text
stringlengths 0
61.5k
|
---|
ಮೇಲಿನ ವೀಡಿಯೊದಲ್ಲಿ ತೋರಿಸಲಾಗಿದೆ ವುಹಾನ್ ಆಸ್ಪತ್ರೆಯ ನೈಜ ಚಿತ್ರಗಳುಈ ಕಾರಣಕ್ಕಾಗಿ, ಸಾಂಕ್ರಾಮಿಕ ರೋಗವನ್ನು ಎದುರಿಸಲು ಚೀನಾ ಸರ್ಕಾರವು ತಲಾ 1.200 ಕ್ಕೂ ಹೆಚ್ಚು ಹಾಸಿಗೆಗಳನ್ನು ಹೊಂದಿರುವ ಎರಡು ಹೊಸ ಆಸ್ಪತ್ರೆಗಳ ಎಕ್ಸ್‌ಪ್ರೆಸ್ ನಿರ್ಮಾಣವನ್ನು ಸಿದ್ಧಪಡಿಸುತ್ತಿದೆ. ಈ ಸಮಯದಲ್ಲಿ ಸ್ಪೇನ್‌ನಲ್ಲಿ ಕೊರೊನಾವೈರಸ್‌ನ ಯಾವುದೇ ದೃ confirmed ಪಡಿಸಿದ ಪ್ರಕರಣಗಳಿಲ್ಲ. ವೈರಸ್ ಮುಖ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರು, ಗರ್ಭಿಣಿಯರು, ಮಕ್ಕಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರು ತಮ್ಮ ರೋಗಲಕ್ಷಣಗಳನ್ನು (ಆಸ್ತಮಾ, ಅಲರ್ಜಿ ... ಇತ್ಯಾದಿ) ಉಲ್ಬಣಗೊಳಿಸುವ ಸಾಧ್ಯತೆಯಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು, ಆದ್ದರಿಂದ ನಾವು ಈ ಸಮಯದಲ್ಲಿ ಇಲ್ಲ ಹೆಚ್ಚಿನ ಮರಣ ಹೊಂದಿರುವ ವೈರಸ್‌ನ ಮುಖ, ಇದರ ಹೊರತಾಗಿಯೂ, ವಿದೇಶಾಂಗ ಸಚಿವಾಲಯವು ಶಿಫಾರಸುಗಳ ಯುದ್ಧವನ್ನು ಸಿದ್ಧಪಡಿಸಿದೆ: |
ಚೀನಾದ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ, ಮತ್ತು ನಿರ್ದಿಷ್ಟವಾಗಿ: |
- ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ಮನೆಗಳನ್ನು ಗಾಳಿ ಮಾಡಿ ಮತ್ತು ಸರಿಯಾದ ವೈಯಕ್ತಿಕ ನೈರ್ಮಲ್ಯವನ್ನು ನಿರ್ವಹಿಸಿ. |
- ಕಿಕ್ಕಿರಿದ ಸ್ಥಳಗಳಲ್ಲಿ ಸಾಧ್ಯವಾದಷ್ಟು ಚಟುವಟಿಕೆಗಳನ್ನು ತಪ್ಪಿಸಿ |
- ಕಿಕ್ಕಿರಿದ ಸ್ಥಳಗಳು ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಅಥವಾ ಅನಾರೋಗ್ಯದ ಜನರು ಅಥವಾ ಕಾಡು ಪ್ರಾಣಿಗಳೊಂದಿಗೆ ಸಂಪರ್ಕದಲ್ಲಿದ್ದರೆ ಫೇಸ್ ಮಾಸ್ಕ್ ಬಳಸಿ. ಮುಖವಾಡಗಳು ಒಂದೇ ಬಳಕೆಯಾಗಿರಬೇಕು. |
- ಸೀನುವಾಗ ಬಾಯಿ ಮತ್ತು ಮೂಗನ್ನು ಅಂಗಾಂಶಗಳಿಂದ ಮುಚ್ಚಿ |
- ಜ್ವರ ಅಥವಾ ಒಣ ಕೆಮ್ಮಿನಂತಹ ರೋಗಲಕ್ಷಣಗಳಿಗೆ ಗಮನ ಕೊಡಿ |
- ಪಕ್ಷಿಗಳ ಸಂಪರ್ಕವನ್ನು ತಪ್ಪಿಸಿ |
- ರಕ್ಷಣಾತ್ಮಕ ಮುಖವಾಡ ಧರಿಸದೆ ಕಾಡು ಪ್ರಾಣಿಗಳೊಂದಿಗೆ ಅಥವಾ ಹೊಲಗಳಲ್ಲಿ ಸಂಪರ್ಕವನ್ನು ತಪ್ಪಿಸಿ. |
- ಸಂಪೂರ್ಣವಾಗಿ ಬೇಯಿಸದ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸಿ. |
ಲೇಖನಕ್ಕೆ ಪೂರ್ಣ ಮಾರ್ಗ: ಗ್ಯಾಜೆಟ್ ಸುದ್ದಿ » ಜನರಲ್ » ನೈಜ ಸಮಯದಲ್ಲಿ ಪ್ರಪಂಚದಾದ್ಯಂತದ ಕೊರೊನಾವೈರಸ್ನ ಪ್ರಗತಿಯನ್ನು ಅನುಸರಿಸಿ |
|ಶಬ್ದಕ್ಕೆ ಅಂಜುವುದೇಕೆ? - bodhivruksha - News in kannada, vijaykarnataka |
ಶಬ್ದಕ್ಕೆ ಅಂಜುವುದೇಕೆ? |
Updated: May 23, 2015, 04:54AM IST |
ನಾನು ಆಶ್ರಮದಲ್ಲಿರುವ ಒಬ್ಬ ಮನುಷ್ಯ. ಏನಿಲ್ಲವೆಂದರೂ ದಿನಕ್ಕೆ ನೂರಾರು ಜನರನ್ನು ಭೇಟಿ ಮಾಡುತ್ತೇನೆ; ಹತ್ತಾರು ಸಭೆಗಳನ್ನು ನಡೆಸುತ್ತೇನೆ. ಯಾರಿಗೂ ಐದು ನಿಮಿಷಕ್ಕಿಂತ ಹೆಚ್ಚು ಸಮಯವನ್ನು ನಾನು ಕೊಡುವುದಿಲ್ಲ. ಜನರು ಪ್ರಶ್ನೆಗಳನ್ನು ಕೇಳಬೇಕಷ್ಟೆ. ಅದೂ ಇದೂ ಮಾತನಾಡುವಂತಿಲ್ಲ. ಇದು ನನ್ನ ಕಟ್ಟುನಿಟ್ಟು ನಿಯಮ. ಆದರೂ ಜನ ಇದನ್ನು ಉಲ್ಲಂಘಿಸುವುದೇ ಹೆಚ್ಚು. ಒಂದು ಸಭೆಯಲ್ಲಿ ನನ್ನನ್ನು ನೋಡಲು ಬಂದಿದ್ದ ಒಬ್ಬ ಮನುಷ್ಯ, ''ಸ್ವಾಮೀಜಿ, ನಿಮ್ಮ ಮೇಲೆ ಕೆಲವರು ಏನೇನೋ ಮಾತಾಡಿ ಕೊಂಡು ತಿರುಗುತ್ತಿದ್ದಾರೆ?,'' ಎಂದ. ಅದಕ್ಕೆ ನಾನು, ''ಮಾತಾ ಡಿದರೆ ಮಾತಾಡಿಕೊಳ್ಳಲಿ ಬಿಡಪ್ಪ, ನಾನೇನೂ ಅದಕ್ಕೆ ತಲೆ ಕೆಡಿಸಿಕೊಳ್ಳುವು ದಿಲ್ಲ,'' ಎಂದೆ. ಆದರೆ, ಆ ಮನುಷ್ಯ ನನ್ನ ಈ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರ ಲಿಲ್ಲ. ಹೀಗಾಗಿ ಆತ ''ಅದು ಹಾಗಲ್ಲ ಸ್ವಾಮಿ...,'' ಎಂದು ಮುಂದುವರಿಸುತ್ತಲೇ ಇದ್ದ. ನಾನು, ''ದಯ ವಿಟ್ಟು ಸುಮ್ಮನಿದ್ದು ಬಿಡು,'' ಎನ್ನುವಂತೆ ಸನ್ನೆ ಮಾಡಿದೆ. ಇದರಿಂದ ಆತನಿಗೆ ನಿರಾಸೆ ಯಾಯಿತು. ಆಗ ನಾನು, ''ನನ್ನನ್ನು ಕೇಳಲು ನಿನ್ನಲ್ಲಿ ಯಾವ ಪ್ರಶ್ನೆಯೂ ಇಲ್ಲದಿದ್ದರೆ ಹಾಯಾಗಿ ಒಂದು ಹಾಡನ್ನು ಹಾಡು,'' ಎಂದೆ. ಇದು ಆತನಿಗೆ ಇನ್ನೂ ದೊಡ್ಡ ಬೇಸರ ವನ್ನು ಹುಟ್ಟಿಸಿತು. ಎರಡು ನಿಮಿಷ ಹಾಗೆಯೇ ಕೂತಿದ್ದವನು ಕೊನೆಗೆ ಎದ್ದು ಹೋದ. |
ಈ ಅನುಭವದಲ್ಲಿ ಒಂದು ಮಹಾಸತ್ಯವೇ ಅಡಗಿದೆ. ಅದೇನೆಂದರೆ, ಸಾಮಾನ್ಯ ವಾಗಿ ನಾವೆಲ್ಲರೂ ಹೆಚ್ಚಾಗಿ ಬೇರೊಬ್ಬರ ಬಗ್ಗೆಯೇ ಯೋಚಿಸುತ್ತೇವೆ. ನಮ್ಮ ಮನ ಸ್ಸನ್ನು ನಾವು ಸರಿಯಾಗಿ ಪಳಗಿಸದೆ ಇರುವುದೇ ಇದಕ್ಕೆ ಕಾರಣ. ಹೀಗೆ ಬೇರೆಯವರ ಬಗ್ಗೆ ನಾವು ಯೋಚಿಸುವುದಕ್ಕೆ ಪ್ರೀತಿ ಕಾರಣವಲ್ಲ. ಇದು ಒಂದು ಬಗೆಯಲ್ಲಿ ವ್ಯಕ್ತಿತ್ವದ ಐಬು. ಇದಕ್ಕಿಂತ ಅನಾಹುತಕಾರಿಯೆಂದರೆ, ನಮ್ಮ ಮನಸ್ಸು ಹೆಚ್ಚಿನ ಸಮಯದಲ್ಲಿ ನಕಾರಾತ್ಮಕ ವಾಗಿಯೇ ಕೆಲಸ ಮಾಡುತ್ತಿರುತ್ತದೆ. ಅವರೇಕೆ ಹಾಗೆ, ಇವರೇಕೆ ಹೀಗೆ ಎನ್ನುವುದರ ಸುತ್ತಲೇ ನಾವು ತುಂಬಾ ಸಮಯವನ್ನು ಹಾಳು ಮಾಡುತ್ತೇವೆ ಅಲ್ಲವೆ? ಹಾಗಾದರೆ ಇದಕ್ಕೇನು ಪರಿಹಾರ? |
ಮೊದಲೇ ಹೇಳಿದಂತೆ ಮನಸ್ಸನ್ನು ಉತ್ತರೋತ್ತರವಾದ ಗುರಿ ಇಟ್ಟುಕೊಂಡು, ಆ ದಿಕ್ಕಿನಲ್ಲಿ ಪಳಗಿಸಬೇಕು. ನಿಮಗೊಂದು ಮಾತು ಗೊತ್ತಿರಬೇಕು. ಅದೇನೆಂದರೆ, 'ಅತ್ಯು ತ್ತಮ ಮನಸ್ಸುಗಳು ಸದಾ ಒಂದು ಮಹೋನ್ನತವಾದ ಆಲೋಚನೆಯನ್ನು ಹೊಂದಿರು ತ್ತವೆ. ಸರಾಸರಿಯಾದ ಮನಸ್ಸುಗಳು ಯಾವಾಗಲೂ ಅಪ್ರಯೋಜಕ ವಾದ ಘಟನೆಗಳ ಬಗ್ಗೆ ಗಿರಕಿ ಹೊಡೆಯುತ್ತಿರುತ್ತವೆ. ಇನ್ನು ಕ್ಷುಲ್ಲಕ ಮನಸ್ಸುಗಳಂತೂ ದಿನದ ಇಪ್ಪತ್ನಾಲ್ಕು ಗಂಟೆಯೂ ಬರಿ ಜನರ ಬಗ್ಗೆಯೇ ಯೋಚಿಸುತ್ತಿರುತ್ತವೆ.'' ಯಾರು ತಮ್ಮದೇ ದಾರಿಯಲ್ಲಿ ಸಾಗುತ್ತಿರುತ್ತಾರೋ ಅವರಿಗೆ ಒಂದು ದರ್ಶನದ ಹಂಬಲವಿರು ತ್ತದೆಯೇ ವಿನಾ ಯಾವುದೋ ಲೌಕಿಕ ಸಂಗತಿಗಳ ಕಡೆಗೆ ಅವರು ಗಮನ ಕೊಡುವುದಿಲ್ಲ. ಇದು ಆಧ್ಯಾತ್ಮ, ವಿಜ್ಞಾನ, ಸಂಗೀತ, ವೇದಾಂತ ಹೀಗೆ ಎಲ್ಲ ವಿಷಯಗಳಿಗೂ ಅನ್ವಯ ವಾಗು ತ್ತದೆ. ಇಂಥ ತಹತಹವಿಲ್ಲದವರು ಮಾತ್ರ ಜನರ ಮಾತುಗಳಿಗೆ ಚಿಂತಿತರಾಗುತ್ತಾರೆ. ಆದರೆ ಇದರಲ್ಲಿ ತರ್ಕವಾಗಲಿ, ಚಿಂತನೆಯಾಗಲಿ ಇರುವುದಿಲ್ಲ. ಈ ಲೋಕ ಸಾಮಾನ್ಯ ಕಣ್ಣುಗಳಿಗೆ ಒಂದು ಸಂತೆಯಂತೆಯೇ ಕಾಣು ವುದು ನಿಜ. ಆದರೆ, ಇಲ್ಲಿದ್ದೂ ನಮ್ಮದೇ ಆದ ಒಂದು ಮನೋದಿಗಂತವನ್ನು ನಾವು ಸೃಷ್ಟಿಸಿಕೊಳ್ಳಬೇಕು. ಇಲ್ಲದಿದ್ದರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗ ದಂತಕತೆ ಗಳಾಗಿರುವ ಸಾಧಕರೆಲ್ಲ ರೂಪು ಗೊಂಡಿದ್ದು ಈ ಲೋಕದ ನಡುವಿನಿಂದಲೇ ಅಲ್ಲವೇ? ಹೀಗಾಗಿಯೇ ಯಃಕಶ್ಚಿತ್ ಆದಂತಹ ಅಭಿಪ್ರಾಯಗಳಿಗೆ ದಿಗಿಲು ಬೀಳ ಬಾರದು ಅಥವಾ ಅಂಥವರನ್ನು ಬದಲಾ ಯಿಸಲು ಕೂಡ ಹೋಗಬಾರದು. ಅದು ಗೋರ್ಕಲ್ಲ ಮೇಲೆ ಮಳೆ ಸು |
ರಿದಂತೆ ವ್ಯರ್ಥವಷ್ಟೆ. ಬರಿ ಅವರಿವರ ಕುರಿತೇ ಯೋಚಿಸುವವರಿಗೆ ಸತ್ಯ ಬೇಕಾಗಿಲ್ಲ, ಅವರಿಗೆ ಬೇಕಾಗಿರುವುದು ಕಾಡುಹರಟೆ, ಗಾಳಿಮಾತು, ಗುಸುಗುಸು, ಪಿಸುಪಿಸು ಅಷ್ಟೆ. ನಿಮಗೆ ಸಂಗೀತವನ್ನೇ ಸೃಷ್ಟಿಸುವ ಶಕ್ತಿ ಇರುವಾಗ, ಅವರಿವರ ಶಬ್ದಕ್ಕೇಕೆ ಅಂಜುತ್ತೀರಿ? |
ತೊಂಡೆಯಂತಹ ಗುಲಾಬಿ ಬಣ್ಣದ ತುಟಿಗಳು ನಿಮ್ಮದಾಗಬೇಕೇ? ಇಲ್ಲಿದೆ ಸರಳ ಉಪಾಯ | Beauty tips for Plumper and Pinker Lips in Kannada - Kannada BoldSky |
14 min ago ಡೆಲ್ಟಾ ರೂಪಾಂತರ ಚಿಕನ್‌ಪಾಕ್ಸ್‌ನಷ್ಟೇ ವೇಗವಾಗಿ ಹರಡುವುದು: ವರದಿ |
3 hrs ago ಈ ಪದಾರ್ಥಗಳನ್ನು ಅಡುಗೆಗೆ ಮಾತ್ರವಲ್ಲ, ನೈಸರ್ಗಿಕ ಡಿಯೋಡ್ರೆಂಟ್ ಆಗಿಯೂ ಬಳಸಬಹುದು |
ತೊಂಡೆಯಂತಹ ಗುಲಾಬಿ ಬಣ್ಣದ ತುಟಿಗಳು ನಿಮ್ಮದಾಗಬೇಕೇ? ಇಲ್ಲಿದೆ ಸರಳ ಉಪಾಯ |
| Published: Thursday, June 24, 2021, 12:00 [IST] |
ಮಗುವಿನಂತಹ ಕೋಮಲವಾದ ತುಟಿ ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆ. ಆದರೆ ಬಿಸಿಲು, ಪೋಷಕಾಂಶಗಳ ಕೊರತೆ, ಧೂಮಪಾನದಂತಹ ನಾನಾ ಕಾರಣಗಳಿಂದ ನಮ್ಮ ತುಟಿಗಳು ಕಪ್ಪಾಗಿ ಕಳಾಹೀನವಾಗಿರುತ್ತವೆ. ಆದ್ದರಿಂದ ನಾವಿಲ್ಲಿ ಕೊಬ್ಬಿದ ಹಾಗೂ ಗುಲಾಬಿ ಬಣ್ಣದ ತುಟಿಗಳನ್ನು ಸಿಂಪಲ್ ಮನೆಮದ್ದು ಬಳಸಿ ಪಡೆಯುವುದು ಹೇಗೆ ಎಂಬುದನ್ನು ಹೇಳಿದ್ದೇವೆ. |
ಕೊಬ್ಬಿದ ಹಾಗೂ ಗುಲಾಬಿ ಬಣ್ಣದ ತುಟಿಗಳನ್ನು ಪಡೆಯಲು ಸಿಂಪಲ್ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ: |
ಕೊಬ್ಬಿದ ತುಟಿಗಳಿಗೆ ಪರಿಹಾರಗಳು: |
1. ಆಲಿವ್ ಎಣ್ಣೆ : |
ಈ ನೈಸರ್ಗಿಕ ಪರಿಹಾರವು ನಿಮ್ಮ ತುಟಿಗಳನ್ನು ರಸಗುಲ್ಲದಂತೆ ಉಬ್ಬುವಂತೆ ಮಾಡುತ್ತದೆ. ಇದಕ್ಕಾಗಿ ನೀವು ಒಂದು ಚಮಚ ಆಲಿವ್ ಎಣ್ಣೆಯನ್ನು ಒಂದು ಪಿಂಚ್ ಕೆಂಪುಮೆಣಸಿನೊಂದಿಗೆ ಬೆರೆಸಿ, ನಿಮ್ಮ ತುಟಿಗಳಿಗೆ ನಿಧಾನವಾಗಿ ಹಚ್ಚಿ. 10 ನಿಮಿಷಗಳ ನಂತರ ತೊಳೆಯಿರಿ. ನಂತರ ಜೆಲ್ ಆಧಾರಿತ ಲಿಪ್ ಬಾಮ್‌ನಿಂದ ನಿಮ್ಮ ತುಟಿಗಳನ್ನು ಆರ್ಧ್ರಕಗೊಳಿಸಿ. |
2. ದಾಲ್ಚಿನ್ನಿ ಬಾಮ್: |
ಈ ಪರಿಮಳಯುಕ್ತ ದಾಲ್ಚಿನ್ನಿ ಬಾಮ್ ನಿಮ್ಮ ತುಟಿಗಳು ಕೊಬ್ಬಿದಂತಾಗಲು ಸಹಾಯ ಮಾಡುತ್ತದೆ ಜೊತೆಗೆ ಅವುಗಳನ್ನು ದೀರ್ಘಕಾಲದವರೆಗೆ ಮಾಯಿಶ್ಚರೈಸರ್ ನಿಂದ ಕೂಡಿರುವಂತೆ ಮಾಡುವುದು. ಇದಕ್ಕಾಗಿ ನಿಮ್ಮ ನೆಚ್ಚಿನ ಲಿಪ್ ಬಾಮ್ ನ ಸ್ವಲ್ಪ ಪ್ರಮಾಣವನ್ನು ತೆಗೆದುಕೊಂಡು ಅದನ್ನು ಕರಗಿಸಿ. ಕರಗಿದ ಲಿಪ್ ಬಾಮ್ ಅನ್ನು ¼ ಟೀಚಮಚ ದಾಲ್ಚಿನ್ನಿ ಎಣ್ಣೆಯೊಂದಿಗೆ ಬೆರೆಸಿ. ಈ ಮಿಶ್ರಣವು ತಣ್ಣಗಾದ ನಂತರ, ನಿಮಗೆ ಬೇಕಾದಾಗ ಅದನ್ನು ಹಚ್ಚಿಕೊಳ್ಳಿ. |
3. ಪುದೀನಾ: |
ಇದು ನಯವಾದ ತುಟಿಗೆ ಉತ್ತಮ ಹೊಳಪು ನೀಡುವುದು. ಇದಕ್ಕಾಗಿ ಪರಿಮಳವಿಲ್ಲದ ಲಿಪ್ ಗ್ಲೋಸ್, 6 ಹನಿ ಪುದೀನಾ ಎಣ್ಣೆ, ಮತ್ತು ಒಂದು ಪಿಂಚ್ ಕೆಂಪುಮೆಣಸನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಯಾವುದೇ ಸಮಯದಲ್ಲಿ ಪೂರ್ಣ ತುಟಿಗಳನ್ನು ಪಡೆಯಲು ಅದನ್ನು ಹಚ್ಚಿ. |
ಗುಲಾಬಿ ತುಟಿಗಳಿಗೆ ಸರಳ ಪರಿಹಾರಗಳು: |
1. ಜೇನುತುಪ್ಪ ಮತ್ತು ಸಕ್ಕರೆ: |
ಈ ನೈಸರ್ಗಿಕ ತುಟಿಯ ಸ್ಕ್ರಬ್ ನಿಮ್ಮ ತುಟಿಗಳಿಂದ ಎಲ್ಲಾ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಮೃದುಗೊಳಿಸುತ್ತದೆ. ಇದಕ್ಕಾಗಿ ನೀವು |
1 ಚಮಚ ಬ್ರೌನ್ ಅಥವಾ ಬಿಳಿ ಸಕ್ಕರೆಯನ್ನು 1 ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಅದನ್ನು ನಿಮ್ಮ ತುಟಿಗಳಿಗೆ ಸ್ಕ್ರಬ್ ಆಗಿ ಬಳಸಿ, ಲಘುವಾಗಿ ಮಸಾಜ್ ಮಾಡಿ. 10-15 ನಿಮಿಷಗಳ ಕಾಲ ಬಿಡಿ. ತಣ್ಣೀರು ಬಳಸಿ ತೊಳೆಯಿರಿ. ಪಿಂಕ್ ತುಟಿಗಳಿಗಾಗಿ ವಾರಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ. |
2. ಅರಿಶಿನ ಮತ್ತು ಹಾಲು: |
ಅರಿಶಿನಕ್ಕೆ ಆಯುರ್ವೇದದಲ್ಲಿ ಮಹತ್ತರ ಸ್ಥಾನವಿದೆ. ಜೊತೆಗೆ ಬೆರೆಸುವ ಹಾಲು ಕೂಡ ತುಟಿಗಳ ಕೋಮಲತೆಯನ್ನು ಕಾಪಾಡಲು ಸಹಾಯ ಮಾಡುವುದು. ಇದಕ್ಕಾಗಿ ನೀವು 1 ಚಮಚ ಹಾಲನ್ನು ½ ಟೀಸ್ಪೂನ್ ಅರಿಶಿನದೊಂದಿಗೆ ಬೆರೆಸಿ, ಪೇಸ್ಟ್ ತಯಾರಿಸಿ ತುಟಿಗಳಿಗೆ ಹಚ್ಚಿ. 5-10 ನಿಮಿಷಗಳ ಕಾಲ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. |
3. ನಿಂಬೆ ಮತ್ತು ಪುದಿನಾ: |
ನಿಮ್ಮ ಒಣ ತುಟಿಗಳಿಗೆ ವಿದಾಯ ಹೇಳಿ, ಮೃದುವಾದ, ಮತ್ತು ಗುಲಾಬಿ ಬಣ್ಣದ ತುಟಿಗಳನ್ನು ಪಡೆಯಲು ಈ ಎರಡು ಉತ್ಪನ್ನಗಳನ್ನು ಬಳಸಬಹುದು. ಇದಕ್ಕಾಗಿ 5-6 ಪುಡಿಮಾಡಿದ ಪುದೀನ ಎಲೆಗಳನ್ನು ಕೆಲವು ಹನಿ ಜೇನುತುಪ್ಪ ಮತ್ತು 2-3 ಟೀ ಚಮಚ ನಿಂಬೆ ರಸದೊಂದಿಗೆ ಬೆರೆಸಿ ನಂತರ ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ ಮತ್ತು ನಿಮಗೆ ಬೇಕಾದಾಗ ಒರೆಸಿಕೊಳ್ಳಿ. ಈ ಪರಿಹಾರವನ್ನು ನೀವು ಮೂರು ದಿನಗಳಿಗೊಮ್ಮೆ ಅಭ್ಯಾಸ ಮಾಡಬಹುದು. |
ಗೃಹಿಣಿ Archives - Page 4 of 4 - Public TV |
ಬೆಂಗಳೂರು: ಫೇಸ್ ಬುಕ್ ಬಳಸೋ ಮಹಿಳೆಯರೇ, ಯುವತಿಯರೇ ವ್ಯಾಲೆಂಟೈನ್ಸ್ ಡೇ ಹತ್ತಿರ ಬರುತ್ತಿದೆ ಎಚ್ಚರ. ಫೇಸ್ ಬುಕ್‍ನಲ್ಲಿ ಡ್ಯಾಡೀಸ್ ಗೇಮ್ಸ್ ಲಿಂಕ್‍ನಿಂದಾಗಿ ಇಲ್ಲೊಬ್ಬರು ಮದುವೆಯಾಗಿರೋ ಗೃಹಿಣಿ ಮತ್ತೊಬ್ಬರ ಲವ್ವರ್ ಆಗಿ ಮುಜುಗರ ಅನುಭವಿಸಿದ್ದಾರೆ. ಕಾಮಾಕ್ಷಿಪಾಳ್ಯದ ನಿವಾಸಿ... |
ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನಿಂದಲೇ ಕೊಲೆ? |
ಬಳ್ಳಾರಿ: ಕಳೆದ ಒಂದು ವಾರದ ಹಿಂದೆ ಬಳ್ಳಾರಿಯ ಹುಸೇನ್ ನಗರದ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ. ಬಳ್ಳಾರಿ ಹುಸೇನ್ ನಗರದ... |
ಮನೆಗೆ ಬಂದು ಜಗಳವಾಡಿದಳೆಂದು ಗೃಹಿಣಿಯನ್ನು ಕೊಲೆಗೈದ ಪ್ರಿಯಕರ |
ಮೈಸೂರು: ಗೃಹಿಣಿಯನ್ನು ತನ್ನ ಪ್ರಿಯಕರನೇ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಾರುತಿ ಬಡಾವಣೆ ನಿವಾಸಿ ಜ್ಯೋತಿ(29) ಕೊಲೆಯಾದ ಮಹಿಳೆ. ಹುಣಸೂರು ಪಟ್ಟಣದ ಪ್ರವೀಣ್ ಕೊಲೆ ಮಾಡಿದ ಆರೋಪಿ. ಜ್ಯೋತಿಗೆ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ಒಂದು ವರ್ಷದಿಂದ... |
6 ತಿಂಗ್ಳ ಹಿಂದೆಯಷ್ಟೇ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆ! |
ಚಿತ್ರದುರ್ಗ: ಗೃಹಿಣಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಗರಂಗೆರೆ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ ಆಶಾ (23) ಗುರುತಿಸಲಾಗಿದೆ. ಆಶಾ ಅವರಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ... |
ಪತಿ, ಕುಟುಂಬದ ವರದಕ್ಷಿಣೆ ಕಿರುಕುಳ ತಾಳಲಾರದೇ ಗೃಹಿಣಿ ಆತ್ಮಹತ್ಯೆಗೆ ಯತ್ನ |
ಕೊಪ್ಪಳ: ಪತಿ, ಅತ್ತೆ, ಮಾವ, ನಾದನಿ ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ನಗರದಲ್ಲಿ ಈ ಘಟನೆ ನಡೆದಿದ್ದು, ಡೆತ್ ನೋಟ್ ಬರೆದಿಟ್ಟು ನಿದ್ರೆ ಮಾತ್ರೆ ಸೇವಿಸಿ... |
ಹುಬ್ಬಳ್ಳಿ: ವರದಕ್ಷಿಣೆ ತರಲೊಪ್ಪದ ನವವಿವಾಹಿತೆಯನ್ನು ಪತಿ ಹಾಗೂ ಅತ್ತೆ ಸೇರಿ ನೇಣು ಬಿಗಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟೆ ಗ್ರಾಮದಲ್ಲಿ ನಡೆದಿದೆ. ರುಕ್ಸಾನಾ ದಢಾಕಿ (19) ಮೃತ ದುರ್ದೈವಿ ಗೃಹಿಣಿ.... |
ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ |
ವಿಜಯಪುರ: ಮನೆಯ ಜಂತಿಗೆ ಕೈ, ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಬಸಮ್ಮ ಸಜ್ಜನ (30) ಸಾವನ್ನಪ್ಪಿರುವ ಗೃಹಿಣಿ. ಘಟನೆಯ... |
ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್ |
ರಾಯಚೂರು: ಪತಿ ಹಾಗೂ ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮೈಸೂರು ಮೂಲದ ಮಹಿಳೆ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ. ಮನೆಯಿಂದ ಹೊರಬರುವ ಮೊದಲು ತಾಯಿಗೆ ವಿಡಿಯೋ ಕಾಲ್ ಮಾಡಿ ಗಂಡ ಮಂಜುನಾಥ್‍ನ ಕಿರುಕುಳದ ಬಗ್ಗೆ ಹೇಳಿದ್ದ... |
ಚಿಕ್ಕಬಳ್ಳಾಪುರ: ಫ್ಯಾನಿಗೆ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ |
ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ನಡೆದಿದೆ. 27 ವರ್ಷದ ಕೀರ್ತಿ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಕಳೆದ ರಾತ್ರಿ ಮನೆಯ ರೂಂ ನಲ್ಲಿನ ಫ್ಯಾನಿಗೆ ನೇಣು... |
ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ | ಸುದ್ದಿ ಬೆಳ್ತಂಗಡಿ |
ಏಡ್ಸ್ ರೋಗದ ಕುರಿತು ಮುಂಜಾಗ್ರತೆ ಅಗತ್ಯ: ಬಿಷಪ್ ಲಾರೆನ್ಸ್ ಮುಕ್ಕುಯಿ |
ಬೆಳ್ತಂಗಡಿ: ಹೆಚ್‌ಐವಿ ರೋಗ ಹರಡುವಿಕೆ ಈಗ ಕಡಿಮೆಯಾಗಿದೆ. ಇದರ ಬಗ್ಗೆ ಬಹಳಷ್ಟು ಜನಜಾಗೃತಿ ಉಂಟಾಗಿದೆ. ರೋಗ ಪೀಡಿತರು ಮರಣ ಹೊಂದುತ್ತಾರೆ ಎಂಬ ಅಭಿಪ್ರಾಯ ಇತ್ತು. ನಮ್ಮ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ಏಡ್ಸ್ ಬಾಧಿತರಿಗೆ ಮತ್ತು ಸೋಂಕಿತರಿಗೆ ಎಲ್ಲರಂತೆ ಸಮಾನ ಬದುಕು ಕಟ್ಟಿಕೊಡಲು ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಏಡ್ಸ್ ರೋಗದ ಕುರಿತು ಮುಂಜಾಗ್ರತೆ ಅಗತ್ಯವಿದೆ. ಎಲ್ಲರೂ ಅವರ ಸೇವೆಗೆ ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು ಎಂದು ಡಿಕೆಆರ್‌ಡಿಎಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು. |
ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಬೆಳ್ತಂಗಡಿ (ಡಿಕೆಆರ್‌ಡಿಎಸ್) ನೇತೃತ್ವದಲ್ಲಿ ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟ ಬೆಳ್ತಂಗಡಿ, ನವಚೈತನ್ಯ ಸಂಘ ಬೆಳ್ತಂಗಡಿ ಇವುಗಳ ಆಶ್ರಯದಲ್ಲಿ ಡಿ.1 ರಂದು ಸಾಂತೋಮ್ ಟವರ್ ಸಭಾಂಗಣದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು. |
ಸಮಾರಂಭವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಹಾಯಕ ಅಧಿಕಾರಿ ರತ್ನಾವತಿ ಅವರು ಮಾತನಾಡಿ, ಏಡ್ಸ್ ಬಾಧಿಸಿದರೆ ಅದು ಮೂರನೇ ಹಂತಕ್ಕೆ ಬರುವುದಿಲ್ಲ. ಮೊದಲ ಹಂತದಲ್ಲೇ ಅದನ್ನು ಪತ್ತೆಹಚ್ಚಿ ಅಂತವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕಾರ್ಯವನ್ನು ಹಾಗೂ ರೋಗವನ್ನು ಬಾರದಂತೆ ಮುನ್ನೆಚ್ಚರಿಕೆಯ ಜಾಗೃತಿ ಮೂಡಿಸುವ ಕಾರ್ಯವನ್ನು ಡಿಕೆಆರ್‌ಡಿಎಸ್ ಸಂಸ್ಥೆ ನಡೆಸಿಕೊಂಡು ಬರುತ್ತಿದೆ ಎಂದರು. |
ಏಡ್ಸ್ ಪೀಡಿತರಿಗೆ ಹಾಗೂ ಬಾಧಿತರಿಗೆ ಪೌಷ್ಠಿಕ ಆಹಾರವನ್ನು ಕುಟ್ರುಪಾಡಿ ಚರ್ಚ್‌ನ ಧರ್ಮಗುರು ಫಾ. ಜೋಸ್ ಅಯಾಂಗುಡಿ ವಿತರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಕ್ಕಿಂಜೆಶ್ರೀ ಕೃಷ್ಣ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುರಳಿಕೃಷ್ಣ ಇರ್ವತ್ರಾಯ,ಬೆಳ್ತಂಗಡಿ ಆರೋಗ್ಯ ಕೇಂದ್ರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ, ಮಾತನಾಡಿ, ಏಡ್ಸ್ ರೋಗದ ಗುಣ ಲಕ್ಷಣಗಳು, ಬಾರದಂತೆ ಮತ್ತು ಹರಡದಂತೆ ವಹಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು. |
ಸಮಾರಂಭದಲ್ಲಿ ನವ ಚೈತನ್ಯ ಸಂಘ ಬೆಳ್ತಂಗಡಿ ಅಧ್ಯಕ್ಷೆ ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂದಾದೀಪ ತಂಡದವರಿಂದ ಜಾಗೃತಿ ಗೀತೆ ಮೊಳಗಿತು. ಈ ಹಿಂದೆ 11 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ನೆಲ್ಯಾಡಿ ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಧರ್ಮಗುರುಗಳಾದ ಫಾ. ಜೋಸ್ ಅಯಾಂಗುಡಿ ಅವರನ್ನು ಬಿಷಪ್ ಅವರು ಸನ್ಮಾನಿಸಿದರು. |
ಪ್ರಸ್ತುತ ನಿರ್ದೇಶಕ ಫಾ. ಬಿನೋಯ್ ಎ.ಜೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಿಸಿಲಿಯಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳು ಸಹಕರಿಸಿದರು. |
ಕಾರಿತಾಸ್ ಇಂಡಿಯಾ ಸಂಸ್ಥೆಯಿಂದ ನೀಡಲಾದ ಸುರಕ್ಷಾ ಕಿಟ್ ವಿತರಿಸಲಾಯಿತು. ಮುಂಡಾಜೆ ಸ್ಟಾರ್ ಸಂಘದ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಸ್ನೇಹ ಜ್ಯೋತಿ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಏಲಿಯಮ್ಮ ವಂದಿಸಿದರು. |
ದಂತ ವೈದ್ಯರ ನಿರ್ಲಕ್ಷ್ಯ: ಮಧುಮೇಹಿ ರೋಗಿಗೆ ಲಕ್ಷ ರೂಪಾಯಿ ಪರಿಹಾರಕ್ಕೆ ಆಜ್ಞೆ |
ನವದೆಹಲಿ (ಪಿಟಿಐ): ತನ್ನ ಮಧು ಮೇಹವು ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಹೇಳಿದ ಮಾತನ್ನು ನಂಬಿಕೊಂಡು ಆತನ ರಕ್ತದಲ್ಲಿನ ಸಕ್ಕರೆ ಅಂಶವನ್ನು ಪರೀಕ್ಷಿಸದೆಯೇ ಆತನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿ ಆತ ಇನ್ನಷ್ಟು ವೈದ್ಯಕೀಯ ಸಮಸ್ಯೆಗಳಿಗೆ ಗುರಿಯಾಗುವಂತೆ ಮಾಡಿದ್ದಕ್ಕಾಗಿ ರೋಗಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ದಂತ ವೈದ್ಯರೊಬ್ಬರಿಗೆ ದೆಹಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಆಜ್ಞಾಪಿಸಿದೆ. |
`ರೋಗಿಯ ನಿರ್ಲಕ್ಷ್ಯವು ವೈದ್ಯನ ಪಾಲಿಗೆ ರಕ್ಷಣೆಯಾಗುವುದಿಲ್ಲ` ಎಂದು ಹೇಳಿರುವ ನ್ಯಾಯಾಲಯವು ದೂರುದಾರ ಫತೇಃ ಸಿಂಗ್ ಅವರಿಗೆ ಸೂಚಿತ ಪರಿಹಾರ ನೀಡುವಂತೆ ವೈದ್ಯ ಡಾ. ವನೀತ್ ಕಾಕರ್ ಅವರಿಗೆ ನಿರ್ದೇಶಿಸಿದೆ. |
ರೋಗಿ ತನ್ನ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿದೆ ಎಂಬುದಾಗಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ತಾನು ಆತನಿಗೆ ದಂತ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಡಾ. ವನೀತ್ ಕಾಕರ್ ಪ್ರತಿಪಾದಿಸಿದ್ದರು. |
ತಾನು ಮಧುಮೇಹ ರೋಗಿ ಎಂಬುದಾಗಿ ರೋಗಿ ತಿಳಿಸಿದ ಬಳಿಕವೂ ಆತನ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರೀಕ್ಷಿಸದೆ ಸಕ್ಕರೆ ಅಂಶ ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಹೇಳಿದ್ದನ್ನೇ ನಂಬಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. |
`ನಮ್ಮ ಅಭಿಪ್ರಾಯದಂತೆ ರೋಗಿಯು ವೈದ್ಯರಿಗೆ ತಾನು ಮಧುಮೇಹದಿಂದ ಬಳಲುತ್ತಿರುವುದಾಗಿ ತಿಳಿಸಿದ ಬಳಿಕ, ಪ್ರಕರಣವನ್ನು ನಿಭಾಯಿಸುವಾಗ ವೈದ್ಯರು ಎಚ್ಚರಿಕೆ ವಹಿಸಬೇಕಾಗಿತ್ತು. ರಕ್ತದಲ್ಲಿನ ಸಕ್ಕರೆ ಮಟ್ಟದ ಪರೀಕ್ಷೆ ಮಾಡಿಸಿಕೊಳ್ಳುವಂತೆ ರೋಗಿಗೆ ಸೂಚಿಸುವುದು ವೈದ್ಯರ ಕರ್ತವ್ಯವಾಗಿತ್ತು ಎಂದು ನ್ಯಾಯಾಲಯ ಹೇಳಿತು. |
ಒಂದು ವೇಳೆ ವರದಿಯು ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿದೆ ಎಂದು ಹೇಳಿದರೆ, ರೋಗಿಗೆ `ರೂಟ್ ಕೆನಾಲ್` ಚಿಕಿತ್ಸೆ ನಡೆಸುವ ಮುನ್ನ ಅಗತ್ಯ ತಪಾಸಣೆಗಳನ್ನು ಮಾಡಬೇಕಾದದ್ದು ವೈದ್ಯರ ಪಾಲಿನ ಕರ್ತವ್ಯವಾಗಿತ್ತು. ರೋಗಿಯು ಕರ್ತವ್ಯ ಚ್ಯುತಿ ಎಸಗಿದ್ದರೂ ಅದು ವೈದ್ಯನನ್ನು ನಿರ್ಲಕ್ಷ್ಯದ ಆರೋಪದಿಂದ ಮುಕ್ತನನ್ನಾಗಿ ಮಾಡುವುದಿಲ್ಲ ಎಂದು ಬಾಬುಲಾಲ್ ಅಧ್ಯಕ್ಷತೆಯ ಗ್ರಾಹಕ ನ್ಯಾಯಾಲಯ ಪೀಠ ಅಭಿಪ್ರಾಯ ಪಟ್ಟಿತು. |
ದಂತ ಶಸ್ತ್ರಚಿಕಿತ್ಸೆಯನ್ನು ನೆರವೇರಿಸುವ ಮುನ್ನ ಡಾ. ಕಾಕರ್ ಅವರು ತನ್ನ ರಕ್ತದಲ್ಲಿನ ಸಕ್ಕರೆಯ ಅಂಶದ ತಪಾಸಣೆ ನಡೆಸಲಿಲ್ಲ. ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಿದ್ದ ಕಾರಣ ಚಿಕಿತ್ಸೆ ನೀಡಲಾಗಿದ್ದ ಜಾಗದಲ್ಲಿ ಕೀವು ಆಗಿ ಗಂಟಲಿಗೂ ಸೋಂಕು ತಗಲಿತು. ಹೀಗಾಗಿ 70,000 ರೂಪಾಯಿ ವೆಚ್ಚ ಮಾಡಿ ಇನ್ನೊಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು ಎಂದು ರೋಗಿ ಸಿಂಗ್ ತನ್ನ ದೂರಿನಲ್ಲಿ ತಿಳಿಸಿದ್ದರು. |
ತಾನು ಮಧುಮೇಹದಿಂದ ಬಳಲುತ್ತಿರುವುದಾಗಿ ತಿಳಿಸಿದರೂ, ವೈದ್ಯ ಡಾ. ಕಾಕರ್ ಅವರು ದಂತ ಚಿಕಿತ್ಸೆಗೆ ಇದರಿಂದ ತೊಂದರೆಯೇನೂ ಇಲ್ಲ ಎಂದು ಹೇಳಿದ್ದರು ಎಂದು ಸಿಂಗ್ ಆಪಾದಿಸಿದ್ದರು. |
ತನ್ನ ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣದಲ್ಲಿದೆ ಎಂಬುದಾಗಿ ರೋಗಿ ಭರವಸೆ ನೀಡಿದ್ದರಿಂದ ತಾನು ಸಂತ ಸರ್ಜರಿ ನೆರವೇರಿಸಿದ್ದಾಗಿ ವೈದ್ಯರು ಪ್ರತಿಪಾದಿಸಿದ್ದರು. |
ಬಯಲುಸೀಮೆ ನೀರಾವರಿ ಯೋಜನೆಗಳ ಸತ್ಯ ಶೋಧನೆಯ ಅನಾವರಣ | Shashwata Niravari Horata Samiti started campaign for water - Kannada Oneindia |
| Published: Friday, April 6, 2018, 15:50 [IST] |
ಬೆಂಗಳೂರು, ಏಪ್ರಿಲ್ 06: ಶಾಶ್ವತ ನೀರಾವರಿ ಹೋರಾಟ ಸಮಿತಿ ಸತ್ಯ ಶೋಧನೆಯ ಅನಾವರಣ ಜನ ಜಾಗೃತಿ ಅಭಿಯಾನವನ್ನು ಏಪ್ರಿಲ್ 7ರಂದು ಬೆಳಗ್ಗೆ 10ಗಂಟೆಗೆ ಶಿವಾನಂದ ವೃತ್ತದಲ್ಲಿರುವ ಗಾಂಧೀ ಭವನದಲ್ಲಿ ಆಯೋಜಿಸಿದೆ. |
ಬಯಲುಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಬರಡಾಗಿ ಅಪಾಯದಲ್ಲಿವೆ ಆದರೆ ಸರ್ಕಾರಗಳು ಯೋಜನೆಗಳ ಹೆಸರಲ್ಲಿ ಲೂಟಿ ಮಾಡಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಸತ್ಯ ಶೋಧನೆಯ ಅನಾವರಣ ಜನ ಜಾಗೃತಿ ಅಭಿಯಾನ ಹಾಗೂ ಪವರ್ ಪಾಯಿಂಟ್ ಪ್ರೆಸೆಂಟೇಶನ್ ನಡೆಯಲಿದೆ. |
ಈಗಾಗಲೇ ಕೋಲಾರದ ಪತ್ರಕರ್ತರ ಭವನದಲ್ಲಿ ಸಮಾವೇಶವನ್ನು ಮುಗಿಸಿದ್ದು, ಏಪ್ರಿಲ್ 9ರಂದು ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಅಭಿಯಾನವನ್ನು ಹಮ್ಮಿಕೊಂಡಿದೆ ಇನ್ನು ಏಪ್ರಿಲ್ 11ರಂದು ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಸಮಾವೇಶ ನಡೆಯಲಿದೆ. |
bengaluru campaign water ಬೆಂಗಳೂರು ನೀರು |
Shashwata niravari horata samiti organised special campaign called 'Satya shodhaneya Anavarana' at Gandhi Bhavan near Shivananda circle on Saturday at Bengaluru.Dry land district like Kolar, chikkaballapur, Chitradurga are facing critical problems. |
ಐದನೇ ಟೆಸ್ಟ್: ಶತಕ ವಂಚಿತ ಅಲಿಸ್ಟೆರ್ ಕುಕ್ | Vartha Bharati- ವಾರ್ತಾ ಭಾರತಿ |
ಆಂಗ್ಲರಿಗೆ ಇಶಾಂತ್ ಪ್ರಹಾರ |
ವಾರ್ತಾ ಭಾರತಿ Sep 07, 2018, 11:55 PM IST |
ಲಂಡನ್, ಸೆ.7: ಪ್ರವಾಸಿ ಭಾರತದ ವಿರುದ್ಧ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಮತ್ತು ಮೊಯಿನ್ ಅಲಿ ಅರ್ಧಶತಕಗಳ ನೆರವಿನಲ್ಲಿ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ. |
ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 198 ರನ್ ಗಳಿಸಿದೆ. ಜೋಸ್ ಬಟ್ಲರ್ ಔಟಾಗದೆ 11 ರನ್ ಮತ್ತು ಆದಿಲ್ ರಶೀದ್ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. |
ಅಂತಿಮ ಟೆಸ್ಟ್ ಆಡುತ್ತಿರುವ ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಶತಕದ ಹಾದಿಯಲ್ಲಿ ಎಡವಿದ್ದಾರೆ. ಅಲಿಸ್ಟೈರ್ ಕುಕ್ 71 ರನ್ (190ಎ, 8ಬೌ) ಗಳಿಸಿ ಔಟಾದರು. ಮೊಯಿನ್ ಅಲಿ(50) ಅರ್ಧಶತಕದ ಕೊಡುಗೆ ನೀಡಿದರು. ಇಂಗ್ಲೆಂಡ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. |
ಇನಿಂಗ್ಸ್ ಆರಂಭಿಸಿದ ಅಲಿಸ್ಟೈರ್ ಕುಕ್ ಮತ್ತು ಕೀಟನ್ ಜೆನ್ನಿಂಗ್ಸ್ ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನೀಡಿದರು. 23.1ನೇ ಓವರ್‌ನಲ್ಲಿ ಕೀಟನ್ ಜೆನ್ನಿಂಗ್ಸ್ ಆಲ್‌ರೌಂಡರ್ ಜಡೇಜ ಎಸೆತದಲ್ಲಿ ಲೋಕೇಶ್ ರಾಹುಲ್‌ಗೆ ಕ್ಯಾಚ್ ನೀಡಿದರು. ಔಟಾಗುವ ಮುನ್ನ ಜೆನ್ನಿಂಗ್ಸ್ 23 ರನ್ ಗಳಿಸಿದರು. 1.2ನೇ ಓವರ್‌ನಲ್ಲಿ ಇಶಾಂತ್ ಶರ್ಮಾ ಎಸೆತದಲ್ಲಿ 3 ರನ್ ಗಳಿಸುವ ಮೂಲಕ ಇನಿಂಗ್ಸ್ ಆರಂಭಿಸಿದ್ದ ಕುಕ್ 30.5ನೇ ಓವರ್‌ನಲ್ಲಿ ಜೀವದಾನ ಪಡೆದರು. ಇದರ ಪ್ರಯೋಜನ ಪಡೆದ ಅವರು ಅರ್ಧಶತಕ ದಾಖಲಿಸಿದರು. 161ನೇ ಟೆಸ್ಟ್ ಆಡುತ್ತಿರುವ ಅವರು 139 ಎಸೆತಗಳಲ್ಲಿ 6 ಬೌಂಡರಿಗಳ ಸಹಾಯದಿಂದ 57ನೇ ಅರ್ಧಶತಕ ಗಳಿಸಿದರು. |
ಎರಡನೇ ವಿಕೆಟ್‌ಗೆ ಕುಕ್ ಮತ್ತು ಮೊಯಿನ್ ಅಲಿ 73 ರನ್‌ಗಳ ಜೊತೆಯಾಟ ನೀಡಿದರು. 63.2ನೇ ಓವರ್‌ನಲ್ಲಿ ಕುಕ್ ಅವರು ಜಸ್‌ಪ್ರೀತ್ ಬುಮ್ರಾ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕುಕ್ ನಿರ್ಗಮನದ ಬಳಿಕ ಇಂಗ್ಲೆಂಡ್‌ನ ಇನ್ನೆರಡು ವಿಕೆಟ್‌ಗಳು ಪಟಪಟನೆ ಉರುಳಿತು. ನಾಯಕ ಜೋ ರೂಟ್ (0) ಅವರನ್ನು ಖಾತೆ ತೆರೆಯಲು ಅವಕಾಶ ನೀಡದೆ ಬುಮ್ರಾ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಇಂಗ್ಲೆಂಡ್‌ಗೆ ಇನ್ನೊಂದು ಆಘಾತ. ಜಾನಿ ಬೈರ್‌ಸ್ಟೋವ್ (0) ಅವರು ಇಶಾಂತ್ ಶರ್ಮಾ ಎಸೆತದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಮೊಯಿನ್ ಅಲಿ 50 ರನ್(170ಎ, 4ಬೌ) ಗಳಿಸಿ ಇಶಾಂತ್ ಶರ್ಮಾ ಎಸೆತದಲ್ಲಿ ಪಂತ್‌ಗೆ ಕ್ಯಾಚ್ ನೀಡಿದರು. ಬೈರ್ ಸ್ಟೋವ್ (0) ಮತ್ತು ಸ್ಯಾಮ್ ಕರನ್(0) ಖಾತೆ ತೆರೆಯದೆ ನಿರ್ಗಮಿಸಿದರು. ಭಾರತದ ಪರ ಇಶಾಂತ್ ಶರ್ಮಾ 28ಕ್ಕೆ 3, ಜಸ್‌ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜ ತಲಾ 2 ವಿಕೆಟ್ ಹಂಚಿಕೊಂಡರು. |
ಪಾಂಟಿಂಗ್ ದಾಖಲೆ ಮುರಿದ ಕುಕ್ |
ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಅಲಿಸ್ಟೈರ್ ಕುಕ್ ಅವರು ತನ್ನ ಕೊನೆಯ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗರಿಷ್ಠ ಟೆಸ್ಟ್‌ಗಳನ್ನು ಆಡಿರುವ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದಾರೆ. |
ಕುಕ್ ಅವರು ಟೀಮ್ ಇಂಡಿಯಾ ವಿರುದ್ಧ 30ನೇ ಟೆಸ್ಟ್ ಆಡುತ್ತಿದ್ದಾರೆ. ಆದರೆ ಪಾಂಟಿಂಗ್ 29 ಟೆಸ್ಟ್‌ಗಳನ್ನು ಆಡಿದ್ದಾರೆ. |
ಕುಕ್ ಓವಲ್ ಟೆಸ್ಟ್‌ನಲ್ಲಿ 1,000 ರನ್ ಪೂರ್ಣ ಗೊಳಿಸಿದ್ದಾರೆ. ಓವಲ್‌ನಲ್ಲಿ ಈ ಸಾಧನೆ ಮಾಡಿರುವ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಲೆನ್ ಹಟನ್ (1,521) ಮತ್ತು ಗ್ರಹಾಂ ಗೂಚ್ (1,097) ಅವರು ಒಂದು ಸಾವಿರಕ್ಕಿಂತ ಹೆಚ್ಚು ರನ್ ಪೂರ್ಣಗೊಳಿಸಿದ್ದರು. ಓವಲ್‌ನಲ್ಲಿ ಕುಕ್ 2 ಶತಕ ಮತ್ತು 6 ಅರ್ಧಶತಕಗಳನ್ನು ದಾಖಲಿಸಿದ್ದರು. ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 161 ಟೆಸ್ಟ್‌ಗಳಲ್ಲಿ 32 ಶತಕ ಮತ್ತು 56 ಅರ್ಧಶತಕಗಳನ್ನು ದಾಖಲಿಸಿದ್ದಾರೆ. |
ಮಮತಾ ಆಡಳಿತದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ : ಅಸದುದ್ದೀನ್ ಉವೈಸಿ - ಪ್ರೆಸ್ ಕನ್ನಡ |
ಮಮತಾ ಆಡಳಿತದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ : ಅಸದುದ್ದೀನ್ ಉವೈಸಿ |
ಕೊಲ್ಕತ್ತಾ(17-11-2020) ಪಶ್ಚಿಮ ಬಂಗಾಳದ ಮುಸ್ಲಿಂ ಮತದಾರರನ್ನು ಮಮತಾ ಬ್ಯಾನರ್ಜಿ ಸರಕಾರವು ಕಡೆಗಣಿಸುತ್ತಿದೆ ಎಂದು ಎಐಎಮ್ಐಎಮ್ ನಾಯಕ ಅಸದುದ್ದೀನ್ ಉವೈಸಿ ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಐದು ಸೀಟುಗಳನ್ನು ಗೆದ್ದ ಉವೈಸಿ ಪಕ್ಷವು ಇದೀಗ ಪಶ್ಚಿಮ ಬಂಗಾಳದ ಚುನಾವಣೆಯ ಮೇಲೆ ಕಣ್ಣಿಟ್ಟಿರುವುದರ ಸೂಚನೆ ಇದೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. |
ಮಮತಾ ಆಡಳಿತದಲ್ಲಿ ಮುಸ್ಲಿಮರನ್ನು ದೂರವಿಡಲಾಗುತ್ತಿದೆ. ಇದನ್ನು ಸಾಬೀತುಪಡಿಸುವ ಅಗತ್ಯ ದಾಖಲೆಗಳು ತನ್ನಲ್ಲಿದೆ. ಪಶ್ಚಿಮ ಬಂಗಾಳದ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಉಳಿದ ರಾಜ್ಯಗಳ ಮುಸ್ಲಿಮರಿಗಿಂತಲೂ ದಯನೀಯವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹದಿನೆಂಟು ಸ್ಥಾನಗಳು ದೊರೆತಿದೆ. ಜಾತ್ಯತೀತವೆಂದು ಹೇಳಿಕೊಳ್ಳುವ ಪಕ್ಷಗಳು ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ವಿಫಲರಾಗಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಉವೈಸಿ ಹೇಳಿದರು. |
ಹಲವು ಕಡೆಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಅವರು ಹೊಸ ರಾಜಕೀಯ ಶಕ್ತಿಯೊಂದರ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶಗಳನ್ನು ಒದಗಿಸಬೇಕಿದೆ. ಅಲ್ಲಿ ನಮಗೂ ಸಾಕಷ್ಟು ಅವಕಾಶಗಳಿದ್ದು, ಸ್ಥಳೀಯ ಸಂಘಟನೆಗಳೊಂದಿಗೆ ಚರ್ಚಿಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು |
Subsets and Splits
No community queries yet
The top public SQL queries from the community will appear here once available.