರಬರಾಜು ಮತ್ತು ಒಳಚರಂಡಿ ಚಿಕಿತ್ಸೆ ಜನಪ್ರಿಯವಾಗಿ ಮೆಟ್ರೋ ವಾಟರ್ ಎಂದು ಮೆಟ್ರೋಪಾಲಿಟನ್ ವಾಟರ್ ಸಪ್ಲೈ ಮತ್ತು ಕೊಳಚೆನೀರು ಬೋರ್ಡ್ ನಿರ್ವಹಿಸುತ್ತವೆ. ವಿದ್ಯುತ್ ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪೂರೈಕೆ. ಬಿಎಸ್ಎನ್ಎಲ್, ಟಾಟಾ ಇಂಡಿಕಾಮ್, ರಿಲಯನ್ಸ್ ಇನ್ಫೋಕಾಂ ಮತ್ತು ಏರ್ಟೆಲ್: ನಗರದ ದೂರವಾಣಿ ಸೇವೆಯನ್ನು ನಾಲ್ಕು ಸ್ಥಿರ ದೂರವಾಣಿ ಕಂಪನಿಗಳು ಸೇವೆ ಒದಗಿಸುತ್ತಿವೆ. ಬಿಎಸ್ಎನ್ಎಲ್, ಹಚ್, ಏರ್ಟೆಲ್ ಮತ್ತು ಏರ್ಸೆಲ್ ಸಿಡಿಎಂಎ ಸೇವೆಗಳನ್ನು ಇದು GSM ಸೇವೆಗಳನ್ನು ಮತ್ತು ಟಾಟಾ ಇಂಡಿಕಾಮ್ ಮತ್ತು ರಿಲಯನ್ಸ್ ಇನ್ಫೋಕಾಂ ನೀಡುವ: ಆರು ಮೊಬೈಲ್ ಫೋನ್ ಕಂಪನಿಗಳು. ಫೋನ್ ಕಂಪನಿಗಳು ಬ್ರಾಡ್ಬ್ಯಾಂಡ್ ಇಂಟರ್ನೆಟ್ ಪ್ರವೇಶವನ್ನು ಒದಗಿಸುತ್ತವೆ. SCV ಮತ್ತು Hathway ಪ್ರಮುಖ ಕೇಬಲ್ ಟಿವಿ ಸೇವೆ ಹೋಮ್ಗೆ providers.Direct ಮಾಡಲಾಗುತ್ತದೆ (DTH) ಡಿಡಿ ಡೈರೆಕ್ಟ್ ಪ್ಲಸ್ ಮತ್ತು ಡಿಶ್ ಟಿವಿ ಮೂಲಕ ಲಭ್ಯವಿದೆ. ಚೆನೈ ಕೇಬಲ್ ದೂರದರ್ಶನ ಷರತ್ತು ಪ್ರವೇಶ ಒದಗಿಸಲಾಗುತ್ತಿದೆ ಎಂದು ಭಾರತದ ಏಕೈಕ ನಗರವಾಗಿದೆ. [ಬದಲಾಯಿಸಿ] ಶಿಕ್ಷಣ ಚೆನೈ ಶಾಲೆಗಳಲ್ಲಿ ಎರಡೂ ತಮಿಳುನಾಡು ಸರ್ಕಾರ ಸಾರ್ವಜನಿಕವಾಗಿ ರನ್, ಅಥವಾ ಕೆಲವು ಸರ್ಕಾರದ ಹಣಕಾಸಿನ ನೆರವಿನೊಂದಿಗೆ, ಖಾಸಗಿಯಾಗಿ ನಡೆಸುತ್ತದೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ಇಂಗ್ಲೀಷ್ ಆಗಿದೆ. ಸರಕಾರೀ ಶಾಲೆಗಳಲ್ಲಿ ಇಂಗ್ಲೀಷ್ ಮತ್ತು ತಮಿಳು ಮಾಧ್ಯಮ ಶಿಕ್ಷಣ, ಇಂಗ್ಲೀಷ್ ಬಹುತೇಕ ಆದ್ಯತೆ ಹೀಗೆ ಎರಡೂ ನೀಡುತ್ತವೆ. ಖಾಸಗಿ ಶಾಲೆಗಳು ಸಾಮಾನ್ಯವಾಗಿ ರಾಷ್ಟ್ರೀಯ CBSE ಮಂಡಳಿಗೆ ಅಥವಾ ತಮಿಳುನಾಡು ರಾಜ್ಯ ಬೋರ್ಡ್ ಗುರುತಿಸಲ್ಪಟ್ಟಿವೆ. ಕೆಲವು ಶಾಲೆಗಳು ICSE ಮಂಡಳಿ ಮತ್ತು ಮಾಂಟೆಸ್ಸರಿ ವ್ಯವಸ್ಥೆಗೆ ಸೇರಿವೆ. ಕೆಲವು ಶಾಲೆಗಳು ಇಂಟರ್ನ್ಯಾಷನಲ್ ಬ್ಯಕೆಲೌರಿಯೇಟ್ ಮತ್ತು ಅಮೆರಿಕನ್ ವ್ಯವಸ್ಥೆಗಳು ನೀಡುತ್ತವೆ. ಶಾಲಾ ಮೂರು ವಯಸ್ಸಿನಲ್ಲಿ ಆರಂಭವಾಗುತ್ತದೆ. ಶಿಶುವಿಹಾರ ಮತ್ತು ಶಾಲಾ ಹನ್ನೆರಡು ವರ್ಷಗಳ ಎರಡು ವರ್ಷಗಳ ನಂತರ, ವಿದ್ಯಾರ್ಥಿಗಳು ಅಲ್ಲದ ವೃತ್ತಿಪರ ಅಥವಾ ವೃತ್ತಿಪರ ವಿಶ್ವವಿದ್ಯಾಲಯ ಶಿಕ್ಷಣ ತೆಗೆದುಕೊಳ್ಳಬಹುದು. ಅಣ್ಣಾ ವಿಶ್ವವಿದ್ಯಾಲಯದ ಮುಖ್ಯ ಪ್ರವೇಶದ್ವಾರ. ನಗರದಲ್ಲಿ ಮೂರು ಕ್ಯಾಂಪಸ್ ಹೊಂದಿರುವ ಮದ್ರಾಸ್ (1857), ದಿ ಯೂನಿವರ್ಸಿಟಿ ಉದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾರ್ಯಕ್ರಮಗಳನ್ನು ಒಂದು ಶ್ರೇಣಿಯನ್ನು ಒದಗಿಸುತ್ತದೆ. ನಗರದ ಕಾಲೇಜುಗಳು ಹೆಚ್ಚಿನ ವೈದ್ಯಕೀಯ, ಕಾನೂನು, ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಶ್ವವಿದ್ಯಾನಿಲಯ ಮತ್ತು ಕೊಡುಗೆ ಕಾರ್ಯಕ್ರಮಗಳು ಗುರುತಿಸಲ್ಪಟ್ಟಿವೆ. ಕೆಲವು ಹಳೆಯ ಸಂಸ್ಥೆಗಳ ಸಂಬಂಧ ಎಲ್ಲಾ ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ (1837), ಪ್ರೆಸಿಡೆನ್ಸಿ ಕಾಲೇಜ್ (1840), ಪಚಿಯಪ್ಪ ಕಾಲೇಜಿನಲ್ಲಿ (1842), ಮದ್ರಾಸ್ ವೈದ್ಯಕೀಯ ಕಾಲೇಜ್ (1835), ಸ್ಟಾನ್ಲಿ ಮೆಡಿಕಲ್ ಕಾಲೇಜ್ (1938) ಮತ್ತು ವಿವೇಕಾನಂದ ಕಾಲೇಜು (1948), ಗಳು ಅದರ ರಚನೆಯ ಮೇಲೆ ಮದ್ರಾಸ್ ವಿಶ್ವವಿದ್ಯಾಲಯ ತಮ್ಮನ್ನು. ಇತರೆ ಸ್ವಾಯತ್ತ ಶಿಕ್ಷಣ ಸಂಸ್ಥೆಗಳು ಮಹಿಳಾ ಕ್ರಿಶ್ಚಿಯನ್ ಕಾಲೇಜು (1915), ಲೊಯೋಲಾ ಕಾಲೇಜ್, ಚೆನೈ (1925), ಫ್ಯಾಷನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (1995), ಪತ್ರಿಕೋದ್ಯಮ ನ ಏಷ್ಯನ್ ಕಾಲೇಜ್ (2000) ಮತ್ತು ಸಮಾಜ ವರ್ಕ್ ಮದ್ರಾಸ್ ಸ್ಕೂಲ್ (1952) ಸೇರಿವೆ. ಟೆಕ್ನಾಲಜಿ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ (ಐಐಟಿ), ಮದ್ರಾಸ್ (1959), ನಗರದ ದಕ್ಷಿಣದಲ್ಲಿ ಇದೆ ಮತ್ತು ಇದರ ಇಂಜಿನಿಯರಿಂಗ್ ಅಂತಾರಾಷ್ಟ್ರೀಯವಾಗಿ ಖ್ಯಾತಿ ಇದೆ. ಹತ್ತಿರದ ಇದೆ, ಎಂಜಿನಿಯರಿಂಗ್, ಗಿಂಡಿ (1794), ಟೆಕ್ನಾಲಜಿ ಮದ್ರಾಸ್ ಇನ್ಸ್ಟಿಟ್ಯೂಟ್ (1949), ತಂತ್ರಜ್ಞಾನ (1944) ಆಫ್ ಅಲಗಪ್ಪ ಕಾಲೇಜ್ ಕಾಲೇಜ್ ಒಂದು ವಿಲೀನದಿಂದ ರೂಪುಗೊಂಡ ಅಣ್ಣಾ ವಿಶ್ವವಿದ್ಯಾನಿಲಯ (1978), ಪ್ರಮುಖ ಕ್ಯಾಂಪಸ್ ಹೊಂದಿದೆ, ಮತ್ತು ಆರ್ಕಿಟೆಕ್ಚರ್ ಮತ್ತು ಯೋಜನಾ (1957) ಆಫ್ ಸ್ಕೂಲ್. ಇಂಜಿನಿಯರಿಂಗ್, ತಂತ್ರಜ್ಞಾನ ಮತ್ತು ವಾಸ್ತುಶಿಲ್ಪ ಕಾರ್ಯಕ್ರಮಗಳನ್ನು ನೀಡುವ ತಮಿಳುನಾಡಿನ ಬಹುತೇಕ ಎಲ್ಲಾ ಕಾಲೇಜುಗಳು ಅಣ್ಣಾ ವಿಶ್ವವಿದ್ಯಾಲಯ ಗುರುತಿಸಲ್ಪಟ್ಟಿವೆ. ಉಳಿದ ಕಾಲೇಜುಗಳು ಸ್ವಾಯತ್ತ ಸ್ವಾಯತ್ತ ವಿಶ್ವವಿದ್ಯಾಲಯಗಳು ಇವೆ. ಚಿತ್ರ: Iitm.maingate.logo.jpg ಅದರ ಲೋಗೋ ಮತ್ತು ಅದರ ಗುರಿ ತೋರಿಸುವ ಐಐಟಿ ಮದ್ರಾಸ್ನ ಮುಖ್ಯ ಪ್ರವೇಶದ್ವಾರವು,. ಡಾ ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜ್, ಚೆನೈ, ತಮಿಳುನಾಡು ಪ್ರಮುಖ ಕಾನೂನು ಕಾಲೇಜು 1891 ರಲ್ಲಿ ಸ್ಥಾಪಿಸಲಾಯಿತು. ಮದ್ರಾಸ್ ವೈದ್ಯಕೀಯ ಕಾಲೇಜ್, 1835 ರಲ್ಲಿ ಸ್ಥಾಪನೆಯಾದ [2], ಭಾರತೀಯ ಉಪಖಂಡದ ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಟಾನ್ಲಿ ಮೆಡಿಕಲ್ ಕಾಲೇಜ್, Kilpauk ವೈದ್ಯಕೀಯ ಕಾಲೇಜು ಮತ್ತು ಶ್ರೀ ರಾಮಚಂದ್ರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಗರದ ಇತರೆ ಗಮನೀಯ ವೈದ್ಯಕೀಯ ಕಾಲೇಜುಗಳು. 1903 ರಲ್ಲಿ ಸ್ಥಾಪನೆಯಾದ ಮದ್ರಾಸ್ ಪಶುವೈದ್ಯಕೀಯ ಕಾಲೇಜ್ ಭಾರತದಲ್ಲೇ ಮೊದಲ ಪದ್ಧತಿಯಾಗಿತ್ತು. 1890 ರಲ್ಲಿ ನಿರ್ಮಿಸಿದ ಕನ್ನೆಮಾರಾ ಪಬ್ಲಿಕ್ ಲೈಬ್ರರಿ ಭಾರತದಲ್ಲಿ ನಾಲ್ಕು ರಾಷ್ಟ್ರೀಯ ಡಿಪಾಸಿಟರಿ ಕೇಂದ್ರಗಳು ಒಂದಾಗಿದೆ. ಈ ಕೇಂದ್ರಗಳು ಭಾರತದಲ್ಲಿ ಪ್ರಕಟವಾದ ಎಲ್ಲಾ ಪತ್ರಿಕೆಗಳು ಮತ್ತು ಪುಸ್ತಕಗಳ ಪ್ರತಿಯೊಂದನ್ನು ಪಡೆಯುವುದು. ಇದು ಒಂದು ಡಿಕ್ಲೇರ್ಡ್ ಯುನೆಸ್ಕೋ ಮಾಹಿತಿಯನ್ನು ಕೇಂದ್ರವಾಗಿದೆ. ಇತರ ಪ್ರಮುಖ ಗ್ರಂಥಾಲಯಗಳು ಫೋರ್ಟ್ ಸೇಂಟ್ ಜಾರ್ಜ್ ಭಾರತದ ಗ್ರಂಥಾಲಯದ ಪುರಾತತ್ವ ಇಲಾಖೆ, ರಾಮಕೃಷ್ಣ ಮಠ ಲೈಬ್ರರಿ ಮತ್ತು ಕೃಷ್ಣಮೂರ್ತಿ ಪ್ರತಿಷ್ಠಾನವು ಪ್ರಪಂಚದ ಪ್ರಧಾನ ಕಛೇರಿಯ ಆವರಣದಲ್ಲಿ ಕೃಷ್ಣಮೂರ್ತಿ ಫೌಂಡೇಶನ್ ಲೈಬ್ರರಿ. [ಬದಲಾಯಿಸಿ] ಕ್ರೀಡೆಗಳು ಕ್ರಿಕೆಟ್ ಚೆನೈ ಅತ್ಯಂತ ಜನಪ್ರಿಯ ಕ್ರೀಡೆ. MAC ಎಂದು ಜನಪ್ರಿಯವಾಗಿ MA ಚಿದಂಬರಂ ಚೆಪಾಕ್ ಕ್ರೀಡಾಂಗಣ (ಹಿಂದೆ ಮದ್ರಾಸ್ ಕ್ರಿಕೆಟ್ ಕ್ಲಬ್ ಮೈದಾನ ಅಥವಾ ಚೆಪಾಕ್ ಕ್ರೀಡಾಂಗಣ ಎಂದು ಕರೆಯುತ್ತಾರೆ) ಮತ್ತು, 1916 ರಲ್ಲಿ ನಿರ್ಮಿಸಲಾಯಿತು ಭಾರತದಲ್ಲಿ ಹಳೆಯ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಹೆಚ್ಚು 50,000 ಆಸನಗಳು ಮತ್ತು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ನೆಲೆಯಾಗಿದೆ. ಐಐಟಿ ಮದ್ರಾಸ್ ಆವರಣದಲ್ಲಿ ಕೆಂಪ್ಲಾಸ್ಟ್ ಕ್ರಿಕೆಟ್ ಗ್ರೌಂಡ್ ಮತ್ತೊಂದು ಪ್ರಮುಖ ಕ್ರಿಕೆಟ್ ಸ್ಥಳವಾಗಿದೆ. ಚಿತ್ರ: Chennai.ATP.jpg ಎಟಿಪಿ ಚೆನೈ ಓಪನ್ - Nungambakkam ರಲ್ಲಿ SDAT ಟೆನಿಸ್ ಕ್ರೀಡಾಂಗಣ ಸಂಕೀರ್ಣದಲ್ಲಿ ಸೆಂಟರ್ ಕೋರ್ಟ್ ಟೆನಿಸ್ ಚೆನೈ ಇನ್ನೊಂದು ಜನಪ್ರಿಯ ಆಟ. ಮತ್ತು 6,000 ಪ್ರೇಕ್ಷಕರ ಬಗ್ಗೆ Nungambakkam ಸ್ಥಾನಗಳಲ್ಲಿ SDAT ಟೆನಿಸ್ ಕ್ರೀಡಾಂಗಣ ಐದು ಸಂಶ್ಲೇಷಿತ ಮೇಲ್ಮೈ ಅಂಕಣಗಳನ್ನು ಹೊಂದಿದೆ. ಸ್ಟೇಡಿಯಂನಲ್ಲಿ ಭಾರತದ ಏಕೈಕ ಎಟಿಪಿ, ಚೆನೈ ಓಪನ್ ಆಯೋಜಿಸುತ್ತದೆ. ಪಂದ್ಯಾವಳಿಯ ಟೆನಿಸ್ ವೃತ್ತಿಪರರ ಸಂಘದ ಮೂಲಕ ತನ್ನ ಎರಡನೇ ವರ್ಷದ ಅತ್ಯುತ್ತಮ ಹೊಸ ಈವೆಂಟ್ ಶೀರ್ಷಿಕೆ ನೀಡಲಾಯಿತು. ಉದಾಹರಣೆಗೆ ವಿಜಯ್ ಅಮೃತ್ರಾಜ್, ರಾಮನಾಥನ್ ಕೃಷ್ಣನ್, ರಮೇಶ್ ಕೃಷ್ಣನ್ ಮತ್ತು ಚೆನೈ ನಿಂದ ಮಹೇಶ್ ಭೂಪತಿ ಆಲಿಕಲ್ಲು ಭಾರತೀಯ ಟೆನಿಸ್ ವೃತ್ತಿಪರರ. ಲಿಯಾಂಡರ್ ಪೇಸ್ ತನ್ನ ಶಾಲಾಶಿಕ್ಷಣವನ್ನು ಮತ್ತು ಚೆನೈ ಬಗ್ಗೆ ತರಬೇತಿ ಪಡೆದ. ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂ ಹಾಕಿ ಪಂದ್ಯಗಳನ್ನು ಸ್ಥಾನಗಳನ್ನು 4,000 ನಿಶ್ಚಿತ ಸ್ಥಳವಾಗಿದೆ. ಚೆನೈ Veerans, ಒಂದು ಪ್ರೀಮಿಯರ್ ಹಾಕಿ ಲೀಗ್ ತಂಡ ಚೆನೈ ನೆಲೆಗೊಂಡಿದೆ. ಕ್ರೀಡಾಂಗಣದಲ್ಲಿ 2005 ರಲ್ಲಿ ಇತ್ತೀಚೆಗೆ ಎರಡು ಬಾರಿ ಚಾಂಪಿಯನ್ಸ್ ಟ್ರೋಫಿ (ವಿಶ್ವದ 6 ಅತ್ಯುತ್ತಮ ತಂಡಗಳನ್ನೊಳಗೊಂಡ) ಆಯೋಜಿಸಿದೆ. ಜವಾಹರಲಾಲ್ ನೆಹರು ಸ್ಟೇಡಿಯಂ ಸ್ಥಾನಗಳನ್ನು 40,000 ಮತ್ತು ಅತಿಥೇಯಗಳ ಫುಟ್ಬಾಲ್ (ಸಾಕರ್), ಮತ್ತು ಅಥ್ಲೆಟಿಕ್ ಸ್ಪರ್ಧೆಗಳು. ಸಂಕೀರ್ಣ ಕೂಡ ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಟೇಬಲ್ ಟೆನಿಸ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುತ್ತದೆ ಇದು 8,000 ಒಂದು ಆಸನ ಸಾಮರ್ಥ್ಯವನ್ನು ಹೊಂದಿರುವ ಬಹು ಉದ್ದೇಶದ ಒಳಾಂಗಣ ಕ್ರೀಡಾಂಗಣದ ವ್ಯವಸ್ಥೆಯಿದೆ. ವೇಲಾಚೇರಿ ಅಕ್ವಾಟಿಕ್ ಕಾಂಪ್ಲೆಕ್ಸ್ ಸ್ಥಾನಗಳನ್ನು 4,000 ಮತ್ತು ಜಲ ಕ್ರೀಡೆಗಳು ವಿವಿಧ ರೀತಿಯ ಆಯೋಜಿಸುತ್ತದೆ. ಚೆನೈ ದಕ್ಷಿಣ ಏಷ್ಯನ್ ಫೆಡರೇಷನ್ (ಎಸ್ಎಎಫ್) ಗೇಮ್ಸ್ 1995 ಆಯೋಜಿಸಿದೆ. ಕುದುರೆ ರೇಸಿಂಗ್ ಗಿಂಡಿ ರೇಸ್ ಕೋರ್ಸ್ 1777 ರಲ್ಲಿ ಸ್ಥಾಪಿಸಲಾಯಿತು. ಮೋಟಾರ್ ರೇಸಿಂಗ್ ಘಟನೆಗಳು ಕಾರುಗಳು ಶ್ರೀಪೆರುಂಬುದೂರ್ (Thirupperumbudur) ಟ್ರ್ಯಾಕ್, ಮತ್ತು ಸೈಕಲ್ಗಳಲ್ಲಿ Sholavaram ಟ್ರ್ಯಾಕ್ ಆಯೋಜಿಸಲಾಗುತ್ತದೆ. ಮದ್ರಾಸ್ ಬೋಟ್ ಕ್ಲಬ್ ಬೇಸಿನ್ ಬ್ರಿಡ್ಜ್ ಮತ್ತು ಅತಿಥೇಯಗಳ ರೊವಿಂಗ್ ಓಟಗಳು ನಲ್ಲಿ 1867 ಸ್ಥಾಪಿಸಲಾಯಿತು. 19 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಇವೆರಡೂ ಕಾಸ್ಮೊಪೊಲಿಟನ್ ಕ್ಲಬ್, ಮತ್ತು ಆಟದ ಮೈದಾನ ಕ್ಲಬ್ ಗಾಲ್ಫ್,: ನಗರದ ಎರಡು 18 ಹೋಲ್ ಗಾಲ್ಫ್ ಕೋರ್ಸ್ಗಳನ್ನು ಹೊಂದಿದ್ದು. ಚೆನೈ ಮೊದಲ ಕಾಮನ್ವೆಲ್ತ್ ಜೂನಿಯರ್ ಫೆನ್ಸಿಂಗ್ ಚಾಂಪಿಯನ್ಶಿಪ್ಗಳಿಗೆ 2006 ರಲ್ಲಿ ಸ್ಥಳವಾಗಿತ್ತು. [ಬದಲಾಯಿಸಿ] ಉಲ್ಲೇಖಗಳು ಉಲ್ಲೇಖಗಳು ವರ್ಗ:ತಮಿಳುನಾಡಿನ ನಗರಗಳು
ಕನ್ನಡ ಸಾಹಿತ್ಯ ಸಮ್ಮೇಳನ
https://kn.wikipedia.org/wiki/ಕನ್ನಡ_ಸಾಹಿತ್ಯ_ಸಮ್ಮೇಳನ
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.ಕನ್ನಡ ಸಾಹಿತ್ಯ ಸಮ್ಮೇಳನ ೧೯೧೫ ರಿಂದ ಆಚರಣೆ ಹಿನ್ನಲೆ ೧೯೧೪ರ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಪರಿಷತ್ತನ್ನು ಸ್ಥಾಪಿಸುವ ವಿಚಾರದಲ್ಲಿ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಈ ಉಪಸಮಿತಿಯು ಅಂದಿನ ವಿವಿಧ ಕನ್ನಡ ನಾಡುಗಳ ಪ್ರಾಜ್ಞರೊಡನೆ ಸಮಾಲೋಚಿಸಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಆ ಸಮ್ಮೇಳನಗಳಲ್ಲಿ ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ ಮಾರ್ಗದರ್ಶನ ಸೂತ್ರಗಳನ್ನು ರೂಪಿಸಿತು. ಕನ್ನಡ ಭಾಷೆಯಲ್ಲಿ ವ್ಯಾಕರಣ, ಚರಿತ್ರೆ, ನಿಘಂಟು ಬರೆಯಿಸುವುದು, ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು. ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು. ಬೆರೆ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು. ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು. ಕರ್ನಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು. ಗ್ರಂಥಕರ್ತರಿಗೆ ಬಿರುದು ಸಂಭಾವನೆ ಕೊಡುವುದು. ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು. ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು. ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.http://kannadasahithyaparishattu.in/?page_id=702 ಸಾಹಿತ್ಯ  ಸಮ್ಮೇಳನಗಳ ಉದ್ದೇಶ ಈವರೆಗಿನ ಸಮ್ಮೇಳನಗಳ ಪಟ್ಟಿ {|class="wikitable sortable sortable" border="1" !ಸಮ್ಮೇಳನದ ಸಂಖ್ಯೆ !ಸಮ್ಮೇಳನ ನಡೆದ ದಿನಾಂಕ, ತಿಂಗಳು ಮತ್ತು ವರ್ಷ !ಸ್ಥಳ !ಅಧ್ಯಕ್ಷತೆ |------ |೧ |೩, ೪, ೫, ೬ ಮೇ ೧೯೧೫ |ಬೆಂಗಳೂರು |ಎಚ್. ವಿ. ನಂಜುಂಡಯ್ಯ |---- |೨ |೬, ೭, ೮ ಮೇ ೧೯೧೬ |ಬೆಂಗಳೂರು |ಎಚ್. ವಿ. ನಂಜುಂಡಯ್ಯ |---- |೩ |೮, ೯, ೧೦ ಜೂನ್ ೧೯೧೭ |ಮೈಸೂರು |ಎಚ್. ವಿ. ನಂಜುಂಡಯ್ಯ |---- |೪ |೧೧, ೧೨, ೧೩ ಮೇ ೧೯೧೮ |ಧಾರವಾಡ |ಆರ್. ನರಸಿಂಹಾಚಾರ್ |---- |೫ |೬, ೭, ೮ ಮೇ ೧೯೧೯ |ಹಾಸನ |ಕರ್ಪೂರ ಶ್ರೀನಿವಾಸರಾವ್ |---- |೬ |೨೦, ೨೧ ಜೂನ್ ೧೯೨೦ |ಹೊಸಪೇಟೆ |ರೊದ್ದ ಶ್ರೀನಿವಾಸರಾವ್ |---- |೭ |೧೯, ೨೦, ೨೧ ಮೇ ೧೯೨೧ |ಚಿಕ್ಕಮಗಳೂರು |ಕೆ. ಪಿ. ಪುಟ್ಟಣ್ಣ ಚೆಟ್ಟಿ |---- |೮ |೧೨, ೧೩ ಮೇ ೧೯೨೨ |ದಾವಣಗೆರೆ |ಎಂ. ವೆಂಕಟಕೃಷ್ಣಯ್ಯ |---- |೯ |೨೧, ೨೨, ೨೩ ಮೇ ೧೯೨೩ |ಬಿಜಾಪುರ |ಸಿದ್ಧಾಂತಿ ಶಿವಶಂಕರ ಶಾಸ್ತ್ರಿ |---- |೧೦ |೧೬, ೧೭, ೧೮ ಮೇ ೧೯೨೪ |ಕೋಲಾರ |ಹೊಸಕೋಟೆ ಕೃಷ್ಣಶಾಸ್ತ್ರಿ |---- |೧೧ |೯, ೧೦, ೧೧ ಮೇ ೧೯೨೫ |ಬೆಳಗಾವಿ |ಬೆನಗಲ್ ರಾಮರಾವ್ |---- |೧೨ |೨೨, ೨೩, ೨೪ ಮೇ ೧೯೨೬ |ಬಳ್ಳಾರಿ |ಫ. ಗು. ಹಳಕಟ್ಟಿ |---- |೧೩ |೧೯, ೨೦, ೨೧ ಮೇ ೧೯೨೭ |ಮಂಗಳೂರು |ಆರ್. ತಾತಾಚಾರ್ಯ |---- |೧೪ |೧, ೨, ೩ ಜೂನ್ ೧೯೨೮ |ಕಲಬುರಗಿ |ಬಿ. ಎಂ. ಶ್ರೀಕಂಠಯ್ಯ |---- |೧೫ |೧೨, ೧೩, ೧೪ ಮೇ ೧೯೨೯ |ಬೆಳಗಾವಿ |ಮಾಸ್ತಿ ವೆಂಕಟೇಶ ಅಯ್ಯಂಗಾರ್ |---- |೧೬ |೫, ೬, ೭ ಅಕ್ಟೋಬರ್ ೧೯೩೦ |ಮೈಸೂರು |ಆಲೂರು ವೆಂಕಟರಾವ್ |---- |೧೭ |೨೮, ೨೯, ೩೦ ಡಿಸೆಂಬರ್ ೧೯೩೧ |ಕಾರವಾರ |ಮುಳಿಯ ತಿಮ್ಮಪ್ಪಯ್ಯ |---- |೧೮ |೨೮, ೨೯, ೩೦ ಡಿಸೆಂಬರ್ ೧೯೩೨ |ಮಡಿಕೇರಿ |ಡಿ. ವಿ. ಗುಂಡಪ್ಪ |---- |೧೯ |೨೯, ೩೦, ೩೧ ಡಿಸೆಂಬರ್ ೧೯೩೩ |ಹುಬ್ಬಳ್ಳಿ |ವೈ. ನಾಗೇಶ ಶಾಸ್ತ್ರಿ |---- |೨೦ |೨೮, ೨೯, ೩೦ ಡಿಸೆಂಬರ್ ೧೯೩೪ |ರಾಯಚೂರು |ಪಂಜೆ ಮಂಗೇಶರಾವ್ |---- |೨೧ |೨೬, ೨೭, ೨೮ ಡಿಸೆಂಬರ್ ೧೯೩೫ |ಮುಂಬೈ |ಎನ್. ಎಸ್. ಸುಬ್ಬರಾವ್ |---- |೨೨ |೨೯, ೩೦, ೩೧ ಡಿಸೆಂಬರ್ ೧೯೩೭ |ಜಮಖಂಡಿ |ಬೆಳ್ಳಾವೆ ವೆಂಕಟನಾರಣಪ್ಪ |---- |೨೩ |೨೯, ೩೦, ೩೧ ಡಿಸೆಂಬರ್ ೧೯೩೮ |ಬಳ್ಳಾರಿ |ರಂಗನಾಥ ದಿವಾಕರ |---- |೨೪ |೨೫, ೨೬, ೨೭, ೨೮ ಡಿಸೆಂಬರ್ ೧೯೩೯ |ಬೆಳಗಾವಿ |ಮುದವೀಡು ಕೃಷ್ಣರಾವ್ |---- |೨೫ |೨೭, ೨೮, ೨೯ ಡಿಸೆಂಬರ್ ೧೯೪೦ |ಧಾರವಾಡ |ವೈ. ಚಂದ್ರಶೇಖರ ಶಾಸ್ತ್ರಿ |---- |೨೬ |೨೭, ೨೮, ೨೯ ಡಿಸೆಂಬರ್ ೧೯೪೧ |ಹೈದರಾಬಾದ್ |ಎ. ಆರ್. ಕೃಷ್ಣಶಾಸ್ತ್ರಿ |---- |೨೭ |೨೬, ೨೭, ೨೮ ಜನವರಿ ೧೯೪೩ |ಶಿವಮೊಗ್ಗ |ದ. ರಾ. ಬೇಂದ್ರೆ |---- |೨೮ |೨೮, ೨೯, ೩೦ ಡಿಸೆಂಬರ್ ೧೯೪೪ |ರಬಕವಿ |ಶಿ. ಶಿ. ಬಸವನಾಳ |---- |೨೯ |೨೬, ೨೭, ೨೮ ಡಿಸೆಂಬರ್ ೧೯೪೫ |ಮದರಾಸು |ಟಿ. ಪಿ. ಕೈಲಾಸಂ |---- |೩೦ |೭, ೮, ೯ ಮೇ ೧೯೪೭ |ಹರಪನಹಳ್ಳಿ |ಸಿ. ಕೆ. ವೆಂಕಟರಾಮಯ್ಯ |---- |೩೧ |೨೯, ೩೦, ೩೧ ಡಿಸೆಂಬರ್ ೧೯೪೮ |ಕಾಸರಗೋಡು |ತಿ. ತಾ. ಶರ್ಮ |---- |೩೨ |೫, ೬, ೭ ಮಾರ್ಚ್ ೧೯೪೯ |ಕಲಬುರಗಿ |ಉತ್ತಂಗಿ ಚನ್ನಪ್ಪ |---- |೩೩ |೨೪, ೨೫, ೨೬ ಮೇ ೧೯೫೦ |ಸೊಲ್ಲಾಪುರ |ಎಂ. ಆರ್. ಶ್ರೀನಿವಾಸಮೂರ್ತಿ |---- |೩೪ |೨೬, ೨೭, ೨೮ ಡಿಸೆಂಬರ್ ೧೯೫೧ |ಮುಂಬೈ |ಗೋವಿಂದ ಪೈ |---- |೩೫ |೧೬, ೧೭, ೧೮ ಮೇ ೧೯೫೨ |ಬೇಲೂರು |ಶಿ. ಚ. ನಂದೀಮಠ |---- |೩೬ |೨೬, ೨೭, ೨೮ ಡಿಸೆಂಬರ್ ೧೯೫೪ |ಕುಮಟಾ |ವಿ. ಸೀತಾರಾಮಯ್ಯ |---- |೩೭ |೧೦, ೧೧, ೧೨ ಜೂನ್ ೧೯೫೫ |ಮೈಸೂರು |ಶಿವರಾಮ ಕಾರಂತ |---- |೩೮ |೨೫, ೨೬, ೨೭ ಡಿಸೆಂಬರ್ ೧೯೫೬ |ರಾಯಚೂರು |ಆದ್ಯ ರಂಗಾಚಾರ್ಯ |---- |೩೯ |೭, ೮, ೯ ಮೇ ೧೯೫೭ |ಧಾರವಾಡ |ಕುವೆಂಪು |---- |೪೦ |೧೮, ೧೯, ೨೦ ಜನವರಿ ೧೯೫೮ |ಬಳ್ಳಾರಿ |ವಿ. ಕೃ. ಗೋಕಾಕ |---- |೪೧ |೧೧, ೧೨, ೧೩ ಫೆಬ್ರವರಿ ೧೯೬೦ |ಬೀದರ್ |ಡಿ. ಎಲ್. ನರಸಿಂಹಾಚಾರ್ |---- |೪೨ |೨೭, ೨೮, ೨೯ ಡಿಸೆಂಬರ್ ೧೯೬೦ |ಮಣಿಪಾಲ |ಅ. ನ. ಕೃಷ್ಣರಾಯ |---- |೪೩ |೨೭, ೨೮, ೨೯ ಡಿಸೆಂಬರ್ ೧೯೬೧ |ಗದಗ |ಕೆ. ಜಿ. ಕುಂದಣಗಾರ |---- |೪೪ |೨೮, ೨೯, ೩೦ ಡಿಸೆಂಬರ್ ೧೯೬೩ |ಸಿದ್ದಗಂಗಾ |ರಂ. ಶ್ರೀ. ಮುಗಳಿ |---- |೪೫ |೧೦, ೧೧, ೧೨ ಮೇ ೧೯೬೫ |ಕಾರವಾರ |ಕಡೆಂಗೋಡ್ಲು ಶಂಕರಭಟ್ಟ |---- |೪೬ |೨೬, ೨೭, ೨೮ ಮೇ ೧೯೬೭ |ಶ್ರವಣಬೆಳಗೊಳ |ಆ. ನೇ. ಉಪಾಧ್ಯೆ |---- |೪೭ |೨೭, ೨೮, ೨೯ ಡಿಸೆಂಬರ್ ೧೯೭೦ |ಬೆಂಗಳೂರು |ದೇ. ಜವರೇಗೌಡ |---- |೪೮ |೩೧ ಮೇ, ೧, ೨ ಜೂನ್ ೧೯೭೪ |ಮಂಡ್ಯ |ಜಯದೇವಿತಾಯಿ ಲಿಗಾಡೆ |---- |೪೯ |೧೧, ೧೨, ೧೩ ಡಿಸೆಂಬರ್ ೧೯೭೬ |ಶಿವಮೊಗ್ಗ |ಎಸ್. ವಿ. ರಂಗಣ್ಣ |---- |೫೦ |೨೩, ೨೪, ೨೫ ಏಪ್ರಿಲ್ ೧೯೭೮ |ದೆಹಲಿ |ಜಿ. ಪಿ. ರಾಜರತ್ನಂ |---- |೫೧ |೦೯, ೧೦, ೧೧ ಮಾರ್ಚ್ ೧೯೭೯ |ಧರ್ಮಸ್ಥಳ |ಗೋಪಾಲಕೃಷ್ಣ ಅಡಿಗ |---- |೫೨ |೭, ೮, ೯, ೧೦ ಫೆಬ್ರವರಿ ೧೯೮೦ |ಬೆಳಗಾವಿ |ಬಸವರಾಜ ಕಟ್ಟೀಮನಿ |---- |೫೩ |೧೩, ೧೪, ೧೫ ಮಾರ್ಚ್ ೧೯೮೧ |ಚಿಕ್ಕಮಗಳೂರು |ಪು. ತಿ. ನರಸಿಂಹಾಚಾರ್ |---- |೫೪ |೨೭, ೨೮, ೨೯, ೩೦ ನವೆಂಬರ್ ೧೯೮೧ |ಮಡಿಕೇರಿ |ಶಂ. ಬಾ. ಜೋಶಿ |---- |೫೫ |೨೩, ೨೪, ೨೫, ೨೬ ಡಿಸೆಂಬರ್ ೧೯೮೨ |ಸಿರ್ಸಿ |ಗೊರೂರು ರಾಮಸ್ವಾಮಿ ಅಯ್ಯಂಗಾರ್ |---- |೫೬ |೨೩, ೨೪, ೨೫ ಮಾರ್ಚ್ ೧೯೮೪ |ಕೈವಾರ |ಎ. ಎನ್. ಮೂರ್ತಿರಾವ್ |---- |೫೭ |೫, ೬, ೭ ಏಪ್ರಿಲ್ ೧೯೮೫ |ಬೀದರ್ |ಹಾ. ಮಾ. ನಾಯಕ |---- |೫೮ |೨೯, ೩೦, ೩೧ ಅಕ್ಟೋಬರ್, ೧ ನವೆಂಬರ್ ೧೯೮೭ |ಕಲಬುರಗಿ |ಸಿದ್ಧಯ್ಯ ಪುರಾಣಿಕ |---- |೫೯ |೧೬, ೧೭, ೧೮ ಫೆಬ್ರವರಿ ೧೯೯೦ |ಹುಬ್ಬಳ್ಳಿ |ಆರ್. ಸಿ. ಹಿರೇಮಠ |---- |೬೦ |೨೮, ೨೯, ೩೦ ನವೆಂಬರ್ ೧೯೯೦ |ಮೈಸೂರು |ಕೆ. ಎಸ್. ನರಸಿಂಹಸ್ವಾಮಿ |---- |೬೧ |೯, ೧೦, ೧೧, ೧೨ ಜನವರಿ ೧೯೯೨ |ದಾವಣಗೆರೆ |ಜಿ. ಎಸ್. ಶಿವರುದ್ರಪ್ಪ |---- |೬೨ |೫, ೬, ೭ ಫೆಬ್ರವರಿ ೧೯೯೩ |ಕೊಪ್ಪಳ |ಸಿಂಪಿ ಲಿಂಗಣ್ಣ |---- |೬೩ |೧೧, ೧೨, ೧೩ ಫೆಬ್ರವರಿ ೧೯೯೪ |ಮಂಡ್ಯ |ಚದುರಂಗ |---- |೬೪ |೩, ೪, ೫ ಜೂನ್ ೧೯೯೫ |ಮುಧೋಳ |ಎಚ್. ಎಲ್. ನಾಗೇಗೌಡ |---- |೬೫ |೨೧, ೨೨, ೨೩, ೨೪ ಡಿಸೆಂಬರ್ ೧೯೯೬ |ಹಾಸನ |ಚನ್ನವೀರ ಕಣವಿ |---- |೬೬ |೧೧, ೧೨, ೧೩, ೧೪ ಡಿಸೆಂಬರ್ ೧೯೯೭ |ಮಂಗಳೂರು |ಕಯ್ಯಾರ ಕಿಞ್ಞಣ್ಣ ರೈ |---- |೬೭ |೧೧, ೧೨, ೧೩, ೧೪ ಫೆಬ್ರವರಿ ೧೯೯೯ |ಕನಕಪುರ |ಎಸ್. ಎಲ್. ಭೈರಪ್ಪ |---- |೬೮ |೨೪, ೨೫, ೨೬ ಜೂನ್ ೨೦೦೦ |ಬಾಗಲಕೋಟೆ |ಶಾಂತಾದೇವಿ ಮಾಳವಾಡ |---- |೬೯ |೧೫, ೧೬, ೧೭ ಫೆಬ್ರವರಿ ೨೦೦೨ |ತುಮಕೂರು |ಯು. ಆರ್. ಅನಂತಮೂರ್ತಿ |---- |೭೦ |೭, ೮, ೯ ಮಾರ್ಚ್ ೨೦೦೩ |ಬೆಳಗಾವಿ |ಪಾಟೀಲ ಪುಟ್ಟಪ್ಪ |---- |೭೧ |೧೮, ೧೯, ೨೦, ೨೧ ಡಿಸೆಂಬರ್ ೨೦೦೩ |ಮೂಡುಬಿದಿರೆ |ಕಮಲಾ ಹಂಪನಾ |---- |೭೨ |೨೭, ೨೮, ೨೯ ಜನವರಿ ೨೦೦೬ |ಬೀದರ್ |ಶಾಂತರಸ ಹೆಂಬೆರಳು |---- |೭೩ |೨೦, ೨೧, ೨೨, ೨೩ ಡಿಸೆಂಬರ್ ೨೦೦೭ |ಶಿವಮೊಗ್ಗ |ಕೆ. ಎಸ್. ನಿಸಾರ್ ಅಹಮ್ಮದ್ |---- |೭೪ |೧೨, ೧೩, ೧೪, ೧೫ ಡಿಸೆಂಬರ್ ೨೦೦೭ |ಉಡುಪಿ |ಎಲ್. ಎಸ್. ಶೇಷಗಿರಿ ರಾವ್ |---- |೭೫ |೪, ೫, ೬ ಫೆಬ್ರವರಿ ೨೦೦೯ |ಚಿತ್ರದುರ್ಗ |ಎಲ್. ಬಸವರಾಜು |---- |೭೬ |೧೯, ೨೦, ೨೧ ಫೆಬ್ರವರಿ ೨೦೧೦ |ಗದಗ |ಗೀತಾ ನಾಗಭೂಷಣ |---- |೭೭ |೪, ೫, ೬ ಫೆಬ್ರವರಿ ೨೦೧೧ |ಬೆಂಗಳೂರು |ಜಿ. ವೆಂಕಟಸುಬ್ಬಯ್ಯ |---- |೭೮ |೯, ೧೦, ೧೧ ಡಿಸೆಂಬರ್ ೨೦೧೧ |ಗಂಗಾವತಿ |ಸಿ. ಪಿ. ಕೃಷ್ಣಕುಮಾರ್ |---- |೭೯ |೯, ೧೦, ೧೧ ಫೆಬ್ರವರಿ ೨೦೧೩ |ಬಿಜಾಪುರ |ಕೋ. ಚೆನ್ನಬಸಪ್ಪ |---- |೮೦ |೭, ೮, ೯ ಜನವರಿ ೨೦೧೪ |ಕೊಡಗು |ನಾ. ಡಿಸೋಜಾ |---- |೮೧ |೩೧ ಜನವರಿ, ೧, ೨, ೩ ಫೆಬ್ರವರಿ ೨೦೧೫ |ಶ್ರವಣಬೆಳಗೊಳ |ಸಿದ್ಧಲಿಂಗಯ್ಯ |---- |೮೨ |೨, ೩, ೪ ಡಿಸೆಂಬರ್ ೨೦೧೬ |ರಾಯಚೂರು |ಬರಗೂರು ರಾಮಚಂದ್ರಪ್ಪ |---- |೮೩ |೨೪, ೨೫, ೨೬ ನವೆಂಬರ್ ೨೦೧೭ |ಮೈಸೂರು |ಚಂದ್ರಶೇಖರ ಪಾಟೀಲ |---- |೮೪ |೪, ೫, ೬ ಜನವರಿ ೨೦೧೯ |ಧಾರವಾಡ |ಚಂದ್ರಶೇಖರ ಕಂಬಾರ |---- |೮೫ |೫, ೬, ೭ ಫೆಬ್ರವರಿ ೨೦೨೦ |ಕಲಬುರಗಿ |ಎಚ್. ಎಸ್. ವೆಂಕಟೇಶಮೂರ್ತಿ |---- |೮೬ |೬, ೭, ೮ ಜನವರಿ ೨೦೨೩ |ಹಾವೇರಿ |ದೊಡ್ಡರಂಗೇಗೌಡ |---- |೮೭ |ನಿಗದಿಸಿಲ್ಲ |ಮಂಡ್ಯ |ನಿಯೋಜಿಸಿಲ್ಲ |---- ಉಲ್ಲೇಖಗಳು ಹೊರ ಕೊಂಡಿಗಳು ಸಚಿತ್ರ ಸಮ್ಮೇಳನ ಬರಗೂರರ ಅಧ್ಯಕ್ಷ ಭಾಷಣ:2 Dec, 2016:[] ವರ್ಗ:ಕನ್ನಡ ಸಾಹಿತ್ಯ ವರ್ಗ:ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಜೋಗ್ ಫಾಲ್ಸ್
https://kn.wikipedia.org/wiki/ಜೋಗ್_ಫಾಲ್ಸ್
REDIRECT ಜೋಗ
ದಾವಣಗೆರೆ
https://kn.wikipedia.org/wiki/ದಾವಣಗೆರೆ
right|thumb|ಶ್ರೀ ದುರ್ಗಾಂಬಿಕ ದೇವಿ right|thumb|ದಾವಣಗೆರೆ: ದುರ್ಗಾದೇವಾಲಯದ ಎದುರಿನ ಜಾತ್ರೆಯ ದೃಶ್ಯ right|thumb|ದಾವಣಗೆರೆ: ಸೂರ್ಯಕಾಂತಿ ಹೊಲದ ದೃಶ್ಯ right|thumb|ದಾವಣಗೆರೆ: ದಾವಣಗೆರೆಯಲ್ಲಿ ಮುಹರ್ರಂ right|thumb|ದಾವಣಗೆರೆ: ಮುಂಜಾನೆಯಲ್ಲಿ ಕುಂದವಾಡ ಕೆರೆಯಿಂದ ದಾವಣಗೆರೆ ನಗರದ ವಿಹಂಗಮ ದೃಶ್ಯ ದಾವಣಗೆರೆ - ಕರ್ನಾಟಕ ರಾಜ್ಯದ ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ. ಇದು ರಾಜ್ಯದ ಏಳನೇ ದೊಡ್ಡ ನಗರವಾಗಿದೆ. ದಾವಣಗೆರೆ ಜವಳಿ ಉದ್ಯಮಕ್ಕೆ ಜನಪ್ರಿಯ. ಇಲ್ಲಿನ ದಾವಣಗೆರೆ ಕಾಟನ್ ಮಿಲ್ಸ್ ಬಹಳ ಜನಪ್ರಿಯವಾಗಿದ್ದ ಹೆಸರು. ಅಲ್ಲದೆ, ಬೆಣ್ಣೆದೋಸೆಗೆ ದಾವಣಗೆರೆ ಪ್ರಸಿದ್ಧವಾಗಿದೆ.District Gazetteers Karnataka state ದಾವಣಗೆರೆಯು ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಸ್ಥಳವಾಗಿದ್ದು, ಇಲ್ಲಿ ಹತ್ತಿ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ, ಜೋಳ, ಭತ್ತ ಮತ್ತು ಇತರ ಪ್ರಮುಖ ವಾಣಿಜ್ಯ ಬೆಳೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳಿಂದ ತಂದು ಮಾರುತ್ತಾರೆ. ದಾವಣಗೆರೆ ಇತ್ತೀಚೆಗೆ ರಾಜ್ಯದ ಪ್ರಮುಖ ವಿದ್ಯಾಕೇಂದ್ರವಾಗಿ ಬೆಳೆದಿದ್ದು, ಇಲ್ಲಿ ಚಿತ್ರಕಲೆ, ವಸ್ತ್ರ ವಿನ್ಯಾಸ ಶಾಸ್ತ್ರ, ಎಂಜಿನಿಯರಿಂಗ್ (ಅಭಿಯಂತರ ಶಾಸ್ತ್ರ), ವೈದ್ಯಕೀಯ, ಕಲೆ, ವಾಣಿಜ್ಯ ಹಾಗು ಇತರ ವಿದ್ಯಾ ವಿಭಾಗಗಳನ್ನು ಹೊಂದಿರುವ ಮಹಾವಿದ್ಯಾಲಯಗಳಿವೆ. ಭೂಗೋಳ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಚಿಕ್ಕಮಗಳೂರುಮತ್ತು ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರೆದ ಈ ಊರು, ಪ್ರಮುಖ ಪ್ರದೇಶ. NIC.inಬೆಂಗಳೂರಿನಿಂದ ಮುಂಬೈಗೆ ಹೋಗುವ ಯಾತ್ರಿಕರು ದಾವಣಗೆರೆ ಮೂಲಕವೇ ಹೋಗಬೇಕು. ದಾವಣಗೆರೆಯು ಕರ್ನಾಟಕದ ಹೃದಯಭಾಗದಲ್ಲಿ ೧೪° ೨೮’ ರೇಖಾಂಶ ಮತ್ತು ೭೫° ೫೯’ ಅಕ್ಷಾಂಶದಲ್ಲಿದ್ದು ಸಮುದ್ರ ಮಟ್ಟದಿಂದ ೬೦೨.೫ ಮೀ ಎತ್ತರದಲ್ಲಿದೆ. ದಾವಣಗೆರೆ ಜಿಲ್ಲೆಯ ತಾಲೂಕುಗಳು ದಾವಣಗೆರೆ ಹರಿಹರ ಜಗಳೂರು ಹೊನ್ನಾಳಿ ಚನ್ನಗಿರಿ ನ್ಯಾಮತಿ ಇತಿಹಾಸ ೧೯೯೭ ನೇ ಇಸವಿಯಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್‌, ದಾವಣಗೆರೆಯನ್ನು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಡಿಸಿದರು. ಇದಕ್ಕೂ ಮೊದಲು ದಾವಣಗೆರೆಯು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕುಗಳಲ್ಲೊಂದಾಗಿತ್ತು. ದಾವಣಗೆರೆ ಜಿಲ್ಲೆಯು ಆರು ತಾಲ್ಲೂಕುಗಳಿಂದ ಕೂಡಿದ್ದು ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ. ಪ್ರೇಕ್ಷಣೀಯ ಸ್ಥಳಗಳು ಗದ್ದೆ ರಾಮೇಶ್ವರ ದೇವಸ್ಥಾನ ಕುರುವ ಕುಂದವಾಡ ಕೆರೆ ಶಾಂತಿಸಾಗರ (ಸೂಳೆಕೆರೆ) - ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ. ಭಾರತದಲ್ಲಿಯೆ ಅತಿ ದೊಡ್ಡ ಗ್ಲಾಸ್ ಹೌಸ್ ಹರಪನಹಳ್ಳಿ ತಾಲೂಕು ಬಾಗಳಿ ಕಲ್ಲೇಶ್ವರ ಸ್ವಾಮಿ ದೇವಾಲಯ. ನೀಲಗುಂದ ಭೀಮೇಶ್ವರ ದೇವಾಲಯ ಲಕ್ಕಮುತ್ತೇನಹಳ್ಳಿಯ ಹತ್ತಿರದ ನೀರ್ಥಡಿ ಶ್ರೀ ರಂಗನಾಥ ಸ್ವಾಮಿ ದೆವಾಲಯ(ಚಿತ್ರದುರ್ಗದ ಪಾಳೇಗಾರರ ಕಾಲದ್ದು ೧೬ನೇ ಶತಮಾನ) ಚಿಗಟೇರಿ ಶಿವನಾರದಮುನಿ ದೇವಸ್ತಾನ ಕೊಂಡಜ್ಜಿ ಕೆರೆ ಹರಿಹರ ಸಂಗಮ ಕ್ಷೇತ್ರ. ಹರಿಹರದ ಹರಿಹರೇಶ್ವರ ದೇವಾಲಯ (೧೨ನೇ ಶತಮಾನ, ಚಾಲುಕ್ಯರ ಕಾಲ) ಚನ್ನಗಿರಿಯ ಕೆಳದಿ ಚನ್ನಮ್ಮಾಜಿ ಕಟ್ಟಿದ ಕೋಟೆ ಚನ್ನಗಿರಿ ತಾಲ್ಲೂಕಿನ ಪುಣ್ಯಸ್ಥಳದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ. ಚನ್ನಗಿರಿ ತಾಲೂಕಿನ ಹೋದಿಗೆರೆಯಲ್ಲಿ ಇರುವ ಷಾಜಿ ರಾಜೆ ಬೋಸ್ಲೆ ರವರ(ಶಿವಾಜಿ ಮಹಾರಾಜರ ತಂದೆ) ಸಮಾಧಿ. ಮಾಯಕೊಂಡದಲ್ಲಿನ ಶ್ರೀ ಹಿರೇಮದಕರಿ ನಾಯಕರ ಸಮಾಧಿ. ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯ. ನೀರ್ಥಡಿಯ ಪುರಾತನ ರಂಗನಾಥ ಸ್ವಾಮಿ ದೇವಸ್ಥಾನ - ನರಗನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಶಾಬನೂರಿನ (ಶಾಮನೂರು) ಕೋಟೆ ಪ್ರದೇಶದ ಜೈನ ತೀರ್ಥಂಕರ ಬಸದಿ ಬೇತೂರಿನ ಹಳೆಯ ಶ್ರೀ ಕಲ್ಲೆಶ್ವರ ಸ್ವಾಮಿ ದೇವಸ್ಥಾನ ಬೇತೂರಿನ ಜೈನ ತೀರ್ಥಂಕರ ಮೂರ್ತಿಗಳು ಕೊಮಾರನಹಳ್ಳಿಯ ಪ್ರಸಿದ್ಧವಾದ ಹೆಳವನಕಟ್ಟೆ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ. ಚಿಗಟೆರಿ ಶಿವನಾರದಮುನಿ ದೇವಸ್ತಾನ ಹರಿಹರದ ತುಂಗಭದ್ರೆ ಕೊಂಡಜ್ಜಿಯ ಅರಣ್ಯಧಾಮ ಉಕ್ಕಡಗಾತ್ರಿ ಕರಿಬಸವೇಶ್ವರ, ಅಜ್ಜಯ್ಯ ದೇವಾಲಯ, ನಂದಿಗುಡಿ ವೃಷಭಮಠ ಸಂತೇಬೆನ್ನೂರಿನ ಪುಷ್ಕರಿಣಿ. ದೊಡ್ಡಬಾತಿ ಪವಿತ್ರವನ. ನ್ಯಾಮತಿ ತಾಲೂಕು ತೀರ್ಥರಾಮೇಶ್ವರ ಗೋವಿನಕೋವಿ ಮಠ ಕಣಿವೆ ವೀರಭದ್ರೇಶ್ವರ ದೇವಸ್ಥಾನ ಸವಳಂಗ ಅತಿ ದೊಡ್ಡದಾದ ಕೆರೆ ನ್ಯಾಮತಿ ನಗರದ ಬನಶಂಕರಿ ದೇವಾಲಯ ನ್ಯಾಮತಿ ನಗರದ ಪೇಟೆ ಬಸವೇಶ್ವರ ದೇವಾಲಯ ಚಿನ್ನಿಕಟ್ಟೆ ರುದ್ರಸ್ವಾಮಿ ಮಠ ಕಂಚಿಕೆರೆ ಗ್ರಾಮದ '''''ಶ್ರೀ ಕೋಡಿ ಸಿದ್ದೇಶ್ವರ ಮತ್ತು ಶ್ರೀ ಮದಗಾಂಭಿಕ ದೇವಿ ಪ್ರಾದೇಶಿಕ ದಾವಣಗೆರೆ ಮೊದಲು ಚಿತ್ರದುರ್ಗ ಜಿಲ್ಲೆಗೆ ಸೇರಿತ್ತು. ಆಗಸ್ಟ್ ೧೫, ೧೯೯೭ರಂದು ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್ ಅವರ ನಿರ್ಧಾರದ ಮೇರೆಗೆ ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆ, ಹರಿಹರ, ಮತ್ತು ಜಗಳೂರು ತಾಲ್ಲೂಕುಗಳನ್ನು, ಶಿವಮೊಗ್ಗ ಜಿಲ್ಲೆಯಿಂದ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳನ್ನು, ಹಾಗೂ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕುಗಳನ್ನು ಸೇರಿಸಿ ಹೊಸ ದಾವಣಗೆರೆ ಜಿಲ್ಲೆಯನ್ನು ರಚಿಸಲಾಯಿತು. ೨೦೧೯ರಲ್ಲಿ ಹರಪನಹಳ್ಳಿ ತಾಲೂಕನ್ನು, ತಾಲೂಕಿನ ಜನರ ಆಶಯದ ಮೇರೆಗೆ ಬಳ್ಳಾರಿ ಜಿಲ್ಲೆಗೆ ಸೇರಿಸಲಾಯಿತು. ಜನಸಂಖ್ಯೆ ದಾವಣಗೆರೆ ನಗರವು ೪,೩೫,೧೨೫ ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು ೫೨% ಮತ್ತು ಮಹಿಳೆಯರು ೪೮% ರಷ್ಟಿದ್ದಾರೆ. ದಾವಣಗೆರೆಯು ಸರಾಸರಿ ೮೫% ಸಾಕ್ಷರತೆಯನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ ೭೪.೦೪% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೮೯% ಮತ್ತು ಮಹಿಳಾ ಸಾಕ್ಷರತೆ ೮೧%. ದಾವಣಗೆರೆಯಲ್ಲಿ ಶೇ.೧೨ ರಷ್ಟು ಮಂದಿ ೬ ವರ್ಷದೊಳಗಿನವರು. ೨೦೧೧ ರ ಜನಗಣತಿಯ ಸಮಯದಲ್ಲಿ, ಜನಸಂಖ್ಯೆಯ ೬೬.೩೭% ರಷ್ಟು ಜನರು ಕನ್ನಡ, ೨೩.೮೨% ರಷ್ಟು ಉರ್ದು, ೨.೮೧% ರಷ್ಟು ತೆಲುಗು, ೧.೯೬% ರಷ್ಟು ಮರಾಠಿ, ೧.೧೭% ರಷ್ಟು ತಮಿಳು ಮತ್ತು ೧.೦೪% ರಷ್ಟು ಕೊಂಕಣಿಯನ್ನು ತಮ್ಮ ಮೊದಲ ಭಾಷೆಯಾಗಿ ಮಾತನಾಡುತ್ತಾರೆ. ದಾವಣಗೆರೆಯ ಆಹಾರ ವೈಶಿಷ್ಟ್ಯ left|thumb|ಬೆಣ್ಣೆ ದೋಸೆ ಮಾಡುತ್ತಿರುವುದು right|thumb|ಬೆಣ್ಣೆ ದೋಸೆ ದಾವಣಗೆರೆ ಮಧ್ಯ ಕರ್ನಾಟಕದ ನಗರವಾಗಿರುವುದರಿಂದ ಇದು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರ ವೈಶಿಷ್ಟ್ಯಗಳ ಅನನ್ಯ ಸಂಗಮವಾಗಿದೆ. ದಾವಣಗೆರೆಯಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ, ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ, ಕುರಶನಿ(ಗುರೆಳ್ಳು, ಹುಚ್ಚೆಳ್ಲು)ಪುಡಿ ಹೊಂದಿರುವ ಆಹಾರ ತಿನಿಸುಗಳೂ ದೊರೆಯುತ್ತವೆ ಮತ್ತು ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದ(ಮೈಸೂರು ಪ್ರಾಂತ್ಯದ) ರಾಗಿ ಮುದ್ದೆಗಳೂ ಇಲ್ಲಿನ ಆಹಾರ ಪದಾರ್ಥಗಳಾಗಿವೆ. ರೊಟ್ಟಿಯೊಂದಿಗೆ ಅನ್ನವೂ ಬಳಸಲ್ಪಡುತ್ತದೆ. ದೋಸೆ(ಹಲವು ಪ್ರಕಾರಗಳನ್ನು ಕೆಳಗೆ ವರ್ಗೀಕರಿಸಲಾಗಿದೆ) ಒಂದು ವಿಶಿಷ್ಟ ತಿನಿಸಾಗಿದೆ. ದಾವಣಗೆರೆ ಬೆಣ್ಣೆ ದೋಸೆ ವಿಶ್ವದಲ್ಲೇ ಪ್ರಸಿದ್ಧಿ ಹೊಂದಿದೆ ಮತ್ತು ಇಲ್ಲಿನ ವಿಶಿಷ್ಟ. ಮಿರ್ಚಿ ಮಂಡಕ್ಕಿ ತವರೂರಾಗಿದೆ. ಸಿಹಿ ತಿನಿಸಾದ ಗುಳ್ಳಡಿಕಿ ಉಂಡಿ ದಾವಣಗೆರೆಯಲ್ಲಿ ಮಾತ್ರ ಮಾಡಲಾಗುತ್ತದೆ ಮತ್ತು ಇಲ್ಲಿ ಮಾತ್ರ ದೊರೆಯುತ್ತದೆ. ದಾವಣಗೆರೆಯ ವಾಣಿಜ್ಯ ದಾವಣಗೆರೆ ಪಟ್ಟಣ ಮಧ್ಯ ಕರ್ನಾಟಕದ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಇದು ಅನೇಕ ಹತ್ತಿ ಗಿರಣಿಗಳು ಮತ್ತು ಬಟ್ಟೆ ವ್ಯಾಪಾರ ಸಂಸ್ಥೆಗಳು "ಕರ್ನಾಟಕದ ಮ್ಯಾಂಚೆಸ್ಟರ್" ಎಂದು ಶ್ಲಾಘಿಸಿದರು. ಇದು ರಾಜ್ಯ ಕೇಂದ್ರದಲ್ಲಿ ಭೌಗೋಳಿಕ ಸ್ಥಳ ಮತ್ತು ಉತ್ತಮ ರೈಲು, ರಸ್ತೆ ಸಂಪರ್ಕ ವಹಿವಾಟಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ದಾವಣಗೆರೆ ಜಿಲ್ಲಾ ಅರ್ಧದಷ್ಟು ಭದ್ರ ಜಲಾಶಯ ನೀರಾವರಿ. ಅಕ್ಕಿ, ಅಡಿಕೆ, ಮೆಕ್ಕೆಜೋಳ ಮತ್ತು ಹತ್ತಿ ಅನೇಕ ಶ್ರೀಮಂತ ನಗದು ಮತ್ತು ಆಹಾರ ಬೆಳೆಗಳನ್ನು. ಪ್ರಸ್ತುತ ದಾವಣಗೆರೆ ಸುಮಾರು ಪ್ರಮುಖ ಕೃಷಿ ಕೈಗಾರಿಕಾ ಚಟುವಟಿಕೆ ಮತ್ತು ಈ ಪ್ರದೇಶದಲ್ಲಿ ಸುಮಾರು ಸಕ್ಕರೆ ಮಿಲ್ಲುಗಳು ಜೊತೆಗೆ, ಅಕ್ಕಿ ಮತ್ತು ಕಬ್ಬು ಬೆಳೆಸಬಹುದು. ದಾವಣಗೆರೆ ಬಳಿ ದುಗ್ಗಾವತಿ ಗ್ರಾಮದಲ್ಲಿದೆ. ಶುಗರ್ ಮಿಲ್ಸ್ ಅಸ್ತಿತ್ವದಲ್ಲಿವೆ ಮತ್ತು ದಾವಣಗೆರೆಯ ಪ್ರಮುಖ ಉದ್ಯಮವಾಗಿದೆ. ಅಕ್ಕಿ ಗಿರಣಿಗಳು ಅನೇಕ ಬೈಪಾಸ್ ರಸ್ತೆಯ ಬಳಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಮತ್ತು ಈ ಪಟ್ಟಣದ ಸುತ್ತ ಮಂಡಕ್ಕಿ ಸುತ್ತಿಸಿ ಅಕ್ಕಿ ಮಾಡುವ ಅನೇಕ ಅಕ್ಕಿ ಗಿರಣಿಗಳು ಇವೆ. ದಾವಣಗೆರೆ ಬಟ್ಟೆ ಗಿರಣ ಪ್ರಸಿದ್ಧವಾಗಿದೆ. ಶಂಕರ್ ಟೆಕ್ಸ್ಟೈಲ್ಸ್ ಮಿಲ್ಸ್, ಹತ್ತಿ ವುಲನ್ ಮತ್ತು ಸಿಲ್ಕ್ ಮಿಲ್ಸ್ ಲಿ, ಎಲ್ಲಾ ನಗರದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ. ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಹತ್ತಿ ಗಿರಣಿಗಳು: ಆಂಜನೇಯ ಕಾಟನ್ ಮಿಲ್, ಗಣೇಶ್ ಮಿಲ್, ಮತ್ತು ಸಿದ್ದೇಶ್ವರ ಕಾಟನ್ ಮಿಲ್. ದಾವಣಗೆರೆ ೧೯೮೦ ರವರೆಗೆ ೧೯೬೦ ರ ಪ್ರಮುಖ ಹತ್ತಿ ಬಟ್ಟೆಯ ರಫ್ತು. ಆದರೆ ಗಿರಣಿಗಳ ೧೯೯೦ ರ ಮುಚ್ಚಲಾಯಿತು. ದಾವಣಗೆರೆ ದೊಡ್ಡ ವಸ್ತ್ರ ಅಥವಾ ಬಟ್ಟೆ ಅಂಗಡಿ, ಅಂದರೆ ಬಿ.ಎಸ್ ಚನ್ನಬಸಪ್ಪ ಮತ್ತು ಸನ್ಸ್. ತನ್ನ ಶಾಖೆಗಳನ್ನು ನಗರದಲ್ಲಿ ಹರಡಿದೆ ಇದು ಮಧ್ಯ ಕರ್ನಾಟಕದ ದೊಡ್ಡ ಬಟ್ಟೆಯ ಅಂಗಡಿಯಲ್ಲಿ ಒಂದು.ಹರಿಹರ ನಲ್ಲಿ ವಿಸ್ಕೋಸ್ ಸ್ಟೇಪಲ್ ಫೈಬರ್ಸ್ (ಎಂಬ ಹರಿಹರ ಪಾಲಿ ಫೈಬರ್ಸ್ & Grasilene ವಿಭಾಗ) ವಿಶ್ವದ ಎರಡನೇ ದೊಡ್ಡ ತಯಾರಕ ಇದು ಆದಿತ್ಯ ಬಿರ್ಲಾ ಗ್ರೂಪ್ ಸಂಸ್ಥೆ ಗ್ರಾಸಿಮ್ ಇಂಡಸ್ಟ್ರೀಸ್ ತಯಾರಿಕಾ ಘಟಕವನ್ನು ಹೊಂದಿದೆ ಹಾಗೆಯೆ ಹರಿಹರ ಹತ್ತಿರ ಇರುವ ಬೆಳ್ಳೂಡಿ ಕೈಗಾರಿಕಾ ಪ್ರದೇಶದ ಹತ್ತಿರ ಕಾರ್ಗಿಲ್ ಇಂಡಿಯಾ ಸಂಸ್ಥೆಯು ಗ್ಲೂಕೋಸ್ ಮತ್ತು ಕೃಷಿ ಸಂಭಂದಿಸಿದ ವಸ್ತುಗಳ ತಯಾರಿಕಾ ಘಟಕವನ್ನು ಸ್ಥಾಪಿಸಿದೆ ಶೀಘ್ರದಲ್ಲೆ ಘಟಕವು ಕಾರ್ಯನಿರ್ವಹಿಸುವುದು. ನ್ಯಾಮತಿ ಯಲ್ಲಿ ಅತಿ ಹೆಚ್ಚು ತರಕಾರಿ ಬೆಳೆಗಳನ್ನು ಬೆಳೆದು ಉಡುಪಿ ಮಂಗಳೂರು ಮಣಿಪಾಲ್ ಚಿಕ್ಕಮಂಗಳೂರು ಬಾಳೆಹೊನ್ನೂರು ಕಳಸ ಮುಂತಾದ ಸ್ಥಳಗಳಿಗೆ ರಫ್ತುು ಮಾಡಲಾಗುತ್ತದೆ. ದಾವಣಗೆರೆಯ ವಿಶಿಷ್ಟ ತಿನಿಸುಗಳು ಬೆಣ್ಣೆದೋಸೆ, ಖಾರ ಮಂಡಕ್ಕಿ, ಓಪನ್ನ್ ಬೆಣ್ಣೆದೋಸೆ, ಮಸಾಲೆ ಬೆಣ್ಣೆದೋಸೆ, ಗುಳ್ಳಡಕಿ ಉಂಡೆ, ಅತ್ತಿಕಾಯಿ, ಹಿಟ್ಟು ಹಚ್ಚಿದ ಮೇಣಸಿನಕಾಯೆ, ನರ್ಗೀಸ್ ಮಂಡಕ್ಕಿ, ಮಸಾಲೆ ಮಂಡಕ್ಕಿ, ಮಸಾಲೆ ಅವಲಕ್ಕಿ ತಾಳಿಪೇಟ್ಟು. ಪ್ರಮುಖ ವಿದ್ಯಾಸಂಸ್ಥೆಗಳು ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಸ್ನಾತಕೋತ್ತರ ಕೇಂದ್ರ ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ(ಬಿ.ಡಿ.ಟಿ) ಲಲಿತಕಲಾ ಮಹಾವಿದ್ಯಾಲಯ, ಬಾಪೂಜಿ ವಿದ್ಯಾ ಸಂಸ್ಥೆ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ(ಜೆ.ಜೆ.ಎಂ) ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ(ಬಿ.ಐ.ಇ.ಟಿ) ಜಿ ಮಲ್ಲಿಕಾರ್ಜುನಪ್ಪ ತಾಂತ್ರಿಕ ಮಹಾವಿದ್ಯಾಲಯ(ಜಿ.ಎಂ.ಐ.ಟಿ) ಎಸ್.ಎಸ್.ಮೆಡಿಕಲ್ ಕಾಲೇಜು ಬಾಪೂಜಿ ದಂತ ವೈದ್ಯಕೀಯ ಮಹಾವಿದ್ಯಾಲಯ (ದಂತ ಕಾಲೇಜು) ದಂತವಿಜ್ಞಾನ ಮಹಾವಿದ್ಯಾಲಯ(ಸಿ.ಒ.ಡಿ.ಎಸ್) ಕಲಾನೀಕೇತನ ವಸ್ತ್ರವಿನ್ಯಾಸ ಮಹಾವಿದ್ಯಾಲಯ(ಕೆ.ಸಿ.ಎಪ್.ಡಿ) ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ಪಾಲಿಟೆಕ್ನಿಕ್(ಡಿ.ಆರ್.ಆರ್) ಧರ್ಮಪ್ರಕಾಶ ರಾಜನಹಳ್ಳಿ ಮದ್ದೂರಾಯಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ(ಡಿ.ಆರ್.ಎಂ) ವಿಶ್ವವಿದ್ಯಾನಿಲಯ ಲಲಿತಕಲಾ ಮಹಾವಿದ್ಯಾಲಯ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಕಾನೂನು ವಿದ್ಯಾಲಯ ಬಾಪೂಜಿ ವಿದ್ಯಾಸಂಸ್ಥೆಗಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದಾವಣಗೆರೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಗಳು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್. ದಾವಣಗೆರೆ ವಿದ್ಯಾಸಂಸ್ಥೆ. ಇತರ ತಾಣಗಳು ದಾವಣಗೆರೆ ಮಹಾನಗರ ಪಾಲಿಕೆ ದಾವಣಗೆರೆ ವಿಶ್ವವಿದ್ಯಾನಿಲಯ ದಾವಣಗೆರೆ ದಾವಣಗೆರೆ ಜಿಲ್ಲಾ ರಸ್ತೆ ನಕ್ಷೆ ದಾವಣಗೆರೆ ಜಿಲ್ಲೆಯ ನಕ್ಷೆ ಉಲ್ಲೇಖಗಳು ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ದಾವಣಗೆರೆ ವರ್ಗ:ದಾವಣಗೆರೆ ಜಿಲ್ಲೆಯ ತಾಲೂಕುಗಳು ವರ್ಗ:ಭಾರತದ ಜಿಲ್ಲೆಗಳು ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ
ಜೆ ಹೆಚ್ ಪಟೇಲ್
https://kn.wikipedia.org/wiki/ಜೆ_ಹೆಚ್_ಪಟೇಲ್
ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ - ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು. ಹೊರಗಿನ ಸಂಪರ್ಕಗಳು ಸ್ಮರಣಾರ್ಥ ಅಂತರಜಾಲ ತಾಣ ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು ವರ್ಗ:ಕರ್ನಾಟಕದ ರಾಜಕೀಯ ವರ್ಗ:ದಾವಣಗೆರೆಯ ಪ್ರಮುಖ ವ್ಯಕ್ತಿಗಳು ವರ್ಗ:೧೯೩೦ ಜನನ ವರ್ಗ:೨೦೦೦ ನಿಧನ ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರುವರ್ಗ:ಕರ್ನಾಟಕ ರಾಜಕಾರಣಿಗಳು
ಮೈಸೂರು ವಿಶ್ವವಿದ್ಯಾಲಯ
https://kn.wikipedia.org/wiki/ಮೈಸೂರು_ವಿಶ್ವವಿದ್ಯಾಲಯ
thumb|ಕ್ರಾಫರ್ಡ್ ಭವನ thumb|right|ಕುಲಪತಿಗಳ ಕಾರ್ಯಾಲಯ, ಕ್ರಾಫರ್ಡ್ ಭವನ ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಎಚ್.ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇತಿಹಾಸ ಮೈಸೂರು ವಿಶ್ವವಿದ್ಯಾಲಯವು ೧೯೧೬ರ ಜುಲೈ ೧೭ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಪ್ರಾರಂಭ ವಾದದ್ದು. ಥಾಮಸ್ ಡೆನ್ಹಾಮ್ ಮತ್ತು ಸಿ.ಆರ್.ರೆಡ್ಡಿ ಅವರು, ಅಮೆರಿಕ ಪ್ರವಾಸ ನಂತರ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾಲಯವನ್ನು ಮಹಾರಾಜರು ಸ್ಥಾಪಿಸಿದರು. ಮುಖ್ಯವಾಗಿ ಷಿಕಾಗೊ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ರಚನೆ ಮತ್ತು ಆಡಳಿತಗಳ ಆಳವಾದ ವಿಶ್ಲೇಷಣೆಯ ಮೇಲೆ ಮೈಸೂರು ವಿಶ್ವವಿದ್ಯಾಲಯವನ್ನು ಆಧರಿಸಲಾಯಿತು. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅಪ್ರತಿಮ ವಿದ್ಯಾ ಕೇಂದ್ರಗಳಲ್ಲಿ ಒಂದೆನಿಸಿತು. ನನಸಾದ ವಿಶ್ವವಿದ್ಯಾನಿಲಯ ಸ್ಥಾಪನೆಯ ಹಿಂದೆ, ಆಧುನಿಕ ಮೈಸೂರು ನಿರ್ಮಾಪಕ ಎಂಬ ಪ್ರಶಂಸೆಗೆ ಪಾತ್ರರಾದ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಶಿಕ್ಷಣದ ರೂವಾರಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಣಿಕೆ ಬಹಳ ದೊಡ್ಡದು. ಹೇಮಂತ್ ಕುಮಾರ್ ಪ್ರಸಕ್ತ ಹಂಗಾಮಿ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸುತಿದ್ದಾರೆ. [] ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯ "ನಹಿ ಜ್ಞಾನೇನ ಸದೃಶಂ" ಎಂಬುದು ಮೈಸೂರು ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯವಾಗಿದೆ. ಅಂದರೆ ಜ್ಞಾನಕ್ಕೆ ಸಮಾನವಾದದು ಬೇರೆ ಇಲ್ಲ ಎಂದರ್ಥ. ಈ ವಾಕ್ಯವನ್ನು ಭಗವದ್ಗೀತೆಯಿಂದ ಆಯ್ದುಕೊಳ್ಳಲಾಗಿದೆ. ಇದನ್ನು ದೇವನಾಗರಿ ಲಿಪಿ ಯಲ್ಲಿ ಬರೆಯಲಾಗಿದೆ. ಈ ಲಾಂಛನದ ತಳಭಾಗದಲ್ಲಿ 'ಸತ್ಯಮೇವೋದ್ಧರಾಮ್ಯಹಂ' ಎಂಬ ಸಂಸ್ಕೃತ ನುಡಿ ಇದೆ. ಅಂದರೆ- ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ ಎಂಬುದಾಗಿದೆ. ಪ್ರಚಾರೋಪನ್ಯಾಸ ಮಾಲೆ ೧೯೩೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಾಂಗ ಶುರುವಾಯಿತು. ಬಹುತೇಕ ಶಿಕ್ಷಣತಜ್ಞರ ಪ್ರಕಾರ ಇದು ಮೈಸೂರು ವಿಶ್ವವಿದ್ಯಾನಿಲಯದ ಜೀವನಾಡಿ. ವಿಶ್ವವಿದ್ಯಾನಿಲಯದ ಪ್ರಕಟಣೆಗಳನ್ನು ಹೊರತರುವುದು ಇದರ ಮುಖ್ಯಧ್ಯೇಯ. ಈ ಸಂಸ್ಥೆ ತನ್ನ ನೆಲದ ಅನಕ್ಷರಸ್ಥರಿಗಾಗಿ ಪ್ರಚಾರೋಪನ್ಯಾಸ ಮಾಲೆ ಎಂಬ ವಿಶಿಷ್ಟಸೇವೆಯನ್ನು ಆರಂಭಿಸಿತು. ಈ ಕುರಿತು ಶ್ರೀಯುತ ಕುವೆಂಪು ಅವರ ಮಾತಿನಲ್ಲಿ ಹೇಳುವುದಾದರೆ - 'ದೇಶದಲ್ಲಿರುವ ಎಲ್ಲರೂ ವಿಶ್ವವಿದ್ಯಾನಿಲಯಕ್ಕೆ ಹೋಗಲಾರರಷ್ಟೇ! ಆದರೆ ವಿಶ್ವವಿದ್ಯಾನಿಲಯ ಎಲ್ಲರ ಮನೆ ಬಾಗಿಲಿಗೂ ಹೋಗಬಲ್ಲದು.' ಈ ರೀತಿ ವಿಶ್ವವಿದ್ಯಾನಿಲಯದ ತಜ್ಞರು ಹಳ್ಳಿ ಹಳ್ಳಿಗೆ ತೆರಳಿ, ರೈತಾಪಿ ಜನರಿಗೆ ಉಪನ್ಯಾಸ ನೀಡುವುದು ಹಾಗೂ ಈ ಉಪನ್ಯಾಸವನ್ನು ಕಿರು ಪುಸ್ತಕರೂಪದಲ್ಲಿ ಪ್ರಕಟಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುವುದಾಗಿದೆ. ಈ ಯೋಜನೆಯ ಉದ್ದೇಶ ದುಡ್ಡು ಮಾಡುವುದಲ್ಲ. ವಿಶ್ವವಿದ್ಯಾನಿಲಯದ ಜನತೆಯ ನಡುವೆ ಜ್ಞಾನ೮ಪ್ರಸಾರ ಮಾಡುವುದು. ಹಾಗಾಗಿ ಆರಂಭದಲ್ಲಿ ಪುಸ್ತಕದ ಮುಖಬೆಲೆ ಎರಡಾಣೆಯಾಗಿತ್ತು. ಇದುವರೆವಿಗೂ ಸಾವಿರಾರು ವಿಷಯಗಳ ಕುರಿತು, ಲಕ್ಷಾಂತರ ಪುಸ್ತಕಗಳು ಬಿಕರಿಯಾಗಿವೆ. ಆಧುನಿಕ ವಿಜ್ಷಾನದ ವಿಷಯಗಳಿಂದ ಹಿಡಿದು, ವೈದ್ಯಕೀಯ ವಿಷಯಗಳು, ಕಣ್ಣು ಮತ್ತು ಅದರ ರಕ್ಷಣೆ, ಹೆರಿಗೆ ಮತ್ತು ಶಿಶುಸಂರಕ್ಷಣೆಯಂಥ ಪುಸ್ತಕಗಳು ಈ ಯೋಜನೆಯಲ್ಲಿ ಪ್ರಕಟವಾಗಿವೆ. ಇದು ೧೯೩೪ ರಲ್ಲಿ ಆಕ್ಸ್ ಫರ್ಢ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ಗಮನಸೆಳೆಯಿತು. ಮುಂದೆ ಜಾಗತಿಕವಾಗಿ ' ಮೈಸೂರು ವಿಶ್ವವಿದ್ಯಾನಿಲಯ ಪ್ರಯೋಗ' ಎಂದೇ ಪ್ರಸಿದ್ಧಿಯಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಧೀಮಂತ ವಿದ್ವಾಂಸರು ಯಾವುದೇ ವಿಶ್ವವಿದ್ಯಾನಿಲಯದ ಗುಣಮಟ್ಟವನ್ನು ಅಲ್ಲಿನ ಸುಂದರವಾದ ಕ್ಯಾಂಪಸ್‍ನಿಂದಾಗಲಿ, ಸೌಲಭ್ಯ-ಸೌಕರ್ಯ, ಕಟ್ಟಡ, ವಾಸ್ತುಶಿಲ್ಪಗಳಿಂದಾಗಲಿ ಅಳೆಯುವುದಿಲ್ಲ. ಬದಲಿಗೆ ಆ ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮಾಡಿದ ಅಧ್ಯಾಪಕರು ಹಾಗೂ ವಿಶ್ವವಿದ್ಯಾನಿಲಯ ರೂಪಿಸಿದ ವಿಜ್ಞಾನಿಗಳು, ಕಲಾವಿದರು, ಸಾಹಿತಿಗಳು, ಸಾಧಕರ ಪಟ್ಟಿಯನ್ನು ನೋಡಿ, ವಿಶ್ವವಿದ್ಯಾನಿಲಯದ ಒಳ ಸೌಂದರ್ಯವನ್ನು ಅಳೆಯುತ್ತಾರೆ. ಅಂತೆಯೇ ಮೈಸೂರು ವಿಶ್ವವಿದ್ಯಾನಿಲಯ ಕೂಡ ಬದುಕಿನ ನಾನಾ ವಲಯಗಳಿಗೆ ಶ್ರೇಷ್ಠವಾದ ಮಾನವಸಂಪನ್ಮೂಲವನ್ನು ನೀಡಿದೆ. ಆಡಳಿತ, ಶಿಕ್ಷಣ, ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ನಾಟಕ, ಸಂಗೀತ, ಪತ್ರಿಕೋದ್ಯಮ ಹೀಗೆ ವಿವಿಧ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿದ ಸಾವಿರಾರು ಮಂದಿ ವಿದ್ಯಾರ್ಥಿಗಳು, ಅಧ್ಯಾಪಕರು ಇಲ್ಲಿಂದ ಒಡಮೂಡಿದ್ದಾರೆ. ಕುವೆಂಪು, ಕೆ.ಟಿ.ಷಾ, ಡಾ.ಎಸ್.ರಾಧಾಕೃಷ್ಣನ್, ಎಂ.ಹಿರಿಯಣ್ಣ, ಜೆ.ಸಿ.ರೋಲೋ, ಎ.ಆರ್.ವಾಡಿಯಾ, ಸಿ.ಡಿ.ನರಸಿಂಹಯ್ಯ, ಆರ್.ಕೆ.ಲಕ್ಷ್ಮಣ್, ಡಾ.ಜಿ.ಎಸ್.ಶಿವರುದ್ರಪ್ಪ, ಎಂ.ವಿ.ಗೋಪಾಲಸ್ವಾಮಿ, ಡಾ.ಹಾ.ಮಾ.ನಾಯಕ, ದೇಜಗೌ, ಡಾ. ಸಿ. ಎನ್. ಆರ್. ರಾವ್, ನಾರಾಯಣಮೂರ್ತಿ, ಜಾವಗಲ್ ಶ್ರೀನಾಥ್, ಎಸ್.ನಿಜಲಿಂಗಪ್ಪ, ಎಸ್.ಎಂ.ಕೃಷ್ಣ, ಯು.ಆರ್.ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಎಚ್.ವೈ.ಶಾರದಾಪ್ರಸಾದ್, ದೇವರಾಜ ಅರಸ್, ಸಿದ್ಧರಾಮಯ್ಯ, ಕೆ.ವಿ.ಸುಬ್ಬಣ್ಣ, ರಘು ದೀಕ್ಷಿತ್ ಪಂಡಿತ್ ರಾಜೀವ ತಾರಾನಾಥ್ ಮುಂತಾದವರು ವಿಶ್ವವಿದ್ಯಾನಿಲಯದ ಶ್ರೇಷ್ಠ ಸಂಪನ್ಮೂಲವ್ಯಕ್ತಿಗಳು. ೧೦೦ವರ್ಷಗಳಿಂದ ವಿಶ್ವವಿದ್ಯಾನಿಲಯ ಮಾಡಿರುವ ಶ್ರೇಷ್ಠ ಕೆಲಸ ಇದಾಗಿದೆ. ಬರೀ ವಿವಿಯಲ್ಲ, ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ೧೧ ಅಧ್ಯಯನ ವಿಭಾಗಗಳ ಮೂಲಕ ೧೯೧೬ ರಲ್ಲಿ ಆರಂಭವಾದ ಮೈಸೂರು ವಿಶ್ವವಿದ್ಯಾನಿಲಯ ಕಳೆದ ಒಂಭತ್ತುವರೆ ದಶಕದಲ್ಲಿ ಕ್ರಮಿಸಿರುವ ಹಾದಿ ಅನನ್ಯ. ಪ್ರಸ್ತುತ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ೫೪ ಸ್ನಾತಕೋತ್ತರ ಅಧ್ಯಯನ ವಿಭಾಗಗಳು, ೨೦೨ ಸಂಯೋಜಿತ ಕಾಲೇಜುಗಳು, ೪೯ ಸಂಶೋಧನ ಸಂಸ್ಥೆಗಳು, ೩೮ ಹೊರ ರೀಚ್ ಕೇಂದ್ರಗಳು, ೫೫೦೦ ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಒಳಗೊಂಡು, ಇಡೀ ದಕ್ಷಿಣ ಭಾರತಕ್ಕೆ ಹೆಮ್ಮೆಯ ವಿಶ್ವವಿದ್ಯಾ ನಿಲಯವಾಗಿದೆ. ಇಲ್ಲಿ ೩೬ಕ್ಕೂ ಹೆಚ್ಚು ದೇಶದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಂತರಾಷ್ಟ್ರೀಯ ಕೇಂದ್ರ, ಎಜುಕೇಶನಲ್ ಮಲ್ಟಿಮೀಡಿಯಾ ರೀಸರ್ಚ ಸೆಂಟರ್, ಸೆಂಟರ್ ಫಾರ್ ಇನ್ಫರ್ಮೇಷನ್ ಅಂಡ್ ಟೆಕ್ನಾಲಜಿ(ಸಿಸ್ಟ್), ಯೂನಿವರ್ಸಿಟಿ ಆಫ್ ಸ್ಕೂಲ್ ಡಿಸೈನ್, ಗಾಂಧಿಭವನ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಸೆಂಟರ್ ಫಾರ್ ಪ್ರೊಫಿಶಿಯನ್ಸಿ ಡೆವಲಪ್ಮೆಂಟ್ ಅಂಡ್ ಪ್ಲೇಸ್ಮೆಂಟ್ ಸರ್ವೀಸಸ್, ಹೊರದೇಶಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಹಾಸ್ಟೆಲ್ ಸೌಲಭ್ಯ, ಭವ್ಯವಾದ ಗ್ರಂಥಾಲಯವನ್ನು ಹೊಂದಿದೆ. ಆಧುನಿಕ ಕಾಲದ ಮೌಲ್ಯಮಾಪನ ವಿಧಿ-ವಿಧಾನ ವ್ಯವಸ್ಥೆಗೆ ತಕ್ಕಂತೆ ರೂಪುಗೊಳ್ಳುತ್ತಿರುವ ವಿಶ್ವವಿದ್ಯಾನಿಲಯ ಇದುವರೆವಿಗೂ ನ್ಯಾಕ್ ನಿಂದ ಮೂರು ಬಾರಿ ಮೌಲ್ಯಾಂಕನಕ್ಕೆ ಒಳಗಾಗಿ, ಅಷ್ಟೂ ಬಾರಿಯೂ ನ್ಯಾಕ್ ಮಾನ್ಯತೆ ಪಡೆದಿದೆ. ಪ್ರಸ್ತುತ ನ್ಯಾಕ್ ನಿಗದಿಪಡಿಸಿದ್ಧ ೪ ಅಂಕಗಳ ಸ್ಕೇಲ್ ನಲ್ಲಿ, ೩.೪೭ ಕ್ರಮಾಂಕದಲ್ಲಿ ಗುರುತಿಸಿಕೊಂಡಿರುವ ವಿವಿ 'ಎ' ಗ್ರೇಡ್ ಮಾನ್ಯತೆ ಪಡೆದಿದೆ. ೧೯೮೬ ರಿಂದ ಇಲ್ಲಿಯವರೆವಿಗೂ ೩೬೦೦ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದೆ. ಇದೆಲ್ಲದರೆ ಪರಿಣಾಮ ಕೇಂದ್ರ ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯವನ್ನು ೨೦೧೧-೧೨ನೇ ಸಾಲಿನಲ್ಲಿ "ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್" ಎಂಬ ಕೀರ್ತಿ ನೀಡಿ ೧೦೦ ಕೋಟಿ ರೂ.ಅನುದಾನ ನೀಡಿದೆ. ವಿಶ್ವವಿದ್ಯಾ ನಿಲಯದಲ್ಲಿ ನಡೆಯುವ ಸಂಶೋಧನೆಗಳಿಗೆ ಮನಸೋತ ಯುಜಿಸಿ ಕೂಡ 'ಯೂನಿವರ್ಸಿಟಿ ವಿತ್ ಪೊಟೆಂಷಿಯಲ್ ಫಾರ್ ಎಕ್ಸಲೆನ್ಸ್ ಎಂದು ಬೆನ್ನು ತಟ್ಟಿ ೫೦ ಕೋಟಿ ನೀಡಿದೆ. University of Mysore gets potential for excellence tag , January 6th, 2012,TOI ವಿಶ್ವವಿದ್ಯಾನಿಲಯ ಸಂಜೆ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜು ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು. ೨೦೧೫ ರಲ್ಲಿ ಸುವರ್ಣ ಮೊಹೋತ್ಸವವನ್ನು ಆಚರಿಸಿರುವ ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದ, ಮಾಡುತ್ತಿರುವ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆ. ಇಲ್ಲಿ ತರಗತಿಗಳು ಸಂಜೆ ವೇಳೆ ನಡೆಯುವುದರಿಂದ ಬಹುತೇಕ ಉದ್ಯೋಗಸ್ಥರ ಅಕ್ಷರ ದಾಹವನ್ನು ನೀಗುತ್ತಿರುವ ಸಂಜೆ ಮಲ್ಲಿಗೆ ಇದು. ಪ್ರಸ್ತುತ ಬಿ.ಎ. ಬಿ.ಕಾಂ ಮತ್ತು ಬಿ.ಬಿ.ಎಂ ಪದವಿಗಳಿಗೆ ಇಲ್ಲಿ ಪ್ರವೇಶಾತಿ ಉಂಟು. ೨೦೧೩-೧೪ನೇ ಸಾಲಿನಲ್ಲಿ ಮೈಸೂರು ವಿ.ವಿ.ಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಂಜೆ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಆರಂಬಿಸಿದೆ. ಈ ಸಾಲಿನಿಂದ ಎಂ.ಎ. ಇತಿಹಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪ್ಸಿಸಲಾಗಿದೆ. ಪ್ರಸ್ತುತ ೧೮ ಅಧ್ಯಾಪಕರು ಮತ್ತು ಸುಮಾರು ೩೦ ಮಂದಿ ಅತಿಥಿ ಉಪನ್ಯಾಸಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ೮೦೦ ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ[ಎನ್.ಎಸ್.ಎಸ್] ಮತ್ತು ರಾಷ್ಟ್ರೀಯ ಸೇವಾದಳ[ಎನ್.ಸಿ.ಸಿ] ಘಟಕಗಳು ಸಕ್ರಿಯವಾಗಿವೆ. ಕಾಲೇಜಿನಿಂದ "ಸಂಜೆ ಮಲ್ಲಿಗೆ" ಎಂಬ ವಾರ್ಷಿಕ ಸಂಚಿಕೆ ಹೊರಬರುತ್ತಿದೆ. ಈ ಬಾರಿ ಎಂ ಎ.ಇತಿಹಾಸ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿದ್ದು 'ಎ'ಯೋಜನೆ[ಸ್ಕೀಮ್] ಅಡಿಯಲ್ಲಿ ೧೪ ಸೀಟುಗಳು ಮತ್ತು 'ಬಿ'ಯೋಜನೆ[ಸ್ಕೀಮ್] ಅಡಿಯಲ್ಲಿ ೭ ಸೀಟುಗಳು ಲಭ್ಯವಿವೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳ ಪಟ್ಟಿ ಕ್ರಿ.ಶ.೧೯೧೬ರಲ್ಲಿ ಪ್ರಾರಂಭಗೊಂಡ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳ ಪಟ್ಟಿ. ಕ್ರಮ ಸಂಖ್ಯೆಕುಲಪತಿಗಳ ಹೆಸರು ಎಲ್ಲಿಂದಎಲ್ಲಿಯವರೆಗೆ೧ಶ್ರೀಎಚ್.ವಿ.ನಂಜುಂಡಯ್ಯ ೧೯೧೬ ೧೯೨೦೨ಶ್ರೀಕೆ.ಟಿ.ಬ್ರಜೇಂದ್ರನಾಥ್ ಸೀಲ್೧೯೨೧೧೯೨೯೩ಡಾ.ಇ.ಪಿ.ಮೆಟ್ಕಾಲ್ಫೇ ೧೯೩೦೧೯೩೭೪ಶ್ರೀಎನ್.ಎಸ್.ಸುಬ್ಬರಾವ್ ೧೯೩೭ ೧೯೪೨೫ಶ್ರೀಇ.ಜಿ.ಮೆಕಾಲ್ಫೀನ್ ೧೯೪೨೧೯೪೪೬ಶ್ರೀಟಿ.ಸಿಂಗಾರವೇಲು ಮೊದಲಿಯಾರ್೧೯೪೪೧೯೪೬೭ಶ್ರೀಸುಲ್ತಾನ್ ಮೊಹಿಯುದ್ದೀನ್೧೯೪೬೧೯೪೮೮ಶ್ರೀಆರ್.ಕಸ್ತೂರಿರಾಜ್ ಶೆಟ್ಟಿ೧೯೪೮೧೯೫೦೯ಡಾ.ಬಿ.ಎಲ್.ಮಂಜುನಾಥ್ ೧೯೫೦೧೯೫೪೧೦ಪ್ರೊ.ವಿ.ಎಲ್.ಡಿ'ಸೋಜ೧೯೫೪೧೯೫೬೧೧ಡಾ.ಕೆ.ವಿ.ಪುಟ್ಟಪ್ಪ೧೯೫೬೧೯೬೦೧೨ಶ್ರೀಎನ್.ಎ.ನಿಕ್ಕಮ್ ೧೯೬೦೧೯೬೨೧೩ಶ್ರೀಕೆ.ಎಂ.ಫಣೀಕರ್೧೯೬೨೧೯೬೪೧೪ಡಾ.ಕೆ.ಎಲ್,ಶ್ರೀಮಾಲಿ೧೯೬೪೧೯೬೯೧೫ಪ್ರೊ.ದೇ.ಜವರೇಗೌಡ೧೯೬೯೧೯೭೫೧೬ಶ್ರೀಡಿ.ವಿಜಯದೇವರಾಜ ಅರಸ್೧೯೭೬೧೯೭೯೧೭ಪ್ರೊ.ಕೆ.ಎಸ್.ಹೆಗಡೆ೧೯೭೯೧೯೮೫೧೮ಡಾ.ವೈ.ಪಿ.ರುದ್ರಪ್ಪ೧೯೮೫೧೯೮೮೧೯ಡಾ.ಪಿ.ಸೆಲ್ವಿದಾಸ್೧೯೮೮೧೯೯೧೨೦ಪ್ರೊ.ಎಂ.ಮಾದಯ್ಯ೧೯೯೧೧೯೯೭೨೧ಪ್ರೊ.ಎಸ್.ಎನ್.ಹೆಗಡೆ೧೯೯೭೨೦೦೩೨೨ಪ್ರೊ.ಜೆ.ಶಶಿಧರಪ್ರಸಾದ್೨೦೦೩೨೦೦೭೨೩ಪ್ರೊ.ವಿ.ಜಿ.ತಳವಾರ್೨೦೦೮೨೦೧೩೨೪ಪ್ರೊ.ಕೆ.ಎಸ್.ರಂಗಪ್ಪ೨೦೧೩೨೦೧೭೨೫ಪ್ರೊ.ಯಶವಂತ ಡೋಂಗ್ರೆ(ಪ್ರಭಾರ)೨೦೧೭೨೬ಪ್ರೊ.ದಯಾನಂದ ಮಾನೆ(ಪ್ರಭಾರ)೨೦೧೭೨೭ಪ್ರೊ.ಸಿ. ಬಸವರಾಜ್(ಪ್ರಭಾರ)೨೦೧೭೨೮ಪ್ರೊ.ನಿಂಗಮ್ಮ ಸಿ. ಬೆಸ್ತೂರ್(ಪ್ರಭಾರ)೨೦೧೮೨೯ ಪ್ರೊ. ಟಿ.ಕೆ.ಉಮೇಶ್(ಪ್ರಭಾರ)೨೦೧೮೨೦ಪ್ರೊ.ಆಯಿಷಾ. ಎಂ. ಶರೀಫ್(ಪ್ರಭಾರ)೨೦೧೮೩೧ಪ್ರೊ.ಜಿ. ಹೇಮಂತ್ ಕುಮಾರ್೨೦೧೮ ಲಾಂಛನದ ವೈಶಿಷ್ಟ್ಯತೆ ಮೈಸೂರು ವಿಶ್ವವಿದ್ಯಾಲಯದ ಲಾಂಛನವು ವಿಶೇಷತೆಯಿಂದ ಕೂಡಿರುವಂತಹುದು. ಅದರ ಎರಡು ಪಾರ್ಶ್ವಗಳಲ್ಲೂ ಶರಭಪ್ರಾಣಿಯನ್ನು ಹೊಂದಿ, ನಡುವೆ ಎರಡು ಶಿರಗಳುಳ್ಳ 'ಗಂಡುಭೇರುಂಡ, ಪಕ್ಷಿಯಿಂದ ಕೂಡಿದೆ. ಆ ಶರಭಪ್ರಾಣಿಗೆ ಆನೆಯ ತರಹದ ಸೊಂಡಿಲಿದೆ. ಇವೆರಡು ಪೌರಾಣಿಕ/ಕಾಲ್ಪನಿಕ ಪ್ರಾಣಿ-ಪಕ್ಷಿಗಳಾಗಿವೆ. ಈ ಸಂಕೇತಗಳು ವಿದ್ಯಾವಂತರಲ್ಲಿರಬೇಕಾದ ಜಾಗೃತಿ, ಶೀಲ, ಏಕತೆ, ಧೈರ್ಯ, ಔದಾರ್ಯ ಸಮರಸ ಬಾಳ್ವೆ ಮತ್ತು ಸತ್ಯವನ್ನು ಪ್ರತಿನಿಧಿಸುತ್ತವೆ. ಈ ಲಾಂಛನದ ಮೇಲೆ "ನ ಹಿ ಜ್ಞಾನೇನ ಸದೃಶಂ" ಎಂಬ ಧ್ಯೇಯವಾಕ್ಯವಿದೆ. ಅಂದರೆ "ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ" ಎಂಬರ್ಥವಿದೆ. ಅಲ್ಲದೆ ಈ ಲಾಂಛನದಲ್ಲಿ ಮತ್ತೊಂದು ಸಂಸ್ಕೃತ ನುಡಿಯಾದ 'ಸತ್ಯಮೇವೂದ್ಧರಾಮ್ಯಹಂ'ನ್ನು ರೇಖಿಸಲ್ಪಟ್ಟಿದೆ. ಅಂದರೆ ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ, ಸತ್ಯವಂತರಿಂದಾಗಿ ಈ ಭೂಮಿ ಉಳಿದಿದೆ ಎಂಬ ಆದರ್ಶ ಪರಿಕಲ್ಪನೆ ಇಲ್ಲಿದೆ. ಕ್ಯಾಂಪಸ್ ಸೌಂದರ್ಯ ಭಾರತದ ವಿದ್ಯಾಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹೇಗೆ ತನ್ನದೇ ಆದ ಛಾಪು ಮೂಸಿಡಿದೆಯೋ ಅದೇ ರೀತಿ ವಿ.ವಿ.ಯ ಕ್ಯಾಂಪಸ್ ಸೌಂದರ್ಯವು ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ. ಸುಮಾರು ೬೫೦ ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹಸಿರು ಮತ್ತು ನೀರಿನ ಸಮ್ಮಿಲನದಿಂದ ಹೆಣೆದುಕೊಂಡಿರುವ ಈ ವಿದ್ಯಾಕ್ಷೇತ್ರ ನೋಡುಗರ ಮನವನ್ನು ಸೆಳೆಯುತ್ತಿದೆ. ಈ ಕ್ಯಾಂಪಸ್‍ನ ಮುಖ್ಯ ಆಕರ್ಷಣೆ, ಗ್ರಂಥಾಲಯ, ಬಯಲು ರಂಗಮಂದಿರ, ವೃತ್ತಾಕಾರದ ಕ್ಯಾಂಟೀನ್ ಮತ್ತು ಪ್ರಸಿದ್ಧವಾದ ಕುಕ್ಕರಹಳ್ಳಿ ಕೆರೆ ಸಾಮಾಜಿಕ ಜವಾಬ್ದಾರಿ ಮೈಸೂರು ವಿಶ್ವ ವಿದ್ಯಾನಿಲಯವು ಸಾಮಾಜಿಕ ಜವಾಬ್ದಾರಿಯುತ ತಾಣವಾಗಿದೆ. ಅನೇಕ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿನ ಪರಿಸರದಲ್ಲಿನ ಬದಲಾವಣೆಯನ್ನು ಗಮನಿಸಿ, ಅವರಿಗೂ ಸಹ ತಮ್ಮ ಮೇಲಿನ ಜವಾಬ್ದಾರಿ ತಿಳಿಯಲು ಅನುಕೂಲಕರವಾದ ವಾತಾವರಣ ಸೃ‌‌ಷ್ಟಿಸುತ್ತದೆ. ಮೈಸೂರು ವಿಶ್ವವಿದ್ಯಾನಿಲಯ ತನ್ನ ಶತಮಾನೋತ್ಸವದ ಸಂಭ್ರಮದಲ್ಲಿ Mysore university an amalgamation of ancient India’s rich education and future’s aspirations: PM ModiOct 19, 2020,Hindustan times ಉಲ್ಲೇಖಗಳು ಹೊರಗಿನ ಸಂಪರ್ಕಗಳು ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ತಾಣ ಬಾಹ್ಯಕೊಂಡಿಗಳು ವರ್ಗ:ಶಿಕ್ಷಣ ವರ್ಗ:ವಿಶ್ವವಿದ್ಯಾಲಯಗಳು ವರ್ಗ:ಮೈಸೂರು ವರ್ಗ:ಶೈಕ್ಷಣಿಕ ಸಂಸ್ಥೆಗಳುವರ್ಗ:ಕರ್ನಾಟಕ ವಿಶ್ವವಿದ್ಯಾಲಯಗಳು‏‎
ಮಧ್ವಾಚಾರ್ಯ
https://kn.wikipedia.org/wiki/ಮಧ್ವಾಚಾರ್ಯ
ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಞಾನಿಗಳು. ಮಧ್ವಾಚಾರ್ಯರ ಜೀವನ ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯಾಯಿ ಭಕ್ತರು, ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು ಎಂದು ಭಾವಿಸುತ್ತಾರೆ. ಶ್ರೀಮದಾಚಾರ್ಯರಿಗೆ ಗುರುಗಳು ವೈದಿಕ ಕ್ರಮದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ 'ಆನಂದತೀರ್ಥ'. ವೇದಾಂತ ದರ್ಶನದಲ್ಲಿ, ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು. ಅವರು ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು. ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ(ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಅವರೇ ಹೇಳಿಕೊಂಡಿದ್ದಾರೆ). ಮಧ್ವರು ಉಡುಪಿಯ ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.೧೨೩೮ ರಲ್ಲಿ ಒಂದು ಚಿಕ್ಕ ಕುಟೀರದಲ್ಲಿ ಜನಿಸಿದರು. ಅವರ ತಂದೆ ನಡ್ಡಿಲ್ಲಾಯ ನಾರಾಯಣ ಭಟ್ಟ.(ಇಂಗ್ಲಿಷ್ ವಿಕಿಪೀಡಿಯಾ), ತಾಯಿ ವೇದಾವತಿ. ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಅನುಮಾನ ತೀರ್ಥ,ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು. ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಉಡುಪಿ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಶ್ರೀ ಅನಂತೇಶ್ವರ ದೇವಸ್ಥಾನದ ಸ್ಥಂಬ ವನ್ನು ಏರಿ, 'ಈ ಊರಿನಲ್ಲಿ ವಾಯು ದೇವನು ಅವತರಿಸುವನು' ಎಂದು ಕೂಗಿ ಹೇಳಿದನೆಂದು ಪ್ರತೀತಿ. ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸಂನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥ ರೆಂಬ ಬಿರುದನ್ನು ಕೊಟ್ಟರು. ನಂತರ ಅವರು ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ. ದಕ್ಷಿಣ ಭಾರತ ಪ್ರವಾಸ ಅವರು ದಕ್ಷಿಣ ಭಾರತ ಪ್ರವಾಸ ಕೈಕೊಂಡು ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ತಮ್ಮ ತತ್ವವಾದ ವನ್ನು ಪ್ರಚಾರ ಮಾಡಿದರು. ಸಂಪ್ರದಾಯವಾದಿಗಳಿಂದ ಇದಕ್ಕೆ ಪ್ರಬಲ ವಿರೋಧ ಕಂಡುಬಂದಿತು. ಮಧ್ವರು ಅದಕ್ಕೆ ಜಗ್ಗದೆ ತಮ್ಮ ವಾದವನ್ನು ಸಮರ್ಥಿಸಿ ಕೊಂಡರು. ನಂತರ ಉಡುಪಿಗೆ ಹಿಂತಿರುಗಿದರು. ಅಲ್ಲಿ ಅವರು ಗೀತೆಗೆ ಭಾಷ್ಯವನ್ನು ಬರೆದರು. ತತ್ವವಾದ ಸಿದ್ಧಾಂತದ ಆಧಾರದಮೇಲೆ ೩೭ ಗ್ರಂಥಗಳನ್ನು ಬರೆದರು. ಅವನ್ನು ಸರ್ವ ಮೂಲಗ್ರಂಥ ಗಳೆಂದು ಕರೆಯುತ್ತಾರೆ. ಈ ಗ್ರಂಥಗಳ ಬಗೆಗೆ ಮತ್ತು ತತ್ವವಾದದ ಬಗೆಗೆ ಭಾರತಾದ್ಯಂತ ತೀವ್ರ ಚರ್ಚೆ ನೆಡೆಯಿತು. ಮಧ್ವರು ತಮ್ಮ ವಾದಕ್ಕೆ ಮೂರು ಬಗೆಯ ಪ್ರಮಾಣಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವು ಪ್ರತ್ಯಕ್ಷ, ಅನುಮಾನ [ತಾರ್ಕಿಕ], ಮತ್ತು ಆಗಮ. ಉತ್ತರ ಭಾರತದ ಯಾತ್ರೆ ಅವರು ಕೆಲವು ಕಾಲದ ನಂತರ ತಮ್ಮ ತತ್ವವಾದ ಪ್ರಚಾರಕ್ಕಾಗಿ ಉತ್ತರ ಭಾರತದ ಯಾತ್ರೆ ಕೈಗೊಂಡರು. ಅವರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವೇದ ವ್ಯಾಸರ ಆಶ್ರಮದಲ್ಲಿ ವ್ಯಾಸಮಹರ್ಷಿಗಳನ್ನು ಕಂಡು ಅವರಿಗೆ ತಮ್ಮ ಗೀತೆಯ ಭಾಷ್ಯವನ್ನು ತೋರಿಸಿ ಅವರ ಮೆಚ್ಚುಗೆಯನ್ನು ಪಡೆದುದಾಗಿ ಹೇಳುತ್ತಾರೆ. ಅವರು ಗೀತಾ ಪೀಠಿಕೆಯಲ್ಲಿ ಒಂದುವಾಕ್ಯವನ್ನು ಮಾತ್ರಾ ಬದಲಾಯಿಸಿದುದಾಗಿ ಹೇಳುತ್ತಾರೆ. ನಾನು ಅವನ (ದೇವನ) ಪೂರ್ಣ ಸಾಮರ್ಥ್ಯ ಉಪಯೋಗಿಸಿ ಬರೆದಿದ್ದೇನೆ ಎಂಬುದನ್ನು, ನಾನು ಅವನ ಅಲ್ಪವೇ ಸಾಮರ್ಥ್ಯವನ್ನು ಉಪಯೋಗಿಸಿ ಬರೆದಿದ್ದೇನೆ ಎಂದು ಬದಲಾಯಿಸಿರುವುದಾಗಿ ಹೇಳಿದ್ದಾರೆ. ಅವರು ಬದರಿಯಿಂದ ಹಿಂತಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು. ಅವರು ಆನಂತರ ಅನೇಕ ಗ್ರಂಥಗಳನ್ನು ರಚಿಸಿದರೂ, ಅದನ್ನು ಓಲೆಗರಿಯ ಗ್ರಂಥದಲ್ಲಿ ಲಿಪಿಕಾರರಾಗಿ ಬರೆದವರು ಅವರ ಶಿಷ್ಯರಾದ ಸತ್ಯ ತೀರ್ಥರು. ಆನಂತರ ಅವರ ಕೀರ್ತಿ ದೇಶಾದ್ಯಂತ ಹರಡಿ ಅನೇಕರು ಅವರ ಶಿಷ್ಯರಾದರು. ಅನೇಕರು ಅವರಿಂದ ಸಂನ್ಯಾಸ ಸ್ವೀಕಾರ ಮಾಡಿದರು. ಅವರ ಶಿಷ್ಯ ಅಚ್ಯುತ ಪ್ರೇಕ್ಷ್ಯರಿಗೆ ಅವರ ವಾದದ ಬಗೆಗೆ ಇದ್ದ ಅಲ್ಪ ಸ್ವಲ್ಪ ಸಂಶಯವೂ ಹೋಗಿ ಪೂರ್ಣ ಮನಸ್ಸಿನ ಶಿಷ್ಯರಾದರು. ಉಡುಪಿಯಲ್ಲಿ ಬದರಿಯಿಂದ ಬಂದ ಅವರು ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ ೪೦ ಸೂಕ್ತಗಳಿಗೆ ಟೀಕೆಯನ್ನು ಬರೆದರು. ಭಾಗವತ (ಮಹಾಭಾರತ ?) ತಾತ್ಪರ್ಯ ನಿರ್ಣಯವನ್ನು ಬರೆದರು. ಪಶ್ಚಿಮ ಸಮುದ್ರ ತೀರದಲ್ಲಿ ಸಿಕ್ಕಿದ ಶ್ರೀ ಕೃಷ್ಣನ ಮೂರ್ತಿಯನ್ನು ಇದೇ ಸಮಯದಲ್ಲಿ ಪ್ರತಿಷ್ಟಾಪಿಸಿದರು. ಫುನಃ ಎರಡನೇ ಬಾರಿ ಬದರಿಗೆ ಪ್ರಯಾಣ ಮಾಡಿದರು. ಬದರಿಯ ಎರಡನೇ ಯಾತ್ರೆ ಬದರಿಯ ಎರಡನೇ ಯಾತ್ರೆಯಲ್ಲಿ ಅವರು ಗಂಗಾನದಿಯನ್ನು ದಾಟಿ ಮುಸ್ಲಿಮರ ದೊರೆ ಇದ್ದ ರಾಜ್ಯದ ಮೂಲಕ ಹೋಗಬೇಕಿತ್ತು. ಹಾಗೆ ಗಂಗೆಯನ್ನು ದಾಟಿದಾಗ ರಾಜ ಭಟರು ಅವರನ್ನು ಮುಸ್ಲಿಮರ ದೊರೆಯ ಎದುರಿಗೆ ಎಳದೊಯಿದರು. ಆದರೂ ಇವರು ಸ್ವಲ್ಪವೂ ಭಯ ಪಡಲಿಲ್ಲ. ಆಗ ಆ ದೊರೆಯು ಇವರ ಧೈರ್ಯವನ್ನು ಕಂಡು ಬೆರಗಾದಾಗ , ಇವರು ವಿಶ್ವವನ್ನು ಬೆಳಗುವ ಆ ದೇವನಾದ ತಂದೆಯನ್ನು ನೀನೂ ಪೂಜಿಸುತ್ತೀಯೆ ಹಾಗೇ ನಾನೂ ಪೂಜಿಸುತ್ತೇನೆ, ನನಗೆ ಭಯವೇಕೆ ಎಂದರು, ಅವನು ಇವರ ಮಾತಿಗೆ ಮೆಚ್ಚಿ ಅನೇಕ ಕೊಡುಗೆಗಳನ್ನು ನೀಡಿದನು. ಆದರೆ ಅವರು ಅದನ್ನೆಲ್ಲಾ ನಿರಾಕರಿಸಿ ಬದರಿಗೆ ಪ್ರಯಾಣ ಬೆಳಸಿದರು. ಅಲ್ಲಿ ಅವರು ಪುನಃ ವ್ಯಾಸರನ್ನೂ ನಾರಾಯಣನನ್ನೂ ದರ್ಶನ ಮಾಡಿ ಹಿಂತಿರುಗಿದರು. ಧರಿಯಲ್ಲಿ ಕಾಶಿಗೆ ಹೋಗಿ ಅಲ್ಲಿ ಅಮರೇಂದ್ರ ಪುರಿ ಎಂಬ ಅದ್ವೈತಿಯನ್ನು ವಾದದಲ್ಲಿ ಸೋಲಿಸಿದರು. ಅಲ್ಲಿಂದ ಕುರುಕ್ಷೇತ್ರಕ್ಕೆ ಬಂದರು. ಅಲ್ಲಿ ನಡೆದ ಒಂದು ಕಥೆ ಇದೆ. ಅವರು ಒಂದು ಸ್ಥಳದಲ್ಲಿ ತಮ್ಮ ಶಿಷ್ಯರಿಗೆ ಅಗೆಯಲು ಹೇಳಿದರು. ಅವರು ಅಲ್ಲಿ ಅಗೆದಾಗ ಅವರಿಗೆ ಅಲ್ಲಿ ಒಂದು ದೊಡ್ಡ ಗದೆ ಕಂಡಿತು. ಅದು ದ್ವಾಪರದಲ್ಲಿ ಭೀಮನು ಉಪಯೋಗಿಸಿದ ಗದೆಯೆಂದು ತಿಳಿಸಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿದರು. ನಂತರ ಗೋವಾಕ್ಕೆ ಬಂದು ಉಡುಪಿಗೆ ಹಿಂತಿರುಗಿದರು. ಆಗ ಅವರು ತಮ್ಮ ವಿದ್ವತ್ಪೂರ್ಣ ಸಂಗೀತದಿಂದ ಜನರನ್ನು ರಂಜಿಸಿದುದಾಗಿ ಹೇಳುತ್ತಾರೆ. ದಕ್ಷಿಣ ಯಾತ್ರೆ ಅವರು ನಂತರ ದಕ್ಷಿಣ ಯಾತ್ರೆಯನ್ನು ಮಾಡಿ ಕಾಸರಗೊಡಿನ ಪದ್ಮ ತೀರ್ಥರನ್ನೂ ಪುಂಡರೀಕ ಪುರಿಗಳನ್ನೂ ವಾದದಲ್ಲಿ ಸೋಲಿಸಿದರು. ಪದ್ಮತೀರ್ಥರು ಪೇಜತ್ತಾಯ ಶಂಕರ ಪಂಡಿತರ ಮೂಲಕ ಮಧ್ವರ ಗ್ರಂಥಗಳನ್ನು ಅಪಹರಿಸಿದ್ದರೆಂದೂ ಮಧ್ವರೊಡನೆ ವಾದವಾದ ನಂತರ ಆ ಗ್ರಂಥಗಳನ್ನು ಹಿಂತಿರುಗಿಸಿದರೆಂದೂ ಹೇಳುತ್ತಾರೆ. ಅವರಿಬ್ಬರ ವಾದ ಸಾರಾಂಶವನ್ನು ವಾದ ಅಥವಾ ತತ್ವೋದ್ಯೋತ ಗ್ರಂಥವಾಗಿ ರಚಿಸಿರುವುದಾಗಿ ಹೇಳುತ್ತಾರೆ. ಅವರು ಆನಂತರ ಆಸ್ಥಾನ ಪಂಡಿತರಾದ ತ್ರಿವಿಕ್ರಮ ಪಂಡಿತರನ್ನು ೧೫ ದಿನಗಳಕಾಲ ವಾದ ಮಾಡಿ ಸೋಲಿಸಿದರೆಂದು ಹೇಳುತ್ತಾರೆ. ಅವರು ನಂತರ ಮಧ್ವರ ಬ್ರಹ್ಮ ಸೂತ್ರಕ್ಕೆ ಟೀಕೆಯನ್ನು ಬರೆದರು. ನಾಲ್ಕು ಭಾಗಗಳಲ್ಲಿರುವ ಇದನ್ನು ನಾಲ್ಕು ಶಿಷ್ಯರಿಗೆ ಏಕ ಕಾಲದಲ್ಲಿ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ನ್ಯಾಯವಿವಾರ್ಣವ ವೆಂಬ ಗ್ರಂಥವನ್ನೂ ರಚಿಸಿದ್ದಾಗಿ ಹೇಳುತ್ತಾರೆ. ಸುಮಾರು ೭೦ ವರ್ಷ ವಯಸ್ಸಾದ ಮಧ್ವರು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿಮಾಡಿದರು. ಉಡುಪಿಯ ಅಷ್ಟ ಮಠಗಳು ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು. ೧. ಹೃಷೀಕೇಶ ತೀರ್ಥ (ಫಲಿಮಾರು ಮಠ) ೨. ನರಸಿಂಹ(ನರಹರಿ)ತೀರ್ಥ (ಆದಮಾರು ಮಠ) ೩. ಜನಾರ್ಧನ ತೀರ್ಥ (ಕೃಷ್ಣಾಪುರ ಮಠ) ೪. ಉಪೇಂದ್ರ ತೀರ್ಥ (ಪುತ್ತಿಗೆ ಮಠ) ೫. ವಾಮನ ತೀರ್ಥ (ಶಿರೂರು ಮಠ) ೬. ವಿಷ್ಣು ತೀರ್ಥ (ಸೋದೆ ಮಠ, ಸುಬ್ರಹ್ಮಣ್ಯ ಮಠ) ೭. ಶ್ರೀರಾಮ ತೀರ್ಥ (ಕಾಣಿಯೂರು ಮಠ) ೮. ಅಧೋಕ್ಷಜ(ಅಕ್ಷೋಭ್ಯ) ತೀರ್ಥ (ಪೇಜಾವರಮಠ) ಮಧ್ವರ ಪ್ರಸಿದ್ಧ ಶಿಷ್ಯರು - ೯. ಪದ್ಮನಾಭ ತೀರ್ಥ; ೧೦. ಮಾಧವ ತೀರ್ಥ; ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು. ಮಧ್ವ ನವಮಿ ತಮ್ಮ ೭೯ನೇ ವಯಸ್ಸಿನಲ್ಲಿ ಕಲಿ ೪೪೧೮ [ಕ್ರಿ.ಶ.೧೩೧೭]ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು . ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ. ಕಾಲಕ್ರಮೇಣ ಇವರ ತತ್ವವಾದವು ಭಕ್ತಿ ಪಂಥಕ್ಕೂ, ಹರಿದಾಸ ಪಂಥಕ್ಕೂ ದಾರಿಮಾಡಿ ಕೊಟ್ಟಿತು. ಸಂಗೀತದ ಪ್ರೋತ್ಸಾಹಕ್ಕೂ, ಕನ್ನಡದಲ್ಲಿ ದಾಸ ಪಂಥದ ಮಾರ್ಗ ಬೆಳೆಯಲೂ ಇವರ ದರ್ಶನ ಸ್ಪೂರ್ತಿನೀಡಿತು. ಇವರ ಶಿಷ್ಯರಾದ ನರಹರಿ ತೀರ್ಥರು ಯಕ್ಷಗಾನ ಹಾಗೂ ಕೂಚುಪುಡಿ ನೃತ್ಯ ಪ್ರಾಕಾರಗಳ ಪುನರುತ್ಥಾನಕ್ಕೂ , ಬೆಳವಣಿಗೆಗೂ ಪ್ರೋತ್ಸಾಹಿಸಿದರು. ಪ್ರಚಾರ ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು,ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದಿರುಗಿದರು. ಮಧ್ವಾಚಾರ್ಯರು ಒಂಬತ್ತು ಜನರಿಗೆ ಸನ್ಯಾಸಿ ದೀಕ್ಷೆಯನ್ನು ನೀಡಿದರು, ವೃಷ್ಣ ಮಠದಲ್ಲಿ ಶ್ರೀ ವೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಶ್ರೀ ವೃಷ್ಣನು ತನ್ನ ಮಾವನ ಮನೆಯಾದ ಸಮುದ್ರ ದಿಂದ ಅಚಾರ್ಯರಿಗಾಗಿ ಗೊಪಿಯ ಉಂಡೇಯೊಳಗೆ ಕೂತು ದೊರಕಿದನು ಕೃತಿಗಳು ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ: ಗೀತಾಭಾಷ್ಯ ಗೀತಾತಾತ್ಪರ್ಯ ಬ್ರಹ್ಮಸೂತ್ರ ಭಾಷ್ಯ ಅನುವ್ಯಾಖ್ಯಾನ ನ್ಯಾಯವಿವರಣ ಅಣುಭಾಷ್ಯ ದಶೋಪನಿಷದ್ಭಾಷ್ಯಗಳು ಮಹಾಭಾರತತಾತ್ಪರ್ಯನಿರ್ಣಯ ಯಮಕಭಾರತ ದಶ ಪ್ರಕರಣಗಳು ತಂತ್ರಸಾರ ಸಂಗ್ರಹ ದ್ವಾದಶ ಸ್ತೋತ್ರ ಕೃಷ್ಣಾಮೃತಮಹಾರ್ಣವ ಸದಾಚಾರ ಸ್ಮೃತಿ ಜಯಂತೀ ನಿರ್ಣಯ ಪ್ರಣವ ಕಲ್ಪ ನ್ಯಾಸಪದ್ಧತಿ ತಿಥಿನಿರ್ಣಯ ಕಂದುಕಸ್ತುತಿ ಶಿಷ್ಯರು ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು ಶ್ರೀ ಪದ್ಮನಾಭ ತೀರ್ಥರು ಶ್ರೀ ಸತ್ಯತೀರ್ಥರು ಉಡುಪಿಯ ಅಷ್ಟಮಠಗಳ ಮೂಲಯತಿಗಳು ಶಂಕರ ಪಂಡಿತಾಚಾರ್ಯರು ತ್ರಿವಿಕ್ರಮ ಪಂಡಿತಾಚಾರ್ಯರು ಕಲ್ಯಾಣಿ ದೇವಿ (ತ್ರಿವಿಕ್ರಮ ಪಂಡಿತಾಚಾರ್ಯರ ಸಹೋದರಿ) ಕಲ್ಯಾಣಿ ದೇವಿ (ಆಚಾರ್ಯ ಮಧ್ವರ ಸಹೋದರಿ) ಜಯಸಿಂಹ ರಾಜ ನಾರಾಯಣ ಪಂಡಿತಾಚಾರ್ಯರು ವಾಮನ ಪಂಡಿತಾಚಾರ್ಯರು(ತ್ರೈವಿಕ್ರಮಾರ್ಯರು) ಮಾಧವ ತೀರ್ಥರು ಅಕ್ಷೋಭ್ಯ ತೀರ್ಥರು ಈ ಲೇಖನಗಳನ್ನೂ ನೋಡಿ ಉಡುಪಿ ದ್ವೈತ | ದ್ವೈತ ದರ್ಶನ ವೇದಾಂತ ದ್ವೈತಮತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಹೊರಗಿನ ಸಂಪರ್ಕಗಳು ಶ್ರೀ ಮಧ್ವಾಚಾರ್ಯರ ಮತ್ತು ದ್ವೈತಮತದ ಬಗ್ಗೆ ಜಾಲಪುಟ ಶ್ರೀ ಮಧ್ವಾಚಾರ್ಯರ ಬಗ್ಗೆ ಲೇಖನ ಉಲ್ಲೇಖ ವರ್ಗ:ಇತಿಹಾಸ ವರ್ಗ:ಅಧ್ಯಾತ್ಮ ವರ್ಗ:ಹಿಂದೂ ಧರ್ಮ ವರ್ಗ:ಯೋಗಿಗಳು ಮತ್ತು ಸನ್ಯಾಸಿಗಳು ವರ್ಗ:ಹಿಂದೂ ಧರ್ಮದ ಸಂತರು
ಜ್ಞಾನಪೀಠ ಪ್ರಶಸ್ತಿ
https://kn.wikipedia.org/wiki/ಜ್ಞಾನಪೀಠ_ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೨೧ ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು. ಜ್ಞಾನಪೀಠದ ಹಿನ್ನೆಲೆ ಮತ್ತು ವಿವರ ಈ ಪ್ರಶಸ್ತಿಯನ್ನು ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಹನ್ನೊಂದು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ. ೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ + ವರ್ಷಭಾವಚಿತ್ರಪುರಸ್ಕೃತರುಭಾಷೆಕೃತಿ 1965 60px ಜಿ. ಶಂಕರ ಕುರುಪ್ ಓಡಕ್ಕುಳಲ್ 1966 ತಾರಾಶಂಕರ ಬಂದೋಪಾಧ್ಯಾಯ ಗಣದೇವತಾ 1967 † 60px ಉಮಾಶಂಕರ್ ಜೋಶಿ ನಿಶಿತಾ 60px ಕುವೆಂಪು ಶ್ರೀ ರಾಮಾಯಣ ದರ್ಶನಂ 1968 60px ಸುಮಿತ್ರಾನಂದನ ಪಂತ್ ಚಿದಂಬರಾ 1969 60px ಫಿರಾಕ್ ಗೋರಕ್ ಪುರಿ ಗುಲ್-ಎ-ನಗ್ಮಾ 1970 60px ವಿಶ್ವನಾಥ ಸತ್ಯನಾರಾಯಣ ರಾಮಾಯಣ ಕಲ್ಪವೃಕ್ಷಮು 1971 ಬಿಷ್ಣು ಡೆ ಸ್ಮೃತಿ ಸತ್ತಾ ಭವಿಷ್ಯತ್ 1972 60px ರಾಮ್‍ಧಾರಿ ಸಿಂಘ್ ದಿನಕರ್ ಊರ್ವಶಿ 1973 † 60px ದ. ರಾ. ಬೇಂದ್ರೆ ನಾಕುತಂತಿ 60px ಗೋಪಿನಾಥ್ ಮೊಹಾಂತಿ ಮಾಟಿ ಮಟಲ್ 1974 60px ವಿ. ಎಸ್. ಖಾಂಡೇಕರ್ ಯಯಾತಿ 1975 60px ಪಿ. ವಿ. ಅಖಿಲನ್ ಚಿತ್ರಪ್ಪಾವೈ 1976 ಆಶಾಪೂರ್ಣ ದೇವಿ ಪ್ರಥಮ್ ಪ್ರತಿಶೃತಿ 1977 60px ಕೆ. ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು 1978 ಸಚ್ಚಿದಾನಂದ ವಾತ್ಸಾಯನ ಕಿತ್ನೀ ನಾವೋಂ ಮೇಂ ಕಿತ್ನೀ ಬಾರ್ 1979 ಬೀರೇಂದ್ರ ಕುಮಾರ್ ಭಟ್ಟಾಚಾರ್ಯ ಮೃತ್ಯುಂಜಯ್ 1980 60px ಎಸ್. ಕೆ. ಪೋಟ್ಟಕ್ಕಾಡ್ ಒರು ದೇಶತ್ತಿಂಟೆ ಕಥಾ 1981 60px ಅಮೃತಾ ಪ್ರೀತಮ್ ಕಾಗಜ್ ತೆ ಕ್ಯಾನ್ವಾಸ್ 1982 60px ಮಹಾದೇವಿ ವರ್ಮಾ ಸಮಗ್ರ ಸಾಹಿತ್ಯ 1983 60px ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ 1984 60px ತಕಳಿ ಶಿವಶಂಕರ ಪಿಳ್ಳೈ ಸಮಗ್ರ ಸಾಹಿತ್ಯ 1985 ಪನ್ನಾಲಾಲ್ ಪಟೇಲ್ ಸಮಗ್ರ ಸಾಹಿತ್ಯ 1986 60px ಸಚ್ಚಿದಾನಂದ ರಾವುತರಾಯ್ ಸಮಗ್ರ ಸಾಹಿತ್ಯ 1987 60px ವಿ. ವಿ. ಶಿರ್ವಾಡ್ಕರ್ ಸಮಗ್ರ ಸಾಹಿತ್ಯ 1988 60px ಸಿ. ನಾರಾಯಣ ರೆಡ್ಡಿ ಸಮಗ್ರ ಸಾಹಿತ್ಯ 1989 ಕುರ್ರಾತುಲೈನ್ ಹೈದರ್ ಸಮಗ್ರ ಸಾಹಿತ್ಯ 1990 60px ವಿ. ಕೃ. ಗೋಕಾಕ ಸಮಗ್ರ ಸಾಹಿತ್ಯ 1991 ಸುಭಾಷ್ ಮುಖ್ಯೋಪಾಧ್ಯಾಯ ಸಮಗ್ರ ಸಾಹಿತ್ಯ 1992 60px ನರೇಶ್ ಮೆಹ್ತಾ ಸಮಗ್ರ ಸಾಹಿತ್ಯ 1993 60px ಸೀತಾಕಾಂತ್ ಮಹಾಪಾತ್ರ ಸಮಗ್ರ ಸಾಹಿತ್ಯ 1994 60px ಯು. ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ 1995 60px ಎಂ. ಟಿ. ವಾಸುದೇವನ್ ನಾಯರ್ ಸಮಗ್ರ ಸಾಹಿತ್ಯ 1996 60px ಮಹಾಶ್ವೇತಾ ದೇವಿ ಸಮಗ್ರ ಸಾಹಿತ್ಯ 1997 ಅಲಿ ಸರ್ದಾರ್ ಜಾಫ್ರಿ ಸಮಗ್ರ ಸಾಹಿತ್ಯ 1998 60px ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ 1999 † 60px ನಿರ್ಮಲ್ ವರ್ಮ ಸಮಗ್ರ ಸಾಹಿತ್ಯ ಗುರುದಯಾಳ್ ಸಿಂಗ್ ಸಮಗ್ರ ಸಾಹಿತ್ಯ 2000 60px ಇಂದಿರಾ ಗೋಸ್ವಾಮಿ ಸಮಗ್ರ ಸಾಹಿತ್ಯ 2001 ರಾಜೇಂದ್ರ ಕೆ. ಶಾ ಸಮಗ್ರ ಸಾಹಿತ್ಯ 2002 60px ಡಿ. ಜಯಕಾಂತನ್ ಸಮಗ್ರ ಸಾಹಿತ್ಯ 2003 ವಿಂದಾ ಕರಂದೀಕರ್ ಸಮಗ್ರ ಸಾಹಿತ್ಯ 2004 60px ರೆಹಮಾನ್ ರಾಹಿ ಸಮಗ್ರ ಸಾಹಿತ್ಯ 2005 ಕುನ್ವರ್ ನಾರಾಯಣ್ ಸಮಗ್ರ ಸಾಹಿತ್ಯ 2006 † 60px ರವೀಂದ್ರ ಕೇಳೇಕರ್ ಸಮಗ್ರ ಸಾಹಿತ್ಯ 60px ಸತ್ಯವ್ರತ ಶಾಸ್ತ್ರಿ ಸಮಗ್ರ ಸಾಹಿತ್ಯ 2007 60px ಓ. ಎನ್. ವಿ. ಕುರುಪ್ ಸಮಗ್ರ ಸಾಹಿತ್ಯ 2008 ಅಖ್ಲಾಕ್ ಮೊಹಮ್ಮದ್ ಖಾನ್ (ಶಹರ್ಯಾರ್) ಸಮಗ್ರ ಸಾಹಿತ್ಯ 2009 † ಅಮರ್ ಕಾಂತ್ ಸಮಗ್ರ ಸಾಹಿತ್ಯ 60px ಶ್ರೀ ಲಾಲ್ ಶುಕ್ಲ ಸಮಗ್ರ ಸಾಹಿತ್ಯ 2010 60px ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ 2011 60px ಪ್ರತಿಭಾ ರೇ ಸಮಗ್ರ ಸಾಹಿತ್ಯ 2012 60px ರಾವೂರಿ ಭರದ್ವಾಜ ಸಮಗ್ರ ಸಾಹಿತ್ಯ 2013 60px ಕೇದಾರನಾಥ್ ಸಿಂಗ್ ಸಮಗ್ರ ಸಾಹಿತ್ಯ 2014 60px ಭಾಲಚಂದ್ರ ನೇಮಾಡೆ ಸಮಗ್ರ ಸಾಹಿತ್ಯ 2015 60px ರಘುವೀರ್ ಚೌಧರಿ ಸಮಗ್ರ ಸಾಹಿತ್ಯ 2016 60px ಶಂಖ ಘೋಷ್ ಸಮಗ್ರ ಸಾಹಿತ್ಯ 2017 60px ಕೃಷ್ಣಾ ಸೋಬ್ತಿ ಸಮಗ್ರ ಸಾಹಿತ್ಯ 2018 60px ಅಮಿತಾವ್ ಘೋಷ್ ಸಮಗ್ರ ಸಾಹಿತ್ಯ 2019 60px ಅಕ್ಕಿತಂ ಅಚ್ಯುತನ್ ನಂಬೂದಿರಿ ಸಮಗ್ರ ಸಾಹಿತ್ಯ 2021 ನೀಲಮಣಿ ಫೂಕನ್ ಸಮಗ್ರ ಸಾಹಿತ್ಯ 2022 60px ದಾಮೋದರ ಮೌಜೋ ಸಮಗ್ರ ಸಾಹಿತ್ಯ 2023 † 60px ರಾಮಭದ್ರಾಚಾರ್ಯ ಸಮಗ್ರ ಸಾಹಿತ್ಯ 60px ಗುಲ್ಜಾರ್ ಸಮಗ್ರ ಸಾಹಿತ್ಯ ಈ ಪುಟಗಳನ್ನೂ ನೋಡಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು ಭಾರತೀಯ ಜ್ಞಾನಪೀಠ ಸಂಸ್ಥೆ ಆಧುನಿಕ ಕಾವ್ಯ ಪ್ರಕಾರ;ಬಂಗಾಳದ ಕವಿ ಶಂಖ ಘೋಷ್‌ಗೆ ಜ್ಞಾನಪೀಠ;24 Dec, 2016 ಉಲ್ಲೇಖಗಳು 1.[೧೫]"Gujarati Litterateur Raghuveer Chaudhary honoured with 51st Jnanpith Award". mid-day. 2015-12-29. Retrieved 29 December 2015. 2.[೧೬]http://www.jagranjosh.com/current-affairs/noted-gujarati-writer-raghuveer-chaudhary-selected-for-51st-jnanpith-award-1451444947-1 ವರ್ಗ:ಸಾಹಿತ್ಯ ಪುರಸ್ಕಾರಗಳು ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ವರ್ಗ:ಭಾರತೀಯ ಪ್ರಶಸ್ತಿಗಳು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
https://kn.wikipedia.org/wiki/ಜ್ಞಾನಪೀಠ_ಪ್ರಶಸ್ತಿ_ಪುರಸ್ಕೃತ_ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ. ಹೆಸರು ವರ್ಷ ಕೃತಿ ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ ದ. ರಾ. ಬೇಂದ್ರೆ ೧೯೭೩ ನಾಕುತಂತಿ ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ) ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ ಉಲ್ಲೇಖಗಳು ವರ್ಗ:ಸಾಹಿತ್ಯ
ಮಾಸ್ತಿ ವೆಂಕಟೇಶ ಅಯ್ಯಂಗಾರ್
https://kn.wikipedia.org/wiki/ಮಾಸ್ತಿ_ವೆಂಕಟೇಶ_ಅಯ್ಯಂಗಾರ್
ಮಾಸ್ತಿ ವೆಂಕಟೇಶ ಅಯ್ಯಂಗಾರರು (ಜೂನ್ ೬ ೧೮೯೧ - ಜೂನ್ ೬ ೧೯೮೬)-ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವರು. ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಸಾಹಿತ್ಯಿಕ ಗೌರವವಾದ ಜ್ಞಾನಪೀಠ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟ ಕನ್ನಡ ಲೇಖಕರಲ್ಲಿ ಇವರು ನಾಲ್ಕನೆಯವರಾಗಿದ್ದರು. ಇವರನ್ನು ಜನಪ್ರಿಯವಾಗಿ ಮಾಸ್ತಿ ಕನ್ನಡದ ಆಸ್ತಿ ಎಂದು ಕರೆಯಲಾಗುತ್ತಿತ್ತು ಅಂದರೆ "ಮಾಸ್ತಿ ಕನ್ನಡದ ಸಂಪತ್ತು" ಎಂದರ್ಥ. ಇವರು ಶ್ರೀನಿವಾಸ್ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು. ಇವರನ್ನು ಸಣ್ಣ ಕಥೆಗಳ ಜನಕ ಎಂದು ಕರೆಯುತ್ತಾರೆ. ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ರಾಜಸೇವಾಸಕ್ತ ಎಂಬ ಬಿರುದು ನೀಡಿ ಗೌರವಿಸಿದ್ದರು. ಬಾಲ್ಯ ಜೀವನ ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಂಗೇನಹಳ್ಳಿಯಲ್ಲಿ ತಮಿಳು ಮಾತನಾಡುವ ಶ್ರೀ ವೈಷ್ಣವ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದಲ್ಲಿ ಜೂನ್ ೬ ೧೮೯೧ ರಂದು ಜನಿಸಿದರು. ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಕಡು ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಆಂಗ್ಲ ಭಾಷೆಯಲ್ಲಿ ಎಂ.ಎ ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿಯವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು. ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು. ಮೆಟ್ರಿಕ್ಯುಲೇಷನ್(೧೯೦೭), ಎಫ್.ಎ (೧೯೦೯), ಬಿ.ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ - ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು. ೨೦೦px|thumb|right|ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಮಧ್ಯ ವಯಸ್ಸಿನಲ್ಲಿರುವಾಗ ಇರುವ ಚಿತ್ರ ಸಾಹಿತ್ಯ ಮಾಸ್ತಿಯವರು ಕನ್ನಡಿಗರಿಗೆ ಒಂದು ಆದರ್ಶವಾಗಿದ್ದರೆ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದ ರೀತಿ ಪ್ರತಿಯೊಬ್ಬರು ಕಲಿತುಕೊಳ್ಳಬೇಕಾಗಿರುವಂತದ್ದು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಮಾಸ್ತಿಯವರು ಆದರ್ಶರಾಗಿದ್ದರು. ೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ೨೦ನೆಯ ಶತಮಾನದ ಆರಂಭದ ಕಾಲದಲ್ಲಿ ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. *ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. "ಸುಬ್ಬಣ್ಣ" ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದ ರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. "ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ.ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ. ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ". "ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥಮುಖ್ಯ ಕೃತಿಗಳು, ನಿಧನ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ೧೯೮೬ ರಲ್ಲಿ ತಮ್ಮ ೯೫ ನೇ ಹುಟ್ಟುಹಬ್ಬದಂದು ನಿಧನರಾದರು. ಸ್ಮರಣಾರ್ಥಗಳು ೧೯೯೩ ರಿಂದ ಅವರ ಹೆಸರಿನಲ್ಲಿ "ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ" ಎಂಬ ಪ್ರಶಸ್ತಿಯನ್ನು ಕರ್ನಾಟಕದ ಪ್ರಸಿದ್ಧ ಬರಹಗಾರರಿಗೆ ನೀಡಲಾಗುತ್ತಿದೆ. ಮಾಲೂರು ತಾಲ್ಲೂಕಿನ (ಕೋಲಾರ ಜಿಲ್ಲೆ) ಮಾಸ್ತಿ ಗ್ರಾಮದಲ್ಲಿರುವ ಅವರ ಮನೆಯನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ. ಕರ್ನಾಟಕ ಸರ್ಕಾರವು ಅದರ ಕಾರ್ಯ ನಿರ್ವಹಿಸುತ್ತಿದೆ. ಮಾಸ್ತಿ ವಸತಿ ಶಾಲೆಯನ್ನು ೨೦೦೬-೦೭ ರಲ್ಲಿ ಅವರ ನೆನಪಿಗಾಗಿ ಹತ್ತಿರದ ಸ್ಥಳದಲ್ಲಿ ಪ್ರಾರಂಭಿಸಲಾಯಿತು. ಗ್ರಂಥಸೂಚಿ ಮಹಾಕಾವ್ಯಗಳು ಶ್ರೀರಾಮ ಪಟ್ಟಾಭಿಷೇಕ (ಶ್ರೀರಾಮನ ಪಟ್ಟಾಭಿಷೇಕ) ಸಣ್ಣ ಕಥೆ ಸಂಗ್ರಹ ಸಣ್ಣಕತೆಗಳ(೫ ಪುಟಗಳು) ರಂಗನ ಮದುವೆ ಮಾತುಗಾರ ರಾಮ ನೀಳ್ಗತೆ ಸುಬ್ಬಣ್ಣ (೧೯೨೮) ಶೇಷಮ್ಮ(೧೯೭೬) ಕಾವ್ಯ ಸಂಕಲನಗಳು ಬಿನ್ನಹ, ಮನವಿ(೧೯೨೨) ಅರುಣ(೧೯೨೪) ತಾವರೆ(೧೯೩೦) ಸಂಕ್ರಾಂತಿ(೧೯೬೯) ನವರಾತ್ರಿ(೫ ಭಾಗ ೧೯೪೪-೧೯೫೩) ಚೆಲುವು, ಸುನೀತ ಮಲಾರ ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ) ಜೀವನ ಚರಿತ್ರೆ ರವೀಂದ್ರನಾಥ ಠಾಕೂರ್(೧೯೩೫) ಶ್ರೀ ರಾಮಕೃಷ್ಣ(೧೯೩೬) ಪ್ರಬಂಧ ಕನ್ನಡದ ಸೇವೆ(೧೯೩೦) ವಿಮರ್ಶೆ (೪ ಸಂಪುಟ ೧೯೨೮-೧೯೩೯) ಜನತೆಯ ಸಂಸ್ಕೃತಿ(೧೯೩೧) ಜನಪದ ಸಾಹಿತ್ಯ(೧೯೩೭) ಆರಂಭದ ಆಂಗ್ಲ ಸಾಹಿತ್ಯ(೧೯೭೯) ನಾಟಕ ಶಾಂತಾ, ಸಾವಿತ್ರಿ, ಉಷಾ (೧೯೨೩) ತಾಳೀಕೋಟೆ(೧೯೨೯) ಶಿವಛತ್ರಪತಿ(೧೯೩೨) ಯಶೋಧರಾ(೧೯೩೩) ಕಾಕನಕೋಟೆ(೧೯೩೮) ಲಿಯರ್ ಮಾಹಾರಾಜ ಚಂಡಮಾರುತ, ದ್ವಾದಶರಾತ್ರಿ ಹ್ಯಾಮ್ಲೆಟ್ ಶೇಕ್ಸ್ ಪಿಯರ್ ದೃಶ್ಯಗಳು ೧,೨,೩ ಪುರಂದರದಾಸ ಕನಕಣ್ಣ ಕಾಳಿದಾಸ ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್ ಬಾನುಲಿ ದೃಶ್ಯಗಳು ಕಾದಂಬರಿ ಚೆನ್ನಬಸವ ನಾಯಕ(೧೯೫೦) ಚಿಕವೀರ ರಾಜೇಂದ್ರ(೧೯೫೬) ಪ್ರಶಸ್ತಿಗಳು ಜ್ಞಾನಪೀಠ ಪ್ರಶಸ್ತಿ (೧೯೮೩) (ಚಿಕವೀರ ರಾಜೇಂದ್ರ ಕೃತಿಗೆ) ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭) ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೮) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩) ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬) ಗೌರವಗಳು ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. "ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು. ೧೯೭೨ರಲ್ಲಿ " ಶ್ರೀನಿವಾಸ " ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು. ಉಲ್ಲೇಖಗಳು ವರ್ಗ:ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ ವರ್ಗ:ಕವಿಗಳು ವರ್ಗ:ಲೇಖಕರು
ಶೃ೦ಗೇರಿ
https://kn.wikipedia.org/wiki/ಶೃ೦ಗೇರಿ
REDIRECT ಶೃಂಗೇರಿ
ಲಾಲ್ ಬಹಾದುರ್ ಶಾಸ್ತ್ರಿ
https://kn.wikipedia.org/wiki/ಲಾಲ್_ಬಹಾದುರ್_ಶಾಸ್ತ್ರಿ
thumb|upright thumb| ಲಾಲ್ ಬಹಾದುರ್ ಶಾಸ್ತ್ರಿ (ಅಕ್ಟೋಬರ್ ೦೨, ೧೯೦೪ - ಜನವರಿ ೧೧, ೧೯೬೬) ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ಜೀವನ ಲಾಲ್ ಬಹಾದ್ದೂರ್ ಮೊಘಲ್‌ ಸಾರಾಯ್‌ನಲ್ಲಿ ಜನಿಸಿದ್ದು. ೧೯೨೧ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. ೧೯೨೬ ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಒಟ್ಟು ೯ ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ ೧೯೪೬ ರವರೆಗೂ ಜೈಲು ಶಿಕ್ಷೆ ಅನುಭವಿಸಿದರು. ಗಾಂಧೀಜಿಯವರ ಜನ್ಮದಿನ‌ದಂದೇ ಜನ್ಮದಿನ. ಭಾರತ ಸರಕಾರಕ್ಕೆ ಸಲ್ಲಿಸಿದ ಸೇವೆ ಸ್ವಾತಂತ್ರ ದೊರಕಿದ ಬಳಿಕ ಇವರು ಗೋವಿ೦ದ ವಲ್ಲಭ ಪ೦ತ್ ಅವರ ಸರಕಾರದಲ್ಲಿ ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. ೧೯೫೧ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ಇದರ ಪರ್ಯಾಯ ಇವರು ರೈಲ್ವೆ ಖಾತೆಯನ್ನು ವಹಿಸಿಕೊಂಡಿದ್ದೂ ಉಂಟು. ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್‌ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ ೧೯೬೧ರಲ್ಲಿ ಗೃಹ ಮಂತ್ರಿಯಾಗಿದ್ದರು. ಮೇ ೨೭, ೧೯೬೪ರಂದು ಜವಾಹರ್‌ಲಾಲ್ ನೆಹರು ತಮ್ಮ ಕಾರ್ಯಕಾಲದಲ್ಲಿ ಸಾವನ್ನಪ್ಪಿದರು. ಸ್ವಲ್ಪ ಮಟ್ಟಿಗೆ ಖಾಲಿ ಖಾಲಿಯಾದ ರಾಜಕೀಯ ರಂಗವನ್ನು ಬಿಟ್ಟು ಅಗಲಿದ್ದರು. ಕಾಂಗ್ರೆಸ್‌ನ ಕೆಲವು ಪ್ರಮುಖ ಆಸ್ತಿಗಳಿಗೆ ತಮಗೆ ಬೇಕಾದ ಬೆಂಬಲ ಸಿಗದ ಕಾರಣ ತುಂಬಾ ಸರಳ ಅಧಿಕಾರ ದಾಹಿಯೇ ಅಲ್ಲದ ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಜೂನ್ ೯ ರಂದು ಭಾರತದ ಪ್ರಧಾನಿಯಾದರು. ಪ್ರಧಾನಿಯಾಗಿ ಲಾಲ್ ಬಹಾದುರ್ ಶಾಸ್ತ್ರಿಗಳು ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು. ಜನವರಿ ೧೯೬೬ರಲ್ಲಿ ಶಾಸ್ತ್ರಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್‌ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ ೧೦ ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್. ಮರುದಿನವೇ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು; ಆದರೆ ಪಾಕಿಸ್ತಾನದವರೇ ಅವರ ಊಟದಲ್ಲಿ ವಿಷವನ್ನು ಹಾಕಿ ಕೊಂದರು ಎಂಬ ಊಹೆ ಇದೆ. ಆದರೆ ಅದನ್ನು ಅಲ್ಲಿಯ ವೈದ್ಯರು ದೃಡಪಡಿಸಿಲ್ಲ. ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು. ಪ್ರಾಮಾಣಿಕ, ಸ್ವಾಭಿಮಾನಿ ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು. ಶಾಸ್ತ್ರಿ ಸೋಮವಾರ ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ. ಪ್ರಶಸ್ತಿಗಳು ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ. ನೋಡಿ $$ಬಹಾದ್ದೂರ್‌ ಶಾಸ್ತ್ರಿ ಸಾವಿನ ಚಿದಂಬರ ರಹಸ್ಯ;11 Jan, 2017 ಹೊರಗಿನ ಸಂಪರ್ಕಗಳು ಲಾಲ್ ಬಹಾದುರ್ ಶಾಸ್ತ್ರಿಗಳ ಮನೆ ಸ್ಮಾರಕವಾಗಿ ಪರಿವರ್ತಿಸಲಾಗುತ್ತಿದೆ ಉಲ್ಲೇಖ ಲಾಲ್ ಬಹಾದುರ್ ಶಾಸ್ತ್ರಿ ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಭಾರತೀಯ ಇತಿಹಾಸದ ಪ್ರಮುಖರು ವರ್ಗ:ಭಾರತದ ಪ್ರಧಾನ ಮಂತ್ರಿಗಳು ವರ್ಗ:೧೯೦೪ ಜನನ ವರ್ಗ:೧೯೬೬ ನಿಧನ
ಜಾರ್ಜ್ ಡಬ್ಲ್ಯು. ಬುಷ್
https://kn.wikipedia.org/wiki/ಜಾರ್ಜ್_ಡಬ್ಲ್ಯು._ಬುಷ್
thumbnail|ಜಾರ್ಜ್ ವಾಕರ್ ಬುಷ್ ಜಾರ್ಜ್ ವಾಕರ್ ಬುಷ್ (ಜನನ: ಜುಲೈ ೬, ೧೯೪೬) ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರಸಕ್ತ ಹಾಗೂ ೪೩ನೆಯ ಅಧ್ಯಕ್ಷರು. ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷತಾ ಅವಧಿ ಪ್ರಾರ೦ಭವಾದದ್ದು ಜನವರಿ ೨೦, ೨೦೦೧ ರಂದು. ತೀವ್ರವಾದ ಚುನಾವಣೆಯ ನಂತರ ಇನ್ನೊಂದು ಅವಧಿಗೆ ಅವರು ನವೆಂಬರ್ ೩, ೨೦೦೪ ರಂದು ಪ್ರಮುಖ ಎದುರಾಳಿ ಜಾನ್ ಕೆರಿ ಅವರನ್ನು ಸೋಲಿಸಿ ಪುನರಾಯ್ಕೆಯಾದರು. ಅವರ ಎರಡನೆಯ ಅಧ್ಯಕ್ಷತಾ ಅವಧಿ ಕೊನೆಗೊಳ್ಳುವುದು ಜನವರಿ ೨೦, ೨೦೦೯ ರಂದು. ಅಧ್ಯಕ್ಷತೆ ವಹಿಸಿಕೊಳ್ಳುವ ಮೊದಲು ಅವರು ಉದ್ಯಮಿಯಾಗಿದ್ದರು. ೧೯೯೫ ರಿಂದ ೨೦೦೦ ದ ವರೆಗೆ ಟೆಕ್ಸಸ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅವರು ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಹರ್ಬರ್ಟ್ ವಾಕರ್ ಬುಷ್ ಅವರ ಪುತ್ರ ಹಾಗೂ ಫ್ಲಾರಿಡಾ ರಾಜ್ಯದ ರಾಜ್ಯಪಾಲರಾದ ಜೆಬ್ ಬುಷ್ ಅವರ ಅಣ್ಣ. ವೈಯಕ್ತಿಕ ಜೀವನ ಲಾರಾ ಲೇನ್ ವೆಲ್ಚ್ ರವರನ್ನು ನವೆಂರಬರ್ ೫ರ ೧೯೭೭ರಂದು ಮದುವೆಯಾದರು. ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು
ಕಾಂಗ್ರೆಸ್ ಪಕ್ಷ
https://kn.wikipedia.org/wiki/ಕಾಂಗ್ರೆಸ್_ಪಕ್ಷ
REDIRECT ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಧರ೦ ಸಿ೦ಘ್
https://kn.wikipedia.org/wiki/ಧರ೦_ಸಿ೦ಘ್
REDIRECT ಧರಮ್ ಸಿಂಗ್
ಧರಮ್ ಸಿಂಗ್
https://kn.wikipedia.org/wiki/ಧರಮ್_ಸಿಂಗ್
ಧರಮ್ ಸಿಂಗ್ ಭಾರತದ ಕರ್ನಾಟಕ ರಾಜ್ಯದ ೧೭ನೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು . ಗುಲ್ಬರ್ಗ ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿದ್ದಾರೆ. ೧೯೮೦ ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಸಹ ಚುನಾಯಿತರಾಗಿದ್ದರು. ಮುಖ್ಯಮಂತ್ರಿಯಾಗುವ ಮೊದಲು ಕರ್ನಾಟಕ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು. ರಾಜಕೀಯ ಪ್ರವೇಶ ತಮ್ಮ 24, 25 ನೇ ವಯಸ್ಸಿನಲ್ಲಿ ಕಾಂಗ್ರೆಸ್ ನೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡರು 1968 ರಿಂದ 1988 ರವರೆಗೆ ಸಿಟಿ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ರು. 1978 ರಲ್ಲಿ ಮೊದಲ ಬಾರಿಗೆ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶ 1980 ರಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶ . 1983 ,1985,1989 ,1994 ,1999,2004 , ರಲ್ಲಿ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ 2004 ಮೇ 28 ರಂದು ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿ ಅಧಿಕಾರ 2006 ಜನವರಿ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ 2008 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿ ಎಂಟನೇ ಬಾರಿ ವಿಧಾನಸಭೆ ಪ್ರವೇಶ ಮಾಡುವ ಕನಸಿಗೆ ಭಗ್ನ. ಈ ಬಾರಿ ಸೋಲು. 2009 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು 2006-2007: ಪ್ರತಿಪಕ್ಷ ನಾಯಕ, ಕರ್ನಾಟಕ ವಿಧಾನಸಭೆ 2009 ರಿಂದ: ಸಂಸತ್ತಿನ ಸದಸ್ಯ ಉಲ್ಲೇಖಗಳು ವರ್ಗ:ರಾಜಕೀಯ ವರ್ಗ:ಕರ್ನಾಟಕದ ಮುಖ್ಯಮಂತ್ರಿಗಳು ವರ್ಗ:ಕರ್ನಾಟಕದ ರಾಜಕೀಯ ವರ್ಗ:೧೯೩೬ ಜನನ ವರ್ಗ:ಕರ್ನಾಟಕದ ವಿಧಾನಸಭಾ ಸದಸ್ಯರು ವರ್ಗ:ಕರ್ನಾಟಕದ ಲೋಕ ಸಭೆ ಸದಸ್ಯರುವರ್ಗ:ಕರ್ನಾಟಕ ರಾಜಕಾರಣಿಗಳು
ಧರಮ್ ಸಿ೦ಘ್
https://kn.wikipedia.org/wiki/ಧರಮ್_ಸಿ೦ಘ್
REDIRECT ಧರಮ್ ಸಿಂಗ್
ವಲ್ಲಭ್‌ಭಾಯಿ ಪಟೇಲ್
https://kn.wikipedia.org/wiki/ವಲ್ಲಭ್‌ಭಾಯಿ_ಪಟೇಲ್
thumb|ಸರ್ದಾರ್ ವಲ್ಲಭಭಾಯ್ ಪಟೇಲ್ thumb|left|೧೯೦೯ರಲ್ಲಿ ಹೈದರಾಬಾದ್ ರಾಜ್ಯ. ಈಗಿನ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳನ್ನೊಳಗೊಂಡ ಸಮಯದಲ್ಲಿ. thumb|left|೧೯೪೦ ರ ಬಾಂಬೆಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅಜಾದ್, ಪಟೇಲ್ ಹಾಗು ಗಾಂಧೀಜಿ. thumb|ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕದ ಸೆಂಟ್ರಲ್ ಹಾಲ್ ಸಭಾಂಗಣ. ಸರ್ದಾರ್ ವಲ್ಲಭಭಾಯಿ ಪಟೇಲ್ (ಅಕ್ಟೋಬರ್ ೩೧, ೧೮೭೫ - ಡಿಸೆಂಬರ್ ೧೫, ೧೯೫೦), ಸರ್ದಾರ್ ಪಟೇಲ್ ಎಂದೇ ಕರೆಯಲಾಗುವ, ಭಾರತದ ಪ್ರಮುಖ ರಾಜಕೀಯ ವ್ಯಕ್ತಿಗಳಲ್ಲೊಬ್ಬರು. ಭಾರತದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಹಾಗೂ ಗೃಹಸಚಿವರಾಗಿದ್ದರು. ಅವರೊಬ್ಬ ವಕೀಲ(ಬ್ಯಾರಿಸ್ಟರ್) ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಾತ್ರವಲ್ಲದೇ, ಭಾರತದ ಗಣರಾಜ್ಯದ ಸ್ಥಾಪನೆ ಮತ್ತು ಸ್ವತಂತ್ರ ರಾಷ್ಟ್ರದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದರು. ಭಾರತ ಮತ್ತು ಇತರೆ ಕಡೆಗಳಲ್ಲಿ, ಅವರನ್ನು ಹೆಚ್ಚಾಗಿ ಸರ್ದಾರ್ ಎಂದು ಕರೆಯಲಾಗುತ್ತಿತ್ತು, ಇದರರ್ಥ ಹಿಂದಿ, ಉರ್ದು, ಮತ್ತು ಪರ್ಷಿಯನ್ ಭಾಷೆಗಳಲ್ಲಿ "ಮುಖ್ಯ"ವಾದ ವ್ಯಕ್ತಿ. 1947ರ ಇಂಡೋ-ಪಾಕಿಸ್ತಾನ ಯುದ್ಧದ ಅವಧಿಯಲ್ಲಿ ಅವರು ಭಾರತೀಯ ಸೈನ್ಯದ ಕಮಾಂಡರ್-ಇನ್-ಚೀಫ್ ಆಗಿ ಸಹ ಕಾರ್ಯ ನಿರ್ವಹಿಸಿದರು. ಇವರು ಕೈಗೊಂಡ ಕಠು ನಿರ್ಧಾರಗಳಿಂದ ಇವರಿಗೆ, ಉಕ್ಕಿನ ಮನುಷ್ಯ ಅಥವಾ ಲೋಹ ಪುರುಷ ಎಂಬ ಬಿರುದೂ ಪ್ರಜಾಮಾನಸದಲ್ಲಿ ದೊರೆತಿತ್ತು. ಗುಜರಾತ್‌ನ ಗ್ರಾಮಾಂತರ ಭಾಗದಲ್ಲಿ ಬೆಳೆದ ಪಟೇಲ್, ಯಶಸ್ವಿ ವಕೀಲರಾಗಿದ್ದರು. ಅವರು ತರುವಾಯ ಗುಜರಾತ್‌ನ ಖೇಡಾ, ಬೊರ್ಸಾದ್ ಮತ್ತು ಬರ್ಡೋಲಿಗಳಿಂದ ರೈತರನ್ನು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅಹಿಂಸಾತ್ಮಕ, ನಾಗರಿಕ ಅಸಹಕಾರ ಚಳುವಳಿಗಾಗಿ ಸಂಘಟಿಸಿದರು. ಈ ಮೂಲಕ ಗುಜರಾತ್‌ನ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 49ನೇ ಅಧ್ಯಕ್ಷರಾಗಿ ನೇಮಕಗೊಂಡರು. ಕ್ವಿಟ್ ಇಂಡಿಯಾ ಚಳವಳಿಯನ್ನು ಉತ್ತೇಜಿಸುವುದರ ಜೊತೆಯಲ್ಲೇ, ಕಾಂಗ್ರೆಸ್ ಪಕ್ಷವನ್ನು 1934 ಮತ್ತು 1937ರ ಚುನಾವಣೆಗಳಲ್ಲಿ ಮುನ್ನಡೆಸಿದರು. ಭಾರತದ ಮೊದಲ ಗೃಹ ಸಚಿವ ಮತ್ತು ಉಪ ಪ್ರಧಾನ ಮಂತ್ರಿಯಾಗಿ, ಪಟೇಲ್ ಭಾರತ ವಿಭಜನೆಯಿಂದ ಉಂಟಾದ ಹಿಂಸಾಚಾರದ ಸಮಯದಲ್ಲಿ, ಪಂಜಾಬ್ ಮತ್ತು ದೆಹಲಿಯ ನಿರಾಶ್ರಿತರ ಪರಿಹಾರ ಕಾರ್ಯಗಳನ್ನು ಸಂಘಟಿಸಿ, ಆ ಭಾಗಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಕೆಲಸ ಮಾಡಿದರು. ಅವರು ಭಾರತಕ್ಕೆ "ಹಂಚಿಕೆಯಾದ" ಬ್ರಿಟಿಷ್ ವಸಾಹತುಶಾಹಿ ಪ್ರಾಂತ್ಯಗಳನ್ನು ಹೊಸದಾಗಿ ಸ್ವಾತಂತ್ರ್ಯ ಹೊಂದಿದ ರಾಷ್ಟ್ರವಾಗಿ ಯಶಸ್ವಿಯಾಗಿ ಏಕೀಕರಿಸಿ ಸಂಯುಕ್ತ ಭಾರತವನ್ನು ರೂಪಿಸುವ ಕಾರ್ಯವನ್ನು ಮುನ್ನಡೆಸಿದರು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ನ ಪ್ರಕಾರ ಬ್ರಿಟಿಷ್ ಆಳ್ವಿಕೆಯಿಂದ ಸುಮಾರು 565 ಸ್ವಯಂ ಆಡಳಿತದ ಸಂಸ್ಥಾನಗಳನ್ನು ಬಿಡುಗಡೆ ಮಾಡಲಾಯಿತು. ಸೇನಾಪಡೆಗಳ ಬೆದರಿಕೆಯನ್ನು ಉಪಯೋಗಿಸಿ ಬಹುತೇಕ ರಾಜಪ್ರಭುತ್ವದ ರಾಜ್ಯಗಳನ್ನು ಭಾರತಕ್ಕೆ ಸೇರಿಸಿದರು. ಹೊಸ ಸ್ವತಂತ್ರ ದೇಶದಲ್ಲಿ ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆಯು ಸಂಪೂರ್ಣ ಮತ್ತು ತುಸುವೂ ರಾಜಿಯಾಗದ್ದಾಗಿತ್ತು. ಆಧುನಿಕ ಅಖಿಲ ಭಾರತ ಸೇವೆಗಳ ವ್ಯವಸ್ಥೆಯನ್ನು ಸ್ಥಾಪಿಸಿದ್ದಕ್ಕಾಗಿ ಅವರು "ಭಾರತದ ನಾಗರಿಕ ಸೇವಕರ ಪೋಷಕ ಸಂತ" (patron saint of India's civil servants) ಎಂದು ನೆನಪಿಸಿಕೊಳ್ಳುತ್ತಾರೆ. ಅವರನ್ನು "ಭಾರತದ ಏಕೀಕರಣ ನೇತಾರ" ಎಂದೂ ಕರೆಯಲಾಗುತ್ತದೆ. ಪ್ರಪಂಚದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು 31 ಅಕ್ಟೋಬರ್ 2018 ರಂದು ದೇಶಕ್ಕೆ ಸಮರ್ಪಿಸಲಾಯಿತು, ಅದು ಸುಮಾರು 182 ಮೀಟರ್ ಎತ್ತರದ್ದಾಗಿದೆ. ಆರಂಭಿಕ ಜೀವನ ವಲ್ಲಭಭಾಯ್ ಝವೇರಿಭಾಯ್ ಪಟೇಲ್ ಹುಟ್ಟಿದ್ದು ಗುಜರಾತಿನ ನಡಿಯಾಡ್ ಎಂಬಲ್ಲಿನ ಅವರ ಸೋದರಮಾವನ ಮನೆಯಲ್ಲಿ. ಖೇಡಾ ಜಿಲ್ಲೆಯ ಕರಮಸಾಡ್ ಎಂಬ ಹಳ್ಳಿಯ ನಿವಾಸಿ ಝವೇರಭಾಯ್ ಮತ್ತು ಲಾಡಬಾ ಇವರ ನಾಲ್ಕನೆಯ ಮಗನಾಗಿ ಜನಿಸಿದ ವಲ್ಲಭಭಾಯಿಯ ಹುಟ್ಟಿದ ದಿನ, ಮುಂದೆ ಅವರು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಅಕ್ಟೋಬರ್ ೩೧ ಎಂದು ನಮೂದಿಸಿದರೂ, ನಿಖರವಾಗಿ ದಾಖಲಾಗಿಲ್ಲ. ಅವರು ಮಧ್ಯ ಗುಜರಾತ್‍‌ನ ಲೇವಾ ಪಟೇಲ್ ಪಾಟಿದಾರ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ಆದಾಗ್ಯೂ ಲೇವಾ ಪಟೇಲ್‌ ಮತ್ತು ಕಡವ ಪಟೇಲ್‌ರ ಗುಂಪುಗಳು ಸರ್ದಾರ್ ಪಟೇಲ್‌ರನ್ನು ತಮ್ಮವರೆಂದು ಗುರುತಿಸುತ್ತಾರೆ. ಸೋಮಾಭಾಯಿ, ನರಸೀಭಾಯಿ, ಮತ್ತು ,ರಾಜಕೀಯದಲ್ಲಿ ಮುಂದೆ ಪ್ರಸಿದ್ಧರಾದ, ವಿಠ್ಠಲಭಾಯಿ ಇವರ ಅಣ್ಣಂದಿರುಗಳು. ಕಾಶೀಭಾಯಿ ಎಂಬ ತಮ್ಮ ಹಾಗೂ ದಹೀಬಾ ಎಂಬ ತಂಗಿ ಇವರ ಇತರ ಒಡಹುಟ್ಟಿದವರು. ಪಟೇಲ್‌ರು ನಡಿಯಾದ್, ಪೆಟ್ಲಾಡ್, ಮತ್ತು ಬೋರಸಾಡ್‌ನಲ್ಲಿ ಶಾಲೆಗಳಿಗೆ ಹಾಜರಾಗಲು, ಇತರ ಹುಡುಗರೊಂದಿಗೆ ಪ್ರಯಾಣಿಸುತ್ತಾ ಸ್ವಯಂ ಜೀವಿಸುತ್ತಿದ್ದರು. ಅವರು ಅಚಲ ಸಂಯಮ ಸ್ವಭಾವವನ್ನು ಬೆಳೆಸಿಕೊಂಡರು. ಒಂದು ಜನಪ್ರಿಯ ದಂತಕಥೆಯಂತೆ, ಒಮ್ಮೆ ಕ್ಷೌರಿಕನು ಒಂದು ಗುಳ್ಳೆಯ ಕಾರಣ ಅಳುಕುತಿದ್ದಾಗ, ತಾವೇ ಚಾಕುವನ್ನು ತೆಗೆದುಕೊಂಡು, ಕೆತ್ತಿಕೊಂಡರು. ಪಟೇಲರು ೨೨ ವರ್ಷದವರಿದ್ದಾಗ, ಮ್ಯಾಟ್ರಿಕ್ ಪರೀಕ್ಷೆ ಕಟ್ಟಿದರು. ಈ ಘಟ್ಟದಲ್ಲಿ ಅವರ ಸರೀಕರ ಅಭಿಪ್ರಾಯದಲ್ಲಿ ಪಟೇಲರು ಯಾವುದೇ ಮಹತ್ವಾಕಾಂಕ್ಷೆಯಿಲ್ಲದ ಜನಸಾಮಾನ್ಯರಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಪಟೇಲ್ ಸ್ವತಃ ವಕೀಲರಾಗಿ ಕೆಲಸ ಮಾಡಲು ಮತ್ತು ಹಣವನ್ನು ಉಳಿಸಲು, ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಮತ್ತು ನ್ಯಾಯವಾದಿಯಾಗಲು ಅಧ್ಯಯನ ಮಾಡಲು ಯೋಜನೆಯನ್ನು ರೂಪಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ತನ್ನ ಕುಟುಂಬದಿಂದ ದೂರವಿದ್ದು, ಇತರ ವಕೀಲರಿಂದ ಎರವಲು ಪಡೆದ ಪುಸ್ತಕಗಳೊಂದಿಗೆ ತನ್ನದೇ ಆದ ಅಧ್ಯಯನವನ್ನು ನಡೆಸಿ, ಎರಡು ವರ್ಷಗಳಲ್ಲಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದರು. ಆನಂತರ, ತನ್ನ ಪತ್ನಿಯಾದ ಜಾವೇರ್‌ಬಾರನ್ನು ತವರು ಮನೆಯಿಂದ ಕರೆಯಿಸಿ, ಗೋಧ್ರಾದಲ್ಲಿ ಮನೆ ಮಾಡಿದರು. ಈ ಜೋಡಿಗೆ, 1904 ರಲ್ಲಿ ಮಣಿಬೆನ್ (ಮಗಳು) ಮತ್ತು 1906 ರಲ್ಲಿ ದಹ್ಯಾಭಾಯಿ (ಮಗ) ಜನಿಸಿದರು. ಅಲ್ಲಿಯೇ ಅವರಿಗೆ ವಕೀಲಿ ವೃತ್ತಿಯ ಪರವಾನಿಗೆ ಸಹ ದೊರೆಯಿತು. ಹಣ ಉಳಿಸಲು ಹಲವು ವರ್ಷಗಳನ್ನು ತೆಗೆದುಕೊಂಡ ಪಟೇಲ್, ತೀವ್ರ ಮತ್ತು ನುರಿತ ವಕೀಲರಾಗಿ ಖ್ಯಾತಿಯನ್ನು ಗಳಿಸಿದರು. ಗುಜರಾತ್‌ನಾದ್ಯಂತ ಬಬೊನಿಕ್ ಪ್ಲೇಗ್ ಹರಡುತ್ತಿದ್ದಾಗ, ಸ್ನೇಹಿತರ ಆರೈಕೆ ಮಾಡಿದ್ದರು. ಪಟೇಲ್‌ರಿಗೇ ಈ ಮಾರಿ ಅಪ್ಪಳಿಸಿದಾಗ, ತನ್ನ ಕುಟುಂಬವನ್ನು ಸುರಕ್ಷತಾ ಜಾಗಕ್ಕೆ ಕಳುಹಿಸಿ, ತಾನೂ ಮನೆ ಬಿಟ್ಟು,ನಡಿಯಾದ್‌ನಲ್ಲಿ ಪ್ರತ್ಯೇಕವಾದ ಮನೆ ಮಾಡಿ ಉಳಿಯಲಾರಂಭಿಸಿದರು. (ಕೆಲವು ದಾಖಲೆಗಳ ಪ್ರಕಾರ, ಪಟೇಲ್ ಈ ಸಮಯವನ್ನು ಒಂದು ಶಿಥಿಲವಾದ ದೇವಾಲಯದಲ್ಲಿ ಕಳೆದರು); ಅಲ್ಲಿ ಅವರು ನಿಧಾನವಾಗಿ ಚೇತರಿಸಿಕೊಂಡರು. ಅದಕ್ಕಾಗಿ ಹಣ ಒಟ್ಟುಮಾಡಿ, ಮುಂದೆ ಬ್ಯಾರಿಸ್ಟರಾಗಲು ಇಂಗ್ಲೆಂಡಿಗೆ ತೆರಳುತ್ತಾರೆ. ಪಟೇಲರು ಹಣಸಂಗ್ರಹಣೆಯಲ್ಲಿ ತೊಡಗಿದ್ದ ಕಾಲದಲ್ಲಿ ಅವರ ಅಣ್ಣ ವಿಠ್ಠಲಭಾಯಿ ವಕೀಲರಾಗಿ ಹೆಸರಾಗುತ್ತಿದ್ದರು.http://www.culturalindia.net/leaders/sardar-vallabhbhai-patel.html ತಮ್ಮ ವಾಸಸ್ಥಾನವಾದ ಕರಮ್‌ಸಾದ್‌ನಲ್ಲಿನ ಹಣಕಾಸಿನ ತಾಪತ್ರಯಗಳನ್ನು ಅನುಭವಿಸುತ್ತ, ಗೋದಾ್ರಾ, ಬೋರಸದ್, ಮತ್ತು ಆನಂದ್‌ಗಳಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಮುಂದುವರೆಸಿದ್ದರು. ಬೋರಸದ್‌ನ "ಎಡ್ವರ್ಡ್ ಮೆಮೋರಿಯಲ್ ಹೈಸ್ಕೂಲ್(ಇಂದಿನ ಜಾವೆರ್ಭಾಯಿ ದಜಿಭಾಯಿ ಪಟೇಲ್ ಹೈಸ್ಕೂಲ್)"ನ ಮೊದಲ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು. ಇಂಗ್ಲೆಂಡ್‌ಗೆ ತೆರಳಲು ಅವರು ಸಾಕಷ್ಟು ಹಣ ಉಳಿಸಿ, ಪಾಸ್ ಮತ್ತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದಾಗ, "ವಿ.ಜೆ.ಪಟೇಲ್" ಎಂದು ನಮೂದಿಸಲಾಗಿತ್ತು. ಇವರದೇ ಹೆಸರಿನ ಮೊದಲಕ್ಷರ ಹೊಂದಿದ್ದ ಇವರ ಅಣ್ಣನಾದ ವಿಠಲ್‌ಭಾಯ್ ವಿಳಾಸವು ಸಹ ನಮೂದಾಗಿತ್ತು. ಇಂಗ್ಲೆಂಡ್ನಲ್ಲಿ ಅಧ್ಯಯನ ಮಾಡುವ ಆಶಯವನ್ನು ಹೊಂದಿದ್ದ ವಿಠಲ್‌ಭಾಯ್, ವಲ್ಲಭ್‌ಭಾಯಿ ಮೊದಲು ಹೋದರೆ, ಅಣ್ಣನಾದ ತಾನು ಅವನ ಹಿಂದೆ ಹೋಗಬೇಕಾಗಿ ಬರುತ್ತದೆ ಮತ್ತು ಅದು ತನ್ನ ಗೌರವಕ್ಕೆ ಕುಂದು ತರುವಿದೆಂದು ಅಭಿಪ್ರಾಯಪಟ್ಟರು. ಅವರ ಕುಟುಂಬದ ಗೌರವಾರ್ಥ, ಪಟೇಲ್ ವಿಠಲ್‌ಭಾಯ್ ಅವರನ್ನು ತಮ್ಮ ಜಾಗದಲ್ಲಿ, ತಮ್ಮ ಟಿಕೆಟ್‌ ಉಪಯೋಗಿಸಿಕೊಂಡು ಹೋಗಲು ಅನುಮತಿ ನೀಡಿದರು. 1909 ರಲ್ಲಿ ಪಟೇಲ್ ಅವರ ಹೆಂಡತಿ ಜಾವೇರ್‌ಬಾ ಬಾಂಬೆ (ಈಗನ ಮುಂಬೈ) ನಲ್ಲಿ, ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಆರೋಗ್ಯವು ಹಠಾತ್ತಾಗಿ ಹದಗೆಟ್ಟಿತು ಮತ್ತು ಯಶಸ್ವಿ ತುರ್ತು ಶಸ್ತ್ರಚಿಕಿತ್ಸೆಯ ಹೊರತಾಗಿಯೂ ಅವರು ಆಸ್ಪತ್ರೆಯಲ್ಲಿ ನಿಧನರಾದರು. ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಅಡ್ಡ-ಪರೀಕ್ಷೆ ಮಾಡುತ್ತಿದ್ದ ಪಟೇಲ್ ಅವರಿಗೆ ಪತ್ನಿಯ ಮರಣದ ಬಗ್ಗೆ ತಿಳಿಸುವ ಒಂದು ಟಿಪ್ಪಣಿಯನ್ನು ನೀಡಲಾಯಿತು. ಸಾಕ್ಷಿಗಳ ಪ್ರಕಾರ, ಪಟೇಲ್ ಈ ಟಿಪ್ಪಣಿಯನ್ನು ಓದಿದರು, ಅದನ್ನು ಕಿಸೆಯಲ್ಲಿಟ್ಟರು ಮತ್ತು ಅವರ ಅಡ್ಡ-ಪರೀಕ್ಷೆಯನ್ನು ಮುಂದುವರೆಸಿದರಲ್ಲದೇ ಪ್ರಕರಣವನ್ನು ಗೆದ್ದರು. ವಿಚಾರಣೆ ಕೊನೆಗೊಂಡ ನಂತರ ಅವರು ಸುದ್ದಿಯನ್ನು ಹೊರಹಾಕಿದರು. ಮತ್ತೆ ಮದುವೆಯಾಗದಿರಲು ಪಟೇಲ್ ನಿರ್ಧರಿಸಿದ್ದರು. ತನ್ನ ಕುಟುಂಬದ ಸಹಾಯದಿಂದ ಅವರು ತಮ್ಮ ಮಕ್ಕಳನ್ನು ಬೆಳೆಸಿದರು ಮತ್ತು ಅವರನ್ನು ಮುಂಬೈಯ ಇಂಗ್ಲಿಷ್-ಭಾಷಾ ಶಾಲೆಗಳಿಗೆ ಕಳುಹಿಸಿದರು. 36 ನೇ ವಯಸ್ಸಿನಲ್ಲಿ ಅವರು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು ಮತ್ತು ಲಂಡನ್‌ನ "ಮಿಡಲ್ ಟೆಂಪಲ್ ಇನ್" ನಲ್ಲಿ ಸೇರಿಕೊಂಡರು. ಕೇವಲ 30 ತಿಂಗಳುಗಳಲ್ಲಿ, 36 ತಿಂಗಳ ಕೋರ್ಸ್ ಪೂರ್ಣಗೊಂಡಾಗ, ಯಾವುದೇ ಕಾಲೇಜು ಹಿನ್ನಲೆಯಿಲ್ಲದ ಪಟೇಲ್, ತಮ್ಮ ತರಗತಿಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಪಾಸಗಿದ್ದರು. ಭಾರತಕ್ಕೆ ಹಿಂದಿರುಗಿದ ಪಟೇಲ್ ಅಹಮದಾಬಾದ್‌ನಲ್ಲಿ ನೆಲೆಸಿದರು ಮತ್ತು ನಗರದ ಅತ್ಯಂತ ಯಶಸ್ವಿ ನ್ಯಾಯವಾದಿಗಳ ಪೈಕಿ ಒಬ್ಬರಾದರು. ಯುರೋಪಿಯನ್-ಶೈಲಿಯ ಬಟ್ಟೆಗಳನ್ನು ಧರಿಸುವುದು ಮತ್ತು ಶಿಷ್ಟ (ನಗರೀಕರಣದ) ವರ್ತನೆಗಳನ್ನು ತೋರ್ಪಡಿಸುತ್ತ , ಅವರು ನುರಿತ ಬ್ರಿಡ್ಜ್ ಆಟಗಾರರಾದರು. ಪಟೇಲ್ ತಮ್ಮ ವೃತ್ತಿಯಿಂದ, ಬಹಳಷ್ಟು ಹಣಗಳಿಸಿ, ತಮ್ಮ ಮಕ್ಕಳಿಗೆ ಅಧುನಿಕ ಶಿಕ್ಷಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದರು. ಬೊಂಬೆ ಪ್ರೆಸಿಡೆನ್ಸಿಯಿಂದ ರಾಜಕೀಯಕ್ಕೆ ಸೇರಲು ಸಿದ್ಧರಾಗಿದ್ದ ಅಣ್ಣ ವಿಠಲ್‌ಭಾಯ್‌ರವರೊಂದಿಗಿನ ಒಪ್ಪಂದದಂತೆ, ಅಹಮದಾಬಾದ್‌ನಲ್ಲಿಯೇ ಮನೆ ಜವಾಬ್ದಾರಿಯನ್ನು ವಹಿಸಿಕೊಂಡರು. ಜೀವನ ನಂತರ ಪಟೇಲರು, ಹೆ೦ಡತಿ ಝವೇರಬಾರೊಂದಿಗೆ, ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಮದುವೆಯಾಗಿತ್ತು, ಸಂಸಾರ ಹೂಡಿದರು. ಅವರಿಗೆ ಇಬ್ಬರು ಮಕ್ಕಳಾದರು. ೧೯೦೪ರಲ್ಲಿ ಮಣಿ ಎಂಬ ಮಗಳು ಮತ್ತು ೧೯೦೬ರಲ್ಲಿ ದಹ್ಯಾ ಎಂಬ ಮಗ. ಬ್ಯುಬೋನಿಕ್ ಪ್ಲೇಗಿನಿಂದ ನರಳುತ್ತಿದ್ದ ಗೆಳೆಯನೊಬ್ಬನ ಆರೈಕೆ ಮಾಡುತ್ತ, ಪಟೇಲರು ಸ್ವತಃ ಆ ರೋಗಕ್ಕೆ ತುತ್ತಾದಾಗ, ತಮ್ಮ ಕುಟುಂಬವನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಿ, ತಮ್ಮ ಮನೆಯನ್ನು ತ್ಯಜಿಸಿ, ನಡಿಯಾದಿನ ಮನೆಯೊಂದರಲ್ಲಿ ( ಪಾಳುಬಿದ್ದ ದೇವಸ್ಥಾನ ಎಂದೂ ಕೆಲವರು ಹೇಳುತ್ತಾರೆ) ಚೇತರಿಕೊಳ್ಳುವವರೆಗೆ ನೆಲೆಸಿದರು. ೧೯೦೯ರಲ್ಲಿ ಅವರ ಪತ್ನಿ ತೀರಿಕೊಂಡರು. ಪಟೇಲರ ಅಂತರ್ಮುಖಿ ಸ್ವಭಾವದಿಂದ ಅವರ ಹೆಂಡತಿಯ ಬಗ್ಯೆ ಸಾರ್ವಜನಿಕರಿಗೆ ತಿಳಿದಿರುವುದು ಅತ್ಯಲ್ಪ. ಪಟೇಲರು ಮರುಮದುವೆ ಮಾಡಿಕೊಳ್ಳಲಿಲ್ಲ. ತಮ್ಮ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಲೇ , ಪಟೇಲರು ಇಂಗ್ಲೆಂಡ್ ಪ್ರಯಾಣಕ್ಕೆ ಹಣ ಶೇಖರಿಸತೊಡಗಿದರು. ಮುಂದೆ ಇಂಗ್ಲೆಂಡ್ ಪ್ರಯಾಣದ ಅವಕಾಶ ಸಿಕ್ಕಿದಾಗ ಆ ಅವಕಾಶವನ್ನು ತಮ್ಮ ಅಣ್ಣ, ವಿಠ್ಠಲಭಾಯಿ ,ಗೆ ಬಿಟ್ಟುಕೊಟ್ಟದ್ದಷ್ಟೇ ಅಲ್ಲ, ಅದಕ್ಕೆ ತಾವು ಕೂಡಿಟ್ಟಿದ್ದ ಹಣವನ್ನೂ ನೀಡಿದರು. ಅದು ಆದದ್ದು ಹೀಗೆ: ಪರದೇಶ ಪ್ರಯಾಣದ ತಿಕೀಟುಗಳು ಮತ್ತು ಪಾಸು “ವಿ.ಜೆ.ಪಟೇಲ್” ( ಅಣ್ಣ , ತಮ್ಮ ಇಬ್ಬರ ಇನಿಷಿಯಲ್ಲುಗಳು ವಿ.ಜೆ. ಎಂದೇ ಇತ್ತು) ಎಂಬ ಹೆಸರಿಗೆ ಅವರ ಅಣ್ಣನ ಮನೆಯ ವಿಳಾಸಕ್ಕೆ ತಲುಪಿತು. ಅಣ್ಣನಿಗೆ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಹಿಂದೆಗೆಯದ ವಲ್ಲಭಭಾಯ್ ಅಣ್ಣನ ಪ್ರವಾಸದ ಖರ್ಚನ್ನೂ ನಿಭಾಯಿಸಿದರು.http://mhrd.gov.in/sites/upload_files/mhrd/files/Sardar%20Vallabbhai%20Patel.pdf ಸ್ವಾತಂತ್ರ್ಯ ಹೋರಾಟದಲ್ಲಿ ಭಾಗ ೧೯೧೮ರಲ್ಲಿ ತಮ್ಮ ಚೆನ್ನಾಗಿ ನಡೆಯುತ್ತಿದ್ದ ವಕೀಲಿ ವೃತ್ತಿ, ಅದರ ಘನತೆ,ಗೌರವ, ದೊಡ್ಡ ಮನೆ,ಸಂಪತ್ತು ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದ ಸರಳ ಜೀವನ, ಕಷ್ಟಕಾರ್ಪಣ್ಯ ಗಳಿಗೆ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತಮ್ಮ ಮಿತ್ರರೊಂದಿಗೆ ಗಾಂಧಿಯವರ ರೀತಿನೀತಿಗಳನ್ನೂ, ರಾಜಕೀಯ ನೀತಿಗಳನ್ನೂ ಲೇವಡಿ ಮಾಡಿದ್ದರೂ, ಅನ್ನಿ ಬೆಸಂಟರ ಬಂಧನಕ್ಕೆ ಸಹಿಹಾಕಿದ ಪಿಟಿಷನ್ ಬದಲು ಸಾರ್ವಜನಿಕ ಪ್ರತಿಭಟನೆಮಾಡಬೇಕು ಎಂದು ಗಾಂಧಿ ಸೂಚಿಸಿದಾಗ, ಅವರ ಮನಃಪರಿವರ್ತನೆಯಾಯಿತು. ಗಾಂಧಿಯವರ ಚಂಪಾರಣ್ಯದ ಸತ್ಯಾಗ್ರಹದ ನಂತರ ಪಟೇಲರಿಗೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಯ ಗಳಿಸಲು ಗಾಂಧಿ ಸಮರ್ಥರು ಎಂದು ನಂಬಿಕೆಯುಂಟಾಯಿತು. ಆ ಹಿರಿಯ ವ್ಯಕ್ತಿ ಭಾರತೀಯ ಮೌಲ್ಯಗಳಲ್ಲಿಟ್ಟಿದ್ದ ಶ್ರದ್ಧೆ, ಅತಿ ಸರಳ ಜೀವನ ಇವುಗಳಿಂದ ಆಕರ್ಷಿತರಾದ ಪಟೇಲರು ಗಾಂಧಿಯವರ ಆಪ್ತರಾದರು. ಪಟೇಲರು ಕಾಂಗ್ರೆಸ್ ಪಕ್ಷ ಸೇರಿದ್ದು ೧೯೧೮ರ ನಂತರ. ಅವರು ಕಾರ್ಯದರ್ಶಿಯಾಗಿದ್ದ ಗುಜರಾತ್ ಸಭಾ ೧೯೨೦ ರಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಕಮಿಟಿಯಾಗಿ ಬದಲಾಯಿತು. ಅದರ ಅಧ್ಯಕ್ಷರಾಗಿ ನೇಮಕಗೊಂಡ ಅವರು ೧೯೪೭ರವರೆಗೂ ಅಲ್ಲಿ ಸೇವೆ ಸಲ್ಲಿಸಿದರು. ಖೇಡಾ, ಬರ್ಸಾಡ್ ಮತ್ತು ಬಾರ್ಡೋಲಿ ಸತ್ಯಾಗ್ರಹಗಳು ಖೇಡಾ ಹೋರಾಟದೊಂದಿಗೆ ಪಟೇಲರು ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟರು. ಗುಜರಾತಿನ ಖೇಡಾ ವಿಭಾಗವು ತೀವ್ರ ಕ್ಷಾಮದಿಂದ ತತ್ತರಿಸುತ್ತಿದ್ದು, ಅಲ್ಲಿಯ ರೈತರು ಕರ ವಿನಾಯಿತಿಗೆ ಬೇಡಿಕೆಯಿಟ್ಟರು. ಗಾಂಧಿ ಈ ಹೋರಾಟಕ್ಕೆ ಒಪ್ಪಿದ್ದರೂ ಸ್ವತಃ ಚಂಪಾರಣ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರ ಕಾರಣ, ಈ ಹೋರಾಟದ ಮುಖಂಡತ್ವವನ್ನು ವಹಿಸಲು ಅಸಾಧ್ಯವಾಗಿತ್ತು. ಖೇಡಾ ವಿಷಯಕ್ಕಾಗಿ ಪೂರ್ಣಾವಧಿ ಸಮಯವನ್ನು ಮೀಸಲಿಡುವ ಸ್ವಯಂಸೇವಕನಿಗಾಗಿ ಗಾಂಧಿ ಕೇಳಿದಾಗ ಪಟೇಲರು ಕೈಯೆತ್ತಿ , ಎದ್ದು ನಿಂತರು. ಹಿಂದೆ ವಕೀಲರೂ, ಗಾಂಧಿಯವರ ಅನುಯಾಯಿಗಳೂ ಆಗಿದ್ದ ನರಹರಿ ಪಾರೀಖ್ ಮತ್ತು ಮೋಹನಲಾಲ್ ಪಂಡ್ಯರೊಂದಿಗೆ ಪಟೇಲರು ಹಳ್ಳಿಹಳ್ಳಿ ಪ್ರವಾಸ ಕೈಗೊಂಡು, ಗ್ರಾಮಸ್ಥರ ತೊಂದರೆಗಳನ್ನು ಪರಿಶೀಲಿಸಿ, ರಾಜ್ಯವ್ಯಾಪಿ ಆಂದೋಳನದಲ್ಲಿ ಅವರೆಲ್ಲರ ಬೆಂಬಲವನ್ನು ಬೇಡಿದರು. ರಾಜ್ಯದ ಎಲ್ಲೆಡೆಗಳಲ್ಲಿ ಹಿಂದೂ, ಮುಸ್ಲಿಂ ಎನ್ನದೆ, ಬಹುತೇಕ ಪ್ರತಿಯೊಬ್ಬರೂ ಪಟೇಲರ ಪರಿಶ್ರಮ ಮತ್ತು ನಾಯಕತ್ವವನ್ನು ಒಪ್ಪಿಕೊಂಡರು. ಪಟೇಲರು ಈ ಹೋರಾಟವು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಹಳ್ಳಿಗರು ಒಗ್ಗಟ್ಟನ್ನು ಮುರಿಯಬಾರದೆಂದು ಸಾರಿಹೇಳಿದರು. ಪಟೇಲರ ಈ ಕಾರ್ಯದಲ್ಲಿ ರಾಷ್ಟ್ರೀಯವಾದಿಗಳಾದ ಅಬ್ಬಾಸ್ ತ್ಯಾಬ್ಜೀ ಮತ್ತು ಅಹಮದಾಬಾದಿನ ಸಾರಾಭಾಯ್ ಕೈಗೂಡಿಸಿದರು. ಹಳ್ಳಿಗರ ಕರನಿರಾಕರಣೆಯ ಸತ್ಯಾಗ್ರಹವನ್ನು ಮುರಿಯಲು ಸರಕಾರ ಪೋಲಿಸ್ ಪಡೆಗಳನ್ನು ಕಳುಹಿಸಿ, ಜಮೀನು, ಸಾಕುಪ್ರಾಣಿಗಳನ್ನೊಳಗೊಂಡು, ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಗ್ರಾಮಸ್ಥರು, ಬಂಧಿತರಾದರೂ ಹಳ್ಳಿಗರ ಕಡೆಯಿಂದ ಹಿಂಸಾತ್ಮಕ ಪ್ರತಿಕ್ರಿಯೆ ಇಲ್ಲವೇಇಲ್ಲವೆನ್ನುವಷ್ಟು ಅಪರೂಪವಾಗಿತ್ತು. ಸತ್ಯಾಗ್ರಹಿಗಳಿಗೆ ರಾಜ್ಯಾದ್ಯಂತ ಜನಸಾಮಾನ್ಯರು, ಆಹಾರ, ಬಟ್ಟೆ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಿ, ಬೆಂಬಲ ಸೂಚಿಸಿದರು.ತೆರಿಗೆ ಸಲ್ಲಿಸಿದ ,ಸರಕಾರಕ್ಕೆ ಬೆಂಬಲವಿತ್ತ ಹಳ್ಳಿಗಳಿಗೆ ಗುಜರಾತಿನ ಜನ ಬಹಿಷ್ಕಾರ ಹಾಕಿದರು. ಈ ಪ್ರತಿಭಟನೆಗೆ ಭಾರತದಾದ್ಯಂತ ಸಹಾನುಭೂತಿ ವ್ಯಕ್ತವಾದರೂ, ಈ ಪ್ರತಿಭಟನೆ ಸ್ಥಳೀಯ ಸಮಸ್ಯೆಗಾಗಿತ್ತೇ ಹೊರತು, ಭಾರತದ ಸ್ವಾತಂತ್ರ್ಯಕ್ಕಾಗಿ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು. ೧೯೧೯ರಲ್ಲಿ ಸರಕಾರ ಮಣಿದು, ಕರವನ್ನು ಮುಂದೂಡಿದ್ದಷ್ಟೇ ಅಲ್ಲ, ಅದರ ದರವನ್ನೂ ಕಡಿಮೆ ಮಾಡುವುದರೊಂದಿಗೆ ಈ ಹೋರಾಟ ಮುಕ್ತಾಯ ಕಂಡಿತು. ಸಾಮಾಜಿಕ ಹೋರಾಟಗಳು ಪಟೇಲರು ಈ ಸತ್ಯಾಗ್ರಹದಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆಯನ್ನು ಪಡೆದು, ಭಾರತದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆಯನ್ನು ಗಳಿಸಿದರು.೧೯೧೯ ರಿಂದ ೧೯೨೮ರವರೆಗೆ, ಪಟೇಲರು, ಅಸ್ಪ್ರಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಙಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು. ೧೯೨೨ರಲ್ಲಿ ಅಹಮದಾಬಾದಿನ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಚುನಾಯಿತರಾದರು. ಇದರಿಂದ ಪಟೇಲರಿಗೆ ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ ಮತ್ತು ಆಡಳಿತರಂಗಗಳಲ್ಲಿ ಹೆಚ್ಚಿನ ಅನುಭವ ಪಡೆದುಕೊಳ್ಳುವ ಅವಕಾಶ ದೊರಕಿತು. ಇವರ ಆಡಳಿತಾವಧಿಯಲ್ಲಿ ಅಹಮದಾಬಾದಿಗೆ ವಿದ್ಯುತ್ ಸರಬರಾಜು, ಚರಂಡಿ ಹಾಗೂ ನೈರ್ಮಲ್ಯ ವ್ಯವಸ್ಥೆ, ಹಾಗೂ ಶಿಕ್ಷಣ ವ್ಯವಸ್ಥೆಗಳಲ್ಲಿ ಭಾರೀ ಸುಧಾರಣೆಗಳನ್ನು ತಂದರು. ಹಿಂದೂ-ಮುಸ್ಲಿಮ್ ವಿವಾದದಂತಹ ನಾಜೂಕು ವಿಷಯಗಳನ್ನೂ ಕೈಗೆತ್ತಿಕೊಂಡು, ನಗರದ ಬಹುತೇಕ ಜನಸಂಖ್ಯೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ಕೈಗೊಂಡರು. ೧೯೨೮ರಲ್ಲಿ ಬಾರ್ಡೋಲಿಯು ದುರವಸ್ಥೆಗೀಡಾಯಿತು. ಗುಜರಾತಿನ ಬಹುತೇಕ ಭಾಗಗಳು ಕ್ಷಾಮದಿಂದ ತತ್ತರಿಸುವುದರೊಂದಿಗೇ, ಸರಕಾರ ಕಂದಾಯವನ್ನು ಹೆಚ್ಚು ಮಾಡಿತು. ಇದರ ವಿರುದ್ಧವಾಗಿ ಪಟೇಲರು ಜನಸಮೂಹವನ್ನು ಒಟ್ಟುಗೂಡಿಸಿ ನಡೆಸಿದ ಪ್ರತಿಭಟನೆ ದೇಶದಲ್ಲೆಲ್ಲ ಹೆಸರುಮಾಡಿತು. ಖೇಡಾ ಸತ್ಯಾಗ್ರಹಕ್ಕಿಂತ ಉಗ್ರವಾಗಿದ್ದ ಈ ಪ್ರತಿಭಟನೆಗೆ ಬೆಂಬಲವಾಗಿ ಗುಜರಾತಿನ ಅನೇಕ ಕಡೆಗಳಲ್ಲಿ ಜನರು ಸತ್ಯಾಗ್ರಹ ಹೂಡಿದರು. ಈ ಎರಡೂ ಹೋರಾಟಗಳು ಮುಗಿದ ನಂತರ ಪಟೇಲರು, ಜನಸಾಮಾನ್ಯರು ಕಳೆದುಕೊಂಡಿದ್ದ ಭೂಮಿಕಾಣಿ ಹಾಗೂ ಆಸ್ತಿಪಾಸ್ತಿಗಳನ್ನು ಮತ್ತೆ ಅವರಿಗೆ ವಾಪಸು ದೊರಕಿಸಿಕೊಡಲು ಬಹಳಷ್ಟು ಪರಿಶ್ರಮಪಟ್ಟರು. ಬಾರ್ಡೋಲಿಯ ಸತ್ಯಾಗ್ರಹದಿಂದ ಪಟೇಲರಿಗೆ ಸರದಾರ್ ಎಂಬ ಬಿರುದು ಪ್ರಾಪ್ತವಾಯಿತು. ಗುಜರಾತಿನ ಲಕ್ಷಾಂತರ ಜನರಿಗೆ ಪಟೇಲರು ಆರಾಧ್ಯದೈವವಾದರು. ಭಾರತದ ವಿಭಜನೆ ಜಿನ್ನಾರ ನಾಯಕತ್ವದಲ್ಲಿ ದಿನೇದಿನೇ ಹೆಚ್ಚುತ್ತಿದ್ದ ಮುಸ್ಲಿಮ್ ಪ್ರತ್ಯೇಕತಾ ಬೇಡಿಕೆಯಿಂದ ಭಾರತದ ವಿಭಜನೆ ಅನಿವಾರ್ಯ ಎಂಬ ನಿರ್ಣಯಕ್ಕೆ ಬಂದ ಮೊದಮೊದಲ ಕಾಂಗ್ರೆಸ್ ನಾಯಕರುಗಳಲ್ಲಿ ಪಟೇಲರು ಒಬ್ಬರಾಗಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಮಧ್ಯೆ ಸಂಧಾನದ ಪ್ರಯತ್ನಗಳನ್ನು ವಿಫಲಗೊಳಿಸಿ, ಜಿನ್ನಾ ತನ್ನ ಹಿಂಬಾಲಕರನ್ನು ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದಿಸುತ್ತಿದ್ದದ್ದು ಪಟೇಲರನ್ನು ತೀವ್ರ ಸಂತಾಪಕ್ಕೆ ಈಡುಮಾಡಿತು.( ಜಿನ್ನಾ ಕರೆ ಕೊಟ್ಟ ಡೈರೆಕ್ಟ್ ಆಕ್ಷನ್ ಡೇ ಎಂಬ ಅಂದೋಳನದಲ್ಲಿ ೫೦೦೦ಕ್ಕೂ (?) ಹೆಚ್ಚು ಮಂದಿ ಕೊಲೆಗೀಡಾದರು.:- the death toll is estimated at between 500,000 to 1 million people: ಇಂಗ್ಲಿಷ್ ತಾಣ ನೋಡಿ). ಆದರೂ ಜಿನ್ನಾ ಮುಸ್ಲಿಮರ ಜನಪ್ರಿಯ ನಾಯಕನಾಗಿರುವುದರಿಂದ, ರಾಷ್ಟ್ರೀಯವಾದಿಗಳೊಂದಿಗಿನ ಅವರ ಭಿನ್ನಾಭಿಪ್ರಾಯಗಳು, ಬೃಹತ್ ಹಿಂದೂ ಮುಸ್ಲಿಮ್ ದಂಗೆಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳ ಅರಿವೂ ಅವರಿಗಿತ್ತು. ನೆಹರು ಮತ್ತಿತರರು ವಿಭಜನೆಯ ಸಾಧ್ಯತೆಯನ್ನು ಒಪ್ಪಿದ ಮೇಲೆ , ಈ ವಿಷಯದಲ್ಲಿ ಅತ್ಯಂತ ದುಃಖಿಗಳಾಗಿದ್ದ ಗಾಂಧಿಯನ್ನು ವಿಭಜನೆಯ ಅನಿವಾರ್ಯತೆಯ ಬಗ್ಯೆ ಒಪ್ಪಿಸುವ ಕಾರ್ಯವನ್ನು ಪಟೇಲರು ವಹಿಸಿಕೊಂಡರು. ವಿಭಜನೆಯ ನಂತರದ ಭಾರತ ಪಾರ್ಟಿಷನ್ ಕೌನ್ಸಿಲ್ಲಿನ, ಭಾರತದ ಪರವಾದ ಸದಸ್ಯರಾಗಿ ಪಟೇಲರು ಸರಕಾರಿ ಆಡಳಿತ ಯಂತ್ರಗಳ, ಆಸ್ತಿಪಾಸ್ತಿಗಳ ಸೂಕ್ತಹಂಚಿಕೆಯ ಮೇಲುಸ್ತುವಾರಿ ಮಾಡಿದರು ಭಾರತಕ್ಕಿಂತ ಗಾತ್ರದಲ್ಲೂ, ಜನಸಂಖ್ಯೆಯಲ್ಲೂ ಚಿಕ್ಕದಾಗಿದ್ದ ಪಾಕಿಸ್ತಾನಕ್ಕೆ, ಅದರ ಗಾತ್ರಕ್ಕನುಗುಣವಾಗಿ ಸಿಗಬೇಕಾಗಿದ್ದ ಸಂಪನ್ಮೂಲಗಳ ಭಾಗಕ್ಕಿಂತ ಹೆಚ್ಚಾಗಿ ಜಿನ್ನಾ ಪಡೆದುಕೊಳ್ಳದಂತೆ ಪಟೇಲರು ಎಚ್ಚರ ವಹಿಸಿದರು. ನೆಹರೂ ಮತ್ತು ಪಟೇಲರು ಜಂಟಿಯಾಗಿ ಕೇಂದ್ರ ಮಂತ್ರಿಮಂಡಲವನ್ನು ನಿರ್ಣಯಿಸಿ, ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ , ೫೬೫ ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ, ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ, ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು. ಅಷ್ಟೇ ಅಲ್ಲ, ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು. ರಾಜ-ಮಹಾರಾಜ-ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ಇಂಡಿಯವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು. ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಿಗೆ (ತಿರುವಾಂಕೂರು ಮತ್ತಿತರೆಡೆ) ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರನ್ನು ಒಲಿಸಿದರು. ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ, ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು. ಭಾರತದ ರಾಜಕೀಯ ಏಕೀಕರಣ ೫೬೫ ಅರೆ-ಸ್ವತಂತ್ರ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ , ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು. ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೋಡಿದ್ದರು. ೧೯೪೭ರ ಮೇ ೬ರಂದು ಪಟೇಲರು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಈಗಲೇ ಚಿವುಟಿಹಾಕುವುದಾಗಿತ್ತು. ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ, ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು, ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಕಾಂಗ್ರೆಸ್ ಹಾಗೂ ಈ ರಾಜಕುಮಾರರಲ್ಲಿ ಮೂಲಭೂತವಾದ ಯಾವುದೇ ಚಕಮಕಿಯಿಲ್ಲ ಎಂದು ಪಟೇಲರು ಸ್ಪಷ್ಟಪಡಿಸಿದರೂ , ೧೯೪೭ ಆಗಸ್ಟ್ ೧೫ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು. ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಅದರಲ್ಲೂ ಮುಖ್ಯವಾಗಿ ಹೆಚ್ಚುತ್ತಿದ್ದ ಪ್ರತಿಭಟನೆಯ ವಿರುದ್ಧ, ನಿರರ್ಥಕತೆಯನ್ನೂ ಈ ೫೬೫ ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಬರಿಯ ಮೂರು, ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು. ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ, ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ, ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. *ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ (ಆರ್ಜೀ ಹುಕುಮತ್) ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು. ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ ೯೯.೫ ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ ೮೦ ಹಿಂದೂಗಳಾಗಿದ್ದರು. ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ, ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳುತ್ವದಲ್ಲಿ ಸಾವಿರಾರು ಜನ ರಜಾಕಾರರು, ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು. ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು, ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು. ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ, ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. ೧೯೪೮ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು. ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. ೧೯೪೮ ಸೆಪ್ಟೆ೦ಬರ್ ೧೭ ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು, ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ. ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ, ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು. ಹೈದರಾಬಾದು ಮತ್ತು ಜುನಾಘಡವನ್ನು ಭಾರತಕ್ಕೆ ಜಿನ್ನಾ ಬಿಟ್ಟುಕೊಟ್ಟರೆ , ಕಾಶ್ಮೀರ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಅಡ್ಡಿಯಿಲ್ಲ ಎಂಬ ವಿಚಾರ ಪಟೇಲರ ಮನಸ್ಸಿನಲ್ಲಿ ಇರಬಹುದು ಎಂದು ರಾಜಮೋಹನ ಗಾಂಧಿ ಊಹಿಸುತ್ತಾರೆ. ತಮ್ಮ ಪಟೇಲ್ : ಎ ಲೈಫ್ ಎಂಬ ಪುಸ್ತಕದಲ್ಲಿ ಹೈದರಾಬಾದು ಮತ್ತು ಜುನಾಘಡವನ್ನು ಜಿನ್ನಾ ತಮ್ಮ ಸಂಘರ್ಷದ ಭಾಗವಾಗಬಯಸಿದ್ದರು ಎಂದು ಪ್ರತಿಪಾದಿಸುತ್ತಾರೆ. ಭಾರತ ಹೈದರಾಬಾದು ಮತ್ತು ಜುನಾಘಡಗಳಲ್ಲಿ ಜನಮತಗಣನೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟ ಜಿನ್ನಾರ ಉದ್ದೇಶ, ಮುಂದೆ ಇದೇ ತತ್ವವನ್ನು ಕಾಶ್ಮೀರಕ್ಕೂ ಅನ್ವಯಿಸಬೇಕಾಗುತ್ತದೆ ಹಾಗೂ ಜಿನ್ನಾರ ನಂಬಿದ್ದಂತೆ, ಅಲ್ಲಿಯ ಮುಸ್ಲಿಮ್ ಬಹುಸಂಖ್ಯಾತರು ಪಾಕಿಸ್ತಾನದ ಪರವಾಗಿ ಒಲವು ತೋರಿಸುವರು , ಎಂದಿತ್ತು ಎಂಬ ಅಭಿಪ್ರಾಯವೂ ಇದೆ. ಜುನಾಘಡ ಭಾರತದ ಭಾಗವಾದ ಮೇಲೆ , ಅಲ್ಲಿಯ ಬಹಾವುದ್ದೀನ್ ಕಾಲೇಜಿನಲ್ಲಿ ಮಾತನಾಡುತ್ತಾ ಪಟೇಲರು ಹೇಳುತ್ತಾರೆ: " ಹೈದರಾಬಾದು ಎಚ್ಚರಿಕೆಯಿಂದಿಲ್ಲದಿದ್ದರೆ, ಜುನಾಘಡದ ಗತಿಯೇ ಅದಕ್ಕೂ ಆದೀತು. ಪಾಕಿಸ್ತಾನ ಕಾಶ್ಮೀರವನ್ನು ಜುನಾಘಡದ ವಿರುದ್ಧ ದಾಳವಾಗಿ ಉಪಯೋಗಿಸಲು ನೋಡಿದೆ. ಜನಾಭಿಪ್ರಾಯದ ತಳಹದಿಯ ಮೇಲೆ ಈ ವಿಷಯವನ್ನು ಬಗೆಹರಿಸಲು ನಾವು ಪಾಕಿಸ್ತಾನಕ್ಕೆ ಸೂಚಿಸಿದಾಗ, ಕಾಶ್ಮೀರಕ್ಕೆ ಈ ನೀತಿಯನ್ನು ಅನುಸರಿಸುವಂತೆ ಅವರಿಂದ ತಕ್ಷಣದ ಪ್ರತಿಕ್ರಿಯೆ ಬಂತು. ನೀವು ಹೈದರಾಬಾದಿನಲ್ಲಿ ಈ ನೀತಿಗೆ ಒಪ್ಪಿದರೆ ನಾವು ಕಾಶ್ಮೀರದಲ್ಲಿ ಒಪ್ಪಬಹುದು ಎಂದು ಅದಕ್ಕೆ ನಾವು ಜವಾಬು ಕೊಟ್ಟೆವು.” ಭಾರತವನ್ನು ಒಟ್ಟುಗೂಡಿಸುವುದು ಸುಲಭದಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು. ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು. ಗೌರವ,ಪ್ರಶಸ್ತಿ ಗುಜರಾತಿನ ಜನರಿಂದ ಗೌರವಾರ್ಥ 'ಸರ್ದಾರ್' ಎಂಬ ಬಿರುದು ಪಡೆದರು. ಭಾರತದಲ್ಲಿದ್ದ ಪುಟ್ಟ ಪುಟ್ಟ ರಾಜರಿಂದಾಳಲ್ಪಟ್ಟ ರಾಜ್ಯಗಳನ್ನು ಒಂದುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು 'ಉಕ್ಕಿನ ಮನುಷ್ಯ' ರೆಂದೇ ಅಮರರಾದರು. ಸರ್ದಾರ್ ಪಟೇಲರಿಗೆ ೧೯೯೧ ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಏಕತಾ ಮೂರ್ತಿ thumb|ಗುಜರಾತ್, ಭಾರತದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ - ಏಕತಾ ಪ್ರತಿಮೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 182 ಮೀಟರ್‌ ಎತ್ತರದ "ಏಕತೆಯ ಮೂರ್ತಿ"ಯನ್ನು ೩೧ ಅಕ್ಟೋಬರ್ ೨೦೧೮ ರಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಲೋಕಾರ್ಪಣೆ ಮಾಡಿದರು. ಗುಜರಾತಿನ ನರ್ಮದಾ ಸರೋವರ ದಂಡೆಯ ಮೇಲೆ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವಡೋದರಾ ಸಮೀಪದ ಸಾಧು ಬೆಟ್ಟದಿಂದ 3.2 ಕಿಮೀ ದೂರದಲ್ಲಿದೆ. 182 ಮೀಟರ್ (597 ಅಡಿ) ಎತ್ತರದ, ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ.India unveils the world's tallest statue;31 October 2018ಗುಜರಾತಿನ ನರ್ಮದಾ ಕಣಿವೆಯ ಸಾವಿರಾರು ಆದಿವಾಸಿ ಕುಟುಂಬಗಳ ಕಥೆ ಇದು ವಿಶ್ವದ ಎಂಟನೇ ಅದ್ಭುತ... ಉಲ್ಲೇಖ {{ಜನನನಿಧನ|೧೮೭೫|೧೯೫೦ ವರ್ಗ:ಸ್ವಾತಂತ್ರ್ಯ ಹೋರಾಟಗಾರರು ವರ್ಗ:ಭಾರತದ ಗಣ್ಯರು ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ಭಾರತೀಯ ಇತಿಹಾಸದ ಪ್ರಮುಖರು
ರಾಜಧಾನಿ
https://kn.wikipedia.org/wiki/ರಾಜಧಾನಿ
right|200px|ದೆಹಲಿಯಲ್ಲಿರುವ ಸಂಸತ್ ಭವನ ರಾಜಧಾನಿ - (ಆಂಗ್ಲದಲ್ಲಿ Capital), ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಹೆಸರು. ಹಿಂದಿನ ಕಾಲದಲ್ಲಿ ಸಂಸ್ಥಾನಗಳ ನಿಯಂತ್ರಣಕ್ಕೆ ಕೇಂದ್ರವಾಗಿದ್ದ ಊರುಗಳಿಗೂ ರಾಜಧಾನಿ ಎನ್ನುವ ಬಳಕೆಯುಂಟು. ಪ್ರಮುಖ ದೇಶಗಳ ರಾಜಧಾನಿಗಳ ಪಟ್ಟಿ ಭಾರತ - ನವದೆಹಲಿ ಶ್ರೀಲಂಕಾ - ಕೊಲಂಬೊ ಪಾಕಿಸ್ತಾನ - ಇಸ್ಲಾಮಾಬಾದ್ ಅಮೇರಿಕ - ವಾಷಿಂಗ್ಟನ್ ರಶ್ಶಿಯಾ - ಮಾಸ್ಕೊ ಫ್ರಾನ್ಸ್ - ಪ್ಯಾರಿಸ್ ಕೆನಡಾ - ಒಟ್ಟಾವ ಇಟಲಿ - ರೋಮ್ ಬಾಂಗ್ಲಾದೇಶ - ಢಾಕಾ ನೇಪಾಳ - ಕಠ್ಮಂಡು ಇಂಗ್ಲೆಂಡ್ - ಲಂಡನ್ ಇರಾಕ್ - ಬಾಗ್ದಾದ್ ಇರಾನ್ - ತೆಹ್ರಾನ್ ಭಾರತ ದೇಶದ ಸಂಘ ರಾಜ್ಯ ಕ್ಷೇತ್ರಗಳ(ಕೇಂದ್ರಾಡಳಿತ ಪ್ರದೇಶಗಳು) ರಾಜಧಾನಿಗಳ ಪಟ್ಟಿ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು - ಪೋರ್ಟ್ ಬ್ಲೇರ್ ಚಂಡೀಗಡ - ಚಂಡೀಗಡ ದಾದ್ರ ಮತ್ತು ನಾಗರ್ ಹವೆಲಿ - ದಾದ್ರ ದಮನ್ ಮತ್ತು ದಿಯು - ದಮನ್ ಲಕ್ಷದ್ವೀಪ - ಕವರಟ್ಟಿ ಪೊಂಡಿಚೆರಿ - ಪಾಂಡಿಚೆರಿ ನಗರ ಭಾರತ ದೇಶದ ರಾಜ್ಯಗಳ ರಾಜಧಾನಿಗಳ ಪಟ್ಟಿ ತೆಲಂಗಾಣ - ಹೈದರಾಬಾದ್ ಅರುಣಾಚಲ ಪ್ರದೇಶ - ಇಟಾನಗರ ಆಸ್ಸಾಮ್ - ದಿಸ್ಪುರ ಬಿಹಾರ - ಪಾಟ್ನಾ ಛತ್ತೀಸ್‌ಘಡ್ - ರಾಯಪುರ ದೆಹಲಿ - ನವ ದೆಹಲಿ ಗೋವಾ - ಪಣಜಿ ಗುಜರಾತ - ಗಾಂಧಿನಗರ ಹಿಮಾಚಲ ಪ್ರದೇಶ - ಶಿಮ್ಲಾ ಜಮ್ಮು ಮತ್ತು ಕಾಶ್ಮೀರ - ಚಳಿಗಾಲದಲ್ಲಿ ಶ್ರೀನಗರ ಹಾಗೂ ಬೇಸಿಗೆಕಾಲದಲ್ಲಿ ಜಮ್ಮು ಝಾರ್ಖಂಡ - ರಾಂಚಿ ಕರ್ನಾಟಕ - ಬೆಂಗಳೂರು ಕೇರಳ - ತಿರುವನಂತಪುರಂ ಮಧ್ಯ ಪ್ರದೇಶ - ಭೂಪಾಲ್ ಮಹಾರಾಷ್ಟ್ರ - ಮುಂಬಯಿ ಮಣಿಪುರ - ಇಂಫಾಲ ಮೇಘಾಲಯ - ಶಿಲ್ಲಾಂಗ ಮಿಝೋರಾಮ್ - ಐಝ್ವಾಲ್ ನಾಗಾಲ್ಯಾಂಡ್ - ಕೊಹಿಮಾ ಒಡಿಶಾ - ಭುವನೇಶ್ವರ ಹರಿಯಾಣ ಮತ್ತು ಪಂಜಾಬ - ಚಂಡೀಗಡ ರಾಜಸ್ಥಾನ - ಜೈಪುರ ಸಿಕ್ಕಿಂ - ಗ್ಯಾಂಗಟಕ್ ಸೀಮಾಂಧ್ರ - ಅಮರಾವತಿ ತಮಿಳುನಾಡು - ಚೆನ್ನೈ ತ್ರಿಪುರ - ಆಗರ್ತಲ ಉತ್ತರ ಪ್ರದೇಶ - ಲಕ್ನೊ ಉತ್ತರಾಂಚಲ - ಡೆಹ್ರಾಡೂನ್ ಪಶ್ಚಿಮ ಬಂಗಾಳ - ಕಲ್ಕತ್ತಾ ವರ್ಗ:ಆಡಳಿತ ವಿಭಾಗಗಳು ವರ್ಗ:ರಾಜಧಾನಿಗಳು
ಪ್ಯಾರಿಸ್
https://kn.wikipedia.org/wiki/ಪ್ಯಾರಿಸ್
thumb|right|250px|ಐಫಲ್ ಟವರ್, ಪ್ಯಾರಿಸ್ ಪ್ಯಾರಿಸ್ ಫ್ರಾನ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಫ್ರಾನ್ಸ್‍ನ ಉತ್ತರ ಭಾಗದಲ್ಲಿರುವ ಸೈನ್ ನದಿಯ ತೀರದಲ್ಲಿ ಸ್ಥಿತವಾಗಿದೆ. ಕನ್ನಡ ಸಿನೆಮಾದಲ್ಲಿ ಪ್ಯಾರಿಸ್ ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ ಸಿನೆಮಾ ಪ್ಯಾರಿಸ್ ಪ್ರಣಯ ಹೊರಬಂದಿತ್ತು. ಇದರ ಕಥೆ ಪ್ಯಾರಿಸ್ ಸುತ್ತ ಹೆಣೆಯಲಾಗಿದ್ದು, ಪ್ಯಾರಿಸ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ಯಾರಿಸ್ ಪ್ರವಾಸೋದ್ಯಮ ಮುಖ್ಯ ಆಕರ್ಷಣೆಗಳು ಪುಟ ಸೃಷ್ಟಿಯಲ್ಲಿ ಇದೆ </big> ಪ್ಯಾರಿಸ್ ಮತ್ತು ಭಾರತ</big> ಪುಟ ಸೃಷ್ಟಿಯಲ್ಲಿ ಇದೆ </big> ಪ್ಯಾರಿಸ್ ಸುತ್ತಾಟ </big> ಪ್ಯಾರಿಸ್ ಸುತ್ತಡಾಲು ಎಲ್ಲ ತರಹದ ವ್ಯವಸ್ತೆ ಕಲ್ಪಿಸಿಲಾಗಿದೆ. ಸಾಮಾನ್ಯವಾಗಿ ಮೆಟ್ರೊ ರೈಲು </big> ಪ್ಯಾರಿಸ್ ಎರಡು ದಿವಸದ ಪ್ರಯಾಣ</big> ಪುಟ ಸೃಷ್ಟಿಯಲ್ಲಿ ಇದೆ ಉಲ್ಲೇಖಗಳು ವರ್ಗ:ಯುರೋಪ್ ಖಂಡದ ರಾಜಧಾನಿ ನಗರಗಳು ವರ್ಗ:ಫ್ರಾನ್ಸ್
ಹಾಸನ ಜಿಲ್ಲೆ
https://kn.wikipedia.org/wiki/ಹಾಸನ_ಜಿಲ್ಲೆ
ಕರ್ನಾಟಕದ ಜಿಲ್ಲೆಗಳು
https://kn.wikipedia.org/wiki/ಕರ್ನಾಟಕದ_ಜಿಲ್ಲೆಗಳು
thumbnail|upright|ಕರ್ನಾಟಕದ ನಕ್ಷೆ ಹಿನ್ನೆಲೆ ನಮ್ಮ ಕರ್ನಾಟಕ ರಾಜ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಬ್ರಿಟಿಷರ ಕಾಲದಲ್ಲಿ ಅವರ ಸುಗಮ ಆಡಳಿತದ ಕಾರಣಕ್ಕಾಗಿ ವಿವಿಧ ಜಿಲ್ಲೆಗಳನ್ನು ರಚಿಸಲಾಯಿತು. ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಕೇಂದ್ರಗಳು ಬದಲಾಗಿವೆ. ಕೆಲವು ಜಿಲ್ಲೆಗಳು ಚಿಕ್ಕದಾಗಿದ್ದು, ಕೆಲವು ವಿಸ್ತಾರಗೊಂಡಿವೆ. ಕೆಲವೊಂದು ದೊಡ್ಡ ಜಿಲ್ಲೆಗಳನ್ನು ವಿಭಜಿಸಿ ಎರಡು ಜಿಲ್ಲೆಗಳನ್ನು ರಚಿಸಲಾಗಿದೆ. ಈ ಜಿಲ್ಲೆಗಳ ಆಡಳಿತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೋಡಿಕೊಳ್ಳುತ್ತಾರೆ. ನಮ್ಮ ರಾಜ್ಯ ಸರ್ಕಾರದ ಆಡಳಿತದ ಅನುಕೂಲಕ್ಕಾಗಿ ಇರುವ ಮೂವತ್ತೊಂದು ಜಿಲ್ಲೆಗಳು ನಾಲ್ಕು ಕಂದಾಯ ವಿಭಾಗಗಳ ಅಡಿಯಲ್ಲಿ ಬರುವಂತೆ ರೂಪಿಸಲಾಗಿದೆ, ಅವು ಈ ಕೆಳಗಿನಂತೆ ಇವೆ: 1. ಬೆಂಗಳೂರು ವಿಭಾಗ thumbnail|upright|ಬೆಂಗಳೂರು ವಿಭಾಗದ ಜಿಲ್ಲೆಗಳು ಕರ್ನಾಟಕದ ರಾಜಧಾನಿ ಬೆಂಗಳೂರು ಆಗಿದೆ. ಇದು ಒಂದು ಆಡಳಿತ ಕಂದಾಯ ವಿಭಾಗವಾಗಿದೆ. ಈ ವಿಭಾಗದಲ್ಲಿ ಒಂಭತ್ತು ಜಿಲ್ಲೆಗಳಿವೆ. ಅವು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ. ನಮ್ಮ ರಾಜ್ಯದ ದಕ್ಷಿಣ ಭಾಗದಲ್ಲಿ ಇವು ನೆಲೆಗೊಂಡಿವೆ. 2. ಮೈಸೂರು ವಿಭಾಗ thumbnail|upright|ಮೈಸೂರು ವಿಭಾಗದ ಜಿಲ್ಲೆಗಳು ನಮ್ಮ ರಾಜ್ಯದ ಮತ್ತೊಂದು ಆಡಳಿತ ವಿಭಾಗವೆಂದರೆ ಮೈಸೂರು ವಿಭಾಗ. ಮೈಸೂರು ಆರಂಭದಲ್ಲಿ ಒಡೆಯರ್ ವಂಶಸ್ಥರ ರಾಜಧಾನಿಯಾಗಿತ್ತು. ಈ ವಿಭಾಗದಲ್ಲಿರುವ ಎಂಟು ಜಿಲ್ಲೆಗಳೆಂದರೆ: ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ ಮತ್ತು ಕೊಡಗು. ಕರ್ನಾಟಕದ ಅನೇಕ ಶ್ರೀಮಂತ ಜಿಲ್ಲೆಗಳು ಈ ವಿಭಾಗದಲ್ಲಿವೆ. ಈ ವಿಭಾಗವು ನದಿಗಳಿಗೆ, ಪರ್ವತ ಶ್ರೇಣಿಗಳಿಗೆ, ಅರಣ್ಯಗಳಿಗೆ, ಕಾಡು ಪ್ರಾಣಿಗಳಿಗೆ, ಕಾಫಿ ತೋಟಗಳಿಗೆ, ಕರಾವಳಿಗೆ, ಬಂದರುಗಳಿಗೆ ಪ್ರಸಿದ್ಧವಾಗಿದೆ. 3. ಬೆಳಗಾವಿ ವಿಭಾಗ thumbnail|upright|ಬೆಳಗಾವಿ ವಿಭಾಗದ ಜಿಲ್ಲೆಗಳು ಈ ವಿಭಾಗದ ನಾಲ್ಕು ಜಿಲ್ಲೆಗಳು 1956ರವರೆಗೆ ಬಾಂಬೆ ಪ್ರಾಂತ್ಯದಲ್ಲಿ ಇದ್ದವು. ನಂತರ ಕರ್ನಾಟಕ ರಾಜ್ಯದಲ್ಲಿ ಸೇರ್ಪಡೆಯಾದವು. ಈ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ ಮತ್ತು ಉತ್ತರ ಕನ್ನಡ. ಇವುಗಳಲ್ಲಿ ಉತ್ತರ ಕನ್ನಡ ಮತ್ತು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಾಗಿವೆ. 4. ಕಲಬುರ್ಗಿ ವಿಭಾಗ thumbnail|upright|ಕಲಬುರ್ಗಿ ವಿಭಾಗದ ಜಿಲ್ಲೆಗಳು ಕಲಬುರ್ಗಿ ವಿಭಾಗದಲ್ಲಿ ಇರುವ ಜಿಲ್ಲೆಗಳೆಂದರೆ: ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಹೊಸದಾಗಿ ಉದಯವಾದ ವಿಜಯನಗರ. ದುರದೃಷ್ಟವಶಾತ್ ಈ ಜಿಲ್ಲೆಗಳು ಸಾಕ್ಷರತಾ ಪ್ರಮಾಣ, ತಲಾ ಆದಾಯ, ಕೃಷಿ, ಜೀವಿತಾವಧಿ ಮುಂತಾದ ವಿಷಯಗಳಲ್ಲಿ ಸಾಕಷ್ಟು ಹಿಂದುಳಿದಿವೆ. ಅದಕ್ಕಾಗಿ ಕರ್ನಾಟಕ ಸರ್ಕಾರವು 2000ರಲ್ಲಿ ಡಾ. ಡಿ. ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ತೀರಾ ಇತ್ತೀಚೆಗೆ ಭಾರತ ಸರ್ಕಾರ ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಸಂವಿಧಾನದ 371 (ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಿದೆ. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕೃತ ಪಟ್ಟಿ ವಿವರಣೆ ಸಂಕೇತಜಿಲ್ಲೆಜಿಲ್ಲಾ ಕೇಂದ್ರಸ್ಥಾಪನೆಇಲ್ಲಿ 'ಸ್ಥಾಪನೆ' ಎಂದರೆ ಆ ಜಿಲ್ಲೆಯು ಕರ್ನಾಟಕದಲ್ಲಿ ಜಿಲ್ಲೆಯಾಗಿ ಸ್ಥಾಪನೆಯಾದ ವರ್ಷವನ್ನು ಸೂಚಿಸುತ್ತದೆ. ಒಂದು ವೇಳೆ ಆ ಜಿಲ್ಲೆಯು ಕರ್ನಾಟಕದ ಒಳಗೆ ಜಿಲ್ಲೆಯಾಗಿ ಸೇರ್ಪಡೆಯಾಗುವ ಮೊದಲೇ ಸ್ಥಾಪಿತವಾಗಿದ್ದರೆ ೧ ನವೆಂಬರ್ ೧೯೫೬ರನ್ನು ಜಿಲ್ಲಾ ಸ್ಥಾಪನೆಯ ದಿನ ಎಂದು ಪರಿಗಣಿಸಲಾಗುತ್ತದೆ.ತಾಲೂಕುಗಳುಜನಸಂಖ್ಯೆhttp://www.census2011.co.in/census/state/districtlist/karnataka.html(2011ರ ಜನಗಣತಿಯ ಪ್ರಕಾರ)</small>ವಿಸ್ತೀರ್ಣಜನಸಾಂದ್ರತೆ(2011ರ ಜನಗಣತಿಯ ಪ್ರಕಾರ)</small>ನಕ್ಷೆBKಬಾಗಲಕೋಟಬಾಗಲಕೋಟ15 ಆಗಸ್ಟ್ 1997 ಬಾದಾಮಿ ಬಾಗಲಕೋಟ ಬೀಳಗಿ ಇಳಕಲ್ಲ ರಬಕವಿ-ಬನಹಟ್ಟಿ ಗುಳೇದಗುಡ್ಡ ಜಮಖಂಡಿ ಮುಧೋಳ1,889,75275pxBNಬೆಂಗಳೂರು ನಗರಬೆಂಗಳೂರು1 ನವೆಂಬರ್ 1956 ಬೆಂಗಳೂರು ಆನೇಕಲ್ ಯಲಹಂಕ ಕೃಷ್ಣರಾಜಪುರ ಕೆಂಗೇರಿ9,621,55175pxBRಬೆಂಗಳೂರು ಗ್ರಾಮಾಂತರಬೆಂಗಳೂರು15 ಆಗಸ್ಟ್ 1986 ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ನೆಲಮಂಗಲ990,92375pxBGಬೆಳಗಾವಿಬೆಳಗಾವಿ1 ನವೆಂಬರ್ 1956ಅಥಣಿ ಬೈಲಹೊಂಗಲ ಬೆಳಗಾವಿ ಚಿಕ್ಕೋಡಿ ಗೋಕಾಕ ಹುಕ್ಕೇರಿ ಖಾನಾಪುರ ಕಾಗವಾಡ ಮೂಡಲಗಿ ನಿಪ್ಪಾಣಿ ಕಿತ್ತೂರು ರಾಯಭಾಗ ರಾಮದುರ್ಗ ಸವದತ್ತಿ4,779,66175pxBLಬಳ್ಳಾರಿಬಳ್ಳಾರಿ1 ನವೆಂಬರ್ 1956ಬಳ್ಳಾರಿ ಕಂಪ್ಲಿ ಕುರುಗೋಡ ಸಂಡೂರು ಶಿರುಗುಪ್ಪ2,452,59575pxBDಬೀದರ್ಬೀದರ್1 ನವೆಂಬರ್ 1956ಬೀದರ್ ಬಸವಕಲ್ಯಾಣ ಕಮಲನಗರ ಹುಲಸೂರು ಚಿಟಗುಪ್ಪಾ ಭಾಲ್ಕಿ ಹುಮ್ನಾಬಾದ್ ಔರಾದ್1,703,30075pxBJವಿಜಯಪುರವಿಜಯಪುರ1 ನವೆಂಬರ್ 1956ವಿಜಯಪುರ ಇಂಡಿ ಮುದ್ದೇಬಿಹಾಳ ಬಬಲೇಶ್ವರ ನಿಡಗುಂದಿ ತಿಕೋಟಾ ದೇವರ ಹಿಪ್ಪರಗಿ ತಾಳಿಕೋಟೆ ಚಡಚಣ ಕೊಲ್ಹಾರ ಸಿಂದಗಿ ಬಸವನ ಬಾಗೇವಾಡಿ2,177,33175pxCJಚಾಮರಾಜನಗರಚಾಮರಾಜನಗರ15 ಆಗಸ್ಟ್ 1997ಚಾಮರಾಜನಗರ ಗುಂಡ್ಲುಪೇಟೆ ಕೊಳ್ಳೇಗಾಲ ಹನೂರು ಯಳಂದೂರು1,020,79175pxCBಚಿಕ್ಕಬಳ್ಳಾಪುರಚಿಕ್ಕಬಳ್ಳಾಪುರ10 ಸೆಪ್ಟೆಂಬರ್ 2007ಬಾಗೇಪಲ್ಲಿ ಚಿಕ್ಕಬಳ್ಳಾಪುರ ಚಿಂತಾಮಣಿ ಗೌರಿಬಿದನೂರು ಗುಡಿಬಂಡೆ ಶಿಡ್ಲಘಟ್ಟ ಚೇಳೂರು1,255,10475pxCKಚಿಕ್ಕಮಗಳೂರುಚಿಕ್ಕಮಗಳೂರು1 ನವೆಂಬರ್ 1956ಚಿಕ್ಕಮಗಳೂರು ಕಡೂರು ಕೊಪ್ಪ ಮೂಡಿಗೆರೆ ನರಸಿಂಹರಾಜಪುರ ಶೃಂಗೇರಿ ಅಜ್ಜಂಪುರ ತರೀಕೆರೆ1,137,96175pxCTಚಿತ್ರದುರ್ಗಚಿತ್ರದುರ್ಗ1 ನವೆಂಬರ್ 1956ಚಳ್ಳಕೆರೆ ಚಿತ್ರದುರ್ಗ ಹಿರಿಯೂರು ಹೊಳಲ್ಕೆರೆ ಹೊಸದುರ್ಗ ಮೊಳಕಾಲ್ಮೂರು1,659,45675pxDKದಕ್ಷಿಣ ಕನ್ನಡಮಂಗಳೂರು1 ನವೆಂಬರ್ 1956ಬಂಟ್ವಾಳ ಬೆಳ್ತಂಗಡಿ ಮಂಗಳೂರು ಮೂಡುಬಿದಿರೆ ಕಡಬ ಪುತ್ತೂರು ಸುಳ್ಯ2,089,64975pxDAದಾವಣಗೆರೆದಾವಣಗೆರೆ15 ಆಗಸ್ಟ್ 1997ಚನ್ನಗಿರಿ ದಾವಣಗೆರೆ ಹರಿಹರ ಹೊನ್ನಾಳಿ ಜಗಳೂರು ನ್ಯಾಮತಿ1,945,49775pxDHಧಾರವಾಡಧಾರವಾಡ1 ನವೆಂಬರ್ 1956ಅಣ್ಣಿಗೇರಿ ಅಳ್ನಾವರ ಧಾರವಾಡ ಹುಬ್ಬಳ್ಳಿ ಹುಬ್ಬಳ್ಳಿ ನಗರ ಕಲಘಟಗಿ ಕುಂದಗೋಳ ನವಲಗುಂದ1,847,02375pxGAಗದಗಗದಗ24 ಆಗಸ್ಟ್ 1997ಗದಗ-ಬೆಟಗೇರಿ ಮುಂಡರಗಿ ನರಗುಂದ ಗಜೇಂದ್ರಗಡ ಲಕ್ಷ್ಮೇಶ್ವರ ರೋಣ ಶಿರಹಟ್ಟಿ1,064,57075pxGUಕಲಬುರ್ಗಿಕಲಬುರ್ಗಿ1 ನವೆಂಬರ್ 1956ಅಫಜಲ್ಪುರ ಆಳಂದ ಚಿಂಚೋಳಿ ಚಿತ್ತಾಪುರ ಕಲಬುರ್ಗಿ ಕಮಲಾಪುರ ಕಾಳಗಿ ಜೇವರ್ಗಿ ಸೇಡಂ ಶಹಾಬಾದ್ ಯಡ್ರಾವಿ2,566,32675pxHSಹಾಸನಹಾಸನ1 ನವೆಂಬರ್ 1956ಆಲೂರು ಅರಕಲಗೂಡು ಅರಸೀಕೆರೆ ಬೇಲೂರು ಚನ್ನರಾಯಪಟ್ಟಣ ಹಾಸನ ಹೊಳೆನರಸೀಪುರ ಸಕಲೇಶಪುರ1,776,42175pxHVಹಾವೇರಿಹಾವೇರಿ24 ಆಗಸ್ಟ್ 1997ಬ್ಯಾಡಗಿ ಹಾನಗಲ್ ಹಾವೇರಿ ಹಿರೇಕೆರೂರ ರಾಣಿಬೆನ್ನೂರು ರಟ್ಟೀಹಳ್ಳಿ ಸವಣೂರು ಶಿಗ್ಗಾಂವ1,597,66875pxKDಕೊಡಗುಮಡಿಕೇರಿ1 ನವೆಂಬರ್ 1956ಮಡಿಕೇರಿ ಸೋಮವಾರಪೇಟೆ ವಿರಾಜಪೇಟೆ554,51975pxKLಕೋಲಾರಕೋಲಾರ1 ನವೆಂಬರ್ 1956ಬಂಗಾರಪೇಟೆ ಕೋಲಾರ ಕೆ.ಜಿ.ಎಫ್ ಮಾಲೂರು ಮುಳಬಾಗಿಲು ಶ್ರೀನಿವಾಸಪುರ1,536,40175pxKPಕೊಪ್ಪಳಕೊಪ್ಪಳ24 ಆಗಸ್ಟ್ 1997ಗಂಗಾವತಿ ಕನಕಗಿರಿ ಕುಕನೂರು ಕಾರಟಗಿ ಕೊಪ್ಪಳ ಕುಷ್ಟಗಿ ಯಲಬುರ್ಗಾ1,389,92075pxMAಮಂಡ್ಯಮಂಡ್ಯ1 ನವೆಂಬರ್ 1956 (29 ಆಗಸ್ಟ್ 1939)ವಿಶೇಷ ಮಾಹಿತಿ: ಈ ತಾರೀಕು ಜಿಲ್ಲೆ ಸ್ಥಾಪನೆಯಾದ ದಿನವನ್ನು ಸೂಚಿಸುತ್ತದೆ. 1956ರ ನವೆಂಬರ್ 1ರ ಮುಂಚೆಯೇ ಈ ಜಿಲ್ಲೆ ಮೈಸೂರು ರಾಜ್ಯದ ಭಾಗವಾಗಿತ್ತುಕೃಷ್ಣರಾಜಪೇಟೆ ಮದ್ದೂರು ಮಳವಳ್ಳಿ ಮಂಡ್ಯ ನಾಗಮಂಗಲ ಪಾಂಡವಪುರ ಶ್ರೀರಂಗಪಟ್ಟಣ1,805,76975pxMYಮೈಸೂರುಮೈಸೂರು1 ನವೆಂಬರ್ 1956ಹೆಗ್ಗಡದೇವನಕೋಟೆ ಹುಣಸೂರು ಕೃಷ್ಣರಾಜನಗರ ಮೈಸೂರು ನಂಜನಗೂಡು ಪಿರಿಯಾಪಟ್ಟಣ ಸರಗೂರು ಟಿ.ನರಸೀಪುರ3,001,12775pxRAರಾಯಚೂರುರಾಯಚೂರು1 ನವೆಂಬರ್ 1956ದೇವದುರ್ಗ ಲಿಂಗಸೂಗೂರು ಮಾನ್ವಿ ಮಸ್ಕಿ ರಾಯಚೂರು ಸಿಂಧನೂರು ಸಿರವಾರ1,928,81275pxRMರಾಮನಗರರಾಮನಗರ10 ಸೆಪ್ಟೆಂಬರ್ 2007ರಾಮನಗರ ಚನ್ನಪಟ್ಟಣ ಕನಕಪುರ ಮಾಗಡಿ ಹಾರೋಹಳ್ಳಿ ಕೋಡಿಹಳ್ಳಿ ಕುದೂರು ಕುಣಿಗಲ್ ಹುಲಿಯೂರು ದುರ್ಗ1,082,63675pxSHಶಿವಮೊಗ್ಗಶಿವಮೊಗ್ಗ1 ನವೆಂಬರ್ 1956ಭದ್ರಾವತಿ ಹೊಸನಗರ ಸಾಗರ ಶಿಕಾರಿಪುರ ಶಿವಮೊಗ್ಗ ಸೊರಬ ತೀರ್ಥಹಳ್ಳಿ1,752,75375pxTUತುಮಕೂರುತುಮಕೂರು1 ನವೆಂಬರ್ 1956ಚಿಕ್ಕನಾಯಕನಹಳ್ಳಿ ಗುಬ್ಬಿ ಹುಳಿಯಾರು ಕೊರಟಗೆರೆ ಕುಣಿಗಲ್ ಮಧುಗಿರಿ ಪಾವಗಡ ಶಿರಾ ತಿಪಟೂರು ತುಮಕೂರು ತುರುವೇಕೆರೆ2,678,98075pxUDಉಡುಪಿಉಡುಪಿ25 ಆಗಸ್ಟ್ 1997ಉಡುಪಿ ಬ್ರಹ್ಮಾವರ ಕಾರ್ಕಳ ಕಾಪು ಕುಂದಾಪುರ ಹೆಬ್ರಿ ಬೈಂದೂರು1,177,36175pxUKಉತ್ತರ ಕನ್ನಡಕಾರವಾರ1 ನವೆಂಬರ್ 1956ಅಂಕೋಲಾ ಭಟ್ಕಳ ದಾಂಡೇಲಿ ಹಳಿಯಾಳ ಹೊನ್ನಾವರ ಜೋಯ್ಡಾ ಕಾರವಾರ ಕುಮಟಾ ಮುಂಡಗೋಡು ಸಿದ್ಧಾಪುರ ಸಿರ್ಸಿ ಯಲ್ಲಾಪುರ1,437,16975pxVNವಿಜಯನಗರಹೊಸಪೇಟೆ18 ನವೆಂಬರ್ 2020ಹಗರಿಬೊಮ್ಮನಹಳ್ಳಿ ಹರಪನಹಳ್ಳಿ ಹೂವಿನ ಹಡಗಲಿ ಹೊಸಪೇಟೆ ಕೊಟ್ಟೂರು ಕೂಡ್ಲಿಗಿ 1,353,62875pxಯಾದಗಿರಿಯಾದಗಿರಿ30 ಡಿಸೆಂಬರ್ 2009ಗುರುಮಿಟಕಲ್ ಹುಣಸಗಿ ಶಹಾಪುರ ಶೋರಾಪುರ ವಡಗೇರಾ ಯಾದಗಿರಿ1,174,27175px ಉಲ್ಲೇಖಗಳು ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕರ್ನಾಟಕ ವರ್ಗ:ಭಾರತದ ಜಿಲ್ಲೆಗಳು
ದಕ್ಷಿಣ ಕನ್ನಡ
https://kn.wikipedia.org/wiki/ದಕ್ಷಿಣ_ಕನ್ನಡ
ದಕ್ಷಿಣ ಕನ್ನಡ (ತುಳು: ಕುಡ್ಲ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ)http://www.censusindia.gov.in/pca/default.aspx . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವೆಂದರೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಬೆಳ್ತಂಗಡಿ, ಮೂಡಬಿದಿರೆ,ಹಾಗೂ ಕಡಬ. ಕೆಲವು ವರ್ಷಗಳ ಹಿಂದೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು . ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. 200px|thumb|right|ಪಣಂಬೂರಿನಲ್ಲಿ ಸೂರ್ಯಾಸ್ತಮಾನ ಇತಿಹಾಸ thumb|right|ಕುಕ್ಕೆ ಸುಬ್ರಮಣ್ಯ ದೇವಸ್ಠಾನ ಹಿಂದೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಟ್ಟಾಗಿ ಕೆನರಾ '''(ಕನ್ನಡ'' ಶಬ್ದದ ಆಂಗ್ಲೀಕೃತ ರೂಪ) ಎಂದು ಕರೆಯಲಾಗುತ್ತಿತ್ತು. ೧೮೬೦ ರಲ್ಲಿ ಬ್ರಿಟಿಷರು ಈ ಭಾಗವನ್ನು ಉತ್ತರ ಕೆನರ(North Canara) ಮತ್ತು ದಕ್ಷಿಣ ಕೆನರ(South Canara)ಎಂದು ವಿಂಗಡಿಸಿದರು. ೧೮೬೨ ರಲ್ಲಿ ಉತ್ತರ ಕೆನರವನ್ನು ಬೋಂಬೆ ಪ್ರೆಸಿಡೆನ್ಸಿ ಹಾಗೂ ದಕ್ಷಿಣ ಕೆನರವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಕುಂದಾಪುರ ತಾಲೂಕು ಮೊದಲು ಉತ್ತರ ಕೆನರದಲ್ಲಿದ್ದರೂ ನಂತರ ದಕ್ಷಿಣ ಕೆನರಕ್ಕೆ ಸೇರಿಸಲಾಯಿತು.ಸ್ವಾತಂತ್ರ್ರ್ಯಾನಂತರ ಈ ಎರಡೂ ಜಿಲ್ಲೆಗಳು ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆಗಳಾಗಿ ಬದಲಾದವು. ಸ್ವಾತಂತ್ರ್ಯದ ನಂತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿತ್ತು. ೧೯೫೬ರ ಪುನರ್ ವಿಂಗಡನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು. ಕರ್ನಾಟಕ ಸರ್ಕಾರ ಆಗಸ್ಟ್ ೧೯೯೭ರಲ್ಲಿ, ಆಡಳಿತ ದೃಷ್ಟಿಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾಗಿ ವಿಂಗಡಿಸಿತು. ಜನ ನಂಬುಗೆಯಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ ’ಪರಶುರಾಮ ಸೃಷ್ಟಿ’ಯ ಭಾಗವಾಗಿದೆ. ಈ ನಂಬುಗೆಯಂತೆ, ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು ೨೧ ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಬಯಸುತ್ತಾನೆ. ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ(ಪರಶು)ಯನ್ನು ಸಮುದ್ರದೆಡೆಗೆ ಎಸೆಯಲು ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿದು ಸೃಷ್ಟಿಯಾದ ಭೂಭಾಗವೇ ಈ ಪರಶುರಾಮ ಸೃಷ್ಟಿ. ಬಹುಶಃ ಪಶ್ಚಿಮ ಘಟ್ಟದ ಕೆಳಗಿನ ಭೂಭಾಗದಲ್ಲಿ ಈ ಜಿಲ್ಲೆ ಇರುವುದರಿಂದ ಈ ನಂಬಿಕೆಗೆ ಪುಷ್ಟಿ ಬಂದಿರಬಹುದು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ೧೫೦ ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊಂದಿದೆ. ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ. ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ. ಭತ್ತ ಮತ್ತು ತೆಂಗು ಇಲ್ಲಿಯ ಮುಖ್ಯ ಬೆಳೆಗಳು. ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯಂತ ಅಭಿವೃದ್ದಿ ಹೊಂದಿದ ಜಿಲ್ಲೆ.ಮಂಗಳೂರು ನಗರವು ಇಲ್ಲಿಯ ಜಿಲ್ಲಾ ಕೇಂದ್ರವಾಗಿದೆ. ಮಂಗಳೂರು ನಗರವು ತ್ವರಿತಗತಿಯಲ್ಲಿ ಅಭಿವೃದ್ದಿ ಹೊಂದುತ್ತ ಇದೆ.ಬೆಂಗಳೂರಿನ ನಂತರ ೨ನೇ ಅಭಿವೃದ್ದಿ ಹೊಂದುತ್ತಿರುವ ನಗರ. ಇಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ,ಪ್ರಮುಖ ಬಂದರು ಇದೆ ಇದು ದೇಶದಲ್ಲಿಯೇ ೭ ಬೃಹತ್ ಬಂದರು. ಇಲ್ಲಿನ ರೈಲು ನಿಲ್ದಾಣವು ದೇಶದ ಪ್ರಮುಖ ನಿಲ್ದಾಣಗಳಲ್ಲಿ ಒಂದು.ಈ ಜಿಲ್ಲೆಯನ್ನು ಬುದ್ದಿವಂತರ ಜಿಲ್ಲೆಯೆಂದು ಕರೆಯುತ್ತಾರೆ. ಶೈಕ್ಷಣಿಕವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕ್ರಾಂತಿಯಲ್ಲಿ ಬಹಳ ಮುಂದುವರಿದಿದೆ. ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಚೆಂದ ಇಲ್ಲಿಯ ಪ್ರಕೃತಿ ಸೌಂದಯ೯ವನ್ನು ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ರಮಣೀಯವಾದಂತ ಗುಡ್ಡ ಬೆಟ್ಟಗಳು, ಬಯಲು ಸೀಮೆಗಳು, ನಿತ್ಯಹರಿದ್ವಣ೯ದ ಕಾಡುಗಳು,ಸಂಜೆಯ ಹೊತ್ತಿಗೆ ಕಡಲ ತೀರದಲ್ಲಿ ಸೂಯ೯ನು ಸಮುದ್ರವನ್ನು ತನ್ನ ಅಂತರಂಗದಲ್ಲಿ ಅದುಮಿಟ್ಟಾಗೆ ಪ್ರವಾಸಿಗರಿಗೆ ಗೋಚರಿಸಲ್ಪಡುತ್ತದೆ. ಜಿಲ್ಲೆಯು ಮುಖ್ಯವಾಗಿ ಶೈಕ್ಷಣಿಕವಾಗಿ ಬಹಳ ಮುಂದುವರಿದಿದೆ. ಇಲ್ಲಿ ಅತ್ಯಂತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ ವೈದ್ಯಕೀಯ, ದಂತ, ನಸಿ೯ಂಗ್, ಬಿ.ಪಿ.ಟಿ, ಇಂಜಿನಿಯರಿಂಗ್, ಯಮ್.ಬಿ.ಎ, ಮುಂತಾದ ಕೋಸ್೯ಗಳು ಇಲ್ಲಿ ಲಭ್ಯವಿದೆ, ಅತೀ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿತ್ತು. ೧೯೫೬ರ ಪುನರ್ ವಿಂಗಡನೆ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು. ದಕ್ಷಿಣ ಕನ್ನಡವನ್ನು ಬುದ್ದಿವಂತರ ನಾಡು ಎಂದು ಕರೆಯಲಾಗುತ್ತದೆ. ಭಾಷೆಗಳು ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಜಿಲ್ಲೆಯ ತೆಂಕು ಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಬಡಗು ಭಾಗವನ್ನು ಒಟ್ಟಾಗಿ ತುಳುನಾಡು ಎಂದು ಕರೆಯುತ್ತಾರೆ. ಇಲ್ಲಿನ ಇತರ ಭಾಷೆಗಳೆಂದರೆ ತುಳು ಕನ್ನಡ ಹವ್ಯಕ ಕನ್ನಡ ಕುಂದಾಪುರ ಕನ್ನಡ ಅರೆಬಾಸೆ ಕೊಂಕಣಿ ಬ್ಯಾರಿ ಭಾಷೆ ಐತಿಹಾಸಿಕ ಸ್ಥಳಗಳು ಶ್ರೀ ದುಗಾ೯ಪರಮೇಶ್ವರಿ ದೇವಸ್ಥಾನ, ಕಟೀಲು ಸ್ವಾಮಿ ಕೊಡಮಣಿತ್ತಾಯ ದೈವಸ್ಥಾನ, ಶಿಭರೂರು ಬೋಳಾರ: ಹಳೇಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನ. ಬೋಳಾರ: ಶ್ರೀ ಮಂಗಳಾದೇವಿ ದೇವಸ್ಥಾನ. ಬೋಳಾರ: ಶ್ರೀ ಹನುಮಾನ್ ದೇವಸ್ಥಾನ. ಕುದ್ರೋಳಿ: ಶ್ರೀ ಗೋಕರ್ನಾಥೇಶ್ವರ ದೇವಸ್ಥಾನ. ಮುಲ್ಕಿ: ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ. ಮೂಡುಬಿದಿರೆ: ಸಾವಿರ ಕಂಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ), ಶ್ರೀ ಹನುಮಂತ ದೇವಸ್ಥಾನ, ಗುರು ಬಸದಿ (ಸಿದ್ಧಾಂತ ಬಸದಿ) ಉರ್ವ : ಶ್ರೀ ಮಾರಿಯಮ್ಮ ದೇವಸ್ಥಾನ ಹಂಪನಕಟ್ಟೆ : ಶ್ರೀ ಶರವು ಮಹಾ ಗಣಪತಿ ದೇವಸ್ಥಾನ ಕದ್ರಿ: ಕದ್ರಿ ಶ್ರೀ ಮಂಜುನಾಥ ದೇವಸ್ಥಾನ. ಮರೋಳಿ : ಇತಿಹಾಸ ಪ್ರಸಿದ್ಧ ಶ್ರೀ ಸೂರ್ಯ ನಾರಾಯಣ ಸ್ವಾಮಿ ದೇವಸ್ಥಾನ ಧರ್ಮಸ್ಥಳ:ಶ್ರೀ ಮಂಜುನಾಥ ಸ್ವಾಮಿ ದೇವಾಸ್ಥಾನ. ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಕುತ್ತಾರ್: ಕೊರಗಜ್ಜ ಆದಿಸ್ಥಳ( ಶ್ರೀ ಪಂಜಂದಾಯ ಬಂಟ ದೈವಸ್ಥಾನ ಭಂಡಾರ ಬೈಲ್). ಕೊಂಡಾಣ: ಕೊಂಡಾಣ ಶ್ರೀ ಪಿಲಿಚಂಡಿ ಬಂಟ ದೈವಸ್ಥಾನ). ಮಂಜನಾಡಿ: ಶ್ರೀ ಮಾಲರಾಯ ದೈವಸ್ಥಾನ). ಮಂಜನಾಡಿ ಅಸಯ್ಯಿದ್ ಇಸ್ಮಾಯಿಲ್ ವಳಿಯುಲ್ಲಾಹಿ ದರ್ಗಾ ಷರೀಫ್ ಕರ್ಬಿಂಸ್ತಾನ ದೈವಸ್ಥಾನ. ನೆಲ್ಲಿತೀರ್ಥ:ಶ್ರೀ ಸೋಮನಾಥೇಶ್ವರ ಗುಹಾಲಯ. ಕುಕ್ಕೆ ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕೆ. ಶ್ರೀ ಸುಬ್ರಹ್ಮಣ್ಯ: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ . ಪುತ್ತೂರು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್, ಕೋಟಿ ಚೆನ್ನಯರ ಮೂಲಸ್ಥಾನ. ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ. ಪುತ್ತೂರು ಕರವಡ್ತ ವಲಿಯುಲ್ಲಾಹಿ ದರ್ಗಾ ಶರೀಫ್. ಕಾರ್ಕಳ: ಗೊಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ, ಕಾರ್ಕಳ ಪಡುತಿರುಪತಿ ವೆಂಕಟರಮಣ ದೇವಸ್ಥಾನ. ಕಾರ್ಕಳ: ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್. ಪುತ್ತಿಗೆ: ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ. ಕೊಡ್ಯಡ್ಕ:ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ. ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ. ಬಪ್ಪನಾಡು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ. ಸೋಮೇಶ್ವರ: ಶ್ರೀ ಸೋಮನಾಥೇಶ್ವರ ದೇವಸ್ಥಾನ. ಕೃಷ್ಣಾಪುರ:ಇಲ್ಲಿ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಶಾಖೆ ಇಲ್ಲಿ ಇದೆ. ವೇಣೂರು: ವೇಣೂರು ೩೪ ಅಡಿ ಎತ್ತರದ ಏಕಶಿಲಾ ಬಾಹುಬಲಿ ವಿಠಲ ಶ್ರೀ ಸೋಮನಾಥೇಶ್ವರ ದೇವಸ್ಥಾನ, ದರೆಗುಡ್ಡೆ. ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ದರೆಗುಡ್ಡೆ. ಕೊಕ್ಕಡ :ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಕೊಕ್ಕಡ ವಿಷ್ಣುಮೂರ್ತಿ ವೈದ್ಯನಾಥೇಶ್ವರ ದೇವಸ್ಥಾನ ಮಠಂತಬೆಟ್ಟು.ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಪುತ್ತೂರು: ಎಣ್ಮೂರು ಬೈದರ್ಕಳ ಗರಡಿ ಬಂಟ್ವಾಳ : ನವದುರ್ಗಾ ಶ್ರೀ ಲಕ್ಷ್ಮೀ ಜನಾರ್ದನ ಮಠ ಸಾನಿಧ್ಯ ಪಂಬತ್ತಜೆ ಕರೋಪಾಡಿ ಗ್ರಾಮ ಬಂಟ್ವಾಳ ತಾಲೂಕು ಉಳ್ಳಾಲ: ಸಯ್ಯದ್ ಮದನಿ ದರ್ಗಾ ಶರೀಫ್. ಅಡ್ಯಾರ್ ಕಣ್ಣೂರು: ಶೈಖ್ ಯೂಸುಫ್ ಸಿದ್ದೀಕ್ ದರ್ಗಾ ಶರೀಫ್. ಅಜಿಲಮೊಗರು: ಬಾಬಾ ಫಕ್ರುದ್ದೀನ್ ದರ್ಗಾ ಶರೀಫ್. ಕಾಜೂರು: ಹಯಾತುಲ್ ಅವುಲಿಯಾ ದರ್ಗಾ ಶರೀಫ್. ದುಗ್ಗಲಡ್ಕ: ಸಯ್ಯದ್ ಫಕ್ರುದ್ದೀನ್ ದರ್ಗಾ ಶರೀಫ್. ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ. ಸುಳ್ಯ ಚೆನ್ನಕೇಶವ ದೇವಸ್ಥಾನ ಅಡ್ಕಾರು ಸುಬ್ರಮಣ್ಯ ದೇವಸ್ಥಾನ. ಇರಾ ಶ್ರೀ ಸೋಮನಾಥ ದೇವಸ್ಥಾನ. ನೀಟಿಲಾಕ್ಷ ದೇವಸ್ಥಾನ ( netla.) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಅರಮನೆ ಕೇಪು ಉಳ್ಳಾಲ್ತಿ ದೈವಸ್ತಾನ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ. ಇವನ್ನೂ ನೋಡಿ ಕರ್ನಾಟಕದ ಜಿಲ್ಲೆಗಳು ದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ) ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಹಳ್ಳಿಗಳು ಉಲ್ಲೇಖಗಳು ವರ್ಗ:ದಕ್ಷಿಣ ಕನ್ನಡ ಜಿಲ್ಲೆ ವರ್ಗ:ಕರ್ನಾಟಕದ ಜಿಲ್ಲೆಗಳು
ಕೋಲಾರ
https://kn.wikipedia.org/wiki/ಕೋಲಾರ
thumb|ಕೋಲಾರದಲ್ಲಿ ಸೂರ್ಯಾಸ್ತದ ಒಂದು ನೋಟ ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.ಕೋಲಾರ ಜಿಲ್ಲಾ ದರ್ಶನ ಒಂದು ನೋಟ ಕೋಲಾರ ಜಿಲ್ಲೆಯ ಬಗ್ಗೆ ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ನಾಡು’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪದ ಹೋರಾಟಗಳು ಮತ್ತು ಜನಪದ ಸಂಸ್ಕೃತಿಯನ್ನು ಮೆರೆದಿದೆ . ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ.ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ. ಶಿವಾರ ಪಟ್ಟಣ ಕಲ್ಲಿನಿಂದ ಕೆತ್ತಿರುವ ಶಿಲ್ಪಕಲೆಗೆ ಪ್ರಖ್ಯಾತಿ.ಕೋಲಾರನ್ನು ಚಿನ್ನದ ಗಣಿ ಎಂದು ಸಹ ಕರೆಯುತ್ತಾರೆ ಇತಿಹಾಸ ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಜನಸಂಖ್ಯೆ ೨೦೨೧ ರ ಆದಾರ್ ನೊಂದಣಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು ೧೬,೫೩,೩೨೦ ಆಗಿದೆ ಹಾಗೂ ೨೦೧೧ ರ ಜನಗಣತಿಯ ಪ್ರಕಾರ ೧೫,೩೬,೪೧೧. ಇದರಲ್ಲಿ ಪುರುಷರ ಸಂಖ್ಯೆ ೭೭೬,೩೯೬ ಹಾಗು ಸ್ತೀಯರ ಸಂಖ್ಯೆ ೭೬೦,೦೦೫ ಇದೆ .Kolar District : Census 2011 data ಜಿಲ್ಲೆಯ ಪ್ರಮುಖರು ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ. ಶ್ರೀ ಟಿ ಚನ್ನಯ್ಯ ಕರಡು ಸಮಿತಿ ಸದಸ್ಯರು, ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಆತ್ಮೀಯರು, ಭಾರತದ ಮೊದಲ ತಂಡದ ರಾಜ್ಯ ಸಭಾ ಸದಸ್ಯರು ಮೈಸೂರು ರಾಜ್ಯದ ಮಂತ್ರಿಯಾಗಿದ್ದರು ಬೆಂಗಳೂರು ನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಅಧ್ಯಕ್ಷರಾಗಿದ್ದರು ಕೋಲಾರಕ್ಕೆ ವಿದ್ಯುತ್ ತರಲು ನೀರು ತರಲು ಹೋರಾಡಿದವರು, ಉತ್ತಮವಾದ ನಗರ ರಚನೆ ಮಾಡಿ ಕೋಲಾರದ ಗಾಂಧಿನಗರ ನಿರ್ಮಿಸಿದವರು. ಕೈವಾರ ನಾರಣಪ್ಪ ಸರ್.ಎಂ.ವಿಶ್ವೇಶ್ವರಯ್ಯ ಮಲ್ಲಿಕರ್ಜುನ ರೆಡ್ಡಿ ಸೂಕ್ಷ್ಮ ಕಲೆ ಗಿನ್ನೆಸ್ ವಿಶ್ವ ದಾಖಲೆ.ತೊಪ್ಪನಹಳ್ಳಿ. ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ ತೀ.ತಾ. ಶರ್ಮ. ಗಟ್ಟಹಳ್ಳಿ ಆಂಜನಪ್ಪಸ್ವಾಮಿ ಡಿ. ವಿ. ಗುಂಡಪ್ಪ ಸೌಂದರ್ಯ ವೆಂಕಟೇಶ ಅಯ್ಯಂಗಾರ್ ಅ.ನಾ.ಪ್ರಹ್ಲಾದರಾವ್ ಪದಬಂಧ ರಚನೆಯಲ್ಲಿ ಲಿಮ್ಕಾ ರಾಷ್ಟ್ರೀಯ ದಾಖಲೆಕಾರ [[ಪಿಚ್ಚಳ್ಳಿ ಶ್ರೀನಿವಾಸ್] ಗಾಯಕ ಮತ್ತು ರಂಗಕರ್ಮಿ ಕುಪ್ನಳ್ಳಿ ಎಂ. ಬೈರಪ್ಪ, ಕವಿ ಮತ್ತು ವಿಮರ್ಶಕರು ಪ್ರೊ. ಎಂ. ನಾರಾಯಣ ಸ್ವಾಮಿ ತ್ಯಾವನಹಳ್ಳಿ- ಪ್ರಾಧ್ಯಾಪಕರು ಮತ್ತು ಲೇಖಕರು. ಮಂಸೋರೆ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ, ಚಿತ್ರ ಕಲಾವಿದ, ಲೇಖಕ, ಹವ್ಯಾಸಿ ಪತ್ರಕರ್ತ ಆಕರ್ಷಣೆಗಳು ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆಕೋಲಾರದ ಪ್ರೇಕ್ಷಣೀಯ ಸ್ಥಳಗಳು thumb|right|220px|ಅ೦ತರಗ೦ಗೆ ಚಿನ್ನದ ಗಣಿ (ಕೆ.ಜಿ.ಎಫ್), ಮುಳಬಾಗಿಲು, ಬ೦ಗಾರು ತಿರುಪತಿ, ಕೋಟಿಲಿ೦ಗೇಶ್ವರ, ಅ೦ತರಗ೦ಗೆ, ಮಾರ್ಕ೦ಡೇಯ ಪರ್ವತ, ಸೋಮೇಶ್ವರ ದೇವಸ್ಥಾನ, ಕೋಲಾರಮ್ಮ ದೇವಸ್ಥಾನ, ಕುರುಡುಮಲೆ, ಆವಣಿ, ಚಿಕ್ಕ ತಿರುಪತಿ ಮುರುಗಮಲ್ಲ ದರ್ಗ(ಚಿಂತಾಮಣಿ), ನಂದಿ ಬೆಟ್ಟ (ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದೆ), ವಿಧುರಾಶ್ವತ್ಥ (ಗೌರಿಬಿದನೂರು) ಶ್ರೀ ಮನ್ಮಾಧವ ತೀಥ೯ರ ಮೂಲ ಮಹಾ ಸಂಸ್ಠಾನ ಮಠ ಇದೆ. ಮರುಗಮಲ್ಲ ಗ್ರಾಮ ಮುಸ್ಲಿಂರ ಪವಿತ್ರ ಕ್ಷೇತ್ರವಾಗಿದೆ. ನಗರದ ಸುಧಾರಣೆ ಕೋಲಾರದಲ್ಲಿ ಕಸದ ಪ್ರಮಾಣ ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಿರುವುದನ್ನು ಕಂಡು, 'ಗೋ ಪ್ಲಾಗ್!https://www.prajavani.net/585755.html' ಎಂಬ ವಿಶಿಷ್ಟ ಅಭಿಯಾನವನ್ನು ಸುಮಂಗಲಿ ನೋಹ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯು ಕೋಲಾರವನ್ನು ಕಸ ಮುಕ್ತಗೊಳಿಸಲು ಪಣತೊಟ್ಟಿದೆ. ಹೆಚ್ಚಿನ ಹಳೆಯ ಕಟ್ಟಡಗಳನ್ನು ಬಿಳಿಸಿ, ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದನ್ನೂ ನೋಡಿ ಕೋಲಾರ (ಲೋಕ ಸಭೆ ಚುನಾವಣಾ ಕ್ಷೇತ್ರ) ಉಲ್ಲೇಖಗಳು ವರ್ಗ:ಭೂಗೋಳ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕೋಲಾರ ಜಿಲ್ಲೆಯ ತಾಲೂಕುಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಭಾರತದ ಹಿಂದಿನ ರಾಜಧಾನಿ ನಗರಗಳು
ಗುಲ್ಬರ್ಗ
https://kn.wikipedia.org/wiki/ಗುಲ್ಬರ್ಗ
REDIRECT ಕಲಬುರಗಿ
ಕೊಡಗು
https://kn.wikipedia.org/wiki/ಕೊಡಗು
ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ. thumb|ಕೊಡವರ ಉಡುಪಿನಲ್ಲಿರುವ ಕೊಡವರು right|150px|thumb|ಕೊಡವ ತಿರ್ರಲೆ or ತ್ರಿಮೂರ್ತಿಗಳು(ಮಲೆಯಾಳಂನಲ್ಲಿ ತೆಯ್ಯಂ) ಕನ್ನಡದಲ್ಲಿ ಕೋಲ ಎಂದು ಕರೆಯಲಾಗುವ ಮತ್ತು ತುಳುವಿನಲ್ಲಿ ನೇಮ ಎನ್ನಲಾಗುವ ಕಾಯ‍ಕ್ರಮಕ್ಕೆ ಸದೃಶವಾದುದು ಚಿತ್ರ:ಸಾಂಪ್ರದಾಯಿಕ ವಿವಾಹದ ಉಡುಗೆ thumb|right|ತಲಕಾವೇರಿ, ಕಾವೇರಿ ನದಿಯ ಉಗಮಸ್ಥಳ thumb|ಭಾಗಮಂಡಲದಲ್ಲಿ (ಕೊಡಗು) ಕಾವೇರಿ thumb|ಕುಶಾಲನಗರದಲ್ಲಿ ಕಾವೇರಿ thumb|left|120px|Gambooge or Kachampulior"Kachulli" (Coorg vinegar) thumb|200px|ಕುಶಾಲನಗರದಲ್ಲಿ ಕಾವೇರಿ thumb|right|upright|ಟಿಬೆಟ್ಟಿನ ಸ್ವರ್ಣ ದೇಗುಲ (ಕುಶಾಲನಗರದಲ್ಲಿ ಬೈಲಕುಪ್ಪೆಯಬಳಿ) right|thumb|200px|ಕೊಡಗಿನಲ್ಲಿ ಕಾಫೀ ಪ್ಲ್ಯಾಂಟೇಶನ್ ಹೆಸರಿನ ನಿಷ್ಪತ್ತಿ ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ[ಇಂಗ್ಲಿಶ್] ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ.https://tripedia.info/attraction/coorg-karnataka-india/ 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ. ಇಲ್ಲಿಯ ಜನ ಕೊಡವರು ಮುಖ್ಯ (ಮೂಲ) ಜನರು. ಕೊಡವ ತಕ್ಕ್ ಹಾಗೂ ಅರೆಭಾಷೆ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆಗಳು, ದಿನನಿತ್ಯದ ವ್ಯವಹಾರದಲ್ಲಿ ಹೆಚ್ಚಿನ ಜನರು ಕೊಡವ ತಕ್ಕ್ ಅನ್ನು ಬಳಸುತ್ತಾರೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು.https://www.yatra.com/india-tourism/coorg/language ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿ ಇದೆ,ಹಾಗೂ ಅರೆಬಾಷೆಗೆ ಇಲ್ಲ. ಕೊಡವ ಭಾಷೆಯನ್ನು ಸುಮಾರು ೩೦೦,೦೦೦ ಜನರು ಮಾತನಾಡಲು ಬಳಸುತ್ತಾರೆ ಹಾಗೂ ಅರೆಬಾಷೆಯನ್ನು ೨,೦೦೦೦೦ ಜನ ಬಳಸುತ್ತಾರೆ. ಯೆರವರು (ಅಥವಾ ರಾವುಲರು), ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಅಡಿಯರು ಎಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು. ಜನಸಂಖ್ಯೆ ೨೦೧೧ರ ಜನಗಣತಿಯ http://www.census2011.co.in/census/district/259-kodagu.html ಪ್ರಕಾರ ಕೊಡಗಿನ ಜನಸಂಖ್ಯೆ ೫,೫೪,೭೬೨.http://www.census2011.co.in/census/district/259-kodagu.html ಇವರಲ್ಲಿ ೨,೭೪,೭೨೫ ಪುರುಷರು ಮತ್ತು ೨,೮೦,೦೩೭ ಸ್ತ್ರೀಯರು. ಅಂದರೆ ಪ್ರತಿ ೧೦೦೦ ಪುರುಷರಿಗೆ ೧೦೧೯ ಸ್ತ್ರೀಯರಿದ್ದಾರೆ. ಕೊಡಗಿನ ಒಟ್ಟು ವಿಸ್ತೀರ್ಣವನ್ನು ೪,೧೦೨ ಚದರ ಕಿಲೊಮೀಟರನ್ನು ಪರಿಗಣಿಸಿದಾಗ ಇಲ್ಲಿನ ಜನಸಾಂದ್ರತೆ ಪ್ರತಿ ಚದರ ಕಿಲೊಮೀಟರಿಗೆ ೧೩೫ ಮಂದಿ. ಕೊಡಗಿನ ಒಟ್ಟು ಜನಸಂಖ್ಯೆಯಲ್ಲಿ ೪,೧೪,೩೦೫ ಮಂದಿ ( ಅಂದರೆ ೮೨.೫೨% ) ಅಕ್ಷರಸ್ಥರು. ಇವರಲ್ಲಿ ೨,೧೬,೪೧೩ ಮಂದಿ ಪುರುಷರು (೮೭.೨೪%) ಮತ್ತು ೧,೯೭,೮೯೨ ಸ್ತ್ರೀಯರು (೭೭.೯೧%). ಈ ಕೆಳಗಿನ ಕೋಷ್ಠಕದಲ್ಲಿ ಕೊಡಗಿನ ಕುರಿತ ಅಂಕಿ-ಅಂಶಗಳನ್ನು ೨೦೦೧ರ ಜನಗಣತಿಯೊಡನೆ ಹೋಲಿಸಿ ಕೊಡಲಾಗಿದೆ: ವಿವರ ೨೦೧೧ ೨೦೦೧ ಒಟ್ಟು ಜನಸಂಖ್ಯೆ ೫,೫೪,೭೬೨ ೫,೪೮,೫೬೧ ಪುರುಷರು ೨,೭೪,೭೨೫ ೨,೭೪,೮೩೧ ಸ್ತ್ರೀಯರು ೨,೮೦,೦೩೭ ೨,೭೩,೭೩೦ ಜನಸಂಖ್ಯೆಯ ಹೆಚ್ಚುವರಿ ೧.೧೩% ೧೨.೩೧% ಕೊಡಗಿನ ವಿಸ್ತೀರ್ಣ ೪,೧೦೨ ಚ ಕಿಮೀ ೪,೧೦೨ ಚ ಕಿಮೀ ಜನಸಾಂದ್ರತೆ ೧೩೫ ಮಂದಿ/ಚ ಕಿಮೀ ೧೩೪ ಮಂದಿ/ಚ ಕಿಮೀ ಕರ್ನಾಟಕದ ಜನಸಂಖ್ಯೆಯ ಅನುಪಾತ ೦.೯೧% ೧.೦೪% ೧೦೦೦ ಪುರುಷರಿಗೆ ಸ್ತ್ರೀಯರ ಸಂಖ್ಯೆ ೧೦೧೯ ೯೯೬ ಒಟ್ಟು ಅಕ್ಷರಸ್ಥರು ೪,೧೪,೩೦೫ ೩,೭೩,೫೪೧ ಅಕ್ಷರಸ್ಥ ಪುರುಷರು ೨,೧೬,೪೧೩ ೨,೦೦,೫೮೮ ಅಕ್ಷರಸ್ಥ ಸ್ತ್ರೀಯರು ೧,೯೭,೮೯೨ ೧,೭೨,೯೫೩ ಸರಾಸರಿ ಒಟ್ಟು ಅಕ್ಷರಸ್ಥರು ೮೨.೫೨% ೭೭.೯೯% ಪುರುಷರ ಪ್ರಮಾಣ ೮೭.೨೪% ೮೩.೭೦% ಸ್ತ್ರೀಯರ ಪ್ರಮಾಣ ೭೭.೯೧% ೭೨.೨೬% ಭೂಗೋಳ ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಮೈಸೂರು ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು. ತಾಲೂಕುಗಳು ಕೊಡಗಿನಲ್ಲಿ ಐದುತಾಲೂಕುಗಳಿವೆ. ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರಗಳಿವೆ. ಮಡಿಕೇರಿ ವಿರಾಜಪೇಟೆ ಸೋಮವಾರಪೇಟೆ ಕುಶಾಲನಗರ ಪೊನ್ನಂಪೇಟೆ ಮಡಿಕೇರಿ ತಾಲುಕಿನ ಪ್ರೇಕ್ಷಣೀಯ ಸ್ಥಳಗಳು ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲೂಕಿನಲ್ಲಿ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್, ತಲಕಾವೇರಿ, ಇತ್ಯಾದಿಗಳಾದರೆ, ಎಮ್ಮೆಮಾಡ್ (ಸೂಫೀ ಶ ಹೀ ದ್) ವಿರಾಜಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ವಿರಾಜಪೇಟೆ ತಾಲೂಕಿನಲ್ಲಿ- ನಾಗರಹೊಳೆ , ಇರ್ಪು, ಕುಂದ, ಟೀ ಏಸ್ಟೇಟ್, ಸೈಂಟ್ ಏನ್ಸ್ ಚರ್ಚ್, ಇಗ್ಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಮುಂತಾದವು ಇವೆ. ಕುಶಾಲನಗರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ಕುಶಾಲನಗರ ತಾಲೂಕಿನಲ್ಲಿ- ಕಾವೇರಿ ನಿಸರ್ಗಧಾಮ, [[ಟಿಬೆಟ್ಟಿನ ಸ್ವರ್ಣದೇಗುಲ]ಪಿರಿಯಾಪಟ್ಟಣ{ತಾ}]], ವೀರಭೂಮಿ, ದುಬಾರೆ ಅರಣ್ಯ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ ಮೊದಲಾದವಿವೆ. ಸೋಮವಾರಪೇಟೆ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ಸೋಮವಾರಪೇಟೆ ತಾಲೂಕಿನಲ್ಲಿ- ಹೊನ್ನಮ್ಮನ ಕೆರೆ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಅಭಯಾರಣ್ಯ ಮೊದಲಾದವಿವೆ. ಬೆಳೆಗಳು ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೧/೩ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು. ಇತಿಹಾಸ ಕನ್ನಡ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ ಹಾಗು ಆಡಳಿತ ಭಾಷೆ. ಇದಲ್ಲದೆ ಅರೆಭಾಷೆ, ಕೊಡವ ತಕ್ಕ್, ಮಲಯಾಳಂ,ತಮಿಳು, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ 1370 AD ಯಿಂದ ದಾಖಲಿತ ಲಿಪಿಯನ್ನು ಹೊಂದಿದೆ, ಇದನ್ನು ಸುಮಾರು 1,50,000 ಜನರು ಮಾತನಾಡುತ್ತಾರೆ ಮತ್ತು 4,00,000 ಜನರು ವ್ಯವಹಾರ ಭಾಷೆಯಾಗಿ ಬಳಸುತ್ತಾರೆ, ಕೊಡಗಿನ 18 ಬುಡಕಟ್ಟು ಸಮುದಾಯಗಳು ಕೊಡವ ತಕ್ಕ್ ಮಾತನಾಡುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು. ಹೊರಗಿನ ಸಂಪರ್ಕಗಳು ಕೊಡವ ['ಕೊಡಗು-ಕೊಡವರ ಸಿರಿನಾಡು ಕಾವೇರಿಯ ತವರು'-ಯಶೋದಾ ಮುತ್ತಣ್ಣ, ತರಂಗ,೨೯ ಸೆಪ್ಟೆಂಬರ್,೨೦೧೬,ಪು.೧೪-೩೦ & ೫೧-೫೩,ಮಂಜು ಮುಸುಕಿದ ಕೊಡವ ನಾಡು-ಚಿತ್ರ.ಅನಿಲ್.ಎಚ್.ಟಿ.] ಉಲ್ಲೇಖಗಳು ವರ್ಗ:ಭೂಗೋಳ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕೊಡಗು ಜಿಲ್ಲೆ
ಧಾರವಾಡ
https://kn.wikipedia.org/wiki/ಧಾರವಾಡ
ಧಾರವಾಡ ಕರ್ನಾಟಕ ರಾಜ್ಯದ ಒಂದು ನಗರ; ಧಾರವಾಡ ನಗರ ಧಾರವಾಡ ಜಿಲ್ಲೆಯ ಕೇಂದ್ರಸ್ಥಳ. ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇ ಅತಿ ದೊಡ್ಡ ನಗರ ಎಂದರೆ ಧಾರವಾಡ ನಗರ, ಹುಬ್ಬಳ್ಳಿ ವಾಣಿಜ್ಯ ನಗರವಾದರೆ ಧಾರವಾಡ ಶೈಕ್ಷಣಿಕ ಜಿಲ್ಲೆ, ಧಾರವಾಡ ಅತಿ ತಂಪು ವಾತಾವರಣ ಹೊಂದಿರುವ ನಗರ, ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಆಕಾಶವಾಣಿ, ಕಾನೂನು ವಿಶ್ವವಿದ್ಯಾಲಯ, ಹೈಕೋರ್ಟ್, ನೈರುತ್ಯ ರೈಲ್ವೆ ಘಟಕ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಐ ಐ ಟಿ ,ಮುಂತಾದವುಗಳ ಆಗರ ಧಾರವಾಡ, ಧಾರವಾಡ’ದ ಮೂಲ ರೂಪ ‘ದಾರವಾಡ’. ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು ೧೪೦೩ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.೧೧೧೭ ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ ಇತಿವೃತ್ತ ಇದಕ್ಕೆ ಸಹಾಯಕವಾಗಿ ಕ್ರಿ.ಶ.೧೧೨೫ ನರೇಂದ್ರ ಮತ್ತು ೧೧೪೮ ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ ೧೪೦೩ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು. ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕೃತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕೃತ ಭೂಯಿಷ್ಠವಾಗಿ ಇಡುವುದು ಅಸಂಭವ. ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ. ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವುದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ. ‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು. ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’. ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕೃತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ ‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ. ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ. ಚರಿತ್ರೆ ಪುರಾಣ ಕಾಲದಲ್ಲಿ ಪಾಂಡವರು ಹಾನಗಲ್ ನಲ್ಲಿ ವಾಸ್ತವ್ಯ ಹೂಡಿದ್ದರು ಎಂಬಲ್ಲಿಂದ ಧಾರವಾಡದ ಚರಿತ್ರೆ ಪ್ರಾರಂಭವಾಗುತ್ತದೆ. ತಾಮ್ರ ಶಾಸನಗಳ ಪ್ರಕಾರ ಧಾರವಾಡವು ಬನವಾಸಿ ಯ ಕದಂಬರ ಆಳ್ವಿಕೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ.ಅನಂತರದ ಚರಿತ್ರೆಯಂತೆ ಕ್ರಿ.ಶ. ಏಳನೆಯ ಶತಮಾನದಲ್ಲಿ ಚಾಲುಕ್ಯ ರು, ಕ್ರಿ.ಶ. ಒಂಭತ್ತನೆಯ ಶತಮಾನದಲ್ಲಿ ರಾಷ್ಟ್ರಕೂಟ ರು, ಹನ್ನೆರಡನೆಯ ಶತಮಾನದಲ್ಲಿ ದೇವಗಿರಿಯ ಯಾದವರು ಆಳ್ವಿಕೆ ಮಾಡಿದರು.೧೨ ನೇ ಶತಮಾನದ ವರೆಗೆ ಧಾರವಾಡ ಜಿಲ್ಲೆ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದಿತು. ನಂತರ ವಿಜಯನಗರ ಸಾಮ್ರಾಜ್ಯದ ಭಾಗವಾಯಿತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಕೈ ಸೇರಿದ ಮೇಲೆ ಧಾರವಾಡ ಜಿಲ್ಲೆಯ ಪ್ರಾಮುಖ್ಯತೆ ಹೆಚ್ಚಿತು. ಇದಕ್ಕೆ ಮುಖ್ಯ ಕಾರಣ ಆದಿಲ್ ಶಾಹಿ ಸುಲ್ತಾನರು ಇಲ್ಲಿ ಕಟ್ಟಿಸಿದ ಕೋಟೆ -ಮಣ್ಣಕಿಲ್ಲೆ- ಇದಕ್ಕೆ ಆಗಿನ ಕಾಲದಲ್ಲಿ ನಜರತಾಬಾದ್ ಎಂಬ ಹೆಸರಿತ್ತು. ಆದಿಲ್ ಶಾಹಿ ಸುಲ್ತಾನರ ನಂತರ ಧಾರವಾಡ ಜಿಲ್ಲೆ ಸ್ವಲ್ಪ ಕಾಲ ಮುಘಲ್ ಸಾಮ್ರಾಜ್ಯದ ಕೈಯಲ್ಲಿದ್ದು ನಂತರ ಅನುಕ್ರಮವಾಗಿ ಮರಾಠರು, ಹೈದರ್ ಅಲಿ ಮತ್ತು ಟೀಪು ಸುಲ್ತಾನ್ ಹಾಗೂ ಬ್ರಿಟಿಷರ ಕೈ ಸೇರಿತು. ಮುಂಬಯಿ ಸರ್ಕಾರದ ಆಡಳಿತದಲ್ಲಿದ್ದ ಧಾರವಾಡ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿ ಸಂಘಟನೆ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತುಸ್ಥಾಪಿಸಿ, ರಾಜ್ಯಾದಂತ್ಯ ಕರ್ನಾಟಕ ಏಕೀಕರಣ ಹೋರಾಟದ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಅನ್ನದಾನಯ್ಯ ಪುರಾಣಿಕ. ಹುಬ್ಬಳ್ಳಿಯಲ್ಲಿ ಕರ್ನಾಟಕ ಏಕೀಕರಣದ ಕುರಿತು ಅಂತಿಮ ತೀರ್ಮಾನ ಮಾಡಲು ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕೆ.ಪಿ.ಸಿ.ಸಿ ಸಭೆ ನೆಡೆಯುವಾಗ, ಇವರು ನೆಡೆಸಿದ ಬೃಹತ್ ವಿದ್ಯಾರ್ಥಿ ಮೆರವಣಿಗೆ, ಕೆಪಿಸಿಸಿ ಸಭೆಯು ಕರ್ನಾಟಕ ಏಕೀಕರಣದ ಪರವಾಗಿ ನಿರ್ಧಾರ ಮಾಡಲು ಪ್ರಮುಖ ಕಾರಣವಾಗಿತ್ತು. ತಾಲೂಕುಗಳು ಧಾರವಾಡ ಜಿಲ್ಲೆಯು 8 ಕಂದಾಯ ತಾಲೂಕುಗಳನ್ನು ಹೊಂದಿದೆ ಧಾರವಾಡ ತಾಲೂಕು ಅಳ್ನಾವರ ತಾಲೂಕು ಹುಬ್ಬಳ್ಳಿ ಗ್ರಾಮೀಣ ತಾಲೂಕು ಹುಬ್ಬಳ್ಳಿ ಶಹರ ತಾಲೂಕು ಕುಂದಗೋಳ ತಾಲೂಕು ನವಲಗುಂದ ತಾಲೂಕು ಅಣ್ಣಿಗೇರಿ ತಾಲೂಕು ಕಲಘಟಗಿ ತಾಲೂಕು ಪ್ರಮುಖ ವ್ಯಕ್ತಿಗಳು ಕರ್ನಾಟಕಕ್ಕೆ ಧಾರವಾಡ ಜಿಲ್ಲೆಯ ಪ್ರಮುಖ ಕೊಡುಗೆ ಇಲ್ಲಿ ಹುಟ್ಟಿ ಬೆಳೆದಿರುವ ಅನೇಕ ಸಂಗೀತಗಾರರು ಮತ್ತು ಸಾಹಿತಿಗಳು. ಧಾರವಾಡದ ಕೆಲವು ಪ್ರಮುಖ ಗಣ್ಯ ವ್ಯಕ್ತಿಗಳನ್ನು ಕೆಳಗೆ ಕಾಣಿಸಲಾಗಿದೆ. ಧಾರವಾಡದ ಮುರುಘಾ ಮಠ ಮತ್ತು ಲಿಂ.ಮೃತ್ಯುಂಜಯ ಸ್ವಾಮಿಗಳು ಹಾಗೂ ದಿ. ಮಹಾಂತಪ್ಪಗಳು ವಿಶ್ವ ಪ್ರಸಿದ್ಧ. ಇಲ್ಲಿದ್ದು ವಿದ್ಯಾಭ್ಯಾಸ ಮಾಡಿದವರಲ್ಲಿ ಹಲವಾರು ಜನರು ಗಣ್ಯವ್ಯಕ್ತಿಗಳು, ಸಾಹಿತಿಗಳು, ಅಧಿಕಾರಿಗಳು ಆಗಿದ್ದಾರೆ. ಸಂಗೀತ-ಕಲೆ-ಶಿಕ್ಷಣ-ಭಕ್ತಿಯ ನಿರಂತರ ದಾಸೋಹ ಈ ಮಠದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಿರುವುದು ಇಲ್ಲಿ ವಿಶೇಷವಾಗಿದೆ. ಸಂಗೀತಗಾರರು ಹಿಂದುಸ್ತಾನಿ ಸಂಗೀತ ಪದ್ಧತಿ ಧಾರವಾಡದಲ್ಲಿ ಆಳವಾಗಿ ಬೇರೂರಿದೆ. ಧಾರವಾಡದಿಂದ ಅನೇಕ ಗಣ್ಯ ಹಿಂದುಸ್ತಾನಿ ಸಂಗೀತಗಾರರು ಬೆಳಕಿಗೆ ಬಂದಿದ್ದಾರೆ. ಪಂಡಿತ್ ಭೀಮಸೇನ್ ಜೋಷಿ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಪಂಡಿತ್ ಬಸವರಾಜ ರಾಜಗುರು ಗಂಗೂಬಾಯಿ ಹಾನಗಲ್ ಕುಮಾರ ಗಂಧರ್ವ ಸಂಗೀತಾ ಕಟ್ಟಿ (ಸುಗಮ ಸಂಗೀತ) ಕೈವಲ್ಯ ಗುರವ ಮಾಧವ ಗುಡಿ ಪ್ರವೀಣ್ ಗೋಡ್ಖಿಂಡಿ(ಕೊಳಲು ವಾದನ) ಗೀತಾ ಜಾವಡೇಕರ ಸಾಹಿತಿಗಳು ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ಧಾರವಾಡ ಜಿಲ್ಲೆಯಲ್ಲಿ ಜನಿಸಿದ ಅಥವಾ ನೆಲೆಸಿದ ಮಹತ್ವದ ಸಾಹಿತಿಗಳ ಹೆಸರುಗಳನ್ನು ಇಲ್ಲಿ ಕೊಡಲಾಗುತ್ತಿದೆ: ದ.ರಾ.ಬೇಂದ್ರೆ ಆನಂದಕಂದ(ಬೆಟಗೇರಿ ಕೃಷ್ಣಶರ್ಮ) ಆರ್.ಸಿ.ಹಿರೇಮಠ ಆರ್ಯ ಆಚಾರ್ಯ ಆಲೂರು ವೆಂಕಟರಾಯರು ಉತ್ತಂಗಿ ಚನ್ನಪ್ಪ ಎಂ.ಎಂ.ಕಲಬುರ್ಗಿ ಎಂ.ಜೀವನ ಎಂ.ಡಿ.ಗೋಗೇರಿ ಎನ್.ಕೆ.ಕುಲಕರ್ಣಿ ಎಸ್.ಶೆಟ್ಟರ್ ಎಸ್.ಸಿ.ನಂದೀಮಠ ರೆವೆರೆಂಡ ಕಿಟ್ಟೆಲ್ ಕೀರ್ತಿನಾಥ ಕುರ್ತಕೋಟಿ ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ ಗಿರಡ್ಡಿ ಗೋವಿಂದರಾಜ ಗಿರೀಶ ಕಾರ್ನಾಡ ಗೀತಾ ಕುಲಕರ್ಣಿ ಚಂದ್ರಶೇಖರ ಕಂಬಾರ ಚಂದ್ರಶೇಖರ ಪಾಟೀಲ ಚನ್ನವೀರ ಕಣವಿ ಚೆನ್ನಕ್ಕಾ ಪಾವಟೆ (ಎಲಿಗಾರ) ಜ.ಚ.ನಿ ಜಿ.ಎಸ್.ಆಮೂರ ಜಿ.ಬಿ.ಜೋಶಿ ಜಿ.ವಿ.ಕುಲಕರ್ಣಿ ದ.ಬಾ.ಕುಲಕರ್ಣಿ ದಮಯಂತಿ ನರೇಗಲ್ ಧೋಂಡೊ ನರಸಿಂಹ ಮುಳಬಾಗಲ ನಾ.ಶ್ರೀ.ರಾಜಪುರೋಹಿತ ಪಂಚಾಕ್ಷರಿ ಹಿರೇಮಠ ಪಾ.ವೆಂ.ಆಚಾರ್ಯ(ಲಾಂಗೂಲಾಚಾರ್ಯ) ಪಾಟೀಲ ಪುಟ್ಟಪ್ಪ ಪಿ.ಬಿ.ಕಲ್ಲಾಪುರ ಪಿ.ಬಿ.ದೇಸಾಯಿ ಬಸವರಾಜ ಕಟ್ಟೀಮನಿ ಭಾಲಚಂದ್ರ ಘಾಣೇಕರ ಮಂದಾಕಿನಿ ಪುರೋಹಿತ ಮನೋಹರ ಭಾಲಚಂದ್ರ ಘಾಣೇಕರ ಮಾತೆ ಮಹಾದೇವಿ ಮಾಲತಿ ಪಟ್ಟಣಶೆಟ್ಟಿ ಮೇವುಂಡಿ ಮಲ್ಲಾರಿ ಮೋಹನ ನಾಗಮ್ಮನವರ ರಂಗನಾಥ ದಿವಾಕರ ರಾ.ಹ.ದೇಶಪಾಂಡೆ ರಾಘವೇಂದ್ರ ಖಾಸನೀಸ ರಾಜಶೇಖರ ಭೂಸನೂರುಮಠ ರಾಜೀವ ದೇಶಪಾಂಡೆ ರಾವಬಹಾದ್ದೂರ(ಆರ್.ಬಿ.ಕುಲಕರ್ಣಿ) ರೆವೆರಂಡ ಕಿಟ್ಟಲ್ ರೊದ್ದ ಶ್ರೀನಿವಾಸರಾವ್ ಲಲಿತಾಂಬ ವೃಷಭೇಂದ್ರಸ್ವಾಮಿ ಲೋಹಿತ ನಾಯ್ಕರ ವರದರಾಜ ಹುಯಿಲಗೋಳ ವಿ.ಕೃ.ಗೋಕಾಕ ವಿ.ಸಿ.ಐರಸಂಗ ವಿನೀತ ರಾಮಚಂದ್ರರಾಯರು ವೀಣಾ ಶಾಂತೇಶ್ವರ ವ್ಯಾಸ ದೇಶಪಾಂಡೆ ಶಂ.ಬಾ.ಜೋಶಿ ಎಂ.ಎಲ್. ಏಣಗಿ ಶಂಕರ ಮೊಕಾಶಿ ಪುಣೇಕರ ಶಾಂತಾದೇವಿ ಕಣವಿ ಶಾಂತಾದೇವಿ ಮಾಳವಾಡ ಶುಭದಾ ಅಮಿನಭಾವಿ ಶೈಲಾ ಛಬ್ಬಿ ಶ್ಯಾಮಲಾದೇವಿ ಬೆಳಗಾವಿ ಶ್ರೀರಂಗ ಸಂ.ಶಿ.ಭೂಸನೂರುಮಠ ಸರೋಜಿನಿ ಮಹಿಷಿ ಸಾಲಿ ರಾಮಚಂದ್ರರಾಯರು ಸಿದ್ಧಲಿಂಗ ಪಟ್ಟಣಶೆಟ್ಟಿ ಸುಕನ್ಯಾ ಮಾರುತಿ ಸುದರ್ಶನ ದೇಸಾಯಿ ಸುನಂದಾ ಬೆಳಗಾಂವಕರ ಸುಮಿತ್ರಾ ಹಲವಾಯಿ ಸೋಮಶೇಖರ ಇಮ್ರಾಪೂರ ಹನುಮಾಕ್ಷಿ ಗೋಗಿ ಹೇಮಲತಾ ಮಹಿಷಿ ಹೇಮಾ ಪಟ್ಟಣಶೆಟ್ಟಿ ದುರ್ಗಾದಾಸ್ ಕೆ.ಆರ್. ಡಾ. ಸಿದ್ಧರಾಮ ಕಾರಣಿಕ ಡಾ. ಎಸ್. ಆರ್. ಗುಂಜಾಳ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ ಶಿಕ್ಷಣ ತಜ್ಞರು ಪ್ರೊ.ಡಿ.ಸಿ.ಪಾವಟೆ ಮೂಲತಃ ಬೆಳಗಾವಿ ಜಿಲ್ಲೆಯವರಾದ ಶ್ರೀ ಡಿ.ಸಿ. ಪಾವಟೆಯವರು ಗಣಿತ ಶಾಸ್ತ್ರದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ Rangler ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು. ನಡಕಟ್ಟಿ ಶಿವಶಂಕರ ಹಿರೇಮಠ ಕಂಪ್ಯೂಟರ್ ವಿಜ್ಞಾನ ಉದ್ಯಮಿಗಳು ಉಮೇಶ ವೈದ್ಯಮಠ ಸಾಮಾಜಿಕ ಕಾರ್ಯಕರ್ತರು ಶ್ರೀ ಬಿ ಡಿ ಹಿರೇಮಠ (ಸಾಮಾಜಿಕ ಚಟುವಟಿಕೆಗಳು,ಹೈಕೋರ್ಟ್) ಶ್ರೀ ಹರ್ಷವರ್ಧನ್ ಶೀಲವಂತ್ (ಪರಿಸರವಾದಿ) ಶ್ರೀ ಕಿರಣ್ ಹಿರೇಮಠ (ಸಾಮಾಜಿಕ ಚಟುವಟಿಕೆಗಳು) ಶ್ರೀ ದತ್ತ ಕುಲಕರ್ಣಿ (ಸಾಮಾಜಿಕ ಚಟುವಟಿಕೆಗಳು, ಐ ಐ ಟಿ) ಶ್ರೀ ಬಸವರಾಜ ಎಚ್ ಕೊರವರ (ಸಾಮಾಜಿಕ ಚಟುವಟಿಕೆಗಳು, ಜನಜಾಗೃತಿ ಸಂಘ) ಕಲಾಕಾರರು ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹೆಬ್ಳೀಕರ್ ಲೀನಾ ಚಂದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ. 'ರಂಗಭೂಮಿ ಕಲಾವಿದರು' ಎನ್ ಬಸವರಾಜ (ಗುಡಗೇರಿ) ಗುಬ್ಬಿವಿರಣ್ಣ ಪ್ರಶಸ್ತಿ ವಿಜೇತ ಎಮ್.ಎಸ್.ಕೊಟ್ರೇಶ್ (ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.) ಶ್ರೀಮತಿ. ನಾಗರತ್ನಮ್ಮ. ಹೊಸಮನಿ ಯಶವಂತ ಸರದೆಶಪಾಂಡೆ (ಆಲ್ ದಿ ಬೆಸ್ಟ್ ಪ್ರಸಿಧಿ) ಮಾಲತಿ ಸರದೆಶಪಾಂಡೆ ‍ ಶ್ರೀಕೃಷ್ಣ ಸಂಪಗಾಂವಕರ್ ಅವಿನಾಶ್ ಕಾಮತ್ (ಪ್ರಸ್ತುತ ಮುಂಬಯಿ ಕನ್ನಡ ರಂಗಭೂಮಿಯಲ್ಲಿ ಸಕ್ರೀಯರಾಗಿದ್ದಾರೆ.) ಬಸವರಾಜ ಮನಸೂರ ಚಿತ್ರ ಕಲಾವಿದರಲ್ಲಿ ಪ್ರಮುಖರು- ಎಂ ಆರ್ ಬಾಳಿಕಾಯಿ ಸಿ ಡಿ ಜೆಟ್ಟೆಣ್ಣವರ ಎಂ ಜೆ ಬಂಗ್ಲೇವಾಲೇ ಶೇಖರ ಬಳ್ಳಾರಿ. ಸತೀಶ ಪೂಜಾರಿ ಶಂಕರ್ ಕೆ ವಿ. ವಿಜಯಲಕ್ಶ್ಮಿ ಯಾವಗಲ್ ಸುನಿಲ್ ಪುರಾನಿಕ್ ಜನಸಂಖ್ಯೆ ೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೮,೪೭,೦೨೩ ಆಗಿದ್ದು, ಇದರಲ್ಲಿ ಪುರುಷರು ೯,೩೭,೨೦೬ ಮತ್ತು ಮಹಿಳೆಯರು ೯,೦೯,೮೧೭ ಆಗಿದೆ. ಜಿಲ್ಲೆಯ ವಿಸ್ತೀರ್ಣ ೪೨೬೦ ಕಿ.ಮೀ ವಿಸ್ತೀರ್ಣ ಹೊಂದಿದ್ದು ಜನಸಾಂದ್ರತೆ ೪೩೪ ಪ್ರತೀ ಕಿ.ಮೀ,ಗೆ ಇರುತ್ತದೆ. ಚಾರಿತ್ರಿಕ ಘಟನೆಗಳು ಧಾರವಾಡ ನಗರದ ಕೆಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಾರಿತ್ರಿಕ ಘಟನೆಗಳು ಇಂತಿವೆ: ೧೮೧೮---ಬ್ರಿಟಿಷ್ ಆಡಳಿತ ಪ್ರಾರಂಭ. ೧೮೨೪---ಧಾರವಾಡ ಜಿಲ್ಲಾ ಕಲೆಕ್ಟರ ಥ್ಯಾಕರೆ ಕಿತ್ತೂರು ಕಿತ್ತೂರು ಚೆನ್ನಮ್ಮಇವಳ‍ ವಿರುದ್ಧ ನಡೆಸಿದ ದಾಳಿಯಲ್ಲಿ ಗುಂಡೇಟಿನಿಂದ ಮೃತನಾದನು. ೧೮೨೬---ಪ್ರಥಮ ಮರಾಠಿ ಶಾಲೆ ಪ್ರಾರಂಭ. ೧೮೩೦---ಸಿವಿಲ್ ಆಸ್ಪತ್ರೆ ನಿರ್ಮಾಣ ೧೮೩೧---ಪ್ರಥಮ ಕನ್ನಡ ಶಾಲೆಯ ಪ್ರಾರಂಭ ೧೮೩೬---ಬಾಸೆಲ್ ಮಿಶನ್ ಆಗಮನ ೧೮೪೦---ಕ್ಯಾಥೋಲಿಕ್ ಚರ್ಚ ನಿರ್ಮಾಣ ೧೮೪೪---ಮಾನಸಿಕ ಆರೋಗ್ಯ ಕೇಂದ್ರದ ಸ್ಥಾಪನೆ ೧೮೪೮---ಸರಕಾರಿ ಇಂಗ್ಲಿಷ್ ಶಾಲೆಯ ಸ್ಥಾಪನೆ ೧೮೪೯---ಶ್ರೀ ಗುರುನಾಥರಾವ ಪಾಠಕ ಇವರಿಂದ ‘ಸಂಸ್ಕೃತ ಪಾಠಶಾಲೆ’ಯ ಸ್ಥಾಪನೆ ೧೮೫೬---ನಗರಪಾಲಿಕೆ ಪ್ರಾರಂಭ ೧೮೬೧---ವೆಂಕಟ ರಂಗೊ ಕಟ್ಟಿ ಇವರಿಂದ ಕನ್ನಡದ ಪ್ರಥಮ ಮಾಸಿಕ ‘ಜ್ಞಾನಬೋಧಕ’ ಪ್ರಾರಂಭ ೧೮೬೩---ಬಾಸೆಲ್ ಮಿಶನ್ ಹಾಯ್‍ಸ್ಕೂಲ್ ಪ್ರಾರಂಭ ೧೮೬೫--- ಗಂಡುಮಕ್ಕಳ ಟ್ರೇನಿಂಗ ಕಾಲೇಜಿನಿಂದ ‘ವಾರಪತ್ರಿಕೆ’ ಪ್ರಾರಂಭ ೧೮೬೮---ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭ ೧೮೭೯---ಕರ್ನಾಟಕ ಸಂಗೀತ ಶಾಲೆಯ ಪ್ರಾರಂಭ ೧೮೮೯---ರಾ.ಹ.ದೇಶಪಾಂಡೆಯವರಿಂದ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಾರಂಭ ೧೮೯೨---ಪರಿವ್ರಾಜಕ ಸ್ವಾಮಿ ವಿವೇಕಾನಂದರ ಭೇಟಿ ೧೮೯೫---ಹೆಣ್ಣುಮಕ್ಕಳ ಟ್ರೇನಿಂಗ ಕಾಲೇಜ ಪ್ರಾರಂಭ ೧೮೯೬---ವಾಗ್ಭೂಷಣ ಪತ್ರಿಕೆಯ ಪ್ರಾರಂಭ ೧೯೦೨---ಥಿಯಾಸೊಫಿಕಲ್ ಸೊಸಾಯಿಟಿ ಪ್ರಾರಂಭ ೧೯೦೭---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ ೧೯೧೪---ಕರ್ನಾಟಕ ಪ್ರಾಚ್ಯ ಸಂಶೋಧನಾ ಕೇಂದ್ರ ಪ್ರಾರಂಭ ೧೯೧೫---ಲೋಕಮಾನ್ಯ ತಿಲಕರಿಂದ ಸಾರ್ವಜನಿಕ ಭಾಷಣ ೧೯೧೭---ಕರ್ನಾಟಕ ಕಾಲೇಜ ಸ್ಥಾಪನೆ ೧೯೨೦---ಮಹಾತ್ಮಾ ಗಾಂಧೀಜಿಯವರಿಂದ ಧಾರವಾಡದ ಭೆಟ್ಟಿ ೧೯೨೧---ಕರ್ನಾಟಕ ಶಿಕ್ಷಣ ಸಮಿತಿಯ ಕಾಲೇಜ ಪ್ರಾರಂಭ : ಜಕಣಿ ಭಾವಿಯ ಹತ್ತಿರ ಪೋಲೀಸ ಗೋಳೀಬಾರ, ಮೂವರು ಖಿಲಾಫತ್ ಚಳುವಳಿಗಾರರ ಮರಣ ; ಲಾಲಾ ಲಜಪತರಾಯ ಇವರ ಭೆಟ್ಟಿ ೧೯೨೨---ಕರ್ನಾಟಕ ಲಿಂಗಾಯತ ಶಿಕ್ಷಣ ಸಮಿತಿಯ ಪ್ರಾರಂಭ ೧೯೨೭---ಸೈಮನ್ ಕಮಿಶನ್ ವಿರುದ್ಧ ಪ್ರತಿಭಟನೆ, ಚಳುವಳಿ ೧೯೨೮---ಶ್ರೀ ನಾಡಿಗೇರ ಅವರಿಂದಮಲ್ಲಸಜ್ಜನ ವ್ಯಾಯಾಮಶಾಲೆಯ ಪ್ರಾರಂಭ ೧೯೩೦---ಉಪ್ಪಿನ ಸತ್ಯಾಗ್ರಹ:ರಂಗನಾಥ ದಿವಾಕರ‍ರ ಬಂಧನ. ಹುಕ್ಕೇರಿಕರ ರಾಮರಾವ, ಡಿ.ಪಿ.ಕರಮರಕರ, ನಾರಾಯಣರಾವ ಕಬ್ಬೂರ ಇವರಿಂದ ಬ್ರಿಟಿಷ್ ಧ್ವಜ ಅವರೋಹಣ. ೧೯೩೩---ಪ್ರಸಿದ್ಧ ನಾಟಕಕಾರ ಶ್ರೀರಂಗ‍ರಿಂದ ‘ಕರ್ನಾಟಕ ನಾಟ್ಯ ವಿಲಾಸಿ ಹವ್ಯಾಸಿ ನಾಟಕ ಸಮಾಜ’ ಸ್ಥಾಪನೆ. ೧೯೩೬---ಆಲೂರು ವೆಂಕಟರಾಯ‍ರಿಂದ ದಸರಾ ಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸುವದರ ಪ್ರಾರಂಭ ೧೯೩೮---ಬೆಟಗೇರಿ ಕೃಷ್ಣಶರ್ಮರಿಂದ ‘ಜಯಂತಿ’ ಮಾಸಪತ್ರಿಕೆ ಹಾಗು ಗೆಳೆಯರ ಗುಂಪಿನಿಂದ ಜೀವನ ಮಾಸಪತ್ರಿಕೆಯ ಪ್ರಾರಂಭ; ಸುಭಾಷಚಂದ್ರ ಭೋಸ ಇವರ ಭೆಟ್ಟಿ ೧೯೩೯--- ಸುಭಾಷಚಂದ್ರ ಭೋಸ ಇವರ ಮರು ಭೆಟ್ಟಿ ೧೯೪೦---ವೀರ ಸಾವರಕರ ಇವರ ಭೆಟ್ಟಿ ೧೯೪೨---ಚಲೇಜಾವ್ ಚಳುವಳಿ ಪ್ರಾರಂಭ; ವಿಮಲಾ ಗುಳವಾಡಿ ಹಾಗು ಶಿನೋಳಕರ ಎನ್ನುವ ಬಾಲಕಿಯರಿಂದ ಜಿಲ್ಲಾಕಚೇರಿಯ ಮೇಲೆ ತ್ರಿವರ್ಣಧ್ವಜದ ಆರೋಹಣ! ೧೯೪೪---ಕರ್ನಾಟಕ ಶಿಕ್ಷಣ ಸಮಿತಿಯ ಕಲಾ ಕಾಲೇಜ ಪ್ರಾರಂಭ ೧೯೪೭---ಒಕ್ಕಲುತನದ ಕಾಲೇಜ ಪ್ರಾರಂಭ; ಜನತಾ ಶಿಕ್ಷಣ ಸಮಿತಿ ಪ್ರಾರಂಭ ೧೯೪೯---ಕರ್ನಾಟಕ ವಿಶ್ವವಿದ್ಯಾಲಯ ೧೯೭೪---ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಇವರು ಸಪ್ತಾಪುರದಲ್ಲಿ ಈಗಿರುವ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದರು. ೧೯೮೬---ಕೃಷಿ ವಿಶ್ವವಿದ್ಯಾಲಯ, ಧಾರವಾಡ ರಾಜಕೀಯ thumb|ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಧಾರವಾಡ ಜಿಲ್ಲೆಯಲ್ಲಿ ಒಟ್ಟು ೭ ವಿಧಾನಸಭಾ ಕ್ಷೇತ್ರಗಳಿವೆ. ಧಾರವಾಡ (ಇಂದಿನ ಶಾಸಕರು :ಅಮೃತ ದೇಸಾಯಿ ) ಹುಬ್ಬಳ್ಳಿ -ಧಾರವಾಡ ಪಶ್ಛಿಮ (ಇಂದಿನ ಶಾಸಕರು: ಅರವಿಂದ ಬೆಲ್ಲದ) ಹುಬ್ಬಳ್ಳಿ -ಧಾರವಾಡ ಮಧ್ಯ (ಇಂದಿನ ಶಾಸಕರು: ಜಗದೀಶ ಶೆಟ್ಟರ್) ಹುಬ್ಬಳ್ಳಿ -ಧಾರವಾಡ ಪೂರ್ವ (ಇಂದಿನ ಶಾಸಕರು:ಪ್ರಸಾದ ಅಬ್ಬಯ್ಯ ) ಕಲಘಟಗಿ (ಇಂದಿನ ಶಾಸಕರು: ಸಿ.ಎಂ. ನಿಂಬಣ್ಣವರ ) ಕುಂದಗೋಳ (ಇಂದಿನ ಶಾಸಕರು: ಕುಸುಮಾ ಶಿವಳ್ಳಿ ) ನವಲಗುಂದ (ಇಂದಿನ ಶಾಸಕರು: ಶಂಕರ ಪಾಟೀಲ ಮುನೇನಕೊಪ್ಪ)- ವಿಧಾನ ಪರಿಷತ್ತ ಸದಸ್ಯರು. ಬಸವರಾಜ ಹೊರಟ್ಟಿ ( ಶಿಕ್ಷಕರ ಕ್ಷೇತ್ರ ) ಶ್ರೀನಿವಾಸ ಮಾನೆ. (ಸ್ಥಳಿಯ ಸಂಸ್ಠೆ) ಪ್ರದೀಪ ಶೆಟ್ಟರ್ ಎಸ್.ವಿ. ಸಂಕನೂರ ಧಾರವಾಡ ಜಿಲ್ಲೆಯವರೆ ಆದ ಶ್ರೀ ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಧಾರವಾಡ ಜಿಲ್ಲೆಯವರೇ. ಇವನ್ನೂ ನೋಡಿ ಹುಬ್ಬಳ್ಳಿ ಕರ್ನಾಟಕದ ಜಿಲ್ಲೆಗಳು ಕರ್ನಾಟಕ ಧಾರವಾಡ ಪೇಡ ಮಿರ್ಚಿ ಭಜಿ ಸಂಸ್ಕೃತ ಪಾಠಶಾಲೆ ಧಾರವಾಡ (ಲೋಕ ಸಭೆ ಚುನಾವಣಾ ಕ್ಷೇತ್ರ) ಮಂದಿರಗಳು ಭಗವಾನ್ ಸರಹುನಾಥ್ ಮಂದಿರ, ನುಗ್ಗಿಕೇರಿ (Lord Sarahunaath Temple) ಭಗವಾನ್ ಸರಹುನಾಥ್ ಮಂದಿರ, ಮದಿಹಾಳ (Lord Sarahunaath Temple) ಬಾಹ್ಯ ಸಂಪರ್ಕಗಳು ಧಾರವಾಡ್.ಕಾಂ ವರ್ಗ:ಭಾರತ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಭೂಗೋಳ ವರ್ಗ:ಭಾರತದ ಪಟ್ಟಣಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಧಾರವಾಡ ಜಿಲ್ಲೆ
ಚಾಮರಾಜನಗರ
https://kn.wikipedia.org/wiki/ಚಾಮರಾಜನಗರ
ಚಾಮರಾಜನಗರ ದಕ್ಷಿಣ ಕರ್ನಾಟಕದಲ್ಲಿರುವ ಒಂದು ಜಿಲ್ಲೆ. ಮೊದಲಿಗೆ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ. ಈ ಜಿಲ್ಲೆಯ ಕೇಂದ್ರ ಅದೇ ಹೆಸರಿನ ಪಟ್ಟಣ. ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು ಚಾಮರಾಜನಗರ, ಯಳಂದೂರು, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ. ಇತ್ತೀಚೆಗೆ ಹನೂರು ತಾಲೂಕು ರಚನೆಯಾಯಿತು. ಇತಿವೃತ್ತ ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆ ಕನ್ನಡ. ಇಲ್ಲಿ ಮಾತನಾಡಲ್ಪಡುವ ಅಲ್ಪಸಂಖ್ಯಾತ ಭಾಷೆಗಳಲ್ಲಿ ಪ್ರಮುಖವಾದವು ಸೋಲಿಗನುಡಿ (ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟದ ಪ್ರದೇಶದಲ್ಲಿ) ಚಾಮರಾಜನಗರ ಜಿಲ್ಲೆಯಲ್ಲಿ ಧಾರ್ಮಿಕ ಪ್ರಾಮುಖ್ಯತೆಯ ಸಾಕಷ್ಟು ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧವಾದದ್ದು ಮಲೆಮಹದೇಶ್ವರ ಬೆಟ್ಟ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಈ ಜಿಲ್ಲೆಯಲ್ಲಿ ನೈಸರ್ಗಿಕ ಸೌಂದರ್ಯದ ಉದಾಹರಣೆಗಳಲ್ಲಿ ಮುಖ್ಯವಾದವುಗಳೆಂದರೆ- ಬಿಳಿಗಿರಿರಂಗನ ಬೆಟ್ಟ , ಮಲೆಮಹದೇಶ್ವರ ಬೆಟ್ಟ ಮತ್ತು ಹಿಮವದ್ಗೋಪಾಲಸ್ವಾಮಿಬೆಟ್ಟ. ಶಿವನ ಸಮುದ್ರ ಬಂಡಿಪುರ ರಾಷ್ಟ್ರೀಯ ಉದ್ಯಾನವು ಜಿಲ್ಲೆಯ ದಕ್ಷಿಣಭಾಗದಲ್ಲಿದೆ. ಈ ಜಿಲ್ಲೆಯ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ. ಇಲ್ಲಿನ ಕಾಡುಗಳು, ಮುಖ್ಯವಾಗಿ ಮಲೆಮಹದೇಶ್ವರ ಬೆಟ್ಟ, ಕುಖ್ಯಾತವಾದ ಕಾಡುಗಳ್ಳ ವೀರಪ್ಪನ್ ನ ಅಡಗುದಾಣಗಳಾಗಿದ್ದವು. ಚಾಮರಾಜನಗರ ಜಿಲ್ಲೆಯ ಪರಿಚಯ ಕರ್ನಾಟಕದ ದಕ್ಷಿಣ ತುತ್ತತುದಿಯಲ್ಲಿರುವ ಚಾಮರಾಜನಗರ ಜಿಲ್ಲೆ ಭೂಪಟದಲ್ಲಿ ಬಾಹುಬಲಿಯ ಬಲಭಾಗದ ಪಾದುಕೆಯಂತೆ ಕಂಗೊಳಿಸುವುದನ್ನು ಕಾಣಬಹುದು. ದಕ್ಷಿಣ ಒಳನಾಡಿನ ಎಲೆ ಉದುರುವ, ಮಳೆಗಾಲದಲ್ಲಿ ಸದಾ ಹಸಿರಾಗಿರುವ ಅರಣ್ಯ ಸಾಲನ್ನು ಹೊಂದಿದೆ. ತಮಿಳುನಾಡು ಮತ್ತು ಕೇರಳಗಡಿಗುಂಟ ಹಂಚಿಕೊಂಡಿರುವ ಈ ಜಿಲ್ಲೆ ೧೧.೩೫ ಉತ್ತರ ಅಕ್ಷಾಂಶದಿಂದ ೧೨.೧೮ ಉತ್ತರ ಅಕ್ಷಾಂಶದವರೆವಿಗೂ, ೭೨.೨೪ ಪೂರ್ವ ರೇಖಾಂಶದಿಂದ ೭೭.೪೬ ಪೂರ್ವ ರೇಖಾಂಶದ ನಡುವೆ ೫೬೮೫ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. thumb| ಪೂರ್ವ ಮತ್ತು ಪಶ್ಚಿಮ ಘಟ್ಟ ಸಂದಿಸುವ ನೀಲಗಿರಿ ಅರಣ್ಯ ವ್ಯಾಪ್ತಿಯಲ್ಲಿ ಬಿಳಿಗಿರಿರಂಗನ ಬೆಟ್ಟ ವನ್ಯಧಾಮ ಮತ್ತು ಬಂಡೀಪುರ ರಾಷ್ಟ್ರೀಯ ಹುಲಿ ಅಭಯಾರಣ್ಯ ೧೪೧೩ ಚ.ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿದೆ. ಜಿಲ್ಲೆಯ ಎತ್ತರದ ಕತ್ತರಿಬೆಟ್ಟ ೧೮೧೬ ಮೀ (ಇದು ಅತ್ತಿಖಾನೆ ಗ್ರಾಮದ ಹತ್ತಿರದಲ್ಲಿದೆ), ಬಿಳಿಗಿರಿರಂಗನ ಬೆಟ್ಟ ೧೧೫೧ ಎಂ, ಬೇಡಗುಳಿ ಎಸ್ಟೇಟು ೧೪೦೦ ಮೀ ಗಳಾಗಿದ್ದು ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ. ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ.ಕ್ರಿಸ್ತಪೂರ್ವದಿಂದಲೂ ಆದಿ ಮಾನವನ ನೆಲೆಯಾಗಿದ್ದ ಶಿಲಾ ಸಮಾಧಿಗಳನ್ನು ಬುಡಕಟ್ಟು ಜನಾಂಗ ಸೋಲಿಗರು ವಾಸಿಸುವುದನ್ನು ಬಿಳಿಗಿರಿರಂಗನ ಬೆಟ್ಟದ ಪೋಡುಗಳಲ್ಲಿ ಕಾಣಬಹುದಾಗಿದೆ. ಈ ಭಾಗದ ಜೀವನದಿಗಳಾದ ಸುವರ್ಣವತಿ ಚಿಕ್ಕಹೊಳೆ ಕಬಿನಿ, ಗುಂಡ್ಲು ನದಿಗಳು ಜಿಲ್ಲೆಯಲ್ಲಿ ಹರಿಯುವ ಕಾವೇರಿ ನದಿಯ ಉಪನದಿಗಳಾಗಿವೆ. ಇವುಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಲಾಗಿದೆ. ಜೀವನದಿ ಕಾವೇರಿ ೧೧೦ ಕಿ.ಮೀ. ದೂರವನ್ನು ಕ್ರಮಿಸಿ, ಗಗನಚುಕ್ಕಿ, ಭರಚುಕ್ಕಿ ಜಲಪಾತ ಸೃಷ್ಟಿಸಿ ೧೯೦೨ ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ತಯಾರಿಕೆ ನೆಲೆಯಾಗಿದ್ದು ಇದೇ ಜಿಲ್ಲೆಯಲ್ಲಿ. ಮುಂದೆ ಮಹದೇಶ್ವರ ಬೆಟ್ಟದಿಂದ ೫೦ ಕಿ.ಮೀ ಅಂತರದಲ್ಲಿರುವ ಹೊಗೆನಕಲ್ ಜಲಪಾತ ನೈಸರ್ಗಿಕ ಶಿಲೆಗಳನ್ನು ಸೃಷ್ಟಿಸಿದೆ. ರಾಜ್ಯ, ರಾಷ್ಟ್ರ, ವಿದೇಶಿಯರ ಆಕರ್ಷಣೀಯ ನೈಸರ್ಗಿಕ ಜಲಪಾತಗಳು ಇಲ್ಲಿನ ವೈಶಿಷ್ಟ್ಯ ಗಂಗರು, ಹೊಯ್ಸಳರು, ವಿಜಯನಗರ, ಮೈಸೂರರಸರ ಕಲಾವೈಭವವನ್ನು ಚಾಮರಾಜನಗರದ ಬಳಿ ಇರುವ ನರಸಮಂಗಲ, ಹರದನಹಳ್ಳಿ, ಶಿಲಾಶಾಸನ, ಗುಂಡ್ಲುಪೇಟೆ ತಾಲೂಕಿನಲ್ಲಿ ಕಂಡುಬರುವ ವರಹಾವಾಸುದೇವ ಮಂದಿರ, ಹುಲುಗನ ಮೊರಡಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಯಳಂದೂರಿನ ಬಳೇಮಂಟಪ, ಜಹಾಗಿರ್‌ದಾರ್ ಬಂಗಲೆ, ಕೊಳ್ಳೆಗಾಲದ ಬಳಿಯ ಮಧ್ಯರಂಗ ಇಲ್ಲಿನ ಐತಿಹಾಸಿಕ ಕುರುಹುಗಳಾಗಿವೆ. ಜನಸಂಖ್ಯೆ ಗಡಿಗಳಲ್ಲಿ ತಮಿಳು, ಮಲೆಯಾಳಂ ಮಾತನಾಡುವ ಜನರಿದ್ದು ಅತಿ ಹೆಚ್ಚು ಕನ್ನಡಿಗರಿದ್ದಾರೆ. ಹಿಂದೂ, ಮುಸ್ಲಿಂ,jaina, ಕ್ರಿಶ್ಚಿಯನ್ ಧರ್ಮಗಳ ಸಮನ್ವಯವನ್ನು ಕಾಣಬಹುದು. ಪ್ರಪಂಚದಲ್ಲಿಯೆ ವಿಶಿಷ್ಟವೆನಿಸಿದ ಕಪ್ಪುಶಿಲೆ ಅಥವ ಕರಿಕಲ್ಲು(ಗ್ರಾನೈಟ್) ಇಲ್ಲಿ ಕಂಡು ಬರುತ್ತದೆ. ಜತೆಗೆ ಸುಣ್ಣದ ಕಲ್ಲಿನ ನಿಕ್ಷೇಪವು ಹೇರಳವಾಗಿದೆ. ಶೇ ೪೮ ದಟ್ಟಾರಣ್ಯದಿಂದ ಸುತ್ತುವರಿದಿರುವ ಈ ಜಿಲ್ಲೆ ರಾಜ್ಯದಲ್ಲಿ ೨೫ನೇ ಸ್ಥಾನದಲ್ಲಿದೆ. ೨೦೦ ಯಿಂದ ೩೫೦ ಉಷ್ಣಾಂಶವನ್ನು ಹೊಂದಿದ್ದು ೭೦ ರಿಂದ ೧೦೦ ಸೆಂ.ಮೀ. ಮಳೆಯನ್ನು ಪಡೆಯುತ್ತದೆ. ಕೃಷಿಯ ಬಹುಭಾಗ ಮಳೆ ಆಶ್ರಯದ ಜತೆಗೆ ಕೊಳವೆ ಬಾವಿ, ತೆರೆದ ಬಾವಿ, ಕಬಿನಿ ನಾಲೆಗಳು ಕೃಷಿಕಾರ‍್ಯಗಳಿಗೆ ನೀರನ್ನು ಒದಗಿಸುತ್ತವೆ. ರೈತರು ಕಬ್ಬು, ಭತ್ತ, ರಾಗಿ, ಬಾಳೆ, ಕಡ್ಲೆಕಾಯಿ, ತೆಂಗು ಮತ್ತು ಅಡಿಕೆ ಬೆಳೆಗಳ ಜತೆಗೆ ಹಣ್ಣು, ತರಕಾರಿಗಳನ್ನು ಬೆಳೆಯುತ್ತಾರೆ. ೨೦೧೧ರ ಜನಗಣತಿಯ ಪ್ರಕಾರ ೧೦,೨೦,೭೯೧ ಜನಸಂಖ್ಯೆ ಹೊಂದಿದ್ದು ಪ್ರತಿ ಚ.ಕಿ.ಮೀ. ಪ್ರದೇಶದಲ್ಲಿ ೧೮೯ ಜನರು ವಾಸಿಸುತ್ತಿದ್ದಾರೆ. ೫೧.೨೬% ಸಾಕ್ಷರ ಪ್ರಮಾಣವಿದ್ದು ಲಿಂಗಾನುಪಾತ ೯೯೩ ಆಗಿದೆ. ೧೯೯೭ರಲ್ಲಿ ಜಿಲ್ಲಾ ಸ್ಥಾನ ಪಡೆದ ನಂತರ ೪ ತಾಲೂಕುಗಳನ್ನು ಹೊಂದಿದ್ದು ೧೫,೮೧೮ ತಲಾಧಾಯ ಇದೆ. ಮಲೆ ಮಹದೇಶ್ವರ, ರಾಚಪ್ಪಾಜಿ, ಸಿದ್ಧಪ್ಪಾಜಿ, ಮಂಟೇಸ್ವಾಮಿ ಮೊದಲಾದ ಪವಾಡ ಪುರುಷರ ಪಾದ ಸ್ಪರ್ಶದಿಂದ ಧಾರ್ಮಿಕವಾಗಿ ಮಹದೇಶ್ವರ ಬೆಟ್ಟ, ಚಿಕ್ಕಲೂರು, ಬಿಳಿಗಿರಿರಂಗ ಬೆಟ್ಟದ ಜಾತ್ರೆ, ಶಿಂಷಾದ ಬಳಿಯ ದರ್ಗಾಗಳು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ಜನಪದ ಕಾವ್ಯಗಳಿಗೆ ಸ್ಫೂರ್ತಿಯಾಗಿವೆ. ಗೊರವರ ಕುಣಿತ, ಕಂಸಾಳೆ, ವೀರಗಾಸೆ, ಧಾರ್ಮಿಕ ಹಿನ್ನೆಲೆಯಲ್ಲಿ ರೂಪತಳೆದಿವೆ. ಮುರಾರ್ಜಿ, ವಸತಿ ಶಾಲೆಗಳ ಜತೆಗೆ ನವೋದಯ ಕೇಂದ್ರೀಯ ವಿದ್ಯಾಲಯದ ಮತ್ತು ವೃತ್ತಿ ಕಾಲೇಜುಗಳಾದ ಎಂಜಿನಿಯರ್, ಪಾಲಿಟೆಕ್ನಿಕ್, (ಡಿ.ಎಡ್) ಬಿ.ಎಡ್., ಪದವಿ., ಕಾಲೇಜುಗಳು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿತವಾಗಿವೆ. ರಾಷ್ಟ್ರೀಯ ಹೆದ್ದಾರಿ ೨೦೯ ಮತ್ತು ೨೧೨ ಇಲ್ಲಿ ಹಾದು ಹೋಗಿರುವುದರ ಜತೆಗೆ ಬ್ರಾಡ್‌ಗೇಜ್ ರೈಲು ಮಾರ್ಗ ಕರ್ನಾಟಕದ ದಕ್ಷಿಣ ತುದಿಯ ಈ ಜಿಲ್ಲೆಯನ್ನು ಸಂಪರ್ಕಿಸುತ್ತದೆ. ಚಾಮರಾಜನಗರ ಉತ್ತರ ಭಾಗದಲ್ಲಿ ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳಿದ್ದು ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಜಿಲ್ಲೆಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ಪಶ್ಚಿಮಭಾಗಗಳು ಬಹುತೇಕ ಅರಣ್ಯಗಳಿಂದ ಕೂಡಿವೆ. ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಹಲವಾರು ಕವಿ, ಕಲಾವಿದರ ಜತೆಗೆ ನಟ ಡಾ||ರಾಜಕುಮಾರ ರಂತವರನ್ನು ನೀಡಿರುವ ಈ ಜಿಲ್ಲೆ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ ಹಾಗೂ ಉತ್ತಮ ಜನರನ್ನು ಕೊಡುಗೆ ನೀಡಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಚಾಮರಾಜೇಶ್ವರ ದೇವಾಲಯ ಚಾಮರಾಜೇಶ್ವರ ದೇವಾಲಯ ಜಿಲ್ಲೆಯ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ. ನಗರದ ಹೃದಯ ಭಾಗದಲ್ಲಿರುವ ದೇವಾಲಯ ಸ್ಥಾಪನೆಯಾದದ್ದು, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಒಂದು ಕಾಲದಲ್ಲಿ ಅರಿಕುಠಾರ ಎಂಬ ಗ್ರಾಮವಾಗಿದ್ದು, ಇದು ಚಾಮರಾಜ ಒಡೆಯರ್ ಜನಿಸಿದ್ದರಿಂದ ಚಾಮರಾಜನಗರ ಎಂಬ ಹೆಸರನ್ನು ಪಡೆಯಿತು. ದೇವಾಲಯದ ಮಹಾದ್ವಾರ ಪೂರ್ವ ದಿಕ್ಕಿಗಿದ್ದು ೫ ಅಂತಸ್ತಿನ ಗೋಪುರವಿದೆ. ತುದಿಯಲ್ಲಿ ೫ ಸುಂದರ ಚಿನ್ನದ ರಂಗಿನ ಕಲಶಗಳಿದ್ದು ಮುಂದೆ ಗರುಡಗಂಬವಿದೆ. ದೇವಾಲಯ ಪ್ರವೇಶ ಮಾಡಿದಾಗ ಈಶ್ವರನಿಗೆ ಮುಖ ಮಾಡಿರುವ ಬೃಹತ್ ನಂದಿ ಇದೆ. ದೇವಾಲಯದ ಪ್ರಕಾರದಲ್ಲಿ ೬೪ ಪುರಾತನ ಭಕ್ತರ ವಿಗ್ರಹಗಳಿವೆ. ಉತ್ತರದಲ್ಲಿ ಈಶ್ವರ ವಿಗ್ರಹ, ಈಶಾನ್ಯದಲ್ಲಿ ಯೋಗಶಾಲೆ, ಆಗ್ನೇಯದಲ್ಲಿ ಪಾಕ ಶಾಲೆಯೂ ಇದೆ. ಇಲ್ಲಿ ವಾಸ್ತುಶಿಲ್ಪವು ಹೊಯ್ಸಳರ ಕಲೆಯನ್ನು ನೆನಪಿಸುತ್ತವೆ. ಈ ದೇವಾಲಯದ ಒಳಭಾಗದಲ್ಲಿ ಕಂಡು ಬರುವ ಚಿತ್ರಗಳೆಂದರೆ ಗಿರಿಜಾ ಕಲ್ಯಾಣ, ಸಮುದ್ರಮಥನ ಮತ್ತು ಚಾಮುಂಡೇಶ್ವರಿ, ಇವು ೧೦೦ ವರ್ಷದ ಹಳೆಯವು. ಇಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ಆಷಾಡದ ಹುಣ್ಣಿಮೆಯ ದಿನ ರಥೋತ್ಸವ ನಡೆಯುತ್ತದೆ. ಈ ರಥೋತ್ಸವಕ್ಕೆ ನವದಂಪತಿಗಳು ಹಣ್ಣು ಜವನವನ್ನು ಎಸೆದು ಭಕ್ತಿ ಭಾವ ಮೆರೆಯುವರು. ಅರಿಕುಠಾರ:- ಈ ಸ್ಥಳಕ್ಕೆ ಹಿಂದೆ ಅರಿಕುಠಾರ ಅಥವಾ ಅರಿಕೂಠಾರ ಎಂಬ ಹೆಸರಿತ್ತು. ಒಡೆಯನೂರು ಎಂದು ಕರೆಯಲಾಗುತ್ತಿತ್ತು. ಹರಳುಕೋಟೆ:- ನಗರದಿಂದ ಪೂವ್ಕ್ಕೆ 5 ಕಿ.ಮೀ. ದೂರದಲ್ಲಿ ಹರಳುಕೋಟೆ, ಶ್ರೀ ಆಂಜನೇಯ ಸ್ವಾಮಿ ದೇವಾಲಯವಿದೆ. “ಹನುಮಚ್ಚಿಂತನ” ಎಂಬ ಗದ್ಯ ಕೃತಿಯೂ “ಶ್ರೀ ಹನುಮತ್ ಸುಪ್ರಭಾತ” ಎಂಬ ಪಠ್ಯಮಾಲಿಕೆಯೂ ಈ ಕ್ಷೇತ್ರದ ಐತಿಹಾಸಿಕ ಹಾಗೂ ಪೌರಾಣಿಕ ಮಹತ್ವಗಳನ್ನು ಕುರಿತು ಬಣ್ಣಿಸಿರುವ ಕೃತಿಗಳು. ದೀನ ಬಂಧು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಿ.ಎಸ್. ಜಯದೇವ್ ಇವರು ದೀನ-ದಲಿತರ ಉದ್ಧಾರಕ್ಕಾಗಿ ಹೆಸರೇ ಸೂಚಿಸುವಂತೆ ದೀನಬಂಧು ಸಂಸ್ಥೆಯನ್ನು ೧೯೯೨ರಲ್ಲಿ ಪ್ರಾರಂಭಿಸಿದರು. ಇದು ಜಿಲ್ಲಾ ಕೇಂದ್ರದಿಂದ ೩ ಕಿ.ಮೀ. ದೂರದಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯ ಪಕ್ಕದ ಅರಣ್ಯ ಇಲಾಖೆಯ ನರ್ಸರಿ ಫಾರಂಗೆ ಹೊಂದಿಕೊಂಡಂತೆ ಇದೆ. ಸಂಸ್ಥಾಪಕರ ಮೆಚ್ಚುಗೆಗೆ ಪಾತ್ರರಾದ ಅನೇಕ ಸಂಘಸಂಸ್ಥೆಗಳು ಮತ್ತು ದಾನಿಗಳ ಉದಾರ ಕೊಡುಗೆಯಿಂದ ೧ ರಿಂದ ೧೦ನೇ ತರಗತಿಯವರೆಗೆ ಸ್ವಂತ ಕಟ್ಟಡದಲ್ಲಿ “ಸೃಜನಶೀಲ ಕಲಿಕೆ” ತತ್ವದ ಮಾದರಿಯಲ್ಲಿ ನಡೆಯುತ್ತದೆ. ಅನಾಥ ಮಕ್ಕಳ ವಸತಿ ಸಹಿತ ಶಾಲೆ, ಗಂಡು ಹೆಣ್ಣು ಮಕ್ಕಳಿಗೆ "ದೀನಬಂಧು ಮಕ್ಕಳ ಮನೆ" ಎಂಬ ಹೆಸರಿನ "ವಸತಿ ಸಹಿತ ಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರ" ಸುಸಜ್ಜಿತ ಕಟ್ಟಡದಲ್ಲಿ ನಡೆಯುತ್ತಿದೆ. ಇದು ಶಿಕ್ಷಕರ ಸಂಪನ್ಮೂಲ ಕೇಂದ್ರ ಹೊಂದಿದ್ದು ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಿರತ ಪ್ರಯತ್ನ ನಡೆಸುತ್ತಿದೆ. ಸುವರ್ಣಾವತಿ ಜಲಾಶಯ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೧೮ ಕಿ.ಮೀ. ಚಾಮರಾಜನಗರ ತಾಲೂಕಿನ ಜೀವನಾಡಿಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ ಗಜ್ಜಲ ಹಟ್ಟಿ ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. ಕಾವೇರಿ ಕಣಿವೆಗೆ ಸೇರಿದ ಸುವರ್ಣಾವತಿ ಜಲಾಶಯದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ನರಸಮಂಗಲ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ನೈರುತ್ಯದಲ್ಲಿರುವ ಗಂಗರ ಇತಿಹಾಸ ಬಿಂಬಿಸುವ ಗ್ರಾಮ ನರಸಮಂಗಲ, ಈ ಸ್ಥಳವು ಪ್ರಾಚೀನ ರಾಮಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಗಂಗರ ಕಾಲದಲ್ಲಿ ಅನೇಕ ಸುಂದರ ದೇವಾಲಯ ಮತ್ತು ಬಸದಿಗಳು ನಿರ್ಮಾಣಗೊಂಡವು ಅವುಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ಶಿವಲಿಂಗವು ೬ ಅಡಿ ಎತ್ತರ ೧೨ ಅಡಿಗಳನ್ನು ಸುತ್ತಳತೆ ಹೊಂದಿದೆ. ಈ ದೇವಾಲಯವು ವಿಶಾಲವಾದ ಗರ್ಭಗೃಹ, ಕಿರಿದಾದ ಸುಖನಾಸಿ ಒಂಭತ್ತು ಅಂಕಣಗಳ ನವರಂಗಗಳಿವೆ. ಮೇಲೆ ವಿಮಾನ ಗೋಪುರವಿದೆ. ಇದು ತಮಿಳುನಾಡಿನ ಮಹಾಬಲಿಪುರಂ ಶಿಲ್ಪವನ್ನು ಹೋಲುವುದು. ಶಿಲ್ಪಗಳು ಬಹು ಸುಂದರ ಕಲಾ ಕೃತಿಗಳಾಗಿವೆ. ರಾಮಾಯಣ ಮಹಾಭಾರತ ಕಥೆಗೆ ಸಂಬಂಧಪಟ್ಟ ಹಲವಾರು ಸನ್ನಿವೇಷಗಳನ್ನು ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದೇವಾಲಯವನ್ನು ಭಾರತ ಸರ್ಕಾರವು ೧೯೫೮ರಲ್ಲಿ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಗಿದೆ. ಮಲೆಯೂರಿನ ಕನಕಗಿರಿ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೨೫ ಕಿ.ಮೀ. ಚಾಮರಾಜನಗರ ಪಶ್ಚಿಮದಲ್ಲಿರುವ ಮಲೆಯೂರಿನ ಕನಕಗಿರಿ ಜಗತ್ತಿನ ಸುಪ್ರಸಿದ್ಧ ಜೈನ ಕ್ಷೇತ್ರಗಳಲ್ಲಿ ಒಂದಾಗಿದೆ. ಮಲೆಯೂರಿನ ಪಶ್ಚಿಮಕ್ಕಿರುವ ಈ ಬೆಟ್ಟದ ಬಂಡೆಗಳ ಮೇಲೆ ಚರಣ ಪಾದುಕೆಗಳು, ಶಿಲಾಶಾಸನಗಳು, ಸಮಾಧಿ ಮಂಟಪ ಮತ್ತು ಗುಹೆಗಳಿವೆ. ೧೦ನೇ ಶತಮಾನಕ್ಕೆ ಸೇರಿದ ಕನಕಗಿರಿ ಮೇಲಿನ ಪಾರ್ಶ್ವನಾಥ ಬಸದಿ ಅತಿ ಪುರಾತನ ಹಾಗೂ ಸುಂದರ ಬಸದಿಯಾಗಿದೆ. ಈ ಸ್ಥಳದಲ್ಲಿ ನಾಗಾರ್ಜುನನಿಗೆ ಪದ್ಮಾವತಿ ಅಮ್ಮನವರು ಲೋಹ ವನ್ನು ಚಿನ್ನ ಮಾಡುವ ವಿದ್ಯೆಯನ್ನು ತಿಳಿಸಿದರು. ಈ ಕಾರಣದಿಂದ ಇದಕ್ಕೆ ಕನಕಗಿರಿ ಎಂಬ ಹೆಸರು ಬಂದಿದೆ. ಗಂಗರು ಮತ್ತು ಹೊಯ್ಸಳ ಕಾಲದ ಕಟ್ಟಡಗಳು, ಶಿಲಾಶಾಸನಗಳು ಇಲ್ಲಿ ಕಂಡು ಬರುತ್ತವೆ. ಇಲ್ಲಿನ ಶಿಲಾಶಾಸನಗಳ ಪ್ರಕಾರ ಅಜಿತಮುನಿ ಚಂದ್ರಸೇನಾಚಾರ್ಯ ಮುಂತಾದ ಹಲವರು ಸಲ್ಲೇಖನ ವ್ರತ ಕೈಗೊಂಡು ಸಮಾಧಿ ಪಡೆದರೆಂದು ತಿಳಿಯುತ್ತದೆ. 'ಕಲ್ಯಾಣಕಾರಕ ಚಿಕಿತ್ಸಾಶಾಸ್ತ್ರ' ಗ್ರಂಥ ಬರೆದ ಶ್ರೀ ಪೂಜ್ಯಪಾದರು ಈ ಊರಿನವರು. ದಿವ್ಯಲಿಂಗೇಶ್ವರ ದೇಗುಲ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ ಆಗ್ನೇಯದಿಕ್ಕಿಗಿರುವ ಹೋಬಳಿಕೇಂದ್ರ ಹರದನಹಳ್ಳಿ ಗ್ರಾಮದಲ್ಲಿ ಈ ದೇವಾಲಯವಿದೆ. ಹಿಂದೆ ಹೊಯ್ಸಳರು, ವಿಜಯನಗರ ಅರಸರು ಮತ್ತು ಮೈಸೂರು ಅರಸರು ಆಳುತ್ತಿದ್ದರು. ಈ ಊರಿನಲ್ಲಿ ಹಿಂದೆ ಕೋಟೆಯಿದ್ದು ಈಗ ಹಾಳಾಗಿದೆ. ಈ ಊರಿಗೆ ಕಳಸಪ್ರಾಯವಾಗಿರುವುದು ದಿವ್ಯ ಲಿಂಗೇಶ್ವರ ದೇವಾಲಯ. ಈ ದೇಗುಲವು ಗೋಪುರ ಮತ್ತು ಗರುಡಗಂಭವನ್ನು ಒಳಗೊಂಡಿದ್ದು ೨೦೦೧ನೇ ಇಸವಿಯ ಮಳೆಗಾಲದಲ್ಲಿ ರಾಜಗೋಪರವು ಶಿಥಿಲಗೊಂಡು ನೆಲಸಮವಾಗಿದೆ. *೧೩ನೇ ಶತಮಾನದಲ್ಲಿ ಹೊಯ್ಸಳ ವೀರಬಲ್ಲಾಳರ ಕಾಲದಲ್ಲಿ ನಿರ್ಮಾಣವಾಗಿತ್ತು. ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಕಲಾತ್ಮಕವಾಗಿದೆ. ಇದರಿಂದ ೧೦೫ ಅಡಿ ದೂರದಲ್ಲಿ ನಂದೀಶ್ವರನ ವಿಗ್ರಹವಿದೆ. ಇದೊಂದು ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರವಾಗಿದ್ದು ಆಕರ್ಷಿಣಿಯ ಸ್ಥಳವಾಗಿದೆ. ಈ ಗ್ರಾಮವು ಮಹಿಮಾಪುರುಷರಾದ "ಎಡೆಯೂರು ಸಿದ್ಧಲಿಂಗೇಶ್ವರ"ರ ಜನ್ಮಸ್ಥಳವೂ ಹೌದು. ಬೂದಿ ಪಡಗ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ. ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು. ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟಗಳಲ್ಲಿ ವನ್ಯ ಜೀವಿಧಾಮದ ಭಾಗವಾಗಿದೆ. ಬೇಡಗುಳಿ ಮತ್ತು ಅತ್ತಿಖಾನೆ ಚಾಮರಾಜನಗರ ಜಿಲ್ಲಾ ಕೇಂದ್ರದಿಂದ : ೫೦ ಮತ್ತು ೬೨ ಕಿ.ಮೀ ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಜಿನಲ್ಲಿರುವ ಬೇಡಗುಳಿ ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಮತ್ತು ಅತ್ತಿಖಾನೆ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಮತ್ತು ಅತ್ತಿಖಾನೆ ಗಿರಿಜನರ ಹಾಡಿಗಳು ಅವರ ಹಾಡುಪಾಡು. ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಮತ್ತು ಅತ್ತಿಖಾನೆ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ. ಎಲೆಮರೆಯ ಕಾಯಿಯಂತಿರುವ ಅತ್ತಿಖಾನೆಯ ಕತ್ತರಿ ಬೆಟ್ಟವು (ಸಮುದ್ರ ಮಟ್ಟದಿಂದ ೧೮೧೬ ಮೀ) ಈ ಜಿಲ್ಲೆಯಲ್ಲೆ ಅತಿ ಎತ್ತರವಾದ ಬೆಟ್ಟವಾಗಿದ್ದು, ಇದರ ತಪ್ಪಲಿನಲ್ಲಿ ಹುಟ್ಟುವ ಝರಿಗಳೆ ತೊರೆಯಾಗಿ ಹರಿದು ಚಾಮರಾಜನಗರ ಜಿಲ್ಲೆಯ ಜೀವನಾಡಿಯಾದ ಸುವರ್ಣಾವತಿ ನದಿಯಾಗಿ ಹರಿದು ಸುವರ್ಣಾವತಿ ಜಲಾಶಯದ ಒಡಲಸೇರಿ ಜಿಲ್ಲೆಯ ಆಧಾರವಾಗಿದೆ. ಅತ್ತಿಖಾನೆ ಗ್ರಾಮವು ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದ್ದು ಸುಂದರ ಅತಿಸುಂದರ ಗಿರಿಕಣಿವೆಗಳ ಆಗರವೇ ಆಗಿದೆ. ಜೋಡಿಗೆರೆ ಜೋಡಿಗೆರೆ ಸೌಂದರ್ಯವನ್ನು ಒಂದೆರಡು ಮಾತಿನಲ್ಲಿ ವರ್ಣಿಸಲಾಗದು. ಇದೊಂದು ಪ್ರಕೃತಿಯ ಅಪ್ರತಿಮ ಕೊಡುಗೆ ನಿಂತು ನೋಡಿದರೆ ನೋಡಿದಷ್ಟು ಆನಂದ. ವಿಶಾಲ ಹುಲ್ಲು ಗಾವಲು. ಶೋಲಾ ಅರಣ್ಯ ಪ್ರದೇಶ. ಮನಬಿಚ್ಚಿ ಓಡಾಡುವ ವನ್ಯಜೀವಿಗಳು ಸುಯ್‌ಗುಡುವ ತಂಗಾಳಿ. ಇವೆಲ್ಲವೂ ಒಂದು ಮಾಯಾಲೋಕವನ್ನು ಸೃಷ್ಟಿಸುತ್ತವೆ. ಜಗತ್ತಿನ ಅಪರೂಪದ ಪ್ರದೇಶವೆಂಬಂತೆ ವನ್ಯಜೀವಿಗಳು ಹುಲ್ಲುಗಾವಲಿನಲ್ಲಿ ಗುಂಪುಗುಂಪಾಗಿ ನಲಿದಾಡುವುದನ್ನು ನೋಡಿದರೆ ಇದೊಂದು ಮಿನಿ ಜುರಾಸಿಕ್ ಪಾರ್ಕ್‌ನಂತೆ ಕಾಣುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೧೬೦೦ ಮೀಟರ್‌ಗಳಷ್ಟು ಎತ್ತರದಲ್ಲಿರುವ ಜೋಡಿಗೆರೆ ಬಿಳಿಗಿರಿ ರಂಗನಬೆಟ್ಟ ವನ್ಯಜೀವಿಧಾಮದ ಒಂದು ಭಾಗವಾಗಿದ್ದು ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ. ಕೆ. ಗುಡಿ (ಕ್ಯಾತೇದೇವರ ಗುಡಿ) ಚಾಮರಾಜನಗರದ ಪೂರ್ವಕ್ಕಿರುವ ಪ್ರಕೃತಿ ಧಾಮ. ಸಮುದ್ರ ಮಟ್ಟದಿಂದ ೧೪೫೦ ಮೀಟರ್‌ಗಳಷ್ಟು ಎತ್ತರದಲ್ಲಿದೆ. ಇಲ್ಲಿ ಕರ್ನಾಟಕ ಜಂಗಲ್ ಲಾಡ್ಜ್ ನ ವನ್ಯಜೀವಿ ಪ್ರವಾಸೋದ್ಯಮ ಕೆಲಸ ಮಾಡುತ್ತಿದೆ. ಜೊತೆಗೆ ಅರಣ್ಯ ಇಲಾಖೆಯ ಅತಿಥಿಗೃಹವಿದೆ. ಅರಣ್ಯ ಇಲಾಖೆಯ ಆನೆ ಸಫಾರಿ ಮತ್ತು ವನ್ಯಜೀವಿ ಸಫಾರಿ ಬಹಳ ಪ್ರಸಿದ್ಧ. ಕೆ. ಗುಡಿಗೆ ದೇಶ-ವಿದೇಶಗಳು ಪ್ರವಾಸಿಗರ ಆಗಮನವಿದೆ. ಪ್ರಾಣಿ ಪಕ್ಷಿ, ಪ್ರಕೃತಿ ಸಂಶೋಧಕರಿಗೆ ಮತ್ತು ಪ್ರವಾಸಿಗರಿಗೆ ಕೆ. ಗುಡಿ ರಮ್ಯತಾಣವಾಗಿದ್ದು ಇಲ್ಲಿ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಕರಡಿ, ಜಿಂಕೆ, ಕಡವೆ ಈ ಅರಣ್ಯದ ಪ್ರಮುಖ ವನ್ಯಜೀವಿಗಳು. ಬೆಲ್ಲತ್ತ ಪಕ್ಷಿರಾಶಿ ಚಾಮರಾಜನಗರ ತಾಲ್ಲೋಕಿ ನಲ್ಲಿರುವ ಬೆಲ್ಲತ್ತ ಜಲಾಶಯ ಬಿಳಿಗಿರಿರಂಗನ ಬೆಟ್ಟದ ಕಾಡಂಚಿನಲ್ಲಿದೆ. ಕಾಡಂಚಿಗೆ ತಾಗಿಕೊಂಡಿರುವ ಹಿನ್ನೀರಿ ನಿಂದಾಗಿ ಪ್ರಾಣಿಗಳು ಪಕ್ಷಿಗಳಿಗೆ ಸಮೃದ್ಧ ಪ್ರದೇಶವಾಗಿದೆ. ಈ ಜಲಾಶಯದ ಸುತ್ತ ದೇಶ ವಿದೇಶಗಳ ವೈವಿಧ್ಯಮಯ ಪಕ್ಷಿಗಳ ಸಮ್ಮಿಲನವಾಗುತ್ತದೆ. ನಿಸರ್ಗ ಪ್ರಿಯರಿಗೆ ಪಕ್ಷಿ ಛಾಯಗ್ರಾಹಕರಿಗೆ ಮತ್ತು ಸಂಶೋಧಕರಿಗೆ ಇದೊಂದು ಉತ್ತಮ ತಾಣವಾಗಿದೆ. ಯಳಂದೂರು ಬಹಳ ಹಿಂದೆ ಯಳಂದೂರು ಪದಿನಾಡಿನ ರಾಜವಂಶಸ್ಥರ ಮುಖ್ಯ ಪಟ್ಟಣ ಅಥವಾ ರಾಜಧಾನಿಯಾಗಿತ್ತು. ಈ ವಿಷಯ ಹದಿನಾಡಿನ ಉಲ್ಲೇಖ ಕ್ರಿ.ಶ. ೧೦೧೮ರ ಚೋಳ ದೊರೆ ಒಂದನೇ ರಾಜೇಂದ್ರನ ಕಾಲದ ಶಾಸನದಲ್ಲಿ ಕಂಡು ಬಂದಿದೆ. ಜೈನಧರ್ಮದ ಪ್ರಮುಖ ಮುನಿಗಳಾದ ಶ್ರೀ ಬಾಲಚಂದ್ರ ಮುನಿಗಳ ಹೆಸರು ಈ ಊರಿಗೆ ಇತ್ತು. ನಂತರ ಬಾಲೇಂದುಪುರ ಎಂದಾಯಿತು. ನಂತರ ಎಳವಂದೂರಾಯಿತು. ಮುಂದೆ ಯಳಂದೂರಾಯಿತು. ಇಲ್ಲಿ ಜೈನ ಧರ್ಮದ ಮತ್ತು ವೀರಶೈವ ಧರ್ಮದ ಅನೇಕ ಹೆಸರಾಂತ ಮಹಾಕವಿಗಳು ಇಲ್ಲಿ ಇದ್ದರು. ಇವರು ರಚಿಸಿರುವ ಲೀಲಾವತಿ ಪ್ರಬಂಧ ರಾಜಶೇಖರ ವಿಲಾಸ ಹಾಗೂ ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಶ್ರೇಷ್ಠ ಕೃತಿಗಳಾಗಿವೆ. ಇಂತಹ ಪುಣ್ಯ ಭೂಮಿಯಲ್ಲಿ (ಸುವರ್ಣಾವತಿ) ಹೊನ್ನು ಹೊಳೆ ಹರಿಯುತ್ತದೆ. ಇದಕ್ಕೆ ಇರುವ ದಂತ ಕಥೆಯ ಉಲ್ಲೇಖವು ಶಾಸನವೊಂದರಲ್ಲಿ ದೊರೆಯುತ್ತದೆ. ಯಳಂದೂರು ಸಂಪದ್ಭರಿತವಾದ ಹಾಗೂ ಜನಾಕರ್ಷಕವಾದ ಸ್ಥಳವಾಗಿದ್ದು ನಿರ್ದಿಷ್ಟ ರಾಜಮನೆತನಗಳು ಇದ್ದವು ಎಂಬುದು ತಿಳಿದು ಬಂದಿದೆ. ಬಳೇ ಮಂಟಪ ಯಳಂದೂರಿನ ಗೌರೀಶ್ವರ ದೇವಾಲಯದ ಮುಖ ಮಂಟಪವನ್ನು ಕ್ರಿ.ಶ. ೧೬೫೪ರಲ್ಲಿ ಮುದ್ದುರಾಜನು ಬಹಳ ರಮ್ಯವಾಗಿ ಕಟ್ಟಿಸಿದ್ದಾನೆ. ಇದು ಬಹಳ ಸುಂದರವಾದ ಅತ್ಯಂತ ಪ್ರಾಚೀನ ಹಾಗೂ ಕಲಾಪೂರ್ಣ ಕಗ್ಗಲ್ಲಿನ ಮಂಟಪವಾಗಿದೆ. ಈ ಮಂಟಪ ಹಂಪೆಯ ೨೭ ಕಲ್ಲಿನ ರಥವನ್ನು ಹೋಲುತ್ತದೆ. ಈ ಮಂಟಪವು ಬೇಲೂರು ಮತ್ತು ಹಳೇ ಬೀಡಿನ ದೇವಾಲಯದ ಶಿಲ್ಪಕಲೆಯಂತೆ ಇದೆ. ಈ ಮಂಟಪವೂ ಚತುರ್ಮುಖಗಳನ್ನು ಹೊಂದಿದ್ದು ಸುಂದರವಾದ ಕಲ್ಲಿನ ಬಳೆಗಳಿಂದ ಕೂಡಿದ ಮಂಟಪವಾಗಿದೆ. ಶಿಲೆಯ ಗೋಡೆಯಲ್ಲಿ ಶೈವ ಪುರಾಣದ, ರಾಮಾಯಣದ ಹಾಗೂ ಮಹಾಭಾರತದ ಕೆಲವು ಘಟನೆಗಳನ್ನು ಅತ್ಯಂತ ಮನೋಹರವಾಗಿ ಸುಂದರವಾಗಿ ಕೆತ್ತಿರುವುದನ್ನು ನೋಡಬಹುದು. ಈ ಮಂಟಪದ ಮಧ್ಯಭಾಗದಲ್ಲಿ ಒಂದೇ ಕಲ್ಲಿನಿಂದ ಕಮಲದ ಮೊಗ್ಗನ್ನು ಬಿಡಿಸಿ ಮೇಲ್ಭಾಗದಲ್ಲಿ ಜೋಡಿಸಿರುವುದು ಮನೋಹರವಾಗಿದೆ. ಈ ಮಂಟಪದ ಮೂಲೆಗಳಲ್ಲಿ ಬಳೆಗಳನ್ನು ಒಂದರೊಳಗೊಂದು ಜೋಡಿಸಿದಂತೆ ಒಂದೇ ಕಲ್ಲಿನಿಂದ ಮಾಡಿರುವುದು ಅದ್ಭುತವಾಗಿದೆ. ಈ ಬಳೆಗಳು ಇರುವುದರಿಂದಲೇ ರೂಢಿಯಿಂದ ಈ ಮಂಟಪವನ್ನು ಬಳೆ ಮಂಟಪ ಎಂದು ಕರೆಯುತ್ತಾರೆ. ಗೌರೀಶ್ವರ ದೇವಾಲಯ ಯಳಂದೂರಿನಲ್ಲಿರುವ ಗೌರೀಶ್ವರ ದೇವಾಲಯದ ವೈಶಿಷ್ಟತೆಯನ್ನು ತಿಳಿಯಲು ಇಲ್ಲಿರುವ ಶಿಲಾಶಾಸನ ಒಂದೇ ಆಧಾರ ಯಳಂದೂರಿನಲ್ಲಿ ಆಳಿದ ರಾಜ ಮನೆತನಗಳಲ್ಲಿ ಪದಿನಾಡ ಅರಸರೇ ಪ್ರಮುಖರು. ಈ ಮನೆತನದ ಮೊದಲನೆರಾಜ ಸಿಂಗದೇವಭೂಪನು ಗೌರೀಶ್ವರ ದೇವಾಲಯವನ್ನು ಮುದ್ದುರಾಜನು ಕ್ರಿ.ಶ. ೧೬೫೪ರಲ್ಲಿ ದೇವಾಲಯದ ಮುಖ ಮಂಟಪ ಪಂಚಲಿಂಗಗಳನ್ನೊಳಗೊಂಡ ಗುಡಿಗಳನ್ನು ಕಟ್ಟಿಸಿದ್ದಾನೆ. ಈ ಗೌರೀಶ್ವರನು ಹಿಂದೆ ಕೃತಾಯುಗದಲ್ಲಿ ಜಮದಗ್ನಿ ಮಹಾರ್ಷಿಯಿಂದ “ತ್ರಿಪುರಾಂತಕ”ನೆಂದೂ ತ್ರೇತಾಯುಗದಲ್ಲಿ ಶ್ರೀರಾಮಚಂದ್ರನಿಂದ “ನೀಲಕಂಠ” ನೆಂದೂ, ದ್ವಾಪರಾಯುಗದಲ್ಲಿ ಪಾಂಡವರಿಂದ ಲೋಕೇಶ್ವರನೆಂದೂ ಕಲಿಯುಗದಲ್ಲಿ ಪದಿನಾಡಿನ ರಾಜ ವಂಶಸ್ಥರು ಗೌರೀಶ್ವರನೆಂದೂ ಪೂಜಿಸುತ್ತಿದ್ದರು. ಈ ದೇವಾಲಯದ ಆವರಣದಲ್ಲಿರುವ ಎರಡು ಪಗಡೆ ಮರಗಳು ದೇವಾಲಯದ ಆವರಣವನ್ನು ಬೇಸಿಗೆಯಲ್ಲೂ ತಂಪಾಗಿಸುತ್ತಿದೆ. ಬಿಳಿಗಿರಿರಂಗನಬೆಟ್ಟ ಪೂರ್ವ ಘಟ್ಟದಲ್ಲಿ ಮಲೈ ಮಹಾದೇಶ್ವರ ಬೆಟ್ಟ ಶ್ರೇಣಿ ಹಾಗೂ ದಿಂಬಮ್ ಬೆಟ್ಟ ಶ್ರೇಣಿಗಳ ನಡುವೆ ೩೦ ಮೈಲಿ ದೂರ ಫಲವತ್ತಾದ ಮಣ್ಣು ಮತ್ತು ದಟ್ಟ ಅರಣ್ಯದಿಂದ ಕೂಡಿರುವ ಬೆಟ್ಟವೇ ಬಿಳಿಗಿರಿರಂಗನ ಬೆಟ್ಟ. ಯಳಂದೂರು ತಾಲ್ಲೂಕಿನಿಂದ ೨೪ ಕಿ.ಮೀ. ದೂರದಲ್ಲಿರುವ ಈ ಬೆಟ್ಟವು ಬಿಳಿಕಲ್ಲು ಬೆಟ್ಟ. ಶ್ವೇತಾದ್ರಿಬೆಟ್ಟ. ಬಿಳಿಗಿರಿರಂಗಸ್ವಾಮಿ ಬೆಟ್ಟ ಎಂದು ಹಲವಾರು ಹೆಸರುಗಳಿಂದ ಪ್ರಸಿದ್ಧವಾಗಿದೆ. ಈ ಬೆಟ್ಟವು ಸಮುದ್ರಮಟ್ಟದಿಂದ ೪೪೭೦ ಅಡಿಗಳ ಎತ್ತರದಲ್ಲಿದ್ದು, ಔಷಧಿ ಸಸ್ಯಗಳಿಂದಲೂ, ತೇಗ, ಬೀಟೆ, ಹೊನ್ನೇ, ಮತ್ತಿ, ಬಿದುರು, ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹುಲಿ, ಚಿರತೆ, ಜಿಂಕೆ, ಆನೆ, ಕಾಡೆಮ್ಮೆ, ಕರಡಿ, ಮುಂತಾದ ಕಾಡು ಮೃಗಗಳು ಇವೆ. ಈ ಕಾನನ ಪ್ರದೇಶವನ್ನು ಪಾಂಡವರ ಕಾಲದಲ್ಲಿ ಚಂಪಕಾರಣ್ಯ ಎಂದು, ಗಂಗರ ಕಾಲದಲ್ಲಿ ಗಜಾರಾಣ್ಯ ಎಂದು ಕರೆಯುತ್ತಿದ್ದರು. ಶಿಲಾಯುಗದ ಮಾನವರು ಬಳಸುತ್ತಿದ್ದ ಆಯುಧಗಳು, ಮಡಿಕೆಗಳು, ಮತ್ತು ಅವರ ಸಮಾಧಿಗಳು, ಕಂಡು ಬಂದಿದೆ. ಬಿಳಿಗಿರಿರಂಗಸ್ವಾಮಿ ಬೆಟ್ಟದಲ್ಲಿರುವ ಶ್ರೀ ರಂಗಸ್ವಾಮಿ ದೇವಾಲಯವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ದೊಡ್ಡ ಜಾತ್ರೆಯು ಬಹಳ ಪ್ರಸಿದ್ಧಿಯನ್ನು ಪಡೆದಿದೆ. ದೊಡ್ಡ ಸಂಪಿಗೆ ಇದು ಬಿಳಿಗಿರರಂಗನ ಬೆಟ್ಟದ ಕಾಡಿಗೆ ಸೇರಿದ ಪ್ರದೇಶದಲ್ಲಿದ್ದು ಈ ಸ್ಥಳದಲ್ಲಿ ಭಾರ್ಗವೀ ನದಿ ನಯನ ಮನೋಹರವಾದ ಕಣಿವೆಯಲ್ಲಿ ಹರಿಯುತ್ತಿದೆ. ಪರಶುರಾಮನು ಮಾತೃ ಹತ್ಯಾ ದೋಷ ಪರಿಹಾರಕ್ಕಾಗಿ ಈ ಪರ್ವತದ ಮೇಲೆ ತಪಸ್ಸಾಚರಿಸಿದರೆಂದು ಪ್ರತೀತಿ. ಈ ಸ್ಥಳದಲ್ಲಿ ದೊಡ್ಡ ಸಂಪಿಗೆ ವೃಕ್ಷವಿದೆ. ಈ ಮಹಾವೃಕ್ಷದಲ್ಲಿ ೩ ಕೊಂಬೆಗಳಿದ್ದು ಇವು ಬ್ರಹ್ಮ-ವಿಷ್ಣು ಮತ್ತು ಮಹೇಶ್ವರರ ಸಂಕೇತ ಎಂದು ತಿಳಿಯಲಾಗಿದೆ. ಈ ಮಹಾವೃಕ್ಷವನ್ನು ‘ಸೋಲಿಗರು’ ತಮ್ಮ ಆರಾಧ್ಯ ದೈವವಾಗಿ ಭಯ ಭಕ್ತಿಯಿಂದ ಪೂಜಿಸುತ್ತಾರೆ. ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ (ವಿ.ಜಿ.ಕೆ.ಕೆ.) ತಲೆತಲಾಂತರದಿಂದ ಗುಡ್ಡಗಾಡುಗಳಲ್ಲಿ ಸಂಚರಿಸುತ್ತಾ ನಾಡಿನ ಸಂಪರ್ಕವನ್ನು ಕಳೆದುಕೊಂಡಿದ್ದ ಸೋಲಿಗ ಬುಡಕಟ್ಟು ಜನರಲ್ಲಿ ಆತ್ಮ ವಿಶ್ವಾಸ ತುಂಬಿ ವಂಶ ಪರಂಪರೆಯಾಗಿ ಅವರಲ್ಲಿ ಮನೆ ಮಾಡಿದ್ದ ಅನಿಮಿಯ ರೋಗದಿಂದ ಅವರನ್ನು ಪಾರು ಮಾಡಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ದೆಸೆಯಲ್ಲಿ ೧೯೮೧ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರವೇ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ. ಸೋಲಿಗರ ಪ್ರಗತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಕೇಂದ್ರ ಅವರಿಗೆ ಸೀಮಿತವಾಗಿರದೆ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಪಣಿಯ, ಹಕ್ಕಿಪಿಕ್ಕಿ, ಯರವ, ಲಂಬಾಣಿ,ಕೊರಮ ಇತ್ಯಾದಿ ಬುಡಕಟ್ಟಿನ ಜನರ ಪ್ರಗತಿಗೆ ಶ್ರಮಿಸುತ್ತಿದೆ. ಆರಂಭದಲ್ಲಿ ಏಳು ಮಕ್ಕಳ ಪ್ರವೇಶದೊಂದಿಗೆ ಆರಂಭವಾದ ಪ್ರಾಥಮಿಕ ಶಾಲೆ, ಇಂದು ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು, ಮತ್ತು ವೃತ್ತಿಪರ ಕಾಲೇಜನ್ನು ಹೊಂದಿರುವುದರ ಜೊತೆಗೆ ಸಾಮಾಜಿಕವಾಗಿಯೂ ಬೆಳೆದು ಹೆಮ್ಮರವಾಗಿದೆ. ಬುಡಕಟ್ಟು ಜನರ ಅರಿವಿನ ಆಶ್ರಯಧಾಮವಾಗಿದೆ.ಸೋಲಿಗರ ಬದುಕನ್ನು ಹಸನು ಮಾಡಲು ಜೀವನ ತ್ಯಾಗ ಮಾಡಿದ ಡಾ. ಎಚ್. ಸುದರ್ಶನ್ ರವರಿಗೆ ಮಹತ್ಕಾರ‍್ಯವನ್ನು ಪ್ರಶಂಸಿಸಿ ೯ ಡಿಸೆಂಬರ್ ೧೯೯೪ರಂದು ಅಂತರರಾಷ್ಟ್ರೀಯ ಸಂಸ್ಥೆಯೊಂದು ‘ರೈಟ್ ಲೈವಿಲಿಹುಡ್ ಅವಾರ್ಡ್’ನೀಡಿ ಗೌರವಿಸಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಲಯದ ಪ್ರವಾಸಿ ತಾಣಗಳು ಮರಡಿಗುಡ್ಡ, ಚಿಲಕವಾಡಿ, ಕುಂತೂರು, ಕುರುಬನ ಕಟ್ಟೆ, ಕನಕಗಿರಿ ಕ್ಷೇತ್ರ, ಚಿಕ್ಕಲ್ಲೂರು, ಉಗನಿಯ, ಶಿವನ ಸಮುದ್ರ, ವೆಸ್ಲಿ ಸೇತುವೆ, ಬೂದಬಾಳು ಕ್ಷೇತ್ರ, ಭರಚುಕ್ಕಿ, ಯಡಕುರಿ ಕೊಳ್ಳೇಗಾಲ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೦ ಕಿ.ಮೀ. ಕೊಳ್ಳೇಗಾಲ ವಲಯ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಗಡಿ ತಾಲ್ಲೂಕು, ಪ್ರಕೃತಿ ಸಂಪತ್ತು ಬಹಳಷ್ಟಿದ್ದು ಜಲಪಾತಗಳು, ದೇವಸ್ಥಾನಗಳನ್ನು ಹೊಂದಿದೆ. ವಲಯದ ಸ್ವಲ್ಪಭಾಗ ನೀರಾವರಿ ಹೊಂದಿದೆ. ಈ ಹಿಂದೆ ಈ ಪಟ್ಟಣದಲ್ಲಿ ಕೌಹಳ ಮತ್ತು ಗಾಲವ ಎಂಬ ಈರ್ವರು ಮಹರ್ಷಿಗಳು ನೆಲೆಸಿದ್ದರಿಂದ ಕೌಹಳಗಾಲವ ನಗರವಾಗಿ ಮುಂದೆ ಕೊಳ್ಳೇಗಾಲವೆಂದು ಪ್ರಸಿದ್ಧಿ ಪಡೆಯಿತು. ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ. ಕೊಳ್ಳೇಗಾಲದ ಚಾರಿತ್ರಿಕ ಮುಖವನ್ನು ಅವಲೋಕಿಸಿದರೆ ಜನಪದ ನಾಯಕರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸತ್ ಸಂಕಲ್ಪಗಳಿಗೆ ಸದಾ ಪ್ರೇರಣೆ ನೀಡುತ್ತಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿ, ರಾಚಪ್ಪಾಜಿಯಂತಹ ಜಂಗಮ ಶ್ರೇಷ್ಠರು ನಡೆದಾಡಿದ ಪುಣ್ಯಭೂಮಿ. ನಾಡಿನ ಹಿರಿಯ ಕವಿ ಷಟ್ ಶಾಸ್ತ್ರ ಕೋವಿದ ಶ್ರೀ ನಿಜಗುಣಶಿವಯೋಗಿ ನಂತರದ ಶ್ರೀ ಕುಮಾರ ನಿಜಗುಣಸ್ವಾಮಿ ಹಾಗೂ ಡಾ. ರಾಜ್‌ಕುಮಾರ್ ಸಿಂಗಾನಲ್ಲೂರಿನವರಾಗಿದ್ದು ಇವರೆಲ್ಲರಿಂದ ಸಾಂಸ್ಕೃತಿಕವಾಗಿ ಶ್ರೀಮಂತಗೊಂಡ ಪ್ರದೇಶವಾಗಿದೆ. ಮರಡಿಗುಡ್ಡ ಪವಾಡ ಪುರುಷ ಶ್ರೀ ಮಹದೇಶ್ವರರು ಮಂಡಿ ಊರಿದ ಸ್ಥಳ ಮರಡಿಗುಡ್ಡವಾಗಿದೆ. ಬಸ್ತೀಪುರ : ಪಟ್ಟಣದ ಉತ್ತರ ದಿಕ್ಕಿನಲ್ಲಿದ್ದು, ಜೈನ ಬಸದಿಗಳಿದ್ದ ಪುರಾವೆಗಳಿವೆ. ಇತರೆ ಸ್ಥಳಗಳು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನ, ಮಾಳಿಗೆ ಮಾರಮ್ಮ, ಸೋಮೇಶ್ವರ ಸ್ವಾಮಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ, ಮುರುಡೇಶ್ವರ ಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಉಚ್ಛಾಲಮ್ಮ ದೇವಸ್ಥಾನ, ಮಕ್ಕಳ ಮಹದೇಶ್ವರ ದೇವಸ್ಥಾನ, ನಾರಾಯಣ ಸ್ವಾಮಿ ದೇವಸ್ಥಾನ ಹಾಗೂ ಕಲ್ಯಾಣಿ. ಚಿಲಕವಾಡಿ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ಇದೊಂದು ಧಾರ್ಮಿಕ ಹಾಗೂ ಕವಿಗಳ ಊರು. ಇಲ್ಲಿ ಶ್ರೀ ಶಂಭುಲಿಂಗೇಶ್ವರರ ಬೆಟ್ಟವಿದ್ದು, ದುರ್ಗಾಂಭ ದೇವಿಯ ದೇವಸ್ಥಾನ ಕೂಡ ಇದೆ. ದೀಪಾವಳಿಯ ಸಂದರ್ಭದಲ್ಲಿ ವರ್ಷಕ್ಕೊಮ್ಮೆ ಸ್ವಾಮಿಯ ಉತ್ಸವ ನಡೆಯುತ್ತಿದ್ದು, ಜಾತ್ರೆ ಕೂಡ ಏರ್ಪಾಡಾಗುತ್ತದೆ. ದೇವಸ್ಥಾನದ ಸಮೀಪದಲ್ಲಿ ಅನುಭವ ಮಂಟಪ ಇದ್ದು, ಕುಮಾರ ನಿಜಗುಣ ಸ್ವಾಮಿಗಳವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇವರು ಬರೆದ ’ಬೋಳು ಬಸವನ ಬೊಂತೆ” ಒಂದು ಅಮರ ಕೃತಿ. ಇವರು ಸಂಸಾರಿಕ ಜೀವನವನ್ನು ತ್ಯಜಿಸಿ, ಶ್ರೀ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಗಳವರಿಂದ ದೀಕ್ಷೆಯನ್ನು ಪಡೆದು ವಿರಕ್ತಿ ಮಾರ್ಗದೆಡೆಗೆ ನಡೆದಿದ್ದಾರೆ. ಈ ಸ್ಥಳದಲ್ಲಿ ಶ್ರೀ ನಿಜಗುಣಶಿವಯೋಗಿಗಳು ತಪೋಗೈದ ಗುಹೆ ಇದೆ. ಕುಂತೂರು ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೧೦ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೦ ಕಿ.ಮೀ. ಈ ಗ್ರಾಮದಲ್ಲಿ ಶ್ರೀ ಪ್ರಭುದೇವಸ್ವಾಮಿಯವರ ಬೆಟ್ಟ ಇದ್ದು, ವರ್ಷಕ್ಕೊಮ್ಮೆ ಸ್ವಾಮಿಗೆ ಹಾಲೆರೆವ ಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ. ಇಲ್ಲಿ ಕಾರ್ಖಾನೆಯ ನೌಕರರಿಗೆ ವಸತಿಗೃಹಗಳಿದ್ದು, ಕಾಲೋನಿಯೊಂದು ನಿರ್ಮಾಣಗೊಂಡಿದೆ. ಊರಿನ ಕೇಂದ್ರಸ್ಥಳದಲ್ಲಿ ದಾಸೋಹ ಮಠವಿದ್ದು, ಈ ಮಠದಲ್ಲಿ ಹಿಂದೆ ಶ್ರೀ ಮಾದೇಶ್ವರರವರು ಬಂದು ಹೋಗಿದ್ದ ಐತಿಹ್ಯವಿದೆ. ಶ್ರೀ ಮಠದಲ್ಲಿ ಅನ್ನದಾಸೋಹ ನಡೆಯುತ್ತದೆ. ಶ್ರೀ ಸಿದ್ಧೇಶ್ವರ ಕ್ಷೇತ್ರ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೩ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೪೩ ಕಿ.ಮೀ. ಹೊಂಡರಬಾಳು ಶ್ರೀ ಸಿದ್ಧೇಶ್ವರ ಕ್ಷೇತ್ರವು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಗಿರಿಯಲ್ಲಿ ಗುಹೆಗಳು ಅಧಿಕವಾಗಿವೆ. ತುಟ್ಟತುದಿಯಲ್ಲಿರುವ ಮೊದಲ ಗುಹೆ ವಿಶಾಲವಾದುದು. ಪೂಜಾ ಬಾಗಿಲು, ದರ್ಶನ ಬಾಗಿಲು, ಸ್ವರ್ಗದ ಬಾಗಿಲು ಈ ರೀತಿ ೦೩ ಬಾಗಿಲುಗಳಿವೆ. ಪೂಜೆಯನ್ನು ಭಕ್ತರು ದರ್ಶನದ ಬಾಗಿಲ ಹತ್ತಿರ ಬಂದು ಮಾಡಿಸುತ್ತಾರೆ. ಸ್ವರ್ಗದ ಬಾಗಿಲ ಬಗ್ಗೆ ಒಂದು ದಂತಕಥೆಯಿದ್ದು, ಒಮ್ಮೆ ಮಕ್ಕಳಿಲ್ಲದ ದಂಪತಿಗಳು ಮಗುವಾದರೆ ಅದನ್ನು ಅದರ ಆಭರಣ ಉಡುಪಿನ ಜೊತೆ ನಿನಗರ್ಪಿಸುತ್ತೇವೆಂದು ವಿಚಿತ್ರ ಹರಕೆ ಹೊತ್ತರು. ಮಗುವಾಯಿತು. ಬಹಳ ದಿನಗಳ ನಂತರ ಮಗುವನ್ನು ಸಿಂಗರಿಸಿ ದೇವರ ದರ್ಶನಕ್ಕೆ ಹೋದರು. ಮಗು ಸ್ವರ್ಗದ ಬಾಗಿಲಲ್ಲಿ ಹೋಗಿ ಮತ್ತೆ ಹಿಂತಿರುಗಲಿಲ್ಲ. ಈಗಲೂ ಕೆಲವು ಸಂರ್ದಬ ಗುಹೆಯಲ್ಲಿ ಮಗುವಿನ ಗೆಜ್ಜೆಯ ಸದ್ದು ಕೇಳಿಸುವುದೆಂದು ಪ್ರತೀತಿ ಇದೆ. ಕುರುಬನ ಕಟ್ಟೆ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೮ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕೊಳ್ಳೇಗಾಲದ ಪಕ್ಕದಲ್ಲಿರುವ ಕುರುಬನ ಕಟ್ಟೆಯು ಶೀ ಮಂಟೆಸ್ವಾಮಿ ಯವರು ತಪಗೈದ ಸ್ಥಳ. ಇಲ್ಲಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಗಳು ನಡೆಯುತ್ತದೆ. ಪರಮ ಪರಂಜ್ಯೋತಿ ನೀವೇ ಬನ್ನಿ, ಮಂಟೇದ ಲಿಂಗಯ್ಯ ನೀವೇ ಬನ್ನಿ ಎಂದು ಹಾಡುವ ನೀಲಗಾರರ ಮೇಳ ಈ ಸ್ಥಳದಲ್ಲಿ ಕಾಣಬಹುದು. ಈ ಸ್ಥಳದ ಪಕ್ಕದಲ್ಲಿ ಕರಳಕಟ್ಟೆ ಎಂಬ ಗ್ರಾಮವಿದ್ದು, ಸೋಲಿಗರು ಇಲ್ಲಿ ವಾಸವಾಗಿದ್ದಾರೆ. ಕನಕಗಿರಿ ಕ್ಷೇತ್ರ ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ = ೯ ಕಿ.ಮೀ. ಚಾಮರಾಜನಗರ ಜಿಲ್ಲಾ ಕೇಂದ್ರದಿಂದ = ೫೯ ಕಿ.ಮೀ. ಕ್ಷೇತ್ರವು ದೊಡ್ಡಿಂದವಾಡಿ ಗ್ರಾಮದ ಸನಿಹದಲ್ಲಿರುವ ಗಿರಿ ಪ್ರದೇಶ ಇಲ್ಲಿ ಪಾರ್ವತಿ ಮಲ್ಲಿಕಾರ್ಜುನಸ್ವಾಮಿ ದೇವಾಲಯವಿದೆ. ಪಂಚಲಿಂಗ ದರ್ಶನದಂದು ತಲಕಾಡಿನ ೦೫ ಲಿಂಗಗಳನ್ನು ದರ್ಶನ ಮಾಡಿ, ಕನಕಗಿರಿಯ ಪಾರ್ವತಿ-ಪರಮೇಶ್ವರರ ದರ್ಶನ ಪಡೆದರೆ ಕೈಲಾಸ ಪದವಿ ಪ್ರಾಪ್ತವಾಗುವುದೆಂದು ಪ್ರತೀತಿ ಇದೆ. ಆದ್ದರಿಂದಾಗಿ ಈ ದೇವರ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇದೊಂದು ವೈದಿಕ ಮತ್ತು ಜಾನಪದ ಸಾಂಸ್ಕೃತಿಕ ಆಚರಣೆಯ ಸಂಗಮ, ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ವೈದಿಕ ಪರಂಪರೆಯನ್ನು ಪ್ರತಿನಿಧಿಸಿದರೆ ’ಶ್ರೀ ಗುಡ್ಡದ ಮಾರಮ್ಮನ ದೇವಸ್ಥಾನ ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿರುವ ಕೆಂಡಗಣ್ಣ ಸ್ವಾಮಿಗಳ ಗದ್ದುಗೆಯೂ ಪ್ರಮುಖವಾದುದಾಗಿದೆ. ಗುಂಡಾಲ್ ಜಲಾಶಯ ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಕೊಳ್ಳೇಗಾಲದಿಂದ ಲೊಕ್ಕನ ಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ. ಇಲ್ಲಿ ಬೆಟ್ಟ ಗುಡ್ಡಗಳಿವೆ, ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ. ವಾಸ್ತವ್ಯಕ್ಕೆ ಪ್ರವಾಸಿ ಬಂಗಲೆಯಿದೆ. ಈ ಜಲಾಶಯದಿಂದ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಚಿಕ್ಕಲ್ಲೂರು ತಾಲ್ಲೂಕು ಕೇಂದ್ರದಿಂದ = ೨೭ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೭ ಕಿ.ಮೀ. ಶ್ರೀ ಚಕ್ಕಲ್ಲೂರು ಪುಣ್ಯಕ್ಷೇತ್ರವು ಧರೆಗೆ ದೊಡ್ಡವರು ಮಂಟೇಸ್ವಾಮಿಯವರ ಶಿಷ್ಯರಾದ ಸಿದ್ದಪ್ಪಾಜಿಯವರು ಐಕ್ಯವಾದ ಸ್ಥಳವಾಗಿದೆ. ಪವಾಡ ಪುರುಷ ಶ್ರೀ ಸಿದ್ದಪ್ಪಾಜಿಯವರು ನಿಡುಗಟ್ಟ ಗ್ರಾಮದ ಮುದ್ದೋಜಿ ಲಿಂಗವಂತ ಪಂಚಾಳದವರು, ಆತನ ಕಿರಿಯ ಮಗ ಕೆಂಪಣ್ಣ ಮಂಟೇಸ್ವಾಮಿಯ ಶಿಷ್ಯರಾಗಿ ಅನೇಕ ಪವಾಡಗಳನ್ನು ಮೆರೆಸಿ, ಕೊನೆಯಲ್ಲಿ ಚಿಕ್ಕಲ್ಲೂರು ಬಂದು ಐಕ್ಯವಾಗುತ್ತಾರೆ. ಈ ಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ ಮಾಸದಲ್ಲಿ ಬರುವ ಪೌರ್ಣಿಮೆ ದಿನ ಸಂಕ್ರಾಂತಿಯ ಸಮಯದಲ್ಲಿ ಚಂದ್ರಮಂಡಲ ಆರಂಭದಿಂದ ಪಂತಿ ಸೇವೆಯಲ್ಲಿ ಮುಕ್ತಾಯವಾಗುವ ೦೫ ದಿನಗಳ ಜಾತ್ರೆ ನಡೆಯುತ್ತದೆ. ಪ್ರತೀ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಕಾವೇರಿ ನದಿಯು ಸನಿಹದಲ್ಲಿ ಹರಿಯುತ್ತದೆ. ಸಮೀಪದಲ್ಲಿಯೇ ಮುತ್ತತ್ತಿರಾಯನ ಕ್ಷೇತ್ರವಿದೆ. ಉಗನಿಯ ತಾಲ್ಲೂಕು ಕೇಂದ್ರದಿಂದ = ೧೨ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೨ ಕಿ.ಮೀ. ವಾಸವಾಡಿ ಶ್ರೀ ವೀರಭದ್ರೇಶ್ವರ ಸ್ವಾಮಿ ಸನ್ನಿಧಿ : ಕೊಳ್ಳೇಗಾಲದಿಂದ ಬೆಂಗಳೂರು ರಸ್ತೆಯಲ್ಲಿ ಕ್ರಮಿಸಿ ಧನಗೆರೆ ಊರಿನಿಂದ ಸ್ವಲ್ಪದೂರ ಮುಂದೆ ಹೋದಾಗ ಒಂದು ಕಚ್ಚಾ ರಸ್ತೆಯ ಮೂಲಕ ತಲುಪಿದಾಗ ಸಿಗುವ ಭವ್ಯ ದೇವಾಲಯ ಶ್ರೀ ವಾಸವಾಡಿ ವೀರಭದ್ರೇಶ್ವರ ಸನ್ನಿದಿ ಹಲವಾರು ಭಕ್ತರ ಸಮೂಹ ಹೊಂದಿರುವ ಅತಿ ಪುರಾತನ ದೇವಾಲಯ ಇದಾಗಿದೆ. ದೇವಾಲಯದಲ್ಲಿ ತಯಾರಿಸಿ ನೀಡುವ ಅನ್ನ ಚಟ್ನಿ ತುಂಬಾ ವಿಶೇಷವಾದ ಪ್ರಸಾದವಾಗಿದೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಅನ್ನಬ್ರಹ್ಮೋತ್ಸವವ ನಡೆಯಲಿದ್ದು ತುಂಬಾ ಸಂಖ್ಯೆಯ ಭಕ್ತಾದಿಗಳು ಸೇರಿ ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾರೆ. ದೇವಾಲಯದ ಪಕ್ಕದಲ್ಲಿ ಕೆರೆ ಇದ್ದು ಸುತ್ತಲಿನ ಪರಿಸರ ಸುಂದರ ಹಾಗೂ ಆಕರ್ಷಣೀಯವಾಗಿದೆ. ಶಿವನ ಸಮುದ್ರ ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಕಾವೇರಿ ನದಿ ತೀರದಲ್ಲಿದೆ. ಇಲ್ಲಿನ ವೈಷ್ಣವ, ಶೈವ ಹಾಗೂ ಶಕ್ತಿ ದೇವತೆಗಳಿಗೆ ಸೋಮೇಶ್ವರ ದೇವಾಲಯ ಬಹಳ ಪ್ರಾಚೀನವಾದ ದೇವಾಲಯ. ಇದರ ಸಮೀಪ ಶಕ್ತಿ ದೇವತೆ ಶಿವನ ಸಮುದ್ರ ಮಾರಮ್ಮ ಬಹಳ ಪ್ರಸಿದ್ಧ ದೇವಾಲಯ. ಭಯ- ಭಕ್ತಿಯಿಂದ ಜನರು ಇಲ್ಲಿಗೆ ಬಂದು, ಹೊತ್ತ ಹರಕೆಯನ್ನು ತೀರಿಸುವ ವಾಡಿಕೆ ಇಂದಿಗೂ ಕಂಡು ಬರುತ್ತದೆ. ವೈಷ್ಣವ ದೇವಾಲಯವಾದ ವೆಂಕಟರಮಣ ಸ್ವಾಮಿ ದೇವಸ್ಥಾನ ಬಹಳ ವಿಶಾಲವಾದುದು. ಶಯನ ಭಂಗಿಯಲ್ಲಿರುವ ವಿಷ್ಣುವಿನ ಮೂರ್ತಿ ಇದೆ. ಇದಕ್ಕೆ ಮಧ್ಯರಂಗ ಎಂಬ ಹೆಸರಿನಲ್ಲಿ ಪ್ರಸಿದ್ಧಿ ಹೊಂದಿದೆ. ಶ್ರೀರಂಗಪಟ್ಟಣದ ಆದಿರಂಗ, ಶಿವನ ಸಮುದ್ರದ ಮಧ್ಯರಂಗ, ತಮಿಳುನಾಡಿನ ಶ್ರೀರಂಗಂನ ಅಂತ್ಯರಂಗವನ್ನು ಸೂರ್ಯೋದಯದಿಂದ- ಸೂರ್ಯಾಸ್ತದವರೆಗೆ ನೋಡಿದವರಿಗೆ ಪುಣ್ಯ ಬರುತ್ತದೆ ಎಂದು ಪ್ರತೀತಿ ಇದೆ. ಪ್ರತೀ ವರ್ಷ ಜಾತ್ರೆ ಸೇರು ನಡೆಯುತ್ತದೆ. ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀಚಕ್ರವಿದೆ. ವೆಸ್ಲಿ ಸೇತುವೆ ಶಿವನಸಮುದ್ರ ಪ್ರದೇಶದಲ್ಲಿ ಕಾವೇರಿನದಿಗೆ ಅಡ್ಡಲಾಗಿ ೩ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವೆಸ್ಲೆ ಸೇತುವೆ ಹಳೆಯಕಾಲದ ಇಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಬೂದಬಾಳು ಕ್ಷೇತ್ರ ತಾಲ್ಲೂಕು ಕೇಂದ್ರದಿಂದ = ೧೮ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೮ ಕಿ.ಮೀ. ಬೂದಬಾಳು : ಕೊಳ್ಳೇಗಾಲ ತಾಲ್ಲೂಕಿನ ಬೂದಬಾಳು ಗ್ರಾಮದಲ್ಲಿ ಗುಡಿಹಟ್ಟಿ ವೆಂಕರಮಣಸ್ವಾಮಿ ಪ್ರಸಿದ್ಧ ದೇವಾಲಯವಿದೆ. ಇದು ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ವರ್ಷದಲ್ಲಿ ಒಮ್ಮೆ ಜಾತ್ರೆ ನಡೆಯುತ್ತದೆ. ಇದು ಮೂರು ದಿನಗಳ ಜಾತ್ರೆಯಾಗಿದ್ದು ಮೊದಲ ದಿನ ತೇರು, ಎರಡನೇ ದಿನ ವಧೆ ಅಥವಾ ರಾಕ್ಷಸನ ಸಂಹಾರ. ಮೂರನೇ ದಿನ ವಸಂತೋತ್ಸವ ನಡೆಯುತ್ತದೆ. ತಾಲ್ಲೂಕಿನ, ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ದರ್ಗಾ ತಾಲ್ಲೂಕು ಕೇಂದ್ರದಿಂದ = ೨೦ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೬೦ ಕಿ.ಮೀ. ಮುಸಲ್ಮಾನರ ಪವಿತ್ರ ಮತ್ತು ಧಾರ್ಮಿಕ ಪುಣ್ಯ ಕ್ಷೇತ್ರ. ಭೋರ್ಗರೆದು ಧುಮ್ಮಿಕ್ಕುವ ಕಾವೇರಿ ತಟದಲ್ಲಿದ್ದು, ಗಗನಚುಕ್ಕಿ ಜಲಪಾತವನ್ನು ಉಂಟು ಮಾಡುವ ಸ್ಥಳವಾಗಿದೆ. ಈ ಜಲಾಶಯ ಉಕ್ಕಿ ಹರಿಯುವ ನೀರಿನಿಂದ ರಮ್ಯ ಮನೋಹರವಾಗಿದೆ. ಈ ತಟದಿಂದ ನಿಂತು ನೋಡಿದರೆ ವಿಶ್ವವಿಖ್ಯಾತ ಏಷ್ಯಾ ಖಂಡದ ಪ್ರಪ್ರಥಮ ಜಲ ವಿದ್ಯುತ್ ಸ್ಥಾವರವಾದ ಬ್ಲಫ್‌ನ ಸುಂದರ ನೋಟ ಕಾಣಿಸುತ್ತದೆ. ಈ ದರ್ಗ ಹಿಂದು-ಮುಸಲ್ಮಾನರ ಐಕ್ಯದ ಸಂಕೇತವನ್ನು ಸೂಚಿಸುವ ಸ್ಥಳವಾಗಿದೆ. ಭರಚುಕ್ಕಿ ಇಲ್ಲಿಂದ ಸ್ವಲ್ಪ ದೂರ ಮುಂದೆ ಹೋದಾಗ ಜಗತ್ತಿನಲ್ಲಿಯೇ ಅಪರೂಪದ ಭೂಸೃಷ್ಟಿಯ ಅಚ್ಚರಿ ಕಾವೇರಿಯ ಆರ್ಭಟ ಭರಚುಕ್ಕಿ ಜಲಪಾತವಿದೆ. ಇಲ್ಲಿ ಸುಮಾರು ೧ ಕಿ.ಮೀ. ಅಗಲವಾಗಿ ಮೈದೆಳೆದಿರುವ ಕಾವೇರಿ ಸುಮಾರು ೭೫ ರಿಂದ ೧೦೦ ಅಡಿಯವರೆಗೆ ಭೂಮಿಯಿಂದ ಭೂಮಿಗೆ ಧುಮ್ಮಿಕ್ಕುವಳು. ಭರಚುಕ್ಕಿ ಮತ್ತು ಗಗನಚುಕ್ಕಿ ಜಲಪಾತ ವಿಶ್ವದ ಜಲಪಾತಗಳಲ್ಲಿ ೮೩ನೇ ಸ್ಥಾನವನ್ನು ಪಡೆದಿದೆ. ಯಡಕುರಿ ತಾಲ್ಲೂಕು ಕೇಂದ್ರದಿಂದ = ೧೪ ಕಿ.ಮೀ. ಜಿಲ್ಲಾ ಕೇಂದ್ರದಿಂದ = ೫೪ ಕಿ.ಮೀ. ಚಾಮರಾಜನಗರ ಜಿಲ್ಲೆಯ ಏಕೈಕ ದ್ವೀಪ ಸ್ಥಳ. ಕಾವೇರಿ ನದಿಯು ತಲ ಕಾವೇರಿಯಲ್ಲಿ ಉಗಮವಾಗಿ ತಾನು ಹರಿಯುವ ಉದ್ದಕ್ಕೂ ವೈಚಿತ್ರಗಳನ್ನು ಸೃಷ್ಟಿಮಾಡುತ್ತದೆ. ಇಂತಹ ವೈಚಿತ್ರ್ಯಗಳಲ್ಲಿ ಯಡಕುರಿಯ ಕೂಡ ಒಂದು. ಇಲ್ಲಿ ಕಾವೇರಿ ನದಿ ಕವಲೊಡೆದು ಎರಡು ಭಾಗಗಳಾಗಿ ಮುಂದೆ ಮತ್ತೆ ಒಂದಾಗಿ ಸೇರುತ್ತದೆ. ಈ ಒಂದಾಗಿ ಸೇರುವ ಸ್ಥಳಕ್ಕೆ ಕೂಡುಮೂಲೆ ಎಂದು ಅಲ್ಲಿನ ಜನರು ಕರೆಯುತ್ತಾರೆ. ಯಡಕುರಿಯ ಸುತ್ತಲೂ ನೀರಿನಿಂದ ಸುತ್ತುವರಿದ ದ್ವೀಪ ಊರು. ಊರಿಗೆ ಹೋಗಲು ಹರಿಗೋಲೆ ಬೇಕು. ಅಂಬಿಗಣ್ಣನ ಅಪ್ಪಣೆ ಇಲ್ಲದೆ ಊರಿಗೆ ಪ್ರವೇಶವಿಲ್ಲ. ಇಲ್ಲಿಗೆ ವಿಶೇಷವಾಗಿ ಪಕ್ಷಿಗಳು ವಲಸೆ ಬರುವುದನ್ನು ಕಾಣಬಹುದು. ಚಾಮರಾಜನಗರದ ತಾಲೂಕುಗಳು ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿವೆ. ಅವುಗಳೆಂದರೆ: ಚಾಮರಾಜನಗರ ಯಳಂದೂರು ಕೊಳ್ಳೇಗಾಲ ಗುಂಡ್ಲುಪೇಟೆ ಹನೂರು ಚಾರಣ ಬಂಡೀಪುರ , ಬಿಳಿಗಿರಿ ರಂಗನ ಬೆಟ್ಟ , ಮಲೆ ಮಹದೇಶ್ವರ ಬೆಟ್ಟ , ಹಿಮವದ್ ಗೋಪಾಲಸ್ವಾಮಿ ಬೆಟ್ಟ ಇವುಗಳು ಚಾಮರಾಜನಗರದಲ್ಲಿರುವ ಪ್ರಸಿದ್ದ ಚಾರಣ ಸ್ಥಳವಾಗಿವೆ. ಇದನ್ನೂ ನೋಡಿ ಚಾಮರಾಜನಗರ (ಲೋಕ ಸಭೆ ಚುನಾವಣಾ ಕ್ಷೇತ್ರ) ಉಲ್ಲೇಖಗಳು http://chamrajnagar.nic.in/ https://www.tripadvisor.in/Attractions-g12392996-Activities-Chamarajanagar_District_Karnataka.html https://m.timesofindia.com/topic/Chamarajanagar-district ಬಾಹ್ಯ ಸಂಪರ್ಕಗಳು Mystery Trails - Eco-tourism in Chamarajanagar List of cities and Tourism places in Chamarajanagar Maps Of India - Map of Chamarajanagar district ವರ್ಗ:ಚಾಮರಾಜನಗರ ಜಿಲ್ಲೆ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು
ಗದಗ
https://kn.wikipedia.org/wiki/ಗದಗ
'ಗದಗ ಕರ್ನಾಟಕದ ಒಂದು ಜಿಲ್ಲೆ. ಗದಗ ಪಟ್ಟಣ ಈ ಜಿಲ್ಲೆಯ ಕೇಂದ್ರ. ಕೆಲವು ವರ್ಷಗಳ ಹಿಂದಿನವರೆಗೂ ಗದಗ, ಧಾರವಾಡ ಜಿಲ್ಲೆಯ ಭಾಗವಾಗಿದ್ದಿತು. ಈ ಜಿಲ್ಲೆಯ ಜನಸಂಖ್ಯೆ ಸುಮಾರು ೧೦ ಲಕ್ಷ. "Gadag" www.nkpost.kar.nic.in. Retrieved September 9, 2012Parvathi Menon "A movement for music" Frontline, frontlineonnet.com. Volume 22, Issue 12, June 4–17, 2005. Retrieved September 9, 2012 ಇತಿವೃತ್ತ thumb|left|upright| Gadag style Ornate pillars at Sarasvati Temple, Trikuteshwara temple (complex) at Gadag thumb|200px|Saraswati temple at Trikuteshwara temple complex Gadag, Karnataka ಗದಗ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ, ಪಂಪ, ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ, ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ರಾಗಿ, ಬೇಳೆಗಳು, ನೆಲಗಡಲೆ, ಸೂರ್ಯಕಾಂತಿ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ. ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಇದರ ಜೊತೆಗೆ ಇತಿಹಾಸ ಪ್ರಸಿದ್ಧ ಲಕ್ಕುಂಡಿ ದೇವಾಲಯಗಲಿರುವುದೂ ಗದಗ ಜಿಲ್ಲೆಯಲ್ಲಿಯೇ. ಗದಗ ಪಟ್ಟಣದಲ್ಲಿ ಅತೀ ಹೆಚ್ಚಿನ ಮುದ್ರಣಾಲಯಗಳಿದ್ದವು. ಮುದ್ರಣಾಲಯಗಒಂದು ಕಾಲದಲ್ಲಿ ಗದಗ ಶಹರದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೂ ಅದು ಯಾವದಾದರೊಂದು ಪ್ರಿಂಟಿಂಗ್ ಪ್ರೆಸ್ ಗೆ ಹೋಗಿ ಬೀಳುತ್ತದೆಂಬ ಪ್ರತೀತಿ ಇತ್ತು.ಅಷ್ಟೊಂದು ಮುದ್ರಣಾಲಯಗಳು ಗದಗನಲ್ಲಿದ್ದವು. ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಖ್ಯಾತಿಪಡೆದುಕೊಂಡಿದೆ. ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ "ಕೃತಪುರ" ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಗದಗ ಮತ್ತು ಬೆಟಗೇರಿ ಅವಳಿ ನಗರಗಳು ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳದಲ್ಲಿ ಸನ್ ೧೯೦೫ ಇಸವಿಯಲ್ಲಿ ಏಷ್ಯಾ ಖಂಡದಲ್ಲೇ ಪ್ರಪ್ರಥಮ ಬಾರಿಗೆ ಸ್ಥಾಪನೆಯಾದ ಸಹಕಾರ ಸಂಘವಿದೆ. ಗದಗಿನ ಮೂಲ ಹೆಸರುಗಳು ಕೃತುಕ, ಕೃತುಪುರ, ಕರಡುಗು ನಂತರ ಗಲದುಗು , ಗದುಗು ಮತ್ತು ಈಗ ಗದಗ ಎಂದು ಕರೆಯಲಾಗುತ್ತದೆ. ಕಪ್ಪತ ಗುಡ್ಡ ಸಹ ಇದರ ಸುತ್ತಮುತ್ತಲಲ್ಲೇ ಇವೆ. ಭೂಗೋಳ 300px|thumb|right| ನಕಾಶೆ 100px|thumb|right| ಗದಗ ಜಿಲ್ಲೆ ಗದಗ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಮಲಪ್ರಭಾ ಮತ್ತು ತುಂಗಭದ್ರಾ. ಗದಗ ಪಟ್ಟಣ ಬೆಂಗಳೂರಿನಿಂದ ೪೩೧ ಕಿಮೀ ದೂರದಲ್ಲಿದ್ದು ಧಾರವಾಡದಿಂದ ೮೦ ಕಿಮೀ ದೂರದಲ್ಲಿದೆ. ಗದಗ ಕರ್ನಾಟಕದ ೨೯ ನೇ ಜಿಲ್ಲೆ ಆಗಿರುತ್ತದೆ. ತಾಲೂಕುಗಳು 100px|thumb|ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು ಗದಗ ಜಿಲ್ಲೆಯಲ್ಲಿರುವ ತಾಲೂಕುಗಳು ಗದಗ ಶಿರಹಟ್ಟಿ ಮುಂಡರಗಿ ರೋಣ ನರಗುಂದ ಲಕ್ಷ್ಮೇಶ್ವರ ಗಜೇಂದ್ರಗಡ ಪ್ರಮುಖ ವ್ಯಕ್ತಿಗಳು 75px|thumb|right|ಪಂಚಾಕ್ಷರಿ ಗವಾಯಿಗಳು ಕನ್ನಡ ಪಂಚತಂತ್ರ ನಿರ್ಮಾಣ ಮಾಡಿದ ಕವಿ ನಯಸೇನ ಕನ್ನಡದ ಮಹಾಕವಿ ಪಂಪ ಕನ್ನಡದ ಮಹಾಕವಿ ಕುಮಾರವ್ಯಾಸ ಕವಿ ಹುಯಿಲಗೋಳ ನಾರಾಯಣರಾಯರು ಪ್ರಸಿದ್ಧ ಗಾಯಕರಾದ ಗಾನಯೋಗಿ ಪಂಚಾಕ್ಷರಿಗವಾಯಿ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರು. ಭಾರತರತ್ನ ಭೀಮಸೇನ ಜೋಶಿ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳು.ಇವರು ಗದಗ ನಗರದಲ್ಲಿ ಸುಮಾರು ೬೦ ವರ್ಷಗಳ ಕಾಲ ಹತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಯಾವುದೇ ಪಲಾಪೇಕ್ಷೆ ಇಲ್ಲದೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದ್ದ ಇವರು ಸೆಪ್ಟೆಂಬರ್ ೫ ೨೦೧೯ ಶಿಕ್ಷಕರ ದಿನಾಚರಣೆಯಂದೆ ನಿಧನರಾದರು. ಬಿ.ಎಸ್.ಎಫ್. ಜವಾನ್, ಬಸವರಾಜ ಯರಗಟ್ಟಿ ಕೇದಾರಪ್ರಕೃತಿ ವಿಕೋಪದಲ್ಲಿ ರಕ್ಷಣಾ ಕಾರ್ಯದಲ್ಲಿ -ಹುತಾತ್ಮ ಯೋಧ ಕ್ರಿಕೆಟ್ ಸುನಿಲ್‌ ಜೋಷಿ ಸೈಕ್ಲಿಂಗ್‌ ನೀಲಮ್ಮಾ ಮಲ್ಲಿಗವಾಡ ರಾಜ್ಯೋತ್ಸವ ಪ್ರಶಸ್ತಿ ವಿಜೀತ (ನೀಲಗುಂದ ಚಾರಿತ್ರಿಕ ಘಟನೆಗಳು + ಸಾಂಸ್ಕೃತಿಕ ಹಾಗು ಸಾಮಾಜಿಕ ಚಾರಿತ್ರಿಕ ಘಟನೆಗಳು ವರ್ಷ ಘಟನೆ ೧೮೮೪ ಗದಗ - ಹೊಟಗಿ ರೈಲು ಹಳಿ ೧೯೧೪ ಶ್ರೀ ವೀರೇಶ್ವರ ಪುಣ್ಯಾಶ್ರಮ (ಸಂಚಾರಿ ಪಾಠ ಶಾಲೆ) ೧೯೧೪ ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ೧೯೪೩ ಕೃಷಿ ಮಾರುಕಟ್ಟೆ ಪ್ರಾರಂಭ ೧೯೪೭ ಶ್ರೀ ವಸಂತ ನಾಟ್ಯಕಲಾ ಸಂಘ ೧೯೫೮ ಜೆ.ಟಿ.ಕಾಲೇಜ- ಮಸಾರಿ ಆರಂಭ ೧೯೭೯ ಶ್ರೀ. ಡಿ. ಜಿ ಎಮ್. ಆಯುರ್ವೇದ ಕಾಲೇಜ ಆರಂಭ ೧೯೮೯ ಶ್ರೀ.ಮ.ನಿ.ಪ್ರ.ಪ್ರಭುಮಹಾಸ್ವಾಮಿಗಳವರು ಬೂದೀಶ್ವರ ಮಟ್ಟ್ ಹೊಸಹಳ್ಳಿ ಲಿಂಗೈಕ್ಯ (ನವೆಂಬರ್-೩೦) ೧೯೯೭ ಗದಗ ಜಿಲ್ಲೆಯ ರಚನೆ (ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ಕರ್ನಾಟಕ ಸರ್ಕಾರ ಆಗಸ್ಟ್ ೨ ೧೯೯೭ರಂದು ಬೆಂಗಳೂರಿನಲ್ಲಿ ಹೊರಡಿಸಿದ ಒಂದು ಪ್ರಕಟಣೆಯ ಭಾಗವಾಗಿತ್ತು ಮತ್ತು ಇದು ಕರ್ನಾಟಕದಲ್ಲಿ ಏಳು ಹೊಸ ಜಿಲ್ಲೆಗಳ ರಚನೆಯಾಗುವಲ್ಲಿ ಪರಿಣಮಿಸಿತು. ೧೯೯೭ ತೊಂಟದಾರ್ಯ ತಾಂತ್ರಿಕ ವಿದ್ಯಾಲಯ ಆರಂಭ೨೦೦೦- ಸಿದ್ದಲಿಂಗನಗರ ಬಡಾವಣೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭ ೨೦೦೧ ಭು ದಾಕಲೆಗಳ ಗಣಕೀಕರಣ ವ್ಯವಸ್ಠೆ (೨೯-೦೯-೨೦೦೯ ಪೂರ್ಣ) ೨೦೦೫ ಗದಗ ಹೊಸ ಬಸ್ ನಿಲ್ದಾಣ (ಅಕ್ಟೋಬರ್ ೩೦- ೨೦೦೫) ೨೦೦೭ ಮೀಟರ್ ಗೇಜ್ ರೈಲು ಸಂಚಾರದ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಬಾಗಲಕೋಟೆ- ಗದಗ ಪ್ಯಾಸೆಂಜರ್ ರೈಲು ಈದಿನ ತನ್ನ ಕೊನೆಯ ಸಂಚಾರದೊಂದಿಗೆ ಇತಿಹಾಸದ ಪುಟ ಸೇರಿತು.ಸಂಜೆ ೫.೪೫ ಕ್ಕೆ ಗದುಗಿಗೆ ಹೋಗುವ ರೈಲಿಗೆ ಪೂಜೆ ನೆರವೇರಿಸಿದ ರೈಲ್ವೆ ಸಿಬ್ಬಂದಿ ಆರತಿ ಮಾಡುವ ಮೂಲಕ ಕೊನೆಯ ಗಾಡಿಗೆ ಹೃದಯಸ್ಪರ್ಶಿ ವಿದಾಯ ಹೇಳಿದರು. ೨೦೦೭ ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘಕ್ಕೆ - ಕೆ. ಹಿರಣ್ಣಯ್ಯ ನಾಟಕ ಅಕಾಡೆಮಿ ಪ್ರಶಸ್ತಿ ೨೦೦೯ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯು ಮಾಡುತ್ತಿರುವ ವೈದ್ಯಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾನವೀಯ ಕಾರ್ಯಗಳನ್ನು ರಾಜ್ಯ ಐಎಂಎ ಗುರುತಿಸಿ ರಾಜ್ಯದ ಅತ್ಯುತ್ತಮ ಶಾಖೆ ೨೦೦೯ ಜಿಲ್ಲೆಯಾದ್ಯಂತ ಆರು ದಿನಗಳಿಂದ ಸುರಿಯುತ್ತಿರುವ ಮಳೆ ೨೦೧೦ ಅಖಿಲ ಭಾರತ ೭೬ನೇ ಕನ್ನಡ ಸಾಹಿತ್ಯ ಸಮ್ಮೇಳನ (ಫೆಬ್ರುವರಿ ೧೯ರಿಂದ ೨೧ರವರೆಗೆ), ೭೬ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ. ೨೦೧೦ ಪಂಡಿತ ಪುಟ್ಟರಾಜ ಗವಾಯಿಗಳು ನಿಧನ (೧೭ ಸೆಪ್ಟೆಂಬರ್ ) ೨೦೧೧ ಪಶು ವೈದ್ಯಕಿಯ ಕಾಲೇಜು ಆರಂಭ. ೨೦೧೨ ವೈದ್ಯಕಿಯ ಕಾಲೇಜು ಆರಂಭ. ಕೈಗಾರಿಕೆ ಗದಗಿನ ಬಹಳ ಮುಖ್ಯವಾದ ಕೈಗಾರಿಕೆ ಗದಗ ಪ್ರಿಂಟಿಂಗ್ ಪ್ರೆಸ್ ಹಾಗು ಸುಮಾರು ೧೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ. ಸಂಕೇಶ್ವರ, ಶಾಬಾದಿಮಠ , ಹೊಂಬಾಳಿ, ವಿದ್ಯಾವಿಕಾಸ, ವಿದ್ಯಾನಿಧಿ, ಪಾರು ಪ್ರಕಾಶನ ಮುಂತಾದ ಪ್ರಸಿದ್ಧ ಪ್ರಿಂಟಿಂಗ್ ಪ್ರೆಸ್ ಗಳು ಇವೆ. ಕೈಮಗ್ಗ ಹಾಗೂ ಬಣ್ಣ ಬಣ್ಣದ ಆಕರ್ಷಕ ಸೀರೆಗಳನ್ನು ನೇಯುವ ಹತ್ತಾರು ಮಂದಿ ನೇಕಾರರು ಇಲ್ಲಿದ್ದಾರೆ ಇದು ಗದಗ ಮತ್ತು ಬೆಟಗೇರಿಯ ಇನ್ನೊಂದು ಆಕರ್ಷಣೆ. ಪವನ ವಿದ್ಯುತ್ ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್ ಇ.ಡಿ.ಎಲ್) ಗುರುತಿಸಿದೆ. ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ. ಗಂಗಾಪೂರ ಸಕ್ಕರೆ ಕಾರ್ಖಾನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಮಾಜಿ ಸಚಿವ ಎಸ್ . ಎಸ್. ಪಾಟೀಲ್[ಪಾಟೀಲ] ಇವರ ನೇತೃತ್ವದಲ್ಲಿ ಮೃಡಗಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಎಂದು ರೈತರ ಸಹಕಾರದೊಂದಿಗೆ ಕಾರ್ಖಾನೆ ಸ್ಥಾಪಿಸಿದ್ದು ಇರುತ್ತದೆ. ನಂತರ ಕೆಲವು ಆಡಳಿತಾತ್ಮಕ ಹಾಗೂ ಆರ್ಥಿಕ ಸಮಸ್ಯೆಯಿಂದಾಗಿ ಸದರಿ ಕಾರ್ಖಾನೆಯನ್ನು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಒಡತನದ ಸಂಸ್ಥೆಗೆ ೩೦ ವರ್ಷಗಳ ಗುತ್ತಿಗೆ ಆಧಾರದಲ್ಲಿ ಕೊಟ್ಟಿದ್ದು ಇಂದು ಅದು ವಿಜಯ ನಗರ ಸಕ್ಕರೆ ಕಾರ್ಖಾನೆ ನಿಗಮ ನಿಯಮಿತ, ಗಂಗಾಪೂರ ಎಂಬ ಹೆಸರಿನಲ್ಲಿ ನಡೆಯುತ್ತಿದೆ. ಇದು ಗದಗ ಜಿಲ್ಲೆಯಲ್ಲಿಯೇ ಬೃಹತ್ ಕೈಗಾರಿಕ ಪ್ರದೇಶವಾಗಿದ್ದು ಸಾವಿರಾರು ಉದ್ಯೋಗವನ್ನು ಒದಗಿಸಿದೆ. ಸಕ್ಕರೆ ತಯಾರಿಕೆ ಜೊತೆಗೆ ತ್ಯಾಜ್ಯಗಳನ್ನು ಉಪಯೋಗಿಸಿಕೊಂಡು ಸ್ಪಿರಿಟ್ ಮತ್ತು ಗೊಬ್ಬರ ತಯಾರಿಕ ಘಟಕಗಳನ್ನು ಸ್ಥಾಪಿಸಲಾಗಿದೆ.. . . ಅಮಸೂ(ಅಂಗಂ) ಧಾರ್ಮಿಕ 100px|thumb|right|ಸರಸ್ವತಿ ದೇವಾಲಯ ಧಾರ್ಮಿಕ ಪ್ರಾಮುಖ್ಯತೆಯುಳ್ಳ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ. ಗದಗ ಪಟ್ಟಣದಲ್ಲಿ ಎರಡು ಮುಖ್ಯ ಜೈನ ದೇವಾಲಯಗಳು ಸಹ ಇದ್ದು ಪಾರ್ಶ್ವನಾಥ ತೀರ್ಥಂಕರ ಮತ್ತು ಮಹಾವೀರನಿಗೆ ಅರ್ಪಿತವಾಗಿವೆ.ಶ್ರೀ ತೊಂಟದಾರ್ಯ ಮಠ ಕೂಡ ಇಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಲಿದೆ. ಶ್ರೀ ತೊಂಟದಾರ್ಯ ಮಠ ಹಾಲಕೆರೆ ಅನ್ನದಾನೇಶ್ವರ ಮಠ ಶಿವಾನಂದ ಮಠ ವೀರೇಶ್ವರ ಪುಣ್ಯಾಶ್ರಮ ಡೋಣಿ ಹಾಲೇಶ್ವರ ಮಠ ಶೈಕ್ಷಣಿಕ ಗದಗ ಪಟ್ಟಣ ಅನೇಕ ವಿದ್ಯಾಲಯ, ಮಹಾವಿದ್ಯಾಲಯಗಳಿವೆ. ಒಂದು ಆಯುರ್ವೇದ ಮತ್ತು ತಾಂತ್ರಿಕ ವಿದ್ಯಾಲಯಗಳಿವೆ. ಪ್ರಮುಖ ವಿದ್ಯಾಸಂಸ್ಥೆಗಳು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ,ಗದಗ (ಸರ್ಕಾರಿ) ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಂಡರಗಿ. ಸರಕಾರಿ ಪ್ರಥಮ ದಜೆ೯ ಕಾಲೇಜು, ಗದಗ. ಸರಕಾರಿ ಪ್ರಥಮ ದಜೆ೯ ಕಾಲೇಜು, ಹುಲಕೋಟಿ. ಸರಕಾರಿ ಪ್ರಥಮ ದಜೆ೯ ಕಾಲೇಜು,ರೋಣ. ಸರಕಾರಿ ಪ್ರಥಮ ದಜೆ೯ ಕಾಲೇಜು, ಗಜೇಂದ್ರಗಡ. ಸರಕಾರಿ ಪ್ರಥಮ ದಜೆ೯ ಕಾಲೇಜು, ನರಗುಂದ. ಸರಕಾರಿ ಪ್ರಥಮ ದಜೆ೯ ಕಾಲೇಜು, ಶಿರಹಟ್ಟಿ. ಸರಕಾರಿ ಪ್ರಥಮ ದಜೆ೯ ಕಾಲೇಜು, ನರೇಗಲ್ಲ. ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ನರೇಗಲ್ಲ. ಕೆ. ಎಸ್. ಎಸ್, ಕಾಲೇಜು, ನರೇಗಲ್ಲ ಸರಕಾರಿ ಪ್ರಥಮ ದಜೆ೯ ಕಾಲೇಜು, ಮುಳಗುಂದ. ಸರ್ಕಾರಿ ಪದವಿ ಪೂರ್ವ ಕಾಲೇಜು,ಗದಗ : ಇತ್ತೀಚೆಗೆ ಈ ಕಾಲೇಜು,ಮುಳಗುಂದ ರಸ್ತೆಯಲ್ಲಿರುವ ನೂತನ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆ ಎಲ್ ಇ ಕಾಲೇಜು.ಗದಗ ದಿನ ಪತ್ರಿಕೆ 'ನವೋದಯ' ದಿನಪತ್ರಿಕೆ 'ನಾಗರಿಕ' ದಿನಪತ್ರಿಕೆ 'ಕೌರವ' ದಿನಪತ್ರಿಕೆ 'ಕಿತ್ತೂರ ಕರ್ನಾಟಕ' ದಿನಪತ್ರಿಕೆ ಶಿಲ್ಪಕಲೆ ಗದಗ ಜಿಲ್ಲೆ ಶಿಲ್ಪಕಲೆಯ ಬೀಡೂ ಹೌದು. ಗದುಗಿನ ವೀರನಾರಾಯಣ, ತ್ರಿಕುಟೇಶ್ವರ ಹಾಗೂ ಸೋಮನಾಥ, ಸರಸ್ವತಿ ದೇವಾಲಯಗಳು ಪ್ರಸಿದ್ಧಿ ಪಡೆದಿವೆ. ಕ್ರಿ.ಪೂ. ೯೫೦ ರಲ್ಲಿ ಪದ್ಮಬ್ಬರಸಿ ಕಟ್ಟಿಸಿದ ನರೇಗಲ್ಲದ ನಾರಾಯಣ ದೇವಾಲಯ, ರಾಷ್ಟ್ರಕೂಟರು ಕಟ್ಟಿಸಿದ ಜೈನ ದೇವಾಲಯ ಗಳಲ್ಲಿಯೇ ಅತಿ ದೊಡ್ಡದು ಆಗಿದೆ. ಶ್ರೀ ಅನ್ನದಾನೇಶ್ವ್ಹರ ಮಠ ಪ್ರಸಿದ್ಢವಾಗಿವೆ. ಲಕ್ಕುಂಡಿ ನೂರೊಂದು ಗುಡಿಗಳು ಆಕರ್ಷಣೀಯ. ಇಲ್ಲಿನ ಸೂರ್ಯ ದೇವಾಲಯ, ಬ್ರಹ್ಮ ಜೀನಾಲಯ ಗಮನ ಸೆಳೆಯುತ್ತವೆ. ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ ರಾಷ್ಟ್ರೀಯ ಸಂರಕ್ಷಣಾ ಸ್ಮಾರಕವಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ಶಿಲ್ಪಕಲೆಗೆ ಜೀವ ತುಂಬಿದವರು ರಾಜವಂಶಸ್ಥರು. ಅನೇಕ ರಾಜಮಹಾರಾಜರು ಈ ಭಾಗದಲ್ಲಿ ಆಳಿದ್ದರೆಂಬುದು ಗಮನಾರ್ಹ. ಇನ್ನು ಜಿಲ್ಲೆಯಲ್ಲಿ ೫೦೦ಕ್ಕೂ ಹೆಚ್ಚು ಶಾಸನಗಳಿವೆ. ಸಾಂಸ್ಕೃತಿಕ 100px|thumb|right|ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪರಂಪರೆ ನಮ್ಮೂರ ಜಾತ್ರೆ: ಇಲ್ಲಿ ನಡೆಯುವ ವಾರ್ಷಿಕ ಶ್ರೀ ತೊಂಟದಾರ್ಯ ಮಠದ ಜಾತ್ರೆ ಸಾಕಷ್ಟು ಭಕ್ತರನ್ನು ಆಕರ್ಷಿಸುತ್ತದೆ. ಹಾಗೂ ಈ ಜಾತ್ರೆ ೧ ತಿ೦ಗಳವರೆಗೆ ನಡೆಯುತ್ತದೆ. ಮುಖ್ಯ ಭಾಷೆ ಕನ್ನಡ ಸಂಗೀತ ಮತ್ತು ಕಲೆ ಪಂಡಿತ ರುದ್ರಮುನಿ ಹಿರೇಮಠ ಪಂಡಿತ ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ ಪಂಡಿತ ವೀರೆಶ್ವರ ಹಿರೇಮಠ( ರಾಜ್ಯೋತ್ಸವ ಪ್ರಶಸ್ತಿ ೨೦೦೫) ಶ್ರೀಮತಿ ಪಾರ್ವತಿ ಮಾಳೆಕೊಪ್ಪಮಠ ವಾಯಲಿನ್: ಶ್ರೀ ನಾರಾಯನ ಹಿರೆಕೊಲಚೆ ವೊಕಲ್ : ಶ್ರೀ ರವೀಂದ್ರ ಜಕಾತಿ ವೃತ್ತಿರಂಗಭೂಮಿ ಕಂಪನಿಗಳು ಶ್ರೀ ಕುಮಾರೇಶ್ವರ ಕೃಪಾ ಕಟಾಕ್ಷ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ - ನಾಟಕ ಗದಗ ದತ್ತಾತ್ರೇಯ ನಾಟಕ ಮಂಡಳಿ - ನಾಟಕ ಯರಾಸಿ ಭರಮಪ್ಪನ ವಾಣಿ ವಿಲಾಸ ನಾಟಕ ಕಂಪನಿ- ನಾಟಕ ಕಲಾ ವಿಕಾಸ ಪರಿಷತ್ತು ಸಾಧನೆ ಪಂಡಿತ ಡಾ.ಪುಟ್ಟರಾಜ ಗವಾಯಿಗಳ - ಸಂಗೀತ ಫ. ಸಿ. ಭಾಂಡಗೆ - ನಾಟಕ ಹುಯಿಲಗೋಳ ನಾರಾಯಣರಾಯ - ನಾಡ ಗೀತೆ : ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಜಾನಪದ ಕಲೆ ಶ್ರೀ ಹೊಸಗರಡಿ ಜಾನಪದ ಕಲಾ ಮೇಳ (ರಿ) ಗದಗ -ಬೆಟಗೇರಿ - ದೊಡ್ಡಾಟ ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು ಶ್ರೀ. ಶಂಕ್ರಪ್ಪ ಕಂಪ್ಲಿ- ಆಝಾದ ಹಿಂದ ಸೇವಾ ದಳ ಮತ್ತು ಕ್ಷತ್ರೀಯ ಮರಾಠ ಸಮಾಜ ಸ್ಥಾಪಕರು. ಪ್ರಮುಖ ಬೆಳೆಗಳು ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು. ಸೇವಂತಿಗೆ ಮತ್ತಿತರ ಹೂ ಬೆಳೆ ಹೂವಿನ ಕಣಜ : ಜಮೀನಿನಲ್ಲಿ ಸೇವಂತಿಗೆ, ಮಲ್ಲಿಗೆ, ಸುಗಂಧರಾಜ, ಗುಲಾಬಿ, ಚೆಂಡು ಹೂ ಬೆಳೆದಿದ್ದಾರೆ. ವಿಶೇಷವಾಗಿ ಸೇವಂತಿಗೆ ಹೂವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. (ವಿಶೇಷವಾಗಿ ದಸರಾ, ದೀಪಾವಳಿಗೆ ಹೂವಿಗೆ ಬೇಡಿಕೆ) ಹವಾಮಾನ ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ౪೧.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - ೩೦ °C-೩೯ °C , ಚಳಿಗಾಲ - ೧೮ °C-೨೮ °C ಮಳೆ - ಪ್ರತಿ ವರ್ಷ ಮಳೆ ಸರಾಸರಿ ೧೬.೬ ಮಿಮಿ ಗಳಸ್ಟು ಆಗಿರುತ್ತದೆ. ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ) ಇರುತ್ತದೆ. ಸಮೀಪದ ಸ್ಥಳಗಳು ‍ಲಕ್ಕುಂಡಿ ಡಂಬಳ ಶಿರಹಟ್ಟಿ ಲಕ್ಷ್ಮೇಶ್ವರ ಪ್ರಮುಖ ರಾಜಕಾರಣಿಗಳು ಕೆ. ಹೆಚ್. ಪಾಟೀಲ , ಡಿ. ಆರ್. ಪಾಟೀಲ, ಹೆಚ್.ಕೆ.ಪಾಟೀಲ-ಮಾಜಿ ಸಚಿವರು, ಶ್ರೀಶೈಲಪ್ಪ ವಿ. ಬಿದರೂರ ಪ್ರವಾಸ ಪ್ರವಾಸ ಮಾರ್ಗ ೧ ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ ,ವೀರನಾರಾಯಣ ದೇವಸ್ಥಾನ, ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಣಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ, ನವಲಗುಂದ ನಾಗಲಿಂಗಮಠ, ಇಟಗಿಯ ಭೀಮಾಂಬಿಕಾ ದೇವಸ್ಥಾನ, ಸೂಡಿ ಹಾಗೂ ಕಾಲಕಾಲೇಶ್ವರ ದೇವಸ್ಥಾನ ಮತ್ತು ಕುಕನೂರ ಬಳಿಯ ಇಟಗಿ ಮಹೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೯೫ ಕಿ.ಮೀಗಳು. ಪ್ರವಾಸ ಮಾರ್ಗ ೨ ಗದಗದಿಂದ ಪ್ರವಾಸ ಪ್ರಾರಂಭವಾಗಿ ಲಕ್ಕುಂಡಿ, ಗದುಗಿನ ತ್ರಿಕೂಟೇಶ್ವರ , ವೀರನಾರಾಯಣ ದೇವಸ್ಥಾನ , ವೀರೇಶ್ವರ ಪುಣ್ಯಾಶ್ರಮ, ಸಾಯಿಬಾಬಾ ಮಂದಿರ , ರಾಮಕೃಷ್ಟಾಶ್ರಮ, ಜಿಲ್ಲಾ ಆಡಳಿತ ಭವನ ನಂತರ ಅಣ್ಣಿಗೇರಿಯ ಅಮೃತೇಶ್ವರ ದೇವಸ್ಥಾನ , ಮುಳಗುಂದ ದಾವುಲಮಲಿಕ ದರ್ಗಾ, ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ಜೈನ್ ಬಸದಿ, ಮಾಗಡಿ ಪಕ್ಷಿಧಾಮ(ಗದುಗಿನ ಪಕ್ಷಿಕಾಶಿ), ಶಿರಹಟ್ಟಿ ಫಕೀರೇಶ್ವರ ಮಠ, ವೆಂಕಟಾಪುರದ ವೆಂಕಟೇಶ ದೇವಸ್ಥಾನ ಹಾಗೂ ಡಂಬಳದ ದೊಡ್ಡ ಬಸಪ್ಪ ದೇವಸ್ಥಾನಕ್ಕೆ ಭೇಟಿ ನೀಡಿ. ಪ್ರವಾಸಕ್ಕೆ ಅಂದಾಜು ೧೬೫ ಕಿ.ಮೀಗಳು. ರಸ್ತೆ ಸಾರಿಗೆ ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ. ಗದಗ ಪಟ್ಟಣ ಸಾರಿಗೆ ಮತ್ತು ರೈಲು ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ. ಗದಗದಿಂದ ಮುಂಬಯಿ, ಪೂನಾ, ಹೈದರಾಬಾದ, ತಿರುಪತಿ,ಬೆಂಗಳೂರು, ಮೈಸೂರಗಳಿಗೆ ಐಷಾರಾಮಿ ಬಸ್ಸುಗಳಿವೆ, ಹಾಗು ಹೈದರಾಬಾದ, ತಿರುಪತಿ,ಬೆಂಗಳೂರ , ಮುಂಬಯಿ ರೈಲುಗಳು ಓಡುತ್ತವೆ. ವಿಮಾನ ನಿಲ್ದಾಣ ಹಾಗೂ ಬಂದರು ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಕಾರವಾರ ಬಂದರು ಗದಗ ಹತ್ತಿರದಲ್ಲಿವೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಗದಗ ಪಟ್ಟಣದಿಂದ ೫೮ ಕಿ.ಮೀ ಮತ್ತು ಕಾರವಾರ ಬಂದರು ೨೩೫ ಕಿ.ಮೀ ದೂರದಲ್ಲಿವೆ. ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ೬೩: ನಗರದ ಹೃದಯ ಭಾಗದಲ್ಲಿ ಹಾಯ್ದು ಹೋಗುವ ರಸ್ತೆಗೆ ಇನ್ನೂ ಹೆಸರಿಡಲಾಗಿಲ್ಲ. ಕ್ರೀಡಾಂಗಣ ಜಿಲ್ಲಾ ಕ್ರೀಡಾಂಗಣ : ಕೆ. ಹೆಚ್. ಪಾಟೀಲ‍‍‍ ಕ್ರೀಡಾಂಗಣ ನಗರ ಆಡಳಿತ ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ಪದ್ಧತಿ ವಾರ್ಡ್ ಗಳು ನಗರದಲ್ಲಿ ಒಟ್ಟು ೩೫ ವಾರ್ಡ್ ಗಳು ಇರುತ್ತವೆ. ಗದಗನ ಪ್ರಮುಖ ಬಡಾವಣೆಗಳು ಹೊಸ ಬಡಾವಣೆಗಳು, ಮಸಾರಿ ,ಸಿದ್ದಲಿಂಗ ನಗರ , ವಿರೇಶ್ವರ ನಗರ ಊರಿನ ಸರ್ವತೋಮುಖ ಬೆಳವಣಿಗೆಯಾಗಿದೆ. ಮಸಾರಿ ಸಿದ್ದಲಿಂಗ ನಗರ ವಿರೇಶ್ವರ ನಗರ ಗ೦ಗಾಪೂರ ಪೇಟ ಸಿನಿಮಾ ಚಿತ್ರ ಮಂದಿರಗಳು ನಗರದಲ್ಲಿ ೬ ಸುಂದರ ಚಿತ್ರ ಮಂದಿರಗಳು ಇರುತ್ತವೆ, ಅವುಗಳು ಮಹಾಲಕ್ಷ್ಮಿ, ಶ್ರೀ ಕೃಷ್ಣ, ಚಿತ್ರಾ, ಕರ್ನಾಟಕ, ವೆಂಕಟೇಶ, ಮತ್ತು ಶಾಂತಿ ಚಿತ್ರ ಮಂದಿರಗಳು. ಖಾದ್ಯ ಗದಗ ಪಟ್ಟಣ ಬದನೇಕಾಯಿ ಬಜಿ,ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ(ಮಿರ್ಚಿ ಭಜಿ) ತುಂಬ ಪ್ರಸಿದ್ಧ.'' ಚಿತ್ರ ಗ್ಯಾಲರಿ ಬಾಹ್ಯ ಸಂಪರ್ಕಗಳು ಗದಗ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ ರಾಜ್ಯಸರ್ಕಾರದ ಗದಗ ಅಂತರ್ಜಾಲ ಗದಗ-ಬೆಟಗೇರಿ.ಕಾಂ ಗದಗ ಜಿಲ್ಲೆಯ ನಕ್ಷೆ ಗದಗಿನ ವೈಭವ ಬಲ್ಲಿರಾ ಉಲ್ಲೇಖಗಳು ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಗದಗ ಜಿಲ್ಲೆ ವರ್ಗ:ಗದಗ ವರ್ಗ:ಪಕ್ಷಿಧಾಮಗಳು ವರ್ಗ:ಕರ್ನಾಟಕ ಪಕ್ಷಿಧಾಮಗಳು ವರ್ಗ:ಭಾರತದ ಪಕ್ಷಿಧಾಮಗಳು ವರ್ಗ:ರಾಷ್ಟ್ರೀಯ ಉದ್ಯಾನಗಳು ವರ್ಗ:ಕರ್ನಾಟಕ ಉದ್ಯಾನಗಳು ವರ್ಗ:ಭಾರತದ ಉದ್ಯಾನಗಳು ವರ್ಗ:ನಿಸರ್ಗ ವರ್ಗ:ಪ್ರವಾಸ ವರ್ಗ:ಪ್ರವಾಸೋದ್ಯಮ ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು
ಮಂಡ್ಯ
https://kn.wikipedia.org/wiki/ಮಂಡ್ಯ
ಮಂಡ್ಯ ಕರ್ನಾಟಕದ ಒಂದು ಜಿಲ್ಲೆ - ಮಂಡ್ಯ ಜಿಲ್ಲೆಯ ಜಿಲ್ಲಾ ಕೇಂದ್ರಸ್ಥಳ ಮಂಡ್ಯ ನಗರ. ಮಂಡ್ಯವು ಮೈಸೂರು ಮತ್ತು ಬೆಂಗಳೂರು ನಗರಗಳ ನಡುವೆ ಇದೆ. ಬೆಂಗಳೂರಿನಿಂದ ಸುಮಾರು ೧೦೦ ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು ವಿಸ್ತೀರ್ಣ ೪೮೫೦ ಚ. ಕಿಮೀ. ೨೦೧೧ ರ ಜನಗಣತಿಯಂತೆ ಇಲ್ಲಿನ ಮಂದಿಎಣಿಕೆ ೧೭,೬೧,೭೧೮(೮೮೭೩೦೭ ಗಂಡಸರು, ೮೭೪೪೧೧ ಹೆಂಗಸರು). ಇಲ್ಲಿಯ ಮಂದಿ ಪ್ರಮುಖ ಕಸುಬು ಆರಂಬ. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ. ಮಂಡ್ಯ ನಗರವು ೭೬° ೧೯' ಮತ್ತು ೭೭° ೨೦' ಪೂರ್ವ ರೇಖಾಂಶ ಮತ್ತು ೧೨° ೧೩' ಮತ್ತು ೧೩° ೦೪' ಉತ್ತರ ಅಕ್ಷಾಂಶಗಳಲ್ಲಿ ವಿಸ್ತರಿಸಿದೆ. ಜಿಲ್ಲೆಯ ಸಂಕ್ಷಿಪ್ತ ಪರಿಚಯ thumb|center|ಜಿಲ್ಲಾಧಿಕಾರಿ ಕಾರ್ಯಾಲಯ, ಮಂಡ್ಯ ಮಂಡ್ಯ ಜಿಲ್ಲೆಯು ೧೯೩೯ರಲ್ಲಿ ರೂಪುಗೊಂಡಿತು. ಪ್ರಸ್ತುತ ಉತ್ತರಕ್ಕೆ ಹಾಸನ ಮತ್ತು ತುಮಕೂರು ಜಿಲ್ಲೆಗಳಿಂದ, ಪೂರ್ವಕ್ಕೆ ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳಿಂದ ಮತ್ತು ಪಶ್ಚಿಮದಲ್ಲಿ ಹಾಸನ ಮತ್ತು ಮೈಸೂರು ಜಿಲ್ಲೆಗಳಿಂದ ಸುತ್ತುವರಿದಿದೆ. ಮಂಡ್ಯ ಜಿಲ್ಲೆ ೭ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲೆಯ ಒಟ್ಟು ಭೌಗೋಳಿಕ ಪ್ರದೇಶವು ೪,೯೮,೨೪೪ ಹೆಕ್ಟೇರ್ ಆಗಿದೆ. ಅದರಲ್ಲಿ ೨,೫೩,೦೬೭ ಹೆಕ್ಟೇರ್ಗಳು ಬಿತ್ತನೆಯ ಪ್ರದೇಶವನ್ನು ರೂಪಿಸುತ್ತವೆ. ಜಿಲ್ಲೆಯ ಒಟ್ಟು ಭೂ ಪ್ರದೇಶದ ಅರ್ಧಕ್ಕಿಂತಲೂ ಹೆಚ್ಚು ಕೃಷಿಗೆ ಬಳಕೆಯಾಗುತ್ತಿದೆ. ೯೪೭೭೯ ಹೆಕ್ಟೇರ್ ಭೂಮಿ ನೀರಾವರಿಗೊಳಪಟ್ಟಿದೆ. ೧೯.೨೫ ಲಕ್ಷದ ಒಟ್ಟು ಜನಸಂಖ್ಯೆಯೊಂದಿಗೆ ಸುಮಾರು ೫ ಲಕ್ಷ ಜನರನ್ನು ಕೃಷಿ ವಲಯದಲ್ಲಿ ಕೆಲಸಕ್ಕೆ ತೊಡಗಿದ್ದಾರೆ. ಹೆಚ್ಚು ಕನ್ನಡವನ್ನು ಮಾತನಾಡುವ ಜಿಲ್ಲೆಯಾಗಿದೆ. ಉನ್ನತ ಶಿಕ್ಷಣ ಮಂಡ್ಯ ವಿಶ್ವವಿದ್ಯಾಲಯ ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ತೂಬಿನಕೆರೆ - ಮೈಸೂರು ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಪಿ. ಇ. ಎಸ್. ಶಿಕ್ಷಣ ಸಂಸ್ಥೆಗಳು: ಪದವಿ ಕಾಲೇಜು ಇಂಜಿನಿಯರಿಂಗ್ ಕಾಲೇಜು ಶಂಕರಗೌಡ ಬಿ. ಎಡ್. ಕಾಲೇಜು ಎಂ. ಕಾಂ. ಮತ್ತು ಎಂ. ಬಿ. ಎ. ಕಾಲೇಜು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) - ಮಂಡ್ಯ ವೈದ್ಯಕೀಯ ಕಾಲೇಜು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ - ಹೊಳಲು ಸರ್ಕಲ್ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ಮಹಾವಿದ್ಯಾಲಯ, V C ಫಾರ್ಮ್,ಮಂಡ್ಯ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರ ಆವರಣ ಕೇಂದ್ರ ಬಿ.ಹೊಸೂರು ಕಾಲೋನಿ ಮಂಡ್ಯ *ಭಾರತೀ ಕಾಲೇಜು ಭಾರತೀ ನಗರ (ಕೆ. ಎಮ್ ದೊಡ್ಡಿ ) ಭಾರತೀ ಪಾರ್ಮಸಿ ಕಾಲೇಜು, ಜಿ ಮಾದೇಗೌಡ ತಾಂತ್ರಿಕ ಕಾಲೇಜು ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು ಕೆ. ಎಮ್ ದೊಡ್ಡಿ ಹೆಚ್. ಕೆ ವೀರಣ್ಣಗೌಡ ಕಾಲೇಜು ಮದ್ದೂರು ಶಾಂತಿ ಕಾಲೇಜು ಮಳವಳ್ಳಿ ನೋಡಬಹುದಾದ ಜಾಗಗಳು ಶ್ರೀರಂಗಪಟ್ಟಣ ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಬೃಂದಾವನ ಉದ್ಯಾನ ಟಿಪ್ಪೂ ಅರಮನೆ, ಕೋಟೆಗಳು, ಗುಡಿಗಳು, ಸಂಗಮ ರಂಗನತಿಟ್ಟು ಕರಿಘಟ್ಟ ಪಾಂಡವಪುರ ಕುಂತಿಬೆಟ್ಟ ಮೇಲುಕೋಟೆ ನಾಗಮಂಗಲ ನಾಗಮಂಗಲ ಚನ್ನಕೇಶವಸ್ವಾಮಿ ಗುಡಿ ಬಿಂಡಿಗನವಿಲೆ ಗರುಡಸ್ವಾಮಿ ಗುಡಿ ಆದಿ ಚುಂಚನಗಿರಿ ಮದ್ದೂರು ಶಿವಪುರದ ಸತ್ಯಗ್ರಹ ಸೌಧ, ಮದ್ದೂರು ಅರೆತಿಪ್ಪೂರು, ಶ್ರವಣಪ್ಪನ ಬೆಟ್ಟ ಕೊಕ್ಕರೆ ಬೆಳ್ಳೂರು ಸೋಮನಳ್ಳಮ್ಮನ ಗುಡಿ ಹನುಮಂತನಗರ ಆತ್ಮಲಿಂಗೇಶ್ವರ ಗುಡಿ ಓದಪ್ಪನ ಗುಡಿ,ನಗರಕೆರೆ-ವೈದ್ಯನಾಥಪುರ ನಂಬಿನಾಯಕನಹಳ್ಳಿ ಪಟ್ಟಲದಮ್ಮನ ಗುಡಿ ಹೊಸಹೊಳಲು ದೇವಸ್ಥಾನ ಮಳವಳ್ಳಿ ಶಿವನ ಸಮುದ್ರ ಜಲಪಾತ (ಗಗನ ಚುಕ್ಕಿ ಮತ್ತು ಭರಚುಕ್ಕಿ) ಸೋಮನಾಥಪುರ ಮುತ್ತತ್ತಿ ಬೆಂಕಿ ಫಾಲ್ಸ್ ಗಾಣಾಳು,ಹಲಗೂರು ಭೀಮೇಶ್ವರಿ ಕೆರೆ ತೊಣ್ಣೂರು ಬಸರಾಳು ಮಾಧವರಾಯ ದೇವಸ್ಥಾನ ಕೆರಗೋಡು ಪಂಚಲಿಂಗೇಶ್ವರನ ಗುಡಿ ದೇವರ ಮನೆ ಮೂಡಿಗೆರೆ, ಕಾಲಭೈರವೇಶ್ವರ ವರಹನಾಥ ಕಲ್ಲಹಳ್ಳಿ ಲಕ್ಶ್ಮೀ ಭೂವರಹನಾಥ ಸ್ವಾಮಿ ಗುಡಿ ಕೃಷ್ಣರಾಜಪೇಟೆ ಹೇಮಗಿರಿ ಜಲಪಾತ ಮಂಡ್ಯ ಕೊಪ್ಪಲು - ಕಾವೇರಿ ಬೋರೇದೇವರ ದೇವಸ್ಥಾನ ಕುರುಬರ ಬಸ್ತಿ - ೧೯ ಅಡಿಯ ಜೈನ ಮಂದಿರ ಬಾಹುಬಲಿ ವಿಗ್ರಹ, ಕೃಷ್ಣರಾಜಪೇಟೆ. ರಾಗಿಮುದ್ದನಹಳ್ಳಿ - ಬೇಬಿ ಬೆಟ್ಟ ಮಹದೇಶ್ವರ ಸಿದ್ದಲಿಂಗೇಶ್ವರನ ಗುಡಿ ಕಿಕ್ಕೇರಿ ಲಕ್ಷ್ಮೀ ನರಸಿಂಹ ಸ್ವಾಮಿ ಗುಡಿ ತಾಲ್ಲೂಕುಗಳು ಮಂಡ್ಯ ಮದ್ದೂರು ಮಳವಳ್ಳಿ ಪಾಂಡವಪುರ ನಾಗಮಂಗಲ ಕೃಷ್ಣರಾಜಪೇಟೆ ಶ್ರೀರಂಗಪಟ್ಟಣ ಪ್ರಮುಖ ವ್ಯಕ್ತಿಗಳು ಬಿ.ಎಂ.ಶ್ರೀಕಂಠಯ್ಯ - ಕವಿ ತ್ರಿವೇಣಿ - ಕಾದಂಬರಿಗಾರ್ತಿ ಅಂಬರೀಷ್ - ನಟ, ರಾಜಕಾರಣಿ ಎ.ಎನ್.ಮೂತಿ೯ರಾವ್ - ಸಾಹಿತಿ ಕೆ.ಎಸ್.ನರಸಿಂಹಸ್ವಾಮಿ - ಕವಿ ಬಿ.ಎಸ್.ಯಡಿಯೂರಪ್ಪ - ರಾಜಕಾರಣಿ ಜಿ. ಮಾದೇಗೌಡ- ಕಾವೇರಿ ಚಳುವಳಿ ಹೋರಾಟಗಾರ ಮಂಡ್ಯ ರಮೇಶ್ - ಚಿತ್ರ ನಟ ಚಂದಗಾಲು ಬೋರಪ್ಪ - ತತ್ವಪದ ಗಾಯಕ, ಜನಪದ ಕಲಾವಿದ ಹ. ಕ. ರಾಜೇಗೌಡ - ಜಾನಪದ ಸಂಶೋಧಕ ಜಯಲಕ್ಷ್ಮಿ ಸೀತಾಪುರ - ಜಾನಪದ ವಿದ್ವಾಂಸೆ, ಲೇಖಕಿ ಟಿ. ಸತೀಶ್ ಜವರೇಗೌಡ - ಕವಿ, ಸಂಘಟಕ ಕೆ. ಎಸ್. ಎಲ್. ಸ್ವಾಮಿ - ಚಲನಚಿತ್ರ ನಿರ್ದೇಶಕರು ಪು. ತಿ. ನರಸಿಂಹಾಚಾರ್ - ಕವಿ ರಮ್ಯಾ- ನಟಿ ಹೊಳೆ/ನದಿಗಳು ಕಾವೇರಿ ಹೇಮಾವತಿ ಲೋಕಪಾವನಿ ಲಕ್ಷ್ಮಣತೀರ್ಥ ಶಿಂಷಾ ವೀರವೈಷ್ಣವಿ ಆರಂಬ ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ. ಕಾವೇರಿ ಹೊಳೆ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ಹೊಳೆಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು, ಬತ್ತ, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು, ವಾಣಿಜ್ಯ ಬೆಳೆ ಹಿಪ್ಪುನೇರಳೆ, ಮುಂತಾದವು. ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯ "ಸಕ್ಕರೆಯ ಜಿಲ್ಲೆ ", "ಮಧುರ ಮಂಡ್ಯ" ಎನಿಸಿಕೊಂಡಿದೆ. ಬಾಹ್ಯ ಅಂತರಜಾಲ ತಾಣಗಳು http://www.karunadu.gov.in/gazetteer/GazetteerMandya2009/Chapter-14.pdf http://www.mandya.nic.in/ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಮಂಡ್ಯ ಜಿಲ್ಲೆ
ರಾಯಚೂರು ಜಿಲ್ಲೆ
https://kn.wikipedia.org/wiki/ರಾಯಚೂರು_ಜಿಲ್ಲೆ
thumb|ರಾಯಚೂರು, ಕರ್ನಾಟಕ thumb| ರಾಯಚೂರು ರೈಲು ನಿಲ‍್ದಾಣ ರಾಯಚೂರು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ. ರಾಯಚೂರು ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯಂತೆ ೧೬,೪೮,೨೧೨. ರಾಯಚೂರು ಜಿಲ್ಲೆಯಲ್ಲಿ ೭ ತಾಲೂಕುಗಳಿವೆ: ರಾಯಚೂರು, ದೇವದುರ್ಗ, ಸಿಂಧನೂರು, ಮಾನವಿ,, ಲಿಂಗಸುಗೂರು, ಮಸ್ಕಿ , ಸಿರವಾರ . ಜಿಲ್ಲಾಕೇಂದ್ರ ರಾಯಚೂರು ನಗರ. ಇದು ಬೆಂಗಳೂರಿನಿಂದ ೪೦೯ ಕಿ. ಮೀ. ದೂರದಲ್ಲಿದೆ. ಇತಿಹಾಸ ಸಾಮ್ರಾಟ್ ಅಶೋಕನ ಕುರಿತ ದೇಶದ ಅತಿಮುಖ್ಯ ಶಿಲಾಶಾಸನಗಳಲ್ಲಿ ಒಂದೆನಿಸಿದ ಮಸ್ಕಿ ಶಾಸನವು, ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ದೊರೆತಿರುವುದು ರಾಯಚೂರಿನ ಶ್ರೀಮಂತ ಇತಿಹಾಸಕ್ಕೆ ಒಂದು ಐತಿಹಾಸಿಕ ಸಾಕ್ಷಿ. ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು. ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ನೆಲವಾಗಿತ್ತು. ರಾಯಚೂರು ಜಿಲ್ಲೆ ನವೆಂಬರ್ ೧, ೧೯೫೬ ರಂದು ರಾಜ್ಯ ಮರು ಸಂಘಟನೆಯಾಗುವವರೆಗೂ ಹೈದರಾಬಾದ್ ರಾಜ್ಯದಲ್ಲಿ ಒಂದು ಭಾಗವಾಗಿತ್ತು. ಜಿಲ್ಲೆಯ ದಾಖಲೆಯ ಇತಿಹಾಸವನ್ನು ಕ್ರಿ.ಪೂ:೩ನೇ ಶತಮಾನದಲ್ಲಿ ಅಶೋಕನ ಮೂರು ಚಿಕ್ಕ ಶಿಲಾ ಶಾಸನಗಳು ಈ ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನಲ್ಲಿರುವ ಮಸ್ಕಿ ಮತ್ತು ಕೊಪ್ಪಲ್ ಸಮೀಪದ ಇನ್ನೆರಡರಲ್ಲೂ ಕಂಡುಬರುತ್ತವೆ ಎಂದು ಈ ಪ್ರದೇಶವು ಮಹಾನ್ ಮೌರ್ಯ ರಾಜ ಅಶೋಕನ (೨೭೩ – ೨೩೬ ಬಿ.ಸಿ.) ಆಡಳಿತದಲ್ಲಿ ಸೇರಿದೆ ಎಂದು ಸಾಬೀತುಪಡಿಸುತ್ತದೆ. ಆ ಸಮಯದಲ್ಲಿ, ಈ ಪ್ರದೇಶವು ಅಶೋಕನ ವೈಸ್ರಾಯ್ ಅಥವಾ ಮಹಾಮತ್ರ ಆಡಳಿತದಡಿಯಲ್ಲಿತ್ತು. ಕ್ರಿಶ್ಚಿಯನ್ ಯುಗದ ಆರಂಭದಲ್ಲಿ, ಜಿಲ್ಲೆಯು ಶಾತವಾಹನಗಳ ಸಾಮ್ರಾಜ್ಯದ ಭಾಗವಾಗಿದೆ ಎಂದು ಕಾಣುತ್ತದೆ. ಕ್ರಿ.ಶ ೩ ನೇ ಮತ್ತು ೪ ನೇ ಶತಮಾನದಲ್ಲಿ ಆಳಿದ ವಕತಕರು ಸ್ವಲ್ಪ ಕಾಲ ರಾಯಚೂರಿನ ಮೇಲೆ ನಿಂತಿದ್ದರು ಎಂದು ತೋರುತ್ತದೆ, ನಂತರ ಅದು ಕದಂಬ ಪ್ರಾಂತಗಳಲ್ಲಿ ಸೇರಿದೆ ಎಂದು ತೋರುತ್ತದೆ. ಈ ಪ್ರದೇಶವನ್ನು ಆಳಿದ ಪ್ರಾಮುಖ್ಯತೆಯ ಮುಂದಿನ ಸಾಮ್ರಾಜ್ಯವು ಬಾದಾಮಿಯ ಚಾಲುಕ್ಯರದು. ಐಹೊಳೆಯಿಂದ ಶಾಸನವೊಂದರ ಪ್ರಕಾರ, ಪಲ್ಲವರನ್ನು ಸೋಲಿಸಿದ ೨ನೇ ಪುಲೇಕೇಶಿ ಈ ಪ್ರದೇಶವನ್ನು ವಶಪಡಿಸಿಕೊಂಡು ತನ್ನ ಮಗ ಆದಿತ್ಯವರ್ಮ ಆಡಳಿತದಡಿಯಲ್ಲಿ ತನ್ನ ಸಾಮ್ರಾಜ್ಯದಲ್ಲಿ ಪ್ರಾಂತ್ಯವನ್ನು ಮಾಡಿಕೊಂಡನು. ನಂತರ ಈಗಿನ ರಾಯಚೂರು ಜಿಲ್ಲೆಯು ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸೇರಿಸಲ್ಪಟ್ಟಿತು. ಅವರು ಎಂಟನೇ ಶತಮಾನದಲ್ಲಿ ಅಧಿಕಾರಕ್ಕೆ ಬಂದರು, ಈ ಜಿಲ್ಲೆಯಲ್ಲಿ ಕಂಡುಬಂದ ಆ ಕಾಲದ ಶಾಸನಗಳಿಂದ ಸಂಗ್ರಹಿಸಬಹುದು. ಮಾನವಿ ತಾಲೂಕಿನ ಶಾಸನವೊಂದರ ಪ್ರಕಾರ, ರಾಷ್ಟ್ರಕೂಟ ರಾಜನ ಕೃಷ್ಣ II ನೇ ಅಧೀನದಲ್ಲಿರುವ ಒಬ್ಬ ಜಗತ್ತುಂಗ, ಅಡೆದೋರ್ ಎರಡು ಸಾವಿರ ಪ್ರಾಂತ್ಯವನ್ನು ಆಳುತ್ತಿದ್ದನು, ಅಂದರೆ, ಪ್ರಸ್ತುತ ರಾಯಚೂರು ಜಿಲ್ಲೆಯನ್ನು ರಚಿಸುವ ಪ್ರದೇಶ. ರಾಷ್ಟ್ರಕೂಟ ರಾಜನಾದ ನೃಪತುಂಗ ಅವರು ಕೊಪ್ಪಳನ್ನು ತಮ್ಮ ಕನ್ನಡ ಕೃತಿಯಾದ ಕವಿರಾಜಮಾರ್ಗದಲ್ಲಿ ದೊಡ್ಡ ಕೋಪನಗರ ಎಂದು ವರ್ಣಿಸಿದ್ದಾರೆ. ಕಲ್ಯಾಣದ ಚಾಲುಕ್ಯರ ಹಲವಾರು ಶಾಸನಗಳು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಈ ಪ್ರದೇಶವು ಕ್ರಿ.ಶ ೧೦ ನೇ ಮತ್ತು ೧೨ ನೇ ಶತಮಾನದ ನಡುವೆ ಅವರ ಹತೋಟಿಗೆ ಒಳಪಟ್ಟಿದೆ ಎಂಬ ಅಂಶಕ್ಕೆ ಸಾಕ್ಷಿಯಾಗಿದೆ. ಇದು ನೊಲಿನಲ್ಲಿರುವ ಶಾಸನದಿಂದ ಕಲಿತಿದ್ದು ಲಿಂಗಸೂಗೂರು ತಾಲ್ಲೂಕಿನಲ್ಲಿ ಚಾಲುಕ್ಯರ ದೊರೆ ೫ನೇ ವಿಕ್ರಮಾದಿತ್ಯ ಆಳ್ವಿಕೆಯ ಸಮಯದಲ್ಲಿ ಅಡೆದೋರ್-ಪ್ರಾಂತ, ಅಂದರೆ, ರಾಯಚೂರು ಪ್ರದೇಶವನ್ನು ಅವನ ಕಿರಿಯ ಸಹೋದರ ೧ ನೇ ಜಗದೇಕಮಲ್ಲ ಆಳಿದನು. ಮಸ್ಕಿಯ ಮತ್ತೊಂದು ಶಾಸನವು ಈ ಸ್ಥಳವನ್ನು ರಾಜಧಾನಿಯಾಗಿ ವಿವರಿಸುತ್ತದೆ ಮತ್ತು ಜಯಸಿಂಹನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಆದಾಗ್ಯೂ, ದಕ್ಷಿಣದ ಚೋಳ ರಾಜರು ಮತ್ತು ರಾಯಚೂರು ಪ್ರದೇಶದ ಮೇಲಿನ ಪ್ರಾಬಲ್ಯಕ್ಕಾಗಿ ಕಲ್ಯಾಣದ ಚಾಲುಕ್ಯರ ರಾಜರು ಮತ್ತು ಭೂಪ್ರದೇಶವು ಸ್ವಲ್ಪ ಕಾಲ ಚೋಳರ ಕೈಗೆ ಹಾದುಹೋಗಿದ್ದವು. ಹೈಹಯಾಸ್ ಮತ್ತು ಸಿಂಧಾಸ್ ಈ ಪ್ರದೇಶದ ಕೆಲವು ಭಾಗಗಳನ್ನು ಸ್ವಲ್ಪ ಕಾಲ ಆಳಿದರು ಎಂದು ತೋರುತ್ತದೆ. ನಂತರ, ಚಾಲುಕ್ಯರ ಪತನದ ನಂತರ, ರಾಯಚೂರು ಕಲಚುರಿ ರಾಜರ ಕೈಗೆ ಪ್ರವೇಶಿಸಿತು. ಆಗ ೧೩ ನೇ ಶತಮಾನದಲ್ಲಿ ಕಾಕತೀಯರು ಬಂದರು. ರಾಯಚೂರಿನ ಕೋಟೆ-ಗೋಡೆಯ ಮೇಲೆ ಬರೆದ ಶಾಸನದಿಂದ, ಮೂಲ ಕೋಟೆಯನ್ನು ಕ್ರಿ.ಶ ೧೨೯೪ ಯಲ್ಲಿ ವಾರಂಗಲ್ನ ಕಾಕತೀಯ ರಾಣಿ ರುದ್ರಮ್ಮ ದೇವಿ ಜನರಲ್ ಗೋರ್ ಗಂಗಾಯ ರೆಡ್ಡಿ ಅವರು ನಿರ್ಮಿಸಿದರು ಎಂದು ತಿಳಿದುಬರುತ್ತದೆ. ರಾಯಚೂರು ಜಿಲ್ಲೆಯ ಇದು ಮೌರ್ಯ ರಾಜ ಅಶೋಕನ ದಿನಗಳಿಂದ ಒಂದು ಘಟನಾತ್ಮಕ ಮತ್ತು ಶ್ರೀಮಂತ ಆರಂಭವನ್ನು ಹೊಂದಿದೆ. ಹಲವಾರು ಶಾಸನಗಳು, ಬಂಡೆಗಳ ಶಾಸನಗಳು ಮತ್ತು ಇತರ ದಾಖಲೆಗಳು, ದೇವಾಲಯಗಳು, ಕೋಟೆಗಳು ಮತ್ತು ಯುದ್ಧಭೂಮಿಗಳು ಈ ಸಂಗತಿಗೆ ಸಾಕ್ಷಿಯಾಗಿದೆ. ಎರಡು ಪ್ರಮುಖ ರಾಜ್ಯಗಳ ನಡುವೆ ಸುಳ್ಳು. ಇತ್ತೀಚಿನ ದಿನಗಳಲ್ಲಿ ಇದು ಒಂದು ಭಾಗವಾಗಿತ್ತು, ಅದು ಹೈದರಾಬಾದ್ನ ರಾಜಪ್ರಭುತ್ವದ ರಾಜ್ಯವಾಗಿತ್ತು ಮತ್ತು ನವೆಂಬರ್ ೧, ೧೯೫೬ ರಿಂದ ಇದು ಮೈಸೂರು ರಾಜ್ಯದ ಒಂದು ಜಿಲ್ಲೆಯಾಗಿದೆ. ಭೌಗೋಳಿಕ ಲಕ್ಷಣಗಳು ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ. ರಾಯಚೂರು ಹೆಸರಿನ ಮೂಲ ಈ ಜಿಲ್ಲೆಯು ತನ್ನ ಪ್ರಧಾನ ಪಟ್ಟಣವಾದ ರಾಯಚೂರು (ಕನ್ನಡದಲ್ಲಿ ರಾಯಚೂರು ಎಂಬ ಹೆಸರಿನ ಮೂಲ) ದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ರಾಜ್ಯದ ಇತರ ಜಿಲ್ಲೆಗಳೂ ಸಹ ಈ ಜಿಲ್ಲೆಯ ಹೆಸರನ್ನು ಪಡೆದುಕೊಂಡಿದೆ. ಆದರೆ, ಆಧುನಿಕ ಕಾಲದಲ್ಲಿ ರಾಯಚೂರು ಎಂಬ ಹೆಸರಿನ ಮೊದಲಿನಿಂದಲೂ ಅನೇಕ ಗ್ರಾಮಸ್ಥರು ಈ ಸ್ಥಳಕ್ಕೆ ಇನ್ನೂ ಕರೆ ನೀಡುತ್ತಿದ್ದರೂ, ಇದನ್ನು ಸಾಮಾನ್ಯವಾಗಿ ರಾಯಚೂರು ಎಂದು ಕನ್ನಡದಲ್ಲಿ ಬರೆಯಲಾಗಿದೆ ಮತ್ತು ಉಚ್ಚರಿಸಲಾಗುತ್ತದೆ. ಗಣನೀಯ ಪುರಾತನವಾದ ಈ ಸ್ಥಳದ ಹೆಸರು ಹನ್ನೆರಡನೆಯ ಶತಮಾನದಷ್ಟು ಹಿಂದೆಯೇ ಗುರುತಿಸಬಹುದಾಗಿದೆ. ಡಾ. ಪಿ.ಬಿ. ಹೊಯ್ಸಳ ರಾಜ ವಿಷ್ಣುವರ್ಧನನು ವಶಪಡಿಸಿಕೊಂಡ ಕೋಟೆಗಳಲ್ಲಿ ಒಂದಾದ ರಾಯಚೂರು ಕೋಟೆಯನ್ನು ಗಮನಿಸಿದ ದೇಸಾಯಿ. ಕನ್ನಡದಲ್ಲಿನ ಮೂರು ಹೊಯ್ಸಳ ಶಾಸನಗಳಲ್ಲಿ ಇದು. ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಹುಲೇರರಾದಲ್ಲಿ ಪತ್ತೆಯಾದ ಈ ಮೂರೂ ಶಾಸನಗಳಲ್ಲಿ (ಎಲಿಗ್ರಫಿಯಾ ಕಾರ್ನ್ಯಾಟಿಕ್, ಸಂಪುಟ V, ಪಾರ್ಟಿಐ, ೧೯೦೨ ರಲ್ಲಿ ಬೇಲೂರು ೧೯೩ ಎಂದು ಗುರುತಿಸಲಾಗಿದೆ) ಮತ್ತು ಇದು ೧೧೬೧ ಕ್ರಿ.ಶ. ಮತ್ತು ಹೊಯ್ಸಳ ನರಸಿಂಹ I ಪ್ರದೇಶವನ್ನು ಒಳಗೊಂಡಿದೆ. ವಿಷ್ಣುವರ್ಧನ ಸಾಮ್ರಾಜ್ಯದ ಉತ್ತರದ ಗಡಿಯಾಗಿ ಪೆರ್ಡೋರ್ (ಕೃಷ್ಣ ನದಿ) ಮತ್ತು ರಾಚವೂರ್ ವಿಷ್ಣುವರ್ಧನರಿಂದ ಇನ್ನೂ ಒಂದು ಯುವಕನಾಗಿದ್ದ ಸ್ಥಳಗಳಲ್ಲಿ ಒಂದಾಗಿದೆ. ಪ್ರಸ್ತುತ ಮ್ಯಾಂಡೆ ಜಿಲ್ಲೆಯ ನಾಗಮಂಗದ ತಾಲ್ಲೂಕಿನ ಹಾಸ್ತಾನದಲ್ಲಿ ಪತ್ತೆಯಾಗಿರುವ ಈ ಶಾಸನಗಳಲ್ಲಿ ಎರಡನೆಯದು ಎಗ್ರಾಫಿಫಿಯಾ ಕಾರ್ನಾಟಿಕ್, ಸಂಪುಟ IV- ಭಾಗ II, ೧೮೯೮ ರಲ್ಲಿ ನಾಗಮಂಗಲ ೭೦ ರ ಸಂಖ್ಯೆಯನ್ನು ಹೊಂದಿದೆ) ಮತ್ತು ಹೊಯ್ಸಳ ವೀರ-ಬಲ್ಲಾಳ II ಆಳ್ವಿಕೆಯ ಸಮಯದಲ್ಲಿ ೧೧೭೮ AD ಯಲ್ಲಿ ಉಲ್ಲೇಖಿಸಲಾಗಿದೆ, ಪರ್ಮಮಾನಾ (ಅಂದರೆ, ಪೆರ್ಮಾ + ನಾ) ರಾಚವೂರ್ ವಿಷ್ಣುವರ್ಧನವು ಗಂಟಿಕ್ಕಿ ಹೊಡೆದ ಹಲವಾರು ಕೋಟೆಗಳಲ್ಲಿ ಒಂದಾಗಿದೆ. ಈ ಲಿಥಿಕ್ ದಾಖಲೆ ಈ ಸ್ಥಳವನ್ನು ಪರ್ಮಾಮಾದ ರಾಚವೂರ್ ಎಂದು ಕರೆಯಲಾಗುತ್ತಿತ್ತು, ಈ ಪೆರ್ಮಾನು ಬಹುಶಃ ಸ್ಥಳೀಯ ಮುಖ್ಯಸ್ಥನಾಗಿದ್ದು, ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಿರೇಹಳ್ಳಿಯಿಂದ ಬಂದ ಈ ಶಾಸನಗಳಲ್ಲಿ ಮೂರನೆಯದು (ಎಪಿಗ್ರಫಿಯಾ ಕಾರ್ನಾಟಿಕ, ಸಂಪುಟದಲ್ಲಿ ೧೩೭ ರಲ್ಲಿ ಸಂಖ್ಯೆ). ವಿ-ಭಾಗ I, ೧೯೦೨) ಮತ್ತು ಇದು ೧೧೮೩ ಎಡಿ ದಿನಾಂಕವನ್ನು ಹೊಂದಿದೆ ಮತ್ತು ಹೊಯ್ಸಲ್ಸ್ ವೀರಾ-ಬಲ್ಲಾಳ II ರ ಆಳ್ವಿಕೆಯು ರಾಚವೂರ್ ಅನ್ನು ತನ್ನ ತೋಳಿನ ಶಕ್ತಿಯಿಂದ ವಶಪಡಿಸಿಕೊಂಡ ವಿಷ್ಣುವರ್ಧನ ಸ್ಥಳಗಳಲ್ಲಿ ಒಂದಾಗಿದೆ. ಈ ಶಾಸನಗಳಲ್ಲಿ ಮತ್ತು ವಿಷ್ಣುವರ್ಧನದ ಇತರ ಶೋಷಣೆಗಳಲ್ಲಿನ ಸ್ಥಳಗಳ ಸಂಖ್ಯೆಯ ಸಂದರ್ಭದಿಂದ, ರಚವೂರ್ ಅಥವಾ ರಾಚನೂರ್ ಎಂದು ಕರೆಯಲ್ಪಡುವ ಸ್ಥಳವು ಪ್ರಸ್ತುತ ದಿನಗಳಲ್ಲಿ ರಾಯಚೂರು ಎಂದು ಸ್ಪಷ್ಟವಾಗುತ್ತದೆ. ರಾಚಾವನ್ನು ರಾಜ (ಅಂದರೆ, ರಾಜ) ನಿಂದ ಪಡೆಯಲಾಗಿದೆ ಮತ್ತು ಓರ್ ನಗರವನ್ನು ಅರ್ಥೈಸುತ್ತದೆ. ರಾಚವೂರ್ (ರಾಚಾ + ಓರ್) ಅಥವಾ ರಾಚನೂರು (ರಾಚಾ + ನಾ + ಓರ್) ಅಂದರೆ ಕನ್ನಡ ರಾಜನ ಸ್ಥಳದಲ್ಲಿ ಇದು ಈಗಾಗಲೇ ಕನ್ನಡ ದೇಶದ ಪ್ರಮುಖ ಪಟ್ಟಣ ಎಂದು ತೋರಿಸುತ್ತದೆ. 1294 ಎಡಿ., ಪೆರ್ಮಮಾನ ರಾಚವೂರ್ ಅಥವಾ ರಾಚನೂರ್ ರಚೂರ್ ಅಥವಾ ರಚೂರು ಎಂದು ಚಿಕ್ಕದಾಗಿತ್ತು. ರಾಯಚೂರ್ ಕೋಟೆಯ ಗೋಡೆಯ ಮೇಲೆ ಆ ವರ್ಷದ ಕಾಕತೀಯ ಶಾಸನದಿಂದ ಸ್ಪಷ್ಟವಾಗಿದೆ. ೧೫೩೧ ಎಡಿವರೆಗೂ ವಿಜಯನಗರ ಕಾಲದಲ್ಲಿ ಈ ಹೆಸರಿನ ಈ ಹೆಸರಿನ ಹೆಸರು ಆಲಂಪುರದ (ಈಗ ಆಂಧ್ರಪ್ರದೇಶದ ಮಹಾಬೂಬ್ನಗರ ಜಿಲ್ಲೆಯಲ್ಲಿ) ಕಂಡುಬರುವ ಎರಡು ಕನ್ನಡ ಶಾಸನಗಳಿಂದ ತಿಳಿದುಬಂದಿದೆ, ಇದು ರಾಜ ಕೃಷ್ಣದೇವರಾಯನು ರಚೂರ್ ಉತ್ತರದಲ್ಲಿ ಅವರ ಖರ್ಚುವಿಕೆಯಿಂದ. ಆದ್ದರಿಂದ ಈ ಐತಿಹಾಸಿಕ ರಾಚೂರ್ ಅಥವಾ ರಾಚೂರು ಇತ್ತೀಚೆಗೆ ರಾ ಮತ್ತು ಚ ನಡುವಿನ ಯಾ ಸೇರಿಸುವಿಕೆಯೊಂದಿಗೆ ಪ್ರಸ್ತುತ ರಾಯಚೂರು (ರಾ + ಯಾ + ಚಾ + ಓರ್) ಆಗಿ ಬದಲಾಗುವುದರೊಂದಿಗೆ ಇನ್ನೂ ಸ್ವಲ್ಪ ಬದಲಾವಣೆಯನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇಲ್ಲಿಯೆ ಯಾದಂದರೆ ರಾಜನು ಮತ್ತೊಮ್ಮೆ ರಾಜನ ಅರ್ಥವನ್ನು ಸೂಚಿಸುವ ಎರಡನೇ ಅಕ್ಷರವಾಗಿದೆ. ರಾಯ ಮತ್ತು ರಾಯ್ ಎಂಬ ಪದಕ್ಕೆ ಸಮಾನವಾದ ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ, ಉರ್ದುದಲ್ಲಿ ರಾಯಚೂರ್ ಎಂದು ಹೆಸರಿಸಲು ಇದು ಆಚರಣೆಯನ್ನು ತೋರುತ್ತದೆ, ನಂತರ ಆ ಬಳಕೆಯು ಇಂಗ್ಲಿಷ್ನಲ್ಲಿಯೂ ಸಹ ಬಳಕೆಯಾಗಿದೆ. ನಾಯಿಯ ಮೇಲೆ ತಿರುಗಿಸುವ ಮೊಲದ ಒಂದು ವಿಚಿತ್ರ ದೃಶ್ಯವನ್ನು ವೀಕ್ಷಿಸುವ ಮುಖ್ಯಸ್ಥನು ಅವನನ್ನು ಹಿಂಬಾಲಿಸಿದನು ಮತ್ತು ಈ ಸ್ಥಳದಲ್ಲಿ (ನಾಯಿಯನ್ನು) ತುಂಡುಗಳಾಗಿ ಹರಿದುಹಾಕಿದನು, ಈ ವೀರೋಚಿತ ಮತ್ತು ಅಸಾಮಾನ್ಯ ಕ್ರಿಯೆಯ ದೃಶ್ಯವು ನಿರ್ಮಿಸಲು ಯೋಗ್ಯ ಸ್ಥಳವಾಗಿದೆ ಎಂದು ಭಾವಿಸಲಾಗಿದೆ ಒಂದು ಕೋಟೆ ಮತ್ತು ಅದಕ್ಕನುಸಾರವಾಗಿ ಒಂದು ಅಸಾಧಾರಣ ಕೋಟೆಯನ್ನು ನಿರ್ಮಿಸಿ ಕನ್ನಡದಲ್ಲಿ Raichur ಎಂದು ಹೆಸರಿಸಲಾಯಿತು, ಇದು ನಾಯಿ, ನಾಯಿಯನ್ನು ತುಂಡುಗಳಾಗಿ ಹರಿದ ಕಲ್ಪನೆಯನ್ನು ಸೂಚಿಸುತ್ತದೆ. ಪ್ರಸ್ತುತ ಹೆಸರು, ರಾಯಚೂರು, ನೇಚೂರ್ನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಆದರೆ ಈ ರೀತಿಯ ಕಥೆಯು ಅನೇಕ ಕೋಟೆಗಳನ್ನು ಗೌರವಿಸುತ್ತದೆ. ತೆಲುಗು ಭಾಷೆಯಲ್ಲಿ ರಾಯ್ ಅರ್ಥ ಕಲ್ಲು ಎಂದು ಹೇಳಲಾಗುತ್ತದೆ, ಒರು (ಪಟ್ಟಣ) ಜೊತೆಗೆ, ರಾಜುರು, ಅಂದರೆ, ಕಲ್ಲುಗಳ ಪಟ್ಟಣ (ಸುತ್ತಮುತ್ತಲ ಬಂಡೆಗಳ ಕಾರಣದಿಂದಾಗಿ) ರಾಯಚೂರು ಅಥವಾ ರಾಯ್ಚೂರ್ ಆಗುತ್ತದೆ. ಈ ಮತ್ತು ಇನ್ನಿತರ ಕಥೆಗಳು ಈಗಾಗಲೇ ವಿವರಿಸಿದ ಹೆಸರಿನ ಬಗ್ಗೆ ಸ್ಪಷ್ಟವಾದ ಐತಿಹಾಸಿಕ ಪುರಾವೆಗಳ ದೃಷ್ಟಿಯಿಂದ ಕೇವಲ ಊಹೆಗಳನ್ನು ಮಾತ್ರ ಹೇಳಬಹುದು. ರಾಯಚೂರ್ ಅನ್ನು ಒಮ್ಮೆ ಒಂದು ಬಹಮನಿ ಸುಲ್ತಾನರಿಂದ ಫಿರೋಜೆಂಜರ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಕಾಣುತ್ತದೆ, ಆದರೆ ಈ ಮೇಲ್ಮನವಿಯು ಅದರ ಮೇಲೆ ಅಂಟಿಕೊಳ್ಳುವುದಿಲ್ಲ ಮತ್ತು ಹಳೆಯ ಹೆಸರಿನಿಂದ ಮಾತ್ರ ಇದನ್ನು ಮುಂದುವರೆಸಿತು. ತಾಲೂಕುಗಳು 1 ರಾಯಚೂರು 2 ದೇವದುರ್ಗ 3 ಲಿಂಗಸಗೂರ 4 ಮಾನ್ವಿ 5 ಸಿಂಧನೂರ 6 ಮಸ್ಕಿ 7 ಸಿರವಾರ ಕೊರತೆಗಳು ಮಳೆಯ ಕೊರತೆ, ನೀರಿನ ಅಭಾವ ಜಿಲ್ಲೆಯ ಸಾಮಾನ್ಯ ಸಮಸ್ಯೆಗಳಾದರೆ, ಅತಿಯಾದ ಬಿಸಿಲು ಜಿಲ್ಲೆಯ ಮತ್ತೊಂದು ಲಕ್ಷಣ. ಹವಾಗುಣ ಜಿಲ್ಲೆಯ ಹವಾಗುಣವು ಬಹುತೇಕ ಒಣ ಹವೆ ಇರುತ್ತದೆ. ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ. ಜಿಲ್ಲೆಯ ಪ್ರಮುಖರು ವಿಜಯದಾಸರು, ಹರಿದಾಸರು ಗೋಪಾಲದಾಸರು, ಹರಿದಾಸರು (ಮಸರಕಲ್ ಗ್ರಾಮ ,ದೇವದುರ್ಗ ) ಚನ್ನಬಸವಪ್ಪ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು ಶಂಕರಗೌಡ ಬೆಟ್ಟದೂರು, ಹಿರಿಯ ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರು ಶಿವರಾಜ ಪಾಟೀಲ್ , ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು ಪ್ರಾಮುಖ್ಯತೆ ರಾಯಚೂರು ಜಿಲ್ಲೆಯ ಶಕ್ತಿನಗರದಲ್ಲಿ ಇರುವ ಶಾಖೋತ್ಪನ್ನ ವಿದ್ಯುತ್‌ಸ್ಥಾವರ ಕರ್ನಾಟಕದಲ್ಲಿ ಬಳಸಲ್ಪಡುವ ವಿದ್ಯುಚ್ಛಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಪ್ರಮುಖವಾಗಿದೆ. ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ದೇವನಾಂಪ್ರಿಯಸ ಅಸೋಕಸ ಎನ್ನುವ ಪ್ರಸಿದ್ಡ ಸಾಲಿದೆ. ಸಿಂಧನೂರು ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ. ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದ ಅಂಭಾಮಠದ ಅಂಭಾದೇವಿಯ ಜಾತ್ರೆ ಲಕ್ಷಾಂತರ ಭಕ್ತ ಸಮೂಹವನ್ನು ಹೊಂದಿದೆ. ಲಿಂಗಸೂಗೂರು ತಾಲ್ಲೂಕಿನ ಮುದುಗಲ್ ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ. ಜಲದುರ್ಗದಲ್ಲಿರುವ ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.ಜೊತೆಗೆ ಇಲ್ಲಿ ಕಂಡು ಬರುವ ರಕ್ಷಣಾ ವಾಸ್ತುಶಿಲ್ಪ ತುಂಬಾ ವಿಶೇಷ ವಾದದ್ದು. ಮಂತ್ರಾಲಯವು ರಾಯಚೂರಿನಿಂದ ಹತ್ತಿರದಲ್ಲಿದೆ. ಮಾನವಿ ಕೊನೆಯ ತಾಲೂಕು. ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು. ದೇವದುರ್ಗ ತಾಲೂಕಿನಲ್ಲಿ ಮುಂಡರಗಿಯಲ್ಲಿರು ಶಿವ ದೇವಾಲಯು ಅತ್ಯಂತ ಪ್ರಾಚೀನ ದೇವಾಲಯವಾಗಿದೆ,ಮತ್ತು ಜಾಲಹಳ್ಳಿ ರಂಗನಾಥ ದೇವಾಲಯು ಸುಪ್ರಸಿದ್ಧ ದೇವಾಲಯ ವಾಗಿದೆ. ಇದನ್ನೂ ನೋಡಿ ರಾಯಚೂರು (ಲೋಕ ಸಭೆ ಚುನಾವಣಾ ಕ್ಷೇತ್ರ) ಬಾಹ್ಯ ಅಂತರ್ಜಾಲ ಸಂಪರ್ಕಗಳು ರಾಯಚೂರು ಜಿಲ್ಲೆಯ ಅಧಿಕೃತ ತಾಣ ರಾಯಚೂರು ನಗರದ ಅಧಿಕೃತ ತಾಣ ರಾಯಚೂರು ಜಿಲ್ಲೆಯ ನಕ್ಷೆ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ರಾಯಚೂರು ಜಿಲ್ಲೆ ವರ್ಗ: ರಾಯಚೂರು ಜಿಲ್ಲೆಯ ತಾಲೂಕುಗಳು ವರ್ಗ: ಕರ್ನಾಟಕದ ತಾಲೂಕುಗಳು
ಬಳ್ಳಾರಿ
https://kn.wikipedia.org/wiki/ಬಳ್ಳಾರಿ
ವಿಜಯನಗರದ ಕರ್ನಾಟಕ ರಾಜ್ಯದ ಒಂದು ಪ್ರಮುಖ ಜಿಲ್ಲೆ; ಇದೇ ಹೆಸರಿನ ನಗರ ಜಿಲ್ಲೆಯ ರಾಜಧಾನಿ. ಇಲ್ಲಿನ ಪ್ರಸಿದ್ಧ ಸ್ಥಳಗ ಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ.ಬಳ್ಳಾರಿ ಜಿಲ್ಲೆಯು ೧೯೫೬ ಕ್ಕಿಂತ ಮುಂಚೆ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಜಿಂದಾಲ್ ಕಂಪನಿ ಸಹಾಭಾಗೀತ್ವದಲ್ಲಿ ಬಳ್ಳಾರಿಯು ೧೯೩೨ ರಲ್ಲಿ ಪ್ರಪ್ರಥಮ ಭಾರಿ ವಿಮಾನ ಸಂಪರ್ಕ ಪಡೆದ ಸ್ಥಳವಾಗಿದೆ.ಶಾಸನಗಳ ಪಿತಾಮಹ ಎಂದು ಕರೆಯಲಾದ ಅಶೋಕನ ೯ ಶಾಸನಗಳು ಕಂಡು ಬಂದಿವೆ. ಕರ್ನಾಟಕದಲ್ಲಿ ಒಟ್ಟು ೧೭ ಕಡೆ ಅಶೋಕನ ಶಾಸನಗಳು ಕಂಡುಬಂದಿವೆ. ಬಳ್ಳಾರಿಯಲ್ಲಿ ಅಶೋಕನ ಎರಡು ಶಾಸನಗಳು ಕಂಡುಬಂದಿವೆ ಅವು ಯಾವುವೆಂದರೆ: ೧)ಉದಯಗೋಳ ೨)ನಿಟ್ಟೂರು ನಲ್ಲಿ ಕಂಡುಬದಿವೆ. ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ. ಚರಿತ್ರೆ ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಭೌಗೋಳಿಕತೆ ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ. ಆಕರ್ಷಣೀಯ ಸ್ಥಳಗಳು thumb|200px|ರೈಲು ನಿಲ್ದಾಣದ ವೇದಿಕೆ 1|right ಬಳ್ಳಾರಿಯು ಗಣಿನಾಡು ಎಂದೇ ಪ್ರಸಿದ್ಧಿ 1.ಬಳ್ಳಾರಿ: ಬಳ್ಳಾರಿ ಕೋಟೆ, ಬಳ್ಳಾರಿಯ ಕನಕದುರ್ಗಮ್ಮ ಗುಡಿ, ಮಹದೇವತಾತನವರ ಮಠ 2. ಸಂಡೂರು: ಕುಮಾರಸ್ವಾಮಿ ದೇವಸ್ಥಾನ, ನಾರಿಹಳ್ಳ, ಗಣಿಗಾರಿಕೆ 3. ಕುರುಗೋಡು: ದೊಡ್ಡಬಸವೇಶ್ವರ ದೇವಸ್ಥಾನ ತಾಲ್ಲೂಕುಗಳು: ಬಳ್ಳಾರಿ, ಕಂಪ್ಲಿ, ಸಂಡೂರು, ಸಿರುಗುಪ್ಪ, ಕುರುಗೋಡು ಆಕರ್ಷಣೆಗಳು ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಸಿಂಧಿಗೇರಿ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ. ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲದ ದಶಮಿಯಂದು ರಥೋತ್ಸವ ಇರುತ್ತದೆ ಹಾಗೂ ಸಂಡೂರು ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ. ಚರಿತ್ರೆ ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು. ಭೌಗೋಳಿಕತೆ ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ ೮೪೪೭ ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ. ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ. ತಾಲೂಕುಗಳು ಬಳ್ಳಾರಿ ಹೂವಿನ ಹಡಗಲಿ ಹಗರಿಬೊಮ್ಮನಹಳ್ಳಿ ಕೂಡ್ಲಿಗಿ ಶಿರಗುಪ್ಪ ಹೊಸಪೇಟೆ ಸಂಡೂರು ಕೊಟ್ಟೂರು ಕಂಪ್ಲಿ ಕುರಗೋಡ ಹರಪ್ಪನಹಳ್ಳಿ ಅಕ್ಟೋಬರ್ ೨,೨೦೨೧ ರಿಂದ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸಪೇಟೆಯನ್ನು ಕೇಂದ್ರವಾಗಿಟ್ಟುಕೊಂಡು ವಿಜಯ ನಗರ ಪ್ರತ್ಯೇಕ ಜಿಲ್ಲೆಯನ್ನು ರಚಿಸಲಾಗಿದೆ. ಆದ್ದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಈಗ ಕೇವಲ ಐದು ತಾಲೂಕುಗಳಿವೆ. ಅವೆಂದರೆ ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರಗುಪ್ಪ ಮತ್ತು ಸಂಡೂರು. ಕೃಷಿ ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ. ಇದನ್ನೂ ನೋಡಿ ಬಳ್ಳಾರಿ (ಲೋಕ ಸಭೆ ಚುನಾವಣಾ ಕ್ಷೇತ್ರ) ಶೇಖರ್‌ ಗುಪ್ತ;‘ಬಳ್ಳಾರಿ ರಿಪಬ್ಲಿಕ್‌’ ಉದಯದ ನಿರೀಕ್ಷೆಯಲ್ಲಿ...;13 May, 2018 ವರ್ಗ:ಭೂಗೋಳ ವರ್ಗ:ಕರ್ನಾಟಕದ ಜಿಲ್ಲೆಗಳು
ಭಾರತದ ವಿಜ್ಞಾನಿಗಳು
https://kn.wikipedia.org/wiki/ಭಾರತದ_ವಿಜ್ಞಾನಿಗಳು
ಡಾ. ಸಿ. ವಿ. ರಾಮನ್ (ಸರ್ ಸಿ.ವಿ. ರಾಮನ್) (ನೋಬೆಲ್ ಪ್ರಶಸ್ತಿ ವಿಜೇತರು) ಡಾ. ಜಗದೀಶ್ಚಂದ್ರ ಬೋಸ್ (ಸರ್ ಜೆ. ಸಿ. ಬೋಸ್) ಸತ್ಯೇಂದ್ರನಾಥ ಬೋಸ್ ಮೇಘನಾದ ಸಾಹ ಜೆ. ಬಿ. ಎಸ್. ಹಾಲ್ಡೇನ್ (ಹುಟ್ಟಿನಿಂದ ಅಂಗ್ಲೇಯರಾದರೂ ನಂತರ ಭಾರತದಲ್ಲಿ ನೆಲಸಿ ಭಾರತದ ಪೌರರಾದವರು) ಶ್ರೀನಿವಾಸ ರಾಮಾನುಜನ್ ಹೋಮಿ ಜಹಂಗೀರ್ ಭಾಬ ವಿಕ್ರಮ್ ಸಾರಾಭಾಯಿ ಹರಗೋಬಿಂದ ಖುರಾನ (ನೋಬೆಲ್ ಪ್ರಶಸ್ತಿ ವಿಜೇತರು) ಸುಬ್ರಮಣ್ಯಮ್ ಚಂದ್ರಶೇಖರ್ (ನೋಬೆಲ್ ಪ್ರಶಸ್ತಿ ವಿಜೇತರು) ಯು. ಆರ್. ರಾವ್ ಡಾ. ರಾಜಾರಾಮಣ್ಣ ವರ್ಗ:ವಿಜ್ಞಾನ ವರ್ಗ:ವಿಜ್ಞಾನಿಗಳು
ಚಂದ್ರಶೇಖರ ವೆಂಕಟರಾಮನ್
https://kn.wikipedia.org/wiki/ಚಂದ್ರಶೇಖರ_ವೆಂಕಟರಾಮನ್
ಸರ್ ಸಿ.ವಿ.ರಾಮನ್ (Sir C.V.Raman) ಎಂದು ಶಿಕ್ಷಣ ವಲಯದಲ್ಲಿ ಸುಪ್ರಸಿದ್ಧರಾಗಿದ್ದ, ಚಂದ್ರಶೇಖರ ವೆಂಕಟರಾಮನ್ ರವರು ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಪ್ರಥಮ ಭಾರತೀಯ ವಿಜ್ಞಾನಿ.Documentary on Sir C.V. Raman ಅಷ್ಟೇ ಏಕೆ, ಏಷ್ಯದಲ್ಲೇ ಮೊತ್ತಮೊದಲ ಬಾರಿಗೆ ನೊಬೆಲ್ ಪಾರಿತೋಷಿಕ ಪಡೆದ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ ರಲ್ಲಿ ಅವರದೇ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಪಡೆದರು. ಬಾಲ್ಯ, ವಿದ್ಯಾಭ್ಯಾಸ, ವೃತ್ತಿ ಚಂದ್ರಶೇಖರ ವೆಂಕಟಾರಾಮನ್, ನವೆಂಬರ್ ೭, ೧೮೮೮ ರಲ್ಲಿ ತಮಿಳುನಾಡುನ ತಿರುಚಿನಾಪಳ್ಳಿ ಜಿಲ್ಲೆಯ 'ತಿರುವನೈಕಾವಲ್' ಎಂಬಲ್ಲಿ ಜನಿಸಿದರು. ಅವರ ತಂದೆ, ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಾಯಿಯವರ ಹೆಸರು, ಪಾರ್ವತಿ ಅಮ್ಮಾಳ್. ಆದರೆ ಕುಟುಂಬ ದೊಡ್ಡದಾಗಿದ್ದರಿಂದ ಬಡತನದ ಸ್ಥಿತಿಯಲ್ಲಿದ್ದರು. ರಾಮನ್ ಗೆ ಸಾಕಷ್ಟು ಶೈಕ್ಷಣಿಕ ಸೌಕರ್ಯಗಳನ್ನು ಒದಗಿಸುವ ಅನುಕೂಲ ಅವರಿಗಿರಲಿಲ್ಲ. ಇವರ ಎಳೆತನದ ವಿದ್ಯಾಭ್ಯಾಸ ವಿಶಾಖಪಟ್ಟಣದಲ್ಲಿ ಆಯಿತು. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು. ೧೯೦೦: ತಮ್ಮ ೧೨ ನೆ ವಯಸ್ಸಿನಲ್ಲೇ ಮೆಟ್ರಿಕ್ಯುಲೆಶನ್ ಮುಗಿಸಿದರು. ೧೯೦೪: ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ.ಎ. ಪದವಿ ೧೯೦೭: ಭೌತವಿಜ್ಞಾನದಲ್ಲಿ ಎಂ. ಎ. ಪದವಿThe Nobel Prize in Physics 1930 Sir Venkata Raman , Official Nobel prize biography, nobelprize.org ೧೯೦೭ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತೆಯಲ್ಲಿ, ಭಾರತ ಸರ್ಕಾರದ ವಿತ್ತ ವಿಭಾಗದಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ-ಜೀವನ ಆರಂಭಿಸಿದರು. ವಿದ್ಯಾರ್ಥಿಯಾಗಿದ್ದಾಗ ವೈಜ್ಞಾನಿಕ ಪ್ರಯೋಗಗಳಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಅವರು ವೃತ್ತಿನಿರತರಾಗಿದ್ದಾಗಲೂ ಮುಂದುವರಿಸಿದರು. ಇವರನ್ನು ಸರ್ಕಾರಿ ಕೆಲಸದ ನಿಮಿತ್ತ ಬರ್ಮದ ರಂಗೂನಿಗೆ ಕಳುಹಿಸಿಕೊಡಲಾಯಿತು. ನಾಗಪುರದಲ್ಲೂ ಕೆಲಕಾಲ ಸೇವೆ ಸಲ್ಲಿಸಿದರು. ಆದರೆ ಇವರ ಒಲವೆಲ್ಲ ವಿಜ್ಞಾನದ ಕಡೆಗೇ ಇದ್ದುದರಿಂದ ಕಲ್ಕತ್ತದಲ್ಲಿನ ದಿ ಇಂಡಿಯನ್ ಅಸೋಸಿಯೇಷನ್ ಫಾರ್ ದ ಕಲ್ಟಿವೇಶನ್ ಆಫ್ ಸೈನ್ಸ್ ಎಂಬ ಖಾಸಗಿ ವಿಜ್ಞಾನ ಸಂಶೋಧನೆ ಮಂದಿರದಲ್ಲಿ ಸಂಶೋಧನೆಯಲ್ಲಿ ತೊಡಗಿದರು. ಇಲ್ಲಿದ್ದಾಗ ಮೇಲ್ಮೈಕರ್ಷಣ (ಸರ್ಫೇಸ್ ಟೆನ್ಷನ್) ಮತ್ತು ಬೆಳಕಿನ ಸಂಚರಣೆಯನ್ನು (ಪ್ರಾಪಗೇಷನ್ ಆಫ್ ಲೈಟ್) ಕುರಿತಂತೆ ಕೆಲಸ ಮಾಡಿದರು. ಉದ್ಯೋಗ ನಿಮಿತ್ತ ಕಲ್ಕತ್ತದಿಂದ ಹೊರಗಿನ ಊರುಗಳಿಗೆ ಹೋಗಿದ್ದ ರಾಮನ್ ಅವರು 1911ರಲ್ಲಿ ಪುನಃ ಕಲ್ಕತ್ತೆಗೆ ಮರಳಿದರು. ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿ ಅಶುತೋಷ ಮುಖರ್ಜಿಯವರ ಆಮಂತ್ರಣದ ಮೇರೆಗೆ 1917ರಲ್ಲಿ ಇವರು ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ, ಆ ವಿಶ್ವವಿದ್ಯಾಲಯದ ಪಲಿತ್ ಭೌತವಿಜ್ಞಾನ ಪೀಠದ ಪ್ರಾಧ್ಯಾಪಕರಾಗಿ ಸೇರಿದರು. ಇದಕ್ಕೆ ಇವರ ಧರ್ಮಪತ್ನಿ ಲೋಕಸುಂದರಿ ರಾಮನ್ ಅವರ ಪ್ರೋತ್ಸಾಹವೂ ದೊರಕಿತ್ತು. ಸದಾ ಕುತೂಹಲಿ, ಪ್ರಯೋಗಪಟು ಮತ್ತು ಚಿಂತನಶೀಲರಾಗಿದ್ದ ರಾಮನ್ 1917ರಿಂದ ಮುಂದೆ ಮೂಲಭೂತ ಸಂಶೋಧನೆಗಳನ್ನು ಮಾಡಲು ಉದ್ಯುಕ್ತರಾದರು. ಬೆಳಕಿನ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುವುದು ಇವರ ಆಗಿನ ಆಸಕ್ತ ಕ್ಷೇತ್ರ. ೧೯೨೧ರಲ್ಲಿ ಕಲ್ಕತ್ತ ವಿಶ್ವವಿದ್ಯಾಲಯ ಇವರಿಗೆ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿತು. ೧೯೨೪ರಲ್ಲಿ 'ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿ'ಗೆ ರಾಮನ್ ಆಯ್ಕೆಯಾದರು ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ, 'ರಾಮನ್ ಎಫೆಕ್ಟ್'ನ್ನು 'ಬೆಂಗಳೂರಿ'ನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ 'ನೋಬೆಲ್ ಪ್ರಶಸ್ತಿ'ಗಳಿಸಿದರು. ಮದುವೆ ಡಾ. ರಾಮನ್, ೬, ಮೇ, ೧೯೦೭ ರಲ್ಲಿ ಲೋಕಸುಂದರಿ ಅಮ್ಮಾಳ್ ಎಂಬ ಹುಡುಗಿಯೊಂದಿಗೆ ವಿವಾಹವಾದರು (೧೮೯೨–೧೯೮೦). 'ರಾಮನ್', 'ಲೋಕಸುಂದರಿ ಅಮ್ಮಾಳ್' ದಂಪತಿಗಳಿಗೆ ಚಂದ್ರಶೇಖರ್, ಮತ್ತು ರಾಧಾಕೃಷ್ಣನ್, ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ರಾಮನ್ ಪರಿಣಾಮ ಈ ತತ್ತ್ವವು ವಿಜ್ಞಾನಕ್ಕೆ ಸರ್ ಸಿ.ವಿ. ರಾಮನ್ ರ ಒಂದು ದೊಡ್ಡ ಕೊಡುಗೆಯಾಗಿದೆ. ಆಕಾಶದ ನೀಲಿ ಬಣ್ಣ ಅವರನ್ನು ಸ್ಥಬ್ಧರನ್ನಾಗಿ ಮಾಡಿತ್ತು. ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ರಾಮನ್ ರನ್ನು ಮೊದಲಿನಿಂದಲೂ ಕಾಡುತ್ತಿತ್ತು. ಅದಕ್ಕೆ ಉತ್ತರ ಕಂಡು ಹಿಡಿಯಲು ಪ್ರಯೋಗ ಮಾಡುತ್ತ ಅವರು ಬಹಳ ಸಮಯವನ್ನು ವ್ಯಯಿಸಿದರು. ಸಮುದ್ರದ ಮೇಲೆ ವಿದೇಶ ಪ್ರಯಾಣದಲ್ಲಿದ್ದಾಗ ಕಡಲಿನ ನೀಲಿ ಬಣ್ಣದ ಕಾರಣವನ್ನು ಅರಿಯಲು ಪ್ರಯೋಗ ಮಾಡುತ್ತ ಹಡಗಿನ ತುಂಬ ಅಲೆದಾಡುತ್ತಿದ್ದರು. ಆಕಾಶದ ನೀಲಿ ಬಣ್ಣ ರಾಮನ್ ರ ಕುತೂಹಲ ಕೆರಳಿಸಿ ಪ್ರಯೋಗಕ್ಕೆ ತೊಡಗಿಸಿತು. ಹಾಗೇ ಬಗೆಬಗೆಯ ಹೂಗಳ ಬಣ್ಣದಿಂದಲೂ ಅವರು ಆಶ್ಚರ್ಯಚಕಿತರಾಗುತ್ತಿದ್ದರು. ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯ ಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ. ಇದು ಅನ್ವಯಿಕ ಉಪಯುಕ್ತತೆಯುಳ್ಳ ತತ್ವ.'ರಾಮನ್ ಪರಿಣಾಮದ ಬಗ್ಗೆ ಯೂಟ್ಯೂಬ್' ವಿವರಣೆ: ಯಾವುದೇ ಒಂದು ಬಣ್ಣದ ಉದಾಹರಣೆಗೆ ಕೆಂಪು, ನೀಲಿ, ಹಳದಿ ಇತ್ಯಾದಿ ಬೆಳಕಿನ ಕಿರಣದಂಡವನ್ನು ಅಶ್ರಕದ ಮೂಲಕ ಹಾಯಿಸಿ ಬಿಳಿತೆರೆಯ ಮೇಲೆ ಬೀಳಿಸಿದರೆ ಅದರ ರೋಹಿತ ದೊರೆಯುವುದು. ಇದರಲ್ಲಿ ಕೆಲವು ಉಜ್ವಲ ರೇಖೆಗಳು ಎದ್ದುಕಾಣುವುವು. ಇವೆಲ್ಲವೂ ಮೂಲ ಬೆಳಕಿನ ಬಣ್ಣದವೇ ಆಗಿ ತೋರಿದರೂ ಛಾಯೆಗಳಲ್ಲಿ ಸಂಯುಕ್ತವಾಗಿರುತ್ತದೆ ಮತ್ತು ಅಶ್ರಕ ಅದನ್ನು ವಿಭಜಿಸಿದೆ ಎಂದು ತಿಳಿಯುವುದು. ಆ ಒಂದೊಂದು ಘಟಕದ (ಅಂದರೆ ಛಾಯೆಯ) ಅಲೆಯ ಉದ್ದ ಬೇರೆ ಬೇರೆ ಇರುವುದರಿಂದ ಅದು ರೋಹಿತದಲ್ಲಿ ತನಗೇ ವಿಶಿಷ್ಟವಾದ ಸ್ಥಾನವನ್ನು ಪಡೆಯುತ್ತದೆ. ಈಗ ಅದೇ ಬೆಳಕನ್ನು ಮೊದಲು ಪಾರದರ್ಶಕ ಪದಾರ್ಥದ ಮೂಲಕವೂ ಮತ್ತೆ ಅಶ್ರಕದ ಮೂಲಕವೂ ಹರಿಸಿ ಅದರ ರೋಹಿತವನ್ನು ಪಡೆದರೆ ಇದರಲ್ಲಿ ಮೊದಲಿದ್ದ ಗೆರೆಗಳ ಜೊತೆಗೆ ಕೆಲವು ಹೊಸ ಗೆರೆಗಳು ಕಂಡುಬರುವುವು. ಆದ್ದರಿಂದ ಮೂಲ ಬೆಳಕಿನಲ್ಲಿ ಇದ್ದ ವಿವಿಧ ಅಲೆಯುದ್ದದ ರಶ್ಮಿಗಳ ಜೊತೆಗೆ ಹೊಸ ಅಲೆಯುದ್ದವೂ ಸೇರಿಕೊಂಡಿವೆ ಎಂದು ತೀರ್ಮಾನಿಸಬೇಕಾಗುವುದು. ಬೆಳಕಿನ ಹಾದಿಯಲ್ಲಿ ಪಾರದರ್ಶಕ ಪದಾರ್ಥ ಅಡ್ಡಬರುವುದರಿಂದ ಈ ಪರಿಣಾಮ ಕಂಡುಬರುತ್ತದೆ. ಇದೇ ರಾಮನ್ ಪರಿಣಾಮ. ಇದರ ಅಧ್ಯಯನದಿಂದ ಪಾರದರ್ಶಕ ಪದಾರ್ಥದ ಅಣುರಚನೆಯ ಬಗ್ಗೆ ಮಾಹಿತಿ ಪಡೆಯಬಹುದು. ಭೌತವಿಜ್ಞಾನ ಸಂಶೋಧನೆಗಳಲ್ಲಿ ರಾಮನ್ ಪರಿಣಾಮಕ್ಕೆ ಮಹತ್ತ್ವದ ಸ್ಥಾನವಿದೆ. ಇದರ ಆವಿಷ್ಕಾರ ಕಲ್ಕತ್ತದಲ್ಲಾದರೂ ರಾಮನ್ ಇದನ್ನು ಪ್ರಕಟಿಸಿದ್ದು ಬೆಂಗಳೂರಿನಲ್ಲಿ (28-2-1928). ೧೯೩೦ರ ನಂತರ thumb|ರಾಮನ್ ಪುತ್ಥಳಿ (ಬಿರ್ಲಾ ಇಂಡಸ್ಟ್ರಿಯಲ್ & ಟೆಚೊಲೊಜಿಕಲ್ ಮ್ಯೂಸಿಯಂ)|alt= ೧೯೩೩ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ರಾಮನ್ ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವಾಗಿ ಮಾಡಿಕೊಂಡರು. ಮರುವರ್ಷ ಇಂಡಿಯನ್ ಅಕೆಡಮಿ ಆಫ್ ಸೈನ್ಸಸ್‌ನ್ನು ಖಾಸಗಿಯಾಗಿ ತಮ್ಮ ಸಂಚಾಲಕತ್ವದಲ್ಲಿ ಸ್ಥಾಪಿಸಿದರು. ಇದರ ಉದ್ದೇಶಗಳಿಷ್ಟು: ಪ್ರಥಮದರ್ಜೆಯ ಸಂಶೋಧನೆ ಪ್ರಬಂಧಗಳನ್ನು ಪ್ರಕಟಿಸುವುದು. ವಿಜ್ಞಾನಸಂಬಂಧ ಸಮಸ್ಯೆಗಳ ಚರ್ಚೆಗೆ ಹೊಸ ವೇದಿಕೆ ಒದಗಿಸುವುದು. ಭಾರತದ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನೆಗಳನ್ನು ಸಂಘಟಿಸುವುದು. ಈ ಉದ್ದೇಶ ಸಿದ್ಧಿಗಾಗಿ ಸಂಶೋಧನ ಮಾಸಿಕವೊಂದನ್ನು (ಪ್ರೊಸೀಡಿಂಗ್ಸ್ ಆಫ್ ದಿ ಇಂಡಿಯನ್ ಅಕೆಡೆಮಿ) ಸಹ ರಾಮನ್ ಪ್ರಾರಂಭಿಸಿದರು. ತಮ್ಮ ನೆಚ್ಚಿನ ವಿಜ್ಞಾನ ಮಂದಿರವನ್ನು ಇವರು ಬೆಂಗಳೂರಿನ ಹೆಬ್ಬಾಳ ಎಂಬಲ್ಲಿ ಕಟ್ಟಿಸಿದರು (1948). 1939ರಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನ ನಿರ್ದೇಶಕತ್ವವನ್ನು ಬಿಟ್ಟು ಕೊಟ್ಟು ಕೇವಲ ಭೌತವಿಜ್ಞಾನ ವಿಭಾಗದ ಮುಖ್ಯರಾಗಿ ಉಳಿದರು. 1948ರಲ್ಲಿ ಈ ಹೊಣೆಗಾರಿಕೆಯನ್ನೂ ಕಳಚಿಕೊಂಡು ಸ್ವಂತ ಮಂದಿರದ ಪೂರ್ಣಕಾಲದ ಸಂಶೋಧಕ ಮತ್ತು ನೇತಾರರಾದರು. ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಂದೇ ಪ್ರಸಿದ್ಧವಾಗಿರುವ ಈ ಮಂದಿರದ ಜೀವನಾಡಿ ಏನಿರಬೇಕು ಎಂಬುದನ್ನು ಸ್ವತಃ ಅವರೇ ಹೀಗೆಂದು ಬರೆದಿದ್ದಾರೆ. ಅದರ ಕನ್ನಡ ಭಾವಾನುವಾದ ಹೀಗಿದೆ : "ನಮ್ಮ ಪ್ರಾಚೀನ ರಾಷ್ಟ್ರಕ್ಕೆ ತಕ್ಕುದಾದಂಥ ವಿಜ್ಞಾನ ಸಂಶೋಧನೆ ಕೇಂದ್ರವನ್ನು ಅಸ್ತಿತ್ವಕ್ಕೆ ತರಬೇಕೆಂಬುದು ನನ್ನ ತೀವ್ರ ಅಭಿಲಾಷೆ. ಈ ಕೇಂದ್ರದಲ್ಲಿ ನಮ್ಮ ದೇಶದ ತೀಕ್ಷ್ಣಮತಿಗಳು ವಿಶ್ವರಹಸ್ಯಗಳನ್ನು ಶೋಧಿಸಬೇಕು; ಮತ್ತು ಹಾಗೆ ಮಾಡುವುದರ ಮೂಲಕ ವಿಶ್ವಚಟುವಟಿಕೆಗಳನ್ನು ನಿಯಂತ್ರಿಸುತ್ತಿರುವ ಅತೀತ ಶಕ್ತಿಯನ್ನು ಗ್ರಹಿಸಲು ನಿಮಗೆ ನೆರವಾಗಬೇಕು. ಆತನ ದಿವ್ಯಕೃಪೆಯಿಂದ ನಮ್ಮ ದೇಶಪ್ರೇಮಿಗಳೆಲ್ಲರೂ ಈ ಕಾರಣವನ್ನು ಪೋಷಿಸುವ ವಿಧಾನವನ್ನು ಕಂಡಾಗ ಮಾತ್ರ ಈ ಗುರಿ ಸಿದ್ಧಿಸಿತು.'' ಅಲ್ಲಿ ಬಹಳಷ್ಟು ಸಂಶೋಧನೆಗಳನ್ನು ಮಾಡಿದರು. ಭಾವಿ ಸಂಶೋಧಕರಿಗೆ ಬಿಟ್ಟುಹೋಗಿರುವ ಈ ಸಂಸ್ಥೆ ವಿಶೇಷವಾಗಿ ಭೌತಶಾಸ್ತ್ರದ ಅತ್ಯಂತ ಪ್ರಮುಖ ಸಂಶೋಧನಾ ಸಂಸ್ಥೆಯಾಗಿದೆ. ಸೃಷ್ಟಿಯ ಸಕಲ ವಿದ್ಯಮಾನಗಳೂ ರಾಮನ್ ಅವರ ಆಸಕ್ತಿಯನ್ನು ಕೆರಳಿಸಿದ್ದುವು, ಎಂದೇ ಇವರ ಮಂದಿರದ ವಸ್ತುಸಂಗ್ರಹಾಲಯ ಮತ್ತು ಪುಸ್ತಕ ಭಂಡಾರಗಳು ವಿಶಾಲವ್ಯಾಪ್ತಿಯುಳ್ಳವಾಗಿವೆ. ಮೂಲತಃ ಇವರು ಭೌತವಿಜ್ಞಾನಿ ಆಗಿದ್ದರೂ ಇವರ ಕುತೂಹಲ ಸಕಲ ಶಾಸ್ತ್ರಗಳನ್ನೂ ಒಳಗೊಂಡಿತ್ತು. ವಿಜ್ಞಾನದಿಂದ ಒದಗುವ ಲಾಭ ಗ್ರಾಮೀಣ ಜನರಿಗೂ ದೊರಕಬೇಕು ಎಂಬುದು ರಾಮನ್ ಅವರ ಅಪೇಕ್ಷೆಯಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ಫಿಸಿಕ್ಸ್ ಫಾರ್ ದಿ ಕಂಟ್ರಿಸೈಡ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಮೂರು ಪ್ರಸಾರ ಭಾಷಣಗಳನ್ನು ರಾಮನ್ ನೀಡಿದರು. ಪ್ರಕೃತಿಯಲ್ಲಿನ ಬಣ್ಣಗಳು, ಖನಿಜಗಳ ವರ್ಣವೈಭವ, ವಜ್ರಗಳನ್ನು ಕುರಿತ ಶೋಧನೆ, ಖಗೋಳವಿಜ್ಞಾನ-ಹೀಗೆ ಹಲವಾರು ಕ್ಷೇತ್ರಗಳಲ್ಲಿ ಇವರ ಒಲವು ಇತ್ತು. ಇವರು ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರತಿಷ್ಠಿತ ಸಂಶೋಧನ ಪತ್ರಿಕೆಗಳಿಗೆ (ಜರ್ನಲ್ಸ್) ತನಿಯಾಗಿಯೂ ಇತರರೊಡಗೂಡಿಯೂ 350ಕ್ಕೂ ಹೆಚ್ಚಿನ ಸಂಶೋಧನ ಪ್ರಬಂಧಗಳನ್ನು ಬರೆದರು. ರಾಮನ್ ಅವರ ವಿದ್ಯಾಭ್ಯಾಸ, ಸಂಶೋಧನೆ, ಸಿದ್ಧಿ ಎಲ್ಲವೂ ನಡೆದದ್ದು ಭಾರತದ ಒಳಗೇ. ಅಂತಾರಾಷ್ಟ್ರೀಯ ಖ್ಯಾತಿ ಬಂದ ಬಳಿಕ ಮಾತ್ರವೇ ಇವರು ವಿದೇಶ ಪ್ರವಾಸ ಕೈಗೊಂಡರು. ನಿವೃತ್ತಿಯ ನಂತರ ರಾಮನ್ ನಿವೃತ್ತಿಗೊಂಡ ಬಳಿಕ ಇವರ ಸಂಶೋಧನಾ ಕೆಲಸಗಳಿಗಾಗಿ ಸರ್ಕಾರ ಧನಸಹಾಯ ನೀಡುವುದಕ್ಕೆ ಮುಂದಾಯಿತು. ಆದರೆ ಇವರು ತಮ್ಮ ವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಅಡ್ಡಿಯಾಗುವುದೆಂದು ಭಾವಿಸಿ ಆ ಸಹಾಯಧನವನ್ನು ತಿರಸ್ಕರಿಸಿದರು. ಮುಂದೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೂ ಇವರ ಹೆಸರನ್ನು ಸೂಚಿಸಲಾಗಿದ್ದು ಅದಕ್ಕೂ ಇವರು ತಮ್ಮ ವಿರೋಧ ವ್ಯಕ್ತಪಡಿಸಿದರು. ಗೌರವ, ಪ್ರಶಸ್ತಿಗಳು ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ (೧೯೨೪) ಸೈನ್ಸ್ ಸೊಸೈಟಿ ಆಫ್ ರೋಮ್ ಎಂಬ ಸಂಸ್ಥೆಯಿಂದ ಮ್ಯಾಬ್ಯುಟಿ ಪದಕ (೧೯೨೮) ನೈಟ್ ಹುಡ್ ಪ್ರಶಸ್ತಿ (೧೯೨೯) ನೋಬೆಲ್ ಪ್ರಶಸ್ತಿ (೧೯೩೦) ಲಂಡನ್ನಿನ ರಾಯಲ್ ಸೊಸೈಟಿಯಿಂದ ಹ್ಯೂಗ್ಸ್ ಪದಕ (೧೯೩೦) ಮೈಸೂರು ಮಹಾರಾಜರಿಂದ, 'ರಾಜ ಸಭಾ ಭೂಷಣ ಗೌರವ' (೧೯೩೫) ಅಮೆರಿಕ ಸಂಯುಕ್ತ ಸಂಸ್ಥಾನದ ಫ್ರಾಂಕ್ಲಿನ್ ಪದಕ (೧೯೪೧) ಭಾರತ ರತ್ನ ಪ್ರಶಸ್ತಿ (೧೯೫೪) ಲೆನಿನ್ ಶಾಂತಿ ಪ್ರಶಸ್ತಿ (೧೯೫೭) ಮರಣ ನವೆಂಬರ್ ೨೧ ೧೯೭೦ ರಲ್ಲಿ, 'ಪ್ರೊ.ರಾಮನ್' ರವರು, ದೇಮಹಳ್ಳಿಯಲ್ಲಿ ನಿಧನರಾದರು. ಹೆಚ್ಚಿನ ಮಾಹಿತಿ ಜಗಕ್ಕೆ ಬೆಳಕಿನ ಬಣ್ಣಗಳ ತೋರಿದ ಭಾರತೀಯ ವಿಜ್ಞಾನಿ ಸಿ.ವಿ.ರಾಮನ್‌; d: 07 ನವೆಂಬರ್ 2019 ಉಲ್ಲೇಖಗಳು Raman Effect: From Studying Cells to Detecting Bombs, Page :14, Author:Murthy, M.S.S., Science Reporter, Feb, 2016 ಬಾಹ್ಯ ಸಂಪರ್ಕಗಳು 'ಐ ಲವ್ ಇಂಡಿಯ,'ಸರ್.ಸಿ.ವಿ.ರಾಮನ್,' 'ಜನಶಕ್ತಿ', 'ರಾಮನ್ ಪರಿಣಾಮ: ಇದು ಬರೀ ಬೆಳಕಲ್ಲೋ ಅಣ್ಣಾ' 27 JAN, (ಸಂಪುಟ 9, ಸಂಚಿಕೆ 5, 1 ಬ್ರವರಿ 2015) 'ಜ್ಞಾನ-ವಿಜ್ಞಾನ'– ಜಯ0 'C.V.RAMAN-THE GREAT INDIAN PHYSICIST,hISTORICAL PHOTOGRAPHS OF INDIAN SUBCONTINENT ವಿಜಯ ಕರ್ನಾಟಕ, ಅನುದಿನವೂ ವಿಜ್ಞಾನ ದಿನವಾಗಲಿ, Feb,28,2016 ವರ್ಗ:ಭಾರತದ ವಿಜ್ಞಾನಿಗಳು ವರ್ಗ:ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯರು ವರ್ಗ:ನೊಬೆಲ್ ಪ್ರಶಸ್ತಿ ಪುರಸ್ಕೃತರು ವರ್ಗ:ಭಾರತ ರತ್ನ ಪುರಸ್ಕೃತರು ವರ್ಗ:ವಿಜ್ಞಾನಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಜಗದೀಶ್ಚಂದ್ರ ಬೋಸ್
https://kn.wikipedia.org/wiki/ಜಗದೀಶ್ಚಂದ್ರ_ಬೋಸ್
thumb|300px|ಜಗದೀಶ್ಚಂದ್ರ ಬೋಸ್ ಸರ್ ಜಗದೀಶ್‌ಚಂದ್ರ ಬೋಸ್,Page 3597 of Issue 30022. The London Gazette. (17 April 1917). Retrieved 1 September 2010. ಸಿಎಸ್‌ಐ, ಸಿಐಈ, ಎಫ್‌ಆರ್‌ಎಸ್Page 9359 of Issue 28559. The London Gazette. (8 December 1911). Retrieved 1 September 2010.Page 4 of Issue 27511. The London Gazette. (30 December 1902). Retrieved 1 September 2010. (ನವೆಂಬರ್ ೩೦, ೧೮೫೮ – ನವೆಂಬರ್ ೨೩, ೧೯೩೭) ಒಬ್ಬ ಬಹುಮುಖ ಪ್ರತಿಭೆಯ ಬಂಗಾಲಿ ಮೂಲದ ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನಿ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನಡೆಸಿದ್ದ ಬೋಸರು ಅವರ ಕಾಲದ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು. ಭಾರತ ಉಪಖಂಡದಲ್ಲಿ ಪ್ರಯೋಗವಿಜ್ಞಾನಕ್ಕೆ ಅಡಿಪಾಯ ಹಾಕಿದವರು ಇವರು. ರೇಡಿಯೋ ವಿಜ್ಞಾನದ ತಂದೆ ಎಂದೂ, ಬೆಂಗಾಲಿ ವಿಜ್ಞಾನಸಾಹಿತ್ಯದ ತಂದೆ ಎಂದೂ ಇವರನ್ನು ಪರಿಗಣಿಸಲಾಗುತ್ತದೆ. ತಮ್ಮ ಸಂಶೋಧನೆಗಳಿಗೆ ನೆರವಾಗುವಂತಹ ಅನೇಕ ಉಪಕರಣಗಳನ್ನು (ಕ್ರೆಸ್ಕೊಗ್ರಾಫ್ ಹಾಗು ಕೊಹೆರರ್) ತಾವೇ ಸ್ವತಃ ಕಂಡುಹಿಡಿದಿದ್ದರು. ಅಮೇರಿಕದ ಪೇಟೆಂಟ್ ತೆಗೆದುಕೊಂಡವರಲ್ಲಿ ಭಾರತೀಯ ಉಪಖಂಡದ ಮೊದಲಿಗರು. ಇದು ಆದದ್ದು ೧೯೦೪ರಲ್ಲಿ. ಅಂದಿನ ಲೀಗ್ ಆಫ್ ನೇಷನ್ಸ್ ಸಂಸ್ಥೆಯ ಬೌದ್ಧಿಕ ಸಹಕಾರ ಸಮಿತಿಯ ಸದಸ್ಯರಾಗಿದ್ದರು. ಜೀವಿ ಅಜೀವಿಗಳಲ್ಲಿಯೂ ಸಸ್ಯ ಪ್ರಾಣಿಗಳಲ್ಲಿಯೂ ಒಂದು ತೆರನಾದ ಭೌತ ಏಕತೆ ಇರುವುದನ್ನು ಗುರುತಿಸಿ ಇವರು ಮಾಡಿದ ಪ್ರಯೋಗಗಳು ಹಾಗೂ ಮೂಲಭೂತ ಸಂಶೋಧನೆಗಳು ಪ್ರಪಂಚದ ಗಮನವನ್ನು ಭಾರತದತ್ತ ಸೆಳೆದುವು. ಕಳೆದ ಶತಮಾನದ ಕೊನೆಗೆ ಜೀವಭೌತವಿಜ್ಞಾನದಲ್ಲಿ ಸಂಗೃಹೀತವಾಗಿದ್ದ ಜ್ಞಾನವನ್ನೇ ಪ್ರಶ್ನಿಸಿ ಆ ಕ್ಷೇತ್ರಕ್ಕೆ ಹೊಸ ತಿರುವುಕೊಟ್ಟರು. ಬೋಸ್ ಸಂಶೋಧನ ಸಂಸ್ಥೆ ಸ್ಥಾಪಿಸಿ ಭಾರತದಲ್ಲಿ ಉನ್ನತ ಸಂಶೋಧನೆಗಾಗಿ ಅನುವುಮಾಡಿಕೊಟ್ಟರು. ಸಕಾಲದಲ್ಲಿ ಮನಸ್ಸು ಮಾಡಿದ್ದರೆ ಬಾನುಲಿ ಪ್ರಸಾರ ಮತ್ತು ಅಭಿಗ್ರಹಣ ತಂತ್ರವನ್ನು ಶೋಧಿಸಿದ ಸಂಪೂರ್ಣ ಕೀರ್ತಿಗೆ ಮಾರ್ಕೊನಿಯ ಬದಲು ಇವರೇ ಪಾತ್ರರಾಗಬಹುದಿತ್ತು. ಜಗದೀಶಚಂದ್ರರು ಸದ್ಗೃಹಸ್ಥರು, ಸ್ಫೂರ್ತಿದಾಯಕ ಪ್ರಾಧ್ಯಾಪಕರು, ಸಮರ್ಥ ಸಂಶೋಧನ ನಿರ್ದೇಶಕರು, ಉತ್ತಮ ಉಪಕರಣಗಳ ಉಪಜ್ಞೆಕಾರರು, ಸಾಹಿತ್ಯ ಪ್ರೇಮಿ, ಸರಸವಾಗ್ಮಿ, ಪ್ರೌಢ ಪ್ರಬಂಧ ಪುಸ್ತಕಾದಿಗಳ ಲೇಖಕರು, ಭಾರತೀಯ ಸನಾತನ ಸಂಸ್ಕೃತಿಯ ಅಭಿಮಾನಿಗಳು. ಎಲ್ಲಕ್ಕೂ ಮಿಗಿಲಾಗಿ ಉಜ್ಜ್ವಲ ರಾಷ್ಟ್ರಪ್ರೇಮಿ. ಬಾಲ್ಯ ಮತ್ತು ವಿದ್ಯಾಭ್ಯಾಸ ಬೋಸ್ ಅವರು ಭಾರತದ ಬಂಗಾಳ ಪ್ರಾಂತ್ಯದಲ್ಲಿರುವ ಮೈಮನಸಿಂಗ್ ಎಂಬ ಈಗಿನ ಬಾಂಗ್ಲಾದೇಶಕ್ಕೆ ಸೇರಿದ ಪ್ರಾಂತ್ಯದಲ್ಲಿ ಜನಿಸಿದರು. ತಂದೆ ಭಗವಾನಚಂದ್ರರು ಫರೀದಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದರು. ತಾಯಿ ಸಾಂಪ್ರದಾಯಿಕ ಗೃಹಿಣಿ, ವಿಶಾಲ ಮನೋಭಾವದ ಮಹಿಳೆ. ಜಗದೀಶಚಂದ್ರರೇ ಮುಂದೆ ಬರೆದಂತೆ ತಾವು ಶಾಲಾ ಬಾಲಕರಾಗಿದ್ದಾಗ ಅಸ್ಪೃಶ್ಯಕುಲದ ತಮ್ಮ ಗೆಳೆಯರನ್ನು ಮನೆಗೆ ಕರೆದುಕೊಂಡು ಹೋದಾಗ ಅವರ ತಾಯಿ ಯಾವ ಭೇದವನ್ನು ಮಾಡದೆ ಮಾತೆಯ ಮಮತೆ ತೋರುತ್ತಿದ್ದರಂತೆ. ಜಗದೀಶಚಂದ್ರರಿಗೆ ಒಬ್ಬ ಅಕ್ಕ ಮತ್ತು ನಾಲ್ಕು ತಂಗಿಯರು. ತಂದೆ ಭಗವಾನಚಂದ್ರರಿಗೆ ಭಾರತೀಯ ಸಂಪ್ರದಾಯ ಸಂಸ್ಕೃತಿಗಳಲ್ಲಿ ಅಪಾರ ಗೌರವ ಮತ್ತು ವಿಶ್ವಾಸ. ಆಗಿನ ವಾತಾವರಣದಲ್ಲಿ ಶ್ರೀಮಂತರು ಮತ್ತು ಅಧಿಕಾರಿಗಳು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವುದು ಪ್ರತಿಷ್ಠೆಯ ಕುರುಹಾಗಿತ್ತು. ಆದರೆ ಭಗವಾನಚಂದ್ರರು ಹೀಗಲ್ಲ. ಸ್ವತಃ ಶಿಕ್ಷಣತಜ್ಞರೂ ಆಗಿದ್ದು ಔದ್ಯಮಿಕ ಮತ್ತು ತಾಂತ್ರಿಕ ಶಾಲೆಗಳನ್ನು ಸ್ಥಾಪಿಸಿದ್ದ ಇವರು ತಮ್ಮ ಮಗ ಮಾತೃಭೂಮಿಯ ನಿಜವಾದ ಪರಿಚಯ ಮಾಡಿಕೊಳ್ಳಲೆಂಬ ಘನ ಉದ್ದೇಶದಿಂದ ಈತನನ್ನು ಸನಾತನ ಮಾದರಿಯ ಒಂದು ಪಾಠಶಾಲೆಗೆ ಸೇರಿಸಿದರು. ತಂದೆಯವರ ಈ ನಿರ್ಣಯ ಮುಂದೆ ತಮ್ಮಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲು ಕಾರಣವಾಯಿತೆಂದು ಜಗದೀಶಚಂದ್ರರು ಉದ್ಧರಿಸಿದ್ದಾರೆ. ಆ ಶಾಲೆಯಲ್ಲಿಯೇ ಅವರಿಗೆ ನಿಸರ್ಗದ ಆಕರ್ಷಣೆ ಹುಟ್ಟಿತು. ಜೀವ ಅಜೀವಿಗಳ ವ್ಯವಹಾರಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಹೀಗೆ ಬಾಲ್ಯದಲ್ಲಿಯೇ ಬೆಳೆಯಿತು. ಆಗ ಅವರ ಮೇಲೆ ವಿಶೇಷ ಬೀರಿದ ವ್ಯಕ್ತಿಯೆಂದರೆ ಅವರ ತಂದೆಯೇ. ಸೆರೆಮನೆಯಿಂದ ಬಿಡುಗಡೆಯಾಗಿ ಬಂದಿದ್ದ ಒಬ್ಬ ಭಾರೀ ಡಕಾಯಿತನನ್ನು ಮಗು ಜಗದೀಶನ ಯೋಗಕ್ಷೇಮ ನೋಡಿಕೊಳ್ಳಲು ನಿಯಮಿಸಿ ಆ ಡಕಾಯಿತನನ್ನು ಸುಧಾರಿಸಿದ ಅಸಾಧಾರಣ ವ್ಯಕ್ತಿ ಭಗವಾನಚಂದ್ರರು. ಕಲಕತ್ತೆಯ ಸೇಂಟ್ ಝೇವಿಯರ್ ಕಾಲೇಜು ಹಾಗೂ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಓದಿ ಪದವೀಧರರಾದರು. ಆಗಿನ ಇತರ ಪ್ರತಿಭಾಶಾಲಿ ತರುಣರಂತೆ ಇವರು ಕೂಡ ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್ ಪರೀಕ್ಷೆಗೆ ಕಟ್ಟಬೇಕೆಂದು ಯೋಚಿಸಿದರು. ತಂದೆ ಭಗವಾನಚಂದ್ರರಿಗೆ ಮಗ ತಮ್ಮಂತೆ ಸರಕಾರದ ಗುಲಾಮನಾಗುವುದು ಇಚ್ಛೆಯಿರಲಿಲ್ಲ. ಆತನಿಗೆ ವೈದ್ಯಕೀಯ ಅಥವಾ ಇನ್ನಾವುದೋ ವಿಜ್ಞಾನ ವೃತ್ತಿ ಆಯಲು ಸೂಚಿಸಿದರು. ಜಗದೀಶಚಂದ್ರರು 1880ರಲ್ಲಿ ಲಂಡನ್ನಿಗೆ ವೈದ್ಯಕೀಯವನ್ನು ಕಲಿಯಲು ತೆರಳಿ ಲಂಡನ್ನಿನ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯಾಗಿ ಸೇರಿದರು. ಅಲ್ಲಿ ಮೊದಲನೆಯ ವರ್ಷವೇನೋ ಸುಗಮವಾಗಿ ಕಳೆಯಿತು. ಆದರೆ ಬಾಲಕವಾಗಿದ್ದಾಗ ಇವರಿಗೆ ಅಂಟಿಕೊಂಡಿದ್ದ ಕಾಲಾ ಅಜಾರ್ ಎಂಬ ಜ್ವರ ಇಂಗ್ಲೆಂಡಿನಲ್ಲಿ ಮತ್ತೆ ಮರುಕಳಿಸಿ ಇವರನ್ನು ಹಣ್ಣು ಮಾಡಿತು. ಇವರ ಗುರುಗಳು ಮತ್ತು ವೈದ್ಯರು ಇವರು ವೈದ್ಯಕೀಯ ಶಿಕ್ಷಣವನ್ನೇ ಬಿಡಬೇಕೆಂದು ಸಲಹೆ ಮಾಡಿದರು. ಹೀಗೆ ಇವರು ಅನಿವಾರ್ಯವಾಗಿ ಲಂಡನ್ ಬಿಟ್ಟು ಕೇಂಬ್ರಿಜಿಗೆ ಹೋಗಿ ವಿಜ್ಞಾನದ ವಿದ್ಯಾರ್ಥಿಯಾದರು. 1884ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಮರುವರ್ಷ ಲಂಡನ್ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ. ಪದವಿ ಪಡೆದರು. ನಂತರದ ಜೀವನ ೧೮೮೪ರಲ್ಲಿ ಕಲ್ಕತ್ತೆ ಮರಳಿ ಬಂದು ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಪ್ರೆಸಿಡೆನ್ಸಿ ಕಾಲೇಜನ್ನು ಸೇರಿಕೊಂಡರು. ಅಲ್ಲಿ ಬ್ರಿಟೀಷರ ಜನಾಂಗಭೇದವಿತ್ತು. ಸರಿಸಮಾನ ಸ್ಥಾನಗಳಲ್ಲಿದ್ದ ಬಿಳಿಯ ಪ್ರಾಧ್ಯಾಪಕರ ಮೂರನೆಯ ಎರಡರಷ್ಟು (2/3) ಪಗಾರ ಮಾತ್ರ ಭಾರತೀಯ ಪ್ರಾಧ್ಯಾಪಕರಿಗೆ ಕೊಡಬೇಕೆಂಬ ದುರ್ನಿಯಮ ಜಾರಿಗೆ ಬಂದಿತ್ತು. ಜಗದೀಶಚಂದ್ರರು ಇದನ್ನು ಪ್ರತಿಭಟಿಸಿ ಸಂಬಳ ತೆಗೆದುಕೊಳ್ಳದೇ ಮೂರು ವರ್ಷ ಪರ್ಯಂತ ದುಡಿದರು. ಇದೇ ಅವಧಿಯಲ್ಲಿ ವಿಕ್ರಮಪುರದ ದುರ್ಗಾಮೋಹನದಾಸರ ಮಗಳಾದ ಅಬಲಾರವರೊಡನೆ ಬೋಸರ ವಿವಾಹವಾಯಿತು (1887).Sengupta, Subodh Chandra and Bose, Anjali (editors), 1976/1998, Sansad Bangali Charitabhidhan (Biographical dictionary) Vol I, , p23, ಈಕೆ ವಿದ್ಯಾರ್ಹತೆಯಲ್ಲಿ ಗಂಡನಿಗೆ ಸರಿಜೋಡಿ. ಈಗ್ಗೆ ಒಂದು ಶತಮಾನದಷ್ಟು ಹಿಂದೆಯೇ ಅಬಲಾದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರೆಂಬ ಸಂಗತಿ ಇಂದು ಅಚ್ಚರಿ ಮೂಡಿಸುವಂತಿದೆ. ಪತಿಯ ಸ್ವಾಭಿಮಾನಕ್ಕೆ ಮೆಚ್ಚಿ ಈಕೆ ಅವರಿಗೆ ಯೋಗ್ಯ ಸಹಧರ್ಮಿಣಿ ಆದರು. ಬೋಸರ ವೈವಾಹಿಕ ಜೀವನ ಸುಖಮಯವಾಗಿ ಆದರ್ಶವಾಗಿತ್ತು. ಮೂರು ವರ್ಷಗಳ ಕಾಲ ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲ್ ಮತ್ತು ವಿದ್ಯಾ ಇಲಾಖೆಯ ನಿರ್ದೇಶಕ ಆಗಿದ್ದ ಬ್ರಿಟಿಷ್ ಅಧಿಕಾರಿ ಬೋಸರ ಪ್ರತಿಭೆ ಮತ್ತು ವ್ಯಕ್ತಿತ್ವ ಗಮನಿಸಿ ಅವರ ಆತ್ಮೀಯ ಮಿತ್ರನಾದ. ಹೀಗೆ ಬ್ರಿಟಿಷರಿಂದ ಭಾರತೀಯರಿಗೆ ಆಗುತ್ತಿದ್ದ ಅವಮಾನದ ವಿರುದ್ಧ ಗಳಿಸಿದ ನೈತಿಕ ಜಯದ ಕುರುಹಾಗಿ ಜಗದೀಶಚಂದ್ರ ಬೋಸರಿಗೆ ಹಿಂದಿನ ಮೂರು ವರ್ಷಗಳ ಸಂಪೂರ್ಣ ಪಗಾರ ಪಾವತಿಯಾಯಿತು. ಸಂಶೋಧನೆಗೆ ಅಗತ್ಯವಾದ ಸಲಕರಣೆಗಳು ಮತ್ತು ಹಣದ ಸಹಾಯ ಇರಲಿಲ್ಲ. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮೊದಲಿಗೆ ಪ್ರಯೋಗಾಲಯದ ಸೌಕರ್ಯವಿರಲಿಲ್ಲ. ಹಲವು ವರ್ಷಗಳ ಪ್ರಯತ್ನಾನಂತರ ಒಂದು ಸಣ್ಣ ಪ್ರಯೋಗಾಲಯ ಮಂಜೂರಾಯಿತು. ಅಲ್ಲಿ ಅವರು ತಮ್ಮ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿದರು. ಅವರ ಮೆಚ್ಚಿನ ಕ್ಷೇತ್ರ ವಿದ್ಯುತ್ ತರಂಗಗಳದಾಗಿತ್ತು. ಮ್ಯಾಕ್ಸ್‌ವಲ್ಲನ ವಿದ್ಯುತ್‌ಕಾಂತ ಕ್ಷೇತ್ರದ ತತ್ತ್ವ ಪ್ರಕಟವಾಗಿ ಆಗ ಕೇವಲ ಎರಡು ದಶಕಗಳು ಸಂದಿದ್ದುವು. ಹರ್ಟ್ಸ್ ಮೊದಲಾಗಿ ಅನೇಕ ಪ್ರಥಮ ದರ್ಜೆಯ ಭೌತವಿಜ್ಞಾನಿಗಳು ವಿದ್ಯುತ್‌ಕ್ರಾಂತೀಯ ಅಲೆಗಳ ಮೇಲೆ ಸಂಶೋಧನೆ ನಡೆಸಿದ ಕಾಲವದು. ಸ್ಫಟಿಕಗಳಿಂದ ವಿದ್ಯುತ್ ತರಂಗಗಳ ಧ್ರುವೀಕರಣ ಎಂಬ ಇವರ ಪ್ರಥಮ ಸಂಶೋಧನಾಪ್ರಬಂಧ 1895ರಲ್ಲಿ ಜರ್ನಲ್ ಆಫ್ ದಿ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಪ್ರತಿಕೆಯಲ್ಲಿ ಪ್ರಕಟವಾಯಿತು. ಅದೇ ವರ್ಷ ವಿದ್ಯುತ್ ವಕ್ರೀಭವನ ಸೂಚ್ಯಂಕಗಳ ನಿರ್ಣಯ ಎಂಬ ಎರಡನೆಯ ಸಂಶೋಧನಪ್ರಬಂಧ ಎಲೆಕ್ಟ್ರಿಶಿಯನ್ ಎಂಬ ಪ್ರತಿಕೆಯಲ್ಲಿ ಪ್ರಕಟವಾದಾಗ ಬೋಸರ ಸಂಶೋಧನೆಗೆ ಮಹತ್ತ್ವದ ತಿರುವು ದೊರೆಯಿತು. ಏಕೆಂದರೆ ಲಂಡನ್ನಿನ ರಾಯಲ್ ಸೊಸೈಟಿ ಇವರ ಸಂಶೋಧನೆಗೆ ಮನ್ನಣೆಕೊಟ್ಟು ಆ ಲೇಖನವನ್ನು ಪ್ರಕಟಿಸಿತಲ್ಲದೇ ಬೋಸರಿಗೆ ಸಂಶೋಧನೆ ಮುಂದುವರಿಸಲು ಸಹಾಯಧನವನ್ನು ಕೂಡ ಕೊಡಮಾಡಿತು. ಎರಡು ವರ್ಷಗಳ ತರುವಾಯ ಆಗಿನ ಬಂಗಾಲ ಸರಕಾರ ಸಹ ಬೋಸರಿಗೆ ಸಂಶೋಧನೆಗೆಂದು ಎಲ್ಲ ಅನುಕೂಲತೆಗಳನ್ನು ಒದಗಿಸಿಕೊಟ್ಟಿತು. ಇಟಲಿಯ ಮಾರ್ಕೊನಿಯೂ ಸೇರಿದಂತೆ ಆ ಕಾಲಕ್ಕೆ ಹಲವು ವಿಜ್ಞಾನಿಗಳು ಟೆಲಿಗ್ರಾಫ್ ಸಂದೇಶಗಳನ್ನು ತಂತಿಯ ಸಹಾಯವಿಲ್ಲದೇ ಕಳಿಸುವ ವಿಧಾನಗಳ ಕುರಿತು ಸಂಶೋಧನೆ ನಡೆಸಿದ್ದರು. ಇದನ್ನು ಪ್ರಪ್ರಥಮವಾಗಿ ಮಾಡಿದ ಕೀರ್ತಿ ಭಾರತೀಯ ವಿಜ್ಞಾನಿ ಬೋಸರಿಗೆ ಸಲ್ಲಬೇಕು. 1895ರಲ್ಲಿಯೇ ಅವರು ತಾವು ಸಂಶೋಧಿಸಿ ನಿರ್ಮಿಸಿದ್ದ ನಿಸ್ತಂತು ಪ್ರೇಷಕವನ್ನು ಕಲಕತ್ತೆಯ ಪುರಭವನದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಯಾವ ತಂತಿಯ ಸಂಪರ್ಕವೂ ಇಲ್ಲದೇ ದೂರದಲ್ಲಿಟ್ಟಿದ್ದ ತಮ್ಮ ಉಪಕರಣದಿಂದ ವಿದ್ಯುತ್ ತರಂಗಗಳನ್ನು ಉತ್ಪಾದಿಸಿ ಒಂದು ಕೋಣೆಯಲ್ಲಿಟ್ಟಿದ್ದ ಭಾರವಾದ ವಸ್ತುವನ್ನು ಚಲಿಸುವಂತೆ ಮಾಡಲು ಮತ್ತು ಒಂದು ವಿಶೇಷ ವಿದ್ಯುತ್ ಗಂಟೆ ಬಾರಿಸುವಂತೆ ಮಾಡಲು ಅವನ್ನು ಉಪಯೋಗಿಸಿದರು. ಅವರ ಆ ಉಪಕರಣಕ್ಕೆ ಕೊಹಿಯರರ್ ಎಂದು ಹೆಸರು. ಇಂದಿನ ಬಾನುಲಿ ವ್ಯವಸ್ಥೆಯ ಆದಿಮರೂಪ ಇದಾಗಿದ್ದಿತೆಂದು ಗಮನಿಸಿದರೆ ಅವರ ಸಂಶೋಧನೆಯ ಮಹತ್ತ್ವ ಗೊತ್ತಾಗುತ್ತದೆ. ಈ ಶೋಧನೆಯ ವಿವರವನ್ನು 1896ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿಗೆ ತಿಳಿಸಿದಾಗ ಅದು ಆಶ್ಚರ್ಯಚಕಿತವಾಯಿತು. ರಾಯಲ್ ಸೊಸೈಟಿ ಮುಂದೆ ಅವರನ್ನು ಉಪನ್ಯಾಸಗಳಿಗಾಗಿ ಮೂರು ಬಾರಿ ಆಹ್ವಾನಿಸಿ ಗೌರವಿಸುವುದಕ್ಕೆ ಇದು ನಾಂದಿಯಾಯಿತು. ಅದೇ ವರ್ಷ ಲಂಡನ್ ವಿಶ್ವವಿದ್ಯಾಲಯ ಬೋಸರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ ಕೊಟ್ಟು ಪುರಸ್ಕರಿಸಿತು.https://vigyanprasar.gov.in/bose-jagdish-chandra/ Bose Jagdish Chandra, igyanprasar.gov.in ಈ ಪದವಿ ಅವರಿಗೆ ಸಂದದ್ದು ಭೌತವಿಜ್ಞಾನದಲ್ಲಿಯ ಸಂಶೋಧನೆಗಳಿಗಾಗಿಯೇ ಎಂಬುದನ್ನು ಗಮನಿಸಬೇಕು. ಅವರು ತಮ್ಮ ಸಂಶೋಧನೆಗಳಿಂದ ವಾಣಿಜ್ಯಿಕ ಲಾಭ ಮಾಡಿಕೊಳ್ಳುವುದರ ಬದಲು ತಾವು ಕಂಡುಹಿಡಿದುದನ್ನು ಉಳಿದವರು ಅಭಿವೃದ್ಧಿಪಡಿಸಲಿ ಎಂಬ ಮಹಾನ್ ಮನೋಧರ್ಮವನ್ನು ಬಹಿರಂಗಪಡಿಸಿದರು. ನಂತರದಲ್ಲಿ, ಅವರು ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸ ದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದರು. ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಿದರು. ಬೋಸರು ನವನವೀನ ಉಪಕರಣಗಳನ್ನು ಸಂಶೋಧಿಸಿ ಬಳಸುವುದರಲ್ಲಿ ಸಿದ್ಧಹಸ್ತರು. ಭೌತವಿಜ್ಞಾನದಲ್ಲಿಯ ಪ್ರಾರಂಭಿಕ ಪ್ರಯೋಗಗಳಿಗೆ ಅವರಿಗೆ ಬೇಕಾಗಿದ್ದ ವಿದ್ಯುತ್ ತರಂಗಗಳನ್ನು ಉತ್ಪಾದಿಸಲು ಎಲೆಕ್ಟ್ರಿಕ್ ರೇಡಿಯೇಟಿವ್ ಎಂಬ ಉಪಕರಣ ನಿರ್ಮಿಸಿದರು. ಅದು 25ರಿಂದ 5 ಮಿಲಿ ಮೀಟಿರುಗಳಷ್ಟು ಹ್ರಸ್ವತರಂಗಗಳನ್ನು ವಿಕಿರಣಗೊಳಿಸುತ್ತಿತ್ತು. ಈ ತರಂಗಗಳ ಪ್ರಕಾಶಸದೃಶ ಭೌತಗುಣಧರ್ಮಗಳನ್ನೆಲ್ಲ ಅವರು ಸಂಪೂರ್ಣವಾಗಿ ಅಭ್ಯಸಿಸಿದರು. ಲಂಡನ್ನಿನ ರಾಯಲ್ ಸೊಸೈಟಿಯಲ್ಲಿ ಉಪನ್ಯಾಸಮಾಡಲು ಮೊದಲನೆಯ ಸಲ ಅಹ್ವಾನಿತರಾದಾಗ (1897) ತಾವು ಕಲಕತ್ತೆಯಲ್ಲಿ ನಿರ್ಮಿಸಿದ್ದ ಪ್ರೇಷಕ ಅಭಿಗ್ರಾಹಕಗಳೆರಡೂ ಇದ್ದ ಒಂದು ಉಪಕರಣವನ್ನು ಅಲ್ಲಿ ಪ್ರದರ್ಶಿಸಿದರು. ಅವರ ವಿದ್ಯುತ್ ತರಂಗಗಳ ಉಪಕರಣಗಳು ಹ್ರಸ್ವತರಂಗಗಳ ರೋಹಿತ ಮಾಪಕಗಳನ್ನು ಒಳಗೊಂಡಿದ್ದುವು. ಆದೇ ಕಾಲಕ್ಕೆ ಅವರು ಯಾಂತ್ರಿಕ ಅಥವಾ ಸೂಕ್ಷ್ಮ ಪ್ರಚೋದನೆಗಳು ವಿದ್ಯುತ್ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಬಲ್ಲ ತಂತ್ರವನ್ನು ಶೋಧಿಸಿದರು. ಬಹುಶಃ ಅವುಗಳ ಸೂಕ್ಷ್ಮ ಸಂವೇದಿತ್ವವೇ ಬೋಸರನ್ನು ಜೀವಜಗತ್ತಿನಲ್ಲಿಯ ಸೂಕ್ಷ್ಮ ಪ್ರತಿಕ್ರಿಯೆಗಳನ್ನು ನಿಖರವಾಗಿ ಅಳೆಯುವಂತ ಪ್ರೇರಿಸಿರಬೇಕು. ಅವರು ರಚಿಸಿದ್ದ ಕ್ರಿಸ್ಕೊಗ್ರಾಫ್ ಎಂಬ ಉಪಕರಣ ಇದಕ್ಕೆ ಉದಾಹರಣೆ. ಸಸ್ಯಗಳಲ್ಲಿ ನಡೆಯುವ ಸಂಕೋಚನ ವಿಕಸನಗಳನ್ನು ಅಳೆಯುವ ಸ್ಪೈಗ್ಮೊಗ್ರಾಫ್ ಯಂತ್ರವನ್ನು ಕೂಡ ಇಲ್ಲಿ ಉದಾಹರಿಸಬಹುದು. ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷ ಬೋಸರ ಸಂಶೋಧನ ಕ್ಷೇತ್ರವನ್ನು ಭೌತವಿಜ್ಞಾನದಿಂದ ಜೀವವಿಜ್ಞಾನಕ್ಕೆ ಬದಲಿಸಿತು. ಇವರಾಗ ವಿಶೇಷತಃ ಸಸ್ಯವಿಜ್ಞಾನದಲ್ಲಿ ಭೌತವೈಜ್ಞಾನಿಕಮಾಪನ ಪದ್ಧತಿಗಳನ್ನು ಪ್ರಯೋಗಿಸಲು ತೊಡಗಿದರು. ಭೌತವಿಜ್ಞಾನಿಯೊಬ್ಬ ಹೀಗೆ ಅನ್ಯಕ್ಷೇತ್ರದಲ್ಲಿ ಕಾಲಿಟ್ಟಾಗ ಅಲ್ಲಿಯ ವಿಜ್ಞಾನಿಗಳು ಇವರನ್ನು ಮುಕ್ತ ಹೃದಯದಿಂದ ಸ್ವಾಗತಿಸದೆ ಇದ್ದದ್ದು ಅಸಹಜವಲ್ಲ. ಇದನ್ನು ಪರಿಗಣಿಸದೆ ಅವರು ಸಸ್ಯ ಕ್ಷೇತ್ರದಲ್ಲಿಯೇ ದೃಢವಾಗಿ ಬೇರೂರಿ ತಮ್ಮ ಅಪ್ರತಿಮ ಸಂಶೋಧನಾ ಸಾಮರ್ಥ್ಯವನ್ನು ಅಲ್ಲಿಯೇ ಪ್ರದರ್ಶಿದರು. ನಿರ್ಜೀವ ವಸ್ತುಗಳೂ ಜೀವಿಗಳೂ ವಿದ್ಯುತ್ ಪ್ರೇರಣೆಗೆ ಒಳಗಾದಾಗ ಒಂದೇ ರೀತೀಯ ಪ್ರತಿಕ್ರಿಯೆಗಳನ್ನು ಪ್ರದರ್ಶಿಸುತ್ತವೆ. ಚಿಂತೆ, ಬಳಲಿಕೆ, ನೆನಪು ಮೊದಲಾದ ವಿಷಯಗಳಲ್ಲಿ ಸತುವು ಕೂಡ ಜೀವವಿದ್ದಂತೆಯೇ ವರ್ತಿಸಿದ್ದನ್ನು ತೋರಿಸಿ ಅವರು ವಿಜ್ಞಾನಿಗಳನ್ನು ಬೆರಗುಗೊಳಿಸಿದರು. ಪ್ರಾಣಿ ಸಸ್ಯಗಳ ಜೈವಿಕ ಚಟುವಟಿಕೆಗಳಲ್ಲಿರುವ ಅಸಮತೆ ನಮಗೆ ಗೊತ್ತು. ಆಘಾತಕ್ಕೆ ಈಡಾದಾಗ ಪ್ರಾಣಿಗಳು ಚಲನೆಯಿಂದ ಪ್ರತಿಕ್ರಿಯೆ ತೋರಿಸುತ್ತವೆ. ಅವುಗಳಲ್ಲಿರುವ ನರಮಂಡಲಗಳು ಈ ಪ್ರತಿಕ್ರಿಯೆಗಳಿಗೆ ಕಾರಣ. ಇವನ್ನು ವಿದ್ಯುತ್ ಸ್ಪಂದನಗಳಾಗಿ ಪರಿವರ್ತಿಸಿ ಅಳೆಯಬಹುದು. ಸಸ್ಯ ಜಗತ್ತಿನಲ್ಲಿಯೂ ಇದೇ ರೀತಿ ಪ್ರತಿಕ್ರಿಯಾ ವ್ಯವಸ್ಥೆ ಇದೆಯೇ ಹೇಗೆಂದು ಪರೀಕ್ಷಿಸಲು ಬೋಸರು ನೂರಾರು ಪ್ರಯೋಗಗಳನ್ನು ಮಾಡಿದರು. ಪ್ರಾಣಿಗಳಿಗೆ ಮಾತ್ರ ಇರಬಹುದೆಂದು ತಿಳಿದಿರುವ ವಿಶೇಷ ಪ್ರತಿಕ್ರಿಯೆಗಳೆಲ್ಲ ಗಿಡಗಂಟಿಗಳಿಗೂ ಇವೆಯೆಂದು ಅವರು ಪ್ರಥಮ ಬಾರಿಗೆ ಸಾಧಿಸಿದರು. ಉದಾಹರಣೆಗೆ ಒಂದು ಗಿಡಕ್ಕೆ ಹೊಡೆದಾಗ ಅದು ಪ್ರತಿಕ್ರಿಯೆ ತೋರಿಸಲು ಎಷ್ಟು ಅವಧಿ ತೆಗೆದುಕೊಳ್ಳಬಹುದು? ಸಾಮಾನ್ಯ ಸ್ಥಿತಿಯಲ್ಲಿ ಈ ಅವಧಿ 1/600 ಸೆಕೆಂಡಿನಷ್ಟು ಅಲ್ಪವೆಂದು ಅಳೆದರು. ಅದೇ ರೀತಿ ಆ ಸಸ್ಯ ದಣಿದಾಗ ಈ ಕಾಲಾವಧಿ ಹೆಚ್ಚಾಗಬಹುದೆಂದು ಗೊತ್ತಾಯಿತು. ಬಲವಾದ ಆಘಾತ ಬಡಿದರೆ ಗಿಡಗಳು ಕೂಡ ಮಂಕಾದವರಂತೆ ವರ್ತಿಸುತ್ತವೆ. ಈ ಪ್ರತಿಕ್ರಿಯಾವಧಿ ಋತುಮಾನವನ್ನು ಅವಲಂಬಿಸಿರುವುದು. ಸಸ್ಯಗಳು ಕೂಡ ವಿಷ ಪದಾರ್ಥಗಳನ್ನು ಊಡಿದಾಗ ಕುಂದುತ್ತವೆ ಮತ್ತು ಅವನ್ನು ನಿವಾರಿಸಿದಾಗ ಚೇತರಿಸಿಕೊಳ್ಳುತ್ತವೆ: ಮತ್ತೇರಿಸುವ ಪದಾರ್ಥಗಳನ್ನು ಉಣಿಸಿದಾಗ ಅವು ಪ್ರಾಣಿಗಳಂತೆಯೇ ಅಮಲೇರಿ ವರ್ತಿಸುತ್ತವೆ; ಸಸ್ಯಗಳೂ ರಾತ್ರಿ ನಿದ್ರಿಸಿ ಮುಂಜಾನೆ ಎಚ್ಚರವಾಗುತ್ತದೆ ಎಂದು ಮುಂತಾಗಿ ಬೋಸರು ತೋರಿಸಿದರು. ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು ಸಸ್ಯದ ಒಂದು ತುದಿ ಮುಟ್ಟಿದರೆ ಅದರ ಎಲ್ಲ ಎಲೆಗಳೂ ಮುದುಡಿಕೊಳ್ಳುವ ಪ್ರತಿಕ್ರಿಯೆ ಎಲ್ಲರಿಗೂ ಗೊತ್ತು. ಇದು ಉಳಿದ ಪ್ರತಿಕ್ರಿಯೆಗಳಿಂದ ಈ ಸಸ್ಯದಲ್ಲಿ  ತೀವ್ರವಾಗಿರುವುದರಿಂದ ಯಾವುದೇ ಉಪಕರಣದ ಸಹಾಯವಿಲ್ಲದೇ ಇಂಥ ಪ್ರತಿಕ್ರಿಯೆಯನ್ನು ಗುರುತಿಸಬಲ್ಲವು. ಉಳಿದ ಸಸ್ಯಗಳಲ್ಲಿ ಕೂಡ ಸಂಭವಿಸುವ ಈ ತೆರನಾದ ಪ್ರತಿಕ್ರಿಯೆಗಳನ್ನು ಗುರುತಿಸಲು ಬೋಸರು ನಿರ್ಮಿಸಿರುವ ವಿವಿಧ ಉಪಕರಣಗಳ ಸಹಾಯಬೇಕು. ಸಸ್ಯಗಳಲ್ಲಿಯೂ ಪ್ರತಿಕ್ರಿಯೆಗಳನ್ನು ಸಾಗಿಸಲು ವಿಶಿಷ್ಟ ನರಗಳಿವೆ. ಅವು ಕೂಡ ನೋವು ನಲಿವುಗಳನ್ನು ಪ್ರಾಣಿಗಳಂತೆಯೆ ಅನುಭವಿಸುತ್ತವೆ. ಹೀಗೆ ಸಸ್ಯಜಗತ್ತಿಗೂ ಪ್ರಾಣಿ ಜಗತ್ತಿಗೂ ಹೋಲಿಕೆ ಮತ್ತು ಏಕತೆ ಇರುವುದನ್ನು ಬೋಸರು ಸಿದ್ಧಪಡಿಸಿ ಜೀವ ಭೌತವಿಜ್ಞಾನದಲ್ಲಿ ಹೊಸ ಕ್ರಾಂತಿ ಉಂಟುಮಾಡಿದರು. ಬೋಸರು ಭೌತವಿಜ್ಞಾನ ಕ್ಷೇತ್ರ ಬಿಟ್ಟು ಜೀವವಿಜ್ಞಾನ ಕ್ಷೇತ್ರ ಪ್ರವೇಶಿಸಿದಾಗ ಸಾಕಷ್ಟು ವಿರೋಧ ಎದುರಿಸಬೇಕಾಯಿತು. ಅವರ ಪ್ರಾರಂಭಿಕ ಹೋರಾಟ ಕೂಡ ರೋಮಾಂಚಕಾರಿಯಾಗಿದೆ. 1897ರಲ್ಲಿ ಅವರು ರಾಯಲ್ ಸೊಸೈಟಿಯಲ್ಲಿ ನೀಡಿದ ಶುಕ್ರವಾರ ಸಂಜೆ ಉಪನ್ಯಾಸ ಎಲ್ಲರಿಂದಲೂ ಮೆಚ್ಚುಗೆ ಪಡೆಯಿತು. ಆದರೆ ಸಸ್ಯ ಮತ್ತು ಪ್ರಾಣಿಗಳ ಪ್ರತಿಕ್ರಿಯೆಗಳ ಏಕರೂಪಕ್ಕೆ ಸಿದ್ಧಪಡಿಸಿದ ಅವರ ಎರಡನೆಯ ಉಪನ್ಯಾಸ (1901) ಮಿಶ್ರ ಪ್ರತಿಕ್ರಿಯೆಗೆ ಒಳಗಾಯಿತು. ಆಗ ವೈದ್ಯುತಶರೀರ ಕ್ರಿಯಾವಿಜ್ಞಾನದ ಅಧ್ಯಯನದಲ್ಲಿ ಜಾನ್ ಸ್ಯಾಂಡರ್‌ಸನ್ ಎಂಬ ವಿಜ್ಞಾನಿಯ ನಿರ್ಣಯವೇ ವೇದಾವಾಕ್ಯವೆನಿಸುತ್ತಿತ್ತು. ಬೋಸರ ಉಪನ್ಯಾಸ ಕೇಳಲೆಂದೇ ಈತ ಆಕ್ಸ್‌ಫರ್ಡಿನಿಂದ ಲಂಡನ್ನಿಗೆ ಬಂದಿದ್ದ. ಇವನೂ ಇವನ ಬೆಂಬಲಿಗರೂ ಪೂರ್ವಾಗ್ರಹಪೀಡಿತರಾಗಿ ಬೋಸರ ನಿರ್ಣಯಗಳ ಋಜುತ್ವವನ್ನು ಪ್ರಶ್ನಿಸಿದರು. ಇದರಿಂದಾಗಿ ರಾಯಲ್ ಸೊಸೈಟಿ ಕೂಡ ಬೋಸರ ನಿರ್ಣಯಗಳನ್ನೂ ಪ್ರಬಂಧ ಪ್ರಕಟಣೆಯನ್ನೂ ನಿರಾಕರಿಸಿತು. ಬೋಸರಿಗೇನೂ ನಿರಾಶೆಯಾಗಲಿಲ್ಲ. ಅದೊಂದು ವಿಜ್ಞಾನ ವರ್ಣಾಶ್ರಮದ ಹೇಯ ಪ್ರದರ್ಶನವೆಂದು ಅವರಿಗೆ ಗೊತ್ತಿತ್ತು. ರಾಯಲ್ ಸೊಸ್ಶೆಟಿಯಲ್ಲಿ ಈ ವಿವಾದಾತ್ಮಕ  ಉಪನ್ಯಾಸ ಕೇಳಿದ್ದ ಕೆಲವು ಪ್ರಮುಖ ಜೀವವಿಜ್ಞಾನಿಗಳು ಆಗ ಬೋಸರಿಗೆ ಬೆಂಬಲವಾಗಿ ನಿಂತರು. ಆಕ್ಸ್‌ಫರ್ಡಿನ ಪ್ರಾಧ್ಯಾಪಕ ವೈನ್ಸ್ ಎಂಬ ಸಸ್ಯವಿಜ್ಞಾನಿ ವಿಶೇಷ ಆಸ್ಥೆ ತೋರಿಸಿ ಈ ಪ್ರಬಂಧವನ್ನು ಪ್ರಕಟಿಸಲು ಮುಂದೆ ಬಂದ. ಇದೇ ಸುಮಾರಿಗೆ ಬೋಸರ ಸಂಶೋಧನೆಯ ಚೌರ್ಯ ಮಾಡಿ ಪ್ರಕಟಿಸುವ ಪ್ರಯತ್ನಗಳೂ ನಡೆದವು. ತಮ್ಮ ಸಂಶೋಧನ ನಿರ್ಣಯಗಳು ಬೇರಾರದೂ ಅಲ್ಲವೆಂದು ಸಿದ್ಧಪಡಿಸಲು ಅವರು ಒಂದು ವಿಚಾರಣಸಮಿತಿಯ ಮುಂದೆ ಬರಬೇಕಾಯಿತು. ಇವರ ಮನಸ್ಸಿಗೆ ಈ ಎಲ್ಲಾ ಘಟನೆಗಳು ನೋವು ಉಂಟುಮಾಡಿದವು. ಕೊನೆಗೆ ವಿಚಾರಣ ಸಮಿತಿಯು ಈ ಸಂಶೋಧನೆಗಳ ಮೂಲ ಕರ್ತೃ ಸಾಕ್ಷಾತ್ ಬೋಸರೇ ಎಂದು ನಿರ್ಣಯವಿತ್ತಿತ್ತು. ಅಂದಿನಿಂದ ಇವರಿಗೆ ಏಕಪ್ರಕಾರವಾಗಿ ವಿವಾದಾತೀತ ಮನ್ನಣೆ ದೊರಕಿ ಇವರ ವೈಜ್ಞಾನಿಕ ಪ್ರತಿಷ್ಠೆ ಜೀವವಿಜ್ಞಾನ ಕ್ಷೇತ್ರದಲ್ಲೂ ಭದ್ರವಾಯಿತು. ತಮ್ಮ ಸಂಶೋಧನೆಗಳನ್ನು ಸಾದರಪಡಿಸಿ ಉಪನ್ಯಾಸಗಳನ್ನು ನೀಡಲು ಬೋಸರಿಗೆ ಮೂರು ಬಾರಿ ರಾಯಲ್ ಸೊಸೈಟಿ ಆಹ್ವಾನಿಸಿದ್ದನ್ನು  ಗಮನಿಸಿದರೆ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠತಮ ವಿಜ್ಞಾನಿಗಿರಬೇಕಾದ ಗೌರವ ಸ್ಥಾನವಿದ್ದಿತೆಂಬುದು ಸ್ಪಷ್ಟವಾಗುತ್ತದೆ. ಪ್ರಪಂಚದ ವಿವಿಧ ವಿಶ್ವವಿದ್ಯಾಲಯಗಳೂ ವಿಜ್ಞಾನ ಸಂಸ್ಥೆಗಳೂ ಅವರನ್ನೂ ಆಮಂತ್ರಿಸಿ ಗೌರವಿಸಲು ಪೈಪೋಟಿ ನಡೆಸುವಂಥ ಪರಿಸ್ಥಿತಿ ಏರ್ಪಟ್ಟಿತ್ತು. ಅವರು 1900ರಲ್ಲಿ ಪ್ಯಾರಿಸ್‌ಗೆ ಮತ್ತು 1915ರಲ್ಲಿ ಇಂಗ್ಲೆಂಡಿನ ಪ್ರವಾಸದೊಂದಿಗೆ ಅಮೆರಿಕೆಯನ್ನೂ ಒಳಗೊಂಡಂತೆ ಪ್ರಪಂಚದ ಬೇರೆ ಬೇರೆ ವಿಜ್ಞಾನಸಂಸ್ಥೆಗಳಿಗೆ ಮತ್ತು ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ಉಪನ್ಯಾಸಗಳನ್ನು ಮಾಡಿದರು. ಆಮೇಲೆ ಕೂಡ ಅವರು ಹಲವಾರು ಪ್ರಪಂಚ ಪರ್ಯಟನೆ ಕೈಗೊಂಡರು. ಬೋಸರಿಗೆ ಪದವಿ ಪ್ರಶಸ್ತಿಗಳು ವಿಪುಲವಾಗಿ ದೊರೆತುವು. ಕಲಕತ್ತಾ ವಿಶ್ವ ವಿದ್ಯಾಲಯ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿತು. ಆಗಿನ ಭಾರತ ಸರ್ಕಾರ 1903ರಲ್ಲಿ ಸಿ.ಐ.ಇ. ಬಿರುದನ್ನೂ 1911ರಲ್ಲಿ ಸಿ.ಎಸ್.ಐ. ಬಿರುದನ್ನೂ ಪ್ರದಾನಿಸಿತು. 1916ರಲ್ಲಿ ಬ್ರಿಟಿಷ್ ಸರ್ಕಾರ ನೈಟ್ ಬಿರುದನ್ನು (ಸರ್) ನೀಡಿ ಗೌರವಿಸಿತು. 1920ರಲ್ಲಿ ಇವರು ರಾಯಲ್ ಸೊಸ್ಶೆಟಿಯ ಸದಸ್ಯರಾಗಿ (ಎಫ್.ಆರ್.ಎಸ್.)  ಚುನಾಯಿತರಾದರು. ಭಾರತದಲ್ಲಿ ಹಿಂದೊಮ್ಮೆ ನಲಂದಾ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಿದ್ದಂತೆ ಪೂರ್ತಿ ವಿಜ್ಞಾನ ಸಂಶೋಧನೆಗೆ ಮೀಸಲಾದ ಒಂದು ಸಂಸ್ಥೆ ಕಟ್ಟಬೇಕೆಂದು ಬೋಸರು ಕನಸು ಕಾಣುತ್ತಿದ್ದರು. 1917 ನವೆಂಬರ್ 30ರಂದು ಕಲಕತ್ತೆಯಲ್ಲಿ ಬೋಸ್ ಸಂಶೋಧನಸಂಸ್ಥೆ ಪ್ರಾಂಭವಾದಾಗ ಇದು ನನಸಾಯಿತು. ಬೋಸ್ ಇದನ್ನು ದೇಶಕ್ಕೆ ಅರ್ಪಿಸಿ ಜಾತಿ, ಭಾಷೆ, ಲಿಂಗ ಭೇದವಿಲ್ಲದೆ ಎಲ್ಲರೂ ಇದರಲ್ಲಿ ಸಂಶೋಧನಕಾರ್ಯ ನಡೆಸಲೆಂದು ಹಾರೈಸಿದರು. ಇವರು ಆಗಾಗ ತಮ್ಮ ಸಂಸ್ಥೆಯಲ್ಲಿ ಪ್ರಬುದ್ಧ ಉಪನ್ಯಾಸಗಳನ್ನು ಮಾಡುತ್ತಿದ್ದರು. ಅವರು ಸಾರ್ವಜನಿಕವಾಗಿ ಮಾಡುತ್ತಿದ್ದ ಉಪನ್ಯಾಸಗಳಲ್ಲಿ ಅವರ ರಾಷ್ಟ್ರ ಪ್ರೇಮ, ಸಾಹಿತ್ಯಾಸಕ್ತಿ ಮತ್ತು ಸಾಂಸ್ಕೃತಿಕ ಅಭಿರುಚಿ ಗೋಚರವಾಗುತ್ತವೆ. ಅವರ 70ನೆಯ ವರ್ಧಂತ್ಯುತ್ಸವದಲ್ಲಿ ಪ್ರಪಂಚದ  ಮೂಲೆ ಮೂಲೆಗಳಿಂದ ಅಭಿನಂದನ ಸಂದೇಶಗಳು ಬಂದುವು. ವಿಜ್ಞಾನಿಗಳಷ್ಟೇ ಅಲ್ಲದೆ ರವೀಂದ್ರನಾಥ ಟಾಗೋರರೂ ಜಾರ್ಜ್ ಬರ್ನಾರ್ಡ್ ಷಾ ಮೊದಲಾದ  ಜಗತ್ಪ್ರಸಿದ್ಧ ಸಾಹಿತಿಗಳೂ ಅನೇಕ ರಾಜಕಾರಣಿಗಳೂ ಸಂದೇಶಗಳನ್ನು ಕಳಿಸಿದವರಲ್ಲಿ ಸೇರಿದ್ದರು. ಬೋಸರು ಪ್ರಥಮ ದರ್ಜೆಯ ಸಾಹಿತಿಯೂ ಆಗಿದ್ದರು. ಬಂಗಾಲಿ ಭಾಷೆಯಲ್ಲಿ ಲೇಖನಗಳನ್ನೂ ಪತ್ರಗಳನ್ನೂ ಬರೆಯುತ್ತಿದ್ದರು. 1911ರಲ್ಲಿ ವಂಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರದಾಯಿತು. ಅದು ಆ ನಾಡಿನ ಯಾವುದೇ ಸಾಹಿತಿಗೆ ದೊರಕಬಹುದಾದ ಅತ್ಯುಚ್ಚ ಮನ್ನಣೆಯಾಗಿತ್ತು. ಅಧ್ಯಕ್ಷ ಭಾಷಣಕ್ಕೆ ವಿಜ್ಞಾನದಲ್ಲಿ ಸಾಹಿತ್ಯ ಎಂಬ ವಿಷಯ ಆಯ್ದುಕೊಂಡು ಎರಡೂ ಕ್ಷೇತ್ರಗಳ ನಡುವಿನ ಸಂಬಂಧ ತಿಳಿಸಿದರು. ಜಗದೀಶಚಂದ್ರ ಬೋಸರು ಖ್ಯಾತಿ ಶಿಖರದ ತುತ್ತ ತುದಿಗೇರಿದ ಐತಿಹಾಸಿಕ ಸೀಮಾಪುರುಷರಲ್ಲಿ ಒಬ್ಬರಾದರು. ಕೊನೆಯ ದಿನಗಳಲ್ಲಿ ಆರೋಗ್ಯ ಸುಧಾರಣೆಗಾಗಿ ಡಾರ್ಜಿಲಿಂಗಿಗೆ ಹೋಗಿದ್ದರು. 1937 ನವೆಂಬರ್ 30ರಂದು 80ನೆಯ ವರ್ಷದಲ್ಲಿ ಅಲ್ಲಿಯೇ ಅನಾರೋಗ್ಯದಿಂದ ತೀರಿಕೊಂಡರು. ಹಿತೈಷಿಗಳ ಒತ್ತಡಕ್ಕೆ ಮಣಿದು ತಮ್ಮ ಸಂಶೋಧನೆಗಳಲ್ಲಿ ಒಂದಕ್ಕೆ ಅವರು ಪೇಟೇಂಟ್‍ಗಾಗಿ ಅರ್ಜಿ ಸಲ್ಲಿಸಿದರಾದರೂ ಯಾವುದೇ ಬಗೆಯ ಪೇಟೆಂಟ್ ಪಡೆಯುವುದರಲ್ಲಿ ಅವರಿಗೆ ಯಾವುದೇ ಆಸಕ್ತಿ ಇರಲಿಲ್ಲ ಎಂಬುದನ್ನು ವಿಶ್ವವೇ ಬಲ್ಲಂತ ಸಂಗತಿಯಾಗಿದೆ. “ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತುವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು” ಎಂಬುದು ಅವರ ಹೃದಯ ವೈಶಾಲ್ಯ ವಿಚಾರಧಾರೆಯಾಗಿತ್ತು. ಅವರು ತೀರಿಕೊಂಡ ಹಲವಾರು ವರುಷಗಳ ನಂತರ ಅವರು ಆಧುನಿಕ ವಿಜ್ಞಾನಕ್ಕೆ ಸಲ್ಲಿಸಿದ ಅನೇಕ ಕೊಡುಗೆಗಳಿಗಾಗಿ ಅವರನ್ನು ಗುರುತಿಸಲಾಗುತ್ತಿದೆ. ಕೃತಿಗಳು thumb|right ಬೋಸ್ ಅವರು ಕೆಲವೊಂದು ಪ್ರಮುಖ ಕೃತಿಗಳು ಇಂತಿವೆ Response in the Living and Non-living(1902), Plant response as a means of physiological investigation(೧೯೦೬), Comparative Electro-physiology: A Physico-physiological Study(೧೯೦೭), Researches on Irritability of Plants(೧೯೧೩), Physiology of the Ascent of Sap(೧೯೨೩), The physiology of photosynthesis(೧೯೨೪), The Nervous Mechanisms of Plants(೧೯೨೬), Plant Autographs and Their Revelations(೧೯೨೭), Growth and tropic movements of plants(೧೯೨೮), Motor mechanism of plants(೧೯೨೮) ಅಧ್ಯಾತ್ಮಿಕ - ವೈಜ್ಞಾನಿಕ ಮೇಳೈಕೆ ಬೋಸ್ ಅವರಿಗೆ ರವೀಂದ್ರನಾಥ್ ಠಾಗೂರ್ ಅವರೊಂದಿಗೆ ಆಪ್ತ ಸ್ನೇಹವಿತ್ತು. ಐನ್‍ಸ್ಟೀನ್ ಅವರೊಂದಿಗೂ ಸಂಪರ್ಕವಿತ್ತು. ಜಗದೀಶ್ ಚಂದ್ರ ಬೋಸರಲ್ಲಿ ಆಧ್ಯಾತ್ಮಿಕ - ವೈಜ್ಞಾನಿಕ ಚಿಂತನೆಗಳೆರಡೂ ಒಂದಾಗಿ ಮೇಳೈಸಿದ್ದವು ಎಂಬುದು ಪ್ರಾಜ್ಞರ ಅಭಿಮತ. ಪ್ರಶಸ್ತಿ ಗೌರವಗಳು ಬೋಸರಿಗೆ ೧೯೧೬ರಲ್ಲಿ ನೈಟ್‍ಹುಡ್ ಪ್ರಶಸ್ತಿ ಸಂದಿತು. ಬೋಸರು ೧೯೧೭ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು ಕಲ್ಕತ್ತದಲ್ಲಿ ಸ್ತಾಪಿಸಿದರು. ೧೯೨೦ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ೧೯೨೭ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ೧೪ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು. ೧೯೨೮ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು. ೧೯೨೯ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು. ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು. ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು. ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ ೨೫, ೨೦೦೯ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು. ವಿದಾಯ ನವೆಂಬರ್ ೨೩, ೧೯೩೭ರಂದು ಜಗದೀಶ್ಚಂದ್ರ ಬೋಸರು ನಿಧನರಾದರು. ಉಲ್ಲೇಖಗಳು ಆಕರಗಳು ಬೋಸ್ ಇನ್ಸ್ಟಿಟ್ಯೂಟ್ನ ಅಂತರಜಾಲ ತಾಣ ಕಲ್ಕತ್ತಾ ಅಂತರಜಾಲ ತಾಣದಲ್ಲಿ ಬೋಸರ ಕುರಿತಾದ ಪರಿಚಯ SIR JAGADISH CHANDRA BOSE: the unsung Hero of Radio Communication ರೇಡಿಯೋ ಸಂಪರ್ಕ ಕ್ಷೇತ್ರದ ಅಜ್ಞಾತ ನಾಯಕರಾದ ಜೆ. ಸಿ. ಬೋಸ್ ಹೊರಗಿನ ಕೊಂಡಿಗಳು Bose Institute website Jagadish Chandra Bose at the Encyclopædia Britannica J. C. Bose, The Unsung hero of radio communication , web.mit.edu JC Bose: 60 GHz in the 1890s Jagadish Chandra Bose at Engineering and Technology History Wiki ECIT Bose article at www.infinityfoundation.com ಈ ಲೇಖನಗಳನ್ನೂ ನೋಡಿ ಭಾರತದ ವಿಜ್ಞಾನಿಗಳು ವರ್ಗ:ಭಾರತದ ವಿಜ್ಞಾನಿಗಳು ವರ್ಗ:ಭೌತವಿಜ್ಞಾನಿಗಳು ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಚಿತ್ರದುರ್ಗ
https://kn.wikipedia.org/wiki/ಚಿತ್ರದುರ್ಗ
thumb|ಚಿತ್ರದರ್ಗದ ಕೋಟೆ ಚಿತ್ರದುರ್ಗ ನಗರ ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ನಗರ. ಈ ನಗರವು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 200ಕಿಮೀ ದೂರದಲ್ಲಿದೆ. ಹೆಸರಿನ ಮೂಲ ಚಿತ್ರದುರ್ಗ ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ ಚಿತ್ರಕೇತು ಆಳ್ವಿಕೆ ಮಾಡಿದ ಪ್ರದೇಶ. ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ ಚಿತ್ರದುರ್ಗ ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು. ಇದ್ದರಿಂದ ಚಿತ್ರದುಗ೯ ಎಂದು ಕರೆಯುತ್ತಾರೆ ಇಲ್ಲಿ ಕಲ್ಲಿನ ಕೋಟೆ ಇದೆ ಜನಸಂಖ್ಯಾ ವಿವರ ೨೦೧೧ರ ಜನಗಣತಿಯ ಪ್ರಕಾರ, ಚಿತ್ರದುರ್ಗ ನಗರದ ಜನಸಂಖ್ಯೆ ೧,೨೫,೧೭೦. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಚಿತ್ರದುರ್ಗದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯.೫%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೦% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೨%. ಚಿತ್ರದುರ್ಗದಲ್ಲಿ ಸುಮಾರು ೧೧% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. ಆಡಳಿತ ಚಿತ್ರದುರ್ಗ ನಗರದ ಆಡಳಿತವನ್ನು "ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್" ನೆಡೆಸುತ್ತದೆ. ಐತಿಹಾಸಿಕ ಸ್ಥಳಗಳು ಚಿತ್ರದುರ್ಗ ಕೋಟೆ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು ಮತ್ತು ಚಿತ್ರದುರ್ಗದ ನಾಯಕರು ಸೇರಿದ ಹಲವು ರಾಜರು ಚಿತ್ರದುರ್ಗ ಕೋಟೆಯನ್ನು ಸುಮಾರು ೧೦ರಿಂದ ೧೮ನೇ ಶತಮಾನದವರೆಗೆ ಕಟ್ಟಿದರು. ಚಂದ್ರವಳ್ಳಿ ಗುಹೆಗಳು ಚತ್ರದುರ್ಗ, ಚೋಲಗುಡ್ಡ ಮತ್ತು ಕಿರುಬನಕಲ್ಲು ಗುಡ್ಡಗಳ ನಡುವೆ ಚಂದ್ರವಳ್ಳಿ ಗುಹೆಗಳಿವೆ. ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ದೇವಾಲಯ. JOGIMATTI ಅಶೋಕ ಸಿದ್ದಾಪುರ : ಅಶೋಕ ಸಿದ್ದಾಪುರ ಚಿತ್ರದುರ್ಗ ಜಿಲ್ಲೆಯ ಒಂದು ಪ್ರಮುಖ ಪುರಾತತ್ವ ಸ್ಥಳವಾಗಿದ್ದು, ಅಲ್ಲಿಂದ ಅಶೋಕ ಚಕ್ರವರ್ತಿಯ ಶಾಸನಗಳನ್ನು ಉತ್ಖನನ ಮಾಡಲಾಗಿದೆ. ರಾಮಾಯಣದಲ್ಲಿ ಉಲ್ಲೇಖಿಸಲಾದ ರಾಮಗಿರಿ ಎಂಬ ಗುಡ್ಡಗಾಡು ಹತ್ತಿರದಲ್ಲಿದೆ. ರಾವಣನು ಸೀತೆಯನ್ನು ಅಪಹರಿಸಿ ಮತ್ತೆ ಲಂಕಾಕ್ಕೆ ಪ್ರಯಾಣಿಸುತ್ತಿದ್ದಾಗ, ಪೌರಾಣಿಕ ಹದ್ದು ಜಟಾಯು ಇಲ್ಲಿ ಅವನೊಂದಿಗೆ ಹೋರಾಡಿದನೆಂದು ನಂಬಲಾಗಿದೆ. ಜಟಾಯು ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು ಮತ್ತು ನಂತರ, ಜಟಾಯುವಿನ ಕೊನೆಯ ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ, ರಾಮನು ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದನು. ರಾಮೇಶ್ವಾ ಎಂದು ಕರೆಯಲ್ಪಡುವ ದೇವಾಲಯ ಹವಾಮಾನ ಒನಕೆ ಓಬವ್ವ thumb|right|ಓಬವ್ವನ ಕಿಂಡಿ, ಚಿತ್ರದುರ್ಗದ ಕೋಟೆ. ಒನಕೆ ಓಬವ್ವಳ ಸಾಹಸಗಾಥೆ ಕನ್ನಡ ನಾಡಿನ ಶೌರ್ಯಗಾಥೆಗಳಲ್ಲಿ ಒಂದಾಗಿ ಜನಜನಿತವಾಗಿದೆ. ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ, ಹೈದರ-ಅಲಿಯ ಸೈನ್ಯವು ಕೋಟೆಯನ್ನು ಸುತ್ತುವರೆದಿತ್ತು. ಒಬ್ಬ ಮಹಿಳೆಯನ್ನು ಕೋಟೆಯ ಕಿಂಡಿಯಿಂದ ಒಳ ಹೊಗುವುದನ್ನು ಕಂಡ ಹೈದರ-ಅಲಿಯು ತನ್ನ ಸೈನ್ಯವನ್ನು ಆ ಕಂಡಿಯ ಮೂಲಕ ಒಳಗೆ ಕಳುಹಿಸಿ ಕೋಟೆಯನ್ನು ವಶಪಡಿಸಿಕೊಳ್ಳಲು ಸಂಚು ಹೂಡುತ್ತಾನೆ. ಕೋಟೆಯ ಆ ಭಾಗದ (ಹೆಸರು ಗೊತ್ತಿಲ್ಲ) ನ ಹಂಡತಿಯೇ ಓಬವ್ವ. ಅವಳು ಗಂಡನಿಗೆ ಊಟ ತರುತ್ತಾಳೆ. ಗಂಡನನ್ನು ಊಟಕ್ಕೆ ಕೂರಿಸಿ, ನೀರು ತರಲು ಹೋಗುತ್ತಾಳೆ. ಅಲ್ಲಿ ಹೈದರ-ಅಲಿಯ ಸೈನಿಕರನ್ನು ಕಿಂಡಿಯ ಮೂಲಕ ನುಸುಳುವದನ್ನು ಕಾಣುತ್ತಾಳೆ. ಎದೆಗುಂದದೆ ಕೈಯಲ್ಲಿದ್ದ ಒನಕೆಯಿಂದಲೇ ಒಳಗೆ ನುಗ್ಗುತ್ತಿರುವ ಒಬ್ಬೊಬ್ಬ ಸೈನಿಕರನ್ನು ಜಜ್ಜಿ ಕೊಲ್ಲುತ್ತಾಳೆ. ಸತ್ತವರನ್ನು ಸಂಶಯ ಬಾರದ ಹಾಗೆ ದೂರ ಎಳೆದು ಹಾಕುತ್ತಾಳೆ. ಅತ್ತ ಊಟ ಮುಗಿಸಿದ ಕಾವಲುಗಾರ ತುಂಬಾ ಹೊತ್ತಿನವರೆಗೂ ಹೆಂಡತಿಗಾಗಿ ಕಾಯ್ದ ಹುಡುಕುತ್ತ ಬರುತ್ತಾನೆ. ಅಲ್ಲಿ ರಕ್ತಸಿಕ್ತವಾದ ಒನಕೆಯನ್ನು ಕೈಯಲ್ಲಿ ಹಿಡಿದು ರಣಚಂಡಿಯ ಅವತಾರದಲ್ಲಿರುವ ಓಬವ್ವನನ್ನು ಸತ್ತು ಬಿದ್ದಿರುವ ನೂರಾರು ಹೈದರ-ಅಲಿಯ ಸೈನಿಕರನ್ನು ನೋಡಿ ಆಶ್ಚರ್ಯಚಕಿತನಾಗುತ್ತಾನೆ. ಕೂಡಲೆ ಕಹಳೆ ಊದಿ ತನ್ನ ಸೇನೆಯನ್ನು ಎಚ್ಚರಗೊಳಿಸುತ್ತಾನೆ ಹಾಗೂ ನಾಯಕನ ಸೇನೆಯು ಕೋಟೆಯನ್ನು ಹೈದರ-ಅಲಿಯ ವಶಕ್ಕೆ ಹೋಗುವದನ್ನು ತಪ್ಪಿಸುತ್ತದೆ. ಓಬವ್ವನ ಸಮಯೋಚಿತ ಯುಕ್ತಿ ಮತ್ತು ಧೈರ್ಯವನ್ನು ಈಗಲೂ ಜನ ನೆನೆಯುತ್ತಾರೆ. ಈ ಘಟನೆಗೆ ಸಾಕ್ಷಿಯಾಗಿ ಈಗಲೂ ಆ ಕಿಂಡಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಕಾಣಬಹುದು. ಅದು ಚಿತ್ರದುರ್ಗದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ .ಮತ್ತು ಚಿತ್ರದುಗದಲ್ಲಿ ಗ್ಯಾಲರಿ ಉಲ್ಲೇಖಗಳು‌‌ ವರ್ಗ:ಚಿತ್ರದುರ್ಗ ಜಿಲ್ಲೆಯ ನಗರ ಮತ್ತು ಪಟ್ಟಣಗಳು
ಆಯ್ದ ಪ್ರಮುಖ ದಿನಗಳು
https://kn.wikipedia.org/wiki/ಆಯ್ದ_ಪ್ರಮುಖ_ದಿನಗಳು
REDIRECT Template:ಆಯ್ದ ಪ್ರಮುಖ ದಿನಗಳು
ಸುಗ್ರೀವ
https://kn.wikipedia.org/wiki/ಸುಗ್ರೀವ
thumb|left|Rama and Lakshmana Meet Sugriva at Matanga’s Hermitage thumb|Killing of Vali Monkey ಸುಗ್ರೀವ ರಾಮಾಯಣದಲ್ಲಿ ರಾಮನಿಗೆ ರಾವಣನನ್ನು ತಲುಪಲು ಸಹಾಯ ಮಾಡುವ ವಾನರ ರಾಜ. ಇವನ ಊರು ಪುರಾಣದಲ್ಲಿ - ಕಿಷ್ಕಿಂಧ. ಇವನು ರಾಮನ ಸಹಾಯ ಪಡೆದು ತನ್ನ ಅಣ್ಣನಾದ ವಾಲಿಯನ್ನು ಸದೆಬಡಿಯುತ್ತಾನೆ. ವಾನರ ಸೈನ್ಯವನ್ನು ಲಂಕೆಯೆಡೆಗೆ ಹೊರಡಿಸಿ ರಾಮನಿಗೊಪ್ಪಿಸಿ, ರಾಮಾಯಣದ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ. ಪುರಾಣ ವಿಜಯನಗರ[ಹ೦ಪಿ] ಸುಗ್ರೀವನ ಗುಹೆ ವಿಜಯನಗರದ ಸುಗ್ರೀವನ ಗುಹೆ ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ. ಬಾಹ್ಯ ಸಂಪರ್ಕಗಳು The Ramayana of Valmiki, online version, English translation by Ralph T.H. Griffith. The Mahabharata of Vyasa, online version, English translation by Kisari Mohan Ganguli. Photos of the tympanum at Banteay Srei in Cambodia depicting Sugriva's combat with Vali and Rama's intervention. ವರ್ಗ:ಪುರಾಣ ವರ್ಗ:ಇತಿಹಾಸ ವರ್ಗ:ಧರ್ಮ ವರ್ಗ:ಸಾಹಿತ್ಯ ವರ್ಗ:ಭಾರತ ವರ್ಗ:ರಾಮಾಯಣದ ಪಾತ್ರಗಳು
ಉಡುಪಿ ಜಿಲ್ಲೆ
https://kn.wikipedia.org/wiki/ಉಡುಪಿ_ಜಿಲ್ಲೆ
thumb|ಉಡುಪಿಯ ಸಸ್ಯಹಾರಿ ಊಟ left|thumb|ಉಡುಪಿ ಮಲ್ಲಿಗೆ ಉಡುಪಿ () ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವಮತ ಪ್ರತಿಪಾದಿಸಿದ ತ್ರೈಲೋಕ್ಯಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಶ್ರೀ ವ್ಯಾಸತೀರ್ಥರು, ಶ್ರೀಮದ್ ವಾದಿರಾಜ ತೀರ್ಥರು, ಶ್ರೀರಾಘವೇಂದ್ರ ತೀರ್ಥ ಗುರುರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಈ ಎಲ್ಲ ಮಹನೀಯರೂ ಸಹ ಶ್ರೀಮನ್ ಮಧ್ವಾಚಾರ್ಯರನ್ನು ನಿತ್ಯ ಉಪಾಸಿಸುವ, ಅವರ ಅನುಯಾಯಿಗಳೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ತಿತ್ವಕ್ಕೆ ಬಂದಿತು. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ಹೆಬ್ರಿಗಳನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಬ್ರಹ್ಮಾವರ ತಾಲೂಕನ್ನು ೨೦೧೮ರಲ್ಲಿ ರೂಪಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರು ಇದ್ದಾರೆ. ಇಲ್ಲಿನ ಪ್ರಮುಖ ಭಾಷೆಗಳು ತುಳು ಇಲ್ಲಿನ ಅಧೀಕೃತ ಭಾಷೆಯಾಗಿದೆ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಜಿಲ್ಲೆಯ ತೆಂಕು ಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಬಡಗು ಭಾಗವನ್ನು ಒಟ್ಟಾಗಿ ತುಳುನಾಡು ಎಂದು ಕರೆಯುತ್ತಾರೆ. ಇಲ್ಲಿನ ಇತರ ಭಾಷೆಗಳೆಂದರೆ ಕನ್ನಡ- ಕುಂದಾಪುರ ಕನ್ನಡ ಸೇರಿಸಿ. ಕೊಂಕಣಿ ನವಾಯತಿ ಬ್ಯಾರಿ ಕೊರಗ ಉರ್ದು ಇನ್ನೂ ಹತ್ತು ಹಲವು ಭಾಷೆಗಳಿವೆ. ಉಡುಪಿ ಹೆಸರಿನ ನಿಷ್ಪತ್ತಿ ಒಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು "ಒಡಿಪು"ವಿನಿಂದ ಬಂದಿರುವುದಾಗಿ ನಂಬಲಾಗಿದೆ. ತುಳುವಿನ ಈ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿರುವುದಾಗಿ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ಸಂಸ್ಕೃತ ದ "ಉಡು" ಹಾಗೂ "ಪ" ಶಬ್ದಗಳಿಂದ ಬಂದಿರುವುದಾಗಿ ನಂಬಲಾಗಿದೆ. ಸಂಸ್ಕೃತ ಶಬ್ದ "ಉಡು"ವಿನ ಅರ್ಥ "ನಕ್ಷತ್ರಗಳು" ಹಾಗೂ "ಪ"ವಿನ ಅರ್ಥ "ಒಡೆಯ". ದಂತಕತೆಯ ಪ್ರಕಾರ, ಚಂದ್ರನ ಪ್ರಕಾಶವು ಒಂದು ಸಾರಿ ದಕ್ಷರಾಜನ ಶಾಪದಿಂದಾಗಿ ಕಡಿಮೆಯಾಯಿತು. ಚಂದ್ರನು ದಕ್ಷರಾಜನ ೨೭ ಹೆಣ್ಣುಮಕ್ಕಳನ್ನು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚಂದ್ರ ಹಾಗು ಚಂದ್ರನ ಹೆಂಡತಿಯರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚಂದ್ರನ ಪ್ರಕಾಶವು ಮರಳಿ ಬರುವಂತೆ ಮಾಡಿದನು. ಹಾಗಾಗಿ ನಕ್ಷತ್ರಗಳ ಒಡೆಯ (ಸಂಸ್ಕೃತ: ಉಡುಪ) ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು ಬಂದಿತೆಂದು ಎಂದು ಪ್ರತೀತಿ. ಆದರೆ, ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, 'ಒಡಿಪು' ಶಬ್ದದಿಂದ ಉಡುಪಿ ಎಂಬ ಹೆಸರು ಹುಟ್ಟಿದೆ ಎಂಬುದು ಹೆಚ್ಚು ಸಮರ್ಪಕವಾಗಿದೆ. ಈಗಲೂ ತುಳುವಿನಲ್ಲಿ ಈ ಊರನ್ನು ಒಡಿಪು ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ವಿಶೇಷ. ಇತಿಹಾಸ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತಿಹಾಸ ಪರಂಪರೆಯು ಹೆಚ್ಚು ಸಮಾನ ಸ್ವರೂಪದ್ದು. ಇಡೀ ಕರ್ನಾಟಕದ ಕರಾವಳಿ ಪ್ರದೇಶ ಪರಶುರಾಮ ಸೃಷ್ಟಿಯೆಂದು ಪ್ರತೀತಿಯುಂಟು. ಮಾರ್ಕಂಡೇಯ, ವಾಯು ಮತ್ತು ಭವಿಷ್ಯೋತ್ತರ ಪುರಾಣಗಳು ಇಲ್ಲಿನ ಕೆಲವು ನದಿಗಳ ಮತ್ತು ಪರ್ವತಗಳ ಹೆಸರುಗಳನ್ನು ಉಲ್ಲೇಖಿಸುತ್ತವೆ. ತಮಿಳಿನ ‘ಸಂಗಂ’ ಕಾಲದ ಸಾಹಿತ್ಯದಲ್ಲಿ ತುಳುನಾಡಿನ ಪ್ರಸ್ತಾಪ ಬರುತ್ತದೆ. ಅಶೋಕನ ಶಾಸನಗಳಲ್ಲಿ ಬರುವ ಸಾತಿಯಪುತ್ರ ಅಥವಾ ಸತ್ಯಪುತ್ರರೆಂಬ ಸಮುದಾಯದ ಉಲ್ಲೇಖ ಈ ಪ್ರದೇಶದ ಜನರನ್ನು ಕುರಿತದ್ದೆಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಜಿಲ್ಲೆ ತೀರಪ್ರದೇಶದಲ್ಲಿರುವುದರಿಂದ ಇದು ಹೊರಗಿನ ಪ್ರಪಂಚದ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಪ್ರಸಕ್ತ ಶಕೆಯ ಆಚೀಚೆಗಿನ ಶತಮಾನಗಳಿಗೆ ಸೇರಿದ ಗ್ರೀಕ್ ಮತ್ತು ರೋಮನ್ನರ ಪ್ರವಾಸಿ ಕಥನಗಳಲ್ಲಿ ಈ ತೀರದ ಅನೇಕ ಸ್ಥಳಗಳ ಉಲ್ಲೇಖಗಳಿವೆ. ಅವುಗಳಲ್ಲಿ ನೇತ್ರಾವತಿ, ಮಂಗಳೂರು, ಬಸರೂರುಗಳು ಸೇರಿವೆ. ಪ್ರಾಚೀನಕಾಲದಿಂದಲೂ ಹೊರದೇಶಗಳೊಂದಿಗೆ ವಾಣಿಜ್ಯ ಸಂಪರ್ಕ ಬೆಳೆದುಬಂದದ್ದು ನಿಸ್ಸಂದೇಹ. ಗ್ರೀಕ್ ನಾಟಕವೊಂದರಲ್ಲಿ ಬರುವ ಪಾತ್ರಗಳ ಸನ್ನಿವೇಶ ಈ ಕಡಲತೀರದ್ದೆಂದು ಮತ್ತು ಅಲ್ಲಿನ ಸಂಭಾಷಣೆಯಲ್ಲಿ ಬಳಸಿರುವ ಕೆಲವು ಪದಗಳು ತುಳು ಹಾಗೂ ಕನ್ನಡ ಪದಗಳೆಂದು ಗೋವಿಂದ ಪೈಯವರು ಅಭಿಪ್ರಾಯಪಟ್ಟಿದ್ದಾರೆ. ಇವು ಹಳಗನ್ನಡ ಪದಗಳೆಂದು ಪ್ರತಿಪಾದಿಸುವವರೂ ಇದ್ದಾರೆ. ಒಟ್ಟಿನಲ್ಲಿ ಈ ಜಿಲ್ಲೆ ಪ್ರ.ಶ.ಪೂರ್ವ ಕಾಲದಿಂದಲೂ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿದ್ದ ಪ್ರದೇಶವೆಂಬುದು ದೃಢಪಡುತ್ತದೆ. ಈ ಜಿಲ್ಲೆಯ ಇತಿಹಾಸ ಕಾಲದ ಸ್ಪಷ್ಟ ಪುರಾವೆಗಳು ದೊರಕುವುದು ಆಳುಪರ ಕಾಲದಲ್ಲಿ. ಆಳುಪರ ಆಳ್ವಿಕೆ ಪ್ರಸಕ್ತ ಶಕಾರಂಭದ ಕಾಲಕ್ಕೇ ಪ್ರಾರಂಭವಾಗುತ್ತದೆಂದು ತಿಳಿದುಬರುತ್ತದೆ. ಅವರು ನಾಗಾರಾಧಕರಾಗಿದ್ದರು ಮತ್ತು ಶೈವ ಪಂಥೀಯರಾಗಿದ್ದರು. ಕದಂಬರು ನೆರೆಯ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ರಾಜ್ಯ ಸ್ಥಾಪಿಸಿದ ಮೇಲೆ ಈ ಪ್ರದೇಶವೂ ಅವರ ಸಾರ್ವಭೌಮತ್ವಕ್ಕೆ ಒಳಪಟ್ಟಿತ್ತು. ಆಗ ಅವರು ಇಲ್ಲಿ ಅಹಿಚ್ಫತ್ರದಿಂದ ಬ್ರಾಹ್ಮಣರನ್ನು ಕರೆಸಿ ಇಲ್ಲಿನ ಮಠ ಮತ್ತು ಅಗ್ರಹಾರ ಪರಂಪರೆಗೆ ಬುನಾದಿ ಹಾಕಿದರೆಂದು ಹೇಳಲಾಗಿದೆ. ಜಮೀನು ಸಾಗುವಳಿ ಮತ್ತು ನಿರ್ವಹಣೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಕದಂಬರು ತಂದರೆಂಬ ನಂಬಿಕೆಯಿದೆ. ಕದಂಬರ ಪ್ರಾಬಲ್ಯ ಕಡಿಮೆಯಾಗಿ ಬಾದಾಮಿ ಚಾಳುಕ್ಯರು ಮತ್ತು ತಲಕಾಡಿನ ಗಂಗರು ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದಾಗ ಆಳುಪರು ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ತಮ್ಮ ರಾಜ್ಯವನ್ನು ವಿಸ್ತರಿಸಿದರು. ಆಳುಪರನ್ನು ಸೋಮಕುಲದವರೆಂದೂ ಮೀನ ಲಾಂಛನದವರೆಂದೂ ಹೇಳಲಾಗಿದೆ. ಇವರು ೬ನೆಯ ಶತಮಾನದ ಹೊತ್ತಿಗೆ ಉಡುಪಿ ಜಿಲ್ಲೆಯ ಉದಯಪುರ (ಉದ್ಯಾವರ) ಮಂಗಳಪುರ (ಮಂಗಳೂರು)ಗಳಲ್ಲಿ ರಾಜಧಾನಿಗಳನ್ನು ಸ್ಥಾಪಿಸಿ ಆಳಿದ್ದರಲ್ಲದೆ ಘಟ್ಟದ ಮೇಲಿನ ಕೆಲವು ಭಾಗಗಳಲ್ಲೂ ಆಳ್ವಿಕೆ ನಡೆಸಿದರು. ಪಶ್ಚಿಮ ಚಾಳುಕ್ಯರ ಬೆಂಬಲದೊಂದಿಗೆ ಅವರು 8ನೆಯ ಶತಮಾನದವರೆಗೂ ಆಳ್ವಖೇಡ, ಬನವಾಸಿ ಮಂಡಲ ಮತ್ತು ಹೊಂಬುಚರ್ಚ್‌ (ಹೊಸನಗರ ತಾಲ್ಲೂಕು) ಪ್ರಾಂತ್ಯಗಳನ್ನು ಆಳಿದರೆಂದು ಹೇಳಬಹುದು. ಉಡುಪಿ ಜಿಲ್ಲೆಯ ಬಾರಹಕನ್ಯಾಪುರ ಅಥವಾ ಬಾರಕೂರು ಇವರ ರಾಜಧಾನಿಗಳಲ್ಲೊಂದಾಗಿತ್ತು. ರಾಷ್ಟ್ರಕೂಟರ ಕಾಲದಲ್ಲಿ ಇವರ ಪ್ರಭಾವ ತಗ್ಗಿತ್ತು. ಗಂಗರಿಗೆ ಇವರು ನಾಮಮಾತ್ರ ಅಧೀನತೆ ತೋರಿಸಿ ಅವರೊಂದಿಗೆ ರಕ್ತಸಂಬಂಧ ಮಾಡುವ ಮೂಲಕ ಸೌಹಾರ್ದ ಬಾಂಧವ್ಯ ಹೊಂದಿದ್ದರು. ಇವರು ಕೆಲವೆಡೆ ತಮ್ಮನ್ನು ಪಾಂಡ್ಯರೆಂದು ಕರೆದುಕೊಂಡಿದ್ದಾರೆ. ಮೀನು ಇವರ ಲಾಂಛನವಾಗಿತ್ತು. ಹೊಯ್ಸಳರು ಪ್ರಾರಂಭದಲ್ಲಿ ಆಳುಪರ ಮೇಲೆ ಸಾಂಕೇತಿಕ ಆಧಿಪತ್ಯ ಹೊಂದಿದ್ದರೂ ಮೂರನೆಯ ಬಲ್ಲಾಳನ ಕಾಲದಲ್ಲಿ ಈ ಪ್ರದೇಶದ ಆಗುಹೋಗುಗಳಲ್ಲಿ ಅವರು ಹೆಚ್ಚಾಗಿ ಭಾಗವಹಿಸಿದ್ದು ಕಂಡುಬರುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮುಖ್ಯವಾಗಿ ಶೈವ ಪರಂಪರೆ ಹೊಂದಿದ್ದ ಪ್ರದೇಶಗಳು. ನಾಗಾರಾಧನೆ ಮತ್ತು ಶಿವ ಪೂಜೆ ಇಲ್ಲಿನ ಮೂಲ ಧಾರ್ಮಿಕ ಪರಂಪರೆಯ ಸ್ವರೂಪವಾಗಿತ್ತು. ತರುವಾಯ ವೈಷ್ಣವ ಪಂಥ ಪ್ರವೇಶಿಸಿತು. ಮಧ್ವಚಾರ್ಯರು ೧೩ನೆಯ ಶತಮಾನದಲ್ಲಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪನೆ ಮಾಡಿದ ಮೇಲೆ ಮಾಧ್ವ ವೈಷ್ಣವಮತ ಪ್ರಬಲವಾಯಿತು. ಜೈನಧರ್ಮ ಪ್ರಾರಂಭದಿಂದಲೂ ರಾಜಾಶ್ರಯ ಪಡೆದಿದ್ದು ೧೮ನೆಯ ಶತಮಾನದವರೆಗೂ ಕ್ರಿಯಾಶೀಲ ಧರ್ಮವಾಗಿ ಬೆಳೆಯಿತು. ಸ್ಥಳೀಯ ಪಂಜರವಳ್ಳಿ, ಭೂತ ಮೊದಲಾದ ಶಕ್ತಿಗಳ ಆರಾಧನೆ ಪ್ರಾರಂಭದಿಂದಲೂ ನಡೆದುಬಂದಿದೆ. ಪಾರ್ವತಿಯ ಅವತಾರವಾದ ಶಕ್ತಿದೇವತೆಗಳ ಆರಾಧನೆ (ಉದಾ: ಕೊಲ್ಲೂರು ಮೂಕಾಂಬಿಕೆ) ಜನಪ್ರಿಯವಾಗಿದೆ. ಈ ಪ್ರಾಂತದ ಜನರಿಗೆ ಧರ್ಮಶ್ರದ್ಧೆ ಹೆಚ್ಚು. ಭೂತಾರಾಧನೆಯಾಗಲೀ, ಕೃಷ್ಣಪೂಜೆಯಾಗಲೀ ಹೋಮ-ಹವನಗಳಾಗಲೀ ಎಲ್ಲದರಲ್ಲೂ ಇವರಿಗೆ ಹೆಚ್ಚಿನ ನಿಷ್ಠೆ. ವಿಜಯನಗರದ ಆಳ್ವಿಕೆ ಪ್ರಾರಂಭವಾದಾಗ ಹಿಂದಿನ ಪಾಳೆಯಗಾರರ ಅಥವಾ ಸ್ಥಾನಿಕ ರಾಜರ ಆಳ್ವಿಕೆಯ ಪ್ರಭಾವ ತಗ್ಗಿತು. ಆ ಕಾಲದಲ್ಲಿ ವಿಜಯನಗರದ ಸಾಮ್ರಾಟರು ನೇರವಾಗಿ ತಮ್ಮ ಪ್ರಾಂತಾದಿಕಾರಿಗಳ ಮೂಲಕ ಆಳ್ವಿಕೆ ನಡೆಸಲು ಪ್ರಾರಂಭಿಸಿದರು. ಬಾರಕೂರು ಮತ್ತು ಮಂಗಳೂರು ಈ ಆಡಳಿತ ಕೇಂದ್ರಗಳಾಗಿದ್ದವು. ಮಂಗಳೂರು ರಾಜ್ಯವೆಂದೇ ಈ ಪ್ರಾಂತ್ಯವನ್ನು ಕರೆಯುತ್ತಿದ್ದರು. ೧೩೪೨ರಲ್ಲಿ ಈ ಮಾರ್ಗವಾಗಿ ಹಾದುಹೋದ ಇಬ್ನಬೂತೂತ ರಾಜ್ಯಾಧಿಕಾರಿಗಳು ಆಗಾಗ ಬದಲಾಗುತ್ತಿದ್ದುದರ ಬಗ್ಗೆ ತಿಳಿಸಿದ್ದಾನೆ. ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಉಡುಪಿಯ ಬಳಿಯ ದ್ವೀಪಗಳಿಗೆ ಭೇಟಿ ಕೊಟ್ಟಿದ್ದನೆಂದು ತಿಳಿದುಬರುತ್ತದೆ. ಈಗ ಆ ದ್ವೀಪಗಳು ಸಂತಮೇರಿ ದ್ವೀಪಗಳೆಂದು ಹೆಸರು ಪಡೆದಿವೆ. ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಪೋರ್ಚುಗೀಸರೊಂದಿಗೆ ಹೆಚ್ಚಿನ ಸ್ನೇಹದಿಂದ ನಡೆದುಕೊಂಡ. ಆಗ ಪೋರ್ಚುಗೀಸರು ಕರಾವಳಿಯ ಬಂದರುಗಳಲ್ಲಿ ವ್ಯಾಪಾರದ ನೆಪದಲ್ಲಿ ಬಲವಾಗಿ ನೆಲೆಗೊಂಡರು. ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಮತ್ತು ಬಿದನೂರಿನ ನಾಯಕರು ವಿಜಯನಗರದ ಪತನದ ಅನಂತರ ಪೋರ್ಚುಗೀಸರನ್ನು ಹತೋಟಿಯಲ್ಲಿಡಲು ಅನೇಕ ಕಾರ್ಯಾಚರಣೆಗಳನ್ನು ನಡೆಸಿದರು. ಬಿದನೂರ ನಾಯಕರು ಮಲ್ಪೆ ಮತ್ತು ಕುಂದಾಪುರಗಳಲ್ಲಿ ಕೋಟೆಗಳನ್ನು ನಿರ್ಮಿಸಿದರು. ಅನೇಕ ದಂಡರಸರು ವಿಜಯನಗರ ಕಾಲದಲ್ಲಿ ಮುಂದುವರೆದಿದ್ದು ಅನಂತರ ಪ್ರಬಲರಾಗಿ ಈ ಪ್ರದೇಶದಲ್ಲಿ ಆಳಿದರು. ಅವರಲ್ಲಿ ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಪ್ರಮುಖರು. ಇವರ ಕಾಲದಲ್ಲಿ ಈ ಊರುಗಳಲ್ಲಿ ಅನೇಕ ಜೈನ ಬಸದಿಗಳು ವಿಶ್ವವಿಖ್ಯಾತ ಗೊಮ್ಮಟ ವಿಗ್ರಹಗಳು ನಿರ್ಮಾಣವಾದವು. ಉಡುಪಿಯ ಬಳಿ ಸುರಳದಲ್ಲಿ ತೊಳಹಾರರು ಮತ್ತು ಹೊನ್ನಕಂಬಳಿ ಅರಸರು ಆಳುತ್ತಿದ್ದರು. ಉತ್ತರಕನ್ನಡ ಜಿಲ್ಲೆಯ ಹಾಡುವಳ್ಳಿಯಿಂದ ಆಳುತ್ತಿದ್ದ ಅರಸರು ಉಡುಪಿ ಜಿಲ್ಲೆಯ ಉತ್ತರದ ಕೆಲವು ಭಾಗಗಳಲ್ಲಿ ಆಡಳಿತ ನಡೆಸಿದರು. ಮೈಸೂರು ರಾಜ್ಯದ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಈ ಇಡೀ ಕರಾವಳಿ ಭಾಗವನ್ನು ಗೆದ್ದಕೊಂಡರು. ಆದರೆ ಇಂಗ್ಲಿಷರ ಪ್ರಬಲ ಪ್ರತಿರೋಧದಿಂದಾಗಿ ೧೭೯೨ರ ಯುದ್ಧದಲ್ಲಿ ಅನಂತರದ ಒಪ್ಪಂದದ ಮೇರೆಗೆ ಈ ಭಾಗ ಬ್ರಿಟಿಷರ ವಶವಾಯಿತು. ಟಿಪ್ಪುಸುಲ್ತಾನನು ಇಲ್ಲಿನ ಅನೇಕ ಸ್ಥಳೀಯ ರಾಜರನ್ನು ಪದಚ್ಯುತಿಗೊಳಿಸಿದ್ದ. ೧೮೩೭ ರಲ್ಲಿ ಕಲ್ಯಾಣಸ್ವಾಮಿ ಮತ್ತು ಲಕ್ಷ್ಮಪ್ಪ ಬಂಗೇಶ ಎಂಬ ಅರಸುಗಳು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಬ್ರಿಟಿಷರು ಈ ದಂಗೆಯನ್ನು ಅಡಗಿಸಿದರು. ೧೮೬೦ರಲ್ಲಿ ಕನ್ನಡ ಜನರಿದ್ದ ಕರಾವಳಿ ಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆಂದು ವಿಭಜಿಸಲಾಯಿತು. ೧೮೬೭ ರಲ್ಲಿ ಮೊದಲನೆಯದನ್ನು ಮುಂಬಯಿ ಪ್ರಾಂತ್ಯಕ್ಕೂ ಎರಡನೆಯದನ್ನು ಮದರಾಸು ಪ್ರಾಂತ್ಯಕ್ಕೂ ಸೇರಿಸಲಾಯಿತು. ಬ್ರಿಟಿಷ್ ಭಾರತದ ಭಾಗವಾಗಿದ್ದ ಈ ಕರಾವಳಿ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಿತ್ತು. ಸತ್ಯಾಗ್ರಹಿಗಳು ಸ್ವತಂತ್ರ್ಯವಾಗಿ ಪತ್ರಿಕೆಗಳನ್ನು ಹೊರಡಿಸಿ ಜನತೆಯನ್ನು ಜಾಗೃತಿಗೊಳಿಸಿದರು. ಸ್ವದೇಶಾಭಿಮಾನಿ, ತಿಲಕ ಸಂದೇಶ (೧೯೧೯), ಸತ್ಯಾಗ್ರಹಿ (೧೯೨೧), ಸ್ವದೇಶಿ ಪ್ರಚಾರಕ (೧೯೪೦) ಮೊದಲಾದ ದೇಶಪ್ರೇಮಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದವು. ಕಾರ್ನಾಡು ಸದಾಶಿವರಾವ್, ಯು.ಎಸ್.ಮಲ್ಯ, ಕಮಲಾದೇವಿ ಚಟ್ಟೋಪಾಧ್ಯಾಯ, ಎಚ್.ವಿ.ಕಾಮತ್ ಮೊದಲಾದವರು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದರು. ಎ.ಬಿ.ಶೆಟ್ಟಿ, ಮೋನಪ್ಪ ತಿಂಗಳಾಯ, ಬಿ.ವಿ.ಬಾಳಿಗರಂತಹ ಸಮಾಜ ಸೇವಾಕರ್ತರು ಜನರನ್ನು ಸಂಘಟಿಸಿದರು. ೧೯೨೦ರಲ್ಲಿ ಗಾಂಧೀಜಿ ಮತ್ತು ಶೌಕತ್ ಅಲಿಯವರು ಜಿಲ್ಲೆಗೆ ಭೇಟಿ ನೀಡಿದ್ದರು. ೧೯೨೨ರಲ್ಲಿ ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನ ನಡೆಯಿತು. ೧೯೩೪ರಲ್ಲಿ ಮತ್ತೆ ಗಾಂಧೀಜಿಯವರು ಈ ಪ್ರದೇಶಕ್ಕೆ ಭೇಟಿ ನೀಡಿದರು. ಮಾರನೆಯ ವರ್ಷ ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಇನ್ನೊಂದು ರಾಜಕೀಯ ಸಮ್ಮೇಳನ ಇಲ್ಲಿ ಏರ್ಪಟ್ಟಿತು. ೧೯೩೭ರಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರು ಜಿಲ್ಲೆಯನ್ನು ಸಂದರ್ಶಿಸಿ ಭಾಷಣ ಮಾಡಿದರು. ೧೯೪೨ರ 'ಚಲೇಜಾವ್ ಚಳವಳಿ'ಯು ಇಲ್ಲಿ ಬಿರುಸಾಗಿ ನಡೆಯಿತು. ಆಗ ನೇತೃತ್ವ ವಹಿಸಿದ್ದ ಪ್ರಮುಖರಲ್ಲಿ ಕೆ.ಆರ್.ಕಾರಂತ, ವಿಠಲದಾಸ ಶೆಟ್ಟಿ, ಶ್ರೀನಿವಾಸ ಮಲ್ಯ, ನಾಗಪ್ಪ ಆಳ್ವ, ಎಂ.ಡಿ.ಅಧಿಕಾರಿ, ಶಂಕರ ಆಳ್ವ ಮುಂತಾದವರಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಾಲಿ ಉಡುಪಿ ಜಿಲ್ಲೆಯು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಮದರಾಸು ರಾಜ್ಯದಲ್ಲೇ ಮುಂದುವರಿಯಿತು. ೧೯೫೬ರ ನವೆಂಬರ್ ೧ರಂದು ಅಸ್ತಿತ್ವಕ್ಕೆ ಬಂದ ಭಾಷಾವಾರು ಪ್ರಾಂತ್ಯದ ರಚನೆಯಲ್ಲಿ ಇದು ವಿಶಾಲ ಮೈಸೂರು ರಾಜ್ಯದ ಭಾಗವಾಯಿತು. ಮೇಲ್ಮೈಲಕ್ಷಣ ಈ ಜಿಲ್ಲೆಯ ಪೂರ್ವ ಗಡಿಯುದ್ದಕ್ಕೂ ಎತ್ತರವಾದ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪಶ್ಚಿಮ ಘಟ್ಟದ ಶ್ರೇಣಿಗಳಿವೆ. ಅಲ್ಲಲ್ಲಿ ಎತ್ತರವಾದ ಗಿರಿಶಿಖರಗಳು ಮತ್ತು ಮಧ್ಯೆ ಮಧ್ಯೆ ಕಂದರಗಳಿಂದ ಕೂಡಿರುವ ಭೂದೃಶ್ಯ ರುದ್ರರಮಣೀಯವಾಗಿವೆ. ಸಹ್ಯಾದ್ರಿ ಘಟ್ಟಗಳ ಶ್ರೇಣಿಗಳ ನಡುವೆ ಇರುವ ಆಗುಂಬೆ ಘಾಟ್ ರಸ್ತೆಯು ಕರ್ನಾಟಕದ ಮೈದಾನ ಪ್ರದೇಶದೊಂದಿಗೆ ಸಂಪರ್ಕಮಾರ್ಗವಾಗಿದೆ. ಕಾರ್ಕಳದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಸೇರಿ ಮುಂದೆ ಶೃಂಗೇರಿ ಮತ್ತು ಕುದುರೆಮುಖಗಳತ್ತ ಕವಲಾಗಿ ಹೋಗುವ ಹೆದ್ದಾರಿ ಈ ಪ್ರದೇಶದ ಇನ್ನೊಂದು ಪ್ರಮುಖ ಮಾರ್ಗ. ಆಗುಂಬೆಗೆ ಉತ್ತರದಲ್ಲಿರುವ ಕೊಡಚಾದ್ರಿ ಬೆಟ್ಟ ಈ ಜಿಲ್ಲೆಯ ಅತ್ಯಂತ ಎತ್ತರದ ಶಿಖರ (೧೩೪೧ಮೀ) ಇದು ಪ್ರವಾಸಿಗಳ ಆಕರ್ಷಣೀಯ ತಾಣವೂ ಹೌದು. ನದಿಗಳು ತೊರೆಗಳು ಮತ್ತು ನಿತ್ಯಹಸಿರು ಕಾಡುಗಳಿಂದ ಕೂಡಿರುವ ಈ ಭಾಗದ ಪ್ರಕೃತಿ ತುಂಬಾ ರಮ್ಯವಾಗಿದೆ. ಘಟ್ಟದಿಂದ ಕೆಳಗೆ ಪಶ್ಚಿಮಾಭಿಮುಖವಾಗಿ ಬಂದಂತೆಲ್ಲಾ ಮೈದಾನ ಪ್ರದೇಶ ತೆರೆದು ಕೊಳ್ಳುತ್ತದೆ. ಅಷ್ಟೇನೂ ಕಡಿದಾಗಿರದ ಇಳಿಜಾರಿನ ಪ್ರದೇಶದಲ್ಲಿ ಅಲ್ಲಲ್ಲಿ ಎತ್ತರದ ಗುಡ್ಡಬೆಟ್ಟಗ ಳುಂಟು. ವ್ಯವಸಾಯದ ಜಮೀನಿನಲ್ಲಿ ಗದ್ದೆಗಳು, ತೆಂಗು, ಅಡಕೆ, ಗೋಡಂಬಿ ತೋಟಗಳಿವೆ. ಕೆಲವೆಡೆ ಕೆಮ್ಮಣ್ಣಿನಿಂದ ಕೂಡಿದ ಬರಡು ದಿಣ್ಣೆಗಳಿವೆ. ಈ ಜಿಲ್ಲೆಯಲ್ಲಿ ಸಮತಟ್ಟಾದ ನೆಲ ಕಡಿಮೆಯೇ. ಜಿಲ್ಲೆಯ ತೀರಪ್ರದೇಶ ಅತ್ಯಂತ ಮುಖ್ಯವಾದ ಭಾಗ. ಇಲ್ಲಿಯ ಜನಸಾಂದ್ರತೆ ಅಧಿಕ. ಇದು ಆರ್ಥಿಕ ಚಟುವಟಿಕೆಗಳಿಂದ ಕೂಡಿದ ಪ್ರದೇಶ. ಇಲ್ಲಿಯ ತೀರ ಪ್ರದೇಶದ ಅಂಚು ಸಾಮಾನ್ಯವಾಗಿ ನೇರವಾಗಿದೆ. ನದಿಗಳು ಸಮುದ್ರ ಸೇರುವ ಎಡೆಗಳಲ್ಲಿ ಕೊಲ್ಲಿಗಳುಂಟಾಗಿವೆ. ಸಮುದ್ರದ ಹಿನ್ನೀರಿನ ಪ್ರದೇಶಗಳು ಮೀನುಗಾರಿಕೆಗೆ ಮತ್ತು ದೋಣಿಗಳ ಸಂಚಾರಕ್ಕೆ ಉಪಯುಕ್ತವಾಗಿವೆ. ಬೈಂದೂರು,ಗಂಗೊಳ್ಳಿ, ಕುಂದಾಪುರ, ಮಲ್ಪೆ, ಪಡುಬಿದ್ರಿ ಮೊದಲಾದ ಪಟ್ಟಣಗಳು ಮೀನುಗಾರಿಕೆಗೆ ಮತ್ತು ವ್ಯಾಪಾರದಿಂದಾಗಿ ಅಭಿವೃದ್ಧಿಗೆ ಬಂದಿವೆ. ಮಲ್ಪೆ ಬಳಿ ಸಂತ ಮೇರಿ ದ್ವೀಪ ಸಮೂಹವಿದೆ. ತೀರದಲ್ಲಿ ವಿರಳವಾಗಿರುವ ದ್ವೀಪಗಳಲ್ಲಿ ಈ ದ್ವೀಪಸಮೂಹ ಪ್ರಮುಖವಾದದ್ದು. ಜಿಲ್ಲೆಯ ಭೂಶಿಲಾರಚನೆಯನ್ನು ಮುಖ್ಯವಾಗಿ ಧಾರವಾಡ ಶಿಲಾವರ್ಗ, ಮಧ್ಯಂತರ ಸೇರ್ಪಡೆಗಳು ಮತ್ತು ಈಚಿನ ರಚನೆಗಳು ಎಂದು ವಿಂಗಡಿಸಬಹುದು. ಧಾರವಾಡ ಶಿಲಾವರ್ಗದಲ್ಲಿ ರೂಪಾಂತರಗೊಂಡ ಅನೇಕ ಪ್ರಾಚೀನ ಶಿಲೆಗಳಿವೆ. ಇವುಗಳಲ್ಲಿ ಮುಖ್ಯವಾಗಿ ಪದರ ಪದರವಾದ ಕಬ್ಬಿಣ ಮಿಶ್ರಿತವಾದ ಕ್ವಾರ್ಟ್ಸೈಟ್ ಮತ್ತು ಟಾಲ್ಕ್‌ ಹಾಗೂ ಹಾರ್ನ್ಬ್ಲೆಂಡ್ ಶಿಷ್ಟ್‌ಗಳು ಕಂಡುಬರುತ್ತವೆ. ಹಾರ್ನ್ಬ್ಲೆಂಡ್ ಹೊಡೆಪೊರೆಗಳು ಅಲ್ಲಲ್ಲಿ ವಿರಳವಾಗಿ ಕಾಣಸಿಗುತ್ತವೆ. ಜಂಬುಕಲ್ಲು ಕರಾವಳಿ ಪ್ರದೇಶದಲ್ಲಿ ಬಹುಮಟ್ಟಿಗೂ ಒಳಭಾಗದಲ್ಲಿ ಸ್ವಲ್ಪಮಟ್ಟಿಗೂ ಇದೆ. ಕರಾವಳಿಯಲ್ಲಿ ಕಂಡುಬರುವ ಮೆಕ್ಕಲು, ಜೇಡಿ ಮತ್ತು ಸುಣ್ಣಕಲ್ಲು ಪದರಗಳು ಈಚಿನ ರಚನೆಗಳಾಗಿವೆ. ಜಲಸಂಪತ್ತು ಇಲ್ಲಿಯ ಭೌಗೋಳಿಕ ಸನ್ನಿವೇಶ ಹಾಗೂ ವಾಯುಗುಣದಿಂದಾಗಿ ಇಲ್ಲಿ ಹೆಚ್ಚಿನ ಜಲಸಂಪನ್ಮೂಲವಿದೆ. ನೈರುತ್ಯ ಮಾರುತಗಳು ಇಲ್ಲಿನ ತೀರ ಮತ್ತು ಘಟ್ಟ ಪ್ರದೇಶದಲ್ಲಿ ಹೇರಳವಾಗಿ ಮಳೆ ಸುರಿಸುತ್ತವೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗಿನ ಮುಂಗಾರಿನ ಕಾಲದಲ್ಲಿ ಬರುವ ಮಳೆಯಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಅನೇಕ ನದಿತೊರೆಗಳು ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದುಬರುತ್ತವೆ. ಇವುಗಳ ಉದ್ದ ಕಡಿಮೆಯಾದರೂ ನೀರು ಅಧಿಕವಾಗಿರುತ್ತದೆ. ಗಂಗೊಳ್ಳಿ ನದಿಯು (ಕುಂದಾಪುರದ ಬಳಿ) ಐದು ಉಪ ಹೊಳೆಗಳನ್ನು ಕೂಡಿಕೊಂಡು ಸಮುದ್ರಸೇರುವುದರಿಂದ ಈ ಸ್ಥಳವನ್ನು ಪಂಚಗಂಗಾವಳಿ ಎಂದು ಕರೆಯುತ್ತಾರೆ. ಇಲ್ಲಿ ವಿಸ್ತಾರವಾದ ಅಳಿವೆ ಇದೆ. ಇಲ್ಲಿ ಬಂದರು ಇದೆ. ಗುರುಪುರ, ಸ್ವರ್ಣ, ಸೀತಾ, ಹಳದಿ, ಚಕ್ರಾ ಮತ್ತು ಕೊಲ್ಲೂರು ನದಿಗಳು ಮುಖ್ಯವಾದವು. ಸೀತಾನದಿ ಮತ್ತು ಸ್ವರ್ಣನದಿಗಳು ಬಾರಕೂರು ಬಳಿ ಒಟ್ಟುಗೂಡಿ ಸಮುದ್ರ ಸೇರುತ್ತವೆ. ಈ ಎಲ್ಲ ನದಿಗಳು ಸೇರುವ ಹಿನ್ನೀರು ಪ್ರದೇಶ ದೋಣಿಗಳ ಸಂಚಾರಕ್ಕೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ ಜಲಸಂಪತ್ತು ಹೇರಳವಾಗಿದ್ದರೂ ಅದು ವ್ಯವಸಾಯಕ್ಕೆ ಉಪಯೋಗವಾಗುವುದಕ್ಕಿಂತ ಸಮುದ್ರಕ್ಕೆ ಹರಿದುಹೋಗುವುದೇ ಹೆಚ್ಚು. ಕಾರ್ಕಳ ತಾಲ್ಲೂಕಿನ ಭಂಡಾಜಿ ಜಲಪಾತದಲ್ಲಿ ನೀರು ೭೦೦ ಮೀ ಗಳ ಎತ್ತರದಿಂದ ಧುಮುಕುತ್ತದೆ. ಇದರೊಂದಿಗೆ ತಾಲ್ಲೂಕಿನ ರಾಮಸಾಗರ ಸರೋವರ ಮುಖ್ಯ ಆಕರ್ಷಣೆಯಾಗಿವೆ. ಅರಣ್ಯಸಂಪತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಿತ್ಯಹರಿದ್ವರ್ಣ ಮತ್ತು ಎಲೆ ಉದುರುವ ಸಸ್ಯವರ್ಗಗಳಿವೆ. ಇಲ್ಲಿನ ಅರಣ್ಯಗಳು ಪ್ರಪಂಚದಲ್ಲಿ ಅತ್ಯಂತ ವೈವಿಧ್ಯಮಯ ಸಸ್ಯಗಳನ್ನು ಹೊಂದಿರುವ ವಿರಳ ಅರಣ್ಯಗಳ ಸಾಲಿಗೆ ಸೇರುತ್ತವೆ. ಒಟ್ಟು ೯೯೪೩೯ ಹೆಕ್ಟೇರುಗಳ ಅರಣ್ಯ ಪ್ರದೇಶವಿದೆ. ಶ್ರೀಗಂಧ, ತೇಗ, ನಂದಿ, ಮತ್ತಿ, ಬೀಟೆ, ಸಿರಿಹೊನ್ನೆ, ದಬ್ಬೆ, ಕೋಗಿಲೆ, ಹಲಸು ಮೊದಲಾದ ಮೌಲ್ಯಯುತವಾದ ಮರಗಳು ಇಲ್ಲಿಯ ಕಾಡುಗಳಲ್ಲಿವೆ. ಆಲ, ಅತ್ತಿ, ಸಂಪಿಗೆ, ಅರಳೆ, ಮಾವು, ಹೊಂಗೆ ಮರಗಿಡಗಳು ಇವೆ. ಕೆಲವೆಡೆ ಬಿದಿರು, ಬೆತ್ತ, ವಾಟಿ, ಕೇದಿಗೆ, ಈಚಲು, ಬಗನಿ ಮುಂತಾದವು ಇವೆ. ಏಲಕ್ಕಿ, ಕಾಡುಮೆಣಸು, ಸೀಗೆ, ಗೇರು, ಅಂಟುವಾಳ, ಚಕ್ಕೆ ಮೊದಲಾದವು ಇಲ್ಲಿಯ ಅರಣ್ಯೋತ್ಪನ್ನಗಳು. ನಿಂಬೆ, ಕಾಡು, ಕಂಚಿ, ದೊಡ್ಡಳ್ಳಿಕಾಯಿ, ಕಾಡುಕಿತ್ತಳೆ, ಚಕ್ಕೋತ, ನೆಲ್ಲಿಕಾಯಿ ಮುಂತಾದವೂ ಇವೆ. ಇಲ್ಲಿ ದಕ್ಷಿಣ ಭಾರತದ ಎಲ್ಲ ಪ್ರಾಣಿವರ್ಗವಿದೆ. ಹುಲಿ, ಚಿರತೆ, ಆನೆ, ಕಾಟಿ, ಕಡವೆ, ಕಾಡುಹಂದಿಗಳಂತಹ ದೊಡ್ಡ ಪ್ರಾಣಿಗಳಿಂದ ಹಿಡಿದು ಮೊಲ, ಕೆಂಜಳಿಲು, ಮುಸಿಯ, ಮಂಗಗಳಂತಹ ಬಗೆಬಗೆಯ ಪ್ರಾಣಿಗಳಿವೆ. ಉರಗ ಮತ್ತು ಪಕ್ಷಿ ಜಾತಿಗಳು ಸಮೃದ್ಧವಾಗಿವೆ. ಇಲ್ಲಿಯ ಸಮುದ್ರಕ್ಕಿಂತಲೂ ಕೆರೆಗಳೇ ಮೀನು ಅಭಿವೃದ್ಧಿಗೆ ಅನುಕೂಲವಾಗಿವೆ. ವಾಯುಗುಣ: ಈ ಜಿಲ್ಲೆಯು ಪಶ್ಚಿಮ ಕರಾವಳಿ ವಾಯುಗುಣದ ಲಕ್ಷಣಗಳನ್ನು ಪಡೆದಿದೆ. ಸಮುದ್ರ ಮಟ್ಟದಿಂದ ಹೆಚ್ಚು ಎತ್ತರವಲ್ಲದ ಭೂಪ್ರದೇಶವೇ ಇಲ್ಲಿ ಅಧಿಕ ಇರುವುದರಿಂದಾಗಿ ವರ್ಷದ ಬಹುಭಾಗ ಮೈಯಲ್ಲಿ ಬೆವರು ಬರಿಸುವ ಉಷ್ಣಾಂಶ ಮತ್ತು ತೇವಾಂಶದಿಂದ ಕೂಡಿದ ಸೆಕೆ ಇರುತ್ತದೆ. ಹಗಲು ರಾತ್ರಿ ಉಷ್ಣಾಂಶ ಏರಿಕೆಯಲ್ಲೇ ಇರುತ್ತದೆ. ಚಳಿಗಾಲದಲ್ಲಿ ಗರಿಷ್ಠ ಉಷ್ಣಾಂಶ ಅಪರೂಪಕ್ಕೆ ೩೮º ಸೆಲ್ಸಿಯಸ್ಗೆ ಹೋದರೆ ಕನಿಷ್ಠ ಉಷ್ಣಾಂಶ ೧೭º ಸೆಲ್ಸಿಯಸ್ ಗೆ ಇಳಿಯುವುದುಂಟು. ಮಾರ್ಚ್ನಿಂದ ಮೇ ತಿಂಗಳ ಅಂತ್ಯದವರೆಗೆ ಕಡುಬೇಸಿಗೆಯಿದ್ದು, ವಿರಳವಾಗಿ ಬಿರುಮಳೆಗಳಾಗುತ್ತವೆ. ಪಶ್ಚಿಮ ಘಟ್ಟದತ್ತ ಹೋದಂತೆಲ್ಲಾ ತಂಪು ಹವೆ ಕಂಡುಬರುತ್ತದೆ. ಜೂನ್ ನಿಂದ ಆರಂಭವಾಗುವ ನೈರುತ್ಯ ಮಾರುತದ ಮುಂಗಾರು ಮಳೆಯು ಸೆಪ್ಟೆಂಬರ್ ಅಂತ್ಯದವರೆಗೆ ತೀಕ್ಷ್ಣವಾಗಿರುತ್ತದೆ. ಈ ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ. ರಾಜ್ಯದ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯೂ ಒಂದು. ವಾರ್ಷಿಕವಾಗಿ ಸರಾಸರಿ ೩೫೦೦-೪೦೦೦ಮಿಮೀ ಮಳೆಯಾಗುವ ಸಂಭವವಿದೆ. ಅಕ್ಟೋಬರ್ ನಿಂದ ಮಳೆ ವಿರಳವಾಗುತ್ತಾ ಬರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ಚಳಿಗಾಲದ ತಿಂಗಳುಗಳಲ್ಲಿ ಉಷ್ಣಾಂಶ ಕಡಿಮೆ ಕೆಲವು ವರ್ಷಗಳಲ್ಲಿ ಅತ್ಯಧಿಕ ಮಳೆಯಾದ ದಾಖಲೆ ಈ ಜಿಲ್ಲೆಗಿದೆ. ೧೯೬೧ ರಲ್ಲಿ ಉಡುಪಿ ಮತ್ತು ಕಾರ್ಕಳ ಪಟ್ಟಣಗಳಲ್ಲಿ ಅನುಕ್ರಮವಾಗಿ ೬೩೩೫ ಮತ್ತು ೬೪೬೪ ಮಿಮೀ. ಅಧಿಕ ಮಳೆಯಾದ ದಾಖಲೆ ಇದೆ. ವ್ಯವಸಾಯ ಕರ್ನಾಟಕದ ಇತರ ಜಿಲ್ಲೆಗಳಂತೆಯೇ ಇಲ್ಲಿಯೂ ವ್ಯವಸಾಯವೇ ಆರ್ಥಿಕತೆಯ ಬೆನ್ನೆಲುಬು. ಸು. ೧,೨೨,೧೩೨ ಹೆಕ್ಟೇರು ಬಿತ್ತನೆ ಪ್ರದೇಶವಿದೆ. ಇದು ವರ್ಷದಲ್ಲಿ ನಾಲ್ಕು ತಿಂಗಳು ಅಧಿಕ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಇಲ್ಲಿ ನೀರಾವರಿ ಬೆಳೆಗಳೇ ಹೆಚ್ಚು. ಒಟ್ಟು ೧೧,೧೭೮ ಹೆಕ್ಟೇರುಗಳಿಗೆ ನೀರಾವರಿ ಪೂರೈಕೆಯಿದೆ. ಕಾಲುವೆ ನೀರಾವರಿಯಿಲ್ಲ. ಏತ ನೀರಾವರಿ (೩೭೧೭ ಹೆ) ಮತ್ತು ಬಾವಿ ನೀರಾವರಿ (೪೫೧೪ ಹೆ.) ವಿಧಗಳು ಪ್ರಮುಖ, ಇವು ಶೇ.೭೫ ಭಾಗ ನೀರಾವರಿ ಸೌಲಭ್ಯ ಕಲ್ಪಿಸುತ್ತವೆ. ಅಲ್ಲದೆ ಕೆರೆ ನೀರಾವರಿ (೧೫೩೨ಹೆ.) ಹಾಗೂ ಇತರೆ (೧೨೦೧ಹೆ.) ನೀರಾವರಿ ವಿಧಾನಗಳಿಂದಲೂ ಸೌಕರ್ಯ ಪಡೆಯಲಾಗುವುದು. ಭತ್ತ ಪ್ರಮುಖ ಆಹಾರ ಬೆಳೆ. ಇಲ್ಲಿ ಬತ್ತದ ಗದ್ದೆಗಳನ್ನು ಅವುಗಳ ಸನ್ನಿವೇಶಕ್ಕನುಗುಣವಾಗಿ ವಿಂಗಡಿಸುತ್ತಾರೆ. ಕೊಳಕ ಗದ್ದೆ, ಬೈಲು ಗದ್ದೆ ಮತ್ತು ಪಟ್ಲ್‌ ಗದ್ದೆಗಳೆಂದು ಅವನ್ನು ಕರೆಯಲಾಗುತ್ತದೆ. ಕೆಲವೆಡೆ ಬೇಸಿಗೆ ಬೆಳೆ ಬೆಳೆಯುವುದುಂಟು. ವಾಣಿಜ್ಯ ಬೆಳೆಗಳಲ್ಲಿ ತೆಂಗು ಮುಖ್ಯವಾದುದು. ಸಮುದ್ರತೀರದಲ್ಲಿ ಮತ್ತು ಒಳನಾಡಿನಲ್ಲಿ ವ್ಯಾಪಕವಾಗಿ ತೆಂಗಿನಮರಗಳಿವೆ. ಬೆಟ್ಟದ ತಪ್ಪಲಲ್ಲಿ ಮೆಣಸು ಮತ್ತು ಏಲಕ್ಕಿ ವಾಣಿಜ್ಯ ಬೆಳೆಗಳು. ನೀರಾವರಿ ಅನುಕೂಲವಿರುವ ಹೆಚ್ಚಿನ ಭಾಗಗಳಲ್ಲಿ ಅಡಕೆ ತೋಟಗಳಿವೆ. ಹೊಸ ಹೊಸ ಬೇಸಾಯ ವಿಧಾನಗಳಿಂದ ಮತ್ತು ಹೊಸ ತಳಿಗಳ ಹಾಗೂ ಬೆಳೆಗಳ ಪ್ರಯೋಗದಿಂದ ಇಂದು ಇಲ್ಲಿನ ವ್ಯವಸಾಯಕ್ಷೇತ್ರ ವೈವಿಧ್ಯ ಮಯವಾಗಿದೆ. ಅಲ್ಲಲ್ಲಿ ರಾಗಿ, ಉದ್ದು, ಹೆಸರು, ಹುರುಳಿ, ಅವರೆ, ಗೆಣಸು, ಪರಂಗಿ ಬೆಳೆಯಲಾಗುತ್ತದೆ. ಕಬ್ಬು, ಗೋಡಂಬಿ, ಮೆಣಸಿನಕಾಯಿ, ಸಪೋಟ, ಮಾವು, ಹಲಸು, ಬಾಳೆಗಳ ಸಾಗುವಳಿಯೂ ಉಂಟು. ಈಚಿನ ದಶಕಗಳಲ್ಲಿ ತಾಳೆ ಮರಗಳನ್ನು ಬೆಳೆಯುವುದು ಪ್ರಾರಂಭವಾಗಿದೆ. ಈ ಜಿಲ್ಲೆಯಲ್ಲಿ ಕೆರೆ ನೀರಾವರಿ ಕಡಿಮೆ. ಇಲ್ಲಿ ಅನೇಕ ಸಣ್ಣ ದೊಡ್ಡ ಕೆರೆಗಳಿವೆ. ಕುಂದಾಪುರ ತಾಲ್ಲೂಕಿನ ಚಂತರ ಮಡಗ ಮತ್ತು ಮರನಾಡ ಮಡಗ ಎಂಬ ಕೆರೆಗಳು ನೀರಾವರಿಗೆ ಹೆಚ್ಚು ಉಪಯುಕ್ತ ವಾಗಿವೆ. ಕಾರ್ಕಳದ ಬಳಿಯ ರಾಮಸಾಗರ ದೊಡ್ಡದು. ಜಿಲ್ಲೆಯಲ್ಲಿ ಒಟ್ಟು ೯೭,೨೫೮ ಜನ ಸಾಗುವಳಿದಾರರಿದ್ದಾರೆ. ೮೭,೭೬೧ ಕೃಷಿಕಾರ್ಮಿಕರಿದ್ದಾರೆ (೨೦೦೧). ಭತ್ತ ಅತಿ ವಿಸ್ತಾರ ಪ್ರದೇಶದಲ್ಲಿ ಬೆಳೆಯುವ ಬೆಳೆ (೬೨,೨೯೦ ಹೆ). ಗೇರು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ೨೦೫೫೭ ಹೆಕ್ಟೇರುಗಳಲ್ಲಿ ಬೆಳೆಯುತ್ತಾರೆ. ತರುವಾಯದ ಸ್ಥಾನವನ್ನು ತೆಂಗು (೧೪೮೪೪ ಹೆ), ದ್ವಿದಳ ಧಾನ್ಯ (೭೬೮೪ ಹೆ) ಮತ್ತು ಅಡಕೆ (೮೪೧೯ ಹೆ), ಮೆಣಸು (೨೩೨ ಹೆ) ಬೆಳೆಗಳು ಪಡೆದಿವೆ. ಮೀನುಗಾರಿಕೆ ಉಡುಪಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಲ್ಲಿ ಮೀನುಗಾರಿಕೆ ಗಮನಾರ್ಹ ಸ್ಥಾನ ಪಡೆದಿದೆ. ಈ ಜಿಲ್ಲೆ ಪಾರಂಪರಿಕವಾಗಿ ಮೀನುಗಾರಿಕೆಗೆ ಹೆಸರಾದುದು. ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೪೧ಕಿಮೀ ತೀರಪ್ರದೇಶವಿತ್ತು. ಈಗ ಉಡುಪಿ ಜಿಲ್ಲೆಯಲ್ಲಿ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೇ.60ರಷ್ಟು ಉದ್ದದ ಕರಾವಳಿ ಈ ಜಿಲ್ಲೆಗೆ ಸೇರಿದೆ. ದಕ್ಷಿಣದ ಯರಮಾಲುವಿನಿಂದ ಉತ್ತರದ ಬೈಂದೂರಿನವರೆಗೂ ಅನೇಕ ಮೀನುಗಾರಿಕೆ ಕೇಂದ್ರಗಳಿವೆ. ಅವುಗಳಲ್ಲಿ ಉಡುಪಿ ಬಳಿ ಇರುವ ಮಲ್ಪೆಯಲ್ಲಿ ಮತ್ತು ಕುಂದಾಪುರದ ದಡಗಳಲ್ಲಿ ಮತ್ಸ್ಯೋದ್ಯಮ ಹೆಚ್ಚಾಗಿ ಬೆಳೆದಿದೆ. ಹಿಂದೆ ಸಮುದ್ರದಲ್ಲಿ ಮೀನು ಹಿಡಿಯುವುದು ಒಂದು ಉಪಜೀವನ ವೃತ್ತಿಯಾಗಿತ್ತು. ಮೀನುಗಾರರು ತಮ್ಮ ಸೀಮಿತ ಸಾಮಗ್ರಿ ಸಲಕರಣೆಗಳ ನೆರವಿನಿಂದ ದೋಣಿಗಳಲ್ಲಿ ಹೋಗಿ ಮೀನುಗಳನ್ನು ಹಿಡಿಯುತ್ತಿದ್ದರು. ಈಗ ಆಧುನಿಕ ಯಂತ್ರಚಾಲಿತ ಮೋಟಾರು ದೋಣಿಗಳು ಮತ್ತು ಸುಧಾರಿತ ಬಲೆಗಳು ಲಭ್ಯವಿವೆ. ಮೀನುಗಾರಿಕೆಯ ವಿಧಾನ ಹೆಚ್ಚು ವೈಜ್ಞಾನಿಕವಾಗಿದೆ. ಆದ್ದರಿಂದ ಸಮುದ್ರದಲ್ಲಿ ದೂರದ ಆಳ ಕಡಲಿನಲ್ಲಿ ಸಾಗಿ ಮೀನನ್ನು ಹಿಡಿದು ತರುತ್ತಾರೆ. ಇಂದು ಮೀನು ಮಾತ್ರವಲ್ಲದೆ ಏಡಿ, ಸೀಗಡಿ ಚಿಪ್ಪು ಹಾಗೂ ಹವಳ ಸಂಗ್ರಹಣೆಯೂ ಮೀನುಗಾರಿಕೆಯ ಅಂಗವಾಗಿ ಬೆಳೆದಿದೆ. ಇಲ್ಲಿ ಹಿಡಿಯುವ ಮೀನುಗಳಲ್ಲಿ ಬಂಗಡೆ ಅಥವಾ ಬಗ್ಗಡೆ ಪ್ರಸಿದ್ಧ ವಾದುದು. ಅದು ಈ ತೀರದಲ್ಲಿ ಯಥೇಚ್ಫವಾಗಿ ದೊರಕುತ್ತದೆ. ಮಾಂಸ ಹಾಗೂ ರುಚಿಯ ದೃಷ್ಟಿಯಿಂದ ಇದು ಜನಪ್ರಿಯ. ಇದಲ್ಲದೆ ಭೂತಾಯಿ ಎಂಬ ಚಿಕ್ಕಮೀನು ಇಲ್ಲಿ ಹೆಚ್ಚಾಗಿ ಸಿಗುತ್ತದೆ. ಸಾರ್ಡೀಶ್ ಮೀನುಗಳನ್ನು ಹೆಚ್ಚಾಗಿ ಎಣ್ಣೆ ತೆಗೆಯಲು ಬಳಸುತ್ತಾರೆ. ನದಿ ಮುಖದ ಹಿನ್ನೀರಿನಲ್ಲೂ ಒಳನಾಡಿನ ನದಿ ಕೆರೆಗಳಲ್ಲೂ ಸಾಕಷ್ಟು ಮೀನು ಲಭ್ಯವಿದೆ. ಈಗ ಮೀನುಸಾಕಣೆ ಒಂದು ಮುಖ್ಯ ಉದ್ಯಮ. ಮೀನನ್ನು ಸಂಸ್ಕರಿಸುವ, ಒಣಗಿಸುವ, ಡಬ್ಬಕ್ಕೆ ತುಂಬುವ ಮತ್ತು ಕೆಡದಂತೆ ರಕ್ಷಿಸುವ ಉದ್ಯಮಗಳೂ ಇಲ್ಲಿ ಬೆಳೆದಿವೆ. ಇದರಿಂದ ಅನೇಕರಿಗೆ ಉದ್ಯೋಗ ದೊರಕಿದೆ. ಮೀನುಗಾರಿಕೆ ವರ್ಷಪೂರ್ತಿ ನಡೆಯುವ ಉದ್ಯೋಗವಲ್ಲ. ಸೆಪ್ಟೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೂ ಚಟುವಟಿಕೆ ಚುರುಕಾಗಿರುತ್ತದೆ. ಮುಂದೆ ಏಪ್ರಿಲ್ ವರೆಗೂ ಕಡಿಮೆ. ಮೇ-ಆಗಸ್ಟ್‌ವರೆಗೆ ಸಮುದ್ರದಲ್ಲಿ ಮೀನು ಹಿಡಿಯಲಾಗುವುದಿಲ್ಲ. ಮುಂಗಾರಿನ ತೀವ್ರತೆಯ ಕಾರಣ ಈ ಅವಧಿಯಲ್ಲಿ ಮೀನುಗಾರರು ಬಹುತೇಕ ನಿರುದ್ಯೋಗಿಗಳಾಗಿರುತ್ತಾರೆ. ಈಗ ಸೀಗಡಿಗಳಿಗೆ ವಿಶ್ವ ಮಾರುಕಟ್ಟೆ ಯಲ್ಲಿ ಬೇಡಿಕೆ ಹೆಚ್ಚಿದೆ. ಸೀಗಡಿಗಳನ್ನು ಹಿಡಿಯುವ, ಸಾಕಿ ಬೆಳೆಸುವ ಕಾಯಕಕ್ಕೆ ಈಗ ಪ್ರಾಮುಖ್ಯತೆ ಬಂದಿದೆ. ವಾರ್ಷಿಕವಾಗಿ ಸಾಗರೋತ್ಪನ್ನವಾಗಿ ಹಿಡಿದ ಮೀನಿನ ಪ್ರಮಾಣ 70388 (2006) ಟನ್ಗಳು. ಸಿಹಿ ನೀರು ಮೀನು 82.68 ಟನ್ಗಳು (2006). ಮೋಗವೀರ ಆರಾಧ್ಯ ದೈವ ನಂಬಿ ಮೀನುಗಾರಿಕೆ ನಡೆಸುತ್ತಾರೆ ಖನಿಜ ಸಂಪತ್ತು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಕಬ್ಬಿಣದ ಅದಿರು ಹೇರಳವಾಗಿದೆ. ಕೊಡಚಾದ್ರಿಯ ಬಳಿ ಈ ಅದಿರನ್ನು ತೆಗೆಯಲಾಗುತ್ತದೆ. ಕುಂದಾಪುರ ತಾಲ್ಲೂಕಿನಲ್ಲಿ ಉತ್ತಮ ದರ್ಜೆಯ ಬಾಕ್ಸೈಟ್ ಇದೆ. ಸುಣ್ಣದ ಚಿಪ್ಪು, ಸಿಲಿಕ ಮರಳು, ಸಿಲಿಮನೈಟ್, ಸೋಪುಕಲ್ಲು, ಹಂಚಿನ ತಯಾರಿಕೆಯ ಮಣ್ಣು-ಇವು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆಯುತ್ತವೆ. ಕಾಪು, ಪಡುಬಿದರೆ, ಉದ್ಯಾವರ ಮೊದಲಾದೆಡೆಗಳಲ್ಲಿ ಅಭ್ರಕದಿಂದ ಕೂಡಿದ ಬೆಣಚುಕಲ್ಲಿನ ಶಿಲೆಗಳಿವೆ. ಮಲ್ಪೆ ಬಳಿ ಹೆಂಚು ತಯಾರಿಕೆಗೆ ಉಪಯುಕ್ತವಾದ ಮಣ್ಣು ದೊರೆಯುತ್ತದೆ. ಕೈಗಾರಿಕೆ ಉಡುಪಿ ಜಿಲ್ಲೆ ಕೈಗಾರಿಕಾಪ್ರಧಾನ ಜಿಲ್ಲೆಯಲ್ಲ. ಸಣ್ಣ ಕೈಗಾರಿಕೆ, ವ್ಯಾಪಾರ ಮತ್ತು ಇತರ ವ್ಯವಸಾಯೇತರ ಚಟುವಟಿಕೆಗಳಲ್ಲಿ ತೊಡಗಿರುವವರ ಪ್ರಮಾಣ ಜಿಲ್ಲೆಯ ಒಟ್ಟು ಜನಸಂಖ್ಯೆಯ ಸುಮಾರು ಶೇ.೪೦ ರಷ್ಟು . ಮೀನುಗಳ ಸಂಸ್ಕರಣೆ, ವ್ಯಾಪಾರ, ವಿದೇಶಗಳಿಗೆ ರಫ್ತು ಮಾಡುವುದು ಮುಂತಾದ ಕಾರ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ತೊಡಗಿದ್ದಾರೆ. ಮಲ್ಪೆ, ಕುಂದಾಪುರ, ಕೋಡಿ ಮೊದಲಾದವು ಈ ಚಟುವಟಿಕೆಗಳ ಕೇಂದ್ರಗಳಾಗಿವೆ. ನಿಸರ್ಗಸಂಪನ್ಮೂಲಗಳನ್ನು ಬಳಸಿಕೊಂಡು ಅನೇಕ ಉದ್ಯಮಗಳು ತಲೆ ಎತ್ತಿವೆ. ಅವುಗಳಲ್ಲಿ ಹಂಚಿನ ಕಾರ್ಖಾನೆಗಳು ಮುಖ್ಯವಾದವು. ಕುಂದಾಪುರ ಮತ್ತು ಉಡುಪಿಯಲ್ಲಿ ಈ ಕಾರ್ಖಾನೆಗಳು ಹೆಚ್ಚಾಗಿ ನೆಲೆಸಿವೆ. ವಿಶ್ವಪ್ರಸಿದ್ಧವಾದ ಮಂಗಳೂರು ಹಂಚುಗಳು ಇಲ್ಲಿಂದ ರಫ್ತಾಗುತ್ತವೆ. ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಬಳಸುವ ಮೊಸಾಯಿಕ್ ಹಂಚುಗಳು ಈಗೀಗ ಹೆಚ್ಚಾಗಿ ತಯಾರಾಗುತ್ತವೆ. ಮನೆಗಳ ಗೋಡೆಗಳನ್ನು ಕಟ್ಟಲು ಬಳಸುವ ಜಂಬಿಟ್ಟಿಗೆ ಕಲ್ಲು ಜಿಲ್ಲೆಯಲ್ಲಿ ಹೇರಳವಾಗಿ ಸಿಗುತ್ತವೆ. ಇದನ್ನು ಇಟ್ಟಿಗೆ ಮಾಡಿ ಘಟ್ಟದ ಮೇಲಿನ ಪಟ್ಟಣಗಳಿಗೆ ಮತ್ತು ಗ್ರಾಮಗಳಿಗೆ ಕಳುಹಿಸಲಾಗುತ್ತದೆ. ಇತ್ತೀಚೆಗೆ ಹೆಚ್ಚಾಗಿ ತೆಂಗಿನ ನಾರಿನಿಂದ ಹಗ್ಗ, ಜಮಖಾನೆ, ಕಾಲೊರೆಸುವ ತಾಟು ಮೊದಲಾದವನ್ನು ತಯಾರಿಸಲಾಗುತ್ತಿದೆ. ಇದೊಂದು ಮುಖ್ಯ ಗೃಹಕೈಗಾರಿಕೆಯಾಗಿ ಬೆಳೆದಿದೆ. ಉದ್ಯಾವರ, ಪಡುಬಿದ್ರಿ, ಕಲ್ಯಾಣಪುರಗಳಲ್ಲಿ ಈ ಚಟುವಟಿಕೆಗಳು ಹೆಚ್ಚು. ಇಲ್ಲಿ ಅರಣ್ಯ ಪ್ರದೇಶ ಸಾಕಷ್ಟಿರುವುದರಿಂದ ಮರ, ಬೆತ್ತ, ಬಿದಿರುಗಳನ್ನು ಬಳಸಿ ವಿವಿಧ ಪೀಠೋಪಕರಣಗಳು, ಕುಕ್ಕೆಗಳು, ಚಾಟುಗಳು, ಮಳೆಗಾಲದಲ್ಲಿ ತಲೆಯ ಮೇಲೆ ಹಾಕಿಕೊಳ್ಳುವ ಗೊರಗಗಳು, ಗೋಡೆಗಳ ನಿರ್ಮಾಣಕ್ಕೆ ಬಳಸುವ ಬಿದಿರಿನ ತಡಿಕೆಗಳು ಮೊದಲಾದವನ್ನು ತಯಾರಿಸಲಾಗುತ್ತದೆ. *ಕಾಡಿನಲ್ಲಿ ದೊರೆಯುವ ಈಚಲಿನಿಂದ ಮತ್ತು ದೊಡ್ಡ ಹುಲ್ಲಿನಿಂದ ಚಾಪೆ ತಯಾರು ಮಾಡುತ್ತಾರೆ. ವ್ಯವಸಾಯ ಸಂಬಂಧವಾದ ಇನ್ನೂ ಹಲವಾರು ಉದ್ಯಮಗಳು ಜಿಲ್ಲೆಯಲ್ಲಿವೆ. ಕೊಬ್ಬರಿಯಿಂದ ಎಣ್ಣೆತೆಗೆಯುವ ಗಿರಣಿಗಳು, ಅಕ್ಕಿಗಿರಣಿಗಳು, ಗೋಡಂಬಿ ಸಂಸ್ಕರಣ ಘಟಕಗಳು, ಗೋಡಂಬಿ ಯ ಓಟೆಯಿಂದ ಎಣ್ಣೆ ತಯಾರಿಸುವ ಗಿರಣಿಗಳು, ಬೆಲ್ಲ ತಯಾರಿಕೆಯ ಘಟಕಗಳು-ಇವು ಮುಖ್ಯವಾದವು. ಬೀಡಿ ಕಟ್ಟುವುದು ಒಂದು ಹಳೆಯ ಉದ್ಯಮ. ಇದು ಕರಾವಳಿಯ ಊರುಗಳಲ್ಲಿ ಅಭಿವೃದ್ಧಿ ಹೊಂದಿದೆ. ಕಾರ್ಕಳ ಉಡುಪಿಗಳಲ್ಲಿ ಬೀಡಿ ತಯಾರಿಕೆ ಕಾರ್ಖಾನೆಗಳಿವೆ. ಕೈ ಮಗ್ಗದ ಬಟ್ಟೆಗಳು,ಲುಂಗಿಗಳು ಚೌಕಗಳು ಮೊದಲಾದ ವನ್ನು ತಯಾರಿಸುವ ಉದ್ಯಮಗಳು ಉಡುಪಿ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿವೆ. ಮಣಿಪಾಲ, ಉಡುಪಿ, ಕುಂದಾಪುರ, ಪಟ್ಟಣಗಳು ಆಧುನಿಕ ಕೈಗಾರಿಕೆಗಳಲ್ಲಿ ಮುಂದುವರೆದಿವೆ. ಉಕ್ಕಿನ ಉಪಕರಣಗಳು ಮೋಟಾರುವಾಹನದ ಬಿಡಿಭಾಗಗಳು, ಲೋಹದ ಪಾತ್ರೆಗಳು ಮುಂತಾದವುಗಳ ತಯಾರಿಕೆ, ತಂತಿ ತಯಾರಿಕೆ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆಗೆ ಸಂಬಂಧಿಸಿದ ಕಾರ್ಖಾನೆಗಳು ಇಲ್ಲಿವೆ. ಮುದ್ರಣ, ಪತ್ರಿಕೋದ್ಯಮಗಳಿಗೆ ಮಣಿಪಾಲ ಎತ್ತಿದ ಕೈ, ಉದಯವಾಣಿ ಪತ್ರಿಕೆ, ರೂಪತಾರ, ತರಂಗ ಎಂಬ ನಿಯತಕಾಲಿಕ ಗಳು ಇಲ್ಲಿಂದ ಮುದ್ರಿತವಾಗಿ ಹೊರಬರುತ್ತವೆ. ಮಣಿಪಾಲದ ಮುದ್ರಣಾಲಯ ವಿಶ್ವವಿಖ್ಯಾತವಾದುದು. ಮರಗೆಲಸ, ಕಬ್ಬಿಣದ ಕೆಲಸ. ಚಿನ್ನದ ಕೆಲಸ, ಚರ್ಮ ಕೈಗಾರಿಕೆ, ರಬ್ಬರ್ ಸಂಸ್ಕರಣ ಮುಂತಾದವುಗಳಲ್ಲಿ ಸಾವಿರಾರು ಜನ ದುಡಿಯುತ್ತಿದ್ದಾರೆ. ಗಂಗೊಳ್ಳಿ, ಬೈಂದೂರು, ಮಲ್ಪೆ, ಹಂಗಾರಕಟ್ಟೆ ಬಂದರುಗಳು ಜನರಿಗೆ ಉದ್ಯೋಗ ಒದಗಿಸಿವೆ. ಜಿಲ್ಲೆಯಲ್ಲಿ ಒಟ್ಟು ೬೭೭೨ ವಿವಿಧ ಬಗೆಯ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಸ್ಥಾಪನೆಗೊಂಡಿದ್ದು ಅವುಗಳಲ್ಲಿ ೪೩೩೭೫ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಮಧ್ಯಮ ಪ್ರಮಾಣದ ಉದ್ಯಮಗಳ ಸಂಖ್ಯೆ ೨೭೦ (೨೦೦೬). ಎರಡು ಜವಳಿ ಉದ್ದಿಮೆ, ೩ ರಾಸಾಯನಿಕ ಕೈಗಾರಿಕೆ ಮತ್ತು ೨ ಸಕ್ಕರೆ ಕಾರ್ಖಾನೆಗಳಿವೆ. ಉಡುಪಿ ಜಿಲ್ಲೆಯ ಮಲ್ಲಿಗೆ ಮತ್ತು ಸೀರೆಗಳಿಗೆ ಭೌಗೋಲಿಕ ಗುರುತಿನ (geological identification) ಟ್ಯಾಗ್ ದೊರೆತಿದೆ. ಅಷ್ಟ ಮಠಗಳು ಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ: ಫಲಿಮಾರು ಅದಮಾರು ಸೋದೆ ಕೃಷ್ಣಾಪುರ ಪುತ್ತಿಗೆ ಶಿರೂರು ಕಾಣಿಯೂರು ಪೇಜಾವರ ಉಡುಪಿ ಶೈಲಿಯ ಅಡುಗೆ ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್‌ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ. ಕೃಷ್ಣ ದೇವರಿಗೆ ಪ್ರತಿದಿನವೂ ಬೇರೆ ಬೇರೆ ರೀತಿಯ ಅಡುಗೆ ಮಾಡುತ್ತಾರೆ. ಚಾತುರ್ಮಾಸದ (ಮಳೆಗಾಲದ ನಾಲ್ಕು ತಿಂಗಳ ಅವಧಿ) ಸಮಯದಲ್ಲಿ ತಯಾರಿಸಲಾಗುವ ಅಡುಗೆಗಳಿಗೆ ಕೆಲವು ನಿರ್ಬಂಧಗಳಿವೆ. ಈ ನಿರ್ಬಂಧಗಳು ಹಾಗೂ ಅವಶ್ಯಕತೆಗಳು, ಆ ಸಮಯದಲ್ಲಿ ಸಿಗುವ ಹಾಗು ಹತ್ತಿರದಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ. ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ದಾರಿ ಮಾಡಿದುವು. ಕೃಷ್ಣ ದೇವರಿಗೆ ಅಡುಗೆ ಮಾಡುವ ಶಿವಳ್ಳಿ ಬ್ರಾಹ್ಮಣರು ಈ ಅಡುಗೆ ಶೈಲಿಯನ್ನು ಸೃಷ್ಟಿಸಿದರು. ಇಂದು ದಕ್ಷಿಣಭಾರತದಾದ್ಯಂತ ಉಡುಪಿ ಜಿಲ್ಲೆಯವರು ನಡೆಸುವ ಹೋಟೆಲ್ ಗಳು "ಉಡುಪಿ ಹೋಟೆಲ್'ಎಂಬ ಹೊಸ ಬ್ರಾಂಡ್ ನ್ನು ಸೃಷ್ಟಿಸಿವೆ. ಬೆಂಗಳೂರಿನ ಎಂ.ಟಿ.ಆರ್. ಸಹಾ ಮೂಲತ: ಉಡುಪಿ ಅಡುಗೆಯ ಶೈಲಿಯಿಂದ ರೂಪುಗೊಂಡಿದ್ದು, ಈಗ ಸಿದ್ದ ಆಹಾರಗಳ ತಯಾರಿಯಲ್ಲೂ ಹೆಸರಾಗಿದೆ. ಸಾರಿಗೆ ರಾಷ್ಟ್ರೀಯ ಹೆದ್ದಾರಿ ೧೭ ಉಡುಪಿಯ ಮೂಲಕ ಹಾದುಹೋಗುತ್ತದೆ. ಕಾರ್ಕಳಕ್ಕೆ, ಧರ್ಮಸ್ಥಳಕ್ಕೆ ಹಾಗೂ ಶಿವಮೊಗ್ಗಕ್ಕೆ ಶೃಂಗೇರಿಗೆ ಹೋಗುವ ರಾಜ್ಯ ಹೆದ್ದಾರಿಗಳು ಉಡುಪಿಯನ್ನು ಸಂಪರ್ಕಿಸುವ ಬೇರೆ ಮುಖ್ಯ ರಸ್ತೆಗಳು. ರಾಷ್ಟೀಯ ಹೆದ್ದಾರಿ ೧೭ ಮಂಗಳೂರು ಹಾಗೂ ಕಾರವಾರವನ್ನು ಸಂಪರ್ಕಿಸುತ್ತದೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಉಡುಪಿಯಿಂದ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಹೋಗುತ್ತವೆ. ಕೊಂಕಣ ರೈಲೂ ಸಹಾ ಉಡುಪಿಯ ಮಾರ್ಗವಾಗಿ ಹೋಗುತ್ತದೆ. ಸುಮಾರು ೫೦ ಕಿ.ಮೀ. ದೂರದಲ್ಲಿರುವ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವು ಉಡುಪಿಯ ಹತ್ತಿರದ ವಿಮಾನ ನಿಲ್ದಾಣ. ಉಡುಪಿ ಜಿಲ್ಲೆಯ ಒಂದು ಬದಿಯಲ್ಲಿ ಸಮುದ್ರವೂ ಇನ್ನೊಂದು ಬದಿಯಲ್ಲಿ ಎತ್ತರದ ಘಟ್ಟಗಳೂ ಇವೆ. ಒಳನಾಡು ಚಿಕ್ಕ ದೊಡ್ಡ ಅಸಂಖ್ಯಾತ ನದಿಕೊಳ್ಳಗಳಿಂದ ಕೂಡಿದ ಭೌಗೋಳಿಕ ಸನ್ನಿವೇಶವು ಭೂಸಾರಿಗೆಗೆ ಅಷ್ಟೇನೂ ಅನುಕೂಲಕರವಾಗಿಲ್ಲ. ಹಿಂದೆ ಗಾಡಿ ರಸ್ತೆಗಳು ಹೆಚ್ಚಾಗಿದ್ದವು. ಆಧುನಿಕವಾದ ರಸ್ತೆಗಳು ಹೆಚ್ಚಾಗಿರಲಿಲ್ಲ. ಅವು ಮಳೆಗಾಲದಲ್ಲಿ ಬಹುತೇಕ ಸಂಚಾರಕ್ಕೆ ನಿರುಪಯುಕ್ತವಾಗಿರುತ್ತಿದ್ದವು. ಜಿಲ್ಲೆಯ ಭೌಗೋಳಿಕ ಮಹತ್ತ್ವ ಮತ್ತು ಬಂದರುಗಳಿಂದಾಗಿ ಬ್ರಿಟಿಷ್ ಸರ್ಕಾರ ಕೆಲವು ಘಾಟಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿತು. ಇದರಿಂದ ಜಿಲ್ಲೆಯೊಂದಿಗೆ ಒಳನಾಡಿನ ಸಂಪರ್ಕ ಬೆಳೆಯಲು ಸಹಾಯವಾಯಿತು. ಕೊಲ್ಲೂರು ಸಮೀಪದಲ್ಲಿ ಹಾದು ಹೋಗುವ ಉಡುಪಿ-ಸಾಗರ ರಸ್ತೆ ಶಿವಮೊಗ್ಗ ಜಿಲ್ಲೆಯ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆ, ಉಡುಪಿ-ಆಗುಂಬೆ-ಶಿವಮೊಗ್ಗ ರಸ್ತೆ ಇತ್ತೀಚಿನವರೆಗೂ ದೊಡ್ಡ ವಾಹನಗಳ ಸಂಚಾರಕ್ಕೆ ಅನುಕೂಲಕರವಾಗಿರಲಿಲ್ಲ. ಉಡುಪಿ-ಕಾರ್ಕಳ-ದಕ್ಷಿಣಕನ್ನಡದ ಎಲ್ಲೆ ಮತ್ತು ಶೃಂಗೇರಿ ರಸ್ತೆ ಉತ್ತಮ ಸ್ಥಿತಿಯಲ್ಲಿರುವ ಘಾಟಿಮಾರ್ಗ; ಇದು ಕುದುರೆಮುಖ ಗಣಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ. ಉಡುಪಿ-ಶಂಕರ ನಾರಾಯಣ-ಹೊಸಂಗಡಿ-ಹುಲಿಕಲ್ ಮೂಲಕ ಇನ್ನೊಂದು ಘಾಟಿ ಮಾರ್ಗ ಶಿವಮೊಗ್ಗ ಜಿಲ್ಲೆ ತಲುಪುತ್ತದೆ. ಉಡುಪಿ, ಭಟ್ಕಳ ರಸ್ತೆಯು ರಾಷ್ಟ್ರೀಯ ಹೆದ್ದಾರಿ. ಇದು ಉತ್ತರ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಉಡುಪಿ-ಮಂಗಳೂರು ಮಾರ್ಗವೂ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ. 143ಕಿಮೀ ರಾಷ್ಟ್ರೀಯ ಹೆದ್ದಾರಿ, 353 ಕಿಮೀ ರಾಜ್ಯ ಹೆದ್ದಾರಿ, 735 ಕಿಮೀ ಮುಖ್ಯ ಜಿಲ್ಲಾರಸ್ತೆಗಳು. ಒಟ್ಟು 1230 ಕಿಮೀಗಳ ರಸ್ತೆಗಳ ಉದ್ದವಿದೆ. ಇದರಲ್ಲಿ 1209 ಪಕ್ಕರಸ್ತೆ, 24 ದೊಡ್ಡ ಸೇತುವೆಗಳಿವೆ. ಈಚಿನ ದಶಕಗಳಲ್ಲಿ ಇಲ್ಲಿನ ನದಿಗಳು ಮತ್ತು ಉಪನದಿಗಳಿಗೆ ಅನೇಕ ಸೇತುವೆಗಳನ್ನು ಕಟ್ಟಿದ್ದರಿಂದ ಒಳನಾಡಿನ ಸಂಪರ್ಕ ವ್ಯವಸ್ಥೆ ಉತ್ತಮಗೊಂಡಿದೆ. ಉಡುಪಿ-ಕಾರ್ಕಳ-ಬೆಳ್ತಂಗಡಿ ರಸ್ತೆ ಚಾರ್ಮಾಡಿ ಘಾಟ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆ. ತಿರುವನಂತಪುರ ಮುಂಬಯಿ-ಕೊಂಕಣ ರೈಲು ಮಾರ್ಗ ಇಲ್ಲಿಯ ಏಕೈಕ ರೈಲ್ವೆ ಸಂಪರ್ಕವ್ಯವಸ್ಥೆ ಇದರಿಂದ ಬೈಂದೂರು, ಕುಂದಾಪುರ, ಉಡುಪಿ, ಹಂಗಾರಕಟ್ಟೆ ಮೊದಲಾದ ತೀರದ ಪಟ್ಟಣಗಳಿಂದ ಭಾರತದ ಇತರ ಭಾಗಗಳಿಗೆ ರೈಲು ಸಂಪರ್ಕ ಒದಗಿಬಂದಿದೆ. ಜಿಲ್ಲೆಯ ಒಟ್ಟು ರೈಲು ಮಾರ್ಗದ ಉದ್ದ 49 ಕಿ.ಮೀ.ಗಳು. ಜಲಸಾರಿಗೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯ. ಕರಾವಳಿಯ ಬಂದರುಗಳಿಗೆ ಮತ್ತು ಪಟ್ಟಣಗಳಿಗೆ ದೋಣಿಗಳು ಸ್ಟೀಮರ್ ಗಳು ಮತ್ತು ಸಣ್ಣ ಹಡಗುಗಳ ಮೂಲಕ ಜನ ಸಂಚಾರ ಮತ್ತು ಸಾಮಗ್ರಿಗಳ ಸಾಗಣೆ ನಡೆಯುತ್ತದೆ. ನದಿ ಮುಖಗಳು ಹಿನ್ನೀರು ದೋಣಿ ಸಂಚಾರಕ್ಕೆ ಅನುಕೂಲವಾಗಿವೆ. ಆಧುನಿಕ ದೂರಸಂಪರ್ಕ ವ್ಯವಸ್ಥೆ ಬಳಕೆಯಲ್ಲಿದೆ. ವಾಣಿಜ್ಯ ಹಾಗೂ ಉದ್ದಿಮೆ ಉಡುಪಿಯು ಕರ್ನಾಟಕದ ಒಂದು ಮುಖ್ಯ ನಗರವಾಗಿ ಬೆಳೆಯುತ್ತಿದೆ. ಒಂದು ಖಾಸಗೀ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಬೆಂಗಳೂರು ಹಾಗೂ ಮಂಗಳೂರಿನ ನಂತರ ಉಡುಪಿಯ ಒಬ್ಬ ವ್ಯಕ್ತಿಯ ಸರಾಸರಿ ಆದಾಯವು ಮೂರನೇ ಸ್ಥಾನದಲ್ಲಿದೆ. ಉಡುಪಿಯ ವಾಣಿಜ್ಯವು ಮುಖ್ಯವಾಗಿ ಕೃಷಿ ಹಾಗೂ ಮೀನುಗಾರಿಕೆಯನ್ನು ಅವಲಂಬಿಸಿದೆ. ಗೇರು, ಬೇರೆ ತರಹದ ಆಹಾರ, ಹಾಲಿನಂತಹ ಸಣ್ಣ ಪ್ರಮಾಣದ ಉದ್ದಿಮೆಗಳು ಇತರ ಮುಖ್ಯ ಉದ್ದಿಮೆಗಳು. ಉಡುಪಿ ಜಿಲ್ಲೆಯ ಶಂಕರಪುರವು ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿದೆ. ಉಡುಪಿಯಲ್ಲಿ ದೊಡ್ಡ ಪ್ರಮಾಣದ ಉದ್ದಿಮೆಗಳು ಇಲ್ಲ. ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಕರ್ನಾಟಕ ಸರಕಾರವು ಕೋಜೆಂಟ್ರಿಕ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಉಡುಪಿ ಜನರ ಹಾಗೂ ಪರಿಸರವಾದಿ ಸಂಘಟನೆಗಳ ತೀವ್ರ ವಿರೋಧವಿದ್ದಾಗಲೂ ನಾಗಾರ್ಜುನ ಕಂಪನಿ ನಂದಿಕೂರಿನ ಬಳಿ ಉಷ್ಣ ವಿದ್ಯುತ್ ಸ್ತಾವರವನ್ನು ನಿರ್ಮಿಸಿದೆ. ಪಡುಬಿದರೆಯ ಬಳಿ ಇದೇ ತರಹದ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಲು ನಾಗಾರ್ಜುನ ವಿದ್ಯುತ್ ಸಂಸ್ಥೆಯ ಪ್ರಯತ್ನವೂ ತೀವ್ರ ವಿರೋಧದಿಂದಾಗಿ ಸ್ಥಗಿತಗೊಂಡಿದೆ. ಸುಜಲಾನ್ ಗಾಳಿ ವಿದ್ಯುತ್ ತಯಾರಿಕಾ ಕೇಂದ್ರವೂ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ಭೂಮಿ ಕಳೆದುಕೊಂಡವರ ಜೊತೆಗೆ ಪರಿಸರವಾದಿಗಳು ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಾರೆ. ವಿಂಡೊಸ್ ಹಾಗೂ Mac OS ಗಳಲ್ಲಿ ಕೆಲಸ ಮಾಡುವ ಪ್ರಖ್ಯಾತ software ಕಂಪೆನಿಯಾದ ರೊಬೊಸಾಫ್ಟ್ ಉಡುಪಿಯಲ್ಲೇ ಹುಟ್ಟಿ ಬೆಳೆದ ಕಂಪೆನಿ. ಈ ಕಂಪೆನಿಯು ಉಡುಪಿಗೆ IT ಜಗತ್ತಿನಲ್ಲಿ ಉತ್ತಮ ಸ್ಥಾನವನ್ನು ತಂದು ಕೊಟ್ಟಿದೆ. ಉಡುಪಿ ಜಿಲ್ಲೆ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ತವರು. ಇಲ್ಲಿ 20ನೆಯ ಶತಮಾನದಲ್ಲಿ ಸ್ಥಾಪಿತವಾದ ಬ್ಯಾಂಕಿಂಗ್ ಸಂಸ್ಥೆಗಳು ಹಲವು. 1906ರಷ್ಟು ಹಿಂದೆಯೇ ಕೆನರಾಬ್ಯಾಂಕ್ ಅಸ್ತಿತ್ವಕ್ಕೆ ಬಂದಿತು. ಅನಂತರ ಬಂದ ಹಲವಾರು ಬ್ಯಾಂಕ್ ಗಳಲ್ಲಿ ಕೆಲವು ಉಳಿದಿವೆ. ಮತ್ತು ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಬ್ಯಾಂಕ್ ಗಳು ಉಡುಪಿ ಮತ್ತು ಮಂಗಳೂರು ಮೂಲದವು. ಅವುಗಳಲ್ಲಿ - ಕೆನರಾ ಬ್ಯಾಂಕ್ ಅಲ್ಲದೆ ಸಿಂಡಿಕೇಟ್ ಬ್ಯಾಂಕ್, (ಈಗ ಕೆನರಾ ಬ್ಯಾಂಕ್ ಜೊತೆಗೆ ವಿಲೀನವಾಗಿದೆ) ವಿಜಯಾ ಬ್ಯಾಂಕ್ (೧೯೩೧), ಕರ್ನಾಟಕ ಬ್ಯಾಂಕ್ ೧೯೨೪), ಕಾರ್ಪೊರೇಷನ್ ಬ್ಯಾಂಕ್-ಇವು ಪ್ರಮುಖವಾದವು. ಜಿಲ್ಲೆಯಲ್ಲಿ ೨೧೭ ವಾಣಿಜ್ಯ ಬ್ಯಾಂಕುಗಳು, ೧೧ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ೩೦ ನಗರ ಸಹಕಾರಿ ಬ್ಯಾಂಕುಗಳು, ೭ ವ್ಯವಸಾಯ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ೮೯೩ ಕೃಷಿ ಸಾಲ ಹಾಗೂ ಇತರ ಸಹಕಾರ ಸಂಘಗಳಿವೆ (೨೦೦೬). ಉಡುಪಿಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳಿವೆ. ಉದಾಹರಣೆಗಳು ರಥಬೀದಿಯಲ್ಲಿರುವ ಸಂಪೂರ್ಣ, ಗೀತಾಂಜಲಿ ಚಿತ್ರಮಂದಿರದ ಹತ್ತಿರದ Little ಪೈ, ಕವಿ ಮುದ್ದಣ್ಣ ಮಾರ್ಗದಲ್ಲಿರುವ ಡಯಾನ ಸ್ಟೋರ್ಸ್,ಕಡಿಯಾಳಿಯ ಪಕ್ಕದಲ್ಲಿ ಮೋರ್. ಹೊಸದಾಗಿ ಶುರುವಾಗಿದೆ. ಉಡುಪಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳೆಂದರೆ, ಅಡಿಕೆ, ಗೋಡಂಬಿ, ರಬ್ಬರ್, ತೆಂಗು ಇತ್ಯಾದಿ. ಹಲವಾರು ಗೋಡಂಬಿ ಸಂಸ್ಕ್ರರಣಾ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ.ಉಡುಪಿಯ ಆಭರಣಗಳು ಹಾಗೂ ಕಲೆ ವಿಶ್ವ ಪ್ರಸಿದ್ಧ. ಮೇ ತಿಂಗಳಲ್ಲಿ ಬರುವ ಅಕ್ಷಯ ತದಿಗೆಯ ದಿನ ಜನರು ಬಹಳಷ್ಟು ಆಭರಣಗಳನ್ನು ಖರೀದಿಸುತ್ತಾರೆ. ಆಭರಣ ಹಾಗೂ ಸ್ವರ್ಣ ಇಲ್ಲಿಯ ಪ್ರಸಿದ್ಧ ಚಿನ್ನದ ಅಂಗಡಿಗಳು. ಕಲೆ ಹಾಗೂ ಸಂಸ್ಕೃತಿ ಉಡುಪಿಯ ಸಂಸ್ಕೃತಿಯಲ್ಲಿ ಭೂತ ಕೋಲ, ಆಟಿ ಕಳಂಜ, ಕರಂಗೋಲು ,ಪಾಣಾರಾಟ ಹಾಗೂ ನಾಗಾರಾಧನೆ ಒಳಗೊಂಡಿವೆ. ಇಲ್ಲಿಯ ಜನರು ಆಚರಿಸುವ ಕೆಲವು ಪ್ರಮುಖ ಹಬ್ಬಗಳಲ್ಲಿ ದೀಪಾವಳಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ , ನವರಾತ್ರಿ, ದಸರಾ, ರಂಜಾನ್, ಹಾಗೂ ಕ್ರಿಸ್ಮಸ್ ಒಳಗೊಂಡಿವೆ. ಸಾಂಸ್ಕೃತಿಕ ಕಲೆಯಾದ ಯಕ್ಷಗಾನ, ನಾಟಕ, ಭರತನಾಟ್ಯ ತುಂಬಾ ಪ್ರಸಿಧ್ಧ. ಕಳೆದ ಐದುವರೆ ದಶಕಗಳಿಂದ ನಾಟಕ ರಂಗದಲ್ಲಿ ಸಕ್ರಿಯವಾಗಿರುವ, ದೇಶ ವಿದೇಶಗಳಲ್ಲಿ ನಾಟಕ ಪ್ರದರ್ಶನ ನೀಡುವ, ಸತತವಾಗಿ ನಾಲ್ಕು ದಶಕಗಳಿಂದ ರಾಜ್ಯದ ಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸುತ್ತಿರುವ, ರಾಜ್ಯದ ಅತ್ಯಂತ ಪ್ರಮುಖ ಹವ್ಯಾಸಿ ರಂಗತಂಡವಾದ ರಂಗಭೂಮಿ (ರಿ.) ಉಡುಪಿ, ರಥಬೀದಿ ಗೆಳೆಯರು,ಸುಮನಸಾ ಕೊಡವೂರು ಎಂಬ ಸಂಸ್ಥೆಗಳು ಉಡುಪಿಯ ಸಂಸ್ಕೃತಿಯನ್ನು ಉಳಿಸಲು ಬಹಳಷ್ಟು ಕೆಲಸವನ್ನು ಮಾಡುತ್ತಿದೆ.ಕುಂದಾಪುರದ ರಂಗ ಅಧ್ಯಯನ ಕೇಂದ್ರ, ಲಾವಣ್ಯ ಬೈಂದೂರು, ಸುರಭಿ ಬೈಂದೂರು, ಅಮೋಘ ಹಿರಿಯಡಕ, ಭೂಮಿಕಾ ಹಾರಾಡಿ, ಸಂಗಮ ಕಲಾವಿದರು ಮಣಿಪಾಲ,ಭೂಮಿಗೀತ ಪಟ್ಲ,ವನಸುಮ ವೇದಿಕೆ,ನವಸುಮ ರಂಗತಂಡ ಜಿಲ್ಲೆಯ ಪ್ರಮುಖ ಹವ್ಯಾಸಿ ರಂಗತಂಡಗಳು. ಉಡುಪಿ ಜಿಲ್ಲೆಯಾದ್ಯಂತ ಪ್ರಚಲಿತದಲ್ಲಿರುವ ವಿಶ್ವವಿಖ್ಯಾತ ಕಲೆಯೆಂದರೆ ಯಕ್ಷಗಾನ. ಮುಖ್ಯವಾಗಿ ಬಡಗು ತಿಟ್ಟು ಯಕ್ಷಗಾನ ಇಲ್ಲಿ ಮತ್ತು ನೆರೆಯ ಉತ್ತರಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ದೇವರ ಸೇವೆಯ ರೂಪದಲ್ಲಿ ಆರಂಭಗೊಂಡ ಈ ಕಲೆಯು ೨೦ ನೆಯ ಶತಮಾನದ ಉತ್ತರಾರ್ಧದಲ್ಲಿ ವಾಣಿಜ್ಯ ರೂಪವನ್ನು ಪಡೆದುಕೊಂಡು, ನಾಟಕಗಳ ರೀತಿ ಟಿಕೇಟು ಮೂಲಕ ನೋಡುವಂತಹ ಕಲೆಯಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಅಮೃತೇಶ್ವರಿ ಮೇಳ, ಹಾಲಾಡಿ ಮೇಳ, ಮಂದಾರ್ತಿ ಮೇಳ, ಕಮಲಶಿಲೆ ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮಕ್ಕಳ ಮೇಳ ಮೊದಲಾದವುಗಳು ಇಲ್ಲಿನ ಯಕ್ಷಗಾನದ ನಂಟನ್ನು ಋಜುವಾತುಪಡಿಸುತ್ತವೆ. ಯಕ್ಷಗಾನದ ವೃತ್ತಿ ಕಲಾವಿದರಿಗೆ ಹೊಸ ಚೈತನ್ಯ ನೀಡುತ್ತಿರುವ ಯಕ್ಷಗಾನ ಕಲಾರಂಗ, ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ ಯಕ್ಷಗಾನದ ಪಾರಂಪರಿಕ ಶಿಕ್ಷಣ ನೀಡುವ ಯಕ್ಷಗಾನ ಕೇಂದ್ರ ಇಲ್ಲಿಯ ಮೆರುಗು. ತುಳು ರಂಗಭೂಮಿಯಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆ ಗಳು,ಹೊಸತನ ಬಂದಿದೆ. ಕಾಪುವಿನ 'ರಂಗ ತರಂಗ' ಎಂಬ ಸಕ್ರಿಯ ನಾಟಕ ತಂಡವು 'ತಿಲಕೆ ತಿರ್ಗಯೆ','ಪಿರ ಬನ್ನಗ','ಆಯೆ ಸುಬಗೆ' ಮುಂತಾದ ನಾಟಕಗಳನ್ನು ಉಡುಪಿ ಜಿಲ್ಲೆಯಾದ್ಯಂತ ಹಾಗೂ ದ.ಕ.,ಮುಂಬಯಿಗಳಲ್ಲಿ ಆಡಿ ತೋರಿಸಿ ಪ್ರಸಿದ್ದಿ ಗಳಿಸಿದೆ. ಅದಲ್ಲದೆ ದಿ.ಬಾಲಕೃಷ್ಣ ಪೈ ಯವರ 'ಮೂರು ಮುತ್ತು', ಸಾಸ್ತಾನದ ಸಾಧನಾ ಕಲಾವಿದರು, ಕಟಪಾಡಿಯ ರಂಜನಾ ಕಲಾವಿದರು ಮುಂತಾದ ರಂಗಭೂಮಿ ನಾಟಕ ತಂಡಗಳು ಉಡುಪಿ ಜಿಲ್ಲೆಯಲ್ಲಿವೆ. ಕೊಳಿ ಅಂಕ ಕೂಡಾ ಒಂದು ಜನಪದ ಕ್ರೀಡೆ ಪಾರಂಪರಿಕವಾದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆದಿವೆ. ಉಡುಪಿಯ ಜಾನಪದ ಅಧ್ಯಯನ ಕೇಂದ್ರ (RRC) ದೇಶಕ್ಕೇ ಪ್ರಖ್ಯಾತ. ಕೆರೋಡಿ ಸುಬ್ಬರಾವ್, ಮುದ್ದಣ, [[ಗೋವಿಂದ ಪೈ https://kn.wikipedia.org/s/31t |ಎಂ. ಗೋವಿಂದಪೈ]], ಪಂಜೆ ಮಂಗೇಶರಾವ್, ಕಡೇಕಾರು ರಾಜಗೋಪಾಲ, ಕೃಷ್ಣರಾಯ, ಎಂ.ಎನ್. ಕಾಮತ್, ಉಗ್ರಾಣ ಮಂಗೇಶರಾವ್, ಉಲ್ಲಾಳ ಮಂಗೇಶ್ರಾವ್, ಪೇಜಾವರ ಸದಾಶಿವರಾವ್, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಎಂ. ಮರಿಯಪ್ಪ ಭಟ್ಟ , ಡಾ.ಬನ್ನಂಜೆ ಗೋವಿಂದಾಾಚಾರ್ಯ ಮೊದಲಾದದ ಸಾಹಿತ್ಯ ಶ್ರೇಷ್ಠರ ಕಾರ್ಯಕ್ಷೇತ್ರ ಇದು. ಕೆ.ಕೆ. ಹೆಬ್ಬಾರರಂತಹ ಮಹಾಚಿತ್ರಕಲಾವಿದರ ಮೂಲ ಇಲ್ಲಿಯದು. ರಂಜಾಲ ಗೋಪಾಲಶೆಣೈರ ಶಿಷ್ಯರ ವಿಕ್ರಮಶಿಲ್ಪ ಕಾರ್ಯಾಗಾರವಿದೆ. ಭರತ ನಾಟ್ಯ, ಯಕ್ಷಗಾನ ಹಾಗೂ ವಿವಿಧ ನೃತ್ಯಗಳನ್ನು ಕಲಿಸುವ ಮತ್ತು ಕಲಾವಿದರ ಸಂಸ್ಥೆಗಳು ಇಲ್ಲಿ ಬೇರುಬಿಟ್ಟಿವೆ. ಫೋಕಲ್ ಫೋಟೋಕ್ಲಬ್‍ನಂತಹ ಛಾಯಾಗ್ರಹಣ ಕಲೆ, ಆರ್ಟಿಸ್ಟ್ ಫೋರಂ ಅಂತಹ ಚಿತ್ರ ಕಲೆ ರೂಢಿಸುವ ಸಂಸ್ಥೆಗಳಿವೆ. ಉಡುಪಿ ಜಿಲ್ಲೆ ಮತ್ತು ಪಟ್ಟಣ ಇಂತಹ ಕಲಾಸಂಪತ್ತು ಜೀವಂತವಾಗಿರಲು ಸಾಕಷ್ಟು ಕಾಣಿಕೆ ಸಲ್ಲಿಸಿವೆ. ಕೋಳಿಅಂಕ, ಕಂಬಳ ಮೊದಲಾದ ಗ್ರಾಮೀಣ ಪಂದ್ಯಗಳು ಇಂದಿಗೂ ನಡೆದುಬಂದಿವೆ. ಪಿಲಿ ಏಸ: ಪಿಲಿ ಏಸ ನವರಾತ್ರಿ ಸಮಯದಲ್ಲಿ ಕ೦ಡು ಬರುವ ಆಚರಣೆಯಾಗಿದೆ. ಮೈ ಮೇಲೆ ಹುಲಿಯ೦ತೆ ಬಣ್ಣ ಮತ್ತು ಬಟ್ಟೆ ಧರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಉಡುಪಿ ತಾಲ್ಲೂಕು ವಿಸ್ತೀರ್ಣ ೯೨೯ಚ.ಕಿಮೀ. ಜನಸಂಖ್ಯೆ 529225 (2001). ಉತ್ತರದಲ್ಲಿ ಕುಂದಾಪುರ, ದಕ್ಷಿಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ. ಪೂರ್ವದಲ್ಲಿ ಕಾರ್ಕಳ ತಾಲ್ಲೂಕುಗಳಿಂದಲೂ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರೆದಿದೆ. ಕಾಪು, ಕೋಟ, ಉಡುಪಿ ಮತ್ತು ಬ್ರಹ್ಮಾವರ ಹೋಬಳಿ ಗಳು. ಈ ತಾಲ್ಲೂಕಿನಲ್ಲಿ 4 ಪಟ್ಟಣಗಳು ಮತ್ತು 99 ಗ್ರಾಮಗಳು ಇವೆ. ಪಶ್ಚಿಮ ಕರಾವಳಿಯಲ್ಲಿದ್ದು ಸಸ್ಯಸಮೃದ್ಧವಾಗಿರುವ ಈ ತಾಲ್ಲೂಕಿನಲ್ಲಿ ಸಾಗರಿಕ ವಾಯುಗುಣವಿದೆ. ನೈರುತ್ಯ ಮಾರುತಗಳಿಂದ ಸಾಕಷ್ಟು ಮಳೆ ಬೀಳುತ್ತದೆ. ವಾರ್ಷಿಕ ಸರಾಸರಿ 4188ಮಿಮೀ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಅನೇಕ ತೊರೆಗಳು ಹಾಗೂ ಸೀತಾ ಮತ್ತು ಸ್ವರ್ಣ ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತವೆ. ಈ ತಾಲ್ಲೂಕಿನಲ್ಲಿ 4686 ಹೆಕ್ಟೇರ್ ಗಳಷ್ಟು ಕಾಡು ಪ್ರದೇಶವಿದೆ. ಕಾಡಿನಲ್ಲಿ ಕರಿಮರ, ಮಾವು, ಮತ್ತಿ, ಕಿರಲಬೋಗಿ ಮತ್ತು ಬೆನ್ ಟೀಕ್ ಮುಂತಾದ ಮರಗಳು ಬೆಳೆಯುವುದಲ್ಲದೆ ಹುಣಸೆ, ಸೀಗೇಕಾಯಿ, ಬಿದಿರು ಈ ಉಪಯುಕ್ತ ವಸ್ತುಗಳೂ ದೊರೆಯುತ್ತವೆ. ಸ್ವಲ್ಪ ಮೆಣಸಿನ ಬೆಳೆಯೂ ಇದೆ. ಉಡುಪಿ ತಾಲ್ಲೂಕಿನಲ್ಲಿ ದೊಡ್ಡ ನೀರಾವರಿ ಯೋಜನೆಗಳಿಲ್ಲ. ಆದರೆ ಸಾಕಷ್ಟು ಮಳೆ ಬೀಳುವುದರಿಂದ ನದಿ-ತೊರೆಗಳು ಇದ್ದು ಜಲಾಭಾವವಿಲ್ಲ. ಈ ತಾಲ್ಲೂಕಿನ ಚಂತರ ಮಡಗ ಮತ್ತು ಮರನಾಡ ಮಡಗ ಕೆರೆಗಳಿಂದ 370 ಎಕರೆಗಳಿಗೆ ನೀರೊದಗುತ್ತದೆ. ತಾಲ್ಲೂಕಿನಲ್ಲಿ ಪರ್ಷಿಯನ್ ಚಕ್ರ ಅಥವಾ ಪಂಪ್ಸೆಟ್ ಇರುವ, ಕಪಿಲೆ ಮತ್ತು ಇನ್ನಿತರ ನೀರಾವರಿ ಬಾವಿಗಳಿವೆ. ತಾಲ್ಲೂಕಿನ ತೀರದ ಉದ್ದಕ್ಕೂ ಮತ್ತು ಸ್ವಲ್ಪ ಒಳಭಾಗದಲ್ಲೂ ಜಂಬು ಮಣ್ಣನ್ನು (ಲ್ಯಾಟರೈಟ್) ಕಾಣಬಹುದು. ಇಲ್ಲಿನ ಕಲ್ಲುಗಳು ಹೆಚ್ಚು ಒತ್ತಾಗಿದ್ದು ಪುಡಿಪುಡಿಯಾಗುವ ಕೆಂಪು ಜೇಡಿ ಮಣ್ಣನ್ನು ಒಳಗೊಂಡಿದೆ. ಚಿಪ್ಪು ಸುಣ್ಣ ಕಲ್ಲಿನ ಮತ್ತು ಜೇಡಿಮಣ್ಣಿನ ಸಂಗ್ರಹವೂ ಇದೆ. ನದಿ ಕಣಿವೆಗಳ ಉದ್ದಕ್ಕೂ ನಾನಾ ಬಣ್ಣದ ಜೇಡಿಮಣ್ಣು ಮೆಕ್ಕಲು ಮಣ್ಣಿನೊಡನೆ ಇರುವುದನ್ನು ಕಾಣಬಹುದು. ಕಟ್ಟಡ ಕಲ್ಲುಗಳು ಇದ್ದು-ಅಲಿಯೂರು, ಶಿರ, ಪಾಡು, ಕಡವೂರು ಮತ್ತು ಹರಡಿಯಲ್ಲಿ ಕಲ್ಲುಚಪ್ಪಡಿ ತೆಗೆಯುತ್ತಾರೆ. ಈ ತಾಲ್ಲೂಕಿನ 59.34 ಹೆಕ್ಟೇರುಗಳಲ್ಲಿ ಚಿಪ್ಪು ಸುಣ್ಣವನ್ನು ಸಂಗ್ರಹಿಸುತ್ತಾರೆ. ಶುದ್ಧ ಬಿಳುಪಿನಿಂದ ಬೂದ ಮಿಶ್ರಿತ ಬಿಳಿ ರೀತಿಗಳ ಸಿಲಿಕ ಮರಳು ಹರಹುಗಳು ತೀರದ ಉದ್ದಕ್ಕೂ ಮುಳೂರು, ಕಾಪು, ಹೆಜಮಾಡಿ, ತೋನ್ಸೆ ಮತ್ತು ಉಳಿಯಾರಗೋಳಿ ಮುಂತಾದೆಡೆಗಳಲ್ಲಿ 30ಸೆ.ಮೀ. ನಿಂದ 1ಮೀ ಮಂದದಲ್ಲಿ ಹರಡಿವೆ. 12,000 ಟನ್ ಸಿಲಿಕ ಮರಳನ್ನು ಪ್ರತಿವರ್ಷ ಈ ಪ್ರದೇಶದಿಂದ ತೆಗೆದು ಬಳಸಿಕೊಳ್ಳಲಾಗುತ್ತಿದೆ. ಅಭ್ರಕದಿಂದ ಕೂಡಿದ ಬೆಣಚುಕಲ್ಲಿನ ಶಿಲೆಯನ್ನು ಈ ತಾಲ್ಲೂಕಿನ ಕಾಪು, ಪಡು, ಮೂಳೂರು, ಉಳಿಯಾರಗೋಳಿ, ಉದ್ಯಾವರ, ನಡಸಾಲು ಮತ್ತು ಹೆಜಮಾಡಿಗಳಲ್ಲಿ ಕಾಣಬಹುದು. ಹಂಚು ತಯಾರಿಕೆಗೆ ಬೇಕಾದಂಥ ವಿಶಿಷ್ಟವಾದ ಮಣ್ಣು ಈ ತಾಲ್ಲೂಕಿನ ಮಲ್ಪೆ ಮುಂತಾದೆಡೆ ದೊರೆಯುತ್ತದೆ. ಬತ್ತ, ಕಬ್ಬು ಮತ್ತು ನೆಲಗಡಲೆ ಮುಖ್ಯ ವ್ಯವಸಾಯ ಬೆಳೆಗಳು. ತೆಂಗು, ಅಡಕೆ, ಗೇರು ಮುಖ್ಯ ತೋಟಗಾರಿಕೆ ಬೆಳೆಗಳು 2004-05 ಅಂಕಿ ಅಂಶಗಳ ಪ್ರಕಾರ ಹಣ್ಣುಗಳು 5989 ಹೆ, ಕರಿಮೆಣಸು 50 ಹೆ., ರಬ್ಬರ್ 33, ಹಲಸು 394, ತೆಂಗು (5857), ಕಬ್ಬು (110), ಬತ್ತ (25562), ಗೇರು (4168), ನೆಲಗಡಲೆ (1506), ದ್ವಿದಳ ಧಾನ್ಯಗಳು (5318), ಅಡಕೆ (586), ಬಾಳೆ (338), ಮಾವು (618), ಸಿಹಿ ಗೆಣಸು (217), ಮೊದಲಾದ ಬೆಳೆಗಳು ಬೆಳೆಯುತ್ತಿವೆ. ಇಲ್ಲಿಯ ಜನರ ಮುಖ್ಯ ಕಸಬು ಇಲ್ಲಿಯ ಜನರ ಮುಖ್ಯ ಕಸಬು ವ್ಯವಸಾಯವಾದರೂ ಇತರ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದ್ದಾರೆ. ಸ್ವರ್ಣ ನದಿ ಮತ್ತು ಸೀತಾ ನದಿಗಳಲ್ಲಿ ಹಾಗೂ ಸಮುದ್ರದಲ್ಲಿ ಮೀನು ಹಿಡಿದು ಮತ್ಸ್ಯೊದ್ಯಮವನ್ನೇ ಮುಖ್ಯ ಕಸಬನ್ನಾಗಿ ಮಾಡಿಕೊಂಡಿರುವವರೂ ಇದ್ದಾರೆ. ಈ ತಾಲ್ಲೂಕಿನಲ್ಲಿ ಕೋಳಿಸಾಕಣೆ ಮತ್ತು ಪಶುಪಾಲನೆ ಕೆಂದ್ರಗಳೂ ಇವೆ. ಜಿಲ್ಲೆಯ ಎಲ್ಲ ಕಡೆಗೂ ಉತ್ತಮ ರಸ್ತೆ ಸಂಪರ್ಕವಿದೆ. ಒಟ್ಟು 343 ಪ್ರಾಥಮಿಕ ಶಾಲೆಗಳು 100 ಪ್ರೌಢ ಶಾಲೆಗಳು ಮತ್ತು ಕಾಲೇಜುಗಳೂ ಇವೆ. ಇತರೆ ಸೌಲಭ್ಯಗಳು ಉಡುಪಿಗೆ ಉತ್ತರದಲ್ಲಿ 3 ಕಿಮೀ ದೂರದಲ್ಲಿರುವ ಮಣಿಪಾಲದಲ್ಲಿ ಮಣಿಪಾಲ ಮುದ್ರಣಾಲಯ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಶಿಕ್ಷಣ ತರಬೇತಿ ಕಾಲೇಜುಗಳಿವೆ. ಸಿಂಡಿಕೇಟ್ ಬ್ಯಾಂಕ್ ನ ಕೇಂದ್ರ ಕಚೇರಿ ಇದೆ. ಇಲ್ಲಿ ಸ್ಥಾಪಿತವಾಗಿರುವ ದಿ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ ವಿದ್ಯಾಪ್ರಸಾರಣಾ ಕಾರ್ಯದಲ್ಲಿ ವಿಶೇಷ ರೀತಿಯ ಸೇವೆ ಸಲ್ಲಿಸುತ್ತಿದೆ. 35 ಪದವಿ ಪೂರ್ವ ಕಾಲೇಜುಗಳು, 4 ಸರ್ಕಾರಿ ಕಾಲೇಜುಗಳೂ ಇವೆ. ಖಾಸಗಿ ಕಾಲೇಜುಗಳು 5, ಮಣಿಪಾಲದಲ್ಲಿ ವೈದ್ಯಕೀಯ 2 ಮತ್ತು ಎಂಜಿನಿಯರಿಂಗ್ 2 ಕಾಲೇಜು ಗಳಿವೆ. ಪಾಲಿಟೆಕ್ನಿಕ್ ಕಾಲೇಜು, 1 ದಂತ ಕಾಲೇಜು ಉದ್ಯಾವರ, ಕಲ್ಯಾಣಪುರ, ತೋನ್ಸೆ, ಪೆರ್ಡೂರು, ಬ್ರಹ್ಮಾವರ, ಬಾರಕೂರು, ಮಂದಾರ್ತಿ - ಇವು ತಾಲ್ಲೂಕಿನ ಕೆಲವು ಮುಖ್ಯ ಸ್ಥಳಗಳು (ಇವುಗಳಿಗೆ ಪ್ರತ್ಯೇಕ ಲೇಖನಗಳಿವೆ). ಉಡುಪಿಗೆ ಹತ್ತಿರವಿರುವ ಕರಂಕರಪಾಡಿಯಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಕೆಲವು ಕುರುಹುಗಳು ಸಿಕ್ಕಿವೆ. ಎಣ್ಣೆ ಹೊಳೆ ಮತ್ತು ಸ್ವರ್ಣನದಿ ಸಂಗಮದಲ್ಲಿರುವ ಭದ್ರಗಿರಿಯಲ್ಲಿ ವಿಠ್ಠಲ ದೇವಾಲಯವಿದೆ. ಕಟಪಾಡಿಯಲ್ಲಿ ಪುರಾತನ ದೇವಾಲಯಗಳಿವೆ. ಕಾಪುವಿನಲ್ಲಿ ಜೈನಬಸದಿ ಮತ್ತು ಮಾರಿಯಮ್ಮನ ಗುಡಿಗಳೂ ಕೋಟದಲ್ಲಿ ನರಸಿಂಹ, ಮಹಾದೇವ ಮತ್ತು ಅಮೃತೇಶ್ವರಿ ದೇವಾಲಯಗಳೂ ಇವೆ. ನಂದಿಕೂರಿನ ಅಮೃತೇಶ್ವರ, ಬಂಟ ಕಲ್ಲಿನಲ್ಲಿ ದುರ್ಗಾಪರಮೇಶ್ವರಿ, ನಾಯಂಪಳ್ಳಿಯ ಗೋಪಾಲಕೃಷ್ಣ, ನೀಲಾವರದ ದುರ್ಗಾ ಭಗವತಿ, ಸಾಲಿಗ್ರಾಮದ ಯೋಗನರಸಿಂಹ ಹೆಸರಿಸಬೇಕಾದ ಇತರ ದೇವಾಲಯಗಳು. ಸುರುಳುವಿನ ಮಹಾದೇವ ದೇವಾಲಯ ಪೂರ್ಣ ಕಪ್ಪು ಶಿಲೆಯಲ್ಲಿ ನಿರ್ಮಿತವಾದುದು. ಅಲೆಮೂರಿನಲ್ಲಿ ದುರ್ಗಾ ಮತ್ತು ಜನಾರ್ದನ ದೇವಾಲಯಗಳಿವೆ. ಈ ಜನಾರ್ದನ ದೇವಾಲಯ ಕದಂಬ ಮಯೂರವರ್ಮ ಕಟ್ಟಿಸಿದ್ದೆಂದು ಪ್ರತೀತಿ. ಚಿತ್ರಪದಿ ದಕ್ಷಿಣ ಕನ್ನಡ ಜಿಲ್ಲೆಯ ಬಲ್ಲಾಳವಂಶದವರ ಮೂಲಸ್ಥಾನ. ಕುಂಜಾರು ಮಧ್ವಾಚಾರ್ಯರು ಹುಟ್ಟಿದ ಸ್ಥಳ. ಇಲ್ಲಿ ಮಹಿಷಾಸುರ ಮರ್ಧಿನಿ ದೇವಾಲಯವೂ ನಾಲ್ಕು ಪುಷ್ಕರಣಿಗಳೂ ಇವೆ. ಹತ್ತಿರದಲ್ಲಿ ಕುಂಜಾರುಗಿರಿ ಮತ್ತು ಪರಶುರಾಮಗಿರಿ ಎಂಬ ಎರಡು ಚಿಕ್ಕ ಬೆಟ್ಟಗಳಿವೆ. ಪರಶುರಾಮಗಿರಿಯ ಮೇಲೆ ಪರಶುರಾಮ ವಿಗ್ರಹವಿದೆ. ಎರ್ಮಾಳಿನಲ್ಲಿ ಒಂದು ಚಂದ್ರನಾಥ ಬಸದಿ ಮತ್ತು ಮಧ್ವಾಚಾರ್ಯರು ಸ್ಥಾಪಿಸಿದ ಜನಾರ್ದನ ದೇವಾಲಯ ಇವೆ. ನಿಡಂಬೂರಿನಲ್ಲಿ ಆಂಜನೇಯ ದೇವಾಲಯವಿದೆ. ಇಲ್ಲಿ ಪ್ರಥಮವಾಗಿ ಪೂಜೆ ಸಲ್ಲಿಸಿದ ಅನಂತರವೇ ಉಡುಪಿಯ ಪರ್ಯಾಯ ಮಠಾಧಿಪತಿಗಳು ತಮ್ಮ ಪೂಜೆಯನ್ನು ಆರಂಭಿಸುವುದು ಪದ್ಧತಿ. ಪಡುಬಿದ್ರಿ ಒಂದು ದೊಡ್ಡ ಊರು, ಮೀನು ವ್ಯಾಪಾರಕ್ಕೆ ಪ್ರಸಿದ್ಧಿ, ಇಲ್ಲಿ ಕೆಲವು ದೇವಾಲಯ(ಶ್ರೀ ಮಹಾ ಗಣಪತಿ ದೇವಸ್ಥಾನ , ಶ್ರೀ ಬ್ರಹ್ಮ ಸ್ಥಾನ ನಾಗ ದೇವಸ್ಥಾನ, ಶ್ರೀ ಗುಡ್ಡೆ ಗಣಪತಿ ದೇವಾಲಯ) ಗಳೂ, ಎರಡು ಪ್ರೌಢಶಾಲೆಗಳೂ ಇವೆ. ಪಟ್ಟಣ ಉಡುಪಿ ಈ ತಾಲ್ಲೂಕಿನಲ್ಲಿ ಆಡಳಿತ ಕೇಂದ್ರ. ಜಿಲ್ಲೆಯ ದೊಡ್ಡ ನಗರ. ಜನಸಂಖ್ಯೆ 113112 (2001). ಮಂಗಳೂರಿಗೆ ಉತ್ತರದಲ್ಲಿ 58 ಕಿಮೀ ದೂರದಲ್ಲಿದ್ದು ಮಂಗಳೂರು, ಕಾರ್ಕಳ, ಕುಂದಾಪುರ ಮುಂತಾದ ಪ್ರದೇಶಗಳೊಡನೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಉಡುಪಿಯ ಪಶ್ಚಿಮಕ್ಕೆ 5 ಕಿಮೀ ದೂರದಲ್ಲೇ ಮಲ್ಪೆ ಬಂದರಿದೆ. ಉಡುಪಿ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಯಾತ್ರಾಸ್ಥಳ. ಶಿಕ್ಷಣ, ಕೈಗಾರಿಕೆಗಳಲ್ಲಿ ಸಹ ಪ್ರಗತಿಪಥದಲ್ಲಿರುವ ಊರು. ಶಿಕ್ಷಣ ವ್ಯವಸ್ಥೆ ಲಾ ಕಾಲೇಜು, ಆಯುರ್ವೇದ ಕಾಲೇಜು, ಪೂರ್ಣಪ್ರಜ್ಞಾ ಕಾಲೇಜು, ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು, ಸಂಗೀತ, ಯಕ್ಷಗಾನ ಇತ್ಯಾದಿಗಳನ್ನು ಕಲಿಸುವ ಲಲಿತಕಲಾ ಕಾಲೇಜು ಮತ್ತು ವೇದ ವೇದಾಂತ ತರ್ಕ ವ್ಯಾಕರಣ ಇತ್ಯಾದಿಗಳನ್ನು ಕಲಿಸುವ ಸಂಸ್ಕೃತ ಮಹಾವಿದ್ಯಾಲಯ, ಎಂ.ಗೋವಿಂದ ಪೈ ಸಂಶೋಧನ ಕೇಂದ್ರ, ಸರ್ಕಾರಿ ಗ್ರಂಥಾಲಯ ಮುಂತಾದವು ಇಲ್ಲಿವೆ. ಏಳು ಪ್ರೌಢ ಶಾಲೆಗಳೂ ಹಲವಾರು ಮಾಧ್ಯಮಿಕ ಪ್ರಾಥಮಿಕ ಶಾಲೆಗಳೂ ಇವೆ. ಒಂದು ಹಂಚು ಕಾರ್ಖಾನೆ ಮತ್ತು ಕೊಬ್ಬರಿ ಎಣ್ಣೆ ಕಾರ್ಖಾನೆಗಳು ಇವೆ. *ಮ್ಯಾಜಿಸ್ಟ್ರೇಟ್ ಮತ್ತು ಮುನ್ಸಿಫ್ ನ್ಯಾಯಾಲಯಗಳಿವೆ. ವ್ಯಾಪಾರೋದ್ಯಮಕ್ಕೆ ಅನುಕೂಲವಾಗುವ ಬಂಡವಾಳವನ್ನೊದಗಿಸುವ ಬ್ಯಾಂಕುಗಳು, ಹಣಕಾಸು, ಸಂಸ್ಥೆಗಳು, ಇಲ್ಲಿವೆ. ಭಾರತ ಜೀವವಿಮಾ ಸಂಸ್ಥೆಯ ವಿಭಾಗ ಕೇಂದ್ರ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇವೆ. ಅನೇಕ ಸಾಂಸ್ಕೃತಿಕ ಸಂಘ ಸಂಸ್ಥೆಗಳಿವೆ. ಉಡುಪಿಯಲ್ಲಿ ಪುರಸಭೆ ಇದೆ. ನದಿ ನೀರನ್ನು ಕುಡಿಯಲು ಬಳಸಿಕೊಳ್ಳುತ್ತಿದೆ. ಭೌಗೋಳಿಕತೆ 14ನೆಯ ಶತಮಾನದ ತನಕ ಉಡುಪಿ ಎಂಬ ಹೆಸರು ಇಲ್ಲಿನ ಅನಂತೇಶ್ವರ ದೇವಾಲಯದ ಪರಿಸರದಲ್ಲಿ ಒಂದು ಅಗಲ ಕಿರಿದಾದ ಸ್ಥಳಕ್ಕೆ ಮಾತ್ರ ಅನ್ವಯಿಸಿತ್ತು. ಕಾಲಕ್ರಮೇಣ ಈ ಹೆಸರು ವೈಶಾಲ್ಯವನ್ನು ಪಡೆಯಿತು. ಉಡುಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಕ್ಕೆ ಶಿವಳ್ಳಿ ಎಂಬ ಹೆಸರು 8ನೆಯ ಶತಮಾನದಿಂದಲೇ ಇತ್ತು. ಇದರ ಸಮೀಪವೇ ಕಕ್ಕುಂಜೆ ಎಂಬಲ್ಲಿ ಬಹು ಪ್ರಾಚೀನವಾದ ಒಂದು ಜನಾರ್ದನ ಬಿಂಬ ಚಿಕ್ಕದಾದೊಂದು ಗುಡಿಯಲ್ಲಿದೆ. ಇತಿಹಾಸ ಕಾಲದಲ್ಲಿ ಉಡುಪಿ-ಶಿವಳ್ಳಿ-ನಿಡಂಬೂರು ಮತ್ತು ಬೆಟ್ಟುಪಾಡಿ ಬೀಡುಗಳು ಎಂಬ ಎರಡು ಪ್ರಮುಖ ವಿಭಾಗಗಳಿಂದ ಕೂಡಿತ್ತು. ಈ ಬೀಡುಗಳ ಅಧಿಕಾರಿಗಳು ಬ್ರಾಹ್ಮಣರಾಗಿದ್ದರು. ಆನಂದಗಿರಿ ವಿರಚಿತ ಶಂಕರ ವಿಜಯದಲ್ಲೂ ಉಡುಪಿ ಮಹಾತ್ಮ್ಯದಲ್ಲೂ ಉಡುಪಿಗೆ ರಜತಪೀಠಪುರವೆಂಬ ಹೆಸರಿದೆ. ಸು.10ನೆಯ ಶತಮಾನದಲ್ಲಿ ಈ ಹೆಸರು ಬಳಕೆಯಲ್ಲಿತ್ತು. ತುಳು ನಾಡಿನ ಸಪ್ತಕ್ಷೇತ್ರಗಳಲ್ಲಿ ರೌಪ್ಯಪೀಠ ಅಥವಾ ರಜತಪೀಠಪುರ ಒಂದಾಗಿದೆ. ಚಂದ್ರ (ಉಡು+ಪಿ) ಶಾಪದಿಂದ ವಿಮೋಚನೆಯನ್ನು ಪಡೆಯುವುದಕ್ಕೋಸ್ಕರ ಶಿವನನ್ನು ಕುರಿತು ತಪ್ಪಸ್ಸು ಮಾಡಿದಾಗ ಶಿವನು ಪ್ರತ್ಯಕ್ಷನಾದ ಸ್ಥಳ ಉಡುಪಿ ಎಂದು ಸ್ಥಳಪುರಾಣದ ಹೇಳಿಕೆ. ಉಡುಪಿ ಶಬ್ದ ನಾಗ ಸಂಬಂಧಿಯೂ ಆಗಿದ್ದುದರಿಂದ ಉಡುಪಿ ನಾಗಾರಾಧನೆಗೆ ಹೆಸರುವಾಸಿ ಯಾದ ಸ್ಥಳವೆನ್ನಬಹುದು. ಇಲ್ಲಿಯ ಬಹು ಪ್ರಾಚೀನ ಚಾರಿತ್ರಿಕ ಅವಶೇಷ ಶ್ರೀ ಅನಂತೇಶ್ವರ ದೇವಾಲಯ, ಸು.8-9ನೆಯ ಶತಮಾನದ್ದು. ಇದು ಗಜಪೃಷಾಕಾರವಾಗಿದ್ದು ಕರ್ನಾಟಕದ ಹಿರಿಯ ದೇವಾಲಯಗಳಲ್ಲಿ ಒಂದೆನ್ನಬಹುದು. ಈ ದೇವಾಲಯದ ಎದುರು ತಗ್ಗಾದ ಸ್ಥಳದಲ್ಲಿ ಚಂದ್ರಮೌಳೀಶ್ವರವೆಂಬ ದೇವಾಲಯವಿದೆ. ಇದು ಸಹ ಸು.9-10ನೆಯ ಶತಮಾನದ ದೇಗುಲ. ಈ ದೇವಾಲಯದ ನಿರ್ಮಾಣಕ್ಕಿಂತ ಮೊದಲು ಇದು ಕೆರೆಯಾಗಿರಬೇಕು. ಇಲ್ಲಿನ ಕೃಷ್ಣದೇವಾಲಯ ಅಖಿಲ ಭಾರತದಲ್ಲೇ ಸಾಕಷ್ಟು ಖ್ಯಾತಿ ಪಡೆದಿದೆ. ಶ್ರೀ ಕೃಷ್ಣಮಠವೆಂದು ಕರೆಯಲ್ಪಡುವ ಈ ದೇವಾಲಯ ಅನಂತೇಶ್ವರ ದೇವಾಲಯದ ಪರಿಸರದಲ್ಲಿ ಈಶಾನ್ಯ ದಿಕ್ಕಿಗಿದೆ. ಈ ಮಠದ ರಚನೆ ಸರಳವಾಗಿದ್ದರೂ ಇದೊಂದು ಆಯುತಾಕಾರದ ಕಟ್ಟಡವಾಗಿದ್ದು ಉತ್ತರ ಭಾಗದಲ್ಲಿ ಒಳಗೆ ಪ್ರವೇಶವಿದ್ದು ಪಶ್ಚಿಮ ಭಾಗದ ಕಿಂಡಿಯಿಂದ (ಕನಕನ ಕಿಂಡಿ) ಶ್ರೀಕೃಷ್ಣನ ದರ್ಶನವನ್ನು ಮಾಡುವ ವ್ಯವಸ್ಥೆಯಿಂದ ಕೂಡಿದೆ. ಈ ಮೂರ್ತಿಯನ್ನು ಮಧ್ವಾಚಾರ್ಯರು 13ನೆಯ ಶತಮಾನದ ಅಂತ್ಯ ಭಾಗದಲ್ಲಿ ಪ್ರತಿಷ್ಠಾಪಿಸಿದರು. ಕೃಷ್ಣನ ಮೂರ್ತಿ ಉಡುಪಿಗೆ ಹಡಗಿನ ಮೂಲಕ ಬಂದ ವಿಚಾರದಲ್ಲಿ ಸಾಂಪ್ರದಾಯಿಕವಾದ ಒಂದು ಹೇಳಿಕೆ ಇದ್ದರೂ ಇದನ್ನು ಮಧ್ವಾಚಾರ್ಯರು ತಮ್ಮ ಔತ್ತರೇಯ ಪರ್ಯಟನ ಸಮಯದಲ್ಲಿ ತಂದು ಉಡುಪಿಯಲ್ಲಿ ಸ್ಥಾಪಿಸಿದರೆನ್ನಬಹುದು. *ಬಲ ಕೈಯಲ್ಲಿ ದಂಡ ಹಿಡಿದಿರುವ 15" ಎತ್ತರದ ಈ ಮೂರ್ತಿ ಬಹು ಪ್ರಾಚೀನವೂ ಮಹತ್ವವುಳ್ಳದ್ದೂ ಆಗಿದೆ. ಶ್ರೀ ಕೃಷ್ಣಮಠದಲ್ಲೇ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾ ಚಾರ್ಯರಿಂದ ಪ್ರತಿಷ್ಠಿತವಾದದ್ದೆನ್ನಲಾದ ತೈಲಕೃಷ್ಣ ಎಂಬ ವ್ಯಾವಹಾರಿಕ ಹೆಸರನ್ನು ಪಡೆದಿರುವ ಇನ್ನೊಂದು ಸುಂದರ ಮೂರ್ತಿ ಇದೆ. ಇದು ಸು.9ನೆಯ ಶತಮಾನದ ವೇಣುಗೋಪಾಲ ಕೃಷ್ಣಮೂರ್ತಿ, ಶ್ರೀ ಕೃಷ್ಣಮಠದ ಒಂದು ಭಾಗದಲ್ಲಿ ಮಧ್ವಪುಷ್ಕರಿಣಿ ಇದೆ. ಉಡುಪಿಯಲ್ಲಿ ಸೋದೆ, ಶಿರೂರು, ಕಾಣಿಯೂರು, ಕೃಷ್ಣಾಪುರ, ಆದಮಾರು, ಪಲಿಮಾರು, ಪೇಜಾವರ, ಪುತ್ತಿಗೆ ಎಂಬ ಅಷ್ಟ ಮಠಗಳಿವೆ. ಈ ಮಠಗಳ ಯತಿಗಳು ಶ್ರೀಕೃಷ್ಣನ ಪೂಜೆಯನ್ನು ಪರ್ಯಾಯ ಕ್ರಮದಲ್ಲಿ ಎರಡೆರಡು ವರ್ಷಗಳ ಕಾಲ ಮಾಡುತ್ತಾರೆ. ಅಷ್ಟಯತಿಗಳ ಪರಂಪರೆ ಯನ್ನು ಸ್ಥಾಪಿಸಿದುದು ಮಧ್ವಾಚಾರ್ಯರಾದರೂ ಪರ್ಯಾಯ ಕ್ರಮವನ್ನು ಅನುಷ್ಠಾನಕ್ಕೆ ತಂದುದು ಸೋದೆ ಮಠದ ಯತಿವರ್ಯರಾದ ಶ್ರೀ ವಾದಿರಾಜರು. ಅನುಕ್ರಮವಾಗಿ ಒಂದು ಮಠದ ಸ್ವಾಮಿಗಳಿಂದ ಇನ್ನೊಂದು ಮಠದ ಸ್ವಾಮಿಗಳು ಶ್ರೀ ಕೃಷ್ಣಮಠದ ಪೂಜಾಧಿಕಾರ ವಹಿಸಿಕೊಳ್ಳುವ ಸಮಾರಂಭವೇ ಪರ್ಯಾಯ ಮಹೋತ್ಸವ. ಇದು ಉಡುಪಿಯ ಅತ್ಯಂತ ದೊಡ್ಡ ಉತ್ಸವ, ಈ ಸಂದರ್ಭದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಉಡುಪಿಗೆ ಬರುತ್ತಾರೆ. ಉಡುಪಿಯಲ್ಲಿ ನಡೆಯುವ ಲಕ್ಷದೀಪೋತ್ಸವ, ಮಕರ ಸಂಕ್ರಮಣೋತ್ಸವ, ಶ್ರೀಕೃಷ್ಣ ಜಯಂತಿ ಇತರ ಪ್ರಮುಖ ಉತ್ಸವಗಳು. ಕೆಲವು ಪ್ರಮುಖ ತಾಣಗಳು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮರವಂತೆಯ ತೀರ ಸಾಲಿಗ್ರಾಮ ನರಸಿಂಹ ಮತ್ತು ಹನುಮಾನ್ ದೇವಸ್ಥಾನ ಕೋಟ ಅಮೃತೇಶ್ವರಿ ದೇವಸ್ಥಾನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕೋಟ ಶನೇಶ್ವರ ದೇವಸ್ಥಾನ ಕುಂಭಾಸಿ ಅಮ್ಮನವರ ದೇವಸ್ಥಾನ ಕೋಟಿ ಲಿಂಗೇಶ್ವರ ಕೋಟೇಶ್ವರ ದೇವಸ್ಥಾನ ಮೋಗವೀರ ಕುಲಮಹಸ್ರೀ ದೇವಸ್ಥಾನ ಮಲ್ಪೆ ಕಾಪು ದ್ವೀಪಸ್ತಂಭ ಕಾರ್ಕಳದ ಗೊಮ್ಮಟೇಶ್ವರ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ. ವೇಣೂರಿನ ಗೊಮ್ಮಟೇಶ್ವರ ಅತ್ತೂರಿನ ಸಂತ ಲಾರೆನ್ಸರ ಚರ್ಚ್ ಸೈಂಟ್ ಮೇರೀಸ್ ದ್ವೀಪ ಮೂಡಬಿದಿರೆಯ ಸಾವಿರ ಕಂಬದ ಬಸದಿ ಮಣಿಪಾಲ ಹೂಡೆ ಸಮುದ್ರ ಹೆಬ್ರಿ ಬೇಳಂಜೆ ಕತ್ತಲೆ ಬಸದಿ ಬಾರ್ಕೂರು ಸೂರಾಲು ಅರಮನೆ ಬೈಂದೂರು ಕೋಸಳ್ಳಿ ಜಲಪಾತ ನಂದಳಿಕೆಯಲ್ಲಿನ ಕವಿ ಮುದ್ದಣನ ಮನೆ ಎಲ್ಲೂರು ಇವನ್ನೂ ನೋಡಿ ಪಾಜಕ ಕೃಷ್ಣ ಮಠ ಶ್ರೀ ಮಧ್ವಾಚಾರ್ಯರು ಕನಕದಾಸರು ಪುರಂದರದಾಸರು ಉಡುಪಿ (ಲೋಕ ಸಭೆ ಚುನಾವಣಾ ಕ್ಷೇತ್ರ) ಹೊರಗಿನ ಸಂಪರ್ಕಗಳು ಸರಕಾರಿ ಪುಟ ಉಡುಪಿಯ ಬಗ್ಗೆ ಹೆಚ್ಚಿನ ಮಾಹಿತಿ ಶ್ರೀ ಉಡುಪಿ ಕೃಷ್ಣ ಟೆಂಪಲ್ ವರ್ಗ:ಭೂಗೋಳ ವರ್ಗ:ಐತಿಹಾಸಿಕ ಸ್ಥಳಗಳು ವರ್ಗ:ಭಾರತದ ಪಟ್ಟಣಗಳು ವರ್ಗ:ಉಡುಪಿ ಜಿಲ್ಲೆ ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಭಾರತದ ಪವಿತ್ರ ಕ್ಷೇತ್ರಗಳು ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು ವರ್ಗ:ಉಡುಪಿ ತಾಲೂಕಿನ ಪ್ರವಾಸಿ ತಾಣಗಳು
ತುಮಕೂರು
https://kn.wikipedia.org/wiki/ತುಮಕೂರು
thumb|ತುಮಕುರು ತುಮಕೂರು - ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾಕೇಂದ್ರವಾಗಿದೆ. ತುಮಕೂರಿನ ಮೂಲ ಹೆಸರು ತುಮ್ಮೆಗೂರು. ರಾಷ್ಟ್ರೀಯ ಹೆದ್ದಾರಿ ೪ರಲ್ಲಿ ಬೆಂಗಳೂರಿನಿಂದ ೭೦ ಕಿ.ಮಿ. ದೂರದಲ್ಲಿದೆ.ಈ ತುಮಕೂರು ಜಿಲ್ಲೆ ರಚನೆಯಾದ ವರ್ಷ ೧-೧೧-೧೯೫೬ ಇದರ ವಿಸ್ತೀರ್ಣ-೧೦೫೯೭ ಚ.ಕೀ.ಮೀ ತುಮಕೂರು ಜಿಲ್ಲೆ ೧೮೩೨ ರಲ್ಲಿ ಅಸ್ತಿತ್ವಕ್ಕೆ ಬಂದಿತು ದಕ್ಷಿಣ ಕರ್ನಾಟಕ ರಾಜ್ಯದಲ್ಲಿರುವ ಪ್ರಮುಖ ನಗರವಾಗಿದೆ ತುಮಕೂರು ಜಿಲ್ಲೆ ಅತೀ ಹೆಚ್ಚು ಕೆಂಪು ಮಣ್ಣುನ್ನು ಹೊಂದಿದೆ.ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಅತೀ ಹೆಚ್ಚು ತೆಂಗು, ರಾಗಿ ಬೆಳೆ ಬೆಳೆಯುವ ಜಿಲ್ಲೆಯಾಗಿದೆ. ಈ ಜಿಲ್ಲೆಯು ಕಲ್ಪತರು ನಾಡು ಎಂದು ಹೆಸರುವಾಸಿಯಾಗಿದೆ.ತುಮಕೂರು ಜಿಲ್ಲೆಯಲ್ಲಿ ಕಗ್ಗಲಡು ಪಕ್ಷಿಧಾಮವಿದೆ. ತುಮಕೂರು-ಬೆಂಗಳೂರಿನ ಹೆದ್ದಾರಿಯಲ್ಲಿರುವ ಕ್ಯಾತಸಂದ್ರದ ಬಳಿ ಇರುವ ಪುಣ್ಯಕ್ಷೇತ್ರವಾದ ಶ್ರೀ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ತುಮಕೂರನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಸಿದ್ಧಗಂಗಾ ಮಠಾಧೀಶರಾದ, ತ್ರಿವಿಧ ದಾಸೋಹಿ ೧೦೯ ವರ್ಷದ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು, ನೆಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದಾರೆ. ಸಿದ್ಧಗಂಗಾ ಮಠದ ಸಮೀಪ ಇರುವ ಕ್ಯಾತ್ಸಂದ್ರ, ತಟ್ಟೆಇಡ್ಲಿ ತಿನಿಸಿಗೆ ಖ್ಯಾತಿ ಪಡೆದಿದೆ. ಬೆಂಗಳೂರು - ಮಧುಗಿರಿ ಹೆದ್ದಾರಿಯಲ್ಲಿರುವ ಸಿದ್ದರ ಬೆಟ್ಟವು ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗಾಗಿ ಪ್ರಸಿದ್ಧವಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿರುವ ಯೆಡಿಯೂರು ಶ್ರೀ ಸಿದ್ಧಲಿಂಗೇಶ್ವರ ಕ್ಷೇತ್ರ ಮತ್ತು ಕಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿವೆ. ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ. ತುಮಕುರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿರುವ ಗೊರವನಹಳ್ಳಿ ಶ್ರೀ ಲಕ್ಷ್ಮಿ ದೇವಸ್ಥಾನವು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಪುಣ್ಯಕ್ಷೇತ್ರ. ಮಧುಗಿರಿ ಬೆಟ್ಟ ಏಷಿಯಾ ಖಂಡದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟ ಮತ್ತು ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆ ಇದೆ. ಮಧುಗಿರಿಯ ದಂಡಿನ ಮಾರಮ್ಮದೇವಿ ದೇವಸ್ಥಾನ ಪ್ರಖ್ಯಾತಿ ಹೊಂದಿದೆ. ದೇವರಾಯನ ದುರ್ಗ ನರಸಿಂಹ ಸ್ವಾಮಿ ದೇವಸ್ಥಾನವಿರುವ ಪುಣ್ಯಕ್ಷೇತ್ರವಾಗಿದೆ. ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮ ನವರೂ ಸಾಕ್ಷಾತ್ ಪಾರ್ವತಮ್ಮನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧವಾದ ಪುಣ್ಯಕ್ಷೇತ್ರ ಸ್ಥಳ ಕೋಡ್ಲಹಳ್ಳಿ, ಕ್ಯಾಮೆನಹಳ್ಳಿ ಗ್ರಾಮ ಪಂಚಾಯತಿ, ಹೋಳವನಹಳ್ಳಿ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ, ಕರ್ನಾಟಕ. ತುಮಕೂರು ಹಲವು ಕೈಗಾರಿಕೆಗಳಿಗೆ ಮನೆಯಾಗಿದೆ. ತುಮಕೂರಿನ ಪ್ರಮುಖ ಕೈಗಾರೆಕೆಗಳು ಹೆಚ್.ಎಂ.ಟಿ, ಗ್ರಾನೈಟ್ ಪರಿಷ್ಕರಣೆ, ಟಿ.ವಿ.ಎಸ್.ಇ, ಅಕ್ಕಿ ಮಿಲ್, ಎಣ್ಣೆ ಮಿಲ್ ಇತ್ಯಾದಿ. ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ತುಮಕೂರು ಹೆಸರುವಾಸಿಯಾಗಿದೆ. ಸಿದ್ಧಗಂಗಾ ಮಠದ ಶಿಕ್ಷಣ ಸಂಸ್ಥೆಗಳು, ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ತುಮಕೂರು ವಿಶ್ವವಿದ್ಯಾಲಯ ಕಾರ್ಯಾರಂಭಿಸಿದೆ. ಪ್ರಖ್ಯಾತ ನಾಟಕ ಕಂಪನಿಯು, ಚಿತ್ರ ನಿರ್ಮಾಣ ಸಂಸ್ಥೆಯೂ ಆಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು. ಮಾವತ್ತೂರು ಕೆರೆ ಜಿಲ್ಲೆಯ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾಮದಲ್ಲಿ ಜಯಚಾಮರಾಜ ಒಡೆಯರ್ ಕಾಲದಲ್ಲಿ ಕಟ್ಟಿದ ಬೃಹತ್ ಕೆರೆ. ಇದು ಜಿಲ್ಲೆಯ ಮೊದಲ ಮತ್ತು ಇಂದಿಗೂ ಸುಭದ್ರವಾದ ದೊಡ್ಡದಾದ ಕೆರೆ. ತುಮಕೂರು ಜಿಲ್ಲೆಯ ತಾಲ್ಲೂಕುಗಳು ತುಮಕೂರು ಗುಬ್ಬಿ ಕೊರಟಗೆರೆ ಮಧುಗಿರಿ ಪಾವಗಡ ಶಿರಾ ಚಿಕ್ಕನಾಯಕನಹಳ್ಳಿ ತಿಪಟೂರು ಕುಣಿಗಲ್ ತುರುವೇಕೆರೆ ತುಮಕೂರು ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಗಳು ತುಮಕೂರು ವಿಶ್ವವಿದ್ಯಾಲಯ ಶ್ರೀದೇವಿ ಶಿಕ್ಷಣ ಸಂಸ್ಠೆ ಸಿದ್ಧಗಂಗಾ ಶಿಕ್ಷಣ ಸಂಸ್ಠೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಠೆ ಹೆಚ್.ಎಮ್.ಎಸ್ ಶಿಕ್ಷಣ ಸಂಸ್ಠೆ ಸಿ.ಐ.ಟಿ (ಚನ್ನಬಸವೇಶ್ವರ) ಶಿಕ್ಷಣ ಸಂಸ್ಠೆ ತುಮಕೂರು ಜಿಲ್ಲೆಯ ಪ್ರಸಿದ್ಧ ಸ್ಥಳಗಳು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯ ಸಾಸಲು ಸಿದ್ದಗಂಗ ಮಠ ಬೆಟ್ಟಹಳ್ಳಿ ಮಠ: ಶ್ರೀ ಉರಿಗದ್ದೀಗೇಶ್ವರ ದೇವಾಲಯ, ಗಣಪತಿ ದೇವಾಲಯ, ವಿದ್ಯಾಸಂಸ್ಥೆಗಳು, ಉಚಿತ ವಸತಿ ನಿಲಯಗಳು ಶ್ರೀ ಕ್ಷೇತ್ರ ಕೋಡ್ಲಹಳ್ಳಿ ಜಗನ್ಮಾತೆ ಉದ್ಬವ ಮಾರಮ್ಮನವರೂ, ಸಾಕ್ಷಾತ್ ಪಾರ್ವತಮ್ಮ ನವರ ಸ್ವರೂಪ, ಮಹಾಲಕ್ಷ್ಮಿ ಮಹಾಸರಸ್ವತಿ ಮಹಾಕಾಳಿ ಯಾಗಿ ನೆಲೆನಿಂತಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಅಂಕನಹಳ್ಳಿ ಮಠ :ವಿದ್ಯಾಸಂಸ್ಥೆಗಳು ಮತ್ತು ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆ. ಹುತ್ರಿದುರ್ಗ ಬೆಟ್ಟ: ಶ್ರೀಕೇಂಪೇಗೌಡರು ಕಟ್ಟಿಸಿರುವ ಕೋಟೆ ಕೊತ್ತಲುಗಳು, ಗಂಗಾಧರೇಶ್ವರ ದೇವಸ್ಥಾನ, ಪಾತಾಳಗಂಗೆ, ದೇವರಾಯನದುರ್ಗ - ಯೋಗ ನರಸಿಂಹ ಮತ್ತು ಭೋಗ ನರಸಿಂಹ ದೇವಸ್ಥಾನ ನಾಮದ ಚಿಲುಮೆ ವಿದ್ಯಾ ಶಂಕರ ದೇವಸ್ಥಾನ ಗೂಳೂರು ಗಣಪತಿ ದೇವಸ್ಥಾನ ಕೈದಾಳ ಚನ್ನಕೇಶವ ದೇವಸ್ಥಾನ ಮಂದರ ಗಿರಿ ಜೈನ ದೇವಸ್ಥಾನ ನಿಜಗಲ್ಲು ಬೆಟ್ಟ ಮತ್ತು ಕೋಟೆ ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ ಮಧುಗಿರಿ ಬೆಟ್ಟ ಮತ್ತು ಕೋಟೆ ಚನ್ನರಾಯನ ದುರ್ಗ ಸಿದ್ದರ ಬೆಟ್ಟ ಕ್ಯಾಮೇನಹಳ್ಳಿ ಜಾತ್ರೆ ಬೋರನ ಕಣಿವೆ ಮೈದಾಡಿ ಮಾರ್ಕೋನಹಳ್ಳಿ ಆಣೆಕಟ್ಟು ಕುಣಿಗಲ್ - ಸೋಮೇಶ್ವರ ದೇವಸ್ಥಾನ ಹೆಬ್ಬೂರು ಕಾಮಾಕ್ಷಿ ಮಠ, ಚಿಕ್ಕಣ್ಣ ಸ್ವಾಮಿ ಮಣಿಕುಪ್ಪೆ - ಶ್ರೀ ನಾರಸಿ೦ಹಾ೦ಜನೇಯ ಸ್ವಾಮಿ ದೇವಸ್ಥಾನ ಹ೦ದನಕೆರೆ:೧೨ಸೋಪಾನದ ಬಾವಿ,ರೇವಣ್ಣಸಿದ್ಡೇಶ್ವರ ಮಠ,ಶ್ರೀಗ೦ಗಾದರೇಶ್ವರ ದೇವಸ್ಥಾನ ಕಳುವರಹಳ್ಳಿ ಶಿರಾ ತಾಲ್ಲೂಕಿನ ಒಂದು ಇತಿಹಾಸ ಪ್ರಸಿದ್ಧ ಗ್ರಾಮ ಐದು ಜಾನಪದ ವೀರ ಜುಂಜಪ್ಪನ ಮೂಲ ನೆಲೆಯಾಗಿದ್ದು ಇಲ್ಲಿ ಜುಂಜಪ್ಪ ಜೀವಿಸಿದ್ದಾನೆಂದು ಇಲ್ಲಿನ ಅವಶೇಷಗಳು ಹೇಳುತ್ತವೆ ರೈತರಪಾಳ್ಯ ವೆ೦ಬ ನೊಡ ಬೆಕಾದ ಒಂದು ಮನರ೦ಜನೆಯ ಪುಟ್ಟ ಸು೦ದರ ಕುಗ್ರಾಮ. ಬೆಳ್ಳಾವಿ ಸೊಮೆಶ್ವರ ದೇವಸ್ಥಾನ --ಬೆಳ್ಳಾವಿ ಅಂಕನಹಳ್ಳಿ ಮಠ ಹುತ್ರಿದುರ್ಗ ಬೆಟ್ಟ ಮಧುಗಿರಿಯ ತಾಲ್ಲೂಕಿನ ಕೋಟೆಕಲ್ಲಪ್ಪ(ಕೋಟೆಕಲ್ಲರಂಗನಾಥ ಸ್ವಾಮಿ). ಬೆಟ್ಪ ಹಾಗಲವಾಡಿ ಕೊರಟಗೆರೆ ತಾಲ್ಲೂಕಿನ ಪ್ರಸಿದ್ಧವಾದ ವಡ್ಡಗೆರೆ ವೀರನಾಗಮ್ಮ ದೇವಿ (ಅಮ್ಮಾಜಿ ಕ್ಷೇತ್ರ). ಸಿರಾ ತಾಲ್ಲೂಕಿನ ಪ್ರಸಿದ್ಧ ಕಗ್ಗಲಡು ಪಕ್ಷಿಧಾಮ. ಸಿರಾ ತಾಲ್ಲೂಕಿನ ಪ್ರಸಿದ್ಧವಾದ ಹುಳಿಗೆರೆ ಶ್ರೀ ಕೊಡಿವೀರಪ್ಪ ಸ್ವಾಮಿ ಜಾತ್ರೆ... ಹುತ್ರಿದುರ್ಗ ಇಲ್ಲಿ ನಾಡಪ್ರಭುಕೇಂಪೇಗೌಡರು ಕಟ್ಟಿಸಿರುವ ಬೃಹತ್ ಕೋಟೆ ಮತ್ತು ಶ್ರೀ ಗಂಗಾಧರೇಶ್ವರ ದೇವಸ್ಥಾನ. ಪಾತಾಳ ಗಂಗೆ, ಸಂಕೋಲೆ ಬಸವಣ್ಣನ ದೇವರು, ಪ್ರಸಿದ್ಧ ಕಾಡಪ್ಪನವರ ಮಠ ಮುಂತಾದ ಪ್ರಸಿದ್ಧ ಸ್ಥಳಗಳನ್ನು ಈ ಬೃಹತ್ ಬೆಟ್ಟದಲ್ಲಿ ಕಾಣಬಹುದು. ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದ್ದು, ಇದು ಬೆಂಗಳೂರಿನಿಂದ ಸುಮಾರು ೮೦ ಕಿ.ಮಿ. ದೂರವಿದ್ದು, ಈ ಬೆಟ್ಟಕ್ಕೆ ಬರಲು ಬೆಂಗಳೂರಿನಿಂದ ಹಲವು ಖಾಸಗಿ ಮತ್ತು ಸರ್ಕಾರಿ ಬಸ್ ಗಳಿವೆ.ಬೆಂಗಳೂರಿನಿಂದ ಮಾಗಡಿ ಮುಖಾಂತರ ಬಂದು ಕಲ್ಯ, ಹೊಸಪಾಳ್ಯ ಕ್ಕೆ ಸೇರುವ ಮುನ್ನ ಎಡಕ್ಕೆ ತಿರುವುಪಡೆದರೆ, ಕತ್ತರಿಘಟ್ಟ, ಹಾಲುವಾಗಿಲು ನಂತರ ಸಂತೇಪೇಟೆಯಲ್ಲಿ ಇಳಿದು ನಂತರ ಬೆಟ್ಟಕ್ಕೆ ಹೋಗಬಹುದು.ಮೇಲಿನಂತೆಯೆ ಮಾಗಡಿಯಿಂದ ಹುಲಿಯೂರುದುರ್ಗ ಮಾರ್ಗವಾಗಿ ಬಂದು ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬಲ್ಲಕ್ಕೆ ತಿರುವು ಪಡೆದು ಯಲಗಲವಾಡಿ ಸೇರುವ ಮುನ್ನ ಬಲ ತಿರುವು ಪಡೆದು ಹೊಢಾಘಟ್ಟ ಮಾರ್ಗವಾಗಿ ಬಂದು ನಂತರ ಚಿಕ್ಕ ಬೆಟ್ಟದರಸ್ತೆಯಲ್ಲಿ ಸಾಗಿದ ನಂತರ ಆದಿ ಹನುಮಂತರಾಯ ಸ್ವಾಮಿ ದೇವಸ್ಥಾನದ ನಂತರ ಬಲ ತಿರುವು ಪಡೆದರೆ ಹುತ್ರಿದುರ್ಗ ಬೆಟ್ಟಕ್ಕೆ ಹೋಗಬಹುದು. ಮತ್ತೀಕೆರೆ ಗುಬ್ಬಿ , ತುರುವೇಕೆರೆ ಮತ್ತು ಕುಣಿಗಲ್ ತಾಲ್ಲೂಕುಗಳ ಗಡಿ ಬಾಗದಲ್ಲಿರುವ ಒಂದು ಸುಂದರ ಗ್ರಾಮ ಸಲ್ಲಾಪುರದಮ್ಮ ಮತ್ತು ಕೊಲ್ಲಾಪುರದಮ್ಮ ಎಂಬ ದೇವಸ್ಥಾನವು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಹೋಬಳಿಯ ಗಿಡದ ಕೆಂಚನಹಳ್ಳಿಯಲ್ಲಿ ನೆಲೆಸಿದ್ದು ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ.ಅಲ್ಲದೇ ಹೆಸರಾಂತ ಅಂಜನೇಯ ಸ್ವಾಮಿಯು ಇದೇ ತಾಲ್ಲೂಕಿನ ಅಂದರೆ ಕುಣಿಗಲ್ ನ ಹುಲಿಯೂರುದುರ್ಗ ಹೋಬಳಿಯ ಕಲ್ಲುದೇವನಹಳ್ಳಿಯಲ್ಲಿ ನೆಲೆಸಿದ್ದು, ಇಲ್ಲಿಯೂ ಸಹ ಪ್ರತಿ ವರ್ಷ ಜಾತ್ರೆಯು ನಡೆಯುತ್ತದೆ. ಬೆಟ್ಟಹಳ್ಳಿಮಠ ಇದು ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಮಟ್ಟದಲ್ಲಿ ಬರುವ ಒಂದು ಪ್ರಮುಖ ವಿಧ್ಯಾಸಂಸ್ಥೆಯಾಗಿದ್ದು, ಇಲ್ಲಿ ಶ್ರೀ ಉರಿಗದ್ದಿಗೇಶ್ವರ ದೇವಸ್ಥಾನವಿದೆ. ರಾಮನಗರದಿಂದ - ಕುಣಿಗಲ್ ರಾಜ್ಯ ಹೆದ್ದಾರಿಯಲ್ಲಿರುವ ಬೆಟ್ಟಹಳ್ಳಿ ಬಳಿ ಇರುವ ವೀರಶೈವ ಪುಣ್ಯಕ್ಷೇತ್ರವಾದ ಶ್ರೀ ಬೆಟ್ಟಹಳ್ಳಿಮಠ ವಿಶ್ವವಿಖ್ಯಾತವಾಗಿದೆ. ಇಲ್ಲಿ ಜಾತಿ, ಮತ, ಲಿಂಗ ತಾರತಮ್ಯವಿಲ್ಲದೆ ನಿರಂತರವಾಗಿ ನೆಡೆಯುತ್ತಿರುವ ಜ್ಞಾನ ದಾಸೋಹ ಮತ್ತು ಅನ್ನ ದಾಸೋಹ ವಿಶ್ವಕ್ಕೆ ಮಾದರಿಯಾಗಿದೆ. ಮಠದ ವತಿಯಿಂದ ಪ್ರತಿ ದಿನ ಸಾವಿರಾರು ಜನ ಬಡ ವಿದ್ಯಾರ್ಥಿಗಳಿಗೆ ವಸತಿ, ಊಟ ಮತ್ತು ವಿದ್ಯಾದಾನ ನೆಡೆಯುತ್ತಿದೆ. ಅಧುನಿಕ ಬೆಟ್ಟಹಳ್ಳಿಮಠವನ್ನು ಪವಾಡದಂತೆ ಪ್ರಸಿದ್ಧಿಗೆ ತಂದ ಬೆಟ್ಟಹಳ್ಳಿಮಠ ಮಠಾಧೀಶರಾದ, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀನೀಲಕಂಠಶಿವಾಚಾರ್ಯ ಮಹಾ ಸ್ವಾಮಿಗಳು, ನೆಡೆದಾಡುವ ಶಿವನೆಂದೇ ಪ್ರಖ್ಯಾತರಾಗಿದ್ದಾರೆ. ಅಲ್ಲದೇ ಮಠದ ವತಿಯಿಂದ ಇಲ್ಲಿ ನರ್ಸರಿ ಯಿಂದ ಪದವಿ ಪೂರ್ವ ಕಾಲೇಜು ಮತ್ತು ಸಂಸ್ಕ್ರುತ ಶಿಕ್ಷಣವನ್ನು ನೀಡಲಾಗುವುದು. ಮತ್ತು ಈ ಸಂಸ್ಥೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯುವುದರ ಜೊತೆಗೆ ಕಳೆದ ಐದಾರು ವರ್ಷಗಳಿಂದ ಬಾರಿ ದನಗಳ ಜಾತ್ರೆಯನ್ನು ಏರ್ಪಡಿಸುವುದರ ಜೊತೆಗೆ ಉತ್ತಮವಾದ ರಾಸುಗಳಿಗೆ ಬಹುಮಾನವನ್ನು ಸಹ ನೀಡುವ ವ್ಯ್ವವಸ್ಥೆಯನ್ನು ಮಾಡಲಾಗಿದೆ. ಇದನ್ನೂ ನೋಡಿ ತುಮಕೂರು (ಲೋಕ ಸಭೆ ಚುನಾವಣಾ ಕ್ಷೇತ್ರ) ಹೊರಗಿನ ಸಂಪರ್ಕಗಳು ಸಿದ್ದಗಂಗಾ ತಂತ್ರಜ್ಞಾನ ಕಾಲೇಜು ವರ್ಗ:ಭೂಗೋಳ ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ತುಮಕೂರು ಜಿಲ್ಲೆಯ ತಾಲೂಕುಗಳು
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
https://kn.wikipedia.org/wiki/ಕುಪ್ಪಳ್ಳಿ_ವೆಂಕಟಪ್ಪ_ಪುಟ್ಟಪ್ಪ
REDIRECT ಕುವೆಂಪು
ಮಾಸ್ತಿ
https://kn.wikipedia.org/wiki/ಮಾಸ್ತಿ
REDIRECT ಮಾಸ್ತಿ ವೆಂಕಟೇಶ ಅಯ್ಯಂಗಾರ್
ಟಿಪ್ಪು
https://kn.wikipedia.org/wiki/ಟಿಪ್ಪು
REDIRECT ಟಿಪ್ಪು ಸುಲ್ತಾನ್
ಟೀಪು
https://kn.wikipedia.org/wiki/ಟೀಪು
REDIRECT ಟಿಪ್ಪು ಸುಲ್ತಾನ್
ವೆಂಕಟ ರಾಮನ್
https://kn.wikipedia.org/wiki/ವೆಂಕಟ_ರಾಮನ್
REDIRECT ಚಂದ್ರಶೇಖರ ವೆಂಕಟರಾಮನ್
ಮಧ್ವ
https://kn.wikipedia.org/wiki/ಮಧ್ವ
REDIRECT ಮಧ್ವಾಚಾರ್ಯ
ಬೆಳಗಾವಿ
https://kn.wikipedia.org/wiki/ಬೆಳಗಾವಿ
ಬೆಳಗಾವಿಯು ಕರ್ನಾಟಕದ ವಾಯುವ್ಯ ಭಾಗದಲ್ಲಿ ಇರುವ ನಗರ ಮತ್ತು ಜಿಲ್ಲೆ. ಕರ್ನಾಟಕದ ಅತೀ ದೊಡ್ಡ ಜಿಲ್ಲೆ ಹಾಗು ಪ್ರಮುಖ ನಗರಗಳಲ್ಲೊಂದು. ಇಂಡಾಲ್ (ಭಾರತೀಯ ಅಲ್ಯೂಮಿನಿಯಮ್ ಕಂಪನಿ) ಬೆಳಗಾವಿಯಲ್ಲಿದೆ. ಇದಲ್ಲದೆ ಭಾರತೀಯ ಸೇನಾ ಪಡೆಗಳಿಗೆ ಸಂಬಂಧಪಟ್ಟ ಕೆಲವು ತರಬೇತಿ ಶಿಬಿರಗಳು ಮತ್ತು ಭಾರತೀಯ ವಾಯುಸೇನೆಯ ಒಂದು ವಿಮಾನ ನಿಲ್ದಾಣ ಬೆಳಗಾವಿಯಲ್ಲಿವೆ. ಚರಿತ್ರೆ thumb ಬೆಳಗಾವಿಯ ಪುರಾತನ ಹೆಸರು ವೇಣುಗ್ರಾಮ. ಆದರೆ ಈಗಿರುವ ಹೆಸರು ಬಂದದ್ದು "ಬೆಳ್ಳಗೆ+ಆವಿ" ಎಂದರೆ ಇಲ್ಲಿನ ವಾತಾವರಣದಲ್ಲಿ ಬೆಳಗಿನ ಜಾವ ಮಂಜು ಬೀಳುತ್ತಿರುತ್ತದೆ. ಅದರಿಂದ "ಬೆಳ್ಳಗಾವಿ" ಹೆಸರು ಬಂದಿದೆ. ಈ ಜಿಲ್ಲೆಯ ಅತಿ ಪ್ರಾಚೀನ ಸ್ಥಳ ಎಂದರೆ ಹಲಸಿ - ಉಪಲಬ್ಧವಾಗಿರುವ ತಾಮ್ರಶಾಸನಗಳ ಆಧಾರದ ಮೇಲೆ ಹಲಸಿ ಕೆಲವು ಕದಂಬ ವಂಶದ ಅರಸರ ರಾಜಧಾನಿಯಾಗಿದ್ದಿತೆಂದು ಊಹಿಸಲಾಗಿದೆ. ೬ ನೇ ಶತಮಾನದಿಂದ ಸುಮಾರು ಕ್ರಿ.ಶ. ೭೬೦ ರ ವರೆಗೆ ಈ ಸ್ಥಳ ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿದ್ದು, ನಂತರ ರಾಷ್ಟ್ರಕೂಟರ ನಿಯಂತ್ರಣಕ್ಕೆ ಸಾಗಿತು. ರಾಷ್ಟ್ರಕೂಟರ ಶಕ್ತಿ ಕಡಿಮೆಯಾದ ನಂತರ ರತ್ತ ವಂಶದ (೮೭೫ - ೧೨೫೦)ಕೈಯಲ್ಲಿದ್ದ ವೇಣುಗ್ರಾಮ, ೧೨೧೦ ರ ನಂತರ ರಾಜಧಾನಿಯಾಯಿತು. ೧೨೫೦ ರ ನಂತರ ದೇವಗಿರಿಯ ಯಾದವರು ಈ ಪ್ರದೇಶವನ್ನು ಸ್ವಲ್ಪ ಕಾಲ ಆಳಿದರು. ೧೩೨೦ ರಲ್ಲಿ ದೆಹಲಿಯ ಸುಲ್ತಾನೇಟ್ ಗಳ ಕೈಯಲ್ಲಿ ಯಾದವರು ಸೋಲನುಭವಿಸಿದ ನಂತರ ಸ್ವಲ್ಪ ಕಾಲ ದೆಹಲಿಯ ಆಡಳಿತದಲ್ಲಿ ಬೆಳಗಾವಿ ಜಿಲ್ಲೆ ಇತ್ತು. ಆದರೆ ಕೆಲವೇ ವರ್ಷಗಳ ನಂತರ ವಿಜಯನಗರ ಸಾಮ್ರಾಜ್ಯ ಈ ಪ್ರದೇಶವನ್ನು ತನ್ನದಾಗಿಸಿಕೊಂಡಿತು. ಬೆಳಗಾವಿ ಜಿಲ್ಲೆಯ ಉತ್ತರದ ಭಾಗಗಳು ೧೩೪೭ ರಲ್ಲಿ ಬಹಮನಿ ಸುಲ್ತಾನರ ಕೈ ಸೇರಿದವು. ೧೪೭೩ ರಲ್ಲಿ ಬೆಳಗಾವಿ ಪಟ್ಟಣ ಮತ್ತು ಜಿಲ್ಲೆಯ ಉಳಿದ ಭಾಗಗಳನ್ನು ಸಹ ಬಹಮನಿ ಸುಲ್ತಾನರು ಗೆದ್ದರು. ಬಿಜಾಪುರದ ಸುಲ್ತಾನರನ್ನು ಔರಂಗಜೇಬ್ ೧೬೮೬ ರಲ್ಲಿ ಸೋಲಿಸಿದ ಮೇಲೆ ಸ್ವಲ್ಪ ಕಾಲ ಬೆಳಗಾವಿ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೭೭೬ ರಲ್ಲಿ ಹೈದರ್ ಅಲಿ ಈ ಪ್ರದೇಶವನು ಗೆದ್ದರೂ ಬ್ರಿಟಿಷರ ಸಹಾಯದಿಂದ ಮರಾಠಾ ಪೇಶ್ವೆಗಳು ಈ ಪ್ರದೇಶವನ್ನು ಗೆದ್ದರು. ೧೮೧೮ ರಲ್ಲಿ ಬ್ರಿಟಿಷರ ಆಡಳಿತಕ್ಕೆ ಸಾಗಿದ ಬೆಳಗಾವಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ೧೮೩೬ ರಲ್ಲಿ ಈ ಜಿಲ್ಲೆಯನ್ನು ಎರಡು ಭಾಗವಾಗಿ ಮಾಡಿ ಉತ್ತರ ಭಾಗವನ್ನು ಬೆಳಗಾವಿ ಜಿಲ್ಲೆಯಾಗಿ ಮಾಡಲಾಯಿತು.೧೯೪೭ ರಲ್ಲೆ ಭಾರತ ಸ್ವಾಂತಂತ್ರ್ಯಪಡೆದ ನಂತರ ಬೆಳಗಾವಿ ಮುಂಬಯಿ ರಾಜ್ಯದ ಭಾಗವಯಿತು ಆದರೆ ೧೯೫೬ ರಲ್ಲಿ ನಡೆದ ರಾಜ್ಯಗಳ ಮರುವಿಂಗಡನಾ ಕಾಯ್ದೆಯ ಪ್ರಕಾರ ಬೆಳಗಾವಿಯನ್ನ ಆಗಿನ ಮೈಸೂರು ರಾಜ್ಯಕ್ಕೆ ಸೆರಿಸಲಾಯಿತು ನಂತರ ೧೯೭೨ ರಲ್ಲಿ ಮೈಸೂರು ಕರ್ನಾಟಕ ರಾಜ್ಯವಾದ ನಂತರ ಬೆಳಗಾವಿ ಕರ್ನಾಟಕದ ಭಾಗವಾಗಿ ಮುಂದುವರಿಯಿತು. ಬೆಳಗಾವಿ ಜಿಲ್ಲೆಯಲ್ಲಿರುವ ಕಿತ್ತೂರು ಚಾರಿತ್ರಿಕವಾಗಿ ಪ್ರಸಿದ್ಧ. ಕಿತ್ತೂರು ರಾಣಿ ಚೆನ್ನಮ್ಮ ಚರಿತ್ರೆಯಲ್ಲಿ ಸಾಹಸ ಮತ್ತು ಧೈರ್ಯದ ಪ್ರತೀಕವಾಗಿದ್ದಾಳೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಬೆಳಗಾವಿಯ ಇನ್ನೊಬ್ಬ ಪ್ರಸಿದ್ಧ ವ್ಯಕ್ತಿಯೆಂದರೆ ಸಂಗೊಳ್ಳಿ ರಾಯಣ್ಣ. ಸ್ವಾಂತಂತ್ರ್ಯ ಪೂರ್ವ ಭಾರತದ ಇತಿಹಾಸದಲ್ಲು ಬೆಳಗಾವಿ ತನ್ನದೇ ಆದ ಪಾತ್ರವನ್ನ ಹೊಂದಿತ್ತು. ಡಿಸೆಂಬರ್ ೧೯೨೪ ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ೩೯ ನೇ ಭಾರತೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆದಿತ್ತು. ಭೌಗೋಳಿಕ ಲಕ್ಷಣಗಳು thumb|ಜಿಲ್ಲೆಗಳು 1956 thumb|ಬೆಳಗಾವಿ ಜಿಲ್ಲೆ- (ಉತ್ತರ ಕನ್ನಡ-ಕೆಂಪುಬಣ್ಣ- ಪಶ್ಚಿಮದ ಎರಡನೆಯದು) ಬೆಳಗಾವಿ ನಗರ ಸಮುದ್ರ ಮಟ್ಟದಿಂದ ೨೫೦೦ ಅಡಿ (೭೬೨ ಮೀ)ಎತ್ತರದಲ್ಲಿದೆ. ರಾಜಧಾನಿ ಬೆಂಗಳೂರಿನಿಂದ ೫೦೨ ಕಿಮೀ ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿ ನೆಲೆಸಿದ್ದು ಇತರ ನೆರೆ ರಾಜಧಾನಿಗಳಾದ ಮುಂಬಯಿನಿಂದ ದಕ್ಷಿಣಕ್ಕೆ ಸುಮಾರು ೫೦೦ ಕಿಮೀ ಹೈದರಾಬಾದನಿಂದ ಪಶ್ಚಿಮಕ್ಕೆ ೫೧೫ ಕಿಮೀ ಹಾಗು ಗೋವಾ ರಾಜಧಾನಿ ಪಣಜಿಯಿಂದ ೧೫೯ ಕಿಮೀ ದೂರದಲ್ಲಿದೆ. ಸಹ್ಯಾದ್ರಿಯ ಮಡಿಲಲ್ಲಿ ಹಾಗು ಸಮೀಪದ ಅರಬ್ಬೀ ಸಮುದ್ರದಿಂದ ಕೇವಲ ೧೦೦ ಕಿಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಒಂದು ಸುಂದರ ನಗರ. ಪ್ರತಿಕೂಲ ಹವಾಮಾನ, ಉತ್ತಮ ಮಳೆ, ಸಮೀಪದ ದಟ್ಟವಾದ ಅರಣ್ಯ ಜಿಲ್ಲೆಯ ಪ್ರಮುಖ ಲಕ್ಷಣಗಳು. ಕ್ಕೃಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೇದಗಂಗೆ ಜಿಲ್ಲೆಯ ಪ್ರಮುಖ ನದಿಗಳು. ರಾಕಸಕೊಪ್ಪ ಜಲಾಶಯ,ಹಿಡಕಲ್ ಜಲಾಶಯ ಹಾಗು ನವಿಲುತೀರ್ಥ ಜಲಾಶಯಗಳು ಜಿಲ್ಲೆಗೆ ಒಳಪಟ್ಟಿವೆ. ಸಂಸ್ಕೃತಿ ವೈವಿದ್ಯತೆಗಳಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಬೆಳಗಾವಿ ಕೂಡ ಹಲವು ಭಾಷಿಕರ ಹಾಗೂ ಹಲವು ಧರ್ಮೀಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ(ಕೇವಲ ನಗರದಲ್ಲಿ), ಮರಾಠಿ(ಕೇವಲ ನಗರದಲ್ಲಿ) ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.ಇಲ್ಲಿನ ಇನ್ನೊಂದು ವಿ‍‍ಶೇಷವೆಂದರೆ ಜಾನಪದ ಕಲೆ. ಇಲ್ಲಿನ ಜನರು ವಿವಿಧ ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಜಾನಪದ ಕಲೆಗಳಾದ ಲಾವಣಿ ಪದ, ರಿವಾಯಿತ ಜಾನಪದ, ಬೀಸುಕಲ್ಲಿನ ಪದ, ಹಂತಿ ಪದ, ಇತ್ಯಾದಿ. ಈ ರೀತಿಯಾಗಿ ವಿವಿಧತೆಯಲ್ಲಿ ಏಕತೆಯನ್ನು ಜನರು ಹೊಂದಿದ್ದಾರೆ. ಆರ್ಥಿಕತೆ, ಉದ್ಯಮಗಳು ಹಾಗು ವ್ಯಾಪಾರ ಬೆಳಗಾವಿ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ. ತರಕಾರಿ, ಮೀನು, ಪೀಠೊಪಕರಣಗಳು, ಮರದ ದಿಮ್ಮೆಗಳು ಹಾಗು ಖನಿಜ ಅದಿರುಗಳಿಗೆ ಉತ್ತಮ ಮಾರುಕಟ್ಟೆ. ಬಾಕ್ಸೈಟ ಅದಿರು ಹೇರಳವಾಗಿ ದೊರುಕುವುದರಿಂದ ಬೆಳಗಾವಿಯಲ್ಲಿ ಅಲ್ಯುಮಿನಿಯಂ ಉತ್ಪಾದನಾ ಕೈಗಾರಿಕೆಯೊಂದು (Hindalco Industries)ಭಾರಿ ಪ್ರಮಾಣದ ಅಲ್ಯುಮಿನಿಯಂ ಉತ್ಪಾದಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸಮೀಪದ ದೇಶನೂರ ಎಂಬಲ್ಲಿ ಯುರೇನಿಯಂ ಅದಿರು ಕೂಡ ದೊರೆತಿದೆ. ರಾಜಧಾನಿ ಬೆಂಗಳೂರಿನಂತೆ ಇಲ್ಲಿಯೂ ಐಟಿ ಉದ್ಯಮ (I T Industry) ಬೆಳೆಯುತ್ತಿದೆ. ಮೂಲತಹ ಬೆಳಗಾವಿಯಲ್ಲೆ ಆರಂಭಗೊಂಡು ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿರುವ ಹಲವಾರು ಕಂಪನಿಗಳು ಇಲ್ಲಿವೆ ಹಾಗೂ ಬೆಳಗಾವಿಯಿಂದ ೬೦ ಕಿ.ಮಿ. ದೂರವಿರುವ ಗೋಕಾಕ್ ಫಾಲ್ಸ್ ದಲ್ಲಿ ಸುಮಾರು ೧೪೦ ವರುಶಗಳ ಹಳೆಯದಾದ್ದ ಜವಳಿ ಗಿರಣಿ ಇದೆ ಹಾಗೂ ಇಲ್ಲಿ ಪಾಂಡವರು ಕಟ್ಟಿದ್ದಾರೆ ಎಂದು ನಂಬಲಪಡುವ ಶ್ರೀ ತಡಸಲ ಮಹಾಲಿಂಗೇಶ್ವರ ದೇವಸ್ಥಾನ ಇದೆ. thumb|300px|right|quest-sez ೧೯೭೦ ರಿಂದ ಈಚೆ ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆಯಾಯಿತು. ಮಶಿನ್ ಟೂಲ್ಸ (machine tools), ಹೈಡ್ರೊಲಿಕ್ hydrolic)ಉತ್ಪನ್ನಗಳು , ಕಾಸ್ಟಿಂಗ (casting) ಫೊರ್ಜಿಂಗನಂತಹ (forging) ನೂರಾರು ಉದ್ಯಮಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ಉದ್ಯಮದ ಬಿಡಿಭಾಗಗಳು(Automotive Manufacturing), ಮುಖ್ಯವಾಗಿ ಕ್ರ್ಯಾಂಕ್ ಶಾಪ್ಟ (Crank-shaft)ನಂತಹ ವಸ್ತುಗಳ ತಯಾರಿಕಾ ಉದ್ಯಮಗಳು ಇಲ್ಲಿ ಕೇಂದ್ರೀಕೃತವಾಗಿವೆ . ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಉದ್ಯಮವೊಂದು (Quest engineering) ಕಾರ್ಯಾರಂಭ ಮಾಡಿದೆ. ಈ ಉದ್ಯಮ ವೈಮಾಣಿಕ ತಂತ್ರಜ್ನಾನಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೆ ಮೊದಲು ಸ್ಥಾಪನೆಯಾದ ಉದ್ಯಮ ಎನ್ನಲಾಗಿದೆ. ಇದಲ್ಲದೆ ರವಿವಾರ ಪೇಟೆಯಂತಹ ಇತರ ಮಾರುಕಟ್ಟೆಗಳು ಗ್ರಹೋಪಯೊಗಿ ವಸ್ತುಗಳಿಗೆ ಉತ್ತಮ ವ್ಯಾಪಾರ ಕಲ್ಪಿಸಿವೆ. ಶಿಕ್ಷಣ ಹಾಗೂ ವಿದ್ಯಾ ಸಂಸ್ಥೆಗಳು ಬೆಳಗಾವಿ ಕರ್ನಾಟಕದ ಒಂದು ಪ್ರಮುಖ ವಿದ್ಯಾ ಕೇಂದ್ರ. ೮ ಅಭಿಯಾಂತ್ರಿಕ ಕಾಲೇಜುಗಳು(engineering colleges),೫ ವೈದ್ಯಕೀಯ ಮಹಾವಿದ್ಯಾಲಯಗಳು , ಕೆಲವು ದಂತ ವಿದ್ಯಾಲಯಗಳು ಸೇರಿದಂತೆ ಹಲವಾರು ವಿದ್ಯಾಸಂಸ್ಥೆಗಳು ಇಲ್ಲಿವೆ. ಇಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕರ್ನಾಟಕದ ಅತೀ ದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ, ಸುಮಾರು ೧೪೦ ಕ್ಕೂ ಅಧಿಕ ತಾಂತ್ರಿಕ ವಿದ್ಯಾಲಯಗಳು ಈ ವಿಶ್ವವಿದ್ಯಾಲಯದ ಅಧೀನದೊಳಗೆ ಕಾರ್ಯನಿರ್ವಹಿಸುತ್ತವೆ ಅಲ್ಲದೇ ಸ್ನಾತಕೋತ್ತರ ವಿಭಾಗದಲ್ಲಿ M-Tech,MCA ನಂತಹ ಪದವಿಗಳು ಕೂಡ ವಿ.ತಾ.ವಿ ಅಧೀನದಲ್ಲಿವೆ. ಇದಲ್ಲದೆ ಅದೇ ರೀತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿದೆ. ಇದರ ಬೆಳಗಾವಿ ಬಾಗಲಕೋಟೆ , ವಿಜಾಪುರ ಪದವಿ ಕಾಲೇಜುಗಳು ಇದರ ಅಧೀನದಲ್ಲಿವೆ . ಇತರೆ ಪದವಿ ಕಾಲೇಜುಗಳು,ಪಾಲಿಟೆಕ್ನಿಕ್ ವಿದ್ಯಾಲಯಗಳು, ಕಾನೂನು ಮಹಾವಿದ್ಯಾಲಯಗಳು ಕೂಡ ಇಲ್ಲಿವೆ. ಕೆ ಎಲ್ ಇ , ಕೆ ಎಲ್ ಎಸ್, ಗೋಮಟೇಶ , ಭರತೇಶ ಹಾಗು ಮರಾಠ ಮಂಡಳದಂತಹ ಹಲವಾರು ವಿದ್ಯಾಸಂಸ್ಥೆಗಳು ಸಾಕಷ್ಟು ಶೈಕ್ಷಣಿಕ ವಿದ್ಯಲಯಗಳನ್ನು ನಡೆಸುತ್ತಿವೆ. ಈ ಜಿಲ್ಲೆಯಲ್ಲಿ ಒಟ್ಟಾರೆ ತಾಂತ್ರಿಕ ಕ್ಷೇತ್ರಕ್ಕೆ ಸಂಭಂಧಿಸಿದಂತೆ ೯ ಪಾಲಿಟೆಕ್ನಿಕ್, ೫ ಇಂಜಿನೀಯರಿಂಗ್ ಮಹಾವಿದ್ಯಾಲ್ಯಗಳನ್ನು ಹೊಂದಿದೆ. ಹಾಗೂ ಅನೇಕ ವೈದ್ಯಕೀಯ, ದಂತವೈದ್ಯಕೀಯ, ಅನೇಕ ತಾಂತ್ರಿಕ ಮಹಾವಿದ್ಯಾಲಗಳನ್ನು ಹೊಂದಿದೆ. thumb|300px|right|KLE hospital ಕೆ ಎಲ್ ಇ ಸಂಸ್ಥೆ (ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿ) ಇಸ್ವಿ ೧೯೧೬ ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಇಂದು ವಿಶ್ವದಾದ್ಯಂತ ಹಲವಾರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದೆ.ನವಂಬರ ೧೩,೧೯೧೬ ರಲ್ಲಿ ಕೆ ಎಲ್ ಇ ಸಂಸ್ಥೆ ಇಂದಿನ ಗಿಲಗಂಚಿ ಅರಟಾಳ ಪ್ರೌಢಶಾಲೆ ಹಾಗು ಪದವಿಪೂರ್ವ ಕಾಲೇಜ (G A High school) ನ್ನು ಆರಂಭಿಸಿತು.ಇದೇ ರೀತಿ ೧೯೩೩ ರ ಜೂನ್ ನಲ್ಲಿ ಲಿಂಗರಾಜ ಕಾಲೇಜ್, ೧೯೪೭ರಲ್ಲಿ ಹುಬ್ಬಳ್ಳಿಯ ಬಿ,ವಿ ಭೂಮರಡ್ಡಿ ತಾಂತ್ರಿಕ ಮಹಾವಿದ್ಯಾಲಯ, ೧೯೬೩ ರಲ್ಲಿ ಬೆಳಗಾವಿಯ ಜವಾಹರ ಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಹಾಗು ಹಾವೇರಿಯ ಜಿ,ಎಚ್ ಕಾಲೇಜ್ ಆರಂಭವಾದವು. ೧೯೮೪ ರಿಂದ ಈಚೆಗೆ ವೈದ್ಯಕೀಯ,ದಂತ ವೈದ್ಯಕೀಯ,ಮಾಹಿತಿ ತಂತ್ರಜ್ಞಾನ,ಕಂಪ್ಯೂಟರ ತಂತ್ರಜ್ಞಾನ,ಹೊಟೆಲ್ ಮ್ಯಾನೇಜಮೆಂಟ,ಬ್ಯುಸಿನೆಸ್ ಮ್ಯಾನೇಜಮೆಂಟ,ಪ್ಯಾಶನ್ ಡಿಸೈನಿಂಗ,ಕೃಷಿ ವಿದ್ಯಾಲಯಗಳು ಹಾಗೂ ಇತರ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಿಗೂ ವಿಸ್ತಾರವಾಗಿ ಇಂದು ಶ್ರೀ ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ೨೦೦ ಕ್ಕಿಂತಲೂ ಹೆಚ್ಚಿನ ಶೈಕ್ಷಣಿಕ ವಿದ್ಯಾಲಯಗಳನ್ನು ಒಳಗೊಂಡಿದೆ. thumb|200px|right|KLE MC ಸರಕಾರಿ ಪಾಲಿಟೆಕ್ನಿಕ್ ಬೆಳಗಾವಿ ಇದು ಕರ್ನಾಟಕ ಸರಕಾರದಿಂದ ನಡೆಸಲ್ಪಡುತ್ತಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಇಲ್ಲಿ ಅನೇಕ ತಾಂತ್ರಿಕ ಕಲೆಗಳನ್ನು ಹೇಳಿಕೊಡಲಾಗುತ್ತದೆ. ಕಮರ್ಷಿಯಲ್ ಪ್ರಾಕ್ಟೀಸ್, ಸಿವ್ಹಿಲ್, ಆಟೋಮೋಬೈಲ್, ಮೆಕ್ಯಾನಿಕಲ್, ವಿದ್ಯುತ್ ಮತ್ತು ವಿದ್ಯುನ್ಮಾನ್, ವಿದ್ಯುನ್ಮಾನ್ ಮತ್ತು ಸಂವಹಣೆ ವಿಭಾಗಗಳನ್ನು ಹೊಂದಿದೆ. ಇದು ಅತ್ಯುತ್ತಮ ಸಿಬ್ಬಂದಿಯನ್ನು ಹೊಂದಿರುವುದರಿಂದ ಸಹಜವಾಗಿಯೇ ಹೆಸರುವಾಸಿಯಾಗಿದೆ. ಬಿ.ಇ. ಲ್ಯಾಟರಲ್ ಎಂಟ್ರಿಗೆ ನಡೆಯುವ ಸಿ.ಇ.ಟಿ. ಯಲ್ಲಿ ಪ್ರತಿ ವರ್ಷವು ರಾಜ್ಯಕ್ಕೆ ಪ್ರಥಮ ಸ್ಥಾನ ಹೊಂದಿರುವುದು ಇದರ ಹೆಗ್ಗಳಿಕೆಯಾಗಿದೆ. ತಾಲೂಕುಗಳು ಬೆಳಗಾವಿ ಗೋಕಾಕ ಹುಕ್ಕೇರಿ ಬೈಲಹೊಂಗಲ ಸವದತ್ತಿ ರಾಮದುರ್ಗ ಅಥಣಿ ಚಿಕ್ಕೋಡಿ ರಾಯಬಾಗ್ ಖಾನಾಪುರ ಕಿತ್ತೂರು ಕಾಗವಾಡ ನಿಪ್ಪಾಣಿ ಮೂಡಲಗಿ ಪ್ರೇಕ್ಷಣೀಯ ಸ್ಥಳಗಳು ಮತ್ತು ಆಕರ್ಷಣೆಗಳು ಹಳೆಯ ಕಲ್ಲಿನ ಕೋಟೆ (೧೫೧೯ ರಲ್ಲಿ ಕಟ್ಟಿದ್ದೆಂದು ನಂಬಲಾಗಿದೆ) ಕೋಟೆ ಕೆರೆ ವೀರ ಸೌಧ ಕಮಲ ಬಸದಿ ಸುವರ್ಣ ಸೌಧ thumb|400px|right|ಕೋಟೆ ಕೆರೆಯ ದೃಶ್ಯ ಸ್ವಾಮಿ ವಿವೇಕಾನಂದ ಆಶ್ರಮ ಕಪಿಲೇಶ್ವರ ದೇವಸ್ಥಾನ ಹಿಡಕಲ್ ಜಲಾಶಯ ಮುನವಳ್ಳಿಯ ನವಿಲುತೀರ್ಥ ಜಲಾಶಯ ಮೂಡಲಗಿಯ ಕಬ್ಬು ಮಾರುಕಟ್ಟೆ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಗೋಕಾಕ್ ಜಲಪಾತ - ಘಟಪ್ರಭಾ ನದಿಯ ಜಲಪಾತ + ಗೊಡಚಿನಮಲ್ಕಿ ಜಲಪಾತ ಕಿತ್ತೂರಿನಲ್ಲಿರುವ ರಾಣಿ ಚೆನ್ನಮ್ಮ ಕೋಟೆ ರಾಣಿ ಚೆನ್ನಮ್ಮನ ಸಮಾಧಿ, ಬೈಲಹೊಂಗಲ. ಚಿಂಚಲಿ ಮಾಯಕ್ಕಾ ದೇವಸ್ಥಾನ, ಸರಕಾರ ವಾಡೆ. ಕುಡಚಿ ರೈಲು ಸೇತುವೆ ರಾಯಬಾಗದ ರಾಜವಾಡೆ ಭಾಷೆಗಳು ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡಲ್ಪಡುವ ಮುಖ್ಯ ಭಾಷೆಗಳು ಕನ್ನಡ, ಮತ್ತು ಮಹಾರಾಷ್ಟ್ರದ ಸಾಮೀಪ್ಯದಿಂದಾಗಿ ಮರಾಠಿ, ಈ ಎರಡು ಭಾಷೆಗಳಲ್ಲದೆ ಸಾಮಾನ್ಯವಾಗಿ ಹಿಂದಿ ಹಾಗು ಕೊಂಕಣಿ ಭಾಷೆಗಳು ಕೂಡ ಇಲ್ಲಿ ಮಾತನಾಡಲ್ಪಡುತ್ತವೆ . ಇವನ್ನೂ ನೋಡಿ ಬೆಳಗಾವಿ ಗಡಿ ವಿವಾದ ಬೆಳಗಾವಿ (ಲೋಕ ಸಭೆ ಚುನಾವಣಾ ಕ್ಷೇತ್ರ) ಕನ್ನಡ ನೆಲದಲ್ಲಿ ಗಾಂಧಿ: ಬೆಳಗಾವಿಯಲ್ಲಿ ಗಾಂಧೀಜಿ ರಾಷ್ಟ್ರೀಯ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸುತ್ತೋಣಬನ್ನಿ ಹೊರಗಿನ ಸಂಪರ್ಕಗಳು ಬೆಳಗಾವಿ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ ಬೆಳಗಾವಿ ಪ್ರವಾಸ ಬೆಂಗಳೂರಿನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಐತಿಹಾಸಿಕ ಸ್ಥಳಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು ವರ್ಗ:ಬೆಳಗಾವಿ ಜಿಲ್ಲೆ
ಬಾಗಲಕೋಟೆ
https://kn.wikipedia.org/wiki/ಬಾಗಲಕೋಟೆ
ಬಾಗಲಕೋಟೆ ಕರ್ನಾಟಕದ ಒಂದು ಜಿಲ್ಲಾ ಕೇಂದ್ರ. ಈ ಜಿಲ್ಲೆ ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಹಾಗೂ ಬಿಜಾಪುರಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ ಕರ್ನಾಟಕ ಸರ್ಕಾರದ ಪ್ರಕಟಣೆ ಆರ್‌ಡಿ ೪೨ ಎಲ್ಆರ್‌ಡಿ ೮೭ ಭಾಗ ೩ ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟೆ ಜಿಲ್ಲೆಯು ಚಾಲುಕ್ಯರಾಳಿದ ನಾಡು. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ ಮತ್ತು ಮಹಾಕೂಟ ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾಗಿವೆ. ಭೌಗೋಳಿಕ ಬಾಗಲಕೋಟೆ ನಗರವು ಭಾರತದ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಸ್ಥಿತವಾಗಿದೆ. ಭೌಗೋಳಿಕವಾಗಿ ಉತ್ತರದ ಕಡೆ 16-18* & 75-7* ಪೂರ್ವದಲ್ಲಿ ಘಟಪ್ರಭಾ ನದಿಯ ದಡದಲ್ಲಿ ಸ್ಥಿತವಾಗಿರುವ ಇದು ಸಮುದ್ರ ಮಟ್ಟದಿಂದ ೫೩೩ ಮೀಟರ್ ಎತ್ತರದಲ್ಲಿದ್ದು ಜಿಲ್ಲೆಯ ಕೇಂದ್ರ ಸ್ಥಾನವಾಗಿದೆ. ಈ ಮೊದಲು ಬಿಜಾಪುರ (ಈಗಿನ ವಿಜಯಪುರ) ಜಿಲ್ಲೆಯಲ್ಲಿದ್ದ ಬಾಗಲಕೋಟೆ ಭಾರತದ ೫೦ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ ೧೯೯೭ ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು. ವಿಜಾಪುರ ಜಿಲ್ಲೆಯಿಂದ ಹೋಳಾದ ಬಾಗಲಕೋಟ ಜಿಲ್ಲೆಯು ಬಾದಾಮಿ, ಬಾಗಲಕೋಟ, ಬೀಳಗಿ, ಹುನಗುಂದ, ಜಮಖಂಡಿ & ಮೂಧೋಳ ಈ ೬ ತಾಲ್ಲೂಕುಗಳನ್ನು ಹೊಂದಿದೆ. ೨೦೧೮ ರಲ್ಲಿ ಗುಳೇದಗುಡ್ಡ, ಇಳಕಲ್ಲ & ರಬಕವಿ-ಬನಹಟ್ಟಿ ಇವು ೩ ಹೊಸ ತಾಲ್ಲೂಕು ಕೇಂದ್ರಗಳಾಗಿ ಸೃಷ್ಠಿಯಾಗಿದೆ. ಒಂದು ಕಾಲದಲ್ಲಿ ಕನ್ನಡದ ವೈಭವಯುತ ರಾಜಮನೆತನವಾದ ಚಾಲುಕ್ಯರು ಬಾಗಲಕೋಟ ಜಿಲ್ಲೆಯನ್ನು ಆಳಿದರು. ಕರ್ನಾಟಕದ ಉತ್ತರ ಭಾಗದಲ್ಲಿರುವ ಈ ಜಿಲ್ಲೆಯ ೬೫೯೩ ಚದರ ಮೀಟರ ವ್ಯಾಪ್ತಿಯನ್ನು ಹೊಂದಿದೆ. ಬಾಗಲಕೋಟ ಜಿಲ್ಲೆಯ ಉತ್ತರಕ್ಕೆ ವಿಜಾಪುರ ಜಿಲ್ಲೆ (ಈಗಿನ ವಿಜಯಪುರ), ದಕ್ಷಿಣಕ್ಕೆ ಗದಗ ಜಿಲ್ಲೆ, ಪೂರ್ವಕ್ಕೆ ರಾಯಚೂರು ಜಿಲ್ಲೆ & ಆಗ್ನೆಯ ಬಾಗದಲ್ಲಿ ಕೊಪ್ಪಳ ಜಿಲ್ಲೆ, ಪಶ್ಶಿಮ ಗಡಿಯಲ್ಲಿ ಬೆಳಗಾವಿ ಜಿಲ್ಲೆಗಳಿಂದ ಸುತ್ತುವರಿಯಲ್ಪಟ್ಟಿದೆ. ಇತಿಹಾಸ ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ ೧೮೧೮ ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. ೧೮೬೫ ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು. ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. ಆಲಮಟ್ಟಿ ಅಣೆಕಟ್ಟಿನ ನಿರ್ಮಾಣದಿಂದಾಗಿ ಹಳೆಯ ಪಟ್ಟಣದ ಬಹುತೇಕ ಭಾಗಗಳು ಮುಳುಗಡೆ ಹೋದಿದೆ. ಆ ಕಾರಣದಿಂದ ಹೊಸ ನವನಗರ ನಿರ್ಮಾಣ ಅನಿವಾರ್ಯವಾಯಿತು. ನವನಗರವು ವಿಶಾಲ ರಸ್ತೆಗಳು, ಉದ್ಯಾನಗಳು, ಮತ್ತು ಇತರ ಆಧಿನಿಕ ಸೌಲಭ್ಯಗಳನ್ನು ಹೊಂದಿ ಮಾದರಿ ವಿನ್ಯಾಸದಿಂದ ಯೋಜಿತ ರೀತಿಯಲ್ಲಿ ಕಟ್ಟಿದ ಪಟ್ಟಣವಾಗಿದೆ. ಬಾಗಲಕೋಟ್ ನವನಗರದ ಪ್ರಧಾನ ವಾಸ್ತುಶಿಲ್ಪಿ ಛಾರ್ಲ್ಸ್ ಕೋರಿಯಾ. ನದಿಗಳು ಇಲ್ಲಿ ಘಟಪ್ರಭಾ, ಮಲಪ್ರಭಾ, ಮತ್ತು ಕೃಷ್ಣಾ ನದಿಗಳು ಹರಿಯುತ್ತವೆ. ಶಿಕ್ಷಣ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಬಾಗಲಕೋಟ ಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ, ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘ, ಇಲಕಲ್ಲ ತಾಲೂಕುಗಳು ಜಮಖಂಡಿ ಮುಧೋಳ ಬೀಳಗಿ ಬಾಗಲಕೋಟ ಬಾದಾಮಿ ಹುನಗುಂದ ಇಲಕಲ್ ಗುಳೇದಗುಡ್ಡ ರಬಕವಿ - ಬನಹಟ್ಟಿ ಇದನ್ನೂ ನೋಡಿ ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ) ಹೊರಗಿನ ಸಂಪರ್ಕ ಬಾಗಲಕೋಟ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ * ವರ್ಗ:ಕರ್ನಾಟಕದ ಜಿಲ್ಲೆಗಳು
ಬೆಂಗಳೂರು ಗ್ರಾಮೀಣ
https://kn.wikipedia.org/wiki/ಬೆಂಗಳೂರು_ಗ್ರಾಮೀಣ
REDIRECT ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೀದರ್
https://kn.wikipedia.org/wiki/ಬೀದರ್
thumb|ಬೀದರ್ ಕೋಟೆ ವಿಹಂಗಮ ನೋಟ thumbnail|ಬಿದರಿ ಕಲೆ thumbnail | ಬೀದರ ಜಿಲ್ಲೆಯ ತಾಲೂಕು ಮತ್ತು ಹೋಬಳಿಗಳು ಬೀದರ್ (ಕನ್ನಡ: ಬೀದರ, ಉರ್ದು: بیدار) ಒಂದು ಡೆಕ್ಕನ್ ಪ್ರಸ್ಥಭೂಮಿಯಲ್ಲಿರುವ, ಬೆಟ್ಟದ ತುದಿಯಲ್ಲಿರುವ ನಗರ. ಇದು ಭಾರತದ ಕರ್ನಾಟಕ ರಾಜ್ಯದ ಪೂರ್ವಭಾಗದಲ್ಲಿದೆ. ಇದು ಬೀದರ್ ಜಿಲ್ಲೆಯ ಜಿಲ್ಲಾಕೇಂದ್ರ. ಬೀದರ್ ಜಿಲ್ಲೆ ಮಹಾರಾಷ್ಟ್ರ ಮತ್ತು ತೆಲಂಗಾಣದೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಇದು ಬೀದರ್ ಮಹಾನಗರ ವಲಯಕ್ಕೆ ಸೇರುತ್ತದೆ. ಈ ನಗರವು ಅನೇಕ ವಾಸ್ತುಶಿಲ್ಪ, ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಉಗಮ ಬೀದರ್ ಎಂಬ ಹೆಸರು ಬಿದಿರುನಿಂದ ಬಂದಿದೆ ಎಂದು ನಂಬಲಾಗಿದೆ. ಹಿಂದೆ ಇದು ಇಲ್ಲಿ ಇದ್ದ ಬಿದಿರಿನ ಗೊಂಚಲುಗಳಿಗೆ ಪ್ರಖ್ಯಾತವಾಗಿತ್ತು, ಆದ್ದರಿಂದ ಇದನ್ನು ಬಿದಿರೂರು ಎಂದು ಕರೆಯಲಾಗುತಿತ್ತು ಮತ್ತು ಆಮೇಲೆ ಬಿದರೆ, ಬೀದರ್ ಎಂದು ಹೆಸರು ಬದಲಾಗಿದೆ.ಬೀದರ್ ಹೆಸರಿನ ಉಗಮದ ಬಗ್ಗೆ ಬೀದರ್ ಜಿಲ್ಲೆಯ ಅಧಿಕೃತ ತಾಣದಲ್ಲಿ ಹೇಳಲಾಗಿದೆ ಆದರೂ ಬಿದಿರು ಅಥಾವ ಬಿದಿರಿನ ಉತ್ಪನ್ನಗಳು, ಬೀದರ್ ನಗರದಲ್ಲಾಗಲಿ ಅದರ ಸುತ್ತಲಿನ ಪರಿಸರದಲ್ಲಾಗಲಿ ಇಲ್ಲ. ದಂತಕಥೆಗಳ ಪ್ರಕಾರ ಬೀದರ್ ಗೆ ಪ್ರಾಚೀನ ಸಾಮ್ರಾಜ್ಯ ವಿದರ್ಭ ಜೊತೆ ಸಂಭಂದವಿದೆ ಎಂದು ಹೇಳುತ್ತಾರೆ. ವಿದರ್ಭ ಬಗ್ಗೆ ಪ್ರಾಚೀನ ಹಿಂದು ಗ್ರಂಥಗಳಾದ ಮಾಳವಿಕಾಗ್ನಿಮಿತ್ರ , ಮಹಾಭಾರತ, ಹರಿವಂಶ , ಭಾಗವತ ಮತ್ತು ಕೆಲವು ಇತರೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ಈ ಎರಡು ನಗರಗಳ ಸಂಬಂಧವನ್ನು ಬೀದರ್ ಮತ್ತು ವಿದರ್ಭ ಹೆಸರಿನಲ್ಲಿ ಇರುವ ಹೋಲಿಕೆಗಳಿಂದ ಸ್ಪಷ್ಟವಾಗಿ ಕಾಣಬಹುದು. ಇದನ್ನು ಫರಿಶ್ತಾ ಬರಹದಲ್ಲಿ ಪ್ರಸ್ತಾಪಿಸಲಾಗಿದೆ. ಇಲ್ಲಿನ ಸಾಂಪ್ರದಾಯಿಕ ಕಥೆಗಳು, ಇಲ್ಲಿ ವಿದುರ ವಾಸವಾಗಿದ್ದನೆಂದು ಹೇಳುತ್ತದೆ. ಅದ್ದರಿಂದ ಇದನ್ನು ಹಿಂದೆ ವಿದುರನಗರ ಎಂದು ಕರೆಯಲಾಗುತ್ತಿತ್ತು ಮತ್ತು ಇದು ನಳ ಮತ್ತು ದಮಯಂತಿ (ರಾಜ ಭೀಮನ ಮಗಳು ಮತ್ತು ವಿದರ್ಭದ ರಾಜ) ಭೇಟಿಯಾಗುವ ಸ್ಥಳವೂ ಆಗಿತ್ತು. ಇತಿವೃತ್ತ ಬೀದರ್ - ಕರ್ನಾಟಕ ರಾಜ್ಯದ ಉತ್ತರ ತುದಿಯಲ್ಲಿರುವ ಜಿಲ್ಲೆ. ಬೀದರ ನಗರವು ಈ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಭಾಲ್ಕಿ, ಹುಮನಾಬಾದ್, ಬೀದರ್, ಬಸವಕಲ್ಯಾಣ ಮತ್ತು ಔರಾದ ತಾಲೂಕುಗಳ ೬೨೨ ಹಳ್ಳಿಗಳು ಈ ಜಿಲ್ಲೆಯಲ್ಲಿವೆ. ಬೀದರ್ ಜಿಲ್ಲೆಯು ಸಾಂಸ್ಕೃತಿಕವಾಗಿ ಕರ್ನಾಟಕದ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲೊಂದು. ಹಿಂದೆ ಬೀದರ್ ಜಿಲ್ಲೆಯು ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿತ್ತು. ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬೀದರ್, ಬಿಜಾಪುರ, ಗೋಲ್ಕೊಂಡ, ಗುಲ್ಬರ್ಗಾ ಮತ್ತು ಬಿರಾರ್ ಸಂಸ್ಥಾನಗಳೂ ಸೇರಿದ್ದವು ಎಂಬುದನ್ನು ಗಮನಿಸಬಹುದು. ಬೀದರ್ ಜಿಲ್ಲೆಯು ಬಸವಕಲ್ಯಾಣದಿಂದ ಉಗಮಿಸಿದ ಶರಣರ ಸಾಂಸ್ಕೃತಿಕ ಕ್ರಾಂತಿಯನ್ನೂ ಕಂಡಿದೆ. ಬಸವಕಲ್ಯಾಣದಲ್ಲಿ ಜನಿಸಿದ ಶೈವ ಸಂಸ್ಕೃತಿಯು ವಿಶ್ವಾದ್ಯಂತ ಪಸರಿಸಿ, ನಮ್ಮ ರಾಜ್ಯಕ್ಕೆ ಈಗಿರುವ ವಿಶೇಷ ಮಹತ್ವವನ್ನು ತಂದಿದೆ. ಬೀದರ್ ನಗರದಲ್ಲಿರುವ ವಾಯುಪಡೆ ತರಬೇತಿ ಕೇಂದ್ರವು ಆಗಸದಲ್ಲಿ ತ್ರಿವರ್ಣ ಚಿಮ್ಮುತ್ತಾ ವಿವಿಧ ಕಸರತ್ತು ಪ್ರದರ್ಶಿಸುವ ಸೂರ್ಯಕಿರಣ ವೈಮಾನಿಕ ತಂಡದಿಂದ ಪ್ರಸಿದ್ಧವಾಗಿದೆ. ಪ್ರಸ್ತುತ ಇಲ್ಲಿ ಬ್ರಿಟನ್ನಿನ ಹಾಕ್ ವಿಮಾನಗಳ ಪ್ರಾಯೋಗಿಕ ತರಬೇತಿ ನಡೆದಿದೆ. ಜಿಲ್ಲೆಯ ಭಾಲ್ಕಿ ಪಟ್ಟಣವು ದಲಿತೋದ್ದಾರ ಹಾಗೂ ಕನ್ನಡಕ್ಕಾಗಿ ಅಪಾರ ಸೇವೆ ಸಲ್ಲಿಸಿದ ಶತಾಯುಷಿ ಡಾ.ಚೆನ್ನಬಸವ ಪಟ್ಟದ್ದೇವರಿಂದಾಗಿ ಪ್ರಖ್ಯಾತವಾಗಿದೆ. ಭೌಗೋಳಿಕ ವಿವರಗಳು ಬೀದರ್ ನಗರ ಸುಮಾರು 615 ಮೀಟರ್ (2017 ಅಡಿ) ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ.ಬೀದರ್ ನಗರದ ಹಳೆಯ ಹೆಸರು ’ಮೊಹಮ್ಮದಾಬಾದ್’. ಬೀದರ್ ಜಿಲ್ಲೆಯಾದ್ಯಂತ ಸರಾಸರಿ ವರ್ಷ ಪೂರ್ತಿ ಇರುವ ತನ್ನ ಬಿಗಿಯಾದ ಹಾಗೂ ಬಲವಾದ ಹವಾಮಾನದಿಂದ ಪ್ರಾಯೋಗಿಕವಾಗಿಯೂ, ಆಕರ್ಷಕವಾಗಿಯೂ ಮನೋಹರ ನಗರವೆಂದು ಪ್ರಸಿದ್ಧಿಯಾಗಿದೆ. ಏಪ್ರಿಲ್ ಮತ್ತು ಮೇ ಬೇಸಿಗೆ ತಿಂಗಳುಗಳಾದರೂ ಕೂಡ ಈ ಬಿಸಿ ಹವಾಮಾನದ ಅವಧಿಯಲ್ಲಿ, ಶಾಖ ಹೆಚ್ಚಾದಾಗ ಹಠಾತ್ತಾಗಿ ಸುರಿಯುವ ಅಬ್ಬರದ ವರ್ಷಧಾರೆಯಿಂದ ಬಿಸಿಯ ತಾಪ ಕಡಿಮೆಯಾಗಿ ಬಿಡುತ್ತದೆ. ಜೂನ್ ತಿಂಗಳ ಆರಭದಲ್ಲೇ ನೈಋತ್ಯ ಮುಂಗಾರು ತನ್ನ ಪೂರ್ಣ ಮನೋಹರತೆಯೊಂದಿಗೂ ಮತ್ತು ತಂಪಾದ ಹವೆಯೊಂದಿಗೂ ಹವಾಮಾನವನ್ನು ಜೊತೆ ಹೊಂದಿಸಿಕೊಂಡು ಜಿಲ್ಲೆಗೆ ತನ್ನ ಎಂದಿನ ಬಿಗಿಯಾದ ಆಹ್ಲಾದಕರವಾದ ಹವಾಮಾನದ ವೈಭವವನ್ನು ಮರಳಿ ಹೊಂದಿಸಿ ಬಿಡುತ್ತದೆ. ಇಲ್ಲಿ ಶೀತ ಹವಾಮಾನ ಎಂದಿಗೂ ಅತಿ ತಂಪಾಗಿ ಇರುವುದಿಲ್ಲ ಮತ್ತು ಮಳೆಯೂ ಎಂದಿಗೂ ಅತಿಯಾಗಿರುವುದಿಲ್ಲ. ಆದರೆ ಅದರಲ್ಲಿರುವ ವಿಪರೀತ ಬದಲಾವಣೆಗಳ ಲಕ್ಷಣವೇ ಜಲಕ್ಷಾಮಕ್ಕೂ ಮತ್ತು ದೇಹಾಲಸ್ಯಕ್ಕೂ ಕಾರಣವಾಗಿದೆ. ಬೀದರ್ ಜಿಲ್ಲೆಯ ಒಂದು ಮುಖ್ಯವಾದ ಮೋಡಿ ಯ ಅಂಶವೆಂದರೆ, ಜಿಲ್ಲೆಯ ಪ್ರತಿಯೊಂದು ಹಳ್ಳಿಯಲ್ಲಿಯೂ ಬೆಚ್ಚಿ ಬೀಳಿಸುವಂತಹ ಇತಿಹಾಸದ ಸ್ಮಾರಕಗಳು, ದಂತಕಥೆಗಳು, ಸುಂದರವಾದ ರಾಜಕುಮಾರಿಯರ ಪ್ರೇಮ ಕಥೆಯಗಳು, ಮರೆತು ಹೋದ ದೀರ್ಘ ಕದನಗಳ ವಿವರಗಳು, ಹಗೆತನದ ಕಥೆಗಳು ಮತ್ತು ಮಿಲಿಟರಿ ಸಾಹಸ ಗಳು ತುಂಬಿರುವುದು. ಮಧ್ಯಯುಗದ ಹಿಂದೂ ಧರ್ಮದ ಅಡಿಪಾಯವನ್ನು ಮತ್ತು ಅಸ್ತಿತ್ವವನ್ನು ನಡುಗಿಸಿದ ಸಾಮಾಜಿಕ ಸುಧಾರಣಾ ಚಳುವಳಿಗಳಿಗಳು ಕೂಡ ಬೀದರ್ ಜಿಲ್ಲೆಯ ಮುಖ್ಯ ಆಕರ್ಷಣೆಗಳಲ್ಲೊಂದು. ಬೀದರ್ ಜಿಲ್ಲೆಯ ಇಂದಿನ ಒಳಹರವಿನ ಒಟ್ಟು ಭೂಮಿಯು 5448 ಚದರ ಕಿಲೋಮೀಟರ್ ನಷ್ಟು ವಿಸ್ತಾರದಲ್ಲಿ 17 O 35 !! ಮತ್ತು 18 o 25 !! ಉತ್ತರ ಅಕ್ಷಾಂಶದಲ್ಲಿ ಮತ್ತು 760 42 !! ಮತ್ತು 770 39! ಪೂರ್ವ ರೇಖಾಂಶದಲ್ಲಿ, ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇಡಕ್ ಜಿಲ್ಲೆಗಳೊಂದಿಗೂ ಪಶ್ಚಿಮಕ್ಕೆ ಮಹಾರಾಷ್ಟ್ರದ ನಾಂದೇಡ್ ಮತ್ತು ಉಸ್ಮಾನಾಬಾದ್ ಜಿಲ್ಲೆಗಳೊಂದಿಗೂ ಹೊಂದಿಕೊಂಡಿದೆ. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆಯು ನೆಲೆಗೊಂಡಿದೆ. ಡೆಕ್ಕನ್ ಇತಿಹಾಸದಲ್ಲಿ ಹಿಂದಿನ ಸುಪ್ರಸಿಧ್ಧ ಸ್ಥಾನವನ್ನು ಬೀದರ್ ಹೊಂದಿತ್ತು. ಆದರೆ ಪ್ರಸ್ತುತದಲ್ಲಿ ಇದು ಶತಮಾನಗಳ ನಿರ್ಲಕ್ಷ್ಯದ ಮತ್ತು ನಾಶವಾದ ಚಿತ್ರಣವನ್ನು ಒದಗಿಸುತ್ತದೆ. ಭೌಗೋಳಿಕವಾಗಿ ಬೀದರ್ ಜಿಲ್ಲೆಯು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ೧೭.೯° ಉತ್ತರ ಮತ್ತು ೭೭.೫೫° ಪೂರ್ವದಲ್ಲಿದೆ. ಇದು ದಖನ್ ಪ್ರಸ್ಥಭೂಮಿಯ ಒಂದು ಭಾಗ. ಹೆಚ್ಚು ಬೆಟ್ಟಗುಡ್ಡಗಳಿಲ್ಲದೆ ವಿಶಾಲ ಮಟ್ಟಸಪ್ರದೇಶಗಳಿಂದ ಕೂಡಿದೆ. ಸಮುದ್ರಮಟ್ಟದಿಂದ ೬೧೪ ಮೀಟರು ಎತ್ತರದಲ್ಲಿರುವ ಈ ಜಿಲ್ಲೆಯ ಹವೆ ಹಿತಕರವಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ ೯೦೭.೫ ಮಿಮೀ. ಔರಾದ ಹಾಗೂ ಭಾಲ್ಕಿಗಳು ಕಪ್ಪು ಮಣ್ಣಿನ ನೆಲ ಹೊಂದಿವೆ. ಈ ಜಿಲ್ಲೆಯ ಯಾವುದೇ ಭಾಗದಲ್ಲೂ ಖನಿಜ ನಿಕ್ಷೇಪಗಳಿಲ್ಲ. ಮಾಂಜರಾ ನದಿಯು ಈ ಜಿಲ್ಲೆಯ ಪ್ರಮುಖ ನದಿ. ಗೋದಾವರಿ ನದಿಯ ಉಪನದಿಯಾಗಿರುವ ಈ ನದಿ ೯೭ ಕಿಲೋಮೀಟರು ಉದ್ದವಿದ್ದು ಜಿಲ್ಲೆಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ಹರಿದು ಆಂಧ್ರದ ಗಡಿಯನ್ನು ಪ್ರವೇಶಿಸುತ್ತದೆ. ಕಾರಂಜಾ ನದಿಯು ಮತ್ತೊಂದು ಪ್ರಮುಖ ನದಿ. ಇದು ತೆಲಂಗಾಣಾದ ಕೊಹಿರ್ ಪ್ರದೇಶದಲ್ಲಿ ಹುಟ್ಟಿ ಬೀದರ್ ತಾಲುಕಿನಲ್ಲಿ ಹರಿದು, ಭಾಲ್ಕಿಯಲ್ಲಿ ಇದು ಮಾಂಜರಾ ನದಿಯನ್ನು ಸೇರುತ್ತದೆ. ಬಸವಕಲ್ಯಾಣ ತಾಲೂಕಿನಲ್ಲಿ ಹುಟ್ಟುವ ಮುಲ್ಲಾಮಾರಿ ನದಿಯು ಗುಲ್ಬರ್ಗಾವನ್ನು ಪ್ರವೇಶಿಸುತ್ತದೆ. ಚುಳಕಿ, ಗಂಡೋರಿ, ನಗರವಾಲಾ, ಹುಡಗಿ ಹಾಗೂ ಹಳ್ಳಿಖೇಡ ನಾಲಾ ಇವುಗಳು ಸಣ್ಣ ಹೊಳೆಗಳು. ಚರಿತ್ರೆ ಚಾರಿತ್ರಿಕವಾಗಿ, ಬೀದರ್ ಜಿಲ್ಲೆ ಪ್ರಾಮುಖ್ಯತೆಗೆ ಬಂದದ್ದು ಬಸವಣ್ಣನವರ ಕಾಲದಲ್ಲಿ ಮತ್ತು ಬಹಮನಿ ಸುಲ್ತಾನರ ಕಾಲದಲ್ಲಿ. ಈ ಜಿಲ್ಲೆಯ ಕೆಲಭಾಗಗಳಲ್ಲಿ ನವಶಿಲಾಯುಗದ ಕಾಲದ ಅವಶೇಷಗಳು ಸಿಕ್ಕಿವೆ. ರಾಷ್ಟ್ರಕೂಟರು, ದೇವಗಿರಿಯ ಯಾದವರು, ಕಾಕತೀಯರು ಈ ಪ್ರದೇಶವನ್ನಾಳಿದ್ದಾರೆ. ಜಿಲ್ಲೆಯ ಬಸವಕಲ್ಯಾಣವು ಚಾಲುಕ್ಯರ ರಾಜಧಾನಿಯಾಗಿತ್ತು. ಕ್ರಿಸ್ತಶಕ ೧೪೨೪ರಲ್ಲಿ ಬೀದರ್ ಪಟ್ಟಣವು ಬಿಜಾಪುರದ ಬಹಮನಿ ಸುಲ್ತಾನರ ರಾಜಧಾನಿಯಾಗಿ ಬರೀದ್ ಶಾಹಿ ಕಾಲದವರೆಗೆ ಮುಂದುವರಿಯಿತು. ಕ್ರಿಸ್ತಶಕ ೧೬೧೯ರಲ್ಲಿ ಈ ಪ್ರದೇಶ ಅದಿಲ್ ಶಾಹಿಗಳ ವಶವಾಯಿತು. ೧೬೫೬ರಲ್ಲಿ ಔರಂಗಜೇಬನು ಇದನ್ನು ಮೊಘಲ್ ಸಾಮ್ರಾಜ್ಯದ ತೆಕ್ಕೆಗೆ ತೆಗೆದುಕೊಂಡ. ೧೭೨೪ರಲ್ಲಿ ಇದು ನಿಜಾಮರ ವಶಕ್ಕೆ ಬಂತು. ೧೯೪೮ರಲ್ಲಿ ನಿಜಾಮನು ಹೊಸ ಭಾರತದ ಒಕ್ಕೂಟಕ್ಕೆ ಸೇರಿದನು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಈಗಿರುವ ತಾಲೂಕುಗಳು ಕರ್ನಾಟಕದಲ್ಲಿ ವಿಲೀನಗೊಂಡವು. ಧರ್ಮ ಬೀದರ ಜಿಲ್ಲೆಯಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಜೈನ್ ಮತ್ತು ಸಿಖ್ ಎಂಬ ಐದು ಪ್ರಮುಖ ಧರ್ಮಗಳಿವೆ. ಬೀದರಿನ ಪೂರ್ವದಿಕ್ಕಿನಲ್ಲಿರುವ ದುಲ್ಹನ್ ದರ್ವಾಜದ ಮೂಲಕ ಕೋಟೆಯಿಂದ ಹೊರಬಂದು ಕೆಳಗಿಳಿಯುತ್ತಿದ್ದಂತೆ ಅಗ್ರಹಾರ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಎಡಬದಿ ದಿಬ್ಬದ ಮೇಲೆ ಒಂದು ಅಷ್ಟಕೋನಾಕೃತಿಯ ಚೌಖಂಡಿ ಎಂಬ ಮುಸ್ಲಿಂ ಕಟ್ಟಡವೊಂದು ಕಾಣುತ್ತದೆ. ಚೌಖಂಡಿ ಎಂದರೆ ನಾಲ್ಕು ಅಂತಸ್ತುಗಳ ಕಟ್ಟಡ. ಆದರೆ ವಾಸ್ತವವಾಗಿ ಇಲ್ಲಿರುವುದು ಎರಡು ಅಂತಸ್ತುಗಳ ಕಟ್ಟಡ. ಈ ಕಟ್ಟಡದಲ್ಲಿ ಬಹಮನಿ ಸುಲ್ತಾನ ಅಹಮದ್ ಶಹಾನ ಆಹ್ವಾನದ ಮೇರೆಗೆ ಇರಾನಿನಿಂದ ಬಂದ ಇಸ್ಲಾಮೀ ಸಂತ ಹಜರತ್ ಖಲೀಲುಲ್ಲಾ ಮತ್ತವರ ಕುಟುಂಬ ವರ್ಗದವರನ್ನ ಸಮಾಧಿಗಳಿವೆ. ದಿಬ್ಬದಿಂದ ಇಳಿದುಬಂದು ಅದೇ ರಸ್ತೆಯಲ್ಲಿ ಅಂದರೆ ಅಷ್ಟೂರು ದಾರಿಯಲ್ಲಿ ಒಂದು ಕಿಲೋಮೀಟರು ಮುಂದೆ ಹೋದರೆ ನಾಲ್ಕೈದು ದರ್ಗಾಗಳ ಸಮೂಹ ಇದೆ. ಇಲ್ಲಿರುವ ಒಂದು ದರ್ಗಾದಲ್ಲಿ ವಜ್ರಗಳಿಂದ ಅಲಂಕರಿಸಲ್ಪಟ್ಟ ಚಿತ್ರಗಳು ಇರುವ ಗೋರಿಯನ್ನು ನೋಡಬಹುದಾಗಿದೆ. ಬೀದರ್ ಪಟ್ಟಣಕ್ಕೆ ಉತ್ತರಭಾಗದಲ್ಲಿರುವ ಮಂಗಳಪೇಟೆಯು ಒಂದು ಕ್ರೈಸ್ತ ಕ್ಷೇತ್ರವಾಗಿದ್ದು ಪ್ರತಿವರ್ಷ ಮೇ ತಿಂಗಳಲ್ಲಿ ಇಲ್ಲಿ ದೊಡ್ಡ ಜಾತ್ರೆ ನೆರೆಯುತ್ತದೆ. ಅದೇರೀತಿ ಭಾಲ್ಕಿಯಲ್ಲಿ ಪ್ರತಿವರ್ಷ ಬಾಲಯೇಸುಜಾತ್ರೆ ನಡೆಯುವುದುಂಟು. ಬೀದರ ಜಿಲ್ಲೆಯ ಔರಾದ, ಸಂತಪುರ, ಹಲಬರ್ಗಾ, ಜಲಸಂಗ್ವಿ, ತಾಳಮರಗಿ, ಹುಲಸೂರ, ಕವಡಿಯಾಳ, ಹುಮನಾಬಾದ ಮುಂತಾದೆಡೆಗಳಲ್ಲೂ ಚರ್ಚುಗಳನ್ನು ಕಾಣಬಹುದು. ನರಸಿಂಹ ಜರನಿ ಕ್ಷೇತ್ರದಲ್ಲಿ ಇರುವ ಗವಿಯಲ್ಲಿ ನಡುಮಟ್ಟದ ನೀರಿನಲ್ಲಿ ಮೂವತ್ತು ಮೀಟರ್ ನಡೆದು ಬಂದರೆ, ನರಸಿಂಹನ ದರ್ಶನ ಪಡೆಯಬಹುದು. ಬೀದರದಿಂದ ಕೆಳಕ್ಕೆ ಕಣಿವೆಯಲ್ಲಿರುವ ಝರಿಯೊಂದು ಹರಿಯುತ್ತಿದ್ದು ನಾನಕ್ ಝರಾ ಎಂಬ ಹೆಸರಿನಲ್ಲಿ ಅದು ಸಿಕ್ಕರಿಗೆ ಪವಿತ್ರ ತೀರ್ಥವೆನಿಸಿದೆ. ಇದು ಸಿಖ್ಖರ ಧರ್ಮಗುರುಗಳಾದ ಗುರುನಾನಕರು ತಮ್ಮ ಆಗಮನದಿಂದ ಪವಿತ್ರಗೊಳಿಸಿದ ಪುಣ್ಯಸ್ಥಳ. ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ : ಬೀದರ್-ಉದ್ಗಿರ್ ರಸ್ತೆಯಲ್ಲಿ ಸುಮಾರು ೧೫ ಕಿ ಮಿ ಬೀದರ್ ನಿಂದ ಶ್ರೀ ಕ್ಷೇತ್ರ ಮೈಲಾರ್ ಅಥವಾ ಖಾನಪುರ್ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀ ಮೈಲಾರ್ ಮಲ್ಲಣ್ಣ ದೇವಸ್ಥಾನ ಇದೆ. ಈ ದೇವಸ್ಥಾನ ಇಡಿ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದ ದೇವಸ್ಥಾನ, ಪ್ರತಿ ವರ್ಷ ಲಕ್ಷ ಲಕ್ಷ ಭಕ್ತಾದಿಗಳು ಬಂದು ಮಲ್ಲಣ್ಣ (ಶಿವನ ಉಗ್ರ ರೂಪ) ದರ್ಶನ ಪಡೆಯುತ್ತಾರೆ. ಬೀದರ್ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಹುಮ್ನಾಬಾದ್ ಇಲ್ಲಿರುವ ಮಾಣಿಕಪ್ರಭುಗಳ ಮಠ ಮತ್ತು ೧೭೨೫ರಲ್ಲಿ ನಿರ್ಮಿಸಲಾಗಿರುವ ವೀರಭದ್ರ ದೇವಸ್ಥಾನ ಮತ್ತು ಜಾತ್ರೆಗಳು ಪ್ರಮುಖವಾದುವು. ಬೀದರ್ ಜಿಲ್ಲೆಯ ಬಸವ ಕಲ್ಯಾಣ ಶರಣರ ತಪೋಭೂಮಿಯೆಂದೇ ಪ್ರಸಿದ್ಧವಾಗಿದೆ. ಬಸವಕಲ್ಯಾಣದಲ್ಲಿ ಅರಿವಿನ ಮನೆ, ಅನುಭವ ಮಂಟಪ, ಅಕ್ಕನಾಗಮ್ಮನ ಗವಿ, ಪರುಷಕಟ್ಟೆ, ಮಹಾಮನೆ, ತ್ರಿಪುರಾಂತಕ ಕೆರೆ ಮೊದಲಾಗಿ ಹಲವಾರು ಶರಣರ ಸ್ಥಳಗಳನ್ನು ಮತ್ತು ಸುಸ್ಥಿತಿಯಲ್ಲಿರುವ ಬಸವಕಲ್ಯಾಣ ಕೋಟೆಯನ್ನು ನೋಡಬಹುದಾಗಿದೆ. ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನದ ಮಠ ಇದೆ. ಕಲೆ ಮತ್ತು ಸಾಹಿತ್ಯ ಬಿದರಿಕಲೆ ಪ್ರಪಂಚದಾದ್ಯಂತ ಖ್ಯಾತವಾಗಿರುವ ಬೀದರ್ ಕುಸುರಿ ಕಲೆ. ಈ ಕಲೆಯು ಪರ್ಶಿಯಾ ದೇಶದಿಂದ ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿಗೆ ಬಂದು ತದನಂತರ ಹೊಸ ರೂಪವನ್ನು ಪಡೆದುಕೊಂಡಿದೆ. ಕುಶಲ ಕೆಲಸಗಾರರು ತಾಮ್ರ ಮತ್ತು ಸತುವಿನ ಧಾತುಗಳನ್ನು ಮಿಶ್ರಮಾಡಿ ಹೂಜಿ ಮುಂತಾದ ವಸ್ತುಗಳನ್ನು ತಯಾರಿಸಿ ಅವುಗಳ ಮೇಲೆ ಸಣ್ಣದಾಗಿ ಕೊರೆದು ಅದರಲ್ಲಿ ಬೆಳ್ಳಿಯ ತಂತಿಯನ್ನು ಕೂರಿಸಿ ಹೊಳಪು ಕೊಡುತ್ತಾರೆ. ಈ ಬಿದರಿ ಕಲೆಗೆ ವಿದೇಶಗಳಲ್ಲೂ ಬಲು ಬೇಡಿಕೆಯಿದೆ. ಉಲ್ಲೇಖಗಳು
ಬಿಜಾಪುರ
https://kn.wikipedia.org/wiki/ಬಿಜಾಪುರ
REDIRECT ವಿಜಯಪುರ
ಚಿಕ್ಕಮಗಳೂರು
https://kn.wikipedia.org/wiki/ಚಿಕ್ಕಮಗಳೂರು
ಚಿಕ್ಕಮಗಳೂರು ಭಾರತ ದೇಶದ, ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಚಿಕ್ಕಮಗಳೂರು ಜಿಲ್ಲೆ ಕಾಫಿನಾಡು ಎಂದು ಸಹ ಕರೆಯಲ್ಪಡುತ್ತದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ದತ್ತಗಿರಿ/ ಚಂದ್ರದ್ರೋಣ ಪರ್ವತ ಭಾಗಗಳಲ್ಲಿ ಬೆಳೆಯಲಾಯಿತು. ಚಿಕ್ಕಮಗಳೂರಿನ ಗಿರಿಶ್ರೇಣಿಗಳು ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದ್ದು, ತುಂಗಾ ಮತ್ತು ಭದ್ರಾ ನದಿಗಳ ಮೂಲಸ್ಥಾನವಾಗಿದೆ. ಕರ್ನಾಟಕದ ಅತ್ಯಂತ ಎತ್ತರ ಶಿಖರವಾದ ಮುಳ್ಳಯ್ಯನ ಗಿರಿ ಚಿಕ್ಕಮಗಳೂರಿನಲ್ಲಿದೆ. ಈ ಜಿಲ್ಲೆಯು ಮಲೆನಾಡು, ಅರೆಮಲೆನಾಡು, ಹಾಗೂ ಬಯಲುಸೀಮೆಗಳನ್ನೊಳಗೊಂಡಿದೆ, ಈ ಜಿಲ್ಲೆಯ ಹೆಚ್ಚು ಪ್ರದೇಶ ಮಲೆನಾಡು'. ವಿವಿಧ ಜಾತಿಯ ಪ್ರಾಣಿಗಳನ್ನೊಳಗೊಂಡ ಅಭಯಾರಣ್ಯಗಳು, ನಿತ್ಯಹರಿದ್ವರ್ಣಕಾಡುಗಳಿಂದ ಕೂಡಿದ ಪರ್ವತ ಶ್ರೇಣಿಗಳು ಹಾಗೂ ಅನೇಕ ಜಲಪಾತಗಳು ಮತ್ತು ಕಾಫಿ, ಟೀ, ಏಲಕ್ಕಿ, ಮೆಣಸು, ಅಡಿಕೆ,ಬಾಳೆ, ತೆಂಗುಗಳನ್ನು ಬೆಳೆಯುವ ನಾಡಾಗಿದೆ. ಜಲ ಮತ್ತು ಪ್ರಕೃತಿ ಸಂಪತ್ತಿನಿಂದ ಪ್ರಸಿದ್ಧಿ ಪಡೆದಿದೆ. thumb| ಚಿಕ್ಕಮಗಳೂರನ್ನು ಪ್ರವಾಸಿಗರ ತಾಣ. ಪ್ರಕುತಿಯ ಸೌಂದರ್ಯವನ್ನು ಒಳಗೊಂಡಿರುವ ಮಲೆನಾಡು ಯೆಂದು ಹೆಸರನ್ನು ಪಡೆದುಕೊಂಡಿದೆ ಉಗಮ ಚಿಕ್ಕಮಗಳೂರು ಜಿಲ್ಲೆಯು ಅದರ ಜಿಲ್ಲಾಕೇಂದ್ರವಾದ ಚಿಕ್ಕಮಗಳೂರು ಪಟ್ಟಣದಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಎಂದರೆ “ಚಿಕ್ಕ ಮಗಳ ಊರು” ಎಂದರ್ಥ. ಈ ಪಟ್ಟಣವನ್ನು ಪ್ರಸಿದ್ಧ ಸಖರಾಯ ಪಟ್ಟಣ ಮುಖ್ಯಸ್ಥನಾದ ರುಕ್ಮಾಂಗದ, ಚಿಕ್ಕ ಮಗಳಿಗಾಗಿ ವರದಕ್ಷಿಣೆಯಾಗಿ ನೀಡಿದ ಎಂದು ಹೇಳಲಾಗಿದೆ. ಅದ್ದರಿಂದ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿದೆ. ಹಾಗೆಯೇ “ಹಿರಿಯ ಮಗಳ ಊರು” ಹಿರೇಮಗಳೂರು ಎಂಬ ಊರು ಚಿಕ್ಕಮಗಳೂರಿನಿಂದ ೫ ಕೀ.ಮೀ.ದೂರದಲ್ಲಿದೆ. ಅದಾಗ್ಯೂ ಬಹುತೇಕರು ಚಿಕ್ಕಮಗಳೂರನ್ನು ಚಿಕ್ಕಮಂಗಳೂರು ಎಂದು ತಪ್ಪಾಗಿ ಉಚ್ಚರಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆ ೧೯೪೭ ರ ತನಕ ಕಡೂರು ಎಂದು ಕರೆಯಲ್ಪಡುತ್ತಿತ್ತು. ಕೆಲವು ಹಳೆಯ ಶಾಸನಗಳ ಪ್ರಕಾರ ಚಿಕ್ಕಮಗಳೂರು ಮತ್ತು ಹಿರೇಮಗಳೂರುಗಳನ್ನು ಕ್ರಮವಾಗಿ ಕಿರಿಯ ಮುಗುಲಿ ಮತ್ತು ಪಿರಿಯ ಮುಗುಲಿ ಎಂದು ಕರೆಯಲಾಗುತ್ತಿತ್ತು. ಪ್ರಮುಖ ಬೆಳೆ ಚಿಕ್ಕಮಗಳೂರಿನಲ್ಲಿ ಅತಿಹೆಚ್ಚು ಬೆಳೆಯುವ ಬೆಳೆ ಕಾಫಿ. ಇಲ್ಲಿನ ರೈತರು ಕಾಫಿ ಬೆಳೆಯಮೇಲೆ ಅವಲಂಬಿತರಾಗಿದ್ದಾರೆ. ಇಲ್ಲಿ ಅತಿಹೆಚ್ಚು ಮಳೆಯಾಗುತ್ತದೆ.ಕಾಫೀಯ ತವರೂರು ಬಾಬಾಬುಡನ್ ಎ಼಼ಂಬ ಅರೇಬಿಯನ್ ಫಕೀರ್ ಕರ್ನಾಟಕದಲ್ಲಿ ಕಾಫಿಯನ್ನು ಪರಿಚಯಿಸಿದರು. ಎಂಬ ಮೂಢನಂಬಿಕೆ ಚಾಲ್ತಿಯಲ್ಲಿದೆ.ಎಲ್ಲಿಯ ಅರಬ್ ದೇಶ, ಎಲ್ಲಿಯ ಕಾಫಿ‌ ಬೆಳೆ ಇದು ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ..ಯಾಕೆಂದರೆ‌ ಕಾಫಿ ಒಂದು ಅತ್ಯಂತ ಸೂಕ್ಷ್ಮ ಬೆಳೆ ಇದು ಮರುಭೂಮಿಯಲ್ಲಿ ಬೆಳೆಯಲು ಅದೇನು ಪಾಪಸ್ ಕಳ್ಳಿಯೇ ಅಥವಾ ಖರ್ಜೂರ‌ ಗಿಡವೇ...ನಮ್ಮ ಮಲೆನಾಡಿನಲ್ಲೇ ನೆರಳು ಕಡಿಮೆ ಇದ್ದರೆ ಗಿಡಗಳು ಸುಟ್ಟೇ ಹೋಗುತ್ತವೆ.. ಅಂತಹುದರಲ್ಲಿ 50- 60 ಸೆಂಟಿಗ್ರೇಡ್ ಉಷ್ಣಾಂಶ ಇರೋ ಮೆಕ್ಕಾದಲ್ಲಿ ಕಾಫಿ ಬೆಳೆಯಲು ಸಾಧ್ಯವೇ... ಕಾಫೀ ಬೆಳೆಯನ್ನೂ ಸೆಕ್ಯೂಲರ್ ಮಾಡ ಹೊರಟ ಮೂರ್ಖರ ಹಾಸ್ಯಾಸ್ಪದ ಕಟ್ಟು ಕತೆ ಇದು. ಬೆಳೆಯುವ ಕಾಫಿಯ ತಳಿಗಳೆಂದರೆ ಅರೇಬಿಕ್ ರೋಬಸ್ಟ ಅರೇಬಿಕ್ ತಳಿಯನ್ನು ಇಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಆದರೆ ಅರೇಬಿಕ್ ಕಾಫಿಯ ಮೂಲ ತಳಿಗಳ ಹೆಸರು ಚಿಕ್ಕಮಗಳೂರು ತಳಿ ಕಾಫಿ ಎಂದೆ ಕರೆಯಲಾಗುತ್ತಿತ್ತು ಇದು ಹೇಗೆ ಬದಲಾವಣೆಯಾಗಿತ್ತು ಎಂದರೆ ಅರೇಬಿಯನ್ ಲೂಟಿಕೋರರು ಚಿಕ್ಕಮಗಳೂರಿನ ಕಾಫಿಯನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆಗ ಅರೇಬಿಕ್ ದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಯಿತು. ಆಗ ಮೆಕ್ಕಾ ದೇಶದ ಆಮದು ಕೋರರು ಭಾರತಕ್ಕೆ ವಲಸೆ ಬಂದರು. ಆಗ ಚಿಕ್ಕಮಗಳೂರಿಗೆ ಬಂದು. ಅರೇಬಿಕ್ ದೇಶಗಳಿಗೆ ಕೊಡುತ್ತಿದ್ದ ಕಾಫಿ ಬೀಜಗಳನ್ನು ನಮಗೆ ಕೊಡಿ ಎಂದು ಬೇಡಿಕೆಯಿಟ್ಟರು. ಆಗ ಮತ್ತೊಮ್ಮೆ ಬಂದಾಗ ಅರೇಬಿಕ್ ಕಾಫಿ ಕೊಡಿ ಎಂದು ಹೆಸರನ್ನು ಖ್ಯಾತಿಗಳಿಸಿದರು. ಹಾಗಾಗಿ ಚಿಕ್ಕಮಗಳೂರು ಕಾಫಿ ಹೋಗಿ ಅರೇಬಿಕ್ ಹೆಸರು ಬಂದಿದೆ. ಇದರ ಮೂಲ ಹೆಸರು ಚಿಕ್ಕಮಗಳೂರು ಕಾಫಿ ಎಂದೇ ಹೆಸರುವಾಸಿ. ಇತಿಹಾಸ thumb|216x216px|right|ಶ್ರೀ ಆದಿಶಕ್ತಿ ವಸಂತ ಪರಮೇಶ್ವರಿ ದೇವಸ್ಥಾನ, ಅಂಗಡಿ ಹೊಯ್ಸಳರ ಸಾಮ್ರಾಜ್ಯ ಉಗಮವಾದ ಮತ್ತು ಹೊಯ್ಸಳರು ಸಾಮ್ರಾಜ್ಯದ ತಮ್ಮ ಆರಂಭದಲ್ಲಿ ದಿನಗಳನ್ನು ಕಳೆದ ಸೊಸೆಯೂರು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಸೊಸೆಯೂರು ಕಾಲನಂತರ ಹೊಯ್ಸಳರ ಪ್ರಥಮ ರಾಜಧಾನಿ ಶಶಕಪುರವಾಗಿ ನಿರ್ಮಾಣವಾಯಿತು. ಸೊಸೆಯೂರು ಈಗ ಅಂಗಾಡಿ ಗ್ರಾಮವೆಂದು ಗುರುತಿಸಲ್ಪಡುತ್ತದೆ.ಇದು ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹಿಂದೊಮ್ಮೆ ದಟ್ಟವಾದ ಗೊಂಡಾರಣ್ಯದಲ್ಲಿ ಜೈನ ಮುನಿಗಳ ಜ್ಞಾನ ತಪಸ್ಸಿಗೆ ಯೋಗ್ಯವಾದ ಸ್ಥಳ ಇದಾಗಿತ್ತೆಂದು, ಚಾಳುಕ್ಯ ನಾಡಿನಿಂದ ಮಲ್ಲಚಂದ್ರದೇವ ಇಲ್ಲಿಗೆ ಬಂದನೆಂಬ ವಿಷಯ ೧೦ನೇ ಶತಮಾನದ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಒಂದು ದಂತಕಥೆಯ ಪ್ರಕಾರ, ಒಂದೊಮ್ಮೆ ಈಗಿನ ಅಂಗಡಿ ಗ್ರಾಮದ ವಾಸಂತಿಕಾದೇವಿಯ ಗುಡಿ ಮುಂದೆ ಸುದತ್ತಾಚಾರ್ಯರು ತಮ್ಮ ಶಿಷ್ಯರಿಗೆ ಪಾಠ-ಪ್ರವಚನ ಕಲಿಸುತ್ತಿದ್ದ ಸಂದರ್ಭದಲ್ಲಿ, ಹುಲಿಯೊಂದು ದಿಢೀರನೆ ಗುಡಿಯ ಬಳಿ ಇದ್ದ ಶಿಷ್ಯಾರ್ಥಿಗಳ ಮೇಲೆ ಎರಗಲು ಬಂದಾಗ ಸುದತ್ತಾಚಾರ್ಯರು ಕೂಡಲೇ ಅದನ್ನು ಹೊಡೆಯಲು, ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ಞಾಪಿಸಿದರು. ಇದೇ ಹೊಯ್ಸಳ ಶಬ್ದದ ಮೂಲ ಎನ್ನುತ್ತಾರೆ. ಕೂಡಲೇ ಸ್ಥಳದಲ್ಲಿದ್ದ ಸಳನು ತನ್ನ ಗುರುಗಳ ಆಜ್ಞೆಯಂತೆ ಹುಲಿಯೊಂದಿಗೆ ವೀರಾವೇಶದಿಂದ ಹೋರಾಡಿ ಹುಲಿಯನ್ನು ಕೊಂದನಂತೆ. ೧೧೧೭ರ ವಿಷ್ಣುವರ್ಧನನ ಶಾಸನದಲ್ಲಿ ಈ ಕಥೆ ಮೊದಲು ಕಾಣಬರುತ್ತದೆಹೊಯ್ಸಳ ವಂಶದ ಸ್ಥಾಪಕ ಹುಲಿಯನ್ನು ಕೊಂದ ಎಂದು ನಂಬಲಾಗಿರುವ ಚಿಕ್ಕಮಗಳೂರಿನ ಅಂಗಡಿ ಗ್ರಾಮವನ್ನು, ಪ್ರಮುಖ ಪ್ರವಾಸೀ ತಾಣವಾಗಿದೆ ಮಾಡಲಾಗುವುದು ಎಂದು ಹಿಂದು ಪತ್ರಿಕೆಯಲ್ಲಿ ಬಂದ ವರದಿ, "ಅಂಗಡಿಯನ್ನು ಪ್ರಮುಖ ಪ್ರವಾಸೀ ತಾಣವಾಗಿ ಮಾಡಲಾಗುವುದು". (೧೯ ಅಕ್ಟೋಬರ್ ೨೦೦೬)(ಚೆನೈ, ಭಾರತ: ಹಿಂದೂ ಪ್ರಕಾಶಕರಿಂದ).. ಆದರೆ ಇದರ ತಥ್ಯ ಅನುಮಾನಾಸ್ಪದವಾಗಿದ್ದು ಇನ್ನೂ ದಂತಕಥೆಯ ರೂಪದಲ್ಲಿಯೇ ಉಳಿದಿದೆ.ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಮೇಲೆ ಬಹುಶಃ ಈ ಕಥೆ ಹುಟ್ಟಿರಬಹುದು ಅಥವಾ ಹೆಚ್ಚು ಪ್ರಚಲಿತವಾಗಿರಬಹುದು. ಹೊಯ್ಸಳರ ಲಾಂಛನವು ಸಳನು ಹುಲಿಯನ್ನು ಕೊಲ್ಲುತ್ತಿರುವ ಚಿತ್ರವಾಗಿದ್ದು, ಚೋಳರ ಲಾಂಛನವು ಹುಲಿಯಾಗಿತ್ತು ಎಂಬ ಅಂಶಗಳು ಈ ಊಹೆಗೆ ಕಾರಣ .ಕ್ರಿ.ಶ ೧೦೬೨ ರಲ್ಲಿ ವಿನಯಾದಿತ್ಯ ತನ್ನ ರಾಜಧಾನಿಯನ್ನು ಸೊಸೆಯೂರಿನಿಂದ (ಶಶಕಪುರ-ಅಂಗಡಿ) ಬೇಲೂರಿಗೆ ವರ್ಗಾಯಿಸಿದನಂತೆ. ಅಂಗಡಿ ಗ್ರಾಮದ ಹೊಯ್ಸಳರ ಕಾಲದ ವಾಸಂತಿಕ ದೇವಾಲಯ ಹಾಗೂ ಮಕರ ಜಿನಾಲಯ, ನೇಮೀನಾಥ ಬಸದಿ, ಶಾಂತಿನಾಥ ಬಸದಿ, ವೈಷ್ಣವ ಪಂಥದ ಕೇಶವ ದೇವಾಲಯ, ಶೈವ ಪಂಥದ ಪಾತಾಳ ರುದ್ರೇಶ್ವರ ದೇವಾಲಯ ಹಾಗೂ ಮಲ್ಲೇಶ್ವರ, ಮಲ್ಲಿಕಾರ್ಜುನ ದೇವಾಲಯಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತವೆ. ತರೀಕೆರೆ ತಾಲ್ಲೂಕಿನ ಅಮೃತಪುರದಲ್ಲಿ ಹೊಯ್ಸಳ ಸಾಮ್ರಾಜ್ಯದ ದೊರೆ ಎರಡನೇ ವೀರ ಬಲ್ಲಾಳ (೧೧೭೩-೧೨೨೦ ಸಿ.ಇ.) ನಿರ್ಮಿಸಿದ ಅಮೃತೇಶ್ವರ ದೇವಸ್ಥಾನವಿದೆ. ಕ್ರಿ.ಶ. ೧೬೭೦ ರಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಕಾಫಿಯನ್ನು ಬಾಬಾ ಬುಡನ್‌ಗಿರಿಯಲ್ಲಿ ಬೆಳೆಯಲಾಯಿತು. ಬಾಬಾ ಬುಡನ್ ಅವರು ಮೆಕ್ಕಾ ತೀರ್ಥಯಾತ್ರೆ ಮಾಡುತ್ತಿರುವಾಗ ಯೆಮೆನ್ನ ಮೋಕಾ ಬಂದರಿನಲ್ಲಿ ಕಾಫಿ ಬಗ್ಗೆ ಅವರಿಗೆ ತಿಳಿಯಿತು. ಅವರು ಏಳು ಕಾಫಿಯ ಬೀಜವನ್ನು ಹೊಕ್ಕಳಿನ ಸುತ್ತ ಆಡಗಿಸಿಟ್ಟುಕೊಂಡು ಅರೇಬಿಯಾದಿಂದ ಹೊರಗೆ ತಂದರು. ಅವರು ಮನೆಗೆ ಮರಳುತ್ತಿರುವಾಗ ಬಾಬಾ ಬುಡನಗಿರಿ/ದತ್ತ ಪೀಠ ಬೆಟ್ಟದಲ್ಲಿ ಕೆಲವು ಬೀಜಗಳನ್ನು ನೆಟ್ಟರು ಎಂದು ಹೇಳುತ್ತಾರೆ. ಈ ಜಿಲ್ಲೆಯಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆಯು ಇದ್ದು. ಇದನ್ನು ಹಿಂದೆ ೧೯೨೫ ರಲ್ಲಿ ಲೇ. ಡಾ. ಲೆಸ್ಲಿ. ಸಿ. ಕೊಲ್‌ಮನ್ ನೇತೃತ್ವದಲ್ಲಿ ಆರಂಭವಾದ ಕಾಫಿ ಎಕ್ಸ್‌ಪೆರಿಮೆಂಟಲ್ ಸ್ಟೇಷನ್ ಎಂದು ಕರೆಯಲಾಗಿತ್ತು. ಈ ಸಂಸ್ಥೆ ೧೧೯.೮೬ ಎಕರೆಗಳಷ್ಟು ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಸಂಸ್ಥೆಯು ಕಾಫಿ ಗುಣಮಟ್ಟ ಸುಧಾರಿಸಲು ಸಂಶೋಧನೆಯನ್ನು ನಡೆಸುತ್ತದೆ. ಶಾಸನಗಳಲ್ಲಿ  ಚಿಕ್ಕಮಗಳೂರು.           ಚಿಕ್ಕಮಗಳೂರು ಇದ್ದ ಮೇಲೆ ದೊಡ್ಡ ಮಗಳೂರೂ ಇರಬೇಕಲ್ಲ ಎಂಬ ಸಹಜ ಪ್ರಶ್ನೆಗೆ ಪಕ್ಕದಲ್ಲೇ ಇರುವ ‘ಹಿರೇಮಗಳೂರು’ ‘ನಾನಿದ್ದೇನೆ’ ಎನ್ನುತ್ತದೆ. ಇವರಿಬ್ಬರು ಯಾರ ಮಕ್ಕಳು? ಎಂಬ ಪ್ರಶ್ನೆ ಉದಿಸಿದರೆ ಸಖರಾಯಪಟ್ಟಣದ ರುಕ್ಮಾಂಗದ ದೊರೆಯ ಮಕ್ಕಳೆಂದು ಹೇಳುವ ಪುರಾಣ ಕಥೆ ಇದೆ.           ಆದರೆ, ನಮ್ಮ ಶಾಸನಗಳು ಕಟ್ಟಿಕೊಡುವ ಚಿಕ್ಕಮಗಳೂರಿನ ಇತಿಹಾಸ ಬೇರೆಯದೇ ಆಗಿದೆ, ತುಂಬಾ ಕುತೂಹಲಕರವೂ ಆಗಿದೆ. ಚಿಕ್ಕಮಗಳೂರಿನ ಶಾಸನಗಳನ್ನು ಸನ್ಮಾನ್ಯ ಶ್ರೀ ಬಿ.ಎಲ್.ರೈಸ್ ಅವರು ಕ್ರಿ.ಶ. 1900ರ ಸುಮಾರಿನಲ್ಲಿ  ಸಂಗ್ರಹಿಸಿ, ಸಂಕಲಿಸಿ, ಸಂಪಾದಿಸಿ, ಪ್ರಕಟಿಸಿದ್ದಾರೆ. ಈ ಜಾಡನ್ನು ಹಿಡಿದು ನೋಡಿದರೆ, ಆಗಿನ ಚಿಕ್ಕಮಗಳೂರು ಪಟ್ಟಣದ ವ್ಯಾಪ್ತಿಗೆ ಸೇರಿದ್ದ ಪ್ರದೇಶಗಳೆಂದರೆ ಕೋಟೆ, ಬಸವನಹಳ್ಳಿ ಎರಡು ಮಾತ್ರವೇ. ಈಗ ಚಿಕ್ಕಮಗಳೂರಿನ ಹೃದಯಭಾಗವೇ ಆಗಿಹೋಗಿರುವ ಉಪ್ಪಳ್ಳಿ, ದಂಟರಮಕ್ಕಿ, ಹಿರೇಮಗಳೂರು ಮುಂತಾದವೂ ಆಗ ಪ್ರತ್ಯೇಕ ಗ್ರಾಮ ವ್ಯಾಪ್ತಿಯನ್ನೇ ಪಡೆದಿದ್ದುವು! ಅದಕ್ಕೂ ಹಿಂದೆ ಚಿಕ್ಕಮಗಳೂರು ಎಂದರೆ ಈಗಿನ ಕೋಟೆ ಪ್ರದೇಶ ಮಾತ್ರವೇ!        ಈಗ ಚಿಕ್ಕಮಗಳೂರಿನ ಅವಿಭಾಜ್ಯ ಭಾಗವಾಗಿರುವ ಹಿರೇಮಗಳೂರಿನ ಯೂಪ ಸ್ತಂಭದ ಶಾಸನ ಕ್ರಿ.ಶ. 2-3 ನೇ ಶತಮಾನದ್ದು.  ಆ ಕಾಲದಲ್ಲಿ ಶಾತವಾಹನರ ಆಳ್ವಿಕೆಗೆ ಈ ಪ್ರದೇಶ ಸೇರಿದ್ದುದನ್ನು ದಾಖಲಿಸುತ್ತದೆ. ಇಲ್ಲಿನ ‘ಅಶ್ವಯೂಪ’ ಪದದ ಸುಳಿವಿನಿಂದ ಈ ಶಾಸನ ಅಶ್ವಮೇಧಯಾಗಕ್ಕೆ ಸಂಬಂಧಿಸಿದ್ದೆಂಬುದನ್ನೂ ಊಹಿಸಬಹುದು.       ನಂತರ ಗಂಗ, ನೊಳಂಬ, ಆಳುಪ, ಸಾಂತರ, ತರ್ಯಲ್ಲ, ಸೇನವಾರ, ಚೋಳ, ಚಾಳುಕ್ಯ, ಹೊಯ್ಸಳ, ಸೇಉಣ, ವಿಜಯನಗರ, ಬೇಲೂರು ನಾಯಕರು, ಮೈಸೂರು ಒಡೆಯರು ಮುಂತಾದ ರಾಜ ಮನೆತನಗಳ ಆಳ್ವಿಕೆಗೆ ಈ ಪ್ರದೇಶ ಸೇರಿ ಹೋಗಿರುವುದನ್ನು ಇಲ್ಲಿನ ಶಾಸನಗಳು ದೃಢಪಡಿಸುತ್ತವೆ.      ಹಿರೇಮಗಳೂರಿನ ಪರಶುರಾಮ ದೇವಾಲಯದ ಮಾಳಿಗೆಯ  ಕಲ್ಲಿನ ಮೇಲೆ ಕೆತ್ತಿರುವ ಶಾಸನ 8-9 ನೇ ಶತಮಾನಕೆ ಸೇರಿದ್ದು ಗಂಗರ ಕಾಲದ ಆಳ್ವಿಕೆಯಲ್ಲಿ 'ಹಿರಿ ಮುಗುಳಿಯಗ್ರಹಾರ’ ಎಂಬ ಸ್ಪಷ್ಟತೆಯನ್ನು ಊರಿನ ಹೆಸರಿನ ಬಗೆಗೆ ನೀಡುತ್ತದೆ.      ಚಿಕ್ಕಮಗಳೂರು ಕೋಟೆ ಕಲ್ಯಾಣಿಯ ಉತ್ತರಕ್ಕೆ ನೆಟ್ಟಿದ್ದ ಶಾಸನ (ಚಿ.ಮ 3) (ಈಗ ಕಲ್ಯಾಣಿ ಕಣ್ಮರೆ ಆಗಿರುವುದರಿಂದ ಈ ಶಾಸನವನ್ನು ಹುಡುಕಾಡಬೇಕಿದೆ) ನೀತಿಮಾರ್ಗ ಕೊಂಗಣಿವರ್ಮ ಧರ್ಮ ಮಹಾರಾಜಾಧಿರಾಜನ ಕಾಲದಲ್ಲಿ ಕಿರಿಯ ಮುಗಳಿಯ ಪೆಮ್ಮಡಿಗೊಂಡನಿಗೆ ದತ್ತಿ ನೀಡಿದುದನ್ನು ಉಲ್ಲೇಖಿಸುವ ಜೊತೆಗೆ, ಪಿರಿಯ ಮುಗುಳಿಯ ಕೊಮರಯ್ಯ, ಪಲ್ಮಾಡಿಯ ಮೆಂದಮ್ಮ, ಬೆಣ್ಣೆಯೂರಿನ ದೇವಗಣ, ಮಳ್ಳವೂರಿನ ಮೆರ್ಪಾಡಿಗೌಡ, ಉರ್ಪವಳ್ಳಿಯ ಚಾಮಯ್ಯ, ಇನ್ದವೂರಿನ ವಿಟಿಯ್ಯ ಮುಂತಾದವರು ಈ ದತ್ತು ಭೂಮಿಯ ಆಸುಪಾಸಿನಲ್ಲಿದ್ದದನ್ನು ತಿಳಿಸುತ್ತದೆ. ಅನೇಕ ಅಂಶಗಳನ್ನು ತನ್ನೊಳಗೆ ಕಾಪಿಟ್ಟುಕೊಂಡಿರುವ ಈ ಶಾಸನವನ್ನು ಅಧ್ಯಯನ ಮಾಡಿ ಮಾಡಿದಂತೇ ಆ ಕಾಲದ ಸಂಸ್ಕೃತಿ ಪರಂಪರೆಗಳಿಗೆ ತೋರು ಬೆರಳಾಗುತ್ತದೆ.       ಕ್ರಿ.ಶ. 1140ರ (ಚಿ.ಮ- 4) ಶಾಸನವು ಚಿಕ್ಕಮಗಳೂರು, ಕೋಟೆ ಕಂದಕದ ಗೋಡೆಯ ಪಕ್ಕದಲ್ಲಿದ್ದ ವೀರಗಲ್ಲು, ಈ ವೇಳೆಗಾಗಲೇ ಕಿರಿಯ ಮುಗುಳಿಯನ್ನು ‘ಚಿಕ್ಕಮುಗುಳಿ’ ಎಂದು ಕರೆಯುತ್ತಿದ್ದುದನ್ನು ಈ ಶಾಸನ ದಾಖಲಿಸಿದೆ. ಈ ಅವಧಿಯಲ್ಲಿ ಇಲ್ಲಿನ ಮಹಾ ಪ್ರಭು ಚಿಕ್ಕಬಸವಯ್ಯನವರೆಂದೂ ಹೇಳುವ ಈ ಶಾಸನದಲ್ಲಿ ಇವರ ಮಗ ಹೆಮ್ಮಾಡಿಗೌಡ ಮತ್ತು ಮೊಮ್ಮಗ ಮಸಣಿತಂಮ್ಮರ  ಉಲ್ಲೇಖಗಳೂ ದೊರೆಯುತ್ತವೆ.     ಇದೇ ಸ್ಥಳದಲ್ಲಿದ್ದ ಮತ್ತೊಂದು ವೀರಗಲ್ಲು ಕ್ರಿ. ಶ.  1205ರ ಅವಧಿಯಲ್ಲಿ ಕಿರಿಯ ಮುಗುಳಿಯ ಕಟ್ಟಿನ ಕಾಳಗವನ್ನು ಉಲ್ಲೇಖಿಸುತ್ತಾ ಚಿಕ್ಕಮುಗುಳಿ, ಕಿರಿಯ ಮುಗುಳಿ ಹೆಸರುಗಳು ಪರ್ಯಾಯವಾಗಿ ಬಳಕೆಯಲ್ಲಿದ್ದುದನ್ನು ತಿಳಿಸುತ್ತದೆ.    ಅಗ್ರಹಾರ ಬೀದಿಯ ದಿಣ್ಣೆಯ ಮೇಲಿರುವ ಎರಡು ನಿಸದಿಗಲ್ಲುಗಳು ಕ್ರಿ.ಶ. 1101ರ ಅವಧಿಯವು, ಇಲ್ಲಿದ್ದ ಜೈನ ಪ್ರಭಾವವನ್ನು ಸಾರಿ ಹೇಳುತ್ತಿವೆ.      ಚಿಕ್ಕಮಗಳೂರಿನ ಕೋಟೆ ವೀರಭದ್ರ ದೇಗುಲದ ಬಳಿ ಇರುವ ದಾನಶಾಸನವು ಕ್ರಿ.ಶ. 1257ರ ಕಾಲದ್ದು (ಚಿ.ಮ-1).  ಆ ಸಮಯದಲ್ಲಿ  ದ್ವಾರ ಸಮುದ್ರದ ಹೊಯ್ಸಳ ಚಕ್ರವರ್ತಿ ಮೂರನೇ ವೀರನಾರಸಿಂಗ ದೇವನ ಆಳ್ವಿಕೆಯಲ್ಲಿ ದೇವಳಿಗೆ ನಾಡೆಂದು ಹೆಸರಾಗಿದ್ದ ಚಿಕ್ಕಮುಗುಳಿಗೆ ನಾಡಪ್ರಭು ಆಗಿದ್ದವರು ಸೋಮಗೌಡರು. ಇವರ ಮಗ ಮಸಣಗೌಡರು. ಇವರ ಮಗ ಸೋಮಣ್ಣ ಅಥವಾ ಸೋಮಗೌಡ. ಈ ಸೋಮಣ್ಣನ ತಮ್ಮ ಕಲಿಯುಗ ವೀರಭದ್ರ, ಮಹೇಶ್ವರ ಗಣಾವತಾರ, ಶಿವ ಸಮಯವಾರ್ಧಿ ವರ್ಧನ ಸುಧಾಕರ ಎನಿಸಿದ ನಾಳಪ್ರಭು ಬಾಚಯನಾಯಕರು.    ಈ ಬಾಚಯನಾಯಕರ ಶೌರ್ಯ ಸಾಹಸ ವಿನೀತ ಗುಣಗಳನ್ನು ವರ್ಣಿಸುವ ಕಂದ ಪದ್ಯಗಳ ಸೊಗಸು ಇದು! ದೇವಗುರು ಚರಣ ಸರಸಿಜ ಕೇವಲಮೇಂ ಸೈವ ಸಮೇಯ ನಿಸ್ತಾರಚ ತಾಂ| ಭೂ ವಲಯಯದೊಳಗೆ ಬುಧನಿಧಿ ಭಾವಿಸೆ ವೀರನೊಳಗೇಕವೀರಂ ಬಾಚಂ||        ಆಶ್ರಿತ ಜನರಿಗೆ ಕಲ್ಪವೃಕ್ಷದಂತೆ, ಗೋತ್ರಕ್ಕೆಲ್ಲಾ ಶಾಶ್ವತ ಚಿಂತಾಮಣಿಯಂತೆ, ನಿಜವಾಗಲು ಹಸಣಿ ಹನುಮನ ಧ್ವಜದಂತೆ, ವೀರರೊಳಗೇ ಏಕವೀರನೆಂದು ಬಾಚರಸನು ಪ್ರಸಿದ್ಧನಾಗಿದ್ದನಂತೆ. ಶೈವ  ಸಮೇಯ ನಿಸ್ತಾರಕನಾಗಿಯೂ ಹೆಸರುವಾಸಿಯಾಗದ್ದನು. ಇವನು ಚಿಕ್ಕಮಗಳೂರು ಕೋಟೆ ಅಗ್ರಹಾರದ ಈ ಸೋಮನಾಥ ದೇವರನ್ನು ಮತ್ತು ಶ್ರೀ ವೀರಭದ್ರ ದೇವರನ್ನು ಪ್ರತಿಷ್ಠೆ ಮಾಡಿ ಪೂಜೆಯುಪಾರಕ್ಕೆ ದತ್ತಿಯನ್ನೂ ಬಿಟ್ಟಿದ್ದಾನೆ.       ಕ್ರಿ.ಶ. 1280ರ ಮತ್ತೊಂದು ಶಾಸನವು ಲಾಲ್ ಬಾಗಿನಲ್ಲಿ ನೆಟ್ಟಿರುವ ಕಲ್ಲು ಎಂದು ಉಲ್ಲೇಖವಾಗಿದೆ.(ಚಿ.ಮ-2) ಚಿಕ್ಕಮಗಳೂರಿನ ಈ ಲಾಲ್ ಬಾಗ್ ಯಾವುದಿರಬಹುದೆಂಬ ಕುತೂಹಲಕ್ಕೆ ಉತ್ತರವಿನ್ನೂ ಅಸ್ಪಷ್ಟ. ಈ ಶಾಸನದ ಪ್ರಕಾರ ಚಿಕ್ಕಮುಗುಳಿಯ ಮಸಣಗೌಡನ ಹಿರಿಯ ಮಗನಾದ ಸೋಮಗೌಡನು ಅತ್ಯಂತ ಪ್ರಸಿದ್ದ ದೊರೆ. ಈ ಸೋಮಗೌಡನು ಈ ಹಿಂದಿನ  ಶಾಸನ(ಚಿ.ಮ-1) ದಲ್ಲಿ 1257ರಲ್ಲಿ ಕಾಣಿಸಿಕೊಂಡಿರುವವನೇ.  ಮಸಣಗೌಡನ ಮಗನೂ ಬಾಚರಸನ ಹಿರಿಯ ಸಹೋದರನೂ ಆದ ಚಿಕ್ಕಮಗಳೂರು ಆಳಿದ ದೊರೆ.  ಆ ಶಾಸನವು ಬಾಚರಸನನ್ನು ‘ಶೈವ ಸಮೇಯ ನಿಸ್ತಾರಕ’ನೆಂದು ಹೊಗಳಿದರೆ, ಆತನ ಹಿರಿಯಣ್ಣನಾದ, ಶ್ರೀ ಮೂಲಸಂಘದ ದೇಶಿಗಣ ಪುಸ್ತಕ ಗಚ್ಛ ಹನಸೋಗಿಯ ಕೊಂಡಕುಂದಾನ್ವಯದ ಶ್ರೇಯಾಂಸ ಭಟ್ಟಾರಕರ ಗುಡ್ಡ’ ಎನಿಸಿ ಜೈನಧರ್ಮ ಪರಿಪಾಲಕನಾಗಿ ಜನಮಾನಸದಲ್ಲಿ ಸ್ಥಾನ ಪಡೆದಿದ್ದುದನ್ನು ಈ ಶಾಸನ ವರ್ಣಿಸುತ್ತದೆ. ‘ಶ್ರೀ ಮಂನಾಳು ಪ್ರಭು ಸುಚರಿತನೆನೆ ವಿನಯನಿಧಿಯು ನಿರ್ಮಳಚಿತ್ತಂ ಪ್ರೇಮಂ ಬುಧಜನನಿಕರಕ್ಕಾಲ ವಾಸು ನೇಮಂ ಸಕಳ ಜನಕ್ಕಾಧಾರಂ ಧಾರ್ಮಿಷ್ಟವೀರಂ ಧುರಂಧುರಂ ಪುರುಷಾಕಾರಂ ಕಾಮರೂಪಂ ಮಸಣಗಾಉಂಡನಗ್ರತನೂಜಂ ಸೋಮನಾಮಂ ಧರೆಯೋಳ್’ 'ಜಿನ ಸಮಯ ವಾರ್ಧಿ ವರ್ಧನ, ಅನವರತಂ ಚಾತುವರ್ಣಕ್ಕಿತ್ತುಂ ತಣಿಯನು ಘನಮಹಿಮ ಶ್ರೇಯಾಂಸ ಮುನಿಯ ಗುಡ್ಡನು ವಿನಯನಿಧಿ ಛಲದಂಕರಾಮನೆನಿಪಂ ಸೋಮನುಂ||    ಶ್ರೀ ಮನ್ ನಾಡಪ್ರಭು ಸುಚರಿತ, ವಿನಯನಿಧಿ, ನಿರ್ಮಳ ಚಿತ್ತ, ಪ್ರೇಮಮಯಿ, ವಿದ್ಯಾವಂತ ಕಲಾಪೂರ್ಣ ಜನರಿಗೆ ಆಶ್ರಯದಾತ, ಸಕಲ ಜನರಿಗೂ ಆಧಾರ, ಧರ್ಮವೀರ, ಮಹಾನ್ ಸಾಹಸವಂತ, ಪುರುಷಾಕಾರನಾದ ಮನ್ಮಥರೂಪಿ ಸೋಮಗೌಡನು ಜಿನಸಮಯವೆಂಬ ಸಾಗರದಲ್ಲೇ ಸದಾ ಈಜಾಡಿದರೂ ಚತುರ್ವರ್ಣದ ಎಲ್ಲವಕ್ಕೂ, ಎಲ್ಲರಿಗೂ ಸಮಾನವಾಗಿ ದಾನ ನೀಡಿ ತಣಿಸುತ್ತಿದ್ದನು. ಆದರೆ ಅವನಿಗೆ ಎಂದೂ ತಾನು ಕೊಟ್ಟಿರುವುದು ಸಾಕು ಎನಿಸುತ್ತಿರಲಿಲ್ಲ. ಅಂತಹ  ವಿನಯನಿಧಿಯೂ, ಛಲದಂಕರಾಮನೂ ಆಗಿದ್ದ ಮಹಾಮಹಿಮನು ಅಂದಿನ ಚಿಕ್ಕಮುಗುಳಿಯ ನಾಡಪ್ರಭು ಸೋಮಗೌಡನು.    ಈ ಮಹಾಮಹಿಮ ದೊರೆಯು 1280ರ ಜುಲೈ 1 ಅಥವಾ 31 ರಂದು ಪ್ರಾಣ ತ್ಯಜಿಸಿ ಸಮಾಧಿ ಪಡೆದು ಸುರಲೋಕ ಪ್ರಾಪ್ತನಾದಾಗ ಆತನ ಮಗ ಹೆಗ್ಗಡೆಗೌಡನು ಇಲ್ಕಿ ನಿಸದಿಯಕಲ್ಲನ್ನು ಪ್ರತಿಷ್ಠೆ ಮಾಡಿಸಿ ಅಷ್ಟವಿಧಾರ್ಚನೆಗೆ, ಪ್ರಸಾದಕ್ಕೆಂದು ಭೂಮಿಯನ್ನೂ ದತ್ತಿ ನೀಡಿದ್ದಾನೆ. ಈ ನಿಸದಿಕಲ್ಲಿನ ಶಾಸನ ನೀಡುವ ವಿವರಣೆಯಲ್ಲಿ ಆ ಸಮಯದಲ್ಲಿ ಚಿಕ್ಕಮಗಳೂರಿನಲ್ಲಿ ಒಂದು ಬಸದಿ ಇದ್ದಿರಬಹುದೆಂಬ ಊಹೆಗೂ ಅವಕಾಶವಿದೆ. ಜೊತೆಗೆ ಈ ಎರಡೂ ಶಾಸನಗಳು ಸೇರಿ ಒಂದೇ ರಾಜ ಮನೆತನದ ಅಣ್ಣ ತಮ್ಮರು ಜೈನ, ಶೈವ, ಧರ್ಮಗಳ ಆರಾಧಕರಾಗಿದ್ದ ಸಮನ್ವಯತೆಯ ಚಿತ್ರವನ್ನು ಸ್ಪಷ್ಟವಾಗಿ ಕಟ್ಟಿಕೊಡುತ್ತಾ ನಮ್ಮ ಚಿಕ್ಕಮಗಳೂರಿನ ಹಿರಿಯ ಪರಂಪರೆಯ ಸಂಸ್ಕೃತಿಯನ್ನು ದಾಖಲಿಸಿವೆ.     ದಾಖಲೆಗೆ ಸಿಕ್ಕಿರುವ ನಾಲ್ಕಾರು ಶಾಸನಗಳೇ ಸಾವಿರಾರು ವರ್ಷಗಳ ಹಿಂದಿನ ಚಿತ್ರವನ್ನು ಸ್ಪಷ್ಟಗೊಳಿಸುವ ಸಾಮರ್ಥ್ಯ ಪಡೆದಿದ್ದಾವೆ. ಇನ್ನು ಅಂದು ಆಳ್ವಿಕೆ ನಡೆಸಿದ ಒಬ್ಬೊಬ್ಬ ರಾಜನ ಒಂದೊಂದು ಶಾಸನವಾದರೂ ಸಿಕ್ಕುವಂತಿದ್ದರೆ ಮತ್ತದೆಷ್ಟು ಸಮಗ್ರ ಚಿತ್ರಣವನ್ನು ಕಟ್ಟಬಹುದಿತ್ತು ಎಂದು ಮನ ಕಲ್ಪನೆಯ ಲಹರಿಗಳ ತೆಕ್ಕೆಗೆ ಸಿಲುಕಿಕೊಳ್ಳುತ್ತದೆ.     ಹೀಗೇ  ಚಿಕ್ಕಮಗಳೂರು ಕೋಟೆ ಪ್ರದೇಶದಲ್ಲಿ ದಾಖಲಾಗಿರುವ ಎಂಟು ಶಾಸನಗಳು ಕ್ರಿ.ಶ. 899ರಿಂದ ಕ್ರಿ.ಶ.1280 ರವರೆಗೆ ಕೋಟೆಯಲ್ಲಿ ಆಳಿದ ರಾಜರು, ಅನುಸರಿಸುತ್ತಿದ್ದ ಧರ್ಮ, ಕಟ್ಟಿದ  ದೇವಾಲಯಗಳು, ವೀರಪರಂಪರೆಯ ಛಾತಿ ಈ ಮುಂತಾದ ಸುಳಿವುಗಳನ್ನು ನೀಡುತ್ತಾ ಮತ್ತಷ್ಟು ಶಾಸನಗಳನ್ನು ಹುಡುಕಾಡಬೇಕೆಂಬ ಸಂಕಲ್ಪಕ್ಕೆ ಮನವನ್ನು ಗಟ್ಟಿ ಮಾಡುತ್ತವೆ.  ಇದಕ್ಕಾಗಿ ಪ್ರಾಜ್ಞರ ಸಹಕಾರಕ್ಕೆ ಮನತುಡಿಯುತ್ತದೆ.    ಚಿಕ್ಕಮಗಳೂರು ಭಾಗವಾಗಿರುವ ಬಸವನಹಳ್ಳಿ, ಉಪ್ಪಳಿ, ಹಿರೇಮಗಳೂರು, ದಂಟರಮಕ್ಕಿ ಪ್ರದೇಶಗಳ ಶಾಸನಮೌಲ್ಯಗಳ ಅವಲೋಕನ ಮತ್ತಷ್ಟು ಸತ್ವವನ್ನು ತುಂಬಿಕೊಡುವುದನ್ನು ಪರಿಭಾವಿಸಬಹುದು. ಭೌಗೋಳಿಕ ಚಿಕ್ಕಮಗಳೂರು ಕರ್ನಾಟಕದ ಮಧ್ಯಭಾಗದಲ್ಲಿ ಇದೆ, ಇದು ರಾಜ್ಯದ ರಾಜಧಾನಿಯಿಂದ ೨೫೧ ಕಿ.ಮೀ. ದೂರದಲ್ಲಿದೆ. ಚಿಕ್ಕಮಗಳೂರು ೧೨° ೫೪' ೪೨“-೧೩° ೫೩' ೫೩“ ಉತ್ತರ ಅಕ್ಷಾಂಶ ಹಾಗೂ ೭೫° ೦೪' ೪೫“'-೭೬° ೨೧' ೫೦'” ಪೂರ್ವ ರೇಖಾಂಶದಲ್ಲಿದೆ. ಚಿಕ್ಕಮಗಳೂರು ಜಿಲ್ಲೆಯು ಪೂರ್ವದಿಂದ ಪಶ್ಚಿಮಕ್ಕೆ ೧೩೮.೪ ಕಿ.ಮೀ. ಮತ್ತು ಉತ್ತರದಿಂದ ದಕ್ಷಿಣಕ್ಕೆ ೮೮.೫ ಕಿ.ಮೀ. ಉದ್ದವಿದೆ. ಜಿಲ್ಲೆಯಲ್ಲಿ ಸಮಾನ್ಯವಾಗಿ ವರ್ಷಕ್ಕೆ ಸರಾಸರಿ ೧೯೨೫ ಮಿ.ಮೀ. ಮಳೆಯಾಗುತ್ತದೆ. ಜಿಲ್ಲೆಯ ಅತ್ಯಂತ ಎತ್ತರವಾದ ಸ್ಥಳ ಮುಳ್ಳಯ್ಯನ ಗಿರಿ, ಸಮುದ್ರ ಮಟ್ಟಕ್ಕಿಂತ ೧೯೫೫ ಮೀಟರ್ ಎತ್ತರದಲ್ಲಿ ಇದೆ, ಇದು ಕರ್ನಾಟಕದ ಅತ್ಯಂತ ಎತ್ತರವಾದ ಸ್ಥಳ ಕೂಡ. ಜಿಲ್ಲೆಯ ಒಟ್ಟು ವಿಸ್ತೀರ್ಣ ೨೧೦೮.೬೨ ಕಿ.ಮೀ೨ . ಅದರಲ್ಲಿ ಶೇಕಡ ೩೦ರಷ್ಟು ಕಾಡುಗಳಿಂದ ಆವರಿಸಲ್ಪಟ್ಟದೆಚಿಕ್ಕಮಗಳೂರು ಜಿಲ್ಲೆಯ ಭೌಗೋಳಿಕ ವಿವರಗಳು ಬಗ್ಗೆ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ನೀಡಿರುವ ಮಾಹಿತಿ, "ಚಿಕ್ಕಮಗಳೂರು ಜಿಲ್ಲೆಯ ಕೈಗಾರಿಕಾ ಯೋಜನೆ ದೃಷ್ಟಿಕೋನ " ಚಿಕ್ಕಮಗಳೂರು ಅಧಿಕೃತ ಮಿಂಬಲೆ ತಾಣ. ಜಿಲ್ಲಾಡಳಿತ, ಚಿಕ್ಕಮಗಳೂರು.. ಚಿಕ್ಕಮಗಳೂರು ಜಿಲ್ಲೆಯ ಪೂರ್ವಕ್ಕೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆ, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮದಲ್ಲಿ ಪಶ್ಚಿಮ ಘಟ್ಟಗಳು ಚಿಕ್ಕಮಗಳೂರನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ ಬೇರ್ಪಡಿಸುತ್ತವೆ ಮತ್ತು ಉತ್ತರದಲ್ಲಿ ಶಿವಮೊಗ್ಗ ಮತ್ತು ದಾವಣಗೆರೆ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಹವಾಮಾನ ಚಿಕ್ಕಮಗಳೂರು ಭಾರತದ ಎತಿ ದೊಡ್ಡ ಪ್ರದೇಶವಾಗಿದೆ. ಕರ್ನಾಟಕದ ಎತ್ತರದ ತುದಿಯು ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಬೆಟ್ಟವಾಗಿದೆ.(ಎತ್ತರ ೧೯೨೯ ಮೀ. ೬೩೨೯ ಅಡಿಗಳು ) ಕರ್ನಾಟಕದಲ್ಲಿವೆ. ಇದು ನೋಡಲು ಸುಂದರವಾಗಿದ್ದು . ಹಲವಾರು ಕಡೆಗಳಿಂದ ಬರುತ್ತಾರೆ. ಇಲ್ಲಿ ಎತ್ತರವಾದ ಗಿರಿಗಳನ್ನು ಹೊಂದಿದ್ದೆ. ಇಲ್ಲಿ ಅದಿಕ ಮಳೆಯ ಪ್ರಮಣ ಹೆಚ್ಚಾಗಿದೆ. ಅತಿಯಾಗಿ ಮಳೆ ಆಗುವುದರಿಂದ ಇಲ್ಲಿನ ಗಿಡ ಮರಗಳು ಅಚ್ಚ ಹಸಿರಿನಿಂದ ಕೂಡಿದೆ. ( ದತ್ತಾತ್ರೇಯ ಪೀಠ ) ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ಇಲ್ಲಿರುವ ಹೆಸರುವಾಸಿಯಾದ ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಚಂದ್ರದ್ರೋಣ ಶ್ರೇಣಿಯನ್ನು  ಭೇಟಿ ಮಾಡಬೇಕು. ಇದು 1895 ಮೀಟರ್ ಎತ್ತರದಲ್ಲಿದೆ. ಚಿಕ್ಕಮಗಳೂರು ಪಟ್ಟಣದಿಂದ 28 ಕಿಮೀ ದೂರದಲ್ಲಿದೆ. ಹಿಂದೂಗಳಿಗೆ ಒಂದು ತೀರ್ಥಯಾತ್ರಾ ಸ್ಥಳವಾಗಿದೆ. ಈ ಕಾರಣದಿಂದಾಗಿ, ಸ್ಥಳವನ್ನು  ಹಿಂದೂ ದೇವರು ಗುರು ದತ್ತಾತ್ರೇಯ ಗುರುತಿಸಲಾಗುತ್ತದೆ. ಚಂದ್ರದ್ರೋಣ ಪರ್ವತದಲ್ಲಿ ಪ್ರವಾಸಿಗರು ಮೂರು ಸಿದ್ಧರಿಂದ ಪವಿತ್ರವಾಗಿರುವವೆಂದು ನಂಬಲಾದ ಮೂರು ಗುಹೆಗಳನ್ನು ನೋಡಬಹುದು .  ಶೀಥಲ -ಮಲ್ಲಿಕಾರ್ಜುನನ ಗುಡಿ ಮತ್ತು ಮಠಗಳೆರಡನ್ನೂ  ಒಳಗೊಂಡಿರುವ ಶೀಥಲ ದೇವಾಲಯ ಹತ್ತಿರದಲ್ಲೇ ಇರುವ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ ಅನುಕೂಲವಾದರೆ ಪ್ರಯಾಣಿಕರು ಈ ಸ್ಥಳದಿಂದ ಕೇವಲ 1 ಕಿಮೀ ದೂರವಿರುವ ಮಾಣಿಕ್ಯಧಾರಾ ಜಲಪಾತವನ್ನು ನೋಡಬಹುದು. ಚಂದ್ರದ್ರೋಣ ಪರ್ವತ ಹೈಕಿಂಗ್ ಮತ್ತು ಚಾರಣಗಳ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಪರಿಪೂರ್ಣವಾದ ಜಾಗ. ಈ ಪ್ರದೇಶದ ವ್ಯಾಪ್ತಿಯ ಎರಡು ಜನಪ್ರಿಯ ಪರ್ವತಗಳೆಂದರೆ ಮುಳ್ಳಯ್ಯನಗಿರಿ (1930 ಮೀಟರ್ ಎತ್ತರದಲ್ಲಿ ಜೊತೆ ಸೈಟ್ ಶಿಖರ) ಮತ್ತು ದತ್ತಗಿರಿ. ಅದೃಷ್ಟವಿದ್ದರೆ  ಜನರು 'ಕುರುಂಜಿ' ವೀಕ್ಷಿಸಲು ಅವಕಾಶ ಪಡೆಯುವರು. ಇದು ಒಂದು ಪರ್ವತದ ಹೂವಾಗಿದ್ದು ಪ್ರತಿ 12 ವರ್ಷಗಳಲ್ಲಿ ಒಮ್ಮೆ ಮಾತ್ರ  ಅರಳುತ್ತದೆ. ಈ ಪ್ರದೇಶ ಹಕ್ಕಿಗಳ ವೀಕ್ಷಣೆ ಕೈಗೊಳ್ಳಲು ಬಯಸುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಜನಸಂಖ್ಯೆ ೨೦೧೧ ರ ಜನಗಣತಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಜನಸಂಖ್ಯೆ ೧೧,೩೭,೯೬೧"ಜಿಲ್ಲಾ ಜನಗಣತಿ ೨೦೧೧ ಚಿಕ್ಕಮಗಳೂರು ಜಿಲ್ಲೆ" Census2011.co.in ಸರಿಸುಮಾರಾಗಿ ಸೈಪ್ರಸ್ ರಾಷ್ಟ್ರಕ್ಕೆ ಸಮನಾಗಿದೆ ಅಥವಾ ಸಂಯುಕ್ತ ಅಮೆರಿಕದ ರೋಡ್ ಐಲೆಂಡ್ ರಾಜ್ಯಕ್ಕೆ ಸಮನಾಗಿದೆ. ಚಿಕ್ಕಮಗಳೂರು ಜನಸಂಖ್ಯೆಯಲ್ಲಿ ಭಾರತದಲ್ಲಿ ೪೦೮ನೇ"ಜಿಲ್ಲಾ ಜನಗಣತಿ 2011". census2011.co.in/ ಸ್ಥಾನದಲ್ಲಿದೆ (ಒಟ್ಟು ೬೪೦ರಲ್ಲಿ). ಜಿಲ್ಲೆಯ ಪ್ರತಿ ಚದರ ಕಿಲೋ ಮೀಟರ್ ಗೆ(೪೧೦/ಚದರ ಮೈಲಿ) ೧೫೮.೧೯ ನಿವಾಸಿಗಳ ಸಾಂದ್ರತೆಯನ್ನು ಹೊಂದಿದೆ. ಇಲ್ಲಿನ ಜನಸಂಖ್ಯಾ ಬೆಳವಣಿಗೆ ದರವು ೨೦೦೧-೨೦೧೧ ದಶಕದಲ್ಲಿ ಶೇಕಡ ೦.೨೮ ಆಗಿತ್ತು. ಚಿಕ್ಕಮಗಳೂರು ಪ್ರತಿ ೧೦೦೦ ಪುರುಷರಿಗೆ ೧೦೦೮ ಸ್ತ್ರೀ ಯ ಲಿಂಗ ಅನುಪಾತವನ್ನು ಹೊಂದಿದೆ ಮತ್ತು ಶೇಕಡ ೭೯.೨೪ ಸಾಕ್ಷರತಾ ದರವನ್ನು ಹೊಂದಿದೆ. ಒಟ್ಟು ಜನಸಂಖ್ಯೆಯ ಶೇಕಡ ೮೧ ಜನರು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇಕಡ ೧೯ ಜನರು ನಗರದಲ್ಲಿ ವಾಸಿಸುತ್ತಾರೆ. ಶೃಂಗೇರಿ ತಾಲ್ಲೂಕು ಅತಿ ಕಡಿಮೆ ಜನಸಂಖ್ಯೆಯನ್ನು ಮತ್ತು ಚಿಕ್ಕಮಗಳೂರು ತಾಲ್ಲೂಕು ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ.ಬಹುತೇಕರು ಕನ್ನಡ ಭಾಷೆ ಮಾತನಾಡುತ್ತಾರೆ. ಜತೆಗೆ ತುಳು ,ಕೊಂಕಣಿ , ಬ್ಯಾರಿ ಭಾಷೆ ಮಾತನಾಡುವವರನ್ನೂ ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಆಡಳಿತ ಚಿಕ್ಕಮಗಳೂರು ಜಿಲ್ಲೆಯೂ ಕರ್ನಾಟಕದ ಮೈಸೂರು ವಿಭಾಗಕ್ಕೆ ಸೇರುತ್ತದೆ. ಇದನ್ನು ಎರಡು ಉಪ ವಿಭಾಗಗಳಾಗಿ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗ ಮತ್ತು ತರೀಕೆರೆ ಉಪ ವಿಭಾಗ. ತರೀಕೆರೆ ಉಪ ವಿಭಾಗ, ತರೀಕೆರೆ ಕಡೂರು ಮತ್ತು ನರಸಿಂಹರಾಜಪುರ ತಾಲ್ಲೂಕುಗಳನ್ನು ಒಳಗೊಂಡಿದೆ ಮತ್ತು ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳನ್ನು ಒಳಗೊಂಡಿದೆ. ಜಿಲ್ಲಾಧಿಕಾರಿ ( ಜಿಲ್ಲಾ ಮ್ಯಾಜಿಸ್ಟ್ರೇಟ್ ಸಹ) ಜಿಲ್ಲೆಯ ಕಾರ್ಯಾತ್ಮಕ ಮುಖ್ಯಸ್ಥರಾಗಿರುತ್ತಾರೆ.https://chikkamagaluru.nic.in/en/ ಪ್ರತಿ ಉಪ ವಿಭಾಗವು ಸಹಾಯಕ ಆಯುಕ್ತರನ್ನುಹೊಂದಿದೆ ಮತ್ತು ಪ್ರತಿ ತಾಲ್ಲೂಕು ಒಬ್ಬ ತಹಸೀಲ್ದಾರರನ್ನು ಹೊಂದಿದೆ. ಇವರು ಜಿಲ್ಲಾಧಿಕಾರಿ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ಆರ್ಥಿಕತೆ 216x216px|thumb|right|ರೊಬಸ್ಟಾ ತಳಿ ಕಾಫಿ ಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಮತ್ತು ಕಾಫಿ ಬೆಳೆಯು ಕೃಷಿಯ ಮುಖ್ಯ ಭಾಗವಾಗಿದೆ. ಜಿಲ್ಲೆಯ ಕೃಷಿ ಉತ್ಪಾದನೆಯು ಮೂರು ಋತುಗಳಲ್ಲಿ ಹರಡಿಗೊಂಡಿದೆ. ಅವುಗಳೆಂದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆ. ಇಲ್ಲಿನ ಪ್ರಮುಖ ಬೆಳೆಗಳು ಏಕದಳ ಧಾನ್ಯಗಳಾದ ಅಕ್ಕಿ, ರಾಗಿ , ಜೋಳ , ಮೆಕ್ಕೆಜೋಳ ಮತ್ತು ಚಿಕ್ಕ ಕಾಳುಗಳು, ದ್ವಿದಳ ಧಾನ್ಯಗಳಾದ, ತೊಗರಿ, ಹುರುಳಿಕಾಳು, ಹೆಸರು ಕಾಳು, ಅವರೆಕಾಯಿ (ಹಯಸಿಂತ್ ಬೀನ್ಸ್) ಮತ್ತು ಕಡಲೆ ಕಾಳು ಮತ್ತು ಕಡಲೆ. ತೈಲ ಬೀಜಗಳಾದ ಶೇಂಗಾ, ಎಳ್ಳು,, ಸೂರ್ಯಕಾಂತಿ ಮತ್ತು ಕ್ಯಾಸ್ಟರ್ ಮತ್ತು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮತ್ತು ತಂಬಾಕು ಇಲ್ಲಿ ಬೆಳೆಯಲಾಗುತ್ತದೆಕೃಷಿಯು ಚಿಕ್ಕಮಗಳೂರಿನ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬು ಎಂದು  ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚರ್ಚಿಸಿಲಾಗಿದೆ. "ಕೃಷಿ" ಚಿಕ್ಕಮಗಳೂರು ಅಧಿಕೃತ ಜಾಲತಾಣ, ಕೃಷಿ ಇಲಾಖೆ, ಜಿಲ್ಲಾ ಆಡಳಿತ, ಚಿಕ್ಕಮಗಳೂರು. ಚಿಕ್ಕಮಗಳೂರು ಪಟ್ಟಣದಲ್ಲಿ ಸರ್ಕಾರದ ಅಧೀನದಲ್ಲಿರುವ ಕಾಫಿ ಬೋರ್ಡ್, ಜಿಲ್ಲೆಯ ಕಾಫಿ ಉತ್ಪಾದನೆ ಮತ್ತು ಮಾರಾಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಸುಮಾರು ೮೫.೪೬೫ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಅರೇಬಿಕಾ ಎಂಬ ತಳಿಯನ್ನು ಬೆಟ್ಟೆದ ಮೇಲ್ಭಾಗದಲ್ಲಿ ಮತ್ತು ರೊಬಸ್ಟಾ ಎಂಬ ತಳಿಯನ್ನು ಬೆಟ್ಟೆದ ತಳ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಜಿಲ್ಲೆಯಲ್ಲಿ ಸುಮಾರು ೧೫೦೦೦ ಕಾಫಿ ಬೆಳೆಗಾರರಿದ್ದು, ಅದರಲ್ಲಿ ಶೇಕಡ ೯೬ ಬೆಳೆಗಾರರು ೪ ಚದರ ಹೆಕ್ಟೇರ್ ಅಥವ ಅದಕ್ಕಿಂತಲು ಕಡಿಮೆ ಪ್ರಮಾಣದ ಉಳುಮೆ ಪ್ರದೇಶವನ್ನು ಹೊಂದಿರುವ ಸಣ್ಣ ಬೆಳೆಗಾರರಾಗಿದ್ದಾರೆ. ಜಿಲ್ಲೆಯ ಸರಾಸರಿ ಕಾಫಿ ಉತ್ಪಾದನೆ ಅರೇಬಿಕಾ ೫೫,೦೦೦:೩೫,೦೦೦ ಮೆಟ್ರಿಕ್ ಟನ್ ಮತ್ತು ರೊಬಸ್ಟಾ ೨೦,೦೦೦ ಮೆಟ್ರಿಕ್ ಟನ್ ಆಗಿದೆ. ಹೆಕ್ಟೇರಿಗೆ ಸರಾಸರಿ ಉತ್ಪಾದಕತೆ ಅರೇಬಿಕಾ ೮೧೦ ಕೆ.ಜಿ. ಮತ್ತು ರೊಬಸ್ಟಾ ಆಫ್ ೧೧೧೦ ಕೆ.ಜಿ. ಆಗಿದೆ, ಇದು ನಮ್ಮ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು.ಚಿಕ್ಕಮಗಳೂರಿನಲ್ಲಿ ಕಾಫಿ ಉತ್ಪಾದನೆ ಬಗ್ಗೆ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚಿಕ್ಕಮಗಳೂರು ಅಧಿಕೃತ ಜಾಲತಾಣ ಕಾಫಿ ಬೋರ್ಡ್, ಚಿಕ್ಕಮಗಳೂರು ನಲ್ಲಿ ಚರ್ಚಿಸಲಾಗಿದೆ. ಕೈಗಾರಿಕೆಗಳು ಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ, ಮೂಲಭೂತ ಸೌಲಭ್ಯಗಳು ಕೊರತೆ, ಕಳಪೆ ರಸ್ತೆಗಳು, ಕಳಪೆ ರೈಲು ಸಂಪರ್ಕಜಾಲ ಮತ್ತು ಕೈಗಾರಿಕೆಗಳಿಗೆ ವಿರೋದ, ಜಿಲ್ಲೆಯ ಕೈಗಾರಿಕಾ ಅಭಿವೃಧ್ಧಿ ಕುಂಟಿತಕ್ಕೆ ಕಾರಣಗಳುಚಿಕ್ಕಮಗಳೂರು ಜಿಲ್ಲೆ ಕೈಗಾರಿಕೆಯಲ್ಲಿ ಹೆಚ್ಚು ಅಭಿವೃಧ್ಧಿ ಹೊಂದಿಲ್ಲ ಎಂಬ ಬಗ್ಗೆ ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಸೆಂಟರ್ ರವರಿಂದ ಚರ್ಚಿಸಲಾಗಿದೆ. "ಜಿಲ್ಲೆ ಮತ್ತು SWOT ವಿಶ್ಲೇಷಣೆ ಪ್ರಸ್ತುತ ಕೈಗಾರಿಕಾ ಸನ್ನಿವೇಶ".  ಚಿಕ್ಕಮಗಳೂರು ಅಧಿಕೃತ ಜಾಲತಾಣ. ಜಿಲ್ಲಾಡಳಿತ, ಚಿಕ್ಕಮಗಳೂರು.ಕರ್ನಾಟಕ ಜಿಲ್ಲೆಗಳಲ್ಲಿ ಹೂಡಿಕೆ ಅಸಮತೋಲನ ಸಂಬಂಧಿಸಿದಂತೆ ನಾಗೇಶ್ ಪ್ರಭುರವರ ಬರಹ. "ಕೈಗಾರಿಕೆ ಬಂಡವಾಳ ಹೂಡಿಕೆಯಲ್ಲಿ ಪ್ರಾದೇಶಿಕ ಅಸಮತೋಲನ". ಹಿಂದೂ ಪತ್ರಿಕೆ ಆನ್ಲೈನ್ ಆವೃತ್ತಿ - ಸಂಚಿಕೆ ಭಾನುವಾರ, ಏಪ್ರಿಲ್ ೩೦,೨೦೦೬, ೨೦೦೬ ಹಿಂದೂ, ಹಿಂದೂ ಪ್ರಕಾಶಕರಿಂದ. ಜಿಲ್ಲೆಯಲ್ಲಿ ಕೇವಲ ಒಂದು ಭಾರಿ ಕೈಗಾರಿಕಾ ಉದ್ಯಮವಿದೆ. ಅದೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ, ಇದು ಮೂಡಿಗೆರೆ ತಾಲೂಕಿನ ಕುದುರೆಮುಖ ಪ್ರದೇಶದಲ್ಲಿ ಇದೆ. ಕೆ.ಐ.ಒ.ಸಿ.ಎಲ್ ೧೯೭೬ ರಲ್ಲಿ ಕುದುರೆಮುಖ ಗಣಿ ಅಭಿವೃದ್ಧಿಪಡಿಸಲು ಮತ್ತು ವರ್ಷಕ್ಕೆ ಸಾರೀಕೃತ ೭.೫ ಮಿಲಿಯನ್ ಟನ್ ಉತ್ಪಾದಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಘಟಕವನ್ನು ೧೯೮೦ರಲ್ಲಿ ಕಾರ್ಯಾರಂಭ ಮಾಡಲಾಯಿತು ಮತ್ತು ಸಾರೀಕೃತ ಉತ್ಪನ್ನದ ಮೊದಲ ಸಾಗಣೆಗೆ ಅಕ್ಟೋಬರ್ ೧೯೮೧ ರಲ್ಲಿ ಮಾಡಲಾಯಿತು, ಉನ್ನದ ಗುಣಮಟ್ಟದ ಬ್ಲಾಸ್ಟ್ ಫರ್ನೇಸ್ ಮತ್ತು ನೇರ ಕಡಿಮೆಗೊಳಿಸುವ ಗ್ರೇಡ್ ಅದಿರು ಉಂಡೆಗಳ ಉತ್ಪಾದನೆಗೆ ಮೂರು ಮಿಲಿಯನ್ ಟನ್ ಸಾಮರ್ಥ್ಯದ ಅದಿರು ಉಂಡೆಗಳ ಘಟಕವನ್ನು ೧೯೮೭ರಲ್ಲಿ ಸ್ಥಾಪಿಸಲಾಯಿತುಕುದುರೆಮುಖ ಕಬ್ಬಿಣ ಅದಿರು ಕಂಪನಿ ನಿಯಮಿತ ಇತಿಹಾಸ ": ಕಂಪನಿಯ ವಿವರ "ಕೆ ಐ ಒ ಸಿ ಅಲ್" ಮಿಂಬಲೆತಾಣದಲ್ಲಿ ಚರ್ಚಿಸಲಾಗಿದೆ. ಮಿಂಬಲೆತಾಣ, ಕೆ ಐ ಒ ಸಿ ಅಲ್ ಕುದುರೆಮುಖ.. ಕೆ.ಐ.ಒ.ಸಿ.ಎಲ್ ನ ಗಣಿಗಾರಿಕೆ ಪರವಾನಗಿ ಅವಧಿ ಮುಗಿದ ಮೇಲೆ ಅದರ ಕಾರ್ಯಾಚರಣೆಗಳನ್ನು ಸುಪ್ರೀಂ ಕೋರ್ಟ್ ೩೧ ಡಿಸೇಂಬರ್ ೨೦೦೫ ರಿಂದ ನಿಲ್ಲಿಸಿತ್ತು, ಇದರಿಂದ ಕೆ.ಐ.ಒ.ಸಿ.ಎಲ್ ಭಾರಿ ಹಿನ್ನಡೆ ಉಂಟಾಯಿತು. ಇದರಿಂದ ಅನೇಕ ನೌಕರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಈ ಪ್ರದೇಶದಲ್ಲಿ ಸಮಾಜಿಕ ಹಿಂಬಡಿತ ಆಗಬಾರದೆಂಬ ಕಾರಣಕ್ಕೆ , ಈ ಕಾರ್ಮಿಕರಿಗೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸವ ಪ್ರಯತ್ನ ಮಾಡಲಾಯಿತು. ಜಿಲ್ಲೆಯಲ್ಲಿ ಕೇವಲ ಒಂದೆ ಒಂದು ಮಧ್ಯಮ ಕೈಗಾರಿಕಾ ಉದ್ಯಮವಿದ್ದು ಇದು ತರೀಕೆರೆ ಪಟ್ಟಣದಲ್ಲಿ ಇದೆ. ತರೀಕೆರೆಯಲ್ಲಿರುವ ಬಿಇಎಂಎಲ್ ಅಂಗಸಂಸ್ಥೆಯಾದ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಉಕ್ಕಿನ ಅಚ್ಚುಗಳಲ್ಲಿ ಉತ್ಪಾದಿಸುತ್ತದೆ. ಜಿಲ್ಲೆಯಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿವೆ, ಒಂದು ಚಿಕ್ಕಮಗಳೂರು ನಗರದ ಹತ್ತಿರವಿದೆ, ಇನ್ನೊಂದು ಕಡೂರು ತಾಲ್ಲೂಕಿನ ಬೀರೂರು ನಗರದ ಬಳಿಯಿದೆ. ಚಿಕ್ಕಮಗಳೂರು ನಗರದ ಬಳಿಯಿರುವ ಕೈಗಾರಿಕಾ ಪ್ರದೇಶ ೧೩.೨೦ ಎಕರೆಯಲ್ಲಿ (೫೩.೪೦೦ ಮೀ.೨) ಮತ್ತು ಬೀರೂರು ಹತ್ತಿರವಿರುವ ಕೈಗಾರಿಕಾ ಪ್ರದೇಶ ೧೧.೧ ಎಕರೆಯಲ್ಲಿ (೪೫೦೦ ಮೀ೨) ಹರಡಿಕೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಚಿಕ್ಕಮಗಳೂರು ತಾಲ್ಲೂಕಿನ ಅಬ್ಳೆ ಹಳ್ಳಿಯ ಬಳಿ ೧೪೫ ಎಕರೆ (೦.೫೯ ಕಿ. ಮೀ೨) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುತ್ತಿದೆ. ಶಿಕ್ಷಣ ೨೦೧೧ರ ಜನಗಣತಿಯ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಶೇಕಡಾವಾರು ಸಾಕ್ಷರತೆಯು ಶೇಕಡ ೭೯.೨೫ ರಷ್ಟು ಆಗಿದೆ, ಇದರಲ್ಲಿ ಶೇಕಡ ೮೪.೪೧ಪುರಷರು ಮತ್ತು ಶೇಕಡ ೭೩.೧೬ ಮಹಿಳೆಯರು ಅಕ್ಷರಸ್ಥರಾಗಿದ್ದಾರೆ. ಚಿಕ್ಕಮಗಳೂರು ಸಾಕ್ಷರತೆ ಪ್ರಮಾಣ ಕರ್ನಾಟಕ ರಾಜ್ಯದ ಸರಾಸರಿ ಸಾಕ್ಷರತಾ ಪ್ರಮಾಣ ಶೇಕಡ ೭೫.೩೬ ಕ್ಕಿಂತ ಹೆಚ್ಚಾಗಿದೆ. ಶೃಂಗೇರಿ ತಾಲ್ಲೂಕು ಶೇಕಡ ೯೨.೬೮ ರೊಂದಿಗೆ ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿರು ತಾಲ್ಲೂಕು ಆಗಿದೆ ಮತ್ತು ಕಡೂರು ತಾಲ್ಲೂಕು ಶೇಕಡ ೭೪.೩೩ ರೊಂದಿಗೆ ಕನಿಷ್ಟ ಸಾಕ್ಷರತೆಯನ್ನು ಹೊಂದಿದರು ತಾಲ್ಲೂಕು ಆಗಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ೨೦೦೧ರಂತೆ, ಚಿಕ್ಕಮಗಳೂರು ಜಿಲ್ಲೆಯು ೧೬೨೦ ಪ್ರಾಥಮಿಕ ಶಾಲೆಗಳನ್ನು(೧೫೧೯೨೩ ವಿದ್ಯಾರ್ಥಿಗಳೊಂದಿಗೆ) ಮತ್ತು ೨೩೫ ಮಾಧ್ಯಮಿಕ ಶಾಲೆಗಳನ್ನು(೩೪೬೦೭ ವಿದ್ಯಾರ್ಥಿಗಳೊಂದಿಗೆ) ಹೊಂದಿದೆ. ಚಿಕ್ಕಮಗಳೂರು ತಾಲ್ಲೂಕು ೪೧೪ ಪ್ರಾಥಮಿಕ ಶಾಲೆಗಳೊಂದಿಗೆ(೪೨೭೭೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೮೦ ಪ್ರಾಥಮಿಕ ಶಾಲೆಗಳೊಂದಿಗೆ (೫೮೨೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರಾಥಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ೭೪ ಮಾಧ್ಯಮಿಕ ಶಾಲೆಗಳೊಂದಿಗೆ(೯೯೯೦ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೯ ಮಾಧ್ಯಮಿಕ ಶಾಲೆಗಳೊಂದಿಗೆ(೧೪೯೨ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಮಾಧ್ಯಮಿಕ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಪ್ರೌಢ ಶಿಕ್ಷಣ ೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೪೬ ಪ್ರೌಢ ಶಾಲೆಗಳು (೪೭೧೧ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಿಣವನ್ನು ನೀಡುತ್ತೀವೆ. ಕಡೂರು ತಾಲ್ಲೂಕು ೧೨ ಪ್ರೌಢ ಶಾಲೆಗಳೊಂದಿಗೆ (೧೩೨೪ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಮತ್ತು ಶೃಂಗೇರಿ ೨ ಪ್ರೌಢ ಶಾಲೆಗಳೊಂದಿಗೆ(೧೬೦ ವಿದ್ಯಾರ್ಥಿಗಳೊಂದಿಗೆ) ಅತಿ ಕಡಿಮೆ ಪ್ರೌಢ ಶಾಲೆಗಳನ್ನು ಹೊಂದಿರುವ ತಾಲ್ಲೂಕು ಆಗಿದೆ ಪದವಿ ಶಿಕ್ಷಣ ೨೦೦೧ ರಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪದವಿ ಕಾಲೇಜುಗಳು (೪೬೧೫ ವಿದ್ಯಾರ್ಥಿಗಳೊಂದಿಗೆ) ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಿಣವನ್ನು ನೀಡುತ್ತೀವೆ. ಈ ಕಾಲೇಜುಗಳು ಕುವೆಂಪು ವಿಶ್ವವಿದ್ಯಾಲಯದಿಂದ ಮಾನ್ಯತೆಯನ್ನು ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ೪ ಪದವಿ ಕಾಲೇಜುಗಳೊಂದಿಗೆ (೧೬೪೮ ವಿದ್ಯಾರ್ಥಿಗಳೊಂದಿಗೆ) ಅತಿ ಹೆಚ್ಚು ಪದವಿ ಕಾಲೇಜುಗಳನ್ನು ಹೊಂದಿರುವ ತಾಲ್ಲೂಕು ಆಗಿದೆ. ಕಡೂರು ತಾಲ್ಲೂಕು ೨ ಮತ್ತು ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲ್ಲೂಕುಗಳು ತಲ ೧ ಪದವಿ ಕಾಲೇಜುಗಳನ್ನು ಹೊಂದಿವೆ. ತಾಂತ್ರಿಕ ಶಿಕ್ಷಣ ಇಂಜಿನಿಯರಿಂಗ್: ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಚಿಕ್ಕಮಗಳೂರು ಪಟ್ಟಣದಲ್ಲಿ ಇದೆ. ಇಲ್ಲಿ ಯಾಂತ್ರಿಕ (ಮೆಕ್ಯಾನಿಕಲ್), ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ಎಲೆಕ್ಟ್ರಾನಿಕ್ಸ್ ಮತ್ತು ಸಂಪರ್ಕ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್), ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆಯ, ಪರಿಸರ (ಎನ್ವಿರಾನ್ಮೆಂಟಲ್ ) ಮತ್ತು ಸಿವಿಲ್ ವಿಭಾಗಗಳು ಇವೆ. ಈ ಕಾಲೇಜು ಬೆಳಗಾವಿಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿದೆ. ಪಾಲಿಟೆಕ್ನಿಕ್‍ಗಳು: ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೆಳಗಿನ ಪಾಲಿಟೆಕ್ನಿಕ್‌ಗಳು ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ. ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ಪಾಲಿಟೆಕ್ನಿಕ್, ಚಿಕ್ಕಮಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಮತ್ತು ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್ ), ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ. ಡಿ ಎ ಸಿ ಜಿ, ಚಿಕ್ಕಮಗಳೂರು: ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಆಟೋಮೊಬೈಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ. ಎಸ್ ಜೆ ಎಮ್ ಎಮ್ ವಿದ್ಯಾಪೀಠ ಪಾಲಿಟೆಕ್ನಿಕ್, ಬೀರೂರು: ಸಿವಿಲ್ ಎಂಜಿನಿಯರಿಂಗ್ ಮತ್ತು ದೂರಸಂಪರ್ಕ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಶಿಕ್ಷಣವನ್ನು ನೀಡುತ್ತೀವೆ. ಕೈಗಾರಿಕಾ ತರಬೇತಿ ಸಂಸ್ಥೆಗಳು: ಚಿಕ್ಕಮಗಳೂರಿ ಜಿಲ್ಲೆಯಲ್ಲಿ ಒಟ್ಟು ೭ ಔದ್ಯಮಿಕ ತರಬೇತಿ ಸಂಸ್ಥೆಗಳು ಇವೆ. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್. ಎಸ್. ಡಿ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಸಮ್ಸೇ, ಮೂಡಿಗೆರೆ ತಾಲ್ಲೂಕ್. ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬಾಳೆಹೊನ್ನೂರು, ನರಸಿಂಹರಾಜಪುರ ತಾಲ್ಲೂಕ್. ಎಸ್. ಜೆ. ಎಮ್. ಕೈಗಾರಿಕಾ ತರಬೇತಿ ಸಂಸ್ಥೆ, ಬೀರೂರು, ಕಡೂರು ತಾಲ್ಲೂಕ್. ಕರ್ನಾಟಕ ಕೈಗಾರಿಕಾ ತರಬೇತಿ ಸಂಸ್ಥೆ, ಚಿಕ್ಕಮಗಳೂರು ತಾಲ್ಲೂಕ್. ಲಕ್ಷ್ಮೀಶಾ ಕೈಗಾರಿಕಾ ತರಬೇತಿ ಸಂಸ್ಥೆ, ದೇವನೂರು, ಕಡೂರು ತಾಲೂಕಿನ. ಮಾರುತಿ ಕೈಗಾರಿಕಾ ತರಬೇತಿ ಸಂಸ್ಥೆ, ಕಡೂರು ತಾಲ್ಲೂಕ್. ಎಸ್. ಜೆ. ಎಮ್. ಪದವಿ ಕಾಲೇಜು, ತರೀಕೆರೆ ತಾಲ್ಲೂಕ್. ವೈದ್ಯಕೀಯ ಶಿಕ್ಷಣ ಹೊಸ ವೈದ್ಯಕೀಯ ಕಾಲೇಜು ಚಿಕ್ಕಮಗಳೂರು ನಗರಕ್ಕೆ ಮಂಜೂರು ಮಾಡಿಲಾಗಿದೆ ಆದರೆ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಮೂಲ ಕೊಪ್ಪದ ಅರೋರ್ ಲಕ್ಷ್ಮಿನಾರಾಯಣ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜು. ಈ ಕಾಲೇಜು ಆಯುರ್ವೇದಿಕ್ ಮೆಡಿಸಿನ್ ಅಂಡ್ ಸರ್ಜರಿ (ಬಿ ಏ ಎಮ್ ಎಸ್) ಪದವಿ ನೀಡುತ್ತದೆ. ಸಾರಿಗೆ ರಸ್ತೆ ಚಿಕ್ಕಮಗಳೂರು ಜಿಲ್ಲೆಯ ರಸ್ತೆಗಳು ಸರಿಯಾಗಿ ನಿರ್ವಹಿಸಲ್ಪಡುವ ರಸ್ತೆಗಳ ಪಟ್ಟಿಯಲ್ಲಿ ಬರುವುದಿಲ್ಲ. ದುಸ್ಥಿತಿಯಲ್ಲಿ ಇರುವ ರಸ್ತೆಗಳು ಸ್ವಲ್ಪ ಮಟ್ಟಿಗೆ ಜಿಲ್ಲೆಯ ಅಭಿವೃದ್ಧಿಗ ಅಡ್ಡಿಯಾಗಿವೆ. ಜಿಲ್ಲೆಯು ಉತ್ತಮವಾದ ರೈಲು ಸಂರ್ಪಕ ಜಾಲವನ್ನು ಹೊಂದಿಲ್ಲ. ಜಿಲ್ಲೆಯು ಒಟ್ಟು ೭೨೬೪ ಕೀ. ಮೀ ರಸ್ತೆಯನ್ನು ಹೊಂದಿದೆ. ಜಿಲ್ಲೆಯ ಮೇಲೆ ಕೇವಲ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತದೆ. ರಾಷ್ಟೀಯ ಹೆದ್ದಾರಿ ಎನ್.ಎಚ್.-೧೩(ಶೋಲಾಪೌರದಿಂದ ಮಂಗಳೂರಿಗೆ) ಕೊಪ್ಪ ಮತ್ತು ಶೃಂಗೇರಿ ಮೂಲಕ ಹಾದು ಹೋಗುತ್ತದೆ ಮತ್ತು ರಾಷ್ಟೀಯ ಹೆದ್ದಾರಿ ಎನ್.ಎಚ್.-೨೦೬(ಬೆಂಗಳೂರಿಂದ ಹೋನ್ನವರಗೆ) ಕಡೂರು.ತರೀಕೆರೆ ಮೂಲಕ ಹಾದು ಹೋಗುತ್ತದೆ. ಜಿಲ್ಲೆಯಲ್ಲಿ ಈಗಿರುವ ರಾಜ್ಯ ಹೆದ್ದಾರಿಗಳಾದ ತರೀಕೆರೆ-ಬೇಲೂರು, ಶೃಂಗೇರಿ-ಹಾಸನ್ ಮತ್ತು ಕಡೂರು-ಮಂಗಳೂರು ಹೆದ್ದಾರಿಗಳನ್ನು ನವೀಕರಿಸುವ ಪ್ರಸ್ತಾಪವಿದೆ. ರೈಲು ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲುಕುಗಳು ರೈಲ್ವೆ ಮಾರ್ಗಗಳನ್ನು ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಲಕ ಒಟ್ಟು ೧೩೬ ಕೀ.ಮೀ ರೈಲ್ವೆ ಮಾರ್ಗ ಹಾದು ಹೋಗುತ್ತದೆ. ಬೀರೂರು ಜಿಲ್ಲೆಯ ಅತಿದೊಡ್ಡ ಜಂಕ್ಷನ್ ಆಗಿದೆ. ಹೊಸ ರೈಲು ಮಾರ್ಗ ಚಿಕ್ಕಮಗಳೂರನ್ನು ಹುಬ್ಬಳ್ಳಿ-ಬೆಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುತ್ತದೆ, ಚಿಕ್ಕಮಗಳೂರನ್ನು ಬೆಂಗಳೂರು-ಮಂಗಳೂರು ಟ್ರಂಕ್ ಮಾರ್ಗಕ್ಕೆ ಸೇರಿಸುವ ಹೊಸ ಮಾರ್ಗದ ಕಾರ್ಯ ಆರಂಭವಾಗಿದೆ. ವಿಮಾನ ಚಿಕ್ಕಮಗಳೂರಿನಿಂದ ೧೦ ಕೀ.ಮೀ ದೂರದಲ್ಲಿ ಇರುವ ಗೌಡನಹಳ್ಳಿಯಲ್ಲಿ ಸಣ್ಣ ವಿಮಾನ ನಿಲ್ದಾಣ ಇದೆ. ಇದು ಸಣ್ಣ ಗಾತ್ರದ ವಿಮಾನಗಳ ಉಡವಣೆಯ ಸಮಾರ್ಥ್ಯವನ್ನು ಹೊಂದಿದೆ. ಮಂಗಳೂರು , ಹುಬ್ಬಳ್ಳಿ ಮತ್ತು ಬೆಂಗಳೂರು, ಚಿಕ್ಕಮಗಳೂರಿಗೆ ಹತ್ತಿರದ ವಿಮಾನ ನಿಲ್ದಾಣಗಳು. ಪ್ರವಾಸಿ ತಾಣಗಳು ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ದತ್ತಪೀಠ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ. ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲು ಚಿಕ್ಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ. ಬಿಂಡಿಗ ದೀಪೋತ್ಸವ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಬಿಂಡಿಗ ದೇವಿರಮ್ಮ ದೀಪೋತ್ಸವ ದೀಪಾವಳಿಯಂದು ನಡೆಯುವ ವಿಶೇಷ ಚಂದ್ರದ್ರೋಣ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬಿಂಡಿಗ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿ ದಿನದಂದು ನಡೆಯುವ ಉತ್ಸವ, ಸಂಪ್ರದಾಯ, ದೀಪ ಹಚ್ಚುವುದು ಕಾಪಿsಯ ತವರಿನ ವಿಶೇಷಗಳಲ್ಲಿ ಒಂದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಅನೇಕ, ಆಚರಣೆ, ಸಂಪ್ರದಾಯ, ನಂಬಿಕೆಗಳು ಇವೆ. ಇದರಲ್ಲಿ ಒಂದು ಮಲ್ಲೇನಹಳ್ಳಿ ಸಮೀಪದಲ್ಲಿ ಇರುವ ದೇವಿರಮ್ಮ ಬೆಟ್ಟದಲ್ಲಿ ದೀಪಾವಳಿಯಂದು ನಡೆಯುವ ವಿಶೇಷ ಪೂಜೆ. ವರ್ಷಪೂರ್ತಿ ತಣ್ಣಗೆ ಇರುವ ಈ ಬೆಟ್ಟವನ್ನು ಏರಲು ಮಧ್ಯರಾತ್ರಿಯಿಂದಲೇ ಭಕ್ತರು ಹಾತೊರೆಯುತ್ತಾರೆ. ಕಡಿದಾದ ಅಂಕು ಡೊಂಕಿನ ಹಾದಿಯಲ್ಲಿ ಅಬಾಲವೃದ್ಧರಾಗಿ ಸಾಲು-ಸಾಲಾಗಿ ಜನ ಬೆಟ್ಟ ಹತ್ತುವುದೇ ಒಂದು ರೋಮಂಚನ ಅನುಭವ. ಮಳೆ, ಛಳಿ, ಗಾಳಿಯನ್ನು ಲೆಕ್ಕಿಸದೆ ಜನ ಬೆಟ್ಟವೇರಿ, ದೇವಿಯ ದರ್ಶನ ಪಡೆದು ಧನ್ಯರಾಗುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ದೇವಿರಮ್ಮ ದೇವಾಲಯ ಇದ್ದು ಪ್ರತಿ ದೀಪಾವಳಿ ದಿನದಂದು ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ತಂದು ಇಡುತ್ತಾರೆ. ಇಲ್ಲಿಗೆ ಆಗಮಿಸುವ ಭಕ್ತರು ದೇವಿ ಪೂಜೆಯಲ್ಲಿ ಭಾಗವಹಿಸಿ ಕೆಳಕ್ಕೆ ಇಳಿಯುತ್ತಾರೆ. ಬೆಟ್ಟ ಏರಿದಷ್ಟೇ ಇಳಿಯುವುದೂ ಸಾಹಸದ ಕೆಲಸ. ದಣಿವು, ಆಯಸವನ್ನು ಲೆಕ್ಕಿಸದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಇಂದು ಭೇಟಿ ನೀಡಿ ತೆರಳುತ್ತಾರೆ. ಈ ದೃಶ್ಯ ಇರುವೆಗಳು ಸಾಲಾಗಿ ಹರಿದು ಹೋಗುತ್ತಿರುವಂತೆ ಭಾಸವಾಗುತ್ತದೆ. ಜಿಲ್ಲಾ ಕೇಂದ್ರದಿಂದ ವಿಶೇಷ ಬಸ್ಸಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಬೆಳಗ್ಗೆ ಪೂಜೆ ಬಳಿಕ ರಾತ್ರಿ ದೀಪವನ್ನು ಹಚ್ಚುತ್ತಾರೆ. ಇಲ್ಲಿನ ದೀಪ ನೋಡಿ ಮನೆ ಮನೆಗಳಲ್ಲಿ ದೀಪ ಬೆಳಗುವುದು ಅನೂಚಾನವಾಗಿ ನಡೆದು ಬಂದ ಪದ್ಧತಿ. ಮೈಸೂರು ಅರಸರೂ ಇದನ್ನು ಪಾಲಿಸುತ್ತಾರೆ ಎನ್ನಲಾಗುತ್ತದೆ. ಇದಾದ ೨ ದಿನಗಳಲ್ಲಿ ದೇವಿರಮ್ಮ ದೇವಾಲಯದಲ್ಲಿ ಉತ್ಸವ ಜರುಗಿ ತನ್ನಿಂದ ತಾನೇ ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವ ನಂಬಿಕೆಯೂ ಪ್ರಚಲಿತವಾಗಿದೆ. ಕೊನೆಯ ದಿನ ಕೆಂಡಾರ್ಚನೆ ನಡೆಯುವ ಮೂಲಕ ದೇವಿರಮ್ಮ ವಾರ್ಷಿಕ ಉತ್ಸವಕ್ಕೆ ತೆರೆ ಬೀಳುತ್ತದೆ. ಕರ್ತಿಕೆರೆ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.ಚಿಕ್ಕಮಗಳೂರಿನಿಂದ ೪ ಕಿ, ಮೀ, ದೂರದಲ್ಲಿದೆ ಕರ್ತಿಕೆರೆ. ಈ ಗ್ರಾಮದಲ್ಲಿ ಅತ್ಯಂತ ವಿಜ್ರುಂಭಣೆಯಿಂದ ಶ್ರೀ ರಂಗನಾಥಸ್ವಾಮಿ ಮತ್ತು ದುರ್ಗಮ್ಮ ನವರ ಜಾತ್ರಾ ಮಹೋತ್ಸವ ನೆಡೆಯುತ್ತದೆ ಈ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಆಗಮಿಸಿ ದೇವರ ದರ್ಶನ ಪಡೆದು ಧನ್ಯರಾಗುತ್ತಾರೆ. ಈ ಜಾತ್ರೆಯಲ್ಲಿ ಭಕ್ತಾದಿಗಳು ದೇವರಿಗೆ ಹರಕೆಯನ್ನು ಸಲ್ಲಿಸಿ ದೇವರ ಕೃಪೇಗೆ ಪಾತ್ರರಾಗುತ್ತಾರೆ. ಈ ಜಾತ್ರೆಯು ಪ್ರಸ್ಸಿದ್ದವಾದ ಒಂದು ಜಾತ್ರೆಯಾಗಿದೆ. ಈ ಜಾತ್ರೆಯಲ್ಲಿ ಬೆಳ್ಳಿಯ ರಥೋತ್ಸವ ನೆಡೆಯುತ್ತದೆ ಬೆಳ್ಳಿಯ ರಥದಲ್ಲಿ ರಂಗನಾಥ ಸ್ವಾಮಿಯನ್ನು ಕೂರಿಸಿ ರಥವನ್ನು ಎಳೆಯುತ್ತಾರೆ.ಸಂಜೆ ಈ ಜಾತ್ರೆ ಪ್ರಯುಕ್ತ ಶನಿ ದೇವರ ನಾಟಕ ಕಾರ್ಯಕ್ರಮ ನೆಡೆಯುತ್ತದೆ. ಪ್ರವಾಸಿ ತಾಣ ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಸ್ಥಳಗಳು ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್ಗರಿ, ಕೆಮ್ಮಣ್ಗುಂಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಲ್ಹತ್ತಿ ಜಲಪಾತ, ಭದ್ರಾ ವನ್ಯಜೀವಿ ಧಾಮ ಮತ್ತು ಪ್ರವಾಸಿಗರು ನೋಡಬಹುದಾದ ಹೆಚ್ಚಿನ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ವ್ಯಾಪಕವಾದ ಪಶ್ಚಿಮ ಘಟ್ಟಗಳಲ್ಲಿ ವಿಸ್ತಾರವಾದ ಸ್ಥಳವು ದಟ್ಟವಾದ ಶೋಲಾ ಕಾಡುಗಳ ಮನೋಹರವಾದ ನೋಟಗಳನ್ನು ಮತ್ತು ದಟ್ಟವಾದ ಹಸಿರು ಪೊದೆಗಳನ್ನು ದಾರಿಗಳಲ್ಲಿ ನೀಡುತ್ತದೆ.ಅತ್ಯುನ್ನತ ಎತ್ತರದಲ್ಲಿ ನೆಲೆಗೊಂಡಿರುವ ಬಹು ಬೆಟ್ಟಗಳು ಅದ್ಭುತ ವಾತಾವರಣದ ವಿಹಂಗಮ ನೋಟವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಈ ಪಟ್ಟಿಯನ್ನು ಪರಿಶೀಲಿಸಿ ಮತ್ತು ಬೆಂಗಳೂರಿನಿಂದ ವಾರಾಂತ್ಯದಲ್ಲಿ ಹೊರಹೋಗುವ ಪ್ರವಾಸವನ್ನು ಯೋಜಿಸಲು ನಿಮ್ಮ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಲುು ಚಿಕ್ಕಮಗಳೂರು ಪ್ರವಾಸೋದ್ಯಮ ಸ್ಥಳಗಳು ತಮ್ಮ ಸಾಹಸ ಸ್ವರೂಪ ಮತ್ತು ಬಹು ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶದ ಕಾರಣದಿಂದಾಗಿ ಪ್ರಪಂಚದಾದ್ಯಂತದ ಏಕವ್ಯಕ್ತಿ ಮತ್ತು ಗುಂಪು ಪ್ರಯಾಣಿಕರ ಪೈಕಿ ಪ್ರಸಿದ್ಧವಾಗಿದೆ. ಗಿರಿಧಾಮಗಳು thumb|213x213px|right|ಕೆಮ್ಮಣ್ಣುಗುಂಡಿ ಹೋಗುವ ಮಾರ್ಗದಲ್ಲಿ ಕಂಡುಬರುವ ದೃಶ್ಯ. thumb|right|ಮಾಣಿಕ್ಯಧಾರಾ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯ ಹತ್ತಿರ. ಕೆಮ್ಮಣ್ಣುಗುಂಡಿ: ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಬಳಿ ಇರುವ ಒಂದು ಗಿರಿಧಾಮ. ಇದು ಬಾಬಾ ಬುಡನ್‌/ಚಂದ್ರದ್ರೋಣ ಶ್ರೇಣಿಯಲ್ಲಿ ಬರುವ ಸುಂದರ ಗಿರಿಧಾಮ. ಕೃಷ್ಣರಾಜ ಒಡೆಯರು ಇದನ್ನು ತಮ್ಮ ಮೆಚ್ಚಿನ ಬೇಸಿಗೆ ಶಿಬಿರ ಮಾಡಿಕೊಂಡಿದ್ದರಿಂದ, ಇದನ್ನು ಕೆ.ಅರ್. ಗಿರಿಧಾಮ ಎಂದು ಸಹ ಕರಿಯುತ್ತಾರೆ. ಕೆಮ್ಮಣ್ಣಗುಂಡಿ ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿದೆ. ಇದು ಸುತ್ತ ದಟ್ಟ ಅರಣ್ಯದಿಂದ ಸುತ್ತುವರೆದಿದ್ದು, ವರುಷವಿಡೀ ಹಿತಕರ ವಾತವರಣವಿರುತ್ತದೆ. ಇದು ಸುಂದರ ಬಾಬಾ ಬುಡನ್‌/ಚಂದ್ರದ್ರೋಣ ಶ್ರೇಣಿಯಿಂದ ಸುತ್ತಿವರೆದಿದ್ದು, ಸಮೃದ್ಧ ಸಸ್ಯವರ್ಗ ಮತ್ತು ಅಮೋಘವಾದ ಬೆಳ್ಳಿ ಜಲಪಾತಗಳಿಂದ ಕೂಡಿದೆ. ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ. ರಾಜ್ ಭವನದಿಂದ ಅದ್ಭುತವಾದ ಸೂರ್ಯಾಸ್ತದ ದೃಶ್ಯವನ್ನು ನೋಡಬಹುದು. ಸಾಹಸಿಗರಿಗೆ ಇಲ್ಲಿ ಅನ್ವೇಷಿಸಲು ಅನೇಕ ಶಿಖರಗಳು ಮತ್ತು ಸಂಕೀರ್ಣವಾದ ಕಾಡಿನ ಮಾರ್ಗಗಳೂ ಇವೆ. ಈ ಸ್ಥಳದಲ್ಲಿ ಒಂದು ಸುಂದರ ಗುಲಾಬಿ ಹೂವಿನ ಉದ್ಯಾನ ಮತ್ತು ಅನೇಕ ಆಕರ್ಷಣೇಯ ಸ್ಥಳಗಳು ಇವೆ. ಇಲ್ಲಿನಿಂದ ಹತ್ತು ನಿಮಿಷಗಳ ನೆಡಿಗಯ ದೂರದಲ್ಲಿ ಝಡ್-ಪಾಯಿಂಟ್ ಎನ್ನುವ ಸ್ಥಳವಿದೆ, ಈ ಶಿಖರದಿಂದ ಪಶ್ಚಿಮ ಘಟ್ಟಗಳ ಶೋಲಾ ಹುಲ್ಲುಗಾವಲುಗಳ ವೈಮಾನಿಕ ನೋಟವನ್ನು ನೋಡಬಹುದು. ಇದನ್ನು ಕಮಲ್ ಹಾಸನ್ ಅವರ ಪಂಚತಂತ್ರಮ್ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಕುದುರೆಮುಖ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಕುದುರೆಮುಖ ಪರ್ವತ ಶ್ರೇಣಿ ಚಿಕ್ಕಮಗಳೂರು ನಗರದಿಂದ ೯೫ ಕೀ.ಮೀ ನೈಋತ್ಯದಲ್ಲಿ ಇದೆ. ಕುದರೆಮುಖದಲ್ಲಿ ಕುದರೆಯ ಮುಖಕ್ಕೆ ಹೊಲುವ ಆಕಾರದ ಶಿಖರವಿದೆ, ಇದರಿಂದ ಈ ಸ್ಥಳಕ್ಕೆ ಕುದರೆಮುಖ ಅನ್ನುವ ಹೆಸರು ಬಂದಿದೆ. ಇಲ್ಲಿ ವಿಶಾಲವಾದ ಪರ್ವತಗಳು ಒಂದಕೊಂದು ಹೊಂದಿಹಕೊಂಡು ಆಳವಾದ ಕಣಿವೆ ಮತ್ತು ಪ್ರಪಾತಗಳುನ್ನು ಸೃಷ್ಟಿಸಿವೆ. ಸಮುದ್ರ ಮಟ್ಟದಿಂದ ೧೮೯೪.೩ ಮೀಟರ ಎತ್ತರದಲ್ಲಿ ಇರುವ ಕುದರೆಮುಖದಲ್ಲಿ ಸಮೃದ್ಧವಾದ ಕಬ್ಬಿಣದ ಅದಿರಿನ ನಿಕ್ಷೇಪಗಳು ಇವೆ. ಕುದರೆಮುಖ ಕಬ್ಬಿಣದ ಅದಿರು ಕಂಪನಿ ಕಭ್ಭಿಣದ ಗಣಿಗಾರಿಗೆ ಮಾಡಿ, ಮಂಗಳೂರು ಮತ್ತು ಪಣಂಬೂರು ಬಂದರಿಗೆ ಕೊಳವೆಗಳ ಮೂಲಕ ಕಳುಹಿಸಿಕೊಡುತ್ತದೆ. ಮುಳ್ಳಯ್ಯನಗಿರಿ: ಕರ್ನಾಟಕದ ಅತಿ ಎತ್ತರದ ಗಿರಿಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯು ೬೩೩೦ ಆಡಿ ಎತ್ತರವಿದ್ದು ಪಶ್ಚಿಮ ಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿ ಸಾಲಿಗೆ ಸೇರುತ್ತದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ. ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ ಬಾಬಾ ಬುಡನ್ ಗಿರಿ/ ದತ್ತಗಿರಿ: ಚಿಕ್ಕಮಗಳೂರಿನಿಂದ ಉತ್ತರಕ್ಕೆ ಸುಂದರವಾದ ಬಾಬಾ ಬುಡನ್‌/ಚಂದ್ರದ್ರೋಣ ಶ್ರೇಣಿ ಇದೆ. ಇದು ಚಿಕ್ಕಮಗಳೂರು ನಗರದ ಎಲ್ಲಾ ಭಾಗದಿಂದ ಕಾಣುತ್ತದೆ. ಇದು ಪ್ರಾಚೀನ ಕಾಲದಿಂದ ಸಹ ಹೆಸರು ವಾಸಿಯಾಗಿರುವ ಪರ್ವತ ಶ್ರೇಣಿ. ಈ ಪರ್ವತ ಶ್ರೇಣಿ ಹಿಮಾಲಯ ಮತ್ತು ನೀಲಗಿರಿ ನಡುವಿನ ಅತ್ತಿ ಎತ್ತರದ ಶಿಖರವನ್ನು ಹೊಂದಿದೆ. ಇಲ್ಲಿ ೧೫೦ ವರುಷಗಳ ಹಿಂದೆ ಬಾಬಾ ಬುಡನ್ ಇದ್ದನೆಂದು ಮುಸ್ಲಿಮರು ಮತ್ತು ಗುರು ದತ್ತಾತ್ರೇಯ ಇದ್ದರೆಂದು ಹಿಂದೂಗಳು ನಂಬುತ್ತಾರೆ. ದತ್ತಗಿರಿ/ಬಾಬಾ ಬುಡನ್‌ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿರುವ ಅದರ ದೇವಸ್ಥಾನಕ್ಕಾಗಿ ಪರಿಚಿತವಾಗಿದೆ. ದೇವರಮನೆ: ದೇವರ ಮನೆ ಮೂಡಿಗೆರೆ ಪ್ರವಾಸಿಗರನ್ನು ಆಕರ್ಶಿಸುತ್ತಿರುವ ದೇವಾಲಯ. ಇಲ್ಲಿಯ ಪರಿಸರ,ಬೆಟ್ಟ,ಗುಡ್ಡಗಳು ವರ್ಣನಾತೀತ. ಜಲಪಾತಗಳು ಮತ್ತು ಸರೋವರಗಳು thumb|221x221px|right|ಹನುಮಾನ ಗುಂಡಿ ಜಲಪಾತ thumb|ಹೆಬ್ಬೆ ಜಲಪಾತ, ಕೆಮ್ಮಣ್ಣುಗುಂಡಿ ಬಳಿ thumb|ಸಗೀರ್ ಅಹಮದ್/ದಬ್‌ದಬೆ ಜಲಪಾತ ಮಾಣಿಕ್ಯಧಾರಾ: ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ. ಕಲ್ಹತ್ತಿಗಿರಿ: ಮಾಣಿಕ್ಯಧಾರಾ ಜಲಪಾತ ದತ್ತಾತ್ರೇಯ ಪೀಠ ಅಥವಾ ಬಾಬಾಬುಡನ್‌ಗಿರಿಯಿಂದ ಸುಮಾರು ೩ ಕಿ.ಮೀ ದೂರದಲ್ಲಿದೆ. ಈ ಪರ್ವತ ಶ್ರೇಣಿಗಳಲ್ಲಿ ಹುಟ್ಟುವ ಒಂದು ಸಣ್ಣ ಹಳ್ಳವು ಸುಮಾರು ೧೦೦ ಅಡಿಗಳಿಗೂ ಮೀರಿದ ಜಲಪಾತವನ್ನು ನಿರ್ಮಿಸಿದೆ. ಇಲ್ಲಿ ನೀರು ಮಾಣಿಕ್ಯದ ಮಣಿಗಳಂತೆ ಬೀಳುವುದರಿಂದ ಈ ಹೆಸರು ಬಂದಿದೆ. ಇದು ಚಿಕ್ಕಮಗಳೂರು ನಗರದಿಂದ ಸುಮಾರು ೪೦ ಕಿಮಿ ದೂರದಲ್ಲಿದೆ. ಹೆಬ್ಬೆ ಜಲಪಾತ: ಈ ಪ್ರಸಿದ್ಢವಾದ ಕೆಮ್ಮಣ್ಣುಗುಂಡಿಯಿಂದ ೧೦ ಕೀ.ಮೀ. ದೂರದಲ್ಲಿದೆ. ಇಲ್ಲಿ ನೀರಿನ ತೊರೆಗಳು ೧೬೮ ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ದೊಡ್ಡ ಹೆಬೆ ಮತ್ತು ಚಿಕ್ಕ ಹೆಬ್ಬೆ ಮೂಲಕ ಕೆಳಗೆ ಬಿಳುತ್ತದೆ. ಶಾಂತಿ ಜಲಪಾತ: ಕೆಮ್ಮಣ್ಣುಗುಂಡಿಯಿಂದ ಝಡ್-ಪಾಯಿಂಟ್‌ಗೆ ಹೋಗುವಾಗ ಸಿಗುವ ಜಲಪಾತ. ಹನುಮಾನ ಗುಂಡಿ ಜಲಪಾತ: ಇದು ಕಳಸದಿಂದ ೩೨ ಕೀ.ಮೀ ದೂರದಲ್ಲಿದೆ. ಇಲ್ಲಿ ತೊರೆಗಳು ೩೦ಮೀ ಎತ್ತರದಿಂದ ನೈಸರ್ಗಿಕ ಬಂಡೆಯ ಸ್ತರಗಳ ಮೇಲೆ ಬಿಳುತ್ತದೆ. ಕದಂಬಿ ಜಲಪಾತ: ಇದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಜಲಪಾತ. ಸಿರಿಮನೆ ಜಲಪಾತ: ಇದು ಶೃಂಗೇರಿಯಿಂದ ೧೪ ಕೀ.ಮೀ ದೂರದಲ್ಲಿದೆ. ಸಗೀರ್ ಅಹಮದ್/ದಬ್‌ದಬೆ ಜಲಪಾತ: ಬಾಬಾ ಬುಡನ್ ಗಿರಿ/ ದತ್ತಗಿರಿ ಕಡೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಈ ಜಲಪಾತ ಸಿಗುತ್ತದೆ. ಹಿರೇಕೊಳಲೆ ಕೆರೆ: ಚಿಕ್ಕಮಗಳೂರು ನಗರದ ಹತ್ತಿರ ಇರುವ ಸುಂದರ ಕೆರೆ. ಅಯ್ಯನ ಕೆರೆ: ಚಿಕ್ಕಮಗಳೂರಿನಿಂದ ೨೦ ಕೀ.ಮೀ ದೂರದಲ್ಲಿ ಸಖರಾಯ ಪಟ್ಟದ ಬಳಿ ಇರುವ ದೊಡ್ಡ ಕೆರೆ. [ [ ಜಾರಿ ಜಲಪಾತಗಳು| ಝರಿ ಜಲಪಾತಗಳು:]] ಜರಿ ಜಲಪಾತವನ್ನು ಮಜ್ಜಿಗೆ ಜಲಪಾತ ಎಂದೂ ಕರೆಯುತ್ತಾರೆ, ಇದು ಬಾಬಾ ಬುಡನ್‌ಗಿರಿಯಿಂದ 12 ಕಿಮೀ ದೂರದಲ್ಲಿ ಅತ್ತಿಗುಂಡಿ ಬಳಿ ಇದೆ. ಇದು ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಈ ಸಮ್ಮೋಹನಗೊಳಿಸುವ ಜಲಪಾತವು ದಟ್ಟವಾದ ಕಾಡುಗಳಿಂದ ಆವೃತವಾಗಿದೆ ಮತ್ತು ಕಾಫಿ ತೋಟಗಳು ಪರ್ವತಗಳಲ್ಲಿ ಹುಟ್ಟುವ ಬುಗ್ಗೆಗಳಿಂದ ರಚಿಸಲ್ಪಟ್ಟಿವೆ. .ಪ್ರವಾಸಿಗರು ನೀರಿನಲ್ಲಿ ಈಜಲು ಮತ್ತು ಆಟವಾಡಲು ಮತ್ತು ವಿಶ್ರಾಂತಿ ಪಡೆಯಲು ಜಲಪಾತದ ಕೆಳಭಾಗದಲ್ಲಿ ಪೂಲ್ ಕೂಡ ಇದೆ. ನಗರದ ಬಿಡುವಿಲ್ಲದ ಜೀವನದಿಂದ ಹೊರಬರಲು ಇದು ಸೂಕ್ತ ಸ್ಥಳವಾಗಿದೆ. ಮಂದಿರ ಪಟ್ಟಣಗಳು ಶೃಂಗೇರಿ: ಶೃಂಗೇರಿ ಪಟ್ಟಣ ಚಿಕ್ಕಮಗಳೂರಿನಿಂದ ಪಶ್ಚಿಮಕ್ಕೆ ೯೦ ಕೀ.ಮೀ ದೂರದಲ್ಲಿ ತುಂಗ ನದಿಯ ತೀರದಲ್ಲಿ ಇದೆ. ಶೃಂಗೇರಿ ಪಟ್ಟಣ ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಶಂಕರಾಚಾರ್ಯರು ಕ್ರಿ.ಶ. ೯ನೇ ಶತಮಾನದಲ್ಲಿ ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಇರುವುದು ಇಲ್ಲಿಯೇ. ಇಲ್ಲಿರುವ ಖ್ಯಾತ ವಿದ್ಯಾಶಂಕರ ದೇವಸ್ಥಾನವನ್ನು ಹೊಯ್ಸಳರು ಕಟ್ಟಿದರು ಮತ್ತು ಮುಂದೆ ಇದನ್ನು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಪೂರ್ಣಗೊಳಿಸಿದರು. ಈ ದೇವಸ್ಥಾನದ ಸುತ್ತಲೂ ಇರುವ ಹನ್ನೆರಡು ಕಂಬಗಳಲ್ಲಿ ಪ್ರತಿಯೊಂದರ ಮೇಲೆಯೂ ಬೇರೆ ಬೇರೆ ತಿಂಗಳುಗಳಲ್ಲಿ ಸೂರ್ಯರಶ್ಮಿ ಬೀಳುತ್ತದೆ. ಹೊರನಾಡು: ಹೊರನಾಡು ಇದು ರಾಜ್ಯದ ಪ್ರಸಿದ್ದ ಯಾತ್ರಸ್ತಳವಾಗಿದೆ. ಹೊರನಾಡು ಚಿಕ್ಕಮಗಳೂರು ನಗರದಿಂದ 100 ಕಿಮೀ ನೈಋತ್ಯಕ್ಕೆ ಇದೆ. ಇಲ್ಲಿ ಅನ್ನಪೂರ್ಣೇಶ್ವರಿಯ ಪುರತಾನ ದೇವಾಲಯವಿದೆ, ಈ ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದೆ. ಇದು ಅಗಸ್ತ್ಯ ಕ್ಷೇತ್ರವೆಂದು ಪ್ರಸಿದ್ದಿ ಆಗಿದ್ದು, ಇಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಸ್ಟಾಪನೆ ಯಾಗಿರುವ ಆದಿ-ಶಕ್ತ್ಯತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ವಿಗ್ರಹಾರದನೆ ನಡೆಯುತದೆ. ಶುಕ್ರವಾರವು ಅಮ್ಮನವರ ವಾರವೆಂದು, ಈ ದಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಸ್ಥಳವು ಹೆಚ್ಚು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ, ಇಲ್ಲಿ ಯಾತ್ರಾರ್ಥಿಗಳಿಗೆ ಉಚಿತ ಊಟ್ಟ ಮತ್ತು ವಸತಿ ಸೌಲಭ್ಯವನ್ನು ದೇವಾಲಯವು ಒದಗಿಸುತ್ತದೆ. ಈ ನಗರದ ಹತ್ತಿರದಲ್ಲಿ ಪಂಚತೀರ್ಥ ಎಂದು ಕರೆಯಲಾಗುವ ಐದು ಕೊಳಗಳು ಇವೆ. ಕಳಸ: ಕಳಸ ಚಿಕ್ಕಮಗಳೂರು ನಗರದ ನೈಋತ್ಯಕ್ಕೆ ೯೨ ಕೀ.ಮೀ ದೂರದಲ್ಲಿ, ಭದ್ರ ನದಿಯ ತೀರದಲ್ಲಿರುವ ನಗರ. ಈ ನಗರ ಪಶ್ಚಿಮ ಘಟ್ಟದ ಎತ್ತರದ ಗಿರಿಶಿಖರಗಳಿಂದ ಸುತ್ತುವರೆದಿದೆ ಮತ್ತು ಇದನ್ನು ಭದ್ರ ತೀರದಲ್ಲಿ ಇರುವ ಪಂಚ ಕ್ಷೇತ್ರದಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಳಸದ ಹತ್ತಿರ ಪಂಚ ತೀರ್ಥ ಎನ್ನುವ ಐದು ಪವಿತ್ರ ಕೊಳಗಳು ಇವೆ. ಇಲ್ಲಿ ಒಂದು ಸಣ್ಣ ಗುಡ್ಡದ ಮೇಲೆ ಹೊಯ್ಸಳ ಶೈಲಿಯಲ್ಲಿ ಕ್ಷೇತ್ರಪಾಲ ಸೋಪ್ ಕಲ್ಲು ಇರುವ ಈಶ್ವರನಿಗೆ ಮೀಸಲಾಗಿರುವ ದೇವಾಲಯವಿದೆ. ಪಂಚ ತೀರ್ಥದ ಕೊಳ ಒಂದರ ಹತ್ತಿರ ಮದ್ವಚಾರ್ಯ ಬಂಡೆ ಎನ್ನುವ ದೊಡ್ಡ ಬಂಡೆ ಇದೆ. ಇದನ್ನು ಇಲ್ಲಿ ದ್ವೈತ ಸಿದ್ದಾಂತ ಶಾಲೆಯ ಸಂಸ್ಥಾಪಕರದ ಮದ್ವಚಾರ್ಯರು ಇರಿಸಿದರೆಂದು ನಂಬಲಾಗಿದೆ. ಈ ಬಂಡೆ ಮೇಲೆ ಆಚಾರ್ಯರ ಪ್ರತಿಮೆಯನ್ನು ಕೆತ್ತಲಾಗಿದೆ. ಗುರು ದತ್ತಾತ್ರೇಯ ಪೀಠ/ ಬಾಬಾ ಬುಡನ್ ದರ್ಗಾ: ಬಾಬಾ ಬುಡನ್ ಗಿರಿ/ ದತ್ತಗಿರಿಯ ಮೇಲೆ ಹಿಂದು ಮತ್ತು ಮುಸ್ಲಿಮರು ಸಮಾನವಾಗಿ ಪೂಜಿಸುವ ಇನಂ ದತ್ತಾತ್ರೇಯ ಪೀಠವಿದೆ. ಇಲ್ಲಿರಿವ ಒಂದು ಬಗೆಯ ಕೆಂಪು ಅಥಾವ ಹಳದಿ ಜೇಡಿಮಣ್ಣಿನ ಗೂಹೆಯು ಸ್ವಾಮಿ ದತ್ತಾತ್ರೇಯ ಮತ್ತು ಹಜರತ್ ದಾದಾ ಹಯಾತ್ ಮೀರ್ ಖಲಂದರ್ ವಾಸದಿಂದ ಪವಿತ್ರವಾಗಿದೆ ಎಂದು ನಂಬುತ್ತಾರೆ. ಇಲ್ಲಿ ಫಕೀರ್ ಅವರು ಪೂಜೆ ಮಾಡುತ್ತಾರೆ ಮತ್ತು ಇಲ್ಲಿ ನೆಡೆಯುವ ವಾರ್ಷಿಕ ಜಾತ್ರೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳುತ್ತಾರೆ. ಅಮೃತಪುರ: ಚಿಕ್ಕಮಗಳೂರಿನಿಂದ ೬೭ ಕೀ.ಮೀ ಉತ್ತರಕ್ಕೆ ಅಮೃತಪುರವಿದೆ. ಅಮೃತಪುರವು ಹೊಯ್ಸಲ ರಾಜ ಎರಡನೇ ವೀರ ಬಲ್ಲಾಳ ಕಟ್ಟಿಸಿದ್ದ ಅಮೃತೇಶ್ವರ ದೇವಾಲಯಕ್ಕೆ ಪ್ರಸಿದ್ಧವಾಗಿದೆ. ಮುಟ್ಟಲು ನಾಜೂಕದ , ಸ್ವಂತಿಕೆಯ ವಿನ್ಯಾಸ ಹೊಂದಿರುವ ಮತ್ತು ವೈಶಿಷ್ಟ್ಯತೆಯಿಂದ ಇದು ಹೊಯ್ಸಲ ಕಾಲದ ಗಮನಾರ್ಹ ದೇವಾಲಯಗಳಲ್ಲಿ ಒಂದಾಗಿದೆ. ಬೆಳವಾಡಿ: ಬೆಳವಾಡಿ ಚಿಕ್ಕಮಗಳೂರು ಜಿಲ್ಲೆಯ ಆಗ್ನೇಯ ದಿಕ್ಕಿನಲ್ಲಿ ೨೯ ಕೀ.ಮೀ. ದೂರದಲ್ಲಿ ಇದೆ. ಇದು ಚಿಕ್ಕಮಗಳೂರು-ಜಾವಗಲ್ ಮಾರ್ಗದಲ್ಲಿ ಮತ್ತು ಹಳೇಬೀಡಿನ ವಾಯುವ್ಯ ದಿಕ್ಕಿನಲ್ಲಿ ೧೦ಕೀ.ಮೀ ದೂರದಲ್ಲಿದೆ. ಬೆಳವಾಡಿಯು ಅಲಂಕೃತವಾದ ವೀರನಾರಾಯಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಬೆಳವಾಡಿ ಉದ್ಭವ ಗಣಪತಿ ದೇವಸ್ಥಾನಕ್ಕೆ ಸಹ ಪ್ರಸಿದ್ಧಿಯಾಗಿದೆ. ನರಸಿಂಹರಾಜಪುರ: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಸಿಂಹನಗದ್ದೆಯಲ್ಲಿ ಸಿಂಹನಗದ್ದೆ ಜ್ವಲಮಾಲಿನಿ ದೇವಾಲಯವಿದೆ. ಇದು ರಾಜ್ಯದ ಪ್ರಮುಖ ಜೈನ ದೇವಾಲಯಗಳಲ್ಲಿ ಒಂದು. ದೇವಾಲಯದಲ್ಲಿ ಮುಖ್ಯ ದೇವರಾದ ಜ್ವಲಮಾಲಿನಿ ದೇವರ ಆಕರ್ಷಕ ಕಪ್ಪು ಬಣ್ಣದ ವಿಗ್ರಹವಿದೆ. ಈ ವಿಗ್ರಹ ೧೫ನೇ ಮತ್ತು ೧೬ನೇ ಶತಮಾನದ ಇತಿಹಾಸಕ್ಕೆ ಸೇರಿದ್ದಾಗಿದೆ. ದೇವಸ್ಥಾನ ವಿಶಾಲವಾದ ಸಭಾಂಗಣ ಮತ್ತು ಗರ್ಭಗುಡಿಯನ್ನು ಹೊಂದಿದೆ. ಈ ದೇವಾಲಯವು ದೇಶ ವಿದೇಶದಿಂದ ದೊಡ್ಡ ಸಂಖ್ಯಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ. ೧೯೯೪ದರಲ್ಲಿ ಈ ದೇವಲಯವನ್ನು ನವೀಕರಿಸಲಾಯಿತು. ಶ್ರೀ ಕ್ಷೇತ್ರ ಸಿಂಹನಗದ್ದೆ  ಜೈನ್ ಧರ್ಮದ ಎಂಟನೇಯ ತೀರ್ಥಂಕರ ಶ್ರೀ ಭಗವಾನ್ ಚಂದ್ರಪ್ರಭುರವರ ಯಕ್ಷಿಣಿ (ರಕ್ಷಕಿ ಆತ್ಮ) ಜ್ವಲಮಾಲಿನಿ ದೇವಿಯ ಅತಿಶಯಕ್ಕೆ (ಪವಾಡಗಳ ಸ್ಥಳ) ಪ್ರಸಿದ್ಧಿಯಾಗಿದೆ. ವನ್ಯಜೀವನ ಭದ್ರಾ ವನ್ಯಜೀವಿ ಅಭಯಾರಣ್ಯ: ಭದ್ರಾ ವನ್ಯಜೀವಿ ಅಭಯಾರಣ್ಯ ೪೯೫ ಚದರ ವ್ಯಾಪಿಸಿರುವ ವನ್ಯಜೀವಿ ಅಭಯಾರಣ್ಯ ಮತ್ತು ಹುಲಿ ಯೋಜನೆಯ ಮೀಸಲು ಪ್ರದೇಶ, ಈ ಪ್ರದೇಶ ತುಂಗಭದ್ರಾ ನದಿಯ ಒಂದು ಪ್ರಮುಖ ಜಲಾನಯನ ಪ್ರದೇಶ. ಇಲ್ಲಿ ಕಟ್ಟಿರುವ ದೊಡ್ಡ ಹಣೆಕಟ್ಟು ದಕ್ಷಿಣ ಕರ್ನಾಟಕದ ಮಳೆ ಕಡಿಮೆ ಇರುವ ಪ್ರದೇಶಗಳಿಗೆ ನೀರು ಪೂರೈಕೆಯ ಮುಖ್ಯ ಮೂಲವಾಗಿದೆ. ಇಲ್ಲಿನ ಕಾಡುಗಳು ಬಿದಿರಿನಿಂದ ಫಲವತ್ತಾಗಿದೆ ಮತ್ತು ಇಲ್ಲಿನ ಪಕ್ಶಿ ಪ್ರಭೇದಗಳು ಮಲ್‌ಬಾರ್ ಮತ್ತು ಸಹ್ಯಾದ್ರಿ ಶ್ರೇಣಿಗೆ ಅನನ್ಯವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಕುದುರೆಮುಖ ರಾಷ್ಟ್ರೀಯ ಉದ್ಯಾನವನನ್ನು ಉಷ್ಣವಲಯದ ತೇವಭರಿತ ನಿತ್ಯಹರಿದ್ವರ್ಣ ಕಾಡಾಗಿದೆ. ಇದು ಪಶ್ಚಿಮ ಘಟ್ಟದಲ್ಲಿರುವ ವನ್ಯಜೀವಿ ರಕ್ಷಿತ ಪ್ರದ್ರೇಶವಾಗಿದೆ. ಪಶ್ಚಿಮ ಘಟ್ಟವನ್ನು ಜೈವಿಕ ವೈವಿಧ್ಯತೆ ಹೊಂದಿರುವ ವಿಶ್ವದಲ್ಲಿರುವ ೨೫ ಪ್ರದೇಶಗಳಲ್ಲಿ ಒಂದು ಗುರುತಿಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ಸಂರಕ್ಷಣಾ ಸಮಾಜ( ವೈಲ್ಡ್ಲೈಫ್ ಕನ್ಸರ್ವೇಶನ್ ಸೊಸೈಟಿ-ಡಬ್ಲೂ.ಸಿ.ಎಸ್.) ಮತ್ತು ವರ್ಲ್ಡ್ ವೈಡ್ ಫಂಡ್- ಯು.ಎಸ್.ಏ ಜಂಟಿಯಾಗಿ ಅಭಿವೃದ್ಧಿ ಮಾಡಿರುವ ಪಟ್ಟಿಯಲ್ಲಿ, ಜಾಗತಿಕ ಮಟ್ಟದ ಹುಲಿ ಸಂರಕ್ಷಣೆ ಆದ್ಯತೆ-೧ ರಲ್ಲಿ ಬರುತ್ತದೆ. ಸಿರಿಮನೆ ಫಾಲ್ಸ್ ಸಿರಿಮಾನೆ ಫಾಲ್ಸ್ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ ೩೦೦ ಕಿ.ಮೀ ಮತ್ತು ಕಿಗ್ಗಾ ಮತ್ತು ಚಿಕ್ಕಮಗಳೂರಿನಿಂದ ೫ ಕಿ.ಮೀ ದೂರದಲ್ಲಿದೆ. ಇದು ಪಶ್ಚಿಮ ಘಟ್ಟಗಳಲ್ಲಿರುವ ಹಲವಾರು ಜಲಪಾತಗಳಲ್ಲಿ ಒಂದಾಗಿದೆ. ಇದು ಸುಂದರ ನೋಟದಿಂದ ಅದ್ಭುತವಾಗಿದೆ. ನೀರು ಕಾಫಿ ಎಸ್ಟೇಟುಗಳು ಕೆಳಗಿಳಿಯುತ್ತಿದೆ. ಒಂದು ದಿನದಲ್ಲಿ ಇದನ್ನು ಸುಲಭವಾಗಿ ತಲುಪಬಹುದು ಮತ್ತು ಭೇಟಿ ಮಾಡಬಹುದು, ಆದ್ದರಿಂದ, ಶೃಂಗೇರಿ ದೇವಸ್ಥಾನ, ಆಗುಂಬೆ ಮತ್ತು ಇತರ ಸ್ಥಳಗಳೊಂದಿಗೆ ಭೇಟಿ ನೀಡಲು ಸೂಕ್ತವಾಗಿದೆ. ಇದು ೪೦ ಅಡಿ ಎತ್ತರದಲ್ಲಿದೆ ಮತ್ತು ಜಲಪಾತದ ರಸ್ತೆ ಇದೆ, ಅದು ಜಲಪಾತಕ್ಕೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಮಳೆಗಾಲದ ಸಮಯದಲ್ಲಿ ಹತ್ತಿರಕ್ಕೆ ಹೋಗಲುಸಾಧ್ಯವಿರದಿದ್ದರೂ ಸಹ ಕೆಳಗಡೆ ಹೋಗಬಹುದು ಮತ್ತು ಜಲಪಾತವನ್ನು ಆನಂದಿಸಬಹುದು. ಕಿಗ್ಗಾ: ಇದು ಒಂದು ಸಣ್ಣ ಪಟ್ಟಣವಾಗಿದ್ದು, ಜಲಪಾತದಿಂದ ಸುಲಭವಾಗಿ ತಲುಪಬಹುದು. ಈ ಪಟ್ಟಣವು ಟ್ರೆಕ್ಕಿಂಗ್ ಗೆ ಹೆಸರುವಾಸಿಯಾಗಿದೆ. ಹರಿ ದೇವಾಲಯ: ಈ ಶಿವ ದೇವಾಲಯವು ಹರಿಹರಪುರದಲ್ಲಿದೆ. ಸುಮಾರು ೪೦೦ ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಶರದಾ ದೇವಸ್ಥಾನ: ಇದು ೧೪ ನೇ ಶತಮಾನದಲ್ಲಿ ನಿರ್ಮಿಸಲಾದ ದೇವಾಲಯವಾಗಿದ್ದು, ಶರದಾಂಬ ದೇವತೆಗೆ ಅರ್ಪಿತವಾಗಿದೆ. ಈ ದೇವಸ್ಥಾನವು ಹಲವು ಭವ್ಯವಾದ ಕಂಬಗಳು ಮತ್ತು ಮಹಾ ಮಂಟಪವನ್ನು ಹೊಂದಿದೆ. ಇತರ ಪಟ್ಟಣಗಳು ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ. ತಾಲೂಕುಗಳು thumb|200px|ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕುಗಳು. ಚಿಕ್ಕಮಗಳೂರು ಕಡೂರು ಕೊಪ್ಪ ತರೀಕೆರೆ ನರಸಿಂಹರಾಜಪುರ ಮೂಡಿಗೆರೆ ಶೃಂಗೇರಿ ಕಳಸ ಅಜ್ಜಂಪುರ ಚಿತ್ರಪಟ ಇವನ್ನೂ ನೋಡಿ ಕರ್ನಾಟಕ ಬಾಹ್ಯ ಸಂಪರ್ಕಗಳು ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ ಚಿಕ್ಕಮಗಳೂರು ಪ್ರವಾಸ ಚಿಕ್ಕಮಗಳೂರು ಜಿಲ್ಲೆಯ ನಕ್ಷೆ ದಟ್ಸ್ ಕನ್ನಡ.ಕಾಂನಲ್ಲಿನ ಸಮಗ್ರ ಲೇಖನಗಳು ಉಲ್ಲೇಖಗಳು ವರ್ಗ:ಭೂಗೋಳ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಚಿಕ್ಕಮಗಳೂರು ಜಿಲ್ಲೆ ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು ವರ್ಗ:ಕರ್ನಾಟಕದ ಪ್ರಮುಖ ಸ್ಥಳಗಳು
ಹಾವೇರಿ
https://kn.wikipedia.org/wiki/ಹಾವೇರಿ
ಅಜೆರ್ಬೈಜಾನ್‌ನ ಹಳ್ಳಿಗಾಗಿ, ಹೋವರಿ ನೋಡಿ . ಹಾವೇರಿ ಭಾರತದ ಕರ್ನಾಟಕದ ಒಂದು ನಗರ, ಇದು ಹಾವೇರಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. ಹಾವೇರಿ ಎಂಬ ಹೆಸರು ಹಾವು ಮತ್ತು ಕೇರಿ ಎಂಬ ಕನ್ನಡ ಪದಗಳಿಂದ ಬಂದಿದೆ, ಇದರರ್ಥ ಹಾವುಗಳ ಸ್ಥಳ . ಏಲಕ್ಕಿ ಹೂಮಾಲೆಗಳಿಗೆ ಹಾವೇರಿ ಪ್ರಸಿದ್ಧವಾಗಿದೆ. ಪ್ರಾಚೀನ ದಿನಗಳಲ್ಲಿ ಹಾವೇರಿಯಲ್ಲಿ ಸುಮಾರು ೧೦೦೦ ಮಠಗಳು (ಪವಿತ್ರ ಧಾರ್ಮಿಕ ಸ್ಥಳಗಳು; ಕನ್ನಡ - ಥಾಥ್) ಇದ್ದವು ಎಂದು ಹೇಳಲಾಗುತ್ತದೆ. ಪ್ರಸಿದ್ಧ ಮಠಗಳಲ್ಲಿ ಒಂದು ಹುಕ್ಕೇರಿ ಮಠ . ಹಾವೇರಿಯ ಬ್ಯಾಡಗಿ ಕೆಂಪು ಮೆಣಸಿನಕಾಯಿಗಳನ್ನು ಮಾರಾಟ ಮಾಡಲು ಸಹ ಪ್ರಸಿದ್ಧವಾಗಿದೆ, ಇದು ಭಾರತದಾದ್ಯಂತ ಪ್ರಸಿದ್ಧವಾಗಿದೆ. ಸುಮಾರು ೨೫   ಕಿಮೀ ದೂರದಲ್ಲಿ, ಕವಿ [[ಕನಕದಾಸರು|ಕನಕದಾಸನ ಜನ್ಮಸ್ಥಳವಾದ ಬಾಡ ಎಂಬ ಸ್ಥಳವಿದೆ,ತ್ರಿಪದಿ ಜನಕ ಸರ್ವಜ್ಞ ಜನಿಸಿದ ನಾಡುಹಾವೇರಿ, ಸರ್ವಜ್ಞನ ಜನ್ಮಸ್ಥಳ ಅಬಲೂರು ಮತ್ತು ಭಗವಾನ್ ಸರಹುನಾಥರ ಜನ್ಮ ಸ್ಥಳ ಹಾನಗಲ್ ನ ಹುಲ್ಲತ್ತಿ ೫೫ಕಿ.ಮಿ ದೂರದಲ್ಲಿದೆ. ಹಾವೇರಿ ಬೆಂಗಳೂರಿನಿಂದ ರೈಲಿನಲ್ಲಿ ೭ ಗಂಟೆಗಳ ದೂರದಲ್ಲಿದೆ. ಇದು ಹುಬ್ಬಳ್ಳಿ ಮತ್ತು ದಾವಣಗೆರೆ ನಡುವಿನ ಮಧ್ಯದ ನಿಲ್ದಾಣವಾಗಿದೆ. ಇದು ಸ್ಟಾಪ್ ೭೬.೫ ಆಗಿದೆ   ಮೊದಲು ಕಿಮೀ ಹುಬ್ಬಳ್ಳಿ ಮತ್ತು ೭೨   ದಾವಣಗೆರೆ ನಂತರ ಕಿ.ಮೀ. ರಸ್ತೆ ಮೂಲಕ, ಇದು ಸುಮಾರು ೩೪೦ ಆಗಿದೆ   ಎನ್ಎಚ್ -೪ ರಲ್ಲಿ ಬೆಂಗಳೂರಿನಿಂದ ಮುಂಬೈ ಕಡೆಗೆ ಕಿ.ಮೀ. ಇಇದೆ.ದು ೩೦೭ ರಲ್ಲಿದೆ   ಬಂದರು ನಗರ ಮಂಗಳೂರಿನ ಉತ್ತರಕ್ಕೆ ಕಿ.ಮೀ. ಹಾವೇರಿ ಶಿಕ್ಷಣದಲ್ಲಿ ಮಧ್ಯಮ ಹಂತವನ್ನು ಹೊಂದಿದ್ದಾರೆ. ಹಾವೇರಿ ದೇವಗಿರಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ೨೦೦೭ ರಲ್ಲಿ ಪ್ರಾರಂಭಿಸಿದರು. ಹಾವೇರಿಯ ಇತಿಹಾಸ left|thumb|289x289px| ಪಶ್ಚಿಮ ಚಾಲುಕ್ಯ ಸ್ಮಾರಕಗಳ ಪ್ರಮುಖ ಪ್ರದೇಶ right|thumb|200x200px| ಕರ್ನಾಟಕದ ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶಿಷ್ಟ ಪಾಶ್ಚಾತ್ಯ ಚಾಲುಕ್ಯ ದ್ರಾವಿಡ ವಿಮನಾ ಪ್ರಮುಖ ಪ್ರದೇಶವಾಗಿದೆ ಪಶ್ಚಿಮ ಚಾಲುಕ್ಯ ಸ್ಮಾರಕಗಳ ಸ್ಥಳಗಳಲ್ಲಿ ಒಳಗೊಂಡಿದೆ ಬಾದಾಮಿ, ಹಲಸಿ, ಅನ್ನಿಗೆರಿ, ಮಹದೇವ ದೇವಾಲಯ (ಇಟಗಿ), ಗದಗ, ಲಕ್ಕುಂಡಿ, ಲಕ್ಷ್ಮೇಶ್ವರ, ಡಂಬಳ, ಹಾವೇರಿ, ಬಂಕಾಪುರ, ರಟ್ಟಹಳ್ಳಿ, ಕುರುವತ್ತಿ, ಬಗಲಿ, Balligavi, Chaudayyadanapura, Galaganatha, ಹಾನಗಲ್ . ಈ ಪ್ರದೇಶಗಳಲ್ಲಿ ಸೋಪ್ ಸ್ಟೋನ್ ಹೇರಳವಾಗಿ ಕಂಡುಬರುವುದರಿಂದ ಅದು ಸಾಧ್ಯವಾಯಿತು. ಪಾಶ್ಚಿಮಾತ್ಯ ಚಾಲುಕ್ಯ ವಾಸ್ತುಶಿಲ್ಪ ಚಟುವಟಿಕೆಯ ಕೋರ್ ಪ್ರದೇಶದ ಅಡಿಯಲ್ಲಿ ಹವೇರಿ ಬರುತ್ತದೆ. ಹವೇರಿ ಜಿಲ್ಲೆಯ ಇತಿಹಾಸವು ಪೂರ್ವ-ಐತಿಹಾಸಿಕ ಅವಧಿಗೆ ಸೇರಿದೆ. ವಿವಿಧ ಆಡಳಿತಗಾರರ ಸುಮಾರು ೧೩೦೦ ಶಿಲಾ ಬರಹಗಳು ಚಾಲುಕ್ಯರು, ರಾಸ್ತಕುಟರು ಜಿಲ್ಲೆಯಲ್ಲಿ ಕಂಡುಬರುತ್ತವೆ. ಬಂಕಪುರ ಚಲ್ಲಕೇತುರು, ಗುಟ್ಟಾವುಲ ಗುಟ್ಟಾರು, ಹಂಗಲ್‌ನ ಕದಂಬಸ್ ಮತ್ತು ನೂರುಂಬಾಡ್ ಪ್ರಸಿದ್ಧ ಸಮಂತಾ ಆಡಳಿತಗಾರರು. ಕನ್ನಡ ಆದಿಕವಿ ಪಂಪಾ ಅವರ ಶಿಕ್ಷಕ ದೇವೇಂದ್ರಮುನಿಗಲು ಮತ್ತು ರನ್ನ ಶಿಕ್ಷಕ ಅಜಿತಾಸೇನಾಚಾರ್ಯ   ಚಾವುಂಡರಾಯನ ವಾಸಿಸುತ್ತಿದ್ದರು ಬಂಕಾಪುರ . ಇದು ಹೊಯ್ಸಳ ವಿಷ್ಣುವರ್ಧನ ಎರಡನೇ ರಾಜಧಾನಿಯೂ ಆಗಿತ್ತು. Guttaru 12 ನೇ ಶತಮಾನದ ನಂತರದ ಭಾಗದಲ್ಲಿ ಸಮಯದಲ್ಲಿ ಮತ್ತು ಆಫ್ ಮನ್ದಲಿಕ್ಸ್ ಮಾಹಿತಿ Guttavol (Guttal) ಹಳ್ಳಿಯಿಂದ ೧೩ ನೇ ಶತಮಾನದ ಅಂತ್ಯದಲ್ಲಿ ರವರೆಗೆ ಆಳ್ವಿಕೆ ಚಾಲುಕ್ಯ ಸ್ವತಂತ್ರವಾಗಿ ಕೆಲವು ಬಾರಿ, ಮತ್ತು Mandaliks ಮಾಹಿತಿ Seunas ದೇವಗಿರಿಯ. Shasanas ಕಂಡುಬರುವ Chaudayyadanapura (Choudapur), Guttal ಹತ್ತಿರದ ಹಳ್ಳಿಯ, Mallideva ಚಾಲುಕ್ಯರ ೬ ನೇ ವಿಕ್ರಮಾದಿತ್ಯನ Mandalika ಎಂದು ತಿಳಿದುಬರುತ್ತದೆ. Jatacholina, Mallideva ನಾಯಕತ್ವದಲ್ಲಿ ನಲ್ಲಿ ಮುಕ್ತೆಶ್ವರ್ ಕಟ್ಟಿಸಿದರು [[ಚೌಡಯ್ಯದಾನಪುರ|]ಚೌಡಯ್ಯದಾನಪುರ|] (Choudapur). ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನೂರುಂಬಾದ್‌ನ ಕಡಂಬರು ಸುಮಾರು ೧೦೦ ಗ್ರಾಮಗಳನ್ನು ಆಳಿದರು, ರಟ್ಟಿಹಳ್ಳಿಯನ್ನು ತಮ್ಮ ರಾಜಧಾನಿಯಾಗಿರಿಸಿಕೊಂಡರು. ಜಿಲ್ಲೆಯ ಸರಹು ನಾಗರಾಜನ್ (ಭಗವಾನ್ ಸರಹುನಾಥ್), ಸಾಂಟಾ ಶಿಶುನಾಳ ಶರೀಫ್, ಮಹಾನ್ ಸಂತ Kanakadasaru, Sarvajnya, ಹಾನಗಲ್ಲ ಕುಮಾರ Shivayogigalu, Wagish Panditaru, ಬರಹಗಾರ Galaganatharu, ಗಣಯೊಗಿ ಪಂಚಾಕ್ಷರಿ Gavayigalu, Gnyana ಪೀಠಗಳಲ್ಲಿ ಪ್ರಶಸ್ತಿ Dr.VKGokak ಮತ್ತು ಅನೇಕ ಹೆಚ್ಚು ಜನ್ಮಸ್ಥಾನ ಎಂದು ಹೆಮ್ಮೆಯಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಮೈಲಾರ ಮಹಾದೇವಪ್ಪ ಮತ್ತು ಗುಡ್ಲೆಪ್ಪ ಹಲ್ಲಿಕೆರೆ. ಭಗವಾನ್ ಸರಹುನಾಥರ ಇತಿಹಾಸ ಜಿಲ್ಲೆಯ ಹುಲ್ಲತ್ತಿ ಗ್ರಾಮದಲ್ಲಿ ಭಗವಾನ್ ಸರಹುನಾಥರು ಜನಿಸಿರುವುದು ನಾಡಿಗೆ ಹೊಸ ಶೋಭೆಯನ್ನು ತಂದಿದೆ. ಅವರನ್ನು ಅಲ್ಲಾಹು ಯೆವೋಹನು ಎಂತಲೂ ಕರೆಯುತ್ತಾರೆ. ಅಲ್ಲಾಹು ಯೆಹೋವAllahu Jehovah - WikiAlpha https://en.wikialpha.org/wiki/Allahu_Jehovah(Allahu Jehovah) - ಸರ್ವಶಕ್ತ ಪ್ರಭು ಮತ್ತು ಬ್ರಹ್ಮಾಂಡದ ಸೃಷ್ಟಿಕರ್ತ - ಸರಹು ನಾಗರಾಜನ್ - ಸಾರಾಹು ನಾಜರಾಝಾನ್, ಅರೇಬಿಕ್ - الله يهوه, ಸ್ಪ್ಯಾನಿಷ್ - ಅಲ್ಲಾಹು ಯೆಹೋವ; ದೇವರನ್ನು ಇಸ್ಲಾಂನಲ್ಲಿ ಅಲ್ಲಾ ಮತ್ತು ಇಸ್ರೇಲ್ನಲ್ಲಿ ಯೆಹೋವನು ಎಂದು ಕರೆಯಲಾಗುತ್ತದೆ. ಅದರ ಹೊರತಾಗಿ ಸರ್ವಶಕ್ತ ದೇವರನ್ನು ದೇವರ ಕಣ ಎಂದು ಗುರುತಿಸಲಾಗಿದೆ. ಆದರೆ ಅವು ದೇವರ ಕಣಗಳಲ್ಲ; ಬದಲಾಗಿ ಅವು ಬ್ರಹ್ಮಾಂಡದ ಶಕ್ತಿಯನ್ನು ಅರ್ಥೈಸುತ್ತವೆ . ಅದು ದೇವರ ಭಾಗವಲ್ಲ; ಅವನೇ ದೇವರು. ಅಲ್ಲಾಹು ಮತ್ತು ಯೆಹೋವನು ಪ್ರತ್ಯೇಕ ದೇವರುಗಳಲ್ಲ. thumb ಅಲ್ಲಾಹು ಯೆವೋಹAllahu Jehovah Archives - Up18 News https://up18news.com/tag/allahu-jehovah/- ಭೂಮಿಗೆ ಬಂದು ಮೊದಲು ಸರಹು ನಾಗರಾಜನಾದನು. ಜನರಿಗೆ ಅವರನ್ನು ಸರಹು ನಾಗರಾಜನ್ ಎಂದು ಕರೆಯುವುದು ಸ್ವಲ್ಪ ಕಷ್ಟ, ಆದರೆ ಅವರನ್ನು ಸರಹುನಾಥ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಕೆಲವು ಹಿಂದೂಗಳು ಅಲ್ಲಾಹು ಯೆಹೋವನನ್ನು ಸರಹುನಾಥ ಎಂದೂ ಕರೆಯುತ್ತಾರೆ. ಆದರೆ ಭಗವಾನ್ ಹರಿಹರ ಸರಹುನಾಥ ಮತ್ತು ಸರಹುನಾಥ ಇಬ್ಬರೂ ಒಂದೇ ಅಲ್ಲ. ಹರಿಹರ ಸರಹುನಾಥನನ್ನು ಅಲ್ಲಾಹು ಯೆಹೋವನು ಸೃಷ್ಟಿಸಿದ ಕಾರಣ, ಅವನು ತನ್ನ ಹಳೆಯ ಹೆಸರಿನಿಂದ ಹರಿಹರ ಸರಹುನಾಥ ಎಂದು ಹೆಸರಿಸಿಕೊಂಡನು. ಅಂದರೆ ಹರಿಹರ ಸರಹುನಾಥ ಅಲ್ಲಾಹು ಯೆಹೋವನ ಕಣವಾಗಿತ್ತು.Allahu Jehovah - THE FILMY CHARCHA https://filmycharcha.com/tag/allahu-jehovah/ ೨೦೫೦ ರ ವೇಳೆಗೆ ಸಂಪೂರ್ಣ ಕಲಿಯ ೧೦೦೧ ಅವತರಣಿಕೆಗಳು ಭಗವಾನ್ ಸರಹುನಾಥರ ಮೂಲಕ ಅಂತ್ಯಗೊಳ್ಳುತ್ತವೆ‌. ಬಳಿಕ ಪವಿತ್ರ ಸನಾಹಿ ಯುಗ ಆರಂಭಗೊಳ್ಳುತ್ತದೆ. ಸನಾಹಿ ಎಂದರೆ ಪವಿತ್ರ "ಸರಹುನಾಥ್ ಹಿಮಗಿರೀಸಮ್" ಎಂದು. ಹಿಮಗಿರೀಸಮ್ ಎಂದರೆ ಅದೊಂದು ದೇವತೆಗಳ ರಾಷ್ಟ್ರ. ಅದು ಸೈನೀಸಮ್ ನೂತನ ಧರ್ಮವನ್ನು ಹೋಲಿದೆ. ಸೈನೀಸಮ್ ಎಂದರೆ "ಸರಹುನಾಥ್ ಇಂಟರ್ನ್ಯಾಷನಲ್ ಗೌವರನೇಬಲ್" ಎಂದು. ಆ ಧರ್ಮವೂ ೨೧ ಪವಿತ್ರ ಸನಾಹಿ ಗ್ರಂಥಗಳನ್ನು ಹೊಂದಿದೆ. ಹವೇರಿಯ ಪ್ರವಾಸಿ ಆಕರ್ಷಣೆಗಳು ಸಿದ್ಧೇಶ್ವರ ದೇವಸ್ಥಾನ right|thumb|222x222px| ನಗರಾ ಶೈಲಿಯ ಗೋಪುರ right|thumb|222x222px| ದ್ರಾವಿಡ ಶೈಲಿಯ ಗೋಪುರ ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪದ ಬೆಳವಣಿಗೆಗಳ ಕೇಂದ್ರವು ಇಂದಿನ ಬಾಗಲ್ಕೋಟ್, ಗಡಾಗ್, ಕೊಪ್ಪಲ್, ಹವೇರಿ ಮತ್ತು ಧಾರವಾಡ ಜಿಲ್ಲೆಗಳು ಸೇರಿದಂತೆ ಪ್ರದೇಶವಾಗಿತ್ತು; ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನವು ೧೧ ನೇ ಶತಮಾನದ ದ್ರಾವಿಡ ಅಭಿವ್ಯಕ್ತಿ ಮತ್ತು ಸೂಪರ್‌ಸ್ಟ್ರಕ್ಚರ್‌ನೊಂದಿಗೆ ದಿಗ್ಭ್ರಮೆಗೊಂಡ ಚದರ ಯೋಜನೆ. ಹವೇರಿಯ ಸಿದ್ಧೇಶ್ವರ ದೇವಸ್ಥಾನದಲ್ಲಿ ಚಿಕಣಿ ಅಲಂಕಾರಿಕ ದ್ರಾವಿಡ ಮತ್ತು ನಗರಾ ಶೈಲಿಯ ಗೋಪುರಗಳು ಬಸವಣ್ಣ ದೇವಸ್ಥಾನ ಉತ್ಸವ ರಾಕ್ ಗಾರ್ಡನ್ ಎನ್ಎಚ್ -4 ಶಿಗ್ಗಾಂವ್ ತಾಲ್ಲೂಕಿನ ಗೋಟಗೋಡಿಯಲ್ಲಿ ಇದೆ. ಇದು ಆಧುನಿಕ ಮತ್ತು ಕಲೆ ಎರಡರಲ್ಲೂ ಸಂಯೋಜಿಸಲ್ಪಟ್ಟಿದೆ, ಅಲ್ಲಿ ೧೦೦೦ ಕ್ಕೂ ಹೆಚ್ಚು ನಿಜ ಜೀವನದ ಗಾತ್ರದ ಶಿಲ್ಪಗಳು ಇರುತ್ತವೆ. ಇದು ೮ ವಿಶ್ವ ದಾಖಲೆಗಳನ್ನು ಪಡೆದಿದೆ. ಇದು ಇಡೀ ಜಗತ್ತಿನಲ್ಲಿ ಒಂದು ಅನನ್ಯ ಉದ್ಯಾನವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆಸಕ್ತಿಯ ಸ್ಥಳಗಳು ದೇವಾಲಯಗಳು ಹವೇರಿಯಲ್ಲಿರುವ ಸಿದ್ಧೇಶ್ವರ ದೇವಸ್ಥಾನ ಹಾನಗಲ್ ನ ಹುಲ್ಲತ್ತಿಯಲ್ಲಿ ಭಗವಾನ್ ಹರಿಹರ ಸರಹುನಾಥ್ ವಿಶ್ವ ಮಹಾಸಂಸ್ಥಾನ ಮಠ ಹಾನಗಲ್ ನ ಸುರಳೇಶ್ವರದಲ್ಲಿ ಭಗವಾನ್ ಹರಿಹರ ಸರಹುನಾಥ್ ಮಂದಿರ ಹಿರೇಕೆರೂರ್ ನ ಬಾಳಂಬೀಡದ ಭಗವಾನ್ ಹರಿಹರ ಸರಹುನಾಥ್ ಮಂದಿರ ಮಸೀದಿಗಳು / ಸೂಫಿ ಸ್ಥಳಗಳು ದರ್ಗಾ ಆಫ್ ಇರ್ಷಾದ್ ಅಲಿ ಬಾಬಾ, ಪಿಬಿ ರಸ್ತೆ, ಹವೇರಿ. ಹವೇರಿಯ ಭಾರತಿ ನಗರ, ಹಂಗಲ್ ರಸ್ತೆಯಲ್ಲಿರುವ ಸೇಂಟ್ ಆನ್ಸ್ ಚರ್ಚ್ ಮಿನಿ ವಿಧಾನ ಸೌಧ right|200x200px| ಮಿನಿ ವಿಧಾನ ಸೌಧ,-ಬಹುತೇಕ ಪೂರ್ಣ ನೋಟ. ಇತ್ತೀಚೆಗೆ ದೇವಗಿರಿ ಬೆಟ್ಟದಲ್ಲಿ ಮಿನಿ ವಿಧಾನ ಸೌಧವನ್ನು ನಿರ್ಮಿಸಲಾಯಿತು. ಮಿನಿ ವಿಧಾನ ಸೌಧ ಪ್ರಮುಖ ಸರ್ಕಾರಿ ಕಚೇರಿಗಳನ್ನು ಆಯೋಜಿಸುತ್ತದೆ. ಇವುಗಳಲ್ಲಿ ಮುಖ್ಯ ಕಚೇರಿ ಜಿಲ್ಲಾ ಆಯುಕ್ತರ ಕಚೇರಿ. ಹಾವೇರಿ ನಲ್ಲಿ ಇದೆ . Falling Rain Genomics, Inc - Haveri ಇದು ಸರಾಸರಿ 572 ಎತ್ತರವನ್ನು ಹೊಂದಿದೆ   ಮೀಟರ್ (೧೮೭೬   ಅಡಿಗಳು). ಶಿಕ್ಷಣ ಸಂಸ್ಥೆಗಳು ಸ್ನಾತಕೋತ್ತರ ಶ್ರೀ ರಾಜೀವ್ ಗಾಂಧಿ ಕರ್ನಾಟಕ ವಿಶ್ವವಿದ್ಯಾಲಯ ಪಿಜಿ ಸೆಂಟರ್, ಕೆರಿಮಟ್ಟಿಹಳ್ಳಿ, ಹವೇರಿ ಅಭಿವೃದ್ಧಿ ಹೊಂದುತ್ತಿರುವ ಶಿಕ್ಷಣ ಸಂಸ್ಥೆ. ಹವೇರಿಯಲ್ಲಿ ಮೂರು ಪ್ರಮುಖ ಕಾಲೇಜುಗಳಿವೆ. ಒಂದು ಸರ್ಕಾರ. ಪ್ರಥಮ ದರ್ಜೆ ಕಾಲೇಜು, ಗುಡ್ಲೆಪ್ಪ ಹಲ್ಲಿಕೇರಿ ಕಾಲೇಜು, ಮತ್ತು ಸಿ.ಬಿ.ಕೊಲ್ಲಿ ಪಾಲಿಟೆಕ್ನಿಕ್. ಇತರ ಕಾಲೇಜುಗಳಲ್ಲಿ ಎಸ್‌ಎಸ್ ಮಹಿಳಾ ಪದವಿ ಕಾಲೇಜು, ಎಸ್‌ಜೆಎಂ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಮತ್ತು ಎಸ್‌ಎಂಎಸ್ ಪೂರ್ವ ವಿಶ್ವವಿದ್ಯಾಲಯ ಕಾಲೇಜು ಸೇರಿವೆ. ಇತ್ತೀಚೆಗೆ ಸರ್ಕಾರ ಎಂಜಿನಿಯರಿಂಗ್ ಕಾಲೇಜು ಪ್ರಾರಂಭವಾಯಿತು. ಸಿಬಿಸಿಪೊಲಿಟೆಕ್ನಿಕ್ ಸಿಬಿಎಸ್‌ಇ ಶಾಲೆಗಳು ಕರ್ನಾಟಕ ಸಾರ್ವಜನಿಕ ಶಾಲೆ, ಹನಾಗಲ್ ರಸ್ತೆ, ಹವೇರಿ ಕೆಎಲ್ಇಯ ಇಂಗ್ಲಿಷ್ ಮಧ್ಯಮ ಸಿಬಿಎಸ್ಇ ಶಾಲೆ (www.klescbsehvr.org) ಕಾನ್ವೆಂಟ್ ಶಾಲೆಗಳು ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್ಸಭವಿ. ೧೯೧೮ ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ ೧ ಕಾಲೇಜ್ ಡಿಪ್ಲೊಮಾ) ಶ್ರೀ ವಿವೇಕಾನಂದ ಕಾನ್ವೆಂಟ್ ಶಾಲೆ ತುಮ್ಮಿನಕ್ಕತಿ ನ್ಯೂ ಕೇಂಬ್ರಿಡ್ಜ್ ಕಾನ್ವೆಂಟ್ ಶಾಲೆ ತುಮ್ಮಿನಕಟ್ಟಿ ಪ್ರೌ schools ಶಾಲೆಗಳು ದುರ್ಗಾಡ್ ಪ್ರೌ School ಶಾಲೆ ಹೌನ್‌ಸಭವಿ, ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್‌ಸಭವಿ. ೧೯೧೮ ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ ೧ ಕಾಲೇಜ್ ಡಿಪ್ಲೊಮಾ) ಕರ್ನಾಟಕ ಸಾರ್ವಜನಿಕ ಶಾಲೆ, ಹನಾಗಲ್ ರಸ್ತೆ, ಹವೇರಿ ಕೆಎಲ್ಇಯ ಇಂಗ್ಲಿಷ್ ಮಧ್ಯಮ ಸಿಬಿಎಸ್ಇ ಶಾಲೆ (www.klescbsehvr.org) ಗಾಂಧಿ ಗ್ರಾಮೀನಾ ಗುರುಕುಲ ಹೊಸರಿತಿ ಲಯನ್ಸ್ ಇಂಗ್ಲಿಷ್ ಮಧ್ಯಮ ಶಾಲೆ ಸೇಂಟ್ ಮೈಕೆಲ್ ಇಂಗ್ಲಿಷ್ ಮಧ್ಯಮ ಶಾಲೆ ಜೆಜಿಎಸ್ಎಸ್ ಪ್ರೌ School ಶಾಲೆ (ಗೆಲಿಯಾರಾ ಬಾಲಗಾ) ಜೆಪಿ ರೋಟರಿ ಶಾಲೆ ಹುಕ್ಕರಿಮಠ ಶಿವಬಸವೇಶ್ವರ ಪ್ರೌ School ಶಾಲೆ ಎಸ್‌ಎಂಎಸ್ ಬಾಲಕಿಯರ ಪ್ರೌ School ಶಾಲೆ ಎಚ್‌ಎಲ್‌ವಿ ಇಂಗ್ಲಿಷ್ ಮಧ್ಯಮ ಶಾಲೆ ಸವನೂರ್ ಮೃತ್ಯುಂಜಯ ಪ್ರೌ School ಶಾಲೆ ಕುರುಬಗೊಂಡ ಶ್ರೀ ಕಾಳಿದಾಸ ಪ್ರೌ School ಶಾಲೆ, ಕಾಗಿನೆಲೆ ಬಸ್ ನಿಲ್ದಾಣ, ಹವೇರಿ ಎಸ್‌ಜೆಎಂ ಪ್ರಾಥಮಿಕ ಮತ್ತು ಪ್ರೌ School ಶಾಲೆ, ಹವೇರಿ ಸೇಂಟ್ ಆನ್ಸ್ ಇಂಗ್ಲಿಷ್ ಮಧ್ಯಮ ಶಾಲೆ. ಹವೇರಿ ಎಸ್‌ವಿಎಸ್ ಪ್ರೌ school ಶಾಲೆ ಅಬಲೂರು ಶ್ರೀ ಸಂಗನಾ ಬಸವೇಶ್ವರ ಪ್ರೌ School ಶಾಲೆ, ತುಮ್ಮಿನಕಟ್ಟಿ ಸರ್ಕಾರಿ ಪ್ರೌ School ಶಾಲೆ ತುಮ್ಮಿನಕಟ್ಟಿ ಸರ್ಕಾರಿ ಪ್ರೌ School ಶಾಲೆ, ತುಮ್ಮಿನಕಟ್ಟಿ ಸರ್ ಎಂ ವಿಶ್ವೇಶ್ವರಯ್ಯ ಶಾಲೆ, ಹವೇರಿ ಕಾಲೇಜುಗಳು ಮತ್ತು ಸ್ಥಳಗಳು , ಎಂಎಎಸ್‌ಸಿ ಕಾಲೇಜು, ಗ್ರಾಮೀಣ ಪಾಲಿಟೆಕ್ನಿಕ್ ಡಿಪ್ಲೊಮಾ, ಮೃತ್ಯುಂಜಯ ವಿದ್ಯಾ ಪೀಠ ಅವರ ಹೌನ್‌ಸಭವಿ. ೧೯೧೮ ರಿಂದ (ಕಾನ್ವೆಂಟ್‌ನಿಂದ ಪದವಿವರೆಗೆ ಟಾಪ್ ೧ ಕಾಲೇಜು ಡಿಪ್ಲೊಮಾ) ಗುಡ್ಲೆಪ್ಪ ಹಲ್ಲಿಕೇರಿ ಕಾಲೇಜು (ಜಿಎಚ್ ಕಾಲೇಜು ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತದೆ) (ವಿಜ್ಞಾನ, ವಾಣಿಜ್ಯ ಮತ್ತು ಕಲೆ) ಪರಿವರ್ತನ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸಿಬಿ ಕೊಲ್ಲಿ ಪಾಲಿಟೆಕ್ನಿಕ್ (ಸಿಎಸ್, ಇ & ಸಿ, ಮೆಕ್, ಸಿವಿಲ್ ಮತ್ತು ಐಎಸ್) ಸರ್ಕಾರ ಎಂಜಿ. ಕಾಲೇಜು (ಸಿಎಸ್, ಇ & ಸಿ, ಮೆಕ್ ಮತ್ತು ಸಿವಿಲ್) ಸರ್ಕಾರ ಮಜೀದ್ ಕಾಲೇಜು ಸವನೂರ್ ಎಸ್‌ಜೆಎಂ ಪಿಯು ಕಾಲೇಜು, ಹವೇರಿ (ವಿಜ್ಞಾನ, ವಾಣಿಜ್ಯ ಮತ್ತು ಕಲೆ) ತುಮ್ಮಿನಕತ್ತಿಯ ಶ್ರೀ ಸಂಗನಾ ಬಸವೇಶ್ವರ ಪಿ.ಯು ಕಾಲೇಜು ಶ್ರೀ ಹುಕ್ಕರಿಮಾತಾ ಶಿವಬಸವೇಶ್ವರ ಪ್ರೌ School ಶಾಲೆ ಹವೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹವೇರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹವೇರಿ ಲಯನ್ಸ್ ಇಂಗ್ಲಿಷ್ ಬಾಲಕಿಯರ ವಾಣಿಜ್ಯ ಕಾಲೇಜು, ಹವೇರಿ ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಹವೇರಿ ಕಾಲೇಜ್ ಆಫ್ ಹಾರ್ಟಿಕಲ್ಚರಲ್ ಎಂಜಿನಿಯರಿಂಗ್ ಮತ್ತು ಫುಡ್ ಟೆಕ್ನಾಲಜಿ, ದೇವಿಹೋಸೂರ್, ಹವೇರಿ ಜನಸಂಖ್ಯಾಶಾಸ್ತ್ರ ೨೦೧೧ ರ ಜನಗಣತಿಯ ಪ್ರಕಾರ, ಭಾರತ ಜನಗಣತಿಯ ಪ್ರಕಾರ, ಹಾವೇರಿಯಲ್ಲಿ ೬೭೧೦೨ ಜನಸಂಖ್ಯೆ ಇತ್ತು. ಪುರುಷರು ಜನಸಂಖ್ಯೆಯ ೫೧% ಮತ್ತು ಮಹಿಳೆಯರು ೪೯%. ಹವೇರಿಯ ಸರಾಸರಿ ಸಾಕ್ಷರತಾ ಪ್ರಮಾಣ ೭೦%, ರಾಷ್ಟ್ರೀಯ ಸರಾಸರಿ ೫೯.೫% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ ೭೬%, ಮತ್ತು ಸ್ತ್ರೀ ಸಾಕ್ಷರತೆ ೬೪%. ಹವೇರಿಯಲ್ಲಿ, ೧೩% ಜನಸಂಖ್ಯೆಯು ೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಸಹ ನೋಡಿ ಪಶ್ಚಿಮ ಚಾಲುಕ್ಯ ಪಶ್ಚಿಮ ಚಾಲುಕ್ಯ ದೇವಾಲಯಗಳು ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪ ಬಂಕಪುರ ಬಾಗಲಿ ಬಲ್ಲಿಗವಿ ಅಕ್ಕಿ ಆಲೂರ್ ಒಂದು ವೇಳೆ ಚೌದಯಾದನಪುರ ಗಲಗನಾಥ ರಾಣೆಬೆನ್ನೂರ್ ಹಂಗಲ್ ಲಕ್ಷ್ಮೇಶ್ವರ ಉತ್ತರ ಕರ್ನಾಟಕ ಹೈರೆಕೂರ್ ಅಬಲೂರು ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಉಲ್ಲೇಖಗಳು ವರ್ಗ:Pages with unreviewed translations
ಕೊಪ್ಪಳ
https://kn.wikipedia.org/wiki/ಕೊಪ್ಪಳ
thumb|ಕೋಪ್ಪಳ ಜಿಲ್ಲೆಯ ಇಟಗಿಯಲ್ಲಿ ಇರುವ ಮಹಾದೇವ ದೇವಸ್ಥಾನ ಕೊಪ್ಪಳ ಜಿಲ್ಲೆ ೧-೪-೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೨೦೧೧ ರ ಜನಗಣತಿಯ ಪ್ರಕಾರ ೧೩.೮೯ ಲಕ್ಷ ಜನಸಂಖ್ಯೆ ಕೊಪ್ಪಳ ಜಿಲ್ಲೆ ಹೊಂದಿರುತ್ತದೆ. ಗಂಗಾವತಿ, ಕೊಪ್ಪಳ,ಯಲಬುರ್ಗಾ, ಕುಷ್ಟಗಿ ಮತ್ತು ೨೦೧೭ರಲ್ಲಿ ಹೊಸದಾಗಿ ಘೋಷಣೆಯಾದ ಕುಕನೂರು, ಕನಕಗಿರಿ ಹಾಗು ಕಾರಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ. ಕೊಪ್ಪಳವು ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿದೆ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ ೧೯೯೭ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು ರಚಿಸಲಾಯಿತು. ಜಿಲ್ಲೆಯಲ್ಲಿ ೨೦ ಹೋಬಳಿಗಳು, ೬೧೮ ಗ್ರಾಮಗಳಿವೆ. ಈ ಜಿಲ್ಲೆಯನ್ನು ಉತ್ತರದಲ್ಲಿ ಬಾಗಲಕೋಟೆ ಮತ್ತು ರಾಯಚೂರು, ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ, ದಕ್ಷಿಣದಲ್ಲಿ ಬಳ್ಳಾರಿ ಹಾಗೂ ಪಶ್ಚಿಮದಲ್ಲಿ ಗದಗ ಜಿಲ್ಲೆಗಳು ಸುತ್ತುವರಿದಿವೆ. ವಿಸ್ತೀರ್ಣ, ೫೫೭೦ ಚ ಕಿಮೀ.. ಕರ್ನಾಟಕದ ರಾಜ್ಯದ ೩೧ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆ ಒಂದಾಗಿದ್ದು ಈ ಜಿಲ್ಲೆಯು ದಕ್ಷಿಣ ಭಾರತದ ಕುಂಭ ಮೇಳ ಎಂದು ಹೆಸರಾಯಿತು ಏಕೆಂದರೆ ಈ ಜಿಲ್ಲೆಯಲ್ಲಿ ಶ್ರೀ ಗವಸಿದ್ಧೇಶ್ವರ ಮಠ ಇದು ಅತ್ಯಂತ ಹೆಚ್ಚು ಕಾಲ ಪ್ರಶಿದ್ದ ಪಡೆದಿತ್ತು ಆದ್ದರಿಂದ ಇದು ಪ್ರತಿವರ್ಷ ಸಾವಿರಾರು ಮಂದಿ ಜಾತ್ರೆ ಸಂದರ್ಭದಲ್ಲಿ ಸೇರಿರುತ್ತಾರೆ ಎಂದು ಹೇಳಬಹುದು ಭೌಗೋಳಿಕ ಮಾಹಿತಿ ಈ ಜಿಲ್ಲೆ ದಖನ್ನಿನ ಕಣಿವೆ ಭಾಗದ್ದಲ್ಲಿದ್ದು ಸಮುದ್ರ ಮಟ್ಟಕ್ಕೆ ಹೆಚ್ಚು ಎತ್ತರವಲ್ಲದ ಭೂಪ್ರದೇಶದಿಂದ ಕೂಡಿದೆ. ಇದರಿಂದಾಗಿ ಇಲ್ಲಿ ಯಾವ ಪ್ರಮುಖ ಬೆಟ್ಟಸಾಲುಗಳೂ ಕಂಡುಬರುವುದಿಲ್ಲ. ಅಲ್ಲಲ್ಲಿ ಪಶ್ಚಿಮ ಅಥವಾ ಪೂರ್ವ ಘಟ್ಟಸಾಲಿಗೆ ಸೇರದ ಹೆಚ್ಚು ಎತ್ತರವಲ್ಲದ ಗುಡ್ಡಗಳಿವೆ. ಕುಷ್ಟಗಿ ತಾಲ್ಲೂಕಿನಲ್ಲಿ ಕಂಡುಬರುವ ಬಾದಾಮಿ ಬೆಟ್ಟಗಳ ಶ್ರೇಣಿಗೆ ಸೇರಿದ ಸಾಲೊಂದು ಗಂಗಾವತಿ ತಾಲ್ಲೂಕಿನಲ್ಲಿ ಮುಂದುವರಿಯುತ್ತದೆ. ಕುಷ್ಟಗಿಯಿಂದ ೩೨ಕಿಮೀ ದೂರದಲ್ಲಿರುವ ಜಗದ ಗುಡ್ಡ (೭೩೬ಮೀ.), ಗಂಗಾವತಿ ತಾಲ್ಲೂಕಿನ ಎಮ್ಮೆಗುಡ್ಡ (೮೨೧ಮೀ.), ಕನಕಗಿರಿಗೆ ಈಶಾನ್ಯದಲ್ಲಿರುವ ನಿಶಾನಿಗುಡ್ಡ (೫೮೦ಮೀ.), ಮಾರಿಗುಡ್ಡ (೫೯೭ಮೀ.), ಇವು ಈ ಜಿಲ್ಲೆಯ ಎತ್ತರದ ಬೆಟ್ಟಗಳು. ಈ ಜಿಲ್ಲೆಯಲ್ಲಿ ಮಳೆ ಕಡಿಮೆ. ಹಾಗಾಗಿ ಸಸ್ಯ ಸಂಪತ್ತೂ ಕಡಿಮೆ. ಕಡಿದಾದ ಮತ್ತು ವಿವಿಧ ಆಕಾರದ ಬಂಡೆಗಳಿಂದ ಆವೃತವಾದ ಪರಿಸರವನ್ನು, ಬಯಲು ಭೂದೃಶ್ಯಗಳನ್ನು ಕಾಣುತ್ತೇವೆ. ಇಲ್ಲಿನ ಬೆಟ್ಟಗಳು ಪ್ರಾಕೃತಿಕವಾಗಿ ರೂಪಾಂತರ ಹೊಂದಿದ ಪ್ರಾಚೀನ ಶಿಲಾಯುಗಕ್ಕೆ ಸೇರಿದವು. ಅಲ್ಲಲ್ಲಿ ಗ್ರಾನೈಟ್ ಕಲ್ಲಿನ ಬೆಟ್ಟಗಳು ಕಾಣುತ್ತವೆ; ಉಳಿದಂತೆ ಸಮತಟ್ಟಾದ ಬಯಲು ಪ್ರದೇಶ. ಈ ಶಿಲಾ ಪದರದಲ್ಲಿ ನೈಸ್ ಶಿಲೆಗಳು, ಪದರಗಲ್ಲು ಶಿಲೆಗಳು, ಬೆಣಚುಕಲ್ಲುಗಳು ಇವೆ. ಮುಖ್ಯವಾಗಿ ಕೇಂಬ್ರಿಯನ್ ಯುಗಪೂರ್ವದ ರೂಪ ಪರಿವರ್ತನಾ ಪದರಗಲ್ಲುಗಳು ಮತ್ತು ಗ್ರಾನೈಟ್ ಬೆಣಚುಗಲ್ಲು ಬಹುಪಾಲು ಶಿಲೆಗಳು ಧಾರವಾಡ ಶಿಲಾವರ್ಗಕ್ಕೆ ಸೇರಿದವು. ಪರ್ಯಾಯ ದ್ವೀಪ ಸಂಬಂಧವಾದ ಡೈಕ್ ಮಾದರಿಯ ಶಿಲೆಗಳೂ ಕಂಡುಬರುತ್ತವೆ. ಕಲಾದಗಿ ಶ್ರೇಣಿಗೆ ಸೇರಿದ ಕೆಲವು ಶಿಲೆಗಳು ಕುಷ್ಟಗಿ ಸಮೀಪ ಇವೆ. ಇಲ್ಲಿ ಪೆಂಟೆ ಶಿಲೆ ಮತ್ತು ಪುರಳು ಶಿಲೆಯ ಪದರಗಳನ್ನು ಕಾಣಬಹುದು. ಕಣಶಿಲೆಯ ಗುಡ್ಡಗಳು, ಟ್ರ್ಯಾಪ್ ಶಿಲೆಯ ಉಬ್ಬುಗಳು ಗಂಗಾವತಿ ತಾಲ್ಲೂಕಿನಲ್ಲಿವೆ. ಜಿಲ್ಲೆಯಲ್ಲಿ ಕಬ್ಬಿಣ, ತಾಮ್ರ, ಸೀಸದ ಅದುರು, ಅಭ್ರಕ, ಸ್ಫಟಿಕ ಶಿಲೆ ಮುಂತಾದ ಖನಿಜಗಳಿವೆ. ಸಮೀಪದ ರಾಯಚೂರು ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳಿವೆ. ಜಂಬುಮಣ್ಣು ಮತ್ತು ಕಾವಿಮಣ್ಣಿನ ಭೂಮಿ ಉಪಯುಕ್ತವಾಗಿದೆ. ಕೊಪ್ಪಳ ತಾಲ್ಲೂಕಿನ ಬಹುಭಾಗ ಕಪ್ಪುಮೆಕ್ಕಲು ಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಪ್ಪುಮಿಶ್ರಿತ ಕೆಂಪುಮಣ್ಣು ಅಲ್ಲಲ್ಲಿ ಕಂಡುಬರುತ್ತದೆ. ಮರಳು ಮಿಶ್ರಿತ ಕಪ್ಪುಮಣ್ಣು ಅನೇಕ ಕಡೆಗಳಲ್ಲಿ ಹರಡಿದೆ.ಈ ಜಿಲ್ಲೆಯಲ್ಲಿ ಮಳೆ ಕಡಿಮೆ ಬಿದ್ದರೂ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಎರಡೂ ಪಾಶ್ರ್ವಗಳಲ್ಲಿ ಹರಿಯುವುದರಿಂದ ಜಲ ಸಂಪನ್ಮೂಲ ಉತ್ತಮವಾಗಿದೆ. ತುಂಗಭದ್ರಾ ನದಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಸರಹದ್ದಾಗಿ ಕ್ರಮಿಸುತ್ತದೆ. ಜಿಲ್ಲೆಯ ಸರಾಸರಿ ಮಳೆ ೫೯೫ಮಿಮೀ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ತೊರೆಗಳಲ್ಲಿ ನೀರಿನ ಪ್ರಮಾಣ ಕಡಿಮೆ. ಯಲಬುರ್ಗ ತಾಲ್ಲೂಕಿನಲ್ಲಿ ಹುಟ್ಟುವ ಒಂದು ತೊರೆ ಕೊಪ್ಪಳದ ಸಮೀಪ ಹರಿದು ತುಂಗಭದ್ರಾ ಜಲಾಶಯದ ಹಿನ್ನೀರನ್ನು ಸೇರುತ್ತದೆ. ಕುಷ್ಟಗಿ ತಾಲ್ಲೂಕಿನ ಉಪ್ಪಲದೊಡ್ಡಿ ಬಳಿ ಹುಟ್ಟುವ ಕನಕಗಿರಿ ನಾಲಾ ಗಂಗಾವತಿ ತಾಲ್ಲೂಕನ್ನು ಪ್ರವೇಶಿಸಿ ತುಂಗಭದ್ರಾ ನದಿಯನ್ನು ಸೇರುತ್ತದೆ. ತಾವರಗೆರೆ ಬಳಿ ಹುಟ್ಟುವ ಸಿದ್ಧಾಪುರ ನಾಲೆ ಕುಂಟೋಜಿ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ. ಇನ್ನು ಅನೇಕ ಚಿಕ್ಕ ಪುಟ್ಟ ತೊರೆಗಳು ಆಗ್ನೇಯಾಬಿsಮುಖವಾಗಿ ಹರಿದು ತುಂಗಭದ್ರಾ ನದಿ ಸೇರುತ್ತವೆ. ತೊರೆ ಮತ್ತು ನಾಲಾಗಳ ಮೂಲಕ ಮಳೆಗಾಲದಲ್ಲಿ ನೀರು ಹರಿದರೂ ಬೇಸಗೆಯಲ್ಲಿ ಹೆಚ್ಚಿನವು ಬತ್ತಿಹೋಗುತ್ತವೆ ಜಿಲ್ಲೆಯ ಅತಿ ಉಷ್ಣ ಹವಾಮಾನ ಹಾಗೂ ವಾತಾವರಣದಲ್ಲಿನ ಕಡಿಮೆ ತೇವಾಂಶ ಸಸ್ಯಗಳ ಬೆಳೆವಣಿಗೆಗೆ ಸಹಾಯಕವಾಗಿಲ್ಲ. ಅಲ್ಲಲ್ಲಿ ಗುಡ್ಡಗಳ ಇಳಿಜಾರಿನಲ್ಲಿ ಪೆÇದೆ ಕಾಡುಗಳು ಕಂಡುಬರುತ್ತವೆ. ಕುಷ್ಟಗಿ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಇತರೆಡೆಗಿಂತ ಹೆಚ್ಚಿದೆ. ಜಿಲ್ಲೆಯ ಅರಣ್ಯ ಪ್ರದೇಶದ ವಿಸ್ತೀರ್ಣ ೨೯೪೫೧ ಹೆಕ್ಟೇರುಗಳು. ಇಲ್ಲಿನ ಕಾಡುಗಳಲ್ಲಿ ಜಾಲ, ಹುಣಿಸೆ, ಹೊಂಗೆ, ಹಾಲೆ, ಮುತ್ತುಗ, ದಿಂಡಿಗ, ಚುಜ್ಜಲು, ಹುರಗಲು, ಹೊನ್ನೆ, ಕಮ್ಮಾರ, ನಲ್ಲಮಡ್ಡಿ, ಬಿಲ್ವ, ಬಾಗೆ, ಕಕ್ಕೆ, ಸೀತಾಫಲ ಮುಂತಾದ ಗಿಡಮರಗಳಿವೆ. ಅಲ್ಲಲ್ಲಿ ಮುಳ್ಳುಗಿಡಗಳ ಕುರುಚಲು ಕಾಡುಗಳಿವೆ. ಭೂಸವಕಳಿಯನ್ನು ತಡೆಯಲು ನೆಡುತೋಪುಗಳನ್ನು ಬೆಳೆಸಲಾಗಿದೆ. ಕಾಡುಗಳ ಕೊರತೆಯಿಂದ ಪ್ರಾಣಿಪಕ್ಷಿಗಳ ಸಂಖ್ಯೆಯೂ ಕಡಿಮೆ. ಚಿರತೆ, ತೋಳ, ಕತ್ತೆಕಿರುಬ, ನರಿ, ಕಪಿ ಮತ್ತು ಜಿಂಕೆಗಳು ಅಲ್ಲಲ್ಲಿ ಕಂಡುಬರುತ್ತವೆ. ಹಾವುಗಳ ಸಂತತಿ ಹೆಚ್ಚು. ಚೇಳು, ಹಲ್ಲಿ, ನೀರಹಾವು, ಮಣ್ಣುಮುಕ್ಕ, ನಾಗರಹಾವು ಎಲ್ಲೆಡೆಯೂ ಇವೆ. ಬಾತು, ನೀರಕೋಳಿ, ಕಾಗೆ, ಗಾಜುಗ ಮುಖ್ಯವಾದ ಪಕ್ಷಿಗಳು. ಹಸು, ಎಮ್ಮೆ, ಕುರಿ, ಮೇಕೆ, ಕುದುರೆ,ಕೋಣ, ಮತ್ತು ಕೋಳಿ ಮುಖ್ಯ ಸಾಕುಪ್ರಾಣಿಗಳು.https://karnatakatourism.org/tour-item/koppal/ ಹವಾಮಾನ ವರ್ಷದ ಬಹುಭಾಗ ಉಷ್ಣಾಂಶದಿಂದ ಕೂಡಿರುತ್ತದೆ.ಮಳೆ ಕೆಲವು ವರ್ಷಗಳಲ್ಲಿ ಕಡಿಮೆ ಇದ್ದು ಕೆಲವೊಮ್ಮೆ ಹೆಚ್ಚು ಮಳೆ ಆಗುವುದುಂಟು. ೨೦೦೦ ಇಸವಿಯ ಮಳೆಗಾಲದಲ್ಲಿ ೭೦೧ಮಿಮೀ. ಮಳೆಯಾಗಿತ್ತು. ವರ್ಷದಲ್ಲಿ ೪೧ ಮಳೆ ದಿನಗಳೆಂದು ಗುರುತಿಸಲಾಗಿದೆ. ಮುಂಗಾರಿನಲ್ಲಿ ವರ್ಷದ ಹೆಚ್ಚಿನ ಭಾಗ ಮಳೆಯಾದರೂ ಹಿಂಗಾರಿನಲ್ಲಿ ಚಂಡಮಾರುತದ ಮಳೆ ಬಿರುಸಿನಿಂದ ದೊಡ್ಡ ಪ್ರಮಾಣದಲ್ಲಿ ಬೀಳುತ್ತದೆ. ಉಷ್ಣಾಂಶ ಅದಿsಕವಿರುವ ಭಾಗದಲ್ಲಿರುವ ಈ ಜಿಲ್ಲೆಯ ಕೆಲವೆಡೆ ಗರಿಷವಿ ಉಷ್ಣಾಂಶ ೪೦೦ಸೆ.ಇರುವುದೂ ಉಂಟು. ಹಿಂದಿನ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ೪೫೦ಸೆ.ವರೆಗೂ ಉಷ್ಣಾಂಶ ಏರುವುದನ್ನು ಸ್ಮರಿಸಬಹುದು. ರಾತ್ರಿವೇಳೆ ಉಷ್ಣಾಂಶ ಬೇಗ ಕಡಿಮೆ ಆಗುತ್ತದೆ. ಡಿಸೆಂಬರನಲ್ಲಿ ಗರಿಷ್ಟ ಉಷ್ಣಾಂಶ ೨೯.೩೦ಸೆ. ಇದ್ದರೆ ಕನಿಷ್ಟ ಉಷ್ಣಾಂಶ ೧೭.೭೦ ಸೆ.ಗೆ ಇಳಿಯುತ್ತದೆ. ನವೆಂಬರ್‍ನಿಂದ ಮೇವರೆಗೆ ಒಣ ಹವೆ ಇರುವುದು. ವ್ಯವಸಾಯ ಕೊಪ್ಪಳ ಜಿಲ್ಲೆ ವ್ಯವಸಾಯ ಪ್ರಧಾನವಾದುದು. ಜಿಲ್ಲೆಯ ಸೇ.೭೫ ರಷ್ಟು ಜನರು ವ್ಯವಸಾಯ ಮತ್ತು ಆ ಸಂಬಂಧವಾದ ಕಸಬುಗಳನ್ನು ಅವಲಂಬಿಸಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಬೀಳುವುದರಿಂದ ಸಾಗುವಳಿಗಾರರ ಬದುಕು ಅನಿಶ್ಚಿತ ಆದಾಯವನ್ನು ಆಧರಿಸಿದೆ. ಹಿಂದಿನ ವಿಜಯನಗರ ಕಾಲದ ನಾಲೆಗಳು ಸ್ಥಳೀಯವಾಗಿ ಸೀಮಿತ ಪ್ರದೇಶಗಳಿಗೆ ನೀರೊದಗಿಸುತ್ತಿದ್ದವು. ಸುದೈವವಶಾತ್ ಈ ಜಿಲ್ಲೆಯು ರಾಜ್ಯದ ಪ್ರಮುಖ ನದಿಗಳಾದ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ದೋಆಬ್ ಪ್ರದೇಶದಲ್ಲಿ ಬರುವುದರಿಂದ ನೀರಾವರಿ ಯೋಜನೆಗಳಿಂದ ಜಿಲ್ಲೆ ಹೆಚ್ಚು ಪ್ರಯೋಜನ ಪಡೆದಿದೆ. ಕೃಷಿ, ಪಶುಸಾಕಾಣಿಕೆ, ಮೀನುಗಾರಿಕೆ ಹೈದರಬಾದ್ ಸಂಸ್ಥಾನದ ಆಡಳಿತದಲ್ಲಿದ್ದಾಗ ತುಂಗಭದ್ರಾ ನದಿಯ ಅಣೆಕಟ್ಟು ಯೋಜನೆಗಳನ್ನು ಕಾರ್ಯಗತಗೊಳಿಸಲು ವಿವಿಧ ಪ್ರಯತ್ನಗಳು ನಡೆದವು. ಆಗಿನ ಮೈಸೂರು ಸಂಸ್ಥಾನ ಮತ್ತು ಮದರಾಸು ಪ್ರಾಂತಗಳು ಈ ಸರಹದ್ದಿನಲ್ಲಿ ಬರುತ್ತಿದ್ದುದರಿಂದ ಅವುಗಳೊಂದಿಗೆ ಸಮಾಲೋಚನೆ ಮತ್ತು ಒಪ್ಪಂದಗಳ ಅಂಗೀಕಾರದಲ್ಲೇ ಸಾಕಷ್ಟು ಕಾಲ ಕಳೆಯಿತು. ಸ್ವಾತಂತ್ರ್ಯ ಬಂದ ಮೇಲೆ ೧೯೫೦ರ ದಶಕದಲ್ಲಿ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ ಬೃಹತ್ ಜಲಾಶಯ ನಿರ್ಮಿಸುವ ಕಾರ್ಯಯೋಜನೆ ತ್ವರಿತಗೊಂಡಿತು. ಇದು ೧೯೬೮ರ ಹೊತ್ತಿಗೆ ಪೂರ್ಣಗೊಂಡು ಕೊಪ್ಪಳವನ್ನು ಒಳಗೊಂಡಂತೆ ಹಿಂದಿನ ರಾಯಚೂರು ಜಿಲ್ಲೆಯ - ಈ ಜಲಾಶಯದ ಎಡದಂಡೆ ಕಾಲುವೆ ಮೂಲಕ ಹೆಚ್ಚು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯಿತು. ಈಗಿನ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ ತಾಲ್ಲೂಕುಗಳಲ್ಲಿ ನೀರಾವರಿ ಪ್ರದೇಶ ಹೆಚ್ಚಿತು. ಇದಲ್ಲದೆ ಹಳೆಯ ನಾಲಾಗಳು, ಸಣ್ಣ ಪ್ರಮಾಣದ ಅಣೆಕಟ್ಟುಗಳು ಅಥವಾ ಬ್ಯಾರೇಜ್‍ಗಳು ನಿರ್ಮಾಣವಾಗಿದ್ದು ಇವು ಬೇಸಗೆಯ ಬೆಳೆಗಳಿಗೆ ಆಶ್ರಯವಾಗಿವೆ. ಹಾಲಿ ಜಿಲ್ಲೆಯಲ್ಲಿ ಕಾಲುವೆಗಳಿಂದ ೬೩,೪೧೧ ಹೆಕ್ಟೇರ್, ಕೆರೆಗಳಿಂದ ೧೭೬೩ ಹೆಕ್ಟೇರ್ ಬಾವಿಗಳಿಂದ, ೨೦,೨೬೨ ಹೆಕ್ಟೇರ್ ಮತ್ತು ಕೊಳವೆ ಬಾವಿಗಳಿಂದ ೬೩೬೩ ಹೆಕ್ಟೆರ್ ಜಮೀನಿಗೆ ನೀರೊದಗುತ್ತಿದೆ. ಬತ್ತ, ಜೋಳ, ಸಜ್ಜೆ, ಹುರುಳಿ, ಹೆಸರು, ಮುಸುಕಿನ ಜೋಳ, ಕಡಲೆ, ಎಳ್ಳು, ದ್ವಿದಳ ಧಾನ್ಯಗಳು, ಸೂರ್ಯಕಾಂತಿ, ಸೋಯಾಬೀನ್, ಹತ್ತಿ, ತೊಗರಿ, ಹರಳುಬೀಜ, ನೆಲಗಡಲೆ, ಅಗಸೆ ಇವು ಮುಖ್ಯ ಬೆಳೆಗಳಾಗಿವೆ. ತೋಟಗಾರಿಕೆ ಬೆಳೆಗಳಲ್ಲಿ ಮಾವು, ಸಪೋಟ, ಸೀಬೆ, ಬಾಳೆ, ನಿಂಬೆ, ದಾಳಿಂಬೆ, ಅಂಜೂರ ಮೊದಲಾದವು ಪ್ರಮುಖವಾದವು. ಪಶುಸಂಗೋಪನೆ ಕೃಷಿಯೊಂದಿಗೆ ಜಿಲ್ಲೆಯ ಮುಖ್ಯ ಉಪಕಸಬುಗಳಲ್ಲಿ ಒಂದಾಗಿದೆ. ಇಲ್ಲಿ ಖಿಲಾರ್ ತಳಿಯ ಜಾನುವಾರುಗಳು ಹೆಚ್ಚು. ಅದಿsಕ ಹಾಲು ಉತ್ಪಾದನೆಯ ದೃಷ್ಟಿಯಿಂದ ಮಿಶ್ರತಳಿಗಳನ್ನು ಅಬಿsವೃದ್ಧಿಪಡಿಸಲಾಗಿದೆ. ಜಾನುವಾರು ಮತ್ತು ಕುರಿಗಳ ತಳಿ ಅಬಿsವೃದ್ಧಿಗಾಗಿ ವಿವಿಧ ಫಾರಂಗಳನ್ನು ಸ್ಥಾಪಿಸಿದೆ. ೧೯೫೩ರಲ್ಲಿ ಕೊಪ್ಪಳ ತಾಲ್ಲೂಕಿನ ಮುನಿರಾಬಾದಿನಲ್ಲಿ ಸ್ಥಾಪಿಸಲಾದ ಫಾರಂ ಅವುಗಳಲ್ಲಿ ಪ್ರಮುಖವಾದುದು. ಇಲ್ಲಿ ಆಂಧ್ರ ಮತ್ತು ವಿದೇಶಗಳಿಂದ ತಂದ ತಳಿಗಳೊಂದಿಗೆ ಸ್ಥಳೀಯ ತಳಿಗಳ ಸಂಕರ ಮಾಡುವ ಮೂಲಕ ಹೊಸ ತಳಿಗಳನ್ನು ಬೆಳೆಸಲಾಗುತ್ತಿದೆ. ಕೋಳಿಗಳ ತಳಿ ಅಬಿsವೃದ್ಧಿಗೆ ಸಹ ಇಲ್ಲಿ ಒಂದು ಕೇಂದ್ರವಿದೆ. ಗಂಗಾವತಿಯಲ್ಲಿ ಪ್ರಾದೇಶಿಕ ಕೋಳಿ ಸಾಕಣೆ ಫಾರಂ ಇದೆ. ಆಗಾಗ ಬರಗಾಲಕ್ಕೆ ತುತ್ತಾಗುವ ಪ್ರದೇಶಗಳಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಗೋಶಾಲೆಗಳಿವೆ. ಮೇವು ಬೆಳೆಸುವ ಫಾರಂಗಳಿವೆ. ೧೯೯೮-೯೯ರ ಅಂಕಿಅಂಶಗಳ ಮೇರೆಗೆ ೨೪೯,೯೭೬ ಸ್ಥಳೀಯ ಜಾನುವಾರುಗಳು; ೨,೧೬೫ ವಿದೇಶಿ ತಳಿಯ ಹಸುಗಳು, ೮,೦೩೭ ಮಿಶ್ರತಳಿ ಹಸುಗಳು, ೯೦,೦೭೮ ಎಮ್ಮೆಗಳೂ, ೧,೯೧,೯೧೨ ಕುರಿಗಳು, ೧,೩೬,೬೭೧ ಮೇಕೆಗಳು ಜಿಲ್ಲೆಯಲ್ಲಿದ್ದವು. ಸಾಕು ಪ್ರಾಣಿಗಳ ಕ್ಷೇಮಾಬಿsವೃದ್ಧಿಗೆ ಪಶುಸಂಗೋಪನ ಇಲಾಖೆಯ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಇವೆ. ಜಿಲ್ಲೆಯಲ್ಲಿ ೯ ಪಶುವೈದ್ಯ ಆಸ್ಪತ್ರೆಗಳು, ೧೧ ಚಿಕಿತ್ಸಾಲಯಗಳು, ೫೯ ಪ್ರಾಥಮಿಕ ಪಶುವೈದ್ಯಕೇಂದ್ರಗಳು, ೫ ಸಂಚಾರಿ ಚಿಕಿತ್ಸಾಲಯಗಳು, ೧೨ ಕೃತಕ ಗರ್ಭಧಾರಣಾ ಕೇಂದ್ರಗಳಿವೆ. ಸಾಕಷ್ಟು ಜಲಾಶಯಗಳು ಮತ್ತು ಕೆರೆಕಟ್ಟೆಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಮೀನುಗಾರಿಕೆ ಸಹ ಬೆಳೆದಿದೆ. ೨೦೦೦-೦೧ರಲ್ಲಿ ೩,೩೨೪ ಮೆಟ್ರಿಕ್‍ಟನ್ ಮೀನನ್ನು ಹಿಡಿಯಲಾಗಿತ್ತು. ಮುನಿರಾಬಾದಿನಲ್ಲಿ ಮೀನು ಸಾಕಣೆ ಅಬಿsವೃದ್ಧಿ ಫಾರಂ ಇದೆ. ಕೃಷಿ ಪ್ರದೇಶದ ಸರ್ವತೋಬಿsಮುಖ ಅಬಿsವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಮುಖ್ಯವಾಗಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ವಹಿಸಲಾಗಿದೆ. ಗಂಗಾವತಿಯ ಗ್ರಾಮಸೇವಕರ ತರಬೇತಿ ಕೇಂದ್ರ, ಸಾಮಾನ್ಯ ಕೃಷಿ ಸಂಶೋಧನ ಕೇಂದ್ರ, ತುಂಗಭದ್ರಾ ಕೃಷಿ ಅಬಿsವೃದ್ಧಿ ಕೇಂದ್ರ, ವ್ಯವಸಾಯ ಮತ್ತು ತೋಟಗಾರಿಕೆ ಇಲಾಖೆಗಳು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ. ಕೈಗಾರಿಕೆ ಜಿಲ್ಲೆಯ ಕುಷ್ಟಗಿ ಮತ್ತು ಬಸಾಪುರದಲ್ಲಿ ಎರಡು ಕೈಗಾರಿಕಾ ಪ್ರದೇಶಗಳಿದ್ದು, ಇವುಗಳಲ್ಲಿ ೪೭ ಖನಿಜ ಹಾಗೂ ಲೋಹದ ಕೈಗಾರಿಕೆಗಳಿವೆ. ಇಲ್ಲಿಂದ ಅಕ್ಕಿ ಮತ್ತು ಗ್ರಾನೈಟ್‌ಗಳ ರಫ್ತು ಆಗುತ್ತದೆ. ಗಂಗಾವತಿಯನ್ನು 'ಭತ್ತದ ಕಣಜ' ಎಂದು ಕರೆಯಲಾಗುತ್ತದೆ. ಕೊಪ್ಪಳ ತಾಲೂಕು ವಾಹನ, ಸೀರೆ ಮತ್ತು ಕೂದಲಿನ ಸಣ್ಣ ಕೈಗಾರಿಕೆಗೆ ಹೆಸರಾಗಿದೆ. ವ್ಯಾಪಾರ-ವಹಿವಾಟು ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳು ಅದಿsಕವಾಗಿ ಬೆಳೆಯುವುದರಿಂದ ಹೊರ ಜಿಲ್ಲೆಗಳು ಮತ್ತು ಹೊರ ರಾಜ್ಯಗಳೊಂದಿಗೆ ವ್ಯಾಪಾರ ವಹಿವಾಟು ಹೆಚ್ಚು. ಎಣ್ಣೆ ಬೀಜಗಳು, ಸೇಂಗಾ ಎಣ್ಣೆ, ದ್ವಿದಳ ಧಾನ್ಯಗಳು ಮತ್ತು ಹತ್ತಿ ಹೊರ ರಾಜ್ಯಗಳಿಗೆ ರಫ್ತಾಗುತ್ತವೆ. ಮಹಾರಾಷ್ಟ್ರದ ಸೋಲಾಪುರ, ಪುಣೆ, ಮುಂಬಯಿ ಹಾಗೂ ತಮಿಳುನಾಡಿನ ಕೊಯಮತ್ತೂರುಗಳಿಗೆ ಇಲ್ಲಿಂದ ಸರಕುಗಳು ಹೋಗುತ್ತವೆ. ಹದಮಾಡಿದ ಚರ್ಮಕ್ಕೆ ಹೊಸಪೇಟೆ, ಗದಗಗಳಲ್ಲಿ ಮಾರುಕಟ್ಟೆಗಳಿವೆ. ತೆಂಗಿನಕಾಯಿ, ಬೆಲ್ಲ, ಮರ, ವನಸ್ಪತಿ, ಹೊಗೆಸೊಪ್ಪು, ಕೃತಕ ರೇಷ್ಮೆ ಮೊದಲಾದ ವಸ್ತುಗಳನ್ನು ಜಿಲ್ಲೆಗೆ ಆಮದು ಮಾಡಿಕೊಳ್ಳಲಾಗುವುದು. ಹತ್ತಿ, ಸೇಂಗಾ, ಹುಣಿಸೆಹಣ್ಣು, ಮೆಣಸಿನಕಾಯಿ ಮತ್ತು ಕೈಮಗ್ಗದ ಬಟ್ಟೆಗಳಿಗೆ ಕೊಪ್ಪಳ ದೊಡ್ಡ ವ್ಯಾಪಾರ ಕೇಂದ್ರ. ಬತ್ತ, ಜೋಳ, ಸೇಂಗಾ, ಬೆಲ್ಲ, ಹರಳು, ಸಜ್ಜೆ ಇವುಗಳಿಗೆ ಗಂಗಾವತಿ ಮುಖ್ಯ ವ್ಯಾಪಾರ ಸ್ಥಳ. ಕುಷ್ಟಗಿ, ಯಲಬುರ್ಗ, ಕುಕನೂರು ಇತರ ಮುಖ್ಯ ವ್ಯಾಪಾರ ಕೇಂದ್ರಗಳು. ೯೩ ಕೃಷಿ ಮಾರಾಟ ಸಹಕಾರ ಸಂಘಗಳಿವೆ. ೪ ನಿಯಂತ್ರಿತ ಮಾರುಕಟ್ಟೆಗಳು, ೧೨ ಉಪ ಮಾರುಕಟ್ಟೆಗಳಿವೆ. ಸಹಕಾರಿ ರಂಗ ಆರ್ಥಿಕ ಚಟುವಟಿಕೆಗಳ ಎಲ್ಲ ಕ್ಷೇತ್ರಗಳಲ್ಲೂ ಕೈ ಹಾಕಿದೆ. ಜಿಲ್ಲಾ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆ ಕೃಷಿ ಸಾಲಗಳನ್ನು ನೀಡುತ್ತ ಬಂದಿದೆ. ೧೭೨ ಕೃಷಿ ಸಾಲ ನೀಡಿಕೆ ಸಹಕಾರ ಸಂಘಗಳು ಕಾರ್ಯನಿರತವಾಗಿವೆ. ವ್ಯವಸಾಯೇತರ ಸಾಲನೀಡಿಕೆ ಸಹಕಾರ ಸಂಘಗಳ ಸಂಖ್ಯೆ ೫೫. ಸಾಲೇತರ ಸಹಕಾರ ಸಂಘಗಳ ಸಂಖ್ಯೆ ೪೬೫ (೧೯೯೮). ಹಾಲು ಉತ್ಪಾದನೆ, ಕೋಳಿ ಸಾಕಣೆ, ಮೀನು ಮಾರಾಟ, ಕಂಬಳಿ ಮಾರಾಟ, ತೋಟಗಾರಿಕೆ ಉತ್ಪನ್ನಗಳ ಮಾರಾಟ ಈ ಎಲ್ಲ ವ್ಯವಹಾರಗಳಲ್ಲೂ ಸಹಕಾರಿ ಸಂಘಗಳ ಪಾತ್ರ ಪ್ರಮುಖವಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಜಿಲ್ಲೆಯ ಸಾಕ್ಷರತಾ ಪ್ರಮಾಣ ಸೇ.೫೫.೦೨. ಅದರಲ್ಲಿ ಸೇ.೧೬೯.೧೫ ಪುರುಷರು, ಸೇ.೪೦.೭೬ ಮಹಿಳೆಯರು ಸಾಕ್ಷರರಾಗಿದ್ದಾರೆ. ಸಾಕ್ಷರತಾ ಆಂದೋಲನ ಯೋಜನೆ ಜಿಲ್ಲೆಯಲ್ಲಿ ಕಾರ್ಯನಿರತ ವಾಗಿರುವುದಲ್ಲದೆ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಾಗಿ ಶಾಲೆಗಳನ್ನು ತೆರೆದು ಶಿಕ್ಷಣ ಒದಗಿಸಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸಲು ಒಡಂಬಡಿಸಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅವರಿಗೆ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವೂ ನಡೆದಿದೆ. ಆದರೆ ಅಜ್ನಾನ, ಬಡತನ, ಕುಟುಂಬದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ಉನ್ನತ ಶಿಕ್ಷಣ ನೀಡುವ ೯ ಕಾಲೇಜುಗಳು, ತಾಂತ್ರಿಕ ಶಿಕ್ಷಣ ನೀಡುವ ೩ ಪಾಲಿಟೆಕ್ನಿಕ್‍ಗಳು ಇವೆ. ಆರೋಗ್ಯ ಸುಧಾರಣೆಗಾಗಿ ೫ ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ವೈದ್ಯಪದ್ಧತಿಯ ಚಿಕಿತ್ಸಾಲಯಗಳು ಮತ್ತು ಅನೇಕ ಸರ್ಕಾರಿ ಆರೋಗ್ಯ ಕೇಂದ್ರಗಳು ಇವೆ. ಸಮಗ್ರ ಗ್ರಾಮ ಸ್ವಸಹಾಯ ಯೋಜನೆ, ಗ್ರಾಮೀಣ ಇಂಧನ ಕಾರ್ಯಕ್ರಮ, ಮಾನವ ದಿನಗಳ ಕೆಲಸಗಳ ಸೃಷ್ಟಿ, ನಿರ್ಮಲ ಗ್ರಾಮ ಯೋಜನೆ, ಇಂದಿರಾ ಆವಾಸ್ ಯೋಜನೆ, ಪ್ರಧಾನ ಮಂತ್ರಿಗಳ ರಸ್ತೆ ನಿರ್ಮಾಣ ಯೋಜನೆ, ಕೊಳವೆ ನೀರು ಸರಬರಾಜು ಯೋಜನೆ ಮೊದಲಾದವು ಗ್ರಾಮಗಳ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಲು ಉದ್ದೇಶಿತವಾಗಿವೆ. ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಮಿತಿಗಳು ಗ್ರಾಮೀಣ ಪ್ರದೇಶದ ಪ್ರತಿನಿದಿsಗಳಿಂದ ಕೂಡಿದ್ದು ಈ ಪ್ರದೇಶದ ಅಬಿsವೃದ್ಧಿ ಕಾರ್ಯಗಳ ಮುಖ್ಯ ಜವಾಬ್ದಾರಿ ಹೊತ್ತಿವೆ. ಸಾರಿಗೆ ಸಂಪರ್ಕ ಕೊಪ್ಪಳ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಸಂಪರ್ಕಗಳಿವೆ. ರಾಷ್ತ್ರೀಯ ಹೆದ್ದಾರಿ ೧೩ (NH-13) ಮಹಾರಾಷ್ಟ್ರದ ಸೊಲ್ಲಾಪುರದಿಂದ ವಿಜಯಪುರ, ಚಿತ್ರದುರ್ಗ ಮಾರ್ಗವಾಗಿ ಮಂಗಳೂರಿಗೆ ತಲುಪುತ್ತದೆ. ಇದು ಜಿಲ್ಲೆಯ ಮುಖ್ಯ ಪಟ್ಟಣವಾದ ಕುಷ್ಟಗಿಯ ಮೂಲಕ ಹಾದು ಹೋಗುತ್ತದೆ. ರಾಷ್ಟ್ರೀಯ ಹೆದ್ದಾರಿ ೬೩ (NH-63) ಆಂಧ್ರ ಪ್ರದೇಶದ ಗುತ್ತಿಯಿಂದ ಬಳ್ಳಾರಿ, ಹುಬ್ಬಳ್ಳಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಲುಪುತ್ತದೆ. ಜಿಲ್ಲೆಯ ಒಳಗೆ ಜಿಲ್ಲಾ ಕೇಂದ್ರದಿಂದ ಎಲ್ಲ ತಾಲ್ಲೂಕುಗಳನ್ನು ಕೂಡಿಸುವ ರಾಜ್ಯ ಹೆದ್ದಾರಿಗಳಿವೆ. ಕೊಪ್ಪಳದಿಂದ ರಾಯಚೂರು, ಗದಗ, ಶೋರಾಪುರ, ಬಳ್ಳಾರಿ, ಮೊದಲಾದ ಜಿಲ್ಲೆಯ ಹೊರ ಸ್ಥಳಗಳಿಗೆ ರಸ್ತೆ ಸಂಪರ್ಕವಿದೆ. ಹುಬ್ಬಳ್ಳಿ-ಗುಂತಕಲ್ ರೈಲುಮಾರ್ಗವು ಕೊಪ್ಪಳ ಜಿಲ್ಲೆಯಲ್ಲಿ ಹಾದು ಹೋಗುತ್ತದೆ. ಬೆಂಗಳೂರು, ಕೊಲ್ಹಾಪುರ, ಹೈದರಾಬಾದ್, ವಿಜಯವಾಡ ನಗರಗಳಿಗೆ ರೈಲುಸಂಪರ್ಕವಿದೆ. ಕೊಪ್ಪಳ ಹಾಗು ಮುನಿರಾಬಾದಿನ ರೈಲು ನಿಲ್ದಾಣಗಳು ನೈರುತ್ಯ ರೇಲ್ವೆಯ ಹುಬ್ಬಳ್ಳಿ ವಿಭಾಗಕ್ಕೆ ಸೇರುತ್ತವೆ. ಕೊಪ್ಪಳದಿಂದ ೮ ಕಿ.ಮೀ. ದೂರದಲ್ಲಿರುವ ಗಿಣಿಗೇರಾ ಸಮೀಪ ಮೆಸರ್ಸ್. ಎಂ.ಎಸ್.ಪಿ.ಎಲ್ ಲಿಮಿಟೆಡ್ ರವರ ವಿಮಾನ ನಿಲ್ದಾಣ ಬಳಕೆಯಲ್ಲಿದೆ. ಇತಿಹಾಸ ಕೊಪ್ಪಳ ಜಿಲ್ಲೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಆಸುಪಾಸಿನಲ್ಲಿದ್ದು ಪ್ರಾಚೀನ ಕಾಲದಿಂದಲೂ ಜನವಸತಿ ಹೊಂದಿದ ಪ್ರದೇಶವಾಗಿದೆ. ಗಂಗಾವತಿ ತಾಲ್ಲೂಕಿನ ಬೆಂಕಲ್ ಮತ್ತು ಕೆರೆಹಾಳ್ ನೆರೆಯ ರಾಯಚೂರು ಜಿಲ್ಲೆಯ ಮಸ್ಕಿ, ಹಾಳಾಪುರ, ಕಲ್ಲೂರು ಮೊದಲಾದ ಕಡೆಗಳಲ್ಲಿ ಇತಿಹಾಸ ಪೂರ್ವ ಕಾಲದ ನಿವೇಶನಗಳಿದ್ದುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಕೊಪ್ಪಳ ಮತ್ತಿತರ ಕಡೆಗಳಲ್ಲಿ ಬೃಹತ್ ಶಿಲಾ ಸಮಾದಿsಗಳು ದೊರೆತಿವೆ. ಶಿಲಾಯುಗದ ಉಪಕರಣಗಳು, ಮಣ್ಣಿನ ಮಡಿಕೆಗಳು, ಟೆರಕೋಟ ಮೂರ್ತಿಗಳು ಇಲ್ಲಿ ದೊರೆತಿವೆ. ಈ ಆಧಾರಗಳ ಮೇಲೆ ಈ ಪ್ರದೇಶ ದಕ್ಷಿಣ ಭಾರತದ ಅತಿ ಪುರಾತನ ಮಾನವ ನೆಲೆಗಳನ್ನು ಹೊಂದಿದ್ದ ವಲಯಗಳಲ್ಲೊಂದೆಂದು ಹೇಳಬಹುದು. ಕೊಪ್ಪಳದ ಬಳಿಯ ಮಲಿಮಲ್ಲಪ್ಪ ಬೆಟ್ಟದ ತುದಿಯ ಮೇಲೆ ಅನೇಕ ಹಾಸುಗಲ್ಲಿನ ಕಟ್ಟಡಗಳು ಕಂಡುಬಂದಿವೆ. ಅವನ್ನು ಸ್ಥಳೀಯವಾಗಿ 'ಮೊರಿಯರ ಅಂಗಡಿ' ಎಂದು ಕರೆಯುತ್ತಾರೆ. ಇದು ಮೌರ್ಯರ ಕಾಲದ ವಸತಿಯ ಬಗ್ಗೆ ಮತ್ತು ಆಗ ಉತ್ತರ ಭಾರತದ ಜನ ಇಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದ ಬಗ್ಗೆ ಸುಳಿವು ನೀಡುತ್ತದೆ. ಪೌರಾಣಿಕ ಐತಿಹ್ಯಗಳು ಈ ಪ್ರದೇಶದಲ್ಲೂ ಇತರೆಡೆಗಳಂತೆಯೆ ಅಸ್ತಿತ್ವದಲ್ಲಿವೆ. ಪಾಲ್ಕಿಗುಂಡು ಬೆಟ್ಟ ಮತ್ತು ಮಲಿ ಮಲ್ಲಪ್ಪನ ಬೆಟ್ಟದ ನಡುವಿನ ಬಯಲನ್ನು ಪಾಂಡವರ ವಠಾರ ಎಂದು ಕರೆಯಲಾಗಿದೆ. ಇಲ್ಲೂ ಹಾಸುಗಲ್ಲು ಕಟ್ಟಡಗಳಿವೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ ರಾಮಾಯಣ ಕಾಲದ ಕಿಷ್ಕಿಂದೆಯ ಭಾಗವಾಗಿತ್ತೆಂದು ನಂಬಿಕೆಯಿದೆ. ಗವಿಮಠ ಬೆಟ್ಟ ಮತ್ತು ಪಾಲ್ಕಿಗುಂಡು ಬೆಟ್ಟದಲ್ಲಿ ಒಂದೊಂದು ಅಶೋಕನ ಶಾಸನಗಳು ದೊರೆತಿವೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ನಡೆಯುತ್ತಿದ್ದ ವಾಣಿಜ್ಯ ಹಾಗೂ ಆಗಿನ ವ್ಯಾಪಾರ ಸರಕುಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಮೌರ್ಯ ಸಾಮ್ರಾಜ್ಯದ ಹೊರಗಿನ ದಕ್ಷಿಣ ರಾಜ್ಯಗಳನ್ನು ಚೋಳ, ಪಾಂಡ್ಯ, ಸಾತಿಯಪುತ, ಕೇರಲಪುತ ಮತ್ತು ತಂಬಪನ್ನಿ (ಶ್ರೀಲಂಕಾ) ಎಂದು ಅಶೋಕನ ಶಾಸನಗಳಲ್ಲಿ ಹೆಸರಿಸಲಾಗಿದೆ. ಈ ದೃಷ್ಟಿಯಿಂದ ನೋಡಿದಾಗ ಪೂರ್ವೋಕ್ತ ದೇಶಗಳು ದಖನ್ನಿನ ಹೊರಗಿದ್ದು ಆಂದಿನ ದಖನ್ನಿನ ಪ್ರದೇಶ ಮೌರ್ಯ ಸಾಮ್ರಾಜ್ಯದ ಒಂದು ಪ್ರಾಂತ್ಯವಾಗಿದ್ದದ್ದು ತಿಳಿದುಬರುತ್ತದೆ. ಮೌರ್ಯರ ಶಾಸನಗಳಲ್ಲಿ ಬರುವ ಸುವರ್ಣಗಿರಿಯನ್ನು ಕೊಪ್ಪಳ ಜಿಲ್ಲೆಯ ಕನಕಗಿರಿ ಎಂದು ಕೆಲವು ವಿದ್ವಾಂಸರು ಗುರುತಿಸಿದ್ದರೆ, ಇನ್ನು ಕೆಲವರು ಇದನ್ನು ಮಸ್ಕಿ ಇರಬಹುದೆಂದು ಅಬಿsಪ್ರಾಯಪಟ್ಚಿದ್ದಾರೆ. ಅದೇನೇ ಇದ್ದರೂ ಈ ಪ್ರದೇಶ ಬಹು ಪುರಾತನ ನಾಗರಿಕತೆ ಮತ್ತು ಸಂಸ್ಕøತಿಗಳ ನೆಲೆಬೀಡೆಂಬುದು ಸ್ಪಷ್ಟವಾಗಿದೆ. ಮೌರ್ಯಸಾಮ್ರಾಜ್ಯದ ಪತನಾನಂತರ ದಖನ್‍ನಲ್ಲಿ ಸ್ಥಾಪಿತವಾದ ಪ್ರಥಮ ಸ್ವತಂತ್ರ ಸಾಮ್ರಾಜ್ಯವೆಂದರೆ ಶಾತವಾಹನರದು. ಇಂದಿನ ಮಹಾರಾಷ್ಟ್ರ ರಾಜ್ಯದ ಪ್ರತಿಷಾವಿನ ಅಥವಾ ಪೈಠಣ್ ಅನ್ನು ರಾಜಧಾನಿಯಾಗಿ ಹೊಂದಿದ್ದ ಈ ಸಾಮ್ರಾಜ್ಯದ ಭಾಗವಾಗಿ ಕೊಪ್ಪಳ ಉನ್ನತ ಸ್ಥಿತಿಗೆ ಬಂದಿತು. ಕ್ರಿ.ಪೂ.3ನೆಯ ಶತಮಾನದಿಂದ ಕ್ರಿ.ಶ ೨ನೆಯ ಶತಮಾನದವರೆಗೂ ಆಳಿದ ಈ ವಂಶದ ಸಾಮ್ರಾಟರು ಉತ್ತರ ಭಾರತದವರೆಗೂ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದರು. ಕೊನೆಗೆ ದಕ್ಷಿಣ ಪಥಕ್ಕೆ ಸೀಮಿತವಾದ ಇವರು ತುಂಗಭದ್ರಾ ದಕ್ಷಿಣಕ್ಕೂ ತಮ್ಮ ಆಳಿಕೆಯನ್ನು ಚಾಚಿದ್ದರು. ಶಾತವಾಹನರ ಕಾಲದಿಂದ ಕೊಪ್ಪಳ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಸುತ್ತಮುತ್ತಲ ಬೆಟ್ಟಗುಡ್ಡಗಳಿಗೆ ಕೊಪಣ್ರಾದಿ ಮತ್ತು ಕುಪಣಾಚಲ ಎಂಬ ಹೆಸರುಗಳಿವೆ. ಕೊಪ್ಪಳಕ್ಕೆ ಕೊಪಣ ಅಥವಾ ಕೋಪಣ ನಗರವೆಂಬ ಹೆಸರಿದ್ದಿತು. ಈ ಜಿಲ್ಲೆಯ ಕವಲೂರು, ಆಳವಂಡಿ, ಮಾದಿನೂರು, ಕುಕ್ಕನೂರು , ಪುರ, ಆನೆಗೊಂದಿ, ಕಲ್ಲೂರ ,ಇಟಗಿ ಮತ್ತು ಮುಧುವೊಳಲು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಶಾತವಾಹನರ ಅನಂತರ ಕರ್ನಾಟಕದ ಉತ್ತರ ಭಾಗದಲ್ಲಿ ಮತ್ತು ಕರಾವಳಿಯಲ್ಲಿ ಕದಂಬರು ಪ್ರಬಲ ರಾಜ್ಯಸ್ಥಾಪಿಸಿ ಆಳಿದರು. ಆದರೆ ದಕ್ಷಿಣದಲ್ಲಿ ತಲಕಾಡಿನ ಗಂಗರು, ಪೂರ್ವದಲ್ಲಿ ವಾಕಾಟಕರು ಕದಂಬರ ಸಮಕಾಲೀನರಾಗಿ ಆಳಿದರು. ಕದಂಬರು ಈ ಜಿಲ್ಲೆಯ ಮೇಲೆ ಎಷ್ಟು ನಿಯಂತ್ರಣ ಹೊಂದಿದ್ದರು ಎಂದು ಹೇಳಲು ಸ್ಪಷ್ಟ ಆಧಾರಗಳು ಲಭ್ಯವಿಲ್ಲ. ಆದರೆ ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಕದಂಬರ ಶಾಸನ ದೊರೆತಿರುವುದರಿಂದ ಈ ಜಿಲ್ಲೆಯ ಮೇಲೆ ಒಂದಲ್ಲ ಒಂದು ಕಾಲದಲ್ಲಿ ಭಾಗಶಃವಾಗಿ ಅಥವಾ ಪೂರ್ಣವಾಗಿ ಅವರು ನಿಯಂತ್ರಣ ಹೊಂದಿದ್ದರು ಎಂದು ಹೇಳಬಹುದು. ಇದೇ ವೇಳೆಗೆ ಮಧ್ಯ ಭಾರತದಲ್ಲಿ ಪ್ರಬಲ ರಾಜ್ಯ ಸ್ಥಾಪಿಸಿದ ವಾಕಾಟಕರು ಕುಂತಳ ದೇಶದವರೆಗೂ ತಮ್ಮ ರಾಜ್ಯ ವಿಸ್ತರಿಸಿದ್ದರೆಂದು ತಿಳಿದುಬರುತ್ತದೆ. ಅವರು ಈ ಪ್ರದೇಶವನ್ನು ಸಾಕಷ್ಟು ಕಾಲ ಆಳಿರಬೇಕು. ಕೊಪ್ಪಳ ಜಿಲ್ಲೆಗೆ ಸಮೀಪದಲ್ಲಿ ಈಗಿನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿ 6ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಚಳುಕ್ಯ ಮನೆತನ ಪರ್ಯಾಯ ದ್ವೀಪದಲ್ಲಿ ಒಂದು ಪ್ರಬಲ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಸಫಲವಾಯಿತು. ಕದಂಬ ರಾಜ್ಯ ಬಹುಮಟ್ಟಿಗೆ ಚಳುಕ್ಯ ಸಾಮ್ರಾಜ್ಯದಲ್ಲಿ ವಿಲೀನವಾಗಿ ಕೆಲವು ಶಾಖೆಗಳ ಆಳಿಕೆ ಮಾತ್ರ ಮುಂದುವರಿಯಿತು. ಬಾದಾಮಿ ಚಳುಕ್ಯರ ಶಾಸನಗಳು ಕೊಪ್ಪಳ ಜಿಲ್ಲೆಯ ಕೊಪ್ಪಳ, ಹಲಗೇರಿ, ಕಲ್ಲೂರ ಇಟಗಿ ಮತ್ತು ಕುಕನೂರು ಮೊದಲಾದೆಡೆಗಳಲ್ಲಿ ದೊರೆತಿವೆ. ಇವರು ೭೫೭ರಲ್ಲಿ ರಾಷ್ಟ್ರಕೂಟರಿಂದ ಪರಾಜಯ ಹೊಂದುವವರೆಗೂ ಸಮಗ್ರವಾಗಿ ಆಳಿದರು. ಇವರ ಕಾಲದಲ್ಲಿ ಕೊಪ್ಪಳ ಒಂದು ಪಟ್ಟಣವಾಗಿ ಬೆಳೆಯಿತು. ಚೀನಿ ಪ್ರವಾಸಿ ಯುವಾನ್‍ಚಾಂಗನು ದಾಖಲಿಸಿರುವ ಕೊಂಕಿನಪುಲೋ ಎಂಬುದು ಕೊಪ್ಪಳವೆಂದು ಗುರುತಿಸಲಾಗಿದೆ. ರಾಷ್ಟ್ರಕೂಟರು, ಬಾದಾಮಿ ಚಾಳುಕ್ಯರನ್ನು ಸೋಲಿಸಿ ಅವರ ಉತ್ತರಾದಿsಕಾರಿಗಳಾಗಿ ಮಾನ್ಯಖೇಟದಿಂದ ಆಳತೊಡಗಿದ್ದು ಕೊಪ್ಪಳ ಜಿಲ್ಲೆಯ ಇತಿಹಾಸಕ್ಕೆ ಹೊಸ ತಿರುವನ್ನು ನೀಡಿತು. ಆಗ ಕೋಪ್ಪಳ ಅಥವಾ ಕೋಪಣ ನಗರ ಜೈನರ ಪುಣ್ಯಸ್ಥಳವಾಗಿ ಪ್ರಸಿದ್ಧವಾಗಿತ್ತು. ದಕ್ಷಿಣ ಭಾರತದ ಜೈನ ರಾಜಮನೆತನದವರು ವಿಶೇಷವಾಗಿ ಇಲ್ಲಿಗೆ ಯಾತ್ರೆ ಬರುತ್ತಿದ್ದರು. ಕೊಪ್ಪಳ, ಇಟಗಿ, ಕಲ್ಲೂರ, ಅರಕೇರಿ, ಸಂಕನೂರು, ಅಳವಂಡಿ, ಬೆಣಗೇರಿಗಳಲ್ಲಿ ರಾಷ್ಟ್ರಕೂಟರಿಗೆ ಸಂಬಂದಿsಸಿದ ಶಾಸನಗಳು ದೊರೆತಿವೆ. ಕೊಪ್ಪಳದಲ್ಲಿ ರಾಷ್ಟ್ರಕೂಟರ ದಂಡನಾಯಕರಲ್ಲೊಬ್ಬನಾದ ಮಾಮರಸನೆಂಬಾತನಿದ್ದನೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಸಾಮಂತರೂ ನಿಕಟ ಬಂಧುಗಳೂ ಆಗಿದ್ದ ತಲಕಾಡಿನ ಗಂಗರು ಈ ಪ್ರದೇಶದೊಂದಿಗೆ ಹೆಚ್ಚಿನ ಸಂಪರ್ಕ ಮತ್ತು ಅದಿsಕಾರ ಹೊಂದಿದ್ದರು. ಗಂಗ ಇಮ್ಮಡಿ ಬೂತುಗನ (೯೩೬-೬೧) ಶಾಸನ ಸಮೀಪದ ಇಟಗಿಯಲ್ಲಿ ದೊರೆತಿದೆ. ಈತ ರಾಷ್ಟ್ರಕೂಟ ಮುಮ್ಮಡಿ ಅಮೋಘವರ್ಷನ ಮಗಳು ರೇವಕನಿಮ್ಮಡಿಯನ್ನು ಮದುವೆಯಾಗಿದ್ದ. ಈ ಸಂದರ್ಭದಲ್ಲಿ ಚಕ್ರವರ್ತಿಯು ಬೂತುಗನಿಗೆ ಪುರಿಗೆರೆ ೩೦೦, ಬೆಳ್ವೊಲ ೩೦೦, ಕಿಸುಕಾಡು ೭೦ ಮತ್ತು ಬಾಗೆನಾಡು ೭೦ ಇವುಗಳನ್ನು ನೀಡಿದ್ದ. ಕುಕನೂರಿನ ತಾಮ್ರಶಾಸನ ಇಮ್ಮಡಿ ಮಾರಸಿಂಹನಿಗೆ ಸೇರಿದ್ದು ಅದರಲ್ಲಿ ಗಂಗರ ವಂಶಾವಳಿಯನ್ನು ನೀಡಲಾಗಿದೆ. ಗಂಗಾವತಿ ತಾಲ್ಲೂಕಿನ ಹೆಬ್ಬಾಳದ ಶಾಸನ ಈ ಭಾಗದಲ್ಲಿ ಗಂಗರು ಆಳಿದ್ದಕ್ಕೆ ಸಾಕ್ಷಿಯಾಗಿದೆ. ಗಂಗ ಮನೆತನಕ್ಕೆ ಕೊಪ್ಪಳ ಪುಣ್ಯಕ್ಷೇತ್ರವಾಗಿದ್ದುದಲ್ಲದೆ ಅಲ್ಲಿ ರಾಜಮನೆತನದ ಅನೇಕ ಸದಸ್ಯರು ಸ್ವಯಂಪ್ರೇರಣೆಯಿಂದ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ ವಿವರಗಳು ತಿಳಿದುಬರುತ್ತವೆ. ಇವರಲ್ಲಿ ಇಮ್ಮಡಿ ಬೂತುಗನ ಪತ್ನಿ ಪದ್ಮಬ್ಬರಸಿ, ಮಾರಸಿಂಹನ ಅಕ್ಕ ಹಾಗೂ ಚಾಳುಕ್ಯ ಹರಿಗನ ಪತ್ನಿ ಬಿಜ್ಜಬ್ಬರಸಿ ಮೊದಲಾದವರು ಸೇರಿದ್ದಾರೆ. ಕೊಪ್ಪಳದಲ್ಲಿ ಹಲವಾರು ಜೈನ ಮುನಿಗಳು ಮೋಕ್ಷ ಪಡೆದ ವಿವರಗಳು ಅಲ್ಲಿನ ಶಾಸನಗಳಲ್ಲಿ ದೊರೆಯುತ್ತವೆ. ರಾಷ್ಟ್ರಕೂಟರ ಆಳಿಕೆಯನ್ನು ಕೊನೆಗಾಣಿಸಿ ಚಾಳುಕ್ಯರ ಅದಿsಕಾರವನ್ನು ಮತ್ತೆ ಸ್ಥಾಪಿಸಿದ ಚಾಳುಕ್ಯ ತೈಲಪನ ಮೊದಲ ವರ್ಷದ ಆಳಿಕೆಯ (೯೭೩) ಶಾಸನ ಮಾದಿನೂರಿನಲ್ಲಿದೆ. ಅದರಲ್ಲಿ ರಾಜನು ಬ್ರಹ್ಮಾಂಡಕ್ರತು ಎಂಬ ಯಾಗವನ್ನು ಮಾಡಿದನೆಂದು ಹೇಳಿದೆ. ಕಲ್ಯಾಣದ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶದವರ ಆಳಿಕೆಯು ೧೨ನೆಯ ಶತಮಾನದ ಉತ್ತರಾರ್ಧದವರೆಗೂ ಮುಂದುವರಿಯಿತು. ಈ ಯುಗದಲ್ಲಿ ಹೇಮಾವತಿ, ಹೆಂಜೇರು ಮತ್ತು ಕಂಪಿಲಿಯಿಂದ ಆಳಿದ ನೊಳಂಬರು ಈ ಜಿಲ್ಲೆಯ ಕೆಲವು ಭಾಗಗಳನ್ನು ಆಳಿರುವ ಸಂಭವ ಹೆಚ್ಚಿದೆ. ಕಳಚುರಿಗಳು ಅಲ್ಪಾವದಿsಯ ಕಾಲ ಆಳಿದರೂ ಅವರ ಕೆಲ ಶಾಸನಗಳು ಜಿಲ್ಲೆಯಲ್ಲಿ ದೊರೆತಿವೆ. ಆ ಕಾಲದಲ್ಲಿ ಕುಕನೂರು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿತ್ತು. ಅಲ್ಲಿನ ಜೇಷಾವಿದೇವಿಗೆ ರಾಜರು ಮತ್ತು ದಂಡನಾಯಕರು ನಡೆದುಕೊಳ್ಳುತ್ತಿದ್ದರು. ಆಗಲೇ ಇಟಗಿಯ ಮಹದೇವ ದೇವಾಲಯ ಮತ್ತು ಕಲ್ಲೂರ ಶ್ರೀ ಕಲ್ಲೀನಾಥೇಶ್ವರ ದೇವಾಲಯ ,ಹಂಚಿನಾಳ ಸಮೀಪದ ಶೈವ ದೇವಾಲಯ'ಗಳನ್ನೂ ನಿರ್ಮಾಣಗೈದದ್ದು, ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಈ ಪ್ರಾಂತ್ಯ ಅವರಿಬ್ಬರ ನಡುವಿನ ವಿವಾದಾತ್ಮಕ ಪ್ರದೇಶವಾಗಿತ್ತು. ಈ ಎರಡು ರಾಜ್ಯಗಳ ನಡುವೆ ಮಧ್ಯಗಾಮಿ ರಾಜ್ಯದಂತಿದ್ದ ಕಂಪಿಲಿ ರಾಜ್ಯದ ಪ್ರಬಲ ನೆಲೆಗಳಲ್ಲೊಂದಾದ ಕುಮ್ಮಟದುರ್ಗ ಕೊಪ್ಪಳ ತಾಲ್ಲೂಕಿನಲ್ಲಿದೆ. ಮೊದಲು ಕಂಪಿಲಿಯಿಂದ ಬಳ್ಳಾರಿ ಜಿಲ್ಲೆ ಆಳುತ್ತಿದ್ದ ಇಲ್ಲಿನ ಅರಸರು ೧೩೧೫ರಲ್ಲಿ ಕುಮ್ಮಟದುರ್ಗದಿಂದ ಆಳುತ್ತಿದ್ದುದು ಶಾಸನಗಳಿಂದ ಕಂಡುಬರುತ್ತದೆ. ದೇವಗಿರಿಯಲ್ಲಿ ನೆಲೆಸಿದ್ದ ದೆಹಲಿ ಸುಲ್ತಾನರ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಹುತಾತ್ಮರಾದ ಕಂಪಿಲಿರಾಯ ಮತ್ತು ಕುಮಾರರಾಮ ಈ ಮನೆತನದವರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮೊದಲ ಚಟುವಟಿಕೆಗಳು ಪ್ರಾರಂಭವಾದದ್ದು ಈ ಜಿಲ್ಲೆಯ ಆನೆಗೊಂದಿಯಲ್ಲಿ ಎಂದು ತಿಳಿದುಬರುತ್ತದೆ. ವಿಜಯನಗರ ಅರಸರ ೧೩೪೨ರ ಶಾಸನ ಆನೆಗೊಂದಿಯಲ್ಲಿ ದೊರೆತಿದೆ. ಕೊಪ್ಪಳದ ೧೩೪೬ರ ಶಾಸನದಲ್ಲಿ ಹರಿಹರನ ಉಲ್ಲೇಖವಿದೆ. ಆನೆಗೊಂದಿ, ಕನ್ನೇರುಮಡು, ಕೆಸರಟ್ಟಿ, ಕಲ್ಲೂರು, ಬಂಡಿಹಾಳಗಳಲ್ಲಿ ವಿಜಯನಗರದ ಅರಸರ ಮತ್ತು ಮಾಂಡಲಿಕರ ಶಾಸನಗಳು ಲಭ್ಯವಾಗಿವೆ. ವಿಜಯನಗರದ ಆಯಕಟ್ಟಿನ ಪ್ರದೇಶವಾಗಿದ್ದ ಈ ಜಿಲ್ಲೆಯ ಒಡೆತನಕ್ಕಾಗಿ ವಿಜಯನಗರ ಅರಸರು ಮತ್ತು ಬಹಮನೀ ಸುಲ್ತಾನರುಗಳ ನಡುವೆ ಆಗಾಗ ಯುದ್ಧಗಳಾಗುತ್ತಿದ್ದವು. ಕಲ್ಲೂರು ಮತ್ತು ಬಂಡಿಹಾಳದ ಶಾಸನಗಳು ಅಚ್ಯುತರಾಯನ ಕಾಲದಲ್ಲಿ ಅವನ ಮಾಂಡಲಿಕರಾಗಿದ್ದ ಗುಜ್ಜಲವಂಶದ ಅರಸರ ಬಗ್ಗೆ ತಿಳಿಸುತ್ತದೆ. ತಾಳಿಕೋಟೆಯ ಯುದ್ಧದ ತರುವಾಯವೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸ್ವಲ್ಪ ಕಾಲ ಐತಿಹಾಸಿಕ ಮಹತ್ತº ಪಡೆದಿತ್ತು. ಆನೆಗೊಂದಿಯಲ್ಲಿ ಆಶ್ರಯ ಪಡೆದ ವಿಜಯನಗರದ ಅರಸು ಮನೆತನದವರು ಅಲ್ಲಿ ತಮ್ಮ ಅಧಿಕಾರವನ್ನು ಮುಂದುವರಿಸಿದರು. ಶ್ರೀರಂಗಪಟ್ಟಣದ ಪ್ರಾಂತ್ಯಾದಿsಕಾರಿಯಾಗಿದ್ದ ಶ್ರೀರಂಗರಾಯ ಆನೆಗೊಂದಿಯ ಮೂಲದವನೆಂದು ತಿಳಿದುಬರುತ್ತದೆ. ೧೬೫೭ರಲ್ಲಿ ಶಿವಾಜಿಯು ಆನೆಗೊಂದಿ ಮೊದಲಾದ ಒಂಬತ್ತು ಸಮತಗಳನ್ನು ಶ್ರೀರಂಗರಾಯನ ಕುಟುಂಬದ ಪೋಷಣೆಗಾಗಿ ನೀಡಿದ್ದನೆಂದು ಹೇಳಲಾಗಿದೆ. ಈ ಕಾಲದಲ್ಲಿ ಕೊಪ್ಪಳವು 'ಕೊಪಣನಾಡು' ಅಥವಾ ಕೋಪಣವೇಂಟೆ ಯ ಕೇಂದ್ರ ಸ್ಥಳವಾಗಿದ್ದಿತು. ಕಂಪಿಲಿ ರಾಜ್ಯ ಪತನಗೊಂಡು ದಖನ್ನಿನ ದೆಹಲಿ ಪ್ರಾಂತ್ಯಾದಿsಕಾರಿಯ ವಶಕ್ಕೆ ಬಂದ ದೋಆಬ್ ಪ್ರಾಂತ್ಯವು ಅಂದರೆ ಕೊಪ್ಪಳ ಜಿಲ್ಲೆ ಮತ್ತು ಈಗಿನ ರಾಯಚೂರು ಜಿಲ್ಲೆಗಳ ಪ್ರದೇಶವು ಮುಂದೆ ಸದಾ ವಿಜಯನಗರ ಮತ್ತು ಬಹಮನೀ ರಾಜ್ಯದ ನಡುವೆ ವಿವಾದಿತ ಪ್ರದೇಶವಾಗಿ ಪರಿಣಮಿಸಿತು. ರಾಯಚೂರಿನೊಂದಿಗೆ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳೂ ಆಗಾಗ ಈ ಎರಡು ರಾಜ್ಯ- ಸಾಮ್ರಾಜ್ಯಗಳ ನಡುವೆ ಕೈ ಬದಲಾಯಿಸುತ್ತಿದ್ದುದನ್ನು ಕಾಣಬಹುದು. ರಾಯಚೂರು ಮತ್ತು ಮುದುಗಲ್ಲು ದೀರ್ಘಕಾಲ ಬಿಜಾಪುರ - ಗುಲ್ಬರ್ಗ ಮತ್ತು ಬೀದರ್‍ನಿಂದ ಆಳಿದ ಬಹಮನೀ ರಾಜ್ಯದ ವಶದಲ್ಲಿರುತ್ತಿದ್ದುದ್ದರಿಂದ ಕೊಪ್ಪಳದ ಅನೇಕ ಸ್ಥಳಗಳೂ ಅದರ ಆಳಿಕೆಗೊಳಪಟ್ಟಿದ್ದವು. ಪದೇ ಪದೇ ಬಹಮನೀ ಸೈನ್ಯಗಳು ವಿಜಯನಗರದ ಪ್ರದೇಶಗಳಿಗೆ ನುಗ್ಗಿ ಕೊಲೆ, ಲೂಟಿ ಮತ್ತು ದಬ್ಬಾಳಿಕೆಗಳಲ್ಲಿ ತೊಡಗುತ್ತಿದ್ದವು. ಎರಡನೆಯ ದೇವರಾಯ ಮತ್ತು ಕೃಷ್ಣದೇವರಾಯ ಈ ದಾಳಿಗಳನ್ನು ಯಶಸ್ವಿಯಾಗಿ ಎದುರಿಸಿ ಸುಲ್ತಾನರ ಆಳಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಿದ್ದರು. ೧೫೬೫ರಲ್ಲಿ ತಾಳಿಕೋಟೆ ಯುದ್ಧದಲ್ಲಿ ವಿಜಯನಗರದ ಸೈನ್ಯ ಸೋತ ಮೇಲೆ ಈ ಜಿಲ್ಲೆ ಬಹುಮಟ್ಟಿಗೆ ಬಿಜಾಪುರದ ಸುಲ್ತಾನ್‍ಶಾಹಿಯ ಅಧೀನಕ್ಕೊಳಗಾಯಿತು. ಶಿವಾಜಿ ೧೬೭೭ರಲ್ಲಿ ಕೊಪ್ಪಳವನ್ನು ಮುತ್ತಿ ವಶಪಡಿಸಿಕೊಂಡ. ಸ್ವಲ್ಪ ಕಾಲದಲ್ಲೇ ಬಿಜಾಪುರ ರಾಜ್ಯ ಔರಂಗಜೇಬನ ಮಹಾ ದಕ್ಷಿಣ ದಂಡಯಾತ್ರೆಗೆ ಬಲಿಯಾದ ಮೇಲೆ ಅನೇಕ ವರ್ಷಗಳ ಅರಾಜಕತೆಯ ಅನಂತರ ಈ ಜಿಲ್ಲೆ ಹೈದರಾಬಾದಿನ ನಿಜಾಮರ ಆಡಳಿತದಡಿ ಬಂದಿತು. ಹೈದರ್‍ಅಲಿ ಮತ್ತು ಟಿಪ್ಪುಸುಲ್ತಾನರ ದಂಡಯಾತ್ರೆಗಳಿಂದಾಗಿ ಈ ಪ್ರದೇಶ ಸ್ವಲ್ಪ ಅವದಿsಗೆ ಮೈಸೂರು ರಾಜ್ಯದ ಭಾಗವಾಗಿತ್ತು. ಆದರೆ ೧೭೯೯ರಲ್ಲಿ ಟಿಪ್ಪು ಬ್ರಿಟಿಷರಿಗೆ ಸಂಪೂರ್ಣವಾಗಿ ಸೋತ ಅನಂತರ ಆದ ರಾಜಕೀಯ ಒಡಂಬಡಿಕೆಯ ಮೇರೆಗೆ ಕೊಪ್ಪಳ ಜಿಲ್ಲೆ ಅಂದಿನ ರಾಯಚೂರು ಜಿಲ್ಲೆಯ ಭಾಗವಾಗಿ ಹೈದರಾಬಾದ್ ಸಂಸ್ಥಾನಕ್ಕೆ ಸೇರಿತು. ಹೈದರಾಬಾದ್ ನಿಜಾಮರ ಸರ್ಕಾರವು ಸಂಸ್ಥಾನವನ್ನು ಜಹಗೀರಿಗಳು, ಪೈಗಗಳು ಮತ್ತು ನಿಜಾಮರ ಖಾಸಾ ಜಮೀನುಗಳೆಂದು ವಿಂಗಡಿಸಿದ್ದಿತು. ಜಹಗೀರಿಗಳನ್ನು ರಾಜ್ಯಕ್ಕೆ ಸೈನ್ಯ ಮೊದಲಾದವನ್ನು ಒದಗಿಸಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತಿತ್ತು. ಪೈಗಗಳನ್ನು ಅರಮನೆಗೆ ಬೇಕಾದ ಶ್ರೀಮಂತರು ಮತ್ತು ಕುಲೀನರಿಗೆ ಕೊಡಲಾಗುತ್ತಿತ್ತು. ಈ ನಿಜಾಮರ ಖಾಸಾ ಜಮೀನುಗಳನ್ನು ರೈತರು ಗುತ್ತಿಗೆಗೆ ಸಾಗುವಳಿ ಮಾಡುತ್ತಿದ್ದರು. ಕೊಪ್ಪಳ ಮತ್ತು ಯಲಬುರ್ಗ ತಾಲ್ಲೂಕುಗಳು ನವಾಬ್ ಸಾಲರ್‍ಜಂಗ ಎಂಬ ಜಹಗೀರುದಾರನಿಗೆ ಸೇರಿದ್ದವು. ಕುಷ್ಟಗಿ ತಾಲ್ಲೂಕು ಒಬ್ಬ ದೇಸಾಯಿಯ ಜಹಗೀರಾಗಿದ್ದಿತು. ಆನೆಗೊಂದಿಯೂ ಒಂದು ಪುಟ್ಟ ಜಹಗೀರಾಗಿತ್ತು. ಈ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಶ್ರೀಮಂತ ಮತ್ತು ಪ್ರಭಾವಿ ವರ್ಗದ ಅಲ್ಪಸಂಖ್ಯಾತರ ಕೈಯಲ್ಲಿ ರೈತರೂ ಕಾರ್ಮಿಕರು ಹೀನ ಸ್ಥಿತಿಯಲ್ಲಿ ಬದುಕಬೇಕಾಯಿತು. ಗ್ರಾಮದಲ್ಲಿ ಸರ್ಕಾರದ ಪರವಾಗಿ ಪಟೇಲ ಮತ್ತು ಗ್ರಾಮ ಮುಖ್ಯರಿರುತ್ತಿದ್ದರು. ಈ ಜಹಗೀರುದಾರರುಗಳು ನಿಜಾಮನಿಗೆ ವಾರ್ಷಿಕ ಪೆÇಗದಿ ಕೊಡುತ್ತಿದ್ದರು. ಅವರಿಗೆ ಪೆÇಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಹೊಂದುವ ಅದಿsಕಾರವಿದ್ದಿತು. ಈ ಬಗೆಯ ಆಳಿಕೆಯಲ್ಲಿ ಜನಸಾಮಾನ್ಯರ ಹಕ್ಕುಬಾಧ್ಯತೆಗಳು ಕುಂಠಿತಗೊಂಡಿದ್ದುವು. 20ನೆಯ ಶತಮಾನದ ಪ್ರಾರಂಭದ ಹೊತ್ತಿಗೆ ಭಾರತಾದ್ಯಂತ ಬಲಗೊಳ್ಳುತ್ತಿದ್ದ ಸ್ವಾತಂತ್ರ್ಯಚಳವಳಿಯ ಪ್ರಭಾವ ಹೈದರಾಬಾದ್ ಸಂಸ್ಥಾನವನ್ನೂ ತಟ್ಟದಿರಲಿಲ್ಲ. ೧೯೧೧ರಲ್ಲಿ ಧಾರವಾಡದಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನದಲ್ಲಿ ಈ ಜಿಲ್ಲೆಯ ಹಲವರು ಬಂದು ಭಾಗವಹಿಸಿದರು. ಬೆಳಗಾಂವಿಯಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಸಮ್ಮೇಳನ (೧೯೨೪) ಸ್ವಾತಂತ್ರ್ಯ ಹೋರಾಟದ ಬಗ್ಗೆ ಈ ಪ್ರಾಂತದ ಜನರ ಗಮನ ಸೆಳೆಯುವಲ್ಲಿ ಮುಖ್ಯ ಪಾತ್ರ ವಹಿಸಿತು. ೧೯೬೧-೧೭ ರಿಂದಲೇ ಕೊಪ್ಪಳದಲ್ಲಿ ಒಂದು ಖಾದಿ ಪ್ರಚಾರ ಕೇಂದ್ರ ಪ್ರಾರಂಭಗೊಂಡಿತ್ತು. ೧೯೨೨ರಲ್ಲಿ ಆರ್.ಬಿ.ದೇಸಾಯಿಯವರು ಕುಕನೂರಿನಲ್ಲಿ ವಿದ್ಯಾನಂದ ಗುರುಕುಲವನ್ನು ಸ್ಥಾಪಿಸಿದರು. ಇದು ಜನರಲ್ಲಿ ರಾಷ್ಟ್ರೀಯ ಭಾವನೆ ಬೆಳೆಸಲು ಸಹಕಾರಿಯಾಯಿತು. ೧೯೨೦-೨೧ರಲ್ಲಿ ರಾಯಚೂರಿನಲ್ಲಿ ಪಂಡಿತ ತಾರಾನಾಥರು ಸ್ಥಾಪಿಸಿದ ಹಮ್‍ದರ್ದ್ ರಾಷ್ಟ್ರೀಯ ಶಾಲೆಯು ಸ್ವಾತಂತ್ರ್ಯ ಚಳವಳಿಯ ಗುರಿಗಳನ್ನು ಪ್ರಚಾರಗೊಳಿಸಿತು. ರಾಯಚೂರಿನ ಅಡವಿರಾವ್ ಫಡ್ನಾವಿಸ್, ಆರ್.ಜಿ.ಜೋಷಿ, ಗಾಣದಾಳ್ ನಾರಾಯಣಪ್ಪ, ವೀರಣ್ಣಮಾಸ್ತರ ಮೊದಲಾದವರ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಹರಡಿತು. ೧೯೨೮ರಲ್ಲಿ ರಾಯಚೂರಿನಲ್ಲಿ ಸ್ಥಾಪನೆಗೊಂಡ ಕರ್ನಾಟಕ ಸಂಘ ಇನ್ನೊಂದು ಮುಖ್ಯ ಘಟ್ಟವಾಯಿತು. ೧೯೩೦ರಲ್ಲಿ ಗಾಂದಿsೀಜಿಯವರು ಕೊಪ್ಪಳ ತಾಲ್ಲೂಕಿನ ಮೂಲಕ ರೈಲಿನಲ್ಲಿ ಹಾದುಹೋದಾಗ ಅವರನ್ನು ಅನೇಕರು ಭೇಟಿಯಾದರು. ೧೯೩೪ರಲ್ಲಿ ರಾಯಚೂರಿನಲ್ಲಿ ೨೦ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ೧೯೩೮ರಲ್ಲಿ ಹೈದರಾಬಾದ್ ಸಂಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಸ್ತಿತ್ವಕ್ಕೆ ಬಂತು. ಈ ಭಾಗದ ಜನರು ಮೂರು ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಬೇಕಾಗಿತ್ತು. ಒಂದು ಕಡೆ ಬ್ರಿಟಿಷರಿಂದ ವಿಮೊಚನೆ; ಇನ್ನೊಂದು ಕಡೆ ಜಹಗೀರ್‍ದಾರಿ ವ್ಯವಸ್ಥೆ ನಿಜಾಮ್‍ಶಾಹಿಯಿಂದ ಬಿಡುಗಡೆ; ಮೂರನೆಯದಾಗಿ ಕನ್ನಡೇತರ ರಾಜ್ಯದಿಂದ ಹೊರಬಂದು ಕನ್ನಡನಾಡಿನ ಏಕೀಕರಣ ಸಾದಿsಸುವುದು. ಸಿರೂರು ವೀರಭದ್ರಪ್ಪ ಅಳವಂಡಿ ಶಿವಮೂರ್ತಿಸ್ವಾಮಿ, ಎಲ್.ಕೆ.ಷರಾಫ್, ಡಿ.ಜಿ.ಬಿಂದು, ಜನಾರ್ಧನರಾವ್‍ದೇಸಾಯಿ, ಬುರ್ಲಿಬಿಂದು ಮಾಧವರಾವ್, ಜಿ.ಕೆ.ಪ್ರಾಣೇಶಾಚಾರ್ಯ ಮತ್ತಿತರರು ಜನಜಾಗೃತಿ ಮತ್ತು ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳು ನಿಧಾನವಾಗಿಯಾದರೂ ದೃಢವಾಗಿ ಪ್ರಗತಿಯಲ್ಲಿದ್ದಾಗಲೇ ಇಲ್ಲಿ ಜನತೆ ಹೊಸ ಸಮಸ್ಯೆಯನ್ನು ಎದುರಿಸಬೇಕಾಯಿತು. ೧೯೪೫ರ ಅನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ನಿಚ್ಚಳವಾಗುತ್ತಿದ್ದಂತೆಲ್ಲ ಹೈದರಾಬಾದ್ ಸಂಸ್ಥಾನದ ನಿಜಾಮರು ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯುವ ಪ್ರಯತ್ನದಲ್ಲಿ ತೊಡಗಿದರು. ೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಅದೇ ತಿಂಗಳ ೨೭ರಂದು ಹೈದರಾಬಾದ್ ರಾಜ್ಯ ಭಾರತ ಒಕ್ಕೂಟದಿಂದ ಪ್ರತ್ಯೇಕವಾಗುಳಿಯಲು ನಿರ್ಧರಿಸಿ ಸ್ವಾತಂತ್ರ್ಯ ಘೂೀಷಿಸಿಕೊಂಡಿತು. ಜೊತೆಗೆ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿರುವವರನ್ನು ದಮನ ಮಾಡುವುದಕ್ಕಾಗಿ ಜನರಲ್ಲಿ ಭಯ ಹುಟ್ಟಿಸಲು ರಜಾಕಾರರೆಂದು ಕರೆದುಕೊಂಡ ಮುಸ್ಲಿಮ್ ಉಗ್ರವಾದಿಗಳ ಗುಂಪು ಹಿಂಸಾಚಾರಕ್ಕಿಳಿಯಿತು. ಇದರಿಂದ ಅನೇಕಕಡೆ ಬಿsೀಕರ ಲೂಟಿ, ದರೋಡೆ, ಕೊಲೆ ಸುಲಿಗೆ, ಅತ್ಯಾಚಾರಗಳು ನಡೆದವು. ಆಗ ಈ ರಾಜ್ಯದ ಜನರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿ ೧೯೪೮ರ ಸೆಪ್ಟೆಂಬರ್ ೧೩ರಂದು ಪೆÇಲೀಸ್ ಕಾರ್ಯಾಚರಣೆ ಪ್ರಾರಂಬಿsಸಿತು. ಅದೇ ತಿಂಗಳ ೧೮ರಂದು ಹೈದರಾಬಾದ್ ಸಂಸ್ಥಾನವನ್ನು ವಶಪಡಿಸಿಕೊಂಡು ಭಾರತ ಒಕ್ಕೂಟದಲ್ಲಿ ಸೇರಿಸಲಾಯಿತು. 1೧೯೫೬ ನವೆಂಬರ್ ೧ರಂದು ಭಾಷಾವಾರು ರಾಜ್ಯಗಳ ರಚನೆಯಾದಾಗ ಕೊಪ್ಪಳವೂ ಸೇರಿದಂತೆ ಅಂದಿನ ರಾಯಚೂರು ಜಿಲ್ಲೆ ಮತ್ತು ಹೈದರಾಬಾದ್ ಕರ್ನಾಟಕ ಭಾಗ ವಿಶಾಲ ಮೈಸೂರು ರಾಜ್ಯದಲ್ಲಿ ಒಂದಾಯಿತು. ಸಾಂಸ್ಕೃತಿಕ ಪರಂಪರೆ ಈ ಜಿಲ್ಲೆ ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮ ಪರಂಪರೆ ಹೊಂದಿದೆ. ಶೈವ ಮಠಗಳು, ಅಗ್ರಹಾರಗಳು, ಜೈನ ಕೇಂದ್ರಗಳಿಂದ ಕೂಡಿರುವುದಲ್ಲದೆ ಜನಪದ ಸಾಹಿತ್ಯ ಸಂಪತ್ತಿನಿಂದಲೂ ಕೂಡಿದೆ. ವೀರಶೈವಧರ್ಮ ಹೊಸ ಸಾಂಸ್ಕøತಿಕ ಪರಿಸರವನ್ನು ಸೃಷ್ಟಿಸಿತು. ಯಲಬುರ್ಗ ತಾಲ್ಲೂಕಿನ ಕಲ್ಲೂರ ಕಲ್ಲೀನಾಥೇಶ್ವರ ದೇವಾಲಯ(ಕಾಳಮುಖ ಶೈವ ಪರಂಪರೆಯ ಆಧಿ ಶಿಕ್ಷಣ ಕೇಂದ್ರ). ಕುಕನೂರು ತಾಲೂಕಿನ ಕುಕನೂರ ಕಲ್ಲೇಶ್ವರ ದೇವಾಲಯ ಮತ್ತು ಅದೇ ತಾಲ್ಲೂಕಿನ ಇಟಗಿಯ ಮಹಾದೇವ ದೇವಾಲಯ ಚಾಳುಕ್ಯ ಪರಂಪರೆಯ ಶಿಲ್ಪ ಮತ್ತು ವಾಸ್ತುಗಳನ್ನು ಹೊಂದಿವೆ. ಕೊಪ್ಪಳದ ಕೋಟೆ ನೆಲಮಟ್ಟದಿಂದ 400' ಎತ್ತರದ ಗುಡ್ಡದ ಮೇಲಿದ್ದು ಅದನ್ನು ವಿನ್ಯಾಸ ಮತ್ತು ಭದ್ರತೆಯ ದೃಷ್ಟಿಯಿಂದ ಐರೋಪ್ಯ ದಂಡನಾಯಕರೂ ಮೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೌರೂರು, ಬಳಂಗೆರೆ, ಆಳವಂಡಿ, ತಳಕಲ್ಲು, ಆನೆಗೊಂದಿ, ಮುನಿರಾಬಾದ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಸ್ತ್ರೀ ದೇವತೆಗಳ ಆರಾಧನೆ ಅತ್ಯಂತ ಪೂರ್ವಕಾಲದಿಂದಲೂ ಬಂದ ಬಳುವಳಿ. ಕುಕನೂರಿನ ಮಹಾಮಾಯ, ಜೇಷಾವಿದೇವಿ, ಸಂಕನೂರಿನ ಸಂಕಲಾದೇವಿ, ಹೊಸೂರಿನ ಮಹಾಮಾಯಾ, ಹುಲಿಗಿಯ ಹುಲೆಗೆಮ್ಮ ಇವು ಪ್ರಸಿದ್ಧ ಶಕ್ತಿ ದೇವತೆಗಳು. ಕುಷ್ಟಗಿಯ ಅಡವಿರಾಯನ ಜಾತ್ರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಕನಕಗಿರಿ ಜಾತ್ರೆ, ಯಲಬುರ್ಗ ತಾಲ್ಲೂಕಿನ ಕಲ್ಲೂರ ಕಲ್ಲೀನಾಥೇಶ್ವರ ಕಾರ್ತಿಕೋತ್ಸವ ಜಾತ್ರೆ, ಮಂಗಳೂರಿನ ಮಂಗಳೇಶ್ವರ ಜಾತ್ರೆ, ಗುತ್ತೂರು ಮಾರುತೇಶ್ವರ ಜಾತ್ರೆ, ಕುಕನೂರ ತಾಲೂಕಿನ ಗುದ್ನೇಪ್ಪನಮಠದ ಗುದ್ನೇಶ್ವರ ಜಾತ್ರೆ, ಚಂಡೂರಿನ ಆಂಜನೇಯಸ್ವಾಮಿ ಕಾರ್ತಿಕೋತ್ಸವ ಗಜೇಂದ್ರಗಡದ ಕಾಲಕಾಲೇಶ್ವರ ಕಾರ್ತಿಕೋತ್ಸವ ಮತ್ತು ಜಾತ್ರೆ ಹಾಗೂ ಅಲ್ಲೇ ಸ್ವಲ್ಪ ಮುಂದೆ ಕಣವಿ ವೀರಭದ್ರೇಶ್ವರ ಜಾತ್ರೆಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ. ಶಾಸ್ತ್ರೀಯ ಸಂಗೀತ ಇಲ್ಲಿ ಹೆಚ್ಚು ಜನಪ್ರಿಯ; ದಾಸ ಪರಂಪರೆಯೂ ಉಂಟು. ಪ್ರಾಚೀನ ಕಾಲದಿಂದಲೂ ಸಾಹಿತ್ಯ ರಚನೆಗೆ, ಕವಿಪಂಡಿತರಿಗೆ ಹೆಸರುವಾಸಿ. ಇತ್ತೀಚಿನ ಸಾರಸ್ವತ ಲೋಕದ ಹಲವಾರು ಸಾಧಕರು ಇಲ್ಲಿನವರು. ಇವರಲ್ಲಿ ಸಿದ್ದಯ್ಯ ಪುರಾಣಿಕ, ಕಲ್ಲೂರಿನ ಪ. ಪೂಜ್ಯ ಕವಿಶ್ರೀ ಡಾ. ಪಂ ಕಲ್ಲಯ್ಯಜ್ಜನವರು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ, ಹಾಗೂ ಕವಿ ರಾಜಾಸಾಹೇಬ ಕುಕನೂರ ಸಾ. ಕಲ್ಲೂರ. ಪಾಂಡುರಂಗರಾವ್ ದೇಸಾಯಿ, ಜಯತೀರ್ಥ ರಾಜಪುರೋಹಿತ, ಇಟಗಿ ರಾಘವೇಂದ್ರ, ಕುಷ್ಟಗಿ ರಾಘವೇಂದ್ರರಾವ್, ದೇವೇಂದ್ರ ಕುಮಾರ ಹಕಾರಿ, ಎಚ್.ಎಸ್.ಪಾಟೀಲ, ಬಿ.ಆರ್.ತುಬಾಕಿ, ಗವಿಸಿದ್ದ ಬಳ್ಳಾರಿ, ನಾ.ಭ.ಶಾಸ್ತ್ರಿ,ಕೀರ್ತನಕೇಸರಿ ಜಯರಾಮಾಚಾರ್ಯ, ಮಾಧವರಾವ್ ಮುಧೋಳ (ಉರ್ದು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪರಿಣಿತಿ ಪಡೆದಿದ್ದರು. ಉರ್ದು-ಕನ್ನಡ ನಿಘಂಟಿನಲ್ಲಿ ಇವರು ಕೆಲಸಮಾಡಿದ್ದರು) ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.https://koppal.nic.in/ ತಾಲ್ಲೂಕು ಮತ್ತು ಪಟ್ಟಣವಾಗಿ ಕೊಪ್ಪಳ ಕೊಪ್ಪಳ ತಾಲ್ಲೂಕು ಹಾಗೂ ಅದರ ಮುಖ್ಯ ಪಟ್ಟಣ. ದಕ್ಷಿಣಕ್ಕೆ ತುಂಗಭದ್ರಾ ಜಲಾಶಯ, ಪಶ್ಚಿಮಕ್ಕೆ ಗದಗ ಜಿಲ್ಲೆ, ಉತ್ತರಕ್ಕೆ ಯಲಬುರ್ಗ ತಾಲ್ಲೂಕು ಮತ್ತು ಪೂರ್ವಕ್ಕೆ ಗಂಗಾವತಿ ತಾಲ್ಲೂಕು ಇವೆ. ಕೊಪ್ಪಳ, ಇರಕಲ್ಲಗಡ, ಹಿಟ್ನಾಳ ಮತ್ತು ಅಳವಂಡಿ ಈ ನಾಲ್ಕು ಹೋಬಳಿಗಳಿವೆ. ೧೫೭ ಹಳ್ಳಿಗಳಿವೆ. ತಾಲ್ಲೂಕಿನ ಒಟ್ಟು ವಿಸ್ತೀರ್ಣ ೧,೩೭೮.6ಚ.ಕಿಮೀ. ತಾಲ್ಲೂಕಿನ ಬಹುಭಾಗ ಕಪುಮೆಕ್ಕಲು ಮಣ್ಣಿನ ಮಟ್ಟಸ ಪ್ರಸ್ಥಭೂಮಿ. ತಾಲ್ಲೂಕಿನ ಈಶಾನ್ಯ ಮತ್ತು ಕೊಪ್ಪಳ ಪಟ್ಟಣದ ಸಮೀಪದಲ್ಲಿ ಗುಡ್ಡಗಳಿವೆ. ತುಂಗಭದ್ರಾನದಿ ತಾಲ್ಲೂಕಿನ ದಕ್ಷಿಣದ ಗಡಿಯಾಗಿತ್ತು. ಈಗ ತುಂಗಭದ್ರಾ ಜಲಾಶಯದ ಹರವಿನಲ್ಲಿ ಆ ಅಂಚಿನ ಭಾಗಗಳು ಮುಳುಗಿವೆ. ತುಂಗಭದ್ರಾ ಅಣೆಕಟ್ಟಿರುವುದು ತಾಲ್ಲೂಕಿನ ಆಗ್ನೇಯದಲ್ಲಿ ಮುನಿರಾಬಾದ್ ಬಳಿ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ ೫೯೪.೬೫ಮಿಮೀ. ಕೃಷಿ ತಾಲ್ಲೂಕಿನ ಮುಖ್ಯ ಜೀವನೋಪಾಯ. ಸಾಗುವಳಿಯಾಗುತ್ತಿರುವ ಒಟ್ಟು ೩,೪೦,೫೯೨ ಎಕರೆಗಳಲ್ಲಿ ೫,೨೮೫ಕ್ಕೂ ಹೆಚ್ಚು ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ (ಕಾಲುವೆಯಿಂದ ೪,೭೦೨ ಎಕರೆಗಳು, ಬಾವಿಗಳಿಂದ ೨೮೫ ಎಕರೆಗಳು, ಇತರ ಮೂಲಗಳಿಂದ ೧೫೦ ಎಕರೆಗಳು). ಜೋಳ (೫೧,೯೪೦), ನೆಲಗಡಲೆ (೩೭,೦೦೫), ಹತ್ತಿ (೨೭,೮೩೫), ಗೋದಿ (೭,೨೦೦), ತೊಗರಿ (೫,೫೬೨), ಬಾಜ್ರ (೪,೫೯೩), ಬತ್ತ (೨,೯೪೨), ಕಬ್ಬು (೨,೫೮೩), ಹುರುಳಿ (೧,೩೨೦), ಹರಳು (೨೬೦) ಮುಖ್ಯ ಬೆಳೆಗಳು. ಕೊಪ್ಪಳದಿಂದ ೧೩ಕಿಮೀ ದೂರದಲ್ಲಿರುವ ಕಿನ್ನಾಳ ಗ್ರಾಮ ಮರದ ಕುಶಲ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಕೆಲವು ಚಿತ್ರಗಾರ ಮನೆತನದವರು ಉತ್ತಮವಾಗಿ ರಚಿಸಿ ಬಣ್ಣಹಾಕಿದ ದೇವವಿಗ್ರಹಗಳು, ಪ್ರಾಣಿಗಳ ಬೊಂಬೆಗಳು, ಹಣ್ಣು ತರಕಾರಿಗಳ ತದ್ರೂಪ ಬೊಂಬೆಗಳು, ನಾಟಕಗಳಲ್ಲಿ ಬಳಸುವ ಕಿರೀಟ, ಮುಖವಾಡ, ತೊಟ್ಟಿಲು, ಪೀಠಗಳನ್ನು ತಯಾರಿಸುತ್ತಾರೆ. ನೇಯ್ಗೆ, ಕೊಂಬಿನಿಂದ ಬಾಚಣಿಗೆಯ ತಯಾರಿಕೆ ಈ ಮೊದಲಾದ ಉದ್ಯಮಗಳೂ ಇಲ್ಲಿವೆ. ತುಂಗಭದ್ರಾ ನದಿಯ ಉಪನದಿಯಾದ ಹಿರೇಹಳ್ಳದ ಎಡದಂಡೆಯ ಮೇಲಿರುವ ಕೊಪ್ಪಳ ಈ ತಾಲ್ಲೂಕಿನ ಮುಖ್ಯ ಪಟ್ಟಣ. ಜನಸಂಖ್ಯೆ ೫೬,೧೪೫. ಇದು ತಾಲ್ಲೂಕಿನ ವಾಣಿಜ್ಯ, ಕೈಗಾರಿಕೆ ಮತ್ತು ವಿದ್ಯಾಕೇಂದ್ರ ಹಾಗೂ ಹುಬ್ಬಳ್ಳಿ ಗುಂತಕಲ್ಲು ರೈಲುಮಾರ್ಗದ ಒಂದು ನಿಲ್ದಾಣ. ಬಳ್ಳಾರಿ, ಕುಷ್ಪಗಿ, ಹುಬ್ಬಳ್ಳಿ, ಯಲಬುರ್ಗ, ಗಂಗಾವತಿಗಳಿಗೆ ರಸ್ತೆ ಸಂಪರ್ಕವಿದೆ. ಕೈಮಗ್ಗದ ಬಟ್ಟೆಗಳಿಗೆ ಇದು ಪ್ರಸಿದ್ಧ. ವಾರ್ಷಿಕವಾಗಿ ಜನವರಿಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ. ಈ ಪಟ್ಟಣದ ಪಶ್ಚಿಮಕ್ಕೆ ಬೆಟ್ಟಗಳ ಸಾಲು ಹಬ್ಬಿದೆ. ಇವುಗಳಲ್ಲಿ ಪಾಲ್ಕಿ ಗುಂಡು ಅತ್ಯಂತ ಎತ್ತರವಾದ್ದು (೨೩೩೯'). ಪೂರ್ವಕ್ಕಿರುವ ಬೆಟ್ಟಗಳ ಸಾಲಿನಲ್ಲಿ ಗವಿಮಠವಿದೆ. ದಕ್ಷಿಣಕ್ಕೆ ಮತ್ತೊಂದು ಬೆಟ್ಟದ ಸಾಲು ಇದೆ. ಅದನ್ನು ಬಹದ್ದೂರ್ ಬಂಡೆ (೧೯೮೦') ಎನ್ನುತ್ತಾರೆ. ಗವಿಮಠ ಬೆಟ್ಟದಲ್ಲಿ ನಾಲ್ಕು ಗವಿಗಳಿವೆ. ಅಲ್ಲದೆ ಪುರಾತನವಾದ ವೀರಶೈವ ಮಠ ಮತ್ತು ಜೈನಸಮಾದಿsಗಳೂ ಇವೆ. ಪಾಲ್ಕಿಗುಂಡಿನ ಪಶ್ಚಿಮಕ್ಕಿರುವ ಮಲಿಮಲ್ಲಪ್ಪನ ಬೆಟ್ಟದಲ್ಲಿ ಮೋರಿಯರ ಅಂಗಡಿ ಎಂದು ಕರೆಯುವ ಬೃಹತ್ ಶಿಲಾಯುಗೀನ ಕಲ್ಮನೆ ಸಮಾದಿsಗಳಿವೆ. ಅಶೋಕನ ಎರಡು ಲಘುಪ್ರಸ್ತರ ಧರ್ಮಶಾಸನಗಳು ಸಿಕ್ಕಿದ್ದು ಗವಿಮಠ ಮತ್ತು ಪಾಲ್ಕಿಗುಂಡು ಬೆಟ್ಟಗಳಲ್ಲಿ. ಇವುಗಳಿಂದ ಕೊಪ್ಪಳ ಕ್ರಿ.ಪೂ.೩ನೆಯ ಶತಮಾನದಷ್ಟು ಪ್ರಾಚೀನವಾದ್ದೆಂದು ಊಹಿಸಬಹುದು. ಕ್ರಿ.ಶ.9ನೆಯ ಶತಮಾನದಿಂದ ೧೩ನೆಯ ಶತಮಾನದವರೆಗಿನ ಹಲವು ಶಿಲಾಶಾಸನಗಳೂ ಅನಂತರದ ಮುಸ್ಲಿಂ ದಾಖಲೆಗಳೂ ದೊರಕಿವೆ. ಕೊಪಣಪುರವರಾದಿsೀಶ್ವರರಾದ ಶಿಲಾಹಾರರ ಒಂದು ಶಾಖೆಗೆ ಇದು ರಾಜಧಾನಿಯಾಗಿದ್ದಿರಬಹುದು. ಗಂಗ ಮತ್ತು ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಕೊಪ್ಪಳ ಮುಖ್ಯ ಕೇಂದ್ರವಾಗಿದ್ದಿರಲೂಬಹುದು. ಇದನ್ನು ಶಾಸನ ಮತ್ತು ಸಾಹಿತ್ಯಗಳಲ್ಲಿ ಕೊಪಣ, ಕುಪಣ, ಕುಪಿನ ಎಂದು ಕರೆದಿರುವುದಲ್ಲದೆ, ಆದಿತೀರ್ಥ, ಮಹಾತೀರ್ಥ,ವಿದಿತ ಮಹಾ ಕೊಪಣನಗರಮುಂತಾಗಿ ಬಣ್ಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಸಿದ್ಧ ಜೈನಕ್ಷೇತ್ರವಾಗಿತ್ತು. ಇಲ್ಲಿ ೭೨೨ ಬಸದಿಗಳೂ ೨೪ ಜೈನಸಂಘಗಳೂ ಇದ್ದುವೆಂದು ಹೇಳಲಾಗಿದೆ.ಇಲ್ಲಿ ಅನೇಕ ಜೈನಶಾಸನಗಳೂ ದೊರೆತಿವೆ. ಇತಿಹಾಸಪ್ರಸಿದ್ಧವಾದ ಕೊಪ್ಪಳದ ಕೋಟೆಯನ್ನು ಕಟ್ಟಿದವರು ಯಾರೆಂಬುದು ತಿಳಿದಿಲ್ಲ. ಟಿಪ್ಪುಸುಲ್ತಾನ ೧೭೮೬ರಲ್ಲಿ ಇದನ್ನು ವಶಪಡಿಸಿಕೊಂಡು, ಫ್ರೆಂಚ್ ಶಿಲ್ಪಿಗಳ ನೆರವಿನಿಂದ ಇನ್ನೂ ಭದ್ರ ಪಡಿಸಿದನೆಂದು ತಿಳಿದುಬರುತ್ತದೆ. ಕಡಿದಾದ ಮೆಟ್ಟಿಲುಗಳನ್ನೊಳ ಗೊಂಡಿದೆ. ದಕ್ಷಿಣ ಭಾರತದ ದುರ್ಗಮ ಕೋಟೆಗಳಲ್ಲಿ ಕೊಪ್ಪಳ ಕೋಟೆಯೂ ಒಂದು. ಈ ಕೋಟೆಯನ್ನು ೧೭೯೦ರಲ್ಲಿ ಇಂಗ್ಲಿಷ್ ಮತ್ತು ನಿಜಾಮಿ ಪಡೆಗಳು ಸತತವಾಗಿ ಮುತ್ತಿಗೆ ಹಾಕಿದ್ದುಂಟು. ೧೮೫೮ರಲ್ಲಿ ಈ ದುರ್ಗ ಮುಂಡರಗಿ ಬಿsೀಮರಾಯನ ವಶದಲ್ಲಿತ್ತು. ೧೯೪೯ರ ವರೆಗೆ ಕೊಪ್ಪಳ ನವಾಬ್ ಸಾಲಾರ್‍ಜಂಗನ ಜಹಗೀರಿಯಾಗಿತ್ತು. (ಜೆ.ಆರ್.ಪಿ.;ಎಚ್.ಆರ್.ಆರ್.ಬಿ.) ಕೊಪ್ಪಳ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿತ್ತು. ಸಂಗ್ರಾಮದ ಜ್ವಾಲೆ ೧೮೫೮ರಲ್ಲಿ ಮುಂಡರಗಿ ಭೀಮರಾಯ ಹಾಗೂ ಹಮ್ಮಿಗೆ ಕೆಂಚನಗೌಡ ಇವರ ಹೋರಾಟದಿಂದಲೇ ಪ್ರಾರಂಭವಾಯಿತೆನ್ನಬಹುದು. ಹೈದರಾಬಾದು ಕರ್ನಾಟಕದಲ್ಲಿ ಕೊಪ್ಪಳ ಭಾಗದಲ್ಲಿಯೇ ಮೊದಲಿಗೆ ರಾಜಕೀಯ ಚಟುವಟಿಕೆಗಳು ಕಂಡುಬಂದವು. ಬಹಳ ಮೊದಲೇ ಕೀರ್ತನಕೇಸರಿ ಜಯರಾಮಾಚಾರ್ಯರು ಪುರಾಣದ ಕಥೆಗಳಿಗೆ ರಾಜಕೀಯ ರಂಗು ಕೊಟ್ಟು ಸ್ಫೂರ್ತಿ ಹುಟ್ಟುವಂತೆ ಸ್ವಚ್ಫಂದ ಶೈಲಿಯಲ್ಲಿ ಕೀರ್ತನಗಳನ್ನು ಹೇಳತೊಡಗಿ ಕರ್ನಾಟಕದಲ್ಲೆಲ್ಲ ಅಸಹಕಾರ, ಕಾಯಿದೆ ಭಂಗ, ಖಾದಿ ಪ್ರಚಾರ, ನಿದಿsಸಂಗ್ರಹಗಳಿಗಾಗಿ ಅದನ್ನು ಬಳಸಿಕೊಡರು. ಪುಟ್ಟಾಭಟ್ಟ ಜಹಗೀರದಾರ ಮತ್ತು ಹೊಸಪೇಟೆಯ ಚಕ್ರಪಾಣಿ ಆಚಾರ್ಯರು ಈ ಭಾಗದಲ್ಲಿ ಖಾದಿ ಪ್ರಚಾರ ಮಾಡಿದರು. ಇಲ್ಲಿಯವರಾದ ಬಸವಂತರಾವ್ ಕಾಟರಹಳ್ಳಿ ಮತ್ತು ಹಿರೇಮಠ ಅವರು ಹೈದರಾಬಾದಿನಲ್ಲಿ ಪೆÇೀಲಿಸರ ಕಣ್ಣುತಪ್ಪಿಸಿ ರಾಷ್ಟ್ರಧ್ವಜ ಹಾರಿಸಿದರು. 1928ರಷ್ಟು ಮಂಚೆಯೇ ಕಾಂಗ್ರೆಸ್ಸನ್ನು ಸೇರಿದವರಲ್ಲಿ ಪ್ರಮುಖರೆಂದರೆ ಕೊಪ್ಪಳದವರಾದ ಎಚ್.ಕೊಟ್ರಪ್ಪ, ಹಂಪಿ ನರಸಿಂಗರಾವ್ ಮತ್ತು ಸಿರೂರು ವೀರಭದ್ರಪ್ಪನವರು. ನಿಜಾಮ್ ಮತ್ತು ಬ್ರಿಟಿಷ್ ಸರ್ಕಾರ ಇವರಿಗೆ ಬಹಳ ತೊಂದರೆ ಕೊಟ್ಟಿತ್ತು. 1938ರಲ್ಲಿ ಹೈದರಾಬಾದಿನಲ್ಲಿ ನಡೆದ ವಂದೇ ಮಾತರಂ ವಿದ್ಯಾರ್ಥಿ ಆಂದೋಲನದಲ್ಲಿ ಮತ್ತು ೧೯೪೧ರಲ್ಲಿ ನಡೆದ ವೈಯಕ್ತಿಕ ಸತ್ಯಾಗ್ರಹದಲ್ಲಿ ಕೊಪ್ಪಳದ ವಿದ್ಯಾರ್ಥಿ ಮುಖಂಡ ಇಟಗಿ ವಿರೂಪಾಕ್ಷಯ್ಯನವರ ನೇತೃತ್ವದಲ್ಲಿ ಅನೇಕರು ಸೆರೆಮನೆ ಸೇರಿದರು. ಈ ಭಾಗದಲ್ಲಿದ್ದ ಕುಕನೂರಿನ ವಿದ್ಯಾವಂತ ಗುರುಕುಲ ಅದರ ಸಂಸ್ಥಾಪಕರಾದ ರಾಘವೇಂದ್ರರಾವ್ ದೇಸಾಯಿ ಅವರ ಮುಂಧೋರಣೆಯಿಂದ ರಾಜಕೀಯ ಜಾಗೃತಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಿತು. ಈ ಹೊತ್ತಿಗೆ ನಗರದ ಪ್ರಮುಖ ವಕೀಲರನೇಕರು ರಾಜಕೀಯದಲ್ಲಿ ದುಮುಕಿದರು. ಹಳ್ಳಿಹಳ್ಳಿಗಳಲ್ಲಿ ವಾಚನಾಲಯಗಳು ಸ್ಥಾಪನೆಯಾದವು. ಚಲೇಜಾವ್ ಚಳವಳಿಯಿಂದಾರಂಬಿsಸಿ ಸ್ವಾತಂತ್ರ್ಯದವರೆಗೆ ಈ ಭಾಗದಲ್ಲಿ ಆದ ಹೆಚ್ಚಿನ ಜಾಗೃತಿ ಮುಖಂಡರಾದ ಜನಾರ್ದನರಾವ್ ದೇಸಾಯಿ (ವಕೀಲರು), ಪ್ರಾಣೇಶಾಚಾರ್ ಮುಂತಾದವರ ಲಕ್ಷ್ಯವನ್ನು ಸೆಳೆಯಿತು. ತಂಡತಂಡವಾಗಿ ಸತ್ಯಾಗ್ರಹಿಗಳು ಕೊಪ್ಪಳಕ್ಕೆ ಬಂದು ಸೆರೆಯಾದರು. ಭಾರತ ಸ್ವತಂತ್ರವಾದರೂ ಇನ್ನೂ ಜಾಗೀರಾಗಿ ಉಳಿದಿದ್ದ ಕೊಪ್ಪಳ ಭಾಗದಲ್ಲಿ ಅನೇಕ ಕಡೆ ಜನರು ರಾಷ್ಟ್ರಧ್ವಜವನ್ನು ಹಾರಿಸಿ ಸ್ವಾತಂತ್ರ್ಯ ಘೂೀಷಿಸಿ ಮತ್ತೆ ಸೆರೆಮನೆಗೆ ಹೋದರು. ಈ ಚಳವಳಿಯೇ ಪ್ರಬಲವಾಗಿ ಹೈದರಾಬಾದ್ ಸ್ವಾತಂತ್ರ್ಯಾಂದೋಳನದ ಸ್ವರೂಪ ತಳೆಯಿತು. ಚಳವಳಿ ಹೆಚ್ಚಿದಂತೆ ನಿಜಾಮರ ದಬ್ಬಾಳಿಕೆ ಹೆಚ್ಚಾದಾಗ ಕೊಪ್ಪಳ ಭಾಗದಿಂದ ಜೇಲು ಸೇರಿದ ಬೆಣಕಲ್ ಬಿsೀಮಸೇನರಾವ್ ಎಂಬ ತರುಣ ಸತ್ಯಾಗ್ರಹಿ ಗುಲ್ಬರ್ಗ ಜೈಲಿನಲ್ಲಿ ನಡೆದ ಲಾಠಿ ಪ್ರಹಾರದಲ್ಲಿ ಮೃತನಾದ. ಜನ ರೊಚ್ಚಿಗೆದ್ದರು. ಗದಗಿನಲ್ಲಿ ಪ್ರಾದೇಶಿಕ ಸ್ಟೇಟ್ ಕಾಂಗ್ರೆಸ್ ಕೇಂದ್ರವನ್ನು ತೆರೆದರು. ನಿರಾಶ್ರಿತರಾಗಿ ಹೊರಬರುವ ಕುಟುಂಬಗಳ ವ್ಯವಸ್ಥೆ ಮಾಡಬೇಕಾಯಿತು. ಕೊಪ್ಪಳದ ಗಡಿಯ ಸುತ್ತ ಕಾಂಗ್ರೆಸಿನ ಕಾರ್ಯಕರ್ತರ ಸಶಸ್ತ್ರ ಶಿಬಿರಗಳು ಏರ್ಪಟ್ಟವು. ನಿಜಾಮರ ಪೆÇಲೀಸು, ಸೈನ್ಯ ಮತ್ತು ರಜಾಕಾರರ ವಿರುದ್ಧ ದಾಳಿ, ಕಚೇರಿಗಳ ನಾಶ ಮೊದಲಾದವು ನಡೆದವು. ಗಡಿಭಾಗದ ಅನೇಕ ಹಳ್ಳಿಗಳು ಸಂಪೂರ್ಣವಾಗಿ ಈ ಕಾರ್ಯಕರ್ತರ ಅದಿsೀನವಾದವು. ಹೀಗೆ ನಿಜಾಮರ ಸತ್ತೆಯನ್ನು ನಿಷ್ಕ್ರಿಯೆಗೊಳಿಸುವ ಆಂದೋಲನ ತೀವ್ರಗೊಂಡಾಗ ಭಾರತ ಸರ್ಕಾರದಿಂದ ಪೆÇಲೀಸ್ ಕಾರ್ಯಾಚರಣೆ ನಡೆದು ಹೈದರಾಬಾದಿನೊಂದಿಗೆ ಕೊಪ್ಪಳವೂ ಸ್ವತಂತ್ರವಾಯಿತು. ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ. ಪ್ರಾಮುಖ್ಯತೆ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗುಂದಿ, ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ ನಿರ್ಮಿಸಿದ ಕೊಪ್ಪಳಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ ಕಿನ್ನಾಳ ಆಟಿಕೆ, ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ. ಪ್ರೇಕ್ಷಣೀಯ ಸ್ಥಳಗಳು ಇಂದಿನ ಆನೆಗೊಂದಿ, ಗಂಗಾವತಿ ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, ೬೪ ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ. ಕೊಪ್ಪಳ ಜಿಲ್ಲೆಯ ತಾಲೂಕುಗಳು ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ಏಳು ತಾಲೂಕುಗಳಿವೆ. ಅವುಗಳೆಂದರೆ: ಕೊಪ್ಪಳ , ಗಂಗಾವತಿ , ಕುಷ್ಟಗಿ , ಯಲಬುರ್ಗಾ , ಕನಕಗಿರಿ , ಕಾರಟಗಿ ಮತ್ತು ಕೂಕನೂರ . ಒಂದೊಂದು ತಾಲೂಕು ಒಂದೊಂದು ವೈಶಿಷ್ಟ್ಯತೆಯನ್ನು ಒಳಗೊಂಡಿದೆ. ಗಂಗಾವತಿ ತಾಲೂಕಿನಲ್ಲಿ, ಗಂಗಾವತಿಯಿಂದ ೧೩ ಮೈಲು ದೂರದಲ್ಲಿರುವ ಕನಕಗಿರಿಯನ್ನು ಮೊದಲು ಸ್ವರ್ಣಗಿರಿಯಂದು ಕರೆಯಲಾಗುತ್ತಿತು." ಕಾಲಿದ್ದವರು ಹಂಪಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು" ಎಂಬ ನಾಣ್ಣುಡಿ ಇಲ್ಲಿ ಪ್ರಚಲಿತದಲ್ಲಿದೆ. ಶ್ರೀ ಕನಕಾಚಲಪತಿ ದೇವಸ್ಥಾನವು ವಿಜಯನಗರ ಕಾಲದ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆಯಾಗಿದೆ.ಕನಕಗಿರಿಯ ಹೊರವಲಯದಲ್ಲಿ ರಾಜಾ ವೆಂಕಟಪ್ಪ ನಾಯಕ ನಿರ್ಮಿಸಿರುವ ರಾಜನ ಸ್ನಾನದ ಕೊಳವಿದೆ. ಕುಷ್ಟಗಿ ತಾಲೂಕಿನಲ್ಲಿ ತಾವರಗೇರಾದಿಂದ ೫ ಮೈಲಿ ದೂರದಲ್ಲಿರುವ ಊರು ಪುರಇಲ್ಲಿ ೧ ಕೋಟಿ ಲಿಂಗಗಳಿವೆ. ಇಲ್ಲಿ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಕೋಟಿ ಲಿಂಗಗಳಿದ್ದು, ಶ್ರಾವಣ ಮಾಸದಲ್ಲಿ ಜಾತ್ರೆ ನೆಡೆಯುತ್ತದೆ. ಕುಕನೂರು, ಇದು ಪ್ರಸಿದ್ಧ ಗ್ರಾನೈಟ್ ಉದ್ಯಮ ಕೇಂದ್ರವಾಗಿದೆ. ಸ್ವಾತಂತ್ರ್ಯಪೂರ್ವದಿಂದ ನೆಡೆಯುತ್ತಿರುವ ಪ್ರಸಿದ್ಧ [[vidayananda gurukul. ಕರ್ನಾಟಕದಲ್ಲಿ ನೆಡೆದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಕುಕನೂರು ಪೋಲಿಸ್ ಠಾಣೆಯ ಮೇಲೆ ಅನ್ನದಾನಯ್ಯ ಪುರಾಣಿಕ ನೇತ್ರತ್ವದಲ್ಲಿ ಮುಂಡರಗಿ ಶಿಬಿರದ ಯುವಕರು, ಯಶಸ್ಡಿ ದಾಳಿ ನೆಡೆಸಿ ನಿಜಾಂ ಪೋಲಿಸರು ಮತ್ತು ರಜಾಕಾರರನ್ನು ಸೋಲಿಸಿದ ಘಟನೆ, ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ ಹೊಸ ತಿರುವನ್ನು ನೀಡಿತು. ಕುಕನೂರಿನಲ್ಲಿರುವ ಮಹಾಮಾಯಾ ದೇವಸ್ಥಾನವು, ಈ ಭಾಗದ ಜನರ ನಂಬಿಕೆಯಂತೆ ಕೊಲ್ಹಾಪುರದ ಮಹಾಲಕ್ಷ್ಮಿಯ ವಾಸಸ್ಥಾನವಾಗಿದೆ. ಭಾಗ್ಯನಗರ, ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು ತಿರುಪತಿ ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ ಇಟಗಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲುಕಿನ ಇಟಗಿಯಲ್ಲಿ "ದೇವಾಲಯಗಳ ಚರ್ಕವರ್ತಿ" ಎಂಬ ಬಿರುದಾಂಕಿತ ಶ್ರೀ ಮಹಾದೇವ ದೇವಾಲಯವಿದೆ .ಇದು ಕೊಪ್ಪಳದಿಂದ ೨೦ ಕಿ.ಮೀ. ದೂರದಲ್ಲಿದೆ . ಕುಕನೂರಿನಿಂದ ೭ ಕಿ.ಮೀ, ದೂರದಲ್ಲಿದೆ. ಈ ದೇವಾಲಯವನ್ನು ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದ "ಮಹಾದೇವ ದಂಡನಾಯಕ " ಈ ದೇವಾಲಯವನ್ನು ಕಟ್ಟಿಸಿದ್ದಾನೆ. ಕಲ್ಲೂರ ಈ ಪ್ರಸಿದ್ಧ ಕ್ಷೇತ್ರ ಯಲಬುರ್ಗಾ ತಾಲೂಕಿನ 'ಕಲ್ಲೂರ'ನಲ್ಲಿ ಕಲ್ಯಾಣಿಚಾಲುಕ್ಯರ್ ಪ್ರಸಿದ್ಧ ದೊರೆಯಾದ ೬ನೇ ವಿಕ್ರಮಾದಿತ್ಯನು ಕಟ್ಟಿಸಿದನೆಂಬ ಆಧಿ ೮-೯ ಶತಮಾನದ ಕಾಳಮುಖ ಶೈವ ಪರಂಪರೆಯ ಪ್ರಸಿದ್ಧ ಶಿಕ್ಷಣ ಕೇಂದ್ರ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನವೂ ಇಲ್ಲಿದೆ. ಉಲ್ಲೇಖ ಇದನ್ನೂ ನೋಡಿ ಕೊಪ್ಪಳ (ಲೋಕ ಸಭೆ ಚುನಾವಣಾ ಕ್ಷೇತ್ರ) ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಕೊಪ್ಪಳ ಜಿಲ್ಲೆ ವರ್ಗ:ಕರ್ನಾಟಕ
ಉತ್ತರ ಕನ್ನಡ
https://kn.wikipedia.org/wiki/ಉತ್ತರ_ಕನ್ನಡ
ಉತ್ತರ ಕನ್ನಡ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆ ಗೋವಾ ರಾಜ್ಯ, ಬೆಳಗಾವಿ, ಧಾರವಾಡ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳೊಂದಿಗೆ ತನ್ನ ಗಡಿಗಳನ್ನು ಹಂಚಿಕೊಂಡಿದೆ. ಪಶ್ಚಿಮಕ್ಕೆ ಅರಬ್ಬೀ ಸಮುದ್ರ ವಿದೆ. ಬಹುತೇಕ ಅರಣ್ಯಪ್ರದೇಶದಿಂದ ಕೂಡಿರುವ ಉತ್ತರಕನ್ನಡ ಜಿಲ್ಲೆ, ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸುಂದರ ಜಲಪಾತಗಳಿವೆ. ಕರ್ನಾಟಕದ ಪ್ರಖ್ಯಾತ ಜಾನಪದ ಕಲೆ "ಯಕ್ಷಗಾನ" ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ಹೆಸರು ಮಾಡಿದೆ. ಅದಲ್ಲದೇ, ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿ ಕರ್ನಾಟಕದ ದಾಂಡೀ ಎಂದು ಕರೆಸಿಕೊಳ್ಳೂವ ಅಂಕೋಲಾ ಕೂಡ ಈ ಜಿಲ್ಲೆಗೇ ಸೇರಿದೆ.ಇಲ್ಲಿಯ ಜನಸಂಖ್ಯೆ ೨೦೧೧ ರ ಜನಗಣತಿಯಂತೆ ೧೪,೩೭,೧೬೯ ಇದ್ದು ಇದರಲ್ಲಿ ಪುರುಷರು ೭,೨೬,೨೫೬ ಹಾಗೂ ಮಹಿಳೆಯರು ೭,೧೦,೯೧೩).http://www.censusindia.gov.in/pca/default.aspx ದಿನಕರ ದೇಸಾಯಿಯವರು ಉತ್ತರ ಕನ್ನಡವನ್ನು ವರ್ಣಿಸಿ ಬರೆದಿರುವ ಚುಟುಕ: ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ ಸಿರ್ಸಿ ಜಾತ್ರೆ ಭಾರತದ ಅತಿದೊಡ್ಡ ಜಾತ್ರೆ ಸುಪ್ರಸಿದ್ಧ ಸಿರ್ಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಅತೀ ವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭಾರತದಲ್ಲಿಯೇ ಅತೀದೊಡ್ಡ ಜಾತ್ರೆ, ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಅನೇಕಾನೇಕ ಮನರಂಜನಾ ಕಾರ್ಯಕ್ರಮಗಳು ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ವಿಧಿ ವಿಧಾನಗಳು ಸಿರ್ಸಿಯ ಜಾತ್ರೆ ೯ ದಿನಗಳ ಕಾಲ ಜರುಗುವ ಅದ್ದೂರಿ ಜಾತ್ರೆ ಇಲ್ಲಿ ಜಾತ್ರೆ ಪ್ರಾರಂಭ ಆಗುವ ಎರಡು ತಿಂಗಳು ಮೊದಲಿನಿಂದಲೆ ಜಾತ್ರೆಯ ವಿಧಿ ವಿಧಾನಗಳು ಪ್ರಾರಂಭವಾಗುತ್ತವೆ. ಜಾತ್ರೆಯ ಮುಹೂರ್ತ ನಿಶ್ಚಯಿಸಲು ಪುಷ್ಯ ಮಾಸದ ಒಂದು ದಿನ ವಿಶೇಷ ಸಭೆ ಕರೆಯಲಾಗುತ್ತದೆ. ಈ ಸಭೆಯಲ್ಲಿ ಊರಿನ ಗಣ್ಯರು, ಸಾರ್ವಜನಿಕರು,ಬಾಬುದಾರರು, ಧರ್ಮದತ್ತಿ ಗಳು ಭಾಗವಹಿಸಿರುತ್ತಾರೆ. ಜಾತ್ರೆಯ ದಿನ ನಿಗದಿಯಾದ ನಂತರ ಸಂಪ್ರದಾಯದಂತೆ ಜಾತ್ರೆಯ ಪೂರ್ವದ ಮೂರು ಮಂಗಳವಾರ ಎರಡು ಶುಕ್ರವಾರದ ದಿನಗಳಂದು ಐದು ಹೊರಬೀಡುಗಳು ಆಗುತ್ತವೆ. ಹೊರಬೀಡು ಎಂದರೆ ರಾತ್ರಿ ಗಡಿ ಗದ್ದುಗೆಗಳಿಗೆ ಹೋಗಿ ಜಗನ್ಮಾತೆಯ ಸೇವೆಗೆ ಉಪಯೋಗಿಸುವ ಆಯುಧಗಳು ವಾದ್ಯಗಳು, ಕಹಳೆ, ಹಲಗೆ, ದೀವಟಿಗೆ ಮೊದಲಾದವುಗಳನ್ನು ದೇವಿಯ ಎದುರಿಟ್ಟು ಪೂಜಿಸಿ ಪ್ರಾರ್ಥಿಸುವುದು. ಐದು ಹೊರಬೀಡಿನಲ್ಲಿ ಮೂರು ಮಂಗಳವಾರಗಳಂದು ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯೊಂದಿಗೆ ಪೂರ್ವ ದಿಕ್ಕಿನ ಕಡೆಗೆ ಹೋದರೆ, ಉಳಿದೆರಡು ಶುಕ್ರವಾರ ಪಡಲಿಗೆಯು ಉತ್ತರ ದಿಕ್ಕಿನ ಗಡಿಯ ನಿಶ್ಚಿತ ಗದ್ದುಗೆಗೆ ಹೋಗುತ್ತದೆ. ಎಲ್ಲ ಹೊರಬೀಡಿನಲ್ಲಿ ರಾತ್ರಿ ಮೆರವಣಿಗೆಗಳು ಶ್ರೀ ದೇವಿಗೆ ಉಡಿ ತುಂಬಿದ ನಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೊಗುವವು ಅಲ್ಲಿ ದೇವತೆಗಳಿಗೆ ಉಡಿ ಸಮರ್ಪಣೆಯಾದ ನಂತರ ಜಾತ್ರೆಯ ಗದ್ದುಗೆಗೆ ಹೋಗಿ ಅಲ್ಲಿ ಹೊರಬೀಡಿನನುಗುಣವಾಗಿ ಉತ್ಸವ ಮೂರ್ತಿಯನ್ನು ಪಡಲಿಗೆಯನ್ನು ಇಟ್ಟು ಪೂಜಿಸುತ್ತಾರೆ. ಮಂಗಳವಾರದ ಹೋರಬೀಡುಗಳಲ್ಲಿ ಪಲ್ಲಕ್ಕಿಯು ಪುರ್ವ ದಿಕ್ಕಿನ ಕೊನೆಯ ಗದ್ದುಗೆಗೆ ಬರುತ್ತದೆ. ನಂತರ ಮೆರವಣಿಗೆಯು ಪೂನಃ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಮಾರಿಗುಡಿಗೆ ಹೋಗಿ ಪೂಜೆ ನೆರವೇರಿಸಿ ವಿಸರ್ಜನೆಯಾಗುತ್ತದೆ. ಈ ಜಾತ್ರೆಯಲ್ಲಿ ಅಮ್ಮನವರು ಸವಾರಿ ಮಾಡುವ ರಥವನ್ನು ಕಟ್ಟುವುದು ತುಂಬಾ ವಿಶೇಷ. ನಾಲ್ಕನೆ ಹೊರಬೀಡಿನ ಮರುದಿನ ಮಂಗಳವಾದ್ಯದೊಂದಿಗೆ ಕಾಡಿಗೆ ಹೋಗಿ ಮೊದಲೆ ನಿಶ್ಚಯಿಸಿದ 'ತಾರಿ' ಮರವನ್ನು ಕಡಿಯುತ್ತಾರೆ. ನಂತರ ಐದನೇ ಹೊರಬೀಡಿನ ದಿನ ಮುಂಜಾನೆ ರಷ್ಮಿ ಮೂಡವ ಸಮಯದಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯ ಮುಕಾಂತರ ಮರವನ್ನು ತಂದು ದೇವಾಲಯದ ಎದರು ಪೂಜೆ ಸಲ್ಲಿಸಲಾಗುತ್ತದೆ. ಜಾತ್ರೆ ಪ್ರಾರಂಭವಾಗುವ ಏಳು ದಿನಗಳ ಮೊದಲೆ ರಥ ಕಟ್ಟಲು ಪ್ರಾರಂಭಿಸುತ್ತಾರೆ ಬಾಬುದಾರರು ಬಡಿಗೆರರು ಆಚಾರಿಗಳು ಉಪ್ಪಾರರು ರಥ ಕಟ್ಟುವ ಕಾರ್ಯ ಮಾಡುತ್ತಾರೆ. ಹೊರಬೀಡಿನ ನಂತರ ಮಾರಿ ಕೋಣವನ್ನು ಮೆರೆವಣಿಗೆ ಮುಖಾಂತರ ಮರ್ಕಿ ದುರ್ಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ, ನಂತರ ಅಲ್ಲಿಂದ ಗದ್ದುಗೆಯತ್ತ ಸಾಗುತ್ತದೆ ಅಲ್ಲಿ ಅಸಾದಿಯರು ಮತ್ತು ಮೇತ್ರಿಯರು ರಂಗವಿಧಾನ ನೆರೆವೆರಿಸಿ ಪಟ್ಟದ ಕೋಣಕ್ಕೆ ಕಂಕಣ ಧಾರಣೆ ಮಾಡುತ್ತಾರೆ ಇದನ್ನು ಅಂಕೆ ಹಾಕುವುದು ಎನ್ನುತ್ತಾರೆ. ಅಂಕೆ ಹಾಕಿದ ದಿನ ಅಮ್ಮನವರ ವಿಗ್ರಹ ವಿಸರ್ಜನೆ ಮಾಡಿ ಬಣ್ಣಕ್ಕೆ ಕಳುಹಿಸುವ ಸಂಪ್ರದಾಯ ಇರುತ್ತದೆ. ಜಾತ್ರೆಯ ಗದ್ದುಗೆಯಲ್ಲಿ ನಾಡಿಗ ಬಾಬುದಾರರಿಂದ ಮಂಗಳಾರತಿ ನಡೆಯುತ್ತದೆ ಈ ಮಂಗಳಾರಾತಿಯಿಂದ ಒಂದು ವಿಶೇಷ ಹಣತೆ ಹಚ್ಚುತ್ತಾರೆ ಈ ಹಣತೆಯನ್ನು ಜಾತ್ರೆ ಮುಗಿಯುವವರೆಗೆ ಶಾಂತವಾಗದಂತೆ ಕಾಯಬೇಕು ಮೇಟಿಯವರು ದೀಪ ಆರದಂತೆ ಕಾಯುವ ಕೆಲಸ ಮಾಡುತ್ತಾರೆ. ಇದನ್ನು ಮೇಟ ದೀಪ ಎನ್ನುತ್ತಾರೆ ಅಂಕೆ ಹಾಕಿದ ನಂತರ ಬರುವ ಮೊದಲ ಮಂಗಳವಾರ ಶ್ರೀದೇವಿಗೆ ಕಲ್ಯಾಣ ಮಹೋತ್ಸವ ಮಾಡಲಾಗುತ್ತದೆ. ಅದೆ ದಿನ ರಥಕ್ಕೆ ಕಳಸಾರೋಹಣ ನೆರವೇರುತ್ತದೆ. ಶ್ರೀ ದೇವಿಯ ಮದುವೆಯ ಸಮಾರಂಭದಲ್ಲಿ ವಿಶೆಷವಾಗಿ ನಾಡಿಗರು, ಬಾಬುದಾರರು ಊರ ಗಣ್ಯರು ಸಕಲ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ ಶ್ರೀದೇವಿಯು ಸರ್ವಾಲಂಕಾರ ಭುಷಿತಳಾಗಿ ರಾರಜಿಸುತ್ತಿರುತ್ತಾಳೆ. ಶ್ರೀ ದೇವಿಯ ಮದುವೆಯ ಸಂಪ್ರದಾಯಂದತೆ ಶ್ರೀ ದೇವಿಗೆ ಮಂಗಳ ಸೂತ್ರ ಧಾರಣೆ, ಗುಡಿಗಾರರ ದ್ರಷ್ಟಿ ಪೂಜೆ, ನಾಡಿಗರ ಪೂಜೆ , ಚಕ್ರಸಾಲಿ ಪೂಜೆ ,ಕೇದಾರಿಮನೆತನದ ಪೂಜೆ ಹಾಗು ಪೂಜಾರರ ಪೂಜೆಗಳು ನೆರವೇರುತ್ತವೆ. ಈ ಕಲ್ಯಾಣೊತ್ಸವದಲ್ಲಿ ಘಟ್ಟದ ಕೆಳಗಿನ ಜನರು ಹಾಗು ಬಯಲು ಸೀಮೆಯ ಲಂಬಾಣಿ ಜನಾಗಂದ ಜನರು ವಿಶೇಷವಾಗಿ ಮಹಿಳೆಯರು ತಮ್ಮ ಸಂಪ್ರದಾಯ ಉಡುಗೆ ಧರಿಸಿ ನೃತ್ಯ ಮಾಡುವುದುದು ಮತ್ತು ಸಂಗೀತ ವಾದ್ಯಗಳನ್ನು ನುಡಿಸುವುದು ಮದುವೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದು ಕೊಡುತ್ತದೆ. ಬುಧವಾರ ಮುಂಜಾನೆ ಶ್ರೀದೇವಿಯನ್ನು ರಥದ ಮೆಲೆ ಪ್ರತಿಷ್ಠಾಪನೆ ಮಾಡುವ ಮೊದಲು ದೇವಾಲಯದ ಮುಂಭಾಗದ ಭೂತರಾಜನಿಗೆ ಸಾತ್ವಿಕ ಬಲಿ ಸಮರ್ಪಣೆ ಮಾಡಲಾಗುತ್ತದೆ. ರಥೋತ್ಸವದೊಂದಿಗೆ ಶ್ರೀದೇವಿಯ ಶೋಭಾಯಾತ್ರೆ ಅದ್ದೂರಿಯಾಗಿ ಮಾರಿಗುಡಿಯಿಂದ ಊರ ಮದ್ಯದ ಬಿಡಕಿ ಬೈಲಿನ ಜಾತ್ರಾ ಗದ್ದುಗೆಗೆ ಬಂದು ತಲುಪುತ್ತದೆ. ಶ್ರೀ ದೇವಿಯ ಉ ಶೋಭಾಯಾತ್ರೆಯಲ್ಲಿ ಬರುವಾಗ ಭಕ್ತರ ಭಕ್ತಿಯ ಪರಾಕಾಷ್ಠೆಯ ತುತ್ತತುದಿಯಲ್ಲಿರುತ್ತದೆ ಜೋಗತಿಯರು ನೃತ್ಯ ಮಾಡುತ್ತಿರುತ್ತಿದ್ದರೆ ಅಸಾದಿಯರ ಕೋಲಾಟ, ಡೊಳ್ಳು ಕುಣಿತ, ವಾಲಗ ಕಹಳೆಯ ನಿನಾದ ಝೇಂಕರಿಸುತ್ತಿರುತ್ತದೆ. ಇತರ ಭಕ್ತರು ರಥಕ್ಕೆ ಬಾಳೆಹಣ್ಣನ್ನು ಹಾಕುತಿದ್ದರೆ ಇನ್ನೂ ಕೆಲ ಭಕ್ತರು ಹಾರುಗೋಳಿ ಅಂದರೆ ಕೋಳಿಯನ್ನು ಹಾರಿ ಬಿಡುತ್ತರೆ. ಶೋಭಾಯಾತ್ರೆ ಮುಗಿದ ಮೇಲೆ ಅಮ್ಮನವರನ್ನು ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ‌. ೮ ದಿನಗಳ ಕಾಲ ಜಗನ್ಮಾತೆ ಸಕಲ ಸರ್ವಾಲಂಕಾರ ಭುಷಿತಳಾಗಿ ನಗರ ಮದ್ಯಭಾಗದಲ್ಲಿನ ಗದ್ದುಗೆಯ ಮೇಲೆ ಕುಳಿತು ಜನರಿಗೆ ದರ್ಶನ ಭಾಗ್ಯ ಕರುಣಿಸುತ್ತಾಳೆ. ಶ್ರೀದೇವಿಗೆ ಭಕ್ತರು ಸಲ್ಲಿಸಬೇಕಾದ ಸೇವೆಗಳೆಲ್ಲವು ಮರುದಿನ ಗುರುವಾರದಿಂದ ಪ್ರಾರಂಭವಾಗುತ್ತದೆ. ೮ ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಜಾತ್ರೆಗೆ ಪ್ರತಿನಿತ್ಯವು ಲಕ್ಷಾಂತರ ಜನ ಬರುತ್ತಾರೆ. ಜಾತ್ರೆ ಪ್ರಾರಂಭವಾದ ೮ ದಿನಗಳ ನಂತರ ಬುಧವಾರ ಜಾತ್ರಾ ವಿಸರ್ಜನಾ ವಿಧಿವಿಧಾನಗಳು ನೆರವೇರುತ್ತವೆ ನಾಡಿಗ ಬಾಬುದಾರರಿಂದ ಕೊನೆಯ ಮಂಗಳಾರತಿ, ಶ್ರೀದೇವಿಯನ್ನು ಗದ್ದುಗೆಯಿಂದ ಇಳಿಸಿ ಮಂಟಪದ ಮಧ್ಯಭಾಗದಲ್ಲಿ ಕುಡಿಸಿದಾಗ ಅಸಾದಿಯರು ಹುಲುಸು ಪ್ರಸಾದವನ್ನು ಪೂಜಿಸಿ ರೈತರಿಗೆ ವಿತರಿಸುತ್ತಾರೆ ರೈತರು ಅದನ್ನು ತಮ್ಮ ಹೊಲದಲ್ಲಿ ಬಿತ್ತುತ್ತಾರೆ. ಶ್ರೀ ದೇವಿಯು ಜಾತ್ರೆಯ ಮಂಟಪದಿಂದ ರಥದಲ್ಲಿ ಮರಳುವುದಿಲ್ಲ ಬದಲಾಗಿ ವಿಶೆಷವಾಗಿ ಸಿದ್ದಗೊಳಿಸಿದ ಅಟ್ಟಲಿನಲ್ಲಿ ಮರಳುತ್ತಾಳೆ. ಜಾತ್ರೆ ಕೊನೆಯ ವಿಧಾನಗಳಲ್ಲಿ ಮಾತಂಗಿ ಚಪ್ಪರ ಸುಡುವುದು ಒಂದು, ದೇವಿ ಗದ್ದುಗೆಯಿಂದ ಮೆರವಣಿಗೆಯಲ್ಲಿ ಹೋಗುವಾಗ ಮಹಿಷಾಸುರನ ಸಂಹಾರ ಸಂಕೇತವಾಗಿ ಮಾತಂಗಿ ಚಪ್ಪರ ಸುಡುತ್ತಾರೆ‌. ಜಾತ್ರೆಯ ಕಟ್ಟಕಡೆಯ ವಿಧಾನ ಪೂರ್ವ ದಿಕ್ಕಿನ ಗಡಿಯ ಗದ್ದುಗೆಗೆ ಹೋಗಿ ಮುಕ್ತಾಯದ ವಿಧಿ ನೆರೆವೆರಿಸಲಾಗುತ್ತದೆ ಅಲ್ಲಿ ಶ್ರೀದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ. ಹೀಗೆ ಜಾತ್ರೆ ಸಂಪನ್ನಗೊಳ್ಳುತ್ತದೆ. ಈ ಜಾತ್ರೆಯಲ್ಲಿ ಜನರಿಗೆ ಮನರಂಜನೆಗೆನು ಕೊರತೆ ಇಲ್ಲ ಮಕ್ಕಳು ಯುವಕರಿಂದ ಹಿಡಿದು ವೃದ್ದರಿಗೆಲ್ಲರಿಗು ಇಲ್ಲಿ ಮನರಂಜನೆಯ ಮಹಾಪೂರವೆ ಇರುತ್ತದೆ. ಕಲಾಸಕ್ತರಿಗೆ ವಿವಿಧ ನಾಟಕ ಕಂಪನಿಗಳಿಂದ ನಾಟಕ, ಯಕ್ಷಗಾನ, ಸರ್ಕಸ್ಸುಗಳು‌ ಇರುತ್ತವೆ , ದೈತ್ಯ ತೊಟ್ಟಿಲು ಜೋಕಾಲಿಗಳು ಮತ್ತು ವಿವಿಧ ಆಟಿಕೆಗಳು , ಜಾದು ಚಮತ್ಕಾರಗಳು, ಶ್ವಾನ ಪ್ರದರ್ಶನ , ಪುಸ್ತಕ ಪ್ರಿಯರಿಗೆ ಪುಸ್ತಕ ಪ್ರದರ್ಶನ, ಕೆರೆಯಲ್ಲಿ ಬೋಟಿಂಗ್ , ತಿಂಡಿ ಪ್ರಿಯರಿಗೆ ವಿವಿಧ ಭಗೆಯ ತಿನುಸುಗಳು, ಮಹಿಳೆಯರ ಪ್ರಿಯ ಸೌಂದರ್ಯ ವರ್ಧಕ ಆಭರಣ ಬೆಳೆಗಳ ಮಳಿಗೆಗಳು, ಬಟ್ಟೆ ಬ್ಯಾಗು ಮಕ್ಕಳ ಆಟಿಕೆಗಳ ಮಳಿಗೆಗಳು, ಮಹಿಳಿಯರಿಗೆ ಗೃಹೊಪಕರಣಗಳ ಮಳಿಗೆಗಳು ಹೀಗೆ ಸಕಲ ರೀತಿಯ ಮನರಂಜನೆ ಈ ಜಾತ್ರೆಯಲ್ಲಿ ಇರುತ್ತದೆ. thumb ವಿಶೆಷವಾಗಿ ಈ ಜಾತ್ರೆಯಲ್ಲಿ ಎಲ್ಲೂ ಪ್ರಾಣಿ ಹಿಂಸೆ ಇಲ್ಲ ,ಬಹುಶಃ ಒಂದು ಗ್ರಾಮ ದೇವತೆ‌ ಈಗ ಇಡಿ ನಾಡಿಗೆ ಅಧಿದೇವತೆ ಆಗಿರೋದನ್ನ ನಾವು ಸಿರ್ಸಿ ಯಲ್ಲಿ ಮಾತ್ರ ಕಾಣಬಹುದು. ಸಿರ್ಸಿಗೆ ಪರ ಊರಿನಿಂದ ಬರುವ ಭಕ್ತಾದಿಗಳಿಗೆ ಕರ್ನಾಟಕ ರಾಜ್ಯ ಸಾರಿಗೆಯ ಸಂಸ್ಥೆಯು ಕುಂದಾಪುರ, ಬೈಂದೂರು, ಕಾರವಾರ, ಶಿವಮೊಗ್ಗ, ಸಾಗರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ ದಾವಣಗೆರೆಗಳಿಂದ ಹೆಚ್ಚಿನ ಬಸ್ ಕಲ್ಪಿಸಿರುತ್ತದೆ, ಬಂದ ಭಕ್ತಾದಿಗಳಿಗೆ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುತ್ತದೆ , ಮತ್ತು ನಗರದ ಅಲ್ಲಲ್ಲಿ ಭಕ್ತರಿಂದ ಉಚಿತ ಮಜ್ಜಿಗೆ ಪಾನಕಗಳು ಮತ್ತು ದಾಸೋಹ ಸೇವೆಗಳು ಇರುತ್ತವೆ. ಇತಿಹಾಸ ಇಲ್ಲಿನ ಇತಿಹಾಸ ಮೌರ್ಯರ ಕಾಲದಿಂದ ಪ್ರಾರಂಭವಾಗುತ್ತದೆ (ಪ್ರ.ಶ.ಪು.೪-೩ನೆಯ ಶತಮಾನ). ಈ ಪ್ರದೇಶ ಮೌರ್ಯ ಸಾಮ್ರಾಜ್ಯದಲ್ಲಿತ್ತೆಂದೂ ವನವಾಸಿ ಅಥವಾ ಇಂದಿನ ಬನವಾಸಿ ಮುಖ್ಯ ಸ್ಥಳವಾಗಿತ್ತೆಂದೂ ಈ ಪ್ರದೇಶಕ್ಕೆ ಬೌದ್ಧ ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಅಶೋಕನ ಕಾಲದಲ್ಲಿ ಕಳಿಸಲಾಗಿತ್ತೆಂದೂ ಮಹಾವಂಶ, ದೀಪವಂಶ ಮೊದಲಾದ ಧರ್ಮಗ್ರಂಥಗಳಿಂದ ತಿಳಿಯುತ್ತದೆ. ಮುಂದೆ ಪ್ರ.ಶ.ಪು. ೨ ರಿಂದ ಪ್ರ.ಶ.3ನೆಯ ಶತಮಾನದಲ್ಲಿ ಸಾತವಾಹನರ ಆಳ್ವಿಕೆಯಲ್ಲಿ ಇತ್ತೆಂದು ಬನವಾಸಿಯ ಉತ್ಖನನಗಳಿಂದ ತಿಳಿಯುತ್ತದೆ. ಇಲ್ಲಿ ಯಜ್ಞಶಾತಕರ್ಣಿಯ ಕೆಲವು ನಾಣ್ಯಗಳು ದೊರಕಿವೆ. ೨ ಮತ್ತು ೩ನೆಯ ಶತಮಾನದಲ್ಲಿ ಸಾತವಾಹನರ ಸಂಬಂಧಿಗಳಾದ ಚಟುಕುಲದವರು ಇಲ್ಲಿ ಆಳುತ್ತಿದ್ದರು. ೪ ರಿಂದ ೬ನೇ ಶತಮಾನದವರೆಗೆ ಈ ಪ್ರದೇಶ ಕದಂಬರ ಆಳ್ವಿಕೆಯಲ್ಲಿತ್ತು. ಕದಂಬರ ಅನಂತರ ಬಾದಾಮಿಯ ಚಾಲುಕ್ಯರು (೬-೮ನೆಯ ಶತಮಾನ), ರಾಷ್ಟ್ರಕೂಟರೂ (೮-೧೦ನೆಯ ಶತಮಾನ) ಆಳಿದರು. ರಾಷ್ಟ್ರಕೂಟರ ಮತ್ತು ಅನಂತರ ಕಲ್ಯಾಣದ ಚಾಲುಕ್ಯರ ಕಾಲದಲ್ಲಿ ಈ ಜಿಲ್ಲೆಯ ಬಹುಭಾಗ ಬನವಾಸಿ ಎಂಬ ಪ್ರಮುಖ ಪ್ರಾಂತ್ಯದ ಭಾಗವಾಗಿತ್ತು. ಅಂದಿನ ಆಳರಸರ ಪ್ರತಿನಿಧಿಗಳು ಬನವಾಸಿಯನ್ನು ತಮ್ಮ ಪ್ರಾಂತೀಯ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ೧೧ ಮತ್ತು ೧೩ನೆಯ ಶತಮಾನಗಳಲ್ಲಿ ಹಾನಗಲ್ಲು ಮತ್ತು ಗೋವೆಯ ಕದಂಬರು ಚಾಲುಕ್ಯ ಸಾಮಂತರಾಗಿ ಹೆಚ್ಚುಮಟ್ಟಿಗೆ ಈ ಪ್ರದೇಶವನ್ನು ಆಳುತ್ತಿದ್ದರು. 14ನೆಯ ಶತಮಾನದಾರಭ್ಯ ಸು.೧೬ನೆಯ ಶತಮಾನದವರೆಗೆ ಈ ಜಿಲ್ಲೆಯ ಬಹುಭಾಗ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿತ್ತು. ೧೭-೧೮ನೆಯ ಶತಮಾನಗಳಲ್ಲಿ ಕೆಳದಿಯ ನಾಯಕರು ಮತ್ತು ಬಿಳಗಿ, ಸ್ವಾದಿ, ಗೇರುಸೊಪ್ಪೆ ಮೊದಲಾದ ಪಾಳಯಗಾರ ವಂಶದವರು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಆಳುತ್ತಿದ್ದರು. ೧೮ನೆಯ ಶತಮಾನದ ಉತ್ತರಾರ್ಧದಲ್ಲಿ, ಉತ್ತರ ಕನ್ನಡ ಜಿಲ್ಲೆ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನದ ಭಾಗವಾಯಿತು. ನಾಲ್ಕನೆಯ ಮೈಸೂರು ಯುದ್ಧ(೧೭೯೮ – ೧೭೯೯)ದಲ್ಲಿ, ಶ್ರೀರಂಗಪಟ್ಟಣದ ಪತನವಾದ ನಂತರ, ೧೭೯೯ರ ಜುಲೈ ೮ರಂದು ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಉತ್ತರದಲ್ಲಿ ಕಾರವಾರ ಮತ್ತು ದಕ್ಷಿಣದಲ್ಲಿ ಇಂದಿನ ಕಾಂಞಿಂಗಾಡು (ಕೇರಳದ ಕಾಸರಗೋಡು ಜಿಲ್ಲೆ) ಗಳ ನಡುವಿನ ಪ್ರದೇಶವನ್ನು ವಶಪಡಿಸಿಕೊಂಡು, "ಕೆನರಾ" ಜಿಲ್ಲೆಯೆಂದು ಹೆಸರನ್ನಿಟ್ಟಿತು. ಮಂಗಳೂರು ಈ ಜಿಲ್ಲೆಯ ಆಡಳಿತ ಕೇಂದ್ರವಾಗಿತ್ತು. ಸರ್ ಥಾಮಸ್ ಮುನ್ರೋ ಕೆನರಾ ಜಿಲ್ಲೆಯ ಮೊಟ್ಟಮೊದಲ ಕಲೆಕ್ಟರ್ ಆದರು. ಅಲ್ಲಿಂದ ೧೯೫೭ರವರೆಗೆ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತ ಮುಂದುವರೆಯಿತು. ೧೮೫೭ರ ಸಿಫಾಯಿ ದಂಗೆ ಕೆನರಾ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿದ್ದರಿಂದ, ಬ್ರಿಟಿಷ್ ನೇರ ಆಳ್ವಿಕೆಗೆ ಒಳಪಟ್ಟಿತು. ಅದೇ ಕಾರಣಕ್ಕಾಗಿ, ಕೆನರಾ ಜಿಲ್ಲೆಯನ್ನು ನಾರ್ತ್ ಕೆನರಾ ಮತ್ತು ಸೌತ್ ಕೆನರಾ ಎಂಬ ೨ ಜಿಲ್ಲೆಗಳನ್ನಾಗಿ ವಿಭಜಿಸಿ, ನಾರ್ತ್ ಕೆನರಾವನ್ನು ಮುಂಬೈ ಪ್ರಾಂತ್ಯಕ್ಕೂ, ಸೌತ್ ಕೆನರಾವನ್ನು ಮದ್ರಾಸ್ ಪ್ರಾಂತ್ಯಕ್ಕೂ ಸೇರಿಸಲಾಯಿತು. ಮುಂಬೈ ಮೂಲಕ ನಡೆಯುವ ಅಂತರರಾಷ್ಟ್ರೀಯ ಹತ್ತಿ ಉದ್ಯಮಕ್ಕೊಸ್ಕರ, ಉತ್ತರ ಕನ್ನಡವನ್ನು ಮುಂಬೈ ಪ್ರಾಂತ್ಯಕ್ಕೆ ಸೇರಿಸಲಾಗಿದೆ ಎಂದು ಬ್ರಿಟಿಷರು ಸಮಜಾಯಿಶಿ ನೀಡಿದರು. ಸು.150 ವರ್ಷ ಆ ಪ್ರಾಂತ್ಯದಲ್ಲಿದ್ದ ಈ ಜಿಲ್ಲೆ ಭಾಷಾನುಗುಣ ಪ್ರಾಂತ್ಯ ರಚನೆಯ ಅನಂತರ (1956) ಕರ್ನಾಟಕ (ಅಂದಿನ ಮೈಸೂರು) ರಾಜ್ಯಕ್ಕೆ ಸೇರಿತು. ಸ್ವಾತಂತ್ರ್ಯ ಸಮರ ೧೮೯೦ರಲ್ಲಿ ಜಿಲ್ಲೆಯ ಜನರಿಂದ ಜಂಗಲ್ ಸವಲತ್ತುಗಳನ್ನು ಕಸಿದುಕೊಳ್ಳಲಾಯಿತು. ೧೯೧೪-೧೫ರಲ್ಲಿ ರೈತರ ಮೇಲೆ ವಿಪರೀತ ಕರ ಹೇರಲಾಯಿತು. ಮಾರಕ ರೋಗಗಳಾದ ಮಲೇರಿಯ, ಪ್ಲೇಗು ಹಬ್ಬಿ ಜನಸಂಖ್ಯೆ ಗಣನೀಯವಾಗಿ ಇಳಿಯಿತು. ೧೯೦೧ರಲ್ಲಿ ೫೩,೦೭೧ ಇದ್ದ ಜನಸಂಖ್ಯೆ 1931ರ ವೇಳೆಗೆ 37,000ಕ್ಕೆ ಇಳಿದಿತ್ತು. ಬ್ರಿಟಿಷ್ ಆಡಳಿತದಿಂದ ಜನ ಬೇಸರಗೊಂಡಿದ್ದರು. ಮೂಲತಃ ಲೋಕಮಾನ್ಯ ತಿಲಕರ ಕೇಸರಿಯ ಅಗ್ರಲೇಖನದಿಂದ ಇಲ್ಲಿಯ ಜನ ಸ್ಫೂರ್ತಿ ಪಡೆದರು. ಕನ್ನಡ ಸುವಾರ್ತೆ (೧೮೮೨), ಹವ್ಯಕ ಸುಬೋಧ (1895), ಸಂಯುಕ್ತ ಕರ್ನಾಟಕ, ಕಾನಡಾವೃತ್ತ (1916), ಕಾನಡಾ ಧುರೀಣ, ಬಾಂಬೆಕ್ರಾನಿಕಲ್ ಪತ್ರಿಕೆಗಳಿಂದ ಜನರು ದೇಶವಿದೇಶದ ಸುದ್ದಿಗಳನ್ನು ತಿಳಿದುಕೊಂಡು ಬ್ರಿಟಿಷ್ ಆಡಳಿತದ ವಿರುದ್ಧ ಸಿಡಿದೆದ್ದರು. ಮೊದಲು ಟಿಳಕರ ವಿಚಾರಗಳನ್ನು ಬೆಂಬಲಿಸಿದ ಉತ್ತರ ಕನ್ನಡದ ಜನ ತಿಲಕರ ಮರಣಾನಂತರ (1920) ಗಾಂಧೀಜಿಯವರು ನೇತೃತ್ತ್ವವಹಿಸಿದಾಗ ಅವರ ನಾಯಕತ್ವದಲ್ಲಿ ಹೋರಾಟ ಮುಂದುವರಿಸಿದರು. ಸ್ವದೇಶಿ ಚಳವಳಿ (1906), ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಅರಣ್ಯ ಸತ್ಯಾಗ್ರಹ, ಕರನಿರಾಕರಣೆ, ವೈಯಕ್ತಿಕ ಸತ್ಯಾಗ್ರಹ ಇವುಗಳಲ್ಲೆಲ್ಲಾ ಜಾತಿಮತಗಳನ್ನೆಣಿಸದೆ ಸಾವಿರಾರು ಜನ ಬೀದಿಗಿಳಿದು ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಿರತರಾದರು. ಅನೇಕರು ಶಾಲೆ ಕಾಲೇಜು ಕಚೇರಿಗಳನ್ನು ಬಿಟ್ಟು, ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡು ಜೈಲು ಸೇರಿದರು, ಕಠಿಣ ಶಿಕ್ಷೆ ಅನುಭವಿಸಿದರು. ಸಿರ್ಸಿ, ಸಿದ್ದಾಪುರ, ಅಂಕೋಲ ಹೋರಾಟದ ಕೇಂದ್ರಗಳಾಗಿದ್ದವು. ನಾರಾಯಣ ಚಂದಾವರಕರ, ತಿಪ್ಪಯ್ಯ ಮಾಸ್ತರ, ಕಡವೆ ರಾಮಕೃಷ್ಣ ಹೆಗಡೆ, ವಾಮನ ಹೊರಿಕೆ, ಶಂಕರರಾವ್ ಗುಲ್ವಾಡಿ, ತಿಮ್ಮಪ್ಪ ನಾಯಕ, ನಾರಾಯಣ ಮರಾಠೆ, ಶಿರಳಗಿ ಸುಬ್ರಾಯಭಟ್ಟ, ಶೇಷಗಿರಿ ನಾರಾಯಣರಾವ್‌ ಕೇಶವೈನ್‌ (ಮೋಟಿನಸರ), ತಿಮ್ಮಪ್ಪ ಹೆಗಡೆ, ದೊಡ್ಮನೆ ನಾಗೇಶ ಹೆಗಡೆ, ಭವಾನಿಬಾಯಿ ಕಾನಗೋಡು, ಸೀತಾಬಾಯಿ ಮಡಗಾಂವಕರ, ಜೋಗಿ ಬೀರಣ್ಣ ನಾಯಕ, ಎನ್.ಜಿ.ಪೈ., ನಾರಾಯಣ ಪಿ ಭಟ್ಟ ಮೊದಲಾದವರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಯ ಸಾಧನೆಗೆ ಚರಿತ್ರೆಯ ಪುಟಗಳಲ್ಲಿ ಶಾಶ್ವತ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಈ ಜಿಲ್ಲೆಯ ಜನ ಮಾಡಿದ ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಚಳವಳಿ ಇವು ಹೊಸ ಇತಿಹಾಸ ನಿರ್ಮಿಸಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೂ ಕರ್ನಾಟಕ ಏಕೀಕರಣ ಚಳವಳಿ ಮುಂದುವರಿಯಿತು. 1954ರಲ್ಲಿ ದಿನಕರ ದೇಸಾಯಿ ಮತ್ತು ಪಿ.ಎಸ್.ಕಾಮತರು ಮನವಿಯೊಂದನ್ನು ತಯಾರಿಸಿ ರಾಜ್ಯ ಮರುವಿಂಗಡಣೆ ಆಯೋಗಕ್ಕೆ ಒಪ್ಪಿಸಿದ್ದರು. 1940ರ ಸುಮಾರಿನಲ್ಲಿ ಉಳುವವನೆ ಭೂಮಿಯ ಒಡೆಯ ಎಂಬ ಘೂೕಷಣೆಯೊಂದಿಗೆ ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಧುರೀಣತ್ವದಲ್ಲಿ ನಡೆದ ಚಳವಳಿಯಲ್ಲಿ ಜಿಲ್ಲೆಯ ಜನ ಪಾಲ್ಗೊಂಡು ಅದನ್ನು ಒಂದು ಬಲಿಷ್ಠ ಸಂಘಟನೆಯನ್ನಾಗಿ ರೂಪಿಸಿದರು. ಸರ್ಕಾರ ಗಾಬರಿಗೊಂಡು ೧೯೪೦ರಿಂದ ದಿನಕರ ದೇಸಾಯಿಯವರು ಉತ್ತರ ಕನ್ನಡ ಗಡಿಯನ್ನು ಪ್ರವೇಶಿಸದಂತೆ ಆಜ್ಞೆ ಹೊರಡಿಸಿತು. ಆಗ ದಿನಕರ ದೇಸಾಯಿಯವರು ಸರ್ವೆಂಟ್ಸ್‌ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಮುಂಬಯಿಯಲ್ಲಿದ್ದರು. ಆಗ ಶೇಷಗಿರಿ ಪಿಕಳೆ ಮತ್ತು ದಯಾನಂದ ನಾಡಕರ್ಣಿಯವರು ರೈತಕೂಟದ ಸೂತ್ರಗಳನ್ನು ಕೈಯಲ್ಲಿ ಹಿಡಿದುಕೊಂಡರು. ದಿನಕರ ದೇಸಾಯಿಯವರ ಮಾರ್ಗದರ್ಶನದಲ್ಲಿ ಚಳವಳಿ ನಡೆಯುತ್ತಿತ್ತು. ರೈತರು ಬಲಿಷ್ಠಗೊಳ್ಳಲೂ ಸ್ವತಂತ್ರ್ಯರಾಗಲೂ ಇದು ಕುಮ್ಮಕ್ಕು ನೀಡಿತು. ಈ ಚಳವಳಿಯಲ್ಲಿ ಉತ್ತರ ಕನ್ನಡದ ಸಾವಿರಾರು ರೈತರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಮ್ಮನಸ್ಸಿನಿಂದ ದುಡಿದು ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಭೌಗೋಳಿಕ ಈ ಜಿಲ್ಲೆಯನ್ನು ಎರಡು ಭೌಗೋಳಿಕ ವಿಭಾಗಗಳನ್ನಾಗಿ ವಿಂಗಡಿಸಬಹುದು. ಸಮುದ್ರದಂಚಿನಿಂದ 10-15ಕಿಮೀ ಅಗಲ ಮತ್ತು ಸು.130ಕಿಮೀ ಉದ್ದವಾಗಿರುವ ಕರಾವಳಿ ಘಟ್ಟದ ಕೆಳಗಿನ ಭಾಗ. ಅದರ ಪೂರ್ವ ದಿಕ್ಕಿಗೆ ಗೋಡೆಯಂತೆ ದಕ್ಷಿಣೋತ್ತರವಾಗಿ ಹಬ್ಬಿದ ಜಂಜುಕಲ್ಲಿನ ಸಹ್ಯಾದ್ರಿ ಶ್ರೇಣಿ. ಬೆಟ್ಟದ ತಪ್ಪಲಿನಿಂದ ಹರಿದು ಸಮುದ್ರ ಸೇರುವ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಸುತ್ತಲೂ ಹಸುರು ಹಾಸಿ ಸೌಂದರ್ಯ ಬೆಳೆಸಿವೆ. ಶಿವಮೊಗ್ಗ ಮತ್ತು ಉತ್ತರ ಕನ್ನಡದ ಗಡಿಯಲ್ಲಿ ಹರಿಯುವ ಶರಾವತಿ, ಗೇರುಸೊಪ್ಪೆಯ ಬಳಿ 252ಮೀ ಕೆಳಗೆ ದುಮುಕಿ ಜಗತ್ಪ್ರಸಿದ್ಧ ಜೋಗ್ ಜಲಪಾತವನ್ನು ನಿರ್ಮಿಸಿದೆ. ಅಘನಾಶಿನಿ ನದಿಯ ಉಂಚಳ್ಳಿ, ಗಂಗಾವಳಿ ನದಿಯ ಮಾಗೋಡು, ಕಾಳಿನದಿಯ ಲಾಲಗುಳಿ, ಗಣೀಶಪಾಲ ಹೊಳೆಯ ಶಿವಗಂಗಾ ಜಲಪಾತಗಳೂ ನಿಸರ್ಗ ಸೌಂದರ್ಯದಿಂದ ಕೂಡಿವೆ. ಇವಲ್ಲದೆ ಸುಸುಬ್ಬಿಯಂಥ ಅನೇಕ ಚಿಕ್ಕಪುಟ್ಟ ಜಲಪಾತಗಳಿವೆ. ಜೋಗದ ಶರಾವತಿ ಕಮರಿಯಲ್ಲಿ ಕಟ್ಟಲಾದ ಮಹಾತ್ಮಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರವಿದೆ (1948). ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಶರಾವತಿ ವಿದ್ಯುತ್ ಉತ್ಪಾದನಾ ಕೇಂದ್ರ (1965) ಏಷ್ಯದಲ್ಲಿ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ. ಕಾರವಾರದಿಂದ ಭಟ್ಕಳದವರೆಗೆ ಚಾಚಿಕೊಂಡ ಕರಾವಳಿ ಮರಳುಮಯವಾಗಿದೆ. ಘಟ್ಟದ ಕೆಳಗೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕುಗಳಿವೆ. ಘಟ್ಟದ ಮೇಲೆ ಸಿರ್ಸಿ, ಯಲ್ಲಾಪುರ, ಸಿದ್ಧಾಪುರ, ಹಳಿಯಾಳ, ಜೊಯ್ಡ (ಸುಪ), ಮುಂಡಗೋಡ ತಾಲ್ಲೂಕುಗಳಿವೆ. ಕರಾವಳಿಯ ತಾಲ್ಲೂಕುಗಳಲ್ಲಿ ತೆಂಗು ವಿಪುಲವಾಗಿ ಬೆಳೆದರೆ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಡಕೆ ಬೆಳೆಯುತ್ತದೆ. ಇಲ್ಲಿಯ ಹವಾಮಾನ ಹಿತಕರ. ಕರಾವಳಿ ತಾಲ್ಲೂಕುಗಳಲ್ಲಿ ಸೆಖೆ ಹೆಚ್ಚು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಮಳೆಗಾಲ ಜೂನ್ ನಲ್ಲಿ ಆರಂಭಗೊಂಡು ಅಕ್ಟೋಬರ್‌ವರೆಗೂ ಇರುತ್ತದೆ. ವಾರ್ಷಿಕ ಸರಾಸರಿ ಮಳೆ 2,836 ಮಿಮೀ. ಕರಾವಳಿಯಲ್ಲಿ 3,500mm ಸಹ್ಯಾದ್ರಿಯ ಅಂಚಿನಲ್ಲಿ 5,000mm ಮಳೆ ಹೆಚ್ಚು. ಪೂರ್ವಕ್ಕೆ ಹೋದಂತೆ ಮಳೆ ಕಡಿಮೆಯಾಗುತ್ತದೆ. ಜಿಲ್ಲೆಯ ಶೇ.80ರಷ್ಟು ನೆಲ ಅರಣ್ಯಾವೃತ. ಅರಣ್ಯದ ವಿಸ್ತೀರ್ಣ 8,15,057 ಹೆಕ್ಟೇರ್. 10,325 ಹೆಕ್ಟೇರುಗಳಲ್ಲಿ ತಾಳೆ ಬೆಳೆಯುತ್ತಾರೆ. ಸಾಗುವಾನಿ, ಮತ್ತಿ, ಹೊನ್ನೆ, ನಂದಿ ಮೊದಲಾದ ಗಟ್ಟಿ ಮರಗಳಲ್ಲದೆ ಬೆಂಕಿಪೆಟ್ಟಿಗೆಯ ತಯಾರಿಕೆಗೆ ಉಪಯುಕ್ತವಾದ ಮೃದು ಮರಗಳೂ ಶ್ರೀಗಂಧದ ಮರವೂ ಇವೆ. ಬಿದಿರು ಹೇರಳವಾಗಿದೆ. ತೈಲಯುತ ಸಸ್ಯಜಾತಿಗಳೂ ಇವೆ. ಅಳಲೆ, ಸೀಗೆ, ಜೇನು, ಅರಗು, ಗೋಂದು, ಹಾಲ್ಮಡ್ಡಿ ಇವು ಅರಣ್ಯೋತ್ಪನ್ನಗಳು. ರಾಜ್ಯದ ಅರಣ್ಯೋತ್ಪನ್ನದಲ್ಲಿ ಶೇ.65 ಭಾಗ ಈ ಜಿಲ್ಲೆಯಿಂದ ದೊರೆಯುತ್ತದೆ. ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು. ಜಿಲ್ಲೆಯಲ್ಲಿ ಅನೇಕ ಕಡೆ ಮ್ಯಾಂಗನೀಸ್ ದೊರೆಯುತ್ತದೆ. ಜೋಯ್ಡ ತಾಲ್ಲೂಕಿನ ಕೊಡ್ಲಿಗವಿಗಳು ಮ್ಯಾಂಗನೀಸ್ಗೆ ಪ್ರಸಿದ್ಧವಾಗಿದ್ದರೆ ಹೊನ್ನಾವರ ತಾಲ್ಲೂಕಿನ ಅಪ್ಸರಕೊಂಡದಲ್ಲೂ, ಕುಮಟ ತಾಲ್ಲೂಕಿನ ಯಾಣದಲ್ಲೂ ಕಬ್ಬಿಣದ ಅದಿರಿನ ನಿಕ್ಷೇಪವಿದೆ. ಸಹ್ಯಾದ್ರಿ ಪಾದಭಾಗಗಳಲ್ಲಿ ಕಬ್ಬಿಣವಲ್ಲದೆ ಇತರ ಲೋಹನಿಕ್ಷೇಪಗಳುಂಟು. ಯಾಣ ಮತ್ತಿತರ ಕಡೆಗಳಲ್ಲಿ ಸುಣ್ಣಶಿಲೆದೊರೆಯುತ್ತದೆ. ಹಲವೆಡೆ ಸ್ವರ್ಣಮಕ್ಷಿಕೆ ಬಿಳಿ ಜೇಡು ಇವೆ. ವೃತ್ತಿ ಮತ್ತು ವ್ಯಾಪಾರ ಸಿರ್ಸಿಯು ಜಿಲ್ಲೆಯ ಅತಿದೊಡ್ಡ ವಾಣಿಜ್ಯ ನಗರವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 118996 ಹೆ. ನಿವ್ವಳ ಬಿತ್ತನೆ ಪ್ರದೇಶವಿದೆ. ಇದರಲ್ಲಿ 22,421 ಹೆ. ಗಳಿಗೆ ನೀರಾವರಿ ಸೌಲಭ್ಯವಿದೆ. ಭತ್ತ, ತೆಂಗು, ಕಬ್ಬು, ಅಡಕೆ, ಮೆಣಸು, ಏಲಕ್ಕಿ, ಬಾಳೆ ಮುಖ್ಯವಾದ ಬೆಳೆಗಳು. ಇವಲ್ಲದೆ ಜಿಲ್ಲೆಯಲ್ಲಿ ಗೋಡಂಬಿ, ಮಾವು, ಹುಣಸೆ, ನಿಂಬೆ, ಅನಾನಸು, ಹಲಸು, ಪಪ್ಪಾಯಿ, ಬಟಾಟೆ, ಬದನೆ, ಕಲ್ಲಂಗಡಿ, ಹೈಬ್ರಿಡ್ ಜೋಳ, ಶೇಂಗಾ ಇತ್ಯಾದಿಗಳನ್ನು ಬೆಳೆಯುತ್ತಾರೆ. ಭತ್ತ 82197 ಹೆ, ಜೋಳ 290 ಹೆ, ಕಬ್ಬು ೮೭೨ ಹೆ, ಅಡಕೆ 11160 ಹೆ, ತೆಂಗು 5907 ಹೆ, ಗೋಡಂಬಿ 1827 ಹೆ, ಮೆಣಸು 135 ಹೆ, ಮಾವು 1140 ಹೆ, ಬಾಳೆ 7245 ಹೆ, ಏಲಕ್ಕಿ 369ಹೆ, ಅನಾನಸ್ 315 ಹೆ, ಹಲಸು 206 ಹೆ, ಪರಂಗಿ 114.9 ಹೆ, ಹತ್ತಿ ೭೨೪೫ ಹೆನಲ್ಲಿ ಬೆಳೆಸುತ್ತಾರೆ. ಅಡಕೆಯ ತೋಟದಲ್ಲಿ ಏಲಕ್ಕಿ, ಕಾಳುಮೆಣಸು, ಬಾಳೆ ಬೆಳೆಸುತ್ತಾರೆ. ಗದ್ದೆಯಲ್ಲಿ ಕಡಲೆ, ತೊಗರಿ ಮೊದಲಾದ ಧಾನ್ಯಗಳನ್ನೂ ಬೆಳೆಯುತ್ತಾರೆ.ಪಶುಪಾಲನೆಯೂ ರೂಢಿಯಲ್ಲಿದೆ. ಭಟ್ಕಳವು ಮಲ್ಲಿಗೆಗೆ ಹೆಸರುವಾಸಿಯಾಗಿದೆ.ಇಲ್ಲಿ ಮಲ್ಲಿಗೆ ಬೆಳೆಗೆ ಅನುಕೂಲ ವಾತಾವರಣವಿದೆ.ಭಟ್ಕಳ ಮಲ್ಲಿಗೆಯು ದೇಶ ವಿದೇಶಗಳಿಗೂ ರಫ್ತಾಗುತ್ತದೆ. ಈ ಜಿಲ್ಲೆಯಲ್ಲಿ ಮೀನುಗಾರಿಕೆ ಒಂದು ಮುಖ್ಯ ಉದ್ಯೋಗ. ಒಂದು ಕಾಲದಲ್ಲಿ ಹರಿಕಾಂತ, ತಾಂಡೇಲ, ಖಾರ್ವಿ, ಗಾಬಿತ, ಅಂಬಿಗ, ಮೊಗೇರ, ಆಗೇರ, ಕ್ರಿಶ್ಚಿಯನ್ ದಾಲಜಿಗಳಷ್ಟೇ ಈ ವೃತ್ತಿಯನ್ನವಲಂಬಿಸಿದ್ದರೆ ಇತ್ತೀಚೆಗೆ ಸಾಮಾನ್ಯವಾಗಿ ಎಲ್ಲ ಜಾತಿಯವರೂ ಮೀನು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಇವರು ಕರಾವಳಿ ಪ್ರದೇಶದ 118 ಹಳ್ಳಿಗಳಲ್ಲಿದ್ದಾರೆ. ಸಮುದ್ರದಿಂದ ಮೀನು ಹಿಡಿಯುವ ಕೇಂದ್ರಗಳೆಂದರೆ ಅರ್ಗಾ, ಭಟ್ಕಳ, ಬಿಣಗಾ, ಚೆಂಡಿಯೆ, ಗಂಗಾವಳಿ, ಕಾರವಾರ, ಹೊನ್ನಾವರ, ಖಾರವಿ, ಕೇಣಿ, ಕೋಡಾರ್, ಕುಮಟ, ಹೊಲನಗದ್ದೆ, ಮಾಜಾಳಿ, ಮಂಕಿ, ಮುರ್ಡೇಶ್ವರ, ಶಿರಾಲಿ,ಮತ್ತು ತದಡಿ. ಸಾಗರ ಮೀನುಗಾರಿಕೆಯಲ್ಲಿ 30094 ಟನ್ ಹಿಡಿದರೆ, ಸಿಹಿನೀರಿನಲ್ಲಿ 249ಟನ್ ಮೀನು ಹಿಡಿಯಲಾಗಿದೆ (2001). ಮರ ಕೊಯ್ಯುವ ಗಿರಣಿ, ಹಂಚಿನ ಕಾರ್ಖಾನೆ, ನೇಯ್ಗೆ, ಮೇಣದಬತ್ತಿಯ ಉತ್ಪಾದನೆ, ಸಾಬೂನು ತಯಾರಿಕೆ, ವಾಹನ ದುರಸ್ತಿ, ಮುದ್ರಣ, ಕೆತ್ತನೆಯ ಕೆಲಸ, ಚಿನ್ನ ಬೆಳ್ಳಿಯ ಕೆಲಸ, ಬುಟ್ಟಿ, ಚಾಪೆ ಹೆಣೆಯುವಿಕೆ, ಬೆತ್ತದ ಹೆಣಿಗೆ, ಜೇನು ಸಾಕಣೆ, ಕೋಳಿ ಕುರಿ ಸಾಕಣೆ, ರೇಷ್ಮೆ, ಚರ್ಮದ ಉದ್ಯೋಗ, ವ್ಯಾಪಾರ, ಏಜೆನ್ಸಿಗಳಲ್ಲಿ ಜನ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಂಜುಗೆಡ್ಡೆ ತಯಾರಿಕಾ ಕಾರ್ಖಾನೆಗಳು 52 ಇವೆ. ದಾಂಡೇಲಿಯಲ್ಲಿಯೂ ಕಾಗದದ ಕಾರ್ಖಾನೆ ದೊಡ್ಡ ಉದ್ದಿಮೆ. ಅಲ್ಲದೆ ಪ್ಲೈವುಡ್, ಫೆರೋಮ್ಯಾಂಗನೀಸ್ ಉದ್ದಿಮೆಗಳೂ ಇವೆ. ಕಾರವಾರ, ಬೆಲೆಕೇರಿ, ತದಡಿ, ಕುಮಟ, ಹೊನ್ನಾವರ, ಭಟ್ಕಳ-ಇವು ಮುಖ್ಯ ಬಂದರುಗಳು. ಕಾರವಾರದಲ್ಲಿ ಸರ್ವಋತು ಬಂದರನ್ನು ಬೃಹತ್ತಾಗಿ ಕಟ್ಟಲಾಗಿದೆ. ಬಳ್ಳಾರಿ ಪ್ರದೇಶದ ಕಬ್ಬಿಣದ ಅದಿರನ್ನು ಸಾಗಿಸಲು ಕಾರವಾರ ಬಂದರು ಉಪಯುಕ್ತವಾಗುತ್ತದೆ. ಉದ್ದಿಮೆ ಎಂಜಿನಿಯರಿಂಗ್ ಉದ್ಯಮ 15, ರಾಸಾಯನಿಕ ಕಾರ್ಖಾನೆಗಳು 3, ಬಟ್ಟೆ ಕಾರ್ಖಾನೆ 2, ಇತರ ಸಣ್ಣ ಪ್ರಮಾಣದ ಕಾರ್ಖಾನೆಗಳು 66, ಈ ಕಾರ್ಖಾನೆಗಳಲ್ಲಿ ಉದ್ಯೋಗಿಗಳು 13,243. ಜಿಲ್ಲೆಯಲ್ಲಿ ಕೆಲವು ಬೃಹತ್ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿವೆ. ವೆಸ್ಟ್‌ಕೋಸ್ಟ್‌ ಪೇಪರ್ ಮಿಲ್ಸ್‌, ದಾಂಡೇಲಿಯ ಇಂಡಿಯನ್ ಪ್ಲೈವುಡ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪನಿ, ಜೈಹಿಂದ್ ಸಾಮಿಲ್, ಬಳ್ಳಾಪುರ ಇಂಡಸ್ಟ್ರಿಸ್ ಲಿ., ಬಿಣಗಾದ, ದಾಂಡೇಲಿ ಫೆರೊ ಅಲಾಯ್ಸ್‌ ಪ್ರೈ.ಲಿ. ಇವು ಮುಖ್ಯ ಉದ್ದಿಮೆಗಳು. ಇವಲ್ಲದೆ ಸಣ್ಣ ಕೈಗಾರಿಕಾ ಘಟಕಗಳು, ಖಾದಿ ಗ್ರಾಮೋದ್ಯೋಗ ಕರಕುಶಲ ಘಟಕಗಳು ಹಾಗೂ ಕೈಮಗ್ಗದ ಘಟಕಗಳು ಜಿಲ್ಲೆಯಲ್ಲಿವೆ, ಹೆಂಚು ಕಾರ್ಖಾನೆಗಳಿವೆ. ಮೀನುಗಾರಿಕೆ ಘಟಕಗಳು, ದೋಣಿ ಕಟ್ಟುವ ಘಟಕಗಳು, ಆಹಾರ ಸಂಸ್ಕರಣ ಘಟಕಗಳು, ರಾಸಾಯನಿಕ ಘಟಕಗಳು ಚರ್ಮ ಮತ್ತು ರಬ್ಬರ್ ಘಟಕಗಳು, ಗಂಧ ಚಂದನ ಕೆತ್ತನೆಯ ಘಟಕಗಳು, ಮುದ್ರಣ ಘಟಕಗಳು, ನೂಲುವ ನೇಯುವ ಘಟಕಗಳು, ಜೇನು ಸಾಕಣೆ, ಬೆತ್ತ ಬಿದಿರುಗಳಿಂದ ವಸ್ತುಗಳನ್ನು ತಯಾರಿಸುವ ಘಟಕಗಳು, ಎಣ್ಣೆ ತಯಾರಿಕಾ ಘಟಕಗಳು, ಕುಂಬಾರಿಕೆ ಮುಂತಾದ ಅನೇಕ ಉದ್ಯಮಗಳಿವೆ. ಇವುಗಳಲ್ಲಿ ಕೆಲವು ಗುಡಿ ಕೈಗಾರಿಕೆಗಳು. ಸಾರಿಗೆ-ಸಂಪರ್ಕ ಜಿಲ್ಲೆಯಲ್ಲಿ 329 ಕಿ.ಮೀ ಗಳ ರಾಷ್ಟ್ರೀಯ ಹೆದ್ದಾರಿ, 863 ಕಿ.ಮೀ ಗಳ ರಾಜ್ಯ ಹೆದ್ದಾರಿ ಮಾರ್ಗಗಳಿವೆ. ಜಿಲ್ಲಾ ಮುಖ್ಯ ರಸ್ತೆಗಳು 1039 ಕಿ.ಮೀ. 24 ಭಾರೀ ಸೇತುವೆಗಳಿವೆ. ಪಶ್ಚಿಮ ಕರಾವಳಿಯ ಹೆದ್ದಾರಿ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೆ, ಉತ್ತರಕ್ಕೆ ಕಾಶ್ಮೀರದವರೆಗೆ ಸಂಪರ್ಕ ಕಲ್ಪಿಸುತ್ತದೆ. ಕಾರವಾರದಿಂದ ಹುಬ್ಬಳ್ಳಿಯ ಕಡೆಗೆ ಹೋಗುವ ಹೆದ್ದಾರಿ ಅನೇಕ ನಗರಗಳ ಸಂಪರ್ಕ ಕಲ್ಪಿಸುತ್ತದೆ. ನಗರಗಳೊಂದಿಗೆ ಹಳ್ಳಿಗಳ ಸಂಪರ್ಕವನ್ನು ಕಲ್ಪಿಸುವ ರಸ್ತೆಗಳೂ ಇವೆ. ಘಟ್ಟದ ಮೇಲೆ ಸಿದ್ದಾಪುರದಿಂದ ಹುಬ್ಬಳ್ಳಿಗೆ, ಕಾರವಾರಕ್ಕೆ, ದಾಂಡೆಲಿಗೆ, ಯಲ್ಲಾಪುರಕ್ಕೆ ಸಂಪರ್ಕ ದೊರಕಿಸುವ ರಸ್ತೆಗಳಿವೆ. ಕೊಚ್ಚಿ ಮುಂಬೈಗಳಿಗೆ ಹೋಗುವ ಕೊಂಕಣ ರೈಲ್ವೆ ಈ ಜಿಲ್ಲೆಯ ಮೂಲಕ ಹೋಗುತ್ತದೆ. ಜಿಲ್ಲೆಯಲ್ಲಿ 179ಕಿಮೀ ಉದ್ದದ ರೈಲು ಮಾರ್ಗವಿದೆ. 16 ರೈಲು ನಿಲ್ದಾಣಗಳಿವೆ. ಇವುಗಳಲ್ಲಿ ಮುಖ್ಯವಾದವು-ಭಟ್ಕಳ, ಹೊನ್ನಾವರ, ಕುಮಟ, ಗೋಕರ್ಣ, ಅಂಕೋಲ, ಕಾರವಾರ. ಜಿಲ್ಲೆಯಲ್ಲಿ 497 ಅಂಚೆ ಕಚೇರಿಗಳು 152 ದೂರವಾಣಿ ವಿನಿಮಯ ಕೇಂದ್ರಗಳು ಮತ್ತು 90,234 (2006) ದೂರವಾಣಿ ಸಂಪರ್ಕಗಳಿವೆ. ಇದಲ್ಲದೆ ಜಲಮಾರ್ಗದ ಸಂಪರ್ಕವೂ ಇದೆ. ಜನಸಂಖ್ಯೆ ಜಿಲ್ಲೆಯ ಒಟ್ಟು ಜನಸಂಖ್ಯೆ 13,53,644 ಇದರಲ್ಲಿ 9,65,731 ಜನ ಹಳ್ಳಿಯಲ್ಲಿ ವಾಸಿಸುತ್ತಾರೆ. ಇವರಲ್ಲಿ 4,89,908 ಗಂಡಸರು, 4,75,823 ಹೆಂಗಸರು. ಜನಸಾಂದ್ರತೆ ಪ್ರತಿ ಚ.ಕಿಮೀ.ಗೆ 132 ಜನರು, ಲಿಂಗಾನುಪಾತ ಸಾವಿರ ಪುರುಷರಿಗೆ 970 ಮಹಿಳೆಯರು ಈ ಜಿಲ್ಲೆಯಲ್ಲಿ ಹಿಂದುಗಳೂ (ಶೇ. 83.6) ಮುಸಲ್ಮಾನರೂ (ಶೇ.11.9) ಕ್ರೈಸ್ತರೂ (ಶೇ.3.3) ಇದ್ದಾರೆ. ಬಹುಸಂಖ್ಯಾತರು ಹಿಂದುಗಳು. ಈ ಜಿಲ್ಲೆಯಲ್ಲಿ ಬೌದ್ಧ, ಜೈನ ಧರ್ಮಗಳೂ ಪ್ರಚಾರವಾದವು. 10-12ನೆಯ ಶತಮಾನಗಳಲ್ಲಿ ನಾಥಪಂಥವೂ 16-18ನೆಯ ಶತಮಾನಗಳಲ್ಲಿ ವೀರಶೈವ ಪಂಥದ ಪ್ರಚಾರವೂ ನಡೆದವು. ಜಿಲ್ಲೆಯಲ್ಲಿ ಕ್ರೈಸ್ತ ಮಂದಿರಗಳೂ ಮಸೀದಿಗಳೂ ಸ್ಮಾರ್ತ, ಜೈನ, ವೀರಶೈವ, ವೈಷ್ಣವ ಮಠಗಳೂ ಇವೆ. ಹಿಂದುಧರ್ಮದ ಹಲವು ಪಂಗಡಗಳಿಗೆ ಸೇರಿದ ನೂರಾರು ದೇವಾಲಯಗಳು ಇವೆ. ನಾಥಪಂಥದ ಅವಶೇಷಗಳು ಅಂಕೋಲ, ಬೆಳಂಬರ್, ಹೊನ್ನೆಬೈಲ, ಅಘನಾಶಿನಿ, ಲಿಂಗೆ, ಮಾಜಾಳಿ, ಯಾಣ, ಕವಳೆಯಲ್ಲಿವೆ. ಶಿಕ್ಷಣ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ. 84.64: ಪುರುಷರು ಶೇ. 89.63, ಮಹಿಳೆಯರು ಶೇ. 78.39. ಜಿಲ್ಲೆಯಲ್ಲಿ ಮೊದಲು ಜೈನ, ವೀರಶೈವ, ಬ್ರಾಹ್ಮಣ ಸಂಪ್ರದಾಯದ ಪಾಠಶಾಲೆಗಳು ನಡೆಯುತ್ತಿದ್ದವು. ಅದಕ್ಕೆ ಅನೇಕ ಅಗ್ರಹಾರಗಳು ಪ್ರಚಲಿತವಿದ್ದವು. ಅವುಗಳೆಲ್ಲ ಬ್ರಿಟಿಷರ ಆಳಿಕೆಯಲ್ಲಿ ಕೊನೆಗೊಳ್ಳುತ್ತ ಬಂದು 1866 ಸುಮಾರಿಗೆ ಸರ್ಕಾರಿ ಶಾಲೆಗಳು ಆರಂಭವಾದವು. ಹಳಿಯಾಳ, ಕುಮಟ, ಸಿರ್ಸಿಗಳಲ್ಲಿ ಆಂಗ್ಲೊವರ್ನಾಕ್ಯುಲರ್ ಶಾಲೆಗಳಿದ್ದವು. 1866ರಲ್ಲಿ ಒಂದು ಉರ್ದು ಶಾಲೆ ಹಳಿಯಾಳದಲ್ಲಿ ಆರಂಭವಾಯಿತು. 1864ರಲ್ಲಿ ಕಾರವಾರದಲ್ಲಿ ಮೊದಲ ಹೈಸ್ಕೂಲು ಪ್ರಾರಂಭವಾಯಿತು. 1935-36ರಲ್ಲಿ 853 ಪ್ರಾಥಮಿಕ ಶಾಲೆಗಳಿದ್ದವು. 23,465 ಮಂದಿ ಶಿಕ್ಷಣ ಪಡೆಯುತ್ತಿದ್ದರು. ಇವರಲ್ಲಿ 5776 ವಿದ್ಯಾರ್ಥಿನಿಯರು. ಆ ವರ್ಷದಿಂದ ಪರಿಶಿಷ್ಟ ಜಾತಿಯ, ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ವಿಶೇಷ ಗಮನ ಕೊಡಲಾಯಿತು. ಜಿಲ್ಲಾ ಸ್ಕೂಲ್ ಬೋರ್ಡ್ 1944ರಲ್ಲಿ ಆರಂಭವಾಗಿ ಎಲ್ಲ ಶಾಲೆಗಳು ಸ್ಕೂಲ್ ಬೋರ್ಡ್ ಅಧೀನಕ್ಕೆ ಬಂದು ಶಿಕ್ಷಣದಲ್ಲಿ ಒಂದು ಬಗೆಯ ಶಿಸ್ತು ಬಂತು. ಸ್ಕೂಲ್‌ಬೋರ್ಡಿನಿಂದ ನಿಯಂತ್ರಣಗೊಂಡ ಶಿಕ್ಷಣ ಇಲಾಖೆಯ ಖರ್ಚು ಪುರೈಸಲು ಸ್ಥಳೀಯ ಆಡಳಿತಗಳು ವಿದ್ಯಾ ಕರ ಸಂಗ್ರಹಿಸತೊಡಗಿದವು. ಕಡ್ಡಾಯ ಪ್ರಾಥಮಿಕ ಶಿಕ್ಷಣ ಕಾನೂನು (1918) ಜಾರಿಗೆ ಬಂದಾಗ ಹಳಿಯಾಳ ಮತ್ತು ಹೊನ್ನಾವರ ಪುರಸಭೆಗಳು ಈ ಯೋಜನೆಯನ್ನು ಜಾರಿಗೆ ತಂದವು. 1947ರಲ್ಲಿ ಮುಂಬಯಿ ಪ್ರಾಥಮಿಕ ಶಿಕ್ಷಣ ಅಧಿನಿಯಮದಂತೆ 7-11 ವರ್ಷದ ಮಕ್ಕಳು ಶಾಲೆಗೆ ಹೋಗುವುದು ಕಡ್ಡಾಯವಾಯಿತು. ರಾಜ್ಯ ಪುನಾರಚನೆಯ ಕಾಲದಲ್ಲಿ 969 ಪ್ರಾಥಮಿಕ ಶಾಲೆಗಳೂ 71779 ವಿದ್ಯಾರ್ಥಿಗಳೂ 1759 ಶಿಕ್ಷಕರೂ ಇದ್ದರು. 1900ರ ವೇಳೆಗೆ ಘಟ್ಟದ ಕೆಳಗೆ ಐದು ಪ್ರೌಢಶಾಲೆಗಳೂ ಘಟ್ಟದ ಮೇಲೆ ಸಿರ್ಸಿಯಲ್ಲಿ ಒಂದೇ ಒಂದು ಪ್ರೌಢಶಾಲೆಯೂ ಇದ್ದವು. 1947ರ ವರೆಗೂ ಶಿಕ್ಷಣ ಒಂದು ತೀವ್ರ ಆಸಕ್ತಿಯ ವಿಷಯವಾಗಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಅದುವರೆಗೆ ಜಿಲ್ಲೆಯಲ್ಲಿ ಪದವಿಯ ಮಟ್ಟದ ಉನ್ನತ ಶಿಕ್ಷಣದ ಸೌಲಭ್ಯಗಳಿರಲಿಲ್ಲ. ಸರ್ಕಾರದಿಂದ ಎಲ್ಲವನ್ನೂ ಅಪೇಕ್ಷಿಸುವುದು ಸಾಧ್ಯವಿಲ್ಲವೆಂದು ಮನಗಂಡ ಸಾರ್ವಜನಿಕರು 1947ರಲ್ಲಿ ಕುಮಟದಲ್ಲಿ ಕೆನರಾ ಎಜುಕೇಶನ್ ಸೊಸೈಟಿಯನ್ನು ಆರಂಭಿಸಿದರು. 1919ರಲ್ಲಿ ಭಟ್ಕಳದಲ್ಲಿ ಆರಂಭವಾದ ಅಂಜುಮನ್ ಎಜುಕೇಶನ್ ಟ್ರಸ್ಟ್‌, 1952ರಲ್ಲಿ ಸಿದ್ದಾಪುರದಲ್ಲಿ ಸ್ಥಾಪಿಸಿದ ಸಹಕಾರಿ ಶಿಕ್ಷಣ ಪ್ರಸಾರ ಸಮಿತಿ, 1954ರಲ್ಲಿ ಯಲ್ಲಾಪುರದಲ್ಲಿ ಆರಂಭವಾದ ಶಿವಾಜಿ ಎಜುಕೇಶನ್ ಸೊಸೈಟಿ, 1961ರಲ್ಲಿ ಸಿರ್ಸಿ ಯಲ್ಲಿ ಆರಂಭಿಸಲಾದ ಮಾಡರ್ನ್ ಎಜುಕೇಶನ್ ಸೊಸೈಟಿ, 1962ರಲ್ಲಿ ಅಂಕೋಲದಲ್ಲಿ ಆರಂಭಿಸಲಾದ ನೂತನ ಶಿಕ್ಷಣ ಸಭಾ ಟ್ರಸ್ಟ್‌, 1970ರಲ್ಲಿ ದಾಂಡೇಲಿಯಲ್ಲಿ ಆರಂಭಿಸಿದ ದಾಂಡೇಲಿ ಎಜುಕೇಶನ್ ಸೊಸೈಟಿ, 1964ರಲ್ಲಿ ಹೊನ್ನಾವರದಲ್ಲಿ ಮಹಾವಿದ್ಯಾಲಯ ಸ್ಥಾಪಿಸಿದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜುಕೇಶನ್ ಸೊಸೈಟಿ, 1953ರಲ್ಲಿ ದಿನಕರದೇಸಾಯಿ ನೇತೃತ್ವದಲ್ಲಿ ಸ್ಥಾಪಿತವಾದ ಕೆನರ ವೆಲ್ಫೇರ್ ಟ್ರಸ್ಟ್‌ ಮೊದಲಾದ ಅನೇಕ ಶಿಕ್ಷಣ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದವು. 1949ರಲ್ಲಿ ಕುಮಟದಲ್ಲಿ ಕೆನರಾ ಕಾಲೇಜು ಆರಂಭವಾಗಿ ಅನಂತರ ಅದು ಎ.ವಿ.ಬಾಳಿಗಾ ಕಾಲೇಜ್ ಎಂದು ನಾಮಕರಣ ಗೊಂಡಿತು. 1961ರಲ್ಲಿ ಕಾರವಾರದಲ್ಲಿ ಕಾಲೇಜು ಆರಂಭವಾಯಿತು. ಮುಂದಿನ ಹದಿನೈದು ವರ್ಷಗಳಲ್ಲಿ 13 ಪದವಿ ಮಹಾವಿದ್ಯಾಲಯಗಳು, 3 ವೃತ್ತಿಪರ ಮಹಾವಿದ್ಯಾಲಯಗಳು, 3 ಬಿ.ಇಡಿ. ಮಹಾ ವಿದ್ಯಾಲಯಗಳು, ಒಂದು ಕಾನೂನು ಮಹಾವಿದ್ಯಾಲಯ ಆರಂಭವಾದವು. 1984-85ರಿಂದ ಸಿರ್ಸಿ ಕುಮಟ ಮತ್ತು ದಾಂಡೇಲಿಯಲ್ಲಿ ಪಾಲಿಟೆಕ್ನಿಕ್ಗಳು ನಡೆಯುತ್ತಿವೆ. 1958ರಲ್ಲಿ ಕಾರವಾರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭವಾಯಿತು. ಈಗ ಈ ಜಿಲ್ಲೆಯ ಭಟ್ಕಳದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜ್ ಇದೆ. ಸಿದ್ದಾಪುರದಲ್ಲೊಂದು ಆಯುರ್ವೇದ ಮಹಾವಿದ್ಯಾಲಯವಿದೆ. ಸಿರ್ಸಿಯಲ್ಲಿ ಅರಣ್ಯ ವಿಜ್ಞಾನ ಕಾಲೇಜು ಇದೆ. 1937ರಲ್ಲಿ ಮುಂಬಯಿ ಸರ್ಕಾರದಿಂದ ಅನುದಾನಿತವಾದ ವಯಸ್ಕರ ಶಿಕ್ಷಣ ಸಮಿತಿಯ ರಚನೆಯಾಗಿತ್ತು. 1947-56ರ ಅವಧಿಯಲ್ಲಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ 4 ತಿಂಗಳ ಮತ್ತು ಆರು ತಿಂಗಳ ಅವಧಿಗಳ ಸಾಕ್ಷರತಾ ವರ್ಗಗಳು ಆರಂಭವಾದವು. 1980ರಲ್ಲಿ ಸಿರ್ಸಿಯಲ್ಲಿ ವಯಸ್ಕರ ಶಿಕ್ಷಣಕ್ಕೆ ಯೋಜನಾ ಕಚೇರಿ ತೆರೆದ ಅನಂತರ ವಯಸ್ಕರ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಯಿತು. ಈಗ 150 ವಯಸ್ಕರ ಶಿಕ್ಷಣ ಕೇಂದ್ರಗಳೂ 150 ಸಾಕ್ಷರೋತ್ತರ ತರಬೇತಿ ಕೇಂದ್ರಗಳೂ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರದ ಯೋಜನೆಯಡಿ ನವೋದಯ ಶಾಲೆಯೂ ನಡೆಯುತ್ತಿವೆ.ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಶಿಕ್ಷಣ ಖಾತೆ 1981-82ರಲ್ಲಿ ಪ್ರೌಢಶಾಲೆಯ 65 ಶಿಕ್ಷಕರಿಗೆ ತರಬೇತು ನೀಡಿ ಅವರನ್ನು ಕೆರಿಯರ್ ಮಾಸ್ಟರ್ಸ್‌ ಎಂದು ಕರೆದುದಲ್ಲದೆ ಬಿ.ಎಡ್. ವಿದ್ಯಾರ್ಥಿಗಳಿಗೂ ಈ ವಿಷಯ ಪರಿಚಯಿಸಿತು. ಜಿಲ್ಲೆಯಲ್ಲಿ 2292 ಪ್ರಾಥಮಿಕ ಶಾಲೆಗಳು, 231 ಪ್ರೌಢಶಾಲೆಗಳೂ 63 ಪದವಿಪೂರ್ವ ಕಾಲೇಜುಗಳೂ 28 ಸಾಮಾನ್ಯ ಶಿಕ್ಷಣ ಕಾಲೇಜುಗಳು, 5 ಪಾಲಿಟೆಕ್ನಿಕ್ಗಳು, 168 ಗ್ರಂಥಾಲಯಗಳು ಇವೆ (2000). ಜಿಲ್ಲೆಯಲ್ಲಿ 11 ಅಲೋಪತಿ ಆಸ್ಪತ್ರೆಗಳು, 3 ಭಾರತೀಯ ವೈದ್ಯ ಪದ್ಧತಿಯ ಆಸ್ಪತ್ರೆಗಳು, 61 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 120 ಕುಟುಂಬ ಕಲ್ಯಾಣ ಕೇಂದ್ರಗಳು ಇವೆ. ಕಲೆ ಮತ್ತು ಸಂಸ್ಕೃತಿ right|250px|ಯಕ್ಷಗಾನ ವೇಷ ಈ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಜನ ಕನ್ನಡ ಮಾತನಾಡುವವರು. ಕೊಂಕಣಿ, ಉರ್ದು, ಮರಾಠಿ ಮಾತನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ತೆಲುಗು, ತಮಿಳು, ಮಲಯಾಳಂ, ತುಳು, ರಾಜಸ್ತಾನಿ, ಕೊಡವ, ಹಿಂದಿ, ಗುಜರಾತಿ, ಸಿಂಧಿ, ನೇಪಾಳಿ, ಬಂಗಾಳಿ, ಪಂಜಾಬಿ, ಒರಿಯ, ಪರ್ಷಿಯನ್ ಭಾಷೆ ಮಾತನಾಡುವವರನ್ನೂ ಕಾಣಬಹುದು. ಉತ್ತರ ಕನ್ನಡ ಜಿಲ್ಲೆ ಜನಪದ ಸಂಸ್ಕೃತಿಯ ಬೀಡಾಗಿದೆ. ಹಾಲಕ್ಕಿ, ಹಸಲರು, ನಾಮಧಾರಿ, ನವಾಯತರು, ಸಿದ್ಧಿ, ಹವ್ಯಕ, ಗೊಂಡರು, ಮುಕ್ರಿ, ಸಾರಸ್ವತ, ಪಟಗಾರ, ಭಜಂತ್ರಿ, ದೈವಜ್ಞ (ಜನಿವಾರರು), ಗವಳಿ, ಮೀನುಗಾರರ ಉಪಸಂಸ್ಕೃತಿ ಗಳು ಇವೆ. ಇವರ ಹಾಡು-ಕುಣಿತ-ಹಬ್ಬಗಳು ಮನಮೋಹಕ. ಇಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಿದ ಪ್ರಮುಖರಲ್ಲಿ ವಿ.ವೆ.ತೊರ್ಕೆ, ಮ.ಗ.ಶೆಟ್ಟಿ, ಜಿ.ಆರ್.ಹೆಗಡೆ, ಎಲ್.ಆರ್.ಹೆಗಡೆ, ಎನ್.ಆರ್.ನಾಯಕ, ಫಾದರ್ಸಿ.ಸಿ.ಎ.ಪೈ, ಎಲ್.ಜಿ.ಭಟ್ಟ, ಶಾಂತಿನಾಯಕ, ವಿ.ಗ.ನಾಯಕ ಮೊದಲಾದವರು ಪ್ರಮುಖರು. ಈ ಜಿಲ್ಲೆಯ ರಂಗಕಲೆಗಳಲ್ಲಿ ಯಕ್ಷಗಾನ ವಿಶಿಷ್ಟ ಸ್ಥಾನ ಗಳಿಸಿದೆ. ಕರ್ಕಿ ಪರಮಯ್ಯ ಹಾಸ್ಯಗಾರ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಚಿಟ್ಟಾಣಿ ರಾಮಚಂದ್ರ ಹೆಗಡೆ, ಎಕ್ಟರ್ ಜೋಶಿ, ಕೆರೆಮನೆ ಗಜಾನನ ಹೆಗಡೆ, ಪಿ.ವಿ.ಹಾಸ್ಯಗಾರ, ನಾರಾಯಣ ಹಾಸ್ಯಗಾರ, ಕೃಷ್ಣ ಹಾಸ್ಯಗಾರ, ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮುರೂರು ದೇವರು ಹೆಗಡೆ, ಗೋಡೆ ನಾರಾಯಣ ಹೆಗಡೆ, ಡಿ.ಜಿ.ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಬಳ್ಳುರ ಕೃಷ್ಣಯಾಜಿ, ವೆಂಕಟೇಶ ಜಲವಳ್ಳಿ, ಕಡತೋಕ ಮಂಜುನಾಥ ಭಾಗವತ, ನೆಬ್ಬೂರು ನಾರಾಯಣ ಭಾಗವತ ಪ್ರಮುಖ ಕಲಾವಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಜಾನಪದ ಶ್ರೀ ಪ್ರಶಸ್ತಿ ಬಂದಿದೆ (೨೦೦೪). ತಾಳಮದ್ದಳೆಯ ಕಲಾವಿದರು ಅನೇಕರಿದ್ದಾರೆ. ನಾಟಕ ಕ್ಷೇತ್ರದಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸಿ ನಡೆಸಿದರು. ಸುಗ್ಗಿಕುಣಿತ, ಗುಮಟೆಯ ಪಾಂಡು, ದೋಣಿಯ ಹಾಡು, ಬೆಸ್ತರ ಪದ, ಜನಪದ ಗೀತೆಗಳು, ಸಿದ್ಧಿಯರ ಕುಣಿತ- ಹಾಡುಗಳೂ ಜಿಲ್ಲೆಯ ಜನರನ್ನು ಮನರಂಜಿಸುತ್ತ ಬಂದಿವೆ. ಸಾಹಿತ್ಯ right|150px|thumb|ಯಶವಂತ ಚಿತ್ತಾಲ ಸಾಹಿತ್ಯ ಕ್ಷೇತ್ರವನ್ನು ಕರ್ಕಿ ವೆಂಕಟರಮಣಶಾಸ್ತ್ರಿ ಸೂರಿ, ಜಿ.ಆರ್.ಪಾಂಡೇಶ್ವರ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಬಿ.ಎಚ್.ಶ್ರೀಧರ,ಶಾಂತಿನಾಥ ದೇಸಾಯಿ, ಸು.ರಂ.ಎಕ್ಕುಂಡಿ, ಅರವಿಂದ ನಾಡಕರ್ಣಿ, ಸ.ಪ.ಗಾಂವಕರ್, ಕೃಷ್ಣಾನಂದ ಕಾಮತ್, ಪ.ಸು.ಭಟ್ಟ, ಸುಂದರ ನಾಡಕರ್ಣಿ, ವಿ.ಜಿ.ಭಟ್ಟ, ದಿನಕರ ದೇಸಾಯಿ, ವಿ.ಜಿ.ಶಾನಭಾಗ, ಶಾ.ಮಂ.ಕೃಷ್ಣರಾಯ, ಗಂಗಾಧರ ಚಿತ್ತಾಲ, ಜಿ.ಜಿ.ಹೆಗಡೆ, ಜಿ.ಎಸ್.ಭಟ್ಟ, ಜಯಂತ ಕಾಯ್ಕಿಣಿ, ನಿರಂಜನ ವಾನಳ್ಳಿ, ರಾಜೀವ ಅಜ್ಜಿಬಳ, ವಿಷ್ಣು ನಾಯ್ಕ,ಶಾಂತಾರಾಮ ನಾಯಕ ಹಿಚಕಡ , ರಾಮಕೃಷ್ಣ ಗುಂದಿ ಸಮೃದ್ಧಗೊಳಿಸಿದ್ದಾರೆ. ಹೊಸ ತಲೆಮಾರಿನ ಶಿವಲೀಲಾ ಹುಣಸಗಿ ಯಲ್ಲಾಪುರ ಅನೇಕ ಕವಿಗಳೂ ಲೇಖಕರೂ ಭರವಸೆ ಮೂಡಿಸುತ್ತಿದ್ದಾರೆ ಈ ಜಿಲ್ಲೆಯ ಪತ್ರಿಕೆಗಳಲ್ಲಿ ಹವ್ಯಕ ಸುಬೋಧ (1885), ಕಾರವಾರ ಚಂದ್ರಿಕೆ (1885), ಮಕ್ಕಳ ಪತ್ರಿಕೆ ಹಿತೋಪದೇಶ (1888), ಸರಸ್ವತಿ (1900), ವಿನೋದಿನಿ (1904)- ಇವು ಮಾಸಪತ್ರಿಕೆಗಳು. 1919ರಲ್ಲಿ ಕುಮಟದಿಂದ ಕಾನಡಾ ಧುರೀಣ (1922), ನಂದಿನಿ (1925) ಮಾಸ ಪತ್ರಿಕೆ ಮೊದಲು ಗೋಕರ್ಣದಿಂದ ಪ್ರಕಟಿಸಲಾಗುತ್ತಿದ್ದು ಕೆಲಕಾಲ ನಿಂತು 1937 ರಿಂದ ಸಿರ್ಸಿಯಿಂದ ಪ್ರಕಟವಾಗತೊಡಗಿತು. ಶರಣ ಸಂದೇಶ (1931), ನವಚೇತನ (1941), ಸಾಧನ (1949) ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಮಲಯವಾಣಿ (1955) ವಾರ್ಷಿಕ ಪತ್ರಿಕೆ. 1956ರಲ್ಲಿ ಭಾಮಾ ಮಾಸ ಪತ್ರಿಕೆ ಸಿರ್ಸಿಯಿಂದ ಪ್ರಕಟವಾಗ ತೊಡಗಿತು. 1957ರಲ್ಲಿ ಸಿರ್ಸಿಯಿಂದ ಪ್ರಕಟವಾಗುತ್ತಿದ್ದ ನಗರವಾಣಿ ಅಲ್ಪಾಯುವಾಯಿತು. ಸಹಕಾರಿ ಸಮಾಜ (1979), ಯಕ್ಷಗಾನ (1959), ಗೋಕರ್ಣ ಗೋಷ್ಟಿ (1959), ಸ್ವತಂತ್ರವಾಣಿ (1960), ಮಧುವನ (1960), ಗ್ರಾಮಜೀವನ, ಸಮಾಜ (1965), ಸಂಘಟನೆ, ರಮಣ ಸಂದೇಶ, (1971), ಸಿರ್ಸಿ ಸಮಾಚಾರ, ಸಹಚರ, ಸಮನ್ವಯ (1975) ಇವಲ್ಲದೆ ಕಡಲಧ್ವನಿ (1983), ಆಚಾರ (1980), ಕರಾವಳಿ ಗ್ರಾಮ ವಿಕಾಸ (1987), ಗ್ರಾಮ ಭಾರತಿ ಅಭಯ (1965), ನುಡಿಜೇನು (1968), ಗಿರಿಘರ್ಜನೆ, ಯುಗವಾಣಿ (1964), ಸಮಾಜವಾಣಿ (1965), ಚುನಾವಣೆ, ಆಧ್ಯಾತ್ಮಿಕ ಪತ್ರಿಕೆ ಜೀವೋತ್ತಮ ಉಲ್ಲೇಖನೀಯ. ಮುನ್ನಡೆ (1988) ದಿನಪತ್ರಿಕೆಯಾಗಿ 2000ದಲ್ಲಿ ನಿಂತುಹೊಯಿತು. ಜಿಲ್ಲೆಯ ಮೊದಲ ದೈನಿಕ ಲೋಕಧ್ವನಿ (1983), ಜನಮಾಧ್ಯಮ (1988), ಧ್ಯೇಯನಿಷ್ಠ ಪತ್ರಕರ್ತ (1991), ಕರಾವಳಿಯ ಮುಂಜಾವು (1994) - ಇವು ಇಂದಿನ ಪ್ರಮುಖ ಪತ್ರಿಕೆಗಳು. ದೀರ್ಘಕಾಲ ನಡೆದ ಪತ್ರಿಕೆಗಳಲ್ಲಿ ಕಾನಡಾವೃತ್ತದ ಸ್ಥಾನ ಅದ್ವಿತೀಯ. ಇದು 1916ರಲ್ಲಿ ಪ್ರಾರಂಭವಾಗಿ ಈಗಲೂ ನಡೆಯುತ್ತಿದೆ. 1946ರಲ್ಲಿ ಆರಂಭವಾದ ನಾಗರಿಕ ಈಗಲೂ ಪ್ರಕಟವಾಗುತ್ತಿದೆ. 1960ರಲ್ಲಿ ಜನತಾ, 1955ರಲ್ಲಿ ದಿನಕರ ದೇಸಾಯಿ ಪ್ರಾರಂಭಿಸಿದ ಜನಸೇವಕ 1972ರ ವರೆಗೆ ನಡೆದು ಅನಂತರ ನಿಂತಿತು. ಶೃಂಗಾರ ಹೊನ್ನಾವರದಿಂದ ಪ್ರಕಟವಾಗುತ್ತಿತ್ತು. ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ಸಿರ್ಸಿ : ಈ ಜಾಗವು ಪ್ರಶಾ೦ತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳ ರಮ್ಯ ತಾಣವಾಗಿದೆ. ಮಾರಿಕಾಂಬಾ ದೇವಾಲಯ :ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಸಹ ಇದೆ.ಶ್ರಿ ಮಾರಿಕಾಂಬೆಯ ಜಾತ್ರೆ ಸಿರ್ಸಿ ಮಾರಿಕಾಂಬಾ ಜಾತ್ರೆ ಎರಡು ವರ್ಷಕ್ಕೊಮ್ಮೆ ಎ೦ಟು ದಿನಗಳ ಕಾಲ ನಡೆಯುತ್ತದೆ. ಈ ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಹೊನ್ನಾವರ ಮತ್ತು ಸಿರ್ಸಿಗೆ ಹೊಗುವಾಗ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಪ್ರೇಕ್ಶಣಿಯವಾಗಿದೆ. ಅಲ್ಲಿನ ಸೊಬಗು ಕ೦ದಕದಲ್ಲಿ ಹರಿಯುತ್ತಿರುವ ಶರಾವತಿ ನದಿ,ದಾರಿಯಲ್ಲಿ ಸಿಗುವ ಕಾಡುಪ್ರಾಣಿಗಳು ಅಲ್ಲಲ್ಲಿ ಹರಿಯುವ ಝರಿಗಳು ಮತ್ತು ತ೦ಪನೆಯ ವಾತಾವರಣದಲ್ಲಿ ಹೊಗುತ್ತಿದ್ದರೆ ಸಮಯ ಕಳೆದದ್ದೆ ಗೊತ್ತಾಗುವದಿಲ್ಲ. ಇ೦ತಹ ಒಂದು ಸು೦ದರವಾದ ದ್ರಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ. ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಇಲ್ಲಿ ಬೆಳೆಯುತ್ತಾರೆ. ಸಿರ್ಸಿಯ ಮಾರಿಕಾಂಬಾ ದೇಗುಲವು ಬಹಳ ಪ್ರಸಿದ್ಧಿಯಾಗಿದೆ. ಸಹಸ್ರಲಿಂಗ ಸಿರ್ಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ. ಸೊಂದಾ ಸಿರ್ಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ. ಉಂಚಳ್ಳಿ ಜಲಪಾತ ೧೧೬ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರ್ಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಜನಸಂಖ್ಯೆ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ ೭೯ ಶೇಕಡಾ ಜನರು ವಿದ್ಯಾವಂತರು. ಇವರು ಕನ್ನಡ (ಹವ್ಯಕ ಕನ್ನಡ), ಕೊಂಕಣಿ, ಉರ್ದು, ಮರಾಠಿ ಮಾತಾಡುತ್ತಾರೆ. ಇಲ್ಲಿಯ ಜನ ಬಹಳ ಸೌಹಾರ್ದಶೀಲರು.ಇಲ್ಲಿಯ ಜನರ ಮುಖ್ಯ ವ್ಯಾವಹಾರಿಕ ಭಾಷೇ ಕೊ೦ಕಣಿ ಮತ್ತು ಕನ್ನಡ. ಅಪ್ಸರಕೊಂಡ : ಆಪ್ಸರ ಕೊಂಡ ಇದು ಹೊನ್ನಾವರ ತಾಲೂಕಿನ ಕಾಸರಕೋಡದಲ್ಲಿದೆ. ಹೊನ್ನಾವರದಿಂದ ಸುಮಾರು ೭ ಕೀ.ಮೀ. ದೂರದಲ್ಲಿರುವ ಈ ಪ್ರದೇಶ ಪ್ರವಾಸಿಗರಿಗರನ್ನು ಆಕರ್ಷಿಸುತ್ತದೆ. ಅರಬ್ಬಿ ಸಮುದ್ರದ ತಟದಿಂದ ೫೦೦ ಮೀ ಪೊರ್ವಕ್ಕಿರುವ ಈ ಪ್ರದೇಶದಲ್ಲಿ ಸುಮಾರು ೫೦ ಅಡಿಯಿಂದ ಧುಮುಕುವ ಸಣ್ಣದಾದ ಮನಮೋಹಕ ಜಲಪಾತ ಪ್ರವಾಸಿಗರಿಗೆ ಮುದ ನೀಡುತ್ತದೆ. ಪುರಾತನ ಕಾಲದಲ್ಲಿ ಇಲ್ಲಿ ಅಪ್ಸರೆಯರು ಸ್ನಾನ ಮಾಡಿರುವರೆಂಬ ಪ್ರತೀತಿ. ಅದರಿಂದ ಈ ಪ್ರದೇಶಕ್ಕೆ ಅಪ್ಸರಕೊಂಡ ಎಂದು ಹೆಸರು ಬಂದಿದೆ. ಇಲ್ಲಿನ ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವದೆ ಒಂದು ವಿಶೇಷ ಅನುಭವ. ಬನವಾಸಿ ಮಧುಕೇಶ್ವರ ದೇವಾಲಯ : ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಸಿರ್ಸಿ ತಾಲೂಕಿನಲ್ಲಿದೆ. ಬನವಾಸಿಯ ಅಕ್ಷಾಂಶ : ೧೪೦ ೩೨’ ೧೦’’ (ಉ) ಹಾಗು ರೇಖಾಂಶ : ೭೫೦ ೦೦’ ೫೮”(ಪಶ್ಚಿಮ) . ಸಮುದ್ರ ಮಟ್ಟದಿಂದ ಎತ್ತರ : ೫೭೦.೮೯ ಮೀಟರುಗಳು. ಬನವಾಸಿಯು ಸಿರ್ಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ. ಪೌರಾಣಿಕಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣುವು ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು. ಧರ್ಮರಾಜನ ಅಶ್ವಮೇಧಯಾಗದ ಸಂದರ್ಭದಲ್ಲಿ ಸಹದೇವನು ದಕ್ಷಿಣ ಭಾರತದ ದಿಗ್ವಿಜಯ ಸಮಯದಲ್ಲಿ ವನವಾಸಿಕಾ ಎಂದರೆ ಬನವಾಸಿ ನಗರವನ್ನು ಗೆದ್ದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ. ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ. ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ. ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ. ಪ್ರೇಕ್ಷಣೀಯ ಮಧುಕೇಶ್ವರ ದೇವಾಲಯಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ. ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ವರ್ಷದ ಕಾಲಕ್ಕೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ. ಕದಂಬೋತ್ಸವಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಸಿರ್ಸಿ ವಿಭಾಗ, ಲೋಕೋಪಯೋಗಿ ಇಲಾಖೆ,ಸಿರ್ಸಿ ಇವರ ಮುಖಾಂತರ ವಸತಿ ಕಾಯ್ದಿರಿಸಬಹುದು. ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ. ಮಾಗೋಡು ಜಲಪಾತ : ಮಾಗೋಡು ಜಲಪಾತ ಯಲ್ಲಾಪುರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ. ಬೇಡ್ತಿ ನದಿಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ. ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.ಈ ಮಾರ್ಗವಾಗಿ ಬಂದ್ರೆ,೬೦ ಎಕರೆ ವಿಸ್ತೀರ್ಣದ ಅದ್ಭುತ ಕವಡೆಕೆರೆ,ಪ್ರಸಿದ್ಡ ಚಂದಗುಳಿ ವಿನಾಯಕ ದೇವಸ್ತಾನ,ಬೇಡ್ತಿ ಯೊಜನೆಯ ನೋವನ್ನು ಬಿಂಬಿಸುವ ರೆಡ್ಡಿ ಕೆರೆ,ಕುಳಿಮಾಗೋಡು ಜಲಪಾತ,ಜೇನುಕಲ್ಲು ಗುಡ್ಡ.... ಹೀಗೆ ಹತ್ತಾರು ಜಾಗಗಳಿಗೂ ಭೇಟಿ ನೀಡಬಹುದು. ಉಂಚಳ್ಳಿ ಜಲಪಾತ : ಉಂಚಳ್ಳಿ ಜಲಪಾತ ಅಥವಾ ಲುಷಿಂಗ್ಟನ್ ಜಲಪಾತ ಅಘನನಾಶಿನಿ ನದಿಯಿಂದ ಸೃಷ್ಟಿಯಾಗುವ ಜಲಪಾತ. ಇದರ ಎತ್ತರ ಸುಮಾರು ೧೧೬ ಮೀಟರ್. ಈ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯಿಂದ ೩೦ ಕಿಮಿ ದೂರದಲ್ಲಿದೆ. ೧೮೪೫ರಲ್ಲಿ ಈ ಜಲಪಾತವನ್ನು ಪತ್ತೆಹಚ್ಚಿದ ಬ್ರಿಟಿಷ್ ಅಧಿಕಾರಿ ಜೆ.ಡಿ. ಲುಷಿಂಗ್ಟನ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಜಲಪಾತವು ನೀರು ಬೀಳುವಾಗ ಮಾಡುವ ಶಬ್ದದಿಂದ, ಸ್ಥಳೀಯರು ಇದನ್ನು ಕೆಪ್ಪ ಜೋಗ ಎಂದೂ ಕೂಡ ಕರೆಯುತ್ತಾರೆ. ಯಾಣ : ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಸಿರ್ಸಿ ಇಂದ ೪೫ ಕಿ.ಮಿ. ದೂರದಲ್ಲಿದೆ." ರೊಕ್ಕಿದ್ದರೇ ಗೋಕರ್ಣ ಸೊಕ್ಕಿದ್ದರೆ ಯಾಣ” ಎಂಬ ಮಾತು ಚಾಲ್ತಿಯಲ್ಲಿದೆ.ಏಕೆಂದರೆ ಯಾಣಕ್ಕೆ ಯಾತ್ರೆ ಕೈಕೊಳ್ಳುವದು ಹಿಂದೆ ಅಷ್ಟೊಂದು ಸಾಹಸದ ಮಾತೇ ಆಗಿತ್ತು. ಇಂದು ಯಾಣದ ಹತ್ತಿರದವರೆಗೂ ಬಸ್ಸಿನ ರಸ್ತೆಯಾಗಿದೆ. ಕೇವಲ ಒಂದು ಕಿಲೋಮೀಟರ ದೂರವನ್ನಷ್ಟೇ ನಡೆಯಬೇಕಾಗುವದು. ಕುಮಟೆಯಿಂದ ಹರೀಟಾ ಬಳಿಯ ಮಾರ್ಗದಿಂದ ಅಂಕೋಲೆಯ ಬದಿಯಿಂದ ಅಚವೆ ಮಾರ್ಗವಾಗಿ ಸಿರ್ಸಿಯಿಂದ ಹೆಗಡೆಕಟ್ಟೆ ಮಾರ್ಗವಾಗಿ ಕಾಡಿನಲ್ಲಿ ಹಾದು ಯಾಣವನ್ನು ತಲುಪಬೇಕು. ವಡ್ಡಿ, ಮತ್ತಿ, ದೇವಿಮನೆ ಘಟ್ಟಗಳು ಸುತ್ತುವರಿಯಲ್ಪಟ್ಟದ್ದರಿಂದ ಯಾವ ದಾರಿಯಲ್ಲಿ ಬಂದರೂ ದುರ್ಗಮ ಬೆಟ್ಟದ ದಾರಿ ತಪ್ಪಿದ್ದಲ್ಲ. thumb|right|ಯಾಣ ಯಾಣದ ಶಿಖರ (ದೇವಾಲಯ) ವೆಂದು ಕರೆಯಲ್ಪಡುವ ಹಿರಿಬಂಡೆ ೧೨೦ ಮೀಟರ ಎತ್ತರವಾದ ಸುಮಾರು ಅಷ್ಟೇ ಅಗಲವಾದ ನೆಲಮುಗಿಲನ್ನು ಜೋಡಿಸುವ ಕರೆ ಪರದೆಯಂತೆ ಬೃಹದಾಕಾರದ ಭಯಂಕರವಾದ ಶಿಲಾ ರೂಪವಾಗಿದೆ. ಇದನ್ನು ಮೊದಲೊಮ್ಮೆ ಕಂಡಾಗ ಎಂಥವನಾದರು ನಿಬ್ಬೆರಗಾಗಿ ಪ್ರಕೃತಿ ಮಹಾಕೃತಿಗೆ ತಲೆ ಮಣಿಯಲೇ ಬೇಕು. ಈ ಬಂಡೆಯ ಮಧ್ಯದಲ್ಲಿ ಸೀಳು ಇದ್ದು ನೆತ್ತಿಯ ಮೇಲೆ ಜಲ ಸಂಚಯವಿದೆ! ಈ ಭೀಮ ಬಂಡೆಯ ಸೀಳಿನ ಗುಹೆಯಲ್ಲಿ ತಾನಾಗಿ ಮೂಡಿನಿಂತ ಭೈರವೇಶ್ವಲಿಂಗ ಎರಡು ಮೀಟರ ಎತ್ತರವಾಗಿದ್ದು ಈ ಲಿಂಗದ ಮೇಲೆ ಸದಾ ಅಂಗುಲ ಗಾತ್ರದ ನೀರು ಮೇಲಿನಿಂದ ಒಸರುತ್ತಿರುತ್ತದೆ! ಸ್ಕಂದಪುರಾಣದಲ್ಲಿ ಯಾಣದ ಕತೆ ನಿರೂಪಿತವಾಗಿದೆ. ಭಸ್ಮಾಸುರನು ಈಶ್ವರನಿಂದ ಉರಿಹಸ್ತದ ವರ ಪಡೆದು ಕೊನೆಗೆ ಈಶ್ವರನನ್ನೇ ಸುಡುವದಾಗಿ ಅಟ್ಟಿಸಿಕೊಂಡು ನಡೆದಾಗ ಭೈರವೇಶ್ವರನ ರಕ್ಷಣೆಗಾಗಿ ಮಹಾವಿಷ್ಣುವು ಮೋಹಿನಿಯಾಗಿ ಬಂದು ಭಸ್ಮಾಸುರನನ್ನು ಒಲಿಸಿ ಕುಣಿಸಿ ಅವನ ಹಸ್ತವನ್ನೆ ಅವನ ತಲೆಮೇಲಿರಿಸುವಂತೆ ಮಾಡಿ ಭಸ್ಮಾಸುರನನ್ನು ಭಸ್ಮ ಮಾಡಿದ ಸ್ಥಳವಿದೆಂದು ಪ್ರತೀತಿ. ಸುತ್ತಲಿನ ಅರಣ್ಯ ಪ್ರದೇಶವೆಲ್ಲ ಕಪ್ಪಾದ ಭಸ್ಮಮಯ ಮಣ್ಣಿನಿಂದ ತುಂಬಿರುವದರಿಂದ ಈ ಹೇಳಿಕೆಗೊಂದು ಪುಷ್ಠಿಯೊದಗಿದೆ. ಯಾಣದ ಬಂಡೆಯ ಮೇಲೆಲ್ಲ ಸಾವಿರಾರು ಹಿರಿಜೇನು ಹುಟ್ಟುಗಳು ಕಂಗೊಳಿಸುತ್ತವೆ. ಈ ಹೆಬ್ಬಂಡೆಯಿಂದ ಇಳಿದು ಬಂದ ಪ್ರವಾಹವೆ ಮುಂದೆ ಚಂಡಿಕಾ ನದಿಯಾಗಿ ಅಘನಾಶಿನಿ ನದಿಯನ್ನು ಸೇರುತ್ತದೆ. ಈ ಬಂಡೆಯಿದ್ದ ಬೆಟ್ಟದ ಕೆಳಗಡೆ ನದಿಯಲ್ಲಿ ಸ್ನಾನಮಾಡಿ ಮೇಲೇರಿ ಹೋಗುವಾಗ ಇನ್ನೊಂದು ಕಿರಿಗಾತ್ರದ “ಹೊಲತಿ ಶಿಖರ” (ಮೋಹಿನಿ ಶಿಖರ) ಕಂಗೊಳಿಸುತ್ತದೆ. ಇಂಥ ಹಲವಾರು ಮಹಾಮಹಾ ಬಂಡೆಗಳು ಯಾಣದ ಪರಿಸರದಲ್ಲಿವೆ. ಪ್ರಕೃತಿಯ ಭವ್ಯತೆಯ ದಿವ್ಯದರ್ಶನದಿಂದ ಪುನೀತನಾದ ಪ್ರವಾಸಿಗೆ ಪ್ರವಾಸದ ಪ್ರಯಾಸದ ಅರಿವಾಗುವದಿಲ್ಲ. ಪೂರ್ವಕಾಲದಲ್ಲಿ ಯಾಣದ ಪ್ರದೇಶ ಸಮೃದ್ಧ ಪ್ರದೇಶವಾಗಿದ್ದು “ಯಾಣದ ಎಪ್ಪತ್ತು ಹಳ್ಳಿ” ತುಂಬಾ ಪ್ರಖ್ಯಾತವಾಗಿತ್ತು. ಶಿವರಾತ್ರಿಯ ದಿನ ಇಲ್ಲಿ ಪೂಜೆ ಸಲ್ಲಿಸಿ ದಂಡಿತೀರ್ಥದ ನೀರನ್ನು ತಂದು ಗೋಕರ್ಣದ ಮಹಾಬಲೇಶ್ವರನಿಗೆ ಅರ್ಪಿಸಿದರೆ ಮಹಾಪುಣ್ಯವಂತೆ. ಕೌಶಿಕ ರಾಮಾಯಣ ಬರೆದ ಬತ್ತಲೇಶ್ವರ ಕವಿ ಇಲ್ಲಿ ವಾಸಿಸಿದ್ದನಂತೆ.ಪ್ರವಾಸದ ಕಾಲದಲ್ಲಿ ಎತ್ತರ ಗಿಡಗಳ ದಟ್ಟ ವಿಸ್ತಾರ ಕಾಡು ತನುಮನದ ಆಯಾಸವನ್ನೆಲ್ಲ ಮರೆಸುತ್ತದೆ."ನಮನ ಮುರುಡೇಶ್ವರ ಸಮುದ್ರತೀರ, ದೇವಾಲಯ : ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಗಿದ್ದು, ಐತಿಹಾಸಿಕವಗಿ ಪ್ರಖ್ಯಾತಿಯನ್ನು ಹೊಂದಿದೆ. ಅರೇಬಿಯನ್ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರಿವಾಸಿಯಾಗಿದೆ. ಮುರುಡೆಶ್ವರ ಕೆವಲ ಧಾಮಿಱಕ ಕ್ಷೇತ್ರ ಮಾತ್ರ ಻ಲ್ಲ. ಜಗತ್ತಿನ ೊಂದು ಪ್ರಖ್ಯಾತ ಪ್ರವಾಸಿ ತಾಣ ಮುರುಡೇಶ್ವರ ಕನಾಱಟಕದ ಕರಾವಳಿ ಜಿಲ್ಲೆಯಾದ ುತ್ತರ ಕನ್ನಡದ ಭಟ್ಕಳ ತಾಲೂಕಿನ ೊಂದು ಪುಣ್ಯ ಕ್ಷೇತ್ರ. ಹಿಂದೆ ಈ ಕ್ಷೇತ್ರ ಹೆಚ್ಚು ಜನಪ್ರೀಯ ವಾಗಿರಲಿಲ್ಲಾ ಆದರೆ ಇದನ್ನು ಜಾಗತಿಕ ಮಟ್ಟದಲ್ಇ ನಿಲ್ಲಿಸಿದ ಶ್ರೇಯಸ್ಸು ಸನ್ಮಾನ್ಯರಾದ ಶ್ರೀ ಆರ.ಎನ್.ಶೆಟ್ಟಿಯವರಿಗೆ ಸಲ್ಲುತ್ತದೆ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು. ಜೊತೆಗೆ ೆಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಇದೆ. ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜಗೋಪುರವಿದೆ. ಇದು ಧಾಮಿಱಕ ಾಸಕ್ತರನ್ನು ಮಾತ್ರ ತನ್ನತ್ತ ಸೆಲೆಯದೆ ವಿಹಾರಿಗಳನ್ನು ಆಕಷಿ್ಸುತ್ತಿದೆ. ಇತ್ತಿಚೆಗೆ ಇಲ್ಲಿ ರಾಮ,ಲಕ್ಷ್ಮಣ ಮತ್ತು ಸೀತಾ ಪ್ರತಿಮೆ ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿ ಸಮುದ್ದರದಲ್ಲಿ ಜಲಕೀಡೆ ಆಡುವುದೆ ಒಂದು ಅನನ್ಯ ಻ನುಭವ. ಪುರಾಣದ ಕತೆ : ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಅಂತೆಯೆ ಇಂದಿಗೂ ಅಲ್ಲ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರಮನೆ, ವೀರಗಲ್ಲುಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಕರನ್ನು ಸ್ವಾಗತಿಸುವವು. ಸಮುದ್ರದಲ್ಲಿ ಒಳಸೇರಿದ ಕಂದುಗಿರಿ ಎಂಬ ಗುಡ್ಡದ ಮೇಲೆ ಮುರುಡೇಶ್ವರನ ದೇವಾಲಯವನ್ನು ಹೊಸದಾಗಿ ದಾಕ್ಷಿಣಾತ್ಯ ಶಿಲ್ಪದಲ್ಲಿ ನಿರ್ಮಿಸಲಾಗಿದೆ. ಸುತ್ತಲೂ ವಿಸ್ತಾರವಾದ ಚಂದ್ರಶಾಲೆಯಿದ್ದು ಗಣಪತಿ, ಸುಬ್ರಹ್ಮಣ್ಯ, ಹನುಮಂತ, ಪಾರ್ವತಿಯರ ಪೀಠಗಳಿವೆ. ಮುರ್ಡೇಶ್ವರ ದೇವಾಲಯದ ಗೋಪುರ ಹಾಗು ಸುತ್ತಲಿನ ಕಟ್ಟಡಗಳ ಶಿಲ್ಪಗಳು ಉತ್ತಮ ಮಟ್ಟದ್ದಾಗಿದ್ದು ಆಕರ್ಷಕವಾಗಿದೆ. ಸುತ್ತಲಿನ ಸಮುದ್ರ ನಾಡಿನ ಪ್ರವಾಸಿಗಳನ್ನು ತನ್ನಡೆಗೆ ಸೆಳೆಯುತ್ತದೆ. ನೇತ್ರಾಣಿ ದ್ವೀಪ ಹತ್ತಿರವೆ ಇದೆ. ಇಲ್ಲಿಯ ಕಡಲ ಸಂಜೆಯ ಸೊಗಸನ್ನು ಅನುಭವಿಸಿಯೇ ತಿಳಿಯಬೇಕು. ಪ್ರವಾಸಿಗಳಿಗಾಗಿ ಸಮುದ್ರಮಧ್ಯದಲ್ಲಿ ಕಟ್ಟಲಾದ ನವೀನ ಉಪಹಾರ ಗೃಹ, ಗುಡ್ಡದ ಮೇಲಿರುವ ವಸತಿಗೃಹಗಳು, ರಮ್ಯವಾಗಿದೆ. ಪ್ರತಿನಿತ್ಯ ಉಚಿತ ಅನ್ನದಾನಸೇವೆ ದೇವಾಲಯ ನಡೆಸುತ್ತಿದೆ. ತಿರುಪತಿಯನ್ನು ಬಿಟ್ಟರೆ ಇನ್ನೆಲ್ಲೂ ಈ ವರೆಗೆ ಇಲ್ಲದ ೩೫ ಅಡಿ ಎತ್ತರದ ಚಿನ್ನದ ವರ್ಣದ ಭವ್ಯ ಧ್ವಜಸ್ಥಂಬ ಈ ಮಾದರಿಯದ್ದು ಕರ್ನಾಟಕದಲ್ಲಿಯೆ ಅತಿ ಎತ್ತರವಾಗಿದ್ದು ಮನಸೆಳೆಯುತ್ತದೆ. ಇಂದು ರಾಷ್ಟ್ರಖ್ಯಾತಿಯ ಸ್ಥಳವಾಗಿ ಪರಿಗಣಿಸಲ್ಪಟ್ಟ ಮುರ್ಡೇಶ್ವರದ ನಿಸರ್ಗದ ಹಾಗು ಕಲೆಯ ವೈಭವವನ್ನು ಕಂಡೇ ಆನಂದಿಸಬೇಕು,."ನಮನ" ಗೋಕರ್ಣ ಸಮುದ್ರತೀರ, ದೇವಾಲಯ : ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ; ಪರಶುರಾಮ ಭೂಮಿ ಎಂಬ ಐತಿಹ್ಯಗಳನ್ನು ಹೊಂದಿರುವ ಈ ಪ್ರದೇಶ ವಾಯವ್ಯ ದಿಕ್ಕಿನಲ್ಲಿದೆ. ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. ಮಹಾಗಣಪತಿ ದೇವಾಲಯ, ಶಿವ ದೇವಾಲಯಗಳು ಇದ್ದು ಗೋಕರ್ಣ ಒಂದು ಪವಿತ್ರ ಕ್ಷೇತ್ರವಾಗಿದೆ. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರಗಳಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ.ಗೋಕರ್ಣದಲ್ಲಿ ೩ ಸಮುದ್ರ ತೀರಗಳಿದ್ದು ನೋಡಲು ತುಂಬಾ ರಮಣೀಯವಾಗಿದೆ. ಅರ್ಧಚಂದ್ರಾಕಾರದ ಸಮುದ್ರ ತೀರ ಸಮುದ್ರ ತೀರ ಆಕಾರದ ಸಮುದ್ರ ತೀರ ಕಾರವಾರ ಸಮುದ್ರತೀರ : ಕಾರವಾರ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಮತ್ತು ಜಿಲ್ಲಾ ಕೇಂದ್ರ. ಕಾರವಾರ, ಕರ್ನಾಟಕ ಹಾಗೂ ಗೋವೆಯ ಗಡಿಯಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿದ್ದು, ಅರಬ್ಬೀ ಸಮುದ್ರದಂಚಿನಲ್ಲಿರುವ ನಗರವಾಗಿದೆ. ಕಾರವಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೫೨೦ ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಷ್ಟ್ರಕವಿ ಶ್ರೀ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು."ಕಡಲ ತೀರದ ಕಾಶ್ಮಿರ" ಕಾರವಾರ.ಅರಬ್ಬೀ ಸಮುದ್ರದ ಬಂದರಾಗಿ ಅಭಿವೃದ್ಧಿಪಡಿಸಲಾದ ಕಾರವಾರ ಕರ್ನಾಟಕದ ಎರಡನೆ ಪ್ರಮುಕ ಬಂದರು.ದೇಶದ ಅತೀ ದೊಡ್ಡ ನೌಕಾನೆಲೆ ಕಾರವಾರ.ಕರ್ನಾಟಕದ ಎಕೈಕ ಅಣು ವಿದ್ದುತ ಸ್ತಾವರ ಕೈಗಾ ಕಾರವಾರದ ಸನಿಹದಲ್ಲಿದೆ. ಕಾರವಾರವು ಪ್ರವಾಸಿಗಳಿಗೆ ಒಂದು ಸು೦ದರ ತಾಣ. ದಾಂಡೇಲಿ ಅಭಯಾರಣ್ಯ : ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ಪಟ್ಟಣ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ಉತ್ಪನ್ನಗಳು, ಮೆದು ಮರ ಕಾರ್ಖಾನೆಗಳನ್ನು ಸ್ಥಾಪಿಸಿದರು. ಜನ ಜೀವನ ಮತ್ತು ಭಾಷೆದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ,ಕೊಂಕಣಿ,ಹಿಂದಿ ಭಾಷೆಗಳು ಪ್ರಚಲಿತದಲ್ಲಿವೆ. ಸಂಪರ್ಕ- ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ. ಪ್ರವಾಸಿ ತಾಣಗಳು- ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ, ಉಳವಿ ಸಿಂಥೇರಿ ರಾಕ್ಸ್ ಅಣಶಿ ಅರಣ್ಯಧಾಮ ಸೂಪಾ ಅಣೆಕಟ್ಟು ವಸತಿ - ಈ ಊರಿನಲ್ಲಿ ಹಲವು ಖಾಸಗಿ ಹೋಟೆಲುಗಳಲ್ಲಿ ವಸತಿ ವ್ಯವಸ್ಥೆ ಲಭ್ಯವಿದೆ. ಇಡಗುಂಜಿ ಮಹಾ ಗಣಪತಿ ದೇವಾಲಯ : ಇಡಗುಂಜಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಹಿಂದೂ ಪುಣ್ಯಕ್ಷೇತ್ರ. ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬರುವ ಇಲ್ಲಿನ ಗಣೇಶ ದೇವಾಲಯ ಬಹು ಪ್ರಸಿದ್ಧಿ. ಇದು ಹೊನ್ನಾವರದಿಂದ ೧೪ ಕಿ.ಮಿ ದೂರದಲ್ಲಿದ್ದು, ನವಿಲುಗೊಣದಿಂದ ೨೮ ಕಿ.ಮಿ ದೂರದಲ್ಲಿದೆ. ಸೋಂದಾ ಶ್ರೀ ವಾದಿರಾಜ ಬೃಂದಾವನ : ಸೋಂದಾ ಕ್ಷೇತ್ರವು ಕರ್ನಾಟಕದಲ್ಲಿರುವ ಪವಿತ್ರ ಸ್ಥಳಗಳಲ್ಲಿ ಒಂದು. ವಿವಿಧ ಪ್ರದೇಶದ ಜನರಿಂದ ಸೋಂದಾ, ಸೋದೆ, ಸ್ವಾದಿ ಮುಂತಾದ ಹೆಸರಿನಿಂದ ಕರೆಯಲ್ಪಡುವ ಈ ಸ್ಥಳವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿಯ ಸಮೀಪವಿದೆ. ಇದು ಬೆಂಗಳೂರಿನಿಂದ 450 ಕಿ.ಮೀ. ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಪಟ್ಟಣದಿ೦ದ 25 ಕಿಲೋ ಮೀಟರ್ ದೂರದಲ್ಲಿದೆ. ಸಿರ್ಸಿಯಿಂದ ತಲುಪಲು ಸಾಕಷ್ಟು ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ವಾಹನಗಳ ಸೌಕರ್ಯ ಇದೆ. ಇಲ್ಲಿ ಮಾಧ್ವ ಯತಿಗಳಲ್ಲೊಬ್ಬರಾದ ಮತ್ತು ದಾಸ ಸಾಹಿತ್ಯದಲ್ಲಿಯೂ ಕೊಡುಗೆ ಸಲ್ಲಿಸಿರುವ ವಾದಿರಾಜರ ಬೃಂದಾವನವಿದೆ. ಇಲ್ಲಿ ಶ್ರೀ ಜೈನಮಠ ಮತ್ತು ಶ್ರೀ ಸ್ವಣ೯ವಲ್ಲಿಮಠಗಳೂ ಇವೆ. ಇದು ಪ್ರಕೃತಿ ಸೌಂದರ್ಯ ವೀಕ್ಷಣಿಗೂ ಸೂಕ್ತ ಸ್ಥಳವಾಗಿದೆ. ಈ ಕ್ಷೇತ್ರದಲ್ಲಿ ವಾದಿರಾಜರ ಬೃಂದಾವನವಲ್ಲದೆ, ತ್ರಿವಿಕ್ರಮ ದೇವರ ಮತ್ತು ಭೂತರಾಜರ ಗುಡಿಗಳಿವೆ. ತ್ರಿವಿಕ್ರಮ ದೇವರ ಗುಡಿಯಲ್ಲಿ ವಾದಿರಾಜರು ಪೂಜೆ ಸಲ್ಲಿಸುತ್ತಿದ್ದರೆಂದು ಹೇಳಲಾಗುತ್ತದೆ. ವಾದಿರಾಜರಿಗೆ ಸಂಬಂಧಿಸಿದ ಕೆಲವು ಕೃತಿ, ಹಾಡುಗಳಲ್ಲಿ ಈಬಗ್ಗೆ ಉಲ್ಲೇಖಿಸಲಾಗಿದೆ. ಭೂತರಾಜರ ಗುಡಿಇಲ್ಲಿರುವ ಭೂತರಾಜರ ಗುಡಿಗೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ತನ್ನ ಪ್ರಶ್ನೆಗಳ ಮೂಲಕ ವಾದಿರಾಜರನ್ನು ಸೋಲಿಸಿ, ಅವರಿಗೆ ಉಪದ್ರ ಕೊಡಬೇಕೆಂದು ಬಂದ ಭೂತಕ್ಕೆ ತಕ್ಕ ಉತ್ತರ ಕೊಟ್ಟು ವಾದಿರಾಜರು ಅದನ್ನು ಸೋಲಿಸಿದರೆಂಬ ಪ್ರತೀತಿ ಇದೆ. ಆ ಕಾರಣದಿಂದ ಭೂತ ವಾದಿರಾಜರ ಸೇವಕನಾಗಿ, ಈ ಕ್ಷೇತ್ರದಲ್ಲಿ ನೆಲೆಸಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಈಗಲೂ ಮಾನಸಿಕ ರೋಗಗಳಿಂದ ನರಳುತ್ತಿರುವ( ದೆವ್ವ ಹಿಡಿದವರು ಎಂದು ಹೇಳಲಾಗುವವರು) ಜನರನ್ನು ಈ ಸ್ಥಳಕ್ಕೆ ಕರೆತರಲಾಗುತ್ತದೆ. ಅವರು ಭೂತರಾಜರಿಗೆ ಹರಕೆ,ಸೇವೆಗಳನ್ನು ಸಲ್ಲಿಸುವುದರಿಂದ ಅವರ ಮನೋವಿಕಾರಗಳು ದೂರವಾಗುತ್ತದೆ ಎಂದು ಜನರ ನಂಬಿಕೆಯಾಗಿದೆ. ವಾದಿರಾಜರ ಬೃಂದಾವನದ ಸಮೀಪದಲ್ಲಿ ಧವಳ ಗಂಗಾ ಎಂಬ ಸರೋವರವಿದೆ. ಈ ಕೊಳದ ಒಂದು ಮೂಲೆಯನ್ನು ಭೂತರಾಜರ ಸ್ಥಳ ಎಂದು ಕರೆಯಲಾಗುತ್ತದೆ. ಆ ಸ್ಥಳವನ್ನು ಜನರು ಉಪಯೋಗಿಸುವುದಿಲ್ಲ. ವಾದಿರಾಜರು ಧವಳ ಗಂಗೆಯ ಗಂಗಾಧರ ಮಹಾಲಿಂಗ ಎಂದು ಶಿವನನ್ನು ಸ್ತುತಿಸಿರುವ ಕೀರ್ತನೆಯು ಇದೇ ಸರೋವರದ ಕುರಿತಾಗಿದೆ. ತಪೋವನದಟ್ಟ ಕಾಡಿನ ನಡುವೆ ಇರುವ ಒಂದು ಪ್ರದೇಶದಲ್ಲಿ ವಾದಿರಾಜರು ತಪಸ್ಸು ಮಾಡುತ್ತಿದ್ದರೆಂದು ಹೇಳಲಾಗುತ್ತದೆ. ಶಾಲ್ಮಲಾ ನದಿ ಇಲ್ಲಿ ಸಣ್ಣದಾಗಿ ಹರಿಯತ್ತದೆ. ನದಿ ತೀರದ ಬಂಡೆಯೊಂದರೆಲ್ಲಿ ವಾದಿರಾಜರ ಇಷ್ಟ ದೈವವಾದ ಹಯಗ್ರೀವ ದೇವರ ಚಿತ್ರವನ್ನು ಕಾಣಬಹುದಾಗಿದೆ. ಹತ್ತಿರದ ಪ್ರೇಕ್ಷಣೀಯ ಸ್ಥಳಗಳು ಸಿರ್ಸಿ ಮಾರಿಕಾಂಬಾ ದೇವಸ್ಥಾನ, ಸಹಸ್ರಲಿಂಗ ಮತ್ತು ಯಾಣ ಇಲ್ಲಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳು. ಗೇರಸೊಪ್ಪಾ ಚರ್ತುಮುಖ ಬಸದಿ, ಶರಾವತಿ ಕಣಿವೆ : ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುವ ಶರಾವತಿ ಹರಿಯುವ ಉದ್ದ ಸುಮಾರು ೧೨೦ ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಶರಾವತಿ ಕಣಿವೆ ನೋಡಲು ಬಹು ಸುಂದರ. ಜೋಗದಲ್ಲಿ ಶರಾವತಿ ೯೦೦ ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ಣಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು ಮುಂಡಗೋಡ ಟಿಬೇಟಿಯನ್ ದೇವಾಲಯಗಳು : ಮುಂಡಗೋಡು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ಸಿರ್ಸಿಯಿಂದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ. ಪ್ರವಾಸಿ ತಾಣಗಳು - ಟಿಬೆಟಿಯನ್ ವಸಾಹತು ಬಚನಾಕಿ ಅಣೆಕಟ್ಟು ಅತ್ತಿವೇರಿ ಪಕ್ಷಿಧಾಮ ಸಿರ್ಸಿ ಸಹಸ್ರಲಿ೦ಗ : ಇದು ಸಿರ್ಸಿ ತಾಲ್ಲೂಕಿನಲ್ಲಿರುವ ಪ್ರೇಕ್ಷಣಿಯ ಸ್ಟಳವಾಗಿದೆ. ಶಾಲ್ಮಲಾ ನದಿಯಲ್ಲಿ ಕಂಡುಬರುವ ಲಿಂಗಗಳು. ಸಹಸ್ರ ಎಂದರೆ ಸಂಸ್ಸ್ಕತದಲ್ಲಿ ಸಾವಿರ ಎಂದು ಅರ್ಥ. ಸಾವಿರ ಲಿಂಗಗಳು ಕಂದುಬರುತ್ತದೆ. ಶಿವಗಂಗಾ ಪಾಲ್ಸ್ , ಜಡ್ಡಿಗದ್ದೆ, ಸಿರ್ಸಿ : ಸಿರ್ಸಿಯಿಂದ ೪೫ ಕಿ.ಮಿ. ದೂರದಲ್ಲಿದೆ. ಜಲಪಾತದ ಸುತ್ತಲೂ ದಟ್ಟವಾದ ಅರಣ್ಯ ಕಂಡುಬರುತ್ತದೆ. ಸಹ್ಯಾದ್ರಿ ಪರ್ವತದಲ್ಲಿ ಕಾಣುವ ಈ ಜಲಪಾತವು ಸಿರ್ಸಿ, ಯಲ್ಲಾಪುರ ಹಾಗೂ ಅಂಕೋಲಾ ತಾಲ್ಲೂಕುಗಳ ಗಡಿ ಪ್ರದೇಶದಲ್ಲಿದೆ. ೭೪ ಅಡಿ ಎತ್ತರದಿಂದ ದುಮುಕುತ್ತದೆ. ಈ ನದಿಯ ಮದ್ಯದಲ್ಲಿ ಗಣೇಶ ದೇವಾಲಯವು ಕಾಣ ಬರುತ್ತದೆ. ಆದ್ದರಿಂದ ಈ ಸ್ಟಳಕ್ಕೆ ಗಣೇಶ್ಪಾಲ್ ಎಂದು ಹೆಸರಿಡಿದು ಕರೆಯುತ್ತಾರೆ. ಇಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈಶಾನೆ /ಕಲ್ಯಾಣಿ ಗುಡ್ಡ ಕಾನಮುಸ್ಕಿ, ಸಿರ್ಸಿ : ಕೊಂಕಿಕೋಟೆ, ಜಡ್ಡಿಗದ್ದೆ, ಸಿರ್ಸಿ ಪ್ರಮುಖ ಎಜುಕೇಶನ್ ಸ೦ಸ್ಥೆಗಳು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆ ಭಟ್ಕಳ(೧೯೧೯) ತರಬಿಯತ್ ಎಜ್ಯುಕೇಶನ್ ಸೂಸೈಟಿ ಭಟ್ಕಳ ಭಟ್ಕಳ ಎಜುಕೇಶನ್ ಟ್ರಸ್ಟ್ ಮುಸ್ಲಿಮ್ ಎಜ್ಯಕೇಶನ್ ಸೂಸೈಟಿ ಮುರುಢೇಶ್ವರ ಎಮ್.ಇ.ಎಸ್ ಎಜುಕೇಶನ್ ಟ್ರಸ್ಟ್ ಆವೆ ಮರಿಯಾ ಎಜುಕೇಶನ್ ಟ್ರಸ್ಟ್ ಪ್ರೋಗ್ರೆಸ್ಸಿವ್ ಎಜುಕೇಶನ್ ಟ್ರಸ್ಟ್ ಡೊನ್ ಬೊಸ್ಕೊ ವಎಜುಕೇಶನ್ ಟ್ರಸ್ಟ್ ಆರ್.ನ್.ಸ್ ಪೊಲಿಟೇಕ್ನಿಕ್ ಎಜುಕೇಶನ್ ಟ್ರಸ್ಟ್ ಶ್ರೀ ಮಾತಾ ವಿದ್ಯಾನಿಕೇತನ, ಶಿರ್ಸಿ ಕೆನರಾ ಎಜುಕೇಶನ ಸೊಸೈಟಿ ಕೆನರಾ ವೆಲ್ಫ಼ೇರ್ ಟೃಸ್ಟ್, ಅಂಕೋಲಾ ಎಮ್.ಪಿ.ಇ ಸೊಸೈಟಿ ಯ ಎಸ್.ಡಿ.ಎಮ್ ವಿದ್ಯಾ ಸಂಸ್ಥೆಗಳು. ಸಿದ್ದಾಪುರ : ಪಶ್ಚಿಮ ಘಟ್ಟಗಳ ಸೆರಗಿನಲ್ಲಿದ್ದು ಮಲೆನಾಡಿನ ಭಾಗವಾಗಿರುವ ಸಿದ್ಧಾಪುರದ ಸುತ್ತ ಮುತ್ತ ಕಾಡುಗಳೂ, ಬೆಟ್ಟ ಗುಡ್ಡಗಳೂ ವಿಪುಲವಾಗಿದ್ದು ಚಾರಣ ಹವ್ಯಾಸಿಗಳಿಗೆ ಪ್ರಿಯವಾಗಿದೆ. ಸಮೀಪದಲ್ಲಿ ಅನೇಕ ಜಲಪಾತಗಳಿದ್ದು ಅವುಗಳಲ್ಲಿ ಕೆಲ ಪ್ರಸಿದ್ಧವಾದವುಗಳೆಂದರೆ ಜೋಗ ಜಲಪಾತ - ಸಿದ್ಧಾಪುರದಿಂದ ೨೦ ಕಿ.ಮೀ ದೂರದಲ್ಲಿದೆ. ಹೊನ್ನೇಮರಡು - ೨೫ ಕಿ.ಮೀ ದೂರದಲ್ಲಿ ತಾಳಗುಪ್ಪಾದ ಸಮೀಪದಲ್ಲಿದೆ. ಬುರುಡೆ ಜಲಪಾತ - ೩೦ ಕಿ.ಮೀ ದೂರದಲ್ಲಿ ಕ್ಯಾದಗಿಯ ಸಮೀಪದಲ್ಲಿದೆ. ಉಂಚಳ್ಳಿ ಜಲಪಾತ (ಕೆಪ್ಪ ಜೋಗ) - ೨೮ ಕಿ.ಮೀ ದೂರ ವಾಟೆಹಳ್ಳ - ೩೪ ಕಿ.ಮೀ. ದೂರ ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು. ಶಂಕರಮಠ,ಭುವನಗಿರಿ , ಇಟಗಿ ಮತ್ತು ಚಂದ್ರಗುತ್ತಿ, ಬಿಳಗಿ ವಿಶೇಷ ಸ್ಥಳ : ದೊಡ್ಮನೆ ದೊಡ್ಮನೆಯು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳಾದ ದಿ.ರಾಮಕೃಷ್ಣ ಹೆಗಡೆಯವರ ಜನ್ಮಸ್ಥಳ.ಇದು ಸಿದ್ಧಾಪುರ ತಾಲೂಕು ಕೇಂದ್ರದಿಂದ ಸುಮಾರು ೩೦ಕೀ.ಮಿ. ದೂರವಿದೆ ತಾಲೂಕುಗಳು thumb|right|150px|ಕಾರವಾರ ಸಮುದ್ರತೀರ ಅಂಕೋಲಾ ಭಟ್ಕಳ ಹಳಿಯಾಳ ಹೊನ್ನಾವರ ಜೋಯಿಡಾ ಕಾರವಾರ ಕುಮಟಾ ಮುಂಡಗೋಡು ಸಿದ್ಧಾಪುರ ಸಿರ್ಸಿ ಯಲ್ಲಾಪುರ ದಾಂಡೇಲಿ ಜಿಲ್ಲೆಯ ಪ್ರಮುಖ ವ್ಯಕ್ತಿಗಳು ಯಕ್ಷಗಾನ ಕಲಾವಿದರು: ಶಂಭು ಹೆಗಡೆ , ಮಹಾಬಲ ಹೆಗಡೆ , ಚಿಟ್ಟಾಣಿ ರಾಮಚಂದ್ರ ಹೆಗಡೆ, ತೋಟಿಮನೆ ಗಣಪತಿ ಹೆಗಡೆ ಸಾಹಿತಿಗಳು: ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ಗಂಗಾದರ ಚಿತ್ತಾಲ, ಅರವಿಂದ ನಾಡಕರ್ಣಿ, ಜಿ.ಎಸ್.ಅವಧಾನಿ, ಜಿ.ಎಚ್.ನಾಯಕ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಶೋಕ ಹೆಗಡೆ, ಶ್ರೀಧರ ಬಳಗಾರ, ಸುನಂದಾ ಕಡಮೆ, ಸಂದೀಪ ನಾಯಕ, ವಿಷ್ಣು ನಾಯ್ಕ, ಆರ್.ವಿ.ಭಂಡಾರಿ, ನಾ.ಸು.ಭರತನಹಳ್ಳಿ, ಸಚ್ಚಿದಾನಂದ ಹೆಗಡೆ (ಹೊನ್ನಾವರ), ಗೀತಾ ವಸಂತ, ಶಿವಲೀಲಾ ಹುಣಸಗಿ ಯಲ್ಲಾಪುರ ಸುಧಾ ಶರ್ಮಾ ಚವತ್ತಿ, ಅರವಿಂದ ಕರ್ಕಿಕೋಡಿ, ಆರ್.ಎನ್.ನಾಯಕ, ಫಾಲ್ಗುಣ ಗೌಡ, ಉಮೇಶ ಮು೦ಡಳ್ಳಿ,ಭಟ್ಕಳ, ಪಿ.ಆರ್.ನಾಯ್ಕ್, ಹೊಳೆಗದ್ದೆ, ಎನ್.ಆರ್.ಗಜು, ಕುಮಟಾ, ಶ್ರೀಮತಿ ರೇಷ್ಮಾ ಉಮೇಶ ಭಟ್ಕಳ, ಎಸ್.ಜ಼ಡ್, ಷರೀಪ್ ಭಟ್ಕಳ, ಎಮ್.ಐ. ಹೆಗಡೆ ಮಾಳ್ಕೋಡ್, ಪ್ರೊ. ಆರ್. ಎಸ್. ನಾಯಕ (ವಿಮರ್ಶೆ), ರವಿ ಮಾಗರ್ ಮಂಕಿ, ಹೊನ್ನಾವರ (ಕವನ), ಹುಳಗೋಳ ನಾಗಪತಿ ಹೆಗಡೆ (ಕಥೆ ಗೋಪಾಲಕೃಷ್ಣ ನಾಯಕ ( ಕಾಂತ್ ಮಾಸ್ತರ್ ), ಶಾಂತರಾಮನಾಯಕ ಹಿಚ್ಕಡ,ಜೆ.ಪ್ರೇಮಾನಂದ ರಾಜಕಾರಣಿಗಳು: ಗಣೇಶ ಹೆಗಡೆ,ರಾಮಕೃಷ್ಣ ಹೆಗಡೆ, ಜುಕಾಕೋ ಶಮ್ಸುದ್ದೀನ್, ಎಸ್.ಎಂ.ಯಾಹ್ಯಾ, ಆರ್.ವಿ.ದೇಶಪಾಂಡೆ, ಅನಂತ ಕುಮಾರ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಬೈಲ್ ಶಿವರಾಮ ಹೆಬ್ಬಾರಶಿವಾನಂದ ನಾಯ್ಕ, ಇನಾಯತುಲ್ಲಾ ಶಾಬಂದ್ರಿ, ಜಿ.ಎನ್.ಹೆಗಡೆ ಮುರೇಗಾರ್, ದತ್ತಾತ್ರೇಯ ವೈದ್ಯ ಕಕ್ಕಳ್ಳಿ, ವಿವೇಕಾನಂದ ವೈಧ್ಯ, ಮಾರ್ಗರೇಟ್ ಆಳ್ವ.ಪರ್ವೇಝ್ ಕಾಶಿಮಿಜಿ, ಡಿ.ಎಚ್.ಶಬ್ಬರ್, ಮುಝಮ್ಮಿಲ್ ಕಾಝಿಯಾ , ಕೆ.ಎನ್.ನಾಯ್ಕ ಪತ್ರಕರ್ತರು: ನಾಗೇಶ ಹೆಗಡೆ, ತಿಮ್ಮಪ್ಪ ಭಟ್, ಪರಮೇಶ್ವರ ಗುಂಡ್ಕಲ್, ಹರಿಪ್ರಕಾಶ್ ಕೋಣೆಮನೆ, ರವಿ ಹೆಗಡೆ, ನಿರಂಜನ್ ವಾನಳ್ಳಿ, ಶಿವಾನಂದ ಕಳವೆ, ಮಹಾಬಲ ಸೀತಾಳಭಾವಿ,ಬಿ.ಗಣಪತಿ. ಚಲನಚಿತ್ರ: ಶಂಕರ್ ನಾಗ್, ಅನಂತ್ ನಾಗ್, ಜಯಂತ್ ಕಾಯ್ಕಿಣಿ, ರಾಧಿಕಾ ಪಂಡಿತ್, ದೀಪಕ್ ಗಂಗಾಧರ್ ಜಿಲ್ಲೆಯ ಪ್ರಮುಖ ದಿನಪತ್ರಿಕೆಗಳು& ಟಿ.ವಿ ಮಾಧ್ಯಮ ದಿನಪ್ರತಿಕೆಗಳು ಕರಾವಳಿ ಮುಂಜಾವು ಲೋಕಧ್ವನಿ ಜನಮಾದ್ಯಮ ನುಡಿಜೇನು ಟಿ.ವಿ ಮಾಧ್ಯಮ ಸುಮುಖ ಟಿವಿ ಶ್ರೀ ಮಾರಿಕಾಂಬಾ ಟಿವಿ ವಿಸ್ಮಯ ಟಿ.ವಿ ಬಾಹ್ಯಸಂಪರ್ಕಗಳು ಉಲ್ಲೇಖಗಳು ವರ್ಗ:ಕರ್ನಾಟಕದ ಜಿಲ್ಲೆಗಳು ವರ್ಗ:ಉತ್ತರ ಕನ್ನಡ ಜಿಲ್ಲೆ
ಶೋಧಿಸಿದವರ ಹೆಸರುಗಳನ್ನೇ ಇಡಲಾದ ಶೋಧನೆಗಳ ಪಟ್ಟಿ
https://kn.wikipedia.org/wiki/ಶೋಧಿಸಿದವರ_ಹೆಸರುಗಳನ್ನೇ_ಇಡಲಾದ_ಶೋಧನೆಗಳ_ಪಟ್ಟಿ
ಈ ಲೇಖನ ಶೋಧನೆಯನ್ನೂ, ಶೋಧಕರನ್ನೂ (ಯಾರ ಹೆಸರಿಂದ ಆ ಶೋಧನೆ ಕರೆಯಲ್ಪಡುತ್ತದೋ ಅವರನ್ನು) ಪಟ್ಟಿ ಮಾಡುತ್ತದೆ. ಆರ್ಕಿಮಿಡೀಸ್‌ನ ಸ್ಕ್ರೂ – ಆರ್ಕಿಮಿಡೀಸ್ ಆರ್ಮ್‌ಸ್ಟ್ರಾಂಗ್ ಪಿಸ್ತೂಲು – ವಿಲ್ಲಿಯಮ್ ಜಾರ್ಜ್ ಆರ್ಮ್‌ಸ್ಟ್ರಾಂಗ್ ಬೇಕಲೈಟ್ – ಲಿಯೋ ಬೇಕಲ್ಯಾಂಡ್ ಬಾರ್ಬೀ ಬೊಂಬೆ – ಬಾರ್ಬರಾ ರುತ್ ಹ್ಯಾಂಡ್ಲರ್‌ನ ಮಗಳು, ಬಾರ್ಬಿಯ ಸೃಷ್ಟಿಕರ್ತೆ. ಬೆಸ್ಸಿಮರ್ ಪರಿವರ್ತಕ – ಹೆನ್ರಿ ಬೆಸ್ಸಿಮರ್ ಬಿರೊ, (ಬಾಲ್‌ಪಾಯಿಂಟ್ ಪೆನ್) – ಲ್ಯಾಸ್ಲೋ ಬಿರೊ ಬೋವೀ ಚಾಕು – ಜಿಮ್ ಬೋವೀ ಬ್ರೆಯ್ಲ್ – ಲೂಯಿ ಬ್ರೆಯ್ಲ್ ಬ್ರೌನಿಂಗ್ ಶಸ್ತ್ರಾಸ್ತ್ರಗಳು, ಬ್ರೌನಿಂಗ್ ಆಟೊಮ್ಯಾಟಿಕ್ ರೈಫಲ್ ಅನ್ನು ಒಳಗೊಂಡು – ಜಾಹ್ನ್ ಬ್ರೌನಿಂಗ್ ಬುನ್ಸನ್ ಬರ್ನರ್ – ರಾಬರ್ಟ್ ಬುನ್ಸನ್ ಕೊಲ್ಟ್ ಶಸ್ತ್ರಾಸ್ತ್ರಗಳು ರಿವಾಲ್ವರ್ – ಸ್ಯಾಮ್ಯುಯೆಲ್ ಕೊಲ್ಟ್ ಡ್ಯಾಗೆರ್ರೊಟೈಪ್ – ಜ್ಯಾಕ್ವಿಸ್ ಡ್ಯಾಗೆರ್ ಡೇವಿ ಹಣತೆ – ಹಮ್ಫ್ರಿ ಡೇವಿ ಡೀಸಲ್ ಇಂಜಿನ್ – ರುಡೊಲ್ಫ್ ಡೀಸಲ್ ಡಾಲ್ಬಿ ಸ್ಟೀರಿಯೋ, ಡಾಲ್ಬಿ ಸರೌಂಡ್ ಮತ್ತು ಡಾಲ್ಬಿ ಪ್ರೋ ಲಾಜಿಕ್ – ರೇ ಡೊಲ್ಬಿ ಡಾಪ್ಲರ್ ರೇಡಾರ್ – ಕ್ರಿಶ್ಚಿಯನ್ ಡಾಪ್ಲರ್ ಫೆರ್ರಿಸ್ ಗಾಲಿ – ಜಾರ್ಜ್ ವಾಷಿಂಗ್ಟನ್ ಗಾಲೆ ಫೆರ್ರಿಸ್, ಜೂ. ಫ್ರ್ಯಾಂಕ್ಲಿನ್ ಸ್ಟವ್ – ಬೆಂಜಮಿನ್ ಫ್ರ್ಯಾಂಕ್‌ಲಿನ್ Galil assault rifle – Israel Galili Gatling gun – Richard J. Gatling Geiger counter – Hans Geiger Geiger-Mueller tube – Hans Geiger and W. Mueller M1 Garand rifle – John Garand Goretex – Wilbert Gore Guillotine – Joseph-Ignace Guillotin did not invent the guillotine, but proposed the use of the mechanical device to carry out death penalties in France. Halligan bar – Hugh Halligan Hammond Organ – Laurens Hammond Jacquard loom – Joseph Marie Jacquard Josephson junction – Brian David Josephson The Avtomat Kalashnikova series of weapons, including the AK-47 – Mikhail Kalashnikov Mae West inflatable life jacket – Mae West ಮೇಸನ್ ಹೂಜಿ – ಜಾಹ್ನ್ ಮೇಸನ್ ಮ್ಯಾಕ್ಸಿಮ್ ಪಿಸ್ತೂಲು – ಹಿರಾಮ್ ಮ್ಯಾಕ್ಸಿಮ್ Molotov cocktail – invented by the Finnish army, and named after Vyacheslav Molotov, the Soviet Minister of War Moog Synthesizer - – Robert Moog ಮೊರ್ಸ್ ಕೋಡ್ – ಸ್ಯಾಮ್ಯುಯೆಲ್ ಮೋರ್ಸ್ ಪವ್ಲೋವ – ಆನ್ನ ಪವ್ಲೋವ ಪ್ಯಾಸ್ಚರೈಸೇಶನ್ – ಲೂಯಿ ಪ್ಯಾಸ್ಚರ್ Penkalo (ballpoint pen) – Slavoljub Eduard Penkala ರಾಮನ್ ಸ್ಪೆಕ್ಟ್ರೋಸ್ಕೋಪಿ – ಸಿ. ವಿ. ರಾಮನ್ ರಿಕ್ಟರ್ ಮಾಪಕ – ಚಾರ್ಲ್ಸ್ ರಿಕ್ಟರ್ ಸ್ಯಾಂಡ್‌ವಿಚ್ – ಅರ್ಲ್ ಆಫ್ ಸ್ಯಾಂಡ್‍ವಿಚ್ Saxophone – Adolphe Sax, Belgian music instrument designer Shrapnel shell – Henry Shrapnel Sousaphone – John Philip Sousa Stark spectroscopy – Johannes Stark Thompson submachine gun – John T. Thompson ಟೆಸ್ಲಾ ಕಾಯಿಲ್ – ನಿಕೋಲಾ ಟೆಸ್ಲಾ ಥೆರೆಮಿನ್ – ಲಿಯೋನ್ ಥೆರೆಮಿನ್ ಉಝಿ ಉಪ-ಮಶೀನ್ ಗನ್ – ಊಝೀಲ್ ಗಾಲ್ Wellington boot – Duke of Wellington Westinghouse air brake – George Westinghouse Winchester repeating rifle – named after chief investor Oliver F. Winchester Zeppelin – Ferdinand von Zeppelin ಇವುಗಳನ್ನೂ ನೋಡಿ ಶೋಧನೆಗಳ ಪಟ್ಟಿ ಶೋಧಕರ ಪಟ್ಟಿ ವೈಜ್ಞಾನಿಕ ವಿಷಯಗಳ ಪಟ್ಟಿ ವರ್ಗ:ವಿಜ್ಞಾನ ವರ್ಗ:ವಿಜ್ಞಾನಿಗಳು
ಸಿ. ವಿ. ರಾಮನ್
https://kn.wikipedia.org/wiki/ಸಿ._ವಿ._ರಾಮನ್
REDIRECT ಚಂದ್ರಶೇಖರ ವೆಂಕಟರಾಮನ್
ಮಕ್ಕಳ ದಿನಾಚರಣೆ
https://kn.wikipedia.org/wiki/ಮಕ್ಕಳ_ದಿನಾಚರಣೆ
Category:Infobox holiday with missing field Category:Infobox holiday (other) ಮಕ್ಕಳ ದಿನಾಚರಣೆಯು ಮಕ್ಕಳ ಗೌರವಾರ್ಥವಾಗಿ ವಾರ್ಷಿಕವಾಗಿ ಆಚರಿಸಲಾಗುವ ಸ್ಮರಣಾರ್ಥ ದಿನಾಂಕವಾಗಿದೆ, ಅವರ ಆಚರಣೆಯ ದಿನಾಂಕವು ದೇಶದಿಂದ ಬದಲಾಗುತ್ತದೆ.೧೯೨೫ ರಲ್ಲಿ, ಜಿನೀವಾದಲ್ಲಿ ಮಕ್ಕಳ ಕಲ್ಯಾಣ ಕುರಿತ ವಿಶ್ವ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಮಕ್ಕಳ ದಿನವನ್ನು ಮೊದಲು ಘೋಷಿಸಲಾಯಿತು.೧೯೫೦ರಿಂದ, ಹೆಚ್ಚಿನ ಕಮ್ಯುನಿಸ್ಟ್ ಮತ್ತು ನಂತರದ ಕಮ್ಯುನಿಸ್ಟ್ ದೇಶಗಳಲ್ಲಿ ಇದನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ವಿಶ್ವ ಮಕ್ಕಳ ದಿನವನ್ನು ನವೆಂಬರ್ ೨೦,೧೯೫೯ ರಂದು UN ಜನರಲ್ ಅಸೆಂಬ್ಲಿಯಿಂದ ಮಕ್ಕಳ ಹಕ್ಕುಗಳ ಘೋಷಣೆಯ ನೆನಪಿಗಾಗಿ ನವೆಂಬರ್ 20 ರಂದು ಆಚರಿಸಲಾಗುತ್ತದೆ ಕೆಲವು ದೇಶಗಳಲ್ಲಿ, ಇದು ಮಕ್ಕಳ ವಾರ ಮತ್ತು ಮಕ್ಕಳ ದಿನವಲ್ಲ. thumb| ಡೊನೆಟ್ಸ್ಕ್, ಉಕ್ರೇನ್, 2011 ರಲ್ಲಿ ಮಕ್ಕಳ ದಿನ ಮಕ್ಕಳ ದಿನವು ಜೂನ್ ಎರಡನೇ ಭಾನುವಾರದಂದು ಜೂನ್ ೧೮೫೭ ರಲ್ಲಿ ಪ್ರಾರಂಭವಾಯಿತು. ರೆವರೆಂಡ್ ಡಾ. ಚಾರ್ಲ್ಸ್ ಲಿಯೊನಾರ್ಡ್ , ಮ್ಯಾಸಚೂಸೆಟ್ಸ್‌ನ ಚೆಲ್ಸಿಯಾದಲ್ಲಿನ ಯುನಿವರ್ಸಲಿಸ್ಟ್ ಚರ್ಚ್ ಆಫ್ ರಿಡೀಮರ್‌ನ ಪಾದ್ರಿ: ಲಿಯೊನಾರ್ಡ್ ಮಕ್ಕಳಿಗಾಗಿ ಮತ್ತು ವಿಶೇಷ ಸೇವೆಯನ್ನು ಮೀಸಲಿಟ್ಟರು. ಲಿಯೊನಾರ್ಡ್ ಈ ದಿನವನ್ನು ರೋಸ್ ಡೇ ಎಂದು ಹೆಸರಿಸಿದರು, ಆದರೂ ಇದನ್ನು ನಂತರ ಹೂವಿನ ಭಾನುವಾರ ಎಂದು ಹೆಸರಿಸಲಾಯಿತು ಮತ್ತು ನಂತರ ಮಕ್ಕಳ ದಿನ ಎಂದು ಹೆಸರಿಸಲಾಯಿತು.
ಯಾಸಿರ್ ಅರಾಫತ್
https://kn.wikipedia.org/wiki/ಯಾಸಿರ್_ಅರಾಫತ್
ಯಾಸಿರ್ ಅರಾಫತ್ (ಅರಬಿಕ್: : محمد عبد الرؤوف القدوة الحسيني) (ಜನನ: ಆಗಸ್ಟ್ ೧೯೨೯)ಪ್ಯಾಲಿಸ್ಟೈನ್ ಪ್ರಾಧಿಕಾರದ ಅಧ್ಯಕ್ಷರು(೧೯೯೩ ರಿಂದ, ೧೯೯೬ ರಲ್ಲಿ ಈ ಸ್ಥಾನಕ್ಕೆ ಚುನಾಯಿತರಾದರು). ಫತಾ ದ ನಾಯಕರು ಮತ್ತು ೧೯೬೯ ರಿಂದ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆಯ (ಪಿಎಲ್‍ಒ) ಅಧ್ಯಕ್ಷರು. ೧೯೯೪ ರ ಶಾಂತಿ ನೊಬೆಲ್ ಬಹುಮಾನವನ್ನು ಪಡೆದವರಲ್ಲಿ ಒಬ್ಬರು. ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಅರಾಫತ್ ಕೆಲವರ ದೃಷ್ಟಿಯಲ್ಲಿ ಭಯೋತ್ಪಾದಕರಾದರೆ ಇನ್ನು ಕೆಲವರ ದೃಷ್ಟಿಯಲ್ಲಿ ಪ್ಯಾಲೆಸ್ಟೈನ್ ನ ಸ್ವಾತ೦ತ್ರ್ಯ ಹೋರಾಟಗಾರರು. ಇತ್ತೀಚಿನ ಸುದ್ದಿಯೆಂದರೆ ನವೆಂಬರ್ ೧೧, ೨೦೦೪ ರಂದು ಪ್ಯಾರಿಸ್ ನಲ್ಲಿ ಇವರು ನಿಧನರಾದರು. ಜೀವನ ಪ್ರಾಥಮಿಕ ವರ್ಷಗಳು ಅರಾಫತ್ ಅವರ ಹೇಳಿಕೆಯ ಪ್ರಕಾರ ಅವರು ಜನಿಸಿದ್ದು ಜೆರುಸಲೆಂ ನಲ್ಲಿ; ಆದರೆ ಅನೇಕರ ಹೇಳಿಕೆಯ ಪ್ರಕಾರ ಅವರು ಹುಟ್ಟಿದ್ದು ಈಜಿಪ್ಟ್ ದೇಶದ ಕೈರೋ ನಗರದಲ್ಲಿ. ಕೈರೋ ವಿಶ್ವವಿದ್ಯಾಲಯದಲ್ಲಿ ಓದಿದ ಅರಾಫತ್ ೧೯೪೮ ರ ಅರಬ್-ಇಸ್ರೇಲಿ ಯುದ್ಧದಲ್ಲಿ ಪಾಲ್ಗೊಳ್ಳಲು ವಿಫಲ ಯತ್ನ ನಡೆಸಿದರು. ೧೯೫೨ ರಲ್ಲಿ ಪ್ಯಾಲೆಸ್ಟಿನಿಯನ್ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದರು. ೧೯೫೬ ರಲ್ಲಿ ಸಿವಿಲ್ ಇಂಜಿನಿಯರಿ೦ಗ್ ಪದವಿಯನ್ನು ಪಡೆದರಲ್ಲದೆ ಸುಯೆಜ್ ಯುದ್ಧದಲ್ಲಿ ಈಜಿಪ್ಟ್ ನ ಭೂಸೇನೆಯಲ್ಲಿ ಪಾಲ್ಗೊಂಡರು. ಫತಾ ನಂತರ ಕುವೈತ್ ದೇಶಕ್ಕೆ ತೆರಳಿದ ಅರಾಫತ್ ಸ್ವತಂತ್ರ ಪ್ಯಾಲೆಸ್ಟೈನ್ ದೇಶವನ್ನು ಸೃಷ್ಟಿಸುವ ಉದ್ದೇಶವುಳ್ಳ ಫತಾಎಂಬ ಸಂಸ್ಥೆಯನ್ನು ಆರಂಭಿಸಿದರು. ೧೯೬೪ ರಲ್ಲಿ ಒಂದು ಇಸ್ರೇಲಿ ನೀರಿನ ಪಂಪನ್ನು ಸ್ಫೋಟಿಸುವ ಫತಾ ದ ಉದ್ದೇಶ ವಿಫಲವಾಯಿತು. ೧೯೬೮ ರಲ್ಲಿ ಜೋರ್ಡನ್ ದೇಶದ ಅಲ್-ಕರಮೇಹ್ ಗ್ರಾಮದಲ್ಲಿ ಇಸ್ರೇಲಿ ಸೇನೆಯೊ೦ದಿಗೆ ನಡೆದ ತಿಣುಕಾಟದಲ್ಲಿ ಅನೇಕ ಫತಾ ದ ಸೈನಿಕರು ಸತ್ತರೂ ಇಸ್ರೇಲಿ ಸೈನ್ಯವನ್ನು ಹಿಮ್ಮೆಟ್ಟಿಸುವುದರಲ್ಲಿ ಯಶಸ್ವಿಯಾಯಿತು. right|thumb|ಯಾಸಿರ್ ಅರಾಫತ್ ಜೋರ್ಡನ್ ೧೯೭೦ ರಲ್ಲಿ ಜೋರ್ಡನ್ ದೇಶ ಮತ್ತು ಪ್ಯಾಲೆಸ್ಟೈನಿಯನ್ ಉಗ್ರವಾದಿಗಳ ನಡುವೆ ಸಾಕಷ್ತು ಭಿನ್ನಾಭಿಪ್ರಾಯಗಳು ತಲೆದೋರಿದವು. ಜೂನ್ ೧೯೭೦ ರಲ್ಲಿ ನೇರ ಯುದ್ಧ ಆರಂಭವಾಯಿತು. ಸಿರಿಯಾ ದೇಶದಿಂದ ಸಹಾಯ ಪಡೆದ ಅರಾಫತ್ ಈ ಸಮಯಕ್ಕೆ ಪ್ಯಾಲೆಸ್ಟೈನ್ ವಿಮೋಚನಾ ಸ೦ಘ (ಪಿಎಲ್‍ಒ) ದ ಸೇನಾನಾಯಕರಾಗಿದ್ದರು. ಜೋರ್ಡನ್ ಗೆ ಇಸ್ರೇಲ್ ಮತ್ತು ಅಮೆರಿಕ ಗಳಿಂದ ಸಹಾಯದ ದೊರೆಯುವ ಲಕ್ಷಣಗಳು ಕಂಡುಬಂದವು. ಕೊನೆಗೆ ಜೋರ್ಡನ್ ಆ ವರ್ಷದ ಸಪ್ಟೆಂಬರ್ ನಲ್ಲಿ ಮೇಲುಗೈ ಸಾಧಿಸಿತು. ಲೆಬನಾನ್ ೧೯೭೩ ರಲ್ಲಿ ಅಮೆರಿಕದ ರಾಷ್ಟ್ರೀಯ ಸುರಕ್ಷಾ ಪ್ರಾಧಿಕಾರದವರು ಪಡೆದ ಮಾಹಿತಿಯ ಮೇರೆಗೆ ಸುಡನ್ ದೇಶದ ಸೌದಿ ರಾಯಭಾರಿ ಕಛೇರಿಯ ಮೇಲೆ ನಡೆದ ದಾಳಿ, ಹಾಗೂ ನಂತರ ಅಮೆರಿಕನ್ ರಾಯಭಾರಿ ಮತ್ತು ಇನ್ನಿತರರ ಕೊಲೆಗೆ ಅರಾಫತ್ ಅವರು ಆದೇಶ ನೀಡಿದರು ಎನ್ನಲಾಯಿತು. ಅರಾಫತ್ ಅವರು ಇದನ್ನು ಅಲ್ಲಗಳೆದರು. ಜೋರ್ಡನ್ ನಿಂದ ಹೊರತಳ್ಳಲ್ಪಟ್ಟ ಮೇಲೆ ಅರಾಫತ್ ರ ಪಿಎಲ್‍ಒ ಲೆಬನಾನ್ ದೇಶದಲ್ಲಿ ನೆಲೆ ಸ್ಥಾಪಿಸಿತು. ಈ ನೆಲೆಗಳಿಂದ ಆಗಾಗ್ಗೆ ಇಸ್ರೇಲ್ ನ ಮೇಲೆ ದಾಳಿ ನಡೆಸಲಾರಂಭಿಸಿತು. ಈ ದಾಳಿಗಳು ನಡೆದಾಗಲೆಲ್ಲ ಇಸ್ರೇಲ್ ಲೆಬನಾನ್ ನಲ್ಲಿದ್ದ ನೆಲೆಗಳ ಮೇಲೆ ಪ್ರತಿದಾಳಿ ನಡೆಸಲಾರಂಭಿಸಿತು. ೧೯೭೨ ರ ಮ್ಯೂನಿಚ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ೧೧ ಇಸ್ರೇಲಿ ಕ್ರೀಡಾಪಟುಗಳನ್ನು ಅಪಹರಿಸಿ ಕೊಲ್ಲಲಾಯಿತು. ಸಾಮಾನ್ಯವಾಗಿ ಅರಾಫತ್ ರ ಫತಾ ದ ಭಯೋತ್ಪಾದಕ ಅಂಗವೆಂದು ಹೇಳಲಾದಕಪ್ಪು ಸಪ್ಟಂಬರ ಇದನ್ನು ನಡೆಸಿತು ಎಂದು ಆಪಾದಿಸಲಾಯಿತು. ಅರಾಫತ್ ಅವರು ಸಾರ್ವಜನಿಕವಾಗಿ ತಮಗೂ ಮತ್ತು ಈ ಕೃತ್ಯಕ್ಕೂ ಸಂಬಂಧವಿಲ್ಲವೆಂದು ಹೇಳಿದರು. ೧೯೭೪ ರಲ್ಲಿ ಪಿಎಲ್‍ಒ ಗೆ ಪ್ಯಾಲೆಸ್ಟೈನ್ ನ ಜನರ ಪ್ರಾತಿನಿಧಿಕ ಸಂಸ್ಥೆ ಎಂಬ ಮನ್ನಣೆಯನ್ನು ಅರಬ್ ದೇಶಗಳ ನಾಯಕರು ನೀಡಿದರು. ೧೯೭೮ ರ ಲೆಬನಾನ್ ನ ಆಂತರಿಕ ಯುದ್ಧದಲ್ಲಿ ಪಿಎಲ್‍ಒ ಪಾಲ್ಗೊಂಡಿತ್ತು. ಲೆಬನಾನ್ ದೇಶದ ಕ್ರೈಸ್ತ ಸಮುದಾಯದ ಆಪಾದನೆಯ೦ತೆ ಅನೇಕರ ಸಾವಿಗೆ ಅರಾಫತ್ ಅವರೇ ಕಾರಣರು. ಇಸ್ರೇಲ್ ಲೆಬನಾನ್ ನ ಕ್ರೈಸ್ತ ಸಮುದಾಯದ ಪರ ವಹಿಸಿತು ಮತ್ತು ಎರಡು ಮುಖ್ಯ ದಾಳಿಗಳನ್ನು ನಡೆಸಿತು. ಅನೇಕ ಜನ ಪ್ಯಾಲೆಸ್ಟೈನ್ ನ ಪೌರರು ಈ ದಾಳಿಗಳಲ್ಲಿ ಮೃತಪಟ್ಟರು. ಟನೀಸಿಯಾ ೧೯೮೨ ರಲ್ಲಿ ಲೆಬನಾನ್ ನ ಮೇಲೆ ಇಸ್ರೇಲ್ ನ ದಾಳಿಯ ಸಮಯದಲ್ಲಿ ಅರಾಫತ್ ಮತ್ತು ಪಿಎಲ್‍ಒ ಅನ್ನು ಲೆಬನಾನ್ ನಿಂದ ಹೊರಹೋಗಲು ಬಿಡಲಾಯಿತು. ಅರಾಫತ್ ಅವರು ಇ ಬಾರಿ ಟುನೀಸಿಯಾ ದೇಶಕ್ಕೆ ತೆರಳಿ ಅಲ್ಲಿ ತಮ್ಮ ನೆಲೆಯನ್ನು ೧೯೯೩ ರ ವರೆಗೆ ಸ್ಥಾಪಿಸಿದರು. ೧೯೯೩ ರಲ್ಲಿ, ಅಮೆರಿಕದ ಒತ್ತಡದ ಮೇರೆಗೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಓಸ್ಲೋ ಒಪ್ಪಂದವನ್ನು ಸ್ಥಾಪಿಸಿದರು. ಇರದಂತೆ, ಐದು ವರ್ಷಗಳಲ್ಲಿ ಪ್ಯಾಲೆಸ್ಟೈನ್ ನಲ್ಲಿ ಸ್ವ-ರಾಜ್ಯ ಉಂಟಾಗುವಂತೆ ಒಪ್ಪಂದವಾಯಿತು. ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ೧೯೯೬ ರಲ್ಲಿ ಪ್ಯಾಲೆಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷರಾಗಿ ಅರಾಫತ್ ಚುನಾಯಿತರಾದರು. ೧೯೯೮ ರ ಸಮಯಕ್ಕೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತು. ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಹೊಂದಿಸಿದ ಮಾತುಕತೆಗಳ ನಂತರ ಇಸ್ರೇಲ್ ನ ಪ್ರಧಾನಿ ಎಹುಡ್ ಬರಾಕ್ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿಗಳ ಕೆಲ ಭಾಗಗಳನ್ನು ಪ್ಯಾಲೆಸ್ಟೈನ್ ಗೆ ಬಿಟ್ಟುಕೊಡುತ್ತೇನೆಂದು ತಿಳಿಸಿದರು. ಆದರೆ ವಿವಾದಶೀಲ ನಿರ್ಧಾರವೊಂದರಲ್ಲಿ ಅರಾಫತ್ ಇದನ್ನು ನಿರಾಕರಿಸಿದರು. ನಿಧನ ಅಕ್ಟೋಬರ್ ೨೮, ೨೦೦೪ ರಲ್ಲಿ ಅರಾಫತ್ ತೀವ್ರವಾಗಿ ಅಸ್ವಸ್ಥರಾದರು. ಅವರನ್ನು ಪ್ಯಾರಿಸ್ ನಗರದ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಇತ್ತೀಚಿನ ಬೆಳವಣಿಗೆಯಲ್ಲಿ ಅರಾಫತ್ ಅವರು ನವೆಂಬರ್ ೧೧ ರಂದು ಮರಣ ಹೊಂದಿದರೆಂಬ ಘೋಷಣೆ ಬಂದಿದೆ. ಉಲ್ಲೇಖಗಳು ವರ್ಗ:ಏಷ್ಯಾದ ರಾಜಕೀಯ ಮುಖಂಡರು ವರ್ಗ:ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರು ವರ್ಗ:ಪ್ಯಾಲೆಸ್ಟೈನ್
ಕರ್ನಾಟಕದ ಮುಖ್ಯಮಂತ್ರಿ
https://kn.wikipedia.org/wiki/ಕರ್ನಾಟಕದ_ಮುಖ್ಯಮಂತ್ರಿ
REDIRECT ಕರ್ನಾಟಕದ ಮುಖ್ಯಮಂತ್ರಿಗಳು
ಪೂರ್ಣಚಂದ್ರ ತೇಜಸ್ವಿ
https://kn.wikipedia.org/wiki/ಪೂರ್ಣಚಂದ್ರ_ತೇಜಸ್ವಿ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.http://www.nammakannadanaadu.com/kavigalu/poornachandra-tejaswi.php ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.http://www.thehindu.com/todays-paper/tp-features/tp-fridayreview/article2272137.ece ಜೀವನ thumb|right|ತಂದೆ ಪುಟ್ಟಪ್ಪ ಮತ್ತು ತನ್ನ ತಾಯಿಯ ಜೊತೆ ತೇಜಸ್ವಿ ಜನನ ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ. ಅವರ ತಾಯಿ ಹೇಮಾವತಿ. ಇವರು ೧೯೩೮ ಸೆಪ್ಟೆಂಬರ್ ೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಜನಿಸಿದರು. thumb|ಕುಪ್ಪಳಿಯ ತೇಜಸ್ವಿ ಸ್ಮಾರಕ ಶಿಕ್ಷಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ವೃತ್ತಿ-ಪ್ರವೃತ್ತಿ ಇವರ ಮೊದಲ ಕಥೆ ಲಿಂಗ ಬಂದ. ಈ ಕಥೆಗಾಗಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೋತ್ತರ ಪದವಿಯ ನಂತರ ಓರಗೆ ಇತರೆ ಬರಹಗಾರರಂತೆ ಅಧ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಮಾಡಿದರು. ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ,ಛಾಯಾಚಿತ್ರಗ್ರಹಣ ಹಾಗು ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವೈವಾಹಿಕ ಬದುಕು ಇವರ ಪತ್ನಿ ರಾಜೇಶ್ವರಿ. ಇವರು ತೇಜಸ್ವಿಯವರ ಪ್ರೀತಿಯ ಮನೆ ಮೂಡಿಗೆರೆಯ 'ನಿರುತ್ತರ'ದಲ್ಲಿ ವಾಸಿಸುತ್ತಿದ್ದರು, ಈಗ ಮರಣಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತಾ ಹಾಗು ಈಶಾನ್ಯ. ಇವರಿಬ್ಬರೂ ಸಾಫ್ಟ್ ವೇರ್ ಪರಿಣತರು. ನಿಧನ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ 'ನಿರುತ್ತರ'ದಲ್ಲಿ ೨೦೦೭ರ ಏಪ್ರಿಲ್ ೫ರ ಮಧ್ಯಾಹ್ನ ೨ ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು ೬೯ ವರ್ಷ. ಸಾಹಿತ್ಯ ಕೃಷಿ ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ. ಕವನ ಸಂಕಲನ ಸೋಮುವಿನ ಸ್ವಾಗತ ಲಹರಿ ಮತ್ತು ಇತರ ಕವನಗಳು (೧೯೬೨) ಕಾದಂಬರಿಗಳು ಕರ್ವಾಲೋ (೧೯೮೦) ಚಿದಂಬರ ರಹಸ್ಯ (೧೯೮೫) ಜುಗಾರಿ ಕ್ರಾಸ್ (೧೯೯೪) ಮಾಯಾಲೋಕ (೨೦೦೫) ಕಾಡು ಮತ್ತು ಕ್ರೌರ್ಯ (೨೦೧೩) ನೀಳ್ಗತೆಗಳು ಸ್ವರೂಪ (೧೯೬೬) ನಿಗೂಢ ಮನುಷ್ಯರು (೧೯೭೩) ಕಥಾಸಂಕಲನ ಹುಲಿಯೂರಿನ ಸರಹದ್ದು (೧೯೬೨) ಅಬಚೂರಿನ ಪೋಸ್ಟಾಫೀಸು (೧೯೭೩) ಕಿರಗೂರಿನ ಗಯ್ಯಾಳಿಗಳು (೧೯೯೧) ಪಾಕಕ್ರಾಂತಿ ಮತ್ತು ಇತರ ಕತೆಗಳು ನಾಟಕ ಯಮಳ ಪ್ರಶ್ನೆ (೧೯೬೪) ಆತ್ಮ ಚರಿತ್ರೆ ಅಣ್ಣನ ನೆನಪು. (೧೯೯೬) ಕುವೆಂಪು ಅವರ ಕುರಿತು. ಪ್ರವಾಸ ಕಥನ ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್ (೧೯೯೦) ವಿಮರ್ಶಾ ಕೃತಿಗಳು ವ್ಯಕ್ತಿ ವಿಶಿಷ್ಟ ಸಿಧ್ಧಾಂತ (೧೯೬೪) ವಿಮರ್ಶೆಯ ವಿಮರ್ಶೆ ಹೊಸ ವಿಚಾರಗಳು ವಿಜ್ಞಾನ ಹಾಗೂ ಪರಿಸರ ಕುರಿತ ಕೃತಿಗಳು ಪರಿಸರದ ಕತೆ (೧೯೯೧) ಮಿಸ್ಸಿಂಗ್ ಲಿಂಕ್ (೧೯೯೧) ಸಹಜ ಕೃಷಿ (೧೯೯೨) ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು (೧೯೯೩) ಹಕ್ಕಿ ಪುಕ್ಕ ಮಿಂಚುಳ್ಳಿ-ಕನ್ನಡ ನಾಡಿನ ಹಕ್ಕಿಗಳು-ಭಾಗ ೧ ಹೆಜ್ಜೆ ಮೂಡದ ಹಾದಿ - ಕನ್ನಡ ನಾಡಿನ ಹಕ್ಕಿಗಳು-ಭಾಗ ೨ ವಿಸ್ಮಯ -೧,೨,೩ (೧೯೯೩) ಫ್ಲೈಯಿಂಗ್ ಸಾಸರ್-ಭಾಗ ೧ ಮತ್ತು ೨ (೧೯೯೩) ನಡೆಯುವ ಕಡ್ಡಿ, ಹಾರುವ ಎಲೆ ಮನಸೋಬು ಪೂಕೋವೋಕ ಅವರ "ಒಂದು ಹುಲ್ಲಿನ ಕ್ರಾಂತಿ " ಪುಸ್ತಕದ ವಿವರಣಾತ್ಮಕ ಕೃತಿ ವೈಜ್ಞಾನಿಕ ಹಾಗೂ ಐತಿಹಾಸಿಕ ಲೇಖನಗಳ ಸಂಕಲನ ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಮತ್ತು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಯುಧ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ. ಮಿಲೇನಿಯಮ್ ಸರಣಿ ಹೊಸ ಮಿಲೇನಿಯಮ್‍ನ ಆರಂಭದಲ್ಲಿ ತೇಜಸ್ವಿಯವರು ೨೦ನೇ ಶತಮಾನದಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು ೧೬ ಪುಸ್ತಕಗಳಿವೆ. ಮಿಲೇನಿಯಮ್ ೧ - ಹುಡುಕಾಟ ಮಿಲೇನಿಯಮ್ ೨ - ಜೀವನ ಸಂಗ್ರಾಮ ಮಿಲೇನಿಯಮ್ ೩ - ಪೆಸಿಫಿಕ್ ದ್ವೀಪಗಳು ಮಿಲೇನಿಯಮ್ ೪ - ಚಂದ್ರನ ಚೂರು ಮಿಲೇನಿಯಮ್ ೫- ನೆರೆಹೊರೆಯ ಗೆಳೆಯರು ಮಿಲೇನಿಯಮ್ ೬ - ಮಹಾಯುದ್ಧ - ೧ ಮಿಲೇನಿಯಮ್ ೭ - ಮಹಾಯುದ್ಧ - ೨ ಮಿಲೇನಿಯಮ್ ೮ - ಮಹಾಯುದ್ಧ - ೩ ಮಿಲೇನಿಯಮ್ ೯- ದೇಶವಿದೇಶ - ೧ ಮಿಲೇನಿಯಮ್ ೧೦-ದೇಶವಿದೇಶ - ೨ ಮಿಲೇನಿಯಮ್ ೧೧-ದೇಶವಿದೇಶ - ೩ ಮಿಲೇನಿಯಮ್ ೧೨ - ದೇಶವಿದೇಶ - ೪ ಮಿಲೇನಿಯಮ್ ೧೩ - ವಿಸ್ಮಯ ವಿಶ್ವ - ೧ ಮಿಲೇನಿಯಮ್ ೧೪ - ಮಹಾಪಲಾಯನ ಮಿಲೇನಿಯಮ್ ೧೫ - ವಿಸ್ಮಯ ವಿಶ್ವ - ೨ ಮಿಲೇನಿಯಮ್ ೧೬ - ಅಡ್ವೆಂಚರ್ ಅನುವಾದ ಬೆಳ್ಳಂದೂರಿನ ನರಭಕ್ಷಕ(ಕಾಡಿನ ಕಥೆಗಳು ಭಾಗ ೧) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ ಪೆದ್ದಚೆರುವಿನ ರಾಕ್ಷಸ(ಕಾಡಿನ ಕಥೆಗಳು ಭಾಗ ೨) (೧೯೯೩) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ ಜಾಲಹಳ್ಳಿಯ ಕುರ್ಕ(ಕಾಡಿನ ಕಥೆಗಳು ಭಾಗ ೩) (೧೯೯೪) - ಕೆನೆತ್ ಅಂಡರ್ಸನ್ ಅನುಭವಗಳ ಸಂಗ್ರಹ ರೂಪಾಂತರ ಮುನಿಶಾಮಿ ಮತ್ತು ಮಾಗಡಿ ಚಿರತೆ(ಕಾಡಿನ ಕಥೆಗಳು ಭಾಗ ೪) ರುದ್ರಪ್ರಯಾಗದ ಭಯಾನಕ ನರಭಕ್ಷಕ (೧೯೯೫) - ಜಿಮ್ ಕಾರ್ಬೆಟ್‍ರವರ]] 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ. ಪ್ಯಾಪಿಲಾನ್-೧,೨ - ಹೆನ್ರಿ ಷಾರಿಯೇ ರವರ 'Papillon' ಕೃತಿಯ ಅನುವಾದ ಚಿತ್ರ ಸಂಕಲನ ಮಾಯೆಯ ಮುಖಗಳು ಪ್ರಶಸ್ತಿಗಳು ಚಿದಂಬರ ರಹಸ್ಯ ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ೧೯೮೭ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಾಪ್ತವಾಯಿತು. ಪಂಪ ಪ್ರಶಸ್ತಿ ೨೦೦೧ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ. ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿವೆ. ಕುಬಿ ಮತ್ತು ಇಯಾಲ (ಕಥೆ)ಚಿತ್ರವು ರಾಜ್ಯ ಪ್ರಶಸ್ತಿ ಗಳಿಸಿತು. ಕಿರಗೂರಿನ ಗಯ್ಯಾಳಿಗಳು ಕತೆ ಸುಮನ್ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನೆಮಾ ಆಗಿದೆ. ಚಲನಚಿತ್ರ ಮಾಧ್ಯಮದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು, ತಬರನ ಕಥೆ, ಕುಬಿ ಮತ್ತು ಇಯಾಲ ಹಾಗೂ ಕಿರಗೂರಿನ ಗಯ್ಯಾಳಿಗಳು ಕೃತಿಗಳು ಚಲನಚಿತ್ರಗಳಾಗಿವೆ. ತೇಜಸ್ವಿ ಬಗ್ಗೆ ನನ್ನ ತೇಜಸ್ವಿ (ಲೇ: ರಾಜೇಶ್ವರಿ ತೇಜಸ್ವಿ) ತೇಜಸ್ವಿ ನಾನು ಕಂಡಷ್ಟು (ಲೇ: ಧನಂಜಯ ಜೀವಾಳ ಬಿ. ಕೆ.) ಮತ್ತೆ ಮತ್ತೆ ತೇಜಸ್ವಿ (ಸಿ.ಡಿ.) ಉಲ್ಲೇಖಗಳು ಹೊರಗಿನ ಸಂಪರ್ಕಗಳು ಪೂರ್ಣಚಂದ್ರ ತೇಜಸ್ವಿ ಕುರಿತ ಅಧಿಕೃತ ಅಂತರ್ಜಾಲ ತಾಣ ಸಂಪದ - ಪೂರ್ಣಚಂದ್ರ ತೇಜಸ್ವಿಯವರ ಸಂದರ್ಶನದ ಆಡಿಯೋ ಪಾಡ್‌ಕ್ಯಾಸ್ಟ್ ಉದಯರವಿ.ಕಾಮ್ - ತೇಜಸ್ವಿಯವರ ಕೃತಿಗಳನ್ನು ಇಲ್ಲಿ ಖರೀದಿಸಬಹುದು ವರ್ಗ:ಕನ್ನಡ ಸಾಹಿತಿಗಳು ವರ್ಗ:ನವ್ಯ ಸಾಹಿತ್ಯ ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:೧೯೩೮ ಜನನ ವರ್ಗ:೨೦೦೭ ನಿಧನ ವರ್ಗ:ವಿಜ್ಞಾನ ಸಾಹಿತಿಗಳು ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು ವರ್ಗ:ಕಾದಂಬರಿಕಾರರು
ದ ರಾ ಬೇಂದ್ರೆ
https://kn.wikipedia.org/wiki/ದ_ರಾ_ಬೇಂದ್ರೆ
REDIRECT ದ.ರಾ.ಬೇಂದ್ರೆ
ದತ್ತಾತ್ರೇಯ ರಾಮಚ೦ದ್ರ ಬೇ೦ದ್ರೆ
https://kn.wikipedia.org/wiki/ದತ್ತಾತ್ರೇಯ_ರಾಮಚ೦ದ್ರ_ಬೇ೦ದ್ರೆ
REDIRECT ದ.ರಾ.ಬೇಂದ್ರೆ
ವಿನಾಯಕ ಕೃಷ್ಣ ಗೋಕಾಕ
https://kn.wikipedia.org/wiki/ವಿನಾಯಕ_ಕೃಷ್ಣ_ಗೋಕಾಕ
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಜೀವನ ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣ ಗೋಕಾಕರು ೧೯೦೯ರ ಆಗಸ್ಟ್ ೯ರಂದು ಹಾವೇರಿ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರಿನ ಮಜೀದ್ ಸ್ಕೂಲ್ ಮತ್ತು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡ ದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ. ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಸಿ.ಎಸ್.ಪಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು. ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ. ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನ ಪ್ರಿನ್ಸಿಪಾಲರ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು. ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದ್ ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾ ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು. ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು. ಕೃತಿಗಳು ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ,ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ!. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಅವರ ಮೊದಲ ಪ್ರಕಟಿತ ಕೃತಿ "ಕಲೋಪಾಸಕರು". ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ "ಸಮುದ್ರ ಗೀತೆಗಳು", "ಸಮುದ್ರದಾಚೆಯಿಂದ"- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂಬ ಸಾಲು ತುಂಬ ಪ್ರಸಿದ್ಧವಾಗಿದೆ.ಮುಕ್ತ ಛಂದಸ್ಸು ಮೊದಲ ಬಾರಿ ಬೆಳಕಿಗೆ ತಂದರು.*##(^@€£@) login ಕಾದಂಬರಿಗಳು ಸಮರಸವೇ ಜೀವನ. ಇಜ್ಜೋಡು. ಏರಿಳಿತ. ಸಮುದ್ರಯಾನ. ನಿರ್ವಹಣ ನರಹರಿ. ಕವನ ಸಂಕಲನಗಳು ಕಲೋಪಾಸಕ. ಪಯಣ. ಸಮುದ್ರಗೀತೆಗಳು. ನವ್ಯ ಕವಿಗಳು. ತ್ರಿಶಂಕುವಿನ ಪ್ರಜ್ಞಾ ಪ್ರಭಾತ. ಊರ್ಣನಾಭ. ಉಗಮ. ಬಾಳದೇಗುಲದಲ್ಲಿ. ಸಿಮ್ಲಾಸಿಂಫನಿ. ಇಂದಲ್ಲ ನಾಳೆ(ಚಂಪೂ). ದ್ಯಾವಾಪೃಥಿವೀ. ಪಾರಿಜಾತದಡಿಯಲ್ಲಿ. ಅಭ್ಯುದಯ. ಭಾಗವತ ನಿಮಿಷಗಳು. ಭಾರತ ಸಿಂಧೂರ. ಸಾಹಿತ್ಯ ವಿಮರ್ಶೆ ಕವಿಕಾವ್ಯ ಮಹೋನ್ನತಿ. ನವ್ಯ ಮತ್ತು ಕಾವ್ಯ ಜೀವನ. ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು. ಸಾಹಿತ್ಯದಲ್ಲಿ ಪ್ರಗತಿ. ಸಾಹಿತ್ಯ ವಿಮರ್ಶೆಯ ಕೆಲವು ಮೂಲ ತತ್ವಗಳು. ಪ್ರವಾಸ ಕಥನ ಸಮುದ್ರದಾಚೆದಿಂದ. (ಈ ಪ್ರವಾಸ ಕಥನದಿಂದ ಆಯ್ದ "ಲಂಡನ್ ನಗರ" ಎಂಬ ಗದ್ಯವನ್ನು ೧೦ನೇ ತರಗತಿಯ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.) ಪಯಣಿಗ. ಸಂತೋಷ ಗೌರವಗಳು, ಪ್ರಶಸ್ತಿಗಳು ಹಾಗೂ ಬಿರುದುಗಳು ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರ ೧೯೬೧ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ೧೯೬೫. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ. ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು. ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ. ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ. ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನಿ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ. ಗೋಕಾಕ್ ವರದಿ ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ. ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು. ಜನನಾಯಕ ( ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಲಭ್ಯ ಇರುವ ಗೋಕಾಕರ ಜನಪ್ರಿಯ ನಾಟಕ) ಗೋಕಾಕ್ ವರದಿ ಸಮುದ್ರಗೀತೆಗಳ ಅಲೆಯಲ್ಲಿ ಭಾರತ ಸಿಂಧು ರಶ್ಮಿಯಾಗಿ ಕಂಗೊಳಿಸಿದ ಗೋಕಾಕ್ Na Kanda Gokak - By Jeevi Kulkarni ವರ್ಗ:ಸಾಹಿತಿಗಳು ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವರ್ಗ:ಕನ್ನಡ ಕವಿಗಳು ವರ್ಗ:ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು